1 00:00:06,000 --> 00:00:09,000 ಸೌರೊನ್ಗಾಗಿ ಹುಡುಕುವಾಗಲೇ ನಮ್ಮಣ್ಣ ಪ್ರಾಣತೆತ್ತ. 2 00:00:09,083 --> 00:00:10,833 ಅವನ ಕೆಲಸ ಈಗ ನನ್ನದು. 3 00:00:12,250 --> 00:00:13,791 ಸೇನಾಧಿಪತಿ ಗಲಾಡ್ರಿಯಲ್. 4 00:00:13,916 --> 00:00:17,375 ಈ ದಳ ನಿಮ್ಮನ್ನು ಪ್ರಪಂಚದ ಅಂಚಿನವರೆಗೂ ಹಿಂಬಾಲಿಸಿದೆ. 5 00:00:17,500 --> 00:00:20,000 ಕೊನೆಯ ಓರ್ಕ್ ಕಾಣಿಸಿಕೊಂಡು ವರ್ಷಗಳೇ ಆಗಿದೆ. 6 00:00:21,125 --> 00:00:24,458 ಈ ಗುರುತು ಇದೆ ಅನ್ನೋದೇ ಸೌರೊನ್ ತಪ್ಪಿಸಿಕೊಂಡಿರೋದರ ಸಾಕ್ಷಿ. 7 00:00:24,833 --> 00:00:26,208 ಆದರೆ ಎಲ್ಲಿ ಅನ್ನೋದೇ ಪ್ರಶ್ನೆ. 8 00:00:26,291 --> 00:00:27,166 ಕೆಟ್ಟದ್ದು ಕಳೀತು. 9 00:00:27,250 --> 00:00:29,708 ಮತ್ತದು ಇಲ್ಲಿಂದ ಯಾಕೆ ಹೋಗಿಲ್ಲ? 10 00:00:29,791 --> 00:00:35,166 ಈ ವೀರರಿಗೆ ಶಾಶ್ವತವಾಗಿ ವಾಸಿಸಲು ಸಮುದ್ರದ ಮೂಲಕ ಹಾದಿ ನೀಡಲಾಗುತ್ತದೆ. 11 00:00:35,291 --> 00:00:37,416 ತುಂಬಾ ಕಾಲ ಸೆಣೆಸಾಡಿದ್ದೀಯ, ಗಲಾಡ್ರಿಯಲ್. 12 00:00:38,625 --> 00:00:39,625 ಕತ್ತಿಯನ್ನ ದೂರ ಇಡು. 13 00:00:39,916 --> 00:00:41,416 ಅದಿಲ್ಲದೆ ನಾನೇನಾಗಬೇಕು? 14 00:00:45,125 --> 00:00:48,833 ಲಾರ್ಡ್ ಕೆಲಿಬ್ರೀಂಬೋರರ ಕಾರ್ಯದ ಪರಿಚಯ ನಿನಗಿದೆಯಾ? 15 00:00:48,916 --> 00:00:51,250 ಎಲ್ಫ್ ಕುಶಲಕರ್ಮಿಗಳಲ್ಲೇ ಮಹಾನ್ ವ್ಯಕ್ತಿ, ಹೌದು. 16 00:00:52,791 --> 00:00:54,291 ಅವರಲ್ಲೊಬ್ಬ ಇಲ್ಯಾಕಿದ್ದಾನೆ? 17 00:00:56,041 --> 00:00:58,041 ಅವಳಿಗೆ ಏನೋ ರೋಗ ಬಂದಿದೆ. 18 00:00:58,166 --> 00:01:01,458 -ಎಲ್ಲಿ ಮೇಯ್ತಾ ಇತ್ತು? -ಹಿಂದೊಮ್ಮೆ ಪೂರ್ವಕ್ಕೆ ಹೋಗಿತ್ತು. 19 00:01:01,541 --> 00:01:02,375 ಪೂರ್ವಕ್ಕೆಲ್ಲಿ? 20 00:01:02,666 --> 00:01:03,500 ಹೋರ್ಡರ್ನ್... 21 00:01:08,000 --> 00:01:10,791 ನಿನಗನಿಸಿಲ್ವಾ ಅಲ್ಲಿ ಇನ್ನೇನಿದೆ ಅಂತ? 22 00:01:10,916 --> 00:01:12,166 ನಮ್ಮ ಅಲೆದಾಟ ಮೀರಿ. 23 00:01:12,250 --> 00:01:14,833 ಯಾರೂ ದಾರಿ ತಪ್ಪಲ್ಲ, ಯಾರೂ ಒಂಟಿಯಾಗಿ ಹೋಗಲ್ಲ. 24 00:01:15,791 --> 00:01:18,458 ಆಕಾಶ ವಿಚಿತ್ರವಾಗಿದೆ. 25 00:02:38,208 --> 00:02:44,041 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 26 00:03:56,208 --> 00:03:58,458 -ನೋರಿ! -ಪೋಪ್ಪಿ! 27 00:03:58,541 --> 00:04:01,791 ನಿಂಗೇನು ತಲೆ-ಗಿಲೆ ಕೆಟ್ಟಿದೆಯಾ? ಅಲ್ಲಿಂದ ದೂರ ಹೋಗು! 28 00:04:02,541 --> 00:04:04,666 ಹಾಗೆಲ್ಲಾ ಯಾರನ್ನೂ ಹಿಂಬಾಲಿಸಬಾರದು. 29 00:04:04,750 --> 00:04:06,000 ನೀನಿಲ್ಲಿ ಇರಬಾರದು. 30 00:04:11,958 --> 00:04:13,125 ಬಿಸಿನೇ ಇಲ್ಲ. 31 00:04:13,208 --> 00:04:14,583 ಸರಿ. ಬಿಸಿ ಇಲ್ಲ. 32 00:04:14,666 --> 00:04:17,875 ಅಲ್ಲೊಬ್ಬ ದೈತ್ಯ ಇರೋದಂತೂ ಸುಳ್ಳಾಗಲ್ಲ. 33 00:04:18,250 --> 00:04:21,708 ಆ ಮುಖ ಮಾಡ್ತಿದ್ದಾಳೆ. ಆ ಮುಖ ಬೇಡ, ನೋರಿ... 34 00:04:23,625 --> 00:04:24,458 ನೋರಿ! 35 00:04:25,958 --> 00:04:26,791 ನೋರಿ, ಬೇಡ! 36 00:04:43,458 --> 00:04:46,458 ನೋರಿ, ಬೇಡ! ಅವನು ಸತ್ತಿದ್ದಾನೆ! ಬಾ! 37 00:04:49,583 --> 00:04:52,791 ಇಲ್ಲ! ಬೇಡ! ದಯವಿಟ್ಟು! 38 00:05:06,583 --> 00:05:07,708 ಇಲ್ಲ! 39 00:05:26,083 --> 00:05:27,083 ಏನು... 40 00:05:37,125 --> 00:05:38,458 ನಿಮ್ಮಮ್ಮ ನಿನ್ನ ಸಾಯಿಸ್ತಾಳೆ. 41 00:05:40,375 --> 00:05:44,541 ಅವಳಿಗೆ ಹೇಳಬೇಡ. ನಾನೂ ಹೇಳಲ್ಲ. ಬೇಗ. 42 00:05:44,625 --> 00:05:47,041 ಇವನನ್ನ ಇಲ್ಲೇ ಬಿಡೋಕಾಗಲ್ಲ, ತೋಳಗಳು ಬರ್ತವೆ. 43 00:05:47,125 --> 00:05:48,916 -ಆದ್ರೆ? -ಅದು ನಮ್ಮ ಸ್ವಭಾವ ಅಲ್ಲ. 44 00:05:49,000 --> 00:05:50,291 ಅದು ನಿನ್ನ ಸ್ವಭಾವ ಅಲ್ಲ. 45 00:05:50,375 --> 00:05:53,625 ನನಗೊಬ್ಬಳಿಗೇ ಅವನನ್ನ ಹೊರೋಕಾಗಲ್ಲ. ಸಹಾಯ ಮಾಡ್ತೀಯಾ ಇಲ್ವಾ? 46 00:05:53,708 --> 00:05:54,958 -ಇಲ್ಲ. -ಪೋಪ್ಪಿ! 47 00:05:55,708 --> 00:05:58,333 ಈ ದೈತ್ಯನನ್ನ ನಾವು ಹೊರೋದಾದ್ರೂ ಹೇಗೆ? 48 00:05:59,916 --> 00:06:01,666 ನಕ್ಷತ್ರ ಬಿದ್ದಿರಬೇಕು. 49 00:06:03,958 --> 00:06:05,666 ದೊಡ್ಡದು. 50 00:06:05,750 --> 00:06:08,166 ಇನ್ನೂ ಎಷ್ಟು ಸಂಜ್ಞೆಗಳು ಬೇಕು? 51 00:06:09,083 --> 00:06:12,250 ನನ್ನ ಕೇಳಿದ್ರೆ, ನಾವೀಗಲೇ ಜಾಗ ಖಾಲಿ ಮಾಡಿ ಹೋಗಬೇಕು. 52 00:06:12,333 --> 00:06:13,541 ಹಾಗಿದ್ರೆ ಹಬ್ಬ? 53 00:06:13,625 --> 00:06:15,833 ಈಗಲೇ ದುಡುಕಿ ಏನನ್ನೂ ಮಾಡೋದು ಬೇಡ. 54 00:06:15,916 --> 00:06:18,916 ನಾವು ಹೊರಗಿಗಿಂತ ಬಿಡಾರದಲ್ಲಿ ಇರೋದೇ ಸುರಕ್ಷಿತ. 55 00:06:19,541 --> 00:06:21,541 ಆದರೂ ನೀವಿಬ್ರೂ ಒಂದು ಕಣ್ಣಿಟ್ಟಿರಿ. 56 00:06:21,625 --> 00:06:23,333 -ಮಲ್ವಾ ಹೇಳಿದ್ದು ಸರಿ. -ಹೌದು. 57 00:06:23,416 --> 00:06:26,125 ಇದು ಶುಭಶಕುನ ಅಲ್ಲ. 58 00:06:26,208 --> 00:06:28,041 ಈಗ, ಹೊರಡು. ಹೋಗು. 59 00:06:29,333 --> 00:06:32,333 -ಸರಿ... -ಹೋಗು. ಬೇಗ. 60 00:06:52,458 --> 00:06:54,458 ನೋಡಿ ಅವನನ್ನ. ಎಷ್ಟು ರಕ್ತ ಹೋಗ್ತಿದೆ. 61 00:06:54,541 --> 00:06:56,833 -ಅವನೊಬ್ಬ... -ರಾಕ್ಷಸನಲ್ಲ! 62 00:06:56,916 --> 00:06:59,333 ಆಯ್ತಮ್ಮ, ಬುದ್ಧಿವಂತೆ. ಇನ್ನೇನವನು? 63 00:07:00,291 --> 00:07:02,166 ದೊಡ್ಡ ಮನುಷ್ಯ ಇರಬಹುದು. 64 00:07:02,250 --> 00:07:03,666 ಮನುಷ್ಯನಾ? 65 00:07:03,750 --> 00:07:05,666 ಇಲ್ವೇ ಇಲ್ಲ. ಪಚ್ಚಡಿ ಆಗಿರ್ತಿದ್ದ. 66 00:07:05,750 --> 00:07:07,000 ಎಲ್ಫ್ ಆಗಿರಬಹುದಾ? 67 00:07:07,500 --> 00:07:10,208 ಕಿವಿ ಹಾಗಿಲ್ಲ. ನೋಡಕ್ಕೂ ಏನು ಚೆನ್ನಾಗಿಲ್ಲ. 68 00:07:11,166 --> 00:07:12,916 ಎಲ್ಫ್ಗಳು ಆಕಾಶದಿಂದ ಉದುರಲ್ಲ. 69 00:07:13,000 --> 00:07:14,791 ಯಾರೂ ಉದುರಲ್ಲ. ನನಗೆ ಗೊತ್ತಿರೋ ಹಾಗೆ. 70 00:07:14,875 --> 00:07:15,875 ಇವನು ಉದುರಿದ. 71 00:07:15,958 --> 00:07:18,708 -ಎಳೀತಾ ಇದ್ದೀಯಾ ಏನು? -ಹೌದು, ಎಳೀತಿದ್ದೀನಿ! 72 00:07:18,791 --> 00:07:20,291 ಇನ್ನೂ ಜೋರಾಗಿ ಎಳಿ! 73 00:07:21,916 --> 00:07:24,458 ಅಸಾಧ್ಯ. ಆ ಹಳೇ ಬಂಡಿಯಲ್ಲಿ ಇವನು ಹಿಡಿಸಲ್ಲ. 74 00:07:24,541 --> 00:07:25,958 ಒಂದು ರಾತ್ರಿಗಷ್ಟೇ. 