1 00:00:06,000 --> 00:00:06,833 ಈ ಹಿಂದೆ 2 00:00:06,916 --> 00:00:08,583 ಸಾಡೊಕ್‌ನ ಹಳೆ ಪುಸ್ತಕ ನೋಡುತ್ತಿದ್ದೆ. 3 00:00:08,666 --> 00:00:10,791 ಹಾರ್ಫೂಟ್ಸ್ ಈ ದಾರಿಯಲ್ಲಿ ಹಿಂದೆಯೇ ಹೋಗಿರಬಹುದು. 4 00:00:12,083 --> 00:00:16,333 ಇಸ್ತಾರ್ ನನಗೆ ಶರಣಾಗುತ್ತಾನೆ, ಅವನು ಆಗಲಿಲ್ಲವೆಂದರೆ, 5 00:00:16,375 --> 00:00:20,750 ಅವನು ಸ್ನೇಹಿತರು ಎನ್ನುವ ಅರೆಪಿಳ್ಳೆಗಳನ್ನು ಕೊಂದುಹಾಕುತ್ತೇನೆ. 6 00:00:29,958 --> 00:00:31,541 ನೋರಿ! 7 00:00:31,625 --> 00:00:33,041 ಅಂಚಿನ ಗೆರೆಯ ಬಳಿ ಹೊರಟಿದ್ದೆಯಾ? 8 00:00:33,125 --> 00:00:35,416 ನಮ್ಮ ಶಿಬಿರದ ಬಳಿ ಬದುಕುಳಿದವರು ಕಾಯುತ್ತಿರುತ್ತಾರೆ. 9 00:00:35,541 --> 00:00:37,666 -ನನ್ನ ತಂದೆ ಕೂಡ. -ಅವರು ಹೊರಟುಬಿಟ್ಟಿರಬಹುದು. 10 00:00:37,791 --> 00:00:40,041 -ನಿನ್ನ ಕುಟುಂಬದವರು ಸಿಗಬಹುದಾ? -ನನ್ನ ಭಾವಿ ಪತಿ. 11 00:00:40,125 --> 00:00:42,833 ಅವನಿಗೆ ನಿನ್ನ ಅರ್ಧ ಬಲವಿದ್ದರೂ ಬರ್ತಾನೆ. 12 00:00:42,916 --> 00:00:44,791 ನಾನು ನೀನಂದುಕೊಂಡಷ್ಟು ಬಲಶಾಲಿಯಲ್ಲ. 13 00:00:44,875 --> 00:00:47,750 ನೀನು ನನಗೆ ಏನೇ ಆಗಿದ್ದರೂ, ಅದೆಲ್ಲವೂ ಈಗ ಬೂದಿಯಾಗಿದೆ. 14 00:00:47,833 --> 00:00:51,083 ಹಾಗಾಗಿ ನನ್ನ ಪಾಲಿಗೆ, ನಾವು ಮತ್ತೆ ಮಾತನಾಡುವ ಅಗತ್ಯವಿಲ್ಲ. 15 00:00:54,000 --> 00:00:55,583 ನಿನ್ನ ಕುದುರೆ ವಾಪಸ್ ಬೇಕಾ? 16 00:00:55,666 --> 00:00:58,208 -ಅದು ಎಲ್ಲಿದೆ ಗೊತ್ತಾ? -ಇಲ್ಲೇ ಸಿಗು. ಈ ರಾತ್ರಿ. 17 00:00:58,291 --> 00:01:00,625 ಈ ಕತ್ತಲಲ್ಲಿ ಏನೋ ಮಾಡ್ತಿದ್ದೀಯಾ, ಹುಡುಗ? 18 00:01:03,083 --> 00:01:04,250 ಇದು ಹೊಂಚುದಾಳಿ! 19 00:01:09,375 --> 00:01:12,375 ಸಿದ್ಧತೆಗಳು ಬಹುತೇಕ ಪೂರ್ಣಗೊಂಡಿವೆ, ಮಹಾ ದೊರೆ. 20 00:01:12,458 --> 00:01:14,375 ನಾವು ಮತ್ತೆ ಯುದ್ಧಕ್ಕೆ ಹೋಗಬೇಕೇ? 21 00:01:14,458 --> 00:01:16,583 ನಾವು ಎಂದಿಗೂ ನಿಜವಾಗಿ ಸುರಕ್ಷಿತವಾಗಿರಲ್ಲ, 22 00:01:16,666 --> 00:01:19,541 ಅದು ಸೌರೊನ್ ಬದುಕಿಯೇ ಇಲ್ಲ ಎಂದು ಖಚಿತವಾಗುವವರೆಗೂ. 23 00:01:19,625 --> 00:01:22,208 ಈ ಉಂಗುರವನ್ನು ಧರಿಸಿದಾಗಿನಿಂದ, ನಾನು ಅಗೋಚರ ಜಗತ್ತಿನ 24 00:01:22,291 --> 00:01:24,208 ಮಿಂಚುನೋಟಗಳನ್ನು ಗ್ರಹಿಸಿದ್ದೇನೆ... 25 00:01:25,875 --> 00:01:28,875 ಕೆಲಬ್ರಿಮ್ಬೋರ್ ಗೆ ನಾವು ಬರೆದ ಯಾವ ಪತ್ರಕ್ಕೂ ಉತ್ತರ ಬಂದಿಲ್ಲ. 26 00:01:28,958 --> 00:01:31,000 ಎರೆಗಿಯೊನ್‌ನಲ್ಲಿ ಸೌರೊನ್ ಇರಬಹುದು. 27 00:01:31,083 --> 00:01:33,708 ಮಹಾ ದೊರೆ ಒಂದು ಸಣ್ಣ ತಂಡವನ್ನು ಕಳುಹಿಸಲು ಒಪ್ಪಿದ್ದಾರೆ, 28 00:01:33,791 --> 00:01:36,083 ಕೆಲಬ್ರಿಮ್ಬೋರ್ ಮತ್ತು ಅವರ ನಗರದ ಸುರಕ್ಷತೆಗಾಗಿ. 29 00:01:36,875 --> 00:01:39,291 ಎಲ್ರೊಂಡ್ ಕೆಲಸ ನಿಮ್ಮ ಜೊತೆ ಸೇರಿಕೊಳ್ಳುವುದಲ್ಲ. 30 00:01:39,375 --> 00:01:40,500 ನಿಮ್ಮನ್ನು ಮುನ್ನಡೆಸೋದು. 31 00:02:56,541 --> 00:03:02,541 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 32 00:03:27,333 --> 00:03:29,625 ಕೆಲಬ್ರಿಮ್ಬೋರ್ ನಿಂದ ಇನ್ನೂ ಉತ್ತರ ಸಿಕ್ಕಿಲ್ಲ. 33 00:03:29,708 --> 00:03:33,791 ಆಕ್ಸಾ ಸೇತುವೆ ಮೂಲಕ ಹೋದರೆ, ಎರೆಗಿಯೊನ್‌ಗೆ 150 ಲೀಗುಗಳಷ್ಟೇ ದೂರ. 34 00:03:34,416 --> 00:03:38,375 ಒಬ್ಬ ಬಿಲ್ಲುಗಾರ, ಇಬ್ಬರು ಖಡ್ಗಧಾರಿಗಳು ಬೇಕು. ಯಾರಾದರೂ ಇದ್ದರೆ ಹೇಳು. 35 00:03:38,458 --> 00:03:40,625 ಹೇಳುವುದಾ? ನಾನಾ? 36 00:03:40,708 --> 00:03:42,416 ಇದು ಸರಿಯಾದ ಕ್ರಮವೇ, ನಾಯಕರೇ? 37 00:03:43,458 --> 00:03:46,875 ಮಹಾ ದೊರೆಯ ಆಜ್ಞೆಯ ಮೇರೆಗೆ ನಿನ್ನನ್ನು ಮೊದಲ ಉಪಸೇನಾಧಿಪತಿಯಾಗಿ ನೇಮಿಸಿದೆ. 38 00:03:46,958 --> 00:03:49,791 ಆ ಕರ್ತವ್ಯ ನಿನಗೆ ಒಗ್ಗುವುದಿಲ್ಲವಾದರೆ, ಬೇರೆಯವರನ್ನು ಹುಡುಕುವೆ. 39 00:03:50,458 --> 00:03:52,333 -ಹೌದು. -"ಹೌದು" ಅಂದರೆ? 40 00:03:54,416 --> 00:03:58,416 ಹೌದು, ಒಬ್ಬ ಬಿಲ್ಲುಗಾರ ಮತ್ತು ಇಬ್ಬರು ಖಡ್ಗಧಾರಿಗಳ ಹೆಸರು ಶಿಫಾರಸು ಮಾಡುವೆ. 41 00:03:59,833 --> 00:04:02,833 ಬೇರೆ ಯಾರನ್ನು ಕರೆದೊಯ್ಯೋಣ, ನಾಯಕರೇ? 42 00:04:56,041 --> 00:04:57,375 ಮಿಂಚು? 43 00:05:01,666 --> 00:05:03,541 ಯಾವುದೇ ಐಹಿಕ ಶಕ್ತಿಯಿಂದ ಇದು ಸಾಧ್ಯವಿಲ್ಲ. 44 00:05:04,875 --> 00:05:07,083 ಇದು ಸೌರೊನ್‌ನ ಕೆಲಸ. 45 00:05:07,166 --> 00:05:10,166 ಕೆಮ್ನೀರ್. ನಮಗೆ ಬೇರೆ ಯಾವ ದಾರಿಗಳಿವೆ? 46 00:05:13,708 --> 00:05:16,541 ಅದರ ಸುತ್ತ ಸಾಗಲು, ಒಂದೋ, ನಾವು ಉತ್ತರದ ಕಡೆಗೆ ತಿರುಗಬೇಕು, 47 00:05:16,625 --> 00:05:18,083 ಎರಡು ವಾರ ಹೆಚ್ಚಿನ ಪ್ರಯಾಣ... 48 00:05:18,833 --> 00:05:19,750 ಇಲ್ಲದಿದ್ದರೆ? 49 00:05:20,500 --> 00:05:24,000 ಟುರಿನ್ ಗೋರ್ಥಾಡ್ ಬೆಟ್ಟಗಳ ಮೂಲಕ ದಕ್ಷಿಣಕ್ಕೆ ಹೋಗೋಣ. 50 00:05:25,333 --> 00:05:28,750 ಎರೆಗಿಯೊನ್‌ಗೆ ಅದರ ಮೂಲಕ ಬೇಗ ಹೋಗಬಹುದು. 51 00:05:39,916 --> 00:05:41,875 ಆ ಬೆಟ್ಟಗಳಲ್ಲಿ ದುಷ್ಟ ಶಕ್ತಿ ಇದೆ. 52 00:05:44,916 --> 00:05:48,125 ಪ್ರಾಚೀನವಾದದ್ದು, ಮತ್ತು ದುರುದ್ದೇಶದಿಂದ ತುಂಬಿದೆ. 53 00:05:49,833 --> 00:05:53,750 ಸೌರೊನ್‌ಗೆ ನಾವು ಆ ದಾರಿಯಲ್ಲೇ ಹೋಗಬೇಕು. ಬೇರೆ ದಾರಿಯಲ್ಲಿ ಹೋಗೋಣ. 54 00:05:54,291 --> 00:05:56,791 ವೈರಿಯು ಖಂಡಿತ ಎರಡೂ ದಾರಿಗಳನ್ನು ಗಮನಿಸುತ್ತಿರುತ್ತಾನೆ. 55 00:06:00,791 --> 00:06:04,916 ಈ ಕುಸಿತದಿಂದ ಕೆಲಬ್ರಿಮ್ಬೋರ್ ನ ಬೇಗ ತಲುಪುವುದು ತುಂಬಾ ಮುಖ್ಯವಾಗಿದೆ. 56 00:06:05,000 --> 00:06:08,208 ಅವನ ಬಲೆಯೊಳಗೆ ಹೊಕ್ಕರೆ, ನಾವೆಲ್ಲಿಗೂ ಬೇಗ ತಲುಪಲ್ಲ. 57 00:06:15,000 --> 00:06:16,083 ದಕ್ಷಿಣಕ್ಕೆ ಹೋಗೋಣ. 58 00:06:18,625 --> 00:06:19,875 ನಾಯಕರೇ, ನಾನು ವಿರೋಧಿಸುವೆ. 59 00:06:19,958 --> 00:06:21,958 ಈ ವಿಚಾರದಲ್ಲಿ ನಿನ್ನ ಅಭಿಪ್ರಾಯ ಕೇಳಾಯಿತು. 60 00:06:22,041 --> 00:06:23,208 ಎಲ್ರೊಂಡ್. 61 00:06:26,708 --> 00:06:28,250 ಅಭಿಪ್ರಾಯ ಕೇಳಿದೆ, ಉಪಸೇನಾಧಿಪತಿ. 62 00:06:31,250 --> 00:06:32,791 ದಕ್ಷಿಣಕ್ಕೆ ಹೋಗೋಣ. 63 00:06:45,250 --> 00:06:50,958 ಈ ತುಕಡಿಗೆ ಆ ಅಗ್ಗದ ಒಡವೆಯ ಸಲಹೆ ಬೇಡ, ನಿನಗೂ ಬೇಡ. 64 00:06:53,041 --> 00:06:56,875 ಈ ಷರತ್ತುಗಳಿಗೆ ನೀನು ಒಪ್ಪದಿದ್ದರೆ, ಈಗಲೇ ಹೊರಟು ಲಿಂಡೊನ್‌ಗೆ ಮರಳು. 65 00:06:58,083 --> 00:07:00,541 -ನನಗೆ ಇಷ್ಟವೇ. -ಮತ್ಯಾಕೆ ಒಪ್ಪುತ್ತಿಲ್ಲ? 66 00:07:02,500 --> 00:07:05,208 ಯಾಕೆಂದರೆ ಈ ತುಕಡಿಯಲ್ಲಿ ಯಾರೂ ಸಾಯುವುದು ನನಗಿಷ್ಟವಿಲ್ಲ. 67 00:07:06,500 --> 00:07:07,833 ನೀವೂ ಸಹ. 68 00:07:11,750 --> 00:07:13,125 ನೋರಿ! 69 00:07:41,791 --> 00:07:44,000 ನೋರಿ! ಪೋಪ್ಪಿ! 70 00:08:20,458 --> 00:08:24,791 ಮನ್ನಿಸಬೇಕು. ನೀವೇನಾದರೂ ಇಲ್ಲಿ ಇಬ್ಬರು ಅರೆಪಿಳ್ಳೆಗಳು ಬರುವುದನ್ನು ಕಂಡಿರಾ? 71 00:08:32,416 --> 00:08:33,541 ನಿನಗೆ ಮೇಕೆ ಸಿಕ್ಕಿದೆ. 