1 00:00:18,520 --> 00:00:22,320 ಎಲ್ಲಿಗೆ ಹೊರಟೆಯೋ? ಅದನ್ನು ನೀಲಿ ಟ್ರಕ್ಕಿಗೆ ಹಾಕು. ಬೇಗ. 2 00:00:22,400 --> 00:00:26,400 ಮಿರ್ಜಾಪುರ್ - ಜೌನ್ಪುರ್ ಗಡಿ 3 00:00:26,480 --> 00:00:30,040 ಧೀರಜ್, ಖಾಲಿ ಚೀಲ ಇಲ್ಲಿಗೆ ತಗೊಂಡು ಬಾ! ಬೇಗ! 4 00:00:36,080 --> 00:00:39,840 ಕುಮಾರ್, ಅದನ್ನು ಬೇಗ ಎತ್ತಿಕೊಂಡು ಖಾಲಿ ಮಾಡು. ಬೇಗ. 5 00:01:08,920 --> 00:01:11,680 ಮಲ್ಕೋ. ಬರೋದಕ್ಕೆ ಸ್ವಲ್ಪ ತಡ ಆಯಿತು. 6 00:01:12,640 --> 00:01:15,960 ಇಲ್ಲ, ನಿಮ್ಮ ಬಟ್ಟೆಗಳನ್ನು ತರುತ್ತೇನೆ. ಬದಲಾಯಿಸಿಕೊಳ್ಳಿ. 7 00:01:33,160 --> 00:01:34,240 ಇದೇನು? 8 00:01:38,080 --> 00:01:41,280 ನೀವು ನನಗೆ ಯಾಕೆ ಹೇಳಲಿಲ್ಲ? ಅತಿಯಾಯ್ತು! 9 00:01:55,880 --> 00:01:58,520 ದೇವರೇ. ತೋರಿಸಿ. 10 00:02:05,560 --> 00:02:07,480 ನಾನು ನಿಮ್ಮ ಮುಂದೆ ಹೆಚ್ಚು ಮಾತಾಡಲ್ಲ, 11 00:02:08,800 --> 00:02:11,480 ಆದರೆ ನೀವು ಅಜಾಗರೂಕರಾಗಿರಬಹುದು ಎಂದು ಇದರ ಅರ್ಥವಲ್ಲ. 12 00:02:17,360 --> 00:02:19,600 ಯಾಕೆ ಸುಮ್ಮನೆ ಇದ್ದೀರಿ? ಇದು ಹೇಗಾಯಿತು ಅಂತ ಹೇಳಿ. 13 00:02:24,440 --> 00:02:26,600 ಕಷ್ಟದಿಂದ ಈ ಕುಟುಂಬ ಚೇತರಿಸಿಕೊಳ್ಳುತ್ತಿದೆ. 14 00:02:28,720 --> 00:02:30,760 ಈಗ ನೀವು ಹೆಚ್ಚು ಜವಾಬ್ದಾರರಾಗಿರಬೇಕಲ್ಲವೇ? 15 00:02:38,720 --> 00:02:41,000 ಸರಿ. ಇದು ಹೇಗಾಯಿತು ಅಂತ ನಾನು ಕೇಳಲ್ಲ. 16 00:02:42,800 --> 00:02:44,680 ಆದರೆ ಒಂದು ಮಾತು ನೆನಪಿನಲ್ಲಿಡಿ. 17 00:02:46,160 --> 00:02:47,720 ಎಲ್ಲರಿಗೂ ನಿಮ್ಮ ಅವಶ್ಯಕತೆ ಇದೆ. 18 00:02:53,560 --> 00:02:54,760 ಮತ್ತೆ ನಿನಗೆ? 19 00:02:57,200 --> 00:02:58,200 ನನಗಾ? 20 00:03:01,040 --> 00:03:02,280 ಎಲ್ಲಕ್ಕಿಂತ ಹೆಚ್ಚಾಗಿ. 21 00:04:29,000 --> 00:04:30,000 ಬೇಡ. 22 00:04:34,480 --> 00:04:36,720 ನಾನೂ ನಿನ್ನ ಅಗತ್ಯಗಳನ್ನು ನೋಡಿಕೊಳ್ಳಬಲ್ಲೆ. 23 00:06:29,160 --> 00:06:33,200 ಗುಡ್ಡು ಭಯ್ಯಾ, ಫೋನ್ ಮತ್ತು ಬಟ್ಟೆ ಹೊಂದುತ್ತವೆ. 24 00:06:35,920 --> 00:06:38,600 ಗೋಲು ಅಕ್ಕನ ಕಾರ್ ಕೂಡ ಹತ್ತಿರದಲ್ಲೇ ಇತ್ತು. 25 00:07:10,320 --> 00:07:11,400 ಅಪ್ಪ... 26 00:07:20,200 --> 00:07:24,240 ಹೇಳೋಕೆ... ಏನೂ ಉಳಿದಿಲ್ಲ, ಗುಡ್ಡು. 27 00:07:32,920 --> 00:07:33,960 ಅಪ್ಪ... 28 00:07:58,760 --> 00:08:00,840 ಮಿರ್ಜಾಪುರ್ 29 00:08:40,640 --> 00:08:42,280 ಪೂರ್ವಾಂಚಲ್ 30 00:09:43,760 --> 00:09:44,880 ಏನು ಬೇಕು? 31 00:09:46,520 --> 00:09:47,520 ಯಾಕೆ ಮಾಡಿದೆ? 32 00:09:49,640 --> 00:09:53,640 ಆಫರ್ ಬಂತು. ಚೆನ್ನಾಗಿತ್ತು. ಹಾಗಾಗಿ ಮಾಡಿದೆ. 33 00:09:54,760 --> 00:09:58,000 ಇಡೀ ಜೀವನ ಇಲ್ಲೇ ಕೊಳೆಯುತ್ತೀಯ. ಚೆನ್ನಾಗಿರುತ್ತಾ? 34 00:09:58,480 --> 00:10:00,000 ಹೊರಗಡೆಯೂ ಚೆನ್ನಾಗಿರಲಿಲ್ಲ. 35 00:10:01,240 --> 00:10:02,840 ನನ್ನ ಕುಟುಂಬವನ್ನು ನೋಡಿಕೊಳ್ಳಬೇಕು. 36 00:10:03,440 --> 00:10:05,760 ಹೊರಗಿದ್ದಾಗ ಅವರಿಗಾಗಿ ಏನೂ ಮಾಡಲಾಗಲಿಲ್ಲ. 37 00:10:07,000 --> 00:10:08,160 ನಾನು ಇಲ್ಲಿರುತ್ತೇನೆ, 38 00:10:08,880 --> 00:10:10,720 ಅವರಾದರೂ ಶಾಂತಿಯಿಂದ ಬದುಕುತ್ತಾರೆ. 39 00:10:12,040 --> 00:10:13,320 ನೀನು ಪ್ರತಿಭಾವಂತ. 40 00:10:16,240 --> 00:10:17,880 ಇವೆಲ್ಲಾ ಮೀರಿ ಬೆಳೆಯಬಹುದಿತ್ತು. 41 00:10:22,840 --> 00:10:25,040 ನಿಮಗೆ ಒಂದು ರಹಸ್ಯ ಹೇಳುತ್ತೇನೆ, ಪಂಡಿತ್ ಜೀ. 42 00:10:27,760 --> 00:10:29,600 ಒಂದೇ ಒಂದು ವಿಷಯ ಮುಖ್ಯ. 43 00:10:31,640 --> 00:10:35,120 ನಾನು. ನಾನು ಏನು ಯೋಚಿಸುತ್ತೇನೆ ಅನ್ನೋದು. 44 00:10:37,120 --> 00:10:38,240 ನನಗೆ ಏನು ಬೇಕು ಅನ್ನೋದು. 45 00:10:40,000 --> 00:10:41,360 ನನಗೇನು ಅನಿಸುತ್ತೆ ಅನ್ನೋದು. 46 00:10:44,360 --> 00:10:49,760 ನೀವು, ಸಮಾಜ, ಏನು ಬಯಸುತ್ತೀರಿ ಎಂಬುದು ಮುಖ್ಯವಲ್ಲ. 47 00:10:54,480 --> 00:10:57,600 ಆಫರ್ ಬಂತು. ಜೌನ್ಪುರದವರು ಒಳ್ಳೆ ಸಂಭಾವನೆ ಕೊಡಲಿದ್ದರು. 48 00:10:58,640 --> 00:10:59,880 ಅದಕ್ಕಾಗಿ ಈ ಆಟ ಆಡಿದೆ. 49 00:11:01,240 --> 00:11:03,360 ಇದರಲ್ಲಿ ಹೆಚ್ಚೇನೂ ಇಲ್ಲ. 50 00:11:11,280 --> 00:11:13,440 ನನ್ನಲ್ಲಿ ಭರವಸೆಯನ್ನು ಹುಡುಕಬೇಡಿ. 51 00:11:17,360 --> 00:11:19,080 ನಾನು ನಿಮ್ಮ ಮಗನಲ್ಲ. 52 00:12:45,840 --> 00:12:47,520 ಸರಿ, ಮಕ್ಕಳೇ, ಇವತ್ತಿಗೆ ಅಷ್ಟೇ. 53 00:12:47,600 --> 00:12:49,800 ನಾಳೆ ಪರೀಕ್ಷೆಯಲ್ಲಿ ಎಲ್ಲರೂ ಉತ್ತಮ ಅಂಕ ಗಳಿಸಿ. 54 00:12:49,880 --> 00:12:51,360 -ಸರಿನಾ? -ಸರಿ, ಮ್ಯಾಮ್! 55 00:12:51,440 --> 00:12:52,400 ಚಹಾ ತಗೊಳ್ಳಿ. 56 00:12:52,480 --> 00:12:55,120 -ಅವನ ಹೆಸರೇನು? -ಆರವ್. 57 00:12:55,200 --> 00:12:56,120 ಆರವ್. ಸರಿ. 58 00:12:56,200 --> 00:12:58,400 ನಿನ್ನೆ ಇನ್ನೊಂದು ಮಗುವಿಗೆ ಹೊಡೆಯುತ್ತಿದ್ದ. 59 00:12:58,480 --> 00:13:00,480 -ತುಂಬಾ ತುಂಟ ಅನ್ಸುತ್ತೆ. -ತುಂಬಾ. 60 00:13:00,560 --> 00:13:01,720 -ಅಮ್ಮ? -ಹಾಂ. 61 00:13:09,360 --> 00:13:11,040 -ಬೈ. -ಬೈ. ಬೈ. 62 00:13:15,280 --> 00:13:16,480 ಬೈ. ಬೈ. 63 00:13:40,560 --> 00:13:42,000 ಶುಕ್ಲಾ ಭವನ 64 00:13:47,480 --> 00:13:48,520 ಬನ್ನಿ, ದೊಡ್ಡಪ್ಪ. 65 00:13:55,440 --> 00:13:56,400 ಈ... 66 00:13:58,000 --> 00:14:01,120 ಗೋಲು ಶವವನ್ನು ಗಡಿಯಲ್ಲಿ ಎಸೆಯುವುದರ ಉದ್ದೇಶ ಸ್ಪಷ್ಟವಾಗಿದೆ. 67 00:14:03,000 --> 00:14:04,640 ಗುಡ್ಡುಗೆ ನೇರ ಸವಾಲು. 68 00:14:05,760 --> 00:14:10,440 ತ್ಯಾಗಿಯರು ಗೋಲು ಕೊಲೆಯ ಆಪಾದನೆಯನ್ನು ನಿನ್ನ ಮೇಲೆ ಹಾಕುತ್ತಾರೆ, ಶರದ್. 69 00:14:11,920 --> 00:14:14,880 ದದ್ದಾ ಮತ್ತು ಭರತ್ ಬೆನ್ನಿಗೆ ಚೂರಿ ಹಾಕ್ತಾರೆ ಅಂತ ಗೊತ್ತಿತ್ತು. 