1 00:00:16,040 --> 00:00:18,640 ಇದುವರೆಗಿನ ಕಥೆ... 2 00:00:18,720 --> 00:00:19,640 ಬ್ಯಾಂಗ್! 3 00:00:25,080 --> 00:00:26,440 ನಮಗಾಗಿ ಕೆಲಸ ಮಾಡುವಿರಾ? 4 00:00:29,560 --> 00:00:32,760 ರಮಾಕಾಂತ್ ಪಂಡಿತ್ ಮಕ್ಕಳು ಯಾರೋ ಗೂಂಡಾ ಬಳಿ ಕೆಲಸ ಮಾಡೋದಾ? 5 00:00:33,840 --> 00:00:35,840 ನನಗೆ ಮಿರ್ಜಾಪುರ್ ಬೇಕು, ಶರದ್. 6 00:00:36,360 --> 00:00:39,960 ನನ್ನೊಂದಿಗೆ ಸೇರಿರಿ. ಜೊತೆಯಾಗಿ ಮಿರ್ಜಾಪುರವನ್ನು ಆಳೋಣ. 7 00:00:52,280 --> 00:00:53,560 ನಾನು ಗರ್ಭಿಣಿ. 8 00:00:57,360 --> 00:00:58,840 ಕೊಲ್ಲಲು ಅಲ್ಲಿಗೆ ಹೋಗುವುದಿಲ್ಲ. 9 00:00:58,920 --> 00:01:03,000 ಅವರಿಂದ ಕಸಿದುಕೊಳ್ಳಲು ಬಯಸುತ್ತೇನೆ... ಅಧಿಕಾರ ಮತ್ತು ಮಿರ್ಜಾಪುರವನ್ನು. 10 00:01:03,720 --> 00:01:06,440 ಅವಶ್ಯಕತೆ ನನ್ನದು ಮಾತ್ರವಲ್ಲ, ಅದು ನಿಮ್ಮದೂ ಆಗಿರಬಹುದು. 11 00:01:06,520 --> 00:01:09,080 ಪೂರ್ವಾಂಚಲದಲ್ಲಿ ನಿಮ್ಮ ವ್ಯಾಪಾರ ಸ್ಥಗಿತಗೊಂಡಿದೆಯಲ್ಲವೇ? 12 00:01:09,160 --> 00:01:10,520 ನಾನು ಅಲ್ಲಿ ಉಪಯುಕ್ತನಾಗುವೆ. 13 00:01:10,560 --> 00:01:14,960 ಗುಡ್ಡು ಸಂದೇಶ ಕಳುಹಿಸಿದ್ದಾನೆಂದರೆ, ಲಾಲಾ ಜೊತೆ ಕೈಜೋಡಿಸಿದ್ದಾನೆ. 14 00:01:15,360 --> 00:01:16,520 ನೀನು ಮತ್ತು ನಾನು... 15 00:01:16,560 --> 00:01:18,200 ಭೋಕಾಲ್ 16 00:01:18,280 --> 00:01:19,560 ...ಒಟ್ಟಿಗೆ ಅವನ ಕೊಲ್ಲೋಣ. 17 00:01:24,520 --> 00:01:27,080 ಇಂದಿನಿಂದ ಎರಡನೇ ಹಂತದ ಚುನಾವಣಾ ಪ್ರಚಾರ ಆರಂಭವಾಗುತ್ತೆ. 18 00:01:27,520 --> 00:01:28,840 ಹೋಗಿ ಪ್ರಚಾರ ನಿರ್ವಹಿಸು. 19 00:01:30,280 --> 00:01:33,720 ಬಿಳಿ ಸೀರೆ ನಿನಗೆ ಸರಿಹೊಂದುವುದಿಲ್ಲ. ನಾನು ಅದನ್ನು ತೆಗೆಯಲೇ? 20 00:01:35,000 --> 00:01:38,080 ಮುನ್ನಾ, ನಾನು ನಿನ್ನಂಥವನನ್ನು ಭೇಟಿ ಮಾಡಿಲ್ಲ. 21 00:01:40,280 --> 00:01:44,120 ತ್ರಿಪಾಠಿಯವರ ವೀರ್ಯ ಮಾತ್ರ ನಿನ್ನೊಳಗೆ ಹೋಗಬೇಕು. 22 00:01:47,960 --> 00:01:50,080 ಹಾಗಿದ್ದರೆ, ನನ್ನ ಪ್ರಯತ್ನ ವ್ಯರ್ಥವಾಗಲಿಲ್ಲ. 23 00:01:51,200 --> 00:01:54,480 ತ್ರಿಪಾಠಿ ಕುಟುಂಬದ ಕುಡಿಯನ್ನು ಹೊತ್ತಿರುವೆ. 24 00:01:54,560 --> 00:01:57,360 ನಾನೂ ಇದ್ದು ಜಯಿಸುವೆ... ನೀನೂ ಸಹ. 25 00:01:58,080 --> 00:02:00,560 ಖಾಲೀನ್ ಭಯ್ಯಾ ಕುಟುಂಬ ಒಳಗಿನಿಂದ ದುರ್ಬಲವಾಗಿದೆ. 26 00:02:01,840 --> 00:02:03,360 ನಾನು ಒಪ್ಪಂದ ನೋಡಿಕೊಳ್ಳುವೆ, 27 00:02:03,880 --> 00:02:05,440 ನೀವೂ ಭರವಸೆ ಉಳಿಸಿಕೊಳ್ಳಬೇಕು. 28 00:02:09,240 --> 00:02:10,600 ಗುಡ್ಡು ಮಾಡಿದ್ದು ಇದನ್ನು! 29 00:02:10,680 --> 00:02:14,560 ಇಲ್ಲ. ಒಳಗಿನವರೇ ಯಾರೋ ನಮ್ಮನ್ನು ದುರ್ಬಲಗೊಳಿಸಲು ನೋಡುತ್ತಿದ್ದಾರೆ. 30 00:02:14,600 --> 00:02:16,600 ನಾವು ಕೆಲವು ಹೊಸ ಮೈತ್ರಿ ಮಾಡಿಕೊಳ್ಳಬೇಕು. 31 00:02:19,360 --> 00:02:20,760 ನಾನು ನನ್ನ ಹಕ್ಕಿನಿಂದ... 32 00:02:21,560 --> 00:02:24,440 ಅಖಂಡಾನಂದ್ ತ್ರಿಪಾಠಿ ಅವರನ್ನು ಸಚಿವಾಲಯಕ್ಕೆ ಸೇರಿಸುತ್ತಿದ್ದೇನೆ. 33 00:02:25,040 --> 00:02:28,600 ಗಸಗಸೆ ಕ್ಷೇತ್ರಗಳ ಹಂಚಿಕೆಯನ್ನು ನಿರ್ವಹಿಸುತ್ತಿರುವೆ. ತ್ರಿಪಾಠಿಗೆ ಕೊಡಿಸು. 34 00:02:28,680 --> 00:02:31,320 ನಿಮ್ಮ ತಂದೆಗೆ ಮಿರ್ಜಾಪುರವನ್ನು ಖಾತರಿಪಡಿಸಿದ್ದೆ. 35 00:02:31,400 --> 00:02:32,880 ನೀವು ನನಗೆ ಅದೇ ಭರವಸೆ ನೀಡಬಹುದು. 36 00:02:33,400 --> 00:02:36,280 ಪ್ರತಿಯಾಗಿ, ನಿಮಗೆ ನನ್ನ ಸಹಾಯ ಬೇಕಾದಾಗ, ನನಗೆ ಕರೆ ಮಾಡಿ. 37 00:02:40,000 --> 00:02:42,160 ಅವರು... ಇನ್ನಿಲ್ಲ, ಮಗಳೇ. 38 00:02:44,440 --> 00:02:46,880 ಇವನ ಟ್ರಕ್ನಿಂದ ಈ ಕಾಗದಗಳು ಮತ್ತು ಗನ್ ಸಿಕ್ಕವು. 39 00:02:46,960 --> 00:02:48,000 ಜೌನ್ಪುರ್. 40 00:02:49,080 --> 00:02:50,280 ಇದನ್ನು ಒಮ್ಮೆ ನೋಡಿ. 41 00:02:52,280 --> 00:02:54,800 ನಮ್ಮ ಗುರಿ ಒಂದೇ, ಆದರೆ ವಿಧಾನಗಳು ವಿಭಿನ್ನ. 42 00:02:56,680 --> 00:02:58,800 ಅಧಿಕಾರ ಶಾಶ್ವತವಾಗಿ ಯಾರಿಗೂ ಸೇರಿದ್ದಲ್ಲ. 43 00:02:58,880 --> 00:03:01,160 ಅಪ್ಪನ ನಿಧನದ ನಂತರ ಚಿಕ್ಕಪ್ಪ ಅಧಿಕಾರಕ್ಕೆ ಬಂದರು. 44 00:03:01,240 --> 00:03:03,520 ಅವರು ಹೋದ ನಂತರ ಬೇರೆಯವರು ಅಧಿಕಾರಕ್ಕೆ ಬರಬಹುದು. 45 00:03:07,400 --> 00:03:09,920 ನನ್ನ ಮೇಲೆ ದೌರ್ಜನ್ಯ ನಡೆದಿದೆ. ಲೈಂಗಿಕ ಶೋಷಣೆ. 46 00:03:10,400 --> 00:03:13,240 ಪಕ್ಷವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ. 47 00:03:13,320 --> 00:03:15,520 ಹಾಗಾಗಿ ಪಕ್ಷದ ಸ್ಥಾನಕ್ಕೆ 48 00:03:15,600 --> 00:03:18,760 ರಾಜೀನಾಮೆ ನೀಡಲು ಜೆಪಿ ಯಾದವ್ ನಿರ್ಧರಿಸಿದ್ದಾರೆ. 49 00:03:18,840 --> 00:03:23,520 ನಾನೊಂದು ಹೆಸರನ್ನು ಪ್ರಸ್ತಾಪಿಸಲು ಬಯಸುತ್ತೇನೆ. ಮಾಧುರಿ ಯಾದವ್ ತ್ರಿಪಾಠಿ. 50 00:03:25,480 --> 00:03:27,400 ಪ್ರಪಂಚದಲ್ಲಿ ಹೆಣ್ಣಿನ ಮುಂದೆ ದುರ್ಬಲನಾಗೋ 51 00:03:28,760 --> 00:03:30,360 ಪುರುಷ ನೀನೊಬ್ಬನೇ ಅಲ್ಲ. 52 00:03:32,280 --> 00:03:34,160 ನಾವು ಅಫೀಮು ವ್ಯಾಪಾರ ಮಾಡಲು ಬಯಸುತ್ತೇವೆ. 53 00:03:35,440 --> 00:03:38,160 ನಾವು ಅಫೀಮು ವ್ಯಾಪಾರ ಮಾಡುವುದಿಲ್ಲ. 54 00:03:39,360 --> 00:03:41,560 ಸ್ವಲ್ಪವೂ ಸಂದೇಹವಿದ್ದರೆ, ಮಾಡಬೇಡ. 55 00:03:43,480 --> 00:03:46,040 ದದ್ದಾ ಮತ್ತು ಭಯ್ಯನಿಗೆ ಅಫೀಮು ಬಗ್ಗೆ ಗೊತ್ತಾಗಿದೆ. 56 00:03:46,520 --> 00:03:49,680 ನೀನಿಲ್ಲಿಗೆ ಬಂದು ಅವರ ಕ್ಷಮೆ ಕೇಳಿದರೆ, ಎಲ್ಲಾ ಸರಿ ಹೋಗುತ್ತಂತೆ. 57 00:03:49,760 --> 00:03:50,760 ನಿನ್ನ ಪ್ರೀತಿಸುವೆ. 58 00:03:51,160 --> 00:03:53,760 ನಿನಗೆ ಹುಚ್ಚೇ? ಅದು ಪ್ರೀತಿಯಲ್ಲ, ಅಗತ್ಯವಷ್ಟೇ. 59 00:03:53,840 --> 00:03:55,720 ಅವಳು ನಿನ್ನ ಗೂಬೆ ಮಾಡಿದಳು! 60 00:03:57,240 --> 00:03:58,320 ಛೋಟೆ! 61 00:04:03,320 --> 00:04:06,000 ಬಡೇ, ನೀನು ಚೆನ್ನಾಗಿದ್ದೀಯಾ? 62 00:04:06,520 --> 00:04:07,600 ಛೋಟೆ! 63 00:04:07,680 --> 00:04:10,680 ನಾನು ರಾಬಿನ್. ಹೂಡಿಕೆ ಮತ್ತು ಹಣದ ವಿಷಯಗಳಲ್ಲಿ ವ್ಯವಹರಿಸುತ್ತೇನೆ. 64 00:04:11,680 --> 00:04:13,800 ನನಗೆ ಗುಡ್ಡು ಬಗ್ಗೆ ಎಲ್ಲಾ ಮಾಹಿತಿ ಬೇಕು. 65 00:04:13,880 --> 00:04:15,720 ಅವನ ವ್ಯವಹಾರಗಳು, ವ್ಯಾಪಾರ, ಎಲ್ಲವೂ. 66 00:04:16,320 --> 00:04:19,560 ಇವನು ಈಗ ನನ್ನ ಅಳಿಯನಾಗುವುದಿಲ್ಲ, ನನ್ನ ಮಗನಾಗುತ್ತಾನೆ. 67 00:04:20,520 --> 00:04:23,080 ಸರ್, ಲಾಲಾನ ಹಿಂಬಾಲಿಸಲು ನಮಗೆ ನಿಮ್ಮ ಅನುಮತಿ ಬೇಕು. 68 00:04:23,120 --> 00:04:25,720 ಗುಡ್ಡು ಪಂಡಿತನನ್ನೂ ಬಂಧಿಸುತ್ತೇವೆ, ಅಫೀಮಿಗೆ. 69 00:04:27,080 --> 00:04:28,000 ನಾವು ಏನು ಮಾಡಬೇಕು? 70 00:04:28,080 --> 00:04:29,680 ಎನ್ಕೌಂಟರ್. ಗುಡ್ಡು ಪಂಡಿತ್. 71 00:04:30,840 --> 00:04:33,760 ನೀವೆಲ್ಲರೂ ಶಾಂತಿಯುತವಾಗಿ ಶರಣಾಗಬೇಕು! 72 00:04:35,440 --> 00:04:37,360 ಪಂಡಿತರೇ, ನೀವು ಈ ವಾಹನದಲ್ಲಿ ಬನ್ನಿ. 73 00:04:40,600 --> 00:04:41,600 ಓಡು. 