1 00:00:07,040 --> 00:00:09,110 ಈ ಹಿಂದೆ ಡೈಸಿ ಜೋನ್ಸ್ & ದ ಸಿಕ್ಸಲ್ಲಿ... 2 00:00:09,310 --> 00:00:10,240 ಯಾವ ಸ್ಟೇಷನ್ ಇದು? 3 00:00:10,440 --> 00:00:11,260 ಅಯ್ಯೋ, ದೇವರೇ! 4 00:00:12,050 --> 00:00:12,990 ಅಯ್ಯೋ, ದೇವರೇ. 5 00:00:13,190 --> 00:00:14,180 ದಿ ಸಿಕ್ಸ್ (ಡೈಸಿ ಜೋನ್ಸ್ ಸಹಯೋಗದೊಂದಿಗೆ) 6 00:00:15,220 --> 00:00:17,870 ಡೈಮಂಡ್ ಹೆಡ್ ಫೆಸ್ಟಿವಲ್ ಸೇರಲು ನಮಗೆ ಆಹ್ವಾನ ಬಂದಿತು. 7 00:00:18,070 --> 00:00:21,850 ದಿ ಸಿಕ್ಸ್ ಅವರನ್ನು ಬರಮಾಡಿಕೊಳ್ಳೋಣ. 8 00:00:22,640 --> 00:00:25,340 ಅವರಿಗೆ ಪಟ್ಟಿಯಲ್ಲಿ ಬೇಕಾಗಿದ್ದದ್ದು ಖಂಡಿತ ನಾವಷ್ಟೇ ಅಲ್ಲ. 9 00:00:25,540 --> 00:00:27,630 ಡೈಸಿ! ಡೈಸಿ! ಡೈಸಿ! 10 00:00:27,830 --> 00:00:29,550 ನಿಮ್ಮ ಮೊದಲ ಸಿಂಗಲ್ ನಂಬರ್ ಒನ್ ಆಗಿದೆ. 11 00:00:29,750 --> 00:00:31,010 ಮತ್ತೊಮ್ಮೆ ಯಾವಾಗ ಪ್ರದರ್ಶನ? 12 00:00:31,210 --> 00:00:32,950 ಅದು ಈ ಸಲ ಮಾತ್ರ. 13 00:00:33,360 --> 00:00:35,070 ನೀನೊಬ್ಬ ನಿಜವಾದ ನೀಚ, ಅಲ್ವಾ? 14 00:00:36,370 --> 00:00:37,620 ನನ್ನ ಪ್ರಕಾರ ನೀನು ಅದ್ಭುತ. 15 00:00:38,200 --> 00:00:39,910 ನಮ್ಮ ಮಧ್ಯೆ ಅಂತೂ ನಡೆಯಲ್ಲ, ಅಲ್ವಾ? 16 00:00:41,450 --> 00:00:42,770 ನೀನು ಬ್ಯಾಂಡಲ್ಲಿದ್ದೀಯಾ? 17 00:00:42,970 --> 00:00:44,500 - ಹಾಯ್. ನಾನು ಕ್ಯಾರೋಲಿನ್. - ಗ್ರಹಮ್. 18 00:00:45,170 --> 00:00:48,610 ನೀನು ಮತ್ತು ಡೈಸಿ, ನೀನು ಹೋಗಬೇಕಿರುವ ಕಡೆ ಹೋಗಲು ಬೇಕಿರುವುದು ಅದೇನೇ. 19 00:00:48,810 --> 00:00:49,570 ಗೊತ್ತು. 20 00:00:49,770 --> 00:00:52,340 ಸರಿ, ನಿಮ್ಮ ಬ್ಯಾಂಡ್ ನಾನು ಸೇರಬೇಕೇನು? 21 00:01:47,100 --> 00:01:49,650 {\an8}ಡೈಸಿ ಜೋನ್ಸ್ & ದ ಸಿಕ್ಸ್ 22 00:02:33,940 --> 00:02:37,280 ಶುಭೋದಯ, ಮಿಸ್ ಜೋನ್ಸ್. ಬೆಳಿಗ್ಗೆ ಎಬ್ಬಿಸಲು ನೀವು ಹೇಳಿದಿರಿ. 23 00:02:47,120 --> 00:02:48,210 ಸಮಯ ಎಷ್ಟಾಗಿದೆ? 24 00:02:54,090 --> 00:02:55,590 ನೀನು ಹೋಗುವ ಸಮಯವಾಗಿದೆ, ಚಿನ್ನ. 25 00:02:58,220 --> 00:03:01,140 - ಅಪ್ಪ. - ಹೇ. 26 00:03:01,720 --> 00:03:04,760 ಹೇ. ಶುಭೋದಯ, ಸುಂದರಿ. 27 00:03:05,140 --> 00:03:07,060 ಹಲೋ. ಶುಭೋದಯ. 28 00:03:08,850 --> 00:03:10,480 ತಿಂಡಿ ತಿಂತೀಯಾ? 29 00:03:11,350 --> 00:03:13,440 ಇಲ್ಲ. ನಾನು ಸ್ನಾನ ಮಾಡಿ ಹೊರಡಬೇಕು. 30 00:03:14,730 --> 00:03:16,570 ಮರಳಿ ಎಷ್ಟೊತ್ತಿಗೆ ಬರ್ತೀಯಾ? 31 00:03:17,990 --> 00:03:22,600 ಚೆನ್ನಾಗಿ ನಡೆದರೆ, ಗೊತ್ತಿಲ್ಲ, ರಾತ್ರಿ ಊಟದ ಸಮಯಕ್ಕೆ ಬರುವೆ. 32 00:03:22,800 --> 00:03:24,070 ಚೆನ್ನಾಗಿ ಆಗದಿದ್ದರೆ? 33 00:03:25,530 --> 00:03:28,620 ಚೆನ್ನಾಗಿ ಆಗದಿದ್ದರೆ, ಆಗ ರಾತ್ರಿ ತುಂಬಾ ಹೊತ್ತು ಆಗಬಹುದು. 34 00:03:29,290 --> 00:03:30,710 - ಸರಿ. - ಸರಿ. 35 00:03:50,980 --> 00:03:54,480 ಸೌಂಡ್ ಸಿಟಿ 36 00:04:12,040 --> 00:04:16,960 5/10 "ಫೈರ್" 37 00:04:19,710 --> 00:04:22,970 ನವೆಂಬರ್ 9 1975 38 00:04:26,050 --> 00:04:27,970 - ಹಾಯ್. - ಹಾಯ್. 39 00:04:30,060 --> 00:04:34,400 ಮತ್ತೆ, 9ರಿಂದ 36ರವರೆಗೆ ಝೂಮ್ ಮಾಡುವ ಲೆನ್ಸ್ ಇದರಲ್ಲಿ ಇದೆ. 40 00:04:35,560 --> 00:04:36,650 ತಿಂಡಿ ಮಾಡಿ ತಂದಿರುವೆ. 41 00:04:39,530 --> 00:04:41,300 {\an8}ಏನನ್ನು ಬಯಸಬೇಕೋ ನಮಗೆ ಗೊತ್ತಿರಲಿಲ್ಲ. 42 00:04:41,500 --> 00:04:42,440 {\an8}ಕರೆನ್ ಸಿರ್ಕೊ ಕೀಬೋರ್ಡ್ಸ್ 43 00:04:43,490 --> 00:04:46,390 - ಮತ್ತೆ ಕಾಲುಗಳು, ಕಣೋ. - ಲೋ, ಗೊತ್ತೋ. 44 00:04:46,590 --> 00:04:48,680 - ನನಗೆ ಕಾಲಿಷ್ಟ. - ಹೇ, ಡೈಸಿ. 45 00:04:48,880 --> 00:04:49,890 ಅದು ನಿಜವೇ. 46 00:04:50,090 --> 00:04:50,980 ಹಾಯ್. 47 00:04:51,180 --> 00:04:55,570 ಮತ್ತು ಆ ಕಾಲುಗಳನ್ನು ನೋಡಿ ಸ್ವಲ್ಪ ವಿಚಲಿತನಾದೆ ಅಷ್ಟೇ. 48 00:04:55,770 --> 00:04:56,880 ವಾರೆನ್, ಅಲ್ವಾ? 