1 00:00:06,041 --> 00:00:07,458 ಈ ಹಿಂದೆ 2 00:00:07,458 --> 00:00:09,083 - ತಯಾರಾಗಿ! - ಡೀಸಾ! 3 00:00:11,500 --> 00:00:12,750 ಅಗ್ನಿಪರ್ವತ ಎಚ್ಚರಗೊಂಡಿತು. 4 00:00:12,750 --> 00:00:14,333 ಭೂಮಿಯ ಕಂಪನ... 5 00:00:14,333 --> 00:00:16,583 ಅದು ಭೂಮಿಯ ಆಳದೊಳಗಿನಿಂದ ಹಬ್ಬಿ, 6 00:00:16,583 --> 00:00:18,583 ನಮ್ಮ ಸೂರ್ಯ-ಕಂಬಗಳು ಕುಸಿದು, ಬೆಳೆ 7 00:00:18,583 --> 00:00:20,083 ಬೆಳೆಯುವ ಸಾಮರ್ಥ್ಯ ಕುಸಿದಿದೆ. 8 00:00:20,083 --> 00:00:21,333 ಇಲ್ಲ, ಇಲ್ಲ, ಇಲ್ಲ. 9 00:00:21,333 --> 00:00:24,250 ಈ ಉಂಗುರಗಳು ಯಾವುದೇ ಡ್ವಾರ್ಫ್, ಅಥವಾ ಮನುಷ್ಯ ಇದುವರೆಗೂ 10 00:00:24,250 --> 00:00:26,458 ತಯಾರಿಸಲಾದ ಶಕ್ತಿಯನ್ನೂ ಮೀರಿದ್ದು. 11 00:00:27,083 --> 00:00:29,041 ಇವು ಶಕ್ತಿಯ ಉಂಗುರಗಳು ಆಗಲಿವೆ. 12 00:00:29,041 --> 00:00:31,041 ನಿಮ್ಮ ಪರ್ವತವನ್ನು ಗುಣಪಡಿಸುವ ಶಕ್ತಿ. 13 00:00:31,041 --> 00:00:33,791 ನಿಮ್ಮ ತಂದೆಗೆ ರಾಜ್ಯವನ್ನು ಉಳಿಸಿಕೊಳ್ಳಲು ದಾರಿ ಕಲ್ಪಿಸುವುದು 14 00:00:33,916 --> 00:00:35,875 ಅವರ ಗೌರವ ಗಳಿಸುವ ಮಾರ್ಗವಾಗಿರಬಹುದು. 15 00:00:35,875 --> 00:00:37,666 ನಿನ್ನ ಪಿತ್ರಾರ್ಜಿತ ಆಸ್ತಿ ಕೂಡ. 16 00:00:37,666 --> 00:00:39,625 ನನ್ನ ತಂದೆಗೆ ಅವಮಾನ ಮಾಡಿದೆಯಾ? 17 00:00:39,625 --> 00:00:43,625 ಮತ್ತೊಮ್ಮೆ ರಾಣಿಯ ಬಗ್ಗೆ ಕೆಟ್ಟದಾಗಿ ಮಾತಾಡಿದರೆ, ನಷ್ಟ ಅನುಭವಿಸುವುದು ನೀನೇ. 18 00:00:43,625 --> 00:00:45,375 ನಾನು ಹೇಳಿದ್ದು ಸ್ಪಷ್ಟವಾಗಿದೆಯಾ? 19 00:00:46,291 --> 00:00:47,333 ಸುಳ್ಳಿನ ರಾಣಿ! 20 00:00:47,333 --> 00:00:48,541 ಇವಳು ಆಳಲು ಅನರ್ಹಳು! 21 00:00:48,541 --> 00:00:50,625 ಸಾಯುವ ಸಮಯದಲ್ಲಿ, ಮಹಾರಾಜ ನನಗೆ ಹೇಳಿದರು, 22 00:00:50,625 --> 00:00:53,791 ಮತ್ತು ಆಕೆ ಇದರಿಂದ... ಸಲಹೆ ಪಡೆದಳು ಎಂದರು. 23 00:00:53,791 --> 00:00:55,916 ಈ ಎಲ್ಫ್ ಕಲ್ಲು ನಿಮ್ಮ ರಾಣಿ! 24 00:00:55,916 --> 00:00:58,208 - ಮೌನ! - ಪಲಾಂಟಿರ್ ನನ್ನದು. ನಮಗೆ ಅದು ಬೇಕು. 25 00:01:00,666 --> 00:01:02,125 ಕೊಲೆಗಾತಿ! 26 00:01:02,125 --> 00:01:03,375 ವಾಮಾಚಾರ! 27 00:01:06,375 --> 00:01:09,875 ಫರಝೋನ್! ಫರಝೋನ್! ಫರಝೋನ್! 28 00:01:10,000 --> 00:01:12,333 ಫರಝೋನ್! ಫರಝೋನ್! 29 00:01:12,333 --> 00:01:15,541 ನಿಮ್ಮ ಮಹಾ ದೊರೆಯ ಪ್ರಕಾರ ಡ್ವಾರ್ವ್ಸ್ ಈ ಶಕ್ತಿಗೆ ಯೋಗ್ಯರಲ್ಲ. 30 00:01:15,541 --> 00:01:18,541 ಅಲ್ಲದೆ, ಯಾವುದೇ ಉಂಗುರಗಳ ತಯಾರಿಕೆಗೆ ನಿಷೇಧ ಹೇರಿದ್ದಾರೆ. 31 00:01:18,541 --> 00:01:23,000 ಯಾರಿಗೆ ಸಹಾಯ ಮಾಡುವುದು ಸೂಕ್ತ ಎಂದು ಪದ ಪೋಣಿಸಿ ಅವರಿಗೆ ಮನವರಿಕೆ ಮಾಡುವಷ್ಟು ಸಮಯವಿಲ್ಲ. 32 00:01:23,000 --> 00:01:23,958 ಏನು ಮಾಡುತ್ತಿರುವೆ? 33 00:01:23,958 --> 00:01:26,375 ಕುಲುಮೆಯನ್ನು ಮುಚ್ಚುವೆ ಎಂದು ಹೇಳುತ್ತಿದ್ದೇನೆ. 34 00:01:26,375 --> 00:01:28,416 ನಿನ್ನ ಮಹಾ ದೊರೆಗೆ ಸುಳ್ಳು ಹೇಳುವೆಯಾ? 35 00:01:28,416 --> 00:01:30,791 ನಮ್ಮ ಕೆಲಸ ಮುಗಿಸಲು ಜಾಗ ಕಲ್ಪಿಸುತ್ತೇನೆ. 36 00:01:31,625 --> 00:01:35,125 ಎರೆಗಿಯೊನ್‌ನಲ್ಲಿರೋ ಈ ಶಕ್ತಿ, ನನಗೆ ಅದರ ಮೇಲೆ ನಂಬಿಕೆ ಇಲ್ಲ. 37 00:01:35,125 --> 00:01:36,750 ನೀವು ಒಮ್ಮೆ ಹೇಳಿದ್ದಿರಿ, 38 00:01:36,750 --> 00:01:40,375 ಎಲ್ಫ್‌ಗಳ ಹಣೆಬರಹವನ್ನು ನಮಗಿಂತ ಬುದ್ದಿವಂತರು ಯಾರೋ ನಿರ್ಧರಿಸಿದ್ದಾರೆ ಅಂತ. 39 00:01:40,375 --> 00:01:43,125 ಆ ಹಣೆಬರಹವನ್ನು ಬದಲಾಯಿಸಿ, ಸಾವಿಗೆ ಮೋಸ ಮಾಡಲೆತ್ನಿಸುವುದು, 40 00:01:43,125 --> 00:01:45,708 ಇನ್ನೂ ದೊಡ್ಡ ದುರಂತಕ್ಕೆ ಕಾರಣವಾಗಬಹುದು. 41 00:01:45,708 --> 00:01:47,708 ನಾನು ಯೋಚಿಸುತ್ತಿರುತ್ತೇನೆ... 42 00:01:47,708 --> 00:01:49,666 ನೀವು ಸರಿಯಾಗಿದ್ದರೆ? 43 00:01:49,666 --> 00:01:52,250 ಒರ್ಕ್ಸ್ ಸೇನೆಯೊಂದು ಎಲ್ಫ್ ಗಳ ನಾಡನ್ನು ಪ್ರವೇಶಿಸಿದೆ. 44 00:01:52,250 --> 00:01:53,458 ಆ ಜಾಡು. 45 00:01:53,458 --> 00:01:54,791 ಎಲ್ಲಿ ಹೋಗುತ್ತದೆಂದರೆ-- 46 00:01:54,791 --> 00:01:56,333 ಎರೆಗಿಯೊನ್, ನನ್ನ ಒಡೆಯ. 47 00:01:56,333 --> 00:01:59,666 ಆತಿಥೇಯರು ಮೊರ್ಡೊರ್‌ಗೆ ತೆರಳುವ ಮುನ್ನ ಈ ಸುದ್ದಿ ಮಹಾ ದೊರೆಯನ್ನು ತಲುಪಬೇಕು. 48 00:02:00,791 --> 00:02:02,208 ಆ ಕಡೆ. 49 00:02:02,208 --> 00:02:04,958 ಲಿಂಡೊನ್‌ಗೆ ಹೋಗು. ಸಾಧ್ಯವಾದಷ್ಟು ಇವರ ಗಮನ ಸೆಳೆದಿರುತ್ತೇನೆ. 50 00:02:05,875 --> 00:02:07,083 ತಗೋ. 51 00:02:07,750 --> 00:02:09,166 ತಗೋ, ಎಲ್ರೊಂಡ್. 52 00:02:20,083 --> 00:02:23,333 ನಾವು ಭೇಟಿಯಾಗುವ ಹೊತ್ತಿಗೆ ನಕ್ಷತ್ರವೊಂದು ಮಿನುಗುತ್ತದೆ... 53 00:02:23,333 --> 00:02:25,125 ಗಲಾದ್ರಿಯಲ್. 54 00:03:39,833 --> 00:03:45,833 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 55 00:04:54,666 --> 00:04:55,666 ಈ ಕಡೆ, ಪ್ರಭು. 56 00:04:55,666 --> 00:04:59,625 ಇಲ್ಲಿ ಕಾಣುವಂತೆ, ನಾವೊಂದು ಹೊಸ ಪ್ರವೇಶ ದ್ವಾರವನ್ನು ಕೊರೆಯುತ್ತಿದ್ದೇವೆ, 57 00:04:59,625 --> 00:05:01,333 ಸೂರ್ಯನ ಬೆಳಕನ್ನು ತಲುಪೋಕೆ. 58 00:05:02,333 --> 00:05:06,958 ಆದರೆ ಇಲ್ಲಿಯವರೆಗೂ, ನಮ್ಮ ಎಲ್ಲಾ ಪ್ರಯತ್ನಗಳು ಪರ್ವತವನ್ನು ಇನ್ನೂ ಅಸ್ಥಿರಗೊಳಿಸಿವೆ. 59 00:05:09,500 --> 00:05:12,666 ಆ ಗುದ್ದಲಿ ತಗೊಳ್ಳಿ. ಆಯ್ತಾ? ಅದನ್ನು ಇಲ್ಲಿಡಿ. 60 00:05:12,666 --> 00:05:14,833 ಆ ಗುದ್ದಲಿಯನ್ನು ಎಳೆದರೆ... ಸರಿ, ಸಿದ್ಧವೇ? 61 00:05:14,833 --> 00:05:16,333 ಇಲ್ಲಿ ಸಮಯ ಹಾಳಾಗೋದು ಬೇಡ. 62 00:05:16,333 --> 00:05:18,000 ಸರಿ, ಸರಿ! 63 00:05:23,791 --> 00:05:24,916 ಏನು ವಿಷಯ, ಪ್ರಭು? 64 00:05:27,000 --> 00:05:28,000 ಏನಿಲ್ಲ. 65 00:05:28,791 --> 00:05:31,833 ಏನಿಲ್ಲ, ಶೀಘ್ರದಲ್ಲೇ ಎಲ್ಲವೂ ಸರಿಯಾಗಲಿದೆ. 66 00:05:32,875 --> 00:05:33,875 ಹೌದು. 67 00:06:11,041 --> 00:06:12,125 ಇಲ್ಲಿ ಅಗೆಯಿರಿ. 68 00:06:14,541 --> 00:06:17,916 ಪ್ರಭು. ಅದು ಅಡಿಪಾಯದ ಗೋಡೆ. 69 00:06:17,916 --> 00:06:21,166 - ಅದನ್ನು ಒಡೆದರೆ-- - ನನಗೇ ಗಣಿ ಗಾರಿಕೆ ಹೇಳಿಕೊಡ್ತೀಯಾ? 70 00:06:25,416 --> 00:06:28,583 ನಾವು ಇಲ್ಲಿಯೇ ಅಗೆಯಬೇಕು. ಈಗ ನಾನು ಹೇಳಿದಂತೆ ಮಾಡು. 71 00:06:36,083 --> 00:06:37,333 ನಿನ್ನ ಗುದ್ದಲಿ ಕೊಡು. 72 00:06:37,958 --> 00:06:39,583 - ಅಪ್ಪ-- - ಗುದ್ದಲಿ! 73 00:07:03,750 --> 00:07:04,750 ನಾರ್ವಿ! 74 00:07:05,916 --> 00:07:07,000 ಕೆಲಸ ಮುಗಿಯಿತು! 75 00:07:07,500 --> 00:07:09,708 ಹೋಗಿ. ಮನೆಗೆ ಹೋಗಿ! 76 00:07:09,708 --> 00:07:11,250 - ಒಳ್ಳೆಯದು. - ಎರಡು ಸಲ ಹೇಳಬೇಡ. 77 00:07:11,250 --> 00:07:12,625 ಮುಗಿಯಿತಾ? 78 00:07:29,125 --> 00:07:33,166 ಪ್ರಭು. ನೀವು ಸ್ವಲ್ಪ ವಿಶ್ರಾಂತಿ ಪಡೆಯುವುದು ಒಳ್ಳೆಯದಲ್ಲವೇ? 79 00:07:34,416 --> 00:07:36,958 ನಮಗೆ ಬೇಕಾಗಿರುವುದು ವಿಶ್ರಾಂತಿಯಲ್ಲ, ಬೆಳಕು. 