1 00:00:06,000 --> 00:00:07,375 ಹಿಂದಿನ ಸಂಚಿಕೆಯಲ್ಲಿ 2 00:00:07,458 --> 00:00:08,750 ಅವನು ಸತ್ತಿದ್ದಾನೆ! ಬಾ! 3 00:00:11,916 --> 00:00:12,958 ಏನು? 4 00:00:13,208 --> 00:00:15,041 ಈಗ ಹೋಗುತ್ತೆ ನೋಡು... 5 00:00:15,125 --> 00:00:16,875 ಎಲ್ಲಿಂದ ಬಂದಿದ್ದೀಯ, ಏನು? 6 00:00:23,291 --> 00:00:25,916 ಆ ತಾರೆಗಳನ್ನ ಹುಡುಕಿಕೊಡೋಕೆ ಅವನಿಗೆ ನಮ್ಮ ಸಹಾಯ ಬೇಕು. 7 00:00:28,208 --> 00:00:29,458 ನೋರಿ? 8 00:00:33,000 --> 00:00:35,000 ಮಿಡ್ಲ್ ಅರ್ಥಿಗೆ ಹಿಂದಿರುಗೋದು ನನ್ನ ಕರ್ತವ್ಯ. 9 00:00:35,041 --> 00:00:38,625 ನನ್ನ ಮನೆಯಿಂದ ನನ್ನನ್ನ ಓಡಿಸಿದ್ದು ಎಲ್ಫ್ಗಳಲ್ಲ. ಓರ್ಕ್ಗಳು. 10 00:00:38,708 --> 00:00:40,833 ಅದು ನಿಮ್ಮ ಜನರ ಅರಸನ ಗುರುತಾ? 11 00:00:40,916 --> 00:00:42,291 ನಮ್ಮ ಜನರಿಗೆ ರಾಜನಿಲ್ಲ. 12 00:00:51,916 --> 00:00:54,458 ದೂರದ ಹೊರಪಾಳೆಯಗಳನ್ನು ವಿಸರ್ಜಿಸಲಾಗುತ್ತಿದೆ. 13 00:00:54,541 --> 00:00:56,000 ಕೊನೆಯ ಸಲ ನೋಡ್ತಿದ್ದೀಯ? 14 00:00:56,083 --> 00:00:57,791 ತುಂಬಾ ಬದಲಾಗಿದೆ, ವಾಚ್ ವಾರ್ಡನ್. 15 00:00:57,875 --> 00:00:59,875 ಆದರೆ ಇಲ್ಲಿರುವವರು ಬದಲಾಗಿಲ್ಲ. 16 00:00:59,958 --> 00:01:03,833 ಮಾರ್ಗೋಥಿನ ಜೊತೆ ನಿಂತವರ ರಕ್ತದಿಂದ ಅವರ ರಕ್ತ ಈಗಲೂ ಹೆಪ್ಪುಗಟ್ಟುತ್ತೆ. 17 00:01:03,916 --> 00:01:07,500 -ಯಾರೋ ದಾರಿ ಅಗೆದಿದ್ದಾರೆ. -ಏನೋ ಅಗೆದಿದೆ. ಇದನ್ನ ಮನುಷ್ಯರು ಮಾಡಿಲ್ಲ. 18 00:02:28,125 --> 00:02:32,458 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 19 00:03:27,041 --> 00:03:28,125 ಮಾಡಿ ಬೇಗ. 20 00:03:33,458 --> 00:03:36,083 ನೀನು! ಅವನನ್ನ ಕಟ್ಟಿಹಾಕು. 21 00:03:36,666 --> 00:03:38,291 ಮಿಕ್ಕಿದವರ ಜೊತೆ ಆಚೆ ಬಿಸಾಕು. 22 00:03:38,375 --> 00:03:41,958 ನೀನೇ ಅವನನ್ನ ಬಿಸಾಕು. ನನಗೆ ನೆನ್ನೆ ಬಿಸಿಲಿನ ಪಾಳಿ ಇತ್ತು. 23 00:03:42,041 --> 00:03:46,916 ಅಡಾರ್ ಆಜ್ಞೆ ಕೊಟ್ಟರೆ ನೀನು ಇದ್ದಲಿನ ಹಾಗೆ ಕರ್ರಗಾಗುವರೆಗೂ ಬಿಸಿಲಲ್ಲೇ ಇರ್ತೀಯ. 24 00:03:47,000 --> 00:03:50,333 ಅಡಾರ್ಗೋಸ್ಕರ ಮಾಡ್ತೀನಿ. ಆದರೆ ನಿನಗಲ್ಲ! 25 00:03:56,500 --> 00:03:58,916 ಅಡಾರ್ಗೋಸ್ಕರ. 26 00:04:09,458 --> 00:04:11,333 ವಿರಾಮ ಮುಗಿತು, ಸೋಮಾರಿ. 27 00:04:11,416 --> 00:04:12,666 ಈಗ ಅಗೆ. 28 00:05:04,583 --> 00:05:05,625 ಬದುಕಿದ್ದಾಳೆ. 29 00:05:15,833 --> 00:05:19,541 ನಮ್ಮ ಅತಿಥೇಯರು. ರಕ್ಷಕರಾ, ಬಂಧಿಸುವವರಾ? 30 00:05:20,166 --> 00:05:22,666 ಇದರಲ್ಲೇನು ವಿಷ ಇಲ್ಲ. ಅದೇ ನಿನ್ನ ಚಿಂತೆ ಆದರೆ. 31 00:05:25,750 --> 00:05:27,166 ಮನುಷ್ಯರಿಗಂತೂ ಅಲ್ಲ ಬಿಡು. 32 00:06:23,416 --> 00:06:26,833 ಎಲ್ಡಾರಿನವರು. ನನ್ನ ಹಡಗಲ್ಲಿ? 33 00:06:30,000 --> 00:06:31,541 ಅಲೆಗಳು ವಿಚಿತ್ರವಾಗಿವೆಯಲ್ಲ. 34 00:06:31,625 --> 00:06:32,958 ಯಾವ ದೋಣಿ ಇದು? 35 00:06:33,041 --> 00:06:36,541 ಆರಾಮಾಗಿರು. ನಿನ್ನನ್ನ ಸುರಕ್ಷಿತವಾಗಿ ನನ್ನ ಮೇಲಿನವರ ಬಳಿ ತಲುಪಿಸಬೇಕು. 36 00:06:36,625 --> 00:06:38,958 ನಿನ್ನ ಪ್ರಶ್ನೆಗಳಿಗೆ ಅವರು ಉತ್ತರಿಸುತ್ತಾರೆ. 37 00:06:39,041 --> 00:06:40,666 ಯಾವ ಬಂದರಿಗೆ ನಮ್ಮ ಪಯಣ? 38 00:06:41,541 --> 00:06:44,375 ನೀನೇ ನೋಡುವಂತೆ. ಇನ್ನೇನು ತಲುಪುತ್ತೇವೆ. 39 00:06:45,125 --> 00:06:46,291 ಅಂದ್ರೆ ಎಷ್ಟು ದೂರ? 40 00:06:51,125 --> 00:06:52,208 ಮನೆಗೆ. 41 00:07:46,041 --> 00:07:47,458 ಯಾವ ಸ್ಥಳ ಇದು? 42 00:07:48,916 --> 00:07:51,166 ಇದು ಆ ಸ್ಥಳ ಮಾತ್ರ ಆಗಿರಬಲ್ಲದು. 43 00:07:51,250 --> 00:07:52,916 ನಕ್ಷತ್ರದ ನಾಡು. 44 00:07:54,000 --> 00:07:56,458 ಮಾನವರ ಸ್ತರದಲ್ಲೇ ಅತ್ಯಂತ ಪಶ್ಚಿಮದಲ್ಲಿರುವುದು. 45 00:07:58,125 --> 00:08:02,291 ನ್ಯೂಮೆನೊರಿನ ದ್ವೀಪರಾಜ್ಯ. 46 00:08:03,750 --> 00:08:05,000 ಬಂದರಿನ ವೇಗ! 47 00:08:57,916 --> 00:09:00,041 -ಅದು ಎಲ್ಫಾ? -ನನಗೇನು ಕಾಣಲಿಲ್ಲ... 48 00:09:01,833 --> 00:09:05,041 ನನ್ನಂಥ ಮನುಷ್ಯರು ಇಂತ ರಾಜ್ಯಗಳನ್ನ ಯಾವಾಗ್ಲಿಂದ ಕಟ್ಟುತ್ತಿದ್ದಾರೆ? 49 00:09:07,125 --> 00:09:08,958 ಆ ಜನ ನಿನ್ನ ಹಾಗಲ್ಲ. 50 00:09:11,083 --> 00:09:14,791 ಮಹಾ ಯುದ್ಧದಲ್ಲಿ ನಿನ್ನ ಪೂರ್ವಜರು ಮಾರ್ಗೋಥ್ ಜೊತೆ ನಿಂತರು. 51 00:09:15,750 --> 00:09:17,625 ಈ ಜನ ಎಲ್ಫ್ಗಳ ಜೊತೆ ನಿಂತರು. 52 00:09:18,166 --> 00:09:21,041 ವಲಾರರು ಬಹುಮಾನವಾಗಿ ಅವರಿಗೆ ಈ ದ್ವೀಪವನ್ನು ಕೊಟ್ಟರು, 53 00:09:21,125 --> 00:09:23,125 ಆದರೆ ಅದು ಆಗಿನಿಂದ ಬಹಳ ಬದಲಾಗಿದೆ. 54 00:09:23,208 --> 00:09:25,500 ಹೊಟ್ಟೆಕಿಚ್ಚಿನ ವಾಸನೆ ಬರ್ತಿದೆಯಲ್ಲ? 55 00:09:26,416 --> 00:09:27,833 ಹೊಟ್ಟೆಕಿಚ್ಚಲ್ಲ. 56 00:09:28,416 --> 00:09:29,541 ದುಃಖ. 57 00:09:30,458 --> 00:09:33,458 ಹಿಂದೆಲ್ಲಾ ಎಲ್ಫ್ಗಳು ಭಯವಿಲ್ಲದೆ ಈ ತೀರಗಳಿಗೆ ಬಂದು ಹೋಗುವವರು. 58 00:09:33,541 --> 00:09:35,291 ನಮ್ಮ ಜನ ಅವರ ಕುಟುಂಬದ ಹಾಗಿದ್ದರು. 59 00:09:36,083 --> 00:09:39,000 ಉಡುಗೊರೆಗಳು, ಜ್ಞಾನವನ್ನು ಹಂಚಿಕೊಳ್ತಿದ್ರು. 60 00:09:39,083 --> 00:09:40,708 ಮತ್ತೆ ಏನಾಯ್ತು? 61 00:09:40,791 --> 00:09:42,750 ನ್ಯೂಮೆನೊರ್ ನಮ್ಮ ಹಡಗುಗಳ ವಾಪಸ್ ಕಳಿಸಿದ. 62 00:09:42,833 --> 00:09:44,875 ಕಾಲ ಕಳೆದಂತೆ ಸಂಪರ್ಕ ಮುರಿದುಕೊಂಡರು. 63 00:09:44,958 --> 00:09:46,041 ಯಾಕೆ? 64 00:09:47,666 --> 00:09:49,375 ನಮಗೀಗ ಗೊತ್ತಾಗಬಹುದು. 65 00:09:49,458 --> 00:09:50,625 ಹೋಗ್ತಾ ಇರಿ. 66 00:09:52,625 --> 00:09:55,333 ಜೊತೆಗಾರನಿಲ್ಲದೇ ಇಲ್ಲಿ ಕಳೆದುಹೋಗೋದು ಚಂದ ಅಲ್ಲ. 67 00:09:57,500 --> 00:09:59,041 ಬೇರೆಯವುಗಳ ಜೊತೆ ಹಾಕಿ. 68 00:09:59,666 --> 00:10:00,500 ತುಂಬಾ ಬಿಸಿ. 69 00:10:32,291 --> 00:10:34,375 ತಾಳ್ಮೆ... 70 00:10:34,916 --> 00:10:36,916 ನಾವು ನ್ಯೂಮೆನೊರಿನ ಪ್ರಜೆಗಳು. 71 00:10:37,000 --> 00:10:41,500 ಸ್ವಲ್ಪ ಕಾಲ ಇತಿಹಾಸ ಬದಿಗಿಟ್ಟು ಕೊಂಚ ನಿಗ್ರಹ ತೋರೋಣ ಅಂತ ನನ್ನ ಅಭಿಪ್ರಾಯ. 72 00:10:42,291 --> 00:10:45,000 ಈ ಜನರ ವಿರೋಧ ಕಟ್ಟಿಕೊಳ್ಳದಿರಲು ಯತ್ನಿಸೋಣ. 73 00:10:45,083 --> 00:10:47,416 ನಾಯಕರೇ. ಮಹಾರಾಣಿ ರೀಜೆಂಟ್ ಕಾರ್ಯನಿರತರಾಗಿದ್ದಾರೆ. 74 00:10:47,500 --> 00:10:50,041 ಚಾನ್ಸಲರ್ ಫರಝೋನ್ ಸಹ. ನನ್ನ ಮಾತು ಕೇಳಿ ನೀವು... 75 00:11:19,416 --> 00:11:20,416 ಮಂಡಿಯೂರಿ. 76 00:11:20,791 --> 00:11:22,291 ನ್ಯೂಮೆನೊರಲ್ಲಿ ಮಂಡಿಯೂರಲ್ಲ. 77 00:11:25,166 --> 00:11:26,166 ಕ್ಷಮಿಸು. 78 00:11:28,708 --> 00:11:30,083 ಮಾತಾಡು, ಎಲ್ಫ್. 79 00:11:31,833 --> 00:11:33,000 ನಿನ್ನ ಹೆಸರು ಹೇಳು. 80 00:11:37,708 --> 00:11:39,833 ನೊಲ್ಡೊರಿನ ಗಲಾಡ್ರಿಯಲ್. 81 00:11:40,833 --> 00:11:44,375 ಗೋಲ್ಡನ್ ಹೌಸ್ ಆಫ್ ಫಿನಾರ್ಫಿನ್ನಿನ ಮಗಳು. 82 00:11:44,458 --> 00:11:48,500 ಮೇಲರಸರಾದ ಗಿಲ್-ಗಾಲಾಡ್ ಅವರ ನೊರ್ಧರ್ನ್ ಅರ್ಮಿಸಿನ ಸೇನಾಧಿಪತಿ ನಾನು. 83 00:11:53,625 --> 00:11:54,833 ಹಲ್ಬ್ರ್ಯಾಂಡ್. 84 00:11:55,666 --> 00:11:57,541 ಸೌತ್ ಲ್ಯಾಂಡ್ಸಿಂದ. 85 00:11:58,125 --> 00:12:00,416 ಮನುಷ್ಯ ಮತ್ತು ಎಲ್ಫ್, ಜೊತೆಯಲ್ಲಿ? 86 00:12:01,000 --> 00:12:02,208 ಸಂದರ್ಭಗಳು ಹಾಗಿದ್ದವು. 