1 00:00:26,000 --> 00:00:28,560 ನೋಡಿ, ನೀವೆಲ್ಲರೂ ಸಹಕರಿಸಬೇಕು. 2 00:00:29,160 --> 00:00:31,080 ನಿಮ್ಮ ಸಂಬಳದ ವ್ಯವಸ್ಥೆ ಮಾಡುತ್ತೇನೆ. 3 00:00:31,920 --> 00:00:35,760 ಭಯ್ಯಾ, ಕನಿಷ್ಠ ಇವರ ದಿನಗೂಲಿಯನ್ನು ಪಾವತಿಸಿ. 4 00:00:36,200 --> 00:00:38,200 ಇಲ್ಲಾ ಅವರು ಬೇರೆಡೆ ಕೆಲಸ ಹುಡುಕುತ್ತಾರೆ. 5 00:00:48,360 --> 00:00:51,320 ಪರವಾಗಿಲ್ಲ, ಭಯ್ಯಾ. ಎಲ್ಲಾ ಚೆನ್ನಾಗಿದೆ. 6 00:00:51,960 --> 00:00:53,680 ಇದು ಕೇವಲ ಸಲಹೆಯಾಗಿತ್ತು. 7 00:00:54,960 --> 00:00:56,560 ಪರವಾಗಿಲ್ಲ. ಎಲ್ಲಾ ಚೆನ್ನಾಗಿದೆ. 8 00:00:56,640 --> 00:00:58,280 ದಯವಿಟ್ಟು ಹೊರಡಿ. ಹೋಗಿ. 9 00:00:58,360 --> 00:00:59,840 ಈ ಕಡೆಯಿಂದ ಹೊರಗೆ ಹೋಗೋಣ. 10 00:01:03,000 --> 00:01:04,840 -ನಮಸ್ತೆ, ಅಕ್ಕ. -ಅಕ್ಕ, ನಮಸ್ತೆ. 11 00:01:08,840 --> 00:01:09,680 ಅಕ್ಕ... 12 00:02:19,040 --> 00:02:20,920 ನೀವು ಇಲ್ಲದಿದ್ದಾಗ ತುಂಬಾನೇ ನಡೆಯಿತು. 13 00:02:21,040 --> 00:02:22,040 ಗುಡ್ಡು. 14 00:02:22,760 --> 00:02:25,440 ಗುಡ್ಡು ಭಯ್ಯಾ ಕೂಡ ಜೈಲಿನಲ್ಲಿದ್ದಾರೆ. 15 00:02:26,600 --> 00:02:29,160 ಮತ್ತು ರಾಬಿನ್ ಭಯ್ಯಾ ಸತ್ತಿದ್ದಾರೆ. 16 00:02:30,960 --> 00:02:33,400 ನಿಮ್ಮ ತಂದೆಯೂ ತೀರಿಕೊಂಡರು. 17 00:02:33,440 --> 00:02:38,120 ಮಗಳ ಸಾವಿನ ಕಾರಣದಿಂದ ಪೊಲೀಸ್ ಅಧಿಕಾರಿಯ ಆತ್ಮಹತ್ಯೆ 18 00:03:01,440 --> 00:03:03,120 ನಾನು ಗಜಗಾಮಿನಿ, ಸತ್ಯ. 19 00:03:04,960 --> 00:03:05,920 ನಿಜವಾಗಿಯೂ? 20 00:03:07,280 --> 00:03:08,760 ನೀನು ಸತ್ತಿರಲಿಲ್ಲವೇ? 21 00:03:08,840 --> 00:03:09,840 ನಾನು ಬದುಕಿದ್ದೀನಿ. 22 00:03:10,360 --> 00:03:11,520 ವಿಷಯಕ್ಕೆ ಬರೋಣ. 23 00:03:12,160 --> 00:03:14,440 ಸರಿ. ಹೇಳು. 24 00:03:14,520 --> 00:03:16,520 ಜೆಪಿ ಯಾದವ್ ಜೊತೆ ಮೀಟಿಂಗ್ ಏರ್ಪಡಿಸು. 25 00:03:17,560 --> 00:03:18,560 ಹಣ ಸಿದ್ಧವಾಗಿದೆ. 26 00:03:20,800 --> 00:03:23,920 ನನಗೆ ಪುರಾವೆ ಬೇಕು. ಮಾತನ್ನಷ್ಟೇ ಯಾರೂ ನಂಬಲ್ಲ. 27 00:03:25,160 --> 00:03:27,960 ನಾನು ಸತ್ತಿದ್ದೇನೆ ಎಂದು ನಂಬಲು ನಿನಗೆ ಪುರಾವೆ ಬೇಕಿರಲಿಲ್ಲ. 28 00:03:28,040 --> 00:03:29,520 ಆದರೆ ಹಣಕ್ಕೆ ಪುರಾವೆ ಬೇಕೇ? 29 00:03:31,360 --> 00:03:32,520 ನಾನು ಮತ್ತೆ ಕೇಳುವುದಿಲ್ಲ. 30 00:03:32,600 --> 00:03:35,280 ಅಯ್ಯೋ, ಅಸಮಾಧಾನಗೊಳ್ಳಬೇಡ. 31 00:03:35,360 --> 00:03:38,200 ಸರಿ, ನಾನು ಭೇಟಿ ನಿಗದಿಪಡಿಸುತ್ತೇನೆ. 32 00:03:39,640 --> 00:03:41,720 ಮಿರ್ಜಾಪುರ್ 33 00:04:21,320 --> 00:04:23,120 ಪೂರ್ವಾಂಚಲ್ 34 00:04:36,160 --> 00:04:38,240 ಹಾರ, ಹಾರ, ಹಾರ! 35 00:04:38,360 --> 00:04:40,360 ವಾರಣಾಸಿ 36 00:04:40,480 --> 00:04:43,680 ಗುಲಾಬಿ ಹಾರ ತಗೊಳ್ಳಿ! ಹಾರ! ತಾಜಾ ಮತ್ತು ಸುವಾಸನೆಭರಿತ! 37 00:04:44,240 --> 00:04:46,760 ಬನ್ನಿ, ಸರ್, ಬನ್ನಿ! ಹಾರ ತಗೊಳ್ಳಿ! 38 00:04:47,440 --> 00:04:49,080 ಹಾರ, ಹಾರ! 39 00:04:50,240 --> 00:04:52,920 ಅದು ಜರೀನಾ, ತಾನೇ? ಅವಳೇ ಅನ್ಸುತ್ತೆ. 40 00:04:53,040 --> 00:04:54,240 ಇಲ್ಲೇನು ಮಾಡ್ತಿದ್ದಾಳೆ? 41 00:05:19,800 --> 00:05:20,800 ಕುಳಿತುಕೊಳ್ಳಿ. 42 00:05:49,760 --> 00:05:51,240 ಹೇಗಿದ್ದೀರಾ, ಜರೀನಾ ಜೀ? 43 00:05:58,040 --> 00:05:59,080 ಚಿಂತಿಸಬೇಡಿ. 44 00:06:01,600 --> 00:06:03,600 ನಾನು ಈಗ ಆಧ್ಯಾತ್ಮಿಕ ವ್ಯಕ್ತಿ. 45 00:06:04,560 --> 00:06:08,560 ಇಲ್ಲಿಗೆ ಬಂದ ನಂತರ ನನಗೆ ಶಾಂತಿ ಸಿಕ್ಕಿತು. 46 00:06:09,400 --> 00:06:13,640 ಎಲ್ಲಾ ದ್ವೇಷ ಮತ್ತು ಪಿತೂರಿಗಳನ್ನು ಮೀರಿ ಮೇಲೆ ಏರಿದ್ದೇನೆ. 47 00:06:16,560 --> 00:06:18,520 ನಿಮಗೆ ಈ ಜನ್ಮದಲ್ಲಿ ಶಾಂತಿ ಸಿಗಲ್ಲ. 48 00:06:25,760 --> 00:06:29,680 ನೀವು ಮಾಧುರಿಯ ಸರ್ಕಾರವನ್ನು ಆದಷ್ಟು ಬೇಗ ಉರುಳಿಸಲು ಬಯಸುತ್ತೀರಿ. 49 00:06:31,240 --> 00:06:33,320 ಇಲ್ಲಾಂದ್ರೆ ನನ್ನನ್ನೇಕೆ ಕರೆಸುತ್ತಿದ್ದಿರಿ? 50 00:06:37,560 --> 00:06:40,960 ಜರೀನಾ, ನೀವು ಅಗತ್ಯಕ್ಕಿಂತ ಹೆಚ್ಚು ಸಲುಗೆ ವಹಿಸುತ್ತಿದ್ದೀರಲ್ವಾ? 51 00:06:43,320 --> 00:06:44,320 ನೋಡಿ, 52 00:06:45,800 --> 00:06:48,080 ಹಳೆಯ ಜೆಪಿ ಇನ್ನೂ ನನ್ನೊಳಗೆ ಇದ್ದಾನೆ. 53 00:06:49,920 --> 00:06:53,240 ನಿಮ್ಮನ್ನು ನೋಡಿ ಹೊರಗೆ ಬರೋಕೆ ಚಡಪಡಿಸುತ್ತಿದ್ದಾನೆ. 54 00:06:53,760 --> 00:06:57,080 ನೀವು ತಪ್ಪು ತಿಳಿದುಕೊಂಡಿರಿ, ಯಾದವ್ ಜೀ. 55 00:06:57,160 --> 00:07:01,080 ನೇರವಾಗಿ ವಿಷಯಕ್ಕೆ ಬರಲು ನಾನು ನಿಮ್ಮನ್ನು ಕೇಳುತ್ತಿದ್ದೆ. 56 00:07:01,880 --> 00:07:02,880 ವಿಷಯಕ್ಕೆ? 57 00:07:09,680 --> 00:07:10,680 ಸರಿ ಹಾಗಾದರೆ. 58 00:07:12,800 --> 00:07:13,800 ಎಷ್ಟು ಬೇಕು ನಿನಗೆ? 59 00:07:20,080 --> 00:07:22,320 ಮಾಧುರಿ ಮತ್ತು ಅವಳ ಸರ್ಕಾರ ನಾಶವಾಗಬೇಕು. 60 00:07:24,400 --> 00:07:26,640 ಈಗಲೂ ಮಾರಿಕೊಳ್ಳುತ್ತೇನೆ ಅಂತ ಯಾಕೆ ಅನಿಸುತ್ತೆ? 61 00:07:28,400 --> 00:07:29,640 ಅದೂ ನಿಮಗೆ? 