1 00:00:06,000 --> 00:00:08,916 ಈ ಹಿಂದೆ ದಿ ಪೆರಿಫೆರಲ್ನಲ್ಲಿ 2 00:00:10,000 --> 00:00:11,541 ನನಗಿಲ್ಲಿ ಏನು ಬೇಕಾದರೂ ಸಿಗುತ್ತೆ. 3 00:00:11,625 --> 00:00:15,875 ಆದರೆ ಸ್ವಾರಸ್ಯದ ಸಂಗತಿ? ನಮ್ಮ 'ವರ್ತನಾ ಮಾರ್ಪಾಡಿನ ಇಲಾಖೆ'ಯಿಂದ ಬರುತ್ತವೆ. 4 00:00:17,333 --> 00:00:18,458 ಹೀಗೆ ಮಾಡಲಾರಿರಿ. 5 00:00:18,500 --> 00:00:20,708 ಅವರು ಜನರು. ನಿಜವಾದ ಜನರು. 6 00:00:20,750 --> 00:00:23,250 ಭಯಂಕರವಾಗಿ ಚೆನ್ನಾಗಿದೆ. 7 00:00:24,500 --> 00:00:26,208 ನನಗೆ ರಕ್ಷಣೆಯಿಲ್ಲದೆ ಸಾಕಾಗಿದೆ. 8 00:00:26,291 --> 00:00:28,791 ಹೆಡ್ಸೆಟ್ ಸುರಕ್ಷಿತವಾ ನಮಗೆ ಗೊತ್ತಿಲ್ಲ. 9 00:00:28,875 --> 00:00:30,583 ನೋಡಿರುವುದರಲ್ಲೇ ಅತಿ ವಿಚಿತ್ರ. 10 00:00:30,666 --> 00:00:32,291 ಇಲ್ಲಿ ಎಷ್ಟು ಸುರಕ್ಷಿತ, 11 00:00:32,416 --> 00:00:34,750 ನಮಗಾಗಿ ಯಾರೋ ಬರ್ತಾರೆ ಅಂತ ಕಾಯುವುದು? 12 00:00:34,791 --> 00:00:35,791 ಬಗ್ಗು! 13 00:00:36,750 --> 00:00:39,333 ಶಾಟ್ ಗನ್ ಕೂಡ ಚೆನ್ನಾಗಿ ಹೊಡೆಯಬಲ್ಲೆ. ನೋಡ್ತೀಯಾ? 14 00:00:40,458 --> 00:00:43,166 ಯಾಕಂದ್ರೆ ನನಗಾಗಿ ಬರುವ ಜನರು, ಏನಂದ್ರೆ, 15 00:00:43,833 --> 00:00:46,708 ಅವರು ಯಾವುದನ್ನೂ ಸರಿಪಡಿಸದೆ ಬಿಟ್ಟು ಹೋಗುವವರಲ್ಲ. 16 00:00:58,000 --> 00:01:00,583 ಟೆಕ್ಸಾಸ್ ಹೊರನಾಡು 2028 17 00:01:25,083 --> 00:01:27,333 ಇದಕ್ಕೊಂದು ಸುಲಭವಾದ ಪರಿಹಾರ ಇದೆ. 18 00:01:27,416 --> 00:01:29,000 ನಾನದಕ್ಕೆ ಗುಂಡು ಹೊಡೆಯಲ್ಲ. 19 00:01:29,791 --> 00:01:33,666 ನಿಮ್ಮಲ್ಲಿ ಯಾರಾದರೂ ಪ್ರಯತ್ನಿಸಿದರೆ, ಹಲ್ಲು ಉದುರಿಸಿಬಿಡುತ್ತೇನೆ. 20 00:01:33,750 --> 00:01:37,083 ಯಾರಾದರೂ ಏನಾದರೂ ಮಾಡಿ. ನನಗಿನ್ನು ಈ ದರಿದ್ರ ಸಾಕಾಗಿದೆ. 21 00:01:37,166 --> 00:01:39,333 ಬೇಹುಗಾರಿಕೆ ಪ್ರಕಾರ ಗಾಯಗೊಂಡ ನಾಯಿಗಳಿಂದ 22 00:01:39,416 --> 00:01:42,000 ನಮ್ಮನ್ನು ಬಯಲಿಗೆ ಟೆಕ್ಸನ್ನರು ಕರೆಸುತ್ತಿದ್ದಾರೆ. 23 00:01:42,458 --> 00:01:44,458 ಮತ್ತೀಗ, ಸರಿಯಾಗಿ ನಮ್ಮ ಮುಂದೆ 24 00:01:45,125 --> 00:01:49,000 ಒಂದು ಗಾಯಗೊಂಡ ನಾಯಿ ನರಳುತ್ತಿದೆ. 25 00:01:49,083 --> 00:01:52,000 ಇದನ್ನು ನೋಡಿದರೆ ಎಲ್ಲವೂ ಅರ್ಥವಾಗುತ್ತದೆ, ಅಲ್ವಾ? 26 00:01:52,083 --> 00:01:56,083 ಯಾವನಾದರೂ ಟೆಕ್ಸನ್ನನು ಎಲ್ಲಾದರೂ ಅವಿತು ಕೂತಿದ್ದರೆ, ಒಳ್ಳೆ ವ್ಯಕ್ತಿಗೆ ಕಾಯುತ್ತಾ. 27 00:01:56,166 --> 00:01:58,708 ಮೂರು ಕಿ.ಮೀ. ಆಚೆ ಇರೋ ಸ್ನೈಪರ್ ಗುಂಡು ಹೊಡೆಯಬಲ್ಲ. 28 00:01:59,125 --> 00:02:02,791 ನಿನ್ನ ಪೆದ್ದುತನದ ಅರಿವು ಆಗುವ ಮುಂಚೆಯೇ ಸತ್ತು ಬಿದ್ದಿರುತ್ತೀಯ. 29 00:02:02,875 --> 00:02:06,958 ಇಲ್ಲಿ ಗಾಳಿ ಎಂದು ಕರೆಯುವ ಹಾಳು ಧೂಳಿನ ಬದಲು ಚಂದ್ರನ ಮೇಲಿದ್ದರೂ ಪರವಾಗಿಲ್ಲ. 30 00:02:08,916 --> 00:02:10,041 ಬಾರೋ, ಪುಟ್ಟ. 31 00:02:10,291 --> 00:02:12,916 ನಾವು 19 ದಿನಗಳಿಂದ ಗುಂಡು ಹೊಡೆಸಿಕೊಂಡಿಲ್ಲ. 32 00:02:13,000 --> 00:02:14,708 ಏನಾದರೂ ಕೊಡಿ. ದಯವಿಟ್ಟು? 33 00:02:30,000 --> 00:02:32,541 ಅದರ ಬಗ್ಗೆ ಯೋಚಿಸಲೂ ಬೇಡ. ಕಾನರ್! ಛೆ. 34 00:02:32,625 --> 00:02:33,541 12 ಗಂಟೆ. 35 00:02:35,833 --> 00:02:36,666 ದರಿದ್ರದ್ದು. 36 00:02:44,250 --> 00:02:45,875 ಚಲನೆ, 2 ಗಂಟೆ. 37 00:02:59,333 --> 00:03:01,166 ಅದೊಂದು ಕಾಗೆ ಕಣೋ, ಲಿಯೋನ್. 38 00:03:01,250 --> 00:03:02,208 ಹಾಳಾದ್ದು. 39 00:03:26,083 --> 00:03:26,916 ಹೇ. 40 00:03:38,625 --> 00:03:39,500 ಅರೆ. 41 00:03:40,708 --> 00:03:43,916 ಈ ಸ್ನೈಪರ್ ಗುಂಡುಗಳಿಂದ ಕಷ್ಟವಾಗುತ್ತಿದೆ, ಅಲ್ವಾ? 42 00:03:44,000 --> 00:03:45,500 ಬೇಗ ಮುಗಿಸೋ, ಬೋಳಿಮಗನೇ. 43 00:03:51,958 --> 00:03:54,041 ಇರಪ್ಪ, ಪುಟ್ಟ. ಸ್ವಲ್ಪ ನೋಡ್ತೀನಿ... 44 00:04:16,208 --> 00:04:17,458 ಅಯ್ಯೋ ದೇವರೇ. 45 00:04:21,250 --> 00:04:24,666 ಇಲ್ಲಿದ್ದೇನೆ. ಇಲ್ಲೇ ಇದ್ದೇನೆ. ನಿನಗೇನಾಗಿಲ್ಲ. 46 00:04:24,750 --> 00:04:26,125 ಏನಾಗಿಲ್ಲ. ಚೆನ್ನಾಗಿದ್ದೀಯ. 47 00:04:26,708 --> 00:04:30,416 ಇಲ್ಲಿದ್ದೇನೆ. ಇಲ್ಲೇ ಇದ್ದೀನಿ, ಕಣೋ. ಆಯ್ತಾ? 48 00:04:31,666 --> 00:04:32,875 ಪರವಾಗಿಲ್ಲ, ಕಣೋ. 49 00:05:58,041 --> 00:06:01,083 ದಿ ಪೆರಿಫೆರಲ್ 50 00:06:46,958 --> 00:06:49,083 ವಿಹಾರದ ಸಮಯದಲ್ಲಿ ಅಡ್ಡಿಯಾಗುವುದು ನನಗಿಷ್ಟವಿಲ್ಲ 51 00:06:49,166 --> 00:06:51,208 ಅಂತ ನಿನಗೆ ಗೊತ್ತಲ್ಲ, ಬೀಟ್ರಿಸ್? 52 00:06:51,291 --> 00:06:52,166 ಹೌದು, ಮೇಡಂ. 53 00:06:55,791 --> 00:06:59,750 ಇದು ಸಂಶೋಧನಾ ಸಂಸ್ಥೆಯಲ್ಲಿನ ಇತ್ತೀಚಿನ ಗಲಭೆಯ ಬಗ್ಗೆ ಇರಬಹುದು ಅಂದುಕೊಳ್ಳುವೆ. 54 00:06:59,833 --> 00:07:00,958 ಖಂಡಿತ, ಮೇಡಂ. 55 00:07:01,041 --> 00:07:02,833 ಹತ್ತಕ್ಕಿಂತ ಕಡಿಮೆ ಪದಗಳಲ್ಲಿ ಹೇಳು. 56 00:07:02,916 --> 00:07:07,208 ಸ್ಯಾಕ್ವಿಲ್ ರಸ್ತೆಯಲ್ಲಿ ಒಂದು ಪೆರಿಫೆರಲ್ ಮತ್ತು ಕೋಯ್ಡ್ ಒಳಗೊಂಡ ಕೊಲೆ ನಡೆದಿದೆ. 57 00:07:07,291 --> 00:07:08,875 14 ಪದಗಳಾದವು, ಬೀಟ್ರಿಸ್. 58 00:07:08,958 --> 00:07:12,083 ಖಂಡಿತ, ಮೇಡಂ. ಸ್ಪಷ್ಟತೆಗಾಗಿ ಸ್ವಲ್ಪ ಹೆಚ್ಚೇ ಬೇಕಾಯಿತು. 59 00:07:12,166 --> 00:07:14,666 ಆದರೂ ಬಹಳ ಅಸ್ಪಷ್ಟತೆ ಇದೆ. 60 00:07:14,750 --> 00:07:17,375 ಹೆಚ್ಚಿನ ಸಮಯ ಕೊಟ್ಟರೆ ಹೇಗೆ ಬಳಸಿಕೊಳ್ಳುತ್ತೀಯ? 61 00:07:17,458 --> 00:07:21,250 ಬಲಿಯಾದವರು ಸಂಶೋಧನಾ ಸಂಸ್ಥೆಯ ಸುರಕ್ಷತಾ ಮುಖ್ಯಸ್ಥರು ಎಂದು ತಿಳಿಸಬಲ್ಲೆ. 62 00:07:21,333 --> 00:07:22,416 ಡೇನಿಯಲ್ ಕುಕ್ ಅಂತ. 63 00:07:22,500 --> 00:07:23,833 ನನಗೆ ಡೇನಿಯಲ್ ಗೊತ್ತು. 64 00:07:24,166 --> 00:07:26,666 "ಗೊತ್ತಿದ್ದ" ಅಂದರೆ ಸರಿಯಾದ ಕಾಲಮಾನ, ಮೇಡಂ. 65 00:07:26,750 --> 00:07:28,125 ಕೋಯ್ಡಿನಿಂದ ಸತ್ತನಾ? 66 00:07:28,208 --> 00:07:30,208 ಹೌದು. ಕತ್ತನ್ನು ಸೀಳಲಾಗಿ. 67 00:07:33,500 --> 00:07:34,916 ಎಷ್ಟು ಚೆಂದವಾಗಿದೆ, ಅಲ್ವಾ? 68 00:07:35,000 --> 00:07:36,708 ಬಹುತೇಕ ಚಿತ್ರದಂತೆಯೇ ಇದೆ, ಮೇಡಂ. 69 00:07:36,791 --> 00:07:39,750 ಗೌರವ ಇಲ್ಲದೆ ಮಾತಾಡಬೇಡ, ಬೀಟ್ರಿಸ್. ಅದು ಒಳ್ಳೆಯ ಗುಣ ಅಲ್ಲ. 70 00:07:40,833 --> 00:07:42,458 ನಾವು ಕಾರ್ಯನಿಮಿತ್ತರಾಗಬೇಕು. 71 00:07:54,958 --> 00:07:56,583 ನನಗದು ಕಾಣಿಸುತ್ತಿಲ್ಲ, ಟಾಮಿ. 72 00:07:56,666 --> 00:07:58,291 ಲಾಗ್ ಒಳಗೆ ನಾನೇ ಹಾಕಿದೆ. 73 00:07:58,666 --> 00:07:59,625 ಎರಡು ದಿನಗಳ ಹಿಂದೆ. 74 00:07:59,958 --> 00:08:01,750 ಎರಡು ಎಸ್ಯುವಿಗಳನ್ನು ಕೋರಿದೆ. 75 00:08:01,833 --> 00:08:03,458 ಸಂಖ್ಯೆಯೂ ಇಲ್ಲ, ರಂಗೂ ಇಲ್ಲವೇ? 76 00:08:03,541 --> 00:08:05,541 ಅವುಗಳಿಗೆ ವರ್ಣೀಯ ಪದರ ಹೊದಿಸಲಾಗಿತ್ತು. 77 00:08:05,625 --> 00:08:07,333 ಹಾಗಂದ್ರೆ ಏನು ನನಗೆ ಗೊತ್ತಿರಬೇಕಾ? 78 00:08:07,416 --> 00:08:08,625 ಅವು ಅಗೋಚರದವು. 79 00:08:12,041 --> 00:08:15,666 ನಿನ್ನ ಅಗೋಚರ ಕಾರುಗಳು ಕಾಣೆಯಾಗಿವೆ ಅಂತ ಹೇಳುತ್ತಿದ್ದೀಯಾ? 80 00:08:16,833 --> 00:08:19,416 ನಿನ್ನ ತಲೆಗೆ ಎಷ್ಟು ಜೋರಾಗಿ ಪೆಟ್ಟು ಬಿದ್ದಿತ್ತು? 81 00:08:19,500 --> 00:08:22,583 ಕೀಲಿ ತಗೊಂಡು ನಾನೇ ಲಾಟ್ ಒಳಗೆ ಹುಡುಕಲೇ? 82 00:08:22,666 --> 00:08:25,416 ಅದನ್ನು ಮಾಡಲಾಗದು ಅಂತ ನಿನಗೆ ಗೊತ್ತು. ಕಸ್ಟಡಿಯ ಸರಮಾಲೆ. 83 00:08:26,375 --> 00:08:27,375 ನೀನು ನೋಡಬೇಕಂದ್ರೆ, 84 00:08:29,500 --> 00:08:31,083 ಶೆರಿಫ್ ಜಾಕ್ಮನ್ ಜೊತೆ ಮಾತಾಡು. 85 00:08:56,041 --> 00:08:57,041 ಶೆರಿಫ್. 86 00:09:01,291 --> 00:09:03,791 ನಿನ್ನನ್ನು ನಾನು ಮನೆಗೆ ಕಳುಹಿಸಿದೆನಲ್ಲ, ಟಾಮಿ. 87 00:09:04,125 --> 00:09:06,333 ಮಿಕ್ಕಿದ ಕೆಲಸಗಳನ್ನು ಮುಗಿಸುತ್ತಿದ್ದೇನೆ, ಸರ್. 88 00:09:06,916 --> 00:09:08,375 ಅಯ್ಯೋ ದೇವರೇ. 89 00:09:09,041 --> 00:09:12,750 ಖಂಡಿತವಾಗಲೂ ನಿನ್ನನ್ನು ಯಾರೋ ದೇವತೆ ಕಾಪಾಡುತ್ತಿರಬೇಕು. 90 00:09:13,458 --> 00:09:16,916 ನಿನ್ನ ವರದಿಯನ್ನು ಓದಿದೆ. 91 00:09:17,000 --> 00:09:20,125 ನಿನಗೆ ಹೆಚ್ಚಿನದು ನೆನಪಿಲ್ಲದಂತಿದೆ. ಅದೇನಾದರೂ ಬದಲಾಯಿತಾ? 92 00:09:20,208 --> 00:09:24,166 ಅದರ ಮೇಲೇನೇ ಕೆಲಸ ಮಾಡುತ್ತಿದ್ದೇನೆ, ಸರ್. ಎಲ್ಲಾ ಸ್ವಲ್ಪ ಮಬ್ಬು ಮಬ್ಬಾಗಿದೆ. 