70 00:14:17,120 --> 00:14:20,520 ನಾನಂದುಕೊಂಡೆ, ಗೋಲು ಸಾವಿನ ಹೊಣೆಯನ್ನು ಹೊರುವುದರ ಬದಲಾಗಿ, 71 00:14:21,000 --> 00:14:22,920 ಅದರ ಪೂರ್ತಿ ಜವಾಬ್ದಾರಿ ಹೊರೋಣ ಅಂತ. 72 00:14:24,880 --> 00:14:28,440 ವರ್ಚಸ್ಸೂ ಬೆಳೆಯುತ್ತೆ, ಗುಡ್ಡುಗೆ ಸಂದೇಶವೂ ಹೋಗುತ್ತೆ, ಸ್ಪಷ್ಟವಾಗಿ. 73 00:14:30,800 --> 00:14:32,120 ನೋಡು, ಶರದ್, ಸದ್ಯಕ್ಕೆ, 74 00:14:32,200 --> 00:14:34,880 ಪೂರ್ವಾಂಚಲದಲ್ಲಿ ನೀನು ಶಕ್ತಿಶಾಲಿ ಸ್ಥಾನದಲ್ಲಿದ್ದೀಯ. 75 00:14:37,680 --> 00:14:40,640 ಗೋಲು ಕೊಲೆಯ ಜವಾಬ್ದಾರಿ ಹೊತ್ತರೆ, 76 00:14:42,320 --> 00:14:44,080 ಗುಡ್ಡು ನಿನ್ನ ಮೇಲೆ ದಾಳಿ ಮಾಡ್ತಾನೆ. 77 00:14:47,040 --> 00:14:49,600 ಏನಾದರೂ ಯೋಜನೆ ಮಾಡು, ಇದು ನಿನ್ನ ಮೇಲೆ ಆಧರಿಸಿದೆ. 78 00:14:53,520 --> 00:14:56,560 ನನಗೆ ಅರ್ಥವಾಗದ್ದು ಏನೆಂದರೆ, 79 00:14:57,480 --> 00:15:01,800 ಬೇಟೆಯೇ ಯಾಕೆ ಬಂದು ನಮ್ಮ ಬಲೆಯೊಳಗೆ ಬೀಳುತ್ತಿದೆ? 80 00:15:05,000 --> 00:15:06,640 ನನ್ನನ್ನು ನಂಬುತ್ತೀರಾ, ದೊಡ್ಡಪ್ಪ? 81 00:15:11,880 --> 00:15:14,080 ಸಾವಿನ ದವಡೆಯಿಂದ ನನ್ನನ್ನು ತಪ್ಪಿಸಿದ್ದೀಯಾ. 82 00:15:16,560 --> 00:15:18,440 ಸಾವು ಹಿಂದಕ್ಕೆ ಹೋಗಬೇಕಾಯಿತು. 83 00:15:20,720 --> 00:15:22,320 ನೀನು ನನಗೆ ಮನೆ, ಕುಟುಂಬ ಕೊಟ್ಟೆ. 84 00:15:23,920 --> 00:15:25,680 ನಾನು ಜಗತ್ತನ್ನು ಮತ್ತೆ ನೋಡಬಲ್ಲೆ. 85 00:15:27,000 --> 00:15:28,720 ನಿನ್ನ ನಂಬುತ್ತೀನಾ ಅಂತ ಕೇಳ್ತೀಯ. 86 00:15:32,880 --> 00:15:35,960 ನಿಮ್ಮ ಸಲಹೆಯ ಮೇರೆಗೆ ನಾನು ಕಾರ್ಯನಿರ್ವಹಿಸಬಲ್ಲೆ. 87 00:15:37,680 --> 00:15:39,680 ಆದರೆ ಅದನ್ನು ಮಾಡುವ ಮೊದಲು, 88 00:15:40,800 --> 00:15:42,960 ನಿಮ್ಮಿಂದ ಕ್ಷಮೆ ಮತ್ತು ಅನುಮತಿ ಕೇಳುತ್ತೇನೆ. 89 00:15:49,920 --> 00:15:55,880 ಲಕ್ನೋ 90 00:16:16,800 --> 00:16:18,920 ಇದೇ ಸರಿಯಾದ ಆಯ್ಕೆ ಅಂತೀಯಾ? 91 00:16:20,000 --> 00:16:22,440 ಇದು ಆಯ್ಕೆ ಬಗ್ಗೆ ಅಲ್ಲ, ಅವಕಾಶದ ಬಗ್ಗೆ. 92 00:16:23,800 --> 00:16:27,400 ನಾವು ಈ ಅವಕಾಶ ತಗೊಂಡರೆ, ಇಡೀ ರಾಜ್ಯವೇ ಅಪರಾಧ ಮುಕ್ತವಾಗುತ್ತದೆ. 93 00:16:36,160 --> 00:16:38,640 ಆದರೆ ಇದರಿಂದ ಅಮ್ಮ ಮತ್ತು ಮಗುವಿಗೆ ಅಪಾಯವಾಗಬಹುದು. 94 00:16:41,160 --> 00:16:43,560 ಗುಡ್ಡು ಒತ್ತಡದಲ್ಲಿ ಏನು ಬೇಕಾದರೂ ಮಾಡುತ್ತಾನೆ. 95 00:16:47,240 --> 00:16:49,200 ಗುಡ್ಡು ಸ್ವಭಾವತಃ ಅಸ್ಥಿರ, ನಿಜ, 96 00:16:49,880 --> 00:16:54,120 ಆದರೆ ತ್ರಿಪಾಠಿ ಕುಟುಂಬಕ್ಕೆ ಹಾನಿ ಮಾಡುವುದಕ್ಕಿಂತ ಅವನ ಅಹಂಕಾರವೇ ಅವನಿಗೆ ಮುಖ್ಯ. 97 00:16:55,400 --> 00:16:57,000 ನಾವು ಅದಕ್ಕೆ ಸವಾಲೆಸೆಯಬೇಕು. 98 00:17:06,079 --> 00:17:08,079 ಗುಡ್ಡು ಭಸ್ಮಾಸುರನಿದ್ದಂತೆ. 99 00:17:12,359 --> 00:17:13,720 ವೈರಿಯಾಗಿರಲಿ, ಕುಟುಂಬವಾಗಲಿ, 100 00:17:14,880 --> 00:17:16,800 ಅವನು ಮುಟ್ಟಿದ ಎಲ್ಲರೂ ಬೂದಿಯಾದರು. 101 00:17:19,520 --> 00:17:22,520 ತ್ರಿಪಾಠಿ ಕುಟುಂಬ ಅವನ ಜೊತೆ ಇರೋವರೆಗೂ ಅವರಿಗೆ ಅಪಾಯ. 102 00:17:23,800 --> 00:17:26,400 ಮಾಧುರಿ, ನಿರ್ಧಾರ ಮಾಡೋದಕ್ಕೆ ತಡ ಮಾಡಬಾರದು. 103 00:17:28,480 --> 00:17:30,520 ಬನ್ರೋ, ಕೆಲಸ ಮಾಡಿರಿ! 104 00:17:30,560 --> 00:17:32,040 ನೋಡ್ತಾ ಇದ್ದೀವಿ. 105 00:17:36,760 --> 00:17:38,480 ನಾವೊಬ್ಬರನ್ನು ಭೇಟಿಯಾಗಬೇಕು. 106 00:17:39,280 --> 00:17:40,200 ಆದರೆ... 107 00:18:01,280 --> 00:18:02,920 ನಾನು ಈಗ ಒಬ್ಬಂಟಿಯಾಗೋದೆ, ಅಪ್ಪ. 108 00:18:28,800 --> 00:18:30,560 ನನಗೆ... ನನಗೆ ಉಸಿರುಗಟ್ಟುತ್ತಿದೆ. 109 00:18:33,560 --> 00:18:35,880 ನನ್ನ ಹತ್ರ ಯಾರೇ ಬಂದರೂ ಸತ್ತು ಹೋಗುತ್ತಾರೆ. 110 00:18:40,040 --> 00:18:44,240 ನೋವು ಎಷ್ಟು ಜಾಸ್ತಿ ಆಗಿದೆ ಎಂದರೆ ನಾನು ಜಡವಾಗಿಹೋಗಿದ್ದೇನೆ ಅನಿಸುತ್ತೆ. 111 00:18:45,280 --> 00:18:46,800 ಸಂಪೂರ್ಣ ಜಡವಾಗಿದ್ದೇನೆ, ಅಪ್ಪ. 112 00:18:55,440 --> 00:18:58,440 ನಿಮಗೆ ಇಷ್ಟು ಶಕ್ತಿ ಎಲ್ಲಿಂದ ಬರುತ್ತೆ? 113 00:18:59,960 --> 00:19:01,320 ನೀವು ಯಾಕೆ ಕುಗ್ಗಲಿಲ್ಲ? 114 00:19:08,200 --> 00:19:09,480 ನಾನೇನು ಮಾಡಲಿ? 115 00:19:11,960 --> 00:19:12,960 ಹೇಳಿ. 116 00:19:14,800 --> 00:19:15,880 ನಾನೇನು ಮಾಡಲಿ? 117 00:19:25,960 --> 00:19:29,480 ಮೊದಲ ಬಾರಿ, ನನ್ನ ಸಲಹೆಯನ್ನು ಕೇಳುತ್ತಿದ್ದೀಯ. 118 00:19:30,480 --> 00:19:33,400 ಮೊದಲ ಬಾರಿ, ಕೊಡಲು ನನ್ನ ಬಳಿ ಏನೂ ಇಲ್ಲ. 119 00:19:36,800 --> 00:19:40,160 ನನ್ನ ವಿಧಾನಗಳು, ತತ್ವಗಳು 120 00:19:41,280 --> 00:19:42,800 ಯಾವತ್ತೂ ಮುಖ್ಯವಾಗಿರಲಿಲ್ಲ. 121 00:19:44,520 --> 00:19:49,320 ನನ್ನನ್ನು ಮತ್ತು ನನ್ನ ಕುಟುಂಬವನ್ನು ಸುಮ್ಮನೆ ಮೂರ್ಖರನ್ನಾಗಿಸುತಿದ್ದೆ 122 00:19:50,560 --> 00:19:52,160 ಅಂತ ಅನಿಸುತ್ತಿದೆ. 123 00:19:53,880 --> 00:19:56,320 ಈ ತತ್ವಗಳ ಬಗ್ಗೆ ಯಾವಾಗಲೂ ಜಗಳವಾಡಿದ್ದೇವೆ, ಅಪ್ಪ. 124 00:19:57,560 --> 00:20:00,000 ನಾವಿಬ್ಬರೂ ತಪ್ಪು ಕಾರಣಗಳಿಗಾಗಿ ಜಗಳವಾಡುತ್ತಿದ್ದೆವು. 125 00:20:02,800 --> 00:20:07,800 ಜಗಳವಲ್ಲ, ಪ್ರೀತಿ ಕಲಿಸಬೇಕಿತ್ತು ನಾನು ನಿನಗೆ. ನನಗೂ ಕೂಡ. 126 00:20:11,000 --> 00:20:16,000 ಆದರೆ ಬಹುಶಃ ತಡವಾಗಿ ಅರಿವಾಯಿತು. 127 00:20:18,480 --> 00:20:19,480 ಬಹುಶಃ? 128 00:20:22,640 --> 00:20:24,640 ಅದರಿಂದ ಪ್ರಯೋಜನವಿಲ್ಲ, ಅಪ್ಪ. 129 00:20:31,040 --> 00:20:32,320 ಏನು ಮಾಡಲು ಬಯಸಿರುವೆ? 130 00:20:37,160 --> 00:20:38,720 ನಿನ್ನ ಹೃದಯ ಏನು ಹೇಳುತ್ತದೆ? 131 00:20:42,720 --> 00:20:44,520 ಅದೇ ನನಗೆ ಅರ್ಥವಾಗುತ್ತಿಲ್ಲ. 132 00:20:48,000 --> 00:20:49,080 ಈ ಕೈಗಳು... 133 00:20:52,040 --> 00:20:55,320 ಶತ್ರು ಕಾಣಿಸಿದ ಕೂಡಲೇ ತೊಡೆದುಹಾಕುತ್ತವೆ. 134 00:20:56,760 --> 00:20:59,040 -ಕೊಲ್ಲುವುದಷ್ಟೇ ನನಗೆ ಗೊತ್ತು. -ಹೋಗಿ ಕೊಲ್ಲು. 