1 00:00:00,041 --> 00:00:01,375 {\an8}ಈ ಹಿಂದೆ 2 00:00:03,208 --> 00:00:04,333 ಏನು ನಿನ್ನ ಹೆಸರು? 3 00:00:04,416 --> 00:00:05,625 ಕೆಲೆಬೋರ್ನ್. 4 00:00:07,125 --> 00:00:11,500 ನಿನ್ನ ಬಣ್ಣದ ಮಾತುಗಳಿಗೆ ನನ್ನ ಗಂಡ ಕರಗಬಹುದು, ಆದರೆ ನಾನು ಕಿಂಚಿತ್ತೂ ಅಲುಗಾಡಲ್ಲ. 5 00:00:11,583 --> 00:00:13,375 ನೀನು ಇಲ್ಲಿ ನಿಜವಾಗಲೂ ಏನು ಮಾಡುತ್ತಿರುವೆ? 6 00:00:13,458 --> 00:00:16,666 ಹಳೆಯ ಪ್ರೀತಿಯನ್ನು ನೋಡಲು ಬಂದಿರುವ ಕಾರಣ ಸಾಲದೇ? 7 00:00:16,750 --> 00:00:17,583 ಅಮ್ಮ? 8 00:00:18,250 --> 00:00:22,833 ಅಂಧಕಾರದ ದೊರೆಯು ತಮ್ಮ ಮಾತಿನ ಮೇಲೆ ನಿಲ್ಲದವರ ಪರ ನಿಲ್ಲುವುದಿಲ್ಲ. 9 00:00:22,916 --> 00:00:25,625 ಬಲೆಯನ್ನು ಹೆಣೆದಾಗಿದೆ, ಡ್ಯುರಿನ್ ಅದರೊಳಗೆ ಬೀಳಬೇಕಷ್ಟೇ. 10 00:00:30,541 --> 00:00:32,250 - ಅವನನ್ನು ಕರೆದೊಯ್ಯಿರಿ! - ಅಪ್ಪ! 11 00:00:35,416 --> 00:00:37,333 ಅವರೆಲ್ಲರೂ ಸತ್ತಿದ್ದಾರೆಂದು ಸೌರೊನ್ ಅಂದುಕೊಂಡಿದ್ದಾನೆ. 12 00:00:37,416 --> 00:00:39,958 - ಯಾರು? - ಅವಳ ಹೆಸರು ಮೈಟಾಲಿ. 13 00:00:41,375 --> 00:00:43,333 ಎಲ್ಫ್ ಕುಶಲಕರ್ಮಿಗಳ ಕೊನೆಯವಳು. 14 00:00:43,416 --> 00:00:45,291 ನನ್ನೊಂದಿಗೆ ಬಾ, ಹೆಣ್ಣು ಎಲ್ಫ್. 15 00:00:45,375 --> 00:00:50,875 ಸೌರೊನ್ ತನ್ನ ಉಂಗುರವನ್ನು ಪೂರ್ಣಗೊಳಿಸಲಾಗದಂತೆ ನಾವಿಬ್ಬರೂ ಜೊತೆಯಾಗಿ ನೋಡಿಕೊಳ್ಳೋಣ. 16 00:00:50,958 --> 00:00:52,583 ಅವರನ್ನು ಉತ್ತರಕ್ಕೆ ನಡೆಸುತ್ತಿದ್ದಾನೆ. 17 00:00:52,666 --> 00:00:55,958 ಕೊನೆಗೂ ಒಬ್ಬಳು ಎಲ್ಫ್ ಕುಶಲಕರ್ಮಿ ಎರೆಗಿಯೊನ್ ಬಿದ್ದರೂ ಬದುಕುಳಿದಂತಿದೆ. 18 00:00:56,041 --> 00:00:58,000 ಎಲ್ಫ್‌ಗಳಿಗಿಂತ ಮುಂಚೆ ನಾವು ಅವಳನ್ನು ತಲುಪಬೇಕು. 19 00:01:11,291 --> 00:01:14,750 ಈ ಮೃಗವನ್ನು ನಿಯಂತ್ರಿಸಲಾಗುತ್ತಿಲ್ಲ, ಒಡೆಯ, 20 00:01:14,833 --> 00:01:16,916 ಆದರೆ ನನಗೆ ಕುದುರೆಗಳ ಗುಂಪೊಂದು ಸಿಕ್ಕಿದೆ. 21 00:01:17,000 --> 00:01:21,166 ನಿಮ್ಮನ್ನು ಕೆಲವೇ ವಾರಗಳಲ್ಲಿ ಗುಂಡಬಾದ್‌ಗೆ ಕರೆದೊಯ್ಯಬಹುದು. 22 00:01:21,833 --> 00:01:23,625 ಹೆಚ್ಚೆಂದರೆ ಒಂದು ತಿಂಗಳಲ್ಲಿ. 23 00:01:33,666 --> 00:01:35,666 ಅವು ಹಿಂದೊಮ್ಮೆ ಗರುಡಗಳಾಗಿದ್ದವು, ಗೊತ್ತಾ? 24 00:01:39,541 --> 00:01:42,958 ಮೋರ್ಗೋಥ್ ಅವುಗಳಿಗೆ ಈಗಿನ ರೂಪ ಕರುಣಿಸುವವರೆಗೂ. 25 00:01:45,000 --> 00:01:47,041 ಅವನ ಏಟುಗಳಿಗೆ ಅವುಗಳು ಹಾತೊರೆಯುವಂತೆ ಮಾಡಿದ. 26 00:01:50,333 --> 00:01:53,916 ಅತಿ ನೀಚವಾದ ಮಾಂಸಗಳ ಮೇಲೆಯೇ ಅವಲಂಬಿತವಾಗುವಂತೆ ಮಾಡಿದ. 27 00:01:54,000 --> 00:01:55,666 ಅವುಗಳಿಗೆ ಕೊಳೆತ ಮಾಂಸ ತಿನ್ನಿಸುತ್ತಿದ್ದೇವೆ. 28 00:02:04,500 --> 00:02:06,166 ಅದೇ ನೀವು ಮಾಡಿದ ತಪ್ಪು. 29 00:02:08,666 --> 00:02:14,041 ಇಂತಹ ರಕ್ಕಸಿ ಮೃಗಗಳು ಜೀವಂತ ಮಾಂಸವನ್ನಷ್ಟೇ ತಿನ್ನುತ್ತವೆ. 30 00:02:32,208 --> 00:02:33,416 ಅದಕ್ಕೆ ತಡಿ ಕಟ್ಟಿ. 31 00:03:35,791 --> 00:03:37,208 ಬಾಗಿಲು ತೆಗೆಯಿರಿ! 32 00:03:39,750 --> 00:03:44,000 ನಾವು ಹೊಸ... ಕೈದಿಗಳನ್ನು ನಿರೀಕ್ಷಿಸಿರಲಿಲ್ಲ. 33 00:03:44,083 --> 00:03:45,916 ಇವರು ನಮಗೆ ಅವಶ್ಯಕ. 34 00:03:47,500 --> 00:03:48,791 ನನ್ನನ್ನು ನಂಬು. 35 00:04:12,833 --> 00:04:14,708 ಏನಕ್ಕೆ ಕಾಯುತ್ತಿದ್ದೀರಿ? 36 00:04:14,791 --> 00:04:16,000 ನಡೆಯಿರಿ! 37 00:04:29,125 --> 00:04:30,708 ಹೆಸರು ಮತ್ತು ಹುದ್ದೆ. 38 00:04:30,791 --> 00:04:32,166 ಮಾರ್ನೂಖ್. 39 00:04:33,666 --> 00:04:35,000 ದಂಡನಾಯಕ. 40 00:04:36,041 --> 00:04:39,000 73ನೇ ಪಡೆಯ ನಾಯಕ. 41 00:04:40,166 --> 00:04:41,333 ದಂಡನಾಯಕನಾ? 42 00:04:42,083 --> 00:04:45,625 ಅಗ್ರ ನಾಯಕನಾಗಿರುವ ನೀನು ಗುಂಡಬಾದ್‌ನಲ್ಲಿ ಏನು ಮಾಡುತ್ತಿರುವೆ? 43 00:04:46,375 --> 00:04:49,375 ನಮಗೆ ಯಾವುದೇ ಪ್ರಮುಖ ಅತಿಥಿಗಳು ಬರುವ ಸೂಚನೆ ಸಿಕ್ಕಿರಲಿಲ್ಲ. 44 00:04:49,458 --> 00:04:51,083 ಯಾವ ಸೂಚನೆಯನ್ನೂ ಹೊರಡಿಸಿರಲಿಲ್ಲ. 45 00:04:53,916 --> 00:04:56,000 ನಾನಾಗಿಯೇ ಬಂದೆ. 46 00:04:58,916 --> 00:05:01,208 ಒಂದು ಮುದ್ದಾದ ಉಡುಗೊರೆಯನ್ನು ತಂದಿದ್ದೇನೆ. 47 00:05:04,875 --> 00:05:07,333 ಇದು ಒಡೆಯ ಸೌರೊನ್‌ಗಾಗಿ! 48 00:05:09,250 --> 00:05:11,625 ನಾನು ನನ್ನ ಕೆಲಸವನ್ನು ಯಶಸ್ವಿಯಾಗಿ ನಿಭಾಯಿಸಿದ್ದರೆ, 49 00:05:12,708 --> 00:05:16,500 ಆತ ಇಲ್ಲಿಗೆ ಈಗ ಆಗಮಿಸುತ್ತಿದ್ದಾರೆ! 50 00:05:20,166 --> 00:05:22,375 ನಾವೆಲ್ಲರೂ ಒಟ್ಟಾಗಿ ಇವಳನ್ನು ಅರ್ಪಿಸೋಣ. 51 00:05:24,375 --> 00:05:30,291 ನಮ್ಮ ಉಳಿದ ಜೀವನಗಳನ್ನು ಸುಖಾಶ್ರಮದಲ್ಲಿ ಹಂದಿಗಳಂತೆ ಮೇಯುತ್ತಾ ಕಳೆಯಬಹುದು. 52 00:05:31,041 --> 00:05:31,875 ಅರ್ಥವಾಯಿತಾ? 53 00:05:31,958 --> 00:05:33,333 ಹಾಂ! 54 00:05:34,208 --> 00:05:36,000 ನೀಚ ಮೋಸಗಾರನೇ! 55 00:05:38,875 --> 00:05:40,166 ಅವಳನ್ನು ಕೆಳಗೆ ಕರೆದೊಯ್ಯಿರಿ! 56 00:05:40,250 --> 00:05:42,583 - ನನ್ನನ್ನು ಮುಟ್ಟಬೇಡಿ! - ಇಲ್ಲ! ಆಕೆಯನ್ನು ಬಿಡಿ! 57 00:05:43,416 --> 00:05:44,291 ಅರೊಂಡೀರ್! 58 00:05:44,375 --> 00:05:46,083 ನಿಮ್ಮ ಪರಿಚಯ ಆಗಿ ತುಂಬಾ ಸಂತೋಷವಾಯಿತು, ಕಣವ್ವ. 59 00:05:46,166 --> 00:05:48,375 ಇಲ್ಲ! ಆಕೆಯನ್ನು ಬಿಡಿ! 60 00:05:49,583 --> 00:05:51,000 ಗಲಾದ್ರಿಯಲ್! 61 00:05:54,458 --> 00:05:56,250 ಇವನನ್ನು ಏನು ಮಾಡೋಣ? 62 00:05:57,166 --> 00:06:01,583 ನಾವು ಇವನನ್ನು... ಹಿಂಸೆಯ ಕಟ್ಟೆಯ ಮೇಲೆ ಹಾಕೋಣವೇ? 63 00:06:01,666 --> 00:06:02,875 ಹಾಂ! 64 00:06:03,875 --> 00:06:06,875 ಆರಾಮವಾಗಿ ಮಾತನಾಡೋಣ, 65 00:06:08,458 --> 00:06:10,958 ರಿವೆನ್ಡೆಲ್‌ನ ಸೇನಾಪಡೆಗಳ ಬಗ್ಗೆ. 66 00:06:11,750 --> 00:06:13,833 ಇತ್ತ ಕಡೆ, ದಂಡನಾಯಕನೇ. 67 00:06:16,125 --> 00:06:17,166 ಇಲ್ಲ. 68 00:07:23,083 --> 00:07:26,416 ಜೆ.ಆರ್.ಆರ್. ಟೋಲ್ಕೀನ್ ಅವರ 'ದಿ ಲಾರ್ಡ್ ಆಫ್ ದಿ ರಿಂಗ್ಸ್' ಹಾಗು ಪರಿಶಿಷ್ಟಗಳ ಆಧಾರಿತ 69 00:07:30,166 --> 00:07:37,166 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 70 00:07:52,916 --> 00:07:55,916 ಇಷ್ಟು ಕಾಲವೂ, ನಾವು ಯುದ್ಧದಿಂದ ಹೊರಗುಳಿದಿದ್ದೇವೆ... 