80 00:07:44,291 --> 00:07:45,291 ಪ್ರಭು! ಬೇಡ! 81 00:07:45,291 --> 00:07:46,208 ಅಪ್ಪ, ಬೇಡ! 82 00:08:05,625 --> 00:08:08,125 ಮುಂದಿನ ಬಾರಿ ನಾನು ನಿನಗೆ ಅಗೆಯಲು ಆದೇಶಿಸಿದಾಗ, 83 00:08:10,125 --> 00:08:11,208 ಹೇಳಿದಂತೆ ಮಾಡು. 84 00:08:23,583 --> 00:08:25,541 ಇಲ್ಲಿ. ಇಲ್ಲಿ. 85 00:08:26,083 --> 00:08:27,666 ಸರಿ. ೧, ೨, ೩, ೪. ಅಗೆಯಿರಿ. 86 00:08:27,666 --> 00:08:29,500 ಮೇಲಿರೋರ ಬಗ್ಗೆ ಪಾಪ ಅನ್ಸುತ್ತೆ. 87 00:08:29,500 --> 00:08:30,958 ಸೂರ್ಯನ ಗುಲಾಮರು. 88 00:08:35,166 --> 00:08:38,208 ನಿದ್ರೆ ಮತ್ತು ಎಚ್ಚರದ ನಡುವಿನ ನಿಲ್ಲದ ಚಕ್ರದೊಳಗೆ ಸಿಲುಕಿದ್ದಾರೆ. 89 00:08:51,458 --> 00:08:55,250 ಖಜದ್-ದುಮ್‌ನಲ್ಲಿ, ನಾವು ಅದರ ದಬ್ಬಾಳಿಕೆಯಿಂದ ಮುಕ್ತರಾಗಿದ್ದೇವೆ. 90 00:09:01,000 --> 00:09:05,875 ಇಲ್ಲಿ, ನಾವು ಸೂರ್ಯನನ್ನೇ ಕರೆಸಿಕೊಳ್ಳುತ್ತೇವೆ. 91 00:09:07,958 --> 00:09:12,916 ಕೊನೆಗೂ, ನಮ್ಮ ಪರ್ವತದಲ್ಲಿ ಮತ್ತೊಮ್ಮೆ 92 00:09:12,916 --> 00:09:14,250 ಹೊಸ ಉದಯವಾಗಿದೆ! 93 00:09:19,291 --> 00:09:21,041 ಖಜದ್... 94 00:09:21,041 --> 00:09:22,750 ದುಮ್! 95 00:09:26,458 --> 00:09:28,875 ಡ್ವಾರ್ವ್ಸ್ ಮತ್ತು ಎಲ್ಫ್‌ಗಳು ಜೊತೆಯಾಗಿದ್ದಾರೆ. 96 00:09:28,875 --> 00:09:31,208 ಇದು ಅಸಾಧ್ಯ ಎಂದು ಹೇಳಿದ್ದರು. 97 00:09:31,208 --> 00:09:34,666 ಆದರೆ ನಮ್ಮ ಸಹಕಾರ ಈ ಪವಾಡವನ್ನು ಸಾಧಿಸಿದೆ. 98 00:09:34,666 --> 00:09:39,166 ಮತ್ತು ಇಂದು ನಾವು ಹೊಸ ಕನಸನ್ನು ಪ್ರಾರಂಭಿಸುತ್ತೇವೆ, 99 00:09:39,916 --> 00:09:42,791 ನಮ್ಮ ಸ್ನೇಹವನ್ನು ಕಲ್ಲಿನಲ್ಲಿ ಅಚ್ಚೊತ್ತೋಣ. 100 00:09:45,625 --> 00:09:46,750 ನಾರ್ವಿ? 101 00:09:52,500 --> 00:09:53,583 ನಾರ್ವಿಯ ಪ್ರಮುಖ ಕ್ಷಣ. 102 00:09:55,875 --> 00:09:56,958 ಇಗೋ... 103 00:10:02,208 --> 00:10:03,833 ಡ್ಯುರಿನ್‌ ಬಾಗಿಲು. 104 00:10:05,875 --> 00:10:08,625 ನಮ್ಮ ಪರ್ವತದ ಹೊಸ ಪಡುವಣ ಬಾಗಿಲು. 105 00:10:09,708 --> 00:10:12,833 ತಲುಪಲಾಗದ್ದು. ಚಂದ್ರನ ಬೆಳಕಿನಲ್ಲಷ್ಟೇ ಕಾಣುವಂಥದ್ದು. 106 00:10:13,500 --> 00:10:18,875 ಮತ್ತು ಮಿತ್ರರಿಗೆ ಮಾತ್ರ ತಿಳಿದಿರುವಂಥ ಗುಪ್ತಪದದಿಂದ ರಕ್ಷಿಸಲ್ಪಟ್ಟಿದೆ. 107 00:10:20,000 --> 00:10:22,125 ಈಗ, ಗಮನಿಸಿ, ಕಾರ್ಯಕರ್ತರೇ, 108 00:10:22,958 --> 00:10:25,750 ನಾರ್ವಿ ಇಲ್ಲಿರುವಾಗ ಆತನನ್ನು ಹತ್ತಿರದಿಂದ ಗಮನಿಸಿ. 109 00:10:25,750 --> 00:10:28,083 ಆತ ಮೇರು ಕಲಾವಿದ ಎಂಬ ಕಾರಣಕ್ಕೆ ಮಾತ್ರವಲ್ಲ. 110 00:10:28,458 --> 00:10:29,333 ಆದರೂ ಕೋಪಿಷ್ಠ. 111 00:10:29,333 --> 00:10:32,833 ಆತ ಒಬ್ಬ ಕುಖ್ಯಾತ ಕಳ್ಳ. ಯಾವುದೇ ಒಡವೆ ಕಳವಾಗಲು ಬಿಡಬೇಡಿ. 112 00:10:34,416 --> 00:10:37,166 ಹಾಂ, ಅವನ ಜೇಬಿನಲ್ಲಿ ಹುಡುಕಿ. 113 00:10:39,291 --> 00:10:41,000 ಶಾಶ್ವತ ಸ್ನೇಹಕ್ಕಾಗಿ... 114 00:10:41,833 --> 00:10:44,916 ಎಲ್ಫ್‌ಗಳು ಮತ್ತು ಡ್ವಾರ್ವ್ಸ್ ನಡುವೆ. 115 00:10:46,875 --> 00:10:49,416 ಆತಿಥ್ಯಕ್ಕಾಗಿ ಧನ್ಯವಾದ. 116 00:10:57,041 --> 00:10:59,208 ಹೆಚ್ಚಾಯಿತಾ? ನನ್ನ ಮಾತುಗಳು. 117 00:11:00,708 --> 00:11:02,708 ಕಡಿಮೆ ಮಾತಾಡಲು ನಿಮಗೆ ಹೇಳಿದ್ದೆ. 118 00:11:05,958 --> 00:11:07,458 ನೀನು ಹೇಳಿದ್ದು ನೆನಪಿಲ್ಲ. 119 00:11:09,208 --> 00:11:12,000 ನೀವು ಯಾವಾಗಲೂ ಕೇಳುವುದಿಲ್ಲ. 120 00:11:13,541 --> 00:11:15,541 ನಿಮ್ಮ ತಲೆಗೆ ಒಂದು ಆಲೋಚನೆ ಬಂದರೆ ಹಾಗೇನೇ. 121 00:11:19,916 --> 00:11:21,625 ನಾನು ಹೆಚ್ಚು ಕಾಲ ಮಾತನಾಡಬೇಕಿತ್ತು. 122 00:11:23,625 --> 00:11:24,916 ನಿನ್ನ ಕೊಡುಗೆ ಉಲ್ಲೇಖಿಸಲು. 123 00:11:28,458 --> 00:11:29,625 ನನ್ನನ್ನು ಕ್ಷಮಿಸಿ. 124 00:11:31,875 --> 00:11:33,916 ನನಗೆ ಸಂಭ್ರಮಿಸಲು ಕಷ್ಟವೆನಿಸುತ್ತದೆ, 125 00:11:35,041 --> 00:11:38,125 ಮೊರ್ಡೊರ್‌ನ ಉಗಮದ ಪರಿಣಾಮ ಎದುರಿಸುತ್ತಿರುವವರು ಇನ್ನೂ ನರಳುತ್ತಿದ್ದಾರೆ. 126 00:11:41,375 --> 00:11:42,750 ಮನುಷ್ಯರಿಗೆ ಉಂಗುರಗಳಾ? 127 00:11:49,541 --> 00:11:51,333 ನಾನು ಉಂಗುರಗಳ ಬಗ್ಗೆ ಏನೂ ಹೇಳಲಿಲ್ಲ. 128 00:11:52,291 --> 00:11:55,541 ಇದು ನೀನು ಆಡುವ ಆಟ, ಅಲ್ಲವೇ? 129 00:11:55,541 --> 00:11:59,125 ಪರರ ಮನಸ್ಸಿನಲ್ಲಿ ಆಲೋಚನೆಗಳನ್ನು ಬಿತ್ತಿ, ಅದರ ಫಲವು ಅವರ ಆಲೋಚನೆಗಳಿಂದಲೇ 130 00:11:59,125 --> 00:12:01,208 ಹುಟ್ಟಿದ್ದು ಅಂತ ಬಿಂಬಿಸುವುದು. 131 00:12:01,208 --> 00:12:04,500 ಇದರಲ್ಲಿ ನಮ್ಮ ಆಲೋಚನೆಗಳು ಒಂದೇ ಅಂದುಕೊಂಡಿದ್ದೆ. 132 00:12:07,166 --> 00:12:09,375 ಮನಸ್ಸು ಬದಲಾಯಿಸಿದಿರಾ? 133 00:12:09,375 --> 00:12:13,791 ಇದು ಡ್ವಾರ್ವ್ಸ್ ರಾತ್ರಿ. ಬಾ. ಮನುಷ್ಯರ ಬಗ್ಗೆ ನಾಳೆ ಮಾತಾಡೋಣ. 134 00:12:15,750 --> 00:12:17,833 ಅವರ ಬಗ್ಗೆ ಈಗಲೇ ಮಾತಾಡೋಣ. 135 00:12:22,125 --> 00:12:24,541 ಮನುಷ್ಯರು ಅನುಭವಿಸುವ ಬಹುತೇಕ ದುಃಖಕ್ಕೆ ಅವರೇ ಕಾರಣ. 136 00:12:26,916 --> 00:12:29,500 ತೆಂಕಣ ನಾಡಿನ ಮನುಷ್ಯರೇ ಆಡಾರ್ ಗೆ ತನ್ನ ವಿಜಯದಲ್ಲಿ 137 00:12:29,500 --> 00:12:31,750 ಸಹಾಯ ಮಾಡಿದರು ಅಂತ ನನಗೆ ಗೊತ್ತಾಯಿತು. 138 00:12:31,750 --> 00:12:32,833 ಕೆಲವರು ಮಾತ್ರ. 139 00:12:32,833 --> 00:12:35,291 ಮಿಕ್ಕವರಲ್ಲಿ ಎಷ್ಟೋ ಮಂದಿಗೆ ಹೊಸ ಮನೆಗಳು ಸಿಕ್ಕಿವೆ, 140 00:12:36,416 --> 00:12:39,541 ಅವರ ಕಡೆಯವರಿಂದಲೇ, ನ್ಯೂಮೆನೊರ್‌ನವರು. 141 00:12:40,375 --> 00:12:42,666 ನ್ಯೂಮೆನೊರ್‌ಗೆ ಎಂದಾದರೂ ಹೋಗಿದ್ದೀರಾ? 142 00:12:42,666 --> 00:12:43,958 ಇಲ್ಲ. 143 00:12:45,208 --> 00:12:46,666 ಅದ್ಭುತವಾಗಿದೆ. 144 00:12:47,666 --> 00:12:48,958 ಆದರೆ ಜರ್ಜರಿತವಾಗಿದೆ. 145 00:12:50,166 --> 00:12:53,500 ವೈಭವ ಮತ್ತು ವಿನಾಶದ ನಡುವೆ ಸದಾ ಒದ್ದಾಡುತ್ತಿರುತ್ತದೆ. 146 00:12:55,166 --> 00:12:57,208 ನ್ಯೂಮೆನೊರ್ ಎಂದರೆ ನನಗೆ ಭಯ. 147 00:12:58,416 --> 00:13:00,000 ಮಧ್ಯ ಧರೆಯ ಯಾವುದೇ ನಾಡಿಗಿಂತಲೂ. 148 00:13:02,416 --> 00:13:05,916 ಉಂಗುರಗಳು ಅದನ್ನು ಶಾಂತಗೊಳಿಸುತ್ತವೆ ಅಂದುಕೊಂಡಿದ್ದೆ. 149 00:13:07,208 --> 00:13:09,583 ಉಂಗುರಗಳನ್ನು ಮನುಷ್ಯರಿಗೆ ಕೊಡಲಾಗದು. 150 00:13:10,208 --> 00:13:12,500 ಭ್ರಷ್ಟಾಚಾರದ ಅಪಾಯ ತುಂಬಾನೇ ಇದೆ. 151 00:13:12,500 --> 00:13:15,041 ನಾವು ಸೃಷ್ಟಿಸುವ ಸಮಸ್ಯೆಗಳ ವಿರುದ್ಧ 152 00:13:15,041 --> 00:13:16,750 ಪರಿಹರಿಸುವ ಸಮಸ್ಯೆಗಳು ಏನೇನೂ ಅಲ್ಲ. 153 00:13:16,750 --> 00:13:17,833 ಹೌದು. 154 00:13:18,708 --> 00:13:19,875 ಸರಿ ಹೇಳಿದಿರಿ. 155 00:13:20,958 --> 00:13:23,958 ಖಂಡಿತ. ಮನುಷ್ಯರು ಮಹಾ ದೌರ್ಬಲ್ಯಕ್ಕೆ ಹೆಸರಾದವರು. 156 00:13:26,875 --> 00:13:28,583 ಆದರೆ ಕತ್ತಲೆಯಾದಾಗ, 157 00:13:29,666 --> 00:13:34,666 ಮೇಲೆದ್ದು ಹೊಳೆಯುವಂಥ ಕೆಲವರು ಯಾವಾಗಲೂ ಇರುತ್ತಾರೆ. 158 00:13:37,083 --> 00:13:40,208 ಈಆರೇಂಡೀಲ್, ಟುಓರ್, 159 00:13:41,333 --> 00:13:43,833 ಬರಾಹಿರನ ಮಗ ಬೇರೆನ್. 160 00:13:47,500 --> 00:13:48,916 ನೀನೇನು ಪ್ರಸ್ತಾಪಿಸುತ್ತಿರುವೆ? 