1 00:00:22,708 --> 00:00:24,708 ಆರಂಭದಲ್ಲಿ ಯಾವುದೂ ಕೆಟ್ಟದ್ದಲ್ಲ. 2 00:00:24,791 --> 00:00:26,500 ಈ ಕಡೆ. 3 00:00:29,833 --> 00:00:33,916 ಒಂದು ಕಾಲದಲ್ಲಿ ಜಗತ್ತು ಎಷ್ಟು ಎಳೆಯದಾಗಿತ್ತೆಂದರೆ 4 00:00:34,041 --> 00:00:37,041 ಅಲ್ಲಿ ಸೂರ್ಯೋದಯ ಇನ್ನೂ ಆಗಿರಲೇ ಇಲ್ಲ. 5 00:00:37,125 --> 00:00:41,416 ಆದರೆ ಆಗಲೂ ಬೆಳಕಿತ್ತು. 6 00:01:02,958 --> 00:01:05,875 ಏನು, ಮುಗೀತಾ? 7 00:01:17,666 --> 00:01:21,208 ಆ ಹಳೇ ರದ್ದಿ ತೇಲುತ್ತೆ ಅಂತ ನೀನೂ ನಂಬಲ್ಲ. 8 00:01:22,666 --> 00:01:24,208 ಅದು ತೇಲೋದಿಲ್ಲ. 9 00:01:25,958 --> 00:01:29,000 ಅದು ಸಾಗುತ್ತೆ. 10 00:01:48,666 --> 00:01:49,750 ನಿಲ್ಲು! 11 00:01:50,333 --> 00:01:51,166 ಇಲ್ಲ, ಬೇಡ! 12 00:01:52,500 --> 00:01:54,041 ನಿಲ್ಲು, ಅದನ್ನ ಮುರಿದುಹಾಕ್ತೀಯ! 13 00:01:54,125 --> 00:01:56,083 ನಿಲ್ಲು! ಬೇಡ! 14 00:01:56,166 --> 00:01:58,500 -ಬಾ. -ನಿಲ್ಲು, ಮುರಿಯುತ್ತಿದ್ದೀಯ! ನಿಲ್ಲಿಸು! 15 00:02:02,208 --> 00:02:04,000 ಅದು ತೇಲೋದಿಲ್ಲ ಅಂತ ಹೇಳಿದೆ ನಿಂಗೆ. 16 00:02:07,708 --> 00:02:09,166 ಬಿಡು ನನ್ನ! 17 00:02:09,291 --> 00:02:11,541 ಮತ್ತೆ ಜಾರಿ ಬಿದ್ಯಾ, ಗಲಾಡ್ರಿಯಲ್? 18 00:02:19,625 --> 00:02:21,833 ಅದು ಒಳ್ಳೆ ಹಡಗಾಗಿತ್ತು, ತಂಗಿ. 19 00:02:21,916 --> 00:02:23,833 ನೀನು ಹೇಳಿಕೊಟ್ಟ ಹಾಗೇ ಮಾಡಿದೆ. 20 00:02:25,208 --> 00:02:29,791 ಹಡಗು ಯಾಕೆ ತೇಲುತ್ತೆ, ಆದರೆ ಕಲ್ಲಿಗೆ ಯಾಕಾಗಲ್ಲ ಅಂತ ಗೊತ್ತಾ? 21 00:02:31,041 --> 00:02:35,416 ಯಾಕಂದ್ರೆ ಕಲ್ಲು ಕೆಳಗೆ ಮಾತ್ರ ನೋಡುತ್ತೆ. 22 00:02:36,583 --> 00:02:40,250 ನೀರಿನ ಕತ್ತಲು ವಿಶಾಲ ಮತ್ತು ತಡೆಯಲಾರದ್ದು. 23 00:02:41,708 --> 00:02:43,750 ಹಡಗಿಗೂ ಕತ್ತಲು ಗೋಚರವಾಗುತ್ತೆ, 24 00:02:43,833 --> 00:02:47,666 ಪ್ರತಿಕ್ಷಣ ಅದನ್ನ ಪಳಗಿಸಿ ಕೆಳಗೆ ಎಳೆಯುತ್ತಿರುವ ಹಾಗೆ. 25 00:02:49,458 --> 00:02:51,750 ಆದರೆ ಹಡಗಿಗೆ ಒಂದು ರಹಸ್ಯ ಇದೆ. 26 00:02:53,375 --> 00:02:57,291 ಕಲ್ಲಿನ ಹಾಗಲ್ಲದೆ ಅದರ ದೃಷ್ಟಿ ಮೇಲಕ್ಕೆ ನೆಟ್ಟಿರುತ್ತೆ. 27 00:02:58,666 --> 00:03:00,875 ದಾರಿ ತೋರುವ ಬೆಳಕಿನೆಡೆಗೆ ನೆಟ್ಟಿದ್ದು, 28 00:03:01,750 --> 00:03:04,833 ಕತ್ತಲಿಗೇ ಗೊತ್ತಿಲ್ಲದ ಅದ್ಭುತಗಳನ್ನು ಉಸುರುತ್ತಿರುತ್ತದೆ. 29 00:03:06,958 --> 00:03:10,500 ಆದರೆ ಕೆಲವು ಸಲ ಬೆಳಕು ಆಕಾಶದಲ್ಲಿ ಹೊಳೆಯುವಷ್ಟೇ ಪ್ರಖರವಾಗಿ 30 00:03:10,583 --> 00:03:13,250 ನೀರಿನ ಮೇಲೂ ಪ್ರತಿಬಿಂಬಿಸುತ್ತದೆ. 31 00:03:13,333 --> 00:03:16,541 ಮೇಲೆ ಯಾವುದು ಕೆಳಗೆ ಯಾವುದು ಅಂತ ಹೇಳೋದೇ ಕಷ್ಟ ಆಗುತ್ತೆ. 32 00:03:18,333 --> 00:03:20,875 ಯಾವ ಬೆಳಕನ್ನ ಅನುಸರಿಸಬೇಕು ಹೇಗೆ ಗೊತ್ತಾಗುತ್ತೆ? 33 00:03:33,375 --> 00:03:34,875 ಅದು ತುಂಬಾ ಸುಲಭ ಅನ್ಸುತ್ತೆ. 34 00:03:34,958 --> 00:03:37,166 ಪ್ರಮುಖವಾದ ಸತ್ಯಗಳು ಹಾಗೇನೇ. 35 00:03:38,041 --> 00:03:40,458 ಅದನ್ನ ವಿವೇಚಿಸುವುದನ್ನ ನೀನೇ ಕಲಿಯಬೇಕು. 36 00:03:40,541 --> 00:03:43,375 ನಿನಗೆ ಹೇಳಿಕೊಡಕ್ಕೆ ನಾನಿಲ್ಲಿ ಯಾವಾಗಲೂ ಇರಲ್ಲ. 37 00:03:43,458 --> 00:03:44,875 ಇರಲ್ವಾ? 38 00:03:46,250 --> 00:03:48,750 ಬಾ. ಅಮ್ಮ, ಅಪ್ಪ ಕಾಯ್ತಿದ್ದಾರೆ. 39 00:03:59,333 --> 00:04:01,458 ನಮ್ಮಲ್ಲಿ ಸಾವು ಅನ್ನೋ ಪದವೇ ಇರಲಿಲ್ಲ. 40 00:04:02,583 --> 00:04:05,541 ನಮ್ಮ ಸಂತೋಷ ಕೊನೆಯಿಲ್ಲದ್ದು ಅಂತಲೇ ತಿಳಿದಿದ್ದೆವು. 41 00:04:20,833 --> 00:04:23,833 ನಮ್ಮ ಬೆಳಕು ಎಂದಿಗೂ ಬಾಡದು ಅಂದುಕೊಂಡಿದ್ದೆವು. 42 00:04:28,666 --> 00:04:31,791 ಗ್ರೇಟ್ ಫೋ ಆದ ಮಾರ್ಗೋಥ್ 43 00:04:31,875 --> 00:04:34,916 ನಮ್ಮ ತವರಿನ ಬೆಳಕನ್ನು ನಾಶ ಮಾಡಿದಾಗ... 44 00:04:37,958 --> 00:04:39,791 ನಾವು ಪ್ರತಿರೋಧಿಸಿದೆವು. 45 00:04:43,583 --> 00:04:47,250 ಎಲ್ಫ್ಗಳ ದಳವೊಂದು ಯುದ್ಧಕ್ಕೆ ತೆರಳಿತು. 46 00:04:51,916 --> 00:04:52,916 ವಾಲಿನೊರ್ 47 00:04:53,000 --> 00:04:58,708 ನಮ್ಮ ತವರಾದ ವಾಲಿನೊರ್ ಬಿಟ್ಟು ದೂರದ ಸಾಮ್ರಾಜ್ಯಕ್ಕೆ ಹೊರಟೆವು. 48 00:04:58,791 --> 00:04:59,833 ದಿ ಸಂಡರಿಂಗ್ ಸೀಸ್ 49 00:04:59,916 --> 00:05:05,250 ಅದು ಕೇಳರಿಯದ ಅಪಾಯಗಳು ಮತ್ತು ಅಂಕೆಯಿಲ್ಲದಷ್ಟು ವಿಚಿತ್ರ ಜೀವಿಗಳನ್ನು ಒಳಗೊಂಡದ್ದು. 50 00:05:05,875 --> 00:05:09,375 ಮಿಡ್ಲ್ ಅರ್ಥ್ ಎಂಬ ಒಂದು ಜಾಗ. 51 00:05:44,083 --> 00:05:46,500 ಅವರೇನೋ ಬೇಗ ಮುಗಿಯುತ್ತೆ ಅಂದರು, 52 00:05:48,041 --> 00:05:52,458 ಆದರೆ ಯುದ್ಧದಿಂದ ಮಿಡ್ಲ್ ಅರ್ಥ್ ಜರ್ಜರಿತವಾಗಿಹೋಯಿತು. 53 00:05:55,666 --> 00:05:59,250 ಮತ್ತು ಶತಮಾನಗಳ ಕಾಲ ಮುಂದುವರೆಯಿತು. 54 00:06:20,083 --> 00:06:23,666 ನಮಗೀಗ ಸಾವಿಗೆ ಎಷ್ಟೋ ಪದಗಳು ಸಿಕ್ಕವು. 55 00:06:28,916 --> 00:06:31,875 ಮಾರ್ಗೋಥ್ ಪರಾಭವಗೊಂಡಿತ್ತು. 56 00:06:32,875 --> 00:06:35,625 ಬಹಳ ಶೋಕವನ್ನು ಅನುಭವಿಸಿದ ನಂತರ. 57 00:06:38,125 --> 00:06:42,833 ಯಾಕಂದ್ರೆ ಅವನ ಓರ್ಕ್ಗಳು ಮಿಡ್ಲ್ ಅರ್ಥ್ ಮೂಲೆಮೂಲೆಗೆ ಹರಡಿದ್ದರು, 58 00:06:44,125 --> 00:06:46,583 ಸಂಖ್ಯೆಯಲ್ಲಿ ವೃದ್ಧಿಸುತ್ತಾ 59 00:06:46,666 --> 00:06:50,166 ಅತ್ಯಂತ ವಿನಮ್ರ ಸೇವಕನ ಆದೇಶದಡಿಯಲ್ಲಿ. 60 00:06:50,250 --> 00:06:54,083 ಆತ ಕ್ರೂರಿ ಮತ್ತು ಕುತಂತ್ರಿ ಮಾಟಗಾರ. 61 00:06:54,166 --> 00:06:57,000 ಅವರು ಅವನನ್ನು ಸೌರೊನ್ ಎಂದು ಕರೆದರು. 62 00:06:58,708 --> 00:07:02,291 ನನ್ನಣ್ಣ ಅವನನ್ನು ಪತ್ತೆ ಹಚ್ಚಿ ವಿನಾಶ ಮಾಡಲು ಪಣತೊಟ್ಟ. 63 00:07:05,000 --> 00:07:07,208 ಆದರೆ ಸೌರೊನ್ ಅವನನ್ನು ಮೊದಲು ಪತ್ತೆ ಮಾಡಿ 64 00:07:09,291 --> 00:07:11,625 ಅವನ ಚರ್ಮದ ಮೇಲೆ ಸಂಕೇತ ಬರೆದ. 65 00:07:14,416 --> 00:07:17,875 ಅದರ ಅರ್ಥ ನಮ್ಮಲ್ಲಿನ ಅತಿ ಬುದ್ಧಿವಂತರಿಗೂ ತಿಳಿಯಲಿಲ್ಲ. 66 00:07:22,375 --> 00:07:25,208 ಮತ್ತು ಅಲ್ಲಿ, ಕತ್ತಲಲ್ಲಿ, 67 00:07:25,875 --> 00:07:29,041 ಅವನ ಶಪಥ ನನ್ನದಾಯಿತು. 68 00:07:31,083 --> 00:07:33,625 ಮತ್ತು ನಾವು ಬೇಟೆಯಾಡಿದೆವು. 69 00:07:35,875 --> 00:07:38,750 ಭೂಮಿಯುದ್ದಗಲಕ್ಕೂ ಸೌರೊನ್ಗಾಗಿ ಬೇಟೆಯಾಡಿದೆವು. 70 00:07:41,291 --> 00:07:43,833 ಆದರೆ ಹಾದಿ ಕಿರಿದಾಗುತ್ತಾ ಬಂತು. 71 00:07:46,416 --> 00:07:48,208 ವರ್ಷಗಳು ಉರುಳಿದವು. 72 00:07:48,958 --> 00:07:51,166 ಶತಮಾನಗಳೇ ಕಳೆದವು. 73 00:07:51,708 --> 00:07:55,375 ಎಷ್ಟೋ ಎಲ್ಫ್ಗಳಿಗೆ ಆ ದಿನಗಳ ನೋವು 74 00:07:55,458 --> 00:07:58,458 ಆಲೋಚನೆ ಮತ್ತು ಮನಸ್ಸಿನಿಂದ ದೂರಸರಿಯಿತು. 75 00:07:59,500 --> 00:08:02,000 ನಮ್ಮಲ್ಲಿನ ಎಷ್ಟೋ ಮಂದಿ 76 00:08:02,083 --> 00:08:05,125 ಸೌರೊನ್ ಕೇವಲ ನೆನಪಷ್ಟೇ ಅಂತ ನಂಬಲು ಶುರುಮಾಡಿದರು. 77 00:08:05,208 --> 00:08:06,666 ಫಾರೋಡ್ವಯ್ತ್ ದಿ ನಾರ್ತರ್ನ್ ಮೋಸ್ಟ್ ವೇಸ್ಟ್ 78 00:08:06,750 --> 00:08:10,750 ಕೊನೆಗೂ ಆ ಭೀತಿ ಕೊನೆಯಾಯಿತು. 