62 00:07:32,040 --> 00:07:33,200 ನೋಡು, ಜರೀನಾ, 63 00:07:34,760 --> 00:07:38,480 ಹಳೆಯ ಅಭ್ಯಾಸಗಳು ಬಿಡಲ್ಲ, ಹುಟ್ಟು ಗುಣ ಸುಟ್ಟರೂ ಹೋಗಲ್ಲ. 64 00:07:39,400 --> 00:07:44,080 ಈಗಲೂ ಕೂಡ ನೀನು ಹೆಚ್ಚು ಹಣ ಕೊಡುವವರ ಹಿಂದೆಯೇ ಹೋಗ್ತೀಯ. 65 00:07:48,720 --> 00:07:49,960 ಏನು ಯೋಚಿಸುತ್ತಿರುವೆ? 66 00:07:54,000 --> 00:07:55,040 ಸರಿ, 67 00:07:57,360 --> 00:07:59,520 ನೀವು ಒತ್ತಾಯಿಸುತ್ತಿರುವುದರಿಂದ, 68 00:08:01,400 --> 00:08:03,480 ಸರ್ಕಾರವನ್ನು ಉರುಳಿಸುವ ಜವಾಬ್ದಾರಿ ನನ್ನದು. 69 00:08:06,120 --> 00:08:07,480 ಆದರೆ ನೋಡಿ, ಯಾದವ್ ಜೀ, 70 00:08:08,320 --> 00:08:10,400 ನಾನು ಈಗ ನನಗಾಗಿ ಮಾತ್ರ ಕೆಲಸ ಮಾಡುವುದು. 71 00:08:13,440 --> 00:08:14,920 ಹಾಗಾಗಿ ಮುಂದಿನ ಸಿಎಂ ನಾನಾಗಬೇಕು. 72 00:08:17,560 --> 00:08:18,640 ಕುಶ್ವಾಹಾ ಅಲ್ಲ. 73 00:08:24,760 --> 00:08:26,480 ಊರು ಕೊಳ್ಳೋಕೂ ಮುಂಚೆ 74 00:08:28,000 --> 00:08:30,680 ಗಾಳಿಯಲ್ಲಿ ಗೋಪುರ ಕಟ್ಟಬೇಡ. 75 00:08:34,120 --> 00:08:35,240 ಸದ್ಯಕ್ಕೆ ಎಲ್ಲಾ ಬಿಚ್ಚು. 76 00:08:38,400 --> 00:08:40,280 ಇವತ್ತು ರಾತ್ರಿ, ನಾನು ಏನು ಹೇಳ್ತೀನೋ 77 00:08:42,400 --> 00:08:43,680 ಅದನ್ನು ನೀನು ಮಾಡಬೇಕು. 78 00:08:46,600 --> 00:08:48,200 ನಿನಗೆ ಹಣ ಬೇಕಿತ್ತಲ್ಲವೇ? 79 00:08:50,160 --> 00:08:51,240 ಪೂರ್ತಿ ಇತ್ತಾ? 80 00:08:56,200 --> 00:08:59,880 ಹಾಂ, ಪೂರ್ತಿ ಹಣ ಇತ್ತು, 81 00:09:01,040 --> 00:09:03,360 ಹಾಗಾಗಿ ನಿಮಗೆ ಮಜಾ ಕೂಡ ಪೂರ್ತಿಯಾಗಿಯೇ ಸಿಗಬೇಕು. 82 00:10:07,880 --> 00:10:09,760 ಸೂರ್ಯನು ದಿಗಂತದಲ್ಲಿ ಬೆಳಗುವವರೆಗೆ... 83 00:10:09,880 --> 00:10:11,880 ಮಾಧುರಿ ಯಾದವ್ ಮಿಂಚಲಿದ್ದಾರೆ! 84 00:10:11,960 --> 00:10:13,880 ಸೂರ್ಯನು ದಿಗಂತದಲ್ಲಿ ಬೆಳಗುವವರೆಗೆ... 85 00:10:14,000 --> 00:10:15,880 ಮಾಧುರಿ ಯಾದವ್ ಮಿಂಚಲಿದ್ದಾರೆ! 86 00:10:16,000 --> 00:10:18,000 ಸೂರ್ಯನು ದಿಗಂತದಲ್ಲಿ ಬೆಳಗುವವರೆಗೆ... 87 00:10:18,080 --> 00:10:20,520 ಮಾಧುರಿ ಯಾದವ್ ಮಿಂಚಲಿದ್ದಾರೆ! 88 00:10:21,320 --> 00:10:22,400 ಯು.ಪಿ. ಸರ್ಕಾರ 89 00:10:22,480 --> 00:10:25,760 ಇಂದು ನಾನು ನನ್ನ ಪರಿವಾರಕ್ಕೆ ಒಂದು ಕಥೆಯನ್ನು ಹೇಳಬೇಕು. 90 00:10:25,840 --> 00:10:27,360 ಯು.ಪಿ. ಸರ್ಕಾರದ ಹೊಸ ಗುರುತು 91 00:10:27,440 --> 00:10:29,000 ಅನೇಕ ವರ್ಷಗಳ ಹಿಂದೆ, 92 00:10:30,520 --> 00:10:33,120 ಈ ರಾಜ್ಯದ ಒಂದು ಸಣ್ಣ ಹಳ್ಳಿಯಲ್ಲಿ 93 00:10:33,880 --> 00:10:36,760 ಜನಸಂಖ್ಯೆಯ 90% ಕ್ಕಿಂತ ಹೆಚ್ಚು ಜನ 94 00:10:36,880 --> 00:10:39,080 ಮೂಲಭೂತ ಶಿಕ್ಷಣದಿಂದ ವಂಚಿತರಾಗಿದ್ದರು, 95 00:10:40,000 --> 00:10:41,160 ಆ ಹಳ್ಳಿಯಿಂದ... 96 00:10:41,240 --> 00:10:42,160 ಲೋ. ಸ್ವ. ಪ. 97 00:10:42,240 --> 00:10:45,320 ...ಒಬ್ಬ ದಿನಗೂಲಿ ಕೆಲಸಗಾರನ ಹಿರಿಯ ಮಗ ಮಾತ್ರ 98 00:10:46,520 --> 00:10:51,640 ಪ್ರತಿದಿನ ಶಾಲೆಗೆ 20 ಕಿಲೋಮೀಟರ್ ನಡೆದು ಹೋಗುತ್ತಿದ್ದ. 99 00:10:53,000 --> 00:10:54,520 ನೋಡ್ತಾ ನೋಡ್ತಾನೇ, 100 00:10:55,960 --> 00:10:58,080 ಇಪ್ಪತ್ತು ವರ್ಷಗಳು ಕಳೆದವು. 101 00:10:58,160 --> 00:11:01,200 ಹಳ್ಳಿಯಲ್ಲಿ ಮಾವಿನ ಉತ್ಪಾದನೆ ಕಡಿಮೆಯಾಯಿತು. 102 00:11:01,280 --> 00:11:03,520 ಮಾವಿನ ತೋಟಗಳು ನಶಿಸತೊಡಗಿದವು. 103 00:11:04,400 --> 00:11:07,000 ಎಲ್ಲರೂ ಗೊಂದಲಕ್ಕೊಳಗಾದರು. 104 00:11:09,000 --> 00:11:13,520 ಆ ದಿನಗೂಲಿ ಕಾರ್ಮಿಕನ ಮಗ ಮಾತ್ರ ಅರಿತುಕೊಂಡ, 105 00:11:14,840 --> 00:11:18,320 ಇಷ್ಟು ವರ್ಷಗಳಲ್ಲಿ ಇಳುವರಿ ಕಡಿಮೆಯಾಗಿದ್ದಕ್ಕೆ ಕಾರಣ, 106 00:11:19,400 --> 00:11:22,280 ಕೆಲವು ರೈತರು ಅವರ ತೋಟಗಳಲ್ಲಿ 107 00:11:23,120 --> 00:11:26,200 ಕಡಿಮೆ ಗುಣಮಟ್ಟದ ಬೀಜಗಳನ್ನು ಬಳಸುತ್ತಿದ್ದರು ಅಂತ. 108 00:11:36,600 --> 00:11:37,560 ಹಲೋ? 109 00:11:37,640 --> 00:11:39,760 ಇಲ್ಲಿಗೆ ಬರಲು ಏಕಿಷ್ಟು ಸಮಯ ಹಿಡಿಯುತ್ತಿದೆ? 110 00:11:41,520 --> 00:11:45,280 ಹಾಡಹಗಲೇ ಶಾಸಕರನ್ನು ಕರೆತರೋಕೆ ಸಮಯ ಹಿಡಿಯುತ್ತೆ. 111 00:11:46,640 --> 00:11:50,640 ಅದಲ್ಲದೆ ಯಾದವ್ ಅವರಿಗೆ ಇದರ ಬಗ್ಗೆ ಮುಂಚೆಯೇ ಹೇಳಿದ್ದೆ. 112 00:11:50,720 --> 00:11:51,960 ಯಾದವ್ ಅವರೇ? 113 00:11:52,040 --> 00:11:55,680 ನಿಮಗೆ ಮುಂಗಡವಾಗಿ ಹಣ ಪಾವತಿಸಿದ್ದು ನಾನು, ಸರಿನಾ? 114 00:11:55,760 --> 00:11:57,800 ನನ್ನ ಸರ್ಕಾರ ಅಧಿಕಾರಕ್ಕೆ ಬರಲಿದೆ. 115 00:11:58,360 --> 00:12:01,360 ಹಾಗಾಗಿ ಸುದ್ದಿ ಕೂಡ ನನಗೇ ಕೊಡಿ. ಆಯ್ತಾ? 116 00:12:03,320 --> 00:12:04,320 ಮಂತ್ರಿಯವರೇ, 117 00:12:05,440 --> 00:12:08,720 ಇನ್ನೇನು ನಾಲ್ಕೈದು ಕಿಲೋಮೀಟರ್ ಅಷ್ಟೇ. 118 00:12:10,120 --> 00:12:11,160 ಬೇಗ ತಲುಪುತ್ತೇವೆ. 119 00:12:11,760 --> 00:12:12,720 ಬನ್ನಿ. 120 00:12:30,040 --> 00:12:31,480 ವಾನಪ್ರಸ್ಥ 121 00:12:35,760 --> 00:12:37,360 ಅದಕ್ಕಾಗಿಯೇ ಇದು ಮುಖ್ಯ, 122 00:12:37,840 --> 00:12:40,040 ಏಕಾಂಗಿಯಾಗಿ ಮುಂದುವರಿಯುವ ಬದಲು, 123 00:12:40,960 --> 00:12:43,800 ನಾವು ಒಂದಾಗಿ ಮುನ್ನಡೆಯಬೇಕು, 124 00:12:44,280 --> 00:12:45,840 ಮತ್ತು ಪ್ರಗತಿಯನ್ನು ಹೊಂದಬೇಕು. 