1 00:00:06,132 --> 00:00:07,799 ಕಳೆದ ಬೇಸಿಗೆಯಲ್ಲಿ ಭೀಕರವಾದುದೇನೋ ನಡೆಯಿತು. 2 00:00:07,800 --> 00:00:08,843 ನಿನಗೆ ಪರಿಚಯವಿರುವ ದೆವ್ವ 3 00:00:09,927 --> 00:00:12,053 ನೀವು ಆಸ್ಪತ್ರೆಗೆ ಬರಲಿಲ್ಲ, ಕರೆಯೂ ಮಾಡಿಲ್ಲ. 4 00:00:12,054 --> 00:00:13,847 ನನ್ನ ಜೀವನದ ಬಗ್ಗೆ ನನ್ನೊಂದಿಗೆ 5 00:00:13,848 --> 00:00:15,890 ಮಾತನಾಡುವುದನ್ನು ನೀವು ಎಲ್ಲರಿಗೂ ಏಕೆ ನಿಷೇಧಿಸಿದಿರಿ? 6 00:00:15,891 --> 00:00:18,643 ಕೇಡಿ, ನಿನಗೆ ನೀನೇ ಇದನ್ನು ಮಾಡುತ್ತಿರುವೆ. 7 00:00:18,644 --> 00:00:23,357 ನೀನು ಹೋರಾಡುತ್ತಿರುವುದು ನಿನ್ನ ಮುರಿದ ಮನಸ್ಸಿನ ವಿರುದ್ಧ. 8 00:00:25,401 --> 00:00:27,986 ಹಿಂದಿನ ಭಾಗದಲ್ಲಿ ವಿ ವರ್ ಲಯರ್ಸ್ 9 00:00:27,987 --> 00:00:29,028 ನೀನು ಹೊರಡುತ್ತಿರುವೆ. 10 00:00:29,029 --> 00:00:31,322 ಮುಂದಿನ ವಾರ ನಿನ್ನ ಜನ್ಮದಿನದವರೆಗೆ ಅದನ್ನು ತೆರೆಯಬೇಡ, ಸರಿಯೇ? 11 00:00:31,323 --> 00:00:32,240 ಗೊತ್ತಾ, 12 00:00:32,241 --> 00:00:35,327 "ಬೀಚ್ವುಡ್‍ನಲ್ಲಿ ಗೆಳೆಯರು ಬರಲಿಕ್ಕಿಲ್ಲ" ಎನ್ನುವ ನಿಯಮವನ್ನು ಮತ್ತೆ ತರುತ್ತೀ ಅಂದುಕೊಂಡೆ. 13 00:00:35,453 --> 00:00:36,536 ಕೇಡೆನ್ಸ್ ಚೆನ್ನಾಗಿರುತ್ತಾಳೆ. 14 00:00:36,537 --> 00:00:38,914 ನಿನಗವರು ಎಂದೂ ಇಷ್ಟವಿರಲಿಲ್ಲ ತಾನೇ? ಗ್ಯಾಟ್ ಮತ್ತು ಎಡ್. 15 00:00:39,206 --> 00:00:40,540 ನಾನು ಜನಾಂಗ ದ್ವೇಷಿ ಅನ್ನುವೆಯಾ? 16 00:00:40,541 --> 00:00:41,583 ಜಾಗ್ರತೆ ವಹಿಸು. 17 00:00:41,584 --> 00:00:42,585 ಇಲ್ಲಾ, ನೀನು ಗಾಯಗೊಳ್ಳಬಹುದು. 18 00:00:43,377 --> 00:00:44,919 ನಾವು ಏನೆಂಬುದರ ಬಗ್ಗೆ ನನಗೆ ನಂಬಿಕೆಯಿದೆ. 19 00:00:44,920 --> 00:00:46,504 ನಾವು ಯಾರಾಗಿದ್ದೆವು, ಶತಮಾನಗಳ ಕಾಲ. 20 00:00:46,505 --> 00:00:47,630 ಆತ ತೀರಾ ದೂರ ಸಾಗಿದ್ದಾನೆ. 21 00:00:47,631 --> 00:00:49,632 ನೋಡು, ಆತ ಉಯಿಲು ಬದಲಾಯಿಸುತ್ತಿದ್ದಾರೆ. 22 00:00:49,633 --> 00:00:54,220 ಆತ ಎಲ್ಲವನ್ನು ತನ್ನ ನೆಚ್ಚಿನ ಮಗಳು ಇಲ್ಲವೇ ಮೊಮ್ಮಗುವಿಗೆ ಬರೆದುಹೋಗುವಂತಿದೆ. 23 00:00:54,221 --> 00:00:58,516 ಓರ್ವ ಸಿಂಕ್ಲೇರ್ ಮಾತ್ರ ಸ್ವಚ್ಛಗೊಳಿಸಬಲ್ಲ ದೊಡ್ಡ ಗಲೀಜು ಮಾಡಿದರೆ ಹೇಗೆ? 24 00:00:58,517 --> 00:01:03,605 ನಮ್ಮ ಕುಟುಂಬಗಳನ್ನು ಛಿದ್ರವಾಗಿಸಿದ ಸಣ್ಣ ವಿಷಯಗಳು ಕಣ್ಮರೆಯಾದರೆ ಹೇಗೆ? 25 00:01:03,606 --> 00:01:04,606 ಅದನ್ನು ನಾವು ಪುಡಿಮಾಡಬಹುದು. 26 00:01:04,607 --> 00:01:05,607 ಕೇಡನ್ಸ್ ಸಿಂಕ್ಲೇರ್ 27 00:01:05,608 --> 00:01:07,567 ಹ್ಯಾರಿಸ್ ಮತ್ತು ಅಮ್ಮಂದಿರಿಗೆ ಅಂತಿಮ ಪಾಠ ಕಲಿಸಬಹುದು. 28 00:01:07,568 --> 00:01:08,903 ನನಗೀಗ ನೆನಪಾಗಿದೆ. 29 00:01:09,111 --> 00:01:11,322 ನಾವು ಈ ಸ್ಥಳವನ್ನು ಸಂಪೂರ್ಣ ಸುಟ್ಟುಬಿಟ್ಟೆವು. 30 00:01:18,746 --> 00:01:21,456 ಇಲಿಯ ಬಗ್ಗೆ ಜನರು ಹೆದರದ ಸ್ಥಳದಲ್ಲಿ ಬದುಕಬೇಕೆಂದಿದ್ದರೆ... 31 00:01:21,457 --> 00:01:22,499 ಬೀಚ್ವುಡ್ ಬಿಟ್ಟು ಹೋಗುತ್ತಿದ್ದೇನೆ... 32 00:01:22,500 --> 00:01:25,002 ...ನೀವು ಅರಮನೆಯಲ್ಲಿ ಬದುಕುವುದನ್ನು ಬಿಡಬೇಕು. 33 00:01:27,421 --> 00:01:30,049 ಅಥವಾ ಬಹುಶಃ, 34 00:01:30,883 --> 00:01:33,718 ಆ ಅರಮನೆಯನ್ನೇ ಸುಟ್ಟುಹಾಕಬೇಕು. 35 00:01:33,719 --> 00:01:36,305 ಊಹಿಸಲು ಸಾಧ್ಯವೇ? 36 00:01:37,598 --> 00:01:40,517 ನಾನು ಅಮ್ಮಂದಿರ ಮುಖವನ್ನು ಕಲ್ಪಿಸಿಕೊಳ್ಳಬಲ್ಲೆ. 37 00:01:40,518 --> 00:01:41,768 ನಿಜ ಹೇಳುತ್ತಿದ್ದೇನೆ. 38 00:01:41,769 --> 00:01:43,478 ಕ್ಲೇರ್ಮಾಂಟ್ ಕೇವಲ ಟ್ರೋಫಿಗಳ ರಾಶಿ. 39 00:01:43,479 --> 00:01:46,606 ಅನ್ಯಾಯದ ಅನುಕೂಲಗಳಿಂದ ಜಯಿಸಿದ ಟ್ರೋಫಿಗಳು. 40 00:01:46,607 --> 00:01:49,651 ಇದು ಮೂಲತಃ ಪುರುಷಪ್ರಧಾನತೆಯ ಸ್ಥಾನ. 41 00:01:49,652 --> 00:01:52,070 ಹ್ಯಾರಿಸ್ ಪ್ರಧಾನ ಸ್ಥಾನದಲ್ಲಿದ್ದುಕೊಂಡು. 42 00:01:52,071 --> 00:01:54,906 ಸರಿ, ಹಾಗಾಗಿ, ಇವೆಲ್ಲವೂ ಇಲ್ಲವಾದರೆ, ನಾವು ಮತ್ತೆ ಶುರು ಮಾಡಬೇಕಾಗುತ್ತದೆ. 43 00:01:54,907 --> 00:01:56,617 ಬಹುಶಃ ಅವರು ನಿಲ್ಲಿಸಬಹುದೇನೋ. 44 00:01:57,952 --> 00:01:59,745 ಬಹುಶಃ ಮತ್ತೆ ನಾವೊಂದು ಕುಟುಂಬವಾಗಬಹುದೇನೋ. 45 00:02:00,746 --> 00:02:02,790 ಅದು ಒಂದು ಶುದ್ಧೀಕರಣದಂತಿರುತ್ತದೆ. 46 00:02:03,207 --> 00:02:05,417 ಅಂದರೆ, ಇದಕ್ಕಿಂತ ಕೆಟ್ಟದು ನಡೆಯಲು ಸಾಧ್ಯವಿಲ್ಲ, ಅಲ್ಲವೇ? 47 00:02:05,835 --> 00:02:07,044 ಗ್ಯಾಟ್? 48 00:02:07,962 --> 00:02:10,965 ಇದು ಸಾಮಾನ್ಯವಾಗಿ ನೀನು ಮಾತನಾಡುವ ಕ್ಷಣ. 49 00:02:11,715 --> 00:02:13,843 ಇದು ಸಿಂಕ್ಲೇರ್ ಮನೆ. ನಾನು ಏನೂ ಹೇಳುವಂತಿಲ್ಲ. 50 00:02:14,218 --> 00:02:16,886 ಏನು? ನಾನು ಇನ್ನು ಮುಂದೆ ಇಲ್ಲಿಗೆ ಬರುವಂತಿಲ್ಲವೆಂದು ನಿಮಗೆ ಗೊತ್ತಿದೆ. 51 00:02:16,887 --> 00:02:18,972 ಅದಕ್ಕಾಗಿಯೇ ನಾವು ಏನಾದರೂ ಮಾಡಬೇಕಿರುವುದು. 52 00:02:18,973 --> 00:02:22,017 ಅವರು ಪರಸ್ಪರ ಎಳೆದಾಡುತ್ತಿದ್ದಾರೆ ಮತ್ತು ಅವರೊಂದಿಗೆ ನಮ್ಮನ್ನೂ. 53 00:02:22,601 --> 00:02:24,270 ನೋಡಿ, ಅವರು ಕಲಿಯಬೇಕು. 54 00:02:24,645 --> 00:02:28,106 ಅವರು ನಮ್ಮನ್ನು ಶಿಕ್ಷಿಸಿ, ಸ್ವಿಸ್ ಬೆಟ್ಟಗಳ ಬೋರ್ಡಿಂಗ್ ಶಾಲೆಗೆ ಕಳುಹಿಸುತ್ತಾರೆ. 55 00:02:28,107 --> 00:02:31,359 ಇಲ್ಲ, ನಮಗೆ ಬಹಳ ಪಶ್ಚಾತ್ತಾಪವಿದೆ, 56 00:02:31,360 --> 00:02:35,030 ಡಿಶ್‌ವಾಶರ್‌ನಲ್ಲಿ ಪ್ರವಾಹ ಬರಿಸಿ, ಒಳ್ಳೆಯ ವಿಸ್ಕಿಯನ್ನು ಒಯ್ದೆವೆಂದು. 57 00:02:35,447 --> 00:02:40,786 ನಂತರ ನಾವು ಕಡಲ್ಡೌನ್‌ನಲ್ಲಿ ಸ್ಮೋರ್ಸ್ ಮಾಡಿಕೊಂಡು ಸಿನೆಮಾ ನೋಡಿದೆವು. 58 00:02:40,995 --> 00:02:45,291 ನಾವು ಜಾನಿಗಾಗಿ ಫೆರಿಸ್ ಬ್ಯೂಲರ್, ಸಿಕ್ಸ್ತ್ ಸೆನ್ಸ್ ನೋಡಿ, ನಿದ್ದೆ ಮಾಡಿದೆವು. 59 00:02:46,333 --> 00:02:48,543 ಮತ್ತು ನಾವು ತೀರಾ ತಡವಾಗಿ ಹೊಗೆಯ ವಾಸನೆ ಗ್ರಹಿಸಿದೆವು. 60 00:02:48,544 --> 00:02:50,795 ಅವರು ನಮ್ಮನ್ನು ನಂಬುವುದಿಲ್ಲ, ಆದರೆ ಚಿಂತೆಯಿಲ್ಲ. 61 00:02:50,796 --> 00:02:53,131 - ಏಕೆಂದರೆ? - ಜನರು ಮಾತನಾಡಬಹುದು, ಅಲ್ಲವೇ? 62 00:02:53,132 --> 00:02:54,799 - ಹೌದು. - ಅವರು ಪ್ರಶ್ನೆ ಕೇಳಬಹುದು, 63 00:02:54,800 --> 00:02:59,888 "ಸಿಂಕ್ಲೇರ್ ಹುಡುಗಿಯರು ತಮ್ಮ ಮಕ್ಕಳನ್ನು ಇಷ್ಟು ಹಾಳು ಮಾಡಿದ್ದು ಹೇಗೆ, 64 00:02:59,889 --> 00:03:02,098 - ತಮ್ಮ ಮನೆಯನ್ನು ತಾವೇ ಸುಟ್ಟುಹಾಕುವಷ್ಟು?" - ಸರಿ. 65 00:03:02,099 --> 00:03:04,392 ಅದ್ಭುತ ಯೋಜನೆ, ಆದರೆ ನಮಗೆ ಬೆಂಕಿ ಹಚ್ಚುವುದು ಹೇಗೆಂದು ತಿಳಿದಿಲ್ಲ. 66 00:03:04,393 --> 00:03:05,852 ನಾವು ವಿಭಜಿಸಿ ಗೆಲ್ಲೋಣ. 67 00:03:05,853 --> 00:03:08,606 ಅಂದರೆ, ದೋಣಿಮನೆಯಲ್ಲಿ ಸಾಕಷ್ಟು ಇಂಧನವಿದೆ. 68 00:03:14,695 --> 00:03:17,739 ನಾವು ಪಕ್ಕಾ ಕೆಲಸ ಮಾಡಬೇಕು. ನಾನು ಕೆಳಗಿನ ಕೋಣೆಗಳನ್ನು ನೋಡಿಕೊಳ್ಳುತ್ತೇನೆ. 69 00:03:17,740 --> 00:03:19,032 ಪೂರ್ವದ ಸ್ಥಳವನ್ನು ನಾನು ಮಾಡುವೆ. 70 00:03:19,033 --> 00:03:20,241 ಹೌದು, ಮಿರೆನ್. 71 00:03:20,242 --> 00:03:23,579 ನಿನ್ನ ಅಮ್ಮನ ಹಳೆಯ ಕೋಣೆ ಉರಿಯುವುದನ್ನು ನೀನು ನೋಡಬಯಸುವೆ. 72 00:03:24,038 --> 00:03:26,039 ಸರಿ, ನಾನು ಅಟ್ಟವನ್ನು ನೋಡಿಕೊಳ್ಳುವೆ. 73 00:03:26,040 --> 00:03:27,875 ನಾವು ಮೇಲಿನಿಂದ ಕೆಳಕ್ಕೆ ಕೆಲಸ ಮಾಡೋಣ. 74 00:03:28,334 --> 00:03:31,754 ಎಲ್ಲದಕ್ಕೂ ಪೆಟ್ರೋಲ್ ಸುರಿಯೋಣ. ಬೆಂಕಿ ಉರಿಸಿ, ಅಲ್ಲಿಂದ ಓಡೋಣ. 75 00:03:32,504 --> 00:03:33,422 ಮತ್ತು ನಾನು? 76 00:03:35,132 --> 00:03:38,009 ದೋಣಿ ವಿಂಡಮೀಯರ್‌ನಲ್ಲಿ ಕಟ್ಟಲಾಗಿದೆ, ಅಲ್ಲವೇ? 77 00:03:38,010 --> 00:03:40,845 ಇಲ್ಲಿಗೆ ತಂದು ನಿಲ್ಲಿಸು ಮತ್ತು ನೀನು ನಮ್ಮ ಚಾಲಕನಾಗುವೆ. ಪರಿಪೂರ್ಣವಾಗಿದೆ. 78 00:03:40,846 --> 00:03:43,139 - ನಾನು ದೋಣಿ ಚಾಲನೆ ಮಾಡಲ್ಲ. ನಿನಗದು ಗೊತ್ತಿದೆ. - ಸರಿ, ಆದರೆ-- 79 00:03:43,140 --> 00:03:44,057 - ಗ್ಯಾಟ್. - ಏನು? 80 00:03:44,058 --> 00:03:48,062 ನೋಡು, ಬೆಂಕಿ ಶುರುವಾದುದನ್ನು ನೀನು ನೋಡಿಲ್ಲ ಎನ್ನಬಹುದು, 81 00:03:48,562 --> 00:03:51,898 ಮತ್ತು ನೀನು ನಮ್ಮೆಲ್ಲರನ್ನೂ ಸುರಕ್ಷಿತ ತಾಣಕ್ಕೆ ತಂದೆ. ಅದು ಸುಳ್ಳೂ ಆಗಿರದು. 