1 00:00:07,040 --> 00:00:10,880 ಕ್ರಿಸ್ತಪೂರ್ವ 2500 2 00:00:11,800 --> 00:00:14,160 ನೀನು ಯಾಕೆ ಸಾಯುತ್ತಿರೋದು ಗೊತ್ತಾ? 3 00:00:15,680 --> 00:00:17,360 ದೇವರು ನಿನ್ನ ಕೈ ಬಿಟ್ಟಿದ್ದಾನೆ. 4 00:00:19,200 --> 00:00:21,080 ನಿನ್ನನ್ನು ಪ್ರೀತಿಸುವ ಭರವಸೆ ನೀಡಿದವ, 5 00:00:22,280 --> 00:00:24,000 ನಿನ್ನ ಭಕ್ತಿ ಬೇಕಿದ್ದವ, 6 00:00:24,560 --> 00:00:26,800 ನಿನ್ನನ್ನು ನಾಶ ಆಗಲು ಬಿಟ್ಟಿದ್ದಾನೆ. 7 00:00:28,240 --> 00:00:29,320 ದುರದೃಷ್ಟ. 8 00:00:31,000 --> 00:00:32,040 ಶುರು ಮಾಡೋಣ? 9 00:00:33,320 --> 00:00:36,280 ಊಜ್ ನ ಭೂಮಿ 10 00:00:42,240 --> 00:00:46,680 ನಿಲ್ಲಿಸು ನಿನ್ನ ಕೃತ್ಯ ರಾಕ್ಷಸನೇ, ಸೈತಾನನ ತುಚ್ಛ ಸೇವಕನೇ, 11 00:00:46,760 --> 00:00:50,360 ಸರ್ವಶಕ್ತ ದೇವರ ಹೆಸರಿನಲ್ಲಿ, ತೊಲಗು! 12 00:00:55,720 --> 00:00:57,720 ನೀನು ಇಲ್ಲಿ, ಅಬ್ಬಬ್ಬಾ. 13 00:00:58,560 --> 00:01:01,600 ಪ್ರಳಯ ಆದಾಗಿನಿಂದ ನಿನ್ನ ನೋಡಿಲ್ಲ. 14 00:01:02,440 --> 00:01:03,280 ಹೂಂ. 15 00:01:04,080 --> 00:01:05,960 ಇದಕ್ಕೆ ಕ್ಷಮೆಯಿರಲಿ. 16 00:01:06,000 --> 00:01:07,160 ಪರವಾಗಿಲ್ಲ. 17 00:01:11,880 --> 00:01:13,120 ಓಹ್, ದೇವರೇ. 18 00:01:13,200 --> 00:01:14,560 -ಎಲ್ಲಿದ್ದೆ? -ತೊಲಗು. 19 00:01:14,640 --> 00:01:16,120 ಹೂಂ, ಹೂಂ. 20 00:01:16,200 --> 00:01:19,280 ತೊಲಗು, ಅಸಹ್ಯ ರಾಕ್ಷಸ. 21 00:01:19,360 --> 00:01:23,640 ಸರ್ವಶಕ್ತನಾದ ದೇವರ ಹೆಸರಿನಲ್ಲಿ, ಇಲ್ಲಿಂದ ತೊಲಗಿ ಹೋಗು. 22 00:01:23,720 --> 00:01:24,720 ಇಲ್ಲ. 23 00:01:25,800 --> 00:01:26,640 ಇಲ್ಲ? 24 00:01:28,440 --> 00:01:30,560 ಇಲ್ಲ, ಹೋಗಲ್ಲ. ಅನುಮತಿ ಇದೆ ನನ್ನ ಹತ್ತಿರ. 25 00:01:30,640 --> 00:01:32,240 ಅನುಮತಿ? 26 00:01:32,320 --> 00:01:33,680 ಯಾರಿಂದ? 27 00:01:33,759 --> 00:01:34,680 ದೇವರಿಂದ. 28 00:01:37,039 --> 00:01:38,720 ತಮಾಷೆ ನನಗೂ ಇಷ್ಟ ಆಗುತ್ತೆ. 29 00:01:38,800 --> 00:01:41,520 ಇಲ್ಲ, ಇಲ್ಲ, ಇಲ್ಲ, ಇಲ್ಲ. ತಮಾಷೆ ಅಲ್ಲ. 30 00:01:41,600 --> 00:01:43,560 ಇವು ಜಾಬ್ ನ ಮೇಕೆಗಳಲ್ವಾ? 31 00:01:43,640 --> 00:01:44,960 ಹೌದು, ಅವನದ್ದೇ. 32 00:01:45,039 --> 00:01:46,680 ಅವನು, 33 00:01:46,759 --> 00:01:50,240 ದೇವರಿಗೆ ತುಂಬಾ ಇಷ್ಟ ಕೂಡ ಅಲ್ವಾ? 34 00:01:58,320 --> 00:01:59,600 ಸಂಕ್ಷಿಪ್ತವಾಗಿ ಹೇಳಬೇಕೆಂದರೆ 35 00:02:00,360 --> 00:02:03,400 ಶೈತಾನ ಮತ್ತು ಅವನ ಪಿಶಾಚಿಗಳು 36 00:02:03,480 --> 00:02:06,320 ಜಾಬ್ ನ ಎಲ್ಲಾ ವಸ್ತುಗಳನ್ನು ನಾಶ ಮಾಡಬಹುದು. ಯಾರೂ ಕೇಳೋ ಹಾಗಿಲ್ಲ. 37 00:02:06,400 --> 00:02:08,360 -ಪ್ರೀತಿಯಿಂದ, ದೇವರು. -ಇಲ್ಲ. 38 00:02:08,440 --> 00:02:10,120 ಇದು ನಿಜವಲ್ಲ! 39 00:02:11,400 --> 00:02:14,880 ಜಾಬ್ ಒಳ್ಳೆಯ, ನೀತಿವಂತ ಮನುಷ್ಯ. 40 00:02:14,960 --> 00:02:17,320 ಅವನು ನಿಜವಾಗಿಯೂ ತುಂಬಾ ಮುದ್ದಿನ ಮನುಷ್ಯ. 41 00:02:21,440 --> 00:02:23,880 ನಾನೊಬ್ಬ ರಾಕ್ಷಸ. 42 00:02:23,960 --> 00:02:25,440 ನಾನು ಸುಳ್ಳು ಹೇಳುತ್ತಿರಬಹುದು. 43 00:02:26,040 --> 00:02:27,600 ಒಂದು ಕೆಲಸ ಮಾಡೋಣ? ನೋಡೋಣ? 44 00:02:38,440 --> 00:02:40,400 ನಿಜಾನೇ ಅನಿಸುತ್ತೆ! 45 00:02:44,840 --> 00:02:49,680 "ಕೈಗಳಿಂದ ಹಾಗೂ ಗೊರಸುಗಳಿಂದ ಸಹಿ ಹಾಕಲ್ಪಟ್ಟಿದೆ. ಆಮೆನ್" 46 00:02:50,280 --> 00:02:52,360 ಹೂಂ, ಎಲ್ಲಾ ಸರಿ ಇದೆ. 47 00:02:52,440 --> 00:02:53,880 ದೇವರೇ. 48 00:02:54,800 --> 00:02:55,960 ಏನು ಮಾಡಿದ? 49 00:02:56,560 --> 00:02:58,440 ಜಾಬ್? ಏನೂ ಇಲ್ಲ. 50 00:02:58,520 --> 00:03:00,720 ಅವನು ಜಗತ್ತಿನ ಅತ್ಯಂತ ಒಳ್ಳೆಯ ಮನುಷ್ಯ. 51 00:03:00,800 --> 00:03:03,160 ಅದಕ್ಕೇ ಅವನ ಮೇಲೆ ಬಾಜಿ ಕಟ್ಟಿರೋದು. 52 00:03:04,200 --> 00:03:05,800 -ಬಾಜಿ? -ಹೂಂ. 53 00:03:06,320 --> 00:03:09,320 ದೇವರು ಹೇಳುತ್ತಿದ್ದ, ಜಾಬ್ ಎಷ್ಟು ನೀತಿವಂತ 54 00:03:09,400 --> 00:03:10,760 ದೇವರನ್ನು ನಂಬುತ್ತಾನೆ, ಅಂತ. 55 00:03:10,840 --> 00:03:13,400 -ಅದಕ್ಕೆ ಶೈತಾನ ಹೇಳಿದ... -ಏನು? ಶೈತಾನನಾ? 56 00:03:13,480 --> 00:03:17,079 ದೇವರು ಅಷ್ಟು ಚೆನ್ನಾಗಿ ನೋಡಿಕೊಂಡಿದಕ್ಕಷ್ಟೇ ಅವನು ಒಳ್ಳೆಯವನಾಗಿರಬಹುದೆಂದು. 57 00:03:17,160 --> 00:03:21,640 ಹಾಗಾಗಿ, ದೇವರು ಈಗ ಶೈತಾನನಿಗೆ ಜಾಬ್ ಬಳಿ ಇರುವ ಎಲ್ಲವನ್ನೂ ನಾಶ ಮಾಡಲು ಅನುಮತಿ ಕೊಟ್ಟಿದ್ದಾನೆ. 58 00:03:21,720 --> 00:03:22,920 ಆಮೇಲೆ, ನೋಡೋಣ. 59 00:03:24,320 --> 00:03:26,800 ಅವನ ವಸ್ತುಗಳನ್ನಷ್ಟೇ ನಾಶ ಮಾಡುವುದಲ್ಲ? 60 00:03:26,880 --> 00:03:29,720 ಖಂಡಿತ. ಮುಖ್ಯವಾದದ್ದೇನೂ ಅಲ್ಲ. 61 00:03:29,800 --> 00:03:33,200 ಅವನ ಜಮೀನು, ಒಂಟೆಗಳು, ಮೇಕೆಗಳು, 62 00:03:33,280 --> 00:03:35,360 ಎತ್ತುಗಳು, ಮಕ್ಕಳು, 63 00:03:35,440 --> 00:03:36,800 -ಅವನ ಹೆಬ್ಬಾತುಗಳು... -ಏನು? 64 00:03:37,360 --> 00:03:41,079 ಅವನ ಹೆಬ್ಬಾತುಗಳು? ದೊಡ್ಡ ಬಾತುಕೋಳಿಗಳು? 65 00:03:41,160 --> 00:03:42,760 ಅವನ ಮಕ್ಕಳು? 66 00:03:47,720 --> 00:03:51,000 ಓಹ್, ಹೂಂ! ಸರಿ, ಹಾಗಿದ್ರೆ. 67 00:03:51,079 --> 00:03:52,520 ಹೌದು ಹೌದು. 68 00:03:52,600 --> 00:03:55,680 ಅಜಿರಫೆಲ್, ದೇವರ ಮೇಲೆ ನಂಬಿಕೆ ಇರಲಿ, ಯಾವಾಗಲೂ. 69 00:03:55,760 --> 00:03:57,000 ಹೂಂ, ಹೂಂ, ಸರಿ. 70 00:03:57,079 --> 00:04:00,120 ಜಾಬ್ ನ ಪರೀಕ್ಷೆ ಆದ ಮೇಲೆ, 71 00:04:00,200 --> 00:04:02,960 ಎಲ್ಲವೂ ಅವನಿಗೆ ವಾಪಸ್ ಕೊಡುತ್ತೀರಾ? 72 00:04:03,040 --> 00:04:04,560 ಅದಕ್ಕಿಂತ ಹೆಚ್ಚು. 73 00:04:05,160 --> 00:04:08,840 ಅವನಿಗೆ ಎಲ್ಲವೂ ದುಪ್ಪಟ್ಟು ಕೊಡುತ್ತಾರೆ ದೇವರು. 74 00:04:09,800 --> 00:04:12,080 -ದೇವರು ಮಹಾನ್. -ದುಪ್ಪಟ್ಟು ಎತ್ತುಗಳು, ದುಪ್ಪಟ್ಟು ಮೇಕೆಗಳು, 75 00:04:12,160 --> 00:04:14,480 -ದುಪ್ಪಟ್ಟು ಮಕ್ಕಳು. -ದುಪ್ಪಟ್ಟು ಮಕ್ಕಳು? 76 00:04:15,520 --> 00:04:16,560 ಹೂಂ, ಮತ್ತೆ? 77 00:04:17,120 --> 00:04:19,959 ಈಗೆಷ್ಟಿವೆ ಮಕ್ಕಳು ಅವನಿಗೆ? ಮೂರು? ಹಾಗಿದ್ದರೆ ಆರು ಮಕ್ಕಳು. 78 00:04:20,000 --> 00:04:22,000 ಅಥವಾ ಏಳು. 79 00:04:22,079 --> 00:04:24,680 -ದೇವರಿಗೆ ಏಳು ಅಂಕ ಇಷ್ಟ ಅಲ್ವಾ? -ಹೌದು. 80 00:04:24,760 --> 00:04:25,760 ದೇವರೇ. 81 00:04:27,200 --> 00:04:28,640 ಆದರೆ... 82 00:04:29,360 --> 00:04:32,159 ಸಿಟಿಸ್ ಗೆ ಈಗ 58 ವರ್ಷ. 83 00:04:33,760 --> 00:04:39,360 ನಿನಗೆ ಮನುಷ್ಯರ ಜನನದ ಬಗ್ಗೆ ಗೊತ್ತಿದೆಯೋ ಇಲ್ವೋ. 84 00:04:39,440 --> 00:04:41,320 ಚೆನ್ನಾಗಿ ಗೊತ್ತಿದೆ. 85 00:04:41,920 --> 00:04:45,680 ಮೊದಲ ಮನುಷ್ಯನ ಜನನ ಕಣ್ಣಾರೆ ನೋಡಿದ್ದೀನಲ್ಲ. 86 00:04:45,760 --> 00:04:47,080 ಹೌದು, ಹೌದು, ನಿಜ. 87 00:04:47,680 --> 00:04:50,080 ಆದರೆ ಈವ್ ಳ ಜನನ, 88 00:04:50,159 --> 00:04:53,080 ಮನುಷ್ಯರ ಜನನದಂತೆ ಇರಲಿಲ್ಲ... 89 00:04:53,800 --> 00:04:55,920 ನನ್ನ ಅರ್ಥ... 90 00:04:56,040 --> 00:04:59,720 ಸಿಟಿಸ್ ಇನ್ನೂ ನಾಲ್ಕು ಬಾರಿ ಹೆರಲು ಬಯಸುತ್ತಾಳೆಯೇ? 91 00:05:00,240 --> 00:05:01,680 ಇನ್ನೂ ಏಳು ಬಾರಿ. 92 00:05:01,760 --> 00:05:03,640 ಅವಳಿಗೆ ಈಗಲೇ ಮೂರು ಮಕ್ಕಳಿವೆಯಲ್ಲ? 93 00:05:03,720 --> 00:05:06,800 ಹೂಂ, ಆದರೆ ಅವು ಸಾಯುತ್ತವಲ್ಲ. ಮರೆತೆಯಾ? 94 00:05:07,880 --> 00:05:10,520 ಅವರನ್ನು ಮರಳಿ ತರುವುದಿಲ್ಲವೇ? 95 00:05:10,600 --> 00:05:11,880 ಖಂಡಿತ ಇಲ್ಲ. 96 00:05:12,440 --> 00:05:14,320 ಆದರೆ ಹೊಸತು ಕೊಡ್ತಾ ಇದ್ದೀವಿ. 97 00:05:15,200 --> 00:05:17,360 ಅವರಿಗೆ ಹಳೆಯ ಮಕ್ಕಳು ಇಷ್ಟ ಅನಿಸುತ್ತೆ. 98 00:05:18,920 --> 00:05:22,080 -ಅವುಗಳನ್ನು ಕೊಂದರೆ... -ಅಜಿರಫೆಲ್... 