1 00:00:06,546 --> 00:00:08,838 -ಸ್ತಂಭವಾ? -ವಸಂತ ಕಾಲದೊಳಗೆ ಇದು ತಯಾರಿರಬೇಕು. 2 00:00:09,255 --> 00:00:13,505 ನಮ್ಮ ಜನಾಂಗದಾಚೆ ಜೊತೆಗಾರರನ್ನ ಹುಡುಕೋ ಆಲೋಚನೆ ಮಾಡಿದ್ದೀರಾ? 3 00:00:13,588 --> 00:00:15,088 ನಿಮ್ಮ ರಾಜನ ಪ್ರಸ್ತಾಪ ಹೇಳಿ, 4 00:00:15,171 --> 00:00:17,505 ನನ್ನ ತಂದೆಯ ಹತ್ತಿರ ಹೇಳೋದಾ ನೋಡ್ತೀನಿ. 5 00:00:17,630 --> 00:00:19,713 ಮುಚ್ಚಿಟ್ಟಿದ್ದರೆ ನನಗೆ ಗೊತ್ತಾಗ್ತಿತ್ತು. 6 00:00:19,755 --> 00:00:23,088 ನೀನೇ ಏನೋ ಮುಚ್ಚಿಡ್ತಾ ಇದ್ದೀಯ ಅಂದುಕೊಂಡನೇನೋ. 7 00:00:23,755 --> 00:00:24,921 ಯಾವ ಸ್ಥಳ ಇದು? 8 00:00:25,005 --> 00:00:28,588 ನ್ಯೂಮೆನೊರಿನ ದ್ವೀಪರಾಜ್ಯ. 9 00:00:29,588 --> 00:00:31,130 ನಾನು ಬೇಡ ಅಂದ್ಕೋತಿದ್ದೆ. 10 00:00:31,213 --> 00:00:34,796 ಸಮುದ್ರ ಪರೀಕ್ಷೆ ಆರಂಭವಾಗಿ ಹಡಗಿನ ಉಡಾವಣೆಯಾದಾಗ, ಅದರಲ್ಲಿ ನೀನು ಇರಬೇಕು. 11 00:00:35,046 --> 00:00:36,546 ನನಗೆ ಯಾವ ತೊಂದರೆಯೂ ಬೇಡ. 12 00:00:41,338 --> 00:00:44,046 ಇದು ಸೌತ್ ಲ್ಯಾಂಡ್ಸ್ ನಕ್ಷೆ. 13 00:00:44,130 --> 00:00:46,380 ಇದರಲ್ಲಿ ಜಾಗದ ಬಗ್ಗೆಯಷ್ಟೇ ಇಲ್ಲ, ಯೋಜನೆಯೂ ಇದೆ. 14 00:00:46,463 --> 00:00:48,130 ಅವರದೇ ಒಂದು ಸಾಮ್ರಾಜ್ಯ ಸೃಷ್ಟಿಸಲು. 15 00:00:48,213 --> 00:00:50,171 ಸೌತ್ ಲ್ಯಾಂಡ್ಸ್ ದೊಡ್ಡ ಅಪಾಯದಲ್ಲಿದೆ. 16 00:00:50,255 --> 00:00:54,255 ಸೌರೊನ್ ಒಂದು ವೇಳೆ ವಾಪಸ್ ಬಂದಿದ್ದರೆ, ಸೌತ್ ಲ್ಯಾಂಡ್ಸ್ ಕೇವಲ ಆರಂಭವಷ್ಟೇ. 17 00:00:55,088 --> 00:00:57,880 ಇಲ್ಲಿ ಯಾರಿಗಾದರೂ ಬದುಕೋ ಆಸೆ ಇದ್ದರೆ... 18 00:00:58,505 --> 00:01:01,296 ಬೆಳಕು ಹರಿಯುತ್ತಲೇ ಎಲ್ವೆನ್ ಸ್ತಂಭಕ್ಕೆ ಬನ್ನಿ. 19 00:01:05,130 --> 00:01:06,838 ಅವನನ್ನು ಅಡಾರ್ ಬಳಿಗೆ ಕರೆತನ್ನಿ. 20 00:01:07,963 --> 00:01:10,546 ಸೌರೊನಿಗೆ ಹಿಂದೆ ಬಹಳಷ್ಟು ಹೆಸರುಗಳಿದ್ದವಂತೆ. 21 00:01:10,630 --> 00:01:12,338 ಇದು ಅವುಗಳಲ್ಲೊಂದಿರಬಹುದು. 22 00:01:13,130 --> 00:01:17,296 ನಿಮ್ಮ ಜನರಿಗೆ ರಾಜನೇ ಇಲ್ಲ, ಯಾಕಂದ್ರೆ ಅವರ ರಾಜ ನೀನೇ. 23 00:01:17,380 --> 00:01:19,046 ಮಿಡ್ಲ್ ಅರ್ಥಿಗೆ ನನ್ನ ಜೊತೆ ಬಾ. 24 00:01:19,130 --> 00:01:20,546 ನಿನ್ನ ಹತ್ತಿರ ಸೈನ್ಯವೂ ಇಲ್ಲ. 25 00:01:20,630 --> 00:01:23,213 ಅದೆಲ್ಲಾ ಬದಲಾಗಲಿದೆ. 26 00:02:37,588 --> 00:02:43,588 ದಿ ಲಾರ್ಡ್ ಆಫ್ ದಿ ರಿಂಗ್ಸ್: ದಿ ರಿಂಗ್ಸ್ ಆಫ್ ಪವರ್ 27 00:03:00,005 --> 00:03:05,088 ಈ ಸಭೆಯಲ್ಲಿ ನಾವು ನಮ್ಮ ದ್ವೀಪದ ಭವಿಷ್ಯದ ಬಗ್ಗೆ ಯೋಜನೆ ರೂಪಿಸಲು ದಿನವೂ ಭೇಟಿಯಾಗುತ್ತೇವೆ. 28 00:03:05,671 --> 00:03:08,421 ಬ್ಲೆಸ್ಸಿಂಗ್ ಆಫ್ ದಿ ಚಿಲ್ಡ್ರನ್ ಸಮಾರಂಭದಲ್ಲಿ 29 00:03:09,213 --> 00:03:13,296 ಆ ಭವಿಷ್ಯದಲ್ಲಿ ಬದುಕುವವರನ್ನು ಸ್ವಾಗತಿಸಲು ಜೊತೆ ಸೇರೋಣ. 30 00:03:16,755 --> 00:03:20,546 ಉಕ್ಕುವ ಸಮುದ್ರದ ಮೇಲಿನ ಅಪರಿಮಿತವಾದ ಸೂರ್ಯೋದಯದಂಥದ್ದು. 31 00:03:26,088 --> 00:03:28,338 ಇವಳಿಗೆ ಯಾವ ಹೆಸರು ಆಯ್ಕೆಮಾಡಿದಿರಿ? 32 00:03:28,921 --> 00:03:30,130 ಆಲಿನೆಲ್. 33 00:03:31,380 --> 00:03:32,588 ಆಲಿನೆಲ್. 34 00:03:33,255 --> 00:03:37,046 ನ್ಯೂಮೆನೊರಿನ ಶಕ್ತಿ ನಿನ್ನಲ್ಲಿ ಉದಯಿಸಲಿ. 35 00:03:38,463 --> 00:03:41,421 ಆಕೆಯ ಜ್ಞಾನದಲ್ಲಿ ನಿನ್ನ ಹೆಜ್ಜೆ ಇರಲಿ... 36 00:03:46,838 --> 00:03:49,505 ಕೆಲವೊಮ್ಮೆ ನಮ್ಮ ದ್ವೀಪವೂ ಮೈಮುರಿಯಬೇಕಾಗುತ್ತೆ. 37 00:03:50,588 --> 00:03:51,838 ನಿನ್ನ ಹಾಗೆಯೇ. 38 00:04:34,630 --> 00:04:37,671 ಎಂಥಾ ಅದ್ಭುತ ದಿನ, ಮಹಾರಾಣಿ ರೀಜೆಂಟ್. 39 00:04:39,630 --> 00:04:41,963 ಇವತ್ತು ಯಾವ ಕಾರ್ಯದಿಂದ ಶುರು ಮಾಡಲಿದ್ದೀರಾ? 40 00:04:44,671 --> 00:04:46,505 ಆಕೆ ಎಲ್ಫ್ನ ಸಭೆಗೆ ಕರೆದಿದ್ದಾರೆ. 41 00:04:47,088 --> 00:04:48,838 ಇಂದು ಬೆಳಿಗ್ಗೆಯೇ. 42 00:04:49,213 --> 00:04:53,755 ಎಲ್ಫಿನ ಸ್ನೇಹಿತ ನಾಲ್ಕು ಸಂಘದವರನ್ನ ಹೊಡೆದರೆ, ಮೀರಿಯೆಲ್ ಅವಳನ್ನ ಚಹಾ ಕೂಟಕ್ಕೆ ಕರೀತಾರಾ? 43 00:04:53,838 --> 00:04:56,005 ಎಲ್ಫಿಗೆ ಶಿಕ್ಷೆ ಕೊಡೋಕೆ ಕರೆದಿರಬಹುದು. 44 00:04:56,088 --> 00:04:57,713 ಅವಳನ್ನೇ ಆಜ್ಞೆ ಕೇಳೋಕಿರಬೇಕು. 45 00:04:59,588 --> 00:05:03,421 ಆ ಎಲ್ಫ್ ನಮ್ಮ ರಾಣಿಯ ಕಿವಿಯೊಳಗೆ ವಿಷವನ್ನು ಉಸುರುತ್ತಿದ್ರೆ, 46 00:05:03,505 --> 00:05:05,296 ನಮ್ಮ ಪರ ಯಾರು ಮಾತಾಡ್ತಾರೆ? 47 00:05:12,130 --> 00:05:14,255 ಚಾನ್ಸಲರ್! ಚಾನ್ಸಲರ್! 48 00:05:14,338 --> 00:05:17,380 ಆಕೆಗೆ ನನ್ನ ಸಂತಾಪವನ್ನು ಸೂಚಿಸ್ತೀರಾ? ಧ್ವನಿ ಕಡಿಮೆಯಿರಿಸು. 49 00:05:17,463 --> 00:05:19,838 ಇದನ್ನ ತಗೊಳ್ತೀರಾ, ಸ್ವಾಮಿ? ಬನ್ನಿ, ಸ್ವಾಮಿ. 50 00:05:19,921 --> 00:05:22,630 ಯಾವುದೋ ಮುಖ್ಯ ಕಾರ್ಯದಲ್ಲಿದ್ದೀಯ ಅಂತ ಗೊತ್ತಾಗಲಿಲ್ಲ. 51 00:05:22,713 --> 00:05:23,588 ಚಾನ್ಸಲರ್! 52 00:05:23,671 --> 00:05:27,505 ದೊಡ್ಡ ವಿಚಾರಗಳಿಗೆ ಕೊಡುವಷ್ಟೇ ಪ್ರಾಮುಖ್ಯತೆಯನ್ನ ಸಣ್ಣ ವಿಚಾರಗಳಿಗೂ 53 00:05:27,588 --> 00:05:29,546 ಕೊಡುವಂಥ ಕಲೆಯೇ ರಾಜತಂತ್ರ. 54 00:05:30,171 --> 00:05:32,463 ಈಗಾಗಲೇ ಇದನ್ನ ತಿಳಿದುಕೊಂಡಿರುವೆ ಅಂದ್ಕೋತೀನಿ. 55 00:05:32,546 --> 00:05:34,296 ಚತುರನಾಗಿರೋಕಷ್ಟೇ ನೋಡ್ತಿದ್ದೆ. 56 00:05:34,380 --> 00:05:38,130 ಸಣ್ಣ ಆಶಯದ ವ್ಯಕ್ತಿಗಳಿಗಷ್ಟೇ ಚತುರತೆ. 57 00:05:38,880 --> 00:05:41,921 ನೀನು ವಿವೇಕಿಯಾಗಿದ್ದರೆ ಇನ್ನೂ ಚಂದ, ಮಗನೇ. 58 00:05:43,755 --> 00:05:46,088 ಈಗ, ತೊಂದರೆ ಏನಾಗಿದೆ? 59 00:05:46,588 --> 00:05:49,421 ನಮ್ಮ ಸುತ್ತ ಈಗೊಂದು ಬಿರುಗಾಳಿಯೇ ಎದ್ದಿರಬಹುದು. 60 00:05:49,505 --> 00:05:51,588 ನಮ್ಮ ತೀರದಲ್ಲಿ ಎಲ್ಫ್ ಹಡಗುಗಳಾ? 61 00:05:52,213 --> 00:05:55,380 ಎಲ್ಫ್ ಕಾರ್ಮಿಕರು ನಿಮ್ಮ ವ್ಯಾಪಾರಗಳನ್ನು ಕಸಿಯುತ್ತಿದ್ದಾರಾ? 62 00:05:56,963 --> 00:05:58,963 ನಿದ್ರೆ ಮಾಡದ ಕಾರ್ಮಿಕರು, 63 00:06:00,130 --> 00:06:03,130 ಸುಸ್ತಾಗದವರು, ವಯಸ್ಸಾಗದವರು. 64 00:06:03,588 --> 00:06:04,838 ಇಲ್ಲ! 65 00:06:06,421 --> 00:06:10,171 ನನ್ನ ಪ್ರಕಾರ ರಾಣಿಯು ಬಹುಶಃ ಕುರುಡೋ 66 00:06:10,255 --> 00:06:12,088 ಅಥವಾ ಎಲ್ಫ್ ಪ್ರೇಮಿಯೋ ಇರಬೇಕು. 67 00:06:12,171 --> 00:06:14,380 ಆಕೆಯ ತಂದೆಯಂತೆಯೇ. 68 00:06:14,463 --> 00:06:16,838 -ಎಲ್ಫ್ ಪ್ರೇಮಿ! -ಎಲ್ಫ್ ಪ್ರೇಮಿ! 69 00:06:16,921 --> 00:06:18,713 -ಎಲ್ಫ್ ಪ್ರೇಮಿ! -ಎಲ್ಫ್ ಪ್ರೇಮಿ! 70 00:06:18,796 --> 00:06:20,588 ಎಲ್ಫ್ ಪ್ರೇಮಿ! ಎಲ್ಫ್ ಪ್ರೇಮಿ! 71 00:06:20,671 --> 00:06:24,046 ಒಂದು ವೇಳೆ ಎಲ್ಫ್ ಇಲ್ಲಿದ್ದಿದ್ದರೆ ಏನನ್ನ ನೋಡ್ತಿದ್ದಳು? 72 00:06:24,713 --> 00:06:26,338 ನ್ಯೂಮೆನೊರಿನ ಗಂಡಸರಾ, 73 00:06:27,630 --> 00:06:29,880 ಅಥವಾ ಅತ್ತು ಕರೆಯುವ ಎಳೆ ಮಕ್ಕಳಾ? 74 00:06:31,463 --> 00:06:34,213 ನಾವು ಇಡೈನಿನ ಮಕ್ಕಳು. 75 00:06:35,296 --> 00:06:39,671 ಎಲ್ರೋಸ್ ಟಾರ್-ಮಿನ್ಯಾಟುರಿನ ಮಕ್ಕಳು, ಇದರ ಒಡೆಯ ಮಾರ್ಗೊಥನ್ನೇ ಆಕ್ರಮಿಸಿದ್ದ. 76 00:06:40,588 --> 00:06:44,213 ಆದರೀಗ ಒಬ್ಬ ಎಲ್ಫ್, ಯಾರೋ ಬಹಿಷ್ಕೃತೆ, ನಮ್ಮನ್ನೇ ಬೆದರಿಸೋಕೆ ಬರ್ತಾಳಾ? 77 00:06:45,255 --> 00:06:48,338 ಎಲ್ಲರೂ ನಿಮ್ಮ ನಿಮ್ಮ ಸಂಘದ ಶಿಖೆಗಳನ್ನ ನೋಡಿಕೊಳ್ಳಿ. 78 00:06:48,421 --> 00:06:50,713 ಶಕ್ತಿಶಾಲಿ ಕೈಗಳ ಪರಂಪರೆ. 79 00:06:52,088 --> 00:06:54,463 ಸಮುದ್ರದ ಗೋಡೆಯನ್ನು ಕಟ್ಟಿದ ಗಂಡಸರದ್ದು. 80 00:06:56,046 --> 00:07:00,880 ಅರಮೆನೆಲಾಸನ್ನು ಬೆಳೆಸಿದವರು, ನಮ್ಮ ನಾಗರಿಕತೆಯ ಯಶಸ್ಸು. 81 00:07:01,380 --> 00:07:05,005 ಆದರೀಗ, ಒಬ್ಬ ಎಲ್ಫ್ ನಮ್ಮನ್ನು ಬೆದರಿಸೋಕೆ ಬರ್ತಾಳಾ? 82 00:07:17,838 --> 00:07:18,921 ನನ್ನ ಸ್ನೇಹಿತರೇ... 83 00:07:21,171 --> 00:07:22,255 ನನ್ನಲ್ಲಿ ನಂಬಿಕೆಯಿಡಿ. 