1 00:00:11,320 --> 00:00:17,320 ಆದಿಗೂ ಮೊದಲು 2 00:00:27,680 --> 00:00:28,640 ಕ್ಷಮಿಸಿ? 3 00:00:29,440 --> 00:00:30,560 ಓಯ್! 4 00:00:33,720 --> 00:00:35,280 ಏನು? ನೀನಾ ಕರೆದದ್ದು? 5 00:00:35,360 --> 00:00:36,680 ಹಾಯ್. ಹೌದು. 6 00:00:37,560 --> 00:00:40,680 ಇದನ್ನು ಸ್ವಲ್ಪ ಹಿಡ್ಕೋತೀಯಾ, ನಾನಿದನ್ನು ಶುರು ಮಾಡುವವರೆಗೆ? 7 00:00:41,720 --> 00:00:43,040 ಯಾವ ಕಡೆ ಮೇಲೆ? 8 00:00:43,120 --> 00:00:45,440 ಹೀಗೆ, ಗಟ್ಟಿಯಾಗಿ ಹಿಡ್ಕೋ. ಹಾಗೇ. 9 00:00:45,520 --> 00:00:47,400 -ಸರಿ. ತಯಾರಾಗಿರುವೆಯಾ? -ಏನಕ್ಕೆ? 10 00:00:50,640 --> 00:00:51,880 ಇದಕ್ಕೆ. ಅದ್ಭುತ. 11 00:00:52,600 --> 00:00:55,040 ಧನ್ಯವಾದ. ಇನ್ನದನ್ನು ಕೆಳಗೆ ಬಿಡು. 12 00:00:55,120 --> 00:00:58,280 -ಅಷ್ಟೇನಾ? -ಇಲ್ಲ. ಈಗಿನ್ನೂ ಇಂಜಿನ್ ಶುರು ಮಾಡಿದ್ದು. 13 00:00:58,360 --> 00:00:59,680 ಈಗ ಮಜಾ ಬರುತ್ತೆ. 14 00:00:59,760 --> 00:01:01,880 ನಾನು ಯಾವಾಗಿನಿಂದ ಕಾಯುತ್ತಿದ್ದೆ... 15 00:01:02,880 --> 00:01:03,880 ಹೂಂ, ಯಾವಾಗಿನಿಂದಲೂ. 16 00:01:05,280 --> 00:01:07,840 ಹಲೋ. ನಾನು ಅಜಿರಫೆಲ್. 17 00:01:07,920 --> 00:01:10,640 ಸಂತೋಷ. ಸರಿ, ಶುರು ಮಾಡೋಣ. 18 00:01:11,280 --> 00:01:15,480 ವಸ್ತುಗಳು ಬರಲಿ, ಗುರುತ್ವಾಕರ್ಷಣೆ ಇರಲಿ, ಎಲ್ಲವೂ ಇರಲಿ ಪೇಜ್... 19 00:01:16,160 --> 00:01:19,400 11 ರಿಂದ 30,00,602 ವರೆಗೂ. 20 00:01:25,440 --> 00:01:26,960 ಏನಾದರೂ ಆಗಬೇಕಿತ್ತಾ? 21 00:01:27,440 --> 00:01:28,880 ಹೌದು. ಕ್ಷಮಿಸು. ಸರಿ, ಸರಿ. 22 00:01:29,640 --> 00:01:31,000 ಗೊತ್ತಿತ್ತು, ನಾನೊಂದನ್ನು ಬಿಟ್ಟೆ. 23 00:01:32,000 --> 00:01:33,120 ಬೆಳಕಿರಲಿ. 24 00:01:59,640 --> 00:02:00,840 ದೇವರೇ. 25 00:02:01,680 --> 00:02:03,800 ನೋಡು, ಎಷ್ಟು ಸುಂದರ! 26 00:02:07,520 --> 00:02:10,039 ಇದು... ಇದನ್ನೆಲ್ಲಾ ನೀನೊಬ್ಬನೇ ಮಾಡಿದ್ದಾ? 27 00:02:11,160 --> 00:02:12,680 ಹೂಂ, ಹೆಚ್ಚು ಕಡಿಮೆ. 28 00:02:12,760 --> 00:02:15,800 ಮೂಲ... ಮೂಲ ವಿನ್ಯಾಸ ನನ್ನದಲ್ಲ, 29 00:02:15,880 --> 00:02:18,320 ಆದರೆ ನಾನು ಮೇಲಿನವನ ಜೊತೆಯಲ್ಲಿ ಕೆಲಸ ಮಾಡಿದ್ದು. 30 00:02:19,400 --> 00:02:21,520 -ತುಂಬಾ ಸುಂದರವಾಗಿದೆ. -ಧನ್ಯವಾದಗಳು. 31 00:02:21,600 --> 00:02:23,840 ನೀನು ಅದ್ಭುತ ಕೆಲಸ ಮಾಡಿದ್ದೀಯ. 32 00:02:30,760 --> 00:02:33,120 -ಏನಕ್ಕೆ ಇದು? -ಅಂದರೆ? 33 00:02:33,160 --> 00:02:36,400 ಹೂಂ, ಏನು ಮಾಡುತ್ತೆ ಇದು? 34 00:02:36,880 --> 00:02:39,360 ಹೂಂ, ಏನು ಮಾಡಲ್ಲ ಈ ಸುಂದರಿ, ಅದನ್ನು ಕೇಳು. 35 00:02:39,440 --> 00:02:41,280 ಮೂಲತಃ ಇದೊಂದು ತಾರಾ ಕಾರ್ಖಾನೆ. 36 00:02:41,360 --> 00:02:43,320 ನೀನು ನೋಡುತ್ತಿರುವ ಹೊಗೆ, ಧೂಳು ಎಲ್ಲಾ 37 00:02:43,400 --> 00:02:48,800 5,000 ಯುವ ನಕ್ಷತ್ರಗಳಿಗೆ ಮತ್ತು ಬಾಲ ಗ್ರಹಗಳಿಗೆ ಜೀವ ಕೊಡುತ್ತಿವೆ. 38 00:02:48,880 --> 00:02:51,000 ಜಗತ್ತಿನ ಎಲ್ಲಾ ನಕ್ಷತ್ರಗಳು ವಯಸ್ಸಾದ ಮೇಲೆ ಬರುತ್ತವೆ, 39 00:02:51,079 --> 00:02:53,760 ಆದರೆ ಇವು ಈಗಷ್ಟೇ ಹುಟ್ಟಿದವು. 40 00:02:54,079 --> 00:02:56,680 ಇನ್ನೂ ಲಕ್ಷಾಂತರ ವರ್ಷ ಬೆಂದರೆ, 41 00:02:57,440 --> 00:02:59,480 ಆಮೇಲೆ ಎಲ್ಲೆಲ್ಲೂ ನಕ್ಷತ್ರಗಳು. 42 00:03:02,600 --> 00:03:04,400 ಒಳ್ಳೆಯದು. 43 00:03:05,080 --> 00:03:07,640 ಗೊತ್ತಾ, ಮೇಲಿನವನ ಇತ್ತೀಚಿನ ಮಾತಿನ ಪ್ರಕಾರ, 44 00:03:07,720 --> 00:03:10,600 ನಾವು ಇದೆಲ್ಲಾ ಮತ್ತೆ ಮುಚ್ಚಿ ಹಾಕುತ್ತೇವೆ. 45 00:03:10,680 --> 00:03:12,920 ಇನ್ನು 6,000 ವರ್ಷಗಳಲ್ಲಿ. 46 00:03:13,880 --> 00:03:15,160 ಆದರೆ, ಅದು ಎಲ್ಲಿ ಸಾಲುತ್ತೆ. 47 00:03:20,040 --> 00:03:23,920 ನನ್ನ ಅರ್ಥ, ಒಂದು ಅನಂತ ಬ್ರಹ್ಮಾಂಡವನ್ನು ಸೃಷ್ಟಿಸಿ, 48 00:03:24,000 --> 00:03:25,960 ಕೋಟ್ಯಾಂತರ ತಾರಾಮಂಡಲಗಳನ್ನು ಮಾಡಿ, 49 00:03:26,040 --> 00:03:29,000 ಕೆಲವೇ ಸಾವಿರ ವರ್ಷಗಳು ಮಾತ್ರ ಇರಲು ಬಿಟ್ಟರೆ, ಏನು ಉಪಯೋಗ? 50 00:03:29,720 --> 00:03:32,560 ಅಷ್ಟರಲ್ಲಿ ಇಂಜಿನ್ ಕೂಡ ಬಿಸಿಯಾಗುವುದಿಲ್ಲ. 51 00:03:33,280 --> 00:03:34,120 ಉಪಯೋಗ ಏನೆಂದರೆ... 52 00:03:34,800 --> 00:03:36,640 ಹೂಂ, ಭೂಮಿಯ ಬಗ್ಗೆ ಕೇಳಿರಬೇಕಲ್ಲ? 53 00:03:39,640 --> 00:03:41,360 ಇಲ್ಲ... ಕೇಳಿರುವಂತಿಲ್ಲ. 54 00:03:42,600 --> 00:03:43,680 ನೀಲಿ-ಹಸಿರು ಬಣ್ಣದ ಗ್ರಹ? 55 00:03:43,760 --> 00:03:48,200 ಅಲ್ಲೆಲ್ಲೋ ಇರುತ್ತೆ, ಈ ಚತುರ್ಭುಜವನ್ನು ಬಿಡಿಸಿದಾಗ. 56 00:03:48,280 --> 00:03:51,600 ಈಗ ಅಲ್ಲೇ ನಾವು ವಿನ್ಯಾಸ ಮಾಡುತ್ತಿರುವ 57 00:03:52,320 --> 00:03:55,320 "ಜನ"ರನ್ನು ಇರಿಸೋದು. 58 00:03:55,400 --> 00:03:56,840 ಯೋಜನೆಗಳನ್ನು ನಾನು ನೋಡಿರುವೆ. 59 00:03:57,320 --> 00:04:00,160 ಹೌದು. ಮೊದಲು ಒಂದು ಸಂತಾನೋತ್ಪತ್ತಿಯ ಜೋಡಿಯನ್ನು ಕಳಿಸೋದು 60 00:04:00,240 --> 00:04:03,040 ಮತ್ತೆ ಸ್ವಲ್ಪವೇ ದಿನಗಳಲ್ಲಿ ಒಂದು ರಾಶಿ ಇರುತ್ತವೆ. 61 00:04:03,120 --> 00:04:06,600 ಮರಿ ಹಾಕಿಕೊಂಡು... ಮರಿ ಹಾಕಿಕೊಂಡು ಜನರಂತೆ. 62 00:04:07,080 --> 00:04:11,840 ನನ್ನ ಪ್ರಕಾರ ಈ ನಕ್ಷತ್ರಗಳು ಮತ್ತು ನಿನ್ನ... 63 00:04:13,120 --> 00:04:15,000 -ಅದರ ಹೆಸರು ನೆಬುಲಾ. -ಸರಿ. 64 00:04:15,080 --> 00:04:19,120 ಹೂಂ, ಅದಿರೋದು 65 00:04:19,200 --> 00:04:22,800 ರಾತ್ರಿ ಆಕಾಶವನ್ನು ನೋಡುತ್ತಾ ಜನರು 66 00:04:22,920 --> 00:04:27,680 ದೇವರ ಜಗತ್ತಿನ ಮಿತಿ ಇರದ ವೈಶಾಲ್ಯತೆಯನ್ನು 67 00:04:27,760 --> 00:04:30,200 ನೋಡುತ್ತಾ ಮೈಮರೆಯಲು. 68 00:04:33,159 --> 00:04:34,800 ಆದರೆ ಅದು ಮೂರ್ಖತನ! 69 00:04:34,880 --> 00:04:37,800 ಇದು ಜಗತ್ತು, ಅಲಂಕಾರಕ್ಕೆ ಇಟ್ಟಿರುವ ಗೋಡೆಪಟ ಅಲ್ಲ. 70 00:04:37,880 --> 00:04:42,720 ಲಕ್ಷಾಂತರ ನಕ್ಷತ್ರಪುಂಜಗಳು, ಕೋಟ್ಯಾಂತರ ನಕ್ಷತ್ರಗಳು, ಎಲ್ಲವೂ ರಾಶಿ ರಾಶಿ. 71 00:04:42,800 --> 00:04:44,800 ಬರೀ ಹೊಳೆಯೋದಕ್ಕೆ ಇರೋದಾ? 72 00:04:45,440 --> 00:04:47,800 ಇದರಲ್ಲಿ ಎಷ್ಟೋ ಭೂಮಿಯಿಂದ ಕಾಣೋದೂ ಇಲ್ಲ. 73 00:04:47,880 --> 00:04:51,600 ಭೂಮಿಯನ್ನೇಕೆ ಮಧ್ಯದಲ್ಲಿ ಇರಿಸಬಾರದು, ಅಲ್ಲಿಂದ ಎಲ್ಲವೂ ಚೆನ್ನಾಗಿ ಕಾಣುತ್ತೆ? 74 00:04:52,480 --> 00:04:56,520 ದೇವರಿಗೆ ನಿರ್ಮಾಣದ ಬಗ್ಗೆ ಹೇಳೋದು ನಮ್ಮ ಕೆಲಸ ಅಲ್ಲ. 75 00:04:56,600 --> 00:04:58,240 ಮತ್ತೆ, ಯಾರ ಕೆಲಸ ಅದು? ಅಂದರೆ... 76 00:04:58,800 --> 00:05:02,680 ಯಾರಾದರೂ ಹೇಳಬೇಕಲ್ಲ, "ನೋಡು ಗುರೂ, ಇದು ತುಂಬಾ... ಕೆಟ್ಟ ಉಪಾಯ" ಅಂತ. 77 00:05:03,680 --> 00:05:08,360 ಅದು ಸರಿ ಇರಲ್ಲ ಅಂದುಕೋತೀನಿ. 78 00:05:10,240 --> 00:05:15,160 ದೂರು ಪೆಟ್ಟಿಗೆಯಲ್ಲಿ ಹಾಕಿದರೆ ಯಾರಿಗೇನು ತೊಂದರೆ ಇರುತ್ತೆ. 79 00:05:16,880 --> 00:05:20,880 ದೇವರು ದೂರು ಪೆಟ್ಟಿಗೆ ಇಟ್ಟಿಲ್ಲ ಅಂದುಕೊಳ್ತೀನಿ. 80 00:05:21,880 --> 00:05:25,440 ಹಾಗೇ, ದೂರು ಪೆಟ್ಟಿಗೆ ಇಡಿ ಅಂತ ಉಪದೇಶ ಹೇಳುವುದು 81 00:05:25,520 --> 00:05:28,000 ಕೂಡ ನಮ್ಮ ಕೆಲಸ ಅಲ್ಲ. 82 00:05:28,080 --> 00:05:31,520 ನಾನು ನಾಯಕನಾಗಿದ್ದರೆ, ನನಗೆ ಖುಷಿಯಾಗುತ್ತಿತ್ತು ಯಾರಾದರೂ ಪ್ರಶ್ನಿಸಿದರೆ. 