74 00:04:42,080 --> 00:04:45,880 ಮೌರ್ಯ ಅವರೇ, ನಮ್ಮ ಕೆಲಸ ಅವರಿಗೆ ಶಿಕ್ಷೆ ಕೊಡಿಸುವುದು, ಶಿಕ್ಷಿಸುವುದಲ್ಲ! 75 00:04:51,080 --> 00:04:53,200 ಈಗ ನಮ್ಮ ನಡುವೆ ಯಾವುದೇ ವ್ಯತ್ಯಾಸವಿಲ್ಲ. 76 00:04:53,240 --> 00:04:55,080 ಮಾಡಿದ್ದಕ್ಕೆ ಶಿಕ್ಷೆ ಅನುಭವಿಸುವೆ. 77 00:04:57,360 --> 00:04:59,720 ತ್ರಿಪಾಠಿಯವರು ಕೊಟ್ಟ ಜೀವವನ್ನು 78 00:05:00,240 --> 00:05:02,600 ಅವರೇ ಹಿಂಪಡೆದರು. 79 00:05:05,640 --> 00:05:07,240 ಬಾವುಜಿಯನ್ನು ಕೊಲ್ಲಬೇಡ, ಮಖ್ಬೂಲ್. 80 00:05:08,040 --> 00:05:09,360 ನಾನು ಕೊಲ್ಲುತ್ತೇನೆ. 81 00:05:09,440 --> 00:05:10,640 ಇದನ್ನು ಬಳಸಿ. 82 00:05:12,560 --> 00:05:14,480 ಇದೇ ಸಮಯ. ಕುಟುಂಬ ದುರ್ಬಲವಾಗಿದೆ. 83 00:05:15,000 --> 00:05:16,120 ಮಿರ್ಜಾಪುರದ ರಾಜ 84 00:05:16,200 --> 00:05:17,760 ಮಿರ್ಜಾಪುರ್ ಈಗ ನಿನ್ನದು. 85 00:05:17,800 --> 00:05:21,360 ಮುನ್ನಾ ತ್ರಿಪಾಠಿ, ಮಿರ್ಜಾಪುರದ ರಾಜ! 86 00:05:40,480 --> 00:05:41,480 ಗುಡ್ಡು! 87 00:05:57,000 --> 00:05:59,840 ಸೀಸನ್ 3 88 00:06:16,960 --> 00:06:19,280 ಎತ್ಕೊಂಡು ಹೋಗಿ ಅಲ್ಲಿರಿಸಿ. 89 00:06:19,360 --> 00:06:20,800 ಅದನ್ನು ತಗೊಳ್ಳಿ. 90 00:06:26,000 --> 00:06:27,000 ಜಾಗ್ರತೆ. 91 00:06:35,840 --> 00:06:37,440 ಹಾಂ. ಅಲ್ಲೇ ಇರಿಸಿ. 92 00:06:41,680 --> 00:06:43,240 ಕುಟುಂಬದ ಯಾರಾದರೂ ಇಲ್ಲಿದ್ದೀರಾ? 93 00:06:43,320 --> 00:06:45,480 ಅವರ ತಂದೆ, ಸಹೋದರ, ಅಥವಾ ಬೇರೆ ಪುರುಷ ಸಂಬಂಧಿ? 94 00:06:51,880 --> 00:06:53,280 ಆದರೆ, ಮೇಡಂ, ಇದು... 95 00:07:31,520 --> 00:07:35,680 ಮೇಡಂ, ನಿಮ್ಮ ಪತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎನ್ನಲಾಗುತ್ತಿದೆ. 96 00:07:35,760 --> 00:07:37,560 ಅದರ ಬಗ್ಗೆ ಏನು ಹೇಳಲು ಬಯಸುತ್ತೀರಿ? 97 00:07:37,640 --> 00:07:40,400 ಮೂಲಗಳ ಪ್ರಕಾರ, ಅಖಂಡಾನಂದ್ ತ್ರಿಪಾಠಿ ಕೂಡ ಕಾಣೆಯಾಗಿದ್ದಾರೆ. 98 00:07:40,480 --> 00:07:41,480 ಅದು ನಿಜವೇ? 99 00:07:41,560 --> 00:07:44,600 ಇಲ್ಲದಿದ್ದರೆ, ತನ್ನ ಮಗನ ಅಂತ್ಯಕ್ರಿಯೆಯಲ್ಲಿ ಏಕೆ ಭಾಗವಹಿಸಲಿಲ್ಲ? 100 00:07:44,680 --> 00:07:46,680 ಮಾಧುರಿಜೀ, ಇದು ಗ್ಯಾಂಗ್ ವಾರಾ? 101 00:07:46,760 --> 00:07:50,280 ಮೇಡಂ, ನಿಮಗೇ ಹೀಗಾದರೆ, ಸಾಮಾನ್ಯರ ಗತಿ ಏನು? 102 00:07:50,360 --> 00:07:52,000 ಜನ ನಿಮ್ಮನ್ನು ಹೇಗೆ ನಂಬುವುದು? 103 00:07:59,800 --> 00:08:01,360 ನಾನು ಈ ರಾಜ್ಯದ ಮಗಳು. 104 00:08:02,920 --> 00:08:04,720 ನೀವು ನನಗೆ ಈ ಬಿರುದು ನೀಡಿದ್ದೀರಿ. 105 00:08:06,440 --> 00:08:08,560 ಇಂದು ವಿಧವೆಯಾಗಿರುವುದು ನಾನೊಬ್ಬಳೇ ಅಲ್ಲ. 106 00:08:10,480 --> 00:08:12,480 ಇಂದು ನಿಮ್ಮ ಮನೆ ಮಗಳು ವಿಧವೆಯಾಗಿದ್ದಾಳೆ. 107 00:08:15,520 --> 00:08:19,000 ತಲೆಯ ಮೇಲಿಂದ ತಂದೆಯ ಆಸರೆ ಕಳೆದುಕೊಂಡವಳು ನಾನೊಬ್ಬಳೇ ಅಲ್ಲ, 108 00:08:19,680 --> 00:08:21,640 ನೀವೂ ಕಳೆದುಕೊಂಡಿದ್ದೀರಿ. 109 00:08:22,160 --> 00:08:26,080 ನಿಮ್ಮ ಪ್ರಶ್ನೆಗಳಲ್ಲಿ ಅಡಗಿರುವ ಕೋಪ ಮತ್ತು ನಿರಾಶೆ ನನಗೆ ಅರ್ಥ ಆಗುತ್ತೆ. 110 00:08:26,680 --> 00:08:28,080 ನಾನು ಭರವಸೆ ನೀಡುವೆ, 111 00:08:30,800 --> 00:08:32,400 ಈ ನೋವನ್ನು ಸಹಿಸಿಕೊಳ್ಳುವೆ, 112 00:08:33,000 --> 00:08:34,760 ಮತ್ತು ಗುರಾಣಿಯಂತೆ ಬಲವಾಗಿ ಉಳಿಯುವೆ. 113 00:08:35,680 --> 00:08:40,400 ನನ್ನ ಕುಟುಂಬಕ್ಕೆ, ಅಂದರೆ ನಿಮಗೆ, ಹಾನಿಯಾಗಲು ಬಿಡುವುದಿಲ್ಲ. 114 00:08:40,960 --> 00:08:42,640 ಈ ರಾಜ್ಯ ಸ್ವಚ್ಛವಾಗುತ್ತದೆ. 115 00:08:42,720 --> 00:08:45,600 ಅದೂ ಕಾನೂನಿನ ಪ್ರಕಾರ. 116 00:08:46,360 --> 00:08:48,320 ಜೈ ಹಿಂದ್! ರಾಜ್ಯವು ಚಿರಾಯುವಾಗಲಿ. 117 00:08:48,400 --> 00:08:49,760 ನಾವು ಭಯದಲ್ಲಿ ಬದುಕುವುದಿಲ್ಲ! 118 00:08:49,880 --> 00:08:51,640 ಮಾಧುರಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ! 119 00:08:51,720 --> 00:08:53,520 ನಾವು ಭಯದಿಂದ ಬದುಕುವುದಿಲ್ಲ! 120 00:08:53,640 --> 00:08:55,360 ಮಾಧುರಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ! 121 00:08:55,440 --> 00:08:57,120 ನಾವು ಭಯದಿಂದ ಬದುಕುವುದಿಲ್ಲ! 122 00:08:57,200 --> 00:08:59,160 ಮಾಧುರಿ ನಮ್ಮ ಬೆಂಬಲಕ್ಕೆ ನಿಂತಿದ್ದಾರೆ! 123 00:08:59,240 --> 00:09:01,120 ಲೋಕ್ ಸ್ವರಾಜ್ಯ ಪಕ್ಷ... 124 00:09:01,200 --> 00:09:02,960 ಐಜಿ ದುಬೆಗೆ ನಿಮ್ಮ ಆದೇಶಕ್ಕೆ ಬೇಕು, 125 00:09:03,440 --> 00:09:05,280 ಗುಡ್ಡು ವಿರುದ್ಧ ಕ್ರಮ ಕೈಗೊಳ್ಳಲು. 126 00:09:05,880 --> 00:09:07,520 ಕೇವಲ ಗುಡ್ಡು ಪಂಡಿತ್ ಅಲ್ಲ, 127 00:09:07,600 --> 00:09:10,600 ಮಿರ್ಜಾಪುರದ ಸಿಂಹಾಸನ ಮುನ್ನಾ ಸಾವಿಗೆ ಕಾರಣ. 128 00:09:11,160 --> 00:09:13,400 ಈಗ ಆ ಸಿಂಹಾಸನವನ್ನು ನಾಶಮಾಡುವುದೇ ನನ್ನ ಗುರಿ. 129 00:09:28,360 --> 00:09:30,760 ಮಿರ್ಜಾಪುರ್ 130 00:10:09,880 --> 00:10:11,880 ಪೂರ್ವಾಂಚಲ್ 131 00:10:26,520 --> 00:10:28,600 ಮುಂಜಾನೆಯ ಸಮಯ, ಜಡ್ಜ್ ಸಾಹೇಬರೇ. 132 00:10:30,280 --> 00:10:31,840 ನಾನು ಪಾಯಿಖಾನೆಯಿಂದ ಬಂದಾಗ, 133 00:10:33,160 --> 00:10:35,520 ಟೇಬಲ್ ಬಳಿ ವಕೀಲರು ಬಂದು ಕೂತಿದ್ದರು. 134 00:10:37,320 --> 00:10:40,440 ಅವರಿಗೆ ನಿದ್ದೆಯಲ್ಲಿ ನಡೆಯುವ ಅಭ್ಯಾಸ ಇದೆ ಅಂದುಕೊಂಡೆ. 135 00:10:41,320 --> 00:10:44,480 ಆದರೆ "ದೂರು ದಾಖಲಿಸಲು ಬಯಸುತ್ತೇನೆ" ಎಂದರು. 136 00:10:45,200 --> 00:10:47,160 "ಯಾರ ವಿರುದ್ಧ?" ಎಂದು ಕೇಳಿದೆ. 137 00:10:48,040 --> 00:10:49,480 "ನನ್ನದೇ ವಿರುದ್ಧ" ಎಂದರು. 138 00:10:50,760 --> 00:10:52,720 "ದೇವರೇ. 139 00:10:53,480 --> 00:10:57,480 "ಸರ್, ಇಷ್ಟು ಮುಂಜಾನೆ ನನ್ನನ್ನು ಕೆಲಸದಿಂದ ತೆಗೆದುಹಾಕಲು ಬಯಸುತ್ತೀರಾ? 140 00:10:58,280 --> 00:11:00,080 "ಇಂದು, ನೀವು ಈ ದೂರನ್ನು ಸಲ್ಲಿಸಿ 141 00:11:00,560 --> 00:11:02,360 "ನಾಳೆ ನನ್ನ ಮೇಲೆ ಕೇಸ್ ಹಾಕ್ತೀರಿ" ಎಂದೆ. 142 00:11:02,440 --> 00:11:04,080 ಪಾಠಕ್ ಜೀ, ವಿಷಯಕ್ಕೆ ಬನ್ನಿ. 143 00:11:04,480 --> 00:11:06,160 ವಿಷಯವೆಂದರೆ, ಸಾಹೇಬರೇ, ಅದು... 144 00:11:06,240 --> 00:11:08,280 ಏನದು? ಅದನ್ನೇ ಕೇಳುತ್ತಿದ್ದೇನೆ. 145 00:11:08,360 --> 00:11:12,560 ವಕೀಲರು ಪೊಲೀಸ್ ಠಾಣೆಯಲ್ಲಿ ಸ್ವತಃ ಶರಣಾಗಿದ್ದಾರೆ. 146 00:11:14,240 --> 00:11:15,240 ನೀವು ಹೋಗಬಹುದು. 147 00:11:17,840 --> 00:11:20,240 ಏನನ್ನಾದರೂ ಹೇಳಲು ಬಯಸುವಿರಾ, ರಮಾಕಾಂತ್ ಪಂಡಿತ್? 148 00:11:22,160 --> 00:11:23,160 ಅಪ್ಪ. 149 00:11:31,880 --> 00:11:33,680 ನಾನು ಎಸ್ಎಸ್ಪಿ ಮೌರ್ಯನ ಕೊಂದೆ. 150 00:11:34,720 --> 00:11:36,240 ಅದಕ್ಕಾಗಿ ನನಗೆ ಶಿಕ್ಷೆಯಾಗಬೇಕು. 151 00:11:43,240 --> 00:11:46,600 ನನ್ನನ್ನು ನಂಬಿರಿ, ಸಾಹೇಬರೇ, ಇದು ಕೇವಲ ಒಂದು ನಾಟಕ. 152 00:11:47,440 --> 00:11:48,440 ಏನು ನಿಮ್ಮ ಅರ್ಥ? 153 00:11:49,000 --> 00:11:50,120 ನೋಡಿ, ಜಡ್ಜ್ ಸಾಹೇಬರೇ, 154 00:11:51,200 --> 00:11:53,040 ಈ ವಕೀಲ ಬಹಳ ಕುತಂತ್ರ ವ್ಯಕ್ತಿ. 