79 00:08:14,000 --> 00:08:16,333 ನಾನೂ ಅವರಲ್ಲೊಬ್ಬಳಾದರೆ ಎಷ್ಟು ಚಂದ. 80 00:09:13,333 --> 00:09:14,833 ಸೇನಾಧಿಪತಿ ಗಲಾಡ್ರಿಯಲ್. 81 00:09:16,916 --> 00:09:20,000 ಈ ದಳ ನಿಮ್ಮನ್ನು ಪ್ರಪಂಚದ ಅಂಚಿನವರೆಗೂ ಹಿಂಬಾಲಿಸಿದೆ. 82 00:09:20,083 --> 00:09:22,875 ಆದರೆ ಈ ಕೊನೆಯ ಭದ್ರಕೋಟೆಯನ್ನು ಹುಡುಕಿದ ಯಾರಿಗೂ 83 00:09:22,958 --> 00:09:24,375 ಏನೊಂದೂ ಸಿಕ್ಕಿಲ್ಲ. 84 00:09:25,916 --> 00:09:28,916 ಕೊನೆಯ ಓರ್ಕ್ ಕಾಣಿಸಿಕೊಂಡು ವರ್ಷಗಳೇ ಆಗಿದೆ. 85 00:09:29,750 --> 00:09:34,250 ಬೇರೆ ಸೇನಾಧಿಪತಿಗಳು ಹೇಳೋ ಹಾಗೆ ನಮ್ಮ ಶತ್ರು ಇನ್ನಿಲ್ಲ ಅನ್ನಿಸಲ್ವಾ? 86 00:09:34,333 --> 00:09:35,541 ರಾತ್ರಿಯಾಗ್ತಾ ಇದೆ. 87 00:09:36,291 --> 00:09:40,291 ಸೂರ್ಯನ ಬೆಳಕೂ ಹೋಗಲು ಹೆದರೋ ಕಡೆ ಜೀವಂತ ಜೀವಿಗಳು ಎಷ್ಟು ಕಾಲ ಸಹಿಸಿರೋಕಾಗುತ್ತೆ? 88 00:09:44,916 --> 00:09:47,250 ನಾವಿಲ್ಲೇ ಉಳಿದುಕೊಳ್ಳೋದು ಒಳ್ಳೆಯದು ಅನ್ಸುತ್ತೆ. 89 00:09:48,041 --> 00:09:50,250 ನಾಳೆ ಬೆಳಿಗ್ಗೆ ವಾಪಸ್ ಮನೆಗೆ ಹೋಗೋಣ. 90 00:09:54,750 --> 00:09:56,166 ಬೆಳಕು ಕ್ಷೀಣಿಸುತ್ತಿದೆ. 91 00:10:11,000 --> 00:10:12,291 ಸೇನಾಧಿಪತಿಗಳೇ, ಇರಿ! 92 00:10:12,375 --> 00:10:14,875 ಇಲ್ಲ. ನಾವು ಹೊರಡುತ್ತಲೇ ಇರಬೇಕು. 93 00:10:14,958 --> 00:10:16,416 ಗಲಾಡ್ರಿಯಲ್, ನಿಲ್ಲು! 94 00:10:39,000 --> 00:10:42,416 ಇಲ್ಲೇನೂ ಇಲ್ಲ. ಇಷ್ಟೊತ್ತಿಗೆಲ್ಲಾ ನಾವಲ್ಲಿರಬೇಕಿತ್ತು. 95 00:10:50,666 --> 00:10:51,875 ನಾವಲ್ಲೇ ಇದ್ದೀವಿ. 96 00:11:13,333 --> 00:11:14,750 ಇದೇ ಅದು. 97 00:11:14,833 --> 00:11:18,041 ಮಾರ್ಗೋಥಿನ ಸೋಲಿನ ನಂತರ ಓರ್ಕ್ಗಳು ಇಲ್ಲೇ ಸೇರಿದ್ದು. 98 00:11:19,125 --> 00:11:22,041 ನಾವಂದುಕೊಂಡಿದ್ದಕ್ಕಿಂತ ಎಷ್ಟೋ ಮಂದಿ ತಪ್ಪಿಸಿಕೊಂಡಿರಬಹುದು. 99 00:11:23,000 --> 00:11:25,416 ನನ್ನ ಕೈಗೆ ಸ್ಪರ್ಶವೂ ಗೊತ್ತಾಗ್ತಿಲ್ಲ. 100 00:11:27,458 --> 00:11:28,541 ಇಲ್ಲ. 101 00:11:30,083 --> 00:11:33,500 ಈ ಜಾಗ ಎಷ್ಟು ಕೆಟ್ಟದ್ದಂದರೆ ನಮ್ಮ ಪಂಜುಗಳಿಂದ ಶಾಖವೇ ಬರುತ್ತಿಲ್ಲ. 102 00:11:34,250 --> 00:11:35,416 ಹೀಗೆ ಬನ್ನಿ. 103 00:11:36,000 --> 00:11:37,500 ಅಷ್ಟು ನಿಖರವಾಗಿ ಹೇಗೆ ಹೇಳ್ತೀಯ? 104 00:11:38,041 --> 00:11:39,666 ಇಲ್ಲಿ ಬೇರೆ ಕಡೆಗಿಂತ ಚಳಿಯಿದೆ. 105 00:12:09,291 --> 00:12:10,875 ಇಲ್ಲೊಂದು ಬಾಗಿಲಿತ್ತು. 106 00:12:12,083 --> 00:12:13,083 ಒಡೆದುಹಾಕಿ. 107 00:12:48,833 --> 00:12:50,625 ಇದೆಂಥಾ ವಿಚಿತ್ರ? 108 00:12:53,375 --> 00:12:56,916 ಈ ಓರ್ಕ್ಗಳು ಕಾಣದ ಜಗತ್ತಿನ ಶಕ್ತಿಗಳ ವಿಷಯಕ್ಕೆ ಕೈ ಹಾಕಿದ್ದರು. 109 00:12:57,666 --> 00:12:59,583 ಯಾವುದೋ ಹಳೆಯ ಕ್ಷುದ್ರವಿದ್ಯೆ. 110 00:13:03,833 --> 00:13:05,458 ಆದರೆ ಅವರ ಉದ್ದೇಶ ಏನಾಗಿತ್ತು? 111 00:13:06,416 --> 00:13:09,250 ಖಂಡಿತವಾಗ್ಲೂ ಅದು ಈಗ ಕಾಲದಲ್ಲಿ ಕಳೆದುಹೋಗಿದೆ. 112 00:13:09,333 --> 00:13:11,500 ಇಲ್ಲೇನೇ ನಡೆದಿದ್ರೂ ಎಷ್ಟೋ ಕಾಲ ಆಗಿದೆ. 113 00:13:19,125 --> 00:13:20,208 ನೀರು. 114 00:13:30,291 --> 00:13:32,291 ದಾಹವೇ ತೀರದ ಅಗ್ನಿಯ ಕೈಯವನ ಗುರುತನ್ನು 115 00:13:32,375 --> 00:13:34,958 ಕಲ್ಲು ಕೂಡ ಅಡಗಿಸಿಡಲಾಗದು. 116 00:13:42,708 --> 00:13:43,791 ಅವನಿಲ್ಲಿದ್ದ. 117 00:13:44,916 --> 00:13:46,666 ಸೌರೊನ್ ಇಲ್ಲಿದ್ದ. 118 00:13:47,125 --> 00:13:49,458 ವಿಶ್ರಾಂತಿ ತೆಗೆದುಕೊಳ್ಳಲು ಮಿಕ್ಕವರಿಗೆ ಹೇಳಿ. 119 00:13:49,541 --> 00:13:52,750 ಸೂರ್ಯೋದಯಕ್ಕೆ ಹೊರಡೋಣ. ಮುಂದೆ ಉತ್ತರಕ್ಕೆ ಹೋಗಿ ಹುಡುಕೋಣ. 120 00:13:52,833 --> 00:13:53,916 ಮುಂದೆ ಉತ್ತರಕ್ಕಾ? 121 00:13:54,000 --> 00:13:56,916 ಓರ್ಕ್ಗಳು ಹಿಂಬಾಲಿಸಲಿ ಅಂತಲೇ ಈ ಗುರುತನ್ನ ಉಳಿಸಿರೋದು. 122 00:13:57,833 --> 00:14:00,333 ನಾನು ಇದನ್ನ ಕೊನೆಯ ಸಾರಿ ನೋಡಿದ್ದು ನಮ್ಮಣ್ಣನ ಮೇಲೆ. 123 00:14:00,916 --> 00:14:02,041 ಅದನ್ನ ಹಿಂಬಾಲಿಸೋಣ. 124 00:14:02,541 --> 00:14:04,583 ಈ ಗುರುತು ಶತಮಾನಗಳಷ್ಟು ಹಳೆಯದು. 125 00:14:04,666 --> 00:14:06,500 ಬಿಟ್ಟು ಹೋದವರು ಸತ್ತುಹೋಗಿರ್ತಾರೆ. 126 00:14:06,583 --> 00:14:08,458 ಇಲ್ಲಾ ಕಾಯುತ್ತಾ, ಶಕ್ತಿ ಪಡೆಯುತ್ತ 127 00:14:08,541 --> 00:14:10,875 ತಪ್ಪಿಹೋದ ಕ್ಷುದ್ರಶಕ್ತಿಯನ್ನ ಒಲಿಸಿಕೊಳ್ತಿರಬಹುದು. 128 00:14:10,958 --> 00:14:12,958 ಆದೇಶಗಳನ್ನು ಮೀರಿ ತಿಂಗಳುಗಳಾಗಿವೆ. 129 00:14:13,041 --> 00:14:17,083 ಮೇಲರಸನ ಜೊತೆ ಸಂಧಾನ ಮಾಡಲು ನಾವು ಖಂಡಿತ ವಾಪಸ್ ಹೋಗಲೇಬೇಕು. 130 00:14:17,583 --> 00:14:20,666 ನಮ್ಮವರ ಪೈಕಿ ಮನೆಗೆ ಹೋಗಲು ನನ್ನಷ್ಟು ಬಯಸುವವರು 131 00:14:21,791 --> 00:14:23,708 ಬೇರೆ ಯಾರೂ ಇಲ್ಲ ಅಂತ ಆಣೆ ಮಾಡಬಲ್ಲೆ. 132 00:14:25,791 --> 00:14:28,791 ಮರಗಳ ಬೆಳಕನ್ನು ನನ್ನ ಮುಖದ ಮೇಲೆ ಈಗಲೂ ಅನುಭವಿಸಬಲ್ಲೆ. 133 00:14:30,791 --> 00:14:32,208 ಈಗಲೂ ಅದನ್ನ ನೋಡಬಲ್ಲೆ. 134 00:14:34,208 --> 00:14:36,375 ನಮ್ಮ ಶತ್ರುವಿನ ಪ್ರತಿ ಕುರುಹೂ 135 00:14:36,875 --> 00:14:40,458 ಅಳಿಸಿಹೋಗಿದೆ ಅಂತ ಖಾತ್ರಿಯಾಗುವವರೆಗೂ... 136 00:14:42,958 --> 00:14:44,458 ನಾನು ವಾಪಸಾಗಲಾರೆ. 137 00:15:17,583 --> 00:15:19,541 ಹಿಮರಾಕ್ಷಸ! 138 00:16:35,833 --> 00:16:37,375 ನಾವಿಲ್ಲಿಗೆ ಬರಲೇಬಾರದಿತ್ತು. 139 00:16:37,458 --> 00:16:38,833 ಬೇಗನೇ ಹೊರಡೋಣ. 140 00:16:40,416 --> 00:16:41,875 ಆಜ್ಞೆ ಕೊಟ್ಟಾಗಿದೆ. 141 00:16:41,958 --> 00:16:43,458 ಮೊದಲ ಬೆಳಕಿಗೇ ಹೊರಡೋಣ. 142 00:16:50,750 --> 00:16:52,500 ಹಾಗಿದ್ರೆ ನೀನೊಬ್ಬಳೇ ಹೋಗುವಂತೆ. 143 00:17:27,958 --> 00:17:33,958 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 144 00:17:40,791 --> 00:17:45,083 ರ್ಹೊವೇನಿಯನ್ ಯಾಂಡುಯಿನ್ನ ಪೂರ್ವಕ್ಕಿರುವ ಅರಣ್ಯಪ್ರದೇಶ 145 00:17:55,666 --> 00:17:57,875 ಇಲ್ಲೇನೋ ಸರಿ ಇಲ್ಲ. ಬೇಟೆಗೆ ಏನೂ ಇಲ್ಲ. 146 00:17:57,958 --> 00:17:59,791 ಎಲ್ಲಿ ನೋಡಿದರೂ ತೋಳಗಳೇ. 147 00:18:00,166 --> 00:18:02,541 ಇದು ಸ್ವಲ್ಪಾನೂ ವಿಚಿತ್ರ ಅನ್ನಿಸ್ತಿಲ್ವಾ? 148 00:18:02,625 --> 00:18:04,375 ಜಗತ್ತೇ ವಿಚಿತ್ರ. 149 00:18:04,708 --> 00:18:06,416 ಅದಕ್ಕೆಲ್ಲಾ ತಲೆಕೆಡಿಸಿಕೊಂಡರೆ 150 00:18:06,500 --> 00:18:08,791 ಕುಂತ ಕಡೆಯಿಂದ ಏಳಕ್ಕಾಗಲ್ಲ. 151 00:18:09,333 --> 00:18:10,166 ಏ!! 152 00:18:13,250 --> 00:18:14,833 ನಡೀತಾನೇ ಇರು. 153 00:18:14,916 --> 00:18:16,000 ಯಾಕೆ? 154 00:18:17,750 --> 00:18:20,333 ನೆಲಗರಡಿ ಇದ್ದಂಗಿದೆ. ನರಿ ಇರಬಹುದು. 155 00:18:20,416 --> 00:18:21,750 ಹಾರ್ಫೂಟ್ ತರ ಇರಬಹುದು. 156 00:18:21,833 --> 00:18:23,083 ಹಾರ್ಫೂಟಾ? 157 00:18:23,166 --> 00:18:25,000 ಕಾಣಿಸದೇ ಇದ್ರೆ ಚಿಂತೆ ಇಲ್ಲ, 158 00:18:25,083 --> 00:18:28,125 ಕಾಣಿಸಿದರೆ ಮಾತ್ರ ಹುಷಾರಾಗಿರು. 