1 00:00:06,041 --> 00:00:08,291 ಈ ಹಿಂದೆ 2 00:00:08,791 --> 00:00:11,125 ಹಾರ್ಫೂಟ್ಸ್ ಎಲ್ಲಿದ್ದಾರೆ? 3 00:00:13,416 --> 00:00:15,166 ನನ್ನ ಗೆಳೆಯರನ್ನು ಹುಡುಕುತ್ತಿದ್ದೆ. 4 00:00:15,250 --> 00:00:17,333 ಸರಿ, ನೀನು ಹುಡುಕುತ್ತಿರುವುದೇ ಬೇರೆ, 5 00:00:17,375 --> 00:00:19,625 ನಿನಗೆ ಈಗ ಸಿಗುವುದೇ ಬೇರೆ, ಅಲ್ವಾ? 6 00:00:21,666 --> 00:00:23,291 ಈ... ಜಾದು. 7 00:00:23,375 --> 00:00:27,750 ದಂಡವನ್ನು ಬಳಸುವುದು ಹೇಗೆ ಎಂದು ನನಗೆ ಹೇಳಿಕೊಡ್ತೀರಾ? 8 00:00:27,833 --> 00:00:32,041 ನೀನದಕ್ಕೆ ಅರ್ಹನಾದರೆ, ಅದು ತಾನಾಗಿಯೇ ನಿನಗೆ ಒಲಿಯುತ್ತದೆ. 9 00:00:32,750 --> 00:00:34,500 ಹಳೇ ಜ್ಹೋಪ್ಡಿಯಲ್ಲಿ ಪ್ರಾರ್ಥನೆಗಳು 10 00:00:34,541 --> 00:00:37,166 ನಿಮಗಾಗಿ ರಾತ್ರಿ-ಹಗಲು ಏರುತ್ತವೆ ಅಂತ ವಲಂಡೀಲ್ ಹೇಳಿದ. 11 00:00:37,250 --> 00:00:40,666 ನಿಷ್ಠಾವಂತರ ಮಾರ್ಗದೆಡೆಗೆ ನನ್ನ ಹೃದಯವನ್ನು ಮತ್ತೆ ತೆರೆಸಿದ್ದು ನೀವೇ. 12 00:00:40,750 --> 00:00:42,666 ಆದರೆ ನಾವು ಒಟ್ಟಿಗೆ ಹೋರಾಡೋಣ. 13 00:00:42,750 --> 00:00:45,333 ಎಲ್ಲಾ ಯುದ್ಧಗಳನ್ನೂ ಹೋರಾಡಿಯೇ ಗೆಲ್ಲಬೇಕಿಲ್ಲ. 14 00:00:48,583 --> 00:00:52,583 ದಂಗೆಯನ್ನು ಆರಂಭಿಸಿದ್ದು ಇವನೇ ಅಂತ ಸೆರೆಮನೆಯಧಿಕಾರಿಗೆ ತಿಳಿಸಿ. 15 00:00:53,125 --> 00:00:55,958 ಶಿಲಾ ಗಾಯಕರು ಪರ್ವತವನ್ನು ಕೇಳಿಸಿಕೊಂಡರೆಂದು ಹೇಳಿದರು. 16 00:00:56,041 --> 00:00:58,666 ಈ ಉಂಗುರದಿಂದ, ನನಗದು ಕಾಣುತ್ತದೆ. 17 00:00:58,750 --> 00:01:03,458 ಈ ಸಾಗರದೊಳಗಿನ ಸಂಪತ್ತಿನಿಂದ ನಾವು ಒಂದು ಕವಡೆಯನ್ನೂ ಪಡೆದಿಲ್ಲ. 18 00:01:04,125 --> 00:01:05,458 ಅವನು ಬದಲಾಗಿದ್ದಾನೆ. 19 00:01:05,500 --> 00:01:08,500 ದುರಾಸೆ ಅವನ ಸ್ವಭಾವವಲ್ಲ. ಎಂದಿಗೂ ಆಗಿಲ್ಲ. 20 00:01:08,583 --> 00:01:12,291 ಇದು ಸಾಧ್ಯವೇ, ಅವನು ತೊಟ್ಟಿರುವ ಉಂಗುರ-- 21 00:01:12,375 --> 00:01:16,083 ಇಲ್ಲ. ನಿಮ್ಮ ಉಂಗುರಗಳಲ್ಲಿ ಯಾವುದೇ ತಪ್ಪು ಇರಬಾರದು. 22 00:01:16,166 --> 00:01:18,750 ಹಾಗಾದರೆ ಉಂಗುರ ತಯಾರಿಸಿದವನದ್ದೇ ತಪ್ಪು. 23 00:01:18,833 --> 00:01:22,625 ಅನ್ನಟಾರ್ ಬಗ್ಗೆ ನಿಜವಾಗಿಯೂ ನಿಮಗೆ ಎಷ್ಟು ತಿಳಿದಿದೆ? 24 00:01:23,666 --> 00:01:26,500 ನೀನು ಡ್ವಾರ್ಫ್ ಉಂಗುರಗಳನ್ನು ಬದಲಿಸಿದೆಯಾ? 25 00:01:27,541 --> 00:01:28,541 ಇಲ್ಲ. 26 00:01:28,625 --> 00:01:29,666 ನಾವು ಬದಲಿಸಿದೆವು. 27 00:01:34,916 --> 00:01:39,083 ನಮ್ಮ ತಪ್ಪುಗಳಿಗೆ ಪ್ರಾಯಶ್ಚಿತ್ತ ಮಾಡಲು ಉಂಗುರಗಳನ್ನು ಒಟ್ಟಿಗೆ ಪೂರ್ಣಗೊಳಿಸುವುದು. 28 00:01:39,166 --> 00:01:42,500 ಆ ಒಂಬತ್ತು ಆ ಏಳನ್ನು ಮುಕ್ತಗೊಳಿಸಬೇಕು. 29 00:01:42,583 --> 00:01:44,625 ನಮ್ಮೆಲ್ಲರನ್ನೂ ಅವು ಮುಕ್ತಗೊಳಿಸಬೇಕು. 30 00:01:45,166 --> 00:01:46,541 ಒರ್ಕ್ಸ್ ಮೊರ್ಡೊರಿನಲ್ಲಿಲ್ಲ. 31 00:01:46,625 --> 00:01:48,875 ಅವರ ದಂಡೊಂದು ಎರೆಗಿಯೊನ್ ಕಡೆ ಹೊರಟಿದೆ. 32 00:01:49,375 --> 00:01:53,375 ಗಲಾದ್ರಿಯಲ್ ಸರಿಯಾಗಿ ಹೇಳಿದಳು. ನೀವು ಈಗಲೇ ಎರೆಗಿಯೊನ್‌ಗೆ ಸೇನೆ ಕಳುಹಿಸಬೇಕು! 33 00:01:58,041 --> 00:01:59,708 ನಾನು ನಿನ್ನನ್ನು ಇಲ್ಲಿಗೆ 34 00:01:59,791 --> 00:02:01,166 ಖೈದಿಯಾಗಿ ಕರೆಸಿಲ್ಲ... 35 00:02:01,250 --> 00:02:02,666 ಆದರೆ ಸಂಭಾವ್ಯ ಮಿತ್ರನಾಗಿ ಕರೆಸಿದೆ. 36 00:02:02,750 --> 00:02:04,666 ಯಾಕೆಂದರೆ ನಮ್ಮ ಶತ್ರು ಒಬ್ಬನೇ. 37 00:03:21,000 --> 00:03:27,000 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 38 00:04:08,000 --> 00:04:09,000 ನೀನು ಬಾಯಿ ಮುಚ್ಚು. 39 00:04:09,083 --> 00:04:10,541 ನಮ್ಮನ್ನು ತೊರೆದವರು ಅಂತಾರೆ. 40 00:04:14,000 --> 00:04:15,666 ಅವರು ನಮ್ಮನ್ನು ಏನಂತಾದರೂ ಕರೆಯಲಿ. 41 00:04:15,750 --> 00:04:18,958 ಆತ್ಮವನ್ನು ಹುಡುಕಲು ಆಡಾರ್ ಗೆ ನೆರವಾಗಿ ಸಾಯುವ ಬದಲು ಯಾವುದಾದರೂ ಒಳ್ಳೆಯದೇ. 42 00:05:16,375 --> 00:05:20,583 ಓ, ಮನುಷ್ಯರ ಉಂಗುರಗಳೇ, ಯಾಕಿನ್ನೂ ನನ್ನನ್ನು ವಿರೋಧಿಸುತ್ತೀರಿ? 43 00:05:22,166 --> 00:05:25,458 ನಿಮಗೆ ಜೀವ ಇಲ್ಲ, ನೀವು ಉಸಿರಾಡಲ್ಲ, 44 00:05:25,541 --> 00:05:28,541 ನಿಮಗೆ ಮನಸ್ಸು ಅಥವಾ ಇಚ್ಛೆ ಇಲ್ಲವೇ? 45 00:05:28,625 --> 00:05:31,958 ನಿಮ್ಮೊಳಗೆ ಅದೆಂತಹ ಅಹಂಕಾರ ಅಡಗಿದೆ, 46 00:05:33,625 --> 00:05:35,375 ನನ್ನ ಆಜ್ಞೆಯನ್ನೇ ಮೀರುತ್ತೀರಾ? 47 00:05:39,208 --> 00:05:40,208 ಮತ್ತೆ. 48 00:05:41,125 --> 00:05:42,458 ಹೆಚ್ಚು ಬೆಳ್ಳಿ. 49 00:05:43,375 --> 00:05:44,458 ಹೆಚ್ಚು ಮೀಥ್ರಿಲ್. 50 00:05:45,000 --> 00:05:46,583 ಹೆಚ್ಚಿನ ಮೀಥ್ರಿಲ್ ಇಲ್ಲ. 51 00:05:46,666 --> 00:05:49,125 ಡ್ವಾರ್ವ್ಸ್ ಪೂರೈಕೆ ಮಾಡುವಲ್ಲಿ ತಡ ಮಾಡಿದ್ದಾರೆ. 52 00:05:50,666 --> 00:05:52,000 ಹಾಗಾಗಿ ಅವರನ್ನು ಹುಡುಕಿ. 53 00:05:52,083 --> 00:05:55,458 ಪ್ರಯತ್ನಿಸಿದೆವು, ನನ್ನೊಡೆಯ. ನಮ್ಮ ಯಾವ ಸಂದೇಶಗಳಿಗೂ ಉತ್ತರ ಬಂದಿಲ್ಲ. 54 00:05:55,541 --> 00:05:56,958 ಎಲ್ಲವನ್ನೂ ನಾನೇ ಮಾಡಬೇಕೇ? 55 00:05:57,041 --> 00:05:59,041 ನಾವು ಆದಷ್ಟೂ ಶ್ರಮವಹಿಸುತ್ತಿದ್ದೇವೆ. 56 00:06:02,583 --> 00:06:04,958 ನಮ್ಮಲ್ಲಿ ಕೆಲವರು ಗಮನಿಸಿದ್ದೇವೆ... 57 00:06:05,833 --> 00:06:08,666 ಇತ್ತೀಚೆಗೆ ನೀವು ತುಂಬಾ ಕೋಪಗೊಳ್ಳುತ್ತೀರಿ, ಒಡೆಯ. 58 00:06:26,416 --> 00:06:28,250 ನಿನ್ನ ಹೆಸರೇನಂದೆ, ಅಕ್ಕಸಾಲಿಗಳೇ? 59 00:06:30,208 --> 00:06:32,708 ಅಂದರೆ, ನಿಮಗೆ ನೆನಪಿಲ್ಲವೇ? 60 00:06:32,791 --> 00:06:34,083 ಖಂಡಿತ ನನಗೆ ನೆನಪಿದೆ. 61 00:06:35,625 --> 00:06:38,000 ಅದು... ಒಂದು ನಿಮಿಷ ಇರು. 62 00:06:38,083 --> 00:06:40,333 -ಕೆಲಬ್ರಿಮ್ಬೋರ್ ದೊರೆ. -ಒಂದು ನಿಮಿಷ ಇರಿ, ಅಂದೆ! 63 00:06:42,625 --> 00:06:44,375 ಎಲ್ಲರೂ ವಿರಾಮ ತಗೊಳ್ಳಿ. 64 00:06:54,166 --> 00:06:57,291 ಮೀರ್ಡಾನಿಯ. ಅವಳ ಹೆಸರು ಮೀರ್ಡಾನಿಯ. 65 00:06:59,500 --> 00:07:01,750 ಎಲ್ಲವನ್ನೂ ನೆನಪಿಟ್ಟುಕೊಳ್ಳುವುದು ಸಾಧ್ಯವಿಲ್ಲ. 66 00:07:04,583 --> 00:07:08,958 ಇಲ್ಲ, ಅಂದರೆ, ಸಣ್ಣ ವಿಚಾರಗಳನ್ನು ಕೂಡ. 67 00:07:09,916 --> 00:07:15,208 ಈ ಮೊದಲು, ನನ್ನ ಸುಕ್ಕು ಬಿಡಿಸುವ ಸುತ್ತಿಗೆಯನ್ನು ಇಲ್ಲೇ ಇಟ್ಟಿರುತ್ತಿದ್ದೆ, ಮತ್ತು... 68 00:07:16,416 --> 00:07:17,625 ಅಂದರೆ ಆ ಸುತ್ತಿಗೆಯೇ? 69 00:07:28,333 --> 00:07:29,333 ಹೌದು. 70 00:07:40,458 --> 00:07:42,541 ನನ್ನ ತಲೆಗೇನೋ ಆಗಿದೆ. 