75 00:07:26,041 --> 00:07:29,916 ಬೆಳಿಗ್ಗೆ ಅವನಿಗೇನಾದ್ರು ಊಟ ಕೊಟ್ಟು ಕಳಿಸಿಬಿಡೋಣ. 76 00:07:30,000 --> 00:07:32,375 -ಎಲ್ಲಿಗೆ? -ಅದನ್ನ ನಾಳೆ ನೋಡಿಕೊಳ್ಳೋಣ. 77 00:07:32,458 --> 00:07:35,166 -ಇದೇನು ಆಟಾನಾ? -ಅಂದರೆ? 78 00:07:35,250 --> 00:07:37,958 -ನನಗೆ ಇದೇನೂ ಬೇಕಿರಲಿಲ್ಲ. -ಈಗ ವಾಪಸ್ ಹೋಗಬೇಡ. 79 00:07:38,041 --> 00:07:40,541 -ಯಾಕಂದ್ರೆ ನನಗಾಗಲ್ಲ. -ಯಾಕಂದ್ರೆ ನೀನು ಹೋಗಲ್ಲ. 80 00:07:40,625 --> 00:07:43,458 ಈ ಆಗಂತುಕ ಮನುಷ್ಯನೋ, ಎಲ್ಫೋ, 81 00:07:43,541 --> 00:07:45,500 ಅಥವಾ ಯಾವುದೋ ರೆಕ್ಕೆ ಮುರಿದ ಹದ್ದಲ್ಲ. 82 00:07:45,583 --> 00:07:48,083 -ಅದು ಆಗ. -ಇವನು ಬೇರೆ ಏನೋ. 83 00:07:51,125 --> 00:07:52,791 ಇವನು ಅಪಾಯಕಾರಿ ಇರಬಹುದು. 84 00:07:52,875 --> 00:07:55,083 ಮಲ್ವಾ ಮತ್ತು ಸೋದರಿಯರಂತೇ ಮಾತಾಡ್ತಿದ್ದೀಯ. 85 00:07:55,166 --> 00:07:56,291 ಅವರಷ್ಟೇ ಅಲ್ಲ. 86 00:07:56,375 --> 00:07:58,833 ಈ ಅಪರಿಚಿತನಿಗೆ ಸಹಾಯ ಮಾಡಿದ್ದು ಗೊತ್ತಾದ್ರೆ 87 00:07:58,916 --> 00:08:01,708 ಮತ್ತು ಮುಂದಿನ ಮೂರು ಮಾಸಗಳು ಏನಾದ್ರೂ ಕೆಟ್ಟದು ಆದ್ರೆ 88 00:08:01,791 --> 00:08:03,083 ತಪ್ಪು ನಮ್ಮದೇ ಆಗಿರುತ್ತೆ. 89 00:08:03,166 --> 00:08:06,458 ಮಂಜು ಜಾಸ್ತಿ ಕಾಲ ಇದ್ದರೆ ಚಕ್ರ ದಾರಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೆ. 90 00:08:07,291 --> 00:08:09,750 -ಅಯ್ಯೋ ದೇವರೇ! -ಬೇಗ, ಅದು ಅಪ್ಪಳಿಸೋದರೊಳಗೆ! 91 00:08:09,833 --> 00:08:11,375 ಈಗ ಅವನ ಬಗ್ಗೆ ಯೋಚಿಸ್ತಿದ್ದೀಯ. 92 00:08:11,458 --> 00:08:13,958 ಅಲ್ಲ! ಈ ಬಂಡಿ, ಇದು ನಂದಲ್ಲ! 93 00:09:01,208 --> 00:09:02,708 ಯಾಕಿಂಗೆ ಮಾಡ್ತಿದ್ದೀಯ, ನೋರಿ? 94 00:09:03,958 --> 00:09:05,750 ಅವನು ನನ್ನ ಜವಾಬ್ದಾರಿ ಅನ್ಸುತ್ತೆ. 95 00:09:05,833 --> 00:09:08,250 -ಎಲ್ರೂ ನಿನಗೆ ಹಾಗೇ ಅನ್ಸೋದು. -ಇಲ್ಲ. 96 00:09:09,125 --> 00:09:10,625 ಇದು ಬೇರೆ. 97 00:09:15,916 --> 00:09:18,750 ಅವನು ಎಲ್ಲಾದ್ರೂ ಬೀಳಬಹುದಿತ್ತು, ಆದರೆ ಇಲ್ಲಿ ಬಂದು ಬಿದ್ದ. 98 00:09:21,041 --> 00:09:25,875 ಕೇಳೋಕೆ ವಿಚಿತ್ರ ಅನ್ನಿಸಿದರೂ ಅವನು ಮುಖ್ಯ ಅಂತ ನನಗ್ಯಾಕೋ ಅನ್ಸುತ್ತೆ. 99 00:09:27,333 --> 00:09:29,833 ಇದೆಲ್ಲಾ ಆಗೋಕೆ ಏನೋ ಕಾರಣ ಇದ್ದ ಹಾಗೆ. 100 00:09:29,916 --> 00:09:32,625 ನಾನೇ ಅವನನ್ನ ಕಂಡುಹಿಡಿಯಬೇಕಾದ ಹಾಗೆ. ನಾನು. 101 00:09:34,125 --> 00:09:37,625 ನಾನು ಹಾಗೆ ಬಿಟ್ಟು ಹೋಗೋಕಾಗಲ್ಲ. ಅವನು ಸುರಕ್ಷಿತ ಅಂತ ತಿಳಿಯೋವರೆಗೂ. 102 00:09:40,541 --> 00:09:41,583 ನೀನು? 103 00:09:44,666 --> 00:09:46,250 ಸರಿ. ನಾನು ಯಾರಿಗೂ ಹೇಳಲ್ಲ. 104 00:09:48,625 --> 00:09:49,875 ಧನ್ಯವಾದ. 105 00:09:53,333 --> 00:09:55,750 ಒಬ್ಬ ದೈತ್ಯ ಏನು ತಿಂತಾನೆ ಅಂತ? 106 00:09:55,833 --> 00:09:57,791 ಹಾರ್ಫೂಟ್ಸ್ ಆಗದೇ ಇದ್ದರೆ ಸಾಕು. 107 00:09:57,875 --> 00:10:00,375 ರಹಸ್ಯ ಇಟ್ಕೊಳಕ್ಕೆ ಆಗದವರನ್ನ ಮಾತ್ರ. 108 00:10:29,000 --> 00:10:33,166 ಭೂಮಿ ಬಿರುಕು ಬಿಟ್ಟುಕೊಂಡಿದೆ. ಭೂಕಂಪದಲ್ಲಿ ಆದಂಗೆ. 109 00:10:35,416 --> 00:10:36,500 ಶವಗಳಿಲ್ಲ. 110 00:10:39,208 --> 00:10:40,583 ಗಾಯಾಳುಗಳಿಲ್ಲ. 111 00:10:40,666 --> 00:10:42,083 ಎಲ್ಲರೂ ಓಡಿ ಹೋದರೇನೋ. 112 00:10:43,083 --> 00:10:44,250 ಇರಬಹುದು. 113 00:10:59,375 --> 00:11:00,791 ಇದು ಕಿಯಾರನ್ ಮನೆಯಾಗಿತ್ತು. 114 00:11:01,458 --> 00:11:05,500 ಮತ್ತು... ಹಾನಾ. ಅವನ ಹೆಂಡತಿ ಹೆಸರು ಹಾನಾ. 115 00:11:08,958 --> 00:11:12,291 ಇದು ಭೂಕಂಪ ಅಲ್ಲ. ಯಾರೋ ದಾರಿ ಅಗೆದಿದ್ದಾರೆ. 116 00:11:12,375 --> 00:11:13,541 ಏನೋ ಅಗೆದಿದೆ. 117 00:11:14,333 --> 00:11:15,750 ಇದನ್ನ ಮನುಷ್ಯರು ಮಾಡಿಲ್ಲ. 118 00:11:15,833 --> 00:11:18,208 ಹೋಗು. ನಿಮ್ಮವರನ್ನ ಎಚ್ಚರಿಸು. 119 00:11:18,625 --> 00:11:20,166 ನೀನು ಜೊತೆಗೆ ಬರಲ್ವಾ? 120 00:11:20,250 --> 00:11:21,916 ಈ ದಾರಿಯನ್ನೇ ಅನುಸರಿಸಿ ಹೋಗ್ಬೇಕು. 121 00:11:22,000 --> 00:11:25,833 -ಅಲ್ಲೇನಿದೆ ನಿನಗೆ ಗೊತ್ತಿಲ್ಲ. -ಅದಕ್ಕೇ ನಾನು ಹೋಗ್ಬೇಕು. 122 00:11:55,625 --> 00:11:59,208 ಎರೆಗಿಯೊನ್ ಎಲ್ವೆನ್ ಕುಶಲಕರ್ಮಿಗಳ ಸಾಮ್ರಾಜ್ಯ 123 00:12:05,625 --> 00:12:06,958 ಫೆಯಾನೋರನ ಸುತ್ತಿಗೆ. 124 00:12:08,833 --> 00:12:11,666 ಸಿಲ್ಮರಿಲ್ಸನ್ನ ಪಳಗಿಸಿದ ಆಯುಧ. 125 00:12:13,583 --> 00:12:16,500 ವಾಲಿನೊರ್ನ ಬೆಳಕನ್ನು ಹಿಡಿದಿಟ್ಟುಕೊಂಡಿರುವ ಆಭರಣಗಳು. 126 00:12:17,333 --> 00:12:18,666 ವಿಚಿತ್ರ, ಅಲ್ವಾ? 127 00:12:19,500 --> 00:12:23,333 ಒಂದೇ ವಸ್ತು ಎಷ್ಟೆಲ್ಲಾ ಸೌಂದರ್ಯವನ್ನು ಸೃಷ್ಟಿಸಿದೆ... 128 00:12:24,416 --> 00:12:25,666 ಜೊತೆಗೆ ನೋವನ್ನು ಕೂಡ. 129 00:12:26,250 --> 00:12:29,375 ನಿಜವಾದ ಸೃಷ್ಟಿಗೆ ತ್ಯಾಗ ಬೇಕು. 130 00:12:31,333 --> 00:12:35,750 ಮಾರ್ಗೋಥಿಗೆ ಸಿಲ್ಮರಿಲ್ಸ್ ಎಷ್ಟು ಅಂದವಾಗಿ ಕಂಡಿತಂದ್ರೆ 131 00:12:37,083 --> 00:12:39,083 ಅವನ್ನ ಕದ್ದ ಮೇಲೆ ವಾರಗಳಷ್ಟು ಕಾಲ 132 00:12:39,166 --> 00:12:41,875 ಅವುಗಳ ಆಳಕ್ಕೆ ನೋಡ್ತಾನೇ ಇದ್ದುಬಿಟ್ಟ. 133 00:12:43,125 --> 00:12:46,333 ಅವನದೊಂದು ಕಂಬನಿ ಆಭರಣಗಳ ಮೇಲೆ ಬಿದ್ದಾಗ 134 00:12:46,416 --> 00:12:49,291 ಮತ್ತು ತನ್ನದೇ ದುಷ್ಟತನದ ಪ್ರತಿಬಿಂಬವನ್ನು ನೋಡಿದಾಗಲೇ 135 00:12:49,375 --> 00:12:51,541 ಅವನ ಸಂಭ್ರಮ ಮುರಿದಿದ್ದು. 136 00:12:53,000 --> 00:12:55,166 ಆ ಕ್ಷಣದಿಂದ ಅವನು... 137 00:12:55,250 --> 00:12:57,416 ಅವುಗಳ ಬೆಳಕಿನ ಕಡೆ ನೋಡಲೇ ಇಲ್ಲ. 138 00:13:00,500 --> 00:13:04,666 ಫೆಯಾನೋರನ ಕೆಲಸ ಗ್ರೇಟ್ ಫೋನ ಹೃದಯವನ್ನೇ ಕರಗಿಸಿಬಿಡ್ತು. 139 00:13:06,791 --> 00:13:08,708 ನಂದು ಏನನ್ನ ಸಾಧಿಸಿದೆ? 140 00:13:09,625 --> 00:13:12,125 ನನ್ನ ಹೃದಯವನ್ನೂ ಕರಗಿಸಿದೆ, ಒಡೆಯ. 141 00:13:12,208 --> 00:13:13,791 ಎಷ್ಟೋ ಎಲ್ಫ್ಗಳ ಹೃದಯವನ್ನ. 142 00:13:15,000 --> 00:13:17,791 ಆದರೆ ಅದಕ್ಕಿಂತಲೂ ಹೆಚ್ಚು ಮಾಡೋ ಆಸೆ ನನಗೆ. 143 00:13:18,666 --> 00:13:21,250 ಯುಗದ ಹಿಂದೆ ನಮ್ಮವರು ಈ ತೀರಗಳಿಗೆ ಯುದ್ಧವನ್ನು ತಂದರು. 144 00:13:21,333 --> 00:13:22,958 ಅವರಿಗೆ ಸೌಂದರ್ಯವ ಕೊಡ್ಬೇಕು. 145 00:13:23,041 --> 00:13:27,708 ಬರೀ ಆಭರಣ ಮಾಡ್ಕೊಂಡು ಇರೋ ಬದಲು ನೈಜ ಶಕ್ತಿ ಇರೋದನ್ನ ತಯಾರಿಸಬೇಕು. 