84 00:07:23,921 --> 00:07:26,463 ನನ್ನ ಹಸ್ತಗಳ ಮೇಲಿನ ಗೆರೆಗಳ ಮೇಲೆ ಆಣೆ ಮಾಡ್ತೀನಿ, 85 00:07:26,546 --> 00:07:30,838 ನ್ಯೂಮೆನೊರಿನ ಗದ್ದುಗೆಯನ್ನು ಎಲ್ಫ್ಗಳು ಎಂದಿಗೂ ಪಡೆಯೋಕೆ ಆಗಲ್ಲ. 86 00:07:32,755 --> 00:07:37,088 ಇದು ಯಾವತ್ತಿಗೂ ಎಂದಿನಂತೆ ಮನುಷ್ಯರ ಸಾಮ್ರಾಜ್ಯವೇ ಆಗಿರುತ್ತೆ. 87 00:07:44,421 --> 00:07:45,630 ಎಲ್ಲರಿಗೂ ಪಾನೀಯಗಳು! 88 00:08:15,463 --> 00:08:18,213 ಈ ನಗರದಲ್ಲಿ ಅವರಿಗೆ ಗೊತ್ತಿಲ್ಲದ ಹೆಸರಿಲ್ಲ, 89 00:08:18,296 --> 00:08:21,005 ಅವರನ್ನು ಆದರಿಸದ ಜನರಿಲ್ಲ, ಅವರು ಮಾಡದ ಉಪಕಾರವಿಲ್ಲ... 90 00:08:22,463 --> 00:08:23,713 ಮೆಚ್ಚುವಂಥದ್ದೇ. 91 00:08:24,546 --> 00:08:26,546 "ಕೋಪ ತರಿಸುವಂಥದ್ದು" ಅನ್ನುವವನಿದ್ದೆ. 92 00:08:29,380 --> 00:08:31,713 ಮೆನೇಲ್ಟಾರ್ಮಾ ಪಕ್ಕದ ದ್ರಾಕ್ಷಿತೋಟಗಳಿಂದ. 93 00:08:31,796 --> 00:08:34,671 ತೊಂದರೆಗಳನ್ನ ಮರೆಸುತ್ತಂತೆ. ಹಾಗಂತ ಹೇಳ್ತಾರೆ. 94 00:08:35,880 --> 00:08:37,671 ನನ್ನ ತೊಂದರೆಗಳು ಕಷ್ಟಪಟ್ಟು ಗಳಿಸಿದವು. 95 00:08:40,880 --> 00:08:42,463 ಹೊಸಗಸುಬಿ ನೀವೇ ಇರಬೇಕು. 96 00:08:43,130 --> 00:08:45,421 ನಾನು ಕೆಮೆನ್. ನಿಮ್ಮ ಹೆಸರು... 97 00:08:45,505 --> 00:08:48,088 ಈರಿಯನ್. ನಕ್ಷೆಗಳು, ಈಗಲೇ. 98 00:09:01,088 --> 00:09:02,755 ನನಗೆ ಕಿರಿಕಿರಿ ಮಾಡ್ತೀಯ, ಎಲ್ಫ್. 99 00:09:03,463 --> 00:09:05,296 ನಿನ್ನನ್ನ ಅತಿಥಿಯಾಗಿ ಸ್ವಾಗತಿಸಿದರೆ 100 00:09:05,380 --> 00:09:09,130 ನೀನು ಪುರಾತನ ಚರ್ಮಕಾಗದಗಳನ್ನು ಕದಿಯಲು, ಹಳ್ಳಿಯ ಕಡೆಗೆ ಓಡುತ್ತೀ. 101 00:09:09,213 --> 00:09:12,588 ನಿನ್ನ ಈ ಸೌತ್ ಲ್ಯಾಂಡಿನ ಜೊತೆಗಾರ ನಮ್ಮ ಪ್ರಜೆಗಳನ್ನೇ ಹೊಡೆಯುತ್ತಾನೆ. 102 00:09:12,671 --> 00:09:16,088 ಅವನ ಮುಂಗೋಪ ಅರ್ಥವಾಗುವಂಥದ್ದೇ. ಅವನ ಜನ ಸಾಯುತ್ತಿದ್ದಾರೆ. 103 00:09:16,171 --> 00:09:17,713 "ಅವನ ಜನ"? 104 00:09:17,796 --> 00:09:21,380 ನಿಮ್ಮ ಕಾರಾಗೃಹದಲ್ಲಿರುವ ಆ ಮನುಷ್ಯ ಯಾರೋ ಸಾಮಾನ್ಯ ಗಲಭೆಕೋರನಲ್ಲ, 105 00:09:21,463 --> 00:09:25,463 ಸೌತ್ ಲ್ಯಾಂಡ್ಸಿನ ಸಿಂಹಾಸನದಿಂದ ದೂರವಾಗಿ ಗಡಿಪಾರಾಗಿರುವ ಉತ್ತರಾಧಿಕಾರಿ. 106 00:09:25,963 --> 00:09:28,880 ಹಾಗೇ, ನಮ್ಮ ಎಲೆಂಡಿಲ್ ಕೂಡ ರ್ಹುನಿಕ್ ರಾಜನಿರಬೇಕು. 107 00:09:30,046 --> 00:09:31,880 ನಾನೊಬ್ಬ ಸಣ್ಣ ದೊರೆಯಷ್ಟೇ. 108 00:09:33,671 --> 00:09:36,463 ಅವನ ಜನ ಚದುರಿಹೋಗಿದ್ದಾರೆ. ನಾಯಕನಿಲ್ಲದೇ. 109 00:09:37,463 --> 00:09:41,546 ನಿಮ್ಮ ಆಸರೆಯಡಿ ಅವರು ಆತನ ಲಾಂಛನದ ಹಿಂದೆ ಒಗ್ಗಟ್ಟಾಗಬಹುದು. ಯುದ್ಧ ಮಾಡಬಹುದು. 110 00:09:41,630 --> 00:09:43,213 "ಆಸರೆ" ಅಂದ್ರೆ ಏನರ್ಥ? 111 00:09:43,296 --> 00:09:48,338 ಒಂದೊಮ್ಮೆ ಸೌರೊನ್ ನಿಮ್ಮ ಜನರಿಗೂ ವೈರಿಯಾಗಿದ್ದ, ನನ್ನ ಜನರಿಗಾದಂತೆ. 112 00:09:49,296 --> 00:09:52,046 ನಡುವೆ ಬಿಟ್ಟ ಕೆಲಸವನ್ನು ಮುಗಿಸೋಣ ಅಂತಿದ್ದೀನಿ. 113 00:09:52,130 --> 00:09:55,130 ನ್ಯೂಮೆನೊರ್ ಮತ್ತು ಎಲ್ಫ್ಗಳ ಮೈತ್ರಿಯ ಮತ್ತೆ ಬಲಪಡಿಸೋಣ... 114 00:09:56,088 --> 00:09:59,463 ಸೌರೊನ್ ಅವರ ಭೂಮಿಗಳ ಆಕ್ರಮಿಸಿಕೊಳ್ಳುವುದರೊಳಗೆ ನನ್ನೊಂದಿಗೆ ಹೋರಾಡಿ, 115 00:09:59,546 --> 00:10:02,213 ಸೌತ್ ಲ್ಯಾಂಡ್ಸಿನ ಜನರನ್ನು ಕಾಪಾಡೋಕೆ. 116 00:10:07,588 --> 00:10:10,088 ಈ ಸಭೆಯಲ್ಲಿ ಎಷ್ಟೋ ಪ್ರಸ್ತಾವನೆಗಳನ್ನ ಕೇಳ್ತೀವಿ. 117 00:10:10,171 --> 00:10:13,421 ಅತ್ಯಂತ ಆಶ್ಚರ್ಯಕರ ಮತ್ತು ಮಹತ್ವಾಕಾಂಕ್ಷೆ ಇರುವಂಥದ್ದು ನಿನ್ನದೇ. 118 00:10:16,755 --> 00:10:20,338 ಏನೇ ಇದ್ದರೂ, ನ್ಯೂಮೆನೊರ್ ಬೇರೆಯೇ ದಾರಿಯನ್ನು ಆರಿಸಿಕೊಂಡಿದೆ. 119 00:10:22,630 --> 00:10:24,130 ಪೂರ್ತಿ ನ್ಯೂಮೆನೊರ್ ಏನಲ್ಲ. 120 00:10:24,671 --> 00:10:28,296 ಅರಸನೋ, ಬಡಗಿಯೋ, ಸೌತ್ ಲ್ಯಾಂಡಿನವನು ತೀರ್ಪನ್ನು ಎದುರಿಸಲೇಬೇಕು. 121 00:10:28,380 --> 00:10:29,838 ಈ ಸಭೆ ಮುಗಿಯಿತು. 122 00:10:44,463 --> 00:10:47,546 ಹಾಗಿದ್ದರೆ ಮತ್ತೊಂದನ್ನು ಕೇಳದೆ ನನ್ನಲ್ಲಿ ಬೇರೆ ಆಯ್ಕೆಯಿಲ್ಲ. 123 00:10:47,630 --> 00:10:50,046 ನ್ಯೂಮೆನೊರಿನ ನಿಜವಾದ ದೊರೆಯಲ್ಲಿ. 124 00:10:50,130 --> 00:10:51,963 ನಿಮ್ಮ ತಂದೆ, ಮಹಾರಾಜರು. 125 00:10:53,380 --> 00:10:56,046 ನಿನಗೆ ಅರ್ಥವಾಗದ ವಿಚಾರಗಳನ್ನು ಮಾತನಾಡಬಾರದು, 126 00:10:56,130 --> 00:10:57,838 ಫಿನಾರ್ಫಿನ್ನ ಮಗಳಾದ ಗಲಾಡ್ರಿಯಲ್. 127 00:10:57,921 --> 00:10:59,088 ನೀವು ಪಕ್ಕಕ್ಕೆ ಸರಿದರೆ 128 00:10:59,171 --> 00:11:02,130 ಇದನ್ನು ಉತ್ತರಿಸುವ ಅಧಿಕಾರ ಇರುವವರ ಬಳಿ ಇದನ್ನು ಪ್ರಸ್ತಾವಿಸಬಹುದು. 129 00:11:02,213 --> 00:11:03,588 ಗಲಾಡ್ರಿಯಲ್, ಸಾಕು... 130 00:11:03,671 --> 00:11:06,671 ನೀನ್ಯಾವ ಅಧಿಕಾರದಿಂದ ಮಾತನಾಡುತ್ತಿದ್ದೀಯ, ಎಲ್ಫ್? 131 00:11:06,755 --> 00:11:08,255 ನಿಮ್ಮ ಜನರದ್ದಾ? 132 00:11:08,796 --> 00:11:12,296 ಅಥವಾ ನೀನು ಬಿರುಗಾಳಿಯಲ್ಲಿ ಆಸರೆ ಪಡೆಯಲೆತ್ನಿಸುತ್ತಿರುವ ಬಹಿಷ್ಕೃತೆಯೋ? 133 00:11:12,380 --> 00:11:14,380 ಬಿರುಗಾಳಿ ನನ್ನೊಳಗೇ ಇದೆ. 134 00:11:15,255 --> 00:11:18,255 ಅದು ನನ್ನನ್ನು ಈ ದ್ವೀಪಕ್ಕೆ ತಂದು ಹಾಕೋಕೆ ಕಾರಣವಿದೆ. 135 00:11:18,338 --> 00:11:21,671 ಮತ್ತದು ನಿನ್ನಿಂದ ತಣಿಸಲ್ಪಡದು, ರೀಜೆಂಟ್. 136 00:11:29,463 --> 00:11:30,463 ಹೇಳ್ತೀನಿರು. 137 00:11:32,046 --> 00:11:33,296 ಸಾರಾಯಿದೊಡ್ಡಿಯ ಜಗಳ? 138 00:11:34,130 --> 00:11:35,296 ದೇಶದ್ರೋಹ. 139 00:11:44,838 --> 00:11:46,546 ಇನ್ನೇನು ತಲುಪುತ್ತೀರಿ! 140 00:11:47,255 --> 00:11:48,671 ಇನ್ನು ಕೆಲವೇ ದಿನಗಳಲ್ಲಿ, 141 00:11:48,755 --> 00:11:53,005 ನಿಮ್ಮೆಲ್ಲರನ್ನೂ ನನ್ನ ಹಡಗಿನ ಸಹವರ್ತಿಗಳು ಎಂದು ಕರೆಯಲು ಆನಂದವಾಗುತ್ತೆ. 142 00:11:53,088 --> 00:11:57,546 ಈಗ ಎಳೆಯಿರಿ, ಯೋಧರೇ! ಎಳೆಯಿರಿ! 143 00:12:02,838 --> 00:12:05,630 ಇಸಿಲ್ದೂರ್... 144 00:12:18,463 --> 00:12:20,963 ಈಗ ಎಳೆಯಿರಿ, ಯೋಧರೇ! 145 00:12:22,338 --> 00:12:23,171 ಎಳೆಯಿರಿ! 146 00:12:30,880 --> 00:12:31,713 ಹಗ್ಗ! 147 00:12:36,921 --> 00:12:38,171 ಏನಾಯ್ತು ಹೇಳು. 148 00:12:39,255 --> 00:12:40,880 ಸ್ವಾಮಿ, ಒಂದು ತಪ್ಪಾಗಿರಬೇಕು. 149 00:12:40,963 --> 00:12:42,838 ತಪ್ಪು ನನ್ನದೇ, ಸೀ-ಮಾಸ್ಟರ್. 150 00:12:43,671 --> 00:12:44,671 ನಾನೇ ಜಾರಿಸಿದೆ. 151 00:12:45,880 --> 00:12:48,921 ನೀನು ಆ ಹಗ್ಗವನ್ನ ಸರಿಯಾಗಿ ಬಿಡೋದನ್ನ ನಾನೇ ನೂರು ಸಲ ನೋಡಿದ್ದೀನಿ. 152 00:12:49,880 --> 00:12:51,296 ಇದು ಬೇಕಂತ ಮಾಡಿದ್ದು. 153 00:12:53,213 --> 00:12:54,796 ಸೀ ಗಾರ್ಡಿನಿಂದ ಹೊರಗೋಗಿ! 154 00:12:55,838 --> 00:12:57,005 ನೀವು ಮೂವರೂ! 155 00:13:00,671 --> 00:13:04,213 "ಪಶ್ಚಿಮ"? "ನಿಜವಾದ ನ್ಯೂಮೆನೊರಾ"? 156 00:13:04,630 --> 00:13:07,255 ನಿಮ್ಮಣ್ಣ ಹೇಳ್ತಾ ಇದ್ದಂಥ ಆ ಹಳಸು ವಿಷಯವೇ, ಮತ್ತೆ! 157 00:13:09,005 --> 00:13:11,505 ನನ್ನನ್ನು ಮಾತ್ರ ವಜಾಗೊಳಿಸುತ್ತಾರೆ ಅಂದ್ಕೊಂಡೆ. 158 00:13:13,255 --> 00:13:14,421 ನನ್ನನ್ನು ಕ್ಷಮಿಸು. 159 00:13:14,921 --> 00:13:16,255 ನಿನ್ನನ್ನ ಕ್ಷಮಿಸೋದಾ? 160 00:13:16,838 --> 00:13:20,088 ನಿನ್ನನ್ನ ಕ್ಷಮಿಸೋದಾ? ನಮ್ಮ ಜೀವನಗಳಿಗೆ ಬೆಂಕಿ ಇಟ್ಟುಬಿಟ್ಟೆಯಲ್ಲೋ! 161 00:13:20,963 --> 00:13:23,588 ಆ ಶೌಚದ ಮಡಕೆ ಎಲ್ಲಿ? ನನ್ನ ಆರೋಗ್ಯ ಕೆಡಲಿದೆ. 162 00:13:23,671 --> 00:13:24,921 ನನ್ನ ತಂದೆ ಜೊತೆ ಮಾತಾಡುವೆ. 163 00:13:25,005 --> 00:13:26,671 -ನಿಮ್ಮಿಬ್ಬರನ್ನೂ ಸೇರಿಸೋಕೆ. -ಇಲ್ಲ. 164 00:13:26,755 --> 00:13:29,088 ಗಳಿಸದೇ ಇರೋದ್ರಿಂದ 165 00:13:29,171 --> 00:13:30,963 ಹೊರಬೀಳೋಕೆ ನಿನ್ನನ್ನೇ ಬಿಡ್ತೀನಿ. 166 00:13:31,046 --> 00:13:32,380 -ವಲಂಡೀಲ್... -ಇಲ್ಲ. 167 00:13:33,671 --> 00:13:37,130 ಹುಟ್ಟುಗೋಲನ್ನು ಹಿಡಿಯುವ ವಯಸ್ಸಿನಿಂದ ಆ ದೋಣಿಯ ಮೇಲೆ ಹೋಗುವ ಆಸೆ ನನಗೆ. 168 00:13:38,338 --> 00:13:41,880 ಅದನ್ನು ಗಳಿಸೋಕೆ ಮಾಡಬೇಕಾದದ್ದನ್ನೆಲ್ಲಾ ಮಾಡಿದೆ. ಮತ್ತು ನೀನೇನು ಮಾಡಿದೆ? 