159 00:18:28,208 --> 00:18:30,541 ಅಪಾಯಕಾರಿ ಪ್ರಾಣಿಗಳವು. 160 00:18:31,958 --> 00:18:32,958 ಸುಮ್ನೆ ಹೇಳ್ತಿದ್ದೀಯ. 161 00:18:35,250 --> 00:18:37,375 ನಡಿ. ಹೆಜ್ಜೆ ಬೇಗ ಹಾಕು! 162 00:18:38,083 --> 00:18:41,250 ಸೂರ್ಯ ಮುಳುಗೋಕೆ ಮುಂಚೆ ಕೆರೆ ತಲುಪೋಣ. 163 00:19:09,541 --> 00:19:11,208 ಎಲ್ಲಾ ಸುರಕ್ಷಿತವಾಗಿದೆ. 164 00:19:25,791 --> 00:19:26,791 ನೋರಿ! 165 00:19:28,291 --> 00:19:29,375 ನೋರಿ! 166 00:19:30,500 --> 00:19:31,666 ನೋರಿ! 167 00:19:37,166 --> 00:19:38,333 ನೋರಿ! 168 00:19:57,791 --> 00:20:00,416 ಪ್ರಯಾಣಿಕರಾ? ವರ್ಷದ ಈ ಕಾಲದಲ್ಲಾ? 169 00:20:00,500 --> 00:20:03,375 ಇದೊಂದು ಶಕುನ, ಹೇಳ್ತೀನಿ ಕೇಳು. ಅದೂ ಕೆಟ್ಟದ್ದು. 170 00:20:03,458 --> 00:20:05,458 -ಅತೀ ಕೆಟ್ಟದ್ದು. -ಬಿಡು, ಮಲ್ವಾ. 171 00:20:05,541 --> 00:20:08,791 ಕಳೆದ ಸಲ ಇಷ್ಟು ಬೇಗ ಪ್ರಯಾಣಿಕರು ಬಂದಿದ್ದು ಮಹಾ ಹಿಮಗಾಲದಲ್ಲಿ. 172 00:20:08,875 --> 00:20:12,250 ಆ ಕಾಲ ಎಷ್ಟು ಭೀಕರವಾಗಿತ್ತು ಅಂತ ಮರೆಯೋಕೆ ಸಾಧ್ಯವೇ ಇಲ್ಲ. 173 00:20:12,333 --> 00:20:15,833 ಏನೋ ದಾರಿ ತಪ್ಪಿ ಬಂದಿರ್ತಾರೆ ಅಷ್ಟೇ. ಅದೇ ಕಾರಣ ಇರಬಹುದು. 174 00:20:15,916 --> 00:20:17,250 ರಾತ್ರಿ ಊಟ ಹಾಳು ಮಾಡ್ತೀಯ. 175 00:20:17,333 --> 00:20:19,208 ನಾನು ಎಲ್ಲೆಡೆ ನೋಡಿದೆ. 176 00:20:19,291 --> 00:20:20,958 ಮಕ್ಕಳಿನ್ನೂ ಅಲ್ಲೇ ಇದ್ದಾರೆ. 177 00:20:21,041 --> 00:20:23,583 ಆರಾಮಾಗಿರ್ತಾರೆ ಬಿಡು, ಗೋಲ್ಡೀ. 178 00:20:23,666 --> 00:20:26,375 ಅವರ ಜೊತೆ ನೋರಿ ಇದ್ದಾಳೆ. ನೋರಿ ಬಗ್ಗೆ ಗೊತ್ತಲ್ವಾ? 179 00:20:26,458 --> 00:20:28,291 ಹೌದು. ಗೊತ್ತು. 180 00:20:30,708 --> 00:20:32,291 ಈಗ ವಾಪಸ್ ಹೋಗೋಣ? 181 00:20:32,375 --> 00:20:34,875 ನಮ್ಮ ಪ್ರಾಣ ತೆಗೆಯುವಂಥ 110 ವಿಷಯಗಳು ಇಲ್ಲಿವೆ. 182 00:20:34,958 --> 00:20:38,250 ನೀನು ಚಿಂತಿಸುವುದೂ ಸೇರಿದರೆ 111 ಆಗುತ್ತೆ. 183 00:20:38,333 --> 00:20:40,833 ನಾವಿಷ್ಟು ದೂರ ಬರಬಾರದು ಅಂತ ಗೊತ್ತು ನಿನಗೆ. 184 00:20:40,916 --> 00:20:43,541 ನಾವು ಮಾಡಬಾರದ್ದೆಲ್ಲವನ್ನೂ ಮಾಡದೇ ಇದ್ದರೆ 185 00:20:43,625 --> 00:20:45,250 ಏನನ್ನೂ ಮಾಡಕ್ಕಾಗಲ್ಲ ಅಷ್ಟೇ. 186 00:20:45,375 --> 00:20:46,208 ನಾನು ಮೊದಲು! 187 00:20:48,541 --> 00:20:50,750 ನಡಿ ಮತ್ತೆ. ಕೆಸರು ನೋಡ್ಕೋ. 188 00:20:51,875 --> 00:20:53,375 ತಲೆ ಹುಷಾರು. 189 00:20:55,291 --> 00:20:56,125 ಹೀಗೆ ಬನ್ನಿ! 190 00:20:56,625 --> 00:20:57,750 ನೋರಿ! 191 00:20:58,625 --> 00:20:59,916 -ನೀನು ಸಿಕ್ಬಿಟ್ಟೆ. 192 00:21:00,333 --> 00:21:01,166 ಇದು... 193 00:21:01,625 --> 00:21:02,708 ನೋರಿ! 194 00:21:07,916 --> 00:21:09,000 ಮನಮೋಹಕ. 195 00:21:11,875 --> 00:21:13,125 ಬಾ. 196 00:21:13,208 --> 00:21:14,958 ಈಗ್ಲಾದ್ರೂ ವಾಪಸ್ ಹೋಗೋಣ? 197 00:21:15,041 --> 00:21:17,750 -ನೀನಿನ್ನೂ ನೋಡೇ ಇಲ್ಲ. -ಏನು ನೋಡಿಲ್ಲ? 198 00:21:17,833 --> 00:21:20,750 ಗುಡ್ಡದ ರಾಕ್ಷಸ ಬಚ್ಚಿಟ್ಟುಕೊಳ್ಳೋಕೆ ಒಳ್ಳೆ ಜಾಗ ಅನ್ನಬಹುದು. 199 00:21:21,916 --> 00:21:23,541 ಮಹಾ ಅದ್ಭುತ ಮತ್ತು ವೈಭವ. 200 00:21:34,083 --> 00:21:35,250 ನೋರಿ! 201 00:21:55,000 --> 00:21:56,166 ನೋರಿ! 202 00:21:57,375 --> 00:21:58,541 ನನಗೇನೋ ಸಿಕ್ತು. 203 00:22:00,000 --> 00:22:01,708 ಮಣ್ಣಲ್ಲೇನೋ ಇದೆ. 204 00:22:02,583 --> 00:22:03,750 ಏನಿದು? 205 00:22:05,833 --> 00:22:07,250 ಯಾರದೋ ಹೆಜ್ಜೆ ಇದ್ದಂಗಿದೆ. 206 00:22:09,500 --> 00:22:10,541 ನಾಯಿ. 207 00:22:11,250 --> 00:22:14,166 ನಾಯಿ ಅಷ್ಟೇ. ನಾಯಿಗಳಿಗೆ ಹಣ್ಣು ಅಂದ್ರೆ ಇಷ್ಟ ಅಲ್ವಾ? 208 00:22:20,916 --> 00:22:23,000 ಅಂದ್ರೆ ನಮ್ಮ ಹಣ್ಣು ತಿಂದುಬಿಡುತ್ತಾ? 209 00:22:23,083 --> 00:22:25,166 ನಾವದರ ಕಣ್ಣಿಗೆ ಬೀಳದಿದ್ದರೆ ತಿನ್ನಲ್ಲ. 210 00:22:25,916 --> 00:22:29,250 ಹೇಯ್. ಇಬ್ಬಿಬ್ಬರಾಗಿ ಕೈ ಹಿಡಿದುಕೊಳ್ಳಿ. ಹೋಗೋ ಸಮಯವಾಯ್ತು. 211 00:22:29,333 --> 00:22:31,791 -ಯಾಕಿಷ್ಟು ಬೇಗ? -ತೋಳ. 212 00:22:34,125 --> 00:22:35,875 ಅಕ್ಕ ಹೇಳಿದ್ದು ಕೇಳಿದ್ರಲ್ಲ? ಹೋಗೋಣ. 213 00:22:35,958 --> 00:22:37,791 ಬನ್ರಿ ಈಗ. ಹೋಗೋಣ. 214 00:22:37,875 --> 00:22:40,750 ಬಿಡಾರಕ್ಕೆ ಮೊದಲು ಹೋಗೋರಿಗೆ ಕೊಯ್ಲು ಹಬ್ಬದ ಹೋಳಿಗೆ. 215 00:22:40,833 --> 00:22:43,041 ನಡೀರಿ. ನಾವು ಬೇಲಿ ತಲುಪಬಹುದು. 216 00:22:43,125 --> 00:22:47,333 ನೆನಪಿಡಿ, ಯಾರಾದ್ರೂ ಕೇಳಿದ್ರೆ ಬಸವನಹುಳು ಹಿಡಿಯಕ್ಕೆ ಹೋಗಿದ್ವಿ ಅನ್ನಿ. 217 00:22:57,125 --> 00:23:01,083 "ದೂರದ ಪಶ್ಚಿಮಕ್ಕೆ... ಸಾಯದ ನಾಡಿಗೆ... 218 00:23:01,166 --> 00:23:02,916 "ಕೊನೆಗೂ ಅವರು ಹೊರಟಿರುವುದು... 219 00:23:03,875 --> 00:23:05,083 "ತವರಿಗೆ. 220 00:23:07,625 --> 00:23:11,458 "ಶತಮಾನಗಳ ಕಾಲ, ಬಂಡೆ ಬಿರುಕೆನ್ನದೆ ಚಲಿಸುತ್ತಾ 221 00:23:11,541 --> 00:23:14,166 "ಶತ್ರುವಿನ ಕೊನೆಯ ಅವಶೇಷಗಳನ್ನು ದೂರಕ್ಕೆ ತಳ್ಳಿದ್ದಾರೆ. 222 00:23:14,750 --> 00:23:17,416 "ವಸಂತಕಾಲದ ಮಳೆಯು ಸುರಿದಂತೆ, ಸತ್ತ ಪ್ರಾಣಿಯ... 223 00:23:18,375 --> 00:23:19,458 "ಮೂಳೆಗಳ ಮೇಲೆ." 224 00:23:21,583 --> 00:23:24,916 "ವಸಂತಕಾಲದ ಮಳೆಯು ಸುರಿದಂತೆ, ಸತ್ತ ಪ್ರಾಣಿಯ..." 225 00:23:26,708 --> 00:23:28,041 ಹೆರಾಲ್ಡ್ ಎಲ್ರೊಂಡ್. 226 00:23:30,500 --> 00:23:31,666 ಕೊನೆಗೂ. 227 00:23:32,833 --> 00:23:35,666 ಹೌದು. ಇದೊಂಥರ ನಾನೇ ಸಿಗಬಾರದು ಅಂದುಕೊಂಡ ಹಾಗೆ. 228 00:23:35,958 --> 00:23:37,250 ಏನು ಸಮಾಚಾರ? 229 00:23:37,333 --> 00:23:39,083 ಕೌನ್ಸಿಲ್ ವಿಷಾದ ವ್ಯಕ್ತಪಡಿಸೋ ಪ್ರಕಾರ 230 00:23:39,166 --> 00:23:41,750 ಮುಂದಿನ ಅವಧಿಗೆ ಹಾಜರಾಗಕ್ಕೆ ನಿನಗೆ ಅವಕಾಶವಿಲ್ಲ. 231 00:23:44,000 --> 00:23:45,375 ಎಲ್ಫ್-ದೊರೆಗಳಿಗೆ ಮಾತ್ರ. 232 00:23:48,375 --> 00:23:49,791 ಬೇರೇನಾದ್ರೂ ಇದೆಯಾ? 233 00:23:49,875 --> 00:23:52,000 ಹೌದು. ನಿನ್ನ ಗೆಳತಿ ಬಂದಿದ್ದಾಳೆ. 234 00:23:52,916 --> 00:23:55,333 ಬಂದಿದ್ದಾಳಾ? ಮೊದಲೇ ಯಾಕೆ ಹೇಳಲಿಲ್ಲ? 235 00:24:02,250 --> 00:24:03,458 ಸಮಾರಂಭಕ್ಕೆ. 236 00:24:05,500 --> 00:24:11,500 ಲಿಂಡೊನ್ ಮೇಲಿನ ಎಲ್ಫ್ಗಳ ರಾಜಧಾನಿ 237 00:24:21,500 --> 00:24:22,666 ಗಲಾಡ್ರಿಯಲ್. 238 00:24:24,666 --> 00:24:25,625 ಎಲ್ರೊಂಡ್. 239 00:24:27,041 --> 00:24:29,041 ಲಿಂಡೊನ್ಗೆ ನಿನಗೆ ಆತ್ಮೀಯ ಸ್ವಾಗತ. 240 00:24:29,125 --> 00:24:30,791 ಆತ್ಮೀಯವಾದ ಸ್ವಾಗತವೇ ಸಿಕ್ಕಿತು. 241 00:24:36,291 --> 00:24:40,208 ದಾಟಿ ಬರುವಾಗ ಒಂದು ಹಾಡು ಕೇಳಿಸುತ್ತೆ ಅಂತ ಕೇಳಲ್ಪಟ್ಟೆ. 242 00:24:40,291 --> 00:24:42,416 ಅದರ ನೆನಪನ್ನು ನಾವೆಲ್ಲರೂ ಹೊರುವಂಥದ್ದು. 