82 00:03:51,899 --> 00:03:55,485 ಒಮ್ಮೆ ಒಳಗಿನ ಸಾಮಗ್ರಿಗಳು ಉರಿದ ನಂತರ ಅವರ ಶಕ್ತಿ ಹೊರಟುಹೋಗುತ್ತದೆ. 83 00:03:55,486 --> 00:03:59,197 ಹ್ಯಾರಿಸ್ ಮುಂದಿನ ಬೇಸಿಗೆಯಲ್ಲಿ ನಿನಗೆ ನಾಯಕನ ಸ್ವಾಗತ ನೀಡಬೇಕಾಗುತ್ತದೆ. 84 00:03:59,198 --> 00:04:01,950 ಎಡ್‍ಗೂ ಸಹ. ನಾವಿದನ್ನು ಸರಿಪಡಿಸಬಹುದು. 85 00:04:01,951 --> 00:04:02,868 ನಾನು... 86 00:04:03,452 --> 00:04:04,745 ಹಾಳಾಗಲಿ. ನಾನು ನೆರವಾಗಲು ಬಯಸುತ್ತೇನೆ. 87 00:04:08,165 --> 00:04:10,416 ಇದು ದೊಡ್ಡ ಮನೆ, ಅದು ಬೇಗನೆ ಹರಡಬೇಕು, 88 00:04:10,417 --> 00:04:12,252 ಅಗ್ನಿಶಾಮಕ ಇಲಾಖೆ ಬರುವ ಮುನ್ನ. 89 00:04:12,711 --> 00:04:15,088 ನಾನು ಬೆಂಕಿಗೆ ನೆರವಾದ ಮೇಲೆ, ದೋಣಿಯನ್ನು ಇಲ್ಲಿಗೆ ತರುವೆ. 90 00:04:15,089 --> 00:04:17,423 ಮೆಟ್ಟಿಲುಗಳ ಬಳಿ ಪೆಟ್ರೋಲ್ ಬೇಡ. ನಮಗೆ ಹೊರಹೋಗಲು ಸ್ಥಳ ಬೇಕು. 91 00:04:17,424 --> 00:04:20,260 ಮತ್ತು ಅಜ್ಜನ ಗಡಿಯಾರ 12:00 ಬಾರಿಸಿದಾಗ, 92 00:04:20,552 --> 00:04:24,138 ನಾವು ಬೆಂಕಿ ಹಚ್ಚಿ, ಕಾಲುಕೀಳುತ್ತೇವೆ. 93 00:04:24,139 --> 00:04:27,893 - ಏನೇ ಆದರೂ. - ಏನೇ ಆದರೂ, ನಾವು ಕಾಲುಕೀಳುತ್ತೇವೆ. 94 00:04:28,519 --> 00:04:29,602 ಲಯರ್ಸ್ ಎಂದೆಂದಿಗೂ, ಅಲ್ಲವೇ? 95 00:04:29,603 --> 00:04:33,023 ಲಯರ್ಸ್ ಎಂದೆಂದಿಗೂ. 96 00:04:48,831 --> 00:04:50,499 ಸಿಂಕ್ಲೇರ್ 97 00:04:59,174 --> 00:05:05,180 ವಿ ವರ್ ಲಯರ್ಸ್ 98 00:05:12,146 --> 00:05:13,896 ಈಗ ಅದು ಅರ್ಥವಾಗುತ್ತಿದೆ. 99 00:05:13,897 --> 00:05:15,607 ನಾವದನ್ನು ಮಾಡಿದೆವೆಂದರೆ ನಂಬಲಾಗುತ್ತಿಲ್ಲ. 100 00:05:16,817 --> 00:05:21,237 ಅಮ್ಮಂದಿರು ಜಗಳವಾಡುತ್ತಿಲ್ಲ. ಗ್ಯಾಟ್ ಮರಳಿ ಆಹ್ವಾನಿಸಲ್ಪಟ್ಟ. 101 00:05:21,238 --> 00:05:22,572 ಅದು ಕೆಲಸ ಮಾಡಿತು. 102 00:05:22,573 --> 00:05:25,075 - ಅಂದರೆ-- - ಮಿರ್, ಅವಳಿಗೆ ಬೆಂಕಿ ಮಾತ್ರ ನೆನಪಾಗಿದೆ. 103 00:05:25,534 --> 00:05:26,410 ಹೌದು. 104 00:05:33,459 --> 00:05:34,418 ಇರಿ, ಇರಿ, ಇರಿ. 105 00:05:35,586 --> 00:05:36,712 ನಾನು ಏನನ್ನೋ ಮರೆತಿದ್ದೇನೆ. 106 00:05:38,297 --> 00:05:41,008 ನಾನು ನೀರಿನಲ್ಲಿ ಹೇಗೆ ಬಿದ್ದೆ ಎನ್ನುವುದನ್ನು ಇದು ಇನ್ನೂ ವಿವರಿಸುವುದಿಲ್ಲ. 107 00:05:45,929 --> 00:05:47,973 ನಡಿ, ನಾವು ಗ್ಯಾಟ್‌ನನ್ನು ಕರೆತರಬೇಕು. 108 00:05:48,432 --> 00:05:50,059 ಸರಿ. ನಾವು ಮತ್ತೆ ಬರುತ್ತೇವೆ. 109 00:05:58,317 --> 00:05:59,526 ನಡಿ, ಕೇಡಿ. 110 00:06:01,320 --> 00:06:03,155 ಅವಳು ಉಳಿದದ್ದನ್ನು ನೆನಪಿಸಿಕೊಳ್ಳಲಿದ್ದಾಳೆ. 111 00:06:03,530 --> 00:06:04,739 ಬೇಗನೆ. 112 00:06:04,740 --> 00:06:06,784 ಅವಳು ಎಲ್ಲವನ್ನೂ ಜೋಡಿಸತೊಡಗಿದ್ದಾಳೆ. 113 00:06:08,952 --> 00:06:10,036 ನನಗೆ ಅರ್ಥವಾಗಿದೆ ಅನಿಸುತ್ತೆ. 114 00:06:10,037 --> 00:06:12,581 ಬೆಂಕಿಯ ನಂತರ ನಾವು ಸಂಭ್ರಮಿಸಲು ದೋಣಿಯಾಚೆ ಈಜಲು ಹೋದೆವೇ? 115 00:06:13,123 --> 00:06:15,417 ನನ್ನ ತಲೆಗೆ ಏಟಾಯಿತು, ಮತ್ತು ನಾನು ನಿಮಗೆ ಕಾಣಲಿಲ್ಲ, ಅಲ್ಲವೇ? 116 00:06:15,876 --> 00:06:19,253 ನಿಮಗೆ ಭಯವಾಗಿತ್ತು, ನಾವು ಕುಡಿದಿದ್ದೆವು. ತಪ್ಪು ಮಾಡಿದ್ದೆವು. ಹಾಗಾಗಿ ನೀವು ಹೋದಿರಿ. 117 00:06:19,254 --> 00:06:21,589 - ಇಲ್ಲ, ಇಲ್ಲ, ಇಲ್ಲ. - ನನಗೆ ಅರ್ಥವಾಗುತ್ತದೆ. 118 00:06:21,590 --> 00:06:22,758 ನಿಜವಾಗಿಯೂ. 119 00:06:23,258 --> 00:06:25,718 ನೀನು ಮರಳಿ ಆಹ್ವಾನಿಸಪಡಬೇಕಿತ್ತು ನನಗೆ, ಗ್ಯಾಟ್. 120 00:06:25,719 --> 00:06:28,179 - ಮತ್ತೆ ಈಗ ನೀನು ಇಲ್ಲಿರುವೆ. ನನ್ನೊಂದಿಗೆ. - ಕೇಡಿ, ನಿಲ್ಲಿಸು. 121 00:06:28,180 --> 00:06:30,264 ನೀನು ನೀರಿಗೆ ಹೇಗೆ ಬಿದ್ದೆ, ನಮಗೆ ಗೊತ್ತಿಲ್ಲ. 122 00:06:30,265 --> 00:06:32,058 - ಸರಿ. - ನಾವು ಅದರ ಬಗ್ಗೆ ನಿನಗೆ ನಿಜ ಹೇಳಿದೆವು. 123 00:06:32,059 --> 00:06:34,186 - ನಿಮಗೆ ಗೊತ್ತಿರುವುದೇನೋ ನನಗೆ ಗೊತ್ತಿಲ್ಲ. - ಸ್ವಲ್ಪ. 124 00:06:34,895 --> 00:06:36,980 ನಾವು ನೇರವಾಗಿ ನಿನಗೆ ಹೇಳುವಂತಿಲ್ಲ. 125 00:06:37,272 --> 00:06:39,566 ಜನರು ಹಾಗೆ ಮಾಡಿದಾಗಲೆಲ್ಲ, ನೀನು... 126 00:06:40,150 --> 00:06:42,276 ಹೌದು, ಹೇಗಿದ್ದರೂ ನೀನು ಮತ್ತೆ ಮರೆತುಬಿಡುತ್ತೀ. 127 00:06:42,277 --> 00:06:45,238 ಕೇಡಿ, ನಾವು ನಿಜವಾಗಿಯೂ ನೆರವಾಗಬಯಸುತ್ತೇವೆ. ಆದರೆ ಅದು-- 128 00:06:45,239 --> 00:06:48,617 ನಾನು ನಿಜಕ್ಕೆ ಹತ್ತಿರವಾಗುತ್ತಿರುವ ಪ್ರತಿ ಬಾರಿಯೂ, 129 00:06:49,284 --> 00:06:53,079 ಈ ನೋವಿನ ಡ್ರ್ಯಾಗನ್ ನನ್ನ ಮೆದುಳಿನೊಳಕ್ಕೆ ನುಸುಳಿ, ಹಾಳುಮಾಡುತ್ತದೆ. 130 00:06:53,080 --> 00:06:56,875 ನಾವು ಲಯರ್ಸ್ ಲಯರ್ಸ್ ಆಗಿಯೇ ಇರುವಾಗ, ಡ್ರ್ಯಾಗನ್ ಗಲಿಬಿಲಿಗೊಳಗಾಗುತ್ತದೆ. 131 00:07:00,963 --> 00:07:02,005 ನನಗೊಂದು ಉಪಾಯ ಹೊಳೆದಿದೆ. 132 00:07:05,509 --> 00:07:06,677 ಸರಿ, ಸಿದ್ಧವೇ? 133 00:07:07,469 --> 00:07:10,722 ಒಂದು ಚಿರಪರಿಚಿತ, ಯೋಚನೆಗೆ ಹಚ್ಚದ, ಶಾಂತ ಚಟುವಟಿಕೆ. 134 00:07:11,223 --> 00:07:12,765 ನಿಮ್ಮ ಪದಗಳನ್ನು ಜಾಗ್ರತೆಯಾಗಿ ಆರಿಸಿ. 135 00:07:12,766 --> 00:07:16,769 ನನಗೆ ಆಘಾತ ತರುವ ಸ್ಕ್ರಾಬಲ್‌ಗಿಂತ ಕೊಳಕು ಪದದ ಸ್ಕ್ರಾಬಲ್ ಇಷ್ಟ. 136 00:07:16,770 --> 00:07:18,105 ಡ್ರ್ಯಾಗನ್ ಅನ್ನು ಎಚ್ಚರಿಸಬೇಡ. 137 00:07:18,605 --> 00:07:19,565 ಯಾರು ಮೊದಲು? 138 00:07:44,756 --> 00:07:47,551 ಚಿಯರ್ಸ್ 139 00:07:50,971 --> 00:07:51,929 ಚಿಯರ್ಸ್ 140 00:07:51,930 --> 00:07:56,894 ಸಿಂಕ್ಲೇರ್ ಸಹೋದರಿಯರ ಬೇಸಿಗೆಯ ಖಾಲಿ ಬಾಟಲಿಗಳಿಂದ ಮಾಲಟೊವ್ ಕಾಕ್ಟೇಲ್. 141 00:07:57,686 --> 00:07:59,521 ಒಂದು ರೀತಿಯಲ್ಲಿ ಕಾವ್ಯಾತ್ಮಕವಾಗಿದೆ. 142 00:08:00,856 --> 00:08:02,566 ನಾನು ನಿನ್ನನ್ನು ಉತ್ತಮ ಜಗತ್ತಲ್ಲಿ ಕಾಣುವೆ. 143 00:08:03,859 --> 00:08:08,947 ನನಗೆ ನೆನಪಾಯಿತು, ನೀನು ಮತ್ತು ನಾನು ಅಡುಗೆಮನೆಯಲ್ಲಿ, ಅಲ್ಲವೇ? 144 00:08:11,825 --> 00:08:13,202 ಉತ್ತಮ ಜಗತ್ತಲ್ಲಿ ಸಿಗೋಣ. 145 00:08:15,996 --> 00:08:18,206 ಸರಿ, ಇದನ್ನು ನಾವು ಮಾಡಬಲ್ಲೆವು. 146 00:08:18,207 --> 00:08:19,416 - ಹೇ. - ಹೇ. 147 00:08:20,584 --> 00:08:21,543 ಸರಿ. 148 00:08:22,544 --> 00:08:24,046 ಇಲ್ಲ, ಇಲ್ಲ, ಇಲ್ಲ, ಇಲ್ಲ. 149 00:08:25,756 --> 00:08:26,589 ಪೆಟ್ರೋಲ್ ಇಲ್ಲಿದೆ. 150 00:08:26,590 --> 00:08:29,425 ದೊಡ್ಡದಾದ ಕೆಂಪಿನದಕ್ಕಿಂತ ಇದನ್ನು ಮೇಲಕ್ಕೊಯ್ಯುವುದು ಸುಲಭ ಅನಿಸಿತು. 151 00:08:29,426 --> 00:08:30,344 ಅದ್ಭುತ. 152 00:08:31,178 --> 00:08:32,012 ಮಧ್ಯರಾತ್ರಿ, ಅಲ್ಲವೇ? 153 00:08:32,429 --> 00:08:33,472 ಅದೊಂದು ಡೇಟ್, ಕಣೋ. 154 00:08:36,600 --> 00:08:39,811 ಬಹಳ ವ್ಯಂಗ್ಯವಾಗಿದೆ ಅಲ್ಲವೇ? ದಿ ಬಾಸ್ಟನ್ ಸೆಂಟಿನೆಲ್. 155 00:08:40,729 --> 00:08:43,523 ಸಿಂಕ್ಲೇರ್ ಪ್ರಕಾಶನ ಸಾಮ್ರಾಜ್ಯವನ್ನು ಆರಂಭಿಸಿದ ದಿನಪತ್ರಿಕೆ. 156 00:08:43,982 --> 00:08:47,069 {\an8}ಈ ಮನೆಯನ್ನು ಕಟ್ಟಲು ಕಾರಣವಾದ ವಸ್ತುವೇ ಅದನ್ನು ಸಂಪೂರ್ಣ ಸುಡಲಿದೆ. 157 00:08:51,949 --> 00:08:53,366 ವಿಪರ್ಯಾಸ 158 00:08:53,367 --> 00:08:58,455 ಈ ಬಾರಿ ಇದನ್ನು ಸರಿಯಾಗಿ ಬರೆದೆ. ಹಾಗಾಗಿ ವಿಮೋಚನೆ ಅಥವಾ ಏನೋ ಒಂದು. 159 00:09:03,377 --> 00:09:06,337 ನೀನು ಅಟ್ಟದಲ್ಲಿ ಆರಂಭಿಸುವ ಯೋಜನೆ ಇತ್ತು, ಅಲ್ಲವೇ? 160 00:09:06,338 --> 00:09:07,422 ಹೌದು. 161 00:09:09,216 --> 00:09:10,634 ಅಷ್ಟೊಂದು ನೆನಪುಗಳು ಅಲ್ಲಿವೆ. 162 00:09:21,895 --> 00:09:25,439 ನನ್ನ ಅಮ್ಮನ ಚಿಕ್ಕಂದಿನ ಮಲಗುವ ಕೋಣೆಗೆ ಬೆಂಕಿ ಇಡುವುದಕ್ಕೆ ನನಗೆ ಬಹಳ ಉತ್ಸಾಹವಿತ್ತು. 163 00:09:25,440 --> 00:09:27,400 ಅವಳು ಇದ್ದವರಲ್ಲಿ ಕೆಟ್ಟವಳಾಗಿದ್ದಳು. 164 00:09:27,401 --> 00:09:30,444 ದುಡ್ಡಿನ ಹಿಂದೆ ಓಡುವುದು, ಸಹೋದರಿಯರೊಂದಿಗೆ ಜಗಳ ತೆಗೆಯುವುದು. 165 00:09:30,445 --> 00:09:31,362 ಸೇಡು 166 00:09:31,363 --> 00:09:34,448 ಅದಕ್ಕಾಗಿ ಮಾತ್ರ ನಾನು ಈ ಯೋಜನೆಗೆ ಒಪ್ಪಿರುವುದು. 167 00:09:34,449 --> 00:09:35,701 ಅದು ನಿನಗೆ ಒಳ್ಳೆಯದೆನಿಸರಬೇಕು. 