1 00:00:07,166 --> 00:00:08,875 ಯಾರ ಕತ್ತಿ ಅದು, ಗಲಾಡ್ರಿಯಲ್? 2 00:00:08,958 --> 00:00:12,291 ನನ್ನ ಅಣ್ಣ. ಅವನನ್ನು ಸೌರೊನಿನ ಸೇವಕರು ಕೊಂದರು. 3 00:00:13,333 --> 00:00:17,500 ಮಾರ್ಗೋಥಿನ ಸೋಲಿನ ನಂತರ, ನೀವು ಸೌರೊನ್ ಎಂದು ಕರೆಯುವವನು 4 00:00:17,625 --> 00:00:22,666 ಒಂದು ಶಕ್ತಿಯನ್ನು ಸೃಷ್ಟಿಸಲು ಬಯಸಿದ, ರಟ್ಟೆಗಳ ಶಕ್ತಿಯಲ್ಲ, ರಟ್ಟೆಗಳ ಮೀರಿದ ಶಕ್ತಿ. 5 00:00:22,750 --> 00:00:25,416 ಸೌರೊನನ್ನು ಸಾಯಿಸಿದೆ. 6 00:00:25,500 --> 00:00:26,541 ನಾನು ನಿನ್ನ ನಂಬಲ್ಲ. 7 00:00:26,625 --> 00:00:29,041 ಬದುಕು! 8 00:00:29,583 --> 00:00:30,625 ಡಿಲ್ಲಿ, ಹಿಂದಕ್ಕೆ ಬಾ! 9 00:00:35,375 --> 00:00:39,500 ಆದರೆ ನಾವೆಷ್ಟೇ ಶ್ರಮವಹಿಸಿದರೂ, ನಮ್ಮ ಅವನತಿ ಇನ್ನೂ ವೇಗವಾಗಾಗುತ್ತಿದೆ. 10 00:00:39,583 --> 00:00:42,125 ಈ ಮಿಥ್ರಿಲ್... ಇದರಿಂದಷ್ಟೇ ನಮ್ಮ ವಿಮೋಚನೆ. 11 00:00:42,208 --> 00:00:44,625 ಯಾವುದರಿಂದಲೂ ಇದರ ಬೆಳಕು ಆರದು. 12 00:00:45,041 --> 00:00:46,541 -ಮಹಾರಾಜ ಡ್ಯುರಿನ್… -ಸಾಕು! 13 00:00:47,541 --> 00:00:51,791 ಎಲ್ಫ್ಗಳು ಸಾವನ್ನು ತಪ್ಪಿಸಿಕೊಳ್ಳಲೆಂದು ಕುಬ್ಜರ ಜೀವಗಳನ್ನು ಒತ್ತೆಯಿಡಲಾರೆ. 14 00:00:52,916 --> 00:00:54,541 ಮಿಡ್ಲ್ ಅರ್ಥಿಗೆ ಹೋಗುತ್ತಿದ್ದೇನೆ. 15 00:00:54,625 --> 00:00:58,250 ಅಲ್ಲಿ ನಿನಗಾಗಿ ಕಾದಿರುವುದು ಕಗ್ಗತ್ತಲು. 16 00:00:59,333 --> 00:01:00,166 ರಕ್ಷಣೆ ಪಡೆಯಿರಿ! 17 00:01:03,875 --> 00:01:04,708 ಇಲ್ಲ! 18 00:01:05,125 --> 00:01:06,500 ನನ್ನ ಮಗ ಎಲ್ಲಿ? 19 00:01:06,583 --> 00:01:08,625 ಅಡಾರ್! 20 00:01:08,708 --> 00:01:11,375 ಈ ನೆಲವನ್ನು ನಮ್ಮ ಹಾಯಿಗಳ ಹಿಂದೆ ಸರಿಸೋಣ. 21 00:01:11,708 --> 00:01:15,458 -ನಿನ್ನ ಬದಿಯಲ್ಲಿ ಹೋರಾಡುತ್ತಾ, ನನಗನಿಸಿದ್ದು… -ನನಗೂ ಹಾಗನ್ನಿಸಿತು. 22 00:01:17,375 --> 00:01:19,125 ಈ ಗಾಯಕ್ಕೆ ಎಲ್ವಿಶ್ ಔಷಧವೇ ಬೇಕು. 23 00:01:19,208 --> 00:01:20,791 ರಾಜನಿಗೆ ಜಯವಾಗಲಿ! 24 00:01:25,375 --> 00:01:26,416 ಎಲ್ಲಿಗೆ ಹೋಗ್ತಿರುವೆ? 25 00:01:26,500 --> 00:01:28,125 -ಬರಲಿರೋದ ಅವನಿಗೆ ತಿಳಿಸಿ. -ಒಬ್ಬಳೇ? 26 00:01:28,208 --> 00:01:29,875 ಅವಳು ಒಬ್ಬಳೇ ಇರಲ್ಲ. 27 00:01:47,750 --> 00:01:53,666 ಎರಿನ್ ಗ್ಯಾಲೆನ್ ದಿ ಗ್ರೀನ್ವುಡ್ 28 00:02:20,916 --> 00:02:22,500 ನೀನು ಆಪತ್ತಲ್ಲ. 29 00:02:25,291 --> 00:02:26,500 ನೀನು ಒಳ್ಳೆಯವಳು. 30 00:03:07,083 --> 00:03:08,083 ನೋರಿ? 31 00:03:46,625 --> 00:03:52,166 ನಾವು ನಿಮಗೆ ಸೇವೆಗೈಯಲು ಬಂದಿದ್ದೇವೆ… ಒಡೆಯ ಸೌರೊನ್. 32 00:05:18,375 --> 00:05:24,375 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 33 00:05:55,750 --> 00:05:57,708 ಗಿಲ್-ಗಲಾಡ್ ನಾಳೆ ಬರಲಿದ್ದಾರೆ, 34 00:05:57,791 --> 00:06:01,125 ಸಂಪೂರ್ಣ ಎಲ್ಫ್ ರಾಜ್ಯವನ್ನು ಕಾಪಾಡುವ ಯೋಜನೆಯ ನಿರೀಕ್ಷೆಯಲ್ಲಿದ್ದಾರೆ. 35 00:06:02,083 --> 00:06:03,333 ನಮ್ಮಲ್ಲಿ ಯಾವುದೂ ಇಲ್ಲ. 36 00:06:04,666 --> 00:06:06,750 ಒಂದಾದರೂ ದಾರಿ ಇದ್ದಿದ್ದರೆ… 37 00:06:08,583 --> 00:06:12,583 ಅಲ್ಪದಿಂದ ಹೆಚ್ಚನ್ನು ಮಾಡುವಂಥದ್ದು. 38 00:06:13,708 --> 00:06:18,750 ಸೂರ್ಯನೂ ನನ್ನ ಹಸ್ತದಷ್ಟೇ ಚಿಕ್ಕ ಗಾತ್ರದಿಂದ ಬೆಳೆದದ್ದು. 39 00:06:18,833 --> 00:06:22,625 ಆದರೆ ಸೂರ್ಯನನ್ನು ಸೃಷ್ಟಿಸಿದ ಶಕ್ತಿಗೆ ಸಮನಾಗಿ ನಾವು ನಿಲ್ಲುವುದು ಹೇಗೆ? 40 00:06:24,416 --> 00:06:26,541 ನಮ್ಮಲ್ಲಿ ಸಮಯವಿಲ್ಲ, ಕೆಲಿಬ್ರೀಂಬೋರ್. 41 00:06:30,166 --> 00:06:32,666 ನಮ್ಮ ವೈಫಲ್ಯದ ಬಗ್ಗೆ ಮೇಲರಸರಿಗೆ ತಿಳಿಸಬೇಕು. 42 00:06:34,125 --> 00:06:39,125 ನಂತರ ಎಲ್ಫ್ಗಳು ಈ ತೀರಗಳನ್ನು ಬಿಡುವುದಕ್ಕಾಗಿ ತಯಾರಾಗಬೇಕು. ಶಾಶ್ವತವಾಗಿ. 43 00:06:54,750 --> 00:06:55,583 ಗಲಾಡ್ರಿಯಲ್? 44 00:06:56,791 --> 00:06:57,875 ಎಲ್ರೊಂಡ್. 45 00:06:58,708 --> 00:06:59,791 ಏನಾಗಿದೆ? 46 00:07:01,583 --> 00:07:04,000 ವೈರಿಯ ಈಟಿ. ಆರು ದಿನಗಳ ಹಿಂದೆ. 47 00:07:04,791 --> 00:07:06,041 ವಿಶ್ರಾಂತಿಯಿಲ್ಲದ ಪ್ರಯಾಣ. 48 00:07:08,041 --> 00:07:09,458 ಅವನಿಗೆ ಸಹಾಯ ಮಾಡುವೆಯಾ? 49 00:07:10,958 --> 00:07:14,416 ಜೀವವನ್ನು ಹೊಂದು… 50 00:07:14,500 --> 00:07:19,125 ಸೌತ್ ಲ್ಯಾಂಡ್ಸಿನ ರಾಜನೇ? ಅವರೊಂದಿಗೆ ನಿನ್ನ ಮುಖಾಮುಖಿ ಹೇಗಾಯಿತು? 51 00:07:19,875 --> 00:07:21,458 ನೀನಿಲ್ಲಿ ಹೇಗೆ ಬಂದೆ? 52 00:07:22,583 --> 00:07:24,083 ನೀನಿಲ್ಲಿ ಹೇಗೆ ಬಂದೆ? 53 00:07:28,791 --> 00:07:31,208 ಬಾ. ಚರ್ಚಿಸಲು ತುಂಬಾ ಇದೆ. 54 00:07:38,625 --> 00:07:40,750 ನಾನು ನಿನ್ನನ್ನು ಹಡಗಿಗೆ ಕಳಿಸಲೇಬಾರದಿತ್ತು. 55 00:07:41,416 --> 00:07:45,416 ನಾನು ನಿನ್ನನ್ನು ನಂಬಬೇಕಾಗಿತ್ತು. ಈ ತಪ್ಪನ್ನು ನಾನು ಮತ್ತೆ ಮಾಡೆನು. 56 00:07:52,291 --> 00:07:53,791 ನಾನು ಹಡಗಿನಿಂದ ಎಗರಿದೆ… 57 00:07:56,166 --> 00:07:59,541 ಯಾಕೆಂದರೆ ನನ್ನ ಮನಸ್ಸಿನಲ್ಲಿ ನಾನಿನ್ನೂ ಅದಕ್ಕೆ ಯೋಗ್ಯಳಲ್ಲ ಎಂದುಕೊಂಡಿದ್ದೆ. 58 00:08:00,083 --> 00:08:04,083 ಹೇಗೋ ನನ್ನ ಕಾರ್ಯ ಇಲ್ಲಿ ಇನ್ನೂ ಮುಗಿದಿರಲಿಲ್ಲ ಎಂದು ನನಗೆ ಗೊತ್ತಿತ್ತು. 59 00:08:05,750 --> 00:08:09,750 ನಾನು ಮೇಲೆ ಎದ್ದಾಗ, ನನ್ನಿಂದ ಆಗಿದ್ದು ಕೇವಲ ಈಜುವುದು ಮತ್ತು ಸರಿಯಾದ ಆಯ್ಕೆ 60 00:08:09,833 --> 00:08:12,041 ಮಾಡಿರಲೆಂದು ಪ್ರಾರ್ಥಿಸುವುದು. 61 00:08:16,125 --> 00:08:18,333 ಆ ಕಷ್ಟದ ಸಾಗರವನ್ನು ನಾನು ಅಂದು ದಾಟಿದ್ದು… 62 00:08:19,708 --> 00:08:21,291 ಈಗ ಮುಳುಗೋಕೆ ಅಲ್ಲ. 63 00:08:24,000 --> 00:08:25,583 ನಿನ್ನನ್ನು ಮುಳುಗಲೂ ಬಿಡಲ್ಲ. 64 00:08:33,041 --> 00:08:34,875 ನಿನ್ನ ಅನುಪಸ್ಥಿತಿ ಕಾಡುತ್ತಿತ್ತು. 65 00:08:38,333 --> 00:08:39,750 ನಾವೇನು ಮಾಡಬಹುದು? 66 00:08:42,750 --> 00:08:44,333 ನಾವು ಮಾಡಲಾಗುವಂಥ ಒಂದೇ ಒಂದನ್ನು. 67 00:08:46,000 --> 00:08:47,416 ಈಜುವುದು. 68 00:08:56,958 --> 00:08:58,125 ಯಾರಲ್ಲಿ? 69 00:09:04,208 --> 00:09:06,208 ಯಾರಲ್ಲಿ? ಕಾಣಿಸಿಕೊಳ್ಳಿ. 70 00:09:07,208 --> 00:09:08,875 ಗಲಾಡ್ರಿಯಲ್ ಇದ್ದಾಳಾ? 71 00:09:15,625 --> 00:09:16,833 ಇಲ್ಲ. 72 00:09:18,666 --> 00:09:21,166 ನೀನು ವಿಶ್ರಾಂತಿ ತೆಗೆದುಕೊಳ್ಳುತ್ತಿರಬೇಕಲ್ಲವೇ? 73 00:09:21,708 --> 00:09:23,208 ಇದು ಯಾವ ಸ್ಥಳ? 74 00:09:24,416 --> 00:09:28,291 ಇದು ಕೆಲಿಬ್ರೀಂಬೋರರ ಕಾರ್ಯಗಾರ. 75 00:09:28,916 --> 00:09:30,083 ಆ ಕೆಲಿಬ್ರೀಂಬೋರರೇ? 76 00:09:31,666 --> 00:09:33,666 ಅವರು ಇಲ್ಲಿಲ್ಲ, ಅಲ್ಲವೇ? 77 00:09:33,750 --> 00:09:37,541 ಅಂದ್ರೆ... ನಿಜವಾಗ್ಲೂ ಹೇಳಬೇಕೆಂದರೆ, ಇದ್ದಾರೆ. 78 00:09:50,583 --> 00:09:52,000 ಕೆಲಿಬ್ರೀಂಬೋರ್... 