71 00:07:43,458 --> 00:07:45,541 ಅದರ ಆಳದೊಳಗೆ ಎಷ್ಟು ಹೊಕ್ಕಿದ್ದೀರಿ ಎಂದರೆ, 72 00:07:46,166 --> 00:07:48,583 ಅದರಿಂದ ಹೊರಬರಲು ಸಾಧ್ಯವಾಗುತ್ತಲೇ ಇಲ್ಲ. 73 00:07:50,458 --> 00:07:52,833 ತುಂಬಾ ಆಳಕ್ಕೆ. 74 00:07:53,791 --> 00:07:56,416 ನನಗನಿಸುತ್ತೆ, ಕೆಲವೊಮ್ಮೆ, ಅಲ್ಲಿಯೇ ಕೆಲ ಹೊತ್ತು 75 00:07:57,666 --> 00:07:59,541 ಇರಬೇಕೆಂದು ನಿಮಗನಿಸುತ್ತಿರಬೇಕು, 76 00:08:00,416 --> 00:08:01,833 ಸ್ವಲ್ಪ ಸ್ಪಷ್ಟತೆ ಪಡೆಯಲು. 77 00:08:06,500 --> 00:08:07,708 ನಾನು ಚೆನ್ನಾಗಿದ್ದೇನೆ. 78 00:08:10,375 --> 00:08:12,416 ನಾನು ದಣಿದಿದ್ದೇನೆ ಅಷ್ಟೇ. 79 00:08:12,916 --> 00:08:15,750 ಹಾಗಾದರೆ ನಾನೀಗ ಹೇಳುವ ಸುದ್ದಿ ನಿಮಗೆ ಇಷ್ಟವಾಗದಿರಬಹುದು. 80 00:08:17,750 --> 00:08:19,500 ನಿಮ್ಮ ಜನರಿಗೆ ವಿಚಾರಣೆ ಬೇಕಂತೆ. 81 00:08:20,083 --> 00:08:21,333 ಇಲ್ಲ, ಇಲ್ಲ. 82 00:08:22,791 --> 00:08:26,125 ಎರೆಗಿಯೊನ್ ದೊರೆ ನೀವೇ. ನಿಮಗೆ ಜವಾಬ್ದಾರಿಗಳಿವೆ. 83 00:08:26,208 --> 00:08:30,000 ಹೌದು, ಮತ್ತು ನನ್ನ ದೊಡ್ಡ ಜವಾಬ್ದಾರಿ ಉಂಗುರಗಳು ಆಗಿವೆ. 84 00:08:30,750 --> 00:08:35,125 ಆ ಒಂಬತ್ತು ಪೂರ್ಣಗೊಳ್ಳುವವರೆಗೆ, ಬೇರೆ ಯಾವುದೂ ಮುಖ್ಯವಲ್ಲ. 85 00:08:37,750 --> 00:08:38,750 ಸರಿ ಬಿಡಿ. 86 00:08:39,958 --> 00:08:41,083 ನಿಮ್ಮ ಇಚ್ಛೆ. 87 00:08:42,583 --> 00:08:44,166 ಇನ್ನೂ ಏನೋ ಇದೆ. 88 00:08:45,708 --> 00:08:48,833 ಡ್ವಾರ್ವ್ಸ್ ನಮ್ಮ ಮೀಥ್ರಿಲ್ ತರಲು ತಡ ಮಾಡಿದ್ದಾರೆ. 89 00:08:51,541 --> 00:08:53,583 ಅದೇನಂತ ನೋಡುವೆಯಾ? 90 00:08:53,666 --> 00:08:55,083 ಈಗಲೇ ನೋಡುವೆ. 91 00:09:16,125 --> 00:09:19,041 ಮಹಾ ಎಲ್ಫ್ ಕುಶಲ ಕರ್ಮಿ ಕೆಲಸದಲ್ಲಿ ನಿರತರಾಗಿದ್ದಾರೆ. 92 00:09:20,291 --> 00:09:24,208 ಅವರ ಪರವಾಗಿ ಆಡಳಿತದ ಎಲ್ಲಾ ಜವಾಬ್ದಾರಿಗಳನ್ನು ನಾನೇ ನಿರ್ವಹಿಸಬೇಕೆಂದು ಕೋರಿದ್ದಾರೆ. 93 00:09:25,666 --> 00:09:27,250 ಈಗ, ಸಮಸ್ಯೆ ಏನು ಹಾಗಾದರೆ? 94 00:09:31,333 --> 00:09:32,375 ಅವರಿಗೆ ತೋರಿಸು. 95 00:09:33,791 --> 00:09:34,791 ಏನು ತೋರಿಸುವುದು? 96 00:09:35,666 --> 00:09:39,000 ಈ ಕಾವಲುಮನೆಯಲ್ಲಿ ನಗರಕ್ಕೆ ಪ್ರಯಾಣಿಸುವ ಕುಶಲಕರ್ಮಿಗಳು ಮತ್ತು ವ್ಯಾಪಾರಿಗಳು 97 00:09:39,083 --> 00:09:40,333 ತುಂಬಿ ತುಳುಕುತ್ತಿರುತ್ತಾರೆ. 98 00:09:40,416 --> 00:09:42,416 ನಿನ್ನೆ ಸಂಜೆ ಇದು ಸಂಶಯಾಸ್ಪದವಾಗಿ ನಿಂತಿತು. 99 00:09:42,500 --> 00:09:44,125 ರಸ್ತೆಯಲ್ಲಿ ತಡೆ ಆಯಿತಾ ಅಂತ ನೋಡೋಕೆ 100 00:09:44,208 --> 00:09:46,583 ನದಿಯ ಮೂಲಕ ಹುಡುಕಾಟದ ತಂಡವನ್ನು ಕಳಿಸಿದೆವು. 101 00:09:46,666 --> 00:09:48,666 ಆದರೆ ಒಬ್ಬ ಸೈನಿಕ ಮಾತ್ರ ಹಿಂತಿರುಗಿದ. 102 00:09:48,750 --> 00:09:49,750 ಅವನು ಎಲ್ಲಿದ್ದಾನೆ? 103 00:09:53,666 --> 00:09:58,083 ಈ ಬೆಳಿಗ್ಗೆ ನೀರಿನಲ್ಲಿ ಕೊಚ್ಚಿಕೊಂಡು ಬಂದ. ಅವನ ಬಳಿ ಒಂದು ಸಂದೇಶವಿತ್ತು. 104 00:10:05,750 --> 00:10:07,000 ಅವನನ್ನು ಹೂಳಿರಿ. 105 00:10:10,416 --> 00:10:11,708 ಇದನ್ನು ಯಾರಿಗೂ ತೋರಿಸಬೇಡಿ. 106 00:10:18,958 --> 00:10:20,916 ದೊರೆ ಕೆಲಬ್ರಿಮ್ಬೋರ್‌ಗೆ ತಿಳಿಸಲೇ? 107 00:10:21,000 --> 00:10:22,083 ಬೇಡ. 108 00:10:22,916 --> 00:10:26,333 ಅವರನ್ನು ಯಾರೂ ವಿಚಲಿತಗೊಳಿಸಬಾರದೆಂದು ನನಗೆ ಖುದ್ದಾಗಿ ಹೇಳಿದ್ದಾರೆ. 109 00:10:27,833 --> 00:10:29,125 ಅಕ್ಕಸಾಲಿಗರಾದರೂ ಅಷ್ಟೇ. 110 00:10:30,125 --> 00:10:31,875 ನಮ್ಮನ್ನು ಕರ್ತವ್ಯದಿಂದ ಬಿಡಿಸಿದ್ದಾರಾ? 111 00:10:33,750 --> 00:10:34,958 ಹೌದು ಎಂದು ಹೇಳುವೆ. 112 00:10:36,916 --> 00:10:39,583 ನನ್ನ ಹೆಸರನ್ನು ಮರೆತ ವಿಚಾರವಾಗಿಯೇ? 113 00:10:39,666 --> 00:10:41,250 ಅವರೊಂದಿಗೆ ಒರಟಾಗಿ ವರ್ತಿಸಿದೆ... 114 00:10:41,750 --> 00:10:44,250 ಅವರು ಎಂದಿನಂತಿಲ್ಲ, ಮೀರ್ಡಾನಿಯ. 115 00:10:46,541 --> 00:10:49,208 ಸದ್ಯಕ್ಕೆ, ನಾವು ಅವರನ್ನು ಒಂಟಿಯಾಗಿ ಬಿಡುವುದೇ ಒಳಿತು. 116 00:10:49,958 --> 00:10:52,916 ಅವರಿಗೆ ಸಮಯ ಕೊಡೋಣ. ಪ್ರಾರ್ಥಿಸೋಣ. 117 00:10:54,166 --> 00:10:56,916 ಅದು ಅವರನ್ನು ಮುಗಿಸುವುದರೊಳಗೆ ಅವರೇ ಈ ಕೆಲಸವನ್ನು ಮುಗಿಸಲಿ ಅಂತ. 118 00:11:09,708 --> 00:11:11,416 ನಿನ್ನನ್ನು ನಂಬಬಹುದೇ... 119 00:11:12,250 --> 00:11:15,083 ಬೇರೆಯವರು ಸಹ ಅವರ ಕೋರಿಕೆಗಳನ್ನು ಗೌರವಿಸುವರು ಎಂದು? 120 00:11:16,625 --> 00:11:18,458 ಖಂಡಿತ, ಒಡೆಯ. 121 00:11:27,000 --> 00:11:30,208 ಒಡೆಯ, ಆ ಕೆತ್ತನೆ. ದೇಹದ ಮೇಲೆ. 122 00:11:31,083 --> 00:11:32,541 ಏನಂತ ಬರೆದಿತ್ತು? 123 00:11:39,125 --> 00:11:40,458 "ಅವನು ಎಲ್ಲಿದ್ದಾನೆ?" 124 00:12:27,291 --> 00:12:30,791 ನಿಮ್ಮ ಸೆರೆಯಲ್ಲಿ ನಾನು ಕಳೆದ ಅಲ್ಪಾವಧಿಯಲ್ಲಿ, 125 00:12:32,166 --> 00:12:34,583 ಸೌರೊನ್‌ನ ಹುಡುಕಲೇಬೇಕೆಂದು ಪಣ ತೊಟ್ಟಿದ್ದೀಯ. 126 00:12:35,375 --> 00:12:38,916 ಹೇಗೆಂದರೆ, ಅದರೊಳಗಡೆಯೇ ಮುಳುಗಿಹೋದಂತೆ, 127 00:12:40,416 --> 00:12:41,958 ಅದು ಯಾವಾಗಲೂ ಆಗುವಂತೆ, 128 00:12:42,041 --> 00:12:44,833 ಒಮ್ಮೆ ಅವನು ನಿನ್ನ ತಲೆಯೊಳಗೆ ಹೊಕ್ಕಿ ಕುಳಿತ ಎಂತಾದರೆ. 129 00:12:45,541 --> 00:12:47,333 ನನ್ನ ಮನಸಿನ ಬಗ್ಗೆ ನಿನಗೆ ಗೊತ್ತಿಲ್ಲ. 130 00:12:49,833 --> 00:12:51,166 ನೀನು ಅವನಿಗೆ ಮಣಿದೆ. 131 00:12:51,958 --> 00:12:53,291 ನಾನು ಪ್ರತಿರೋಧಿಸಿದೆ. 132 00:12:53,791 --> 00:12:55,583 ಬಹುಶಃ, ಸ್ವಲ್ಪ ಸಮಯದವರೆಗೆ. 133 00:12:58,416 --> 00:13:00,791 ಆದರೆ ಇಷ್ಟರಲ್ಲೇ ಅವನು ನಿನ್ನನ್ನು ನೋಡುತ್ತಾನೆ. 134 00:13:02,916 --> 00:13:07,083 ನೀನು ಯಾರಂತ ಅಷ್ಟೇ ಅಲ್ಲ, ನೀನು ಏನಾಗಬೇಕಂತಿದ್ದೀಯಾ ಅನ್ನೋದು ಕೂಡ. 135 00:13:07,833 --> 00:13:11,875 ಅವನ ಕಣ್ಣುಗಳು ರಂದ್ರ ಕೊರೆಯುತ್ತವೆ, ಅದರ ಒಳಗೆ ಅವನ ನುಗ್ಗುತ್ತಾನೆ. 136 00:13:14,333 --> 00:13:20,000 ಕೆಲ ಸಮಯದವರೆಗೂ, ಅವನ ಶಕ್ತಿ ನಿನ್ನದೇ ಆಗಿದೆ ಎಂಬಂತೆ ನಂಬಿಸುತ್ತಾನೆ. 137 00:13:22,291 --> 00:13:23,875 ಅದಮ್ಯ ಶಕ್ತಿ... 138 00:13:24,791 --> 00:13:28,416 ಅದರಿಂದ ಪ್ರತಿ ಆಸೆಯನ್ನು ಪೂರೈಸುವುದು ಅನಿವಾರ್ಯವೆನಿಸುತ್ತದೆ. 139 00:13:29,208 --> 00:13:30,750 ರಂಗಿನ ಸಾಗರದೆದುರು 140 00:13:32,083 --> 00:13:35,458 ಕಾಣುವ ಎಲ್ಲವೂ ಅಂದಿನಿಂದ ಶಾಶ್ವತವಾಗಿ-- 141 00:13:35,541 --> 00:13:38,291 ಬಣ್ಣ ಕಳೆದುಕೊಂಡಂತಿರುತ್ತವೆ. 