1 00:00:06,666 --> 00:00:08,083 ನನಗೆ ನಿನ್ನ ಮಾತು ಬೇಕು. 2 00:00:08,875 --> 00:00:11,750 ಒಂದು ಹೊಸ ಅದಿರಿನ ಮೊದಲ ಕುರುಹುಗಳು. 3 00:00:12,458 --> 00:00:15,166 ತನ್ನನ್ನಿಲ್ಲಿಗೆ ಕಳುಹಿಸಿದ ಗಿಲ್-ಗಾಲಾಡಿಗೆ ಯಾವುದೇ 4 00:00:15,250 --> 00:00:18,125 ದುರುದ್ದೇಶ ಇಲ್ಲ ಅಂತ ಎಲ್ರೊಂಡ್ ಮನವರಿಕೆ ಮಾಡಿಸಿದ್ದಾನೆ. 5 00:00:18,208 --> 00:00:19,875 ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ. 6 00:00:19,958 --> 00:00:20,875 ಲಿಂಡೊನ್ನಿಗೆ ಹೋಗು. 7 00:00:20,958 --> 00:00:21,791 ಏನಂತ ತಿಳಿದುಕೋ. 8 00:00:23,458 --> 00:00:25,666 ಸೀ ಗಾರ್ಡಿನಿಂದ ಹೊರಗೋಗಿ! ನೀವು ಮೂವರೂ! 9 00:00:25,750 --> 00:00:26,583 ಸಾಕು! 10 00:00:26,666 --> 00:00:29,833 ನನ್ನ ಸ್ನೇಹಿತರ ಜೀವನ ಹಾಳು ಮಾಡಿದೆ, ನಮ್ಮ ಕುಟುಂಬದ ಹೆಸರು ಕೆಡಿಸಿದೆ. 11 00:00:30,166 --> 00:00:34,166 ಕಾವಲು ಸ್ತಂಭದಲ್ಲಿ ಆಶ್ರಯ ಪಡೆದಿರುವ ಮನುಷ್ಯರ ಬಳಿ ಹೋಗು. 12 00:00:34,291 --> 00:00:35,875 ಅವರಿಗೊಂದು ಸಂದೇಶವನ್ನು ಕೊಡು. 13 00:00:35,916 --> 00:00:39,583 ನೀವು ಈ ನೆಲದ ಎಲ್ಲಾ ಹಕ್ಕುಗಳನ್ನು ಬಿಟ್ಟು ಅವರಿಗೆ ಶರಣಾದರೆ 14 00:00:39,666 --> 00:00:41,083 ನಿಮ್ಮ ಜನರು ಬದುಕಬಹುದು ಅಂತ. 15 00:00:42,500 --> 00:00:44,916 ಒಂದು ದಿನ ನಮ್ಮ ನಿಜವಾದ ರಾಜ ಬರ್ತಾನೆ. 16 00:00:45,291 --> 00:00:47,500 ನಿಮ್ಮ ಕಾರಾಗೃಹದಲ್ಲಿರುವ ಆ ಮನುಷ್ಯ 17 00:00:47,583 --> 00:00:51,458 ಸೌತ್ ಲ್ಯಾಂಡ್ಸಿನ ಸಿಂಹಾಸನದಿಂದ ದೂರವಾಗಿ ಗಡಿಪಾರಾಗಿರುವ ಉತ್ತರಾಧಿಕಾರಿ. 18 00:00:51,833 --> 00:00:53,500 ನಂಜೊತೆ ಯುದ್ಧದಲ್ಲಿ ಭಾಗಿಯಾಗಿ... 19 00:00:53,583 --> 00:00:55,083 -ನಾನು ಬರ್ತೀನಿ! -ನಾನು ಕೂಡ! 20 00:00:55,166 --> 00:00:57,666 ಸೌರೊನ್ ಅವರ ಭೂಮಿಗಳ ಆಕ್ರಮಿಸಿಕೊಳ್ಳುವುದರೊಳಗೆ. 21 00:01:01,125 --> 00:01:02,083 ನೀನು ಸುಳ್ಳು ಹೇಳಿ, 22 00:01:02,166 --> 00:01:04,625 ನಮ್ಮ ನಡುವೆ ಒಬ್ಬ ಅಪಾಯಕಾರಿ ಆಗಂತುಕನನ್ನ ಕರೆತಂದಿದ್ದೀಯ. 23 00:01:07,458 --> 00:01:10,000 ನಮ್ಮನ್ನ ಬಿಟ್ಟು ಹೊರಟುಹೋಗ್ತಾರೆ. 24 00:01:10,083 --> 00:01:12,041 ಮಿಕ್ಕವರ ಜೊತೆಯಾಗಿ ನಾವು ಹೀಗೇ ಹೋಗೋದು. 25 00:01:12,125 --> 00:01:14,416 ಅವನು ನಮಗೆ ನೆರವಾಗುತ್ತಾನೆ, ನಾವವನಿಗೆ ನೆರವಾಗೋಣ. 26 00:02:29,458 --> 00:02:35,458 ದಿ ಲಾರ್ಡ್ ಆಫ್ ದಿ ರಿಂಗ್ಸ್ : ದಿ ರಿಂಗ್ಸ್ ಆಫ್ ಪವರ್ 27 00:03:01,375 --> 00:03:04,333 ಆಲಸಿ. ಆಲಸಿ. 28 00:03:04,416 --> 00:03:06,250 ಇಲ್ಲ, ವ... ವಲಸೆ. 29 00:03:06,333 --> 00:03:08,833 ವ-ಲ-ಸೆ. 30 00:03:10,750 --> 00:03:14,041 ಅಂದರೆ ಬೇರೆಡೆ ಹೋಗುವುದು. ನಾವು ಹಾರ್ಫೂಟ್ಸ್ ಅದನ್ನೇ ಮಾಡುವುದು. 31 00:03:14,125 --> 00:03:17,125 ಚಳಿಗಾಲದಲ್ಲಿ ಓಲ್ಡ್ ಫಾರೆಸ್ಟಿಗೆ ಹೋಗ್ತೀವಿ, 32 00:03:17,208 --> 00:03:21,208 ನಡು-ಬೇಸಿಗೆಯಲ್ಲಿ ಬಸವನಹುಳು ಹಿಡಿಯೋಕೆ ನೋರ್ಫೀಲ್ಡ್ ಗ್ಲೆನ್ನಿಗೆ ಹೋಗ್ತೀವಿ. 33 00:03:21,333 --> 00:03:23,250 -"ಬಸವನಹುಳು"? -ಹಾಂ, ಬಸವನಹುಳು. 34 00:03:23,333 --> 00:03:26,916 ಓಕ್ ಮರದ ಎಲೆಗಳು ಕೆಂಪಾಗಲು ಶುರುವಾದಾಗ, ಗ್ರೋವಿಗೆ ಹೊರಡುತ್ತೇವೆ. 35 00:03:27,000 --> 00:03:28,625 ಒಂದು ಇಡಿಯ ತೋಟ, 36 00:03:28,708 --> 00:03:33,708 ಅದರ ತುಂಬೆಲ್ಲಾ ಸೇಬುಗಳು, ಜಲ್ದರಿ, ಪ್ಲಮ್ ಹಣ್ಣು, ಗಜ್ಜರಿಗಳು, ನಿನಗಿಷ್ಟ ಆಗುತ್ತೆ. 37 00:03:36,416 --> 00:03:41,041 ಸಮಸ್ಯೆ ಏನೆಂದರೆ ಇಲ್ಲಿಗೂ ಅಲ್ಲಿಗೂ ಮಧ್ಯೆ ನೂರು ಅಪಾಯಗಳಿವೆ. 38 00:03:43,666 --> 00:03:44,750 "ಅಪಾಯಗಳು"? 39 00:03:45,375 --> 00:03:46,958 ಅಂದರೆ ಕೇಡು. 40 00:03:47,041 --> 00:03:51,208 ಅಂದರೆ ದೊಡ್ಡ ಜನ, ತೋಳಗಳು, ಮಂಜು, ಮಳೆ, 41 00:03:51,291 --> 00:03:55,750 ಗುಡ್ಡದ ರಾಕ್ಷಸರು, ಗುಹೆಯ ರಾಕ್ಷಸರು, ನಮ್ಮನ್ನು ಕೊಲ್ಲುವಂಥವರು. 42 00:03:57,750 --> 00:03:58,833 "ಕೊಲ್ಲು"? 43 00:04:00,333 --> 00:04:02,958 ಅಂದ್ರೆ ಯಾರನ್ನಾದರೂ ಸಾಯಿಸುವುದು. 44 00:04:16,125 --> 00:04:17,958 ನಾನು ಅಪಾಯ. 45 00:04:20,125 --> 00:04:21,750 ಇಲ್ಲ. ಇಲ್ಲ, ಅದು ನೀನಲ್ಲ. 46 00:04:21,833 --> 00:04:24,000 -ಅದು... -ಇಲ್ಲ. ಮಿಂಚುಹುಳುಗಳು. 47 00:04:24,583 --> 00:04:26,708 ಅದು ಆಕಸ್ಮಿಕವಷ್ಟೇ. ಅದು... 48 00:04:27,791 --> 00:04:29,333 ನೀನು ಅಪಾಯ ಅಲ್ಲ. 49 00:04:30,291 --> 00:04:31,541 ನೀನು ಒಳ್ಳೆಯವನು. 50 00:04:33,166 --> 00:04:35,125 ನಾನು ಒಳ್ಳೆಯವನು? 51 00:04:36,041 --> 00:04:40,208 ನೀನು ಒಳ್ಳೆಯವನು. ಯಾಕಂದ್ರೆ ನೀನಿಲ್ಲಿ ನೆರವಾಗೋಕೆ ಬಂದಿದ್ದೀಯಾ. 52 00:04:44,458 --> 00:04:45,833 ನೋರಿ! 53 00:04:45,916 --> 00:04:48,333 ಸರಿ. ಮಿಕ್ಕವರು ಈಗ ತಯಾರಿರಬಹುದು. 54 00:04:49,708 --> 00:04:50,958 ಬೇಗ ಬೇಗ! 55 00:04:51,958 --> 00:04:54,541 ಹೋಗೋಣ. ಬಾ. 56 00:04:58,000 --> 00:04:59,458 ನಾ... ನಾನು... 57 00:05:00,375 --> 00:05:01,791 ನಾನು ಒಳ್ಳೆಯವನು. 58 00:05:04,916 --> 00:05:06,541 ಆ ಊರುಗೋಲಿನಿಂದ ಮತ್ತೆ ಚುಚ್ಚಿದರೆ 59 00:05:06,625 --> 00:05:09,041 ನಿದ್ದೆಯಲ್ಲಿ ಕಾಲ್ಬೆರಳ ಕೂದಲು ಕಿತ್ತುಹಾಕ್ತೀನಿ. 60 00:05:09,125 --> 00:05:11,333 ಹಾಗಿದ್ರೆ ನನ್ನ ಕಿವಿಯನ್ನು ಕೀಳು. 61 00:05:11,416 --> 00:05:13,375 ನಿನ್ನ ಗೊರಕೆಯಿಂದ ತಪ್ಪಿಸಿಕೊಳ್ಳಬಹುದು. 62 00:05:13,458 --> 00:05:14,791 ನಾನು ಗೊರಕೆ ಹೊಡೆಯಲ್ಲ. 63 00:05:14,875 --> 00:05:16,458 -ಹೊಡೀತೀಯ. -ಹೊಡೀತೀಯ. 64 00:05:18,125 --> 00:05:21,000 ಬನ್ನಿ ಈಗ. ಗ್ರೋವ್ ನಮ್ಮ ಬಳಿಗೆ ವಲಸೆ ಬರೋದಿಲ್ಲ. 65 00:05:21,083 --> 00:05:25,083 ನಿಮ್ಮಮ್ಮನ ನಡಿಗೆಯ ಹಾಡನ್ನು ಹಾಡಿದರೆ ನಾವು ಸ್ವಲ್ಪ ಬೇಗ ನಡೆಯಬಹುದು. 66 00:05:25,166 --> 00:05:27,708 ಹಾಂ, ಹಾಡಪ್ಪ, ಏನಾದರೂ ಗುನುಗು. 67 00:05:27,791 --> 00:05:29,875 ಹಾಡು, ನಮಗೇನಾದರೂ ಪ್ರಯೋಜನವಾಗಬಹುದು. 68 00:05:33,041 --> 00:05:36,375 ಸೂರ್ಯ ಬೇಗ ಮುಳುಗುತ್ತಿದ್ದಾನೆ 69 00:05:36,458 --> 00:05:39,166 ಕಲ್ಲಿನ ಮರಗಳಡಿಯಲ್ಲಿ 70 00:05:39,875 --> 00:05:42,916 ಗೋಪುರದೊಳಗಿನ ಬೆಳಕು 71 00:05:43,000 --> 00:05:46,041 ನನ್ನ ತವರಾಗಿ ಉಳಿದಿಲ್ಲ 72 00:05:46,125 --> 00:05:49,416 ಮಂದಾಗ್ನಿಯ ಕಣ್ಣುಗಳಾಚೆ 73 00:05:49,500 --> 00:05:52,666 ಕರಿ ಮರಳೇ ನಾ ಮಲಗುವ ಹಾಸಿಗೆ 74 00:05:52,750 --> 00:05:54,916 ಗೊತ್ತಿರುವುದೆಲ್ಲಾ ಕೊಟ್ಟಿದ್ದೇನೆ 75 00:05:55,000 --> 00:05:59,916 ಗೊತ್ತಿರದ ಭವಿಷ್ಯಕ್ಕಾಗಿ 76 00:06:00,000 --> 00:06:02,625 ಕೂಗಿ ಎನ್ನ ಕೂಗಿ ಎನ್ನ, ದೂರದ ನೆಲಗಳೇ 77 00:06:02,708 --> 00:06:04,833 ರ್ಹೊವೇನಿಯನ್ ಗುಡ್ಡಗಳು - ವೀಡ್ಬ್ರೂಕ್ 78 00:06:05,875 --> 00:06:08,375 ಯಾಕಂದ್ರೆ ನಾನೀ ಸುತ್ತುವ ದಿನವ ಸುತ್ತಿಯೇ ಕಳೆಯಬೇಕು 79 00:06:08,458 --> 00:06:10,958 ಗುಡ್ಡದಡಿ - ಗ್ರೇ ಮಾರ್ಷಸ್ 80 00:06:11,625 --> 00:06:14,625 ದೂರ ನಾನು ಹೋಗಬೇಕು 81 00:06:14,708 --> 00:06:17,333 ಈ ಸುತ್ತುವ ದಿನದಂದು 82 00:06:19,166 --> 00:06:21,833 ಕುಡಿಯಲು ಕಡಿಮೆಯಿದೆ 83 00:06:21,916 --> 00:06:25,125 ತಿನ್ನಲೂ ಕಡಿಮೆಯಿದೆ 84 00:06:25,208 --> 00:06:30,083 ಶಕ್ತಿ ಇಲ್ಲವೆನ್ನುತ್ತೆ ಆದರೆ ದಾರಿ ಬೇಕೆನ್ನುತ್ತೆ 85 00:06:30,166 --> 00:06:31,416 ಟ್ರೌಟ್ ತಿರುವು 86 00:06:31,500 --> 00:06:36,916 ನನ್ನ ಕಾಲುಗಳು ಚಿಕ್ಕವು ಹಾದಿ ತುಂಬಾ ದೊಡ್ಡದು 87 00:06:37,000 --> 00:06:39,791 ವಿಶ್ರಾಂತಿಯಿಲ್ಲ, ಸುಖವಿಲ್ಲ 88 00:06:39,875 --> 00:06:43,333 ಸುಖವಿಲ್ಲ, ಆದರೆ ಹಾಡಿದೆ 89 00:06:43,458 --> 00:06:45,791 ಥಿಸಲ್ಡೆಲ್ - ದಿ ಬ್ರೈಡ್ಸ್ 90 00:06:45,875 --> 00:06:50,916 ಹಾಡಿ ಎನಗೆ, ಹಾಡಿ ಎನಗೆ, ದೂರದ ನೆಲಗಳೇ 91 00:06:51,000 --> 00:06:56,875 ಓ, ಮೇಲೆದ್ದು ದಾರಿ ತೋರಿ ಈ ಸುತ್ತುವ ದಿನದಂದು 92 00:06:56,958 --> 00:07:00,166 ಹುಡುಕಿಕೊಡಲು ಮಾತು ಕೊಡಿ 93 00:07:00,250 --> 00:07:03,833 ಈ ಸುತ್ತುವ ದಿನ 94 00:07:04,833 --> 00:07:08,041 ಕೊನೆಗೆ ಬರುವುದು ಅವರ ಉತ್ತರ 95 00:07:08,125 --> 00:07:11,083 ಚಳಿಯೊಳಗಿಂದ, ಮಂಜಿನೊಳಗಿಂದ 96 00:07:11,166 --> 00:07:17,166 ವಿಸ್ಮಿತರು, ವಿಹಾರಿಗಳೆಲ್ಲಾ ಕಳೆದುಹೋದವರಲ್ಲ 97 00:07:17,250 --> 00:07:20,166 ದುಃಖ ಏನೇ ಇರಲಿ 98 00:07:20,250 --> 00:07:23,291 ಯಾವುದೇ ಪರಿಸ್ಥಿತಿ ಇರಲಿ 99 00:07:23,375 --> 00:07:29,375 ವಿಸ್ಮಿತರು, ವಿಹಾರಿಗಳೆಲ್ಲಾ ಕಳೆದುಹೋದವರಲ್ಲ 100 00:08:37,166 --> 00:08:40,208 ಸುರಂಗ ಪೂರ್ಣಗೊಂಡಿದೆ, ಒಡೆಯ. 101 00:08:44,708 --> 00:08:48,208 ನಿನ್ನ ತೋಳು. ನನಗೆ ತೋರಿಸು. 