79 00:09:53,166 --> 00:09:54,583 ನನಗೆ ವಿದ್ಯೆ ಕಲಿಸಿದ ಗುರು 80 00:09:54,666 --> 00:09:57,166 ನಿನ್ನ ಕಲೆಯ ಬಗ್ಗೆ ಅದ್ಭುತ ಮಾತುಗಳನ್ನಾಡುತ್ತಿದ್ದರು. 81 00:09:58,125 --> 00:10:01,750 ಅವನನ್ನು ನೇರವಾಗಿ ಭೇಟಿಯಾಗುತ್ತೇನೆ ಎಂದು ನಾನು ಕನಸಿನಲ್ಲೂ ಎಣಿಸಿರಲಿಲ್ಲ. 82 00:10:01,833 --> 00:10:03,041 ನೀನು ಕಮ್ಮಾರನೇ? 83 00:10:03,750 --> 00:10:07,083 ಏನೋ... ನಿಮ್ಮಷ್ಟು ಕಲಾವಿದನಲ್ಲ. 84 00:10:09,458 --> 00:10:13,458 ನಾನು ಇಂಥ ಮುತ್ತುರತ್ನಗಳನ್ನು ಎಂದಿಗೂ ನೋಡಿಲ್ಲ. 85 00:10:14,291 --> 00:10:17,458 ಇವನ್ನು ಯಾವುದಕ್ಕಾಗಿ ಬಳಸುವಿರಿ? 86 00:10:17,541 --> 00:10:23,541 ಫೇನೋರನ ಆಭರಣಾಕಲೆ ವಾಲಿನೊರಿನ ಅಂಶವನ್ನು ಹಿಡಿದಿಡಲು ಯಶಸ್ವಿಯಾಯಿತು. 87 00:10:24,208 --> 00:10:26,250 ಮಿಡ್ಲ್ ಅರ್ಥಿಗೆ ಅದನ್ನೇ ಮಾಡಲು ಯೋಚಿಸಿದೆ. 88 00:10:26,333 --> 00:10:30,541 ಇದೊಂದು ವಿಲಕ್ಷಣವಾದ ಅದಿರು. ಏನಿದು? 89 00:10:33,750 --> 00:10:34,833 ಸಾಲದು. 90 00:10:34,916 --> 00:10:36,750 ಯಾವುದಕ್ಕೆ ಸಾಲದು? 91 00:10:40,375 --> 00:10:41,375 ದಯಮಾಡಿ. 92 00:10:41,458 --> 00:10:45,541 ಇದನ್ನು ಬೇರೆ ಅದಿರುಗಳ ಜೊತೆ ಬೆರೆಸಲು ಪ್ರಯತ್ನಿಸಿದಿರಾ? ಇದನ್ನು ಚೆನ್ನಾಗಿ ಬಳಸಲು? 93 00:10:45,625 --> 00:10:47,958 ಅದು ಈ ಅದಿರಿಗೆ ಸರಿಬರದು. 94 00:10:48,041 --> 00:10:50,166 -ಯಾಕೆ? -ಯಾಕೆಂದರೆ ನಮಗೆ ಬೇಕಾಗುವ ಪ್ರಮಾಣ, 95 00:10:50,250 --> 00:10:53,125 ಇದರ ವಿಶೇಷ ಗುಣಗಳನ್ನು ಅತಿಯಾಗಿ ಕುಗ್ಗಿಸಿಬಿಡುತ್ತದೆ. 96 00:10:53,708 --> 00:10:56,708 ಕ್ಷಮಿಸಿ, ಇದನ್ನು ಕೇಳುವುದು ಮೂರ್ಖತನವಿರಬಹುದು, 97 00:10:56,791 --> 00:10:59,958 ಸರಿಯಾದ ಮಿಶ್ರಲೋಹದಿಂದ ಇದರ ಗುಣಗಳನ್ನು ವೃದ್ಧಿಸಲಾಗದೇ? 98 00:11:02,708 --> 00:11:03,791 ವೃದ್ಧಿಸುವುದಾ? 99 00:11:03,875 --> 00:11:07,208 ನಾನು ಬೆಳೆದ ಕಡೆ ಅಮೂಲ್ಯ ಲೋಹಗಳು ಕೋಳಿಯ ಹಲ್ಲುಗಳಷ್ಟೇ ಅಪರೂಪ. 100 00:11:07,666 --> 00:11:11,875 ಶಕ್ತಿಗಳನ್ನು ವೃದ್ಧಿಸಲು ಮತ್ತು ಬಲಹೀನತೆಗಳನ್ನು ಮರೆಮಾಚಲು ಅವುಗಳ ಮಿಶ್ರಣ ಮಾಡಿದೆವು. 101 00:11:11,958 --> 00:11:17,291 ಕಬ್ಬಿಣಕ್ಕೆ ಸ್ವಲ್ಪ ನಿಕಲ್ ಬೆರೆಸಿದರೆ ಖಡ್ಗವು ಹಗುರ ಮತ್ತು ಶಕ್ತಿಯುತವಾಗಿ ತಯಾರಾಗುವುದು. 102 00:11:17,375 --> 00:11:22,375 ನಿಮ್ಮ ಅದಿರಿನ ಗುಣಗಳನ್ನು ವೃದ್ಧಿಸುವಂತಹ ಯಾವುದಾದರೂ ಮಿಶ್ರಲೋಹ ಇರದೇ? 103 00:11:29,916 --> 00:11:35,333 ಇದೊಂದು ರೀತಿ ಕುತೂಹಲಕಾರಿ ಸಲಹೆಯಾಗಿದೆ. 104 00:11:38,166 --> 00:11:41,666 ಇದನ್ನು… ಉಡುಗೊರೆ ಎನ್ನಿರಿ. 105 00:11:49,000 --> 00:11:54,458 ಪ್ರತಿ ವ್ಯಕ್ತಿಯೂ ಕೊನೆಯದಾಗಿ ನಡೆವ ರಸ್ತೆಯಲ್ಲಿ ಅವನು ಇಷ್ಟರಲ್ಲೇ ಪಯಣಿಸಲಿದ್ದಾನೆ. 106 00:11:55,291 --> 00:11:58,041 ನಮ್ಮ ಬಂದರಿನಲ್ಲಿ ಕಪ್ಪು ಬಾವುಟಗಳು ರಾರಾಜಿಸಲಿವೆ. 107 00:11:59,458 --> 00:12:02,625 ಆತನಿಗೊಂದು ಗೋರಿಯನ್ನು ಕಟ್ಟಿಸಿ, ಯಾವುದೇ ವ್ಯಕ್ತಿಯಾಗಲಿ, 108 00:12:04,791 --> 00:12:10,625 ರಾಜನಾಗಲಿ, ಜೀವನದಲ್ಲೇ ಪಡೆಯಲಾಗದಂಥ ಅಮರತ್ವವನ್ನು ಕಲ್ಲಿನಲ್ಲಿ 109 00:12:13,083 --> 00:12:16,333 ಅವನಿಗೆ ಕಟ್ಟಿ ಕೊಡುವುದು ನಮ್ಮ ಕರ್ತವ್ಯವಾಗಲಿದೆ. 110 00:12:17,708 --> 00:12:23,083 ಒಂದು ವಿನ್ಯಾಸವನ್ನು ಪ್ರತಿಪಾದಿಸುವ ಕೆಲಸಕ್ಕೆ ಆತನ ಮುಖಚಹರೆಯನ್ನು ಹಿಡಿದಿಡಲು ನ್ಯೂಮೆನೊರಿನಿಂದ 111 00:12:23,166 --> 00:12:25,166 ನಕ್ಷಾಗಾರರನ್ನು ಕರೆಸಿದ್ದಾರೆ. 112 00:12:26,041 --> 00:12:27,875 ಎಲ್ಲಾ ಶಿಷ್ಯಂದಿರ ಪೈಕಿ, 113 00:12:29,041 --> 00:12:31,875 ನಿನ್ನನ್ನೂ ಸಹ ಪ್ರತಿಪಾದಿಸಲು ಆಯ್ಕೆ ಮಾಡಿದ್ದಾರೆ. 114 00:12:34,916 --> 00:12:36,083 ಬರುವ ದಿನಗಳಲ್ಲಿ, 115 00:12:36,166 --> 00:12:39,291 ಪ್ರತಿಯೊಬ್ಬರಿಗೂ ರಾಜನ ಜೊತೆ ಒಂದು ಗಂಟೆಯ ಕಾಲಾವಕಾಶ ಸಿಗುವುದು. 116 00:12:41,333 --> 00:12:42,541 ಅದನ್ನು ಸರಿಯಾಗಿ ಬಳಸಿ. 117 00:13:07,208 --> 00:13:09,833 ಎಲ್ಲರೂ ಮಲಗಿದ್ದಾರೆ ಎಂದು ಅರಿತು ಕಗ್ಗತ್ತಲ ರಾತ್ರಿಯಲ್ಲಿ 118 00:13:09,916 --> 00:13:12,666 -ನೀನೇನು ಮಾಡುತ್ತಿರುವೆ ಎಂದು ನನಗೆ ಗೊತ್ತು. -ಕ್ಷಮಿಸಿ. 119 00:13:12,750 --> 00:13:16,083 ನಿಮ್ಮ ಸೇವಕಿ ಒಂದು ಕ್ಷಣದಲ್ಲೇ ವಾಪಸಾಗುವಳು, ಮಹಾರಾಜ. 120 00:13:16,166 --> 00:13:18,208 ಹಾಗಿದ್ದರೆ ಇನ್ನೂ ಸಮಯವಿದೆ. 121 00:13:23,875 --> 00:13:24,958 ಯಾವುದಕ್ಕೆ ಸಮಯ? 122 00:13:25,041 --> 00:13:27,541 ನಿನ್ನನ್ನು ಎಚ್ಚರಿಸಲು, ಯುವ ಮೀರಿಯೆಲ್. 123 00:13:27,625 --> 00:13:30,416 -ತಪ್ಪು ಹೇಳ್ತಿದ್ದೀರ. ನಾನು... -ರಾಣಿಯಲ್ಲವೇ? ಇಲ್ಲ. 124 00:13:30,500 --> 00:13:32,916 ಆದರೆ ಆಗಲಿರುವೆ. ಮತ್ತೆ ಇದನ್ನು ತಿಳಿದಿರು, 125 00:13:33,000 --> 00:13:36,166 ನಮ್ಮ ಜನಗಳ ಹಳೆಯ ಆಚಾರಗಳನ್ನು ಮರುಸ್ಥಾಪಿಸದಿದ್ದರೆ 126 00:13:36,250 --> 00:13:37,958 ನಮ್ಮ ದ್ವೀಪ ಪತನವಾಗುವುದು. 127 00:13:43,166 --> 00:13:44,375 ಕಾಪಾಡಿ! 128 00:13:44,958 --> 00:13:47,375 ಮಹಾರಾಜರನ್ನು ಕಾಪಾಡಿ! 129 00:13:58,583 --> 00:14:00,041 ಬಾ. ನೀನು ಮೇಲೆ ಹೋಗಬೇಕು. 130 00:14:00,125 --> 00:14:03,916 ಆದರೆ ನನ್ನ ಹಾಗೆ ಮಾಡಬೇಡ. ನಾನು ಬಹಳ ಕಾಲ ಹುಡುಕಿದೆ. 131 00:14:04,000 --> 00:14:07,500 ಆದರೆ ಈಗ, ವರ್ತಮಾನವನ್ನು ಭೂತದಿಂದ, 132 00:14:07,583 --> 00:14:09,708 ಭೂತವನ್ನು ಭವಿಷ್ಯದಿಂದ ಬೇರ್ಪಡಿಸಲಾರೆ. 133 00:14:46,333 --> 00:14:50,833 ಒಂದು ವಸ್ತು. ಇಡಿಯ ಮಿಡ್ಲ್ ಅರ್ಥಿಗೆ. 134 00:14:50,916 --> 00:14:52,750 ಇದು ವಿಚಿತ್ರವಾಗಿ ಕೇಳುವುದೆಂದು ಗೊತ್ತು. 135 00:14:52,833 --> 00:14:56,000 ಆದರೆ ನಮಗಿರುವ ಎಲ್ಲಾ ಪರಿಹಾರಗಳನ್ನೂ ನಾವು ಪರಿಗಣಿಸಲೇಬೇಕು. 136 00:14:56,500 --> 00:14:58,875 ನಿಖರವಾಗಿ ಇದು ಯಾವ ರೀತಿಯ ವಸ್ತು? 137 00:14:58,958 --> 00:15:01,916 ಹಿಂದೆ ಅಂದುಕೊಂಡಿದ್ದಕ್ಕಿಂತ ಇದು ಚಿಕ್ಕದಾಗಿರಲಿದೆ. 138 00:15:02,000 --> 00:15:03,750 ಎತ್ತಿಕೊಂಡು ಹೋಗುವಂಥದ್ದು… 139 00:15:03,833 --> 00:15:04,916 -ಕೈಗೋಲು. -ಖಡ್ಗವೇ? 140 00:15:05,000 --> 00:15:07,708 ಅಥವಾ ಬಹುಶಃ… ಕಿರೀಟ. 141 00:15:10,125 --> 00:15:11,125 ಕಿರೀಟ ಯಾಕೆ? 142 00:15:11,208 --> 00:15:13,750 ದುಂಡನೆಯ ಆಕಾರ ಪ್ರಶಸ್ತವಾಗಿರುವುದು. 143 00:15:13,833 --> 00:15:17,666 ಕೊನೆಯಿರದ ವೃತ್ತದೊಳಗೆ ಬೆಳಕು ತನ್ನ ಮೇಲೆಯೇ ಬಾಗಲು ಅವಕಾಶಮಾಡಿಕೊಟ್ಟು 144 00:15:17,750 --> 00:15:21,791 ಅನಿಯಮಿತವಾದ ಶಕ್ತಿಗಾಗಿ ಅದನ್ನು ಕಟ್ಟುವುದು. 145 00:15:22,791 --> 00:15:26,791 ಅಷ್ಟೆಲ್ಲಾ ಶಕ್ತಿಯನ್ನು ಒಬ್ಬರ ಮೇಲೆಯೇ ಹೊರಿಸಲು ಯೋಚಿಸಿದ್ದೀರಾ? 146 00:15:26,875 --> 00:15:29,875 ಯಾರೊಬ್ಬರ ಮೇಲೋ ಅಲ್ಲ, ಮೇಲರಸರೇ. ನೀವೇ. 