99 00:05:23,000 --> 00:05:24,520 ನಾವು ಒಳ್ಳೆಯವರು. 100 00:05:24,920 --> 00:05:26,800 ಸರಿನಾ? ನಾವು ಯಾರನ್ನೂ ಕೊಲ್ಲಲ್ಲ. 101 00:05:26,880 --> 00:05:31,120 ನಾವು ನರಕವನ್ನು ತಡೆಯುತ್ತಿಲ್ಲ ಅಷ್ಟೇ. 102 00:05:32,600 --> 00:05:34,200 ಅವರು ಮಾಡೋದು ಅವರಿಗೆ. 103 00:05:36,760 --> 00:05:38,720 ಲಂಡನ್ 104 00:05:38,880 --> 00:05:41,400 ಇಂದಿನ ದಿನ 105 00:05:50,280 --> 00:05:51,880 "ಕ" ಆದ ಮೇಲೆ ಏನು ಬರುತ್ತೆ? 106 00:05:53,159 --> 00:05:55,240 -ಭಯಪಡಿಸಿದೆ ನೀನು. -ಒಳ್ಳೆಯದಾ ಅದು? 107 00:05:55,320 --> 00:05:57,720 -ನೀನು ಬರೋದು ನೋಡಿಲ್ಲ ನಾನು. -ಹೂಂ. 108 00:05:57,800 --> 00:06:00,840 ನೀನು ಓಡಾಡಬೇಕಾದರೆ ಸ್ವಲ್ಪ ಶಬ್ದ ಮಾಡಿಕೊಂಡು ಓಡಾಡು. 109 00:06:01,560 --> 00:06:04,640 -ಸರಿ. -"ಕ" ಆದಮೇಲೆ "ಖ" ಬರುತ್ತೆ. 110 00:06:04,720 --> 00:06:06,760 ಆದರೆ, ನೀನು ಏನು ಮಾಡ್ತಾ ಇದ್ದೀಯ? 111 00:06:06,840 --> 00:06:09,040 ನಾನು ಪುಸ್ತಕ ಹುಡುಕುವುದು ಸುಲಭ ಮಾಡುತ್ತಿದ್ದೇನೆ. 112 00:06:09,120 --> 00:06:11,960 ಸಾಲಾಗಿ ಜೋಡಿಸಿದರೆ, 113 00:06:12,040 --> 00:06:14,720 ಲೇಖಕನ ಹೆಸರಿನ ಮೇಲಾ? 114 00:06:15,960 --> 00:06:16,920 ಲೇಖಕ ಅಂದರೆ? 115 00:06:17,000 --> 00:06:22,360 ಇಲ್ಲ, ಮೊದಲ ಹಾಳೆಯ ಮೊದಲಕ್ಷರದ ಆಧಾರದ ಮೇಲೆ. 116 00:06:22,920 --> 00:06:26,200 ಆದರೆ ಯಾರಿಗೂ... ಒಳ್ಳೆಯ ಉಪಾಯ. ಧನ್ಯವಾದ, ಜಿಮ್. ಮುಂದುವರಿಸು. 117 00:06:26,280 --> 00:06:28,600 ಮತ್ತು ಈಗಿoದ ಓಡಾಡಬೇಕಾದರೆ ಶಬ್ದ ಮಾಡಿಕೊಂಡು 118 00:06:28,680 --> 00:06:30,280 -ಓಡಾಡುತ್ತೀನಿ. -ಸರಿ. 119 00:06:35,040 --> 00:06:36,080 ಅದು ಬೇಡ. 120 00:06:40,440 --> 00:06:41,760 ಅದೂ ಬೇಡ. 121 00:06:44,640 --> 00:06:48,600 ಪ್ರತಿದಿನವೂ ಹತ್ತಿರವಾಗುತಿದೆ, 122 00:06:48,680 --> 00:06:52,200 ಬೇಗ ಬೇಗ ಕಳೆಯುತಿದೆ, 123 00:06:53,360 --> 00:06:59,360 ನಿನ್ನ ಪ್ರೀತಿ ಸಿಗುವುದು, ಸಿಕ್ಕೇ ಸಿಗುವುದು, ಆಹಾ, 124 00:07:00,040 --> 00:07:01,440 ಏನು ಹಾಡ್ತಾ ಇದ್ದೀಯ? 125 00:07:02,760 --> 00:07:03,920 ಹಾಡ್ತಾ ಇದ್ದೀನಾ? 126 00:07:06,040 --> 00:07:08,440 ಆಹಾ, ಓಹೋ, ಆಹಾ ಆಹಾ. 127 00:07:08,520 --> 00:07:09,640 ಹೌದು ಅನಿಸುತ್ತೆ. 128 00:07:10,760 --> 00:07:12,360 ನಾನೇ ಬರೆದೆ ಅನಿಸುತ್ತೆ. 129 00:07:13,440 --> 00:07:16,680 "ಅದು ಒಳ್ಳೆಯ ಸಮಯ, ಅದು ಕೆಟ್ಟ ಸಮಯ..." 130 00:07:16,760 --> 00:07:18,840 ಇದು "ಅ" ಸಾಲಿನಲ್ಲಿ. 131 00:07:40,120 --> 00:07:41,200 ತೊಂದರೆಯಲ್ಲಿದ್ದೀಯ. 132 00:07:41,280 --> 00:07:42,520 ಅದು ಖಚಿತ. 133 00:07:43,040 --> 00:07:46,159 ಮಾಜಿ ರಾಕ್ಷಸ, ಸ್ವರ್ಗ ನರಕ ಎರಡರಿoದಲೂ ದ್ವೇಷಿಸಲ್ಪಡುವವ. 134 00:07:46,240 --> 00:07:49,840 -ಹೇಗೆ ಸಂಭಾಳಿಸಲಿ? -ತಮಾಷೆ ಮಾಡ್ತಾ ಇದ್ದೀಯಾ? 135 00:07:49,920 --> 00:07:51,880 ಮಾಡ್ತಾ ಇದ್ದರೆ ಗೊತ್ತಾಗುತ್ತಾ ನಿನಗೆ? 136 00:07:53,040 --> 00:07:54,159 ಒಳಗೆ ಬರಬಹುದಾ? 137 00:07:55,600 --> 00:07:57,480 ಗೇಬ್ರಿಯಲ್ ಕಾಣೆಯಾಗಿದ್ದಾನೆ. 138 00:07:57,560 --> 00:07:59,080 ವಿಷಯ ಬಂತು. 139 00:07:59,880 --> 00:08:01,520 ಬೀಲ್ಜಬಬ್ ಬಳಿ ಮಾತಾಡಿದೆ, 140 00:08:01,600 --> 00:08:04,720 ಅಜಿರಫೆಲ್ ಏನೋ ಮಾಡಿರಬೇಕು ಅಂತ ಸಂದೇಹ. 141 00:08:04,800 --> 00:08:06,560 ನನಗನಿಸಲ್ಲ. 142 00:08:07,120 --> 00:08:09,680 ತುಂಬಾ ಶಕ್ತಿಯುತ ಪವಾಡ ನಡೆದಿದೆ ನೆನ್ನೆ. 143 00:08:09,760 --> 00:08:11,400 ಅತ್ಯಂತ ಶಕ್ತಿಶಾಲಿ ದೇವತೆಗಳು 144 00:08:11,480 --> 00:08:15,080 ಮಾತ್ರ ಮಾಡಲಾಗುವಂತಹ ಪವಾಡ. 145 00:08:17,640 --> 00:08:20,080 ನಿನ್ನ ಸ್ನೇಹಿತನ ಪುಸ್ತಕ ಅಂಗಡಿಯ ಹತ್ತಿರದಲ್ಲೇ. 146 00:08:20,160 --> 00:08:22,160 ಏನು ಪವಾಡ ಎಂದು ನಿನಗೆ ತಿಳಿದಿಲ್ಲವಾ? 147 00:08:22,240 --> 00:08:23,840 ನಾನು ಮಾಡಿದ್ದಲ್ಲ ಅಂತ ಹೇಗೆ ಗೊತ್ತು? 148 00:08:25,160 --> 00:08:27,760 ಸಹಾಯ ಮಾಡು ನಮಗೆ. 149 00:08:29,160 --> 00:08:30,040 ಇಲ್ಲದಿದ್ದರೆ, 150 00:08:31,160 --> 00:08:33,200 ಸ್ವರ್ಗವು ನಿನ್ನ ದ್ವೇಷಿಸುತ್ತದೆ, 151 00:08:33,720 --> 00:08:35,760 ನರಕ ನಾಶ ಮಾಡಲು ನೋಡುತ್ತೆ. 152 00:08:40,000 --> 00:08:42,880 ನಿನಗೆ ನಾನು ಬೆದರಿಸುತ್ತಿರೋದು ಗೊತ್ತಾಯ್ತಾ? 153 00:10:07,240 --> 00:10:09,320 ಅಧ್ಯಾಯ 2: ಸುಳಿವು 154 00:10:19,520 --> 00:10:21,040 ಗುಡ್ ಒಮೆನ್ಸ್ 155 00:10:24,080 --> 00:10:24,880 ಮ್ಯಾಗಿ. 156 00:10:25,960 --> 00:10:27,160 ನಿನಗೆ ಸಂಗೀತ ಗೊತ್ತಲ್ಲ. 157 00:10:27,240 --> 00:10:30,400 ಈ ಹಾಡಿನ ಬಗ್ಗೆ ಏನು ಗೊತ್ತು? 158 00:10:30,480 --> 00:10:33,840 ಪ್ರತಿದಿನವೂ ಹತ್ತಿರವಾಗುತಿದೆ, 159 00:10:35,840 --> 00:10:40,000 ನಿನ್ನ ಪ್ರೀತಿ ಸಿಗುವುದು, ಸಿಕ್ಕೇ ಸಿಗುವುದು, 160 00:10:42,080 --> 00:10:42,960 ಅಳ್ತಿದ್ದೀಯ ನೀನು. 161 00:10:43,040 --> 00:10:44,040 ಇಲ್ಲ. 162 00:10:45,440 --> 00:10:47,040 ಇಲ್ಲ ಅನಿಸುತ್ತಾ ನಿನಗೆ? 163 00:10:47,120 --> 00:10:49,720 -ಯಾಕೆಂದರೆ... -ಹೌದು, ಅಳ್ತಿದ್ದೀನಿ, ಗೊತ್ತು 164 00:10:49,760 --> 00:10:51,480 ಸುಮ್ಮನೆ ಹೇಳಿದೆ ಅಷ್ಟೇ. 165 00:10:52,640 --> 00:10:53,720 ಹೂಂ, ಸರಿ. 166 00:10:55,440 --> 00:11:00,320 ಯಾಕೆ "ಅಳ್ತಾ ಇಲ್ಲ" ಅಂತ ಕೇಳಬಹುದಾ? 167 00:11:00,400 --> 00:11:03,480 ಅವಳಿಗಾಗಂತೂ ಅಲ್ಲ. 168 00:11:06,000 --> 00:11:08,320 ಅಲ್ಲ, ಅಲ್ಲ. ಖಂಡಿತ ಅಲ್ಲ. 169 00:11:08,400 --> 00:11:13,600 ಅವಳಿಗೆ ಆ ರೆಕಾರ್ಡ್ ಕೊಡವಷ್ಟು ಧೈರ್ಯ ಮಾಡಲು ನನಗೆ ತಿಂಗಳುಗಟ್ಟಲೆ ಹಿಡಿಯಿತು, 170 00:11:13,680 --> 00:11:16,640 ನೆನ್ನೆ ಇಬ್ಬರೂ ಕಾಫಿ ಅಂಗಡಿಯಲ್ಲಿ ಸಿಕ್ಕಿಬಿದ್ದಿದ್ದೆವು ಕೂಡ, 171 00:11:16,720 --> 00:11:19,280 ನಾನು ಹುಚ್ಚಿ ತರ ಆಡಿದೆ, ನಿಜ, 172 00:11:19,360 --> 00:11:22,680 ಅವಳಿಗೆ ಸಂಗಾತಿ ಕೂಡ ಇದ್ದಾರಂತೆ. ಇಷ್ಟೆಲ್ಲಾ ಬಿಟ್ಟರೆ, 173 00:11:23,520 --> 00:11:26,200 ನನಗೆ ಅವಳ ಮೇಲೆ ಪ್ರೀತಿ ಇದೆ ಅನ್ಸುತ್ತೆ. 174 00:11:27,320 --> 00:11:29,480 ಆದರೆ ಅವಳಿಗೆ ನಾನಿಷ್ಟ ಇಲ್ಲ. 175 00:11:30,600 --> 00:11:32,120 ನಾನೇನು ಮಾಡೋದು? 176 00:11:33,640 --> 00:11:35,560 ಅದರ ಬಗ್ಗೆ ಆಮೇಲೆ ಮಾತಾಡೋಣ? 177 00:11:35,640 --> 00:11:38,560 ಈಗ ನನ್ನ ಹತ್ತಿರ ಪವಾಡಗಳಿಲ್ಲ. 178 00:11:39,280 --> 00:11:41,000 ಹೂಂ, ಪರವಾಗಿಲ್ಲ. 179 00:11:41,560 --> 00:11:42,520 ನಾನೇ ನೋಡ್ಕೋತೀನಿ. 180 00:11:42,600 --> 00:11:46,920 ನೀವು ಹೇಳಿದ್ದು ನಿಜ. ನನ್ನ ಮುಳುಗಿದ ಜೀವನ ತೇಲಿಸೋದು ನಿಮ್ಮ ಕೆಲಸ ಅಲ್ಲ. 181 00:11:47,000 --> 00:11:50,720 ಈ ಹಾಡು ಪ್ರತಿದಿನ ಅಂತ, ಬಡ್ಡಿ ಹಾಲಿ ಮತ್ತು ನಾರ್ಮನ್ ಪೆಟ್ಟಿಯ ಹಾಡು. 182 00:11:50,800 --> 00:11:53,000 ಪೆಗ್ಗಿ ಸೂನ ಇನ್ನೊಂದು ಹಾಡು ಇದು, 183 00:11:53,080 --> 00:11:55,040 ಕೋರಲ್ ಲೇಬಲ್ ನಲ್ಲಿ 1957ರಲ್ಲಿ ಬಿಡುಗಡೆ. 184 00:11:56,280 --> 00:11:57,320 ಒಳ್ಳೆಯದು. 185 00:11:57,720 --> 00:11:58,720 ಅದರ ಪ್ರತಿ ಇದೆಯಾ? 186 00:11:58,800 --> 00:12:00,120 ತುಂಬಾ. 187 00:12:01,160 --> 00:12:04,120 ಈಡಿನ್ಬರ್ಗ್ ನಲ್ಲಿ ಒಂದು ಪಬ್ ಇದೆ. 188 00:12:04,200 --> 00:12:07,960 ಅವರಿಗೆ ಕೆಲ ರೆಕಾರ್ಡ್ ಕಳಿಸ್ತೀನಿ, ಬದಲಿಗೆ ಅವರು ಪ್ರತಿದಿನ ವನ್ನು ಕಳಿಸ್ತಾರೆ. 189 00:12:08,440 --> 00:12:12,040 ಅವರು ಯಾವ ಹಾಡು ಹಾಕಿದರೂ ಕೊನೆಗೆ ಇದೇ ಹಾಡು ಬರೋದು ಅಂತಾರೆ. 190 00:12:12,120 --> 00:12:14,840 ಹುಚ್ಚು ಅವರಿಗೆ, ಹೇಗೂ, ಆದ್ದರಿಂದ... 191 00:12:15,880 --> 00:12:16,720 ತಗೊಳ್ಳಿ. 192 00:12:18,800 --> 00:12:21,200 ದಿ ರಿಸರೆಕ್ಷನಿಸ್ಟ್ 66, ಗೋಟ್ ಗೇಟ್ - ಈಡಿನ್ಬರ್ಗ್ 193 00:12:22,840 --> 00:12:23,680 ಅಯ್ಯೋ. 