155 00:11:53,840 --> 00:11:57,760 ನ್ಯಾಯಾಲಯದಲ್ಲಿ ಶರಣಾಗಿ ಸಹಾನುಭೂತಿ ಪಡೆಯಲು ನೋಡ್ತಿದ್ದಾರೆ. 156 00:11:57,840 --> 00:12:01,640 ಆದ್ದರಿಂದ ಗೌರವಾನ್ವಿತ ನ್ಯಾಯಾಲಯ ಇವರಿಗೆ ಶಿಕ್ಷೆಯನ್ನು ಪ್ರಕಟಿಸುವಾಗ, 157 00:12:02,440 --> 00:12:04,840 ನೇಣು ಹಾಕದೆ ಇರಲಿ ಅಂತ. 158 00:12:04,920 --> 00:12:07,800 ನಿಮ್ಮ ಭಾಷೆಯನ್ನು ಗಮನದಲ್ಲಿಟ್ಟುಕೊಳ್ಳಿ, ವಕೀಲರೇ. 159 00:12:07,880 --> 00:12:09,040 ಕ್ಷಮಿಸಿ, ಮೈ ಲಾರ್ಡ್. 160 00:12:10,440 --> 00:12:11,800 ನಾನು ಹೇಳೋದೇನಂದ್ರೆ 161 00:12:12,640 --> 00:12:17,480 ಇದು ಕೊಲೆಗೆ ಸಮಾನವಾದ ನರಹತ್ಯೆಯ ಪ್ರಕರಣವಲ್ಲ. 162 00:12:17,560 --> 00:12:21,120 ಇದು ಕರ್ತವ್ಯದಲ್ಲಿದ್ದ ಅಧಿಕಾರಿಯ ನಿರ್ದಾಕ್ಷಿಣ್ಯ, ಪೂರ್ವಯೋಜಿತ ಕೊಲೆ. 163 00:12:21,200 --> 00:12:24,280 -ಏನು ಹೇಳುತ್ತಿದ್ದಾರೆ? -ಇದು ಯೋಜಿಸಲಾದ ಕೊಲೆ ಎಂದು. 164 00:12:24,360 --> 00:12:28,920 ಆತನಿಗೆ ಸೆಕ್ಷನ್ 302, 353 ಅಡಿಯಲ್ಲಿ ಶಿಕ್ಷೆಯಾಗಬೇಕು 165 00:12:29,760 --> 00:12:31,680 ಮತ್ತು ಗಲ್ಲಿಗೇರಿಸಬೇಕು. 166 00:12:35,400 --> 00:12:36,960 ಆದರೆ ಉದ್ದೇಶವೇನು? 167 00:12:37,040 --> 00:12:41,280 ಅವರ ಮಗನ ವ್ಯಾಪಾರಾಸಕ್ತಿ. ಕ್ಷಮಿಸಿ. 168 00:12:42,880 --> 00:12:45,800 ಅಪರಾಧ ಚಟುವಟಿಕೆಗಳನ್ನು ರಕ್ಷಿಸಲು. 169 00:12:45,880 --> 00:12:49,480 ಹಾಗಿಲ್ಲದಿದ್ದರೆ, ಅವರು ಸಾಕ್ಷ್ಯವನ್ನು ನೀಡಬಹುದು. 170 00:13:00,320 --> 00:13:04,360 ಆರೋಪಿಯನ್ನು ಮುಂದಿನ ವಿಚಾರಣೆಯವರೆಗೆ ನ್ಯಾಯಾಂಗ ಬಂಧನದಲ್ಲಿರಿಸಲಾಗುತ್ತದೆ. 171 00:13:18,280 --> 00:13:24,280 ಕಾಶಿ ಟೀ ಸ್ಟಾಲ್ 172 00:13:24,360 --> 00:13:25,360 ಜೈ ಹಿಂದ್, ಸರ್. 173 00:13:26,120 --> 00:13:29,320 ಸಿ. ಜೆ. ಎಂ. ನ್ಯಾಯಾಲಯ 174 00:14:37,840 --> 00:14:40,520 ಯು.ಪಿ. ಪೊಲೀಸ್ ಪೊಲೀಸ್ 175 00:14:40,600 --> 00:14:43,480 ನೀವು ಶರಣಾಗಬೇಕಿರಲಿಲ್ಲ. 176 00:14:46,440 --> 00:14:48,800 ಆಪಾದನೆ ಹೊರಲು ನಾನು ಯಾರನ್ನಾದರೂ ಕೇಳುತ್ತಿದ್ದೆ. 177 00:14:52,920 --> 00:14:54,240 ನಿಮಗೆ ಜೈಲಲ್ಲಿ ಇರಲಾಗಲ್ಲ. 178 00:14:57,400 --> 00:15:00,560 ಬನ್ನಿ, ನಾನು ನಿಮ್ಮನ್ನು ಮನೆಗೆ ಬಿಡುತ್ತೇನೆ. 179 00:15:04,960 --> 00:15:08,080 ಚಿಂತಿಸಬೇಡಿ, ಒಬ್ಬ ಅಪರಾಧಿ ಮಾತ್ರ ನಿಮಗಾಗಿ ಜೈಲಿಗೆ ಹೋಗುತ್ತಾನೆ. 180 00:15:16,920 --> 00:15:18,120 ನೀವು ವಕೀಲರು, 181 00:15:19,560 --> 00:15:20,800 ಪ್ರಕರಣದ ವಿರುದ್ಧ ಹೋರಾಡಿ. 182 00:15:22,320 --> 00:15:24,760 ಕಾನೂನು ವಲಯದಲ್ಲಿ ಏನೋ ಹೇಳುತ್ತಾರಲ್ಲ? 183 00:15:26,440 --> 00:15:28,680 "ನಿರಪರಾಧಿಯಾಗುವವರೆಗೂ ಸಾಬೀತಾಗಿಲ್ಲ." 184 00:15:28,760 --> 00:15:31,040 "ಅಪರಾಧ ಸಾಬೀತಾಗುವವರೆಗೂ ನಿರಪರಾಧಿ." 185 00:15:31,120 --> 00:15:32,120 ಅದೇನೇ. 186 00:15:33,080 --> 00:15:35,320 ಆದ್ದರಿಂದ, ಹೋರಾಡಿ. ನಿಮಗಾಗಿ ಅಲ್ಲದಿದ್ದರೆ, 187 00:15:36,560 --> 00:15:39,360 ಅಮ್ಮನಿಗಾಗಿ ಮತ್ತು ಡಿಂಪಿಗಾಗಿ ಮಾಡಿ. 188 00:15:40,520 --> 00:15:42,200 ಈ ಹಾದಿ ಏಕೆ ಆರಿಸಿಕೊಂಡಿರಿ? 189 00:15:51,560 --> 00:15:52,720 ನಿನ್ನಂತೆಯೇ... 190 00:15:55,360 --> 00:15:57,320 ನಾನೂ ನನ್ನ ಮಾರ್ಗ ಆರಿಸಿಕೊಂಡಿದ್ದೇನೆ. 191 00:15:59,720 --> 00:16:01,880 ನನ್ನ ಮಾರ್ಗದಲ್ಲಿ ಗಲ್ಲು ಶಿಕ್ಷೆ ಆಗಲ್ಲ. 192 00:16:03,880 --> 00:16:05,400 "ಮಾರ್ಗ ಆರಿಸಿಕೊಂಡಿದ್ದೇನೆ..." 193 00:16:06,480 --> 00:16:07,880 ಹಾಗಾದರೆ ಎಲ್ಲಿಗೆ ಹೋಗುತ್ತೆ? 194 00:16:13,720 --> 00:16:14,720 ನಿಯಂತ್ರಣ. 195 00:16:16,240 --> 00:16:17,240 ಅಧಿಕಾರ. 196 00:16:18,360 --> 00:16:19,360 ಗೌರವ. 197 00:16:27,040 --> 00:16:29,200 ನಿನಗೆ ಶುಭವಾಗಲಿ. ಈಗ ಹೋಗು. 198 00:16:37,600 --> 00:16:38,600 ಕೇಳು, 199 00:16:39,480 --> 00:16:41,760 ನನ್ನ ಸ್ಕೂಟರ್ ಪೊಲೀಸ್ ಠಾಣೆಯಲ್ಲಿದೆ. 200 00:16:42,960 --> 00:16:44,280 ಮನೆಗೆ ತೆಗೆದುಕೊಂಡು ಹೋಗು. 201 00:16:46,360 --> 00:16:47,360 ಕಾನ್ಸ್ಟೇಬಲ್. 202 00:16:50,400 --> 00:16:52,720 ಅವರು ಹೋಗಲಿ! 203 00:16:52,800 --> 00:16:58,760 ಮಿರ್ಜಾಪುರದ ರಾಜ 204 00:17:12,840 --> 00:17:14,280 ನಿಮ್ಮ ಸಮಯಕ್ಕಾಗಿ ಧನ್ಯವಾದ. 205 00:17:15,320 --> 00:17:16,320 ಕೂತ್ಕೊಳ್ಳಿ. 206 00:17:27,320 --> 00:17:31,040 ನಾನು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮಿಸಿ. 207 00:17:31,680 --> 00:17:33,560 ಬರಲಾಗಲಿಲ್ಲವೇ ಅಥವಾ ಬರಲು ಬಯಸಲಿಲ್ಲವೇ? 208 00:17:36,400 --> 00:17:39,000 ಮುನ್ನಾ ಜೊತೆ ನನ್ನ ವ್ಯವಹಾರ ಸಂಬಂಧ ಮಾನ್ಯ ಮುಖ್ಯಮಂತ್ರಿಯವರ 209 00:17:39,720 --> 00:17:42,080 ಗೌರವದ ಮೇಲೆ ಪರಿಣಾಮ ಬೀರಬಹುದಿತ್ತು. 210 00:17:43,640 --> 00:17:45,560 ಸಾರ್ವಜನಿಕರಿಗೆ ತಪ್ಪು ಸಂದೇಶ ಹೋಗುತ್ತಿತ್ತು. 211 00:17:46,200 --> 00:17:47,480 ಅದಕ್ಕೇ ನಾನು ಬರಲಿಲ್ಲ. 212 00:17:50,400 --> 00:17:51,480 ಈಗ ಯಾಕೆ ಬಂದಿದ್ದೀರಿ? 213 00:17:51,960 --> 00:17:54,080 ನಾನು ಒಪ್ಪಂದ ಮಾಡಲು ಬಂದಿಲ್ಲ, ಮಾಧುರಿಜೀ. 214 00:17:55,960 --> 00:17:57,800 ನಿಮಗೆ ನನ್ನ ಸಂಪೂರ್ಣ ಬೆಂಬಲವಿದೆ 215 00:17:59,720 --> 00:18:01,400 ಎಂದು ಹೇಳಲು ಬಂದಿದ್ದೇನೆ. 216 00:18:10,320 --> 00:18:12,440 ಬೆಂಬಲ ಬೇಕಿರುವುದು ನಿಮಗೋ, ನನಗೋ? 217 00:18:13,080 --> 00:18:14,560 ಬಹುಶಃ ನಮ್ಮಿಬ್ಬರಿಗೂ. 218 00:18:19,760 --> 00:18:21,800 ನನ್ನ ತಂದೆಯ ಮರಣದ ನಂತರ 219 00:18:22,680 --> 00:18:24,080 ನಾನೂ ದಿಕ್ಕುತೋಚದಂತಾದೆ. 220 00:18:26,280 --> 00:18:27,280 ನನಗೆ ಯಾರೂ ಇರಲಿಲ್ಲ. 221 00:18:29,320 --> 00:18:31,520 ಮುನ್ನಾ ಆ ಸಮಯದಲ್ಲಿ ನನ್ನ ಬೆಂಬಲಕ್ಕೆ ನಿಂತ. 222 00:18:34,160 --> 00:18:36,920 ಹಾಗಾಗಿ, ಇದು ಬೆಂಬಲ ಕೊಡುವ, ತೆಗೆದುಕೊಳ್ಳುವ ಬಗ್ಗೆ ಅಲ್ಲ. 223 00:18:38,040 --> 00:18:43,080 ಒಂಟಿಯಾಗಿರುವಾಗ, ಜೊತೆಯಲ್ಲಿ ಒಬ್ಬರು ಇರುವ ಭರವಸೆ ಇದ್ದರೆ ಸಾಕು. 224 00:18:43,920 --> 00:18:47,240 ಆ ವಿಶ್ವಾಸ ಮತ್ತು ಆಶ್ವಾಸನೆಯನ್ನು ನಿಮಗೆ ಕೊಡಲು ಬಂದಿದ್ದೇನೆ, 225 00:18:48,320 --> 00:18:49,480 ನಾನಿದ್ದೇನೆ ಅಂತ. 226 00:18:52,880 --> 00:18:54,800 ನೀವು ಹೇಳುವುದು ನನಗೆ ಅರ್ಥವಾಗುತ್ತೆ. 227 00:19:00,000 --> 00:19:01,200 ಆದರೆ ನೆನಪಿನಲ್ಲಿಡಿ, 228 00:19:03,640 --> 00:19:06,440 ನೀವು ಕೂಡ ಅಪರಾಧ ಮುಕ್ತ ರಾಜ್ಯದ ಭಾಗವೇ. 229 00:19:09,160 --> 00:19:11,080 ಇದರಲ್ಲಿ ಯಾವುದೇ ಸಲೀಸು ನಿರೀಕ್ಷಿಸಬೇಡಿ. 230 00:19:11,720 --> 00:19:12,720 ಖಂಡಿತ. 231 00:19:14,280 --> 00:19:15,280 ಧನ್ಯವಾದ. 232 00:19:18,880 --> 00:19:19,960 ದೊಡ್ಡಪ್ಪನ ಸುದ್ದಿ? 233 00:19:21,400 --> 00:19:22,400 ಯಾರು? 