83 00:05:31,600 --> 00:05:32,960 ಹೊಸ ದೃಷ್ಟಿಕೋನ ಸಿಗುತ್ತಲ್ಲ. 84 00:05:34,159 --> 00:05:36,159 ಒಂದು ಜಗತ್ತನ್ನು ನಿರ್ಮಿಸಿ, 85 00:05:36,240 --> 00:05:38,920 ಸಾವಿರ ವರ್ಷ ನಡೆಸಿ, ನಿಲ್ಲಿಸಿಬಿಡೋದಾ? 86 00:05:42,880 --> 00:05:46,440 ನೆಬುಲಾದ... ಆ ಗುಲಾಬಿ ನೀಲಿ ಬಣ್ಣ ಚೆನ್ನಾಗಿದೆ. 87 00:05:46,520 --> 00:05:48,159 ಹೂಂ, ಅದು ತುಂಬಾ... 88 00:05:51,680 --> 00:05:53,920 ಆದರೆ ಇಲ್ಲಿ ನೋಡು, ಒಂದು ಬುದ್ಧಿ ಮಾತು... 89 00:05:54,920 --> 00:05:57,240 ಯಾವುದೇ ತೊಂದರೆಗೆ ಸಿಕ್ಕಿಬೀಳದಂತೆ ನೋಡಿಕೊ. 90 00:05:58,000 --> 00:06:01,760 ನಿನ್ನ ಸಹಾಯಕ್ಕೆ ಮತ್ತು ಬುದ್ಧಿಮಾತಿಗೆ ಧನ್ಯವಾದ. ಆದರೂ, ನಾನು ಚಿಂತಿಸುವುದಿಲ್ಲ. 91 00:06:01,840 --> 00:06:05,600 ಒಂದೆರಡು ಪ್ರಶ್ನೆಗಳನ್ನು ಕೇಳಿದ್ದಕ್ಕೆ ಏನು ತೊಂದರೆ ಆಗುತ್ತೆ? 92 00:07:34,320 --> 00:07:36,320 ಅಧ್ಯಾಯ 1: ಆಗಮನ 93 00:07:46,440 --> 00:07:48,320 ಗುಡ್ ಒಮೆನ್ಸ್ 94 00:07:56,720 --> 00:07:58,360 ಲಂಡನ್ 95 00:07:58,760 --> 00:08:00,200 ಇಂದಿನ ದಿನ 96 00:08:07,760 --> 00:08:08,960 ಮುಚ್ಚಿದೆ 97 00:08:18,240 --> 00:08:20,120 "ಪ್ರಿಯ ಫೆಲ್ ಅವರೇ. 98 00:08:20,200 --> 00:08:23,680 "ನಿಮ್ಮ ಬಳಿ ವಿಷಯವೊಂದು ಮಾತನಾಡುವುದಿದೆ 99 00:08:23,760 --> 00:08:27,200 "ಸ್ವಲ್ಪ... ತುರ್ತು ವಿಷಯ" 100 00:08:27,280 --> 00:08:28,680 ತುರ್ತು ವಿಷಯ. 101 00:08:28,760 --> 00:08:31,400 "ಇಂತಿ ನಿಮ್ಮ ವಿಶ್ವಾಸಿ, ಮ್ಯಾಗಿ" 102 00:08:37,280 --> 00:08:38,880 ಹಲೋ, ಮ್ಯಾಗಿ. 103 00:08:39,640 --> 00:08:40,840 ನಿನ್ನ ಪತ್ರ ಸಿಕ್ಕಿತು. 104 00:08:42,520 --> 00:08:46,200 ನೀವು... ಈ ಕೆಲ ವರ್ಷಗಳು ಕಠಿಣವಾಗಿವೆ 105 00:08:46,280 --> 00:08:49,600 ಲಾಕ್ ಡೌನ್ ನಿಂದ, ಆನ್ಲೈನ್ ಆರ್ಡರ್ ಗಳು ಕೂಡ ಇಲ್ಲದೆ. 106 00:08:50,600 --> 00:08:52,880 ಎರಡು ವಾರಗಳಲ್ಲಿ ಇಲ್ಲಿಂದ ಹೋಗಿಬಿಡುತ್ತೇನೆ. 107 00:08:52,960 --> 00:08:54,360 "ಹೋಗಿಬಿಡುತ್ತೇನೆ"? 108 00:08:54,880 --> 00:08:57,760 ಯಾಕೆ? ನಿನಗಿಲ್ಲಿ ಇಷ್ಟವಿಲ್ಲವೇ? 109 00:08:57,880 --> 00:08:59,880 ಫೆಲ್ ಅವರೇ, ಈ ಅಂಗಡಿ ತುಂಬಾ ಇಷ್ಟ ನನಗೆ. 110 00:09:00,000 --> 00:09:02,160 ಮಗುವಿದ್ದಾಗಲಿಂದಲೂ. 111 00:09:02,240 --> 00:09:04,720 ಆದರೆ ನಾನು ತಿಂಗಳುಗಟ್ಟಳೆ ಬಾಡಿಗೆ ಕೊಟ್ಟಿಲ್ಲ. 112 00:09:04,760 --> 00:09:08,600 ಹಾಗಾದರೆ ಅದು ನನ್ನ ತಪ್ಪಲ್ಲವೇ, ಬಾಡಿಗೆ ತೆಗೆದುಕೊಳ್ಳದೇ ಇರೋದು. 113 00:09:08,640 --> 00:09:11,880 ಅಷ್ಟೇ. ಈಗ, ನೀನು ನನಗಾಗಿ ರಷ್ಯನ್ ಶಾಸ್ತ್ರೀಯ ಸಂಗೀತಗಳ ರೆಕಾರ್ಡ್ 114 00:09:12,000 --> 00:09:14,480 ತರುವವಳಿದ್ದೆಯಲ್ಲ? 115 00:09:15,160 --> 00:09:16,640 ಬಾಡಿಗೆ ಕಟ್ಟಕ್ಕಾಗಲ್ಲ. 116 00:09:16,720 --> 00:09:19,640 ಕ್ಷಮಿಸಿ. ಮುಂದಿನ ವಾರ ಹೋಗಿಬಿಡುತ್ತೇನೆ. 117 00:09:19,720 --> 00:09:21,880 ಎಲ್ಲವನ್ನೂ ಪ್ಯಾಕ್ ಮಾಡಬೇಕು ಅಷ್ಟೇ. 118 00:09:21,960 --> 00:09:25,480 ಮ್ಯಾಗಿ, ನೀನು ಹೊರಟೋದ್ರೆ ನನಗೆ ರೆಕಾರ್ಡ್ ಗಳನ್ನು ಯಾರು ಕೊಡುತ್ತಾರೆ. 119 00:09:26,080 --> 00:09:29,200 ಹಳೆಯ ಹಾಡುಗಳ ರೆಕಾರ್ಡ್ ಸಿಕ್ಕೋದು ತುಂಬಾ ಕಷ್ಟ. 120 00:09:29,960 --> 00:09:32,080 ಎಲ್ಲಿ ಹುಡುಕಬೇಕು ಅಂತ ಕೂಡ ಗೊತ್ತಿಲ್ಲ ನನಗೆ. 121 00:09:32,160 --> 00:09:33,600 ನನ್ನ ಹತ್ತಿರ ದುಡ್ಡಿಲ್ಲ. 122 00:09:35,000 --> 00:09:36,240 ಮ್ಯಾಗಿ... 123 00:09:36,880 --> 00:09:42,160 ನಾನು ಈ ರೆಕಾರ್ಡ್ ಗಳನ್ನು ತಗೊಂಡು 124 00:09:42,240 --> 00:09:45,480 ನಿನಗೆ ದುಡ್ಡು ಕೊಡದೆ ಇದ್ದರೆ, ಸರಿ ಹೋಗುತ್ತೆ ಅಲ್ವಾ? 125 00:09:45,520 --> 00:09:47,640 ನಾನು ನಿಮಗೆ ಲಕ್ಷಾಂತರ ರೂಪಾಯಿ ಕೊಡಬೇಕು. 126 00:09:47,720 --> 00:09:50,480 ಈ ರೆಕಾರ್ಡ್ ಗಳ ದುಡ್ಡು ಕೇವಲ 500 ರೂಪಾಯಿ. 127 00:09:50,520 --> 00:09:53,320 500 ಅಲ್ಲ, 600 ರೂಪಾಯಿ. 128 00:09:53,400 --> 00:09:56,880 ಎಂಟು ತಿಂಗಳ ಬಾಡಿಗೆ ಕ್ಷಮಿಸುವುದಕ್ಕಾಗುತ್ತಾ? 129 00:09:56,960 --> 00:09:59,080 ಆಗುತ್ತೆ, ನಾನು ಸುಲಭವಾಗಿ ಕ್ಷಮಿಸ್ತೀನಿ. 130 00:09:59,160 --> 00:10:02,360 ಇಷ್ಟ ಕೂಡ ಕ್ಷಮಿಸೊಕ್ಕೆ. ನೀನು ನಿನ್ನ ಬಾಡಿಗೆ ಕೊಟ್ಟಾಯಿತು. 131 00:10:02,440 --> 00:10:05,880 ನನ್ನ ಇಷ್ಟದ ರೆಕಾರ್ಡ್ ಸಿಕ್ಕಿತು. ಇನ್ನು ಮುಂದಿನ ೨೧ ನಿಮಿಷ 132 00:10:05,960 --> 00:10:07,520 ಏನ್ ಮಾಡ್ತೀನಿ ಅಂತ ಗೊತ್ತು. 133 00:10:32,840 --> 00:10:36,720 ಕೊಳಲಿನಿಂದ ಹೊರಹೊಮ್ಮಲಿದೆ ಸುಂದರ ಸಂಗೀತ. 134 00:10:38,600 --> 00:10:39,440 ಏನು? 135 00:10:41,040 --> 00:10:42,400 ಕೊಳಲು, 136 00:10:43,120 --> 00:10:45,720 ಅದರಿಂದ ಹೊರಹೊಮ್ಮಲಿದೆ ಸುಂದರ ಸಂಗೀತ. 137 00:10:47,080 --> 00:10:48,480 ತಪ್ಪು ಜಾಗಕ್ಕೆ ಬಂದಿದ್ದೀಯ. 138 00:10:48,960 --> 00:10:52,160 ನಿನಗೆ ಅಜರ್ಬಾಯ್ಜನ್ ದ ಜನರಲ್ ಬೇಕಿರುವುದು. ಅವನು ಅಲ್ಲಿದ್ದಾನೆ. 139 00:10:59,960 --> 00:11:01,320 ನಿನ್ನ ಪತ್ರ ತಂದಿದ್ದೇನೆ. 140 00:11:01,920 --> 00:11:03,280 ಏನಾದರೂ ರುಚಿಕರ ವಿಷಯ? 141 00:11:04,720 --> 00:11:05,720 ಕೇವಲ ಬಿಲ್ ಗಳಷ್ಟೇ. 142 00:11:06,600 --> 00:11:09,840 ಪತ್ರಗಳನ್ನು ನಿನ್ನ ಗಾಡಿಗೆ ಏಕೆ ಕಳುಹಿಸುವುದಿಲ್ಲ, ನನಗರ್ಥವಾಗಲ್ಲ. 143 00:11:09,920 --> 00:11:12,960 -ನರಕದ ಆರ್ಥಿಕ ವಿಭಾಗಕ್ಕೆ ಕಳಿಸಬೇಕಿತ್ತು. -ಕಳಿಸಿದ್ದೆ. 144 00:11:13,400 --> 00:11:16,360 ನನ್ನ ಸಹಿ ಸಾಲುವುದಿಲ್ಲ ಎಂದರು. 145 00:11:16,440 --> 00:11:18,280 ಅವುಗಳಿಗೆ ಬ್ರೆಡ್ ತಿನ್ನಿಸಬೇಡ, ಮೂರ್ಖ! 146 00:11:18,360 --> 00:11:21,240 -ಅವುಗಳು ಅದನ್ನು ತಿನ್ನಬಾರದು. -ಮತ್ತೇನು ಕೊಡಬೇಕು? 147 00:11:21,320 --> 00:11:23,120 -ಅವರಿಗೆ ಗೊತ್ತೇ? -ಬಾತುಕೋಳಿಗಳಿಗಾ? 148 00:11:23,200 --> 00:11:24,400 ಕೆಳಗಿನವರಿಗೆ. 149 00:11:24,480 --> 00:11:26,600 ನೀನು ನನ್ನನ್ನು ಭೇಟಿಯಾಗುವ ವಿಷಯ ಗೊತ್ತೇ? 150 00:11:26,680 --> 00:11:30,240 ಕ್ರೌಲಿ. ನಾನೀಗ ಲಂಡನ್ನಿನಲ್ಲಿ ನರಕದ ಪ್ರತಿನಿಧಿ. 151 00:11:31,560 --> 00:11:34,600 -ಕೆಲಸ ಹೇಗೆ ಆಗುತ್ತೆ ಎಂಬುದು ನರಕಕ್ಕೆ ಬೇಕಿಲ್ಲ. -ಹೂಂ, ನೆನಪಿದೆ. 152 00:11:34,680 --> 00:11:37,000 ಅವರಿಗೆ ಕೆಲಸ ಆದರೆ ಸಾಕು. 153 00:11:39,120 --> 00:11:41,040 ಯಾವಾಗಲಾದರೂ ಇದೆಲ್ಲಾ ಯಾಕೆ ಅನಿಸಿದೆಯಾ? 154 00:11:41,120 --> 00:11:42,320 ಏನು ನಿನ್ನ ಅರ್ಥ? 155 00:11:42,880 --> 00:11:44,480 ಇದೆಲ್ಲಾ ಯಾಕೆ ಬೇಕು? 156 00:11:45,160 --> 00:11:47,920 ಸ್ವರ್ಗ, ನರಕ, ರಾಕ್ಷಸರು, ದೇವತೆಗಳು... 157 00:11:48,480 --> 00:11:52,240 ಇದು... ಇದೆಲ್ಲಾ ವ್ಯರ್ಥ ಅಲ್ವಾ? 158 00:11:54,120 --> 00:11:56,480 -ಯಾವಾಗಲೂ ಇಷ್ಟು ಸುಲಭ ಇತ್ತಾ ಇದು? -ಸುಲಭ? 159 00:11:56,560 --> 00:11:59,360 ನಾನು ಕ್ಲಿಷ್ಟಕರ ತಂತ್ರಗಳನ್ನೆಲ್ಲಾ ಯೋಚಿಸುತ್ತೇನೆ 160 00:11:59,440 --> 00:12:02,000 ಭಯ ಮತ್ತು ದುಃಖ ಹರಡಿಸಲು, 161 00:12:02,080 --> 00:12:04,840 ಆದರೆ ನಾನು ಅವುಗಳನ್ನು ಉಪಯೋಗಿಸುವ ಮೊದಲು, 162 00:12:04,920 --> 00:12:06,560 ಅವರೇ ಏನಾದರೂ ಮಾಡಿಕೊಂಡಿರುತ್ತಾರೆ 163 00:12:06,640 --> 00:12:09,600 ನಾನು ಯೋಚಿಸಿದ್ದಕ್ಕಿಂತಲೂ ಹೆಚ್ಚು ದುಃಖಕರವಾದಂತಹದ್ದನ್ನು. 