194 00:12:24,720 --> 00:12:26,240 -ಇದು ಒಳ್ಳೆಯದಲ್ಲ. -ಏನು? 195 00:12:26,320 --> 00:12:28,480 ಅವರು ಬರ್ತಾ ಇದ್ದಾರೆ, ಗೊತ್ತಾಗ್ತಾ ಇಲ್ವಾ? 196 00:12:28,560 --> 00:12:29,400 ಯಾರು? 197 00:12:30,640 --> 00:12:32,120 ಅವನಲ್ಲಿ ಒಬ್ಬನೇ ಇದ್ದಾನೆ. 198 00:12:44,960 --> 00:12:45,960 ಓಹ್, ಸರಿ. 199 00:12:46,080 --> 00:12:48,560 -ಇಲ್ಲಿ ನೀವು? -ಅಜಿರಫೆಲ್. 200 00:12:48,640 --> 00:12:50,280 ಯಾಕೆ ಬಂದಿದ್ದು ನಿನಗೆ ಗೊತ್ತಲ್ಲ. 201 00:12:50,360 --> 00:12:51,880 -ನಾವು... -ನಮಸ್ಕಾರ. 202 00:12:52,440 --> 00:12:56,240 ನಾನು ಜೇಮ್ಸ್, ಚಿಕ್ಕದಾಗಿ ಜಿಮ್. ಎಲ್ಲರಿಗೂ ಹೇಳಬೇಕoತಿಲ್ಲ ಅಲ್ಲ. 203 00:12:56,320 --> 00:12:58,000 ನಾನು ಇವರ ಸಹಾಯಕ. 204 00:12:58,840 --> 00:12:59,840 ಗೇಬ್ರಿಯಲ್. 205 00:13:00,320 --> 00:13:03,720 -ಗೇಬ್ರಿಯಲ್ ಎಲ್ಲಿ? -ಗೇಬ್ರಿಯಲ್? 206 00:13:03,800 --> 00:13:05,960 ಜನರು ಒಮ್ಮೊಮ್ಮೆ ನನ್ನನ್ನು ಗೇಬ್ರಿಯಲ್ ಅಂತಾರೆ. 207 00:13:06,360 --> 00:13:08,200 ಒಳಗೆ ಹೋಗಿ ಮಾತಾಡೋಣ? 208 00:13:08,280 --> 00:13:09,120 ಸರಿ! 209 00:13:12,320 --> 00:13:13,400 ಖಂಡಿತ. 210 00:13:14,880 --> 00:13:16,760 ಒಳಗೆ ಬನ್ನಿ. 211 00:13:21,680 --> 00:13:24,200 ಯೇಯ್! ಇವತ್ತು ಪುಸ್ತಕ ಮಾರಬಹುದು! 212 00:13:24,640 --> 00:13:27,120 ಜಿಮ್, ಇವರ ತಲೆ ತಿನ್ನಬೇಡ. 213 00:13:27,200 --> 00:13:29,040 ಅವರಿಗೆ ಪುಸ್ತಕ ಬೇಡ. 214 00:13:29,120 --> 00:13:33,120 ಯಾಕೆಂದರೆ ಅವರು ಓದಿ ನೋಡಿಲ್ಲ. ಪುಸ್ತಕ ಚೆನ್ನಾಗಿರುತ್ತೆ. ತೋರಿಸ್ತೀನಿ. 215 00:13:34,240 --> 00:13:36,360 ನಿನ್ನ ಕುರುಹು ನಮಗೆ ಕಾಣಿಸಲ್ಲ ಅಂದುಕೊಂಡ್ಯಾ? 216 00:13:37,360 --> 00:13:39,800 ಕುರುಹು? ಎಂತಹ ಕುರುಹು? 217 00:13:39,880 --> 00:13:42,240 ನಿನ್ನ ಪವಾಡದ ಕುರುಹು. 218 00:13:42,320 --> 00:13:44,840 ನೆನ್ನೆ ರಾತ್ರಿ, ಅಂಗಡಿಯಿಂದ. 219 00:13:44,920 --> 00:13:47,320 ಸುಮಾರು 25 ಲಾಜರೈಗಳು. 220 00:13:48,400 --> 00:13:50,080 ನೀನೇ ಮಾಡಿದ್ದು ತಾನೇ? 221 00:13:50,920 --> 00:13:52,240 ಅದು ನಾನು... 222 00:13:53,600 --> 00:13:55,280 ನಾನು ಪವಾಡ ಮಾಡಿದೆ. 223 00:13:56,080 --> 00:13:58,560 ಏನು ಪವಾಡ ಅಜಿರಫೆಲ್? 224 00:13:58,640 --> 00:14:01,360 ಅಷ್ಟು ಶಕ್ತಿಶಾಲಿ ಪವಾಡ, ಏನೋ ಮುಖ್ಯ ವಿಷಯ ಇರಬೇಕು. 225 00:14:01,440 --> 00:14:03,680 ಇವುಗಳನ್ನ ಫ್ಯಾನ್ ತರ ಕೂಡ ಉಪಯೋಗಿಸಬಹುದು. 226 00:14:03,760 --> 00:14:04,720 ಅದು... 227 00:14:07,560 --> 00:14:09,320 ಪ್ರೀತಿ! ಹೌದು. 228 00:14:10,120 --> 00:14:11,560 ಹೌದು, ನೋಡಿ... 229 00:14:12,520 --> 00:14:16,360 ಮ್ಯಾಗಿ, ಆ ರೆಕಾರ್ಡ್ ಅಂಗಡಿಯವಳು, 230 00:14:17,040 --> 00:14:18,120 ಪ್ರೀತಿಸ್ತಿದ್ದಾಳೆ! 231 00:14:19,280 --> 00:14:21,560 ಮನುಷ್ಯರು ಅದೇ ಮಾಡೋದು. 232 00:14:21,640 --> 00:14:24,160 ಆಕಡೆ ಅಂಗಡಿಯ ನೀನಾಳನ್ನು. 233 00:14:24,720 --> 00:14:28,200 ಆದರೆ ನೀನಾಗೆ ಇವಳು ಇಷ್ಟ ಇಲ್ಲ. 234 00:14:28,280 --> 00:14:30,880 ಮ್ಯಾಗಿ ನನ್ನ ಬಾಡಿಗೆಯವಳು. 235 00:14:30,960 --> 00:14:32,360 ಅದಕ್ಕೇ, ನಾನು... 236 00:14:32,920 --> 00:14:35,920 ಒಂದು ದೊಡ್ಡ, ದೊಡ್ಡ ಪವಾಡ ಮಾಡಿದೆ, 237 00:14:36,480 --> 00:14:38,240 ನೀನಾ ಮತ್ತು ಅವಳು 238 00:14:38,720 --> 00:14:42,680 ಪ್ರೀತಿಯಲ್ಲಿ ಬೀಳಕ್ಕೆ. 239 00:14:43,760 --> 00:14:45,440 -ಕೆಲಸ ಮಾಡಿತಾ ಅದು? -ಹೌದು. 240 00:14:45,520 --> 00:14:47,880 ಚೆನ್ನಾಗಿ ಕೆಲಸ ಮಾಡಿತು. 241 00:14:47,960 --> 00:14:50,120 ಹೌದು, ಪ್ರೀತಿಯಲ್ಲಿ ಹುಚ್ಚರಾಗಿದ್ದಾರೆ. 242 00:14:50,560 --> 00:14:53,560 ಅಂದರೆ ಈ ಪವಾಡಕ್ಕೂ ಗೇಬ್ರಿಯಲ್ ಕಾಣೆಯಾಗಿದ್ದಕ್ಕೂ 243 00:14:53,640 --> 00:14:56,000 ಏನೂ ಸಂಬಂಧ ಇಲ್ಲವಾ? 244 00:14:57,840 --> 00:14:58,720 ಗೇಬ್ರಿಯಲ್? 245 00:15:00,720 --> 00:15:02,440 ಅವನನ್ನ ಹುಡುಕ್ತಾ ಇದ್ದೀರಿ 246 00:15:02,520 --> 00:15:04,000 ಅಂತ ಹೇಳಿದಿರಿ. 247 00:15:04,080 --> 00:15:05,040 ನಾವಾ? 248 00:15:05,880 --> 00:15:06,720 ಹೌದು. 249 00:15:08,920 --> 00:15:11,320 ದೊಡ್ಡವುಗಳನ್ನು ನೊಣ ಹೊಡೆಯಲು ಉಪಯೋಗಿಸಬಹುದು. 250 00:15:11,400 --> 00:15:13,640 ಗೊತ್ತು ನೀವೇನು ಯೋಚಿಸ್ತಿದ್ದೀರ ಅಂತ. ಪರವಾಗಿಲ್ಲ. 251 00:15:13,720 --> 00:15:16,200 ಆದರೆ ಅದು ಕೆಲಸ ಮಾಡಲ್ಲ. 252 00:15:20,800 --> 00:15:21,680 ನನಗೆ... 253 00:15:23,800 --> 00:15:24,800 ನನಗೆ ನೀನು ಗೊತ್ತು. 254 00:15:25,600 --> 00:15:26,560 ಹೌದು. 255 00:15:28,680 --> 00:15:29,520 ಗೊತ್ತು. 256 00:15:31,200 --> 00:15:33,040 ನಾನಿಲ್ಲಿನ ಸಹಾಯಕ ಪುಸ್ತಕ ಮಾರಾಟಗಾರ. 257 00:15:33,120 --> 00:15:35,520 ನೀವು ಬಂದಾಗ ನಾನೇ ಬಾಗಿಲು ತೆಗೆದದ್ದು. 258 00:15:36,960 --> 00:15:40,520 ನಿನ್ನ ಪವಾಡ ಪರೀಕ್ಷೆ ಮಾಡಲು ನಾಳೆ ಯಾರಾದರೂ ಬರುತ್ತಾರೆ. 259 00:15:41,400 --> 00:15:45,520 ನಿನ್ನ ಮೇಲೆ ಒಂದು ಕಣ್ಣಿಟ್ಟಿರುತ್ತೇವೆ, ಅಜಿರಫೆಲ್. 260 00:15:46,480 --> 00:15:48,480 ಖಂಡಿತ, ನಿಮ್ಮ ಕೆಲಸ ಅದು. 261 00:15:50,760 --> 00:15:51,600 ನನ್ನ ಮೇಲೆ? 262 00:15:52,000 --> 00:15:54,520 ನನ್ನ ಮೇಲೂ ಕಣ್ಣಿಟ್ಟಿರಬೇಕಲ್ವಾ ನೀವು? 263 00:15:57,760 --> 00:15:58,880 ಒಳ್ಳೆಯವರು ಅನಿಸುತ್ತೆ. 264 00:16:04,680 --> 00:16:08,200 ಪ್ರತಿದಿನವೂ ಹತ್ತಿರವಾಗುತಿದೆ, 265 00:16:08,280 --> 00:16:11,840 ಬೇಗ ಬೇಗ ಕಳೆಯುತಿದೆ, 266 00:16:12,200 --> 00:16:13,600 ಪ್ರತಿದಿನವೂ ಹತ್ತಿರವಾಗುತಿದೆ, 267 00:16:13,680 --> 00:16:18,680 ನಿನ್ನ ಪ್ರೀತಿ ಸಿಗುವುದು, ಸಿಕ್ಕೇ ಸಿಗುವುದು, ಆಹಾ, 268 00:16:18,760 --> 00:16:21,880 ಪ್ರತಿದಿನ ಬೇಗನೇ ಕಳೆಯುತಿದೆ 269 00:16:22,640 --> 00:16:26,240 ಎಲ್ಲರೂ ಅಂದರು, "ಹೋಗಿ ಕೇಳಬಾರದೇ" 270 00:16:26,320 --> 00:16:27,440 ನಿನ್ನಂತಹ ಪ್ರೀತಿ 271 00:16:28,320 --> 00:16:30,840 ದಿ ಡರ್ಟಿ ಡಾಂಕಿ 272 00:16:35,400 --> 00:16:37,240 ನಾವು ಪಬ್ ಗೆ ಹೋಗ್ತಾ ಇದ್ದೀವಿ. 273 00:16:37,320 --> 00:16:38,760 ನೀನು ಪಬ್ ಗೆ ಹೋಗಲ್ಲ ಅಲ್ಲ. 274 00:16:38,840 --> 00:16:41,760 -ನಾವು ಪಬ್ ನಲ್ಲೇ ಇದ್ದೀವಿ. -ಕಾಫಿ ಅಂಗಡಿಗೆ ಯಾಕೆ ಹೋಗಿಲ್ಲ ನಾವು? 275 00:16:41,840 --> 00:16:43,720 ಅದೇ ವಿಷಯ. 276 00:16:43,800 --> 00:16:45,320 ಒಂದು ದೊಡ್ಡ ಶೆರ್ರಿ ನನಗೆ. 277 00:16:52,160 --> 00:16:54,040 ನನಗೆ ದೊಡ್ಡ ಟಲಿಸ್ಕರ್. 278 00:16:54,120 --> 00:16:55,960 ಮತ್ತು ಲೇಡಿ ಬ್ರೈಟನ್ ಗೆ ಒಂದು ಶೆರ್ರಿ. 279 00:16:56,520 --> 00:16:58,280 ಫೆಲ್ ಅವರೇ. 280 00:16:59,160 --> 00:17:00,200 ಹಲೋ. 281 00:17:00,280 --> 00:17:03,160 ಬ್ರೌನ್. ಬ್ರೌನ್ ಕಾರ್ಪೆಟ್ ವರ್ಲ್ಡ್ ಅವನು? 282 00:17:03,240 --> 00:17:05,200 ವಿಕ್ವೇರ್ ಸ್ಟ್ರೀಟ್ ಟ್ರೇಡರ್ಸ್ ನಲ್ಲಿ, 283 00:17:05,280 --> 00:17:07,960 ಮತ್ತು ಅಂಗಡಿ ಸಂಘದ ವಾರ್ಷಿಕ ಸಭೆಯಲ್ಲಿ ಸಿಕ್ಕಿದವರು. 284 00:17:08,040 --> 00:17:09,599 -ಹೌದು. -ಆಗ ನೀವು ಹೇಳಿದ್ದಿರಿ 285 00:17:09,720 --> 00:17:13,240 ಮಾಸಿಕ ಸಭೆಯೊoದನ್ನು ಖುಷಿಯಿಂದ ಆಯೋಜಿಸುತ್ತೀರಿ ಎಂದು. 286 00:17:13,319 --> 00:17:14,319 ಹೌದಾ? 287 00:17:14,440 --> 00:17:17,280 ಆದರೆ ಪ್ರತಿ ಬಾರಿ ನಿಮ್ಮ ಅಂಗಡಿಗೆ ಬಂದಾಗ ಅದು ಮುಚ್ಚಿತ್ತು. 288 00:17:17,319 --> 00:17:20,000 ಮೂಢನಂಬಿಕೆಯ ಮನುಷ್ಯನಾಗಿದ್ದಾರೆ ತುಂಬಾ ಬೇಜಾರಾಗುತ್ತಿತ್ತು. 289 00:17:20,079 --> 00:17:20,920 ನಿಜ. 290 00:17:21,000 --> 00:17:24,640 ನಾವು ಪರಿಷತ್ತಿನ ಕಸ ತೆಗೆಯುವ ಸಮಯದ ಬಗ್ಗೆ ಮಾತಾಡಬೇಕು. 