49 00:04:57,790 --> 00:04:58,570 ಹಾಂ. 50 00:04:58,770 --> 00:05:01,420 ನಿನ್ನನ್ನು ಉದ್ರೇಕಿಸುವುದು ನನ್ನ ಕೆಲಸವಲ್ಲ, ಗೊತ್ತಲ್ಲ. 51 00:05:03,380 --> 00:05:05,280 ಈಗ ಗೊತ್ತಾಯಿತು. 52 00:05:05,480 --> 00:05:06,470 ಒಳ್ಳೆಯದು. 53 00:05:08,850 --> 00:05:13,210 ಸರಿ, ಎಲ್ಲರೂ, ನಾವು ಶುರು ಮಾಡುವ ಮೊದಲು ಕೆಲವು ವಿಚಾರಗಳನ್ನು ಹೇಳಬೇಕು. 54 00:05:13,410 --> 00:05:16,300 ಮೊದಲಿಗೆ, ನಮ್ಮ ಬ್ಯಾಂಡಿನ ಹೊಸ ಸದಸ್ಯೆ ಇದ್ದಾರೆ, 55 00:05:16,500 --> 00:05:18,550 ಹಾಗಾಗಿ ಡೈಸಿ ಜೋನ್ಸನ್ನು ಸ್ವಾಗತಿಸೋಣ. 56 00:05:18,750 --> 00:05:20,760 - ಹಾಂ. - ಅದ್ಭುತ. 57 00:05:20,960 --> 00:05:21,900 ಸುಸ್ವಾಗತ. 58 00:05:22,230 --> 00:05:24,970 ಇಲ್ಲಿ ಬಂದು ನಮ್ಮೊಂದಿಗೆ ಇದನ್ನು ಮಾಡುವುದಕ್ಕೆ ಧನ್ಯವಾದಗಳು. 59 00:05:25,170 --> 00:05:26,390 ಕರೆದಿದ್ದಕ್ಕೆ ಧನ್ಯವಾದಗಳು. 60 00:05:26,590 --> 00:05:28,770 ಮತ್ತೆ, ಏನು, ನಾಲ್ಕು ವಾರ ಆಯ್ತಾ? 61 00:05:28,970 --> 00:05:29,830 ಒಂದು ಹಾಡು ಬರೆದೆ. 62 00:05:30,620 --> 00:05:33,600 ಏನಂದ್ರೆ, ನಿಮ್ಮ ಮುಂದೆ ಹಾಡಲು 20 ಹಾಡುಗಳನ್ನು ಬರೆದಿರುವೆ. 63 00:05:33,800 --> 00:05:36,690 ಕ್ಷಮಿಸು. ನಿನಗೆ ಅಡಚಣೆ ಮಾಡುವುದು ನನ್ನ ಉದ್ದೇಶವಲ್ಲ. 64 00:05:36,890 --> 00:05:38,880 - ತುಂಬಾ ಉತ್ಸುಕಳಾಗಿದ್ದೇನೆ, ಅದಕ್ಕೆ… - ಸರಿ. 65 00:05:44,590 --> 00:05:45,410 ಏನು? 66 00:05:45,610 --> 00:05:47,990 {\an8}ಹಾಡುಗಳು ಬರೆದು ಹಾಡಲು ತಯಾರಿದ್ದವು. 67 00:05:48,190 --> 00:05:49,260 {\an8}ಬಿಲ್ಲಿ ಡನ್ ಪ್ರಮುಖ ಗಾಯಕ/ಗೀತರಚನೆಕಾರ 68 00:05:49,890 --> 00:05:52,510 ಸರಿ, ಡೈಸಿ, ಶುಭವಾರ್ತೆ ಏನೆಂದರೆ, 69 00:05:53,270 --> 00:05:58,250 ನಮ್ಮ ಬಳಿ ಈಗಾಗಲೇ ಆಲ್ಬಮ್ಮಿಗಾಗಿ 13 ಹಾಡುಗಳಿವೆ, ಹಾಗಾಗಿ… ಹಾಂ. 70 00:05:58,450 --> 00:06:00,760 ನಾವು ನಿನಗಾಗಿ ನುಡಿಸುತ್ತೇವೆ. ನೀನು ಕೇಳಿದ ನಂತರ, 71 00:06:00,960 --> 00:06:05,430 ಅವುಗಳ ಬಗ್ಗೆ ಏನನಿಸುತ್ತೆ ನೋಡು ಅಥವಾ ಏನಾದರೂ ಸೇರಿಸಬೇಕೇ ನೋಡು. 72 00:06:05,630 --> 00:06:06,890 {\an8}ಅಂದ್ರೆ, ಊಹಿಸಲು ಪ್ರಯತ್ನಿಸಿ. 73 00:06:07,090 --> 00:06:09,360 ಅದಕ್ಕಿಂತ ಒಳ್ಳೆಯ ರೀತಿ ಹೇಳಲಾಗಲಿಲ್ಲ. 74 00:06:09,950 --> 00:06:12,350 ಡೈಸಿಗಾಗಿ ಹೊಸದನ್ನು ನುಡಿಸೋಣ. 75 00:06:12,550 --> 00:06:13,660 ಹಾಂ. 76 00:06:15,290 --> 00:06:17,230 ನಿನಗಿದು ಇಷ್ಟವಾಗಬಹುದು. 77 00:06:17,430 --> 00:06:21,040 ಊಹಿಸಲು ಬಿಡು. ಇದು ಮಳೆಯಲ್ಲಿ ನಿನ್ನ ಹೆಂಡತಿಯ ಬಗ್ಗೆ. 78 00:06:23,050 --> 00:06:24,700 {\an8}ವಾರೆನ್ ರೋಜಸ್ ಡ್ರಮ್ಸ್ 79 00:06:24,900 --> 00:06:25,870 {\an8}ಅಯ್ಯೋ, ದೇವರೇ. 80 00:06:26,060 --> 00:06:26,910 {\an8}ಎಡ್ಡಿ ರೌಂಡ್ ಟ್ರೀ ಬೇಸ್ 81 00:06:27,110 --> 00:06:29,410 {\an8}ಅದರ ಹೆಸರು "ಶಿ'ಸ್ ದಿ ಸ್ಟಾರ್ಮ್" ಅನ್ಸುತ್ತೆ. 82 00:06:29,610 --> 00:06:30,470 {\an8}ನಿಜವಾಗಿ. 83 00:06:34,470 --> 00:06:37,350 ತಮಾಷೆಯಾಗಿದೆಯೇ? ಕ್ಷಮಿಸು. ಏನಾದರೂ ಹೇಳುವುದಿತ್ತಾ? 84 00:06:38,480 --> 00:06:44,150 ನಿನ್ನ ಹೆಂಡತಿಯ ಕುರಿತಾದ ಪ್ರೇಮಗೀತೆಗಳಿಗೆ ಕೋರಸ್ ಹಾಡಲು ನಾನಿಲ್ಲಿ ಬಂದಿಲ್ಲ. ಆಯ್ತಾ? 85 00:06:45,360 --> 00:06:49,810 ನಾವು ಬ್ಯಾಂಡಿನಲ್ಲಿ ಇದ್ದೇವೆ ಅಂದ್ರೆ, ಈ ಆಲ್ಬಮ್ ನಿನ್ನದಷ್ಟೇ ಅಲ್ಲದೆ, 86 00:06:50,010 --> 00:06:53,100 ನನ್ನದು, ಕರೆನ್ದು, ಗ್ರಹಮ್ದು, ವಾರೆನ್ದು, 87 00:06:53,300 --> 00:06:54,740 ಮತ್ತು ಅವನದೂ ಆಗಿರಬೇಕು. 88 00:06:56,200 --> 00:06:57,310 ಗೊತ್ತಾ? 89 00:06:57,510 --> 00:06:59,610 ನಾನು ಹೇಳುತ್ತಿದ್ದುದನ್ನೇ ಹೇಳುತ್ತಿದ್ದಳು. 90 00:06:59,810 --> 00:07:02,230 ಒಂದು ಮಾರ್ಗದ ಬಗ್ಗೆಯಾದರೂ ನಾವು ಮಾತನಾಡಬಾರದಾ? 91 00:07:02,430 --> 00:07:06,490 ರೆಕಾರ್ಡಿಗೋಸ್ಕರ ನಿನ್ನ ಬಳಿ ಏನಾದರೂ ದೊಡ್ಡ ಉಪಾಯ, ಯೋಜನೆ ಇದೆಯೇ, ಅಥವಾ… 92 00:07:06,690 --> 00:07:07,970 ಅಂದ್ರೆ, ನಾನು ಒಪ್ಪುತ್ತೇನೆ. 