168 00:09:36,201 --> 00:09:37,493 ಅದು ಕೇವಲ ಅತಿಥಿಗಳ ಮಲಗುವ ಕೋಣೆ. 169 00:09:37,494 --> 00:09:40,579 ಅಜ್ಜಿ ತನ್ನ ಟೀನ್ ನಿಯತಕಾಲಿಕಕ್ಕೆ ಅಥವಾ ಹಳತಾದ ಉಗುರಿನ ಬಣ್ಣಗಳಿಗೆ 170 00:09:40,580 --> 00:09:42,374 ಮಂದಿರ ಕಟ್ಟಿರಲಿಲ್ಲವಲ್ಲ. 171 00:09:42,833 --> 00:09:44,542 ಬಹುಶಃ ಅವಳಲ್ಲಿ ಅಂತಹ ಕೊಳಕು ಇದ್ದಿರಲಿಕ್ಕಿಲ್ಲ. 172 00:09:44,543 --> 00:09:49,047 ಬಹುಶಃ ಅವಳು ಎಂದೂ ಅತಿ ಸಕಾರಾತ್ಮಕತೆ ಮತ್ತು ಪರಿಪೂರ್ಣತೆ ಹೊಂದಿದ್ದಿರಬಹುದು. 173 00:09:49,756 --> 00:09:50,881 ಅಂದರೆ, ಕೇಡಿ, ನಾನು-- 174 00:09:50,882 --> 00:09:53,217 ಇದು ನಿನಗೇನಾದರೂ ನೆರವಾಗುತ್ತಿದೆಯೇ, ಈಗ? 175 00:09:53,218 --> 00:09:54,218 - ಹೌದು. ಹೌದು. - ಸರಿ. 176 00:09:54,219 --> 00:09:55,345 ಹಾಗನಿಸುತ್ತದೆ ನನಗೆ. 177 00:09:58,056 --> 00:09:59,182 ನನಗೆ ಕೆಲವು ನೆನಪಿಗೆ ಬರುತ್ತಿವೆ. 178 00:10:00,559 --> 00:10:01,643 ಆ ವಾಸನೆ. 179 00:10:02,019 --> 00:10:05,105 ನನಗೆ... ಅದು ಬಹಳ ಉದ್ರೇಕಕಾರಿಯಾಗಿತ್ತು. 180 00:10:07,649 --> 00:10:08,984 ಗ್ಯಾಸೊಲೀನ್. 181 00:10:10,444 --> 00:10:11,570 ಅಡ್ರಿನಾಲಿನ್. 182 00:10:20,120 --> 00:10:22,122 ನಾನೊಬ್ಬ ಕ್ರಾಂತಿಕಾರಿ ಎಂಬ ಭಾವನೆ ಇತ್ತು. 183 00:10:27,169 --> 00:10:29,378 ನಾನು ಅಮ್ಮನ ಜೊತೆ, ಹ್ಯಾರಿಸ್ ಜೊತೆ ಮಾತನಾಡಲು ಯತ್ನಿಸಿದೆ. 184 00:10:29,379 --> 00:10:30,796 ಅವರು ಆಲಿಸಲಿಲ್ಲ. 185 00:10:30,797 --> 00:10:32,340 ಹಾಗಾಗಿ ಅವರಿಗೆ ಇದು ಆಗಬೇಕು. 186 00:10:32,341 --> 00:10:36,011 ಗ್ಯಾಟ್ ಅಥವಾ ಎಡ್‌ರನ್ನು ಅಥವಾ ಸಿಂಕ್ಲೇರ್ಸ್ ಬಿಟ್ಟು ಬೇರೆ ಯಾರನ್ನೂ ನೋಡದಿರುವುದಕ್ಕೆ. 187 00:10:46,188 --> 00:10:50,816 ಹ್ಯಾರಿಸ್ ಸಿಂಕ್ಲೇರ್ ಅರ್ಹನಲ್ಲ ಎಂದುಕೊಂಡವನಲ್ಲಿ ನನಗೆ ಪ್ರೀತಿ ಹುಟ್ಟಿತ್ತು. 188 00:10:50,817 --> 00:10:53,070 ಮತ್ತು ನನಗೆ ಆತನ ದ್ವೇಷವನ್ನು ತೊಳೆಯಬೇಕಿತ್ತು. 189 00:11:02,245 --> 00:11:05,081 ಅದನ್ನು ನಾಶಮಾಡಿದರೆ 190 00:11:05,082 --> 00:11:06,917 ಮರುನಿರ್ಮಾಣ ಮಾಡಬಹುದು ಎಂದು ನಾನು ನಂಬಿದ್ದೆ. 191 00:11:07,292 --> 00:11:09,168 ಎಲ್ಲರಿಗೂ ಒಂದು ಹೊಸ ಆರಂಭ. 192 00:11:09,169 --> 00:11:11,505 ನಂಬು 193 00:11:29,648 --> 00:11:32,275 ಹನ್ನೆರಡು 194 00:11:35,779 --> 00:11:36,780 ಮಧ್ಯರಾತ್ರಿ. 195 00:12:07,310 --> 00:12:10,605 ಹೊಗೆ ನಿಜಕ್ಕೂ ಕುಟುಕುತ್ತದೆ, ಅಲ್ಲವೇ? 196 00:12:18,989 --> 00:12:20,574 ಮತ್ತು ನನಗೆ ಎಂದೂ ಅರಿವಾಗಲಿಲ್ಲ... 197 00:12:23,326 --> 00:12:25,244 ಬೆಂಕಿ ಎಷ್ಟು ದೊಡ್ಡ ಸದ್ದುಮಾಡುತ್ತದೆಂದು. 198 00:12:25,245 --> 00:12:28,457 ಗದ್ದಲ 199 00:12:40,010 --> 00:12:41,386 ಇಲ್ಲ! 200 00:12:45,098 --> 00:12:46,099 ನಾಯಿಗಳು. 201 00:12:47,684 --> 00:12:50,728 ಇಲ್ಲ! ಇಲ್ಲ! ನಾನು ಬರುತ್ತಿದ್ದೇನೆ! ನಾನು ಬರುತ್ತಿದ್ದೇನೆ! 202 00:12:50,729 --> 00:12:54,232 ನನ್ನಮ್ಮ ಅವುಗಳಿಗೆ ಆತಂಕದ ಮಾತ್ರೆಗಳನ್ನು ಕೊಟ್ಟಿದ್ದಳು, ಊಟದ ಸಮಯದಲ್ಲಿ ಸುಮ್ಮನಿರುವಂತೆ. 203 00:12:55,066 --> 00:12:58,361 ಇಲ್ಲ, ಇಲ್ಲ, ಇಲ್ಲ. 204 00:13:01,615 --> 00:13:03,158 ಇಲ್ಲ, ಇಲ್ಲ, ಇಲ್ಲ. 205 00:13:11,082 --> 00:13:13,251 ಇಲ್ಲ, ನಾಯಿಗಳು ಬೇಡ. 206 00:13:14,002 --> 00:13:16,254 ಇಲ್ಲ, ನಾಯಿಗಳು ಬೇಡ. 207 00:13:16,713 --> 00:13:17,547 ಇಲ್ಲ! 208 00:13:18,006 --> 00:13:18,924 ಇಲ್ಲ! 209 00:13:23,762 --> 00:13:24,596 ಇಲ್ಲ. 210 00:14:09,307 --> 00:14:11,810 ಫ್ರಾಂಕ್ಲಿನ್. ಎಲೆನೋರ್. ಬನ್ನಿ. 211 00:14:51,224 --> 00:14:55,645 ಒಂದಾನೊಂದು ಕಾಲದಲ್ಲಿ, ಒಬ್ಬ ರಾಜಕುಮಾರಿ ತನ್ನ ಸಾಮ್ರಾಜ್ಯದ ಕೊಳೆ ತೊಳೆಯಬಹುದೆಂದುಕೊಂಡಳು. 212 00:14:56,313 --> 00:14:58,147 ಮದ್ಯ, ನಂಬುಗೆಯ ಅಮಲಿನಲ್ಲಿ, 213 00:14:58,148 --> 00:15:02,694 ಆಕೆ ತನ್ನ ಡ್ರ್ಯಾಗನ್ ಏರಿ ಬೆಂಕಿ ಉಗುಳಿದಳು. 214 00:15:03,486 --> 00:15:07,324 ತನ್ನ ಅಹಂಕಾರದಲ್ಲಿ, ಆಕೆ ಅತ್ಯಂತ ಮಹತ್ವದ ಪಾಠವನ್ನು ಮರೆತಳು. 215 00:15:07,907 --> 00:15:12,245 ಕ್ರಾಂತಿಯು ರಕ್ತಸಿಕ್ತವಾಗಿರುತ್ತದೆ, ಮತ್ತು ಹೆಚ್ಚಿನ ಬಾರಿ ಮುಗ್ಧರು ಬಲಿಯಾಗುತ್ತಾರೆ. 216 00:15:18,251 --> 00:15:19,502 ಫ್ರಾಂಕ್ಲಿನ್. ಎಲೆನೋರ್. ಬನ್ನಿ. 217 00:15:21,713 --> 00:15:22,547 ತಗೋ. 218 00:15:23,423 --> 00:15:25,174 ಬಾ ಇಲ್ಲಿ. ಹಾಗೇ, ಕೊಡದನ್ನು. 219 00:15:25,175 --> 00:15:27,302 ಸರಿ. ಸರಿ. ತಾ ಅದನ್ನು. 220 00:15:28,136 --> 00:15:29,137 ಅಜ್ಜ. 221 00:15:32,015 --> 00:15:33,182 ಮೊದಲನೆಯ ಕೇಡೆನ್ಸ್. 222 00:15:33,183 --> 00:15:34,559 ಬಾ, ಕೂರು. 223 00:15:38,647 --> 00:15:42,233 ನಾವು ಈ ವರ್ಷದ ವಾರ್ಷಿಕ ಮರಳು ಕೋಟೆ ಕಟ್ಟುವ ಸ್ಪರ್ಧೆ ಮಾಡಿಲ್ಲ, ಅಲ್ಲವೇ? 224 00:15:42,901 --> 00:15:44,611 ಯಾರಾದರೂ ನನಗೆ ನೆನಪಿಸಬೇಕಿತ್ತು. 225 00:15:47,113 --> 00:15:48,531 ನಾನು ಹೇಳಬೇಕಿತ್ತು... 226 00:15:50,450 --> 00:15:51,618 ಕ್ಷಮಿಸು. 227 00:15:54,954 --> 00:15:56,580 ಹಾಗಾದರೆ ನಿನಗೆ ಎಲ್ಲವೂ ನೆನಪಾಗಿದೆ. 228 00:15:56,581 --> 00:15:57,624 ನಿನ್ನ ನೆನಪುಗಳು. 229 00:16:02,128 --> 00:16:03,004 ಹಾಂ... 230 00:16:03,838 --> 00:16:04,881 ಅವು ನೆನಪಾಗುತ್ತವೆ. 231 00:16:06,508 --> 00:16:08,009 ವಿಲಕ್ಷಣ ಕ್ಷಣಗಳಲ್ಲಿ. 232 00:16:09,135 --> 00:16:11,846 ಯಾವತ್ತೂ ಅನುಕೂಲಕರವಲ್ಲದ ಕ್ಷಣಗಳು. 233 00:16:12,972 --> 00:16:15,016 ಮತ್ತು ವಿಷಾದ ಬೇಡ. 234 00:16:16,893 --> 00:16:18,228 ನೀನು ನಾಯಕತ್ವ ತೋರಿದೆ. 235 00:16:19,938 --> 00:16:21,147 ಒಂದು ಒಳ್ಳೆಯ ಉದಾಹರಣೆ. 236 00:16:21,648 --> 00:16:25,443 ತಂತಿ ಸರಿಯಿಲ್ಲದ್ದೇ ಕಾರಣ, ಮತ್ತು ... 237 00:16:27,278 --> 00:16:28,530 ಆ ಅನಿಲದ ಮುಖ್ಯ ಕೊಳವೆ. 238 00:16:29,489 --> 00:16:30,323 ಹೇ. 239 00:16:32,325 --> 00:16:36,453 ನಾನು ಮತ್ತು ಲಯರ್ಸ್ ನಿಮ್ಮೊಂದಿಗೆ ಊಟ ಮಾಡಲು 240 00:16:36,454 --> 00:16:38,873 ಇಂದು ನ್ಯೂ ಕ್ಲೇರ್ಮಾಂಟ್‌ಗೆ ಬರುವುದರ ಬಗ್ಗೆ ನಿಮಗೇನನಿಸುತ್ತೆ? 241 00:16:40,667 --> 00:16:41,835 ಅಂದರೆ, ನಾವೆಲ್ಲರೂ. 242 00:16:43,336 --> 00:16:44,379 ಗ್ಯಾಟ್ ಕೂಡ. 243 00:16:44,921 --> 00:16:47,590 ಅವನಿಗೆ ಈಗ ಇಲ್ಲಿ ಸ್ವಾಗತವಿದೆಯೆಂದು ಅವನಿಗೆ ತಿಳಿಯುವುದು ಮುಖ್ಯ. 244 00:16:51,136 --> 00:16:51,970 ಹಾಂ... 245 00:16:59,686 --> 00:17:01,312 ನಿನ್ನ 18ನೆಯ ಜನ್ಮದಿನ ಬರುತ್ತಿದೆ. 246 00:17:06,484 --> 00:17:08,319 ಹೌದು. ಮೂರು ದಿನಗಳು. 247 00:17:09,863 --> 00:17:11,156 ಹೌದು, ಸಮಯ. 248 00:17:12,031 --> 00:17:14,993 ಬೇಸಿಗೆಯಲ್ಲಿ ನೆನಪಿಟ್ಟುಕೊಳ್ಳುವುದು ಕಷ್ಟ, ಅಲ್ಲವೇ? 249 00:17:16,453 --> 00:17:17,287 ಹೌದು. 250 00:17:18,246 --> 00:17:21,875 ನಾನು ಇವುಗಳಿಗೆ ಅಂಟಿಕೊಂಡಿದ್ದೆ. 251 00:17:23,168 --> 00:17:24,334 ನನಗವು ಬೇಡ. 252 00:17:24,335 --> 00:17:25,712 ಇದು ಜನ್ಮದಿನದ ಉಡುಗೊರೆ. 253 00:17:26,671 --> 00:17:28,089 ನೀನದನ್ನು ತೆರೆ... 254 00:17:29,883 --> 00:17:30,925 ನೀನು ಸಿದ್ಧವಿರುವಾಗ. 255 00:17:32,051 --> 00:17:32,886 ಧನ್ಯವಾದ. 256 00:18:07,420 --> 00:18:09,255 ಇಲ್ಲಿ! ಇಲ್ಲಿ! 257 00:18:11,382 --> 00:18:12,425 ನನ್ನೊಂದಿಗಿರು. 258 00:18:24,854 --> 00:18:27,397 ಹೇ, ಕೇಡಿ? ನೀನು ಇಲ್ಲೇನು ಮಾಡುತ್ತಿರುವೆ? 259 00:18:27,398 --> 00:18:30,193 ನೀನು ಹ್ಯಾರಿಸ್ ಜೊತೆ ಮಾತನಾಡುವುದನ್ನು ನೋಡಿ, ಮಾತಾಡಿಸೋಣ ಎಂದುಕೊಂಡೆವು. 260 00:18:32,529 --> 00:18:35,031 ಆತನಿಗೆ ಏನೋ ಗೊತ್ತಿದೆ, ಅನಿಸುತ್ತೆ. 261 00:18:37,325 --> 00:18:38,535 ಅಥವಾ ಎಲ್ಲವೂ. 262 00:18:39,035 --> 00:18:40,328 ಆತ ನನಗೆ ಇವುಗಳನ್ನು ಕೊಟ್ಟರು. 263 00:18:41,371 --> 00:18:43,080 ಕುಟುಂಬದ ಪ್ರೀತಿಯ ಉರುಳು. 