234 00:19:24,800 --> 00:19:25,960 ಖಾಲೀನ್ ಭಯ್ಯಾ. 235 00:19:28,080 --> 00:19:29,080 ಇನ್ನೂ ಇಲ್ಲ. 236 00:19:35,280 --> 00:19:37,200 ನಮಸ್ತೆ, ಮುಖ್ಯಮಂತ್ರಿ ಮೇಡಂ. 237 00:19:38,480 --> 00:19:39,640 ನಮಸ್ತೆ. 238 00:19:40,320 --> 00:19:42,760 ಮಾಧುರಿ ಯಾದವ್ ಮುಖ್ಯಮಂತ್ರಿ 239 00:19:51,280 --> 00:19:56,080 ಆಜಂಗಢ 240 00:20:02,920 --> 00:20:04,480 -ಹೇ, ಖಿಲಾವನ್. -ಹಾಂ? 241 00:20:04,560 --> 00:20:07,480 ಆ 26ನೇ ಸಂಖ್ಯೆಯ ರುಚಿಕರವಾದ ಪಾನ್ ಒಂದನ್ನು ನನಗೆ ಕೊಡು. 242 00:20:08,000 --> 00:20:09,320 ಮಾಡಿಟ್ಟಿರುವುದೇ ಇದೆ. ತಗೋ. 243 00:20:12,040 --> 00:20:13,720 ನಿನ್ನ ಲೆಕ್ಕದಲ್ಲಿ ಬರೆಯುವೆ. 244 00:20:13,800 --> 00:20:16,800 ಈ ಹುಡುಗನೇ ನಮ್ಮನ್ನು ಆ ಜಾಗಕ್ಕೆ ಕೊಂಡೊಯ್ಯುತ್ತಾನೆ. 245 00:20:16,920 --> 00:20:20,400 ಆದರೆ ಇದು ತುಂಬಾ ಸೂಕ್ಷ್ಮ ನೆರೆಹೊರೆ, ಅಕ್ಕ. 246 00:20:21,480 --> 00:20:24,040 ಗುಡ್ಡು ಭಯ್ಯಾಗೆ ಕಾಯುವುದೇ ಒಳ್ಳೆಯದು. 247 00:21:27,800 --> 00:21:32,720 ಸ್ಟೇಷನರಿ 248 00:23:56,840 --> 00:23:58,080 ನಮಸ್ಕಾರ, ಚಿಕ್ಕಪ್ಪ. 249 00:24:02,040 --> 00:24:03,040 ಖುಷಿಯಾಗಿರು, ರಾಜು. 250 00:24:03,120 --> 00:24:04,640 ತುಂಬಾನೇ ಖುಷಿಯಾಗಿದ್ದೀನಿ ಬಿಡಿ. 251 00:24:06,240 --> 00:24:07,240 ಮಗನೇ... 252 00:24:14,480 --> 00:24:16,800 ಇದೇನು, ಚಿಕ್ಕಪ್ಪ? ರಕ್ಷಣೆಯಾ? 253 00:24:18,240 --> 00:24:19,360 ನೀವು ಯಾರು? 254 00:24:20,320 --> 00:24:22,400 ಅವರು ನನ್ನ ಚಿಕ್ಕಪ್ಪ. ಚಿಕ್ಕಪ್ಪ. 255 00:24:23,400 --> 00:24:25,560 ದೊಡ್ಡ ಬೇವರ್ಸಿ ನನ್ನ ಮಗ ಇವನು. 256 00:24:26,160 --> 00:24:28,240 ಚಿಕ್ಕಪ್ಪ ಅಂದು ನನ್ನನ್ನು ಕುಂಟ ಮಾಡಿಬಿಟ್ಟ. 257 00:24:29,360 --> 00:24:32,440 ಅವನನ್ನು ಕೊಲ್ಲಿ. ಏನು ಬೇಕಾದರೂ ಕೊಡುತ್ತೇನೆ. 258 00:24:34,400 --> 00:24:38,000 ಹೌದಾ? ಆತನೇ ಭಿಕಾರಿ. ನಿಮಗೆ ಕೊಡಲು ಒಂದು ಪೈಸೆಯೂ ಇಲ್ಲ. 259 00:24:38,080 --> 00:24:41,000 ನೀವು ಅವನನ್ನು ಕೊಂದರೆ, ಐದು ಬಿಘಾ ಜಮೀನು ಕೊಡುತ್ತೇನೆ. 260 00:24:41,080 --> 00:24:44,720 ಕೊಡೋದಕ್ಕೆ ಅದೇನು ಮಿಠಾಯಿಯೇನೋ? ನಿಮ್ಮಪ್ಪ ಕೊಟ್ಟು ಹೋದನಾ ನಿನಗೆ ಜಮೀನು? 261 00:24:45,200 --> 00:24:47,520 ನನ್ನಪ್ಪ ಜೀವನಪೂರ್ತಿ ಮಿಲಿಟರಿಯಲ್ಲಿ ದುಡಿದು 262 00:24:47,600 --> 00:24:49,320 15 ಬಿಘಾ ಭೂಮಿಯನ್ನು ಖರೀದಿಸಿದರು. 263 00:24:49,400 --> 00:24:51,600 ಆತ ಸತ್ತ ಕೂಡಲೆ ಈ ಸೂಳೆಮಗ ಅದನ್ನು ಲಪಟಾಯಿಸಿದ. 264 00:24:51,680 --> 00:24:55,280 ಕೇಳು, ನಿನ್ನಪ್ಪ ಶಾಟಾನೂ ಖರೀದಿಸಲಿಲ್ಲ. 265 00:24:55,360 --> 00:24:58,080 ಇರೋ ದುಡ್ಡನ್ನೆಲ್ಲಾ ಸೂಳೆಯರ ಮೇಲೆ ಸುರಿದ. 266 00:24:58,160 --> 00:25:01,040 ಮತ್ತೆ ನೀನು ಯಾವಾಗ ಖರೀದಿಸಿದೆ? ಕುಡಿದಿದ್ದಾಗಲೇ? 267 00:25:01,120 --> 00:25:02,600 ಅದು ನಮ್ಮ ಪೂರ್ವಜರಿಗೆ ಸೇರಿದ್ದು. 268 00:25:02,680 --> 00:25:04,960 ನಿನ್ನ ಅಜ್ಜ ಅದನ್ನು ನನಗೆ ಒಪ್ಪಿಸಿದರು. 269 00:25:05,040 --> 00:25:06,280 ನನ್ನಣ್ಣನನ್ನು ಏಕೆ ಕೊಂದೆ? 270 00:25:06,360 --> 00:25:08,200 ನನ್ನ ಭಾವನಿಗೆ ಯಾಕೆ ಗುಂಡು ಹೊಡೆಸಿದ? 271 00:25:08,280 --> 00:25:09,320 ತಾಯಿಗೆ ಬೈದಿದ್ಯಾರು? 272 00:25:09,400 --> 00:25:11,360 ನನ್ನ ನಾದಿನಿಗೆ ಕಿರುಕುಳ ಕೊಟ್ಟಿದ್ಯಾರು? 273 00:25:11,440 --> 00:25:13,560 ನಿನ್ನ ನಾದಿನಿ ಸೂಳೆ ಕಣೋ ಲೇ. 274 00:25:13,640 --> 00:25:15,680 -ಮುಚ್ಚೋ, ಸೂಳೆಮಗನೇ! -ನಿನ್ ತಿಕ ಕೆಯ್ತೀನಿ! 275 00:25:15,760 --> 00:25:16,640 ಹೇ, ಸೂಳೆಮಗನೇ! 276 00:25:16,720 --> 00:25:18,000 -ಬೋಳಿಮಗನೇ! -ದರಿದ್ರದವನೇ! 277 00:25:22,000 --> 00:25:23,320 ನೀವು ಹುಚ್ಚರಾ? 278 00:25:23,800 --> 00:25:25,760 ನೀವೇ ಸತ್ತರೆ ಭೂಮಿ ಇದ್ದು ಏನು ಪ್ರಯೋಜನ? 279 00:25:27,720 --> 00:25:30,720 ನೀವು ಶಸ್ತ್ರಚಿಕಿತ್ಸೆ ಮುಂದುವರಿಸಿ. ಮತ್ತು ನೀನು. ನೀನೇ. 280 00:25:35,880 --> 00:25:38,320 ಅರ್ಧರ್ಧ ಭೂಮಿ ಹಂಚಿಕೋ, ಕಾಗದಪತ್ರ ಸರಿಮಾಡಿಕೊಂಡು. 281 00:25:38,960 --> 00:25:40,600 ನನ್ನ ಜನ ನೋಡಿಕೊಳ್ತಾರೆ. 282 00:25:42,480 --> 00:25:44,120 ನನಗೆ ಇನ್ನು ರಕ್ತಪಾತ ಬೇಡ. 283 00:25:44,600 --> 00:25:45,720 ನಿಮಗೆ ಅರ್ಥವಾಗುತ್ತಿಲ್ಲ. 284 00:25:47,040 --> 00:25:48,280 ಚಿಕ್ಕಪ್ಪ ಒಪ್ಪುವುದಿಲ್ಲ. 285 00:25:48,840 --> 00:25:50,360 ಅವನೊಬ್ಬ ದಡ್ಡ. 286 00:25:51,280 --> 00:25:54,240 ಒಪ್ಪದಿದ್ದರೆ, ಅವನ ಎರಡೂ ಕಾಲುಗಳನ್ನು ಕತ್ತರಿಸುತ್ತೇನೆ. 287 00:25:59,520 --> 00:26:02,240 ನೀವು ಈ ಕೌಟುಂಬಿಕ ಕಲಹಗಳಿಂದ ದೂರವಿರಬೇಕು. 288 00:26:19,200 --> 00:26:20,480 ಯಾರನ್ನೋ ಹುಡುಕುತ್ತಿರುವೆ. 289 00:26:21,440 --> 00:26:23,000 ನಿಮ್ಮೊಂದಿಗೆ ನನಗೆ ದ್ವೇಷವಿಲ್ಲ. 290 00:26:29,000 --> 00:26:30,840 ನಾನು ಮಿರ್ಜಾಪುರದ ಬಾಹುಬಲಿ. 291 00:26:31,800 --> 00:26:33,400 ಗುಡ್ಡು ಪಂಡಿತ್ ನನ್ನ ಕಳುಹಿಸಿದರು. 292 00:26:33,480 --> 00:26:35,760 ಇದು ಮಿರ್ಜಾಪುರ್ ಅಲ್ಲ. 293 00:26:37,520 --> 00:26:39,560 ಇಲ್ಲಿ ನಾನೇ ಬಾಹುಬಲಿ. 294 00:26:44,160 --> 00:26:46,000 ಇಡೀ ಪೂರ್ವಾಂಚಲ್ ನಮಗೆ ವರದಿ ಮಾಡುತ್ತದೆ. 295 00:26:47,080 --> 00:26:49,800 ನಮ್ಮ ವಿರುದ್ಧ ಹೋದರೆ ಸಿಂಹಾಸನದ ವಿರುದ್ಧ ಹೋದಂತೆ. 296 00:27:00,400 --> 00:27:02,400 ಭಯ್ಯಾಜಿ... ಭಯ್ಯಾಜಿ, ನಾನಲ್ಲ! 297 00:27:03,080 --> 00:27:06,480 ಭಯ್ಯಾಜಿ, ನಾ... ಭಯ್ಯಾಜಿ... 298 00:27:06,560 --> 00:27:08,320 ಭಯ್ಯಾಜಿ, ಅದು ನಾನಲ್ಲ! 299 00:27:08,400 --> 00:27:10,480 ಭಯ್ಯಾಜಿ, ಅದು ನಾನಲ್ಲ! ಭಯ್ಯಾಜಿ! 300 00:27:25,000 --> 00:27:29,000 ಗುಡ್ಡು ಪಂಡಿತ್ ಪೂರ್ವಾಂಚಲವನ್ನು ಆಳುತ್ತಾನೆ ಎಂದು ಇನ್ನೂ ನಿರ್ಧರಿಸಿಲ್ಲ. 301 00:27:30,120 --> 00:27:33,520 ಎಲ್ಲಾ ಬಾಹುಬಲಿಗಳು ಅದನ್ನು ಬೆಂಬಲಿಸಿದ ಮೇಲೆ ಗೊತ್ತಾಗುತ್ತೆ. 302 00:27:36,160 --> 00:27:38,320 ನೀನು ಹೆಂಗಸು ಅಂತ ಬಿಟ್ಟು ಕಳಿಸ್ತಾ ಇದ್ದೇನೆ. 303 00:27:39,520 --> 00:27:41,520 ಮುಂದಿನ ಬಾರಿ ನಾನು ದಯೆ ತೋರುವುದಿಲ್ಲ. 304 00:28:04,520 --> 00:28:05,960 ಆರಕ್ಷಕ ಠಾಣೆ ಮಿರ್ಜಾಪುರ್ 305 00:28:09,520 --> 00:28:11,120 ಹೇ, ನಿಲ್ಲಿಸು... ನಿಲ್ಲಿಸು! 306 00:28:34,960 --> 00:28:35,960 ಸಿಕ್ಕಿತು, ಭಯ್ಯಾಜಿ. 307 00:28:40,360 --> 00:28:41,360 ಇರು. 308 00:28:42,200 --> 00:28:43,880 -ಶುರುವಾಗ್ತಿಲ್ಲ, ಭಯ್ಯಾಜಿ. -ಜರುಗು. 309 00:28:44,640 --> 00:28:46,160 ಎಷ್ಟಾದರೂ ಅಪ್ಪನದಲ್ವಾ? 310 00:28:56,440 --> 00:28:57,440 ಥತ್. 311 00:29:31,320 --> 00:29:34,400 ಶ್ರೀ ಅಖಂಡಾನಂದ್ ತ್ರಿಪಾಠಿ 312 00:30:21,800 --> 00:30:24,760 ಅಪ್ಪನೊಂದಿಗೆ ಮಾತನಾಡಲು ಪ್ರಯತ್ನಿಸಿದೆ, ಆದರೆ ಅವರು ಕೇಳಲಿಲ್ಲ. 313 00:30:33,840 --> 00:30:35,120 ಅಮ್ಮ, ನಾನು ನಿರ್ಧರಿಸಿರುವೆ, 314 00:30:36,280 --> 00:30:38,200 ನೀನು ಮತ್ತು ಡಿಂಪಿ ನನ್ನೊಂದಿಗಿರುತ್ತೀರಿ. 