93 00:07:08,670 --> 00:07:11,540 ಏನು? ಇದು ಒಳ್ಳೆಯ ಚರ್ಚೆ ಅನ್ಸುತ್ತೆ. 94 00:07:11,740 --> 00:07:13,290 - ನನಗೇನನ್ಸುತ್ತೆ ಗೊತ್ತಾ? - ದೇವರೇ. 95 00:07:13,490 --> 00:07:15,460 ಇದು ರಾಕ್ ಅಂಡ್ ರೋಲ್ ರೆಕಾರ್ಡ್ ಆಗಬೇಕು. 96 00:07:15,660 --> 00:07:17,960 ಧನ್ಯವಾದ, ಎಡ್ಡಿ. ನಿನ್ನ ಅಭಿಪ್ರಾಯಕ್ಕೆ ಧನ್ಯವಾದ. 97 00:07:18,160 --> 00:07:19,520 ಇಲ್ಲ, ನಿಜವಾಗಿಯೂ. 98 00:07:20,310 --> 00:07:23,340 ಇದು ಖಂಡಿತ ರಾಕ್ ಅಂಡ್ ರೋಲ್ ಆಗಲಿದೆ. ಮತ್ತೇನು? 99 00:07:23,540 --> 00:07:24,630 ಆದರೆ ಆಗಿದೆಯಾ? 100 00:07:24,830 --> 00:07:30,320 ಯಾಕಂದ್ರೆ ಇದರಲ್ಲಿ ಬಹುತೇಕ ಹಾಡುಗಳು ಪಾಪ್ ಸಂಗೀತದಂತೆ ಕೇಳಿಸುತ್ತವೆ. 101 00:07:31,030 --> 00:07:35,600 ಸನ್ನಿ ಮತ್ತು ಶೆರ್ ಹಾಡುಗಳಂತೆ, ಗೊತ್ತಾ? ನಾವೇನು ಪಾಪ್ ಬ್ಯಾಂಡಾ ಅಥವಾ… ಅಲ್ವಾ? 102 00:07:35,800 --> 00:07:39,290 ಅಂದರೆ, ರಾಕ್ ಅಂಡ್ ರೋಲ್ ಆಕಾಂಕ್ಷೆ, ನೋವು, ಕೋಪದ ಬಗ್ಗೆ ಆಗಿರಬೇಕು. 103 00:07:39,830 --> 00:07:43,670 ಪರಿಚಯವಿಲ್ಲದ ಹುಡುಗಿಯ ಜೊತೆ ಮಲಗುವುದು, ಹೆಂಡತಿಯನ್ನು ಪ್ರೀತಿಸದಿರುವುದು. 104 00:07:46,170 --> 00:07:48,910 - ತಪ್ಪು ತಿಳಿಯಬೇಡ, ಬಿಲ್ಲಿ. - ಅದನ್ನೇ ಹೇಳಬೇಕೆಂದುಕೊಂಡೆ. 105 00:07:49,110 --> 00:07:51,370 - ಆಫ್ರಿಕಾದ ಡ್ರಮ್ಸ್ ಹಾಕಿದ್ರೆ? - ಒಳ್ಳೆ ಉಪಾಯ. 106 00:07:51,570 --> 00:07:53,240 ಧ್ವನಿ, ಪಿಯಾನೋದೊಂದಿಗೆ ಮಾಡಬಹುದು. 107 00:07:53,440 --> 00:07:55,660 ಒಂದು ಸಲ ನನ್ನದೇ ಬೇಸ್ ಬರೆಯಬೇಕೆಂದುಕೊಂಡಿರುವೆ. 108 00:07:55,860 --> 00:07:57,750 - ಒಳ್ಳೆಯದು. - ಅತ್ಯಂತ ದರಿದ್ರ ಉಪಾಯ. 109 00:07:57,950 --> 00:07:59,020 ಯಾವುದು ಕೆಟ್ಟ ಉಪಾಯ? 110 00:07:59,470 --> 00:08:01,090 ನೀವೇ ನನ್ನನ್ನು ಕರೆದಿದ್ದು. 111 00:08:01,280 --> 00:08:03,600 ಅದು ತಪ್ಪಾಗಿರಬಹುದು, ಡೈಸಿ. 112 00:08:04,150 --> 00:08:05,270 ಮುಗಿಯಿತಾ? 113 00:08:06,480 --> 00:08:07,340 ಆಯ್ತಾ? 114 00:08:07,540 --> 00:08:11,260 ದೇವರೇ, ಸಣ್ಣ ಮಕ್ಕಳ ಹಾಗೆ ಆಡುತ್ತಿದ್ದೀರಿ. 115 00:08:11,460 --> 00:08:15,520 ನೀವಿಬ್ಬರೇ ಎಲ್ಲಿಗಾದರೂ ಹೋಗಿ ಯಾವುದರ ಮೇಲಾದರೂ ಕೆಲಸ ಮಾಡಿ. ಇದು ಹೇಗೆ? 116 00:08:15,720 --> 00:08:17,600 ಏನೇ ಇರಲಿ, ಬಾಗಿಲು ಅಲ್ಲಿಯೇ ಇದೆ. 117 00:08:17,800 --> 00:08:21,080 ಹಾಗಾಗಿ ಮುಚ್ಕೊಂಡು ಇಲ್ಲಿಂದ ಹೋಗಿ, ಯಾಕಂದ್ರೆ ನನಗೆ ಮಾಡಲು ಕೆಲಸ ಇದೆ. 118 00:08:23,040 --> 00:08:24,290 ತೊಲಗಿ ಮೊದಲು. 119 00:08:27,090 --> 00:08:28,210 ಬನ್ನಿರಿ. 120 00:08:34,340 --> 00:08:35,720 ಮತ್ತೆ, ನಾವು? 121 00:08:36,430 --> 00:08:37,600 ನನಗೇನಾಗಬೇಕಿಲ್ಲ. 122 00:08:38,720 --> 00:08:40,770 - ಮತ್ತೆ, ಎಲ್ಲಿಗೆ ಹೋಗೋಣ? - ಆ್ಯಪಲ್ ಪ್ಯಾನ್. 123 00:08:41,480 --> 00:08:43,310 - ಏನು? - ನನಗೆ ಹಸಿವಾಗಿದೆ. 124 00:08:43,770 --> 00:08:47,020 - ಬೆಳಿಗ್ಗೆ 10:00 ಆಗಿದೆ. - ಹಸಿವಿನಲ್ಲಿ ನಾನು ಕೆಲಸ ಮಾಡಲಾರೆ. 125 00:09:10,840 --> 00:09:12,450 - ಸುಮ್ಮನೆ ಇರ್ತೀಯಾ? - ಒಳ್ಳೆಯ ಹಾಡು. 126 00:09:12,650 --> 00:09:14,930 - ಇದು ನನ್ನ ಕಾರು. - ಅಯ್ಯೋ, ದೇವರೇ. 127 00:09:16,470 --> 00:09:18,160 ನಮಸ್ಕಾರ. ಏನು ಬೇಕು? 128 00:09:18,360 --> 00:09:21,580 ಎರಡು ಹಿಕರಿ ಬರ್ಗರ್ಸ್, ಮೀಡಿಯಂ ರೇರ್, ಮತ್ತು ಎರಡು ಸೈಡ್ ಫ್ರೈಸ್. 129 00:09:21,780 --> 00:09:23,420 ನೀನು ನನಗೆ ಹೇಳಬೇಕಿಲ್ಲ. 130 00:09:23,620 --> 00:09:25,480 ಹೌದು, ನಾನು ಹೇಳಲಿಲ್ಲ. 131 00:09:30,520 --> 00:09:32,640 ಹಾಂ, ನನಗೂ ಅದನ್ನೇ ಕೊಡಿ. 132 00:09:32,830 --> 00:09:33,900 ಈಗ ತಂದೆ. 133 00:09:41,740 --> 00:09:45,540 ನೋಡು, ನಾವಿಬ್ಬರೂ ಯಾವಾಗಲೂ ಜಗಳವಾಡುತ್ತಿದ್ದರೆ ಯಾವುದೇ ಪ್ರಯೋಜನವಿಲ್ಲ. 134 00:09:46,000 --> 00:09:47,620 ಹೌದಾ, ನಿನಗೆ ಹೇಗೆ ಗೊತ್ತು? 