161 00:13:51,125 --> 00:13:53,125 ನಂಬಿಕಸ್ಥ ಮನುಷ್ಯರನ್ನು ಹುಡುಕೋಣ. 162 00:13:54,458 --> 00:13:58,291 ಅತ್ಯಂತ ಬುದ್ಧಿವಂತ, ಅತ್ಯಂತ ಶ್ರೇಷ್ಠ, ಪರಿಶುದ್ಧ ಹೃದಯದವರು. 163 00:13:58,291 --> 00:14:02,750 ನ್ಯೂಮೆನೊರಿಂದ ರ್ಹುನ್‌ವರೆಗೂ ಒಂಬತ್ತು ಮಹಾನ್ ಮರ್ತ್ಯ ಸಾಮ್ರಾಜ್ಯಗಳೊಂದಿಗೆ 164 00:14:02,750 --> 00:14:04,583 ಒಂಬತ್ತು ಉಂಗುರ-ಧಾರಕರನ್ನು ಹುಡುಕೋಣ. 165 00:14:04,583 --> 00:14:05,666 ಒಂಬತ್ತೇ? 166 00:14:08,125 --> 00:14:09,791 ಮೂರರ ಪರಿಪೂರ್ಣತೆ. 167 00:14:12,083 --> 00:14:13,541 ಮೂರು ಬಾರಿ ಪರಿಪೂರ್ಣಗೊಂಡಿರೋದು. 168 00:14:15,750 --> 00:14:20,333 ಮೂರನೇ ಸಲ ಕುಲುಮೆಯಲ್ಲಿ ತಯಾರಿಸುವಾಗ ಒಂಬತ್ತು ಮಾಡೋಣ. 169 00:14:23,375 --> 00:14:28,416 ನಾವು ದೊಡ್ಡವನ್ನು ಸಾಧಿಸಿದ್ದೇವೆ, ಗೆಳೆಯ. 170 00:14:30,333 --> 00:14:33,833 ಹಾಸಿಗೆಗಿಂತ ಹೆಚ್ಚು ಕಾಲು ಚಾಚಿ... 171 00:14:35,875 --> 00:14:39,541 ಕೈಸುಟ್ಟುಕೊಳ್ಳುವುದು ಬೇಡ. 172 00:14:44,041 --> 00:14:47,041 ನನ್ನನ್ನು ಕ್ಷಮಿಸು. ನನ್ನ ಉತ್ತರ ಬೇಡ ಅಂತ. 173 00:14:48,416 --> 00:14:50,916 ಶಕ್ತಿಯ ಉಂಗುರಗಳು ಪೂರ್ಣವಾಗಿವೆ. 174 00:14:52,125 --> 00:14:53,208 ಖಂಡಿತವಾಗಿ. 175 00:14:56,333 --> 00:14:59,541 ನೀವು ಕ್ಷಮೆ ಕೇಳಬೇಡಿ. ಹಾಗೆಯೇ ಆಗಲಿ. 176 00:15:09,291 --> 00:15:11,500 ನಾನೇ ಆ ಒಂಬತ್ತನ್ನು ಮಾಡುತ್ತೇನೆ. 177 00:15:21,125 --> 00:15:24,875 ಎಂದಾದರೂ ನೋಡಿದ್ದೀಯಾ? ನಮ್ಮ ಪಶ್ಚಿಮದ ಸಾಗರಗಳ ಆಚೆ. 178 00:15:25,750 --> 00:15:27,791 ಎರೆಸ್ಸಿಯ ಬಿಳಿಯ ಸೌಧ... 179 00:15:27,791 --> 00:15:31,041 ಅಮರ್ಥ್ಯ ಲೋಕಕ್ಕೆ ಅದೇ ದ್ವಾರ. 180 00:15:31,875 --> 00:15:33,375 ನಾನು ನೋಡಿಲ್ಲ. 181 00:15:34,083 --> 00:15:35,708 ತೀಕ್ಷ್ಣವಾದ ಕಣ್ಣಿಗಷ್ಟೇ ಕಾಣುತ್ತೆ. 182 00:15:37,458 --> 00:15:40,041 ಮತ್ತು ಮೆನೇಲ್ಟಾರ್ಮಾ ಶಿಖರದಿಂದ ಮಾತ್ರ. 183 00:15:40,666 --> 00:15:42,958 ಎಲ್ಫ್‌ಗಳು ಬೇಕಾಗಿಯೇ ಅದನ್ನಲ್ಲಿ ಇರಿಸಿದರು. 184 00:15:43,458 --> 00:15:48,083 ಪ್ರತಿ ಸೂರ್ಯಾಸ್ತವೂ ನಮ್ಮ ದಿನ ಕೊನೆಯಾಗಬೇಕು, ಆದರೆ ಅವರದ್ದಲ್ಲ 185 00:15:49,083 --> 00:15:50,625 ಎಂದು ನೆನಪಿಸಬೇಕು. 186 00:15:51,750 --> 00:15:54,500 ನಾವೆಷ್ಟೇ ಎತ್ತರಕ್ಕೆ ಏರಿದರೂ, 187 00:15:54,500 --> 00:15:58,083 ಕೆಲವು ವಿಷಯಗಳನ್ನು ನಾವು ಎಂದಿಗೂ ತಲುಪಲಾಗದು. 188 00:16:02,625 --> 00:16:05,375 ರಾಜದಂಡವು ಈಗ ನಿಮ್ಮ ಕೈಲಿದೆ, ಅಪ್ಪ. 189 00:16:07,291 --> 00:16:08,833 ಅಷ್ಟು ಎತ್ತರ ಸಾಲದೇ? 190 00:16:08,833 --> 00:16:12,333 ನನ್ನ ಜೀವನದುದ್ದಕ್ಕೂ, ಅಷ್ಟು ಸಾಕು ಎಂದು ನಂಬಿದ್ದೆ. 191 00:16:20,333 --> 00:16:23,000 ರಾಜದಂಡವನ್ನು ನೀವೇನಾದರೂ ಮಾಡಬಹುದು. 192 00:16:23,000 --> 00:16:26,583 ಮನುಷ್ಯರ ಯುಗದಲ್ಲಿದ್ದೇವೆ, ಅಪ್ಪ. ಅದನ್ನು ಬಳಸಿಕೊಳ್ಳೋಣ. 193 00:16:26,583 --> 00:16:30,291 ನಿಮ್ಮ ಮನಸ್ಸಿನಲ್ಲಿ ನೀವು ಯಾವಾಗಲೂ ಕಲ್ಪಿಸಿಕೊಂಡಿರುವ ನ್ಯೂಮೆನೊರ್ ಕಟ್ಟೋಣ. 194 00:16:40,250 --> 00:16:42,833 ಒಮ್ಮೆ, ನಿನಗೆ ಹಾಲುಣಿಸುತ್ತಿದ್ದಾಗ, 195 00:16:42,833 --> 00:16:47,875 ನಿನಗೆ ಅಕಾಲಿಕ ಮರಣ ಬರಬಹುದು ಅಂತ ನಿನ್ನ ತಾಯಿ ಭವಿಷ್ಯ ನುಡಿದಳು. 196 00:16:52,000 --> 00:16:53,208 ನನ್ನ ತಾಯಿಯೇ? 197 00:16:57,166 --> 00:16:58,791 ಆಕೆ ಏನು ಹೇಳಿದಳು? 198 00:16:58,791 --> 00:17:03,166 ನಾನು ನಿನಗೆ ಈಗ ಕೊಡುವ ಕೆಲಸದಲ್ಲಿ ನನ್ನನ್ನು ಮೆಚ್ಚಿಸು, 199 00:17:03,166 --> 00:17:04,375 ಆಮೇಲೆ ನಿನಗೆ ಹೇಳುತ್ತೇನೆ. 200 00:17:04,500 --> 00:17:09,875 ನೀನು ವಿಫಲನಾದರೆ, ನಿನ್ನನ್ನು ಬಳಸಲು ನಾನು ಬೇರೆ ಜಾಗಗಳನ್ನು ಹುಡುಕಬೇಕಾದೀತು. 201 00:17:13,750 --> 00:17:20,083 ಫರಝೋನ್! ಫರಝೋನ್! ಫರಝೋನ್! 202 00:17:20,708 --> 00:17:21,708 ಅವರನ್ನು ಕೇಳಿಸಿಕೋ. 203 00:17:22,541 --> 00:17:24,541 ಅಲ್ಲಿ ಇತರ ಧ್ವನಿಗಳೂ ಇವೆ. 204 00:17:24,541 --> 00:17:26,625 ಹಳೇ ಜ್ಹೋಪ್ಡಿಯಲ್ಲಿ ಪ್ರಾರ್ಥನೆಗಳು ನಿಮಗಾಗಿ 205 00:17:26,625 --> 00:17:28,875 ರಾತ್ರಿ-ಹಗಲು ಏರುತ್ತವೆ ಅಂತ ವಲಂಡೀಲ್ ಹೇಳಿದ. 206 00:17:30,041 --> 00:17:31,333 ಅವರ ರಾಣಿಗಾಗಿ. 207 00:17:33,375 --> 00:17:35,083 ನಮ್ಮ ರಾಣಿ. 208 00:17:35,083 --> 00:17:37,625 ನಮ್ಮೆಲ್ಲರಿಗೂ ಆದೇಶಿಸಿದರೆ ಜೊತೆಯಾಗಿ ಇದನ್ನು ಸರಿಪಡಿಸೋಣ. 209 00:17:37,625 --> 00:17:39,708 - ಕಡಲು ಕಾವಲುಗಾರರು ನಿಷ್ಠರು. - ಎಲೆಂಡಿಲ್-- 210 00:17:39,708 --> 00:17:41,958 - ನಾವು ಒಟ್ಟಿಗೆ ಹೋರಾಡೋಣ. - ಎಲೆಂಡಿಲ್. 211 00:17:53,958 --> 00:17:58,250 ನಿಷ್ಠಾವಂತರ ಮಾರ್ಗದೆಡೆಗೆ ನನ್ನ ಹೃದಯವನ್ನು ಮತ್ತೆ ತೆರೆಸಿದ್ದು ನೀವೇ. 212 00:17:59,333 --> 00:18:01,250 ಸೇವೆ ಮಾಡಲು ಪ್ರತಿಜ್ಞೆ ಮಾಡಿದೆವು. 213 00:18:01,250 --> 00:18:02,583 ಈಗ ಸುಮ್ಮನಿರಬೇಕಂತೀರಾ... 214 00:18:03,416 --> 00:18:05,416 ಅಪಾಯ ತಲೆ ಹತ್ತಿ ಕೂತಿರೋವಾಗ? 215 00:18:06,833 --> 00:18:10,000 ನೀನೇನು ನೋಡಿದೆ? ಪಲಾಂಟಿರಲ್ಲಿ. 216 00:18:17,416 --> 00:18:18,541 ನನ್ನನ್ನೇ ನೋಡಿದೆ. 217 00:18:21,208 --> 00:18:22,291 ಕಳೆದುಹೋಗಿದ್ದೆ. 218 00:18:24,125 --> 00:18:25,541 ನಗರದಿಂದ ಸವಾರಿ ಹೊರಟಿದ್ದೆ... 219 00:18:31,250 --> 00:18:32,250 ಎಲ್ಲಿಗೋ ಗೊತ್ತಿಲ್ಲ. 220 00:18:32,916 --> 00:18:35,125 ಹಾಗಾದರೆ ನೀನು ಅದನ್ನು ನೋಡಲಿಲ್ಲ. 221 00:18:36,041 --> 00:18:38,166 - ಏನನ್ನು ನೋಡುವುದು? - ಅದು ಬದಲಾಯಿತೇನೋ. 222 00:18:38,791 --> 00:18:40,000 ಏನು ಹೇಳುತ್ತಿದ್ದೀರಿ? 223 00:18:41,416 --> 00:18:43,791 ಎಲ್ಲಾ ಯುದ್ಧಗಳನ್ನೂ ಹೋರಾಡಿಯೇ ಗೆಲ್ಲಬೇಕಿಲ್ಲ. 224 00:18:43,791 --> 00:18:47,416 ಕೆಲವೊಮ್ಮೆ ಮನಸ್ಸಿನ ನಿಯಂತ್ರಣ ಸಾಧಿಸುವುದೇ ಮಹಾ ವಿಜಯ, 225 00:18:47,416 --> 00:18:50,458 ಯಾರಾದರೂ ಮಾಡಬಹುದಾದ ನಂಬಿಕೆಯ ಶ್ರೇಷ್ಠ ಕಾರ್ಯ. 226 00:18:50,458 --> 00:18:51,958 ನನಗೆ ಅರ್ಥವಾಗುತ್ತಿಲ್ಲ. 227 00:18:54,375 --> 00:18:57,958 ವರ್ಷಗಳ ಕಾಲ, ಆ ಪಲಾಂಟಿರ್ 228 00:18:57,958 --> 00:19:00,541 ನಮ್ಮ ದ್ವೀಪದ ಅವನತಿಯನ್ನು ಮಾತ್ರ ನನಗೆ ತೋರಿಸಿತ್ತು. 229 00:19:00,541 --> 00:19:03,541 ಆದರೆ ನೀನು ಅದನ್ನು ಮುಟ್ಟಿದಾಗ, ಆ ದೃಶ್ಯ ಹೋಯಿತು. 230 00:19:03,541 --> 00:19:05,500 ಹೊಸ ದಾರಿಗೆ ಬದಲಾಯಿತು. 231 00:19:06,166 --> 00:19:09,666 ಫರಝೋನಿನ ರಾಜತ್ವ ಆ ಮಾರ್ಗದ ಒಂದು ಭಾಗವಾಗಿದೆ. 232 00:19:09,666 --> 00:19:11,958 ಮತ್ತು ನೀನೂ ಸಹ. 233 00:19:11,958 --> 00:19:14,458 ನೀನು ನನ್ನ ಆಜ್ಞೆಯನ್ನು ಯಾಚಿಸಿದ್ದೀಯ. 234 00:19:17,458 --> 00:19:18,708 ಈಗ ಅದನ್ನು ಕೊಟ್ಟಿರುವೆ. 235 00:19:27,291 --> 00:19:31,000 ಅವರು ನಿನ್ನನ್ನು ಎಷ್ಟೇ ಬಲವಂತಪಡಿಸಿದರೂ, ನಿನ್ನಿಂದ ಏನೇ ಕಸಿಯಲು ಪ್ರಯತ್ನಿಸಿದರೂ, 236 00:19:31,000 --> 00:19:34,250 ನ್ಯೂಮೆನೊರಿನ ಹೊಸ ವಿಧಿಗೆ ಮಾತ್ರ ಯಾವುದೇ ಆಪತ್ತು ಬರಕೂಡದು. 