264 00:18:43,081 --> 00:18:45,208 ಇವು ಈ ಬೆಂಕಿಯಲ್ಲಿ ಉಳಿದದ್ದಾದರೂ ಹೇಗೆ? 265 00:18:46,334 --> 00:18:47,168 ಕೇಡಿ? 266 00:18:50,964 --> 00:18:53,299 ನಾವು ನಿನ್ನನ್ನು ಎಚ್ಚರಿಸಲು ಯತ್ನಿಸಿದೆವು. ಇವು ಸಂತಸದ ನೆನಪುಗಳಲ್ಲ. 267 00:18:54,259 --> 00:18:55,092 ಇಲ್ಲ. 268 00:18:55,093 --> 00:18:56,886 - ಈಗ ನಿನಗೆ ಮರೆವು ಇರಬೇಕಿತ್ತೇನೋ. - ಇಲ್ಲ. 269 00:18:57,595 --> 00:18:59,430 ಇಲ್ಲ! ನನಗೆ ತಿಳಿಯಬೇಕು. 270 00:19:00,265 --> 00:19:02,225 ನನ್ನನ್ನು ಕಡಲ ಕಿನಾರೆಯಲ್ಲಿ ಕಂಡಾಗ ನೀವು ಎಲ್ಲಿದ್ದಿರಿ? 271 00:19:02,642 --> 00:19:04,601 ಮತ್ತು ನೀನು ಕರೆ ಏಕೆ ಮಾಡಲಿಲ್ಲ? 272 00:19:04,602 --> 00:19:08,106 ನಿಮ್ಮಲ್ಲಿ ಯಾರೂ ಏಕೆ ಕರೆ ಮಾಡಲಿಲ್ಲ? 273 00:19:10,608 --> 00:19:11,609 ಹೇ. 274 00:19:11,985 --> 00:19:12,861 ಕೇಡಿ. 275 00:19:13,570 --> 00:19:14,528 ನಿನಗೇನಾಗಿಲ್ಲ. 276 00:19:14,529 --> 00:19:16,822 - ನೀನು ಶಾಂತಳಾಗಬೇಕು. - ಅವಳಿಗೆ ಆತಂಕದ ಆಕ್ರಮಣವಾಗುತ್ತಿದೆ. 277 00:19:16,823 --> 00:19:18,992 ಉಸಿರಾಡು, ಉಸಿರಾಡು, ಉಸಿರಾಡು. 278 00:19:20,326 --> 00:19:21,786 ಇಲ್ಲ! 279 00:19:31,212 --> 00:19:35,300 ನನ್ನದೇ ಕಥೆ ತಿಳಿಯುವಷ್ಟು ನಾನು ಬಲಶಾಲಿಯಾಗಿದ್ದೇನೆ. 280 00:19:41,014 --> 00:19:42,223 ದಯವಿಟ್ಟು. 281 00:19:50,523 --> 00:19:51,399 ಸರಿ. 282 00:19:53,276 --> 00:19:54,110 ಹೌದು. 283 00:19:59,365 --> 00:20:01,075 ಮಧ್ಯರಾತ್ರಿಯಲ್ಲಿ ಸೇರುವ ಯೋಜನೆಯಿತ್ತು. 284 00:20:02,535 --> 00:20:05,079 ನಾನು ಅಲ್ಲಿ 11:56 ಕ್ಕೆ ಇದ್ದೆ. ನಾನು ಸಿದ್ಧವಾಗಿದ್ದೆ. 285 00:20:09,375 --> 00:20:10,584 ನಾನೂ ಸಿದ್ಧವಾಗಿದ್ದೆ. 286 00:20:10,585 --> 00:20:13,546 ನಾನು ಅಮ್ಮನ ಹಳೆಯ ಮಲಗುವ ಮನೆಯನ್ನು ಸುಡುವವಳಿದ್ದೆ. 287 00:20:14,005 --> 00:20:15,715 ಆಗ ನನಗೇನೋ ಕಂಡಿತು. 288 00:20:33,858 --> 00:20:34,983 ನನ್ನ ಅಮ್ಮ ಪ್ರಯತ್ನಿಸಿದಳು. 289 00:20:34,984 --> 00:20:36,360 ಕಲೆಯ ಜೀರ್ಣೋದ್ಧಾರದ ಕಲೆ 290 00:20:36,361 --> 00:20:39,864 ಆಕೆಗೆ ಏಕೆ ಕ್ಷಮೆ ಕೇಳಲಾಗಲಿಲ್ಲ ಗೊತ್ತಿಲ್ಲ, ಆದರೆ ಅವಳು ಪ್ರಯತ್ನಿಸುತ್ತಿದ್ದಳು. 291 00:20:41,574 --> 00:20:43,576 ಹಠಾತ್ತಾಗಿ ನನಗೆ ಅಪರಾಧಿ ಪ್ರಜ್ಞೆ ಕಾಡಿತು. 292 00:20:44,452 --> 00:20:45,620 ಆದರೆ ನಮಗೊಂದು ಉಪಾಯವಿತ್ತು. 293 00:20:46,996 --> 00:20:48,623 ಬೆಂಕಿ ಹಾಕಿ, ಹೊರಗೆ ಓಡುವುದು. 294 00:21:11,145 --> 00:21:13,022 ನಾನು ಸ್ವಲ್ಪ ಗಮನ ತಪ್ಪಿದ್ದು ನಿಜ. 295 00:21:38,297 --> 00:21:39,923 ನನಗೆ ಘಂಟೆಯ ಸದ್ದು ಕೇಳದೇ ಹೋಗುತ್ತಿತ್ತು. 296 00:21:39,924 --> 00:21:43,094 ಆದರೆ ಕೇಳಿತು. ಸಮಯಕ್ಕೆ ಸರಿಯಾಗಿ ಕೇಳಿತು. 297 00:21:44,637 --> 00:21:47,056 ನಾನು ಮಾಡಿದ ಕೊಳಕನ್ನು ಸುಡಲೂ ಇಲ್ಲ. ನಾನು... 298 00:21:47,682 --> 00:21:49,475 ಅಲ್ಲಿಂದ ಹೊರಬಂದೆ. 299 00:21:53,396 --> 00:21:57,066 ಆದರೆ ಹೊಗೆ, ಅದು ಬಹುಬೇಗ ಬುರುಜಿನ ಮೇಲೇರಿತು. 300 00:22:03,781 --> 00:22:06,408 ಗಡಿಯಾರ 12:00 ಬಾರಿಸಿತು. ಬೆಂಕಿ ಸುಡಲಾರಂಭಿಸಿತ್ತು. 301 00:22:06,409 --> 00:22:10,121 ನೀನು ಹೊರಗೆ ಬಂದು, ಬೆಂಕಿ ಹಚ್ಚಿ, ಹೊರಗೆ ಬರಬೇಕಾಗಿತ್ತು. 302 00:22:16,669 --> 00:22:17,670 ಛೇ. 303 00:22:59,212 --> 00:23:01,005 ಅಲ್ಲಿ ಅಷ್ಟೊಂದು ಬೆಂಕಿಯಿತ್ತು. 304 00:23:01,464 --> 00:23:03,173 ಬಹುಶಃ ನನಗೆ ದಾರಿ ತಪ್ಪಿರಬಹುದು. 305 00:23:03,174 --> 00:23:04,216 ನನಗೆ ಗೊತ್ತಿಲ್ಲ. 306 00:23:04,217 --> 00:23:06,094 ಜಾನಿ! 307 00:23:08,262 --> 00:23:09,346 ನನಗೆ ಕಾಯಲು ಆಗಲಿಲ್ಲ. 308 00:23:09,347 --> 00:23:10,263 ಕೇಡಿ! 309 00:23:10,264 --> 00:23:11,933 ನಾನು ನಿನ್ನ ಬೆನ್ನತ್ತಬೇಕಿತ್ತು, ಕೇಡೆನ್ಸ್. 310 00:23:18,231 --> 00:23:19,607 ನಾನು ಎಲ್ಲೆಡೆ ಹುಡುಕಿದೆ. 311 00:23:20,942 --> 00:23:23,111 ನಾನು ತೀರಾ ಹೆಚ್ಚು ಹುಡುಕಿದೆ ಅನಿಸುತ್ತೆ. 312 00:23:24,529 --> 00:23:26,280 ಕೇಡಿ! 313 00:23:28,407 --> 00:23:30,117 ಅದು ಬಹುಶಃ ದಿನಪತ್ರಿಕೆಗಳಿರಬಹುದು. 314 00:23:30,118 --> 00:23:31,452 ಅತಿಯಾದ ಉರಿ. 315 00:23:32,161 --> 00:23:33,746 ಜಾನಿ! 316 00:23:34,247 --> 00:23:36,581 ಜಾನಿ! ಕೇಡಿ! 317 00:23:36,582 --> 00:23:38,583 ಅತಿಯಾದ ಅಗ್ನಿಕಾರಕ. 318 00:23:38,584 --> 00:23:40,545 ಕೇಡಿ! ಮಿರೆನ್! 319 00:23:41,045 --> 00:23:42,587 ನೀವು ಎಲ್ಲಿದ್ದೀರಿ? 320 00:23:42,588 --> 00:23:44,799 ನಾವು ಅನಿಲ ಕೊಳವೆಯ ಬಗ್ಗೆ ಯೋಚಿಸಲೂ ಇಲ್ಲ. 321 00:23:45,383 --> 00:23:46,884 ಕೇಡಿ! 322 00:24:11,367 --> 00:24:13,911 ನಾವೆಲ್ಲರೂ ತಪ್ಪು ಮಾಡಿದೆವು. ಮತ್ತು ಅದರಿಂದ ಪರಿಣಾಮಗಳಾದವು. 323 00:24:15,705 --> 00:24:16,538 ಇಲ್ಲ. 324 00:24:16,539 --> 00:24:18,749 ನಮಗೆ ಬೆಂಕಿ ಹಚ್ಚುವುದು ನಿಜವಾಗಿ ಗೊತ್ತಿರಲಿಲ್ಲ ಅನಿಸುತ್ತೆ. 325 00:24:22,503 --> 00:24:23,588 ಜಾನಿ! 326 00:24:27,758 --> 00:24:29,385 ಮಿರೆನ್! 327 00:24:33,347 --> 00:24:34,348 ಗ್ಯಾಟ್! 328 00:25:12,511 --> 00:25:15,096 ಜೊನಾಥನ್ ಸಿಂಕ್ಲೇರ್ ಡೆನ್ನಿಸ್, ಮಿರೆನ್ ಸಿಂಕ್ಲೇರ್ ಶೆಫೀಲ್ಡ್ 329 00:25:15,097 --> 00:25:17,849 ಮತ್ತು ಗ್ಯಾಟ್ವಿಕ್ ಪಾಟೀಲ್ ಮಾರ್ಥಾಸ್ ವಿನಿಯಾರ್ಡ್‌ ಬಳಿ 330 00:25:17,850 --> 00:25:19,893 ಇತ್ತೀಚೆಗಿನ ಬೆಂಕಿ ಅವಗಢದಲ್ಲಿ ಬಲಿಯಾಗಿದ್ದಾರೆಂದು ದೃಢೀಕರಿಸಿದ್ದೇವೆ. 331 00:25:19,894 --> 00:25:22,395 ಪ್ರಖ್ಯಾತ ಸಿಂಕ್ಲೇರ್ ಮಕ್ಕಳು ಬೀಚ್ವುಡ್ ಐಲ್ಯಾಂಡ್ ಬೆಂಕಿಗೆ ಆಹುತಿ 332 00:25:22,396 --> 00:25:25,273 ಹ್ಯಾರಿಸ್ ಸಿಂಕ್ಲೇರ್ ಮತ್ತು ಮೃತ ಮಿಸಸ್. ಟಿಪ್ಪರ್ ಟಾಫ್ಟ್ ಸಿಂಕ್ಲೇರ್ ಅವರ ಮನೆ 333 00:25:25,274 --> 00:25:28,109 ಅಗ್ನಿಶಾಮಕ ಇಲಾಖೆ ಬರುವ ಮುನ್ನ ಸುಟ್ಟು ಬೂದಿಯಾಯಿತು. 334 00:25:28,110 --> 00:25:29,320 ಕೇಡೆನ್ಸ್? 335 00:25:30,696 --> 00:25:32,614 ನಾನು ಚೆನ್ನಾಗಿರುವೆ, ಅಮ್ಮ. ಚಿಂತಿಸಬೇಡ. 336 00:25:32,615 --> 00:25:34,074 ಹಾಗಾದರೆ ನೀನು ಯಾಕೆ ಕರೆ ಮಾಡಲಿಲ್ಲ? 337 00:25:34,075 --> 00:25:35,659 ಆ ರಾತ್ರಿ ನನಗೂ ಕೇಡಾಯಿತು. 338 00:25:35,660 --> 00:25:38,579 ಅದಕ್ಕಾಗಿಯೇ ನಾನು ಅದರ ಬಗ್ಗೆ ಮಾತನಾಡಲು ಸಾಧ್ಯವಿಲ್ಲ. 339 00:25:40,122 --> 00:25:42,332 ನಿನ್ನನ್ನು ಸುಂದರವಾಗಿ ಕಾಣುವಂತೆ ಮಾಡುವಾಗ ದೂರು ನೀಡಬೇಡ. 340 00:25:42,333 --> 00:25:44,085 ಅವಳು ಈಗಾಗಲೇ ಸುಂದರವಾಗಿದ್ದಾಳೆ. 341 00:25:47,088 --> 00:25:48,881 ಇದು ಜಾನಿಯ ಫೋನ್ ಅಲ್ಲವೇ? 342 00:25:53,094 --> 00:25:54,302 ಅಮ್ಮಾ, ನನ್ನ ಫೋನ್ ನಿನ್ನಲ್ಲೇಕಿದೆ? 343 00:25:54,303 --> 00:25:56,722 ಬಿಟ್ಟುಬಿಡು, ಅಮ್ಮಾ. ದಯವಿಟ್ಟು ಅದನ್ನು ವಾಪಸು ಮಾಡು. 344 00:25:58,391 --> 00:26:01,643 {\an8}ಹೌದು, ನನ್ನ ಪೋಷಕರು ನನ್ನ ಫೋನ್ ಒಯ್ದರು. ಅದರ ಪರದೆ ನನ್ನ ಮೈಗ್ರೇನ್ ಹೆಚ್ಚಿಸುತ್ತದೆ. 345 00:26:01,644 --> 00:26:03,437 {\an8}ಬೇಗನೆ ಅಗಲಿಕೆ - ಆರ್‌ಐಪಿ ನಿಮ್ಮನ್ನು ಅರಿತಿದ್ದರೆ ಚೆನ್ನಿತ್ತು 346 00:26:04,230 --> 00:26:07,525 ನಾನು ಕಂಡುಕೊಳ್ಳುವ ಯಾವುದೂ ನಿನ್ನ ಮೇಲಿನ ನನ್ನ ಭಾವನೆ ಬದಲಿಸಲಾರದು, ಗ್ಯಾಟ್. 347 00:26:10,152 --> 00:26:12,697 ಸಿಂಕ್ಲೇರ್ ಮಕ್ಕಳು ಮತ್ತು ಮೊಮ್ಮಕ್ಕಳು ಅಗ್ನಿ ಅನಾಹುತಕ್ಕೆ ಬಲಿ 348 00:26:13,030 --> 00:26:14,031 ಗ್ಯಾಟ್... 349 00:26:17,410 --> 00:26:19,537 ಕೇಡಿ, ನನಗೊಂದು ದೆವ್ವದ ಕಥೆ ಹೇಳು. 350 00:26:19,787 --> 00:26:22,081 ನನ್ನಲ್ಲಿರುವುದೆಲ್ಲ ಮುಗಿದಿದೆ. ಮಿರೆನ್‌ಳನ್ನು ಕೇಳು. 351 00:26:23,040 --> 00:26:23,958 ತಮಾಷೆಯಾಗಿದೆ. 352 00:26:24,458 --> 00:26:25,583 ಸಿಂಕ್ಲೇರ್ ಕುಟುಂಬದ ಶಾಪ 353 00:26:25,584 --> 00:26:26,627 {\an8}ವಿಧ್ವಂಸಕ ಬೆಂಕಿ ದುರಂತ 354 00:26:53,321 --> 00:26:54,405 ಕೇಡೆನ್ಸ್? 355 00:27:00,202 --> 00:27:01,203 ಅಮ್ಮ. 356 00:27:01,829 --> 00:27:02,997 ಅಮ್ಮ. 357 00:27:04,707 --> 00:27:05,708 ಅಮ್ಮಾ. 