1
00:02:23,280 --> 00:02:25,080
ನಾನಿಲ್ಲಿ ಎಷ್ಟು ದಿನ ಇರಬೇಕು ಹೇಳು.
2
00:02:25,840 --> 00:02:28,440
ಬೇಕಿರುವ ವಸ್ತುಗಳ ಪಟ್ಟಿ ಕೊಡುತ್ತೇನೆ.
3
00:02:35,880 --> 00:02:37,160
ಏನೋ ಯೋಚನೆ ಮಾಡಿರುತ್ತೀಯಾ,
4
00:02:38,400 --> 00:02:39,760
ಅದಕ್ಕೇ ಜೀವಂತವಾಗಿಟ್ಟಿರುವೆ.
5
00:02:40,760 --> 00:02:44,000
ಯಾಕಿಷ್ಟು ಚಂಚಲವಾಗಿದ್ದೀಯ?
ನಿನ್ನನ್ನು ಕೊಲ್ಲುತ್ತೇನೆ.
6
00:02:46,960 --> 00:02:48,760
ಆದರೆ ಮೊದಲು ಹಿಂಸಿಸುತ್ತೇನೆ.
7
00:02:54,000 --> 00:02:57,440
ಮತ್ತೆ ಶುರು ಮಾಡು.
ಎಷ್ಟೊತ್ತಿನಿಂದ ಕಾಯುತ್ತಿದ್ದೇನೆ.
8
00:03:28,800 --> 00:03:30,320
ನೀನು ಹೇಳಿದ್ದು ಸರಿ, ನಾನು...
9
00:03:32,520 --> 00:03:34,320
ನಾನು ಛೋಟೆನ ಬಳಸಿಕೊಂಡೆ.
10
00:03:36,920 --> 00:03:41,120
ಅವನು ನನ್ನ ಥರದವನಾಗಿರಲಿಲ್ಲ.
ಯಾವಾಗಲೂ ತರಾತುರಿ ಮತ್ತು ನನಗೆ...
11
00:03:43,480 --> 00:03:44,920
ನನಗೆ ನಿಯಂತ್ರಣ ಇಷ್ಟ.
12
00:03:48,360 --> 00:03:49,640
ಆ ಗುಣ ನಿನ್ನಲ್ಲಿದೆ.
13
00:03:58,760 --> 00:04:00,480
ನಿನಗೆ ನಾನಂದ್ರೆ ಇಷ್ಟ, ಅಲ್ವಾ?
14
00:04:03,560 --> 00:04:04,560
ಶತ್ರುಘನ್.
15
00:04:26,680 --> 00:04:30,000
ನಿನಗೆ ಯಾವುದೇ ಯೋಜನೆ ಇಲ್ಲ ಅಂತ ನನಗೆ ಗೊತ್ತು.
16
00:04:32,600 --> 00:04:34,920
ಮತ್ತು ನೀನು ನನ್ನನ್ನು ಕೊಲ್ಲಲು ಬಯಸುವುದಿಲ್ಲ.
17
00:04:38,480 --> 00:04:40,880
ನೀನು ನನ್ನೊಂದಿಗೆ ಬದುಕಲು ಬಯಸುತ್ತೀಯಲ್ಲವೇ?
18
00:04:43,520 --> 00:04:44,800
ನಿನ್ನ ತಡೆಯುವವರು ಯಾರು?
19
00:04:45,480 --> 00:04:46,480
ದದ್ದಾ?
20
00:04:48,240 --> 00:04:51,880
ನಾನಿಲ್ಲದಿದ್ದರೆ ದದ್ದಾ ನಿನ್ನನ್ನು
ಆ್ಯಸಿಡ್ನಿಂದ ಸುಟ್ಟು ಹಾಕುತ್ತಿದ್ದರು.
21
00:04:53,360 --> 00:04:55,240
ಮತ್ತೆ ಮಿರ್ಜಾಪುರಕ್ಕೆ ನನ್ನೊಂದಿಗೆ ಬಾ.
22
00:04:57,000 --> 00:04:59,440
ಇಲ್ಲಿ ಯಾರೂ ಛೋಟೆ ತ್ಯಾಗಿಗೆ ಬೆಲೆ ಕೊಡುವುದಿಲ್ಲ.
23
00:05:01,680 --> 00:05:03,680
ನಿನ್ನ ಕರೆದುಕೊಂಡು ಹೋಗುವೆ, ಶತ್ರುಘನ್.
24
00:05:22,760 --> 00:05:24,360
ನನ್ನನ್ನು ಪ್ರೀತಿಸುತ್ತೀಯಾ?
25
00:05:30,840 --> 00:05:31,800
ಹೌದು.
26
00:05:43,200 --> 00:05:44,280
ಸುಳ್ಳು.
27
00:05:48,520 --> 00:05:49,840
ಸುಳ್ಳು.
28
00:05:53,960 --> 00:05:55,760
ನೀನು ನನಗೆ ಸುಳ್ಳು ಹೇಳುತ್ತಿರುವೆ.
29
00:05:57,240 --> 00:05:58,960
ನಾನು ಮತ್ತೆ ಮೋಸಹೋಗುವುದಿಲ್ಲ.
30
00:06:04,400 --> 00:06:07,000
ಭರತ್ ತ್ಯಾಗಿಯಂತೆ
ಸುಳ್ಳಿನ ಜೀವನ ನಡೆಸುತ್ತಿದ್ದೀಯ.
31
00:06:15,120 --> 00:06:17,760
ನನ್ನನ್ನು ಕೊಂದರೆ
ನಿನ್ನ ಸಮಸ್ಯೆ ಬಗೆಹರಿಯುವುದಿಲ್ಲ.
32
00:06:19,320 --> 00:06:20,920
ನೀನು ದದ್ದಾನನ್ನು ಕೊಲ್ಲಬೇಕು.
33
00:06:26,000 --> 00:06:28,240
ಏಕೆಂದರೆ ದದ್ದಾ ಬದುಕಿರುವವರೆಗೂ
34
00:06:30,040 --> 00:06:32,440
ಛೋಟೆ ತ್ಯಾಗಿ ಮರಳಿ ಬರಲು ಸಾಧ್ಯವಿಲ್ಲ.
35
00:07:33,200 --> 00:07:35,360
ಮಿರ್ಜಾಪುರ್
36
00:08:14,960 --> 00:08:16,720
ಪೂರ್ವಾಂಚಲ್
37
00:09:02,080 --> 00:09:06,040
ಸಂಗೀತ! ಮತ್ತು ಆಕ್ಷನ್!
38
00:09:06,120 --> 00:09:08,880
ಭ್ರಷ್ಟಾಚಾರವ ದ್ವೇಷಿಸುವಳು
ಅಪರಾಧಿಗಳಿಗೆ ತೊಂದರೆ ಕೊಡುವಳು
39
00:09:09,000 --> 00:09:09,840
ಮಿಸ್ ಜರೀನಾ!
40
00:09:09,880 --> 00:09:12,080
ಬಾಹುಬಲಿಗಳ ವಿರುದ್ಧ ಸಮರ ಸಾರುವಳು
ಅವಳು ಧೈರ್ಯಶಾಲಿ
41
00:09:12,160 --> 00:09:13,280
ಐದು, ಆರು, ಏಳು, ಎಂಟು!
42
00:09:13,360 --> 00:09:17,160
ಸರಳ ಮನಸಿನವಳು
ಕೆಚ್ಚೆದೆಯ ಹೃದಯದವಳು
43
00:09:17,240 --> 00:09:20,960
ಅಪರಾಧ ಮುಕ್ತ ರಾಜ್ಯ ಸಾಧಿಸಲು
ಸಿಎಂ ಮಾಧುರಿ ಬಂದಿದ್ದಾಳೆ
44
00:09:21,040 --> 00:09:24,640
ಸರಳ ಮನಸಿನವಳು
ಕೆಚ್ಚೆದೆಯ ಹೃದಯದವಳು
45
00:09:24,760 --> 00:09:28,440
ಅಪರಾಧ ಮುಕ್ತ ರಾಜ್ಯ ಸಾಧಿಸಲು
ಸಿಎಂ ಮಾಧುರಿ ಬಂದಿದ್ದಾಳೆ
46
00:09:28,520 --> 00:09:29,360
ತುಂಬಾ ಒಳ್ಳೆಯದು!
47
00:09:29,440 --> 00:09:31,880
ಸರಳ ಮನಸಿನವಳು
ಕೆಚ್ಚೆದೆಯ ಹೃದಯದವಳು
48
00:09:31,960 --> 00:09:34,200
ಕಟ್, ಕಟ್, ಕಟ್! ಸೌಂಡ್ ಅವನೇ!
49
00:09:34,280 --> 00:09:35,400
ಅಪರಾಧ ಮುಕ್ತ...
50
00:09:38,520 --> 00:09:39,520
ಹೇಗಿತ್ತು?
51
00:09:40,520 --> 00:09:42,880
-ಕಾರ್ಟೂನಂತೆ ಕಾಣುತ್ತೇನೆ.
-ಖಂಡಿತ ಇಲ್ಲ.
52
00:09:43,520 --> 00:09:46,400
ರಾಜ್ಯದಾದ್ಯಂತ ಈ ಹಾಡು
ದಿನವಿಡೀ ಪ್ರತಿಧ್ವನಿಸಿದಾಗ,
53
00:09:46,960 --> 00:09:48,480
ನೀವು ಎಲ್ಲರ ಹೃದಯ ಆಳುವಿರಿ.
54
00:09:51,360 --> 00:09:53,880
ಆದರೆ ಇದು ಚಿಕ್ಕಪ್ಪನಿಗೆ ಹೇಗೆ ಸಂಬಂಧಿಸಿದೆ?
55
00:09:54,000 --> 00:09:55,640
ನಾನು ಅವರನ್ನು ಹುಡುಕಲು ಹೇಳಿದೆ.
56
00:09:56,280 --> 00:09:59,200
ಅದೊಂದು ಬಿಟ್ಟು
ಪಕ್ಷಕ್ಕಾಗಿ ಎಲ್ಲಾ ಮಾಡುತ್ತಿದ್ದೀ.
57
00:09:59,280 --> 00:10:00,760
ನನ್ನನ್ನು ನಂಬಿದ್ದೀರಲ್ಲವೇ?
58
00:10:01,600 --> 00:10:03,960
ಫಲಿತಾಂಶ ನೀಡುತ್ತೇನೆ. ಈಗ ನನ್ನ ಜೊತೆ ಬನ್ನಿ.
59
00:10:04,520 --> 00:10:05,640
-ಬನ್ನಿ.
-ಆದರೆ...
60
00:10:05,720 --> 00:10:06,880
ಬನ್ನಿ.
61
00:10:06,960 --> 00:10:08,600
ಗಮನ ಕೊಡಿ, ಆಗ ಅರ್ಥ ಆಗುತ್ತೆ.
62
00:10:08,640 --> 00:10:10,120
ನನ್ನ ಜೊತೆ ಬನ್ನಿ. ಬನ್ನಿ.
63
00:10:10,200 --> 00:10:11,520
ತಯಾರಾಗಿ. ಮೇಡಂ ಬರ್ತಿದ್ದಾರೆ.
64
00:10:11,600 --> 00:10:12,600
ಬನ್ನಿ.
65
00:10:12,640 --> 00:10:14,240
ಉತ್ಸಾಹದಿಂದ ಮಾಡಿ, ಆಯ್ತಾ?