87 00:12:02,291 --> 00:12:05,416 ಅನಿವಾರ್ಯವಾಗಿ ಜೊತೆಯಾಗಬೇಕಾಯಿತು. ತೆರೆದ ಸಮುದ್ರದಲ್ಲಿ ಭೇಟಿಯಾದೆವು. 88 00:12:06,250 --> 00:12:09,250 ನಿಮ್ಮ ಈ ನಾಯಕ ನಮ್ಮನ್ನ ಸಾವಿನಿಂದ ರಕ್ಷಿಸಿದರು. 89 00:12:10,125 --> 00:12:14,166 ನಾವು ಕೇಳೋದೆಲ್ಲಾ ನ್ಯೂಮೆನೊರ್ ತಮ್ಮ ಕರುಣೆಯನ್ನು ಮುಂದುವರೆಸುತ್ತಾ 90 00:12:14,250 --> 00:12:16,791 ಮಿಡ್ಲ್ ಅರ್ಥಿಗೆ ನಮ್ಮ ಹಡಗು ಹೋಗಲು ಅನುವು ಮಾಡಿ ಅಂತ. 91 00:12:20,208 --> 00:12:22,416 ಒಬ್ಬ ಎಲ್ಫ್ಗಾಗಿ ನ್ಯೂಮೆನೊರಿನ ಹಡಗಿಗೆ ಈ ರೀತಿ 92 00:12:22,500 --> 00:12:25,375 ಹೋಗಲು ಅವಕಾಶ ಮಾಡಿಕೊಟ್ಟು ಯುಗಗಳೇ ಕಳೆದಿವೆ. 93 00:12:25,458 --> 00:12:28,875 ಎಲ್ಫ್ಗಳ ಕಾರಣದಿಂದಲೇ ನಿಮಗೆ ಈ ದ್ವೀಪವನ್ನು ಕೊಡಲಾಯಿತು. 94 00:12:28,958 --> 00:12:31,708 ನಿಮ್ಮ ಬಳಿ ಖಂಡಿತ ಮರದ ಹಲಗೆಗಳು, ಚುಕ್ಕಾಣಿ ಇರಬಹುದು. 95 00:12:35,125 --> 00:12:37,958 ನಮ್ಮ ಪೂರ್ವಜರಿಗೆ ಏನನ್ನೂ ಕೊಡಲಿಲ್ಲ. 96 00:12:39,666 --> 00:12:43,125 ತಮ್ಮವರ ರಕ್ತದಿಂದ ಬೆಲೆ ಕಟ್ಟಿ ಈ ದ್ವೀಪವನ್ನು ಸಂಪಾದಿಸಿದರು. 97 00:12:43,208 --> 00:12:44,458 ಎಲ್ಫ್ ಮಾತಿನ ಅರ್ಥ... 98 00:12:44,541 --> 00:12:47,625 ಹೋಗಲು ರಕ್ತದಿಂದಲೇ ಬೆಲೆ ತೆರಬೇಕಂದ್ರೆ ನಾನು ಕೊಡ್ತೀನಿ. 99 00:12:48,541 --> 00:12:50,500 ಹೇಗಾದರೂ ಸರಿ, ಹೋಗೇಹೋಗ್ತೀನಿ. 100 00:12:51,416 --> 00:12:52,916 ಧಾರಾಳವಾಗಿ ಪ್ರಯತ್ನಿಸಿ. 101 00:12:53,458 --> 00:12:55,291 ನಿಮ್ಮ ಧಾರಾಳತನ ನನಗೆ ಬೇಕಿಲ್ಲ. 102 00:12:56,083 --> 00:12:58,791 ನೀವೂ ಅದನ್ನ ಬೇಗ ಕಳೆದುಕೊಳ್ತಿದ್ದೀರ. 103 00:12:58,875 --> 00:13:00,541 -ಭಟರೇ! -ಗೆಳೆಯರೇ. 104 00:13:02,083 --> 00:13:06,208 ನಾವು ಹೊರಡುವುದರಿಂದ ಕೆಲವು ತೊಂದರೆಗಳು ಎದುರಾಗಬಹುದು ಅಂತ ನನ್ನ ಅನಿಸಿಕೆ. 105 00:13:07,000 --> 00:13:09,333 ಬಹುಶಃ ನಾವು ಇನ್ನೊಂದು ಸ್ವಲ್ಪ ಕಾಲ ಇದ್ದರೆ… 106 00:13:09,416 --> 00:13:13,125 -ಇದ್ದರೇನಾ? -ಎಷ್ಟು ಕಾಲ ಅಂದರೆ, ಉದಾರಿ ರಾಣಿಯವರೇ, 107 00:13:13,208 --> 00:13:17,500 ನಿಮಗೂ, ನಿಮ್ಮ ಸಲಹೆಗಾರರಿಗೂ ನಮ್ಮ ಮನವಿಯನ್ನು ಅವಲೋಕಿಸುವಷ್ಟು ಹೆಚ್ಚಿನ ಸಮಯ. 108 00:13:19,458 --> 00:13:21,125 ಬಹುಶಃ ಕೆಲವು ದಿನಗಳು? 109 00:13:26,000 --> 00:13:30,000 ಮೂರು ದಿನಗಳು. ಎಲ್ಫ್ ಮಾತ್ರ ಅರಮನೆ ಮೈದಾನದಲ್ಲೇ ಇರಬೇಕು. 110 00:13:30,083 --> 00:13:31,625 ನಾನು ಬಂಧಿಯಾಗಿರಲ್ಲ. 111 00:13:31,708 --> 00:13:33,416 ನನ್ನ ಕುದುರೆಯ ಕಾಲು ಮುರೀತೀನೇನೋ, 112 00:13:33,500 --> 00:13:37,333 ಆದರೆ ನೊರ್ಧರ್ನ್ ಅರ್ಮಿಸಿನ ಬಲಶಾಲಿ ಸೇನಾಧಿಪತಿಯನ್ನ ಬಂಧಿಸುವುದಿಲ್ಲ. 113 00:13:38,958 --> 00:13:41,375 ಹಾಗಾಗಿ, ನೀವು ನ್ಯೂಮೆನೊರಿನ ಅತಿಥಿ. 114 00:13:48,666 --> 00:13:49,916 ನಾಯಕರೇ... 115 00:13:52,375 --> 00:13:53,375 ನನ್ನ ವಂದನೆಗಳು. 116 00:14:02,416 --> 00:14:03,791 "ಉದಾರಿ ರಾಣಿ"? 117 00:14:04,833 --> 00:14:07,333 ಸೌತ್ ಲ್ಯಾಂಡ್ಸ್ ಇನ್ನೂ ಮೂರು ದಿನ ಇರುತ್ತೆ. 118 00:14:07,416 --> 00:14:08,583 ಆದರೆ ಜನ ಇರ್ತಾರಾ? 119 00:14:08,666 --> 00:14:10,708 ನೋಡು ನಿನ್ನ ಸುತ್ತ. ಇದೊಂದು ಸ್ವರ್ಗ. 120 00:14:10,791 --> 00:14:12,208 ಅವಕಾಶಭರಿತವಾಗಿದೆ. 121 00:14:12,833 --> 00:14:15,500 ನಿನ್ನ ಜೊತೆ ನಾನು ಕುಲುಮೆಗೆ ಹಾರಬೇಕೇನು? 122 00:14:15,583 --> 00:14:17,833 ಒಂದು ಜೀವ ಉಳಿಸೋಕೆ ಸಮುದ್ರಕ್ಕೆ ಹಾರಿದೆ ನೀನು. 123 00:14:17,916 --> 00:14:19,208 ನನಗೆಷ್ಟೋ ಜೀವಗಳ ಉಳಿಸಬೇಕು. 124 00:14:19,291 --> 00:14:22,375 ನಿನಗೆ ಗೊತ್ತಿರದಷ್ಟು ಕಾಲದಿಂದ ನಾನು ಶಾಂತಿಯನ್ನ ಅರಸುತ್ತಿದ್ದೇನೆ. 125 00:14:23,166 --> 00:14:26,583 ದಯವಿಟ್ಟು, ನಮ್ಮಿಬ್ಬರ ಸಲುವಾಗಿ, ಅದು ನನ್ನಲ್ಲುಳಿಯಲಿ. 126 00:14:31,583 --> 00:14:33,833 ಸ್ವಲ್ಪ ಶಾಂತಿಯಿದ್ದರೆ ನಿನಗೂ ಒಳ್ಳೆಯದೇನೋ. 127 00:14:45,333 --> 00:14:46,833 ಕನಿಷ್ಠ ಪಕ್ಷ... 128 00:14:48,458 --> 00:14:50,666 ಹೊಸ ಶತ್ರುಗಳನ್ನಾದರೂ ಮಾಡಿಕೊಳ್ಳದೆ ಇರು. 129 00:15:01,041 --> 00:15:03,416 ಈ ವಿಷಯ ಆದಷ್ಟೂ ಬೇಗ ಇತ್ಯರ್ಥವಾದರೆ ಒಳ್ಳೆಯದು. 130 00:15:03,500 --> 00:15:04,666 ಅವಳು ಅಂತಿಂಥ ಎಲ್ಫ್ ಅಲ್ಲ. 131 00:15:04,750 --> 00:15:07,000 ಬೆಟ್ಟ ಕುಸಿಯೋಕೆ ಒಂದು ಕಲ್ಲು ಸಾಕು. 132 00:15:07,750 --> 00:15:10,833 ನಿಮ್ಮ ತಂದೆಯ ಯುದ್ಧದ ಕಾರ್ಮೋಡ ಕವಿಯೋಕೆ ಬಿಡೋದು ಬೇಡ. 133 00:15:12,958 --> 00:15:14,541 ಈ ನಾಯಕನ ಬಗ್ಗೆ ಹೇಳು. 134 00:15:14,625 --> 00:15:16,583 ಅವನ ಹೆಸರು ಎಲೆಂಡಿಲ್. 135 00:15:17,125 --> 00:15:21,166 ಅವನು ರಾಜವಂಶಸ್ಥನಾಗಿದ್ದು, ಈಗ ತನ್ನ ಮಗನ ಜೊತೆ ನೌಕಾ ಯೋಧನಾಗಿದ್ದಾನೆ, 136 00:15:21,250 --> 00:15:24,625 ನನಗೆ ನೆನಪಿದ್ದಂತೆ ಅವನೂ ತಂದೆಯ ಹಾದಿಯನ್ನೇ ಹಿಡಿದಿರಬಹುದು. 137 00:15:26,083 --> 00:15:27,208 ಎಳೆಯಿರಿ! 138 00:15:28,166 --> 00:15:30,625 ಒಟ್ಟಾಗಿ ಈಗ! 139 00:15:40,500 --> 00:15:41,875 ಎಳೆಯಿರಿ! 140 00:15:43,583 --> 00:15:47,416 ನನ್ನ ಕೆಳಗೆ ಕೆಲಸ ಮಾಡಬೇಕಾದರೆ ಅದಕ್ಕಿಂತ ಬೇಗ ಆ ಹಾಯಿಯನ್ನ ಎಸೆಯಬೇಕು! 141 00:15:48,791 --> 00:15:51,458 ಬನ್ನಿರಿ, ಸೈನಿಕರಾ! 142 00:15:52,208 --> 00:15:54,166 ಒಟ್ಟಾಗಿ ಈಗ! 143 00:16:02,875 --> 00:16:05,000 ಇಸಿಲ್ದೂರ್... 144 00:16:05,083 --> 00:16:06,250 ಇಸಿಲ್ದೂರ್! 145 00:16:07,000 --> 00:16:08,083 ಇಸಿಲ್ದೂರ್! 146 00:16:08,750 --> 00:16:13,416 ಸೀ ಗಾರ್ಡಲ್ಲಿ ಸ್ಥಾನ ಪಡೆಯುವ ಯಾವುದೇ ಯೋಧ 147 00:16:13,500 --> 00:16:17,000 ನ್ಯೂಮೆನೊರಿನ ರಕ್ಷಕನಷ್ಟೇ ಆಗಿರಲ್ಲ. 148 00:16:17,083 --> 00:16:18,166 ಅದಲ್ಲ! 149 00:16:21,625 --> 00:16:22,750 ಇಮ್ರಾಹಿಲ್! 150 00:16:22,833 --> 00:16:26,208 ಬಂದರ ಕಡೆಗೆ! ಬಂದರ ಕಡೆಗೆ ಹಾಕಿರಿ! 151 00:16:27,125 --> 00:16:29,208 ವಲಂಡೀಲ್! ಒಂಟಮೋ! 152 00:16:32,125 --> 00:16:32,958 ನೆರವಾಗಿ! ಎಳೀರಿ! 153 00:16:36,875 --> 00:16:39,875 ಸಮನ್ವಯ, ಯೋಧರೇ! ಮತ್ತೆ ಅಲ್ಲಿಗೆ! 154 00:16:50,166 --> 00:16:53,708 ಸಮುದ್ರಕ್ಕಿಂತ ಕಠಿಣವಾದ ಯಜಮಾನ ಯಾರೂ ಇಲ್ಲ. 155 00:17:33,083 --> 00:17:35,500 ಯಾವಾಗಲೂ ಸಮುದ್ರವೇ ಸರಿ! 156 00:17:36,125 --> 00:17:38,125 ಯಾವಾಗಲೂ ಸಮುದ್ರವೇ ಸರಿ! 157 00:17:42,333 --> 00:17:43,666 ಪಾಪ ಇಮ್ರಾಹಿಲ್. 158 00:17:44,416 --> 00:17:47,416 ಅವನ ತಂದೆ ಮನೆಯಿಂದ ಒದ್ದು ಓಡಿಸ್ತಾರೆ ಅಷ್ಟೇ. 159 00:17:48,125 --> 00:17:49,958 ಇಸಿಲ್ ಅವನ ಜೊತೆ ಹೋಗದೇ ಇರೋದು ಅದೃಷ್ಟ. 160 00:17:51,000 --> 00:17:51,833 ನಾನಾ? 161 00:17:51,916 --> 00:17:55,166 ನಿನ್ನ ಮನಸ್ಸೆಲ್ಲಾ ಆ ದರಿದ್ರ ಮೋಡಗಳಲ್ಲೇ ಇತ್ತು ಇವತ್ತು. ಏನದು? 162 00:17:55,250 --> 00:17:57,458 ಅಲ್ಲಿ ಹೋಗೋಕೆ ಆಸೆ ಅಷ್ಟೇ. ಇನ್ನೇನಿಲ್ಲ. 163 00:17:58,833 --> 00:18:00,833 ಇನ್ನು ಒಂಭತ್ತು ದಿನಗಳು. ಒಂಭತ್ತೇ ದಿನಗಳು! 164 00:18:00,916 --> 00:18:03,916 ಸಮುದ್ರ ಪರೀಕ್ಷೆ ಉತ್ತೀರ್ಣವಾದ ನಾಲ್ಕು ವರ್ಷಕ್ಕೆ ಅಧಿಕಾರಿಗಳಾಗಬಹುದು. 165 00:18:04,000 --> 00:18:05,916 ಹತ್ತು ವರ್ಷಗಳಲ್ಲಿ ಅಧಿಪತಿಗಳಾಗಬಹುದು. 166 00:18:06,000 --> 00:18:07,958 -ನನಗೇನೋ ಎಂಟು. -ಬಹುಶಃ ಹದಿನೆಂಟು. 