71 00:07:56,500 --> 00:08:00,333 - ಈಗ ಅಂಧಕಾರದ ದೊರೆಯ ವೈರತ್ವ ಸಾಧಿಸುತ್ತಿದ್ದೇವೆ! - ಹೌದು! 72 00:08:00,416 --> 00:08:02,791 ನೀನು ಎಲ್ಫ್‌ಗಳಿಗೆ ನೆರವಾಗಬೇಕೆಂದುಕೊಂಡಿದ್ದಕ್ಕೆ 73 00:08:02,875 --> 00:08:05,583 ಎಷ್ಟು ಮಂದಿ ಡ್ವಾರ್ವ್ಸ್ ‌ಸಾಯಲಿದ್ದಾರೆ? 74 00:08:05,666 --> 00:08:07,416 ಬದಲಾಗಿ, ನಾವು ಸೌರೊನ್‌ಗೆ ಸಹಾಯ ಮಾಡಬೇಕಿತ್ತಾ? 75 00:08:07,500 --> 00:08:10,375 ಆ ಆರ್ಕ್ ಸಿಕ್ಕಲ್ಲಿಯೇ ಅವನನ್ನು ಬಿಟ್ಟು ಬಂದಿದ್ದರೆ ಚೆನ್ನಾಗಿರುತ್ತಿತ್ತು! 76 00:08:10,458 --> 00:08:11,291 - ಹೌದು! - ಹೌದು! 77 00:08:11,375 --> 00:08:14,500 ಮೊರ್ಡೊರ್‌ನಿಂದ ಬಂದ ಸೇನಾ ತುಕಡಿಗಳು ನಮ್ಮ ಗಡಿಗಳ ಸುತ್ತಲೂ 78 00:08:14,583 --> 00:08:16,666 ನೆಲೆ ಏರ್ಪಡುತ್ತಿದ್ದಾರೆ ಅಂತ ಸುದ್ದಿ ಬಂದಿದೆ. 79 00:08:16,750 --> 00:08:20,333 ಈಗ, ಆ ಉಂಗುರಗಳು ನಮಗೆ ಬೇಕಿರುವುದಷ್ಟೇ ಅಲ್ಲ, ಅವು ನಮಗೆ ಅವಶ್ಯಕ. 80 00:08:20,416 --> 00:08:21,583 - ಹೌದು! - ಹೌದು! 81 00:08:21,666 --> 00:08:22,708 ಉಂಗುರಗಳು ಬೇಡ. 82 00:08:23,708 --> 00:08:25,458 ಈಗ ಬೇಡ. ಎಂದಿಗೂ ಬೇಡ. 83 00:08:26,416 --> 00:08:27,750 ಥ್ರೇನ್, ಅವರಿಗೆ ಹೇಳು. 84 00:08:29,083 --> 00:08:31,083 ನಾನು ಈ ವಿಚಾರವಾಗಿ ದೊರೆಯ ಮಾತನ್ನು ಒಪ್ಪುವೆ. 85 00:08:33,833 --> 00:08:35,208 ನನ್ನ ಮಾತನ್ನು ಕೇಳು, ತಮ್ಮ. 86 00:08:35,958 --> 00:08:39,166 ಸೌರೊನ್‌ನ ಶಕ್ತಿಗೆ ಸಾಟಿಯಾಗಬಲ್ಲ ಏಕೈಕ ಶಕ್ತಿಯ ಬಗ್ಗೆ ಮಾತನಾಡುತ್ತಿದ್ದೇವೆ. 87 00:08:39,791 --> 00:08:42,666 ಎಲ್ಫ್‌ಗಳಿಗೆ ನೆರವಾಗುತ್ತಾ ನಿನ್ನವರನ್ನು ರಕ್ಷಿಸಬೇಕು ಅಂದುಕೊಂಡಿದ್ದೀಯಾ? 88 00:08:43,291 --> 00:08:45,291 ಆ ಉಂಗುರಗಳಷ್ಟೇ ನಮಗೆ ಗತಿಯಿರಬಹುದು. 89 00:08:46,333 --> 00:08:48,583 ಆ ಉಂಗುರಗಳು ನಿಮ್ಮ ತಂದೆಗೆ ಹುಚ್ಚು ಹಿಡಿಸಿದವು. 90 00:08:52,375 --> 00:08:57,250 ತನ್ನದೇ ರಕ್ತ ಹಂಚಿಕೊಂಡವರನ್ನು ಎದುರಿಸಲು ಆತನಿಗೆ ಒಂದೇ ಒಂದು ಉಂಗುರ ಸಾಕಾಗಿತ್ತು. 91 00:08:57,916 --> 00:09:01,500 ನಿಮಗೆ ತಿಳಿಯುತ್ತಿಲ್ಲವೇ? ಈ ಕಾರಣಕ್ಕಾಗಿಯೇ ನಾವು ಅವನ್ನು ತೊಡಬೇಕೆಂದು ಸೌರೊನ್ ಬಯಸುವುದು. 92 00:09:02,291 --> 00:09:05,666 ನಮ್ಮನ್ನು ಪರಸ್ಪರ ವಿರೋಧಿಗಳಾಗಿಸಬೇಕು ಅಂತ. 93 00:09:06,250 --> 00:09:08,041 ಆದರೆ ನಾವು ಡ್ವಾರ್ವ್ಸ್. 94 00:09:09,708 --> 00:09:12,875 ಸೌರೊನ್‌ನನ್ನು ಸೋಲಿಸಲು ನಮಗೆ ಉಂಗುರಗಳ ಅವಶ್ಯಕತೆ ಇಲ್ಲ. 95 00:09:14,750 --> 00:09:17,000 ನಾವು ಯಾರೆಂಬುದನ್ನು ನೆನೆಸಿಕೊಂಡರೆ ಸಾಕು. 96 00:09:24,875 --> 00:09:27,208 ಆತ ಆ ಉಂಗುರ ಯಾವಾಗ ತೊಟ್ಟರು? 97 00:09:28,750 --> 00:09:29,833 ನಮ್ಮ ತಂದೆ? 98 00:09:32,041 --> 00:09:37,000 ನಿನ್ನನ್ನು ಆತ ತನ್ನ ವಾರಸುದಾರ ಅಂತ... 99 00:09:37,083 --> 00:09:39,041 ಪುನಃಸ್ಥಾಪಿಸುವ ಮುಂಚೆಯೋ ನಂತರವೋ? 100 00:09:40,375 --> 00:09:41,958 ಅದಕ್ಕೂ ಇದಕ್ಕೂ ಏನು ಸಂಬಂಧ? 101 00:09:42,041 --> 00:09:43,708 ನಮ್ಮ ಸಾಮ್ರಾಜ್ಯಗಳ ಕಾನೂನಿನ ಪ್ರಕಾರ, 102 00:09:43,791 --> 00:09:47,458 ಮತಿಭ್ರಮಣೆಯಾಗಿರುವ ರಾಜನು ಹೊರಡಿಸುವ ಯಾವುದೇ ಆದೇಶವಾದರೂ 103 00:09:47,541 --> 00:09:48,875 ಅದನ್ನು ರದ್ದುಪಡಿಸಲಾಗುತ್ತದೆ. 104 00:09:49,958 --> 00:09:51,083 ಅದು ನಿಜವೇ? 105 00:09:51,958 --> 00:09:53,375 ಅಂದರೆ, ಅದು... 106 00:09:53,458 --> 00:09:56,208 - ಅಂದರೆ, ನಮಗೆ ಅತಿ ಮುಖ್ಯ ವಿಚಾರ-- - ನಾರ್ವಿ. 107 00:10:00,541 --> 00:10:02,500 ಅದು ಸರಿಯೇ, ದೊರೆ, ಆದರೆ ನಮಗೆ-- 108 00:10:02,583 --> 00:10:04,125 ಹಾಗಾದರೆ ಮತ್ತೊಮ್ಮೆ ಕೇಳುತ್ತೇನೆ. 109 00:10:05,208 --> 00:10:10,833 ನಮ್ಮ ತಂದೆ ನಿನ್ನನ್ನು ತನ್ನ ವಾರಸುದಾರ ಮಾಡಿದಾಗ, ಆ ಉಂಗುರವನ್ನು ಧರಿಸಿದ್ದರೋ ಇಲ್ಲವೋ? 110 00:10:14,750 --> 00:10:15,583 ಡ್ಯುರಿನ್. 111 00:10:16,166 --> 00:10:18,333 ಆತ ನಿನಗೆ ಏನನ್ನೂ ಕೊಡಬೇಕಿಲ್ಲ. 112 00:10:19,375 --> 00:10:22,125 ಡ್ಯುರಿನ್ ಈ ಬೆಟ್ಟದ ಅರ್ಹ ರಾಜ. 113 00:10:23,250 --> 00:10:24,666 ಹೌದು. 114 00:10:25,416 --> 00:10:32,375 ಆಗಿದ್ದಾನೆಯೇ ಅಂತ ನನಗಿನ್ನು ಖಚಿತವಿಲ್ಲ. 115 00:10:39,375 --> 00:10:41,583 ನಾನು ನಿನ್ನನ್ನು ಮತ್ತೆ ಕರೆಸಿಕೊಳ್ಳಲೇಬಾರದಿತ್ತು. 116 00:10:41,666 --> 00:10:46,750 ಆ ಉಂಗುರವನ್ನು ಆತ ಧರಿಸಿದ್ದರೋ ಇಲ್ಲವೋ? 117 00:10:57,291 --> 00:10:58,333 ಧರಿಸಿದ್ದರು. 118 00:11:01,333 --> 00:11:05,375 ಕ್ಷಮಿಸು, ಡ್ಯುರಿನ್. ಡೀಸಾ, ನನ್ನನ್ನು ಕ್ಷಮಿಸು, ಆದರೆ ಆತ ಧರಿಸಿದ್ದರು. 119 00:11:08,375 --> 00:11:09,458 ಆತ ಧರಿಸಿದ್ದರು. 120 00:11:09,541 --> 00:11:11,416 ಆದರೆ ಇದೆಲ್ಲದರ ಅರ್ಥ ಏನು? 121 00:11:11,500 --> 00:11:12,833 ಅಂದರೆ... 122 00:11:14,125 --> 00:11:16,333 ನನ್ನ ತಂದೆಯ ವಾರಸುದಾರಿಕೆ ಈಗ ತಗಾದೆಯಲ್ಲಿದೆ, 123 00:11:17,583 --> 00:11:22,833 ಹಾಗಾಗಿ ಅದನ್ನು ಔಲೆಯ ಇಚ್ಛೆಯಂತೆ ನಿರ್ಧರಿಸಲಾಗುತ್ತದೆ. 124 00:11:22,916 --> 00:11:25,041 ಔಲೆಯ ಇಚ್ಛೆಯಂತೆಯೇ? ಹೇಗೆ? 125 00:11:26,458 --> 00:11:28,250 ದ್ವಂದ್ವಯುದ್ಧದ ಮೂಲಕ ತೀರ್ಪು. 126 00:11:40,708 --> 00:11:42,250 ನಾವು ಪ್ರತಿಸ್ಪಂದಿಸಬೇಕು, ಮಹಾಸ್ವಾಮಿ. 127 00:11:42,958 --> 00:11:45,541 ಥ್ರೇನ್‌ನ ಸವಾಲಿನ ವಿಷಯವು ರಾಜ್ಯದಾದ್ಯಂತ 128 00:11:45,625 --> 00:11:47,500 ಕಾಡ್ಗಿಚ್ಚಿನಂತೆ ಹಬ್ಬುತ್ತಿದೆ. 129 00:11:49,250 --> 00:11:50,583 ಹಾಗಾದರೆ ನಮಗೆ ಬೇರೆ ದಾರಿ ಇಲ್ಲ. 130 00:11:50,666 --> 00:11:54,791 ಇಲ್ಲ. ನೀನು ಇವನನ್ನು ಎದುರಿಸಬಾರದು, ಡ್ಯುರಿನ್. ಸಿಂಹಾಸನಕ್ಕಾಗಿ ಮಾತ್ರ ಬೇಡ. 131 00:11:54,875 --> 00:11:56,666 ನಿನ್ನನ್ನು ಅಪಾಯಕ್ಕೆ ಒಡ್ಡಿಕೊಳ್ಳಬೇಡ. 132 00:11:56,750 --> 00:12:00,333 ಇದುವರೆಗೂ ಯಾವ ಡ್ವಾರ್ಫ್ ರಾಜನೂ ಸವಾಲಿನಿಂದ ಹಿಮ್ಮೆಟ್ಟಿಲ್ಲ, ಡೀಸಾ. 133 00:12:01,000 --> 00:12:04,416 ಥ್ರೇನ್‌ನನ್ನು ನಾನು ಎದುರಿಸದಿದ್ದರೆ, ನನ್ನನ್ನು ಹೇಡಿ ಎಂದು ಕರೆಯುತ್ತಾರೆ. 134 00:12:04,500 --> 00:12:07,666 ನಾನು ಸಿಂಹಾಸನ ಹತ್ತಿದ್ದೇ ತಪ್ಪಿನಿಂದ ಎಂದು ಮಾತನಾಡಿಕೊಳ್ಳುತ್ತಾರೆ, 135 00:12:07,750 --> 00:12:09,333 ಮತ್ತು ಅದು ಅವರ ಮಾತಿಗೆ ಪುಷ್ಠಿ ಕೊಡುತ್ತದೆ. 