135 00:09:48,670 --> 00:09:49,440 ಏನು? 136 00:09:49,640 --> 00:09:52,710 ಜಗಳದ ಬಗ್ಗೆ ನಿನಗೇನು ಗೊತ್ತು? ನಿನ್ನ ವಿರುದ್ಧ ಯಾರೂ ನಿಲ್ಲಲ್ಲ. 137 00:09:57,090 --> 00:09:58,620 ನಿನ್ನನ್ನೊಂದು ಪ್ರಶ್ನೆ ಕೇಳಲೇ? 138 00:09:58,820 --> 00:10:01,370 - ಧಾರಾಳವಾಗಿ. - ನಿನಗೆ ಯಾಕೆ ನಿನ್ನ ಹೆಂಡತಿಯ ಬಗ್ಗೆ ಹುಚ್ಚು? 139 00:10:01,570 --> 00:10:02,960 - ಏನು? - ಕೆಮೀಲ ಒಳ್ಳೆಯವಳೇ, 140 00:10:03,160 --> 00:10:05,380 ಆದರೆ ಬೇರೆ ವಿಚಾರವಾಗಿ ನೀನ್ಯಾಕೆ ಹಾಡು ಬರೆಯಲ್ಲ? 141 00:10:05,580 --> 00:10:09,380 ಅವಳು ನಿನ್ನನ್ನು ಬಿಟ್ಟು ಹೋಗುವ ಭಯವೇ ಅಥವಾ ನಿನಗೆ ಬೇರೇನೂ ಬರುವುದಿಲ್ಲವೇ? 142 00:10:09,580 --> 00:10:11,630 - ಅದು ಯಾಕಂತ… - ಡೈಸಿ. 143 00:10:11,830 --> 00:10:13,940 - ಏನಾದರೂ ತಪ್ಪು ಮಾಡಿದ್ಯಾ? - ಡೈಸಿ. 144 00:10:14,320 --> 00:10:16,510 ನಿನ್ನೊಂದಿಗೆ ಇದರ ಬಗ್ಗೆ ಮಾತನಾಡುವುದಿಲ್ಲ. 145 00:10:16,710 --> 00:10:17,700 - ಸರಿ. - ಸರಿ. 146 00:10:20,530 --> 00:10:23,450 ಸರಿ, ಇಬ್ಬರಿಗೂ ಎರಡು ಹಿಕರಿ ಬರ್ಗರ್ಗಳು. 147 00:10:27,460 --> 00:10:28,790 ಫ್ರೈಸ್. 148 00:10:32,420 --> 00:10:33,590 - ಆನಂದಿಸಿ. - ಧನ್ಯವಾದಗಳು. 149 00:10:36,760 --> 00:10:39,180 ಭವ್ಯವಾದದ್ದನ್ನು ಕಂಡೆ 150 00:10:50,850 --> 00:10:52,230 ಈ ಹಾಡೆಂದರೆ ಇಷ್ಟವೇ? 151 00:10:53,270 --> 00:10:54,680 "ಸ್ಟಂಬಲ್ಡ್ ಆನ್ ಸಬ್ ಲೈಮ್"? 152 00:10:54,870 --> 00:10:57,050 - ಈ ಹಾಡು ಎಲ್ಲರಿಗೂ ಇಷ್ಟ. - ನಾನೇ ಬರೆದದ್ದು. 153 00:10:57,250 --> 00:10:59,600 - ನೀನೇ ಬರೆದದ್ದು ಅಂದರೆ? - ನಾನೇ ಬರೆದದ್ದು. 154 00:10:59,800 --> 00:11:01,910 - "ಹನೀಕೂಂಬ್" ಬರೆದಂತೆಯಾ? - ಹಾಗೇನೇ. 155 00:11:02,490 --> 00:11:04,280 - ಸರಿ. - ನಾನೇ ಸಾಹಿತ್ಯ ರಚಿಸಿದ್ದು. 156 00:11:05,290 --> 00:11:07,620 ರಾಗದ ಭಾಗ. ಬಹುತೇಕ ರಾಗದ ಭಾಗ. 157 00:11:09,330 --> 00:11:12,420 ಈ ಹಾಡನ್ನು ಕೇಳು. ವ್ಯಾಟ್ ಸ್ಟೋನ್ ಇದನ್ನು ಬರೆಯಬಲ್ಲ ಅಂತೀಯಾ? 158 00:11:29,430 --> 00:11:32,230 ಇದೊಂದು ಅತ್ಯುತ್ತಮ ಹಾಡು, ಡೈಸಿ. 159 00:11:33,190 --> 00:11:34,150 ಸರಿ, ಕಣಪ್ಪ. 160 00:11:35,110 --> 00:11:37,980 ನಿನಗೀಗ ಇಷ್ಟವಾಗಿರುವುದರಿಂದ ದುಷ್ಟನ ಹಾಗೆ ಆಡುವುದು ಬಿಡು. 161 00:11:41,360 --> 00:11:43,560 ನಿಜವಾಗಲೂ ಬರಲ್ವಾ ನೀನು? 162 00:11:43,760 --> 00:11:45,080 ನಾನು ಈಗಾಗಲೇ ನೋಡಿದ್ದೇನೆ. 163 00:11:45,910 --> 00:11:47,640 ಹೌದು. ಒಂದು ಸಲ ನೋಡಿದ್ದೀಯ. 164 00:11:47,840 --> 00:11:51,020 ರೋಲರ್ಬಾಲನ್ನು ಅಷ್ಟು ಸಲ ನೋಡಿದರೆ ಸಾಕು. 165 00:11:51,220 --> 00:11:53,780 ನಿನಗೆ ಕಲಾಭಿರುಚಿ ಇದ್ದರೆ ಅಲ್ವೋ, ತಮ್ಮ. 166 00:11:53,980 --> 00:11:55,650 ಅದೊಂದು ಮಹೋನ್ನತ ದೃಶ್ಯಕಾವ್ಯ. 167 00:11:55,850 --> 00:11:58,000 ಸರಿ, ಎರಡನೆಯ ಬಾರಿ ಆನಂದಿಸಿ, ಮಹನೀಯರೇ. 168 00:11:58,800 --> 00:11:59,880 ಖಂಡಿತ. 169 00:12:03,720 --> 00:12:05,870 - ಎಲ್ಲಿಗೆ ಹೊರಟಿದ್ದೀರಿ? - ಸಿನಿಮಾಗೆ. 170 00:12:06,070 --> 00:12:07,060 ಮತ್ತೆ ರೋಲರ್ಬಾಲಾ? 171 00:12:07,600 --> 00:12:09,890 - ಅದೊಂದು ಅದ್ಭುತ ಚಿತ್ರ. - ಹೇ! 172 00:12:17,820 --> 00:12:21,530 ಹೇ, ಇವತ್ತು ನಿನ್ನ ಜೊತೆ ಕಡಲ ತೀರಕ್ಕೆ ಹೋಗೋಣ ಅಂದುಕೊಳ್ಳುತ್ತಿದ್ದೆ. 173 00:12:25,990 --> 00:12:27,120 ಅಂದರೆ, ಯಾಕೆ ಬೇಡ? 174 00:12:28,330 --> 00:12:29,830 ನನಗೆ ಬೇರೇನೂ ಕೆಲಸವಿಲ್ಲ. 175 00:12:33,870 --> 00:12:34,880 ಸರಿ. 176 00:12:38,710 --> 00:12:39,670 ಗ್ರಹಮ್. 177 00:12:45,510 --> 00:12:46,890 ಆರಾಮಿದ್ದೀವಿ ತಾನೇ? 178 00:12:48,720 --> 00:12:49,720 ಖಂಡಿತವಾಗಲೂ ಇದ್ದೇವೆ. 179 00:12:52,600 --> 00:12:54,770 ಚೆನ್ನಾಗಿದ್ದೇವೆ. ಆಯ್ತಾ? 180 00:12:55,690 --> 00:12:56,770 ಸರಿ. 