102 00:08:57,583 --> 00:08:58,916 ಹೇಗನ್ನಿಸುತ್ತಿದೆ? 103 00:08:59,000 --> 00:09:01,333 ಅಗ್ನಿಯಂತೆ, ಲಾರ್ಡ್ ಫಾದರ್. 104 00:09:03,333 --> 00:09:07,000 ನನಗೆ ಅನಿಸುವ ಹಾಗೆ ನಿನಗೂ ಅನಿಸಬೇಕಿತ್ತು. 105 00:09:09,458 --> 00:09:11,000 ಇದು ಬೇಗ ಹೊರಟುಹೋಗುತ್ತದೆ. 106 00:09:13,541 --> 00:09:17,916 ಅದರೊಂದಿಗೆ ಇದರ ಬೆಚ್ಚನೆಯ ಅನುಭವ ಪಡೆದ ನನ್ನ ಒಂದು ಭಾಗವೂ ಸಹ. 107 00:09:21,958 --> 00:09:23,125 ಅದನ್ನು ಕಳೆದುಕೊಳ್ತೇನೆ. 108 00:09:26,583 --> 00:09:29,583 ಸೈನ್ಯ ದಳಗಳನ್ನು ಕರೆಸಿ. ಸಮಯವಾಗಿದೆ. 109 00:10:02,708 --> 00:10:04,708 ನಮ್ಮ ಶತ್ರು ದಾಳಿಮಾಡಲು ಅನುವಾಗಿದ್ದಾನೆ. 110 00:10:05,625 --> 00:10:07,791 ಕ್ಷಮಾದಾನವನ್ನು ಪಡೆಯಲು 111 00:10:07,875 --> 00:10:10,583 ನಾವು ಈ ಗೋಪುರವನ್ನು ಬಿಟ್ಟುಕೊಟ್ಟು 112 00:10:10,666 --> 00:10:12,833 ಅವರ ಅಧಿಪತಿಗೆ ಶರಣಾಗಬೇಕು. 113 00:10:15,375 --> 00:10:17,875 ನೀವು ಎದುರುನೋಡುವ ರಾಜ ನಾನಲ್ಲ ಅಂತ ನನಗೆ ಗೊತ್ತು. 114 00:10:17,958 --> 00:10:20,958 ಆದರೆ ನೀವು ನನ್ನೊಂದಿಗೆ ನಿಂತು ಸೆಣೆಸಿದರೆ, 115 00:10:21,041 --> 00:10:24,458 ಈ ಗೋಪುರ ಇನ್ನೆಂದಿಗೂ ನಮ್ಮ ದೌರ್ಬಲ್ಯದ ನೆನಪಾಗಿರುವುದಿಲ್ಲ, 116 00:10:24,541 --> 00:10:26,791 ಬದಲಾಗಿ ನಮ್ಮ ಶಕ್ತಿಯ ಸಂಕೇತವಾಗಿರುತ್ತದೆ. 117 00:10:31,041 --> 00:10:32,625 ನನ್ನೊಂದಿಗೆ ಯಾರು ನಿಲ್ತೀರಿ? 118 00:10:33,416 --> 00:10:36,666 ನಿಮ್ಮಲ್ಲಿ ಯಾರು ಜೊತೆ ನಿಂತು ಸೆಣೆಸುವಿರಿ? 119 00:10:45,791 --> 00:10:47,208 -ಆಗಲಿ. ಮಾಡೋಣ. -ಆಗಲಿ. 120 00:10:48,291 --> 00:10:49,916 ನಿಂತು ಸೆಣೆಸುವುದಾ? 121 00:10:52,583 --> 00:10:54,166 ನಿಂತು ಸೆಣೆಸುವುದಾ? 122 00:10:54,875 --> 00:10:56,125 ಸತ್ತುಹೋಗ್ತೀರಾ. 123 00:10:57,500 --> 00:11:01,000 ನನ್ನ ಪ್ರಕಾರ ನಾವು ಜಾಗ್ರತೆಯಿಂದ 124 00:11:01,083 --> 00:11:04,000 ಬರುವ ಶತ್ರುವಿಗೆ ಶರಣಾಗುವುದೇ ಲೇಸು. 125 00:11:04,083 --> 00:11:06,250 ಆ ಶತ್ರುವಿನ ಕಣ್ಣಲ್ಲಿ ಕಣ್ಣಿಟ್ಟು ನೋಡಿದ್ದೇನೆ. 126 00:11:06,958 --> 00:11:08,750 ಅವನಿಂದ ನಿನಗೆ ವಿಮೋಚನೆ ಇಲ್ಲ. 127 00:11:08,833 --> 00:11:10,541 ಮತ್ತೆ ನಿನ್ನಿಂದ ಇದೆಯಾ? 128 00:11:11,458 --> 00:11:12,791 ಎಲ್ಫ್? 129 00:11:14,041 --> 00:11:16,458 ನಮ್ಮ ಪೂರ್ವಜರ ಪರವಾಗಿ ಇದನ್ನು ಹೇಳುತ್ತಿದ್ದೇನೆ. 130 00:11:18,000 --> 00:11:19,500 ಅವರು ಬದುಕಿದರು! 131 00:11:23,791 --> 00:11:26,125 ಜೊತೆಯಾಗಿ ನಾವು ಇದರಲ್ಲಿ ಬದುಕುಳಿಯಬಹುದು. 132 00:11:27,000 --> 00:11:31,041 ನನ್ನನ್ನ ಹಿಂಬಾಲಿಸಿ, ಜೊತೆಯಾಗಿ ಸಾಧಿಸೋಣ! 133 00:11:32,791 --> 00:11:35,916 ಬನ್ನಿ. ನನ್ನನ್ನ ಹಿಂಬಾಲಿಸಿ. ಬನ್ನಿ! 134 00:11:37,750 --> 00:11:39,000 ಬನ್ನಿ! 135 00:11:39,083 --> 00:11:39,916 ನನ್ನ ಹಿಂಬಾಲಿಸಿ! 136 00:11:44,166 --> 00:11:45,250 ಥಿಯೋ! 137 00:11:46,083 --> 00:11:49,250 ಇದೇ ನಮ್ಮ ಅವಕಾಶ. ಇದೇ ನಮ್ಮ ಸಮಯ. ಬಾ. 138 00:11:49,333 --> 00:11:52,375 ನನ್ನೊಂದಿಗೆ. ಬಾರೋ, ಹುಡುಗ. ನನ್ನನ್ನ ಹಿಂಬಾಲಿಸೋ, ಹುಡುಗ. 139 00:12:06,333 --> 00:12:07,583 ಸ್ವಲ್ಪ ಸಹಾಯ ಮಾಡ್ತೀಯಾ? 140 00:12:07,666 --> 00:12:09,166 ಮೇಲಕ್ಕೆ... 141 00:12:16,875 --> 00:12:18,333 ಇಷ್ಟು ಸಾಕು ಬಿಡ್ರಪ್ಪ. 142 00:12:23,458 --> 00:12:24,666 ಈಗ ಅದನ್ನು ಸಾಗಿಸಿ. 143 00:12:31,083 --> 00:12:33,166 -ಅಪ್ಪ. -ಇಸಿಲ್ದೂರ್. 144 00:12:33,250 --> 00:12:34,583 ನಾವು ಮಾತಾಡಬಹುದಾ? 145 00:12:37,375 --> 00:12:39,625 ದಂಡಯಾತ್ರೆಗೆ ನನ್ನ ಯಾಕೆ ಆರಿಸಿಕೊಳ್ಳಲಿಲ್ಲ? 146 00:12:39,708 --> 00:12:42,333 -ನೀನು ಪಶ್ಚಿಮಕ್ಕೆ ಹೋಗುತ್ತಲಿದ್ದೆ. -ಈಗೇನಿಲ್ಲ. 147 00:12:42,416 --> 00:12:45,250 ನ್ಯೂಮೆನೊರಿನಷ್ಟು ಮೌಲ್ಯವಾದದ್ದನ್ನು ಮಾಡೋವರೆಗೂ ಇಲ್ಲ. 148 00:12:45,958 --> 00:12:48,791 ಅಂದರೆ ಏನು? ನೀನೇ ಹೇಳು. 149 00:12:49,500 --> 00:12:51,083 ಅದನ್ನು ಹೇಳಲು ಪದಗಳಿಲ್ಲ. 150 00:12:52,500 --> 00:12:54,916 ಅದಕ್ಕೇ ಅದನ್ನು ಹುಡುಕಲು ಕಷ್ಟಪಡುತ್ತಿದ್ದೇನೆ. 151 00:12:55,416 --> 00:12:57,125 ನಿಮ್ಮ ಸಹಾಯ ಕೋರುತ್ತಿದ್ದೇನೆ. 152 00:12:58,208 --> 00:12:59,625 ಕೊಡೋಕಾಗಿದ್ರೆ ಚೆನ್ನಾಗಿರೋದು. 153 00:12:59,708 --> 00:13:03,708 ಆದರೆ ನಾವು ಇರಿಸಿಕೊಳ್ಳಲು ಆಗುವುದಕ್ಕಿಂತ ಹೆಚ್ಚಿನ ಸ್ವಯಂಸೇವಕರು ಇದ್ದಾರೆ. 154 00:13:03,791 --> 00:13:06,291 ಅರ್ಧಕ್ಕರ್ಧ ನಗರಕ್ಕೆ ಆ ದೋಣಿಗಳಲ್ಲಿ ಜಾಗ ಬೇಕು. 155 00:13:08,958 --> 00:13:10,958 ಮುಂದಿರುವ ಸಾಲಿಗೆ ನನ್ನನ್ನು ಕಳುಹಿಸಿ. 156 00:13:14,250 --> 00:13:15,750 ನಿನ್ನ ಅರ್ಹತೆ ಏನು? 157 00:13:15,833 --> 00:13:18,333 -"ಅರ್ಹತೆ"? -ಸೀ ಗಾರ್ಡಲ್ಲಿ ನಿನಗೆ ಸ್ಥಾನ ಇದೆಯೇ? 158 00:13:18,416 --> 00:13:22,583 -ನಿಮಗ್ಗೊತ್ತು ನಾನು ಒಬ್ಬ ಉತ್ತಮ ನಾವಿಕ... -ಸೀ ಗಾರ್ಡಲ್ಲಿ ನಿನಗೆ ಸ್ಥಾನ ಇದೆಯೇ? 159 00:13:22,666 --> 00:13:24,416 ರಾಣಿಯ ಅಂಗರಕ್ಷಣೆ? ವ್ಯಾಪಾರಿಗಳ ಸಂಘ? 160 00:13:24,500 --> 00:13:26,666 -ಇದು ಸಮವಸ್ತ್ರದ ಬಗ್ಗೆ. -ಕುದುರೆಸವಾರರ ಸಂಘ? 161 00:13:26,750 --> 00:13:27,750 ಇದಕ್ಕೆ ಅರ್ಥವಿಲ್ಲ. 162 00:13:27,833 --> 00:13:30,750 ಈ ದ್ವೀಪದ ಸಂಪ್ರದಾಯಗಳನ್ನು ನೀನು ಮುರಿಯುತ್ತಿದ್ದರೆ, 163 00:13:30,833 --> 00:13:33,875 ಈ ಜನ ಅವುಗಳನ್ನು ತೊಡಗಿಸಿಕೊಂಡಿದ್ದರು. 164 00:13:35,291 --> 00:13:38,125 ಸಹಾಯವಾಗುವ ದಾರಿಗಳನ್ನು ಹುಡುಕುತ್ತಿದ್ದರು. ಸೇವೆ ಮಾಡಲು. 165 00:13:39,458 --> 00:13:42,125 ಅದರ ಬಗ್ಗೆಯಂತೂ ನಿನಗೆ ಕಿಂಚಿತ್ತೂ ಚಿಂತೆಯಿಲ್ಲ. 166 00:13:44,500 --> 00:13:47,541 ಚಿಂತೆಯಿದೆ. ನಾನು ಸೇವೆ ಮಾಡಲು ತಯಾರಿದ್ದೇನೆ. 167 00:13:48,916 --> 00:13:50,750 ಬೇರೆ ಯಾವುದರಿಂದಲೂ ಹೆಮ್ಮೆಯಾಗಲ್ಲ. 168 00:13:51,833 --> 00:13:53,291 ಆದರೆ ನಿನಗೆ ಅವಕಾಶವಿತ್ತು. 169 00:13:55,250 --> 00:13:56,750 ನಿನ್ನ ಆಯ್ಕೆಯ ನೀನು ಮಾಡಿದೆ. 170 00:14:02,708 --> 00:14:04,750 ಯಾರೋ ಹುಚ್ಚು ಸೌತ್ ಲ್ಯಾಂಡವನು ಮತ್ತು ಒಬ್ಬ 171 00:14:04,833 --> 00:14:07,875 ಯುದ್ಧದ ಗೀಳಿನ ಎಲ್ಫಿಗಾಗಿ ನ್ಯೂಮೆನೊರಿನ ಜೀವಗಳನ್ನು ಪಣಕ್ಕಿಡಬೇಕಾ? 172 00:14:07,958 --> 00:14:11,666 ರಾಯಭಾರಿ ಫರಝೋನ್! ನಮ್ಮ ಜನರನ್ನು ಸಾಯಲು ಯಾಕೆ ಕಳುಹಿಸುತ್ತಿದ್ದೀರಾ? 173 00:14:13,583 --> 00:14:14,666 ಫರಝೋನ್! 174 00:14:17,416 --> 00:14:18,958 -ಫರಝೋನ್! -ನಂಜೊತೆ ಬಾ. 175 00:14:19,041 --> 00:14:21,833 ವಿಷಯ ಮುಟ್ಟಿಸದಿದ್ದುದಕ್ಕೆ ಕ್ಷಮಿಸು. ಈ ವಾರ ಬಹಳ ಕಷ್ಟ ಇತ್ತು. 176 00:14:21,916 --> 00:14:23,333 ಆತ ಇದನ್ನು ಯಾಕೆ ತಡೆಯಲಿಲ್ಲ? 177 00:14:23,416 --> 00:14:26,125 -ಆಕೆಗೆ ನಿಷ್ಠರಾಗಿದ್ದಾರೆ. ಸರಿಯಾಗೋ... -ತಪ್ಪಾಗಿ. 178 00:14:26,791 --> 00:14:29,791 ಬಹಳ ಮಂದಿಗೆ ನಿನ್ನ ಹಾಗೇ ಅನಿಸುತ್ತಿದೆ. ಆತನ ಕದಲಿಸಲು ಸಾಧ್ಯವಿಲ್ಲ… 179 00:14:29,875 --> 00:14:33,000 ಅದನ್ನು ನೀನೇ ಮಾಡಬೇಕು. ಆತ ನಿನ್ನ ಮಾತನ್ನಷ್ಟೇ ಕೇಳುತ್ತಾರೆ. 180 00:14:34,541 --> 00:14:37,500 ನಾನು ಮಾತಾಡುವಾಗ ಅವರ ಕಿವಿಗಳು ಮುಚ್ಚಿಹೋಗುತ್ತವೆ. 181 00:14:41,625 --> 00:14:43,625 ಹಾಗಿದ್ದರೆ ಜೋರಾಗಿ ಮಾತಾಡು. 182 00:15:25,291 --> 00:15:27,041 ಸೌತ್ ಲ್ಯಾಂಡವನೇ. 183 00:15:27,916 --> 00:15:29,375 ನಿನಗಾಗಿ ಯಾರೋ ಬಂದಿದ್ದಾರೆ. 184 00:15:40,416 --> 00:15:42,333 ಮತ್ತೆ ಶತ್ರು ಮುಂದೆ ಎಲ್ಲಿಗೆ ಹೋದನು? 185 00:15:42,416 --> 00:15:46,125 ಮುಂದೆ ದಕ್ಷಿಣಕ್ಕೆ ಅಂದ್ಕೋತೀನಿ. ಒಸ್ಟಿರಿಥ್ನ ಕಾವಲು ಗೋಪುರದ ಕಡೆಗೆ. 186 00:15:48,083 --> 00:15:49,833 ಸೀ ಗಾರ್ಡಿಗೆ ವಿಷಯ ತಿಳಿಸುತ್ತೇನೆ. 187 00:15:55,458 --> 00:15:57,708 ಧನ್ಯವಾದಗಳು, ಲಾರ್ಡ್ ಹಲ್ಬ್ರ್ಯಾಂಡ್. 