142 00:13:45,583 --> 00:13:47,083 ನಿನಗೇನು ಭರವಸೆ ಕೊಟ್ಟ? 143 00:13:49,041 --> 00:13:50,250 ಒಂದು ಸೈನ್ಯ. 144 00:13:51,833 --> 00:13:53,666 ನನಗೇನು ಆಮಿಷ ಒಡ್ಡಿದ ಗೊತ್ತಾ? 145 00:13:55,208 --> 00:13:56,208 ನನಗೆ ಬೇಕಾಗಿಲ್ಲ. 146 00:13:58,291 --> 00:13:59,291 ಮಕ್ಕಳು. 147 00:14:00,166 --> 00:14:03,791 ಹಾಗಾದರೆ ನಮಗಿಬ್ಬರಿಗೂ ನಮ್ಮಿಷ್ಟವಾದವುಗಳನ್ನೇ ಕೊಟ್ಟಿದ್ದಾನೆ. 148 00:14:04,291 --> 00:14:05,625 ನೋಡು, 149 00:14:07,125 --> 00:14:09,916 ನಾವು ನಂದಿಸಬೇಕಾಗಿರುವುದು ಅವನ ಸುಳ್ಳುಗಳನ್ನಲ್ಲ. 150 00:14:11,666 --> 00:14:12,958 ಬದಲಾಗಿ ಅವನನ್ನು. 151 00:14:14,833 --> 00:14:16,666 ಅದನ್ನು ಮಾಡಲು ನಿನಗೆ ಸಹಾಯ ಮಾಡುವೆ. 152 00:14:18,625 --> 00:14:20,500 ಸೌರೊನ್‌ನ ನಾಶಮಾಡಲು ನೆರವಾಗುವೆ. 153 00:14:20,583 --> 00:14:23,708 ಅದೆಂತಹ ಸಹಾಯ ಮಾಡುವೆ, ಆರ್ಕ್? 154 00:14:39,583 --> 00:14:42,041 ಮೋರ್ಗೋಥ್ ನ ಕಿರೀಟ. ಆದರೆ ನನಗೆ ಹೇಳಿದ್ದು-- 155 00:14:42,125 --> 00:14:44,166 ಏನಾಯಿತು ಎಂಬುದಕ್ಕೆ ಅನೇಕ ಕಥೆಗಳಿವೆ, 156 00:14:44,250 --> 00:14:46,875 ಸಿಲ್ಮರಿಲ್ ಗಳನ್ನು ತಮ್ಮ ಮೂಲಸ್ವರೂಪದಿಂದ ಬದಲಾಯಿಸಿದ ಮೇಲೆ. 157 00:14:47,625 --> 00:14:50,833 ಸೌರೊನ್ ತನಗೆ ಸರಿಹೊಂದುವಂತೆ ಅದನ್ನು ಮತ್ತೆ ಕಾಯಿಸಿದಾಗ ನಾನಲ್ಲಿದ್ದೆ. 158 00:14:52,166 --> 00:14:54,541 ಕಿರೀಟ ಧರಿಸಲು ಅವನು ಮಂಡಿಯೂರಿದಾಗ ನಾನಲ್ಲಿದ್ದೆ. 159 00:14:56,750 --> 00:15:02,166 ಅವನನ್ನು ಕೊಲ್ಲಲು ಅದರ ಶಕ್ತಿಯನ್ನು ಬಳಸಿದವನು ನಾನೇ. 160 00:15:04,500 --> 00:15:06,208 ನೀನು ಹೇಳುವುದು ನಿಜವಾದರೆ, 161 00:15:08,416 --> 00:15:09,541 ಅವನು ಏಕೆ ಹಿಂದಿರುಗಿದ? 162 00:15:09,625 --> 00:15:11,916 ಯಾಕೆಂದರೆ ನನಗಿನ್ನೂ ನೀನು ಸಿಕ್ಕಿರಲಿಲ್ಲ. 163 00:15:13,125 --> 00:15:14,833 ಇದರಲ್ಲಿ ನನ್ನ ಪಾತ್ರ ಏನಿದೆ? 164 00:15:14,916 --> 00:15:18,416 ಆ ಮೂರು ಎಲ್ವೆನ್ ಉಂಗುರಗಳು ನಿಮ್ಮ ಜನರ ವಿನಾಶವನ್ನು ತಡೆದವಂತೆ. 165 00:15:19,875 --> 00:15:21,041 ಅದು ನಿಜವೇ? 166 00:15:23,375 --> 00:15:28,000 ನಿಜವಾಗಿದ್ದರೆ, ಬಹುಶಃ ಒಟ್ಟಿಗೆ, 167 00:15:28,083 --> 00:15:30,666 ಈ ಕಿರೀಟ ಮತ್ತು ನಿನ್ನ ಉಂಗುರಗಳು ಸೌರೊನ್‌ನ ಶಾಶ್ವತವಾಗಿ 168 00:15:30,750 --> 00:15:33,250 ನಾಶಮಾಡಲು ಸಾಕಷ್ಟು ಶಕ್ತಿಯುತವಾಗಿರುತ್ತವೆ. 169 00:15:35,708 --> 00:15:38,708 ವಂಚಕನು ನನಗಿನ್ನು ಸಿಗಲ್ಲ ಅಂದುಕೊಂಡಿದ್ದಾನೆ. 170 00:15:40,458 --> 00:15:42,666 ಆದರೆ ಅವನು ಎರೆಗಿಯೊನ್‌ನಲ್ಲಿ ಅವಿತಿದ್ದಾನೆ. 171 00:15:44,583 --> 00:15:48,375 ಮತ್ತು ನಾನು ಅನುಮಾನಿಸಿದಂತೆ ನಿನಗೆ ಖಂಡಿತ ಗೊತ್ತಿರಬೇಕು... 172 00:15:55,541 --> 00:15:57,916 ಹಲ್ಬ್ರ್ಯಾಂಡೇ ಸೌರೊನ್ ಅಂತ. 173 00:15:59,333 --> 00:16:00,416 ಅಲ್ಲವೇ? 174 00:16:05,500 --> 00:16:07,666 ಆ ನಗರದ ಭವಿಷ್ಯ 175 00:16:08,416 --> 00:16:11,666 ನಿನ್ನ ಅಹಂಕಾರವನ್ನು ಬದಿಗಿಡುವ ನಿನ್ನ ಸಾಮರ್ಥ್ಯದ ಮೇಲೆ ನಿಂತಿದೆ. 176 00:16:14,333 --> 00:16:16,750 ಆ ಇಚ್ಛಾಶಕ್ತಿಯನ್ನು ಬೆಳೆಸಿಕೋ ಎನ್ನುವೆ. 177 00:16:17,958 --> 00:16:19,166 ನಿನಗೆ ಸಾಧ್ಯವಾದಲ್ಲಿ. 178 00:16:34,708 --> 00:16:36,041 ನಾವು ಮತ್ತೆ ಮಾತನಾಡೋಣ. 179 00:16:51,458 --> 00:16:52,625 ಕಾನೂನಿನ ಉಲ್ಲಂಘನೆ. 180 00:16:54,750 --> 00:17:00,416 ಹಿಂಸಾತ್ಮಕ ಕಲಹದ ಪ್ರಚೋದನೆಯು ಜೀವಹಾನಿಗೆ ಕಾರಣವಾಯಿತು. 181 00:17:01,458 --> 00:17:05,375 ಮತ್ತು ಕೊನೆಯದು, ಆದರೆ ಅತ್ಯಂತ ಅಸಹ್ಯಕರವಾದುದು, 182 00:17:06,500 --> 00:17:08,500 ಮಹಾ ದೇಶದ್ರೋಹದ ಅಪರಾಧ. 183 00:17:09,875 --> 00:17:15,708 ಒಟ್ಟಾರೆಯಾಗಿ ನೋಡಿದರೆ, ಕಾನೂನಿನ ಈ ಭೀಕರ ಉಲ್ಲಂಘನೆಗಳಿಗೆ ಮರಣದಂಡನೆಯೇ ಸೂಕ್ತ. 184 00:17:15,791 --> 00:17:17,958 -ಹಾಂ! -ಅಲ್ಲಿಗೆ ಮುಗಿಯುತ್ತೆ. 185 00:17:21,333 --> 00:17:23,583 -ಅವನು ಮರಣದಂಡನೆಗೆ ಅರ್ಹನಲ್ಲ. -ಹಾಂ, ಇರಬಹುದು. 186 00:17:24,416 --> 00:17:25,416 ಆದಾಗ್ಯೂ, 187 00:17:27,166 --> 00:17:30,625 ನಮ್ಮ ರಾಜ್ಯಕ್ಕೆ ಆತನ ವರ್ಷಗಳ ನಿಷ್ಠಾವಂತ ಸೇವೆಯನ್ನು ಪರಿಗಣಿಸಿ, 188 00:17:31,750 --> 00:17:35,458 ಆರೋಪಿಯನ್ನು ಬಿಡುಗಡೆಗೊಳಿಸಲು ಈ ನ್ಯಾಯಾಲಯದ ಸಭೆಯು ತೀರ್ಮಾನಿಸುತ್ತದೆ. 189 00:17:43,833 --> 00:17:45,291 ಬಿಡುಗಡೆಗೊಳಿಸಿ... 190 00:17:48,666 --> 00:17:54,291 ಬಿಡುಗಡೆಗೊಳಿಸಬಹುದು, ಯಾವಾಗ ಎಂದರೆ, ಅವನು ತನ್ನ ಅಪರಾಧಗಳನ್ನು ತ್ಯಜಿಸಿ 191 00:17:55,958 --> 00:17:59,291 ನ್ಯೂಮೆನೊರಿನ ನಿಜವಾದ ದೊರೆಗೆ ತನ್ನ ನಿಷ್ಠೆಯ ಭರವಸೆ ಇತ್ತಾಗ ಮಾತ್ರ. 192 00:18:05,625 --> 00:18:10,166 ಎಲೆಂಡಿಲ್, ಅಮಾನ್ಡಿಲ್‌ನ, ಪುತ್ರನೇ, ನಿನ್ನ ಅಪರಾಧಗಳನ್ನು ತ್ಯಜಿಸುವೆಯಾ? 193 00:18:23,375 --> 00:18:24,375 ತ್ಯಜಿಸುವೆ. 194 00:18:27,541 --> 00:18:32,333 ಅರ್-ಫರಝೋನ್ ನ್ಯೂಮೆನೊರಿನ ನಿಜವಾದ ಅರಸನೆಂದು ಒಪ್ಪುವೆಯಾ? 195 00:18:43,083 --> 00:18:44,291 ನಾನೊಪ್ಪಲ್ಲ. 196 00:18:45,791 --> 00:18:47,458 ಜೋರಾಗಿ ಮಾತನಾಡು, ಎಲೆಂಡಿಲ್, 197 00:18:48,416 --> 00:18:50,958 ಇಲ್ಲಿ ನೆರೆದಿರುವವರಿಗೆ ನಿನ್ನ ಮಾತು ಸರಿಯಾಗಿ ಕೇಳಿಸಲಿ. 198 00:18:55,541 --> 00:18:56,791 ನಾನು ಒಪ್ಪಲ್ಲ! 199 00:18:59,125 --> 00:19:05,000 ಯಾಕೆಂದರೆ ಈಗ ನ್ಯೂಮೆನೊರಿನ ನಿಜವಾದ ಆಳುಗರು, ಅದರ ಕೊನೆಗಾಲದವರೆಗೂ, 200 00:19:05,083 --> 00:19:08,750 ಟಾರ್-ಪಲಾಂಟಿರ್‌ನ ಪುತ್ರಿಯಾದ ಮಿರಿಯೆಲ್! 201 00:19:11,083 --> 00:19:15,541 ಮತ್ತು ಇಲ್ಲಿರುವ ಒಬ್ಬನೇ ಮೋಸಗಾರ ಅಂದರೆ ನೀನೇ! 202 00:19:34,000 --> 00:19:35,750 ಈಗ ಇವನೊಂದಿಗೆ ಏನು ಮಾಡುವುದು? 203 00:19:36,416 --> 00:19:38,458 ಈಗಾಗಲೇ ಬೇಕಾದಷ್ಟು ಮಾಡಿದ್ದೀಯಾ. 204 00:19:42,875 --> 00:19:45,833 ಬಹುಶಃ ಇವನ ಭವಿಷ್ಯದ ನಿರ್ಧಾರವನ್ನು ವಾಲಾರಿಗೇ ಬಿಡಬೇಕು. 205 00:19:47,458 --> 00:19:50,666 ನಿಷ್ಠಾವಂತರು ಹಳೆಯ ಸಂಪ್ರದಾಯಗಳ ಪ್ರಕಾರ ಬದುಕಬೇಕೆಂದರೆ, 206 00:19:50,750 --> 00:19:52,208 ಅದೇ ರೀತಿ ಸಾಯಲೂಬೇಕು. 207 00:20:05,666 --> 00:20:06,750 ನೋರಿ. 208 00:20:08,250 --> 00:20:10,041 ನೋಡಿ? ಯಾರನ್ನ ನೋಡ್ಬೇಕು? 209 00:20:12,125 --> 00:20:13,500 ಯಾರೂ ಇಲ್ಲ. 210 00:20:13,583 --> 00:20:16,583 ನಾನು... ನಾನು ಏನನ್ನೋ ನೋಡಿದೆ. 211 00:20:17,583 --> 00:20:21,250 ಗುಪ್ತ ಅಗ್ನಿ ನಮಗೆ ಪಿಸುಗುಟ್ಟುತ್ತದೆ, ನಾವು ಕೇಳಲು ಕಿವಿಗೊಟ್ಟರೆ. 