181 00:12:59,270 --> 00:13:01,360 - ಹೋಗಿ ನನ್ನ ವಸ್ತುಗಳನ್ನು ತರುವೆ. - ಸರಿ. 182 00:13:09,530 --> 00:13:11,520 - ಹೇ. - ಹೇಗಿದ್ದೀಯಾ? 183 00:13:11,720 --> 00:13:13,790 - ಆರಾಮ. ನೀನು? - ಸಿಕ್ತಾ? ಚೆನ್ನಾಗಿದ್ದೇನೆ. 184 00:13:14,210 --> 00:13:15,170 ಹಾಂ. 185 00:13:18,340 --> 00:13:20,110 - ಸರಿ. - ಬರ್ತಿದ್ದೀಯಾ? 186 00:13:20,310 --> 00:13:21,950 ನೀವು ಹೋಗಿ ಬನ್ನಿ. 187 00:13:22,150 --> 00:13:23,070 ಆರಾಮ ಇದ್ದೀಯಾ? 188 00:13:23,270 --> 00:13:25,660 ಹಾಂ, ಹೀಗಂತ ನನಗೆ ಗೊತ್ತಿರಲಿಲ್ಲ… 189 00:13:25,860 --> 00:13:28,050 ಇಲ್ಲ, ಪರವಾಗಿಲ್ಲ. ಹಾಂ. ಹತ್ತು. 190 00:13:28,390 --> 00:13:30,600 ನೋಡಿದ್ಯಾ? ವಿಚಿತ್ರವಾಗಿ ಆಡಬೇಡ. 191 00:13:32,350 --> 00:13:33,480 ಹೋಗೋಣ. 192 00:13:34,390 --> 00:13:35,440 ಸರಿ. 193 00:13:41,860 --> 00:13:44,400 - ಇದು ಯಾರ ಮನೆ? - ನೀನು ಮುಂಚೆ ಇಲ್ಲಿಗೆ ಬಂದಿಲ್ವಾ? 194 00:13:47,490 --> 00:13:49,180 ಬಂದಿದ್ದೀನಿ ಅನ್ನೋಕಾಗಲ್ಲ. 195 00:13:49,380 --> 00:13:51,310 - ಸರಿ, ಮತ್ತೆ... - ಡೈಸಿ? 196 00:13:51,510 --> 00:13:52,660 ಏನು? 197 00:13:53,540 --> 00:13:54,660 ಕೀಲಿಕೈ... 198 00:13:55,120 --> 00:13:58,080 - ಏನು ಮಾಡುತ್ತಿರುವೆ? - ಬೀಗದ ಕೈ ಹುಡುಕುತ್ತಿರುವೆ, ಬಿಲ್ಲಿ. 199 00:14:01,670 --> 00:14:03,460 - ದೇವರೇ... - ಡೈಸಿ? 200 00:14:06,720 --> 00:14:09,680 ಕಾನೂನುಬಾಹಿರವಾದದ್ದನ್ನು ಮಾಡುತ್ತಿದ್ದೇವೆ ಅನಿಸುತ್ತಿದೆ? 201 00:14:10,470 --> 00:14:12,680 - ಇದು ರಾಕ್ ಅಂಡ್ ರೋಲ್ ಹಾಗೆ ಇಲ್ಲ. - ಆಯ್ತು. 202 00:14:34,950 --> 00:14:36,250 ಸರಿ. 203 00:14:46,800 --> 00:14:47,880 ಪರವಾಗಿಲ್ಲವೇ. 204 00:15:22,460 --> 00:15:23,540 ಯಾವುದಿದು? 205 00:15:24,130 --> 00:15:26,340 ನನ್ನ ತಮ್ಮ ಸುಮ್ಮನೆ ಏನೋ ನುಡಿಸುತ್ತಿದ್ದ. 206 00:15:30,430 --> 00:15:33,040 - ಮತ್ತೆ, ಇದನ್ನು ಹೇಗೆ ಮಾಡುವುದು? - ಏನು ಹಾಗಂದರೆ? 207 00:15:33,240 --> 00:15:35,870 - ಅಂದರೆ, ನಿನ್ನ ವಿಧಾನ ಹೇಗೆ? - ನನ್ನ ವಿಧಾನವೇ? 208 00:15:36,070 --> 00:15:37,310 ಹೌದು, ಹಾಡುಗಳನ್ನು ಬರೆಯಲು. 209 00:15:38,850 --> 00:15:40,310 ನೋಡ್ತಿದ್ದೀಯಲ್ಲ. 210 00:15:44,730 --> 00:15:46,680 ನೀನು ಕುಡಿಯಲ್ಲಂತ ನಿನ್ನ ಹೆಂಡತಿ ಹೇಳಿದಳು. 211 00:15:46,870 --> 00:15:48,860 ಇದರಿಂದ ನಿನಗೆ ತೊಂದರೆಯೇ? 212 00:15:49,900 --> 00:15:50,950 ಪರವಾಗಿಲ್ಲ. 213 00:15:55,370 --> 00:15:57,440 ಬೇರೆಯವರೊಂದಿಗೆ ಹೇಗೆ ಬರೆಯಬೇಕೋ ಗೊತ್ತಿಲ್ಲ. 214 00:15:57,640 --> 00:15:59,270 ನನಗೂ ಅಷ್ಟೇ. ನಿಜವಾಗಿಯೂ. 215 00:15:59,470 --> 00:16:00,370 ನಾವೇನು ಮಾಡೋಣ? 216 00:16:09,710 --> 00:16:11,590 ಕನಿಷ್ಠಪಕ್ಷ ಇದನ್ನು ನೋಡು, ಆಯ್ತಾ? 217 00:16:12,220 --> 00:16:14,010 ಎಲ್ಲವೂ ನನ್ನ ಹೆಂಡತಿಯ ಬಗ್ಗೆ ಅಲ್ಲ. 218 00:16:21,180 --> 00:16:22,770 ಸರಿ, ಬೇರೆಯದನ್ನು ಆರಿಸಿಕೋ. 219 00:16:28,530 --> 00:16:30,900 ಏನು ಗೊತ್ತಾ? ಅದನ್ನು ಕೊಡು. ಪರವಾಗಿಲ್ಲ. 220 00:16:31,820 --> 00:16:33,570 ಏನಾದರೂ ಹೊಸದನ್ನು ಶುರು ಮಾಡೋಣ. 221 00:16:50,460 --> 00:16:51,300 ಸರಿ. 222 00:16:52,380 --> 00:16:53,260 ಏನು? 223 00:16:55,220 --> 00:16:56,090 ಏನು? 224 00:16:58,350 --> 00:17:00,210 ಈಗೇನು ಸಮಸ್ಯೆ? 225 00:17:00,410 --> 00:17:02,230 ಏನೂ ಇಲ್ಲ. ಅದು… 226 00:17:03,770 --> 00:17:04,810 ಏನು? 227 00:17:05,350 --> 00:17:09,650 ನನಗೆ ಪ್ರಕೃತಿಯ ಬಗ್ಗೆ, ದೃಶ್ಯಗಳ ಬಗ್ಗೆ ಹಿಡಿಸಲ್ಲ, ಅದು… 228 00:17:11,150 --> 00:17:11,930 ಸರಿ. 229 00:17:12,130 --> 00:17:14,950 ಕೆಲವರಿಗೆ ಅದು ಹಿಡಿಸಬಹುದು, ಆದರೆ ನನಗಲ್ಲ. 230 00:17:15,360 --> 00:17:16,850 ಇದೇನು ಸಾಹಿತ್ಯವೇ? 231 00:17:17,050 --> 00:17:18,270 ಹೌದು, ಇದು ಸಾಹಿತ್ಯವೇ. 