93 00:09:29,250 --> 00:09:33,291 ನೋಡಿಲ್ಲಿ, ಟಾಮಿ, ನೀನು ಸ್ವಲ್ಪ ಸಮಯ ವಿರಾಮ ತೆಗೆದುಕೋ. 94 00:09:33,375 --> 00:09:37,625 ವೇತನ ಸಹಿತ ರಜೆ. ನೀನು ವಿಶ್ರಾಂತಿ ತೆಗೆದುಕೊಂಡು ನಿನ್ನ ತಲೆಯನ್ನು ಸರಿ ಮಾಡಿಕೋ. 95 00:09:37,708 --> 00:09:39,875 ನಿನ್ನ ಸಂಪೂರ್ಣ ಸಾಮರ್ಥ್ಯದೊಂದಿಗೆ ವಾಪಸ್ ಬಾ. 96 00:09:39,958 --> 00:09:42,041 ಅವನು ನನ್ನ ಪಹರೆಯಿಂದ ತಪ್ಪಿಸಿಕೊಂಡಿದ್ದಾನೆ. 97 00:09:42,125 --> 00:09:43,291 ನನಗೆ ಗೊತ್ತಿದೆ. 98 00:09:43,375 --> 00:09:46,041 ಅದೆಲ್ಲಾ ಸರಿಹೋಗುತ್ತೆ, ನಾನೇ ಅದನ್ನು ನೋಡಿಕೊಳ್ಳುವೆ. 99 00:09:49,041 --> 00:09:51,833 ನಾನು ನಿನ್ನಲ್ಲಿ ಯಾವಾಗಲೂ ಇಷ್ಟಪಡುವ ಗುಣ, ಥಾಮಸ್. 100 00:09:52,333 --> 00:09:53,916 ನಿನ್ನೊಳಗೆ ಆ ಕಿಚ್ಚಿದೆ. 101 00:09:54,625 --> 00:09:58,166 ನೀನು ಹದಿಹರೆಯದ ವಯಸ್ಸಿನಿಂದಲೂ ಹಾಗೆಯೇ ಇದ್ದೀಯ. 102 00:09:58,916 --> 00:10:01,041 ನಿನಗೆ ಸ್ವಲ್ಪ ಸಲಹೆ ಕೊಡಬಹುದಾ? 103 00:10:01,625 --> 00:10:03,208 ಅದನ್ನು ನಿಯಂತ್ರಿಸಲು ಕಲಿ. 104 00:10:04,500 --> 00:10:06,958 ಅತಿಯಾದರೆ ಅಮೃತವೂ ವಿಷವೇ. 105 00:10:07,791 --> 00:10:10,208 ನನ್ನ ತಾತ ಯಾವಾಗಲೂ ಹೇಳೋರು, 106 00:10:10,291 --> 00:10:13,125 ಮೊಟ್ಟೆಯ ಮೇಲೆ ನಡೆಯುವಾಗ ಎಗರಬೇಡ ಅಂತ. 107 00:10:14,708 --> 00:10:15,916 ಗೊತ್ತಾಯ್ತೇನಪ್ಪಾ? 108 00:10:19,750 --> 00:10:20,916 ಒಳ್ಳೆ ಮನುಷ್ಯ. 109 00:10:22,041 --> 00:10:24,708 ನಾನು ಹೋಗಿ ಸ್ವಲ್ಪ ಕೆಲಸ ನೋಡ್ತೀನಿ. 110 00:11:04,208 --> 00:11:06,666 ಶೆರೀಸಳನ್ನು ಎದುರಿಸಲು ನೀನು ಕಾಣೆಯಾದಾಗ ನಾನೆಷ್ಟು 111 00:11:06,750 --> 00:11:09,166 ತಳಮಳಗೊಂಡಿದ್ದೆ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತದೆ. 112 00:11:10,916 --> 00:11:14,125 ನೀನೊಬ್ಬ ಸಾಮಾನ್ಯ ವ್ಯಕ್ತಿ ಅಷ್ಟೇ ತಾನೇ? 113 00:11:15,041 --> 00:11:16,208 ಅಂದ್ರೆ ಹೇಗೆ? 114 00:11:16,291 --> 00:11:21,250 ಗೊತ್ತಿಲ್ಲ. ನಿನ್ನನ್ನು ನೋಡಿ ಇದನ್ನೆಲ್ಲಾ ನೋಡಿದರೆ, 115 00:11:22,250 --> 00:11:24,791 ನಾನು ಇರುವ ಕಡೆಗಿಂತ ತುಂಬಾ ಭಿನ್ನವಾಗಿದೆ. 116 00:11:26,416 --> 00:11:27,541 ಅಥವಾ ಇರುವ ಕಾಲಕ್ಕಿಂತ. 117 00:11:27,625 --> 00:11:32,333 ಚೆನ್ನಾಗಿರಬಹುದು ಅನ್ಸುತ್ತೆ, ಆದರೆ ನಿಮಗೆ ಕೂಡ ನಮ್ಮಷ್ಟೇ ತೊಂದರೆ ಇದೆ. 118 00:11:35,166 --> 00:11:36,333 ಇನ್ನೂ ಹೆಚ್ಚು ಎನ್ನಬಲ್ಲೆ. 119 00:11:37,166 --> 00:11:38,166 ಇರಬಹುದು. 120 00:11:45,958 --> 00:11:49,666 ಇಲ್ಲಿರುವವರು ಯಾಕೆ ನಮ್ಮಿಂದ ಅಷ್ಟು ದೂರ ಇರ್ತಾರೆ? 121 00:11:50,958 --> 00:11:53,916 ಇದು ಆರೋಗ್ಯಕ್ಕೆ ಸಂಬಂಧಪಟ್ಟಿರುವುದಾ? 122 00:11:57,750 --> 00:12:00,416 ನನ್ನ ಮಾತಿನ ಅರ್ಥ ಏನಂದರೆ ಅವರು ಹತ್ತಿರಕ್ಕೆ ಬರುವುದೇ ಇಲ್ಲ. 123 00:12:01,000 --> 00:12:02,333 ಯಾಕಂದ್ರೆ ಅದು ನಿಜವಲ್ಲ. 124 00:12:03,416 --> 00:12:04,791 ಅದೊಂದು ವರ್ಧಿತ ಮರುಸೃಷ್ಟಿ. 125 00:12:08,375 --> 00:12:09,416 ಹೀಗೆ ಮಾಡು. 126 00:12:20,083 --> 00:12:22,916 ಸಂಶೋಧನಾ ಸಂಸ್ಥೆ ತಯಾರುಪಡಿಸಿದ ತಂತ್ರಜ್ಞಾನ ಇದು. 127 00:12:26,666 --> 00:12:27,916 ದೇವರೇ. 128 00:12:30,791 --> 00:12:31,916 ಯಾಕೆ? 129 00:12:33,666 --> 00:12:36,125 ಮನಸ್ಸಿಗೆ ಹಿತ ಕೊಡಲು ಅನ್ನಬಹುದು. 130 00:12:36,583 --> 00:12:38,166 ಪ್ರಪಂಚದ ಕರಾಳತೆ ಕಡಿಮೆ ಆಗುತ್ತೆ. 131 00:12:39,166 --> 00:12:43,041 ನಿಜವಾಗಿ, ಅದು ನಡೆಯುತ್ತಿದೆ ಅಂತಲೂ ಗೊತ್ತಾಗಲ್ಲ. ಅಲ್ಲೇ ಇರುತ್ತೆ. ಹವಾಮಾನದಂತೆ. 132 00:12:43,708 --> 00:12:46,250 ಆದರೆ ಮಿಕ್ಕ ಎಲ್ಲವೂ ಸತ್ಯ ತಾನೇ? 133 00:12:49,625 --> 00:12:51,791 ಕೆಲವು ಕಟ್ಟಡಗಳನ್ನು ತುಂಬಿಸಲಾಗಿದೆ. 134 00:12:52,250 --> 00:12:55,208 ಅವುಗಳನ್ನು ಇನ್ನೂ ರಿಪೇರಿ ಮಾಡಲು ಶುರುಮಾಡಿಲ್ಲ. 135 00:12:56,333 --> 00:12:58,750 ನೋಡು, ಇಲ್ಲಿ. 136 00:13:09,541 --> 00:13:10,791 ಓ, ದೇವರೇ. 137 00:13:13,708 --> 00:13:17,041 ಮುಕ್ತವಾಗಿಯೇ ಇಂಥ ಕೆಲಸವನ್ನು ಆರ್ಐ ಮಾಡುತ್ತಿದ್ದರೆ, 138 00:13:17,125 --> 00:13:18,916 ರಹಸ್ಯವಾಗಿ ಏನು ಮಾಡುತ್ತಿರಬಹುದು? 139 00:13:24,958 --> 00:13:30,125 ಅಂದು ರಾತ್ರಿ ನಾನು ಮಾಹಿತಿಯನ್ನು ಅವಳಿಂದ ಕಾಪಿ ಮಾಡಿದೆ ಅಂತ ಶೆರೀಸ್ ಹೇಳಿದಳು, ಕದ್ದೆ ಅಂತ. 140 00:13:30,583 --> 00:13:33,458 ಅದು ಸಿಗುವವರೆಗೂ ನನ್ನ ಕೊಲ್ಲಲು ಯತ್ನಿಸುತ್ತಿರುತ್ತಾಳೆ. 141 00:13:33,541 --> 00:13:35,791 ಅದೇನೇ ಆದರೂ, ಇದನ್ನಂತೂ ಸ್ಪಷ್ಟವಾಗಿ ಹೇಳಿದಳು. 142 00:13:35,875 --> 00:13:39,125 ನಾವು ನೋಡಲು ಹೋಗುವ ಫ್ಯಾಬ್ರಿಕೇಟರ್ ನಮಗೆ ಸಹಾಯ ಮಾಡಬಹುದು. 143 00:13:39,208 --> 00:13:42,666 ಎಲೀಟಾಳ ಪೆರಿಫೆರಲ್ ಕಟ್ಟಿದ್ದರಿಂದ, ಎಲ್ಲಿದ್ದಾಳೆಂದು ಗೊತ್ತಿರಬಹುದು. 144 00:13:42,750 --> 00:13:45,708 -ಅವನೇ ಅಂತ ನಿನಗೆ ಹೇಗೆ ಖಾತ್ರಿಯಿದೆ? -ಇವುಗಳ ಆಧಾರದ ಮೇಲೆ. 145 00:13:55,916 --> 00:13:57,125 ಇಂಥದ್ದು ನನ್ನ ಬಳಿ ಇದೆಯಾ? 146 00:14:01,291 --> 00:14:06,125 ಅಂದು ರಾತ್ರಿ ಎಲೀಟಾ ಅದಕ್ಕೆ ನನ್ನ ಕಣ್ಣನ್ನು ಒತ್ತಿದಾಗ, ನನಗೇನೋ ಅನಿಸಿತು. 147 00:14:12,500 --> 00:14:16,083 ಸ್ಟಬ್ ಒಳಗೆ ಮಾಹಿತಿಯನ್ನು ಹೇಗಾದರೂ ಎಲೀಟಾ ಡೌನ್ಲೋಡ್ ಮಾಡಿರಬಹುದೇ? 148 00:14:16,166 --> 00:14:17,375 ಸೈದ್ಧಾಂತಿಕವಾಗಿ. 149 00:14:18,041 --> 00:14:20,250 ಅದನ್ನ ನಿಮ್ಮ ಪ್ರಪಂಚದಲ್ಲಿ ಡೌನ್ಲೋಡ್ ಮಾಡಬೇಕು. 150 00:14:20,333 --> 00:14:21,458 ಅದು ಎಂಥದ್ದು? 151 00:14:22,166 --> 00:14:25,458 ನಿಜವಾಗಿ, ಎಲೀಟಾ ಮಾತ್ರ ಹೇಳಬಲ್ಲಳು. 152 00:14:28,416 --> 00:14:30,958 ಕ್ರೌನ್ & ರೋಸ್ ಚಾಪ್ ಶಾಪ್ ಅತ್ಯುತ್ತಮ ಮಾಂಸ ಸರಬರಾಜುದಾರರು 153 00:14:37,541 --> 00:14:38,416 ಮತ್ತೆ, 154 00:14:40,958 --> 00:14:42,166 ಏನು ಬೇಕಾಗುತ್ತೆ? 155 00:14:43,750 --> 00:14:44,875 ತೂತಿನಲ್ಲಿ-ಕಪ್ಪೆ ಕೊಡಿ. 156 00:14:50,041 --> 00:14:51,250 ಅದು ನಮ್ಮ ಬಳಿ ಇಲ್ಲ. 157 00:14:53,291 --> 00:14:55,541 ಇಂದು ವಿಶೇಷ ಹಂದಿಮಾಂಸ ಇದೆ. ನನ್ನ ಸಲಹೆ. 158 00:14:55,958 --> 00:14:57,041 ಎಂಥ ಅವಮಾನ. 159 00:14:57,750 --> 00:15:00,375 ತೂತಿನಲ್ಲಿ-ಕಪ್ಪೆಯನ್ನು ನಿರೀಕ್ಷಿಸಿ ಬಂದೆವು. 160 00:15:00,458 --> 00:15:02,625 ಇದೇ ನಿಮ್ಮ ವಿಶೇಷ ಎಂದು ಹೇಳಿದರು. 161 00:15:02,708 --> 00:15:04,791 ನಿಮ್ಮಿಬ್ಬರ ಜೋಡಿ ತುಂಬಾ ಚೆನ್ನಾಗಿದೆ. 162 00:15:05,333 --> 00:15:08,041 ಯಾರಿಗಾದರೂ ತೊಂದರೆಯಾಗುವ ಮುನ್ನ ನೀವು ಹೊರಡುವುದು ಒಳಿತು. 163 00:15:10,750 --> 00:15:14,541 ಈಗ, ನನ್ನ ಬಗ್ಗೆ ನಿಮಗೇನನ್ಸುತ್ತೆ, ಮಿಸ್ಟರ್? 164 00:15:14,625 --> 00:15:16,291 ನೀನ್ಯಾರು ಅಂತಲೇ ನನಗೆ ಗೊತ್ತಿಲ್ಲ. 165 00:15:16,916 --> 00:15:19,333 ಸರಿ, ನೋಡಿ, ಇದನ್ನು ಕಟ್ಟಿದವನು, 166 00:15:19,416 --> 00:15:23,250 ನೀವು ಮಾಡುವುದರಲ್ಲೇ ಅತಿ ಶ್ರೇಷ್ಠವಾದದ್ದು ಅದು ಅಂತ ನನಗೆ ತಿಳಿಸಿದ. 167 00:15:24,000 --> 00:15:25,375 ನಿಮ್ಮ ಯಶಸ್ವಿ ದಿನಗಳಲ್ಲೂ. 168 00:15:26,125 --> 00:15:27,458 ನನ್ನ ಯಶಸ್ವಿ ದಿನಗಳಲ್ಲಾ? 169 00:15:28,083 --> 00:15:30,583 ಹೌದು, ನಿಮ್ಮ ಕಲಾತ್ಮಕತೆ ಜಾರುವ ಮೊದಲು. 170 00:15:31,458 --> 00:15:34,000 ಹಾಗಂತ ಹೇಳಿದ ನನ್ಮಗ ಯಾರದು? 171 00:15:34,083 --> 00:15:38,666 ನಾನು ಅವನನ್ನು ನಂಬುವೆ ಎಂದು ಹೇಳುತ್ತಿಲ್ಲ. ಅವನು ಹೇಳಿದ್ದನ್ನು ನಿಮಗೆ ಹೇಳುತ್ತಿರುವೆ ಅಷ್ಟೇ. 172 00:15:38,750 --> 00:15:40,541 ನನ್ನನ್ನು ಸಂತೋಷಪಡಿಸಲೆಂದೇ? 173 00:15:40,625 --> 00:15:45,666 ನಾನು ಅವನನ್ನು ತಪ್ಪು ಎಂದು ಸಾಬೀತುಪಡಿಸಿದರೆ ನನ್ನ ದುಡ್ಡನ್ನು ಅವನು ವಾಪಸ್ ಕೊಡುವನಂತೆ. 174 00:15:46,166 --> 00:15:49,458 ಹಾಗಾಗಿ, ನಿಮಗೊಂದು ಅವಕಾಶ ಯಾಕೆ ಕೊಡಬಾರದು ಅಂತ ನಾನು ಯೋಚಿಸಿದೆ. 175 00:15:50,166 --> 00:15:51,833 ನಿನ್ನಲ್ಲಿದೆ ಅಂತ ತೋರಿಸು. 176 00:16:01,375 --> 00:16:04,041 -ನಾನು ಅಗ್ಗದ ವ್ಯಕ್ತಿ ಅಲ್ಲ. -ದುಡ್ಡು ಸಮಸ್ಯೆ ಅಲ್ಲ. 177 00:16:15,000 --> 00:16:16,458 ಒಳಗೆ ಬನ್ನಿ ತೆರೆದಿದೆ 178 00:16:16,541 --> 00:16:18,125 ಕ್ಷಮಿಸಿ ಮುಚ್ಚಿದೆ 179 00:16:48,166 --> 00:16:49,583 ಸರಿ. 