188 00:15:57,791 --> 00:16:02,458 ನಾವು ದಡ ಮುಟ್ಟಿದ್ದೇ ನಿಮ್ಮ ಸಹಯೋಗ ಬಹಳ ಮೌಲ್ಯಯುತವಾದ ನೆರವಾಗಲಿದೆ ಎಂದು ನನಗ್ಗೊತ್ತು. 189 00:16:03,166 --> 00:16:04,333 ದಡ ಮುಟ್ಟೋದಾ? 190 00:16:04,916 --> 00:16:08,791 ನಿಮ್ಮ ಜನರನ್ನು ಒಗ್ಗೂಡಿಸುವ ನಿನ್ನ ಆಶಯದ ಬಗ್ಗೆ ಗಲಾಡ್ರಿಯಲ್ ಹೇಳಿದಳು. 191 00:16:10,083 --> 00:16:11,250 ಈಗ ಹೇಳಿದಳಾ? 192 00:16:11,333 --> 00:16:14,250 ಅವಳು ಆತುರದಲ್ಲಿ ಹೇಳಿಲ್ಲ ತಾನೇ? 193 00:16:15,083 --> 00:16:16,958 ಸತ್ಯವಾಗಿ, ಅದು ನನ್ನ ಉದ್ದೇಶ… 194 00:16:17,041 --> 00:16:20,500 ನನ್ನ ಸಹವರ್ತಿಗೆ ತನ್ನ ಕಾರ್ಯದ ಭಾರ ಅರಿವಾಗುತ್ತಿದೆಯಷ್ಟೇ. 195 00:16:20,583 --> 00:16:24,958 ಸಮಯ ಬಂದಾಗ ಆತ ತನ್ನ ಕಾರ್ಯವನ್ನು ನೆರವೇರಿಸುತ್ತಾನೆಂದು ಯಾವುದೇ ಅನುಮಾನವಿಲ್ಲ. 196 00:16:27,250 --> 00:16:30,583 ಇದರಲ್ಲಿ ನನ್ನ ಹೆಸರೂ ಭಾಗಿಯಾಗಿರುವುದರಿಂದ ಹಾಗೇ ಆಗಬೇಕು. 197 00:16:31,625 --> 00:16:35,625 ಮಹಾರಾಣಿ ರೀಜೆಂಟ್, ನಿಮ್ಮ ತಂದೆಯವರು ಗೋಪುರದಲ್ಲಿ ನಿಮ್ಮನ್ನು ಕಾಣಲು ಬಯಸುತ್ತಿದ್ದಾರೆ. 198 00:16:44,916 --> 00:16:46,416 "ಗಲಾಡ್ರಿಯಲ್ ನಮಗೆ ತಿಳಿಸಿದಳು." 199 00:16:46,500 --> 00:16:50,041 ರಾಣಿ ತನ್ನ ತಂದೆಯ ಹಾಸಿಗೆ ಪಕ್ಕದಲ್ಲಿ ನನ್ನ ಹೇಗೆ ತಡೆದಳಂತ ಯೋಚಿಸುತ್ತಿದ್ದೆ. 200 00:16:50,125 --> 00:16:53,083 ಸಂಘದ ಶಿಖೆಗಾಗಿ ನನ್ನನ್ನೇ ಅರ್ಪಿಸುತ್ತೀಯ ಅಂದುಕೊಳ್ಳಲಿಲ್ಲ. 201 00:16:53,166 --> 00:16:56,291 ನೀನು ನನ್ನನ್ನ ಬಳಸಿದೆ. ನನ್ನ ಪಾಡಿಗೆ ಬಿಡೋಕೆ ಕೇಳಿಕೊಂಡರೂ ಸಹ. 202 00:16:56,375 --> 00:17:00,458 ನಿನ್ನ ಜನರಿಗೆ ಸಹಾಯವಾಗಲು ಮತ್ತು ನಿನ್ನ ತಲೆಯ ಮೇಲೆ ಕಿರೀಟ ಇರಿಸಲು 203 00:17:00,541 --> 00:17:03,375 ಐದು ಹಡಗುಗಳು ಮತ್ತು 500 ಮಂದಿಯ ನೆರವು ಕೊಡುವಂತೆ 204 00:17:03,958 --> 00:17:05,958 ಈಗಷ್ಟೇ ನ್ಯೂಮೆನೊರನ್ನು ಒಪ್ಪಿಸಿದ್ದೇನೆ. 205 00:17:07,000 --> 00:17:10,333 ನೀನೇ ನನ್ನನ್ನು ಬಳಸಿಕೊಂಡಿದ್ದೀಯ ಅಂತ ತುಂಬಾ ಜನ ಅಂದುಕೊಳ್ಳಬಹುದು. 206 00:17:17,416 --> 00:17:19,083 ಕಿರೀಟ ಇಡೋಕೆ ಬೇರೆ ತಲೆ ಹುಡುಕಿಕೋ. 207 00:17:32,000 --> 00:17:33,375 ನನಗಿಲ್ಲಿ ಇಷ್ಟವಾಗುತ್ತಿಲ್ಲ. 208 00:17:33,458 --> 00:17:36,125 ಪರವಾಗಿಲ್ಲ, ಡಿಲ್. ಇವು ಮರಗಳಷ್ಟೇ. 209 00:17:36,208 --> 00:17:39,083 ಈ ದಾರಿಯಲ್ಲಿ ಹೋಗೋಕೆ ಅವರಿಗೇನಾದರೂ ತಲೆ ಕೆಟ್ಟಿದೆಯಾ? 210 00:17:41,000 --> 00:17:43,833 ರಾಕ್ ಫೂಟ್ ಪಾಸ್ ಮುಚ್ಚಿರಬಹುದು. 211 00:17:43,916 --> 00:17:47,333 ಕತ್ತಲಲ್ಲಿ ಇದು ಸುಲಭವಾಗುವುದಿಲ್ಲ. ನಡೀತಾ ಇರಿ. 212 00:17:51,416 --> 00:17:53,166 "ಕತ್ತಲಲ್ಲಿ ಸುಲಭ." 213 00:18:13,125 --> 00:18:14,333 ತೋಳಗಳು. 214 00:18:15,916 --> 00:18:19,000 ನಿಜವಾಗಿಯೂ ಏನು ನಡೆಯುತ್ತಿದೆ ಅಂತ ನನಗೆ ಹೇಳ್ತೀಯಾ? 215 00:18:19,083 --> 00:18:23,625 ಈ ಕಾಡು ಈ ಕಾಲದಲ್ಲಿ ಹಿಂದೆಂದೂ ಇಷ್ಟು ಬರಿದಾಗಿರಲಿಲ್ಲ. 216 00:18:23,708 --> 00:18:25,416 ಯಾರದೋ ಬೋಳು ತಲೆಯ ಹಾಗಿದೆ. 217 00:18:25,500 --> 00:18:28,000 ಅವನು ತಾನೇ ಜವಾಬ್ದಾರನು? ಆ ದೊಡ್ಡ ಮನುಷ್ಯ. 218 00:18:28,083 --> 00:18:30,083 ಅದರ ಬಗ್ಗೆ ನಾನೇನು ಮಾಡಬೇಕು ಹೇಳು? 219 00:18:30,166 --> 00:18:32,291 ನೀನು ಬಿಡಾರದಲ್ಲಿ ಏನು ಮಾಡಬೇಕಿತ್ತೋ ಅದನ್ನೇ. 220 00:18:32,375 --> 00:18:34,750 ಅವರ ಚಕ್ರಗಳನ್ನು ತಗೊಂಡು ಅವರನ್ನು ಬಿಡು! 221 00:18:35,708 --> 00:18:37,750 ಅದರಿಂದ ಏನಾಗಬಹುದು? 222 00:18:37,833 --> 00:18:40,000 ಯಾರಾದರೂ ವಿಧವೆಯಾಗುತ್ತಾರಾ ಏನು? 223 00:18:40,083 --> 00:18:41,500 ಅಥವಾ ಅನಾಥರಾಗುತ್ತಾರಾ? 224 00:18:44,208 --> 00:18:45,791 ಜನಗಳಿಗೆ ಹಸಿವಾಗುತ್ತಿದೆ. 225 00:18:51,583 --> 00:18:53,000 ಹತ್ತಿರದಲ್ಲೇ ಇರಿ. 226 00:19:03,333 --> 00:19:05,416 ಇದು ತುಂಬಾ ವಿಚಿತ್ರ… 227 00:19:05,625 --> 00:19:09,666 ಅತ್ಯಂತ ವಿಶಿಷ್ಟ... 228 00:19:22,000 --> 00:19:24,375 -ನನ್ನ ಎದೆ ಒಡೆದು ಹೋಗ್ತಿತ್ತು ನಿನ್ನಿಂದ. -ಮಲ್ವಾ. 229 00:19:24,500 --> 00:19:26,083 -ಹೆಜ್ಜೆಗುರುತಿತ್ತು. -ಮಣ್ಣಲ್ಲಿ. 230 00:19:26,166 --> 00:19:28,125 ಒಬ್ಬೊಬ್ಬರಾಗಿ ಹೇಳಿ, ದಯವಿಟ್ಟು! 231 00:19:38,291 --> 00:19:39,416 ಓಡಿ! 232 00:19:43,791 --> 00:19:44,625 ಬೇಗ, ಓಡಿ! 233 00:20:02,125 --> 00:20:03,291 ನೋರಿ! 234 00:20:08,541 --> 00:20:10,708 ನೋರಿ! ನೋರಿ! 235 00:20:10,791 --> 00:20:12,458 ನೋರಿ, ಅಲ್ಲಿಂದ ದೂರ ಹೋಗು! 236 00:20:14,291 --> 00:20:16,541 ನೋರಿ! ನೋರಿ! 237 00:20:16,625 --> 00:20:17,625 ನಿನ್ನ ಹಿಡಿಯುತ್ತೆ! 238 00:21:12,500 --> 00:21:14,416 ಗಟ್ಟಿಯಾಗಿ ನಿಲ್ಲು, ಒಂಟಮೋ. 239 00:21:14,916 --> 00:21:16,458 ನಿನ್ನ ತಂದೆಯನ್ನು ಹೆಮ್ಮೆಪಡಿಸು. 240 00:21:17,000 --> 00:21:20,333 ಅವರ ಏಟುಗಳು ನಾರ್ಥ್ ಮೂರ್ಸಿನ ಕಲ್ಲಿನ ದೈತ್ಯರ ಹಾಗೆ ಬೀಳುತ್ತವೆ. 241 00:21:20,875 --> 00:21:22,166 ಆದರೆ? 242 00:21:24,875 --> 00:21:28,625 ಅವರು ಈ ಶತ್ರುವನ್ನು ಎದುರಿಸಿಲ್ಲ. 243 00:21:29,833 --> 00:21:33,958 ಬಹುಶಃ ಎಲ್ಫ್ ಏನಾದರೂ ಸಲಹೆಗಳನ್ನು ಕೊಡಲು ಬಯಸುವರೇ? 244 00:21:42,416 --> 00:21:44,500 ಓರ್ಕನ್ನು ಕೊಲ್ಲಲು ಬಹಳಷ್ಟು ದಾರಿಗಳಿವೆ. 245 00:21:45,166 --> 00:21:48,125 ಆದರೆ ನಿಮಗಾಗಿ ಬಲವಾದದ್ದು ಮತ್ತು ಸುಲಭವಾದದ್ದನ್ನು ಹೇಳುವೆ. 246 00:21:48,875 --> 00:21:51,458 ಚುಚ್ಚಿ, ತಿರುಗಿಸಿ, ತೆಗೆಯಿರಿ. 247 00:21:54,208 --> 00:21:55,416 ನನ್ನೆಡೆಗೆ ಬಾ. 248 00:21:56,083 --> 00:21:58,625 ಯಾರು ರಕ್ತ ಚಿಮ್ಮಿಸುತ್ತಾರೋ ನೋಡೋಣ. 249 00:21:58,708 --> 00:22:02,541 ಯಾರಾದರೂ ಮಾಡಿದಲ್ಲಿ ಅವರನ್ನು ಉಪನಾಯಕನನ್ನಾಗಿ… 250 00:22:06,125 --> 00:22:07,541 ನೇಮಿಸುತ್ತೇನೆ. 251 00:22:50,166 --> 00:22:53,250 ಕತ್ತಿಯ ಚಾತುರ್ಯಕ್ಕೆ ಶಕ್ತಿಗಿಂತ ಸಮತೋಲನ ಮುಖ್ಯ. 252 00:22:53,333 --> 00:22:56,166 ನಿನ್ನ ಕಾಲುಗಳಿಂದ ಸೆಣಸಾಡು. ಕೈಗಳಿಂದಲ್ಲ. 253 00:23:15,166 --> 00:23:17,708 ಚೌಕದಲ್ಲಿ ಎಲ್ಫ್ ಸೈನಿಕನೊಂದಿಗೆ ಸೆಣಸಾಡುತ್ತಿದ್ದಾಳೆ. 254 00:23:40,333 --> 00:23:41,416 ಒಂದೇ ಕಡೆ ಬೇರೂರಬೇಡ. 255 00:23:42,583 --> 00:23:43,833 ಜರುಗುತ್ತಿರು. 256 00:24:06,458 --> 00:24:08,958 ಓರ್ಕ್ ಮೇಲೆ ವಿವೇಚನಾರಹಿತ ಶಕ್ತಿ ಪ್ರದರ್ಶಿಸಬೇಡ. 257 00:24:12,708 --> 00:24:16,125 ಅವರ ಕಣ್ತಪ್ಪಿಸುವುದು ಸಾಮಾನ್ಯವಾಗಿ ಸುಲಭವೇ. 258 00:24:20,708 --> 00:24:22,875 ಒಳ್ಳೆಯ ಕೆಲಸ, ಉಪನಾಯಕರೇ. 259 00:24:48,500 --> 00:24:51,125 ಕಮ್ಮಾರನ ಸಹಚರ ಇದನ್ನು ಮಾಡುತ್ತಾನೆ ಎಂದುಕೊಂಡಿರಲಿಲ್ಲ. 260 00:24:55,166 --> 00:24:56,791 ಇದನ್ನು ತಡೆಯಲು ಈಗಲೂ ಕಾಲ ಮಿಂಚಿಲ್ಲ. 261 00:24:57,750 --> 00:25:00,666 ಅಧಿಕಾರ ನಿನ್ನ ಸೋದರಸಂಬಂಧಿ ಬಳಿ ಇದ್ದರೂ ಜನ ನಿನ್ನ ಅನುಯಾಯಿಗಳು. 262 00:25:00,750 --> 00:25:03,166 -ಅವರ ಸಹಾಯದೊಂದಿಗೆ ನೀನು... -ಏನು ಮಾಡಬಹುದು? 263 00:25:04,583 --> 00:25:06,333 ನಿನ್ನ ಪ್ರಭಾವ ಎತ್ತಿಹಿಡಿಯಬಹುದು. 264 00:25:06,416 --> 00:25:09,708 ಕೆಲವೊಮ್ಮೆ ಯುವಕರ ಮೂರ್ಖತನ ಹಿರಿಯರಿಗೆ ಕಣ್ಣೀರು ತರಿಸುತ್ತೆ. 265 00:25:15,958 --> 00:25:18,375 ಯುದ್ಧವನ್ನು ತಡೆಯಲೆತ್ನಿಸುವುದು ಮೂರ್ಖತನವೇ? 266 00:25:19,333 --> 00:25:21,750 ಹರಿವಿಗೆ ವಿರುದ್ಧವಾಗಿ ಈಜುವುದು ಮೂರ್ಖತನ. 267 00:25:23,333 --> 00:25:25,916 ನೋಡು, ಅಲೆಯು ವ್ಯಕ್ತಿಯನ್ನು ಮೇಲೆತ್ತಿ ಮುಳುಗಿಸಬಹುದು, 268 00:25:26,000 --> 00:25:28,833 ಅಥವಾ ಕೆಳಗೆ ಬಿದ್ದು ಅವನನ್ನು ಸಮುದ್ರಕ್ಕೆ ತಳ್ಳಬಹುದು. 269 00:25:28,916 --> 00:25:32,875 ಹರಿವು ಯಾವ ಕಡೆ ತಿರುಗುವುದಂತ ಅರಿಯುವುದೇ ಅದನ್ನು ಗೆಲ್ಲುವ ವಿಧಾನ. 270 00:25:32,958 --> 00:25:35,333 ನಮ್ಮ ಹಿಂದಿನ ರಾಜ ನಮ್ಮನ್ನು ಹಳೆಯ ವಿಧಾನಗಳಿಗೆ 271 00:25:35,416 --> 00:25:37,166 ಎಳೆಯುವುದನ್ನು ನೀವೊಬ್ಬರೇ ತಡೆದಿರಿ. 272 00:25:37,250 --> 00:25:39,833 ಮೀರಿಯೆಲ್ ಮನಸ್ಸನ್ನು ಬದಲಾಯಿಸಲಾಗುವುದಿಲ್ಲವಾ? 273 00:25:39,916 --> 00:25:42,583 ಮೀರಿಯೆಲ್ದೂ ನನ್ನದೂ ಒಂದೇ ಮನಸ್ಸಲ್ಲ ಅನ್ಸುತ್ತಾ? 274 00:25:42,666 --> 00:25:46,333 ಯಾಕಂದರೆ ನನ್ನ ತಂದೆ ಎಲ್ಫಿಂದ ಆದೇಶ ಪಡೆಯುವುದರ ಬದಲು ಪ್ರಾಣವನ್ನಾದರೂ ಬಿಡುತ್ತಾರೆ. 275 00:26:06,083 --> 00:26:07,708 "ಎಲ್ಫಿಂದ ಆದೇಶ"? 