232 00:17:18,470 --> 00:17:21,600 ಇವು ಆಲೋಚನೆಗಳು, ತುಣುಕುಗಳು, ನನ್ನ ರಚನೆಗಳು. 233 00:17:21,800 --> 00:17:23,980 - "ಅಗ್ನಿಮಾರುತದಲ್ಲಿ ಗಾಳಿಪಟಗಳು". - ಅದು ಉಪಮೆ. 234 00:17:24,180 --> 00:17:26,610 - ಯಾವುದಕ್ಕೆ? - ನಿಯಂತ್ರಣವಿಲ್ಲದೆ ಇರುವುದಕ್ಕೆ. 235 00:17:26,810 --> 00:17:28,330 ಮತ್ತೆ ಹಾಗೆಯೇ ಹೇಳು. 236 00:17:29,790 --> 00:17:33,280 - ಕೆಲವೊಮ್ಮೆ ಅನಿಸಿದ್ದನ್ನು ಹೇಳಿದರೆ ಒಳ್ಳೆಯದು. - ಅನಿಸಿದ್ದನ್ನೇ ಹೇಳುವೆ. 237 00:17:33,480 --> 00:17:34,450 - ಹೌದಾ? - ಹೇಳಬಲ್ಲೆ. 238 00:17:34,650 --> 00:17:36,930 ನೀನೊಬ್ಬ ತಲೆಕೆಟ್ಟವನು. ಇದು ಹೇಗಿದೆ? 239 00:17:39,720 --> 00:17:41,470 ಇದೊಂದು ರೀತಿ ಪರವಾಗಿಲ್ಲ. 240 00:17:45,560 --> 00:17:48,900 ಸರಿ. ಮತ್ತೊಮ್ಮೆ ಆ ರಿಫ್ ನುಡಿಸು. ನಿನ್ನ ತಮ್ಮನ ರಿಫ್ ನುಡಿಸು. 241 00:17:54,360 --> 00:17:55,400 ಸರಿ. 242 00:19:09,060 --> 00:19:11,400 - ವಿರಾಮ ತೆಗೆದುಕೊಳ್ಳುತ್ತಿದ್ದೇವಾ? - ಇಲ್ಲ. 243 00:19:11,940 --> 00:19:13,310 ಬರೆಯುತ್ತಿದ್ದೇವೆ. 244 00:19:43,890 --> 00:19:46,600 ನೀನು ರಾಕ್ ಬ್ಯಾಂಡಿನಲ್ಲಿರುವುದು ತುಂಬಾ ಚೆನ್ನಾಗಿದೆ. 245 00:19:48,350 --> 00:19:50,810 ಒಬ್ಬ ಹೆಣ್ಣಾಗಿ. ಇಂಥದ್ದನ್ನು ನಾವು ನೋಡುವುದೇ ಇಲ್ಲ. 246 00:19:51,600 --> 00:19:52,940 ವಿಪರ್ಯಾಸವಾದರೂ ನಿಜವೇ. 247 00:19:56,860 --> 00:19:58,720 ನಿನಗೆ ಯಾವ ರೀತಿಯ ಸಂಗೀತ ಇಷ್ಟ? 248 00:19:58,920 --> 00:20:00,990 ಸ್ವಲ್ಪ ಎಲ್ಲಾ ರೀತಿಯದ್ದೂ ಅನ್ನಬಹುದು. 249 00:20:03,240 --> 00:20:04,950 ಬ್ಯಾರಿ ಮ್ಯಾನಿಲೋ ಅಂತೂ ಅದ್ಭುತ. 250 00:20:07,120 --> 00:20:08,370 ತುಂಬಾ ಸುಂದರವಾಗಿದ್ದೀಯ. 251 00:20:10,620 --> 00:20:13,960 '73ರಲ್ಲಿ ಮಿಸ್ ಟೀನ್ ಅರಿಜೋನಾ ಆಗಿದ್ದೆ. 252 00:20:14,380 --> 00:20:16,500 - ಅಭಿನಂದನೆಗಳು. - ಧನ್ಯವಾದ. 253 00:20:17,050 --> 00:20:18,450 ಈಗೇನು ಮಾಡ್ತೀಯಾ? 254 00:20:18,650 --> 00:20:20,920 ಯುಸಿ ಸ್ಯಾಂಟಾ ಬಾರ್ಬರಾದಲ್ಲಿ ವಿದ್ಯಾರ್ಥಿನಿ. 255 00:20:21,420 --> 00:20:22,510 ಪೂರ್ವ ವೈದ್ಯಕೀಯ. 256 00:20:23,640 --> 00:20:25,080 ವೈದ್ಯೆಯಾಗುತ್ತೀಯಾ? 257 00:20:25,280 --> 00:20:26,640 ಮನೋವೈದ್ಯೆ. 258 00:20:28,600 --> 00:20:30,520 ನಿನಗೆ ಗ್ರಹಮ್ ಅಂದರೆ ಇಷ್ಟವೇ? 259 00:20:31,100 --> 00:20:32,060 ಹಾಂ. 260 00:20:32,480 --> 00:20:35,260 ಸತ್ಯ ಹೇಳು. ಅವನು ರಾಕ್ಸ್ಟಾರ್ ಆಗಿರೋದಕ್ಕಾ? 261 00:20:35,450 --> 00:20:36,920 ಗಿಟಾರ್ ಹಿಡಿದಿದ್ದಾನೆ ಅಂತಲಾ? 262 00:20:37,120 --> 00:20:38,520 ಹಾಗಂತೇನಿಲ್ಲ. 263 00:20:40,900 --> 00:20:41,820 ಮತ್ತೆ ಯಾಕೆ? 264 00:20:44,070 --> 00:20:46,030 ಅವನು ತುಂಬಾ ಒಳ್ಳೆಯ ಹುಡುಗ. 265 00:20:48,120 --> 00:20:49,910 ಮತ್ತೆ, ಏನಂದ್ರೆ… 266 00:20:51,910 --> 00:20:54,540 - ಏನು? - ಅವನು ತುಂಬಾ ಸೆಕ್ಸಿ ಅಂತ. 267 00:20:56,670 --> 00:20:57,590 ಹೌದಾ? 268 00:20:59,920 --> 00:21:01,240 ಏನು ಮಾತಾಡುತ್ತಿದ್ದೀರಿ? 269 00:21:01,440 --> 00:21:02,990 - ಏನಿಲ್ಲ. - ಏನಿಲ್ಲ. 270 00:21:03,190 --> 00:21:04,990 ಸರ್ಫಿಂಗ್ ಕಲಿಯಲು ಯಾರಿಗೆ ಇಷ್ಟ? 271 00:21:05,190 --> 00:21:08,370 ಹುಚ್ಚಾ ನಿನಗೆ? ಉಚ್ಚೆಯಂಥ ಆ ಗಲೀಜು ನೀರಿನಲ್ಲಿ ನಾನು ಇಳಿಯುವುದಿಲ್ಲ. 272 00:21:08,570 --> 00:21:09,830 - ಬಾ. - ನಾನು ಬರ್ತೀನಿ. 273 00:21:10,030 --> 00:21:10,970 - ಹೌದಾ? - ಹೌದು. 274 00:21:11,680 --> 00:21:15,210 ಸರಿ. ಆಮೇಲೆ ಮುಳುಗಬೇಡ, ಸಿರ್ಕೊ. ನಮಗೆ ಕೀಬೋರ್ಡ್ ವಾದಕಿ ಬೇಕು. 275 00:21:15,410 --> 00:21:16,460 ಇಬ್ಬರೂ ಮಜಾ ಮಾಡಿ. 276 00:21:16,660 --> 00:21:18,360 ಸರಿ. ಹೋಗಿ ಬರ್ತೀವಿ. 277 00:22:14,620 --> 00:22:17,000 ನನ್ನ ಸ್ವಂತ ದುಡ್ಡಿನಿಂದ ಖರೀದಿಸಿದ ಮೊದಲ ರೆಕಾರ್ಡ್. 