125 00:12:45,920 --> 00:12:49,600 ಮಾವಿನ ತೋಟಗಳಂತೆ ನಾವು ನಶಿಸಿ ಹೋಗಬಾರದು. 126 00:12:53,280 --> 00:12:55,840 ನಿಮ್ಮ ಐದು ಕಿಲೋಮೀಟರ್ ಇನ್ನೂ ಮುಗಿದಿಲ್ಲವೇ? 127 00:12:56,400 --> 00:12:58,680 ಹೇಳಿ, ಮಾಹಿತಿ ಕೊಡಿ. ಎಲ್ಲಿದ್ದೀರಿ? 128 00:12:58,760 --> 00:13:00,840 ಮಾಹಿತಿ ಕೊಡುವುದಕ್ಕೇ ಕರೆ ಮಾಡಿದೆ. 129 00:13:01,880 --> 00:13:02,880 ಗಮನವಿಟ್ಟು ಕೇಳಿ. 130 00:13:07,720 --> 00:13:09,280 -ಕುಶ್ವಾಹಾ. -ಶರದ್ ಶುಕ್ಲಾ? 131 00:13:12,240 --> 00:13:14,040 ಇಲ್ಲಿಂದ ಅಧಿಕಾರ ನನ್ನದು. 132 00:13:14,520 --> 00:13:16,880 ಶರದ್ ಶುಕ್ಲಾ, ನೀವಾ? 133 00:13:16,960 --> 00:13:17,960 ಗುರುತು ಸಿಕ್ಕಿತಾ? 134 00:13:18,880 --> 00:13:22,440 ನಿಮ್ಮ ಧ್ವನಿಯಲ್ಲಿ ಇದೇ ನಡುಕದೊಂದಿಗೆ ಜೆಪಿ ಯಾದವ್ ಗೆ ಸಂದೇಶ ಕಳಿಸಿ. 135 00:13:24,880 --> 00:13:26,920 ನೀವು ಮಾಧುರಿಗೆ ವಿರುದ್ಧವಾಗಿ ನಿಂತಿದ್ದೀರಿ. 136 00:13:28,440 --> 00:13:29,760 ಅಂದರೆ ನನಗೂ ವಿರುದ್ಧವಾಗಿ. 137 00:13:32,200 --> 00:13:37,000 ಹಾಗಾಗಿ ಜೆಪಿ ಯಾದವ್ ಯಾವ ಬಿಲದಲ್ಲಿದ್ದಾನೋ ಅಲ್ಲಿಯೇ ಇದ್ದರೆ ಒಳ್ಳೆಯದು ಅಂತ ಹೇಳಿ. 138 00:13:41,120 --> 00:13:43,200 ನಾನು ಅವನಿಗೆ ತೊಂದರೆ ಕೊಡಲ್ಲ. 139 00:13:44,880 --> 00:13:46,520 ನಮ್ಮದು ಹಳೆಯ ಸಂಬಂಧ. 140 00:13:51,800 --> 00:13:54,960 ನಿಮ್ಮ ನಿಷ್ಠೆಗೆ ಜೆಪಿ ಯಾದವ್ ಬೆಲೆ ನಿಗದಿಪಡಿಸಿದ್ದಾನೆ. 141 00:13:58,520 --> 00:14:01,560 ನಿಮ್ಮ ಜೀವಗಳ ಬೆಲೆ ನಾನು ನಿಗದಿಪಡಿಸಲೇ? 142 00:14:02,880 --> 00:14:06,000 ಆ ದಿನದಂದು, ಆ ಹುಡುಗ ಕೇವಲ ತನ್ನ ಅಪ್ಪನಿಗೆ ಮಾತ್ರ ಅಲ್ಲ, 143 00:14:07,080 --> 00:14:09,880 ಇಡೀ ಹಳ್ಳಿಯ ಮಗನಾದ. 144 00:14:10,960 --> 00:14:13,600 ಮತ್ತು ಇಡೀ ಹಳ್ಳಿಯು ಅವನ ಕುಟುಂಬವಾಯಿತು. 145 00:14:14,320 --> 00:14:16,640 ಆ ಹುಡುಗ ಯಾರು ಗೊತ್ತಾ? 146 00:14:18,840 --> 00:14:21,480 ದಿವಂಗತ ಸೂರ್ಯ ಪ್ರತಾಪ್ ಯಾದವ್. 147 00:14:22,160 --> 00:14:25,920 -ಸೂರ್ಯ ಪ್ರತಾಪ್ ಯಾದವ್ ಗೆ... -ಜೈ! 148 00:14:26,000 --> 00:14:29,480 -ಸೂರ್ಯ ಪ್ರತಾಪ್ ಯಾದವ್ ಗೆ... -ಜೈ! 149 00:14:29,560 --> 00:14:31,560 ಲೋಕ ಸ್ವರಾಜ್ ಪಕ್ಷಕ್ಕೆ... 150 00:14:31,640 --> 00:14:33,480 ಜೈ! ಜೈ! 151 00:14:33,560 --> 00:14:35,120 ಲೋಕ ಸ್ವರಾಜ್ ಪಕ್ಷಕ್ಕೆ... 152 00:14:35,200 --> 00:14:37,160 ಜೈ! ಜೈ! 153 00:14:37,240 --> 00:14:38,960 ಲೋಕ ಸ್ವರಾಜ್ ಪಕ್ಷಕ್ಕೆ... 154 00:14:39,040 --> 00:14:40,720 ಜೈ! ಜೈ! 155 00:14:40,800 --> 00:14:42,640 ಲೋಕ ಸ್ವರಾಜ್ ಪಕ್ಷಕ್ಕೆ... 156 00:14:42,720 --> 00:14:44,840 ಜೈ! ಜೈ! 157 00:14:50,240 --> 00:14:52,040 ಹಾಂ. ರಸ್ತೆ ಛೇದಕದ ಬಳಿ ಇದ್ದೇವೆ. 158 00:14:53,560 --> 00:14:54,720 ಎಡಕ್ಕೆ ತಿರುಗಿದೆವು. 159 00:14:56,680 --> 00:14:57,720 ಹಾಂ, ಕಾಣುತ್ತೆ. 160 00:15:13,040 --> 00:15:14,960 ಗೋಲು ಅಕ್ಕ ಬಂದಿದ್ದಾರಂತ ಹೇಳು ಅವನಿಗೆ. 161 00:15:30,400 --> 00:15:31,400 ಒಳಗೆ ಬನ್ನಿ. 162 00:15:35,640 --> 00:15:37,320 ಇಲ್ಲೇ ಇರಿ, ನಾನು ಬರುತ್ತೇನೆ. 163 00:15:42,560 --> 00:15:43,880 ಗೋಲು ಅಕ್ಕ ಬಂದಿದ್ದಾರೆ. 164 00:15:49,520 --> 00:15:52,640 ಬರಿಗೈಯಲ್ಲಿ ಬಂದಿದ್ದೀರಿ. ಯಾದವ್ ಜೀ ನಿಮ್ಮನ್ನು ಕಾಣುವುದಿಲ್ಲ. 165 00:15:53,800 --> 00:15:55,320 -ನೀವು ಹೋಗಬಹುದು... -ಕೇಳು. 166 00:15:56,600 --> 00:15:59,320 ಇಡೀ ಜೀವನ ಇಲ್ಲೇ ಇರುತ್ತಾರಾ ಅಂತ ಯಾದವ್ ರನ್ನು ಕೇಳು. 167 00:16:00,640 --> 00:16:03,800 ಅವರಲ್ಲಿ ಸ್ವಲ್ಪವಾದರೂ ಕಿಚ್ಚು ಉಳಿದಿರುತ್ತೆ ಅಂದುಕೊಂಡು ಬಂದೆ. 168 00:16:05,200 --> 00:16:07,400 ನಾನು ಹೆಚ್ಚು ಕಾಯಲ್ಲ. ಅವರಿಗೆ ಬಿಟ್ಟದ್ದು. 169 00:16:13,520 --> 00:16:14,720 ಸರಳ ಒಪ್ಪಂದವಾಗಿತ್ತು. 170 00:16:17,680 --> 00:16:19,880 ಮುಂಗಡ ಹಣ ತಂದರೆ ಮಾತ್ರ ಮಾತಾಡೋಣ. 171 00:16:24,440 --> 00:16:26,360 ಮತ್ತು ನನ್ನ ಬಗ್ಗೆ ಚಿಂತಿಸಬೇಡಿ. 172 00:16:28,520 --> 00:16:32,360 ಯಾದವ್ ಜೀ, ಅದೇ ನಿಮ್ಮ ಸಮಸ್ಯೆ. 173 00:16:35,320 --> 00:16:37,040 ಹಣವೇನೋ ನಿಮಗೆ ಬಲವನ್ನು ನೀಡುತ್ತದೆ, 174 00:16:37,680 --> 00:16:40,240 ಆದರೆ ಬಾಹುಬಲಿಗಳು ನಿಜವಾದ ಶಕ್ತಿಯನ್ನು ತರುತ್ತಾರೆ. 175 00:16:41,240 --> 00:16:42,240 ಹೌದಾ? 176 00:16:44,280 --> 00:16:45,840 ಮತ್ತೆ ಎಲ್ಲಿ ನಿಮ್ಮ ಬಾಹುಬಲ? 177 00:16:51,400 --> 00:16:52,920 ಮಾಧುರಿ ನಿಜವಾಗಿಯೂ ಬಲಶಾಲಿ. 178 00:16:53,880 --> 00:16:55,720 ನೀವೇ ಅವಳನ್ನು ಸೋಲಿಸಲು ಸಾಧ್ಯವಿಲ್ಲ. 179 00:16:57,680 --> 00:16:59,880 ನಿಮ್ಮ ರಾಜಕೀಯ ವಿಫಲವಾದಾಗ, 180 00:16:59,960 --> 00:17:03,880 ನಾವು ಮಿರ್ಜಾಪುರದಿಂದ ತ್ರಿಪಾಠಿಗಳನ್ನು ಸಂಪೂರ್ಣ ಅಳಿಸಿ ಹಾಕಿದೆವು. 