169 00:13:43,046 --> 00:13:46,546 ನಿನ್ನ ಸತ್ತ ತಾಯಿಯ ಬಗ್ಗೆ ಕೊರಗಿ ಬಡಬಡಾಯಿಸುವುದರ ಬದಲು ಬೇರೇನು ಮಾಡಿದ್ದೀಯ? 170 00:13:46,630 --> 00:13:49,046 ನಿಲ್ಸೋ! ಸಾಕು! 171 00:13:51,880 --> 00:13:53,880 ಹಾಂ, ಯಾವಾಗಲೂ ನಡುವೆ ಹೊರಡೋ ಇಸಿಲ್. 172 00:13:53,963 --> 00:13:56,171 ಇಸಿಲ್! ಎಲ್ಲೋ ಹೋಗ್ತಿದ್ದೀಯ? 173 00:13:56,255 --> 00:13:58,171 ಹೋಗ್ತಾನೋ, ಇರ್ತಾನೋ, ಯಾರಿಗೆ ಬೇಕು? 174 00:13:59,005 --> 00:14:02,838 ಅವನೇ ನಿಜವಾದ ಸಮಸ್ಯೆ. ಅದೆಲ್ಲೂ ಹೋಗಲ್ಲ ಬಿಡು. 175 00:14:23,671 --> 00:14:25,046 ಮ್ಯಾಗ್ರೋಟ್! 176 00:14:27,546 --> 00:14:28,796 ಅಡಾರ್... 177 00:15:20,463 --> 00:15:22,296 ಅಡಾರ್... 178 00:16:15,505 --> 00:16:17,880 ವೀರನಾಗಿ ಮರಣಿಸು. 179 00:16:27,713 --> 00:16:30,671 ವೀರನಾಗಿ ಮರಣಿಸು. 180 00:16:42,588 --> 00:16:45,671 ನೀನೆಲ್ಲಿ ಜನಿಸಿದೆ... 181 00:16:48,130 --> 00:16:49,380 ಸೈನಿಕನೇ? 182 00:16:52,838 --> 00:16:54,255 ಬೇಲೇರಿಯಾಂಡ್. 183 00:16:56,213 --> 00:16:58,046 ನದೀಮುಖದ ಬಳಿ? 184 00:17:01,463 --> 00:17:02,838 ಯಾರು ನೀನು? 185 00:17:08,005 --> 00:17:10,046 ನಾನು ಆ ನದಿಯ ಬಳಿ ಸಾಗಿದ್ದೆ... 186 00:17:12,255 --> 00:17:13,755 ಚಿಕ್ಕವನಿದ್ದಾಗ. 187 00:17:17,921 --> 00:17:19,338 ನನಗೆ ನೆನಪಿದೆ... 188 00:17:21,463 --> 00:17:23,963 ದಡದ ಮೇಲೆಲ್ಲಾ ಕಚೋರದ ಹೂಗಳೇ ತುಂಬಿದ್ದವು. 189 00:17:28,005 --> 00:17:29,463 ಮೈಲಿಗಟ್ಟಲೆ. 190 00:17:32,130 --> 00:17:34,338 ಓರ್ಕ್ಸ್ ನಿಮ್ಮನ್ನು ಏಕೆ ತಂದೆ ಅಂತಾರೆ? 191 00:17:51,171 --> 00:17:53,921 ನಿಮಗೆ ತುಂಬಾ ಸುಳ್ಳು ಹೇಳಿದ್ದಾರೆ. 192 00:17:56,005 --> 00:17:57,921 ಕೆಲವಂತೂ ಎಷ್ಟು ಆಳವಾಗಿವೆ ಅಂದರೆ, 193 00:17:59,088 --> 00:18:03,671 ಕಲ್ಲುಗಳು ಮತ್ತು ಬೇರುಗಳೂ ಅವುಗಳನ್ನೀಗ ನಂಬುತ್ತಿವೆ. 194 00:18:04,380 --> 00:18:06,213 ಅವನ್ನೆಲ್ಲಾ ಬಿಡಿಸಬೇಕೆಂದರೆ... 195 00:18:08,546 --> 00:18:11,796 ಒಂದು ಹೊಸ ಪ್ರಪಂಚವನ್ನೇ ಸೃಷ್ಟಿಸಬೇಕಾದೀತು. 196 00:18:14,880 --> 00:18:17,588 ಆದರೆ ಅದನ್ನು ದೇವತೆಗಳು ಮಾತ್ರ ಮಾಡಲು ಸಾಧ್ಯ. 197 00:18:17,671 --> 00:18:21,505 ನಾನೇನೂ ದೇವರಲ್ಲ. ಕನಿಷ್ಠ ಪಕ್ಷ... 198 00:18:26,255 --> 00:18:27,130 ಸದ್ಯಕ್ಕಂತೂ ಅಲ್ಲ. 199 00:18:31,213 --> 00:18:32,838 ನೀನೇನು? 200 00:18:36,338 --> 00:18:39,880 ಕಾವಲು ಸ್ತಂಭದಲ್ಲಿ ಆಶ್ರಯ ಪಡೆದಿರುವ ಮನುಷ್ಯರ ಬಳಿ ಹೋಗು. 201 00:18:42,546 --> 00:18:44,088 ಅವರಿಗೊಂದು ಸಂದೇಶವನ್ನು ಕೊಡು. 202 00:18:50,671 --> 00:18:51,755 ಯಾವ ಸಂದೇಶ? 203 00:19:14,755 --> 00:19:18,588 ಸೇನಾಪಾಳ್ಯಗಳು ತುಂಬಿವೆ. ನಿಮಗೆಲ್ಲಿ ಸಾಧ್ಯವೋ ಅಲ್ಲಿ ಬಿಡಾರ ಹೂಡಿ. 204 00:19:20,088 --> 00:19:22,463 -ಈ ಜನ ಎಲ್ಲಿಯವರು? -ಇಯೋರ್ಬಾಡ್. 205 00:19:23,213 --> 00:19:25,963 ಅಂದ್ರೆ ಇಲ್ಲಿಂದ ಓರೋಡ್ರಿಯನ್ವರೆಗೆ ಎಲ್ಲಾ ಹಳ್ಳಿಗಳೂ ಇವೆ. 206 00:19:33,796 --> 00:19:34,880 ಮಿಕ್ಕಿದ್ದೆಲ್ಲಿ? 207 00:19:35,880 --> 00:19:37,380 ಇದೇ ಮಿಕ್ಕಿರೋದು. 208 00:19:37,880 --> 00:19:39,505 ನಾವು ಮತ್ತೆ ಪಡಿತರ ಕಡಿತ ಮಾಡಬೇಕು. 209 00:19:39,588 --> 00:19:41,130 ಪಡಿತರವನ್ನ ಕಡಿತ ಮಾಡಬೇಕಿಲ್ಲ. 210 00:19:41,213 --> 00:19:43,296 ನಿರ್ಧರಿಸುವ ಹಕ್ಕು ನಿನಗ್ಯಾರು ಕೊಟ್ಟರು? 211 00:19:43,380 --> 00:19:46,755 ಈ ಸ್ತಂಭಕ್ಕೆ ಬರಲು ನಿರ್ಧರಿಸಿದ ಎಲ್ಲರೂ, ವಾಲ್ಡ್ರೆಗ್. ನಿನ್ನ ಸಹಿತ. 212 00:19:46,838 --> 00:19:47,755 ನಾವೇನು ತಿನ್ನೋಣ? 213 00:19:48,546 --> 00:19:50,088 -ದಾರಿ ಹುಡುಕೋಣ. -ಹೇಗೆ? 214 00:19:50,171 --> 00:19:52,796 -ಗೊತ್ತಿಲ್ಲ. -ಅದು ನೋಡಿದ್ರೆ ಗೊತ್ತಾಗುತ್ತೆ. 215 00:19:54,213 --> 00:19:55,921 ವಾಲ್ಡ್ರೆಗ್ನ ಮೂಲ ನೆಲಮಾಳಿಗೆ? 216 00:19:56,755 --> 00:19:58,713 ಒಂದು ಸಣ್ಣ ಗುಂಪನ್ನ ಊರಿನೊಳಗೆ ಕಳಿಸೋಣ. 217 00:19:58,796 --> 00:20:02,921 ಹಗಲಲ್ಲಿ ಓರ್ಕ್ಸ್ ಕಡಿಮೆ ಇರುವಾಗ, ಸದ್ದಿಲ್ಲದೇ ಬೇಗ ಸಿಕ್ಕಿದ್ದನ್ನ ಎತ್ತಿಕೊಳ್ಳೋಣ. 218 00:20:03,005 --> 00:20:05,088 ನಾವು ಹೋಗಿದ್ದೂ ಗೊತ್ತಾಗಲ್ಲ. 219 00:20:05,171 --> 00:20:07,130 ಅದಕ್ಕೆ ಯಾವ ಬಡಪಾಯಿಗಳನ್ನ ಕರೆದುಕೊಳ್ತೀಯ? 220 00:20:07,921 --> 00:20:10,213 ನಾನೇ ಮಾಡ್ತೀನಿ, ಯಾರೂ ಬರಲಿಲ್ಲವೆಂದರೆ. 221 00:20:10,296 --> 00:20:11,963 ನೀನಲ್ಲಿಗೆ ಹೋಗಬೇಡ. 222 00:20:12,755 --> 00:20:16,171 ಮೊದಲಿಗೆ ಬೆಟ್ಟಗಳಲ್ಲಿ ಮತ್ತೆ ಹುಡುಕೋಣ. ಬೇಟೆಗಾರರನ್ನು ಸೇರಿಸಿ. 223 00:20:16,963 --> 00:20:19,380 ಅವರೇನು ಬೇಟೆಯಾಡುತ್ತಾರೆ? ಮೊಲಗಳನ್ನಾ? 224 00:20:19,463 --> 00:20:20,630 ಒಂದು ದಿನಕ್ಕೆ ಸಾಕು. 225 00:20:20,713 --> 00:20:23,463 ಇನ್ನೊಂದು ದಿನ ಸಿಕ್ಕಿದ ಹಾಗೆ. ಅದಕ್ಕಾಗಿ ಧನ್ಯರಾಗಿರೋಣ. 226 00:20:23,546 --> 00:20:24,630 ಎಲ್ಲರೂ ಸೋತು ಸುಣ್ಣವಾಗಿ 227 00:20:24,713 --> 00:20:27,838 ಏನನ್ನೂ ಮಾಡಲಾಗದೆ ಇರೋದನ್ನ ನೋಡ್ತಾ ನನಗೆ ಸಾಕಾಗಿ ಹೋಗಿದೆ... 228 00:20:27,921 --> 00:20:30,255 -ಆಗೋದನ್ನ ಮಾಡ್ತಾನೇ ಇದ್ದೀವಿ. -ನಾನಲ್ವಲ್ಲ. 229 00:20:30,338 --> 00:20:31,713 ಥಿಯೋ. ಥಿಯೋ! 230 00:20:32,255 --> 00:20:34,880 ನೀ ನಂಗೆ ಸಹಾಯವಾಗಬಹುದು ಅಥವಾ ಇನ್ನೂ ಕಷ್ಟ ಆಗಬಹುದು. 231 00:20:55,421 --> 00:20:57,796 ನಿನ್ನ ಮಾತು ಕೇಳಿ ಒಪ್ಪಿಕೊಳ್ಳಲೇಬಾರದಿತ್ತು. 232 00:21:00,380 --> 00:21:01,630 ನಾನು ವಾಪಸ್ ಹೋಗ್ತೀನಿ. 233 00:21:03,380 --> 00:21:05,338 ಪುಕ್ಕಲನ ತರ ಆಡಬೇಡ. 234 00:21:06,338 --> 00:21:07,421 ಬಾ. 235 00:21:29,505 --> 00:21:31,421 ರೋವನ್, ಸಾರಾಯಿಮನೆ. 236 00:21:31,505 --> 00:21:32,963 ನಾನಲ್ಲಿಗೆ ಹೋಗಲ್ಲ. 237 00:21:33,338 --> 00:21:34,838 ಅಲ್ಲಿ ಹೆಚ್ಚಿನ ಆಹಾರ ಇರಬಹುದು. 238 00:21:34,921 --> 00:21:36,880 ನೋಡು, ಈ ಜಾಗ ನಿರ್ಜನವಾಗಿದೆ. 239 00:21:40,213 --> 00:21:41,630 ಸರಿ. ನಾನೇ ಹೋಗ್ತೀನಿ. 240 00:22:37,671 --> 00:22:38,755 ರೋವನ್? 241 00:23:15,588 --> 00:23:16,713 ಎಳೆಯ ರಕ್ತ. 242 00:23:22,505 --> 00:23:23,588 ಅದೆಲ್ಲಿ ಸಿಕ್ಕಿತು? 243 00:23:34,088 --> 00:23:35,255 ಕೊಡೋ ಇಲ್ಲಿ. 244 00:23:46,213 --> 00:23:48,005 ಓಯ್! ಸಿಕ್ಕಿತು! 245 00:23:48,088 --> 00:23:51,963 ಸಿಕ್ಕಿತು! ಒಬ್ಬ ಹುಡುಗ! ಅವನ ಬಳಿ ಹಿಡಿಕೆ ಇದೆ! 246 00:23:52,046 --> 00:23:53,713 ಹುಡುಗನಾ? ಎಲ್ಲಿದ್ದಾನೆ? 247 00:23:53,796 --> 00:23:55,505 ಇಲ್ಲೆಲ್ಲೋ ಅವಿತುಕೊಂಡಿದ್ದಾನೆ. 248 00:23:56,338 --> 00:23:58,671 ನೀನು! ಲಾರ್ಡ್ ಫಾದರ್ಗೆ ಸುದ್ದಿ ಮುಟ್ಟಿಸು. 249 00:24:00,046 --> 00:24:01,921 ಮಿಕ್ಕ ಎಲ್ಲರೂ ಹರಡಿಕೊಳ್ಳಿ. 250 00:24:03,130 --> 00:24:05,588 ಅವನು ಸಿಗೋವರೆಗೂ ಯಾರೂ ಮಲಗಬಾರದು. 251 00:24:29,505 --> 00:24:30,588 ಸಿಕ್ಕಿದೆ! 252 00:24:51,213 --> 00:24:54,505 ಎಲ್ವ್ಸ್ ಮತ್ತು ಕುಬ್ಜರು ಒಟ್ಟಿಗೇ ಕಾರ್ಯನಿರ್ವಹಿಸುವುದು. ಅದ್ಭುತ. 253 00:24:56,046 --> 00:24:58,296 ಎಲ್ಲವೂ ನೀವು ಹೇಳಿದ ಹಾಗೆಯೇ ಇದೆ. 254 00:25:03,713 --> 00:25:04,546 ಏನು? 255 00:25:05,005 --> 00:25:06,255 ಏನಿಲ್ಲ. ಅದು... 256 00:25:06,338 --> 00:25:10,338 ಒಂದು ಕ್ಷಣ ಅಲ್ಲಿ ನಿಂತುಕೊಂಡಿದ್ದು, ನೀನು ನಿನ್ನ ತಂದೆಯ ಹಾಗೆಯೇ ಕಂಡೆ. 257 00:25:12,088 --> 00:25:15,671 -ನೀವು ಅವರನ್ನು ಭೇಟಿಯಾಗಿರೋದು ಗೊತ್ತಿರಲಿಲ್ಲ. -ಖಂಡಿತ, ಬಹಳ ಸಲ. 258 00:25:15,755 --> 00:25:19,005 ಅವರಿಗೆ ಆ ದೂರದೃಷ್ಟಿ ಇತ್ತು. 