146 00:13:28,333 --> 00:13:30,250 ಏನನ್ನ ತಯಾರಿಸಬೇಕು ಅಂದುಕೊಂಡಿದ್ದೀರ? 147 00:13:30,333 --> 00:13:33,750 "ಏನು" ಅನ್ನೋದೇ ಇನ್ನೂ ಮರೀಚಿಕೆಯಾಗಿದೆ. 148 00:13:33,833 --> 00:13:39,250 "ಹೇಗೆ" ಸಾಧಿಸಬೇಕು ಅಂತ ನನಗೆ ನೆರವಾಗಲೆಂದೇ ನೀನು ಎರೆಗಿಯೊನಿಗೆ ಬಂದಿದ್ದೀಯ. 149 00:13:40,333 --> 00:13:41,500 ಸ್ತಂಭವಾ? 150 00:13:42,250 --> 00:13:47,416 ಹಿಂದೆಂದೂ ಕಟ್ಟಿರದಂಥ ತಡೆಗೋಡೆಯನ್ನ ನೋಡಿಕೊಳ್ಳಬಹುದು. 151 00:13:47,500 --> 00:13:50,583 ಅಗ್ನಿಯ ನಾಲಗೆಯಷ್ಟು ಬಿಸಿಯ ಬೆಂಕಿಯನ್ನು ಸೃಷ್ಟಿಬಲ್ಲದು, 152 00:13:50,666 --> 00:13:52,166 ನಕ್ಷತ್ರದ ಬೆಳಕಿನಷ್ಟೇ ಶುದ್ಧ. 153 00:13:52,250 --> 00:13:56,083 ಇದನ್ನ ಉಪಯೋಗಿಸಿ ಮಿಡ್ಲ್ ಅರ್ಥ್ ಸ್ವರೂಪವನ್ನೇ ಬದಲಾಯಿಸಬಹುದು. 154 00:13:56,166 --> 00:13:57,958 ಅದಕ್ಕೆ ಏನು ಕಷ್ಟ ಇದೆ? 155 00:13:58,916 --> 00:14:00,916 ವಸಂತ ಕಾಲದೊಳಗೆ ಇದು ತಯಾರಿರಬೇಕು. 156 00:14:02,250 --> 00:14:04,250 ದೊರೆ, ಅದಕ್ಕೆ ಹಿಂದೆಂದೂ... 157 00:14:04,333 --> 00:14:06,625 ಸೇರಿಸಿರಲಾರದಂಥ ದೊಡ್ಡ ಸೈನ್ಯವೇ ಬೇಕು. 158 00:14:06,708 --> 00:14:09,500 ಹೌದು. ಮೇಲರಸರಿಗೆ ಅದು ಮಾಡಲಾಗುವುದಿಲ್ಲ. 159 00:14:09,583 --> 00:14:12,000 ಅದಕ್ಕೆ ನಿನ್ನನ್ನ ನನ್ನ ಬಳಿ ಕಳಿಸಿದ್ದಾರೆ. 160 00:14:15,625 --> 00:14:19,958 ನಮ್ಮ ಜನಾಂಗದಾಚೆ ಜೊತೆಗಾರರನ್ನ ಹುಡುಕೋ ಆಲೋಚನೆ ಮಾಡಿದ್ದೀರಾ? 161 00:14:20,666 --> 00:14:22,166 ಎಷ್ಟು ಆಚೆ? 162 00:14:22,250 --> 00:14:24,166 ಎರೆಗಿಯೊನ್ ಎಲ್ವೆನ್ ಕುಶಲಕರ್ಮಿಗಳ ಸಾಮ್ರಾಜ್ಯ 163 00:14:26,833 --> 00:14:30,166 ಖಜದ್-ದುಮ್ ಕುಬ್ಜರ ಸಾಮ್ರಾಜ್ಯ 164 00:14:44,250 --> 00:14:48,500 ಕುಬ್ಜರ ಜೊತೆಗಿನ ಮೈತ್ರಿ ಈ ಯುಗದ ರಾಜತಾಂತ್ರಿಕ ಸಾಧನೆಯೇ ಆಗಲಿದೆ. 165 00:14:48,583 --> 00:14:51,583 ಅವರ ರಾಜ ಡ್ಯುರಿನ್ ನನ್ನ ಹಳೆಯ ಆಪ್ತಮಿತ್ರ. 166 00:14:51,666 --> 00:14:53,166 ನನ್ನ ಸಹೋದರನಂತೆ. 167 00:14:53,250 --> 00:14:57,333 ಕುಬ್ಜರು ಇತ್ತೀಚಿಗೆ ತಮ್ಮ ಪಡಸಾಲೆಗಳನ್ನ ಇನ್ನೂ ವಿಶಾಲವಾಗಿಸಿಕೊಂಡಿದ್ದಾರಂತೆ. 168 00:14:57,666 --> 00:15:01,208 ಅವರು... ಕಲ್ಲನ್ನು ಕೆತ್ತೋದು ಕೂಡ 169 00:15:01,291 --> 00:15:05,333 ವಯಸ್ಸಾದ ಹಿರಿಯರನ್ನ ಗೌರವದಿಂದ ನೋಡಿಕೊಳ್ಳೋ ಹಾಗೆ. 170 00:15:05,416 --> 00:15:08,083 ನನಗಂತೂ ಅವರ ಕೆಲಸ ನೋಡೋ ಆಸೆ ಬಹಳ ಕಾಲದಿಂದ ಇದೆ. 171 00:15:08,166 --> 00:15:10,083 ಅವರನ್ನ ಇಷ್ಟೆಲ್ಲಾ ಅಭಿಮಾನಿಸ್ತೀರಾ? 172 00:15:10,166 --> 00:15:12,791 ರಹಸ್ಯಗಳೊಳಗೆ ನೋಡಲು ಸಾಧ್ಯವಾಗುವ, 173 00:15:12,875 --> 00:15:15,541 ಸರಳತೆಯಲ್ಲೇ ದೈವತ್ವ, ಮತ್ತದರ ಸೌಂದರ್ಯವನ್ನು 174 00:15:15,625 --> 00:15:17,416 ಅರಸುವ ಎಲ್ಲರನ್ನೂ ಮೆಚ್ಚುತ್ತೇನೆ. 175 00:15:18,583 --> 00:15:22,000 ನಿಮ್ಮ ಮಿತ್ರ ನನಗೆ ಅವರ ಕಾರ್ಯಗಾರಗಳೊಳಗೆ ಅವಕಾಶ ಕೊಡುತ್ತಾರಾ? 176 00:15:22,083 --> 00:15:24,625 ಡ್ಯುರಿನ್ ಅದಕ್ಕಿಂತಲೂ ಉದಾರಿ. 177 00:15:25,375 --> 00:15:27,375 ನಮ್ಮನ್ನು ಎರಡೂ ಕೈಗಳಿಂದ ಸ್ವಾಗತಿಸಿ, 178 00:15:27,458 --> 00:15:29,291 ಕೊಂಬು, ಕಹಳೆಗಳು ಮೊಳಗುತ್ತಾ, 179 00:15:29,416 --> 00:15:31,250 ಉಪ್ಪು ಹಚ್ಚಿದ ಮಾಂಸ ಇಟ್ಟ ಮೇಜುಗಳು, 180 00:15:31,333 --> 00:15:34,000 ಮತ್ತು ಇಡೀ ಯಾಂಡುಯಿನ್ಗೇ ಸಾಕಾಗುವಷ್ಟು ಹೆಂಡ ಇರುತ್ತೆ. 181 00:15:34,083 --> 00:15:35,291 ನಿನಗೇನು ಬೇಕು? 182 00:15:36,500 --> 00:15:38,208 ನಾನು ಲಿಂಡೊನ್ನಿನ ಎಲ್ರೊಂಡ್, 183 00:15:38,291 --> 00:15:40,875 ಜೊತೆಗೆ ಎರೆಗಿಯೊನ್ ದೊರೆ ಕೆಲಿಬ್ರೀಂಬೋರ್ ಇದ್ದಾರೆ. 184 00:15:41,625 --> 00:15:43,583 ನಾವು ಯುವರಾಜ ಡ್ಯುರಿನ್ರನ್ನ ಕಾಣಬೇಕು. 185 00:15:44,958 --> 00:15:45,833 ಇಲ್ಲ. 186 00:15:51,791 --> 00:15:52,958 ಕ್ಷಮಿಸಿ. 187 00:15:54,166 --> 00:15:57,041 ಡ್ಯುರಿನ್ ದೊರೆಗೆ ಅವರ ಮಿತ್ರ ಎಲ್ರೊಂಡ್... 188 00:15:57,125 --> 00:15:59,708 ಅವರು ಈಗಾಗಲೇ ತೀರ್ಪು ಕೊಟ್ಟಾಗಿದೆ, ಎಲ್ಫ್. 189 00:16:03,500 --> 00:16:04,791 ಕೊಂಬು ಕಹಳೆ? 190 00:16:19,041 --> 00:16:20,500 ಆಗಲಿ, ಮಿತ್ರ. 191 00:16:27,583 --> 00:16:30,625 ರೈಟ್ ಆಫ್ ಸಿಗಿನ್ ಟಾರಾಗನ್ನು ಆರಂಭಿಸುತ್ತೇನೆ. 192 00:16:30,708 --> 00:16:32,250 ಏನಿದು ರೈಟ್ ಆಫ್... 193 00:16:39,208 --> 00:16:40,583 ಎರೆಗಿಯೊನಲ್ಲಿ ಸಿಗ್ತೀನಿ. 194 00:16:40,666 --> 00:16:44,458 -ಏನ್ಮಾಡ್ತಾ ಇದ್ದೀಯಾ ಗೊತ್ತಾ? -ಕೆಲಿಬ್ರೀಂಬೋರ್ ದೊರೆ, ನನ್ನ ನಂಬಿ. 195 00:16:44,541 --> 00:16:47,333 ನಿಮ್ಮ ಕೌಶಲ್ಯದ ಪರಿಣಿತರು ನೀವೇ, ಮಿತ್ರ. 196 00:16:47,416 --> 00:16:50,166 ನನ್ನ ಕೌಶಲ್ಯದ ಬಳಕೆಗೂ ಸ್ವಲ್ಪ ಅವಕಾಶ ಕೊಡಿ. 197 00:17:19,750 --> 00:17:21,625 ಅದ್ಭುತ... 198 00:18:30,666 --> 00:18:34,458 -ಖಜದ್! -ದುಮ್! 199 00:18:37,833 --> 00:18:39,541 ನಿನ್ನ ನೋಡಿ ಸಂತೋಷ... 200 00:18:39,625 --> 00:18:44,833 ಎಲ್ಫ್ ಎಲ್ರೊಂಡ್ ರೈಟ್ ಆಫ್ ಸಿಗಿನ್ ಟಾರಾಗನ್ನು ಆರಂಭಿಸಿದ್ದಾನೆ. 201 00:18:46,791 --> 00:18:49,583 ಕುಬ್ಜರ ತಾಳ್ಮೆಯ ಪರೀಕ್ಷೆ, 202 00:18:49,666 --> 00:18:52,250 ಸ್ವತಃ ಆಲೇ ವಿನ್ಯಾಸಗೊಳಿಸಿರೋದು. 203 00:18:54,375 --> 00:18:57,125 ನಮ್ಮ ಸುತ್ತಿಗೆಗಳನ್ನ ಎತ್ತಿ 204 00:18:58,291 --> 00:19:02,333 ನಮ್ಮಿಂದ ಇನ್ನಾಗೋದೇ ಇಲ್ಲ ಅನ್ನೋವರೆಗೂ ಮಹಾ ಬಂಡೆಗಳನ್ನೇ ಒಡೆಯೋಣ. 205 00:19:05,208 --> 00:19:07,291 ಎಲ್ಫ್ ಶರಣಾದಲ್ಲಿ 206 00:19:08,041 --> 00:19:11,291 ಅವನನ್ನ ಎಲ್ಲಾ ಕುಬ್ಜರ ನಾಡುಗಳಿಂದ ಬಹಿಷ್ಕಾರ ಹಾಕಲಾಗುತ್ತೆ. 207 00:19:12,958 --> 00:19:14,125 ಎಂದೆಂದಿಗೂ! 208 00:19:19,500 --> 00:19:21,916 ಎಲ್ಫ್ಗೆ ಅರ್ಥ ಆಯಿತೋ? 209 00:19:24,166 --> 00:19:25,333 ಅರ್ಥ ಆಯ್ತು. 210 00:19:26,291 --> 00:19:29,541 ಅನಿರೀಕ್ಷಿತವಾಗಿ ಎಲ್ಫ್ ಏನಾದ್ರೂ ಗೆದ್ದರೆ... 211 00:19:32,625 --> 00:19:36,208 ಒಂದು ವರವನ್ನ ಕೊಡೋಣ. ಆದರೆ ಸೋತರೆ... 212 00:19:36,291 --> 00:19:39,166 ಬಹಿಷ್ಕಾರ. ಹಾಂ. ಅರ್ಥವಾಯ್ತು. 213 00:19:44,208 --> 00:19:45,458 ಆರಂಭಿಸಿ. 214 00:19:49,541 --> 00:19:55,250 ಡ್ಯುರಿನ್! ಡ್ಯುರಿನ್! ಡ್ಯುರಿನ್! 215 00:20:21,208 --> 00:20:22,791 ತಗೋ, ಎಲ್ಫ್. 