237 00:19:35,083 --> 00:19:38,500 ನೀನು ಅತ್ಯಂತ ಶಾಂತನಾಗಿರಬೇಕು. 238 00:19:39,166 --> 00:19:41,416 ಈಗ ನಿನ್ನ ಹಡಗಿಗೆ ಹಿಂತಿರುಗು, ನಾಯಕನೇ. 239 00:19:48,750 --> 00:19:50,625 - ನೀನಾಗೇ ಹಿಂದಿರುಗಿಸುವೆಯಾ? - ಹೌದು. 240 00:19:50,625 --> 00:19:52,875 ನೀನೀಗ ಕಡಲು ಕಾವಲುಗಾರನಲ್ಲ. ಹೊರಡು. ಮುಂದೆ. 241 00:19:55,583 --> 00:19:56,583 ಸಾಲಾಗಿ ಬನ್ನಿ. 242 00:19:57,083 --> 00:19:58,250 ಉಪನಾಯಕರೇ. 243 00:19:58,250 --> 00:19:59,416 ಸರಿ. ಈ ಕಡೆ. 244 00:20:04,416 --> 00:20:06,000 ಇದೆಲ್ಲದರ ಅರ್ಥವೇನು? 245 00:20:06,791 --> 00:20:11,041 ರಾಣಿ ರೀಜೆಂಟ್ ಪರ ನಿಂತವರೆಲ್ಲರ ಪದವಿ ತೆಗೆದುಹಾಕುತ್ತಿದ್ದಾರೆ. 246 00:20:11,041 --> 00:20:12,541 ಯಾರ ಆಜ್ಞೆಯ ಮೇರೆಗೆ? 247 00:20:12,541 --> 00:20:13,833 ನನ್ನ ಆಜ್ಞೆ. 248 00:20:18,125 --> 00:20:19,916 ಕ್ಷಮಿಸಿ. ನಿಮಗೆ ಮೊದಲೇ ಹೇಳಬೇಕಂತಿದ್ದೆ. 249 00:20:19,916 --> 00:20:23,250 ಒಡೆಯ ಬೆಲ್ಜಗಾರ್ ಬೆಲ್ಜಗಾರ್ ನಿಮ್ಮನ್ನು ನಾಡದ್ರೋಹಿಗಳೆಂದು ಶಿಕ್ಷಿಸಬೇಕಂತೆ. 250 00:20:24,208 --> 00:20:28,291 ಆದರೂ, ರಾಣಿಯನ್ನು ಕೆಳಗಿಳಿಸಿದ್ದು ನಿನಗೆ ಬಡ್ತಿಯನ್ನು ಕೊಡಿಸಿದೆ. 251 00:20:28,291 --> 00:20:30,958 ನನ್ನ ದುಃಖವನ್ನು ಆಸೆಯೆಂದು ಬಿಂಬಿಸಲು ನಿಮಗೆಷ್ಟು ಧೈರ್ಯ? 252 00:20:31,708 --> 00:20:35,083 ಎಲ್ಫ್ ಕಲ್ಲಿನೊಳಗೆ ಮಿರಿಯೆಲ್ ಇಣುಕಿ ನೋಡಿದ್ದಕ್ಕೆ ನನ್ನ ಸೋದರ ಸತ್ತ. 253 00:20:35,083 --> 00:20:37,666 ಪವಿತ್ರವಾದುದನ್ನು ಅಪಹಾಸ್ಯ ಮಾಡುತ್ತೀಯ. 254 00:20:37,666 --> 00:20:40,083 ಅಸಂಬದ್ಧವಾದದ್ದನ್ನು ಅಪಹಾಸ್ಯ ಮಾಡುತ್ತೇನೆ. 255 00:20:40,083 --> 00:20:41,541 ಅರ್-ಫರಝೋನ್ ನಿಮ್ಮ ರಾಜ. 256 00:20:42,208 --> 00:20:43,833 ಒಪ್ಪಿಕೊಳ್ಳಿ, ಅಪ್ಪ. ಬೇಡಿಕೊಳ್ಳುವೆ. 257 00:20:45,500 --> 00:20:47,583 ನೀವು ಅಪಾಯದ ಹಾದಿಯಲ್ಲಿ ನಡೆಯುತ್ತಿದ್ದೀರಿ. 258 00:20:48,916 --> 00:20:50,958 ನಿನ್ನ ದಾರಿಯಲ್ಲಿ ಸಮುದ್ರದ ನೀರಿದೆ. 259 00:20:50,958 --> 00:20:54,666 ಜಾಗ್ರತೆಯಿಂದ ಸಾಗು, ಒಳಗೆ ತುಂಬಾ ಆಳವಿದೆ. 260 00:20:59,750 --> 00:21:02,166 - ಸಿದ್ಧವೇ? - ಅಲ್ಲಿ ಎಲ್ಲವೂ ಇದೆಯೇ? 261 00:21:02,166 --> 00:21:03,208 - ಹೌದು. - ಮುಂದೆ. 262 00:21:04,250 --> 00:21:07,208 ಸರಿ, ತಡಿ. ಇವೆಲ್ಲವೂ ಒಂದೇ ಹಡಗಿನಿಂದಲೇ. ಅವನನ್ನು ಪರಿಶೀಲಿಸಿ. 263 00:21:10,625 --> 00:21:11,875 - ಗುರುತು ಹಾಕು. - ಸರಿ, ಒಡೆಯ. 264 00:21:12,750 --> 00:21:14,291 ದಾಖಲೆಗಾಗಿ ಒಂದು ಪಟ್ಟಿ ಮಾಡೋಣ. 265 00:21:14,291 --> 00:21:15,583 ನಾಯಕರು ಹೊರಟಿದ್ದಾರೆ! 266 00:21:18,041 --> 00:21:19,625 ಆತ ಈಗ ಯಾರ ನಾಯಕನೂ ಅಲ್ಲ. 267 00:21:40,333 --> 00:21:41,333 ಅವನು ಸರಿಯೇ. 268 00:21:48,375 --> 00:21:49,375 ನಾನಲ್ಲ. 269 00:21:54,875 --> 00:21:55,875 ನಾಯಕರೇ. 270 00:22:00,875 --> 00:22:02,666 - ಧನ್ಯವಾದ, ನಾಯಕರೇ. - ವಾಲಾರ್ ಕಾಪಾಡಲಿ. 271 00:22:02,666 --> 00:22:03,583 ಇನ್ನು ಸಾಕು. 272 00:22:03,583 --> 00:22:05,541 - ಧನ್ಯವಾದ, ನಾಯಕರೇ. - ಧನ್ಯವಾದ, ನಾಯಕರೇ. 273 00:22:05,541 --> 00:22:07,750 - ವಾಲಾರ್ ಆಶೀರ್ವದಿಸಲಿ, ನಾಯಕರೇ. - ಧನ್ಯವಾದ. 274 00:22:07,750 --> 00:22:09,208 - ವಾಲಾರ್ ಹರಸಲಿ. - ಧನ್ಯವಾದ. 275 00:22:09,208 --> 00:22:10,666 ಧನ್ಯವಾದ, ಸ್ವಾಮಿ. 276 00:22:11,500 --> 00:22:12,500 ಇನ್ನು ಸಾಕು. 277 00:22:12,500 --> 00:22:15,000 - ಧನ್ಯವಾದ, ನಾಯಕರೇ. - ಧನ್ಯವಾದ, ನಾಯಕರೇ. 278 00:22:15,000 --> 00:22:17,083 ಏನು ಮಾಡ್ತೀನೋ ನೋಡಿ! ನಿಶ್ಯಬ್ದ! 279 00:22:17,083 --> 00:22:20,625 - ಧನ್ಯವಾದ, ನಾಯಕರೇ. ಧನ್ಯವಾದ. - ಒಳ್ಳೆಯದಾಗಲಿ, ನಾಯಕರೇ. ಒಳ್ಳೆಯದಾಗಲಿ. 280 00:22:22,416 --> 00:22:25,000 - ನಾಯಕರೇ, ಎಲೆಂಡಿಲ್. - ವಾಲಾರ್ ಆಶೀರ್ವದಿಸಲಿ. 281 00:22:26,416 --> 00:22:27,416 ವಲಂಡೀಲ್. 282 00:22:28,125 --> 00:22:30,250 ನಿನ್ನನ್ನು ಇದರಿಂದ ಹೊರಗಿಡುವೆ. 283 00:22:31,250 --> 00:22:32,375 ರಾಜನೊಂದಿಗೆ ಮಾತಾಡುವೆ. 284 00:22:33,500 --> 00:22:34,750 ನನಗಾಗಿ ಹಾಗೆ ಮಾಡುತ್ತೀಯಾ? 285 00:22:37,833 --> 00:22:39,583 ನೀನು ನನ್ನ ಹಳೆಯ ಸ್ನೇಹಿತರಲ್ಲಿ ಒಬ್ಬ. 286 00:22:40,458 --> 00:22:44,625 ನಿನ್ನ ಸ್ನೇಹಿತರು ಯಾರು ಅಂತ ಚೆನ್ನಾಗಿ ಸ್ಪಷ್ಟವಾಗಿದೆ ಬಿಡು. 287 00:23:33,000 --> 00:23:35,125 ಅತ್ಯಂತ ಉದಾತ್ತ ಮಹಾ ದೊರೆಯವರೇ. 288 00:23:35,125 --> 00:23:38,166 ಲಿಂಡೊನ್‌ನಲ್ಲಿ ಮೂರು ಉಂಗುರಗಳ ಯಶಸ್ಸಿನ ಬಗ್ಗೆ ಕೇಳಿ 289 00:23:38,166 --> 00:23:41,833 ನನ್ನ ಮಹದಾನಂದವನ್ನು ವ್ಯಕ್ತಪಡಿಸಲು ಈ ಪತ್ರ ಬರೆದಿದ್ದೇನೆ. 290 00:23:42,791 --> 00:23:48,125 ನೀವು ಕೇಳಿದಂತೆ, ಕುಲುಮೆಯಲ್ಲಿ ಕತ್ತಲಾಗಿದ್ದು ಟಂಕಸಾಲೆ ಖಾಲಿಯಾಗಿದೆ. 291 00:23:48,791 --> 00:23:54,041 ನಗರದಲ್ಲಿ ಅಮೂಲ್ಯವಾದ ಪ್ರಶಾಂತತೆ ನೆಲೆಸಿದ್ದು, ಮುಂಬರುವ ಶುಭದಿನಗಳು ಗೋಚರವಾಗುತ್ತಿವೆ. 292 00:23:54,583 --> 00:23:57,375 ನೀವು ಆದಷ್ಟು ಬೇಗ ಬರುತ್ತೀರಿ ಅಂದುಕೊಳ್ಳುವೆ. 293 00:23:57,375 --> 00:24:00,916 ಅಲ್ಲಿಯವರೆಗೂ, ನಾನು ಎಂದಿನಂತೆಯೇ ಇರುವೆ, 294 00:24:00,916 --> 00:24:04,875 ನಿಮ್ಮ ವಿಧೇಯ ಸೇವಕ, ದೊರೆ ಕೆಲಬ್ರಿಮ್ಬೋರ್. 295 00:24:09,916 --> 00:24:13,041 ನಮ್ಮ ನೌಕಾಪಡೆ ಹೊರಡಲು ಸಿದ್ಧವಾಗಿದೆ. ಯಾವುದಕ್ಕಾಗಿ ಕಾಯುತ್ತಿದ್ದೇವೆ? 296 00:24:13,041 --> 00:24:15,208 ಎರೆಗಿಯೊನಲ್ಲಿ ಎಲ್ಲವೂ ಚೆನ್ನಾಗಿದೆ. 297 00:24:15,208 --> 00:24:17,708 ಗಲಾದ್ರಿಯಲ್ ತಪ್ಪು ಎಂದು ಪತ್ರವು ಸಾಬೀತುಪಡಿಸುತ್ತದೆ. 298 00:24:17,708 --> 00:24:22,083 ನಾವು ಹಿಂಜರಿಯುತ್ತಿರುವಾಗ, ಆಡಾರ್ ಸೈನ್ಯ ದಿನದಿನವೂ ಬಲಿಷ್ಠವಾಗುತ್ತಿದೆ. 299 00:24:22,625 --> 00:24:25,375 ನಾವು ಆಕ್ರಮಣ ಮಾಡಬೇಕಾದರೆ, ಈಗಲೇ ಹೊರಡಬೇಕು. 300 00:24:39,583 --> 00:24:41,416 ನಮ್ಮ ಶತ್ರು ಮೊರ್ಡೊರ್‌ನಲ್ಲಿದ್ದಾನೆ. 301 00:24:42,458 --> 00:24:45,291 ಮಧ್ಯ ಧರೆಯ ಭವಿಷ್ಯವನ್ನು ಆ ಉಂಗುರದ ಪಿಸುಮಾತಿನ 302 00:24:45,291 --> 00:24:47,833 ಮೇರೆಗಷ್ಟೇ ಪಣಕ್ಕಿಡಲು ನಿಜವಾಗಿ ತಯಾರಿದ್ದೀರಾ? 303 00:24:57,333 --> 00:24:59,333 - ಇದನ್ನು ಕೇಳಿದ್ದು ನೀನೇ. - ಗೊತ್ತು. 304 00:25:00,250 --> 00:25:03,333 - ಆರಂಭದಿಂದಲೂ. - ನನಗೆ ಗೊತ್ತು. ನಾನೇ. ನನಗೆ ಗೊತ್ತು. 305 00:25:05,000 --> 00:25:09,166 ಆದರೆ ಪರ್ವತವು ಔಲೆಯ ಉಡುಗೊರೆ ಅಂತ ಕೇಳಿ ತಿಳಿಯುವುದು, 306 00:25:09,166 --> 00:25:12,875 ಅದು ಯುಗಾನುಗಟ್ಟಲೆ ಪರಿಪಕ್ವಗೊಂಡು ಪರಿಶುದ್ಧಗೊಂಡಿರುವುದು. 307 00:25:13,958 --> 00:25:14,833 ಮತ್ತು ಇದು... 308 00:25:17,500 --> 00:25:19,000 ಹೇಗೋ ಮೋಸ ಮಾಡಿದಂತೆ ಅನಿಸುತ್ತದೆ. 309 00:25:19,708 --> 00:25:21,041 ಹಾಂ, ಆತ ಮೂರನೆಯ ಡ್ಯುರಿನ್. 310 00:25:21,958 --> 00:25:24,583 ಶಕ್ತಿಯನ್ನು ಚಲಾಯಿಸುವ ಬಗ್ಗೆ ಆತನಿಗೂ ತಿಳಿದಿರುತ್ತೆ. 311 00:25:25,083 --> 00:25:29,208 ಅಂಥ ಶಕ್ತಿ ಅತ್ಯಂತ ಪುಣ್ಯವಂತ ಡ್ವಾರ್ವ್ಸ್ಗಳನ್ನೂ ಪರೀಕ್ಷಿಸುತ್ತದೆ. 