180 00:16:50,666 --> 00:16:54,750 ಕೆಟ್ಟದಾಗಿ ಏನಿಲ್ಲ. ಹೆಚ್ಚು ಶ್ರಮವಿಲ್ಲದೆ ನಿನ್ನ ಹಣವನ್ನು ಕೊಡಿಸಬಲ್ಲೆ. 181 00:16:55,708 --> 00:16:57,041 ಹಾಂ. 182 00:16:57,125 --> 00:17:00,125 ನನಗೇ ಅಚ್ಚರಿಪಡಿಸುವ ಒಂದು ಹೊಸ ವಸ್ತುವಿದೆ. 183 00:17:00,208 --> 00:17:02,833 ಟೈಟಾನಿಯಂ ಉಗುರುಗಳು. ವಾಪಸ್ ಹೋಗುವಂಥವು. 184 00:17:02,916 --> 00:17:05,500 ಬೇಕಾದರೆ ಕಲ್ಲನ್ನು ಕೂಡ ಕೊರೆಯಬಹುದು. 185 00:17:06,000 --> 00:17:07,250 ಮತ್ತೆ ಕಣ್ಣುಗಳು? 186 00:17:08,250 --> 00:17:10,375 ಕಣ್ಣುಗಳನ್ನು ಯಾರು ಬೇಕಾದರೂ ವರ್ಧಿಸಬಲ್ಲರು. 187 00:17:10,458 --> 00:17:12,500 ರಾತ್ರಿಯ ದೃಷ್ಟಿ ಬೇಕಾ? ಶಾಖದ ದೃಷ್ಟಿಯಾ? 188 00:17:13,375 --> 00:17:17,666 ನನಗೆ ಒಂದನ್ನು ಮನುಷ್ಯನ ಕಣ್ಣಿಗೆ ಬದಲಾಯಿಸಬೇಕಾದರೆ? 189 00:18:18,541 --> 00:18:19,458 ಏಳು ಮೇಲೆ. 190 00:18:50,583 --> 00:18:54,916 ದೇವರೇ. ಆಬಿ, ನಮ್ಮಿಬ್ಬರನ್ನೂ ಕೊಲ್ಲಿಸುವ ಮುನ್ನ ಸ್ವಲ್ಪ ಸುಮ್ಮನಿರು. 191 00:18:58,916 --> 00:19:00,791 ಈ ಹೆಂಗಸಿನ ಬಗ್ಗೆ ಹೇಳಿ. 192 00:19:02,791 --> 00:19:06,208 ಮಾತಾಡಲು ಶುರು ಮಾಡು, ರೆಜ್ಜೀ. ಇಲ್ಲದಿದ್ದರೆ ಕತ್ತರಿಸಲು ಶುರುಮಾಡುವೆ. 193 00:19:08,250 --> 00:19:09,416 ಆಯ್ಕೆ ನಿನ್ನದು. 194 00:19:12,541 --> 00:19:14,416 ಅವರು ನನಗೆ ಏನು ಮಾಡುತ್ತಾರೆ ಅಂತೀಯಾ? 195 00:19:14,500 --> 00:19:15,541 ಯಾರು? 196 00:19:15,625 --> 00:19:16,750 ನಿಯೋಪ್ರಿಮ್ಸ್. 197 00:19:18,083 --> 00:19:20,208 ಇಂಥದ್ದರೊಂದಿಗೆ ಅವರು ಆಟ ಆಡಲ್ಲ. 198 00:19:20,291 --> 00:19:21,750 ನನ್ನ ನಾಲಿಗೆ ಕತ್ತರಿಸ್ತಾರೆ. 199 00:19:21,833 --> 00:19:24,500 -ನಿಯೋಪ್ರಿಮ್ಸಿಗೆ ಏನಾಗಬೇಕು? -ಅಯ್ಯೋ, ಹುಡುಗ. 200 00:19:25,375 --> 00:19:29,458 ಅದರ ಕಣ್ಣನ್ನು ಕೊರೆಯಲೆಂದೇ ನನ್ನಿಂದ ಕಟ್ಟಿಸಿದಳು. ಮನುಷ್ಯನ ಕಣ್ಣನ್ನು ಹಾಕಲು. 201 00:19:29,541 --> 00:19:32,000 ನಿಯೋಪ್ರಿಮ್ ಅಲ್ಲದೆ ಅದು ಬೇರೆ ಯಾರಿಗೆ ಗೊತ್ತು? 202 00:19:32,083 --> 00:19:34,625 ಸ್ಕಾಲ್ಪೆಲ್ನೊಂದಿಗೆ ಹಳೆಯಕಾಲದ ಶಸ್ತ್ರಚಿಕಿತ್ಸೆ. 203 00:19:43,208 --> 00:19:46,125 ಇರು, ಇರು. ಹಾಗೆಯೇ ಹೊರಹೋಗಲಾಗದು. 204 00:19:59,958 --> 00:20:02,291 ಎಲೀಟಾ ನಿಯೋಪ್ರಿಮ್ ಅಂತ ನೀನು ನನಗೆ ಹೇಳಲಿಲ್ಲ. 205 00:20:06,291 --> 00:20:07,416 ನನಗೆ ಗೊತ್ತಿರಲಿಲ್ಲ. 206 00:20:13,291 --> 00:20:15,166 ಏನು ಮಾಡಿದೆ ಅಂತ ಅವಳಿಗೆ ಹೇಳಿದ್ಯಾ? 207 00:20:17,125 --> 00:20:19,041 ನಿಮ್ಮ ಶಾಲೆಯನ್ನು ವಶಪಡಿಸಿಕೊಂಡಾಗ? 208 00:20:34,333 --> 00:20:35,750 ಕ್ಷಮಿಸು, ವಿಲ್ಫ್! 209 00:20:40,791 --> 00:20:42,666 ಹವಾನಿಯಂತ್ರಿತ ಜಿಮ್ಮಿಸ್ - ಮಧ್ಯರಾತ್ರಿವರೆಗೆ 210 00:21:06,541 --> 00:21:07,375 ಛೆ! 211 00:21:15,791 --> 00:21:16,833 ದರಿದ್ರದ್ದು. 212 00:21:27,791 --> 00:21:29,500 ಸರಿ, ಸುಮ್ಮನೆ ಹೋಗೋಣ. 213 00:21:36,833 --> 00:21:37,791 ಹೇ, ಗುರು. 214 00:21:39,166 --> 00:21:42,000 ನಾನು ನಿನ್ನನ್ನು ನೋಡಲಿಲ್ಲ. ಬರ್ತಿದ್ದೀಯಾ ಹೋಗ್ತಿದ್ದೀಯಾ? 215 00:21:50,541 --> 00:21:52,000 ಯಾರೋ ನಿನ್ನನ್ನು ಕರೆದರು. 216 00:21:52,083 --> 00:21:54,250 ನಾನಿಲ್ಲಿ, ಇದನ್ನು ತಗೊಳ್ಳೋಕೆ ಬಂದೆ… 217 00:21:56,791 --> 00:21:57,750 ಯಾವುದನ್ನು, ಮೇಕನ್? 218 00:21:59,333 --> 00:22:01,875 ಕಾಫಿ, ಅಂದುಕೊಳ್ಳುವೆ? 219 00:22:04,750 --> 00:22:06,000 ಹಾಂ, ನನ್ನನ್ನು ಕರೆದರು. 220 00:22:07,833 --> 00:22:09,416 ನಾನು ಯೋಚಿಸುತ್ತಿರುವುದು, 221 00:22:10,333 --> 00:22:12,750 ಅವರಾಗಿಯೇ ಯಾಕೆ ಆಚೆ ಬರಬಾರದು? 222 00:22:15,791 --> 00:22:18,708 ಬರೋಕೆ ಭಯ, ಅಂದ್ಕೋತೀನಿ. 223 00:22:20,500 --> 00:22:21,541 ನಿನಗೆ ಭಯ ಇಲ್ವಾ? 224 00:22:22,708 --> 00:22:27,125 ಗೊತ್ತಿಲ್ಲ. ಏನು? ಹೌದು, ಸ್ವಲ್ಪ. 225 00:22:35,666 --> 00:22:39,000 ಆ ಟೋ ಟ್ರಕ್ ಕೆಳಗಡೆ ಎಲ್ಲೋ ಒಂದು ಚಂದ್ರಾಕಾರದ ರೆಂಚ್ ಇದೆ. 226 00:22:39,083 --> 00:22:40,541 ಎತ್ತಿ ಕೊಡಬೇಕಾ? 227 00:22:41,541 --> 00:22:43,250 ನಿನಗೆ? 228 00:22:44,833 --> 00:22:46,166 ಆಯ್ತು, ಸಿಕ್ಕಿತಾ? 229 00:22:47,000 --> 00:22:49,125 -ಸರಿ, ಇಲ್ಲೇನಾ? -ಹೌದು, ಅಲ್ಲಿಯೇ. 230 00:22:49,666 --> 00:22:51,250 -ಅದನ್ನು ಸಿಕ್ಕಿಸು. -ಸರಿ, ತಗೋ. 231 00:22:52,583 --> 00:22:53,416 ಅಷ್ಟೇ. 232 00:22:59,750 --> 00:23:00,666 ಬೇರೆ ಏನಾದ್ರೂ? 233 00:23:02,083 --> 00:23:04,166 ಫ್ಲಿನ್ ಉಪಯೋಗಿಸೋ ತಂತ್ರಜ್ಞಾನದ ಬಗ್ಗೆ ಹೇಳು. 234 00:23:07,583 --> 00:23:11,416 ನಿಜವಾಗಲೂ, ಕಾನರ್, ಇದನ್ನು ತಪ್ಪಾಗಿ ತಿಳಿಯಬೇಡ, 235 00:23:12,500 --> 00:23:15,291 ನಾನು ಹೇಳುವುದರ ಬಗ್ಗೆ ಫ್ಲಿನ್ ಮತ್ತು ಬರ್ಟನ್ನ ಕೇಳಬೇಕು. 236 00:23:15,375 --> 00:23:17,833 ನಾನು ಉಪಯೋಗಿಸಿದೆ. ಹೆಡ್ಸೆಟ್ಟನ್ನು. 237 00:23:19,083 --> 00:23:20,041 ಬರ್ಟನಿಗೆ ಗೊತ್ತು. 238 00:23:22,791 --> 00:23:23,875 ಅದು ನಿಜ, ಅಲ್ವಾ? 239 00:23:26,208 --> 00:23:29,625 ಫ್ಲಿನ್ ಒಂದು ನಿಜವಾದ ದೇಹದಲ್ಲಿ, ನಿಜವಾದ ಸ್ಥಳದಲ್ಲಿ ಕ್ರಮಿಸುತ್ತಿದ್ದಾಳಾ? 240 00:23:30,041 --> 00:23:31,458 ಅಷ್ಟು ನನಗೆ ತಿಳಿದಿರುವುದು. 241 00:23:34,750 --> 00:23:36,000 ಅದರ ಮಿತಿ ಏನು? 242 00:23:37,000 --> 00:23:37,958 ಅಂದರೆ ಯಾವ ಥರ? 243 00:23:38,041 --> 00:23:41,625 ಅಲ್ಲಿ ಎಷ್ಟು ಕಾಲ ಹೋಗಬಹುದು ಅಂತ ಸಮಯದ ಮಿತಿ ಏನಾದರೂ ಇದೆಯೇ? 244 00:23:42,000 --> 00:23:46,583 ನೀನು ಉಚ್ಚೆ ಹೊಯ್ಯಬೇಕು, ಅಲ್ವಾ? ಕುಡಿಯುವುದು, ತಿನ್ನುವುದು, ಅದೆಲ್ಲಾ? ಮತ್ತೆ... 245 00:23:47,625 --> 00:23:51,041 ವಾಲ್ಟರ್ ರೀಡಲ್ಲಿ ಹಾಸಿಗೆ ಮೇಲೆ ಇದ್ದೆ, 246 00:23:51,833 --> 00:23:55,458 ಹೆಚ್ಚೂಕಡಿಮೆ ಎಂಟು ತಿಂಗಳ ಕಾಲ ಕೋಮಾದಲ್ಲಿ. 247 00:23:56,791 --> 00:24:00,416 ಉಚ್ಚೆ ಮಾಡಲು ಕೊಳವೆ ಹಾಕಿದ್ರು. ಕುಡಿಯುವುದಕ್ಕೆ ಐವಿ ಚುಚ್ಚಿದ್ದರು. 248 00:24:00,500 --> 00:24:03,583 ಆಹಾರ ಕೊಡಲು ಕೊಳವೆ ತೂರಿಸಿದ್ದರು. 249 00:24:05,208 --> 00:24:08,333 ನಾನಂದುಕೊಂಡಿದ್ದನ್ನು ಹೇಳುತ್ತಿದ್ದೀಯಾ? 250 00:24:08,416 --> 00:24:11,375 ಯಾರಾದರೂ ನನಗಾಗಿ ಒಂದು ದೇಹವನ್ನು ತಯಾರಿಸಿದರೆ, 251 00:24:11,875 --> 00:24:17,291 ನೀನು ಮತ್ತು ಎಡ್ವರ್ಡ್ ಆ ಜಾಗದಲ್ಲಿ ನನಗೆ ಇರಲು ವ್ಯವಸ್ಥೆ ಮಾಡ್ತೀರಾ? ಶಾಶ್ವತವಾಗಿ? 252 00:24:19,583 --> 00:24:23,000 ನಾನು ವೈದ್ಯನಲ್ಲ, ಕಾನರ್, ಆದರೆ ನಿನ್ನ ಈ ನಿಜವಾದ ದೇಹ, ಇಲ್ಲಿರುವ ದೇಹ, 253 00:24:23,083 --> 00:24:25,875 ಅದನ್ನು ತಡೆದುಕೊಳ್ಳಲು ಆಗುತ್ತಾ ನನಗೆ ಗೊತ್ತಿಲ್ಲ. 254 00:24:25,958 --> 00:24:27,166 ಕ್ಷಮಿಸು, ನನಗೆ… 255 00:24:27,833 --> 00:24:29,833 ನೀನೆಷ್ಟು ಕಾಲ ಬದುಕಬಲ್ಲೆ ಅಂತ ಗೊತ್ತಿಲ್ಲ. 256 00:24:32,958 --> 00:24:36,166 ನೀನು ಇಲ್ಲಿ ಇರುವವರಲ್ಲೇ ತುಂಬಾ ಬುದ್ಧಿವಂತರಲ್ಲಿ ಒಬ್ಬನು, ಅಲ್ವಾ? 257 00:24:37,125 --> 00:24:38,000 ಹೌದು. 258 00:24:38,791 --> 00:24:41,166 -ನನಗೆ ಅದು ಗೊತ್ತಿಲ್ಲ. -ಹೌದು, ಕಣೋ. 259 00:24:41,250 --> 00:24:42,333 ನನ್ನನ್ನು ನಂಬು. 260 00:24:44,625 --> 00:24:48,041 ಎಚ್ಚರಗೊಂಡು ಇಂತಹ ದೇಹದೊಳಗೆ ನಿನ್ನನ್ನು ನೀನು 261 00:24:48,125 --> 00:24:50,916 ಕಂಡುಕೊಳ್ಳುವುದನ್ನು ಊಹಿಸಲಾಗದಿದ್ದರೆ, 262 00:24:53,375 --> 00:24:55,333 ನೀನು ಅದನ್ನು ಅನುಭವಿಸಿಲ್ಲ ಅದಕ್ಕೆ. 263 00:24:57,375 --> 00:24:59,625 ಅದರ ಬಗ್ಗೆ ಸ್ವಲ್ಪ ಯೋಚನೆ ಮಾಡು. 264 00:25:02,500 --> 00:25:04,250 ಆಗ ಮತ್ತೆ ಮಾತಾಡೋಣ. 265 00:25:16,125 --> 00:25:17,958 ಬಯೋಮೆಟ್ರಿಕ್ ಮಾಹಿತಿ ಸಂಗ್ರಹಿಸಲಾಗುತ್ತಿದೆ 266 00:25:18,041 --> 00:25:20,708 ಅಸೆಟ್ ಕಟ್ಟಲಾಗುತ್ತಿದೆ 267 00:25:30,458 --> 00:25:32,875 ಮೌಖಿಕ ವಿಶ್ಲೇಷಣೆ ಜೋಡಿಸಲಾಗುತ್ತಿದೆ 268 00:25:34,708 --> 00:25:35,750 ನರಸಂಬಂಧಿತ ಜೋಡಣೆ ಆರಂಭಿಸಿ ಸಕ್ರಿಯವಾಗಿದೆ 269 00:25:41,250 --> 00:25:42,958 ಸಂರಚನೆಗಳನ್ನು ಅಂತಿಮಗೊಳಿಸಲಾಗುತ್ತಿದೆ 270 00:25:58,208 --> 00:25:59,041 ಪೆರಿಫೆರಲನ್ನು ಸಕ್ರಿಯಗೊಳಿಸಿ ಕಾರ್ಯಗತಗೊಳಿಸಿ 271 00:26:02,583 --> 00:26:06,541 ಸ್ವಲ್ಪ ಭಯಗೊಳಿಸುವಂತೆ ಇರುತ್ತೆ, ಅಲ್ವಾ, ಎಐ ನಿಯಂತ್ರಣ ಪಡೆದಾಗ? 272 00:26:07,666 --> 00:26:09,083 ಸಿಸ್ಟೀನ್ ಚಾಪೆಲ್ ಘಟನೆ. 