164 00:12:09,680 --> 00:12:11,440 ಹೂಂ, ಸುಲಭವೇ ಇತ್ತು ಯಾವಾಗಲೂ. 165 00:12:13,680 --> 00:12:15,600 ಏನಾದರೂ ನನಗೆ ಗೊತ್ತಿರಬೇಕೇ? 166 00:12:15,680 --> 00:12:17,600 ನೀನಿನ್ನೂ ಯಾರಿಗೂ ಬೇಡದವನು. 167 00:12:18,880 --> 00:12:21,880 ಬೀಲ್ಜಬಬ್ ಕೆಲವು ಕೆಳಮಟ್ಟದ ರಾಕ್ಷಸರನ್ನು ಉಪವಾಸ ಕೆಡವಿದ್ದಾನೆ, 168 00:12:23,240 --> 00:12:25,560 ಏನೋ ಆಗಲಿದೆ ಮೇಲೆ. 169 00:12:26,880 --> 00:12:27,840 ಎಲ್ಲಿ ಮೇಲೆ? 170 00:12:28,720 --> 00:12:30,280 ಮೇಲೆ... ಮೇಲೆ. 171 00:12:32,520 --> 00:12:33,560 ಏನೋ ದೊಡ್ಡದಾ? 172 00:12:34,160 --> 00:12:37,480 ಗೊತ್ತಿಲ್ಲ. ಸುದ್ದಿ ಬಂತು 173 00:12:37,560 --> 00:12:40,320 ಮೇಲೆ ಎಲ್ಲಾ ಸರಿ ಇಲ್ಲ ಎಂದು. 174 00:12:41,200 --> 00:12:42,560 ನಿನಗೆ ಏನಾದರೂ ಗೊತ್ತಾದರೆ 175 00:12:42,640 --> 00:12:45,560 ನಿನ್ನ ಪುಸ್ತಕದ ಅಂಗಡಿಯವನಿಂದ, ನನಗೆ ಹೇಳ್ತೀಯಾ? 176 00:12:45,640 --> 00:12:47,880 ಇಲ್ಲ. ಸ್ವರ್ಗ ಈಗ ಅವನನ್ನು ಮಾತಾಡಿಸುತ್ತಿಲ್ಲ. 177 00:12:48,440 --> 00:12:51,640 ನನಗೇನಾದರೂ ಉಪಯುಕ್ತ ವಿಷಯ ಗೊತ್ತಾದರೆ, 178 00:12:52,360 --> 00:12:54,720 ನಿನಗೆ ಹೇಳ್ತೀನಿ, ಬದಲಿಗೆ ನೀನು, 179 00:12:54,800 --> 00:12:57,240 ನನಗೆ ಬೇಕಾಗಿರುವ ವಿಷಯಗಳನ್ನು ಹೇಳು. 180 00:12:57,320 --> 00:12:59,160 ಏನಾದರೂ ವಿಷಯ ಇದೆಯಾ? 181 00:13:00,520 --> 00:13:01,920 ಮೊಳಕೆ ಕಾಳುಗಳು. 182 00:13:02,720 --> 00:13:03,720 ಏನು? 183 00:13:03,800 --> 00:13:06,720 ಬಾತುಕೊಳಿಗಳು ಅದನ್ನೇ ತಿನ್ನುವುದು, ಮೊಳಕೆ ಕಾಳುಗಳು. 184 00:13:06,800 --> 00:13:10,520 ಅವುಗಳಿಗೆ ತುಂಬಾ ಇಷ್ಟ, ಒಳ್ಳೆಯದು ಕೂಡ. 185 00:13:22,200 --> 00:13:23,440 ಹಲೋ. 186 00:13:24,800 --> 00:13:26,400 ಏನಾದರೂ ಇಷ್ಟ ಆಯಿತಾ? 187 00:13:26,760 --> 00:13:28,960 ನನಗೆ... ಹೂಂ. ಕಾಫಿ! 188 00:13:29,560 --> 00:13:33,800 ಯಾವಾಗಿನoತೆ, ಅಲ್ವಾ? ಹೇಳಬೇಡ. ನೆನಪಿದೆ. ಕಡಿಮೆ ಹಾಲಿನ ಕಾಫಿ. 189 00:13:33,880 --> 00:13:35,400 ನಿನಗೆ ನೆನಪಿದೆ. 190 00:13:35,480 --> 00:13:38,000 ಈ ತಲೆಯಲ್ಲಿ ಎಷ್ಟೋ ಜನರು ತುಂಬಿಕೊಂಡಿದ್ದಾರೆ, ಅವರ ಕಾಫಿ ಕೂಡ, 191 00:13:38,080 --> 00:13:40,280 ಆದರೆ ನೆನಪಿರೋದು ಯಾವಾಗಲೂ ಬರೋರು ಮಾತ್ರ. 192 00:13:40,360 --> 00:13:42,160 ಹೂಂ, ಸರಿ. ಅದು ನಾನು. 193 00:13:42,240 --> 00:13:43,840 ನೀನು ರೆಕಾರ್ಡ್ ಅಂಗಡಿಯವಳಲ್ವಾ? 194 00:13:43,920 --> 00:13:46,840 ಈಗಿನ ಕಾಲದಲ್ಲಿ ಯಾರು ರೆಕಾರ್ಡ್ ಖರೀದಿಸುತ್ತಾರೆ? 195 00:13:47,160 --> 00:13:48,560 ಅಯ್ಯೋ ದೇವರೇ! 196 00:13:49,120 --> 00:13:50,280 -ಏನು? -ನೋಡಿಲ್ಲಿ. 197 00:13:54,560 --> 00:13:56,840 ಅಯ್ಯೋ ದೇವರೇ! 198 00:14:55,880 --> 00:14:57,080 ಹೇಗಿದ್ದೀಯಾ? 199 00:15:01,240 --> 00:15:02,920 -ಏನು... -ಏನು ಮಾಡ್ತಿದ್ದೀನಿ ಇಲ್ಲಿ? 200 00:15:03,000 --> 00:15:04,000 ಹೂಂ. 201 00:15:05,840 --> 00:15:08,720 ಏನು ಮಾಡ್ತಾ ಇದ್ದೀಯ ಇಲ್ಲಿ ನೀನು? 202 00:15:08,800 --> 00:15:10,800 ಗೊತ್ತಿಲ್ಲ, ಅದಕ್ಕೇ ನಿನ್ನ ಕೇಳಿದ್ದು. 203 00:15:11,760 --> 00:15:14,880 -ಗೊತ್ತಿಲ್ವಾ? -ಇಲ್ಲ, ಆದರೆ ಗೊತ್ತಾದರೆ ಚೆನ್ನಾಗಿರುತ್ತೆ. 204 00:15:14,960 --> 00:15:19,320 ಇಲ್ಲಿ ಅಂದರೆ ಎಲ್ಲಿ ಅಂತ ಗೊತ್ತಾದರೆ ಇನ್ನೂ ಚೆನ್ನಾಗಿರುತ್ತೆ. 205 00:15:19,400 --> 00:15:24,040 ಹಾಗೇ, ನೀನ್ಯಾರು ಮತ್ತು ನಾನ್ಯಾರು ಅಂತ. 206 00:15:24,520 --> 00:15:26,400 ನೀನು ಬಟ್ಟೆ ಯಾಕೆ ಹಾಕಿಲ್ಲ ಅಂತ ಕೂಡ. 207 00:15:26,800 --> 00:15:28,200 ಹಾಕಿಲ್ಲ ಅಂತ ಯಾರು ಹೇಳಿದ್ದು? 208 00:15:29,040 --> 00:15:30,920 ಯಾರು... ಕಾಣುತ್ತಿದೆಯಲ್ಲಾ ಅದು? 209 00:15:31,600 --> 00:15:33,400 ಹೂಂ, ಅದು ನಿಜ. 210 00:15:34,960 --> 00:15:36,520 -ಒಳಗೆ ಬರಲಾ? -ಇಲ್ಲ. 211 00:15:39,320 --> 00:15:40,320 ಸರಿ. 212 00:15:44,240 --> 00:15:45,240 ಸರಿ. 213 00:15:45,320 --> 00:15:48,000 ಬಾ... ಒಳಗೆ ಬಾ. 214 00:15:53,320 --> 00:15:55,960 -ದಿನಾ ನೋಡಲು ಸಿಗುವುದಲ್ಲ ಇದು. -ಹೂಂ. 215 00:15:56,040 --> 00:15:59,520 ಹೊಸ ಸರ್ವೀಸ್ ಇರಬೇಕು. ನಗ್ನ ಹಂಚಿಕೆ ಕಂಪನಿ. 216 00:16:00,480 --> 00:16:02,200 -ನೀನೇ ಹುಟ್ಟುಹಾಕಿದ ಹೆಸರಾ? -ಹೌದು. 217 00:16:04,320 --> 00:16:06,840 ನಾನು ಮ್ಯಾಗಿ. ಆ ರೆಕಾರ್ಡ್ ಅಂಗಡಿ ನನ್ನದೇ. 218 00:16:06,920 --> 00:16:09,320 ನನಗೆ ಗೊತ್ತು ನೀನ್ಯಾರು ಅಂತ. ಕಡಿಮೆ ಹಾಲಿನ ಕಾಫಿಯವಳು. 219 00:16:09,840 --> 00:16:10,880 ನನ್ನ ಹೆಸರು ನೀನಾ. 220 00:16:12,400 --> 00:16:17,400 ನರಕ ಈ ಕೆಲಸ ಮಾಡಿಸಿದೆ ಎನ್ನುತ್ತಿಲ್ಲ ನಾನು, ಯಾರೋ ಮಾಡಿದ್ದಾರೆ ಎಂದೂ ಅಲ್ಲ. 221 00:16:17,920 --> 00:16:20,800 ಆದರೆ ಅವನಿಗೆ ಯಾರಾದರೂ ಸಹಾಯ ಮಾಡುವುದು ಕಂಡುಬಂದಲ್ಲಿ, 222 00:16:21,400 --> 00:16:24,600 -ತೀವ್ರ ನಿರ್ಬಂಧಗಳನ್ನು ಹೇರಬೇಕಾಗುತ್ತದೆ. -ತೀವ್ರ ನಿರ್ಬಂಧಗಳೇ? 223 00:16:24,680 --> 00:16:25,960 ಹೌದು. 224 00:16:26,680 --> 00:16:28,400 -ಜೀವನದ ಪುಸ್ತಕ. -ಈಗಲೇ ನೋಡುವೆ. 225 00:16:29,360 --> 00:16:30,800 ಸಂತೋಷ. 226 00:16:32,040 --> 00:16:34,880 ಅದರ ಹೆಸರು ಕಾಫಿ. ಕುಡಿ ಅದನ್ನು. 227 00:16:35,000 --> 00:16:38,400 ನಿನಗೆ ನೀನ್ಯಾರು ಅಂತ ಗೊತ್ತಿಲ್ಲ, ಅಲ್ವಾ? 228 00:16:39,080 --> 00:16:40,080 ಹೂಂ. 229 00:16:42,840 --> 00:16:46,680 ನಾನು ನಾನೇ. ಆದರೆ "ನಾನು" ಯಾರಂತ ಗೊತ್ತಿಲ್ಲ. 230 00:16:48,000 --> 00:16:50,680 -ಸರಿ. -ಆದರೆ ನಿನಗೆ ನಾನ್ಯಾರು ಅಂತ ಗೊತ್ತು. 231 00:16:51,560 --> 00:16:53,440 -ನೀನು ಗುರುತು ಹಿಡಿದೆ ನನ್ನ. -ನನಗೆ... 232 00:16:54,920 --> 00:16:58,760 ನಿನ್ನಂತೆ ಕಾಣುವವರೊಬ್ಬರು ಗೊತ್ತು. 233 00:16:59,560 --> 00:17:01,040 ಅದು ನಾನೇ ಇರಬೇಕು, ಹಾಗಿದ್ದರೆ. 234 00:17:02,080 --> 00:17:04,920 ನೋಡಿಯೇ ಅಲ್ವಾ ಜನರನ್ನು ಗುರುತಿಸೋದು. 235 00:17:05,880 --> 00:17:10,079 ಆದರೆ ನಿನಗೆ ನಾನ್ಯಾರು ಅಂತ ಗೊತ್ತಿಲ್ಲ. 236 00:17:14,160 --> 00:17:16,200 ಇಲ್ಲ, ಕ್ಷಮಿಸಿ. 237 00:17:17,560 --> 00:17:21,319 ಮತ್ತೆ ನನ್ನ ಅಂಗಡಿಗೆ ಯಾಕೆ ಬಂದೆ? 238 00:17:21,400 --> 00:17:24,000 ಗೊತ್ತಿಲ್ಲ. ಬರಬೇಕು ಅನ್ನಿಸಿತು ಬಂದೆ, ಅಷ್ಟೇ. 239 00:17:24,079 --> 00:17:27,200 ಗೊತ್ತಲ್ಲ? ಹೇಗೆ ನಿಮಗೆ ಏನೂ ಗೊತ್ತಿಲ್ಲದೆ ಇದ್ದಾಗ 240 00:17:27,280 --> 00:17:31,040 ಒಬ್ಬ ಮನುಷ್ಯನ ಬಳಿ ಹೋದರೆ 241 00:17:31,080 --> 00:17:33,800 ಎಲ್ಲವೂ ಸರಿಯಾಗುತ್ತೆ ಅನ್ನಿಸುತ್ತಲ್ಲ, ಹಾಗೆ. 242 00:17:34,680 --> 00:17:36,240 ಇಲ್ಲ, ಖಂಡಿತ ಗೊತ್ತಿಲ್ಲ. 243 00:17:36,320 --> 00:17:38,760 ಇದುವರೆಗೂ ಹಾಗೆ ಆಗಿಲ್ಲ. 244 00:17:38,800 --> 00:17:40,080 ಯಾಕೆ ಹಾಗೆ ಹೇಳ್ತಾ ಇದ್ದೀಯ? 245 00:17:40,560 --> 00:17:42,680 ಅದು ನನ್ನ ಮಿದುಳು ಅನಿಸುತ್ತೆ. 