216 00:21:02,833 --> 00:21:03,833 ಯಾರು? 217 00:21:06,750 --> 00:21:09,375 ಇರು! ಇರು, ನಾನು! 218 00:21:09,833 --> 00:21:11,208 ನಾನೇ! ನಿಲ್ಲು! 219 00:21:13,458 --> 00:21:15,250 ತಡಿ! 220 00:21:15,750 --> 00:21:18,750 ನೆನ್ನೆ ರಾತ್ರಿ ನಿನಗೆ ಸಹಾಯ ಮಾಡಿದೆ. ನನ್ನ ನೆನಪಿದೆ ತಾನೇ? 221 00:21:21,083 --> 00:21:22,166 ಇದೆ ತಾನೇ? 222 00:21:32,291 --> 00:21:33,416 ಸರಿ. 223 00:21:36,500 --> 00:21:37,833 ಹಾಗಿದ್ರೆ ಹೀಗೆ ಮಾಡೋಣ... 224 00:21:38,375 --> 00:21:39,958 ನಾನು ನಿಂಗೇನೂ ಮಾಡಲ್ಲ. 225 00:21:41,291 --> 00:21:43,916 ನೀನೂ ನಂಗೇನೂ ಮಾಡಬೇಡ. ಆಯ್ತಾ? 226 00:21:51,708 --> 00:21:53,875 ಹೀಗಾದರೂ ಶುರು ಆಗ್ಲೇ ಬೇಕಲ್ವಾ? 227 00:21:53,958 --> 00:21:56,250 ಈಗ ಸರಿಯಾಗಿರೋದನ್ನ ಮಾಡೋಣ. ಅಪ್ಪ ಹೇಳ್ತಾರೆ, 228 00:21:56,333 --> 00:22:00,750 "ಮರ್ಯಾದೆ ಇಲ್ಲದ ಹಾರ್ಫೂಟ್ ಜೀವನ ಚೌಕಾಕಾರದ ಚಕ್ರದ ಮೇಲೆ ಹೋದಂಗೆ" ಅಂತ. 229 00:22:01,833 --> 00:22:03,250 ನಾನು ನೋರಿ. 230 00:22:08,250 --> 00:22:09,458 ನಾನು ನೋರಿ. 231 00:22:10,916 --> 00:22:13,333 ನಾನು... 232 00:22:14,416 --> 00:22:15,583 ಇಲ್ಲ, ನಾನು ನೋರಿ. 233 00:22:15,666 --> 00:22:17,416 ಇಲ್ಲ, ನಾನು ನೋರಿ. 234 00:22:17,500 --> 00:22:20,041 ನಿನ್ನ ಹೆಸರೇನು? ನೀನು? 235 00:22:23,458 --> 00:22:25,083 ನಿನಗೆ ನೆನಪಿಲ್ಲ ಅಲ್ವಾ? 236 00:22:26,875 --> 00:22:28,666 ತುಂಬಾ ದೂರಕ್ಕೇ ಬಿದ್ದಂಗಿದ್ದೀಯಾ. 237 00:22:28,750 --> 00:22:30,958 ಯಾರದೇ ತಲೆ ಆದ್ರೂ ಕೆಟ್ಟಿರುತ್ತೆ ಬಿಡು. 238 00:22:31,041 --> 00:22:32,375 ನಾನೂ ಮರದಿಂದ ಬಿದ್ದಿದ್ದೆ. 239 00:22:32,500 --> 00:22:35,375 ಇಡೀ ವಾರ ಸ್ಟ್ರಾಬೆರ್ರಿಗಳನ್ನ "ಪಿಗ್ ಬೆರ್ರಿ" ಅಂತಿದ್ದೆ. 240 00:22:35,458 --> 00:22:37,541 ಊಹಿಸಿಕೋ. ಪಿಗ್ ಬೆರ್ರಿ? 241 00:22:40,708 --> 00:22:41,833 ಇದು ಆಹಾರ. 242 00:22:43,500 --> 00:22:46,041 ನಿಮ್ಮ ಕಡೆ ತಿಂತೀರಲ್ವಾ? 243 00:22:46,125 --> 00:22:48,625 ಹೌದು ಕಣೆ, ನೋರಿ, ಎಂಥಾ ಪೆದ್ದು ಪ್ರಶ್ನೆ ಕೇಳ್ತೀಯೇ. 244 00:23:23,833 --> 00:23:25,583 ಇಲ್ಲ... ಅದು ಹಾಗಲ್ಲ... 245 00:23:33,125 --> 00:23:35,916 ಲಾರ್ಗೋ! 246 00:23:36,666 --> 00:23:38,666 ಬಿಡು, ಮಲ್ವಾ. ನೀನೇ ಸಹಾಯ ಮಾಡು ಹೋಗು. 247 00:23:38,750 --> 00:23:41,333 ಅವನಿಗೆ ಸಹಾಯ ಮಾಡಕ್ಕೆ ಹೇಳ್ತಾ ಸಹಾಯ ಮಾಡ್ತಿದ್ದೀನಲ್ಲ. 248 00:23:42,083 --> 00:23:44,625 ಸುಮ್ನೆ ಬಿದ್ದುಕೊಂಡಿರೋ ಬದಲು ಬಂದು ಸಹಾಯ ಮಾಡು. 249 00:23:44,708 --> 00:23:48,166 ನಾನೇನೋ ನೋರಿ ಬಂದು ಅದಕ್ಕೆ ಸಹಾಯ ಮಾಡ್ತಾಳೆ ಅಂದುಕೊಂಡಿದ್ದೆ. 250 00:23:48,250 --> 00:23:50,916 ನೋರಿ? 251 00:23:55,625 --> 00:23:57,583 ಎಲ್ಲಿಂದ ಬಂದಿದ್ದೀಯ, ಏನು? 252 00:23:57,666 --> 00:24:00,125 ನಿಮ್ಮೂರು ಯಾವುದು? ನಿಮ್ಮ ಕಡೆಯವರು ಎಲ್ಲಿ? 253 00:24:00,208 --> 00:24:02,041 ಅಂದ್ರೆ ನಿನ್ನ ಜನ? ನಿನ್ನಂಥವರು? 254 00:24:04,750 --> 00:24:06,166 ಬೇರೆ ಯಾರಾದ್ರೂ ಇದ್ದಾರಾ? 255 00:24:22,333 --> 00:24:25,375 ಈಗ ಹೋಗುತ್ತೆ ನೋಡು... 256 00:24:26,041 --> 00:24:27,166 ಬಾರೋ, ಬಾರೋ. 257 00:24:30,250 --> 00:24:31,916 ನಿಮ್ಮ ಶಕ್ತಿಯೆಲ್ಲ ಹಾಕ್ರೋ! 258 00:24:39,541 --> 00:24:40,541 ಏನದು? 259 00:24:41,625 --> 00:24:42,708 ಮಾನಾ... 260 00:24:43,500 --> 00:24:44,916 ಯಾವುದೋ ನಕ್ಷೆಯಾ? 261 00:24:45,250 --> 00:24:46,375 ಹಂಗೇ ಬರಲಿ! 262 00:24:49,125 --> 00:24:50,500 ಪಕ್ಕ ಜಾಗ ಇಲ್ಲ. 263 00:24:51,708 --> 00:24:52,875 ಏನು... 264 00:24:55,333 --> 00:24:56,166 ಬೆಚ್ಚನೆ... 265 00:25:09,041 --> 00:25:11,916 ಏನು... 266 00:25:12,000 --> 00:25:15,125 ಬೆಚ್ಚನೆ... 267 00:25:18,541 --> 00:25:20,750 ಚುಕ್ಕೆಗಳು ಮತ್ತು ಸುರುಳಿಗಳು ಇದ್ದಂಗಿದೆ. 268 00:25:21,666 --> 00:25:23,000 ಅರ್ಥ ಆಗ್ತಿಲ್ಲ. 269 00:25:23,083 --> 00:25:23,916 ಏನು! 270 00:25:24,041 --> 00:25:26,333 ನಿನಗೆ ಸಹಾಯ ಮಾಡೋಕೆ ಪ್ರಯತ್ನಿಸ್ತಿದ್ದೀನಿ... 271 00:25:26,458 --> 00:25:27,916 ಬೆಚ್ಚಗೆ! 272 00:25:28,125 --> 00:25:29,541 ನಾನೊಬ್ಬ ಹಾರ್ಫೂಟ್ ಅಷ್ಟೇ! 273 00:25:32,500 --> 00:25:33,541 ನೋರಿ! 274 00:25:38,041 --> 00:25:39,666 ಮಿತ್ರ! 275 00:25:40,666 --> 00:25:43,333 ಮಿತ್ರ. ಮಿತ್ರನಷ್ಟೇ. 276 00:25:43,916 --> 00:25:45,000 ನೋರಿ. 277 00:25:46,291 --> 00:25:47,708 ನಿನ್ನ ತಂದೆ. 278 00:25:52,208 --> 00:25:53,833 ನೇರಳೆ ಆಗ್ಬಿಟ್ಟಿದೆ. 279 00:25:57,416 --> 00:25:59,291 ನೋರಿ, ನನಗೇನಾಗಿಲ್ಲ. 280 00:25:59,375 --> 00:26:01,958 ಒದ್ದೆ ಹುಲ್ಲಿನ ಮೇಲೆ ಕಾಲಿಟ್ಟೆ ಅಷ್ಟೇ. ಉಳುಕಿದೆ. 281 00:26:02,041 --> 00:26:04,333 ಗಾಬರಿಯಾಗೋದೇನಿಲ್ಲ. 282 00:26:04,416 --> 00:26:05,958 -ಅಮ್ಮ... -ತಲೆ ಕೆಡಿಸಿಕೋಬೇಡ. 283 00:26:06,041 --> 00:26:07,208 ನಾನಲ್ಲಿರಬೇಕಿತ್ತು. 284 00:26:07,291 --> 00:26:08,750 ಈಗ ಇಲ್ಲಿದ್ದೀಯಲ್ಲ? 285 00:26:08,833 --> 00:26:11,833 ಈಗ ಹೋಗಿ ಸ್ವಲ್ಪ ತಣ್ಣೀರು ಮತ್ತು ಮರಳನ್ನ ತಾ. 286 00:26:24,250 --> 00:26:27,250 ಹೇಗಿದ್ದಾನೆ? ವಲಸೆ ಆಗುತ್ತಾ? 287 00:26:30,250 --> 00:26:31,083 ಅಂದ್ರೆ... 288 00:26:32,666 --> 00:26:33,708 ನೀನವನ ನೋಡಿದೆ. 289 00:26:33,791 --> 00:26:36,166 ಕಾಲ ಮೇಲೆ ಒಂದೆಲೆ ಭಾರಾನೂ ಇಟ್ಕೊಳ್ಳಕ್ಕಾಗಲಿಲ್ಲ. 290 00:26:36,250 --> 00:26:39,250 -ಬಂಡಿ ಎಳೆಯೋದೆಲ್ಲಿ? -ನಿನ್ನ ಕೆಲಸ ನೋಡ್ಕೋ, ಮಲ್ವಾ. 291 00:27:39,250 --> 00:27:40,291 ಈ ಕಡೆ! 292 00:27:46,125 --> 00:27:48,250 ಬಾ. ಹತ್ತಿರ ಬಾ. 293 00:27:48,333 --> 00:27:51,625 -ಏನ್ಮಾಡ್ತಾ ಇದ್ದೀಯ? -ಅವಳನ್ನ ನೀರಲ್ಲೇ ಬಿಡೋಕಾಗಲ್ಲ. 294 00:27:51,708 --> 00:27:53,958 ನಿನ್ನ ಆಹಾರ ಹಂಚಿಕೊಳ್ತೀಯಾ ಹಂಗಾದ್ರೆ? 295 00:27:54,041 --> 00:27:55,958 ಅನಿರೀಕ್ಷಿತತೆಯ ಅಲೆಗಳು ಬಡಿಯುತ್ತಿವೆ. 296 00:27:56,041 --> 00:27:57,041 ಯಾರೂ ಮಾಡಲ್ವಲ್ಲ. 297 00:27:57,125 --> 00:27:59,375 ನೀನು ಚೆನ್ನಾಗಾಗಬಹುದು, ಅಥವಾ ಇಲ್ಲ. 298 00:27:59,458 --> 00:28:02,666 ಅವಳನ್ನ ಮೇಲೆ ಕರ್ಕೊಳ್ಳದಿದ್ದರೆ ಅವಳ ಸಾವಿಗೆ ಕಾರಣ ನಾವೇ. 