276 00:26:16,875 --> 00:26:21,291 ಇದೆಲ್ಲಾ ಮುಗಿದ ಮೇಲೆ ಎಲ್ಫ್ಗಳು ನಮ್ಮಿಂದ ಆದೇಶವನ್ನು ಪಡೆಯುತ್ತಾರೆ. 277 00:26:22,625 --> 00:26:26,291 ಈಗ ನನ್ನ ಸೋದರಸಂಬಂಧಿ ಗಲಾಡ್ರಿಯಲ್ಗಾಗಿ ಬೇಕಾದರೆ ಯುದ್ಧಕ್ಕೆ ಹೋಗಬಹುದು. 278 00:26:26,375 --> 00:26:28,208 ನಾನು ನ್ಯೂಮೆನೊರಿಗಾಗಿ ಯುದ್ಧ ಮಾಡುವೆ. 279 00:26:28,291 --> 00:26:30,916 ಇದು ನ್ಯೂಮೆನೊರಿಗಾಗಿ ಹೇಗಾಗುತ್ತೆ? 280 00:26:32,333 --> 00:26:33,916 ನೀನು ಏನನ್ನೂ ಕಲಿತಿಲ್ಲವಾ? 281 00:26:35,500 --> 00:26:38,291 ಬೇಗ ನಾವು ಮಿಡ್ಲ್ ಅರ್ಥಿನ ಕೆಳಜನರನ್ನು ರಕ್ಷಿಸಿ, 282 00:26:38,375 --> 00:26:41,791 ಅವರನ್ನು ಮೇಲೆತ್ತಿ, ಅವರು ಬಹಳ ಕಾಲದಿಂದ ಕಾಯುತ್ತಿರುವ ರಾಜನನ್ನು ಕೊಡೋಣ. 283 00:26:41,875 --> 00:26:44,208 ಸದಾಕಾಲ ನಮ್ಮ ಋಣದಲ್ಲೇ ಬದುಕುವಂಥ ರಾಜ. 284 00:26:45,250 --> 00:26:48,875 ಈಗ ಅದರಿಂದ ನಮಗೆ ಎಂತಹ ಪ್ರಯೋಜನವಾಗುವುದು ಎಂದು ಆಲೋಚಿಸು. 285 00:26:51,041 --> 00:26:54,541 ಅದಿರುಗಳು, ಕಾಡುಗಳು, ವ್ಯಾಪಾರಗಳು, ಗೌರವ… 286 00:26:55,000 --> 00:26:58,416 ನಾನದನ್ನು ನಿಲ್ಲಿಸಲ್ಲ. ಸಮುದ್ರದಲ್ಲಿರುವ ಉಪ್ಪೆಲ್ಲವನ್ನು ಕೊಟ್ಟರೂ ಸಹ. 287 00:26:59,125 --> 00:27:00,875 ನೀನು ಸಹ ನಿಲ್ಲಿಸಬಾರದು. 288 00:27:10,875 --> 00:27:12,208 ರಾಜ್ಯ! 289 00:27:12,291 --> 00:27:16,291 -ರಾಜ್ಯವು ಅಪಾಯದಲ್ಲಿದೆ. ನಾನು… -ಅಪಾಯವು ಕಳೆದಿದೆ, ಅಪ್ಪ. 290 00:27:17,125 --> 00:27:20,541 ನೀವು ಯಾವಾಗಲೂ ನಂಬಿದ್ದನ್ನೇ ನಾವೀಗ ಮಾಡುತ್ತಿದ್ದೇವೆ. 291 00:27:21,708 --> 00:27:24,375 ಎಲ್ಫ್ಗಳ ಜೊತೆ ನಮ್ಮ ಸಂಬಂಧಗಳನ್ನ ಮರುಜೋಡಿಸುತ್ತಿದ್ದೇವೆ. 292 00:27:26,291 --> 00:27:28,291 ನಾನು ಮಿಡ್ಲ್ ಅರ್ಥಿಗೆ ಹೋಗುತ್ತಿದ್ದೇನೆ. 293 00:27:39,958 --> 00:27:40,958 ಮೀರಿಯೆಲ್? 294 00:27:42,083 --> 00:27:44,083 ಹೇಳಿ, ಅಪ್ಪ. 295 00:27:45,916 --> 00:27:47,000 ನಾನೇ. 296 00:27:50,041 --> 00:27:53,791 ಮಿಡ್ಲ್ ಅರ್ಥಿಗೆ ಹೋಗಬೇಡ. 297 00:27:57,000 --> 00:27:59,125 ಅಲ್ಲಿ ನಿನಗಾಗಿ ಕಾದಿರುವುದು…. 298 00:28:01,833 --> 00:28:03,833 ಏನಪ್ಪಾ? ಏನು ಕಾದಿದೆ? 299 00:28:05,208 --> 00:28:06,625 ಕಗ್ಗತ್ತಲು. 300 00:28:13,541 --> 00:28:14,750 ನಂಬ್ತೀಯಾ? 301 00:28:16,250 --> 00:28:18,500 ಎಲ್ಲರೂ ನೀನು ಮಾಡಿದುದರ ಬಗ್ಗೆ ಮಾತಾಡ್ತಿದ್ದಾರೆ. 302 00:28:22,125 --> 00:28:25,625 ಅವರು ಯಾವತ್ತೂ ಹೊರಗಿನವರನ್ನು ಈ ರೀತಿ ಹೊಗಳಿರಲಿಲ್ಲ. 303 00:28:29,375 --> 00:28:31,250 ನಿನಗೆ ಸ್ವಲ್ಪ ಜೇನಿನ ಮೇಣ ತಂದಿದ್ದೀನಿ. 304 00:28:31,333 --> 00:28:34,750 ಆ ಕೈಗೆ ಸ್ವಲ್ಪ ಹಚ್ಚಿಕೊ, ಗಾಯಕ್ಕೆ ಒಳ್ಳೆಯದು. 305 00:28:59,000 --> 00:29:00,250 ಹೇ. 306 00:29:08,875 --> 00:29:11,041 ನಿಲ್ಲು. ದಯವಿಟ್ಟು. 307 00:30:15,083 --> 00:30:18,458 ನಮ್ಮೆರಡು ಮಹಾ ಜನತೆಗಳ ಒಕ್ಕೂಟವು ಸದಾಕಾಲ ಬಾಳಲು, 308 00:30:18,541 --> 00:30:20,458 ಖಜದ್ ಮತ್ತು ನೊಲ್ಡೊರ್. 309 00:30:20,541 --> 00:30:22,666 -ಒಕ್ಕೂಟಕ್ಕಾಗಿ. -ಒಕ್ಕೂಟಕ್ಕಾಗಿ. 310 00:30:23,291 --> 00:30:25,708 ಮದಿರೆ ತಲೆಗೆ ಹತ್ತುವ ಮುನ್ನ, 311 00:30:26,166 --> 00:30:29,083 ಲಾರ್ಡ್ ಡ್ಯುರಿನ್, ನಾನು ನಿಮ್ಮನ್ನು ಪ್ರಶಂಸಿಸಬೇಕು. 312 00:30:29,708 --> 00:30:33,791 ಖಜದ್-ದುಮ್ ಕುಬ್ಜರ ರಾಜ್ಯಗಳಲ್ಲೇ ಅತ್ಯಂತ ಶಾಂತವಾದದ್ದು ಎನಿಸಿಕೊಂಡಿದೆ, 313 00:30:33,916 --> 00:30:37,041 ಆದರೆ ಇತ್ತೀಚಿನ ತಿಂಗಳುಗಳಲ್ಲಿ ನಿಮ್ಮ ಕುಲುಮೆಗಳು 314 00:30:37,125 --> 00:30:40,583 ಆಲೆಯ ಕಣ್ಣುಗಳಷ್ಟೇ ಪ್ರಖರವಾಗಿ ಉರಿಯುತ್ತಿವೆ ಎನ್ನಲಾಗುತ್ತಿದೆ. 315 00:30:40,666 --> 00:30:42,875 ನಿಮ್ಮ ಗಣಿಗಳು ಇನ್ನೂ ಆಳವಾಗುತ್ತಿವೆ. 316 00:30:43,583 --> 00:30:47,708 ಈ ಹೊಸ ಉತ್ಸಾಹಕ್ಕೆ ಕಾರಣವಾದರೂ ಏನು? 317 00:30:49,625 --> 00:30:51,625 ಲಿಂಡೊನ್ ಬಗ್ಗೆ ನಾನಿದನ್ನೇ ಕೇಳಬಹುದು. 318 00:30:53,208 --> 00:30:57,208 ಅವರ ಸೈನಿಕರನ್ನು ಕಳಿಸುತ್ತಾ ನಗರಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ. 319 00:30:58,416 --> 00:31:00,291 ಎಲ್ಫ್ಗಳಿಗೆ ಹಠಾತ್ ಅನ್ನಿಸಿತಲ್ವಾ? 320 00:31:02,583 --> 00:31:05,333 ನೀವುಗಳು ವಾರಗಟ್ಟಲೆ ಯೋಚನೆ ಮಾಡಿದ ಮೇಲೇನೇ ಕಕ್... 321 00:31:05,416 --> 00:31:06,791 ನಾನು ಹೇಳಲಾ... 322 00:31:08,250 --> 00:31:11,083 ನಮ್ಮವರಿಗೆ ಕಾಲ ಜರುಗುವುದು ತುಂಬಾನೇ ನಿಧಾನ. 323 00:31:11,166 --> 00:31:15,250 ಕೆಲವೊಮ್ಮೆ ಎಷ್ಟೋ ವರ್ಷಗಳ ಶ್ರಮ ನಮಗೆ ಕ್ಷಣಿಕವಾಗಿ ಗೋಚರಿಸುತ್ತೆ. 324 00:31:15,333 --> 00:31:18,166 ಹಾಗೆ ಮಾಡಿ ನಮ್ಮ ಅತಿಥಿಗೆ ಅವಮಾನ ಮಾಡುವುದು ನನಗೆ ಇಷ್ಟ ಇಲ್ಲ. 325 00:31:18,250 --> 00:31:21,500 ಒಂದು ಪ್ರಾಮಾಣಿಕವಾದ ಪ್ರಶ್ನೆಯಿಂದ ನಮ್ಮ ದೊಡ್ಡ ಮನಸ್ಸಿನ 326 00:31:21,583 --> 00:31:24,416 ಕುಬ್ಜ ಸ್ನೇಹಿತನಿಗೆ ಅವಮಾನ ಆಗದು ಎಂದು ನನ್ನ ಅನಿಸಿಕೆ. 327 00:31:25,833 --> 00:31:28,541 ನನ್ನಲ್ಲಿ ನಿಮಗೆ ಒಂದು ಪ್ರಾಮಾಣಿಕ ಪ್ರಶ್ನೆಯಿದೆ. 328 00:31:31,166 --> 00:31:34,250 ಈ ಮೇಜನ್ನು ಎಲ್ಲಿಂದ ತರಿಸಿದಿರಿ? 329 00:31:35,500 --> 00:31:36,916 ಯಾಕೆ ಕೇಳ್ತಿದ್ದೀರಿ? 330 00:31:38,000 --> 00:31:41,583 ಈ ಕಲ್ಲು ಒಂದು ನಿಖರವಾದ ಆಳದಲ್ಲಿ ಮಾತ್ರ ಬೆಳೆಯುತ್ತದೆ. 331 00:31:42,000 --> 00:31:45,750 ನಮ್ಮ ಅನುರಣಕರಿಗೆ ಇದರ ಸಂಗ್ರಹ ಪತ್ತೆಯಾಗುವುದೇ ವಿರಳ. 332 00:31:45,833 --> 00:31:48,625 ಪ್ರತಿಯೊಂದನ್ನೂ ಅಮೂಲ್ಯವಾದ ಉಡುಗೊರೆಯೆಂದು ಪರಿಗಣಿಸುತ್ತೇವೆ. 333 00:31:50,583 --> 00:31:55,833 ಇದನ್ನು ಅತ್ಯಂತ ಪವಿತ್ರ ಕಾರ್ಯಗಳಿಗೆ ಮಾತ್ರ ಉಪಯೋಗಿಸುತ್ತೇವೆ. 334 00:31:57,291 --> 00:32:00,291 ಸ್ಮಾರಕಗಳು ಅಥವಾ ಸಮಾಧಿಗಳಲ್ಲಿ, 335 00:32:01,541 --> 00:32:03,541 ನಮ್ಮಲ್ಲಿ ತೀರಿಕೊಂಡವರ ಗೌರವಕ್ಕಾಗಿ. 336 00:32:13,083 --> 00:32:15,916 ದಯವಿಟ್ಟು ನಮ್ಮ ಈ ಅಪಚಾರವನ್ನು ಕ್ಷಮಿಸಿ, ಲಾರ್ಡ್ ಡ್ಯುರಿನ್. 337 00:32:17,041 --> 00:32:22,458 ಇದಕ್ಕೆ ಸರಿಯಾದ ಗೌರವ ಸಿಗಲೆಂದು ನಿಮ್ಮ ಜೊತೆಗೇ ಇದನ್ನು ಕಳಿಸುತ್ತೇವೆ. 338 00:32:26,833 --> 00:32:30,625 ಎಲ್ಫ್ಗಳಲ್ಲಿ ಇನ್ನೂ ಮರ್ಯಾದೆ ಉಳಿದುಕೊಂಡಿರುವುದು ನೋಡೋಕೆ ಖುಷಿಯಾಗುತ್ತೆ. 339 00:32:32,166 --> 00:32:33,250 ನಿಮ್ಮ ಕೃಪೆ. 340 00:32:33,708 --> 00:32:37,166 ನಮ್ಮೆರಡು ಜನತೆಗಳ ಒಕ್ಕೂಟಕ್ಕಾಗಿ. 341 00:32:37,250 --> 00:32:38,416 ಒಕ್ಕೂಟಕ್ಕಾಗಿ. 342 00:32:47,958 --> 00:32:51,375 ಕುಬ್ಜರ ಪರವಾಗಿ ನಿಮ್ಮ ನಿಯತ್ತು ಪ್ರಶಂಸನೀಯ. 343 00:32:52,416 --> 00:32:55,166 ಮಿತ್ರನ ಪರವಾಗಿ ನಿಯತ್ತಾಗಿ ಇರಲೇಬೇಕು. 344 00:32:55,250 --> 00:32:56,958 ಅವರು ಯಾವುದೇ ಜನಾಂಗದವರಾದರೂ. 345 00:32:57,041 --> 00:33:00,250 ನಿನ್ನ ರಾಜನಿಗೆ ಸುಳ್ಳು ಹೇಳಿದ್ದನ್ನ ಇದು ಸಮರ್ಥಿಸುವುದಾ? 346 00:33:00,333 --> 00:33:04,333 ಮೇಲರಸರೇ, ನನಗೇನೋ ನೀವೇ ಸುಳ್ಳು ಹೇಳುತ್ತಿದ್ದೀರಿ ಅನಿಸುತ್ತೆ. 347 00:33:08,750 --> 00:33:12,583 ಖಜದ್-ಡೂಮಿಗೆ ಸ್ನೇಹದ ಪ್ರಸ್ತಾವನೆಯನ್ನು ಹೊತ್ತೇ ನಾನು ಹೋಗಿದ್ದೆ, ಆದರೆ ನಿಜವಾಗಿ, 348 00:33:12,666 --> 00:33:15,666 ನೀವೇನೋ ಮೂರ್ತವಾದದ್ದನ್ನು ನಿರೀಕ್ಷಿಸುತ್ತಿದ್ದಿರಿ, ಅಲ್ಲವೇ? 349 00:33:15,750 --> 00:33:19,666 ಹಿತಾಗ್ಲಿರ್ ಬೇರುಗಳ ಹಾಡಿನ ಪರಿಚಯ ನಿನಗಿದೆಯಾ? 350 00:33:19,750 --> 00:33:21,833 ದಯವಿಟ್ಟು ನನಗಾಗಿ ನೆನಪಿಸಿಕೋ. 351 00:33:23,500 --> 00:33:26,833 ಎಷ್ಟೋ ಜನ ಅನುಮಾನ ವ್ಯಕ್ತಪಡಿಸುವ ಒಂದು ಅಸ್ಪಷ್ಟ ದಂತಕತೆ. 352 00:33:26,916 --> 00:33:30,166 ನೆನಪಿಸಿಕೋ, ಎಲ್ರೊಂಡ್ ಪೆರೆದೆಲ್. 353 00:33:33,958 --> 00:33:35,958 ಅದು ಯುದ್ಧದ ಬಗ್ಗೆ ಹೇಳುತ್ತೆ, 354 00:33:36,833 --> 00:33:39,416 ಮಿಸ್ಟಿ ಮೌಂಟೈನ್ಸಿನ ಶಿಖರಗಳ ಮೇಲೆ ನಡೆದಂಥದ್ದು. 355 00:33:40,291 --> 00:33:43,750 ಗೌರವಕ್ಕಾಗಿ ಅಲ್ಲ, ಕರ್ತವ್ಯಕ್ಕಾಗಿ ಅಲ್ಲ. ಮರದ ಕುರಿತಾಗಿ. 356 00:33:43,833 --> 00:33:47,666 ಅದರೊಳಗಡೆ ಕಡೆಯ ಸಿಲ್ಮರಿಲ್ಸ್ ಅವಿತುಕೊಂಡಿದ್ದರು ಎಂಬುದು ಕೆಲವರ ನಂಬಿಕೆ. 357 00:34:00,583 --> 00:34:04,208 ಒಂದು ಬದಿಯಲ್ಲಿ ಒಬ್ಬ ಎಲ್ವೆನ್ ವೀರ ಸೆಣೆಸುತ್ತಿದ್ದನು, 358 00:34:04,291 --> 00:34:06,250 ಅವನ ಹೃದಯ ಮಾನ್ವೇಯಷ್ಟೇ ಪರಿಶುದ್ಧ, 359 00:34:06,333 --> 00:34:09,750 ಆ ಮರವನ್ನು ಕಾಪಾಡಲು ತನ್ನೆಲ್ಲಾ ಬೆಳಕನ್ನು ಚೆಲ್ಲಿದನು. 