259 00:25:20,171 --> 00:25:22,338 ಗೊತ್ತಾ, ನನಗೆ ಅವರು ಹೇಳಿದ್ದು ನೆನಪಿದೆ, 260 00:25:24,546 --> 00:25:29,755 ಒಂದು ದಿನ ನನ್ನ ಭವಿಷ್ಯ ಅವರ ಮಗನ ಕೈಯಲ್ಲಿರುತ್ತೆ ಅಂತ. 261 00:25:32,421 --> 00:25:36,421 ಸುಮ್ಮನೆ ನಾಳೆ ಮಳೆಯಾಗಬಹುದು ಅನ್ನುವ ಧಾಟಿಯಲ್ಲೇ ಅವರು ಅದನ್ನು ಸಲೀಸಾಗಿ ಹೇಳಿದರು. 262 00:25:36,796 --> 00:25:38,338 ಮತ್ತು ನಾನು... 263 00:25:38,421 --> 00:25:42,255 ಅದನ್ನ ಇಲ್ಲಿವರೆಗೂ… ಈ ಕ್ಷಣದವರೆಗೂ ಮರೆತಿದ್ದೆ. 264 00:25:44,421 --> 00:25:45,671 ವಿಚಿತ್ರ ಅನ್ಸಲ್ವಾ? 265 00:25:48,380 --> 00:25:50,963 ಇವತ್ತು ಯಾವುದೋ ತಳಮಳದಲ್ಲಿ ಇದ್ದಂತಿದ್ದೀರಾ, ಒಡೆಯ. 266 00:25:51,880 --> 00:25:53,088 ಏನು ನಿಮ್ಮ ಚಿಂತೆ? 267 00:25:54,255 --> 00:25:57,880 ಇಲ್ಲ, ನಾನೇ ಹೇಳೋದು ಬೇಡ ಅಂತ ಅಂದುಕೊಂಡಿದ್ದೇನೆ. ಆತ ನಿನ್ನ ಸ್ನೇಹಿತ. 268 00:25:57,963 --> 00:25:59,088 ಡ್ಯುರಿನ್. 269 00:26:00,505 --> 00:26:05,005 ಒಂದೋ ನನ್ನಿಂದ ದೂರವಿರಲು ಯತ್ನಿಸುತ್ತಿದ್ದಾನೆ ಅಥವಾ ಏನನ್ನೋ ಮುಚ್ಚಿಡುತ್ತಿದ್ದಾನೆ. 270 00:26:16,380 --> 00:26:18,421 ಅವರ ಕಾರ್ಯಪಡೆಗಳನ್ನು ಕೇಳಿ ನೋಡಿದ್ರಾ? 271 00:26:18,505 --> 00:26:22,380 ಎಲ್ಲಾ 19 ಜನ. ಏನೋ ಒಂದು ಸಬೂಬು ಹೇಳ್ತಾ ಇರ್ತಾರೆ. 272 00:26:22,463 --> 00:26:24,671 ಯಾರಿಗೇ ಆದರೂ ಇದು ಅನುಮಾನಾಸ್ಪದವಾಗಿ ಕಾಣುತ್ತೆ. 273 00:26:25,546 --> 00:26:28,796 ಡ್ಯುರಿನ್ಗೆ ಯಾರಾದ್ರೂ ಪ್ರಿಯತಮೆ ಸಿಕ್ಕಿದ್ದಾಳೆ ಅಂತಿದ್ದೀಯಾ? 274 00:26:28,880 --> 00:26:31,921 -ನೀವಲ್ಲದೇ ಬೇರೆ ಯಾರೂ ಇಲ್ಲ, ತಾಯಿ. -ಗೊತ್ತು. 275 00:26:32,005 --> 00:26:33,255 ಅವನನ್ಯಾರು ಪ್ರೀತಿಸ್ತಾರೆ? 276 00:26:35,380 --> 00:26:38,671 ಕುರೂಪಿ ಮುದುಕಿ, ಕಲ್ಲಿಗೆ ಮುತ್ತಿಡು ವಜ್ರ ವೈಡೂರ್ಯಗಳ ಒರೆಸಿಡು 277 00:26:39,088 --> 00:26:39,921 ಅಬ್ಬಾ! ನಿಲ್ಸು! 278 00:26:40,046 --> 00:26:41,755 ಗೆರಡಾ, ನಿನ್ನ ತಮ್ಮನಿಗೆ ಹೊಡೆಯಬೇಡ. 279 00:26:41,838 --> 00:26:45,213 -ಹೊಡೆಯೋ ಆಟ ಆಡ್ತಿದ್ದೀವಿ. -ಸಾಕು ಮಾಡಿ ಅದನ್ನ. 280 00:26:46,588 --> 00:26:49,255 ಗೋಲ್ಡನ್ ಸ್ಟೇರ್ಸ್ ಪ್ರಯತ್ನಿಸಿದ್ದೀಯಾ? 281 00:26:49,338 --> 00:26:51,088 ಇಲ್ಲಾ ಥ್ರೀ ಡೋರ್ ಗಾರ್ಡ್? 282 00:26:55,296 --> 00:26:56,588 ಮರೆತಿದ್ದೆ. 283 00:26:56,671 --> 00:26:59,921 ಈ ಚಿಣ್ಣರು ನನ್ನ ಮರೆವನ್ನು ಜಾಸ್ತಿ ಮಾಡುತ್ತಿದ್ದಾರೆ. 284 00:27:00,005 --> 00:27:02,880 ಕ್ವಾರ್ಟ್ಜ್ ಚಾಸ್ಮ್ ಗಣಿಗಾರಿಕೆ ಮಾಡಲು ಹೊರಟಿದ್ದರು. 285 00:27:04,921 --> 00:27:08,838 ನಿಮಗ್ಗೊತ್ತಾ, ಡಿಸಾ, ಯಾವ ರಹಸ್ಯಕ್ಕೂ ಮೋಸದಿಂದ ಮುಚ್ಚಿಡುವಷ್ಟು ಬೆಲೆಯಿಲ್ಲ. 286 00:27:10,380 --> 00:27:13,338 ತನ್ನ ಮನೆಯಲ್ಲೇ ಒಬ್ಬ ಕುಬ್ಜಳನ್ನ ಮೋಸ ಅಂತೀಯಾ? 287 00:27:14,088 --> 00:27:16,088 ದೊಡ್ಡ ಯುದ್ಧಕ್ಕೆ ನಾಂದಿ ಹಾಡುವ ಹಾಗಿದೆ. 288 00:27:18,505 --> 00:27:20,088 ಡ್ಯುರಿನ್ ಗಣಿಗಾರಿಕೆ ಮಾಡ್ತಿದ್ರೆ 289 00:27:20,171 --> 00:27:22,921 ತನ್ನ ಕೆತ್ತುವ ಕೊಡಲಿಯನ್ನ ಯಾಕೆ ಬಿಟ್ಟು ಹೋಗ್ತಿದ್ದ? 290 00:27:23,005 --> 00:27:25,338 ಇಳಿಯೋಕೆ ಎರಡು ದಿನಗಳು ಹಿಡಿಯುವ ಬಿರುಕಿನೊಳಗೆ 291 00:27:25,421 --> 00:27:28,838 ಹೋಗಿದ್ದಾರಂದ್ರೆ ಅವರ ಪ್ರಿಯವಾದ ಅಡಿಗೆ ಯಾಕೆ ಮಾಡ್ತಿದ್ದೀರಿ? 292 00:27:28,921 --> 00:27:31,463 ಕುರೂಪಿ ಮುದುಕಿ, ಕಲ್ಲಿಗೆ ಮುತ್ತಿಡು ವಜ್ರ ವೈಡೂರ್ಯ... 293 00:27:31,546 --> 00:27:33,296 ಗೆರಡಾ, ಮತ್ತೆ ಹೇಳ್ತಿದ್ದೀನಿ ನೋಡು! 294 00:27:39,130 --> 00:27:40,921 ಡ್ಯುರಿನ್ ಕೊಡಲಿ ಯಾಕೆ ತಗೊಂಡು ಹೋಗಲಿಲ್ಲ 295 00:27:41,671 --> 00:27:45,338 ಅಂದ್ರೆ ಅವರು ಹುಡುಕುತ್ತಿರುವ ಕ್ವಾರ್ಟ್ಜ್ನ ಕೆತ್ತೋದಲ್ಲ, ಕೀಳಬೇಕು. 296 00:27:46,171 --> 00:27:47,713 ಅವರು ಮನೆಗೆ ಬರೋಕೆ ಒಂದಷ್ಟು 297 00:27:47,796 --> 00:27:50,880 ಹೊತ್ತಾಗುತ್ತೆ ಅಂತ ಮೂಗಿಲಿಯ ಬಾಲದ ಸಾರು ಮಾಡ್ತಾ ಇದ್ದೀನಿ. 298 00:27:51,630 --> 00:27:55,630 ನಿಮ್ಮಂಥ ಹೊರಗಿನವರಿಗೆ ಅದು ಎಷ್ಟೋ ದಿನಗಳು ಹಿಡಿದರೆ, 299 00:27:55,713 --> 00:27:57,671 ನನ್ನ ಗಂಡನಂಥ ಕುಬ್ಜರು ಕ್ವಾರ್ಟ್ಜ್ 300 00:27:57,755 --> 00:28:01,088 ಬಿರುಕಿನೊಳಗೆ ಕೆಲವೇ ಗಂಟೆಗಳಲ್ಲಿ ಇಳಿಯಬಲ್ಲರು. 301 00:28:02,463 --> 00:28:05,296 ಕೇಳುವುದಕ್ಕೆ ಇನ್ನೇನಾದರೂ ಇದೆಯಾ, ಪುಟ್ಟ? 302 00:28:07,380 --> 00:28:08,546 ಇಲ್ಲ. 303 00:28:09,713 --> 00:28:10,880 ಧನ್ಯವಾದ. 304 00:28:20,046 --> 00:28:23,671 ಕ್ವಾರ್ಟ್ಜ್ ಚಾಸ್ಮ್. ಪರವಾಗಿಲ್ಲ. ಪರವಾಗಿಲ್ಲ. 305 00:28:23,755 --> 00:28:27,255 ನನ್ನನ್ನ ನಂಬಿದ್ದಾನೆ ಅಂದ್ಕೋತೀನಿ. ಆ ಎಲ್ಫ್ ಅಷ್ಟು ಸುಲಭವಾಗಿ ನಂಬಲ್ಲ. 306 00:28:27,338 --> 00:28:28,755 ಖಂಡಿತ ಇಲ್ಲ. 307 00:28:29,796 --> 00:28:34,046 ನನ್ನ ಭವಿಷ್ಯದ ರಾಣಿ ಬೇಕಿದ್ರೆ ನೀರಿಲಿಗೂ ಉಣ್ಣೆಯ ಕವಚ ಹಾಕಿಸಿಬಿಡ್ತಾಳೆ. 308 00:28:34,130 --> 00:28:39,505 ಮಾರ್ಗಿಡ್ ರಸ್ಟ್ಬೋರಿನ್ ಅಲ್ಲದೆ ನಿನ್ನನ್ನ ಮದುವೆಯಾಗಿದ್ದಕ್ಕೆ ಇನ್ನೊಂದೊಳ್ಳೆ ಕಾರಣ ಇದು. 309 00:28:39,588 --> 00:28:41,421 ಬೇರೆ ಕಾರಣಗಳು ಯಾವುವು? 310 00:28:42,005 --> 00:28:43,546 ಆಮೇಲೆ ಹೇಳ್ತೀನಿ. 311 00:28:43,630 --> 00:28:46,546 ಈಗ ಸುಮ್ನಿರು. ನಮ್ಮ ಧ್ವನಿಗಳನ್ನ ಕಡಿಮೆ ಇರಿಸೋಣ. 312 00:28:49,088 --> 00:28:51,588 ಹಳೆಯ ಗಣಿಯಲ್ಲಿ ಒಳ್ಳೆಯ ಪ್ರಗತಿಯಾಗುತ್ತಿದೆ. 313 00:28:52,255 --> 00:28:54,880 ಅವನನ್ನು ಕರೆದೊಯ್ದಿದ್ದು ಖಚಿತಪಡಿಸಿದೆ… 314 00:29:04,671 --> 00:29:08,088 ಮಿರರ್ ಮೇಯ್ರ್ ಕೆಳಗಿನ ಹಳೆಯ ಗಣಿ. 315 00:29:10,005 --> 00:29:11,421 ಕಳೆದುಹೋದೆಯಾ, ಎಲ್ಫ್? 316 00:29:14,088 --> 00:29:16,755 ಇಲ್ಲ. ಎಲ್ಲಿ ಹೋಗ್ಬೇಕು ಅಂತ ನನಗೆ ಚೆನ್ನಾಗಿ ಗೊತ್ತಿದೆ. 317 00:29:19,088 --> 00:29:20,255 ಶುಭದಿನ. 318 00:30:15,963 --> 00:30:19,296 ಕುರೂಪಿ ಮುದುಕಿ, ಕಲ್ಲಿಗೆ ಮುತ್ತಿಡು. ವಜ್ರ ವೈಡೂರ್ಯಗಳ ಒರೆಸಿಡು. 319 00:31:02,088 --> 00:31:03,088 ನನಗೆ ಗೊತ್ತಿತ್ತು! 320 00:31:04,130 --> 00:31:05,171 ಡ್ಯುರಿನ್? 321 00:31:05,255 --> 00:31:07,046 ನನ್ನ ಗಮನಿಸೋಕೆ ಬಂದ್ಯಾ, ಎಲ್ಫ್? 322 00:31:07,130 --> 00:31:09,130 ಸ್ವಲ್ಪವೂ ಇಲ್ಲ. ಇದ್ಯಾವ ಸ್ಥಳ? 323 00:31:09,213 --> 00:31:12,130 ನಿನಗೆ ಗೊತ್ತಿಲ್ಲ ಅಂತ ನಾನು ನಂಬುತ್ತೇನೆ ಅಂದುಕೊಂಡೆಯಾ? 324 00:31:12,213 --> 00:31:16,046 ಅವನು ನಿನ್ನನ್ನು ಇಲ್ಲಿಗೆ ಕಳಿಸಿದ ಮೂಲ ಕಾರಣ ಇದಲ್ಲ ಅಂತಾನಾ? 325 00:31:17,213 --> 00:31:19,088 ನೀನೇ ಇದು ಬೇಕು ಅಂತಿದ್ದೀಯ. 326 00:31:19,171 --> 00:31:20,755 ಡ್ಯುರಿನ್, ಏನು ಬೇಕು ಅಂತ? 327 00:31:22,421 --> 00:31:25,671 ಆ ಕೋಣೆಯಲ್ಲಿ ಏನಿದೆಯೋ ನನಗೆ ಬೇಕಿಲ್ಲ. 328 00:31:25,755 --> 00:31:29,213 ನನಗೆ ಬೇಕಿರುವುದು ನೀನು, ಮತ್ತು ನಿನ್ನ ಸ್ನೇಹ. 329 00:31:30,421 --> 00:31:32,130 ರಹಸ್ಯಗಳಿದ್ದರೆ ಅದು ಆಗಲ್ಲ. 330 00:31:35,130 --> 00:31:37,130 ಇದೆಲ್ಲದರ ಅರ್ಥ ಏನು? 331 00:31:41,338 --> 00:31:43,005 ನನಗೆ ನಿನ್ನ ಮಾತು ಬೇಕು. 332 00:31:50,505 --> 00:31:52,088 ಬೆಟ್ಟದ ಮೇಲಾಣೆ, 333 00:31:52,171 --> 00:31:55,005 ನಾನು ಹೇಳಲಿರುವ ವಿಷಯವನ್ನು ಇನ್ನೊಬ್ಬ ವ್ಯಕ್ತಿಯ ಹತ್ತಿರ 334 00:31:55,088 --> 00:31:58,296 ಪಿಸುಮಾತಿನಲ್ಲಿ ಕೂಡ ನೀನು ಹೇಳಕೂಡದು. 335 00:31:59,546 --> 00:32:02,130 ಕುಬ್ಜರ ಕೋಪ ಎಲ್ಫ್ಗಳ ನೆನಪಿಗಿಂತ ದೀರ್ಘವಾದದ್ದು. 336 00:32:02,213 --> 00:32:03,796 ನೀನು ಮಾತು ಮುರಿದರೆ, 337 00:32:04,713 --> 00:32:08,463 ಮಿಡ್ಲ್ ಅರ್ಥಿನ ಕೊನೆಯ ದಿನದವರೆಗೂ ಈ ಕಲ್ಲಿನ ಶಕ್ತಿ ನಿನ್ನನ್ನು ಮತ್ತು 338 00:32:08,546 --> 00:32:11,338 ನಿನ್ನ ಕಡೆಯವರನ್ನು ದುಃಖದಲ್ಲಿ ಮುಳುಗಿಸಿಬಿಡುತ್ತೆ. 339 00:32:13,046 --> 00:32:14,838 ಆಣೆ ಮಾಡ್ತೀಯಾ, ಎಲ್ರೊಂಡ್? 340 00:32:27,588 --> 00:32:31,338 ಈರೇಂಡೀಲ್ ದಿ ಮ್ಯಾರಿನರ್ ಆದಂಥ ನನ್ನ ತಂದೆಯ ನೆನಪಿನ ಮೇಲೆ ಆಣೆ ಮಾಡುತ್ತೇನೆ. 