147 00:15:33,500 --> 00:15:35,583 ಈ ಪಿಸುಮಾತುಗಳು ಅಪಾಯಕಾರಿ… 148 00:15:35,666 --> 00:15:38,000 ಕೆಲವೊಮ್ಮೆ ಅಪಾಯಕಾರಿ ದಾರಿಯೊಂದೇ ಇರುವ ದಾರಿ. 149 00:15:38,083 --> 00:15:40,041 ಇಲ್ಲದಿದ್ದರೆ ನಾನಿಲ್ಲಿ ಇರುತ್ತಿರಲಿಲ್ಲ. 150 00:15:40,125 --> 00:15:42,208 ನೀನಿಲ್ಲಿ ಇರಲೇಬಾರದಿತ್ತು. 151 00:15:43,333 --> 00:15:45,458 ಮೇಲರಸರೇ, ಎಲ್ಫ್-ಕಲಾವಿದರನ್ನು ಸೇರಿಸಿ, 152 00:15:45,541 --> 00:15:48,375 ಕೆಲಿಬ್ರೀಂಬೋರರ ಸಿದ್ಧಾಂತವನ್ನು ಪರೀಕ್ಷಿಸಲು ಸಮಯ ಬೇಕು... 153 00:15:48,458 --> 00:15:49,791 ನಮಗೆ ಹೆಚ್ಚಿನ ಸಮಯವಿಲ್ಲ. 154 00:15:49,875 --> 00:15:52,083 -ಹೌದು, ಅದಕ್ಕಾಗೇ... -ತುಂಬಾನೇ ಕಡಿಮೆ. 155 00:15:53,625 --> 00:15:58,125 ಅಗ್ನಿಪರ್ವತದ ಸ್ಫೋಟವಾದ ನಂತರ ಮಹಾವೃಕ್ಷದ ಎಲೆಗಳು ಉದುರುತ್ತಲೇ ಇವೆ. 156 00:15:58,750 --> 00:16:00,833 ಕೊನೆಯವು ಇಷ್ಟರಲ್ಲೇ ಬೀಳಲಿವೆ. 157 00:16:00,916 --> 00:16:05,333 ನಮ್ಮ ಜನರು ಈ ತೀರಗಳನ್ನು ಬಿಡಲಾಗದಿದ್ದರೆ ನಮ್ಮಿಂದಲೂ ಆಗದು. 158 00:16:08,125 --> 00:16:12,125 ನನಗಿಂತ ಹೆಚ್ಚಾಗಿ ಪರಿಹಾರ ಬೇಕಿರುವ ಎಲ್ಫ್ ಈ ಮಿಡ್ಲ್ ಅರ್ಥಲ್ಲೇ ಇಲ್ಲ. 159 00:16:13,083 --> 00:16:18,750 ಆದರೆ ಇದೇ ನಮ್ಮ ವಿಮೋಚನೆಯಾದರೆ, ನಮಗಿದು ಬೇಗನೇ ಬೇಕಾಗಿತ್ತು. 160 00:16:18,833 --> 00:16:20,916 ನನಗದು ಬೇಗನೇ ಬಂದೇಬಿಟ್ಟಿತ್ತು. 161 00:16:21,708 --> 00:16:23,916 ಸೌತ್ ಲ್ಯಾಂಡವನ ಜೊತೆ ಮಾತಾಡುತ್ತಾ... 162 00:16:24,000 --> 00:16:26,416 ಕೆಳಗಿನ ಮನುಷ್ಯನಾ? ಈ ಉಪಾಯ ಅವನದಾ? 163 00:16:26,500 --> 00:16:30,000 ಅವರಿಗೊಂದು ಪರಿಹಾರ ಸಿಗಲು ಇವನ ಸಲಹೆಗಳೇ ಮುಖ್ಯ ಕಾರಣ. 164 00:16:30,083 --> 00:16:34,750 ಒಂದು ಹೊಸ ರೀತಿಯ ಶಕ್ತಿಯನ್ನು ತಯಾರಿಸುವ ತುದಿಯಲ್ಲಿ ನಾವಿದ್ದೇವೆ. 165 00:16:34,833 --> 00:16:37,875 ಇದು ಬಲದಿಂದಲ್ಲ, ಆತ್ಮದಿಂದ. 166 00:16:37,958 --> 00:16:40,458 ಜನಗಳಿಂದಲ್ಲ, ಜನಗಳ ಮೇಲೆ. 167 00:16:42,166 --> 00:16:43,916 ಇದು... 168 00:16:44,000 --> 00:16:47,541 ಇದು ಕಂಡಿರದ ಪ್ರಪಂಚದ ಶಕ್ತಿ. 169 00:16:49,250 --> 00:16:52,500 ನನ್ನನ್ನು ಕ್ಷಮಿಸಿ, ಲಾರ್ಡ್ ಕೆಲಿಬ್ರೀಂಬೋರ್. 170 00:16:53,250 --> 00:16:56,625 ನೀವು ಈ ಕ್ಷಣವೇ ನಗರವನ್ನು ತೊರೆದು ಲಿಂಡೊನ್ನಿಗೆ 171 00:16:56,708 --> 00:16:59,708 ಹಿಂತಿರುಗಲು ಆಜ್ಞಾಪಿಸುತ್ತೇನೆ. 172 00:17:00,458 --> 00:17:01,875 ನೀವೆಲ್ಲರೂ. 173 00:17:16,083 --> 00:17:19,833 ಆ ಮಾತು, "ಜನಗಳ ಮೇಲಿನ ಶಕ್ತಿ". 174 00:17:20,791 --> 00:17:22,208 ಅದನ್ನು ಎಲ್ಲಿ ಕೇಳಿದಿರಿ? 175 00:17:26,041 --> 00:17:29,750 ನಮ್ಮ ಕಮ್ಮಾರರೊಂದಿಗೆ ಚರ್ಚಿಸುತ್ತಿದ್ದೆ. ಆಗ ನಾನು… 176 00:17:31,500 --> 00:17:34,666 -ಅದು ನನ್ನದೇ ಮಾತೆಂದು ನನ್ನ ನಂಬಿಕೆ. -ಹಲ್ಬ್ರ್ಯಾಂಡ್ ಇದ್ದನೇ? 177 00:17:36,666 --> 00:17:39,833 ಈಗ ಆ ವಿಷಯ ಯಾಕೆ? ಮುಗಿದುಹೋಗಿದೆ. 178 00:17:43,625 --> 00:17:45,125 ಮೇಲರಸರೇ, ಇರಿ! 179 00:17:45,916 --> 00:17:47,916 -ನನ್ನನ್ನು ಕ್ಷಮಿಸು… -ಮೂರು ತಿಂಗಳು ಕೊಡಿ. 180 00:17:48,458 --> 00:17:50,458 ನನಗಷ್ಟಾದರೂ ಕೊಡಿ. 181 00:17:50,541 --> 00:17:53,666 ನಿನಗೇನೂ ಕೊಡಬೇಕಿಲ್ಲ. 182 00:17:54,416 --> 00:17:56,416 ಹಾಗಿದ್ದರೆ ಇದನ್ನು ಪರಿಹಾರ ಎಂದು ಮಾಡಬೇಡಿ. 183 00:17:58,291 --> 00:17:59,875 ನಿಮ್ಮನ್ನು ಕೇಳಿದೆನೆಂದು ಮಾಡಿ. 184 00:18:01,291 --> 00:18:04,458 ಇದು ಮೂರ್ಖತನದ ವಿಶ್ವಾಸ, ಎಲ್ರೊಂಡ್. 185 00:18:04,541 --> 00:18:06,583 ಕೇವಲ ಅಷ್ಟೇ. ಬೇರೇನೂ ಅಲ್ಲ. 186 00:18:06,666 --> 00:18:12,083 "ವಿಶ್ವಾಸ ಎಂದಿಗೂ ಕೇವಲವಲ್ಲ. ಅದು ಕಡಿಮೆ ಇದ್ದಾಗಲೂ ಸಹ." 187 00:18:13,041 --> 00:18:15,375 ಅಥವಾ ನಿಮ್ಮ ಸಲಹೆಯನ್ನೇ ಮರೆತಿರಾ? 188 00:19:09,166 --> 00:19:13,750 ನನಗೆ ರಾಜವಂಶಸ್ಥರು, ರಾಜಮನೆತನದವರು ಬೇಕು. ಸೌತ್ ಲ್ಯಾಂಡ್ಸಲ್ಲಿ ಏನು ಸಿಕ್ಕರೂ ಸರಿ. 189 00:19:13,833 --> 00:19:16,833 ಮಾನವ ರಾಜ್ಯಗಳ ಬಗ್ಗೆ ನಮಗೆ ಅಷ್ಟೊಂದು ಮಾಹಿತಿ ಇಲ್ಲ. 190 00:19:16,916 --> 00:19:19,666 ಆ ಮಾಹಿತಿಗಾಗಿ ನಾನು ಸಮಾಧಿಗಳ ಒಳಗೆ ಹುಡುಕಬೇಕು. 191 00:19:19,750 --> 00:19:21,791 -ಬಾ. -ಮೂರು ವಾರಗಳು... 192 00:19:21,875 --> 00:19:25,125 ಮೂರು ಶತಮಾನಗಳು ಹಿಡಿಯುವಷ್ಟು ಕೆಲಸಕ್ಕೆ ಮೂರು ವಾರಗಳು. 193 00:19:25,208 --> 00:19:28,208 ನಿರ್ಬಂಧವೇ ಆವಿಷ್ಕಾರಕ್ಕೆ ಕಾರಣವಾಗಬಹುದು. 194 00:19:29,375 --> 00:19:32,041 ಹೋಗು. ಇದನ್ನು ಯಾರಿಗೂ ಹೇಳಬೇಡ. 195 00:19:36,250 --> 00:19:37,916 ಭಯಪಡಬೇಡ. 196 00:19:38,000 --> 00:19:41,083 ಕೆಲಿಬ್ರೀಂಬೋರ್ ಒಂದು ದಾರಿಯನ್ನು ಹುಡುಕುವರು. ನನಗದು ಗೊತ್ತು. 197 00:19:41,583 --> 00:19:44,583 ಏಕಾಏಕಿ ನೀವಿಬ್ಬರೂ ಬಹಳ ಪರಿಚಿತರಂತೆ ಕಾಣುತ್ತಿದೆ. 198 00:19:44,666 --> 00:19:47,333 ನನ್ನಿಂದಾಗುವ ಅಳಿಲುಸೇವೆಯನ್ನಷ್ಟೇ ಮಾಡುತ್ತಿದ್ದೇನೆ. 199 00:19:49,791 --> 00:19:52,875 ನಿಜ ಹೇಳಬೇಕೆಂದರೆ, ನನಗೇ ಇನ್ನೂ ನಂಬಿಕೆಯಾಗುತ್ತಿಲ್ಲ. 200 00:19:53,791 --> 00:19:56,750 ನನ್ನಂಥವನು, ಇಲ್ಲಿ, 201 00:19:58,041 --> 00:20:00,625 ಎರೆಗಿಯೊನಿನ ಎಲ್ಫ್-ಕಲಾವಿದರೊಡನೆ ಕೆಲಸ ಮಾಡುವುದು. 202 00:20:04,833 --> 00:20:06,250 ಧನ್ಯವಾದ, ಗಲಾಡ್ರಿಯಲ್. 203 00:20:07,541 --> 00:20:08,958 ನಿನ್ನಿಲ್ಲಿ ಕರೆತಂದಿದ್ದಕ್ಕಾ? 204 00:20:09,916 --> 00:20:11,333 ನನ್ನ ಪ್ರಾಣ ಉಳಿಸಿದ್ದಕ್ಕೆ. 205 00:20:11,416 --> 00:20:15,500 ನೀನು ನನ್ನನ್ನು ಉಳಿಸಿದೆ. ಲೆಕ್ಕ ಸರಿಯಾಗಿದೆ. 206 00:20:15,583 --> 00:20:16,916 ಇಲ್ಲ. 207 00:20:17,000 --> 00:20:19,583 ನೀನು ನನಗಾಗಿ ಅದಕ್ಕಿಂತಲೂ ಹೆಚ್ಚಾಗಿ ಮಾಡಿರುವೆ. 208 00:20:20,875 --> 00:20:22,625 ನಾನಿನ್ನೇನು ಕೈಚೆಲ್ಲುತ್ತಲಿದ್ದೆ. 209 00:20:22,708 --> 00:20:26,000 ಆದರೆ ನೀನು, ನೀನು ನನ್ನನ್ನು ನಂಬಿದೆ. 210 00:20:26,083 --> 00:20:27,958 ನೀನು ನನ್ನಲ್ಲಿ ಶಕ್ತಿಯನ್ನು ಕಂಡೆ. 211 00:20:28,041 --> 00:20:31,125 ನನ್ನನ್ನು ಯಾರೂ ತಳ್ಳದಷ್ಟು ಮೇಲಕ್ಕೆ ತಳ್ಳಿದೆ. 212 00:20:32,916 --> 00:20:34,500 ನಾನದನ್ನು ಎಂದಿಗೂ ಮರೆಯಲಾರೆ. 213 00:20:38,625 --> 00:20:41,500 ಬೇರೆ ಯಾರೂ ಅದನ್ನು ಮರೆಯದಂತೆ ನೋಡಿಕೊಳ್ಳುವೆ. 214 00:21:01,583 --> 00:21:03,916 ಭಯಪಡಬೇಡಿ, ಒಡೆಯ. 215 00:21:04,458 --> 00:21:10,208 ನಿಮ್ಮ ಶಕ್ತಿ ಹೆಚ್ಚು ಜಾಗೃತಗೊಂಡಷ್ಟೂ, ಪರದೆ ತೆಳುವಾಗುತ್ತಾ ಬರುತ್ತದೆ. 216 00:21:10,958 --> 00:21:12,041 ಪರದೆ? 217 00:21:12,125 --> 00:21:17,041 ನಿಮ್ಮನ್ನು ಕೆಳಕ್ಕೆ ತಳ್ಳಿದವರು ಅದರಿಂದ ನಿಮ್ಮ ಮನಸ್ಸನ್ನು ಮುಚ್ಚಿರುವುದು. 218 00:21:17,125 --> 00:21:21,583 ಆದರೆ ನಿಮ್ಮನ್ನು ಒಳಗೆ ಬರಮಾಡಿಕೊಳ್ಳಲು ನಾವು ಇಲ್ಲಿಗೆ ಬಂದಿದ್ದೇವೆ. 219 00:21:22,250 --> 00:21:25,083 ನಿಮ್ಮನ್ನು ನಮ್ಮ ನೆಲಕ್ಕೆ ಕರೆಸಲು. 