360 00:34:09,791 --> 00:34:12,375 ಇನ್ನೊಂದು ಬದಿಯಲ್ಲಿ ಮಾರ್ಗೊಥಿನ ಬಾಲ್ರೊಗ್ 361 00:34:12,416 --> 00:34:15,916 ಆ ಮರವನ್ನು ನಾಶ ಮಾಡಲು ತನ್ನೆಲ್ಲಾ ದ್ವೇಷವನ್ನು ಅದರೆಡೆಗೆ ಹರಿಸಿದನು. 362 00:34:16,583 --> 00:34:20,875 ಅವರ ಕದನ ಮುಗಿಯದಿರಲು ಸಿಡಿಲು ಮರವನ್ನು ಬಡಿಯಿತು... 363 00:34:24,125 --> 00:34:28,041 ಅವರ ಕದನದ ಮುಂದುವರಿಕೆಯಿಂದ ಒಂದು ಶಕ್ತಿ... 364 00:34:28,708 --> 00:34:32,875 ಒಳ್ಳೆಯತನದಷ್ಟೇ ಪರಿಶುದ್ಧ ಮತ್ತು ಹಗುರವಾದ ಶಕ್ತಿ. 365 00:34:32,958 --> 00:34:35,958 ದುಷ್ಟತನದಷ್ಟೇ ಬಲಿಷ್ಠ ಮತ್ತು ಬಗ್ಗದ್ದು. 366 00:34:36,958 --> 00:34:39,958 ಬೆಟ್ಟದ ಆಳಗಳೊಳಗೆ ಬೇರುಗಳ ಮೂಲಕ ಹರಿದುಹೋಗಿ, 367 00:34:40,041 --> 00:34:44,125 ಈಗಾಗಲೇ ಶತಮಾನಗಳ ಕಾಲ ಕಾಯುತ್ತಿದೆ ಎನ್ನುತ್ತಾರೆ. 368 00:34:45,416 --> 00:34:46,583 ಡ್ಯುರಿನ್ ನಿಜ ಹೇಳಿದ. 369 00:34:46,666 --> 00:34:49,000 ಇದನ್ನು ಪತ್ತೆಮಾಡಿದ್ದು ಕುಬ್ಜರೇ ಎಂದು ಒಪ್ತೀಯಾ? 370 00:34:49,083 --> 00:34:52,166 ಕಳೆದುಹೋದ ಸಿಲ್ಮರಿಲ್ಲಿನ ಬೆಳಕನ್ನು ಹಿಡಿದಿಟ್ಟುಕೊಂಡಿರುವ ಅದಿರು. 371 00:34:52,250 --> 00:34:54,083 ಇದನ್ನಷ್ಟೇ ಒಪ್ಪಬಲ್ಲೆ. 372 00:34:54,166 --> 00:34:57,041 ತಮ್ಮ ರಹಸ್ಯಗಳ ಬಯಲುಮಾಡೆನೆಂದು ಡ್ಯುರಿನ್ಗೆ ಮಾತುಕೊಟ್ಟಿದ್ದೆ. 373 00:34:58,041 --> 00:35:01,583 ಅವರ ಜನರ ಬಳಿ ನಿನ್ನ ಮಾತು ಉಳಿಸಿಕೊಳ್ಳೋದರಿಂದ 374 00:35:01,666 --> 00:35:04,500 ನಿನಗೆ ಕೇಡು ಖಚಿತ ಅಂತಾದರೆ? 375 00:35:38,583 --> 00:35:42,875 ಗಲಾಡ್ರಿಯಲ್ ಹಿಂತಿರುಗುವ ಮುನ್ನ ನಾವಿದನ್ನು ಮೊದಲು ಗಮನಿಸಿದೆವು. 376 00:35:42,958 --> 00:35:44,750 ಆಕೆಯನ್ನು ದೂರ ಕಳುಹಿಸಿ, 377 00:35:44,833 --> 00:35:48,541 ಯುದ್ಧದ ಕೊನೆಯ ಕುರುಹುಗಳಿಗೆ ಅಂತ್ಯ ಹಾಡಿ, 378 00:35:48,625 --> 00:35:50,833 ವಿನಾಶವನ್ನು ನಿಲ್ಲಿಸಬಹುದು ಎಂದುಕೊಂಡೆವು. 379 00:35:51,916 --> 00:35:54,750 ಆದರೆ ನಾವೆಷ್ಟೇ ಶ್ರಮವಹಿಸಿದರೂ, 380 00:35:54,833 --> 00:35:57,750 ನಮ್ಮ ಅವನತಿ ಇನ್ನೂ ವೇಗವಾಗಾಗುತ್ತಿದೆ. 381 00:35:58,750 --> 00:36:01,958 ಈ ಮರಕ್ಕೆ ಅಂಟಿರುವ ರೋಗ ಅದರ ಆಂತರಿಕ ನೈಜತೆಯ 382 00:36:02,041 --> 00:36:03,583 ಬಾಹ್ಯ ಸ್ವರೂಪವಷ್ಟೇ. 383 00:36:04,416 --> 00:36:06,583 ಅಂದರೆ ಎಲ್ದಾರಿನ ಬೆಳಕು, 384 00:36:06,666 --> 00:36:10,083 ನಮ್ಮ ಬೆಳಕು, ಕ್ಷೀಣಿಸುತ್ತಿದೆ. 385 00:36:12,875 --> 00:36:14,458 ಇದರ ಬಗ್ಗೆ ಬೇರೆ ಯಾರಿಗೆ ಗೊತ್ತು? 386 00:36:15,041 --> 00:36:16,458 ಅತ್ಯಂತ ಕಡಿಮೆ ಮಂದಿಗೆ. 387 00:36:19,625 --> 00:36:22,750 ಕೊನೆಯದಾಗಿ ಮತ್ತೊಮ್ಮೆ ಕೇಳುವೆ, 388 00:36:24,500 --> 00:36:27,750 ಕುಬ್ಜರು ಅದಿರನ್ನು ಪತ್ತೆಮಾಡಿದರಾ ಇಲ್ಲವಾ? 389 00:36:32,333 --> 00:36:35,500 ನಾನು ಡ್ಯುರಿನ್ಗೆ ಪ್ರಮಾಣ ಮಾಡಿದ್ದೇನೆ. 390 00:36:38,166 --> 00:36:42,166 ಕೆಲವರಿಗೆ ಅದು ಈಗ ಮುಖ್ಯವಲ್ಲದಿರಬಹುದು. 391 00:36:45,541 --> 00:36:47,125 ನನ್ನ ನಂಬಿಕೆಯ ಪ್ರಕಾರ, 392 00:36:48,000 --> 00:36:51,708 ಇಂಥ ವಿಷಯಗಳೇ ನಮ್ಮ ನಡುವಿನ ಬಂಧಗಳಿಗೆ ಅರ್ಥವನ್ನು ಕೊಡುವುದು. 393 00:36:52,500 --> 00:36:56,833 ಕೇವಲ ವಿಶ್ವಾಸಕ್ಕಾಗಿ ಅದನ್ನು ನಾನು ಕಳೆದುಕೊಳ್ಳಲು ಇಚ್ಛಿಸುವುದಿಲ್ಲ. 394 00:36:58,333 --> 00:37:02,500 ವಿಶ್ವಾಸ ಎಂದಿಗೂ ಕೇವಲವಲ್ಲ, ಎಲ್ರೊಂಡ್... 395 00:37:03,666 --> 00:37:05,500 ಅದು ಕಡಿಮೆ ಇದ್ದಾಗಲೂ ಸಹ. 396 00:37:06,666 --> 00:37:09,041 ಮಿಕ್ಕೆಲ್ಲಾ ಇಂದ್ರಿಯಗಳೂ ಮಲಗಿದಾಗ, 397 00:37:09,125 --> 00:37:13,416 ವಿಶ್ವಾಸದ ಕಣ್ಣೇ ಮೊದಲು ತೆರೆಯೋದು, ಕೊನೆಯಲ್ಲಿ ಮುಚ್ಚೋದು. 398 00:37:15,541 --> 00:37:19,708 ಎಲ್ಫ್ಗಳು ಈಗ ಮಿಡ್ಲ್ ಅರ್ಥನ್ನು ಪರಿತ್ಯಜಿಸಿದರೆ, 399 00:37:19,791 --> 00:37:24,458 ಕಗ್ಗತ್ತಲೆಯ ಸೇನೆಗಳು ಭೂಮಿಯ ಮೇಲೆಲ್ಲಾ ಮೆರವಣಿಗೆ ಮಾಡುತ್ತವೆ. 400 00:37:24,541 --> 00:37:25,791 ಇದು ಕೊನೆಯಾಗುವುದು, 401 00:37:25,875 --> 00:37:30,000 ಕೇವಲ ನಮ್ಮ ಜನರಿಗಷ್ಟೇ ಅಲ್ಲ, ಎಲ್ಲ ಜನರಿಗೂ. 402 00:37:31,583 --> 00:37:34,583 ಇದನ್ನು ತಡೆಯುವ ಒಂದು ವಿಶ್ವಾಸ ನಿನ್ನ ಪ್ರಮಾಣವಚನವನ್ನು 403 00:37:34,666 --> 00:37:37,125 ಮರುಪರಿಶೀಲಿಸಲು ಬಿಡಲಾರದು ಎಂದರೆ, 404 00:37:38,125 --> 00:37:40,125 ನೀನು ಮತ್ತೊಂದನ್ನು ಹುಡುಕಿಕೊಳ್ಳಬೇಕಷ್ಟೇ. 405 00:38:07,416 --> 00:38:10,666 ಅಮೃತಹಸ್ತಗಳ ಭೂಮಿ ಯಾವುದದು 406 00:38:10,750 --> 00:38:14,000 ಸಂಡರಿಂಗ್ ಸಮುದ್ರದಿಂದ ಎದ್ದದ್ದು? 407 00:38:14,083 --> 00:38:17,416 ವರಗಳ ಬೀಡು, ತಾರೆಯ ನಾಡು 408 00:38:17,500 --> 00:38:20,916 ಬೆಳಗುವುದೇ ಎಂದೆಂದಿಗೂ? 409 00:38:21,000 --> 00:38:24,458 ಅದುವೇ ನ್ಯೂಮೆನೊರ್ ನಮ್ಮ ನ್ಯೂಮೆನೊರ್ 410 00:38:24,541 --> 00:38:27,875 ದಿವ್ಯತೆಯಿರುವ ಭವ್ಯ ದ್ವೀಪವಿದು... 411 00:38:29,250 --> 00:38:32,083 ಇದು ಅಪಾಯಕಾರಿಯಲ್ಲ ಅಂತ ಹೇಳಿದೆನಲ್ಲ. 412 00:38:32,166 --> 00:38:35,041 ನಾನು ದೋಣಿಯಿಂದ ಕೆಳಗಿಳಿಯುವುದರೊಳಗೆ ಮುಗಿದುಹೋಗಿರುತ್ತದೆ. 413 00:38:35,125 --> 00:38:36,500 ನಮ್ಮಪ್ಪನಿಗೆ ಮಾತ್ರ ಹೇಳಬೇಡ. 414 00:38:36,583 --> 00:38:40,500 ತನ್ನ ಭಾವಿ ಅಳಿಯ ಯುದ್ಧವೀರ ಅಂತ ಸಿಕ್ಕಿದವರ ಕಿವಿಯಲ್ಲೆಲ್ಲ ಊದಲು ಶುರುಮಾಡುತ್ತಾರೆ. 415 00:38:41,166 --> 00:38:43,166 ಹಾಡು! ಬಾ, ಹಾಡು. 416 00:38:43,250 --> 00:38:44,958 ನಿನಗೆ ಪದಗಳು ನೆನಪಿದೆಯಲ್ಲವೇ? 417 00:38:45,041 --> 00:38:49,000 ನೀನು ರಾತ್ರಿಯೆಲ್ಲಾ ಅದನ್ನೇ ಅರಚುವುದನ್ನು ಕೇಳಿದ ಮೇಲೆ ನಾನು ಹೇಗೆ ಮರೆಯಲಿ? 418 00:38:49,083 --> 00:38:52,541 ಬಹುಶಃ ಇಸಿಲ್ದೂರ್ ಕೂಡ ನಿಮ್ಮ ಜೊತೆ ಹಾಡ್ತಾನೇನೋ. 419 00:38:55,166 --> 00:38:56,791 ತುಂಬಾ ಆಸಕ್ತಿಕರವಾಗಿರುತ್ತೆ. 420 00:38:56,875 --> 00:39:02,125 ನಮ್ಮ ಮಹಾನಾಡು ಸದಾ ನಿಂತಿರಲಿ ನಮ್ಮ ಖಡ್ಗಗಳು ಸಾವನ್ನೇ ಗೆಲ್ಲಲಿ 421 00:39:02,208 --> 00:39:05,083 -ಬೇಡ ಅಂತೀನಿ. -ನಾನಿನ್ನೂ ಏನನ್ನೂ ಹೇಳಿಲ್ಲ. 422 00:39:05,166 --> 00:39:06,375 ನಿನ್ನ 15 ವರ್ಷದಿಂದ ಬಲ್ಲೆ. 423 00:39:06,458 --> 00:39:08,833 ನೀನೇನು ಹೇಳೋಕೆ ಬಂದಿದ್ದೀಯಾ ಅಂತ ನನಗೆ ಗೊತ್ತಿಲ್ವಾ? 424 00:39:08,916 --> 00:39:11,208 -ಅದು 16, ಆದರೆ ನಾನು ಹೇಳೋದು... -ಒಂಟಮೋ. 425 00:39:11,291 --> 00:39:13,750 ಸರಿ. ನಾನೇನು ಹೇಳೋಕೆ ಬಂದಿದ್ದೀನಿ? 426 00:39:13,833 --> 00:39:16,458 ಒಂದು ಸುದೀರ್ಘವಾದ ಕ್ಷಮೆಯಾಚನೆ, ಒಂಟಮೋ ಏನೋ ತಕ್ಷಣ 427 00:39:16,541 --> 00:39:19,000 ಒಪ್ಪಿಕೊಂಡುಬಿಡಬಹುದು, ಆದರೆ ನಾನು ಒಪ್ಪುತ್ತಿರಲಿಲ್ಲ. 428 00:39:19,083 --> 00:39:20,583 ಅದು ಯಾಕಂತ ಗೊತ್ತಾ? 429 00:39:21,500 --> 00:39:25,583 ಈಗ ನನಗೆ ಬಡ್ತಿ ಸಿಕ್ಕಿರುವುದರಿಂದ ನಿನ್ನನ್ನು ಕೂಡ ದಂಡಯಾತ್ರೆಗೆ ಸೇರಿಸಿಕೊಳ್ಳಲು 430 00:39:25,666 --> 00:39:27,541 ನನ್ನ ಬಳಿ ಕ್ಷಮೆಯಾಚಿಸುತ್ತಿದ್ದೀಯ. 431 00:39:31,958 --> 00:39:33,416 -ಸೇರಿಸಿಕೊಳ್ತೀಯಾ? -ಸರಿ. 432 00:39:35,125 --> 00:39:38,166 ನಾನು ತಕ್ಷಣ ಒಪ್ಪಿಕೊಳ್ಳುತ್ತಿರಲಿಲ್ಲ ಎಂದಷ್ಟೇ ಹೇಳಬಲ್ಲೆ. 433 00:39:38,250 --> 00:39:40,166 -ಕೊನೆಗೂ ಕ್ಷಮೆ ಕೇಳಿದೆ. -ಅವ ಕೇಳಲಿಲ್ಲ. 434 00:39:40,250 --> 00:39:41,541 ನಾನು ಕೇಳಿದೆ! 435 00:39:41,625 --> 00:39:45,083 ಬೇಕಾದ್ರೆ ಮತ್ತೊಮ್ಮೆ ಕೇಳ್ತೀನಿ. ಜಗಳ ಶುರು ಮಾಡಿದ್ದಕ್ಕೆ ಕ್ಷಮಿಸು. 436 00:39:46,708 --> 00:39:48,458 ನನ್ನನ್ನೂ ಸೇರಿಸಿಕೊಳ್ಳಿ. 437 00:39:49,625 --> 00:39:50,833 ಇಲ್ಲ. 438 00:39:53,541 --> 00:39:55,625 ಇದನ್ನು ಸರಿಪಡಿಸಲು ನಾನೇನು ಮಾಡಬೇಕು? 439 00:39:56,375 --> 00:39:57,875 ಸರಿ, ನಿನಗೊಂದು ಮುಕ್ತ ಅವಕಾಶ. 440 00:39:58,666 --> 00:40:01,375 ದವಡೆಗೋ, ಹೊಟ್ಟೆಗೋ, ನಿನ್ನಿಷ್ಟ. ಒಂದು ಏಟು. 441 00:40:04,250 --> 00:40:05,250 ಮೂರು. 442 00:40:06,208 --> 00:40:07,291 ಎರಡು. 443 00:40:07,875 --> 00:40:08,875 ಏನಂದ್ರೆ... 444 00:40:13,916 --> 00:40:15,250 ಮೂರು ಹೊಡೆದ ಹಾಗಿತ್ತು. 445 00:40:20,916 --> 00:40:23,250 ಮತ್ತೆ, ನನ್ನನ್ನು ಕೂಡ ಹಡಗಿಗೆ ಕರೆದುಕೊಳ್ತೀಯ? 446 00:40:24,208 --> 00:40:27,208 ಇಸಿಲ್ದೂರ್, ನೀನು ನನ್ನ ಹಳೆಯ ಸ್ನೇಹಿತ. 447 00:40:28,958 --> 00:40:32,000 ನಿಜ ಹೇಳಬೇಕೆಂದರೆ ನೀನೇ ನನ್ನ ಆಪ್ತಮಿತ್ರನೂ ಸಹ, ಆದರೆ… 448 00:40:32,083 --> 00:40:34,083 -ಏನು? -ಒಂಟಮೋ, ದಯವಿಟ್ಟು. 