315 00:30:40,040 --> 00:30:41,360 ಇಲ್ಲಿರೋದು ಸುರಕ್ಷಿತವಲ್ಲ. 316 00:30:47,200 --> 00:30:48,520 ನೀನು ಹೇಳಿದ್ದು ಸರಿ, ಗುಡ್ಡು. 317 00:30:49,760 --> 00:30:51,560 ಕುಟುಂಬವು ಒಟ್ಟಿಗೆ ಬದುಕಬೇಕು. 318 00:30:52,760 --> 00:30:53,760 ಒಂದೇ ಸೂರಿನಡಿ. 319 00:30:55,480 --> 00:30:56,800 ಮತ್ತು ನನ್ನ ಸೂರು ಇಲ್ಲಿದೆ. 320 00:30:58,560 --> 00:30:59,760 ನಿನಗೆ ಅರ್ಥವಾಗುತ್ತಿಲ್ಲ. 321 00:31:01,600 --> 00:31:02,720 ಅಪ್ಪ ಇಲ್ಲಿಲ್ಲ. 322 00:31:03,280 --> 00:31:05,280 ಈಗ ನೀನು ಮತ್ತು ಡಿಂಪಿ ನನ್ನ ಜವಾಬ್ದಾರಿ. 323 00:31:06,920 --> 00:31:08,080 ನಾನು ಎಲ್ಲಿಯೂ ಹೋಗಲ್ಲ. 324 00:31:10,160 --> 00:31:13,400 ಯಾಕೆ ಹಠ ಮಾಡುತ್ತಿದ್ದೀಯ? 325 00:31:13,480 --> 00:31:17,240 ನಾನು ಹಠ ಮಾಡದಿದ್ದರೆ, ಈ ಕುಟುಂಬಕ್ಕೆ ಸೇರುವುದಿಲ್ಲಲ್ಲ, ಗುಡ್ಡು. 326 00:31:21,000 --> 00:31:25,160 ನನ್ನ ಹಠಮಾರಿ ಅಮ್ಮ, ಇದು ಅಪಾಯಕಾರಿ. 327 00:31:25,240 --> 00:31:27,840 ಅರ್ಥ ಮಾಡಿಕೋ. ನನ್ನ ಜೊತೆ ಇದ್ದರೆ ಸುರಕ್ಷಿತವಾಗಿರ್ತೀರಿ. 328 00:31:30,480 --> 00:31:33,360 ಮಿರ್ಜಾಪುರದ ಅತಿ ದೊಡ್ಡ ಬಾಹುಬಲಿಯ ತಾಯಿ ನಾನು. 329 00:31:34,720 --> 00:31:36,960 ಈ ನಗರದಲ್ಲಿ ನನಗಿಂತ ಯಾರು ಸುರಕ್ಷಿತರು? 330 00:31:39,000 --> 00:31:40,520 ಅಷ್ಟಕ್ಕೂ ನೀನು ಬಾಹುಬಲಿ. 331 00:31:44,720 --> 00:31:46,760 ಮೇಡಂ, ಗುಡ್ಡು ಎಷ್ಟೆಂದರೂ ದರೋಡೆಕೋರ. 332 00:31:47,720 --> 00:31:50,960 ಆದ್ದರಿಂದ, ನಾವು ಅವನಿಗೆ ಸುಲಭವಾಗಿ ಶತ್ರುಗಳನ್ನು ಸೃಷ್ಟಿಸಬಹುದು. 333 00:31:51,480 --> 00:31:55,880 ನನ್ನ ಕೆಲವು ಅಧಿಕಾರಿಗಳು ತಜ್ಞರು ಇದರಲ್ಲಿ, ಮೇಡಂ. ಅವರು ಅದನ್ನು ನಿಭಾಯಿಸುತ್ತಾರೆ. 334 00:31:56,800 --> 00:31:58,000 ಎಷ್ಟು ವೆಚ್ಚವಾಗುತ್ತದೆ? 335 00:32:03,560 --> 00:32:04,960 ನಿಮಗೆ ಮುಕ್ತ ಅಧಿಕಾರ ಇದೆ. 336 00:32:09,640 --> 00:32:12,600 ನನ್ನ ಅತ್ತೆ ಮತ್ತು ಆಕೆಯ ಮಗ ಸುರಕ್ಷಿತವಾಗಿರಬೇಕು ಅಷ್ಟೇ. 337 00:32:13,360 --> 00:32:15,160 ಗುಡ್ಡು ಅವರನ್ನು ಒತ್ತೆ ಇರಿಸಿದ್ದಾನೆ. 338 00:32:15,920 --> 00:32:19,080 -ಖಂಡಿತ. -ಇದರಲ್ಲಿ ನನ್ನ ಕೈವಾಡ ಇರುವುದು ತಿಳಿಯಬಾರದು. 339 00:32:20,000 --> 00:32:21,000 ಸರಿ, ಮೇಡಂ. 340 00:32:25,320 --> 00:32:26,720 ತ್ರಿಪಾಠಿಯವರ ಸುದ್ದಿ? 341 00:32:27,280 --> 00:32:29,000 ಏನೂ ಇಲ್ಲ. 342 00:32:29,080 --> 00:32:31,520 ಮತ್ತು, ಮೇಡಂ, ಅವನಂತಹ ಅಪರಾಧಿಗಳು 343 00:32:31,600 --> 00:32:34,720 ದೊಡ್ಡದನ್ನು ಕಾರ್ಯಗತಗೊಳಿಸಿದ ನಂತರ ಆಗಾಗ್ಗೆ ಭೂಗತವಾಗಿ ಹೋಗ್ತಾರೆ. 344 00:32:34,800 --> 00:32:35,960 ಅವರಿಗೆ ಇದು ಸಹಜ. 345 00:32:40,400 --> 00:32:41,400 ಮರೆಯಬೇಡಿ, 346 00:32:43,120 --> 00:32:44,880 ಅವರು ರಾಜ್ಯದ ಸಚಿವರೂ ಆಗಿದ್ದಾರೆ. 347 00:32:47,120 --> 00:32:48,120 ಸರಿ, ಮೇಡಂ. 348 00:32:55,960 --> 00:32:58,720 ಹಾಂ, ಮುದ್ದು, ಮುದ್ದು... 349 00:32:58,800 --> 00:33:01,040 ಮಗನೇ, ಏನಾಯ್ತೋ? 350 00:33:02,720 --> 00:33:05,720 ಲಾಲಿ ಮುದ್ದು... 351 00:33:09,680 --> 00:33:11,680 ಚಿನ್ನ, ನನ್ನ ಪುಟ್ಟ 352 00:33:12,400 --> 00:33:14,280 ಸರಿ, ಚಿನ್ನ. ಪರವಾಗಿಲ್ಲ. 353 00:33:14,760 --> 00:33:16,840 ರಧಿಯಾ, ಟಿವಿ ಆನ್ ಮಾಡಬೇಡ, ಹೇಳಿದೆ ನೋಡು. 354 00:33:17,800 --> 00:33:20,400 ಏನು, ಭಾಭಿ. ಮೂಢನಂಬಿಕೆ ಬೇಡ. 355 00:33:21,000 --> 00:33:22,800 ಎರಡೇ ಕ್ಷಣದಲ್ಲಿ ಶಾಂತನಾಗುತ್ತಾನೆ ನೋಡಿ. 356 00:33:22,880 --> 00:33:26,960 ತೋಳದ ಮರಿಯನ್ನು ಜಿಂಕೆ ಬೆಳೆಸಿದರೂ, ತೋಳವೇ ಬೆಳೆಸಿದರೂ, 357 00:33:27,040 --> 00:33:28,640 ಅದು ತೋಳವೇ ಆಗುತ್ತದೆ. 358 00:33:29,360 --> 00:33:32,880 ಆ ಮರಿಗೆ ಇದು ತಿಳಿದಿರುತ್ತೆ. 359 00:33:34,400 --> 00:33:38,120 ಆ ಮರಿಗೆ ಕಾಡಿನ ಹುಲ್ಲು ಮತ್ತು ಎಲೆಗಳು ಬೇಕಾಗಿಲ್ಲ. 360 00:33:38,200 --> 00:33:40,720 ಅದಕ್ಕೆ ಮಾಂಸ ಬೇಕು. 361 00:33:40,800 --> 00:33:42,640 -ಅದಕ್ಕಾಗಿಯೇ ಈ ಪ್ರಾಣಿಗಳು... -ನೋಡು. 362 00:33:42,720 --> 00:33:44,880 ...ಸಣ್ಣ ಗುಂಪುಗಳಲ್ಲಿ ಚಲಿಸುತ್ತವೆ... 363 00:33:44,960 --> 00:33:46,760 ಗೋಲು ಅಕ್ಕ ಬಂದಿದ್ದಾರೆ. 364 00:33:48,680 --> 00:33:51,560 ಆರಂಭಿಕ ದಿನಗಳಲ್ಲಿ, ಮರಿಗಳು ತಾಯಿಯ ಬಳಿ ಇರುತ್ತವೆ. 365 00:33:51,640 --> 00:33:54,080 ಗೋಲು ಅಕ್ಕ, ನಿಮಗಾಗಿ ಒಳ್ಳೆ ಶರಬತ್ತು ಮಾಡಿರುವೆ. 366 00:33:55,680 --> 00:33:56,880 ಆಮೇಲೆ ಕುಡಿಯುತ್ತೇನೆ. 367 00:33:59,640 --> 00:34:00,640 ಸರಿ. 368 00:34:11,120 --> 00:34:13,520 ಇನ್ನೆಷ್ಟು ಕಾಲ ಕತ್ತಲಲ್ಲಿ ಗುಂಡು ಹೊಡೆಯುವುದು? 369 00:34:15,040 --> 00:34:17,240 ಸ್ವಲ್ಪ ಸಮಯ ತೆಗೆದುಕೊಂಡು ಒಳ್ಳೆಯ ಯೋಜನೆ ಮಾಡು. 370 00:34:18,160 --> 00:34:19,960 ಆದರೆ ನಮ್ಮ ಬಳಿ ಸಮಯವಿಲ್ಲ. 371 00:34:20,720 --> 00:34:21,720 ಯಾಕಿಲ್ಲ? 372 00:34:23,080 --> 00:34:24,400 ಮುಂದಿನ ವಾರ ಸಭೆ ಇದೆ. 373 00:34:26,440 --> 00:34:27,520 ಯಾರು ಕರೆದಿರುವುದು? 374 00:34:28,200 --> 00:34:30,280 ಪಶ್ಚಿಮ ಯುಪಿಯಿಂದ ಒಬ್ಬ ದೂತ ಇದ್ದಾನೆ. 375 00:34:30,360 --> 00:34:32,520 ಅಬ್ಬಾಸ್ ಅಲಿ ಮಿರ್ ಪೂರ್ವಾಂಚಲದ ನಾಯಕನ ಆರಿಸಲು 376 00:34:33,120 --> 00:34:34,920 ತನ್ನ ವ್ಯಕ್ತಿಯನ್ನು ಕಳುಹಿಸಿದ್ದಾನೆ. 377 00:34:37,880 --> 00:34:39,640 ಪಶ್ಚಿಮದವರು ಯಾಕೆ ತಲೆ ಹಾಕುತ್ತಿದ್ದಾರೆ? 378 00:34:40,920 --> 00:34:42,000 ಅದೇ ಸಂಪ್ರದಾಯ. 379 00:34:43,320 --> 00:34:47,920 ಇಂತಹ ಪರಿಸ್ಥಿತಿಯಲ್ಲಿ ಇಲ್ಲಿನ ಜನ ನಾಯಕನನ್ನು ಆಯ್ಕೆ ಮಾಡಲು ಅಲ್ಲಿಗೆ ಹೋಗುತ್ತಾರೆ. 380 00:34:49,560 --> 00:34:50,640 ಮಧ್ಯವರ್ತಿಯಾಗಿ. 381 00:34:52,680 --> 00:34:54,800 ನನ್ನ ಅಜ್ಜಿ ಆಜಂಗಢದ ಬಳಿ ಇದ್ದಾರೆ. 382 00:34:55,920 --> 00:34:57,160 ಹಾಂ, ಸರಿ. 383 00:34:59,160 --> 00:35:00,440 ಇದು ನನಗೆ ತಿಳಿದಿರಲಿಲ್ಲ. 384 00:35:01,000 --> 00:35:02,520 ಖಾಲೀನ್ ಭಯ್ಯಾ ಶವವಿಲ್ಲದೆ, 385 00:35:03,360 --> 00:35:05,600 ಸಿಂಹಾಸನದ ಮೇಲೆ ಹಕ್ಕು ಸಾಧಿಸಲು ಕಷ್ಟವಾಗುತ್ತದೆ. 386 00:35:06,800 --> 00:35:08,320 ಶವ ಸಿಗದಿದ್ದರೆ ಏನಾಗುತ್ತೆ? 387 00:35:10,640 --> 00:35:14,160 ಸಭೆಯಲ್ಲಿ ನಮ್ಮ ಹಕ್ಕನ್ನು ಬಲಪಡಿಸಲು ಇನ್ನೊಂದು ಮಾರ್ಗವನ್ನು ಹುಡುಕಬೇಕು. 388 00:35:16,640 --> 00:35:19,080 ಆದರೆ ನಾನು ಖಾಲೀನ್ ಭಯ್ಯಾ ಮಾಡಿದ ತಪ್ಪು ಮಾಡಲ್ಲ, 389 00:35:20,000 --> 00:35:21,120 ನಮ್ಮನ್ನು ಬದುಕಲುಬಿಟ್ಟು. 390 00:35:22,560 --> 00:35:25,080 ಎಲ್ಲರಿಗಿಂತ ಹೆಚ್ಚು ನನಗೆ ಅವರ ಮೃತ ದೇಹ ನೋಡಬೇಕಿದೆ. 391 00:35:27,360 --> 00:35:29,480 ಆದರೆ ಆತ ಕಣ್ಮರೆಯಾಗಿದ್ದು ನೋಡಿದರೆ, 392 00:35:30,600 --> 00:35:31,680 ಯಾರೋ ಒಳಗಿನವರು 393 00:35:34,120 --> 00:35:35,320 ಅವರನ್ನು ಮರೆಮಾಡಿರಬೇಕು. 