220 00:21:26,000 --> 00:21:27,083 ನಿಮ್ಮ ನೆಲ? 221 00:21:27,166 --> 00:21:28,791 ನಿಮಗೀಗಾಗಲೇ ಗೊತ್ತಿದೆ. 222 00:21:35,375 --> 00:21:37,083 ನಕ್ಷತ್ರಗಳು. 223 00:21:37,166 --> 00:21:40,333 ಅದನ್ನು ಸಂತನ ಟೊಪ್ಪಿ ಎನ್ನುವರು. 224 00:21:41,583 --> 00:21:44,625 ಒಂದು ಕಡೆಯಷ್ಟೇ ಕಾಣುವ ನಕ್ಷತ್ರಪುಂಜ. 225 00:21:45,708 --> 00:21:50,541 ನಕ್ಷತ್ರಗಳು ವಿಚಿತ್ರವಾಗಿರುವ ಜಾಗ, ಪೂರ್ವಕ್ಕೆ ದೂರವಾಗಿ. 226 00:21:51,375 --> 00:21:54,833 ರ್ಹುನನ ನೆಲ. 227 00:21:55,958 --> 00:21:57,875 -ರ್ಹುನ್... -ಹೌದು. 228 00:21:58,708 --> 00:22:04,541 ಕೊನೆಗೂ ನೀವು ಯಾರೆಂದು ನಿಜವಾಗಲೂ ತಿಳಿಯುವ ಸ್ಥಳ. 229 00:22:04,625 --> 00:22:09,291 ನೀವು ತಾರೆಗಳಿಂದ ಬಿದ್ದಿರಿ. ಆದರೂ ಅವಕ್ಕಿಂತ ಮಹಾತ್ಮರು ನೀವು. 230 00:22:09,375 --> 00:22:12,125 ಯಾಕೆಂದರೆ ಬೆಂಕಿಯೂ ನಿಮ್ಮ ಆಜ್ಞೆಯನ್ನು ಪಾಲಿಸುತ್ತದೆ. 231 00:22:12,208 --> 00:22:17,041 ನೀವು ಮಣ್ಣಿನ ಅಡಿಯಲ್ಲೇ ಬಿದ್ದಿರಿ, ಆದರೂ ಮಣ್ಣೇ ನಿಮಗೆ ಹೆದರುವುದು. 232 00:22:17,125 --> 00:22:19,541 ನೀವು ಉಗ್ರರಾದಲ್ಲಿ ಅದು ನಡುಗುವುದು. 233 00:22:19,625 --> 00:22:24,291 ಗಾಳಿ ಮತ್ತು ನೀರು, ಶಾಖ ಮತ್ತು ಚಳಿ. 234 00:22:24,375 --> 00:22:28,083 ರ್ಹುನಲ್ಲಿ ನೀವು ಇವನ್ನೆಲ್ಲಾ ನಿಯಂತ್ರಿಸುವುದನ್ನು ಕಲಿಯುವಿರಿ. 235 00:22:28,166 --> 00:22:34,166 ನಡೆಯುವ ಅಥವಾ ತೆವಳುವ ಯಾವುದೇ ಜೀವಿಯಾದರೂ ನಿಮ್ಮ ಅಡಿಯಾಳಾಗಿರುವುದು. 236 00:22:35,125 --> 00:22:38,541 -ಯಾಕೆಂದರೆ ನೀವೇ ಲಾರ್ಡ್ ಸೌರೊನ್. -ಯಾಕೆಂದರೆ ನೀವೇ ಲಾರ್ಡ್ ಸೌರೊನ್. 237 00:22:58,000 --> 00:22:59,166 ಸಾಕು! 238 00:23:08,666 --> 00:23:11,625 ಕಾಲಕ್ರಮೇಣ ತನ್ನ ಶಕ್ತಿಗಳನ್ನು ನಿಯಂತ್ರಿಸುವುದನ್ನು ಕಲಿಯುವನು. 239 00:23:13,000 --> 00:23:14,833 ಸದ್ಯಕ್ಕೆ ಅವನನ್ನು ಕಟ್ಟಿಹಾಕಿ. 240 00:23:22,125 --> 00:23:23,541 ಏನು ವಿಷಯ? 241 00:23:37,083 --> 00:23:41,583 ಕೆಟ್ಟ ಉಪಾಯಗಳ ಮಹಾ ಸಂಪ್ರದಾಯದಲ್ಲಿ ಇದೇ ಅತ್ಯಂತ ಕೆಟ್ಟದ್ದಿರಬಹುದು. 242 00:23:41,666 --> 00:23:43,458 ಹಾಗಿದ್ರೆ ನಿನಗೆ ಒಳ್ಳೆಯ ಉಪಾಯ ಇದೆಯೇ? 243 00:23:49,791 --> 00:23:50,958 ಮೂರನೆಯವರೂ ಹೋಗಿದ್ದಾರೆ. 244 00:23:51,916 --> 00:23:53,500 ಮೂರನೆಯವರೆಲ್ಲಿ ಹೋದರು? 245 00:23:53,583 --> 00:23:56,416 ಮೂರಕ್ಕಿಂತ ಇಬ್ಬರೇ ಒಳಿತು. ಇದೇ ನಮ್ಮ ಅವಕಾಶ. 246 00:24:53,625 --> 00:24:54,583 ಹೇ! 247 00:24:55,125 --> 00:24:57,125 ಬ್ರ್ಯಾಂಡಿಫುಟ್! ಓಡು! 248 00:25:05,583 --> 00:25:06,791 ಸಾಡೋಕ್! 249 00:25:56,833 --> 00:25:59,666 ಒಡೆಯ, ಶಾಂತರಾಗಿ. 250 00:26:01,708 --> 00:26:03,541 ನೋರಿ. ನೋರಿ, ಹೋಗೋಣ! 251 00:26:56,041 --> 00:26:57,375 ನಡಿ! 252 00:27:21,166 --> 00:27:22,291 ಅವನಿಗೆ ಕಾಣಿಸು. 253 00:28:33,500 --> 00:28:34,958 ತಗೋ. 254 00:28:35,708 --> 00:28:37,541 ನೀನು ನಮಗೆ ಬೇಕು. ದಯವಿಟ್ಟು ತಗೋ. 255 00:28:38,583 --> 00:28:41,875 ನನ್ನಿಂದ ದೂರ ಹೋಗು. ಇಲ್ಲಾಂದ್ರೆ ನಾನು… 256 00:28:43,958 --> 00:28:46,666 ನಿನ್ನನ್ನು ಘಾಸಿಗೊಳಿಸಬಹುದು. ಮತ್ತೆ. 257 00:28:46,750 --> 00:28:49,833 ಏನು? ಅವರು ನಿನಗೇನು ಮಾಡಿದ್ದಾರೆ? 258 00:28:49,916 --> 00:28:53,333 ನಾನೇನು ಎಂದು ನನಗೆ ತೋರಿಸಿದ್ದಾರೆ. 259 00:28:55,916 --> 00:28:57,916 ನೀನೇನೆಂದು ನೀನು ಮಾತ್ರ ತೋರಿಸಬಲ್ಲೆ. 260 00:28:59,083 --> 00:29:02,000 ನೀನು ಮಾಡುವುದರಿಂದಲೇ ನೀನು ಆಯ್ಕೆ ಮಾಡುತ್ತೀ. 261 00:29:16,208 --> 00:29:17,625 ನೀನಿಲ್ಲಿ ನೆರವಾಗಲು ಬಂದಿರುವೆ. 262 00:29:19,666 --> 00:29:20,833 ನನಗೆ ಗೊತ್ತಿದೆ. 263 00:29:38,916 --> 00:29:42,333 ನಿನ್ನ ಕಣ್ಣುಗಳನ್ನು ಮುಚ್ಚಿಕೊ. ಒಂದೇ ಒಂದು ಕ್ಷಣ ನೋವಾಗುತ್ತದಷ್ಟೇ. 264 00:29:44,416 --> 00:29:45,291 ಇಲ್ಲ! 265 00:30:11,958 --> 00:30:14,291 ನೆರಳಿನಿಂದ ನೀನು ಬಂದೆ. 266 00:30:15,833 --> 00:30:18,041 ನಿನ್ನನ್ನು ನೆರಳಿನೊಳಗೆೇ ಕಳಿಸುವೆನು! 267 00:30:18,125 --> 00:30:22,625 -ಅವನು ಸೌರೊನ್ ಅಲ್ಲ. -ಅವನು ಬೇರೆಯವನು. ಮಾಂತ್ರಿಕ. ಅವನು... 268 00:30:22,708 --> 00:30:24,333 ನಾನು ಒಳ್ಳೆಯವನು. 269 00:31:06,041 --> 00:31:06,875 ನೋರಿ! 270 00:31:18,291 --> 00:31:19,458 ಸಾಡೋಕ್? 271 00:31:28,666 --> 00:31:32,166 ಕದಲದಿರಿ. ನಿಮ್ಮನ್ನು ಹೊತ್ತೊಯ್ಯಲು ದಾರಿ ಹುಡುಕುತ್ತೇವೆ. 272 00:31:32,791 --> 00:31:34,208 ಕ್ಷಮಿಸಿ, ತಾಯಿ. 273 00:31:34,625 --> 00:31:38,375 ನಾನು ಬೇರೆಯದೇ ದಾರಿಯಲ್ಲಿ ಹೋಗುವವನಿದ್ದೇನೆ. 274 00:31:40,708 --> 00:31:42,083 ಬರೋಸ್ ಅವರೇ... 275 00:31:42,166 --> 00:31:44,291 ಪರವಾಗಿಲ್ಲ, ಪ್ರೌಡ್ಫೆಲೋ. 276 00:31:46,291 --> 00:31:47,916 ನನ್ನ ಮನೆಯಾಕೆ ಕಾಯುತ್ತಿರುತ್ತಾಳೆ. 277 00:31:49,625 --> 00:31:54,458 ಈಗ, ನಿಮಗೆ ಅಭ್ಯಂತರವಿಲ್ಲದಿದ್ದರೆ, ನಾನು ಕೆಲಹೊತ್ತು ಕುಳಿತು, 278 00:31:55,791 --> 00:31:57,208 ಸೂರ್ಯೋದಯವ ನೋಡಬಯಸುತ್ತೇನೆ. 279 00:33:12,458 --> 00:33:16,083 ಒಂದು, ಎರಡು, ಮೂರು, 280 00:33:16,166 --> 00:33:20,208 ನಾಲ್ಕು, ಐದು, ಆರು, 281 00:33:20,291 --> 00:33:22,666 ಏಳು, ಎಂಟು... 282 00:33:25,166 --> 00:33:26,250 ಅದು ಒಂಬತ್ತು. 283 00:33:27,708 --> 00:33:29,208 ಮುಖ್ಯ-ಕಟ್ಟೆಗೆ ಮೆಟ್ಟಿಲುಗಳು. 284 00:33:38,000 --> 00:33:39,250 ಚೆನ್ನಾಗಿ ಮಾಡುತ್ತಿರುವಿರಿ. 285 00:33:39,333 --> 00:33:42,750 ಮತ್ತೆ ಕನಿಕರ ತೋರಿಸಿದರೆ, ನಾಯಕರೇ, ನಿಮ್ಮ ಹಡಗನ್ನು ವಶಪಡಿಸಿಕೊಳ್ಳುವೆನು. 286 00:33:44,875 --> 00:33:46,291 ಬನ್ನಿ ಮತ್ತೆ. 287 00:33:48,541 --> 00:33:49,375 ನಿಮ್ಮೊಂದಿಗಿರುವೆ. 288 00:33:55,625 --> 00:33:57,291 ಮತ್ತು ನಿನಗೆ ಯಾರು? 289 00:34:02,333 --> 00:34:03,833 ನಿನ್ನ ನಷ್ಟವನ್ನು ಪರಿಗಣಿಸಿ, 290 00:34:04,791 --> 00:34:09,541 ನಾವು ಹಿಂತಿರುಗಿದಾಗ, ನೀನು ರಜೆಯ ಮೇಲೆ ಹೋಗಬೇಕೆಂದರೆ ನಾನು ಅರ್ಥ ಮಾಡಿಕೊಳ್ಳುವೆ. 291 00:34:13,916 --> 00:34:18,875 ಗಲಾಡ್ರಿಯಲ್ನ ಯಾಕೆ ಸಮುದ್ರದಿಂದ ಹೊರಗೆಳೆದೆನೆಂದು ನನ್ನನ್ನು ನೀವೊಮ್ಮೆ ಕೇಳಿದಿರಿ. 292 00:34:20,250 --> 00:34:22,375 ನನಗೆ ಹೆಚ್ಚಿನ ಆಯ್ಕೆ ಇರಲಿಲ್ಲ ಎಂದಿದ್ದೆ. 293 00:34:23,875 --> 00:34:26,541 ನಿಜಾಂಶ ಏನೆಂದರೆ, ಆಕೆಯನ್ನು ನಾನಲ್ಲೇ ಬಿಡಬಹುದಿತ್ತು. 294 00:34:27,166 --> 00:34:29,916 ಮಿಡ್ಲ್ ಅರ್ಥಿಗೆ ಹಿಂಬಾಲಿಸಲು ನಿರಾಕರಿಸಬಹುದಿತ್ತು. 295 00:34:31,583 --> 00:34:33,583 ಹಾಗೆ ಮಾಡದಂತೆ ನನ್ನ ಮಗನನ್ನು ತಡೆಯಬಹುದಿತ್ತು. 