449 00:40:34,666 --> 00:40:37,083 ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮುಂದೆ ನೀನು 450 00:40:37,166 --> 00:40:40,166 ಬಿಡಬಹುದಾದ ಕೆಲಸಕ್ಕೆ ನಿನ್ನ ನೇಮಿಸಿ ನನ್ನ ಹೆಸರು ಕೆಡಿಸಿಕೊಳ್ಳಲಾರೆ. 451 00:40:40,250 --> 00:40:42,375 ಈ ಸಲ ಹಾಗಾಗಲ್ಲ. 452 00:40:44,208 --> 00:40:45,875 ಮುಂದೆ ಒಂದು ದಿನ ಹಾಗೇ ಆಗಲಿ. 453 00:40:47,625 --> 00:40:50,333 ಮುಂದೊಂದು ದಿನ, ನೀನು ಏನೇ ಆದರೂ ತ್ಯಾಗ ಮಾಡಲು 454 00:40:50,416 --> 00:40:53,416 ಸಿದ್ಧವಾಗುವಂಥದ್ದು ನಿನಗೆ ಸಿಗಲೆಂದು ಆಶಿಸುತ್ತೇನೆ. 455 00:40:55,833 --> 00:40:58,333 ಬೆರೆಕ್ನ ನಿನಗಾಗಿ ನೋಡಿಕೊಳ್ತೀನಿ. ಆಣೆ. 456 00:40:58,750 --> 00:41:00,083 ಬೆರೆಕ್ ಕೂಡ ಬರ್ತಾನಾ? 457 00:41:01,000 --> 00:41:02,833 ಕುದುರೆಲಾಯದವ ಅದನ್ನ ಕರ್ಕೊಂಡಿದ್ದಾನೆ. 458 00:41:04,333 --> 00:41:07,750 ಕ್ಷಮಿಸು, ಇಸಿಲ್. ಸಮುದ್ರ ಯಾವತ್ತಿಗೂ ಸರಿಯೇ. 459 00:41:57,166 --> 00:42:00,000 ಎತ್ತಿಡುತ್ತಾ ಇದ್ದೀಯಾ ಏನು? 460 00:42:08,250 --> 00:42:09,875 ದೋಣಿಯನ್ನು ಸುಡಲಿದ್ದೀಯಾ? 461 00:42:09,958 --> 00:42:13,666 ಇಲ್ಲಿಂದ ಈಗಲೇ ಹೊರಡು. ನಾನು ನಿನ್ನನ್ನು ನೋಡಿದ್ದು ಯಾರಿಗೂ ಹೇಳಲ್ಲ. 462 00:42:13,750 --> 00:42:16,208 -ದೀಪವನ್ನು ನನಗೆ ಕೊಡು. -ಬೇಡ. 463 00:42:17,500 --> 00:42:18,333 ಕೊಡು ಅದನ್ನ! 464 00:42:51,416 --> 00:42:53,416 ಎಲ್ಲರೂ ಕೈಜೋಡಿಸಿ. ಬೇಗ! 465 00:42:54,500 --> 00:42:56,541 ಅವರನ್ನು ಹೊರತನ್ನಿ. ಬೇಗ. 466 00:42:57,625 --> 00:42:59,625 ಅವರನ್ನು ಹೊರತನ್ನಿ! ಇಸಿಲ್ದೂರ್? 467 00:43:08,333 --> 00:43:09,500 ಇಸಿಲ್ದೂರ್? 468 00:43:11,625 --> 00:43:12,708 ಏನಾಯ್ತು? 469 00:43:13,416 --> 00:43:16,583 ಅವನು ಮೀನುಗಾರಿಕೆಯ ದೋಣಿಯಲ್ಲಿದ್ದ. ಯಾವುದೋ ಪೀಪಾಯಿ ಸಿಡಿದಿರಬೇಕು. 470 00:43:16,666 --> 00:43:17,833 ಪೀಪಾಯಿಯಾ? 471 00:43:19,916 --> 00:43:21,291 ಅವನು ನನ್ನ ಪ್ರಾಣ ಉಳಿಸಿದ. 472 00:43:22,000 --> 00:43:24,583 ಅವನು ಸುಮ್ಮನೆ ಹೋಗಬಹುದಿತ್ತು, ಆದರೆ ನನ್ನ ಜೀವ ಉಳಿಸಿದ. 473 00:43:24,666 --> 00:43:25,916 ನಾಯಕರೇ! 474 00:43:42,500 --> 00:43:45,333 ಒಬ್ಬ ಡಕಾಯಿತ ಇಲ್ಲಿ ಬಂದಿರಬಹುದು ಎಂದು ನಮಗೆ ಅನುಮಾನ ಬಂದಿದೆ, 475 00:43:45,416 --> 00:43:47,333 ಆದರೆ ಅವನ ಗುರುತನ್ನ ಪತ್ತೆಹಚ್ಚಬೇಕಷ್ಟೇ. 476 00:43:47,416 --> 00:43:51,000 ಮಿಕ್ಕ ಹಡಗುಗಳನ್ನು ನಾವು ಕಳೆದುಕೊಳ್ಳಲಿಲ್ಲ ಅನ್ನುವುದೇ ಪುಣ್ಯ. 477 00:43:51,083 --> 00:43:54,833 ಇದು ನಿಮ್ಮ ಅನುಮಾನಗಳನ್ನು ಗರಿಗೆದರಿಸುವ ಪ್ರಯತ್ನವಷ್ಟೇ, ರಾಣಿ ರೀಜೆಂಟ್. 478 00:43:54,916 --> 00:43:58,208 -ಹಾಗಾಗಲು ಬಿಡಬೇಡಿ. -ಎಲ್ಫಿನ ಈ ಮಾತನ್ನು ನಾನು ಒಪ್ಪಲ್ಲ. 479 00:43:58,291 --> 00:44:00,708 ನಾವು ಆತುರದಲ್ಲಿ ವರ್ತಿಸಿದೆವೇನೋ. 480 00:44:00,791 --> 00:44:03,250 ರಾಜ್ಯವನ್ನು ಮುನ್ನಡೆಸಬೇಕು. ಎಳೆದೊಯ್ಯಬಾರದು. 481 00:44:03,333 --> 00:44:05,125 ನಿಮ್ಮ ಕಾರ್ಯಕ್ಕೆ ಹೆಚ್ಚಿನ ಸಹಮತ 482 00:44:05,208 --> 00:44:07,916 ಸಿಗುವವರೆಗೂ ನಾವು ಈ ಯಾತ್ರೆಯನ್ನು ಮುಂದೂಡುವುದು ಉತ್ತಮ. 483 00:44:08,000 --> 00:44:12,000 ನಮ್ಮ ಶತ್ರು ದಿನದಿನವೂ ಬಲಿಷ್ಠನಾಗುತ್ತಿದ್ದಾನೆ. ನಾವು ಹಿಂಜರಿಯುವ ಪ್ರತಿ ಗಂಟೆಗೂ. 484 00:44:12,083 --> 00:44:15,375 ಈ ದಾರಿಯನ್ನೇಕೆ ಆಯ್ದಿರಿ ಎಂದು ನೆನೆಸಿಕೊಳ್ಳಿ. ನಂಬಿಕೆಯ ನೆನೆಸಿಕೊಳ್ಳಿ. 485 00:44:15,458 --> 00:44:17,583 ನಾನು ಮರೆತಿರುವೆ ಅಂದುಕೊಂಡೆಯಾ? 486 00:44:18,083 --> 00:44:22,541 ನಮ್ಮಲ್ಲಿನ್ನೂ ಮೂರು ಹಡಗುಗಳಿವೆ. ಜೊತೆಗೆ ನಿಮ್ಮ ತಂದೆಯವರ ಆಶೀರ್ವಾದ. 487 00:44:26,375 --> 00:44:27,958 ಮತ್ತೆ ಲಾರ್ಡ್ ಹಲ್ಬ್ರ್ಯಾಂಡ್? 488 00:44:28,791 --> 00:44:30,291 ನಾವು ಹೊರಡಲು ಕಾಯುತ್ತಿದ್ದಾರೆ. 489 00:44:30,375 --> 00:44:31,791 ಖಂಡಿತ ಕಾಯ್ತಿರ್ತಾರೆ. 490 00:44:36,375 --> 00:44:38,791 ಸೀ ಗಾರ್ಡಿಗೆ ನಿಲ್ಲಲು ಹೇಳಲಾ? 491 00:44:44,416 --> 00:44:48,458 ಈ ಸಭೆ ಮುಂಜಾನೆಯೇ ಸೇರಿ ಇದರ ಬಗ್ಗೆ ಕೊನೆಯ ನಿರ್ಧಾರ ತೆಗೆದುಕೊಳ್ಳಲಿದೆ. 492 00:44:50,500 --> 00:44:52,833 ಲಾರ್ಡ್ ಹಲ್ಬ್ರ್ಯಾಂಡ್ ಬರುವಂತೆ ನೋಡಿಕೊಳ್ಳಿ. 493 00:45:01,666 --> 00:45:03,875 ಇಲ್ಲಿಯವರೆಗೂ ಏನನ್ನು ಅರ್ಥಮಾಡಿಕೊಂಡೆ? 494 00:45:04,583 --> 00:45:06,000 ಎಲ್ರೊಂಡ್, ನನ್ನನ್ನು ಕ್ಷಮಿಸು. 495 00:45:06,625 --> 00:45:07,875 ನಿಮ್ಮನ್ನು ಕ್ಷಮಿಸುವುದಾ? 496 00:45:07,958 --> 00:45:10,000 ನಾನು ನಿನಗೆ ಮುಂಚೆಯೇ ಹೇಳದಿದ್ದುದಕ್ಕೆ. 497 00:45:14,250 --> 00:45:15,458 ನಿಮಗೆ ಗೊತ್ತಿತ್ತು. 498 00:45:16,250 --> 00:45:19,833 ಆರಂಭದಿಂದಲೇ ನಿನ್ನನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಬೇಡಿಕೊಂಡೆ. 499 00:45:19,916 --> 00:45:21,750 ಆದರೆ ಮೇಲರಸರು ಒಪ್ಪಲೇ ಇಲ್ಲ. 500 00:45:24,708 --> 00:45:27,125 ಮತ್ತು ಈ ಮಿಥ್ರಿಲ್... 501 00:45:29,291 --> 00:45:31,000 ಇದರಿಂದಷ್ಟೇ ನಮ್ಮ ವಿಮೋಚನೆಯಾ? 502 00:45:31,083 --> 00:45:35,125 ಎಲ್ರೊಂಡ್, ನಾನಿದನ್ನು ಪ್ರತಿ ಸಂಕಷ್ಟದಲ್ಲೂ ಪರೀಕ್ಷಿಸಿದ್ದೇನೆ. 503 00:45:36,291 --> 00:45:39,000 ಯಾವುದರಿಂದಲೂ ಇದರ ಬೆಳಕು ಆರದು. 504 00:45:39,958 --> 00:45:44,458 ಇದನ್ನು ಆದಷ್ಟು ಬೇಗ ಹೆಚ್ಚಿನ ಪ್ರಮಾಣದಲ್ಲಿ ಶೇಖರಿಸಿಟ್ಟುಕೊಂಡರೆ, 505 00:45:44,541 --> 00:45:49,958 ಪ್ರತಿಯೊಬ್ಬ ಎಲ್ಫಿಗೂ ಸಾಕಾಗುವಷ್ಟು ವಲಾರಿನ ಬೆಳಕು ಸಿಗುವುದೆಂದು ನಮ್ಮ ನಂಬಿಕೆ... 506 00:45:52,625 --> 00:45:53,958 ಸರಿ, ಮತ್ತೆ. 507 00:45:55,500 --> 00:45:58,250 ಹೌದು. ಅದು ಹಾಗೇ ಇರಬಹುದು. 508 00:46:08,166 --> 00:46:09,500 ನನ್ನನ್ನು ಕ್ಷಮಿಸು. 509 00:46:11,500 --> 00:46:13,333 ಮೇಲರಸರು ನನಗೆ ಮೋಸ ಮಾಡಿದ್ದಕ್ಕಾ? 510 00:46:15,250 --> 00:46:18,750 ಅಥವಾ ನಾನು ಮಾತು ಮುರಿಯದಿದ್ದರೆ ನಮ್ಮ ಜನರ ಗತಿ ಮುಗಿಯುವುದೆಂದಾ? 511 00:46:20,541 --> 00:46:21,958 ಮಿತ್ರನಿಗೆ ದ್ರೋಹ ಬಗೆಯಬೇಕಾ? 512 00:46:23,833 --> 00:46:29,250 ನಿನ್ನ ತಂದೆ ಆ ರಾತ್ರಿ ಯಾತ್ರೆಗೆ ಹೊರಟಾಗ ನಾನಲ್ಲಿದ್ದೆ, ಎಲ್ರೊಂಡ್. 513 00:46:32,458 --> 00:46:37,291 ಯುದ್ಧದಲ್ಲಿ ನಮ್ಮ ನೆರವಿಗೆ ಬರಲು ದೇವತೆಗಳನ್ನೇ ಒಪ್ಪಿಸಬಹುದು ಎಂದು ನಂಬಿದ್ದ 514 00:46:39,041 --> 00:46:40,916 ಒಬ್ಬ ಸಾಮಾನ್ಯ ಮನುಷ್ಯ. 515 00:46:42,916 --> 00:46:46,208 ನಿನ್ನ ತಾಯಿ ಆತನನ್ನು ಹೋಗಬೇಡವೆಂದು ಬೇಡಿಕೊಳ್ಳುತ್ತಾ, 516 00:46:46,291 --> 00:46:50,125 ಯಾಕೆ, ಆತನೇ ಯಾಕೆಂದು ಕೇಳಿಕೊಳ್ಳುವುದನ್ನು ನಾನು ಕೇಳಿಸಿಕೊಂಡೆ. 517 00:46:52,375 --> 00:46:54,125 ಆಗ ಆತ ಏನು ಹೇಳಿದರು ಗೊತ್ತಾ? 518 00:46:59,541 --> 00:47:02,125 ಯಾಕಂದ್ರೆ ಅದು ಸಾಧ್ಯವಿದ್ದದ್ದು ಅವನೊಬ್ಬನಿಂದಷ್ಟೇ. 519 00:47:23,541 --> 00:47:25,791 ನಾನು ನಿನ್ನನ್ನು ಬಳಸಿಕೊಂಡಿದ್ದು ತಪ್ಪೇ. 520 00:47:26,875 --> 00:47:28,291 ಅದಕ್ಕಾಗಿ ನನ್ನನ್ನು ಕ್ಷಮಿಸು. 521 00:47:30,583 --> 00:47:33,541 ನಾಳೆ, ರಾಣಿ ನಿನ್ನನ್ನು ಸಭೆಗೆ ಕರೆಯಲಿದ್ದಾರೆ. 522 00:47:33,625 --> 00:47:38,291 ಆ ಸಭೆಯಲ್ಲಿ ನಿನ್ನ ಧ್ವನಿಯೇ ಈ ಕಾರ್ಯ ನಿಲ್ಲುತ್ತೋ ಬೀಳುತ್ತೋ ಎಂಬುದನ್ನ ನಿರ್ಧರಿಸಲಿದೆ. 523 00:47:39,041 --> 00:47:42,041 -ಸಹಾಯ ಮಾಡು. -ಈಗಾಗಲೇ ಬೇಕಾದಷ್ಟು ಸಹಾಯ ಮಾಡಿದ್ದೇನೆ. 524 00:47:43,500 --> 00:47:45,083 ಹಾಗಿದ್ರೆ ನಿನಗೆ ನೀನೇ ನೆರವಾಗು. 525 00:47:45,833 --> 00:47:48,750 ನನ್ನ ಜೊತೆ ಜಗಳವಾಡುವುದ ಬಿಟ್ಟು ಅವರನ್ನೆದುರಿಸಲು ಜೊತೆಯಾಗು. 526 00:47:49,416 --> 00:47:53,750 ಬಹಳ ಇತ್ತೀಚೆಗಷ್ಟೇ ನನ್ನಂಥ ಜನರು ಅವರೊಟ್ಟಿಗೆ ಕಾದಾಡುತ್ತಿದ್ದರು. 527 00:47:53,833 --> 00:47:55,500 ನಿನ್ನಂಥ ಜನರು. ನೀನಲ್ಲವಲ್ಲ. 528 00:48:02,000 --> 00:48:03,166 ತಪ್ಪು ಹೇಳಿದ್ದೀಯ. 529 00:48:07,333 --> 00:48:11,750 ಆ ತೆಪ್ಪದ ಮೇಲೆ ಏರುವುದಕ್ಕೂ ಮುನ್ನ ನಾನೇನು ಮಾಡಿದೆ ಅಂತ ನಿನಗೆ ಗೊತ್ತಿಲ್ಲ. 530 00:48:16,583 --> 00:48:18,416 ನಾ ಹೇಗೆ ಬದುಕುಳಿದೆ ನಿನಗ್ಗೊತ್ತಿಲ್ಲ. 531 00:48:27,375 --> 00:48:28,875 ನಾವು ಹೇಗೆ ಬದುಕುಳಿದೆವು ಅಂತ. 532 00:48:35,625 --> 00:48:38,958 ಈ ಜನರಿಗೆ ಅದು ಗೊತ್ತಾದಾಗ ನನ್ನನ್ನು ಹೊರಗಟ್ಟುತ್ತಾರೆ. 