66
00:10:14,320 --> 00:10:16,760
ಇವರಿಗೆ ಸ್ಟೆಪ್ಸ್ ತೋರಿಸಿ...
ಬನ್ನಿ, ಮೇಡಂ. ಬನ್ನಿ.
67
00:10:17,440 --> 00:10:19,160
ಸರಿ. ಎಲ್ಲರಿಗೂ ಒಳ್ಳೆಯದಾಗಲಿ.
68
00:10:19,240 --> 00:10:22,200
ಹಾಂ. ಹೋಗೋಣ. ಒಬ್ಬರನ್ನೊಬ್ಬರು ಅನುಸರಿಸಿ.
69
00:10:23,520 --> 00:10:25,040
ಹೀಗೆ, ಒಂದು, ಎರಡು,
70
00:10:26,360 --> 00:10:27,960
ಮೂರು, ನಾಲ್ಕು...
71
00:10:28,640 --> 00:10:30,520
-ಹಲೋ?
-ಹಲೋ, ಆನಂದ್?
72
00:10:30,640 --> 00:10:31,880
ಐದು, ಆರು.
73
00:10:32,000 --> 00:10:34,000
-ಯಾರು?
-ಬೀನಾ ತ್ರಿಪಾಠಿ ಮಾತನಾಡುತ್ತಿರುವೆ.
74
00:10:35,760 --> 00:10:37,200
ನನಗೆ ಹೆಚ್ಚು ಸಮಯವಿಲ್ಲ.
75
00:10:37,760 --> 00:10:39,880
ಕಷ್ಟಪಟ್ಟು ಫೋನ್ ಕದ್ದು ಕರೆ ಮಾಡಿದ್ದೇನೆ.
76
00:10:40,440 --> 00:10:43,480
ಮಾಧುರಿಗೆ ಹೇಳಿ
ನಾನು ಇಲ್ಲಿಂದ ಹೊರಬರುವಂತೆ ನೋಡಿಕೊಳ್ಳಿ.
77
00:10:43,520 --> 00:10:46,520
ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇನೆ.
ನಂತರ ಮಾತಾಡುತ್ತೇನೆ.
78
00:10:50,000 --> 00:10:51,080
ತಗೊಳ್ಳಿ, ಭಾಭಿ.
79
00:11:05,800 --> 00:11:11,240
ಗುಡುಗುವ ಮೋಡಗಳು ಮತ್ತೆ ಕರಗುತ್ತಿವೆ
80
00:11:11,320 --> 00:11:12,600
ಹಿತ್ತಲಿನಲ್ಲಿ
81
00:11:15,720 --> 00:11:19,760
ಕೀಟಗಳ ಕಲರವ
82
00:11:19,840 --> 00:11:22,560
ಹಿತ್ತಲಿನಲ್ಲಿ
83
00:11:24,200 --> 00:11:25,600
ನಿನ್ನೊಂದಿಗೆ
84
00:11:29,600 --> 00:11:30,600
ಇದನ್ನು ಪ್ರಯತ್ನಿಸಿ.
85
00:11:30,680 --> 00:11:33,960
ಶರತ್ಕಾಲದಲ್ಲಿ
86
00:11:34,040 --> 00:11:35,560
ನನ್ನ ಪ್ರೀತಿ
87
00:11:43,440 --> 00:11:44,640
ಶರದನಿಗೆ ಹೇಳಿದೆ,
88
00:11:45,960 --> 00:11:47,160
ನನ್ನ ಕಾಶಿಗೆ ಕರೆದೊಯ್ಯಲು.
89
00:11:49,360 --> 00:11:51,480
ನನ್ನ ಆತ್ಮವು ಈಗಾಗಲೇ ನನ್ನನ್ನು ತೊರೆದಿದೆ,
90
00:11:53,000 --> 00:11:57,160
ಈಗ ನನ್ನ ದೇಹವೂ ಸರಿಯಾಗಿ ಕೆಲಸ ಮಾಡುತ್ತಿಲ್ಲ.
91
00:11:57,880 --> 00:11:59,200
ನಿಮಗೆ ವಯಸ್ಸಾಗಿದೆ.
92
00:12:00,680 --> 00:12:04,400
ಎಷ್ಟು ನಾಟಕ.
ಕೊರಗುವುದನ್ನು ಬಿಟ್ಟು ಕಾರ್ಡ್ ಎಸೆಯಿರಿ.
93
00:12:05,880 --> 00:12:07,400
ಹಾಗೇ ಮಾಡುತ್ತೇನೆ.
94
00:12:12,920 --> 00:12:14,240
ಯಾರೆಂದು ನೀವು ಓದಬಹುದೇ?
95
00:12:16,760 --> 00:12:18,120
ಅಜ್ಞಾತ.
96
00:12:21,560 --> 00:12:22,840
ನಿನ್ನೊಂದಿಗೆ
97
00:12:22,920 --> 00:12:25,320
-ಹಲೋ?
-ನಮಸ್ಕಾರ, ಶಕುಂತಲಾ.
98
00:12:25,880 --> 00:12:26,880
ನಮಸ್ಕಾರ.
99
00:12:27,720 --> 00:12:29,280
ನಿಮಗೆ ನನ್ನ ಪರಿಚಯ ಇಲ್ಲ.
100
00:12:31,240 --> 00:12:32,960
ನಾನು ಬೀನಾ ತ್ರಿಪಾಠಿ.
101
00:12:35,240 --> 00:12:38,040
-ಹೇಳಿ.
-ನನಗೆ ಹೆಚ್ಚು ಸಮಯವಿಲ್ಲ.
102
00:12:38,120 --> 00:12:40,280
ಕಷ್ಟಪಟ್ಟು ಫೋನ್ ಕದ್ದು ಕರೆ ಮಾಡಿದ್ದೇನೆ.
103
00:12:41,160 --> 00:12:44,080
ದಯವಿಟ್ಟು ಶರದ್ ಗೆ
ಇಲ್ಲಿಂದ ಹೊರಬರಲು ನನಗೆ ಸಹಾಯ ಮಾಡಲು ಹೇಳಿ.
104
00:12:45,400 --> 00:12:48,560
ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇನೆ.
ನಂತರ ಮಾತಾಡುತ್ತೇನೆ.
105
00:12:54,760 --> 00:12:57,960
ಶಕುಂತಲಾ ಅವರೇ, ಆಡಿ, ಈಗ ನಿಮ್ಮ ಸರದಿ.
106
00:13:02,720 --> 00:13:04,600
ಹೆಸರಾಂತ ದಾರದ ಉದ್ಯಮಿ ರೌಫ್ ಲಾಲಾ
107
00:13:04,680 --> 00:13:07,240
ನಿಗೂಢ ಸನ್ನಿವೇಶಗಳ ಅಡಿಯಲ್ಲಿ
ಜೈಲಿನಲ್ಲಿ ನಿಧನರಾದರು
108
00:13:08,000 --> 00:13:10,880
ಒಂದೇ ಸಂಖ್ಯೆಯ 40 ಡಬ್ಬಿಗಳಿವೆ.
ಅವುಗಳನ್ನು ತುಂಬಿಸಿರುವೆ.
109
00:13:12,280 --> 00:13:14,800
ಕೇಳು, ನಾಲ್ಕು ಪೆಟ್ಟಿಗೆಗಳನ್ನು
ವರ್ಮಾ ಅವರಿಗೆ ಕೊಡು.
110
00:13:14,880 --> 00:13:16,240
ಸರ್, ಬಿಲ್ ಮೇಲೆ ಸಹಿ...
111
00:13:27,800 --> 00:13:28,960
ಈಗ ನಿಮಗೆ ಸಂತೋಷವೇ?
112
00:13:31,560 --> 00:13:34,000
ಇನ್ನೂ ಬಹಳ ದೂರ ಸಾಗಬೇಕಾಗಿದೆ, ಭಯ್ಯಾಜೀ.
113
00:13:34,840 --> 00:13:36,400
ಆದರೂ ಹೇಗೋ ಕೆಲಸ ನಡೆಯುತ್ತಿದೆ.
114
00:13:38,120 --> 00:13:40,960
ಹಾಗಾದರೆ, ಸಿವಾನ್ಗೆ ಮದ್ಯವನ್ನು ತಲುಪಿಸಿದ್ದೀರಾ?
115
00:13:41,440 --> 00:13:42,440
ಹೌದು, ತಲುಪಿಸಾಗಿದೆ.
116
00:13:44,080 --> 00:13:45,440
ಆದರೆ ಏನೋ ವಿಚಿತ್ರವಿದೆ.
117
00:13:47,080 --> 00:13:48,520
ಕಳೆದ ಹತ್ತು ವರ್ಷಗಳಲ್ಲಿ,
118
00:13:49,280 --> 00:13:51,560
ಮೊದಲ ಬಾರಿ ಅವರು ಯಾವುದೇ ಮುಂಗಡ ಪಾವತಿಸಿಲ್ಲ.
119
00:13:55,600 --> 00:13:56,600
ಏಕೆ?
120
00:13:57,640 --> 00:14:00,320
ಕೊನೆಯ ಸರಕು ಮಾರಾಟವಾಗಲಿಲ್ಲ
ಅಂತ ಭರತ್ ಹೇಳಿದ್ದಾರೆ.
121
00:14:01,960 --> 00:14:05,440
ಅವರು ಈ ತಿಂಗಳು ಕಾರ್ಯನಿರತರಾಗಿದ್ದರು,
ವ್ಯವಹಾರ ಹೊಡೆತ ತಿಂದಿತು.
122
00:14:10,680 --> 00:14:12,200
ಸರ್, ಇಬ್ಬರು ಬಂದಿದ್ದಾರೆ.
123
00:14:14,040 --> 00:14:16,400
ಆ ಇಬ್ಬರು ಹೊಸ ವಿತರಕರು ಭೇಟಿಯಾಗಲು ಬಂದಿದ್ದಾರೆ.
124
00:14:19,680 --> 00:14:22,840
ಹಾಂ, ಸರಿ,
ನೀವು ಅವರೊಂದಿಗೆ ಒಪ್ಪಂದ ಮಾಡಿಕೊಳ್ಳಿ.
125
00:14:24,040 --> 00:14:25,840
ಒಂದು ತುರ್ತು ಕೆಲಸ ನೋಡಿ ಬರುತ್ತೇನೆ.
126
00:14:33,080 --> 00:14:34,520
ನಮಸ್ತೆ, ಭಯ್ಯಾಜೀ.
127
00:14:34,600 --> 00:14:36,240
-ನಮಸ್ತೆ, ಭಯ್ಯಾ.
-ನಮಸ್ತೆ.
128
00:14:38,840 --> 00:14:39,840
ಕರೆಯುತ್ತಿದ್ದಾರೆ.
129
00:14:39,920 --> 00:14:42,160
-ಹೋಗೋಣ, ರಿಂಕು? ಬಾ.
-ಬಾ, ರಿಂಕು.
130
00:14:45,800 --> 00:14:47,040
ನಮಸ್ಕಾರ, ದದ್ದಾ.
131
00:14:47,120 --> 00:14:48,360
-ಒಳ್ಳೆಯದಾಗಲಿ.
-ನಮಸ್ಕಾರ.
132
00:14:49,120 --> 00:14:50,400
-ನಮಸ್ಕಾರ.
-ನಮಸ್ಕಾರ.