358 00:27:06,250 --> 00:27:07,208 ಸಹಾಯ ಮಾಡು. 359 00:27:07,209 --> 00:27:08,586 ಅಮ್ಮಾ. 360 00:27:09,211 --> 00:27:10,629 ಪರವಾಗಿಲ್ಲ. 361 00:27:49,043 --> 00:27:50,794 ಕೇಡಿಗೆ ಗ್ಯಾಟ್‌ನಿಂದ 362 00:27:50,795 --> 00:27:53,381 ಮುಂದಿನ ವಾರ, ನಿನ್ನ ಜನ್ಮದಿನದವರೆಗೆ ತೆರೆಯಬೇಡ, ಸರಿಯೇ? 363 00:28:06,310 --> 00:28:10,063 ಕೇಡಿ, ನಾನು ಈ ಮಣಿಗಳನ್ನು ಬೇಸಿಗೆಯಿಡೀ ನನ್ನ ಹೃದಯಕ್ಕೆ ಹತ್ತಿರವಾಗಿ ಧರಿಸಿದ್ದೇನೆ. 364 00:28:10,064 --> 00:28:12,691 ನಿನ್ನನ್ನು ಪ್ರೀತಿಸುವೆ, ಗ್ಯಾಟ್‌ನಿಂದ. 365 00:28:28,624 --> 00:28:29,875 ಹೇಗಿದ್ದೀ? 366 00:28:31,460 --> 00:28:33,920 ಎಲ್ಲಾ ಸಮಯದಲ್ಲೂ 367 00:28:33,921 --> 00:28:37,341 ಹೃದಯದಿಂದ ರಕ್ತ ಒಸರುವಂತಿದೆ. 368 00:28:39,301 --> 00:28:40,594 ಅದು ಸಹಜವೇ. 369 00:28:41,429 --> 00:28:45,641 ದುಃಖವು ಯಾವತ್ತೂ... ಒಳಗಿಳಿಯುತ್ತದೆ. 370 00:28:48,352 --> 00:28:49,895 ಮತ್ತು ನಿನ್ನ ಮೈಗ್ರೇನುಗಳು? 371 00:28:54,483 --> 00:28:55,484 ನಾನು... 372 00:28:57,445 --> 00:28:59,530 ನಾನು ಅತಿಯಾಗಿ ಮಾತ್ರೆಗಳನ್ನು ಸೇವಿಸುತ್ತಿದ್ದೆ ಅನಿಸುತ್ತಿದೆ. 373 00:29:00,448 --> 00:29:02,324 ಅವುಗಳನ್ನು ಸೇವಿಸದಿರುವುದು ಕಷ್ಟವಾಗಿತ್ತು. 374 00:29:04,201 --> 00:29:07,078 ಅವುಗಳನ್ನು ಇನ್ನು ಸೇವಿಸದಿರಲು 375 00:29:07,079 --> 00:29:09,748 ನನಗೆ ಸಹಾಯ ಬೇಕಾಗಬಹುದು. 376 00:29:10,541 --> 00:29:12,083 ನನಗೆ ಹೇಳಿದ್ದಕ್ಕೆ ಧನ್ಯವಾದ. 377 00:29:12,084 --> 00:29:14,211 ನಾನು ಡಾಕ್ಟರ್ ಅನ್ನು ಕರೆಯುತ್ತೇನೆ, 378 00:29:15,880 --> 00:29:16,838 ಮತ್ತು ನಿನ್ನ ಅಪ್ಪನನ್ನು, 379 00:29:16,839 --> 00:29:20,134 ನಿನಗೆ ಬೇಕಾದ ಎಲ್ಲ ಸಹಾಯವನ್ನೂ ವರ್ಮಾಂಟಿನಲ್ಲಿ ಪಡೆಯೋಣ. 380 00:29:20,968 --> 00:29:25,180 "ಎಲ್ಲಾ ಖಾಯಿಲೆಗೂ ಉಪ್ಪು, ಗಾಳಿ ಮತ್ತು ಹೊರಾಂಗಣ ವ್ಯಾಯಾಮವೇ ಮದ್ದು" 381 00:29:25,181 --> 00:29:28,350 ಎನ್ನುವುದಕ್ಕೆ ಏನಾಯಿತು? 382 00:29:29,101 --> 00:29:33,355 ಅದು ನಿನ್ನ ಜೀವನದ ಪ್ರೀತಿಯನ್ನು ಕಳೆದುಕೊಳ್ಳುವುದಕ್ಕೆ ಅನ್ವಯಿಸುದಿಲ್ಲ. 383 00:29:33,981 --> 00:29:34,856 ನನ್ನನ್ನು ನಂಬು. 384 00:29:34,857 --> 00:29:39,737 ನಾನು ನಿಯಮದ ಪುಸ್ತಕವನ್ನು ಹಲವು ಬಾರಿ ನೋಡಿರುವೆ. 385 00:29:42,573 --> 00:29:44,909 ನೀನು ಅಪ್ಪನ ಬಗ್ಗೆ ಮಾತನಾಡುತ್ತಿಲ್ಲ, ತಾನೇ? 386 00:29:47,244 --> 00:29:48,204 ಇಲ್ಲ. 387 00:29:50,247 --> 00:29:52,082 ಯಾರೋ ಬೇರೆಯವರು ಇದ್ದರು... 388 00:29:55,503 --> 00:29:56,921 ಬಹಳ ಸಮಯ. 389 00:30:00,758 --> 00:30:04,053 ಮತ್ತು ಹೊರಟುಹೋದದ್ದಕ್ಕೆ ನಾನು ಇನ್ನೂ ನಿನ್ನ ಅಪ್ಪನನ್ನೇ ದೂರುತ್ತಿದ್ದೆ. 390 00:30:04,595 --> 00:30:07,056 ಯಾಕೆಂದರೆ ನಾನು ಹೋಗುತ್ತಿರಲಿಲ್ಲ. 391 00:30:08,724 --> 00:30:10,851 ಅದು ಸಿಂಕ್ಲೇರ್‌ಗಳು ಮಾಡುವಂಥ ಕೆಲಸವಲ್ಲ. 392 00:30:14,813 --> 00:30:15,648 ನಾನು... 393 00:30:17,066 --> 00:30:18,943 ನೀನು ನನ್ನನ್ನು ದ್ವೇಷಿಸುವುದಿಲ್ಲ ಎಂದು ಆಶಿಸುವೆ. 394 00:30:20,402 --> 00:30:23,280 ನಿನಗೂ ಅವನನ್ನು ದೂಷಿಸಲು ಬಿಟ್ಟಿರುವುದಕ್ಕೆ. 395 00:30:25,366 --> 00:30:28,326 ನಿನಗೆ ಆಯ್ಕೆಯಿದ್ದರೆ, ನೀನು ಇದನ್ನು ಆಯ್ಕೆ ಮಾಡುವುದಿಲ್ಲ, 396 00:30:28,327 --> 00:30:30,663 ಎಂದು ನನಗೆ ಭಯವಿತ್ತು ಅನಿಸುತ್ತದೆ. 397 00:30:33,791 --> 00:30:36,877 ನನ್ನನ್ನು... ಆಯ್ಕೆ ಮಾಡುವುದು. 398 00:30:39,880 --> 00:30:42,007 ನಿನಗೆ ಆಯ್ಕೆ ಇದೆ ಎಂದು ನಿನಗೆ ತಿಳಿದಿರಬೇಕು. 399 00:30:43,259 --> 00:30:46,554 ನನಗೆ ಗೊತ್ತು. ಸಿಂಕ್ಲೇರ್ ಆಗಿರುವುದು ಸುಲಭವಲ್ಲ. 400 00:30:47,179 --> 00:30:51,183 ಆದರೆ ಸಿಂಕ್ಲೇರ್ ಆಗದೇ ಇರುವುದು ಇನ್ನೂ ಕಷ್ಟ ಅನಿಸುತ್ತದೆ. 401 00:30:53,894 --> 00:30:55,604 ಆದರೆ ಆಯ್ಕೆ ನಿನ್ನದು. 402 00:31:52,244 --> 00:31:53,494 ಹಾಯ್. 403 00:31:53,495 --> 00:31:54,413 ಹಲೋ. 404 00:31:54,705 --> 00:31:55,831 ನೀನು ಎಲ್ಲಿದ್ದೆ? 405 00:31:57,333 --> 00:32:00,251 ಟೆನಿಸ್ ಆಟದಲ್ಲಿದ್ದೆ. 406 00:32:00,252 --> 00:32:01,753 ನಿಜವಾಗಿ, ನಾನು ಗೆದ್ದೆ. 407 00:32:01,754 --> 00:32:04,131 ಹೌದು. ನಂತರ ಪಾರ್ಟಿ ದೋಣಿಯಲ್ಲಿ ಸಂಭ್ರಮಿಸಿದೆ. 408 00:32:04,840 --> 00:32:08,636 ನಂತರ ಅದು ಕಾಮಕೇಳಿಗೆ ದಾರಿ ಮಾಡಿತು, ಅದನ್ನೂ ಗೆದ್ದೆ. 409 00:32:11,513 --> 00:32:13,015 ಅದೇ, ನಾನು ಅಲ್ಲೇ ಇದ್ದೆ. 410 00:32:13,682 --> 00:32:14,975 ಹೇ, ನಿಜಕ್ಕೂ. 411 00:32:15,976 --> 00:32:16,852 ನೀನು ಎಲ್ಲಿದ್ದೆ? 412 00:32:17,770 --> 00:32:19,647 ಇಲ್ಲಿ ಬರುವ ಮೊದಲು. 413 00:32:22,149 --> 00:32:23,358 ನಿದ್ದೆ ಮಾಡುತ್ತಿದ್ದೆ. 414 00:32:23,359 --> 00:32:24,485 ಒಂದು ರೀತಿಯಲ್ಲಿ. 415 00:32:25,778 --> 00:32:28,447 ಅದು ಒಂದು ರೀತಿಯಲ್ಲಿ ಏನೂ ಇಲ್ಲದ ಮೃದುತ್ವದಂತಿದೆ. 416 00:32:29,698 --> 00:32:34,036 ನಂತರ ಒಂದು ಸೆಳೆತ, ನಂತರ ನಾನಿಲ್ಲಿದ್ದೇನೆ. 417 00:32:34,828 --> 00:32:36,580 ನಾನಿನ್ನು ನಿನ್ನನ್ನು ನೋಡಲ್ಲ ಅಂದುಕೊಂಡಿದ್ದೆ. 418 00:32:36,997 --> 00:32:39,082 ನಾವು ನಿನ್ನ ಆಘಾತಕ್ಕೊಳಗಾದ, ವಿಚಿತ್ರ ಊಹೆಯ 419 00:32:39,083 --> 00:32:40,834 ಕಲ್ಪನೆಯ ತುಣುಕುಗಳು ಅಂದುಕೊಂಡೆಯಾ ನೀನು? 420 00:32:42,961 --> 00:32:47,131 ವಿದಾಯ ಹೇಳದ ನನ್ನ ಮೂರ್ಖ ಆವೃತ್ತಿಯನ್ನು ನೀನು ಏಕೆ ಕಲ್ಪಿಸುವೆ? 421 00:32:47,132 --> 00:32:48,049 ಅದು ಸರಿ. 422 00:32:48,050 --> 00:32:50,135 ಏಕೆಂದರೆ ನೀನು ಎಂದೂ ಮೂರ್ಖನಾಗಿರಲಿಲ್ಲ. 423 00:32:52,304 --> 00:32:53,138 ಇಲ್ಲ. 424 00:32:57,226 --> 00:32:58,227 ನೋಡು. 425 00:33:00,396 --> 00:33:02,564 ಈ ಬೇಸಿಗೆಯ ಬಗ್ಗೆ ನನಗೆ ವಿಷಾದವಿದೆ. 426 00:33:03,982 --> 00:33:05,734 ನಿನಗೆ ನಿನ್ನ ನೆನಪುಗಳು ಮರಳಿ ಬೇಕಾಗಿತ್ತು, 427 00:33:06,360 --> 00:33:08,487 ಚೆನ್ನಾಗಿರಲು, ಮತ್ತು ನಾನು ಬಹಳ ಹೋರಾಡಿದೆ. 428 00:33:09,655 --> 00:33:12,449 ನೀನು ನೆನಪಿಸಿಕೊಳ್ಳುವುದು ನನಗೆ ಬೇಕಿರಲಿಲ್ಲ, ಏಕೆಂದರೆ ನೆನಪಿಸಿಕೊಂಡರೆ, 429 00:33:13,325 --> 00:33:16,286 ನಾನು ಇಷ್ಟು ಮೃದುವಾಗಿಲ್ಲದ ಕಡೆಗೆ ಹೋಗುವೆನೆಂದು ಅಂದುಕೊಂಡಿದ್ದೆ. 430 00:33:18,122 --> 00:33:19,455 ನೀನು ನರಕದಲ್ಲಿ ನಂಬಿಕೆ ಇಡಲಾಗದು. 431 00:33:19,456 --> 00:33:21,667 ಅದು ಕೇವಲ ಸುಳ್ಳು ಬೆದರಿಕೆ ಅಷ್ಟೇ. 432 00:33:22,042 --> 00:33:26,254 ನನಗೆ ಬೇಕಾದುದೆಲ್ಲವನ್ನೂ ಪಡೆದುದಕ್ಕೆ, ಮತ್ತು ಒಳ್ಳೆಯದನ್ನು ಮಾಡದೇ ಇದ್ದುದಕ್ಕೆ 433 00:33:26,255 --> 00:33:28,048 ಏನಾದರೂ ಶಿಕ್ಷೆ ಇರಲೇಬೇಕು. 434 00:33:30,592 --> 00:33:32,010 ಸುಳ್ಳು ಹೇಳಿದೆ, ಕ್ಷಮಿಸು. ನಾನು... 435 00:33:33,804 --> 00:33:35,597 ನಾನು ಮತ್ತೆ ನರಳಲು ಬಯಸುವುದಿಲ್ಲ. 436 00:33:38,434 --> 00:33:39,393 ಜಾನಿ... 437 00:33:41,019 --> 00:33:42,604 ನರಕ ನಿಜವೆಂದಾದರೆ, 438 00:33:44,106 --> 00:33:45,649 ನಾನೂ ಕೆಟ್ಟೆ. 439 00:33:49,820 --> 00:33:52,364 ನೀನು ನಿನ್ನ ಜೀವನದಲ್ಲಿ ಹಲವಾರು ಒಳ್ಳೆಯ ಕೆಲಸ ಮಾಡಲಿರುವೆ, ಕೇಡಿ. 440 00:33:53,574 --> 00:33:55,867 ನಿನಗೆ ಆ ರಾತ್ರಿಯ ಬಗ್ಗೆ ಎಷ್ಟು ವಿಷಾದವಿದೆಯೆಂದರೆ 441 00:33:55,868 --> 00:33:58,995 ಜೀವನವಿಡೀ ನೀನು ಅದ್ಭುತವಾದುದನ್ನೇ ಮಾಡಲಿರುವೆ. 442 00:33:58,996 --> 00:34:02,082 ಎಷ್ಟು ಅದ್ಭುತವೆಂದರೆ ಸ್ವರ್ಗದಲ್ಲಿ ನಿನಗಾಗಿ ಪ್ರತ್ಯೇಕ ಮಜಲು ಸೃಷ್ಟಿಸಬೇಕಾಗುತ್ತದೆ. 443 00:34:03,959 --> 00:34:05,627 ನನಗಾಗಿ ಕಾಯುವ ಯಾವುದೇ ಸ್ವರ್ಗದಲ್ಲಿ 444 00:34:06,920 --> 00:34:08,172 ನೀನು ಇರುವೆ. 445 00:34:42,289 --> 00:34:43,624 ಅವನು ಜಾರುತ್ತಿದ್ದಾನೆ. 446 00:34:44,082 --> 00:34:47,210 ದಂತಕಥೆಯಾಗಿರುವ ಹ್ಯಾರಿಸ್ 447 00:34:47,211 --> 00:34:50,714 ಊಟಕ್ಕೆ ವಿಭಿನ್ನ ಬೂಟುಗಳನ್ನು ಧರಿಸಿದ್ದ, ನಿನಗೆ ಗೊತ್ತಾ? 