1 00:00:06,041 --> 00:00:08,833 ಈ ಹಿಂದೆ ದಿ ಪೆರಿಫೆರಲ್ನಲ್ಲಿ 2 00:00:10,416 --> 00:00:12,166 ನಿನ್ನ ಮತ್ತು ಇದನ್ನೆಲ್ಲಾ ನೋಡಿದರೆ. 3 00:00:12,250 --> 00:00:14,500 ನಾನು ಇರುವ ಕಡೆಗಿಂತ ತುಂಬಾ ಭಿನ್ನವಾಗಿದೆ. 4 00:00:15,291 --> 00:00:17,375 ನೀನು ಸ್ವಲ್ಪ ಸಮಯ ವಿರಾಮ ತೆಗೆದುಕೋ. 5 00:00:17,458 --> 00:00:19,000 ನನ್ನ ಪಹರೆಯಿಂದ ತಪ್ಪಿಸಿಕೊಂಡ. 6 00:00:19,083 --> 00:00:21,583 ಅದೆಲ್ಲಾ ಸರಿಹೋಗುತ್ತೆ, ನಾನೇ ಅದನ್ನು ನೋಡಿಕೊಳ್ಳುವೆ. 7 00:00:23,125 --> 00:00:25,583 ನಾವಿಬ್ಬರೂ ಜೊತೆಯಾಗಿ ಒಂದು ಒಪ್ಪಂದಕ್ಕೆ ಬರುವುದು? 8 00:00:25,666 --> 00:00:27,875 ಅದಕ್ಕೆ ಬದಲಾಗಿ ಏನನ್ನೋ ಕೊಡುವೆ. 9 00:00:28,875 --> 00:00:31,666 ಯೋಜನೆ, ಮಾಹಿತಿ, ಸ್ಥಳಾನ್ವೇಷಣೆಗಳಿಲ್ಲ. 10 00:00:31,750 --> 00:00:34,541 ಇನ್ಸ್ಪೆಕ್ಟರ್ ಏಯ್ನ್ಸ್ಲೀ ಲೋಬಿಯರ್, ನಗರ ಪೊಲೀಸ್ ಇಲಾಖೆಯಿಂದ. 11 00:01:25,250 --> 00:01:26,458 ಯಾರಾದ್ರೂ ಇದ್ದೀರಾ? 12 00:01:28,375 --> 00:01:30,083 ಏನು ಸಮಸ್ಯೆ, ಶ್ರೀಮತಿ ಫಿಷರ್? 13 00:01:31,375 --> 00:01:32,791 ರೀಸ್, ಪುಟ್ಟ. 14 00:01:32,875 --> 00:01:35,791 ನನ್ನನ್ನು ವೈದ್ಯರ ಬಳಿ ಕರ್ಕೊಂಡು ಹೋಗು. 15 00:01:35,875 --> 00:01:37,791 -ಬರ್ಟನ್ನಿಗೆ ಕರೆ ಮಾಡಲೇ? -ಬೇಡ. 16 00:01:37,875 --> 00:01:39,416 ಅವರಿಗೆ ಗಾಬರಿ ಮಾಡುವುದು ಬೇಡ. 17 00:01:39,500 --> 00:01:42,250 ಏನೂ ಆಗಿರಲ್ಲ. ನಾವಷ್ಟೇ ಹೋಗೋಣ. ನೀನು ಮತ್ತು ನಾನು. 18 00:01:43,500 --> 00:01:45,500 ಪರವಾಗಿಲ್ಲ, ಪುಟ್ಟ. ಸತ್ಯವಾಗಿಯೂ. 19 00:01:45,583 --> 00:01:47,916 ವಾಪಸ್ ಬಂದ ಮೇಲೆ ಅವರೊಂದಿಗೆ ಮಾತಾಡುವೆ. 20 00:01:48,375 --> 00:01:49,958 ನನ್ನ ಟ್ರಕ್ ರಸ್ತೆ ಮೇಲಿದೆ. 21 00:01:50,458 --> 00:01:52,708 ನನಗೆ ನಿನ್ನ ಸಹಾಯ ಬೇಕಿದೆ, ರೀಸ್. 22 00:01:52,791 --> 00:01:53,833 ನಾ… 23 00:01:54,750 --> 00:01:55,958 ನನಗೆ ಸರಿಯಾಗಿ… 24 00:01:58,458 --> 00:01:59,708 ನನಗೆ ಮತ್ತೆ ಕುರುಡಾಗಿದೆ. 25 00:03:41,791 --> 00:03:44,791 ದಿ ಪೆರಿಫೆರಲ್ 26 00:03:59,750 --> 00:04:04,291 ಅಯ್ಯೋ. ಕಳೆದ ಒಂದು ವಾರದಲ್ಲಿ ನಿನ್ನ ಜೀವನ ಕೆಲವು ನಿರ್ದಿಷ್ಟ ಅನಪೇಕ್ಷಿತ ತಿರುವುಗಳನ್ನು 27 00:04:04,375 --> 00:04:06,083 ಪಡೆದಿದೆ ಎನ್ನಬಹುದು, ಕಣಮ್ಮ. 28 00:04:06,166 --> 00:04:07,166 ಹೌದು, ಮೇಡಂ. 29 00:04:07,250 --> 00:04:09,583 ಮತ್ತು ಈಗೇನು? ನಿನಗೇನಾದರೂ ಯೋಜನೆ ಇದೆಯೇ? 30 00:04:09,666 --> 00:04:13,041 ಅಥವಾ ಒಳ್ಳೆಯದಕ್ಕಾಗಿ ಆಶಿಸುತ್ತಾ, ಸನ್ನಿವೇಶ ಬಂದಾಗ ನೋಡಿಕೊಳ್ಳೋಣ 31 00:04:13,125 --> 00:04:14,166 ಅಂತಿದ್ದೀಯಾ? 32 00:04:16,208 --> 00:04:18,625 ಸರಿ, ನಾನೇನು ಮಾಡಬೇಕು ಅಂತ ಗೊತ್ತಿದೆ, ಬೀಟ್ರಿಸ್. 33 00:04:18,750 --> 00:04:20,750 ಸ್ವಲ್ಪ ನನ್ನ ಕಾಲುಗಳನ್ನು ಚಾಚಿ, 34 00:04:20,875 --> 00:04:23,208 -ಶುದ್ಧ ಗಾಳಿ ಪಡೆಯುವೆ. -ಸರಿ, ಮೇಡಂ. 35 00:04:23,291 --> 00:04:25,500 ದಯವಿಟ್ಟು ತಪ್ಪು ತಿಳಿಯಬೇಡಿ, ಮಿ. ಜುಬೊವ್, 36 00:04:25,583 --> 00:04:29,541 ಆದರೆ ನೀವು ತುಂಬಾ ಶೋಷಣೆಯುಳ್ಳ ಅಲಂಕಾರಿಕ ಯೋಜನೆಯನ್ನು ಅನುಸರಿಸಿದ್ದೀರಿ. 37 00:04:33,333 --> 00:04:37,375 ಸರಿ ಮತ್ತೆ, ಇನ್ಸ್ಪೆಕ್ಟರ್, ತೋಟಕ್ಕೆ ಹೋಗ್ತೀರಾ? 38 00:04:37,458 --> 00:04:39,000 ನನಗೆ ಹೊರಡಬೇಕು ಅಂತಿದೆ. 39 00:04:39,083 --> 00:04:41,416 ಈ ಮೂವರು ಅತಿಥಿಗಳನ್ನು ನನ್ನೊಂದಿಗೆ ಕರೆದೊಯ್ಯುವೆ, 40 00:04:41,500 --> 00:04:44,875 ಹಾಗೆಯೇ ಶುದ್ಧ ಗಾಳಿಯ ಮಧ್ಯದಲ್ಲಿ ನಮ್ಮ ಮಾತನ್ನು ಮುಂದುವರಿಸಬಹುದು. 41 00:04:44,958 --> 00:04:45,875 ಹೋಗೋಣವೇ? 42 00:04:46,541 --> 00:04:48,416 ಅಗೌರವ ಸೂಚಿಸುತ್ತಿಲ್ಲ, 43 00:04:48,500 --> 00:04:52,250 ಆದರೆ ವಿಲ್ಫ್ ನಮ್ಮ ಜೊತೆ ಬಂದರೆ ನನಗೆ ಆರಾಮದಾಯಕವಾಗಿರುತ್ತದೆ. 44 00:04:52,708 --> 00:04:53,875 ಎಷ್ಟು ಚಂದ. 45 00:04:54,958 --> 00:04:56,708 ಇಲ್ಲಿ ಆಗಲೇ ಸ್ನೇಹ ಮಾಡಿದ್ದೀಯಾ. 46 00:04:56,791 --> 00:04:58,791 ಮತ್ತೆ ಸಂತೋಷವಾಗಿ ಬನ್ನಿ, ಮಿ. ನೆದರ್ಟನ್, 47 00:04:59,208 --> 00:05:00,291 ನಮ್ಮೊಂದಿಗೆ. 48 00:05:11,833 --> 00:05:14,916 ಕ್ಲಾಂಟನ್ ಅರ್ಜೆಂಟ್ಮೆಡ್ ಕ್ಲಾಂಟನ್ ಪ್ರಾಂತ್ಯಕ್ಕೆ ಗುಣಮಟ್ಟದ ಆರೈಕೆ 49 00:05:16,916 --> 00:05:20,250 ಹೇಳದೇ ಹೀಗೆ ಬಂದಿದ್ದಕ್ಕಾಗಿ ಕ್ಷಮಿಸು, ಡೀ ಡೀ. 50 00:05:20,333 --> 00:05:22,750 ಇರಲಿ. ನಿಮ್ಮನ್ನು ನೋಡುವುದೇ ಸಂತೋಷ, ಎಲ್ಲಾ. 51 00:05:22,833 --> 00:05:25,125 -ರೀಸ್, ಆಕೆಯನ್ನು ಮೇಲೆ ಕೂರಿಸು. -ಸರಿ. ಹೀಗೆ. 52 00:05:26,250 --> 00:05:27,750 -ಇಲ್ಲಿ ಕೂರಿ. -ಧನ್ಯವಾದ. 53 00:05:30,208 --> 00:05:32,625 ಸರಿ, ಏನು ನಿಮ್ಮ ತೊಂದರೆ? 54 00:05:32,708 --> 00:05:34,208 ನಾನು ಹೊರಗಡೆ ಇದ್ದರೆ ತೊಂದರೇನಾ? 55 00:05:34,291 --> 00:05:36,458 -ಖಂಡಿತ ಇಲ್ಲ, ಪುಟ್ಟ. -ಸರಿ. 56 00:05:36,541 --> 00:05:39,041 ರೀಸ್, ಲಿಜ್ ಗೆ ಊಟದ ವಿರಾಮ ತೆಗೆದುಕೊಳ್ಳಲು ಹೇಳ್ತೀಯಾ? 57 00:05:39,125 --> 00:05:40,000 ಹಾಂ, ಸರಿ. 58 00:05:42,708 --> 00:05:45,875 ಮತ್ತೆ, ಹೇಗಿದ್ದೀರಾ? 59 00:05:50,541 --> 00:05:53,083 ನೀನು ಆರೋಗ್ಯ ಸರಿಯಿಲ್ಲ ಅಂತ ರಜೆಯಲ್ಲಿರುವೆ ತಾನೆ, ಟಾಮಿ? 60 00:05:53,166 --> 00:05:57,041 ಹೌದು. ಆದರೆ ಸಾಕ್ಷ್ಯಾಧಾರಗಳನ್ನು ಮತ್ತೆ ನೋಡಲೇ ಇಲ್ಲ ಎಂದು ಅರಿತೆ. 61 00:05:57,125 --> 00:05:58,666 ಸೇತುವೆ ಮೇಲೆ ನಡೆದ ಘಟನೆಯದ್ದು. 62 00:05:58,750 --> 00:06:01,708 ಅದನ್ನೆಲ್ಲಾ ಸರಿಯಾಗಿ ನಮೂದಿಸಿದ್ದಾರಾ ನೋಡಲು ಬಂದೆ. 63 00:06:01,791 --> 00:06:03,750 ಅದು ಯಾವ ಸಾಕ್ಷ್ಯಾಧಾರ? 64 00:06:03,833 --> 00:06:05,583 ಆ ಮುದುಕನ ಬಳಿ ಇದ್ದ ಆಯುಧ. 65 00:06:05,666 --> 00:06:07,250 ಅದು ನಿಖರವಾಗಿ ಯಾವುದು? 66 00:06:07,333 --> 00:06:09,375 ನನಗೆ ನೆನಪಿದ್ದಂತೆ ಗ್ಲಾಕ್ ಇತ್ತು, 67 00:06:09,750 --> 00:06:13,125 ಇನ್ನೊಂದ್ಯಾವುದೋ ಹೊಸ ವಸ್ತು, ಫ್ಲಾಶ್ಲೈಟ್ ಇದ್ದಂಗಿತ್ತು. 68 00:06:13,541 --> 00:06:15,041 ಹೊಸ ವಸ್ತುವೇ? 69 00:06:15,125 --> 00:06:17,833 ನೋಡಲು ಆ ಗೊತ್ತಿಲ್ಲದ ವಸ್ತುವಿನಂತೆ ಇತ್ತೇನು? 70 00:06:19,583 --> 00:06:23,208 ನನಗೆ ಆ ಎಸ್ಯುವಿ ಹೊಡೆದ ನಂತರ ಅಲ್ಲಿಂದ ಏನಾದ್ರೂ ಸಾಕ್ಷಿ ಸಿಕ್ಕಿತೇ? 71 00:06:23,291 --> 00:06:26,208 ಅಗೋಚರವಾಗಿತ್ತು ಅಂತ ಹೇಳಿದೆಯಲ್ಲ, ಅದೇನು? 72 00:06:28,125 --> 00:06:31,375 -ಏನು ಮಾಡುತ್ತಿದ್ದೀರಿ? -ಡೀ ಡೀಗೆ ಕರೆ ಮಾಡಿ ನಿನ್ನನ್ನು-- 73 00:06:36,666 --> 00:06:38,833 ನಿನಗೆ ಸರಿಯಾಗಿ ಏಟು ಬಿದ್ದಿದೆ, ಟಾಮಿ. 74 00:06:39,208 --> 00:06:40,083 ಗಟ್ಟಿಯಾಗಿ. 75 00:06:40,166 --> 00:06:42,291 ನೀನೊಂದು ಕತ್ತಲೆಯ ಕೋಣೆಯಲ್ಲಿ ತಲೆಯ ಮೇಲೆ 76 00:06:42,375 --> 00:06:45,875 ಐಸ್ ಮತ್ತು ಕೈಯಲ್ಲೊಂದು ತಣ್ಣನೆಯ ಬಿಯರ್ ಹಿಡಿದು ಕೂರಬೇಕು. 77 00:06:45,958 --> 00:06:48,916 ನನ್ನ ಪ್ರಶ್ನೆಗೆ ಉತ್ತರಿಸಿ, ಗ್ಲಾಡಿಸ್, ನಾನದನ್ನೇ ಮಾಡುತ್ತೇನೆ. 78 00:06:49,541 --> 00:06:50,375 ಆಣೆ. 79 00:06:57,750 --> 00:07:01,208 ನಿನ್ನ ಜಖಂಗೊಂಡ ಕ್ರೂಜರ್ ಬಿಟ್ಟರೆ ಬೇರೆ ಯಾವ ಸಾಕ್ಷಿಯೂ ಸಿಗಲಿಲ್ಲ. 80 00:07:01,583 --> 00:07:04,166 ಗ್ಲಾಕೂ ಇಲ್ಲ. ಹೊಸ ವಸ್ತುವೂ ಇಲ್ಲ. 81 00:07:04,250 --> 00:07:05,791 ಅದೂ ಅಲ್ಲದೆ, ಮುದುಕನೂ ಇಲ್ಲ. 82 00:07:05,875 --> 00:07:08,458 ಕೇವಲ ನೀನು ಮತ್ತು ನಿನ್ನ ಹಾಳಾದ ಕಾರು, ಟಾಮಿ. 83 00:07:08,541 --> 00:07:09,916 ಈಗ, ಮನೆಗೆ ಹೋಗು, 84 00:07:10,625 --> 00:07:13,041 ನಾನು ಶೆರಿಫ್ ಜಾಕ್ಮನ್ ಅವರಿಗೆ ಕರೆ ಮಾಡೋಕೂ ಮುಂಚೆ, 85 00:07:13,125 --> 00:07:17,208 ಆಮೇಲೆ ಅವರು ನಿನಗೆ ಇದೇ ಮಾತನ್ನು ಹೇಳುತ್ತಾರೆ, ಆದರೆ ಇಷ್ಟು ಒಳ್ಳೆಯ ರೀತಿಯಲ್ಲಿ ಅಲ್ಲ. 86 00:07:29,458 --> 00:07:30,375 ಏನಿದು? 87 00:07:30,708 --> 00:07:33,916 ಮೆಟ್ ಪೊಲೀಸ್ ತರಬೇತಿ ಕೇಂದ್ರ. ಇದನ್ನು ಮೃಗಾಲಯ ಎನ್ನುತ್ತೇವೆ. 88 00:07:34,000 --> 00:07:34,833 ಯಾಕೆ? 89 00:07:34,916 --> 00:07:36,833 ಪ್ರಾಣಿಗಳು ಇಲ್ಲಿಯೇ ಬಂದು ಆಡುವುದು. 