273 00:26:09,916 --> 00:26:11,875 ಅದಕ್ಕೆ ಖಂಡಿತ ಯಾವುದೋ ಅರ್ಥ ಇರಬೇಕಲ್ಲವೇ? 274 00:26:12,833 --> 00:26:17,125 ದೇವರು ಆಡಂ ಕಡೆಗೆ ಕೈಚಾಚುವುದು, ಜೀವದ ಕಿಡಿಯನ್ನು ಧಾರೆ ಎರೆಯುವುದು. 275 00:26:25,958 --> 00:26:28,958 ನನಗೆ ಗೊತ್ತಾಯ್ತು. ಆ ಚಿಕ್ಕ ಗುಡ್ಡೆಯನ್ನು ಅನುಸರಿಸುವುದಲ್ವಾ? 276 00:26:29,375 --> 00:26:30,750 ಇದು ಆಟ ಅಲ್ಲ, ಟಾಮಿ. 277 00:26:32,833 --> 00:26:34,041 ಪತ್ತೆಮಾಡಬಲ್ಲೆಯಾ? 278 00:26:34,125 --> 00:26:34,958 ಹಾಂ. 279 00:26:47,875 --> 00:26:48,750 ಸಾಕಾ ಇಷ್ಟು? 280 00:26:51,083 --> 00:26:53,416 ನಿನ್ನ ಕಣ್ಣಿನಲ್ಲಿ ಅದುರುವ ಚಲನೆ ಇದೆ. 281 00:26:54,833 --> 00:26:57,916 -ತಲೆ ತಿರುಗುವುದು, ಗುಂಯ್ಗುಡುವಿಕೆ… -ಆರಾಮಾಗಿದ್ದೇನೆ. 282 00:26:58,500 --> 00:27:02,625 ನಿನಗೆ ಏಟಾಗಿದೆ. ಕತ್ತಿನ ಪೆಟ್ಟಾಗಿರಬಹುದು. ಸಿಟಿ ಸ್ಕ್ಯಾನ್ ಮಾಡಬೇಕಾಗಬಹುದು. 283 00:27:02,708 --> 00:27:07,208 ಹೈಸ್ಕೂಲಲ್ಲಿ ಫುಟ್ಬಾಲ್ ಆಡುವಾಗ ದೊಡ್ಡ ಏಟುಗಳನ್ನೇ ತಿಂದಿದ್ದೇನೆ. ವಾಪಸ್ ಹೋಗಬೇಕು. 284 00:27:07,291 --> 00:27:10,583 ತುಂಬಾ ಬುದ್ಧಿವಂತನಂತೆ ಮಾತನಾಡುತ್ತಿರುವೆ. ಸರಿಯಾಗಿ ಯೋಚಿಸುವವರ ಹಾಗೆ. 285 00:27:11,166 --> 00:27:14,375 ಫಿಷರ್ಗಳಿಗೆ ಮಾತು ಕೊಟ್ಟಿದ್ದೇನೆ. ನಿಭಾಯಿಸುತ್ತೇನೆ ಎಂದಿದ್ದೇನೆ. 286 00:27:14,458 --> 00:27:16,833 ಇದೆಲ್ಲಾ ನಡೆದ ಮೇಲೆ ನೀನು ಈಗ ಅದನ್ನು ಬಿಡಬೇಕು. 287 00:27:16,916 --> 00:27:19,500 ಅವನನ್ನು ಬಂಧಿಸಿದ್ದು ನಾನು. ನನ್ನ ವಶದಲ್ಲಿದ್ದ. 288 00:27:19,583 --> 00:27:21,416 ಹಾಗೆ ಸುಮ್ಮನೆ ಬಿಡೋಕಾಗಲ್ಲ. 289 00:27:21,500 --> 00:27:23,833 ನೀನು ಬಿಡಲಿಲ್ಲ. ಆದರೆ ಬಹುತೇಕ ಸಾಯುತ್ತಿದ್ದೆ. 290 00:27:24,833 --> 00:27:26,583 ಅದು ನಮ್ಮ ಮುಂದಿರುವ ದೊಡ್ಡ ಚಿಂತೆ. 291 00:27:26,666 --> 00:27:29,958 ನನಗೆ ಬಹಳ ಚಿಂತೆ ಇದೆ. ಅದಕ್ಕೆ ನಾನು ಅಲ್ಲಿಗೆ ವಾಪಸ್ ಹೋಗಿ, 292 00:27:30,041 --> 00:27:31,875 ಅವನನ್ನು ಹುಡುಕಿ ಒಳಗೆ ಹಾಕಬೇಕು. 293 00:27:31,958 --> 00:27:33,666 ಇದನ್ನು ಮಾಡಿದವರು ಯಾರಂತ ಗೊತ್ತು. 294 00:27:39,541 --> 00:27:43,875 ಚೇಳಿಗೆ ನದಿಯನ್ನು ದಾಟಿಸಿದ ಕಪ್ಪೆಯಂತೆ ವರ್ತಿಸುತ್ತಿರುವೆ. 295 00:27:43,958 --> 00:27:47,041 ಚೇಳು ಕಪ್ಪೆಗೆ ಕುಟುಕಿ ಇಬ್ಬರೂ ಮುಳುಗಿದ್ದು ಯಾಕಂತ ಗೊತ್ತಾಗುತ್ತಿಲ್ಲ. 296 00:27:49,708 --> 00:27:51,250 ನಾನೇನು ಮಾಡಲಿ ಹೇಳು? 297 00:27:52,333 --> 00:27:54,583 ಇಲಾಖೆಯಿಂದ ವೈದ್ಯಕೀಯ ರಜೆ ತೆಗೆದುಕೋ. 298 00:27:55,041 --> 00:27:58,500 ಸುಮ್ಮನೆ ಇರು. ಇಲ್ಲಿ ನನ್ನ ಎರಡು ವರ್ಷಗಳ ಒಪ್ಪಂದ ಮುಗಿಯುತ್ತಾ ಬಂತು. 299 00:27:58,583 --> 00:28:00,083 ನನಗೆ ಎಲ್ಲಾದರೂ ಕೆಲಸ ಸಿಗುತ್ತೆ. 300 00:28:00,583 --> 00:28:02,791 ಮತ್ತೆ ಎದ್ದು ಸಾಗಲು ಒಂದಷ್ಟು ಸಮಯ ಸಿಗುತ್ತದೆ. 301 00:28:02,875 --> 00:28:04,708 ಇದು ನನ್ನ ತವರು, ಡೀ. 302 00:28:05,708 --> 00:28:08,750 ನಾನು ಈ ಊರಿನಲ್ಲೇ ಬೆಳೆದೆ. ಇಲ್ಲೇ ಇಡೀ ಜೀವನ ಕೆಲಸ ಮಾಡಿದೆ. 303 00:28:09,208 --> 00:28:11,125 ಇದನ್ನು ನಿಯಂತ್ರಿಸುವವರು ನಿನಗೆ ಗೊತ್ತು. 304 00:28:11,666 --> 00:28:14,166 ತಾನು ಚೇಳು ಅಂತ ಅವನು ಈಗಷ್ಟೇ ಹೇಳಿದ್ದಾನೆ. 305 00:28:15,833 --> 00:28:17,708 ನಿನ್ನನ್ನು ಮತ್ತೆ ಕುಟುಕುವುದು ಬೇಡ. 306 00:28:24,041 --> 00:28:25,583 ನಾನು ಇದರಿಂದ ಓಡಲ್ಲ. 307 00:28:49,708 --> 00:28:51,875 ವಿಧಾನದ ಪ್ರಕಾರ ಇನ್ನೂ ಹತ್ತು ನಿಮಿಷಗಳಿವೆ. 308 00:28:52,625 --> 00:28:57,125 ಅಡುಗೆ ಮಾಡಲು ನನಗೆ ವಿಧಾನ ಬೇಕಿಲ್ಲ ಅನ್ನುವುದೇ ಒಳ್ಳೆಯ ಸಂಗತಿ ಹಾಗಿದ್ರೆ. 309 00:28:58,000 --> 00:29:03,041 ಒಂದು ವೇಳೆ ಇದ್ದರೆ, ಇದರ ರುಚಿ ಹೇಗಿರುತ್ತೆ ಅಂದ್ರೆ... 310 00:29:03,500 --> 00:29:04,541 ಹೇಗಿರುತ್ತೆ? 311 00:29:04,958 --> 00:29:06,541 ಸರಿಯಾದ ಪದ ಯೋಚಿಸುತ್ತಿದ್ದೇನೆ. 312 00:29:07,625 --> 00:29:09,875 ಸಾಮಾನ್ಯವಾಗಿ ಶೂ ಲೆದರ್ ಅಂತಾರೆ. 313 00:29:09,958 --> 00:29:11,375 ಅದಕ್ಕೆ ಅದನ್ನು ಬೇಡ ಅಂತಿರೋದು. 314 00:29:11,708 --> 00:29:14,916 ಕ್ಲೀಷೆಗಳಲ್ಲಿ ಅಡ್ಡಿಯಾಗೋದು ಬೇಡ ಅಂತ. ರುಚಿ ನೋಡು. 315 00:29:18,708 --> 00:29:20,166 -ಸರಿ. -ಏನು ಸರಿ? 316 00:29:20,958 --> 00:29:22,541 ಸರಿ, ನೀನೇ ಸರಿ ಅಂತ. 317 00:29:22,625 --> 00:29:25,458 -ಅದರ ಕೊನೆಯ ಭಾಗ ಮರೆಯುತ್ತಿರುವೆ. -ಯಾವುದು? 318 00:29:25,750 --> 00:29:26,750 "ಎಂದಿನಂತೆ." 319 00:29:29,791 --> 00:29:31,583 ನಮ್ಮ ಅತಿಥಿ ಎಚ್ಚರಗೊಂಡಿದ್ದಾರೆ. 320 00:29:31,666 --> 00:29:34,416 ಏನ್ಸಾರ್, ನಿಮ್ಮ ಟೈಮಿಂಗ್ ಸಕ್ಕತ್ತು. 321 00:29:36,541 --> 00:29:38,666 ಬಿಸಿ ಇರುವಾಗಲೇ ತಿನ್ನಿರಿ. 322 00:29:40,208 --> 00:29:42,833 ನೀವು ನಿದ್ದೆಯಲ್ಲಿರುವಾಗ ಕೆಲವು ಕೆಲಸ ಮಾಡಬೇಕಾಯಿತು. 323 00:29:42,916 --> 00:29:46,083 ನಿಮ್ಮನ್ನು ನಮ್ಮಲ್ಲಿಗೆ ತಲುಪಿಸಿದಾಗ ನಿಮ್ಮ ಸ್ಥಿತಿ… 324 00:29:47,333 --> 00:29:49,541 -ಅದು ಯಾವ ಪದ ನೀನು ಹೇಳಿದ್ದು? -ಅಹಿತ. 325 00:29:50,875 --> 00:29:53,083 ಸರಿ, ಅದಾದ ಮೇಲೆ, ಶುಭ್ರ ಬಟ್ಟೆಗಳು. 326 00:29:53,416 --> 00:29:57,208 ಈಗ ನೀವು ಒಗ್ಗಿಕೊಳ್ಳಬೇಕಾದ ವಸ್ತು ಅಂದರೆ ಕೊರಳಪಟ್ಟಿ. 327 00:29:59,750 --> 00:30:00,708 ಇದೇನು ಮಾಡುತ್ತೆ? 328 00:30:01,208 --> 00:30:05,250 ಇಂಥ ವಸ್ತುವಿನ ಬಗ್ಗೆ ಎರಡು ರೀತಿಯ ಅಭಿಪ್ರಾಯಗಳು ಕಂಡುಬರುತ್ತವೆ. 329 00:30:06,416 --> 00:30:09,291 ಕೆಲವು ಜನ ಸೇರುವಂತಹ ವರ್ಗ, 330 00:30:09,375 --> 00:30:12,916 "ನೋಡದಿದ್ದರೂ ನಂಬುವಂಥವರೇ ನಿಜವಾಗಿಯೂ ಧನ್ಯರು." 331 00:30:13,000 --> 00:30:14,375 ಜಾನ್ 20:29. 332 00:30:14,458 --> 00:30:16,958 ಮತ್ತೊಂದು ವರ್ಗ ಅನುಸರಿಸುವ ಮಾರ್ಗ, 333 00:30:17,041 --> 00:30:21,583 "ಕೆಟ್ಟದಾಗಿ ಸುಟ್ಟುಕೊಂಡವನಷ್ಟು ಬೇರೆ ಯಾರೂನೂ ಬೆಂಕಿಯನ್ನು ಗೌರವಿಸುವುದಿಲ್ಲ." 334 00:30:21,666 --> 00:30:23,333 ಪೀಟ್ ಟೌನ್ಸೆಂಡ್, ಅಂದ್ಕೋತೀನಿ. 335 00:30:23,750 --> 00:30:25,416 ನಿನ್ನ ಅಭಿಪ್ರಾಯ ವರ್ಗ ಯಾವುದು? 336 00:30:34,875 --> 00:30:36,708 ರಾಕ್ ಅಂಡ್ ರೋಲ್ ವರ್ಗ. 337 00:30:36,791 --> 00:30:38,166 ಅಷ್ಟು ಮಾತ್ರ ಯೋಚಿಸಬೇಕಿತ್ತು. 338 00:30:38,250 --> 00:30:39,666 ಹೌದು. ಗೊತ್ತು. 339 00:30:41,291 --> 00:30:44,833 ಎದ್ದೇಳಪ್ಪ, ದೊಡ್ಡ ಮನುಷ್ಯ. ನನಗೆ ಗೊತ್ತು. ಗೊತ್ತು. ಗೊತ್ತು. 340 00:30:45,166 --> 00:30:46,750 ಹಾಂ. ಸರಿ. ಇಲ್ಲಿ. 341 00:30:51,375 --> 00:30:52,666 ಇಲ್ಲಿ. ತಗೋ. 342 00:30:53,416 --> 00:30:54,375 ಇಲ್ಲಿ. 343 00:30:55,750 --> 00:30:59,916 ಇದನ್ನು ಮಾರ್ಪಡಿಸಬಹುದು. ಒಂದರಿಂದ ಹತ್ತರೊಳಗೆ. ಅದು ನಾಲ್ಕಾಗಿತ್ತು. 344 00:31:00,000 --> 00:31:01,250 ಸತ್ಯವಾಗಿ ಮೂರು. 345 00:31:02,291 --> 00:31:04,416 ಆದರೂ ಇದು ಒಳ್ಳೆಯ ಅನುಭವ ಅಲ್ಲ. 346 00:31:06,125 --> 00:31:07,416 ನನ್ನನ್ನು ಕರೆಸಿದ್ದು ನೀವಾ? 347 00:31:15,083 --> 00:31:17,625 ರೋಸ್ಟ್ ತಿನ್ನಿ. ದಯವಿಟ್ಟು. 348 00:31:39,166 --> 00:31:41,875 ಏನನ್ಸುತ್ತೆ? ಸತ್ಯವಾಗಿ ಹೇಳು. 349 00:31:46,500 --> 00:31:47,333 ಚೆನ್ನಾಗಿದೆ. 350 00:31:50,500 --> 00:31:52,875 ಮಾಂಸವನ್ನು ಮೆತ್ತಗೆ ಮಾಡುವ ಶ್ರೇಷ್ಠ ವಿಧಾನ ಗೊತ್ತಾ? 351 00:31:57,375 --> 00:31:59,208 ಬಹುತೇಕರು ಸುತ್ತಿಗೆ ಉಪಯೋಗಿಸುತ್ತಾರೆ. 352 00:31:59,666 --> 00:32:03,458 ಬೇಗ ಸುಲಭವಾಗಿ ಆಗುತ್ತೆ, ಆದರೆ ಗಲೀಜು ಕೂಡ ಆಗುತ್ತದೆ, 353 00:32:04,083 --> 00:32:06,583 ಅದರ ಫಲಿತಾಂಶ ಹೇಳೋಕಾಗಲ್ಲ. 354 00:32:07,916 --> 00:32:11,708 ಅದಕ್ಕೆ ನನಗೆ ಉಪ್ಪುನೀರು ಇಷ್ಟ. 355 00:32:13,333 --> 00:32:15,583 ನಿಧಾನವಾದ, ನಿಯಂತ್ರಿತ ಕ್ರಿಯೆ, 356 00:32:16,000 --> 00:32:20,125 ನೀನು ತಿನ್ನುವುದರ ಸ್ವರೂಪವನ್ನೇ ನಿನ್ನ ರುಚಿಗೆ ತಕ್ಕಂತೆ ಬದಲಿಸಿಬಿಡುತ್ತದೆ. 