133
00:14:51,400 --> 00:14:52,440
ದದ್ದಾ, ನಮಸ್ಕಾರ.
134
00:14:53,840 --> 00:14:54,840
ದದ್ದಾ...
135
00:14:59,760 --> 00:15:03,200
ದದ್ದಾ, ಕ್ಷಮಿಸಿ, ಇಲ್ಲಿಗೆ ಬಂದ ನಂತರ
ಛೋಟೆ ಭಯ್ಯಾ ಬಗ್ಗೆ ತಿಳಿದೆ.
136
00:15:04,440 --> 00:15:07,520
ಅವರಿಗೆ ಈ ತಿಂಡಿ ತಂದೆ.
ಅವರಿಗೆ ಇದು ತುಂಬಾ ಇಷ್ಟ.
137
00:15:08,000 --> 00:15:09,000
ಹೋಗೋ ಇಲ್ಲಿಂದ.
138
00:15:10,000 --> 00:15:12,400
ಛೋಟೆ ಹೆಸರಲ್ಲಿ ಬೆಣ್ಣೆ ಹಚ್ಚಲು ಪ್ರಯತ್ನಿಸಬೇಡ.
139
00:15:12,480 --> 00:15:13,480
ಇಲ್ಲಿಂದ ಹೋಗು.
140
00:15:13,960 --> 00:15:16,360
ಇಲ್ಲ, ಭಯ್ಯಾಜೀ, ನಾನು ಯಾವಾಗಲೂ ತರುತ್ತಿದ್ದೆ.
141
00:15:17,040 --> 00:15:19,720
ಛೋಟೆ ಭಯ್ಯಾ
ಖುಷಿಯಿಂದ ತಿನ್ನುತ್ತಿದ್ದರು, ದದ್ದಾ.
142
00:15:20,200 --> 00:15:21,800
ನಿನಗೆ ಅರ್ಥವಾಗುವುದಿಲ್ಲವೇ?
143
00:15:26,080 --> 00:15:27,080
ನನಗೆ ಕೊಡು.
144
00:15:47,280 --> 00:15:49,320
ಭಯ್ಯಾ, ನಾಕಾಬಂದಿಯಿಂದ ಮಾತಾಡ್ತಿದ್ದೇನೆ.
145
00:15:49,400 --> 00:15:50,400
ಹೇಳು?
146
00:15:51,280 --> 00:15:54,040
ಭಯ್ಯಾ, ಮಿರ್ಜಾಪುರದ ನೋಂದಣಿ ಸಂಖ್ಯೆ ಬಗ್ಗೆ
147
00:15:54,120 --> 00:15:56,680
ಪೊಲೀಸರು ವಿಚಾರಿಸುತ್ತಿದ್ದಾರೆ.
ಆ ಹುಡುಗಿಯ ಕಾರು.
148
00:15:58,320 --> 00:15:59,720
ಅಧಿಕಾರಿಯೊಂದಿಗೆ ಮಾತಾಡುವೆ.
149
00:15:59,800 --> 00:16:01,200
ಆತ ಸ್ಥಳೀಯ ಅಧಿಕಾರಿ ಅಲ್ಲ.
150
00:16:01,920 --> 00:16:03,480
ಅವರು ಯುಪಿ ಪೊಲೀಸರು.
151
00:16:03,960 --> 00:16:05,320
ಇಲ್ಲಿಗೆ ವರ್ಗಾವಣೆ ಮಾಡಲಾಗಿದೆ.
152
00:16:05,400 --> 00:16:07,040
ಅವರ ಹೆಸರು ಪರಶುರಾಮ್ ಗುಪ್ತಾ.
153
00:16:07,600 --> 00:16:11,000
ಚೆಕ್ ಪೋಸ್ಟ್ ಪ್ಯಾಕೆಟ್ ಕೊಟ್ಟೆ,
ಆದರೆ ತೆಗೆದುಕೊಳ್ಳಲು ನಿರಾಕರಿಸಿದರು.
154
00:16:11,680 --> 00:16:12,920
ಯಾರಾದರೂ ಬಾಯಿಬಿಟ್ಟರೆ,
155
00:16:13,520 --> 00:16:15,600
ನಿನ್ನನ್ನು ಆಸಿಡ್ ಒಳಗೆ ಮುಳುಗಿಸುತ್ತೇನೆ.
156
00:16:15,680 --> 00:16:17,920
ಇಲ್ಲ, ಭಯ್ಯಾ, ಯಾರೂ ಬಾಯಿ ಬಿಡಲ್ಲ.
157
00:16:18,640 --> 00:16:20,600
ನೀವೇ ಏನಾದರೂ ಮಾಡಿ ಇದನ್ನು ತಡೆಯಿರಿ.
158
00:16:22,240 --> 00:16:23,240
ಮಾಡ್ತೀನಿ.
159
00:19:14,640 --> 00:19:17,000
-ಈ ಕಪ್ಪು ಕನ್ನಡಕಕ್ಕೆ ಎಷ್ಟು?
-ಮುನ್ನೂರು.
160
00:19:19,760 --> 00:19:20,880
ಭರತ್ ಬಾಬು.
161
00:19:23,080 --> 00:19:26,320
ಬಹಳ ಸಮಯದಿಂದ ಯೋಜಿಸುತ್ತಿದ್ದೆ.
ಕೊನೆಗೂ, ಇಲ್ಲಿಗೆ ಬಂದೆ.
162
00:19:28,640 --> 00:19:31,080
ನಾನು ಇಷ್ಟೆಲ್ಲಾ ಕಾಲ
ಮನೆಯಲ್ಲೇ ಇದ್ದಿಲ್ಲ, ಗೊತ್ತಾ?
163
00:19:33,080 --> 00:19:37,040
ಜೌನ್ಪುರ್ ನನ್ನ ಮನೆ,
ಆದರೆ ಸ್ವಲ್ಪ ಸಮಯದ ನಂತರ ನನಗೆ ಬೇಸರವಾಗುತ್ತದೆ.
164
00:19:55,080 --> 00:19:56,080
ಕೊಡು ನನಗೆ.
165
00:20:07,440 --> 00:20:09,160
ತುಂಬಾ ಒತ್ತಡ
166
00:20:10,520 --> 00:20:13,080
ಆಗಾಗ್ಗೆ ಕೆಲಸಗಳನ್ನು ಹಾಳುಮಾಡುತ್ತದೆ.
167
00:20:15,280 --> 00:20:17,280
ಬಾಟಲಿ ತೆರೆಯುವುದರಲ್ಲೂ ಉಪನ್ಯಾಸವೇ?
168
00:20:17,320 --> 00:20:18,800
ಇನ್ನೇನು ಮಾಡಲಿ?
169
00:20:19,280 --> 00:20:21,640
ನೀನೇನೂ ಮಾತಾಡ್ತಾನೇ ಇಲ್ಲ.
170
00:20:25,320 --> 00:20:26,320
ಕ್ಷಮಿಸು...
171
00:20:28,080 --> 00:20:29,200
ನನ್ನ ಮನ ಬೇರೆಡೆ ಇದೆ.
172
00:20:29,680 --> 00:20:31,080
ಅದನ್ನು ಕೇಳೋಕೇ ಬಂದಿದ್ದೇನೆ.
173
00:20:32,320 --> 00:20:33,400
ನಿನ್ನ ಮನಸ್ಸು ಎಲ್ಲಿದೆ?
174
00:20:34,200 --> 00:20:35,320
ವ್ಯವಹಾರದಲ್ಲಂತೂ ಇಲ್ಲ.
175
00:20:35,440 --> 00:20:36,720
ಹಾಗೇನಿಲ್ಲ.
176
00:20:38,200 --> 00:20:39,800
ಸೇಡು ತೀರಿಸಿಕೊಂಡಿದ್ದು ಹೇಗಿತ್ತು?
177
00:20:44,320 --> 00:20:45,440
ನಿನ್ನ ಮಾತಿನ ಅರ್ಥ?
178
00:20:45,520 --> 00:20:47,080
ನನಗೆ ತಿಳಿಯಬೇಕು, ಭರತ್,
179
00:20:48,280 --> 00:20:51,200
ಸೇಡು ತೀರಿಸಿಕೊಂಡಾಗ ಹೇಗೆ ಅನಿಸುತ್ತದೆ?
180
00:20:53,640 --> 00:20:55,720
ನೀನೇ ಗೋಲುನ ಮಾಯ ಮಾಡಿದ್ದು, ನನಗೆ ಗೊತ್ತು.
181
00:20:57,240 --> 00:20:58,400
ನೀನು ಸುಳ್ಳು ಹೇಳಿದೆ.
182
00:20:58,480 --> 00:21:00,280
ನಾನೇಕೆ ನಿನಗೆ ಸುಳ್ಳು ಹೇಳಲಿ?
183
00:21:01,080 --> 00:21:02,080
ಹಾಗಾದರೆ, ಹೇಳು...
184
00:21:05,680 --> 00:21:07,000
ಈಗ ಸಮಾಧಾನದಿಂದಿದ್ದೀಯಾ?
185
00:21:07,080 --> 00:21:08,640
ತಲೆಬುಡ ಇಲ್ಲದ ಮಾತಾಡುತ್ತಿರುವೆ.
186
00:21:09,800 --> 00:21:11,160
ಬಾಟಲಿ ತೆರೆದೊಡನೆ ನಶೆ ಏರಿತೇ?
187
00:21:11,240 --> 00:21:15,800
ಅವಳನ್ನು ಹೇಗೆ ಕೊಂದೆ?
ಕತ್ತರಿಸಿದೆಯಾ? ಸುಟ್ಟುಹಾಕಿದೆಯಾ?
188
00:21:16,960 --> 00:21:18,560
ಅಥವಾ ಹೊಡೆದು ಸಾಯಿಸಿದೆಯಾ?
189
00:21:21,080 --> 00:21:22,960
ನೀನು ದದ್ದಾಗೂ ಹೇಳಿಲ್ಲ, ಅಲ್ವಾ?
190
00:21:26,960 --> 00:21:29,400
ಭರತ್, ನೀನು ಛೋಟೆಯ ಸೇಡು
ತೀರಿಸಿಕೊಂಡಿದ್ದು ಸಂತೋಷ.
191
00:21:30,880 --> 00:21:33,520
ಆದರೆ ನನ್ನಿಂದ ಬಚ್ಚಿಟ್ಟು
ನನ್ನ ಸ್ಥಾನ ದುರ್ಬಲಗೊಳಿಸಿದೆ.
192
00:21:35,080 --> 00:21:38,040
ನನ್ನ ಸಂಕಲ್ಪ ಪೂರ್ತಿಯಾಗುವವರೆಗೂ
ನನ್ನೊಂದಿಗೆ ಇರುವೆ ಎಂದು
193
00:21:38,080 --> 00:21:39,280
ನೀನು ಮಾತು ಕೊಟ್ಟಿದ್ದೆ.
194
00:21:39,320 --> 00:21:40,320
ನೋಡು, ಶರದ್,
195
00:21:41,520 --> 00:21:44,240
ನಿನ್ನ ಹೊಸ ಪಿತೂರಿ ಏನು ಎಂದು ನನಗೆ ತಿಳಿದಿಲ್ಲ.
196
00:21:46,760 --> 00:21:49,680
ನೀನು ನನ್ನ ಗೆಳೆಯ,
ಹಾಗಾಗಿ ಕೊನೆಯ ಎಚ್ಚರಿಕೆ ನೀಡುತ್ತಿದ್ದೇನೆ.