90 00:07:36,916 --> 00:07:40,916 ಯಾವುದೇ ಸಂಭಾವ್ಯ ಆರ್ಐ ಪರಿವೀಕ್ಷಣೆ ಅಥವಾ ಹಸ್ತಕ್ಷೇಪದಿಂದ ಸಂಪೂರ್ಣ ಸುರಕ್ಷಿತ. 91 00:07:41,500 --> 00:07:43,250 ಅಥವಾ ಕ್ಲೆಪ್ಟ್, ಆ ವಿಚಾರದಲ್ಲಿ. 92 00:07:44,166 --> 00:07:46,500 ನೀವಿಬ್ಬರು ಮತ್ತು ಬೀಟ್ರಿಸ್ ಮಜಾ ಮಾಡಲಿದ್ದೀರಿ. 93 00:07:46,583 --> 00:07:48,541 ನೀವು ಮೇಲೆ ಹತ್ತಿ… 94 00:07:48,625 --> 00:07:51,625 ಅವರಿಗೆ ಎಷ್ಟು ಮಹಡಿಗಳು ಆಗಬಹುದು ಅನ್ಸುತ್ತೆ, ಬೀಟ್ರಿಸ್? 95 00:07:51,708 --> 00:07:52,708 ಎಂಟು ಪ್ರಯತ್ನಿಸೋಣ. 96 00:07:52,791 --> 00:07:54,333 ತುಂಬಾ ಆಶಾವಾದಿಗಳು ನಾವು, ಅಲ್ಲವೇ? 97 00:07:55,208 --> 00:07:56,166 ಸರಿ, ಮತ್ತೆ. 98 00:07:57,250 --> 00:07:58,291 ಎಂಟನೆಯ ಮಹಡಿ. 99 00:08:01,625 --> 00:08:04,375 ಮಿಸ್ ಫಿಷರ್ ಅಂತಲ್ಲದೆ, ನಿಮಗೆ ಈ ದೇಹಗಳು ಹೊಸತು. 100 00:08:05,833 --> 00:08:08,541 ಈ ಅಭ್ಯಾಸ ನಿಮ್ಮನ್ನು ಸಜ್ಜುಗೊಳಿಸುತ್ತದೆ. 101 00:08:12,666 --> 00:08:13,541 ಏನಿದು? 102 00:08:32,166 --> 00:08:34,541 ನಮ್ಮ ಮೆಟ್ ಕೋಯ್ಡುಗಳನ್ನು ಇಲ್ಲೇ ಪರೀಕ್ಷಿಸೋದು. 103 00:08:34,625 --> 00:08:38,916 ನಿನ್ನ ತಂಗಿ ಏನನ್ನು ಆಡುತ್ತಿದ್ದಳು ಎಂದುಕೊಂಡಿದ್ದಳೋ ಹಾಗೆ ಇದು. 104 00:08:39,000 --> 00:08:41,166 ನೀವು ಇದನ್ನು ಸಿಮ್ ಅಂತೀರಿ, ಅಲ್ವಾ? 105 00:08:41,250 --> 00:08:43,500 ಬೀಟ್ರಿಸ್ ಹಿಂದೆ ಹೋಗಿ. ಎಲ್ಲ ವಿವರಿಸುತ್ತಾಳೆ. 106 00:08:48,666 --> 00:08:49,625 ನಾನೂ ಹೋಗಬಹುದಾ? 107 00:08:49,708 --> 00:08:51,125 ಈ ಸಲ ಬೇಡ, ಚಿನ್ನ. 108 00:08:51,208 --> 00:08:53,125 ನಿನಗಾಗಿ ಬೇರೆ ಪರೀಕ್ಷೆ ಇದೆ. 109 00:08:55,291 --> 00:08:56,208 ಕೂರೋಣವೇ? 110 00:09:00,291 --> 00:09:01,958 ಇದು ತುಂಬಾ ನೇರವಾಗಿದೆ. 111 00:09:02,041 --> 00:09:05,125 ಮಹಡಿಯಿಂದ ಮಹಡಿಗೆ ಹೋಗುತ್ತಾ, ಛಾವಣಿ ತಲುಪುವವರೆಗೆ ಅಡ್ಡಬರುವುದನ್ನು 112 00:09:05,208 --> 00:09:06,750 ಕೊಲ್ಲುತ್ತಾ ಸಾಗಬೇಕು. 113 00:09:06,833 --> 00:09:08,000 ಅಲ್ಲೇನಾಗುತ್ತೆ? 114 00:09:08,083 --> 00:09:09,666 -ಒಂದು ಅಚ್ಚರಿ. -ಯಾವ ಥರದ್ದು? 115 00:09:09,750 --> 00:09:12,458 ಅನಿರೀಕ್ಷಿತ ಘಟನೆಯನ್ನು ಅಚ್ಚರಿ ಎಂದು ಕರೆಯಲಾಗುವುದು. 116 00:09:12,541 --> 00:09:14,416 "ಅನಿರೀಕ್ಷಿತ" ಅಂದ್ರೆ ಏನಂತ ಹೇಳಬೇಕಾ? 117 00:09:16,416 --> 00:09:20,791 ತಪ್ಪಾಗಿ ಅರ್ಥ ಮಾಡಿಕೊಳ್ಳಬೇಡಿ, ಮೇಡಂ, ಆದರೆ ನೀವು… ಮನುಷ್ಯರೇ? 118 00:09:20,875 --> 00:09:22,166 ಯಾಕೆ ಕೇಳುತ್ತೀರಿ? 119 00:09:22,250 --> 00:09:25,458 ಸಂಭಾವ್ಯ ದೈಹಿಕ ಹಾನಿಯ ಬಗ್ಗೆ ನಿಮಗೆ ಯಾವುದೇ ಚಿಂತೆ ಇದ್ದಂತಿಲ್ಲ. 120 00:09:25,541 --> 00:09:28,625 ನೀವು ಕೇಳಿದ್ದು ತುಂಬಾ ಒಳ್ಳೆಯದಾಯಿತು, ಲಾನ್ಸ್ ಕಾರ್ಪೊರಲ್. 121 00:09:29,208 --> 00:09:30,916 ನಾನು ವಿಶೇಷವಾದವಳು ಅಷ್ಟೇ. 122 00:09:31,375 --> 00:09:34,750 ಬರಲಿರುವ ಘಟನೆಯಲ್ಲಿ ನೀವು ನಿಮ್ಮ ಬಗ್ಗೆ ಯೋಚಿಸಬೇಕು. 123 00:09:34,833 --> 00:09:36,041 ನನ್ನದು ನಾನು ಯೋಚಿಸುವೆ. 124 00:09:36,708 --> 00:09:39,791 -ಆಯುಧಗಳು ಸಿಗುತ್ತಾ? -ನಿಮಗೆ ದಾರಿ ಮಧ್ಯೆ ಸಿಗೋದು ಅಷ್ಟೇ. 125 00:09:41,000 --> 00:09:41,833 ಹೋಗೋಣವೇ? 126 00:09:44,666 --> 00:09:47,125 -ಇರುಳಿನ ದೃಷ್ಟಿ ಕೂಡ ಇದೆ, ಕಣೋ. -ಹೇಗೆ? 127 00:09:47,208 --> 00:09:49,291 ನಾಲಿಗೆ ಮೇಲೆ ತಾಗಿಸು. ಹ್ಯಾಪ್ಟಿಕ್ಸಂತೆ. 128 00:10:27,500 --> 00:10:29,166 ಮತ್ತೆ, ಕೆಟ್ಟದಾಗೇನೂ ಇರಲಿಲ್ಲ. 129 00:10:29,250 --> 00:10:31,958 -ಗಣಿತ ಚೆನ್ನಾಗಿ ಬರುತ್ತಾ? -ತರಗತಿಯಲ್ಲೇ ಮೊದಲಿಗ ನಾನು. 130 00:10:32,041 --> 00:10:34,291 ಎಷ್ಟು ಮಂದಿ ದಾಳಿಕೋರರನ್ನು ಎದುರಿಸಿದೆವು? 131 00:10:35,875 --> 00:10:38,375 -ಆರು. -ಮುಂದಿನ ಮಹಡಿಯಲ್ಲಿ 12 ಮಂದಿ. 132 00:10:38,458 --> 00:10:41,000 ಆನಂತರ 18 ಮಂದಿ, ಮತ್ತು ಅದು ಹಾಗೆಯೇ ಹೋಗುತ್ತದೆ. 133 00:10:41,083 --> 00:10:43,750 -ಮೇಲೆ 48 ಇರ್ತಾರಾ? -ನೀವು ಅಷ್ಟು ದೂರ ಹೋದರೆ. 134 00:10:43,833 --> 00:10:44,916 ಇವು ಏನು? 135 00:10:45,500 --> 00:10:48,125 ನಿಮ್ಮ ಸಾಧಾರಣ ಕೋಯ್ಡ್, ಸರಣಿ 24ಎ. 136 00:10:48,541 --> 00:10:50,750 ಕಾರ್ಯಕ್ಕೆ ತಕ್ಕಂತೆ ಮಾರ್ಪಡಿಸಲಾಗಿದೆ, ಖಂಡಿತ. 137 00:10:51,125 --> 00:10:52,083 ಕೋಯ್ಡ್ ಅಂದರೆ ಏನು? 138 00:10:52,166 --> 00:10:53,875 ಒಂದು ರೋಬೋಟ್. ಎರಡು ಕಾಲಿನದ್ದು. 139 00:10:54,750 --> 00:10:55,708 ಕಣ್ಣು ಮನುಷ್ಯರಂತೆ. 140 00:10:55,791 --> 00:10:57,625 ನೈಜತೆಗಾಗಿ ಅಷ್ಟೇ. 141 00:11:01,791 --> 00:11:06,625 ವೇಗ, ತೀವ್ರತೆ, ಮತ್ತು ಕ್ರಿಯೆಯ ಹಿಂಸೆ. ನಿಮ್ಮ ತಂಡದ ಧ್ಯೇಯ, ಅಲ್ಲವೇ? 142 00:11:06,708 --> 00:11:07,541 ಮತ್ತು? 143 00:11:07,625 --> 00:11:09,916 ಸ್ವಲ್ಪ ವೇಗ ಹೆಚ್ಚಿಸಿದರೆ ಒಳ್ಳೆಯದು. 144 00:11:10,000 --> 00:11:13,083 ನಮ್ಮಲ್ಲಿ ತರಬೇತಿ ಪಡೆಯುವವರು ಮೂರನೆಯ ಮಹಡಿಯನ್ನು ದಾಟುತ್ತಿದ್ದಾರೆ. 145 00:12:00,250 --> 00:12:01,375 ಹಾಂ, ಗ್ಲಾಡಿಸ್. 146 00:12:02,208 --> 00:12:03,833 ಹೊಸ ವಸ್ತು ಸಿಕ್ತು. 147 00:12:23,208 --> 00:12:25,041 ಶೆರಿಫ್ ಜಾಕ್ಮನ್ ರಿಂದ ಕರೆ 148 00:12:25,125 --> 00:12:26,208 ಶೆರಿಫ್? 149 00:12:26,291 --> 00:12:27,583 ಟಾಮಿ, ಎಲ್ಲಿದ್ದೀಯಾ? 150 00:12:28,541 --> 00:12:29,375 ನಾನು... 151 00:12:29,458 --> 00:12:33,333 ನೀನೇನೇ ಮಾಡುತ್ತಿದ್ದರೂ, ನಿಲ್ಲಿಸು. ಕೋರ್ಬೆಲ್ ಪಿಕೆಟ್ ಮನೆಗೆ ಬಾ. 152 00:12:33,416 --> 00:12:35,083 ನಾನು ರಜೆಯಲ್ಲಿದ್ದೆ, ಸರ್. 153 00:12:35,166 --> 00:12:36,916 ಇದ್ದೆ. ಅದನ್ನು ರದ್ದು ಮಾಡಿದೆ. 154 00:12:37,000 --> 00:12:40,041 ಬೇಗ ಬಾ ಇಲ್ಲಿ. ನಮಗೊಂದು ಸನ್ನಿವೇಶ ಎದುರು ಬಂದಿದೆ. 155 00:12:40,125 --> 00:12:42,541 -ಅದನ್ನು ಸರಿಮಾಡಲು ನಿನ್ನ ಸಹಾಯ ಬೇಕು. -ತಿಳಿಯಿತು. 156 00:13:09,833 --> 00:13:12,791 ದೇವರೇ. ಗಾಯವಾಗಿದೆ. ನನಗೆ ತುಂಬಾ ಗಾಯವಾಗಿದೆ. 157 00:13:12,875 --> 00:13:13,708 ಹಲೋ? 158 00:13:14,041 --> 00:13:16,583 ಸಹಾಯ ಮಾಡಿ. ನನಗೆ ತುಂಬಾ ಗಾಯವಾಗಿದೆ. 159 00:13:16,666 --> 00:13:17,625 ಆರಾಮಿದ್ದೀರಾ? 160 00:13:28,791 --> 00:13:29,958 ಟಾಮಿಗೆ ಕರೆ ಮಾಡು. 161 00:13:30,041 --> 00:13:31,958 ಡೀ ಡೀ? ಏನಾಗ್ತಿದೆ? 162 00:13:51,000 --> 00:13:53,583 -ನಿಮ್ಮ ಕರೆಯನ್ನು ಈಗ ಸ್ವೀಕರಿಸಲಾರೆ. -ಟಾಮಿ, ಉತ್ತರಿಸು. 163 00:13:53,666 --> 00:13:55,333 ಸಂದೇಶವನ್ನು ಬಿಡಿ, ತಿರುಗಿ ಮಾಡುವೆ. 164 00:14:06,125 --> 00:14:07,458 ಅಷ್ಟೇ. ಅಷ್ಟೇ. 165 00:14:08,583 --> 00:14:09,791 ಹಾಂ, ಅಷ್ಟೇ. 166 00:14:10,333 --> 00:14:14,750 ಅಷ್ಟೇ. ಅಷ್ಟೇ. ಹಾಗೆ. ಹಾಗೆ. 167 00:14:29,000 --> 00:14:30,208 ದರಿದ್ರದ್ದು. 168 00:14:32,291 --> 00:14:33,666 ಸೂಳೆಮಗ. 169 00:14:37,250 --> 00:14:38,083 ರೀಸ್? 170 00:14:40,458 --> 00:14:41,458 ಬೇರೆ ಯಾರಿದ್ದಾರೆ? 171 00:14:42,833 --> 00:14:43,916 ಏನಾಗ್ತಿದೆ? 172 00:14:44,000 --> 00:14:46,500 ಏನು ನಡೆಯುತ್ತಿದೆ? ಹೇಳು, ಡೀ ಡೀ, ಏನಾಗುತ್ತಿದೆ? 173 00:14:46,583 --> 00:14:50,041 ಅವಳನ್ನು ಶಾಂತವಾಗಿಸು, ಇಲ್ಲಾ ಇಬ್ಬರಿಗೂ ಗುಂಡು ಹೊಡೆಯುವೆ. 174 00:14:50,125 --> 00:14:52,125 ಪರವಾಗಿಲ್ಲ. ನಾನಿಲ್ಲೇ ಇದ್ದೇನೆ. 175 00:14:52,208 --> 00:14:54,583 ರೀಸ್ ಎಲ್ಲಿ? ಅವನು ಯಾಕೆ ಉತ್ತರಿಸುತ್ತಿಲ್ಲ? 176 00:14:54,666 --> 00:14:55,583 ಅವನು ಈಗಷ್ಟೇ… 177 00:14:56,666 --> 00:14:57,875 ಹೊರಗೆ ಹೋದ. 178 00:14:58,458 --> 00:15:00,541 ಕುಳಿತುಕೊಳ್ಳಿ. ಇಬ್ಬರೂ. 179 00:15:01,041 --> 00:15:02,041 ಕೈಗಳ ಮೇಲೆ. 180 00:15:25,083 --> 00:15:26,208 ಅದು ಅವನೇ, ಅಲ್ಲವೇ? 181 00:15:27,291 --> 00:15:30,250 -ಯಾರು? -ಸೇತುವೆಯ ಮೇಲಿನ ವ್ಯಕ್ತಿ. 182 00:15:30,750 --> 00:15:34,458 ನನಗೆ ಒರಟಾಗಿ ಹೇಳಲು ಇಷ್ಟವಿಲ್ಲ, ಮೇಡಂ, ಆದರೆ ನೀವು ಬಾಯಿಮುಚ್ಚಿಕೊಳ್ಳಬೇಕು. 