357 00:32:21,500 --> 00:32:23,750 ಮತ್ತು ನಿನಗೆ ಸೂಕ್ತವಾದ ಉಪ್ಪುನೀರು ಸಿಕ್ಕಾಗ, 358 00:32:24,625 --> 00:32:26,500 ಬಹುತೇಕ ಬಾರಿ ಅದರ ಭರವಸೆ ಇರುತ್ತೆ. 359 00:32:28,500 --> 00:32:29,666 ಈಗ... 360 00:32:31,125 --> 00:32:34,333 ಇತ್ತೀಚೆಗೆ ನನಗೆ ಗೊತ್ತಾದ ವಿಷಯ, 361 00:32:35,833 --> 00:32:40,916 ಯಾರೋ ನನ್ನ ಅಡುಗೆಮನೆಯಲ್ಲಿದ್ದು ನನ್ನ ಉಪ್ಪುನೀರನ್ನು ಕೆಡಿಸುತ್ತಿದ್ದಾರೆ ಅಂತ. 362 00:32:42,750 --> 00:32:44,500 ಅದು ಯಾರಂತ ನನಗೆ ಗೊತ್ತಾಗಬೇಕು. 363 00:32:55,166 --> 00:32:58,125 ನಿನಗೆ ಫ್ಲಾಶ್ ಬ್ಯಾಕ್ ಆಯ್ತು ಅಂತ ಬರ್ಟನ್ ಹೇಳಿದ. ಕೆಟ್ಟದು. 364 00:32:58,375 --> 00:32:59,583 ಏನಾದ್ರೂ ತಗೋತಿದ್ದೀಯಾ? 365 00:32:59,666 --> 00:33:03,083 ಇಲ್ಲ, ಅದರಿಂದ ಪ್ರಯೋಜನ ಇಲ್ಲ. ಇನ್ನೂ ಹಾಗೇ ಅನ್ಸುತ್ತೆ. 366 00:33:03,791 --> 00:33:05,125 ಸ್ವಲ್ಪ ತೆಗೆದು ಬಿಡುತ್ತೇನೆ. 367 00:33:05,208 --> 00:33:07,333 ಅದು ಇನ್ನು ನಿನ್ನ ಸಮಸ್ಯೆ ಅಲ್ಲ, ಲಿಯೋನ್. 368 00:33:09,541 --> 00:33:10,916 ಮತ್ತೆ ನಾನು ಹಾಡಲೇ? 369 00:33:11,708 --> 00:33:14,666 ನನ್ನ ಧ್ವನಿ ಕೇಳಲು ಹಿತವಾಗಿರುತ್ತೆ ಅಂತ ಎಲ್ಲರೂ ಹೇಳುತ್ತಾರೆ. 370 00:33:16,250 --> 00:33:20,166 ಸಹಾಯವಾಗಲು ನೋಡುತ್ತಿರುವೆ ಅಷ್ಟೇ, ಕಾನರ್. ಹೇಗಾದರೂ ಸರಿ. ನಿನ್ನಿಷ್ಟ. 371 00:33:26,375 --> 00:33:29,583 ನಾನೊಂದು ಉರುಳುವ ಬಂಡೆ 372 00:33:29,666 --> 00:33:33,000 ಒಂಟಿಯಾಗಿ ಕಳೆದುಹೋಗಿರುವೆ 373 00:33:33,708 --> 00:33:36,375 ಈ ಪಾಪದ ಬದುಕಿನಲ್ಲಿ 374 00:33:36,458 --> 00:33:39,708 ಬೆಲೆಯನ್ನು ತೆತ್ತಿರುವೆ 375 00:33:41,166 --> 00:33:42,833 ನಾನು ಉರುಳುವಾಗ-- 376 00:33:42,916 --> 00:33:44,916 ಅಯ್ಯೋ, ಸಾಕು ಬಿಡು. ಆಯ್ತು. ಸುಮ್ನೆ-- 377 00:33:47,458 --> 00:33:48,375 ಸುಮ್ಮನೆ ಮಾಡು. 378 00:34:27,541 --> 00:34:29,041 ನನ್ನ ಕಾಲುಗಳನ್ನು ತಗೋಬೇಡ! 379 00:34:30,833 --> 00:34:31,750 ದಯವಿಟ್ಟು! 380 00:35:00,375 --> 00:35:01,958 ಇದು ಸಂಕೀರ್ಣಗೊಳ್ಳುತ್ತಿದೆ, 381 00:35:02,750 --> 00:35:03,625 ಅಲ್ವಾ? 382 00:35:07,291 --> 00:35:09,166 ನಿನ್ನ ಮುಖಭಾವನೆ ಸರಿ ಎನಿಸುತ್ತಿಲ್ಲ. 383 00:35:09,666 --> 00:35:12,166 ಪೋಲ್ಟಿನ ಮೂರ್ಛೆಗೆ ಚಿಕಿತ್ಸೆ ನೀಡುತ್ತಿರುವ ವೈದ್ಯೆ, 384 00:35:12,250 --> 00:35:16,125 "ಆಕ್ಸಿಪಿಟಲ್ ಲೋಬ್ ಒಳಗೆ ಸ್ಥಳೀಯ ಬ್ಯಾಕ್ಟೀರಿಯಾದ ಸೋಂಕಿನ" ಬಗ್ಗೆ ಹುಡುಕಿದ್ದಾಳೆ. 385 00:35:16,208 --> 00:35:17,958 ಹಾಗಂದ್ರೆ ಎಲೀಟಾ ಏನಾದರೂ... 386 00:35:18,041 --> 00:35:20,208 ಹಾಗೆಯೇ ಅನ್ಸುತ್ತೆ. 387 00:35:20,291 --> 00:35:21,625 ಅದು ಸಾಧ್ಯವೇ? 388 00:35:22,416 --> 00:35:23,458 ಅವಳ ಕಣ್ಣಿನ ಮೂಲಕವೇ? 389 00:35:24,958 --> 00:35:26,791 ಹೌದು, ಸೈದ್ಧಾಂತಿಕವಾಗಿ. 390 00:35:45,500 --> 00:35:46,541 ಮರ್ಫಿಯವರೇ! 391 00:35:47,583 --> 00:35:49,625 ಕ್ಷಮಿಸಿ, ನಮ್ಮ ಪರಿಚಯ ಆಗಿಲ್ಲ. 392 00:35:50,083 --> 00:35:52,916 ನನ್ನ ವಯಸ್ಸಿಗೆ ನನ್ನ ಬಾಯಿ ನಿಲ್ಲಲ್ಲ, ಮರ್ಫಿಯವರೇ. 393 00:35:53,000 --> 00:35:56,083 ನನ್ನ ಪಾಪಗಳಿಗೆ ಎಷ್ಟೋ ವಿಚಾರಗಳು ನನಗೆ ಲಭ್ಯವಿವೆ, ಅದರಿಂದಾಗಿ 394 00:35:56,166 --> 00:36:00,333 ನಾನು ಭೇಟಿಯಾಗಿರುವವರನ್ನೆಲ್ಲ ಆತ್ಮೀಯವಾಗಿ ಮಾತನಾಡಿಸುವ ಕೆಟ್ಟ ಅಭ್ಯಾಸ ಆಗಿಬಿಟ್ಟಿದೆ. 395 00:36:00,416 --> 00:36:03,041 ಹಾಗೇನಿಲ್ಲ, ಮೇಡಂ. ತೊಂದರೆ ಏನಿಲ್ಲ. 396 00:36:03,125 --> 00:36:05,000 ಹಾಗಿದ್ದರೆ, ಮಾಡ್ತೀನಿ ಅನ್ಸುತ್ತೆ. 397 00:36:05,083 --> 00:36:06,333 ಹೌದು, ಮೇಡಂ, ಹಾಗನ್ನಬಲ್ಲೆ. 398 00:36:06,416 --> 00:36:09,416 ಜ಼ುಬೋವ್ ಮತ್ತು ನೆದರ್ಟನ್ ಅವರಿಗೆ ನನ್ನ ಪರಿಚಯ ಮಾಡಿಸುತ್ತೀರಾ? 399 00:36:09,500 --> 00:36:12,666 ನಾನು ನಗರ ಪೊಲೀಸ್ ಇಲಾಖೆಯ ಇನ್ಸ್ಪೆಕ್ಟರ್ ಏಯ್ನ್ಸ್ಲೀ ಲೋಬಿಯರ್. 400 00:36:14,125 --> 00:36:15,833 ನಗರ ಪೊಲೀಸರು, ಸರ್. 401 00:36:17,291 --> 00:36:18,958 -ಪೊಲೀಸಾ? -ಇನ್ಸ್ಪೆಕ್ಟರ್. 402 00:36:19,958 --> 00:36:21,875 ನನ್ನ ತಂದೆಯ ವಕೀಲರನ್ನು ಕರೆಸಿ. 403 00:36:22,375 --> 00:36:23,416 ತಕ್ಷಣವೇ! 404 00:36:23,500 --> 00:36:25,041 ಫೋನುಗಳನ್ನು ಕಡಿತಗೊಳಿಸಲಾಗಿದೆ. 405 00:36:25,125 --> 00:36:27,208 ಹಿಂಬದಿಯಿಂದ ತಪ್ಪಿಸಿಕೊಳ್ಳುವುದು ಜಾಣತನ. 406 00:36:27,291 --> 00:36:29,333 ಆಕೆಗೆ ನೀವಿರುವುದು ಗೊತ್ತು. ಹೇಳಿದರು. 407 00:36:33,666 --> 00:36:35,208 ನಾನೇನು ಮಾಡಬೇಕು, ಸರ್? 408 00:36:35,875 --> 00:36:37,541 ಒಳಗಡೆ ಬಿಟ್ಟು ಸಾಯಿ. 409 00:36:37,625 --> 00:36:39,583 ಹೆಚ್ಚು ಕಾಲ ಕಾಯಿಸಿದರೆ ತಪ್ಪಾಗಿ ಕಾಣುತ್ತೆ. 410 00:36:43,000 --> 00:36:45,125 ಏನೇ ಮಾಡಿದರೂ ಸುಳ್ಳು ಹೇಳಬೇಡ. 411 00:36:45,208 --> 00:36:47,833 ನಿನಗದು ಅಸಾಧ್ಯವೆನಿಸಬಹುದು. 412 00:36:47,916 --> 00:36:51,166 ಅವರಲ್ಲಿ ಆ ಸಾಮರ್ಥ್ಯ ಇದೆ, ಮೇಲು ಸ್ತರದ ಅಧಿಕಾರಿಗಳಲ್ಲಿ. 413 00:36:52,541 --> 00:36:55,666 ಆಕೆ ನಮ್ಮನ್ನು ಕೇಳುವ ಪ್ರಶ್ನೆಗಳಿಗೆ ಆಕೆಯ ಬಳಿಯೇ ಉತ್ತರ ಇದೆ 414 00:36:56,875 --> 00:36:58,791 ಎಂದು ಭಾವಿಸುವುದು ಒಳ್ಳೆಯದು. 415 00:37:02,416 --> 00:37:03,500 ಛೆ. 416 00:37:33,666 --> 00:37:36,833 ಏನೋ ನಡೆಯಿತು, ನಿನಗೆ ತಿಳಿದಿದ್ದರೆ ಒಳ್ಳೆಯದು. 417 00:37:38,666 --> 00:37:41,333 ಸೇತುವೆಯ ಮೇಲೆ ನಾನು ವಶಕ್ಕೆ ಪಡೆದ ಆ ಮುದುಕ. 418 00:37:42,750 --> 00:37:43,750 ಹಾಂ? 419 00:37:44,833 --> 00:37:48,916 ಇದನ್ನು ಹೇಗೆ ಹೇಳಬೇಕೋ ಗೊತ್ತಿಲ್ಲ, ಆದರೆ ಎಲ್ಲವೂ ಸಂಪೂರ್ಣ ಹಾಳಾಗಿ ಹೋಯಿತು... 420 00:37:49,000 --> 00:37:50,250 ಅವನು ತಪ್ಪಿಸಿಕೊಂಡನೇ? 421 00:37:50,333 --> 00:37:53,375 ಒಂದು ಕ್ಷಣ ಇರು, ಆಯ್ತಾ? ಅದು ಹಾಗಲ್ಲ. 422 00:37:53,458 --> 00:37:55,250 ಮತ್ತೆ ಹೇಗೆ, ಟಾಮಿ? 423 00:37:55,333 --> 00:37:57,750 ನಿನಗಿದ್ದಿದ್ದು ಒಂದೇ ಕೆಲಸ, ತಪ್ಪಿಸಿಕೊಂಡ. 424 00:37:57,833 --> 00:37:59,791 ನನಗೆ ಅಪಘಾತವಾಯಿತು, ಬರ್ಟನ್. 425 00:38:00,500 --> 00:38:02,750 ನಾನು ನಿನಗೆ ಹೇಳೋದು, ಅದು ಆಕಸ್ಮಿಕವಲ್ಲ. 426 00:38:02,833 --> 00:38:05,041 ಯಾರೋ ದಾಳಿ ಮಾಡಿದ ಹಾಗಿತ್ತು. 427 00:38:05,125 --> 00:38:06,458 ದಾಳಿ ಮಾಡಿದ ಹಾಗಿತ್ತಾ? 428 00:38:06,958 --> 00:38:10,708 ದಾಳಿಯ ಬಗ್ಗೆ ಹೇಳ್ತೀನಿ ಕೇಳು, ಬಹಳ ಸಲ ಎರಡೂ ಕಡೆ ಇದ್ದು ಬಂದವನು ನಾನು. 429 00:38:10,791 --> 00:38:13,458 ದಾಳಿಯಲ್ಲಿ ಸಾಮಾನ್ಯವಾಗಿ ಗುರಿ ಮತ್ತು ಚಲಿಸುವ ಮಾರ್ಗದ 430 00:38:13,541 --> 00:38:15,833 ಬಗ್ಗೆ ನಿರ್ದಿಷ್ಟ ಮಾಹಿತಿ ಬೇಕಾಗುತ್ತೆ. 431 00:38:15,916 --> 00:38:17,708 ಅದೇ ನಿನಗೆ ಹೇಳುತ್ತಿರುವುದು, 432 00:38:17,791 --> 00:38:20,333 ನನ್ನನ್ನು ಗುರಿಮಾಡಿದರು, ಅವರಿಗೇನೋ ಗೊತ್ತಿದ್ದಂತೆ. 433 00:38:20,416 --> 00:38:22,625 ಯಾರು? ಏನನ್ನು ಹೇಳುತ್ತಿರುವೆ, ಟಾಮಿ? 434 00:38:22,708 --> 00:38:25,333 ಯಾರನ್ನು ವಶಕ್ಕೆ ಪಡೆದಿದ್ದೆ ಅವರಿಗೆ ಗೊತ್ತಿತ್ತು. 435 00:38:25,416 --> 00:38:26,791 ನಾನು ಬರುವುದು ಗೊತ್ತಿತ್ತು. 436 00:38:26,875 --> 00:38:28,291 -ಶೆರಿಫ್ ಇಲಾಖೆಗಾ? -ಹೌದು. 437 00:38:29,833 --> 00:38:30,833 ಶೆರಿಫ್ ಜಾಕ್ಮನ್. 438 00:38:32,250 --> 00:38:35,708 ಅದರ ಅರ್ಥ ಕೋರ್ಬೆಲ್ ಪಿಕೆಟ್ ಬಳಿ ನಮ್ಮವನು ಇದ್ದಾನೆ. 439 00:38:39,125 --> 00:38:40,791 ಈಗ ನನಗೆ ಅರ್ಥವಾಯಿತು. 440 00:38:40,875 --> 00:38:42,291 ನನಗೆ ಅದೇ ಅರ್ಥವಾಗುತ್ತಿಲ್ಲ. 441 00:38:43,625 --> 00:38:46,208 ನೋಡು, ಬರ್ಟನ್, ಇದೆಲ್ಲಾ ಶುರುವಾದ ರೀತಿ, 442 00:38:46,291 --> 00:38:49,583 ಹೊದಿಕೆ ಉಟ್ಟ ಕಾರುಗಳು, ಕವಚಗಳು, 443 00:38:49,666 --> 00:38:52,541 ಇಲ್ಲಿ ಅಂದು ನಡೆದ ಘಟನೆ, ಲಾಟರಿ, ಈಗ ಇದು? 444 00:38:52,958 --> 00:38:54,791 ಇಲ್ಲೇನು ನಡೆಯುತ್ತಿದೆ, ಬರ್ಟನ್? 445 00:38:54,875 --> 00:38:55,958 ಏನು ಗೊತ್ತಾ? 446 00:38:56,041 --> 00:38:59,458 ನೀನು ಸುಮ್ಮನೆ ನಿನ್ನ ಪಾಡಿಗೆ ನೀನು ಮುಚ್ಕೊಂಡು ಹೋದರೆ ಒಳ್ಳೆಯದು. 447 00:39:00,666 --> 00:39:03,541 ಇಡೀ ಜೀವನ ನಿನ್ನ ಕುಟುಂಬ ನನಗೆ ಗೊತ್ತಿದೆ, ಹೀಗೆ ಹೇಳ್ತೀಯಾ? 