296 00:34:35,750 --> 00:34:38,916 ಆದರೂ ಪ್ರತಿ ತಿರುವಿನಲ್ಲೂ, ನಾನು ಏಕೆ ಈ ಆಯ್ಕೆಗಳನ್ನು ಮಾಡಿದೆ ಎಂದರೆ… 297 00:34:40,375 --> 00:34:41,791 ಯಾಕೆ, ಎಲೆಂಡಿಲ್? 298 00:34:44,458 --> 00:34:48,416 ಯಾಕೆಂದರೆ "ಎಲೆಂಡಿಲ್"ನ ಅರ್ಥ ಕೇವಲ "ನಕ್ಷತ್ರಗಳನ್ನು ಪ್ರೀತಿಸುವವನು" ಅಷ್ಟೇ ಅಲ್ಲ. 299 00:34:49,750 --> 00:34:52,166 ಇದು ಇಲ್ಲಿಯವರೆಗೂ ಬರುವುದೆಂದು ನಾನು ಊಹಿಸಿರಲಿಲ್ಲ. 300 00:35:04,083 --> 00:35:09,083 ನಿಷ್ಠಾವಂತರ ಗುಣ ಬೆಲೆಯನ್ನು ತೆರಲು ಒಪ್ಪುವುದು 301 00:35:09,166 --> 00:35:11,166 ಎಂದು ನನ್ನ ತಂದೆ ಹೇಳುತ್ತಿದ್ದರು… 302 00:35:12,916 --> 00:35:15,333 ಅದರ ಬೆಲೆ ಎಷ್ಟು ಅಂತ ಗೊತ್ತಿಲ್ಲದಿದ್ದರೂ ಸಹ. 303 00:35:17,583 --> 00:35:20,583 ಅದನ್ನು ನಂಬುವುದರಿಂದ ಕೊನೆಯಲ್ಲಿ ಸಾರ್ಥಕವಾಗುವುದು. 304 00:35:25,791 --> 00:35:28,791 ಕೆಲವೊಮ್ಮೆ ಬೆಲೆ ಹೆಚ್ಚೇ. 305 00:35:33,000 --> 00:35:34,250 ಹೌದು. 306 00:35:36,750 --> 00:35:39,500 ಹಾಗಿದ್ದರೆ ಸೇವೆ ಮಾಡದೆ ನಮಗೆ ಬೇರೆ ಆಯ್ಕೆ ಇಲ್ಲ. 307 00:35:42,250 --> 00:35:47,000 ಎಲ್ಲರ ಪೈಕಿ ನಾನು ಇದರ ಕೊನೆ ತೆರುವ ಬೆಲೆಗೆ ಸರಿಯಾದ ನ್ಯಾಯ ಒದಗಿಸುವಂತೆ ನೋಡುತ್ತೇನೆ. 308 00:35:48,791 --> 00:35:50,208 ಏನೇ ಬಂದರೂನೂ? 309 00:35:51,416 --> 00:35:52,833 ಏನೇ ಬಂದರೂನೂ. 310 00:36:03,500 --> 00:36:06,666 ನಾಯಕರೇ. ನ್ಯೂಮೆನೊರ್ ಕಾಣುತ್ತಿದೆ. 311 00:36:12,791 --> 00:36:14,208 ಮಹಾರಾಣಿ. 312 00:36:42,041 --> 00:36:45,333 ಎಲೆಂಡಿಲ್, ಏನದು? ಏನಾಗಿದೆ? 313 00:36:50,958 --> 00:36:52,208 ಏನದು? 314 00:36:53,708 --> 00:36:54,958 ಏನು ಕಾಣುತ್ತಿದೆ? 315 00:37:46,291 --> 00:37:47,541 ಏನಾಗಿದೆ? 316 00:37:49,583 --> 00:37:51,833 ಮಿಥ್ರಿಲ್ ಜೊತೆ ಕೆಲಸ ಮಾಡುವುದು ಕಷ್ಟವಾಗ್ತಿದೆ. 317 00:37:53,750 --> 00:37:57,750 ತನ್ನ ಕೆಳಗಿನ ಅದಿರುಗಳ ಜೊತೆ ಸೇರಲು ಪ್ರತಿ ಪ್ರಯತ್ನವ ನಿರಾಕರಿಸುತ್ತಿದೆ. 318 00:37:57,833 --> 00:38:00,500 ಕಾಣುವ ಮತ್ತು ಕಾಣದ ಪ್ರಪಂಚಗಳ ಶಕ್ತಿಯನ್ನು ಬಳಸುವುದರಿಂದ 319 00:38:00,583 --> 00:38:03,333 ಎರಡರ ಮಧ್ಯೆಯ ಗಡಿಯನ್ನು ಕರಗಿಸಬಹುದು ಎಂದನಿಸಿತ್ತು. 320 00:38:03,416 --> 00:38:04,583 ಏನೂ ಅರ್ಥವಾಗುತ್ತಿಲ್ಲ. 321 00:38:04,666 --> 00:38:07,375 ಭೂಮಿಯನ್ನೇ ಸ್ವರ್ಗದ ಜೊತೆ ಸೇರಿಸುವಷ್ಟು ಒತ್ತಡ ಬಳಸಿದೆವು. 322 00:38:07,458 --> 00:38:10,708 -ಈ ಬಾರಿ ಕೂಡಿಕೊಳ್ಳಬೇಕಿತ್ತು! -ತಾಳ್ಮೆ. ಇದೊಂದು ಪಯಣ. 323 00:38:10,791 --> 00:38:13,666 ನಾವಿಡುವ ಪ್ರತಿ ಹೆಜ್ಜೆಯೂ ಮುಂದೆ ಹೋಗದು. ಸಮಯ ಹಿಡಿಯಬಹುದು. 324 00:38:13,750 --> 00:38:15,625 -ಸಮಯವೇ? ನಮಗೆ ಸಮಯವಿಲ್ಲ. -ಸಮಯ... 325 00:38:15,708 --> 00:38:18,000 ಇವತ್ತಿಗೆ ಇಷ್ಟು ಸಾಕು ಅನ್ಸುತ್ತೆ. 326 00:38:18,083 --> 00:38:21,041 ಬಹುಶಃ ನಾವು ಬಹಳ ಕಷ್ಟಪಡುತ್ತಿರಬೇಕು. 327 00:38:21,125 --> 00:38:23,291 "ನಾವು ಬಹಳ ಕಷ್ಟಪಡುತ್ತಿರಬೇಕು." 328 00:38:28,291 --> 00:38:30,041 ಬಹುಶಃ ಅದರಿಂದಲೇ ತೊಂದರೆಯಾಗಿರಬೇಕು. 329 00:38:31,541 --> 00:38:34,291 ನಾವು ಹೆಚ್ಚಿನ ಬಲಪ್ರಯೋಗ ಮಾಡುತ್ತಿರಬಹುದೇ? 330 00:38:34,375 --> 00:38:36,416 ಹಾಗೆಂದರೆ? 331 00:38:36,500 --> 00:38:39,666 ಹಾಗೆಂದರೆ ಲೋಹಗಳನ್ನು ಸೇರಲು ಬಲವಂತಪಡಿಸಬಾರದು… 332 00:38:39,750 --> 00:38:43,666 ಬದಲಾಗಿ ಒಂದನ್ನೊಂದು ಸೆಳೆಯಬೇಕು ಇಲ್ಲವೇ ಮನವೊಲಿಸಬೇಕು. 333 00:38:43,750 --> 00:38:47,666 ಅದೇ ನಿಜವಾದರೆ, ನಾವು ಇಷ್ಟು ಹೊತ್ತು ವಿರುದ್ಧವಾಗಿ ಮಾಡುತ್ತಿದ್ದೆವೇನೋ. 334 00:38:50,041 --> 00:38:53,166 ಬೇಗ. ಇದನ್ನು ಬಿಡಿಸಿ. ಮತ್ತೆ ಶುರು ಮಾಡೋಣ. 335 00:38:59,000 --> 00:39:00,208 ತಾಯಿ. 336 00:39:27,625 --> 00:39:28,833 ಗಲಾಡ್ರಿಯಲ್! 337 00:39:30,958 --> 00:39:32,041 ನಮಗದು ಸಿಕ್ಕಿತು. 338 00:39:32,708 --> 00:39:34,916 ಮೊದಲೇ ನಾವು ಏಕೆ ಪತ್ತೆ ಮಾಡಲಿಲ್ಲವೋ ತಿಳಿಯದು. 339 00:39:35,416 --> 00:39:37,500 ಒಂದು ವಸ್ತುವಿಗೆ ಬಹಳಷ್ಟು ಶಕ್ತಿ ಹೊಂದಿದೆ. 340 00:39:38,291 --> 00:39:39,625 ಎರಡು ಬೇಕು. 341 00:39:40,666 --> 00:39:41,875 ಎರಡನ್ನು ತಯಾರಿಸಬೇಕು. 342 00:39:41,958 --> 00:39:44,250 -ಎರಡು ಕಿರೀಟಗಳೇ? -ನಿಖರವಾಗೇನಲ್ಲ. 343 00:39:44,625 --> 00:39:46,625 ಅದೊಂದು ರೀತಿ… 344 00:39:47,666 --> 00:39:48,875 ಚಿಕ್ಕದಾಗಿರಬೇಕು. 345 00:39:49,541 --> 00:39:51,208 ಬಾ, ನೀನೇ ನೋಡುವೆಯಂತೆ. 346 00:39:51,750 --> 00:39:53,833 ನೀನ್ಯಾರು ಎಂದು ಹೇಳುವವರೆಗೂ ಇಲ್ಲ. 347 00:39:55,875 --> 00:39:57,458 ನಾನ್ಯಾರೆಂದು ನಿನಗೆ ಗೊತ್ತಿದೆ. 348 00:39:57,541 --> 00:39:59,458 ನೀನು ನಿಜವಾಗಿಯೂ ಯಾರು ಅಂತ. 349 00:40:01,541 --> 00:40:03,541 ಗಲಾಡ್ರಿಯಲ್, ಏನಂದ್ರೆ ನಮಗೆ... 350 00:40:04,875 --> 00:40:07,291 ಸೌತ್ ಲ್ಯಾಂಡ್ಸಿಗೆ ರಾಜನಿಲ್ಲ. 351 00:40:08,000 --> 00:40:09,583 ವಂಶವು ಮುರಿದಿದೆ. 352 00:40:10,500 --> 00:40:14,166 ನಿಮ್ಮ ಕಿರೀಟವನ್ನು ಧರಿಸಿದ ಕೊನೆಯ ವ್ಯಕ್ತಿ ಸಾವಿರ ವರ್ಷಗಳ ಹಿಂದೆ ಮೃತನಾದ. 353 00:40:15,291 --> 00:40:16,875 ಆತನಿಗೆ ವಂಶೋದ್ಧಾರಕನಿರಲಿಲ್ಲ. 354 00:40:32,000 --> 00:40:34,583 ಇದು ಸಿಕ್ಕಿದ್ದು ಒಬ್ಬ ಮೃತ ವ್ಯಕ್ತಿಯ ಬಳಿ ಎಂದಿದ್ದೆ. 355 00:40:34,666 --> 00:40:35,916 ಇಲ್ಲ. 356 00:40:36,583 --> 00:40:38,583 ಇಲ್ಲ, ತೆಪ್ಪದ ಮೇಲೆ ನೀನು ನನ್ನ ಕಾಪಾಡಿದೆ… 357 00:40:38,666 --> 00:40:40,416 ತೆಪ್ಪದ ಮೇಲೆ ನೀನು ನನ್ನ ಕಾಪಾಡಿದೆ. 358 00:40:40,500 --> 00:40:43,333 ಮಿಡ್ಲ್ ಅರ್ಥಿನ ಜನರನ್ನು ರಕ್ಷಿಸಲು ಮೀರಿಯೆಲ್ನ ಒಪ್ಪಿಸಿದೆ. 359 00:40:43,416 --> 00:40:46,458 ಒಪ್ಪಿಸಿದ್ದು ನೀನು. ನಾನು ನ್ಯೂಮೆನೊರಿನಲ್ಲೇ ಉಳಿಯಬಯಸಿದ್ದೆ. 360 00:40:46,541 --> 00:40:48,666 ನೀನು ನನ್ನ ಪಕ್ಕ ಹೋರಾಡಿದೆ. 361 00:40:48,750 --> 00:40:51,916 ನಿನ್ನ ಶತ್ರುವಿನ ವಿರುದ್ಧ. ನನಗೂ ಶತ್ರುವೇ. 362 00:40:56,708 --> 00:40:58,125 ನಿನ್ನ ಹೆಸರನ್ನು ಹೇಳು. 363 00:41:00,875 --> 00:41:04,708 ಮೊದಲ ಮೌನ ಮುರಿಯುವ ಮುನ್ನವೇ ನಾನು ಎಚ್ಚರಗೊಂಡಿದ್ದೆ. 364 00:41:05,583 --> 00:41:09,083 ಆ ಸಮಯದಲ್ಲಿ… ನನಗೆಷ್ಟೋ ಹೆಸರುಗಳಿದ್ದವು. 365 00:41:34,333 --> 00:41:36,333 ಮತ್ತೆ ಹೆಜ್ಜೆ ತಪ್ಪಿದೆಯಾ, ತಂಗಿ? 366 00:41:40,791 --> 00:41:42,958 ಸ್ವಲ್ಪ ಎಡವಿದೆ, ಅಷ್ಟೇ. 367 00:41:57,000 --> 00:41:58,083 ಈಗ ಎದ್ದು ನಿಲ್ಲು. 368 00:41:58,166 --> 00:42:01,583 ನನ್ನ ಮನಸ್ಸಿನಿಂದ ಹೊರಹೋಗು. 369 00:42:02,166 --> 00:42:03,833 ದಯವಿಟ್ಟು, ತಂಗಿ. 370 00:42:06,416 --> 00:42:07,791 ನನ್ನೆಡೆ ನೋಡು. 371 00:42:09,208 --> 00:42:10,625 ಗಲಾಡ್ರಿಯಲ್. 372 00:42:22,416 --> 00:42:24,041 ನನ್ನ ಹಳೆಯ ಕತ್ತಿ. 