135 00:21:06,200 --> 00:21:07,280 ಇಲ್ಲಿಗೆ ಬಂದ ನಂತರ, 136 00:21:09,880 --> 00:21:11,920 ನಾನು ಕಲಿತದ್ದು ಒಂದೇ ಒಂದು ವಿಷಯ. 137 00:21:14,680 --> 00:21:17,800 ಬದುಕಲು ಅಗತ್ಯವಿರುವುದನ್ನೇ ಮಾಡಬೇಕು. 138 00:21:20,040 --> 00:21:21,240 ಏನು ಮಾಡಬೇಕೋ ಅದನ್ನು ಮಾಡು. 139 00:21:25,640 --> 00:21:27,800 ನನ್ನ ಮೇಲೆ ಎಲ್ಲಾ ಭರವಸೆ ಕಳೆದುಕೊಂಡಿದ್ದೀರಿ. 140 00:21:29,560 --> 00:21:30,760 ನಿನ್ನ ಮೇಲಲ್ಲ. 141 00:21:35,320 --> 00:21:36,560 ನನ್ನ ಮೇಲೆ ಕಳೆದುಕೊಂಡೆ. 142 00:21:42,640 --> 00:21:43,640 ಸರ್. 143 00:21:48,560 --> 00:21:49,560 ಹೋಗಿ. 144 00:21:50,920 --> 00:21:53,800 ಜೈ ಹಿಂದ್, ಸರ್. ನಾನು ಹಿರಿಯ ಕಾನ್ಸ್ಟೇಬಲ್ ಪಾಠಕ್. 145 00:21:54,280 --> 00:21:56,800 -ಹೇಗಿದ್ದೀಯ, ಪಾಠಕ್? -ತುಂಬಾ ಚೆನ್ನಾಗಿದ್ದೇನೆ, ಸರ್. 146 00:21:59,160 --> 00:22:00,600 -ಒಂದು ವಿಷಯ ಹೇಳು. -ಹಾಂ? 147 00:22:01,080 --> 00:22:02,520 ಗುಡ್ಡು ಪಂಡಿತ್ ಗೊತ್ತಾ? 148 00:22:03,000 --> 00:22:05,320 ಸರ್, ಪೂರ್ವಾಂಚಲದಲ್ಲಿ ಯಾರಿಗೆ ಗೊತ್ತಿಲ್ಲ ಅವನು? 149 00:22:07,160 --> 00:22:11,160 ಪೊಲೀಸ್ ಠಾಣೆಯಲ್ಲಿ ಭೇಟಿಯಾಗಲು ಐಜಿ ಸಾಹೇಬರು ಆದೇಶಿಸಿದ್ದಾರೆ ಅಂತ ಅವನಿಗೆ ಹೇಳು. 150 00:22:11,240 --> 00:22:14,680 ಸರ್, ಮಿರ್ಜಾಪುರದಲ್ಲಿ ಗುಡ್ಡು ಪಂಡಿತನ ಭೇಟಿಯಾಗಲು ಅವರ ಅನುಮತಿ ಪಡೆಯಬೇಕು. 151 00:22:16,920 --> 00:22:19,400 ಯಶೋಧಾನಂದ್ ದುಬೆ 152 00:22:19,920 --> 00:22:22,720 ಇಲ್ಲ, ಸರ್. ನಾನು ಹೇಳಿದ್ದು ಏನೆಂದರೆ, 153 00:22:22,800 --> 00:22:26,080 ಅವನನ್ನು ಭೇಟಿ ಮಾಡಲು, ನಾವೇ ಅಲ್ಲಿಗೆ ಹೋಗಬೇಕು. 154 00:22:41,280 --> 00:22:42,680 ಈ ನಗರ ನನ್ನ ಏನು ಕರೆಯುತ್ತೆ? 155 00:22:42,760 --> 00:22:44,440 -ಗುಡ್ಡು ಭಯ್ಯಾ! -ಗುಡ್ಡು ಭಯ್ಯಾ! 156 00:22:46,080 --> 00:22:47,480 ಅಂದರೆ ಬೇರೆ ಎಲ್ಲರೂ. 157 00:22:49,680 --> 00:22:50,680 ಗೂಂಡಾ! 158 00:22:51,680 --> 00:22:52,680 ಅಂದರೆ... 159 00:22:54,120 --> 00:22:57,040 ನಿಮ್ಮನ್ನು ಜೀವನದಿಂದ ಸಾವಿನವರೆಗೆ ಕರೆದೊಯ್ಯುವ ಕರ್ಮಚಾರಿ. 160 00:23:00,640 --> 00:23:01,960 ಆದ್ದರಿಂದ ಗೂಂಡಾ ಆಗಿ. 161 00:23:02,880 --> 00:23:06,600 ಜೌನ್ಪುರಕ್ಕೆ ಹೋಗಬೇಕು. ಆಯುಧಗಳು ಅಗತ್ಯವಿದ್ದರೆ, ಸಿಗುತ್ತವೆ. 162 00:23:07,440 --> 00:23:09,120 ಇನ್ನೂ ಬೇಕೆಂದರೆ ಇನ್ನೂ ಸಿಗುತ್ತವೆ. 163 00:23:11,920 --> 00:23:15,000 ಷರತ್ತು ಏನೆಂದರೆ ಜೌನ್ಪುರವನ್ನು ಸ್ಮಶಾನವನ್ನಾಗಿ ಮಾಡಬೇಕು. 164 00:23:16,360 --> 00:23:17,840 ಯಾರ ಮೇಲೆ ಅನುಮಾನ ಬಂದರೂ, 165 00:23:18,640 --> 00:23:20,880 ಅಥವಾ ಅವರ ಮುಖ ಇಷ್ಟವಾಗದಿದ್ದರೆ, ಗುಂಡು ಹೊಡೆಯಿರಿ. 166 00:23:23,560 --> 00:23:26,200 ಏಕೆಂದರೆ ನಮಗೆಲ್ಲರಿಗೂ ಗೌರವ ಬೇಕು. 167 00:23:28,960 --> 00:23:30,520 ಅದಕ್ಕಾಗಿ ಏನು ಮಾಡೋಣ? 168 00:23:32,080 --> 00:23:33,760 ಜೌನ್ಪುರದ ತಿಕ ಹೊಡೆಯೋಣ. 169 00:23:33,840 --> 00:23:35,720 ಜೌನ್ಪುರದ ತಿಕ ಹೊಡೆಯೋಣ, ಭಯ್ಯಾ! 170 00:23:35,800 --> 00:23:36,920 ಜೌನ್ಪುರದ ತಿಕ ಹೊಡೆಯೋಣ! 171 00:23:37,000 --> 00:23:39,000 ಜೌನ್ಪುರದ ತಿಕ ಹೊಡೆಯೋಣ, ಭಯ್ಯಾ! 172 00:23:39,560 --> 00:23:40,560 ಮುಂದೆ ಬನ್ರೋ. 173 00:23:42,920 --> 00:23:46,560 ಭಯ್ಯಾ, ಎರಡು ಪೊಲೀಸ್ ವಾಹನಗಳು ಕಾರ್ಖಾನೆಯ ಗೇಟಿನ ಹೊರಗೆ ಕಾಯುತ್ತಿವೆ. 174 00:23:49,600 --> 00:23:51,520 ಇವರಿಲ್ಲೇ ಇರಲಿ. ತೌಸಿಫ್. 175 00:23:51,600 --> 00:23:53,640 -ಹಾಂ, ಭಯ್ಯಾ? -ನಂಜೊತೆ ಬಾ. 176 00:23:53,720 --> 00:23:56,080 -ಶರದ್ ಶುಕ್ಲಾನ ನಾಶ ಮಾಡೋಣ. ನೋಡಿರಿ. -ನಡೀರಿ. 177 00:23:56,160 --> 00:23:57,240 ಎಲ್ಲಾ ಒಳಗೆ ಹಾಕಿ. 178 00:23:57,880 --> 00:23:58,720 ಇವನ್ನು ಬಚ್ಚಿಡು. 179 00:24:17,720 --> 00:24:18,720 ಬನ್ನಿ. 180 00:24:21,560 --> 00:24:23,160 ಸರಿಯೋ, ಸೂಳೆಮಗನೇ! 181 00:24:42,920 --> 00:24:46,000 ಹೇಗೆ ನಡೆಯುತ್ತಿದೆ? ನಿಮ್ಮ ಕಾರ್ಪೆಟ್ ವ್ಯಾಪಾರ? 182 00:24:46,720 --> 00:24:48,120 ಚೆನ್ನಾಗಿ ನಡೆಯುತ್ತಿದೆ. 183 00:24:49,120 --> 00:24:52,720 ವಿಶ್ವದಾನಂದ್ ದುಬೆ ಜೀ, ಏನು ಇಲ್ಲಿಗೆ ಬಂದಿದ್ದೀರಿ? 184 00:24:53,680 --> 00:24:58,000 ಮಿರ್ಜಾಪುರದ ಹೆಚ್ಚಿನ ಪೊಲೀಸ್ ಪಡೆ ನನ್ನ ಅಡಿಯಲ್ಲಿ ಕೆಲಸ ಮಾಡುತ್ತದೆ. 185 00:24:59,440 --> 00:25:02,600 ಮಾಡದವರು ದೂರ ಉಳಿಯುತ್ತಾರೆ. 186 00:25:05,840 --> 00:25:07,360 ಕಾರ್ಪೆಟ್ ಬೇಕಿದ್ದರೆ ಹೇಳಿ. 187 00:25:12,280 --> 00:25:16,440 ನಾನು ಪೋಸ್ಟ್ ಮ್ಯಾನ್. ಅದರಲ್ಲೂ ದುಬಾರಿಯವನು. 188 00:25:25,680 --> 00:25:26,680 ಹಾಂ, ಮೇಡಂ. 189 00:25:28,800 --> 00:25:30,960 ಹಾಂ. ಸರಿ, ಅವನೊಂದಿಗೆ ಮಾತನಾಡಿ. 190 00:25:37,600 --> 00:25:41,120 ನಾನು ಮಾಧುರಿ ಯಾದವ್. ನೇರವಾಗಿ ವಿಷಯಕ್ಕೆ ಬರುತ್ತೇನೆ. 191 00:25:42,080 --> 00:25:44,840 ಬೀನಾ ಮತ್ತು ಅವಳ ಮಗನನ್ನು ಒತ್ತೆಯಾಳಾಗಿಟ್ಟಿದ್ದೀಯ. 192 00:25:44,920 --> 00:25:47,000 ಅವರನ್ನು ಸುರಕ್ಷಿತವಾಗಿ ನನಗೆ ಒಪ್ಪಿಸು. 193 00:25:49,600 --> 00:25:53,160 ಬದಲಾಗಿ, ನಾನು ವೈಯಕ್ತಿಕವಾಗಿ ರಮಾಕಾಂತ್ ಪಂಡಿತ್ ಅವರ ಪ್ರಕರಣವನ್ನು ನೋಡಿ 194 00:25:53,240 --> 00:25:55,600 ಅವರಿಗೆ ಮರಣದಂಡನೆ ಆಗದಂತೆ ಖಚಿತಪಡಿಸುವೆ. 195 00:25:55,680 --> 00:25:57,800 ಮರಣದಂಡನೆ ಆಗುವಂತೆ ಕಾಣುತ್ತಿದೆ. 196 00:25:59,320 --> 00:26:00,560 ಅದು ನಿನಗೆ ತಿಳಿದಿರಬೇಕು. 197 00:26:06,880 --> 00:26:09,240 -ಗುಡ್ಡು ಪಂಡಿತ್. -ಹಾಂ. 198 00:26:11,160 --> 00:26:14,720 ಇಡೀ ರಾಜ್ಯಕ್ಕೆ ಸಿಎಂ ಜವಾಬ್ದಾರರು ಅಂತ ಕೇಳಿದ್ದೀನಿ. 199 00:26:15,640 --> 00:26:19,720 ನೀವು ಒಂದೇ ಜಿಲ್ಲೆಯ ಪರವಾಗಿ ವಾಲುವುದಿಲ್ಲ ಅಂದುಕೊಳ್ಳುತ್ತೇನೆ. 200 00:26:21,680 --> 00:26:26,840 ನನ್ನಂಥ ಸಾಮಾನ್ಯ ಗೂಂಡಾ ಬಳಿ ಸಿಎಂ ಖುದ್ದಾಗಿ ಮಾತನಾಡುವ ವಿಷಯ ಏನಿದೆ? 