246 00:17:42,760 --> 00:17:44,280 ಆದರೆ ಖಚಿತವಾಗಿ ಗೊತ್ತಿಲ್ಲ. 247 00:17:44,320 --> 00:17:47,480 ಅದು ಬಿಡು, ಹಾಗೆ ಅನ್ನಿಸಿತು, ಇಲ್ಲಿಗೆ ಬಂದರೆ 248 00:17:47,560 --> 00:17:50,440 ನನ್ನ ಜೊತೆ ಏನೂ ಕೆಟ್ಟದು ನಡೆಯಲ್ಲ ಅಂತ. 249 00:17:51,800 --> 00:17:53,800 "ಕೆಟ್ಟದು"? 250 00:17:56,960 --> 00:17:58,680 ಇದು... ಇದು ಅದ್ಭುತವಾಗಿದೆ. 251 00:17:59,240 --> 00:18:01,800 -ಏನು ಕೆಟ್ಟದು? -ಇದು ಇಲ್ಲಿ ಏನೂ ಮಾಡ್ತಾ ಇದೆ 252 00:18:01,880 --> 00:18:04,920 ಮತ್ತೆ ಇಲ್ಲಿ ಏನೂ ಮಾಡ್ತಾ ಇದೆ, ಆದರೆ ಎರಡೂ ಬೇರೆ ಬೇರೆ. 253 00:18:05,000 --> 00:18:08,240 -ಆದರೆ ಎರಡೂ ಚೆನ್ನಾಗಿವೆ. -ದಯವಿಟ್ಟು, ಹೇಳು 254 00:18:08,320 --> 00:18:11,080 -ಏನು ಕೆಟ್ಟದು? -ಏನು? ನನಗೆ ಗೊತ್ತಿಲ್ಲ. 255 00:18:11,200 --> 00:18:13,200 ಅದು ತುಂಬಾ ಕೆಟ್ಟದ್ದು ಅಂತ ಗೊತ್ತು 256 00:18:13,280 --> 00:18:16,400 ಅದಕ್ಕೇ ನಾನು ಇಲ್ಲಿಗೆ ಬಂದು ನಿನಗೆ ಆ ವಸ್ತುವನ್ನು ಕೊಡಬೇಕಿತ್ತು. 257 00:18:20,000 --> 00:18:20,800 ಏನು? 258 00:18:20,920 --> 00:18:22,800 ಈಗ ಇದು ಇಲ್ಲಿ ಏನೋ ಮಾಡ್ತಾ ಇದೆ. 259 00:18:23,680 --> 00:18:25,320 ಇದು ಅವೆರಡಕ್ಕಿಂತ ಚೆನ್ನಾಗಿದೆ. 260 00:18:25,440 --> 00:18:26,800 ಎಂತಹ ವಸ್ತು? 261 00:18:27,880 --> 00:18:29,880 ಏನು ಕೊಡಬೇಕಿತ್ತು ನೀನು ನನಗೆ? 262 00:18:31,560 --> 00:18:35,480 ನನ್ನ... ನನ್ನ ಬಳಿ ಏನೂ ಇಲ್ಲ ಅಲ್ವಾ? ಅದು ಮುಖ್ಯವಾದ ವಸ್ತುನಾ? 263 00:18:35,560 --> 00:18:36,480 ಅದು ನೀನು... 264 00:18:38,320 --> 00:18:39,680 ನೀನೇ ಹೇಳಿದ್ದು... 265 00:18:39,760 --> 00:18:42,960 ಆ ವಸ್ತುವಿನಿಂದಲೇ ತಡೆಯಕ್ಕೆ ಆಗೋದು ಕೆಟ್ಟದ್ದನ್ನು ಅಂತ. 266 00:18:43,480 --> 00:18:44,520 ನಿಜವಾಗಲೂ? ಏನು? 267 00:18:44,560 --> 00:18:46,200 ನನಗೆ ಗೊತ್ತಿಲ್ಲ! 268 00:18:46,280 --> 00:18:49,040 ಸರಿ ಹಾಗಿದ್ದರೆ, ಏನೂ ತೊಂದರೆ ಇಲ್ಲ ಅನಿಸುತ್ತೆ. 269 00:18:49,080 --> 00:18:51,440 ಎಲ್ಲವೂ ಕೊನೆಯಲ್ಲಿ ಹೇಗೂ ಸರಿ ಆಗಿಯೇ ಆಗುತ್ತವೆ. 270 00:18:51,520 --> 00:18:54,440 ಒಮ್ಮೆ ಹೀಗೇ, ನನಗೆ ಚಳಿಯಾಗುತ್ತಿತ್ತು. 271 00:18:56,320 --> 00:18:58,080 ಈಗ ನನ್ನ ಬಳಿ ಬ್ಲಾಂಕೆಟ್ ಇದೆ. 272 00:18:59,400 --> 00:19:00,400 ಮತ್ತೊಮ್ಮೆ, 273 00:19:00,480 --> 00:19:02,640 ನನ್ನ ಕೈಗಳು ನೋಯುತ್ತಿದ್ದವು, 274 00:19:02,720 --> 00:19:05,040 ಯಾರಿಗೋ ಪೆಟ್ಟಿಗೆ ತೆಗೆದುಕೊಂಡು ಹೋಗುತ್ತಿದ್ದಾಗ. 275 00:19:05,080 --> 00:19:07,000 ಈಗ ಕೈಗಳು ಸರಿ ಇವೆ. 276 00:19:08,480 --> 00:19:09,720 ಪೆಟ್ಟಿಗೆ. 277 00:19:13,080 --> 00:19:15,160 ಇದು ಮೇಲ್ಬದಿ 278 00:19:30,160 --> 00:19:33,400 ಬೇಡದೆ ಇರೋದೇ ಎಲ್ಲಾ. 279 00:19:36,960 --> 00:19:38,200 ಶ್ಯಾಕ್ಸ್ 280 00:19:38,920 --> 00:19:41,000 -ಹೇಳು. -ನಿನಗೆ ಗೊತ್ತಿರಬೇಕಾದ ವಿಷಯ. 281 00:19:41,080 --> 00:19:42,720 ಎಲ್ಲಾ ರಾಕ್ಷಸರೂ ಮಾಡೋದೇ. 282 00:19:42,800 --> 00:19:44,760 ಒಂದೋ ಕರೆ ಮಾಡಿ ಮಾತಾಡು, 283 00:19:44,800 --> 00:19:47,080 ಇಲ್ಲವೇ ಪ್ರತ್ಯಕ್ಷವಾಗು. ಎರಡೂ ಬೇಡ. 284 00:19:48,240 --> 00:19:51,000 -ಯಾಕೆ? -ನಂಬು ನನ್ನ. 285 00:19:51,080 --> 00:19:52,080 ಸರಿ. 286 00:19:53,080 --> 00:19:57,640 ಮೇಲೆ ನಡೆಯುತ್ತಿರುವ ವಿಷಯಗಳ ಬಗ್ಗೆ ಇನ್ನೂ ಸ್ವಲ್ಪ ಮಾಹಿತಿ ಬಂದಿದೆ. 287 00:19:57,720 --> 00:20:00,720 ಏನೋ ಗೇಬ್ರಿಯಲ್ ಗೆ ಸಂಬಂಧ ಪಟ್ಟಿದ್ದು. 288 00:20:00,800 --> 00:20:04,440 ರಾಜಕುಮಾರ ಏನೋ ತೊಂದರೆಯಲ್ಲಿದ್ದಾನೆ. ಪಾಪ. 289 00:20:04,520 --> 00:20:06,000 ಹೌದಾ? ಯಾಕೆ? 290 00:20:06,560 --> 00:20:09,000 ವ್ಯಂಗ್ಯ ಮಾಡಿದ್ದು. ಗೊತ್ತೂ ಆಗಲ್ಲ ನಿನಗೆ. 291 00:20:09,080 --> 00:20:10,080 ಅಷ್ಟೇನಾ ವಿಷಯ? 292 00:20:20,400 --> 00:20:22,000 ಇದರೊಳಗೆ ಏನೂ ಇಲ್ಲ. 293 00:20:22,760 --> 00:20:24,320 ಏನು ತರಬೇಕು ಅಂತಿದ್ದೆ ನೀನು ನನಗೆ? 294 00:20:25,480 --> 00:20:27,720 ಚೆನ್ನಾಗಿ ತಮಾಷೆ ಮಾಡ್ತೀಯ. ನನಗೆ ನೀನಿಷ್ಟ ಆದೆ. 295 00:20:30,560 --> 00:20:32,640 ಧನ್ಯವಾದ. ನಾನು... 296 00:20:36,000 --> 00:20:37,880 ನೀನೇನೋ ತರಬೇಕು ಅಂತಿದ್ದೆ ಅಂದೆ. 297 00:20:37,960 --> 00:20:39,320 ನಾನಾ? 298 00:20:39,440 --> 00:20:42,000 -ಇರಬಹುದೇನೋ. -ಗೇಬ್ರಿಯಲ್. ನೋಡು, ದಯವಿಟ್ಟು... 299 00:20:42,080 --> 00:20:43,320 ಗಮನ ಕೊಡು ಸ್ವಲ್ಪ. 300 00:20:43,400 --> 00:20:46,560 ಈ ಪೆಟ್ಟಿಗೆ ಇಲ್ಲಿಗೆ ಯಾಕೆ ತಂದೆ? 301 00:20:47,800 --> 00:20:49,040 "ಗೇಬ್ರಿಯಲ್" ಅಂದರೇನು? 302 00:20:49,760 --> 00:20:50,720 ನೀನು! 303 00:20:51,720 --> 00:20:53,320 ನನ್ನ ಪ್ರಕಾರ ನೀನು ಗೇಬ್ರಿಯಲ್. 304 00:20:53,400 --> 00:20:55,680 ಗೇಬ್ರಿಯಲ್. ಚೆನ್ನಾಗಿದೆ. ಇಷ್ಟ ಆಯಿತು ನನಗೆ. 305 00:20:56,160 --> 00:20:57,960 ಗೇಬ್ರಿಯಲ್. 306 00:20:58,040 --> 00:21:00,320 ಆದರೆ... ನೀನು, ಇಲ್ಲ. 307 00:21:00,440 --> 00:21:03,520 ಇಲ್ಲ. ಯಾರಾದರೂ ಕೇಳಿದರೆ ನೀನು ಗೇಬ್ರಿಯಲ್ ಅಲ್ಲ. 308 00:21:03,560 --> 00:21:04,800 ಸರಿ. 309 00:21:06,280 --> 00:21:07,800 ಮತ್ತೇನು ನಾನು? 310 00:21:08,440 --> 00:21:10,000 ನೀನು... 311 00:21:10,800 --> 00:21:11,920 ಲಾರ್ಡ್ ಜಿಮ್ ಜೋಸೆಫ್ ಕೋನ್ರಾಡ್ 312 00:21:12,400 --> 00:21:15,320 -ಜಿಮ್. -ಜಿಮ್. ಚೆನ್ನಾಗಿದೆ. ಇಷ್ಟ ಆಯಿತು ನನಗೆ. 313 00:21:15,440 --> 00:21:17,680 ಗೇಬ್ರಿಯಲ್. ಚಿಕ್ಕದಾಗಿ ಜಿಮ್. 314 00:21:17,760 --> 00:21:20,440 ಇಲ್ಲ, ಇಲ್ಲ. ಜೇಮ್ಸ್, ಚಿಕ್ಕದಾಗಿ ಜಿಮ್. 315 00:21:20,520 --> 00:21:22,520 ಜೇಮ್ಸ್. ಚೆನ್ನಾಗಿದೆ. ಇಷ್ಟ ಆಯಿತು ನನಗೆ. 316 00:21:22,560 --> 00:21:25,760 ಜೇಮ್ಸ್. ಚಿಕ್ಕದಾಗಿ ಗೇಬ್ರಿಯಲ್. ಇನ್ನೂ ಚಿಕ್ಕದಾಗಿ ಜಿಮ್. 317 00:21:25,800 --> 00:21:27,720 ಇಲ್ಲ. ಗೇಬ್ರಿಯಲ್ ನ ಮರೆತು ಬಿಡು. 318 00:21:28,560 --> 00:21:31,400 ಪ್ರಯತ್ನ ಪಡ್ತೀನಿ ಮರೆಯಕ್ಕೆ. ಆದರೆ ಸ್ವಲ್ಪ ಕಷ್ಟ. 319 00:21:32,280 --> 00:21:34,440 ನಿಜವಾಗಲೂ? ಸರಿ, ನೋಡೋಣ. 320 00:21:34,520 --> 00:21:37,040 ಈ ಪೆಟ್ಟಿಗೆಯಲ್ಲಿ ಏನಿತ್ತು ಹೇಳು. 321 00:21:41,920 --> 00:21:42,920 ಯಾವ ಪೆಟ್ಟಿಗೆ? 322 00:21:48,080 --> 00:21:50,160 ಹಲೋ, ನಾನು. ಮಾತಾಡಬೇಡ. 323 00:21:51,200 --> 00:21:53,320 -ಎಲ್ಲಿ ಹೋದೆ? -ಈಗ ಮಾತಾಡಬಹುದಾ? 324 00:21:53,400 --> 00:21:55,560 ಇಲ್ಲ. ಪುಸ್ತಕದ ಅಂಗಡಿಯ ಹತ್ತಿರ ಭೇಟಿಯಾಗು. 325 00:21:55,640 --> 00:21:57,880 ಕಾಫಿ ಅಂಗಡಿಯಲ್ಲಿ ಇರ್ತೀನಿ, 326 00:21:57,960 --> 00:21:59,640 -ರಸ್ತೆ ಬದಿಯಲ್ಲಿ. -ಒಂದೇ ನಿಮಿಷ. 327 00:22:11,000 --> 00:22:15,160 "ಅವನ ಬಾಯೊಳಗಿಂದ ಹೊಳೆಯುವ ಬೆಳಕು ಮತ್ತು ಬೆಂಕಿಯ ಕಿಡಿಗಳು ಹೊರಹೊಮ್ಮಿದವು" - ಜಾಬ್ 41:19 328 00:22:57,440 --> 00:22:59,400 ಸರಿ. ಏನು ಸಮಸ್ಯೆ ಆಯಿತು? 329 00:22:59,480 --> 00:23:01,360 ಯಾರು ಹೇಳಿದರು ಸಮಸ್ಯೆ ಆಯಿತು ಅಂತ? 330 00:23:01,480 --> 00:23:03,960 ನಿನ್ನ ಧ್ವನಿ ಹೇಳಿತು. ನೀನು ಮೂರೇ ಕಾರಣಕ್ಕೆ ಕರೆ ಮಾಡೋದು. 