181 00:17:07,440 --> 00:17:09,920 ನಿಮ್ಮ ಎಲ್ಲಾ ಸಮಸ್ಯೆಗಳಿಗೆ ಒಂದೇ ಪರಿಹಾರ. 182 00:17:12,880 --> 00:17:15,560 ಗುಡ್ಡು ಪಂಡಿತ್. ಮತ್ತು ಈಗ ಅವನು ಜೈಲಿನಲ್ಲಿದ್ದಾನೆ. 183 00:17:29,920 --> 00:17:32,800 ಕೇಳೋ, ಬೇವರ್ಸಿ. ಸಿಎಂನ ಕೊಂದಿದ್ದು ನೀನೇ ಅಂತ ಗೊತ್ತು. 184 00:17:34,440 --> 00:17:37,200 ಸರ್, ಇವನ ಟ್ರಕ್ಕಿಂದ ಗನ್ ಮತ್ತು ದಾಖಲೆಗಳು ಸಿಕ್ಕವು. 185 00:17:38,480 --> 00:17:41,560 ಜೌನ್ಪುರ್. ಶರದ್ ಶುಕ್ಲಾ. 186 00:17:42,800 --> 00:17:45,040 ಸಾಕ್ಷಿ ಇದ್ದರೆ, ಮೊದಲೇ ಯಾಕೆ ಬರಲಿಲ್ಲ? 187 00:17:53,440 --> 00:17:57,000 ಇದರಿಂದ ಗುಡ್ಡು ಮೇಲೆ ಮೃದು ಧೋರಣೆ ತೋರುತ್ತೇನೆ ಅಂತ ಅಂದುಕೊಳ್ಳಬೇಡಿ. 188 00:17:58,240 --> 00:17:59,800 ಅದು ನನಗೆ ಬೇಕೂ ಇಲ್ಲ. 189 00:17:59,880 --> 00:18:01,400 ಹಾಗಾದರೆ ಯಾಕೆ ಬಂದಿದ್ದೀರಿ? 190 00:18:04,960 --> 00:18:08,880 ಗುಡ್ಡು ಪಂಡಿತ್ ಮತ್ತು ಅವನಂಥ ಇತರ ಅಪರಾಧಿಗಳಿಗೆ ಶಿಕ್ಷೆಯಾಗಬೇಕು. 191 00:18:10,080 --> 00:18:11,920 ಯಾವ ನಿರಪರಾಧಿಗೂ ಶಿಕ್ಷೆಯಾಗಬಾರದು, 192 00:18:12,800 --> 00:18:14,200 ಅದೇ ಈಗ ನನ್ನ ಏಕೈಕ ಗುರಿ. 193 00:18:15,760 --> 00:18:19,080 ನಿಮ್ಮ ಉದ್ದೇಶ ಏನೇ ಇರಲಿ, ನೀವು ಜನತಾ ಸಭೆಯ ಮೂಲಕವೇ ಬರಬೇಕು. 194 00:18:19,560 --> 00:18:21,760 ಮುಂದಿನ ಬಾರಿ ನೇರ ಪ್ರವೇಶ ಸಿಗುವುದಿಲ್ಲ. 195 00:18:25,800 --> 00:18:29,160 ನೀವು ಅಧಿಕಾರದಲ್ಲಿದ್ದೀರಿ. ಮತ್ತು ನ್ಯಾಯವು ಅಧಿಕಾರದಿಂದ ಬರುತ್ತದೆ. 196 00:18:30,800 --> 00:18:34,800 ನಿಮ್ಮನ್ನು ವೈಯಕ್ತಿಕವಾಗಿ ಭೇಟಿಯಾಗಿ, ಅಪರಾಧಿಗಳು ಅಪರಾಧಿಗಳೇ ಅಂತ ಹೇಳಬೇಕೆಂದುಕೊಂಡೆ. 197 00:18:35,480 --> 00:18:36,960 ಕುಟುಂಬ ಅಥವಾ ಹೊರಗಿನವರಂತೇನಿಲ್ಲ. 198 00:18:42,520 --> 00:18:45,800 ಮತ್ತು ನನಗೆ, ನಾನು ನಿಮ್ಮನ್ನು ಮತ್ತೆ ಭೇಟಿಯಾಗಬೇಕಾದರೆ, 199 00:18:46,960 --> 00:18:49,440 ನನ್ನ ಸ್ಥಾನ ಸಾಮಾನ್ಯರಿಗಿಂತ ಹೆಚ್ಚಾಗಿರುತ್ತದೆ. 200 00:19:03,080 --> 00:19:06,760 ಪೊಲೀಸ್, ಜೌನ್ಪುರ್ 201 00:19:21,080 --> 00:19:23,480 ನಾವು ಸಾಕ್ಷಿಗಳನ್ನು ಒಮ್ಮೆ ಪರಿಶೀಲಿಸಬೇಕು. 202 00:19:31,480 --> 00:19:32,440 ಕ್ಷಮಿಸಿ. 203 00:20:10,560 --> 00:20:13,240 ಎಲ್ಲಾ ಶಾಸಕರು ಒಂದೇ ರೆಸಾರ್ಟ್ನಲ್ಲಿದ್ದಾರೆ. 204 00:20:15,640 --> 00:20:17,520 ಯಾರೂ ವಿರೋಧ ಪಕ್ಷದ ಪರವಾಗಿಲ್ಲ. 205 00:20:19,560 --> 00:20:23,080 ಚಿಂತೆ ಬಿಡು ಮತ್ತು ಅಪರಾಧ ಮುಕ್ತ ರಾಜ್ಯದ ಮೇಲೆ ಗಮನ ವಹಿಸು. 206 00:20:26,960 --> 00:20:27,960 ಮಾಧುರಿ? 207 00:20:30,080 --> 00:20:31,200 ಏನು ಯೋಚಿಸುತ್ತಿರುವೆ? 208 00:20:34,520 --> 00:20:35,640 ನೋಡು, ಇಷ್ಟು ಯೋಚಿಸಬೇಡ. 209 00:20:37,800 --> 00:20:40,800 ತುಂಬಾ ಯೋಚಿಸಿದರೆ ಕಠಿಣ ನಿರ್ಧಾರ ತೆಗೆದುಕೊಳ್ಳೋದು ಕಷ್ಟವಾಗುತ್ತೆ. 210 00:20:47,640 --> 00:20:49,960 ನೀನು ಇಂತಹ ಅನೇಕ ನಿರ್ಧಾರಗಳನ್ನು ಮಾಡಿರಬೇಕು. 211 00:20:53,280 --> 00:20:55,720 ನಮ್ಮ ಕೆಲಸದಲ್ಲಿ ಇಂತಹ ನಿರ್ಧಾರಗಳನ್ನು 212 00:20:55,800 --> 00:20:58,000 ತೆಗೆದುಕೊಳ್ಳಬೇಕು ಎಂದು ನನಗೆ ಅರ್ಥವಾಗುತ್ತದೆ. 213 00:21:02,440 --> 00:21:03,800 ನೀನು ನನಗೆ ಹೇಳಬಹುದು. 214 00:21:05,040 --> 00:21:06,760 ರಹಸ್ಯ ಇಟ್ಟುಕೊಳ್ಳುವ ಅಗತ್ಯವಿಲ್ಲ. 215 00:21:08,560 --> 00:21:11,080 ನೀನು ಏನೇ ಮಾಡಿದ್ದರೂ ಅದು ನಿನ್ನ ಗತಕಾಲ. 216 00:21:14,560 --> 00:21:17,560 ನಮ್ಮ ನಡುವೆ ಏನೂ ಬದಲಾಗುವುದಿಲ್ಲ. 217 00:21:35,440 --> 00:21:38,080 ಮಾಧುರಿ, ನಿನ್ನಿಂದ ನಾನು ಏನನ್ನೂ ಮುಚ್ಚಿಡಲ್ಲ. 218 00:21:40,200 --> 00:21:41,760 ಮುಚ್ಚಿಡೋಕೂ ಆಗಲ್ಲ. 219 00:21:45,320 --> 00:21:47,640 ಯಾಕೆ ಹೀಗೆ ಮಾಡಿದೆ ಅಂತ ನೀನು ಅರ್ಥ ಮಾಡಿಕೊಳ್ಳುವೆ 220 00:21:50,160 --> 00:21:51,600 ಅಂದುಕೊಳ್ಳುತ್ತೇನೆ. 221 00:22:05,800 --> 00:22:07,120 ಖಾಲೀನ್ ಭಯ್ಯಾ ಬದುಕಿದ್ದಾರೆ. 222 00:22:11,080 --> 00:22:12,320 ನನ್ನ ಜೊತೆ ಇದ್ದಾರೆ. 223 00:22:18,640 --> 00:22:22,000 ಅವರೊಂದಿಗಿನ ನಿನ್ನ ಸಂಬಂಧ ಎಷ್ಟು ಜಟಿಲವಾಗಿ ಕೊನೆಯಾಗಿತ್ತು ಅಂದರೆ, 224 00:22:24,000 --> 00:22:25,640 ನಿನ್ನನ್ನು ನಂಬಬಹುದೇ 225 00:22:27,240 --> 00:22:29,160 ಎಂದು ನನಗೆ ಖಚಿತವಿರಲಿಲ್ಲ. 226 00:22:32,760 --> 00:22:35,120 ನಿನ್ನನ್ನು ಚೆನ್ನಾಗಿ ತಿಳಿದುಕೊಳ್ಳುವ ಹೊತ್ತಿಗೆ, 227 00:22:35,880 --> 00:22:37,200 ನಿನ್ನ ನಂಬಲು ಪ್ರಾರಂಭಿಸಿದಾಗ 228 00:22:39,160 --> 00:22:40,480 ಸಾಕಷ್ಟು ಸಮಯ ಕಳೆದಿತ್ತು. 229 00:22:44,000 --> 00:22:46,680 ನಾನೇನೇ ಮಾಡಿದ್ದರೂ, ನನ್ನ ಉದ್ದೇಶ ನಿನಗೆ 230 00:22:47,840 --> 00:22:49,040 ತೊಂದರೆ ಕೊಡುವುದಲ್ಲ ಎಂಬ 231 00:22:51,480 --> 00:22:53,880 ನಂಬಿಕೆ ನಿನ್ನಲ್ಲಿದೆ ಅಂದುಕೊಳ್ಳುವೆ. 232 00:22:56,680 --> 00:22:57,720 ಮತ್ತೆ? 233 00:23:00,160 --> 00:23:01,160 ಮತ್ತು... 234 00:23:03,680 --> 00:23:07,480 ಮತ್ತು ಅವರು ಸುರಕ್ಷಿತ ಮತ್ತು ಆರೋಗ್ಯವಾಗಿದ್ದಾರೆ. 235 00:23:10,680 --> 00:23:12,840 ನನ್ನ ಕುಟುಂಬದ ಅವಿಭಾಜ್ಯ ಸದಸ್ಯರಾಗಿದ್ದಾರೆ. 