341 00:32:36,171 --> 00:32:39,630 ನೀನಿಲ್ಲಿ ಹೇಳುವ ಯಾವುದೇ ವಿಚಾರ ನನ್ನ ಕಿವಿಯಲ್ಲಷ್ಟೇ ಉಳಿಯುತ್ತದೆ. 342 00:32:45,630 --> 00:32:49,421 ಚಿನ್ನದ ಅನ್ವೇಷಣೆಯಲ್ಲಿ ತೊಡಗಿದ್ದಾಗ ಡಿಸಾ ಇದನ್ನು ಕಂಡುಹಿಡಿದಳು. 343 00:32:52,755 --> 00:32:54,505 ಒಂದು ಹೊಸ ಅದಿರು. 344 00:32:57,296 --> 00:33:00,505 ರೇಷ್ಮೆಗಿಂತಲೂ ಹಗುರ, ಕಬ್ಬಿಣಕ್ಕಿಂತಲೂ ಗಟ್ಟಿ, 345 00:33:00,588 --> 00:33:03,755 ಆಯುಧಗಳಾಗಿ ಇವು ನಮ್ಮ ಹೆಮ್ಮೆಯ ಖಡ್ಗಗಳಾಗುತ್ತವೆ. 346 00:33:04,671 --> 00:33:09,671 ನಗದಾಗಿ ಇದು ಚಿನ್ನಕ್ಕಿಂತಲೂ ಮೌಲ್ಯವಾದದ್ದಿರಬಹುದು. 347 00:33:10,713 --> 00:33:13,130 ಇದು ಬೆಳಕನ್ನು ಹಿಡಿಯುವುದೇ ವಿಸ್ಮಯಕಾರಿ. 348 00:33:13,963 --> 00:33:15,713 ಒಳಗಿಂದಲೇ ಹೊರಸೂಸುವ ಹಾಗನಿಸುತ್ತೆ. 349 00:33:15,796 --> 00:33:20,213 ಹೇಳ್ತೀನಿ ನೋಡು, ನಮ್ಮ ಜನರಿಗೆ ಇದೊಂದು ಹೊಸ ಯುಗದ ಆರಂಭವಿರಬಹುದು. 350 00:33:21,005 --> 00:33:22,671 ಬಲ, ಐಶ್ವರ್ಯ… 351 00:33:22,755 --> 00:33:25,546 ಮತ್ತೆ ಇಷ್ಟೆಲ್ಲಾ ರಹಸ್ಯ ಯಾಕೆ? 352 00:33:26,130 --> 00:33:27,546 ಇದನ್ನು ಯಾಕೆ ಆಚರಿಸಬಾರದು? 353 00:33:31,046 --> 00:33:32,546 ಇದರ ಗಣಿಗಾರಿಕೆ ಅಪಾಯಕಾರಿ. 354 00:33:33,588 --> 00:33:37,921 ಎಚ್ಚರಿಕೆಯ ಹೆಸರಲ್ಲಿ ನನ್ನ ತಂದೆ ನಮ್ಮ ಎಲ್ಲಾ 355 00:33:38,005 --> 00:33:39,880 ಶ್ರಮಗಳನ್ನೂ ನಿರ್ಬಂಧಿಸಿದ್ದಾರೆ. 356 00:33:42,546 --> 00:33:43,630 ನೋಡಲಾ? 357 00:33:51,338 --> 00:33:53,921 ಈ ವಿಸ್ಮಯಕಾರಿ ಅದಿರನ್ನು ಏನಂತ ಕರೆಯುತ್ತೀರಾ? 358 00:33:55,296 --> 00:33:57,296 ನಮ್ಮ ಭಾಷೆಯಲ್ಲಿ "ಬೂದು ಹೊಳಪು" ಅಂತೀವಿ. 359 00:33:57,380 --> 00:33:59,921 ನಿಮ್ಮ ಭಾಷೆಯಲ್ಲಿ ಮಿತ್-ರೌಡ್ ಅಂತ. 360 00:34:01,671 --> 00:34:06,380 ಇಲ್ಲ, ಇಲ್ಲ. ಅದನ್ನ ಮಿಥ್ರಿಲ್ ಅಂತೀವಿ. 361 00:34:08,546 --> 00:34:12,505 ಹಾಗಿದ್ರೆ ಇಷ್ಟು ದೂರ ಎರೆಗಿಯೊನ್ಗಾಗಿಯಷ್ಟೇ ಬಂದೆಯಾ? 362 00:34:13,046 --> 00:34:16,130 ಇಪ್ಪತ್ತು ವರ್ಷ ದೂರ ಇರೋದು ತುಂಬಾ ಜಾಸ್ತಿ ಅನ್ಸಿದ್ರಿಂದ ಬಂದೆ. 363 00:34:19,005 --> 00:34:20,296 ಎಲ್ಫ್ಗೂನೂ ಅಷ್ಟೇ. 364 00:34:27,671 --> 00:34:28,963 ಇಟ್ಕೋ. 365 00:34:31,546 --> 00:34:33,171 ನಮ್ಮ ಸ್ನೇಹದ ಸಂಕೇತ. 366 00:34:37,255 --> 00:34:38,255 ಆಗಲಿ. 367 00:34:48,463 --> 00:34:51,505 ಡ್ಯುರಿನ್! ಡ್ಯುರಿನ್! ಡ್ಯುರಿನ್, ಬೇಡ! 368 00:34:51,963 --> 00:34:53,880 ಕೆಳಗಲ್ಲಿ ನಾಲ್ಕು ಕುಬ್ಜರಿದ್ದಾರೆ! 369 00:34:55,671 --> 00:34:56,755 ಡ್ಯುರಿನ್! 370 00:35:14,338 --> 00:35:16,838 ಈರಿಯನ್, ನೆಲ ಮತ್ತು ಲೋಟಗಳು. 371 00:35:21,671 --> 00:35:22,796 ದಯವಿಟ್ಟು ಕ್ಷಮಿಸಿ. 372 00:35:22,880 --> 00:35:26,380 ಪರವಾಗಿಲ್ಲ. ಪರವಾಗಿಲ್ಲ. ಏನೂ ತೊಂದರೆಯಿಲ್ಲ. 373 00:35:27,005 --> 00:35:29,338 ನಿನ್ನ ಕೌಶಲ್ಯ ನಕ್ಷಾಕಲೆಗಷ್ಟೇ ಅಂದುಕೊಂಡಿದ್ದೆ. 374 00:35:29,838 --> 00:35:32,088 ಒರೆಸುವುದು ಚಾಕಚಕ್ಯತೆಯನ್ನು ವೃದ್ಧಿಸುತ್ತದೆ. 375 00:35:32,713 --> 00:35:34,380 ಸಂಘದ ಶಿಕ್ಷಕರು ಅದನ್ನೇ ಹೇಳೋದು. 376 00:35:35,755 --> 00:35:38,713 ಹೀಗೆ ಮಾಡೋಣ? ನಾನು ನೆಲ ಒರೆಸ್ತೀನಿ, ನೀನು ಲೋಟ ಒರೆಸು. 377 00:35:38,796 --> 00:35:40,671 ಕೊನೆಗೆ ಕೆಲಸ ಮುಗಿಸೋರು ಊಟ ಕೊಡಿಸಬೇಕು. 378 00:35:40,755 --> 00:35:42,755 ನಾನು ಅಪರಿಚಿತ ಯುವಕರ ಜೊತೆ ಹೋಗುವುದಿಲ್ಲ. 379 00:35:42,838 --> 00:35:45,755 ತುಂಬಾ ಒಳ್ಳೆಯದು. ಅಂಥವರು ಯಾರಾದ್ರೂ ಕಂಡರೆ ಹೇಳ್ತೀನಿ. 380 00:36:12,255 --> 00:36:15,921 ಅಡ್ಡ ಬರುವ ಪ್ರತಿ ಅಡಚಣೆಯತ್ತ ಕುದುರೆಯು ಎಗರುತ್ತಾ ಹೋಗುವಂತೆ 381 00:36:16,005 --> 00:36:18,296 ನೀನು ಮುನ್ನುಗ್ಗುವುದನ್ನು ನಾನು ಇಷ್ಟಪಡುವಂತೆ... 382 00:36:19,588 --> 00:36:23,838 ನೀನು ದೈತ್ಯರು ಅಥವಾ ಓರ್ಕ್ಸ್ಗಳನ್ನಲ್ಲದೆ ಮನುಷ್ಯರ ಜೊತೆ ಯುದ್ಧ ಮಾಡ್ತಿದ್ದೀಯ 383 00:36:23,921 --> 00:36:24,880 ಅಂತ ಅನಿಸಿದೆಯಾ? 384 00:36:25,380 --> 00:36:28,046 ಯುದ್ಧ ಕಲೆಯ ಬಗ್ಗೆ ನನಗೇ ಉಪದೇಶ ಕೊಡಲು ಹೊರಟಿರುವೆಯಾ? 385 00:36:28,130 --> 00:36:29,630 ಇಲ್ಲ. ಇಲ್ಲ, ನಾ... 386 00:36:30,671 --> 00:36:33,880 ನನಗಷ್ಟು ಧೈರ್ಯ ಇಲ್ಲ. ಆದರೂ… 387 00:36:34,796 --> 00:36:39,421 ರಾಣಿಯ ಆಸ್ಥಾನ ಸಾಧಾರಣವಾಗಿ ನಿನ್ನ ಯುದ್ಧಭೂಮಿ ಅಲ್ಲ, ಅಲ್ಲವೇ? 388 00:36:42,088 --> 00:36:43,255 ಮುಂದುವರೆಸಿ. 389 00:36:44,671 --> 00:36:47,671 ಇಂಥ ಸಂದರ್ಭದಲ್ಲಿ ನಿನ್ನ ಶತ್ರುವಿಗೆ ಯಾವುದು ಭಯವೋ, 390 00:36:47,755 --> 00:36:52,171 ಅದನ್ನು ನೀನು ಚೆನ್ನಾಗಿ ಮಾಡ್ತೀಯ ಅಂತ ನನಗನಿಸುತ್ತೆ. 391 00:36:52,755 --> 00:36:54,546 -ದುರುಪಯೋಗ ಮಾಡ್ತೀನಂತಾನಾ? -ಇಲ್ಲ. 392 00:36:56,088 --> 00:36:58,671 ಅದನ್ನು ಕರಗತ ಮಾಡಿಕೊಳ್ಳಲು ಅವರಿಗೊಂದು ದಾರಿ ಕೊಡು. 393 00:36:59,796 --> 00:37:02,380 ಆಗ ನೀನು ಅವರನ್ನು ಪಳಗಿಸಬಹುದು. 394 00:37:02,463 --> 00:37:04,588 ರಾಣಿಗೆ ಯಾವ ಭಯ ಎಂದು ಯೋಚಿಸದೆ ಇರೋದ್ರಿಂದ 395 00:37:04,671 --> 00:37:07,130 ಇನ್ನೂ ಈ ಕಾರಾಗೃಹದಲ್ಲಿ ಇದ್ದೀನಿ ಅಂತಾನಾ? 396 00:37:07,213 --> 00:37:08,880 ನನ್ನ ಪ್ರಕಾರವಾಗಿ. ಹೌದು. 397 00:37:08,963 --> 00:37:11,671 ಆಕೆಯನ್ನ ಕೆಲವೇ ಕ್ಷಣ ಭೇಟಿಯಾದರೂ ನಿನಗೆ ಗೊತ್ತಾಗಲಿಲ್ವಾ? 398 00:37:11,755 --> 00:37:16,505 ಅಷ್ಟರಲ್ಲಿ ನೀನೊಂದು ಹೊಸ ಹಡಗನ್ನು ಕೇಳಿ, ಆಕೆಯ ಜನರನ್ನು ಅವಮಾನಿಸಿ, ಆಜ್ಞೆಯನ್ನೇ ಮೀರಿದೆ, 399 00:37:16,588 --> 00:37:18,296 ಯಾವುದರಿಂದಲೂ ಆಕೆಗೆ ಕೋಪ ಬರಲಿಲ್ಲ. 400 00:37:19,338 --> 00:37:22,171 ಆದರೆ, ಒಮ್ಮಿಂದೊಮ್ಮೆಲೆ, ನಿನ್ನನ್ನ ಬಂಧಿಸುತ್ತಾರೆ. 401 00:37:24,130 --> 00:37:24,963 ಯಾಕೆ? 402 00:37:25,338 --> 00:37:27,546 ನಿನ್ನ ಜನರಿಗಾಗಿ ಯುದ್ಧಮಾಡಲು ಆಕೆಗೆ ಹೇಳಿದೆ. 403 00:37:27,630 --> 00:37:30,796 ಆದರೆ ಆಕೆಗೆ ಅದರಿಂದ ಕೋಪ ಬರಲಿಲ್ಲ, ಅಲ್ವಾ? 404 00:37:33,338 --> 00:37:35,505 ಆಕೆಯ ತಂದೆಯೊಂದಿಗೆ ಮಾತನಾಡಲು ಕೇಳಿದೆ. 405 00:37:37,005 --> 00:37:41,005 ವರ್ಷಗಳ ಕಾಲ ಯಾರೂ ನೋಡಿರದ ಸ್ತಂಭದೊಳಗಿನ ರಾಜ. 406 00:37:43,880 --> 00:37:48,463 ಎಗರುವುದು ಬಿಟ್ಟು ಒಂದು ಕ್ಷಣ ನಿಂತು ಆಲೋಚಿಸಿದರೆ ಹೇಗಿರುತ್ತೆ ನೋಡಿದೆಯಾ? 407 00:37:48,546 --> 00:37:50,171 ನನ್ನನ್ನು ಕುದುರೆಗೆ ಹೋಲಿಸಬೇಡ. 408 00:37:50,255 --> 00:37:53,130 ನನ್ನನ್ನು ಹೊರಡಲು ಒಪ್ಪಿಸುವ ಪ್ರಯತ್ನ ಕೈಬಿಡು, ಆಗ ನೋಡ್ತೀನಿ. 409 00:37:53,213 --> 00:37:54,630 ಎಲ್ಫಿಗೆ ನಮಸ್ಕಾರಗಳು. 410 00:37:54,713 --> 00:37:57,421 ಮಹಾರಾಣಿ ರೀಜೆಂಟ್ ಅವರ ನಿರ್ಧಾರವನ್ನು ಪ್ರಕಟಿಸಿದ್ದಾರೆ. 411 00:37:58,380 --> 00:38:02,796 ಶಸ್ತ್ರಸಜ್ಜಿತ ಜೊತೆಗಾರರೊಂದಿಗೆ ನಿಮ್ಮನ್ನು ಎಲ್ಫ್ಗಳ ಬಳಿ ಕೊಂಡೊಯ್ಯಲಾಗುವುದು. ರಾತ್ರಿಯೇ. 412 00:38:16,588 --> 00:38:18,005 ಮುಂದೆ ಬನ್ನಿ. 413 00:38:32,921 --> 00:38:36,005 -ಇದು ಒಳ್ಳೆಯದಲ್ಲ. -ನಾನು ಅವಳನ್ನು ಹೋಗೋಕೆ ಬಿಡೋಕಾಗಲ್ಲ. 414 00:38:36,088 --> 00:38:38,880 ಬಿಡಬಹುದು. ಎಲ್ಲಿಗೆ ಹೋಗುತ್ತಿದ್ದಾಳೆ ಅಂತ ಗೊತ್ತಿದ್ದರೆ. 415 00:39:00,838 --> 00:39:02,505 ಇಲ್ಲೇನು ಮಾಡುತ್ತಿದ್ದೀಯಾ? 416 00:39:03,588 --> 00:39:05,005 ಊಟಕ್ಕೆ ಬಂದಿದ್ದೆ. 417 00:39:08,755 --> 00:39:10,005 ಯಾರವನು? 418 00:39:11,005 --> 00:39:12,296 ನಿನ್ನ ಸಮವಸ್ತ್ರ ಎಲ್ಲಿ? 419 00:39:15,296 --> 00:39:17,505 ಪಡೆಗಳಿಗೆ ರಾಜೀನಾಮೆ ಕೊಟ್ಟೆಯಾ ಏನು? 420 00:39:18,338 --> 00:39:19,755 ಇಲ್ಲ, ಇನ್ನೂ ಕೆಟ್ಟದ್ದು. 421 00:39:19,838 --> 00:39:21,338 ಸೇವೆಯಿಂದ ವಜಾ ಮಾಡಿದ್ರಾ? 422 00:39:22,421 --> 00:39:23,755 ಎಲ್ಲರನ್ನೂ ವಜಾ ಮಾಡಿಸಿದೆ. 423 00:39:23,838 --> 00:39:25,088 ಇಸಿಲ್... 424 00:39:28,796 --> 00:39:32,463 ಸರಿ, ಗೆದ್ದೆಯಲ್ಲ. ಈಗ ನೀನು ಪಶ್ಚಿಮಕ್ಕೆ ಹೋಗಬಹುದು. 