201 00:26:28,120 --> 00:26:31,880 ಬೀನಾ ತ್ರಿಪಾಠಿ ನಾನು ಅಲಂಕಾರಕ್ಕೆ ಬಳಸುವ ಹೂವಿನ ಬೊಕ್ಕೆ ಅಲ್ಲ. 202 00:26:33,240 --> 00:26:34,880 ಇಲ್ಲಿ ಆಕೆ ಬದುಕುತ್ತಿರಲಿಲ್ಲ. 203 00:26:36,840 --> 00:26:39,160 -ನನ್ನ ತಂದೆಗೆ ಏನಾದರೂ ಆದರೆ... -ನೆನಪಿಡು, 204 00:26:39,240 --> 00:26:42,760 ಮಿರ್ಜಾಪುರದಲ್ಲಿ ನಾವು ನುಗ್ಗಿ ಹೊಡೆಯುವುದನ್ನು ಒಂದು ಮಾತ್ರ ತಡೆಯುತ್ತಿದೆ. 205 00:26:42,840 --> 00:26:44,160 ನನ್ನ ಕುಟುಂಬದ ಸುರಕ್ಷತೆ. 206 00:26:49,560 --> 00:26:50,560 ಸರಿ. 207 00:26:51,760 --> 00:26:54,000 ಎಲ್ಲರೂ ತಮಗೆ ತೋಚಿದಂತೆ ವರ್ತಿಸುತ್ತಾರೆ. 208 00:26:56,600 --> 00:26:59,880 ಸಿಎಂ ಆಗಿ ಜನತೆಯ ಪರವಾಗಿ ನಿರ್ಧಾರ ಮಾಡುವುದು ನಿಮ್ಮ ಕೆಲಸ. 209 00:27:01,600 --> 00:27:03,160 ಈಗಾಗಲೇ ನಿರ್ಧಾರ ಮಾಡಿದ್ದೇನೆ. 210 00:27:05,520 --> 00:27:09,840 ರಮಾಕಾಂತ್ ಪಂಡಿತರನ್ನು ಕಾಪಾಡಲು ನಿನಗೊಂದು ಅವಕಾಶ ಕೊಡೋಣ ಅಂದುಕೊಂಡೆ. 211 00:27:11,400 --> 00:27:12,840 ಒಳ್ಳೆಯ ವ್ಯಕ್ತಿ ಎಂದು ಕೇಳಿದೆ. 212 00:27:14,880 --> 00:27:16,360 ಆದರೆ ನಾನು ತಪ್ಪಾಗಿರಬಹುದು. 213 00:27:17,640 --> 00:27:19,160 ಅಷ್ಟಕ್ಕೂ ಅವರು ನಿನ್ನ ತಂದೆ. 214 00:27:26,800 --> 00:27:30,480 ಇದರ ಕೆಲಸ ಮುಗಿದಿದೆ. ಬಳಸಿ ಬಿಸಾಡುವುದು. 215 00:27:51,240 --> 00:27:54,560 ಇಂದು ನಾವು ಗಣಿತದ ಭಯವನ್ನು ಕಳೆದುಕೊಳ್ಳೋಣ. 216 00:27:54,640 --> 00:27:56,560 ಗಣಿತದ ಭಯವೇ? 217 00:27:56,640 --> 00:27:59,840 ಗಣಿತದ ಪೂರ್ಣ ರೂಪವನ್ನು ನನಗೆ ಯಾರು ಹೇಳಬಹುದು? 218 00:27:59,920 --> 00:28:01,840 "ನಾನು ಯಾವಾಗಲೂ ನಿನ್ನನ್ನು ಕಾಡುತ್ತೇನೆ." 219 00:28:03,600 --> 00:28:08,320 ಅದಕ್ಕೆ ಹೆದರಿದರೆ ನಿನ್ನನ್ನು ಕಾಡುತ್ತದೆ, ಕೃಷ್ಣ. ಹೇಳ್ತೀನಿ ಕೇಳು. 220 00:28:08,960 --> 00:28:12,680 -ಗಣಿತದ ಪೂರ್ಣ ರೂಪವೆಂದರೆ ಸ್ಮರಣಶಕ್ತಿ... -ಹಾಯ್, ಮೇಡಂ! 221 00:28:12,760 --> 00:28:13,800 ಹಾಯ್, ಮೇಡಂ. 222 00:28:15,560 --> 00:28:20,640 ಹೌದು, ಅದು ಸ್ಮರಣ, ನಿಖರತೆ, ಪ್ರತಿಭೆ, ಪರಿಶ್ರಮ, ಪ್ರಾಮಾಣಿಕತೆ. 223 00:28:20,720 --> 00:28:21,720 ಏನಾಯಿತು? 224 00:28:22,320 --> 00:28:26,360 ಈಗ ಗಣಿತದ ಸಮಸ್ಯೆಯನ್ನು ಪರಿಹರಿಸಿ, 18 + 5/4. ನಾನು ಈಗ ಬರುತ್ತೇನೆ. 225 00:28:27,520 --> 00:28:28,520 ಹೇಳು. 226 00:28:29,040 --> 00:28:30,320 ಡಿಂಪಿ, ಏನು ಆಯಿತು? 227 00:28:32,040 --> 00:28:34,120 ನ್ಯಾಯಾಧೀಶ ಅಂಕಲ್ ರ ವರ್ಗಾವಣೆ ಮಾಡಲಾಗಿದೆ. 228 00:28:34,200 --> 00:28:36,160 ಲಕ್ನೋದಿಂದ ವಿಶೇಷ ನ್ಯಾಯಾಧೀಶ ಬಂದಿದ್ದಾರೆ. 229 00:28:36,240 --> 00:28:37,960 ಮತ್ತು ವಿಚಾರಣೆ ಇದೇ ವಾರ ಆಗಲಿದೆ. 230 00:28:38,040 --> 00:28:39,440 -ಇದೇ ವಾರ? -ಏನು? 231 00:28:42,120 --> 00:28:43,920 ಇಷ್ಟು ದಿಢೀರನೆ ಇದು ಹೇಗೆ ಆಯಿತು? 232 00:28:46,920 --> 00:28:48,240 ಆಗಿದ್ದು ಆಗೋಗಿದೆ. 233 00:28:50,200 --> 00:28:53,200 ಈಗ ಅಪ್ಪನನ್ನು ಕಾಪಾಡುವುದು ಅಸಾಧ್ಯವೆಂದು ತೋರುತ್ತದೆ. 234 00:28:53,280 --> 00:28:55,240 -ಸುಮ್ಮನಿರು. -ನೀನು... 235 00:29:07,160 --> 00:29:11,080 ಪುರಾತನ ಕಾಲದಲ್ಲಿ, ಕುಟುಂಬದಲ್ಲಿ ಸಾವು ಸಂಭವಿಸಿದರೆ, 236 00:29:11,160 --> 00:29:12,880 ಶತ್ರು ಯುದ್ಧ ನಿಲ್ಲಿಸುತ್ತಿದ್ದ. 237 00:29:15,160 --> 00:29:16,880 ದುಃಖಿಸಲು ಸ್ವಲ್ಪ ಸಮಯಕ್ಕಾಗಿ. 238 00:29:19,160 --> 00:29:22,000 ಮಾಧುರಿ ಇಷ್ಟು ನಿರ್ದಯಿ ಅಂತ ನಾನು ಊಹಿಸಿರಲಿಲ್ಲ. 239 00:29:27,000 --> 00:29:28,920 ನೀವು ದುಃಖಿಸುವುದು ಮುಖ್ಯ. 240 00:29:31,000 --> 00:29:32,600 ಇಲ್ಲಾ ಸಮತೋಲನ ಕಳೆದುಕೊಳ್ತೀರಿ. 241 00:29:33,880 --> 00:29:35,800 ನಿರ್ಧಾರ ಹೇಗೆ ಮಾಡುತ್ತೀರಿ? 242 00:29:35,880 --> 00:29:38,160 ನನ್ನ ಶತ್ರುವನ್ನು ಕೊಂದು ದುಃಖಿಸುತ್ತೇನೆ. 243 00:29:43,440 --> 00:29:45,160 ನಾನು ನಿಮ್ಮನ್ನು ತಡೆಯುವುದಿಲ್ಲ. 244 00:29:47,880 --> 00:29:52,000 ನಿಮ್ಮ ತಂದೆ ಮತ್ತು ನನ್ನ ಮಧ್ಯೆ ಯಾರನ್ನು ಆರಿಸಿಕೊಳ್ಳುತ್ತೀರಿ ಅಂತ ಚಿಂತೆ. 245 00:30:04,880 --> 00:30:08,240 ನೀವು ಮತ್ತು ನಿಮ್ಮ ಮಗು ನನ್ನ ಜವಾಬ್ದಾರಿ. 246 00:30:11,160 --> 00:30:12,520 ನಾನು ನಿಮಗೆ ಮಾತು ಕೊಟ್ಟೆ. 247 00:30:13,560 --> 00:30:15,040 ನನ್ನ ತಂದೆಯ ವಿಷಯದಲ್ಲಿ, 248 00:30:17,040 --> 00:30:20,560 ಜೀವನದಲ್ಲಿ ಸಾಕಷ್ಟು ಕಳೆದುಕೊಂಡಿದ್ದೇನೆ, ಅವರನ್ನೂ ಕಳೆದುಕೊಳ್ಳುವುದಿಲ್ಲ. 249 00:30:22,000 --> 00:30:23,240 ಚಿಂತಿಸಬೇಡಿ. 250 00:30:25,680 --> 00:30:29,640 ನಾನು ತಾಯಿ. ಚಿಂತಿಸುವುದು ನನ್ನ ಸ್ವಭಾವ. 251 00:30:34,040 --> 00:30:35,280 ನಾನು ನಿಮ್ಮನ್ನು ನಂಬುವೆ. 252 00:30:36,920 --> 00:30:39,920 ನೀವು ಸರಿಯಾದ ನಿರ್ಧಾರ ತೆಗೆದುಕೊಂಡಿರಬೇಕು. 253 00:30:41,240 --> 00:30:42,600 ಅಲ್ಲವೇ, ಮಗು? 254 00:30:43,840 --> 00:30:45,040 ಅಲ್ಲವೇ, ಮಗು? 255 00:30:53,400 --> 00:30:54,800 ಗುಡ್ಡು ಸಿಕ್ಕಿಹಾಕಿಕೊಂಡ. 256 00:30:59,400 --> 00:31:02,280 ಎಷ್ಟೋ ದಿನಗಳ ನಂತರ ಈ ಮನೆಯಲ್ಲಿ ಸಿಹಿ ತಿಂಡಿ ಮಾಡಿದ್ದೇವೆ. 257 00:31:03,240 --> 00:31:08,320 ಇದೇ ವಾತಾವರಣ ಇರುವಂತೆ ನೋಡಿಕೊಳ್ಳಿ. 258 00:31:12,000 --> 00:31:16,120 ಶರದ್ ಜೊತೆ ಸಾಧ್ಯವಾದಷ್ಟು ಬೇಗ ಖಾತೆ ಮುಚ್ಚಿರಿ. 259 00:31:17,240 --> 00:31:20,720 ಅವನನ್ನು ನಂಬಿ ಈಗಾಗಲೇ ತಪ್ಪು ಮಾಡಿದ್ದೀರಿ. 260 00:31:22,760 --> 00:31:23,760 ನಾನೂ ಕೂಡ. 261 00:31:24,560 --> 00:31:27,800 ಊಟದ ಸಮಯದಲ್ಲಿ ವ್ಯವಹಾರದ ಮಾತು ಬೇಡ. 262 00:31:28,680 --> 00:31:30,040 ಈ ನಿಯಮ ಮಾಡಿದ್ದು ನೀನೇ ತಾನೆ? 263 00:31:30,680 --> 00:31:32,840 ಅಜ್ಜಿಗೆ ಯಾವುದೇ ನಿಯಮಗಳಿಲ್ಲ. 264 00:31:32,920 --> 00:31:34,000 ಸರಿಯೇ, ಗಿನ್ನಿ. 265 00:31:34,080 --> 00:31:35,280 "ನಿಯಮವಿಲ್ಲ." 266 00:31:41,120 --> 00:31:42,400 -ದದ್ದಾ. -ಹಾಂ? 