291 00:17:24,720 --> 00:17:26,560 ಚಳಿಗಾಲದ ಬೀದಿದೀಪಗಳ ಪ್ರಚಾರದ ಬಗ್ಗೆ. 292 00:17:26,680 --> 00:17:28,440 -ಅದು ನನಗೆ... -ನಿಮಗಾಗಿ ಶೆರ್ರಿ. 293 00:17:28,960 --> 00:17:29,960 ನನಗೆ ವಿಸ್ಕಿ. 294 00:17:30,040 --> 00:17:31,160 ಹಲೋ. 295 00:17:31,240 --> 00:17:33,040 ಫೆಲ್ ಅವರು ಹೇಳುತ್ತಿದ್ದರು, 296 00:17:33,080 --> 00:17:36,520 ನಮ್ಮ ಸಂಘದ ಸಭೆಯನ್ನು ಆಯೋಜಿಸಲು ಅವರು ಎಷ್ಟು ಉತ್ಸುಕರಿದ್ದಾರೆ ಎಂದು. 297 00:17:36,560 --> 00:17:39,200 -ಆಶ್ಚರ್ಯ. -ನಾನು ವಿವರಗಳನ್ನು ಕಳಿಸ್ತೀನಿ. 298 00:17:39,280 --> 00:17:41,440 ಆದರೆ ಗುರುವಾರ ರಾತ್ರಿ ಅಂಗಡಿ ಮುಚ್ಚಿದ ಮೇಲೆ. 299 00:17:44,560 --> 00:17:45,520 ನೋಡಿದಿರಾ? 300 00:17:45,560 --> 00:17:47,680 ಇದಕ್ಕೇ ನಾನು ಪಬ್ ಗೆ ಹೋಗಲ್ಲ. 301 00:17:47,760 --> 00:17:48,920 ನೀನೇ ಪಬ್ ಗೆ ಕರೆದದ್ದು. 302 00:17:49,000 --> 00:17:51,720 ಏನೋ ತುರ್ತು ವಿಷಯ ಹೇಳಬೇಕು ನಿನಗೆ. 303 00:17:51,800 --> 00:17:53,720 -ನಾನೂ. ನೆನ್ನೆ ರಾತ್ರಿಯ ಪವಾಡ. -ಅದೇ. 304 00:17:53,800 --> 00:17:56,080 -ಕಾಫಿ ಅಂಗಡಿಯಲ್ಲಿ ಮಾತಾಡಕ್ಕೆ ಆಗಲ್ಲ. -ಯಾಕೆ? 305 00:17:56,200 --> 00:17:58,080 ಕಾಫಿ ಅಂಗಡಿಯವಳಿಗೆ ಸಂಬಂಧ ಪಟ್ಟಿದ್ದು ಅದು. 306 00:17:58,160 --> 00:17:59,280 ಅವಳ ಹೆಸರು ನೀನಾ. 307 00:17:59,320 --> 00:18:01,240 ರೆಕಾರ್ಡ್ ಅಂಗಡಿಯ ಮ್ಯಾಗಿಗೆ ಅವಳ... 308 00:18:02,200 --> 00:18:06,040 ಮೇಲೆ ಪ್ರೀತಿ, ಆದರೆ ಏನು ಮಾಡೋದು ಗೊತ್ತಿಲ್ಲ. 309 00:18:06,080 --> 00:18:09,560 ಅದಕ್ಕಿಂತ ದೊಡ್ಡ ಸಮಸ್ಯೆಯಿದೆ. ನಿನ್ನ ಅಂಗಡಿಯಲ್ಲಿ. 310 00:18:09,960 --> 00:18:11,200 ಎರಡೂ ಒಂದೇ ಸಮಸ್ಯೆ. 311 00:18:11,920 --> 00:18:15,240 ನಮ್ಮ ಗೇಬ್ರಿಯಲ್ ಪವಾಡದಿoದ ನೆನ್ನೆ ಸ್ವರ್ಗದಲ್ಲಿ ಅಲಾರಂ ಆಗಿದೆ. 312 00:18:15,320 --> 00:18:16,960 ಅವರಿಗೆ ಸಂದೇಹ ಇದೆ. 313 00:18:17,040 --> 00:18:20,880 ಅದಕ್ಕೇ ನಾನು ಹೇಳಿದೆ, ಮ್ಯಾಗಿ ಮತ್ತು ನೀನಾ ಪ್ರೀತಿಸುವಂತೆ ಮಾಡಿದೆ ಅಂತ. 314 00:18:20,960 --> 00:18:23,800 -ಯಾಕೆ? -ಅದೇ ತಲೆಗೆ ಬಂದಿದ್ದು. 315 00:18:23,920 --> 00:18:24,880 ನಂಬಿದರಾ ನಿನ್ನ ಅವರು? 316 00:18:24,960 --> 00:18:27,200 -ಯಾರನ್ನೋ ಪರೀಕ್ಷಿಸಲು ಕಳಿಸುತ್ತಿದ್ದಾರೆ. -ಓಹ್. 317 00:18:27,280 --> 00:18:29,760 ಚಿಕ್ಕ ಪವಾಡ ಮಾಡು, ಕೈ ಬೆರಳಿನ ಚಳಕ ತೋರು, 318 00:18:29,800 --> 00:18:33,200 -ನೀನಾ ಮ್ಯಾಗಿ ಪ್ರೀತಿಯಲ್ಲಿ. ನೀನು ಸುರಕ್ಷಿತ. -ಹಾಗಾಗಲ್ಲ ಅದು. 319 00:18:33,280 --> 00:18:35,080 ಏನು ಮಾಡಬೇಕು ಮತ್ತೆ? 320 00:18:35,200 --> 00:18:37,400 ಸರಿ ಮಾಡಬೇಕು. 321 00:18:38,200 --> 00:18:39,720 ನೀನಾ ಮ್ಯಾಗಿ ಪ್ರೀತಿಯಲ್ಲಿ, 322 00:18:39,800 --> 00:18:41,800 ಸ್ವರ್ಗದ ಸಂದೇಹ ಪರಿಹಾರ. 323 00:18:44,080 --> 00:18:49,720 ಏನು ಅರ್ಥ, ಮಳೆ ಬರಿಸಿ, ಮರದ ಸುತ್ತಾ ಸುತ್ತಿಸಿ, 324 00:18:50,560 --> 00:18:54,920 ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮಾಡಿ, ಅವರು ಪ್ರೀತಿಯಲ್ಲಿ ಬೀಳೋ ಹಾಗೆ ಮಾಡಬೇಕಾ? 325 00:18:55,520 --> 00:18:56,720 ಹಾಗಾಗುತ್ತೆ ಅನಿಸುತ್ತಾ? 326 00:18:56,800 --> 00:18:58,960 ಇಲ್ಲ, ಇಲ್ಲ, ಇಲ್ಲ, ಇಲ್ಲ. 327 00:18:59,680 --> 00:19:03,760 ಮನುಷ್ಯರನ್ನು ನೆನೆಸಿ, ಕಣ್ಣಲ್ಲಿ ಕಣ್ಣಿಟ್ಟು ನೋಡುವಂತೆ ಮಾಡು... ಅಷ್ಟೇ ತಾನೇ. 328 00:19:04,880 --> 00:19:06,800 ರಿಚರ್ಡ್ ಕರ್ಟಿಸ್ ಚಿತ್ರದಂತೆ. 329 00:19:07,920 --> 00:19:10,040 ಕಲ್ಪನೆನೇ ಮಾಡಿಕೊಳ್ಳೋದು ಅಂದರೆ, 330 00:19:10,680 --> 00:19:12,640 ಚೆನ್ನಾಗಿರೋ ಕಲ್ಪನೆ ಮಾಡು. 331 00:19:12,720 --> 00:19:14,040 ಚೆನ್ನಾಗಿ? 332 00:19:14,560 --> 00:19:16,400 -ಜೇನ್ ಆಸ್ಟೆನ್ ನೆನಪಿದೆಯಾ? -ಹೂಂ. 333 00:19:16,480 --> 00:19:18,640 ಅವಳನ್ನು ಅಷ್ಟು ಬೇಗ ಮರೆಯಕ್ಕಾಗಲ್ಲ, ಅಲ್ವಾ? 334 00:19:18,720 --> 00:19:21,680 1810ರ ಕ್ಲರ್ಕನ್ವೆಲ್ ವಜ್ರದ ಕಳ್ಳತನ. 335 00:19:21,760 --> 00:19:23,680 ಬ್ರಾಂಡಿ ಕಳ್ಳಸಾಗಾಣಿಕೆ, ನಿಪುಣ ಗೂಢಾಚಾರಿ. 336 00:19:24,280 --> 00:19:25,480 ಅದ್ಭುತ ವ್ಯಕ್ತಿ! 337 00:19:26,040 --> 00:19:28,400 ಕಾದಂಬರಿ ಬರೆದವಳು. 338 00:19:29,000 --> 00:19:31,040 -ಜೇನ್ ಆಸ್ಟೆನ್? -ಹೌದು. 339 00:19:34,040 --> 00:19:36,440 ಅನಿರೀಕ್ಷಿತ ಇದು. ಕಾದಂಬರಿ? 340 00:19:36,520 --> 00:19:38,320 ಹೂಂ, ಚೆನ್ನಾಗೂ ಇದ್ದವು. 341 00:19:38,680 --> 00:19:42,920 ಹೂಂ, ಆಶ್ಚರ್ಯ. ನಿಮಗೆ ಚೆನ್ನಾಗಿ ಗೊತ್ತು ಅಂದುಕೋತೀರಿ... 342 00:19:43,000 --> 00:19:45,080 -ಅವಳ ಬಳುಕು. -ಹೂಂ... 343 00:19:45,160 --> 00:19:46,680 ಕೋಟಿಲಿಯನ್ ನಲ್ಲಿ. 344 00:19:47,160 --> 00:19:50,080 ಜನ ಸೇರಿ, ಸ್ವಲ್ಪ ನೃತ್ಯ ಮಾಡಿದ ಮೇಲೆ 345 00:19:50,200 --> 00:19:52,720 ಅಪಾರ್ಥ ಮಾಡಿಕೊಂಡು, 346 00:19:52,800 --> 00:19:55,160 ಪ್ರೀತಿಯಲ್ಲಿ ಬೀಳುತ್ತಿದ್ದರು. 347 00:19:55,240 --> 00:19:56,760 ಅದು ಹೇಗೆ ಸಾಧ್ಯ? 348 00:19:56,800 --> 00:19:58,640 ಯಾವಾಗಲೂ ಆಗುತ್ತoತೆ. 349 00:19:58,720 --> 00:19:59,960 ಬೇರೆ ಏನೋ ವಿಷಯ ಇದೆ. 350 00:20:00,040 --> 00:20:01,560 ನಾನು ರೆಕಾರ್ಡ್ ತೋರಿಸ್ತೀನಿ. 351 00:20:01,680 --> 00:20:03,480 ಅದು ನಮಗೆ ಸುಳಿವು ಕೊಡಬಹುದು. 352 00:20:03,560 --> 00:20:05,680 ಅರ್ಥ ಆಗ್ತಾ ಇಲ್ಲ. ಮಳೆ ಬರಿಸಬೇಕಾ ಬೇಡವಾ? 353 00:20:05,760 --> 00:20:07,640 ಬಾ, ಸುಳಿವು ತೋರಿಸ್ತೀನಿ. 354 00:20:13,040 --> 00:20:15,240 ಏನು ಸಿಕ್ಕಿದರೂ, ಅದನ್ನು ಸುಳಿವು ಅಂತೀಯ. 355 00:20:15,320 --> 00:20:18,040 -ಸುಳಿವೇ ಅದು. -ಸರಿ, ಆದರೆ ಹಾಗೆ ಹೇಳಬೇಡ. 356 00:20:18,080 --> 00:20:20,280 ಗೇಬ್ರಿಯಲ್ ಈ ಹಾಡು ಹಾಡ್ತಾ ಇದ್ದ ಬೆಳಿಗ್ಗೆ. 357 00:20:20,320 --> 00:20:23,480 -ಏನು? -ನೀನು ಕೇಳಿದ್ದೀಯಾ ಈ ಹಾಡು? 358 00:20:23,560 --> 00:20:25,800 ಪ್ರತಿದಿನವೂ ಹತ್ತಿರವಾಗುತಿದೆ... 359 00:20:25,920 --> 00:20:27,680 -ಇಲ್ಲ. -ಅದನ್ನೇ ಹಾಡ್ತಾ ಇದ್ದ. 360 00:20:27,760 --> 00:20:28,760 ಮನುಷ್ಯರ ಹಾಡು. 361 00:20:28,800 --> 00:20:30,680 ಆ ಹಾಡಿನ ಜೊತೆ ಇನ್ನೊಂದು ರಹಸ್ಯ ಇದೆ. 362 00:20:30,760 --> 00:20:34,560 ಅದೇ ನಮ್ಮ ಸುಳಿವು. ಹೌದು. 363 00:20:35,640 --> 00:20:36,920 ಇನ್ನು ಮಾತಾಡಬೇಡ. 364 00:20:45,320 --> 00:20:48,280 ಜೇನ್ ಆಸ್ಟೆನ್ ಕಾದಂಬರಿ ಕೂಡ ಬರೆದಳು. 365 00:20:49,400 --> 00:20:52,160 ನನಗೆ ನೀವು, ಜನರು, ಅರ್ಥಾನೇ ಆಗಲ್ಲ. 366 00:20:53,280 --> 00:20:55,880 ಜಿಮ್, ಈಗ ಹೇಳು, ನಿನಗೆ ಏನು ಗೊತ್ತು? 367 00:20:56,280 --> 00:20:57,280 ಸರಿ. 368 00:20:58,240 --> 00:20:59,240 ಏನು ಗೊತ್ತು? 369 00:20:59,320 --> 00:21:02,000 ಇಲ್ಲ, ಅಂದರೆ, ನಿನಗೆ ಏನು ನೆನಪಿದೆ? 370 00:21:03,440 --> 00:21:06,520 ಬೆಳಿಗ್ಗೆ ಹಾಡಿದ ಹಾಡು ನೆನಪಿದೆ. 371 00:21:06,920 --> 00:21:08,480 ಎಲ್ಲಿ ಕೇಳಿದೆ ನೀನು ಅದನ್ನ? 372 00:21:08,560 --> 00:21:11,440 ಇವತ್ತು ಬೆಳಿಗ್ಗೆ, ನನ್ನ ಬಾಯಿಂದ. 373 00:21:12,040 --> 00:21:15,760 ಮತ್ತೆ ಆ ಮೂರು ಒಳ್ಳೆಯ ಜನರು ನೆನಪಿದ್ದಾರೆ. ಅಂಗಡಿಗೆ ಬಂದಿದ್ದರಲ್ಲ. 374 00:21:15,800 --> 00:21:17,160 ಅದು ನೆನಪಿದೆಯಾ? 375 00:21:17,240 --> 00:21:19,400 ಹೂಂ, ಈಗಷ್ಟೇ ಅಂಗಡಿಗೆ ಬಂದಿದ್ದರಲ್ಲ. 376 00:21:20,320 --> 00:21:22,000 ಇನ್ನೇನು ನೆನಪಿದೆ? 377 00:21:22,280 --> 00:21:23,760 ನೆನಪಿಸಿಕೊ. 378 00:21:24,160 --> 00:21:25,400 ಚೆನ್ನಾಗಿ ನೆನಪಿಸಿಕೊ! 379 00:21:25,480 --> 00:21:28,040 ನಿನಗೆ ಮೊತ್ತಮೊದಲಿದ್ದು ಏನು ನೆನಪಿದೆ? 380 00:21:34,240 --> 00:21:36,960 ನನಗೆ ಬೆಳಗ್ಗಿನ ನಕ್ಷತ್ರಗಳು ಹಾಡಿದ್ದು ನೆನಪಿದೆ 381 00:21:37,040 --> 00:21:39,560 ಎಲ್ಲಾ ದೇವತೆಗಳು ಖುಷಿಯಿಂದ ಕಿರುಚುತ್ತಿದ್ದರು. 