425 00:39:35,421 --> 00:39:37,380 ನನ್ನ ಸ್ನೇಹಿತರ ಜೀವನ ಹಾಳು ಮಾಡಿದೆ, 426 00:39:38,921 --> 00:39:40,505 ನಮ್ಮ ಕುಟುಂಬದ ಹೆಸರು ಕೆಡಿಸಿದೆ. 427 00:39:42,296 --> 00:39:43,963 ನಾನು ಪಶ್ಚಿಮಕ್ಕೆ ಹೋಗಲು ಅರ್ಹನಲ್ಲ. 428 00:39:47,671 --> 00:39:49,880 ಬೆರೆಕ್ನ ಕರ್ಕೊಂಡು ಹೋಗಲು ಅಪ್ಪ ಒಪ್ಪಲ್ಲ. 429 00:39:56,046 --> 00:39:57,755 ಆ ಎಲ್ಫ್! ತಪ್ಪಿಸಿಕೊಂಡಿದ್ದಾಳೆ. 430 00:39:58,255 --> 00:39:59,588 ಪ್ರತಿ ಬೀದಿಯನ್ನೂ ಹುಡುಕಿ. 431 00:40:19,338 --> 00:40:22,505 ಒಳಬಂದಿದ್ದಕ್ಕೆ ಕ್ಷಮೆ ಇರಲಿ, ಮಹಾರಾಜ. ಆದರೆ ನಾನು... 432 00:40:22,588 --> 00:40:24,296 ಅವರು ಈಗ ಅದಕ್ಕೆ ಸ್ಪಂದಿಸಲ್ಲ. 433 00:40:32,046 --> 00:40:33,880 ಇಲ್ಲಿ ಬರ್ತೀನಿ ಅಂತ ಹೇಗೆ ಗೊತ್ತಿತ್ತು? 434 00:40:33,963 --> 00:40:37,630 ನಿನ್ನನ್ನು ಹಡಗಿಗೆ ಕರೆದೊಯ್ಯಲು ಹೊರಗಡೆ ಒಂದು ಸೇನಾಪಡೆ ಕಾದುಕುಳಿತಿದೆ. 435 00:40:38,838 --> 00:40:40,921 ನೀನಾಗೇ ಹೋದರೆ ಬುದ್ಧಿವಂತೆ ಅನಿಸಿಕೊಳ್ತೀಯ. 436 00:40:42,421 --> 00:40:43,505 ಮೀರಿಯೆಲ್. 437 00:40:50,005 --> 00:40:51,213 ಮೀರಿಯೆಲ್. 438 00:41:00,755 --> 00:41:01,755 ನಾ... ನಾ... 439 00:41:01,838 --> 00:41:04,421 ಪರ್ವಾಗಿಲ್ಲ, ಅಪ್ಪ. ನಾನಿಲ್ಲೇ ಇದ್ದೀನಿ. 440 00:41:08,088 --> 00:41:09,338 ನನ್ನನ್ನು ಕ್ಷಮಿಸಿ. 441 00:41:11,046 --> 00:41:12,380 ನನಗೆ ಗೊತ್ತಿರಲಿಲ್ಲ. 442 00:41:13,463 --> 00:41:15,880 ಅವರ ಅವನತಿಯ ಬಗ್ಗೆ ಕಡಿಮೆ ಜನರಿಗಷ್ಟೇ ಗೊತ್ತು. 443 00:41:18,130 --> 00:41:20,130 ಅದು ಹಾಗಿರಲಿ ಎಂದೇ ನನ್ನ ಆಸೆ. 444 00:41:20,796 --> 00:41:23,213 ಹಾಗಿದ್ದರೆ ನಮ್ಮ ಮಧ್ಯೆ ಸತ್ಯಕ್ಕೆ ಸಮಯವಾಗಿದೆ. 445 00:41:26,005 --> 00:41:28,671 ನಿಮ್ಮ ತಂದೆ ಎಲ್ವಿಷ್ ಪದ್ಧತಿಗಳಿಗೆ ಬದ್ಧರಾಗಿದ್ದರು. 446 00:41:29,630 --> 00:41:31,046 ನೀವು ಯಾಕಿಲ್ಲ? 447 00:41:32,213 --> 00:41:33,546 ಹೇಳಿ. 448 00:41:35,880 --> 00:41:37,130 ದಯವಿಟ್ಟು. 449 00:41:39,463 --> 00:41:42,171 ನನ್ನ ತಂದೆ ಯಾವಾಗಲೂ ಅವರ ನಂಬಿಕೆಗಳಿಗೆ ಕಟ್ಟುಬಿದ್ದಿದ್ದರು. 450 00:41:43,255 --> 00:41:46,130 ಅವರ ಪಟ್ಟಾಭಿಷೇಕದ ಬಳಿಕ ಏನೋ ಬದಲಾಯಿತು. 451 00:41:48,255 --> 00:41:50,380 ವಲಾರಿಗೆ ಕೋಪ ತರಿಸಿದ್ದೀವಿ ಅಂತ 452 00:41:50,463 --> 00:41:54,130 ಸಾಧಿಸುತ್ತಾ ಅವರು ನಮ್ಮ ಮೇಲೆ ವ್ಯಗ್ರರಾದರು, 453 00:41:54,213 --> 00:41:57,880 ಹಾಗಾಗಿ ಪಶ್ಚಾತ್ತಾಪವನ್ನು ಅನುಭವಿಸಿ ಹಳೆಯ ಪದ್ಧತಿಗಳಿಗೆ ಮರಳಬೇಕು ಅಂದರು. 454 00:41:59,505 --> 00:42:01,130 ತಳಮಳವಿತ್ತು. 455 00:42:02,171 --> 00:42:05,880 ಎಲ್ಫ್ಗಳ ಜೊತೆ ಹೊಸದಾಗಿ ಸಂಬಂಧಗಳನ್ನು ಕುದುರಿಸುವ ಬಗ್ಗೆ ಅವರು ಘೋಷಿಸಿದಾಗ... 456 00:42:05,963 --> 00:42:07,380 ಜನರು ದಂಗೆಯೆದ್ದರು. 457 00:42:10,130 --> 00:42:11,588 ತುಂಬಾ ನಷ್ಟವಾಯಿತು. 458 00:42:14,713 --> 00:42:17,046 ಅವರ ಬದಲಾಗಿ ಆಳಲು ನನ್ನನ್ನು ಆರಿಸಲಾಯಿತು, 459 00:42:18,213 --> 00:42:20,255 ಬಿರುಗಾಳಿಯನ್ನು ನಂದಿಸುವ ನಂಬಿಕೆಯಲ್ಲಿ. 460 00:42:21,713 --> 00:42:25,838 ಆದರೆ ಆ ಮೊದಲ ರಾತ್ರಿ, ಇಡೀ ನ್ಯೂಮೆನೊರ್ ನಿದ್ರೆಯಲ್ಲಿದ್ದಾಗ, 461 00:42:25,921 --> 00:42:27,588 ನನ್ನನ್ನಿಲ್ಲಿಗೆ ಕರೆತಂದರು. 462 00:42:32,963 --> 00:42:34,213 ಪಲಾಂಟಿರ್. 463 00:42:35,213 --> 00:42:37,671 ಹಿಂದೊಮ್ಮೆ ಏಳು ದೃಷ್ಟಿಯ ಕಲ್ಲುಗಳು ಇದ್ದವು. 464 00:42:38,338 --> 00:42:40,921 ಆರು ಕಲ್ಲುಗಳು ಕಳೆದುಹೋಗಿರಬಹುದು ಇಲ್ಲಾ ಅಡಗಿರಬಹುದು. 465 00:42:41,921 --> 00:42:43,963 ಇದು ನನ್ನ ತಂದೆಗೆ ಬಳುವಳಿಯಾಗಿ ಬಂತು. 466 00:42:44,796 --> 00:42:46,671 ಇದರ ಜೊತೆ ಒಂದು ರಹಸ್ಯವೂ ಕೂಡ. 467 00:42:49,588 --> 00:42:51,213 ನಿನ್ನ ಕೈಯನ್ನು ಇದರ ಮೇಲಿರಿಸು. 468 00:42:54,588 --> 00:42:57,671 -ಎಚ್ಚರಿಕೆ... -ನಾನು ಹಿಂದೆ ಪಲಾಂಟಿರ್ಗಳನ್ನ ಮುಟ್ಟಿದ್ದೀನಿ. 469 00:42:57,755 --> 00:42:59,755 ಆದರೆ ನೀನು ಇದನ್ನು ಮುಟ್ಟಿಲ್ಲ. 470 00:43:28,880 --> 00:43:30,713 ನೀನು ನೋಡಿದ್ದು ನ್ಯೂಮೆನೊರಿನ ಭವಿಷ್ಯ. 471 00:43:34,838 --> 00:43:36,838 ಪಲಾಂಟಿರಿ ತುಂಬಾ ದೃಶ್ಯಗಳನ್ನ ತೋರಿಸ್ತವೆ. 472 00:43:37,755 --> 00:43:39,755 ಕೆಲವು ಇನ್ನೂ ನಡೆಯದಂಥವು. 473 00:43:39,838 --> 00:43:41,630 ಇದು ಈಗಾಗಲೇ ನಡೆಯಲು ಅಣಿಯಾಗಿದೆ. 474 00:43:42,505 --> 00:43:44,671 ನಿನ್ನ ಆಗಮನದಿಂದಲೇ ದೃಶ್ಯ ಶುರುವಾಗುತ್ತೆ. 475 00:43:45,338 --> 00:43:48,338 ನ್ಯೂಮೆನೊರಿನ ಪತನ ನನ್ನಿಂದ ಅಂತ ನೀವು ನಂಬ್ತೀರಾ? 476 00:43:48,421 --> 00:43:51,005 ನ್ಯೂಮೆನೊರಿನ ಪತನ ಅದರಿಂದ ಅಷ್ಟೇ ಸಾಧ್ಯ. 477 00:43:52,255 --> 00:43:55,088 ವೀರತ್ವದ ದಿನ ವಲಾರ್ ಈ ದ್ವೀಪವನ್ನು ಕಾಣಿಕೆಯಾಗಿ ಕೊಟ್ಟರು. 478 00:43:55,171 --> 00:43:58,796 ಕಗ್ಗತ್ತಲ ದಾರಿಗೆ ನಾವು ತಿರುಗಿದರೆ ಅವರು ನಮ್ಮಿಂದ ಇದನ್ನು ಕಸಿಯಬಲ್ಲರು. 479 00:43:58,880 --> 00:44:02,838 ನೀವು ಹೇಳುವ ವೀರತ್ವ ಎಲ್ಫ್ಗಳ ಪರವಾಗಿ ನಿಮ್ಮ ಪೂರ್ವಜರಿಗೆ ಇದ್ದಂಥ ಬದ್ಧತೆ. 480 00:44:02,921 --> 00:44:04,921 ನನ್ನ ತಂದೆ ಅದನ್ನು ನಂಬಿದ್ದರು. 481 00:44:05,921 --> 00:44:07,921 ಅವರ ದಾರಿ ನಮ್ಮನ್ನು ನಾಶ ಮಾಡಿಸ್ತಿತ್ತು. 482 00:44:09,505 --> 00:44:13,005 ಅದಕ್ಕೆ ನಾಳೆ ನೀನು ಹೋಗಿದ್ದೀಯಾ ಅಂತ ನಾನು ಘೋಷಿಸಲಿದ್ದೇನೆ. 483 00:44:13,796 --> 00:44:15,213 ಈ ಕಷ್ಟಕಾಲ ಮುಗಿದಿದೆ ಅಂತ. 484 00:44:18,213 --> 00:44:21,171 ಮಿಡ್ಲ್ ಅರ್ಥಲ್ಲಿ ಏಳುತ್ತಿರುವ ದುಷ್ಟಶಕ್ತಿಯ ನಿಗ್ರಹಿಸದಿದ್ದರೆ 485 00:44:21,255 --> 00:44:23,921 ಅದು ಹರಡಿ ನಮ್ಮೆಲ್ಲರನ್ನೂ ನುಂಗುತ್ತದೆ. 486 00:44:24,421 --> 00:44:27,838 ಈ ಯುದ್ಧವನ್ನು ತಪ್ಪಿಸುವುದರಿಂದಲೇ ನಿಮ್ಮ ಪತನ ಶುರುವಾಗಬಹುದು. 487 00:44:27,921 --> 00:44:31,088 ನಾನು ದೇವರುಗಳನ್ನು ಸಂದೇಹಿಸುವುದಿಲ್ಲ. ನನ್ನ ನಿರ್ಧಾರವೇ ಅಂತಿಮ. 488 00:44:31,171 --> 00:44:32,963 ಭಯದಲ್ಲಿ ಕೈಗೊಂಡ ನಿರ್ಧಾರ. 489 00:44:34,796 --> 00:44:38,338 ಒಬ್ಬಳೇ ಆಗಿರುವುದರ ಪರಿಸ್ಥಿತಿ ನನಗೆ ಗೊತ್ತಿದೆ, 490 00:44:40,380 --> 00:44:42,213 ನೋಡಲಾಗುವ ಒಬ್ಬಳೇ, 491 00:44:42,963 --> 00:44:44,796 ತಿಳಿದಿರುವ ಒಬ್ಬಳೇ. 492 00:44:46,046 --> 00:44:49,796 ಈ ಭಾರವನ್ನು ಒಂಟಿಯಾಗಿ ನಾವಿಬ್ಬರೇ ಇನ್ನು ಮುಂದೆ ಹೊರಬೇಕಾಗಿಲ್ಲ. 493 00:44:50,255 --> 00:44:54,588 ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ, ಮೀರಿಯೆಲ್, ಭಯದ ಹಾದಿ ಬೇಡ, 494 00:44:54,671 --> 00:44:56,255 ನಂಬಿಕೆಯ ಹಾದಿ ಹಿಡಿಯಿರಿ. 495 00:44:56,880 --> 00:44:58,380 ನನ್ನ ಜೊತೆ ನಿಲ್ಲಿರಿ. 496 00:44:59,130 --> 00:45:02,088 ಎಲ್ಫ್ಗಳ ಜೊತೆಯಾಗಿ ನ್ಯೂಮೆನೊರ್ ಮತ್ತೊಮ್ಮೆ ಹೋರಾಡಲಿ. 497 00:45:11,963 --> 00:45:15,380 ನಂಬಿಕೆಯಿಂದ ಒಂದು ಹೃದಯವನ್ನು ಬೆಸೆಯಬಹುದು, ಗಲಾಡ್ರಿಯಲ್. 498 00:45:16,171 --> 00:45:19,505 ಆದರೆ ಒಂದು ರಾಜ್ಯವನ್ನೇ ತೂಗುವಷ್ಟು ಶಕ್ತಿ ಅದಕ್ಕಿಲ್ಲ. 499 00:45:22,255 --> 00:45:23,463 ನನ್ನನ್ನು ಕ್ಷಮಿಸು. 500 00:45:30,171 --> 00:45:34,088 ಕಾಡು ಬರಿದಾಗಿದೆ. ಪ್ರಾಣಿಗಳು ಓಡಿಹೋಗಿವೆ. 501 00:45:34,171 --> 00:45:36,921 ನಿಮ್ಮ ಹುಡುಗನಿಗೆ ಅಂದುಕೊಂಡಿದ್ದಕ್ಕಿಂತ ಹೆಚ್ಚಿನ ಬುದ್ಧಿ. 502 00:45:38,838 --> 00:45:40,588 ದ್ವಾರದ ಬಳಿ ಯಾರೋ ಬಂದಿದ್ದಾರೆ! 503 00:45:45,505 --> 00:45:46,755 ಹಿಂದೆ ನಿಲ್ಲಿ. 504 00:45:46,838 --> 00:45:49,546 -ದಾರಿ ಬಿಡಿ. ಹಿಂದೆ ನಿಲ್ಲಿ! -ಆ ಹುಡುಗನನ್ನ ಬಿಡಿ! 505 00:45:51,380 --> 00:45:53,130 ಬೇಕಾದಷ್ಟಿದೆ. ನಿಧಾನ! 506 00:45:53,213 --> 00:45:55,588 ರೋವನ್! ಥಿಯೋ ಎಲ್ಲಿ? 507 00:45:57,546 --> 00:45:59,130 ನನ್ನ ಹಿಂದೆನೇ ಇದ್ದ. 508 00:45:59,213 --> 00:46:00,463 -ಹಸಿವು! -ತಳ್ಳಬೇಡಿ! 