136 00:12:10,291 --> 00:12:12,416 ಹಾಗಾದಾಗ ನಾನು ಸೌರೊನ್‌ನನ್ನು ಹೇಗೆ ಎದುರಿಸಲಿ? 137 00:12:12,500 --> 00:12:16,166 ಗುಹೆಯೊಳಗಿನ ಕುಸ್ತಿ, ತೋಳಿನ ಕುಸ್ತಿ, ಕಲ್ಲಿನ ಬಿಲ್ಲೆ ಎಸೆಯುವುದು... 138 00:12:16,250 --> 00:12:19,541 ಥ್ರೇನ್‌ನನ್ನು ನೀನು ಎದುರಿಸುವಾಗಲೆಲ್ಲಾ ಅದೇ ನಡೆಯುತ್ತದೆ. 139 00:12:20,291 --> 00:12:22,208 ಅವನು ಹೇಗೋ ಮಾಡಿ ನಿನ್ನನ್ನು ಕೆರಳಿಸುವನು, 140 00:12:22,291 --> 00:12:25,875 ನೀನು ಸಂಯಮ ಕಳೆದುಕೊಂಡು, ಆಲೋಚಿಸದೆ ವರ್ತಿಸುವೆ, ಅವನು ಗೆಲ್ಲುವನು. 141 00:12:25,958 --> 00:12:27,791 ಹೋರಾಡಲು ನಿರಾಕರಿಸಿದರೆ, ಡೀಸಾ... 142 00:12:30,041 --> 00:12:31,666 ಥ್ರೇನ್ ಗೆದ್ದಂತೆಯೇ ಲೆಕ್ಕ. 143 00:12:34,291 --> 00:12:37,333 ದೊರೆ, ನಿಮ್ಮ ಮಿತ್ರನಾಗಿ, 144 00:12:38,375 --> 00:12:41,416 ನಾನು ಯಾವಾಗಲೂ ನಿಮ್ಮ ಸೇವೆ ಮಾಡಲು ಬಯಸುತ್ತೇನೆ. 145 00:12:41,500 --> 00:12:45,125 ಆದರೆ ಡೆಲ್ವ್ ಪ್ರಮುಖನಾಗಿ, ನನ್ನ ನಿಷ್ಠೆ ಇರುವುದು ಈ ಬೆಟ್ಟಕ್ಕಾಗಿ, 146 00:12:45,208 --> 00:12:46,625 ಯಾವುದೇ ಒಬ್ಬ ರಾಜನಿಗಲ್ಲ. 147 00:12:47,791 --> 00:12:50,083 ನೀವು ಥ್ರೇನ್‌ನನ್ನು ಎದುರಿಸಿ, ಆತ ಗೆದ್ದರೆ-- 148 00:12:50,166 --> 00:12:53,000 ಅವನು ಗೆಲ್ಲುವುದಿಲ್ಲ. 149 00:12:57,125 --> 00:13:00,750 ಅವನು ಕೆರಳಿಸುತ್ತಿದ್ದಂಥ ಅದೇ ಮುಂಗೋಪಿ ಡ್ವಾರ್ಫ್ ನಾನಾಗಿಲ್ಲ ಈಗ. 150 00:13:05,041 --> 00:13:08,666 ಅವನು ಏನು ಹೇಳಿದರೂ ನನ್ನನ್ನು ಕೆರಳಿಸಲಾರ. 151 00:13:20,875 --> 00:13:21,958 ನೀನು ಹೇಳಿದ್ದು ಸರಿ. 152 00:13:23,916 --> 00:13:25,333 ನೀನೊಂದು ಬಾಲ್ರೊಗನ್ನು ಎದುರಿಸಿದೆ. 153 00:13:27,916 --> 00:13:29,458 ಥ್ರೇನ್‌ನನ್ನು ನಿಭಾಯಿಸಬಲ್ಲೆ. 154 00:13:31,333 --> 00:13:32,750 ಮತ್ತು ನಾನು ನಿಭಾಯಿಸುವೆ. 155 00:13:53,541 --> 00:13:55,041 ಇನ್ನೊಂದು ವಿಜಯ. 156 00:13:56,916 --> 00:13:59,083 ಇದನ್ನು ವಿಜಯವೆಂದು ಕರೆದರೆ... 157 00:14:00,583 --> 00:14:04,375 ಅದೊಂದು ಅವಮಾನ, ಅದಕ್ಕಾಗಿ ನಮಗೆ ತಗುಲಿದ ನಷ್ಟವನ್ನು ನೋಡಿದರೆ. 158 00:14:04,458 --> 00:14:07,833 ನಷ್ಟವನ್ನು ಅನುಭವಿಸಿ ರಕ್ಷಿಸಿದಾಗ, ಅದರ ಮೌಲ್ಯ ಪವಿತ್ರವಾಗುತ್ತದೆ. 159 00:14:08,708 --> 00:14:11,541 ಸೌರೊನ್‌ನ ಆಳ್ವಿಕೆಯಿಂದ ಮುಕ್ತವಾದ ಲಿಂಡೊನ್. 160 00:14:13,333 --> 00:14:15,166 ಆದರೆ ಎಷ್ಟು ಕಾಲದವರೆಗೂ? 161 00:14:15,250 --> 00:14:16,333 ಇಂದಿನ ಮೇರೆಗೆ. 162 00:14:18,041 --> 00:14:19,875 ಸದಾಶಯ ಹೊಂದಿರಲು ಅದೊಂದೇ ಸಾಕು. 163 00:14:21,375 --> 00:14:23,208 ನಾನು ಯಾವಾಗಲೂ ಆಶಯವನ್ನು ನಂಬುತ್ತೇನೆ. 164 00:14:24,833 --> 00:14:27,625 ಈಗ ಅದನ್ನು ಪಡೆಯಲು ನನ್ನ ಸೈನಿಕರು ನನ್ನನ್ನು ನಂಬುತ್ತಾರೆ, 165 00:14:27,708 --> 00:14:31,666 ಅವರಿಗೆ ಏನೋ ಒಂದು ಭರವಸೆ, ತಮ್ಮ ರಾಜನಿಗೆ 166 00:14:31,750 --> 00:14:34,333 ವಿಜಯದೆಡೆಗೆ ಹೋಗಲು ಯಾವುದೋ ರಹಸ್ಯ ದಾರಿ ಗೊತ್ತಿದೆ ಅಂತ. 167 00:14:35,708 --> 00:14:37,791 ಅವರಿಗೆ ಅದನ್ನು ಅರ್ಪಿಸಲು ನಾನು ಏನು ಬೇಕಾದರೂ ತ್ಯಾಗ ಮಾಡುವೆ. 168 00:14:38,875 --> 00:14:41,583 ಆದರೆ ಆಶಯವೇ ಕಳೆದುಹೋದಾಗ ನಾನೇನು ಮಾಡಲಿ? 169 00:14:41,666 --> 00:14:45,708 ಈ ಜಗತ್ತಿನಲ್ಲಿ ನಿಜವಾಗಲೂ ಕಳೆದುಹೋಗುವವು ಏನೆಂದರೆ... 170 00:14:47,250 --> 00:14:49,875 ನಾವು ಅವುಗಳಿಗಾಗಿ ಹುಡುಕಾಟ ನಿಲ್ಲಿಸುವ ವಿಚಾರಗಳು. 171 00:14:51,583 --> 00:14:54,333 ಮಹಾ ದೊರೆ. ಕೀರ್ದಾನ್ ಗುರುಗಳೇ. 172 00:14:55,750 --> 00:14:57,416 ನೀವು ಒಬ್ಬರನ್ನು ಕಾಣಬೇಕಾಗಿದೆ. 173 00:14:57,500 --> 00:15:00,541 ಆತ ನಮ್ಮನ್ನು ತಲುಪಲು ಶತ್ರುಪಡೆಗಳನ್ನು ದಾಟಿ ಬಂದಿದ್ದಾನೆ. 174 00:15:00,625 --> 00:15:03,000 ತಾನು ತಿಂದಷ್ಟೇ ಅವರಿಗೂ ಕೊಟ್ಟು ಬಂದಂತಿದ್ದಾನೆ. 175 00:15:03,083 --> 00:15:05,333 ಅವನ ಸುತ್ತಲೂ ಹಲವಾರು ಒರ್ಕ್ಸ್ ಸತ್ತು ಬಿದ್ದಿದ್ದರು. 176 00:15:05,416 --> 00:15:06,833 ವಾಲಾರ್ ದಯೆ, ಆತ ಬದುಕಿದ್ದಾನೆ. 177 00:15:06,916 --> 00:15:09,958 ಈಆರೇಂಡೀಲ್‌ನ ಮಗನೇ, ಮಾತಾಡು. ಇಮ್ಲಾಡ್ರಿಸ್‌ನಿಂದ ಏನು ಸುದ್ದಿ ಇದೆ? 178 00:15:11,041 --> 00:15:12,041 ಹದಿನಾರು. 179 00:15:14,125 --> 00:15:15,875 ಹದಿನಾರು ಒರ್ಕ್ಸ್‌ರ ವಿರುದ್ಧ ಹೊರಾಡಿದೆ. 180 00:15:20,458 --> 00:15:24,833 ಇದು ನಾವೆಣಿಸಿದಂತೆಯೇ ನಡೆಯಿತು. ಅದಕ್ಕಿಂತ ಭಯಾನಕವಾಗಿ. 181 00:15:24,916 --> 00:15:26,208 ಎಲ್ಲವೂ ಕಳೆದುಹೋಗಿಲ್ಲ. 182 00:15:26,833 --> 00:15:30,833 ರ್ಹುನ್‌ಗಿಂತ ಬಲಶಾಲಿಯಾದ ಇನ್ನೂ ಒಂದು ಸೈನ್ಯ ಅಲ್ಲಿದೆ. 183 00:15:32,708 --> 00:15:35,083 ನೀವು ಮನುಷ್ಯರನ್ನು ನಂಬದಿರುವುದು ಸಮಂಜಸವೇ, 184 00:15:35,166 --> 00:15:38,041 ಆದರೆ ನನ್ನ ಸಹೋದರ ಮನುಷ್ಯ ಜೀವನವನ್ನು ಆರಿಸಿಕೊಂಡ, ಯಾಕೆಂದರೆ ಅವನು ನಂಬಿದ್ದು 185 00:15:38,125 --> 00:15:41,708 ನ್ಯೂಮೆನೊರ್ ಜಗತ್ತು ಎಂದೂ ನೋಡಿರದಂತಹ ಶಕ್ತಿಯಾಗಿರಬಹುದು ಅಂತ. 186 00:15:41,791 --> 00:15:42,916 - ಎಲ್ರೊಂಡ್... - ಎಲ್ಫ್‌ಗಳು 187 00:15:43,000 --> 00:15:45,833 ಮತ್ತು ಮನುಷ್ಯರ ಉತ್ತಮರನ್ನು ಒಂದೇ ಜನರನ್ನಾಗಿ ಸೇರಿಸಬಲ್ಲಂಥ ರಾಜ್ಯವನ್ನು. 188 00:15:46,833 --> 00:15:48,541 ನಾವು ನ್ಯೂಮೆನೊರ್‌ನಿಂದ ನೆರವನ್ನು ಕೋರಬೇಕು. 189 00:15:48,625 --> 00:15:49,875 ಈಗಾಗಲೇ ಕೇಳಿದೆವು. 190 00:15:50,666 --> 00:15:52,875 ಫರಝೋನ್ ಇದನ್ನು ಕಳಿಸಿದರು. 191 00:15:59,958 --> 00:16:02,250 "ನ್ಯೂಮೆನೊರ್ ತನ್ನ ವ್ಯವಹಾರಗಳನ್ನು ನೋಡಿಕೊಳ್ಳುವಲ್ಲಿ ಮಗ್ನವಿದೆ." 192 00:16:06,333 --> 00:16:08,541 ನೀವು ಆತನ ಮಾತನ್ನು ನಂಬುವುದಿಲ್ಲ, ಅಲ್ಲವೇ? 193 00:16:10,791 --> 00:16:12,875 ಯುದ್ಧಕ್ಕೆ ಸೇರಲು ನಿಮ್ಮನ್ನು ಅವನು ಬೇಡಿಕೊಳ್ಳುತ್ತಿದ್ದಾನೆ. 194 00:16:14,833 --> 00:16:18,166 ಪ್ರತಿಫಲಾಪೇಕ್ಷೆ ಇಲ್ಲದೆ ಸೇವೆ ಮಾಡುವವನು ವಿಚಿತ್ರವಾದ ಭಿಕ್ಷುಕನೇ. 195 00:16:18,250 --> 00:16:21,166 ಮನುಷ್ಯರು ಅಹಂಕಾರಿಗಳು, ಕೀರ್ದಾನ್ ಗುರುಗಳೇ. 196 00:16:21,250 --> 00:16:23,333 ಕೀರ್ತಿ ಮತ್ತು ಪ್ರಶಂಸೆಗಾಗಿ ಹಸಿದಿರುವವರು. 197 00:16:23,416 --> 00:16:25,791 ಕೇವಲ ಒಂದು ಪತ್ರದಿಂದ ಫರಝೋನ್‌ನ ಹಸಿವು ನೀಗಲಾರದು. 