382 00:21:40,480 --> 00:21:42,000 ಹಾಗೆ. ಹಾಗೆ. 383 00:21:42,080 --> 00:21:43,400 ಹೂಂ, ಹಾಗೇನೇ. 384 00:21:43,480 --> 00:21:44,760 -ಇಲ್ಲ. -ಹೇಳುತ್ತಾ ಹೋಗು. 385 00:21:44,800 --> 00:21:46,200 -ಆಗಲ್ಲ. -ಆಗುತ್ತೆ. 386 00:21:46,280 --> 00:21:47,640 ಆಗಲ್ಲ. ಆಗಲ್ಲ! 387 00:21:48,200 --> 00:21:52,200 ನನಗೆ ಇದೆಲ್ಲಾ ನೆನಪಿಲ್ಲ. ನನ್ನ ತಲೆ ಅಷ್ಟು ದೊಡ್ಡದಿಲ್ಲ, ಈಗಂತೂ. 388 00:21:52,280 --> 00:21:54,160 ಹೂಂ, ಗೊತ್ತಾಯ್ತು. 389 00:21:54,720 --> 00:21:55,880 ಕ್ಷಮಿಸು, ಜಿಮ್. 390 00:21:56,960 --> 00:21:58,560 ತುಂಬಾ ಚೆನ್ನಾಗಿ ನೆನಪಿಸಿಕೊಂಡೆ. 391 00:21:59,560 --> 00:22:00,720 ಆರಾಮ ಮಾಡು. 392 00:22:12,560 --> 00:22:15,960 ನಿನ್ನ ಬಾಸ್ ಕೂಡ ಜಾಬ್ ಗೆ ಅದನ್ನೇ ಹೇಳಿದ್ದು, 393 00:22:16,040 --> 00:22:17,080 ನೆನಪಿದೆಯಾ? 394 00:22:17,720 --> 00:22:19,200 ಖಂಡಿತವಾಗಿ. 395 00:22:29,080 --> 00:22:32,120 ಜಾಬ್ ನ ಪುಸ್ತಕ ಜಾಬ್ ನ ಹೊಲದ ನಾಶ 396 00:22:38,560 --> 00:22:39,760 ನನ್ನ ಮಕ್ಕಳು? 397 00:22:41,400 --> 00:22:44,280 ಇಲ್ಲೇ ಇದ್ದಾರಾ? ನನಗೆ ಸ್ವಲ್ಪ ಕೆಲಸ ಇತ್ತು. 398 00:22:45,160 --> 00:22:47,000 ಗೊತ್ತಿಲ್ಲ ನನಗೆ. 399 00:22:47,080 --> 00:22:48,720 ಸಿಟಿಸ್ ಗೆ ಗೊತ್ತಿರಬಹುದು. 400 00:22:49,680 --> 00:22:52,560 ಕ್ಷಮಿಸಿ, ನೀವು ಬಂದ ಸಮಯ ಸರಿಯಿಲ್ಲ. 401 00:22:52,640 --> 00:22:55,040 ಹೂಂ, ಗೊತ್ತಾಗ್ತಾ ಇದೆ. ಏನಾಯಿತು? 402 00:22:55,800 --> 00:22:59,200 ದೇವರು ನನ್ನ ಕೈಬಿಟ್ಟು, ರಾಕ್ಷಸರ ಪಾಲಿಗೆ ಬಿಟ್ಟಿದ್ದಾನೆ. 403 00:23:00,120 --> 00:23:01,320 ಕೋಪ ಬಂದಿರಬೇಕು ನಿನಗೆ. 404 00:23:01,400 --> 00:23:03,280 ತುಂಬಾ ಕೋಪ ಬರ್ತಿದೆ. 405 00:23:03,360 --> 00:23:04,480 ನಿಜವಾಗಿಯೂ. 406 00:23:05,200 --> 00:23:07,120 ದೇವರಿಗೆ ಅಷ್ಟು ಭಕ್ತಿ ತೋರಿಸಿ. 407 00:23:07,880 --> 00:23:09,000 ದೇವರ ಮೇಲಲ್ಲ. 408 00:23:09,600 --> 00:23:11,280 ನನ್ನ ಮೇಲೆ. 409 00:23:11,360 --> 00:23:13,880 -ನಿನ್ನ ಮೇಲೆ? ನೀನೇನು ಮಾಡಿದೆ? -ಗೊತ್ತಿಲ್ಲ. 410 00:23:14,720 --> 00:23:18,560 ಎಷ್ಟು ಪಾಪ ಮಾಡಿರಬೇಕು ನಾನು, ಇದನ್ನೆಲ್ಲಾ ಅನುಭವಿಸುವುದಷ್ಟೇ ಅಲ್ಲದೇ, 411 00:23:18,640 --> 00:23:20,160 ಅದು ಯಾಕೆ ಅಂತಲೂ ಗೊತ್ತಿಲ್ಲ. 412 00:23:20,240 --> 00:23:22,120 ಈಗೇನಂತೆ? 413 00:23:22,960 --> 00:23:26,760 ಸಿಟಿಸ್ ಇವರು ನಮ್ಮ ಮಕಳನ್ನು ಹುಡುಕುತ್ತಿದ್ದಾರೆ. 414 00:23:28,160 --> 00:23:29,480 ಯಾಕೆ? ನೀವು ಯಾರು? 415 00:23:29,560 --> 00:23:32,400 ಹಳೆಯ ಸ್ನೇಹಿತ. ಸಮಾಧಾನ ಮಾಡಲು ಬಂದೆ. 416 00:23:32,480 --> 00:23:34,080 ಎಂತಹ ಹಳೆಯ ಸ್ನೇಹಿತ? 417 00:23:34,600 --> 00:23:35,800 ನೀನು ಹೇಳು. 418 00:23:39,280 --> 00:23:40,720 ಶುಹದ ಬಿಲ್ದಾದ್. 419 00:23:41,960 --> 00:23:45,560 ಹೂಂ, ಅದೇ. ಮಕ್ಕಳೆಲ್ಲಿದ್ದಾರೆ? 420 00:23:45,640 --> 00:23:47,160 ಈಗಲ್ಲ, ಶುಹದ ಬಿಲ್ದಾದ್. 421 00:23:47,240 --> 00:23:51,120 ನೋಡಲು ಬಂದಿದ್ದು ಖುಷಿಯಾಯಿತು, ಆದರೆ ದೇವರ ವಿಕೋಪ ಎದುರಿಸುವುದರಲ್ಲಿ ವ್ಯಸ್ತರಿದ್ದೇವೆ. 422 00:23:51,200 --> 00:23:55,040 ಹೂಂ, ಅದಕ್ಕೇ ನೀವಿನ್ನು ಮಕ್ಕಳನ್ನು ನೋಡಿಕೊಳ್ಳಬೇಕೂಂತ ಇಲ್ಲ. 423 00:23:56,240 --> 00:23:58,560 ಇಲ್ಲ. ದೇವರು ಹಾಗೆ ಮಾಡಲ್ಲ. 424 00:23:59,640 --> 00:24:01,040 ಪಕ್ಕಾ? 425 00:24:01,600 --> 00:24:04,160 ಆದರೆ ಅವರೇನೂ ಮಾಡಿಲ್ಲ. ಅವರು ಮುಗ್ಧರು. 426 00:24:04,240 --> 00:24:05,680 ಮೇಕೆಗಳು ಕೂಡ. 427 00:24:22,720 --> 00:24:24,000 ಮನೆ ಚೆನ್ನಾಗಿದೆ. 428 00:24:24,680 --> 00:24:25,520 ಛೇ. 429 00:24:27,120 --> 00:24:28,360 ಕ್ರೌಲಿ. 430 00:24:28,440 --> 00:24:30,520 ನೀನು ಅವನ ಮಕ್ಕಳನ್ನು ನಾಶ ಮಾಡಬೇಕಂತಿಲ್ಲ. 431 00:24:30,600 --> 00:24:32,880 ಹಿಂದಿನ ಬಾರಿ ನಾವು ಭೇಟಿಯಾದಾಗ, 432 00:24:32,960 --> 00:24:35,360 ಮೇಕೆಗಳ ಬಗ್ಗೆಯೂ ನೀನು ಅದೇ ಹೇಳಿದ್ದೆ. 433 00:24:35,440 --> 00:24:36,960 ಹೂಂ, ಆದರೆ ಅದು ತಪ್ಪಾಗಿತ್ತು. 434 00:24:37,040 --> 00:24:38,720 -ನೀನು ಹಾಗೆ ಮಾಡಬಹುದು. -ಒಳ್ಳೆಯದು. 435 00:24:38,800 --> 00:24:40,520 ಹಾಗಾದರೆ, ನಾನು ಹಾಗೆ ಮಾಡುತ್ತೇನೆ. 436 00:24:40,600 --> 00:24:41,920 ಆದರೆ ನೀನು ಮಾಡಬೇಕಂತಿಲ್ಲ. 437 00:24:42,000 --> 00:24:45,160 ರಾಕ್ಷಸನಾಗಿ ಒಂದು ಒಳ್ಳೆಯದಂದರೆ 438 00:24:45,240 --> 00:24:48,440 -ನೀನು ಏನು ಬೇಕಾದರೂ ಮಾಡಬಹುದು. -ನಿನಗೆ ಹೊಟ್ಟೆ ಉರಿಯುತ್ತಿರುವಂತಿದೆ. 439 00:24:48,520 --> 00:24:49,600 ಖಂಡಿತ ಇಲ್ಲ. 440 00:24:49,680 --> 00:24:51,840 ನನಗೆ ದೇವರ ಕೆಲಸ ಮಾಡಸಿಗುತ್ತೆ. 441 00:24:51,920 --> 00:24:54,880 ಶೈತಾನನೊಂದಿಗೆ ಬಾಜಿ ಕಟ್ಟಿ ಮಕ್ಕಳನ್ನು ಕೊಲ್ಲುವಂತಹ ಕೆಲಸಾನಾ? 442 00:24:54,960 --> 00:24:57,360 ದೇವರಿಗೆ ಅದು ಬೇಕಿರೋದು 443 00:24:58,400 --> 00:25:00,600 ಅನಿಸಲ್ಲ ನನಗೆ. 444 00:25:00,680 --> 00:25:01,720 ಸರಿ... 445 00:25:02,800 --> 00:25:05,200 ನಿನಗೂ ಅದು ಇಷ್ಟ ಇಲ್ಲ ಅನಿಸುತ್ತೆ. 446 00:25:05,280 --> 00:25:07,320 ನನಗೇನು ಇಷ್ಟ ಅಂತ ನಿನಗೇನು ಗೊತ್ತು? 447 00:25:08,280 --> 00:25:10,320 -ನನಗೆ ನೀನು ಗೊತ್ತು. -ಇಲ್ಲ, ಗೊತ್ತಿಲ್ಲ. 448 00:25:11,280 --> 00:25:13,240 ನೀನು ಎಂತಹ ದೇವತೆಯಾಗಿದ್ದೆ ಗೊತ್ತು. 449 00:25:13,320 --> 00:25:15,600 ನಿನಗೆ ಗೊತ್ತಿದ್ದ ದೇವತೆ ನಾನಲ್ಲ. 450 00:25:16,760 --> 00:25:20,120 ನಿನಗೆ ಇದು ಮಾಡಕ್ಕೆ ಇಷ್ಟ ಅಂತ ಹೇಳು ನನಗೆ. 451 00:25:20,760 --> 00:25:23,200 ಕಣ್ಣಲ್ಲಿ ಕಣ್ಣಿಟ್ಟು ಹೇಳು. 452 00:25:27,400 --> 00:25:28,680 ಹೌದು, ಮಾಡಬೇಕು. 453 00:25:30,360 --> 00:25:35,200 ತಪ್ಪಿಲ್ಲದ ಜಾಬ್ ನ ತಪ್ಪಿಲ್ಲದ ಮಕ್ಕಳನ್ನು ನಾಶ ಮಾಡಲು ನಾನು ಕಾತುರನಿದ್ದೀನಿ. 454 00:25:35,960 --> 00:25:39,680 ಅವನ ತಪ್ಪಿಲ್ಲದ ಮೇಕೆಗಳನ್ನು ಸಾಯಿಸಿದಂತೆ. 455 00:25:47,640 --> 00:25:49,080 ದೇವರು ನಿನ್ನನ್ನು ಕ್ಷಮಿಸಲಿ. 456 00:26:24,960 --> 00:26:25,880 ಈಗ... 457 00:26:29,760 --> 00:26:32,040 -ನಗೋದು ನಿಲ್ಲಿಸು. -ನಾನು ನಗ್ತಿಲ್ಲ. 458 00:26:32,120 --> 00:26:35,520 -ನಾವಿಬ್ಬರೂ ಒಂದೇ ತಂಡ ಆಗಿದ್ದಿವಿ ಅಂತೇನಲ್ಲ. -ಅಲ್ಲ. ಅಲ್ಲ. 459 00:26:37,680 --> 00:26:39,840 ಸದ್ಯಕ್ಕೆ ಒಂದೇ ತಂಡ ಅಷ್ಟೇ. 460 00:26:39,920 --> 00:26:41,160 ನೀನು ಹೇಳಿದಂತೆ. 461 00:26:43,560 --> 00:26:45,760 ಭಯ ಬೇಡ. 462 00:26:45,840 --> 00:26:50,040 ನಾನು ದೇವರು ಕಳಿಸಿದ ದೇವತೆ. 463 00:26:50,760 --> 00:26:53,040 ವೈನ್ ತಂದೆಯಾ, ಅಪ್ಪ ಕೇಳಿಕೊಂಡಿದ್ದರಲ್ಲ? 464 00:26:53,120 --> 00:26:54,200 ಪಾರ್ಟಿಗಾಗಿ. 465 00:26:55,320 --> 00:26:58,480 ಏನು? ಇಲ್ಲ. ನನ್ನ ಬಳಿ ವೈನ್ ಇಲ್ಲ, ಮಗು. 466 00:26:59,000 --> 00:27:00,600 -ನಾನು ತಂದಿದ್ದು... -ಎನಾನ್. 467 00:27:00,680 --> 00:27:01,920 ಏನು? 468 00:27:02,360 --> 00:27:05,160 ದೇವತೆಗಳು ಬಂದಿದ್ದಾರೆ. ಯಾವಾಗಲೂ ಬರುವವರಲ್ಲ ಮಾತ್ರ. 469 00:27:05,240 --> 00:27:07,120 ವೈನ್ ಕೂಡ ತಂದಿಲ್ಲ ಅವರು. 470 00:27:08,000 --> 00:27:09,280 ಸರಿ, ಹಾಗಿದ್ರೆ. 471 00:27:09,360 --> 00:27:12,200 ಈಗ ಹೋಗಿ ತನ್ನಿ, ಸರಿನಾ? 472 00:27:17,560 --> 00:27:19,160 ಅವನು ಒಳ್ಳೆಯವನಂತೆ ಕಾಣ್ತಾನೆ. 473 00:27:21,040 --> 00:27:23,040 ನಾನು ಎಚ್ಚರಿಕೆಯೊಂದನ್ನು ತಂದಿದ್ದೇನೆ! 474 00:27:23,120 --> 00:27:29,120 ಶೈತಾನ ನಿಮ್ಮನ್ನು ನಾಶ ಮಾಡಲು ಇಂದು ರಾತ್ರಿ ರಾಕ್ಷಸನನ್ನು ಕಳಿಸಲಿದ್ದಾನೆ. 