236 00:23:25,880 --> 00:23:28,400 ಅವರನ್ನು ನಾನು ಒಮ್ಮೆ ಒಂಟಿಯಾಗಿ ಭೇಟಿಯಾಗಬೇಕು. 237 00:23:31,120 --> 00:23:33,000 ಅವರು ಮೊದಲು ನನ್ನ ಕುಟುಂಬ. 238 00:23:34,160 --> 00:23:36,400 ಅವರು ನನ್ನನ್ನು ನಂಬಬೇಕಿತ್ತು. 239 00:23:42,160 --> 00:23:43,360 ಅವರೀಗ ಬದಲಾಗಿದ್ದಾರೆ. 240 00:23:47,440 --> 00:23:49,000 ನಾನು ಅವರಿಗೆ ಎರಡನೇ ಅವಕಾಶ ನೀಡಿದೆ. 241 00:23:51,720 --> 00:23:53,360 ನಿನ್ನಿಂದಲೂ ಅದನ್ನೇ ನಿರೀಕ್ಷಿಸುವೆ. 242 00:24:00,520 --> 00:24:02,760 ದಯವಿಟ್ಟು ಭೇಟಿಗೆ ವ್ಯವಸ್ಥೆ ಮಾಡು. 243 00:24:05,480 --> 00:24:07,240 ನನಗೆ ಒಂಟಿಯಾಗಿ ಸ್ವಲ್ಪ ಸಮಯ ಬೇಕು. 244 00:24:10,640 --> 00:24:12,520 ಸ್ವಲ್ಪ ತಾಳ್ಮೆಯನ್ನು ಹೊಂದಿರು. 245 00:24:20,720 --> 00:24:22,880 ಮಲಗು, ನನ್ನ ಮಗು, ಮಲಗು. 246 00:24:23,360 --> 00:24:24,560 ಮಲಗು. ಮಲಗು. 247 00:24:24,640 --> 00:24:26,600 ಮಲಗು. ಮಲಗು. ಮಲಗು. 248 00:24:28,400 --> 00:24:30,600 ಅಮ್ಮ, ನಾನು ಒಳಗೆ ಬರಬಹುದೇ? 249 00:24:31,240 --> 00:24:32,920 ಬಾ. ಒಳಗೆ ಬಾ. 250 00:24:34,200 --> 00:24:36,160 ನಿಮ್ಮೊಂದಿಗೆ ತುರ್ತಾಗಿ ಮಾತಾಡಬೇಕಿತ್ತು. 251 00:24:37,680 --> 00:24:39,320 ನನಗೂ ನಿನ್ನ ಜೊತೆ ಮಾತಾಡುವುದಿತ್ತು. 252 00:24:39,880 --> 00:24:42,560 ನಿನಗೊಂದು ಸಂದೇಶ ಕಳಿಸೋಣ ಅಂತ ಈಗಷ್ಟೇ ಯೋಚಿಸುತ್ತಿದ್ದೆ. 253 00:24:43,680 --> 00:24:44,680 ಹೇಳಿ. 254 00:24:52,240 --> 00:24:54,880 ನೀನು ರಾಜ್ಯವನ್ನು ನೋಡಿಕೊಳ್ಳುತ್ತಾ ಬ್ಯುಸಿ ಇರ್ತೀಯ. 255 00:24:57,040 --> 00:25:01,440 ಕೆಲಸದಲ್ಲಿ ಬ್ಯುಸಿ ಇರುವುದರಿಂದ, ಎಲ್ಲವನ್ನೂ ಮರೆತು ಮುಂದೆ ಸಾಗುವೆ. 256 00:25:02,040 --> 00:25:03,560 ಧೈರ್ಯ ತಂದುಕೊಂಡಿರುವೆ. 257 00:25:09,640 --> 00:25:11,280 ನನಗೂ ಧೈರ್ಯ ತಂದುಕೊಳ್ಳಬೇಕು. 258 00:25:14,600 --> 00:25:16,400 ನನಗಾಗಿ, ನನ್ನ ಮಗುವಿಗಾಗಿ. 259 00:25:21,000 --> 00:25:22,840 ನಾನು ಮಿರ್ಜಾಪುರವನ್ನು ನಡೆಸಬೇಕು. 260 00:25:26,800 --> 00:25:30,640 ಅದು ನನ್ನ ಮಗನ ಪರಂಪರೆ. ಏನೇ ಆದರೂ, ನಾನು ಅವನ ತಾಯಿ. 261 00:25:33,080 --> 00:25:34,560 ಆದರೆ ನನಗೆ ನಿನ್ನ ಬೆಂಬಲ ಬೇಕು. 262 00:25:40,480 --> 00:25:42,400 ಈಗ ಬೇರೆ ಯಾರೂ ಉಳಿದಿಲ್ಲ. 263 00:25:46,440 --> 00:25:47,440 ಅಲ್ಲವೇ, ಮಗನೇ? 264 00:25:49,440 --> 00:25:51,840 ನಾನು ನಿಮಗೆ ಅಪ್ಪನ ಬಗ್ಗೆ ಹೇಳಲು ಬಂದೆ... 265 00:25:51,920 --> 00:25:54,000 ಈಗ ಅವರು ಬದುಕಿರುವ ಭರವಸೆ ಇಲ್ಲ. 266 00:25:57,960 --> 00:25:59,640 ತುಂಬಾ ಕಾಲವಾಯಿತು. 267 00:26:01,640 --> 00:26:03,840 ನಾನು ಕೂಡ ಮುಂದೆ ಸಾಗಲು ಯೋಚಿಸುತ್ತಿರುವೆ. 268 00:26:06,080 --> 00:26:07,920 ಬಹುಶಃ ಅವರು ಬದುಕಿರಬಹುದು. 269 00:26:08,000 --> 00:26:09,760 ಹೇಗೆ ಬದುಕಿರುತ್ತಾರೆ? 270 00:26:13,040 --> 00:26:15,120 ಅವರು ಬದುಕುಳಿದಿರುವುದು ಅಸಾಧ್ಯ. 271 00:26:16,280 --> 00:26:17,640 ಮೂರು ಗುಂಡುಗಳು ತಗುಲಿದ್ದವು. 272 00:26:21,040 --> 00:26:23,720 ಮೂರು ಗುಂಡುಗಳು ತಗುಲಿದ್ದವಂತ ನಿಮಗೆ ಹೇಗೆ ಗೊತ್ತು? 273 00:26:30,400 --> 00:26:34,440 ನಾನು ಗುಡ್ಡುವಿನ ಬಂಧಿಯಾಗಿದ್ದರೂ, ನನ್ನ ಕಿವಿಗಳು ಸದಾಕಾಲ ತೆರೆದೇ ಇದ್ದವು. 274 00:26:35,160 --> 00:26:37,440 ಗುಡ್ಡು ಮತ್ತು ಗೋಲು ಮಾತಾಡುವುದು ಕೇಳಿಸಿಕೊಂಡೆ. 275 00:26:39,960 --> 00:26:41,560 ಅದರ ನಂತರ ನನಗೆ ನಿದ್ರೆಯೇ ಬರಲಿಲ್ಲ. 276 00:26:45,920 --> 00:26:46,920 ಅದು ಬಿಡು. 277 00:26:49,000 --> 00:26:52,320 ಮಿರ್ಜಾಪುರ್ ನಡೆಸುವುದಕ್ಕೆ ನನಗೆ ಸಹಾಯ ಮಾಡುವೆಯಾ? 278 00:26:52,400 --> 00:26:53,240 ಹಾಂ. 279 00:26:55,720 --> 00:26:57,040 ಅಷ್ಟಕ್ಕೂ ಅದೇ ನನ್ನ ಮನೆ. 280 00:26:59,880 --> 00:27:01,440 ನಾನಿಲ್ಲಿ ಯಾವಾಗಲೂ ಇರೋಕಾಗಲ್ಲ. 281 00:27:03,680 --> 00:27:05,360 ನೀವು ತಯಾರಿ ಮಾಡಿಕೊಳ್ಳಿ. 282 00:27:06,800 --> 00:27:10,600 ನೀವು ಮತ್ತು ಪಾಪು ಮನೆಗೆ ಹೋಗ್ತೀರಿ. 283 00:27:23,280 --> 00:27:24,880 ಇಷ್ಟು ದೊಡ್ಡ ಮಾತಾಡುತ್ತಿದ್ದೀರಾ? 284 00:27:26,720 --> 00:27:29,480 ನಿಮ್ಮ ರಾಜಕೀಯ ಜೀವನ ಮುಗಿದಿದೆ. 285 00:27:29,560 --> 00:27:31,760 ನನ್ನದೂ ನಾಶಮಾಡಲು ಬಯಸುತ್ತೀರಾ? 286 00:27:35,880 --> 00:27:37,960 ವೃತ್ತಿಜೀವನ ಮುಗಿದಂತೆ ಕಾಣುತ್ತಿರಬಹುದು, 287 00:27:40,440 --> 00:27:42,120 ಆದರೆ ಮಹತ್ವಾಕಾಂಕ್ಷೆ ಇನ್ನೂ ಇದೆ. 288 00:27:49,840 --> 00:27:51,080 ನೀವು ಹಳೆಯ ಆಟಗಾರ. 289 00:27:52,800 --> 00:27:54,560 ನನ್ನ ಮಹತ್ವಾಕಾಂಕ್ಷೆಯ ಲಾಭ ಪಡೆಯಿರಿ. 290 00:27:55,320 --> 00:27:58,920 ಗೃಹ ಮಂತ್ರಿಯವರೇ, ಸಿಎಂ ಹುದ್ದೆಯೊಂದಿಗೆ ಎಷ್ಟು ಕಾಲ ಕಣ್ಣಾಮುಚ್ಚಾಲೆ ಆಡುತ್ತೀರಿ? 291 00:28:10,040 --> 00:28:11,280 ನೀವೀಗ ಈ ಹೊಸ 292 00:28:12,600 --> 00:28:15,560 ಅವತಾರದಲ್ಲಿ ಜ್ಞಾನಿಯಾಗಿ ಹೋಗಿದ್ದೀರಿ. 293 00:28:16,640 --> 00:28:21,320 ಒಂದು ಹೇಳಿ. ಬಹುಮತ, ಹಣ, ಬಲ, 294 00:28:22,000 --> 00:28:23,600 ಎಲ್ಲವೂ ಮಾಧುರಿಯ ಕಡೆ ಇದೆ. 