198 00:16:27,583 --> 00:16:28,666 ಇಲ್ಲ. 199 00:16:30,666 --> 00:16:33,250 ನೀವು ನ್ಯೂಮೆನೊರ್‌ಗೆ ಪ್ರಯಾಣಿಸಬೇಕು, ಇಂಗರಾನ್. 200 00:16:33,333 --> 00:16:34,875 ಆತನನ್ನು ನೇರವಾಗಿ ಭೇಟಿಯಾಗಿ. 201 00:16:35,916 --> 00:16:37,250 ರಾಜನೊಂದಿಗೆ ರಾಜನಾಗಿ ಮಾತಾಡಿ. 202 00:16:37,333 --> 00:16:40,458 ನನ್ನನ್ನು ಅವನಲ್ಲಿ ಬೇಡಿಕೊಳ್ಳಲು ಕೇಳುತ್ತಿದ್ದೀಯಾ, ಯಾಕಾಗಿ? 203 00:16:40,541 --> 00:16:44,458 ನೀವು ನಿಮ್ಮ ಜನರಿಗಾಗಿ ಏನನ್ನು ಬೇಕಾದರೂ ಕೊಡಲು ಸಿದ್ಧ ಎಂಬ ಆಶಯವನ್ನು ಅವರಲ್ಲಿ 204 00:16:45,833 --> 00:16:50,000 ನೀವೇ ತರುವಂತೆ ಮಾಡಿ ಒಡೆಯ ಎಲ್ರೊಂಡ್ ನಿಮ್ಮ ಮೆಚ್ಚುಗೆ ಗಳಿಸುವರೆಂದು ನಂಬುವೆ. 205 00:16:50,750 --> 00:16:53,375 ಆದರೂ, ಮನುಷ್ಯರ ಮನಸ್ಸನ್ನು ಆಳವಾಗಿ ಅರಿತ ದೂತನೊಬ್ಬ 206 00:16:53,458 --> 00:16:55,291 ನಿಮ್ಮ ಸಂಗಡ ಸೇರಿದರೆ, 207 00:16:55,375 --> 00:16:57,541 ಅದರಿಂದ ನಿಮ್ಮ ಅವಕಾಶಗಳು ಬಲಗೊಳ್ಳಬಹುದು ಎಂದು ನನ್ನ ಅನಿಸಿಕೆ, 208 00:16:57,625 --> 00:17:02,166 ಅದರಲ್ಲೂ ಆತ ನ್ಯೂಮೆನೊರ್‌ನ ಸ್ಥಾಪನೆ ಮಾಡಿದಂಥ ವ್ಯಕ್ತಿಯಾಗಿದ್ದರೆ. 209 00:17:03,833 --> 00:17:06,208 ನನ್ನ ಮಾತನ್ನು ಒಪ್ಪುವಿರಾ, ಎಲ್ರೋಸ್‌ನ ಸೋದರನೇ? 210 00:17:21,250 --> 00:17:23,583 ನನ್ನ ತಾಯಿಯ ಬಗ್ಗೆ ನಿನಗೆ ಖಂಡಿತ ಗೊತ್ತಿರಬೇಕು. 211 00:17:25,500 --> 00:17:27,083 ನನಗೆ ವದಂತಿಗಳು ಗೊತ್ತಿವೆ. 212 00:17:28,458 --> 00:17:30,958 ಅಂದರೆ, ನೋಡು, ಆಕೆ ರಾತ್ರಿಯ ವ್ಯವಹಾರದಲ್ಲಿದ್ದಳು. 213 00:17:32,875 --> 00:17:35,708 ಎಷ್ಟೋ ವರ್ಷಗಳ ಕಾಲ, ನನ್ನ ತಂದೆಯಿಂದ ನನ್ನ ನಿಜವಾದ ಹುಟ್ಟನ್ನು ಮುಚ್ಚಿಟ್ಟಿದ್ದಳು. 214 00:17:36,958 --> 00:17:39,458 ಆತ ನನ್ನನ್ನು ತೊಟ್ಟಿಲಿನಲ್ಲೇ ಕೊಲೆ ಮಾಡಿಬಿಡಬಹುದೆಂದು ಹೆದರಿದ್ದಳು. 215 00:17:42,458 --> 00:17:45,875 ಬದಲಾಗಿ, ತನಗೆ ಸುಳ್ಳು ಹೇಳಲಾಗಿದೆ ಎಂದು ಆತ ತಿಳಿದಾಗ, ಅವಳ ಕತ್ತು ಹಿಸುಕಿ, 216 00:17:45,958 --> 00:17:47,458 ನನ್ನನ್ನು ಆತನೊಂದಿಗೆ ಕರೆದೊಯ್ದ. 217 00:17:49,666 --> 00:17:52,958 ಅಂದಿನಿಂದಲೂ, ನಾನು ಆತನ ಋಣ ತೀರಿಸಲು ಯಾವುದಾದರೂ ದಾರಿ ಹುಡುಕುತ್ತಿದ್ದೇನೆ, 218 00:17:53,041 --> 00:17:55,125 ಆತನ ಕರುಣೆಯ ಕೃತ್ಯಕ್ಕಾಗಿ. 219 00:17:58,666 --> 00:18:03,458 ನಾನು ಅದಕ್ಕೆ ಅತ್ಯಂತ ಹತ್ತಿರವಾಗಿರುವುದು ಇದೇ ಅನಿಸುತ್ತೆ. 220 00:18:05,083 --> 00:18:06,250 ಅಯ್ಯೋ ಪಾಪ. 221 00:18:09,500 --> 00:18:10,958 ಆತ ಹಿಂಜರಿದ ಅಂತೇನು? 222 00:18:11,041 --> 00:18:13,916 ನೀನು ಹುಟ್ಟಿದ ಸ್ಥಳದಿಂದ ತಪ್ಪಿಸಿಕೊಳ್ಳಲು ನಿನಗೆ ಅವಕಾಶ ಕೊಟ್ಟ ಅಂತ. 223 00:18:15,625 --> 00:18:19,583 ಆದರೆ ನೀನು ನಿನ್ನ ಇಡೀ ಜೀವನವನ್ನು ಆತನ ಪ್ರವೃತ್ತಿಗಳಿಗಾಗಿಯೇ ಮುಡುಪಾಗಿಟ್ಟು ಕಳೆದಿರುವೆ, 224 00:18:19,666 --> 00:18:21,166 ಆತನನ್ನು ಮೆಚ್ಚಿಸುವ ಸಲುವಾಗಿ. 225 00:18:22,083 --> 00:18:24,416 ನನ್ನನ್ನು ಅವಮಾನಿಸುವುದರಿಂದ ನಿನ್ನ ಕತ್ತು ಉಳಿಯುತ್ತೆ ಅಂದುಕೊಂಡೆಯಾ? 226 00:18:24,500 --> 00:18:26,000 ನಾನು ನಿನ್ನನ್ನು ಅವಮಾನಿಸುತ್ತಿರಲಿಲ್ಲಪ್ಪ. 227 00:18:26,916 --> 00:18:28,208 ಇದು ಎಷ್ಟೇ ವಿಚಿತ್ರ ಅನಿಸಿದರೂ, 228 00:18:28,291 --> 00:18:30,833 ನಿನ್ನ ಆತ್ಮಕ್ಕಾಗಿ ಒಬ್ಬ ತಂದೆಯ ದೃಷ್ಟಿಯಿಂದ ಯೋಚಿಸುತ್ತಿದ್ದೆ. 229 00:18:38,000 --> 00:18:39,708 ಆತ್ಮ ಎನ್ನುವುದು ಮೂರ್ಖರು ಮತ್ತು ಮಕ್ಕಳಿಗಾಗಿ. 230 00:18:39,791 --> 00:18:41,833 ಆದರೂ, ನಿನ್ನ ಆತ್ಮ ಬಿಡುಗಡೆಗೊಂಡಾಗ... 231 00:18:42,583 --> 00:18:44,458 ಯಾವುದೇ ಸರಪಳಿಯೂ ನಿನ್ನನ್ನು ಬಂಧಿಸಲಾರದು. 232 00:18:46,000 --> 00:18:48,333 ತನ್ನ ನಿಜವಾದ ಸ್ವಾತಂತ್ರ್ಯ ಏನೆಂದು ತಿಳಿದಾಗ 233 00:18:49,250 --> 00:18:51,083 ನಿನ್ನಂಥ ಹುಡುಗ ಏನು ಮಾಡುವನೋ ಏನೋ. 234 00:18:55,541 --> 00:18:57,166 ನಿನ್ನೊಂದಿಗೆ ಕೈಜೋಡಿಸಲು ಕೇಳುತ್ತಿದ್ದೀಯಾ? 235 00:18:57,250 --> 00:19:01,541 ಫರಝೋನ್‌ನ ಉಪಕಾರದ ಹಿಂದೆ ಬಿದ್ದು ನಿನ್ನ ತಾಯಿ ದುರಂತ ಅಂತ್ಯ ಕಂಡಳು. 236 00:19:03,791 --> 00:19:06,125 ನೀನೂ ಅದನ್ನೇ ಮಾಡಬೇಕಿಲ್ಲ, ಕೆಮೆನ್. 237 00:19:16,041 --> 00:19:16,958 ನಿಲ್ಲಿ! 238 00:19:25,750 --> 00:19:27,333 ಯಾವುದೇ ಕಾರಣಕ್ಕೂ ನಿಲ್ಲಬಾರದೆಂದು ಹೇಳಿದ್ದೆ. 239 00:19:27,416 --> 00:19:28,625 ಅದು ನಮ್ಮವರೇ, ದೊರೆ. 240 00:19:29,333 --> 00:19:31,791 ನಿಮ್ಮ ತಂದೆ ಒಂದು ತುರ್ತು ಸಂದೇಶವನ್ನು ಕಳಿಸಿದ್ದಾರಂತೆ. 241 00:19:38,958 --> 00:19:40,500 ಸರಿ, ಏನದು ಸುದ್ದಿ? 242 00:20:09,000 --> 00:20:10,208 ನಿಲ್ಲಿ! 243 00:20:11,916 --> 00:20:13,708 ಇವನು ಬದುಕಲು ಅರ್ಹನಲ್ಲ. 244 00:20:13,791 --> 00:20:16,916 ಯಾರು ಬದುಕಲು ಅರ್ಹರು ಎಂಬುದನ್ನು ಸ್ವತಃ ವಾಲಾರ್ ನಿರ್ಧರಿಸಲಿ. 245 00:20:17,000 --> 00:20:20,208 ಇವನು ಬದುಕಿದ್ದರೇನೇ ನಮಗೆ ಹೆಚ್ಚು ಪ್ರಯೋಜನ. 246 00:20:50,958 --> 00:20:53,250 ನಡೆಯೋ, ನೀಚ! 247 00:20:55,416 --> 00:20:57,583 ಇತ್ತ ಕಡೆ ಇತ್ತೀಚಿಗೆ ಯಾರೂ ಬರುವುದಿಲ್ಲ. 248 00:20:58,541 --> 00:21:01,458 ನಿಮ್ಮ ಕಲೆಯನ್ನು ಇವನ ಮೇಲೆ ಬಳಸುವುದನ್ನು ನೋಡಲು ಕಾತುರನಾಗಿದ್ದೇನೆ. 249 00:21:01,541 --> 00:21:03,666 ಕಾತುರ ತಡೆಯಲಾಗುತ್ತಿಲ್ಲ. 250 00:21:04,791 --> 00:21:06,333 ಅದನ್ನು ಎತ್ತಿಕೋ, ಎಲ್ಫ್! 251 00:21:07,166 --> 00:21:08,416 ನನಗೆ ರಾತ್ರಿಯೆಲ್ಲಾ ಸಮಯವಿಲ್ಲ. 252 00:21:09,208 --> 00:21:13,791 ಒಳ್ಳೆಯ ಹಿಂಸಾಚಾರದ ಬಗ್ಗೆ ಇತ್ತೀಚಿನ ಯುವಕರಲ್ಲಿ ಸದಭಿರುಚಿಯೇ ಇಲ್ಲ. 253 00:21:13,875 --> 00:21:15,875 ಇದೊಂದು ನಶಿಸಿಹೋಗುತ್ತಿರುವ ಕಲೆ ಅಂತಲೇ ಹೇಳುತ್ತೇನೆ. 254 00:21:53,250 --> 00:21:56,458 ಒಳ್ಳೆಯ ಕೆಲಸ, ಎಲ್ಫ್. ಚೆನ್ನಾಗಿ ನಟಿಸಿರುವೆ. 255 00:22:00,541 --> 00:22:03,708 ತುಂಬಾನೇ ಚೆನ್ನಾಗಿ ನಟಿಸಿದ್ದೇನೆ, ದಂಡನಾಯಕನೇ. 256 00:22:03,791 --> 00:22:05,833 ಸಮಾಧಾನವಾಗು, ಎಲ್ಫ್. 257 00:22:06,708 --> 00:22:11,125 ನನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದೇನೆ, ನಮ್ಮ ಒಪ್ಪಂದದಂತೆಯೇ. 258 00:22:12,416 --> 00:22:14,375 ಹೆಣ್ಣು ಎಲ್ಫ್ ತನ್ನದನ್ನು ಈಗ ನಿಭಾಯಿಸುತ್ತಿದ್ದಾಳೆ. 