183 00:15:35,625 --> 00:15:36,666 ಹಾಗೆಯೇ ಇರಬೇಕು. 184 00:15:42,500 --> 00:15:43,750 ಗಮನಿಸಿದೆಯಾ? 185 00:15:45,000 --> 00:15:46,500 ಅವಳು ನಮ್ಮ ಡಿಎನ್ಎ ಮಾದರಿ ಪಡೆದಳು. 186 00:15:47,541 --> 00:15:49,833 ನಾವು ಯಾರು, ಏನಂತ ಖಚಿತವಾಗಿ ತಿಳಿದುಕೊಳ್ಳುವುದು ಹೇಗೆ ಮತ್ತೆ? 187 00:15:52,916 --> 00:15:54,958 ನಾವು ಅವಳ ಮಾದರಿ ಪಡೆಯೋಣ. 188 00:15:55,041 --> 00:15:57,166 ಮತ್ತು ವಿಚಾರಣೆಗೆ ಒಳಪಡೋಣ. 189 00:15:58,583 --> 00:16:01,666 ನಾನು ಎಂದಿಗೂ ಒಬ್ಬ ಹಿರಿಯ ಪೊಲೀಸ್ ಅಧಿಕಾರಿಯನ್ನು ಭೇಟಿಯಾಗಿಲ್ಲ. 190 00:16:01,750 --> 00:16:04,375 ಒಂಥರಾ ಅಸಾಮಾನ್ಯ ವ್ಯಕ್ತಿ. 191 00:16:05,041 --> 00:16:06,750 ಅವರೆಲ್ಲರೂ ಹಾಗೆಯೇ, ದುರಾದೃಷ್ಟವಶಾತ್. 192 00:16:06,833 --> 00:16:08,041 ಕೆಲವರು... 193 00:16:08,875 --> 00:16:10,000 ಅವನೇನಾ? 194 00:16:14,500 --> 00:16:15,333 ಹೇಳಿ, ಸರ್? 195 00:16:15,416 --> 00:16:17,958 ನೀನು ಪೆರಿಫೆರಲ್ ದೃಷ್ಟಿಕೋನಕ್ಕೆ ಪ್ರವೇಶ ಪಡೆ. 196 00:16:18,041 --> 00:16:19,791 ಏನು ಮಾತಾಡ್ತಿದ್ದಾರೆ ಗೊತ್ತಾಗಬೇಕು. 197 00:16:19,875 --> 00:16:23,625 ನಾನು ಅದನ್ನು ಮಾಡಲಾಗದು, ಮಿ. ಜುಬೊವ್. ಮತ್ತು ಮಾಡಲ್ಲ ಕೂಡ. 198 00:16:23,708 --> 00:16:24,791 ಏನಂದೆ? 199 00:16:24,875 --> 00:16:27,625 ನಾವು ಯತ್ನಿಸಿದರೆ ಇನ್ಸ್ಪೆಕ್ಟರಿಗೆ ಗೊತ್ತಾಗಬಹುದು. 200 00:16:27,708 --> 00:16:31,875 ಈ ಗುರಿ ತಪ್ಪಿದ ಮಾತುಕತೆಯನ್ನು ನಾವು ನಡೆಸುತ್ತಿರುವುದು ಆಕೆಗೆ ಗೊತ್ತಿರುವ ಹಾಗೆ. 201 00:16:32,958 --> 00:16:34,916 ನಾನು ಅಂದುಕೊಂಡಿದ್ದನ್ನು ಆತ ಕೇಳಿದನಾ? 202 00:16:35,708 --> 00:16:37,875 ನಾವು ಬುದ್ಧಿವಂತರಾದರೆ ಈಗಲೇ ಗಂಟು-ಮೂಟೆ ಕಟ್ಟಿಕೊಳ್ಳಬೇಕು. 203 00:16:38,375 --> 00:16:39,375 ಜಾಗ ಖಾಲಿ ಮಾಡಬೇಕು. 204 00:16:39,916 --> 00:16:41,750 ಹೊರಟರೆ, ಎಲ್ಲಾ ವ್ಯರ್ಥವಾಗುತ್ತೆ. 205 00:16:42,041 --> 00:16:43,750 ಸ್ಟಬ್ ಮತ್ತು ಆ ಹುಡುಗಿಯ ಆಂತರ್ಯಕ್ಕೆ ಪ್ರವೇಶ ಇಲ್ಲವಾಗುತ್ತೆ. 206 00:16:43,833 --> 00:16:46,125 ಪ್ರಾಣಕ್ಕಿಂತ ಮುಖ್ಯ ಏನಿರಲ್ಲ ಬಿಡು, ಚಿನ್ನ. 207 00:16:46,791 --> 00:16:50,500 ಅದರಿಂದ ಓಡಿಹೋಗಿ ಬದುಕಬಲ್ಲೆನಾ ಅಂತ ನನಗೆ ಗೊತ್ತಿಲ್ಲ. 208 00:16:51,416 --> 00:16:53,000 ಮತ್ತೆ ನಿನಗೆ? 209 00:16:56,291 --> 00:16:58,458 ನೀನು ಸ್ಥಿರವಾಗಿ ಇರುವೆಯಾ, ಆಸಿಯನ್? 210 00:16:59,166 --> 00:17:02,125 ಹೌದು. ನಾನು ಸ್ಥಿರವಾಗಿ ಇರುವೆ. 211 00:17:09,875 --> 00:17:10,958 ಸರಿ, ಮಿಸ್ ಫಿಷರ್, 212 00:17:11,041 --> 00:17:14,125 ಆಂಟಿಗಳು ಕೆಲವು ಆಸಕ್ತಿದಾಯಕ ಮಾಹಿತಿಯನ್ನು ಪತ್ತೆ ಮಾಡಿವೆ. 213 00:17:14,208 --> 00:17:15,250 ಆಂಟಿಗಳಾ? 214 00:17:15,333 --> 00:17:17,750 ಮೆಟ್ಟಿನ ಮಾಹಿತಿ ವಿಂಗಡಿಸುವ ಕ್ರಮಾವಳಿ. 215 00:17:18,125 --> 00:17:20,166 ಕಾರ್ಯನಿಮಿತ್ತ ಜೇನ್ನೊಣಗಳಂತೆ, ಹಾರಾಡಿಕೊಂಡು. 216 00:17:20,250 --> 00:17:23,458 ನಿಮ್ಮ ಸ್ನೇಹಿತ ಪೆನ್ಸ್ಕೆ, ನನ್ನ ಕಾಲಘಟ್ಟದಲ್ಲಿ ಕೈಕಾಲುಗಳನ್ನು 217 00:17:23,541 --> 00:17:25,958 ಕಳೆದುಕೊಳ್ಳಲಿಲ್ಲ ಎಂಬುದು ನಿಮಗೆ ಖುಷಿಯಾಗಬಹುದು. 218 00:17:26,583 --> 00:17:28,125 ಅಂದರೆ ಅದರ ಅರ್ಥ-- 219 00:17:28,208 --> 00:17:30,916 ನೀವಂದುಕೊಂಡಿರುವುದಕ್ಕಿಂತ ಕನಿಷ್ಠ 220 00:17:31,000 --> 00:17:34,083 ಹತ್ತು ವರ್ಷಗಳ ಮುಂಚೆಯೇ ಆರ್ಐ ಸ್ಟಬ್ಬನ್ನು ತೆರೆದಿರಬಹುದು. 221 00:17:34,166 --> 00:17:36,583 ಹಾಗಾಗಿ, ನಮ್ಮ ಎರಡೂ ಕಾಲಮಾನಗಳಲ್ಲಿ, 222 00:17:36,666 --> 00:17:38,916 ದೊಡ್ಡ ಮತ್ತು ಸೂಕ್ಷ್ಮ ಪ್ರಮಾಣಗಳಲ್ಲಾಗುತ್ತಿದೆ, 223 00:17:39,000 --> 00:17:41,583 ಅದರಲ್ಲಿ ವಿಚಲಿತಗೊಳಿಸುವಂಥದ್ದು ಜ್ಯಾಕ್ಪಾಟ್. 224 00:17:41,666 --> 00:17:45,250 ನಿಮ್ಮ ಪ್ರಪಂಚದಲ್ಲಿ ಅತಿ ವೇಗವಾಗಿ ನಡೆಯುತ್ತಿರುವಂತೆ ಭಾಸವಾಗುತ್ತದೆ. 225 00:17:45,333 --> 00:17:48,708 ನನ್ನ ಅನಿಸಿಕೆ, ಆರ್ಐ ಈ ಪ್ರಕ್ರಿಯೆಯನ್ನು ಉದ್ದೇಶಪೂರ್ವಕವಾಗಿ ನಡೆಸುತ್ತಿದೆ. 226 00:17:48,791 --> 00:17:49,875 ಯಾತಕ್ಕಾಗಿ? 227 00:17:50,250 --> 00:17:53,083 ಅದಕ್ಕೆ ಶೆರೀಸ್ ನ್ಯೂಲ್ಯಾಂಡ್ ಮಾತ್ರ ಉತ್ತರಿಸಬಲ್ಲಳು. 228 00:17:53,458 --> 00:17:54,500 ಟೆಕ್ಸಾಸ್ ಯುದ್ಧ. 229 00:17:54,583 --> 00:17:56,833 ಬೇರ್ಪಡಿಕೆ. ನಿಮ್ಮಲ್ಲಿ ನಡೆಯಿತೇ? 230 00:17:56,916 --> 00:18:00,416 ಖಂಡಿತ. ಮಿ. ಪೆನ್ಸ್ಕೆ ಮತ್ತು ನಿಮ್ಮಣ್ಣ ಇಬ್ಬರೂ ಯುದ್ಧದಲ್ಲಿ ಭಾಗಿಯಾದರು. 231 00:18:00,500 --> 00:18:03,083 ಅವರ ದೇಹದಲ್ಲಿ ಅಳವಡಿಸಲಾದ ಹ್ಯಾಪ್ಟಿಕ್ ತಂತ್ರಜ್ಞಾನ 232 00:18:03,166 --> 00:18:05,666 ನನ್ನ ಕಾಲಮಾನದಲ್ಲಿ ಅಭಿವೃದ್ಧಿಯಾಗಲು ದಶಕಗಳೇ ಬೇಕಿದ್ದವು, 233 00:18:05,750 --> 00:18:08,041 ಹಾಗಾಗಿ ಅವರು ಸಾಮಾನ್ಯ ಸೈನಿಕರಂತೆ ಕಾದಾಡಿದರು. 234 00:18:08,791 --> 00:18:10,541 ಕಾನರಿಗೆ ಗಾಯ ಆಗಲಿಲ್ಲವೇ? 235 00:18:10,625 --> 00:18:12,541 ಯಾವ ಹಾನಿಯೂ ಇಲ್ಲದೆ ಯುದ್ಧದಲ್ಲಿ ಬದುಕಿದ. 236 00:18:14,375 --> 00:18:15,916 ಆದರೆ ನಿನ್ನ ಅಣ್ಣ ಅಲ್ಲ. 237 00:18:17,750 --> 00:18:19,000 ಏನು, ಅವನಿಗೆ ಗಾಯವಾಯಿತೇ? 238 00:18:20,041 --> 00:18:21,000 ಸತ್ತುಹೋದ. 239 00:18:26,375 --> 00:18:29,333 ಇಂಥ ವಿವರಗಳನ್ನು ಪಡೆಯೋಕಾಗಲ್ಲ ಅಂತ ನೀನು ಹೇಳಿದ್ದೆ ಅನ್ಸುತ್ತೆ. 240 00:18:29,416 --> 00:18:31,958 ಆತ ಬಹುತೇಕ ಸರಿಯಾಗಿಯೇ ಹೇಳಿದ್ದ. 241 00:18:32,041 --> 00:18:36,416 ಸಾಮಾನ್ಯ ನಾಗರಿಕರಿಗೆ ಸಿಗದಿರುವ ಕಡತಗಳು ಆಂಟಿಗಳಿಗೆ ಲಭ್ಯವಿದೆ. 242 00:18:38,750 --> 00:18:39,958 ಮತ್ತೆ ನಾನು? 243 00:18:41,833 --> 00:18:43,541 ಜಾಕ್ಪಾಟ್ ಶುರುವಾದ ಮೇಲೆ ಮಾಹಿತಿ 244 00:18:43,625 --> 00:18:46,916 ಸ್ವಲ್ಪ ಮಬ್ಬಾಗಿ ಗೋಚರಿಸುತ್ತದೆ, ಆದರೆ ನಿನಗೆ ಮದುವೆಯಾಗಿ, 245 00:18:47,000 --> 00:18:48,125 ಎರಡು ಮಕ್ಕಳಾದಂತಿದೆ. 246 00:18:48,208 --> 00:18:49,208 ಯಾರನ್ನು ಮದುವೆಯಾದೆ? 247 00:18:49,291 --> 00:18:51,208 ಶೆರಿಫ್ ಥಾಮಸ್ ಕಾನ್ಸ್ಟಂಟೈನ್. 248 00:18:51,625 --> 00:18:53,125 ಟಾಮಿಯನ್ನು ಮದುವೆಯಾದೆನೇ? 249 00:18:53,208 --> 00:18:56,000 ಹೌದು. ಶಿಷ್ಟಾಚಾರದ ಬಗ್ಗೆ ಚಿಂತೆಗೀಡು ಮಾಡುತ್ತದೆ, 250 00:18:56,083 --> 00:18:57,041 ಅಲ್ಲವೇ? 251 00:18:57,416 --> 00:18:59,625 ಅಭಿನಂದನೆಗಳು ಹೇಳಬೇಕಾ ಅಂತ. 252 00:18:59,708 --> 00:19:04,333 ಪ್ರಸ್ತುತ ಅಸ್ತಿತ್ವದಲ್ಲಿರದ ಒಬ್ಬ ಫ್ಲಿನ್ ಫಿಷರ್ ಬಗ್ಗೆ ಆಂಟಿಗಳು ನನಗೆ ಹೇಳಿವೆ. 253 00:19:04,416 --> 00:19:06,625 ಆದರೆ ನಿನ್ನ ಬಗ್ಗೆ, ಪುಟ್ಟಿ, 254 00:19:07,708 --> 00:19:09,250 ನನಗೆ ಏನೂ ಗೊತ್ತಿಲ್ಲ. 255 00:19:10,250 --> 00:19:11,625 ಒಂಥರಾ ಉಲ್ಲಾಸದಾಯಕವಾಗಿದೆ. 256 00:19:12,166 --> 00:19:14,875 ನೀನು ಉದ್ಯೋಗಕ್ಕಾಗಿ ಹೆಚ್ಚು ಸಂದರ್ಶನಗಳಿಗೆ ಹೋಗಿಲ್ಲವಲ್ಲ? 257 00:19:14,958 --> 00:19:16,083 ಕೇವಲ ಫಾರೆವರ್ ಫ್ಯಾಬ್. 258 00:19:16,166 --> 00:19:20,416 ಆದರೆ ಅದು ನಿಜವಾಗಿ ಕೆಲಸದ ಸಂದರ್ಶನ ಆಗಿರಲಿಲ್ಲ. ಮಾದಕದ್ರವ್ಯದ ಪರೀಕ್ಷೆ ಅಷ್ಟೇ. 259 00:19:20,500 --> 00:19:21,750 ನೀನು ಉತ್ತೀರ್ಣಳಾದೆಯಾ? 260 00:19:21,833 --> 00:19:22,708 ಹೌದು. 261 00:19:23,041 --> 00:19:24,083 ಅದ್ಭುತ. 262 00:19:24,833 --> 00:19:26,291 ಅಂದರೆ ನಾನು ಹೇಳುವುದು, 263 00:19:26,375 --> 00:19:30,208 ಆ ವಿಚಾರದ ಪ್ರಕಾರವಾಗಿ ನಾವು ಈ ಭೇಟಿಯನ್ನು ಪರಿಗಣಿಸೋಣ. 264 00:19:30,291 --> 00:19:32,166 ಒಬ್ಬರನ್ನೊಬ್ಬರು ತಿಳಿದುಕೊಳ್ಳುವುದು. 265 00:19:32,250 --> 00:19:33,791 ಕೆಲವು ಪ್ರಶ್ನೆಗಳನ್ನು ಕೇಳುವೆ. 266 00:19:33,875 --> 00:19:37,041 ಆಲೋಚನೆ ಮಾಡದೆ, ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಉತ್ತರ ಕೊಡು. 267 00:19:37,416 --> 00:19:38,708 ಕೊಡ್ತೀಯಾ? 268 00:20:27,416 --> 00:20:30,541 ತುಂಬಾ ಜನರಿಗೆ ಅದು ಕಷ್ಟ. ಚಾಕುವಿನ ಕಾಳಗ. 269 00:20:30,958 --> 00:20:34,333 ನೀವು ನಗುತ್ತೀರಿ, ಅಂತರ್ಜಾಲದಲ್ಲಿ ಅದನ್ನು ಮಾಡಲು ಕಲಿಸುವ ವಿಡಿಯೋಗಳಿವೆ. 