373 00:42:25,625 --> 00:42:27,791 ಇಷ್ಟು ಕಾಲ ಅದನ್ನು ಜೋಪಾನವಾಗಿ ಇರಿಸಿರುವೆ. 374 00:42:30,833 --> 00:42:32,833 ನೀನು ಬಹಳ ಧೈರ್ಯವಂತೆ. 375 00:42:35,416 --> 00:42:39,416 ಕಷ್ಟಪಟ್ಟು ಹೋರಾಡಿದ್ದೀಯ. ತುಂಬಾ ವರ್ಷಗಳ ಕಾಲ. 376 00:42:40,708 --> 00:42:42,958 ನನ್ನಿಂದ ಸಾಧ್ಯವಾಗದ ಕಾರ್ಯವನ್ನು ಪೂರ್ಣಗೊಳಿಸಲು. 377 00:42:45,375 --> 00:42:47,541 ನಿನ್ನ ಕೆಲಸ ಸೌರೊನನ್ನು ಹುಡುಕುವುದಾಗಿತ್ತು. 378 00:42:49,208 --> 00:42:52,625 ನನ್ನ ಕೆಲಸ ಶಾಂತಿಯನ್ನು ಸ್ಥಾಪಿಸುವುದು. 379 00:42:54,916 --> 00:42:59,333 ಆದರೆ ಅದು ಸೌರೊನನ ಕೆಲಸವೂ ಆಗಿತ್ತು ಎನ್ನುವುದನ್ನು ತಿಳಿದೆ. 380 00:43:00,166 --> 00:43:01,375 ಇಲ್ಲ. 381 00:43:03,875 --> 00:43:05,291 ಇಲ್ಲ, ನೀನು ಮರಣಿಸಿದೆ. 382 00:43:06,166 --> 00:43:08,750 ಲೆಕ್ಕವಿಲ್ಲದಷ್ಟು ಇತರರ ಜೊತೆಗೆ, ಅವನ ಕಾರಣದಿಂದ. 383 00:43:08,833 --> 00:43:10,958 ಇಲ್ಲ, ಗಲಾಡ್ರಿಯಲ್. 384 00:43:12,750 --> 00:43:17,583 ಅವನು ಮಿಡ್ಲ್ ಅರ್ಥನ್ನು ನಾಶಮಾಡಲು ಶಕ್ತಿಯನ್ನು ಅರಸುತ್ತಿರಲಿಲ್ಲ, 385 00:43:19,000 --> 00:43:20,166 ಗುಣಪಡಿಸಲು ನೋಡಿದ. 386 00:43:23,500 --> 00:43:27,625 ನಿನ್ನ ಜೊತೆಯ ಎಲ್ಫ್ಗಳು ಈ ಕ್ಷಣ ಮಾಡುತ್ತಿರುವ ಹಾಗೆಯೇ. 387 00:43:29,416 --> 00:43:30,916 ನೀನವರಿಗೆ ಸುಳ್ಳು ಹೇಳಬೇಕಿಲ್ಲ. 388 00:43:33,375 --> 00:43:35,375 ಸುಮ್ಮನೆ ಕೆಲಸ ಮುಂದುವರೆಯಲಿ. 389 00:43:40,666 --> 00:43:45,291 ಇದೇ ಮರದ ಕೆಳಗೆ ನಾನು ನಿನ್ನ ಕಿವಿಯಲ್ಲಿ ಏನು ಹೇಳಿದೆ ನೆನಪಿದೆಯೇ? 390 00:43:51,875 --> 00:43:53,875 ಮತ್ತೊಮ್ಮೆ ಕತ್ತಲನ್ನು ಮುಟ್ಟು. 391 00:44:08,500 --> 00:44:12,500 ನನ್ನ ಅಣ್ಣ ಸತ್ತಿದ್ದಾನೆ. ನಿನ್ನಿಂದ. 392 00:44:12,583 --> 00:44:16,416 ಗಲಾಡ್ರಿಯಲ್. ಯಾಕೆ ಹೀಗೆ ಹೇಳುತ್ತಿರುವೆ? 393 00:44:17,208 --> 00:44:19,208 ಇಂಥ ಮಾತನ್ನು ಏಕೆ ಹೇಳುವೆ? 394 00:44:20,250 --> 00:44:21,500 ಗಲಾಡ್ರಿಯಲ್. 395 00:44:23,291 --> 00:44:25,750 ಗಲಾಡ್ರಿಯಲ್. ಮರಳಿ ನನ್ನ ಬಳಿ ಬಾ. 396 00:44:25,833 --> 00:44:28,875 ಗಲಾಡ್ರಿಯಲ್. ನನ್ನನ್ನು ನೋಡು! 397 00:44:33,166 --> 00:44:35,000 ಗಲಾಡ್ರಿಯಲ್. ನನ್ನನ್ನು ನೋಡು. 398 00:44:39,875 --> 00:44:41,291 ನಾನ್ಯಾರೆಂದು ನಿನಗೆ ಗೊತ್ತಿದೆ. 399 00:44:43,625 --> 00:44:44,708 ನಾನು ನಿನ್ನ ಮಿತ್ರ. 400 00:44:44,791 --> 00:44:47,208 ನೀನು ಮಾರ್ಗೋಥಿನ ಮಿತ್ರ. 401 00:44:52,500 --> 00:44:54,333 ಮಾರ್ಗೋಥ್ ಪರಾಭವಗೊಂಡಾಗ, 402 00:44:56,625 --> 00:45:01,375 ಒಂದು ಬೃಹತ್ ಮುಷ್ಠಿ ನನ್ನ ಕತ್ತಿನ ಮೇಲಿನ 403 00:45:02,791 --> 00:45:05,041 ಬಿಗಿ ಹಿಡಿತವನ್ನು ಬಿಟ್ಟಂತೆ ಭಾಸವಾಗಿತ್ತು. 404 00:45:06,041 --> 00:45:08,833 ಆ ಮೊದಲ ಸೂರ್ಯೋದಯದ ಪ್ರಶಾಂತತೆಯಲ್ಲಿ, 405 00:45:09,750 --> 00:45:14,166 ಕೊನೆಗೂ, ಆ ಪರಮಾತ್ಮನ ಬೆಳಕನ್ನು ಅನುಭವಿಸಿದೆ. 406 00:45:16,625 --> 00:45:20,833 ನನ್ನನ್ನು ಎಂದಾದರೂ ಕ್ಷಮಿಸಬೇಕಿದ್ದರೆ… 407 00:45:22,208 --> 00:45:25,708 ನಾನು ಹಾಳುಮಾಡಿದ ಎಲ್ಲವನ್ನೂ ಸರಿಪಡಿಸಬೇಕಿತ್ತು ಎಂದು ನನಗೆ ಗೊತ್ತಿತ್ತು. 408 00:45:25,791 --> 00:45:28,458 ನಿನ್ನ ದುಷ್ಟಕಾರ್ಯವನ್ನು ಪ್ರಾಯಶ್ಚಿತ್ತದಿಂದ ಅಳಿಸಲಾಗದು. 409 00:45:28,541 --> 00:45:31,750 -ಅದು ನಿನ್ನ ನಂಬಿಕೆಯಲ್ಲ. -ನನ್ನ ನಂಬಿಕೆಯ ಬಗ್ಗೆ ಮಾತನಾಡಬೇಡ. 410 00:45:31,833 --> 00:45:33,416 ಇಲ್ಲ. ನೀನು ನನಗೆ ಹೇಳಿದೆ. 411 00:45:33,500 --> 00:45:38,375 ನಮ್ಮ ವಿಜಯದ ನಂತರ, ನಾನು ಹಿಂದೆ ಏನೇನು ಮಾಡಿದ್ದೆನೋ, ಅದರಿಂದ ಮುಕ್ತಿ ಎಂದು ಹೇಳಿದ್ದೆ. 412 00:45:38,458 --> 00:45:40,833 -ನೀನು ನನಗೆ ಮೋಸ ಮಾಡಿದೆ. -ನಾನು ನಿಜ ಹೇಳಿದೆ. 413 00:45:40,916 --> 00:45:44,500 ನಾನು ದುಷ್ಟಕಾರ್ಯ ಮಾಡಿದ್ದೆ ಎಂದರೂ ನೀನದನ್ನು ಪರಿಗಣಿಸಲಿಲ್ಲ. 414 00:45:44,583 --> 00:45:47,958 ಯಾಕೆಂದರೆ ನಮ್ಮ ಭವಿಷ್ಯಕ್ಕೆ ತೂಗಿ ನೋಡಿದಾಗ, 415 00:45:48,041 --> 00:45:49,708 ನಮ್ಮ ಭೂತಕಾಲಕ್ಕದು ಸಂಬಂಧವಿರಲಿಲ್ಲ. 416 00:45:50,625 --> 00:45:52,625 ಅಂಥ ಭವಿಷ್ಯ ಇಲ್ಲವೇ ಇಲ್ಲ. 417 00:45:53,916 --> 00:45:55,083 ಇಲ್ಲವೇ? 418 00:46:17,291 --> 00:46:19,291 ಎಲ್ಲರೂ ನಿನ್ನನ್ನು ಅನುಮಾನದಿಂದ ನೋಡುತ್ತಾರೆ. 419 00:46:21,875 --> 00:46:23,875 ನನಗೆ ಮಾತ್ರ ನಿನ್ನ ಮಹತ್ವ ಕಾಣುತ್ತದೆ. 420 00:46:28,458 --> 00:46:32,041 ನಾನು ಮಾತ್ರ ನಿನ್ನ ಬೆಳಕನ್ನು ಕಾಣಬಲ್ಲೆ. 421 00:46:33,500 --> 00:46:35,916 ನೀನು ನನ್ನನ್ನು ನಿರಂಕುಶಾಧಿಕಾರಿಯನ್ನಾಗಿಸುವೆ. 422 00:46:36,000 --> 00:46:37,625 ನಾನು ನಿನ್ನನ್ನು ರಾಣಿಯನ್ನಾಗಿಸುವೆ. 423 00:46:39,041 --> 00:46:41,041 ಸಮುದ್ರ ಮತ್ತು ಸೂರ್ಯರಷ್ಟೇ ಗೌರವಯುತವಾಗಿ. 424 00:46:41,875 --> 00:46:44,458 ಭೂಮಿಯ ಅಡಿಪಾಯಕ್ಕಿಂತಲೂ ಗಟ್ಟಿಯಾಗಿ. 425 00:46:45,250 --> 00:46:47,833 ಮತ್ತು ನೀನು. ನನ್ನ ರಾಜ. 426 00:46:49,708 --> 00:46:50,791 ಕಗ್ಗತ್ತಲ ರಾಜ. 427 00:46:50,875 --> 00:46:53,875 ಇಲ್ಲ. ಕಗ್ಗತ್ತಲಲ್ಲ. 428 00:46:54,958 --> 00:46:56,666 ನೀನು ನನ್ನ ಪಕ್ಕದಲ್ಲಿರುವಾಗಲ್ಲ. 429 00:46:57,958 --> 00:47:01,958 ನಾವಿಬ್ಬರೂ ಜೊತೆಯಾಗಿದ್ದು ಒಂದು ಕಾರ್ಯದ ಸಲುವಾಗಿ ಎಂದು ನೀನೊಮ್ಮೆ ಹೇಳಿದ್ದೆ. 430 00:47:04,291 --> 00:47:05,625 ಇದೇ ಅದು. 431 00:47:06,541 --> 00:47:10,375 ನೀನು ನನ್ನನ್ನು ಬೆಳಕಿನೊಂದಿಗೆ ಸೇರಿಸುವೆ. ನಾನು ನಿನ್ನನ್ನು ಶಕ್ತಿಯೊಂದಿಗೆ ಸೇರಿಸುವೆ. 432 00:47:12,625 --> 00:47:16,208 ಜೊತೆಯಾಗಿ ನಾವು ಈ ಮಿಡ್ಲ್ ಅರ್ಥನ್ನು ಕಾಪಾಡಬಹುದು. 433 00:47:18,208 --> 00:47:19,291 ಕಾಪಾಡುವುದಾ… 434 00:47:21,041 --> 00:47:22,541 ಅಥವಾ ಆಳುವುದಾ? 435 00:47:24,666 --> 00:47:26,333 ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. 436 00:47:29,458 --> 00:47:34,791 ಇದಕ್ಕಾಗಿಯೇ… ನಾನೆಂದಿಗೂ ನಿನ್ನ ಜೊತೆ ಇರೆನು. 437 00:47:39,583 --> 00:47:40,750 ನಿನಗೆ ಬೇರೆ ದಾರಿಯಿಲ್ಲ. 438 00:47:41,208 --> 00:47:43,291 ನಾನಿಲ್ಲದೆ ನಿನ್ನ ಜನ ನಶಿಸಿಹೋಗುತ್ತಾರೆ. 439 00:47:43,375 --> 00:47:46,583 ನೆರಳು ಹರಡಿ ಇಡೀ ಪ್ರಪಂಚವನ್ನೇ ಕತ್ತಲಾಗಿಸುತ್ತದೆ. 440 00:47:46,666 --> 00:47:49,250 -ನಿನಗೆ ನಾ ಬೇಕು. -ನಿನ್ನ ಸಮುದ್ರದಲ್ಲೇ ಬಿಡಬೇಕಿತ್ತು. 441 00:47:49,333 --> 00:47:51,791 ಎಲ್ಫ್ಗಳು ನಿನ್ನನ್ನು ಬಹಿಷ್ಕರಿಸಿದ್ದಕ್ಕೆ ನೀನಿದ್ದೆ. 442 00:47:51,875 --> 00:47:56,291 ಕೆಲ ಸಾಮಾನ್ಯ ಯೋಧರಿಗಾಗಿ ನೀನು ಬೇಡಿಕೊಂಡಿದ್ದಕ್ಕೆ ನಿನ್ನನ್ನು ಬಹಿಷ್ಕರಿಸಿದರು. 443 00:47:56,375 --> 00:47:59,875 ನೀನು ನನ್ನ ಸಹವರ್ತಿ ಎಂದು ತಿಳಿದಾಗ ಅವರು ನಿನಗೆ ಏನು ಮಾಡಬಹುದು? 