1
00:00:17,920 --> 00:00:23,600
ಬದ್ಲಾಪುರ್
2
00:00:50,560 --> 00:00:52,320
-ಬನ್ರೋ, ಕೆಲಸ ಶುರು ಮಾಡಿ.
-ಸರಿಯಣ್ಣ.
3
00:00:52,400 --> 00:00:53,720
-ಹಗ್ಗ ಹಿಡಿದುಕೋ.
-ಸರಿಯಣ್ಣ.
4
00:00:54,240 --> 00:00:56,800
ಹುಷಾರು, ಹುಷಾರು. ನಿಧಾನವಾಗಿ, ನಿಧಾನವಾಗಿ.
5
00:01:05,160 --> 00:01:07,560
-ಸಮಯ ಹಾಳು ಮಾಡಬೇಡಿ. ಬೇಗ.
-ಮಜಾನೇ ಇರಲಿಲ್ಲ.
6
00:01:09,640 --> 00:01:11,720
ಕೇಳು, ಗುಣಮಟ್ಟ ಅತ್ಯುತ್ತಮವಾಗಿರಬೇಕು.
7
00:01:11,840 --> 00:01:13,280
ಇದು ಉತ್ತಮ ವಿದೇಶಿ ಉತ್ಪನ್ನ.
8
00:01:13,360 --> 00:01:14,880
ಬೇಗ ಮಾಡ್ರಿ.
9
00:01:18,440 --> 00:01:20,560
-ಒಳ್ಳೆಯ ಸರಕನ್ನು ಇಳಿಸಿ.
-ಮಾಡ್ತಿದ್ದೇನೆ.
10
00:01:23,880 --> 00:01:25,000
ಒಂದು ಬಾಟಲ್ ಕೊಡೋ.
11
00:01:31,480 --> 00:01:34,000
ಮಿರ್ಜಾಪುರದವರು ಬಂದಿದ್ದಾರೆ, ಓಡ್ರೋ!
12
00:01:57,320 --> 00:01:59,880
-ಗುಡ್ಡು ಪಂಡಿತ್...
-ಮಿರ್ಜಾಪುರದ ರಾಜ!
13
00:01:59,960 --> 00:02:02,880
-ಗುಡ್ಡು ಪಂಡಿತ್...
-ಮಿರ್ಜಾಪುರದ ರಾಜ!
14
00:02:12,240 --> 00:02:13,240
ಚುನಾರ್
15
00:02:13,320 --> 00:02:14,600
ಸರಿಯೋ, ನಿನ್ನಮ್ಮನ್.
16
00:02:30,160 --> 00:02:31,160
ಕೇಳ್ರೋಲೇ!
17
00:02:32,760 --> 00:02:36,440
ಗುಡ್ಡು ಭಯ್ಯಾಗೆ ಹೇಳಿ,
ಶರದ್ ಶುಕ್ಲಾ ನಮಸ್ತೆ ಅಂದರು ಅಂತ.
18
00:02:40,560 --> 00:02:42,000
ಥೂ!
19
00:02:42,560 --> 00:02:44,120
ನನಗೆ ಬೇರೆ ಗಿರಾಕಿಗಳೂ ಇದ್ದಾರೆ.
20
00:02:44,200 --> 00:02:46,000
ನೀನೊಬ್ಬನೇ ಅಲ್ಲ.
21
00:03:04,240 --> 00:03:07,560
ಇವತ್ತು ತುಂಬಾ ಖುಷಿಯಾಗಿದ್ದೀರಿ. ಏನು ವಿಷಯ?
22
00:03:12,880 --> 00:03:15,720
-ಇರು. ಉಚ್ಚೆ ಹೊಯ್ದು ಬರ್ತೀನಿ.
-ಬೇಗ ಬನ್ನಿ.
23
00:03:33,960 --> 00:03:36,480
ಅವನೊಂದಿಗೆ ಸೌಮ್ಯವಾಗಿರಿ. ನನ್ನ ನೆಚ್ಚಿನವನು.
24
00:03:53,720 --> 00:03:54,720
ಬಾ.
25
00:03:57,080 --> 00:03:58,080
ಹತ್ತಿರ ಕುಳಿತುಕೋ.
26
00:04:00,960 --> 00:04:01,960
ಕುಡಿ.
27
00:04:03,800 --> 00:04:05,440
ಬೆಚ್ಚಗಾಗುವ ಮೊದಲು ಅದನ್ನು ಕುಡಿ.
28
00:04:19,520 --> 00:04:21,000
ಕುಡಿ, ಕುಡಿ.
29
00:04:28,000 --> 00:04:31,360
-ಈಗ?
-ಇದು ಮುಗಿದಿದೆ, ಭಯ್ಯಾ.
30
00:04:32,360 --> 00:04:33,360
ಅದು ನಿಜವೇ.
31
00:05:17,440 --> 00:05:23,360
ಬಸ್ತಿ
32
00:05:23,440 --> 00:05:26,080
ಗುಡ್ಡು ಭಯ್ಯಾ, ನನ್ನ ಕುಟುಂಬ ಬೇಡ.
33
00:05:27,480 --> 00:05:28,480
ಕುಳಿತುಕೋ.
34
00:05:37,080 --> 00:05:39,360
ಅವತ್ತು ಶರದ್ ಶುಕ್ಲಾ ಜೊತೆ
35
00:05:39,440 --> 00:05:42,960
ನಿಂತುಕೊಂಡು ನನ್ನನ್ನು
ಅಪಹಾಸ್ಯ ಮಾಡುತ್ತಿದೆಯಲ್ಲ?
36
00:05:45,800 --> 00:05:47,880
ನನ್ನ ಮನೆಯವರನ್ನು ಬಿಡಿ, ಗುಡ್ಡು ಭಯ್ಯಾ.
37
00:05:49,960 --> 00:05:51,280
ಒಬ್ಬರನ್ನು ಕೊಲ್ಲುತ್ತೇನೆ.
38
00:05:52,200 --> 00:05:55,160
ತಂದೆ. ಮಗ. ಹೆಂಡತಿ.
39
00:05:56,360 --> 00:05:58,760
ಯಾರು ಸಾಯುತ್ತಾರೆ ಎಂಬುದನ್ನು ನೀವೇ ನಿರ್ಧರಿಸಿ.
40
00:06:00,000 --> 00:06:02,320
ಉಳಿದವರನ್ನು ಬಿಡುತ್ತೇನೆ. ಇದು ನನ್ನ ಮಾತು.
41
00:06:04,280 --> 00:06:05,600
ಗುಡ್ಡು ಭಯ್ಯಾ, ನೋಡಿ...
42
00:06:05,680 --> 00:06:08,400
ನ್ಯಾಯಯುತವಾಗಿ, ನೀವೇ ಸಾಯಬೇಕು.
43
00:06:08,480 --> 00:06:10,120
ಏಕೆಂದರೆ ನೀವು ಅವರಿಗೆ ಶತ್ರು.
44
00:06:10,960 --> 00:06:12,440
ನಾನು ಅಥವಾ ಮಗು ಏಕೆ ಸಾಯಬೇಕು?
45
00:06:13,080 --> 00:06:14,680
ಏನೇ ಮಾತಾಡ್ತಾ ಇದ್ದೀಯಾ? ಮುಚ್ಚು!
46
00:06:15,440 --> 00:06:17,760
ಗುಡ್ಡು ಭಯ್ಯಾ, ಕ್ಷಮಿಸಿ. ನನ್ನಿಂದ ತಪ್ಪಾಯಿತು.
47
00:06:17,840 --> 00:06:19,400
ನಾನೀಗ ನಿಮ್ಮ ಪರ ಇರುತ್ತೇನೆ.
48
00:06:34,680 --> 00:06:36,600
ನಿನ್ನ ತಂದೆ ಒಬ್ಬ ಹೇಡಿ.
49
00:06:37,680 --> 00:06:38,920
ಅದಕ್ಕಾಗಿ ಅವನನ್ನು ಕೊಂದೆ.
50
00:06:39,800 --> 00:06:40,800
ನೆನಪಿರಲಿ,
51
00:06:42,160 --> 00:06:43,400
ನಾನು ನಿಮ್ಮ ಶತ್ರು ಅಲ್ಲ.
52
00:06:47,360 --> 00:06:48,360
ನಿನ್ನ ಹೆಸರು ಏನು?
53
00:06:49,720 --> 00:06:50,720
ಮುನ್ನಾ.
54
00:06:57,320 --> 00:06:58,360
ಅದನ್ನು ಬದಲಾಯಿಸು.
55
00:07:13,640 --> 00:07:15,200
ಗುಡ್ಡು ಕ್ರಿಪಾನೂ ಕೊಂದ.
56
00:07:23,920 --> 00:07:24,920
ಈಗೇನು?
57
00:07:27,200 --> 00:07:28,800
ನೀನು ಯಾರ ಮೇಲೆ ಗುರಿ ಇಡುವೆ?
58
00:07:28,880 --> 00:07:31,000
ಗುಡ್ಡುವಿಗೆ ಸಂಬಂಧಿಸಿದ ಎಲ್ಲರ ಮೇಲೂ.
59
00:07:31,760 --> 00:07:33,040
ನಾನು ಈಗ ಹಿಂದೆ ಸರಿಯಲ್ಲ.
60
00:07:35,960 --> 00:07:38,320
ಭಸ್ಮಾಸುರನ ಕಥೆ ಕೇಳಿದ್ದೀಯಾ, ಶರದ್?
61
00:07:39,960 --> 00:07:43,120
ಅದುವೇ ಗುಡ್ಡು. ಭಸ್ಮಾಸುರ.
62
00:07:44,720 --> 00:07:46,400
ತನ್ನನ್ನು ತಾನೇ ನಾಶಮಾಡುತ್ತಾನೆ.
63
00:07:47,160 --> 00:07:48,600
ಅವನು ಗಲಭೆ ಎಬ್ಬಿಸಲಿ.
64
00:07:50,400 --> 00:07:51,960
ನಿನಗೇ ಉಪಯೋಗವಾಗುತ್ತೆ.
65
00:07:57,840 --> 00:07:59,720
-ನಾನು ಸಭೆಯನ್ನು ಕರೆಯಬೇಕೇ?
-ಬೇಡ.
66
00:08:01,280 --> 00:08:03,760
ಸಭೆಯನ್ನು ಕರೆದರೆ,
ನಿನ್ನ ಗಂಭೀರವಾಗಿ ಪರಿಗಣಿಸಲ್ಲ.
67
00:08:08,120 --> 00:08:10,920
ಅಂದರೆ ಗುಡ್ಡುವಿನ ಬಾಹುಬಲವಾಗಲಿ,
ಮನೋಬಲವಾಗಲಿ ಮುರಿಯಬಾರದಾ?
68
00:08:11,000 --> 00:08:12,000
ಮತ್ತೇನು ಮಾಡಲಿ?
69
00:08:15,040 --> 00:08:18,520
ಗುಡ್ಡು ಭಯದಿಂದ,
ಇತರ ಬಾಹುಬಲಿಗಳೇ ಸಭೆಗೆ ಕರೆಯುತ್ತಾನೆ.
70
00:08:19,520 --> 00:08:21,360
ಆಗ ಅವರಿಗೆ ನಿನ್ನ ತಾಕತ್ತನ್ನು ತೋರಿಸು.
71
00:08:22,440 --> 00:08:23,440
ಹೇಗೆ?
72
00:08:26,360 --> 00:08:28,680
ನೋಡು, ಹಿಂಸೆಯನ್ನು ಮಾಡಬಲ್ಲವರು
73
00:08:30,000 --> 00:08:33,040
ಗದ್ದುಗೆಗೆ ಸಮರ್ಥರಾಗುವುದಿಲ್ಲ.
74
00:08:33,760 --> 00:08:37,600
ಹಿಂಸೆಯನ್ನು ನಿಲ್ಲಿಸಬಲ್ಲವರೇ ಸಮರ್ಥರು.
75
00:08:39,960 --> 00:08:42,360
ಹಾಗೆ ನಿನ್ನ ಪ್ರಾಬಲ್ಯವನ್ನು ಸಾಧಿಸಬೇಕು.
76
00:08:48,120 --> 00:08:51,280
ಆದರೆ ನೀವು ಇಲ್ಲಿರುವಾಗ
ನಾನು ಗದ್ದುಗೆ ಹೇಗೆ ಹಿಡಿಯಲಿ?
77
00:08:54,280 --> 00:08:56,160
ನಾನು ಯಾವಾಗಲೋ ಗದ್ದುಗೆ ತ್ಯಜಿಸಿರುವೆ.
78
00:08:58,720 --> 00:09:00,520
ಮುನ್ನಾನ ಕೂರಿಸಲು ಬಯಸಿದ್ದೆ.
79
00:09:03,720 --> 00:09:05,360
ಈಗ ನಿನ್ನನ್ನು ಕೂರಿಸುತ್ತೇನೆ.
80
00:09:07,520 --> 00:09:10,240
ಮಿರ್ಜಾಪುರದ ಗದ್ದುಗೆಗೆ ನೀನೇ ಸರಿಯಾದ ಹಕ್ಕುದಾರ.