270 00:20:34,416 --> 00:20:36,041 ಕೊಯ್ಯುವುದು ಮತ್ತು ಚುಚ್ಚುವುದು, 271 00:20:36,125 --> 00:20:38,625 ರಕ್ತನಾಳಗಳು ಮತ್ತು ಅಂಗಗಳು, ಹಾಗೆ. 272 00:20:38,708 --> 00:20:40,625 ನನ್ನ ಅನುಭವದಲ್ಲಿ ಇದು, 273 00:20:40,708 --> 00:20:42,000 ವೇಗಕ್ಕೆ ಸಂಬಂಧಿಸಿದ್ದು. 274 00:20:42,958 --> 00:20:46,083 ಅತ್ಯಂತ ಕಡಿಮೆ ಸಮಯದಲ್ಲಿ ಅತ್ಯಂತ ಹೆಚ್ಚಿನ ತೂತುಗಳು. 275 00:20:47,041 --> 00:20:48,000 ಸರಳ. 276 00:20:51,458 --> 00:20:52,875 ಅದರ ಬಗ್ಗೆ ಯೋಚಿಸಿದಾಗ, 277 00:20:52,958 --> 00:20:56,291 ನಿಮಗೆ ತರಬೇತಿ ಕೊಟ್ಟಿರುವುದಕ್ಕೆ ವಿರುದ್ಧವಾದದ್ದು, ಅಲ್ವಾ? 278 00:20:56,625 --> 00:21:00,416 ಹಾಗಾಗಿ ಅದನ್ನು ಎದುರಿಸುವುದು ಸ್ವಲ್ಪ ಕಷ್ಟವೇ ಆಗಬಹುದು. 279 00:21:00,500 --> 00:21:03,833 ಅದರ ಜೊತೆಗೆ ಬೇರೆ ತಡೆಗಳೂ ಇರುತ್ತವೆ, "ಹಾಗೆ, ಹೀಗೆ ಮಾಡಬಾರದು" ಅಂತ. 280 00:21:04,291 --> 00:21:07,291 ಹೆಚ್ಚೆಂದರೆ, ಒಂದು ಸಲ ಸರಿಯಾಗಿ ಬೀಸಿದರೆ, 281 00:21:08,000 --> 00:21:12,250 ಅದು ಹೇಗೆ ಬಿಚ್ಚಿಕೊಳ್ಳುತ್ತದೆ ಅಂದರೆ… ಅದು ಏನಂತೀರಿ… 282 00:21:13,250 --> 00:21:16,958 ಜರಡಿ ಮತ್ತು ಜಾಲರಿಗೆ ವ್ಯತ್ಯಾಸ ಏನು? ಅವೆರಡೂ ಒಂದೇನಾ? 283 00:21:39,833 --> 00:21:43,041 ಇದು ಭಾರೀ ಮಜವಾಗಿದೆ. 284 00:21:43,125 --> 00:21:47,041 ನಿನಗೆ ಹೇಳಿದೆ, ಗುರು. ನಾನು ಇಲ್ಲಿಗೆ ಬಂದುಬಿಡುವೆ. ಶಾಶ್ವತವಾಗಿ. 285 00:21:47,125 --> 00:21:48,333 ಅಚ್ಚರಿ ಏನು? 286 00:21:48,416 --> 00:21:52,666 ನಮ್ಮಲ್ಲಿ ಒಬ್ಬರು ಮಾತ್ರ ಬದುಕಿರುವವರೆಗೂ ತರಬೇತಿ ಮುಗಿಯದು. 287 00:21:55,000 --> 00:21:55,833 ಇದೇ ಅಚ್ಚರಿ. 288 00:22:03,791 --> 00:22:06,000 -ದೊಡ್ಡ ಭಯ? -ನನ್ನ ತಾಯಿಯ ಸಾವು. 289 00:22:06,375 --> 00:22:09,416 -ದೊಡ್ಡ ಶಕ್ತಿ? -ಯಾವಾಗ ಕೈಚೆಲ್ಲಬೇಕು ಗೊತ್ತಿಲ್ಲ. 290 00:22:09,500 --> 00:22:10,375 ಬಲಹೀನತೆ? 291 00:22:10,458 --> 00:22:11,500 ಅದೇನೇ. 292 00:22:11,625 --> 00:22:15,375 ನೀನು ಸಮಯವನ್ನು ತಿರುಗಿಸಿ ಇದು ಯಾವುದೂ ನಡೆಯದಂತಾದರೆ, ಮಾಡುವೆಯಾ? 293 00:22:15,458 --> 00:22:16,291 ಇಲ್ಲ. 294 00:22:16,375 --> 00:22:20,125 ನಮ್ಮಿಬ್ಬರ ಪ್ರಪಂಚಗಳ ಮಧ್ಯೆ ಸಂಪರ್ಕವನ್ನು ಕಡಿತಗೊಳಿಸುವ ಶಕ್ತಿ ನನಗಿದ್ದರೆ, 295 00:22:20,208 --> 00:22:21,708 ನನ್ನನ್ನು ಮಾಡಲು ಬಿಡುವೆಯಾ? 296 00:22:21,791 --> 00:22:23,166 -ಇಲ್ಲ. -ಯಾಕಿಲ್ಲ? 297 00:22:25,416 --> 00:22:29,250 ನೀನು ಇದರ ಬಗ್ಗೆ ತುಂಬಾ ಹೊತ್ತು ಚಿಂತಿಸಿದೆ. ಸ್ತಬ್ಧಳಾದೆ. ಹೀಗಾಗುತ್ತೆ. 298 00:22:29,333 --> 00:22:30,916 ನಿಮ್ಮನ್ನು ಕೆಲ ಪ್ರಶ್ನೆ ಕೇಳಲೇ? 299 00:22:32,333 --> 00:22:33,791 ನೀವು ನನ್ನನ್ನು ಕೇಳಿದಂತೆ? 300 00:22:33,875 --> 00:22:36,125 ಜೀನಿಯ ಹಾಗೆ ಮೂರು ಎನ್ನುವೆ. 301 00:22:36,208 --> 00:22:38,000 ನಿಮ್ಮ ದೊಡ್ಡ ಭಯ ಯಾವುದು? 302 00:22:38,083 --> 00:22:39,125 ಭೂತಕಾಲ. 303 00:22:40,208 --> 00:22:42,125 ಅಂದರೆ, ನಾನು ಬಂದಿರುವ ಕಾಲವೇ? 304 00:22:42,208 --> 00:22:43,166 ಖಚಿತವಾಗಿ. 305 00:22:44,291 --> 00:22:46,583 ಎರಡು ಮುಗಿಯಿತು. ಒಂದು ಬಾಕಿ ಇದೆ. 306 00:22:50,083 --> 00:22:52,041 ನಿಮಗೆ ನಿಜವಾಗಲೂ ಆ ಶಕ್ತಿ ಇದೆಯೇ? 307 00:22:53,250 --> 00:22:54,583 ನಮ್ಮ ಸಂಪರ್ಕ ಕಡಿಯಲು? 308 00:22:57,083 --> 00:22:59,000 ಕ್ಷಮಿಸು, ನಾನು ಹೆಚ್ಚಿಗೆ ಹೇಳಿರಬಹುದು. 309 00:22:59,083 --> 00:23:01,458 ನಿಮ್ಮಣ್ಣ ಮತ್ತು ಅವನ ಗೆಳೆಯನ ಕಥೆ ಮುಗಿಯಿತು, 310 00:23:01,541 --> 00:23:04,333 ಹಾಗಾಗಿ ನಾನು ವಿದಾಯ ಹೇಳುವೆ, ಮತ್ತು ಒಳ್ಳೆಯದಾಗಲಿ. 311 00:23:05,333 --> 00:23:08,541 ನಮ್ಮ ಮುಂದಿನ ಭೇಟಿ ಹೆಚ್ಚು ಚಟುವಟಿಕೆಯಿಂದಿರುತ್ತೆ ಅಂತೀನಿ. 312 00:23:40,875 --> 00:23:42,000 ಯಮ್ಮೋ, 313 00:23:43,083 --> 00:23:44,916 ನೀನು ಅದ್ಭುತ ಬಿಡು. 314 00:24:00,000 --> 00:24:01,875 ಅಬ್ಬಾ ದೇವರೇ! 315 00:24:01,958 --> 00:24:04,083 ಆಚೆ ಬಂದಾಗ ಯಾವಾಗಲೂ ಹೀಗೇ ಅನ್ಸುತ್ತಾ? 316 00:24:04,166 --> 00:24:06,416 ಗುರು, ಅವಳನ್ನು ಮದುವೆಯಾಗುವೆ. 317 00:24:07,041 --> 00:24:09,291 -ಯಾರನ್ನ? -ಆ ರೋಬೋಟ್ ಹೆಂಗಸನ್ನು. 318 00:24:17,750 --> 00:24:19,208 ನನಗೆ ಇದನ್ನು ಓದಲೂ ಆಗುತ್ತಿಲ್ಲ. 319 00:24:19,708 --> 00:24:20,708 ಏನು? 320 00:24:21,291 --> 00:24:24,916 ರೀಸ್ ಅಮ್ಮನನ್ನು ಅರ್ಜೆಂಟ್ ಮೆಡ್ಡಿಗೆ ಕರ್ಕೊಂಡು ಹೋದ. ಈಗಲೇ ಬನ್ನಿ ಅಂದ. ಬಾ. 321 00:24:26,541 --> 00:24:27,958 ಅಯ್ಯೋ. ಒಂದು ನಿಮಿಷ. 322 00:24:28,958 --> 00:24:31,291 ಧೈರ್ಯ ಮಾಡು, ಬರ್ಟನ್! ನಾವು ಹೋಗಬೇಕು! 323 00:24:46,625 --> 00:24:47,458 ಹಲೋ? 324 00:24:51,750 --> 00:24:52,708 ಶೆರಿಫ್? 325 00:25:50,208 --> 00:25:52,416 ಅಂದರೆ ನಾನು ಯಾರನ್ನಾದರೂ ಕೊಲ್ಲಬೇಕು. 326 00:25:52,500 --> 00:25:54,666 ನನ್ನ ಬರಿಗೈಯಿಂದಲೇ-- 327 00:25:55,583 --> 00:25:57,416 ಇಲ್ಲಿ ಇವನೇನು ಮಾಡುತ್ತಿದ್ದಾನೆ? 328 00:26:04,000 --> 00:26:05,541 ಆಯುಧವನ್ನು ಒಳಗೆ ಇಳಿಸಪ್ಪ. 329 00:26:05,625 --> 00:26:08,083 ಈಗ ಅದನ್ನು ಬಳಸಲು ತುಂಬಾ ತಡವಾಗಿದೆ. 330 00:26:08,458 --> 00:26:09,416 ಏನಾಯಿತು? 331 00:26:09,875 --> 00:26:12,625 ಅದು, ನಿನ್ನಿಂದ ತಪ್ಪಿಸಿಕೊಂಡ ಕೈದಿ ಇದ್ದಾನಲ್ಲ? 332 00:26:13,875 --> 00:26:16,041 ಅವನು ಇಲ್ಲಿಗೆ ಬಂದು ಮೇರಿ ಪಿಕೆಟ್ನ ಕೊಂದ. 333 00:26:17,041 --> 00:26:18,916 ಅವರ ಒಂದು ಗಾಡಿಯನ್ನು ಕದ್ದ. 334 00:26:19,000 --> 00:26:23,041 ಶ್ರೀ ಪಿಕೆಟ್ ಅವರು ತುಂಬಾನೇ ಆಘಾತಕ್ಕೊಳಗಾಗಿದ್ದಾರೆ. 335 00:26:23,958 --> 00:26:26,250 ಫಿಷರ್ ಮನೆಗೆ ಹೋಗಿ, 336 00:26:26,333 --> 00:26:27,958 ಬರ್ಟನ್ನನ್ನು ವಶಕ್ಕೆ ಪಡೆದುಕೋ. 337 00:26:28,041 --> 00:26:30,166 ಅದೇ ಕೆಲಸದಲ್ಲಿ ಅವನ ತಂಗಿಯನ್ನೂ ಹಿಡಿದುಕೋ. 338 00:26:30,250 --> 00:26:32,000 ಇದಕ್ಕೂ ಫಿಷರ್ಗಳಿಗೂ ಏನು ಸಂಬಂಧ? 339 00:26:32,083 --> 00:26:35,375 ನಾನಿನ್ನೂ ಅದರ ಬಗ್ಗೆ ಮಾಹಿತಿ ತೂಗಿನೋಡುತ್ತಿರುವೆ, ಟಾಮಿ, 340 00:26:35,458 --> 00:26:37,708 ಆದರೆ ಮೊದಲಿಗೆ ಈ ಕೆಲಸ ಮಾಡಿದರೆ ಹೇಗೆ? 341 00:26:38,583 --> 00:26:42,083 ಬರ್ಟನ್ ಮತ್ತು ಅವನ ಗೆಳೆಯರು ಮಾದಕದ್ರವ್ಯದ ವ್ಯವಹಾರದಲ್ಲಿ ಕೈಹಾಕುತ್ತಿದ್ದಾರೆ. 342 00:26:42,166 --> 00:26:44,583 ಬೇಡದ ಯಾರನ್ನೋ ಎದುರು ಹಾಕಿಕೊಂಡಿದ್ದಾರೆ. 343 00:26:44,666 --> 00:26:48,458 ಅವರು ಇವರನ್ನು ಮುಗಿಸಲು ಒಬ್ಬ ಕೊಲೆಗಾರನನ್ನು ನೇಮಿಸಿಕೊಂಡಿದ್ದಾರೆ. 344 00:26:48,666 --> 00:26:52,041 ಆ ಕೊಲೆಗಾರ ನಿನ್ನ ವಶದಲ್ಲಿ ಇದ್ದ, ಟಾಮಿ. 345 00:26:52,416 --> 00:26:53,583 ನೀನವನನ್ನು ಕಳೆದುಕೊಂಡೆ, 346 00:26:53,666 --> 00:26:56,166 ಅವನು ಅಲ್ಲಿಂದ ಪಿಕೆಟ್ ಮನೆಗೆ ಬಂದು, 347 00:26:56,250 --> 00:26:59,125 ಕಾರು ಕದ್ದು ತಪ್ಪಿಸಿಕೊಂಡು ಹೋಗಲು ಆಲೋಚಿಸಿದ. 348 00:26:59,208 --> 00:27:02,541 ಅದನ್ನು ಮಾಡುವಾಗ ಮೇರಿ ಪಿಕೆಟ್ ಅವರನ್ನು ಭೀಕರವಾಗಿ ಕೊಂದ. 349 00:27:03,458 --> 00:27:05,125 ಏನನ್ಸುತ್ತೆ, ಆತುರಗಾರನೇ? 350 00:27:06,166 --> 00:27:08,125 ನೀವೇ ಸೃಷ್ಟಿಸಿ ಹೇಳಿದ ಹಾಗಿದೆ. 351 00:27:09,625 --> 00:27:13,166 ಕಥೆಯನ್ನು ಹಾಗೆಯೇ ಹೇಳುವುದು, ಟಾಮಿ. ಇಲ್ಲದ್ದನ್ನು ಹೇಳುವುದು. 352 00:27:13,250 --> 00:27:15,958 ನೀನು ಕಳೆದ ಹತ್ತು ವರ್ಷಗಳಿಂದ ಮಾಡುತ್ತಿರುವ ಹಾಗೆ. 353 00:27:16,041 --> 00:27:18,291 ಯಾವ ರೀತಿ ಅಂತ ಗೊತ್ತಿಲ್ಲದ ಹಾಗೆ ನಟಿಸುತ್ತಿರುವೆ. 354 00:27:18,375 --> 00:27:20,416 ನಿನಗೆ ನೀನೇ ಕಥೆ ಹೇಳಿಕೊಂಡು, 355 00:27:20,500 --> 00:27:23,333 ರಾಜನ ಭಟರ ಸೇನಾಧಿಪತಿ ನೀನೇ ಎಂದು ಭಾವಿಸುತ್ತಾ, 356 00:27:23,416 --> 00:27:25,916 ಅಷ್ಟೂ ಸಮಯ ನನ್ನ ಅಡಿಯಲ್ಲಿ ಕೆಲಸ ಮಾಡುತ್ತಿದ್ದೆ. 357 00:27:27,250 --> 00:27:29,958 ಅಂದ್ರೆ, ನೀನು ಕೆಲಸ ಮಾಡುವುದು ಕೋರ್ಬೆಲ್ ಪಿಕೆಟಿಗೆ. 