312 00:25:29,208 --> 00:25:31,291 ನಿನ್ನ ತಂದೆ ಸತ್ಯದ ಮಾರ್ಗ ಹಿಡಿಯಲಿ. 313 00:25:44,250 --> 00:25:45,708 ಇದು ಪರಿಪೂರ್ಣವಾಗಿದೆ. 314 00:25:47,458 --> 00:25:49,125 ಅದಕ್ಕೆ ಇನ್ನೂರು. 315 00:25:49,125 --> 00:25:51,083 ಇನ್ನೂರಾ? ಈ ದರಿದ್ರ ಕಲ್ಲಿಗೆ? 316 00:25:51,083 --> 00:25:53,166 ಇದು ಶ್ರುತಿ ಸ್ಫಟಿಕ. 317 00:25:53,166 --> 00:25:56,916 ಇದು ಆರು ಕುದುರೆಗಳ ರಥವಾದರೂ ಸರಿ. ನಾನಿದಕ್ಕೆ ದುಡ್ಡು ಕೊಡಲ್ಲ. 318 00:25:56,916 --> 00:25:58,750 ಇದು ರಾಜನ ಹೊಸ ಕಾನೂನು. 319 00:25:58,750 --> 00:26:01,875 ಒಂದು ನಾಣ್ಯ ಖರ್ಚು ಮಾಡಿದರೆ, ಇನ್ನೊಂದು ನಾಣ್ಯ ರಾಜ್ಯಕ್ಕೆ ಸೇರಬೇಕು. 320 00:26:01,875 --> 00:26:03,708 ಅದನ್ನು ಉಂಗುರದ ಗೌರವ ಎನ್ನುತ್ತಾರೆ. 321 00:26:05,000 --> 00:26:06,375 ಉಂಗುರದ ಗೌರವವೇ? 322 00:26:06,875 --> 00:26:10,166 ಸ್ವಾಮಿ, ಇದು ಮುಂದಿನ ವಾರ ನಮ್ಮ ಪುಟ್ಟ ಮಗಳ ಹುಟ್ಟುಹಬ್ಬಕ್ಕಾಗಿ. 323 00:26:10,166 --> 00:26:13,041 ಅವಳಿಗೂ ಸ್ವಲ್ಪ ಉಳಿಸಿ. ನಿಮಗೆ 100 ಕೊಡುತ್ತೇವೆ. 324 00:26:13,041 --> 00:26:15,291 - ಒಂದು ನೂರಾ? - ಒಂದು ನೂರೇ. 325 00:26:16,375 --> 00:26:17,375 ಏನಂತೀರಿ? 326 00:26:17,375 --> 00:26:19,666 ಗಣಿ ಬೀದಿಗಳ್ಳತನದಂತಿದೆ. 327 00:26:27,333 --> 00:26:28,291 ನೂರೈವತ್ತು? 328 00:26:36,666 --> 00:26:38,333 - ಅಯ್ಯೋ, ಕ್ಷಮಿಸಿ. - ಅಯ್ಯೋ ದೇವ್ರೇ. 329 00:26:38,333 --> 00:26:40,500 - ನೋಡ್ಕೋ! - ಉರುಳುತ್ತಿದೆ. 330 00:26:42,625 --> 00:26:44,333 ಒದ್ದುಬಿಟ್ಟಿದ್ದೀರಿ. 331 00:26:45,208 --> 00:26:47,541 ತಾಯಿ, ನಿಮಗೆ ಅಡ್ಡ ಬಂದಿದ್ದಕ್ಕೆ ಕ್ಷಮೆಯಿರಲಿ. 332 00:26:48,208 --> 00:26:51,833 ನನ್ನ ಬಳಿ ಇದೆ, ಇದೆ, ಇದೆ. ಅಯ್ಯೋ! ಇಲ್ಲ, ನನ್ನ ಬಳಿ ಇಲ್ಲ. 333 00:27:13,083 --> 00:27:14,083 ಈಗ ಮತ್ತೆ... 334 00:27:14,708 --> 00:27:16,291 ಎಲ್ಲಿದ್ದೀಯ, ನಿನ್ನ... 335 00:27:24,083 --> 00:27:25,083 ಏನು? 336 00:27:26,250 --> 00:27:27,250 ಏನಿದು? 337 00:27:49,750 --> 00:27:51,250 ಇಲ್ಲಿದ್ದೀಯ. 338 00:28:24,208 --> 00:28:27,500 ಏಳು ಡ್ವಾರ್ಫ್ ಸಾಮ್ರಾಜ್ಯಗಳ ದೂತರೇ, 339 00:28:28,416 --> 00:28:32,750 ಮಧ್ಯ ಧರೆ ಬದಲಾಗುತ್ತಿರುವದರಿಂದ ನಿಮ್ಮೆಲ್ಲರನ್ನೂ ಇಲ್ಲಿ ಇಂದು ಸೇರಿಸಿದ್ದೇನೆ. 340 00:28:34,666 --> 00:28:36,333 ಅದರ ಕೈಕಾಲುಗಳು ಹಿಗ್ಗುತ್ತಿವೆ. 341 00:28:37,125 --> 00:28:39,583 ಅದರ ಮೂಳೆಗಳು ನಟಿಕೆ ಮುರಿಯುತ್ತಿವೆ. 342 00:28:41,458 --> 00:28:45,500 ಯಾವುದೋ ದುಷ್ಟ ಶಕ್ತಿಯಿಂದ ನಮ್ಮೆಲ್ಲರ ರಾಜ್ಯಗಳಿಗೆ ಅಪಾಯವಿದೆ. 343 00:28:48,291 --> 00:28:53,000 ಆದರೆ ಔಲೆಯ ಕೃಪೆಯಿಂದ, ನನ್ನ ಜನರು ಈ ಪರೀಕ್ಷೆಯಲ್ಲಿ ಗೆದ್ದಿದ್ದಾರೆ. 344 00:28:55,000 --> 00:28:57,375 ಮತ್ತು ಬೇಗ, ನಿಮ್ಮವರೂ ಗೆಲ್ಲುತ್ತಾರೆ. 345 00:28:58,333 --> 00:29:01,333 ಮತ್ತು ಎಲ್ಲವನ್ನೂ ಬದಲಾಯಿಸುವ ಶಕ್ತಿಯ ನೆರವಿನಿಂದ 346 00:29:04,750 --> 00:29:08,208 ನಮ್ಮ ಜನಗಳಿಗಾಗಿ ಒಂದು ಹೊಸ ಯುಗದೊಳಗೆ ಜೊತೆಯಾಗಿ ಉದಯಿಸುತ್ತಾರೆ. 347 00:29:10,708 --> 00:29:12,166 ಏಳು ಉಂಗುರಗಳು. 348 00:29:14,083 --> 00:29:15,583 ಏಳು ಅಧಿಪತಿಗಳು. 349 00:29:17,333 --> 00:29:22,041 ಮತ್ತು ಪ್ರತಿಯೊಂದರೊಳಗೂ... ಶಕ್ತಿಯು ಬಂಧಿತವಾಗಿದೆ. 350 00:29:24,166 --> 00:29:25,625 ಭೂಮಿಯನ್ನು ಆಳುವ ಶಕ್ತಿ. 351 00:29:27,083 --> 00:29:28,083 ಶಿಲೆಯನ್ನಾಳುವ ಶಕ್ತಿ. 352 00:29:29,166 --> 00:29:32,208 ಎಲ್ಲಾ ಡ್ವಾರ್ವ್ಸ್‌ಗಳ ವಿಧಿಬರಹ ಶಾಶ್ವತವಾಗಿ ಬದಲಾಯಿಸುವ ಶಕ್ತಿ. 353 00:29:35,250 --> 00:29:38,583 ಉಂಗುರಗಳು ನಿಮಗಲ್ಲ, ಆದರೆ ನಿಮ್ಮ ದೊರೆಗಳಿಗೆ. 354 00:29:38,583 --> 00:29:43,208 ವಾಪಸ್ ಹೋಗಿ ಅವರಿಗೆ ಹೇಳಿ, ಎಲ್ಲಾ ರಾಜ್ಯಗಳೂ ಈ ನಿಧಿಯನ್ನು ಹಂಚಿಕೊಳ್ಳಿ. 355 00:29:45,833 --> 00:29:47,416 ಆದರೆ ಇದಕ್ಕೊಂದು ಬೆಲೆ ತೆರಬೇಕು. 356 00:29:58,875 --> 00:30:01,083 ಖಜದ್-ದುಮ್ ಮತ್ತೆ ಎಂದಿಗೂ ಬಯಸದಂಥದ್ದು. 357 00:30:03,916 --> 00:30:06,333 ನಮ್ಮ ಕೆಳಗಡೆಯೇ ಚಿನ್ನವಿದೆ. 358 00:30:10,833 --> 00:30:13,500 ನಾವು ಇನ್ನೂ ಆಳಕ್ಕೆ ಹೋಗಬೇಕು. 359 00:30:13,500 --> 00:30:16,208 ಆದರೆ ಈ ನಿರ್ಬಂಧಗಳನ್ನು ಯಾರು ಹೇರಿದರು? 360 00:30:17,041 --> 00:30:19,500 ನೀವೇ, ಪ್ರಭು. ದಶಕಗಳ ಹಿಂದೆ. 361 00:30:20,958 --> 00:30:22,041 ಅವನ್ನು ತೆಗೆದುಹಾಕಿ. 362 00:30:22,750 --> 00:30:23,791 ತೆಗೆದು... ಆದರೆ-- 363 00:30:23,791 --> 00:30:27,500 ತೆಗೆದುಹಾಕಿ, ಡೆಲ್ವ್ ಪ್ರಮುಖರೇ, ಇಲ್ಲದಿದ್ದರೆ ನಾನೇ ಹುಡುಕುವೆ... 364 00:30:30,916 --> 00:30:32,666 - ಎಲ್ಲಿದೆ? - ನೀವೇ ತೆಗೆದಿದ್ದೀರಿ. 365 00:30:32,666 --> 00:30:34,458 ಅದೆಲ್ಲಿದೆ? ಅದಕ್ಕೇನು ಮಾಡಿರುವೆ? 366 00:30:34,458 --> 00:30:37,375 ಅಲ್ಲೇ ಇದೆ, ಪ್ರಭು. ನೀವು-- ನೀವೇ ತೆಗೆದಿದ್ದೀರಿ. 367 00:30:38,083 --> 00:30:41,916 ನಿಮ್ಮ ಕೈ ಭಾರವೆನಿಸುತ್ತಿತ್ತು ಅಂತ ಹೇಳಿದಿರಿ. 368 00:30:47,875 --> 00:30:50,458 ಹೌದು. ಅನಿಸಿತ್ತು. 369 00:31:05,875 --> 00:31:08,291 ನಾನು ಗುರುತು ಮಾಡಿದ ಕಡೆ ಅಗೆಯಲು ಆರಂಭಿಸಿ. 370 00:31:09,625 --> 00:31:10,625 ಪ್ರಭು. 371 00:31:15,250 --> 00:31:16,250 ನಿಲ್ಲಿಸಿ! 372 00:31:21,750 --> 00:31:23,208 ಗಣಿಗಳ ಕೆಳಗೆ ಏನೋ ಇದೆ. 373 00:31:23,208 --> 00:31:25,375 ಡೀಸಾ ಅದನ್ನು ಸ್ವತಃ ಕೇಳಿಸಿಕೊಂಡಳು. 374 00:31:25,375 --> 00:31:29,458 ಹೆಸರಿಲ್ಲದ ದುಷ್ಟಶಕ್ತಿ, ಪ್ರಾಚೀನ ಮತ್ತು ಶಕ್ತಿಯುತವಾದದ್ದು. 375 00:31:30,625 --> 00:31:32,500 ನೀವು ಅಗೆಯಬಾರದು. 376 00:31:36,750 --> 00:31:38,916 ನಿಮಗೆ ಆಜ್ಞೆ ಇತ್ತಿದ್ದೇನೆ, ಡೆಲ್ವ್-ಪ್ರಮುಖರೇ. 377 00:31:40,583 --> 00:31:42,000 ನಾರ್ವಿ, ನಿನ್ನನ್ನು ಬೇಡುವೆ. 378 00:31:43,958 --> 00:31:46,958 ಡೆಲ್ವ್ ಪ್ರಮುಖರೇ. ನಿಮಗೆ ಆಜ್ಞೆಇತ್ತಿದ್ದೇನೆ. 379 00:31:58,666 --> 00:32:02,333 ಶಿಲಾ ಗಾಯಕರು ಪರ್ವತವನ್ನು ಕೇಳಿಸಿಕೊಂಡರೆಂದು ಹೇಳಿದರು. 380 00:32:03,625 --> 00:32:08,791 - ಏನು? - ಈ ಉಂಗುರದಿಂದ, ನನಗದು ಕಾಣುತ್ತದೆ. 381 00:32:11,041 --> 00:32:15,333 ಪ್ರತಿ ದ್ವಾರ, ಪ್ರತಿ ಅದಿರು, ಪ್ರತಿ ಆಭರಣವೂ. 382 00:32:15,333 --> 00:32:17,750 ಸಾವಿರಾರು ವರ್ಷಗಳಲ್ಲಿ, 383 00:32:18,541 --> 00:32:23,541 ಈ ಸಾಗರದೊಳಗಿನ ಸಂಪತ್ತಿನಿಂದ ನಾವು ಒಂದು ಕವಡೆಯನ್ನೂ ಪಡೆದಿಲ್ಲ. 384 00:32:24,416 --> 00:32:26,208 ಡೀಸಾ ತಪ್ಪು ತಿಳಿದಿದ್ದಾಳೆ. 385 00:32:29,625 --> 00:32:31,041 ಯಾವುದೇ ಅಪಾಯವಿಲ್ಲ. 386 00:32:42,458 --> 00:32:44,458 - ಒಡೆಯ. - ಏನಾಯ್ತು? 387 00:32:44,875 --> 00:32:45,875 ಗೊತ್ತಿಲ್ಲ. 388 00:32:50,666 --> 00:32:51,833 ಆರಾಮವಾಗಿದ್ದೀರಾ? 389 00:33:16,500 --> 00:33:18,125 ನಾನು ನೋಡುತ್ತಿರುವುದು ನಿಜವೇ? 