81
00:09:22,240 --> 00:09:24,400
ಮಿರ್ಜಾಪುರ್
82
00:10:03,760 --> 00:10:05,760
ಪೂರ್ವಾಂಚಲ್
83
00:10:18,640 --> 00:10:20,640
ಗುಡ್ಡು, ಇದನ್ನೆಲ್ಲಾ ಗೋಲುಗಾಗಿ
84
00:10:21,520 --> 00:10:24,720
ಮಾಡುತ್ತಿದ್ದೀರಾ ಅಥವಾ ಇದನ್ನು ಮಾಡಲು
ನಿಮಗೆ ಮಜಾ ಬರುತ್ತಿದೆಯಾ?
85
00:10:24,760 --> 00:10:25,760
ಮುನಾವರ್
86
00:10:25,880 --> 00:10:27,480
ನಾನು ಅಷ್ಟೆಲ್ಲಾ ಯೋಚನೆ ಮಾಡಲ್ಲ.
87
00:10:28,120 --> 00:10:32,160
ಸರಿ ಅನಿಸಿದ್ದನ್ನು ಮಾಡುತ್ತೇನೆ.
ಸರಿಯಾಗದಿದ್ದರೆ, ಅದನ್ನು ಮತ್ತೆ ಮಾಡುತ್ತೇನೆ.
88
00:10:33,240 --> 00:10:35,320
ನನ್ನ ಸಂದೇಶ ಸ್ಪಷ್ಟ, ಮುನಾವರ್ ಜೀ.
89
00:10:35,400 --> 00:10:38,520
ಗೋಲು ಸಿಗೋವರೆಗೂ
ನಾನು ನಿಲ್ಲಿಸಲ್ಲ.
90
00:10:38,640 --> 00:10:40,480
ಇಲ್ಲಿಯವರೆಗೆ ಇದು ವಿನಂತಿ,
91
00:10:40,520 --> 00:10:44,440
ಆದರೆ ಈಗ ಇದು ಆದೇಶ. ನಿಲ್ಲಿಸಿ.
92
00:10:46,360 --> 00:10:49,000
ಇದು ವೃತ್ತಿಪರ ವಿಷಯವಾಗಿದ್ದಾಗ,
ನಿಮ್ಮ ಮಾತು ಕೇಳಿದೆ.
93
00:10:49,080 --> 00:10:50,760
ಆದರೆ ಇದು ವೈಯಕ್ತಿಕ ವಿಷಯ.
94
00:10:50,880 --> 00:10:52,320
ನಾನೇ ನೋಡಿಕೊಳ್ಳುತ್ತೇನೆ.
95
00:10:52,400 --> 00:10:54,040
ಎಲ್ಲರೂ ನಷ್ಟ ಅನುಭವಿಸ್ತಿದ್ದಾರೆ.
96
00:10:54,760 --> 00:10:58,000
ಈ ವೈಷಮ್ಯದ ಬೆಲೆಯನ್ನು
ಇಡೀ ಪೂರ್ವಾಂಚಲ್ ತೆರುತ್ತಿದೆ.
97
00:10:59,080 --> 00:11:00,920
ಹಾಗಾದರೆ ಈ ವಿಷಯ ಹೇಗೆ ವೈಯಕ್ತಿಕ?
98
00:11:02,280 --> 00:11:04,400
ಗೋಲು ಜೌನ್ಪುರದಲ್ಲಿದ್ದಾಳಂತ ನಿಮ್ಮ ಬಳಿ
99
00:11:05,400 --> 00:11:06,720
ಯಾವುದೇ ಪುರಾವೆಯೂ ಇಲ್ಲ.
100
00:11:08,440 --> 00:11:11,120
ಗೋಲು ಜೌನ್ಪುರದಲ್ಲಿಲ್ಲ ಅಂತ
ನಿಮ್ಮ ಬಳಿಯೂ ಪುರಾವೆ ಇಲ್ಲ.
101
00:11:15,440 --> 00:11:17,600
ನಿಮ್ಮ ಬಳಿ ಪುರಾವೆ ಇದ್ದಾಗ ನನಗೆ ಕರೆ ಮಾಡಿ.
102
00:11:24,440 --> 00:11:26,320
ಬರ್ಫಿ ನಾಳೆ ಬೆಳಿಗ್ಗೆ ಹೊರಡುತ್ತೆ.
103
00:11:26,920 --> 00:11:28,200
ನಮ್ಮ ವಿತರಕರಿಗೆ ತಿಳಿಸಿ.
104
00:11:28,680 --> 00:11:30,240
ಕ್ಯಾಶ್ ಆನ್ ಡೆಲಿವರಿನಾ, ಭಯ್ಯಾ?
105
00:11:34,560 --> 00:11:36,160
ಎಂಬಿಎ ಎಲ್ಲಿಂದ ಮಾಡಿದೆ?
106
00:11:36,240 --> 00:11:39,400
ಹೌದು, ಭಯ್ಯಾ, ಈ ಮೂರ್ಖ ಬಿಎ ಪಾಸ್ ಆಗಿದ್ದಾನೆ.
107
00:11:39,480 --> 00:11:40,640
ಅದೂ ಖಾಸಗಿಯಾಗಿ.
108
00:11:42,240 --> 00:11:43,200
ಸರಿ.
109
00:11:45,000 --> 00:11:46,440
ನೀನೆಷ್ಟು ಓದಿದ್ದೀಯಾ?
110
00:11:46,520 --> 00:11:49,400
ಒಂಬತ್ತನೇ ತರಗತಿ ಪಾಸಾದೆ.
ಬೋರ್ಡ್ ಪರೀಕ್ಷೆ ಪಾಸಾಗಲಿಲ್ಲ.
111
00:11:52,200 --> 00:11:53,240
ನೀನೇ ನೋಡಿಕೋ.
112
00:11:59,920 --> 00:12:01,960
ಐಎನ್ಎನ್-886
ಶುಭ ಪ್ರಯಾಣ
113
00:12:02,040 --> 00:12:07,320
ರಪ್ತಿ ನದಿ - ನೇಪಾಳ
114
00:12:19,800 --> 00:12:20,800
ಹಲೋ.
115
00:12:22,200 --> 00:12:24,280
ಕೆಲಸ ಇನ್ನರ್ಧ ಗಂಟೆಯಲ್ಲಿ ಮುಗಿಯುತ್ತೆ.
116
00:12:27,400 --> 00:12:33,360
ಕಠ್ಮಂಡು - ನೇಪಾಳ - ಗೋರಖ್ಪುರ್
ಜೌನ್ಪುರ್ - ಬಲಿಯಾ
117
00:12:42,720 --> 00:12:47,680
ರಪ್ತಿ ನದಿ - ಗೋರಖ್ಪುರ್
118
00:12:53,000 --> 00:12:54,560
ಅಣ್ಣ, ಸಿಗರೇಟ್ ತಗೋ.
119
00:13:03,640 --> 00:13:06,480
ಗಮನ! ನೀವು ಈಗ ಭಾರತದ ಗಡಿಯೊಳಗೆ ಇದ್ದೀರಿ.
120
00:13:06,560 --> 00:13:08,200
-ದೋಣಿ ನಿಲ್ಲಿಸಿ.
-ಪೊಲೀಸ್.
121
00:13:08,280 --> 00:13:11,600
ಮತ್ತು ದೋಣಿ ಸಿಬ್ಬಂದಿ
ನಿಮ್ಮ ಗುರುತಿನೊಂದಿಗೆ ಸಿದ್ಧರಾಗಿರಿ.
122
00:13:12,200 --> 00:13:13,880
-ಎಚ್ಚರಿಸುತ್ತಿದ್ದೇನೆ.
-ನಿಲ್ಲಿ.
123
00:13:13,960 --> 00:13:18,040
ದೋಣಿ ನಿಲ್ಲಿಸಿ,
ಗುರುತಿನ ಚೀಟಿಗಳೊಂದಿಗೆ ತಯಾರಾಗಿ ನಿಲ್ಲಿ.
124
00:13:20,920 --> 00:13:21,920
ಕೈ ಮೇಲೆತ್ತಿ!
125
00:13:27,400 --> 00:13:29,360
-ಮಂಡಿಯೂರಿ!
-ಹಾಂ, ಸರ್.
126
00:13:29,440 --> 00:13:30,280
ಹಾಂ, ಸರ್.
127
00:13:31,160 --> 00:13:32,040
ಕುಳಿತುಕೋ!
128
00:13:43,920 --> 00:13:45,000
ಹಾಂ, ಆ ಕಡೆ ನೋಡಿ.
129
00:13:46,200 --> 00:13:49,160
ಸರಿಯಾಗಿ ಹುಡುಕಿ.
ಮೂಲೆ ಮೂಲೆಯಲ್ಲೂ ಹುಡುಕಿ.
130
00:13:56,360 --> 00:13:57,600
ಸರ್, ಊಟ ತಿನ್ನಿ.
131
00:13:58,680 --> 00:14:02,080
ಸರ್, ಸಂಪೂರ್ಣವಾಗಿ ಪರಿಶೀಲಿಸಿದ್ದೇವೆ.
ನಮಗೆ ಏನೂ ಸಿಗಲಿಲ್ಲ.
132
00:14:03,200 --> 00:14:04,200
ನಿಜವಾಗಿಯೂ?
133
00:14:05,560 --> 00:14:08,720
ಪರವಾಗಿಲ್ಲ. ತಪ್ಪು ಮಾಹಿತಿ ಸಿಕ್ಕಿರಬೇಕು.
134
00:14:09,640 --> 00:14:10,600
ಸರ್.
135
00:14:13,040 --> 00:14:14,040
ಹುಡುಗರೇ, ಹೋಗೋಣ.
136
00:14:14,120 --> 00:14:15,120
ಅದ್ಭುತ.
137
00:14:15,600 --> 00:14:16,800
ನೀವೆಲ್ಲರೂ ಊಟ ಮಾಡಿದ್ರಾ?
138
00:14:47,280 --> 00:14:48,560
ಜೋಶಿ ಯಾಕೆ ಬಂದಿದ್ದ?
139
00:14:51,200 --> 00:14:53,600
ಪೊಲೀಸರು ಅಫೀಮು
ದೋಣಿಗಳನ್ನು ವಶಪಡಿಸಿಕೊಂಡಿದ್ದಾರೆ.
140
00:14:54,120 --> 00:14:55,360
ಹಾಗಾದರೆ ಹೊರಗೆ ಏನು?
141
00:14:56,400 --> 00:14:59,600
ಜೋಶಿಯವರಿಂದಾಗಿ ಅಫೀಮು ಬೇರೆ ಮಾರ್ಗದ ಮೂಲಕ
ಇಲ್ಲಿಗೆ ತಲುಪಿತು.
142
00:15:04,880 --> 00:15:05,880
ಹಾಗೋ.
143
00:15:11,280 --> 00:15:12,640
ಏನು ಮಾಡುತ್ತಿರುವೆ?
144
00:15:14,160 --> 00:15:15,360
ಅಬ್ಬುಗೆ ಏನು ಹೇಳಲಿ?
145
00:15:16,320 --> 00:15:17,520
ಏಕೆ? ಏನಾಯಿತು?
146
00:15:18,960 --> 00:15:20,080
ಅಫೀಮು ಬಂದಿದೆ.
147
00:15:21,720 --> 00:15:23,560
ಮುಂದಿನ ಸಲ ಇನ್ನೊಂದು ದಾರಿ ಹುಡುಕೋಣ.
148
00:15:24,600 --> 00:15:26,560
ನಡೆದಿರುವುದನ್ನು ಬದಲಾಯಿಸೋಕಾಗಲ್ಲ.
149
00:15:27,680 --> 00:15:30,160
ಗುಡ್ಡು, ಅಬ್ಬುಗೆ ಮಾತು ಕೊಟ್ಟಿದ್ದೆ,
150
00:15:30,240 --> 00:15:32,480
ಪ್ರತಿ ಬಾರಿಯಂತೆ ನೀನು ಗಬ್ಬೆಬ್ಬಿಸಲ್ಲ ಎಂದು.
151
00:15:37,960 --> 00:15:38,960
"ಗಬ್ಬೆಬ್ಬಿಸುವುದು"?
152
00:15:44,920 --> 00:15:46,520
ನೋಡು, ನಿನ್ನ ಅಬ್ಬು...
153
00:15:51,080 --> 00:15:52,680
ಲಾಭ ಮಾತ್ರ ನೋಡ್ತಾರೆ.
154
00:15:54,960 --> 00:15:57,160
ಅವರಿಗೆ ಯಾರ ಬಗ್ಗೆಯೂ ಏನೂ ಆಗಬೇಕಿಲ್ಲ.
155
00:15:58,200 --> 00:15:59,960
ನೀನು ಬುದ್ಧಿವಂತೆ.
156
00:16:00,040 --> 00:16:03,360
ಗುಡ್ಡುನ ಯಾರೂ ನಂಬೋಕಾಗಲ್ಲ ಅಂತ
ನಿನಗೆ ಗೊತ್ತಿರಬೇಕಿತ್ತು.
157
00:16:06,840 --> 00:16:08,160
ಮತ್ತೆ ಯಾಕೆ ನಂಬಿದೆ?
158
00:16:09,000 --> 00:16:11,480
ಏಕೆಂದರೆ ನಾನು ನಿನಗೆ ಮುಖ್ಯ ಎಂದು ಭಾವಿಸಿದೆ.
159
00:16:12,880 --> 00:16:15,920
ನೀನು ಏನು ಮಾಡಿದೆ?
ಎಲ್ಲವನ್ನೂ ಪಣಕ್ಕಿಟ್ಟಿದ್ದೀಯ.