243 00:24:43,625 --> 00:24:45,083 ನೀನು ಮುಳುಗಿರುವಂಥ ಬೆಳಕು 244 00:24:45,166 --> 00:24:48,875 ಮಿಡ್ಲ್ ಅರ್ಥಲ್ಲಿ ಯಾವುದೇ ಅನುಭವಕ್ಕಿಂತಲೂ ಮತ್ತೇರಿಸುವಂಥದ್ದು. 245 00:24:48,958 --> 00:24:53,208 ನಾನು ಮಗುವಾಗಿದ್ದಾಗ ಅದೊಂದೇ ಅನುಭವ ನನಗೆ ಗೊತ್ತಿದ್ದಿದ್ದು. 246 00:24:53,291 --> 00:24:55,000 ಈಗ ನೋಡು ನೀನು. 247 00:24:55,083 --> 00:24:58,083 ನೊರ್ಧರ್ನ್ ಅರ್ಮಿಸ್ ಸೇನಾಧಿಪತಿ. ವೇಸ್ಟ್ ಲ್ಯಾಂಡ್ಸ್ನ ವೀರವನಿತೆ. 248 00:24:58,750 --> 00:25:03,041 ನಾನೇನೋ ನೀನು ಮಣ್ಣು, ಕೆಸರು ಮೆತ್ತಿಸಿಕೊಂಡು ಬರ್ತೀಯ ಅಂದುಕೊಂಡಿದ್ದೆ. 249 00:25:03,125 --> 00:25:06,166 ಈ ಸಲ ಹಿಮಾಘಾತ ಮತ್ತು ರಾಕ್ಷಸನ ರಕ್ತ ಮೆತ್ತಿಕೊಂಡಿದೆ. 250 00:25:07,166 --> 00:25:08,250 ಮತ್ತು ಸೈನ್ಯವೂ ಇಲ್ಲ. 251 00:25:09,375 --> 00:25:10,791 ಎಲ್ಲಾ ಹೇಳು. 252 00:25:11,458 --> 00:25:14,791 ಈ ಗುರುತು ಇದೆ ಅನ್ನೋದೇ ಸೌರೊನ್ ತಪ್ಪಿಸಿಕೊಂಡಿರೋದರ ಸಾಕ್ಷಿ. 253 00:25:14,875 --> 00:25:16,125 ಅವನಿನ್ನೂ ಇದ್ದಾನೆ. 254 00:25:16,541 --> 00:25:18,166 ಆದರೆ ಎಲ್ಲಿ ಅನ್ನೋದೇ ಪ್ರಶ್ನೆ. 255 00:25:19,250 --> 00:25:22,125 ಹೊಸ ಸೇನಾ ದಳಕ್ಕಾಗಿ ರಾಜನನ್ನು ಕೇಳೋಣ ಅಂದುಕೊಂಡಿದ್ದೀನಿ. 256 00:25:22,208 --> 00:25:25,208 -ಆತ ಸಾಕಷ್ಟು ಕೊಟ್ಟರೆ... -ಈಗಷ್ಟೇ ಬಂದಿದ್ದೀಯ. 257 00:25:25,291 --> 00:25:27,500 ಇಷ್ಟು ಬೇಗ ಹೊರಡೋ ಮಾತಾಡಬೇಕಾ? 258 00:25:27,583 --> 00:25:29,416 ಯಾಕೆ ಅಂತ ನಿನಗೆ ಚೆನ್ನಾಗಿ ಗೊತ್ತು. 259 00:25:30,250 --> 00:25:33,666 ಅಧಿಕೃತ ವಿಚಾರಗಳನ್ನ ಮಾತಾಡೋಕೆ ಮುಂದೆ ಬಹಳ ಸಮಯ ಇರುತ್ತೆ. 260 00:25:34,708 --> 00:25:36,291 ನನಗೆ ನಿನ್ನ ಬಗ್ಗೆ ಕೇಳಬೇಕು. 261 00:25:37,708 --> 00:25:39,291 ನಿನ್ನ ಕಷ್ಟದ ಪ್ರಯಾಣದ ಬಗ್ಗೆ. 262 00:25:40,000 --> 00:25:41,083 ಏನು, ಎಲ್ರೊಂಡ್. 263 00:25:41,166 --> 00:25:43,291 ನಿಜವಾಗಲೂ ರಾಜಕಾರಣಿಯಾಗಿಬಿಟ್ಟಿದ್ದೀಯ. 264 00:25:43,375 --> 00:25:45,125 ಅದೇನೋ ಕೆಟ್ಟದ್ದು ತರ ಹೇಳ್ತೀಯ. 265 00:25:45,208 --> 00:25:48,541 ಮಾತಿಗೆ ಮರುಳಾಗುವಂಥ ಆಸ್ಥಾನಿಕಳಂತೂ ಅಲ್ಲ ನಾನು. 266 00:25:49,875 --> 00:25:52,291 ನೇರವಾಗಿ ರಾಜನ ಹತ್ತಿರವೇ ನಾನು ಮಾತಾಡಬೇಕು. 267 00:25:54,708 --> 00:25:56,416 ನೀನದನ್ನ ಸ್ಪಷ್ಟವಾಗಿಸಿದ್ದೀಯಾ. 268 00:25:57,750 --> 00:25:59,708 ನಾನೂ ಹಾಗೇ ಹೇಳ್ತೀನಿ. 269 00:26:02,750 --> 00:26:05,583 ಅಲ್ಲಿ ನಿನ್ನ ಆಜ್ಞೆ ಮೀರಿದ್ದು ನಿನ್ನ ಸೇನೆ ಅಲ್ಲ, 270 00:26:06,083 --> 00:26:08,416 ಬದಲಾಗಿ ಮೇಲರಸನ ಆಜ್ಞೆ ಮೀರಿದ್ದು ನೀನು, 271 00:26:09,291 --> 00:26:12,041 ನಿನ್ನ ಮಿತಿಯನ್ನ ಮೀರಿ ನಡೆದುಕೊಂಡಿದ್ದು ನೀನು. 272 00:26:13,750 --> 00:26:15,333 ಅವರ ಹೃದಯ ವೈಶಾಲ್ಯತೆಯಿಂದ 273 00:26:15,416 --> 00:26:18,125 ನಿನ್ನ ಸಾಧನೆಗಳನ್ನ ಪುರಸ್ಕರಿಸೋಕೆ ಒಪ್ಪಿ... 274 00:26:18,958 --> 00:26:21,291 ನಿನ್ನ ಸೊಕ್ಕನ್ನ ಪಕ್ಕಕ್ಕಿಟ್ಟಿದ್ದಾರೆ. 275 00:26:23,750 --> 00:26:25,416 ಅವರನ್ನ ಮತ್ತೆ ಪರೀಕ್ಷಿಸಿದರೆ 276 00:26:25,500 --> 00:26:28,916 ನೀನಂದುಕೊಂಡಿದ್ದಕ್ಕಿಂತ ಕಡಿಮೆ ಆದರತೆ ಅವರಲ್ಲಿ ನೋಡ್ತೀಯ. 277 00:26:35,416 --> 00:26:38,458 ವೀಕ್ಷಕರನ್ನ ಕರ್ಕೊಂಡು ಬರ್ತೀಯಾ ಏನು? 278 00:26:40,583 --> 00:26:43,541 ಸಮಾರಂಭ ಮುಗಿದ ಮೇಲೆ ಅದೇ ನಿನ್ನಾಸೆ ಆದ್ರೆ 279 00:26:43,625 --> 00:26:45,041 ಹಾಗೇ ಆಗಲಿ. 280 00:26:57,333 --> 00:26:58,833 ವಾಪಸ್ ಬಂದುಬಿಟ್ಟಳು. 281 00:26:58,916 --> 00:27:01,500 -ಹೇಗಿದ್ದೀಯ? -ಚೆನ್ನಾಗಿದ್ದೀನಪ್ಪ. 282 00:27:01,583 --> 00:27:03,041 ನೋಡಪ್ಪ ಇವಳನ್ನ! 283 00:27:03,125 --> 00:27:06,125 ಇದೆಲ್ಲಾ ನಿನಗೆ ನದಿ ದಡದಲ್ಲಿ ಸಿಕ್ತಾ ಏನು? 284 00:27:06,958 --> 00:27:08,916 ಪ್ರಯಾಣಿಕರ ಬಗ್ಗೆ ವಿಚಾರ ಗೊತ್ತಾಯ್ತಾ? 285 00:27:09,000 --> 00:27:11,416 -ಪ್ರಯಾಣಿಕರಾ? -ಬೇಟೆಗಾರರು. 286 00:27:12,000 --> 00:27:13,333 ಇಬ್ಬರು. 287 00:27:13,416 --> 00:27:15,500 ದೊಡ್ಡ ಬಂಡೆಗಳಿದ್ದಂಗೆ ಇದ್ದಾರೆ. 288 00:27:15,583 --> 00:27:17,041 ಆ ಬೆಟ್ಟದ ಮೇಲೇ ಇದ್ದಾರೆ. 289 00:27:17,125 --> 00:27:18,625 ನನ್ನ ಕಣ್ಣಿಗೆ ಹೇಗೆ ಬೀಳಲಿಲ್ಲ! 290 00:27:18,708 --> 00:27:22,375 ಮನೆ ಹತ್ರಾನೇ ಇದ್ದರೆ ನಿನ್ನ ಕಣ್ಣಿಗೆ ಎಲ್ಲಾ ಬೀಳುತ್ತೆ. 291 00:27:31,208 --> 00:27:33,416 ಮತ್ತೆ ಹಳೇ ಹೊಲಕ್ಕೆ ಹೋಗಿದ್ಯಲ್ಲ? 292 00:27:34,125 --> 00:27:35,291 ಹೌದು ತಾನೇ? 293 00:27:36,416 --> 00:27:37,416 ಹುಷಾರಾಗೇ ಇದ್ದೆ. 294 00:27:37,500 --> 00:27:39,416 ಆದರೆ ಮಕ್ಕಳು ಇರೋದಿಲ್ಲ. 295 00:27:39,500 --> 00:27:41,083 ಕ್ಷಮಿಸಿ, ನನಗೆ ಗೊತ್ತಿರಲಿಲ್ಲ. 296 00:27:41,166 --> 00:27:43,750 ಕೊಯ್ಲಿಗೆ ಮುಂಚೆ ಈ ಕಡೆ ಬೇಟೆಗಾರರು ಬರೋದಿಲ್ಲವಲ್ಲ? 297 00:27:44,416 --> 00:27:45,625 ತೋಳಗಳೂ ಅಷ್ಟೇ. 298 00:27:48,500 --> 00:27:51,041 ದಕ್ಷಿಣದಲ್ಲೇನಾದ್ರೂ ತೊಂದರೆ ಆಗಿದೆಯೇನೋ. 299 00:27:51,125 --> 00:27:54,208 ಅದರ ಬಗ್ಗೆ ನಿನಗ್ಯಾಕೆ ಚಿಂತೆ, ಎಲೀನೋರ್ ಬ್ರಾಂಡಿಫುಟ್? 300 00:27:58,666 --> 00:28:00,375 ನಿನಗನಿಸಿಲ್ವಾ... 301 00:28:01,416 --> 00:28:02,916 ಅಲ್ಲಿ ಇನ್ನೇನಿದೆ ಅಂತ? 302 00:28:03,541 --> 00:28:04,875 ನದಿ ಎಷ್ಟು ದೂರ ಹರಿಯುತ್ತೆ 303 00:28:04,958 --> 00:28:08,583 ಅಥವಾ ಗುಬ್ಬಚ್ಚಿಗಳು ವಸಂತಕಾಲದಲ್ಲಿ ಹಾಡೋ ಹಾಡುಗಳನ್ನ ಎಲ್ಲಿ ಕಲಿಯುತ್ತವೆ ಅಂತ? 304 00:28:09,166 --> 00:28:13,333 ಈ ಜಗತ್ತಿನಲ್ಲಿ ಅದ್ಭುತಗಳಿವೆ ಅಂತ ಅಂದುಕೊಳ್ಳದೆ ಇರಲಾರೆ. 305 00:28:13,875 --> 00:28:15,500 ನಾವು ತಿಳಿದಿರೋದಕ್ಕೂ ಮಿಗಿಲಾಗಿ. 306 00:28:16,458 --> 00:28:18,000 ನಿನಗೆ ಹೇಳಿದ್ದೀನಿ. 307 00:28:18,750 --> 00:28:20,583 ಲೆಕ್ಕವಿಲ್ಲದಷ್ಟು ಸಲ. 308 00:28:22,500 --> 00:28:24,916 ಎಲ್ಫ್ಗಳು ಅರಣ್ಯಗಳನ್ನ ಕಾಪಾಡಬೇಕು. 309 00:28:25,000 --> 00:28:28,250 ಕುಬ್ಜರಿಗೆ ಗಣಿಗಳು. ಮನುಷ್ಯರಿಗೆ ಧಾನ್ಯದ ಹೊಲಗಳು. 310 00:28:29,166 --> 00:28:32,833 ಮರಗಳೂ ಅವುಗಳ ಬೇರುಗಳ ಕೆಳಗಿನ ಮಣ್ಣಿನ ಬಗ್ಗೆ ಚಿಂತಿಸುತ್ತವೆ. 311 00:28:33,458 --> 00:28:37,291 ಆದರೆ ನಮ್ಮಂಥ ಹಾರ್ಫೂಟ್ಗಳಿಗೆ ವಿಶಾಲ ಪ್ರಪಂಚದ ಯಾವುದೇ ಚಿಂತೆ ಇಲ್ಲ. 312 00:28:37,375 --> 00:28:41,125 ದೀರ್ಘವಾದ ಹೊಳೆಯ ಮೇಲಿನ ಅಲೆಗಳು ನಾವು, ಅಷ್ಟೇ. 313 00:28:41,541 --> 00:28:43,958 ಚಲಿಸುವ ಕಾಲಗಳೇ ನಮಗೆ ದಾರಿ ತೋರಿಸುವುದು. 314 00:28:44,833 --> 00:28:47,708 ಯಾರೂ ದಾರಿ ತಪ್ಪಲ್ಲ, ಯಾರೂ ಒಂಟಿಯಾಗಿ ಹೋಗಲ್ಲ. 315 00:28:49,708 --> 00:28:52,416 ನಾವು ಒಬ್ಬರಿಗೊಬ್ಬರು ಇದ್ದೀವಿ. ಸುರಕ್ಷಿತವಾಗಿದ್ದೀವಿ. 316 00:28:53,875 --> 00:28:55,375 ನಾವು ಬದುಕೋದೇ ಹಾಗೆ. 317 00:28:58,750 --> 00:29:00,875 ಹೋಗು. ನಿನ್ನ ತಂದೆಗೆ ಸಹಾಯ ಮಾಡು. 