197
00:21:50,800 --> 00:21:52,880
ಮುಂದಿನ ಬಾರಿ ಹೀಗೆ ನನ್ನನ್ನು ವಿಚಾರಿಸಿದರೆ,
198
00:21:53,360 --> 00:21:55,080
ನಾವು ಸ್ನೇಹಿತರೆಂದು ಮರೆಯುತ್ತೇನೆ.
199
00:21:55,800 --> 00:21:58,600
ನಮ್ಮ ಒಪ್ಪಂದ ಏನಾಗಿತ್ತು? ಏನಾಗಿತ್ತು?
200
00:21:58,680 --> 00:22:00,280
ಗುಡ್ಡು ಮತ್ತು ಗೋಲುನ ಕೊಲ್ಲೋದು.
201
00:22:00,800 --> 00:22:02,600
ಗುಡ್ಡುನ ನೀನು ಮುಟ್ಟೋಕೂ ಆಗಲಿಲ್ಲ.
202
00:22:04,200 --> 00:22:07,400
ನಿನ್ನಿಂದ ಆಗದಿದ್ದರೆ,
ನನಗೆ ಹೇಳಿ ಪಕ್ಕಕ್ಕೆ ಸರಿದುಬಿಡು.
203
00:22:07,480 --> 00:22:10,000
ನಾನೇ ನಿಭಾಯಿಸುತ್ತೇನೆ. ನಾನು ತ್ಯಾಗಿ.
204
00:22:11,760 --> 00:22:14,400
ಬೇಕಾದರೆ ಮಿರ್ಜಾಪುರಕ್ಕೆ ನುಗ್ಗಿ
ಅವನನ್ನು ಕೊಲ್ಲುತ್ತೇನೆ.
205
00:22:14,480 --> 00:22:17,080
ಹೌದು, ನೀನು ಘಟಾನುಘಟಿ ಅಂತ ಬಲ್ಲೆ.
206
00:22:19,960 --> 00:22:21,120
ಆದರೆ ಒಂದು ತಿಳಿದುಕೋ.
207
00:22:22,560 --> 00:22:25,680
ಮಿರ್ಜಾಪುರದ ಗದ್ದುಗೆಯ ಮೇಲೆ ಒಂದು ಮೊಲ ಕುಳಿತರೂ
208
00:22:25,760 --> 00:22:27,280
ಅದನ್ನು ಕೊಲ್ಲುವುದು ಸುಲಭವಲ್ಲ.
209
00:22:27,360 --> 00:22:29,000
ಅದು ಆ ಸಿಂಹಾಸನದ ಶಕ್ತಿ.
210
00:22:29,840 --> 00:22:31,680
ಸಿಂಹಾಸನದಲ್ಲಿರುವವನನ್ನು ಕೊಲ್ಲಲು,
211
00:22:31,760 --> 00:22:34,520
ಅವನ ಪ್ರದೇಶದಲ್ಲಿ ಅಲ್ಲ,
ಬೇರೆ ಜಾಗದಲ್ಲಿ ಕೊಲ್ಲಬೇಕು.
212
00:22:36,440 --> 00:22:38,320
ನನ್ನ ತಂದೆಗೆ ಅದೇ ಸಲಹೆ ನೀಡಿದ್ದೆ.
213
00:22:39,240 --> 00:22:42,160
ಈಗ ನಿನಗೆ. ಏಕೆಂದರೆ ನೀನು ನನ್ನ ಕುಟುಂಬದವನಂತೆ.
214
00:22:46,400 --> 00:22:47,880
ಗುಡ್ಡು ಮೇಲೆ
215
00:22:47,960 --> 00:22:51,080
ನೇರ ದಾಳಿ ಮಾಡದಂತೆ ನಿನ್ನ ತಡೆದು
ನಾನು ತಪ್ಪು ಮಾಡಿದೆ ಅನಿಸಿದರೆ,
216
00:22:51,720 --> 00:22:52,720
ಸರಿ ಬಿಡು.
217
00:22:54,680 --> 00:22:56,000
ನಾನು ಇನ್ನು ನಿನ್ನ ತಡೆಯಲ್ಲ.
218
00:22:57,840 --> 00:23:00,200
ನಮ್ಮ ಸಂಬಂಧ ಇಂದಿನಿಂದ ವೃತ್ತಿಪರವಾಗಿರುತ್ತದೆ.
219
00:23:01,440 --> 00:23:03,560
ವೃತ್ತಿಪರವಾಗಿ ಹೇಳುವುದಾದರೆ, ಭರತ್ ತ್ಯಾಗಿ,
220
00:23:04,840 --> 00:23:08,360
ಮದ್ಯದ ಹಣ ಬಾಕಿ ಇದೆ. ಅದನ್ನು ಕಳಿಸು. ಬೇಗ.
221
00:23:58,040 --> 00:23:59,240
ಏನು ನೋಡ್ತಾ ಇದ್ದೀರಿ?
222
00:24:01,520 --> 00:24:03,960
ಕಲ್ಲು ಹೊಡೆದವನ ಮಂದ ಬುದ್ಧಿ.
223
00:24:05,040 --> 00:24:07,400
ಜೇನನ್ನು ಪಡೆಯುವುದರ ಬದಲು ಜೇನ್ನೊಣಗಳ ಬಳಿ
224
00:24:07,880 --> 00:24:09,640
ಕಚ್ಚಿಸಿಕೊಳ್ಳುತ್ತಿದ್ದಾನೆ.
225
00:24:13,360 --> 00:24:15,600
ನನ್ನ ಬಗ್ಗೆಯೇ ಹೇಳುತ್ತಿದ್ದೀರಿ ಅಂತ ಗೊತ್ತು.
226
00:24:17,440 --> 00:24:19,120
ನನ್ನ ನಿರ್ಧಾರ ನಿಮಗೆ ಸರಿ ಅನಿಸಿಲ್ಲ.
227
00:24:22,000 --> 00:24:24,920
ಲಾಲಾ ಪೂರ್ವಾಂಚಲದ
ಅತಿದೊಡ್ಡ ಅಫೀಮು ಪೂರೈಕೆದಾರನಾಗಿದ್ದ.
228
00:24:25,880 --> 00:24:27,280
ಅವನನ್ನು ಕೊಲ್ಲುವ ಮೂಲಕ,
229
00:24:28,560 --> 00:24:31,040
ಗುಡ್ಡುಗೆ ವ್ಯಾಪಾರದ ಹಿಡಿತ ಹಸ್ತಾಂತರಿಸಿದ್ದೀಯ.
230
00:24:31,520 --> 00:24:33,040
ಗುಡ್ಡುನ ದುರ್ಬಲಗೊಳಿಸಿದ್ದೇನೆ.
231
00:24:34,600 --> 00:24:37,760
ಲಾಲಾನ ಪೂರೈಕೆದಾರರಿಂದ ಅಫೀಮು ಪಡೆಯಲು
ಈಗ ಅವನಿಗೆ ಸುಲಭವಲ್ಲ.
232
00:24:40,160 --> 00:24:44,040
ಲಾಲಾನ ಮರಣವು
ಅಫೀಮು ಪೂರೈಕೆಯನ್ನು ನಿಲ್ಲಿಸುತ್ತದೆಯೇ?
233
00:24:46,600 --> 00:24:49,520
ಗುಡ್ಡು ಅವರೊಂದಿಗೆ
ಸಂಪರ್ಕವನ್ನು ಸ್ಥಾಪಿಸಿರಬೇಕು.
234
00:24:50,720 --> 00:24:53,480
ಅವನ ಸಾಗಣೆಯನ್ನು
ನದಿ ಮಾರ್ಗದ ಮೂಲಕ ತಲುಪಿಸಲಾಯಿತು.
235
00:24:54,960 --> 00:24:56,280
ಈಗಲೂ ಅವನಿಗೆ ತಲುಪುತ್ತಿದೆ.
236
00:24:58,520 --> 00:25:00,680
ಶರದ್, ನೀನು ಮೇಲುಗೈ ಕಳೆದುಕೊಂಡೆ.
237
00:25:04,800 --> 00:25:08,880
ನನ್ನ ಮಾತು ಕೇಳು.
ಮುನಾವರ್ಗೆ ಕರೆ ಮಾಡಿ ಸಭೆಯನ್ನು ನಿಗದಿಪಡಿಸು.
238
00:25:09,440 --> 00:25:10,920
ಇಲ್ಲಿ, ಜೌನ್ಪುರದಲ್ಲಿ.
239
00:25:11,800 --> 00:25:13,920
ಶಾಂತಿಯ ಪ್ರಸ್ತಾವನೆಯನ್ನು ನೀನೇ ಮಾಡು.
240
00:25:16,040 --> 00:25:18,320
ನಾನು ಗುರಿಯೆಡೆಗೆ ವೇಗವಾಗಿ ಹೋಗುತ್ತಿದ್ದರೆ,
241
00:25:18,400 --> 00:25:19,920
ಹಿಂದಡಿ ಇಡಲು ಹೇಳುತ್ತಿದ್ದೀರಿ.
242
00:25:20,000 --> 00:25:23,280
ಇಲ್ಲ. ಹಿಂದಡಿ ಇಡಲು ನಾನು ನಿನಗೆ ಹೇಳುತ್ತಿಲ್ಲ.
243
00:25:24,920 --> 00:25:26,920
ನೀನು ದುರ್ಬಲನಾಗಿದ್ದೀಯ ಅಂತ ತಿಳಿಯುತ್ತಾರೆ,
244
00:25:27,000 --> 00:25:29,560
ಆದರೆ ಅದು ಹಾಗಾಗುವುದಿಲ್ಲ. ನನ್ನನ್ನು ನಂಬು.
245
00:25:31,920 --> 00:25:33,920
ಶರದ್, ಪೂರ್ವಾಂಚಲದ ಇತಿಹಾಸದಲ್ಲೇ
246
00:25:34,600 --> 00:25:38,000
ನಡೆಯದಿರುವುದನ್ನು ಮಾಡಲು ನಿನಗೆ ನೆರವಾಗುತ್ತೇನೆ.
247
00:25:43,200 --> 00:25:44,200
ಸರಿ, ದೊಡ್ಡಪ್ಪ.
248
00:25:45,520 --> 00:25:46,520
ನನ್ನನ್ನು ನಂಬು.
249
00:25:47,840 --> 00:25:48,840
ವಿದಾಯ.
250
00:26:08,080 --> 00:26:09,520
ದೊಡ್ಡಪ್ಪನಿಗೆ ನನ್ನ ಮೇಲೆ ಕೋಪ.
251
00:26:11,280 --> 00:26:14,080
-ಕೋಪವೋ ಅಥವಾ ಭಯವೋ?
-ಹಾಂ?
252
00:26:15,520 --> 00:26:17,640
ಅವರ ಕುಟುಂಬ ಸುರಕ್ಷಿತವಾದ ತಕ್ಷಣ,
253
00:26:18,320 --> 00:26:21,720
ಬೇರೆ ಯಾವುದೇ ಕುಟುಂಬ ಸುರಕ್ಷಿತವಾಗಿರಲ್ಲ.
ಅದನ್ನು ಎಂದಿಗೂ ಮರೆಯಬೇಡ.
254
00:26:24,560 --> 00:26:25,720
ಬೀನಾ ಕರೆ ಮಾಡಿದ್ದಳು.