212 00:20:22,333 --> 00:20:24,666 ನಮಗೆ ವಿಷಯಗಳನ್ನು ಹೇಳುತ್ತದೆ. ಮತ್ತು ತೋರಿಸುತ್ತದೆ. 213 00:20:25,541 --> 00:20:30,208 ನಡೆಯುವಂತಹ ವಿಷಯಗಳನ್ನು ತೋರಿಸುತ್ತಾ? ಅಥವಾ ನಡೆಯಬಹುದಾದಂಥ ವಿಷಯಗಳನ್ನಾ? 214 00:20:31,125 --> 00:20:34,791 ನಾಳೆಯ ಮೋಡಗಳನ್ನು ನೆನ್ನೆಯ ಸೂರ್ಯಕಿರಣಗಳಷ್ಟೇ ಸ್ಪಷ್ಟವಾಗಿ ತೋರಿಸುತ್ತದೆ. 215 00:20:36,500 --> 00:20:40,666 ಅದರ ಶಕ್ತಿಯನ್ನು ಪಳಗಿಸಲು ಹೇಗೆ ಕಲಿಯಲಿ? ಅಂಧಕಾರದ ವಿರುದ್ಧ ಹೋರಾಡಲು? 216 00:20:40,750 --> 00:20:43,291 ನೀನು ಅದನ್ನು ಪಳಗಿಸಿದರೆ ಗುಪ್ತ ಅಗ್ನಿಗೆ ಏನಾಗಬೇಕು? 217 00:20:43,375 --> 00:20:46,208 ಅದನ್ನು ಪಳಗಿಸದಿದ್ದರೆ, ನಾನು ಬಳಸುವುದಾದರೂ ಹೇಗೆ? 218 00:20:49,583 --> 00:20:54,541 ನೀನು ಇದುವರೆಗೂ ಕೈಗೆತ್ತಿಕೊಂಡಿರುವ ಪ್ರತಿ ಕಾರ್ಯದಲ್ಲೂ ವಿಫಲನಾಗಿದ್ದೀಯ. 219 00:20:55,541 --> 00:20:57,666 ನಿನ್ನ ಮುಂದಿರುವ ಈ ಪರೀಕ್ಷೆಯಲ್ಲಿ ವಿಫಲನಾದರೆ, 220 00:20:59,166 --> 00:21:00,958 ಇನ್ನೊಂದು ಅವಕಾಶ ಇರುವುದಿಲ್ಲ. 221 00:21:02,083 --> 00:21:03,791 ನಾನು ಏನು ಮಾಡಬೇಕು ಹೇಳಿ. 222 00:21:06,625 --> 00:21:09,708 ಹಳೆಯ ಟಾಮ್‌ನ ಅನುಸರಿಸು. ಆತನೇ ನಿನಗೆ ತೋರಿಸುತ್ತಾನೆ. 223 00:21:17,291 --> 00:21:18,750 ನೀನೇಕೆ ಹೊರಡಬಾರದು? 224 00:21:19,333 --> 00:21:21,458 ಅವರಿಂದ ತಪ್ಪಿಸಿಕೋ. ಓಡಿ ಹೋಗು. 225 00:21:21,541 --> 00:21:23,000 ಆಮೇಲೆ ಎಲ್ಲಿಗೆ ಹೋಗೋಣ? 226 00:21:23,083 --> 00:21:25,458 ಯಾಕೆ... ನಿನಗೆ ಎಲ್ಲಿ ಬೇಕಾದರೂ ಹೋಗು. 227 00:21:26,666 --> 00:21:30,291 ಹಾರ್ಫೂಟ್ಸ್ ವಾಸಿಸಲು ಪ್ರತಿ ತಿಂಗಳು ಹೊಸ ಸ್ಥಳವನ್ನು ಕಂಡುಕೊಳ್ಳುತ್ತಾರೆ. 228 00:21:34,375 --> 00:21:39,583 ನನ್ನ ತಾಯಿ ಮತ್ತು ಅವಳ ಪೋಷಕರು ಈ ಸ್ಮಿಯಲ್‌ನ ನನಗಾಗಿ ತೋಡಿದರು. 229 00:21:39,666 --> 00:21:41,166 ನಾನು ಇದರೊಳಗೇ ಹುಟ್ಟಿದೆ. 230 00:21:44,875 --> 00:21:49,041 ಗೋರೆಯನ್ನು ನಿಲ್ಲಿಸುವಷ್ಟು ದೊಡ್ಡವಳಾದಾಗಿನಿಂದಲೂ ಆ ಮರವನ್ನು ನೋಡಿಕೊಳ್ಳುತ್ತಿದ್ದೇನೆ. 231 00:21:52,041 --> 00:21:55,166 ಅದರ ಛಾಯೆಯಡಿಯೇ ನನ್ನ ಬ್ರಮ್ಗಾರ್‌ನ ಮದುವೆಯಾದೆ. 232 00:21:58,541 --> 00:22:02,666 ಮತ್ತು ಕಳೆದ ವಸಂತದಂದು, ಅವನು ತೀರಿಕೊಂಡಾಗ, 233 00:22:05,166 --> 00:22:06,583 ಅವನನ್ನು ಅದರಡಿಯೇ ಹೂಳಿದೆ. 234 00:22:11,041 --> 00:22:13,041 ಒಂದು ದಿನ, ನಾನೂ ಅವರ ಪಕ್ಕದಲ್ಲೇ ಮಣ್ಣಾಗುವೆ. 235 00:22:21,500 --> 00:22:24,291 ಇಂಥ ಪ್ರತಿಯೊಂದು ಸ್ಮಿಯಲ್‌ಗಳಿಗೂ ಅಂಥದ್ದೊಂದು ಕತೆ ಇದೆ. 236 00:22:30,791 --> 00:22:35,000 ನೋಡು, ಈ ಜಾಗ ನಾವು ಬದುಕುವ ಜಾಗವಷ್ಟೇ ಅಲ್ಲ. 237 00:22:37,041 --> 00:22:38,208 ಇದು ನಮ್ಮ ಮನೆ. 238 00:22:39,541 --> 00:22:40,958 ನಾನೇ. 239 00:22:42,250 --> 00:22:44,333 -ನೋರಿ-- -ನಿಮ್ಮನ್ನು ಈ ಕಷ್ಟಕ್ಕೆ ನಾನೇ ತೂರಿದೆ. 240 00:22:45,416 --> 00:22:48,291 ನಿಮ್ಮನ್ನು ಇದರಿಂದ ನಾನೇ ಹೊರತರಬೇಕು. 241 00:22:49,125 --> 00:22:50,708 ನಾನೀಗಲೇ ಶರಣಾಗುವೆ, 242 00:22:50,791 --> 00:22:53,250 ಆಗ ನಾನು ಪೋಪ್ಪಿನ ತಪ್ಪಿಸುವ ಅವಕಾಶವೂ ಇದೆ. 243 00:22:56,958 --> 00:23:00,833 ನಿನ್ನನ್ನು ಕೇಳಬೇಕಂತಿದ್ದೆ, ಅದ್ಯಾಕೆ ನಿನ್ನನ್ನು ಯಾರೂ ಅಲ್ಲ ಅಂತ ಕರೆಯುತ್ತಾರೆ? 244 00:23:01,458 --> 00:23:05,541 ನನ್ನ ಪೋಷಕರು ಅಷ್ಟು ಬೇಗ ನಿರ್ಧಾರ ಮಾಡಲ್ಲ. ನನಗೆ ಹೆಸರಿಡೋಕೆ ತುಂಬಾ ಸಮಯ ತೆಗೆದುಕೊಂಡರು. 245 00:23:05,625 --> 00:23:06,833 ಅಂದರೆ, ಎಷ್ಟು ಸಮಯ? 246 00:23:06,916 --> 00:23:08,416 ಅದು, ಒಂದೆರಡು ವರ್ಷಗಳು. 247 00:23:08,500 --> 00:23:09,625 ಅಷ್ಟು ತಡವೇನಲ್ಲ. 248 00:23:10,166 --> 00:23:11,625 ಒಂದೆರಡು ವರ್ಷಗಳ ಹಿಂದೆ. 249 00:23:12,958 --> 00:23:14,666 ಯಾರೂ ಅಲ್ಲ ಅನ್ನೋದೇ ನನ್ನ ಹೆಸರಾಯಿತು. 250 00:23:23,416 --> 00:23:24,958 ನನ್ನನ್ನೇಕೆ ಹಾಗೆ ನೋಡುತ್ತಿರುವೆ? 251 00:23:25,583 --> 00:23:27,833 ನಾನು-- ನಾನು ನಿನ್ನನ್ನು ಕೇಳಬೇಕೆಂದುಕೊಂಡಿದ್ದೆ, 252 00:23:27,916 --> 00:23:30,291 ಮುಂದೆ ನಾವೆಲ್ಲರೂ ಕೊಲೆಯಾಗಲಿರುವುದರಿಂದ, ಒಂದು ವೇಳೆ, 253 00:23:30,375 --> 00:23:31,541 ನೀನು ಹೋಗಬೇಕೆಂದರೆ-- 254 00:23:31,625 --> 00:23:33,041 ಮಾತು ನಿಲ್ಲಿಸು. 255 00:23:53,541 --> 00:23:55,333 -ಮೆರಿಮ್ಯಾಕ್. -ಪೋಪ್ಪಿ. 256 00:23:57,041 --> 00:23:59,041 ಊಟಕ್ಕೆ ಹಲ್ಲಿ ತಿಂದಿದ್ದೆಯಾ? 257 00:23:59,791 --> 00:24:00,916 ಯಾಕೆ ಕೇಳಿದೆ? 258 00:24:06,500 --> 00:24:07,708 ಅವಳು ಸರಿ, ನೋರ್. 259 00:24:08,458 --> 00:24:11,125 ಆ ಮಾನವರು ಆಗಂತುಕನನ್ನು ಹಿಡಿಯಲೆಂದೇ ನಮ್ಮ ಹಿಂದಿದ್ದಾರೆ. 260 00:24:11,833 --> 00:24:15,041 ನೀನು ಶರಣಾದರೆ, ಇಡೀ ಜಗತ್ತಿಗೇ ಅಪಾಯ ಬಂದೊದಗಬಹುದು. 261 00:24:15,125 --> 00:24:17,750 ಸ್ಟೂರ್ ಗಳು ಅಷ್ಟೇ ಅಲ್ಲ, ಹಾರ್ಫೂಟ್ಸ್ ಕೂಡ. 262 00:24:17,833 --> 00:24:19,875 ನಿನ್ನ ಅಮ್ಮ ಮತ್ತು ಅಪ್ಪ. ಡಿಲ್ಲಿ. 263 00:24:22,583 --> 00:24:24,708 ಅವನು ಮುಖ್ಯ ಅಂತ ನನಗೆ ಎಷ್ಟು ಸಲ ಹೇಳಿರುವೆ? 264 00:24:27,375 --> 00:24:29,500 ಸುಮಾರು ಸಲ ಹೇಳಿರಬಹುದು ಅನ್ಸುತ್ತೆ. 265 00:24:33,041 --> 00:24:37,625 ಅದೇನೆಂದರೆ, ನೋರ್, ಇಷ್ಟರಲ್ಲೇ, ನೀನು ಏನನ್ನಾದರೂ ಸಾಕಷ್ಟು ಬಾರಿ ಹೇಳಿದರೆ, 266 00:24:40,291 --> 00:24:41,625 ನಿನ್ನನ್ನು ನಂಬಿಬಿಡುವೆ. 267 00:24:49,500 --> 00:24:50,750 ಅದಕ್ಕಾಗಿ ಹೋರಾಡೋಣ. 268 00:24:59,041 --> 00:25:01,583 ಕ್ಷುದ್ರ ಮಾಂತ್ರಿಕ ತನ್ನ ದಂಡ ಪತ್ತೆ ಮಾಡಿದ. 269 00:25:02,541 --> 00:25:06,250 ಈಗ ನಿನ್ನದನ್ನು ಹುಡುಕುವ ಸಮಯ ಬಂದಿದೆ. 270 00:25:12,750 --> 00:25:14,166 ಅದು ಯಾವುದು? 271 00:25:16,166 --> 00:25:20,083 ನಿನ್ನ ಅಂತರಾಳವು ಗುಪ್ತ ಅಗ್ನಿ ಸೇವೆಗಾಗಿ ಮುಡುಪಾದಾಗಲೇ 272 00:25:20,166 --> 00:25:23,041 ನಿನ್ನ ನಿಜವಾದ ದಂಡವು ನಿನಗೆ ಲಭಿಸುತ್ತದೆ. 273 00:25:23,541 --> 00:25:24,833 ಆದರೆ ತುಂಬಾ ಇವೆ. 274 00:25:25,583 --> 00:25:27,541 ಅದನ್ನು ಅರಸುತ್ತಾ ತಿಂಗಳುಗಳೇ ಕಳೆಯಬಹುದು. 275 00:25:28,375 --> 00:25:30,125 ನಿನಗೆ ಬೇಕಾದಷ್ಟು ಸಮಯವಿದೆ. 276 00:25:31,208 --> 00:25:33,833 ನಿನಗೆ ಬೇರೆ ಕಡೆ ಹೋಗುವ ಆಸೆ ಇಲ್ಲವಾದರೆ. 277 00:25:36,208 --> 00:25:39,166 ನಾನು ಅವಳನ್ನು ನೋಡಿದೆ. ನೋರಿ. 278 00:25:40,125 --> 00:25:41,500 ಅವಳು... 