267 00:31:42,480 --> 00:31:46,040 ಎಷ್ಟು ದಿನ ಇದೇ ವ್ಯವಹಾರ ಮಾಡೋದು ಅಂತ ಯೋಚಿಸುತ್ತಿದ್ದೆ. 268 00:31:48,800 --> 00:31:52,040 ಸಿವಾನ್ ಮಿತಿ ತಲುಪಿದೆ. ನಾವು ವಿಸ್ತರಿಸಬೇಕು. 269 00:31:53,200 --> 00:31:56,880 ಪೂರ್ವಾಂಚಲದಲ್ಲಿ ತುಂಬಾನೇ ಗೊಂದಲ ಇದೆ. ನಾವು ಅದರ ಲಾಭ ಪಡೆಯಬೇಕು. 270 00:31:57,480 --> 00:32:00,600 ಕಾರುಗಳ ಕಳ್ಳತನ, ಮದ್ಯ, 271 00:32:01,680 --> 00:32:05,160 ಇವೆರಡೂ ಅಕ್ರಮ ವ್ಯವಹಾರಗಳು. ಹುಚ್ಚೇನು ನಿನಗೆ? 272 00:32:07,200 --> 00:32:09,840 ಹಾಗಾಗಿ ನಿಧಾನವಾಗಿ ನಡೆಯುವುದು ಜಾಣತನ. 273 00:32:15,200 --> 00:32:16,840 ನಿಮಗೇನು ಬೇಕೆಂದೇ ಗೊತ್ತಾಗಲ್ಲ. 274 00:32:18,840 --> 00:32:21,560 ನಾನು ಏನನ್ನೂ ಮಾಡದಿದ್ದಾಗ, ಸೋಮಾರಿ ಎಂದು ಹೇಳುತ್ತೀರಿ. 275 00:32:21,640 --> 00:32:23,680 ಏನಾದರೂ ಮಾಡಿದಾಗ, ನನ್ನನ್ನು ತಡೆಯುತ್ತೀರಿ. 276 00:32:24,280 --> 00:32:26,240 -ನಿಮಗೆ ನಿಜವಾಗಿಯೂ ಏನು ಬೇಕು? -ನೋಡು... 277 00:32:26,320 --> 00:32:28,240 ನೀವು ಮುಖ್ಯವಾದುದನ್ನು ಮರೆತುಬಿಡುತ್ತೀರಿ. 278 00:32:28,320 --> 00:32:30,240 ಗೋಲು ಸತ್ತಳು, ಸೇಡಲ್ಲ. 279 00:32:30,760 --> 00:32:31,840 ಗುಡ್ಡು ಬದುಕಿದ್ದಾನೆ. 280 00:32:31,920 --> 00:32:34,360 ಗುಡ್ಡು ತನ್ನ ಸಮಾಧಿಯನ್ನು ತಾನೇ ಅಗೆದುಕೊಂಡಿದ್ದಾನೆ! 281 00:32:34,880 --> 00:32:36,200 ನಾವು ಏನನ್ನೂ ಮಾಡಬೇಕಾಗಿಲ್ಲ. 282 00:32:36,280 --> 00:32:38,760 ಪೂರ್ವಾಂಚಲದಲ್ಲಿ ನಮ್ಮ ಸ್ಥಾನ ಭದ್ರಪಡಿಸುವವರೆಗೂ, 283 00:32:39,280 --> 00:32:41,880 -ಏನೂ ಆಗಲ್ಲ. -ಒಬ್ಬ ಬಿಹಾರಿ ಎಲ್ಲರನ್ನೂ ಮೀರುತ್ತಾನೆ. 284 00:32:42,880 --> 00:32:44,520 ಈ ಮಾತನ್ನು ಕೇಳಿದ್ದೀರಲ್ಲ? 285 00:32:45,480 --> 00:32:49,040 ಹೊರಗಡೆ ಈ ನಾಟಕ ಸರಿ, ಆದರೆ ಮನೆಯಲ್ಲಿ ನನಗೆ ಗಲಭೆ ಬೇಡ. 286 00:32:51,840 --> 00:32:55,960 ಹೌದು, ನೀನು ಹೇಳಿದ್ದು ಸರಿ. ಕುಟುಂಬವೂ ಮುಖ್ಯ. 287 00:32:56,800 --> 00:32:58,280 ಹೇಳ್ತೀನಿ ಕೇಳು, ಬಡೇ, 288 00:32:59,240 --> 00:33:02,320 ಮನಸ್ಸು ಶಾಂತವಾಗಿದ್ದರೆ ಬುದ್ಧಿಯೂ ಶಾಂತವಾಗಿರುತ್ತದೆ. 289 00:33:02,800 --> 00:33:05,360 ಇದೆಲ್ಲದರ ನಡುವೆ ನೀನು ಸಲೋನಿಯನ್ನು ಮರೆತಿರುವೆ. 290 00:33:09,240 --> 00:33:11,200 ಹಾಗೇನಿಲ್ಲ, ದದ್ದಾ. 291 00:33:11,280 --> 00:33:13,040 ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾರೆ. 292 00:33:13,160 --> 00:33:14,400 ಅದು ಒಳ್ಳೆಯದು. 293 00:33:15,080 --> 00:33:18,440 ನೀವು ಹೊರಗೆ ತಿರುಗಾಡಲು ಹೋಗಿ ಎಷ್ಟು ಕಾಲವಾಯಿತು. 294 00:33:18,920 --> 00:33:20,480 ಹೋಗಿ ತಿರುಗಾಡಿಕೊಂಡು ಬನ್ನಿ. 295 00:33:21,920 --> 00:33:24,120 ಒಂದು ಮುಖ್ಯವಾದ ಕೆಲಸ ಮುಗಿಸಿ ಹೋಗುತ್ತೇವೆ. 296 00:33:24,200 --> 00:33:26,360 -ನಾನಿದ್ದೇನಲ್ಲ? ನೋಡಿಕೊಳ್ಳುತ್ತೇನೆ. -ಬೇಡ! 297 00:33:32,400 --> 00:33:35,080 ನಾನು ಮಾಡಲೇಬೇಕು. ನೀವು ಎಷ್ಟು ಸಮಯ ನನ್ನ ಭಾರ ಹೊರುತ್ತೀರಿ? 298 00:33:35,560 --> 00:33:37,520 ಗಿನ್ನಿ, ಸಿಹಿತಿಂಡಿ ಸಾಕು. 299 00:33:37,600 --> 00:33:39,000 ನಿನ್ನ ಹೊಟ್ಟೆ ನೋಯುತ್ತೆ. 300 00:33:40,920 --> 00:33:43,840 ಅವಳ ಶಾಲೆಗೆ ತಡವಾಗಿಲ್ಲವೇ? 301 00:33:43,920 --> 00:33:45,600 ಹೋಗು, ತಿಂಡಿ ಮುಗಿಯಿತು. ಹೋಗಿ. 302 00:33:45,680 --> 00:33:47,960 ನಾನು ಶಾಲೆಗೆ ಬಿಡ್ತೇನೆ. ಆ ಕಡೆ ಹೋಗ್ತಿದ್ದೇನೆ. 303 00:33:48,040 --> 00:33:50,840 ಬೇಡ. ಸಲೋನಿ ಗಿನ್ನಿನ ಶಾಲೆಗೆ ಬಿಡ್ತಾಳೆ. 304 00:33:52,240 --> 00:33:55,640 ನೀವಿಬ್ಬರೂ ಮಾತನಾಡಿ ಸಹಮತಕ್ಕೆ ಬನ್ನಿ. 305 00:33:55,720 --> 00:33:58,480 ನಾನು ಹೊಗಬೇಕು. ನಂತರ ದದ್ದಾ ಜೊತೆ ಮಾತನಾಡುತ್ತೇನೆ. 306 00:34:01,800 --> 00:34:02,800 ಬಾ, ಗಿನ್ನಿ. 307 00:34:43,360 --> 00:34:44,480 ಚೌಹಾಣ್, ಎಲ್ಲಿರುವೆ? 308 00:34:46,639 --> 00:34:47,960 ಪ್ರವೇಶದಲ್ಲಿದ್ದೇವೆ, ಸರ್. 309 00:34:48,639 --> 00:34:50,480 -ಶ್ರೀವಾಸ್ತವ? -ಸಿದ್ಧ, ಸರ್. 310 00:34:51,199 --> 00:34:52,400 ಹಿಮಾಂಶು? 311 00:34:53,760 --> 00:34:54,760 ಸ್ಥಾನದಲ್ಲಿ, ಸರ್. 312 00:34:55,679 --> 00:34:56,800 ಮತ್ತು ಮಿಶ್ರಾ? 313 00:34:56,880 --> 00:34:58,040 ನಿರ್ಗಮನದಲ್ಲಿ, ಸರ್. 314 00:34:58,520 --> 00:35:01,480 ಸರಿ. ಚಹಾ-ಸಿಗರೇಟು ಕುಡಿಯಬಯಸಿದರೆ, ಈಗಲೇ ಮಾಡಿ. 315 00:35:02,000 --> 00:35:04,640 ಪ್ರತಿಯೊಂದು ಚಲನವಲನದ ಮೇಲೆ ನಿಗಾ ಇರಿಸಿ 316 00:35:04,680 --> 00:35:05,880 ನನಗೆ ಮಾಹಿತಿ ನೀಡಿ. 317 00:35:09,360 --> 00:35:10,360 ಮತ್ತು ಇಲ್ಲಿ. 318 00:35:15,040 --> 00:35:16,040 ಬಾ! 319 00:35:17,040 --> 00:35:20,080 ಅಪ್ಪ, ಇವತ್ತು ಮೊದಲ ಪೀರಿಯಡ್ ಗಣಿತ ತರಗತಿ. 320 00:35:20,160 --> 00:35:23,640 ನಾನು ನನ್ನ ಹೋಂವರ್ಕ್ ಮಾಡಿರುವೆ. ಚಿಂತಿಸಬೇಡಿ. 321 00:35:25,080 --> 00:35:27,280 ಅಪ್ಪ, ನೀವು ಕೇಳೋದೇ ಇಲ್ಲ. 322 00:35:44,600 --> 00:35:45,440 ಭಯ್ಯಾ. 323 00:36:34,160 --> 00:36:36,280 ಇಂದು ನ್ಯಾಯಾಲಯದಲ್ಲಿ ರಮಾಕಾಂತರ ಮೊದಲ ದಿನ. 324 00:36:36,360 --> 00:36:38,800 ಬಂದರು ನೋಡಿ. ಆದೇಶ ಇಂದೇ ಬರಲಿ. 325 00:36:47,680 --> 00:36:49,480 ನ್ಯಾಯಾಧೀಶರು ಬಂದರು. ಎದ್ದು ನಿಲ್ಲಿ. 326 00:36:51,000 --> 00:36:51,960 ಏಳಿ, ಎದ್ದೇಳಿ. 327 00:36:52,600 --> 00:36:55,000 ಈಗ ಕೋರ್ಟ್ ಅಧಿವೇಶನದಲ್ಲಿದೆ! 328 00:37:01,280 --> 00:37:02,280 ಅಪ್ಪ. 329 00:37:02,880 --> 00:37:04,160 -ಗುಡ್ಡು ಭಯ್ಯಾ! -ಹಾಂ... 330 00:37:06,160 --> 00:37:07,160 ನಮಸ್ತೆ, ಭಯ್ಯಾ. 331 00:37:08,080 --> 00:37:10,160 -ನಮಸ್ತೆ, ಗುಡ್ಡು ಭಯ್ಯಾ. -ನಮಸ್ತೆ, ಭಯ್ಯಾ. 332 00:37:10,280 --> 00:37:11,400 -ನಮಸ್ತೆ. -ನಮಸ್ತೆ. 