448 00:34:51,715 --> 00:34:55,219 ಸಂಗತಿಗಳು ಒಂದೇ ಸಮಯದಲ್ಲಿ ತಮಾಷೆಯೂ ದುಃಖಭರಿತವೂ ಆಗಿರುವುದು ನನಗಿಷ್ಟವಿಲ್ಲ. 449 00:34:55,844 --> 00:34:58,012 ನನಗೆ ಗೊತ್ತು, ಆದರೆ, ಅದನ್ನು ಒತ್ತಿ ಹೇಳಬೇಕಿಲ್ಲ. 450 00:34:58,013 --> 00:35:00,890 ಅದು ಅವಮಾನಕರ. ಅದು ಅಸಭ್ಯ. 451 00:35:00,891 --> 00:35:02,225 - ನೂರಾ ಇಪ್ಪತ್ತ ಎಂಟು. - ಹೇಗೆ? 452 00:35:02,226 --> 00:35:03,894 - ನೂರಾ ಇಪ್ಪತ್ತ ಎಂಟು? - ನಾನು ಗೆದ್ದೆ. 453 00:35:04,311 --> 00:35:07,438 ಸರಿ, ನೀನು "ಕೊನೆಯದು" ಎನ್ನುವುದನ್ನು ಅಷ್ಟು ಬಾರಿ ಹೇಳಬೇಕಿರಲಿಲ್ಲ. 454 00:35:07,439 --> 00:35:08,440 ಆದರೆ ನೀನು ಸೋತೆ. 455 00:35:09,149 --> 00:35:10,400 ನೀನು ಆಟವಾಡಬೇಕೇ? 456 00:35:11,109 --> 00:35:11,944 ಬಹುಶಃ ಆಮೇಲೆ. 457 00:35:14,238 --> 00:35:15,239 ಹೇ. 458 00:35:16,448 --> 00:35:17,366 ನೀವು ಚೆನ್ನಾಗಿದ್ದೀರಾ? 459 00:35:21,537 --> 00:35:23,121 ಈಗ ಇಲ್ಲಿ ತೀರಾ ಮೌನವಾಗಿದೆ. 460 00:35:25,749 --> 00:35:26,583 ಹೌದು. 461 00:35:28,502 --> 00:35:29,752 ನನಗೆ ಸ್ಕ್ರಾಬಲ್ ಮೇಲೆ ಆಸಕ್ತಿಯಿಲ್ಲ. 462 00:35:29,753 --> 00:35:31,213 - ನಾನು ಈಜಲು ಬಯಸುತ್ತೇನೆ. - ನಾನೂ ಸಹ. 463 00:35:33,173 --> 00:35:34,633 - ಯಾರು ಮೊದಲು ನೋಡೋಣ. - ಅನ್ಯಾಯ. 464 00:35:35,217 --> 00:35:36,342 - ನಾನು ಗೆಲ್ಲುತ್ತಿರುವೆ. - ಬಾಯ್. 465 00:35:36,343 --> 00:35:38,178 ನೀನು ಬೇಗನೆ ಆರಂಭಿಸಿದೆ. 466 00:35:49,273 --> 00:35:51,191 ನಾನು ಇನ್ನಷ್ಟು ಕರುಣಾಳುವಾಗಿದ್ದರೆ ಚೆನ್ನಾಗಿತ್ತು. 467 00:35:55,112 --> 00:35:56,113 ಲಿಟಲ್ಸ್. 468 00:35:56,780 --> 00:36:00,242 ನಾನು ಅವರಿಗೆ ಜಡೆ ಹೆಣೆಯುವುದು, ಗೆಳೆತನದ ಬ್ರೇಸ್ಲೆಟ್ಸ್ ಮಾಡುವುದು 469 00:36:01,827 --> 00:36:03,787 ಕಲಿಸಬೇಕು ಎಂದು ಯಾವತ್ತೂ ಕೇಳುತ್ತಿದ್ದರು. 470 00:36:09,668 --> 00:36:12,963 ನನಗೆ ಅಗತ್ಯವಿಲ್ಲದಿದ್ದರೆ ಅವರೊಂದಿಗೆ ಮಾತನಾಡುತ್ತಲೂ ಇರಲಿಲ್ಲ. 471 00:36:13,255 --> 00:36:14,214 ಮಿರೆನ್. 472 00:36:17,050 --> 00:36:19,011 ವಿಷಾದಿಸುವುದನ್ನು ನನಗೆ ಬಿಡು. 473 00:36:21,513 --> 00:36:23,932 ನೀನು ಗಾಳಿಯಂತೆ ಹಗುರವಾಗಿರಬೇಕು. 474 00:36:26,935 --> 00:36:29,354 ನೀನು ಸೂರ್ಯಕಿರಣವಾಗಬೇಕು. 475 00:36:30,856 --> 00:36:33,317 ನಾನು ದೆವ್ವವಾಗುವುದರಲ್ಲೂ ವಿಫಲಳಾಗಿದ್ದೇನೆ. 476 00:36:36,403 --> 00:36:38,614 ನಾನು ಅದರಲ್ಲಿ ಅಪ್ರತಿಮಳಾಗಬಯಸಿದ್ದೆ. 477 00:36:39,406 --> 00:36:44,077 ಎಲ್ಲದರಲ್ಲೂ, ನನ್ನ ಕಲೆ, ಲೈಂಗಿಕತೆ, ಮತ್ತು ದರ್ಜೆಗಳಲ್ಲಿ ಅಪ್ರತಿಮಳಾಗಬಯಸಿದ್ದೆ. 478 00:36:45,996 --> 00:36:48,081 ಮತ್ತು ಬೆಸ್ ಸಿಂಕ್ಲೇರ್‌ಳ ಮಗಳಾಗುವುದರಲ್ಲೂ. 479 00:36:50,334 --> 00:36:53,461 ಬಹುಶಃ ಅಲ್ಲೇ ಎಲ್ಲಾ ತಪ್ಪಿರುವುದು, ನಮ್ಮ ನಡುವೆ. 480 00:36:53,462 --> 00:36:56,631 ಕೆಲವೊಮ್ಮೆ ನಾವಿಬ್ಬರೂ ಪರಸ್ಪರರನ್ನು ಕೊಳಕಾಗಿರಲು ಬಿಟ್ಟಿದ್ದರೆ, 481 00:36:56,632 --> 00:36:59,384 ನಾವು ನಿಜವಾಗಿ ಒಬ್ಬರನ್ನೊಬ್ಬರು ನೋಡಬಹುದಿತ್ತು, ಗೊತ್ತಾ. 482 00:37:06,183 --> 00:37:07,309 ಕೇಡಿ. 483 00:37:12,522 --> 00:37:15,651 ನನ್ನನ್ನು ಯಾರೂ ನಿಜವಾಗಿ ನೋಡಿಲ್ಲ ಅನಿಸುತ್ತೆ. 484 00:37:21,949 --> 00:37:24,451 ಮತ್ತು, ಈಗ ಯಾರೂ ಎಂದಿಗೂ ನೋಡಲ್ಲ... 485 00:37:25,535 --> 00:37:27,371 ಇಲ್ಲ, ನನ್ನನ್ನು ನೋಡು. 486 00:37:30,415 --> 00:37:32,209 ಲಯರ್ಸ್ ನಿನ್ನನ್ನು ನೋಡಿದರು, ಮಿರೆನ್. 487 00:37:34,962 --> 00:37:36,296 ಮತ್ತು ನಾನು ನಿನ್ನನ್ನು ನೋಡುವೆ, 488 00:37:37,214 --> 00:37:39,216 ನನ್ನ ಉಳಿದ ಜೀವನದುದ್ದಕ್ಕೂ. 489 00:37:41,510 --> 00:37:43,971 ನನಗೆ ಸುಸ್ತಾಗಿದೆ, ಕೇಡಿ. 490 00:37:48,684 --> 00:37:50,519 ನನಗೆ ತುಂಬಾ ಸುಸ್ತಾಗಿದೆ. 491 00:38:00,654 --> 00:38:01,655 ಕೇಡಿ? 492 00:38:05,701 --> 00:38:06,785 ಅವನು ಬರುತ್ತಾನೆ. 493 00:38:29,599 --> 00:38:32,394 ಉಡುಗೊರೆಗೆ ಧನ್ಯವಾದ, ಆದರೆ ನನಗಿವು ಬೇಡ. 494 00:38:33,311 --> 00:38:35,604 ನೀನವುಗಳನ್ನು ಯಾರಿಗೆ ನಿಜವಾಗಿ ಬೇಕೋ ಅವರಿಗೆ ಕೊಡಬೇಕು. 495 00:38:35,605 --> 00:38:36,773 ಅಸಂಬದ್ಧ. 496 00:38:37,774 --> 00:38:38,692 ಬೇರೆ ಯಾರಿಗೆ? 497 00:38:40,152 --> 00:38:42,863 ನೀನು ಮೊದಲ ಸಿಂಕ್ಲೇರ್ ಮೊಮ್ಮಗಳು. 498 00:38:44,197 --> 00:38:45,407 ನಾನು ಅದಾಗಲು ಬಯಸುವುದಿಲ್ಲ, 499 00:38:46,491 --> 00:38:47,492 ವಾರಸುದಾರೆ. 500 00:38:48,493 --> 00:38:49,745 ಸರಿ, ಹಾಗಿದ್ದರೆ. 501 00:38:52,789 --> 00:38:53,790 ನೀನು ಯಾರಾಗುವೆ? 502 00:38:57,753 --> 00:38:59,838 ಬಹುಶಃ ನೀನು 503 00:39:00,589 --> 00:39:03,592 ಪ್ರೀತಿಯಲ್ಲಿ ಸಿಲುಕಿರುವ ಓರ್ವ ಮಗುವಾಗಬಯಸುವೆ, 504 00:39:05,218 --> 00:39:08,721 ತನ್ನ ಕುಟುಂಬದೊಂದಿಗೆ ಕೋಪಗೊಂಡು ಬೆಂಕಿ ಹಚ್ಚಿದವಳು, 505 00:39:08,722 --> 00:39:12,559 ಪ್ರಾಣಿ ಹಿಂಸೆ ಮತ್ತು ಅನುದ್ದೇಶಿತ ಹತ್ಯೆ ಮಾಡಿದವಳು. 506 00:39:13,852 --> 00:39:15,479 ನಿನಗೆ ಕಥೆಯೆಂದರೆ ಪ್ರೀತಿ. 507 00:39:16,646 --> 00:39:19,648 ನಿನಗೆ ಅದು ಟಿಪ್‍ಳಿಂದ ಬಂದಿದೆ, 508 00:39:19,649 --> 00:39:21,860 ಅವಳಿಗೆ ಸುಖಾಂತ್ಯದ ಕಥೆಗಳೆಂದರೆ ಅಚ್ಚುಮೆಚ್ಚು. 509 00:39:22,861 --> 00:39:26,947 ಆದರೆ ನಾಯಕರು ಮತ್ತು ಖಳನಾಯಕರು, 510 00:39:26,948 --> 00:39:28,616 ಕಥೆಯಲ್ಲಿ ತಿರುವು, ಹಂದರ ನನಗೂ ಗೊತ್ತು. 511 00:39:28,617 --> 00:39:32,120 ಆದರೆ ಅತ್ಯಂತ ಮುಖ್ಯವಾಗಿ, ಕಥೆ ಹೇಳಿ ನಂಬಿಸುವುದು ಹೇಗೆಂದು ನನಗೆ ಗೊತ್ತು. 512 00:39:33,747 --> 00:39:35,457 ನಿನ್ನ ಚಿಕ್ಕಮ್ಮಂದಿರಿಗಂತೂ ಖಂಡಿತವಾಗಿ, 513 00:39:36,333 --> 00:39:37,501 ಮತ್ತು ನಿನ್ನ ಅಮ್ಮನಿಗೆ, 514 00:39:38,335 --> 00:39:42,130 ಅಥವಾ ಜಾನಿ ಮತ್ತು ಮಿರೆನ್‌ರನ್ನು ಕಳಕೊಂಡಿರುವ ಬಡಪಾಯಿ ಲಿಟಲ್ಸ್‌ಗೆ. 515 00:39:42,714 --> 00:39:44,633 ಹೌದು, ಅದೊಂದು ದಾರಿತಪ್ಪಿದ ಕಿಡಿಯಾಗಿತ್ತು. 516 00:39:45,175 --> 00:39:46,843 ಒಬ್ಬ ಮೊದ್ದು ಕೆಲಸಗಾರ 517 00:39:47,344 --> 00:39:50,429 ಸರಿಯಾಗಿ ಇಂಧನವನ್ನು ದಾಸ್ತಾನು ಮಾಡಿರಲಿಲ್ಲ. 518 00:39:50,430 --> 00:39:53,391 ಅದು ಗಾಳಿಯ ಕ್ರೂರ ತಿರುವಾಗಿತ್ತು. 519 00:39:54,351 --> 00:39:55,727 ಮತ್ತು ನೀನು ಇನ್ನೇನು ಸತ್ತುಹೋಗಿದ್ದೆ, 520 00:39:56,311 --> 00:39:59,980 ಉಳಿದವರನ್ನು ಬದುಕಿಸುವ ಪ್ರಯತ್ನದಲ್ಲಿ, 521 00:39:59,981 --> 00:40:02,359 ಯಾವುದೇ ಒಳ್ಳೆಯ ಸಿಂಕ್ಲೇರ್ ಮಾಡುವಂತೆ. 522 00:40:03,610 --> 00:40:06,530 ಈಗ, ನಾನು, ಆ ಕಥೆಯನ್ನು ಹೇಳುವೆ. 523 00:40:08,865 --> 00:40:12,201 ಶನಿವಾರ ಇಲ್ಲಿಗೆ ವರದಿಗಾರರು ಬರುವಾಗ, ನೀನದನ್ನು ಮನಸ್ಸಿನಲ್ಲಿಟ್ಟುಕೊಳ್ಳುವೆ. 524 00:40:12,202 --> 00:40:13,161 ವರದಿಗಾರರೇ? 525 00:40:14,496 --> 00:40:15,372 ಬೀಚ್ವುಡ್‍ನಲ್ಲೇ? 526 00:40:16,331 --> 00:40:18,333 ಇನ್ನೊಂದು ಟೈಮ್ ನಿಯತಕಾಲಿಕ ಸುದ್ದಿ. 527 00:40:19,084 --> 00:40:22,170 ನನ್ನ ಕೊನೆಯ ಗಣನೀಯ ಪ್ರೊಫೈಲಿಗೆ ಕುಟುಂಬದ ಶಾಪದ ಬಗೆಗಿನ ಗಾಳಿಮಾತಿಗೆ 528 00:40:22,671 --> 00:40:24,881 ಕೊನೆಹಾಡಲು ಬಯಸುವೆ. 529 00:40:26,049 --> 00:40:30,220 ನಾನು ನನ್ನ ಉತ್ಕರ್ಷದಲ್ಲಿ ಸಾರ್ವಜನಿಕ ಜೀವನದಿಂದ ನಿವೃತ್ತನಾಗಲು ನಿರ್ಧರಿಸಿರುವೆ. 530 00:40:32,597 --> 00:40:33,557 ಹಾಗಾಗಿ, 531 00:40:34,891 --> 00:40:36,017 ಈಗ ಸಮಯ ಬಂದಿದೆ... 532 00:40:38,353 --> 00:40:43,150 ಆ ಅಧಿಕಾರ ದಂಡವನ್ನು ಕುಟುಂಬದ ಹೊಸ ಅರ್ಹ ವ್ಯಕ್ತಿಗೆ ದಾಟಿಸುವುದಕ್ಕೆ. 533 00:40:49,823 --> 00:40:51,283 ನೀನು ಅವುಗಳನ್ನು ಧರಿಸುವೆ. 534 00:41:02,502 --> 00:41:03,545 ಬಹಳ ಬೇಗ. 535 00:41:05,005 --> 00:41:07,590 ಮತ್ತೆ ಈ ದಿನಕ್ಕೆ ಒಂದು ವರ್ಷ ಮೊದಲು. 536 00:41:07,591 --> 00:41:08,592 ನನಗೆ ಗೊತ್ತು. 537 00:41:09,342 --> 00:41:10,302 ಒಂದು ವರ್ಷ. 538 00:41:13,138 --> 00:41:16,224 ಸೌಂಡ್ಸ್ ಎಡ್ಜ್ ಗ್ಯಾಲರಿ ಮಿರೆನ್‌ಳ ಕಲೆಯನ್ನು ಪ್ರದರ್ಶಿಸಲು ಒಪ್ಪಿಕೊಂಡಿದೆ. 