279 00:25:41,583 --> 00:25:45,916 ಅವಳನ್ನು ಬೇಗ ಹುಡುಕದಿದ್ದರೆ, ಅವಳು ಸಾಯುವಳು ಅಂತ ಅದು ಹೇಗೋ ನನಗೆ ಗೊತ್ತಿದೆ. 280 00:25:46,000 --> 00:25:47,208 ಅವರಿಬ್ಬರೂ ಸಾಯುತ್ತಾರೆ. 281 00:25:48,291 --> 00:25:50,208 ಸಾಯುವ ಅನೇಕರು ಜೀವನಕ್ಕೆ ಅರ್ಹರು. 282 00:25:51,125 --> 00:25:52,958 ಬದುಕಿರುವ ಕೆಲವರು ಸಾವಿಗೆ ಅರ್ಹರು. 283 00:25:54,083 --> 00:25:55,666 ಅವರಿಗದನ್ನು ಕೊಡಲು ನೀನ್ಯಾರು? 284 00:25:56,541 --> 00:25:59,458 ಅವಳು ಸುರಕ್ಷಿತಳು ಎಂದು ತಿಳಿದರೆ, ನಿನ್ನ ಬಳಿ ಮರಳುವೆ. 285 00:25:59,541 --> 00:26:02,250 ಇಲ್ಲ. ನಿನಗೆ ಸಾಧ್ಯವಿಲ್ಲ. 286 00:26:04,125 --> 00:26:09,000 ಕೆಲವೊಮ್ಮೆ ಒಂದು ಮಾರ್ಗ ಎರಡಾಗುತ್ತದೆ, ಆಗ ನೀನು ಆಯ್ಕೆ ಮಾಡಬೇಕಾಗುತ್ತದೆ. 287 00:26:10,750 --> 00:26:14,833 ಈಗ ನೀನು ದೂರ ತಿರುಗಿದರೆ, ಈ ಮಾರ್ಗಕ್ಕೆ ಎಂದೂ ಮರಳಲು ಸಾಧ್ಯವಿಲ್ಲ. 288 00:26:15,916 --> 00:26:17,291 ಬೇರೆ ದಾರಿಯೇ ಇಲ್ಲವೇ? 289 00:26:18,750 --> 00:26:20,875 ಸೌರೊನ್ ಪಶ್ಚಿಮದಲ್ಲಿ ಉದಯಿಸುತ್ತಾನೆ. 290 00:26:21,375 --> 00:26:23,291 ಪೂರ್ವದಲ್ಲಿ ಒಬ್ಬ ಕ್ಷುದ್ರ ಮಾಂತ್ರಿಕ. 291 00:26:23,375 --> 00:26:25,875 ಮಧ್ಯ ಧರೆಯಲ್ಲಿರೋ ಪ್ರತಿ ಜೀವಕ್ಕೂ ಅಪಾಯವಿದೆ. 292 00:26:26,625 --> 00:26:28,833 ಅವರನ್ನು ವಿನಾಶವಾಗಲು ಬಿಡುತ್ತೀಯಾ? 293 00:26:31,333 --> 00:26:32,791 ಅವಳು ನನ್ನ ಗೆಳತಿ. 294 00:26:34,166 --> 00:26:37,291 ನಿನ್ನ ಗೆಳತಿಯಾ ಅಥವಾ ನಿನ್ನ ವಿಧಿಯಾ? 295 00:26:39,791 --> 00:26:41,125 ಆಯ್ಕೆ ನಿನ್ನದು. 296 00:27:06,458 --> 00:27:09,291 ಬಾ, ಅದರೊಳಗೆ ನಿನ್ನ ಗಡ್ಡ ಹಾಕು. 297 00:27:38,750 --> 00:27:39,750 ಒಡೆಯ. 298 00:28:05,583 --> 00:28:07,166 ಕರೆಸಿದಿರಾ, ಅಪ್ಪ? 299 00:28:09,375 --> 00:28:10,375 ಇಲ್ಲ. 300 00:28:11,916 --> 00:28:13,000 ಅವನು ಕರೆಸಿದ. 301 00:28:16,958 --> 00:28:20,375 ಆ ಏಳು ನಿಮಗೆ ಒಳ್ಳೆಯ ಸೇವೆಯನ್ನೇ ಮಾಡುತ್ತಿವೆ, ರಾಜಕುಮಾರ ಡ್ಯುರಿನ್. 302 00:28:22,791 --> 00:28:26,375 ಯಾರದೋ ಸೇವೆಯನ್ನು ಚೆನ್ನಾಗಿ ಮಾಡುತ್ತಿದ್ದಾರೆ. ಅದಂತೂ ನಿಜ. 303 00:28:26,458 --> 00:28:28,166 ಸನ್ನಿವೇಶಗಳು ಬದಲಾಗಿವೆ. 304 00:28:28,250 --> 00:28:31,541 ಎರೆಗಿಯೊನ್ ಆಕ್ರಮಣದ ಅಪಾಯದಲ್ಲಿದೆ ಎಂದು ಗೊತ್ತಾಯಿತು. 305 00:28:32,250 --> 00:28:35,875 ಮೀಥ್ರಿಲ್ ಇಲ್ಲದೆ, ಮಿಕ್ಕ ಶಕ್ತಿಯ ಉಂಗುರಗಳು ಎಂದಿಗೂ ಪೂರ್ಣವಾಗದಿರಬಹುದು. 306 00:28:36,708 --> 00:28:38,041 ನಮಗೆ ಇನ್ನೂ ಬೇಕು. 307 00:28:39,250 --> 00:28:40,791 ಮತ್ತು ನಮಗೆ ಈಗಲೇ ಬೇಕು. 308 00:28:41,541 --> 00:28:43,125 ನಾನು ನಿಮಗೆ ಎಷ್ಟು ನೀಡಲಿ? 309 00:28:43,208 --> 00:28:44,583 ನೀನು ನಮಗೆ ಏನನ್ನೂ ಕೊಡಲು-- 310 00:28:44,666 --> 00:28:46,750 ಯಾವುದರಲ್ಲಿ ಎಷ್ಟು? 311 00:28:48,125 --> 00:28:51,000 ನಿಮ್ಮ ಗಣಿಗಾರಿಕೆ ಕಾರ್ಯಾಚರಣೆಗಳನ್ನು ವಿಸ್ತರಿಸುತ್ತಿರುವಿರಿ. 312 00:28:52,583 --> 00:28:55,791 ಕಟ್ಟೆಗಳು ಮತ್ತು ಗಣಿದ್ವಾರಗಳನ್ನು ಕಟ್ಟಲು 313 00:28:55,875 --> 00:28:59,541 ಸ್ಥಿರವಾದ ಮರದ ಪೂರೈಕೆ ಮಾಡಬಲ್ಲೆವು. 314 00:29:01,041 --> 00:29:04,208 ಅಥವಾ ಖಜದ್-ದುಮ್‌ಗೆ ಏನಾದರೂ... 315 00:29:05,875 --> 00:29:07,333 ಹೆಚ್ಚು ಅಮೂಲ್ಯವಾದದ್ದು ಬೇಕೇ? 316 00:29:10,958 --> 00:29:16,500 ಅಪ್ಪ, ಇದರ ಬಗ್ಗೆ ನಾವು ಖಾಸಗಿಯಾಗಿ ಚರ್ಚಿಸುವುದು ಒಳ್ಳೆಯದು. 317 00:29:17,291 --> 00:29:18,750 ಚರ್ಚಿಸಲು ಏನೂ ಇಲ್ಲ. 318 00:29:20,333 --> 00:29:21,958 ನಾನು ಈಗಾಗಲೇ ನಿರ್ಧರಿಸಿದ್ದೇನೆ. 319 00:29:25,291 --> 00:29:26,291 ಮತ್ತು? 320 00:29:27,625 --> 00:29:29,000 ಇಲ್ಲ ಎಂಬುದೇ ಉತ್ತರ. 321 00:29:30,875 --> 00:29:34,750 ಕೆಲಬ್ರಿಮ್ಬೋರ್ ದೊರೆಗೆ ನನ್ನ ವಿಷಾದ ತಿಳಿಸಿ. 322 00:29:44,250 --> 00:29:45,250 ರಾಜ ಡ್ಯುರಿನ್. 323 00:29:46,833 --> 00:29:48,750 ರಾಜಕುಮಾರ. ಮತ್ತೆ ಸಿಗೋಣ. 324 00:30:00,333 --> 00:30:01,541 ಔಲೇಗೆ ಧನ್ಯವಾದ. 325 00:30:03,416 --> 00:30:07,583 ಒಂದು ಕ್ಷಣ, ನಿಮ್ಮ ಆಲೋಚನಾಶಕ್ತಿಯೇ ಬಿದ್ದುಹೋಗಿತ್ತು ಅಂದುಕೊಂಡಿದ್ದೆ. 326 00:30:09,000 --> 00:30:10,000 ಅದಕ್ಕೆ ವಿರುದ್ಧ. 327 00:30:15,833 --> 00:30:17,750 ನನ್ನ ಬುದ್ಧಿಶಕ್ತಿಗೆ ಯಾವ ತೊಂದರೆಯೂ ಇಲ್ಲ. 328 00:30:18,416 --> 00:30:20,000 ಚಿಂತಿಸಬೇಡ, ಮಗನೇ. 329 00:30:21,875 --> 00:30:22,833 ಅವರು ಹಿಂತಿರುಗುವರು. 330 00:30:23,458 --> 00:30:24,458 ಮತ್ತೆ? 331 00:30:26,458 --> 00:30:27,458 ಅವನೇ ಹೇಳಿದ. 332 00:30:29,041 --> 00:30:30,791 ಮಧ್ಯ ಧರೆಗೆ ಯುದ್ಧ ಸಮೀಪಿಸುತ್ತಿದೆ. 333 00:30:31,958 --> 00:30:37,041 ಮತ್ತು ಮೀಥ್ರಿಲ್‌ನ ಆಯುಧಗಳು ಮತ್ತು ರಕ್ಷಾಕವಚ ಹೊಂದಿರುವ ಸೈನ್ಯವನ್ನು 334 00:30:37,125 --> 00:30:39,083 ಸೋಲಿಸುವುದೇ ಮಹಾ ಕಷ್ಟ. 335 00:30:39,166 --> 00:30:41,125 ನಾವೇ ನಮ್ಮ ಬೆಲೆ ತಿಳಿಸಬಹುದು. 336 00:30:42,375 --> 00:30:43,750 ನಿಮಗೆ ಹುಚ್ಚು ಹಿಡಿದಿದೆಯೇ? 337 00:30:44,833 --> 00:30:47,375 ಇಡೀ ಜಗತ್ತಿಗೇ ಹುಚ್ಚು ಹಿಡಿದಿದೆ, ಮಗನೇ. 338 00:30:49,833 --> 00:30:53,833 ಅದರ ನಿಯಂತ್ರಣ ಸಾಧಿಸುವುದು ನಮಗೆ ಬಿಟ್ಟಿದ್ದು. 339 00:30:55,166 --> 00:30:59,750 ಕಾರ್ಯಪಡೆಗಳನ್ನು ದ್ವಿಗುಣಗೊಳಿಸಲು ನಾರ್ವಿ ಗೆ ಹೇಳು. ಅಗೆಯುವಿಕೆಯನ್ನು ವಿಸ್ತರಿಸೋಣ. 340 00:31:00,583 --> 00:31:01,583 ಅಪ್ಪ. 341 00:31:03,833 --> 00:31:05,166 ಉಂಗುರವನ್ನು ತೆಗೆಯಿರಿ. 342 00:31:06,166 --> 00:31:07,375 ನಾನು ತೆಗೆಯಲ್ಲ. 343 00:31:10,208 --> 00:31:11,291 ಇದು ನನ್ನದು. 344 00:31:13,000 --> 00:31:14,125 ನನಗೆ ಸೇರಿದ್ದು. 345 00:31:15,375 --> 00:31:16,375 ಇಲ್ಲ. 346 00:31:18,083 --> 00:31:19,916 ನೀವು ಅದಕ್ಕೆ ಸೇರಿದವರು. 347 00:31:22,125 --> 00:31:26,708 ಹಾಗಿಲ್ಲದಿದ್ದರೆ, ದಯವಿಟ್ಟು, ಅದನ್ನು ಸಾಬೀತುಪಡಿಸಿ. 348 00:31:31,416 --> 00:31:32,583 ಅದನ್ನು ತೆಗೆಯಿರಿ. 349 00:31:42,666 --> 00:31:46,291 ನಿನಗೆ ನಾನೇನನ್ನೂ ಸಾಬೀತುಪಡಿಸಬೇಕಿಲ್ಲವೋ, ಹುಡುಗ. 350 00:32:07,291 --> 00:32:09,500 ಹಾಗಾದರೆ ನಮಗೆ ಬೇರೆ ಮಾರ್ಗವಿಲ್ಲ. 351 00:32:11,000 --> 00:32:14,500 ಬೇಕಾದರೆ ಆ ಗಣಿಯ ಮುಂದೆ ನಾವೇ ಹೋಗಿ ಅಡ್ಡ ಮಲಗೋಣ. 352 00:32:16,125 --> 00:32:18,208 ನಮ್ಮ ವಿರುದ್ಧ ಇಡೀ ಸೈನ್ಯವನ್ನು ಕಳಿಸುತ್ತಾರೆ. 