299 00:28:02,750 --> 00:28:05,791 ಡೋಬಲ್ ಸಾವಿನ ಬಗ್ಗೆ ಇಷ್ಟೆಲ್ಲಾ ತಲೆ ಕೆಡಿಸಿಕೊಂಡಿರಲಿಲ್ಲವಲ್ಲ. 300 00:28:05,875 --> 00:28:08,291 ಕ್ರೌರ್ಯ ನಮಗೆ ಒಳ್ಳೆಯದಲ್ಲ. 301 00:28:09,000 --> 00:28:10,083 ಅವಳನ್ನ ಬಿಡಬೇಡಿ. 302 00:28:10,791 --> 00:28:11,625 ಎತ್ತಿ ಅವಳನ್ನು. 303 00:28:21,416 --> 00:28:22,250 ಇಲ್ಲ. 304 00:28:23,708 --> 00:28:25,000 ಮೊದಲು ಉತ್ತರಗಳು. 305 00:28:29,791 --> 00:28:31,041 ಇಲ್ಯಾಕೆ ಬಂದಿದ್ದೆ? 306 00:28:33,041 --> 00:28:34,875 ನನ್ನ ಹಡಗಿನಿಂದ ದೂರ ಆದೆ. 307 00:28:34,958 --> 00:28:36,166 ದಾಳಿಯಿಂದಲಾ? 308 00:28:38,833 --> 00:28:40,250 ಹಾಗಿದ್ರೆ ನೀನು ನೋಡಿಲ್ವಾ? 309 00:28:40,666 --> 00:28:41,916 ಏನು ನೋಡಿಲ್ಲ? 310 00:28:46,916 --> 00:28:48,083 ಹುಳ. 311 00:28:51,166 --> 00:28:53,166 ಎರಡು ವಾರಗಳ ಹಿಂದೆ ಯಾನ ಕೈಗೊಂಡೆವು... 312 00:28:53,250 --> 00:28:55,708 -ನಮ್ಮ ವಿಚಾರ ಎಲ್ಲಾ ಅವಳಿಗೆ ಹೇಳಬೇಕಾ? -ಯಾಕೆ ಬೇಡ? 313 00:28:55,875 --> 00:28:57,500 ಅವಳೇನು ಅಪಾಯಕಾರಿಯಾಗಿದ್ದಾಳಾ? 314 00:28:57,583 --> 00:28:59,000 ಕಾಣೋದು ಸುಳ್ಳಿರಬಹುದು. 315 00:29:03,708 --> 00:29:04,875 ಇವಳೊಬ್ಬ ಎಲ್ಫ್. 316 00:29:04,958 --> 00:29:06,791 ಕೈ ತೆಗೆಯಿರಿ, ಸ್ವಾಮಿ. 317 00:29:07,583 --> 00:29:08,958 ಸುಳ್ಳುಗಾರ್ತಿ. 318 00:29:09,041 --> 00:29:11,458 -ನಾವು ಸುರಕ್ಷಿತರು. ಸುರಕ್ಷಿತರು. ನೋಡು! -ಬೇಗ! 319 00:29:11,541 --> 00:29:13,250 ನೋಡಿ! ಇಲ್ಲಿ! 320 00:29:13,333 --> 00:29:14,500 ಸಹಾಯ ಮಾಡಿ! 321 00:29:14,583 --> 00:29:17,208 ಬೇಗ, ನನಗೊಂದು ಪಂಜು ಹತ್ತಿಸಿಕೊಡಿ. ಬೇಗ! 322 00:29:17,291 --> 00:29:19,250 ಇರಿ! ಇರಿ! ದೋಣಿಯ ಹಾಯಿ ಕಾಣಲಿ ಮೊದಲು. 323 00:29:19,333 --> 00:29:22,458 ಕೋರ್ಸೇರ್ಗಳು ಈ ನೀರಿನಲ್ಲಿರ್ತಾರೆ. ಚರ್ಮ ಸುಲಿಸಿಕೊಳ್ಳಬೇಕಾ? 324 00:29:27,833 --> 00:29:29,666 ಅದು ಕೋರ್ಸೇರ್ ಹಡಗಲ್ಲ. 325 00:29:29,750 --> 00:29:32,041 ಅದು ನಮ್ಮ ಹಡಗು. 326 00:29:38,208 --> 00:29:39,208 ಹುಳ. 327 00:29:43,458 --> 00:29:44,583 ಕದಲಬೇಡಿ. 328 00:30:04,916 --> 00:30:06,333 ಇವಳೇ ಅದನ್ನ ಕರೆಸಿಕೊಂಡಿದ್ದಾಳೆ. 329 00:30:26,750 --> 00:30:27,583 ಬರ್ತಾ ಇದೆ! 330 00:30:34,083 --> 00:30:35,083 ಕಾಪಾಡಿ! 331 00:32:01,125 --> 00:32:02,125 ಏನಂತ ಕರೀತಾರೆ ನಿನ್ನ? 332 00:32:10,166 --> 00:32:11,250 ಗಲಾಡ್ರಿಯಲ್. 333 00:32:13,166 --> 00:32:14,333 ನಾನು ಹಲ್ಬ್ರ್ಯಾಂಡ್. 334 00:32:15,250 --> 00:32:16,458 ಯಾವ ಕಡೆ ಹೋಗೋಣ? 335 00:33:31,375 --> 00:33:32,583 ಯಾ! 336 00:33:45,416 --> 00:33:47,208 ನಾಯಿ ಚಂದ್ರನನ್ನ ನೋಡಿ ಬೊಗಳಬಹುದು. 337 00:33:49,083 --> 00:33:50,875 ಆದರೆ ಕೆಳಗೆ ಇಳಿಸೋಕಾಗಲ್ಲ. 338 00:33:52,416 --> 00:33:53,750 ಇನ್ನು ಹೊರಡು. 339 00:33:56,000 --> 00:33:59,666 ದೊರೆಗಳೇ ನನ್ನನ್ನ ಕಳಿಸಿಕೊಟ್ರೆ ಚೆನ್ನಾಗಿರುತ್ತೇನೋ. 340 00:34:01,958 --> 00:34:03,125 ಧಾರಾಳವಾಗಿ. 341 00:34:15,083 --> 00:34:18,958 ಅದ್ಭುತ. ನಿಮ್ಮ ನಗರ ಇಷ್ಟೆಲ್ಲಾ ಬದಲಾಗಿದೆ ಅಂತಾನೇ ಅಂದುಕೊಂಡಿರಲಿಲ್ಲ. 342 00:34:20,250 --> 00:34:22,041 ಇಪ್ಪತ್ತು ವರ್ಷ ಕಳೆದರೆ ಹಾಗೇನೇ. 343 00:34:22,125 --> 00:34:23,625 ಇಪ್ಪತ್ತೇ ವರ್ಷಗಳಾ? 344 00:34:26,208 --> 00:34:28,458 ನಿಮ್ಮ ರಹಸ್ಯ ಹೇಳಿ. 345 00:34:30,791 --> 00:34:32,375 ನಮ್ಮ ರಹಸ್ಯ ನಮ್ಮದೇ. 346 00:34:33,041 --> 00:34:34,125 ನನ್ನಿಂದ ಅಪಚಾರವಾಯ್ತಾ? 347 00:34:34,208 --> 00:34:36,250 ಅದನ್ನ ಉತ್ತರಿಸೋಕೆ ಇನ್ನೂ ಮೇಲೆ ಹೋಗ್ಬೇಕು. 348 00:34:36,333 --> 00:34:39,125 ಕಾರಣ ಇಲ್ಲದೆ ನನ್ನನ್ನ ಕಳಿಸಿಕೊಡುವುದು ನಿಮ್ಮಿಷ್ಟ. 349 00:34:39,208 --> 00:34:41,041 ನಿನ್ನ ರೆಕ್ಕೆಗಳ ಬಟ್ಟೆ ಮೇಲಾಣೆ, ನಿಜ. 350 00:34:41,125 --> 00:34:43,333 ಯಾವುದೇ ಕುಬ್ಜ-ಯುವರಾಜನಿಗೆ ಯುಗದಲ್ಲೇ 351 00:34:43,416 --> 00:34:45,500 ಅತ್ಯುತ್ತಮ ಅವಕಾಶ ಸಿಕ್ಕಾಗ, 352 00:34:45,583 --> 00:34:47,833 ನನ್ನ ಪ್ರಸ್ತಾವನೆಯನ್ನ ಕನಿಷ್ಠ ಒಮ್ಮೆ ಕೇಳಿ. 353 00:34:47,916 --> 00:34:48,875 ಇದಾ ವಿಷಯ? 354 00:34:48,958 --> 00:34:51,541 ನಿನ್ನ ಭೇಟಿಯ ನಿಜವಾದ ಉದ್ದೇಶ. ನಿನಗೇನೋ ಬೇಕಿದೆ. 355 00:34:51,625 --> 00:34:53,750 ಮಿತ್ರನನ್ನ ನೆನೆಸಿಕೊಂಡು ನೋಡಕ್ಕೆ ಬಂದೆ. 356 00:34:53,833 --> 00:34:56,916 ನೆನೆಸಿಕೊಂಡಾ? ನನ್ನ ಮದುವೆಗೂ ಬರಲಿಲ್ಲ? 357 00:34:57,000 --> 00:34:59,375 ನನಗೆ ಮಕ್ಕಳು ಹುಟ್ಟಿದರು, ಇಬ್ಬರು! 358 00:35:01,250 --> 00:35:05,583 ನೀನು ನನ್ನ ಬೆಟ್ಟಕ್ಕೇ ನುಗ್ಗಿ, ನಾನು ನಿನ್ನನ್ನ ಸ್ವಾಗತ ಮಾಡ್ತೀನಿ ಅಂದುಕೋಬೇಡ. 359 00:35:06,083 --> 00:35:08,916 ನೀನೇ ಬೇಡ ಅಂದುಕೊಂಡಿದ್ದನ್ನ ಈಗ ಬೇಕು ಅನ್ನೋಕಾಗಲ್ಲ. 360 00:35:09,000 --> 00:35:10,291 ಬೇಡ ಅಂದಿದ್ದಾ? ಡ್ಯುರಿನ್... 361 00:35:10,375 --> 00:35:13,458 ಇಪ್ಪತ್ತು ವರ್ಷ ಒಬ್ಬ ಎಲ್ಫಿಗೆ ಒಂದು ಕ್ಷಣದ ಹಾಗಿರಬಹುದು. 362 00:35:14,333 --> 00:35:16,833 ಆದರೆ ನಾನು ನನ್ನಿಡೀ ಜೀವನವನ್ನೇ ಕಳೆದುಬಿಟ್ಟಿರ್ತೀನಿ. 363 00:35:18,875 --> 00:35:20,375 ನೀನು ಕಳೆದುಕೊಂಡಂಥ ಜೀವನ. 364 00:35:33,208 --> 00:35:35,458 ಮತ್ತೆ ಅದಕ್ಕೇನು ಹೇಳ್ತೀಯ? 365 00:35:37,500 --> 00:35:38,625 "ಗೆಳೆಯ?" 366 00:35:44,208 --> 00:35:45,416 ಅಭಿನಂದನೆಗಳು. 367 00:35:47,541 --> 00:35:50,333 ನಿನ್ನ ಹೆಂಡತಿ, ಮಕ್ಕಳಿಗಾಗಿ. 368 00:35:52,666 --> 00:35:54,666 ನನ್ನನ್ನ ಕ್ಷಮಿಸುತ್ತೀಯ ಅಂದ್ಕೋತೀನಿ. 369 00:35:57,041 --> 00:36:01,083 ಹಾಗೇ ನಾನು ನಿನ್ನ ಕುಟುಂಬದವರನ್ನ ಕೂಡ ಕ್ಷಮೆ ಕೇಳಬೇಕು ಅಂತ ಇದ್ದೀನಿ. 370 00:36:06,458 --> 00:36:08,583 ಡಿಸಾನ ಕ್ಷಮೆ ಕೇಳಿ ಹೊರಡ್ತಾ ಇರಬೇಕು. 371 00:36:08,666 --> 00:36:10,666 ಹೆಚ್ಚಿಗೆ ಪರಿಚಯ ಎಲ್ಲಾ ಬೇಡ. 372 00:36:10,750 --> 00:36:15,458 ಹಳೆಯ ಕತೆಗಳೆಲ್ಲಾ ಬೇಕಿಲ್ಲ. ಊಟಕ್ಕಂತೂ ಇರಲೇಬೇಡ. 373 00:36:15,541 --> 00:36:17,000 ಅರ್ಥ ಆಯ್ತು. 