444 00:47:59,958 --> 00:48:04,541 ಸೌರೊನ್ ನಿನ್ನ ಕಾರಣದಿಂದಲೇ ಬದುಕಿದ್ದಾನೆ ಎಂದು ಅವರಿಗೆ ಹೇಳಿದಾಗ? 445 00:48:04,625 --> 00:48:06,375 ಮತ್ತು ನೀನು ನನ್ನಿಂದಲೇ ಸಾಯುವೆ. 446 00:48:42,666 --> 00:48:44,250 ಗಲಾಡ್ರಿಯಲ್! 447 00:48:51,166 --> 00:48:52,000 ವಂಚಕ! 448 00:48:53,041 --> 00:48:55,375 ಗಲಾಡ್ರಿಯಲ್, ನಿಲ್ಲು! ಎಲ್ರೊಂಡ್. ನಾನು ಎಲ್ರೊಂಡ್. 449 00:48:55,458 --> 00:48:56,500 ಸಾಬೀತುಪಡಿಸು. 450 00:48:58,750 --> 00:49:00,166 ಮೊದಲ ಸಲ ಎಲ್ಲಿ ಭೇಟಿಯಾದೆವು? 451 00:49:01,708 --> 00:49:03,791 ಸಮುದ್ರದ ಬಳಿ. ನಾನು ಅನಾಥನಾದಾಗ. 452 00:49:04,791 --> 00:49:08,541 ನಾನು ಒಬ್ಬಂಟಿಯಾಗಿದ್ದೆ. ಬಂಧು ಅಥವಾ ಗೆಳೆಯರಿಲ್ಲದ ಸಣ್ಣ ಅರ್ಧ-ಎಲ್ಫ್ ಹುಡುಗ. 453 00:49:11,625 --> 00:49:13,125 ನೀನು ನನಗೆ ನೀರು ಕೊಟ್ಟೆ. 454 00:49:17,666 --> 00:49:18,916 ಎಲ್ರೊಂಡ್. 455 00:49:26,291 --> 00:49:29,208 ಕೆಲಿಬ್ರೀಂಬೋರ್. ಆತನೆಲ್ಲಿ? 456 00:49:29,291 --> 00:49:32,666 ಕಾರ್ಯಗಾರ. ಇಷ್ಟೊತ್ತಿಗಾಗಲೇ ಮುಗಿಸಿರಬಹುದು. 457 00:49:32,750 --> 00:49:34,000 ಇಲ್ಲ! 458 00:49:34,083 --> 00:49:37,250 ಗಲಾಡ್ರಿಯಲ್! ಏನಾಗಿದೆ? 459 00:49:42,541 --> 00:49:43,625 ಗಲಾಡ್ರಿಯಲ್! 460 00:49:49,083 --> 00:49:50,708 ಮುಗಿಯಿತೇ? 461 00:49:50,791 --> 00:49:53,416 ಗಲಾಡ್ರಿಯಲ್. ನದಿಯ ಬಂಡೆಯಂತೆ ನೆನೆದಿರುವೆ. 462 00:49:53,500 --> 00:49:54,583 ಯಾಕೆ? 463 00:49:54,666 --> 00:49:57,583 ಏಕೆಂದರೆ ನಾನಾಕೆಯನ್ನು ಗ್ಲಾಂಡುಯಿನ್ನಿನ ನೀರಿನಿಂದ ಹೊರಗೆಳೆದೆ. 464 00:49:57,666 --> 00:49:59,625 ಗ್ಲಾಂಡುಯಿನ್ನಾ? ಏನಾಯ್ತು? 465 00:49:59,708 --> 00:50:00,958 ಗಲಾಡ್ರಿಯಲ್. 466 00:50:04,250 --> 00:50:05,750 ಹಲ್ಬ್ರ್ಯಾಂಡ್ ಎಲ್ಲಿ? 467 00:50:08,208 --> 00:50:11,625 ಅವನು ಹೋದನು. ಮರಳಿ ಬರುವುದು ಅನುಮಾನ. 468 00:50:13,041 --> 00:50:16,083 ಮರಳಿ ಬಂದರೆ ನಾವ್ಯಾರೂ ಅವನನ್ನು ಸಂಪರ್ಕಿಸಬಾರದು. 469 00:50:17,333 --> 00:50:19,416 ಆ ತೊರೆಯ ಬಳಿ ಏನಾಯಿತು? 470 00:50:19,500 --> 00:50:21,500 ಹಿಂದೆ ಒಂದು ತಪ್ಪಿನ ಬಗ್ಗೆ ನೀನು ಹೇಳಿದ್ದೆ. 471 00:50:22,791 --> 00:50:24,750 ನೀನು ಮರಳಿ ಮಾಡೆನು ಎಂದದ್ದು. 472 00:50:26,125 --> 00:50:28,750 ಆ ಮಾತನ್ನು ಉಳಿಸಿಕೊಳ್ಳಲು ನೀನು ಕಷ್ಟವಾಗಿಸುತ್ತಿರುವೆ. 473 00:50:28,833 --> 00:50:31,916 ಅದು ಸುಲಭವಾಗಿದ್ದಿದ್ದರೆ, ನಂಬಿಕೆಯ ಅವಶ್ಯಕತೆ ಇರುತ್ತಿರಲಿಲ್ಲ. 474 00:50:39,375 --> 00:50:41,291 ಮತ್ತೆ, ನಾವು ಮುಂದುವರಿಯಬಹುದೇ? 475 00:50:41,375 --> 00:50:42,250 ಇಲ್ಲ. 476 00:50:44,958 --> 00:50:46,958 ನಾವು ಮೂರನ್ನು ಮಾಡಬೇಕು. 477 00:50:47,041 --> 00:50:48,875 ಮೂರಾ? ಮೂರು ಏಕೆ? 478 00:50:50,791 --> 00:50:54,625 ಒಂದಾದರೆ ಭ್ರಷ್ಟವನ್ನಾಗಿಸುವುದು. ಎರಡಾದರೆ ವಿಭಜಿಸುವುದು. 479 00:50:54,750 --> 00:50:57,583 ಆದರೆ ಮೂರಿದ್ದರೆ, ಸಮತೋಲನವಿರುವುದು. 480 00:51:03,375 --> 00:51:08,375 ನಾವು ತಯಾರುಪಡಿಸುವ ಶಕ್ತಿ ಎಲ್ಫ್ಗಳಿಗೆ ಮಾತ್ರ ಇರಬೇಕು. 481 00:51:09,416 --> 00:51:11,416 ಬೇರೆ ಯಾರೂ ಅದನ್ನು ತಾಕುವಂತಿರಬಾರದು. 482 00:51:12,666 --> 00:51:16,541 ಗಲಾಡ್ರಿಯಲ್, ಮಿಶ್ರಲೋಹದಲ್ಲಿನ ಕೆಳಗಿನ ಅದಿರುಗಳ ಶುದ್ಧತೆ 483 00:51:16,625 --> 00:51:19,708 ಅತಿ ಮುಖ್ಯ ಎಂದು ನಾನು ಅರಿತಿರುವೆ. 484 00:51:22,250 --> 00:51:25,666 ಅತ್ಯುತ್ಕೃಷ್ಟ ಗುಣಮಟ್ಟದ ಚಿನ್ನ ಮತ್ತು ಬೆಳ್ಳಿ ನನಗೆ ಬೇಕಿದೆ. 485 00:51:27,791 --> 00:51:29,958 ನನಗೆ ವಾಲಿನೊರಿನ ಚಿನ್ನ ಮತ್ತು ಬೆಳ್ಳಿ ಬೇಕು. 486 00:51:34,458 --> 00:51:38,875 ನಿಜವಾದ ಸೃಷ್ಟಿಗೆ… ತ್ಯಾಗ ಅವಶ್ಯಕ. 487 00:51:47,083 --> 00:51:49,166 ನಿನಗಿನ್ನೂ ಬೇರೆ ಏನಾದರೂ ನೆನಪಿದೆಯೇ? 488 00:51:50,291 --> 00:51:53,708 ಚೂರುಗಳು. ಕುರುಹುಗಳು. 489 00:51:55,333 --> 00:52:00,000 ಹೆಚ್ಚು ಬಂದಿದೆ. ಆದರೆ ಮಿಕ್ಕಿದ್ದನ್ನು ನೆನಪಿಸಿಕೊಳ್ಳಲು ನಾನು ರ್ಹುನಿಗೆ ಹೋಗಬೇಕು. 490 00:52:02,625 --> 00:52:04,791 ಅವರು ನಿನ್ನ ಹೆಸರನ್ನು ತಪ್ಪಾಗಿ ತಿಳಿದರು. 491 00:52:04,875 --> 00:52:08,375 ಆ ವಿಚಾರದಲ್ಲೂ ಅವರು ತಪ್ಪಾಗಿದ್ದರೆ? ಅಥವಾ ಸುಳ್ಳು ಹೇಳಿಯೋ… 492 00:52:08,458 --> 00:52:13,958 ಅವರು ಹೇಳಿದ್ದು, ನನಗೆ ವಿವರಿಸಲಾಗದಷ್ಟು ಸತ್ಯವೆನಿಸಿತು. 493 00:52:17,291 --> 00:52:18,500 ಅವರು... 494 00:52:19,333 --> 00:52:22,083 ಅವರು ನಿನ್ನನ್ನು ಬೇರೇನೆಂದೋ ಕರೆದರು. "ಇಸ್ತಾರ್." 495 00:52:23,083 --> 00:52:24,500 ಅದು ನಿಮ್ಮ ಪಂಗಡವೇ? 496 00:52:26,541 --> 00:52:27,791 "ಇಸ್ತಾರ್?" 497 00:52:31,083 --> 00:52:33,333 ನಿಮ್ಮ ಭಾಷೆಯಲ್ಲಿ ಅದರ ಅರ್ಥ "ಜ್ಞಾನಿ" ಅಂತ. 498 00:52:34,416 --> 00:52:35,250 ಅಥವಾ... 499 00:52:38,458 --> 00:52:39,791 "ಮಾಟಗಾರ." 500 00:52:51,416 --> 00:52:53,833 ನೀನು ನಿಜವಾಗಿಯೂ ನಮ್ಮೊಂದಿಗೆ ಬರುತ್ತಿಲ್ಲವೇ? 501 00:52:59,625 --> 00:53:04,083 ಕೆಲವೊಮ್ಮೆ, ನಮ್ಮ ದಾರಿಗಳನ್ನು ನಮಗಿಂತ ದೊಡ್ಡ ಶಕ್ತಿಗಳೇ ಸೃಷ್ಟಿಸಿರುತ್ತವೆ. 502 00:53:04,750 --> 00:53:07,625 ಅಂಥ ಸಮಯದಲ್ಲೇ ನಮ್ಮ ಮನಸ್ಸು ಒಪ್ಪದ ಕಡೆಗೆ 503 00:53:07,708 --> 00:53:10,958 ನಮ್ಮ ಹೆಜ್ಜೆಗಳನ್ನು ಇರಿಸಬೇಕಾಗುವುದು. 504 00:53:11,041 --> 00:53:14,000 ದಾರಿಯಲ್ಲಿ ನಮಗೆ ಎಂತಹ ಅಪಾಯಗಳೇ ಎದುರಾದರೂ ಸರಿ. 505 00:53:16,875 --> 00:53:19,500 ಇದೊಂದು ರೀತಿಯ ಸಾಹಸದ ಹಾಗಿದೆ. 506 00:53:19,583 --> 00:53:21,250 ಒಂಟಿಯಾಗಿ, ಇದು ಕೇವಲ ಪಯಣವಷ್ಟೇ. 507 00:53:22,583 --> 00:53:26,000 ಸಾಹಸಗಳಿವೆಯಲ್ಲ, ಇವನ್ನು ಹಂಚಿಕೊಳ್ಳಬೇಕು. 508 00:53:32,708 --> 00:53:36,916 ಯಾವುದೇ ಹಾರ್ಫೂಟ್ ನಿರೀಕ್ಷಿಸದಷ್ಟು ಸಾಹಸವನ್ನು ನಾನೀಗಾಗಲೇ ಕಂಡಿದ್ದೇನೆ. 509 00:53:49,750 --> 00:53:53,083 ಇಲ್ಲಿ ಹೇಳುವ ಹಾಗೆ, ನಾವು ಉತ್ತರಕ್ಕೆ ಹೋದರೆ, 510 00:53:53,166 --> 00:53:56,666 ನಮಗೆ 30 ದಿನಗಳ ಸ್ಪಷ್ಟ ಪಥ ಸಿಗುವುದು. 511 00:53:56,791 --> 00:53:58,875 ಎಲ್ಲೆಡೆ ಹಸಿರು ಹುಲ್ಲು, ರಾಕ್ಷಸರು ಇರಲ್ಲ. 512 00:53:59,958 --> 00:54:04,416 -ಹೇ! ಎಲ್ಲ ಕೆಳಗೆ ಹೋಗೋ ಹಾಗೇ ಕಾಣ್ತಿದೆ... -ನೀನದನ್ನು ತಲೆಕೆಳಗಾಗಿ ಹಿಡಿದಿರುವೆ. 513 00:54:07,708 --> 00:54:11,500 ಕ್ಷಮಿಸು, ಮಲ್ವಾ. ವಾರಗಟ್ಟಲೆ ಕಡಿದಾದ ಇಳಿಜಾರು ಮತ್ತು ಕಲ್ಲುಮುಳ್ಳುಗಳು. 514 00:54:11,583 --> 00:54:15,000 ನೀನು ಅಷ್ಟೆಲ್ಲಾ ಬುದ್ಧಿವಂತೆಯಾಗಿದ್ದರೆ, ನೀನೇ ಪಥವನ್ನು ಹುಡುಕು. 515 00:54:19,083 --> 00:54:22,166 ಮಕ್ಕಳು ಮತ್ತು ಆಡ್ಡಾಡುವವರನ್ನು ನೋಡಿಕೊಳ್ಳಿ. 516 00:54:22,250 --> 00:54:24,833 ಯಾರೂ ದಾರಿ ತಪ್ಪಕೂಡದು! 