509 00:46:00,546 --> 00:46:01,755 ಅವಳು ತಳ್ಳಿದ್ದು! 510 00:46:04,380 --> 00:46:08,255 ಪ್ರತಿ ಕಲ್ಲಿನ ಅಡಿಯಲ್ಲೂ ಹುಡುಕಿದ್ದೇವೆ. ಅವನಿಲ್ಲಿಗೆ ಬಂದಿಲ್ಲ. 511 00:46:08,338 --> 00:46:09,505 ಬನ್ನಿ. 512 00:46:14,713 --> 00:46:15,796 ಎಲ್ಲಿ ಅವನು? 513 00:46:18,463 --> 00:46:19,755 ಅವನು ಇಲ್ಲಿಲ್ಲ! 514 00:46:23,546 --> 00:46:24,380 ಹೋಗೋಣ. 515 00:46:27,296 --> 00:46:29,546 ಯಾವ ಮೂಲೆಯನ್ನೂ ಬಿಡಬೇಡಿ. 516 00:46:32,671 --> 00:46:35,296 ಅವನು ಸಿಗದೇ ಇದ್ದರೆ ಯಜಮಾನರು ನಮ್ಮ ಚರ್ಮ ಸುಲಿದುಬಿಡ್ತಾರೆ. 517 00:46:35,380 --> 00:46:38,171 ಅವನನ್ನ ಕಳೆದುಕೊಂಡಿದ್ದೇ ನಮ್ಮ ಯಜಮಾನರು. 518 00:46:38,255 --> 00:46:40,713 ಅವನ ವಾಸನೆ ಬಡಿಯುತ್ತಿದೆ… 519 00:46:43,463 --> 00:46:44,755 ಬನ್ನಿ! 520 00:46:48,505 --> 00:46:50,880 ಹುಡುಕಿ ಅದನ್ನ. 521 00:47:04,296 --> 00:47:05,755 ಹುಡುಕಿ ಅದನ್ನ. 522 00:47:11,338 --> 00:47:12,421 ಹುಡುಕಿ ಅವನನ್ನ! 523 00:47:23,005 --> 00:47:24,296 ಇಲ್ಲೇನೂ ಇಲ್ಲ. 524 00:47:35,921 --> 00:47:38,088 ಆ ಕಡೆ! ನೋಡಿ! 525 00:48:00,171 --> 00:48:03,088 ಎಲ್ಲಿ ಹೋಗ್ತಾ ಇದ್ದೀಯಾ, ಮರಿ? 526 00:48:03,171 --> 00:48:04,255 ಎಲ್ಲಿದೆ? 527 00:48:04,338 --> 00:48:05,338 ಇಲ್ಲ! 528 00:48:05,421 --> 00:48:07,505 ಅದನ್ನ ಎಲ್ಲಿಟ್ಟಿದ್ದೀಯಾ? 529 00:48:08,671 --> 00:48:12,546 ನಿನ್ನ ಕೈ ಕಳೆದುಕೊಂಡರೆ ಬಾಯಿ ತೆರೆಯುತ್ತೇನೋ. 530 00:48:24,046 --> 00:48:25,130 ಬೇಗ, ಹುಡುಗ. 531 00:48:27,005 --> 00:48:28,338 ಅವರು ಬರುತ್ತಿದ್ದಾರೆ. 532 00:48:53,338 --> 00:48:54,338 ಹೋಗ್ತಾ ಇರು. 533 00:49:20,796 --> 00:49:21,796 ಓಡು! 534 00:49:36,296 --> 00:49:37,463 ಅಮ್ಮ? 535 00:49:38,963 --> 00:49:40,130 ಬ್ರೊನವೀನ್. 536 00:49:43,838 --> 00:49:45,713 ಓಡು! ಬಯಲಿನ ಕಡೆಗೆ ಓಡು! 537 00:52:12,130 --> 00:52:14,338 ಏನದು? 538 00:52:14,880 --> 00:52:17,505 ತಮ್ಮೊಳಗೆ ಇನ್ನೂ ಜೀವಂತವಾಗಿ ಉಳಿದಿರುವ 539 00:52:17,588 --> 00:52:21,505 ಗಣಿಗಾರರ ದೇಹಗಳನ್ನು ಬಿಡುಗಡೆ ಮಾಡಲು ಬಂಡೆಗಳಿಗೆ ಸಲ್ಲಿಸಿದ ಪ್ರಾರ್ಥನೆ. 540 00:52:23,005 --> 00:52:25,963 ನೀನು ಅಲ್ಲಿಗೆ ಹೋಗದೆ ಇದ್ದಿದ್ದರೆ, ಡ್ಯುರಿನ್ ಇನ್ನೂ 541 00:52:27,130 --> 00:52:29,796 ಆ ಸುರಂಗದಲ್ಲಿಯೇ... ಹೀಗಂತ ನನಗೆ ಯೋಚಿಸದಿರಲಾಗುತ್ತಿಲ್ಲ. 542 00:52:31,380 --> 00:52:32,463 ಕ್ಷಮಿಸು. 543 00:52:33,171 --> 00:52:34,671 ಸುಳ್ಳು ಹೇಳಿದ್ದಕ್ಕೆ ಕ್ಷಮಿಸು. 544 00:52:34,755 --> 00:52:38,338 ನೀವು ನನ್ನ ಗೆಳೆಯನಿಗೆ ನಿಯತ್ತಿನಿಂದ ಇದ್ರಿ. ಇದೊಂದು ನೆನಪಿದ್ದರೆ ಸಾಕು. 545 00:52:40,546 --> 00:52:42,588 ಕೊನೆಯವನನ್ನ ಈಗಷ್ಟೇ ಹೊರತೆಗೆದಿದ್ದಾರೆ. 546 00:52:44,421 --> 00:52:47,380 ಜೀವಂತವಾಗಿ. ಎಲ್ಲರನ್ನೂ ಜೀವಂತವಾಗಿ. 547 00:52:48,338 --> 00:52:50,255 ನಿಮ್ಮ ತಂದೆ ನಿರಾಳರಾಗಿರ್ತಾರೆ. 548 00:52:50,338 --> 00:52:51,755 ಅವರು ಅದನ್ನ ಮುಚ್ಚಿಬಿಟ್ಟರು. 549 00:52:53,213 --> 00:52:56,130 ಅದಿರಿನ ಪೂರ್ತಿ ಸಮೂಹವನ್ನು ಮುಚ್ಚಲಾಗುತ್ತಿದೆ. 550 00:52:56,213 --> 00:52:58,130 -ಇಡೀ ಸಮೂಹ? -ಸಂಪೂರ್ಣವಾಗಿ. 551 00:52:59,046 --> 00:53:00,505 ಅವರಿಗೆ ಸಮಯ ಕೊಡಿ. 552 00:53:01,505 --> 00:53:04,005 ಅತ್ಯಂತ ಬಿಸಿಯಾದ ಇದ್ದಲು ಕೂಡ ತಣ್ಣಗಾಗಲೇಬೇಕು. 553 00:53:04,088 --> 00:53:06,505 ಕೆಲವು ಸಲ ತಣ್ಣಗಾಗುವುದು ನನಗೆ ಇಷ್ಟ ಇಲ್ಲ. 554 00:53:07,755 --> 00:53:11,380 ಕೆಲವು ಸಲ ಅವರ ಬಗ್ಗೆ ನನಗೆ ಏನನ್ಸುತ್ತೆ ಅಂತ ಅವರಿಗೆ ನಿಖರವಾಗಿ ಹೇಳಿ, 555 00:53:12,380 --> 00:53:16,963 ಮತ್ತೆ ಆ ಮುದುಕನ ಹತ್ತಿರ ಮಾತಾಡಲೇಬಾರದು ಅನ್ಸುತ್ತೆ! 556 00:53:41,255 --> 00:53:44,046 ನನ್ನ ತಂದೆ ಒಬ್ಬಂಟಿಯಾಗಿ ವಾಲಿನೊರಿಗೆ ಯಾನ ಕೈಗೊಂಡು, 557 00:53:45,255 --> 00:53:49,880 ಯುದ್ಧದಲ್ಲಿ ಪಾಲ್ಗೊಂಡು ಮಾರ್ಗೊಥನ್ನು ನಾಶಮಾಡಲು ವಲಾರನ್ನು ಒಪ್ಪಿಸಿದರು. 558 00:53:51,171 --> 00:53:53,213 ಅವರ ಕಾರ್ಯ ಎಷ್ಟೊಂದು ಮಹತ್ವದ್ದಾಗಿತ್ತೆಂದರೆ 559 00:53:53,296 --> 00:53:56,796 ವಲಾರ್ ಅವರನ್ನು ಪ್ರಪಂಚಕ್ಕೆ ಅತೀತವಾಗಿ ಮೇಲೆತ್ತಿ... 560 00:53:57,630 --> 00:54:00,338 ಸದಾಕಾಲ ಆಕಾಶದಲ್ಲಿ ಇವನಿಂಗ್ ಸ್ಟಾರನ್ನು ಹೊರಲು ಬಿಟ್ಟರು. 561 00:54:03,671 --> 00:54:06,838 ಎಷ್ಟೋ ವರ್ಷಗಳ ಕಾಲ, ದಿನದ ಅಂತ್ಯದಲ್ಲಿ ನಾನು ಅದನ್ನ ನೋಡ್ತಾ... 562 00:54:08,171 --> 00:54:13,213 ಅವರು ನನ್ನನ್ನ ನೋಡ್ತಾ ಇದ್ದರೆ ಏನು ಆಲೋಚಿಸಬಹುದು ಅಂತ ಯೋಚಿಸ್ತಾ ಇರ್ತಿದ್ದೆ. 563 00:54:15,130 --> 00:54:18,630 ಅವರ ಪರಂಪರೆಯೊಂದಿಗೆ ನಾನೇನು ಸಾಧಿಸಿದ್ದೇನೆ ಅಂತ ಅವರಿಗೆ ಹೆಮ್ಮೆ ಇರಬಹುದಾ? 564 00:54:20,713 --> 00:54:26,296 ಅದಕ್ಕೆ ತಕ್ಕಂತೆ ಬದುಕಲು ನಾನು ಲೆಕ್ಕವಿಲ್ಲದಷ್ಟು ಸಾರಿ ವಿಫಲನಾಗಿರುವುದನ್ನ ಕಂಡು ನಿರಾಶೆಯಾಗಬಹುದಾ? 565 00:54:31,255 --> 00:54:34,046 ಆದರೆ ಒಂದು ರಾತ್ರಿ, ನನ್ನ ತಂದೆಯೊಂದಿಗೆ 566 00:54:34,130 --> 00:54:37,088 ಒಂದೇ ಒಂದು ಸಲ ಮಾತನಾಡಲು ಅವಕಾಶ ಸಿಕ್ಕರೆ, 567 00:54:37,171 --> 00:54:39,421 ಯಾವುದೇ ತೀರ್ಪನ್ನು ಸಂತೋಷವಾಗಿ 568 00:54:39,505 --> 00:54:42,505 ಕೇಳಬಲ್ಲೆ ಎಂದು ನನಗೆ ಮನವರಿಕೆಯಾಯಿತು. 569 00:54:43,838 --> 00:54:47,838 ನಿನ್ನ ಬಳಿ ಇರುವಂಥ ಸಮಯವನ್ನು ಹಾಳು ಮಾಡಿಕೊಳ್ಳಬೇಡ. 570 00:54:57,671 --> 00:55:01,880 ಎಲ್ರೊಂಡ್, ಒಂದು ವಿಷಯ ಇತ್ಯರ್ಥ ಮಾಡಿಕೊಳ್ಳೋಕೆ ನೀನು ಸಹಾಯ ಆಗ್ತೀಯಾ ಅಂದ್ಕೋತೀನಿ. 571 00:55:02,671 --> 00:55:05,171 ನೀನು ಮತ್ತು ನನ್ನ ಗಂಡ ಹೇಗೆ ಭೇಟಿಯಾದಿರಿ? 572 00:55:05,255 --> 00:55:07,838 ಅವನನ್ನು ಒಬ್ಬ ಗುಡ್ಡದ ರಾಕ್ಷಸನಿಂದ ಕಾಪಾಡಿದೆ. 573 00:55:07,921 --> 00:55:10,255 -ಇಬ್ಬರಿಂದ. -ಇಬ್ಬರಿಂದ. ಹೌದು, ಗೊತ್ತು. 574 00:55:11,796 --> 00:55:13,338 ನಾನು ಎಲ್ರೊಂಡನ್ನ ಕೇಳ್ತಿದ್ದೆ. 575 00:55:13,755 --> 00:55:17,755 ಹಾಗಿದ್ರೆ ನಿಮ್ಮ ಪತಿಯ ಉತ್ತರವನ್ನು ಬದಲಾಯಿಸದೇ ನನಗೆ ಬೇರೆ ಆಯ್ಕೆಯಿಲ್ಲ. 576 00:55:17,838 --> 00:55:20,588 ಮೂವರು ರಾಕ್ಷಸರಿದ್ದರು. ಇವರನ್ನು ಕಾಪಾಡಿದ್ದು ನಾನೇ. 577 00:55:20,671 --> 00:55:24,088 ಕನ್ನಡಿ ನೋಡಿಕೊಂಡರೆ ನಿನಗೆ ನಿನ್ನ ಮುಖವೇ ನೆನಪಿರಲ್ಲ. 578 00:55:24,171 --> 00:55:25,921 ನಾನು ಇವರನ್ನು ಕಾಡಿನಲ್ಲಿ ಕಂಡಾಗ 579 00:55:26,005 --> 00:55:28,463 ಈತ ಅವರ ಸುತ್ತಿಗೆಯಿಂದ ತಪ್ಪಿಸಿಕೊಳ್ಳುತ್ತಿದ್ದರು. 580 00:55:28,546 --> 00:55:30,171 ಕೂಗುತ್ತಾ, ಅಳುತ್ತಾ ಇದ್ದರು. 581 00:55:30,296 --> 00:55:31,505 ಅದು ಯುದ್ಧದ ಕೂಗು. 582 00:55:31,588 --> 00:55:35,255 ಎಷ್ಟು ಜೋರಾಗಿ ಕೂಗುತ್ತಿದ್ದರಂದರೆ ಯಾರೋ ಮಗು ಅಂದ್ಕೊಂಡೆ. ಬಿಲ್ಲನ್ನು ಎತ್ತಿ... 583 00:55:35,338 --> 00:55:36,838 -ಅದು ಕತ್ತಿ. -ಅದು ಬಿಲ್ಲು. 584 00:55:36,963 --> 00:55:38,713 -ಇಲ್ಲ. ಅದು ಕತ್ತಿ! -ಏನೇ ಇರಲಿ... 585 00:55:45,505 --> 00:55:46,755 ನನ್ನನ್ನು ಕ್ಷಮಿಸಿ, ಅಪ್ಪ. 586 00:55:47,546 --> 00:55:52,088 ಅಹಂಕಾರದಿಂದ ಮತ್ತು ಮೊಂಡುತನದಿಂದ ತಪ್ಪು ಮಾಡಿದೆ. 587 00:55:57,671 --> 00:55:59,463 ನೀವು ನನ್ನ ಮುಖವನ್ನೂ ನೋಡುವುದಿಲ್ವಾ? 588 00:56:11,213 --> 00:56:13,213 ಒಬ್ಬ ಹೊಸ ಕುಬ್ಜ-ರಾಜ ಗದ್ದುಗೆಯೇರಿದಾಗ... 589 00:56:14,713 --> 00:56:17,421 ಅವನ ಪೂರ್ವಜರ ಧ್ವನಿಗಳೆಲ್ಲಾ ಅವನಲ್ಲಿ ಆವಾಹನೆಯಾಗಿ 590 00:56:18,671 --> 00:56:22,046 ಅವರ ಸಭೆ ಮತ್ತು ಜ್ಞಾನವನ್ನು 591 00:56:24,421 --> 00:56:26,671 ಅವನೊಂದಿಗೆ ಹಂಚಿಕೊಳ್ಳುತ್ತಾರೆ 592 00:56:27,588 --> 00:56:29,005 ಎಂಬುದು ನಮ್ಮ ಜನರ ನಂಬಿಕೆ. 