160
00:16:17,000 --> 00:16:18,240
ಮತ್ತು ಯಾರಿಗಾಗಿ?
161
00:16:18,320 --> 00:16:19,720
ಆ ಗೋಲುಗಾಗಾ?
162
00:16:22,000 --> 00:16:25,680
"ಆ ಗೋಲುಗಾಗಿ"
ನಾನು ಅದನ್ನು ಮತ್ತೆ ಮತ್ತೆ ಮಾಡುತ್ತೇನೆ.
163
00:16:28,760 --> 00:16:33,200
ಗುಡ್ಡು, ನಾನು ಹೆಚ್ಚು ಮಾತನಾಡದೇ ಇರಬಹುದು
ಆದರೆ ನಾನು ಮೂರ್ಖಳಲ್ಲ.
164
00:16:36,560 --> 00:16:39,960
ಅಫೀಮು ವ್ಯವಹಾರಕ್ಕಾಗಿ
ನೀನು ನನ್ನ ಬಳಿ ಬಂದೆ. ಅಲ್ಲವೇ?
165
00:16:41,000 --> 00:16:42,480
"ಗುಡ್ಡು ಮೂರ್ಖ."
166
00:16:43,160 --> 00:16:45,440
ಜೌನ್ಪುರಕ್ಕೇ ಹೋಗಬೇಕಿತ್ತು ನೀನು.
167
00:16:46,520 --> 00:16:48,840
ಹೋಗಬೇಕಿತ್ತು! ಯಾಕೆ ನಾನು...
168
00:16:53,880 --> 00:16:55,640
ನಾನು ಗಬ್ಬೆಬ್ಬಿಸುತ್ತಿಲ್ಲ.
169
00:16:56,200 --> 00:16:59,680
ನನ್ನ ಬಗ್ಗೆ ಗೊತ್ತಿದೆ
ಅಂದುಕೊಂಡಿರುವವರು ಗಬ್ಬೆಬ್ಬಿಸುತ್ತಿದ್ದಾರೆ.
170
00:17:05,480 --> 00:17:06,800
ಅಫೀಮು ತಗೊಂಡು ಹೋಗುವೆ.
171
00:17:07,960 --> 00:17:11,520
ನಾನು ದುಡ್ಡು ಕೊಟ್ಟಿದ್ದೇನೆ.
ನಿನ್ನ ಪಾಲು ನಿನಗೆ ಸಿಗುತ್ತೆ.
172
00:17:11,560 --> 00:17:13,240
ನಿನ್ನಿಂದ ನನಗೇನೂ ಬೇಡ.
173
00:17:13,320 --> 00:17:16,880
ಹಾಗಾದರೆ ಸರಿ.
ನಾನು ನಿನ್ನ ಪಾಲನ್ನು ಸುಡುತ್ತೇನೆ. ಸರಿಯಾ?
174
00:17:34,240 --> 00:17:40,200
ತ್ರಿಪಾಠಿ
175
00:17:53,800 --> 00:17:55,440
ಖಾಲೀನ್ ಭಯ್ಯಾ ಹೇಳುತ್ತಿದ್ದರು,
176
00:17:55,520 --> 00:17:59,520
ಬರ್ಫಿಯ ದರವನ್ನು ನಿಯಂತ್ರಿಸಲು,
ಅದರ ಪೂರೈಕೆಯನ್ನು ನಿಯಂತ್ರಿಸಬೇಕು ಅಂತ.
177
00:18:01,560 --> 00:18:03,920
ಬಾಹುಬಲಿಗಳಿಗೆ ಅದನ್ನು ಮಿಠಾಯಿ ಥರ ಹಂಚಿದರೆ
178
00:18:05,000 --> 00:18:06,160
ದರಗಳು ಕುಸಿಯುವುದಿಲ್ಲವೇ?
179
00:18:09,240 --> 00:18:11,040
ನೇಪಾಳಕ್ಕೆ ಲಾಭವನ್ನು ತೋರಿಸದಿದ್ದರೆ,
180
00:18:11,520 --> 00:18:13,560
ಅವರು ಅದನ್ನು ಪೂರೈಸಲು ಹಿಂಜರಿಯುತ್ತಾರೆ.
181
00:18:23,080 --> 00:18:26,080
ಈ ಸಲವೂ ಸಭೆಗೆ ಹೋಗಲ್ಲ ಅಂದಿರಿ
ಅಂತ ರಧಿಯಾ ಹೇಳಿದಳು.
182
00:18:28,880 --> 00:18:30,240
ನನಗೆ ಹೋಗುವ ಮನಸ್ಸಿಲ್ಲ.
183
00:18:35,240 --> 00:18:37,440
ಕೆಲಸ ಮತ್ತು ಮನಸ್ಸನ್ನು ದೂರ ಇರಿಸಿ.
184
00:18:42,800 --> 00:18:45,040
ಹೃದಯದ ಭಾರವನ್ನು ಇಳಿಸಿಕೊಳ್ಳಿ.
185
00:18:48,960 --> 00:18:50,760
ನಿಮಗೇನು ಮಾಡಲು ಇಷ್ಟ ಹೇಳಿ?
186
00:18:53,080 --> 00:18:55,480
ಸಭೆಯನ್ನು ಕರೆಯಿರಿ. ನಾನು ನಿಭಾಯಿಸುತ್ತೇನೆ.
187
00:19:11,880 --> 00:19:16,800
ಮಿರ್ಜಾಪುರ್ - ವಾರಣಾಸಿ - ಜೌನ್ಪುರ್
ಪ್ರಯಾಗರಾಜ್ - ಅಜಂಗಢ
188
00:19:16,920 --> 00:19:22,880
ಘಾಜಿಪುರ್ - ಬಸ್ತಿ - ಮೌ
ಬಲಿಯಾ - ದೇವರಿಯಾ
189
00:19:22,960 --> 00:19:26,560
ಗೋರಖ್ಪುರ್ - ಕುಶಿನಗರ್ - ಮಹಾರಾಜಗಂಜ್
190
00:19:38,680 --> 00:19:39,680
ಭಯ್ಯಾಜೀ...
191
00:19:45,320 --> 00:19:47,440
ಈ ಅಫೀಮು ನಮ್ಮದಕ್ಕಿಂತ ಉತ್ತಮವಾಗಿದೆ.
192
00:19:51,320 --> 00:19:52,920
ಇದು ಮಾರುಕಟ್ಟೆಗೆ ಬಂದರೆ,
193
00:19:54,920 --> 00:19:56,640
ನಮ್ಮ ಮಾಲಿಗೆ ಬೇಡಿಕೆ ಕಡಿಮೆಯಾಗುತ್ತೆ.
194
00:19:56,720 --> 00:19:58,280
ಹಾಗಾದರೆ ಇದರ ಮಾರಾಟ ನಿಲ್ಲಿಸಿ.
195
00:20:00,320 --> 00:20:03,440
ಪೂರ್ವಾಂಚಲದಲ್ಲಿ ನಿಮ್ಮ ಜಾಲ
ಅತ್ಯಂತ ಹಳೆಯದು, ಛಡ್ಡಾ ಜೀ.
196
00:20:04,440 --> 00:20:05,680
ಅದರ ಪ್ರಯೋಜನ ಪಡೆಯಿರಿ.
197
00:20:07,480 --> 00:20:09,800
ನಾನು ನನ್ನ ಪ್ರದೇಶವನ್ನು ನಿಯಂತ್ರಿಸಬಲ್ಲೆ.
198
00:20:12,280 --> 00:20:14,560
ಆದರೆ ನಾವು ಮಾರುಕಟ್ಟೆಯಿಂದ ಪಡೆದಿರುವ ಹಣಕ್ಕೆ
199
00:20:15,320 --> 00:20:17,720
ನಮಗೆ ಇಡೀ ಪೂರ್ವಾಂಚಲದ ಮೇಲೆ ನಿಯಂತ್ರಣ ಬೇಕು.
200
00:20:24,000 --> 00:20:25,320
ಗುಡ್ಡುನ ಒಡೆಯಬೇಕು.
201
00:20:26,920 --> 00:20:29,160
ಅವನು ಕುಸಿಯುವವರೆಗೆ ಕಾಯಲು ಸಾಧ್ಯವಿಲ್ಲ.
202
00:20:33,960 --> 00:20:37,080
"ನಾನೂ ಬಡತನದ ಮಗುವೇ
ನೀನು ಯಾಕೆ ಅಳುತ್ತಿದ್ದೀ?
203
00:20:37,720 --> 00:20:41,160
"ಆದರೂ ಕಡಿಮೆ ವೋಟುಗಳು ಬಿದ್ದರೆ
ನಮ್ಮನ್ನವರು ನಡೆಸಿಕೊಳ್ಳುವುದು ಹೀಗೆ
204
00:20:41,960 --> 00:20:45,320
"ನಮ್ಮನ್ನು ದಂಗೆಯೊಳಗೆ ತಳ್ಳಿ
ಅವರನ್ನವರು ದೆಂಗಿಸಿಕೊಳ್ತಾರೆ
205
00:20:46,040 --> 00:20:49,400
"ನಾಚಿಕೆಪಡಬೇಕು ಇಂತಹ ನಾಯಕರು
ಸುಳ್ಳಿನ ಮೇಲೆ ಬದುಕುವ ನಾಲಾಯಕರು
206
00:20:49,480 --> 00:20:52,320
"ತಲೆಯ ಮೇಲೆ ಗರ್ವ ಹೊರುವರು
ತಮ್ಮನ್ನೇ ನಾಯಕರೆನ್ನುವರು
207
00:20:58,400 --> 00:20:59,520
ನೋಡು,
208
00:21:00,760 --> 00:21:03,080
ನಿನ್ನ ಸ್ವರ ತಪ್ಪು,
ಆದರೆ ನೀನು ಹೇಳೋದು ಸರಿ ಇದೆ.
209
00:21:03,560 --> 00:21:05,640
ನನ್ನ ಸ್ವರ ತಪ್ಪು, ಆದರೆ ಹೇಳೋದು ಸರಿಯೇ?
210
00:21:06,080 --> 00:21:08,160
ತಮಾಷೆ ಒಪ್ಪಲು ಅವರಿಗೆ ಧೈರ್ಯ ಇಲ್ವಾ?
211
00:21:08,720 --> 00:21:10,400
ಐಪಿಸಿ 294 ಆರೋಪ ಮಾಡಿದ್ದಾರೆ.
212
00:21:10,960 --> 00:21:13,200
ಅಶ್ಲೀಲತೆ ಕಾಯಿದೆ. ನೀವೇ ಹೇಳಿ.
213
00:21:14,080 --> 00:21:15,560
ನಿಮ್ಮ ವಕೀಲರು ಏನು ಮಾಡಿದರು?
214
00:21:19,560 --> 00:21:21,560
ಕವಿತೆ ಓದಿಕೊಂಡು ಜೀವನ ನಡೆಸುವವನಿಗೆ,
215
00:21:21,640 --> 00:21:24,240
ವಕೀಲರನ್ನು ನೇಮಿಸಿಕೊಳ್ಳಲು ಸಾಧ್ಯವೇ, ಸರ್?
216
00:21:26,400 --> 00:21:28,720
ನಾನೇ ಕಾನೂನು ಕಲಿತು ಹೋರಾಡೋಣ ಅಂದುಕೊಂಡೆ.
217
00:21:29,240 --> 00:21:32,440
ಓದಿಗೂ ಹೋರಾಟಕ್ಕೂ ವ್ಯತ್ಯಾಸವಿದೆ
ಅಂತ ಆಮೇಲೆ ತಿಳಿಯಿತು.
218
00:21:33,320 --> 00:21:34,760
ಈಗ ನೀನು ವಕೀಲನಾಗಬೇಕಾ?
219
00:21:35,680 --> 00:21:37,200
ಐಎಎಸ್ ಆಗಬೇಕೆಂದು ಬಯಸಿದ್ದೆ.
220
00:21:38,320 --> 00:21:40,880
ಆದರೆ ನಾನು ವಕೀಲನಾಗಲು ಸಾಧ್ಯವಾದರೆ,
ಅದೂ ಉತ್ತಮವೇ.
221
00:21:53,720 --> 00:21:56,360
ಮಣ್ಣನ್ನು ತುಂಬಾ ಗಟ್ಟಿಯಾಗಿ ಒತ್ತಬೇಡಿ,
222
00:21:57,000 --> 00:21:58,320
ಸಸ್ಯವು ಉಸಿರುಗಟ್ಟುತ್ತದೆ.
223
00:21:58,800 --> 00:22:01,240
ಅವೂ ಉಸಿರಾಡಬೇಕು.
224
00:22:03,040 --> 00:22:05,040
ಮಣ್ಣನ್ನು ಸ್ವಲ್ಪ ಸಡಿಲಗೊಳಿಸಿ.
225
00:22:07,560 --> 00:22:08,640
ಕೇಳು, ಮಗ.
226
00:22:14,480 --> 00:22:15,480
ಇದು...
227
00:22:15,960 --> 00:22:17,360
ಹೋಗು, ಟೀ ಕುಡಿ...
228
00:22:23,760 --> 00:22:25,520
ಇಲ್ಲಿಗೆ ಒಗ್ಗಿಕೊಂಡಿರಾ?