167 00:18:08,041 --> 00:18:10,166 ಇಸಿಲ್ದೂರ್! ನಿನ್ನ ಸಹೋದರಿ ಬಂದಿದ್ದಾಳೆ. 168 00:18:15,708 --> 00:18:16,875 ಇಲ್ಲಿದ್ದೀಯಾ. 169 00:18:17,833 --> 00:18:19,500 ಬೆರೆಕ್, ನನ್ನ ಪುಟ್ಟ. 170 00:18:19,583 --> 00:18:21,750 ಚಿತ್ರಪುಸ್ತಕ ಬಿಟ್ಟು ಬಂದಿರುವುದಾರು ನೋಡಿ. 171 00:18:21,833 --> 00:18:24,500 ನನ್ನನ್ನ ನೋಡೋಕೆ ಅಂತ ಇಷ್ಟು ದೂರ ಬರಬೇಕಿರಲಿಲ್ಲ ನೀನು. 172 00:18:24,583 --> 00:18:26,958 -ಇಸಿಲ್, ಕ್ಯಾಂಟೀನಾ? -ಇಲ್ಲ, ನೀನು ಹೋಗು. 173 00:18:27,041 --> 00:18:29,541 ಆಮೇಲೆ ಬಂದು ಸಿಗು. ನಿಮ್ಮಣ್ಣನ ಹಾಗೆ ಇರಬೇಡ. 174 00:18:29,625 --> 00:18:31,583 ಮುದುಕಿಯಾಗಿರೋಕೆ ಇಡೀ ಜೀವನವೇ ಇದೆ. 175 00:18:31,666 --> 00:18:32,666 ಯುವತಿಯಾಗಿರೋಕೂ ಸಹ. 176 00:18:33,833 --> 00:18:36,916 ನೀನಿಲ್ಲೇನು ಮಾಡ್ತಿದ್ದೀಯಾ? ಅಪ್ಪ ಎಲ್ಲಿ? 177 00:18:43,541 --> 00:18:47,625 ನಂಬಿಕಸ್ಥರ ಪ್ರಕಾರ ವೈಟ್ ಟ್ರೀಯ ದಳಗಳು ಉದುರುತ್ತಿವೆ ಅಂದರೆ 178 00:18:47,708 --> 00:18:49,375 ಅದು ಸಾಮಾನ್ಯ ವಿಷಯವಲ್ಲ... 179 00:18:51,083 --> 00:18:54,000 ಸ್ವತಃ ವಲಾರರ ಕಣ್ಣೀರೇ, 180 00:18:55,666 --> 00:18:59,333 ಅವರ ಕಣ್ಣುಗಳು ಮತ್ತು ತೀರ್ಪು ನಮ್ಮ ಮೇಲೆ 181 00:19:00,833 --> 00:19:04,708 ಸದಾ ಕಾಲ ಇದೆ ಅನ್ನುವುದರ ಜೀವಂತ ಸಾಕ್ಷಿ. 182 00:19:10,500 --> 00:19:12,416 ನೀನದನ್ನ ನಂಬುತ್ತೀಯಾ? 183 00:19:12,500 --> 00:19:15,041 ನನ್ನ ಅನುಭವದಲ್ಲಿ, ಸಂಜ್ಞೆಗಳು ಮತ್ತು ಶಕುನಗಳನ್ನ 184 00:19:15,125 --> 00:19:17,916 ಊಹಿಸಿಕೊಂಡು ಬದುಕುವುದು ಬುದ್ಧಿವಂತಿಕೆ ಅಲ್ಲ. 185 00:19:21,750 --> 00:19:25,166 "ಎಲೆಂಡಿಲ್." ವಿಲಕ್ಷಣವಾದ ಹೆಸರು. 186 00:19:26,875 --> 00:19:28,916 ನಮ್ಮ ಪಶ್ಚಿಮದ ತೀರಗಳಿಂದ, ಅಲ್ವಾ? 187 00:19:30,208 --> 00:19:31,416 ಅದರ ಮೂಲ ಅಲ್ಲಿನದೇ. 188 00:19:31,500 --> 00:19:33,208 ದಯವಿಟ್ಟು ಅದರ ಅರ್ಥ ಹೇಳ್ತೀಯಾ? 189 00:19:34,541 --> 00:19:36,125 ನಕ್ಷತ್ರಗಳ ಪ್ರೇಮಿ ಅಂತ. 190 00:19:37,208 --> 00:19:39,625 ಇದು ಮಾತ್ರ ಅದರ ಭಾಷಾಂತರ ಅಲ್ಲ ತಾನೇ? 191 00:19:43,041 --> 00:19:45,250 ಎಲ್ದಾರಿನ ಪುರಾತನ ಭಾಷೆಯಲ್ಲಿ 192 00:19:45,958 --> 00:19:47,791 ಅದರ ಅರ್ಥ "ಎಲ್ಫ್-ಮಿತ್ರ" ಅಂತ. 193 00:19:47,875 --> 00:19:51,125 ಮತ್ತೆ ನೀನು? ಎಲ್ಫ್-ಮಿತ್ರನಾ? 194 00:19:54,666 --> 00:19:57,083 ನಾನು ನ್ಯೂಮೆನೊರಿನ ನಿಯತ್ತಿನ ಸೇವಕ. 195 00:19:57,166 --> 00:20:00,875 ಆದರೂ, ನಮ್ಮ ತಾತನ ಮುತ್ತಾತನ ಆಳ್ವಿಕೆಯ ಕಾಲದಿಂದಲೂ 196 00:20:00,958 --> 00:20:03,916 ನಮ್ಮ ತೀರಗಳಲ್ಲಿ ಎಲ್ಫ್ಗಳಿಗೆ ಸ್ವಾಗತ ಇಲ್ಲ, 197 00:20:04,000 --> 00:20:07,333 ನೀನು ಆ ಸಂಪ್ರದಾಯವನ್ನು ಮುರಿಯಲು ನಿರ್ಧರಿಸಿದೆ. ಯಾಕೆ? 198 00:20:08,166 --> 00:20:10,500 ಸಮುದ್ರವೇ ಅವಳನ್ನು ನನ್ನ ದಾರಿಗೆ ತಂದಿರಿಸಿತು. 199 00:20:12,333 --> 00:20:14,000 ಹಾಗೂ ಸಮುದ್ರ ಯಾವಾಗಲೂ ಸರಿಯೇ. 200 00:20:15,041 --> 00:20:16,916 ಸಮುದ್ರಕ್ಕೆ ದ್ರೋಹ ಬಗೆಯೋದು ಗೊತ್ತಿಲ್ಲ. 201 00:20:22,833 --> 00:20:24,208 ಗೌರವದಿಂದ, ಮಹಾರಾಣಿ ರೀಜೆಂಟ್, 202 00:20:24,875 --> 00:20:28,541 ಸಂದರ್ಭಕ್ಕನುಸಾರವಾಗಿ ನನಗೆ ನ್ಯಾಯಸಮ್ಮತ ಅನಿಸಿದ್ದನ್ನೇ ಮಾಡಿದೆ. 203 00:20:29,000 --> 00:20:33,291 ಒಂದು ವೇಳೆ, ಎಲೆಂಡಿಲ್, ಅದೇ ನಿನ್ನಾಸೆಯಾದರೆ, 204 00:20:35,541 --> 00:20:39,250 ನಿನ್ನಿಂದ ಒಂದು ಸೇವೆಯಾಗಬೇಕಿದೆ. 205 00:20:58,250 --> 00:21:01,166 ನ್ಯೂಮೆನೊರ್ 206 00:21:02,916 --> 00:21:04,458 ದಿ ಸಂಡರಿಂಗ್ ಸೀಸ್ 207 00:21:08,250 --> 00:21:10,625 ದಿ ಸೌತ್ ಲ್ಯಾಂಡ್ಸ್ 208 00:21:42,166 --> 00:21:44,750 ಈ ಮಾರ್ಗಗಳೆಲ್ಲಾ ಹೋರ್ಡರ್ನಿಗೇ ಹೋಗಿ ತಲುಪುತ್ತವೆ. 209 00:21:46,333 --> 00:21:47,500 ಅದನ್ನೂ ಮೀರಿ ಇರಬಹುದು. 210 00:21:48,583 --> 00:21:51,083 ನಮಗೆ ಕಾಣದೆ ಅವರು ಹೀಗೇ ತಪ್ಪಿಸಿಕೊಂಡು ಹೋಗಿರಬೇಕು. 211 00:21:51,166 --> 00:21:53,583 ಸೂರ್ಯನ ಬೆಳಕಿನಿಂದ ತಪ್ಪಿಸಿಕೊಂಡು ಹೋಗಿದ್ದಾರೆ. 212 00:21:57,500 --> 00:21:59,416 ಅವರು ಏನನ್ನೋ ಹುಡುಕುತ್ತಿದ್ದಾರೆ. 213 00:22:00,791 --> 00:22:02,625 ಬಹುಶಃ ಯಾವುದಾದರೂ ಆಯುಧ ಇರಬಹುದಾ? 214 00:22:02,708 --> 00:22:04,000 ಗೊತ್ತಿಲ್ಲ. 215 00:22:04,708 --> 00:22:07,041 ಆದರೆ ಅವರು ಹಳ್ಳಿ ಮೇಲೆ ಹಳ್ಳಿ ನಾಶ ಮಾಡುತ್ತಾ 216 00:22:07,750 --> 00:22:10,375 ರಾತ್ರಿಯೆಲ್ಲಾ ನಾಯಕನಿಗಾಗಿ ಅದನ್ನು ಅರಸುತ್ತಾರೆ. 217 00:22:10,750 --> 00:22:13,500 ಒಬ್ಬ ಓರ್ಕ್ ಬಹಳ ವಿಧೇಯತೆಯಿಂದ ಹೇಳ್ತಾನೆ, 218 00:22:13,583 --> 00:22:17,041 ಅಭಿಮಾನದಿಂದ ಕೂಡ, ಅವರಿಗದು ಸಾಧ್ಯ ಆದರೆ. 219 00:22:17,541 --> 00:22:20,041 ಮಾರ್ಗೋಥಿಗೆ ಒಬ್ಬ ವಾರಸುದಾರನಿರಬಹುದು. 220 00:22:20,875 --> 00:22:21,875 "ಅಡಾರ್." 221 00:22:24,333 --> 00:22:27,541 ಓರ್ಕ್ಗಳು ಅವರ ನಾಯಕನನ್ನ ಎಲ್ಫ್ ಪದದಿಂದ ಯಾಕೆ ಸಂಬೋಧಿಸುತ್ತಾರೆ? 222 00:22:27,625 --> 00:22:30,583 ಸೌರೊನಿಗೆ ಹಿಂದಿನ ದಿನಗಳಲ್ಲಿ ಬಹಳಷ್ಟು ಹೆಸರುಗಳಿದ್ದವಂತೆ. 223 00:22:30,666 --> 00:22:32,333 ಇದು ಅವುಗಳಲ್ಲೊಂದಿರಬಹುದು. 224 00:22:32,416 --> 00:22:35,041 ಇಲ್ಲಿ ನಮಗೆ ಕಾಣುತ್ತಿರುವುದಕ್ಕಿಂತ ಹೆಚ್ಚಾಗೇ ನಡೆಯುತ್ತಿದೆ. 225 00:22:36,083 --> 00:22:38,166 ನಿಮ್ಮಿಬ್ಬರಲ್ಲಿ ಮೊದಲು ಯಾರಿಗೇ ಈ ಕಂದಕದ ಆಚೆ 226 00:22:38,250 --> 00:22:40,750 ನೋಡುವ ಅವಕಾಶ ಸಿಕ್ಕರೂ, ಕೈಚೆಲ್ಲಬಾರದು. 227 00:22:40,833 --> 00:22:42,458 ಹತ್ತಿರದ ಕಾಡನ್ನು ಪತ್ತೆಹಚ್ಚಿ, 228 00:22:42,541 --> 00:22:45,458 ಸೂರ್ಯ ನೆತ್ತಿಯ ಮೇಲೇರಿದ್ದೇ, ನಾವು ತಪ್ಪಿಸಿಕೊಳ್ಳೋಣ. 229 00:22:45,541 --> 00:22:47,625 ನಮ್ಮಲ್ಲಿ ಒಬ್ಬರಾದರೂ ಊರಿಗೆ ತಲುಪಿದರೆ, 230 00:22:47,708 --> 00:22:49,458 ಸೂಕ್ತ ಬಂದೋಬಸ್ತಿನೊಂದಿಗೆ ವಾಪಾಸಾಗಿ 231 00:22:49,541 --> 00:22:53,041 ಮೇಜಿನ ಮೇಲಿಂದ ಉಪ್ಪು ಒರೆಸುವ ಹಾಗೆ ಶತ್ರುವನ್ನು ಅಳಿಸಿಹಾಕಬಹುದು. 232 00:22:54,041 --> 00:22:57,791 ಬಾಯಿ ಮುಚ್ಚಿಕೊಂಡು ಅಗೆಯೋ, ಎಲ್ಫ್. 233 00:22:58,375 --> 00:23:01,000 -ಈ ಬೇರುಗಳು ನಮ್ಮ ದಾರಿಗೆ ಅಡ್ಡ ಇವೆ. -ಕಿತ್ತುಹಾಕು. 234 00:23:01,750 --> 00:23:05,833 ಆ ಹೊಲಸು ಮರವನ್ನೇ ಕಿತ್ತು ಬಿಸಾಕು! 235 00:23:05,916 --> 00:23:09,666 ಮರ ಬೀಳಿಸಿದರೆ ನಮ್ಮ ಕೆಲಸ ನಿಧಾನವಾಗುತ್ತೆ. ಅದರ ಸುತ್ತ ಹೋಗೋಣ. 236 00:23:09,750 --> 00:23:13,333 ಪ್ರಯತ್ನಿಸಿ ನೋಡು. ನಿನ್ನ ಬೆನ್ನ ಮೇಲೆ ಬಾಸುಂಡೆ ಬೀಳಿಸ್ತೀನಿ. 237 00:23:17,166 --> 00:23:20,833 ನೀವು ಹುಟ್ಟಿ ಬೆಳೆದ ಆ ಹೀನ ಸ್ಥಳದಿಂದ ಆಚೆ ಬರೋಕೂ 238 00:23:20,916 --> 00:23:22,916 ಮುಂಚಿನಿಂದ ಈ ಮರ ಭೂಮಿಯ ಮೇಲಿದೆ. 239 00:23:23,000 --> 00:23:25,291 ಈ ನೆಲದಲ್ಲಿ ತನಗೊಂದು ಜಾಗವನ್ನು ಗಳಿಸಿಕೊಂಡಿದೆ. 240 00:23:31,750 --> 00:23:32,916 ಒಳ್ಳೇದೋ, ಎಲ್ಫ್. 241 00:23:33,750 --> 00:23:34,958 ತುಂಬಾ ಒಳ್ಳೇದು. 242 00:23:39,583 --> 00:23:41,458 ತಾಕತ್ತು ತೋರಿಸಿದ್ದೀಯ. 243 00:23:42,375 --> 00:23:46,750 ನಿಮ್ಮವರಿಗಾಗಿ ನೀರನ್ನು ಗಳಿಸಿದ್ದೀಯ. 244 00:23:49,916 --> 00:23:51,083 ಭಯ ಪಡಬೇಡಿ. 245 00:23:52,291 --> 00:23:53,666 ತುಂಬಾ ಬಾಯಾರಿರಬೇಕು. 246 00:24:26,250 --> 00:24:27,458 ಹಂಗೇ... 