593 00:56:30,755 --> 00:56:32,380 ಅವರ ತಪ್ಪುಗಳನ್ನೂ ಕೂಡ. 594 00:56:39,088 --> 00:56:40,505 ಆದರೆ ನೀನು… 595 00:56:42,588 --> 00:56:45,838 ನನ್ನ ಧ್ವನಿ ಕೇಳೋಕೆ ನೀನು ಆ ದಿನದವರೆಗೂ ಕಾಯಬೇಕಿಲ್ಲ. 596 00:56:50,588 --> 00:56:55,171 ಸದಾಕಾಲವೂ ನಾನು ನಿನ್ನೊಂದಿಗೆ ಇರುತ್ತೇನೆ, ಮಗನೇ. 597 00:56:58,838 --> 00:57:00,088 ಕೋಪದಲ್ಲಿಯೂ ಕೂಡ. 598 00:57:01,880 --> 00:57:03,963 ಕೆಲವೊಮ್ಮೆ ಹೆಚ್ಚಾಗಿ ಕೋಪದಲ್ಲೇ. 599 00:57:08,463 --> 00:57:10,463 ಕ್ಷಮಿಸುವಂಥದ್ದು ಏನೂ ಇಲ್ಲ. 600 00:57:26,505 --> 00:57:31,255 ನಾಳೆ ಲಿಂಡೊನ್ಗೆ ಹೋಗೋಕೆ ಎಲ್ರೊಂಡ್ ನನ್ನನ್ನು ಆಮಂತ್ರಿಸಿದ್ದಾನೆ. 601 00:57:36,296 --> 00:57:37,630 ಹೋಗಲಾ? 602 00:57:39,546 --> 00:57:42,380 ತನ್ನನ್ನಿಲ್ಲಿಗೆ ಕಳುಹಿಸಿದ ಗಿಲ್-ಗಾಲಾಡಿಗೆ ಯಾವುದೇ 603 00:57:42,463 --> 00:57:45,796 ದುರುದ್ದೇಶ ಇಲ್ಲ ಅಂತ ಎಲ್ರೊಂಡ್ ಸ್ಪಷ್ಟವಾಗಿ ಮನವರಿಕೆ ಮಾಡಿಸಿದ್ದಾನೆ. 604 00:57:45,880 --> 00:57:49,171 ಹೌದು. ಮಾಡಿಸಿದ್ದಾನೆ. 605 00:57:50,296 --> 00:57:52,546 ಆದರೆ ಅಂತಃಪ್ರಜ್ಞೆ ಬಲವಾದ ಮದ್ದು. 606 00:57:54,046 --> 00:57:55,546 ನಿನ್ನದೇನು ಹೇಳುತ್ತೆ? 607 00:57:56,796 --> 00:57:58,838 ಅಲ್ಲಿ ಅಂದುಕೊಂಡಿದ್ದಕ್ಕಿಂತ ಹೆಚ್ಚೇ ಇದೆ. 608 00:57:58,921 --> 00:58:00,005 ಒಳ್ಳೆಯದು, ಮಗನೇ. 609 00:58:01,046 --> 00:58:02,213 ಒಳ್ಳೆಯದು. 610 00:58:04,046 --> 00:58:05,380 ಲಿಂಡೊನ್ನಿಗೆ ಹೋಗು. 611 00:58:06,796 --> 00:58:08,130 ಏನಂತ ತಿಳಿದುಕೋ. 612 00:58:24,921 --> 00:58:26,088 ಧನ್ಯವಾದ. 613 00:58:34,005 --> 00:58:36,421 ಏನದು? ಏನಾಯ್ತು? 614 00:58:38,963 --> 00:58:43,296 ಒಂದು ಸಂದೇಶ ಬಂದಿದೆ. ನಮ್ಮ ವೈರಿಯ ಅಧಿಪತಿಯಿಂದ. 615 00:58:46,088 --> 00:58:50,088 ನೀವು ಈ ನೆಲದ ಎಲ್ಲಾ ಹಕ್ಕುಗಳನ್ನು ಬಿಟ್ಟು ಅವರಿಗೆ ಶರಣಾದರೆ... 616 00:58:51,671 --> 00:58:53,088 ನಿಮ್ಮ ಜನರು ಬದುಕಬಹುದು ಅಂತ. 617 00:58:55,505 --> 00:58:56,921 ನಾವು ಒಪ್ಪದಿದ್ದರೆ? 618 00:58:58,421 --> 00:58:59,921 ಒಸ್ಟಿರಿಥ್ಗಾಗಿ ಬರ್ತಿದ್ದಾನೆ. 619 00:59:39,046 --> 00:59:40,296 ಬಾ. 620 00:59:45,880 --> 00:59:49,463 ನನ್ನ ಪ್ರಕಾರ ಇಷ್ಟೆಲ್ಲಾ ಮಾಡಿದ ಮೇಲೆ ನಿನಗೆ ಮದಿರೆಯ ರುಚಿ ತೋರಿಸಲೇಬೇಕು. 621 00:59:50,505 --> 00:59:52,005 ತಗೋ ಹೋಗು. 622 00:59:52,588 --> 00:59:56,671 ನನ್ನ ಹೊಲದಿಂದ ಆ ಹಿಡಿಕೆಯನ್ನು ತಗೊಂಡ ಹಾಗೆ. 623 00:59:57,255 --> 00:59:58,463 ಏನು ಹೇಳ್ತಿದ್ದೀರೋ... 624 00:59:58,546 --> 01:00:00,046 ಬಿಡೋ, ಹುಡುಗ. 625 01:00:00,755 --> 01:00:02,588 ನಾನೇನು ಹೇಳ್ತಿದ್ದೀನಿ ನಿನಗೆ ಗೊತ್ತು. 626 01:00:14,088 --> 01:00:17,546 ಇದೇನಂತ ನಿನಗೆ ಗೊತ್ತಾ? ಇದು ಖಡ್ಗವಲ್ಲ. 627 01:00:18,171 --> 01:00:19,421 ಇದೊಂದು ಶಕ್ತಿ. 628 01:00:20,296 --> 01:00:24,796 ನಮ್ಮ ಪೂರ್ವಜರಿಗಾಗಿ ಅವನ ಯಜಮಾನನ ಕೈಯಿಂದಲೇ ತಯಾರಾದದ್ದು. 629 01:00:25,296 --> 01:00:27,838 ಸುಂದರವಾದ ಸೇವಕ. 630 01:00:27,921 --> 01:00:31,505 ಕಳೆದುಹೋದವನು, ಆದರೆ ವಾಪಸ್ ಬರುವವನು. 631 01:00:33,046 --> 01:00:34,796 ಅವನ ಬಗ್ಗೆ ಕೇಳಿದ್ದೀಯಾ, ಹುಡುಗ? 632 01:00:35,755 --> 01:00:37,255 ಸೌರೊನ್ ಬಗ್ಗೆ ಕೇಳಿದ್ದೀಯಾ? 633 01:00:41,921 --> 01:00:44,796 ನೀನದನ್ನ ಆಕಾಶದಲ್ಲಿ ನೋಡಿರಬಹುದು. 634 01:00:44,880 --> 01:00:46,463 ಈಗಿಂದ ಕೆಲವು ವಾರಗಳ ಹಿಂದೆ. 635 01:00:47,546 --> 01:00:48,796 ನಕ್ಷತ್ರ ಪತನ. 636 01:00:48,880 --> 01:00:50,713 ಅಂದರೆ ಅವನ ಸಮಯ ಹತ್ತಿರವಾಗಿದೆ. 637 01:00:51,838 --> 01:00:55,671 ತಯಾರಾಗಿರುವುದು ನಿನಗೆ ಮತ್ತು ನನಗೆ ಬಿಟ್ಟಿದ್ದು ಕಣೋ, ಹುಡುಗ. 638 01:00:55,755 --> 01:00:57,130 ಯಾವುದಕ್ಕೆ ತಯಾರಾಗಿರುವುದು? 639 01:00:57,213 --> 01:00:59,505 ಮೌನವಾಗಿರೋ, ಹುಡುಗ. 640 01:01:00,421 --> 01:01:02,255 ನಿನ್ನ ಶಕ್ತಿಯನ್ನು ಉಳಿಸಿಕೋ. 641 01:01:03,588 --> 01:01:05,005 ಬೇಕಾಗುತ್ತೆ. 642 01:01:06,630 --> 01:01:08,046 ಮುಂದೆ ಬರುವುದಕ್ಕಾಗಿ. 643 01:01:22,838 --> 01:01:24,421 ಲಾರ್ಡ್ ಫಾದರ್... 644 01:01:26,130 --> 01:01:27,630 ನಮಗದು ಸಿಕ್ಕಿತು. 645 01:01:29,380 --> 01:01:31,213 ಅದು ಸ್ತಂಭದಲ್ಲಿ ಇದೆ. 646 01:01:56,463 --> 01:01:58,255 ಶಾಂತಿಯಿಂದ ಹೋಗಿ. 647 01:02:41,796 --> 01:02:44,005 ನಿಮ್ಮ ಜನರು ನಿರಾಳರಾಗುತ್ತಾರೆ. 648 01:02:44,380 --> 01:02:46,463 ನಿಮ್ಮ ಘೋಷಣೆಯನ್ನು ಕೇಳಲು ಅವರು ಬೇಗನೇ 649 01:02:46,546 --> 01:02:48,713 ಆಸ್ಥಾನ ಮತ್ತು ಹೊರಬಯಲಲ್ಲಿ ಸೇರುತ್ತಾರೆ. 650 01:02:52,213 --> 01:02:54,046 ಮತ್ತೆ ನಾವು ಅವರನ್ನ ಇರಿಸಿಕೊಳ್ಳಬಾರದು. 651 01:04:05,796 --> 01:04:09,130 ನಂಬಿಕಸ್ಥರ ಪ್ರಕಾರ ವೈಟ್ ಟ್ರೀಯ ದಳಗಳು ಉದುರುತ್ತಿವೆ 652 01:04:09,213 --> 01:04:11,005 ಅಂದರೆ ಅದು ಸಾಮಾನ್ಯ ವಿಷಯವಲ್ಲ... 653 01:04:11,088 --> 01:04:13,963 ಸ್ವತಃ ವಲಾರರ ಕಣ್ಣೀರೇ, 654 01:04:14,380 --> 01:04:19,255 ಅವರ ಕಣ್ಣುಗಳು ಮತ್ತು ತೀರ್ಪು ನಮ್ಮ ಮೇಲೆ ಸದಾ ಕಾಲ ಇದೆ ಅನ್ನುವುದರ ಜೀವಂತ ಸಾಕ್ಷಿ. 655 01:04:20,463 --> 01:04:23,880 ಮನುಜರ ವಿಧಿಗಳಿಗೆ ಭವಿಷ್ಯಸೂಚಕ ಕಾಲದ ಗಂಟೆಯೊಂದು ಬರಲಿದೆ. 656 01:04:24,546 --> 01:04:25,796 ಈ ತೀರ್ಪಿನ ಗಂಟೆಯಲ್ಲಿ 657 01:04:27,005 --> 01:04:31,171 ನಮ್ಮಲ್ಲಿನ ಪ್ರತಿಯೊಬ್ಬರೂ, ಒಬ್ಬೊಬ್ಬರೂ, 658 01:04:32,005 --> 01:04:35,255 ನಾವೇನಾಗುತ್ತೇವೆ ಅಂತ ನಿರ್ಧರಿಸಬೇಕು. 659 01:04:36,213 --> 01:04:40,505 ನಮ್ಮ ಹೃದಯಗಳು ನಮ್ಮ ದ್ವೀಪದ ಸುತ್ತಲಿನ ಕಲ್ಲಿನ ವಿಗ್ರಹಗಳಂತೆ ಆಗಿವೆಯೇ? 660 01:04:40,963 --> 01:04:44,838 ಅಥವಾ ಅವುಗಳನ್ನು ಕೆತ್ತಿದ ವೀರರ ರಕ್ತದಿಂದ ಅವು ಇನ್ನೂ ಮಿಡಿಯುತ್ತಿವೆಯೇ? 661 01:04:48,171 --> 01:04:51,380 ನಮ್ಮ ವೀರತ್ವ ತೀರಿಕೊಂಡಿರುವ ನಮ್ಮ ತಂದೆಯರ ಸಮಾಧಿಗಳಿಗಷ್ಟೇ ಮೀಸಲಾ? 662 01:04:53,505 --> 01:04:54,880 ಅಥವಾ ಅದು ಇಲ್ಲಿ, 663 01:04:56,796 --> 01:04:58,588 ಈಗಲೂ ನಮ್ಮ ಮಧ್ಯೆ ಇದ್ದು... 664 01:05:06,005 --> 01:05:08,421 ಉದಯಿಸುವ ಸೂರ್ಯನಂತೆ ಮೇಲೆದ್ದು ಬರಲು ಕಾಯುತ್ತಿದೆಯೇ? 665 01:05:11,463 --> 01:05:16,755 ನಾನು ಖುದ್ದಾಗಿ ಎದುರಿಸದ ಯಾವುದೇ ಅಪಾಯಕ್ಕೂ ನಿಮ್ಮನ್ನು ಆಹ್ವಾನಿಸಲ್ಲ, ಅಜ್ಞಾಪಿಸಲ್ಲ. 666 01:05:17,546 --> 01:05:22,171 ಹಾಗಾಗಿ ನಾನೇ ಸ್ವತಃ ಎಲ್ಫನ್ನು ಮಿಡ್ಲ್ ಅರ್ಥಿಗೆ ಬಿಟ್ಟುಬರಲು ನಿರ್ಧರಿಸಿದ್ದೇನೆ. 667 01:05:29,630 --> 01:05:35,088 ಸೌತ್ ಲ್ಯಾಂಡ್ಸಲ್ಲಿ ಮುತ್ತಿಗೆಗೆ ಒಳಗಾಗಿರುವ ನಮ್ಮ ಮಾನವ ಸಹೋದರರಿಗೆ ನೆರವಾಗಲಿಕ್ಕೆ. 668 01:05:35,171 --> 01:05:37,213 ರಾಣಿ ತನ್ನ ಉದ್ದೇಶವ ಪ್ರಕಟಿಸಿದ್ದಾರೆ. 669 01:05:37,296 --> 01:05:39,505 ನಮ್ಮ ಹಡಗುಗಳು ಹತ್ತು ದಿನಗಳಲ್ಲಿ ಹೊರಡಲಿವೆ. 670 01:05:40,713 --> 01:05:45,255 ಈ ದಂಡಯಾತ್ರೆಯಲ್ಲಿ ನ್ಯೂಮೆನೊರಿನ ಉದ್ದಗಲಗಳಿಂದ ಬರುವಂಥ ವೀರ ಯುವಕ-ಯುವತಿಯರು 671 01:05:45,338 --> 01:05:47,546 ಜೊತೆ ಬರಲಿದ್ದಾರೆ. 672 01:05:48,380 --> 01:05:52,880 ನಮ್ಮ ರಾಣಿ ರೀಜೆಂಟರ ರಕ್ಷಣೆಗೆ ಯಾರು ಬದ್ಧರಾಗಲು ಬರಲಿದ್ದೀರಾ? 673 01:05:58,838 --> 01:06:01,671 ಮುಂದೆ ಬಂದು ನಿಮ್ಮ ಪರಿಚಯ ಮಾಡಿಸಿ. 674 01:06:04,171 --> 01:06:05,463 ನಾನು ಸೇವೆ ಸಲ್ಲಿಸ್ತೀನಿ. 675 01:06:09,921 --> 01:06:11,213 ನಾನು ಸೇವೆ ಸಲ್ಲಿಸ್ತೀನಿ. 676 01:06:14,130 --> 01:06:15,546 ನಾನು ಸೇವೆ ಸಲ್ಲಿಸ್ತೀನಿ. 677 01:06:22,671 --> 01:06:23,505 ನಾನು ಕೂಡ! 678 01:06:25,921 --> 01:06:26,755 ನಾನು ಕೂಡ! 679 01:08:37,921 --> 01:08:39,921 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 680 01:08:40,005 --> 01:08:42,005 ಸೃಜನಾತ್ಮಕ ಮೇಲ್ವಿಚಾರಕ: ಮೌರಿಯಾ. ಸ್. ಅರವಿಂದ್