475 00:27:29,440 --> 00:27:31,400 ಸುಮ್ಮನಿರು. ಅವನಿಗಷ್ಟು ಧೈರ್ಯವಿಲ್ಲ. 476 00:27:32,960 --> 00:27:34,120 ಸಾರೀ. ಶೈತಾನ? 477 00:27:34,200 --> 00:27:36,280 -ಶೈತಾನನಿಗೆ ಧೈರ್ಯವಿಲ್ಲ? -ಖಂಡಿತ ಇಲ್ಲ. 478 00:27:36,360 --> 00:27:38,400 ನೋಡಿ, ನಾನು ಕೆಜ್ಹಾಯ, ಜಾಬ್ ನ ಮಗಳು. 479 00:27:38,480 --> 00:27:40,440 ಮತ್ತು ನಾನು ಎನಾನ್, ಜಾಬ್ ನ ಮಗ. 480 00:27:40,520 --> 00:27:42,720 ಮತ್ತು ನಾನು ಜೆಮೈಮಾ. ಈ ಮಡಕೆಯನ್ನು ಮಾಡಿದವಳು. 481 00:27:43,120 --> 00:27:45,960 ಹೌದು, ಆದರೆ ಅವಳು ಕೂಡ ಜಾಬ್ ನ ಮಗಳು. 482 00:27:46,040 --> 00:27:48,160 ಜಾಬ್ ಗೊತ್ತಾ? 483 00:27:48,800 --> 00:27:51,320 ದೇವರ ಅತ್ಯಂತ ಇಷ್ಟದ ಮನುಷ್ಯ. 484 00:27:51,400 --> 00:27:52,840 ಹೂಂ, ನನಗೆ ನೀವ್ಯಾರು ಗೊತ್ತು. 485 00:27:52,920 --> 00:27:54,600 ನೀನು ವಿಚಿತ್ರ ಕಾಣಿಸ್ತೀಯ. 486 00:27:54,960 --> 00:27:56,600 ನಾನು ಸಖತ್ ಅಲ್ಲ? 487 00:27:57,800 --> 00:27:59,600 ನೀನು ರಾಕ್ಷಸನಾ? 488 00:28:00,640 --> 00:28:01,800 ಜಾಣ ಹುಡುಗಿ. 489 00:28:02,640 --> 00:28:05,760 ಹೂಂ. ಅವನು ನಿಜವಾಗಿ... 490 00:28:05,840 --> 00:28:08,320 -ಒಬ್ಬ ರಾಕ್ಷಸ. -ಸರಿಯಾಗಿ ಹೇಳಿದೆ! 491 00:28:08,960 --> 00:28:13,640 ನಿಮ್ಮನ್ನು ನಾಶ ಮಾಡಲು ಬಂದವನು! ತಯಾರಿದ್ದೀರಾ? 492 00:28:15,720 --> 00:28:17,840 ಏನು? ನೀನು ಹಾಗೆ ಮಾಡಲ್ಲ ಅಂದೆ. 493 00:28:17,920 --> 00:28:20,000 ನಾನು ರಾಕ್ಷಸ. ಸುಳ್ಳು ಹೇಳಿದೆ. 494 00:28:21,440 --> 00:28:22,440 ನೀನು ಕಾಪಾಡಲ್ವಾ? 495 00:28:23,400 --> 00:28:24,240 ಆಗಲ್ಲ ನನಗೆ. 496 00:28:24,760 --> 00:28:26,720 ಆವನ ಬಳಿ ಅನುಮತಿ ಇದೆ. 497 00:28:27,600 --> 00:28:30,240 ಆದರೆ ಭಯ ಬೇಡ. 498 00:28:30,720 --> 00:28:32,120 ನೀವು ಸುರಕ್ಷಿತ. 499 00:28:35,120 --> 00:28:36,520 ಪಕ್ಕಾ, ದೇವತೆ? 500 00:28:37,320 --> 00:28:39,800 ಹೂಂ, ಪಕ್ಕಾ. 501 00:28:52,760 --> 00:28:55,040 ಏನಾಯಿತು. ತಳಮನೆಯಲ್ಲಿ ಯಾಕೆ ನಾವು? 502 00:28:55,120 --> 00:28:58,080 ಗೊತ್ತಿತ್ತು ನನಗೆ! ಗಾಳಿಯಿಂದ ಅಂದುಕೋತೀನಿ? 503 00:28:58,640 --> 00:29:00,560 ಇಷ್ಟೇನಾ ಸೈತಾನನ ಯೋಜನೆ? 504 00:29:00,640 --> 00:29:02,160 ಜೋರಾಗಿ ಗಾಳಿ ಬರಿಸಿ 505 00:29:02,240 --> 00:29:04,640 ಈ ಮನೆಯನ್ನು ಬೀಳಿಸಿ 506 00:29:04,720 --> 00:29:06,560 ಮಕ್ಕಳನ್ನು ಕೊಲ್ಲುವುದಾ? 507 00:29:06,640 --> 00:29:08,160 ಎಷ್ಟು ಬುದ್ಧಿವಂತ ನೀನು? 508 00:29:08,240 --> 00:29:12,080 ನಮ್ಮೆಲ್ಲರನ್ನೂ ತಳಮನೆಗೆ ತಂದಿದ್ದು ಜಾಣ ಯೋಚನೆ. 509 00:29:12,160 --> 00:29:14,480 ನನಗೆ ಯಾರಾದರೂ ದಯವಿಟ್ಟು ಹೇಳ್ತೀರಾ... 510 00:29:14,560 --> 00:29:15,840 -ಏನು... -ಇಲ್ಲ. 511 00:29:20,520 --> 00:29:22,480 -ಏನು ಮಾಡಿದೆ ಅವನಿಗೆ? -ಇದು. 512 00:29:31,080 --> 00:29:32,240 ನನ್ನ ನೀಲಿ ಮಾಡು. 513 00:29:34,520 --> 00:29:37,000 ಇರಲಿ. ನೀನಿನ್ನೂ ನನಗೆ ಕೋಪ ಬರಿಸಿಲ್ಲ. 514 00:29:37,680 --> 00:29:38,680 ಆದರೆ ನೀಲಿ? 515 00:29:40,560 --> 00:29:41,600 ಖಂಡಿತ. 516 00:30:00,520 --> 00:30:02,280 ಅವರು ಬೇಗ ಶುರು ಮಾಡಿದ್ದಾರೆ. 517 00:30:05,360 --> 00:30:06,200 ಹೂಂ... 518 00:30:07,600 --> 00:30:09,400 ಸ್ವಲ್ಪ ಆರಾಮಾಗಿ ಮಾಡ್ತೀನಿ. 519 00:30:13,080 --> 00:30:17,040 ನೀನು ಮನುಷ್ಯರ ವೈನ್ ಕುಡೀತಾ ಇದ್ದೀಯಾ? 520 00:30:17,560 --> 00:30:19,400 ಕುಡಿಯಕ್ಕೆ ಏನಾದರೇನು? 521 00:30:19,480 --> 00:30:20,760 ಇದು ತುಂಬಾ... 522 00:30:25,200 --> 00:30:27,280 ಚೆನ್ನಾಗಿದೆ ಇದು. 523 00:30:31,360 --> 00:30:32,320 ಹೂಂ, ಪರವಾಗಿಲ್ಲ. 524 00:30:32,880 --> 00:30:33,840 ನೀನು ಕುಡಿಯಲ್ಲ. 525 00:30:34,760 --> 00:30:36,000 ಊಟ ಆದರೂ ತಗೊ. 526 00:30:37,200 --> 00:30:38,640 ಅದು ಪರವಾಗಿಲ್ಲ ಅಲ್ವಾ? 527 00:30:41,920 --> 00:30:43,040 ತಗೊ. 528 00:30:43,880 --> 00:30:45,440 ಕಬಾಬ್ ತಿನ್ನು. 529 00:30:47,080 --> 00:30:50,640 ಆಸೆ ಹುಟ್ಟಿಸಕ್ಕೆ ನೋಡ್ತಾ ಇದ್ದೀಯಾ? 530 00:30:50,720 --> 00:30:53,160 ಖಂಡಿತ ಇಲ್ಲ. ದೇವತೆಗಳಿಗೆ ಆಸೆ ಆಗಲ್ಲ, ಅಲ್ವಾ? 531 00:30:53,240 --> 00:30:55,200 -ಖಂಡಿತ ಇಲ್ಲ. -ಸರಿ ಹಾಗಿದ್ರೆ. 532 00:30:55,280 --> 00:30:56,960 ಊಟ ತಿಂದು ನೋಡಬಹುದು. 533 00:31:26,640 --> 00:31:27,640 ಅಲ್ಲವೇ? 534 00:31:35,680 --> 00:31:36,520 ಇನ್ನಷ್ಟು! 535 00:31:50,560 --> 00:31:53,840 ನಿಜ ಹೇಳು, ನೀನು ಸ್ವಲ್ಪ ನಮ್ಮ ತಂಡವೇ, 536 00:31:53,920 --> 00:31:56,960 ಸ್ವಲ್ಪಾನೂ ಇಲ್ಲ. 537 00:31:57,040 --> 00:31:58,840 ಆದರೆ ನೀನು ನರಕದ ತಂಡ ಅಂತೂ ಅಲ್ಲ. 538 00:32:00,000 --> 00:32:03,160 ಎಷ್ಟಾಗುತ್ತೋ ಅಷ್ಟು ನರಕದ ಕಡೆ ನಾನು. 539 00:32:04,880 --> 00:32:06,520 ನೀನು ಯಾರ ತಂಡ? 540 00:32:07,160 --> 00:32:08,160 ನನ್ನ ತಂಡ. 541 00:32:09,240 --> 00:32:10,240 ದೇವರೇ. 542 00:32:11,200 --> 00:32:13,600 -ಅದು ಸ್ವಲ್ಪ... -ಏನು? 543 00:32:14,600 --> 00:32:15,760 ಒಂಟಿತನ. 544 00:32:16,720 --> 00:32:18,800 ಒಂಟಿತನ? ಇಲ್ಲಪ್ಪ. 545 00:32:20,040 --> 00:32:21,360 ನೀನು ಯಾರ ತಂಡ? 546 00:32:23,320 --> 00:32:24,800 ಸುಲಭ, ದೇವರದ್ದು. 547 00:32:25,920 --> 00:32:26,880 ನಿಜವಾಗಿಯೂ? 548 00:32:27,680 --> 00:32:30,120 ಈ ಮಕಳನ್ನು ಕೊಲ್ಲಲು ಕಳಿಸಿರೋ ದೇವರಾ? 549 00:32:32,800 --> 00:32:33,640 ಹೌದು. 550 00:32:35,080 --> 00:32:37,280 -ಆದರೆ... -ಹೂಂ. 551 00:32:38,240 --> 00:32:40,240 ನನ್ನ ಜೀವನಾನೂ ಹೀಗೇ ಇದ್ದಿದ್ದು. 552 00:32:41,560 --> 00:32:43,320 ನರಕದಲ್ಲಿ ಸಿಗೋಣ. 553 00:32:48,360 --> 00:32:49,200 ಮಾರನೆಯ ದಿನ 554 00:32:49,280 --> 00:32:50,440 ಜಾಬ್... 555 00:32:59,720 --> 00:33:01,040 ದೇವರೇ! 556 00:33:01,120 --> 00:33:04,320 -ಮೋಸ, ದೇವತೆ. ನೀನು ಅಂತಹವನಲ್ಲ. -ಇಲ್ಲ, ನೋಡು. 557 00:33:07,080 --> 00:33:08,080 ದೇವರು! 558 00:33:09,080 --> 00:33:11,200 ಜಾಬ್, ನಿನಗೆ ಪ್ರಶ್ನೆಗಳಿದ್ದರೆ, 559 00:33:11,280 --> 00:33:13,360 ನನಗೂ ಪ್ರಶ್ನೆಗಳಿವೆ. 560 00:33:13,440 --> 00:33:15,560 ಗೊತ್ತಾ ನಾನು ಭೂಮಿ ಹೇಗೆ ನಿರ್ಮಿಸಿದ್ದು ಎಂದು? 561 00:33:15,640 --> 00:33:18,880 ನಾನು ಭೂಮಿಯ ತಳ ಹಾಕುವಾಗ ನೀನು ಎಲ್ಲಿದ್ದೆ, ಜಾಬ್? 562 00:33:18,960 --> 00:33:21,760 ಎಲ್ಲಾ ಬೆಳಕಿನ ನಕ್ಷತ್ರಗಳು ಹಾಡುವಾಗ ನೀನು ಇದ್ದೆಯಾ? 563 00:33:21,840 --> 00:33:24,280 ದೇವತೆಗಳು ಖುಷಿಯಿಂದ ಕಿರುಚಾಡಿದಾಗ? 564 00:33:24,360 --> 00:33:25,920 -ದೇವರು ನಿಜವಾಗಿ ಅವನಲ್ಲಿ... -ಹೌದು. 565 00:33:26,000 --> 00:33:27,200 ಮಾತಾಡುತ್ತಿದ್ದರಾ? 566 00:33:29,440 --> 00:33:32,120 -ಅವನಿಗೆ ಏನೂ ಉತ್ತರ ಸಿಗ್ತಿಲ್ಲ ಅನಿಸುತ್ತೆ. -ಇಲ್ಲ. 567 00:33:32,800 --> 00:33:34,920 ಬರೀ ಪ್ರಶ್ನೆ ಕೇಳಕ್ಕಾದರೆ ಸಾಕು. 568 00:33:35,000 --> 00:33:37,200 ನಿನಗೆ ಸ್ವರ್ಗದ ನಿಯಮಗಳು ಗೊತ್ತಾ? 569 00:33:37,680 --> 00:33:40,280 ನಕ್ಷತ್ರಪುಂಜ ನೀನಾ ಮಾಡಿದ್ದು? 570 00:33:40,880 --> 00:33:45,400 ನೀನು ಸಿಡಿಲು ಕಳಿಸಿ, ಅವುಗಳು ನಿನಗೆ ಉತ್ತರಿಸುವಂತೆ ಮಾಡಬಲ್ಲೆಯಾ? 571 00:33:45,480 --> 00:33:47,640 ನವಿಲುಗಳಿಗೆ ಗರಿ ಕೊಟ್ಟಿದ್ದು ನೀನಾ? 572 00:33:47,720 --> 00:33:49,640 ಅಥವಾ ಕೋಳಿಗೆ ಓಡಲು ಹೇಳಿಕೊಟ್ಟಿದ್ದು? 573 00:33:54,800 --> 00:33:56,400 ದೇವರು ಏನು ಹೇಳಿದರು? 574 00:33:57,800 --> 00:34:00,520 ನನಗೆ... ನನಗೆ ಗೊತ್ತಿಲ್ಲ. 575 00:34:00,600 --> 00:34:02,200 ಅರ್ಥ ಆಗಲಿಲ್ಲ ನನಗೆ. 576 00:34:03,120 --> 00:34:04,680 ತುಂಬಾ ಅದ್ಭುತ ವಿಷಯಗಳು. 