72 00:08:36,416 --> 00:08:40,708 ನಾನು ಹುಡುಕುತ್ತಿದ್ದದ್ದು... ಇದನ್ನಲ್ಲ. 73 00:08:41,791 --> 00:08:43,791 ಸರಿ, ನೀನು ಹುಡುಕುತ್ತಿರುವುದೇ ಬೇರೆ, 74 00:08:43,875 --> 00:08:46,083 ನಿನಗೆ ಈಗ ಸಿಗುವುದೇ ಬೇರೆ, ಅಲ್ವಾ? 75 00:08:47,166 --> 00:08:51,416 ಚಿನ್ನು ಮರಿ ಮುದ್ದು ಮರಿ ಹಾಡಿ ಕುಣಿ ನೀನು 76 00:08:51,500 --> 00:08:55,500 ಮರಳ ಹುಳು ಹುಲ್ಲ ಮೇಲೆ ಮರದ ಸುತ್ತ ಮುತ್ತ ಜೇನು 77 00:08:56,458 --> 00:08:59,458 ನಿಮ್ಮ ಬೆಟ್ಟದ ಮೇಲೆ ಕೆಲವು ನಕ್ಷತ್ರಗಳಿವೆ. 78 00:09:00,958 --> 00:09:02,500 ಬೆಟ್ಟಗಳ ಮೇಲೆ ನಕ್ಷತ್ರಗಳಿರ್ತವೆ. 79 00:09:02,583 --> 00:09:05,208 ನಾವು ಈ ನಕ್ಷತ್ರಗಳನ್ನು ಹುಡುಕುತ್ತಿದ್ದೆವು. 80 00:09:05,291 --> 00:09:07,000 ನಾನು ಆಶಿಸಿದ್ದೆ... 81 00:09:09,625 --> 00:09:11,666 ಕ್ಷಮಿಸಿ, ಒಂದು ಕ್ಷಣ-- 82 00:09:11,750 --> 00:09:14,875 ಸೂರ್ಯ ತಾರೆ ಚಂದ್ರ ಮಂಜು 83 00:09:16,916 --> 00:09:19,125 ಮತ್ತು ಮೋಡ ಕವಿದ ಬಾನು 84 00:09:39,875 --> 00:09:42,750 ರೆಂಬೆ... ಖಂಡಿತ... 85 00:09:44,000 --> 00:09:46,958 ಹೌದು. ಇದೇ ಇರಬೇಕು. 86 00:10:58,750 --> 00:10:59,791 ಪೋಪ್ಪಿ! 87 00:11:01,416 --> 00:11:02,666 ಎದ್ದೇಳು! 88 00:11:10,875 --> 00:11:13,333 -ಅವನು ಕಾಣಿಸಿದನಾ? -ಯಾರು? 89 00:11:13,416 --> 00:11:17,666 ಇನ್ಯಾರು? ನಮ್ಮ ಸ್ನೇಹಿತ,ರಕ್ತಸುರೀತಿರೋ ಆಗಂತುಕ. 90 00:11:20,791 --> 00:11:23,250 ಅವನು ಎಲ್ಲಾದರೂ ಇರಲಿ, ನಾವೆಲ್ಲಿದ್ದೇವೆ? 91 00:11:31,208 --> 00:11:32,375 ನೋರಿ! ಓಡು! 92 00:11:53,625 --> 00:11:56,166 ಅವರನ್ನು ಕಳೆದುಕೊಂಡೆವೇನೋ. 93 00:11:56,250 --> 00:11:57,875 ನೀವು ಎಲ್ಲಿಂದ ಬಂದಿರಿ? 94 00:12:00,750 --> 00:12:01,958 ನಾವೇ? 95 00:12:04,708 --> 00:12:05,791 ನೀನು ಎಲ್ಲಿಂದ ಬಂದೆ? 96 00:12:07,833 --> 00:12:09,666 ನನ್ನ ತಲೆ. 97 00:12:12,083 --> 00:12:13,833 -ಇಲ್ಲಿರುವೆ. -ಹಾರ್ಫೂಟ್ಸ್ ಇರುತ್ತಾರಾ? 98 00:12:13,916 --> 00:12:15,250 ಹಾರ್ಫೂಟ್ ಎಂದರೇನು? 99 00:12:15,333 --> 00:12:16,625 ಅಂದರೆ, ನೀವೇ-- 100 00:12:18,500 --> 00:12:20,208 ಅಸಲಿಗೆ ಯಾರು ನೀನು? 101 00:12:21,416 --> 00:12:22,708 ನಾನು ಯಾರೂ ಅಲ್ಲ. 102 00:12:23,875 --> 00:12:25,791 ನೀನು "ಯಾರೂ ಅಲ್ಲ" ಆಗಲಾರೆ. 103 00:12:25,875 --> 00:12:27,916 ನನ್ನನ್ನು ಎಲ್ಲರೂ ಹಾಗೆಯೇ ಕರೆಯುತ್ತಾರೆ. 104 00:12:28,000 --> 00:12:30,791 ಎಲ್ಲರೂ ಯಾರೂ ಅಲ್ಲ ಅಂದರೆ, ಬೇರೆ ಹೆಸರಲ್ಲಿ ಯಾರೂ ಕರೆಯಲ್ವಾ? 105 00:12:31,500 --> 00:12:33,708 ನನ್ನ ಅಮ್ಮ ಮೆರಿಮ್ಯಾಕ್ ಎಂದು ಕರೆಯುತ್ತಾರೆ. 106 00:12:36,125 --> 00:12:37,333 ನಾನು ಪೋಪ್ಪಿ. 107 00:12:47,041 --> 00:12:48,291 ನಾನು ನೋರಿ. 108 00:12:52,958 --> 00:12:54,375 ಆ ನೀರು ಎಲ್ಲಿ ಸಿಕ್ಕಿತು? 109 00:12:54,458 --> 00:12:56,500 -ಕೂಗಬೇಡಿ. -ನೀನು ಕದ್ದಿದ್ದೀಯ ತಾನೆ? 110 00:12:56,583 --> 00:12:58,708 ಆ ಬಾವಿಯಿಂದ ಕದ್ದಿದ್ದೀಯ. ಮಾನವರದ್ದು. 111 00:13:01,041 --> 00:13:02,625 -ಎಲ್ಲಿಗೆ ಹೋಗುವೆ? -ಎಲ್ಲೂ ಇಲ್ಲ. 112 00:13:02,708 --> 00:13:03,541 ನಾವೂ ಬರುವೆವು. 113 00:13:03,625 --> 00:13:06,000 ಕ್ಷಮಿಸಿ, ಹಳ್ಳಿಗೆ ಹೊರಗಿನವರು ಬರುವ ಹಾಗಿಲ್ಲ. 114 00:13:06,083 --> 00:13:07,666 ಹಳ್ಳಿಯೇ? ಯಾವ ಹಳ್ಳಿ? 115 00:13:07,750 --> 00:13:09,750 ಹಳ್ಳಿ ಇಲ್ಲ! ಯಾವುದೇ ಹಳ್ಳಿ ಇಲ್ಲ. 116 00:13:09,833 --> 00:13:11,375 ಇಲ್ಲಿ ಕೇಳು, ಯಾರೂ ಇಲ್ಲ. 117 00:13:13,000 --> 00:13:14,291 ನಿಂಜೊತೆ ಬರುತ್ತೇವೆ 118 00:13:14,375 --> 00:13:17,541 ಇಲ್ಲದಿದ್ದರೆ ನಾನೇ ನಿನ್ನನ್ನು ಹಿಡಿದುಕೊಡುತ್ತೇನೆ, ನೀರ್ಗಳ್ಳ. 119 00:13:23,916 --> 00:13:26,791 ನಮ್ಮ ಗ್ರಾಮ-ನಾಯಕಿ ಗೂಂಡ್ ಅನ್ನು ಭೇಟಿಯಾಗಲಿದ್ದೀರಿ. 120 00:13:26,875 --> 00:13:30,833 ಆಕೆ ನಿಮ್ಮನ್ನು ಕರೆಸಿಕೊಳ್ಳಬೇಕೆಂದು ಯೋಚಿಸಬೇಕಾದರೂ, ನಾಲ್ಕು ನಿಯಮಗಳಿವೆ. 121 00:13:30,916 --> 00:13:33,541 ಒಂದು, ಆಕೆಯ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಡಿ. 122 00:13:33,625 --> 00:13:36,375 ಎರಡು, ಯಾವಾಗಲೂ ಮೂರು ಹೆಜ್ಜೆ ಹಿಂದೆ ನಿಂತುಕೊಳ್ಳಿ. 123 00:13:36,458 --> 00:13:41,250 ನಾಲ್ಕು, ಎಂದಿಗೂ, ಎಂದೆಂದಿಗೂ, ಯಾವತ್ತಿಗೂ, ಏನೇ ಆದರೂ, ಆಕೆಯನ್ನು "ಗೂಂಡ್" ಎಂದು ಕರೆಯಬೇಡಿ. 124 00:13:42,750 --> 00:13:43,958 -ಅರ್ಥವಾಯಿತು. -ಅರ್ಥವಾಯಿತು. 125 00:13:48,333 --> 00:13:50,125 ಅದು ಮೂರು ನಿಯಮಗಳಾ ಅಥವಾ ನಾಲ್ಕಾ? 126 00:13:50,208 --> 00:13:51,708 ನಾನು ಸರಿಯಾಗಿ ಗಮನಿಸಲಿಲ್ಲ. 127 00:14:06,416 --> 00:14:08,375 ಹೋಗು, ಈಗ ಆನಂದಿಸು. 128 00:14:14,416 --> 00:14:15,916 ಬನ್ನಿ. ಆ ಕಡೆ. 129 00:14:20,666 --> 00:14:22,500 ಅದರ ಮೇಲೆ ಸೂರ್ಯನ ಬೆಳಕು ಬಿದ್ದಿದೆ. 130 00:14:26,875 --> 00:14:28,791 ಅಲ್ಲಿ ನೋಡು. 131 00:14:28,875 --> 00:14:30,833 ಒಳ್ಳೆಯ ತಾಜಾ ಗುಂಪು, ಸುಲಿಯಲು ಸಿದ್ಧವಾಗಿದೆ. 132 00:14:42,416 --> 00:14:44,666 -ದೊಡ್ಡ ಟೊಪ್ಪಿ, ನನ್ನಂತೆ! -ಅಪ್ಪನಂತೆ! 133 00:14:48,708 --> 00:14:51,291 ಹಾರ್ಫೂಟ್ಸ್, ಬಿಲಗಳಲ್ಲಿ ವಾಸಿಸುತ್ತಿದ್ದಾರೆಯೇ? 134 00:14:54,375 --> 00:14:57,041 -ಇದು ಸಹಜವಾಗಿ ಕಾಣುತ್ತಿಲ್ಲ. -ನಾವು ಹಾರ್ಫೂಟ್ಸ್ ಅಲ್ಲ. 135 00:14:58,125 --> 00:14:59,333 ನಾವು ಸ್ಟೂರ್ಸ್. 136 00:15:00,375 --> 00:15:02,166 ಸ್ಟೂರ್ಸ್? 137 00:15:02,250 --> 00:15:06,291 ಅವರನ್ನು ಇಲ್ಲಿಗೆ ಯಾಕೆ ಕರೆತಂದೆ? ಯಾರೂ ಅಷ್ಟು ದಡ್ಡರಲ್ಲ. 138 00:15:06,375 --> 00:15:07,708 ಅವರಿಗೆ ಅಡಗಲು ಜಾಗ ಬೇಕಿತ್ತು. 139 00:15:07,791 --> 00:15:10,833 ಏನು, ಮರುಭೂಮಿಯ ಅರ್ಧದಷ್ಟು ರಾಕ್ಷಸರು ಅವರಿಗಾಗಿ ಹುಡುಕುತ್ತಿರುವಾಗಲಾ? 140 00:15:10,916 --> 00:15:14,250 ನಿನ್ನ ಮೆದುಳನ್ನು ರಣಹದ್ದಿಗೆ ಹಾಕಿದರೆ, ಅದು ಹಿಂದಕ್ಕೆ ಹಾರುತ್ತೆ, ಕಣೋ. 141 00:15:14,333 --> 00:15:15,666 ಅವನೊಂದಿಗೆ ಸರಿಯಾಗಿ ಮಾತಾಡಿ. 142 00:15:18,125 --> 00:15:19,958 ನನಗೇ ಎದುರಿಸಿ ಮಾತಾಡ್ತೀಯಾ? 143 00:15:21,291 --> 00:15:22,625 ಅದೇ ನಾಲ್ಕನೆಯ ನಿಯಮ. 144 00:15:23,333 --> 00:15:26,250 ನಿಮ್ಮ ಬೆನ್ನುಬಿದ್ದಿರುವ ಗಾಡ್ರಿಮ್ಗಳಿಗೆ ನಿಮ್ಮ ಕೈ, ಕಾಲು, 145 00:15:26,333 --> 00:15:28,291 ಮತ್ತು ಮೂಳೆಗಳನ್ನು ಹಾಕದಿರಲು ಕಾರಣ ಕೊಡು. 146 00:15:31,916 --> 00:15:33,708 ಹೇಳಿ, ನಿಮ್ಮ ವಾದ ಮಂಡಿಸಿ. 147 00:15:37,916 --> 00:15:42,083 ನಾನು ನದಿಗಳು, ಬೆಟ್ಟಗಳು ಮತ್ತು ಮರುಭೂಮಿಗಳನ್ನು ದಾಟಿದೆ, 148 00:15:42,166 --> 00:15:45,416 ನನ್ನ ಮಿತ್ರ ತನ್ನ ವಿಧಿಯನ್ನು ಕಂಡುಕೊಳ್ಳಲಿ ಎಂದು ನೆರವಾಗಲು, 149 00:15:45,500 --> 00:15:48,541 ಇಡೀ ಪ್ರಪಂಚದ ಹಣೆಬರಹ ಅವನ ಮೇಲೆ ಅವಲಂಬಿತವಾಗಿದೆ, ನಿಮ್ಮದೂ ಸಹ-- 150 00:15:48,625 --> 00:15:49,833 ಒಂದು ಕಾರಣ ಕೊಡು ಅಂದೆ. 