229
00:22:25,600 --> 00:22:29,480
ಲಾಲಾಜೀ, ಮನುಷ್ಯ ಎಲ್ಲೇ ಇದ್ದರೂ,
ಜೀವನಕ್ಕೊಂದು ಅರ್ಥ ಹುಡುಕಿಕೊಳ್ಳುತ್ತಾನೆ.
230
00:22:31,320 --> 00:22:35,680
ನೀವು ಬಹಳಷ್ಟು ಕೈದಿಗಳಿಗೆ
ಮೇಲ್ಮನವಿ ಸಲ್ಲಿಸುತ್ತಿದ್ದೀರಂತೆ?
231
00:22:37,200 --> 00:22:38,360
ನನ್ನದೂ ಸಲ್ಲಿಸಿ.
232
00:22:41,360 --> 00:22:44,280
ಲಾಲಾ ಜೀ, ಅವರು ನಿರ್ಗತಿಕರು.
233
00:22:45,120 --> 00:22:47,720
ಮತ್ತು ನೀವು ಅಪರಾಧಿ,
ನೀವು ಸಹ ಅದನ್ನು ಒಪ್ಪುತ್ತೀರಿ.
234
00:22:48,200 --> 00:22:50,880
ನಾನು ಉದ್ಯಮಿ ಎಂದು
ನಿಮಗೆ ಹತ್ತಾರು ಬಾರಿ ಹೇಳಿದ್ದೇನೆ.
235
00:22:53,280 --> 00:22:56,320
ಕಾನೂನುಬಾಹಿರವಾಗಿ ಏನಾದರೂ ಮಾಡುವಂತೆ
ನಿಮ್ಮನ್ನು ಕೇಳುತ್ತಿಲ್ಲ.
236
00:22:57,640 --> 00:22:59,560
ನಿಮಗೆ ಚೆನ್ನಾಗಿ ಗೊತ್ತು
237
00:23:00,240 --> 00:23:01,720
ನಾನು ಜಾಮೀನಿಗೆ ಅರ್ಹ ಎಂದು.
238
00:23:02,240 --> 00:23:03,240
ಆದರೆ...
239
00:23:04,160 --> 00:23:06,120
ಸರ್ಕಾರದ ಒತ್ತಡದಿಂದಾಗಿ
240
00:23:06,960 --> 00:23:08,760
ಅದನ್ನು ಪದೇ ಪದೇ ಹಿಂಪಡೆಯಲಾಗುತ್ತಿದೆ.
241
00:23:09,840 --> 00:23:10,840
ಅಂದಹಾಗೆ,
242
00:23:12,880 --> 00:23:16,880
ನಿಮ್ಮ ಕಾನೂನು ಎಲ್ಲರಿಗೂ ಸಮಾನ ಅಲ್ಲವೇ,
ಪಂಡಿತ್ ಜೀ?
243
00:23:21,960 --> 00:23:25,800
ಸರಿ, ನಾನು ನಿಮ್ಮ ಅರ್ಜಿಯನ್ನು ಬರೆಯುತ್ತೇನೆ.
244
00:23:27,400 --> 00:23:29,520
ಆದರೆ ತಪ್ಪೊಪ್ಪಿಗೆಯನ್ನು ನೀವು ಬರೆಯಬೇಕು.
245
00:23:34,200 --> 00:23:37,120
ಸಾಕ್ಷಿಯಾಗಿ.
ನಿಮ್ಮ ಶಿಕ್ಷೆ ಕಡಿಮೆ ಮಾಡಿಸುತ್ತೇನೆ.
246
00:23:42,840 --> 00:23:44,520
ಹಾಂ, ನಾನು ಎಲ್ಲವನ್ನೂ ಖರೀದಿಸಿದೆ.
247
00:23:45,440 --> 00:23:46,840
ಏನು ಪರಿಶೀಲಿಸುತ್ತೀಯ?
248
00:23:47,720 --> 00:23:50,600
ನೀನು ನನ್ನನ್ನು ನಿಜವಾಗಲೂ ನಂಬುವುದಿಲ್ಲ.
ಸರಿ, ಹೇಳು.
249
00:23:51,680 --> 00:23:53,280
ಹಾಂ, ಬದನೆಕಾಯಿ ತಗೊಂಡಿದ್ದೇನೆ.
250
00:23:54,440 --> 00:23:55,680
ದೊಣ್ಣೆ ಮೆಣಸಿನಕಾಯಿ ಇದೆ.
251
00:23:57,160 --> 00:23:58,280
ಕ್ಯಾರೆಟ್ ಇದೆ.
252
00:24:00,040 --> 00:24:01,920
ಬಜ್ಜಿಗೆ ಮೆಣಸಿನಕಾಯಿ ಕೂಡ ಇವೆ.
253
00:24:02,760 --> 00:24:04,600
ಹಾಂ. ಬೀನ್ಸ್ ಸಹ ಇದೆ.
254
00:24:05,400 --> 00:24:06,400
ಸೋರೆಕಾಯಿ...
255
00:24:08,000 --> 00:24:10,040
ಸೋರೆಕಾಯಿ... ಹೇಳಿದ್ಯಾ?
256
00:24:10,720 --> 00:24:12,720
ಹಾಂ, ಹಾಂ. ಇದೆ. ಸೋರೆಕಾಯಿ ಇದೆ.
257
00:24:12,800 --> 00:24:14,200
ಸೋರೆಕಾಯಿ ಕೂಡ ಇದೆ.
258
00:24:14,280 --> 00:24:16,080
ಹಾಂ, ಬೇಗ ಬರ್ತೀನಿ. ಇಡ್ತೀನಿ.
259
00:24:19,840 --> 00:24:21,000
-ಒಂದು ಕೆಲಸ ಮಾಡು.
-ಹಾಂ?
260
00:24:21,600 --> 00:24:24,400
-ಹೋಗಿ ಸೋರೆಕಾಯಿ ತಗೊಂಡು ಬಾ.
-ಸರಿ, ಸರ್.
261
00:24:24,920 --> 00:24:28,160
ಸುರಕ್ಷತೆಗಾಗಿ, ಕೊತ್ತಂಬರಿ ಸೊಪ್ಪು,
ಮೆಣಸಿನಕಾಯಿ ಮತ್ತು ಶುಂಠಿ ಕೂಡ.
262
00:24:28,240 --> 00:24:29,360
-ಸರಿನಾ?
-ಸರಿ, ಸರ್.
263
00:24:29,920 --> 00:24:32,080
ಎರಡೂ ಕಡೆ ಮೇಡಂಗಳೇ ಕಾಯುತ್ತಿದ್ದಾರೆ ನನಗೆ.
264
00:24:33,600 --> 00:24:35,440
-ಹೋಗಿ ಬೇಗ ಬಾ.
-ಹಾಂ, ಸರ್.
265
00:24:41,680 --> 00:24:44,320
ಅಪರಾಧ ಮುಕ್ತ ರಾಜ್ಯಕ್ಕೆ ಇವರೇ ದೊಡ್ಡ ವೈರಿಗಳು.
266
00:24:47,400 --> 00:24:50,840
ಸರ್ಕಾರದ ಸಂಬಳ ಪಡೆದು
ಬಾಹುಬಲಿಗಳಿಗಾಗಿ ಕೆಲಸ ಮಾಡುತ್ತಾರೆ.
267
00:24:52,200 --> 00:24:53,200
ಏನು ಮಾಡೋಣ?
268
00:24:54,160 --> 00:24:57,200
ನಿಮ್ಮಂತಹ ಪ್ರಾಮಾಣಿಕ ಅಧಿಕಾರಿಗಳು ತುಂಬಾ ಕಡಿಮೆ.
269
00:24:58,080 --> 00:24:59,240
ಹಾಂ.
270
00:25:11,120 --> 00:25:12,120
ಮೇಡಂ,
271
00:25:12,680 --> 00:25:15,560
ಗೃಹ ಸಚಿವರ ಒಪ್ಪಿಗೆಯಿಲ್ಲದೆ ಇದು ಸಾಧ್ಯವಿಲ್ಲ.
272
00:25:17,200 --> 00:25:19,040
ಸೋಲಂಕಿ ಅರ್ಥ ಮಾಡಿಕೊಳ್ಳಬೇಕು,
273
00:25:20,640 --> 00:25:23,320
ಅದು ಅವರ ಇಲಾಖೆಯಾಗಿರಬಹುದು,
ಆದರೆ ಇದು ನನ್ನ ಸರ್ಕಾರ.
274
00:25:24,760 --> 00:25:27,200
ಹೌದು, ಆದರೆ ನಾವು ಅವರ ಒಪ್ಪಿಗೆ...
275
00:25:27,280 --> 00:25:29,560
ಆನಂದ್ ಜೀ, ಅಪರಾಧ ಮುಕ್ತ ರಾಜ್ಯ ಬೇಕೆಂದರೆ,
276
00:25:29,640 --> 00:25:32,560
ಬಾಹುಬಲಿಗಳು ಮತ್ತು ಪೊಲೀಸರ
ಸಂಬಂಧವನ್ನು ಮುರಿಯಬೇಕು.
277
00:25:34,160 --> 00:25:36,120
ಈ ವರ್ಗಾವಣೆ ಪಟ್ಟಿಯನ್ನು ಸಿದ್ಧಗೊಳಿಸಿ.
278
00:25:36,200 --> 00:25:37,880
-ಈ ಕೂಡಲೇ.
-ಸರಿ.
279
00:25:52,120 --> 00:25:53,520
ಓ, ಗುಪ್ತಾ,
280
00:25:54,840 --> 00:25:56,200
ಮತ್ತೆ ಹಿಂತಿರುಗಿದ್ದೀರಾ?
281
00:25:57,760 --> 00:26:00,080
-ಸರ್, ಒಂದು ವಾರದಿಂದ ಬರುತ್ತಿದ್ದೇನೆ.
-ಸರ್.
282
00:26:04,000 --> 00:26:05,520
ನನ್ನ ಮಗಳು ಕಾಣೆಯಾಗಿದ್ದಾಳೆ.
283
00:26:06,120 --> 00:26:08,240
ನಿಮ್ಮ ಸ್ಥಳೀಯ ಮಾಹಿತಿದಾರರನ್ನು ಕೇಳಿ.
284
00:26:09,240 --> 00:26:12,560
ಜನರನ್ನು ಕಾಣೆಯಾಗುವಂತೆ ಮಾಡುವುದು ನಿಮ್ಮ ಮಗಳು.
285
00:26:13,560 --> 00:26:15,120
ಅವಳು ಭೂಗತಳಾಗಿ ಹೋಗಿರಬೇಕು.
286
00:26:16,960 --> 00:26:19,960
ಅವಳ ಪ್ರಿಯಕರನನ್ನು ಕೇಳಿ ನೋಡಿ.
287
00:26:22,760 --> 00:26:23,760
ತಪ್ಪು ಹೇಳಿದೆನಾ?
288
00:26:24,800 --> 00:26:27,120
ಸರ್, ನಾನು ಎಫ್ಐಆರ್ ದಾಖಲಿಸಿದ್ದೇನೆ.
289
00:26:28,360 --> 00:26:31,000
-ದಯವಿಟ್ಟು ಆಕೆಯ ಫೋನ್ ಪತ್ತೆ ಮಾಡಿ.
-ನೋಡು, ಗುಪ್ತಾ,
290
00:26:32,680 --> 00:26:36,320
ನಿನಗೆ ಸುಳಿವುಗಳನ್ನು ನೀಡಿ
ನಾನು ಆಯಾಸಗೊಂಡಿದ್ದೇನೆ.
291
00:26:37,080 --> 00:26:38,080
ಈಗ ನನ್ನ ಮಾತು ಕೇಳು.
292
00:26:38,880 --> 00:26:41,720
ನಿನ್ನ ಮಗಳು ಸರ್ಕಾರದ ಶತ್ರು.
293
00:26:43,160 --> 00:26:45,280
ನಿಮ್ಮ ಮಗಳ ಮಾವ ಪೋಲೀಸನ್ನು ಕೊಂದ.
294
00:26:45,840 --> 00:26:49,480
ನೀನ ಎಷ್ಟು ಸಲ ಕೇಳಿದರೂ ಸಹಾಯ ಸಿಗಲ್ಲ.
295
00:26:50,680 --> 00:26:52,720
ಅರ್ಥ ಆಯ್ತಾ? ಹೊರಡಿ.
296
00:26:58,400 --> 00:26:59,480
ಹಲೋ.
297
00:27:02,640 --> 00:27:05,600
ಈ ಮಧ್ಯೆ, ಸಿಎಂ ಮಾಧುರಿ ಕೈಗೊಂಡ ಮಹತ್ವದ ಕ್ರಮ.
298
00:27:05,680 --> 00:27:09,040
ಪೊಲೀಸ್ ಇಲಾಖೆಯಲ್ಲಿ
ದೊಡ್ಡ ಬದಲಾವಣೆಯ ಸುದ್ದಿ ಪಡೆಯುತ್ತಿದ್ದೇವೆ.
299
00:27:09,120 --> 00:27:12,200
ಬಹುತೇಕ ಎಲ್ಲ ಜಿಲ್ಲೆಗಳ
ಎಸ್ಪಿಗಳನ್ನು ಬದಲಾಯಿಸಲಾಗಿದೆ.