374 00:36:17,083 --> 00:36:19,500 ಆಲೆಯ ಗಡ್ಡವೇ! ಇಲ್ಲ! 375 00:36:19,583 --> 00:36:21,375 ಇದು ಎಲ್ರೊಂಡ್ ಆಗಿರಲಿಕ್ಕಿಲ್ಲ ತಾನೇ? 376 00:36:21,458 --> 00:36:24,708 ಅವನೇ ನಾನು, ತಾಯಿ. 377 00:36:31,333 --> 00:36:33,583 ನೀನು ಬರ್ತಿದ್ದೀಯ ಅಂತ ಡ್ಯುರಿನ್ ಹೇಳಲಿಲ್ಲ. 378 00:36:33,666 --> 00:36:34,958 ಡ್ಯುರಿನ್ಗೆ ಗೊತ್ತಿರಲಿಲ್ಲ. 379 00:36:35,041 --> 00:36:38,291 ಇನ್ನೂ ಬೇಗ ಬರದೇ ಇರೋದಕ್ಕೆ ನನಗೆ ನೋವಾಗ್ತಿದೆ. 380 00:36:38,375 --> 00:36:41,666 ಅದಕ್ಕಾಗಿ ನಾನು ನಮ್ರನಾಗಿ ಕ್ಷಮೆ ಕೇಳ್ತಿದ್ದೀನಿ. 381 00:36:41,750 --> 00:36:44,041 -ಊಟಕ್ಕೆ ಇರು. -ಹೊರಡ್ತಿದ್ದಾನೆ. 382 00:36:44,125 --> 00:36:45,708 -ಇರ್ತಾನೆ. -ಹೊರಡ್ತಾನೆ! 383 00:36:45,791 --> 00:36:46,708 ಇರ್ತಿದ್ದಾನೆ. 384 00:36:49,333 --> 00:36:53,500 ಹೇಯ್! ನಿಮ್ಮಿಬ್ರಿಗೂ ನನ್ನ ತಲೆಗಳಿಂದ ದೂರ ಇರೋಕೆ ಹೇಳಿದೆ! 385 00:36:53,583 --> 00:36:57,125 ಇಬ್ರೂ ಮರಿ ರಾಕ್ಷಸರಿಗೆ ಮಲಗಿ ಅಂತ ಹೇಳಿದೆ ತಾನೇ? 386 00:36:57,250 --> 00:36:58,291 ಬನ್ನಿ! 387 00:36:58,375 --> 00:37:01,458 ಗೇರಡಾ! ಗಾಮ್ಲಿ! ಬನ್ರಿ ಬೇಗ. 388 00:37:02,500 --> 00:37:04,791 ಆರಾಮಾಗಿರು, ದಯವಿಟ್ಟು. 389 00:37:05,541 --> 00:37:07,000 ಅಷ್ಟೆಲ್ಲಾ ಆರಾಮ ಬೇಡ. 390 00:37:08,041 --> 00:37:09,208 ಗಾಮ್ಲಿ, ದಯವಿಟ್ಟು! 391 00:37:09,291 --> 00:37:12,083 ಇಬ್ರನ್ನೂ ಉಪ್ಪಿನ ಗಣಿಗೆ ಕಳಿಸಿಬಿಡ್ತೀನಿ! 392 00:37:12,166 --> 00:37:15,166 ಗುಹೆಯ ರಾಕ್ಷಸರು ಮತ್ತು ಜೇಡಗಳೇ ತುಂಬಿರುತ್ತವೆ! 393 00:37:25,333 --> 00:37:27,666 ನಿಮ್ಮಿಬ್ಬರ ಪರಿಚಯ ಹೇಗಾಯ್ತು? 394 00:37:28,166 --> 00:37:31,250 ನಾನೊಂದು ಹೊಸದಾಗಿ ತೆರೆದ ಕೋಣೆಯಲ್ಲಿ ಆಲಾಪಿಸ್ತಾ ಇದ್ದೆ, 395 00:37:31,333 --> 00:37:34,625 ನಮಗೆ ಒಳ್ಳೆ ಬೆಳ್ಳಿ ಸಿಗುತ್ತೆ ಅನ್ನೋ ನಂಬಿಕೆಯಲ್ಲಿ... 396 00:37:34,708 --> 00:37:37,208 "ಆಲಾಪಿಸೋದಾ?" ಅದರ ಬಗ್ಗೆ ಕೇಳೇ ಇಲ್ವಲ್ಲ ನಾನು? 397 00:37:37,291 --> 00:37:39,291 ಅಂದ್ರೆ ನಾವು ಕಲ್ಲಿಗೆ ಹಾಡೋದು. 398 00:37:39,375 --> 00:37:41,708 ನೋಡು, ಬೆಟ್ಟ ಕೂಡ ವ್ಯಕ್ತಿ ಇದ್ದಂಗೆ. 399 00:37:41,791 --> 00:37:46,208 ಅನಿಯಮಿತ ಸಣ್ಣ ಭಾಗಗಳಿಂದ ಕೂಡಿದ, ದೀರ್ಘ ಮತ್ತು ಯಾವಾಗ್ಲೂ ಬದಲಾಗ್ತಾ ಇರೋ ಕತೆ ಅದು. 400 00:37:46,291 --> 00:37:48,958 ಮಣ್ಣು ಮತ್ತು ಅದಿರು, ಗಾಳಿ ಮತ್ತು ನೀರು. 401 00:37:49,041 --> 00:37:53,750 ಇವಕ್ಕೆ ಸರಿಯಾಗಿ ಹಾಡಿದರೆ, ಅದರ ಪ್ರತಿಯೊಂದು ಭಾಗವೂ ಹಾಡನ್ನ ನಿನಗೆ ಪ್ರತಿಧ್ವನಿಸುತ್ತಾ, 402 00:37:53,833 --> 00:37:57,166 ಅದರ ಕತೆ ಹೇಳುತ್ತಾ, ಏನು ಅಡಗಿರಬಹುದು, 403 00:37:57,250 --> 00:37:59,708 ಎಲ್ಲಿ ಗಣಿ ತೋಡಬೇಕು, ಎಲ್ಲಿ ಕೊರೆಯಬೇಕು, ಮತ್ತು... 404 00:37:59,791 --> 00:38:02,333 ಬೆಟ್ಟವನ್ನ ಎಲ್ಲಿ ಮುಟ್ಟಬಾರದು ಅಂತಲೂ ತಿಳಿಸುತ್ತೆ. 405 00:38:02,416 --> 00:38:04,250 ಇದೊಂದು ಸುಂದರ ಆಚರಣೆ. 406 00:38:07,916 --> 00:38:12,375 ಇರಲಿ, ನಮ್ಮ ಸಲಕರಣೆಗಳನ್ನ ಬಿಚ್ಚುತ್ತಿದ್ದಾಗ ನಮ್ಮ ತಂಡ ಏಕಾಏಕಿ ಮೌನವಾಗಿಹೋದರು. 407 00:38:12,458 --> 00:38:14,750 ಆಗ ನಮ್ಮ ಯುವರಾಜರನ್ನ ನೋಡಿದೆ. 408 00:38:14,833 --> 00:38:16,666 ನಮ್ಮನ್ನ ಗಮನಿಸೋಕೆ ಬಂದಿದ್ದರು. 409 00:38:16,750 --> 00:38:18,791 ಅವರ ವ್ಯಾಪ್ತಿಗಿಂತಲೂ ಕೆಳಗೇ ಅಂದ್ಕೋ. 410 00:38:19,250 --> 00:38:21,083 ಮೊದಲಿಗೆ ಕುತೂಹಲ ಇರಬಹುದು ಅಂದ್ಕೊಂಡೆ. 411 00:38:21,500 --> 00:38:24,916 ಅದು ನಮ್ಮ ಮುಂದಿನ ಸಮೀಕ್ಷೆಗೆ ಅವರು ಬರೋವರೆಗೂ ಅಷ್ಟೇ. 412 00:38:25,000 --> 00:38:29,458 ಆಮೇಲೆ ಅದರ ನಂತರದ್ದು. ಮತ್ತದರ ನಂತರದ್ದು. 413 00:38:29,541 --> 00:38:31,500 ಹೊಂಚುಹಾಕೋ ಕೌಶಲ್ಯ ಮೊದಲಿನಿಂದಲೂ ಇದೆ. 414 00:38:31,583 --> 00:38:34,875 ನನ್ನನ್ನ ಸರಿಯಾಗಿ ಮಾತಾಡಿಸೋಕೇನೇ ಅವರಿಗೆ ವಾರಗಳು ಹಿಡಿಯಿತು. 415 00:38:34,958 --> 00:38:36,833 ಎರಡು ವಾರಗಳಷ್ಟೇ. 416 00:38:36,916 --> 00:38:39,041 -ಐದು. -ಸುಳ್ಳು ಹೇಳ್ತಿದ್ದೀಯ. 417 00:38:39,125 --> 00:38:40,333 ಸುಳ್ಳು ಹೇಳ್ತಿದ್ದಾಳೆ. 418 00:38:40,416 --> 00:38:42,625 ಈಗ ಅಮಾಯಕಳ ಹಾಗೆ ಆಡಬಹುದು, 419 00:38:42,708 --> 00:38:46,583 ಆದರೆ ನಾವು ಭೇಟಿಯಾದಾಗಿನಿಂದ ನಾನಂದ್ರೆ ಅವಳಿಗೆ ವ್ಯಾಮೋಹ. 420 00:38:50,500 --> 00:38:52,583 ತುಂಬಾ ಖುಷಿಯಾದ ಜೋಡಿ, ನಿಜವಾಗಲೂ. 421 00:38:52,666 --> 00:38:54,458 ಮದುವೆಗೆ ಇರಬೇಕಿತ್ತು ನೀನು. 422 00:38:55,000 --> 00:38:56,166 ಸಾಕು. 423 00:38:57,625 --> 00:38:59,250 ನಿಮ್ಮ ಗೆಳೆಯ ಬಂದಿದ್ದಾರೆ. 424 00:39:00,041 --> 00:39:02,041 ಅದಕ್ಕಾಗಿ ಸಂತೋಷ ಪಡಬಾರದಾ? 425 00:39:02,125 --> 00:39:03,541 ನಮಗಾಗೇನು ಬಂದಿಲ್ಲ ಬಿಡು. 426 00:39:03,625 --> 00:39:06,125 ನಮ್ಮದನ್ನ ಪಡೆಯೋಕೆ ಅವರ ರಾಜ ಕಳಿಸಿದ್ದಾರೆ. 427 00:39:06,208 --> 00:39:09,041 ನಿಜ ಏನಂದ್ರೆ ಖಜದ್-ದುಮ್ಮಿಗೆ ಬರೋದು ನನ್ನದೇ ಆಲೋಚನೆ. 428 00:39:09,125 --> 00:39:11,250 ಬೇರೆ ಏನನ್ನೂ ಕೇಳಿಲ್ಲ, ಕೇಳಿಸಿಕೊಳ್ಳೋಕಷ್ಟೇ. 429 00:39:11,333 --> 00:39:13,166 ಹಾಂ, ಹಾಗೇ ಮೊದಲಾಗೋದು. 430 00:39:13,250 --> 00:39:16,250 ಸ್ವಲ್ಪ ಹೊತ್ತಲ್ಲೇ ನಾವು ಅಗೌರವ ತೋರಿಸ್ತಾ ಇರ್ತೀವಿ. 431 00:39:16,333 --> 00:39:19,166 -ಎಲ್ಫ್ಗಳು ಎಲ್ಫ್ಗಳಿಗೇ ಅಲ್ವಾ? -ನಮ್ಮ ಮಧ್ಯೆ ಹಾಗಿತ್ತಾ? 432 00:39:19,250 --> 00:39:21,875 -ಗೊತ್ತಿಲ್ಲ! ಇತ್ತಾ? -ಆಲೆಯ ಗಡ್ಡವೇ! 433 00:39:24,333 --> 00:39:26,458 ಇದನ್ನ ಸರಿಮಾಡೋಕೆ ದಾರಿಯಾದರೂ ಹುಡುಕಬಾರದಾ? 434 00:39:33,875 --> 00:39:35,708 ನೀವು ಸಸಿಯನ್ನ ನೆಟ್ಟಿದ್ದೀರ. 435 00:39:36,625 --> 00:39:39,083 ನೆಟ್ಟಿದೆ. ಬೆಳೆಸಿದೆ. 436 00:39:39,625 --> 00:39:42,416 ನಮ್ಮ ಮೂರನೇ ಮಗುವಿನ ಹಾಗೆ ನೋಡಿಕೊಳ್ತೀವಿ. 437 00:39:43,250 --> 00:39:45,250 ಯಾವ ಥರದ ಮರ ಅದು? 438 00:39:46,041 --> 00:39:49,500 ಒಂದು ಸಸಿ. ಲಿಂಡೊನ್ನಿನ ನಮ್ಮ ಮಹಾ ವೃಕ್ಷದ್ದು. 439 00:39:50,000 --> 00:39:52,875 ನಮ್ಮ ಜನರ ಶಕ್ತಿ ಮತ್ತು ಚೈತನ್ಯದ ಸಂಕೇತ. 440 00:39:53,208 --> 00:39:54,916 ಅದು ಅಷ್ಟು ಕತ್ತಲಲ್ಲಿ ಬೆಳೆಯುತ್ತೆ 441 00:39:55,583 --> 00:39:58,583 ಅಂತ ನಂಬಿದ್ದಕ್ಕೆ ಕೆಲವರು ಅವರನ್ನ ಮೂರ್ಖ ಅಂದರು. 