247 00:25:29,250 --> 00:25:30,916 ಮರ. 248 00:25:31,041 --> 00:25:33,875 ಸಾಕು! ದುಷ್ಟ ರಾಕ್ಷಸ! 249 00:25:35,250 --> 00:25:36,541 ನಾನು ಕತ್ತರಿಸ್ತೀನಿ. 250 00:25:38,041 --> 00:25:39,375 ನಾನು ಕತ್ತರಿಸಿಹಾಕ್ತೀನಿ! 251 00:26:14,625 --> 00:26:16,750 ನನ್ನನ್ನು ಕ್ಷಮಿಸು... 252 00:26:33,375 --> 00:26:35,625 ಫರಝೋನಿಗೆ ಅವಳು ತಪ್ಪಿಸಿಕೊಂಡಳು ಅಂತ ಹೇಳು. 253 00:26:35,708 --> 00:26:36,958 ಕಳೆದ ಬಾರಿ ನಾನೇ ಹೇಳಿದ್ದು. 254 00:26:37,041 --> 00:26:38,291 ಅದು ನಾಯಿ ತಪ್ಪಿಸಿಕೊಂಡಾಗ. 255 00:27:00,708 --> 00:27:02,791 ಸಣ್ಣ ದೋಣಿಯನ್ನ ಕದ್ದರೆ ಒಳ್ಳೆಯದೇನೋ. 256 00:27:04,375 --> 00:27:06,875 ಈ ತೆಪ್ಪದಲ್ಲಿ ಬಂದರಿನಿಂದ ಆಚೆ ಹೋಗೋದೂ ಕಷ್ಟ. 257 00:27:06,958 --> 00:27:10,541 ನಾನು ಮುಂಚೆ ಪ್ರಯಾಣಿಸಿದಕ್ಕಿಂತ ಅನುಕೂಲಕರವಾಗೇ ಇರುತ್ತೆ ಬಿಡು. 258 00:27:10,625 --> 00:27:12,500 ಆದರೂ. ಅದನ್ನ ತಗೊಳ್ಳೋಕೆ ಬಿಡಲ್ಲ. 259 00:27:13,166 --> 00:27:14,625 ಮಹಾರಾಣಿಯ ಆಜ್ಞೆಯಂತೆ ನೀನು 260 00:27:14,708 --> 00:27:18,208 ಇನ್ನೂ ಹೆಚ್ಚಿನ ತೊಂದರೆ ಉಂಟುಮಾಡಬಾರದು ಅಂತ ನನಗೆ ಹೇಳಿದ್ದಾರೆ. 261 00:27:18,291 --> 00:27:20,166 ಅದನ್ನವರು ಶಿಕ್ಷೆ ಅಂತ ನೋಡಬಹುದು. 262 00:27:20,250 --> 00:27:23,083 ಹಾಗಿದ್ರೆ ಆಕೆಗೂ ನನಗೂ ಬಹಳ ಹೋಲಿಕೆಗಳಿವೆ. 263 00:27:23,166 --> 00:27:25,333 ನೀವು ನನ್ನನ್ನಿಲ್ಲಿ ಕರ್ಕೊಂಡು ಬರಬಾರದಿತ್ತು. 264 00:27:26,833 --> 00:27:29,000 ಆ ತೆಪ್ಪದಲ್ಲೇ ಹೋಗಿ ನೋಡ್ತೀನಿ. 265 00:27:29,541 --> 00:27:33,333 ಹಂಗಾದ್ರೆ ನಿನ್ನ ನೋಡಿಕೊಳ್ಳುವವರಿಗೆ ಹೇಳದೇ ನನಗೆ ಬೇರೆ ಆಯ್ಕೆಯಿಲ್ಲ. 266 00:27:34,125 --> 00:27:37,083 ಒಂದು ವೇಳೆ ಆ ಮಾತುಗಳು ನಿನ್ನ ಕಂಠದಿಂದ ಹೊರಬರದಿದ್ದರೆ? 267 00:27:38,791 --> 00:27:40,875 ಒಂದು ವೇಳೆ ಬಂದಿದ್ದರೆ, 268 00:27:40,958 --> 00:27:44,916 ನೀನು ಸರಪಳಿಯಲ್ಲಿ ಬಂಧಿಯಾಗಿ, ನಿನ್ನ ಗಮ್ಯದಿಂದ ಇನ್ನೂ ದೂರವಾಗಿರುತ್ತಿದ್ದೆ. 269 00:27:45,000 --> 00:27:50,666 ನಾನು ಯಾರಂತ ಕಿಂಚಿತ್ತೂ ಗೊತ್ತಿಲ್ಲದೇ ನನ್ನ ಹತ್ತಿರ ಮಾತಾಡೋ ಈ ಮನುಷ್ಯ ಯಾರು? 270 00:27:52,416 --> 00:27:57,125 ನನ್ನ ಮಗಳು ವೇಗವಾಗಿ ಓಡ್ತಾಳೆ, ನನ್ನ ಮಗ ಕುರುಡಾಗಿ ಓಡ್ತಾನೆ. 271 00:27:58,958 --> 00:28:01,625 ನಿನ್ನ ಕಣ್ಣುಗಳು ಅವರಿಬ್ಬರನ್ನೂ ಹೋಲುವಂತಿವೆ. 272 00:28:01,708 --> 00:28:05,083 ನಾನೆಲ್ಲಿ ಓಡ್ತೀನಿ, ಹೇಗೆ ಓಡ್ತೀನಿ ಅನ್ನೋದು ನಿನಗೆ ಸಂಬಂಧಿಸಿದ್ದಲ್ಲ. 273 00:28:05,166 --> 00:28:08,916 ಇಲ್ಲಿಗಿಂತ ಎಲ್ಲಾದರೂ ಒಳ್ಳೆಯದೇ, ಇಲ್ಲಿ ನನ್ನನ್ನ ನೋಡೋರೆಲ್ಲಾ ದ್ವೇಷಿಸ್ತಾರೆ. 274 00:28:10,083 --> 00:28:13,375 ಅದಕ್ಕೆ ಒಂದೋ ನಿನ್ನ ಭಟರನ್ನು ಕೂಗು, ಇಲ್ಲ ನನ್ನ ದಾರಿಯಿಂದ ಸರಿ. 275 00:28:14,416 --> 00:28:18,541 ನಿಮ್ಮನ್ನ ಎಲ್ಲರೂ ದ್ವೇಷಿಸುವುದಿಲ್ಲ, ಕಣಮ್ಮ. 276 00:28:20,291 --> 00:28:22,875 ನಿನಗೆ ಎಲ್ವಿಶ್ ಬರುತ್ತಾ? 277 00:28:22,958 --> 00:28:25,041 ನಾನು ಬೆಳೆದ ಕಡೆ ತುಂಬಾ ಜನ ಮಾತಾಡ್ತಾರೆ. 278 00:28:26,041 --> 00:28:28,375 ನಮ್ಮ ಹಾಲ್ ಆಫ್ ಲೋರಲ್ಲಿ ಈಗಲೂ ಹೇಳಿಕೊಡ್ತಾರೆ. 279 00:28:28,458 --> 00:28:31,958 ಗಮನಿಸಿದರೆ, ನಗರದಲ್ಲೆಲ್ಲಾ ಶಿಲ್ಪಗಳ ಮೇಲೆ ಕೆತ್ತಿರುತ್ತಾರೆ. 280 00:28:32,041 --> 00:28:34,333 ನಿಮ್ಮ ಹಾಲ್ ಆಫ್ ಲೋರ್ ಎಷ್ಟು ದೂರ ಇದೆ? 281 00:28:34,416 --> 00:28:35,958 ಕಾಲು ದಿನದ ಪ್ರಯಾಣ. 282 00:28:37,083 --> 00:28:38,333 ನಿನಗೇನು ಬೇಕು? 283 00:28:40,041 --> 00:28:41,291 "ಪ್ರಯಾಣ" ಅಂದೆಯಾ? 284 00:29:50,791 --> 00:29:54,875 ಈ ವಿದ್ಯೆಯನ್ನ ನನಗಿಂತ ಚೆನ್ನಾಗಿ ತಿಳಿದಿರೋ ವ್ಯಕ್ತಿ ಈ ದ್ವೀಪದಲ್ಲೇ ಇಲ್ಲ. 285 00:29:54,958 --> 00:29:58,666 ಇದ್ದಲನ್ನ ಎತ್ತಿಹಾಕ್ತೀನಿ ಬೇಕಾದ್ರೆ, ಮರವನ್ನ ಕಡಿಯುತ್ತೇನೆ, 286 00:29:58,750 --> 00:30:01,250 ಶುಲ್ಕವಿಲ್ಲದೆ ಸಮುದ್ರದ ಲಂಗರನ್ನು ತಯಾರಿಸ್ತೀನಿ, 287 00:30:01,333 --> 00:30:04,083 ಅಷ್ಟು ಗಟ್ಟಿಯಾದದ್ದನ್ನ ನೀನು ನೋಡೇ ಇರಲ್ಲ. ಏನಂತಿ? 288 00:30:06,833 --> 00:30:08,500 ಹೊಸದಾಗಿ ಶುರು ಮಾಡಬೇಕಂತಿದ್ದೀನಿ. 289 00:30:10,291 --> 00:30:12,458 ಅವಕಾಶ ಮಾಡಿಕೊಡಿ. ದಯವಿಟ್ಟು. 290 00:30:14,041 --> 00:30:15,458 ನಾನು ಯಾವತ್ತೂ ಮರೆಯಲ್ಲ. 291 00:30:16,208 --> 00:30:17,833 ಗಟ್ಟಿ ಗುಂಡಿಗೆ ಕಣಪ್ಪ ನಿಂದು. 292 00:30:19,166 --> 00:30:23,541 ಆದರೆ ಸಂಘದ ಶಿಖೆಯನ್ನು ಸಂಪಾದಿಸುವವರೆಗೂ ನೀನು ನ್ಯೂಮೆನೊರಿನಲ್ಲಿ ಕುಲುಮೆ ಮಾಡೋಕಾಗಲ್ಲ. 293 00:30:29,875 --> 00:30:31,125 ಅದು ಅವನೇ ಅಲ್ವಾ? 294 00:30:32,166 --> 00:30:34,416 ಎಲ್ಫ್ ಜೊತೆ ಹಡಗಿನಲ್ಲಿ ಬಂದವನಲ್ವಾ? 295 00:30:35,791 --> 00:30:37,041 ಅದು ನೀನೇ ತಾನೇ? 296 00:30:37,666 --> 00:30:39,625 ನೋಡಿದ್ರೆ ಹಾಗೇ ಕಾಣ್ತೀನಿ. 297 00:30:40,166 --> 00:30:42,375 -ನಿನ್ನ ಹೆಸರೇನಂದೆ ಮತ್ತೆ? -ಅದು ಆಧರಿಸಿದೆ. 298 00:30:43,916 --> 00:30:45,166 ಯಾವುದರ ಮೇಲೆ ಆಧರಿಸಿದೆ? 299 00:30:46,541 --> 00:30:47,958 ನಮ್ಮ ಸಾಂಗತ್ಯದ ಮೇಲೆ. 300 00:30:56,083 --> 00:30:58,666 ಮತ್ತು ನಿನ್ನ ಮತ್ತು ಆ ಹೆಣ್ಣು-ಎಲ್ಫಿನ ಸಾಂಗತ್ಯದ ಮೇಲೆ? 301 00:31:02,291 --> 00:31:04,291 ನಿನಗೆ ಅದೃಷ್ಟದ ಮೇಲೆ ಅದೃಷ್ಟವೋ, ನಿರ್ಗತಿಕ. 302 00:31:04,958 --> 00:31:07,750 ನಮ್ಮ ದ್ವೀಪಕ್ಕೆ ಉಚಿತ ಪ್ರಯಾಣ, ನಮ್ಮ ಆಹಾರ ತಿಂದುಕೊಂಡು, 303 00:31:07,833 --> 00:31:09,375 ನಮ್ಮ ಪಾನೀಯ ಕುಡ್ಕೊಂಡು... 304 00:31:10,291 --> 00:31:11,958 ಮುಂದೆ ಏನನ್ನ ತಗೊಳ್ತೀಯ? 305 00:31:12,583 --> 00:31:14,958 ನಮ್ಮ ನೆಲವನ್ನಾ? ನಮ್ಮ ವ್ಯಾಪಾರಗಳನ್ನಾ? 306 00:31:15,041 --> 00:31:16,666 ನಿಮ್ಮ ಹೆಂಗಸರನ್ನ ಮರೆತಿರಿ. 307 00:31:19,666 --> 00:31:21,375 ಎಷ್ಟು ಮಾತಾಡ್ತಾನೆ ನೋಡ್ರಿ. 308 00:31:24,416 --> 00:31:27,833 ಇವನು ಮತ್ತು ಆ ಹೆಣ್ಣು-ಎಲ್ಫ್ ಅಷ್ಟೆಲ್ಲಾ ಹತ್ತಿರ ಇಲ್ವೇನೋ ಪಾಪ. 309 00:31:29,250 --> 00:31:33,666 ಇವನಿಗಿಂತ ಚೆನ್ನಾಗಿರೋನನ್ನೇ ಆರಿಸಿಕೊಳ್ತಾಳೆ ಅವಳು ಬೇಕಾದ್ರೆ. 310 00:31:37,375 --> 00:31:39,958 ಖಂಡಿತ... 311 00:31:41,333 --> 00:31:42,791 ನಾನು ಬಂದಿದೀನಿ. 312 00:31:42,875 --> 00:31:44,541 ನಿಮ್ಮ ದ್ವೀಪದಲ್ಲೊಬ್ಬ ಅತಿಥಿಯಾಗಿ 313 00:31:44,625 --> 00:31:47,750 ನಿಮಗೆ ಸ್ವಲ್ಪವೂ ಕೃತಜ್ಞತೆ ತೋರಿಸಿಲ್ಲ. 314 00:31:48,708 --> 00:31:50,250 ಇದು ಹೇಗೆ? 315 00:31:51,500 --> 00:31:53,291 ಮುಂದಿನ ಕೆಲವು ಸುತ್ತುಗಳು ನನ್ನಿಂದ! 316 00:32:01,041 --> 00:32:03,041 ನೀನು ಅಷ್ಟೇನೂ ಕೆಟ್ಟವನಲ್ಲವೋ, ನಿರ್ಗತಿಕ. 317 00:32:04,541 --> 00:32:06,625 ಸರಿ ಮತ್ತೆ, ನಿಮಗಿನ್ನೂ ನನ್ನ ಮೇಲೆ 318 00:32:06,708 --> 00:32:09,541 ಒಳ್ಳೆ ಅಭಿಪ್ರಾಯ ಇರುವಾಗಲೇ ನಾನು ಹೊರಡ್ತೀನಿ. 319 00:32:09,625 --> 00:32:13,208 ಮಹನೀಯರೇ, ಮಹಿಳೆಯರೇ, ವಿದಾಯ! 320 00:32:34,125 --> 00:32:35,291 ಲೇ, ನಿರ್ಗತಿಕ. 321 00:32:40,583 --> 00:32:42,666 ನನಗೇನು ಗೊತ್ತಾಗಲ್ಲ ಅಂದುಕೊಂಡೆಯಾ? 322 00:32:45,333 --> 00:32:47,958 ಒಂದು ಸಲ ಪ್ರಯತ್ನಿಸಿ ನೋಡೋಣ ಅನ್ನಿಸ್ತು. 323 00:32:49,375 --> 00:32:50,791 ತಗೊಳ್ಳಿ. 324 00:32:51,958 --> 00:32:53,208 ನನಗೆ ಯಾವ ತೊಂದರೆಯೂ ಬೇಡ. 325 00:32:55,416 --> 00:32:57,166 ಅದಕ್ಕೆ ಕಾಲ ಮಿಂಚಿಹೋಗಿದೆ, ಅಲ್ವಾ? 