259 00:22:15,541 --> 00:22:19,083 ಈಗ ರಾತ್ರಿ ಎಲ್ಲ ಇಲ್ಲೇ ನಿಂತುಕೊಂಡು ನನಗೆ ಹೊಡೆಯುತ್ತೀಯಾ? 260 00:22:19,875 --> 00:22:26,458 ಅಥವಾ ನಾವು ಕುಶಲಕರ್ಮಿ ಮತ್ತು ಗಲಾದ್ರಿಯಲ್‌ಳನ್ನು ಇಲ್ಲಿಂದ ಕರೆದೊಯ್ದು ತಪ್ಪಿಸಿಕೊಳ್ಳೋಣವೇ? 261 00:22:28,708 --> 00:22:30,083 ನಾನು ಯೋಚಿಸುತ್ತಿದ್ದೇನೆ. 262 00:22:43,833 --> 00:22:45,125 ಮೈಟಾಲಿ. 263 00:22:57,041 --> 00:22:58,708 ಮೈಟಾಲಿ? 264 00:23:07,541 --> 00:23:08,750 ಸತ್ತಿದ್ದಾಳೆ. 265 00:23:10,666 --> 00:23:11,875 ಎಷ್ಟೋ ತಿಂಗಳಾಗಿದೆ. 266 00:23:13,833 --> 00:23:16,291 ಇಲ್ಲ. ಕೆಲವೇ ವಾರಗಳಾಗಿವೆ ಅನ್ನಬಹುದು. 267 00:23:21,166 --> 00:23:23,000 ನಾವು ಇಲ್ಲಿಗೆ ಬರಲೇಬಾರದಿತ್ತು. 268 00:23:23,916 --> 00:23:28,000 ಕನಿಷ್ಠ, ಅವಳು ಸೌರೊನ್ ಬಳಿ ಯಾವುದೇ ರಹಸ್ಯಗಳನ್ನು ಬಿಚ್ಚಿಡುವಳು ಎಂಬ ಭಯ ನಮಗಿಲ್ಲ. 269 00:23:31,125 --> 00:23:34,916 ನೀನು "ಹೆಣ್ಣು ಎಲ್ಫ್" ಅಂತ ಕರೆಯುವಾಕೆಗೂ ಅವೇ ರಹಸ್ಯಗಳು ತಿಳಿದಿವೆ, 270 00:23:35,000 --> 00:23:37,791 ಮತ್ತು ನಾವು ಉಳಿದ ಭಟರ ಗಮನ ತಪ್ಪಿಸಲು ಆಕೆಯನ್ನು ಬಳಸಿಕೊಂಡೆವು. 271 00:23:37,875 --> 00:23:39,416 ಆ ಉಪಾಯ ಕೊಟ್ಟಿದ್ದು ಅವಳೇ. 272 00:23:39,500 --> 00:23:42,083 ಯಾರೂ ಅಂಥ ಉಪಾಯ ಮಾಡಬಾರದಿತ್ತು. 273 00:23:42,166 --> 00:23:44,416 ನಾವು ರಿವೆನ್ಡೆಲ್ ಬಿಟ್ಟು ಬರಲೇಬಾರದಿತ್ತು. 274 00:23:50,625 --> 00:23:51,958 ಮಧ್ಯರಾತ್ರಿಯ ಪಹರೆಯವರು. 275 00:23:53,041 --> 00:23:54,791 ಅವರು ಇಲ್ಲಿಗೆ ತಲುಪಲು ಎಷ್ಟು ಸಮಯ ಬೇಕಾಗಬಹುದು? 276 00:23:57,750 --> 00:23:59,625 ನಿನಗೆ ಈ ಜಾಗ ಗೊತ್ತಿದೆ ಅಂದುಕೊಂಡಿದ್ದೆ. 277 00:23:59,708 --> 00:24:01,458 ಯಾರಿಗೂ ಇದು ಅಷ್ಟು ಚೆನ್ನಾಗಿ ತಿಳಿದಿಲ್ಲ. 278 00:24:01,541 --> 00:24:03,583 ನಿಖರವಾಗಿ ಹೇಳಬೇಕೆಂದರೆ, ಏಳು ನಿಮಿಷಗಳು. 279 00:24:03,666 --> 00:24:06,875 ಮೆಟ್ಟಿಲನ್ನು ತಲುಪಲು ನಾಲ್ಕು, ಚಾವಡಿ ದಾರಿ ತಲುಪಲು ಎರಡು, 280 00:24:06,958 --> 00:24:09,875 ಅಲ್ಲಿ ನೀವು ಕೊಂದ ಮೂವರು ಕ್ರಿಮಿಗಳನ್ನು ಕಂಡುಕೊಂಡು, ಈ ಇಡೀ ಜಾಗದ 281 00:24:09,958 --> 00:24:11,583 ದಿಗ್ಬಂಧನ ಮಾಡಲು ಇನ್ನೊಂದು ನಿಮಿಷ ಸಾಕು. 282 00:24:12,333 --> 00:24:13,458 ಮತ್ತು ನೀನು ಯಾರು? 283 00:24:13,541 --> 00:24:15,875 ನಾನು ಇಲ್ಲಿ ಅದೆಷ್ಟು ಕಾಲದಿಂದ ಇದ್ದೇನೆಂದರೆ, 284 00:24:16,958 --> 00:24:18,625 ಅದು ನನಗೇ ನೆನಪಿಲ್ಲ. 285 00:24:20,833 --> 00:24:22,458 ಆದರೂ ಒಂದು ಸಮಯವಿತ್ತು... 286 00:24:24,000 --> 00:24:25,458 ಜನರು ನನ್ನನ್ನು... 287 00:24:26,458 --> 00:24:27,875 ಕೆಲೆಬೋರ್ನ್ ಎನ್ನುತ್ತಿದ್ದರು. 288 00:24:33,708 --> 00:24:34,791 ಯಾರು? 289 00:24:35,583 --> 00:24:39,458 ಡೋರಯಥ್ ಸೇನೆ. ರಾಜ ಥಿಂಗಲ್ ಅಡಿ ಹೋರಾಡಿದ್ದೆ. 290 00:24:41,166 --> 00:24:42,875 ಹಾಗಾದರೆ ನಿಮಗೆ ನಾಯಕ ಎರೆಸ್ಟೋರ್ ಗೊತ್ತೇನೋ? 291 00:24:45,583 --> 00:24:46,625 ಅಥವಾ ನನ್ನ ಹೆಂಡತಿ? 292 00:24:46,708 --> 00:24:49,625 ವಂಶವೃಕ್ಷವನ್ನು ಹುಡುಕಲು ನಮಗೆ ಸಮಯವಿಲ್ಲ. 293 00:24:49,708 --> 00:24:51,375 ನಾವು ಹೊರಡಬೇಕು. 294 00:24:51,458 --> 00:24:54,041 ನನ್ನನ್ನೂ ನಿಮ್ಮೊಂದಿಗೆ ಕರೆದೊಯ್ಯಿರಿ. 295 00:24:54,125 --> 00:24:55,583 ಅವರು ಮೆಟ್ಟಿಲುಗಳ ಬಳಿ ಬಂದಿದ್ದಾರೆ. 296 00:24:58,083 --> 00:25:00,583 - ಹೇಳಲು ವಿಷಾದಿಸುವೆ, ಕೆಲೆಬ್ರನ್-- - ಕೆಲೆಬೋರ್ನ್. 297 00:25:01,375 --> 00:25:02,791 ಆದರೆ ಆ ಆರ್ಕ್ ಹೇಳಿದ್ದು ನಿಜ. 298 00:25:05,708 --> 00:25:07,500 ಆತನನ್ನು ಯಾವ ಕಡೆ ಕರೆದೊಯ್ಯುತ್ತಿರುವೆ, ಆರ್ಕ್? 299 00:25:08,166 --> 00:25:10,333 ಪೂರ್ವದ ದಾರಿಯ ಮೂಲಕ. ಕಡಿಮೆ ಭಟರು ಇರುವರು. 300 00:25:10,416 --> 00:25:13,291 ದಿಗ್ಬಂಧನದ ಸಮಯದಲ್ಲಿ ಅವರು ಹೆಚ್ಚು ಸೇರುವುದೇ ಪೂರ್ವದ ದಾರಿಯಲ್ಲಿ. 301 00:25:13,375 --> 00:25:14,958 ಸೆರೆಮನೆಯಧಿಕಾರಿಯ ಅಡುಗೆ ಮನೆಗೆ ಹೋಗೋಣ. 302 00:25:15,041 --> 00:25:18,000 - ಅವರು ವಾರ್ಗ್‌ಗಳನ್ನು ಇರಿಸುವೆಡೆ. - ವಾರ್ಗ್‌ಗಳೇನೂ ಇಲ್ಲ. 303 00:25:18,083 --> 00:25:20,666 ನನಗೆ ಈ ಸೆರೆಮನೆಯಲ್ಲಿರುವ ಪ್ರತಿಯೊಂದು ಮೂಲೆಯೂ ಗೊತ್ತು, ಮರದ-ಎಲ್ಫ್. 304 00:25:20,750 --> 00:25:22,625 ಪ್ರತಿಯೊಂದು ಇಟ್ಟಿಗೆ, ತಪ್ಪಿಸಿಕೊಳ್ಳಲು ಪ್ರತಿ ದಾರಿ, 305 00:25:22,708 --> 00:25:25,541 ಹಿಂಸಾಚಾರಿಗಳು ತಮ್ಮ ಪಾದರಕ್ಷೆಗಳನ್ನು ತೊಳೆಯುವ ಶೌಚಾಲಯಗಳನ್ನೂ ಬಲ್ಲೆ. 306 00:25:26,750 --> 00:25:29,541 ದಕ್ಷಿಣದ ಕಿರುಗುಮ್ಮಟ. ನೀನು ಕೇಳಿದ್ದಕ್ಕಾಗಿ. 307 00:25:29,625 --> 00:25:30,875 ನಾನು ಕೇಳಲಿಲ್ಲ. 308 00:25:30,958 --> 00:25:34,666 ಆದರೆ ನಾನು ನಿಮಗೆ ಮಾತು ಕೊಡುವೆ, ನನ್ನನ್ನು ಈ ಸೆರೆಮನೆಯಿಂದ ಹೊರಗೊಯ್ದರೆ, 309 00:25:34,750 --> 00:25:37,750 ನಾನು ನಿಮ್ಮನ್ನು ಈ ಕೋಟೆಯಿಂದ ಜೀವಂತವಾಗಿ ಹೊರಗೊಯ್ಯುವೆ. 310 00:25:55,291 --> 00:25:57,000 ನನ್ನನ್ನು ಯಾಕೆ ಇಲ್ಲಿಗೆ ಕರೆಸಿದೆ? 311 00:25:58,166 --> 00:26:00,041 ನಿನಗೂ ನನ್ನಂತೆಯೇ ಚೆನ್ನಾಗಿ ಗೊತ್ತಿದೆ. 312 00:26:00,125 --> 00:26:02,750 ನನ್ನ ತಮ್ಮನೊಂದಿಗೆ ನಾನು ಸ್ಪರ್ಧಿಸಿ ಗೆಲ್ಲದ 313 00:26:02,833 --> 00:26:04,166 ಒಂದೇ ಒಂದು ಸಂದರ್ಭವೂ ಇಲ್ಲ. 314 00:26:04,250 --> 00:26:07,041 ಈ ಬಾರಿಯೂ ನಾನು ಗೆಲ್ಲುತ್ತೇನೆ, ಮತ್ತು ನಾನು ಗೆದ್ದಾಗ, 315 00:26:07,125 --> 00:26:10,625 ಆ ಏಳು ಉಂಗುರಗಳನ್ನು ಹುಡುಕಲು ನನ್ನ ಅಧಿಕಾರದ ಸರ್ವ ಶಕ್ತಿಗಳನ್ನೂ ಬಳಸುವೆ. 316 00:26:10,708 --> 00:26:12,083 ಆತ ಅವುಗಳನ್ನು ಎಂದಿಗೂ ಬಿಟ್ಟುಕೊಡಲ್ಲ. 317 00:26:12,166 --> 00:26:13,500 ಅದನ್ನು ಅವನು ನಿರ್ಧರಿಸುವುದಿಲ್ಲ. 318 00:26:13,583 --> 00:26:14,958 ನಾನೊಂದು ದಾರಿ ಹುಡುಕುತ್ತೇನೆ. 319 00:26:16,166 --> 00:26:17,333 ಅದು... 320 00:26:18,791 --> 00:26:21,666 ಅವುಗಳನ್ನು ಮೊದಲೇ ಒಪ್ಪಿಸಲು ನೀನು ಅವನ ಮನವೊಲಿಸದಿದ್ದರೆ ಮಾತ್ರ. 321 00:26:21,750 --> 00:26:23,291 ಮತ್ತು ನಾನು ಹಾಗೆ ಯಾಕೆ ಮಾಡಲಿ? 322 00:26:23,375 --> 00:26:25,333 ಯಾಕೆಂದರೆ ಅವನು ಆ ಏಳನ್ನು ನನಗೆ ಒಪ್ಪಿಸಿದರೆ, 323 00:26:26,291 --> 00:26:28,666 ನಾನು ಸಿಂಹಾಸನದ ನನ್ನ ಹಕ್ಕನ್ನು ಬಿಡುತ್ತೇನೆ. 