517 00:54:24,916 --> 00:54:27,750 ಯಾರೂ ಒಂಟಿಯಾಗಿ ಹೋಗಕೂಡದು! 518 00:54:27,833 --> 00:54:30,250 ಸಾಡೊಕ್ ಹೇಳುವಾಗ ಚೆನ್ನಾಗಿರುತ್ತಿತ್ತು. 519 00:54:34,125 --> 00:54:36,625 ಆ ಮುದಿಯ ನಮ್ಮೊಂದಿಗಿದ್ದಿದ್ದರೆ ಚೆನ್ನಾಗಿರುತ್ತಿತ್ತು. 520 00:54:36,708 --> 00:54:37,916 ಇದ್ದಾನೆ. 521 00:54:50,416 --> 00:54:51,250 ನಡಿ. 522 00:54:55,625 --> 00:54:58,083 ನೀನೀಗ ಮಹತ್ತಾದುದರ ಒಂದು ಭಾಗ. 523 00:55:00,208 --> 00:55:01,375 ಆತನಿಗೆ ನೀನು ಬೇಕು. 524 00:55:02,583 --> 00:55:04,750 ನೀನು ಅಲ್ಲಿಯೇ ಸೇರಬೇಕು. 525 00:55:19,416 --> 00:55:20,750 ವಿದಾಯ, ನೋರಿ! 526 00:55:20,875 --> 00:55:22,291 -ವಿದಾಯ... -ಜಾಗ್ರತೆ! 527 00:55:26,625 --> 00:55:27,458 ಚೆನ್ನಾಗಿರು. 528 00:55:37,958 --> 00:55:40,208 -ದೀಪವನ್ನು ಎತ್ತಿಕೊಂಡೆಯಾ? -ಖಂಡಿತವಾಗಿ. 529 00:55:40,291 --> 00:55:41,375 ಒಳ್ಳೆಯದು. 530 00:55:42,416 --> 00:55:46,000 ಮತ್ತೆ... ಸಿಗೋಣ. 531 00:55:49,875 --> 00:55:50,708 ನೋರಿ... 532 00:55:53,458 --> 00:55:55,791 ಸರಿ. ದೊಡ್ಡ ಮನುಷ್ಯನಿಗೆ ಬಸವನಹುಳುಗಳು. 533 00:55:55,875 --> 00:55:57,750 ಅವನ ಹಸಿವು ನಿನಗೆ ಗೊತ್ತೇ ಇದೆ. 534 00:55:57,833 --> 00:56:01,333 ನಿನಗೆ ಚಳಿಯಾದರೆ ಮತ್ತೊಂದು ಕಂಬಳಿ. ಸರಿ. 535 00:56:02,750 --> 00:56:03,916 ಮತ್ತೆ ಸಿಗೋಣ. 536 00:56:11,166 --> 00:56:12,333 ಎಂಥಾ ತಂದೆ ನಾನು. 537 00:56:13,875 --> 00:56:18,208 ನೀನೊಂದು ಅಪರಿಚಿತ ಪ್ರಪಂಚಕ್ಕೆ ಕಾಲಿಡುತ್ತಿರುವೆ, ಆದರೆ ನಾನು ನಿನಗೆೇನೂ ತಿಳಿಸಿಕೊಟ್ಟಿಲ್ಲ. 538 00:56:18,291 --> 00:56:20,458 ಅಯ್ಯೋ. ಖಂಡಿತ ತಿಳಿಸಿಕೊಟ್ಟಿರುವೆ. 539 00:56:23,250 --> 00:56:26,375 ಬೆಂಕಿಯನ್ನು ಯಾವಾಗಲೂ ನೀರು ಮತ್ತು ಮಣ್ಣಿನೊಂದಿಗೆ ನಂದಿಸಬೇಕು. 540 00:56:26,458 --> 00:56:30,541 ನದಿಯ ಬಳಿ ಗಲೀಜು ಮಾಡಬೇಡ, ಮುಂದೆ ಅದೇ ನೀರನ್ನು ಕುಡಿಯಬೇಕಾದೀತು. 541 00:56:30,625 --> 00:56:35,833 ಮರ್ಯಾದೆ ಇಲ್ಲದ ಹಾರ್ಫೂಟ್ ಜೀವನ ಚೌಕಾಕಾರದ ಚಕ್ರದ ಮೇಲೆ ಹೋದಂತೆ. 542 00:56:35,916 --> 00:56:37,083 ಚೌಕಾಕಾರದ ಚಕ್ರ... 543 00:56:40,041 --> 00:56:42,541 ನಾನು ಎಲ್ಲವನ್ನೂ ಆಲಿಸುತ್ತಿದ್ದೆ, ಅಪ್ಪ. 544 00:56:59,250 --> 00:57:03,750 ನದಿ ಎಲ್ಲಿ ಹರಿಯುವುದೆಂದು ತಿಳಿ. ಗುಬ್ಬಚ್ಚಿಗಳು ಹಾಡಲು ಕಲಿಯುವೆಡೆ. 545 00:57:07,500 --> 00:57:08,875 ಖಂಡಿತ, ಅಮ್ಮ. 546 00:57:09,625 --> 00:57:10,833 ಜಾಗ್ರತೆಯಿಂದಿರುವೆ. 547 00:57:15,625 --> 00:57:16,791 ಇಲ್ಲ. 548 00:57:22,250 --> 00:57:24,250 ನೀನು ಧೈರ್ಯವಾಗಿರುವೆ. 549 00:57:48,416 --> 00:57:51,708 ಹೋಗು... 550 00:57:51,791 --> 00:57:53,250 ನಿನ್ನ ಧೈರ್ಯ ಮರೆಯಾಗುವ ಮುಂಚೆ. 551 00:57:55,250 --> 00:57:56,875 ಇಲ್ಲಾ ನಾವೂ ಕಳೆದುಕೊಳ್ಳುವೆವು. 552 00:58:08,250 --> 00:58:11,333 ಇರು! ನೋರಿ! 553 00:58:11,416 --> 00:58:12,583 ಪೋಪ್ಪಿ! 554 00:58:24,458 --> 00:58:28,125 ಯಾವಾಗಲೂ ನಾನು ಅತ್ಯಂತ ಪ್ರೀತಿಸುವವರೇ ದೂರ ಏಕೆ ಹೋಗುವರು? 555 00:58:29,916 --> 00:58:33,958 ಏಕೆಂದರೆ ನಾವು ಹೋಗದಿದ್ದರೆ, ಹೊಸದಾಗಿ ಏನನ್ನೂ ಕಲಿಯಲಾಗದು. 556 00:58:40,250 --> 00:58:42,833 ಮರಳಿ ಬರುವೆಯಾ? ಆಣೆ ಮಾಡು? 557 00:58:44,000 --> 00:58:47,500 -ಎಲ್ಲರನ್ನೂ ನೋಡಿಕೊಳ್ಳುವೆ ಎಂದು ಮಾತು ಕೊಡೆಯಾ? -ಖಂಡಿತ ಕಣೆ, ತಿಕ್ಕಲಿ. 558 00:58:50,291 --> 00:58:54,166 ಈ ವಿಶಾಲವಾದ ವಿಚಿತ್ರ ಪ್ರಪಂಚದಲ್ಲಿ ನೀನೊಬ್ಬಳೇ ನನಗೆ ಪ್ರಾಣಸ್ನೇಹಿತೆ. 559 00:58:54,958 --> 00:58:56,375 ನಿನಗಾಗಿ ಏನು ಬೇಕಾದರೂ ಮಾಡುವೆ. 560 00:58:58,375 --> 00:59:02,625 ಪ್ರಪಂಚ ಅಷ್ಟು ವಿಶಾಲವಾಗಿಲ್ಲ, ಪೋಪ್ಪಿ. ನಾವೇ ತುಂಬಾ ಚಿಕ್ಕವರು ಅಷ್ಟೇ. 561 00:59:08,458 --> 00:59:10,458 ಆ ಎತ್ತರದ ಮನುಷ್ಯನ ಜೊತೆಯಲ್ಲೇ ಇರು. 562 00:59:11,000 --> 00:59:13,000 ಕಷ್ಟಕಾಲದಲ್ಲಿ ಅವನು ಒಳ್ಳೆಯ ಮಿತ್ರ. 563 00:59:13,083 --> 00:59:14,500 ನಿನ್ನಷ್ಟೇನಿಲ್ಲ. 564 00:59:45,958 --> 00:59:48,208 -ನಿನಗೆ ಖಚಿತವಿದೆಯೇ? -ಎಂದಿಗಿಂತ ಹೆಚ್ಚಾಗಿ. 565 00:59:49,000 --> 00:59:51,000 ಅವರೆಲ್ಲಾ ನಿನ್ನೆಡೆ ಕೈಬೀಸುತ್ತಿದ್ದಾರೆ. 566 00:59:52,791 --> 00:59:56,041 ನಾನು ಹಿಂದೆ ತಿರುಗಿದರೆ, ಮತ್ತೆಂದೂ ಹೋಗಲಾರೆ. 567 00:59:57,416 --> 01:00:01,416 ಹಾಗಿದ್ದಲ್ಲಿ, ನೀನೇ ಮುನ್ನಡೆಸುವುದು ಉತ್ತಮ. 568 01:00:05,500 --> 01:00:09,208 ಈಗ ಆ ಸಂದರ್ಭ ಬಂದಿರುವುದರಿಂದ, ನನ್ನ ಕಾಲುಗಳು ಭಾರವೆನಿಸುತ್ತಿವೆ. 569 01:00:11,541 --> 01:00:14,833 ಅದರ ಜೊತೆಗೆ ನಾನೆಲ್ಲಿಗೆ ಹೋಗಬೇಕೆಂದು ಕಿಂಚಿತ್ತೂ ಅರಿವಿಲ್ಲ. 570 01:00:27,000 --> 01:00:28,416 ಅದೋ ಅಲ್ಲಿದೆ. 571 01:00:29,916 --> 01:00:31,541 ಖಚಿತವಾಗಿ? 572 01:00:32,208 --> 01:00:33,625 ಪೂರ್ತಿಯಾಗೇನಿಲ್ಲ. 573 01:00:34,541 --> 01:00:37,041 ಈ ದಿಕ್ಕಿನ ಗಾಳಿಯಲ್ಲಿ ಮಧುರ ಸುಗಂಧವಿದೆ. 574 01:00:40,083 --> 01:00:43,208 ಅನುಮಾನವಿದ್ದಾಗ, ಎಲನೊರ್ ಬ್ರ್ಯಾಂಡಿಫುಟ್... 575 01:00:45,625 --> 01:00:47,333 ನಿನ್ನ ಮೂಗಿನ ಸಲಹೆ ಕೇಳು. 576 01:07:23,125 --> 01:07:27,500 ಆಗಸದ ಕೆಳಗಿನ ಎಲ್ಫ್ ರಾಜರಿಗೆ 577 01:07:27,583 --> 01:07:31,916 ಮೂರು ಉಂಗುರಗಳು 578 01:07:32,000 --> 01:07:35,291 ಕಲ್ಲು ಪಡಸಾಲೆಯೊಳಗಿನ 579 01:07:35,375 --> 01:07:40,583 ಕುಬ್ಜ ಆಳುಗರಿಗೆ ಏಳು 580 01:07:40,666 --> 01:07:45,125 ಸಾವನ್ನು ಸಂಧಿಸುವ 581 01:07:45,208 --> 01:07:49,458 ಮನುಜರಿಗೆ ಒಂಭತ್ತು 582 01:07:49,541 --> 01:07:52,791 ಕಾಳ ಸಿಂಹಾಸನದ ಮೇಲಿನ 583 01:07:52,875 --> 01:07:57,083 ಕಾಳ ದೇವನಿಗೊಂದು 584 01:07:57,166 --> 01:08:03,041 ಛಾಯೆಗಳು ಸುಪ್ತವಾಗಿರುವ 585 01:08:03,916 --> 01:08:09,916 ಮೊರ್ಡೊರ್ ನ ನಾಡಿನಲ್ಲಿ 586 01:08:12,625 --> 01:08:18,625 ಛಾಯೆಗಳು ಸುಪ್ತವಾಗಿರುವ 587 01:08:27,333 --> 01:08:32,000 ಅವರನ್ನೆಲ್ಲಾ ಆಳಲು ಒಂದು ಉಂಗುರ 588 01:08:32,083 --> 01:08:37,000 ಅವರನ್ನು ಪತ್ತೆಹಚ್ಚಲು ಒಂದು ಉಂಗುರ 589 01:08:37,083 --> 01:08:42,166 ಅವರನ್ನೆಲ್ಲಾ ಜೊತೆ ಸೇರಿಸಿ 590 01:08:42,250 --> 01:08:48,250 ಕಗ್ಗತ್ತಲಿನಲ್ಲಿ ಬಂಧಿಸಲು ಒಂದು ಉಂಗುರ. 591 01:08:52,250 --> 01:08:58,250 ಛಾಯೆಗಳು ಸುಪ್ತವಾಗಿರುವ 592 01:09:01,416 --> 01:09:07,416 ಮೊರ್ಡೊರ್ ನ ನಾಡಿನಲ್ಲಿ... 593 01:09:10,166 --> 01:09:16,166 ಛಾಯೆಗಳು ಸುಪ್ತವಾಗಿರುವ 594 01:09:21,833 --> 01:09:23,833 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 595 01:09:23,916 --> 01:09:25,916 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್