331 00:23:04,040 --> 00:23:08,160 ನೀರಸ ಅನಿಸಿದಾಗ, ಜಾಣ್ಮೆ ತೋರಿದಾಗ, ಇಲ್ಲವೇ ಸಮಸ್ಯೆ ಆದಾಗ. 332 00:23:08,240 --> 00:23:10,280 ಇದು ನಿನ್ನ "ಸಮಸ್ಯೆ ಆಗಿದೆ" ಧ್ವನಿ. 333 00:23:10,360 --> 00:23:13,640 ಜಾಣ್ಮೆ ತೋರಿಸೋದು ಒಳ್ಳೆಯ ವಿಷಯ ತಾನೇ. 334 00:23:13,720 --> 00:23:16,280 -ಸ್ವರ್ಗಕ್ಕಂತೂ ಹೇಳಕ್ಕೆ ಆಗ್ತಾ ಇಲ್ಲ. -ಹಲೋ. 335 00:23:16,360 --> 00:23:17,720 ಏನು ತರಲಿ ನಿಮಗೆ? 336 00:23:17,800 --> 00:23:20,760 ದೊಡ್ಡ ಕಪ್ ತಗೊಂಡು, ಅದರಲ್ಲಿ ಆರು ಕಪ್ ಕಾಫಿ ಹಾಕಿ ಕೊಡಿ. 337 00:23:20,840 --> 00:23:23,400 -ಅಷ್ಟೇ. -ಚೆನ್ನಾಗಿರುವಂತಿದೆ. 338 00:23:23,480 --> 00:23:25,360 -ಅದನ್ನು ಕುಡಿದರೆ ಸಮಾಧಾನ ಆಗುತ್ತಾ? -ಇಲ್ಲ. 339 00:23:25,440 --> 00:23:27,960 ನೀನಾ, ಸಮಾಧಾನ ಮಾಡುವಂತದ್ದು ಏನಿದೆ ನಿನ್ನ ಹತ್ತಿರ? 340 00:23:28,040 --> 00:23:29,040 ಚಾಕ್ಲೇಟ್ ಕೇಕ್? 341 00:23:30,280 --> 00:23:31,920 ಚಾಕ್ಲೇಟ್ ಕೇಕ್ ಕೊಡು, ಹಾಗಿದ್ರೆ. 342 00:23:32,000 --> 00:23:34,200 ನಿಮ್ಮ ನಗ್ನ ಸ್ನೇಹಿತ ಹೇಗಿದ್ದಾನೆ? 343 00:23:34,760 --> 00:23:37,080 ಅವನು... ಅವನು ನನ್ನ... 344 00:23:37,160 --> 00:23:39,160 ಅವನು ನಗ್ನವಾಗಂತೂ ಇಲ್ಲ ಈಗ. 345 00:23:39,240 --> 00:23:40,920 ನೀವು ರಸಿಕರು, ಫೆಲ್ ಅವರೇ. 346 00:23:42,320 --> 00:23:45,520 -ನೀವೂ ಪುಸ್ತಕ ಮಾರೋದಾ? -ಸತ್ತರೂ ಇಲ್ಲ. 347 00:23:45,600 --> 00:23:48,200 ಇದು... ಕ್ರೌಲಿ. 348 00:23:48,280 --> 00:23:52,320 -ಹಳೆಯ ಸ್ನೇಹಿತ. -ಸಂತಸವಾಯಿತು. 349 00:23:54,040 --> 00:23:57,720 ಕೇಳು, ಸ್ವರ್ಗದಲ್ಲಿ ಏನೋ ದೊಡ್ಡದು ನಡೀತಾ ಇದೆ. ನಿನಗೇನಾದರೂ ಗೊತ್ತಾ ಅದರ ಬಗ್ಗೆ? 350 00:23:57,800 --> 00:23:58,920 ಹೂಂ, ಸ್ವಲ್ಪ ಸ್ವಲ್ಪ. 351 00:23:59,000 --> 00:24:02,080 ಸರಿ, ನಿನ್ನ ಅಂಗಡಿಗೆ ಹೋಗಿ ಅದರ ಬಗ್ಗೆ ಮಾತಾಡೋಣವಾ? 352 00:24:02,160 --> 00:24:05,320 -ಯಾಕೆ, ಅಲ್ಲಿ ನಗ್ನ ವ್ಯಕ್ತಿ ಇದ್ದಾನೆ ಅಂತಾನಾ? -ಹಾಗಲ್ಲ. 353 00:24:05,400 --> 00:24:09,720 ಅದಕ್ಕೇನಾ ನನ್ನನ್ನು ನೀನು ಪುಸ್ತಕ ಅಂಗಡಿಗೆ ಕರೆದಿಲ್ಲ? 354 00:24:11,560 --> 00:24:13,680 ನನ್ನಿಂದ ಏನಾದರೂ ಸಹಾಯ ಬೇಕಾ? 355 00:24:28,800 --> 00:24:30,400 ಫೆಲ್ ಅವರೇ, ಅದು ಬಾಡಿಗೆ ಬಗ್ಗೆ, 356 00:24:30,480 --> 00:24:32,280 ನೀವು ನಿಜವಾಗಲೂ ದೇವತೆ. 357 00:24:33,320 --> 00:24:34,520 ಹಾಗೇನಿಲ್ಲ. 358 00:24:35,280 --> 00:24:36,800 ಚಾಕ್ಲೇಟ್ ಕೇಕ್? 359 00:24:39,240 --> 00:24:41,800 -ಏನೋ ಒಳ್ಳೆಯದು ಮಾಡ್ತಿರೋ ಹಾಗಿದೆ, ದೇವತೆ. -ಏನಿಲ್ಲ. 360 00:24:41,880 --> 00:24:43,560 ಸ್ವಾರ್ಥ ಅಷ್ಟೇ. 361 00:24:55,040 --> 00:24:56,320 ಮತ್ತೆ ಬಂದಿದ್ದೀಯಾ? 362 00:24:56,400 --> 00:24:59,320 ಏನಾದರೂ ತಗೊಂಡು ಹೋಗೋಣ ಅಂತ, ಕೊನೆಯದಾಗಿ. 363 00:24:59,400 --> 00:25:02,240 ಓಹ್, ನನಗಾಗಿ ಬಂದೆ ಅಂದುಕೊಂಡೆ. 364 00:25:03,320 --> 00:25:08,080 ನಿಜ ಹೇಳಬೇಕೆಂದರೆ, ನಿನಗಾಗಿ ಏನೋ ತಂದಿದ್ದೀನಿ. ನೀನಾ ಸಿಮೋನ್ ಹೆಸರಿನದ್ದು. 365 00:25:08,200 --> 00:25:10,800 ನಿನ್ನ ಹೆಸರೂ ನೀನಾ ಅಲ್ವಾ. 366 00:25:12,800 --> 00:25:15,440 ನನ್ನ ಬಳಿ ಇದನ್ನು ಕೇಳುವ ಯಂತ್ರ ಇಲ್ಲ. 367 00:25:16,360 --> 00:25:18,720 ಓಹ್... ಹೂಂ, ಸರಿ. 368 00:25:19,000 --> 00:25:21,080 -ಕಡಿಮೆ ಹಾಲಿನ ಕಾಫಿ? -ಇಲ್ಲ, ನಿದ್ದೆ ಬರಲ್ಲ. 369 00:25:21,160 --> 00:25:25,160 ಬರೀ ಚಹಾ ಸಾಕು. ಪುದೀನ ಚಹಾ. ಶುಂಠಿ ಚಹಾ ಕೂಡ ಚೆನ್ನಾಗಿ ಕಾಣ್ತಿದೆ. 370 00:25:25,240 --> 00:25:26,520 ವಯಸ್ಸಾಯಿತಲ್ಲ ನಮಗೆ. 371 00:25:26,600 --> 00:25:29,640 ದಿನಾ ಪಾರ್ಟಿ ಮಾಡುತ್ತಿದ್ದೆ. ಈಗ 10:00 ಕ್ಕೆಲ್ಲ ಮಲಗುತ್ತೇನೆ. 372 00:25:29,720 --> 00:25:30,920 ನಾನು ಹೋಗುತ್ತಿರಲಿಲ್ಲ. 373 00:25:31,000 --> 00:25:32,680 ಹರೆಯದಲ್ಲಿದ್ದಾಗಲೂ? 374 00:25:32,760 --> 00:25:34,800 ಹೂಂ, ಆಗಲೂ. 375 00:25:35,680 --> 00:25:38,680 ನಾನು ನಿಮ್ಮನ್ನು ಕೇಳದೇ ಈ ರೆಕಾರ್ಡ್ ತರಬಾರದಿತ್ತು. 376 00:25:38,760 --> 00:25:39,760 ಸಾಕಾಗಿದೆ. 377 00:25:39,840 --> 00:25:43,120 ಅಂಗಡಿ ಮುಚ್ಚಿ ಹೊರಡಬೇಕು. ಮನೆಯಲ್ಲಿ ಕಾಯುತ್ತಿದ್ದಾರೆ. 378 00:25:43,200 --> 00:25:46,640 -ಸಂಗಾತಿ ಇದ್ದಾರಾ ನಿಮಗೆ? -ಹೂಂ, ತಡ ಆಗಿ ಹೋಗೋದು ಅವರಿಗೆ ಇಷ್ಟ ಇಲ್ಲ. 379 00:25:46,720 --> 00:25:49,720 ಏನು ಬೇಕು? ಪುದೀನ ಚಹಾನ ಇಲ್ಲ ಶುಂಠಿಯದ್ದಾ? 380 00:25:50,960 --> 00:25:52,840 ಹೇಳಕ್ಕೆ ಇಷ್ಟ ಇರಲಿಲ್ಲ ನನಗೆ. 381 00:25:52,920 --> 00:25:55,840 ಆದರೆ ನಿನ್ನ ಆ ಹಳೆಯ ಜನರು 382 00:25:55,920 --> 00:25:58,320 ಏನೋ ಮಾಡ್ತಾ ಇದ್ದಾರೆ ಅನಿಸುತ್ತೆ. 383 00:25:59,520 --> 00:26:02,000 ಶ್ಯಾಕ್ಸ್ ಯಾರ ಬಗ್ಗೆ ಕೇಳುತ್ತಿದ್ದಳು ಗೊತ್ತಿದೆಯಾ ನಿನಗೆ? 384 00:26:02,080 --> 00:26:04,120 ಹೂಂ, ಗೊತ್ತಿಲ್ಲದಿದ್ದರೂ ಊಹಿಸಬಹುದು. 385 00:26:05,240 --> 00:26:06,640 ಊಹಿಸು ಹಾಗಿದ್ರೆ. 386 00:26:08,000 --> 00:26:09,000 ಜಿಮ್? 387 00:26:10,080 --> 00:26:11,160 ಜಿಮ್? 388 00:26:12,160 --> 00:26:14,480 -ಜಿಮ್ ಗೊತ್ತಾ ನಮಗೆ? -ಹಲೋ. 389 00:26:15,080 --> 00:26:15,960 ಗೇಬ್ರಿಯಲ್! 390 00:26:16,960 --> 00:26:19,200 ನೋಡು, ಗೇಬ್ರಿಯಲ್ ಹೆಸರು ಸರಿ ಇದೆ ನನಗೆ. 391 00:26:20,320 --> 00:26:22,200 -ಇಲ್ಲೇನು ಮಾಡ್ತಿದ್ದಾನೆ? -ಗೊತ್ತಿಲ್ಲ. 392 00:26:22,280 --> 00:26:24,200 -ಏನಾಗಿದೆ ಅವನಿಗೆ? -ಗೊತ್ತಿಲ್ಲ. 393 00:26:24,280 --> 00:26:26,960 -ಕೇಳು ಅವನನ್ನು! -ಕೇಳಿದೆ! ಅವನಿಗೂ ಗೊತ್ತಿಲ್ಲ. 394 00:26:27,640 --> 00:26:29,120 ಸರಿಯಾಗಿ ಕೇಳು! 395 00:26:34,240 --> 00:26:37,000 ನೀನು ಪುಸ್ತಕದ ಅಂಗಡಿಯಲ್ಲಿ 396 00:26:37,080 --> 00:26:41,760 ಏನು ಮಾಡ್ತಾ ಇದ್ದೀಯ? 397 00:26:46,840 --> 00:26:49,480 ಧೂಳು ಹೊಡೀತಾ... 398 00:26:50,560 --> 00:26:51,560 ಇದ್ದೀನಿ. 399 00:27:04,680 --> 00:27:06,280 ಹೂಂ, ಸರಿ. 400 00:27:07,240 --> 00:27:10,400 ಪರವಾಗಿಲ್ಲ. ಎಲ್ಲಿಯಾದರೂ ಕರೆದುಕೊಂಡು ಹೋಗಿ ಅವನನ್ನು ಬಿಟ್ಟು ಬರೋಣ. 401 00:27:10,480 --> 00:27:11,440 ಎಲ್ಲಿ? 402 00:27:12,560 --> 00:27:13,880 ಎಲ್ಲಿಯಾದರೂ. 403 00:27:14,440 --> 00:27:17,040 ಮುಖ್ಯವಾದ ಭಾಗ ಕರ್ಕೊಂಡು ಹೋಗೋದಲ್ಲ. 404 00:27:17,120 --> 00:27:19,120 ವಾಪಸ್ ಕರ್ಕೊಂಡು ಬರದೇ ಇರೋದು. 405 00:27:19,880 --> 00:27:23,600 ಗಾಡಿಯಲ್ಲಿ ಹಾಕಿಕೊಂಡು ಹೋಗಿ ಡಾರ್ಟ್ಮೋರ್ ನಲ್ಲಿ ಬಿಟ್ಟು ಬರೋಣ. 406 00:27:23,960 --> 00:27:25,080 ಡಾರ್ಟ್ಮೋರ್ ಯಾಕೆ? 407 00:27:25,160 --> 00:27:29,040 ತುಂಬಾ ದೂರ ಇದೆ ಅದು, ಅದಕ್ಕೇ. 408 00:27:29,120 --> 00:27:30,920 ಕ್ರೌಲಿ, ಅವನು ತೊಂದರೆಯಲ್ಲಿದ್ದಾನೆ. 409 00:27:31,000 --> 00:27:33,920 ಹಾಗಾದರೆ ಅವನಿಂದ ಎಷ್ಟು ದೂರ ಆಗುತ್ತೋ ಅಷ್ಟು ದೂರ ಇರು. 