333 00:37:12,840 --> 00:37:14,840 -ನಮಸ್ತೆ, ಗುಡ್ಡು ಭಯ್ಯಾ. -ನಮಸ್ತೆ, ಭಯ್ಯಾ. 334 00:37:15,400 --> 00:37:16,400 ನಮಸ್ತೆ, ಭಯ್ಯಾ. 335 00:37:35,080 --> 00:37:36,080 ಸಲೋನಿ? 336 00:37:40,440 --> 00:37:41,440 ಈ ಹುಡುಗಿ ಯಾರು? 337 00:37:42,480 --> 00:37:43,640 ಯಾಕೆ ಕಟ್ಟಿಹಾಕಿದ್ದೀರಾ? 338 00:37:43,680 --> 00:37:45,640 -ಸುಲಿಗೆಗಾಗಿ ಅಪಹರಿಸಲಾಗಿದೆ. -ಅಪಹರಣ? 339 00:37:45,680 --> 00:37:47,360 -ಅತ್ತಿಗೆ! -ಬಾಯಿ ಮುಚ್ಚು. 340 00:37:48,120 --> 00:37:50,200 ನಿನ್ನ ಅತ್ತಿಗೆ ಅಲ್ಲವೇ, ಶತ್ರುಘನ್? 341 00:37:55,520 --> 00:37:56,520 ಸಲೋನಿ... 342 00:37:56,600 --> 00:37:59,480 -ನೀನು ದೆಂಗಿಸಿಕೊಂಡೆ ಬಿಡು. -ಸಲೋನಿ. ಸಲೋನಿ... 343 00:38:00,000 --> 00:38:00,960 ಸಲೋನಿ. 344 00:38:01,040 --> 00:38:02,480 ನನ್ನ ಮಾತು ಕೇಳು. 345 00:38:02,560 --> 00:38:03,880 ಬಿಡು, ಛೋಟೆ! 346 00:38:04,520 --> 00:38:06,440 ಸಲೋನಿ, ನಾನು ಅಸಹಾಯಕನಾಗಿದ್ದೆ. 347 00:38:06,520 --> 00:38:08,400 ಎಲ್ಲವನ್ನೂ ವಿವರಿಸುತ್ತೇನೆ. ಕೇಳಿ... 348 00:38:09,760 --> 00:38:11,400 ಸಲೋನಿ. ದಯವಿಟ್ಟು ನನ್ನ ಮಾತು ಕೇಳಿ. 349 00:38:11,480 --> 00:38:12,640 ಛೋಟೆ, ನನ್ನನ್ನು ಬಿಡು! 350 00:38:13,480 --> 00:38:15,800 ಸತ್ಯ ತಿಳಿದಿದ್ದರೂ ನನಗೆ ಇದನ್ನು ಮಾಡಿದ್ದೀಯ. 351 00:38:16,280 --> 00:38:19,360 ದದ್ದಾನ ಕೊಲ್ಲಬೇಕು ಅಂತಿದ್ದೆವು! ಈಗ ಇವಳನ್ನೂ ಕೊಲ್ಲಬೇಕೇ? 352 00:38:19,920 --> 00:38:21,800 -ಸಲೋನಿ... -ಛೋಟೆ, ಬಿಡು! 353 00:38:22,960 --> 00:38:24,520 ಛೋಟೆ. ಛೋಟೆ. 354 00:38:27,280 --> 00:38:28,280 ಛೋಟೆ! 355 00:38:29,320 --> 00:38:31,480 ಛೋಟೆ. ಛೋಟೆ, ನನ್ನನ್ನು ಬಿಡು! 356 00:38:31,560 --> 00:38:33,920 -ಸಲೋನಿ, ಎಲ್ಲವನ್ನೂ ಸರಿಪಡಿಸುವೆ. -ನಾನೇನೂ ಹೇಳಲ್ಲ. 357 00:38:34,000 --> 00:38:35,480 ಛೋಟೆ, ದಯವಿಟ್ಟು ಬಾಗಿಲು ತೆರೆ! 358 00:38:36,080 --> 00:38:38,440 ಛೋಟೆ. ಛೋಟೆ! 359 00:38:40,280 --> 00:38:42,000 -ಛೋಟೆ! -ಸಲೋನಿ, ಬೇಗ ಬರುವೆ. 360 00:38:42,080 --> 00:38:43,360 ಬೇಗ ನಿಮ್ಮನ್ನ ಕರೆದೊಯ್ಯುವೆ. 361 00:38:47,280 --> 00:38:49,400 ನ್ಯಾಯಾಲಯ ತನ್ನ ತೀರ್ಪು ನೀಡುವ ಮೊದಲು, 362 00:38:50,520 --> 00:38:53,320 ನಿಮ್ಮ ಯಾವುದೇ ಮುಕ್ತಾಯದ ವಾದ ಇದೆಯೇ? 363 00:38:57,200 --> 00:38:58,960 ನಾನು ಹೇಳಲು ಏನೂ ಇಲ್ಲ, ಸಾಹೇಬರೇ. 364 00:39:05,160 --> 00:39:06,280 ಇಲ್ಲ, ಸಾಹೇಬರೇ. 365 00:39:11,160 --> 00:39:13,960 ಪ್ರಕರಣ ಸಂಖ್ಯೆ 48673, 366 00:39:15,320 --> 00:39:18,960 ವಿಚಾರಣೆ, ರಾಜ್ಯದ ವಿರುದ್ಧ ರಮಾಕಾಂತ್ ಪಂಡಿತ್. 367 00:39:20,160 --> 00:39:25,760 ವೀರೇಂದ್ರಕಾಂತ ಪಂಡಿತ್ ಪುತ್ರ ರಮಾಕಾಂತ್ ಪಂಡಿತನ ಈ ನ್ಯಾಯಾಲಯ ತಪ್ಪಿತಸ್ಥ ಎಂದು 368 00:39:28,080 --> 00:39:29,080 ಘೋಷಿಸುತ್ತದೆ. 369 00:39:29,880 --> 00:39:31,880 ಪಂಡಿತ್ ಕತೆ ಮುಗೀತು. ತಪ್ಪಿಸಿಕೊಳ್ಳಲಾರ. 370 00:39:33,200 --> 00:39:35,360 ಕಠಿಣ ಶಿಕ್ಷೆಯೇ ಅಥವಾ ಜೀವಾವಧಿ ಶಿಕ್ಷೆಯೇ? 371 00:39:35,440 --> 00:39:37,880 ರಮಾಕಾಂತ್ ಪಂಡಿತ್, ದಯವಿಟ್ಟು ಎದ್ದು ನಿಲ್ಲಿ. 372 00:39:44,040 --> 00:39:46,880 ಸೆಕ್ಷನ್ 353 ಅಡಿಯಲ್ಲಿ, 373 00:39:47,360 --> 00:39:49,160 ಸರ್ಕಾರಿ ಸೇವಕನನ್ನು ಕೊಂದಿದ್ದಕ್ಕಾಗಿ, 374 00:39:49,640 --> 00:39:53,200 ಮತ್ತು ಸೆಕ್ಷನ್ 302 ಅಡಿಯಲ್ಲಿ, ರಮಾಕಾಂತ್ ಪಂಡಿತ್ ಶಿಕ್ಷೆ... 375 00:39:53,320 --> 00:39:55,440 ಪ್ರಾಸಿಕ್ಯೂಷನ್ ಸುಳ್ಳು ಪ್ರಕರಣ ನಡೆಸುತ್ತಿದೆ. 376 00:40:00,440 --> 00:40:03,800 ನಾನು, ರಾಬಿನ್ ರಾಧೇಶ್ಯಾಮ್ ಅಗರ್ವಾಲ್, 377 00:40:04,800 --> 00:40:05,880 ಸತ್ಯ ತಿಳಿದಿರುವೆ. 378 00:40:06,640 --> 00:40:10,480 ಎಸ್ಎಸ್ಪಿ ಮೌರ್ಯ ಮತ್ತು ರಮಾಕಾಂತ್ ಪಂಡಿತ್ ಗುಡ್ಡು ಪಂಡಿತನನ್ನು ಬಂಧಿಸಲು 379 00:40:10,560 --> 00:40:12,400 ಅಲ್ಲಿಗೆ ಹೋದರು ಎಂದು ನನಗೆ ತಿಳಿದಿದೆ. 380 00:40:13,120 --> 00:40:14,160 ಅದೇ ಪ್ರಕರಣವಾಗಿತ್ತು. 381 00:40:15,280 --> 00:40:17,040 ಇದು ನನಗೆ ತಿಳಿದಿದೆ ಏಕೆಂದರೆ... 382 00:40:20,520 --> 00:40:23,880 ಗುಡ್ಡು ಪಂಡಿತನ ಎಲ್ಲಾ ಅಕ್ರಮ ವ್ಯವಹಾರ ಮತ್ತು ಕಪ್ಪು ಹಣದ ಸಾಕ್ಷಿಯನ್ನು 383 00:40:23,960 --> 00:40:25,600 ರಮಾಕಾಂತ್ ಪಂಡಿತ್ ಗೆ ಕೊಟ್ಟಿದ್ದೆ. 384 00:40:27,440 --> 00:40:30,280 ಪ್ರಾಸಿಕ್ಯೂಷನ್ ಮತ್ತು ಪೊಲೀಸರು ಈ ಸತ್ಯವನ್ನು ಮರೆಮಾಚಿದ್ದಾರೆ. 385 00:40:31,480 --> 00:40:33,880 ಎನ್ಕೌಂಟರ್ ಬಗ್ಗೆಯೂ ಅವರು ಸುಳ್ಳು ಹೇಳುತ್ತಿರಬಹುದು. 386 00:40:35,440 --> 00:40:37,840 ನ್ಯಾಯಾಲಯದಲ್ಲಿ ಪುರಾವೆ ಸಲ್ಲಿಸಲು ನಾನು ಸಿದ್ಧ. 387 00:40:37,920 --> 00:40:39,040 ನೀನು ಹುಚ್ಚನಾ? 388 00:40:40,200 --> 00:40:42,400 ಯಾರಾದರೂ ಬಂದು ಏನು ಬೇಕಾದರೂ ಹೇಳಬಹುದಾ? 389 00:40:42,480 --> 00:40:43,640 ಇದೆಲ್ಲಾ ನಡೆಯಲ್ಲ. 390 00:40:44,200 --> 00:40:45,640 ಇದು ನ್ಯಾಯಾಲಯ. 391 00:40:45,760 --> 00:40:48,200 ಆದರೆ, ಪಂಚ್ ಜೀ, ನಿಮಗೇಕೆ ಇಷ್ಟು ಗಾಬರಿ? 392 00:40:48,320 --> 00:40:50,600 ಪ್ರಾಸಿಕ್ಯೂಷನ್ ಪ್ರಕರಣವು ಪ್ರಬಲವಾಗಿದ್ದರೆ, 393 00:40:50,640 --> 00:40:52,760 ಅದರ ವಿರುದ್ಧ ಹೋರಾಡಿ. ತಡೆಯುವವರು ಯಾರು? 394 00:40:52,840 --> 00:40:54,560 ನಾನು ಯಾರಿಗೂ ಹೆದರುವುದಿಲ್ಲ. 395 00:40:55,600 --> 00:40:56,640 ಆದರೆ ಈತ ಯಾರು? 396 00:40:57,880 --> 00:41:01,040 ಪ್ರತಿ ಸಲ ಬಂದು, ಕುರ್ಚಿ ಬೆಚ್ಚಗಾಗಿಸಿ ಹೊರಟುಬಿಡುತ್ತಾನೆ. 397 00:41:01,800 --> 00:41:05,160 ಈತನ ಬಳಿ ಸಾಕ್ಷಿ ಇದ್ದರೆ, ಮೊದಲೇ ಯಾಕೆ ಹೇಳಲಿಲ್ಲ? 398 00:41:05,760 --> 00:41:09,640 ಮಾನ್ಯರೇ, ಇದೊಂದು ಪ್ರಮುಖ ಪ್ರಕರಣ ಮತ್ತು ಯಾವುದೇ ನಿರ್ಲಕ್ಷ್ಯ ಇರಬಾರದು. 