390 00:33:21,458 --> 00:33:22,458 ಹೌದು. 391 00:33:23,333 --> 00:33:25,500 ಉಂಗುರಕ್ಕೆ ಹೊಸ ವಿನ್ಯಾಸ ರೂಪಿಸುತ್ತಿದ್ದೇವೆ. 392 00:33:26,041 --> 00:33:28,833 ಮೀರ್ಡಾನಿಯ ಅದರ ಗಾತ್ರ ಬದಲಿಸಲು ನೋಡುತ್ತಿದ್ದಾಗ... 393 00:33:33,875 --> 00:33:35,083 ಆಕೆ ಎಲ್ಲಿರುವಳು? 394 00:33:38,666 --> 00:33:40,458 - ನೋಡಿಕೋ! - ಗುರುಗಳೇ! 395 00:33:45,625 --> 00:33:46,541 ಹಿಂದೆ ಹೋಗು! 396 00:33:58,750 --> 00:33:59,750 ನಿಲ್ಲು. 397 00:34:02,000 --> 00:34:03,166 ಉಸಿರಾಡು. 398 00:34:09,000 --> 00:34:10,250 ಏನಾಯಿತು? 399 00:34:10,250 --> 00:34:13,541 ನಾನು ಇಂತಹ ಸ್ಥಳದಲ್ಲಿದ್ದೆ, 400 00:34:13,666 --> 00:34:19,666 ಆದರೆ ಅದು ಮಂಜು ಮತ್ತು ಕತ್ತಲಿನಿಂದ ತುಂಬಿತ್ತು, ಮತ್ತು... 401 00:34:20,208 --> 00:34:21,875 ನಾನು ನೋಡಿದೆ-- ನಾನು-- 402 00:34:24,041 --> 00:34:27,083 ಮೊದಲಿಗೆ, ಅದನ್ನು ಉರಿಯುತ್ತಿರುವ ಕುಲುಮೆ ಅಂದುಕೊಂಡೆ. 403 00:34:30,875 --> 00:34:32,125 ಆದರೆ ಅಲ್ಲ. 404 00:34:32,708 --> 00:34:33,708 ಅದು ಏನಾಗಿತ್ತು? 405 00:34:35,000 --> 00:34:36,833 ಅದು ಎತ್ತರವಾಗಿತ್ತು... 406 00:34:38,458 --> 00:34:41,458 ಮತ್ತು ಅದರ ಚರ್ಮವು ಜ್ವಾಲೆಯಿಂದ ಕೂಡಿತ್ತು. 407 00:34:44,333 --> 00:34:50,083 ಅದು ಉಸಿರಾಡುತ್ತಾ ನನ್ನ ಕಡೆಗೆ ಬಂದಿತು, ಅದರಿಂದ ಸಾವಿನ ವಾಸನೆ ಬಡಿಯುತ್ತಿತ್ತು, 408 00:34:50,083 --> 00:34:52,083 ಮತ್ತು ನಾನು ನೋಡಿದೆ... ನಾನು-- 409 00:34:53,125 --> 00:34:54,750 ಅದರ ಕಣ್ಣುಗಳನ್ನು ನೋಡಿದೆ. 410 00:34:56,333 --> 00:34:58,958 ಕರುಣೆಯಿಲ್ಲದ್ದು ಮತ್ತು ಕೊನೆಯಿಲ್ಲದ್ದು. 411 00:34:59,666 --> 00:35:01,083 ಇಲ್ಲಿಯೇ ಇದೆ ಅನಿಸುತ್ತೆ. 412 00:35:02,250 --> 00:35:04,666 ಇದುವರೆಗೂ ಅದು ನಮ್ಮೊಂದಿಗೇ ಇತ್ತು ಅನಿಸುತ್ತೆ! 413 00:35:04,666 --> 00:35:06,250 ನೀನೀಗ ನಮ್ಮೊಂದಿಗಿರುವೆ. 414 00:35:07,666 --> 00:35:09,333 ಭಯಪಡುವಂಥದ್ದೇನೂ ಇಲ್ಲ. 415 00:35:11,958 --> 00:35:13,458 ಸುತ್ತಲೂ ನೋಡು. 416 00:35:15,666 --> 00:35:16,916 ಎಲ್ಲವೂ ಸರಿಯಾಗಿದೆ. 417 00:35:20,208 --> 00:35:24,208 ಈ ಬಾರಿ ವಿಭಿನ್ನವಾಗಿ ಏನು ಮಾಡಿದೆ? 418 00:35:26,958 --> 00:35:32,375 ಮನುಷ್ಯರು ತುಂಬಾ ಭ್ರಷ್ಟರು ಎಂಬ ನಿಮ್ಮ ಚಿಂತೆಯನ್ನು ಉಡುಗೊರೆಗಳ ಒಡೆಯ ಹಂಚಿಕೊಂಡನು. 419 00:35:33,333 --> 00:35:36,333 ಹೆಚ್ಚಿನ ಮೀಥ್ರಿಲ್ ಸೇರಿಸಿ ಮಿಶ್ರಲೋಹವನ್ನು ಬಲಪಡಿಸಲು ನೋಡಿದೆವು. 420 00:35:36,333 --> 00:35:37,666 ಇಲ್ಲ, ಇಲ್ಲ! 421 00:35:37,666 --> 00:35:39,916 ಅದನ್ನು ಮಾಡಬೇಕಾಗಿದ್ದರೆ, ನೀವು... 422 00:35:41,958 --> 00:35:43,208 ನೀವು... 423 00:35:47,791 --> 00:35:50,250 ನೀವು ಇದೊಂದೇ ಒಂದು ಆಜ್ಞೆಯನ್ನು ದಯಪಾಲಿಸಿದರೆ, 424 00:35:50,250 --> 00:35:55,166 ನಮಗೆ ಲೆಕ್ಕವಿಲ್ಲದಷ್ಟು ಗಂಟೆಗಳ ಶ್ರಮ ಉಳಿಯುತ್ತದೆ. 425 00:36:07,916 --> 00:36:09,416 - ಒಡೆಯ, ಕೆಲಬ್ರಿಮ್ಬೋರ್. - ನೀನು-- 426 00:36:11,125 --> 00:36:14,791 ಕ್ಷಮಿಸಿ, ಒಡೆಯ, ಆದರೆ ಖಜದ್-ದುಮ್‌ನಿಂದ ಕಿರಿಯ ಡ್ಯುರಿನ್ ಬಂದಿದ್ದಾರೆ. 427 00:36:14,791 --> 00:36:16,083 ಇಲ್ಲ, ಅವನಿಗೆ ಕಾಯಲು ಹೇಳಿ. 428 00:36:17,000 --> 00:36:21,041 ತುರ್ತು ಅಂತ ಹೇಳಿದರು. ಏನೋ ಉಂಗುರಗಳ ಬಗ್ಗೆಯಂತೆ. 429 00:36:23,250 --> 00:36:24,666 ಆತನಿಗೇನು ಬೇಕೋ ನೋಡುತ್ತೇನೆ. 430 00:36:24,666 --> 00:36:25,833 ಬೇಡ. 431 00:36:27,416 --> 00:36:29,750 ಬೇಡ. ನಾನು ಹೋಗುತ್ತೇನೆ. 432 00:36:40,083 --> 00:36:41,208 "ಬದಲಾಗಿದ್ದಾನೆ" ಎಂದರೆ? 433 00:36:41,208 --> 00:36:45,083 ಅಂದರೆ ಕರುಣೆ ಇಲ್ಲದೆ. ಬೇಗ ಕೋಪಗೊಳ್ಳುತ್ತಾನೆ. 434 00:36:45,083 --> 00:36:48,041 ಡ್ವಾರ್ಫ್-ದೊರೆಗಳು ತಮ್ಮ ಗಣಿಗಳ ಅರ್ಧದಷ್ಟು ಪಾಲನ್ನು 435 00:36:48,041 --> 00:36:52,833 ಅವನಿಗೆ ಕೊಡದ ಹೊರತು ಮಿಕ್ಕ ಉಂಗುರಗಳನ್ನು ಅವನು ಕೊಡಲ್ಲ ಅಂತ ನನಗೆ ಈಗ ಅವರು ಹೇಳುತ್ತಾರೆ! 436 00:36:52,833 --> 00:36:55,833 ದುರಾಸೆ ಅವನ ಸ್ವಭಾವವಲ್ಲ. ಎಂದಿಗೂ ಆಗಿಲ್ಲ. 437 00:36:56,666 --> 00:36:57,708 ನಾನು-- 438 00:37:02,083 --> 00:37:05,208 ಇದು ಸಾಧ್ಯವೇ, ಅವನು ತೊಟ್ಟಿರುವ ಉಂಗುರ-- 439 00:37:05,208 --> 00:37:06,583 ಇಲ್ಲ. 440 00:37:08,166 --> 00:37:10,625 ನಾವು ಅದೇ ಪ್ರಕ್ರಿಯೆಯನ್ನು ಬಳಸಿದೆವು, ಡ್ಯುರಿನ್, 441 00:37:10,625 --> 00:37:13,625 ಮೂರಕ್ಕೂ ಅದೇ ವಸ್ತುಗಳು, ಮತ್ತು ಅದೇ ಉಪಕರಣಗಳು. 442 00:37:14,875 --> 00:37:19,416 ಈಗ ನಿಮ್ಮ ಉಂಗುರಗಳಲ್ಲಿ ಯಾವುದೇ ತಪ್ಪು ಇರಬಾರದು. 443 00:37:22,416 --> 00:37:25,000 ಹಾಗಾದರೆ ಉಂಗುರ ತಯಾರಿಸಿದವನದ್ದೇ ತಪ್ಪು. 444 00:37:26,416 --> 00:37:27,583 ಏನು ಹೇಳುತ್ತಿರುವೆ? 445 00:37:27,583 --> 00:37:31,416 ಅನ್ನಟಾರ್ ಬಗ್ಗೆ ನಿಜವಾಗಿಯೂ ನಿಮಗೆ ಎಷ್ಟು ತಿಳಿದಿದೆ? 446 00:37:46,791 --> 00:37:48,208 ನೀನು ತುಂಬಾ ಧೈರ್ಯಶಾಲಿ. 447 00:37:49,458 --> 00:37:54,833 ಕಾಣದ ಪ್ರಪಂಚವನ್ನು ನೋಡಿದ ಕೆಲವರು ಈ ಜಗತ್ತನ್ನು ಮತ್ತೆಂದೂ ಮುಂಚಿನಂತೆ ನೋಡಲ್ಲ. 448 00:37:57,041 --> 00:37:58,708 ನೀವು ಅದನ್ನು ನೋಡಿದ್ದೀರಾ? 449 00:37:58,708 --> 00:38:00,250 ಹೌದು. 450 00:38:01,875 --> 00:38:05,958 ಅದರ ಬೆಳಕಿನಡಿ, ಎಲ್ಲವೂ ತಮ್ಮ ನಿಜಸ್ವರೂಪದಲ್ಲಿ ಕಾಣುತ್ತವೆ. 451 00:38:07,375 --> 00:38:11,000 ಬೆಳಕಿನ ವಿವಿಧ ಛಾಯೆಗಳ ಜೀವಿಗಳು... 452 00:38:13,916 --> 00:38:15,291 ಮತ್ತು ಅದರ ಕತ್ತಲೆ. 453 00:38:18,375 --> 00:38:20,083 ಹೇಳಲು ನನಗೆ ನೋವಾಗುತ್ತದೆ, 454 00:38:21,208 --> 00:38:23,583 ನೀನು ನೋಡಿದ್ದನ್ನು, ಆತನಿಗೆ ಗುಣವಾಗಲು ನೆರವಾಗುವವರೆಗೂ 455 00:38:25,041 --> 00:38:26,875 ನೀವು ಯಾರೂ ನೋಡಬಾರದೆಂದುಕೊಂಡಿದ್ದೆ. 456 00:38:29,291 --> 00:38:34,875 ನೀವು... ನೀವು ಹೇಳುತ್ತಿರುವುದು... ಲಾರ್ಡ್ ಕೆಲಬ್ರಿಮ್ಬೋರ್ ಬಗ್ಗೆಯಾ? 457 00:38:35,750 --> 00:38:36,958 ಹೌದು. 458 00:38:39,250 --> 00:38:41,166 ಆ ಮೂರು ಮತ್ತು ಏಳನ್ನು ರಚಿಸುವಾಗ 459 00:38:41,166 --> 00:38:45,833 ಆ ಸೃಷ್ಟಿಯಿಂದ ಆತ ತುಂಬಾ ಕುಂದಿದ್ದಾನೆ. 460 00:38:46,708 --> 00:38:48,291 ನೆರಳಿಗೆ ಸಿಲುಕುವಂತೆ. 461 00:38:52,541 --> 00:38:54,125 ಆಗ, ನಾನು ಕಂಡದ್ದು... 462 00:38:55,458 --> 00:38:57,583 ಇದರ ಬಗ್ಗೆ ಯಾರಿಗೂ ಹೇಳಲ್ಲ ಅಂತ ಮಾತು ಕೊಡು. 463 00:38:58,500 --> 00:38:59,875 ಅವನೂ ಸೇರಿದಂತೆ. 464 00:38:59,875 --> 00:39:01,125 ನಾನು ಮಾತು ಕೊಡುತ್ತೇನೆ. 465 00:39:07,458 --> 00:39:08,791 ಎಂಥಾ ವಿಚಿತ್ರ. 466 00:39:09,500 --> 00:39:12,500 ನಿನ್ನ ಕೂದಲಿನ ಮೇಲೆ ಬೆಳಕು ಬಿದ್ದಾಗ, 467 00:39:14,291 --> 00:39:16,291 ಒಂದು ಕ್ಷಣ, ನೀನು ಅವಳ ಹಾಗೇ ಕಂಡೆ. 468 00:39:17,708 --> 00:39:19,041 ಯಾರ ಹಾಗೆ? 469 00:39:20,500 --> 00:39:22,166 ಗಲಾದ್ರಿಯಲ್, ಇನ್ಯಾರು? 