324 00:26:29,541 --> 00:26:32,208 ಮತ್ತು ಈ ಬೆಟ್ಟವನ್ನು ಬಿಟ್ಟುಹೋಗಿ, ಎಂದಿಗೂ ಹಿಂದಿರುಗುವುದಿಲ್ಲ. 325 00:26:34,541 --> 00:26:37,708 ನನ್ನ ಪ್ರಕಾರ, ಇದೊಂದು ನ್ಯಾಯೋಚಿತವಾದ ಅವಕಾಶ. 326 00:26:39,000 --> 00:26:41,916 ಆ ಉಂಗುರಗಳನ್ನು ನನಗೆ ಕೊಡಲು ನೀನು ಹೇಳಿದರೆ, ಅವನು ಕೊಡುತ್ತಾನೆ. 327 00:26:43,125 --> 00:26:45,041 ಅಲ್ಲವೇ, ಡಿಡಿ? 328 00:26:48,458 --> 00:26:50,166 ನನ್ನನ್ನು ಹಾಗೆಂದೂ ಕರೆಯಬೇಡ ಅಂತ ನಿನಗೆ ಹೇಳಿದೆ. 329 00:26:50,833 --> 00:26:52,625 ಹಳೆಯ ಹವ್ಯಾಸಗಳನ್ನು ಬಿಡುವುದು ಕಷ್ಟ. 330 00:26:53,541 --> 00:26:55,041 ಹಾಗಾದರೆ ಇನ್ನಷ್ಟು ಕಷ್ಟಪಡು. 331 00:27:01,000 --> 00:27:03,250 - ನೀನು ಒಂದನ್ನು ಮರೆತೆ. - ಏನು ಆ ಒಂದು? 332 00:27:03,333 --> 00:27:07,291 ಒಂದು ಬಾರಿ ನೀನು ನಿನ್ನ ತಮ್ಮನೊಂದಿಗೆ ಸ್ಪರ್ಧಿಸಲು ಪ್ರಯತ್ನಿಸಿ, ಸೋತೆ. 333 00:27:08,958 --> 00:27:12,291 ಆ ಒಂದು ಬಾರಿಯ ಬಗ್ಗೆ ಅವನಿಗೆ ಹೇಳುವಂಥವನು ನಾನಾದರೆ... 334 00:27:15,125 --> 00:27:17,541 ಉಂಗುರಗಳು ನನ್ನ ಬಾಯನ್ನು ಮುಚ್ಚಿಸಬಲ್ಲವು, ನೋಡು. 335 00:27:19,500 --> 00:27:23,750 ನಾನು ದಶಕಗಳ ಹಿಂದೆ ಮಾಡಿದ ತಪ್ಪಿನಿಂದ ಡ್ಯುರಿನ್ ಎಂದಿಗೂ ಎದೆಗುಂದುವುದಿಲ್ಲ. 336 00:27:26,458 --> 00:27:28,583 ಹಾಗಾದರೆ ನೀನು ಯಾಕೆ ಅವನಿಗೆ ಅದನ್ನೆಂದೂ ಹೇಳಿಲ್ಲ? 337 00:27:43,625 --> 00:27:45,250 ಅವನಿಗೆ ಉಂಗುರಗಳು ಬೇಕು, ಅಲ್ಲವೇ? 338 00:27:48,250 --> 00:27:49,458 ನನಗೆ ಗೊತ್ತಿತ್ತು. 339 00:27:51,375 --> 00:27:53,291 ಸೌರೊನ್ ಅವನನ್ನು ಬೆಂಬಲಿಸುತ್ತಿದ್ದಾನೆ ಎನ್ನುವೆ. 340 00:27:54,833 --> 00:27:57,541 ಆ ಹುಳು ನೆಕ್ಕುವ, ಗಲೀಜು ತಿನ್ನುವ ದರಿದ್ರ-- 341 00:27:57,625 --> 00:27:59,041 ಡ್ಯುರಿನ್, ದಯವಿಟ್ಟು ಕುಳಿತುಕೋ. 342 00:28:21,833 --> 00:28:23,750 ನಾನೊಂದು ತಪ್ಪು ಮಾಡಿದೆ. 343 00:28:26,916 --> 00:28:28,416 ಆಗ ನಾವಿಬ್ಬರೂ ಬೇರೆಯಾಗಿದ್ದೆವು. 344 00:28:29,958 --> 00:28:31,333 ನಮ್ಮ ನಡುವೆ ಮನಸ್ತಾಪವಿತ್ತು. 345 00:28:32,666 --> 00:28:34,416 ಅದು ಅಂಥ ಒಂದು ರಾತ್ರಿಯಾಗಿತ್ತು... 346 00:28:36,333 --> 00:28:39,333 ಮತ್ತು ಸೂರ್ಯ ಮೂಡಿದ ಕೂಡಲೇ ಅದನ್ನು ಮಾಡಬಾರದಿತ್ತೆಂದು ಪರಿತಪಿಸಿದೆ. 347 00:28:49,375 --> 00:28:50,791 ಥ್ರೇನ್? 348 00:28:54,833 --> 00:28:56,791 ಕೆಲವು ದಿನಗಳ ನಂತರ, ನೀನು ಹಿಂತಿರುಗಿದೆ... 349 00:28:57,958 --> 00:28:59,625 ಮತ್ತು ನನ್ನನ್ನು ವಿವಾಹವಾಗಲು ಕೇಳಿದೆ. 350 00:29:01,125 --> 00:29:03,333 ನನ್ನ ಜೀವನದಲ್ಲೇ ನಾನು ಅಷ್ಟು ಸಂತೋಷ ಅನುಭವಿಸಿರಲಿಲ್ಲ. 351 00:29:05,625 --> 00:29:06,875 ನಿಜವಾಗಲೂ ಹಾಗನಿಸಿತ್ತು. 352 00:29:08,875 --> 00:29:11,041 ನಾನು ಸೂಕ್ತ ಸಮಯಕ್ಕಾಗಿ ಕಾಯುತ್ತಾ ಇದ್ದೆ, 353 00:29:12,375 --> 00:29:14,083 ಆದರೆ ಅಲ್ಲಿ ನಿನ್ನ ತಂದೆ... 354 00:29:15,625 --> 00:29:17,791 ಮದುವೆಯ ಕಾರ್ಯಗಳನ್ನು ನಡೆಸುತ್ತಿದ್ದರು. 355 00:29:17,875 --> 00:29:19,916 ಆಮೇಲೆ, ಗೇರ್ಡಾ, 356 00:29:20,916 --> 00:29:24,416 ಮತ್ತು ಇನ್ನೂ ಹೆಚ್ಚು, ಇನ್ನೂ ಹೆಚ್ಚು, ಆಮೇಲೆ ಅದು... 357 00:29:25,541 --> 00:29:28,041 ನಮ್ಮ ಗುಹೆಯಲ್ಲಿ ಆ ವಿಷದ ಮಾತನ್ನು ಹೇಳಿದರೆ, 358 00:29:28,125 --> 00:29:30,750 ಅದು ನನಗೆ ಮಾಡಿದ ಹಾನಿಗಿಂತಲೂ ಹೆಚ್ಚಿನ ಹಾನಿ ಉಂಟುಮಾಡಬಹುದೆಂದು ಹೆದರಿದೆ. 359 00:29:34,375 --> 00:29:35,708 ಹಾಗಾಗಿ, ಅದನ್ನು ಮುಚ್ಚಿಟ್ಟೆ. 360 00:29:38,416 --> 00:29:42,333 ಈಗ ಅದು ಮರಳಿ ಮುನ್ನೆಲೆಗೆ ತಂದಿದೆ, 361 00:29:43,541 --> 00:29:47,500 ಯಾಕೆಂದರೆ ನಿನ್ನ ಅಣ್ಣ ಅದನ್ನು ಬಳಸಿಕೊಂಡು ನಮ್ಮಿಬ್ಬರನ್ನು ಬೇರ್ಪಡಿಸಲು ನೋಡುತ್ತಿದ್ದಾನೆ, 362 00:29:47,583 --> 00:29:49,791 ಅವನಿಗೆ ಸೇರದ್ದನ್ನು ಪಡೆಯುವ ಹುನ್ನಾರದಿಂದ. 363 00:29:53,583 --> 00:29:57,083 ಆದರೆ ಅದನ್ನು ತಾಳಲು ನಮ್ಮ ವಿವಾಹಬಂಧವು ತುಂಬಾ ಗಟ್ಟಿಯಾಗಿದೆ ಅಂತ ಅವನಿಗೆ ಹೇಳಿದೆ. 364 00:29:58,583 --> 00:30:03,583 ಅಷ್ಟು ಗಟ್ಟಿಯಾಗಿರುವುದನ್ನು ಇಂಥ ಯಾವ ಕ್ಷುಲ್ಲಕ ವಿಚಾರವೂ ಅಲುಗಾಡಿಸಲಾಗದು ಅಂತ. 365 00:30:07,916 --> 00:30:09,250 ದಯವಿಟ್ಟು, ಡ್ಯುರಿನ್. 366 00:30:11,416 --> 00:30:12,833 ನಾನು ಸರಿ ಹೇಳಿದೆನೆಂದು ಹೇಳು. 367 00:30:28,708 --> 00:30:31,041 - ನಮ್ಮ ಮದುವೆಗೆ ಮುಂಚೆಯೇ? - ನಮ್ಮ ಮದುವೆಗೆ ಮುಂಚೆ. 368 00:30:31,125 --> 00:30:32,333 ಆ ಮನಸ್ತಾಪ ಯಾವುದರ ಬಗ್ಗೆ-- 369 00:30:32,416 --> 00:30:34,583 ಆ ಹೆಂಡ ತಯಾರಕನ ಮಗಳ ವಿಚಾರವಾಗಿ. ಹೌದು. 370 00:30:35,291 --> 00:30:36,208 ಸರಿ. 371 00:30:38,541 --> 00:30:40,208 ಅದರ ಬಗ್ಗೆ ನನಗೆ ನನ್ನದೇ ಪಶ್ಚಾತ್ತಾಪವಿದೆ. 372 00:30:54,416 --> 00:30:55,583 ಒಮ್ಮೆಯೇ? 373 00:30:56,416 --> 00:30:57,416 ಒಮ್ಮೆಯೇ. 374 00:30:57,500 --> 00:30:59,041 ಅಂದಿನಿಂದ ಎಂದೂ ಇಲ್ಲವೇ? 375 00:30:59,125 --> 00:31:01,666 ಇಲ್ಲ. ಅಂದಿನಿಂದ ಎಂದಿಗೂ ಇಲ್ಲ. 376 00:31:02,416 --> 00:31:05,833 - ಈಗ ಇಲ್ಲವೇ? - ಔಲೆಯ ಸುತ್ತಿಗೆಯೇ! ಇಲ್ಲ. 377 00:31:10,291 --> 00:31:12,750 - ಏನೂ ಇಲ್ಲವೇ? - ಈಗ ಏನೂ ಇಲ್ಲ. 378 00:31:12,833 --> 00:31:14,125 ಬೇರೇನೂ ಇಲ್ಲ. 379 00:31:14,916 --> 00:31:17,958 ನೀನಲ್ಲದೆ ಬೇರೆ ಯಾರೂ ಇಲ್ಲ, ಪ್ರಿಯ. 380 00:31:20,041 --> 00:31:21,125 ಏನೂ ಇಲ್ಲ. 381 00:31:35,041 --> 00:31:36,125 ನೀನು ಹೇಳಿದ್ದು ಸರಿ. 382 00:31:43,375 --> 00:31:46,541 ಡ್ಯುರಿನ್, ನಾನೆಷ್ಟು ಪಶ್ಚಾತ್ತಾಪ ಪಡುತ್ತಿದ್ದೇನೆ ಅಂತ ನಿನಗೆ ಹೇಳಲಾರೆ-- 383 00:31:46,625 --> 00:31:48,208 ಅದರ ಬಗ್ಗೆ ಇನ್ನು ಹೇಳಬೇಡ. 384 00:31:50,000 --> 00:31:51,416 ಇನ್ನೊಂದು ಪದವೂ ಬೇಡ. 385 00:31:53,583 --> 00:31:57,791 ಪ್ರಸ್ತುತ, ನಾವು ಒಂದು ವಿಷಯದ ಮೇಲಷ್ಟೇ ಗಮನಹರಿಸಬೇಕು. 386 00:32:01,333 --> 00:32:03,791 ಆ ನೀಚ ನಿಕೃಷ್ಟನನ್ನು ಹೇಗೆ ಸೋಲಿಸಬೇಕು ಅಂತ. 387 00:32:09,375 --> 00:32:10,541 ನಾವಲ್ಲ. 388 00:32:12,166 --> 00:32:13,166 ನೀನು. 389 00:32:14,791 --> 00:32:16,000 ಯಾಕೆಂದರೆ ನೀನು ಹೇಳಿದ್ದು ಸರಿ. 