410 00:27:34,000 --> 00:27:36,960 ಅವನು ಏನೋ ಕೆಟ್ಟದ್ದು ನಡೆಯಲಿದೆ ಅಂತ ಹೇಳಿದ. 411 00:27:37,040 --> 00:27:40,200 ಹಾಗಾದರೆ ಪಕ್ಕಾ ದೂರ ಇರೋದು ಒಳ್ಳೆಯದು ಅವನಿಂದ! 412 00:27:40,280 --> 00:27:41,120 ನಾನು ಕೇವಲ... 413 00:27:41,800 --> 00:27:44,760 ದೇವತೆ, ಇವನು ಸ್ವರ್ಗದ ಅತ್ಯುನ್ನತ ದೇವತೆ. 414 00:27:44,840 --> 00:27:46,400 ನಿನ್ನ ಮುಂಚಿನ ಯಜಮಾನ, 415 00:27:46,480 --> 00:27:49,680 ನಿನ್ನನ್ನು ನರಕಕ್ಕೆ ಎಸೆದು ನಾಶ ಮಾಡಲು ನೋಡಿದವನು. 416 00:27:49,760 --> 00:27:53,080 -ನಮ್ಮ ಸ್ನೇಹಿತನಲ್ಲ. -ಅವನಿಗೆ ಯಾರೂ ಸ್ನೇಹಿತರಲ್ಲ. 417 00:27:53,160 --> 00:27:54,920 -ಅದೇ. -ಹೌದು, ಅದೇ. 418 00:27:56,120 --> 00:28:00,280 ಅದೇ ಅಂದರೆ ನಿನ್ನ ಅರ್ಥ ಏನು? ನಮ್ಮಿಬ್ಬರ ಅರ್ಥ ಬೇರೆ ಬೇರೆ ಇದೆ ಅನಿಸುತ್ತೆ. 419 00:28:00,360 --> 00:28:02,880 ಅವನಿಗೆ ಯಾರೂ ಸ್ನೇಹಿತರಿಲ್ಲ, ನಮ್ಮ ಸಹಾಯ ಬೇಕು. 420 00:28:03,440 --> 00:28:07,160 ನನಗೆ ಬೇಕಿರೋದು ಅವನಿಂದ ದೂರ ಇರೋದು. 421 00:28:07,240 --> 00:28:10,360 ನನ್ನ ಶಾಂತ, ಸುಂದರ, ನಯ ಜೀವ 422 00:28:10,440 --> 00:28:12,360 ಹೀಗೇ ನಡೆಯೋದು. 423 00:28:12,440 --> 00:28:15,520 -ನಮ್ಮ ಜೀವನ! -ಸರಿ, ನಮ್ಮ ಜೀವನ! 424 00:28:16,600 --> 00:28:18,000 ಸರಿ. 425 00:28:18,080 --> 00:28:20,600 ಸಹಾಯ ಮಾಡಲ್ಲ ಅಂದರೆ, ಇನ್ನೇನು ಮಾಡೋದು. 426 00:28:21,520 --> 00:28:23,520 ನೀನು ಹೊರಡಬಹುದು. 427 00:28:25,480 --> 00:28:26,600 ಹೊರಡಬಹುದು? 428 00:28:27,880 --> 00:28:29,840 ನಿಜವಾಗಲೂ? ಇದೇನಾ ನಿನಗೆ ಬೇಕಿರೋದು? 429 00:28:29,920 --> 00:28:32,200 ಇಲ್ಲ, ನಿನ್ನ ಸಹಾಯ ಬೇಕಿರೋದು. 430 00:28:32,720 --> 00:28:35,800 ಅವನನ್ನು ನೋಡಿಕೊಳ್ಳಕ್ಕೆ ನಿನ್ನ ಸಹಾಯ. 431 00:28:38,640 --> 00:28:40,560 ಮಾಡಲ್ಲ ಅಂದರೆ ಏನು ಮಾಡೋದು. 432 00:28:42,480 --> 00:28:43,680 ಮಾಡಲ್ಲ. 433 00:28:46,000 --> 00:28:47,960 ನೀನೇ ಮಾಡಿಕೋ. 434 00:29:02,720 --> 00:29:04,840 ದೀರ್ಘವಾಗಿ ಉಸಿರು ತಗೊ, ಜನರು ಅದೇ ಮಾಡೋದು. 435 00:29:05,760 --> 00:29:08,600 ಹತ್ತರವರೆಗೆ ಎಣಿಸಿ ಆಮೇಲೆ ಮೂರ್ಖ ಕೆಲಸ ಮಾಡುತ್ತಾರೆ. 436 00:29:18,080 --> 00:29:21,920 ವಿಚಿತ್ರ. ಆ ಗಂಡಸನ್ನ ನೋಡು. ಆರು ಕಪ್ ಕಾಫಿ. ಹೊಗೆ ಬರುತ್ತಿದೆ. 437 00:29:22,000 --> 00:29:23,560 ಅದಕ್ಕೇನೀಗ? 438 00:29:23,640 --> 00:29:25,320 ಎಲ್ಲರ ಗಾಡಿಯಲ್ಲಿ ಹೊಗೆ ಬರುತ್ತೆ. 439 00:29:25,400 --> 00:29:27,440 ಅಲ್ಲಿ ನೋಡು, ಅವನಿಂದ ಹೊಗೆ ಬರ್ತಾ ಇದೆ. 440 00:29:31,040 --> 00:29:33,560 ನನ್ನಿಂದ ಆಗಲ್ಲ. ತುಂಬಾ ಕೋಪ ಬರ್ತಾ ಇದೆ! 441 00:29:33,640 --> 00:29:35,200 ಹತ್ತು! 442 00:29:39,840 --> 00:29:42,240 ಅವನಿಗೆ ಸಿಡಿಲು ಬಡಿಯಿತು ಅನಿಸುತ್ತೆ! 443 00:29:42,320 --> 00:29:44,440 -ಇಲ್ಲ, ಇಲ್ಲ, ಹೀಗಾಗಬಾರದು. -ಏನಾಯಿತು? 444 00:29:44,520 --> 00:29:47,600 ಪವರ್ ಕಟ್ ಆದರೆ ಸೆಕ್ಯೂರಿಟಿ ಸಿಸ್ಟಂ ಚಾಲೂ ಆಗುತ್ತೆ. 445 00:29:47,680 --> 00:29:49,920 ಬಾಗಿಲು ಆಟೋಮೇಟಿಕ್ ಲಾಕ್ ಆಗುತ್ತೆ. 446 00:29:50,000 --> 00:29:51,560 ಸ್ವಲ್ಪ ಹೊತ್ತು ನಾವಿನ್ನು ಇಲ್ಲೇ. 447 00:29:51,640 --> 00:29:55,040 ಯಾರಿಗಾದರೂ ಕರೆ ಮಾಡು, ನಮ್ಮನ್ನು ಆಚೆ ಬಿಡಬಹುದು. 448 00:29:55,560 --> 00:29:57,960 -ನನ್ನ ಫೋನ್ ನಲ್ಲಿ ಚಾರ್ಜ್ ಇಲ್ಲ. -ನನ್ನದರಲ್ಲಿ ಕೂಡ. 449 00:30:00,280 --> 00:30:04,240 ನೀನು ತಪ್ಪು ತಿಳಿದಿರುವೆ ಉರಿಯಲ್, ನನ್ನ ಬಗ್ಗೆ, ತಪ್ಪಾಗಿ. 450 00:30:04,320 --> 00:30:07,000 ಸರಿಯಾಗಿ ಅರ್ಥ ಮಾಡಿಕೊಂಡಿದ್ದಿನಿ ಮೈಕೆಲ್ ನಿನ್ನ. 451 00:30:07,480 --> 00:30:10,240 ಯಾರಾದರೂ ಆದೇಶ ಕೊಡಬೇಕು ಅಂತ ಹೇಳ್ತಾ ಇದ್ದೀಯ. 452 00:30:10,320 --> 00:30:13,520 -ಅದು ನೀನೇ. -ಅತ್ಯುನ್ನತ ದೇವತೆಯ ಬದಲಿಗೆ 453 00:30:13,600 --> 00:30:18,760 ಬೇರೆಯವರು ಬರುವ ಪ್ರಶ್ನೆಯೇ ಇಲ್ಲ. 454 00:30:19,720 --> 00:30:22,760 ನಾನು ದೇವತೆ ಮೈಕೆಲ್. 455 00:30:22,840 --> 00:30:24,760 ನೀನು ದೇವತೆ ಉರಿಯಲ್. 456 00:30:24,840 --> 00:30:26,800 ಆದರೆ ನಾವು ನಾಯಕರಲ್ಲ. 457 00:30:26,880 --> 00:30:28,720 ಈಗ, ಈ ಕ್ಷಣದಲ್ಲಿ, 458 00:30:28,800 --> 00:30:31,320 ಸ್ವರ್ಗಕ್ಕೆ ಅತ್ಯುನ್ನತ ದೇವತೆ ಇಲ್ಲ. 459 00:30:31,400 --> 00:30:34,800 ಅತ್ಯುನ್ನತ ದೇವತೆ ಯಾವಾಗಲೂ ಇದ್ದೇ ಇದೆ. 460 00:30:34,880 --> 00:30:38,280 -ಹೌದಾ? ಯಾರದು ಹೇಳು ಹಾಗಿದ್ರೆ? -ನನ್ನ ಮಾತಿನ ಅರ್ಥ 461 00:30:38,360 --> 00:30:40,840 ಗೇಬ್ರಿಯಲ್ ಇಲ್ಲದ ಸಮಯದಲ್ಲಿ, 462 00:30:40,920 --> 00:30:43,960 ಯಾರಾದರೂ ಅವನ ಕೆಲಸ ಮಾಡಬೇಕು. 463 00:30:44,040 --> 00:30:46,120 ಯಾರಾದರೂ ಆದೇಶ ನೀಡಬೇಕು. 464 00:30:51,160 --> 00:30:52,440 ಅದು ನೀನಾಗಿರಬೇಕಾ? 465 00:30:52,520 --> 00:30:54,840 ನಾವೆಲ್ಲರೂ ಆಗಿರಬೇಕು. 466 00:30:55,880 --> 00:30:57,240 ನನ್ನ ನಾಯಕತ್ವದಲ್ಲಿ. 467 00:30:58,120 --> 00:31:00,320 ನಾನು ಅಧಿಕಾರಿ. 468 00:31:04,560 --> 00:31:05,560 ನೀವು ಸ್ವರ್ಗದವರೇ? 469 00:31:06,480 --> 00:31:07,640 -ಹೌದು. -ಹೌದು. 470 00:31:17,880 --> 00:31:19,480 ಇದನ್ನು ಕೇಳಿ. 471 00:31:20,520 --> 00:31:21,760 ಮುರಿಯಲ್. 472 00:31:23,960 --> 00:31:24,960 ಹಲೋ. 473 00:31:25,040 --> 00:31:26,480 ನೀನ್ಯಾರು? 474 00:31:27,160 --> 00:31:29,080 ಯಾರೂ ಅಲ್ಲ. ಅಂದರೆ ನಾನು, 475 00:31:29,160 --> 00:31:32,440 ಮುರಿಯಲ್, 37ನೇ ಗುಮಾಸ್ತೆ. 476 00:31:32,520 --> 00:31:34,640 ಆದರೆ ನಿಜವಾಗಿ, ಯಾರೂ ಅಲ್ಲ. 477 00:31:35,160 --> 00:31:36,240 ಸರಿ, ಹೇಳು. 478 00:31:45,280 --> 00:31:50,520 ನನಗೆ... ಲಿಫ್ಟ್ ಬಳಿ... ನೆಲದ ಮೇಲೆ... 479 00:31:51,720 --> 00:31:52,680 ಏನೋ ಸಿಕ್ಕಿದೆ. 480 00:31:53,480 --> 00:31:55,120 ಏನೋ ವಸ್ತು? 481 00:31:59,400 --> 00:32:00,560 ಸ್ವರ್ಗದಲ್ಲಿ? 482 00:32:00,640 --> 00:32:01,600 ಅಸಾಧ್ಯ. 483 00:32:02,600 --> 00:32:04,320 ಹೂಂ, ಗೊತ್ತು. 484 00:32:38,240 --> 00:32:39,280 ದ ರಿಸರೆಕ್ಷನಿಸ್ಟ್ 485 00:32:52,960 --> 00:32:54,760 ಭೂಮಿಯ ವಸ್ತು ಅದು. 486 00:32:55,640 --> 00:32:56,880 ಗೊತ್ತಾಯಿತು ನೋಡಿ. 487 00:32:57,440 --> 00:32:59,040 ಅವನು ಭೂಮಿಗೆ ಹೋಗಿರಬೇಕು. 488 00:33:19,720 --> 00:33:20,560 ನಿಜವಾಗಲೂ? 489 00:33:21,200 --> 00:33:22,280 ಛೇ! 490 00:33:22,360 --> 00:33:23,720 ನನ್ನ ಗಾಡಿಯಲ್ಲಿ! ನಿಜವಾಗಲೂ? 491 00:33:23,800 --> 00:33:25,080 ಹಲೋ, ಮೋಸಗಾರ. 492 00:33:25,600 --> 00:33:27,360 ಲಾರ್ಡ್ ಬೀಲ್ಜಬಬ್! 493 00:33:28,120 --> 00:33:31,000 ನಾನು ನಿನ್ನನ್ನು ಇಲ್ಲಿಗೇಕೆ ಕರೆದೆ ಎಂದು ನೀನು ಯೋಚಿಸುತ್ತಿರಬೇಕು. 494 00:33:31,080 --> 00:33:32,520 ನೀನು ನನ್ನಲ್ಲಿಗೆ ಬಂದಿದ್ದು! 495 00:33:35,040 --> 00:33:36,160 ಛೇ! 496 00:33:42,320 --> 00:33:43,920 ನಮ್ಮಿಬ್ಬರ ನಡುವೆ... 497 00:33:44,720 --> 00:33:46,560 ...ಒಪ್ಪಂದವಿದೆ ಅಂದುಕೊಂಡಿದ್ದೆ. 498 00:33:47,040 --> 00:33:48,080 ಇಲ್ಲ. 499 00:33:49,040 --> 00:33:50,320 ನೀನಿನ್ನೂ ಮೋಸಗಾರನೇ. 