326 00:32:57,791 --> 00:32:59,208 ಖಂಡಿತ ಹೌದು. 327 00:33:17,000 --> 00:33:20,000 ದಯವಿಟ್ಟು. ಇದನ್ನು ಮಾಡಬೇಡಿ. 328 00:33:23,041 --> 00:33:24,958 ಯಾಕೆ ಬೇಡ? ನಿರ್ಗತಿಕ! 329 00:33:45,375 --> 00:33:46,375 ಹೋಗು. 330 00:33:52,333 --> 00:33:53,791 ಹಲ್ಬ್ರ್ಯಾಂಡ್ ನನ್ನ ಹೆಸರು. 331 00:33:57,708 --> 00:33:58,916 ಇತ್ತ ಕಡೆ. 332 00:34:21,666 --> 00:34:24,583 ಇದರ ಬಗ್ಗೆ ನಿಮಗೆ ಏನೇ ತಿಳಿದಿದ್ದರೂ ನಮಗೆ ಮಾಹಿತಿ ಕೊಡಿ. 333 00:34:24,666 --> 00:34:26,333 ನಾನು ನೋಡ್ತೀನಿ. 334 00:34:41,625 --> 00:34:45,458 ಹಾಲ್ ಆಫ್ ಲೋರ್ ಸಂಯೋಜಿಸಿದ್ದು ಸ್ವತಃ ಎಲ್ರೋಸ್ ಅಂತ ನೀವು ಹೇಳಲೇ ಇಲ್ಲ. 335 00:34:47,666 --> 00:34:48,875 ನಿಜಕ್ಕೂ ಅದ್ಭುತವಾಗಿದೆ. 336 00:34:49,750 --> 00:34:50,916 ಖಂಡಿತ... 337 00:34:53,375 --> 00:34:54,625 ಎಲ್ರೋಸ್ ಗೊತ್ತಿದ್ದರಾ? 338 00:34:54,708 --> 00:34:56,250 ವಿಶೇಷವಾದ ವ್ಯಕ್ತಿತ್ವ. 339 00:34:56,791 --> 00:34:59,208 ಆದರೆ ನನಗೆ ಅವರ ತಮ್ಮನೇ ಹೆಚ್ಚು ಹತ್ತಿರ. 340 00:35:02,000 --> 00:35:03,250 ಅದ್ಭುತ. 341 00:35:04,000 --> 00:35:05,833 ನನ್ನ ಕರ್ಕೊಂಡು ಬಂದಿದ್ದಕ್ಕೆ ಧನ್ಯವಾದ. 342 00:35:06,750 --> 00:35:08,083 ಹಿಂದಿನ ರಾಜನಿಗೆ ಧನ್ಯವಾದ. 343 00:35:09,041 --> 00:35:12,916 ಅವರಿಂದಲೇ ಈ ಜಾಗ ಇನ್ನೂ ಉಳಿದುಕೊಂಡಿದೆ. 344 00:35:13,875 --> 00:35:15,541 ಅವರು ಎಲ್ಫ್ಗಳಿಗೆ ವಿಧೇಯರಾಗಿದ್ರಾ? 345 00:35:18,708 --> 00:35:20,250 ವಿಧೇಯರಾಗಿದ್ದಾರೆ. 346 00:35:20,333 --> 00:35:22,583 ಅದಕ್ಕಾಗೇ ಅವರನ್ನ ಸಿಂಹಾಸನದಿಂದ ಇಳಿಸಿದ್ದು. 347 00:35:23,416 --> 00:35:26,041 ಈಗ ತಮ್ಮ ಜೀವನವನ್ನ ಸ್ತಂಭದಲ್ಲಿ ಕಳೆಯುತ್ತಿದ್ದಾರೆ. 348 00:35:26,916 --> 00:35:28,833 ತನ್ನ ರಾಜ್ಯದಲ್ಲೇ ಬಹಿಷ್ಕಾರ. 349 00:35:36,000 --> 00:35:36,833 ನೋಡಿ. 350 00:35:42,125 --> 00:35:43,541 ಏನಿದು? 351 00:35:44,166 --> 00:35:48,750 ಶತ್ರುವಿನ ಬಂಧೀಖಾನೆಯಲ್ಲಿ ಸಿಕ್ಕ ಒಬ್ಬ ಮಾನವ ಗೂಢಚಾರಿಯ ಬರಹ. 352 00:35:50,500 --> 00:35:53,375 ಅವನೇ ಇದನ್ನ ಬಿಡಿಸಿದ್ದು. ಸ್ತಂಭದ ಸ್ಥಳವನ್ನು ನಮೂದಿಸೋಕೆ. 353 00:35:57,208 --> 00:35:59,875 ಒಂದು ನಿಮಿಷ. ಇದೇನು ನಿಜವಾ? 354 00:36:01,750 --> 00:36:02,833 ಇದರಲ್ಲಿ ಚಿಹ್ನೆ ಇಲ್ಲ. 355 00:36:10,791 --> 00:36:12,958 ಇದು ಸೌತ್ ಲ್ಯಾಂಡ್ಸ್ ನಕ್ಷೆ. 356 00:36:14,291 --> 00:36:15,916 ಹಲ್ಬ್ರ್ಯಾಂಡ್ ಹೇಳಿದ ಹಾಗೇ ಇದೆ. 357 00:36:16,000 --> 00:36:17,291 ಮತ್ತೆ ಈ ಶಾಸನ? 358 00:36:19,083 --> 00:36:20,541 ಇದು ಕಾಳ ಭಾಷೆಯದ್ದು. 359 00:36:23,916 --> 00:36:27,125 ಇದರಲ್ಲಿ ಜಾಗದ ಬಗ್ಗೆಯಷ್ಟೇ ಇಲ್ಲ, ಯೋಜನೆಯೂ ಇದೆ. 360 00:36:28,250 --> 00:36:32,416 ಈ ಯೋಜನೆಯ ಪ್ರಕಾರ ಅವರದೇ ಒಂದು ಸ್ತರವನ್ನು ಸೃಷ್ಟಿಸಿ, 361 00:36:33,500 --> 00:36:38,333 ಕೆಟ್ಟದ್ದು ಬದುಕುವುದಕ್ಕಷ್ಟೇ ಅಲ್ಲ, ವಿಜೃಂಭಿಸಲು ಅನುವುಮಾಡಿಕೊಡುವುದು. 362 00:36:39,250 --> 00:36:42,500 ಮಾರ್ಗೋಥಿನ ಪರಾಭವವಾದಲ್ಲಿ ಈ ಯೋಜನೆಯನ್ನು ಮಾಡತಕ್ಕದ್ದು... 363 00:36:46,000 --> 00:36:47,166 ಮುಂದಿನ ವಾರಸುದಾರನೇ. 364 00:36:47,666 --> 00:36:48,791 ಗಲಾಡ್ರಿಯಲ್. 365 00:36:48,875 --> 00:36:50,875 ಸನ್ನಿವೇಶ ಅಂದುಕೊಂಡಿದ್ದಕ್ಕಿಂತ ವಿಷಮವಾಗಿದೆ. 366 00:36:57,708 --> 00:37:00,375 ಹಾಗಿದ್ದರೆ ಸೌತ್ ಲ್ಯಾಂಡ್ಸ್ ದೊಡ್ಡ ಅಪಾಯದಲ್ಲಿದೆ. 367 00:37:00,458 --> 00:37:03,250 ಸೌರೊನ್ ಒಂದು ವೇಳೆ ವಾಪಸ್ ಬಂದಿದ್ದರೆ, 368 00:37:04,666 --> 00:37:08,583 ಸೌತ್ ಲ್ಯಾಂಡ್ಸ್ ಕೇವಲ ಆರಂಭವಷ್ಟೇ. 369 00:38:06,666 --> 00:38:08,333 ಯಾರೂ ದಾರಿ ತಪ್ಪಲ್ಲ. 370 00:38:08,416 --> 00:38:09,958 ಯಾರೂ ಒಂಟಿಯಾಗಿ ಹೋಗಲ್ಲ. 371 00:38:10,041 --> 00:38:11,041 ಹೌದು. 372 00:38:11,125 --> 00:38:12,625 ಯಾರೂ ದಾರಿ ತಪ್ಪಲ್ಲ. 373 00:38:12,958 --> 00:38:14,958 ಯಾರೂ ಒಂಟಿಯಾಗಿ ಹೋಗಲ್ಲ. 374 00:38:15,500 --> 00:38:16,958 ಯಾರೂ ದಾರಿ ತಪ್ಪಲ್ಲ. 375 00:38:17,041 --> 00:38:19,833 ಬನ್ನಿ. 376 00:38:19,916 --> 00:38:21,833 ಯಾರೂ ದಾರಿ ತಪ್ಪಲ್ಲ. 377 00:38:21,916 --> 00:38:23,791 ಯಾರೂ ಒಂಟಿಯಾಗಿ ಹೋಗಲ್ಲ. 378 00:38:24,375 --> 00:38:25,958 ಯಾರೂ ದಾರಿ ತಪ್ಪಲ್ಲ. 379 00:38:26,041 --> 00:38:28,083 ಯಾರೂ ಒಂಟಿಯಾಗಿ ಹೋಗಲ್ಲ. 380 00:38:28,750 --> 00:38:30,708 ಯಾರೂ ದಾರಿ ತಪ್ಪಲ್ಲ. 381 00:38:30,791 --> 00:38:32,250 ಯಾರೂ ಒಂಟಿಯಾಗಿ ಹೋಗಲ್ಲ. 382 00:38:33,250 --> 00:38:34,625 ಯಾರೂ ದಾರಿ ತಪ್ಪಲ್ಲ. 383 00:38:34,708 --> 00:38:37,458 ಇದು ಚೆನ್ನಾಗೇನೂ ಇಲ್ಲ. 384 00:38:37,541 --> 00:38:39,625 ಯಾರೂ ದಾರಿ ತಪ್ಪಲ್ಲ. 385 00:38:39,708 --> 00:38:41,375 ಯಾರೂ ಒಂಟಿಯಾಗಿ ಹೋಗಲ್ಲ. 386 00:38:41,458 --> 00:38:42,708 ಯಾರೂ ದಾರಿ ತಪ್ಪಲ್ಲ. 387 00:38:43,125 --> 00:38:45,750 ನೀನಿಲ್ಲದೆ ನಾವು ಬಂಡಿ ಹೊರೋಕಾಗಲ್ಲ. 388 00:38:47,791 --> 00:38:50,000 ನಮ್ಮನ್ನ ಬಿಟ್ಟು ಹೊರಟುಹೋಗ್ತಾರೆ. 389 00:38:50,083 --> 00:38:52,833 ಇದುವರೆಗೂ ಯಾವ ಬ್ರ್ಯಾಂಡಿಫುಟ್ಟನ್ನೂ ಬಿಟ್ಟುಹೋಗಿಲ್ಲ. 390 00:39:01,958 --> 00:39:03,875 ಗೊತ್ತಾ, ನಾನು ರೋಸ್ನ ಕಳೆದುಕೊಂಡ ಮೇಲೆ, 391 00:39:06,166 --> 00:39:11,000 ನನ್ನ ಕಾಲುಗಳೇ ಬಿದ್ದುಹೋದಂತಾದವು. 392 00:39:14,666 --> 00:39:17,625 ಆಮೇಲೆ ಹುಲ್ಲುಗಾವಲಿನಲ್ಲಿ ನಿನ್ನನ್ನ ನೋಡಿದೆ. 393 00:39:18,458 --> 00:39:19,875 ಈ ಸ್ವಚ್ಛ ನೆಲದಲ್ಲೇ. 394 00:39:22,041 --> 00:39:24,666 ನೀನವತ್ತು ಎಷ್ಟು ಸುಂದರವಾಗಿದ್ದೆ. 395 00:39:26,083 --> 00:39:27,833 ಒಂದೇ ಕ್ಷಣದಲ್ಲಿ 396 00:39:28,375 --> 00:39:32,875 ನಿನ್ನ ಜೊತೆಯಲ್ಲೇ ನನ್ನ ಜೀವನ ಕಳೆಯಬೇಕು ಅಂತ ನಿರ್ಧರಿಸಿದ್ದೆ, ಮಾರಿಗೋಲ್ಡ್. 397 00:39:40,083 --> 00:39:41,791 ಗ್ರೋವಿಗೆ ನಾವು ಹೋಗ್ತೀವಿ. 398 00:39:43,458 --> 00:39:44,708 ನಾವೆಲ್ರೂನಾ? 399 00:39:46,125 --> 00:39:47,416 ನಾವೆಲ್ಲರೂ. 400 00:39:47,500 --> 00:39:48,791 ಹೇಗೆ? 401 00:39:50,250 --> 00:39:52,666 ಬಂಡಿಯ ಮುಂದುಗಡೆ ನಾನಿರ್ತೀನಿ. 402 00:39:54,000 --> 00:39:55,666 ನಮ್ಮ ಜೊತೆ ನೋರಿ ಇದ್ದಾಳೆ. 403 00:39:55,750 --> 00:39:59,958 ಇಲ್ಲ! ನೋಡು, ಆ ಹುಡುಗಿ ಒಂದು ಸಲ ತನ್ನ ತಲೆಯನ್ನು ಏನಕ್ಕಾದರೂ ಉಪಯೋಗಿಸಿದರೆ, 404 00:40:01,958 --> 00:40:03,375 ಅವಳನ್ನ ಏನೂ ತಡೆಯೋಕೆ ಆಗಲ್ಲ. 405 00:40:19,416 --> 00:40:20,958 ಆ ಪುಸ್ತಕವನ್ನೇನಾದರೂ ಮುಟ್ಟಿದರೆ, 406 00:40:21,041 --> 00:40:23,708 ಸಾಡೋಕ್ ಮುಂದಿನ ಪುಟಗಳನ್ನ ನಿನ್ನ ಚರ್ಮದಿಂದ ಮಾಡ್ತಾರೆ. 407 00:40:23,791 --> 00:40:26,375 ಇನ್ನೂ ಒಳ್ಳೆ ಉಪಾಯ ಇದೆಯಾ ನಿನಗೆ? ನಾಳೆನೇ ವಲಸೆ. 408 00:40:26,458 --> 00:40:28,541 ಅವನಿಗಾಗಿ ನಕ್ಷತ್ರಗಳನ್ನು ಹುಡುಕಬೇಕೆಂದರೆ 409 00:40:28,625 --> 00:40:30,166 ನಮಗಿರುವ ದಾರಿ ಆ ಪುಸ್ತಕ ಒಂದೇ. 410 00:40:30,250 --> 00:40:31,875 ನನಗವನಿಗೆ ಸಹಾಯ ಮಾಡಬೇಕಂತಿಲ್ಲ. 411 00:40:33,583 --> 00:40:37,333 ಕೆಟ್ಟ ಕೋಪ ಇರೋ ದೈತ್ಯ ಅವನು, ಆಗಾಗ ಮಿಂಚುಹುಳಗಳನ್ನ ಕೊಲೆ ಮಾಡೋನು. 