295 00:28:24,640 --> 00:28:25,720 ನಮ್ಮ ಬಳಿ ಏನಿದೆ? 296 00:28:26,840 --> 00:28:28,080 ನಿಮ್ಮ ಮಹತ್ವಾಕಾಂಕ್ಷೆಯೇ? 297 00:28:35,160 --> 00:28:39,000 ಸರಿ ಬಿಡಿ, ನಿಮ್ಮ ವ್ಯಂಗ್ಯವನ್ನೂ ನಾನು ಗೌರವಿಸುತ್ತೇನೆ. 298 00:28:43,960 --> 00:28:47,640 ಆದರೆ ಬಹುಮತ, ಹಣ, 299 00:28:49,000 --> 00:28:51,080 ಅವೆಲ್ಲವೂ ನಮ್ಮ ನಿಯಂತ್ರಣದಲ್ಲಿರಬಹುದು, 300 00:28:53,040 --> 00:28:55,080 ನಮ್ಮಲ್ಲಿ ಬಾಹುಬಲ ಇದ್ದರೆ. 301 00:28:55,160 --> 00:28:56,160 ಸರಿ... 302 00:28:59,320 --> 00:29:01,040 ಅದರೊಂದಿಗೆ ಪ್ರಾರಂಭಿಸೋಣ ಹಾಗಿದ್ದರೆ. 303 00:29:02,480 --> 00:29:05,440 ನಿಮಗಾಗಿ ಕೆಲಸ ಮಾಡಲು ಯಾವ ಬಾಹುಬಲಿ ಉಳಿದಿದ್ದಾರೆ? 304 00:29:07,160 --> 00:29:08,160 ಒಬ್ಬರು ಇದ್ದಾರೆ. 305 00:29:09,480 --> 00:29:12,280 ನಿಮಗೆ ಪರಿಚಯಿಸುತ್ತೇನೆ. ಹೊರಗೆ ಕಾಯುತ್ತಿದ್ದಾರೆ. 306 00:29:14,120 --> 00:29:15,600 ಆದರೆ ಅವರೂ ಕೂಡ... 307 00:29:17,200 --> 00:29:18,680 ಪ್ರತಿಯಾಗಿ ಏನೋ ಬಯಸುತ್ತಾರೆ. 308 00:29:29,720 --> 00:29:30,720 ಸರಿ. 309 00:29:56,200 --> 00:29:58,440 ನೀವು... ಜೀವಂತವಾಗಿದ್ದೀರಾ? 310 00:29:59,880 --> 00:30:00,880 ಹೌದು. 311 00:30:02,720 --> 00:30:05,280 ಇರಲಿ, ಅದು ಬಿಡಿ. 312 00:30:06,000 --> 00:30:09,280 ನೀವು ಯಾರ ವಿರೋಧನೆ ಮಾಡುತ್ತಿದ್ದೀರಿ? 313 00:30:10,080 --> 00:30:11,840 ಅನುಮೋದನೆ, ಮಾಮ, ವಿರೋಧನೆ ಅಲ್ಲ. 314 00:30:11,920 --> 00:30:14,840 ಗೊತ್ತೋ, ಮೂರ್ಖ. "ಅನುಮೋದನೆ." 315 00:30:14,920 --> 00:30:19,120 ನಾನು ಹೇಳುವುದು ಎಲ್ಲರಿಗೂ ಅರ್ಥವಾಯಿತು. ಅಲ್ವಾ? 316 00:30:21,440 --> 00:30:24,680 ವಿಷಯ ಏನಂದ್ರೆ, ನಿಮಗೆ ಅರ್ಥವಾಯಿತಾ ಅನ್ನೋದು, ಸೋಲಂಕಿಯವರೇ. 317 00:30:40,800 --> 00:30:43,640 ಜೌನ್ಪುರ್ 318 00:30:57,360 --> 00:30:59,160 ಚಳಿಗಾಳಿ ಹೆಚ್ಚಿದೆ. 319 00:31:02,160 --> 00:31:04,480 ದಸರಾ ನಂತರ ಹವಾಮಾನ ಬದಲಾಗುತ್ತದೆ. 320 00:31:11,520 --> 00:31:14,240 ಪೂರ್ವಾಂಚಲದ ಬಗ್ಗೆ ನನಗೆ ವಿಶ್ವಾಸವಿದೆ, ದೊಡ್ಡಪ್ಪ. 321 00:31:16,280 --> 00:31:18,600 ನಮ್ಮ ಲೆಕ್ಕಾಚಾರಗಳು ಸರಿಯಾಗಿವೆ. 322 00:31:22,320 --> 00:31:25,360 ಆದರೆ ನಾವು ಒಂದು ಮುಖ್ಯವಾದದ್ದನ್ನು ಬಿಟ್ಟಿದ್ದೇವೆ. 323 00:31:27,680 --> 00:31:29,360 ನೀವು ಮತ್ತು ನಾನು. 324 00:31:33,720 --> 00:31:37,520 ನಮ್ಮ ಸಂಬಂಧ ಈ ಲೆಕ್ಕಾಚಾರಗಳು ಮತ್ತು ಪಿತೂರಿಗಳನ್ನು ಮೀರಿ ಮೇಲಕ್ಕೆ ಏರಿದೆ. 325 00:31:40,360 --> 00:31:42,600 ಹಾಗಾಗಿ, ಕೊನೆಯಲ್ಲಿ ನಾವಿಬ್ಬರೂ 326 00:31:43,840 --> 00:31:45,960 ಒಬ್ಬರಿಗೊಬ್ಬರು ಸವಾಲು ಹಾಕುವುದು ನನಗೆ ಬೇಡ. 327 00:31:56,400 --> 00:31:59,800 ನಾನು ನಿಮ್ಮ ಜೀವ ಯಾಕೆ ಉಳಿಸಿದೆ ಅಂತ ಯಾವತ್ತೂ ಹೇಳಿಲ್ಲ. 328 00:32:05,480 --> 00:32:10,240 ನಿಮ್ಮ ತಂದೆಯ ಮೇಲೆ ದಾಳಿ ಮಾಡಿ ನನ್ನ ತಂದೆ ಶುರು ಮಾಡಿದ ವೈರತ್ವವನ್ನು 329 00:32:12,000 --> 00:32:14,280 ನಿಮ್ಮ ಪ್ರಾಣ ಉಳಿಸಿ ಕೊನೆಗೊಳಿಸಬೇಕು ಅಂದುಕೊಂಡೆ. 330 00:32:23,000 --> 00:32:26,240 ಆದರೆ ನೀವು ನನ್ನ ಕುಟುಂಬದ ಭಾಗವಾಗುತ್ತೀರಿ ಅಂತ ನಾನೆಂದಿಗೂ ಯೋಚಿಸಲಿಲ್ಲ. 331 00:32:28,080 --> 00:32:30,600 ಮಿರ್ಜಾಪುರದ ಸಿಂಹಾಸನವು ನಿಮ್ಮ ಪರಂಪರೆಯಾಗಿದೆ. 332 00:32:35,720 --> 00:32:38,000 ನನ್ನ ವರ್ಚಸ್ಸಿನೊಂದಿಗೆ ನಿಮ್ಮ ಪರಂಪರೆಯನ್ನು 333 00:32:39,760 --> 00:32:41,720 ಮುಂದುವರಿಸಿಕೊಂಡು ಹೋಗುವ ಕಾಲ ಬಂದಿದೆ. 334 00:32:47,520 --> 00:32:51,240 ಶರದ್, ನಾನು ನಿನಗೆ ಮಾತು ಕೊಟ್ಟಿದ್ದೇನೆ, 335 00:32:53,720 --> 00:32:55,440 ಸಿಂಹಾಸನದಲ್ಲಿ ನೀನೇ ಕೂರುವೆ ಎಂದು. 336 00:32:57,360 --> 00:32:59,240 ನಾನೇ ನಿನ್ನನ್ನು ಅಲ್ಲಿ ಕೂರಿಸುವೆ. 337 00:33:04,280 --> 00:33:05,400 ಸಭೆಯನ್ನು ಕರೆಸು. 338 00:33:14,800 --> 00:33:16,880 ದೊಡ್ಡಪ್ಪ, ಮಾಧುರಿಗೆ ನೀವಿಲ್ಲಿರೋದು ಗೊತ್ತು. 339 00:33:22,080 --> 00:33:24,400 ಬೀನಾ ಭಾಭಿ ಮತ್ತು ನಿಮ್ಮ ಮಗನನ್ನೂ ಭೇಟಿಯಾಗಬಹುದು. 340 00:33:26,720 --> 00:33:29,080 ಮಾಧುರಿಯನ್ನು ಒಮ್ಮೆ ನಂಬಿ 341 00:33:31,120 --> 00:33:32,720 ನಾನು ತಪ್ಪು ಮಾಡಿದೆ. 342 00:33:37,200 --> 00:33:38,840 ನಾನು ಮಾಧುರಿಯನ್ನು ನಂಬುತ್ತೇನೆ. 343 00:33:42,960 --> 00:33:45,080 ಆಕೆ ನಿಮ್ಮನ್ನು ಖಾಸಗಿಯಾಗಿ ಭೇಟಿಯಾಗಬೇಕಂತೆ. 344 00:33:47,160 --> 00:33:48,160 ಅವಳನ್ನು ಭೇಟಿ ಮಾಡಿ. 345 00:33:49,800 --> 00:33:50,880 ನನಗಾಗಿ. 346 00:34:47,000 --> 00:34:48,640 ಶರದ್ ಏನೇ ಮಾಡಿದ್ದರೂ ಅದು 347 00:34:50,640 --> 00:34:51,760 ವೈಯಕ್ತಿಕವಾಗಿತ್ತು. 348 00:34:53,160 --> 00:34:55,600 ನಿನ್ನ ವಿರುದ್ಧ ಅಲ್ಲ, ನನ್ನ ವಿರುದ್ಧ. 349 00:34:58,520 --> 00:35:01,200 ನಾನು ಎಲ್ಲವನ್ನೂ ಹಿಂದಿಕ್ಕಿ ಮುಂದೆ ಸಾಗಿದ್ದೇನೆ. 350 00:35:04,200 --> 00:35:05,960 ನಾನು ಶರದ್ ಗೆ ಮಾತು ಕೊಟ್ಟಿರುವೆ, 351 00:35:06,800 --> 00:35:08,200 ಸಿಂಹಾಸನವು ಅವನದಾಗಿರುತ್ತದಂತ. 352 00:35:11,640 --> 00:35:13,440 ನನ್ನ ಮಾತನ್ನು ಉಳಿಸಿಕೊಳ್ಳುತ್ತೇನೆ. 