399 00:41:10,120 --> 00:41:12,480 ನ್ಯಾಯಾಲಯಕ್ಕೆ ಕೆಟ್ಟ ಹೆಸರು ಬರುತ್ತೆ. 400 00:41:13,360 --> 00:41:16,160 ದುಬೆ ಜೀ, ನೀವು ಇನ್ನೊಂದು ಮಾತು ಆಡಿದರೆ, 401 00:41:16,280 --> 00:41:18,200 ನ್ಯಾಯಾಂಗ ನಿಂದನೆ ಆಗುತ್ತದೆ. 402 00:41:18,320 --> 00:41:19,800 ನ್ಯಾಯಾಲಯದ ಗೌರವ ಕಾಪಾಡಿ. 403 00:41:19,880 --> 00:41:22,440 ಸರಿ ಅನಿಸಿದ್ದನ್ನು ಹೇಳಲೂ ಆಗದಿದ್ದರೆ, 404 00:41:22,520 --> 00:41:24,800 ನನ್ನ ಮೇಲೆ ಕೂಡ ನ್ಯಾಯಾಂಗ ನಿಂದನೆ ಆರೋಪ ಹೊರಿಸಿ. 405 00:41:24,880 --> 00:41:26,640 ಕೂತ್ಕೊಳ್ಳಿ. ಇದು ನ್ಯಾಯಾಲಯ. 406 00:41:26,760 --> 00:41:27,920 ನಮ್ಮ ಮೇಲೂ ಹೊರಿಸಿ! 407 00:41:28,000 --> 00:41:29,760 ದಯವಿಟ್ಟು ಶಾಂತರಾಗಿ! 408 00:41:30,760 --> 00:41:32,280 ಮೌನ! ಮೌನ! 409 00:41:33,760 --> 00:41:35,600 ನ್ಯಾಯಾಲಯದ ಸಭ್ಯತೆ ಕಾಪಾಡಿ. 410 00:41:36,440 --> 00:41:38,920 ನ್ಯಾಯಾಲಯದಲ್ಲಿ ಮೌನ! ಮೌನ! 411 00:41:39,000 --> 00:41:40,320 -ಅದು ನಿಜ. -ಹೌದು. 412 00:41:40,400 --> 00:41:42,440 ಈ ನ್ಯಾಯಾಲಯ ತನ್ನ ತೀರ್ಪನ್ನು ಹಿಡಿದಿಟ್ಟು 413 00:41:44,280 --> 00:41:46,360 ರಾಧೇಶ್ಯಾಮ್ ಅವರ ಹೇಳಿಕೆ 414 00:41:46,440 --> 00:41:48,640 ದಾಖಲಿಸಲು ಪೊಲೀಸರಿಗೆ ಆದೇಶಿಸುತ್ತದೆ. 415 00:41:49,160 --> 00:41:52,080 ಅದರ ನಂತರವೇ ಮುಂದಿನ ವಿಚಾರಣೆಯ ದಿನಾಂಕ ನಿರ್ಧರಿಸುತ್ತೇವೆ. 416 00:41:53,840 --> 00:41:55,080 ಸಭೆಯನ್ನು ಮುಂದೂಡಲಾಗಿದೆ. 417 00:42:11,160 --> 00:42:12,960 -ಡಿಂಪಿ... -ಬನ್ನಿ, ಮಿ. ರಾಬಿನ್. 418 00:42:13,480 --> 00:42:15,880 ಒಳ್ಳೆಯ ಪ್ರವೇಶ. ಬನ್ನಿ. 419 00:42:32,360 --> 00:42:34,480 ಇದು ಕಠಿಣ ಕೆಲಸ. 420 00:42:36,600 --> 00:42:37,640 ಪ್ರಯತ್ನಿಸ್ತಿದ್ದೇನೆ. 421 00:42:40,160 --> 00:42:42,280 ತಪ್ಪು ಮಾಡಿದರೆ ದಯವಿಟ್ಟು ಕ್ಷಮಿಸು. 422 00:42:44,280 --> 00:42:45,600 ಮೇಡಂ ಜೊತೆ ಮಾತನಾಡಿ. 423 00:42:47,360 --> 00:42:49,440 ಮೇಡಂ, ಐಜಿ ದುಬೆ ಫೋನಿನಲ್ಲಿದ್ದಾರೆ. 424 00:42:50,320 --> 00:42:51,840 ಯೋಜನೆ ಕಾರ್ಯಗತವಾಗಲಿಲ್ಲ. 425 00:42:58,120 --> 00:42:59,360 ನಮಸ್ಕಾರ, ಮೇಡಂ. 426 00:42:59,440 --> 00:43:03,040 ರಮಾಕಾಂತ್ ಪಂಡಿತ್ ಪ್ರಕರಣವನ್ನು ಮುಂದೂಡಲಾಗಿದೆ 427 00:43:03,120 --> 00:43:06,760 ಮತ್ತು ನಮ್ಮ ಗುಡ್ಡು ಯೋಜನೆಯೂ ವಿಫಲವಾಗಿದೆ. 428 00:43:07,280 --> 00:43:08,880 ಅವನು ಗಲಾಟೆ ಏನೂ ಮಾಡಲಿಲ್ಲ. 429 00:43:09,840 --> 00:43:14,640 ಮಿಕ್ಕ ವಿವರಗಳನ್ನು ವೈಯಕ್ತಿಕವಾಗಿ ಭೇಟಿಯಾದಾಗ ನೀಡುತ್ತೇನೆ. 430 00:43:15,120 --> 00:43:16,120 ಜೈ ಹಿಂದ್, ಮೇಡಂ. 431 00:43:21,920 --> 00:43:23,880 -ವಿಡಿಯೋ ನೋಡುತ್ತಿದ್ದಾನಾ? -ಹೌದು. 432 00:43:23,960 --> 00:43:25,320 -ಅಷ್ಟೇ. -ತೋರಿಸುತ್ತಿರುವೆ. 433 00:43:25,840 --> 00:43:28,880 ಸಣ್ಣ ಪುಟ್ಟ ಕೆಲಸಗಳಿಗೆ ನನಗೆ ನಿಮ್ಮ ಸಹಾಯ ಬೇಕು. 434 00:43:28,960 --> 00:43:31,320 ಹಾಗಾಗಿ, ನಿಮ್ಮ ಫೋನ್ ಸಂಖ್ಯೆ ಸೇವ್ ಮಾಡಿದ್ದೇನೆ. 435 00:43:31,400 --> 00:43:32,760 -ತುಂಬಾ ಧನ್ಯವಾದಗಳು. -ಸರಿ. 436 00:43:33,760 --> 00:43:35,400 ನನಗೊಂದು ಪ್ಲೇಟ್ ಭೇಲ್ ಪುರಿ ಕೊಡು. 437 00:43:44,240 --> 00:43:45,240 ಡಿಂಪಿ... 438 00:43:48,360 --> 00:43:49,880 -ಡಿಂಪಿ. -ನಾನು ಕೋಪಗೊಂಡಿಲ್ಲ. 439 00:43:51,120 --> 00:43:52,120 ಅಸಮಾಧಾನಗೊಂಡಿದ್ದೇನೆ. 440 00:43:53,360 --> 00:43:56,400 ನನ್ನ ರಕ್ಷಿಸುವುದು ಅವರ ಜವಾಬ್ದಾರಿ ಅಂತ ಎಲ್ಲರೂ ಯೋಚಿಸುತ್ತಾರೆ. 441 00:43:56,480 --> 00:43:58,480 ನನಗೆ ಜವಾಬ್ದಾರಿ ನಿಭಾಯಿಸೋಕಾಗಲ್ಲ ಅಂದಂತೆ. 442 00:43:59,360 --> 00:44:02,000 ಕೇಳಿ, ನಾನು ಎಲ್ಲರಿಗಿಂತ ಉತ್ತಮವಾಗಿ ನಿಭಾಯಿಸಬಲ್ಲೆ. 443 00:44:02,080 --> 00:44:03,080 ಹೌದು. 444 00:44:03,560 --> 00:44:06,960 ಅವರು ನನ್ನ ತಂದೆಯಲ್ಲವೇ? ಅವರನ್ನು ಉಳಿಸಲು ನಾನು ಪ್ರಯತ್ನಿಸುವುದಿಲ್ಲವೇ? 445 00:44:08,520 --> 00:44:10,360 -ನಾನು ಹೊರಗಿನವಳಾ? -ಅರೆ... 446 00:44:15,040 --> 00:44:16,040 ಅದು ನಾನು. 447 00:44:21,480 --> 00:44:24,320 ನನಗಿಂತ, ಹಣಕ್ಕಿಂತ ಜೀವನದಲ್ಲಿ ಯಾವುದೂ ಮುಖ್ಯವಲ್ಲ 448 00:44:24,400 --> 00:44:26,160 ಅಂತ ಯಾವಾಗಲೂ ನಂಬಿದ್ದೆ. 449 00:44:28,520 --> 00:44:30,600 ನಿನ್ನನ್ನು ಭೇಟಿಯಾದ ನಂತರ ನನಗೆ ಅರಿವಾಯಿತು, 450 00:44:31,080 --> 00:44:33,840 ಇತರರಿಗಾಗಿ ಬದುಕುವ ಸಂತೋಷ ಬೇರೆ ಯಾವುದರಲ್ಲೂ ಇಲ್ಲ ಅಂತ. 451 00:44:39,240 --> 00:44:42,640 ಡಿಂಪಿ, ನಾನು ಏನೇ ಮಾಡಿದರೂ, ನನ್ನ ಈ ಕುಟುಂಬಕ್ಕಾಗಿ ಮಾಡಿದೆ. 452 00:44:46,960 --> 00:44:48,320 ಹೌದು, ನಾನು ತಪ್ಪು ಮಾಡಿದೆ. 453 00:44:49,400 --> 00:44:50,800 ನಿನ್ನಿಂದ ರಹಸ್ಯವಾಗಿಟ್ಟೆ. 454 00:44:56,360 --> 00:44:57,720 ಡಿಂಪಿ ಪಂಡಿತ್, 455 00:44:59,520 --> 00:45:03,840 ರಾಧೇಶ್ಯಾಮ್ ಅಗರ್ವಾಲನಿಗೆ ನೀನು ಒಂದೇ ಒಂದು ಅವಕಾಶ ಕೊಡಲ್ವಾ? 456 00:45:09,360 --> 00:45:10,360 ದಯವಿಟ್ಟು. 457 00:45:13,240 --> 00:45:14,240 ದಯವಿಟ್ಟು. 458 00:45:15,600 --> 00:45:16,600 ದಯವಿಟ್ಟು. 459 00:45:19,480 --> 00:45:21,720 -ದಯವಿಟ್ಟು. -ನಿನಗೆ ಅವಕಾಶ ಸಿಗಲ್ಲ. 460 00:45:33,720 --> 00:45:34,960 ಇದೂ ಸರಿಯೇ. 461 00:46:03,840 --> 00:46:06,560 ಇಲ್ಲ. ಸ್ಥಾನಕ್ಕೆ ಹಿಂತಿರುಗಿ. 462 00:46:09,480 --> 00:46:11,920 ಇದು ಒಳ್ಳೆಯ ಫ್ಯಾಮಿಲಿ ಫೋಟೋ. 463 00:46:13,960 --> 00:46:15,680 ನೀವೂ ಸೇರಿಕೊಳ್ಳಿ, ಗುಡ್ಡು ಭಯ್ಯಾ. 464 00:46:15,760 --> 00:46:17,440 ನೀವಿಲ್ಲದೆ ಅದು ಪೂರ್ಣವಾಗುವುದಿಲ್ಲ. 465 00:46:17,520 --> 00:46:22,080 ಇಲ್ಲ, ನಾನು ಹೇಗೆ ಬರಲಿ? ನಾನು ಅವರ ಮುದ್ದು ಮಗ ಅಲ್ಲ. 466 00:46:22,160 --> 00:46:23,160 ಗುಡ್ಡು... 467 00:46:32,760 --> 00:46:34,520 ಅಪ್ಪನಿಗೆ ಪುರಾವೆ ಕೊಟ್ಟಿದ್ದೇಕೆ? 