500 00:33:50,400 --> 00:33:53,280 ನಿನ್ನ ಮೇಲೆ ಯಾವಾಗ ಬೇಕಾದರೂ ಸುಪಾರಿ ಕೊಡಬಹುದು. 501 00:33:53,360 --> 00:33:54,840 ನಿನ್ನ ಮುಖದ ಮೇಲೆ ಏನದು? 502 00:33:55,480 --> 00:33:56,920 ಏನು, ಇದಾ? 503 00:33:58,520 --> 00:33:59,760 ಇದು ಯಾವ ಕಾಲದಿಂದ ಇದೆ. 504 00:34:01,160 --> 00:34:05,160 ಪಾಪ ನೀನು, ನರಕ ನಿನ್ನ ಪ್ರತಿಭೆಯನ್ನು ಗುರುತಿಸಲೇ ಇಲ್ಲ, ಕ್ರೌಲಿ. 505 00:34:06,240 --> 00:34:07,680 ಹೌದಾ? ಹೌದು. ಇರಲಿ. 506 00:34:07,760 --> 00:34:10,760 ನರಕ ನೀನು ಮಾಡಿದೆಲ್ಲಾ ಮರೆಯಲು ತಯಾರಿದೆ ಎಂದರೆ ಏನು ಮಾಡುವೆ? 507 00:34:10,840 --> 00:34:15,280 ನಿನಗೆ ಬಡ್ತಿ ಕೊಟ್ಟು ವಾಪಸ್ ಕರೆದುಕೊಳ್ಳುತ್ತೇವೆ, ಏನೂ ಕೇಳದೆ, ಎಂದರೆ? 508 00:34:15,360 --> 00:34:18,800 ನೀನು ಈ ಮಾತು ಹೇಳುತ್ತೀಯಾ ಅಂತ ನನಗೆ ಅನಿಸಲ್ಲ. 509 00:34:18,880 --> 00:34:20,040 ಇರಬಹುದು. 510 00:34:21,960 --> 00:34:24,560 ದೇವತೆ ಗೇಬ್ರಿಯಲ್ ನಾಪತ್ತೆಯಾಗಿದ್ದಾನೆ. 511 00:34:25,360 --> 00:34:29,040 ಅವನು ಸ್ವರ್ಗದಿಲ್ಲವೆಂದು ಗೊತ್ತು. ಆದರೆ ಎಲ್ಲಿದ್ದಾನೆಂದು ಗೊತ್ತಿಲ್ಲ. 512 00:34:29,960 --> 00:34:31,480 ಎಂತಹ ನಿಗೂಢ! 513 00:34:31,560 --> 00:34:33,400 ಅವನನ್ನು ಯಾರೋ ಬಚ್ಚಿಟ್ಟಿರಬೇಕು ನಮ್ಮಿಂದ. 514 00:34:33,480 --> 00:34:34,440 ಸಾಧ್ಯತೆ ಕಡಿಮೆ. 515 00:34:34,520 --> 00:34:38,199 ನೀನು ಗೇಬ್ರಿಯಲ್ ನನ್ನು ಹುಡುಕಿ ತಂದುಕೊಟ್ಟರೆ, ನಿನಗೆ ಬೇಕಾದದ್ದು ಸಿಗುತ್ತೆ. 516 00:34:38,320 --> 00:34:41,960 ನರಕದ ರಾಕ್ಷಸರೆಲ್ಲ ಅವನನ್ನು ಹುಡುಕುತ್ತಿದ್ದಾರೆ, ಸಿಕ್ಕಿಯೇ ಸಿಗುತ್ತಾನೆ. 517 00:34:42,040 --> 00:34:44,760 ಆದರೆ ಕ್ರೌಲಿ, ನಿನಗೆ ಭೂಮಿಯ ಬಗ್ಗೆ ಚೆನ್ನಾಗಿ ಗೊತ್ತು. 518 00:34:46,880 --> 00:34:48,920 ಹೂಂ, ಇದು ದೊಡ್ಡ ಜಗತ್ತು. 519 00:34:49,000 --> 00:34:52,000 ದೇವತೆಗಳು ಆರಾಮಾಗಿ ಯಾರಿಗೂ ಸಿಗದಂತೆ ಕಾಲ ಕಳೆಯಲು 520 00:34:52,080 --> 00:34:53,280 ಬೇಕಾದಷ್ಟು ಜಾಗಗಳಿವೆ. 521 00:34:53,360 --> 00:34:55,960 ಸರಿ, ಎಲ್ಲಿದ್ದಾನೋ, ಅವನನ್ನು ಹುಡುಕಿಕೊಡು. 522 00:34:56,040 --> 00:34:59,280 ನಿನ್ನ ಅಸಹ್ಯ ಹೃದಯಕ್ಕೆ ಬೇಕಿರುವುದನ್ನು ನಾನು ನಿನಗೆ ಕೊಡ್ತೀನಿ. 523 00:34:59,360 --> 00:35:01,040 ನೀನು ನರಕದ ರಾಜನಾಗಬಹುದು. 524 00:35:02,040 --> 00:35:06,280 ನನಗೆ ಹರಿದು ಬಂದ ಗಾಳಿಸುದ್ದಿಯ ಪ್ರಕಾರ 525 00:35:06,360 --> 00:35:10,160 ಮೇಲೆ ಗೇಬ್ರಿಯಲ್ ನ ಕಾಣೆಯಿಂದ ಬಹಳ ತೊಂದರೆಯಾಗಿದೆ. 526 00:35:10,200 --> 00:35:13,840 ಯಾರು ಇದಕ್ಕೆ ಕಾರಣವೋ 527 00:35:13,920 --> 00:35:15,440 ಅವರಿಗೆ ಕಠಿಣ ಶಿಕ್ಷೆ ಇದೆ. 528 00:35:16,920 --> 00:35:18,080 ಹೇಗೆ? 529 00:35:31,600 --> 00:35:35,000 ತೀವ್ರ ನಿರ್ಬಂಧಗಳು. 530 00:35:37,760 --> 00:35:39,200 ಅದು ನಿಜವಾಗಲೂ ಇದೆಯಾ? 531 00:35:39,320 --> 00:35:42,640 ಮಕ್ಕಳನ್ನು ಹೆದರಿಸಲು ಹೇಳುತ್ತಿದ್ದ ಕತೆ ಮಾತ್ರ ಅಲ್ವಾ ಅದು? 532 00:35:42,760 --> 00:35:45,600 ಇಲ್ಲ. ನಿಜವಾಗಲೂ ಇವೆ. ತೀವ್ರ ನಿರ್ಬಂಧಗಳು. 533 00:35:45,640 --> 00:35:48,200 ಗೇಬ್ರಿಯಲ್ ನ ಕಾಣೆ ಮಾಡಿದವರ ಹೆಸರನ್ನು 534 00:35:48,320 --> 00:35:50,320 ಜೀವನದ ಪುಸ್ತಕದಿಂದ ಅಳಿಸಲಾಗುತ್ತದೆ. 535 00:35:50,400 --> 00:35:52,280 ಅವರು ಬರೀ ಕಾಣೆಯಾಗುವುದಿಲ್ಲ, 536 00:35:52,360 --> 00:35:53,920 ಅವರ ಆಸ್ತಿತ್ವವೇ ಇರುವುದಿಲ್ಲ. 537 00:35:55,320 --> 00:35:58,520 ಅದು... ಅದು ಪಾಠ ಕಲಿಸುತ್ತೆ ಅವರಿಗೆ, ಅಲ್ವಾ? 538 00:35:59,360 --> 00:36:01,640 ಏನಾದರೂ ಗೊತ್ತಾದರೆ, ನನಗೆ ಮೊದಲು ಹೇಳು. 539 00:36:01,760 --> 00:36:05,160 ನನಗೆ ಏನೂ ಗೊತ್ತಿಲ್ಲ, ಗೊತ್ತಾದರೆ ಖಂಡಿತ ಹೇಳ್ತೀನಿ. 540 00:36:07,280 --> 00:36:12,000 ಇಲ್ಲ, ಇಲ್ಲ, ಇಲ್ಲ, ಇಲ್ಲ, ಅಜಿರಫೆಲ್! ಏನು ಮಾಡಿದೆ ನೀನು? 541 00:36:19,840 --> 00:36:21,680 ಯಾರೋ ಬರುತ್ತಿದ್ದಾರೆ. ಅದನ್ನು ಹಿಡಿ. 542 00:36:23,160 --> 00:36:24,960 ದಯವಿಟ್ಟು ಸಹಾಯ ಮಾಡಿ! 543 00:36:28,160 --> 00:36:29,400 ಛೇ! 544 00:36:30,680 --> 00:36:32,880 ಯಾರಾದರೂ ನನ್ನ ಅಂಗಡಿಗೆ ಹೋಗಿ 545 00:36:32,960 --> 00:36:35,520 ಎಲ್ಲಾ ರೆಕಾರ್ಡ್ ಎತ್ತಿಕೊಂಡು ಓಡಿಹೋಗಬಹುದು. 546 00:36:35,600 --> 00:36:37,520 ನಾನು ಇಲ್ಲಿಂದ ನೋಡಿದರೂ, ಅವರನ್ನು ತಡೆಯಕ್ಕೆ ಆಗಲ್ಲ. 547 00:36:37,600 --> 00:36:38,920 ನನ್ನ ಅಂಗಡಿ ಇದ್ದಿದ್ದರೆ, 548 00:36:39,000 --> 00:36:43,040 ನಾನು ಜನರು ಬಂದು ಇನ್ನಷ್ಟು ರೆಕಾರ್ಡ್ ಗಳನ್ನು ಇಟ್ಟು ಹೋಗುತ್ತಾರೆ ಎಂದು ಭಯಪಡುತ್ತಿದ್ದೆ. 549 00:36:44,320 --> 00:36:47,480 ವೈನ್ ಕುಡಿತೀಯಾ? ಹಿಂದೆ ಒಂದು ಬಾಟಲಿ ಇದೆ. 550 00:36:47,560 --> 00:36:48,880 ತುರ್ತು ಪರಿಸ್ಥಿತಿಗಾಗಿ. ಇದು ಅದೇ ತಾನೇ. 551 00:36:48,960 --> 00:36:50,120 ನಾನು ಕುಡಿಯಲ್ಲ. 552 00:36:51,320 --> 00:36:52,320 ಯಾಕೆ? 553 00:36:52,760 --> 00:36:53,960 ಕುಡಿಬೇಕು ಅನಿಸಿಲ್ಲ. 554 00:36:54,600 --> 00:36:55,640 ರುಚಿ ಇಷ್ಟ ಆಗಲ್ಲ. 555 00:36:56,480 --> 00:36:57,680 ಸರಿ, ನನಗಂತೂ ಬೇಕು. 556 00:37:02,000 --> 00:37:04,360 -ನನಗೇನೂ ತೊಂದರೆ ಇಲ್ಲ. -ಒಳ್ಳೆಯದು. 557 00:37:06,920 --> 00:37:09,080 ತೊಂದರೆ ಇರುವ ಜನರು ಸಾಕಷ್ಟು ಇದ್ದಾರೆ ಜೀವನದಲ್ಲಿ. 558 00:37:09,280 --> 00:37:10,640 ಫೋನ್ ಗೆ ಜೀವ ಬಂದಾಗ 559 00:37:10,760 --> 00:37:14,200 ಲಿಂಡ್ಸೇ ಇಂದ ನೂರು ಮೆಸೇಜ್ ಬಂದಿರುತ್ತೆ. 560 00:37:14,640 --> 00:37:19,560 ಮನೆಯಲ್ಲಿ ಅಷ್ಟು ಕಾಳಜಿ ವಹಿಸೋರು ಇದ್ದರೆ ಒಳ್ಳೆಯದಲ್ವಾ? 561 00:37:20,120 --> 00:37:22,800 ಹೂಂ. ಲಿಂಡ್ಸೇ ಗೆ ನಾನು ಹತ್ತು ನಿಮಿಷ ತಡ ಆಗುತ್ತೆ ಅಂದರೂ 562 00:37:22,880 --> 00:37:25,520 ಸಂದೇಶ ಕಳುಹಿಸಬೇಕು. 563 00:37:26,920 --> 00:37:30,120 ತಮಾಷೆಯಾಗಿದೆ. ನಾವು ಮಾತಾಡಲು ಅವಕಾಶ ಸಿಗುವುದೆಂದು ಆಶಿಸುತ್ತಿದ್ದೆ. 564 00:37:30,160 --> 00:37:32,480 ಮತ್ತು ಈಗ ನಾವಿಲ್ಲಿದ್ದೇವೆ. 565 00:37:33,560 --> 00:37:34,680 ಸಿಕ್ಕಿಬಿದ್ದಿದ್ದೀವಿ. 566 00:37:35,600 --> 00:37:36,760 ನಾವಿಬ್ಬರೂ. 567 00:37:49,360 --> 00:37:51,160 ಜಾಗ ಬಿಡು! 568 00:37:51,200 --> 00:37:54,440 ಈ ರಸ್ತೆಯಲ್ಲಿ ಒಂದೇ ಗಾಡಿಗೆ ಜಾಗ ಇರೋದು, ಆ ಗಾಡಿ ನಿನ್ನದಲ್ಲ. 569 00:37:55,000 --> 00:37:57,440 ಯೋಚಿಸಲೂ ಬೇಡ. 570 00:37:59,080 --> 00:38:00,200 ಒಳ್ಳೆಯದು. 571 00:38:00,760 --> 00:38:04,000 ರೆಕಾರ್ಡ್ ಯಾಕೆ? ಯಾರೂ ತಗೊಳ್ಳೋದೂ ಇಲ್ಲ. 572 00:38:04,640 --> 00:38:07,840 ಅದು ನನ್ನ ಅಜ್ಜಿಯ ಅಮ್ಮ ತೆರೆದ ಅಂಗಡಿ. 573 00:38:07,920 --> 00:38:09,160 1920ರಲ್ಲಿ. 574 00:38:09,280 --> 00:38:12,520 ಆಗಿಂದ ಫೆಲ್ ಅವರ ಅಂಗಡಿ ಪಕ್ಕದಲ್ಲೇ ಇದೆ ನಮ್ಮ ಅಂಗಡಿ. 575 00:38:12,600 --> 00:38:15,440 ಅದಕ್ಕೇ ಅವರೂ ಇರಕ್ಕೆ ಬಿಡ್ತಾರೆ. ಹಳೆಯ ದಿನಗಳ ನೆನಪಿನಲ್ಲಿ. 576 00:38:15,520 --> 00:38:18,160 ಅವರ ಅಜ್ಜನಿಗೆ ನಿನ್ನ ಅಜ್ಜಿಯ ಅಮ್ಮ ಗೊತ್ತಿದ್ದರು ಅಂತಾನಾ? 577 00:38:18,200 --> 00:38:19,400 ಹೂಂ. 578 00:38:26,960 --> 00:38:29,360 -ಯಾರೋ ಬರ್ತಾ ಇದ್ದಾರೆ ಈಕಡೆ. -ಅವನು ಅದು. 