412 00:40:37,416 --> 00:40:38,250 ಅದು ಆಕಸ್ಮಿಕ. 413 00:40:38,333 --> 00:40:41,000 ಬುದ್ಧಿವಂತರ ಕೆಲಸ ಅಂದ್ರೆ ಅವನಿಗೆ ಊಟ ಸಾಕಷ್ಟು ಕೊಟ್ಟು, 414 00:40:41,083 --> 00:40:44,250 ಪಕ್ಕದ ಮನುಷ್ಯರ ಹಳ್ಳಿಯನ್ನ ತೋರಿಸಿ, ವಿದಾಯ ಹೇಳೋದು. 415 00:40:44,333 --> 00:40:46,625 -ಅವನು ಇರಬೇಕಾದ ಜಾಗ ಅದಲ್ಲ. -ಮತ್ತಿನ್ನೆಲ್ಲಿ? 416 00:40:46,708 --> 00:40:50,333 -ಅದನ್ನೇ ನಾನು ಚಿಂತೆ ಮಾಡ್ತಾ ಇರೋದು. -ಇದು ಯಾಕೆ ನಿನ್ನ ಸಮಸ್ಯೆ? 417 00:40:51,708 --> 00:40:54,916 ಈಗ ಆಗಿರೋಕಿಂತ ಅವನಿಗೋಸ್ಕರ ಇನ್ನೂ ಎಷ್ಟು ಅಪಾಯಕ್ಕೆ ಒಡ್ಡಿಕೊಳ್ತೀಯಾ? 418 00:40:55,000 --> 00:40:56,875 ಇದು ಬುದ್ಧಿ ಮತ್ತು ಹೃದಯದ ವಿಷಯ. 419 00:40:56,958 --> 00:40:58,791 ಇದು ವಿವೇಕ ಮತ್ತು ಅವಿವೇಕದ ವಿಷಯ. 420 00:40:58,875 --> 00:41:01,750 ವಿವೇಕ ಏನಾದರೂ ಕಡಿಮೆಯಾಗಿದ್ರೆ ನನ್ನಿಂದ ಸ್ವಲ್ಪ ತಗೋ. 421 00:41:01,833 --> 00:41:04,333 ಆ ಪುಸ್ತಕದಿಂದ ನಕ್ಷತ್ರಗಳ ಚಿತ್ರಗಳನ್ನೇ ತಗೋತೀನಿ. 422 00:41:04,416 --> 00:41:07,625 ನೀನು ನನಗೆ ಸಹಾಯ ಮಾಡು. ಇಲ್ಲಾಂದ್ರೆ ಮಲ್ವಾಳ ಕಾಲ್ಬೆರಳ ಮುಲಾಮಿಗೆ 423 00:41:07,708 --> 00:41:09,958 ಅಗ್ನಿಕಳೆ ಬೆರೆಸಿದ್ದು ನೀನೇ ಅಂತ ಹೇಳಿಬಿಡ್ತೀನಿ. 424 00:41:11,875 --> 00:41:13,291 ಆಯ್ತು, ನೋಡ್ಕೋತೀನಿ. 425 00:41:15,000 --> 00:41:16,333 ಒಳ್ಳೇದು. 426 00:41:35,250 --> 00:41:38,083 ಈಗ ನಿಮ್ಮ ಭಾಷಣದ ಸಮಯ ಅಲ್ವಾ, ಬರೋಸ್ ಅವರೇ? 427 00:41:38,166 --> 00:41:40,166 ಖಂಡಿತ. ಅದನ್ನ ನನ್ನ ಬಂಡಿಯಿಂದ ತರಬೇಕು. 428 00:41:40,250 --> 00:41:42,916 ಒಳ್ಳೆ ಉಪಾಯ, ಹಾಗೇ ಮಾಡಿ. ನಿಮ್ಮ ಬಂಡಿಯಿಂದಲೇ ತನ್ನಿ! 429 00:41:54,041 --> 00:41:56,750 "ವಿಶ್ರಾಂತ ಕಾಲುಗಳು ಮತ್ತು ತುಂಬಿದ ಬಂಡಿ"ಯಾ? 430 00:41:57,333 --> 00:41:58,916 ಇಲ್ಲ... 431 00:42:00,291 --> 00:42:02,750 ಇಲ್ಲ... 432 00:42:15,625 --> 00:42:18,500 "ತುಂಬಿದ ಬಂಡಿಗಳು ಮತ್ತು ತುಂಬಿದ ಹೊಟ್ಟೆಗಳು." 433 00:42:29,125 --> 00:42:30,333 ಬರೋಸ್ ಅವರೇ! 434 00:42:30,416 --> 00:42:31,583 ಈಗೇನಾಯ್ತು? 435 00:42:31,666 --> 00:42:34,666 ಇಲ್ಲ, ಏನಂದ್ರೆ, ಎಲ್ರೂ ಕಾಯ್ತಿದ್ದಾರೆ. 436 00:42:35,916 --> 00:42:37,500 ನಿಮ್ಮ ಬಲ ಚೆನ್ನಾಗಿದೆಯಲ್ಲ? 437 00:42:38,291 --> 00:42:40,291 ಹೌದೌದು. ಇನ್ನೇನು ಮುಗಿತು. 438 00:42:41,541 --> 00:42:43,333 'ಎಡ'ಬಿಡದೇ ಮಾಡ್ತಿದ್ದೀರಾ? 439 00:42:44,708 --> 00:42:45,666 'ಎಡ'ವಟ್ಟಾಯ್ತಾ? 440 00:42:46,250 --> 00:42:48,333 ಇನ್ನೇನು ಬಂದೆ ಅಂತ ಹೇಳು ಅವರಿಗೆ. 441 00:42:48,416 --> 00:42:51,458 ಬಲವಾಗಿ. ಇಲ್ಲ! ಅಂದ್ರೆ ಎಡ. ಹಾಂ. ಇಲ್ಲ, ನಾನು... 442 00:42:51,541 --> 00:42:53,791 ನಾನೀಗಲೇ ಅವರಿಗೆ ಹೇಳ್ತೀನಿ, ನೇರವಾಗಿ ಹೋಗಿ. 443 00:42:56,166 --> 00:42:58,958 ಶಾಂತಳಾಗು, ಹೋಗಿ ಒಂದು ಚೆಸ್ಟ್ನಟ್ ಮಿಠಾಯಿ ತಿನ್ನು. 444 00:43:00,500 --> 00:43:01,916 ಒಳ್ಳೆ ವಿಚಿತ್ರ ಹುಡುಗಿಯಪ್ಪ. 445 00:43:21,125 --> 00:43:25,750 ಅತ್ಯಂತ ವಿನಮ್ರ, ಗೌರವಾನ್ವಿತ ಹಾರ್ಫೂಟ್ಗಳೇ. 446 00:43:31,666 --> 00:43:34,000 ಈ ಕಾಡ ಮಧ್ಯದ ಬಯಲಿನಲ್ಲಿ ಇನ್ನೊಂದು ಕಾಲ ಕಳೆದಿದೆ, 447 00:43:34,791 --> 00:43:38,000 ಇದರಿಂದ ನಮ್ಮ ಹೊಟ್ಟೆಗಳು, ಬಂಡಿಗಳು ತುಂಬಿವೆ. 448 00:43:38,583 --> 00:43:41,708 ಕೆಲವರಿಗಂತೂ ಮಿಕ್ಕವರಿಗಿಂತ ಸ್ವಲ್ಪ ಹೆಚ್ಚೇ ತುಂಬಿದಂಗಿದೆ ಅನ್ನೋಣ. 449 00:43:43,541 --> 00:43:44,666 ಇನ್ನೇನು... 450 00:43:44,750 --> 00:43:46,250 ಹುಣ್ಣಿಮೆ ರಾತ್ರಿ ಬೇರೆ, 451 00:43:46,333 --> 00:43:49,833 ಅದಕ್ಕೆ ಆಮೇಲೆ ನಿಮ್ಮ ಸರಸಸಲ್ಲಾಪಗಳ ವಿಚಾರವಾಗಿ ಹುಷಾರಾಗಿರಿ. 452 00:43:49,916 --> 00:43:53,625 ಆಮೇಲೆ ಇಡೀ ಬಿಡಾರಕ್ಕೇ ಕಾಣಿಸುತ್ತೆ. ಅದು ಯಾರಿಗೂ ಬೇಡದ್ದು. 453 00:43:55,041 --> 00:43:56,666 ಸುಮ್ನೆ ತಮಾಷೆ ಮಾಡಿದೆ ಅಷ್ಟೇ. 454 00:43:56,750 --> 00:44:00,333 ಈಗ ನಮ್ಮ ಮುಂದಿನ ಪ್ರಯಾಣ ಶುರು ಮಾಡೋಕೂ ಮುಂಚೆ, 455 00:44:01,666 --> 00:44:04,833 ಹಿಂದಿನ ವಲಸೆಗಳವರು, ಅವುಗಳಲ್ಲಿ ನಮ್ಮಿಂದ ದೂರವಾದವರನ್ನ 456 00:44:06,791 --> 00:44:08,750 -ಸ್ಮರಿಸೋಣ. -ಹೌದು, ಹೌದು. 457 00:44:08,833 --> 00:44:12,583 ಯಾವುದೇ ಹಾರ್ಫೂಟ್ ಈ ವಲಸೆಯಲ್ಲಿ ಹಿಂದುಬಿದ್ದರೆ, 458 00:44:13,291 --> 00:44:16,083 ಅವರನ್ನೂ ಸಹ ಹಾಗೇ ನಮ್ಮ ಹೃದಯ 459 00:44:16,166 --> 00:44:19,000 ಮತ್ತು ನೆನಪುಗಳಲ್ಲಿ ಹೊತ್ತುಕೊಂಡು ಸಾಗೋಣ. 460 00:44:24,583 --> 00:44:27,666 ಜೀವನದಲ್ಲಿ ನಾವು ಅವರಿಗಾಗಿ ನಿಲ್ಲಲಾಗಲಿಲ್ಲ. 461 00:44:29,625 --> 00:44:34,625 ಆದರೆ ಇಲ್ಲಿ, ಈಗ, ನಮ್ಮ ಗುಂಪಿಗೆ ಸ್ವಾಗತಿಸೋಣ... 462 00:44:43,541 --> 00:44:45,000 ಮೈಲ್ಸ್ ಬ್ರೈಟ್ಆಪಲ್. 463 00:44:48,083 --> 00:44:50,583 ಬೆಟ್ಟದ ಮಾರ್ಗದಲ್ಲಿನ ಹಿಮದಲ್ಲಿ ಸಿಲುಕಿದವರು. 464 00:44:50,666 --> 00:44:52,166 ನಿಮಗಾಗಿ ಕಾಯುವೆವು. 465 00:44:56,750 --> 00:44:58,166 ಚಾನ್ಸ್ ಪ್ರೌಡ್ಫೆಲೋ. 466 00:45:00,750 --> 00:45:02,291 ಯಾರ್ರೋ ಪ್ರೌಡ್ಫೆಲೋ. 467 00:45:04,166 --> 00:45:07,458 ಸ್ಟ್ರಾಪ್, ಡ್ಯೂವಿಸ್, 468 00:45:09,333 --> 00:45:11,041 ಲಿನ್ಸೀಡ್ ಪ್ರೌಡ್ಫೆಲೋ. 469 00:45:12,875 --> 00:45:15,541 ಚಳಿಗಾಲದ ಮಳೆಯ ಭೂಕುಸಿತದಲ್ಲಿ ತೀರಿಕೊಂಡವರು. 470 00:45:16,125 --> 00:45:17,833 -ನಿಮಗಾಗಿ ಕಾಯುವೆವು. -ನಿಮಗಾಗಿ ಕಾಯುವೆವು. 471 00:45:28,166 --> 00:45:29,708 ಡ್ಯಾಫೋಡಿಲ್ ಬರೋಸ್. 472 00:45:31,750 --> 00:45:32,833 ತೋಳಗಳು. 473 00:45:33,333 --> 00:45:35,333 -ನಿಮಗಾಗಿ ಕಾಯುವೆವು. -ನಿಮಗಾಗಿ ಕಾಯುವೆವು. 474 00:45:38,041 --> 00:45:41,708 ಡ್ರೂಡಾ ಬಂಬೆಲ್ಲಿ. ರೋಶನಿಯ ಹಳದಿ ಹಣ್ಣು ತಿಂದಳು. 475 00:45:41,791 --> 00:45:42,875 ನಿಮಗಾಗಿ ಕಾಯುವೆವು. 476 00:46:10,708 --> 00:46:12,291 ಬ್ಲೋವೋ ಬಾಲ್ಜರ್ಬಕ್. 477 00:46:13,000 --> 00:46:14,083 ಜೇನ್ನೊಣಗಳು. 478 00:46:17,250 --> 00:46:19,583 ಅವನಂದರೆ ಎಲ್ಲರಿಗೂ ಪ್ರೀತಿ, ಆದರೆ ಅವನೊಬ್ಬ ಮೂರ್ಖ. 479 00:46:20,583 --> 00:46:21,958 ನಿಮಗಾಗಿ ಕಾಯುವೆವು. 480 00:46:24,791 --> 00:46:28,500 ಮಾ ಹಾಂಬ್ಲೀ. ಶಿಲ್ಪ ಕೆತ್ತುತ್ತಿದ್ದರು... 481 00:46:41,708 --> 00:46:43,291 ನಿಮಗಾಗಿ ಕಾಯುವೆವು. 482 00:47:31,958 --> 00:47:33,166 ನೋರಿ? 483 00:47:54,625 --> 00:47:57,208 ನೀನು ಸುಳ್ಳು ಹೇಳಿ, ಕಳ್ಳತನ ಮಾಡಿ, 484 00:47:57,291 --> 00:47:59,916 ನಮ್ಮ ನಡುವೆ ಒಬ್ಬ ಅಪಾಯಕಾರಿ ಆಗಂತುಕನನ್ನ ಕರೆತಂದಿದ್ದೀಯ. 485 00:48:00,000 --> 00:48:01,125 ಸುಳ್ಳು ಹೇಳಿದ್ದಾಳೆ. 486 00:48:01,208 --> 00:48:03,375 -ಅವರಾಗಲೇ ಹೇಳಿದರಲ್ಲ. -ಸುಳ್ಳು ಹೇಳಿದಳಲ್ಲ. 487 00:48:03,458 --> 00:48:06,083 ಆದರೆ ಅವನು ದಾರಿ ತಪ್ಪಿದ್ದ. ಪೆಟ್ಟಾಗಿತ್ತು. 488 00:48:06,166 --> 00:48:08,750 ನಾನೇನು ಮಾಡಬೇಕಿತ್ತು? ಅಲ್ಲೇ ಬಿಟ್ಟು ಬರಬೇಕಾ? 489 00:48:08,833 --> 00:48:12,958 ನಿಜ ಹೇಳಬೇಕಂದ್ರೆ, ಸಾಡೋಕ್, ಇದು ನಿಜಕ್ಕೂ ಅದ್ಭುತ. 490 00:48:13,041 --> 00:48:16,125 ಯಾವತ್ತಾದರೂ ಜೀವಿಗಳು ನಕ್ಷತ್ರಗಳಿಂದ ಉದುರೋದು ಕೇಳಿದ್ದೀರಾ? 491 00:48:16,916 --> 00:48:19,791 ಜೀವಿಗಳು ನಕ್ಷತ್ರಗಳಾಗಿರೋದನ್ನ ಕೇಳಿದ್ದೀನಿ. 