470 00:39:41,000 --> 00:39:45,583 ನಾವು ಕಳೆದುಕೊಂಡವರ ಆತ್ಮಗಳು ಶಾಂತಿಗಾಗಿ ಹಾತೊರೆಯುತ್ತಿವೆ. 471 00:39:45,583 --> 00:39:49,083 ಇಂದು ರಾತ್ರಿ, ಅದನ್ನು ಅವರಿಗೆ ದಕ್ಕಿಸಿಕೊಡೋಣ. 472 00:39:49,958 --> 00:39:54,166 ಮತ್ತೆ ನಾವು ದೂರದ ಹಸಿರು ನಾಡಲ್ಲಿ 473 00:39:54,166 --> 00:39:56,583 ತ್ವರಿತ ಸೂರ್ಯೋದಯದ ಅಡಿಯಲ್ಲಿ ಸಿಗೋಣ. 474 00:40:43,583 --> 00:40:47,000 ಈ ದೇಗುಲವನ್ನು ರಾಜನ ಆದೇಶದಂತೆ ಖಂಡಿಸಲಾಗಿದೆ. 475 00:40:47,916 --> 00:40:49,166 ನಿಮ್ಮ ಮನೆಗಳಿಗೆ ಹಿಂತಿರುಗಿ. 476 00:40:49,166 --> 00:40:51,625 ಮಗನೇ, ಇದು ನ್ಯೂಮೆನೊರಲ್ಲೇ ಅತ್ಯಂತ ಹಳೆಯ ದೇಗುಲ. 477 00:40:51,625 --> 00:40:53,375 ಇದು ಹೊಸ ಜಲಮಾರ್ಗದಲ್ಲಿದೆ. 478 00:40:54,083 --> 00:40:56,416 ನೀವಾಗಿಯೇ ಹೊರಡಿ, ಇಲ್ಲಾ ಹೊರದಬ್ಬಬೇಕಾಗುತ್ತದೆ. 479 00:40:56,416 --> 00:40:58,375 ಮಹಾರಾಜರು ಕ್ಷಮೆ ಕೇಳುತ್ತಾರೆ. 480 00:41:07,833 --> 00:41:10,458 ನಿನ್ನ ಮಗಳು ನಿನ್ನ ಬಗ್ಗೆ ಅಸಹ್ಯಪಟ್ಟರೆ ಹೇಗಿರುತ್ತೆ? 481 00:41:10,458 --> 00:41:11,833 ಎದುರಿಸುವುದನ್ನು ನಿಲ್ಲಿಸು. 482 00:41:15,625 --> 00:41:18,083 ಕೇಳಿಸಿತಾ, ಮುದುಕ? ತೊಲಗು! 483 00:41:21,333 --> 00:41:22,791 ಅವನ ತೋಳುಗಳನ್ನು ಹಿಡಿಯಿರಿ. 484 00:41:22,791 --> 00:41:24,291 ಇರಿ. ಇರಿ! 485 00:41:26,333 --> 00:41:27,625 ನಾನು ಅವನನ್ನು ಕಳಿಸುವೆ. 486 00:41:29,791 --> 00:41:34,166 ಅವಳನ್ನು ಕೂಡಿಸಿಡದಿದ್ದರೆ, ಯಾವ ಆತ್ಮಗಳಿಗಾಗಿ ಅವಳು ಅಳುವಳೋ, ಅವು ಇರುವುದಿಲ್ಲ. 487 00:41:36,958 --> 00:41:38,041 ಅವನಿಗೆ ಅವಶೇಷ ಕೊಡು. 488 00:41:42,416 --> 00:41:43,750 ಅವನಿಗೆ ಕೊಡು, ಹುಡುಗ. 489 00:42:02,333 --> 00:42:04,916 ನಿನಗೆ ಗೊತ್ತಿಲ್ವೇನೋ, ನನಗೆ ಬಡ್ತಿ ಸಿಕ್ಕಿದೆ-- 490 00:42:15,791 --> 00:42:17,041 ಅವನನ್ನು ಹಿಡಿದುಕೊಳ್ಳಿ. 491 00:42:28,000 --> 00:42:31,708 ಈ ದೇವಾಲಯವು ನಿಷ್ಠಾವಂತರಿಗಾಗಿ. ರಾಜನ ಆಳುಗಳಿಗೆ ಇಲ್ಲಿ ಪ್ರವೇಶವಿಲ್ಲ. 492 00:42:31,708 --> 00:42:33,458 ನೀನು ಪ್ರಾರ್ಥಿಸುತ್ತಿಲ್ಲ. 493 00:42:36,916 --> 00:42:38,916 - ವಾಲಾರ್ ನನ್ನನ್ನು ಕ್ಷಮಿಸಲಿ. - ಯಾವುದಕ್ಕೆ? 494 00:42:39,958 --> 00:42:41,375 ನಿಲ್ಲಿ! ಇಲ್ಲ! 495 00:42:42,708 --> 00:42:43,833 ನನ್ನ ಮಗನ ಬೆಂಬಲಿಸಿ. 496 00:42:49,916 --> 00:42:50,916 ವಲಂಡೀಲ್! 497 00:43:03,291 --> 00:43:05,166 ಇಲ್ಲ! ವಲಂಡೀಲ್! 498 00:43:23,583 --> 00:43:24,583 ಇಲ್ಲ! 499 00:43:43,083 --> 00:43:46,000 ಇಲ್ಲ! ವಲಂಡೀಲ್, ಅದನ್ನು ಕೆಳಗೆ ಇಡು! 500 00:43:53,375 --> 00:43:54,458 ಕೆಳಗೆ ಇಡು, ಮಗನೇ. 501 00:43:57,375 --> 00:43:59,041 ಇದು ನನ್ನ ಆದೇಶ. 502 00:44:23,625 --> 00:44:24,708 ಸರಿ, ನಾಯಕರೇ. 503 00:44:28,583 --> 00:44:29,583 ಇಲ್ಲ. 504 00:44:41,750 --> 00:44:43,416 ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ. 505 00:44:53,208 --> 00:44:54,208 ಇಲ್ಲ. 506 00:45:14,333 --> 00:45:17,666 ಇಲ್ಲ, ಇಲ್ಲ. ನನ್ನ ಮಗ. 507 00:45:20,833 --> 00:45:22,333 ಇಲ್ಲ. ಇಲ್ಲ. 508 00:45:32,166 --> 00:45:37,125 ದಂಗೆಯನ್ನು ಆರಂಭಿಸಿದ್ದು ಇವನೇ ಅಂತ ಸೆರೆಮನೆಯಧಿಕಾರಿಗೆ ತಿಳಿಸಿ. 509 00:45:45,250 --> 00:45:50,125 ಇಲ್ಲ! ಇಲ್ಲ, ನಾನು ಹೇಳುವೆ, ಡ್ವಾರ್ಫ್ ಗಳ ಉಂಗುರಗಳಲ್ಲಿ ಏನೋ ದೋಷವಿದೆ! 510 00:45:50,125 --> 00:45:53,666 ಅಥವಾ ಡ್ಯುರಿನ್ ಉಂಗುರದ ದುರ್ಬಳಕೆ ಮಾಡಿ ಆರೋಪದಿಂದ ತಪ್ಪಿಸಿಕೊಳ್ಳುತ್ತಿರುವನು. 511 00:45:53,666 --> 00:45:54,750 ಇಲ್ಲ! 512 00:45:55,458 --> 00:45:57,041 ಇಲ್ಲ, ನಾನು ಅದನ್ನು ನಂಬಲ್ಲ. 513 00:45:57,041 --> 00:46:00,000 ಲೋಹಗಳನ್ನು ಕುಶಲತೆಯಿಂದ ಬಳಸಿಕೊಳ್ಳುವವನು ಅವನು, 514 00:46:00,666 --> 00:46:03,291 ನಿಮ್ಮನ್ನು ಯಾರೂ ಕುಶಲತೆಯಿಂದ ಬಳಸದಿರುವಂತೆ ನೋಡಿ. 515 00:46:04,125 --> 00:46:05,875 ನಿನಗೆ ಕತ್ತಿಗಳು ಇಲ್ಲದಾಗಲೂ ಕಾಣುತ್ತವೆ. 516 00:46:05,875 --> 00:46:09,250 ಅವುಗಳನ್ನು ಕಡೆಗಣಿಸಿದರೆ, ಗಂಟಲಿಗೆ ಬಂದು ಚುಚ್ಚುತ್ತವೆ. 517 00:46:09,250 --> 00:46:11,000 ಇಲ್ಲ. ಸಾಕು. 518 00:46:11,000 --> 00:46:12,500 ನೀನು... 519 00:46:15,000 --> 00:46:16,333 ಯಾವ ರೀತಿಯಲ್ಲಾದರೂ... 520 00:46:18,291 --> 00:46:20,291 ಡ್ವಾರ್ಫ್ ಗಳ ಉಂಗುರಗಳನ್ನು ಬದಲಿಸಿದೆಯಾ? 521 00:46:25,541 --> 00:46:26,625 ಇಲ್ಲ. 522 00:46:46,958 --> 00:46:47,958 ನಾವು ಬದಲಿಸಿದೆವು. 523 00:46:49,833 --> 00:46:51,458 ಏನು ಹೇಳುತ್ತಿರುವೆ? 524 00:46:52,833 --> 00:46:57,250 ಇದರಲ್ಲಿ ಕಲೆಯಷ್ಟೇ ಅಲ್ಲದೆ ಆಧ್ಯಾತ್ಮಿಕತೆಯೂ ಸೇರಿದೆ. 525 00:46:58,375 --> 00:47:01,458 ಮತ್ತು ಈ ಬಾರಿ, ಈ ಪ್ರಕ್ರಿಯೆಗೆ ಮೋಸವನ್ನು ಸೇರಿಸಿದ್ದೇವೆ. 526 00:47:01,458 --> 00:47:02,875 ಮೋಸವೇ? 527 00:47:04,916 --> 00:47:06,458 ಇದರಲ್ಲಿ ಎಂಥ ಮೋಸ-- 528 00:47:09,833 --> 00:47:11,041 ಪತ್ರ. 529 00:47:14,625 --> 00:47:15,625 ಇಲ್ಲ. 530 00:47:17,458 --> 00:47:19,333 ಇಲ್ಲ, ಅದು, ಅದು... 531 00:47:20,333 --> 00:47:21,541 ನೀವು ಸುಳ್ಳು ಹೇಳಿದಿರಿ. 532 00:47:24,291 --> 00:47:26,000 ಅದು ಸುಳ್ಳಲ್ಲ. ನಾನು-- 533 00:47:26,000 --> 00:47:28,333 ನಿಮ್ಮ ಮಹಾ ದೊರೆ ಆ ಮೂರಕ್ಕೆ ಒಪ್ಪಿಕೊಂಡರು. 534 00:47:29,333 --> 00:47:34,000 ಆದರೆ ಆ ಏಳನ್ನು ಮೋಸದಿಂದ ತಯಾರಿಸಿದೆವು. 535 00:47:34,000 --> 00:47:35,666 ನೀವು ತಕ್ಷಣ ಲಿಂಡೊನ್‌ಗೆ ಹೊರಟು 536 00:47:36,541 --> 00:47:38,416 ನಿಮ್ಮ ಮಹಾ ದೊರೆಗೆ ನಿಜ ಹೇಳಿ. 537 00:47:38,416 --> 00:47:40,083 ಅಥವಾ ವಿಷಯಗಳು ಹದಗೆಡುತ್ತವೆ. 538 00:47:40,083 --> 00:47:41,750 ಇಲ್ಲ, ಹಾಗೆ ಮಾಡಿದರೆ, ಆತ... 539 00:47:43,916 --> 00:47:46,416 ಮತ್ತೆ ನನಗೆ ಏನನ್ನು ತಯಾರಿಸಲೂ ಅನುಮತಿಸುವುದಿಲ್ಲ. 540 00:47:47,458 --> 00:47:49,083 ಒಂದೋ ಅದು, 541 00:47:51,125 --> 00:47:52,875 ಇಲ್ಲದಿದ್ದರೆ ಸುಳಿಯೊಳಗೆ... 542 00:47:55,541 --> 00:47:57,291 ಇನ್ನೂ ಆಳಕ್ಕೆ ಸಿಲುಕುತ್ತೀರಿ. 543 00:48:01,250 --> 00:48:04,291 ಅಪ್ಪ, ನಾನು ಎರೆಗಿಯೊನ್‌ಗೆ ಹೋಗಿದ್ದೇನೆ. 544 00:48:04,291 --> 00:48:09,416 ಹೇಳುತ್ತೇನೆ ಕೇಳಿ, ಈ ಉಂಗುರಗಳ ಒಳಗೆ ಯಾವುದೋ ವಾಮಾಚಾರವೇ ತುಂಬಿದೆ. 545 00:48:09,416 --> 00:48:12,500 ನಾವು ಇನ್ನು ಮುಂದೆ ಅವುಗಳನ್ನು ಬಳಸಬಾರದು. 546 00:48:13,000 --> 00:48:18,625 ಕಾಲ ಮತ್ತು ಒತ್ತಡವು ಒಬ್ಬ ಡ್ವಾರ್ಫ್‌‌ನ ರೂಪಿಸಬಹುದು, 547 00:48:18,625 --> 00:48:21,375 ಶಿಲೆಯನ್ನು ರೂಪಿಸುವಂತೆಯೇ. 548 00:48:23,750 --> 00:48:28,083 ನಮ್ಮ ದೂರಾಗುವಿಕೆ ನಿನ್ನನ್ನು ರೂಪಿಸಬಹುದು ಅಂದುಕೊಂಡಿದ್ದೆ, ಮಗನೇ. 549 00:48:28,083 --> 00:48:32,916 ಆದರೆ ಅದು ನನ್ನನ್ನು ಇಷ್ಟು ರೂಪಿಸಬಹುದು ಅಂತ ನಿರೀಕ್ಷಿಸಿರಲಿಲ್ಲ. 550 00:48:32,916 --> 00:48:34,666 - ಅಪ್ಪ-- - ನಿನ್ನ ಬಗ್ಗೆ ಹೆಮ್ಮೆ. 