390 00:32:18,333 --> 00:32:21,833 ನೀನು ಈಗ ಎಲ್ಲದಕ್ಕೂ ಉರಿದು ಬೀಳುವ ತಮ್ಮನಲ್ಲ. 391 00:32:23,833 --> 00:32:25,791 ನೀನು ಈ ಬೆಟ್ಟದ ರಾಜ. 392 00:32:32,750 --> 00:32:35,125 ಆ ಅಮರ್ತ್ಯನಂತೆಯೇ, 393 00:32:36,500 --> 00:32:39,833 ಆತನ ಹೆಸರಿಗೆ ನೀನೇ ಅರ್ಹನು ಎಂದು ನಿನ್ನ ತಂದೆಗೆ ತಿಳಿದಿತ್ತು. 394 00:32:40,708 --> 00:32:44,375 ಯಾಕೆಂದರೆ ನಿನ್ನ ಗುಂಡಿಗೆ ಹೆಚ್ಚು ಗಟ್ಟಿ ಎಂದು ಆತನಿಗೆ ಗೊತ್ತಿತ್ತು. 395 00:32:45,333 --> 00:32:47,416 ಸಿಂಹದಂಥ ಗುಂಡಿಗೆ. 396 00:32:48,791 --> 00:32:51,041 ಮಹಾರಾಜನ ಗುಂಡಿಗೆ. 397 00:32:52,333 --> 00:32:54,750 ಡ್ಯುರಿನ್‌ನ ಗುಂಡಿಗೆ. 398 00:33:00,708 --> 00:33:04,333 ಡ್ಯುರಿನ್! ಡ್ಯುರಿನ್! ಡ್ಯುರಿನ್! ಡ್ಯುರಿನ್! 399 00:33:27,791 --> 00:33:29,291 ಹೊಡೆದಾಡಿ! ಹೊಡೆದಾಡಿ! ಹೊಡೆದಾಡಿ! 400 00:33:29,375 --> 00:33:31,333 ಆಡಿ, ಡ್ಯುರಿನ್! ಆಡಿ! 401 00:33:34,166 --> 00:33:35,333 - ನಾರ್ವಿ! - ಆಡಿ! 402 00:33:35,416 --> 00:33:36,500 ಆಡಿ, ಥ್ರೇನ್! 403 00:33:37,166 --> 00:33:41,958 ನಮ್ಮ ಪೂರ್ವಜರು ತಾವು ಹುಟ್ಟಿದ ಜೇಡಿ ಮಣ್ಣನ್ನು ಬಿಟ್ಟು ಬಂದಾಗಿನಿಂದ 404 00:33:42,041 --> 00:33:47,083 ದ್ವಂದ್ವಯುದ್ಧದ ತೀರ್ಪುಗಳು ವಿವಾದಗಳನ್ನು ಇತ್ಯರ್ಥಪಡಿಸಿವೆ. 405 00:33:47,166 --> 00:33:48,000 - ಹೌದು! - ಹೌದು! 406 00:33:48,083 --> 00:33:51,958 ಡ್ಯುರಿನ್, ಥ್ರೇನ್, ರಾಜ ಮೂರನೇ ಡ್ಯುರಿನ್‌ನ ಪುತ್ರರೇ, 407 00:33:53,500 --> 00:33:57,083 ಔಲೆಯ ಕುಲುಮೆಯ ಅಗ್ನಿ ಮತ್ತು ಆತನ ತೀರ್ಪನ್ನು, ಜಯವಾಗಲಿ, ಪರಾಜಯವಾಗಲಿ, 408 00:33:57,166 --> 00:34:00,416 ಒಪ್ಪಿಕೊಂಡು ಸ್ವೀಕರಿಸುತ್ತೀರಾ? 409 00:34:00,500 --> 00:34:01,791 ನಾನು ಸ್ವೀಕರಿಸುವೆ. 410 00:34:01,875 --> 00:34:03,041 ಹೌದು! 411 00:34:03,958 --> 00:34:05,041 ಹೌದು. 412 00:34:07,166 --> 00:34:08,666 ನಾನು ಹೊಡೆದಾಟವನ್ನು ನೋಡಬೇಕಷ್ಟೇ. 413 00:34:21,291 --> 00:34:23,666 - ಸವಾಲನ್ನು ಸ್ವೀಕರಿಸಲಾಗಿದೆ. - ಸವಾಲನ್ನು ಸ್ವೀಕರಿಸಲಾಗಿದೆ. 414 00:34:23,750 --> 00:34:24,958 - ಹೌದು. - ಹೌದು. 415 00:34:31,541 --> 00:34:33,000 ಗಂಟೆ ಮೊಳಗಿದ ಕೂಡಲೇ, 416 00:34:33,875 --> 00:34:36,958 ಸ್ಪರ್ಧಿಗಳು ತಮ್ಮ ಅಸ್ತ್ರಗಳನ್ನು ಬಳಸಬಹುದು. 417 00:34:39,208 --> 00:34:40,541 ಆದರೆ ಚೆನ್ನಾಗಿ ಬಳಸಿ, 418 00:34:41,208 --> 00:34:44,458 ಯಾಕೆಂದರೆ ಕಡೆಯದಾಗಿ ನಿಲ್ಲುವ ಡ್ವಾರ್ಫ್‌ಗೆ ಸಿಂಹಾಸನ ಒಲಿಯುತ್ತದೆ. 419 00:34:44,541 --> 00:34:45,750 ಹೌದು! 420 00:34:47,291 --> 00:34:50,583 ಸ್ಪರ್ಧಿಗಳೇ, ನಿಮ್ಮ ಕೊಡಲಿಗಳನ್ನು ಆರಿಸಿಕೊಳ್ಳಿ! 421 00:35:03,416 --> 00:35:04,583 ಬನ್ನಿ! 422 00:35:17,166 --> 00:35:18,583 ಅವನ ಕರುಳನ್ನು ಬಗೆದುಹಾಕು. 423 00:35:20,041 --> 00:35:21,583 ಇಲ್ಲ, ಮಗನೇ. 424 00:35:22,666 --> 00:35:25,958 ರಾಜ್ಯದ ಪರಿಸ್ಥಿತಿ ಅನಿಶ್ಚಿತವಾಗಿರುವಾಗ ಕೋಪದಿಂದ ನಮ್ಮ ಬುದ್ಧಿಯನ್ನು ಮಂಕಾಗಿಸಬಾರದು. 425 00:35:26,041 --> 00:35:27,250 ಅದನ್ನು ನೆನಪಿಡು. 426 00:35:28,416 --> 00:35:31,541 ನಾನು ಅವನ ಪ್ರಜ್ಞೆ ತಪ್ಪಿಸುವಂತೆ ಹೊಡೆದರೆ ಸಾಕು. 427 00:35:31,625 --> 00:35:34,250 ನೀವು ನನಗೆ ಸುಳ್ಳು ಹೇಳಬೇಕಾಗಿಲ್ಲ, ಅಪ್ಪ. 428 00:35:35,083 --> 00:35:36,916 ಇದು ಯಾವುದರ ಬಗ್ಗೆ ಅಂತ ನನಗೆ ನಿಜವಾಗಿ ಗೊತ್ತಿದೆ. 429 00:35:38,041 --> 00:35:39,375 ನಾನು ಅವರಿಬ್ಬರನ್ನೂ ಜೊತೆಗೆ ನೋಡಿದೆ. 430 00:35:41,500 --> 00:35:43,083 ಯಾರನ್ನು ಜೊತೆಯಾಗಿ ನೋಡಿದೆ? 431 00:35:44,708 --> 00:35:45,958 ಅಮ್ಮ ಮತ್ತು ಥ್ರೇನ್‌ನನ್ನು. 432 00:35:53,875 --> 00:35:56,583 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 433 00:35:56,666 --> 00:35:59,250 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 434 00:35:59,333 --> 00:36:01,833 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 435 00:36:01,916 --> 00:36:03,875 - ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! 436 00:36:03,958 --> 00:36:08,000 - ಥ್ರೇನ್! ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! ಥ್ರೇನ್! 437 00:36:08,083 --> 00:36:09,125 ಧನ್ಯವಾದ, ಮಗನೇ. 438 00:36:13,583 --> 00:36:15,750 ಇಲ್ಲ. ಡ್ಯುರಿನ್. 439 00:36:15,833 --> 00:36:17,125 ಡ್ಯುರಿನ್, ಬೇಡ! 440 00:36:20,916 --> 00:36:22,250 ಅಪ್ಪ! 441 00:36:24,125 --> 00:36:26,375 ದಾಳಿ ಮಾಡು! ದಾಳಿ ಮಾಡು! ದಾಳಿ ಮಾಡು! 442 00:36:43,375 --> 00:36:46,541 ನಿನ್ನನ್ನು ನಂಬಬೇಕೇನು? ನಿನ್ನನ್ನು ನಂಬುವುದು! 443 00:36:50,250 --> 00:36:51,291 ಅವನನ್ನು ಸೋಲಿಸಲಿದ್ದಾನೆ! 444 00:37:06,041 --> 00:37:07,041 ಇಲ್ಲ! 445 00:37:12,916 --> 00:37:14,083 ಎದ್ದೇಳಿ, ಅಪ್ಪ. 446 00:37:14,708 --> 00:37:15,708 ಎದ್ದೇಳಿ! 447 00:37:15,791 --> 00:37:18,041 - ಥ್ರೇನ್! - ಥ್ರೇನ್! 448 00:37:18,125 --> 00:37:19,083 ಥ್ರೇನ್! 449 00:37:19,166 --> 00:37:20,875 - ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! 450 00:37:20,958 --> 00:37:23,208 ಇಲ್ಲ! ಇಲ್ಲ! 451 00:37:24,291 --> 00:37:26,791 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 452 00:37:26,875 --> 00:37:29,416 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 453 00:37:45,375 --> 00:37:49,416 ಖಜದ್-ದುಮ್‌ನ ರಾಜನಿಗೆ ಜಯವಾಗಲಿ! 454 00:37:50,333 --> 00:37:52,750 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 455 00:37:52,833 --> 00:37:55,333 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 456 00:37:55,416 --> 00:37:57,916 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 457 00:37:58,000 --> 00:38:00,625 - ಥ್ರೇನ್! ಥ್ರೇನ್! ಥ್ರೇನ್! - ಥ್ರೇನ್! ಥ್ರೇನ್! ಥ್ರೇನ್! 