278 00:22:17,710 --> 00:22:21,380 ಹೇಳ್ತೀನಿರು. ನಿನ್ನದು ಒಂಥರಾ ಚೆನ್ನಾಗಿತ್ತು, 279 00:22:22,000 --> 00:22:24,710 ಎವರ್ಲಿ ಬ್ರದರ್ಸ್ ಥರ. 280 00:22:27,720 --> 00:22:29,140 ಫ್ಯಾಟ್ಸ್ ಡಾಮಿನೋ? 281 00:22:29,840 --> 00:22:30,890 ಅಲ್ಲ. 282 00:22:31,850 --> 00:22:32,930 ಲಿಟಲ್ ರಿಚರ್ಡ್? 283 00:22:33,510 --> 00:22:34,970 - ಅಲ್ಲ. - ಮತ್ತೆ ಯಾವುದು? 284 00:22:39,940 --> 00:22:42,440 "(ಹೌ ಮಚ್ ಈಸ್) ದಟ್ ಡಾಗೀ ಇನ್ ದ ವಿಂಡೋ?" 285 00:22:42,900 --> 00:22:45,470 ನೀನು ಯಾರಿಗಾದರೂ ಹೇಳಿದರೆ, ಇಲ್ಲ ಎನ್ನುತ್ತೇನೆ. 286 00:22:45,670 --> 00:22:46,820 ರೆಕಾರ್ಡ್ ಆರಿಸುವೆಯಾ? 287 00:22:48,780 --> 00:22:49,780 ಸರಿ. 288 00:22:58,460 --> 00:22:59,460 ತಗೋ. 289 00:23:00,120 --> 00:23:01,790 - ಸರಿ. - ಯಾವುದು? 290 00:23:03,290 --> 00:23:05,000 ಮೊದಲ ಹಾಡು ತುಂಬಾ… 291 00:23:05,920 --> 00:23:07,220 ಏನು? 292 00:23:08,220 --> 00:23:09,840 ನನ್ನ ಮೊದಲ ಪ್ರೇಮ. 293 00:23:10,510 --> 00:23:11,680 ಆಸಕ್ತಿಕರವಾಗಿದೆ. 294 00:23:22,860 --> 00:23:28,140 ನಾನು ಹೋಗಲಾಗುವ ಪ್ರಪಂಚ ಒಂದಿದೆ 295 00:23:28,340 --> 00:23:33,200 ನನ್ನ ರಹಸ್ಯಗಳನ್ನು ಹೇಳುವಂಥದ್ದು 296 00:23:34,870 --> 00:23:38,120 ನನ್ನ ಕೋಣೆಯೊಳಗೆ 297 00:23:39,460 --> 00:23:41,900 - ನಿನಗೀ ಹಾಡು ಗೊತ್ತಾ? - ನನಗೀ ಹಾಡು ಗೊತ್ತು. 298 00:23:42,100 --> 00:23:43,880 ನನ್ನ ಕೋಣೆಯೊಳಗೆ 299 00:23:44,420 --> 00:23:47,460 ನನ್ನ ಕೋಣೆಯೊಳಗೆ 300 00:23:49,630 --> 00:23:52,890 ಈ ಪ್ರಪಂಚದಲ್ಲಿ ನಾನು… 301 00:23:55,930 --> 00:23:57,870 - ಭುಜಗಳನ್ನು ಅಲುಗಾಡಿಸು. - ಸರಿ. 302 00:23:58,070 --> 00:24:01,880 ನೀನು ಒಂದು ಸ್ಟೆಪ್ ಅಷ್ಟೇ ಮಾಡಬೇಕು. ಒಂದು. ಹಾಗೆ. 303 00:24:02,080 --> 00:24:04,650 - ದೇಹವನ್ನು ಜರುಗಿಸು. - ಸರಿ. 304 00:24:08,360 --> 00:24:10,030 ನಾವು ಸ್ನೇಹಿತರಾಗಿರಬೇಕಿಲ್ಲ. 305 00:24:13,360 --> 00:24:17,290 ಆದರೆ ನಾವು ಜೊತೆಯಾಗಿ ಬರೆಯಬೇಕೆಂದರೆ, ಅಪರಿಚಿತರಾಗಿರಲಾಗುವುದಿಲ್ಲ. 306 00:24:20,120 --> 00:24:21,940 ನನ್ನನ್ನು ಏನಾದರೂ ಕೇಳು. 307 00:24:22,140 --> 00:24:23,920 ನನ್ನನ್ನು ಏನು ಬೇಕಾದರೂ ಕೇಳು. 308 00:24:25,920 --> 00:24:27,300 ನೀನು ನನಗೆ ನಿಜ ಹೇಳುವೆಯಾ? 309 00:24:28,300 --> 00:24:30,550 ಖಂಡಿತ. ಆಣೆ ಮಾಡಿ ಹೇಳ್ತೀನಿ. 310 00:24:32,510 --> 00:24:33,510 ಸರಿ. 311 00:24:37,760 --> 00:24:39,540 ದಿನದಲ್ಲಿ ಎಷ್ಟು ಮಾತ್ರೆ ತಗೋತೀಯ? 312 00:24:39,740 --> 00:24:41,350 ಇದನ್ನು ನೀನು ಕೇಳಬೇಕಾ? 313 00:24:42,310 --> 00:24:44,210 - ಉತ್ತರ ಹೇಳು. - ನಂಗೊತ್ತಿಲ್ಲ. 314 00:24:44,410 --> 00:24:45,380 ಏನಾದರೂ ಅಂದೆ. 315 00:24:45,580 --> 00:24:47,630 ನನಗೆ ಗೊತ್ತಿಲ್ಲ. ನಾನು ಎಣಿಸುವುದಿಲ್ಲ. 316 00:24:47,830 --> 00:24:49,430 ಅದು ಸಮಸ್ಯೆ ಅನ್ಸಲ್ವಾ? 317 00:24:49,630 --> 00:24:51,590 ಯಾಕೆ? ಅದನ್ನು ವೈದ್ಯರೇ ಹೇಳಿದ್ದು. 318 00:24:51,790 --> 00:24:54,260 - ನಿಲ್ಲಿಸಲಾಗದಿದ್ದರೆ ಸಮಸ್ಯೆ. - ನಿಲ್ಲಿಸಬಲ್ಲೆ. 319 00:24:54,460 --> 00:24:56,990 ಶೌಚಾಲಯದಲ್ಲಿ ಎಸೆಯುತ್ತೇನೆ. ನನಗೇನೂ ಅನಿಸುವುದಿಲ್ಲ. 320 00:24:59,160 --> 00:25:00,870 ನಿನ್ನನ್ನು ನಂಬಲಾಗುವುದಿಲ್ಲ. 321 00:25:24,060 --> 00:25:25,850 ಬೇರೆ ಏನು ತಿಳಿದುಕೊಳ್ಳಬೇಕು? 322 00:25:32,110 --> 00:25:34,300 ಬ್ಯಾಂಡ್ ಯಾಕೆ ಸೇರಬೇಕು ಎಂದುಕೊಂಡೆ? 323 00:25:34,500 --> 00:25:35,610 ನಿನಗಾಗಿ. 324 00:25:39,780 --> 00:25:40,830 ನಾನು ಯಾಕೆ? 325 00:25:41,540 --> 00:25:43,120 ನೀನು ಗೊತ್ತಿರುವಂತೆ ಅನಿಸುತ್ತೆ. 326 00:25:43,910 --> 00:25:45,980 ನಮ್ಮಿಬ್ಬರಿಗೂ ದೀರ್ಘಕಾಲದ ಪರಿಚಯ ಇರುವಂತೆ. 