358 00:27:31,000 --> 00:27:32,375 ನನ್ನನ್ನು ನಂಬಪ್ಪ, 359 00:27:32,666 --> 00:27:35,458 ನಿನ್ನೊಂದಿಗೆ ನೀನು ಪ್ರಾಮಾಣಿಕವಾಗಿದ್ದರೆ ಸುಲಭವಾಗುತ್ತದೆ. 360 00:27:35,541 --> 00:27:39,375 ಘಟಿಸುವ ಪ್ರತಿ ಗಂಟೆ ಅಜ್ಞಾನದಿಂದ ಕುರುಡಾಗಿರುವುದಕ್ಕೆ ಬಹಳ ಶಕ್ತಿ ಬೇಕಾಗುತ್ತದೆ. 361 00:27:39,458 --> 00:27:41,458 ಈಗಲೇ, ನೀನು ಹೋಗಿ ಬರ್ಟನ್ನನ್ನು ಬಂಧಿಸು. 362 00:27:41,541 --> 00:27:44,083 ಅವನನ್ನು ಕೇಳಲು ಕೋರ್ಬೆಲ್ ಬಳಿ ಕೆಲವು ಪ್ರಶ್ನೆಗಳಿವೆ. 363 00:27:48,083 --> 00:27:48,916 ಇಲ್ಲ. 364 00:28:00,333 --> 00:28:04,083 ಆ ಮುದುಕ ನಿನ್ನ ಜೀವನದಲ್ಲಿ ಒಂದು ಕವಲುದಾರಿ ಎದುರಾಗಿದೆ ಅಂದ. 365 00:28:04,791 --> 00:28:07,000 ಅವನು ಅದರ ಬಗ್ಗೆ ಸರಿಯಾಗೇ ಹೇಳಿದ್ದಾನೆ. 366 00:28:08,375 --> 00:28:11,875 ದೇವರೇ, ಟಾಮಿ, ನಾನು ನಿನಗೆ ವಿವರಿಸಿ ಹೇಳಬೇಕಾ? 367 00:28:11,958 --> 00:28:14,833 ಸರಿ. ಸರಿ, ನೀನಿಲ್ಲಿ ಸರಿಯಾದುದನ್ನೇ ಮಾಡುವಂತೆ. 368 00:28:14,916 --> 00:28:19,000 ನನ್ನನ್ನು ಮತ್ತು ಕೋರ್ಬೆಲ್ ಅವರನ್ನು ನಾಯಿಗಳಂತೆ ಬಂಧಿಸಿ ಠಾಣೆಗೆ ಕರೆದೊಯ್ಯಬಹುದು. 369 00:28:19,083 --> 00:28:23,083 ಆಮೇಲೆ ನಾವು ಮೂವರೂ ನಮ್ಮ ಕಥೆಗಳನ್ನು ಪ್ರಪಂಚದ ಮುಂದೆ ಇಡೋಣ. 370 00:28:23,166 --> 00:28:28,000 ನಿನ್ನ ವೈಫಲ್ಯಗಳಿಗೆ ಬೇರೆಯವರನ್ನು ಹೇಗೆ ದೂಷಿಸಿದೆ ಅಂತ ಕೋರ್ಬೆಲ್ ಮತ್ತು ನಾನು ಹೇಳ್ತೀವಿ, 371 00:28:28,083 --> 00:28:31,375 ಎಳೆಯರು ಮತ್ತು ಅಪ್ರಬುದ್ಧರು ಇದನ್ನೇ ಮಾಡುವುದು. 372 00:28:35,166 --> 00:28:36,250 ನಿನಗೊಂದು ಕಡ್ಡಿ ಬೇಕಾ? 373 00:28:41,208 --> 00:28:42,833 ನೀನು ಗಾಬರಿಯಾದೆ, ಟಾಮಿ. 374 00:28:42,916 --> 00:28:45,041 ಕ್ಲಾಂಟನ್ನಿನ ನಾಲ್ಕು ಅವಧಿಗಳಿಗೆ ಆಯ್ಕೆಗೊಂಡ 375 00:28:45,125 --> 00:28:48,041 ಶೆರಿಫ್ ಆದ ನಾನು, ನಿನ್ನ ಕ್ರೂಜರಿಗೆ ಅಗೋಚರ ಎಸ್ಯುವಿಯಿಂದ 376 00:28:48,125 --> 00:28:51,250 ಹೊಡೆದು, ನಿನ್ನ ಕೈದಿಯನ್ನು ತಪ್ಪಿಸಿ, ಇಲ್ಲಿಗೆ ಕರೆತಂದು, 377 00:28:51,333 --> 00:28:53,000 ಕೋರ್ಬೆಲ್ ಪಿಕೆಟ್ ಅವರ ಮನೆಯಲ್ಲಿ 378 00:28:53,083 --> 00:28:55,500 ಬಿಟ್ಟೆ ಎಂಬ ನಂಬಲಸಾಧ್ಯ ಕಥೆಯನ್ನು ಹೇಳುತ್ತೀಯಾ. 379 00:28:55,583 --> 00:29:00,583 ಕ್ಲಾಂಟನ್ನಿನ 50 ರಿಂದ 60% ಜನರಿಗೆ ಉದ್ಯೋಗ ಕೊಟ್ಟಿರುವ ಇದೇ ಕೋರ್ಬೆಲ್ ಪಿಕೆಟ್. 380 00:29:00,666 --> 00:29:05,125 ಆಮೇಲೆ, ಸರಿ, ಹಾಳಾಗಿ ಹೋಗಲಿ, ಟಾಮಿ, ನನಗೆ ಈಗಲೂ ಗೊಂದಲವಾಗುತ್ತಿದೆ. 381 00:29:06,958 --> 00:29:08,958 ಏನು ಹೇಳ್ತಿದ್ದೀನಿ ನಿನಗೆ ಅರ್ಥ ಆಯ್ತಲ್ಲ? 382 00:29:09,583 --> 00:29:13,333 ಕೋರ್ಬೆಲ್ ಮತ್ತು ನಾನು, ನಮ್ಮ ವಿನಮ್ರ ಕ್ಷಮೆಯಾಚನೆಯಿಂದ ಬಿಡುಗಡೆ ಹೊಂದುತ್ತೇವೆ. 383 00:29:13,416 --> 00:29:16,833 ನೀನು, ಅಬ್ಬಬ್ಬಾ ಅಂದ್ರೆ, ಇಲಾಖೆಯಿಂದ ಕೆಲಸ ಕಳೆದುಕೊಳ್ಳಬಹುದು. 384 00:29:16,916 --> 00:29:19,208 ಆದರೂ ನಿನ್ನ ಮೇಲೆ ಕೆಲವು ಪ್ರಕರಣಗಳು ಬರಬಹುದು. 385 00:29:19,291 --> 00:29:21,500 ಸುಳ್ಳು ಬಂಧನ, ಮತ್ತು ಇತ್ಯಾದಿ. 386 00:29:23,416 --> 00:29:26,000 ಅಥವಾ ಬೇರೆ ದಾರಿಯೂ ಇದೆ. 387 00:29:26,083 --> 00:29:27,958 ಜೊತೆಯಾಗಲು ಜೊತೆ ಹೋಗುವ ಮಾರ್ಗ, 388 00:29:28,041 --> 00:29:31,833 ನೀನೊಬ್ಬ ಕಾನೂನಿನ ರಕ್ಷಕನಾಗಿ ಒಳ್ಳೆಯ ಕೆಲಸವನ್ನು ಹಾಗೆಯೇ ಮುಂದುವರಿಸಬಹುದು. 389 00:29:31,916 --> 00:29:34,541 ಜೊತೆಗೆ ಬೇರೆಯ ಜವಾಬ್ದಾರಿಗಳನ್ನೂ ವಹಿಸಿಕೊಳ್ಳಬಹುದು, 390 00:29:34,916 --> 00:29:37,583 ಖಂಡಿತ, ಅದಕ್ಕೆ ಸೂಕ್ತವಾದ ಭತ್ಯೆಗಳೊಂದಿಗೆ. 391 00:29:39,333 --> 00:29:42,083 ಅಥವಾ ಬದಲಾವಣೆಗಾಗಿ ಪ್ರಬುದ್ಧನಾಗಲು ಪ್ರಯತ್ನಿಸು. 392 00:29:46,000 --> 00:29:48,208 ನಿನಗೆ ಆಯ್ಕೆ ಇಲ್ಲ. ಗೊತ್ತಾಗುತ್ತೆ, ತಾನೇ? 393 00:29:49,458 --> 00:29:51,541 ಯಾಕಂದ್ರೆ ನನ್ನ ಕಥೆ ನಿಜವಾಗಿರದಿರಬಹುದು, 394 00:29:52,541 --> 00:29:54,916 ಆದರೆ ನಿಜವಾಗಂತೂ ಕೇಳಿಸುತ್ತೆ. 395 00:29:55,375 --> 00:29:58,208 ನಿನ್ನ ಕಥೆಯನ್ನು ಪ್ರತಿ ಬಾರಿ ಸೋಲಿಸುತ್ತದೆ. 396 00:29:59,208 --> 00:30:01,958 ಹಾಗಾಗಿ, ನಮ್ಮೊಳಗೆ ನಾವು ಘರ್ಷಣೆ ಎದುರಿಸುವ ಬದಲು, 397 00:30:02,041 --> 00:30:06,000 ನೀನು ಹೋಗಿ ಬರ್ಟನ್ ಫಿಷರ್ ಮತ್ತು ಅವನ ತಂಗಿಯನ್ನು ಕರೆದುಕೊಂಡು ಬಾ. 398 00:30:18,041 --> 00:30:21,916 ತಮ್ಮ ವರ್ಧನೆಗಳನ್ನು ಮನೋಜ್ಞವಾದ ವೇಗದಿಂದ ಪತ್ತೆಹಚ್ಚಿ ಬಳಸಿಕೊಂಡರು. 399 00:30:22,000 --> 00:30:24,500 ದೃಶ್ಯ ಮತ್ತು ಧ್ವನಿ ಮಾಹಿತಿ ಹಂಚಿಕೊಳ್ಳಲು ಜಾಲಬಂಧನ. 400 00:30:24,583 --> 00:30:28,000 ಇದು ಅವರ ಮೂಲಭೂತ ಹ್ಯಾಪ್ಟಿಕ್ ಅಳವಡಿಕೆಗಳ ಮೇಲೆ ವ್ಯಾಪಿಸಬಹುದು. 401 00:30:28,666 --> 00:30:31,750 ನಿನಗೆ ಅವರ ಬಗ್ಗೆ ಏನು ಅರ್ಥವಾಯಿತು? ಅವರ ವ್ಯಕ್ತಿತ್ವಗಳ ಬಗ್ಗೆ. 402 00:30:32,083 --> 00:30:35,208 ಧೈರ್ಯ. ಛಲ. ದೃಢತೆ. 403 00:30:35,625 --> 00:30:38,458 ಅಣ್ಣ ಹೆಚ್ಚು ಊಹಿಸಬಲ್ಲಂಥವನು ಮತ್ತು ವಿಶ್ವಾಸಾರ್ಹನು, 404 00:30:38,541 --> 00:30:41,500 ಆದರೆ ಕಷ್ಟ ಕಾಲದಲ್ಲಿ ಅವನ ಸ್ನೇಹಿತನ ಮೇಲೆ ಆಧಾರ ಪಡುವೆ. 405 00:30:41,916 --> 00:30:42,750 ಯಾಕೆ? 406 00:30:43,625 --> 00:30:44,458 ಮೇಡಂ? 407 00:30:44,541 --> 00:30:48,250 ಅಣ್ಣನು ಹೆಚ್ಚು ವಿಶ್ವಾಸಾರ್ಹನಾದರೆ ಅವನ ಸ್ನೇಹಿತನ ಮೇಲೆ ಯಾಕೆ ಆಧಾರ ಪಡುವೆ? 408 00:30:53,875 --> 00:30:56,250 ಅದರ ಬಗ್ಗೆ ಖಚಿತ ಮಾಹಿತಿ ಇಲ್ಲ, ಇನ್ಸ್ಪೆಕ್ಟರ್. 409 00:30:57,208 --> 00:31:01,625 ಪ್ರಜ್ಞೆಯ ಯಾವುದೇ ಮಟ್ಟಕ್ಕಿಂತ ಕೆಳಗಿನ ನರಸಂಬಂಧಿ ಜಾಲಬಂಧದಲ್ಲಿ ಈ ನಿರ್ಧಾರವನ್ನು ಮಾಡಲಾಗಿದೆ. 410 00:31:01,708 --> 00:31:02,666 ಆಸಕ್ತಿದಾಯಕ. 411 00:31:07,541 --> 00:31:08,833 ಮತ್ತು ಆ ಯುವತಿ? 412 00:31:08,916 --> 00:31:12,666 ಅದಿನ್ನೂ ತೆರೆದ ಪ್ರಶ್ನೆ, ಸ್ವಲ್ಪ ಹೊತ್ತಿನಲ್ಲೇ ಅದನ್ನು ಉತ್ತರಿಸುವೆ. 413 00:31:16,875 --> 00:31:17,708 ಏನದು? 414 00:31:17,791 --> 00:31:20,541 ಶೆರೀಸ್ ನ್ಯೂಲ್ಯಾಂಡ್ ಕೆಳಗೆ ವೀಕ್ಷಕರಿಗಾಗಿ ಕಾಯುತ್ತಿದ್ದಾಳೆ. 415 00:31:20,625 --> 00:31:21,833 ಆಕೆಗಾಗಿ ಕಾಯುತ್ತಿದ್ರಿ. 416 00:31:22,833 --> 00:31:26,958 ಜುಬೊವ್ ಮನೆಗೆ ನಮ್ಮ ಭೇಟಿಯ ನಂತರ ಸ್ವಲ್ಪವಷ್ಟೇ ತೆರೆಯನ್ನು ಸರಿಸಿದೆ, 417 00:31:27,041 --> 00:31:29,541 ನಾವು ಬರುವಾಗ ನಮ್ಮ ಪರಿಶೀಲನೆ ಆಗುವಂತೆ ಬಿಟ್ಟೆ. 418 00:31:29,625 --> 00:31:34,125 ಆದರೆ ಡಾ. ನ್ಯೂಲ್ಯಾಂಡ್ ಅಷ್ಟೆಲ್ಲಾ ಚುರುಕಾಗಿ ಪ್ರತಿಕ್ರಿಯಿಸುತ್ತಾರೆಂದು ಅಂದುಕೊಂಡಿರಲಿಲ್ಲ. 419 00:31:35,208 --> 00:31:38,625 ಆಕೆಯನ್ನು ಮೇಲಕ್ಕೆ ಕಳಿಸು. ಇದರಲ್ಲಿ ತುಂಬಾ ಮಾಹಿತಿ ಸಿಗಬಹುದು. 420 00:31:46,958 --> 00:31:48,666 ಥೂ, ಅಪ್ರಯೋಜಕನೇ. 421 00:31:55,125 --> 00:31:57,375 ಇದರೊಂದಿಗೆ ಹೇಗೋ ಬದುಕುವೆ? 422 00:31:59,583 --> 00:32:03,208 ಅಂದ್ರೆ, ಇದರೊಂದಿಗೆ ಹೇಗೆ ಬದುಕುವೆ? 423 00:32:29,541 --> 00:32:30,416 ಈಗ ಏನು? 424 00:32:31,208 --> 00:32:32,125 ನಾವು ಕಾಯೋಣ. 425 00:32:32,750 --> 00:32:33,583 ಯಾವುದಕ್ಕೆ? 426 00:32:36,166 --> 00:32:37,750 ನಾನು ಇಬ್ಬರನ್ನು ಸಾಯಿಸಬೇಕು. 427 00:32:38,708 --> 00:32:40,708 ಅವರಲ್ಲಿ ಒಬ್ಬರು ಇಲ್ಲಿಗೆ ಬರುತ್ತಿರಬಹುದು. 428 00:32:40,791 --> 00:32:42,916 ನನ್ನ ಮಕ್ಕಳ ಬಗ್ಗೆ ಮಾತನಾಡುತ್ತಿರುವೆ, ತಾನೆ? 429 00:32:43,000 --> 00:32:44,666 ಹೌದು, ಮೇಡಂ. ಅವರ ಬಗ್ಗೆನೇ. 430 00:32:51,041 --> 00:32:53,416 -ಅಮ್ಮ ಉತ್ತರಿಸುತ್ತಿಲ್ಲ. -ರೀಸ್ ಕೂಡ. 431 00:32:53,500 --> 00:32:56,708 ರೀಸ್. "ನಿಮ್ಮಮ್ಮ ಆದಷ್ಟು ಬೇಗ ಬರಲು ಹೇಳುತ್ತಿದ್ದಾರೆ." 432 00:32:57,166 --> 00:32:59,375 -"ನಿಮ್ಮಮ್ಮ"? -ಹೌದು, ವಿಚಿತ್ರವೇ. 433 00:32:59,458 --> 00:33:00,625 ಅವನನ್ನು ಲಿಂಕ್ ಮಾಡು? 434 00:33:04,541 --> 00:33:06,166 -ಅಯ್ಯೋ. -ಏನು? 435 00:33:06,250 --> 00:33:07,791 ಅವನ ಜೀವಾಳಗಳು ಗೊತ್ತಾಗ್ತಿಲ್ಲ. 436 00:33:12,500 --> 00:33:15,333 ಪೊಲೀಸರನ್ನು ಕರೆಸಬೇಕು ಅನಿಸುತ್ತಿದೆ, ಇನ್ಸ್ಪೆಕ್ಟರ್. 