255
00:26:47,200 --> 00:26:48,920
-ಹೋಗೋಣ, ರಿಂಕು?
-ರಿಂಕು.
256
00:26:49,560 --> 00:26:50,560
ನಮಸ್ತೆ, ಭಯ್ಯಾ.
257
00:26:52,480 --> 00:26:53,480
-ಬನ್ನಿ.
-ಹಾಂ.
258
00:27:05,960 --> 00:27:07,640
ಶರದ್ ಸಭೆಗೆ ಕರೆಯುತ್ತಿದ್ದಾನೆ.
259
00:27:09,760 --> 00:27:10,760
ಅವನು ಹೆದರಿದ್ದಾನೆಯೇ?
260
00:27:11,560 --> 00:27:12,560
ನೋಡಿ, ಗುಡ್ಡು,
261
00:27:13,680 --> 00:27:15,640
ಕಳೆದ ಕೆಲವು ದಿನಗಳಲ್ಲಿ ಆದ ರಕ್ತಪಾತ
262
00:27:16,840 --> 00:27:19,040
ನಿಮ್ಮ ಸ್ಥಾನವನ್ನು ಗಣನೀಯವಾಗಿ ದುರ್ಬಲಗೊಳಿಸಿದೆ.
263
00:27:19,520 --> 00:27:22,360
ನೀವು ನಿರಾಕರಿಸಿದರೆ,
ಶರದನ ಕೀರ್ತಿ ಹೆಚ್ಚುತ್ತದೆ.
264
00:27:22,440 --> 00:27:25,640
ನಾನು ಏಕೆ ನಿರಾಕರಿಸುತ್ತೇನೆ?
ನಾನು ಸಭೆಯನ್ನು ಗೌರವಿಸುತ್ತೇನೆ.
265
00:27:26,360 --> 00:27:28,360
ಗುಡ್ಡು, ಈ ಸಭೆ ಶಾಂತಿಯ ಕರೆ.
266
00:27:29,600 --> 00:27:33,480
ಪೂರ್ವಾಂಚಲದಲ್ಲಿ ಏಕತೆ ಈಗಲೂ ಸಾಧ್ಯ ಎಂದು
ನನ್ನ ನಂಬಿಕೆಯನ್ನು ಬಲಪಡಿಸಲು,
267
00:27:33,960 --> 00:27:38,120
ಶಾಂತಿಯ ಉಡುಗೊರೆ ತರಲು,
268
00:27:39,000 --> 00:27:43,080
ನಾನು ಎಲ್ಲಾ ಬಾಹುಬಲಿಗಳಲ್ಲಿ ವಿನಂತಿಸಿದೆ.
269
00:27:43,760 --> 00:27:45,960
ಖಂಡಿತ, ಇದು ಸಾಧ್ಯ. ಸರಿ.
270
00:28:03,200 --> 00:28:05,960
ಮಹಾರಾಜಗಂಜ್ - ಕುಶಿನಗರ್
ಬಸ್ತಿ - ಗೋರಖ್ಪುರ್ - ದೇವರಿಯಾ
271
00:28:06,080 --> 00:28:08,480
ಅಜಂಗಢ - ಮೌ
ಬಲಿಯಾ - ಗಾಜಿಪುರ್
272
00:28:08,560 --> 00:28:11,640
ಜೌನ್ಪುರ್ - ವಾರಣಾಸಿ
ಮಿರ್ಜಾಪುರ್ - ಪ್ರಯಾಗರಾಜ್
273
00:28:23,240 --> 00:28:24,800
ಹುಷಾರು, ಅದು ಉಡುಗೊರೆ.
274
00:28:24,880 --> 00:28:25,800
ಸರಿ, ಭಯ್ಯಾ.
275
00:28:32,360 --> 00:28:33,280
ಹೋಗಿ.
276
00:28:33,840 --> 00:28:34,960
-ಕೊಡಿ.
-ತಗೊಳ್ಳಿ.
277
00:28:37,120 --> 00:28:38,120
ಹಾಂ, ಪರವಾಗಿಲ್ಲ.
278
00:28:40,800 --> 00:28:41,640
ಹಾಂ.
279
00:28:41,720 --> 00:28:42,800
-ಕೊಡಿ.
-ತಗೊಳ್ಳಿ.
280
00:28:48,000 --> 00:28:48,840
ನಮಸ್ತೆ.
281
00:28:55,320 --> 00:28:56,160
ಬನ್ನಿ.
282
00:29:16,960 --> 00:29:18,880
-ಹೇಗಿದ್ದೀರಾ.
-ಚೆನ್ನಾಗಿದ್ದೇನೆ.
283
00:29:18,960 --> 00:29:20,680
-ಎಲ್ಲಾ ಆರಾಮಾ?
-ಹಾಂ.
284
00:29:20,760 --> 00:29:22,040
-ಕೂರಿ.
-ನಮಸ್ತೆ.
285
00:29:30,680 --> 00:29:32,360
-ಹೇಗಿದ್ದೀರಿ?
-ಹಲೋ. ಬನ್ನಿ.
286
00:29:51,840 --> 00:29:54,560
ನನ್ನ ಆಹ್ವಾನ ಸ್ವೀಕರಿಸಿದ್ದಕ್ಕೆ
ಎಲ್ಲರಿಗೂ ಧನ್ಯವಾದ.
287
00:29:55,240 --> 00:29:57,200
ಧನ್ಯವಾದ.
288
00:30:16,280 --> 00:30:18,120
ನಾನು ಇಂದು ಈ ಸಭೆಯನ್ನು ಕರೆದಿದ್ದರಿಂದ,
289
00:30:18,960 --> 00:30:21,000
ನಾನೇ ಚರ್ಚೆಯನ್ನು ಪ್ರಾರಂಭಿಸುತ್ತೇನೆ.
290
00:30:22,040 --> 00:30:23,200
ದಯವಿಟ್ಟು ಸಹಕರಿಸಿ.
291
00:30:30,480 --> 00:30:33,240
ಪೂರ್ವಾಂಚಲದ ಎಲ್ಲಾ ಪ್ರದೇಶಗಳಲ್ಲಿ
ಎಲ್ಲಾ ಗುಂಪುಗಳ ನಡುವೆ
292
00:30:33,320 --> 00:30:36,240
ಸ್ನೇಹ ಮತ್ತು ದ್ವೇಷ
ಒಂದೇ ನಾಣ್ಯದ ಎರಡು ಮುಖಗಳಾಗಿವೆ.
293
00:30:40,600 --> 00:30:43,040
ಆದರೆ, ಸಿಂಹಾಸನವು ಯಾವಾಗಲೂ ಅಣೆಕಟ್ಟಿನಂತೆ
294
00:30:43,600 --> 00:30:45,240
ಹಿಂಸೆಯ ಹರಿವನ್ನು ನಿಯಂತ್ರಿಸಿದೆ.
295
00:30:48,720 --> 00:30:51,200
ದುರದೃಷ್ಟವಶಾತ್, ರಕ್ತಪಾತ ಮತ್ತು ಹಿಂಸೆ
296
00:30:52,200 --> 00:30:53,640
ಎಲ್ಲಾ ಮಿತಿಗಳನ್ನು ದಾಟಿವೆ.
297
00:30:58,880 --> 00:31:01,400
-ಆದರೆ ನಾನು...
-ನಮಗೆ ಚೆನ್ನಾಗಿ ತಿಳಿದಿದೆ.
298
00:31:03,360 --> 00:31:07,160
ಈ ರಕ್ತಪಾತದ ಬೆಲೆಯನ್ನು
ಇಲ್ಲಿ ಪ್ರತಿಯೊಬ್ಬ ವ್ಯಾಪಾರಿ ಭರಿಸುತ್ತಿದ್ದಾರೆ.
299
00:31:08,640 --> 00:31:09,960
ಇದಕ್ಕೆ ಪರಿಹಾರವಿದೆಯೇ?
300
00:31:11,280 --> 00:31:12,760
ಇದ್ದರೆ ನೀವೇ ತಿಳಿಸಿ.
301
00:31:12,840 --> 00:31:14,360
ನೋಡಿ, ಇದು ಸ್ಪಷ್ಟವಾಗಿದೆ.
302
00:31:14,880 --> 00:31:18,200
ಎರಡು ಪ್ರದೇಶಗಳ ನಡುವಿನ ದ್ವೇಷದ ಕಾರಣ
ಪೂರ್ವಾಂಚಲ ಘಾಸಿಗೊಳ್ಳುತ್ತಿದೆ.
303
00:31:18,760 --> 00:31:20,480
ನೀವೆಲ್ಲರೂ ಹೆಚ್ಚು ಅನುಭವಿಗಳು.
304
00:31:20,560 --> 00:31:23,000
ಆದ್ದರಿಂದ ನೀವೇ ಪರಿಹಾರವನ್ನು ಸೂಚಿಸಿದರೆ ಉತ್ತಮ.
305
00:31:25,240 --> 00:31:27,960
ಭಯ್ಯಾ, ನನ್ನ ಪ್ರಕಾರ ಗುಡ್ಡುನೇ ಸಮಸ್ಯೆ.
306
00:31:28,840 --> 00:31:32,520
ಮಿರ್ಜಾಪುರದ ನಿಯಂತ್ರಣವನ್ನು ಪಡೆದಾಗಿನಿಂದ,
ವಿನಾಶವನ್ನುಂಟುಮಾಡುತ್ತಿದ್ದಾನೆ.
307
00:31:33,360 --> 00:31:35,400
ಕತ್ತಿ ಹಿಡಿದಿರುವ ಕೋತಿಯಂತೆ.
308
00:31:35,480 --> 00:31:37,880
ಆ ಕಥೆಯನ್ನು ನಿಜ ಮಾಡುತ್ತಿದ್ದಾನೆ.
309
00:31:37,960 --> 00:31:39,960
ತನಗೆ ಇಷ್ಟ ಬಂದಂತೆ ಮಾಡುತ್ತಾನೆ, ಭಯ್ಯಾ.
310
00:31:40,040 --> 00:31:41,440
ಆದರೆ ಹೀಗೆ ನಡೆಯಲ್ಲ.
311
00:31:41,520 --> 00:31:43,520
ಕೇಳು, ತುಂಬಾ ಎಗರಾಡಬೇಡ.
312
00:31:44,160 --> 00:31:46,320
ಉಚ್ಚೆ ಹೊಯ್ದರೆ ಕೊಚ್ಚಿಕೊಂಡು ಹೋಗ್ತೀಯ.
313
00:31:46,400 --> 00:31:47,280
ಏನು ಹೇಳಿದೆ?
314
00:31:48,800 --> 00:31:51,040
ಶುಕ್ಲಾ ಅವರು ಮೊದಲು ದಾಳಿ ಮಾಡಿದರು.
315
00:31:52,120 --> 00:31:55,520
ಗೋಲುಳ ಅಪಹರಣ
ಮಿರ್ಜಾಪುರದ ಮೇಲೆ ನೇರ ದಾಳಿಯಾಗಿದೆ.
316
00:31:56,760 --> 00:31:58,520
ಇದರ ಲಾಭ ಜೌನ್ಪುರಕ್ಕೇ ಆಗುತ್ತೆ.
317
00:31:59,000 --> 00:32:00,000
ನೋಡಿ,
318
00:32:01,680 --> 00:32:05,840
ಒಬ್ಬರ ಮೇಲೊಬ್ಬರು ಆಪಾದನೆ ಹೊರಿಸುವುದು
ಇಂದಿನ ಸಭೆಯ ಉದ್ದೇಶವಲ್ಲ.