318 00:29:03,583 --> 00:29:07,000 ಅದು ನಿನ್ನ ಸಮಸ್ಯೆ. ನೋಡು, ಚಕ್ರ ಅಂದರೆ ಗುಂಡಗಿರಬೇಕು. 319 00:29:40,708 --> 00:29:44,666 ಈ ವೀರಾಧಿವೀರರು 320 00:29:44,750 --> 00:29:49,291 ವಿಜಯಿಗಳಾಗಿ ನಮ್ಮ ಮುಂದೆ ಮಂಡಿಯೂರುತ್ತಾರೆ. 321 00:29:50,958 --> 00:29:53,708 ಮಾರ್ಗೋಥ್ ಪತನವಾಗಿ ಯುಗವೇ ಕಳೆದರೂ 322 00:29:54,416 --> 00:29:58,208 ಅವನ ನೆರಳಿನಿಂದ ಹೊಸ ದುಷ್ಟಶಕ್ತಿ ಉದಯಿಸಬಹುದೆಂದು ಕೆಲವರು ಭಯಗೊಂಡಿದ್ದರು. 323 00:29:58,291 --> 00:30:00,125 ಹಾಗಾಗಿ ಶತಮಾನಗಳ ಕಾಲ 324 00:30:00,208 --> 00:30:04,291 ಈ ಯೋಧರು ಬಂಡೆ-ಬಿರುಕೆನ್ನದೆ ಸಾಗುತ್ತಾ, 325 00:30:04,375 --> 00:30:07,625 ವಸಂತಕಾಲದ ಮಳೆಯು ಕೊಳೆತ ಶವದ ಮೂಳೆಗಳನ್ನು ತೊಳೆಯುವ ಹಾಗೆ 326 00:30:07,708 --> 00:30:11,416 ನಮ್ಮ ಶತ್ರುವಿನ ಕೊನೆಯ ಅವಶೇಷಗಳನ್ನು ತೊಳೆದುಹಾಕಿದ್ದಾರೆ. 327 00:30:14,125 --> 00:30:15,458 ಕೊನೆಗೆ ಈಗ 328 00:30:16,666 --> 00:30:20,041 ವಿಜಯದೊಂದಿಗೆ ನಮ್ಮ ಬಳಿ ವಾಪಸಾಗಿದ್ದಾರೆ, 329 00:30:20,125 --> 00:30:23,250 ಯಾಕಂದ್ರೆ ಯುದ್ಧದ ದಿನಗಳು ಮುಗಿದಿವೆ ಅಂತ 330 00:30:23,333 --> 00:30:27,458 ಅವರು ನಿಸ್ಸಂದೇಹವಾಗಿ ಸಾಬೀತುಪಡಿಸಿದ್ದಾರೆ. 331 00:30:29,791 --> 00:30:30,875 ಇಂದು... 332 00:30:32,708 --> 00:30:35,541 ನಮ್ಮ ಶಾಂತಿಯ ದಿನಗಳು ಆರಂಭವಾಗುತ್ತವೆ. 333 00:31:01,541 --> 00:31:04,958 ಮತ್ತು ನಮ್ಮ ಕೃತಜ್ಞತೆಯ ಪ್ರತೀಕವಾಗಿ 334 00:31:06,041 --> 00:31:08,583 ಈ ವೀರರಿಗೆ ನಮ್ಮ ಇತಿಹಾಸದಲ್ಲೇ ಕಂಡು ಕೇಳರಿಯದ 335 00:31:08,666 --> 00:31:11,416 ಸನ್ಮಾನಗಳನ್ನು ಮಾಡಲಾಗುತ್ತದೆ. 336 00:31:11,500 --> 00:31:14,791 ಗ್ರೇಯ್ ಹವೆನ್ಸ್ಗೆ ಅವರನ್ನು ಕರೆದುಕೊಂಡು ಹೋಗಿ 337 00:31:14,875 --> 00:31:19,208 ಸಮುದ್ರದ ಮೂಲಕ ದಾರಿ ಕಲ್ಪಿಸಿ, ದೂರದ ಪಶ್ಚಿಮದಲ್ಲಿನ ಬ್ಲೆಸ್ಡ್ ರೀಲ್ಮ್ನಲ್ಲಿ 338 00:31:20,291 --> 00:31:24,000 ಶಾಶ್ವತವಾಗಿ ನೆಲೆಸಲು ಅನುವು ಮಾಡಿಕೊಡಲಾಗುತ್ತದೆ. 339 00:31:24,083 --> 00:31:27,250 ವಾಲಿನೊರಿನ ಅಮರ ಪ್ರದೇಶಗಳಲ್ಲಿ. 340 00:31:28,083 --> 00:31:31,916 ಕೊನೆಗೂ ಅವರು ಮನೆಗೆ ಹೋಗಲಿದ್ದಾರೆ. 341 00:32:34,041 --> 00:32:37,375 ಸುಮ್ಮನೆ ಅಲ್ಲಿ ನಿಂತಿದ್ದು ಓರ್ಕ್ ಥರ ಉಸಿರಾಡ್ಕೊಂಡು ಇರ್ತೀಯಾ? 342 00:32:40,583 --> 00:32:44,000 ಕಹಿಯಾದ ಕಷ್ಟಗಳನ್ನೆದುರಿಸಿ ಗೆದ್ದು ತಯಾರಿಸಿದಂಥ 343 00:32:44,083 --> 00:32:46,666 ಕ್ಷೀರವೇ ಅತಿ ಮಧುರವಾದದ್ದಂತೆ. 344 00:32:47,416 --> 00:32:49,250 ನನಗೆ ಗೆದ್ದ ಹಾಗನಿಸುತ್ತಿಲ್ಲ. 345 00:32:49,333 --> 00:32:52,375 ಇಂದಿನ ಸನ್ಮಾನಗಳಿಗೆ ನೀನು ಅರ್ಹಳು. 346 00:32:53,250 --> 00:32:54,916 ನಿಮ್ಮಣ್ಣ ಹೆಮ್ಮೆಪಡುತ್ತಿದ್ದ. 347 00:33:01,208 --> 00:33:03,958 ಇವುಗಳನ್ನ ಮೊದಲು ಕೆತ್ತಿದ್ದು ನನಗೆ ನೆನಪಿದೆ. 348 00:33:05,291 --> 00:33:08,708 ಬಿದ್ದುಹೋದಂಥದ್ದನ್ನ ಜೀವ ಇರುವುದರ ಮೇಲೆ ಸಂರಕ್ಷಿಸಿಟ್ಟಿರುವುದು. 349 00:33:08,791 --> 00:33:12,541 ನನ್ನ ಮಿಕ್ಕ ಭಾಗ ಎಲ್ಲಾ ಇಲ್ಲೇ ಇರುತ್ತೆ, ಅವರ ಜೊತೆಯಲ್ಲೇ ಅನ್ನೋದು 350 00:33:12,625 --> 00:33:13,916 ನನ್ನ ಒಂದು ನಂಬಿಕೆ. 351 00:33:14,958 --> 00:33:16,875 ಬದಲಾಗಿ, ನಾನವರನ್ನ ಬಿಟ್ಟು ಹೋಗಬೇಕು. 352 00:33:18,458 --> 00:33:22,458 ಇದು ನಿಮ್ಮ ರಾಜನ ಉಡುಗೊರೆ. 353 00:33:26,000 --> 00:33:28,000 ನಾನು ನಿರಾಕರಿಸಲು ನಿರ್ಧರಿಸಿರುವ ಉಡುಗೊರೆ. 354 00:33:29,125 --> 00:33:30,125 ಗಲಾಡ್ರಿಯಲ್, ನೀನು... 355 00:33:30,208 --> 00:33:32,916 ಸೌರೊನ್ಗಾಗಿ ಹುಡುಕುವಾಗಲೇ ನಮ್ಮಣ್ಣ ಪ್ರಾಣತೆತ್ತ. 356 00:33:34,416 --> 00:33:36,416 ಅವನ ಕೆಲಸ ಈಗ ನನ್ನದು. 357 00:33:39,250 --> 00:33:42,458 ಉತ್ತರದಲ್ಲಿ ತಪ್ಪಿಸಿಕೊಂಡ ವೈರಿಯನ್ನ ಹುಡುಕೋದಕ್ಕೆ ನಾನು ಹೋಗ್ತೀನಿ. 358 00:33:44,083 --> 00:33:46,125 ಒಬ್ಬಳೇ ಆದ್ರೂ ಸರಿ. 359 00:33:48,291 --> 00:33:51,291 ಹಾಂ. ನಿನ್ನ ರಹಸ್ಯ ಸಂಜ್ಞೆ. 360 00:33:51,375 --> 00:33:53,208 ಅದನ್ನ ಮೇಲರಸರ ಜೊತೆ ಹಂಚಿಕೊಂಡೆ. 361 00:33:53,291 --> 00:33:55,083 -ಮತ್ಯಾಕೆ... -ಸಂಜ್ಞೆಯನ್ನ ನೋಡಿದರೆ 362 00:33:55,166 --> 00:33:57,708 ಸೌರೊನ್ ಸಿಕ್ಕೇಬಿಟ್ಟ ಅಂತ ಅದರ ಅರ್ಥ ಅಲ್ಲ. 363 00:33:57,791 --> 00:34:01,166 ಅದು ಮುಗಿದುಹೋಗಿದೆ. ಕೆಟ್ಟದ್ದು ಕಳೆದುಹೋಗಿದೆ. 364 00:34:01,250 --> 00:34:03,625 ಮತ್ತದು ಇಲ್ಲಿಂದ ಯಾಕೆ ಹೋಗಿಲ್ಲ? 365 00:34:05,041 --> 00:34:07,041 ನೀನಿಷ್ಟೆಲ್ಲಾ ಅನುಭವಿಸಿದ ಮೇಲೆ... 366 00:34:08,416 --> 00:34:10,666 ಸಂದಿಗ್ಧ ಮನಸ್ಥಿತಿಯಲ್ಲಿರೋದು ಸಾಮಾನ್ಯವೇ. 367 00:34:11,666 --> 00:34:13,125 ಸಂದಿಗ್ಧತೆ? 368 00:34:16,750 --> 00:34:19,666 ನಾನು ನೋಡಿದ ದುಷ್ಟತೆಯನ್ನ ನೀನು ನೋಡಿಲ್ಲ ಅನ್ನೋದೇ ಸಮಾಧಾನ. 369 00:34:20,875 --> 00:34:23,125 ಆದರೆ ನಾನು ನೋಡಿರೋದನ್ನ ನೀನು ನೋಡಿಲ್ಲ. 370 00:34:23,208 --> 00:34:24,250 ಸಾಕಷ್ಟು ನೋಡಿದೀನಿ. 371 00:34:24,333 --> 00:34:27,958 ನಾನು ನೋಡಿರೋದನ್ನ ನೀನು ನೋಡಿಲ್ಲ. 372 00:34:28,791 --> 00:34:30,916 ದುಷ್ಟತನ ನಿದ್ರಿಸೋದಿಲ್ಲ, ಎಲ್ರೊಂಡ್. 373 00:34:32,250 --> 00:34:33,458 ಅದು ಕಾಯುತ್ತೆ. 374 00:34:34,125 --> 00:34:36,958 ನಾವು ಮೈಮರೆತಿರುವಾಗ 375 00:34:37,041 --> 00:34:38,458 ನಮ್ಮನ್ನ ಕುರುಡಾಗಿಸುತ್ತೆ. 376 00:34:40,416 --> 00:34:43,041 ನೀನು ಭಯ ಪಟ್ಟ ಹಾಗೇ ಎಲ್ಲಾ ಇದೆ, 377 00:34:43,125 --> 00:34:46,458 ಮತ್ತು ಈ ಶತ್ರು ಎಲ್ಲೋ ಕಾಯುತ್ತಾ ಇದ್ದಾನೆ ಅಂತ ಅಂದುಕೊಳ್ಳೋಣ. 378 00:34:47,125 --> 00:34:50,291 ಅವನನ್ನ ಹುಡುಕುವುದರಲ್ಲೇ ನಿನ್ನ ತೃಪ್ತಿ ಇದೆ ಅಂತ ನಂಬಿದ್ದೀಯಾ? 379 00:34:50,375 --> 00:34:54,041 ನಿನ್ನ ಕತ್ತಿಯ ಅಂಚಿಗೆ ಇನ್ನೊಬ್ಬ ಓರ್ಕ್ ಸಿಕ್ಕಾಗಲೇ ಶಾಂತಿ ಅಂತಾನಾ? 380 00:34:54,125 --> 00:34:56,041 -ನೀನು ತಪ್ಪಾದರೆ... -ನಾನು ತಪ್ಪಲ್ಲ. 381 00:34:56,125 --> 00:34:57,583 ನೀನು ತಪ್ಪಾದರೆ, 382 00:34:58,458 --> 00:35:01,625 ದೂರದಲ್ಲಿ ಸಾಯೋಕೆ ಹೆಚ್ಚಿನ ಎಲ್ಫ್ಗಳನ್ನ ಕರ್ಕೊಂಡು ಹೋಗ್ತೀಯಾ? 383 00:35:03,458 --> 00:35:05,583 ನೀನು ಮಾಡಿದ್ದು ಸಾಕು ಅಂತ ಅರ್ಥ ಆಗೋಕೆ 384 00:35:05,666 --> 00:35:08,500 ಈ ದಾರಿಯಲ್ಲಿ ಇನ್ನೂ ಎಷ್ಟು ವಿಗ್ರಹಗಳನ್ನ ಸೇರಿಸ್ತೀಯ? 385 00:35:09,333 --> 00:35:11,958 ಈ ಕರೆಯನ್ನ ಇತಿಹಾಸದಲ್ಲಿ ಯಾರೂ ನಿರಾಕರಿಸಿಲ್ಲ. 386 00:35:12,791 --> 00:35:14,875 ಈಗ ಬೇಡ ಅಂದ್ರೆ ಮುಂದೆ ಯಾವತ್ತೂ ಸಿಗಲ್ಲ. 387 00:35:15,750 --> 00:35:18,750 ನೀನಿಲ್ಲೇ ಒಬ್ಬ ಬಹಿಷ್ಕೃತಳಾಗಿ 388 00:35:18,833 --> 00:35:21,083 ಕತ್ತಲ ಮಾತು, ಕನಸುಗಳಲ್ಲಿ ಕಳೆದುಹೊಗ್ತೀಯ. 389 00:35:21,166 --> 00:35:24,333 ಅಂದ್ರೆ ಪಶ್ಚಿಮದಲ್ಲಿ ನನ್ನ ಹಣೆಬರಹ ಬದಲಾಗುತ್ತೆ ಅಂದುಕೊಂಡ್ಯಾ? 390 00:35:25,458 --> 00:35:28,916 ನನ್ನ ಕಿವಿಯಲ್ಲಿ ಮೊಳಗೋ ಯುದ್ಧದ ಕೂಗನ್ನ ಅಣಕಿಸೋ ಹಾಡು ಇರೋ ಕಡೆನಾ? 