437 00:33:16,541 --> 00:33:19,708 ಯಂತ್ರಮಾನವರೆಡೆ ಮಾನವರಿಗೆ ಹುಟ್ಟುವ ಭಾವನಾತ್ಮಕ ಪ್ರತಿಕ್ರಿಯೆಯೇ 438 00:33:19,791 --> 00:33:23,208 ಪೆರಿಫೆರಲ್ಗಳು ಸ್ವತಂತ್ರ ಜೀವಿಗಳಾಗಿ ಬದುಕಬಾರದು ಎಂಬುದಕ್ಕೆ ಸಾಕ್ಷಿ. 439 00:33:23,541 --> 00:33:27,125 ಬೀಟ್ರಿಸ್ ಯುವಿಎಸ್ಸಿನ ವಿಶೇಷ ರಿಯಾಯಿತಿಯ ಮೇರೆಗೆ ಇದ್ದಾಳೆ. 440 00:33:27,666 --> 00:33:28,500 ಖಂಡಿತ. 441 00:33:29,916 --> 00:33:32,375 ಆರ್ಐ ಸೃಷ್ಟಿಯಂತೆ ಕಾಣುತ್ತಿಲ್ಲ. 442 00:33:34,375 --> 00:33:36,000 ನಿನ್ನ ಭೇಟಿ ಸಂತೋಷವಾಯಿತು. 443 00:33:36,083 --> 00:33:37,500 ಸಂತೋಷ ನನ್ನದು, ಮೇಡಂ. 444 00:33:38,125 --> 00:33:39,458 ಗಾಬರಿಯ ವಿಚಾರ ಗೊತ್ತಾ? 445 00:33:39,750 --> 00:33:44,250 ಜ್ಯಾಕ್ಪಾಟಿನ ದೀರ್ಘಕಾಲದ ಪರಿಣಾಮ ಏನಂದ್ರೆ ಈಗ ಬಹಳಷ್ಟು ಕೋಯ್ಡುಗಳನ್ನು 446 00:33:44,333 --> 00:33:47,875 ಕಳೆದುಹೋದ ವೈಯಕ್ತಿಕ ಸಂಪರ್ಕಗಳಂತೆ ಮಾರ್ಪಡಿಸಲಾಗಿದೆ. 447 00:33:48,958 --> 00:33:51,208 ಒಡಹುಟ್ಟಿದವರು. ಸಹೋದ್ಯೋಗಿಗಳು. 448 00:33:51,833 --> 00:33:54,083 ನಿಯಮಬದ್ಧವಾಗಿ ತಂದೆ-ತಾಯಿಯರು ಅಲ್ಲ. 449 00:33:54,833 --> 00:33:56,625 ತುಂಬಾ ಕುತೂಹಲಕಾರಿ, ಅಲ್ವಾ? 450 00:33:57,625 --> 00:34:00,250 ಇದೊಂದು ರೀತಿ ತಾಯಿ ಅಥವಾ ತಂದೆಯನ್ನು 451 00:34:00,333 --> 00:34:02,208 ಕಳೆದುಕೊಂಡಷ್ಟು ಸಹಜವಾಗಿದ್ದು 452 00:34:02,875 --> 00:34:05,333 ನಮಗೆ ಒಪ್ಪಿಕೊಳ್ಳಲು ಸುಲಭವಾಗುತ್ತದೆ. 453 00:34:06,041 --> 00:34:07,041 ಆದರೆ ಮಗು? 454 00:34:09,250 --> 00:34:10,250 ಮಗಳಾದರೆ, 455 00:34:11,500 --> 00:34:12,791 ಉದಾಹರಣೆಗೆ? 456 00:34:14,416 --> 00:34:15,833 ದಯವಿಟ್ಟು ಕ್ಷಮಿಸು, ಬೀಟ್ರಿಸ್. 457 00:34:16,416 --> 00:34:18,750 ನೀನು ಈಗ ಆಫ್ ಆಗಲೆಂದು ವಿನಂತಿಸುತ್ತೇನೆ. 458 00:34:18,833 --> 00:34:22,500 ಮತ್ತು ನಿನ್ನ ನೆನಪಿನ ಕಳೆದ ಐದು ನಿಮಿಷಗಳಷ್ಟು ಅಳಿಸಿಹಾಕು. 459 00:34:22,583 --> 00:34:25,333 ಈಗ ಆಫ್ ಆಗುತ್ತಿದೆ. ಅಳಿಸುವಿಕೆ ಶುರುವಾಗುತ್ತಿದೆ. 460 00:34:30,541 --> 00:34:31,875 ನಿಮ್ಮ ಬಗ್ಗೆ ಸಂತೋಷವಾಯಿತೇ? 461 00:34:31,958 --> 00:34:34,208 ನನಗೆ ಕುತೂಹಲ. ಅದನ್ನು ಯಾಕೆ ರಹಸ್ಯವಾಗಿಡಬೇಕು? 462 00:34:35,333 --> 00:34:37,000 ನಮ್ಮ ಸಂಬಂಧ ಹಾಳಾಗಬಹುದು. 463 00:34:37,083 --> 00:34:38,333 ಹೌದು, ಆಗಬಹುದು ಅನ್ನುವೆ. 464 00:34:38,416 --> 00:34:39,958 ಇಲ್ಲಿ ಯಾಕೆ ಬಂದ್ರಿ, ಡಾಕ್ಟರ್? 465 00:34:42,708 --> 00:34:46,875 ಮಹತ್ವವುಳ್ಳದ್ದೊಂದು ನನ್ನಿಂದ ಕಳುವಾಗಿದೆ, 466 00:34:48,291 --> 00:34:50,208 ಮತ್ತು ನನಗೆ ಕಾನೂನಿನ ಪರಿಹಾರ ಬೇಕು. 467 00:34:59,458 --> 00:35:01,000 ನಿನಗಿದು ಸಂಕಟ ಅಂತ ಗೊತ್ತು. 468 00:35:01,541 --> 00:35:02,416 "ಸಂಕಟ"? 469 00:35:03,625 --> 00:35:05,791 ನನಗೆ ವಿಪರೀತ ಭಯವಾಗಿದೆ. 470 00:35:06,125 --> 00:35:08,500 ಇಲ್ಲಿ ನಾವು ಎದುರುಹಾಕಿಕೊಳ್ಳುತ್ತಿರುವುದು ಕ್ಲೆಪ್ಟ್ಗಳನ್ನಷ್ಟೇ ಅಲ್ಲ. 471 00:35:08,583 --> 00:35:09,666 ಈಗ ಮೆಟ್ ಪೊಲೀಸ್ ಕೂಡ ಇದ್ದಾರೆ. 472 00:35:09,750 --> 00:35:11,083 ಇಬ್ಬರಲ್ಲಿ ಒಬ್ಬರು ಸುಲಭವಾಗಿ ನಮ್ಮನ್ನು ಕೊನೆಗಾಣಿಸುತ್ತಾರೆ. 473 00:35:14,375 --> 00:35:16,000 ಇದರ ಅರ್ಥ ಏನಂತ ತಿಳಿಯಿತೇ? 474 00:35:16,083 --> 00:35:17,583 ನಮ್ಮಿಬ್ಬರಿಗೆ ಮಾತ್ರ ಗೊತ್ತಿರುವುದು. 475 00:35:18,583 --> 00:35:19,500 ಎಲೀಟಾಗೆ ಗೊತ್ತು. 476 00:35:21,041 --> 00:35:21,958 ಎಲೀಟಾ ಸತ್ತಿದ್ದಾಳೆ. 477 00:35:22,500 --> 00:35:24,958 ಅಥವಾ ಭೂಮಿಯ ಕೆಳಗೆ ನೆಮ್ಮದಿಯಾಗಿ ಮಲಗಿದ್ದಾಳೆ. 478 00:35:25,666 --> 00:35:27,166 ಇದು ನಮ್ಮದು. ತಗೊಂಡು ಹೋಗಲು. 479 00:35:27,583 --> 00:35:30,583 ಬ್ಯಾಕ್ಟೀರಿಯಾವನ್ನು ಪಡೆಯುವುದು ಹೇಗೆ? ಅದರ ಅನುಕ್ರಮ ಪಡೆಯುವುದು ಹೇಗೆ? 480 00:35:30,875 --> 00:35:32,750 ಸ್ಟಬ್ಬಿನಿಂದ ಯಾರನ್ನಾದರೂ ನಿಯೋಜಿಸಿ-- 481 00:35:34,083 --> 00:35:34,958 ಅವನೇ, ಚಿನ್ನ. 482 00:35:37,125 --> 00:35:39,708 ಅದು ಸಂತೋಷದ ಭಾಗವಾಗಿರದು ಅಂತ ಹೇಳು. 483 00:35:41,166 --> 00:35:43,208 ಸರಿಯಾಗಿ ಅವನ ದುರಹಂಕಾರದಿಂದ ಕದಿಯುತ್ತಾ-- 484 00:35:43,291 --> 00:35:46,375 ದುರಹಂಕಾರ ಒಂದು ರೀತಿಯ ಮೂರ್ಖತನ, 485 00:35:46,458 --> 00:35:47,583 ಒಪ್ಪುತ್ತೀರಾ? 486 00:35:48,875 --> 00:35:51,125 ಉದಾಹರಣೆಗೆ ಅದು ಸ್ವಲ್ಪ ದುರಹಂಕಾರದ ರೀತಿ ತೋರಬಹುದು, 487 00:35:51,208 --> 00:35:54,000 ನಮ್ಮ ಎಂಕ್ರಿಪ್ಷನ್ ಒಡೆಯಲಾರದ್ದು ಅಂದುಕೊಳ್ಳಲು, 488 00:35:54,083 --> 00:35:56,083 ಅದರಲ್ಲೂ, ಐತಿಹಾಸಿಕವಾಗಿ, 489 00:35:56,166 --> 00:35:59,208 ಯಾವುದೇ ನಿಗದಿತ ಕೋಡಿನ ಅಭೇಧ್ಯತೆಯ ಆಯಸ್ಸು 490 00:35:59,750 --> 00:36:03,750 ಯಾವಾಗಲೂ ನಿರಾಶಾದಾಯಕವಾಗಿ ಕಡಿಮೆಯೆಂದು ನಿರೂಪಿಸಲಾಗಿದೆ. 491 00:36:08,916 --> 00:36:11,708 ಅಪ್ಪನ ಕೋಣೆಗೆ ಹೋಗು. ಒಂದು ಚಾಕು ತಂದು ಕೊಡು. 492 00:36:11,791 --> 00:36:13,583 -ಯಾವುದು? -ಯಾವುದಾದರೂ ಸರಿ. 493 00:36:17,333 --> 00:36:19,458 ನಾನು ಸ್ವಲ್ಪ ಇಕ್ಕಟ್ಟಿನಲ್ಲಿದ್ದೇನೆ. 494 00:36:19,791 --> 00:36:24,583 ನನ್ನ ಒಂದು ಮನಸ್ಸು, ಸ್ವಾಭಾವಿಕವಾಗಿ, ನಿಮ್ಮಿಬ್ಬರನ್ನು ನಾಶಮಾಡಲು ಆಶಿಸುತ್ತಿದೆ. 495 00:36:24,666 --> 00:36:26,958 ನನ್ನ ಆಂತರ್ಯದ ಮಗು ಎಂದು ಅದನ್ನು ಕರೆಯಬಹುದು. 496 00:36:27,041 --> 00:36:31,083 ಉದ್ರಿಕ್ತಗೊಂಡು. ಸಿಟ್ಟಿನಲ್ಲಿ. ಸೇಡನ್ನರಸುತ್ತಾ. 497 00:36:33,000 --> 00:36:36,625 ಆದರೆ ನನ್ನ ತಣ್ಣಗಿರುವ ಮನಸ್ಸಿಗೆ, ನನಗೆ ನಿಮ್ಮಿಬ್ಬರ 498 00:36:37,041 --> 00:36:39,208 ಅವಶ್ಯಕತೆ ಇರುವ ಅರಿವಾಗಿದೆ. 499 00:36:41,291 --> 00:36:43,416 ಖಂಡಿತವಾಗಿ, ನಿಮ್ಮ ಕೌಶಲ್ಯದ್ದು. 500 00:36:46,291 --> 00:36:50,666 ಮತ್ತು ಈಗ ನಿಮ್ಮ ರಹಸ್ಯಗಳು ಕೂಡ ಅನ್ಸುತ್ತೆ. 501 00:36:53,750 --> 00:36:56,833 ಅಲ್ಲದೆ, ನೀವೆಂದರೆ ನನಗೆ ಇಷ್ಟ. 502 00:36:58,791 --> 00:37:00,083 ಅದರಲ್ಲೂ ನೀನೆಂದರೆ, ಆಶ್. 503 00:37:00,666 --> 00:37:03,625 ಆಸಿಯನ್ನನ್ನ ತಗೋಬಹುದು ಅಥವಾ ಬಿಡಬಹುದು, ಆದರೆ ನೀನು, 504 00:37:04,041 --> 00:37:07,083 ನಿನಗೆ ಗೊತ್ತೋ ಇಲ್ಲವೋ, ನಿನಗಿರುವುದು ಕ್ಲೆಪ್ಟ್ ಮನಸ್ಸು. 505 00:37:07,541 --> 00:37:12,041 ಗರ್ವ. ಕುತಂತ್ರ. ಆಕ್ರಮಣಶೀಲತೆ. 506 00:37:13,208 --> 00:37:14,833 ಮತ್ತು: ದುರಹಂಕಾರವೂ ಹೌದು. 507 00:37:16,333 --> 00:37:18,708 ಹಾಗಾಗಿ ಇದೆಲ್ಲವೂ ಸ್ವಲ್ಪ ಅನಿಶ್ಚಿತವಾಗಿದೆ. 508 00:37:20,375 --> 00:37:21,541 ಎಂಬುದು ನನ್ನ ಭಯ. 509 00:37:23,416 --> 00:37:24,875 ನಾನು ಮಾಡಬೇಕಿರುವುದು. 510 00:37:30,208 --> 00:37:31,208 ನನಗೆ ಇಷ್ಟವಾದದ್ದು. 511 00:37:32,208 --> 00:37:34,333 ತುಂಬಾ ಸುಂದರವಾಗಿದೆ, ಮಗನೇ. 512 00:37:34,625 --> 00:37:36,000 ನಾನು ನೋಡಬಹುದಾ, ಅಪ್ಪ? 513 00:37:36,083 --> 00:37:39,916 ಅದು ಬೇಡ. ಅಡುಗೆಮನೆಗೆ ಓಡು, ಅಡುಗೆಯಾಕೆ ಪುಡ್ಡಿಂಗ್ ಮಾಡಿದ್ದಾಳೆ. 514 00:37:49,541 --> 00:37:52,041 -ದಯವಿಟ್ಟು ಕ್ಷಮಿಸಿ, ಸರ್. -ಬಾಯಿ ಮುಚ್ಚು, ಆಸಿಯನ್. 515 00:37:59,916 --> 00:38:02,875 ನಿಮ್ಮ ಯೋಜನೆ ಹೇಳು, ಇಲ್ಲಾ ಸಾಯಿಸುತ್ತೇನೆ. ಹತ್ತೇ ಕ್ಷಣಗಳು. 516 00:38:10,000 --> 00:38:12,208 ಎಲೀಟಾ ಪೋಲ್ಟ್ ಅಣ್ಣನೊಂದಿಗೆ ಇದ್ದಳಂದುಕೊಂಡಿದ್ಳು. 517 00:38:12,291 --> 00:38:15,583 ಆರ್ಐ ಕಡತಗಳನ್ನು ಅವನ ಹ್ಯಾಪ್ಟಿಕ್ ಅಳವಡಿಕೆಗಳಿಗೆ ಡೌನ್ಲೋಡ್ ಮಾಡಲು. 518 00:38:15,666 --> 00:38:20,166 ಅವನ್ನು ಸ್ಟಬ್ಬಿನಲ್ಲಿ ಶೇಖರಿಸಿಡಲು ಯೋಜಿಸಿದ್ಳು. ಅದರರ್ಥ, ಅವುಗಳ ಜಾಡು ಪತ್ತೆಯಾಗದಿರಲಿ ಅಂತ. 519 00:38:21,583 --> 00:38:23,916 ಒಳ್ಳೆಯ ಬುದ್ಧಿವಂತಿಕೆ, ನೀನೂ ಒಪ್ಪುವಂಥದ್ದು. 520 00:38:24,541 --> 00:38:26,833 ಆದರೆ ಪೆರಿಫೆರಲ್ ನಡೆಸುತ್ತಿದ್ದದ್ದು ತಂಗಿ, 521 00:38:26,916 --> 00:38:28,833 ಮತ್ತು ಅವಳಿಗೆ ಅಳವಡಿಕೆಗಳು ಇಲ್ಲ, 522 00:38:28,916 --> 00:38:31,708 ಹೆಡ್ಸೆಟ್ ಮಾಹಿತಿಯ ಬ್ಯಾಕ್ಟೀರಿಯಾ ಡಿಎನ್ಎಗೆ ಅನುವಾದಿಸಿತು. 523 00:38:31,791 --> 00:38:33,625 ಅವಳ ಮೆದುಳಿನಲ್ಲಿ ವಸತಿ ಹೂಡಿವೆ. 