551 00:48:34,666 --> 00:48:36,416 - ಇಲ್ಲ. - ನಿನ್ನ ಬಗ್ಗೆ ಹೆಮ್ಮೆ ಇದೆ. 552 00:48:37,833 --> 00:48:43,291 ಎಲ್ಫ್‌ಗಳ ಜೊತೆ ಕೈಜೋಡಿಸಬೇಕೆಂಬ ನಿನ್ನ ಆಸೆ ನಮ್ಮ ರಾಜ್ಯವನ್ನು ಉಳಿಸಿದೆ. 553 00:48:44,708 --> 00:48:48,375 ಅದಕ್ಕಾಗಿಯೇ ಈಗ, ಈಗ, ಎಂದಿಗಿಂತಲೂ ಹೆಚ್ಚಾಗಿ, 554 00:48:49,750 --> 00:48:51,375 ನನಗೆ ನೀನು ಬೇಕು. 555 00:48:52,375 --> 00:48:55,458 ನನ್ನ ಪಕ್ಕದಲ್ಲಿ ನಿನ್ನ ಕೊಡಲಿ ಬೇಕು. 556 00:49:04,083 --> 00:49:05,083 ರಾಜಕುಮಾರ ಡ್ಯುರಿನ್. 557 00:49:28,166 --> 00:49:29,375 ಡ್ಯುರಿನ್? 558 00:49:30,375 --> 00:49:33,000 ಡ್ಯುರಿನ್, ಆತ ಏನು ಹೇಳಿದರು? ಆತ-- 559 00:49:39,125 --> 00:49:40,125 ನಾನು ಪ್ರಯತ್ನಿಸಿದೆ. 560 00:49:40,125 --> 00:49:42,708 - ಆದರೆ-- - ಡ್ಯುರಿನ್, ಇಲ್ಲ. 561 00:49:42,708 --> 00:49:44,458 ಅವರಿಗೆ ಹೇಳಲು ಪ್ರಯತ್ನಿಸಿದೆ. 562 00:49:46,958 --> 00:49:48,000 ಡ್ಯುರಿನ್... 563 00:49:58,666 --> 00:49:59,666 ಪ್ರತಿಜ್ಞೆ ಮಾಡು. 564 00:50:02,250 --> 00:50:06,458 ಆ ಉಂಗುರಗಳನ್ನು ಎಂದಿಗೂ ಧರಿಸಲ್ಲ ಅಂತ ನನಗೆ ಪ್ರತಿಜ್ಞೆ ಮಾಡು. 565 00:50:15,750 --> 00:50:17,083 ಪ್ರತಿಜ್ಞೆ ಮಾಡುತ್ತೇನೆ. 566 00:50:23,916 --> 00:50:28,375 ಕಲ್ಲು ಮತ್ತು ಅದಿರಿನ ಹೃದಯದೊಳಗೆ ಒಂದು ವಿಲಕ್ಷಣವಾದ ಶಕ್ತಿ ಇದೆ. 567 00:50:30,041 --> 00:50:33,291 ಯಾವುದಾದರೂ ಕೆಲಸ ಒಬ್ಬ ಕಲಾವಿದನ ಮನಸ್ಸಿನಲ್ಲಿನ್ನೂ ಇರುವಾಗಲೇ, ಅದು... 568 00:50:36,333 --> 00:50:37,333 ಅವನ ಮಾತು ಕೇಳಲ್ಲ. 569 00:50:39,875 --> 00:50:42,500 ನಾವು ವಿಫಲರಾಗಿದ್ದೇವೆ. ಪ್ರತಿಯೊಬ್ಬರೂ. 570 00:50:43,041 --> 00:50:47,750 ವಿನ್ಯಾಸಗಳನ್ನು ಅತ್ಯಂತ ನಿಖರತೆಯಿಂದ ರೂಪಿಸಲಾಗಿತ್ತು, ನನ್ನೊಡೆಯ. 571 00:50:47,750 --> 00:50:49,125 ಹೌದೇನು? 572 00:50:50,458 --> 00:50:53,833 ಪ್ರತಿಯೊಂದು ಉಳಿಯೇಟೂ ನಿಖರವಾಗಿತ್ತಾ? 573 00:50:53,833 --> 00:50:59,250 ಅಥವಾ ದುರಹಂಕಾರ ಮತ್ತು ಸೋಮಾರಿತನದಿಂದ ನಿನ್ನ ಗಮನಭಂಗವಾಯಿತಾ? 574 00:51:02,125 --> 00:51:06,291 ನಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಲು ಒಂದೇ ಮಾರ್ಗವಿದೆ, 575 00:51:06,291 --> 00:51:11,041 ಉಂಗುರಗಳನ್ನು ಒಟ್ಟಿಗೆ ಪೂರ್ಣಗೊಳಿಸುವುದು. 576 00:51:13,625 --> 00:51:17,083 ಆ ಒಂಬತ್ತು, ಮನುಷ್ಯರಿಗೆ ನೆರವಾಗುವುದಷ್ಟೇ ಅಲ್ಲದೆ ಇನ್ನೂ ಹೆಚ್ಚು ಮಾಡಬೇಕು, 577 00:51:17,083 --> 00:51:20,208 ಇಡೀ ಯೋಜನೆಗೆ ಅವು ಸಮತೋಲನ ತರಬೇಕು. 578 00:51:20,208 --> 00:51:24,000 ಆ ಮೂರರಿಂದ ಅವು ಶಕ್ತಿಯನ್ನು ಪಡೆಯಬೇಕು. 579 00:51:24,625 --> 00:51:25,875 ಮತ್ತು ಹೇಗಾದರೂ... 580 00:51:28,291 --> 00:51:29,958 ಆ ಏಳನ್ನು ಪುನಃ ಪಡೆದುಕೊಳ್ಳಬೇಕು. 581 00:51:32,958 --> 00:51:36,000 ನಮ್ಮೆಲ್ಲರನ್ನೂ ಅವು ಪಡೆಯಬೇಕು. 582 00:51:39,208 --> 00:51:41,583 ನಾವು ಹಗಲು ರಾತ್ರಿ ಕೆಲಸ ಮಾಡೋಣ. 583 00:51:43,166 --> 00:51:47,625 ಹೊಸ ವಿನ್ಯಾಸಗಳು. ಹೊಸ ಮಿಶ್ರಲೋಹಗಳು. ಹೊಸ ಪ್ರಕ್ರಿಯೆ. 584 00:51:48,625 --> 00:51:50,333 ನಿಮ್ಮೊಂದಿಗೆ ಸದಾ ಇರುತ್ತೇನೆ. 585 00:51:50,333 --> 00:51:54,750 ನಿಮ್ಮಲ್ಲಿ ಯಾರಾದರೂ ನಿಮ್ಮ ಸಾಮರ್ಥ್ಯಕ್ಕಿಂತ ಒಂದು ರಾಗಿ ಕಾಳಿನಷ್ಟು 586 00:51:54,750 --> 00:51:58,166 ಕಡಿಮೆ ಶ್ರಮ ಹಾಕಿದರೂ ಅವರು-- 587 00:51:58,166 --> 00:52:00,375 ಇನ್ನು ಮುಂದೆ ಎರೆಗಿಯೊನ್‌‌ನ ಕಮ್ಮಾರರಾಗಿರಲ್ಲ. 588 00:52:03,458 --> 00:52:05,000 ನಾನು ಹೇಳಿದ್ದು ಅರ್ಥವಾಯಿತಾ? 589 00:52:05,000 --> 00:52:06,791 ಹಾಂ, ಹೌದು, ಒಡೆಯ. 590 00:52:07,541 --> 00:52:08,625 ಈಗ ಪ್ರಾರಂಭವಾಗುತ್ತದೆ. 591 00:52:14,666 --> 00:52:16,291 ಆಶ್ಚರ್ಯಕರವಾಗಿತ್ತು. 592 00:52:18,333 --> 00:52:21,916 ನನ್ನ ಗೆಳೆಯರೇ. ಎದೆಗುಂದಬೇಡಿ. 593 00:52:24,291 --> 00:52:28,166 ನಿಮ್ಮ ಒಡೆಯ ಅಸಮಂಜಸವಾಗಿ ಅನಿಸಬಹುದು. 594 00:52:29,833 --> 00:52:34,208 ಅವರ ಬೇಡಿಕೆಗಳು ಅಸಾಧಾರಣ, ಅಥವಾ ಅಸಾಧ್ಯವಾದವಾಗಿರಬಹುದು. 595 00:52:36,000 --> 00:52:39,416 ನಿಮ್ಮ ಯಶಸ್ಸಿನ ಮೇಲೆ ಏನೆಲ್ಲಾ ಅವಲಂಬಿತವಾಗಿವೆ ಎಂದು ಅವರಿಗೆ ತಿಳಿದಿದೆ. 596 00:52:40,375 --> 00:52:42,916 ಆದರೂ, ನೀವವರಿಗೆ ನಿರಾಶೆಗೊಳಿಸುವುದಿಲ್ಲ ಎಂದು ಬಲ್ಲೆ. 597 00:52:47,041 --> 00:52:48,250 ಅಥವಾ ನನಗೂ. 598 00:52:52,208 --> 00:52:54,875 ನನಗಂತೂ ಖಚಿತವಿದೆ, ನಾವು 599 00:52:56,250 --> 00:52:58,375 ಶಕ್ತಿಯ ಉಂಗುರಗಳನ್ನು ಪೂರ್ಣಗೊಳಿಸುತ್ತೇವೆಂದು. 600 00:52:58,375 --> 00:52:59,458 ಹೌದು. 601 00:53:04,750 --> 00:53:05,958 ಪ್ರಾರಂಭಿಸೋಣವೇ? 602 00:53:05,958 --> 00:53:07,458 ಹೌದು, ಖಂಡಿತ, ನನ್ನೊಡೆಯ. 603 00:53:08,791 --> 00:53:10,041 ಉಡುಗೊರೆಗಳ ಒಡೆಯನೇ. 604 00:53:12,625 --> 00:53:13,625 ಅದನ್ನು ಮಾಡೋಣ. 605 00:53:58,875 --> 00:54:00,083 ಮಹಾ ದೊರೆ! 606 00:54:01,583 --> 00:54:04,583 ಮಹಾ ದೊರೆ, ಒರ್ಕ್ಸ್ ಮೊರ್ಡೊರಿನಲ್ಲಿಲ್ಲ. 607 00:54:05,083 --> 00:54:07,333 ಅವರ ದಂಡೊಂದು ಎರೆಗಿಯೊನ್ ಕಡೆ ಹೊರಟಿದೆ. 608 00:54:07,833 --> 00:54:09,041 ಗಲಾದ್ರಿಯಲ್ ಸರಿ ಹೇಳಿದಳು. 609 00:54:09,041 --> 00:54:12,125 ಈಗಲೇ ನೀವು ಸೈನ್ಯವನ್ನು ಎರೆಗಿಯೊನ್‌ಗೆ ಕಳಿಸಬೇಕು! 610 00:54:13,375 --> 00:54:15,041 ಅದು ಸಾಧ್ಯವಾಗುವುದಿಲ್ಲ. 611 00:54:15,541 --> 00:54:21,250 ಸೌರೊನ್ ಇದೆಲ್ಲದರ ಸೂತ್ರಧಾರಿ ಎಂದು ನಂಬಲು ನನ್ನಲ್ಲಿ ಕಾರಣವಿದೆ. 612 00:54:22,166 --> 00:54:26,250 ಮಹಾ ದೊರೆ, ಎರೆಗಿಯೊನ್ ಎಲ್ವೆನ್ ಡಾಮ್‌ನ ಮಕುಟಮಣಿ. 613 00:54:26,250 --> 00:54:29,416 ಅದು ಪತನಗೊಂಡರೆ, ಇಡೀ ಮಧ್ಯ ಧರೆಗೆ ಅದು ಸಾವಿನ ಹೊಡೆತವಾಗುತ್ತದೆ. 614 00:54:29,416 --> 00:54:31,208 ನೀವು ಸಹಾಯವನ್ನು ಕಳಿಸಬೇಕು! 615 00:54:32,208 --> 00:54:36,333 ನಮ್ಮ ಸೇನೆಗಳು ಆಡಾರ್ ಮತ್ತು ಸೌರೊನ್‌ರನ್ನು ಸೋಲಿಸಲಾರವು. 616 00:54:36,333 --> 00:54:37,666 ತಾವಾಗಂತೂ ಅಲ್ಲ. 617 00:54:40,833 --> 00:54:44,083 ಬನ್ನಿ! ಬನ್ನಿ! 618 00:54:57,958 --> 00:54:59,166 ಹಿಂದೆ ಹೋಗಿ! 619 00:55:14,666 --> 00:55:16,250 ಅವರೆಂದರೆ ಅಸಹ್ಯವಾಗುತ್ತದೆ. 620 00:55:18,416 --> 00:55:19,500 ಮುಂದುವರೆಸು. 621 00:55:30,208 --> 00:55:32,291 - ಅವಳನ್ನು ನೋಡಿಕೊಳ್ಳಿ. - ಪರವಾಗಿಲ್ಲ. 622 00:55:32,291 --> 00:55:33,666 ಹಾಂ. 623 00:55:51,916 --> 00:55:53,125 ನಾನು ನಿನ್ನನ್ನು ಇಲ್ಲಿಗೆ 624 00:55:54,125 --> 00:55:55,208 ಖೈದಿಯಾಗಿ ಕರೆಸಿಲ್ಲ... 625 00:55:55,958 --> 00:55:57,083 ಆದರೆ ಸಂಭಾವ್ಯ ಮಿತ್ರನಾಗಿ ಕರೆಸಿದೆ. 626 00:55:58,791 --> 00:56:00,666 ಯಾಕೆಂದರೆ - ನಮ್ಮ ಶತ್ರು ಒಬ್ಬನೇ. 627 00:58:09,708 --> 00:58:11,708 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 628 00:58:11,708 --> 00:58:13,791 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