577 00:34:08,040 --> 00:34:10,000 ಕೋಳಿಗಳೆಲ್ಲಾ ಬಂದವು ಅದಕ್ಕೆ. 578 00:34:10,480 --> 00:34:12,480 -ಕೋಳಿಗಳು? -ಮತ್ತು ತಿಮಿಂಗಿಲಗಳು. 579 00:34:13,520 --> 00:34:15,880 ದೇವರಿಗೆ ತಿಮಿಂಗಿಲ ಇಷ್ಟ. 580 00:34:16,560 --> 00:34:20,880 ವಿವರವಾಗಿ ತಿಮಿಂಗಿಲಗಳ ಬಗ್ಗೆ ಹೇಳಿದರು. 581 00:34:21,880 --> 00:34:23,360 ವಿವರಿಸಿದರಾ? 582 00:34:26,280 --> 00:34:28,440 ಅವರು ಹೇಳಕ್ಕೆ ಇಷ್ಟ ಪಟ್ಟಿದ್ದು, 583 00:34:29,520 --> 00:34:31,120 ನಿನಗೆ ಉತ್ತರ ಬೇಕೆಂದರೆ, 584 00:34:32,920 --> 00:34:35,040 ತಿಮಿಂಗಿಲ ಮಾಡಕ್ಕಾದಾಗ ಬಾ ಅಂತ ಇರಬೇಕು. 585 00:34:35,679 --> 00:34:37,600 ಮತ್ತು ಮಕ್ಕಳು? 586 00:34:37,639 --> 00:34:39,800 ಮಕ್ಕಳ ಬಗ್ಗೆ ಹೇಳಿದರಾ? 587 00:34:40,280 --> 00:34:41,440 ಇಲ್ಲ. 588 00:34:41,520 --> 00:34:42,840 ಇಲ್ಲ. 589 00:34:53,000 --> 00:34:56,159 ನಿಷ್ಟಾವಂತ ಜಾಬ್, ನೀನು ದೇವರ ಪರೀಕ್ಷೆಯನ್ನು ಗೆದ್ದಿದ್ದೀಯ. 590 00:34:57,200 --> 00:34:59,400 ನಿನ್ನ ಬಹುಮಾನಕ್ಕೆ ತಯಾರಾಗು. ಇಗೋ. 591 00:34:59,480 --> 00:35:01,800 ನೀನು 300 ಕುರಿಗಳನ್ನು ಕಳೆದುಕೊಂಡೆ, 592 00:35:01,880 --> 00:35:04,680 ದೇವರು ನಿನಗೆ 600 ಕೊಡ್ತಾ ಇದ್ದಾನೆ. 593 00:35:08,960 --> 00:35:10,120 ಕ್ಷಮಿಸಿ, ಕ್ಷಮಿಸಿ. 594 00:35:13,520 --> 00:35:14,640 ಏನು ಹೇಳುವೆ? 595 00:35:15,880 --> 00:35:16,880 ಧನ್ಯವಾದ? 596 00:35:16,960 --> 00:35:19,960 ನನಗಲ್ಲ, ದೇವರಿಗೆ ಹೇಳು. 597 00:35:20,040 --> 00:35:22,480 ಕುರಿಗಳಿಗಾಗಿ ದೇವರಿಗೆ ಧನ್ಯವಾದ ಹೇಳಲಾ? 598 00:35:24,080 --> 00:35:25,080 ನಮ್ಮ ಮಕ್ಕಳು. 599 00:35:25,160 --> 00:35:26,880 ನಮ್ಮ ಮಕ್ಕಳ ಬಗ್ಗೆ ಹೇಳಿ. 600 00:35:26,960 --> 00:35:30,160 ಅದಕ್ಕೇ ಬರ್ತಾ ಇದ್ದೆ. 601 00:35:30,200 --> 00:35:35,160 ಇಗೋ, ನಿನ್ನ ಮೂರು ಮಕ್ಕಳು ಸತ್ತಿದ್ದರೂ, 602 00:35:35,200 --> 00:35:40,760 ದೇವರ ಆಶೀರ್ವಾದದಿಂದ ನಿನಗೆ ಇನ್ನೂ ಏಳು ಮಕ್ಕಳಾಗುತ್ತವೆ. 603 00:35:43,000 --> 00:35:45,960 -ನಮ್ಮ ಮಕ್ಕಳು ಸತ್ತಿದ್ದಾರಾ? -ಹೂಂ. 604 00:35:46,640 --> 00:35:48,640 ಆದರೆ ಅವರು ನನ್ನ ಪ್ರಿಯವಾದ ಮಕ್ಕಳು 605 00:35:48,760 --> 00:35:51,360 ನನಗೆ ಇನ್ನು... ನನಗೆ ಇನ್ನು ಮಕ್ಕಳು ಬೇಡ. 606 00:35:52,400 --> 00:35:55,320 ನನ್ನ ಮಕ್ಕಳು ಸತ್ತಿದ್ದರೆ, ನಾನು ದೇವರಿಗೆ ಶಾಪ ಹಾಕ್ತೀನಿ. 607 00:35:59,520 --> 00:36:02,200 ಅದರ ಅಂತ್ಯ ಚೆನ್ನಾಗಿರಲ್ಲ. ನನ್ನ ಬಗ್ಗೆ ನೆನಪಿದೆಯಲ್ಲ? 608 00:36:02,920 --> 00:36:04,040 ಶುಹದ ಬಿಲ್ದಾದ್. 609 00:36:04,920 --> 00:36:05,800 ಇದು ಯಾರು? 610 00:36:06,800 --> 00:36:10,000 ಇವನು ಶುಹದ ಬಿಲ್ದಾದ್ ಅಂತೆ. 611 00:36:10,080 --> 00:36:13,360 ಹೂಂ, ಅದೇ ನಾನು. ಶುಹದ ಬಿಲ್ದಾದ್. 612 00:36:14,280 --> 00:36:15,160 ಶೂ ಬೇಕಾ? 613 00:36:16,520 --> 00:36:18,800 ಶುಹದ ಅಂದರೆ, 614 00:36:18,880 --> 00:36:21,400 -"ಶುಹ ಊರಿನಿಂದ." -ಹೌದು. 615 00:36:21,680 --> 00:36:24,640 ಹೌದು, ಅದು ನಿಜ. 616 00:36:24,680 --> 00:36:29,160 ಅಲ್ಲಿ ನಾನು ಒಬ್ಬ ಶೂ ಮಾಡುವವ. 617 00:36:31,200 --> 00:36:33,200 ಏನು? ಶುಹದಲ್ಲಿ ಶೂ ಹಾಕುವುದಿಲ್ಲವೇ? 618 00:36:33,960 --> 00:36:39,000 ಹೂಂ. ನಿಮಗೆ ಮನುಷ್ಯರ ಜನನದ ಬಗ್ಗೆ ಗೊತ್ತಿದ್ದರೆ 619 00:36:39,080 --> 00:36:41,120 ಚೆನ್ನಾಗಿತ್ತು. 620 00:36:42,320 --> 00:36:45,200 ನೀನಿಂದು ಅದೃಷ್ಟವಂತ! 621 00:36:45,320 --> 00:36:48,520 ಶೂ ಮಾಡೋದು, ಪ್ರಸೂತಿ ವಿಜ್ಞಾನ, 622 00:36:48,600 --> 00:36:51,440 ಎರಡೂ ಬಿಲ್ದಾದ್ ನ ಇಷ್ಟದ ವಿಷಯಗಳು. 623 00:36:51,520 --> 00:36:53,040 ಏನಾಯಿತು? 624 00:36:53,120 --> 00:36:58,640 ಸಿಟಿಸ್ ಗೆ ಈಗಷ್ಟೇ ಇನ್ನೂ ಮಕ್ಕಳನ್ನು ಹೆರಬೇಕು ಅಂತ ಗೊತ್ತಾಗಿದೆ. 625 00:37:00,000 --> 00:37:02,480 ಸರಿ, ಶುರು ಮಾಡೋಣ. 626 00:37:02,560 --> 00:37:06,440 ನಾಚಿಕೆ ಬೇಡ ಸಿಟಿಸ್. ನಾನು ವೃತ್ತಿಪರ ಪ್ರಸೂತಿ ತಜ್ಞ/ಚಮ್ಮಾರ. 627 00:37:06,520 --> 00:37:09,760 ಖಂಡಿತವಾಗಿ ಈ ದೇವತೆಗಳೆಲ್ಲಾ ಇದನ್ನು ಮೊದಲೇ ನೋಡಿದ್ದಾರೆ. 628 00:37:09,880 --> 00:37:13,160 ಹೂಂ. ಗೇಬ್ರಿಯಲ್ ಇದ್ದಾನಲ್ಲ, 629 00:37:13,280 --> 00:37:17,960 ಈಡನ್ ಗಾರ್ಡನ್ ನಲ್ಲಿ ಮೊಟ್ಟಮೊದಲ ಜನನವನ್ನು ನೋಡಿದ್ದಾನೆ. 630 00:37:18,600 --> 00:37:20,040 ಹೌದಾ? 631 00:37:20,120 --> 00:37:24,760 ನಿಪುಣರ ಮುಂದೆ ಸ್ವಲ್ಪ ಜಾಗ್ರತೆಯಿಂದಿರಬೇಕು ನಾನು. 632 00:37:29,640 --> 00:37:30,640 ಕ್ಷಮಿಸಿ. 633 00:37:30,760 --> 00:37:32,640 ನಾನು ಹೇಳಿದಂತೆ ಮಾಡು. ನಂಬು ನನ್ನ. 634 00:37:34,760 --> 00:37:36,640 ಈಗ, ಹೆಣ್ಣೇ, 635 00:37:36,680 --> 00:37:39,480 ನಿನ್ನ ಗಂಡನತ್ತ ತಿರುಗು. 636 00:37:39,560 --> 00:37:41,560 ಅವನ ಬಟ್ಟೆಯೊಳಗೆ ಕೈ ಹಾಕು. 637 00:37:42,760 --> 00:37:43,760 ಮೇಲೆ. 638 00:37:44,520 --> 00:37:45,800 ಇನ್ನೂ ಮೇಲೆ. 639 00:37:46,560 --> 00:37:48,320 ಇನ್ನೂ ಮೇಲೆ. ಅಷ್ಟೇ. 640 00:37:48,400 --> 00:37:51,880 ಅವನ ಮೂರು ಪಕ್ಕೆಲುಬುಗಳನ್ನು ಎಳೆದು ತೆಗೆ. 641 00:37:51,960 --> 00:37:53,600 ಹೂಂ, ಪಕ್ಕೆಲುಬುಗಳೇ. 642 00:37:53,640 --> 00:37:55,080 ಅದು... ಚಿಂತೆಯಿಲ್ಲ. 643 00:37:55,160 --> 00:37:57,960 ಈ ಕ್ರಿಯೆಯ ಭಾಗ ಅದು. ನಾನು ನೋಡಿದ್ದೀನಿ. 644 00:38:04,400 --> 00:38:07,640 ಕ್ರಿಯೆ ಮುಗಿಸಲು, ಒಂದು ಸಣ್ಣ ಅಪ್ಪುಗೆ. 645 00:38:20,680 --> 00:38:22,160 ಅಮ್ಮ! 646 00:38:26,760 --> 00:38:29,480 ಆದರೆ ಇವು ಮಗುವಲ್ಲ. 647 00:38:30,040 --> 00:38:31,160 ಖಂಡಿತ ಅಲ್ಲ. 648 00:38:31,280 --> 00:38:33,120 -ಈವ್ ಮಗುವಾಗಿದ್ದಳೇ? -ಇದ್ದಳೇ? 649 00:38:33,160 --> 00:38:35,400 ಇಲ್ಲ. ಅವು ಯಾವ ಗಾತ್ರದಲ್ಲಾದರೂ ಇರಬಹುದು. 650 00:38:35,920 --> 00:38:37,640 ಎನಾನ್, ನನ್ನ ಮಗ. 651 00:38:37,680 --> 00:38:39,440 -ಎನಾನ್? -ಇಲ್ಲ, ಇಲ್ಲ. 652 00:38:39,520 --> 00:38:41,320 ಎನಾನ್ ಅಲ್ಲ ಜಾಬ್. ಎನಾನ್ ಹೋದ. 653 00:38:41,400 --> 00:38:44,040 ಇದು, ನಿನ್ನ ಹೊಸ ಮಗ. 654 00:38:44,280 --> 00:38:46,280 -ಆದರೆ ಇದು... -ಒಂದು ಪವಾಡ. 655 00:38:47,320 --> 00:38:48,760 ಇದು ಪವಾಡ 656 00:38:48,840 --> 00:38:51,640 ನಮ್ಮ ಹೊಸ ಮಗ ಹಳೆಯ ಮಗನಂತಿರುವುದು. 657 00:38:51,760 --> 00:38:53,560 -ಆದರೆ ಇವನು... -ಇಲ್ಲ, ಜಾಬ್. 658 00:38:53,640 --> 00:38:56,000 ಅದು ಎನಾನ್ ಅಲ್ಲ. 659 00:38:56,080 --> 00:38:58,320 ಇದು ಹೊಸ ಮಗು. 660 00:38:58,400 --> 00:39:02,160 ಇವೆಲ್ಲಾ... ಇವೆಲ್ಲಾ ಹೊಸ ಮಕ್ಕಳು. 661 00:39:02,880 --> 00:39:06,880 ಹೌದು, ನಿಜ. ಇದು ಎನಾನ್ ಅಲ್ಲ. 662 00:39:06,960 --> 00:39:08,000 ಇದು ಅವನೇ. 663 00:39:10,040 --> 00:39:12,520 ಅಜಿರಫೆಲ್, ದೇವರು ಜಾಬ್ ಗೆ ನೀಡಿದ 664 00:39:13,080 --> 00:39:14,320 ಹೊಸ ಮಕ್ಕಳು ಇವರೇನಾ? 665 00:39:17,560 --> 00:39:19,080 ಹಾಗೇ ಅನಿಸುತ್ತಿದೆ. 666 00:39:19,160 --> 00:39:21,120 ಅವೇ ಇರಬೇಕು. 667 00:39:21,160 --> 00:39:24,040 ಆದರೆ ಇವು ಅವನ ಹಳೆಯ ಮಕ್ಕಳಂತೆ ಇವೆ. 668 00:39:26,280 --> 00:39:28,160 ಅಜಿರಫೆಲ್, ಇವರು ಯಾರು? 669 00:39:30,320 --> 00:39:31,440 ಇವರು... 670 00:39:36,960 --> 00:39:38,160 ...ಅವನ ಹೊಸ ಮಕ್ಕಳು. 671 00:39:40,000 --> 00:39:43,120 ನಾನು... ನಿನಗೆ ಮಾತು ಕೊಡ್ತಾ ಇದ್ದೀನಿ, ದೇವತೆಯಾಗಿ. 672 00:39:46,960 --> 00:39:48,680 ಸರಿ ಹಾಗಿದ್ರೆ. 673 00:39:49,640 --> 00:39:52,080 ಮೊದಲೇ ಹೇಳಬೇಕಿತ್ತಲ್ಲ? 674 00:39:53,800 --> 00:39:55,560 ಅಭಿನಂದನೆಗಳು. 