539 00:41:17,475 --> 00:41:18,475 {\an8}ಸೌಂಡ್ಸ್ ಎಡ್ಜ್ ಗ್ಯಾಲರಿ 540 00:41:18,476 --> 00:41:20,645 {\an8}ದೇವರೇ. ಅವಳಿಗೆ ಅದು ಇಷ್ಟವಾಗುತ್ತಿತ್ತು. 541 00:41:22,189 --> 00:41:23,647 ಅವರು ಬಹಳ ಕಾತುರರಾಗಿದ್ದರು. 542 00:41:23,648 --> 00:41:25,024 ಮಿರೆನ್ ಸಿಂಕ್ಲೇರ್ ಶೆಫೀಲ್ಡ್ 543 00:41:25,025 --> 00:41:26,151 ನಾನು... 544 00:41:27,861 --> 00:41:30,279 ಜನರು ಅವುಗಳನ್ನು ನೋಡುವಾಗ 545 00:41:30,280 --> 00:41:31,948 ಅವಳನ್ನು ಕಾಣುತ್ತಾರೆಂದು ಆಶಿಸುವೆ. 546 00:41:35,243 --> 00:41:37,244 ಆಕೆಯನ್ನು ಕೇವಲ ದುರಂತವಾಗಿ ಕಾಣದಿರುವಂತೆ 547 00:41:37,245 --> 00:41:39,915 ಮಾಡುವುದನ್ನು ಖಚಿತಪಡಿಸಲು ಬಯಸುವೆ. 548 00:42:08,026 --> 00:42:10,403 ಅದು ನೀನು ಅವಳಿಗೆ ಮಾಡಿರುವ ಒಳ್ಳೆಯ ಕೆಲಸ. 549 00:42:11,863 --> 00:42:12,864 ಹಾಂ, 550 00:42:13,281 --> 00:42:16,284 ಅವಳಿಗಾಗಿ ಮಾಡುವುದಕ್ಕೆ ತೀರಾ ತಡವಾಗಿದೆ, ಹಾಗಾಗಿ... 551 00:42:20,914 --> 00:42:23,083 ನನಗೆ ಯಾವತ್ತೂ ಅಮ್ಮನಲ್ಲಿರುವುದು ಬೇಕಿತ್ತು. 552 00:42:23,959 --> 00:42:26,628 ಒಳ್ಳೆಯ ಕುಟುಂಬದಿಂದ ಗಂಡ, ಅಂದದ ಮನೆ, ಮೂರು ಹೆಣ್ಣುಮಕ್ಕಳು, 553 00:42:27,087 --> 00:42:29,256 ಅಂದದ ಮನೆ, ಮೂರು ಹೆಣ್ಣುಮಕ್ಕಳು, 554 00:42:30,090 --> 00:42:32,007 ಮತ್ತು ನಾನು ಹಗಲುಗನಸು ಕಾಣುತ್ತಿದ್ದೆ, 555 00:42:32,008 --> 00:42:34,677 ನಾನು ಅವರಿಗೆ ಹೆಸರೇನಿಡುವೆ ಎಂದು, ಯಾವ ಉಡುಪು ತೊಡಿಸುವೆ ಎಂದು, 556 00:42:34,678 --> 00:42:39,349 ಮತ್ತು ಅವರನ್ನು ಪರಿಪೂರ್ಣರಾಗುವಂತೆ ಹೇಗೆ ಬೆಳೆಸುವೆ ಎಂದು. 557 00:42:40,267 --> 00:42:42,309 ನಂತರ ನಾನು ಯೋಚಿಸುವೆ, 558 00:42:42,310 --> 00:42:45,981 ಅವರನ್ನು ಸರಿಹೊಂದಿಸುವಲ್ಲಿ ನಾನು ಎಷ್ಟು ನಿರತಳಾದೆನೆಂದರೆ... 559 00:42:48,024 --> 00:42:50,944 ನಾನು ಅವರನ್ನು ಪ್ರೀತಿಸುವುದನ್ನೇ ಮರೆತೆ. 560 00:42:52,445 --> 00:42:55,156 ನೀನವಳನ್ನು ಪ್ರೀತಿಸುತ್ತೀ ಎಂದು ಮಿರೆನ್‌ಗೆ ಗೊತ್ತಿತ್ತು. 561 00:43:01,913 --> 00:43:02,872 ಅವಳಿಗೆ ಗೊತ್ತಿತ್ತು. 562 00:43:07,585 --> 00:43:11,089 ಕೆಲವೊಮ್ಮೆ ನನಗೆ ಅನಿಸುತ್ತೆ, ಅವರನ್ನು ಕಳಕೊಂಡಿರುವುದೇ ನಮಗೆ ಶಿಕ್ಷೆ. 563 00:43:12,382 --> 00:43:15,759 ಒಂದು ಸಣ್ಣ ಕಿಡಿಯನ್ನು ದೇವರು ಕಳಿಸಿದ, 564 00:43:15,760 --> 00:43:18,930 ಅಥವಾ ವಿಶ್ವ ಅಥವಾ ಬೀಚ್ವುಡ್ ಐಲ್ಯಾಂಡ್. 565 00:43:20,765 --> 00:43:22,517 ಯಾವುದಕ್ಕೆ ಶಿಕ್ಷೆ? 566 00:43:24,311 --> 00:43:25,562 ನಾವು ಮಾಡಿದ್ದಕ್ಕೆ. 567 00:43:26,604 --> 00:43:28,398 ಸಮ್ಮರ್ 16ರಲ್ಲಿ. 568 00:43:30,358 --> 00:43:31,401 ಆ ಬೇಸಿಗೆ... 569 00:43:32,319 --> 00:43:34,195 ನಾನು 16 ವರ್ಷದವಳಾಗಿದ್ದ ಬೇಸಿಗೆ. 570 00:43:36,197 --> 00:43:38,575 ಆದರೆ ನಂತರ ಯೋಚಿಸುತ್ತೇನೆ, ಅದು ನಮ್ಮ ಶಿಕ್ಷೆಯಾಗಿದ್ದರೆ, 571 00:43:39,951 --> 00:43:43,246 ಪೆನ್ನಿಗೂ ಬಿಡುಗಡೆಯಿರುತ್ತಿರಲಿಲ್ಲ ಅಲ್ಲವೇ? 572 00:43:47,083 --> 00:43:48,084 ಹೌದು. 573 00:44:12,067 --> 00:44:14,194 - ನಡಿ. - ಧನ್ಯವಾದ. 574 00:44:18,406 --> 00:44:19,783 ಬಾ. 575 00:44:27,415 --> 00:44:28,458 ನೀನು ನಿಜವೇ? 576 00:44:28,917 --> 00:44:30,293 ಹಾಗಂದುಕೊಂಡಿದ್ದೇನೆ. 577 00:44:30,794 --> 00:44:32,212 ನಾನು ಕೇಡೆನ್ಸ್. 578 00:44:32,545 --> 00:44:33,755 ನಾನು ಗ್ಯಾಟ್. 579 00:44:45,517 --> 00:44:47,227 ಟ್ಯಾಗ್, ನೀನು ಅದು. 580 00:44:54,734 --> 00:44:56,653 ನಾನು ನಿನ್ನನ್ನು ಹಿಡಿಯುತ್ತೇನೆ, ಕೇಡೆನ್ಸ್. 581 00:45:15,004 --> 00:45:18,383 ಕಡಲ್ಡೌನ್ ಬೀಚ್ವುಡ್ ಐಲ್ಯಾಂಡ್ 582 00:45:21,761 --> 00:45:23,012 ವಿಂಡಮೀಯರ್ ಬೀಚ್ವುಡ್ ಐಲ್ಯಾಂಡ್ 583 00:45:33,565 --> 00:45:35,650 - ನೀನು ನನ್ನ ಹಿಂದೆ ಬರುವಿಯೆಂದು ಗೊತ್ತಿತ್ತು. - ಎಂದೆಂದೂ. 584 00:45:37,318 --> 00:45:38,570 ನೀನು ನಿಜವೇ? 585 00:45:39,946 --> 00:45:41,030 ನನಗೆ ಗೊತ್ತಿಲ್ಲ. 586 00:45:42,240 --> 00:45:43,825 ನಿಜವಾಗಿಯೂ ಗೊತ್ತಿಲ್ಲ. 587 00:45:50,832 --> 00:45:51,666 ಅದ್ಭುತ. 588 00:45:52,125 --> 00:45:54,209 ಅಮೆರಿಕಾದ ರಾಜಮನೆತನ, ನಿಜವಾಗಿಯೂ. 589 00:45:54,210 --> 00:45:56,838 ಇಂದು ಬ್ರೊಡಿ ನಮ್ಮನ್ನು ಸೇರಿರುವುದು ಒಳ್ಳೆಯದಾಯಿತು, ಬೆಸ್. 590 00:45:58,298 --> 00:46:01,342 ಕಳೆದುಕೊಂಡಿರುವುದು ನಮಗೆ ನಮ್ಮ ಮದುವೆ ಎಷ್ಟು ಬಲವಾಗಿದೆ ಎನ್ನುವುದನ್ನು ತೋರಿಸಿತು. 591 00:46:01,718 --> 00:46:03,553 ಹುಟ್ಟಿದ ಕ್ರಮದಲ್ಲೇ ನಿಲ್ಲುವಿರಾ? 592 00:46:04,095 --> 00:46:07,807 ಅದು ಅವನನ್ನು ಆರ್ಥಿಕವಾಗಿ ಕಾಪಾಡಿರುವುದಕ್ಕೆ ಅಪ್ಪನ ಷರತ್ತು. 593 00:46:08,349 --> 00:46:12,562 ಎಲ್ಲವೂ ಘಟಿಸಿದ ನಂತರದ ಒಂದು ಸಂಘಟಿತ, ಸ್ಥಿರವಾದ ಮುಖವಾಡ. 594 00:46:13,062 --> 00:46:14,272 ಹಾಗಾದರೆ ನೀನು ಸಿಕ್ಕಿಬಿದ್ದೆ. 595 00:46:15,773 --> 00:46:18,151 ಓ, ದೇವರೇ. ಕೆಲವು ಸಂಗತಿಗಳು ಎಂದಿಗೂ ಬದಲಾಗುವುದಿಲ್ಲ. 596 00:46:18,985 --> 00:46:20,153 ಹಾಗಿದ್ದರೂ, ಕೆಲವು ಬದಲಾಗುತ್ತವೆ. 597 00:46:23,823 --> 00:46:24,741 ಎಡ್. 598 00:46:27,285 --> 00:46:28,453 ಅಗೋ ಬಂದ. 599 00:46:33,291 --> 00:46:35,292 - ಹಾಂ, ನೀನು ಬಂದೆ. - ಹೌದು. 600 00:46:35,293 --> 00:46:36,210 ಎಡ್, ನಡಿ. 601 00:46:36,211 --> 00:46:40,297 - ನಾವು ನಿನ್ನನ್ನೂ ಫೊಟೋದಲ್ಲಿ ಸೇರಿಸಬೇಕು. - ಇಲ್ಲ, ಪರವಾಗಿಲ್ಲ, ಹ್ಯಾರಿಸ್. 602 00:46:40,298 --> 00:46:41,799 ವಿಮರ್ಶೆ ದೂರವಿರಿಸಲು ಬಯಸುವೆ. 603 00:46:43,885 --> 00:46:46,803 - ನಾವು ಕೇಡೆನ್ಸ್‌ಳ ನಿರೀಕ್ಷೆಯಲ್ಲಿದ್ದೇವೆಯೇ? - ಅವಳು ಬರುತ್ತಾಳೆ. 604 00:46:46,804 --> 00:46:47,722 ಧನ್ಯವಾದ. 605 00:46:49,098 --> 00:46:50,517 ನಾವು ಅವಳನ್ನು ಕರೆತರಬೇಕೇ? 606 00:46:51,100 --> 00:46:53,520 ಬೇಡ, ಅದು ಅವಳ ಆಯ್ಕೆ. 607 00:46:57,398 --> 00:46:59,442 ನಿನಗೆ ನೆರವಾಗುತ್ತಿದ್ದೇವೆಂದು ನಾನು ನಂಬಲು ಬಯಸಿದ್ದೆ, 608 00:47:00,276 --> 00:47:01,653 ರಹಸ್ಯವನ್ನು ಉಳಿಸಿ. 609 00:47:02,362 --> 00:47:03,988 ಅದು ಸ್ವಾರ್ಥವೆಂದು ಈಗ ಅನಿಸುತ್ತಿದೆ. 610 00:47:06,866 --> 00:47:08,868 ನನಗೆ ಇನ್ನೊಂದು ಬೇಸಿಗೆ ಬೇಕಿತ್ತು. 611 00:47:10,620 --> 00:47:12,455 ನಿನಗೆ ಇನ್ನಷ್ಟು ಖಾಯಿಲೆ ತರುವುದು ಬೇಕಿರಲಿಲ್ಲ. 612 00:47:13,581 --> 00:47:15,583 ಆದರೆ ನಿನ್ನನ್ನು ಬಯಸುವುದನ್ನು ತಡೆಯಲಾಗಲಿಲ್ಲ. 613 00:47:18,836 --> 00:47:21,547 ನನ್ನದೆಲ್ಲವೂ ಮಾಸಿಹೋಗುತ್ತಿದೆ ಅನಿಸಿದಾಗಲೂ, 614 00:47:21,548 --> 00:47:23,925 ನಾನು ನಿನ್ನನ್ನು ಎಂದಿನಷ್ಟೇ ಪ್ರೀತಿಸುತ್ತಿದ್ದೆ. 615 00:47:25,969 --> 00:47:27,804 ನಿನಗೆ ಗೊತ್ತಿಲ್ಲದಿರುವುದು ಏನೋ ಇದೆ... 616 00:47:29,764 --> 00:47:31,683 ಅದು ನೀನು ನನ್ನನ್ನು ಪ್ರೀತಿಸುವುದನ್ನು ಕಡಿಮೆ ಮಾಡಬಹುದು. 617 00:47:36,062 --> 00:47:37,980 ಮಧ್ಯರಾತ್ರಿಗೂ ಮುನ್ನ, 618 00:47:37,981 --> 00:47:40,692 ನಾನು ಹೊರಗೆ ನೋಡಿ ದೋಣಿಯ ಬಳಿ ನಿನ್ನನ್ನು ಕಂಡೆ. 619 00:47:43,653 --> 00:47:46,239 - ನಾನು ಕಾಯಬೇಕಿತ್ತು, ಆದರೆ-- - ನಾನು ತಡಮಾಡಿದೆ. 620 00:47:47,407 --> 00:47:48,658 ನಾನು ಕೆಳಗಡೆ ಇದ್ದೆ. 621 00:47:50,451 --> 00:47:54,539 ಗಡಿಯಾರ ಬಾರಿಸುತ್ತಿದ್ದಾಗಲೇ ನಾನು ಹೊರಬರಬಹುದಿತ್ತು, 622 00:47:55,540 --> 00:47:56,541 ಆದರೆ... 623 00:47:58,126 --> 00:48:00,086 ನಾನು ಕುಟುಂಬದ ಫೋಟೋ ನೋಡುತ್ತಿದ್ದೆ. 624 00:48:00,545 --> 00:48:02,462 ಕರಿಮುತ್ತುಗಳು, 625 00:48:02,463 --> 00:48:05,841 ಅಮ್ಮಂದಿರು ಇಡೀ ಜೀವನ ಬಯಸುತ್ತಿದ್ದಂಥವು. 626 00:48:05,842 --> 00:48:07,759 ಅವರು ಅವುಗಳ ಮೇಲೆ ಹುಚ್ಚರಾಗಿದ್ದರು. 627 00:48:07,760 --> 00:48:11,179 ಕ್ರಿಸ್ಮಸ್ ಅಥವಾ ಈಸ್ಟರ್ ದಿನ ಅದನ್ನು ಧರಿಸಲು ಯಾರಿಗೆ ಸಿಗುತ್ತದೆ. 