524 00:38:34,791 --> 00:38:37,291 ಆ ಮಾಹಿತಿಯೊಂದಿಗೆ ಏನನ್ನು ಮಾಡಲು ಬಯಸಿದ್ದೆ? 525 00:38:38,375 --> 00:38:39,916 ಹರಾಜುಗಾರನಿಗೆ ಮಾರುತ್ತಿದ್ದೆ. 526 00:38:54,750 --> 00:38:56,333 ನಾನು ನಿನ್ನನ್ನು ನಂಬುವುದಿಲ್ಲ. 527 00:39:04,666 --> 00:39:06,208 ನಿಯೋಪ್ರಿಂಗಳಿಗೆ ಕೊಡು. 528 00:39:06,291 --> 00:39:09,416 ಹಾಗೆ ಯಾಕೆ ಮಾಡಬೇಕು ಅಂತೀಯ? 529 00:39:09,500 --> 00:39:14,500 ಅವರು ಈ ಜಾಗವನ್ನು ಸುಟ್ಟುಹಾಕಿ ಅದರ ಜಾಗದಲ್ಲಿ ಹೊಸದನ್ನು ಕಟ್ಟಲಿ ಅಂತ. 530 00:39:18,583 --> 00:39:19,583 ನೀನೊಬ್ಬ ದಡ್ಡಿ. 531 00:39:21,333 --> 00:39:22,541 ಪ್ರೇಮಮಯ ದಡ್ಡಿ. 532 00:39:26,333 --> 00:39:28,625 ಮತ್ತೆ ನನಗೆ ಮೋಸ ಮಾಡಲು ನೋಡಿದರೆ, 533 00:39:31,458 --> 00:39:34,791 ನಿಮ್ಮಿಬ್ಬರನ್ನು ಕೊರೆದು ಕತ್ತರಿಸಿ, ನನ್ನ ಮುದ್ದಾದ ನಾಯಿಗಳಿಗೆ 534 00:39:35,625 --> 00:39:37,708 ತಿನ್ನಲು ಹಾಕಿಬಿಡುತ್ತೇನೆ. 535 00:39:44,583 --> 00:39:46,416 ಆದರೂ ನಿಮ್ಮ ಮಿಕ್ಕ ಯೋಜನೆ ಚೆನ್ನಾಗಿದೆ. 536 00:39:47,208 --> 00:39:48,666 ಹಾಗಿದ್ದರೆ ಮುಂದುವರಿಯೋಣವೇ? 537 00:39:54,750 --> 00:39:57,333 ಜ್ಯಾಕ್ಪಾಟಿನ ಪ್ರತಿ ದಿಕ್ಕು ಕೂಡ 538 00:39:57,875 --> 00:40:00,208 ಅದೇ ಪ್ರತಿಬಂಧಕದಿಂದ ಆಯುಧಮಯವಾಗಿದೆ. 539 00:40:01,500 --> 00:40:03,375 ಮಾನವ ಗುಣ. 540 00:40:04,333 --> 00:40:07,291 ಈಗ ಅದು ಸ್ವಾರ್ಥ, ಭ್ರಷ್ಟತೆ ಅಥವಾ 541 00:40:07,375 --> 00:40:09,916 ಸರಳ ದಡ್ಡತನದಿಂದ ರೂಪುಗೊಂಡಿರಬಹುದು, 542 00:40:10,625 --> 00:40:15,125 ಆದರೆ ಆಳದಲ್ಲಿ, ಎಲ್ಲದರ ಗುಣ ಒಂದೇ, 543 00:40:15,916 --> 00:40:18,541 ಸಾಮೂಹಿಕ ಒಳ್ಳೆಯದಕ್ಕೆ ಅಡ್ಡಿಯಾಗುವಂಥ 544 00:40:18,625 --> 00:40:20,791 ಒಂದು ನಿರಂತರವಾದ, ಸ್ವಯಂನಾಶಕ ಅಡಚಣೆ. 545 00:40:23,125 --> 00:40:23,958 ಮಾಡಲೇ? 546 00:40:24,583 --> 00:40:25,416 ದಯಮಾಡಿ. 547 00:40:35,458 --> 00:40:38,583 ಕೆಲವು ರಾತ್ರಿಗಳ ಹಿಂದೆ, ಒಬ್ಬ ಆರ್ಐ ಉದ್ಯೋಗಿ ಮತ್ತು 548 00:40:38,666 --> 00:40:40,750 ಸ್ಟಬ್ ಒಳಗಿನಿಂದ ಚಾಲಿತ ಪೆರಿಫೆರಲ್ರಿಂದ 549 00:40:40,833 --> 00:40:43,750 ಆರ್ಐನಲ್ಲಿ ಒಂದು ನಿರ್ಣಾಯಕವಾದ ಮಾಹಿತಿಯ ಉಲ್ಲಂಘನೆ ಆಯಿತು. 550 00:40:44,333 --> 00:40:47,583 ಮುಂದೆ ನಡೆದ ಉಲ್ಲಂಘನೆ ಸಂಬಂಧಿತ ಅಪರಾಧದ ಸಂದರ್ಭದಲ್ಲಿ 551 00:40:47,666 --> 00:40:51,916 ಜುಬೊವನ ಸಹವರ್ತಿಯ ಇರುವಿಕೆ ಖಚಿತವಾಗಿ ಕ್ಲೆಪ್ಟ್ ಒಳಗೊಂಡಿರುವುದನ್ನು ಸೂಚಿಸುತ್ತದೆ. 552 00:40:52,166 --> 00:40:54,125 ಅವರು ನಮ್ಮ ನರಸಂಬಂಧಿ ಹೊಂದಾಣಿಕೆಯ 553 00:40:54,208 --> 00:40:56,166 ವ್ಯವಸ್ಥೆಯನ್ನು ಗುರಿ ಮಾಡಿದ್ದರು ಎಂದು 554 00:40:56,250 --> 00:41:01,250 ನಂಬಲು ನಮ್ಮಲ್ಲಿ ಕಾರಣವಿದೆ, ಇದು ನಿಮಗೆ ಗೊತ್ತಿರುವಂತೆ ಅತಿ ಸೂಕ್ಷ್ಮವಾದ ಸಂಶೋಧನಾ ವಲಯ. 555 00:41:01,333 --> 00:41:04,458 ಹಾಗಂದ್ರೆ, ನಿಮ್ಮಿಂದ ಕಳುವಾದ ಮಾಹಿತಿ ಈ ಯಾಂತ್ರಿಕ ವ್ಯವಸ್ಥೆಯ 556 00:41:04,541 --> 00:41:07,083 ಅಸ್ತಿತ್ವವನ್ನು ದಾಖಲಿಸುತ್ತದೆಯೇ? 557 00:41:07,166 --> 00:41:08,000 ಹೌದು. 558 00:41:08,083 --> 00:41:09,416 ಅದೇನಾ ನಿಮ್ಮ ಭಯ? 559 00:41:09,500 --> 00:41:12,958 ಇದು ಸಾರ್ವಜನಿಕವಾಗಿ ತಿಳಿದರೆ ಟೀಕೆ ಮತ್ತು ನಿರಾಕರಣೆ ಎದುರಿಸಬೇಕೆಂದಾ? 560 00:41:13,041 --> 00:41:14,041 ಖಂಡಿತ. 561 00:41:14,416 --> 00:41:17,500 ಎಲ್ಲಕ್ಕಿಂತ ಹೆಚ್ಚಾಗಿ ಈ ಯಾಂತ್ರಿಕ ವ್ಯವಸ್ಥೆಯ ನಿಯಂತ್ರಣದ ವಿಧಾನ, 562 00:41:17,583 --> 00:41:19,291 ಕಡಿಮೆ ಸೌಮ್ಯ ರೀತಿಯಲ್ಲಿ ಬಳಸಲು. 563 00:41:19,375 --> 00:41:22,125 ಈ ತಂತ್ರಜ್ಞಾನದಲ್ಲಿ ಈಗಾಗಲೇ ಅಂತರ್ಗತವಾಗಿರುವ ಸಾಧ್ಯತೆ. 564 00:41:23,708 --> 00:41:27,541 ಏನಂದ್ರೆ, ನೀವು ಒಪ್ಪಬಹುದು, ಇನ್ಸ್ಪೆಕ್ಟರ್, 565 00:41:27,625 --> 00:41:30,291 ಸುತ್ತಿಗೆಯು ತುಂಬಾ ಉಪಕಾರಿ ಸಲಕರಣೆ. 566 00:41:31,458 --> 00:41:34,375 ಆದರೆ ತಪ್ಪಾದ ಕೈಗಳಲ್ಲಿ ಅದು ಅಪಾಯಕಾರಿ ಆಯುಧವಾಗಬಹುದು. 567 00:41:35,916 --> 00:41:38,500 ನೀವು ಇತ್ತೀಚೆಗೆ ಲೆವ್ ಜುಬೊವರನ್ನು ಭೇಟಿಯಾದಿರಲ್ಲವೇ? 568 00:41:39,500 --> 00:41:44,291 ಆರ್ಐಯ ಸ್ಟಬ್ಬಿನಲ್ಲಿ ತನ್ನ ಇತ್ತೀಚೆಗಿನ ಸಾಹಸಗಳ ಆಸಕ್ತಿದಾಯಕ ಕಥೆಯನ್ನು ನಿಮಗೆ ಹೇಳಿರಬಹುದು. 569 00:41:45,375 --> 00:41:47,041 "ಆರ್ಐಯದ್ದಾ"? ನಿಮ್ಮ ಮಾಲೀಕತ್ವದ್ದಾ? 570 00:41:47,125 --> 00:41:48,708 ಸೃಷ್ಟಿಸಿದ್ದು ನಾನೇ ಅಲ್ವಾ? 571 00:41:48,791 --> 00:41:51,583 ಈ ತಂತ್ರಜ್ಞಾನದ ಅಭಿವೃದ್ಧಿಗೆ ಪ್ರಯೋಗಾಲಯದಂತೆ ಉಪಯೋಗಿಸಲು. 572 00:41:52,541 --> 00:41:56,083 ಕ್ಲೆಪ್ಟರು ಇದನ್ನು ನಿಯಂತ್ರಿಸಲು ಶುರುಮಾಡಿದರೆ ಅದು ಎಷ್ಟು ಅಪಾಯಕಾರಿ 573 00:41:56,958 --> 00:41:59,166 ಅಂತ ನಾನು ನಿಮಗೆ ಹೇಳಬೇಕಿಲ್ಲ. 574 00:42:05,000 --> 00:42:06,541 ನನ್ನಿಂದ ನಿಮಗೇನು ಬೇಕು? 575 00:42:11,083 --> 00:42:12,333 ಜುಬೊವರನ್ನು ನಾಶಮಾಡಿ, 576 00:42:12,750 --> 00:42:15,375 ಫ್ಲಿನ್ ಫಿಷರ್, ಮತ್ತು ಅವರ ಎಲ್ಲಾ ಸಹವರ್ತಿಗಳನ್ನು. 577 00:42:15,458 --> 00:42:17,333 ಇಲ್ಲಿ ಮತ್ತು ಸ್ಟಬ್, ಎರಡೂ ಕಡೆ. 578 00:42:18,000 --> 00:42:21,416 ಎಷ್ಟು ಸರಳವಾಗಿ ಹೇಳಿದಿರಿ. ನಾನೇನೋ ಮಾಯಾಮಂತ್ರ ಮಾಡುವ ಹಾಗೆ. 579 00:42:21,500 --> 00:42:23,208 ಹಿಂದಿನ ಉದಾಹರಣೆಯನ್ನು ಗಮನಿಸಿ. 580 00:42:23,291 --> 00:42:24,500 ಸ್ಯಾಮ್ಸೊನೋವರು. 581 00:42:25,041 --> 00:42:26,541 ಭೂಮಿಯಿಂದ ಅವರ 582 00:42:28,125 --> 00:42:31,625 ಇಡೀ ವಂಶ ನಿರ್ವಂಶವಾಯಿತು. ಅದು ಮಾತ್ರ ನಿಜಕ್ಕೂ ಅದ್ಭುತ ದೃಶ್ಯ. 583 00:42:31,708 --> 00:42:33,541 ಅದು ಬೇರೆಯದೇ ಆದ ಸಂದರ್ಭ. 584 00:42:33,625 --> 00:42:34,458 ಹೌದಾ? 585 00:42:34,541 --> 00:42:36,541 ದೇಶದ್ರೋಹ? ಖಂಡಿತವಾಗಿಯೂ. 586 00:42:36,625 --> 00:42:39,375 "ಒಂದು ಕಾನೂನಾತ್ಮಕ ಸಂಸ್ಥೆಯ ವಿರುದ್ಧ ಅದನ್ನು 587 00:42:39,458 --> 00:42:42,333 "ಉರುಳಿಸುವ ಉದ್ದೇಶದಿಂದ ಹಿಂಸೆಯನ್ನು ಜಾರಿ ಮಾಡುವುದು." 588 00:42:43,333 --> 00:42:45,708 ನನ್ನ ಬಳಿ ಸುತ್ತಿಗೆಯೊಂದಿದ್ದರೆ... 589 00:42:49,291 --> 00:42:52,958 ಸ್ವಾಭಾವಿಕವಾಗಿ, ನೀವು ಇದನ್ನೆಲ್ಲಾ ಅರ್ಥಮಾಡಿಕೊಂಡು ಅರಗಿಸಿಕೊಳ್ಳಬೇಕಾಗುತ್ತೆ. 590 00:42:54,000 --> 00:42:57,375 ಆದರೆ ತಿಳಿಯಿರಿ, ನಾನಿದನ್ನು ನಿಮ್ಮ ಬಳಿ ಮಾತ್ರ ಹಂಚಿಕೊಳ್ಳಲು ಕಾರಣ, 591 00:42:57,458 --> 00:43:01,541 ಪರಿಸ್ಥಿತಿಯ ಗಾಂಭೀರ್ಯವನ್ನು ಅರ್ಥಮಾಡಿಕೊಳ್ಳುವ ಬುದ್ಧಿಮತ್ತೆ ಮತ್ತು ಸೂಕ್ಷ್ಮ ಮತಿ 592 00:43:01,625 --> 00:43:03,833 ನಿಮ್ಮಲ್ಲಿದೆ ಅಂತ ನನಗಿರುವ ವಿಶ್ವಾಸ. 593 00:43:16,208 --> 00:43:17,791 ಮುಂದೆ ನನ್ನ ನಿವಾಸಕ್ಕೆ ಬನ್ನಿ. 594 00:43:19,083 --> 00:43:21,750 ಚಹಾಗಾಗಿ, ನಿಮಗಿಷ್ಟವಾದರೆ. 595 00:43:38,083 --> 00:43:39,833 ನೀವು ಮಾಡುತ್ತಿರುವುದು ದುಡ್ಡಿಗಾಗಿಯಾ? 596 00:43:40,291 --> 00:43:42,958 ದುಡ್ಡೇನೋ ಇದೆ, ಆದರೆ ನಾನು ಅದಕ್ಕಾಗಿ ಬಂದಿಲ್ಲ. 597 00:43:43,333 --> 00:43:44,208 ಮತ್ತೆ ಯಾಕೆ? 598 00:43:45,333 --> 00:43:47,083 ನನಗೆ ಒಬ್ಬ ಮಗಳಿದ್ದಾಳೆ. 599 00:43:47,916 --> 00:43:49,916 ಸಾಧ್ಯವಾದರೆ ಅವಳನ್ನು ಬದುಕಿಸಲು ನೋಡುವೆ. 600 00:43:50,000 --> 00:43:53,125 ನನ್ನ ಮಕ್ಕಳನ್ನು ಕೊಲ್ಲದಿದ್ದರೆ ಅವಳಿಗೆ ತೊಂದರೆ ಕೊಡುತ್ತೇವಂದ್ರಾ? 601 00:43:53,208 --> 00:43:54,375 ಸ್ಥೂಲವಾಗಿ. 602 00:43:58,250 --> 00:44:02,083 ನನ್ನ ತಾಯಿ ಹೇಳ್ತಿದ್ರು, "ಮೂರ್ಖನು ಮಾತ್ರ ಪ್ರಪಂಚವನ್ನು ಹೀಗೆ ಅಥವಾ ಹಾಗೆ ನೋಡುವನು." 603 00:44:02,916 --> 00:44:07,166 ಇದು ಸರಳ ಜಾಗದಲ್ಲಿರುವ ಸರಳ ಜನರಿಗೆ ಇರುವ ಹಿತವಾದ ಸರಳ ಆಲೋಚನೆ. 604 00:44:07,250 --> 00:44:09,958 ಆದರೆ ದುರಾದೃಷ್ಟವಶಾತ್, ಅದ್ಯಾವುದರ ಪಾತ್ರವೂ ಇಲ್ಲಿಲ್ಲ. 605 00:44:10,041 --> 00:44:12,125 ನಿಮ್ಮ ಪ್ರಕಾರ ಎರಡು ಆಯ್ಕೆಗಳು ಕಾಣುತ್ತಿವೆ. 606 00:44:12,625 --> 00:44:16,083 ಒಂದೋ ನಿಮ್ಮ ಮಗಳು ಸಾಯಬೇಕು, ಅಥವಾ ನನ್ನ ಮಕ್ಕಳು, ಅಲ್ಲಿಗೆ ಮುಗಿಯುತ್ತದೆ. 