151 00:15:51,000 --> 00:15:53,375 ಈ ನಿಮ್ಮ ಸ್ನೇಹಿತ, ಅಸಲಿಗೆ ಯಾರವನು? 152 00:15:53,916 --> 00:15:55,416 -ಅವನೊಬ್ಬ ದೈತ್ಯ. -ದೈತ್ಯನೇ? 153 00:15:55,500 --> 00:15:57,791 -ಏನು, ಎಲ್ಫ್ ರೀತಿಯಾ? -ಅದಕ್ಕಿಂತ ದೊಡ್ಡವನು. 154 00:15:57,875 --> 00:15:59,250 ಅವನು ಮಹಾ ದೈತ್ಯ ಎಲ್ಫ್ ಏನೋ. 155 00:16:00,208 --> 00:16:01,208 ಅವನು ಎಲ್ಫ್ ಅಲ್ಲ. 156 00:16:03,916 --> 00:16:05,125 ಅವನೊಬ್ಬ ಮಾಂತ್ರಿಕ. 157 00:16:08,875 --> 00:16:11,125 ಈ ಆಕಾಶದ ಕೆಳಗಿರುವ ಒಬ್ಬನೇ ಮಾಂತ್ರಿಕನೆಂದರೆ, 158 00:16:13,250 --> 00:16:14,666 ಅದು ಕಾಳ ಮಾಂತ್ರಿಕ. 159 00:16:14,750 --> 00:16:17,666 ಅವನ ಮಿತ್ರರು ನಮಗೆ ಖಂಡಿತ ಬೇಡ. 160 00:16:18,166 --> 00:16:19,041 ಅವರನ್ನು ಕಟ್ಟಿರಿ. 161 00:16:19,541 --> 00:16:21,875 ಏನು? ಏನು? ಬೇಡ. 162 00:16:22,583 --> 00:16:24,875 ಏನು? ಅವಳನ್ನು ಬಿಡಿ. ಯಾವ ಕಾಳ ಮಾಂತ್ರಿಕ? 163 00:16:27,666 --> 00:16:31,875 ಇಸ್ತಾರ್ ನಾವು ನಿರೀಕ್ಷಿಸಿದ್ದಕ್ಕಿಂತ ಈಗಾಗಲೇ ಹೆಚ್ಚು ಶಕ್ತಿಶಾಲಿಯಾಗಿದ್ದಾನೆ. 164 00:16:33,500 --> 00:16:37,291 ಏಕಾಏಕಿ ಅವನೆಬ್ಬಿಸಿದ ಮರಳಿನ ಬಿರುಗಾಳಿಯಿಂದ ನನ್ನವರಿಬ್ಬರು ಸತ್ತರು. 165 00:16:38,875 --> 00:16:41,125 ಈಗ ಉತ್ತರದ ಕಡೆಗೆ ಹೊರಟಿದ್ದಾನೆ. 166 00:16:41,208 --> 00:16:43,583 ಸನ್ಯಾಸಿ... ಇರುವ ಕಡೆಗೆ. 167 00:16:46,416 --> 00:16:48,416 ಹಾಗಾದರೆ ಅರೆಪಿಳ್ಳೆಗಳು? 168 00:16:49,625 --> 00:16:54,333 ನಾವು ಈಗಲೂ ಮರುಭೂಮಿಯಲ್ಲಿ ಹುಡುಕುತ್ತಿದ್ದೇವೆ. ಅವರು ಹೆಚ್ಚು ಕಾಲ ತಪ್ಪಿಸಿಕೊಳ್ಳಲಾಗದು. 169 00:16:55,000 --> 00:16:57,625 ನನ್ನ ಜೀವದ ಮೇಲೆ ಆಣೆ ಮಾಡಿ ಹೇಳುವೆ. 170 00:16:57,708 --> 00:17:01,625 ಒಂದೋ, ನೀನು ದೊಡ್ಡ ಮೂರ್ಖ, ಗಾಡ್ರಿಮ್, 171 00:17:02,958 --> 00:17:05,083 ಅಥವಾ ತುಂಬಾ ಧೈರ್ಯಶಾಲಿ. 172 00:17:07,375 --> 00:17:11,208 ಹಾರ್ಫೂಟ್ಸ್ ಬಗ್ಗೆಯಷ್ಟೇ ಚಿಂತಿಸು. 173 00:17:11,291 --> 00:17:14,375 ಇಸ್ತಾರನನ್ನು ನಾನು ನೋಡಿಕೊಳ್ಳುವೆ. 174 00:17:25,291 --> 00:17:27,208 ಅವನನ್ನು ಮತ್ತೆ ಹೊರಗೆ ಬಿಡಿ. 175 00:17:28,875 --> 00:17:31,375 ನೀನು ಎಚ್ಚರವಾಗಿರಬಾರದು. 176 00:17:32,125 --> 00:17:35,833 ಮಣ್ಣು ತಿನ್ನಿರಿ. ಆಳವಾಗಿ ತೋಡಿರಿ. 177 00:17:36,791 --> 00:17:38,666 ನೀರು ಕುಡಿಯಿರಿ. 178 00:17:40,333 --> 00:17:42,166 ನಿದ್ದೆ ಮಾಡಿರಿ. 179 00:17:51,250 --> 00:17:52,500 ನೀವು ಯಾರು? 180 00:17:55,291 --> 00:17:57,875 ನನ್ನನ್ನು ಏನೆಂದಾದರೂ ಕರೆದು ತುಂಬಾ ಕಾಲವಾಯಿತು, 181 00:17:59,125 --> 00:18:02,625 ಆದರೆ ವಿಧಿವಿಂಡಲ್ ನಲ್ಲಿ, ಜನ ನನ್ನನ್ನು ಬೊಂಬಡಿಲ್ ಅಂತ ಕರೆಯುತ್ತಿದ್ದರು. 182 00:18:04,083 --> 00:18:05,291 ಟಾಮ್ ಬೊಂಬಡಿಲ್. 183 00:18:07,041 --> 00:18:12,041 ದೂರದ ಪಶ್ಚಿಮದಲ್ಲಿ ಸೂರ್ಯ ಮುಳುಗುವನು ಇಷ್ಟರಲ್ಲೇ ನೀನು ಹುಡುಕಲಿರುವೆ 184 00:18:12,958 --> 00:18:15,625 ಈಗ ನಾಚಿಕೆಪಡಬೇಡ, ಗೋಲ್ಡ್‌ಬೆರಿ... 185 00:18:15,708 --> 00:18:21,708 ಇರುಳಿನ-ನೆರಳುಗಳು ಬಿದ್ದಾಗ ಬಾಗಿಲು ತೆರೆಯುತ್ತದೆ 186 00:18:27,166 --> 00:18:30,125 ನಿನ್ನ ಹೊಲಸು ನಿಲುವಂಗಿಗೆ ನನ್ನ ಕೈಲಾದಷ್ಟು ಮಾಡಿದ್ದೇನೆ. 187 00:18:33,583 --> 00:18:35,375 ಕೈಗಳನ್ನು ತೊಳೆದುಕೋ, ಮುಖ ತೊಳೆದುಕೋ, 188 00:18:35,458 --> 00:18:37,125 ಆಮೇಲೆ ಬೆಂಕಿಯ ಹತ್ತಿರ ನಂಜೊತೆ ಬಾ. 189 00:18:39,625 --> 00:18:43,000 ಯಾರಾದರೂ... ಅಲ್ಲಿ ನಿಮ್ಮ ಜೊತೆ ಇದ್ದಾರಾ? 190 00:18:44,250 --> 00:18:46,500 ಯಾರೋ ಹೆಂಗಸು ಹಾಡಿದಂತಿತ್ತು. 191 00:18:46,583 --> 00:18:49,791 ಹೆಂಗಸಾ? ಯಾವ ಹೆಂಗಸು? 192 00:18:51,291 --> 00:18:53,333 ನಿಮ್ಮೊಂದಿಗೆ ಬೇರೆ ಯಾರೂ ಇಲ್ಲವೇ? 193 00:18:55,583 --> 00:18:56,833 ನೀನು ಇದ್ದೀಯ. 194 00:18:57,958 --> 00:18:59,583 ಇದ್ದೀಯ ಅಂದುಕೊಳ್ಳುವೆ. ಇದ್ದೀಯಾ? 195 00:19:03,291 --> 00:19:04,291 ಹೌದು. 196 00:19:20,708 --> 00:19:26,583 ಈಗ ಹೇಳು, ಆ ನಿನ್ನ ನಕ್ಷತ್ರಗಳ ಅಡಿಯಲ್ಲಿ ಅದೇನು ಹುಡುಕುತ್ತಿದ್ದೆ? 197 00:19:27,291 --> 00:19:29,041 ಈ ಟಾಮ್ ನಂತೂ ಖಂಡಿತ ಅಲ್ಲ. 198 00:19:31,541 --> 00:19:33,166 ನನ್ನ ಗೆಳೆಯರನ್ನು ಹುಡುಕುತ್ತಿದ್ದೆ. 199 00:19:35,875 --> 00:19:37,625 ನಕ್ಷತ್ರಗಳಿಗೂ ಗೊತ್ತಿರುವಂತಿಲ್ಲ. 200 00:19:38,625 --> 00:19:40,625 ಅವುಗಳು ಕೂಡ ಹೊಸಬರೇ. 201 00:19:40,708 --> 00:19:41,875 ಒಂದು ವರ್ಷ ಕತ್ತಲೆ. 202 00:19:41,958 --> 00:19:43,708 ಮುಂದಿನ ವರ್ಷ, ಮೇಲೆ ನೋಡಿದರೆ, 203 00:19:45,291 --> 00:19:49,500 ನಿನ್ನನ್ನು ನೋಡುತ್ತಿರುವ ಸಣ್ಣ ಕಣ್ಣುಗಳ ಸಾಗರವೇ ಅಲ್ಲಿರುತ್ತೆ. 204 00:19:51,708 --> 00:19:55,916 ಈಗ, ಅವಕ್ಕೆ ಎಲ್ಲವೂ ಗೊತ್ತು ಅಂದುಕೊಳ್ಳುತ್ತವೆ, ಆದರೆ ಹೊಸಬರು. 205 00:19:57,166 --> 00:19:58,583 ಇನ್ನೂ ಹೊಸಬರೇ. 206 00:20:05,916 --> 00:20:07,333 ನೀವು ಏನು? 207 00:20:08,458 --> 00:20:12,083 ನನ್ನ ಹೆಸರು ಇನ್ನೂ ಗೊತ್ತಾಗಿಲ್ವಾ? ಅದೊಂದೇ ಉತ್ತರ. 208 00:20:14,083 --> 00:20:15,916 ಹೇಳು, ನೀನು ಯಾರು, 209 00:20:16,000 --> 00:20:18,750 ಏಕಾಂಗಿ, ನೀನೇ, ಮತ್ತು ಹೆಸರಿಲ್ಲದವನು? 210 00:20:19,583 --> 00:20:24,041 ಆದರೆ ನೀನು ಯುವಕ, ಮತ್ತು ನಾನು ಮುದುಕ. 211 00:20:25,958 --> 00:20:28,333 ಹಿರಿಯವನು, ಅದೇ ನಾನು. 212 00:20:30,833 --> 00:20:32,250 "ಹಿರಿಯವನು" ಅಂದರೆ? 213 00:20:34,500 --> 00:20:35,875 ಹಿರಿಯವನು. 214 00:20:37,500 --> 00:20:40,083 ನನ್ನ ಮಾತನ್ನು ನೆನಪಿಟ್ಟುಕೋ, ಮಿತ್ರ, 215 00:20:40,166 --> 00:20:43,375 ನದಿ ಮತ್ತು ಮರಗಳು ಹುಟ್ಟೋಕೂ ಮುನ್ನವೇ ಟಾಮ್ ಇದ್ದ. 216 00:20:44,416 --> 00:20:47,625 ಟಾಮ್ ಗೆ ಮೊದಲ ಮಳೆಹನಿ ಮತ್ತು ಸಿಂಧೂ ಮರದ ಹಣ್ಣು ಈಗಲೂ ನೆನಪಿವೆ. 217 00:20:48,541 --> 00:20:52,291 ಭಯವೇ ಇಲ್ಲದ ಕಾಲದಿಂದಲೂ ನಕ್ಷತ್ರಗಳಡಿಯ ಕತ್ತಲು ಅವನಿಗೆ ನೆನಪಿದೆ. 218 00:20:55,083 --> 00:20:59,791 ಈ ಸ್ಥಳವೆಲ್ಲಾ ಹಸಿರಿನಿಂದ ಕಂಗೊಳಿಸುತ್ತಿತ್ತು. ಈಗ, ಇಲ್ಲಿ ಕೇವಲ ಮರಳು ತುಂಬಿದೆ. 219 00:21:02,333 --> 00:21:05,083 ಇದನ್ನು ನಂಬಲು ನಾನೇ ಬಂದು ನೋಡಬೇಕಾಯಿತು. 220 00:21:06,750 --> 00:21:08,583 ಪಕ್ಷಿಗಳ ಗೀತೆಯನ್ನೂ ಮುಟ್ಟದವರಿಲ್ಲ. 221 00:21:09,083 --> 00:21:12,500 ಅಲ್ಲಿರುವ ನಿನ್ನ ಮರ ಕೂಡ. ಮುದಿಯ ಮರಗಬ್ಣ 222 00:21:12,583 --> 00:21:14,166 ನಾನಂದುಕೊಂಡೆ-- 223 00:21:14,250 --> 00:21:18,958 ಆತ... ನನಗೊಂದು ರೆಂಬೆಯನ್ನೇನಾದರೂ ಕೊಡಬಹುದಾ ಅಂತ. 224 00:21:19,041 --> 00:21:21,250 ನೀನು ಕೇಳಿ ನೋಡಬೇಕಿತ್ತು. 