394 00:35:40,160 --> 00:35:42,840 ಗೋಲು, ನೀನು ಸೇಡಿನ ಮೇಲೆ ಇಟ್ಟಿದ್ದ ಗಮನವನ್ನು ನಾನು ಕಂಡೆ. 395 00:35:44,360 --> 00:35:46,840 ಆದರೆ, ಕೇವಲ ಒಂದೇ ಯೋಜನೆಗೆ ಅಂಟಿಕೊಂಡಿದ್ದರೆ, 396 00:35:47,480 --> 00:35:49,160 ನಾನು ಇಷ್ಟು ದಿನ ಬದುಕುತ್ತಿರಲಿಲ್ಲ. 397 00:35:53,280 --> 00:35:54,920 ಇದನ್ನೆಲ್ಲಾ ಬೇಗ ತೆಗೆಯಿರಿ. 398 00:36:02,520 --> 00:36:04,360 ಪಶ್ಚಿಮದವರಿಗೇನಾಗಿದೆ? 399 00:36:05,400 --> 00:36:07,760 ಇದು ಪೂರ್ವದ ವಿಚಾರ. ಪೂರ್ವವೇ ನಿಭಾಯಿಸುತ್ತದೆ. 400 00:36:09,680 --> 00:36:11,200 ಚಿಂತಿಸಬೇಡಿ, ನಿಭಾಯಿಸುತ್ತೇನೆ. 401 00:36:12,640 --> 00:36:16,040 ಯಾವ ಬಾಹುಬಲಿಯೂ ನಿಮ್ಮ ವಿರುದ್ಧ ಹೋಗಲ್ಲ ಎಂದು ಬಲ್ಲೆ. 402 00:36:17,320 --> 00:36:19,160 ಆದರೆ ಅಲ್ಲಿವರೆಗೆ ಯಾಕೆ ಬರಲು ಬಿಡಬೇಕು? 403 00:36:21,760 --> 00:36:23,000 ಆಕೆ ಹೇಳಿದ್ದು ಸರಿ. 404 00:36:24,480 --> 00:36:27,360 ಮಿಕ್ಕ ಜಿಲ್ಲೆಗಳ ಬಾಹುಬಲಿಯರನ್ನು ಸಂಪರ್ಕಿಸಿ 405 00:36:27,440 --> 00:36:29,400 ನಮ್ಮ ಸ್ಥಾನವನ್ನು ಬಲಪಡಿಸೋಣ. 406 00:36:29,480 --> 00:36:32,600 ಹಾಂ, ಸಂಪೂರ್ಣ ಪೂರ್ವಾಂಚಲ್ ನಿಮ್ಮ ಶಕ್ತಿಯನ್ನು ನೋಡಬೇಕು. 407 00:36:32,640 --> 00:36:33,880 ನಾನು ಎಲ್ಲಿಯೂ ಹೋಗಲ್ಲ. 408 00:36:36,800 --> 00:36:38,920 ಎಲ್ಲಾ ಬಾಹುಬಲಿಗಳಿಗೂ ಸಂದೇಶ ಕಳಿಸಿ, 409 00:36:39,640 --> 00:36:42,520 ಮಿರ್ಜಾಪುರಕ್ಕೆ ಬಂದು ತಮ್ಮ ನಿಯತ್ತು ಸಾಬೀತುಪಡಿಸಲು. 410 00:36:44,680 --> 00:36:47,120 ಬರಲಿಲ್ಲ ಅಂದ್ರೆ, ಅವರು ನನ್ನ ಶತ್ರುಗಳಾಗ್ತಾರೆ. 411 00:36:53,080 --> 00:36:54,480 ಜೌನ್ಪುರ್ 412 00:36:54,560 --> 00:36:56,960 ಗುಡ್ಡು ಪಂಡಿತ್ ಒಬ್ಬ ವಿದ್ಯಾವಂತ ಮೂರ್ಖ. 413 00:36:59,480 --> 00:37:01,160 ಅವನು ಸಭೆಗೆ ಬರುವ ಬದಲು, 414 00:37:01,640 --> 00:37:04,280 ಅವನಿಗೆ ನಾವು ನಮ್ಮ ನಿಷ್ಠೆ ಸಾಬೀತುಪಡಿಸಬೇಕಂತೆ. 415 00:37:07,160 --> 00:37:08,480 ಫಿಲ್ಟರ್ ಇಲ್ಲ ಗುಡ್ಡುಗೆ. 416 00:37:08,960 --> 00:37:10,800 ಮನಸಿಗೆ ಬಂದಿದ್ದು ಮಾತಾಡ್ತಾನೆ. 417 00:37:12,560 --> 00:37:16,760 ಅವನಿಗೆ ಸಿಂಹಾಸನ ಸಿಕ್ಕಿದೆ ಅಂದುಕೊಂಡು ನಮಗೆ ಸವಾಲೆಸೆಯುತ್ತಿದ್ದಾನೆ. ಮಾಡಲಿ. 418 00:37:18,080 --> 00:37:21,000 ಈ ಪರಿಸ್ಥಿತಿಯನ್ನು ನಿಮ್ಮ ಅನುಕೂಲಕ್ಕೆ ಬಳಸಿಕೊಳ್ಳಿ. 419 00:37:22,080 --> 00:37:23,080 ತಕ್ಷಣ ಹೊರಡಿ. 420 00:37:23,760 --> 00:37:27,000 ಮತ್ತು ಸಭೆ ಪ್ರಾರಂಭವಾಗುವ ಮೊದಲು, ಇತರ ಬಾಹುಬಲಿಗಳನ್ನು ಭೇಟಿ ಮಾಡಿ 421 00:37:27,080 --> 00:37:28,480 ಅವರನ್ನು ನಿಮ್ಮ ಕಡೆ ತಿರುಗಿಸಿ. 422 00:37:28,560 --> 00:37:29,840 ಸರಿ. 423 00:37:29,920 --> 00:37:33,800 ನಾವು ಖಾಲೀನ್ ಭಯ್ಯಾ ಅವರಿಗೆ ಸಹಾನುಭೂತಿಯನ್ನು ಹುಟ್ಟುಹಾಕಬೇಕು. 424 00:37:35,640 --> 00:37:38,440 ಗುಡ್ಡು ತನಗೆ ಬೇಕಾದ ಗಲಾಟೆ ಮಾಡಲಿ. 425 00:37:40,800 --> 00:37:42,200 -ಸರಿ, ಹಾಗೇ ಮಾಡುವೆವು. -ಸರಿ. 426 00:37:42,320 --> 00:37:43,400 -ನಮಸ್ತೆ. -ಸಿಗೋಣ. 427 00:37:44,400 --> 00:37:45,400 ಸಿಗೋಣ. 428 00:37:48,320 --> 00:37:49,520 ಒಟ್ಟಿಗೆ ಹೋಗೋಣ. 429 00:37:56,200 --> 00:38:00,320 ಈ ಸಿಪಾಯಿಗಳನ್ನು ನಂಬಿ ನಿನ್ನ ಹಕ್ಕನ್ನು ಬಲಪಡಿಸುತ್ತೀಯಾ? 430 00:38:02,320 --> 00:38:05,360 ಇಂತಹ ಸಂದರ್ಭಗಳಲ್ಲಿ ರಾಜ ಕೂಡ ಒಂದು ನಡೆ ಮಾಡಿ... 431 00:38:07,400 --> 00:38:09,680 ತನ್ನ ಉಪಸ್ಥಿತಿಯನ್ನು ತೋರಿಸಬೇಕು. 432 00:38:14,040 --> 00:38:16,200 ಹೋಗಿ ಪಶ್ಚಿಮದ ಮಧ್ಯವರ್ತಿಯನ್ನು ಭೇಟಿ ಮಾಡು. 433 00:38:18,640 --> 00:38:21,800 ಜೌನ್ಪುರ್ 434 00:38:23,160 --> 00:38:25,400 ಪಶ್ಚಿಮ 435 00:38:26,280 --> 00:38:28,960 ಮೀರತ್ 436 00:38:29,640 --> 00:38:34,200 ಮೀರತ್ 437 00:38:50,280 --> 00:38:53,080 ಭೇಟಿಗಾರರು ಯಾವಾಗಲೂ ಅತಿಥಿಗಳಲ್ಲ. 438 00:38:53,160 --> 00:38:55,480 ಕೂರಿ. ಮುನಾವರ್ ಮಿಯಾ ಊಟ ಮಾಡುತ್ತಿದ್ದಾರೆ. 439 00:38:55,560 --> 00:38:57,080 ಅವರು ಗ್ರಾಹಕರೂ ಆಗಿರಬಹುದು. 440 00:38:59,640 --> 00:39:01,600 ಮತ್ತು ಗ್ರಾಹಕರು ಮತ್ತು ಅತಿಥಿಗಳು ಇಬ್ಬರೂ... 441 00:39:06,280 --> 00:39:09,160 -ಚೆನ್ನಾಗಿ ಹೇಳಿದಿರಿ. -ಧನ್ಯವಾದ. 442 00:39:11,480 --> 00:39:13,480 ಬನ್ನಿ. ಭಾಯ್ ನಿಮ್ಮನ್ನು ಒಳಗೆ ಕರೆದರು. 443 00:39:19,640 --> 00:39:21,920 ಬನ್ನಿ, ಶುಕ್ಲಾಜೀ. ಕೂತ್ಕೊಳ್ಳಿ. 444 00:39:22,520 --> 00:39:23,680 ಧನ್ಯವಾದ. 445 00:39:23,800 --> 00:39:25,600 ಶುಕ್ಲಾಜೀಗೆ ಒಂದು ತಟ್ಟೆ ತನ್ನಿ. 446 00:39:26,360 --> 00:39:29,320 ಇಲ್ಲ, ಧನ್ಯವಾದ. ನನ್ನ ಊಟ ಆಗಿದೆ. 447 00:39:29,400 --> 00:39:30,560 ಆದರೇನು? 448 00:39:31,760 --> 00:39:33,960 ನಮ್ಮ ಜೊತೆ ಒಂದು ತುತ್ತು ತಿನ್ನಿ. 449 00:39:34,640 --> 00:39:36,640 ಬಾರೋ, ಶುಕ್ಲಾಜೀಗೆ ಊಟ ಬಡಿಸು. 450 00:39:41,600 --> 00:39:45,160 ಶುಕ್ಲಾಜೀ, ನಾನು ಅವರನ್ನು ಕೇಳುತ್ತಿದ್ದೆ, 451 00:39:46,680 --> 00:39:50,800 ಮಾಂಸದ ರುಚಿಯ ಕೀರ್ತಿ ಯಾರಿಗೆ ಸಲ್ಲಬೇಕು ಅಂತ. 452 00:39:52,320 --> 00:39:55,640 ಅಡುಗೆಯ ಕ್ರಮಕ್ಕಾ? ಅಥವಾ ಬಾಣಸಿಗನಿಗಾ? 453 00:40:02,000 --> 00:40:03,400 ಇಬ್ಬರಿಗೂ ಅಲ್ಲ. 454 00:40:05,560 --> 00:40:09,760 ಎಷ್ಟು ನುಣ್ಣಗೆ ಕತ್ತರಿಸಿದ್ದಾರೆ ಎಂಬುದರ ಮೇಲೆ 455 00:40:10,280 --> 00:40:11,920 ಮಾಂಸದ ರುಚಿ ಅವಲಂಬಿಸಿರುತ್ತದೆ. 456 00:40:15,160 --> 00:40:18,080 ಆದ್ದರಿಂದ, ರುಚಿ ಮಾಂಸದ ಅಂಗಡಿಯಲ್ಲಿ ನಿರ್ಧಾರ ಆಗುತ್ತೆ. 457 00:40:23,120 --> 00:40:25,080 ನಿಮ್ಮ ಬಗ್ಗೆ ನಾನು ಕೇಳಿದ್ದು ಸರಿ. 458 00:40:26,680 --> 00:40:30,480 ನೀವು ಬಹಳ ಬುದ್ಧಿವಂತ ಮತ್ತು ತಾಳ್ಮೆಯ ಮನುಷ್ಯ. 459 00:40:32,600 --> 00:40:36,000 ಆದರೆ ನೀವು ತಾಳ್ಮೆಯನ್ನೇ ಹಿಡಿದುಕೊಂಡರೆ, 460 00:40:37,160 --> 00:40:38,680 ಹಿಂದೆ ಉಳಿಯುತ್ತೀರಿ. 461 00:40:39,320 --> 00:40:42,160 ಪೂರ್ವಾಂಚಲದ ಗದ್ದುಗೆಗೆ ಒಬ್ಬ ನಾಯಕ ಬೇಕು. 462 00:40:47,040 --> 00:40:48,320 ನೀವು ಆ ನಾಯಕನಾ? 463 00:40:57,800 --> 00:40:59,440 ಅದನ್ನು ನೇರಗೊಳಿಸಿ ಹಾಗೇ ಇರಿ. 464 00:41:00,040 --> 00:41:01,920 ತಾಕತ್ತು ಚೆನ್ನಾಗಿದೆ, ಗುಡ್ಡು ಭಯ್ಯಾ. 465 00:41:02,000 --> 00:41:05,760 ಅದನ್ನು ಬಾಗಿಸಿ. ಅಷ್ಟೇ. ಈಗ ವಿಶ್ರಾಂತಿ. 466 00:41:09,480 --> 00:41:11,040 ದೇಹ ದುರ್ಬಲವಾಗಿದೆ, ಡಾಕ್ಟರ್. 467 00:41:12,440 --> 00:41:15,200 -ಜಿಮ್ಗೆ ಹೋಗಲು ಪ್ರಾರಂಭಿಸಬಹುದೇ? -ಖಂಡಿತ. ಮಾಡಿ. 468 00:41:21,520 --> 00:41:22,800 ನಮಸ್ತೆ, ಗುಡ್ಡು ಭಯ್ಯಾ. 469 00:41:25,320 --> 00:41:27,160 ನನಗೆ ಹೇಳಿದ್ದನ್ನು ಇವರಿಗೆ ಹೇಳಿ. 470 00:41:28,800 --> 00:41:30,640 ಶರದ್ ಕಠಿಣ ಫೀಲ್ಡಿಂಗ್ ಮಾಡುತ್ತಿದ್ದಾನೆ. 