458 00:38:27,916 --> 00:38:30,375 ಮುಂದಿನ ದಾಟಿನಲ್ಲಿ ನಾವು ಒಬ್ಬ ಕಾವಲುಗಾರನನ್ನು ಕೊಲ್ಲಬೇಕು. 459 00:38:30,458 --> 00:38:31,541 ನನ್ನ ಸಂಜ್ಞೆಗಾಗಿ ಕಾಯಿರಿ. 460 00:38:50,458 --> 00:38:51,958 ಆ ಮೊದಲ ಇಬ್ಬರು ಕಾಲಾಳುಗಳು. 461 00:38:53,000 --> 00:38:54,541 ಈಗಿನವನು ಕಾವಲು ಪಡೆಯ ನಾಯಕ. 462 00:39:16,208 --> 00:39:18,833 ಮುಂದಿನ ಹಂತದ ಬೀಗದ ಕೈ ಇವನ ಬಳಿಯೇ ಇದೆ. 463 00:39:18,916 --> 00:39:21,291 ಇದಕ್ಕೆ ಮುಂಚೆ ನೀನು ಯಾಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿಲ್ಲ? 464 00:39:21,375 --> 00:39:23,708 ಪ್ರಯತ್ನಿಸಿದ್ದೇನೆ. ಸಮಸ್ಯೆ ಏನೆಂದರೆ... 465 00:39:25,833 --> 00:39:27,458 ಅವರು ನನ್ನನ್ನು ಮತ್ತೆ ಹಿಡಿದು ತರುತ್ತಾರೆ. 466 00:39:34,041 --> 00:39:35,541 ಮಹಡಿಯ ಮೇಲೆ ಶೌಚಾಲಯದ ಕಿಂಡಿ ಇದೆ. 467 00:39:35,625 --> 00:39:37,875 ವಾಸನೆಯನ್ನು ಸಹಿಸಿಕೊಂಡರೆ ಅಲ್ಲಿಂದಲೇ ತಪ್ಪಿಸಿಕೊಳ್ಳಬಹುದು. 468 00:39:37,958 --> 00:39:41,375 ಇರು! ನಾವು ಮೂವರು ಇದ್ದೇವೆ. ನಮ್ಮ ಸಹವರ್ತಿಯನ್ನು ಕೆಳಗಿನ ಕಾವಲುಗಾರರು ಸೆರೆಹಿಡಿದರು. 469 00:39:42,000 --> 00:39:43,000 ಕೆಳಗಡೆಯೇ? 470 00:39:44,166 --> 00:39:45,708 ಏನಾಯಿತು? 471 00:39:45,791 --> 00:39:47,458 - ಕೆಳಗಡೆ ಏನಿದೆ? - ಏನೂ ಇಲ್ಲ. 472 00:39:47,541 --> 00:39:49,875 ಅದೊಂದು ಹಿತವಾದ ಜಾಗ ಬಿಡಿ, ನಿಮ್ಮ ಸ್ನೇಹಿತನಿಗೆ ಏನೂ ಆಗಲ್ಲ. 473 00:39:49,958 --> 00:39:52,166 - ಹೋಗೋಣ. - ನಾನು ಆಕೆಯನ್ನು ಬಿಟ್ಟು ಬರಲ್ಲ. 474 00:39:53,541 --> 00:39:55,166 ನಿಮ್ಮ ಭೇಟಿ ಸಂತೋಷವಾಯಿತು. 475 00:39:56,958 --> 00:39:59,291 ಅವನ ಜೊತೆ ಹೋಗು, ಆರ್ಕ್. ನಿನ್ನ ಜೀವ ಉಳಿಸಿಕೋ. 476 00:40:00,208 --> 00:40:01,125 ಇಲ್ಲ. 477 00:40:02,125 --> 00:40:04,250 ನಾನೂ ಗಲಾದ್ರಿಯಲ್‌ಳನ್ನು ಬಿಟ್ಟು ಬರಲ್ಲ. 478 00:40:06,583 --> 00:40:07,833 ಈ ಕಡೆ ಹೋಗಬೇಕು. 479 00:41:29,375 --> 00:41:30,458 ಕೆಲೆಬೋರ್ನ್. 480 00:41:33,125 --> 00:41:34,125 ನಾನು... 481 00:41:38,458 --> 00:41:39,458 ನನ್ನನ್ನು ಹಿಂಬಾಲಿಸಿ. 482 00:41:57,333 --> 00:41:59,291 ಸೌರೊನ್‌ಗೆ ಜಯವಾಗಲಿ! 483 00:41:59,375 --> 00:42:02,833 - ಸೌರೊನ್‌ಗೆ ಜಯವಾಗಲಿ! ಸೌರೊನ್‌ಗೆ ಜಯವಾಗಲಿ! - ಸೌರೊನ್‌ಗೆ ಜಯವಾಗಲಿ! ಸೌರೊನ್‌ಗೆ ಜಯವಾಗಲಿ! 484 00:42:02,916 --> 00:42:08,166 - ಸೌರೊನ್‌ಗೆ ಜಯವಾಗಲಿ! ಸೌರೊನ್‌ಗೆ ಜಯವಾಗಲಿ! - ಸೌರೊನ್‌ಗೆ ಜಯವಾಗಲಿ! ಸೌರೊನ್‌ಗೆ ಜಯವಾಗಲಿ! 485 00:42:08,250 --> 00:42:10,708 ನನಗೆ ಗಲಾದ್ರಿಯಲ್ ಮತ್ತು ಮಾರ್ನೂಖ್ ಜೀವಂತವಾಗಿ ಬೇಕು. 486 00:42:12,541 --> 00:42:13,708 ಉಳಿದವರನ್ನು ಕೊಂದುಹಾಕಿ. 487 00:42:24,083 --> 00:42:26,333 ಇದು ಸಾಮಾನ್ಯ ಕರೆಗಂಟೆ. ಶೌಚಾಲಯದ ಕಿಂಡಿ ಈಗ ಪ್ರಯೋಜನವಿಲ್ಲ. 488 00:42:26,416 --> 00:42:29,041 - ನಾವು ಇನ್ನೊಂದು ದಾರಿ ಹುಡುಕಬೇಕು. - ಹಾಗಾದರೆ ನಿನ್ನ ಸ್ನೇಹಿತ? 489 00:42:29,125 --> 00:42:30,833 ನಾನು ಅವನನ್ನು ತಾರಸಿಯಿಂದ ಕರೆಸಿಕೊಳ್ಳಬೇಕು. 490 00:42:30,916 --> 00:42:33,041 - ಕುಶಲಕರ್ಮಿ ಎಲ್ಲಿ? - ಕುಶಲಕರ್ಮಿ ಸತ್ತಿದ್ದಾಳೆ. 491 00:42:33,125 --> 00:42:34,208 ಮೆಟ್ಟಿಲುಗಳು ಈ ಕಡೆ ಇವೆ. 492 00:42:57,458 --> 00:43:00,458 ಸರಿ. ನಾನು ಶರಣಾಗುವೆ. 493 00:43:01,166 --> 00:43:03,000 ಇದುವರೆಗೂ ಇದೊಂದು ತಮಾಷೆಯಾಗಿತ್ತು. 494 00:43:03,791 --> 00:43:05,291 ನಾನು ನಿಮ್ಮಲ್ಲಿ ಒಬ್ಬನು. 495 00:44:05,958 --> 00:44:06,791 ಈ ಕಡೆ! 496 00:44:15,125 --> 00:44:16,041 ಹೋಗಿ! 497 00:44:33,625 --> 00:44:35,000 ಅವಳ ನೆರೆಯವನ ಬಗ್ಗೆ ಹೇಳು. 498 00:44:36,083 --> 00:44:37,666 ಅವನ ಹೆಸರು ಕೆಲೆಬೋರ್ನ್. 499 00:44:37,750 --> 00:44:40,000 ಯಾಕೆ? ಅವನು ಯಾರು? 500 00:44:40,083 --> 00:44:41,708 ಅವರು ತಾರಸಿಯ ಕಡೆಗೆ ಹೋಗುತ್ತಿದ್ದಾರೆ! 501 00:45:28,125 --> 00:45:29,625 ಅವರು ನಮ್ಮ ಹಿಂದೆಯೇ ಇದ್ದಾರೆ! 502 00:45:30,375 --> 00:45:31,458 ಹಿಂದಕ್ಕೆ ಹೋಗಿ! 503 00:45:43,000 --> 00:45:45,083 ಒಡತಿ ಗಲಾದ್ರಿಯಲ್, ನೀವು ದೂರ ಹೋಗಿ! 504 00:45:56,166 --> 00:45:57,500 ಲ್ಯಾಂಡ್ರೋವಲ್. 505 00:45:58,541 --> 00:46:00,166 ಗರುಡಗಳ ರಾಜ. 506 00:47:11,541 --> 00:47:12,375 ಅರೊಂಡೀರ್! 507 00:47:28,083 --> 00:47:29,625 ನೀನು ನಮ್ಮ ಜೊತೆ ಬರುವೆ. 508 00:47:36,041 --> 00:47:38,833 ಓಡು, ಅರೊಂಡೀರ್! ಓಡು! 509 00:47:40,416 --> 00:47:42,583 ನಾನು ಛಾಯೆಯಿಂದ ದೂರ ಓಡಲ್ಲ. 510 00:47:44,750 --> 00:47:46,750 ನೀನು ಅವಳ ಮಾತನ್ನು ಕೇಳಬೇಕು. 511 00:47:50,583 --> 00:47:52,500 ಹೊರಡು! ಈಗಲೇ! 512 00:48:27,583 --> 00:48:30,791 ಅವನಿಗೆ ಬೇಕಿರುವುದು ಅವರು. ಹೊರಟುಹೋಗು. 513 00:48:39,625 --> 00:48:41,125 ಮೂರ್ಖನಂತೆ ಆಡಬೇಡ. 514 00:48:41,208 --> 00:48:43,875 ಹೇಗಾದರೂ ಸರಿ, ನಾನು ಅವರನ್ನು ಎದುರಿಸುತ್ತೇನೆ. 515 00:48:45,250 --> 00:48:46,250 ಇಲ್ಲ. 516 00:48:48,375 --> 00:48:49,750 ನಾನು ನಿನ್ನನ್ನು ಕರೆದೊಯ್ಯುವೆ. 517 00:48:53,083 --> 00:48:55,708 - ನಾವು ಇಲ್ಲಿಂದ ಒಟ್ಟಿಗೆ ಹೋಗೋಣ. - ನಾನು ಹೋಗು ಅಂದೆ! 518 00:49:05,666 --> 00:49:06,916 ಉಂಗುರವನ್ನು ತೆಗೆದುಹಾಕು. 519 00:49:07,000 --> 00:49:08,208 ಅವನು ಬರುತ್ತಿದ್ದಾನೆ. 520 00:49:09,708 --> 00:49:11,791 ನಿನ್ನನ್ನು ಹಿಂದೊಮ್ಮೆ ಬಿಟ್ಟು ಹೋಗಿದ್ದೆ, ಥಿಯೋ. 521 00:49:14,208 --> 00:49:15,833 ನಾನು ಮತ್ತೊಮ್ಮೆ ಹಾಗೆ ಮಾಡಲ್ಲ. 522 00:49:21,000 --> 00:49:22,083 ಈ ಬಾರಿಯಾದರೂ... 523 00:49:24,208 --> 00:49:25,666 ನಿನಗೆ ಸಹಾಯವಾಗಲು ಬಿಡು. 524 00:49:54,291 --> 00:49:55,291 ಅವನನ್ನು ಕೊಂದುಹಾಕಿ. 525 00:49:57,541 --> 00:49:58,791 ಇಲ್ಲ! 526 00:50:10,083 --> 00:50:11,166 ಇಲ್ಲ! 527 00:51:20,458 --> 00:51:21,458 ಬಿಡಿ ಅವನನ್ನು. 528 00:54:15,958 --> 00:54:17,958 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 529 00:54:18,041 --> 00:54:20,041 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