492 00:48:19,875 --> 00:48:21,458 ಅದರ ವಿರುದ್ಧವಾಗಂತೂ ಅಲ್ಲ. 493 00:48:22,500 --> 00:48:23,708 ತುಂಬಾ ತೊಂದರೆಯಾಗುತ್ತೆ. 494 00:48:23,791 --> 00:48:25,666 ಮತ್ತೆ ಆ ಪುಟದಲ್ಲಿರುವ ನಕ್ಷತ್ರಗಳು? 495 00:48:25,750 --> 00:48:27,125 ಅವುಗಳ ಅರ್ಥ ಏನು? 496 00:48:27,250 --> 00:48:31,333 ಏನಿಲ್ಲ. ಪುಟಗಳು ಸುಟ್ಟುಹೋಗಿವೆ. ನೀನ್ಯಾಕೆ ಅವನ್ನ ಓದೋಕೆ ಹೋಗಲಿಲ್ಲ? 497 00:48:31,416 --> 00:48:33,125 ನಮಗೆ ಆಮೇಲೆ ಸಮಯ ಸಿಗುತ್ತೆ ಅಂದ್ಕೊಂಡೆ. 498 00:48:33,208 --> 00:48:34,541 "ನಮಗೆ" ಅಂದ್ರೆ ಯಾರು? 499 00:48:36,833 --> 00:48:40,083 ಯಾರೂ ಇಲ್ಲ. ನಾನಷ್ಟೇ. ಅವನು ನನ್ನ ಸ್ನೇಹಿತ. 500 00:48:40,166 --> 00:48:42,041 ನಮಗೆ ಸ್ನೇಹಿತರು ಬೇಡವೇ, ಹುಡುಗಿ. 501 00:48:42,833 --> 00:48:44,166 ನಾವು ಬದುಕಬೇಕು. 502 00:48:44,250 --> 00:48:47,041 ಸ್ನೇಹಿತರೇ ಇಲ್ಲದೆ ಯಾವುದಕ್ಕಾಗಿ ಬದುಕಬೇಕು? 503 00:48:47,125 --> 00:48:50,416 "ಒಳ್ಳೆ ಪುಟ್ಟ ಹಾರ್ಫೂಟ್ಗಳೇ, ದಾರಿಯಲ್ಲೇ ಇರಿ, ಅಪಾಯ ತಪ್ಪಿಸಿಕೊಳ್ಳಿ," 504 00:48:50,500 --> 00:48:53,000 ಅಂದ್ರೆ ಒಂದು ಸಲ ಆದರೂ ಹೊರಗೆ ಏನಿದೆ ನೋಡೋಕಾಗುತ್ತಾ? 505 00:48:53,083 --> 00:48:54,791 ಎಲನೊರ್ ಕೆಲ್ಲಮಾರ್ಕ್ ಬ್ರ್ಯಾಂಡಿಫುಟ್! 506 00:48:55,833 --> 00:48:58,333 ನಮ್ಮ ರೀತಿಯಿಂದಲೇ ನಾವು ಸಾವಿರಾರು ವರ್ಷ ಬದುಕಿರೋದು. 507 00:48:59,625 --> 00:49:01,708 ನಮ್ಮ ಕಾನೂನು ಸ್ಪಷ್ಟವಾಗಿದೆ. 508 00:49:01,791 --> 00:49:07,541 ಅದನ್ನು ಮುರಿಯುವ ಯಾವುದೇ ಹಾರ್ಫೂಟನ್ನು ಬಂಡಿಯಿಂದ ಹೊರದಬ್ಬಬೇಕು. 509 00:49:12,375 --> 00:49:16,750 ನಮ್ಮ ಕಾನೂನುಗಳು ಸ್ಪಷ್ಟವಾಗೇನೋ ಇವೆ. ಆದರೆ... 510 00:49:22,458 --> 00:49:24,083 ಕುಮಾರಿ ಬ್ರ್ಯಾಂಡಿಫುಟ್ ಚಿಕ್ಕವಳು. 511 00:49:24,708 --> 00:49:28,416 ಅವಳ ಕಾಲ್ಬೆರಳಿನ ಮೇಲೆ ಕೂದಲು, ಕಿವಿಗಳ ಮಧ್ಯೆ ಬುದ್ಧಿ ಬೆಳೆಯಬೇಕಿದೆ. 512 00:49:29,333 --> 00:49:31,583 ನಾಳೆ ಅಂದುಕೊಂಡಂತೆಯೇ ಹೊರಡೋಣ. 513 00:49:34,500 --> 00:49:36,708 ಬ್ರ್ಯಾಂಡಿಫುಟ್ ಬಂಡಿ ನಮ್ಮ ಬಳಿಯೇ ಇರುತ್ತದೆ. 514 00:49:39,166 --> 00:49:40,833 ಪ್ರಯಾಣಿಕರ ಗುಂಪಿನ ಹಿಂದೆ. 515 00:49:40,916 --> 00:49:42,708 -ಹಿಂದೆನಾ? -ಹಿಂದೇನೇ. 516 00:49:42,791 --> 00:49:45,291 ಇರಿ, ಇರಿ, ಒಂದು ನಿಮಿಷ ಇರಿ, ಸಾಡೋಕ್. 517 00:49:45,416 --> 00:49:47,291 ಇದರ ಬಗ್ಗೆ ನಾವು ಮಾತಾಡಬೇಕು. 518 00:49:47,375 --> 00:49:51,583 ಎಲ್ಲಕ್ಕಿಂತ ಹಿಂದೇನಾ ಅಥವಾ ಮಧ್ಯದಲ್ಲಿ ಹಿಂದೇನಾ? 519 00:49:51,666 --> 00:49:53,416 ಹಿಂದೆ ಅಂತಂದೆ. 520 00:49:55,375 --> 00:49:59,458 ಹಿಂದೆ ಬಿದ್ದವರ ಪುಸ್ತಕದಲ್ಲಿ ನಮ್ಮ ಹೆಸರು ಮುದ್ರೆಯೊತ್ತಿದಂತೆಯೇ ಆಗಿದೆ. 521 00:50:02,416 --> 00:50:04,333 ಆತ ನಮ್ಮ ಬಳಿ ಬಂದಿದ್ದಕ್ಕೆ ಕಾರಣವಿದೆ. 522 00:50:05,291 --> 00:50:06,541 ನಿಜವಾಗಲೂ, ನೋರಿ. 523 00:50:08,083 --> 00:50:09,875 ನಿನಗಿದರಲ್ಲಿ ವಿಧಿ ಕಾಣ್ತಿದೆಯಾ? 524 00:50:12,000 --> 00:50:15,625 ನಕ್ಷತ್ರಗಳೇ ಬಾಗಿ ನಿನ್ನನ್ನು ಮುಟ್ಟಿವೆ ಅಂದುಕೋತಿದ್ದೀಯಾ, ಅಲ್ವಾ? 525 00:50:15,708 --> 00:50:18,625 ನಿನ್ನನ್ನೇನು ವಿಶೇಷ ಅಂದುಕೊಂಡ್ಯಾ? ನೀನಿನ್ನೂ ಮಗು ಅಷ್ಟೇ. 526 00:50:20,458 --> 00:50:22,791 ನಾನೇನೂ ವಿಶೇಷ ಅಲ್ಲ ಅಂತ ಗೊತ್ತು. 527 00:50:23,750 --> 00:50:27,625 ಇಷ್ಟು ದೊಡ್ಡ ಪ್ರಪಂಚದಲ್ಲಿ ನಾನೊಬ್ಬ ಪುಟ್ಟ ಹಾರ್ಫೂಟ್ ಅಂತ ನನಗೆ ಗೊತ್ತು. 528 00:50:28,208 --> 00:50:29,875 ಆದರೆ ಅವನು ವಿಶೇಷವಾದವನು. 529 00:50:31,625 --> 00:50:33,125 ನನಗೆ ಹಾಗನ್ನಿಸ್ತಿದೆ. 530 00:50:36,041 --> 00:50:37,625 ನನ್ನ ಪ್ರೀತಿಯ ಮಗಳೇ. 531 00:50:39,333 --> 00:50:41,875 ನಿನ್ನ ಮನಸ್ಸು ಯಾವಾಗಲೂ ನಿನ್ನ ತಂದೆಯ ಹಾಗೆಯೇ. 532 00:50:43,041 --> 00:50:46,250 ಆದರೆ ಉದ್ದವಾಗಿ ಬೆಳೆದ ಧಾನ್ಯವನ್ನೇ ಮೊದಲು ಕತ್ತರಿಸೋದು ತಿಳ್ಕೋ. 533 00:50:48,125 --> 00:50:49,541 ಗಂಟುಮೂಟೆ ಕಟ್ಟೋಣ. 534 00:51:05,958 --> 00:51:06,791 ಅಯ್ಯೋ! 535 00:51:08,375 --> 00:51:10,166 ಸತ್ತುಹೋಗುವೆ, ರಾಣಿ, ನೀನು! 536 00:51:10,250 --> 00:51:13,000 ಗಲಾಡ್ರಿಯಲ್! ಬೇಡ! 537 00:51:13,083 --> 00:51:14,166 ಬೇಡ! 538 00:51:15,125 --> 00:51:16,333 ಗಲಾಡ್ರಿಯಲ್! ಬೇಡ! 539 00:51:16,416 --> 00:51:17,625 ಗಲಾಡ್ರಿಯಲ್? 540 00:51:18,250 --> 00:51:20,333 ಗಲಾಡ್ರಿಯಲ್ಲೇನಾ? ಓರ್ಕ್ಗಳಿಗೆ ಮಾರಿ? 541 00:51:20,416 --> 00:51:23,625 ಅವಳು ಯಾರಿಗೆ ಮಾರಿಯೋ ಬೇಕಾಗಿಲ್ಲ. ನ್ಯೂಮೆನೊರಿನಲ್ಲಿ ಯಾಕಿದ್ದಾಳೆ? 542 00:51:25,416 --> 00:51:27,583 ಮಿಡ್ಲ್ ಅರ್ಥಿನ ಹಡಗಿಗೆ ಕಾಯುತ್ತಿದ್ದಾಳೆ. 543 00:51:28,791 --> 00:51:33,125 ರಾಣಿ ರೀಜೆಂಟ್ ನನ್ನನ್ನು ಅಧಿನಾಯಕನನ್ನಾಗಿ ಮಾಡಿ ಅವಳ ಮೇಲೆ ಕಣ್ಣಿರಿಸಲು ಹೇಳಿದ್ದಾರೆ. 544 00:51:33,208 --> 00:51:35,500 ಎಲ್ಫ್ನ ಕರ್ಕೊಂಡು ಬಂದಿದ್ದಕ್ಕೆ ಬಡ್ತಿ ಸಿಕ್ತಾ? 545 00:51:35,583 --> 00:51:37,458 ವಾಪಸ್ ಕರ್ಕೊಂಡು ಹೋಗೋದ್ಯಾರು? 546 00:51:37,541 --> 00:51:39,541 ಬಡ್ತಿ ಬೇಕಾ, ಸೈನಿಕನೇ? 547 00:51:40,500 --> 00:51:42,041 ಸುಮುದ್ರ ಪರೀಕ್ಷೆಗೆ 9 ದಿನ ಇದೆ. 548 00:51:42,125 --> 00:51:43,291 -ಹೇಳವನಿಗೆ. -ಕೇಳ್ತೀಯಾ? 549 00:51:43,916 --> 00:51:46,833 ನಮ್ಮ ಉತ್ತರದ ಸಂಬಂಧಿಕರು ನಿನ್ನನ್ನ ಕಳಿಸಿಕೊಡೋಕೆ 550 00:51:46,916 --> 00:51:49,833 ಅಂತ ಬಂದು ಒಂದು ಔತಣ ಏರ್ಪಡಿಸಿದ್ದಾರೆ. 551 00:51:49,916 --> 00:51:53,125 -ಪರವಾಗಿಲ್ಲ ತಾನೇ? -ನಾನು ಬೇಡ ಅಂದ್ಕೋತಿದ್ದೆ. 552 00:51:55,458 --> 00:51:57,916 -ಬೇಡವಾ? -ಇನ್ನೊಂದು ಕಾಲವಾಗೋವರೆಗೂ ಬೇಡ ಅಂತ. 553 00:52:00,375 --> 00:52:01,958 ನಿನಗೆ ಇದರ ಬಗ್ಗೆ ಗೊತ್ತಿತ್ತಾ? 554 00:52:02,041 --> 00:52:06,083 ಆಗಾಗ ಅವನ ಮಾತುಗಳನ್ನು ಕೇಳ್ತಾ ಇರ್ತೀನಿ, ಆದ್ದರಿಂದ, ಹೌದು, ನನಗೂ ಅನುಮಾನ ಇತ್ತು. 555 00:52:06,166 --> 00:52:07,791 ನನಗೆ ಹೇಳಬೇಕು ಅನ್ನಿಸಲಿಲ್ಲವಾ? 556 00:52:07,875 --> 00:52:10,375 -ಯೋಚನೆ ಮಾಡ್ತಿದ್ದೀನಿ. -ಈರಿಯನ್ ಜೊತೆ ಮಾತಾಡ್ತಿದ್ದೆ. 557 00:52:10,458 --> 00:52:12,958 ನನಗೆ ನನ್ನದೇ ಆದ ಜವಾಬ್ದಾರಿಗಳಿವೆ. 558 00:52:13,041 --> 00:52:15,916 ಯಾಕಿಷ್ಟು ಬೇಸರ? ಅನಾರಿಯೋನ್ ಹೇಳಿದ, ಎರಡು ಸಲ ಮುಂದೂಡಿದೆ... 559 00:52:16,000 --> 00:52:18,250 ಇದಕ್ಕೂ ನಿಮ್ಮಣ್ಣನಿಗೂ ಏನು ಸಂಬಂಧ? 560 00:52:18,333 --> 00:52:20,750 -ಏನಿಲ್ಲ. -ಏನಿಲ್ಲದೆ ಹೇಗಿರುತ್ತೆ! 561 00:52:21,916 --> 00:52:23,166 ಧನ್ಯವಾದ. 562 00:52:26,458 --> 00:52:27,708 ದೇವರೇ. 563 00:52:31,666 --> 00:52:33,166 ಅವನಿಗೆ ಹೇಳಿದ್ದು ಹೇಳ್ತೀನಿ. 564 00:52:34,791 --> 00:52:37,625 ನಮ್ಮ ಪಶ್ಚಿಮದ ತೀರಗಳಲ್ಲಿ ನಮಗೇನೂ ಉಳಿದಿಲ್ಲ. 565 00:52:38,833 --> 00:52:40,666 ಭೂತಕಾಲ ಸತ್ತಿದೆ. 566 00:52:41,500 --> 00:52:44,083 ನಾವು ಮುಂದೆ ಹೋಗಬೇಕು ಇಲ್ಲಾ ಅದರ ಜೊತೆ ಸಾಯಬೇಕು. 567 00:52:47,000 --> 00:52:50,916 ನಿನ್ನ ಕೈಲಾಗುತ್ತೆ ಅಂತ ಹಡಗಿನ ನಾಯಕರಿಗೆ ಮನವರಿಕೆ ಮಾಡಿಸೋದೆಷ್ಟು ಕಷ್ಟ ಗೊತ್ತಾ? 568 00:52:51,000 --> 00:52:51,916 ನಾನು ಕೇಳಲಿಲ್ಲ. 569 00:52:52,000 --> 00:52:54,750 ಮತ್ತೆ ರಾಣಿಯ ಅಂಗರಕ್ಷಕರ ಜೊತೆ ಜಗಳ ಕಾದೆಯಲ್ಲ. 570 00:52:54,833 --> 00:52:57,291 -ಅವರೇ ಮಾಡಿದ್ದು! -ಕುದುರೆ ತರಬೇತಿಯಿಂದ ಹೊರದಬ್ಬಿದ್ದು. 