353 00:35:19,680 --> 00:35:22,360 ಯಾವಾಗಲೂ ನಿಮಗೆ ಸರಿ ಅನಿಸಿದ್ದನ್ನೇ ಮಾಡಿದ್ದೀರಿ. 354 00:35:26,080 --> 00:35:27,680 ನಿಮ್ಮ ಮಗನ ಮಾತು ಕೇಳಲೇ ಇಲ್ಲ. 355 00:35:31,880 --> 00:35:34,120 ನನ್ನನ್ನು ನಿಮ್ಮ ಮಗಳಂತೆ ನೋಡಲೇ ಇಲ್ಲ. 356 00:35:43,600 --> 00:35:46,920 ನನ್ನ ಸುಪರ್ದಿಯಲ್ಲಿರುವ ನಿಮ್ಮ ಕುಟುಂಬ ಮತ್ತು ಗುಡ್ಡು ಪಂಡಿತ್ 357 00:35:47,000 --> 00:35:48,480 ನಿಮಗೆ ಬೇಕೆಂದರೆ, 358 00:35:49,360 --> 00:35:51,560 ನಾನು ಹೇಳಿದಂತೆ ನೀವು ಮಾಡಬೇಕು. 359 00:36:13,160 --> 00:36:15,960 ಸುಲ್ತಾನಪುರ್ - ಗೋರಖ್ಪುರ್ - ಕುಶಿನಗರ್ - ದೇವರಿಯಾ 360 00:36:16,040 --> 00:36:18,040 ಬಲಿಯಾ - ಅಜಂಗಢ - ಮೌ - ಗಾಜಿಪುರ 361 00:36:18,120 --> 00:36:20,120 ವಾರಣಾಸಿ - ಮಿರ್ಜಾಪುರ್ - ಪ್ರಯಾಗರಾಜ್ 362 00:36:20,160 --> 00:36:24,160 ಪ್ರಯಾಗರಾಜ್ 363 00:36:37,000 --> 00:36:38,080 ಓ, ಸ್ವಾಗತ. 364 00:36:39,120 --> 00:36:40,200 ಸಲಾಂ, ಭಯ್ಯಾ. 365 00:36:40,800 --> 00:36:41,800 ಸಲಾಂ. 366 00:36:47,080 --> 00:36:48,840 ಶುಕ್ಲಾ ಅವರ ಪರಿಸ್ಥಿತಿ ನೋಡಿದ್ರಾ? 367 00:37:00,560 --> 00:37:02,560 ಭೀಕರ ಚಂಡಮಾರುತದ ವಿರುದ್ಧ ಹೋರಾಡಿ 368 00:37:03,560 --> 00:37:05,320 ನೀವು ಇಲ್ಲಿ ಒಟ್ಟುಗೂಡಿದ್ದೀರಿ. 369 00:37:06,640 --> 00:37:07,760 ಮತ್ತು ಅದಕ್ಕಾಗಿ, 370 00:37:08,960 --> 00:37:10,680 ಪಶ್ಚಿಮವು ನಿಮಗೆ ಕೃತಜ್ಞವಾಗಿದೆ. 371 00:37:12,840 --> 00:37:13,960 ಕುಳಿತುಕೊಳ್ಳಿ. 372 00:37:16,440 --> 00:37:17,440 ಕುಳಿತುಕೊಳ್ಳಿ. 373 00:37:25,360 --> 00:37:26,560 ನಿರ್ಧರಿಸಿದಂತೆ, 374 00:37:28,560 --> 00:37:32,160 ಈ ಮಂಗಳಕರ ದಿನದಂದು ಪೂರ್ವದ ಹೊಸ ಬಾಹುಬಲಿಯನ್ನು ಘೋಷಿಸುತ್ತೇವೆ. 375 00:37:36,120 --> 00:37:39,600 ಅವರ ಹೆಸರನ್ನು ಅಧಿಕೃತವಾಗಿ ಘೋಷಿಸುವ ಮೊದಲು, 376 00:37:40,880 --> 00:37:44,320 ನಾನು ನಿಮಗೆ ಕೊನೆಯ ಅವಕಾಶವನ್ನು ನೀಡುತ್ತೇನೆ. 377 00:37:46,200 --> 00:37:47,920 ಯಾರಿಗಾದರೂ ಯಾವುದೇ ವಿರೋಧವಿದೆಯೇ? 378 00:37:48,000 --> 00:37:49,800 ನನಗಿಲ್ಲ. ಮಿಕ್ಕವರು ಹೇಳಿ. 379 00:37:49,880 --> 00:37:51,880 ಸರಿ ಹೇಳಿದಿರಿ. ಅಸ್ಲಂ ಭಾಯ್, ನಿಮ್ಮಿಷ್ಟ. 380 00:37:53,040 --> 00:37:54,040 ಇಲ್ಲ, ಮುನಾವರ್ ಜೀ. 381 00:37:55,640 --> 00:37:57,640 ಯಾರಿಗೂ ಯಾವುದೇ ವಿರೋಧವಿದೆ ಅನಿಸಲ್ಲ. 382 00:37:58,120 --> 00:37:59,880 ಮತ್ತು ಈಗ ಏಕೆ ವಿರೋಧಿಸುತ್ತೇವೆ? 383 00:37:59,960 --> 00:38:02,840 -ಹಾಂ. ಅದು ಸರಿ. -ಅದು ಸರಿ. ನೀವು ಸರಿ. 384 00:38:02,920 --> 00:38:03,920 ಸರಿ. 385 00:38:06,160 --> 00:38:08,640 ಸಿಂಹಾಸನದ ಪರಂಪರೆಯನ್ನು ಎತ್ತಿ ಹಿಡಿಯಲು 386 00:38:09,640 --> 00:38:11,880 ಹಕೀಮ್ ಸಾಹೇಬರು ನಿರ್ಧರಿಸಿದ್ದಾರೆ. 387 00:38:13,640 --> 00:38:15,120 ಆದರೆ ಸದ್ಯಕ್ಕೆ, 388 00:38:15,160 --> 00:38:20,200 ಪೂರ್ವಾಂಚಲಕ್ಕೆ ತನ್ನ ಕಾಲುಗಳ ಮೇಲೆ ನಿಲ್ಲಲು ಬೆಂಬಲ ಬೇಕು. 389 00:38:25,000 --> 00:38:27,600 ಪರಿಸ್ಥಿತಿ ಸುಧಾರಿಸುವವರೆಗೆ, 390 00:38:29,160 --> 00:38:32,040 ಪೂರ್ವಾಂಚಲ ಪಶ್ಚಿಮದ ರಕ್ಷಣೆಯಲ್ಲಿ ಉಳಿಯುತ್ತದೆ. 391 00:38:35,080 --> 00:38:36,440 ಪ್ರತಿ ನಿರ್ಧಾರಕ್ಕೂ 392 00:38:37,520 --> 00:38:39,800 ಪಶ್ಚಿಮದಿಂದ ಅನುಮೋದನೆಯ ಮುದ್ರೆಯ ಅಗತ್ಯವಿದೆ. 393 00:38:40,480 --> 00:38:42,080 ಇದೇನು ಹೊಸ ನಿಯಮ, ಮುನಾವರ್ ಜೀ. 394 00:38:43,080 --> 00:38:44,840 ಇದರಲ್ಲಿ ರಾಜಿಯಾಗಲ್ಲ. 395 00:38:45,840 --> 00:38:46,840 ಶರದ್ ಅವರೇ? 396 00:38:53,520 --> 00:38:54,560 ಮುನಾವರ್ ಜೀ, 397 00:38:57,200 --> 00:38:59,840 ನೀವು ಅತಿಥಿಯಾಗಿ ಬಂದ ಈ ಪ್ರದೇಶವನ್ನು ವಶಪಡಿಸಿಕೊಳ್ಳುವ 398 00:39:01,320 --> 00:39:03,920 ಬಗ್ಗೆ ಯಾವಾಗ ಕನಸು ಕಾಣಲು ಪ್ರಾರಂಭಿಸಿದಿರಿ? 399 00:39:06,680 --> 00:39:08,800 ಪೂರ್ವಾಂಚಲದ ಬೇರುಗಳು ಬಲವಾಗಿವೆ. 400 00:39:10,000 --> 00:39:11,680 ನಮಗೆ ಯಾವುದೇ ಬೆಂಬಲ ಬೇಕಾಗಿಲ್ಲ. 401 00:39:13,400 --> 00:39:16,040 ಅಸಲಿಗೆ, ಯಾವಾಗಲೂ ರಕ್ಷಣೆ ಬೇಕಿದ್ದಿದ್ದು ನಿಮಗೆ. 402 00:39:16,640 --> 00:39:17,640 ಅದನ್ನು ಮರೆತಿದ್ದೀರಾ? 403 00:39:27,600 --> 00:39:28,640 ನಮಸ್ಕಾರ, ಭಯ್ಯಾ. 404 00:39:30,920 --> 00:39:33,360 -ಆ ಬೇವರ್ಸಿಗೆ ಹುಚ್ಚು ಹಿಡಿಯಿತು. -ಓ, ನಿಜವಾ? 405 00:39:36,120 --> 00:39:37,160 ನಮಸ್ಕಾರ, ಭಯ್ಯಾ. 406 00:39:38,600 --> 00:39:39,640 ನಮಸ್ಕಾರ, ಭಯ್ಯಾ. 407 00:39:43,440 --> 00:39:44,480 ನಮಸ್ಕಾರ, ಭಯ್ಯಾ. 408 00:39:45,360 --> 00:39:46,400 ನಮಸ್ಕಾರ, ಭಯ್ಯಾ. 409 00:39:48,360 --> 00:39:49,440 ಶರದ್ ಶುಕ್ಲಾ. 410 00:39:51,960 --> 00:39:53,640 ನನ್ನನ್ನು ಅವಮಾನಿಸುತ್ತಿದ್ದೀರಿ. 411 00:39:53,680 --> 00:39:56,920 ಈ ಸಿಂಹಾಸನವನ್ನು ಅವಮಾನಿಸುವುದರಿಂದ ನಿಮ್ಮನ್ನು ತಡೆಯುತ್ತಿದ್ದೇನೆ. 