300
00:27:12,280 --> 00:27:16,040
ಇದಲ್ಲದೆ, ಸ್ಟೇಷನ್ ಇನ್ ಚಾರ್ಜ್ ಶ್ರೇಣಿಯ
ಸುಮಾರು 150 ಅಧಿಕಾರಿಗಳು,
301
00:27:16,120 --> 00:27:18,160
ಎಸ್ಐ ಶ್ರೇಣಿಯ 200 ಅಧಿಕಾರಿಗಳು,
302
00:27:18,640 --> 00:27:22,120
ಮತ್ತು ಮೀಸಲಾತಿ ಶ್ರೇಣಿಯ ಕಾನ್ಸ್ಟೆಬಲ್ಗಳನ್ನೂ ಸಹ
ವರ್ಗಾವಣೆ ಮಾಡಲಾಗಿದೆ.
303
00:27:22,200 --> 00:27:24,400
ಸಚಿವರು ಕಾರ್ಯನಿರತರಾಗಿದ್ದಾರೆ ಎಂದು ಹೇಳಿದೆ.
304
00:27:24,960 --> 00:27:28,600
ಹೊಸ ಆದೇಶ ಇನ್ನಷ್ಟೇ ಬರಬೇಕಿದೆ.
ನಾನು ನಿಮಗೆ ಕರೆ ಮಾಡಿ ತಿಳಿಸುತ್ತೇನೆ.
305
00:27:28,680 --> 00:27:29,840
ಸ್ವಲ್ಪ ತಾಳ್ಮೆಯಿಂದಿರಿ.
306
00:27:47,480 --> 00:27:48,800
-ಜೈ ಹಿಂದ್, ಸರ್.
-ಜೈ ಹಿಂದ್.
307
00:27:52,920 --> 00:27:54,880
-ಸರ್, ಸಭೆ ಪ್ರಾರಂಭವಾಗಿದೆ.
-ಅದಕ್ಕೆ?
308
00:27:54,960 --> 00:27:57,360
ತಡವಾಗಿ ಬಂದವರನ್ನು ಒಳ ಬಿಡಬಾರದೆಂದು ಮೇಡಂ ಆದೇಶ.
309
00:28:00,360 --> 00:28:02,040
ನಿಮ್ಮ ಮೇಡಮ್ ಆದೇಶ ಹಾಳಾಗಲಿ.
310
00:28:04,640 --> 00:28:08,280
ಕಠಿಣ ಕ್ರಮಗಳಿಲ್ಲದೆ, ಅಪರಾಧ ಮುಕ್ತ ರಾಜ್ಯವನ್ನು
ಸಾಧಿಸುವುದು ಅಸಾಧ್ಯ.
311
00:28:10,480 --> 00:28:13,360
ರಾಜ್ಯದ ಕಾನೂನು ವ್ಯವಸ್ಥೆಯೊಂದಿಗೆ
ಏನು ಆಟವಾಡುತ್ತಿದ್ದೀರಿ?
312
00:28:13,840 --> 00:28:16,560
ನನ್ನ ಒಪ್ಪಿಗೆಯಿಲ್ಲದೆ ನನ್ನ ಸಚಿವಾಲಯದ ಆದೇಶ
ಹೇಗೆ ಕಳಿಸಿದಿರಿ?
313
00:28:18,480 --> 00:28:21,000
ನಿಮಗೆ ಹೀಗೆ ಮಾಡಬೇಕೆಂದಿದ್ದರೆ,
ನಾನು ಯಾಕೆ ಇರಬೇಕು?
314
00:28:21,640 --> 00:28:23,880
ಇರಬೇಕಿಲ್ಲ. ರಾಜೀನಾಮೆ ಕೊಡಿ.
315
00:28:34,160 --> 00:28:38,040
ನೋಡಿ, ಮೇಡಂ, ನೀವು ರಾಜಕೀಯಕ್ಕೆ ಹೊಸಬರು.
316
00:28:39,440 --> 00:28:42,760
ನಾನು ವರ್ಷಗಳ ಕಾಲ
ಚುನಾಯಿತ ಪ್ರತಿನಿಧಿಯಾಗಿದ್ದೇನೆ.
317
00:28:43,680 --> 00:28:47,920
ನಾನು ರಾಜೀನಾಮೆ ಕೊಟ್ಟರೆ,
ಸರ್ಕಾರ ಯಾವುದೇ ಸಮಯದಲ್ಲಿ ಕುಸಿಯುತ್ತದೆ.
318
00:28:49,360 --> 00:28:52,880
ಸೋಲಂಕಿ ಜೀ, ನೀವು ಚುನಾಯಿತ ಪ್ರತಿನಿಧಿ, ಅಲ್ಲವೇ?
319
00:28:53,720 --> 00:28:55,320
ಹಾಗಾದರೆ ಜನರಿಗಾಗಿ ಕೆಲಸ ಮಾಡಿ.
320
00:28:56,040 --> 00:28:59,200
ಜೇಬು ತುಂಬಿಸಲು ಸರ್ಕಾರ ನಡೆಸುವುದರಲ್ಲಿ
ನನಗೆ ಆಸಕ್ತಿ ಇಲ್ಲ.
321
00:29:02,760 --> 00:29:04,440
ನೀವು ಕೂರಬಹುದು ಅಥವಾ ಹೊರಡಬಹುದು.
322
00:29:06,160 --> 00:29:07,160
ಕರೆದುಕೊಂಡು ಹೋಗಿ.
323
00:29:09,320 --> 00:29:10,320
ನಡೀರಿ.
324
00:29:26,600 --> 00:29:27,840
ನಾನೊಂದು ವಿಷಯ ಕೇಳಲೇ?
325
00:29:27,920 --> 00:29:28,920
ನನ್ನನ್ನು ಭಯಪಡಿಸಿದೆ.
326
00:29:30,120 --> 00:29:32,440
ಯಾವಾಗಲಾದರೂ ಶರ್ಟ್
ಮತ್ತು ಪ್ಯಾಂಟ್ ಧರಿಸಿದ್ದೀರಾ?
327
00:29:34,760 --> 00:29:37,280
ಗೋಲುನ ಕೇಳದೆ ಅವಳ ಬಟ್ಟೆ ಹಾಕಿಕೊಂಡಿದ್ದೀಯಾ?
328
00:29:37,360 --> 00:29:38,560
ಅವಳು ವಾಪಸ್ ಬರಲ್ಲ ಬಿಡಿ.
329
00:29:43,560 --> 00:29:45,440
ಗುಡ್ಡು ಬಲಿಯಾಗೆ ಹೋಗಿದ್ದು ನಿನ್ನ ಪುಣ್ಯ.
330
00:29:46,040 --> 00:29:48,080
ಇಲ್ಲದಿದ್ದರೆ ಮಾತು ಕೇಳಿ ಹುಚ್ಚನಾಗುತ್ತಿದ್ದ.
331
00:29:48,160 --> 00:29:49,280
ಅವನನ್ನು ಬಿಡಿ.
332
00:29:49,760 --> 00:29:51,000
ನೀವು ನನಗೆ ಉತ್ತರಿಸಲಿಲ್ಲ.
333
00:29:51,720 --> 00:29:54,840
-ಪ್ರಯತ್ನಿಸಿದ್ದೀರಾ...
-ಮಗುವಿಗೆ ಹಾಲು ಸಿದ್ಧವಾಗಿದೆಯೇ? ಹೋಗು!
334
00:29:56,360 --> 00:29:57,680
"ಪ್ಯಾಂಟ್-ಶರ್ಟ್."
335
00:31:17,000 --> 00:31:19,400
ಬಿಹಾರದಲ್ಲಿ ಇದಕ್ಕಿಂತ ಒಳ್ಳೆ ಚೌ ಮೇನ್ ಸಿಗಲ್ಲ.
336
00:31:23,280 --> 00:31:24,280
ತಗೋ, ಎತ್ತಿಕೋ.
337
00:31:26,560 --> 00:31:28,040
ಕ್ಷಮಿಸು, ಫೋರ್ಕ್ ಸಿಗಲಿಲ್ಲ.
338
00:31:28,800 --> 00:31:30,480
ಕೈಯಿಂದಲೇ ತಿಂದುಬಿಡು.
339
00:31:32,520 --> 00:31:34,040
ನಿನಗೆ ಶಕ್ತಿ ಬೇಕು.
340
00:31:34,120 --> 00:31:35,600
ನೀನು ನನ್ನನ್ನೇಕೆ ಕೊಲ್ಲಲಿಲ್ಲ?
341
00:31:39,480 --> 00:31:42,040
ನಾನೇಕೆ ನಿನ್ನನ್ನು ಕೊಲ್ಲಲಿಲ್ಲ?
342
00:33:03,800 --> 00:33:05,160
ಮಜಾ ಇತ್ತಲ್ವಾ?
343
00:33:28,920 --> 00:33:29,920
ಹಾಂ, ಸಲೋನಿ?
344
00:33:30,000 --> 00:33:32,840
ಹಾಂ. ಊಟಕ್ಕೆ ಮನೆಗೆ ಬರ್ತೀರಾ
ಅಂತ ಅಮ್ಮ ಕೇಳುತ್ತಿದ್ದರು.
345
00:33:32,920 --> 00:33:35,160
ನೀವು ಬ್ಯುಸಿ ಅಂತ ಹೇಳಿದೆ. ಸರಿಯೇ ಅಲ್ವಾ?
346
00:33:35,240 --> 00:33:37,120
ನಾನು ಮನೆಗೆ ಬರುತ್ತೇನೆ.
347
00:33:37,800 --> 00:33:39,800
ನಿಮಗೆ ಅಡುಗೆ ಮಾಡಬೇಕಾ ಬೇಡವಾ?
348
00:33:41,000 --> 00:33:42,760
ಹಾಂ, ಮನೆಗೆ ಬಂದು ಊಟ ಮಾಡುವೆ.
349
00:33:42,840 --> 00:33:44,720
ಹಾಗಿದ್ದರೆ ಒಟ್ಟಿಗೆ ಊಟ ಮಾಡೋಣ.
350
00:33:44,800 --> 00:33:46,080
ಪಕ್ಕಾ ಬರ್ತೀರಿ ತಾನೇ?
351
00:33:46,160 --> 00:33:49,520
ಬರ್ತೀನಿ ಅಂತ ಹೇಳಿದ್ನಲ್ಲ? ಸರಿ, ಇಡ್ತೀನಿ.
352
00:33:49,600 --> 00:33:50,920
ಸರಿ. ಬೈ.
353
00:33:51,000 --> 00:33:52,240
ಅದ್ಭುತ!
354
00:33:56,000 --> 00:33:57,000
ಚೌ ಮೇನ್.
355
00:33:59,240 --> 00:34:00,240
ರುಚಿಕರವಾಗಿದೆ.
356
00:34:02,920 --> 00:34:03,920
ನೀನೂ ತಿನ್ನು.
357
00:34:06,240 --> 00:34:07,640
ಅಥವಾ ನಿನಗೂ ಇಷ್ಟವಿಲ್ಲವೇ?
358
00:34:08,760 --> 00:34:09,760
ಛೋಟೆ ಥರ?
359
00:34:35,560 --> 00:34:36,560
ಮೇಡಂ.
360
00:34:42,160 --> 00:34:47,600
ಯಾಕೆಂದರೆ ನಿಮ್ಮ ಸಿಎಂ ಗಲಭೆಯನ್ನು
ಬಹಳ ಹತ್ತಿರದಿಂದ ನೋಡಿದ್ದಾರೆ.
361
00:34:48,320 --> 00:34:49,320
ನನ್ನ ಮಗಳು,
362
00:34:50,880 --> 00:34:51,880
ಯುಪಿಯ ಮಗಳು,
363
00:34:53,120 --> 00:34:54,160
ಮಾಧುರಿ ಯಾದವ್.
364
00:34:55,160 --> 00:34:57,840
ಹೇಗೆ ವಿಧವೆಯಾದಳು ನಿಮಗೆ ನೆನಪಿದೆ ಅಲ್ವಾ?
365
00:34:59,000 --> 00:35:00,000
ನಿಮಗೆ ನೆನಪಿದೆಯಾ,
366
00:35:02,800 --> 00:35:06,280
ದಿವಂಗತ ರೋಶನ್ ಸಿಂಗ್ ಅವರನ್ನು
ಗುಂಡಿಕ್ಕಿ ಕೊಲ್ಲಲಾಯಿತು?
367
00:35:06,360 --> 00:35:08,600
ಲೋಕ್ ಸ್ವರಾಜ್ ಪಕ್ಷದ ವಿರುದ್ಧ
ವಂಚನೆಯ ಆರೋಪ
368
00:35:08,640 --> 00:35:11,560
ಮಾಧುರಿ ಯಾದವ್ ಅವರ ಮೊದಲ ಪತಿ ಹುತಾತ್ಮನಲ್ಲ.
369
00:35:12,920 --> 00:35:14,480
-ಏನು?
-ಅದು ಆತ್ಮಹತ್ಯೆ.
370
00:35:15,320 --> 00:35:17,640
ಹೇಗೆ ನಡೆಯಿತು? ವಿವರವಾಗಿ ಹೇಳಿ.
371
00:35:19,960 --> 00:35:22,560
ಅವನು ಒಬ್ಬ ದೊಡ್ಡ ಕುಡುಕ. ಕುಡುಕ ನನ್ನ ಮಗ.
372
00:35:23,080 --> 00:35:24,760
ಮತ್ತು ದಿವಂಗತ ಸಿಎಂ
373
00:35:27,040 --> 00:35:31,480
ರಾಜಕೀಯ ಲಾಭಕ್ಕಾಗಿ
ಅವನನ್ನು ಹುತಾತ್ಮ ಎಂದು ಘೋಷಿಸಿದರು.