391 00:35:30,916 --> 00:35:34,833 ಮಿಡ್ಲ್ ಅರ್ಥ್ನ ಎಲ್ಲಾ ಭೀಕರತೆಗಳ ಮೇಲೆ ನಾನು ವಿಜಯ ಸಾಧಿಸಿದೆ ಅಂತ ಹೇಳಿದೆ. 392 00:35:36,375 --> 00:35:38,583 ಆದರೂ ಅವನ್ನ ನನ್ನೊಳಗೇ ಜೀವಂತವಾಗಿ ಬಿಡ್ತೀಯಾ? 393 00:35:39,666 --> 00:35:41,000 ಹೊತ್ಕೊಂಡು ಹೋಗೋಕಾ? 394 00:35:42,000 --> 00:35:45,916 ಸಾಯದೆ, ಬದಲಾಗದೆ, ಮುರಿಯದೆ, 395 00:35:46,958 --> 00:35:49,333 ಚಳಿಗಾಲವಿಲ್ಲದ ವಸಂತಕಾಲದ ನಾಡಿಗಾ? 396 00:35:49,416 --> 00:35:51,833 ಬ್ಲೆಸ್ಡ್ ರೀಲ್ಮಲ್ಲಿ ಮಾತ್ರವೇ 397 00:35:51,916 --> 00:35:54,416 ನಿನ್ನೊಳಗೆ ಮುರಿದಿರೋದು ಗುಣವಾಗಬಲ್ಲದು. 398 00:35:55,250 --> 00:35:56,333 ಅಲ್ಲಿಗೆ ಹೋಗು. 399 00:35:56,833 --> 00:35:58,625 ಹೋಗು, ನಾನು ಮಾತು ಕೊಡ್ತೀನಿ... 400 00:35:59,333 --> 00:36:03,250 ನಿನ್ನ ಭೀತಿಯ ಒಂದೇ ಒಂದು ಗಾಳಿಮಾತಿನ ಪಿಸುಮಾತು ನಿಜವಾದರೂ 401 00:36:03,750 --> 00:36:06,125 ಅದನ್ನ ಸರಿ ಮಾಡೋವರೆಗೂ ನಾನು ವಿರಮಿಸಲ್ಲ. 402 00:36:08,000 --> 00:36:10,416 ತುಂಬಾ ಕಾಲ ಸೆಣೆಸಾಡಿದ್ದೀಯ, ಗಲಾಡ್ರಿಯಲ್. 403 00:36:13,000 --> 00:36:14,541 ನಿನ್ನ ಕತ್ತಿಯನ್ನ ದೂರ ಇಡು. 404 00:36:15,291 --> 00:36:17,208 ಅದಿಲ್ಲದೆ ನಾನೇನಾಗಬೇಕು? 405 00:36:17,291 --> 00:36:18,916 ಯಾವಾಗ್ಲೂ ಏನಾಗಿದ್ದೀಯೋ ಅದೇ. 406 00:36:21,875 --> 00:36:23,125 ನನ್ನ ಗೆಳತಿ. 407 00:36:27,041 --> 00:36:30,041 ಲಿಂಡೊನ್ 408 00:36:42,083 --> 00:36:43,541 ದಿ ಸೌತ್ ಲ್ಯಾಂಡ್ಸ್ ಮನುಷ್ಯರ ಪ್ರದೇಶಗಳು 409 00:37:20,291 --> 00:37:21,708 ಶುಭಸಂಜೆ. 410 00:37:21,791 --> 00:37:23,333 ಮೂರು ನಡೆಗಳಲ್ಲಿ ಕರೈಸ್. 411 00:37:28,166 --> 00:37:29,625 ವಿಷಭರಿತವಾಗಿರಬಹುದು. 412 00:37:29,708 --> 00:37:31,625 ವಿಷವಾ? ಯಾರು ಹಾಕಿರಬಹುದು? 413 00:37:32,166 --> 00:37:35,250 ನಮಗೆ ಗೊತ್ತಿರೋ ಹಾಗೆ ಆ ಈರುಳ್ಳಿ ಕಣ್ಣಿನವನೇ ಹಾಕಿರಬಹುದು. 414 00:37:47,375 --> 00:37:48,583 ಅರೊಂಡೀರ್. 415 00:37:49,916 --> 00:37:52,250 ಆಗಲೇ 15 ದಿನ ಕಳೆದುಹೋಯ್ತಾ? 416 00:37:53,458 --> 00:37:54,583 ಹೌದು. 417 00:37:56,416 --> 00:38:00,083 ಈ ಸಲ ಹೇಳೋದಕ್ಕೆ ಹೆಚ್ಚೇನಿಲ್ಲ. 418 00:38:00,166 --> 00:38:03,583 ಕೆಲವು ಕೆಟ್ಟ ಜಗಳಗಳು, ಸ್ವಲ್ಪ ಜೂಜಾಟದಲ್ಲಿನ ಮೋಸ ಬಿಟ್ರೆ. 419 00:38:04,166 --> 00:38:06,291 ಮತ್ತು... ಹಾಂ! 420 00:38:06,375 --> 00:38:08,833 ಕಳೆದ ಮಂಗಳವಾರ ಅಂತೂ ಇಲ್ಲಿ ಒಳ್ಳೆ ಮಜಾ ಇತ್ತು. 421 00:38:08,916 --> 00:38:10,833 ಯಾರೋ ಹುಡುಗಿ ಬಗ್ಗೆ ಜಗಳ. 422 00:38:11,250 --> 00:38:14,666 ಇವನ ಕಣ್ಣೇನೋ ಏಳಲ್ಲ, ಅವಳ ಕಣ್ಣಂತೂ ನಿಲ್ಲಲ್ಲ, ಹೇಳಿದ್ದು ಗೊತ್ತಾಯ್ತಲ್ಲ? 423 00:38:16,875 --> 00:38:19,000 ಏನಾದ್ರೂ ಕುಡೀತೀಯೇನಪ್ಪ, ಸೈನಿಕ? 424 00:38:19,083 --> 00:38:21,291 ಯಾವಾಗಿನ ಥರ ನನ್ನ ಬಾವಿ ನಿನ್ನದೇ. 425 00:38:21,375 --> 00:38:22,875 ಮತ್ತೆ ವಿಷ ಹಾಕಿರೋದು? 426 00:38:23,375 --> 00:38:24,416 ಏನು ವಿಷ? 427 00:38:24,500 --> 00:38:26,291 ಈಗಷ್ಟೇ ಮಾತಾಡ್ತಿದ್ರಲ್ಲ? 428 00:38:26,375 --> 00:38:27,500 ಇಲ್ಲ... 429 00:38:27,583 --> 00:38:30,625 ವಿಷ ಹಾಕಿದ ಹುಲ್ಲಿನ ಬಗ್ಗೆ ಒದರುತ್ತಾ ಇದ್ದ. 430 00:38:32,125 --> 00:38:34,958 ಯಾರೋ ಒಬ್ಬನ ಮೇವೆಲ್ಲ ಕೊಳೆತುಹೋಗಿತ್ತಂತೆ. 431 00:38:35,041 --> 00:38:37,208 ಬರೀ ಕಳೆ ಮಾತ್ರ ಬೆಳೆಯುತ್ತಿದೆಯಂತೆ. 432 00:38:37,291 --> 00:38:40,000 ಈ ವ್ಯಕ್ತಿ ಎಲ್ಲಿಯವನು? 433 00:38:40,500 --> 00:38:42,000 ಹೇಳಲಿಲ್ಲ. ಪೂರ್ವ ಅನ್ಸುತ್ತೆ. 434 00:38:42,750 --> 00:38:44,166 ಇಲ್ಲಿಗೆ ಯಾವತ್ತು ಬಂದಿದ್ದ? 435 00:38:44,625 --> 00:38:47,291 ಹೋಗ್ಲಿ ಬಿಡೋ, ಚೂಪು-ಕಿವಿಯವನೇ. 436 00:38:48,208 --> 00:38:50,250 ಯಾವ್ದೋ ಹುಲ್ಲು, ಅಷ್ಟೇ ತಾನೇ? 437 00:38:51,333 --> 00:38:55,625 ನೀವು ನಮ್ಮ ಜೊತೆ ಸೇರಿಸುವವರು ಸತ್ತು ಸಾವಿರ ವರ್ಷಗಳೇ ಕಳೆದಿವೆ. 438 00:38:55,708 --> 00:38:58,541 ಕಳೆದುಹೋಗಿರೋದನ್ನ ಯಾವಾಗ್ರೋ ಬಿಡ್ತೀರ ನೀವುಗಳು? 439 00:39:02,416 --> 00:39:05,958 ಕಳೆದುಹೋಗಿರೋದು ಇಷ್ಟ ಇದ್ರೂ, ಇಲ್ಲದಿದ್ರೂ ನಮ್ಮ ಜೊತೆಗೇ ಇದೆ. 440 00:39:06,833 --> 00:39:10,833 ಒಂದು ದಿನ ನಮ್ಮ ನಿಜವಾದ ರಾಜ ಬರ್ತಾನೆ. 441 00:39:11,958 --> 00:39:16,458 ನಿಮ್ಮ ಕಾಲಿನ ಅಡಿಯಿಂದ ನಮ್ಮನ್ನ ಮೇಲಕ್ಕೆ ಎತ್ತೇ ಎತ್ತುತ್ತಾನೆ. 442 00:39:16,541 --> 00:39:18,208 ಆಯ್ತು, ಬಿಡಪ್ಪ. ಸಮಾಧಾನ ಮಾಡ್ಕೋ. 443 00:39:31,083 --> 00:39:31,916 ಬಾರೋ ಹುಡುಗ. 444 00:39:35,208 --> 00:39:37,208 ಇನ್ನೇನಾದ್ರೂ ಬೇಕಿತ್ತಾ? 445 00:40:00,791 --> 00:40:02,208 ನಿನ್ನ ಕೈ ಕೊಡು. 446 00:40:20,833 --> 00:40:22,000 ಆಲ್ಫಿರಿನ್ ಬೀಜಗಳು. 447 00:40:25,000 --> 00:40:27,666 ನಾನು ಚಿಕ್ಕವನಾದಾಗಿನಿಂದ ಈ ಹೂಗಳನ್ನ ನೋಡಿಲ್ಲ. 448 00:40:28,416 --> 00:40:29,916 ಎಲ್ಲಿ ಸಿಕ್ಕವು ಇವು ನಿನಗೆ? 449 00:40:30,583 --> 00:40:34,041 ಎಲ್ಲಿಗೋ ಹೋಗ್ತಿದ್ದ ಇನ್ನೊಬ್ಬ ವೈದ್ಯರ ಹತ್ತಿರ ಕೊಂಡುಕೊಂಡೆ. 450 00:40:34,125 --> 00:40:36,250 ಹೂವಿನ ದಳಗಳನ್ನ ನೂರಿ ಮುಲಾಮಿನ ಥರ ಮಾಡಿಕೊಳ್ತೀವಿ. 451 00:40:36,333 --> 00:40:37,958 ನೂರೋದಾ? 452 00:40:38,041 --> 00:40:39,500 ಮೆಲ್ಲಗೆ. 453 00:40:42,958 --> 00:40:44,958 ನಿಮ್ಮವರಲ್ಲೂ ವೈದ್ಯರಿದ್ದಾರಾ? 454 00:40:45,041 --> 00:40:46,416 ಇದ್ದಾರೆ. 455 00:40:46,500 --> 00:40:48,333 ಅವರನ್ನ ನಾವು ಕುಶಲಕರ್ಮಿಗಳಂತೀವಿ. 456 00:40:49,291 --> 00:40:53,333 ನಮ್ಮ ದೇಹಕ್ಕಾಗೋ ಎಷ್ಟೋ ಗಾಯಗಳು ತಾವಾಗೇ ವಾಸಿಯಾಗ್ತವೆ, 457 00:40:53,416 --> 00:40:57,833 ಹಾಗಾಗಿ ಅವರ ಕೈಚಳಕವೇ ಅಡಗಿರೋ ಸತ್ಯಗಳನ್ನ ಸುಂದರ ಕಲಾಕೃತಿಗಳನ್ನಾಗಿ ಮಾಡುತ್ತೆ. 458 00:40:58,791 --> 00:41:01,458 ಆತ್ಮಕ್ಕೆ ಚಿಕಿತ್ಸೆ ಕೊಡೋ ಮಹಾ ಶಕ್ತಿ ಸೌಂದರ್ಯಕ್ಕಿದೆ. 459 00:41:03,750 --> 00:41:06,458 ಆಲ್ಫಿರಿನ್ ಹೂಗಳು ನಿನಗೆ ಸುಂದರವಾಗಿ ಕಾಣುತ್ತೆ ಅಲ್ವಾ? 460 00:41:13,750 --> 00:41:15,416 ಮತ್ತೆ ಸಿಗೋಣ ಹಾಗಾದ್ರೆ. 461 00:41:15,500 --> 00:41:16,583 ಸೈನಿಕ. 462 00:41:27,291 --> 00:41:28,916 ಏನಾದ್ರೂ ಹೇಳೋಕಿದೆಯಾ? 463 00:41:30,208 --> 00:41:31,875 ವಿಶೇಷ ಅಂತ ಏನಿಲ್ಲ. 464 00:41:34,458 --> 00:41:35,666 ಮತ್ತೆ ಬಾವಿ... 465 00:41:37,083 --> 00:41:38,333 ಹೇಗಿತ್ತು? 466 00:41:39,875 --> 00:41:41,291 ನೀರೇನಾದ್ರೂ ಸೇದಿದ್ಯಾ? 467 00:41:42,208 --> 00:41:43,958 ಒಸ್ಟಿರಿಥ್ಥಲ್ಲಿ ಕಾಯುತ್ತಿದ್ದಾರೆ. 468 00:41:46,083 --> 00:41:48,916 ವಾಚ್ ವಾರ್ಡನ್ನಿಗೇನಾದ್ರು ನೀನೇನು ಮಾಡ್ತಿದ್ದೀಯ 469 00:41:49,000 --> 00:41:51,916 ಅಂತ ಗೊತ್ತಾದ್ರೆ ನನ್ನ ಗತಿ ಏನು ಅಂತ ಎಣಿಸಿದ್ದೀಯಾ? 