533 00:48:40,458 --> 00:48:41,666 ನೀನೂ ಸಹ. 534 00:48:44,041 --> 00:48:48,666 ಕೆಲವೊಮ್ಮೆ ಬೆಳಕನ್ನು ಹುಡುಕಲು ಮೊದಲು ಕತ್ತಲನ್ನು ಮುಟ್ಟಬೇಕು. 535 00:48:52,458 --> 00:48:54,208 ಕತ್ತಲಿನ ಬಗ್ಗೆ ನಿನಗೇನು ಗೊತ್ತು? 536 00:48:58,250 --> 00:49:00,083 ಯಾರ ಕತ್ತಿ ಅದು, ಗಲಾಡ್ರಿಯಲ್? 537 00:49:01,083 --> 00:49:02,583 ನೀನು ಯಾರನ್ನು ಕಳೆದುಕೊಂಡೆ? 538 00:49:03,833 --> 00:49:04,833 ನನ್ನ ಅಣ್ಣನನ್ನ. 539 00:49:05,500 --> 00:49:06,750 ಅವನಿಗೆ ಏನಾಯಿತು? 540 00:49:06,833 --> 00:49:08,458 ಅವನನ್ನು ಕೊಂದರು. 541 00:49:08,541 --> 00:49:10,791 ಕಗ್ಗತ್ತಲು, ನಿರಾಶಾವಾದ ತುಂಬಿದ ಸ್ಥಳದಲ್ಲಿ. 542 00:49:10,875 --> 00:49:13,583 ಸೌರೊನಿನ ಸೇವಕರು. ಇಷ್ಟು ಹೇಳಿದ್ರೆ ಸಾಕಾ ನಿನಗೆ? 543 00:49:13,666 --> 00:49:15,166 ಹಾಗಿದ್ದರೆ ಇದು ಪ್ರತೀಕಾರವೇ? 544 00:49:15,250 --> 00:49:17,625 ಉಪ್ಪುನೀರು ಕುಡಿದರೆ ದಾಹ ನೀಗದು. 545 00:49:17,708 --> 00:49:20,250 ಮತ್ತಿನ್ನೇನು? ಯಾಕೆ ಯುದ್ಧ ಮಾಡಬೇಕೆಂತಿದ್ದೀಯಾ? 546 00:49:21,166 --> 00:49:25,250 ನಾನು ಮತ್ತೆಂದೂ ಕಾಲಿಡಲು ಬಯಸದ ಜಾಗಕ್ಕೆ ಮತ್ತೆ ಹೋಗಲು ಹೇಳುತ್ತಿದ್ದೀಯ. 547 00:49:25,333 --> 00:49:27,625 ಕನಿಷ್ಠ ಪಕ್ಷ ಯಾಕೆ ಅಂತ ಆದ್ರೂ ಹೇಳ್ತೀಯಾ? 548 00:49:29,375 --> 00:49:31,166 ಯಾಕೆ ಕಾದಾಡುತ್ತಿರುವೆ? 549 00:49:31,250 --> 00:49:33,000 ಯಾಕಂದ್ರೆ ನನಗೆ ನಿಲ್ಲಿಸಲಾಗದು. 550 00:49:47,083 --> 00:49:49,375 ನಾನು ಮುನ್ನಡೆಸಿದ ಪಡೆ ನನ್ನ ವಿರೋಧಿಸಿತು. 551 00:49:51,750 --> 00:49:55,958 ನನ್ನನ್ನು ಬಹಿಷ್ಕರಿಸಲು ನನ್ನ ಆಪ್ತಮಿತ್ರನೇ ರಾಜನ ಜೊತೆ ಪಿತೂರಿ ನಡೆಸಿದನು. 552 00:49:56,500 --> 00:50:00,375 ಪ್ರತಿಯೊಬ್ಬರೂ ಅವರಂತೆಯೇ ನಡೆದುಕೊಂಡರು... 553 00:50:03,916 --> 00:50:07,166 ಯಾಕಂದ್ರೆ ನಾನು ಎದುರಿಸುತ್ತಿದ್ದ ದುಷ್ಟಶಕ್ತಿಗೂ ನನಗೂ ಮಧ್ಯೆ... 554 00:50:08,208 --> 00:50:10,208 ಯಾವುದೇ ವ್ಯತ್ಯಾಸ ಅವರಿಗೆ ಕಾಣ್ತಿರಲಿಲ್ಲ. 555 00:50:16,166 --> 00:50:17,416 ಕ್ಷಮಿಸು. 556 00:50:20,916 --> 00:50:22,250 ನಿನ್ನ ಅಣ್ಣನಿಗಾಗಿ. 557 00:50:23,458 --> 00:50:24,708 ಪ್ರತಿಯೊಂದಕ್ಕೂ. 558 00:50:25,750 --> 00:50:27,000 ನನ್ನನ್ನು ಕ್ಷಮಿಸು. 559 00:50:28,333 --> 00:50:30,875 ನನ್ನ ನೋವು ಕಳೆಯುವುದು ನಿನ್ನಿಂದ ಸಾಧ್ಯವಿಲ್ಲ. 560 00:50:32,666 --> 00:50:35,166 ಕೇವಲ ಸುತ್ತಿಗೆ ಮತ್ತು ಉಳಿಯಿಂದ ನಿನ್ನದೂ ತೀರದು. 561 00:50:36,625 --> 00:50:39,416 ನಿನಗಿಲ್ಲಿ ಯಾವುದೇ ಶಾಂತಿ ಲಭಿಸದು. 562 00:50:39,500 --> 00:50:41,000 ನನಗೂ ಅಷ್ಟೇ. 563 00:50:41,125 --> 00:50:43,500 ಸಮುದ್ರದ ಆಚೆಗೆ ಇರುವುದನ್ನು ಬಿಟ್ಟು 564 00:50:43,583 --> 00:50:45,916 ಬೇರೆ ಯಾವುದರಿಂದಲೂ ಚಿರಶಾಂತಿ ದೊರಕದು. 565 00:50:47,583 --> 00:50:50,583 ನನ್ನದನ್ನು ಗಳಿಸಲು ನಾನು ಶತಮಾನಗಳ ಕಾಲ ಹೋರಾಡಿದ್ದೇನೆ. 566 00:50:52,375 --> 00:50:54,083 ನಿನ್ನದನ್ನು ಈ ರೀತಿ ಗಳಿಸಬಹುದು. 567 00:51:14,333 --> 00:51:16,333 ಈ ದಿನಕ್ಕಾಗಿ ಬಹಳ ಕಾಲ ಎದುರು ನೋಡಿರುವೆ. 568 00:51:17,666 --> 00:51:20,500 ಕೊನೆಗೂ ನಿಮ್ಮವರು ಹಿಂತಿರುಗುವ ದಿನ, 569 00:51:21,458 --> 00:51:26,000 ನಮ್ಮನ್ನು ಈ ಗಲೀಜು, ಕೊಳಕಿಂದ ಮೇಲೆತ್ತಿ 570 00:51:27,041 --> 00:51:30,958 ನಿಮ್ಮ ಪಕ್ಕದಲ್ಲಿ ಸೂಕ್ತ ಸ್ಥಾನ ಗಳಿಸಿಕೊಳ್ಳುವುದಕ್ಕಾಗಿ. 571 00:51:33,041 --> 00:51:36,666 ನನ್ನ ಕೊನೆಯಾಗದ ಸೇವೆಯನ್ನು ನಿಮಗೆ ಅರ್ಪಿಸುತ್ತೇನೆ. 572 00:51:39,625 --> 00:51:43,250 ನನ್ನ ನಿಷ್ಠೆಯನ್ನು ಸೌರೊನಿಗೆ ಮುಡಿಪಾಗಿಡುತ್ತೇನೆ. 573 00:52:03,958 --> 00:52:05,958 ನೀವೇ ಸೌರೊನ್, ಅಲ್ಲವೇ? 574 00:52:16,791 --> 00:52:18,583 ಹೇ... ತಡಿ... 575 00:52:22,041 --> 00:52:24,833 ಹಾಗಿದ್ದಲ್ಲಿ ಸೇವೆ ಸಲ್ಲಿಸುವೆ. ನೀವು ಯಾರೇ ಆದರೂ. 576 00:52:37,625 --> 00:52:40,041 ರಕ್ತದಿಂದಷ್ಟೇ ಬಂಧ ಸಾಧ್ಯ. 577 00:52:48,708 --> 00:52:49,875 ವಾಲ್ಡ್ರೆಗ್? 578 00:52:58,333 --> 00:52:59,583 ವಾಲ್ಡ್ರೆಗ್... 579 00:53:02,208 --> 00:53:03,541 ವಾಲ್ಡ್ರೆಗ್, ಬೇಡ. 580 00:53:05,125 --> 00:53:06,416 ಬೇಡ... 581 00:53:07,791 --> 00:53:08,875 ಬೇಡ... 582 00:53:13,083 --> 00:53:14,166 ಬೇಡ... 583 00:53:15,083 --> 00:53:16,166 ಬೇಡ! 584 00:53:19,708 --> 00:53:21,291 ಮುಂದಿನ ಸಲ ಗುರಿಯ ಮೇಲಕ್ಕಿರಿಸು. 585 00:53:24,375 --> 00:53:26,583 ತಂತಿಯ ಬಗ್ಗೆ ಭಯಪಡಬೇಡ. 586 00:53:27,250 --> 00:53:29,083 ನನಗೆ ಯಾಕೆ ಹೇಳಿಕೊಡುತ್ತಿದ್ದೀಯಾ? 587 00:53:30,958 --> 00:53:33,666 ಯಾಕಂದ್ರೆ ನನ್ನನ್ನು ಇಲ್ಲಿ ನಿಲ್ಲಿಸಿರುವಂಥ 588 00:53:33,750 --> 00:53:37,416 ಧೈರ್ಯವನ್ನು ಗಳಿಸಲು 200 ವರ್ಷಗಳೇ ಬೇಕಾದವು. 589 00:53:38,791 --> 00:53:40,666 ನಿನಗಿದು 14ಕ್ಕೇ ಸಿಕ್ಕಿದೆ. 590 00:53:41,791 --> 00:53:43,583 ನಮಗದರ ಅವಶ್ಯಕತೆ ಇರುತ್ತೆ. 591 00:53:43,666 --> 00:53:46,041 ನನ್ನಿಡೀ ಜೀವನ ನಿಮ್ಮವರು ನಮ್ಮವರ ಕಾದಿದ್ದಾರೆ. 592 00:53:46,125 --> 00:53:47,875 ಪ್ರತಿ ಪಿಸುಮಾತನ್ನೂ ಎಣಿಸುತ್ತಾ. 593 00:53:48,666 --> 00:53:50,833 ಪ್ರತಿ ಅಡುಗೆಮನೆಯ ಚಾಕುವೂ ಚೂಪೇ. 594 00:53:52,166 --> 00:53:54,666 ನಾವೆಲ್ಲರೂ ಈ ಗೋಪುರದಲ್ಲೇ ಮಣ್ಣಾಗಲಿದ್ದೇವೆ. 595 00:53:54,750 --> 00:53:56,541 ನಮ್ಮ ಜೊತೆ ಯಾಕೆ ಮಣ್ಣಾಗ್ತೀರ? 596 00:53:58,416 --> 00:54:01,250 ಯಾಕಂದ್ರೆ ಪಿಸುಮಾತು ಮತ್ತು ಚಾಕುಗಳನ್ನು ಎಣಿಸುವುದರಲ್ಲೇ, 597 00:54:01,333 --> 00:54:04,958 ಅವುಗಳ ಹಿಂದಿನ ದನಿಗಳು ಮತ್ತು ಕೈಗಳನ್ನು ಅರಿತುಕೊಂಡಿದ್ದೇನೆ. 598 00:54:06,250 --> 00:54:07,750 ನಮ್ಮ ಅರ್ಧ ಜನ ಬಿಟ್ಟುಹೋದರು. 599 00:54:08,833 --> 00:54:10,666 ಮಿಕ್ಕ ಅರ್ಧ ಉಳಿದರು. 600 00:54:12,125 --> 00:54:13,208 ನಿನ್ನನ್ನೂ ಸೇರಿಸಿ. 601 00:54:19,833 --> 00:54:21,333 ನಿನ್ನ ಗುರಿಯನ್ನು ಮೇಲೆತ್ತು. 602 00:54:39,083 --> 00:54:41,083 ನಿನಗೆ ಗೊತ್ತಿಲ್ಲದ್ದು ಏನೋ ಇದೆ. 603 00:54:49,416 --> 00:54:50,916 ಇದನ್ನು ಮುಂಚೆ ನೋಡಿದ್ದೇನೆ. 604 00:55:39,041 --> 00:55:40,250 ಇದೊಂದು ಕೀಲಿಕೈ. 605 00:55:42,375 --> 00:55:46,875 ನಿನ್ನ ಪೂರ್ವಜರನ್ನು ಬಂಧಿಸಲು ಶತ್ರುವಿನ ಯಾವುದೋ ಕಳೆದುಹೋದ ವಿದ್ಯೆಯಿಂದ ಸೃಷ್ಟಿಸಿದ್ದು. 606 00:55:46,958 --> 00:55:48,500 ಯಾವುದರ ಕೀಲಿಕೈ? 607 00:55:51,875 --> 00:55:53,291 ನನಗೆ ಗೊತ್ತಿಲ್ಲ. 608 00:55:53,375 --> 00:55:56,166 ಶತ್ರುಗಳ ಅಧಿಪತಿ ದೇವರಾಗಲು ಬಯಸುವ ಮಾತುಗಳನ್ನಾಡಿದ್ದ. 609 00:55:56,250 --> 00:55:58,916 ಓರ್ಕ್ಸಿಗೆ ಈ ನೆಲದಲ್ಲೇ ವಾಸ್ತವ್ಯ ಹೂಡಿಸುವ ಬಗ್ಗೆ. 610 00:55:59,916 --> 00:56:02,583 ಅವನ ಯೋಜನೆ ಏನೇ ಆಗಿದ್ದರೂ, ಇದು ಮಾತ್ರ ಸತ್ಯ. 611 00:56:05,083 --> 00:56:08,291 ಅದನ್ನು ಮರುಸೃಷ್ಟಿಸಲು ಬೇಕಿರೋದು ನಿನ್ನ ಮಗನ ಬಳಿ ಇದೆ ಎಂದವನಿಗೆ ಗೊತ್ತು. 612 00:56:14,458 --> 00:56:15,666 ಇನ್ನೆಷ್ಟು ಕಾಲ? 613 00:56:17,208 --> 00:56:18,375 ದಿನಗಳು. 614 00:56:21,041 --> 00:56:22,458 ಅಥವಾ ಗಂಟೆಗಳು. 615 00:56:27,416 --> 00:56:29,125 ನಾವಿದರಿಂದ ಹೊರಬರಬಹುದು, ಬ್ರೊನವೀನ್. 616 00:56:29,791 --> 00:56:31,208 ಅದಕ್ಕೊಂದು ದಾರಿ ಇದೆ. 617 00:56:32,791 --> 00:56:33,958 ಇರಲೇಬೇಕು. 618 00:56:37,666 --> 00:56:39,083 ಒಂದಿದೆ. 619 00:56:40,333 --> 00:56:44,041 ಇಲ್ಲ! ಶತ್ರುವಿಗೆ ಶರಣಾದರೆ ಎಲ್ಲವೂ ಕಳೆದುಹೋಗುತ್ತೆ. 620 00:56:45,625 --> 00:56:47,625 ನಿನ್ನ ಮಗನಿಂದ ಹಿಡಿದು ಅವನ ಮಕ್ಕಳದ್ದೂ ಸಹ. 621 00:56:49,333 --> 00:56:53,333 ತಮ್ಮ ಸಚ್ಚರಿತ್ರೆಯನ್ನು ಗಳಿಸಲು ನಿಮ್ಮವರು ಒಂದಿಡೀ ಯುಗವನ್ನು ಸವೆಸಿದ್ದಾರೆ. 622 00:56:54,041 --> 00:56:57,166 ನಿನಗೆ ನಿರಾಶೆಯಾದ ಒಂದೇ ಕ್ಷಣಕ್ಕೆ ಇದನ್ನೆಲ್ಲಾ ಹಾಳುಗೆಡವುತ್ತೀಯಾ? 623 00:57:00,083 --> 00:57:02,083 ಇದಕ್ಕೆ ಬೇರೊಂದು ದಾರಿ ಇರಲೇಬೇಕು. 624 00:57:02,166 --> 00:57:04,666 ಹಾಗಿದ್ದರೆ ದಯವಿಟ್ಟು ಹೇಳು. 625 00:57:10,166 --> 00:57:11,208 ನೋಡಿದ್ಯಾ? 