448 00:39:03,625 --> 00:39:06,500 ಪಿಕೆಟ್ ಒಬ್ಬನೇ ಅಲ್ಲ. ಬೇರೆ ಶಕ್ತಿಗಳಿಗೂ ನಮ್ಮ ಸಾವು ಬೇಕು-- 449 00:39:06,583 --> 00:39:07,666 "ಬೇರೆ ಶಕ್ತಿಗಳು"? 450 00:39:07,750 --> 00:39:09,500 ಅದರೊಂದಿಗೆ ನಾನೇನು ಮಾಡಬೇಕು? 451 00:39:09,583 --> 00:39:13,333 ಅದಕ್ಕೆ ನೀನು ಚೆನ್ನಾಗಿ ಏಟು ತಿಂದು, ಜರ್ಜರಿತನಾಗಿ, ಬದುಕಿರುವುದೇ ಅದೃಷ್ಟ. 452 00:39:15,000 --> 00:39:16,166 ಮುಂದಿನ ದಾಳಿಯಲ್ಲಿ ನಿನಗೆ 453 00:39:17,833 --> 00:39:19,375 ಇಷ್ಟು ಅದೃಷ್ಟ ಇರದಿರಬಹುದು. 454 00:39:36,625 --> 00:39:38,541 ನನಗೆ ಸ್ವಲ್ಪ ಚಿಂತೆಯಾಗಿದೆ, ಶೆರಿಫ್, 455 00:39:38,625 --> 00:39:41,750 ನಿಮ್ಮ ಡೆಪ್ಯೂಟಿ ನಮಗೆ ಬೇಡದ ಭಾರ ಆಗುತ್ತಿದ್ದಾನೆ ಅಂತ. 456 00:39:42,333 --> 00:39:45,916 ಸರಿ, ಕೋರ್ಬೆಲ್, ನೀನು ಅಲ್ಲಿಯೇ ಕುಳಿತುಕೊಂಡು, 457 00:39:46,000 --> 00:39:48,791 ಟಾಮಿ ಕಾನ್ಸ್ಟಂಟೈನ್ ಅವನ ವಶದಲ್ಲಿದ್ದ ಕೈದಿಯನ್ನು 458 00:39:48,875 --> 00:39:50,500 ಕಳೆದುಕೊಂಡ ದೃಶ್ಯ ನೋಡಬೇಕನ್ನು, 459 00:39:50,583 --> 00:39:53,791 ಅದನ್ನು ನೋಡಲು, ಎರಡು ದರಿದ್ರ ಪಾಸ್ವರ್ಡ್ ಹಾಕಬೇಕು. 460 00:39:53,875 --> 00:39:55,458 ನಿಜಕ್ಕೂ ದಡ್ಡತನ ಇದು. 461 00:39:56,916 --> 00:39:59,208 ನಾನು ಯಾವ ಪಾಸ್ವರ್ಡ್ಸ್ ಆಯ್ಕೆಮಾಡಿದೆ ಊಹಿಸು? 462 00:40:00,583 --> 00:40:04,250 ಪಾಸ್ವರ್ಡುಗಳ ವಿಚಾರವೇ ಹಾಗೆ, ಅಲ್ವಾ, ಶೆರಿಫ್? 463 00:40:04,708 --> 00:40:06,250 ಯಾರೂ ಅವನ್ನು ಊಹಿಸದಂತೆ? 464 00:40:07,833 --> 00:40:08,750 "ಹಾಳಾಗಿ ಹೋಗು" 465 00:40:10,333 --> 00:40:11,916 ಮತ್ತು "ಹೇಲು ತಿನ್ನು". 466 00:40:13,333 --> 00:40:14,375 ದೊಡ್ಡಕ್ಷರಗಳು. 467 00:40:15,166 --> 00:40:18,125 ಕೂಗಿ ಹೇಳುವಂತೆ. ಇಲ್ಲಿ ಒಬ್ಬನೇ ಆರಾಮಾಗಿರ್ತೀಯಾ? 468 00:40:18,208 --> 00:40:19,791 ಹೌದು, ಸರ್, ಇರಬಲ್ಲೆ. 469 00:40:19,875 --> 00:40:22,083 ಒಳ್ಳೆಯದು. ಆರಾಮವಾಗಿ ಇರು. 470 00:40:25,500 --> 00:40:26,708 ಅಬ್ಬಾ. 471 00:40:27,916 --> 00:40:28,958 "ಹಾಳಾಗಿ ಹೋಗು". 472 00:40:30,291 --> 00:40:32,541 "ಹೇಲು ತಿನ್ನು". 473 00:40:32,833 --> 00:40:35,000 ನಿನಗೆ ಎಷ್ಟು ವಯಸ್ಸು? 474 00:40:35,083 --> 00:40:37,375 28 ಇರಬಹುದೇನೋ. 475 00:40:38,708 --> 00:40:41,208 ನಿಮಗೆ ಹೆಚ್ಚು ಮಾತನಾಡಲು ಆಗದು ಅಂತ ನನಗೆ ಗೊತ್ತಿದೆ. 476 00:40:41,833 --> 00:40:44,875 ನಿಮ್ಮ ಪರಿಸ್ಥಿತಿ ನೋಡಿದರೇನೇ ನನಗೆ ಅರ್ಥವಾಗುತ್ತೆ. 477 00:40:45,416 --> 00:40:49,291 ನಾನೇನೂ ಬೇಜಾರು ಮಾಡಿಕೊಳ್ಳಲ್ಲ. ಆದರೆ ಒಂದು ವಿಚಾರ, 478 00:40:49,375 --> 00:40:51,750 ನಿನ್ನ ಮಾತನಾಡಿಸಲಾಗದಂತ ಕೋರ್ಬೆಲ್ ಸವಾಲೆಸೆದರು. 479 00:40:52,125 --> 00:40:56,458 ಆದರೆ, ನಾನು ಆಶ್ವಿಲ್ಲಲ್ಲಿ ಕಣ್ಣಿಟ್ಟಿದ್ದ ಒಂದು ತಿಳಿ ನೀಲಿ ಮಸ್ಟಾಂಗ್ ಕನ್ವರ್ಟಿಬಲ್ 480 00:40:56,541 --> 00:40:58,916 ನನಗೆ ಕೊಡಿಸಲು ಅವರು ಒಪ್ಪಿದ್ದಾರೆ. 481 00:40:59,000 --> 00:41:01,125 ಇದು ಸ್ವಲ್ಪ ತಾಂತ್ರಿಕತೆ ಅನ್ನಿಸಬಹುದು, 482 00:41:01,208 --> 00:41:04,375 ಆದರೆ ನೀನು ಏನು ಮಾತನಾಡುತ್ತೀಯ ಅಂತ ಕೋರ್ಬೆಲ್ ಹೇಳಲಿಲ್ಲ. 483 00:41:05,208 --> 00:41:06,791 ಮಾತನಾಡುವುದಷ್ಟೇ. ಸರಳ, ಸುಲಭ. 484 00:41:06,875 --> 00:41:09,916 ಹಾಗಾಗಿ, ನನ್ನ ಆಲೋಚನೆ, ನಾವಿಬ್ಬರೂ ಜೊತೆಯಾಗಿ ತಲೆ ಓಡಿಸಿ 485 00:41:10,000 --> 00:41:11,708 ಒಂದು ಒಪ್ಪಂದಕ್ಕೆ ಬರುವುದು. 486 00:41:12,333 --> 00:41:15,708 ಕೋರ್ಬೆಲ್ ವಾಪಸ್ ಬಂದಾಗ ನೀನು ಸ್ವಲ್ಪ ಮಾತನಾಡಲು ಒಪ್ಪಿದರೆ, 487 00:41:15,791 --> 00:41:18,125 ಅದಕ್ಕೆ ಬದಲಾಗಿ ಏನನ್ನೋ ಕೊಡುವೆ. 488 00:41:18,208 --> 00:41:21,583 ನನ್ನ ಬಗ್ಗೆ ಕೆಟ್ಟ ಆಲೋಚನೆ ಬೇಡ. ನಾನು ಅಂಥವಳಲ್ಲ. 489 00:41:21,666 --> 00:41:26,041 ಆದರೆ ನಿನಗೆ ಏನಾದರೂ ಬೇಕಿದ್ದರೆ ಅದನ್ನು ನಾನು ಕೊಡಿಸಬಲ್ಲೆ. 490 00:41:33,291 --> 00:41:34,458 ಅದು ಉಪ್ಪು ನೀರಾ? 491 00:41:38,416 --> 00:41:40,250 ಅದು ಕೋರ್ಬೆಲ್ ಆಯ್ಕೆ. 492 00:41:40,333 --> 00:41:44,541 ಗಂಡಸರ ಆಲೋಚನೆಯಾ ಇದು? ಉಪ್ಪು ನೀರು ಹಾಕಿದರೆ ಇನ್ನೂ ಖದರ್ರಾಗಿರುತ್ತೆ ಅಂತ. 493 00:41:45,250 --> 00:41:46,375 ಆದರೆ ಏನು ಗೊತ್ತಾ? 494 00:41:46,458 --> 00:41:49,375 ಅದರಲ್ಲಿ ಒಂದು ಕಾಯಿಲೆ ಬೀಳುವವರೆಗೂ ನಿಮಗೆ ಏನೂ ಅನ್ಸಲ್ಲ. 495 00:41:49,458 --> 00:41:52,041 24 ಗಂಟೆಗಳ ನಂತರ, ಬೇರೆಯವಕ್ಕೂ ಹಾಗೇ ಆಗುತ್ತದೆ. 496 00:41:52,125 --> 00:41:55,125 ಅಂದರೆ ಎಲ್ಲವೂ, ತೇಲುತ್ತಿರುತ್ತವೆ, ಹೊಟ್ಟೆ ಮೇಲಾಗಿ. 497 00:41:55,208 --> 00:41:58,333 ಟ್ಯಾಂಕ್ ಖಾಲಿ ಮಾಡಿ, ಶುಚಿಗೊಳಿಸಿ, ಮೊದಲಿನಿಂದ ಶುರುಮಾಡಬೇಕು. 498 00:41:58,416 --> 00:42:00,416 ಅದನ್ನು ಮೂರು ಬಾರಿ ಮಾಡಿದೆವು. 499 00:42:00,500 --> 00:42:02,708 ಆಮೇಲೆ ನಾನು ನಿರಾಕರಿಸಿಬಿಟ್ಟೆ. ಖಡಾಖಂಡಿತವಾಗಿ. 500 00:42:03,458 --> 00:42:07,083 ಅದರಲ್ಲಿ ನಿಮಗೆ 200 ಗ್ಯಾಲನ್ ಶುದ್ಧ ನೀರು ಕಾಣುತ್ತಿದೆ. 501 00:42:07,625 --> 00:42:09,583 ನನಗೆ ಹೇಳಲು ಯಾವುದೇ ಅವಮಾನ ಇಲ್ಲ. 502 00:42:11,958 --> 00:42:12,833 ನೋಡಲಾ? 503 00:42:17,958 --> 00:42:22,875 ಅದರಲ್ಲಿ ಕೆಲವು ನೀಲಿ ರ್ಯಾಮ್ಸ್ ಇವೆ. ಚೆರ್ರಿ ಬಾರ್ಬ್ಸ್. ಎಲೆಕ್ಟ್ರಿಕ್ ಬ್ಲೂ ಹ್ಯಾಪ್ಸ್. 504 00:42:22,958 --> 00:42:25,583 ಅವೇ ನನ್ನ ಅಚ್ಚುಮೆಚ್ಚಿನವು. ತುಂಬಾ ಸೂಕ್ಷ್ಮ. 505 00:42:26,291 --> 00:42:29,916 ಮತ್ತು ಜೊತೆಗೆ ಫ್ಯಾನ್ಟೈಲ್ ಗಪ್ಪೀಸ್. ಶುದ್ಧನೀರಿನ ತೊಟ್ಟಿ ಇದ್ದುಕೊಂಡು-- 506 00:42:30,000 --> 00:42:33,583 ಹೇ! ಏನೋ ಅಂದುಕೊಂಡಿದ್ದೀಯಾ, ಮುದುಕ? 507 00:42:35,833 --> 00:42:37,625 ನೀನು ನಮ್ಮ ಮನೆಯ ಅತಿಥಿ. 508 00:42:38,375 --> 00:42:40,333 ನನ್ನ ಪೆಡಿಗೆ ಏನು ಮಾಡಿದೆ ನೋಡು! 509 00:42:47,833 --> 00:42:50,291 ಇಲ್ಲ, ಇಲ್ಲ, ಇಲ್ಲ, ಇಲ್ಲ. ಇಲ್ಲ. 510 00:43:31,208 --> 00:43:33,416 ನೀವು ಚೆಸ್ ಆಡ್ತೀರಾ, ಜುಬೊವ್ ಅವರೇ? 511 00:43:34,791 --> 00:43:38,333 ನಮಗೀಗ ಕೃತಕ ಬುದ್ಧಿಮತ್ತೆಯ ಆಸರೆ ಇರುವುದರಿಂದ 512 00:43:38,416 --> 00:43:41,000 ಅದು ಮೊದಲಿನಷ್ಟು ಮಜಾ ಇಲ್ಲ. 513 00:43:41,083 --> 00:43:44,833 ಆದರೆ ಒಂದು ಕಾಲದಲ್ಲಿ ಅದು ಅದ್ಭುತವಾದ ತಿರುವಾಗಿತ್ತು. 514 00:43:45,333 --> 00:43:48,000 ನೀನು ನಡೆಸುವ ಪ್ರತಿ ನಡೆಯುೂ ನಿನ್ನ ಎದುರಾಳಿಯ 515 00:43:48,083 --> 00:43:52,458 ಮುಂದಿನ ನಡೆಯನ್ನು ನಿರ್ಧರಿಸುವಂತಿರುವಾಗ ಒಂದು ರೀತಿಯ ಮೇಲರಿಮೆ ಅನುಭವಿಸಬಹುದಾಗಿತ್ತು. 516 00:43:52,541 --> 00:43:55,625 ಮತ್ತು ನಾವಂದುಕೊಂಡಿರದ ರೀತಿ ಎದುರಾಳಿ ಚಲಿಸಿದಾಗ 517 00:43:55,708 --> 00:43:58,375 ಆಗುವ ಭ್ರಮನಿರಸನದ ರೋಚಕತೆಯೇ ಮಜಾ. 518 00:43:58,458 --> 00:44:00,958 ನನಗೆ ಆಶ್ಚರ್ಯ ಉಂಟು ಮಾಡಬಲ್ಲಿರಾ, ಮಿ. ಜುಬೊವ್? 519 00:44:02,166 --> 00:44:03,875 ದಯವಿಟ್ಟು ಕ್ಷಮಿಸಿ, ಇನ್ಸ್ಪೆಕ್ಟರ್, 520 00:44:04,666 --> 00:44:08,458 ನನ್ನ ಕುಟುಂಬದ ವಕೀಲರು ನಮ್ಮ ಜೊತೆ ಇದ್ದರೆ ಸಮಂಜಸವಾಗಿರಬಹುದೇನೋ? 521 00:44:09,250 --> 00:44:13,000 ಖಚಿತವಾಗಿ ನಾನಂದುಕೊಂಡ ಹಾಗೇನೇ. ನಿರೀಕ್ಷಿಸಿದ ನಡೆಯೇ. 522 00:44:14,041 --> 00:44:15,208 ಇದು ನಿಮ್ಮ ನಿರ್ಧಾರ, 523 00:44:15,291 --> 00:44:18,125 ಆದರೆ ನಿಮ್ಮ ವಕೀಲರನ್ನು ಕರೆಸಬೇಕೆಂದಾದರೆ, 524 00:44:18,625 --> 00:44:20,833 ನಮ್ಮ ಭೇಟಿ ಹೀಗೆ ಮುಂದುವರಿಯಬಹುದು. 525 00:44:21,166 --> 00:44:25,291 ನಿಮ್ಮ ಗೆಳೆಯ, ಮಿ. ನೆದರ್ಟನ್, ಒಂದು ಅಪರಾಧ ನಡೆದ ಸ್ಥಳದಲ್ಲಿ ಕಂಡುಬಂದಿದ್ದಾರೆ. 526 00:44:26,000 --> 00:44:28,583 ಡೇನಿಯಲ್ ಕುಕ್ ಎಂಬ ವ್ಯಕ್ತಿಯ ಕೊಲೆಯ ಸ್ಥಳದಲ್ಲಿ, 527 00:44:28,666 --> 00:44:31,250 ಆತ ಸಂಶೋಧನಾ ಸಂಸ್ಥೆಯ ಸುರಕ್ಷತಾ ಮುಖ್ಯಸ್ಥ. 528 00:44:31,333 --> 00:44:33,541 ಕೋಯ್ಡಿನಿಂದ ಕೊಲ್ಲಲ್ಪಟ್ಟಿರಬಹುದು. 529 00:44:34,208 --> 00:44:37,208 ನೆದರ್ಟನ್ ಅವರನ್ನು ಸಹವರ್ತಿ ಎಂದು ವಿಚಾರಣೆಗೆ ಒಳಪಡಿಸಬಹುದು. 530 00:44:37,291 --> 00:44:40,416 ಅದರ ಅರ್ಥ ಇಲ್ಲಿಯೇ, ನಿಮ್ಮ ಡ್ರಾಯಿಂಗ್ ಕೋಣೆಯಲ್ಲಿ, 531 00:44:40,500 --> 00:44:41,750 ಸುಮಾರು ಏಳು ನಿಮಿಷಗಳಲ್ಲಿ, 532 00:44:41,833 --> 00:44:44,458 ಪಾಪದ ನೆದರ್ಟನ್ನನ ಬಲಿಗೆ ನಾವು ಸಾಕ್ಷಿಯಾಗಬಹುದು. 