353 00:32:18,708 --> 00:32:20,000 ಕಳಿಸಲಿ! 354 00:32:20,541 --> 00:32:24,333 ಸ್ವಂತ ಮಗನ ಮೇಲೆಯೇ ಸೈನ್ಯವನ್ನು ಕಳಿಸುವಷ್ಟು ಪ್ರಭಾವ ಆ ಉಂಗುರ ಅವರ ಮೇಲೆ ಬೀರಿದ್ದರೆ, 355 00:32:24,416 --> 00:32:28,375 ಆಗ ಖಜದ್-ದುಮ್‌ನ ಪ್ರತಿ ಡ್ವಾರ್ಫ್‌ಗೂ ಆತ ಆಳಲು ಅನರ್ಹ ಅಂತ ಗೊತ್ತಾಗುತ್ತೆ. 356 00:32:28,458 --> 00:32:29,625 ಆತನ ಕಿರೀಟ ಕಸಿಯುತ್ತಾರೆ. 357 00:32:32,791 --> 00:32:35,083 ಅವರ ಬಗ್ಗೆ ಈ ರೀತಿ ಹೇಗೆ ಮಾತನಾಡುವೆ? 358 00:32:36,250 --> 00:32:37,500 ಡ್ಯುರಿನ್. 359 00:32:37,583 --> 00:32:39,833 ನೀನು ಅವರನ್ನು ಅವಮಾನಿಸುವುದರ ಬಗ್ಗೆ ಹೇಳುತ್ತಿರುವೆ. 360 00:32:41,208 --> 00:32:42,541 ಅವರನ್ನು ನಾಶಪಡಿಸುವ ಬಗ್ಗೆ. 361 00:32:42,625 --> 00:32:46,541 ನೀನು ಪ್ರೀತಿಸುವಷ್ಟೇ ನಾನು ಅವರನ್ನು ಪ್ರೀತಿಸುತ್ತೇನೆ. 362 00:32:47,125 --> 00:32:50,875 ಅವರನ್ನು ನನ್ನ ತಂದೆಗಿಂತ ಎರಡರಷ್ಟು ಗೌರವಿಸುತ್ತೇನೆ ಎಂದು ಔಲೆಗೆ ಗೊತ್ತು. 363 00:32:52,208 --> 00:32:55,333 ಆದರೆ ಆ ಸಿಂಹಾಸನದ ಮೇಲಿರೋ ಡ್ವಾರ್ಫ್ ನಿನ್ನ ತಂದೆ ಅಲ್ಲ. 364 00:32:55,958 --> 00:33:00,875 ಅವರು ಆ ಉಂಗುರವನ್ನು ತೊಟ್ಟಿರುವವರೆಗೂ, ಅವರಿಗೆ ಯಾರ ಧ್ವನಿಯೂ ಕೇಳಿಸಲ್ಲ, ನಮ್ಮದೂ ಸಹ. 365 00:33:00,958 --> 00:33:03,666 ಈ ಬೆಟ್ಟದಲ್ಲಿರುವ ಪ್ರತಿ ಡ್ವಾರ್ಫ್ ಅಪಾಯದಲ್ಲಿದ್ದಾರೆ! 366 00:33:05,125 --> 00:33:06,208 ಡ್ಯುರಿನ್. 367 00:33:08,000 --> 00:33:09,083 ಡ್ಯುರಿನ್. 368 00:33:13,083 --> 00:33:14,833 ಡ್ಯುರಿನ್, ನೀನು... 369 00:33:15,333 --> 00:33:17,000 ನನ್ನಿಂದ ಅದು ಸಾಧ್ಯವಿಲ್ಲ. 370 00:33:18,791 --> 00:33:20,958 ನಾನು ಮಾಡಲಾರೆ, ಡೀಸಾ. 371 00:33:24,250 --> 00:33:28,583 ಅವರನ್ನು ನೋಡಿದಾಗ, ಅವರ ಕಣ್ಣುಗಳನ್ನು ನೋಡಿದಾಗ, ನನಗೆ... 372 00:33:32,583 --> 00:33:34,250 ಈಗಲೂ ನನ್ನ ತಂದೆಯೇ ಕಾಣುತ್ತಾರೆ. 373 00:33:36,833 --> 00:33:40,500 ಅವರ ವರ್ತನೆ ಬದಲಾಗಿ ಅವರು ಕಳೆದುಹೋಗಿರಬಹುದು, ಆದರೂ ಆತ ಅದೇ ವ್ಯಕ್ತಿ. 374 00:33:44,375 --> 00:33:48,250 ನೀನು ಯಾವಾಗಲೂ ಆಶಾವಾದಿ, ಪ್ರಿಯ. 375 00:33:49,750 --> 00:33:50,750 ಬಾ. 376 00:33:56,666 --> 00:34:00,916 ನಾವು ಈಗ ಮಾಡದಿದ್ದರೆ, ಅದೆಂದಿಗೂ ಆಗಲ್ಲ. 377 00:34:02,708 --> 00:34:06,958 ಅವರು ತನ್ನನ್ನು ನಾಶ ಮಾಡಿಕೊಂಡು ಈ ರಾಜ್ಯವನ್ನೂ ನಾಶ ಮಾಡುತ್ತಾರೆ. 378 00:34:24,166 --> 00:34:29,750 ಬೆಳಿಗ್ಗೆ, ಅಂಧಕಾರದ ಪರೀಕ್ಷೆ ಎದುರಿಸಲು ನಿಮ್ಮನ್ನು ಸಮುದ್ರಕ್ಕೆ ಎಸೆಯುತ್ತಾರೆ. 379 00:34:32,416 --> 00:34:34,583 ಈಗ ಕಡಲ ಹುಳುವನ್ನು ಕರೆಸುತ್ತಿದ್ದಾರೆ. 380 00:34:38,583 --> 00:34:39,958 ಅರ್-ಫರಝೋನ್ ಜೊತೆ ಮಾತಾಡಿದೆ. 381 00:34:40,875 --> 00:34:43,291 ನಿಷ್ಠಾವಂತರನ್ನು ಆತ ಮತ್ತಷ್ಟು ವಿರೋಧಿಸುವುದಿಲ್ಲ. 382 00:34:44,166 --> 00:34:47,833 ಅವರ ಕ್ಷಮಾದಾನ ಈಗಲೂ ಲಭ್ಯವಿದೆ, ನೀನು ಒಪ್ಪಿಕೊಂಡರೆ-- 383 00:34:47,916 --> 00:34:49,583 ಅವರಿಗೆ ನಿಷ್ಠೆಯ ಪ್ರತಿಜ್ಞೆಯೇ? 384 00:34:53,333 --> 00:34:58,083 ಒಬ್ಬ ವ್ಯಕ್ತಿಗೆ ತನ್ನ ಮೌಲ್ಯಗಳನ್ನು ಸುಡಲು ಹೇಳುವುದು ಕ್ಷಮಾದಾನ ಅಲ್ಲ. 385 00:35:03,166 --> 00:35:06,958 ಈ ಕುಟುಂಬವು ಎಲ್ಲವನ್ನೂ ಕಳೆದುಕೊಂಡ ಮೇಲೆ, ನಿನ್ನನ್ನೂ ಕಳೆದುಕೊಳ್ಳಲಾರೆ. 386 00:35:08,791 --> 00:35:10,250 ದಯವಿಟ್ಟು, ಅಪ್ಪ. 387 00:35:13,791 --> 00:35:14,958 ದಯವಿಟ್ಟು. 388 00:35:20,750 --> 00:35:22,458 ನಿನ್ನ ಅಹಂ ಬದಿಗಿಡು. 389 00:35:24,791 --> 00:35:27,750 ಇಷ್ಟೆಲ್ಲಾ ನಡೆದು, ನಿನಗೆ ಅಹಂ ಮಾತ್ರ ಕಾಣುತ್ತದೆಂದರೆ... 390 00:35:33,625 --> 00:35:36,041 ಇನ್ನು ನಮಗೆ ಮಾತನಾಡಲು ಏನೂ ಉಳಿದಿಲ್ಲ. 391 00:35:48,916 --> 00:35:50,541 ಹೀಗಂತೀಯ ಅಂತ ರಾಜ ಹೇಳಿದರು. 392 00:35:52,666 --> 00:35:56,666 ಅವರ ಮೇಲಿನ ದ್ವೇಷದಿಂದ ನೀನು ನನ್ನನ್ನೂ ದ್ವೇಷಿಸುತ್ತಿರುವೆ, ಮತ್ತು ನನ್ನ ಮಾತು 393 00:35:58,083 --> 00:36:00,375 ಕೇಳುವುದನ್ನು ಶಾಶ್ವತವಾಗಿ ನಿಲ್ಲಿಸಿದೆ ಎಂದರು. 394 00:36:03,333 --> 00:36:05,875 ಆದ್ದರಿಂದ ನಾನು ಅವರ ಮುಂದೆ ಮಂಡಿಯೂರಿ, 395 00:36:07,666 --> 00:36:08,916 ಅವರನ್ನು ಬೇಡಿಕೊಂಡೆ, 396 00:36:09,000 --> 00:36:12,083 ತಲೆಯನ್ನು ನೆಲಕ್ಕೊತ್ತಿ, ಆಕೆಯ ಬಳಿ ಹೋಗಲು ಅವಕಾಶ ಕೇಳಿದೆ. 397 00:36:28,708 --> 00:36:30,208 ನಾನು ತಪ್ಪಾಗಿಲ್ಲ ಅಂದುಕೊಳ್ಳುವೆ. 398 00:36:31,916 --> 00:36:33,458 ನಿನಗೆ ಈ ಜಾಗ ಸೂಕ್ತವಲ್ಲ. 399 00:36:33,541 --> 00:36:34,750 ಫರಝೋನ್ ಗೆ ತಲೆಬಾಗು. 400 00:36:36,125 --> 00:36:37,375 ಇದು ನನ್ನ ಆಜ್ಞೆ. 401 00:36:38,708 --> 00:36:41,583 ನ್ಯೂಮೆನೊರ್ ತಡೆದುಕೊಳ್ಳಬೇಕಾದರೆ, ಅದಕ್ಕೆ ನಿನ್ನಂತಹ ಜನ ಬೇಕು. 402 00:36:42,750 --> 00:36:46,000 ಬೆಲೆಬಾಳುವುದಕ್ಕೆ ಬೆಲೆ ಕೊಡುವ ಜನ. ನಂಬಿಕಸ್ಥ ಜನ. 403 00:36:47,291 --> 00:36:50,125 ನಂಬಿಕೆಯನ್ನು ಉಳಿಸಿಕೊಳ್ಳದಿದ್ದರೆ ಅದು ನಂಬಿಕೆಯಲ್ಲ. 404 00:36:52,083 --> 00:36:56,666 ನನ್ನ ಮನಸ್ಸಿನಲ್ಲಿ ಈ ರಾಜ್ಯದ ನಿಜವಾದ ವಾರಸುದಾರಳು ನೀವೇ ಅಂತ ಗೊತ್ತಿದೆ. 405 00:36:58,166 --> 00:37:00,000 ಅದನ್ನು ನಾನು ಕಡೆಗಣಿಸಲಾರೆ. 406 00:37:01,291 --> 00:37:04,375 ನಾನು ಹಾಗೆ ಮಾಡಿದರೆ, ನೀವು ಕಾಪಾಡಬೇಕೆಂದುಕೊಂಡ ವ್ಯಕ್ತಿ ನಾನಾಗಿರಲ್ಲ. 407 00:37:04,458 --> 00:37:05,791 ನೀನು ತಪ್ಪಾಗಿದ್ದರೆ? 408 00:37:07,291 --> 00:37:09,833 ಆಗ ನಾನು ತೃಪ್ತಿಯಿಂದ ಸಾಯುತ್ತೇನೆ, 409 00:37:09,916 --> 00:37:12,000 ಬದಲಾಗಿ ಹೇಡಿಯ ಬದುಕು ಮಾತ್ರ ಬೇಡ. 410 00:37:15,375 --> 00:37:16,958 ಹಾಗಾದರೆ ನನ್ನ ಮನಸ್ಸು? 411 00:37:24,125 --> 00:37:28,875 ನನ್ನ ಜೀವ ಉಳಿಯಬೇಕೆಂಬುದು ವಾಲಾರ್ ಇಚ್ಛೆಯಾಗಿದ್ದರೆ... 412 00:37:32,166 --> 00:37:33,583 ಹಾಗೆಯೇ ಆಗುತ್ತೆ. 413 00:37:39,125 --> 00:37:40,541 ಹಾಗಾಗದಿದ್ದರೆ? 414 00:37:50,916 --> 00:37:53,125 "ಕಡಲು ಸತ್ಯದ ಪ್ರತೀಕ." 415 00:38:16,583 --> 00:38:17,583 ನಡೆ! 416 00:38:28,166 --> 00:38:29,250 ಡೀಸಾ? 417 00:38:37,875 --> 00:38:41,250 ಡೀಸಾ, ನಾವು ರಾಜನ ಆದೇಶದ ಮೇರೆಗೆ ಇಲ್ಲಿದ್ದೇವೆ. 418 00:38:41,333 --> 00:38:42,541 ಅದಕ್ಕೇ, ದಯವಿಟ್ಟು ಸರಿ, 419 00:38:43,458 --> 00:38:46,625 ಇಲ್ಲವಾದರೆ ಬಲವಂತವಾಗಿ ನಿನ್ನನ್ನು ಸರಿಸಬೇಕಾಗುತ್ತದೆ. 420 00:38:52,833 --> 00:38:53,916 ನನ್ನನ್ನು ಕ್ಷಮಿಸು. 