225 00:21:28,750 --> 00:21:33,291 ಆರಾಮಾಗಿ, ಇಯಾರ್ವೈನ್. ಆರಾಮಾಗಿ. 226 00:21:35,125 --> 00:21:36,125 ನನಗೆ ಗೊತ್ತು. 227 00:21:37,416 --> 00:21:41,458 ಈ... ಜಾದು. ಇದನ್ನು ನನಗೆ ಹೇಳಿಕೊಡ್ತೀರಾ? 228 00:21:42,750 --> 00:21:47,333 ಹೇಳಿಕೊಡುವುದಾ? ಇಲ್ಲಿ ಕಲಿಯುವುದು ಏನಿದೆ? 229 00:21:50,708 --> 00:21:55,416 ನೀವು ಮರಗಳನ್ನು, ಗಾಳಿ, ಮತ್ತು ಬೆಂಕಿಯನ್ನು ನಿಯಂತ್ರಿಸುತ್ತೀರಿ. 230 00:21:55,500 --> 00:21:58,208 ಅವನ್ನು ನಿಮ್ಮದೇ ಎಂಬಂತೆ ಪಳಗಿಸುತ್ತೀರಿ. 231 00:21:58,291 --> 00:22:00,583 ಎಲ್ಲವೂ ಎಲ್ಲದಕ್ಕೂ ಸೇರಿವೆ. 232 00:22:01,791 --> 00:22:04,208 ನೀನು ನಿನಗೆ ಸೇರಿರುವಂತೆ. 233 00:22:04,291 --> 00:22:09,708 ಹಾಗಾದರೆ, ದಂಡವನ್ನು ಬಳಸುವುದು ಹೇಗೆ ಎಂದು ನನಗೆ ಹೇಳಿಕೊಡ್ತೀರಾ? 234 00:22:10,833 --> 00:22:14,333 ಮಾಂತ್ರಿಕನ ದಂಡವು ಒಂದು ಹೆಸರಿದ್ದಂತೆ. 235 00:22:15,375 --> 00:22:20,375 ನೀನು ಅದಕ್ಕೆ ಯೋಗ್ಯನೆಂದು ಸಾಬೀತುಪಡಿಸಿದರೆ, ಅದು ತಾನಾಗಿಯೇ ನಿನಗೆ ಒಲಿಯುತ್ತದೆ. 236 00:22:21,625 --> 00:22:25,916 ನೀನು ಇಂದು ಅದಕ್ಕೆ ಯೋಗ್ಯನಲ್ಲ ಎಂದು ತೋರಿಸಿದೆ. ಇನ್ನೂ ಇಲ್ಲ. 237 00:22:28,458 --> 00:22:33,458 ನೀನು ಅದಕ್ಕೆ ಯೋಗ್ಯನಾಗುವೆಯಾ, ಇಷ್ಟರಲ್ಲೇ ನಮಗೆ ತಿಳಿಯುತ್ತೆ. 238 00:22:38,750 --> 00:22:41,333 ಈ ನಕ್ಷತ್ರಗಳ ಕೆಳಗೆ ನಾನು ದಂಡವನ್ನು ಹುಡುಕುವುದಲ್ಲ. 239 00:22:43,750 --> 00:22:47,000 ನಿಮ್ಮನ್ನು ಹುಡುಕಬೇಕಿತ್ತು. ಹೌದಲ್ವಾ? 240 00:22:54,708 --> 00:22:55,708 ಏನದು? 241 00:22:56,875 --> 00:22:58,083 ಯಾರೋ ಇದ್ದಾರೆ. 242 00:23:04,291 --> 00:23:05,541 ಯಾರವರು? 243 00:23:09,291 --> 00:23:11,500 ಯಾಕೆ ನನ್ನ ಮತ್ತು ನನ್ನ ಗೆಳೆಯರ ಬೆನ್ನತ್ತಿದ್ದಾರೆ? 244 00:23:14,708 --> 00:23:17,958 ನನ್ನ ಬೆಂಕಿಯ ಪಕ್ಕ ಕುಳಿತು ಜೇನು ತಿಂದಿರುವ ಮೊದಲ ಇಸ್ತಾರ್ ನೀನಲ್ಲ. 245 00:23:19,541 --> 00:23:22,208 ವರ್ಷಗಳ ಹಿಂದೆ, ಇನ್ನೊಬ್ಬ ಇದ್ದ. 246 00:23:22,750 --> 00:23:24,500 ಕಾಳ ಮಾಂತ್ರಿಕ. 247 00:23:27,958 --> 00:23:29,125 ಅವನಿಗೆ ಏನಾಯಿತು? 248 00:23:31,625 --> 00:23:34,333 ಒಮ್ಮೆ, ಅವನೂ ನಿನ್ನಂತೆ ಜಾದೂವನ್ನು ನಿಯಂತ್ರಿಸಲು ನೋಡಿದ. 249 00:23:37,666 --> 00:23:39,791 ಈಗ, ಹೆಚ್ಚಿನ ರ್ಹುನ್ ನ ನಿಯಂತ್ರಿಸುತ್ತಾನೆ. 250 00:23:41,791 --> 00:23:43,458 ಆದರೂ, ಇನ್ನಷ್ಟು ಬಯಸುತ್ತಾನೆ. 251 00:23:44,833 --> 00:23:48,416 ಅವನ ದುಷ್ಟತನವು ಹರಡುತ್ತದೆ ಎಂದು ನಂಬುತ್ತೀರಾ? 252 00:23:49,625 --> 00:23:53,666 ಅವನಿಗಿಂತ ಶಕ್ತಿಶಾಲಿಯಾದ ಮಿತ್ರನಿಲ್ಲದಿದ್ದರೆ ಇಲ್ಲ. 253 00:23:55,333 --> 00:23:56,666 ಸೌರೊನ್. 254 00:24:00,291 --> 00:24:02,750 ಈ ಎರಡು ಜ್ವಾಲೆಗಳು ಒಂದಾಗಿ ಸೇರಿದರೆ, 255 00:24:04,250 --> 00:24:08,166 ಮಧ್ಯ ಧರೆ ಪೂರ್ತಿ ಬೂದಿಯಾಗುವವರೆಗೂ ಆ ಬೆಂಕಿ ಉರಿಯುತ್ತಲೇ ಇರುತ್ತದೆ. 256 00:24:12,458 --> 00:24:14,375 ನೀವು ಅದನ್ನು ನಿಲ್ಲಿಸಬಹುದೇ? 257 00:24:17,166 --> 00:24:19,583 ಈ ಹಳೆಯ ಟಾಮ್ ಒಬ್ಬ ಅಲೆಮಾರಿ, ಯೋಧನಲ್ಲ. 258 00:24:20,666 --> 00:24:23,750 ಮಹತ್ಕಾರ್ಯಗಳನ್ನು ತಮಗೆ ವಹಿಸಲಾದ ಕೈಗಳೇ ಪೂರ್ತಿಗೊಳಿಸಬೇಕು. 259 00:24:26,750 --> 00:24:31,166 ಇನ್ನೂ ಬೆಳೆಯುತ್ತಿರುವಾಗಲೇ ನೈದಿಲೆಗಳನ್ನು ಸಂಗ್ರಹಿಸುವವನು ನಾನು. 260 00:24:33,166 --> 00:24:34,583 ನಿಮ್ಮ ಮಾತಿನ ಅರ್ಥ... 261 00:24:37,541 --> 00:24:38,750 ನನ್ನ ಕೈಗಳು. 262 00:24:48,833 --> 00:24:51,291 ಬೆಂಕಿಯನ್ನು ತಡೆಯುವುದು ನನ್ನ ಕೆಲಸವೇ? 263 00:24:52,666 --> 00:24:55,125 ಸೌರೊನ್ ನ ಎದುರಿಸುವುದು ನನ್ನ ಕೆಲಸವೇ? 264 00:24:57,916 --> 00:25:02,625 ನಿನ್ನ ಕೆಲಸ... ಇಬ್ಬರನ್ನೂ ಎದುರಿಸುವುದು. 265 00:25:31,500 --> 00:25:34,666 ನಿನಗಾಗಿ ಕಾಯುತ್ತಿದ್ದೇನೆ. 266 00:25:43,541 --> 00:25:45,125 ಇದು ಯಾವ ಜಾಗ? 267 00:25:48,000 --> 00:25:49,250 ಟುರಿನ್ ಗೋರ್ಥಾಡ್. 268 00:25:51,500 --> 00:25:53,208 ಮನುಷ್ಯರು ಬ್ಯಾರೋ-ಡೌನ್ಸ್ ಅಂತಾರೆ. 269 00:25:54,916 --> 00:25:58,916 ಪುರಾತನ ಕಾಲದಲ್ಲಿ, ತಮ್ಮ ದೊರೆಗಳು ಹಾಗೂ ರಾಜರನ್ನು ಇಲ್ಲಿಯೇ ಹೂಳುತ್ತಿದ್ದರು. 270 00:26:00,666 --> 00:26:02,625 ನನಗೆ ಇಲ್ಲಿ ಆರಾಮವಾಗಿಲ್ಲ. 271 00:26:04,125 --> 00:26:06,375 ಇಲ್ಲಿ ಮರಗಳೂ ಆರಾಮವಾಗಿದ್ದಂತಿಲ್ಲ. 272 00:26:07,666 --> 00:26:08,583 ಭಯಪಡಬೇಡಿ. 273 00:26:08,666 --> 00:26:10,833 ಸತ್ತವರಿಂದ ಅಪಾಯವಿಲ್ಲ. 274 00:26:13,333 --> 00:26:14,416 ಹೋಗುತ್ತಿರಿ. 275 00:26:21,208 --> 00:26:25,041 ಕೈ ಮತ್ತು ಹೃದಯ ಮತ್ತು ಎಲುಬು ತಣ್ಣಗಿರುತ್ತವೆ 276 00:26:25,125 --> 00:26:29,000 ಕಲ್ಲಿನಡಿ ಮಲಗುವುದು ತಣ್ಣಗಿರುತ್ತದೆ 277 00:26:50,750 --> 00:26:54,708 ಒಂದು ಕ್ಷಣ, ನನಗೇನೋ ಕೇಳಿಸಿದಂತೆ... 278 00:26:54,791 --> 00:26:56,083 ಕೇಳಿಸಿತಾ? 279 00:26:57,875 --> 00:26:59,000 ಏನು ಕೇಳಿಸಿತು? 280 00:27:00,625 --> 00:27:02,166 ಒಂಥರಾ ಹಾಡಿನಂತಿತ್ತು. 281 00:27:06,000 --> 00:27:07,666 ಅಥವಾ ಒಂದು ಹಾಡಿನ ನೆನಪಿನಂತೆ. 282 00:27:18,041 --> 00:27:18,958 ಗಲಾದ್ರಿಯಲ್. 283 00:27:27,250 --> 00:27:29,083 ಅವರ ರಕ್ಷಾಕವಚ ಲಿಂಡೊನ್ ದು. 284 00:27:31,833 --> 00:27:34,333 ಕೆಲಬ್ರಿಮ್ಬೋರ್ ನ ಎಚ್ಚರಿಸಲು ರಾಜರು ಸಂದೇಶ ಕಳಿಸಿದ್ದಾರೆ. 285 00:27:36,166 --> 00:27:37,708 ಇವುಗಳನ್ನೇ? 286 00:27:40,916 --> 00:27:42,708 ನಾವು ಇಲ್ಲಿಂದ ಹೋಗಬೇಕು. 287 00:27:49,458 --> 00:27:51,750 -ಡೈಮೊರ್! -ನನ್ನ ಹಿಡಿದುಕೋ. 288 00:27:51,833 --> 00:27:53,083 ಬಿಡಬೇಡಿ! 289 00:28:07,083 --> 00:28:09,875 ಕೈ ಮತ್ತು ಹೃದಯ ಮತ್ತು ಎಲುಬು ತಣ್ಣಗಿರುತ್ತವೆ 290 00:28:10,583 --> 00:28:13,875 ಕಲ್ಲಿನಡಿ ಮಲಗುವುದು ತಣ್ಣಗಿರುತ್ತದೆ 291 00:28:14,500 --> 00:28:17,916 ಕಲ್ಲು ಹಾಸಿಗೆಯ ಮೇಲೆ ಏಳುವುದು ಹೆಚ್ಚೇನಿರಲ್ಲ 292 00:28:18,000 --> 00:28:21,791 ಸೂರ್ಯ ವಿಫಲನಾಗಿ ಚಂದ್ರನು ಸಾಯುವವರೆಗೆ, ಎಂದಿಗೂ ಇಲ್ಲ 293 00:28:27,125 --> 00:28:30,083 ಕಪ್ಪು ಗಾಳಿಯಲ್ಲಿ ನಕ್ಷತ್ರಗಳು ಸಾಯುವವು 294 00:28:35,541 --> 00:28:37,125 ಸಜ್ಜುಗೊಳ್ಳಿ. 295 00:28:43,583 --> 00:28:44,666 ಅವು ಏನು? 296 00:28:45,458 --> 00:28:46,708 ಬ್ಯಾರೋ-ವೈಟ್ಸ್. 297 00:28:59,708 --> 00:29:01,000 ದಾಳಿ ಮಾಡಿ! 298 00:29:25,666 --> 00:29:26,750 ಬಾಣಗಳನ್ನು ನಿಲ್ಲಿಸಿ! 299 00:29:36,208 --> 00:29:37,875 ನಮ್ಮ ಆಯುಧಗಳಿಂದ ಅವರಿಗೇನೂ ಆಗಲ್ಲ. 300 00:29:42,625 --> 00:29:44,458 ಗಟ್ಟಿಯಾಗಿ ಹಿಡಿದುಕೋ. ನನ್ನ ಜೊತೆ ಬಾ. 301 00:29:44,541 --> 00:29:45,750 ಎಲ್ಲಿಗೆ ಹೋಗುವೆ? 