533 00:44:45,666 --> 00:44:49,541 ಆದರೂ, ಖಂಡಿತ, ಮೀನು ಹಿಡಿಯುವಾಗ ಮರಿಯನ್ನು ಹಿಡಿದರೆ, 534 00:44:49,625 --> 00:44:52,333 ಬುದ್ಧಿವಂತ ಮೀನುಗಾರನು ಅದನ್ನು ಕೊಕ್ಕಿಗೆ ಚುಚ್ಚಿ 535 00:44:52,416 --> 00:44:54,666 ಅದನ್ನು ದೊಡ್ಡ ಮೀನು ಹಿಡಿಯಲು ಬಳಸುತ್ತಾನೆ. 536 00:44:55,083 --> 00:44:57,708 ನಿಮ್ಮನ್ನು ಕೀಳಾಗಿ ನೋಡುತ್ತಿಲ್ಲ, ಮಿ. ನೆದರ್ಟನ್, 537 00:44:57,791 --> 00:45:02,291 ಆದರೆ ನನ್ನ ಲೋಕದಲ್ಲಿ ನಿಮಗೆ ಅಂತಹ ಬೆಲೆಯೇನೂ ಇಲ್ಲ. 538 00:45:03,833 --> 00:45:06,291 ಇದರಿಂದ ನಿಮಗೆ ಅನುಕೂಲವೇ ಆಗಬಹುದು. 539 00:45:06,375 --> 00:45:08,708 ಯಾಕೆಂದರೆ, ನಿಮ್ಮ ವಿಚಾರಣೆ ಶುರುವಾದಾಗ, 540 00:45:08,791 --> 00:45:12,125 ನನ್ನ ಗಮನವನ್ನು ದೊಡ್ಡ ಮೀನುಗಳ ಕಡೆಗೆ ಹರಿಸಿ ನಿಮ್ಮ ಜೀವವನ್ನು 541 00:45:12,208 --> 00:45:15,125 ಉಳಿಸಿಕೊಳ್ಳಬಹುದು ಎಂದು ಸ್ಪಷ್ಟವಾಗಿ ಹೇಳಬಲ್ಲೆ. 542 00:45:15,583 --> 00:45:17,916 ನಿಮಗೆ ಅಂತಹದ್ದೇನಾದರೂ ಗೊತ್ತಿದ್ದರೆ. 543 00:45:18,875 --> 00:45:21,041 ನೀವಿಬ್ಬರೂ ಹಳೆಯ ಸ್ನೇಹಿತರು, ಖಂಡಿತ. 544 00:45:21,125 --> 00:45:23,750 ಮತ್ತು ಅದು ಆತ್ಮದ ಮೇಲೆ ಸೆಳೆತ ಬೀರಬಹುದು. 545 00:45:24,125 --> 00:45:26,916 ಆದರೆ ಒಬ್ಬರ ಕತ್ತಿನ ಮೇಲೆ ಕತ್ತಿ ಇಟ್ಟಾಗ 546 00:45:27,000 --> 00:45:30,750 ಈ ಭಾವನೆಗಳೆಲ್ಲಾ ಹೇಗೆ ಮಾಯವಾಗುತ್ತವೆ ಎನ್ನುವುದೇ ಕುತೂಹಲಕಾರಿ. 547 00:45:41,583 --> 00:45:42,958 ಸಾಲ್ಮನ್, ಧನ್ಯವಾದ. 548 00:45:45,291 --> 00:45:47,708 ಚಹಾದಲ್ಲಿ ಚೂರೇ ಚೂರು ಹಾಲು ಬೆರೆಸಿ, ಸಾಕು. 549 00:46:01,583 --> 00:46:03,916 ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ, ಮರ್ಫಿ ಅವರೇ, 550 00:46:04,000 --> 00:46:07,500 ಯೌವ್ವನದಲ್ಲಿ ಕಾನೂನಿನೊಂದಿಗೆ ನಿಮ್ಮ ಭೇಟಿಗಳನ್ನು ಪರಿಗಣಿಸಿದಾಗ. 551 00:46:07,583 --> 00:46:09,291 ನೆನೆಯಲು ಸಂತೋಷವಾಗುತ್ತದೆ. 552 00:46:11,708 --> 00:46:14,916 ನನ್ನ ಅನುಭವದಲ್ಲಿ, ಜುಬೊವ್ ಅವರೇ, ಇಂತಹ ಪರಿಸ್ಥಿತಿಯಲ್ಲಿ, 553 00:46:15,000 --> 00:46:18,166 ನಿಮ್ಮ ಕಡೆಯಲ್ಲಿ ಸ್ವಲ್ಪ ತುಂಬಿದಂತೆ ಭಾಸವಾಗಬಹುದು. 554 00:46:18,250 --> 00:46:22,041 ನಿಮ್ಮ ಕುಟುಂಬದ ವ್ಯವಹಾರಗಳು ವಿಸ್ತಾರವಾಗಿ ಬೆಸೆದುಕೊಂಡಿವೆ, ಅಂದುಕೊಳ್ಳುವೆ. 555 00:46:22,125 --> 00:46:25,625 ಅದರಲ್ಲಿ ಒಂದೇ ಒಂದು ಎಳೆ ನನಗೆ ಸಿಕ್ಕರೆ, ಅದು ಯಾವೆಲ್ಲಾ ರೀತಿಯಲ್ಲಿ 556 00:46:25,708 --> 00:46:28,541 ಬಿಚ್ಚಿಕೊಳ್ಳಬಹುದು ಅಂತ ನನಗೇ ಗೊತ್ತಿಲ್ಲ… 557 00:46:31,250 --> 00:46:34,166 ಮತ್ತೆ ನನ್ನ ರೂಪಕಗಳನ್ನು ಬೆರೆಸುತ್ತಿರುವೆ, ಅಲ್ವಾ? 558 00:46:34,583 --> 00:46:37,625 ಚದುರಂಗ, ಮೀನು ಹಿಡಿಯುವುದು, ಸುತ್ತಿಕೊಂಡ ದಾರಗಳು. 559 00:46:37,708 --> 00:46:40,041 ನೀನು ಅದಕ್ಕೆ ನನಗೆ ಸಹಾಯ ಮಾಡಬೇಕು, ಬೀಟ್ರಿಸ್. 560 00:46:40,125 --> 00:46:43,333 ನೀವು ತುಂಬಾ ಮಜಾ ಅನುಭವಿಸುತ್ತಿದ್ದಿರಿ. ಅಡ್ಡಿಪಡಿಸಲು ಮನಸ್ಸಾಗಲಿಲ್ಲ. 561 00:46:44,250 --> 00:46:45,083 ಹೇಗೇ ಇದ್ದರೂ. 562 00:46:48,041 --> 00:46:50,458 ನೀನು ನಿಮ್ಮ ವಕೀಲರನ್ನು ಕರೆಸಿದರೆ, 563 00:46:50,541 --> 00:46:53,791 ಕಥೆ ಹೀಗೆ ಮುಂದುವರೆಯುತ್ತದೆ. ಏನಂತೀಯಾ? 564 00:46:53,875 --> 00:46:57,958 ನಾನು ಒಪ್ಪುವೆ. ಸುಸ್ತು ಮಾಡುತ್ತೆ. ತಡ್ಕೊಳ್ಳೋಕೆ ಆಗಲ್ಲ. 565 00:46:58,041 --> 00:47:00,166 ನಾವು ಮಿ. ನೆದರ್ಟನ್ ರನ್ನು ಕಳೆದುಕೊಳ್ಳಬಹುದು. 566 00:47:00,250 --> 00:47:03,583 ಇದನ್ನೆಲ್ಲಾ ಒಂದು ಕ್ಷಣ ಬದಿಗಿಟ್ಟು, ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರೆ, 567 00:47:03,666 --> 00:47:05,916 ಎಷ್ಟು ಚೆನ್ನಾಗಿರುತ್ತೆ? 568 00:47:06,375 --> 00:47:10,750 ಸತ್ಯವಾಗಿ. ನೇರವಾಗಿ. ವಿವರವಾಗಿ. ಮತ್ತು ಯಾರಿಗ್ಗೊತ್ತು? 569 00:47:11,000 --> 00:47:14,750 ಇದು ನಮ್ಮನ್ನು ಒಂದು ಹೊಸ ಕುತೂಹಲಕಾರಿ ಸಾಹಸಕ್ಕೆ ಈಡು ಮಾಡಬಲ್ಲದು. 570 00:47:15,583 --> 00:47:16,750 ಏನಂತೀಯಾ? 571 00:47:18,958 --> 00:47:20,166 ಪ್ರಯತ್ನಿಸೋಣವೇ? 572 00:47:21,708 --> 00:47:22,875 ಸರಿ, ಮತ್ತೆ. 573 00:47:23,125 --> 00:47:27,083 ಕೃತಕ ಬುದ್ಧಿಮತ್ತೆಯಿಂದ ಚಲಿಸುತ್ತಿರುವ ಮೂರು ಪೆರಿಫರಲ್ಗಳನ್ನ ಮೆಟ್ ಪತ್ತೆಮಾಡಿದ್ದಾರೆ. 574 00:47:27,166 --> 00:47:30,500 ಅವರನ್ನು ಕರೆಯುತ್ತೀರಾ? ನಾನಂತೂ ನೋಡಲು ಉತ್ಸುಕಳಾಗಿರುವೆ. 575 00:47:36,125 --> 00:47:37,208 ಮತ್ತು 576 00:47:38,291 --> 00:47:39,375 ಅವರ ಚಾಲಕರನ್ನು ಕೂಡ. 577 00:47:42,833 --> 00:47:46,541 ಅದು ಸ್ವಲ್ಪ ಕಷ್ಟ ಆಗಬಹುದು, ಇನ್ಸ್ಪೆಕ್ಟರ್. 578 00:47:46,625 --> 00:47:52,458 ಕಷ್ಟದ್ದನ್ನು ಪರಿಹರಿಸುವಲ್ಲಿ ನಾನು ನಿಸ್ಸೀಮಳು ಅಂತ ಸ್ವಲ್ಪ ಹೊತ್ತಲ್ಲಿ ನೀವೇ ನೋಡ್ತೀರ. 579 00:47:55,750 --> 00:47:56,791 ಮತ್ತು ನೀವು ಯಾವಾಗ-- 580 00:47:56,875 --> 00:48:00,291 ಈಗಲೇ, ಮಿ. ಜುಬೊವ್. ತ್ವರಿತವಾಗಿ. 581 00:48:01,958 --> 00:48:05,666 ಆದರೂ ಸದ್ಯಕ್ಕೆ ಸಾಧ್ಯವಿರುವಂಥದ್ದು ನನ್ನಿಷ್ಟದ ಪ್ರಕಾರ ಆಗಲಿದೆ. 582 00:48:17,166 --> 00:48:19,000 ನಮ್ಮನ್ನು ಹರಸು, ಸ್ವರ್ಗರೂಪಿ ತಂದೆಯೇ, 583 00:48:20,541 --> 00:48:24,208 ಮತ್ತು ನಿನ್ನ ನಿಧಿಯಿಂದ ನಾವು ಪಡೆಯಲಿರುವ ಈ ಎಲ್ಲಾ ಉಡುಗೊರೆಗಳನ್ನು, 584 00:48:25,791 --> 00:48:29,375 ನಮ್ಮ ದೇವನಾದ ಏಸು ಕ್ರಿಸ್ತನಿಂದ. ಆಮೆನ್. 585 00:48:56,291 --> 00:48:58,916 ನನ್ನ ಹುಟ್ಟುಹಬ್ಬ ಅಲ್ಲ, ನೀನು ಹಾಗೆಂದುಕೊಂಡಿದ್ದರೆ. 586 00:48:59,000 --> 00:48:59,833 ಇಲ್ಲ. 587 00:49:00,375 --> 00:49:04,166 ನೀನು ನಿದ್ದೆಯಿಂದ ಎದ್ದ ಆ ಫ್ಲಾಶ್ ಬ್ಯಾಕ್, ನನಗೂ ಸ್ವಲ್ಪ ಚಿಂತೆ ಕೊಡುತ್ತಿದೆ. 588 00:49:04,416 --> 00:49:06,416 ತುಂಬಾ ಭೀಕರವಾಗಿತ್ತು. 589 00:49:07,500 --> 00:49:10,500 ಹಾಗಾಗಿ ಒಮ್ಮೆ ಭೇಟಿ ಕೊಟ್ಟು, ಹೇಗಿದ್ದೀಯಾ ಅಂತ ನೋಡೋಕೆ ಬಂದೆ. 590 00:49:11,666 --> 00:49:12,500 ಆಮೇಲೆ? 591 00:49:13,125 --> 00:49:14,250 ನೀನು ಹೇಳು. 592 00:49:15,458 --> 00:49:16,791 ಕಲ್ಲುಗುಂಡು ಇದ್ದಂಗಿದ್ದೀನಿ. 593 00:49:17,625 --> 00:49:20,250 ಬಿಸಿಬಿಸಿಯಾಗಿ ಫ್ರೆಂಚ್ ಟೋಸ್ಟ್ ಒಲೆಯಿಂದ ಇಳಿಸಿದೆ. 594 00:49:20,333 --> 00:49:23,750 ನೀನು ಸ್ವಲ್ಪ ಗೌರವ ತೋರಿಸಿದರೆ, ನಿನಗೂ ಒಂದು ತುಂಡು ಕೊಡೋಣ ಅಂತಿದ್ದೀನಿ. 595 00:49:23,833 --> 00:49:27,750 ಅಯ್ಯೋ, ಅದು ನನಗೆ ತುಂಬಾನೇ ಕಷ್ಟವಾಗುತ್ತೆ, ಕಾನರ್. 596 00:49:27,833 --> 00:49:30,625 ನಾನು ಈಗಾಗಲೇ ತಿಂದಿರುವೆ. ಧನ್ಯವಾದ. ನೀನು ತಿನ್ನು. 597 00:49:30,708 --> 00:49:32,541 ನೀನು ನನಗೆ ಅದನ್ನು ತಂದುಕೊಟ್ಟರೆ, 598 00:49:32,625 --> 00:49:36,625 ನಾನು ಇಲ್ಲಿಯೇ ಕುಳಿತು, ಈ ಸುಂದರ ವಾತಾವರಣದಲ್ಲಿ ತಿನ್ನುವೆ. 599 00:49:36,708 --> 00:49:37,958 ಅದ್ಭುತ. 600 00:49:39,666 --> 00:49:41,958 ಕಾನರ್ ಪೆನ್ಸ್ಕೆ ಈಗಷ್ಟೇ ನನ್ನ ಸಹಾಯ ಕೇಳಿದ. 601 00:49:42,041 --> 00:49:44,875 ಸಾಬೀತುಪಡಿಸಲು ಸುತ್ತಮುತ್ತ ಒಬ್ಬ ಸಾಕ್ಷಿಯೂ ಇಲ್ಲ. 602 00:49:44,958 --> 00:49:46,958 ನನ್ನ ತಿಂಡಿ ತಣ್ಣಗಾಗಲು ಬಿಡುತ್ತೀಯಾ? 603 00:49:47,041 --> 00:49:48,166 ಬೇಗ ಬೇಗ, ಮಗಾ! 604 00:49:48,541 --> 00:49:51,041 ಇನ್ನೇನಾದರೂ ಬೇಕಿತ್ತೇ, ಮಹಾರಾಜ? 605 00:49:54,208 --> 00:49:55,041 ಹೌದು. 606 00:49:56,458 --> 00:49:57,541 ಡಬ್ಬಿಯಲ್ಲಿ ಏನಿದೆ? 607 00:49:58,166 --> 00:50:00,500 ನಮ್ಮ ಭವಿಷ್ಯದ ಗೆಳೆಯರಿಂದ ಉಡುಗೊರೆ. 608 00:50:00,750 --> 00:50:03,875 ಮೇಕನ್ ಮತ್ತು ಎಡ್ವರ್ಡ್ ಇದನ್ನು ಮುದ್ರಿಸಿದರು. ತೆರೆದು ನೋಡು. 609 00:50:11,041 --> 00:50:13,375 ಫ್ಲಿನ್ ವರ್ಣಿಸುವಷ್ಟೇನೂ ಅದ್ಭುತವಾಗಿಲ್ಲ. 610 00:50:13,458 --> 00:50:15,083 ಫ್ಲಿನ್ ಕಾಲುಗಳನ್ನು ಮುದ್ರಿಸಿದಳಾ? 611 00:50:15,166 --> 00:50:16,958 ಒಳಗಡೆ ಬೇಕಾದಷ್ಟು ಇವೆ. 612 00:50:17,041 --> 00:50:20,166 ಅವುಗಳ ಕೆಲಸವನ್ನೂ ಮಾಡುತ್ತಾಳೆ. ಅವು ಕಲೆ ಇದ್ದಂತೆ. 613 00:50:20,250 --> 00:50:21,666 ಫ್ಲಿನ್ ದು ಒಳ್ಳೆಯ ಮನಸ್ಸು. 614 00:50:21,750 --> 00:50:23,333 ನೀನ್ಯಾಕೆ ಅವನ್ನು ಹಾಕುವುದಿಲ್ಲ? 615 00:50:24,083 --> 00:50:27,416 ಕೆಲವೊಮ್ಮೆ ಇದೆಲ್ಲಾ ನನಗಿಂತ ನಿಮಗೆ ಜಾಸ್ತಿ ಅನ್ಸುತ್ತೆ. 