319
00:32:06,440 --> 00:32:10,680
ಬದಲಾಗಿ ನಾವು ಗಟ್ಟಿಯಾದ ಸಂಬಂಧಗಳೊಂದಿಗೆ
ವ್ಯಾಪಾರವನ್ನು ಬಲಗೊಳಿಸಬೇಕು.
320
00:32:11,640 --> 00:32:14,320
ಇದೀಗ, ನನ್ನ ಗಮನ
ಜೌನ್ಪುರದ ಲಾಭದ ಮೇಲೆ ಕಡಿಮೆ ಇದ್ದು
321
00:32:15,440 --> 00:32:17,120
ಪೂರ್ವಾಂಚಲದ ನಷ್ಟದ ಕುರಿತು ಹೆಚ್ಚಿದೆ.
322
00:32:18,240 --> 00:32:19,480
ಮತ್ತು ಕೇಳಿ,
323
00:32:20,360 --> 00:32:22,240
ಗೋಲು ಬಗ್ಗೆ ಅಳೋದು ನಿಲ್ಲಿಸಿ.
324
00:32:22,960 --> 00:32:24,720
ನನಗೂ ಅದಕ್ಕೂ ಸಂಬಂಧವಿಲ್ಲ.
325
00:32:26,840 --> 00:32:29,720
ನನ್ನ ಅಭಿಪ್ರಾಯದಲ್ಲಿ,
ಇಂದಿನ ಸಭೆ ಅರ್ಥಹೀನವಾಗಿದೆ.
326
00:32:31,280 --> 00:32:35,240
ಈಗ ಒಬ್ಬರಿಗೊಬ್ಬರು ಹಣ್ಣುಗಳು, ಫಲಗಳನ್ನು ಕೊಟ್ಟು
327
00:32:35,320 --> 00:32:37,760
ಗುಡ್ಡು ಮತ್ತು ಶರದ್ ಮತ್ತೆ ರಕ್ತಪಾತ
328
00:32:38,640 --> 00:32:42,080
ಶುರುಮಾಡುತ್ತಾರೆ ನೋಡುತ್ತಿರಿ.
329
00:32:42,160 --> 00:32:45,800
ಇಬ್ಬರೂ ಹಗ್ಗಜಗ್ಗಾಟ
ಆಡುವುದರಲ್ಲಿ ನಿರತರಾಗಿದ್ದಾರೆ.
330
00:32:45,880 --> 00:32:48,400
ಅದರ ಪರಿಣಾಮ ನಮ್ಮ ಮೇಲೆ ಆಗುತ್ತಿದೆ.
331
00:32:49,040 --> 00:32:53,120
ಪೊಲೀಸ್ ಮತ್ತು ಸರ್ಕಾರದಿಂದಲೂ ಒತ್ತಡ ಬೇರೆ.
332
00:32:53,800 --> 00:32:56,880
ನಿಮ್ಮ ನೋವು ಮತ್ತು ವ್ಯಂಗ್ಯ ನನಗೆ ಅರ್ಥವಾಗಿದೆ.
333
00:32:58,320 --> 00:33:00,440
ಹಗೆತನ ಜೌನ್ಪುರ್ ಮತ್ತು ಮಿರ್ಜಾಪುರ ನಡುವಿದೆ.
334
00:33:01,240 --> 00:33:05,240
ಆದರೆ ಈ ಹಗ್ಗಜಗ್ಗಾಟವನ್ನು
ಮಂಥನವಾಗಿ ಪರಿವರ್ತಿಸಲು ಸಾಧ್ಯವಾದರೆ,
335
00:33:06,640 --> 00:33:08,960
ವ್ಯಾಪಾರದಲ್ಲಿರುವ ಎಲ್ಲರೂ
ಅಮೃತವನ್ನು ಸವಿಯಬಹುದು.
336
00:33:10,200 --> 00:33:12,920
ಮತ್ತು ಈ ಮಂಥನದಲ್ಲಿ ಉಕ್ಕಿ ಬರುವ ವಿಷವನ್ನು
337
00:33:14,040 --> 00:33:16,120
ನಾನು ಮತ್ತು ಗುಡ್ಡು ಕುಡಿಯುತ್ತೇವೆ,
338
00:33:17,240 --> 00:33:18,320
ನೀವಲ್ಲ.
339
00:33:18,400 --> 00:33:19,880
ಅಂದರೆ ನಿಮ್ಮ ಮಾತಿನ ಅರ್ಥ
340
00:33:21,000 --> 00:33:24,640
ಒಂದು ಕ್ಷೇತ್ರವನ್ನು ಬೆಂಬಲಿಸಿ
ನಷ್ಟ ಅನುಭವಿಸುವುದರ ಬದಲು
341
00:33:24,720 --> 00:33:28,440
ಅದನ್ನು ಬೇರ್ಪಡಿಸಿ
ಮಿಕ್ಕ ಕ್ಷೇತ್ರಗಳನ್ನು ಭದ್ರಪಡಿಸಿಕೊಳ್ಳಬೇಕು.
342
00:33:28,520 --> 00:33:31,080
ಖಂಡಿತ. ಅದನ್ನು ಬೇರ್ಪಡಿಸಲೇಬೇಕು.
343
00:33:32,040 --> 00:33:35,400
ಇವರ ವೈಯಕ್ತಿಕ ದ್ವೇಷದ ಭಾರ ನಮಗೆ ಏಕೆ?
344
00:33:35,880 --> 00:33:39,320
ನಾವು ಇವರನ್ನು ಬಹಿಷ್ಕರಿಸಬೇಕು.
345
00:33:40,040 --> 00:33:41,800
ಸಂಪೂರ್ಣ ಬಹಿಷ್ಕಾರ.
346
00:33:41,880 --> 00:33:43,800
-ಅದು ಸರಿ. ಸಂಪೂರ್ಣ ಬಹಿಷ್ಕಾರ.
-ಹೌದು.
347
00:33:46,760 --> 00:33:48,440
ಭಯ್ಯಾ, ಸಂಪೂರ್ಣ ಬಹಿಷ್ಕಾರ.
348
00:33:48,520 --> 00:33:50,040
-ಸಂಪೂರ್ಣ ಬಹಿಷ್ಕಾರ.
-ಬಹಿಷ್ಕಾರ.
349
00:33:57,400 --> 00:33:58,720
ಬಹುಶಃ ನೀವು ಹೇಳಿದ್ದು ಸರಿ.
350
00:34:00,160 --> 00:34:01,480
ಬೇರೆ ಆಯ್ಕೆ ಇಲ್ಲ.
351
00:34:03,800 --> 00:34:06,480
ಆದ್ದರಿಂದ, ಶಾಂತಿ ಪ್ರಸ್ತಾಪದ ಅಡಿಯಲ್ಲಿ,
352
00:34:07,360 --> 00:34:09,840
ಗದ್ದುಗೆಯನ್ನು ದಸರಾವರೆಗೆ
ಎರಡು ಭಾಗಗಳಾಗಿ ಮಾಡಬೇಕು.
353
00:34:10,280 --> 00:34:12,960
ಮಿರ್ಜಾಪುರ್, ಜೌನ್ಪುರ್.
354
00:34:14,520 --> 00:34:15,760
ಸೂಕ್ತವಾದ ವಿಭಜನೆ.
355
00:34:18,760 --> 00:34:22,480
ಸಲಹೆಗಾರನಾಗಿ, ಪಶ್ಚಿಮದ ಪರವಾಗಿ ನಾನು ಅನುಮೋದನೆಯ
356
00:34:23,680 --> 00:34:25,280
ಮುದ್ರೆಯನ್ನು ಹಾಕುತ್ತೇನೆ.
357
00:34:25,360 --> 00:34:29,160
ಮುನಾವರ್ ಜೀ, ಮಿರ್ಜಾಪುರದ ಸಿಂಹಾಸನ
ಹಳ್ಳಿಯ ಆಟದ ಮೈದಾನವಲ್ಲ,
358
00:34:29,880 --> 00:34:32,640
ಅಲ್ಲಿ ಇಟ್ಟಿಗೆ ಇಟ್ಟು
ಪ್ರದೇಶಗಳನ್ನು ಪ್ರತ್ಯೇಕಿಸೋಕೆ.
359
00:34:33,160 --> 00:34:35,600
ಶಾಂತನಾಗು. ಯಾಕೆ ಎಗರಾಡುತ್ತಿದ್ದೀಯ?
360
00:34:36,400 --> 00:34:37,800
ಇದು ಅದ್ಭುತ ಉಪಾಯ.
361
00:34:39,680 --> 00:34:41,400
ಒಳ್ಳೆ ತಲೆ ಓಡಿಸಿದೆ ನೀನು, ಗುರು.
362
00:34:44,040 --> 00:34:46,160
ಚಾಣಕ್ಯನಂತೆಯೇ.
363
00:34:49,200 --> 00:34:52,280
ಬುದ್ಧಿವಂತರನ್ನು ಅರ್ಥಮಾಡಿಕೊಳ್ಳಲು
ನನಗೆ ಸಮಯ ಹಿಡಿಯುತ್ತೆ.
364
00:34:54,040 --> 00:34:56,800
ಆದರೆ ಈಗ ಅವರನ್ನು ಗೌರವಿಸಲು ಪ್ರಾರಂಭಿಸಿದ್ದೇನೆ.
365
00:34:59,120 --> 00:35:00,360
ಇದು ಅದ್ಭುತ ನಿರ್ಧಾರ.
366
00:35:02,520 --> 00:35:05,600
ಯಾವುದೇ ತಲೆಬುಡ ಇಲ್ಲದ ನಿಯಮಗಳ ಬಗ್ಗೆ
ನಾನು ಚಿಂತಿಸಬೇಕಾಗಿಲ್ಲ.
367
00:35:07,040 --> 00:35:09,840
ನಾನು ಬಯಸಿದಂತೆ ಆಡಲು
ನನಗೆ ಸ್ವಾತಂತ್ರ್ಯ ಇರುತ್ತದೆ.
368
00:35:14,360 --> 00:35:16,360
ಈ ವಿಷಯ ನಿನ್ನ ಮತ್ತು ನನ್ನ ನಡುವೆ ಇದೆ.
369
00:35:18,080 --> 00:35:20,760
ಮೂರನೆಯವರು ಬಂದರೆ, ಸರ್ವನಾಶವೇ ಆಗುತ್ತೆ.
370
00:35:26,000 --> 00:35:27,000
ಮತ್ತೆ,
371
00:35:29,160 --> 00:35:30,480
ಪಶ್ಚಿಮದ ಕಾವಲುಗಾರರೇ,
372
00:35:31,160 --> 00:35:34,040
ವಿಭಜನೆ ಮಾಡಿ
ನನ್ನನ್ನು ನಿಯಂತ್ರಿಸಬಹುದು ಅಂದುಕೊಳ್ಳಬೇಡಿ.
373
00:35:34,680 --> 00:35:39,160
ಬರುವ ದಸರಾ,
ನಿಮ್ಮ ಲಂಕೆಯನ್ನು ನಾನು ಸುಡುತ್ತೇನೆ.
374
00:35:49,040 --> 00:35:50,040
ಓ, ಕ್ಷಮಿಸಿ.