302 00:29:45,833 --> 00:29:46,833 -ತೆರೆಯೋಣ ಬಾ. -ಏನು? 303 00:29:46,916 --> 00:29:48,500 ಬೇಗ! 304 00:29:55,875 --> 00:29:57,000 ಉಪನಾಯಕರೇ! 305 00:30:10,125 --> 00:30:11,125 ತೆಗೆದುಕೋ. 306 00:30:26,625 --> 00:30:27,458 ಹೇಗೆ? 307 00:30:27,541 --> 00:30:28,666 ಪುರಾಣದ ಪ್ರಕಾರ, 308 00:30:28,750 --> 00:30:32,000 ಆ ಜೀವಿಗಳ ಜೊತೆ ಹೂಳಲಾದ ಕತ್ತಿಗಳೇ ಅವುಗಳನ್ನು ಚಿರನಿದ್ರೆಗೆ ದೂಡುತ್ತವೆ. 309 00:30:32,083 --> 00:30:35,458 ಆದರೆ ಇಲ್ಲಿ ಹೂಳಲಾದ ಮನುಷ್ಯರು ಸಾವಿರ ವರ್ಷಗಳಿಂದ ಸಮಾಧಿಯಾಗಿದ್ದಾರೆ. 310 00:30:35,541 --> 00:30:37,958 ಅವರನ್ನು ಏನೋ ಎಚ್ಚರಿಸಿದೆ ಅನ್ನಬಹುದು. 311 00:30:38,041 --> 00:30:39,458 ಇಲ್ಲ. 312 00:30:41,083 --> 00:30:42,500 ಯಾರೋ ಎಚ್ಚರಿಸಿದ್ದಾರೆ. 313 00:30:43,625 --> 00:30:45,208 ಎಚ್ಚರಗೊಳ್ಳುವ ದುಷ್ಟಶಕ್ತಿ. 314 00:30:46,333 --> 00:30:48,708 ಮಧ್ಯ ಧರೆಯಾದ್ಯಂತ. 315 00:30:48,791 --> 00:30:52,666 ಥಿಯೋ! ಥಿಯೋ! 316 00:30:52,750 --> 00:30:54,750 -ಥಿಯೋ! -ಥಿಯೋ! 317 00:30:54,833 --> 00:30:57,208 -ಥಿಯೋ! -ಥಿಯೋ! 318 00:30:57,291 --> 00:30:59,125 -ಥಿಯೋ! -ಥಿಯೋ! 319 00:31:01,000 --> 00:31:02,000 ಥಿಯೋ! 320 00:31:03,083 --> 00:31:03,958 ಥಿಯೋ! 321 00:31:08,041 --> 00:31:09,833 -ಥಿಯೋ! -ಥಿಯೋ! 322 00:31:20,000 --> 00:31:21,625 ಆಯುಧಗಳನ್ನು ಬಿಟ್ಟು ಹೋಗಿದ್ದಾರೆ. 323 00:31:24,375 --> 00:31:27,333 ಕಾಡುಮನುಷ್ಯನಿಗೆ ಚಿನ್ನಕ್ಕಿಂತ ಹೆಚ್ಚಾಗಿ ಕೊಡಲಿಯ ತಲೆ ಮುಖ್ಯ. 324 00:31:28,041 --> 00:31:30,250 ಆದರೂ ಅವರು ಅದನ್ನು ಕೊಂಡೊಯ್ಯದಿರುವುದು ವಿಚಿತ್ರವೇ. 325 00:31:31,791 --> 00:31:34,791 ಬನ್ನಿ, ಎಲ್ಲರೂ. ಮುಂದೆ ಸಾಗೋಣ. 326 00:31:36,625 --> 00:31:38,458 ಈ ಕಡೆ. ಹೋಗೋಣ. 327 00:31:42,416 --> 00:31:43,916 ಹಿಂಸೆಪಡಬೇಡ, ನ್ಯೂಮೆನೋರ್ನವನೇ. 328 00:31:45,625 --> 00:31:47,500 ಥಿಯೋ ಎಂಥೆಂಥದ್ದೋ ತಪ್ಪಿಸಿಕೊಂಡಿದ್ದ. 329 00:31:49,083 --> 00:31:50,375 ಇದನ್ನು ತಡೆದುಕೊಳ್ಳುತ್ತಾನೆ. 330 00:31:50,458 --> 00:31:51,666 ಥಿಯೋ! 331 00:31:55,750 --> 00:31:57,083 ಥಿಯೋ! 332 00:32:06,416 --> 00:32:07,541 ಥಿಯೋ! 333 00:32:09,708 --> 00:32:11,791 ನೀನಲ್ಲಿ. ಈ ಕಡೆ. 334 00:32:43,125 --> 00:32:45,291 ಅವರ ಶಿಬಿರಗಳ ಮೇಲೆ ದಾಳಿ ಮಾಡೋಣ. 335 00:32:45,375 --> 00:32:47,000 ಯುದ್ಧ ಆರಂಭಿಸುತ್ತೇವೆ. 336 00:32:47,083 --> 00:32:49,416 ಈಗಾಗಲೇ ಯುದ್ಧದಲ್ಲಿದ್ದೇವೆ, ಕಡಲ-ಜನರೇ. 337 00:32:50,125 --> 00:32:54,375 ನಾನು ನೋಡಿದ್ದನ್ನು ಸಾಮಾನ್ಯ ಮನುಷ್ಯರು ಮಾಡಿದ್ದಾರೆ ಅಂತ ನಂಬಲ್ಲ. 338 00:32:54,458 --> 00:32:58,458 ಅವರು ಮನುಷ್ಯರಲ್ಲ. ಮೃಗಗಳು. ಬೇಕಾದರೆ ನರಮಾಂಸವನ್ನೂ ತಿಂದುಬಿಡುತ್ತಾರೆ. 339 00:32:58,541 --> 00:33:01,375 ನಾವು ಹಾಳು ಮಾಡುವ ಪ್ರತಿ ನಿಮಿಷವೂ ಥಿಯೋಗೆ ಅಪಾಯ. 340 00:33:01,458 --> 00:33:02,666 ನಾವು ಹುಡುಕುತ್ತಲೇ ಇರಬೇಕು. 341 00:33:02,750 --> 00:33:06,916 ಮೂಡಣ ಬಯಲನ್ನು ಸುತ್ತುವರೆಯೋಣ. ಕಾಡುಜನ ಅಲ್ಲಿ ಶಿಬಿರ ಹೂಡುತ್ತಾರಂತೆ. 342 00:33:07,000 --> 00:33:08,000 ಒಳ್ಳೆಯ ಉಪಾಯ. 343 00:33:08,083 --> 00:33:09,708 ಉತ್ತರದ ಕಡೆ ಹುಡುಕಿದರೆ ಒಳ್ಳೆಯದು. 344 00:33:12,208 --> 00:33:13,291 ಉತ್ತರಕ್ಕೆ ಏಕೆ? 345 00:33:15,458 --> 00:33:19,083 ಈ ಪ್ರದೇಶಗಳಲ್ಲಿ ನನ್ನವರಿಗಾಗಿ ಹುಡುಕುತ್ತಾ ವಾರಗಳನ್ನೇ ಕಳೆದಿದ್ದೇನೆ. 346 00:33:19,166 --> 00:33:21,000 ಕಾಡಿನ ಆ ಭಾಗ ಹಳೆಯದು. 347 00:33:21,083 --> 00:33:23,375 ಅಲ್ಲಿ ಕಾಡುಜನ ಇದ್ದಾರೆ, ಬೇರೆ ಅಪಾಯ ಸಹ. 348 00:33:24,708 --> 00:33:26,000 ನೀನು ಸರಿ ಇರಬಹುದು. 349 00:33:26,083 --> 00:33:27,166 ಅರೊಂಡೀರ್. 350 00:33:30,250 --> 00:33:33,625 ಹಗಲು ಸಮಯ ಕಳೆಯುವುದು ಬೇಡ. ನೀರು ಮತ್ತು ಸಾಮಗ್ರಿಗಳನ್ನು ತಗೊಳ್ಳಿ. 351 00:33:33,708 --> 00:33:35,000 ಹೊರಡೋಣ. 352 00:33:48,375 --> 00:33:49,375 ತಗೋ. 353 00:33:57,541 --> 00:33:58,750 ಒಂದು ಜಾಗ ಬಿಟ್ಟಿದ್ದೀಯ. 354 00:34:06,833 --> 00:34:07,833 ಧನ್ಯವಾದ. 355 00:34:09,750 --> 00:34:12,041 ನಿಮ್ಮ ದ್ವೀಪದಲ್ಲಿ ನೀರಿಗೆ ಕೊರತೆಯೇ ಇಲ್ಲವಾ? 356 00:34:13,166 --> 00:34:15,750 ಇಲ್ಲ. ನ್ಯೂಮೆನೊರ್‌ನಲ್ಲಿ ಎಲ್ಲರ ಮನೆಯಲ್ಲೂ ನೀರಿದೆ. 357 00:34:16,416 --> 00:34:17,916 ನಾನು ಅದನ್ನು ನೋಡಬೇಕು. 358 00:34:19,541 --> 00:34:21,208 ನಿನ್ನ ಭಾವಿ ಪತಿಗೂ ನೋಡಬೇಕೇನೋ. 359 00:34:25,666 --> 00:34:27,208 ನಾವು ಹೋಗುತ್ತಲೇ ಇರಬೇಕು. 360 00:34:27,291 --> 00:34:28,416 ಒಂದು ನಿಮಿಷ. 361 00:34:28,500 --> 00:34:31,583 ನೀನು ಕಾಡುಜನರೊಂದಿಗೆ ಸಮಯ ಕಳೆದಿದ್ದೆ ಅಲ್ವಾ, ಎಸ್ತ್ರಿಡ್? 362 00:34:32,458 --> 00:34:33,333 ಎಷ್ಟು ಸಮಯ? 363 00:34:34,625 --> 00:34:37,125 ಅಂದರೆ ನಾನು ಅವರ ಜೊತೆ ಇರಲಿಲ್ಲ. ಅಡಗಿಕೊಂಡಿದ್ದೆ. 364 00:34:38,541 --> 00:34:40,833 -ನಿನಗೆ ತೊಂದರೆ ಕೊಟ್ಟರಾ? -ಅರೊಂಡೀರ್, ನೀನೇನು... 365 00:34:40,916 --> 00:34:43,375 ನಿನ್ನ ಕತ್ತಿನ ಮೇಲಿನ ಗಾಯ ನೋಡಿ ಕೇಳಿದೆ. 366 00:34:44,291 --> 00:34:45,291 ಇತ್ತೀಚೆಗೆ ಆದಂತಿದೆ. 367 00:34:46,625 --> 00:34:50,833 ಇಲ್ಲ. ಅದು ನನ್ನ ತಪ್ಪೇ. ನಾನು... ಬೆಂಕಿಯ ಹತ್ತಿರ ನಿದ್ದೆ ಮಾಡಿಬಿಟ್ಟೆ. 368 00:34:50,916 --> 00:34:52,916 ಅದನ್ನು ಆರಿಸಬೇಕಿತ್ತು, ಆ ರಾತ್ರಿ ಚಳಿ ಇತ್ತು. 369 00:34:53,000 --> 00:34:54,083 ಅದು ನನ್ನ ಮೂರ್ಖತನ. 370 00:34:54,166 --> 00:34:56,958 ನಾವೆಲ್ಲರೂ ಆಗಾಗ ಮೂರ್ಖ ಕೆಲಸಗಳನ್ನು ಮಾಡುತ್ತೇವೆ. 371 00:34:57,041 --> 00:34:59,750 ಅದರಲ್ಲೂ ಹತಾಶೆಯ ಸಮಯದಲ್ಲಿ. 372 00:35:10,458 --> 00:35:12,291 ಎಸ್ತ್ರಿಡ್. ಇದೇನು? 373 00:35:12,375 --> 00:35:13,916 ಸ್ವದಹನ. 374 00:35:14,000 --> 00:35:16,583 ಆಡಾರ್ ಚಿನ್ಹೆ ಮರೆಮಾಡಲು ಕಾಡುಜನ ಅದನ್ನು ಮಾಡುತ್ತಾರೆ. 375 00:35:17,208 --> 00:35:20,208 ಅವಳು ನಿನ್ನ ಜೊತೆ ಬಂದಿಲ್ಲದಿದ್ದರೆ, ದ್ವಾರದಲ್ಲೇ ಹಿಡಿಯುತ್ತಿದ್ದೆವು. 376 00:35:20,291 --> 00:35:22,125 ಇವಳು ಕಾಡುಮನುಷ್ಯಳಾ? 377 00:35:22,208 --> 00:35:24,250 ಇವಳು ಅವರಲ್ಲೊಬ್ಬಳು. 378 00:35:24,333 --> 00:35:26,583 ಅವರ ಬಳಿಗೆ ನಮ್ಮನ್ನು ಕರೆದೊಯ್ಯುತ್ತಾಳೆ. 379 00:35:38,083 --> 00:35:39,166 ನಿನ್ನ ಯೋಜನೆ ಏನು? 380 00:35:41,458 --> 00:35:43,958 ನನಗೆ ಚುಚ್ಚುವುದಾ? ನನ್ನ ಕುದುರೆಯನ್ನು ಕದಿಯುವುದಾ? 381 00:35:44,916 --> 00:35:47,458 ಅದೇನಾ? ಇಲ್ವಾ? 382 00:35:47,541 --> 00:35:51,208 ನನ್ನನ್ನು ನ್ಯೂಮೆನೊರಿನವ ಎಂದು ನೋಡಿದೆ ನೀನು. ನಿನಗೆ ಬೇರೆಯೇ ಆಲೋಚನೆ ಇತ್ತಲ್ವಾ? 