442 00:39:58,666 --> 00:40:01,000 ಪ್ರೇಮ ಇರೋ ಕಡೆ ಯಾವತ್ತೂ ಕತ್ತಲು ಇರೋದಿಲ್ಲ. 443 00:40:02,041 --> 00:40:05,000 ನಿಮ್ಮಂಥ ಮನೆಯಲ್ಲಿ ಅದು ಹೇಗೆ ಬೆಳೆಯದು? 444 00:40:14,166 --> 00:40:15,916 ಇಷ್ಟು ಬೇಗ ಹೊರಡುತ್ತಿಲ್ಲ ತಾನೇ? 445 00:40:16,000 --> 00:40:18,500 ಇಷ್ಟೊತ್ತು ಇದ್ದಿದ್ದೇ ಹೆಚ್ಚು ಅಂದುಕೊಳ್ತಾ ಇದ್ದೀನಿ. 446 00:40:18,583 --> 00:40:21,208 ನಿಮ್ಮ ಆತಿಥ್ಯಕ್ಕೆ ಧನ್ಯವಾದ, ಡಿಸಾ. 447 00:40:23,125 --> 00:40:24,375 ಡ್ಯುರಿನ್. 448 00:40:32,000 --> 00:40:33,458 ಹೋಗ್ಲಿ, ಕೂರು ಬಾ. 449 00:40:34,625 --> 00:40:37,416 -ಇಲ್ಲ. ನನಗೆ ತೊಂದರೆ ಕೊಡೋಕೆ ಇಷ್ಟ ಇಲ್ಲ. -ಕೂತ್ಕೋ ಅಂದೆ. 450 00:40:37,500 --> 00:40:38,583 ನಿಜವಾಗ್ಲಾ? 451 00:40:38,666 --> 00:40:42,416 ಇಲ್ಲ. ನನಗಿನ್ನೂ ಕೋಪ ಇದೆ. ನಿಮ್ಮ ರಾಜನ ಪ್ರಸ್ತಾಪದ ಬಗ್ಗೆ ಹೇಳಿದರೆ 452 00:40:42,500 --> 00:40:45,291 ನನ್ನ ತಂದೆಯ ಹತ್ತಿರ ಹೇಳೋದಾ ಅಥವಾ ಹತ್ತಿರದ ಕಲ್ಲುಗುಣಿಯೊಳಗೆ 453 00:40:45,375 --> 00:40:47,708 ಎಸೆಯೋದಾ ನಿರ್ಧರಿಸ್ತೀನಿ. 454 00:41:12,625 --> 00:41:14,250 ಅಷ್ಟೇನೂ ದೂರ ಇರಬೇಕಿಲ್ಲ. 455 00:41:17,083 --> 00:41:20,333 ಯಾವ ರೀತಿಯ ಮನುಷ್ಯ ತನ್ನ ಸಹವರ್ತಿಗಳನ್ನ ಸಾವಿನ ಸಮೀಪ 456 00:41:20,416 --> 00:41:23,708 ಅಷ್ಟು ಸುಲಭವಾಗಿ ಬಿಟ್ಟುಬಿಡ್ತಾನೆ ಅಂತ ಯೋಚಿಸ್ತಿದ್ದೆ. 457 00:41:23,791 --> 00:41:25,875 ಬದುಕೋದು ಹೇಗೆ ಅಂತ ಗೊತ್ತಿರುವವನೇ. 458 00:41:26,625 --> 00:41:28,583 ಯಾಕೆ ದೊಡ್ಡ ಗುರಿಯ ಭಾಗವಾಗಿರಬೇಕು? 459 00:41:28,666 --> 00:41:30,166 ನೀನಿನ್ನೂ ಲಕ್ಷ್ಯವೇ. 460 00:41:31,500 --> 00:41:34,500 ನಾವು ದಡ ಮುಟ್ಟೋವರೆಗೂ ಸುರಕ್ಷತೆ ಸಿಗೋದು ಅನುಮಾನ. 461 00:41:34,583 --> 00:41:37,000 ಸುರಕ್ಷತೆಯನ್ನು ಹುಡುಕೋದು ಅಷ್ಟೇನೂ ಸುಲಭ ಅಲ್ಲ. 462 00:41:37,416 --> 00:41:39,291 ನಿನಗಂತೂ ಅಲ್ವೇ ಅಲ್ಲ. 463 00:41:40,458 --> 00:41:42,375 ಹಡಗಿನಿಂದ "ಬೇರ್ಪಟ್ಟಿದ್ದಾ"? 464 00:41:43,791 --> 00:41:44,833 ನಿಜವಾಗಲೂ? 465 00:41:46,166 --> 00:41:48,708 -ನೀನೇ ಬಿಟ್ಟು ಬಂದಿರ್ತೀಯ. -ನಾನು ಹಾಗೆ ಕಾಣ್ತೀನಾ? 466 00:41:48,791 --> 00:41:52,791 ಸುಮ್ನೆ ಆಕಸ್ಮಿಕವಾಗಿ ಆಗೋ ಹಾಗಂತೂ ನೀನು ಕಾಣಿಸಲ್ಲ. 467 00:41:53,208 --> 00:41:55,083 ಅಂದ್ರೆ ನೀನು ಓಡಿಹೋಗ್ತಿದ್ದೆ. 468 00:41:55,166 --> 00:41:58,458 ಯಾವುದರಿಂದಲೋ, ಯಾವುದರ ಕಡೆಗೋ, ನನಗಂತೂ ಗೊತ್ತಿಲ್ಲ. 469 00:41:58,541 --> 00:42:00,875 ಮಿಡ್ಲ್ ಅರ್ಥಿಗೆ ಹಿಂದಿರುಗೋದು ನನ್ನ ಕರ್ತವ್ಯ. 470 00:42:02,083 --> 00:42:04,375 ನಿನಗಷ್ಟು ತಿಳಿದರೆ ಸಾಕು. 471 00:42:04,458 --> 00:42:08,250 -ಮುಖ್ಯವಾದ ಎಲ್ಫ್ ಕೆಲಸವೇ ಬಿಡು. -ಎಲ್ಫ್ಗಳು ನಿನಗೇನು ಮಾಡಿದ್ದರು? 472 00:42:08,333 --> 00:42:10,583 ನೀನಿಲ್ಲಿ ಸಿಕ್ಕಿಕೊಂಡಿರೋದಕ್ಕೆ ನಾವಾ ಕಾರಣ? 473 00:42:10,666 --> 00:42:13,875 ನನ್ನ ಮನೆಯಿಂದ ನನ್ನನ್ನ ಓಡಿಸಿದ್ದು ಎಲ್ಫ್ಗಳಲ್ಲ. 474 00:42:15,375 --> 00:42:16,541 ಓರ್ಕ್ಗಳು. 475 00:42:25,458 --> 00:42:28,500 ನಿಮ್ಮ ಮನೆ. ಎಲ್ಲಿತ್ತು? 476 00:42:30,208 --> 00:42:31,708 ಈಗ್ಯಾಕದು? 477 00:42:32,791 --> 00:42:33,833 ಬೂದಿಯಾಗಿಹೋಗಿದೆ. 478 00:42:37,208 --> 00:42:39,541 ನಿನ್ನ ನೋವಿನ ಬಗ್ಗೆ ನನಗೂ ಸ್ವಲ್ಪ ಗೊತ್ತು. 479 00:42:41,208 --> 00:42:42,291 ದುಃಖಿಸುತ್ತೇನೆ. 480 00:42:47,125 --> 00:42:48,541 ನೀನು ಕಳೆದುಕೊಂಡವರಿಗಾಗಿ. 481 00:42:55,125 --> 00:42:56,500 ನಿನ್ನ ಕತ್ತಿನ ಸುತ್ತ. 482 00:42:58,250 --> 00:43:00,250 ಅದು ನಿಮ್ಮ ಜನರ ಅರಸನ ಗುರುತಾ? 483 00:43:00,333 --> 00:43:01,500 -ನಮ್ಮ ಜನರಿಗೆ ರಾಜನಿಲ್ಲ. 484 00:43:01,625 --> 00:43:05,000 -ಇದ್ದಿದ್ರೆ, ಆ ರಾಜ್ಯ ಎಲ್ಲಿರೋದು? -ಯಾತಕ್ಕಾಗಿ? 485 00:43:05,083 --> 00:43:08,083 ಅದನ್ನ ನಾವು ವಾಪಸ್ ಗಳಿಸಬಹುದು ಅಂದರೆ ಏನ್ಮಾಡ್ತೀಯ? 486 00:43:08,458 --> 00:43:10,083 ಸೇನೆ ಕಡಿಮೆ ಆಯ್ತಲ್ವಾ? 487 00:43:10,166 --> 00:43:11,750 ಪ್ರಶ್ನೆಯನ್ನ ಯಾಕೆ ತಡೆಯುತ್ತೀಯ? 488 00:43:11,833 --> 00:43:13,208 ಯಾಕೆ ಸಮುದ್ರದಲ್ಲಿ ಸಿಲುಕಿದೆ? 489 00:43:13,291 --> 00:43:15,666 ನನ್ನ ಪಾಡಿಗೆ ಸುಖವಾಗಿರೋ ಬದಲು ನಿಮ್ಮ ನೋವಿಗೆ 490 00:43:15,750 --> 00:43:18,125 ಕಾರಣನಾದ ಶತ್ರುವನ್ನ ಹುಡುಕೋಕೆ ನಿರ್ಧರಿಸಿದೆ. 491 00:43:18,208 --> 00:43:21,583 ನೋಡು, ಎಲ್ಫ್. ನನ್ನ ನೋವಿಗೆ ನೀನು ಕಾರಣ ಅಲ್ಲ, ಸರಿ ಮಾಡೋಕೂ ಆಗಲ್ಲ. 492 00:43:21,666 --> 00:43:25,083 ನಿನ್ನ ಧ್ಯೇಯ ಎಷ್ಟೇ ಗಟ್ಟಿ ಇರಲಿ. ಅಥವಾ ಗರ್ವ ಇರಲಿ. 493 00:43:26,791 --> 00:43:28,166 ಅದನ್ನ ಹಾಗೇ ಬಿಟ್ಟುಬಿಡು. 494 00:43:28,625 --> 00:43:32,833 ಮೊದಲ ಸೂರ್ಯೋದಯದಿಂದ ಆಕಾಶ ಕೆಂಪಾದ ದಿನದಿಂದಲೂ ಈ ಶತ್ರುವಿನ ಹಿಂದೆ ಬಿದ್ದಿದ್ದೀನಿ. 495 00:43:33,416 --> 00:43:36,083 ನಾನು ಅವರಿಂದ ಕಳೆದುಕೊಂಡಿರುವವರ ಪಟ್ಟಿ 496 00:43:36,166 --> 00:43:39,500 ಹೇಳ್ತಾ ಹೋದರೆ ನಿನ್ನ ಜೀವಮಾನವೂ ಸಾಕಾಗಲ್ಲ. 497 00:43:40,166 --> 00:43:43,416 ಹಾಗಾಗಿ ಸುಮ್ನೆ ಬಿಡೋದು ಸಮಂಜಸವಲ್ಲ. 498 00:43:46,125 --> 00:43:49,791 ಕೊನೆಗೆ, ಸ್ವಲ್ಪ ಪ್ರಾಮಾಣಿಕತೆ ಬಂತು. 499 00:43:49,875 --> 00:43:53,125 ನೀನು ಓರ್ಕ್ಗಳನ್ನ ಕೊಲೆ ಮಾಡಿ, ಲೆಕ್ಕ ಚುಕ್ತಾ ಮಾಡೋದು ನಿನ್ನಿಷ್ಟ. 500 00:43:53,208 --> 00:43:54,875 ಅದನ್ನ ಶೌರ್ಯ ಎನ್ನಬೇಡ. 501 00:43:54,958 --> 00:43:57,291 ಶತ್ರು ಎಲ್ಲಿದ್ದಾನಂತ ಹೇಳ್ತೀಯಾ ಇಲ್ವಾ? 502 00:43:57,375 --> 00:43:58,541 ಸೌತ್ ಲ್ಯಾಂಡ್ಸ್. 503 00:44:02,041 --> 00:44:04,208 ಎಷ್ಟು ವೈರಿಗಳಿದ್ರು, ಯಾರ ಆದೇಶದಡಿಯಲ್ಲಿ 504 00:44:04,291 --> 00:44:06,000 ನಡೆದರು ಅಂತ ನನಗೆ ಗೊತ್ತಾಗಬೇಕು, 505 00:44:06,083 --> 00:44:09,875 ಹಾಗೇ ಅವರು ಕೊನೆಗೆ ಕಾಣಿಸಿಕೊಂಡ ಜಾಗಕ್ಕೆ ನನ್ನನ್ನ ಕರೆದುಕೊಂಡು ಹೋಗು. 506 00:44:10,916 --> 00:44:12,541 ನನಗೆ ನನ್ನದೇ ಯೋಜನೆಗಳಿವೆ. 507 00:44:22,375 --> 00:44:23,458 ತಯಾರಾಗು. 508 00:44:45,500 --> 00:44:47,791 -ನೋಡ್ಕೊಳ್ಳಿ! -ಹುಷಾರಮ್ಮಾ! 509 00:44:51,583 --> 00:44:53,375 "ಶವಗಳಿಲ್ಲ" ಅಂದ್ರೆ ಏನರ್ಥ? 510 00:44:53,458 --> 00:44:55,375 ಇಡೀ ಹಳ್ಳಿಯೇ ಖಾಲಿ ಇತ್ತು. 