628 00:48:11,180 --> 00:48:15,393 ಯಾರು ಅತ್ಯುತ್ತಮರು, ಹೆಚ್ಚು ಯಾರನ್ನು ಪ್ರೀತಿಸಲಾಗುತ್ತದೆ. 629 00:48:16,352 --> 00:48:18,187 ಮತ್ತು ನನಗೆ ಅವುಗಳು ಬೇಕಿದ್ದವು. 630 00:48:18,938 --> 00:48:21,190 ಏಕೆಂದು ನಾನು ವಿವರಿಸಲಾರೆ. 631 00:48:22,400 --> 00:48:24,569 ಅದಕ್ಕೇ ನೀನು ಒಳಗಿದ್ದೆ, ಗ್ಯಾಟ್. 632 00:48:25,361 --> 00:48:27,572 ಅದಕ್ಕೇ ನೀನು ಸತ್ತುಹೋದೆ. 633 00:48:34,495 --> 00:48:36,122 ಇಲ್ಲ! 634 00:48:39,208 --> 00:48:43,253 ಅದು ಎಲ್ಲವೂ ನನ್ನದೇ ತಪ್ಪು. 635 00:48:43,254 --> 00:48:44,630 ಅದು ನಮ್ಮ ತಪ್ಪಾಗಿತ್ತು. 636 00:48:44,631 --> 00:48:45,589 ಇಲ್ಲ. 637 00:48:45,590 --> 00:48:48,216 ಇಲ್ಲ, ನಾನು ಅಸಹನೆಗೊಳಗಾದೆ ಮತ್ತು ನಮ್ಮ ಯೋಜನೆಯನ್ನು ಅನುಸರಿಸಲಿಲ್ಲ. 638 00:48:48,217 --> 00:48:50,637 ನಿನ್ನಷ್ಟೇ ನಾನೂ ತೊಡಗಿದ್ದೆ, ಕೇಡಿ. 639 00:48:51,804 --> 00:48:52,805 ನಿಜ ಹೇಳಬೇಕೆಂದರೆ, 640 00:48:53,306 --> 00:48:56,934 ನಾನು ಆಗಲೇ ಮನಸ್ಸಿನಲ್ಲಿ ಹಲವಾರು ಬಾರಿ ಆ ಮನೆಯನ್ನು ಸುಟ್ಟುಹಾಕಿದ್ದೆ. 641 00:48:58,770 --> 00:49:00,146 ನಾನು ನಿನ್ನನ್ನು ದೂಷಿಸುವುದಿಲ್ಲ. 642 00:49:02,398 --> 00:49:06,402 ಹ್ಯಾರಿಸ್ ನಾನು ದೊಡ್ಡ ಸಿಂಕ್ಲೇರ್ ಸುಳ್ಳನ್ನು ಉಳಿಸಬೇಕೆಂದು ಬಯಸುತ್ತಾರೆ. 643 00:49:06,903 --> 00:49:10,073 ನಾನು ನಾಯಕಿ ಎಂಬಂತೆ. 644 00:49:10,573 --> 00:49:13,242 ಮತ್ತು ನಾನು ಆ ರೀತಿಯ ಸುಳ್ಳಿಯಾಗಲು ಬಯಸಲ್ಲ. 645 00:49:13,743 --> 00:49:14,786 ಆದರೆ... 646 00:49:16,371 --> 00:49:19,374 ಅಮ್ಮಂದಿರು ಮತ್ತು ಲಿಟಲ್ಸ್ ಬಗ್ಗೆ ಏನು... 647 00:49:21,584 --> 00:49:22,585 ನಿನ್ನ ಅಮ್ಮ... 648 00:49:24,796 --> 00:49:25,630 ಎಡ್? 649 00:49:27,256 --> 00:49:29,676 ಅವರೆಲ್ಲರೂ ಅದೊಂದು ಅಪಘಾತ ಅಂದುಕೊಂಡಿದ್ದಾರೆ. 650 00:49:32,011 --> 00:49:34,096 ನಾವು ಮಾಡಿರುವೆವೆಂದು ತಿಳಿದರೆ ಅವರು ಮುಂದುವರಿಯುವುದು ಹೇಗೆ? 651 00:49:34,097 --> 00:49:37,141 ಹಾಗಾದರೆ ಅವರು ನಟಿಸಲು ಬಿಟ್ಟರೆ ಪರವಾಗಿಲ್ಲವೇನೋ. 652 00:49:38,393 --> 00:49:40,644 ನೋಡು, ನಿನಗೆ ಈಗ ನಿಜ ತಿಳಿದಿದೆ, 653 00:49:40,645 --> 00:49:42,562 ಹಾಗಾಗಿ ನಿನ್ನ ಉಳಿದ ಕಥೆಯನ್ನು ನಿರ್ಧರಿಸುವುದು ನೀನೇ. 654 00:49:42,563 --> 00:49:44,232 ಅಷ್ಟೇ. ಅದೇ ಸಂಗತಿ. 655 00:49:49,612 --> 00:49:50,530 ಅದಲ್ಲದೆ, 656 00:49:51,239 --> 00:49:53,908 ಕೆಲವು ಕಟ್ಟುಕಥೆಗಳು ಅಷ್ಟೇನೂ ಕೆಟ್ಟವಲ್ಲ. 657 00:49:56,077 --> 00:49:58,121 ನಾನು ಬೇಸಿಗೆಯಿಡೀ ನನಗೆ ಹೇಳಿಕೊಂಡಿದ್ದೇನೆ. 658 00:50:01,457 --> 00:50:02,834 ಅಂದರೆ... 659 00:50:04,377 --> 00:50:09,173 ನಾನು ಮತ್ತು ನೀನು ಬೀಚ್ವುಡ್ ಐಲ್ಯಾಂಡ್ ರಾಜ ಮತ್ತು ರಾಣಿಯಾಗುವ ಕಥೆಯೇ? 660 00:50:11,884 --> 00:50:12,719 ಅಲ್ಲ. 661 00:50:16,723 --> 00:50:18,056 ಯಾವತ್ತೂ ಬೇಸಿಗೆ ಇರುವ 662 00:50:18,057 --> 00:50:20,393 ಕಾಲ್ಪನಿಕ ನಗರಿಯಿಂದ ನಾವಿಬ್ಬರೂ ದೂರಸರಿಯುವ ಕಥೆ. 663 00:50:22,103 --> 00:50:23,479 ನಿಜ ಜಗತ್ತಿನಲ್ಲಿ, 664 00:50:24,897 --> 00:50:26,149 ಚಳಿಯಾಗುತ್ತದೆ. 665 00:50:27,859 --> 00:50:30,527 ನಮ್ಮ ಹಾಳಾದ ಕಾಲೇಜ್ ಅಪಾರ್ಟ್ಮೆಂಟಿನಲ್ಲಿ ರೇಡಿಯೇಟರ್ 666 00:50:30,528 --> 00:50:32,488 ರಾತ್ರಿ ಬಹಳ ಸದ್ದು ಮಾಡುತ್ತದೆ. 667 00:50:33,114 --> 00:50:34,991 ನೀನು ಸಾಹಿತ್ಯ ನಿಯತಕಾಲಿಕಕ್ಕೆ ಬರೆಯುವೆ. 668 00:50:35,491 --> 00:50:37,535 ನೀನು ದ್ವೇಷಿಸುವೆ ಎಂದು ನಟಿಸುವ ಹಚ್ಚೆಯನ್ನು ನಾನು ಹಾಕಿಸುವೆ. 669 00:50:38,870 --> 00:50:42,832 ನನ್ನ ಅಮ್ಮ ಬಂದು ಪೋಹಾ ಮಾಡುವುದು ಹೇಗೆಂದು ಕಲಿಸುತ್ತಾರೆ. 670 00:50:46,002 --> 00:50:51,591 ಯಾರು ಡ್ರೈಯರ್ ಲಿಂಟ್ ತೆಗೆಯಲು ಮರೆತಿದ್ದಾರೆಂದು ಜಗಳವಾಡುತ್ತೇವೆ. 671 00:50:56,345 --> 00:50:58,848 ಒಂದು ಸೆಮಿಸ್ಟರ್ ನಾವು ದೂರವಿರಬೇಕಾಗುತ್ತದೆ, 672 00:51:00,767 --> 00:51:02,185 ಮತ್ತು ನಾವು ಪರಸ್ಪರ ಪತ್ರ ಬರೆಯುತ್ತೇವೆ, 673 00:51:03,186 --> 00:51:04,520 ಅಂಚೆಯಲ್ಲಿ ಬರುವಂಥವು. 674 00:51:10,401 --> 00:51:12,570 ಮತ್ತೆ ನಾವು ನಮ್ಮ ಅಪಾರ್ಟ್ಮೆಂಟಿಗೆ ತಿರುಗಿ ಬಂದಾಗ, 675 00:51:14,489 --> 00:51:17,616 ನಾನು ನಿನಗೆ ಉಂಗುರ ಕೊಳ್ಳಲು ಉಳಿತಾಯ ಮಾಡತೊಡಗುತ್ತೇನೆ... 676 00:51:17,617 --> 00:51:19,827 - ನನಗೆ ಬೇಕಿಲ್ಲ. - ...ನನಗೆ ಬೇಕಿಲ್ಲ ಎಂದು ನೀನಂದರೂ. 677 00:51:26,876 --> 00:51:28,252 ಎಂದಿಗೂ ಖುಷಿಯಾಗಿದ್ದರು. 678 00:51:31,380 --> 00:51:32,882 ಉತ್ತಮ ಜಗತ್ತಿನಲ್ಲಿ. 679 00:51:36,761 --> 00:51:38,012 ಉತ್ತಮ ಜಗತ್ತಿನಲ್ಲಿ. 680 00:51:45,978 --> 00:51:47,063 ಗ್ಯಾಟ್. 681 00:52:13,589 --> 00:52:15,883 ಬನ್ನಿ. ಕೊನೆಯ ಬಾರಿಗೆ. 682 00:52:42,076 --> 00:52:44,453 ಫಿರಂಗಿ ಗುಂಡು! 683 00:53:32,793 --> 00:53:34,127 ಅದೋ ಅಲ್ಲಿದ್ದಾಳೆ. 684 00:53:34,128 --> 00:53:35,630 ಮೊದಲನೆಯ ಕೇಡೆನ್ಸ್. 685 00:53:44,722 --> 00:53:47,391 {\an8}ಗ್ಯಾಟ್ 686 00:54:00,237 --> 00:54:01,238 ಎಡ್. 687 00:54:07,370 --> 00:54:08,371 ಹೇ. 688 00:54:10,790 --> 00:54:12,166 {\an8}ನೀನು ಇಲ್ಲಿರುವುದು ಬಹಳ ಖುಷಿಯಾಗಿದೆ. 689 00:54:13,626 --> 00:54:15,044 ನೀನು ಇರುವುದೂ ಅಷ್ಟೇ. 690 00:54:27,348 --> 00:54:28,391 ಕೇಡೆನ್ಸ್. 691 00:54:33,020 --> 00:54:36,148 ನಿನ್ನನ್ನು ಈ ಯುವತಿಗೆ ಪರಿಚಯಿಸಲು ಬಯಸುತ್ತೇನೆ. 692 00:54:36,649 --> 00:54:38,484 ಅವರು ನಿನ್ನಲ್ಲಿ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. 693 00:54:40,569 --> 00:54:41,654 ಯಾವ ರೀತಿಯ ಪ್ರಶ್ನೆಗಳು? 694 00:54:42,530 --> 00:54:46,534 ಅದು ಪಿತೃಪ್ರಧಾನನಾಗಿ ನಿನ್ನ ಅಜ್ಜನ ಬಗ್ಗೆ, 695 00:54:46,951 --> 00:54:50,162 ಆದರೆ ನಿಜವಾಗಿ, ಅದು ನಿಮ್ಮ ಕುಟುಂಬದ ಸಶಕ್ತತೆಯ ಗುಣದ ಬಗ್ಗೆ. 696 00:54:59,213 --> 00:55:00,965 ನಾನು ನಿಮಗೆ ಆ ವಿಷಯದ ಬಗ್ಗೆ ಸಹಾಯ ಮಾಡಲಾರೆ. 697 00:55:03,134 --> 00:55:04,051 ಕೇಡೆನ್ಸ್. 698 00:55:15,187 --> 00:55:17,773 ನಾನು ಈಗ ಕಟ್ಟುಕಥೆಗಳ ಬಗ್ಗೆ ಆಸಕ್ತಿ ಹೊಂದಿಲ್ಲ. 699 00:55:47,762 --> 00:55:50,430 ನನ್ನ ಹೆಸರು ಕೇಡನ್ಸ್ ಈಸ್ಟ್‌ಮನ್. 700 00:55:50,431 --> 00:55:52,724 ನಾನೊಮ್ಮೆ ಸಕ್ಕರೆ ಮತ್ತು ಪ್ರಯತ್ನವಾಗಿದ್ದೆ, 701 00:55:52,725 --> 00:55:56,520 ಅಜಾಗರೂಕ, ಸ್ವೇಚ್ಛೆಯವಳಾಗಿದ್ದೆ, ಮಹತ್ವಾಕಾಂಕ್ಷೆ ಮತ್ತು ಗಾಢ ಕಾಫಿ ಆಗಿದ್ದೆ. 702 00:55:57,855 --> 00:56:01,442 ಅದರೆ ನಾನು ಬಲಹೀನಳೂ, ಸಹಭಾಗಿಯೂ ಆಗಿದ್ದೆ. 703 00:56:08,282 --> 00:56:10,785 ಈಗ ನನಗೆ ಪ್ರೀತಿಪಾತ್ರರ ಕಳಕೊಳ್ಳುವಿಕೆಯ ಅರಿವಿದೆ, 704 00:56:11,952 --> 00:56:14,580 ಮತ್ತು ಬೂದಿಯಿಂದ ಮರುನಿರ್ಮಾಣ ಮಾಡುವ ಕೆಲಸ ತಿಳಿದಿದೆ, 705 00:56:15,372 --> 00:56:19,376 ಒಮ್ಮೆ ಎತ್ತರದಲ್ಲಿ ನಿಂತಿದ್ದುದರ ನೆರಳಿನಲ್ಲಿ ಕೂಡ. 706 00:56:23,464 --> 00:56:25,508 ಒಮ್ಮೆ ನಾನು ಸಿಂಕ್ಲೇರ್ ಆಗಿದ್ದೆ, 707 00:56:25,925 --> 00:56:28,677 ನಾನು ಎಂದಿಗೂ ಲಯರ್ ಆಗಿಯೇ ಉಳಿಯಬಹುದು, 708 00:56:29,220 --> 00:56:32,640 ಏಕೆಂದರೆ ಲಯರ್ಸ್ ನಿಮಗೆ ಗೊತ್ತಿರಬೇಕು, ಎಂದೆಂದಿಗೂ ಇರುತ್ತಾರೆ. 709 00:56:49,990 --> 00:56:52,243 - ಕ್ಯಾರಿ? - ಬರುತ್ತಿದ್ದೇನೆ. 710 00:57:00,167 --> 00:57:02,586 ಎಲ್ಲವೂ ಭದ್ರವಾಗಿದೆ ಎಂದು ಖಚಿತಪಡಿಸಿಕೊಳ್ಳುತ್ತೇನೆ. 711 00:57:03,045 --> 00:57:04,839 - ನಾನು ಬಂದರಿನಲ್ಲಿ ಭೇಟಿಯಾಗುವೆ, ಸರಿಯೇ? - ಸರಿ. 712 00:57:05,631 --> 00:57:06,757 ನಡಿ, ವಿಲ್. 713 00:57:07,675 --> 00:57:08,676 ತಗೊಂಡೆಯಾ? 714 00:57:29,113 --> 00:57:30,281 ನೀನು ಹೊರಟುಹೋದೆ ಅಂದುಕೊಂಡೆ. 715 00:57:31,949 --> 00:57:33,659 ನನಗೆ ಅದು ಸಾಧ್ಯವಿಲ್ಲ ಅನಿಸುತ್ತದೆ. 716 00:59:33,028 --> 00:59:35,029 ಉಪ ಶೀರ್ಷಿಕೆ ಅನುವಾದ: ಸ್ಮಿತಾ ಪಿ. ಜಿ. 717 00:59:35,030 --> 00:59:37,116 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