471 00:41:31,480 --> 00:41:34,120 ಅವನ ಜನ ಬಾಹುಬಲಿಗಳನ್ನು ಭೇಟಿಯಾಗುತ್ತಿದ್ದಾರೆ. 472 00:41:34,160 --> 00:41:36,200 ನಿಮ್ಮ ವಿರುದ್ಧ ತಿರುಗಿಸುತ್ತಿದ್ದಾನೆ. 473 00:41:36,760 --> 00:41:37,920 ಚಿಂತಿಸಬೇಡಿ. 474 00:41:38,880 --> 00:41:42,440 ಸಭೆಗೆ ಯಾರೇ ಬರಲಿ, ಅಲಹಾಬಾದಿನಲ್ಲಿ ಟೋಲ್ ಪಾವತಿಸಬೇಕಾಗುತ್ತದೆ. 475 00:41:43,320 --> 00:41:45,680 ನಿಷ್ಠೆ ಅಥವಾ ಬುಲೆಟ್. 476 00:41:46,160 --> 00:41:49,160 ಇದು ಹಿಂಸೆಯ ಸಮಯವಲ್ಲ, ಬಲವರ್ಧನೆಯ ಸಮಯ. 477 00:41:51,960 --> 00:41:53,600 ಹಿಂಸೆಯೇ ನನ್ನ ತಾಕತ್ತು. 478 00:41:59,360 --> 00:42:01,040 ಹಿಂಸೆ ಸರಿಯಾದ ಸಂದೇಶ ನೀಡುತ್ತದೆ. 479 00:42:01,600 --> 00:42:04,600 ಖಾಲೀನ್ ಭಯ್ಯಾ ಮೇಲಿನ ದಾಳಿಗಿಂತ ದೊಡ್ಡ ಸಂದೇಶ ಯಾವುದಿದೆ? 480 00:42:06,680 --> 00:42:08,560 ಫಲಿತಾಂಶಗಳು ಇನ್ನೂ ನಮ್ಮ ಪರವಾಗಿಲ್ಲ. 481 00:42:14,960 --> 00:42:17,080 ನಾವು ಈಗ ಸವಾಲುಗಾರರಲ್ಲ, ಸ್ಪರ್ಧಿಗಳು. 482 00:42:22,160 --> 00:42:24,600 ನಿಮಗೆ ಪಶ್ಚಿಮದ ಹಸ್ತಕ್ಷೇಪದೊಂದಿಗೆ ಸಮಸ್ಯೆಯಿದೆ. 483 00:42:25,080 --> 00:42:26,800 ಆದರೆ ಅದು ಸಂಪೂರ್ಣವಾಗಿ ಅವರ ತಪ್ಪಲ್ಲ. 484 00:42:27,280 --> 00:42:29,280 ಒಂದು ರಾಜ್ಯ, ಒಂದು ಪೊಲೀಸ್, ಒಂದು ಕಾನೂನು. 485 00:42:30,000 --> 00:42:31,360 ಎರಡೂ ಪರಸ್ಪರ ಸಂಬಂಧ ಹೊಂದಿವೆ. 486 00:42:31,920 --> 00:42:33,560 ಅವರಿಗೆ ಸ್ಥಿರತೆ ಕಾಪಾಡಬೇಕು. 487 00:42:35,040 --> 00:42:38,680 ನಾವು ಹೊಸಬರು. ಸಂಪ್ರದಾಯದ ವಿರುದ್ಧ ಹೋಗುವುದು ಬುದ್ಧಿವಂತಿಕೆ ಅಲ್ಲ. 488 00:42:39,440 --> 00:42:41,600 ನಾವು ಹೋಗದಿದ್ದರೆ ತಪ್ಪು ಸಂದೇಶ ಹೋಗುತ್ತದೆ. 489 00:42:44,440 --> 00:42:46,920 ಹೋದರೆ ನಮ್ಮ ಪರವಾಗಿ ಯಾರಿದ್ದಾರೆಂದೂ ತಿಳಿಯುತ್ತದೆ. 490 00:42:49,200 --> 00:42:50,200 ನಾವು ಹೋಗಬೇಕು. 491 00:42:51,640 --> 00:42:52,760 ಆದರೆ... 492 00:42:53,920 --> 00:42:58,560 ಪ್ರತಿ ಸೀಟಿಗೆ ಕೇವಲ ಒಬ್ಬ ಸ್ಪರ್ಧಿಯನ್ನು ಅನುಮತಿಸಲಾಗಿದೆ. ಆದ್ದರಿಂದ... 493 00:43:01,600 --> 00:43:02,600 ಆದ್ದರಿಂದ... 494 00:43:10,920 --> 00:43:12,160 ನಾನು ಹೊರಗೆ ಕಾಯುತ್ತೇನೆ. 495 00:43:14,200 --> 00:43:15,640 ನನ್ನ ಕಾಲು ಈಗ ಚೆನ್ನಾಗಿದೆ. 496 00:43:16,520 --> 00:43:17,640 ಮತ್ತು ನಾನು ಹೋಗಲ್ಲ. 497 00:43:56,880 --> 00:44:00,200 ಗೋಲು, ಈ ಮಾತುಕತೆ ಮತ್ತು ಚರ್ಚೆಗಳು ನನ್ನಿಂದಾಗಲ್ಲ. 498 00:44:00,760 --> 00:44:03,160 ನನ್ನನ್ನು ಅಲ್ಲಿಗೆ ಕಳಿಸಬೇಡ, ಕೆಲಸ ಕೆಡುತ್ತೆ. 499 00:44:04,000 --> 00:44:06,640 ನಿಮ್ಮ ದೌರ್ಬಲ್ಯವೇ ನಿಮ್ಮನ್ನು ನಿಯಂತ್ರಿಸುತ್ತಿದೆ. 500 00:44:13,120 --> 00:44:16,600 ಶರದ್ ಬಿಟ್ಟರೆ ನಿಮಗೆ ಸವಾಲು ಹಾಕುವ ಧೈರ್ಯ ಬೇರೆ ಯಾರಿಗೂ ಇಲ್ಲ. 501 00:44:16,680 --> 00:44:21,680 ನಿಮ್ಮನ್ನು ಪ್ರಚೋದಿಸಲು ಪ್ರಯತ್ನಿಸುತ್ತಾನೆ. ನೀವು ಕೇವಲ ನಿಯಂತ್ರಣದಲ್ಲಿ ಉಳಿಯಬೇಕು. 502 00:44:21,760 --> 00:44:23,280 ಅದೇ ನನಗೆ ಗೊತ್ತಿಲ್ಲದ ವಿಷಯ. 503 00:44:25,920 --> 00:44:30,120 ನಾವು ಇಲ್ಲಿಯವರೆಗೆ ಸಾಗಿದ ಹಾದಿಯ ಗುರಿ ಮಿರ್ಜಾಪುರದ ಸಿಂಹಾಸನವಾಗಿತ್ತು. 504 00:44:31,480 --> 00:44:34,000 ಈಗ ಆಟ ಬದಲಾಗಿದೆ ಮತ್ತು ಸ್ಪರ್ಧೆಯೂ ಹೆಚ್ಚಾಗಿದೆ. 505 00:44:37,120 --> 00:44:40,520 ಅದನ್ನು ಗೆಲ್ಲಲು, ನಿಮಗೆ ಎರಡೂ ಅಗತ್ಯವಿದೆ, 506 00:44:40,600 --> 00:44:41,880 ಮಿದುಳು ಮತ್ತು ರಟ್ಟೆ. 507 00:44:44,200 --> 00:44:45,920 ನೀನು ನನ್ನ ಮೆದುಳು. 508 00:44:51,120 --> 00:44:52,880 ನೀವು ಅದನ್ನು ಬಳಸುತ್ತಿಲ್ಲ. 509 00:44:58,640 --> 00:44:59,760 ಬಿಡು. 510 00:45:01,800 --> 00:45:03,400 ಬಿಡು, ಗೋಲು. 511 00:45:04,480 --> 00:45:05,480 ಬಿಡು. 512 00:45:26,280 --> 00:45:29,560 ಮಹಾರಾಜಗಂಜ್ - ಕುಶಿನಗರ್ - ಗೋರಖ್ಪುರ್ 513 00:45:29,640 --> 00:45:32,400 ದೇವರಿಯಾ - ಬಸ್ತಿ - ಬಲಿಯಾ - ಮೌ - ಆಜಂಗಢ 514 00:45:32,480 --> 00:45:36,840 ಗಾಜಿಪುರ್ - ಜೌನ್ಪುರ್ 515 00:45:36,920 --> 00:45:40,680 ವಾರಣಾಸಿ - ಮಿರ್ಜಾಪುರ್ - ಪ್ರಯಾಗರಾಜ್ 516 00:45:40,760 --> 00:45:44,440 ಪ್ರಯಾಗರಾಜ್ 517 00:45:59,440 --> 00:46:01,480 -ಸಲಾಂ. -ಸಲಾಂ. 518 00:46:01,560 --> 00:46:03,360 -ಕೂರಬಹುದಾ? -ದಯವಿಟ್ಟು. 519 00:46:06,520 --> 00:46:07,520 ಬನ್ನಿ. 520 00:46:18,360 --> 00:46:19,360 ನಮಸ್ಕಾರ, ಭಯ್ಯಾಜಿ. 521 00:46:41,520 --> 00:46:43,880 -ಎಲ್ಲರೂ ಬಂದಿದ್ದಾರಾ? -ಮಿರ್ಜಾಪುರದವರು ಬರಬೇಕು. 522 00:46:44,840 --> 00:46:46,960 -ಏನಾದರೂ ಖಚಿತವಾಯಿತೇ? -ಇಲ್ಲ. 523 00:46:53,880 --> 00:46:54,880 ಪ್ರಾರಂಭಿಸೋಣ. 524 00:46:59,520 --> 00:47:01,040 ನಿಮಗೆಲ್ಲಾ ತಿಳಿದಿರುವಂತೆ, 525 00:47:02,200 --> 00:47:03,560 ನಾನು, ಮುನಾವರ್ ನಿಯಾಜಿ, 526 00:47:04,400 --> 00:47:05,960 ಸಂಪ್ರದಾಯದಂತೆ, 527 00:47:06,680 --> 00:47:10,560 ಪಶ್ಚಿಮದ ನಾಯಕ ಮಿರ್ಜಾ ಅಬ್ಬಾಸ್ ಅಲಿ ಮಿರ್ ಪರವಾಗಿ ಇಲ್ಲಿದ್ದೇನೆ, 528 00:47:11,560 --> 00:47:15,440 ನಿಮ್ಮೆಲ್ಲರ ನಡುವೆ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸೋಕೆ. 529 00:47:15,520 --> 00:47:16,640 ಪ್ರಶ್ನೆಯೆಂದರೆ, 530 00:47:17,200 --> 00:47:21,200 ಈ ಸ್ಥಿತಿಯಲ್ಲಿ ಪೂರ್ವಾಂಚಲವನ್ನು ಯಾರು ಮುನ್ನಡೆಸುತ್ತಾರೆ? 531 00:47:21,280 --> 00:47:22,880 ಅಂದರೆ, ಸಂಪ್ರದಾಯದ ಪ್ರಕಾರ, 532 00:47:23,720 --> 00:47:26,280 ಮಿರ್ಜಾಪುರದ ನಾಯಕನೇ ಪೂರ್ವಾಂಚಲವನ್ನು ಮುನ್ನಡೆಸಬೇಕು. 533 00:47:27,800 --> 00:47:29,360 ಮತ್ತು ಮುನ್ನಾನನ್ನು ಕೊಂದ ನಂತರ, 534 00:47:29,840 --> 00:47:32,160 ಗುಡ್ಡು ಪಂಡಿತ್ ಪ್ರಬಲ ಸ್ಪರ್ಧಿಯಾಗಿದ್ದಾನೆ. 535 00:47:32,240 --> 00:47:34,400 ಆದರೆ ಖಾಲೀನ್ ಭಯ್ಯಾ ಸಿಂಹಾಸನದಲ್ಲಿದ್ದವನು, 536 00:47:35,120 --> 00:47:36,120 ಮುನ್ನಾ ಅಲ್ಲ. 537 00:47:36,200 --> 00:47:37,800 -ಅದು ಸತ್ಯ. -ಖಂಡಿತ. 538 00:47:41,040 --> 00:47:44,560 ಬಾಹುಬಲಿಯ ಖ್ಯಾತಿ ಅವನ ಪರಂಪರೆ ಮತ್ತು ವರ್ಚಸ್ಸಿಗೆ ಸಂಬಂಧಿಸಿದೆ. 539 00:47:46,560 --> 00:47:50,280 ಈ ಸಭೆಯ ಸಂಪ್ರದಾಯವನ್ನು ಗೌರವಿಸಲು ಸಾಧ್ಯವಾಗದ ವ್ಯಕ್ತಿ 540 00:47:51,120 --> 00:47:53,800 ಯಾವುದೇ ಆಡಳಿತಗಾರ ಅಥವಾ ಸ್ಪರ್ಧಿಯಾಗಲು ಯೋಗ್ಯನಲ್ಲ. 541 00:47:54,280 --> 00:47:57,400 ಬಲ ಮತ್ತು ಬುದ್ಧಿಯ ಮೇಲೆ ಸಮತೋಲನ ಸಾಧಿಸುವವನು 542 00:47:58,200 --> 00:48:00,360 ಮಾತ್ರ ಗದ್ದುಗೆ ಏರಬಲ್ಲ. 543 00:48:01,880 --> 00:48:03,240 ನಿನ್ನ ಸಲಹೆ ಏನು? 544 00:48:05,360 --> 00:48:07,120 ಜೌನ್ಪುರ್ ಅಧಿಕಾರ ವಹಿಸಿಕೊಳ್ಳಲಿ. 545 00:48:22,720 --> 00:48:26,440 ಇಡೀ ಪೂರ್ವಾಂಚಲ್ ತೂಗುತ್ತಿದೆ, 546 00:48:27,920 --> 00:48:32,680 ಶರದ್ ಶುಕ್ಲಾ, ಶರದ್ ಶುಕ್ಲಾ, ಅಂತ ಕೂಗುತ್ತಿದೆ. 