626 00:57:12,708 --> 00:57:14,708 ನೀನು ನಮ್ಮನ್ನು ಕಾದಿದ್ದು ಸರಿಯೇ ಇದೆ. 627 00:57:16,041 --> 00:57:18,458 ಯಾಕೆಂದರೆ ನಮಗೆ ಕಗ್ಗತ್ತಲೇ ಗತಿ. 628 00:57:20,208 --> 00:57:21,666 ನಾವು ಬದುಕುಳಿಯುವುದೇ ಹಾಗೆ. 629 00:57:24,833 --> 00:57:26,416 ನಮ್ಮ ಜನರೇ ಅಷ್ಟೇನೋ. 630 00:57:28,333 --> 00:57:29,833 ನಾವು ಎಂದಿಗೂ ಹೀಗೇ ಇರ್ತೀವಿ. 631 00:57:30,750 --> 00:57:35,375 ಇಲ್ಲಿ ನಮ್ಮ ಪ್ರಾಣಗಳಷ್ಟೇ ಅಲ್ಲದೆ ಬೇರೆ ಪ್ರಮುಖ ವಿಚಾರಗಳೂ ತೊಂದರೆಯಲ್ಲಿ ಇವೆ. 632 00:57:36,750 --> 00:57:40,666 ಮಾರ್ಗೊಥ್ ಯುದ್ಧದಲ್ಲಿ ಮುಳುಗಿದ್ದಾಗ ಇಡಿಯ ಭೂಖಂಡಗಳೇ ಮುಳುಗಿದವು. 633 00:57:40,750 --> 00:57:43,416 ನಮ್ಮ ಶತ್ರುವಿನ ಕೈಗೆ ಇದು ಸಿಕ್ಕರೆ ಇದರಿಂದ ಎಂಥ ವಿನಾಶ 634 00:57:43,500 --> 00:57:45,166 ಆಗಬಹುದು ಅಂತ ಯಾರಿಗೆ ಗೊತ್ತು? 635 00:57:45,250 --> 00:57:47,250 ಅವನನ್ನು ತಡೆಯಲು ನಮ್ಮ ಬಳಿ ಯಾವ ಶಕ್ತಿ ಇದೆ? 636 00:57:47,875 --> 00:57:49,791 ಸುತ್ತ ನೋಡು. ಎಲ್ಲಾ ಮುಗಿದುಹೋಗಿದೆ. 637 00:57:49,875 --> 00:57:51,666 -ಇನ್ನೂ ಇಲ್ಲ. -ಬೇಗ ಮುಗಿಯುತ್ತೆ. 638 00:57:53,416 --> 00:57:55,958 ಅವರು ನಮ್ಮ ಮೇಲೆ ಮೆರವಣಿಗೆ ಬರುವಾಗ ಈ ಗೋಪುರ ಬೀಳುತ್ತದೆ. 639 00:58:13,875 --> 00:58:14,916 ನಾಂಪಟ್! 640 00:58:59,916 --> 00:59:02,000 ನೀನೇ ಹುಟ್ಟಿಸಿಕೊಂಡು ಹೇಳಿದೆ ತಾನೇ? 641 00:59:02,083 --> 00:59:04,916 ಡಿಸಾ ಎಷ್ಟೋ ವರ್ಷಗಳಿಂದ ಹೊಸ ಮೇಜು ಬೇಕೆಂದು ಕೇಳುತ್ತಿದ್ದಳು. 642 00:59:12,375 --> 00:59:14,125 ಬಾ, ಇದು ಅಷ್ಟೇನೂ ಭಾರ ಇಲ್ಲ. 643 00:59:14,208 --> 00:59:17,208 ನನಗೆ ಭಾರ ಆಗಿರುವುದು ಈ ಮೇಜಿನ ತೂಕ ಅಲ್ಲ. 644 00:59:18,041 --> 00:59:19,666 ಮತ್ತೆ ಅದೇನು ಅಂತ ಹಂಚಿಕೋ. 645 00:59:19,750 --> 00:59:22,625 ಭಾರ ಹಂಚಿಕೊಂಡರೆ ಅರ್ಧ ಆಗಬಹುದು ಇಲ್ಲವೇ ಎರಡರಷ್ಟು ಆಗಬಹುದು. 646 00:59:22,708 --> 00:59:24,875 ಸ್ವೀಕರಿಸುವ ಹೃದಯವನ್ನು ಆಧರಿಸಿರುತ್ತೆ. 647 00:59:24,958 --> 00:59:28,750 ಆಲೆಯ ಗಡ್ಡವೇ! ಈ ದರಿದ್ರ ವಿಷಯ ಸಾಕು ಮಾಡು. 648 00:59:28,833 --> 00:59:31,833 ಸತ್ಯ ಹೇಳು, ಇದ್ದಿದ್ದು ಇದ್ದ ಹಾಗೆಯೇ ಹೇಳು. 649 00:59:37,583 --> 00:59:40,000 ನಾನು ನಿನಗೆ ಸಂಪೂರ್ಣ ನಿಜ ಹೇಳಿಲ್ಲ, ಡ್ಯುರಿನ್. 650 00:59:41,958 --> 00:59:45,375 ನಾನು ಖಜ಼ದ್-ಡೂಮಿಗೆ ಸ್ನೇಹಕ್ಕಾಗಿ ಅಲ್ಲ, ಆದರೆ ಒಂದು ಆಶಯಕ್ಕಾಗಿ ಬಂದೆ. 651 00:59:46,333 --> 00:59:47,750 ನನಗೆ ಗೊತ್ತಿರಲಿಲ್ಲ. 652 00:59:50,291 --> 00:59:51,916 ನಾನು ಬಂದಿದ್ದು ಮಿಥ್ರಿಲ್ಗಾಗಿ. 653 00:59:58,041 --> 00:59:59,291 ಯಾಕೆ? 654 01:00:01,000 --> 01:00:02,416 ಅದಿಲ್ಲದೆ, 655 01:00:03,500 --> 01:00:07,916 ವಸಂತ ಕಾಲದೊಳಗೆ ಈ ತೀರಗಳನ್ನು ನಮ್ಮವರು ಬಿಟ್ಟು ಹೊರಡಬೇಕು ಇಲ್ಲಾ ಸಾಯಬೇಕು. 656 01:00:09,791 --> 01:00:11,041 ಸಾಯೋದಾ? 657 01:00:12,500 --> 01:00:14,166 ಹೇಗೆ ಸಾಯೋದು? 658 01:00:16,166 --> 01:00:21,833 ನಮ್ಮ ಸಾವಿಲ್ಲದ ಆತ್ಮಗಳು ಯಾವುದರಲ್ಲೂ ಹೋಗದೆ, 659 01:00:23,541 --> 01:00:25,166 ನಿಧಾನವಾಗಿ ಮರೆಯಾಗುತ್ತಾ, 660 01:00:26,166 --> 01:00:27,833 ನಾವು ಕೇವಲ ಛಾಯೆಗಳಾಗುವವರೆಗೆ, 661 01:00:29,208 --> 01:00:31,916 ಕಾಲದ ಅಲೆಗಳಲ್ಲಿ ಕೊಚ್ಚಿಕೊಂಡು ಹೋಗುತ್ತವೆ. 662 01:00:33,750 --> 01:00:35,000 ಎಂದೆಂದಿಗೂ. 663 01:00:48,958 --> 01:00:54,708 ಹಾಗಿದ್ದರೆ ಇಡೀ ಎಲ್ವೆನ್ ಜನಾಂಗದ ಭವಿಷ್ಯ ನನ್ನ ಕೈಯಲ್ಲಿದೆಯಾ? 664 01:00:55,708 --> 01:00:57,416 ಹಾಗೆಯೇ ಇದ್ದಂಗಿದೆ. 665 01:01:03,625 --> 01:01:05,041 ಅದನ್ನ ಮತ್ತೆ ಹೇಳು. 666 01:01:05,500 --> 01:01:11,333 ಇಡೀ ಎಲ್ವೆನ್ ಜನಾಂಗದ ಭವಿಷ್ಯ ನಿನ್ನ ಕೈಯಲ್ಲಿದೆ. 667 01:01:20,041 --> 01:01:21,458 ಯಾರ ಕೈಯಲ್ಲಿ? 668 01:01:23,750 --> 01:01:25,166 ನಿನ್ನದೇ. 669 01:01:40,416 --> 01:01:43,541 ನಿನ್ನ ರೆಕ್ಕೆಯಿರೋ ಅಂಗಿಗಳನ್ನು ತಾ. ನಡೆಯೋಕೆ ಶುರುಮಾಡೋಣ. 670 01:01:43,625 --> 01:01:46,000 -ಡ್ಯುರಿನ್... -ಈಗಲೇ ಕೃತಜ್ಞತೆ ಹೇಳಬೇಡ. 671 01:01:46,083 --> 01:01:48,833 ನನ್ನ ತಂದೆಯನ್ನು ಒಪ್ಪಿಸಿದ ಮೇಲೆ ಕೃತಜ್ಞತೆ ತಿಳಿಸು. 672 01:01:48,916 --> 01:01:51,125 ನಾವೀಗ ದಯಮಾಡಿ ಹೊರಡಬಹುದಾ? 673 01:01:51,208 --> 01:01:53,041 ವಾಪಸ್ ಹೋಗಲು ತುಂಬಾ ದೂರ ಇದೆ. 674 01:01:53,125 --> 01:01:56,625 ಈ ಬಿಸಿಲಿನಿಂದ ನನ್ನ ಹೊಟ್ಟೆ ತೊಳೆಸುತ್ತಿದೆ. 675 01:01:56,708 --> 01:02:00,291 ಆದರೆ ಒಂದು ಶರತ್ತು. ಮೇಜು ನಾನು ಕೊಟ್ಟಿದ್ದು ಅಂತ ಡಿಸಾಗೆ ಹೇಳು. 676 01:02:00,375 --> 01:02:02,125 ಅದೃಷ್ಟ ಪರೀಕ್ಷಿಸಬೇಡ, ಎಲ್ಫ್. 677 01:02:22,833 --> 01:02:25,666 ಲಾರ್ಡ್ ಹಲ್ಬ್ರ್ಯಾಂಡ್, ರಾಣಿ ರೀಜೆಂಟ್ ಕರೆಯುತ್ತಿದ್ದಾರೆ. 678 01:04:35,250 --> 01:04:38,250 ಅವನಿಗೆ ಯಾರ ತಂದೆ ಸ್ಥಾನ ಕೊಡಿಸಿದರು ನೋಡು. ಮತ್ತೆ. 679 01:04:40,333 --> 01:04:42,208 ನನ್ನದು ನಾನು ಗಳಿಸಿದೆ. ನಿನ್ನ ಹಾಗೆಯೇ. 680 01:04:42,291 --> 01:04:43,500 ಸೈನಿಕನೇ. 681 01:04:46,750 --> 01:04:48,333 ಕುದುರೆಲಾಯದವನ ಬಳಿ ಹೋಗು. 682 01:04:49,708 --> 01:04:51,208 ನಾನು ಅಶ್ವದಳ ಅಂದುಕೊಂಡಿದ್ದೆ. 683 01:04:51,291 --> 01:04:52,625 ಅದೇನೇ. 684 01:04:55,958 --> 01:04:57,208 ಕೊಟ್ಟಿಗೆ ಗುಡಿಸುವುದು. 685 01:05:16,791 --> 01:05:17,625 ಸೈನಿಕರೇ! 686 01:06:06,708 --> 01:06:08,000 ಹಗ್ಗಗಳ ಬಿಡಿ! 687 01:06:08,666 --> 01:06:10,166 ಹಾಯಿಗಳ ಹರಡಿ! 688 01:06:10,583 --> 01:06:12,250 ನಾವು ಈಶಾನ್ಯಕ್ಕೆ ಹೋಗಲಿದ್ದೇವೆ. 689 01:06:13,958 --> 01:06:15,208 ಮಿಡ್ಲ್ ಅರ್ಥಿಗಾಗಿ. 690 01:06:16,791 --> 01:06:18,000 ಹಾಂ! 691 01:07:10,458 --> 01:07:13,750 ಸೂರ್ಯ ಬೇಗ ಮುಳುಗುತಿಹನು 692 01:07:13,833 --> 01:07:17,208 ಕಲ್ಲಿನ ಮರಗಳಡಿಯಲ್ಲಿ 693 01:07:17,291 --> 01:07:20,250 ಸೌಧದ ಒಳಗಿನ ಬೆಳಕು 694 01:07:20,333 --> 01:07:23,375 ಅದೀಗ ನನ್ನ ಮನೆಯಲ್ಲ 695 01:07:23,458 --> 01:07:26,166 ಮಂದಾಗ್ನಿಯ ಕಣ್ಣುಗಳಾಚೆ 696 01:07:26,250 --> 01:07:29,500 ಕರಿ ಮರಳೇ ನನಗೆ ಹಾಸಿಗೆ 697 01:07:29,583 --> 01:07:31,916 ಗೊತ್ತಿರುವುದೆಲ್ಲವ ಒತ್ತೆಯಿಟ್ಟೆ 698 01:07:32,000 --> 01:07:36,708 ಮುಂದಿರುವ ಅಗೋಚರಕ್ಕಾಗಿ 699 01:07:36,791 --> 01:07:42,041 ಕೂಗಿ ಎನ್ನ ಕೂಗಿ ಎನ್ನ, ದೂರದ ನೆಲಗಳೇ 700 01:07:42,125 --> 01:07:47,833 ದೂರ ನಾನು ಹೋಗಬೇಕು ಈ ಸುತ್ತುವ ದಿನದಂದು 701 01:07:47,916 --> 01:07:50,500 ದೂರ ನಾನು ಹೋಗಬೇಕು 702 01:07:50,583 --> 01:07:55,166 ಈ ಸುತ್ತುವ ದಿನದಂದು 703 01:07:55,250 --> 01:07:57,750 ಕುಡಿಯಲು ಕಡಿಮೆಯಿದೆ 704 01:07:57,833 --> 01:08:00,875 ತಿನ್ನಲೂ ಕಡಿಮೆಯಿದೆ 705 01:08:00,958 --> 01:08:06,333 ಶಕ್ತಿ ಇಲ್ಲವೆನ್ನುತ್ತೆ ಆದರೆ ದಾರಿ ಬೇಕೆನ್ನುತ್ತೆ 706 01:08:06,416 --> 01:08:12,375 ನನ್ನ ಕಾಲುಗಳು ಚಿಕ್ಕವು ಹಾದಿ ತುಂಬಾ ದೊಡ್ಡದು 707 01:08:12,458 --> 01:08:15,375 ವಿಶ್ರಾಂತಿಯಿಲ್ಲ, ಸುಖವಿಲ್ಲ 708 01:08:15,458 --> 01:08:20,250 ಸುಖವಿಲ್ಲ, ಆದರೆ ಹಾಡಿದೆ 709 01:08:20,333 --> 01:08:25,708 ಹಾಡಿ ಎನಗೆ, ಹಾಡಿ ಎನಗೆ, ದೂರದ ನೆಲಗಳೇ 710 01:08:25,791 --> 01:08:31,250 ಓ, ಮೇಲೆದ್ದು ದಾರಿ ತೋರಿ ಈ ಸುತ್ತುವ ದಿನದಂದು 711 01:08:31,333 --> 01:08:34,208 ಹುಡುಕಿಕೊಡಲು ಮಾತು ಕೊಡಿ 712 01:08:34,291 --> 01:08:39,041 ಈ ಸುತ್ತುವ ದಿನದಂದು 713 01:08:39,125 --> 01:08:41,916 ಕೊನೆಗೆ ಬರುವುದು ಅವರ ಉತ್ತರ 714 01:08:42,000 --> 01:08:44,958 ಚಳಿಯೊಳಗಿಂದ, ಮಂಜಿನೊಳಗಿಂದ 715 01:08:45,041 --> 01:08:50,750 ವಿಸ್ಮಿತರು, ವಿಹಾರಿಗಳೆಲ್ಲಾ ಕಳೆದುಹೋದವರಲ್ಲ 716 01:08:50,833 --> 01:08:53,625 ದುಃಖ ಏನೇ ಇರಲಿ 717 01:08:53,708 --> 01:08:56,708 ಯಾವುದೇ ಪರಿಸ್ಥಿತಿ ಇರಲಿ 718 01:08:56,791 --> 01:09:02,791 ವಿಸ್ಮಿತರು, ವಿಹಾರಿಗಳೆಲ್ಲಾ ಕಳೆದುಹೋದವರಲ್ಲ 719 01:09:04,250 --> 01:09:06,250 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 720 01:09:06,333 --> 01:09:08,333 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್