579 00:38:29,440 --> 00:38:32,840 ಆರು ಕಪ್ ಕಾಫಿ ಅವನು, ಸಿಡಿಲು ಬಡಿಸಿಕೊಂಡವನು. 580 00:38:36,640 --> 00:38:37,920 ನಿಜವಾಗಲೂ? 581 00:38:38,000 --> 00:38:39,160 ನನ್ನ ತಪ್ಪದು. 582 00:38:43,160 --> 00:38:44,680 ಇದೆಂತಹ ವಿಚಿತ್ರ. 583 00:38:44,800 --> 00:38:47,120 ಅವನು ಆಕಡೆ ಹೋದೊಡನೆ ಹೋಯಿತು... 584 00:38:47,640 --> 00:38:48,920 ನೀನಾ 585 00:38:49,040 --> 00:38:50,000 ಲಿಂಡ್ಸೇ ಅದು. 586 00:38:50,080 --> 00:38:51,160 ನನಗೆ ವಿವರಣೆ ಬೇಕು. 587 00:38:52,000 --> 00:38:53,320 ಪರಸ್ಪರ ಮರ್ಯಾದೆಯ ಬಗ್ಗೆ ನಾವು ಏನು ಮಾತಾಡಿಕೊಂಡಿದ್ದೆವು? 588 00:38:53,840 --> 00:38:54,960 ಎಲ್ಲಿ ಹಾಳಾಗಿ ಹೋಗಿರುವೆ!!!?!?!? 589 00:39:13,200 --> 00:39:14,280 ನಾನು ವಾಪಸ್ ಬಂದೆ. 590 00:39:16,160 --> 00:39:18,880 ಕಾಣಿಸ್ತಾ ಇದೆ ಅದು. 591 00:39:21,560 --> 00:39:23,760 ನಿನಗೇನು ನಾನು ಕ್ಷಮೆ ಕೇಳಬೇಕಾ? 592 00:39:23,840 --> 00:39:26,160 ಅಥವಾ ವಾಪಸ್ ಬಂದಿದ್ದು ಸಾಕಾ? 593 00:39:27,560 --> 00:39:29,600 ಸರಿಯಾದ ಕ್ಷಮೆ ಬೇಕು. 594 00:39:31,840 --> 00:39:33,120 ನೀನು ಹೇಳಿದ್ದು ಸರಿ. 595 00:39:38,640 --> 00:39:39,760 ಸಾಕಾಗಲ್ಲ. 596 00:39:39,840 --> 00:39:41,960 ಸರಿಯಾದ ಕ್ಷಮೆ ಯಾಚನೆ ಬೇಕು. 597 00:39:42,040 --> 00:39:43,640 -ಇಲ್ಲ. -ಒಂದು ಚಿಕ್ಕ ನೃತ್ಯದ ಜೊತೆ. 598 00:39:43,760 --> 00:39:47,920 -ಅದೆಲ್ಲ ಆಗಲ್ಲ. -1650ಯಲ್ಲಿ ಒಮ್ಮೆ ನಾನು ಮಾಡಿದ್ದೆ ಸಾರೀ ಡಾನ್ಸ್ 599 00:39:48,000 --> 00:39:51,160 ಆಮೇಲೆ 1793, 1941-- 600 00:39:51,200 --> 00:39:52,280 ಸರಿ! 601 00:40:03,160 --> 00:40:07,160 ನೀನು ಸರಿ, ನೀನು ಸರಿ, ನಾನು ತಪ್ಪು, ನೀನು ಸರಿ. 602 00:40:09,400 --> 00:40:10,640 ಸರಿನಾ? 603 00:40:11,160 --> 00:40:12,160 ಚೆನ್ನಾಗಿತ್ತು. 604 00:40:13,160 --> 00:40:15,680 ಅವನನ್ನು ಇಲ್ಲಿ ಬಚ್ಚಿಟ್ಟು ಕಾಪಾಡಬೇಕು. 605 00:40:16,200 --> 00:40:18,960 -ಯಾರಿಂದ? -ಎಲ್ಲರಿಂದ. ಸ್ವರ್ಗ, ನರಕ, ಜನರು. 606 00:40:19,040 --> 00:40:20,120 ಒಟ್ಟಿಗೆ ಮಾಡೋಣ, 607 00:40:20,160 --> 00:40:23,360 ಎಲ್ಲಾ ಸರಿಯಾಗೋವರೆಗೂ ಅವನಿಲ್ಲಿರೋದು ಯಾರಿಗೂ ಗೊತ್ತಾಗದಂತೆ. 608 00:40:23,440 --> 00:40:27,640 -ಒಟ್ಟಿಗೆ? -ಹೂಂ, ಸಣ್ಣ... ಪವಾಡ ಮಾಡೋಣ. 609 00:40:28,360 --> 00:40:30,320 ಹುಡುಕಿದರೂ ಅವನು ಯಾರಿಗೂ ಕಾಣದಂತೆ. 610 00:40:30,400 --> 00:40:32,600 ಅವನನ್ನು ಹುಡುಕುತ್ತಿದ್ದರಂತೂ ಖಂಡಿತ. 611 00:40:32,640 --> 00:40:36,080 ನಾನು ಸಣ್ಣ ಪವಾಡ ಮಾಡಿದರೂ ಸ್ವರ್ಗಕ್ಕೆ ಗೊತ್ತಾಗುತ್ತೆ. 612 00:40:36,160 --> 00:40:38,360 ನಾನು ಮಾಡಿದರೆ ನರಕಕ್ಕೆ. 613 00:40:38,440 --> 00:40:41,000 ಹಲೋ. ನೀನೆಲ್ಲಿoದ ವಾಪಸ್ ಬಂದೆ? 614 00:40:41,080 --> 00:40:42,160 ಹೊರಗಿoದ. 615 00:40:43,760 --> 00:40:45,080 "ಹೊರಗಿoದ". 616 00:40:47,040 --> 00:40:50,120 ಅದು ದೊಡ್ಡ ಜಾಗಾನಾ? ನಾನೂ "ಹೊರಗಿoದ" ನೋಡಬಹುದಾ? 617 00:40:50,160 --> 00:40:54,160 ಇಲ್ಲ, ಇಲ್ಲ, ಇಲ್ಲ, ಇಲ್ಲ. ನೀನಿಲ್ಲೇ ಇರಬೇಕು. 618 00:40:54,200 --> 00:40:57,360 ಅಂಗಡಿ ಒಳಗೆ. ಇಲ್ಲಿ ನಾವು ನಿನ್ನನ್ನು ನೋಡಿಕೊಳ್ಳಬಹುದು. 619 00:40:57,440 --> 00:40:59,160 ಇಲ್ಲೇ ಇರು. 620 00:40:59,280 --> 00:41:02,040 ಕ್ರೌಲಿ, ನಾವಿಬ್ಬರೂ ಅರ್ಧ ಅರ್ಧ ಪವಾಡ ಮಾಡಿದರೆ? 621 00:41:02,120 --> 00:41:04,760 ನಾನು ನಿನ್ನ ಹಳೆಯ ಜನರಿಂದ ಇವನನ್ನು ಕಾಪಾಡಬಹುದು. 622 00:41:04,840 --> 00:41:07,840 ನೀನು ನನ್ನ ಜನರಿಂದ, ಯಾರಿಗೂ ಗೊತ್ತೂ ಆಗಲ್ಲ. 623 00:41:08,560 --> 00:41:09,600 ಹೂಂ. 624 00:41:10,680 --> 00:41:12,840 ಹೂಂ, ಹಾಗೆ ಮಾಡಬಹುದು. ಹೂಂ, ಸರಿ. 625 00:41:12,920 --> 00:41:14,160 ಸರಿ, ನೀನು... 626 00:41:14,280 --> 00:41:16,200 ಜೇಮ್ಸ್, ಚಿಕ್ಕದಾಗಿ ಜಿಮ್, 627 00:41:16,320 --> 00:41:18,880 -ಏನಾದರೂ ಕರೆಯಿರಿ. -ಜಿಮ್, ಹೌದು. 628 00:41:19,640 --> 00:41:20,880 ಈ ಕುರ್ಚಿಯಲ್ಲಿ ಕುಳಿತುಕೋ. 629 00:41:22,640 --> 00:41:25,000 ನೀನು ಬಲಕ್ಕೆ ಹೋಗು, ನಾನು ಎಡಕ್ಕೆ. 630 00:41:27,400 --> 00:41:30,480 ನಾವೀಗ ತುಂಬಾ ಚಿಕ್ಕ, 631 00:41:30,560 --> 00:41:32,480 ಯಾರಿಗೂ ತಿಳಿಯದ, 632 00:41:33,280 --> 00:41:35,640 ಅತಿ ಪುಟ್ಟ ಅರ್ಧ ಪವಾಡ ಮಾಡಬೇಕು. 633 00:41:35,680 --> 00:41:37,960 ಪವಾಡದ ಏನೂ ಕುರುಹುಗಳು ಉಳಿಯದಂತೆ. 634 00:41:38,040 --> 00:41:41,160 ಸ್ವರ್ಗ... ಸ್ವರ್ಗದಲ್ಲಿ ಎಚ್ಚರಿಕೆ ಗಂಟೆ ಬಾರಿಸದಂತೆ. 635 00:41:41,280 --> 00:41:43,360 ಸರಿ. ಮೂರಿನ ಗಣತಿಗೆ. 636 00:41:44,160 --> 00:41:47,080 ಒಂದು, ಎರಡು, ಮೂರು. ಈಗ. 637 00:41:54,360 --> 00:41:55,680 ಪವಾಡ ಆಯಿತಾ? 638 00:41:56,520 --> 00:41:58,320 ಗೊತ್ತಿಲ್ಲ, ಆಗಿರಬೇಕು. 639 00:42:02,120 --> 00:42:03,400 ಜಿಮ್, ಒಳ್ಳೆಯ ಸುದ್ದಿ. 640 00:42:03,920 --> 00:42:05,480 ಯಾರಿಗೂ ನೀನಿರೋದು ಗೊತ್ತಾಗಲ್ಲ. 641 00:42:05,560 --> 00:42:07,160 ನೀನಿಲ್ಲಿ ಸುರಕ್ಷಿತ. 642 00:42:08,040 --> 00:42:08,880 ಈಗಕ್ಕೆ. 643 00:42:08,960 --> 00:42:11,480 ಏನು ನಡೀತಾ ಇದೆ ಅಂತ ನಮಗೆ ಗೊತ್ತಾಗೋವರೆಗೆ. 644 00:42:11,560 --> 00:42:13,840 ನನಗೆ ಗೊತ್ತು ಅನಿಸುತ್ತೆ. 645 00:42:13,920 --> 00:42:15,120 ಏನು? 646 00:42:16,640 --> 00:42:18,160 ನಾನು "ಹೊರಗಿoದ" ಹೋಗಲ್ಲ. 647 00:42:18,800 --> 00:42:19,840 ಮತ್ತೆ ಈಗ ನನಗೆ... 648 00:42:20,640 --> 00:42:21,640 2 ಸ್ನೇಹಿತರಿದ್ದಾರೆ. 649 00:42:22,080 --> 00:42:23,600 ನಾನು ನಿನ್ನ ಸ್ನೇಹಿತನಲ್ಲ. 650 00:42:29,440 --> 00:42:30,840 ಆಗಿದೆ ಅನಿಸುತ್ತೆ. 651 00:42:32,600 --> 00:42:36,160 ಅದ್ಭುತ ಅರ್ಧ ಪವಾಡ. 652 00:42:37,960 --> 00:42:40,000 ಯಾರಿಗೂ ಗೊತ್ತಾಗಿರಲ್ಲ. 653 00:42:51,520 --> 00:42:53,160 ಕ್ಷಮಿಸು, ಮೈಕೆಲ್. 654 00:42:53,200 --> 00:42:55,440 ಇದು ನೀನು ನೋಡಿಕೊಳ್ಳಬೇಕು ಅನಿಸುತ್ತೆ. 655 00:42:55,520 --> 00:42:57,680 -ಏನಾಗ್ತಾ ಇದೆ? -ನೀನು ಅಧಿಕಾರಿ. 656 00:42:57,800 --> 00:43:00,640 -ನಾನು ಅಧಿಕಾರಿ ಅಂತ ಗೊತ್ತು. -ಭೂಮಿ. 657 00:43:01,080 --> 00:43:02,640 ಇಲ್ಲಿ ಬಂದು ನೋಡು. 658 00:43:05,400 --> 00:43:07,520 -ಗೇಬ್ರಿಯಲ್ ಸಿಕ್ಕಿದನಾ? -ಇಲ್ಲ. 659 00:43:07,960 --> 00:43:08,960 ಆದರೆ ಇದನ್ನು ನೋಡು. 660 00:43:10,160 --> 00:43:11,760 ಆ ಶಬ್ದ ನಿಲ್ಲಿಸು. 661 00:43:11,840 --> 00:43:13,920 ದಯವಿಟ್ಟು ಅಲಾರಂ ನಿಲ್ಲಿಸುತ್ತೀಯಾ? 662 00:43:31,320 --> 00:43:32,760 ಹೂಂ. 663 00:43:33,800 --> 00:43:37,560 ಗೇಬ್ರಿಯಲ್ ಎಲ್ಲಿದ್ದಾನೆ ಗೊತ್ತಿಲ್ಲದೇ ಇರಬಹುದು, ಆದರೆ ಇದು ಗೊತ್ತಿದೆ. 664 00:43:37,640 --> 00:43:42,680 ಯಾವುದೋ ಪುಸ್ತಕದ ಅಂಗಡಿಯ ಹಳೆಯ ದೇವತೆ ಅವನಿಗೆ ಸಹಾಯ ಮಾಡ್ತಾ ಇದ್ದಾನೆ. 665 00:45:24,640 --> 00:45:26,640 ಉಪ ಶೀರ್ಷಿಕೆ ಅನುವಾದ: ಅನುರಾಧ 666 00:45:26,720 --> 00:45:28,720 -ಸೃಜನಶೀಲ ಮೇಲ್ವಿಚಾರಕರು -ಅಭಿಜಿತ್ ರ