375
00:35:52,160 --> 00:35:56,280
ನನ್ನ ಶಾಂತಿಯ ಅರ್ಪಣೆ ಇದು.
376
00:36:02,640 --> 00:36:04,040
ಸಭೆಯನ್ನು ಮುಂದೂಡಲಾಗಿದೆ.
377
00:36:25,600 --> 00:36:26,640
ಒಳ್ಳೆ ಕೆಲಸ.
378
00:36:27,840 --> 00:36:28,920
ನಾನು ಹೊರಡುವೆ.
379
00:36:34,640 --> 00:36:36,320
ಈಗ ನಿನಗೆ ಸಂತೋಷವೇ?
380
00:36:37,680 --> 00:36:38,680
ಮಗನೇ...
381
00:36:41,280 --> 00:36:46,000
ಶರದ್, ಅಪರಾಧ ಜಗತ್ತಲ್ಲೂ ರಾಜಕೀಯವಿದೆ.
382
00:36:47,000 --> 00:36:48,640
-ನಿರ್ಧಾರ ಮಾಡೋದು--
-ಶರದ್!
383
00:37:25,160 --> 00:37:27,880
ಮದ್ಯವನ್ನು ಪೂರೈಸಲು
ಯಾಕಿಷ್ಟು ಸಮಯ ಹಿಡಿಯುತ್ತಿದೆ?
384
00:37:28,640 --> 00:37:31,560
-ಏನು ವಿಷಯ?
-ಶರದ್ ಕಡೆಯಿಂದ ವಿಳಂಬ.
385
00:37:32,360 --> 00:37:34,040
ನಿಭಾಯಿಸುತ್ತಿದ್ದೇನೆ, ಮುಗಿಯುತ್ತೆ.
386
00:37:36,440 --> 00:37:39,840
ಹಣ ಪಾವತಿಸದೆ ಶರದ್ ಅದನ್ನು ಪೂರೈಸುತ್ತಾನಾ?
387
00:37:41,760 --> 00:37:42,760
ಹೇಳು.
388
00:37:44,360 --> 00:37:47,160
ದೊಡ್ಡ ವಿಷಯವಲ್ಲ, ದದ್ದಾ.
ಅತಿಯಾಗಿ ಯೋಚಿಸುತ್ತಿದ್ದೀರಿ.
389
00:37:47,200 --> 00:37:49,160
ಯಾವ ವ್ಯಾಪಾರದಲ್ಲಿ ವಿಳಂಬ ಆಗಲ್ಲ?
390
00:37:49,200 --> 00:37:50,880
ಕೆನ್ನೆಗೆ ಒಂದು ಬಾರಿಸಿದರೆ,
391
00:37:50,960 --> 00:37:53,280
ಹೋಗಿ ಗೋಡೆಗೆ ಅಂಟಿಕೊಳ್ತೀಯ.
392
00:37:55,800 --> 00:37:58,160
ಶತ್ರುಘನ್ ಮೂರ್ಖನಾಗಿದ್ದ,
393
00:37:59,640 --> 00:38:01,880
ಆದರೆ ಎಲ್ಲವನ್ನೂ ಸಮಯಕ್ಕೆ ಮಾಡುತ್ತಿದ್ದ.
394
00:38:02,520 --> 00:38:05,160
ಏನು ಹೇಳಿದರೂ, ಯಾವಾಗ ಹೇಳಿದರೂ.
395
00:38:06,160 --> 00:38:07,760
ಆದರೆ ನೀನು ರಾಜಕುಮಾರ.
396
00:38:09,480 --> 00:38:11,080
ನಿನ್ನ ತಿಕವನ್ನೂ ಸರಿಸುವುದಿಲ್ಲ.
397
00:38:11,960 --> 00:38:15,160
ನೀವು ಒಂದು ಮರೆತುಬಿಡುತ್ತೀರಿ,
ಆದ್ದರಿಂದ ನಿಮಗೆ ನೆನಪಿಸುತ್ತೇನೆ.
398
00:38:15,280 --> 00:38:17,800
ಛೋಟೆಯಿಂದಾಗಿ ನಾವು ಈ ಪರಿಸ್ಥಿತಿಯಲ್ಲಿದ್ದೇವೆ.
399
00:38:17,880 --> 00:38:19,640
ಹೌದು, ಯಾರ ತಮ್ಮ ಆಗಿದ್ದ ಅವನು?
400
00:38:20,680 --> 00:38:23,360
ನಿನ್ನ ತಮ್ಮ ತಾನೆ? ಅಥವಾ ನೆರೆಯವರದ್ದಾ?
401
00:38:24,800 --> 00:38:26,640
ನಿನ್ನ ರಕ್ತ ಕುದಿಯುವುದಿಲ್ಲವೇ?
402
00:38:26,680 --> 00:38:29,600
ನನಗೆ ಗೋಲುವಿನ ಕತ್ತರಿಸಿದ ತಲೆ ಬೇಕು.
403
00:38:29,640 --> 00:38:30,880
ಆದರೆ ಅವಳು ಸಿಗುತ್ತಿಲ್ಲ.
404
00:38:31,960 --> 00:38:34,440
ಯಾರಿಗೂ ಸಿಗುತ್ತಿಲ್ಲ. ಶರದನಿಗೂ ಸಿಗುತ್ತಿಲ್ಲ.
405
00:38:35,160 --> 00:38:36,160
ಶರದ್?
406
00:38:37,160 --> 00:38:38,480
ಶರದ್ ಹಾವಿದ್ದಂತೆ.
407
00:38:39,920 --> 00:38:41,760
ಎಲ್ಲರಿಗೂ ದ್ರೋಹ ಮಾಡಿದನು.
408
00:38:43,200 --> 00:38:45,680
ಈಗ ಗೋಲುನ ಬಳಸಿಕೊಂಡು
409
00:38:46,160 --> 00:38:48,640
ಗುಡ್ಡು ಜೊತೆ ಒಪ್ಪಂದ ಮಾಡುತ್ತಿದ್ದಾನೆ.
410
00:38:52,520 --> 00:38:55,880
ದದ್ದಾ, ನೀವು ನನಗೆ ಮುಕ್ತ ಅಧಿಕಾರ ಕೊಟ್ಟರೆ,
ಶರದ್ ಜೊತೆ
411
00:38:56,840 --> 00:38:58,560
ನನ್ನ ರೀತಿಯಲ್ಲಿ ವ್ಯವಹರಿಸಬಹುದೇ?
412
00:39:02,120 --> 00:39:05,200
ನೀನು ಅನುಮತಿಯನ್ನು ಕೇಳಬೇಕೆಂದರೆ,
ಏನೋ ತಪ್ಪಾಗಿದೆ.
413
00:39:08,280 --> 00:39:09,640
ಅರೆ, ಶರದನನ್ನು ಬಿಡು,
414
00:39:10,960 --> 00:39:14,280
ನಮ್ಮ ಸ್ಥಳದ ಬಗ್ಗೆ ಯಾರು ಮಾಹಿತಿ ಸೋರಿಕೆ
ಮಾಡಿದರು ಅಂತ ಕೂಡ
415
00:39:15,120 --> 00:39:16,680
ನಿನಗೆ ಗೊತ್ತಾಗಲಿಲ್ಲ.
416
00:39:16,800 --> 00:39:18,440
ನಾನು ಎಲ್ಲರನ್ನೂ ಕೇಳಿದೆ.
417
00:39:19,040 --> 00:39:20,640
ಇನ್ನೂ ಎಷ್ಟು ಜನರಿಗೆ ಹೊಡೆಯಬೇಕು?
418
00:39:21,360 --> 00:39:23,040
ಯಾರೋ ಹೊರಗಿನವರಾಗಿರಬೇಕು.
419
00:39:26,320 --> 00:39:27,880
ನಿಮ್ಮ ಅಮ್ಮ ಹೇಳಿದ್ದು ಸರಿ.
420
00:39:29,440 --> 00:39:33,400
ಉದ್ದದ ಗಂಡಸರ ಮೆದುಳು ಮೊಣಕಾಲಿನಲ್ಲಿರುತ್ತದೆ.
421
00:39:36,160 --> 00:39:37,360
ಬೇಗ ಬರ್ತೀಯಾ?
422
00:39:40,600 --> 00:39:42,080
ನೀನು ಎಲ್ಲರನ್ನೂ ಕೇಳಿಲ್ಲ.
423
00:40:12,400 --> 00:40:15,600
ನಾನು ನಿನಗೆ ಹೇಳಲಿಲ್ಲವೇ?
ನೀನು ಎಲ್ಲರನ್ನೂ ಕೇಳಿಲ್ಲ.
424
00:40:32,880 --> 00:40:33,880
ಅವನು...
425
00:40:35,200 --> 00:40:38,280
ಒಂದು ವಾರದಿಂದ ನಾಪತ್ತೆಯಾಗಿದ್ದಾನೆ.
426
00:40:40,040 --> 00:40:43,280
ಎಲ್ಲಿದ್ದ ಅಂತ ಅವನ ಮನೆಯವರಿಗೂ ಗೊತ್ತಿರಲಿಲ್ಲ.
427
00:40:45,000 --> 00:40:46,080
ಮತ್ತು ಇವನು
428
00:40:47,200 --> 00:40:50,040
ಮಿರ್ಜಾಪುರದ ಒಳಕ್ಕೂ ಹೊರಕ್ಕೂ
ಹೋಗ್ತಾ ಬರ್ತಾ ಇದ್ದಾನೆ.
429
00:40:52,160 --> 00:40:53,160
ಈ ವ್ಯಕ್ತಿ...
430
00:40:55,360 --> 00:40:57,560
ಗಡಿಯಲ್ಲಿ ಪೊಲೀಸರ ಜೊತೆ
431
00:40:58,200 --> 00:40:59,800
ಕುಡಿಯುತ್ತಾ ಸಿಕ್ಕಿಬಿದ್ದ.
432
00:41:01,200 --> 00:41:05,320
ದದ್ದಾ, ನಾನು ಹೇಳಿದಂತೆ,
ನನ್ನ ನಾದಿನಿಯೊಂದಿಗೆ ಇದ್ದೆ.
433
00:41:06,120 --> 00:41:07,880
ಅದಕ್ಕೇ ಮನೆಯವರಿಗೆ ಹೇಳಲಿಲ್ಲ.
434
00:41:29,160 --> 00:41:31,200
ದದ್ದಾ, ಕರುಣೆ ತೋರಿ.
435
00:41:32,000 --> 00:41:33,840
ಇದರ ಬದಲು ನನ್ನನ್ನು ಸಾಯಿಸಿಬಿಡಿ.
436
00:41:53,400 --> 00:41:55,760
ದದ್ದಾ! ಭಯ್ಯಾ...
437
00:41:55,840 --> 00:41:57,480
ದದ್ದಾ, ಬೇಡ.
438
00:41:57,560 --> 00:41:58,600
ದದ್ದಾ.
439
00:41:59,360 --> 00:42:00,880
-ದದ್ದಾ, ಬೇಡ...
-ದದ್ದಾ.
440
00:42:00,960 --> 00:42:03,520
ನೀವು ಕೂತ್ಕೊಳ್ಳಿ.
ನಾನು ಅವನ ಬಾಯಿ ಬಿಡಿಸುತ್ತೇನೆ.
441
00:42:04,640 --> 00:42:06,280
ಬೇಡ!