374
00:35:33,160 --> 00:35:35,800
ಸಹಾನುಭೂತಿ ಮತಗಳೊಂದಿಗೆ
ಹೊಸ ಸರ್ಕಾರವನ್ನು ನಿರ್ಮಿಸಿದರು.
375
00:35:35,880 --> 00:35:37,800
ಈ ಕ್ಲಿಪ್ ಅನ್ನು ಇಲ್ಲಿಗೇ ನಿಲ್ಲಿಸೋಣ
376
00:35:37,880 --> 00:35:41,560
ಏಕೆಂದರೆ ವಿರೋಧ ಪಕ್ಷದ ನಾಯಕ
ಶ್ರೀ ಕುಶ್ವಾಹ ಕರೆಯಲ್ಲಿದ್ದಾರೆ.
377
00:35:42,560 --> 00:35:46,920
ಮತ್ತೆ, ಕುಶ್ವಾಹ ಜೀ, ವಿರೋಧ ಪಕ್ಷದ ನಾಯಕರಾಗಿ,
ನಿಮ್ಮ ಮುಂದಿನ ಹೆಜ್ಜೆ ಏನು?
378
00:35:47,000 --> 00:35:48,000
ಸಿಬಿಐ ವಿಚಾರಣೆ.
379
00:35:48,800 --> 00:35:50,760
ನಿಷ್ಪಕ್ಷಪಾತ ತನಿಖೆಯಾಗಬೇಕು.
380
00:35:50,840 --> 00:35:53,360
ಕುಟುಂಬ ಸದಸ್ಯರ ಸಾವನ್ನೇ
381
00:35:53,440 --> 00:35:56,800
ರಾಜಕೀಯಕ್ಕೆ ಬಳಸಿಕೊಳ್ಳುವವರು ಸಾಮಾನ್ಯ ಜನರಿಗೆ
ಇನ್ನೇನು ಮಾಡಬಹುದು?
382
00:35:56,880 --> 00:35:58,200
ಯೋಚಿಸಿದರೇನೇ ಭಯವಾಗುತ್ತೆ.
383
00:35:58,680 --> 00:36:03,200
ಮಾಧುರಿ ಯಾದವ್ ಜೀ, ಬಿಳಿ ಬಟ್ಟೆ ನಿಮ್ಮ
ಕರಾಳ ವ್ಯಕ್ತಿತ್ವವನ್ನು ಮರೆಮಾಡಲು ಸಾಧ್ಯವಿಲ್ಲ.
384
00:36:03,680 --> 00:36:05,640
ಜನರಿಗೆ ಉತ್ತರ ಬೇಕಿದೆ. ಹೇಳಿ.
385
00:36:14,280 --> 00:36:16,120
ಜರೀನಾಳ ಪ್ರವಾಸ ಹೇಗೆ ನಡೆಯುತ್ತಿದೆ?
386
00:36:18,080 --> 00:36:21,080
ಪಕ್ಷಕ್ಕಾಗಿ ಶ್ರಮಿಸುತ್ತಿದ್ದಾಳೆ
ಅವಳ ಮೇಲೆ ಕಣ್ಣಿಟ್ಟಿದ್ದೇನೆ.
387
00:36:21,680 --> 00:36:24,680
ಅವಳ ನಿಷ್ಠೆಯನ್ನು ಅನುಮಾನಿಸುವಂತಹ
ಯಾವುದೇ ಕೆಲಸ ಮಾಡಿಲ್ಲ.
388
00:36:27,400 --> 00:36:28,400
ಒಳ್ಳೆಯದು.
389
00:36:29,760 --> 00:36:32,080
ಮತ್ತೆ ಅವಳನ್ನು ಕರೆಸಿ.
390
00:36:33,040 --> 00:36:34,520
ಈಗ ಅವಳಿಗೆ ಬಡ್ತಿಯ ಸಮಯ.
391
00:36:36,360 --> 00:36:37,360
ಸರಿ.
392
00:36:44,520 --> 00:36:49,360
ರಾಯ್ಬರೇಲಿ
393
00:36:50,160 --> 00:36:54,320
ಲೋಕ್ ಸ್ವರಾಜ್ ಪಕ್ಷ ಯಾವಾಗಲೂ
ಮಹಿಳಾ ಸಬಲೀಕರಣವನ್ನು ಪ್ರೋತ್ಸಾಹಿಸಿದೆ.
394
00:36:55,520 --> 00:36:57,840
ನನ್ನ ವಿನಂತಿ ಇಷ್ಟೇ,
395
00:36:58,600 --> 00:37:00,880
ಈ ಗ್ರಾಮದ ಎಲ್ಲಾ ಮಹಿಳೆಯರು
396
00:37:00,960 --> 00:37:04,760
ನಮ್ಮ ಕಾರ್ಯಕರ್ತರ ಬಳಿ
ನಿಮ್ಮ ಕಷ್ಟಗಳನ್ನು ಹೇಳಿಕೊಳ್ಳಿ.
397
00:37:05,480 --> 00:37:08,400
ನಾವು ಅವನ್ನು ಒಟ್ಟಿಗೆ ಎದುರಿಸೋಣ.
398
00:37:08,480 --> 00:37:09,920
ಅರೆ, ಜರೀನಾ ಜೀ,
399
00:37:10,680 --> 00:37:13,520
ನನ್ನ ಸಮಸ್ಯೆಯನ್ನು ಯಾರು ಪರಿಹರಿಸುತ್ತಾರೆ?
400
00:37:14,400 --> 00:37:19,480
ನಾನು ಈ ಬಿಸಿಲಲ್ಲಿ
ನಿಮ್ಮ ಪ್ರದರ್ಶನ ನೋಡಲು ಬಂದಿದ್ದೇನೆ.
401
00:37:20,040 --> 00:37:22,440
ಸ್ವಲ್ಪ ಕರುಣೆ ತೋರಿ.
402
00:37:22,520 --> 00:37:23,920
ಅದು ಮಾತಂದ್ರೆ, ಅಂಕಲ್!
403
00:37:24,680 --> 00:37:26,640
ಸ್ವಲ್ಪ ಕುಣಿದು ತೋರಿಸು.
404
00:37:27,880 --> 00:37:30,960
ಮೇಡಂ, ಈಗ ನಮಗೆ ಗೌರವ ಸಿಗುತ್ತದೆ
ಎಂದು ಹೇಳಿದ್ದಿರಿ?
405
00:37:31,560 --> 00:37:33,120
ಕಳ್ಳ ವ್ಯವಹಾರ ಬೇಡ ಅಂತ.
406
00:37:33,160 --> 00:37:35,760
ಭೋಜಪುರಿ ಹಾಡುಗಳಿಗೆ ಕುಣಿಯುವುದು
ಇದಕ್ಕಿಂತ ಎಷ್ಟೋ ಮೇಲು.
407
00:37:36,200 --> 00:37:39,160
ಎರಡು ತಿಂಗಳಿಂದ ಯುಪಿ ಯಾತ್ರೆಯಲ್ಲಿ
ತಿರುಗಾಡುತ್ತಾ, ನನ್ನ ಬಣ್ಣ...
408
00:37:39,640 --> 00:37:43,120
ಜರೀನಾ, ಏನು ನೋಡ್ತಾ ಇದ್ದೀಯಾ?
ನಿನ್ನ ನೃತ್ಯ ನೋಡಬೇಕು ನಾನು.
409
00:37:43,160 --> 00:37:46,160
-ಕುಣಿದು ತೋರಿಸು ನಮಗೆ.
-ನಿಲ್ಲಿಸಿ!
410
00:37:47,440 --> 00:37:49,640
ನಾನು ಖಂಡಿತ ನಿಮಗಾಗಿ ಪ್ರದರ್ಶನ ನೀಡುತ್ತೇನೆ.
411
00:37:51,640 --> 00:37:52,920
ಆದರೆ ಈ ಹಳ್ಳಿಯಿಂದ
412
00:37:53,640 --> 00:37:58,400
ನೂರು ಹೆಂಗಸರು ನನ್ನ ಯೋಜನೆಯನ್ನು
ಸೇರಿಕೊಂಡರೆ ಮಾತ್ರ.
413
00:38:00,000 --> 00:38:01,000
ಹಾಗಾದರೆ ಹೇಳಿ,
414
00:38:02,120 --> 00:38:03,640
ನೀವೇ ನಿರ್ಧರಿಸಿ.
415
00:38:04,520 --> 00:38:06,000
ಮೊದಲು, ನೀವು ಕುಣಿಯಬೇಕು.
416
00:38:06,640 --> 00:38:08,400
ಮೊದಲು, ನೀವು ಕುಣಿಯಬೇಕು.
417
00:38:08,480 --> 00:38:10,800
ನೀವೊಂದು ವಿಚಿತ್ರ ಷರತ್ತು
ವಿಧಿಸಿದ್ದೀರಿ, ಜರೀನಾ.
418
00:38:18,040 --> 00:38:20,960
ಇರು. ನನ್ನ ಹೆಂಡತಿ ಅಷ್ಟೇ ಅಲ್ಲ,
ಬೇರೆಯವರನ್ನೂ ಕರೆತರುವೆ.
419
00:38:26,600 --> 00:38:28,640
ಮಾಧುರಿ ಯಾದವ್
420
00:38:31,400 --> 00:38:33,200
ಲೋ. ಸ್ವ. ಪಾ.
421
00:38:35,640 --> 00:38:36,920
ಇಲ್ಲಿ ಬನ್ನಿ.
422
00:38:38,160 --> 00:38:41,600
ಬೇಗ ಈ ಮಹಿಳೆಯರೆಲ್ಲರ ನೋಂದಣಿ ಮಾಡಿ. ಹೋಗಿ.
423
00:38:41,640 --> 00:38:42,640
ಸರಿ.
424
00:38:43,200 --> 00:38:45,640
-ಹೆಂಗಸರು ಈ ಕಡೆ ಬನ್ನಿ.
-ಕೇಳು. ಹಾಡನ್ನು ಹಾಕು.
425
00:38:45,680 --> 00:38:47,440
-ಗಾಡಿ ರೆಡಿ ಇಡು.
-ಸರಿ.
426
00:38:47,520 --> 00:38:49,680
-ಒಂದೆರಡು ಸ್ಟೆಪ್ ಹಾಕಿ ಹೊರಟುಬಿಡೋಣ.
-ಸರಿ.
427
00:38:49,800 --> 00:38:50,800
-ಸರಿನಾ?
-ಸರಿ.
428
00:38:54,640 --> 00:38:59,520
ಮಹಿಳಾ ಸಬಲೀಕರಣದ ಮುಖ
ಮಾಧುರಿ ಯಾದವ್
429
00:39:02,480 --> 00:39:04,280
ಮಾದಕ ಜರೀನಾ!
430
00:39:05,120 --> 00:39:08,280
ನನ್ನ ಹೃದಯ ಕದಿಯುವೆಯಾ, ಜರೀನಾ?
431
00:39:09,160 --> 00:39:10,200
ಅದ್ಭುತ!
432
00:39:10,920 --> 00:39:15,280
ಯಾಕೆ ನಿನಗಿಷ್ಟು ಚಿಂತೆ, ಪೆದ್ದು?
ಬೆವರು ಹರಿಸಬೇಡ
433
00:39:15,360 --> 00:39:19,000
ನೀನು ಅಲೆಮಾರಿ ಅಂತ ಗೊತ್ತು
ನಿನ್ನ ಮನಸ್ಸು ತುಂಬಾ ಪೋಲಿ
434
00:39:19,080 --> 00:39:23,400
ನನ್ನ ಉಕ್ಕುವ ಸೌಂದರ್ಯದ ಮೇಲೆ
ನಿನ್ನ ದೃಷ್ಟಿ ನೆಟ್ಟಿರುವೆ
435
00:39:23,480 --> 00:39:27,600
ನಿನ್ನ ಮೃದು ಹೃದಯ
ಒಡೆದು ಚೂರಾಗದಿರಲಿ ಅನ್ನುವೆ
436
00:39:27,680 --> 00:39:28,680
ಸಕ್ಕತ್ತಾಗಿದೆ!
437
00:39:28,800 --> 00:39:32,360
ನನ್ನ ಸುತ್ತಲೂ ಬೀಳುತ್ತಾರೆ
ನನ್ನ ಕಾಲಿಗೆ ಬೀಳುತ್ತಾರೆ
438
00:39:32,440 --> 00:39:35,960
ನಾನೇ ಪ್ರತಿ ಪ್ರೇಮಿಯ ಮನದರಸಿ
439
00:39:36,640 --> 00:39:38,600
ಜರೀನಾ! ಜರೀನಾ!
440
00:39:38,640 --> 00:39:40,480
ನಿನ್ನ ಜೀವನ ಕಷ್ಟವಾಗಿಸುತ್ತೇನೆ
441
00:39:40,560 --> 00:39:42,600
ಜರೀನಾ! ಜರೀನಾ!
442
00:39:42,640 --> 00:39:44,760
ಎಲ್ಲರ ಮನಃಶಾಂತಿ ಕದ್ದೊಯ್ಯುತ್ತೇನೆ
443
00:39:44,840 --> 00:39:46,680
ಜರೀನಾ! ಜರೀನಾ!