571 00:52:57,375 --> 00:52:58,458 ಅದು ನನ್ನ ತಪ್ಪಲ್ಲ! 572 00:52:58,541 --> 00:53:01,958 -ಇಸಿಲ್ ಹೇಳಿದ್ದು ನಿಜ, ಅವರು... -ನಾನು ನಿನ್ನೊಂದಿಗೆ ಮಾತಾಡ್ತಿಲ್ಲ! 573 00:53:04,625 --> 00:53:06,583 -ಕ್ಷಮಿಸಿ, ನಾಯಕರೇ. -ಏನು? 574 00:53:07,000 --> 00:53:09,166 ನಿಮ್ಮ ಮಗಳು ಈರಿಯನ್ನಿಗೊಂದು ಸಂದೇಶ ಬಂದಿದೆ. 575 00:53:21,916 --> 00:53:23,541 ನಿನಗೆ ಅನುಮಾನಗಳಿವೆ ಅಂತ ಗೊತ್ತು. 576 00:53:26,291 --> 00:53:30,541 ಆದರೆ ನಾನು ಹೇಳೋದೆಲ್ಲಾ ನಿನ್ನ ಒಳ್ಳೆಯದಕ್ಕೇ ಅಂತ ನಿನಗೆ ನಂಬಿಕೆಯಿಲ್ವಾ? 577 00:53:32,625 --> 00:53:37,333 ಈ ಜಗತ್ತಿನ ಜಲಾವೃತ ಭಾಗಕ್ಕೆ ಎಂಥದ್ದೇ ಗಾಯ ಆದರೂ ವಾಸಿ ಮಾಡೋ ಗುಣವಿದೆ. 578 00:53:38,458 --> 00:53:40,041 ನಿಮ್ಮ ಗಾಯ ವಾಸಿ ಆದಂಗಾ? 579 00:53:46,166 --> 00:53:50,250 ಒಂಭತ್ತು ದಿನಗಳಲ್ಲಿ, ಸಮುದ್ರ ಪರೀಕ್ಷೆ ಆರಂಭವಾಗಿ ಹಡಗಿನ ಉಡಾವಣೆಯಾದಾಗ, 580 00:53:50,333 --> 00:53:51,833 ಅದರಲ್ಲಿ ನೀನು ಇರಬೇಕು. 581 00:53:52,750 --> 00:53:54,875 -ಅಪ್ಪ. -ಏನು? 582 00:53:56,166 --> 00:53:57,375 ಶಿಷ್ಯವೃತ್ತಿ ಸಿಕ್ಕಿತು. 583 00:53:57,958 --> 00:54:00,458 ನನ್ನನ್ನ ನಿರ್ಮಾಣಗಾರರ ಸಂಘಕ್ಕೆ ಸ್ವೀಕರಿಸಿದ್ದಾರೆ. 584 00:54:00,541 --> 00:54:03,666 ಹೇಗೆ? ಸಂಘದವರು ಯೋಚನೆ ಮಾಡ್ತಾರೆ ಅಂದುಕೊಳ್ಳಲಿಲ್ಲ. 585 00:54:03,750 --> 00:54:05,916 ಮತ್ತೆ ಅರ್ಜಿ ಸಲ್ಲಿಸೋಕೆ ಇಸಿಲ್ದೂರೇ ಹೇಳಿದ್ದು. 586 00:54:07,791 --> 00:54:09,416 ಇಸಿಲ್ದೂರ್ ಹೇಳಿದನಾ? 587 00:54:25,750 --> 00:54:27,875 ಶಾಂತಿಯ ಹುಡುಕಾಟ ಹೇಗೆ ನಡೀತಿದೆ? 588 00:54:29,125 --> 00:54:30,916 ಅಂದುಕೊಂಡಿದ್ದಕ್ಕಿಂತ ಚೆನ್ನಾಗೇ. 589 00:54:31,000 --> 00:54:32,291 ಏನಾಯ್ತು? 590 00:54:33,375 --> 00:54:34,833 ಒಬ್ಬ ಹೆಂಗಸಿನ ಬಗ್ಗೆ ಕಲಹ. 591 00:54:35,458 --> 00:54:36,750 ಹಲ್ಬ್ರ್ಯಾಂಡ್. 592 00:54:36,833 --> 00:54:38,041 ಶುರುಮಾಡಬೇಡ. 593 00:54:38,166 --> 00:54:40,166 ನಿನಗೆ ಈ ದ್ವೀಪ ಜಾಗವಲ್ಲ. 594 00:54:40,250 --> 00:54:44,083 ಇಲ್ಲಿ ಯಾರಾದರೂ ಇರಬಾರದು ಅಂತಿದ್ರೆ, ಅದು ನೀನೇ, ಎಲ್ಫ್. 595 00:54:44,208 --> 00:54:46,166 ನನಗೆ ಅದರ ಬಗ್ಗೆ ಅಷ್ಟೇನೂ ಖಾತ್ರಿಯಿಲ್ಲ. 596 00:54:46,833 --> 00:54:48,833 ಆದರೆ ಒಂದು ವಿಚಾರ ಮಾತ್ರ ಖಾತ್ರಿಯಿದೆ. 597 00:54:50,583 --> 00:54:52,666 ನೀನು ಹೇಳಿಕೊಳ್ಳೋದಕ್ಕಿಂತ ಹೆಚ್ಚೇ ಇದ್ದೀಯ. 598 00:54:52,750 --> 00:54:54,833 ಹಾಲ್ ಆಫ್ ಲೋರಲ್ಲಿ ನನಗಿದು ಸಿಕ್ಕಿತು. 599 00:55:09,416 --> 00:55:12,958 ಹೌದಾ? ನನಗಿದು ಒಬ್ಬ ಸತ್ತ ವ್ಯಕ್ತಿಯ ಹತ್ತಿರ ಸಿಕ್ಕಿತು. 600 00:55:13,666 --> 00:55:15,500 ಇದರ ವಿನ್ಯಾಸ ನನಗೆ ಚೆನ್ನಾಗಿ ಕಂಡಿತು. 601 00:55:18,500 --> 00:55:19,875 ಎಷ್ಟೋ ಯುಗಗಳ ಹಿಂದೆ, 602 00:55:20,791 --> 00:55:22,958 ಆ ಗುರುತು ಇದ್ದಂಥ ಒಬ್ಬ ವ್ಯಕ್ತಿ 603 00:55:23,041 --> 00:55:26,750 ಸೌತ್ ಲ್ಯಾಂಡ್ಸಿನ ಚದುರಿದ ಬುಡಕಟ್ಟುಗಳನ್ನು ಒಂದೇ ಧ್ಯೇಯದಡಿ ಒಟ್ಟಾಗಿಸಿದ. 604 00:55:28,041 --> 00:55:30,958 ಅದೇ ಧ್ಯೇಯ ಇಂದು ಅವರನ್ನು ಒಂದು ಮಾಡಬಹುದು. 605 00:55:31,041 --> 00:55:34,458 ಅವರ ನೆಲವನ್ನು ಕಸಿಯಲೆತ್ನಿಸುವ ದುಷ್ಟಶಕ್ತಿಯ ವಿರುದ್ಧವಾಗಿ. 606 00:55:37,125 --> 00:55:38,541 ನಿಮ್ಮ ನೆಲ, ಹಲ್ಬ್ರ್ಯಾಂಡ್. 607 00:55:40,666 --> 00:55:45,166 ನಿಮ್ಮ ಜನರಿಗೆ ರಾಜನೇ ಇಲ್ಲ, ಯಾಕಂದ್ರೆ ಅವರ ರಾಜ ನೀನೇ. 608 00:55:48,625 --> 00:55:51,333 ಸೆರೆಮನೆಯಲ್ಲಿರುವವನಿಗೆ ಇದನ್ನ ಹೇಳೋದು ವಿಚಿತ್ರವಾಗಿದೆ. 609 00:55:51,416 --> 00:55:55,666 ಸಾಮಾನ್ಯನ ಹಾಗೆ ಬದುಕೋಕೆ ಹೋಗಿ ನೀನೇ ಒಳಬಿದ್ದಂಥ ಸೆರೆಮನೆ. 610 00:55:56,333 --> 00:55:59,708 ನಿನ್ನ ಭುಜಗಳ ಮೇಲಿರಬೇಕಾದ ರಕ್ಷಾಕವಚ 611 00:55:59,791 --> 00:56:01,208 ನಿನ್ನ ಆತ್ಮಕ್ಕೆ ಭಾರವಾಗಿದೆ. 612 00:56:16,708 --> 00:56:17,958 ಹುಷಾರು, ಎಲ್ಫ್. 613 00:56:19,541 --> 00:56:22,875 ಈ ಗುರುತಿನ ವಾರಸುದಾರ ಕೇವಲ ಅಧಿಕಾರಕ್ಕಷ್ಟೇ ವಾರಸುದಾರನಲ್ಲ. 614 00:56:26,291 --> 00:56:29,875 ಯಾಕಂದ್ರೆ ಮಾರ್ಗೊಥಿಗಾಗಿ ರಕ್ತದ ಆಣೆ ಮಾಡಿದ್ದು ಇವನ ಪೂರ್ವಜನೇ. 615 00:56:31,958 --> 00:56:33,875 ನೀವು ಹುಡುಕುವ ವೀರ ನಾನಲ್ಲ. 616 00:56:36,583 --> 00:56:40,250 ಯಾಕಂದ್ರೆ ಆ ಯುದ್ಧ ಸೋತಿದ್ದು ನನ್ನ ಕುಟುಂಬವೇ. 617 00:56:40,333 --> 00:56:42,208 ಶುರು ಮಾಡಿದ್ದು ನನ್ನ ಕುಟುಂಬ. 618 00:56:43,166 --> 00:56:44,791 ನಮ್ಮ ಭೇಟಿ ಆಕಸ್ಮಿಕವಲ್ಲ. 619 00:56:45,333 --> 00:56:47,333 ವಿಧಿಯೂ ಅಲ್ಲ, ಹಣೆಬರಹವೂ ಅಲ್ಲ, 620 00:56:48,083 --> 00:56:50,416 ಮನುಷ್ಯರಿಗೆ ಹೆಸರಿಡಲು ಸಾಧ್ಯವಾಗದೆ ಆ ಶಕ್ತಿಗಳ 621 00:56:50,500 --> 00:56:52,500 ಬಗ್ಗೆ ಅವರು ಮಾತನಾಡುವ ಯಾವುದೇ ಪದಗಳಲ್ಲ. 622 00:56:53,458 --> 00:56:55,791 ನಮ್ಮ ಕಾರ್ಯ ಎಷ್ಟೋ ಮಹತ್ವವಾದದ್ದು. 623 00:56:57,083 --> 00:56:58,333 ನೀನದನ್ನ ನೋಡಬೇಕು. 624 00:56:58,416 --> 00:57:01,166 ಕತ್ತಿಯನ್ನು ಕೆಳಗಿಳಿಸದ ಎಲ್ಫ್ ಅಷ್ಟೇ ನನಗೆ ಕಾಣ್ತಿರೋದು. 625 00:57:01,625 --> 00:57:03,458 ಮಿಡ್ಲ್ ಅರ್ಥಿಗೆ ನನ್ನ ಜೊತೆ ಬಾ. 626 00:57:04,583 --> 00:57:07,416 ನಮ್ಮಿಬ್ಬರ ವಂಶವಾಹಿನಿಗಳನ್ನ ಪುನಃ ಪಡೆದುಕೊಳ್ಳೋಣ. 627 00:57:08,291 --> 00:57:09,375 ಹೇಗೆ? 628 00:57:10,458 --> 00:57:12,125 ಈ ದ್ವೀಪದಲ್ಲಿ ಬಂಧಿಯಾಗಿದ್ದೀಯ. 629 00:57:13,333 --> 00:57:15,000 ನಿನ್ನ ಹತ್ತಿರ ಸೈನ್ಯವೂ ಇಲ್ಲ. 630 00:57:16,750 --> 00:57:18,625 ಅದೆಲ್ಲಾ ಬದಲಾಗಲಿದೆ. 631 00:57:56,250 --> 00:57:57,583 ಇದೀಗ ಬಂದಿದೆ, ಅಪ್ಪ. 632 00:58:00,041 --> 00:58:01,625 ನಾವು ಹೆದರುತ್ತಿದ್ದ ಕಾಲ. 633 00:58:04,541 --> 00:58:06,125 ಎಲ್ಫ್ ಬಂದಿದ್ದಾಳೆ. 634 00:58:16,791 --> 00:58:18,375 ನಡೀರಿ! ತಳ್ಳಿ! 635 00:58:44,125 --> 00:58:46,125 ನಡಿ, ಪಾಪ್ಪಿ, ಹಿಂದೆಬೀಳ್ತೀಯ. 636 00:58:47,208 --> 00:58:50,041 ಉಸಿರು ತಗೊಳ್ಳೋಕೆ ಒಂದು ನಿಮಿಷ ಬಿಡಿ. 637 00:58:54,208 --> 00:58:55,041 ಹಿಂದಕ್ಕೆ! 638 00:58:57,583 --> 00:58:58,416 ಹೇ... 639 00:59:14,791 --> 00:59:15,625 ಹೇ... 640 00:59:20,833 --> 00:59:22,000 ಸ್ನೇಹಿತೆ. 641 00:59:30,750 --> 00:59:31,875 ಹೀಗೆ. 642 00:59:33,166 --> 00:59:36,083 ಮಿಕ್ಕವರ ಜೊತೆಯಾಗಿ ನಾವೆಲ್ಲರೂ ಹೀಗೇ ಹೋಗೋದು. 643 00:59:37,750 --> 00:59:40,500 ಅವನು ನಮಗೆ ಸಹಾಯ ಮಾಡ್ತಾನೆ, ಅವನಿಗೆ ನಾವು ನೆರವಾಗೋಣ. 644 00:59:42,333 --> 00:59:45,125 ಆಗಬಹುದಾ, ಅಮ್ಮ? ಜೊತೆ ಕರೆಯೋಣ? 645 01:01:30,083 --> 01:01:32,333 ವಾರ್ಗನ್ನು ಬಿಡಿ! 646 01:02:30,833 --> 01:02:31,833 ಬಿಡಿಸಿಕೋ! 647 01:02:40,833 --> 01:02:41,916 ಅರೊಂಡೀರ್! 648 01:03:33,583 --> 01:03:35,166 ಸೋದರ! 649 01:03:35,250 --> 01:03:36,333 ಇಲ್ಲ! 650 01:03:47,916 --> 01:03:49,000 ಇರಿ! 651 01:03:50,708 --> 01:03:53,208 ಅವನನ್ನು ಅಡಾರ್ ಬಳಿಗೆ ಕರೆತನ್ನಿ. 652 01:04:22,333 --> 01:04:25,375 ಅಡಾರ್! ಅಡಾರ್! ಅಡಾರ್! 653 01:06:20,291 --> 01:06:22,291 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