442
00:42:06,360 --> 00:42:07,920
ಕೊಂದೇಬಿಟ್ಟರೆ ಮಾತಾಡೋದು ಹೇಗೆ?
443
00:42:09,640 --> 00:42:11,200
ನಾನು ಬಾಯಿ ಬಿಡಿಸ್ತೀನಿ, ಕೂರಿ.
444
00:42:23,160 --> 00:42:24,040
ಹೇಳೋ.
445
00:42:27,600 --> 00:42:28,840
ನಿನಗೆ ಏನು ಗೊತ್ತಿದೆ?
446
00:42:31,920 --> 00:42:33,360
ಮಾಹಿತಿ ಸೋರಿಕೆ ಮಾಡಿದ್ದು ಯಾರು?
447
00:42:49,360 --> 00:42:51,280
ನಿನ್ನ ಕುಟುಂಬದ ಜವಾಬ್ದಾರಿ ನನ್ನದು.
448
00:42:51,920 --> 00:42:53,440
ಒಂದು ಮಾತೂ ಹೇಳಬೇಡ.
449
00:42:57,640 --> 00:42:59,160
ಮಾತಾಡ್ತೀಯಾ ಇಲ್ವಾ?
450
00:43:00,880 --> 00:43:01,880
ಹೇಳು.
451
00:43:02,840 --> 00:43:04,000
ಮಾತಾಡಲ್ವಾ?
452
00:43:19,360 --> 00:43:20,600
ಮಾತಾಡೋ, ಸೂಳೆಮಗನೇ.
453
00:43:21,760 --> 00:43:23,040
ಇಲ್ಲಾ ಕತ್ತು ಸೀಳುತ್ತೇನೆ.
454
00:43:33,360 --> 00:43:36,040
ದದ್ದಾ, ಇವನಿಗೇನೂ ಗೊತ್ತಿಲ್ಲ.
455
00:43:37,640 --> 00:43:38,840
ಇದು ಸಮಯದ ವ್ಯರ್ಥ.
456
00:43:40,200 --> 00:43:41,680
ಜಾಸ್ತಿ ಹೊಡೆದರೆ ಹೇತುಕೊಳ್ತಾನೆ.
457
00:43:42,960 --> 00:43:45,440
ಈ ಬೋಳಿಮಗ ಯಾಕೋ ಮಾತಾಡಲ್ಲ?
458
00:43:45,520 --> 00:43:46,480
-ಇವನಿಗೆ...
-ದದ್ದಾ.
459
00:43:46,560 --> 00:43:48,720
ನನ್ನ ಮೇಲಿನ ಕೋಪ ಬೇರೆಯವರ ಮೇಲೆ ಯಾಕೆ?
460
00:43:50,520 --> 00:43:52,240
ನಿಮಗೆ ಸಮಸ್ಯೆ ನನ್ನಿಂದ ತಾನೆ?
461
00:43:52,320 --> 00:43:55,040
ನೀವು ನನ್ನನ್ನೂ ಮೂರ್ಖ ಅಂದುಕೊಂಡಿದ್ದೀರಿ
ಅಂತ ಗೊತ್ತು.
462
00:43:55,120 --> 00:43:57,920
ಆದರೂ ಕೆಲವು ಸಲ ಇತರರ ಮಾತನ್ನೂ ಕೇಳಬೇಕಾಗುತ್ತದೆ.
463
00:43:58,960 --> 00:44:00,520
ನಾನು ಸರಿ ಅಂತ ನಿಮಗೆ ಗೊತ್ತು.
464
00:44:01,920 --> 00:44:03,640
ನೀನು ನನ್ನ ಒಬ್ಬನೇ ಮಗ.
465
00:44:09,240 --> 00:44:11,400
ಅಥವಾ ಈ ವೈಫಲ್ಯಕ್ಕಾಗಿ, ನಿನ್ನನ್ನು
466
00:44:12,960 --> 00:44:14,840
ಯಾವಾಗಲೋ ಗುಂಡಿಕ್ಕಿ ಸಾಯಿಸುತ್ತಿದ್ದೆ.
467
00:44:41,120 --> 00:44:42,120
ನಾನಿಲ್ಲಿದ್ದೀನೆ.
468
00:45:24,040 --> 00:45:25,040
ನೀನು ಹೇಳಿದ್ದು ತಪ್ಪು.
469
00:45:29,600 --> 00:45:32,880
ನಾನು ನಿನಗಿಂತ ಹೆಚ್ಚಾಗಿ
ನನ್ನ ಕುಟುಂಬವನ್ನು ಪ್ರೀತಿಸುತ್ತೇನೆ.
470
00:45:34,960 --> 00:45:37,520
ನನ್ನ ಕುಟುಂಬದವರೂ
ನನ್ನನ್ನು ತುಂಬಾ ಪ್ರೀತಿಸುತ್ತಾರೆ.
471
00:45:37,600 --> 00:45:40,960
ದದ್ದಾ, ಅಮ್ಮ, ಸಲೋನಿ, ಗಿನ್ನಿ.
472
00:45:41,040 --> 00:45:42,040
ಬಡೇಯನ್ನು.
473
00:45:44,320 --> 00:45:45,680
ನಾನು ಹೇಳಿದ್ದೂ ಅದನ್ನೇ.
474
00:45:50,120 --> 00:45:53,480
ದದ್ದಾ ನಿನ್ನನ್ನು ಕೊಲ್ಲಲು
ಒಂದು ಕ್ಷಣವೂ ಹಿಂಜರಿಯುವುದಿಲ್ಲ,
475
00:45:53,560 --> 00:45:55,320
ಅವರಿಗೆ ನೀನು ಯಾರಂತ ಗೊತ್ತಾದರೆ...
476
00:45:56,640 --> 00:45:57,680
ಛೋಟೆ.
477
00:46:02,320 --> 00:46:03,400
ತಪ್ಪು ಹೇಳಿದೆನಾ?
478
00:46:07,720 --> 00:46:09,560
ಹೇಗಿದ್ದರೂ, ಯಾರಾದರೂ ಸತ್ತ ಮೇಲೆ,
479
00:46:09,640 --> 00:46:13,120
ಅವರನ್ನು ಪ್ರೀತಿಯಿಂದಲೇ ನೆನೆಸಿಕೊಳ್ಳುತ್ತಾರೆ.
480
00:46:20,400 --> 00:46:21,400
ನೀನು...
481
00:46:22,160 --> 00:46:24,360
ಮತ್ತು ನಿನ್ನ ಕಟು ನಾಲಿಗೆ
482
00:46:24,880 --> 00:46:27,880
ಕ್ಷಣಾರ್ಧದಲ್ಲಿ ನನ್ನ ಕುಟುಂಬವನ್ನು ನಾಶ ಮಾಡಿತು.
483
00:46:27,960 --> 00:46:29,560
ಅಯ್ಯೋ, ಮುಂದೆ ನೋಡಪ್ಪ.
484
00:46:29,640 --> 00:46:32,920
ಹಳೆಯ ರೆಕಾರ್ಡ್ ಥರ
ಪದೇ ಪದೇ ಅದನ್ನೇ ಹೇಳ್ತಾ ಇದ್ದೀಯಾ.
485
00:46:35,600 --> 00:46:37,560
ಕೊಲ್ಲಬೇಕೆಂದರೆ ಕೊಂದುಬಿಡು.
486
00:46:43,760 --> 00:46:45,720
ಇದನ್ನೂ ನಾನೇ ಮಾಡಿಸಬೇಕು ನಿನ್ನಿಂದ.
487
00:46:48,200 --> 00:46:49,920
ನಿನ್ನ ಗಂಡಸು ಮಾಡಿದ್ದೂ ನಾನೇ,
488
00:46:50,000 --> 00:46:53,080
ನನ್ನನ್ನು ಕೊಲ್ಲುವ ಗಂಡೆದೆ ಕೂಡ
ನಾನೇ ಕೊಡುತ್ತೇನೆ. ಸರಿನಾ?
489
00:46:55,200 --> 00:46:59,200
ನಿನ್ನ ಹೆಣ ಕೂಡ ಯಾರಿಗೂ ಸಿಗಲ್ಲ, ತಿಳಿದುಕೋ.
490
00:47:05,720 --> 00:47:08,360
ಹೇಗಿದ್ದರೂ ಅದರಿಂದ ಏನು ಪ್ರಯೋಜನ?
491
00:47:10,120 --> 00:47:12,440
ನಿನಗೋಸ್ಕರ ಅಳುವುದಕ್ಕೆ ಯಾರೂ ಇಲ್ಲ.
492
00:47:17,560 --> 00:47:19,560
ನನ್ನ ಹೆಣ ಸಿಗದಿದ್ದರೆ ಪರವಾಗಿಲ್ಲ.
493
00:47:21,600 --> 00:47:24,400
ನೀನು ನನ್ನನ್ನು ಕೊಂದೆ ಅಂತ ಗುಡ್ಡು ಪಂಡಿತನಿಗೆ
494
00:47:25,200 --> 00:47:26,280
ಗೊತ್ತಾದರೆ ಮಾತ್ರ...
495
00:47:39,600 --> 00:47:42,040
ಮೊದಲಿನಿಂದಲೂ ಗುಡ್ಡುನೇ ಬೇಕಿದ್ದದ್ದು
ಅಲ್ವಾ ನಿನಗೆ?
496
00:47:46,400 --> 00:47:49,920
ಆಗಲೂ ನೀನು ಅವನ ನಾಯಿ, ಈಗಲೂ ಅವನ ನಾಯಿಯೇ.
497
00:47:53,440 --> 00:47:54,440
ಅಲ್ಲವೇ?
498
00:47:59,480 --> 00:48:00,480
ಹೌದು.
499
00:48:08,120 --> 00:48:09,360
ನೀನು ಎಂದೂ ಬೇಕೇ ಇರಲಿಲ್ಲ.
500
00:48:12,480 --> 00:48:14,440
ಮೊದಲೂ ಗುಡ್ಡು ಬೇಕಿದ್ದ,
501
00:48:17,040 --> 00:48:18,360
ಮುಂದೇನೂ ಗುಡ್ಡುನೇ ಬೇಕು.
502
00:48:27,680 --> 00:48:28,680
ನಡಿ.
503
00:48:31,280 --> 00:48:33,120
ನನ್ನನ್ನು ಕೊಲ್ಲಲು ನಿನಗೆ ಸುಲಭ ಮಾಡಿದೆ.
504
00:48:50,320 --> 00:48:51,320
ಇದು ಸಂದಿಗ್ಧತೆ.
505
00:48:56,240 --> 00:48:57,360
ನನಗೆ ನೀನು ಬೇಕು.
506
00:49:01,560 --> 00:49:02,720
ನಿನಗೆ ಗುಡ್ಡು ಬೇಕು.
507
00:49:04,840 --> 00:49:06,400
ಗುಡ್ಡುಗೆ ಪೂರ್ವಾಂಚಲ ಬೇಕು.
508
00:49:12,840 --> 00:49:14,400
ನಮ್ಮಲ್ಲಿ ಯಾರಿಗೂ ಏನೂ ಸಿಗಲ್ಲ.
509
00:49:19,960 --> 00:49:20,960
ಅರ್ಥವಾಯಿತಾ?
510
00:49:24,520 --> 00:49:27,240
ಮಿರ್ಜಾಪುರ್
511
00:51:20,160 --> 00:51:22,160
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ
512
00:51:22,240 --> 00:51:24,240
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆ.ಜಿ.