547 00:48:37,960 --> 00:48:39,640 ಬಿಟ್ಟಿಯಾಗಿ ಜೌನ್ಪುರವನ್ನು ಪಡೆದ. 548 00:48:41,680 --> 00:48:43,480 ಬಿಟ್ಟಿಯಾಗಿ ಸಿಂಹಾಸನವೂ ಬೇಕಂತೆ. 549 00:48:47,160 --> 00:48:49,920 ಹಾಗಿದ್ದರೆ, ಸಿಂಹಾಸನದ ಚರ್ಚೆ ಮುಗೀತು. 550 00:48:51,000 --> 00:48:54,720 ಸಿಂಹಾಸನ ಇದೆ ಮತ್ತು ಅದರ ಮೇಲೆ ಗುಡ್ಡು ಪಂಡಿತ್ ಕೂತಿದ್ದಾರೆ. 551 00:48:59,480 --> 00:49:01,440 ಬಸ್ತಿಯ ಮತ ನಿನಗೇ, ಶರದ್. 552 00:49:02,440 --> 00:49:03,760 ಜಡವಾಗಿ ನಿಲ್ಲು. 553 00:49:03,840 --> 00:49:05,520 -ಮಾತೆಂದರೆ ಅದು. -ಹೌದು. 554 00:49:05,600 --> 00:49:07,360 -ಜೊತೆಗೆ ನಾವಿದ್ದೇವೆ. -ಹೌದು. 555 00:49:08,600 --> 00:49:09,600 ನೋಡಿ, 556 00:49:10,680 --> 00:49:12,640 ಅತಿಬುದ್ಧಿವಂತಿಕೆ ಪ್ರದರ್ಶಿಸಬೇಡಿ. 557 00:49:13,640 --> 00:49:15,120 ಅವನಿಗೆ ಇನ್ನೂ ಅವಮಾನ ಆಗುತ್ತೆ. 558 00:49:18,480 --> 00:49:19,480 ಮುನಾವರ್ ಮಿಯಾ, 559 00:49:21,360 --> 00:49:23,880 ನಾನು ಸ್ಪರ್ಧಿಯಲ್ಲ, ಪೂರ್ವಾಂಚಲ್ ನ ಒಡೆಯ. 560 00:49:23,960 --> 00:49:26,240 ನಾಯಿ ಕೂಡ ಯಜಮಾನನ ಮೇಲೆ ಹಕ್ಕು ಸಾಧಿಸುತ್ತೆ. 561 00:49:27,080 --> 00:49:28,840 ನೀನು ಖಾಲೀನ್ ಭಯ್ಯಾ ನಾಯಿ ಆಗಿದ್ದೆ. 562 00:49:33,320 --> 00:49:36,560 ಸಿಂಹ ಎಷ್ಟೇ ಮೌನವಾಗಿದ್ದರೂ, ಅದು ಯಾವಾಗಲೂ ಕಾಡಿನ ರಾಜ. 563 00:49:37,920 --> 00:49:42,520 ನಾಯಿ ಎಷ್ಟೇ ನಿಷ್ಠಾವಂತವಾಗಿದ್ದರೂ, ಉಲ್ಟಾ ತಿರುಗಿದರೆ ಅದನ್ನು ಕೊಲ್ಲಲಾಗುತ್ತದೆ. 564 00:49:44,280 --> 00:49:45,760 ಭಲೇ ಇದ್ದೀರಪ್ಪ ನೀವು. 565 00:49:47,520 --> 00:49:50,560 ತಂದೆ ಶಿಕ್ಷಕರಾಗಿದ್ದರು. ಕಾಗುಣಿತ ಕಲಿಸುತ್ತಿದ್ದರು. 566 00:49:52,360 --> 00:49:54,520 ಮಗ ಪೂರ್ವಾಂಚಲವನ್ನು ಮೃಗಾಲಯವೆಂದುಕೊಂಡಿದ್ದಾನೆ. 567 00:49:56,000 --> 00:49:57,880 ನಿಮ್ಮ ಬಳಿ ಸಣ್ಣ ಪಿನ್ ಚಾರ್ಜರ್ ಇದೆಯೇ? 568 00:49:59,720 --> 00:50:00,720 ಅವನಿಗೆ ಹಾಕಿ. 569 00:50:02,800 --> 00:50:07,360 ಬಲಿಯಾದಲ್ಲಿ ನಾಯಿಯಂತೆ ಹೊಡೆಸಿಕೊಂಡಿದ್ದು ಯಾರು? ನಾನು ನೆನಪಿಸಬೇಕೇ? 570 00:50:09,280 --> 00:50:12,520 ಹಾಗಿದ್ದರೆ, ಬಲಿಯಾದಲ್ಲಿ ಬಲಪ್ರದರ್ಶನ ತೋರಿದ ನಂತರ 571 00:50:12,600 --> 00:50:15,680 ನನ್ನ ಮುಂದೆ ಸ್ಪರ್ಧೆ ಮಾಡಲು ನೋಡುತ್ತಿದ್ದೀಯಾ? 572 00:50:21,320 --> 00:50:24,160 ನಾನು ಮುಂದಿನಿಂದ ಹೊಡೆಯುತ್ತೇನೆ, ಹಿಂದಿನಿಂದ ಅಲ್ಲ. 573 00:50:24,240 --> 00:50:25,240 ಹಾಗೋ. 574 00:50:26,000 --> 00:50:28,880 ತ್ರಿಪಾಠಿ ಅವರ ಹೆಸರು ಮತ್ತು ಅಸ್ತಿತ್ವವನ್ನು ಮಿರ್ಜಾಪುರದ 575 00:50:29,440 --> 00:50:31,360 ಇತಿಹಾಸದಿಂದ ಅಳಿಸಿ ಹಾಕಿದ್ದೇನೆ. 576 00:50:35,160 --> 00:50:36,920 ಖಾಲೀನ್ ಭಯ್ಯಾ ಶವ ಪತ್ತೆಯಾಗಿದೆಯೇ? 577 00:50:37,000 --> 00:50:38,760 -ಇನ್ನೂ ಇಲ್ಲ. -ಇಲ್ಲ. 578 00:50:38,840 --> 00:50:40,080 -ಇಲ್ಲವಲ್ಲ? -ಇಲ್ಲ. 579 00:50:44,320 --> 00:50:45,320 ಹಾಗೋ? 580 00:50:46,360 --> 00:50:49,960 ಇಲ್ಲಿ ಬಾಹುಬಲಿಗಳು ಭೇಟಿಯಾಗಲು ಬಂದಿದ್ದಾರೆ ಅಂದುಕೊಂಡೆ. 581 00:50:52,640 --> 00:50:55,200 ಆದರೆ ನೀವು ಸ್ಮಶಾನ ಕಾಯಲು ಬಂದಂತಿದೆ. 582 00:50:59,600 --> 00:51:01,000 ಶವಗಳನ್ನು ಎಣಿಸುತ್ತಾ ಕೂರೋಣವೇ? 583 00:51:01,080 --> 00:51:03,080 ಶವಗಳ ಎಣಿಕೆ ಮುಖ್ಯ, ಪಂಡಿತ್. 584 00:51:04,520 --> 00:51:06,720 ಇತರರದ್ದು ಮಾತ್ರವಲ್ಲ, ನಮ್ಮವರದ್ದೂ ಕೂಡ. 585 00:51:09,000 --> 00:51:11,680 ಇವನ ಗೂಂಡಾಗಿರಿಯಿಂದ ಮೂವರ ಪ್ರಾಣ ಹೋಯಿತು. 586 00:51:13,040 --> 00:51:15,520 ನೆನಪಿದೆಯಾ ಅಥವಾ ಚಾರ್ಜರ್ ಸಿಕ್ಕಿಸಬೇಕಾ? 587 00:51:18,760 --> 00:51:21,240 ಅದರಲ್ಲೊಬ್ಬರು ಹುಟ್ಟಿರಲೂ ಇಲ್ಲ. 588 00:51:24,440 --> 00:51:26,360 ಗುಡ್ಡು, ಅವನನ್ನು ಬಿಡು! 589 00:51:26,440 --> 00:51:27,440 ಶರದ್! 590 00:51:29,960 --> 00:51:31,640 ಬೇಡ, ಶರದ್! 591 00:51:31,720 --> 00:51:33,200 -ಹೇ, ಬೇಡ, ಬೇಡ! -ನಿಲ್ಲಿಸಿ. 592 00:51:35,120 --> 00:51:37,000 -ಶಾಂತರಾಗಿ. -ಗುಡ್ಡು... 593 00:51:38,960 --> 00:51:39,960 ಸರಿ. 594 00:51:40,760 --> 00:51:44,480 ಅಪರಾಧ ಮುಕ್ತ ರಾಜ್ಯ, ಎಲ್ಲವೂ ನಿಮ್ಮ ಕೃಪೆಯೇ. 595 00:51:46,120 --> 00:51:48,280 ಕೇವಲ ಇಬ್ಬರು ಸ್ಪರ್ಧಿಗಳು ಇದ್ದಾರಂತ ಈ ಸಭೆಯ 596 00:51:49,400 --> 00:51:51,400 ಪರಿಸ್ಥಿತಿ ಸ್ಪಷ್ಟವಾಗಿ ಸೂಚಿಸುತ್ತದೆ, 597 00:51:51,480 --> 00:51:54,960 ಗುಡ್ಡು ಪಂಡಿತ್ ಮತ್ತು ಶರದ್ ಶುಕ್ಲಾ. 598 00:51:55,920 --> 00:51:59,840 ನಿಮ್ಮಿಬ್ಬರಿಗೆ ದಸರಾ ತನಕ ಸಮಯವಿದೆ. 599 00:52:01,080 --> 00:52:02,320 ನಿಮ್ಮನ್ನು ಸಾಬೀತುಪಡಿಸಿ, 600 00:52:04,160 --> 00:52:07,080 ಮತ್ತು ಪೂರ್ವಾಂಚಲ್ ಮೇಲಿನ ನಿಮ್ಮ ಹಕ್ಕನ್ನು ಬಲಪಡಿಸಿ. 601 00:52:08,160 --> 00:52:09,760 ಸಿಂಹಾಸನವು ಮಿರ್ಜಾಪುರದ್ದು. 602 00:52:14,560 --> 00:52:17,080 ಹಕೀಂ ಅವರು ವಿಶೇಷವಾಗಿ ಸೂಚನೆ ನೀಡಿದ್ದಾರೆ 603 00:52:18,240 --> 00:52:21,400 ದಸರಾ ತನಕ ಯಾವುದೇ ರಕ್ತಪಾತ ಇರಬಾರದು ಎಂದು. 604 00:52:21,920 --> 00:52:24,360 ಇಲ್ಲದಿದ್ದರೆ ನಮ್ಮ ಸಹಕಾರ 605 00:52:25,520 --> 00:52:27,800 ಹಸ್ತಕ್ಷೇಪವಾಗಿ ಬದಲಾಗುತ್ತದೆ. 606 00:52:33,000 --> 00:52:35,080 ಈ ಸಭೆಯನ್ನು ದಸರಾಗೆ ಮುಂದೂಡಲಾಗಿದೆ. 607 00:52:52,240 --> 00:52:55,040 ಹಿಮ್ಮಡಿ ಎತ್ತಿ ನಿಲ್ಲೋದ್ರಿಂದ ಉದ್ದ ಆಗಲ್ಲ, ಶರದ್. 608 00:53:00,920 --> 00:53:05,040 ತುಂಬಾ ಉದ್ದ ಇರೋರು ತಲೆಬಗ್ಗಿಸಿ ನಡೆಯಬೇಕಾಗುತ್ತೆ, ಪಂಡಿತ್. 609 00:53:06,640 --> 00:53:09,160 ನೋಡ್ತಾ ಇರು, ಪೂರ್ವಾಂಚಲ ತೂಗುತ್ತದೆ, 610 00:53:10,240 --> 00:53:12,480 ಶರದ್ ಶುಕ್ಲಾ, ಶರದ್ ಶುಕ್ಲಾ ಅಂತ ಕೂಗುತ್ತದೆ. 611 00:53:15,400 --> 00:53:17,280 ನಿನ್ನ ಹೊಸ ಧೈರ್ಯದ ಹಿಂದೆ ಯಾರಿದ್ದಾರೆ? 612 00:53:33,640 --> 00:53:34,920 ಖಾಲೀನ್ ಭಯ್ಯಾ. 613 00:53:43,200 --> 00:53:45,400 ಆದರೆ ನಾವು ಅವನ ಪ್ರದೇಶಗಳಲ್ಲಿ ಹುಡುಕಿದ್ದೇವೆ. 614 00:53:45,880 --> 00:53:49,120 ನರಿಯಂಥ ಧೂರ್ತರು, ಒಂದಕ್ಕಿಂತ ಹೆಚ್ಚು ಅಡಗುತಾಣ ಹೊಂದಿರುತ್ತಾರೆ. 615 00:54:05,400 --> 00:54:08,720 ಸಿವಾನ್ 19 ಕಿ.ಮೀ. 616 00:54:08,800 --> 00:54:13,400 ಸಿವಾನ್ 617 00:54:18,920 --> 00:54:19,920 ನಮಸ್ತೆ, ಭಯ್ಯಾ. 618 00:54:51,280 --> 00:54:53,160 ಸೆಪ್ಸಿಸ್ ಷಾಕ್ ಆಗುವ ಅಪಾಯವಿದೆ. 619 00:54:53,760 --> 00:54:55,320 ನಾವು ಕೋಮಾ ಉಂಟುಮಾಡಬೇಕು. 620 00:54:56,240 --> 00:54:59,560 ರಿಸ್ಕ್ ತೆಗೆದುಕೊಳ್ಳಿ ಮತ್ತು ವಾಪಸ್ ಅವರಿಗೆ ಪ್ರಜ್ಞೆ ತರಿಸಿ. 621 00:55:02,160 --> 00:55:03,840 ಕೋಮಾದಲ್ಲಿ ಅವರು ಪ್ರಯೋಜನವಿಲ್ಲ. 622 00:55:15,720 --> 00:55:18,400 ಮಿರ್ಜಾಪುರ್ 623 00:57:11,320 --> 00:57:13,320 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 624 00:57:13,400 --> 00:57:15,400 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.