421 00:39:09,916 --> 00:39:12,166 ಅದು ನಮ್ಮನ್ನು ಹೆದರಿಸಲು ಮಾಡಿದೆಯಾ? 422 00:39:13,875 --> 00:39:14,875 ಇಲ್ಲ. 423 00:39:16,041 --> 00:39:17,125 ಅವು ಹೆದರಿಸುತ್ತವೆ. 424 00:39:47,666 --> 00:39:49,208 ನಿನ್ನನ್ನು ಪ್ರೀತಿಸುತ್ತೇನೆ. 425 00:39:50,333 --> 00:39:51,625 ನನ್ನನ್ನು ನಂತರ ಪ್ರೀತಿಸು. 426 00:39:54,666 --> 00:39:56,166 ಇದು ಆರಂಭ ಮಾತ್ರ. 427 00:39:57,041 --> 00:39:59,916 ಅವು ಹಿಂತಿರುಗುತ್ತವೆ. ಮತ್ತು ಹೆಚ್ಚು ಬರುತ್ತವೆ. 428 00:40:02,333 --> 00:40:03,666 ಆಗ ನಾವು ಸಿದ್ದರಾಗಿರುತ್ತೇವೆ. 429 00:40:35,666 --> 00:40:41,250 ಎಲ್ಲಾ ಐಹಿಕ ಅಧಿಕಾರವನ್ನು ತ್ಯಜಿಸಿ ವಾಲಾರ್ ತೀರ್ಪನ್ನು ಒಪ್ಪಿಕೊಳ್ಳುವೆಯಾ? 430 00:40:46,500 --> 00:40:48,250 ಅವರ ತೀರ್ಪನ್ನು ಒಪ್ಪಿಕೊಳ್ಳುವೆ. 431 00:40:50,291 --> 00:40:51,458 ಅವನನ್ನು ಒಳಗೆಸೆಯಿರಿ. 432 00:41:15,125 --> 00:41:16,333 ಅವನನ್ನು ಬಿಡುಗಡೆ ಮಾಡಿ! 433 00:41:20,791 --> 00:41:23,375 ಅವನ ಅಪರಾಧ ನನ್ನ ಹೆಸರಿನಲ್ಲಿ ಮಾಡಿದ್ದರಿಂದ, 434 00:41:25,333 --> 00:41:28,541 ಅವನ ಸ್ಥಾನದಲ್ಲಿ ವಾಲಾರ್ ತೀರ್ಪನ್ನು ಎದುರಿಸುವ ಹಕ್ಕು ನನಗಿದೆ. 435 00:41:33,500 --> 00:41:36,833 -ಅವನೇ ಆಗಿರಬೇಕು. ಕರೆದುಕೊಳ್ಳಿ. -ಇಲ್ಲ, ಇಲ್ಲ. ಇಲ್ಲ! 436 00:41:38,125 --> 00:41:39,125 ನನ್ನ ರಾಣಿ? 437 00:41:41,916 --> 00:41:44,750 ಆಕೆ ಹೇಳಿದ್ದು ಸರಿ. ಅಲ್ಲಿ ಎಲ್ಲಾ ಇದೆ. ನೀವು ಮಾಡಬೇಕು. 438 00:41:45,666 --> 00:41:46,750 ಇದು ನಿಜಾನಾ? 439 00:41:48,125 --> 00:41:49,625 ಕಾನೂನಿನ ಪ್ರಕಾರ, ಹೌದು. 440 00:41:51,666 --> 00:41:52,916 ಹಾಗೆಯೇ ಆಗಲಿ. 441 00:41:55,083 --> 00:41:56,833 ಇಲ್ಲ, ನನ್ನನ್ನು ಕಳಿಸಿ. 442 00:41:57,833 --> 00:41:59,208 ನನ್ನನ್ನು ಕಳಿಸಿ. 443 00:42:01,000 --> 00:42:02,625 ಮಿರಿಯೆಲ್, ಬೇಡ-- ನೀನು ಬೇಡ-- 444 00:42:02,708 --> 00:42:05,541 ನಿಷ್ಠಾವಂತರ ದಾರಿಯಲ್ಲಿ ನಡೆಯಬೇಕಾದರೆ, 445 00:42:07,375 --> 00:42:09,791 ಮೊದಲ ಹೆಜ್ಜೆ ಇಡುವುದು ನಾನೇ ಆಗಿರಬೇಕು. 446 00:43:06,750 --> 00:43:09,416 -ಇಲ್ಲಿದೆ! ನೋಡಿ! -ದಿಗಂತದ ಮೇಲೆ. 447 00:43:09,500 --> 00:43:10,708 ಹಾಂ, ಈಗ ಬರುತ್ತಿದೆ. 448 00:44:31,875 --> 00:44:34,666 ವಾಲಾರ್ ತೀರ್ಪಿನ ಪ್ರಕಾರ ಆಕೆ... 449 00:44:42,750 --> 00:44:44,250 -ಅಲ್ಲಿದ್ದಾಳೆ! -ನಿರ್ದೋಷಿ! 450 00:44:46,208 --> 00:44:47,208 ಮಹಾರಾಣಿ! 451 00:44:54,333 --> 00:45:00,083 ಕಡಲ ರಾಣಿ, ಟಾರ್-ಮಿರಿಯೆಲ್‌ಗೆ ಜಯವಾಗಲಿ! 452 00:45:00,166 --> 00:45:05,333 ರಾಣಿ ಮಿರಿಯೆಲ್‌ಗೆ ಜಯವಾಗಲಿ! ರಾಣಿ ಮಿರಿಯೆಲ್‌ಗೆ ಜಯವಾಗಲಿ! 453 00:45:05,416 --> 00:45:09,208 ರಾಣಿ ಮಿರಿಯೆಲ್‌ಗೆ ಜಯವಾಗಲಿ! ರಾಣಿ ಮಿರಿಯೆಲ್‌ಗೆ ಜಯವಾಗಲಿ! 454 00:45:09,291 --> 00:45:12,666 -ರಾಣಿ ಮಿರಿಯೆಲ್‌ಗೆ ಜಯವಾಗಲಿ. -ಕಡಲ ರಾಣಿಗೆ ಜಯವಾಗಲಿ. 455 00:45:13,625 --> 00:45:15,541 ರಾಣಿ ಮಿರಿಯೆಲ್‌ಗೆ ಜಯವಾಗಲಿ. 456 00:45:52,791 --> 00:45:55,541 ಹೌದು. ಹಲ್ಬ್ರ್ಯಾಂಡೇ ಸೌರೊನ್. 457 00:45:55,625 --> 00:45:59,333 ನನ್ನ ಜನರ ಮೇಲೆ ಪ್ರಾಬಲ್ಯ ಸಾಧಿಸಲು ಉಂಗುರ ತಯಾರಿಸಲು ಎರೆಗಿಯೊನಲ್ಲಿರುವನು. 458 00:46:00,208 --> 00:46:02,625 -ನಿಮ್ಮ ಮೇಲೂ. -ಮಧ್ಯ ಧರೆಯ ಪ್ರತಿಯೊಬ್ಬರ ಮೇಲೆ. 459 00:46:02,708 --> 00:46:05,375 ಕೆಲಸ ಪೂರ್ಣಗೊಳ್ಳುವವರೆಗೂ ಅವನು ಎಲ್ಲಿಯೂ ತಪ್ಪಿಸಿಕೊಳ್ಳಲ್ಲ. 460 00:46:06,583 --> 00:46:10,458 ಮತ್ತು ಅದು ನಮಗೆ ಕ್ಷಣಿಕ ಪ್ರಯೋಜನವನ್ನು ನೀಡುತ್ತದೆ. 461 00:46:11,083 --> 00:46:12,000 ನಮಗಾ? 462 00:46:15,250 --> 00:46:16,333 ನನ್ನನ್ನು ಬಿಡಿಸಿ. 463 00:46:37,875 --> 00:46:43,458 ನಾವು ಮಾತನಾಡುವಾಗಲೇ, ಎಲ್ರೊಂಡ್ ಲಿಂಡೊನ್‌ನಿಂದ ಎಲ್ಫ್‌ಗಳ ಸೇನೆಯೊಂದಿಗೆ ಹೊರಟಿದ್ದಾನೆ. 464 00:46:46,083 --> 00:46:49,416 ಮತ್ತು ನೆನ್ಯಾ, ನನ್ನ ಉಂಗುರ. 465 00:46:51,666 --> 00:46:52,666 ಹಾಗೋ. 466 00:46:53,250 --> 00:46:56,833 ಅವನು ಬಂದಮೇಲೆ ನಗರವನ್ನು ಮುಚ್ಚುವನು, 467 00:46:56,916 --> 00:47:00,333 ಕೆಲಬ್ರಿಮ್ಬೋ‍ರ್‌ನ ಸೌರೊನ್‌ನ ಹಿಡಿತದಿಂದ ಬಿಡಿಸಿ, ನಂತರ ಒಟ್ಟಿಗೆ, 468 00:47:01,583 --> 00:47:02,500 ಉರುಕ್, 469 00:47:04,625 --> 00:47:08,083 ನೀವು ಮತ್ತು ನಾನು, ಸೌರೊನ್‌ನ ಈ ಜಗತ್ತಿನಿಂದ ಶಾಶ್ವತವಾಗಿ ನಿರ್ಮೂಲನೆ ಮಾಡಬಹುದು. 470 00:47:09,000 --> 00:47:10,375 ಎಂದಿಗೂ ಬಾರದಂತೆ. 471 00:47:11,083 --> 00:47:12,291 ಮತ್ತು ನಂತರ ಏನು? 472 00:47:13,083 --> 00:47:15,833 ಅವನು ಸ್ಪರ್ಶಿಸಿರುವ ಉಂಗುರಗಳನ್ನು ನಾಶ ಮಾಡಬೇಕು. 473 00:47:16,333 --> 00:47:18,625 ಆಮೇಲೆ, ಉರುಕ್‌ಗೆ ಏನಾಗುತ್ತದೆ? 474 00:47:20,208 --> 00:47:23,250 ನಿಮ್ಮ ಮಹಾ ದೊರೆ ನಮಗೆ ಶಾಂತಿಯಿಂದ ಮನೆಗೆ ಮರಳಲು ಅನುಮತಿ ಕೊಡುವರೇ? 475 00:47:24,500 --> 00:47:27,500 ಅಥವಾ ಮೊರ್ಡೊರ್ ಮೇಲೆ ಆಕ್ರಮಣ ಮಾಡಲು ಮುಂದುವರಿಯುತ್ತಾರಾ? 476 00:47:29,375 --> 00:47:33,625 ಛಾಯೆ ನಿಮ್ಮ ಮೇಲಷ್ಟೇ ಅಲ್ಲ, ಇಡೀ ಎಲ್ವೆನ್ ಡಾಮ್ ಮೇಲೆ ಪ್ರಾಬಲ್ಯ ಸಾಧಿಸಿದೆ. 477 00:47:34,250 --> 00:47:35,250 ಕೊನೆಯಲ್ಲಿ, 478 00:47:35,333 --> 00:47:39,708 ನಿನ್ನ ವೀರತ್ವವನ್ನು ಸಾಬೀತುಪಡಿಸುವ ಯತ್ನವೂ ಸೌರೊನ್‌ನ ಯೋಜನೆಯೇ ಆಗಿರುತ್ತದೆ. 479 00:47:40,875 --> 00:47:42,291 ನೀವು ಸುಳ್ಳು ಹೇಳುತ್ತೀರಿ. 480 00:47:43,291 --> 00:47:45,083 ನಾನೇನಾದರೂ ಬಹಿರಂಗಪಡಿಸಲಿ ಅಂತ. 481 00:47:45,750 --> 00:47:47,791 ನಾನಂದುಕೊಂಡಿದ್ದು ಮತ್ತು 482 00:47:47,875 --> 00:47:52,000 ಅದಕ್ಕಿಂತ ಹೆಚ್ಚಿನದನ್ನು ನೀನೀಗಾಗಲೇ ಬಹಿರಂಗಪಡಿಸಿರುವೆ. 483 00:48:04,208 --> 00:48:05,458 ಸರಿ, ಸರಿ. 484 00:48:07,333 --> 00:48:08,750 ಇದೇ ಸಮಯ! 485 00:48:11,333 --> 00:48:14,541 ಎರೆಗಿಯೊನ್ ಪೂರ್ತಿ ಈಗ ಸೌರೊನ್‌ನ ನಿಯಂತ್ರಣದಲ್ಲಿರಬಹುದು. 486 00:48:16,125 --> 00:48:19,833 ಅದನ್ನು ವಶಪಡಿಸಿಕೊಳ್ಳಲು ನಿನ್ನ ಮಕ್ಕಳ ಸೇನೆಯಷ್ಟೇ ಸಾಲದು. 487 00:48:19,916 --> 00:48:23,958 ಒಂದೇ ಒಂದು ಪಡೆಯೊಂದಿಗೆ ನಾನು ಸೌರೊನ್‌ನ ಶಕ್ತಿಗೆ ಸವಾಲೆಸೆಯುವೆ 488 00:48:24,041 --> 00:48:25,583 ಅಂತ ನಿಜವಾಗಿ ಅಂದುಕೊಂಡೆಯಾ? 