616 00:50:28,291 --> 00:50:30,333 ನನ್ನನ್ನು ಹೆಚ್ಚಿನ ಉಪಯೋಗ ಇಲ್ಲದೆ ಕಂಡಾಗ 617 00:50:30,416 --> 00:50:32,291 ಜನರಿಗೆ ಒಂಥರಾ ಸಮಾಧಾನ ಆಗುತ್ತೆ. 618 00:50:32,375 --> 00:50:33,416 ಗೊತ್ತಾಯ್ತು. 619 00:50:33,500 --> 00:50:36,875 ಆದರೆ ಇವು ಬೇರೆ ಯಾವುದಕ್ಕಿಂತಲೂ ಹೆಚ್ಚು ಉಪಯುಕ್ತವಾಗಿವೆ. 620 00:50:37,375 --> 00:50:38,375 ಆದರೂ ನಕಲಿಯೇ. 621 00:50:39,041 --> 00:50:40,583 ನಿನಗೆ ಹೇಳುವುದು ಬೇಡ ಅಂತಿದ್ದೆ, 622 00:50:40,666 --> 00:50:43,666 ಆದರೆ ಇಷ್ಟರಲ್ಲೇ ನೀನು ನಿಜವಾದದ್ದನ್ನು ಬೆಳೆಯಲಂತೂ ಆಗದು. 623 00:50:43,750 --> 00:50:45,083 ನನಗೆ ನಿಜವಾದವು ಇವೆ, 624 00:50:46,750 --> 00:50:49,125 ನನಗಾಗಿ ಕಾಯುತ್ತಿವೆ, ಭವಿಷ್ಯದಲ್ಲಿ. 625 00:50:50,166 --> 00:50:52,625 ನಾನು ಅದರ ಬಗ್ಗೆ ಕೇಳುತ್ತಿರುವೆ. 626 00:50:53,291 --> 00:50:55,916 ಮತ್ತೊಮ್ಮೆ ಹಳೆಯ ಐವಿ ಮತ್ತು ಕೊಳವೆಯಾ? 627 00:50:58,541 --> 00:51:01,083 ಒಪ್ಪಿಗೆ ಇಲ್ಲದಿದ್ದರೆ ಸೂಕ್ಷ್ಮವಾಗಿ ಸೂಚಿಸು, 628 00:51:01,166 --> 00:51:02,541 ನಾನು ಪ್ರತಿಕ್ರಿಯಿಸಬೇಕಾದರೆ. 629 00:51:03,166 --> 00:51:05,333 ನನ್ನನ್ನು ಸಂತೋಷವಾಗಿ ಕೊನೆಗೆ ಯಾವಾಗ ನೋಡಿದ್ದೆ? 630 00:51:09,875 --> 00:51:11,666 ನಾನೊಂದು ಯೋಚಿಸುತ್ತಿರುವೆ. 631 00:51:12,041 --> 00:51:15,875 ಸಿಡಿತದ ನಂತರ ನೀನು ಆಸ್ಪತ್ರೆಯಲ್ಲಿದ್ದ ಆರಂಭದ ದಿನಗಳಲ್ಲಿ ನಿನ್ನನ್ನು ನಾನು 632 00:51:16,541 --> 00:51:18,083 ನೋಡಲು ಬಂದಿದ್ದು ನೆನಪಿದೆಯೇ? 633 00:51:18,500 --> 00:51:19,333 ಸ್ವಲ್ಪ. 634 00:51:20,833 --> 00:51:22,791 ನೀನು ನನಗೆ ಮಾಡಲು ಹೇಳಿದ ಕೆಲಸ, 635 00:51:24,791 --> 00:51:27,041 ನನ್ನನ್ನು ಕೆಡಿಸಿಹಾಕಿಬಿಟ್ಟಿತು, ಕಾನರ್. 636 00:51:28,500 --> 00:51:29,416 ನಾನು ಕೇಳಿದ್ದಾ? 637 00:51:30,916 --> 00:51:32,250 ನಾನು ಮಾಡಲಾಗದ್ದು. 638 00:51:35,791 --> 00:51:41,125 ಸರಿ, ಅದರ ಬದಲಾಗಿ ನೀನು ಮಾಡಿದ್ದು ನನ್ನನ್ನು ಕೆಡಿಸಿತು, ಹಾಗಾಗಿ ಲೆಕ್ಕ ಚುಕ್ತಾ ಆಯ್ತು. 639 00:51:41,208 --> 00:51:42,416 ನಾನೇನು ಮಾಡಿದೆ? 640 00:51:42,500 --> 00:51:44,875 ನನ್ನ ಮಂಚದ ಪಕ್ಕ ಆ ದರಿದ್ರವನ್ನು ಬರೆದೆ. 641 00:51:46,541 --> 00:51:49,916 ಹಾಂ. ನಿನ್ನನ್ನು ಏನಾದರೂ ಎಬ್ಬಿಸುವಂಥದ್ದು ಇದ್ದರೆ, 642 00:51:50,000 --> 00:51:51,708 ಅದು "ಬರ್ಟನ್ ಇಲ್ಲಿದ್ದ" ಎಂಬ ಬರಹ. 643 00:51:51,791 --> 00:51:55,416 ನೀನಲ್ಲಿ ಮಲಗಿದ್ದು ಅದರ ಮೇಲೆ "ಬೋ.ಮ." ಅಂತ ಬರೆಯುತ್ತೀಯ ಅಂದುಕೊಳ್ಳುತ್ತಿದ್ದೆ. 644 00:51:55,500 --> 00:51:57,041 ಬರೆಯುವ ಮುಂಚೆ ಕಳಿಸಿಬಿಟ್ಟರು. 645 00:51:59,583 --> 00:52:02,708 ನೀನು ಕೊಳವೆ ಮತ್ತು ಐವಿ ಜೊತೆ ಪ್ರಯತ್ನಿಸಬೇಕು ಅಂದುಕೊಂಡಿರೋದು? 646 00:52:03,875 --> 00:52:05,541 ಇದನ್ನು ಒಂದು ರೀತಿ ನೋಡೋದಾದ್ರೆ, 647 00:52:06,291 --> 00:52:08,958 ನಿನ್ನ ಮುಖದ ಮೇಲೆ ತಲೆದಿಂಬನ್ನು ಒತ್ತಿಟ್ಟ ಹಾಗೆ. 648 00:52:09,041 --> 00:52:10,583 ಅಥವಾ ಗುಂಡು ಹೊಡೆದುಕೊಂಡ ಹಾಗೆ. 649 00:52:11,291 --> 00:52:12,958 ಸ್ವಲ್ಪ ನಿಧಾನ ಅಷ್ಟೇ. 650 00:52:14,166 --> 00:52:17,208 ಅಯ್ಯೋ, ಬರ್ಟನ್. ಜೀವನವನ್ನು ಒಂದು ರೀತಿ ನೋಡೋದಾದರೆ, 651 00:52:17,291 --> 00:52:19,666 ಅದು ನಿಧಾನವಾಗಿ ಗುಂಡು ಹೊಡೆದುಕೊಂಡಂತೆ. 652 00:52:20,750 --> 00:52:22,208 ನೀನು ಭಲೇ ಕಣೋ, ಕಾನರ್. 653 00:52:25,000 --> 00:52:26,875 ನಾನು ಹೇಳೋದು, ನಿನ್ನ ಈ 654 00:52:26,958 --> 00:52:30,208 ವಲಸೆ ಕಾರ್ಯಕ್ರಮಕ್ಕೆ ನೆರವಾಗುವ ಮುಂಚೆ ಸ್ವಲ್ಪ ಯೋಚಿಸಬೇಕು ಅಂತ. 655 00:52:30,291 --> 00:52:31,125 ನ್ಯಾಯವೇ. 656 00:52:31,916 --> 00:52:35,125 ಏತನ್ಮದ್ಯೆ, ನೀನು ಇವುಗಳನ್ನೂ ಪ್ರಯತ್ನಿಸಿ ನೋಡಬಹುದಲ್ವಾ? 657 00:52:35,791 --> 00:52:38,458 ಹಾಳಾಗಿ ಹೋಗಲಿ. ನಾಳೆ ನೋಡೋಣ. 658 00:52:46,583 --> 00:52:48,291 ಒಂದು ತಮಾಷೆ ಏನು ಗೊತ್ತಾ? 659 00:52:49,291 --> 00:52:53,541 ನಾವು ಚಿಕ್ಕವರಾಗಿದ್ದಾಗ ಕೊರೆದಿದ್ದ ಇವು ಈಗಲೂ ಮನೆಯ ತುಂಬಾ ಇವೆ. 660 00:52:53,625 --> 00:52:58,041 ನಮ್ಮಮ್ಮನನ್ನು "ಎಮ್ಎಫ್" ಅಂದ್ರೇನು ಅಂತ ಕೇಳಿದ್ರೆ, "ನನ್ನ ಗೆಳೆಯ" ಅಂತ ಹೇಳ್ತಾಳೆ. 661 00:53:01,458 --> 00:53:02,291 ಅಲ್ವಾ? 662 00:53:03,291 --> 00:53:08,041 ಹೌದು. ಹಾಗಾಗುತ್ತೆ, ಬೋಳಿಮಗನೇ. 663 00:53:15,958 --> 00:53:17,791 ನೀನು ಜಾಸ್ತಿ ತಿನ್ನಲಿಲ್ಲ ತಾನೇ? 664 00:53:18,791 --> 00:53:19,666 ಯಾಕೆ? 665 00:53:19,750 --> 00:53:23,333 ಲಂಡನ್ ಕರೆಯುತ್ತಿದೆ. ನಾವು ಮರಳಿ ಹೋಗಬೇಕಂತೆ. 666 00:53:28,583 --> 00:53:31,666 ಫಾರೆವರ್ ಫ್ಯಾಬ್ 3ಡಿ ಮುದ್ರಣ 667 00:53:33,166 --> 00:53:35,625 -ಎಲ್ಲಿಗೆ ಹೋಗುತ್ತಿದ್ದೇವೆ ಗೊತ್ತಾ? -ಇಲ್ಲ. 668 00:53:35,708 --> 00:53:38,750 ನೀವು ಮೂವರನ್ನು ಕಳಿಸಲಷ್ಟೇ ಹೇಳಿದರು. "ತ್ವರಿತವಾಗಿ". 669 00:53:38,833 --> 00:53:43,708 -ಅದರ ಅರ್ಥ ಏನೋ. -ಯೋಜನೆ, ಮಾಹಿತಿ, ಸ್ಥಳಾನ್ವೇಷಣೆಗಳಿಲ್ಲ. 670 00:53:44,958 --> 00:53:49,041 -ಹಾಗಂದ್ರೆ ಏನಂತ ಗೊತ್ತಲ್ಲ? -ವೇಗ, ತೀವ್ರತೆ ಮತ್ತು… 671 00:53:49,125 --> 00:53:50,583 ಕ್ರಿಯೆಯ ಹಿಂಸೆ. 672 00:54:03,916 --> 00:54:05,583 ಹೂರಾ, ಮಗನೇ. 673 00:54:07,166 --> 00:54:12,583 ಮತ್ತೆ, ಈ ಕ್ವಾಂಟಮ್ ಸುರಂಗ, ನೀವು ಕರೆಯುವಂತೆ, ಭೂತಕಾಲವನ್ನು ಸಂಪರ್ಕಿಸಲು ಅನುವು ಮಾಡುತ್ತೆ. 674 00:54:12,666 --> 00:54:16,458 ನಿರ್ದಿಷ್ಟ ಭೂತಕಾಲಕ್ಕೆ, ಯಾಕೆಂದರೆ ನೈಜ ಭೂತಕಾಲದಲ್ಲಿ ನೀನು ಸಂಪರ್ಕಿಸಲಿಲ್ಲ. 675 00:54:17,458 --> 00:54:22,791 ಇದು ನನಗೆ ತಲೆನೋವು ಕೊಡುತ್ತಿದೆ, ಮಿ. ಜುಬೊವ್. ನಿಮಗೆ ನೋವಿಲ್ಲ ಅಂತ ಕಾಣುತ್ತೆ. 676 00:54:22,875 --> 00:54:25,000 ಅದು ತುಂಬಾ ಸರಳವಾದದ್ದು. 677 00:54:25,083 --> 00:54:27,708 ಸಂಪರ್ಕದ ಕ್ರಿಯೆ ಕಾರ್ಯಕಾರಣದಲ್ಲಿ ಕವಲನ್ನು ಸೃಷ್ಟಿಸುತ್ತದೆ, 678 00:54:27,791 --> 00:54:30,166 ಈ ಹೊಸ ಶಾಖೆಯ ಕಾರ್ಯರೂಪ ವಿಶಿಷ್ಟವಾಗಿರುತ್ತೆ. 679 00:54:31,250 --> 00:54:33,291 ಅದನ್ನು ಸ್ಟಬ್ ಎನ್ನುತ್ತೇವೆ. 680 00:54:33,375 --> 00:54:39,250 ನೀವು ಯಾಕೆ ಅದನ್ನು ಹಾಗೆ ಕರೆಯುತ್ತೀರಾ? ಹೆಸರು ಚಿಕ್ಕದಾಯಿತಲ್ವಾ? ಹೊಲಸಾಗಿ. ಕ್ರೂರವಾಗಿ. 681 00:54:39,333 --> 00:54:42,333 ಕವಲಿನ ಹೊಸ ಟೊಂಗೆ ಬೆಳೆಯುತ್ತಾ ಹೋಗಬೇಕು ಅಲ್ಲವೇ? 682 00:54:42,416 --> 00:54:45,416 ನಾವು ಹಾಗೆಯೇ ಅಂದುಕೊಳ್ಳುವುದು. ಆ ಪದ ಎಲ್ಲಿಂದ ಬಂತೋ-- 683 00:54:45,500 --> 00:54:46,375 ಸಾಮ್ರಾಜ್ಯಶಾಹಿತ್ವ. 684 00:54:52,583 --> 00:54:56,791 ಇದನ್ನು ಸ್ಟಬ್ ಎಂದು ಕರೆಯುವುದರಿಂದ ಅದರ ಮೇಲೆ ಅಧಿಪತ್ಯ ಸಾಧಿಸಲು ಸುಲಭವಾಗುತ್ತದೆ. 685 00:54:56,875 --> 00:54:59,750 ಈ ವಸಾಹತುಶಾಹಿಯಲ್ಲಿ ಮಿ. ಜುಬೊವಿಗೆ ಅನುಕೂಲ ಮಾಡುವಿರಾ? 686 00:54:59,833 --> 00:55:02,583 -ನೀವು ಮತ್ತು ಮಿ. ಮರ್ಫಿ? -ಹುಟ್ಟಿ ಬರುತ್ತಿದ್ದಾರೆ. 687 00:55:22,875 --> 00:55:26,916 ಮತ್ತು ನೀವು, ನಾನಂದುಕೊಂಡಂತೆ, ಅಸಾಧಾರಣ ಫ್ಲಿನ್ ಫಿಷರ್, ಅಲ್ಲವೇ? 688 00:55:28,000 --> 00:55:31,083 ಇನ್ಸ್ಪೆಕ್ಟರ್ ಏಯ್ನ್ಸ್ಲೀ ಲೋಬಿಯರ್, ನಗರ ಪೊಲೀಸ್ ಇಲಾಖೆಯಿಂದ. 689 00:55:31,166 --> 00:55:33,625 ನಿಮ್ಮ ಪರಿಚಯದಿಂದ ಸಂತೋಷವಾಯಿತು. 690 00:55:35,500 --> 00:55:36,708 ಮೇಡಂ. 691 00:56:00,958 --> 00:56:03,875 ಮುಂದೆ ದಿ ಪೆರಿಫೆರಲ್ನಲ್ಲಿ 692 00:56:05,625 --> 00:56:07,041 ಏನಿದು? 693 00:56:07,125 --> 00:56:08,958 ಪ್ರಾಣಿಗಳು ಇಲ್ಲಿಯೇ ಬಂದು ಆಡುವುದು. 694 00:56:10,791 --> 00:56:13,958 ನನ್ನಿಂದ ಒಂದು ಅಮೂಲ್ಯವಾದ ವಸ್ತುವನ್ನು ಕದಿಯಲಾಗಿದೆ. 695 00:56:17,083 --> 00:56:20,750 ಆಗ ನಾವು ಇದರ ಬಗ್ಗೆ ಮಾತನಾಡಬಹುದು. ಒಂದು ಒಪ್ಪಂದಕ್ಕೆ ಬರಬಹುದು. 696 00:56:22,916 --> 00:56:25,583 -ನಾವು ಹೋಗಬೇಕು! -ಇದನ್ನು ಸರಿಯಾಗಿ ಮಾಡಲು ನನ್ನನ್ನು ನಂಬು. 697 00:56:31,500 --> 00:56:33,291 -ಕೊಲ್ಲಿರಿ. -ದೀಪ ಆರಿತು. 698 00:58:11,458 --> 00:58:13,458 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 699 00:58:13,541 --> 00:58:15,541 ಸೃಜನಶೀಲ ಮೇಲ್ವಿಚಾರಕರು ಮೌರಿಯಾ ಎಸ್ ಅರವಿಂದ್