444
00:39:46,800 --> 00:39:48,840
ನಾನು ಧಗಧಗಿಸುವ ಸುಡು ಬೇಸಿಗೆಯಂತೆ
445
00:39:48,920 --> 00:39:51,160
ಜರೀನಾ! ಜರೀನಾ!
446
00:39:51,280 --> 00:39:53,440
ನಾನು ಯುಪಿಯ ರತ್ನ
447
00:39:54,480 --> 00:39:55,480
ಜರೀನಾ!
448
00:39:57,840 --> 00:40:00,120
-ಸಿಎಂ ಮೇಡಂ ಕರೆ.
-ಹಾಡು ಯಾಕೆ ನಿಲ್ಲಿಸಿದಿರಿ?
449
00:40:00,160 --> 00:40:02,840
-ಸಿಎಂ ಮೇಡಂ ಕರೆ.
-ಏನು? ಹಾಡಿನಲ್ಲಿ ಫೋನ್ ಕರೆಯೇ?
450
00:40:02,920 --> 00:40:04,640
ಜರೀನಾ! ಜರೀನಾ!
451
00:40:04,680 --> 00:40:06,600
-ಜರೀನಾ! ಜರೀನಾ!
-ಹಾಂ, ಮೇಡಂ.
452
00:40:06,640 --> 00:40:07,680
ಜರೀನಾ!
453
00:40:08,160 --> 00:40:10,400
ಮೇಡಂ, ನಾನು ಏನು ಬೇಕಾದರೂ ಮಾಡಲು ಸಿದ್ಧ.
454
00:40:10,480 --> 00:40:12,800
-ನನ್ನನ್ನು ಲಕ್ನೋಗೆ ಕರೆಸಿಕೊಳ್ಳಿ.
-ಜರೀನಾ!
455
00:40:12,880 --> 00:40:14,040
ಜರೀನಾ! ಜರೀನಾ!
456
00:40:25,960 --> 00:40:27,360
ನಿಮ್ಮನ್ನು ನೋಡಿ ಧನ್ಯಳಾದೆ.
457
00:40:29,160 --> 00:40:30,920
ನಾನು ನಿಮ್ಮ ದೊಡ್ಡ ಅಭಿಮಾನಿ.
458
00:40:32,960 --> 00:40:34,640
ನೀವು ನಿಜವಾದ ತಾರೆ, ಜರೀನಾ.
459
00:40:35,920 --> 00:40:37,480
ನನಗಿಂತ ಹೆಚ್ಚು ಅಭಿಮಾನಿಗಳು ನಿಮಗೆ.
460
00:40:38,160 --> 00:40:39,400
ಎಲ್ಲಿ, ಮೇಡಂ.
461
00:40:41,000 --> 00:40:43,040
ಅವರಲ್ಲಿ ನನ್ನ ಚಿಕ್ಕಪ್ಪ ಕೂಡ ಒಬ್ಬರಾಗಿದ್ದರು.
462
00:40:48,040 --> 00:40:49,040
ಅಥವಾ ಈಗಲೂ ಆಗಿದ್ದಾರಾ?
463
00:40:56,280 --> 00:40:58,680
ನಾನು ಅಸಹಾಯಕಳಾಗಿದ್ದೆ.
ನಾನು ಏನು ಮಾಡಬಹುದಿತ್ತು?
464
00:41:02,840 --> 00:41:05,080
ನನ್ನ ತಂದೆ ಹೀಗೆ ಹೇಳುತ್ತಿದ್ದರು.
465
00:41:08,520 --> 00:41:11,080
ಅಸಹಾಯಕರಾಗದ ಹೊರತು
466
00:41:13,280 --> 00:41:14,920
ಬಲಶಾಲಿಗಳಾಗಲು ಸಾಧ್ಯವಿಲ್ಲ.
467
00:41:17,120 --> 00:41:18,480
ನಿಮ್ಮ ತಂದೆ ಹೇಳಿದ್ದು ಸರಿ.
468
00:41:19,680 --> 00:41:24,040
ನಿಮ್ಮ ಬೆಂಬಲದೊಂದಿಗೆ,
ನಾನು ಇನ್ನು ಅಸಹಾಯಕಳಲ್ಲ, ನಾನು ಬಲಶಾಲಿ.
469
00:41:27,640 --> 00:41:31,160
ಈಗ ನಾನು ಆ ಕೆಲಸ ಮಾಡಲ್ಲ, ಮೇಡಂ.
470
00:41:32,040 --> 00:41:33,640
ಚಿಕ್ಕಪ್ಪ ಇನ್ನೂ ಭೂಗತರಾಗಿದ್ದಾರೆ.
471
00:41:34,880 --> 00:41:36,840
ನಾವು ಅವರನ್ನು ಹೊರಗೆ ಸೆಳೆಯಬೇಕು.
472
00:41:41,000 --> 00:41:43,040
ನೀವು ನನ್ನಿಂದ ಏನನ್ನಾದರೂ ಕೇಳಿ,
473
00:41:43,800 --> 00:41:45,280
ಆದರೆ ನಾನು ಇದನ್ನು ಮಾಡಲ್ಲ.
474
00:41:46,880 --> 00:41:49,320
ನಾನು ಏನು ಮಾಡಲಿ, ಜರೀನಾ? ನಾನು ಕೂಡ ಅಸಹಾಯಕಿ.
475
00:42:02,800 --> 00:42:04,840
ನನಗಾಗಿ ಇದನ್ನು ಮಾಡಿದರೆ
476
00:42:05,520 --> 00:42:08,160
ನೀನು ಲಕ್ನೋದಲ್ಲಿ ಶಾಶ್ವತವಾಗಿ ನೆಲೆಸಬಹುದು.
477
00:42:23,800 --> 00:42:28,160
ವಾರಣಾಸಿ
478
00:43:39,760 --> 00:43:41,880
ಕುಳಿತುಕೊಳ್ಳಿ. ಅವರನ್ನು ಕರೆಯುತ್ತೇನೆ.
479
00:43:51,080 --> 00:43:52,400
ಆ ಕಡೆಯಿಂದ ಬನ್ನಿ.
480
00:44:07,040 --> 00:44:08,040
ಕುಳಿತುಕೊಳ್ಳಿ.
481
00:44:09,880 --> 00:44:12,200
ಡೀನ್ ವೀಡಿಯೊ ವಿನಾಶಕಾರಿಯಾಗಿದೆ.
482
00:44:14,080 --> 00:44:16,880
ಶಾಸಕರಲ್ಲಿ ಗದ್ದಲ ಎದ್ದಿದೆ.
483
00:44:17,920 --> 00:44:19,080
ಅದು ಒಳ್ಳೆಯದು.
484
00:44:26,400 --> 00:44:30,240
ಹೇಳಿ, ಮಾದಕ ವಸ್ತುಗಳದ್ದೇನು ಗಲಾಟೆ?
485
00:44:30,320 --> 00:44:33,400
ಏನೂ ಇಲ್ಲ. ಅಫೀಮನ್ನು ವಶಪಡಿಸಿಕೊಳ್ಳಲಾಗಲಿಲ್ಲ
486
00:44:34,280 --> 00:44:37,480
ಏಕೆಂದರೆ ಒಳಗಿನವರು ಮಾಹಿತಿಯನ್ನು
ಸೋರಿಕೆ ಮಾಡಿದ್ದರು.
487
00:44:41,320 --> 00:44:42,320
ತಗೊಳ್ಳಿ.
488
00:44:44,520 --> 00:44:45,840
ನೀವೂ ತಗೊಳ್ಳಿ.
489
00:44:48,640 --> 00:44:52,080
ಬಹುತೇಕ ಶಾಸಕರು ಒಪ್ಪಿದ್ದಾರೆಯೇ?
490
00:44:55,480 --> 00:44:57,600
ಅದನ್ನೇ ಇಲ್ಲಿ ಮಾತನಾಡಲು ಬಂದಿದ್ದೇವೆ, ಸರ್.
491
00:44:58,240 --> 00:44:59,520
ಎಲ್ಲಾ ಸಿದ್ಧಪಡಿಸಿದ್ದೆವು,
492
00:45:00,480 --> 00:45:03,400
ಆದರೆ ಒಂದು ವಾರದಿಂದ
ಅನೇಕ ಶಾಸಕರು ಹಿಂದೇಟು ಹಾಕುತ್ತಿದ್ದಾರೆ.
493
00:45:03,480 --> 00:45:05,400
ಮಾಧುರಿಗೇ ಬೆಂಬಲ ನೀಡುತ್ತಾರೆ.
494
00:45:07,800 --> 00:45:09,120
ವಿರುದ್ಧ ನಿಂತಿರೋದು ಯಾರು?
495
00:45:10,520 --> 00:45:11,600
ಆನಂದ್?
496
00:45:12,200 --> 00:45:14,800
ಇಲ್ಲ, ಅದು ನಿಮ್ಮ ಜರೀನಾ.
497
00:45:25,880 --> 00:45:27,640
ಇವನನ್ನು ನಮಗೆ ಪರಿಚಯಿಸಲಿಲ್ಲ?
498
00:45:28,560 --> 00:45:29,560
ಇವನೇ?
499
00:45:31,560 --> 00:45:32,560
ಇವನು ಗುನ್ಗುನ್.
500
00:45:35,200 --> 00:45:36,840
ಹೊರಗಿನವರಿಗೆ ಮೃದುಲ್.
501
00:45:37,680 --> 00:45:39,040
ಏನು ಮಾಡುತ್ತೀಯ, ಮೃದುಲ್?
502
00:45:41,880 --> 00:45:43,040
ಏನು ಬೇಕಾದರೂ.
503
00:45:48,520 --> 00:45:50,760
ನೋಡು, ನಾನು ಎಲ್ಲರ ಮನವಿಯನ್ನು ಬರೆದಿದ್ದೇನೆ.
504
00:45:50,840 --> 00:45:54,280
ನ್ಯಾಯಾಲಯದಲ್ಲಿ ಸುಳ್ಳು ಹೇಳುವುದು,
ಸತ್ಯ ಮುಚ್ಚಿಡುವುದು ಬೇಡ.
505
00:45:55,040 --> 00:45:57,960
ಯಾರದು... ರಾಕೇಶ್ ತಿವಾರಿದು ಬಾಕಿ ಇದೆ.
506
00:45:58,480 --> 00:46:02,320
ಹಾಗಾಗಿ ಮಕ್ಕಳೇ, ಸೀಮಾಗೆ ಪಾಕೆಟ್ ಮನಿಯಾಗಿ
125 ರೂಪಾಯಿ ಸಿಕ್ಕಿತು. ಸರಿಯಾ?
507
00:46:02,400 --> 00:46:04,960
ಅವಳ ಸಹೋದರಿಗೆ ಅವಳಿಗಿಂತ
52 ರೂಪಾಯಿ ಜಾಸ್ತಿ ಸಿಕ್ಕಿತು.
508
00:46:05,520 --> 00:46:07,880
ಹಾಗಾದರೆ ಅವಳ ತಂಗಿಗೆ
ಒಟ್ಟು ಎಷ್ಟು ಹಣ ಸಿಕ್ಕಿತು?
509
00:46:07,960 --> 00:46:09,040
ಯಾರು ಹೇಳ್ತೀರಿ?
510
00:46:09,760 --> 00:46:11,200
-ನಿಷ್ಠಾ.
-ಹಾಂ, ಮೇಡಂ?
511
00:46:11,800 --> 00:46:12,800
ನಿಷ್ಠಾ, 177 ರೂ.
512
00:46:14,320 --> 00:46:15,960
ನೂರಾ ಎಪ್ಪತ್ತೈದು, ಮೇಡಂ.
513
00:46:17,640 --> 00:46:18,880
ಕುಳಿತುಕೋ.
514
00:46:19,760 --> 00:46:21,760
-ಒಂದು ನೂರಾ...
-ಸ್ವಂತ ಕ್ಲಾಸ್ ನಡೆಸಿ.
515
00:46:21,840 --> 00:46:24,600
-ವಿವರಿಸಲು ಪ್ರಯತ್ನಿಸುತ್ತಿದ್ದೆ...
-ಮುಂದಿನ ಪ್ರಶ್ನೆ.
516
00:46:47,880 --> 00:46:49,880
"ಹೋದವನನ್ನು ಮರೆತುಬಿಡಿ...
517
00:46:50,800 --> 00:46:53,440
ಏನು? "ಹೋದವನನ್ನು ಮರೆತುಬಿಡಿ
518
00:46:53,520 --> 00:46:55,360
-"ಅದುವೇ ಜೀವನದ ಸ್ವಾದ...
-ವಾಹ್!
519
00:46:56,160 --> 00:46:57,960
"ಮತ್ತು ನೀವು ಮರೆಯಲು ಸಾಧ್ಯವಾಗದಿದ್ದರೆ
520
00:46:58,960 --> 00:47:00,400
"ಕೆಲವು ಕವನಗಳನ್ನು ಗೀಚಿ"
521
00:47:00,480 --> 00:47:02,720
ಅದ್ಭುತ! ವಾಹ್!
522
00:47:02,800 --> 00:47:04,560
-ಇದು ಸತ್ಯ.
-ಎಂತಹ ಕವನ.
523
00:47:05,680 --> 00:47:06,840
ಈಗ ನಿಮ್ಮ ಸರತಿ.
524
00:47:07,600 --> 00:47:10,920
ಇಪ್ಪತ್ತಾರು ಜನ ಬಂದಿದ್ದಾರೆ,
ಕುಟುಂಬಗಳು ಮತ್ತು ಸ್ನೇಹಿತರು.