470 00:41:52,000 --> 00:41:53,666 ನೀನು ಹೇಳಿದ್ದು ನನಗೆ ಅರ್ಥ ಆಗಲಿಲ್ಲ. 471 00:41:53,750 --> 00:41:55,250 ನಿನ್ನ ಮೇಲೆ ಒಂದು ಕಣ್ಣಿಡದೆ 472 00:41:55,333 --> 00:41:57,416 ಅವರನ್ನ ನೋಡೋದು ಕಷ್ಟವೇ ಸರಿ. 473 00:41:57,500 --> 00:41:58,750 ನಾನು ಕುರುಡ ಅಂದುಕೊಂಡ್ಯಾ? 474 00:41:58,833 --> 00:42:02,000 ಇಲ್ಲ. ಆದ್ರೆ ಜಾಸ್ತಿ ಮಾತಾಡ್ತೀಯ ಅಂತ ಕಾಣುತ್ತೆ. 475 00:42:02,708 --> 00:42:04,625 ಕೊಳೆತ ಎಲೆಗಳ ವಾಸನೆ ನಾರುತ್ತಿದ್ದೀಯ. 476 00:42:04,708 --> 00:42:06,208 ಇಲ್ಲವಲ್ಲ. 477 00:42:06,291 --> 00:42:07,458 ಹೌದು, ನಿಜ. 478 00:42:15,291 --> 00:42:18,291 ನನ್ನ ಮಾತು ಇದೇ. ಇತಿಹಾಸದಲ್ಲಿ ಎರಡೇ ಸಲ 479 00:42:18,375 --> 00:42:21,500 ಮನುಷ್ಯರು ಮತ್ತು ಎಲ್ಫ್ಗಳು ಜೋಡಿಯಾಗಲು ಯತ್ನಿಸಿದ್ದಾರೆ. 480 00:42:21,583 --> 00:42:24,083 ಎರಡೂ ಬಾರಿ ಅದು ದುರಂತ ಅಂತ್ಯ ಕಂಡಿದೆ. 481 00:42:24,166 --> 00:42:25,250 ಸಾವಲ್ಲಿ ಕೊನೆಗೊಂಡಿದೆ. 482 00:42:25,333 --> 00:42:27,250 ಅದನ್ನೇನು ನೆನಪಿಸಬೇಕಿಲ್ಲ. 483 00:42:28,833 --> 00:42:30,416 ಮತ್ಯಾಕೆ ಪ್ರಯತ್ನ ಮಾಡ್ತೀಯ? 484 00:42:31,208 --> 00:42:32,916 ಒಂದು ಕಾರಣ ಕೊಡು. ಒಂದು. 485 00:42:33,000 --> 00:42:34,833 ಅರೊಂಡೀರ್! ಮೆಧೋರ್! 486 00:42:36,291 --> 00:42:39,208 ಯುದ್ಧದ ದಿನಗಳು ಮುಗಿದಿವೆ ಅಂತ ಮೇಲರಸರು ಘೋಷಿಸಿದ್ದಾರೆ. 487 00:42:40,666 --> 00:42:43,083 ದೂರದ ಹೊರಪಾಳೆಯಗಳನ್ನು ವಿಸರ್ಜಿಸಲಾಗುತ್ತಿದೆ. 488 00:42:44,541 --> 00:42:45,625 ನಾವು ಹೊರಡುತ್ತಿದ್ದೀವಿ. 489 00:43:12,791 --> 00:43:14,375 ಕೊನೆಯ ಸಲ ನೋಡಿಕೊಳ್ತಿದ್ದೀಯಾ? 490 00:43:16,500 --> 00:43:19,000 ನಾನಿಲ್ಲಿ ಠಿಕಾಣಿ ಹೂಡಿ 79 ವರ್ಷಗಳಾದವು. 491 00:43:21,125 --> 00:43:23,791 ಅಭ್ಯಾಸ ಆಗಿಬಿಟ್ಟಿರಬೇಕು ಅನ್ಸುತ್ತೆ. 492 00:43:25,458 --> 00:43:29,000 ಈ ಜಾಗ ಒಂದು ಕಾಲದಲ್ಲಿ ಬಂಡೆಗಳ ಬರಡು ಭೂಮಿ ಅಂದ್ರೆ ನಂಬ್ತೀಯಾ? 493 00:43:29,083 --> 00:43:31,083 ತುಂಬಾ ಬದಲಾಗಿದೆ, ವಾಚ್ ವಾರ್ಡನ್. 494 00:43:31,958 --> 00:43:34,041 ಆದರೆ ಇಲ್ಲಿರುವವರು ಬದಲಾಗಿಲ್ಲ. 495 00:43:34,541 --> 00:43:38,541 ಮಾರ್ಗೋಥಿನ ಜೊತೆ ನಿಂತವರ ರಕ್ತದಿಂದ ಅವರ ರಕ್ತ ಈಗಲೂ ಹೆಪ್ಪುಗಟ್ಟುತ್ತೆ. 496 00:43:40,958 --> 00:43:42,833 ಅದು ಬಹಳ ಹಿಂದೆ, ವಾಚ್ ವಾರ್ಡನ್. 497 00:43:47,833 --> 00:43:49,541 ಯುದ್ಧಕ್ಕೆ ಮುಂಚೆ ನೀನೇನಾಗಿದ್ದೆ? 498 00:43:50,458 --> 00:43:51,583 ಬೆಳೆಗಾರ. 499 00:43:51,666 --> 00:43:55,333 ಮತ್ತೀಗ ನೀನು ವಾಪಸ್ ಹೋಗಿ ಬಿಟ್ಟು ಬಂದಿದ್ದಕ್ಕಿಂತ ಹೆಚ್ಚಿಗೆ ಪಡೀತೀಯ. 500 00:43:55,416 --> 00:43:58,208 ಸನ್ಮಾನ, ಪದವಿ. 501 00:43:59,500 --> 00:44:01,166 ನಿನ್ನ ಜೀವನ ಹೊಸದಾಗಿ ಶುರುವಾಗುತ್ತೆ. 502 00:44:02,166 --> 00:44:04,208 ನೆನಪಿಟ್ಟುಕೋ, ಅರೊಂಡೀರ್, 503 00:44:04,833 --> 00:44:08,416 79 ವರ್ಷಗಳು ನೀನು ತಿರಹರದಿನ ಜನರನ್ನ ಕಾದಿದ್ದೀಯ, 504 00:44:08,500 --> 00:44:11,416 ಅವರ ಪೂರ್ವಜರು ಹಿಂದೆ ಮಾಡಿದ್ದಕ್ಕಲ್ಲ... 505 00:44:12,875 --> 00:44:14,875 ಅವರಿನ್ನೂ ಯಾರಾಗಿದ್ದಾರೆ ಅನ್ನೋ ಕಾರಣಕ್ಕೆ. 506 00:44:20,416 --> 00:44:21,625 ಕೃತಜ್ಞನಾಗಿರು. 507 00:44:23,166 --> 00:44:25,333 ಮತ್ತೆ ಅವರನ್ನ ನೀನು ನೋಡಬೇಕಿಲ್ಲ. 508 00:45:03,958 --> 00:45:07,166 ಹುಷಾರು. ಅದು ಅಗ್ನಿ-ಬೇರಿನ ಪುಡಿ. ನಿಧಾನವಾಗಿ ಮಾಡಬೇಕು. 509 00:45:07,250 --> 00:45:09,333 ಇನ್ನೂ ನಿಧಾನ ಅಂದ್ರೆ ಇಲ್ಲೇ ಇರಬೇಕಷ್ಟೇ. 510 00:45:09,416 --> 00:45:11,291 ಬೆಳಿಗ್ಗೆ ಯಾಕೋ ಮುನಿಸಿಕೊಂಡಿದ್ದೀಯ. 511 00:45:11,375 --> 00:45:14,000 ನಿದ್ದೆ ಸಾಕಾಗಿಲ್ಲ. ನೆಲದ ಕೆಳಗೆ ಇಲಿಗಳು 512 00:45:14,083 --> 00:45:16,125 -ಚೆನ್ನಾಗಿ ಕುಣಿಯುತ್ತಿದ್ದವು. -ಮತ್ತೇನಾ? 513 00:45:16,208 --> 00:45:18,916 ಹಿಂದಿನ ಮೂರು ರಾತ್ರಿಗಳು. ಕೆರೆದು, ಗೀಚುತ್ತಿದ್ದವು. 514 00:45:22,416 --> 00:45:24,250 ಅವರಲ್ಲೊಬ್ಬ ಇಲ್ಲೇನು ಮಾಡ್ತಿದ್ದಾನೆ? 515 00:45:35,250 --> 00:45:36,750 ನೀನು ಹೊರಟಿದ್ದೆ ಅಂತ ಕೇಳಿದೆ. 516 00:45:37,791 --> 00:45:38,958 ಹೌದು. 517 00:45:41,166 --> 00:45:43,166 ನಿಮ್ಮ ದಳದ ಮಿಕ್ಕವರೆಲ್ಲಿ? 518 00:45:44,458 --> 00:45:48,000 ಸದ್ಯಕ್ಕೆ ನನ್ನನ್ನೇ ಹುಡುಕುತ್ತಾ ಇರ್ತಾರೆ. 519 00:45:48,708 --> 00:45:50,375 ಮತ್ತೆ ನನ್ನ ಮನೆಯಲ್ಲಿ ಯಾಕಿದ್ದೀಯ? 520 00:46:03,750 --> 00:46:05,583 ಏನು ಹೇಳಬೇಕೋ ಹೇಳು. 521 00:46:05,666 --> 00:46:07,166 ಈಗಾಗ್ಲೇ ಹೇಳಿದ್ದೀನಿ. 522 00:46:08,041 --> 00:46:11,583 ನೂರಾರು ಸಲ, ಮಾತಿನಲ್ಲಿ ಹೊರತು. 523 00:46:13,583 --> 00:46:14,708 ಅಮ್ಮ. 524 00:46:16,250 --> 00:46:17,916 ನಿನಗೋಸ್ಕರ ಯಾರೋ ಬಂದಿದ್ದಾರೆ. 525 00:46:26,875 --> 00:46:27,958 ಅಮ್ಮ. 526 00:46:31,291 --> 00:46:33,125 ಪ್ರಾಣಿಗಳಿಗೂ ಚಿಕಿತ್ಸೆ ಕೊಡ್ತೀರಾ? 527 00:46:35,583 --> 00:46:37,583 ಒಂದು ಸಲ ನೋಡ್ತೀರಾ? 528 00:46:38,500 --> 00:46:41,541 ಇದಕ್ಕೇನೋ ಸ್ವಲ್ಪ ಹುಷಾರಿಲ್ಲ. 529 00:46:42,291 --> 00:46:43,708 ಏನಾಗಿದೆ? 530 00:46:51,041 --> 00:46:52,541 ಜ್ವರ ಅಂತೂ ಅಲ್ಲ. 531 00:46:54,541 --> 00:46:57,166 ಮತ್ತಿದಕ್ಕೆ ಯಾವ ಹುಣ್ಣುಗಳೂ ಆಗಿಲ್ಲ. 532 00:46:58,375 --> 00:47:00,000 ಎಲ್ಲಿ ಮೇಯ್ತಾ ಇತ್ತು? 533 00:47:00,083 --> 00:47:01,833 ಹಿಂದೊಮ್ಮೆ ಪೂರ್ವಕ್ಕೆ ಹೋಗಿತ್ತು. 534 00:47:03,125 --> 00:47:04,416 ಏನಾದ್ರೂ ತಿಂದಿರಬಹುದಾ? 535 00:47:09,208 --> 00:47:12,041 ಏನದು, ಅದರಿಂದ ಸ್ರವಿಸಿದ್ದು? 536 00:47:13,333 --> 00:47:14,916 ಎಷ್ಟು ದೂರ ಪೂರ್ವದಲ್ಲಿ? 537 00:47:15,000 --> 00:47:17,375 ಹೋರ್ಡರ್ನ್ವರೆಗೂ ಹೋಗಿರಬಹುದು. 538 00:47:24,625 --> 00:47:25,833 ಎಲ್ಲಿಗೆ ಹೋಗ್ತಿದ್ದೀಯ? 539 00:47:25,916 --> 00:47:29,166 ಹೋರ್ಡರ್ನಿಗೆ ಒಂದು ದಿನದ ಪ್ರಯಾಣ. ಸಂಜೆ ಒಳಗೆ ಹೋಗಬಹುದು. 540 00:47:29,250 --> 00:47:30,583 ನಾನೂ ಬರ್ತೀನಿ. 541 00:47:43,083 --> 00:47:44,833 ಬೇಗ ಹೋಗು. 542 00:47:44,916 --> 00:47:47,666 ಅವನಿಗೇನಾದರೂ ಸಿಕ್ಕರೆ ಹಲ್ಲುದುರಿಸಿಬಿಡ್ತಾನೆ. 543 00:47:50,875 --> 00:47:53,000 ತಪ್ಪಿ ಅದನ್ನು ನೋಡಿದೆ. 544 00:47:53,083 --> 00:47:54,375 ಅದೃಷ್ಟದ ಹಲಗೆ ತುಳಿದೆ. 545 00:47:56,916 --> 00:47:58,083 ಮತ್ತೆ, ಹೇಳು, 546 00:47:59,083 --> 00:48:01,625 ನಿಜಾನಾ? ನಿಮ್ಮಮ್ಮನ ಬಗ್ಗೆ? 547 00:48:02,583 --> 00:48:04,000 ಏನು ನಿಜ? 548 00:48:04,708 --> 00:48:08,500 ವಾಲ್ಡ್ರೆಗ್ ಒಂದ್ಸಲ ನಿಮ್ಮಮ್ಮನ್ನ, ಚೂಪುಕಿವಿಯನ್ನ 549 00:48:08,625 --> 00:48:11,125 ಅವನ ಬಾವಿ ಹತ್ತಿರ ನೋಡಿದ್ದನಂತೆ? 550 00:48:11,208 --> 00:48:12,333 ನಿನಗ್ಯಾರು ಹೇಳಿದ್ದು? 551 00:48:12,416 --> 00:48:13,666 ಎಲ್ಲರೂ. 552 00:48:14,125 --> 00:48:15,291 ಅದು ಸುಳ್ಳು. 