383 00:35:53,750 --> 00:35:55,291 ನನ್ನನ್ನು ಬಳಸುತ್ತಿದ್ದೆ ನೀನು. 384 00:35:55,958 --> 00:35:57,583 ನಿನಗೆ ಭಾವಿ ಪತಿಯೂ ಇಲ್ಲವೇನೋ. 385 00:35:57,666 --> 00:36:00,208 -ಮೊರ್ಡೊರ್‌ನಲ್ಲಿ ನಾನು ಸಾಯಬೇಕಿತ್ತಾ? -ಗೊತ್ತಿಲ್ಲ. 386 00:36:00,916 --> 00:36:02,500 ಯೋಚಿಸುವೆ. 387 00:36:14,708 --> 00:36:15,875 ಏನದು? 388 00:36:25,416 --> 00:36:26,625 ಅಲ್ಲಾಡದಿರು. 389 00:36:33,750 --> 00:36:34,750 ಬೇಗ ಬಾ. 390 00:36:35,416 --> 00:36:37,541 ಥಿಯೋನ ಕರೆದೊಯ್ದಿದ್ದು ಮನುಷ್ಯರಲ್ಲ. 391 00:37:00,708 --> 00:37:01,708 ನೋಡು. 392 00:37:03,541 --> 00:37:04,791 ಸುಖಜೀವಿ ಎಚ್ಚರಗೊಂಡಿದ್ದಾನೆ. 393 00:37:13,375 --> 00:37:14,458 ಕಾಪಾಡಿ! 394 00:37:19,875 --> 00:37:21,416 ಅಲ್ಲಿ ಏನಿದೆ? 395 00:37:21,500 --> 00:37:25,000 ಇನ್ನೂ ಗೊತ್ತಿಲ್ಲ. ಆದರೆ ಅವು ಏನೇ ಆಗಿರಲಿ, ದೊಡ್ಡದಾಗಿವೆ. 396 00:37:42,166 --> 00:37:43,125 ಹುಷಾರಾಗಿ ನಡಿ. 397 00:37:55,958 --> 00:37:58,958 ಕೈಗಳನ್ನು ಬಳಸಿದರೆ ನಡೆಯಲು ಸುಲಭವಾಗಬಹುದೇನೋ. 398 00:37:59,041 --> 00:38:00,666 ಮತ್ತು ತಪ್ಪಿಸಿಕೊಳ್ಳಲೂ ಸುಲಭ. 399 00:38:01,958 --> 00:38:04,291 ಇದರಲ್ಲಿ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 400 00:38:04,375 --> 00:38:05,583 ಬಾ, ನನ್ನನ್ನು ಬಿಡಿಸು. 401 00:38:12,541 --> 00:38:13,666 ಪರವಾಗಿಲ್ಲ. 402 00:38:15,708 --> 00:38:17,083 ಅಲ್ಲಾಡದಿರು. 403 00:38:17,166 --> 00:38:18,500 ಪರವಾಗಿಲ್ಲ ಅಂದೆ. 404 00:38:23,875 --> 00:38:24,833 ನಿನ್ನ ಕೈ ಕೊಡು. 405 00:38:25,875 --> 00:38:26,958 ಕಾಪಾಡಿ! 406 00:38:34,541 --> 00:38:35,583 ನನ್ನನ್ನು ಮೇಲೆತ್ತು. 407 00:38:37,916 --> 00:38:39,250 ಕೆಳಗೆ ಹೋಗುತ್ತಿದ್ದೇನೆ. 408 00:39:53,541 --> 00:39:54,541 ಅದು ಏನಾಗಿತ್ತು? 409 00:39:54,625 --> 00:39:57,416 ಈ ಪ್ರಪಂಚದ ಆಳವಾದ ಸ್ಥಳಗಳಲ್ಲಿ ಹೆಸರಿಲ್ಲದ ಜೀವಿಗಳಿವೆ. 410 00:40:00,583 --> 00:40:02,041 ಇದು... 411 00:40:04,250 --> 00:40:06,125 ಇದನ್ನು "ಊಟ" ಅನ್ನೋಣ. 412 00:40:15,750 --> 00:40:18,166 ಸರಿ, ಗ್ರಾಮದ ಹಿರಿಯರೊಂದಿಗೆ ಮಾತಾಡಿದ್ದೇನೆ. 413 00:40:18,750 --> 00:40:23,875 ಸೂರ್ಯೋದಯದ ವೇಳೆಗೆ ನಿಮ್ಮಿಬ್ಬರಿಗೂ ಬಹಿಷ್ಕಾರ. ಕ್ಷಮಿಸಿ, ಮೊದಲು ಸ್ಟೂರ್ಸ್ ಬರಬೇಕು. 414 00:40:23,958 --> 00:40:26,958 ನಿಜ ಏನೆಂದರೆ, ಅವನು ನಿನ್ನ ಸ್ಥಾನದಲ್ಲಿದ್ದಿದ್ದರೆ... 415 00:40:29,458 --> 00:40:31,791 ಸಾಡೊಕ್ ಅದೇ ಕೆಲಸವನ್ನು ಮಾಡುತ್ತಿದ್ದನೇನೋ. 416 00:40:32,291 --> 00:40:33,666 ಸಾಡೊಕ್? 417 00:40:33,750 --> 00:40:37,291 ನಮ್ಮ ಪಥಾನ್ವೇಷಕ. ಅವನ ಹೆಸರು ಸಾಡೊಕ್ ಬರ್ರೋಸ್. 418 00:40:38,541 --> 00:40:42,375 ಸಾಡೊಕ್ ಬರ್ರೋಸ್ ನಿಮ್ಮ ನಾಯಕನ ಹೆಸರೇ? 419 00:40:46,875 --> 00:40:50,708 ನಮ್ಮಿಬ್ಬರಿಗೂ ಒಂದೇ ವಿಷಯ ತಿಳಿದಿರುವುದರಿಂದ ನಾನು ನಿನ್ನನ್ನು ನಂಬುವುದಿಲ್ಲ. 420 00:40:51,666 --> 00:40:54,958 ಖಚಿತಪಡಿಸಲಷ್ಟೇ ನಿನಗಿದನ್ನು ತೋರಿಸುತ್ತಿದ್ದೇನೆ. 421 00:40:55,666 --> 00:40:56,875 ಯಾವುದು ಖಚಿತಪಡಿಸೋಕೆ? 422 00:41:01,125 --> 00:41:05,708 ಕಥೆಯ ಪ್ರಕಾರ, ಪುರಾತನ ಕಾಲದಲ್ಲಿ, ಒಬ್ಬ ಸ್ಟೂರ್ ಇದ್ದ. 423 00:41:05,791 --> 00:41:07,791 ಅವನು ನಮ್ಮಂತೆ ಇರಲಿಲ್ಲ. 424 00:41:07,875 --> 00:41:13,833 ಒಂದು ದಿನ ಅವನಿಗೆ ಒಂದು ಸ್ಥಳದ ಕನಸು ಬಿತ್ತಂತೆ, ಅಲ್ಲಿ ನಿರಂತರವಾಗಿ ಹರಿಯುವ ತಣ್ಣೀರಿನ ತೊರೆಗಳು 425 00:41:13,916 --> 00:41:18,500 ಮತ್ತು ಮೆತ್ತನೆಯ ಬೆಟ್ಟಗಳಿದ್ದವು, ಅಲ್ಲೊಂದು ಕುಟುಂಬ ಗುಂಡಿ ತೋಡಿ 426 00:41:18,583 --> 00:41:20,625 ತಿಂಗಳೊಳಗೆ ಅಲ್ಲಿ ವಾಸವಿರಬಹುದಿತ್ತು. 427 00:41:21,916 --> 00:41:24,708 ಅದನ್ನು "ಸೂಜಾಟ್" ಎಂದು ಕರೆದ. 428 00:41:26,625 --> 00:41:29,708 ಒಂದು ಬಂಡಿಯ ತುಂಬಾ ಹಿಂಬಾಲಕರೊಂದಿಗೆ ಅದನ್ನು ಒಂದು ವರ್ಷ ಹುಡುಕಿದ. 429 00:41:29,791 --> 00:41:31,333 ಮಾತು ಕೊಟ್ಟಂತೆ, ಅದು ಸಿಕ್ಕಾಗ, 430 00:41:31,416 --> 00:41:34,041 ನಮ್ಮಲ್ಲಿ ಮಿಕ್ಕವರನ್ನು ಕರೆತರಲು ಯಾರನ್ನಾದರೂ ಕಳಿಸುತ್ತಿದ್ದ. 431 00:41:35,458 --> 00:41:40,500 ಅವತ್ತೇ ನಾವು ರೋರಿಮಾಸ್ ಬರ್ರೋಸ್ ಬಗ್ಗೆ ಕೊನೆಯದಾಗಿ ಕೇಳಿದ್ದು. 432 00:41:48,791 --> 00:41:50,416 ಪೋಪ್ಪಿಯ ನಡೆಯುವ ಹಾಡು. 433 00:41:51,791 --> 00:41:54,000 ಹಾರ್ಫೂಟ್ಸ್ ಈ ಹಿಂದೆ ಇಲ್ಲಿಗೆ ಬಂದಿದ್ದಾರೆ. 434 00:41:58,833 --> 00:42:01,291 ನಿಮ್ಮವರ ಮನೆ, ನಿಮ್ಮ ಊರಿನಲ್ಲಿ, 435 00:42:01,375 --> 00:42:02,833 ಹೀಗೆಯೇ ಕಾಣುತ್ತಾ? 436 00:42:04,541 --> 00:42:08,000 ನಮ್ಮನ್ನೆಲ್ಲ ಸೂಜಾಟ್ ಬಳಿ ಕರೆದೊಯ್ಯಲು ಇಲ್ಲಿಗೆ ಬಂದಿದ್ದೀಯಾ? 437 00:42:11,000 --> 00:42:12,291 ನನಗನಿಸುತ್ತೆ... 438 00:42:14,500 --> 00:42:17,916 ರೋರಿಮಾಸ್‌ ಸೂಜಾಟ್ ನ ಕಂಡು ಹಿಡಿಯಲೇ ಇಲ್ಲ. 439 00:42:22,125 --> 00:42:24,041 ಮತ್ತು ಸ್ವಲ್ಪ ಸಮಯದ ನಂತರ... 440 00:42:26,666 --> 00:42:30,166 ನಾವು ಅಲೆದಾಡುತ್ತಲೇ ಇದ್ದೆವು. 441 00:42:39,208 --> 00:42:41,041 ನಮಗೆ ಮನೆ ಇಲ್ಲ. 442 00:42:55,291 --> 00:42:59,083 ಸವಾರರು ಕಾಣಿಸಿದರು. ಮಾನವರು. ಈ ಕಡೆ ಬರುತ್ತಿದ್ದಾರೆ. 443 00:43:09,791 --> 00:43:11,583 ಏನಿವತ್ತು ನಿಮ್ಮ ದರ್ಶನ-- 444 00:43:33,416 --> 00:43:37,458 ಹಾರ್ಫೂಟ್ಸ್ ಎಲ್ಲಿದ್ದಾರೆ? 445 00:43:45,166 --> 00:43:50,208 ನಮಗೆ ಈ ಮರುಭೂಮಿಯಲ್ಲಿ ಗೊತ್ತಿರುವ ಅರೆಪಿಳ್ಳೆಗಳು ಸ್ಟೂರ್ಸ್. 446 00:43:52,583 --> 00:43:55,250 ನಾವು ಈ ಮುಖವಾಡಗಳನ್ನು ಏಕೆ ಧರಿಸುತ್ತೇವೆ ಗೊತ್ತಾ? 447 00:43:56,458 --> 00:44:00,500 ಕಾಳ ಮಾಂತ್ರಿಕನನ್ನು ವಿರೋಧಿಸಿ ಮತ್ತು, ನಾವು ಅವನೊಂದಿಗೆ ಹಿಂತಿರುಗಿದಾಗ, 448 00:44:00,583 --> 00:44:02,958 ನಿಮಗೇ ಗೊತ್ತಾಗುತ್ತೆ. 449 00:44:33,083 --> 00:44:36,000 ಈ ಉಂಗುರ ನನಗೆ ಮೋಸ ಮಾಡುತ್ತಿದೆ ಎಂದುಕೊಂಡಿರುವೆ ಅಂತ ನಾನು ಬಲ್ಲೆ. 450 00:44:36,583 --> 00:44:39,208 ಅದು ನನಗೆ ಮಾರ್ಗದರ್ಶಿಸುತ್ತಿದೆ ಎಂದು ನಂಬುವೆ, 451 00:44:40,125 --> 00:44:43,750 ಅದನ್ನು ಹಿಂಬಾಲಿಸುವುದೇ ನಮಗೆ ಗೆಲುವಿನ ದಾರಿಯಾಗಬಹುದು. 452 00:44:45,000 --> 00:44:48,375 ಈ ಗೆಲುವಿಗೆ ತೆರಬೇಕಾದ ಬೆಲೆ ತುಂಬಾ ಹೆಚ್ಚಾಗುವುದಿಲ್ಲವೇ? 453 00:44:51,041 --> 00:44:53,458 ಆ ಮಟ್ಟಕ್ಕೆ ಇನ್ನೂ ಹೋಗಿಲ್ಲ. 454 00:44:53,541 --> 00:44:55,041 ನಿನಗೆ ಯಾಕೆ ಭಯವಾಗುತ್ತಿಲ್ಲ? 455 00:44:55,125 --> 00:44:59,875 ಯಾಕೆಂದರೆ ಸೌರೊನ್ ಆಳುವ ಪ್ರಪಂಚದ ಜನರ ಸಂಕಟ 456 00:44:59,958 --> 00:45:01,666 ನನ್ನನ್ನು ಹೆಚ್ಚು ಭಯಪಡಿಸುತ್ತದೆ. 457 00:45:04,708 --> 00:45:10,458 ನನಗೆ ಯಾವಾಗಲೂ ಅನಿಸಿದೆ. ಆದರೆ ಈ ಉಂಗುರದೊಂದಿಗೆ, ಅದು ಕಾಣುತ್ತದೆ. 