525
00:47:11,960 --> 00:47:15,120
ಈ ತಂದೆ-ಮಗಳ ಜೋಡಿ ಯಾವಾಗಲೂ ಸಮಾಜ ಸೇವಕರೇ,
ಈಗ ನೀನೂ ಹಾಗೆಯೇ.
526
00:47:15,200 --> 00:47:16,880
ಇದಕ್ಕಾಗಿ ಎಷ್ಟು ಖರ್ಚು ಮಾಡಿದೆ?
527
00:47:16,960 --> 00:47:20,080
-ಅಮ್ಮ...
-ಏನೀಗ? ನಾನು ಕೇಳಬಹುದು, ಅಲ್ಲವೇ?
528
00:47:20,160 --> 00:47:22,600
ಇಲ್ಲಮ್ಮ, ಚಿಂತಿಸಬೇಡಿ. ನಾವು ನೋಡಿಕೊಂಡೆವು.
529
00:47:22,680 --> 00:47:25,440
ಬಸ್ ಮಾಲೀಕ ಹಳೆಯ ಪರಿಚಯಸ್ಥ.
530
00:47:25,520 --> 00:47:26,520
ಹಾಗೋ.
531
00:47:26,600 --> 00:47:28,040
ಹಾಗಾಗಿ ಒಳ್ಳೆ ಡೀಲ್ ಸಿಕ್ಕಿತು.
532
00:47:34,440 --> 00:47:35,880
ಒಂದು ನಿಮಿಷ.
533
00:47:35,960 --> 00:47:37,680
-ಕೇಳಿ ಬರ್ತೇನೆ.
-ಹಾಂ, ಸರಿ.
534
00:47:37,760 --> 00:47:38,840
ಮೇಡಂ.
535
00:47:39,840 --> 00:47:41,560
ಜೈಲರ್ ಸರ್, ಹೇಗಿದ್ದೀರಿ?
536
00:47:41,640 --> 00:47:43,440
ಹೇ, ರಾಬಿನ್. ಹೇಗಿದ್ದೀರಿ?
537
00:47:43,520 --> 00:47:44,800
ನಾನು ಚೆನ್ನಾಗಿದ್ದೇನೆ.
538
00:47:45,320 --> 00:47:46,440
ಎಷ್ಟು ಸಮಯ ಆಗುತ್ತದೆ?
539
00:47:46,520 --> 00:47:49,160
ನೀವು ಸ್ವಲ್ಪ ಸಮಯ ಕಾಯಬೇಕಾಗುತ್ತದೆ.
540
00:47:49,240 --> 00:47:52,200
ದಾಖಲೆಗಳು ಬಾಕಿಯಿದೆಯೇ? ನಾನು ಬಗೆಹರಿಸುತ್ತೇನೆ.
541
00:47:52,280 --> 00:47:54,440
ಹೇ, ಇಲ್ಲ, ಇಲ್ಲ. ಇದು ನಿಮ್ಮ ತಪ್ಪಲ್ಲ.
542
00:47:55,280 --> 00:47:58,040
ಅದು ನಾವು ನಿರ್ಮಿಸಿದ ಕೀರ್ತಿ.
543
00:47:59,560 --> 00:48:02,960
ಏನೆಂದರೆ, ಜೈಲಿನೊಳಗೆ ಆಚರಿಸುತ್ತಿದ್ದಾರೆ.
544
00:48:03,040 --> 00:48:05,320
ಇಂದು ಅನೇಕ ಕೈದಿಗಳನ್ನು
ಬಿಡುಗಡೆ ಮಾಡಲಾಗುತ್ತಿದೆ.
545
00:48:05,400 --> 00:48:07,040
ಆದ್ದರಿಂದ, ಒಂದು ಸಣ್ಣ ಪಾರ್ಟಿ.
546
00:48:07,120 --> 00:48:08,120
ಸರಿ.
547
00:48:08,200 --> 00:48:11,720
ದಯಮಾಡಿ ಕಾಯಿರಿ. ಅದು ಮುಗಿದ ತಕ್ಷಣ
ಅವರು ಹೊರಗೆ ಬರುತ್ತಾರೆ.
548
00:48:12,680 --> 00:48:14,400
ಇದೂ ಸರಿಯೇ ಬಿಡಿ.
549
00:48:15,880 --> 00:48:17,120
ನಾನು ಕಾಯುತ್ತೇನೆ.
550
00:48:17,200 --> 00:48:20,760
ನನ್ನ ಸುತ್ತಲೂ ಬೀಳುತ್ತಾರೆ
ನನ್ನ ಕಾಲಿಗೆ ಬೀಳುತ್ತಾರೆ
551
00:48:20,840 --> 00:48:24,560
ನಾನೇ ಪ್ರತಿ ಪ್ರೇಮಿಯ ಮನದರಸಿ
552
00:48:25,120 --> 00:48:27,160
ಜರೀನಾ! ಜರೀನಾ!
553
00:48:27,240 --> 00:48:29,200
ನಿನ್ನ ಜೀವನ ಕಷ್ಟವಾಗಿಸುತ್ತೇನೆ
554
00:48:29,280 --> 00:48:31,160
ಜರೀನಾ! ಜರೀನಾ!
555
00:48:31,240 --> 00:48:33,440
ಎಲ್ಲರ ಮನಃಶಾಂತಿ ಕದ್ದೊಯ್ಯುತ್ತೇನೆ
556
00:48:33,520 --> 00:48:35,440
ಜರೀನಾ! ಜರೀನಾ!
557
00:48:35,520 --> 00:48:37,480
ನಾನು ಧಗಧಗಿಸುವ ಸುಡು ಬೇಸಿಗೆಯಂತೆ
558
00:48:37,560 --> 00:48:39,720
ಜರೀನಾ! ಜರೀನಾ!
559
00:48:39,800 --> 00:48:41,960
ನಾನು ಯುಪಿಯ ರತ್ನ
560
00:48:46,120 --> 00:48:47,680
-ವಾಹ್!
-ಅದ್ಭುತ!
561
00:48:47,760 --> 00:48:49,120
ಒಳ್ಳೆ ಪ್ರದರ್ಶನ.
562
00:48:50,200 --> 00:48:52,280
ಚೆನ್ನಾಗಿ ನರ್ತಿಸಿದೆ. ಅದ್ಭುತ.
563
00:48:57,000 --> 00:48:59,680
ನಾವು ಜಯಿಸುತ್ತೇವೆ
564
00:48:59,760 --> 00:49:04,920
ನಾವು ಒಂದು ದಿನ ಜಯಿಸುತ್ತೇವೆ!
565
00:49:06,160 --> 00:49:09,960
ನನ್ನ ಹೃದಯದಲ್ಲಿ ಆಳವಾಗಿ
566
00:49:10,040 --> 00:49:12,880
ನಾನು ನಂಬುತ್ತೇನೆ
567
00:49:12,960 --> 00:49:17,000
ನಾವು ಒಂದು ದಿನ ಜಯಿಸುತ್ತೇವೆ
568
00:49:35,920 --> 00:49:39,000
ಶೀರ್ಷಿಕೆ, "ನಾವು ಸ್ವತಂತ್ರರು, ಹೇಳ್ಕೊಳ್ಳೋಕೆ."
569
00:49:40,920 --> 00:49:46,080
"ಹೇಳ್ಕೊಳ್ಳೋಕೆ ಸ್ವತಂತ್ರರು ಆದರೆ
ತಮ್ಮ ಕಾಮನೆಗಳ ಸೆರೆವಾಸಿಗಳು
570
00:49:47,400 --> 00:49:49,880
"ನಾನು ಮಾತ್ರ ಸೆರೆವಾಸಿ ಎಂದು ನೀವು ಅಂದುಕೊಂಡರೆ
571
00:49:50,480 --> 00:49:52,840
"ತಿಳಿಯಿರಿ ನೀವೊಬ್ಬ ಮಹಾ ಮೂರ್ಖ
572
00:49:55,120 --> 00:49:56,840
"ನೀವೊಬ್ಬ ಮಹಾ ಮೂರ್ಖ
573
00:49:56,920 --> 00:50:01,440
"ಸೆರೆಯಲ್ಲಿದ್ದರೂ
ನಾನು ಕಾಮನೆಗಳ ಹೊರೆಯಿಂದ ಮುಕ್ತ..."
574
00:50:01,520 --> 00:50:03,760
ವಾಹ್!
575
00:50:03,840 --> 00:50:05,720
"ಹಾಗಾಗಿ, ಇಂದು ಮುಕ್ತವಾಗಿ ನಡೆಯುವವರು
576
00:50:05,800 --> 00:50:10,000
"ನೀವು ಈ ಸೆರೆಯನ್ನು ಬಿಡಬಹುದು
ಆದರೆ ನೆನಪಿಡಿ, ನೀವು ಇನ್ನೂ ಸೆರೆಯಲ್ಲಿರುತ್ತೀರಿ
577
00:50:11,560 --> 00:50:15,320
"ಇಲ್ಲಿ, ಸೆರೆಯಲ್ಲಿದ್ದರೂ
ಪ್ರಪಂಚದ ಅಸಂಬದ್ಧತೆಗಳಿಂದ ಮುಕ್ತರಾಗಿದ್ದೀರಿ
578
00:50:15,400 --> 00:50:19,520
"ಹೊರಗೆ, ನೀವು ಮುಕ್ತರಾಗಿರುತ್ತೀರಿ
ಆದರೆ ಅಸಂಬದ್ಧತೆಗಳು ಮುಂದುವರೆಯುತ್ತವೆ..."
579
00:50:24,560 --> 00:50:26,160
"ನಾನು ಪ್ರಾರ್ಥಿಸುವೆ...
580
00:50:27,640 --> 00:50:29,520
"ಮತ್ತೆ ಭೇಟಿಯಾಗಬಾರದು ಅಂತ ಪ್ರಾರ್ಥಿಸುವೆ
581
00:50:30,160 --> 00:50:31,760
"ನೀವು ನನ್ನ ಇಲ್ಲಿ ಭೇಟಿಯಾಗಬಾರದು
582
00:50:32,720 --> 00:50:34,120
"ನಾನೂ ನಿಮ್ಮನ್ನ ಭೇಟಿಯಾಗಲ್ಲ"
583
00:50:34,200 --> 00:50:36,080
ವಾಹ್!
584
00:50:36,160 --> 00:50:37,840
-ವಾಹ್, ರಹೀಮ್!
-ಅದ್ಭುತ!
585
00:50:37,920 --> 00:50:39,440
-ಅದ್ಭುತ!
-ಶಭಾಷ್!
586
00:50:39,520 --> 00:50:41,440
-ಶಭಾಷ್, ರಹೀಮ್!
-ವಾಹ್! ಅದ್ಭುತ!
587
00:50:47,080 --> 00:50:49,240
ವಾಹ್! ಅದ್ಭುತವಾಗಿತ್ತು.
588
00:50:56,720 --> 00:50:57,720
ಮಹೋನ್ನತ.
589
00:50:59,480 --> 00:51:03,400
ಹೀಗೇ ಬರೆಯುತ್ತಿರಿ.
ಒಂದು ದಿನ, ನೀವು ಹೆಸರಾಂತ ಕವಿಯಾಗುತ್ತೀರಿ.
590
00:51:03,880 --> 00:51:04,880
ಪರವಾಗಿಲ್ಲ.
591
00:51:36,160 --> 00:51:38,120
-ಮಂಡಿಯೂರು!
-ಕೈಗಳು ಮೇಲಕ್ಕೆತ್ತು!
592
00:51:39,800 --> 00:51:41,760
ಆಂಬುಲೆನ್ಸ್! ಆಂಬುಲೆನ್ಸ್ ಕರೆಸಿ!
593
00:51:43,880 --> 00:51:45,920
ಬರ್ತಿರ್ತಾರೆ. ಸಂಭ್ರಮದ ನಂತರ...
594
00:51:46,000 --> 00:51:48,440
ರಹೀಮ್ ರೌಫ್ ಲಾಲಾನ ಕೊಂದ. ಬಾಗಿಲು ಹಾಕಿ. ಬೇಗ!
595
00:51:48,520 --> 00:51:50,480
-ಬಾಗಿಲು ಹಾಕಿ!
-ಏನು...
596
00:51:52,440 --> 00:51:54,600
ನೋಡಿ, ಸರ್, ಏನಾಗಿದೆ.
597
00:51:55,240 --> 00:51:56,600
ಹಿಂದಕ್ಕೆ ಹೋಗಿ!
598
00:51:56,680 --> 00:51:58,800
ಒಂದು ನಿಮಿಷನಪ್ಪಾ. ದಾರಿ ಬಿಡಿ.
599
00:51:58,880 --> 00:52:00,200
ಸರ್, ಶಾಂತವಾಗಿರಿ.
600
00:52:00,280 --> 00:52:01,680
-ಈ ಕಡೆ.
-ಎಲ್ಲರೂ ಶಾಂತರಾಗಿ.
601
00:52:26,720 --> 00:52:29,400
ಮಿರ್ಜಾಪುರ್
602
00:54:22,320 --> 00:54:24,320
ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ
603
00:54:24,400 --> 00:54:26,400
ಸೃಜನಶೀಲ ಮೇಲ್ವಿಚಾರಕರು
ಸುಬ್ಬಯ್ಯ ಕೆ.ಜಿ.