675 00:40:04,200 --> 00:40:07,440 ಹಿನ್ನುಡಿ ಜಾಬ್ ಮತ್ತು ಅವನ ಕುಟುಂಬಕ್ಕೆ ಮರಳಿದ ಸಮೃದ್ಧಿ 676 00:40:09,440 --> 00:40:10,520 ಕ್ರೌಲಿ? 677 00:40:11,640 --> 00:40:13,160 ಅವನು ಹೋಗಿಬಿಟ್ಟ, 678 00:40:14,920 --> 00:40:16,400 ನೀನು ಯೋಚಿಸುತ್ತಿರುವಾಗ. 679 00:40:17,160 --> 00:40:18,000 ಗೊತ್ತಾ, 680 00:40:18,760 --> 00:40:22,160 ನೀನು ತುಂಬಾ ಕೆಟ್ಟವನಾಗಿದ್ದೆ. 681 00:40:23,120 --> 00:40:25,040 ತುಂಬಾ ಕೆಟ್ಟವನು. 682 00:40:27,600 --> 00:40:28,600 ಈಗ ಕೆಟ್ಟವನಾ ನಾನು? 683 00:40:30,040 --> 00:40:31,160 ಗೊತ್ತಿಲ್ಲ. 684 00:40:33,040 --> 00:40:34,080 ಅಲ್ಲದಿದ್ದರೆ ಸಾಕು. 685 00:40:37,080 --> 00:40:38,080 ಒಳ್ಳೆಯದು. 686 00:41:04,440 --> 00:41:06,080 ನೀನು ನೆನ್ನೆ ಬಂದವನು. 687 00:41:06,520 --> 00:41:08,040 ಸಿಡಿಲು ಬಡಿಸಿಕೊಂಡವನು. 688 00:41:08,120 --> 00:41:09,560 ತುಂಬಾ ಕೆಟ್ಟದಾಗಿತ್ತು ಅದು. 689 00:41:09,640 --> 00:41:12,400 ದೊಡ್ಡ ಕಪ್ ನಲ್ಲಿ ಆರು ಕಪ್ ಕಾಫಿ. 690 00:41:13,560 --> 00:41:17,400 ಮೂರ್ಖ ಪ್ರಶ್ನೆ, ಆದರೆ ಹಠಾತ್ ಮಳೆಯ ಬಗ್ಗೆ ನಿನಗೆ ಏನನಿಸುತ್ತೆ? 691 00:41:18,080 --> 00:41:20,520 ಹೂಂ, ಅದು ಮೂರ್ಖ ಪ್ರಶ್ನೆನೇ. 692 00:41:20,600 --> 00:41:23,960 ಇಲ್ಲ, ಆದರೆ ಜೋರು ಮಳೆಯಾದಲ್ಲಿ, 693 00:41:24,040 --> 00:41:26,680 ನೀನು ಯಾವುದಾದರೂ ಮರದ ಕೆಳಗೆ ನಿಲ್ತೀಯಾ? 694 00:41:27,400 --> 00:41:31,440 ವಾಹ್, ನೀನು ನನ್ನ ಮನದಾಳದ ಮಾತು ಹೇಳ್ತಾ ಇದ್ದೀಯ. 695 00:41:31,520 --> 00:41:33,040 ಹೂಂ, ಅದೊಂದು ಕಲೆ. 696 00:41:33,520 --> 00:41:34,520 ಉದಾಹರಣೆಗೆ... 697 00:41:37,200 --> 00:41:40,080 ಮ್ಯಾಗಿ? ಇಲ್ಲ, ಇಲ್ಲ. ಅದಲ್ಲ. 698 00:41:40,640 --> 00:41:43,480 ನಾವು ಸ್ನೇಹಿತರು. ಅದೂ ಅಲ್ಲ. ಪರಿಚಯ ಅಷ್ಟೇ ನಮಗೆ. 699 00:41:43,560 --> 00:41:45,960 ವಿದ್ಯುತ್ ಹೋಗಿ ಅಂಗಡಿಯಲ್ಲಿ ಸಿಕ್ಕಿಬಿದ್ವಿ ಅಷ್ಟೇ. 700 00:41:46,040 --> 00:41:47,800 ನನ್ನ ಸಂಗಾತಿ ಕೋಪದಲ್ಲಿದ್ದಾರೆ. 701 00:41:49,640 --> 00:41:52,160 ಮನೋಹರ ಸಂಜೆಯಲ್ಲ. ಅಷ್ಟೇ. 702 00:41:53,120 --> 00:41:54,280 ಗೊತ್ತಾಯ್ತು. 703 00:42:00,880 --> 00:42:02,480 ಎಲ್ಲಿಗಾದರೂ ಹೋಗಬೇಕಾ ನಿನಗೆ? 704 00:42:02,560 --> 00:42:05,920 ಇಲ್ಲ, ನಾನು ನಿನಗೆ ಹೇಳಲು ಬಂದಿದ್ದು, 705 00:42:06,480 --> 00:42:07,840 ನನ್ನ ಸುಳಿವಿನ ಬಗ್ಗೆ. 706 00:42:07,920 --> 00:42:09,360 "ದಿ ರಿಸರೆಕ್ಷನಿಸ್ಟ್." 707 00:42:09,440 --> 00:42:11,160 ಪಬ್, ಅಲ್ಲಿ ಜೂಕ್ ಬಾಕ್ಸ್ ಇದೆ. 708 00:42:11,560 --> 00:42:15,840 ಇದು ಅಲ್ಲೇ ಇದ್ದ ರೆಕಾರ್ಡ್. 709 00:42:16,320 --> 00:42:17,200 ಅದಕ್ಕೆ? 710 00:42:17,320 --> 00:42:20,400 ಆದರೆ ಇದು ಮೊದಲು ಜೂಕ್ ಬಾಕ್ಸ್ ನಲ್ಲಿ ಇರಲಿಲ್ಲ. 711 00:42:20,480 --> 00:42:23,480 ಜನ ಅಲ್ಲಿ ಯಾವ ಹಾಡು ಹಾಕಿದರೂ, 712 00:42:23,560 --> 00:42:27,920 ಅದು ಕೊನೆಯದಾಗಿ ಇದೇ ಹಾಡಾಗುತ್ತದೆ. 713 00:42:28,000 --> 00:42:30,880 ನಿನ್ನ ಪದಗಳಲ್ಲಿ ಹೇಳುವುದೆಂದರೆ... ಒಂದು ಪವಾಡ. 714 00:42:32,360 --> 00:42:35,920 ಅದಕ್ಕೆ ನಾನೇ ಅಲ್ಲಿ ಹೋಗಿ 715 00:42:36,560 --> 00:42:38,320 ತನಿಖೆ ಮಾಡ್ತೀನಿ. 716 00:42:39,280 --> 00:42:41,200 ಸರಿ. ನಿನ್ನ ರೈಲುಗಾಡಿ ಎಷ್ಟು ಹೊತ್ತಿಗೆ? 717 00:42:41,320 --> 00:42:44,120 ನಿಜ ಹೇಳಬೇಕು ಅಂದರೆ, ಕಾರ್ ನಲ್ಲಿ ಹೋಗೋಣ ಎಂದುಕೊಂಡೆ. 718 00:42:45,360 --> 00:42:47,880 -ಏನು ಕಾರ್? -ನಮ್ಮ ಕಾರ್. 719 00:42:48,800 --> 00:42:49,800 ನಮ್ಮ ಬಳಿ ಕಾರ್ ಇಲ್ಲ. 720 00:42:50,280 --> 00:42:51,560 ಯಾಕಿಲ್ಲ? 721 00:42:52,120 --> 00:42:53,880 ಚೆನ್ನಾಗಿದೆಯಲ್ವಾ? 722 00:42:54,360 --> 00:42:56,160 ಇದು ನನ್ನ ಕಾರ್. 723 00:42:56,280 --> 00:43:01,320 ಹೂಂ, ಆ ಪುಸ್ತಕದ ಅಂಗಡಿ ನನ್ನದಿದ್ದಂತೆ. 724 00:43:01,400 --> 00:43:05,160 ಇಬ್ಬರಿಗೂ ತುಂಬಾ ಉಪಯೋಗಕ್ಕೆ ಬರುತ್ತೆ ಅಲ್ವಾ? 725 00:43:05,200 --> 00:43:06,640 ನಿನಗೆ ನನ್ನ ಕಾರ್ ಕೊಡಲ್ಲ. 726 00:43:06,680 --> 00:43:08,960 ಕೊಡು, ನನ್ನ ಹತ್ತಿರ ಪರವಾನಗಿ ಇದೆ. 727 00:43:09,040 --> 00:43:11,640 90 ವರ್ಷಗಳ ಹಿಂದೆ ಚಾಲನಾ ಪರೀಕ್ಷೆ ಉತ್ತೀರ್ಣನಾದೆ. 728 00:43:11,760 --> 00:43:14,280 ಅವರಿಗೆ ಅಗತ್ಯ ಇರಲಿಲ್ಲ, ನಾನೇ ಒತ್ತಾಯ ಮಾಡಿದೆ. 729 00:43:14,360 --> 00:43:16,640 -ಇಲ್ಲ. -ಚಿಂತೆ ಬೇಡ. 730 00:43:17,960 --> 00:43:20,640 -ನಾನು ತುಂಬಾ, ತುಂಬಾ ಜಾಗ್ರತೆಯಿಂದ ಇರ್ತೀನಿ. -ಇಲ್ಲ. 731 00:43:21,280 --> 00:43:24,160 ನಾನು ಹೋಗಿರಬೇಕಾದರೆ, ಪುಸ್ತಕದ ಅಂಗಡಿ ನೀನು ನೋಡಿಕೋ. 732 00:43:24,200 --> 00:43:25,080 ಗೇಬ್ರಿಯಲ್ ನೂ. 733 00:43:25,920 --> 00:43:27,000 ಸರಿನಾ? 734 00:43:29,040 --> 00:43:31,480 "ಅದು ನನ್ನ ಅಜ್ಜಿ ಸ್ಫೋಟವಾದ ದಿನ." 735 00:43:38,400 --> 00:43:41,000 "ಜಗತ್ತೇ ಅರಿತುಕೊಂಡ ಸತ್ಯವಿದು 736 00:43:41,080 --> 00:43:44,080 "ದುಡ್ಡಿರುವ ಒಂಟಿ ಮನುಷ್ಯನಿಗೆ 737 00:43:44,160 --> 00:43:45,760 "ಹೆಂಡತಿಯೂ ಬೇಕಿರುತ್ತಾಳೆ." 738 00:43:47,320 --> 00:43:48,560 ಏನೋ. 739 00:44:00,240 --> 00:44:02,360 ಪ್ರಾರಂಭದಲ್ಲಿ ಅಂದು ಒಳ್ಳೆಯ ದಿನ. 740 00:44:02,760 --> 00:44:04,120 "ಅದು ಒಳ್ಳೆಯ ದಿನ" 741 00:44:05,200 --> 00:44:06,400 ಇದು ಚೆನ್ನಾಗಿದೆ. 742 00:44:33,440 --> 00:44:36,120 ಅಂದುಕೊಂಡೆ, ನಿನ್ನೇ ಕಳಿಸ್ತಾರೆ ಅಂತ. 743 00:44:39,640 --> 00:44:40,840 ಹೂಂ... 744 00:44:44,240 --> 00:44:45,320 ಹೋಗಲು ತಯಾರಿದ್ದೀನಿ. 745 00:44:45,880 --> 00:44:47,040 ಎಲ್ಲಿಗೆ? 746 00:44:47,120 --> 00:44:48,640 ನರಕಕ್ಕೆ. 747 00:44:51,560 --> 00:44:53,600 ನಿನ್ನ ನರಕಕ್ಕೆ ಕರ್ಕೊಂಡು ಹೋಗ್ತಿಲ್ಲ. 748 00:44:55,880 --> 00:44:56,880 ಯಾಕೆ? 749 00:44:57,440 --> 00:44:58,880 ನಿನಗೆ ಇಷ್ಟ ಆಗಲ್ಲ ಅನಿಸುತ್ತೆ. 750 00:45:01,120 --> 00:45:02,200 ಆದರೆ ಹೋಗಲೇಬೇಕಲ್ಲ. 751 00:45:04,960 --> 00:45:06,360 ನಾನೂ ನಿನ್ನಂತೆ ಈಗ. 752 00:45:07,560 --> 00:45:08,640 ಓರ್ವ ರಾಕ್ಷಸ. 753 00:45:17,280 --> 00:45:18,440 ಕ್ಷಮಿಸು. 754 00:45:20,240 --> 00:45:21,800 ನೀನು ರಾಕ್ಷಸ ಅಂತ ಅಂದುಕೊಂಡಿದ್ದೀಯ? 755 00:45:23,800 --> 00:45:26,280 ನಿನ್ನ ದೇವತೆಯಂತಹ ಕೂದಲು... ನಿನ್ನ ಬಳುಕಿನೊಂದಿಗೆ... 756 00:45:26,360 --> 00:45:28,440 ನಾನು ಪತಿಸಿದ ದೇವತೆ. 757 00:45:30,680 --> 00:45:32,000 ನಾನು ಸುಳ್ಳು ಹೇಳಿದೆ... 758 00:45:33,120 --> 00:45:35,160 ದೇವರ ಇಚ್ಛೆಯನ್ನು ತಡೆಯಲು. 759 00:45:36,040 --> 00:45:37,600 ಹೂಂ, ನಿಜ, ಆದರೆ... 760 00:45:39,680 --> 00:45:41,280 ನಾನು ಯಾರಿಗೂ ಹೇಳಲ್ಲ. 761 00:45:42,080 --> 00:45:43,000 ನೀನು ಹೇಳ್ತೀಯಾ? 762 00:45:47,080 --> 00:45:49,400 ಒಳ್ಳೆಯದು. ಏನೂ ಬದಲಾಗಬೇಕಿಲ್ಲ, ಅಲ್ವೇ? 763 00:46:12,760 --> 00:46:14,200 ಆದರೆ ನಾನೇನು? 764 00:46:15,400 --> 00:46:16,840 ನೀನೊಬ್ಬ ದೇವತೆ 765 00:46:16,920 --> 00:46:20,560 ಎಷ್ಟಾಗುತ್ತೋ ಅಷ್ಟು ಸ್ವರ್ಗದ ಕಡೆ ವಾಲುವವನು. 766 00:46:25,280 --> 00:46:26,880 ಅದು ಸ್ವಲ್ಪ... 767 00:46:27,760 --> 00:46:29,000 ಒಂಟಿತನ ಅನಿಸುತ್ತಾ? 768 00:46:31,480 --> 00:46:32,600 ಹೂಂ. 769 00:46:34,320 --> 00:46:35,960 ಆದರೆ ಅದು ಹಾಗಲ್ಲ ಅಂದೆಯಲ್ಲ ನೀನು. 770 00:46:37,360 --> 00:46:38,760 ನಾನು ರಾಕ್ಷಸ. 771 00:46:39,800 --> 00:46:40,800 ಸುಳ್ಳು ಹೇಳಿದೆ. 772 00:48:31,720 --> 00:48:33,720 ಉಪ ಶೀರ್ಷಿಕೆ ಅನುವಾದ: ಅನುರಾಧ 773 00:48:33,800 --> 00:48:35,800 ಸೃಜನಶೀಲ ಮೇಲ್ವಿಚಾರಕರು: ಅಭಿಜಿತ್ ರ