458 00:45:11,458 --> 00:45:15,291 ನಾವು ಈ ಕಾರ್ಯದಲ್ಲಿ ವಿಫಲಗೊಂಡರೆ ನಮ್ಮ ಮುಂದಿರುವ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ. 459 00:45:19,666 --> 00:45:23,416 ನನ್ನ ತಂದೆ ಒಂದು ದಿನ ಅದನ್ನು ಮೊದಲೇ ನೋಡಿದ್ದರು, 460 00:45:23,500 --> 00:45:25,791 ಕೆಲಬ್ರಿಮ್ಬೋರ್ ನ ಜೀವ ನನ್ನ ಜವಾಬ್ದಾರಿ ಅಂತ. 461 00:45:27,833 --> 00:45:31,833 ಅದನ್ನು ಕಾಪಾಡಲು ನನಗೆ ಸೂಕ್ತ ಭರವಸೆ ಕೊಡುವ ದಾರಿಯನ್ನೇ ನಾನು ಅರಸುತ್ತೇನೆ. 462 00:45:34,875 --> 00:45:38,166 ಅತ್ಯಂತ ದುರ್ಬಲವಾದುದನ್ನು, ಅತ್ಯಂತ ಪ್ರಿಯವಾದದ್ದನ್ನು 463 00:45:40,000 --> 00:45:45,125 ರಕ್ಷಿಸುವುದು ಎಲ್ಲಾ ಎಲ್ಫ್‌ಗಳಿಗೂ ವಹಿಸಲಾದ ಜವಾಬ್ದಾರಿ. 464 00:45:50,750 --> 00:45:52,666 ಮತ್ತು ಇನ್ನೂ ಪೂರ್ಣಗೊಂಡಿಲ್ಲದಿರುವುದು. 465 00:45:55,208 --> 00:46:00,708 ಖಂಡಿತ ಹೇಳುವೆ, ಇದಕ್ಕಾಗಿ ಹೆಚ್ಚಿನ ನೋವುಭರಿತ ತ್ಯಾಗಗಳು ನಡೆಯುತ್ತವೆ. 466 00:46:07,708 --> 00:46:09,041 ಗಲಾದ್ರಿಯಲ್? 467 00:46:10,500 --> 00:46:12,166 ಮಾತು ಕೊಡು, ಎಲ್ರೊಂಡ್, 468 00:46:13,958 --> 00:46:17,416 ಸೌರೊನ್‌ನ ವಿರೋಧಿಸುವುದೇ ನಿನಗೆ ಬೇರೆಲ್ಲದಕ್ಕಿಂತ ಪ್ರಮುಖವಾಗಬೇಕು. 469 00:46:18,750 --> 00:46:19,958 ನನ್ನ ಜೀವಕ್ಕಿಂತಲೂ. 470 00:46:20,958 --> 00:46:24,375 ಆ ಉಂಗುರದ ಪ್ರಭಾವದಿಂದ ಕೇಳುವವರಿಗೆ ನಾನು ಯಾವ ಮಾತನ್ನೂ ಕೊಡಲ್ಲ. 471 00:46:29,708 --> 00:46:31,416 ಆದರೆ ಆಣೆ ಮಾಡಿ ಹೇಳುವೆ... 472 00:46:33,375 --> 00:46:35,625 ಸೌರೊನ್‌ನ ಸೋಲಿಸುವುದೇ ನನ್ನ ಮೊದಲ ಆದ್ಯತೆ. 473 00:46:37,333 --> 00:46:38,958 ನಿನಗಿಂತಲೂ ಮುಖ್ಯವಾಗಿ. 474 00:46:41,583 --> 00:46:45,500 ಕ್ಷಮಿಸಿ, ಸೇನಾಧಿಪತಿಗಳೇ, ನಗಾರಿಯ ಶಬ್ದ ಕೇಳಿಸಿತು. 475 00:47:26,666 --> 00:47:28,333 ಕೈಕೋಳದ ಕೀಲಿಕೈ ಅದೇನಾ? 476 00:47:29,625 --> 00:47:32,625 ಅದನ್ನು ಬಳಸಬೇಕಾ ಬೇಡವಾ ಅಂತ ಅವರಿಗೆ ನೀನೇ ನಿರ್ಧರಿಸಬೇಕೇನೋ. 477 00:47:54,875 --> 00:47:55,875 ನನ್ನನ್ನು ಕ್ಷಮಿಸು. 478 00:47:59,125 --> 00:48:00,250 ನನ್ನನ್ನೂ ಕ್ಷಮಿಸು. 479 00:48:03,083 --> 00:48:05,916 ಇಲ್ಲ. ಇಸಿಲ್ದುರ್, ನೋಡು... 480 00:48:10,666 --> 00:48:13,125 ನನ್ನಂತಹ ಜನರಿಗೆ ಕ್ಷಮೆ ಸಿಗುವುದಿಲ್ಲ. 481 00:48:14,750 --> 00:48:17,166 ಇಷ್ಟರಲ್ಲೇ ನನ್ನನ್ನು ಬಹಿಷ್ಕರಿಸುತ್ತಾರೆ, ನಿಂಗೊತ್ತು. 482 00:48:25,333 --> 00:48:26,625 ನಾನು ಅವರನ್ನು ಬಿಡಲ್ಲ. 483 00:48:29,250 --> 00:48:30,875 ನಿನ್ನನ್ನು ಬಹಿಷ್ಕರಿಸಲು ಬಿಡಲ್ಲ. 484 00:48:33,625 --> 00:48:35,166 ಕತ್ತಿಯನ್ನು ಕೆಳಗಿಡು. 485 00:48:49,791 --> 00:48:51,791 ಎಸ್ತ್ರಿಡ್, ಕತ್ತಿಯನ್ನು ಕೆಳಗೆ ಹಾಕು! 486 00:48:58,250 --> 00:48:59,583 ಎಸ್ತ್ರಿಡ್! 487 00:49:06,166 --> 00:49:07,375 ನಿಲ್ಲು! 488 00:49:12,083 --> 00:49:15,166 ನಾನು ಗ್ರೀನ್‌ವುಡ್‌ನ ಅರೊಂಡೀರ್. 489 00:49:18,041 --> 00:49:22,916 ನೀನೆಂದಾದರೂ ವೃಕ್ಷಜೀವಗಳಿಗೆ ಕೊಡಲಿಯನ್ನು ತಾಕಿಸಿದ್ದೀಯಾ? 490 00:49:25,333 --> 00:49:27,208 ನನ್ನ ಕಷ್ಟಕ್ಕಾಗಿ ಮಾಡಿರುವೆ, ಆದರೆ-- 491 00:49:30,333 --> 00:49:31,541 ನನ್ನ ಮಾತು ಕೇಳು! 492 00:49:52,208 --> 00:49:53,625 ಇದು ಮರಗಳನ್ನು ಕಡಿಯಲು ಅಲ್ಲ. 493 00:49:58,208 --> 00:50:00,625 ಇನ್ನೇನು ಕಡಿಯಲು? 494 00:50:00,708 --> 00:50:02,125 ಆರ್ಕ್ಸ್. 495 00:50:06,666 --> 00:50:07,875 ಹಿಂದೆ ಇರು. 496 00:50:10,166 --> 00:50:11,291 ಅಲ್ಲಿ... 497 00:50:13,166 --> 00:50:14,916 ಅವರ ಸೈನ್ಯವೇ ಇತ್ತು. 498 00:50:15,000 --> 00:50:19,083 ಅವರು ಹೋದಲ್ಲೆಲ್ಲಾ ಹಿಂಸಿಸಿ ಕೊಲ್ಲುತ್ತಿದ್ದರು. 499 00:50:20,125 --> 00:50:21,583 ಅವರು ಮಾಡಿದ್ದನ್ನು ನೋಡಿದೆವು. 500 00:50:22,625 --> 00:50:26,208 ಅದಕ್ಕೇ ನೀನು ಇಲ್ಲಿದ್ದೀಯಾ? ಅದಕ್ಕೇನಾ ನಿನಗೆ ಇಷ್ಟೊಂದು ಕೋಪ? 501 00:50:28,291 --> 00:50:34,291 ಚೆಲ್ಲುವ ರಸ ಮತ್ತು ಸುಡುವ ರೆಂಬೆ ದೂರದಿಂದ ನಮ್ಮನ್ನು ಕರೆದವು. 502 00:50:35,833 --> 00:50:39,583 ಆದರೆ... ನಾವು ತುಂಬಾ ತಡವಾಗಿದ್ದೆವು. 503 00:50:39,666 --> 00:50:42,666 ಸೈನ್ಯವೇ? ಎಷ್ಟು ಹಿಂದೆ ನಡೆದಿದ್ದು ಇದು? 504 00:50:42,750 --> 00:50:46,875 ವಿಂಟರ್‌ಬ್ಲೂಮ್ ಬೀಜ ಮತ್ತು ಮೊಳಕೆಯಿಂದ ಆ ಅನೇಕ ಮರಗಳನ್ನು ಪೋಷಿಸಿತು. 505 00:50:46,958 --> 00:50:49,833 ಅದರ ಬಗ್ಗೆ ಅವಳನ್ನು ಹೆಚ್ಚು ಕೇಳಬೇಡ. 506 00:50:49,916 --> 00:50:51,666 ಅವರು ಇವರಿಗಿಂತ ಭಿನ್ನವೇನಿಲ್ಲ! 507 00:50:56,333 --> 00:51:01,125 ಕತ್ತರಿಸುವುದು, ಬುಡಮೇಲಾಗಿಸಿ, ರೆಂಬೆಗಳನ್ನು ಮುರಿದು, ಕಾಂಡಗಳನ್ನು ಕಡಿಯುವುದು, ಎಲ್ಲವೂ! 508 00:51:07,416 --> 00:51:08,333 ನಮ್ಮನ್ನು ನೀವು... 509 00:51:16,000 --> 00:51:17,333 ಕ್ಷಮಿಸಬೇಕು... 510 00:51:26,041 --> 00:51:27,333 ನಿಮಗೆ ನಮ್ಮಿಂದ ಆದ... 511 00:51:36,500 --> 00:51:37,708 ...ಗಾಯಗಳಿಗಾಗಿ. 512 00:51:50,541 --> 00:51:53,583 ಕ್ಷಮೆಗೆ ಒಂದು ಯುಗವೇ ಹಿಡಿಯುತ್ತದೆ. 513 00:52:01,166 --> 00:52:06,291 ಮಣ್ಣಿನ ನೆನಪನ್ನು ಮಳೆಯು ತೊಳೆದುಹಾಕುತ್ತದೆ. 514 00:52:06,375 --> 00:52:10,875 ಹಳೆಯ ಗಾಯಗಳನ್ನು ಹೊಸ ತೊಗಟೆ ಮುಚ್ಚುತ್ತದೆ. 515 00:52:11,666 --> 00:52:15,458 ಆ ಸಮಯದಲ್ಲಿ, ನಾನು ಮಾತು ಕೊಡುವೆ, 516 00:52:15,541 --> 00:52:19,916 ಈ ಕಾಡಿನ ಮರಗಳನ್ನು ಪ್ರಶಾಂತವಾಗಿರಲು ಬಿಡುವಂತೆ ನಾನು ನೋಡಿಕೊಳ್ಳುತ್ತೇನೆ. 517 00:52:38,208 --> 00:52:40,083 ಅವರಿಗೆ ಶಾಂತಿ ಎಂದರೇನು ಗೊತ್ತಾ? 518 00:52:40,166 --> 00:52:44,000 ಅದು ರಾತ್ರಿಯ ಬಿರುಗಾಳಿಯ ನಂತರ, 519 00:52:44,083 --> 00:52:47,958 ಮುಂಜಾನೆ ಮೌನವಾದಾಗ ಮತ್ತು ಪಕ್ಷಿಗಳು ಎಚ್ಚರಗೊಳ್ಳುವಾಗ ಬರುತ್ತದೆ. 520 00:52:48,708 --> 00:52:53,208 ಬೆಟ್ಟಗಳು ಮೇಲೆದ್ದು ಇದನ್ನು ಬೇರ್ಪಡಿಸುವುದಕ್ಕಿಂತಲೂ 521 00:52:53,291 --> 00:52:57,291 ಮುಂಚಿನಿಂದ ಈ ಕಾಡನ್ನು ಪೋಷಿಸಿದ್ದೇವೆ. 522 00:53:00,791 --> 00:53:06,625 ಪಾಚಿಯ ಮೇಲೆ ಬೀಳುವ ಬೆಳಕಿನ ಶಬ್ದವಷ್ಟೇ ಇದ್ದಾಗ... 523 00:53:11,250 --> 00:53:12,333 ಥಿಯೋ? 524 00:53:12,416 --> 00:53:15,833 ಮತ್ತು ಎಲೆಗಳ ಉಸಿರಾಟವಿದ್ದಾಗಿನಿಂದ. 525 00:53:19,583 --> 00:53:24,500 ಹೌದು. ನಮಗೆ ಶಾಂತಿ ಗೊತ್ತಿದೆ. 526 00:53:24,583 --> 00:53:27,291 ಎಸ್ತ್ರಿಡ್? ನಾನು. 527 00:53:36,875 --> 00:53:39,250 ಎಸ್ತ್ರಿಡ್? ಎಸ್ತ್ರಿಡ್. 528 00:53:41,250 --> 00:53:42,250 ಹೇಗನ್? 529 00:53:44,500 --> 00:53:46,791 -ನಾನಂದುಕೊಂಡೆ ನೀ... -ನಾನು ಕೂಡ. 530 00:53:50,750 --> 00:53:53,875 ನೀನಿಲ್ಲಿದ್ದೀಯಾ ಅಂತ ನಂಬಕ್ಕಾಗುತ್ತಿಲ್ಲ. ನೋಡು ನಿನ್ನನ್ನು. 531 00:54:20,625 --> 00:54:22,250 ನನಗಾಗಿ ಬಂದಿದ್ದಕ್ಕೆ ಧನ್ಯವಾದ. 532 00:54:26,625 --> 00:54:28,166 ನಾನು ಮಾತು ಕೊಟ್ಟಿದ್ದೆ. 