607 00:44:16,166 --> 00:44:18,041 ಇನ್ನೊಂದು ಆಯ್ಕೆ ಇದೆ ಅಂತಿದ್ದೀರಾ? 608 00:44:18,125 --> 00:44:19,208 ಹೌದು. 609 00:44:20,708 --> 00:44:22,583 ಆದರೆ ನಿಮ್ಮ ಮಾತು ಕೇಳಿ, 610 00:44:23,166 --> 00:44:26,416 ನಿಮ್ಮ ಧ್ವನಿ ಕೇಳಿ, ನೀವು ಅದನ್ನು ಪರಿಗಣಿಸಲ್ಲ ಎನ್ನಬಲ್ಲೆ. 611 00:44:29,541 --> 00:44:30,375 ಪ್ರಯತ್ನ ಮಾಡಿ. 612 00:44:32,458 --> 00:44:33,500 ನೀವು ಸಾಯಬಹುದು. 613 00:44:35,333 --> 00:44:37,666 ಏನು ಮಾಡ್ತಾ ಇದ್ದೀಯ? ಛೆ! 614 00:44:39,458 --> 00:44:40,583 ಯಾಕೆ ನಿಲ್ಲಿಸಿದೆವು? 615 00:44:40,666 --> 00:44:43,875 ನಿಧಾನವು ಸರಾಗ. ಸರಾಗವು ವೇಗ. ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು. 616 00:44:43,958 --> 00:44:45,916 ಈಗಲೇ ಹೋಗದಿದ್ದರೆ, ಮುಂದಿನದು ಅಮ್ಮನೇ. 617 00:44:46,000 --> 00:44:49,375 ಕೊಲೆಗಾರ ಹೊಂಚುಹಾಕಿ ಕುಳಿತಿದ್ದಾನೆ. ಆತುರದಿಂದ ಎಲ್ಲರೂ ಸಾಯ್ತೇವೆ. 618 00:44:49,458 --> 00:44:50,291 ಬರ್ಟನ್-- 619 00:44:50,375 --> 00:44:52,500 ನನಗೆ ಸರಿಯಾಗಿ ಬರುವುದು ಇದೊಂದೇ. 620 00:44:52,583 --> 00:44:55,666 ಹಾಗಾಗಿ ಈಗ ಇದನ್ನು ಸರಿಯಾಗಿ ಮಾಡಲು ನೀನು ನನ್ನನ್ನು ನಂಬಬೇಕು. 621 00:44:59,125 --> 00:45:00,125 ಛೆ. 622 00:45:00,208 --> 00:45:02,458 ಇವನ್ನು ತಗೋ. ಆ ಕಡೆ, ಕಾರಿನ ಸುತ್ತ ಹೋಗು. 623 00:45:05,666 --> 00:45:06,958 ಇದನ್ನು ಅರ್ಥಮಾಡಿಕೊಳ್ಳುವೆ. 624 00:45:07,041 --> 00:45:10,458 ನಾನು ಇಲ್ಲಿ ಸಾಯಬಾರದು ಅಂದುಕೊಂಡರೆ ಮೂರ್ಖನಾಗುತ್ತೀನಾ? 625 00:45:11,208 --> 00:45:12,541 ಮೂರ್ಖನಷ್ಟೇ ಅಲ್ಲ. 626 00:45:13,750 --> 00:45:15,333 ಹೇಡಿ ಕೂಡ. 627 00:45:16,333 --> 00:45:17,416 ಮತ್ತು ಸ್ವಾರ್ಥಿ. 628 00:45:18,166 --> 00:45:19,958 ಭಯಂಕರ ಸ್ವಾರ್ಥಿ. 629 00:45:20,791 --> 00:45:24,750 ನಿಮಗೆ ನನ್ನನ್ನು ಕಂಡರೆ ಅಷ್ಟೊಂದು ಇಷ್ಟವಿಲ್ಲ ಅಂತ ಅನಿಸುತ್ತಿದೆ. 630 00:45:25,458 --> 00:45:26,916 ಮೂರು ಶಾಖದ ಗುರುತುಗಳ ನೋಡು? 631 00:45:27,000 --> 00:45:28,541 ನೆಲದ ಮೇಲೊಂದು ತಣ್ಣಗೆ? 632 00:45:28,625 --> 00:45:29,458 ಅದು ರೀಸ್. 633 00:45:29,541 --> 00:45:31,916 ಡೀ ಡೀ, ನಿಮ್ಮಮ್ಮ, ಮತ್ತು ನಮ್ಮ ಗುರಿ ಇದ್ದಾರೆ, 634 00:45:32,000 --> 00:45:34,500 ನನಗೆ ಆಯ್ಕೆ ಮಾಡಲು ತುಂಬಾ ಗೊಂದಲವಾಗುತ್ತಿದೆ. 635 00:45:34,583 --> 00:45:36,958 ಅವನು ಬಲಗಡೆ ಇರಬಹುದು, ಆದರೆ ಖಚಿತವಾಗಿ ಗೊತ್ತಿಲ್ಲ. 636 00:45:37,041 --> 00:45:38,291 ಅವನನ್ನು ಓಡಾಡಿಸಬೇಕು. 637 00:45:40,500 --> 00:45:42,833 ರೀಸನ ನರವ್ಯವಸ್ಥೆಯನ್ನು ಮತ್ತೆ ಸಂಪರ್ಕಿಸು. 638 00:45:42,916 --> 00:45:44,916 ಬಿಡು. ಹೆಣದ ಜೊತೆ ಸಂಪರ್ಕ ಮಾಡಬೇಕಾಗುತ್ತೆ. 639 00:45:45,000 --> 00:45:48,041 ದೇಹ ಅಲ್ಲಾಡಿದರೆ, ರೀಸ್ ಬದುಕಿದ್ದಾನೆ ಅಂತ ಮುದುಕ ತಿಳಿಯಬಹುದು. 640 00:45:48,125 --> 00:45:50,458 ಅವನನ್ನು ಮುಗಿಸಲು ಯತ್ನಿಸಿದಾಗ, ನಮಗೆ ಸಿಗುವನು. 641 00:45:50,541 --> 00:45:52,500 ಕೇಳ್ತಿದ್ದೀಯಾ? ಲಿಯೋನಿಗೆ ಗೊತ್ತಾಗುತ್ತೆ. 642 00:45:52,583 --> 00:45:56,625 ಹೌದು, ರೀಸ್ ನಮ್ಮ ಸ್ಥಾನದಲ್ಲಿ ಇದ್ದಿದ್ದರೆ, ಅದನ್ನೇ ಮಾಡುತ್ತಿದ್ದ. 643 00:45:56,708 --> 00:45:59,041 ಇನ್ನೂ ಯಾಕೆ ಮಾತು? ಇದನ್ನು ಮುಗಿಸೋಣ. 644 00:45:59,125 --> 00:46:01,333 ಫ್ಲಿನ್, ಗುರಿ ಕಂಡಾಗ ಹೇಳು. 645 00:46:12,791 --> 00:46:13,750 ಚಲಿಸುತ್ತಿದ್ದಾನೆ. 646 00:46:15,166 --> 00:46:16,083 ಕೊಲ್ಲಿರಿ. 647 00:46:32,750 --> 00:46:33,583 ಅಮ್ಮ! 648 00:46:37,416 --> 00:46:38,250 ದೀಪ ಆರಿತು. 649 00:46:49,333 --> 00:46:51,958 ನನಗೆ ಆ ಮುದುಕ ಜೀವಂತ ಬೇಕು, ಡೇವಿಸ್. 650 00:46:52,958 --> 00:46:55,291 ಅವನಿಗೆ ಕೆಲವೊಂದನ್ನು ಮಾಡುವುದಿದೆ. 651 00:46:55,375 --> 00:46:57,083 ನನಗೆ ಅರ್ಥವಾಗುತ್ತೆ, ಕೋರ್ಬೆಲ್. 652 00:46:57,166 --> 00:46:59,000 ಸಾಧ್ಯವಾದದ್ದು ಎಲ್ಲಾ ಮಾಡೋಣ. 653 00:46:59,625 --> 00:47:01,625 ಆಕೆ ಒಳ್ಳೆಯ ಹೆಂಗಸು. ಊಹಿಸಲು ಆಗುತ್ತಿಲ್ಲ-- 654 00:47:01,708 --> 00:47:04,083 ನನಗೊಂದು ಒಳ್ಳೆಯ ಉಪಾಯ ಹೊಳೆದಿದೆ, ಶೆರಿಫ್. 655 00:47:06,916 --> 00:47:08,333 ಅದನ್ನು ನೀವೇ ನಡೆಸಬೇಕು. 656 00:47:09,250 --> 00:47:11,250 ಮುದುಕ ಇಲ್ಲಿಗೆ ಬಂದ ಅಂತಿಟ್ಟುಕೊಳ್ಳೋಣ, 657 00:47:11,791 --> 00:47:12,833 ಮೇರಿಯನ್ನು ಕೊಂದ. 658 00:47:15,583 --> 00:47:18,541 ಅಲ್ಲಿರುವ ಪಿಕೆಟ್ ಅವರು ಪೊಲೀಸರಿಗೆ ಕರೆ ಮಾಡಿದರು, 659 00:47:20,375 --> 00:47:22,166 ಸ್ಥಳಕ್ಕೆ ಮೊದಲು ಬಂದಿದ್ದು ನೀವೇ. 660 00:47:22,250 --> 00:47:23,708 ಯಾಕೆಂದರೆ ನಾಲ್ಕು ಅವಧಿಗಳ ನಂತರವೂ 661 00:47:23,791 --> 00:47:27,541 ನಿಮಗೆ ನಿಮ್ಮ ಕರ್ತವ್ಯ ಬಹಳ ಮುಖ್ಯ, ನಾವೆಲ್ಲರೂ ಅದನ್ನು ಗೌರವಿಸುತ್ತೇವೆ. 662 00:47:32,208 --> 00:47:34,125 ಟಾಮಿ, ಏನಂತ ಅಂದುಕೊಂಡಿದ್ದೀಯಾ-- 663 00:47:34,208 --> 00:47:35,833 ಮುದುಕ ಇನ್ನೂ ಇಲ್ಲೇ ಇದ್ದ, 664 00:47:37,250 --> 00:47:39,000 ಈ .45 ಇಟ್ಕೊಂಡು. 665 00:47:39,541 --> 00:47:41,041 ನೀವು ನಿಮ್ಮ ಆಯುಧವನ್ನು ತೆಗೆದಾಗ, 666 00:47:41,125 --> 00:47:44,000 ಪಾಪ, ಅವನು ನಿಮಗೆ ಗುಂಡು ಹೊಡೆದ. 667 00:47:45,625 --> 00:47:47,583 ತುಂಬಾ ಸಲ, ಅನ್ನಬಲ್ಲೆ. 668 00:47:47,666 --> 00:47:49,875 ಆಯ್ತು, ಆರಾಮಾಗಿ. ಶಾಂತನಾಗು, ಟಾಮಿ. 669 00:47:49,958 --> 00:47:52,833 ತುಂಬಾನೆ ಶಾಂತವಾಗಿರುವೆ, ಶೆರಿಫ್. ಅದೇ ಭಯವಾಗುತ್ತಿರುವುದು. 670 00:47:53,250 --> 00:47:54,458 ಅದು ನೀವು ಹೇಳಿದಂತೆ. 671 00:47:54,958 --> 00:47:56,750 ನನಗೀಗ ಹೆಚ್ಚಿನ ಆಯ್ಕೆ ಉಳಿದಿಲ್ಲ. 672 00:47:56,833 --> 00:47:57,666 ಟಾಮಿ, ಬೇಡ! 673 00:48:09,791 --> 00:48:11,250 ಅಯ್ಯೋ, ದೇವರೇ. 674 00:48:14,041 --> 00:48:15,875 ನಾನಿದನ್ನು ಊಹಿಸಲೇ ಇಲ್ಲ. 675 00:48:16,541 --> 00:48:18,083 ಸ್ವಲ್ಪವೂ ಗೊತ್ತಾಗಲಿಲ್ಲ. 676 00:48:18,625 --> 00:48:19,458 ಈಗ, ಶಾಂತಿಯ ಬಗ್ಗೆ 677 00:48:20,333 --> 00:48:22,166 ಮಾತನಾಡುತ್ತಿದ್ದೆ, ಅಲ್ವಾ? 678 00:48:22,250 --> 00:48:24,375 ಅದು ವಾಪಸ್ ಬರುವವರೆಗೂ ನೀನು ನಿನ್ನ 679 00:48:25,500 --> 00:48:26,916 ಬಂದೂಕನ್ನು ಕೆಳಗಿಳಿಸಬೇಕು, 680 00:48:27,458 --> 00:48:29,625 ಆಗ ನಾವು ಇದರ ಬಗ್ಗೆ ಮಾತನಾಡಬಹುದು. 681 00:48:29,708 --> 00:48:31,666 ಒಂದು ಒಪ್ಪಂದಕ್ಕೆ ಬರಬಹುದು. 682 00:48:31,750 --> 00:48:35,333 ಆ ಮುದುಕ ನಿನ್ನನ್ನು ಬದುಕಲು ಬಿಡುತ್ತಿದ್ದ ಅಂತ ಅಂದುಕೊಂಡಿಲ್ಲ, ಅಲ್ವಾ? 683 00:48:35,416 --> 00:48:36,708 ನಾನು ಅಂದುಕೊಳ್ಳದಿರುವುದು, 684 00:48:37,500 --> 00:48:42,583 ಇದನ್ನು ನೀನಾಗಿಯೇ ಯಶಸ್ವಿಯಾಗಿ ಮುಗಿಸುವಷ್ಟು ಗುಂಡಿಗೆ ನಿನ್ನಲ್ಲಿದೆ ಅಂತ, ಕಣಪ್ಪ. 685 00:48:44,791 --> 00:48:46,000 ಅಥವಾ ಗುಂಡುಗಳು. 686 00:48:52,000 --> 00:48:54,041 ಅದೇನೋ ಅದು? 687 00:48:54,125 --> 00:48:57,583 ಇದೊಂದು ಹೊಸ ವಸ್ತು ಕಣೋ, ದರಿದ್ರದವನೇ. 688 00:49:33,833 --> 00:49:36,750 ಮುಂದೆ ದಿ ಪೆರಿಫೆರಲ್ನಲ್ಲಿ 689 00:49:38,416 --> 00:49:39,958 ನೀನು ಸತ್ತರೆ ಅದು ನಿಜವೇ. 690 00:49:40,041 --> 00:49:41,708 ಸತ್ತು ಕುಟುಂಬವನ್ನು ಕಾಪಾಡುತ್ತೇನೆ. 691 00:49:44,166 --> 00:49:45,500 ನೀವು ಅವನನ್ನು ಸಾಯಿಸಬೇಕು. 692 00:49:45,833 --> 00:49:46,708 ವುಲ್ಫ್! 693 00:49:46,791 --> 00:49:48,583 ನಿನಗೆ ಎಲ್ಲವನ್ನೂ ಹೇಳುತ್ತೇನೆ. ಆಣೆ. 694 00:49:49,750 --> 00:49:51,458 ಇಎಮ್ಟಿಗಳಿಗೆ ನಾಡಿ ಸಿಕ್ಕಿದೆ. 695 00:49:51,541 --> 00:49:52,375 ಯಾರಿಗೆ? 696 00:49:57,500 --> 00:50:00,291 ನಮಗೆ ಬೇಕಿರುವುದು ಆ ಹುಡುಗಿಯ ತಲೆಯಲ್ಲಿರುವ ರಹಸ್ಯಗಳು. 697 00:50:02,416 --> 00:50:03,250 ಇಲ್ಲ! 698 00:51:42,666 --> 00:51:44,666 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 699 00:51:44,750 --> 00:51:46,750 ಸೃಜನಾತ್ಮಕ ಮೇಲ್ವಿಚಾರಕರು