511 00:44:55,458 --> 00:44:59,000 ಹೋರ್ಡರ್ನಿನ ಜನರನ್ನ ಭೂಮಿಯೇ ಬಾಯ್ತೆರೆದು ನುಂಗಿದ ಹಾಗಿದೆ. 512 00:44:59,083 --> 00:45:01,458 ಇಲ್ಲಿನ ನೆಲವೇ ಸೂಕ್ಷ್ಮ. ಯಾವಾಗ್ಲೂ ಹಾಗೇನೇ. 513 00:45:01,541 --> 00:45:04,833 ಕ್ರೂಕ್ ಫಿಂಗರ್ ಕೆರೆಯಲ್ಲಿ ಯಾವಾಗಲೂ ಹೊಗೆಯಾಡ್ತಾ ಇರುತ್ತೆ. 514 00:45:04,916 --> 00:45:06,000 ಒಂದು ಸುರಂಗ ನೋಡಿದೆ. 515 00:45:06,083 --> 00:45:07,541 ಹುಷಾರಾಗಿ ಆಳ ತೋಡಿದ್ದಾರೆ. 516 00:45:07,625 --> 00:45:10,791 ಯಾವುದರಿಂದಲೋ ಗೊತ್ತಿಲ್ಲ, ಆದರೆ ನಮ್ಮ ಕಡೆಗೇ ತೋಡುತ್ತಿದ್ದಾರೆ. 517 00:45:10,875 --> 00:45:13,250 ನಾವಿಲ್ಲೇ ಇದ್ದರೆ ಅಪಾಯ ಖಚಿತ ಅಂತ ಹೇಳ್ತೀನಿ. 518 00:45:13,333 --> 00:45:14,750 ಬೇಗ ಸುದ್ದಿ ಹರಡಬೇಕು. 519 00:45:14,833 --> 00:45:17,500 ಇಲ್ಲ! ನನಗೀ ಮಾತುಕತೆ ಎಲ್ಲಾ ಬೇಕಿಲ್ಲ, ಬ್ರೊನವೀನ್. 520 00:45:17,583 --> 00:45:20,958 ಎಷ್ಟೋ ಭೂಕುಸಿತಗಳು ಕೆಲವರ ಮಾತುಗಳು ಮಾಡುವಷ್ಟು ಹಾನಿಯೂ ಮಾಡಿರಲ್ಲ, 521 00:45:21,041 --> 00:45:24,625 ಸಾಕ್ಷಿ, ಪುರಾವೆ ಏನೂ ಇಲ್ಲದೆ ಅದಷ್ಟೇ ಆಗಿರುತ್ತೆ. 522 00:45:24,708 --> 00:45:27,125 ವಾಲ್ಡ್ರೆಗ್, ನಾವೆಲ್ಲರೂ ಒಂಟಿಯೇ. 523 00:45:27,208 --> 00:45:29,750 ಒಸ್ಟಿರಿಥ್ ಖಾಲಿ. ಕಾವಲುಸ್ತಂಭ ಬಿಟ್ಟುಹೋಗಿದ್ದಾರೆ. 524 00:45:29,833 --> 00:45:31,791 ಗೊತ್ತು, ಯಾವುದೋ ಒಂದು ಹಳ್ಳದ ವಿಷಯಕ್ಕೆ 525 00:45:31,875 --> 00:45:33,708 ಆ ಎಲ್ಫ್ಗಳನ್ನ ಒಳಗೆ ಬಿಡಕ್ಕಾಗಲ್ಲ. 526 00:45:33,791 --> 00:45:37,791 ಅವರು ಸತ್ತರೇನೇ ಒಳ್ಳೇದು. ಕೊನೇ ಪಕ್ಷ ನಮ್ಮಲ್ಲಿ ಕೆಲವರಿಗಾದರೂ. 527 00:46:00,791 --> 00:46:02,041 ಹಾಳು ಇಲಿಗಳು! 528 00:46:06,708 --> 00:46:09,833 ದರಿದ್ರ, ದಡ್ಡ ಇಲಿಗಳು! 529 00:49:16,208 --> 00:49:17,291 ಥಿಯೋ?! 530 00:49:19,875 --> 00:49:21,083 ಥಿಯೋ? 531 00:49:35,541 --> 00:49:37,541 ಥಿಯೋ, ಯಾಕೆ? ಏನಾಯ್ತು? 532 00:49:37,625 --> 00:49:39,250 ಸಹಾಯಕ್ಕೆ ಕರ್ಕೊಂಡು ಬಾ. ಹೋಗು. 533 00:51:29,541 --> 00:51:31,416 ಓಡು! ಥಿಯೋ, ಓಡು! 534 00:51:35,583 --> 00:51:36,666 ಹೇಯ್! 535 00:51:44,416 --> 00:51:45,333 ನಿಲ್ಲು! 536 00:52:26,958 --> 00:52:29,625 ಇಲ್ಲಿ ಯಾರಿಗಾದರೂ ಬದುಕೋ ಆಸೆ ಇದ್ದರೆ 537 00:52:29,708 --> 00:52:32,208 ಬೆಳಕು ಹರಿಯುತ್ತಲೇ ಎಲ್ವೆನ್ ಸ್ತಂಭಕ್ಕೆ ಬನ್ನಿ. 538 00:52:50,166 --> 00:52:53,375 ದೋಣಿಯನ್ನ ಕಟ್ಟಬೇಕು! ಎಲ್ಲಾ ಕಡೆ ಬಿಚ್ಚಿಕೊಳ್ತಾ ಇದೆ! 539 00:52:53,458 --> 00:52:54,708 ಗಾಳಿ ತುಂಬಾ ಜೋರಾಗಿದೆ. 540 00:52:54,791 --> 00:52:56,125 ಹಗ್ಗ ಹಿಡಿ! 541 00:53:19,708 --> 00:53:22,416 ಬಾ! ನಿನ್ನ ಕೈ ಕೊಡು! 542 00:53:24,958 --> 00:53:26,625 ನನ್ನನ್ನ ಸೇರಿಸಿ ಕಟ್ಟಿಕೋ. 543 00:53:26,708 --> 00:53:28,750 ಬಾ! ನಿನ್ನ ಕೈ ಕೊಡು! 544 00:55:27,041 --> 00:55:29,958 ನಮಸ್ಕಾರ, ನಾನು. ನಾನು, ನೋರಿ. 545 00:55:40,500 --> 00:55:45,041 ಮುಂದಿನ ವಲಸೆ ಕೆಲವೇ ದಿನಗಳಲ್ಲಿದೆ, ಮತ್ತು ಎಲ್ಲವೂ ಹೋಗಿಬಿಟ್ಟಿದೆ... 546 00:55:45,833 --> 00:55:47,500 ಎಲ್ಲೆಯೇ ಇಲ್ಲದಷ್ಟು. 547 00:55:50,541 --> 00:55:52,125 ನಿನಗೆ ಸಹಾಯ ಮಾಡಬೇಕಂತಿದ್ದೆ. 548 00:55:53,875 --> 00:55:55,875 ಮಾಡಬಹುದು ಅಂದ್ಕೊಂಡೆ, ಆದರೆ ಕ್ಷಮಿಸು. 549 00:56:08,958 --> 00:56:11,958 ಇದೊಂದು ದೀಪ. ಮಿಂಚುಹುಳುಗಳದ್ದು. 550 00:56:59,666 --> 00:57:01,333 ಏನು ಹೇಳ್ತಿದ್ದಾನೆ ಅವುಗಳಿಗೆ? 551 00:57:03,625 --> 00:57:05,333 ನನಗೆ ಮಿಂಚುಹುಳದ ಭಾಷೆ ಗೊತ್ತಿಲ್ಲ. 552 00:57:35,458 --> 00:57:37,125 ಅವು ನಕ್ಷತ್ರಗಳು. 553 00:57:38,166 --> 00:57:41,125 ಒಂದು ರೀತಿಯ ನಕ್ಷತ್ರಪುಂಜ. 554 00:57:42,041 --> 00:57:45,583 ಸರಿ? ಅವು ನಕ್ಷತ್ರಗಳಾ? ಅಂದ್ರೆ ಏನರ್ಥ? 555 00:57:45,666 --> 00:57:47,083 ಅವನಿಗೆ ಹೀಗೇ ಸಹಾಯ ಮಾಡಬೇಕು. 556 00:57:47,166 --> 00:57:50,041 ಆ ತಾರೆಗಳನ್ನ ಹುಡುಕಿಕೊಡೋಕೆ ಅವನಿಗೆ ನಮ್ಮ ಸಹಾಯ ಬೇಕು. 557 00:57:51,875 --> 00:57:53,291 ಅಷ್ಟೇ ಅಲ್ವಾ? 558 00:57:54,208 --> 00:57:55,416 ಅಲ್ವಾ? 559 00:58:05,791 --> 00:58:07,583 ಮುಂಚೆ ಆ ನಕ್ಷತ್ರಗಳು ಕಂಡೇ ಇಲ್ಲ. 560 00:58:09,333 --> 00:58:12,333 ಆದರೆ ಅವನ್ನ ಎಲ್ಲಿ ಹುಡುಕಬೇಕೋ ನನಗೆ ಚೆನ್ನಾಗಿ ಗೊತ್ತಿದೆ. 561 00:58:25,458 --> 00:58:26,625 ನೋರಿ? 562 00:58:41,958 --> 00:58:44,875 ನನಗೆ ಖಾತ್ರಿಯಿದೆ. ಅವನಿಗೆ ಗೊತ್ತಿಲ್ಲ. 563 00:58:49,666 --> 00:58:50,833 ಇರಬಹುದು. 564 00:58:52,666 --> 00:58:53,833 ಇಲ್ಲದಿರಬಹುದು. 565 00:58:57,416 --> 00:58:59,625 ಎಲ್ಫ್ಗಳ ವಿಷಯಕ್ಕೆ ಬಂದಾಗಲೆಲ್ಲಾ 566 00:58:59,708 --> 00:59:01,708 ನಿನ್ನ ಕಲ್ಲು ಹೃದಯ ಬೆಣ್ಣೆಯಾಗಿಬಿಡುತ್ತೆ. 567 00:59:01,791 --> 00:59:04,125 ಒಬ್ಬ ಎಲ್ಫ್ ಈಗಲೇ ನಮ್ಮ ಬಾಗಿಲಾಚೆ ಬರ್ತಾನೆ 568 00:59:04,208 --> 00:59:07,375 ಅಂದ್ರೆ ಇದು ಕಾಕತಾಳೀಯ ಅನ್ಸಲ್ವಾ, ಹೇಳು? ಅದೂ ಈಗ? 569 00:59:07,458 --> 00:59:10,375 ನನಗೆ ಎಲ್ರೊಂಡ್ ಅರ್ಧ ಶತಮಾನದ ಪರಿಚಯ, ಅಪ್ಪ. 570 00:59:10,458 --> 00:59:12,750 ಮುಚ್ಚಿಟ್ಟಿದ್ದರೆ ನನಗೆ ಗೊತ್ತಾಗ್ತಿತ್ತು. 571 00:59:12,875 --> 00:59:16,500 ನೀನೇ ಏನೋ ಮುಚ್ಚಿಡ್ತಾ ಇದ್ದೀಯ ಅಂದುಕೊಂಡನೇನೋ. 572 00:59:16,583 --> 00:59:18,875 ನೀವವರ ಬಗ್ಗೆ ತುಂಬಾ ಯೋಚನೆ ಮಾಡ್ತೀರ. 573 00:59:18,958 --> 00:59:22,166 ಅನುಕೂಲಕರ ಪರಿಸ್ಥಿತಿಯಲ್ಲಿ ಈಗ ನಾವೇ ಇರೋದು. 574 00:59:22,250 --> 00:59:24,541 ಹೌದು. ಸದ್ಯಕ್ಕೆ. 575 00:59:28,791 --> 00:59:30,750 ಎಲ್ರೊಂಡ್ ನನ್ನ ಮಿತ್ರ. ನಂಬ್ತೀನಿ. 576 00:59:30,833 --> 00:59:33,500 ಸುತ್ತಿಗೆಗೂ ಬಂಡೆಗೂ ಮಧ್ಯೆ ಯಾವ ತರದ ನಂಬಿಕೆ? 577 00:59:34,166 --> 00:59:38,041 ಎರಡರಲ್ಲೊಂದು ಒಡೆದು ಹೋಗಲೇಬೇಕು. 578 01:00:54,125 --> 01:00:55,083 ಥಿಯೋ! 579 01:00:59,500 --> 01:01:00,500 ತಯಾರಿದ್ದೀಯಾ? 580 01:01:00,916 --> 01:01:03,250 ಹೌದಮ್ಮ. ತಯಾರಾಗಿದ್ದೀನಿ. 581 01:04:01,750 --> 01:04:03,750 ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ 582 01:04:03,833 --> 01:04:05,833 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್