553 00:48:15,833 --> 00:48:18,375 ಅದಕ್ಕೇನೇನೋ ನಿಮ್ಮಪ್ಪ ಆ ರೀತಿ ಓಡಿಹೋಗಿದ್ದು. 554 00:48:18,458 --> 00:48:19,791 ನಮ್ಮಪ್ಪ ಓಡಿಹೋಗಲಿಲ್ಲ. 555 00:48:19,875 --> 00:48:21,708 ಮತ್ತವರಿಗೆ ಏನಾಯ್ತು? 556 00:48:21,791 --> 00:48:23,458 ನಿನಗೆ ಗೊತ್ತೂ ಇಲ್ಲ, ತಾನೆ? 557 00:48:27,000 --> 00:48:29,833 ಆ ಒರಟನಿಗೆ ಒಳ್ಳೆ ಆಸ್ತಿ ಸಿಕ್ಕಿರಬಹುದು ಅಲ್ಲಿ. 558 00:48:31,416 --> 00:48:32,916 ಇದೇ ನಿಜವಾದ ಆಸ್ತಿ. 559 00:48:53,125 --> 00:48:54,125 ನೋಡ್ಕೋ! 560 00:48:56,625 --> 00:48:57,708 ಹೋಗು, ಬೇಗ. 561 00:49:36,541 --> 00:49:38,541 ನನ್ನ ದೃಷ್ಟಿಯನ್ನೂ ತಪ್ಪಿಸಿ ಹೋಗಿದ್ದಾಳೆ. 562 00:49:39,750 --> 00:49:42,833 ಗಲಾಡ್ರಿಯಲ್ ಹುಡುಕಾಟ ಮುಂದುವರಿಯಲೇಬೇಕು ಅಂತ ನಿರ್ಧರಿಸಿದ್ದಳು. 563 00:49:44,083 --> 00:49:47,083 ನಮ್ಮ ಗ್ರಹಿಕೆಯ ಪ್ರಕಾರ ಅದೇ ಆಗಿದ್ದಿದ್ರೆ 564 00:49:47,166 --> 00:49:52,541 ಅವಳು ಸೋಲಿಸಬೇಕು ಅಂದುಕೊಂಡ ದುಷ್ಟನನ್ನ ಅಜಾಗರೂಕವಾಗಿ ಅವಳೇ ಬದುಕಿಸಿ ಇಡುತ್ತಿದ್ದಳು. 565 00:49:54,583 --> 00:49:57,666 ಯಾಕಂದ್ರೆ ಬೆಂಕಿಯನ್ನು ನಂದಿಸಬಹುದಾದ ಗಾಳಿಯೇ 566 00:49:57,750 --> 00:50:00,166 ಅದನ್ನು ಹಬ್ಬಿಸಲೂಬಲ್ಲದು. 567 00:50:02,000 --> 00:50:03,750 ಅವಳು ಹುಡುಕುತ್ತಿದ್ದ ನೆರಳು... 568 00:50:06,583 --> 00:50:08,166 ಇದೆ ಅಂತ ನೀವು ನಂಬುತ್ತೀರಾ? 569 00:50:08,791 --> 00:50:11,416 ಅದರ ಬಗ್ಗೆ ನೀನು ಪ್ರಶಾಂತವಾಗಿರು. 570 00:50:12,750 --> 00:50:14,958 ನೀನು ಮಾಡಿದ್ದು ಸರಿಯಾಗೇ ಇದೆ. 571 00:50:15,041 --> 00:50:18,333 ಗಲಾಡ್ರಿಯಲ್ ಮತ್ತು ಮಿಡ್ಲ್ ಅರ್ಥ್ಗಾಗಿ. 572 00:50:20,291 --> 00:50:22,291 ಸರಿ ಯಾವುದು ಅಂತ ನೋಡೋದೇ ಕಷ್ಟ... 573 00:50:24,208 --> 00:50:26,416 ಸ್ನೇಹ ಮತ್ತು ಕರ್ತವ್ಯ ಬೆಸೆದುಕೊಂಡಿರುವಾಗ. 574 00:50:28,416 --> 00:50:31,083 ಮುನ್ನಡೆಸುವವರು ಮತ್ತು ಮುನ್ನಡೆಸಲ್ಪಡುವವರ ಭಾರ 575 00:50:32,000 --> 00:50:34,208 ಇಂಥದ್ದೇ ಆಗಿರುತ್ತೆ. 576 00:50:35,958 --> 00:50:38,250 ಗಲಾಡ್ರಿಯಲ್ ಸೂರ್ಯಾಸ್ತದ ದಿಕ್ಕಿಗೆ ಹೊರಡುವಳು. 577 00:50:38,333 --> 00:50:43,166 ನಾನು, ನೀನು ಹೊಸ ಸೂರ್ಯೋದಯದ ಕಡೆ ನೋಡಬೇಕು. 578 00:50:45,291 --> 00:50:46,458 ಅದಕ್ಕಾಗಿ, 579 00:50:48,041 --> 00:50:51,625 ಲಾರ್ಡ್ ಕೆಲಿಬ್ರೀಂಬೋರರ ಕಾರ್ಯದ ಪರಿಚಯ ನಿನಗಿದೆಯಾ? 580 00:50:52,666 --> 00:50:55,083 ಎಲ್ಫ್ ಕುಶಲಕರ್ಮಿಗಳಲ್ಲೇ ಮಹಾನ್ ವ್ಯಕ್ತಿ, ಹೌದು. 581 00:50:55,500 --> 00:50:59,166 ನಾನು ಮಗುವಾಗಿದ್ದಾಗಿನಿಂದಲೂ ಅವರ ಕಲೆಯ ಅಭಿಮಾನಿ. ಯಾಕೆ ಕೇಳಿದಿರಿ? 582 00:50:59,250 --> 00:51:04,000 ಅವರೊಂದು ಹೊಸ ಯೋಜನೆಯನ್ನು ಶುರುಮಾಡಲಿದ್ದಾರೆ. ಅತಿ ಪ್ರಮುಖವಾದದ್ದು. 583 00:51:05,083 --> 00:51:08,208 ಅವರ ಜೊತೆ ನೀನು ಕೆಲಸ ಮಾಡಬೇಕು ಅಂತ ನಾವು ನಿರ್ಧರಿಸಿದ್ದೀವಿ. 584 00:51:11,166 --> 00:51:14,666 ವಿವರಣೆ ಕೊಡೋಕೆ ನಿಮಗೇ ಅವಕಾಶ ಕೊಡುವೆ, ಲಾರ್ಡ್ ಕೆಲಿಬ್ರೀಂಬೋರ್. 585 00:51:30,250 --> 00:51:33,291 ಮೊದಲು ದೊಡ್ಡ ಮನುಷ್ಯರು, ಈಗ ನಕ್ಷತ್ರಗಳು. 586 00:51:35,000 --> 00:51:37,333 ನಿದ್ದೆ ಮಾಡಬೇಕಾದ ಕಣ್ಣುಗಳು ತೆರೆದಿವೆ. 587 00:51:41,291 --> 00:51:42,583 ಒಂದು ರೀತಿ... 588 00:51:44,208 --> 00:51:46,375 ಯಾವುದನ್ನೋ ನೋಡುತ್ತಿರುವ ಹಾಗೆ. 589 00:51:46,875 --> 00:51:47,958 ಏನನ್ನ ನೋಡುವ ಹಾಗೆ? 590 00:51:48,875 --> 00:51:51,833 ನಿನಗೆ ಸಂಬಂಧಪಡದ ವಿಷಯದ ಬಗ್ಗೆ ಮಾತಾಡಿದ್ರೆ ಬೈಸಿಕೊಳ್ತೀಯ. 591 00:51:51,916 --> 00:51:53,750 ಏನದು? ಅಲ್ಲಿ ನಿಮಗೇನು ಕಾಣಿಸ್ತಿದೆ? 592 00:51:53,833 --> 00:51:56,041 ಎಲೀನರ್ ಬ್ರಾಂಡಿಫುಟ್, ನಿಮ್ಮಪ್ಪನ ಮೂಗಿನ ಹಾಗೆ 593 00:51:56,125 --> 00:51:57,958 ಯಾವಾಗ್ಲೂ ತೊಂದರೆಯೊಳಗೆ ತೂರಿಸ್ತೀಯ, 594 00:51:58,041 --> 00:52:02,250 ಹಾರ್ಫೂಟ್ ಆಗಿ ಹುಟ್ಟಿ ಸಹ ನಿನಗೆ ತುಂಬಾ ಕುತೂಹಲ ಮತ್ತು ಎಲ್ಲದಕ್ಕೂ ತಲೆ ಹಾಕ್ತೀಯ. 595 00:52:02,333 --> 00:52:05,041 ನೀನೇನಾದ್ರೂ ಅರ್ಧ ಅಳಿಲುವಿನ ವಂಶದವಳಾ ಏನು? 596 00:52:06,458 --> 00:52:09,208 ಸಾಡೊಕ್. ಸಾಡೊಕ್, ದಯವಿಟ್ಟು. 597 00:52:10,000 --> 00:52:11,208 ಹೇಳಿ. 598 00:52:13,958 --> 00:52:16,541 ಆಕಾಶ ವಿಚಿತ್ರವಾಗಿದೆ. 599 00:52:19,000 --> 00:52:20,208 ವಿಚಿತ್ರ.. 600 00:52:20,291 --> 00:52:21,375 ವಿಚಿತ್ರ ಅಂದ್ರೆ? 601 00:52:21,458 --> 00:52:23,333 ನೋರಿ! ನಿನ್ನ ಹತ್ತಿರ ಆ ಚರಬಿ ಇದೆಯಾ? 602 00:52:23,416 --> 00:52:24,666 ಬಂದೆ. 603 00:52:33,416 --> 00:52:35,958 ಹೋರ್ಡರ್ನಿನ ಜನರ ಬಗ್ಗೆ ನಿನಗೆಷ್ಟು ಗೊತ್ತಿದೆ? 604 00:52:36,041 --> 00:52:38,875 ತುಂಬಾ ಚೆನ್ನಾಗಿ, ಅನ್ನಬಹುದು. ನಾನಲ್ಲೇ ಹುಟ್ಟಿದ್ದು. 605 00:52:40,875 --> 00:52:42,041 ಯಾಕೆ? 606 00:52:42,125 --> 00:52:45,583 ಮಾರ್ಗೋಥಿನ ವಿಷಯದಲ್ಲಿ ಹೋರ್ಡರ್ನಿನ ಜನರ ನಿಯತ್ತು 607 00:52:45,666 --> 00:52:47,333 ತುಂಬಾ ಗಟ್ಟಿಯಾದದ್ದು ಅಂತ ಮಾತಿದೆ. 608 00:52:48,458 --> 00:52:49,875 ಏನು ಹೇಳಿದೆ? 609 00:52:53,916 --> 00:52:55,166 ಸತ್ಯವನ್ನೇ. 610 00:52:56,416 --> 00:52:58,416 ನನ್ನ ಸ್ನೇಹಿತರ ಬಗ್ಗೆ ಮಾತಾಡ್ತಾ ಇದ್ದೀಯ. 611 00:52:58,500 --> 00:53:01,083 ಹತ್ತಿರದವರು, ನನಗವರು ಗೊತ್ತು. ಒಳ್ಳೆ ಜನ ಅವರು. 612 00:53:05,250 --> 00:53:07,041 ಅದಕ್ಕೇ ನಾನಿಲ್ಲಿ ನಿನ್ನ ಜೊತೆ ಇರೋದು. 613 00:53:09,500 --> 00:53:11,125 ವಾಚ್ ವಾರ್ಡನ್ ಬದಲಾಗಿ. 614 00:53:12,166 --> 00:53:13,416 ಬ್ರೊನ್ವಿನ್. 615 00:53:20,125 --> 00:53:24,041 ಈ ನೆಲದಲ್ಲಿ ನಾನಿದ್ದಷ್ಟು ಕಾಲ ನನಗೆ ಗೊತ್ತಿರುವ ಒಳ್ಳೆ ಸ್ಪರ್ಶ ಅಂದ್ರೆ ನೀನೇ. 616 00:53:40,708 --> 00:53:41,958 ಹೋರ್ಡರ್ನ್. 617 00:53:47,000 --> 00:53:48,083 ಸೌತ್ ಲ್ಯಾಂಡ್ಸ್ 618 00:53:51,083 --> 00:53:52,708 ಮಿಡ್ಲ್-ಅರ್ಥ್ 619 00:53:52,791 --> 00:53:54,791 ದಿ ಸಂಡರಿಂಗ್ ಸೀಸ್ 620 00:56:11,250 --> 00:56:16,916 ಹಡಗು ಯಾಕೆ ತೇಲುತ್ತೆ, ಆದರೆ ಕಲ್ಲಿಗೆ ಯಾಕಾಗಲ್ಲ ಅಂತ ಗೊತ್ತಾ? 621 00:56:51,958 --> 00:56:53,125 ಗಲಾಡ್ರಿಯಲ್. 622 00:57:09,041 --> 00:57:10,458 ನಿನ್ನ ಕೈ ಕೊಡು. 623 00:57:23,208 --> 00:57:26,208 ಆದರೆ ಕೆಲವು ಸಲ ಬೆಳಕು ಆಕಾಶದಲ್ಲಿ ಹೊಳೆಯುವಷ್ಟೇ ಪ್ರಖರವಾಗಿ 624 00:57:26,291 --> 00:57:28,958 ನೀರಿನ ಮೇಲೂ ಪ್ರತಿಬಿಂಬಿಸುತ್ತದೆ. 625 00:57:30,666 --> 00:57:33,083 ಯಾವ ಬೆಳಕನ್ನ ಅನುಸರಿಸಬೇಕು ಅಂತ ಹೇಗೆ ಗೊತ್ತಾಗುತ್ತೆ? 626 00:57:34,750 --> 00:57:36,750 ಕೆಲವೊಮ್ಮೆ ಕತ್ತಲನ್ನು ಮುಟ್ಟುವವರೆಗೂ 627 00:57:38,500 --> 00:57:40,500 ತಿಳಿಯೋಕಾಗಲ್ಲ. 628 00:57:52,125 --> 00:57:53,208 ಗಲಾಡ್ರಿಯಲ್! 629 01:02:39,666 --> 01:02:41,666 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