489 00:48:45,541 --> 00:48:48,708 ಈಗ ನೀನು ಯಾವುದೇ ಅನುಮಾನವಿಲ್ಲದೆ ಅವನು ಯಾರೆಂದು ಖಚಿತಪಡಿಸಿ, 490 00:48:49,708 --> 00:48:51,708 ನಿನ್ನ ಉಂಗುರ ಯಾರ ಬಳಿ ಇದೆ ಅಂತ ಹೇಳಿರೋದರಿಂದ, 491 00:48:53,416 --> 00:48:55,125 ಎರೆಗಿಯೊನ್ ಪರಾಭವಗೊಳ್ಳುತ್ತದೆ. 492 00:48:56,250 --> 00:48:57,750 ಮತ್ತು ಅದರೊಂದಿಗೆ ಸೌರೊನ್. 493 00:48:58,916 --> 00:48:59,916 ಇಲ್ಲ. 494 00:49:02,833 --> 00:49:04,583 ಅವನಿಗೆ ಇದೇ ಬೇಕೇನೋ. 495 00:49:07,166 --> 00:49:09,291 ಸೌರೊನ್‌ಗೆ ತನ್ನದೇ ಆದ ಸೈನ್ಯ ಇಲ್ಲ, 496 00:49:10,666 --> 00:49:12,875 ಆದ್ದರಿಂದ ಅವನು ನಿನ್ನನ್ನು ಇಲ್ಲಿಗೆ ಕರೆಸಿದನು. 497 00:49:14,916 --> 00:49:17,041 ಅವನಿಗೆ ಎರೆಗಿಯೊನ್ ಮೇಲೆ ನೀವು ದಾಳಿ ಮಾಡಬೇಕು. 498 00:49:17,125 --> 00:49:19,666 ಅವಳನ್ನು ಬಂಧಿಸಿ. ನಂತರ ಉಪಯುಕ್ತವಾಗುತ್ತಾಳೆ. 499 00:49:20,750 --> 00:49:24,166 -ನಿನ್ನನ್ನು ಬೇಡುತ್ತೇನೆ. ಮೂರ್ಖನಾಗಬೇಡ. -ಇಲ್ಲಿಗೆ ಬಾ. 500 00:49:24,250 --> 00:49:26,500 ಇದನ್ನು ಮಾಡಬೇಡ. ಅವನ ಆಮಿಷಕ್ಕೆ ಮರುಳಾಗಬೇಡ. 501 00:49:26,583 --> 00:49:28,166 ಅದನ್ನವನ ವಿರುದ್ಧವೇ ತಿರುಗಿಸುವೆ. 502 00:49:29,000 --> 00:49:30,000 ಇಲ್ಲ! 503 00:49:31,041 --> 00:49:34,083 ಹಾಗೆ ಮಾಡಬಾರದು. ಇದೆಲ್ಲಾ ಅವನ ಯೋಜನೆಯೇ! 504 00:49:35,083 --> 00:49:36,666 ಸೌರೊನ್‌ಗೆ ಇದೇ ಬೇಕಿರೋದು! 505 00:49:37,500 --> 00:49:39,000 ಅವನಿಗೆ ಬೇಕಾಗಿರುವುದು ಇದೇ! 506 00:49:39,791 --> 00:49:41,416 ಈ ಕಡೆ. ಬಾ. 507 00:50:12,875 --> 00:50:14,875 ತಳ್ಳು! ನಡಿ! 508 00:50:16,416 --> 00:50:17,458 ಜೋರಾಗಿ! 509 00:50:28,875 --> 00:50:30,125 ಗಂಟೆಗಳನ್ನು ಬಾರಿಸಿ. 510 00:50:31,166 --> 00:50:32,375 ನಾವು ದಾಳಿಗೊಳಗಾಗಿದ್ದೇವೆ! 511 00:50:33,166 --> 00:50:36,000 ದ್ವಾರಗಳನ್ನು ಮುಚ್ಚಿ! ಸೇತುವೆ ಮೇಲೆತ್ತಿ! 512 00:51:18,250 --> 00:51:19,708 ನಿಮ್ಮ ಪ್ರಗತಿ ಹೇಗಿದೆ? 513 00:51:21,500 --> 00:51:22,833 ನಿನಗದು ಕೇಳಿಸಲಿಲ್ಲವೇ? 514 00:51:23,833 --> 00:51:26,500 ಹೊರಗೆ. ಮುತ್ತಿಗೆಯ ಎಚ್ಚರಿಕೆಯಂತೆ ಸದ್ದು ಮಾಡಿತು. 515 00:51:27,291 --> 00:51:30,208 ನನ್ನನ್ನು ನಂಬಿ, ನಗರದಲ್ಲಿ ಎಲ್ಲವೂ ನಿಯಂತ್ರಣದಲ್ಲಿದೆ. 516 00:51:31,958 --> 00:51:33,791 ಅದನ್ನು ನಾನು ನಿರ್ಧರಿಸುತ್ತೇನೆ. 517 00:51:36,333 --> 00:51:37,833 ನೀವು ಇಲ್ಲಿಯೇ ಇರಬೇಕು, ಮಿತ್ರ. 518 00:51:39,125 --> 00:51:41,833 ನಾನು ಎಲ್ಲಿರಬೇಕು ಅಂತ ನೀನು ನನಗೆ ಹೇಳಬೇಕಾಗಿಲ್ಲ! 519 00:51:51,625 --> 00:51:54,291 ನನ್ನ ಕೈ ಬಿಡು, ಮಿತ್ರ. 520 00:52:00,166 --> 00:52:01,958 ಈಗಲೇ ಈ ಗೋಪುರದಿಂದ ಹೊರಡಿ, 521 00:52:02,041 --> 00:52:04,375 ಮಧ್ಯ ಧರೆಯ ಮನುಷ್ಯರು ಸೋತಾಗ, ಪ್ರಮಾಣ ಮಾಡುವೆ, 522 00:52:04,458 --> 00:52:06,833 ಕಾಣುವ ಮತ್ತು ಕಾಣದ ಪ್ರಪಂಚದ ಪ್ರತಿಯೊಂದು ಜೀವಕ್ಕೂ 523 00:52:06,916 --> 00:52:10,166 ತಮ್ಮ ಸಾವಿನ ಸೂತ್ರಧಾರ ನೀವೇ ಅಂತ ಗೊತ್ತಾಗುತ್ತೆ. 524 00:52:10,250 --> 00:52:12,166 ಇನ್ನೂ ಒಂಬತ್ತು ಉಂಗುರಗಳನ್ನು ತಯಾರಿಸಬೇಕು! 525 00:52:36,666 --> 00:52:37,791 ಅತ್ಯುತ್ತಮ ಕುದುರೆ. 526 00:53:07,708 --> 00:53:10,333 -ಸರಿ. -ಅದು ಕುದುರೆ. 527 00:53:13,291 --> 00:53:14,625 ಶತಮಾನಗಳಿಂದ, 528 00:53:16,125 --> 00:53:18,833 ಮಹಾ ಶಕ್ತಿಯುಳ್ಳ ವಸ್ತುಗಳನ್ನು ತಯಾರಿಸಲು ಯತ್ನಿಸಿದೆ. 529 00:53:21,208 --> 00:53:22,166 ಆದರೆ ನಾನು ವಿಫಲನಾದೆ. 530 00:53:22,791 --> 00:53:24,125 ನಿಜವೇನೆಂದರೆ, 531 00:53:25,208 --> 00:53:28,208 ನಾನು ಎರೆಗಿಯೊನ್‌ಗೆ ಬಂದಿದ್ದು ವಾಲಾರ್ ಗೆ ನೀವು ಬೇಕು ಅಂತಲ್ಲ, 532 00:53:30,541 --> 00:53:31,708 ನನಗೆ ನೀವು ಬೇಕು ಅಂತ. 533 00:53:33,666 --> 00:53:34,666 ನಾನು... 534 00:53:41,750 --> 00:53:44,000 ನಾನು ಹೆಚ್ಚು ಉಂಗುರಗಳನ್ನು ತಯಾರಿಸಲಾರೆ. 535 00:53:47,791 --> 00:53:49,583 ಮತ್ತು ಮೀಥ್ರಿಲ್ ಇಲ್ಲದೆ, ನಾನು... 536 00:53:52,375 --> 00:53:53,625 ನಿರಾಳವಾಗಿರಿ. 537 00:53:55,125 --> 00:53:56,750 ನಾನು ಖಜದ್-ದುಮ್‌ಗೆ ಹೋಗಿದ್ದೇನೆ. 538 00:54:01,375 --> 00:54:02,791 ಮೀಥ್ರಿಲ್ ಅದಿರು. 539 00:54:04,583 --> 00:54:07,125 ನಾರ್ವಿ‌ಯೇ ಅದನ್ನು ಪುಡಿಯಾಗಿ ಸಂಸ್ಕರಿಸಿದ್ದಾರೆ. 540 00:54:09,166 --> 00:54:11,250 ಅವರ ಗಣಿಯಲ್ಲಿ ಸಿಕ್ಕಿದ ಪರಿಶುದ್ಧ ಅದಿರಿನಿಂದ. 541 00:54:11,333 --> 00:54:13,666 ಪ್ರತಿ ಉಂಗುರಕ್ಕೂ ಒಂಬತ್ತರ ಒಂದು ಭಾಗ. 542 00:54:15,041 --> 00:54:16,375 ಅಷ್ಟು ಸಾಕು. 543 00:54:19,916 --> 00:54:22,291 ನಾವು ಹತ್ತಿರವಾಗಿದ್ದೇವೆ, ಈಗ, ಕೆಲಬ್ರಿಮ್ಬೋರ್. 544 00:54:24,166 --> 00:54:26,375 ಅದನ್ನು ಸಾಧಿಸಲು ತುಂಬಾ ಹತ್ತಿರದಲ್ಲಿದ್ದೇವೆ. 545 00:54:28,125 --> 00:54:31,500 ನನ್ನ ಜೀವದ ಮೇಲೆ ಆಣೆ ಮಾಡುವೆ, 546 00:54:32,250 --> 00:54:35,916 ಈ ಯುಗದ ಇತಿಹಾಸ ಬರೆಯುವಾಗ, ಸಿಲ್ಮರಿಲ್ ಗಳು, 547 00:54:37,458 --> 00:54:38,458 ಅದು... 548 00:54:42,375 --> 00:54:44,750 ಅವರಿಗೆ ಸಲ್ಲಬೇಕಾದ ಶ್ರೇಯ ಸಿಗಲ್ಲ. 549 00:54:47,458 --> 00:54:49,166 ಆದರೆ ನಿಮ್ಮ ಉಂಗುರಗಳು, 550 00:54:51,166 --> 00:54:52,750 ಶಕ್ತಿಯ ಉಂಗುರಗಳು, 551 00:54:54,791 --> 00:55:00,500 ಮಧ್ಯ ಧರೆಯಲ್ಲೆಲ್ಲಾ ಅತ್ಯಮೂಲ್ಯವಾದ ಸೃಷ್ಟಿ ಅವೇ ಆಗಿರುತ್ತವೆ. 552 00:55:01,750 --> 00:55:02,958 ಹಾಂ. 553 00:55:03,041 --> 00:55:07,375 ಗೆಲುವಿನ ಹೊಸ್ತಿಲಲ್ಲಿರುವಾಗ ಹಿಂದೆ ತಿರುಗಬೇಡಿ. 554 00:55:12,541 --> 00:55:15,291 ಅದನ್ನು ಬಳಸಿ, ಮಿತ್ರ. 555 00:55:17,416 --> 00:55:18,416 ಫೀನೋರ್‌ನ ಮೀರಿಸಿ. 556 00:55:20,458 --> 00:55:21,458 ನಿಮ್ಮನ್ನೇ ಮೀರಿಸಿ. 557 00:55:26,333 --> 00:55:31,375 ಕೊನೆಯ ಬಾರಿಗೆ. 558 00:55:59,166 --> 00:56:01,041 ಒಂದು ಕವಿತೆ ಬರೆದಿರುವೆ, 559 00:56:01,125 --> 00:56:03,958 ಆದರೆ ನಿನ್ನಂದಕ್ಕೆ ಅದು ಸರಿಸಾಟಿಯೇ ಗೊತ್ತಿಲ್ಲ. 560 00:56:22,500 --> 00:56:23,583 ಬನ್ನಿ, ಮಕ್ಕಳೇ! 561 00:57:30,500 --> 00:57:31,750 ಹಾಂ! 562 00:57:36,166 --> 00:57:40,083 ಅಲ್ಲಿಗೆ ಹೋಗಿ. ಬನ್ನಿ! ಬನ್ನಿ! 563 00:57:57,416 --> 00:57:58,416 ಬಿಡುಗಡೆ ಮಾಡಿ! 564 01:00:13,541 --> 01:00:15,541 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 565 01:00:15,625 --> 01:00:17,625 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