533 00:54:29,708 --> 00:54:31,125 ಉಳಿಸಿಕೊಂಡಿದ್ದಕ್ಕೆ ಧನ್ಯವಾದ. 534 00:54:35,708 --> 00:54:37,291 ಈಗ ಇನ್ನೊಂದನ್ನು ಉಳಿಸಿಕೊಳ್ಳಬೇಕು. 535 00:54:38,875 --> 00:54:43,541 ಆರ್ಕ್ಸ್ ಚಲಿಸುತ್ತಿದ್ದಾರೆ. ನಾನು ಜಾಡನ್ನು ಹಿಡಿದು ಹೋಗಬೇಕು. 536 00:54:44,625 --> 00:54:47,083 ಆಡಾರ್‌ನ ಎದುರಿಸಲು ಇನ್ನೊಂದು ಅವಕಾಶ ಪಡೆಯಬೇಕು. 537 00:54:50,708 --> 00:54:52,625 ನಿನಗೆ ಬೇಕಾದರೆ ನನ್ನ ಜೊತೆ ಬಾ. 538 00:54:56,833 --> 00:54:58,666 ನಾನೂ ಕೊಟ್ಟ ಮಾತು ಉಳಿಸಿಕೊಳ್ಳಬೇಕಿದೆ. 539 00:55:06,375 --> 00:55:10,250 ಹಾಗಾದರೆ "ಮೈ ಗ್ಲೆನ್ನೋ." ಪೆಲಾರ್ಗೀರ್ ನ ದೊರೆ. 540 00:55:19,125 --> 00:55:24,041 ದಕ್ಷಿಣ 541 00:55:24,125 --> 00:55:27,000 ಎರೆಗಿಯೊನ್ 542 00:55:48,375 --> 00:55:49,916 ಆರ್ಕ್-ಮೋಸ. 543 00:55:50,000 --> 00:55:51,416 ಆ ಜಾಡು. 544 00:55:52,791 --> 00:55:54,041 ಎಲ್ಲಿ ಹೋಗುತ್ತದೆಂದರೆ-- 545 00:55:54,125 --> 00:55:56,166 ಎರೆಗಿಯೊನ್, ನನ್ನ ಒಡೆಯ. 546 00:55:57,041 --> 00:56:01,333 ಸೌರೊನ್‌ಗಾಗಿ ಹುಡುಕಿಕೊಂಡು ಬಂದೆವು. ಬದಲಾಗಿ, ನಮಗೆ ಆಡಾರ್ ಸಿಗುವುದೇ? 547 00:56:01,833 --> 00:56:03,791 ಅವರು ಪರಸ್ಪರ ಕೈಜೋಡಿಸಿರಬಹುದೇ? 548 00:56:05,708 --> 00:56:06,916 ಬಹುಶಃ ಯುದ್ಧದಲ್ಲಿ. 549 00:56:07,000 --> 00:56:09,375 ಆರ್ಕ್ಸ್ ಸೇನೆಯೊಂದು ಎಲ್ವಿಶ್ ನಾಡನ್ನು ಪ್ರವೇಶಿಸಿದೆ. 550 00:56:10,375 --> 00:56:12,083 ನಾವೆಲ್ಲರೂ ಯುದ್ಧದಲ್ಲಿದ್ದೇವೆ. 551 00:56:14,875 --> 00:56:18,541 ನಮ್ಮ ಆತಿಥೇಯರು ಮೊರ್ಡೊರ್‌ಗೆ ತೆರಳುವ ಮುನ್ನ ಈ ಸುದ್ದಿ ಮಹಾ ದೊರೆಯನ್ನು ತಲುಪಬೇಕು. 552 00:56:23,375 --> 00:56:24,416 ಅಲ್ಲಿ! 553 00:56:28,416 --> 00:56:29,541 ಹಿಡಿ! 554 00:56:30,375 --> 00:56:32,333 ನಮ್ಮ ಊಟ ಓಡಿಹೋಗುತ್ತಿದೆ! 555 00:56:34,500 --> 00:56:35,666 ಬನ್ನಿ! 556 00:56:36,958 --> 00:56:38,458 ಹಿಂದಕ್ಕೆ ಸಾಲಾಗಿ ಬನ್ನಿ! 557 00:56:41,208 --> 00:56:44,083 ಯಾರದು? ಹುಡುಕುತ್ತಿರಿ! 558 00:56:56,666 --> 00:56:59,500 ಹತ್ತಿರದಲ್ಲೇ ಇದ್ದಾರೆ. ಹುಡುಕುತ್ತಿರಿ. 559 00:57:01,708 --> 00:57:04,000 ಯಾರದು? ಏನದು? 560 00:57:06,083 --> 00:57:07,416 ಅಲ್ಲಿಂದ ಬಂತು. 561 00:57:08,375 --> 00:57:10,791 ನನಗೆ ಎಲ್ಫ್ ವಾಸನೆ ಬರುತ್ತಿದೆ. 562 00:57:36,458 --> 00:57:37,416 ಅದ್ಭುತ. 563 00:57:37,500 --> 00:57:39,750 ಒಂದು ಮೂಲೆಯನ್ನೂ ಬಿಡಕೂಡದು. ಹೋಗಿ! 564 00:57:39,833 --> 00:57:43,583 ಲಿಂಡೊನ್‌ಗೆ ಹೋಗು. ಸಾಧ್ಯವಾದಷ್ಟು ಸಮಯ ಇವರ ಗಮನ ಸೆಳೆದಿರುತ್ತೇನೆ. 565 00:57:47,375 --> 00:57:48,458 ಹುಡುಕುತ್ತಿರಿ. 566 00:57:49,208 --> 00:57:50,458 ತೆಗೆದುಕೋ. 567 00:57:55,083 --> 00:57:56,625 ತಗೋ, ಎಲ್ರೊಂಡ್. 568 00:57:59,166 --> 00:58:00,458 ಆ ಕಡೆ. 569 00:58:07,500 --> 00:58:10,000 ಮಿಕ್ಕವರೆಲ್ಲಿ? 570 00:58:11,958 --> 00:58:13,125 ನಾನೊಬ್ಬಳೇ ಇದ್ದೇನೆ. 571 00:58:14,375 --> 00:58:16,625 ಅವಳ ಬಲಗೈ ಹೆಬ್ಬೆರಳನ್ನು ಕತ್ತರಿಸಿ. 572 00:58:17,958 --> 00:58:21,875 ಇತರರು ಎಲ್ಲಿದ್ದಾರೆ ಎಂದು ಹೇಳಿದರೆ, ಎಡಗೈ ಹೆಬ್ಬೆರಳನ್ನು ಉಳಿಸಿಕೊಳ್ಳಬಹುದು. 573 00:59:11,291 --> 00:59:14,041 ನಮ್ಮನ್ನು ಉಳಿಸಲು ತನ್ನನ್ನೇ ತ್ಯಾಗ ಮಾಡಿದಳು. 574 00:59:19,041 --> 00:59:21,166 ತಪ್ಪು ತಿಳಿದಿರುವೆ, ಕೆಮ್ನೀರ್. 575 00:59:23,708 --> 00:59:26,125 ಅವಳು ನಮ್ಮನ್ನು ಉಳಿಸಲು ಮಾಡಲಿಲ್ಲ. 576 00:59:28,208 --> 00:59:29,458 ಏನು? 577 00:59:29,541 --> 00:59:31,791 ಉಂಗುರವನ್ನು ಉಳಿಸಲು ಮಾಡಿದಳು. 578 00:59:33,875 --> 00:59:34,875 ಬೇಗ. 579 00:59:41,583 --> 00:59:43,291 ಇವು ಎಲ್ವೆನ್ ನಾಡುಗಳು. 580 00:59:47,375 --> 00:59:49,083 ನೆರಳಿಗೆ ಹಿಂತಿರುಗಿ. 581 01:00:01,333 --> 01:00:04,583 ನಾವು ಭೇಟಿಯಾಗುವ ಹೊತ್ತಿಗೆ ನಕ್ಷತ್ರವೊಂದು ಮಿನುಗುತ್ತದೆ... 582 01:00:04,666 --> 01:00:06,666 ಲೇಡಿ ಗಲಾದ್ರಿಯಲ್. 583 01:00:12,083 --> 01:00:15,791 ಈಗ ಹಾಡು ಆರಂಭವಾಗಲಿ 584 01:00:15,875 --> 01:00:19,166 ಜೊತೆಯಾಗಿ ಹಾಡೋಣ 585 01:00:19,250 --> 01:00:23,166 ಸೂರ್ಯ, ತಾರೆಗಳು, ಚಂದ್ರ ಮತ್ತು ಮಂಜಿನ ಬಗ್ಗೆ, 586 01:00:23,250 --> 01:00:26,875 ಮಳೆ ಮತ್ತು ಮೋಡದ ವಾತಾವರಣದ ಬಗ್ಗೆ 587 01:00:26,958 --> 01:00:30,583 ಚಿಗುರುವ ಎಲೆಯ ಮೇಲಿನ ಬೆಳಕು 588 01:00:30,666 --> 01:00:34,250 ರೆಕ್ಕೆಯ ಮೇಲಿನ ಮಂಜಿನ ಹನಿ 589 01:00:34,333 --> 01:00:37,958 ಬಯಲಿನ ಬೆಟ್ಟದ ಮೇಲಿನ ಗಾಳಿ 590 01:00:38,041 --> 01:00:40,708 ಹೆದರ್ ಹೂವಿನ ಗಂಟೆಗಳು 591 01:00:40,791 --> 01:00:45,041 ಬಳ್ಳಿಯಂತೆ ಬಳುಕುವುದು 592 01:00:45,125 --> 01:00:48,125 ಶುದ್ಧ ನೀರಿಗಿಂತ ಶುದ್ಧವಾಗಿರುವುದು 593 01:00:48,208 --> 01:00:52,750 ಓ, ಜೀವಂತ ಕೆರೆಯ ಬಳಿಯ ಹುಲ್ಲು 594 01:00:52,833 --> 01:00:55,500 ಸೊಬಗಿನ ನದಿ-ತನುಜೆ 595 01:00:55,583 --> 01:00:59,791 ಓ ವಸಂತ ಮತ್ತು ವೈಶಾಖವೇ 596 01:00:59,875 --> 01:01:03,041 ನಂತರ ಮತ್ತೊಮ್ಮೆ ವಸಂತ 597 01:01:03,125 --> 01:01:07,500 ಓ, ಜಲಪಾತದ ಮೇಲಿನ ಗಾಳಿ 598 01:01:07,583 --> 01:01:11,208 ಮತ್ತು ಎಲೆಗಳ ನಗು 599 01:01:11,291 --> 01:01:14,958 ಹಳೆಯ ಟಾಮ್ ಬೊಂಬಡಿಲ್ 600 01:01:15,041 --> 01:01:18,583 ತುಂಬಾ ಉತ್ಸಾಹಿ ವ್ಯಕ್ತಿ 601 01:01:18,666 --> 01:01:22,250 ಪ್ರಖರ ನೀಲಿ ಅವನ ನಿಲುವಂಗಿ 602 01:01:22,333 --> 01:01:25,958 ಅವನ ಜೋಡುಗಳು ಹಳದಿ 603 01:01:26,041 --> 01:01:29,666 ನೆರಳಿರೋ ಕೆರೆಯ ಬಳಿಯ ಹುಲ್ಲು 604 01:01:29,750 --> 01:01:33,333 ನೀರ ಮೇಲಿನ ನೈದಿಲೆ 605 01:01:33,416 --> 01:01:37,041 ಹಳೆಯ ಟಾಮ್ ಬೊಂಬಡಿಲ್ 606 01:01:37,125 --> 01:01:39,791 ಮತ್ತು ನದಿ-ತನುಜೆ 607 01:01:39,875 --> 01:01:44,083 ಬಳ್ಳಿಯಂತೆ ಬಳುಕುವುದು 608 01:01:44,166 --> 01:01:47,250 ಶುದ್ಧ ನೀರಿಗಿಂತ ಶುದ್ಧವಾಗಿರುವುದು 609 01:01:47,333 --> 01:01:51,791 ಓ, ಜೀವಂತ ಕೆರೆಯ ಬಳಿಯ ಹುಲ್ಲು 610 01:01:51,875 --> 01:01:54,666 ಸೊಬಗಿನ ನದಿ-ತನುಜೆ 611 01:01:54,750 --> 01:01:58,791 ಓ ವಸಂತ ಮತ್ತು ವೈಶಾಖವೇ 612 01:01:58,875 --> 01:02:02,041 ನಂತರ ಮತ್ತೊಮ್ಮೆ ವಸಂತ 613 01:02:02,125 --> 01:02:06,958 ಓ, ಜಲಪಾತದ ಮೇಲಿನ ಗಾಳಿ ಮತ್ತು ಎಲೆಗಳ ನಗು 614 01:02:07,041 --> 01:02:09,041 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 615 01:02:09,125 --> 01:02:11,125 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