412 00:39:58,280 --> 00:40:00,440 ನಾವು ಜಾಗರೂಕರಾಗಿರಬೇಕು... 413 00:40:03,400 --> 00:40:06,120 ಯಾರನ್ನು ನಂಬುತ್ತೇವೆ ಎಂಬುದರ ಬಗ್ಗೆ. 414 00:40:07,160 --> 00:40:08,480 -ನಮಸ್ತೆ. -ಕೆಲವೊಮ್ಮೆ, 415 00:40:10,160 --> 00:40:11,520 ದೇವತೆಯ ವೇಷದಲ್ಲಿರುವ 416 00:40:12,800 --> 00:40:14,560 ದೆವ್ವಗಳೂ ಸಿಗುತ್ತವೆ. 417 00:40:23,200 --> 00:40:24,880 ನೀವು ನನ್ನನ್ನು ಮರೆತಿಲ್ಲವಲ್ಲ? 418 00:40:30,800 --> 00:40:35,440 ಅಲ್ಲಾಹುವಿನ ದಯೆಯಿಂದ ಖಾಲೀನ್ ಭಯ್ಯಾ ತಮ್ಮ ವೈಭವವನ್ನು ಕಳೆದುಕೊಂಡಿಲ್ಲ. 419 00:40:37,880 --> 00:40:39,120 ಮತ್ತು ಮುಖ್ಯವಾಗಿ, 420 00:40:39,920 --> 00:40:42,520 ಹಕ್ಕಿನ ಮೇಲಿನ ಈ ಜಗಳವೇ ನಿಲ್ಲುತ್ತೆ. 421 00:40:46,560 --> 00:40:50,000 ಖಾಲೀನ್ ಭಯ್ಯಾ, ದಯವಿಟ್ಟು ನಿಮ್ಮ ಸಿಂಹಾಸನವನ್ನೇರಿ 422 00:40:51,080 --> 00:40:54,560 ಮತ್ತೊಮ್ಮೆ ಪೂರ್ವಾಂಚಲದ ನಿಯಂತ್ರಣವನ್ನು ತೆಗೆದುಕೊಳ್ಳಿ. 423 00:41:01,040 --> 00:41:02,160 ಈ ಸಿಂಹಾಸನ... 424 00:41:05,400 --> 00:41:06,800 ಈ ಪರಂಪರೆಯನ್ನು... 425 00:41:08,080 --> 00:41:12,320 ನನ್ನ ತಂದೆ ಮತ್ತು ನಾನು ನಿರ್ಮಿಸಿದ್ದೇವೆ. 426 00:41:15,160 --> 00:41:17,800 ಇಲ್ಲದಿದ್ದರೆ ನಿಮ್ಮಲ್ಲಿ ಯಾರೂ ಇರುತ್ತಿರಲಿಲ್ಲ. 427 00:41:20,880 --> 00:41:23,440 ನಾವು ಉಮೇದುವಾರಿಕೆಯನ್ನು ನಿರ್ಧರಿಸುತ್ತಿರುವುದರಿಂದ, 428 00:41:25,320 --> 00:41:28,120 ಆ ಕರ್ತವ್ಯವನ್ನೂ ಪೂರೈಸಲಾಗುತ್ತದೆ. 429 00:41:29,080 --> 00:41:30,840 ದಯವಿಟ್ಟು ಕುಳಿತುಕೊಳ್ಳಿ. ಕೂರಿ. 430 00:41:30,920 --> 00:41:33,000 ಹಾಂ. ಕೂರಿ. ಕುಳಿತು ಮಾತಾಡೋಣ. 431 00:41:37,040 --> 00:41:38,560 ಈ ಸಿಂಹಾಸನದ ಗರಿಮೆಯನ್ನು 432 00:41:39,280 --> 00:41:41,160 ಅದರ ಮೇಲೆ ಕೂರುವವರು ನಿರ್ಧರಿಸುತ್ತಾರೆ. 433 00:41:44,840 --> 00:41:48,880 ಅದರ ಗರಿಮೆಯನ್ನು ಎತ್ತಿಹಿಡಿದು ಅದನ್ನು ಹೆಚ್ಚಿಸುವವರು. 434 00:41:52,200 --> 00:41:54,040 ನಿರ್ಧಾರಗಳನ್ನು ಕಠಿಣ ಮನಸ್ಸಿನಿಂದ, 435 00:41:54,960 --> 00:41:57,080 ಶಿಕ್ಷೆಯನ್ನು ಶಾಂತ ಮನಸ್ಸಿನಿಂದ ನೀಡುವವರು. 436 00:42:02,280 --> 00:42:04,400 ನನ್ನ ದೃಷ್ಟಿಯಲ್ಲಿ, ಒಬ್ಬರು ಮಾತ್ರ ಇದ್ದಾರೆ. 437 00:42:06,480 --> 00:42:09,920 ನನ್ನ ಪ್ರತಿಬಿಂಬ, ಶರದ್ ಶುಕ್ಲಾ. 438 00:42:14,320 --> 00:42:15,320 ಶರದ್... 439 00:42:20,160 --> 00:42:24,200 ಈ ದಿನದಿಂದ, ಇವನೇ ಮಿರ್ಜಾಪುರದ ರಾಜ. 440 00:42:34,320 --> 00:42:36,000 ಆದರೆ ದುರದೃಷ್ಟವಶಾತ್, 441 00:42:37,520 --> 00:42:39,760 ಇವನೇ ಮಿರ್ಜಾಪುರದ ಕೊನೆಯ ರಾಜನಾಗುತ್ತಾನೆ. 442 00:42:50,880 --> 00:42:51,760 ತ್ರಿಪಾಠಿ! 443 00:42:56,640 --> 00:42:58,520 -ಬಾ, ಗುಂಡು ಹೊಡಿ! -ಹಾಂ, ಸರ್! 444 00:42:58,960 --> 00:43:00,480 ಬನ್ನಿ! ಬೇಗ ಹೋಗಿ! ನಡೀರಿ! 445 00:45:48,560 --> 00:45:54,520 ಮಿರ್ಜಾಪುರ್ 446 00:46:08,560 --> 00:46:10,400 ಮನೆಗೆ ಹೋದ ಮೇಲೆ, 447 00:46:10,480 --> 00:46:13,240 ಏನಂತೀಯಾ? ಅಷ್ಟೊಂದು ಆಟಿಕೆಗಳನ್ನು ಬಿಟ್ಟು ಬಂದೆ ಅಂತಾನಾ? 448 00:46:13,720 --> 00:46:15,040 ಅವೆಲ್ಲವನ್ನೂ ತೆರೆಯಬೇಕಾ? 449 00:46:15,960 --> 00:46:17,680 ಇದನ್ನು ರಧಿಯಾಗೆ ಹೇಳುತ್ತಿದ್ದೀಯಾ? 450 00:46:22,280 --> 00:46:23,600 ಆ ಕಾರಿನ ಪಕ್ಕ ನಿಲ್ಲಿಸು. 451 00:46:26,920 --> 00:46:27,920 ಎಲ್ಲಿಗೆ ಕರೆತಂದಿರಿ? 452 00:46:29,400 --> 00:46:31,920 ಚಿಂತಿಸಬೇಡಿ. ಯಾರೋ ನಿಮ್ಮನ್ನು ಭೇಟಿಯಾಗಬೇಕಂತೆ. 453 00:46:32,000 --> 00:46:33,280 ಇದು ಮೇಡಂ ಅವರ ಆದೇಶ. 454 00:47:44,440 --> 00:47:45,440 ದಯವಿಟ್ಟು ಬನ್ನಿ. 455 00:47:49,400 --> 00:47:50,760 ನಮಸ್ತೆ, ಖಾಲೀನ್ ಭಯ್ಯಾ. 456 00:48:06,560 --> 00:48:08,160 ಗುಡ್ಡು. ಗುಡ್ಡು! 457 00:48:10,000 --> 00:48:13,400 ಮಿಶ್ರಾ! ಹೇಮ್ ಸಿಂಗ್! ಗುಡ್ಡು ಎಲ್ಲಿ? 458 00:48:14,760 --> 00:48:16,200 ಕ್ಷಮಿಸಿ, ಖಾಲೀನ್ ಭಯ್ಯಾ. 459 00:48:18,200 --> 00:48:21,080 ಯಾರೋ ತಪ್ಪಿಸಿಕೊಂಡಂತಿದೆ! 460 00:52:24,680 --> 00:52:26,640 ಖಾನ್ ಸಾಬ್, ಯಾರೋ ನಿಮಗಾಗಿ ಬಂದಿದ್ದಾರೆ. 461 00:52:30,600 --> 00:52:35,040 ಬೀಳುವುದು ಒಳ್ಳೆಯದು. ಆಗಲೇ ನಮ್ಮ ಶಕ್ತಿ ಏನಂತ ಗೊತ್ತಾಗುತ್ತೆ. 462 00:52:36,320 --> 00:52:40,240 ಕೋಪಗೊಳ್ಳಬೇಕು. ಆಗಲೇ ನಮ್ಮ ಸ್ಥಾನ ಏನಂತ ಗೊತ್ತಾಗುತ್ತೆ. 463 00:52:41,480 --> 00:52:45,560 ನಮ್ಮವರನ್ನು ಕಂಡುಕೊಳ್ಳಲು ನಾವು ಸೋಲಬೇಕು. 464 00:52:46,960 --> 00:52:49,240 ನಾನು ಜನರನ್ನು ಓದುವ ಕಲೆಯನ್ನು ಕಲಿಯುತ್ತಿದ್ದೇನೆ, 465 00:52:50,520 --> 00:52:54,680 ಪುಸ್ತಕಗಳಿಗಿಂತ ಮುಖಗಳೇ ಹೆಚ್ಚಾಗಿ ಹೇಳುತ್ತವೆ ಎಂದು ಕೇಳಿದ್ದೇನೆ. 466 00:53:04,520 --> 00:53:07,600 ಖಾನ್ ಸಾಬ್, ಭಾಭಿ ನಿಮ್ಮೊಂದಿಗೆ ಮಾತನಾಡಲು ಬಯಸುತ್ತಾರೆ. 467 00:53:09,720 --> 00:53:11,720 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 468 00:53:11,800 --> 00:53:13,800 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆ.ಜಿ.