468 00:46:36,360 --> 00:46:39,520 ಭಯ್ಯಾ, ಅಪ್ಪ ಕೇಳಿದ್ದಕ್ಕೇ ಕೊಟ್ಟರು. 469 00:46:39,600 --> 00:46:41,160 ಅವನಿಗೆ ಮಾತು ಬರಲ್ವಾ? 470 00:46:42,640 --> 00:46:44,640 ಅವನಿಗೆ ಮಾತನಾಡಲು ನಿನ್ನ ಸಹಾಯ ಬೇಕೇ? 471 00:46:46,880 --> 00:46:48,840 ಸಾಮಾನ್ಯವಾಗಿ ನೀನು ಬಾಯಿ ಮುಚ್ಚುವುದೇ ಇಲ್ಲ. 472 00:46:48,920 --> 00:46:50,840 -ಅರೆ. -ಮಾತನಾಡು. 473 00:46:55,640 --> 00:46:59,720 ಭಯ್ಯಾ, ಪುರಾವೆ ನೀಡಿದ್ದಕ್ಕೆ ನಿಮಗೇನೂ ಬೇಜಾರಿಲ್ಲ ಅಂತ ಗೊತ್ತು. 474 00:47:00,880 --> 00:47:04,520 ನಾನು ನಿಮಗೆ ಮೋಸ ಮಾಡಿದೆ ಅಂದುಕೊಂಡು ಕೋಪಗೊಂಡಿದ್ದೀರಿ. 475 00:47:05,920 --> 00:47:07,400 ನನಗೆ ಬೇಜಾರಿದೆ, 476 00:47:08,640 --> 00:47:10,120 ರಾಧೇಶ್ಯಾಮ್ ಅಗರ್ವಾಲ್. 477 00:47:13,080 --> 00:47:15,120 ನಿನಗೆ ಎಲ್ಲವೂ ಗೊತ್ತಿತ್ತು. 478 00:47:18,760 --> 00:47:21,880 ವ್ಯಾಪಾರ, ಕುಟುಂಬದ ಬಗ್ಗೆ. 479 00:47:26,360 --> 00:47:28,520 ಏನು ಆಟ ಆಡುತ್ತಿರುವೆ, ಬೇವರ್ಸಿ? 480 00:47:29,000 --> 00:47:30,440 -ಗುಡ್ಡು. -ಆಟ... 481 00:47:32,360 --> 00:47:34,280 ಭಯ್ಯಾ, ನೀವು ಅಪಾರ್ಥ ಮಾಡಿಕೊಂಡಿದ್ದೀರ. 482 00:47:35,200 --> 00:47:37,200 ನನ್ನನ್ನು ನಿಮ್ಮ ತಮ್ಮ ಅಂದುಕೊಂಡು ಕ್ಷಮಿಸಿ. 483 00:47:39,760 --> 00:47:42,520 ನನಗೆ ಒಬ್ಬನೇ ತಮ್ಮ ಮತ್ತು ಅದು ಬಬ್ಲು ಪಂಡಿತ್. 484 00:47:42,600 --> 00:47:43,680 ಗುಡ್ಡು! 485 00:47:46,280 --> 00:47:47,640 ನಾನು ಆರಾಮಾಗಿದ್ದೇನೆ. 486 00:47:59,440 --> 00:48:00,520 ನೀನು... 487 00:48:02,840 --> 00:48:04,520 ನನ್ನ ಕುಟುಂಬವನ್ನು ನಾಶಮಾಡಿದೆ. 488 00:48:06,800 --> 00:48:08,000 ಏನಂದುಕೊಂಡಿದ್ದೆ? 489 00:48:09,000 --> 00:48:10,120 ಗುಡ್ಡು ದಡ್ಡ. 490 00:48:11,880 --> 00:48:13,680 ಗುಡ್ಡು ಒಬ್ಬ ಮೂರ್ಖ. 491 00:48:15,440 --> 00:48:17,120 ಮಂದಬುದ್ಧಿಯವನು. 492 00:48:17,200 --> 00:48:20,080 "ಇವನನ್ನು ತುಳಿಯಬಹುದು. ವಿರುದ್ಧ ಮಾತಾಡಲ್ಲ!" 493 00:48:20,160 --> 00:48:21,600 -ಅಲ್ಲವೇ? -ಗುಡ್ಡು. 494 00:48:22,400 --> 00:48:24,360 ಮತ್ತೆ ಯಾಕೆ ಬಂದೆ? ನಾನು ಏನು ಹೇಳಿದ್ದೆ? 495 00:48:24,840 --> 00:48:26,280 ನೀನು ಮರಳಿ ಬರಬಾರದು ಎಂದು. 496 00:48:26,360 --> 00:48:27,360 ಈ ಕುಟುಂಬ ತನ್ನನ್ನು 497 00:48:27,440 --> 00:48:30,280 ನೋಡಿಕೊಳ್ಳುತ್ತದೆ ಅಂತ ಹೇಳಿದ್ದೆ ತಾನೆ? ಹೊರಡು ಇಲ್ಲಿಂದ. 498 00:48:30,360 --> 00:48:31,800 ನೀವು ಕುರುಡಾಗಿದ್ದೀರಿ! 499 00:48:33,280 --> 00:48:36,440 ನನ್ನನ್ನು ದ್ವೇಷಿಸುತ್ತಾ ನಮ್ಮಮ್ಮನ ತಲೆಯೂ ಕೆಟ್ಟಿದೆ! 500 00:48:43,600 --> 00:48:45,320 ಆಕೆ ನನ್ನ ತಬ್ಬಿಕೊಳ್ಳುವುದೂ ಇಲ್ಲ. 501 00:48:46,560 --> 00:48:50,240 ಅಲ್ಲವೇ? ಏಕೆಂದರೆ ಆಕೆಗೆ ಈಗ ಕುಟುಂಬವಿದೆ. 502 00:48:54,040 --> 00:48:55,800 ಇವನು ಪುರಾವೆ ನೀಡದಿದ್ದಿದ್ದರೆ, 503 00:48:55,880 --> 00:48:58,360 ಅಪ್ಪ ಅವನಿಗೆ ಗುಂಡು ಹೊಡೆದು ಜೈಲಿಗೆ ಹೋಗುತ್ತಿರಲಿಲ್ಲ. 504 00:49:01,440 --> 00:49:04,040 ನಾನು ಮೊದಲಿನಿಂದಲೂ ದಡ್ಡನೇ ಆಗಿದ್ದೆ. 505 00:49:04,120 --> 00:49:07,800 ಈ ಹುಚ್ಚನ್ನು ಮುಂದುವರಿಸುತ್ತಲೇ ಇರುತ್ತಿದ್ದೆ, ಅಲ್ವಾ? ಎಲ್ಲರಿಂದ ದೂರವಾಗಿ. 506 00:49:08,800 --> 00:49:09,880 ಕುಟುಂಬದಿಂದ ದೂರ! 507 00:49:12,440 --> 00:49:15,400 ಆದರೆ ಇವನು... ಇವನ ಸ್ಥಾನವನ್ನು ಅರಿತ. 508 00:49:15,480 --> 00:49:18,000 ಯಾವ ಸ್ಥಾನ? 509 00:49:19,280 --> 00:49:21,800 ನನ್ನ ಸ್ಥಾನದ ಬಗ್ಗೆ ಮಾತಾಡೋದಲ್ಲ. ನಿಮ್ಮದು ಹೇಳಿ. 510 00:49:23,960 --> 00:49:25,240 ಇಲ್ಲ, ಸ್ವಲ್ಪ ಇರು. 511 00:49:25,320 --> 00:49:27,000 ನನ್ನ ಬಳಿ ಏನೂ ಇರಲಿಲ್ಲ. 512 00:49:28,080 --> 00:49:29,440 ನನಗೆ ಕುಟುಂಬ ಸಿಕ್ಕಿತು. 513 00:49:30,560 --> 00:49:34,400 ನಿಮಗೆ ಎಲ್ಲವೂ ಇತ್ತು. ಎಲ್ಲವನ್ನೂ ಕಳೆದುಕೊಂಡಿರಿ. 514 00:49:36,760 --> 00:49:37,960 ನಿಮಗಿದ್ದಿದ್ದು ಗೋಲು. 515 00:49:39,800 --> 00:49:40,880 ಈಗ ಅವಳೂ ಹೋದಳು. 516 00:49:42,840 --> 00:49:45,680 ಅವಳನ್ನು ಎಚ್ಚರಿಸಿದೆ, ಆದರೆ ತಡೆಯಲಾಗಲಿಲ್ಲ. 517 00:49:46,880 --> 00:49:49,920 ಆದರೆ ಇನ್ನು ನನ್ನ ಕುಟುಂಬವನ್ನು ಹಿಂಸಿಸಲು 518 00:49:50,000 --> 00:49:52,400 ನಾನು ಬಿಡುವುದಿಲ್ಲ. ಅಷ್ಟೇ. 519 00:49:57,440 --> 00:49:59,880 -ಗೋಲುನ ಭೇಟಿಯಾದೆಯಾ? -ಹೌದು. 520 00:50:00,640 --> 00:50:03,480 ತನ್ನ ಖಾತೆ ಮುಚ್ಚಿ, ಎಲ್ಲಾ ದುಡ್ಡು ಪಡೆದು ಹೊರಟಳು. 521 00:50:07,120 --> 00:50:10,440 ಗೋಲುನ ಹುಡುಕುತ್ತಾ ಊರೆಲ್ಲಾ ತಿರುಗಾಡುತ್ತಿದ್ದೇನೆ, 522 00:50:12,160 --> 00:50:13,960 ಹುಚ್ಚನ ಹಾಗೆ ಹುಡುಕುತ್ತಿದ್ದೇನೆ, 523 00:50:15,400 --> 00:50:19,880 ಒಂದು ಮಾತೂ ಹೇಳಲಾಗಲಿಲ್ಲವೇ ನಿನಗೆ? ಹಾಂ? 524 00:50:20,360 --> 00:50:21,960 ಕುಟುಂಬ ನೋಡಿಕೊಳ್ಳುತ್ತಿದ್ದೆಯಾ? 525 00:50:22,040 --> 00:50:23,600 ಹೌದು, ನೋಡಿಕೊಳ್ಳುತ್ತಿದ್ದೆ. 526 00:50:28,080 --> 00:50:30,200 ಗೋಲುನ ಸಜೀವವಾಗಿ ಸುಟ್ಟರು! 527 00:50:30,280 --> 00:50:32,920 -ಸೂಳೆಮಗನೇ! -ಗುಡ್ಡು! 528 00:50:33,320 --> 00:50:34,520 ಅವನನ್ನು ಬಿಡು! 529 00:50:35,360 --> 00:50:37,680 -ಭಯ್ಯಾ! -ಅವನನ್ನು ಬಿಡು! 530 00:50:43,480 --> 00:50:44,840 ಅವನನ್ನು ಬಿಡು, ಗುಡ್ಡು! 531 00:50:48,640 --> 00:50:49,680 ಗುಡ್ಡು, ಅವನ ಬಿಡು! 532 00:50:55,280 --> 00:50:56,280 ಗುಡ್ಡು... 533 00:51:54,280 --> 00:51:56,960 ಮಿರ್ಜಾಪುರ್ 534 00:53:49,880 --> 00:53:51,880 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 535 00:53:51,960 --> 00:53:53,960 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.