327 00:25:46,180 --> 00:25:50,090 ನೀನು ನನಗೆ ಗೊತ್ತಿರುವುದು ಹೇಗೆ ಅಂತ ಹೇಳಲು ಗೊತ್ತಿಲ್ಲ. 328 00:25:52,300 --> 00:25:54,510 ನಿನಗೆ ಹೀಗೆ ಯಾವಾಗಲೂ ಆಗುತ್ತಾ? 329 00:25:55,680 --> 00:25:56,590 ಇಲ್ಲ. 330 00:25:59,470 --> 00:26:01,100 ಇನ್ನೊಂದು, ಆಮೇಲೆ ನಾನು ಕೇಳುವೆ. 331 00:26:06,940 --> 00:26:07,940 ಸರಿ. 332 00:26:16,070 --> 00:26:17,930 ಕೈಯನ್ನು ಹೇಗೆ ಕೊಯ್ದುಕೊಂಡೆ ಹೇಳು. 333 00:26:18,130 --> 00:26:19,430 ನಿನಗೆ ಹೇಳಿದೆ. 334 00:26:19,630 --> 00:26:21,990 - ನಿನ್ನ ತಂದೆ ತಾಯಿಯ ಮನೆಗೆ ನುಗ್ಗುವಾಗಲೇ? - ಹೌದು. 335 00:26:22,410 --> 00:26:24,370 ನಿಜವಾಗಲೂ ಪ್ರಯತ್ನಿಸಿದೆಯಾ? 336 00:26:26,620 --> 00:26:27,870 ಅರ್ಥ ಆಗಲಿಲ್ಲ. 337 00:26:29,710 --> 00:26:33,610 ದೇಶದ ನಂಬರ್ ಒನ್ ಹಾಡು ನನ್ನದಾಗಿತ್ತು, ಅವರಿಗೆ ಹೇಳಬೇಕು ಎಂದುಕೊಂಡೆ. 338 00:26:33,810 --> 00:26:35,090 ಆದರೆ ಅವರು ಇರಲಿಲ್ಲ. 339 00:26:35,760 --> 00:26:36,920 ಇಲ್ಲ. 340 00:26:38,130 --> 00:26:40,640 - ಬೇರೆ ಕಡೆ ಹೊರಟುಹೋದರು. - ಏನು? 341 00:26:45,390 --> 00:26:46,850 ನಿನಗೆ ಹೇಳದೆ 342 00:26:48,100 --> 00:26:49,480 ಬೇರೆ ಕಡೆ ಹೊರಟುಹೋದರು. 343 00:26:53,900 --> 00:26:56,900 ಅಯ್ಯೋ, ಡೈಸಿ, ಇಷ್ಟು ವಿಷಾದಕರ ಸುದ್ದಿ ನಾನೆಲ್ಲೂ ಕೇಳಿಲ್ಲ. 344 00:26:57,360 --> 00:27:01,520 ಆದರೆ, ಬಿಲ್ಲಿ, ನಿನಗೆ ಹೇಳಲು ಇಷ್ಟವಿಲ್ಲ, ಆದರೆ ಜೀವನ ಪೂರ್ತಿ ವಿಷಾದಗಳೇ ಇವೆ. 345 00:27:01,720 --> 00:27:05,290 ನನಗೆ ಬೇಜಾರಾದಾಗ ಮಾತ್ರೆ ತಗೋತೀನಿ. ನೀನೇನು ಮಾಡುತ್ತೀಯ? 346 00:27:11,080 --> 00:27:12,080 ನಂಗೊತ್ತಿಲ್ಲ. 347 00:27:14,590 --> 00:27:17,200 ಅಂದರೆ, ನಾನೂ ಅದನ್ನೇ ಮಾಡುತ್ತಿದ್ದೆ. 348 00:27:17,400 --> 00:27:19,430 ಆದರೆ ನನಗನಿಸುತ್ತೆ ನಾನು… 349 00:27:20,630 --> 00:27:21,640 ಏನು? 350 00:27:24,760 --> 00:27:26,350 ನನಗದು ಅನುಭವಕ್ಕೆ ಬರುತ್ತಿದೆ 351 00:27:29,350 --> 00:27:30,230 ಅನ್ಸುತ್ತೆ. 352 00:27:31,940 --> 00:27:34,070 ನಾನು ಕೇಳಿದ ಅತ್ಯಂತ ವಿಷಾದಕರ ಸಂಗತಿ ಇದು. 353 00:27:44,620 --> 00:27:47,100 - ಗೊತ್ತಾಯ್ತು. - ಏನು ಗೊತ್ತಾಯ್ತು? 354 00:27:47,300 --> 00:27:51,290 ಏನಾಗಬೇಕಂದುಕೊಂಡಿದ್ದ ಬಗ್ಗೆ ಹಾಡುಗಳನ್ನು ಬರೆಯುತ್ತೀಯ, ಏನಾಗಿರುವೆ ಅಲ್ಲ. 355 00:27:53,670 --> 00:27:55,340 ನೀನು ಹಾಗೆ ಮಾಡದಿದ್ದರೆ? 356 00:27:55,920 --> 00:27:59,530 ಅಷ್ಟೇನೂ ಒಳ್ಳೆಯವನಲ್ಲದವನ ಬಗ್ಗೆ ನೀನು ಹಾಡುಗಳನ್ನು ಬರೆದರೆ, 357 00:27:59,730 --> 00:28:03,590 ಎಲ್ಲರಿಗೂ ನಿರಾಸೆ ಮೂಡಿಸುವವನು ಮತ್ತು ಬಯಸಬಾರದ್ದನ್ನು ಬಯಸುವವನ ಬಗ್ಗೆ? 358 00:28:05,550 --> 00:28:07,420 ಅಂಥ ಹಾಡನ್ನು ಯಾರು ಕೇಳುವರು? 359 00:28:07,610 --> 00:28:08,600 ನಾನು ಕೇಳುವೆ. 360 00:28:11,890 --> 00:28:13,400 ಎಲ್ಲರೂ ಕೇಳುವರು. 361 00:28:18,440 --> 00:28:21,490 - ಆರಾಮವಾಗಿರು. ಆಯ್ತಾ? - ನನಗೆ ಆರಾಮವಾಗಿರುವುದು ಗೊತ್ತಿಲ್ಲ. 362 00:28:21,950 --> 00:28:25,830 - ನಾನು ಇಂಗ್ಲೆಂಡಿನವಳು. - ನೀನು ಆರಾಮಿದ್ದೀಯ, ಅಲ್ವಾ? ನಾನಿದ್ದೇನೆ. 363 00:28:28,040 --> 00:28:29,560 ಅವಳು ಒಳ್ಳೆಯವಳು. 364 00:28:29,760 --> 00:28:31,000 ಹೌದು, ನಿಜವೇ. 365 00:28:32,040 --> 00:28:33,250 ಅಂದವಾಗಿದ್ದಾಳೆ ಕೂಡ. 366 00:28:33,830 --> 00:28:35,040 ಹೌದು, ಅನ್ನಬಹುದು. 367 00:28:35,920 --> 00:28:37,340 ಏನು ಮಾತನಾಡುತ್ತೀರಿ? 368 00:28:38,500 --> 00:28:40,710 - ಕರೆನ್? - ಏನು? 369 00:28:40,920 --> 00:28:44,040 - ಅವಳನ್ನು ದಡ್ಡಿ ಎನ್ನುತ್ತಿರುವೆಯಾ? - ಇಲ್ಲ. ಇಲ್ಲ! 370 00:28:44,230 --> 00:28:46,290 ಅವಳು ರೋಡ್ಸ್ ಪಂಡಿತೆ ಇದ್ದಂತೆ. 371 00:28:46,490 --> 00:28:50,220 ನಿಮ್ಮಿಬ್ಬರಿಗೂ ಏನಾದರೂ ಸಮಾನ ಆಸಕ್ತಿಗಳು ಇವೆಯೇ ಎಂದು ಕೇಳುತ್ತಿದ್ದೇನೆ. 372 00:28:51,600 --> 00:28:56,710 ಹಾಂ. ಅಂದರೆ, ಇವೆ. ಇವೆ ಅನ್ಸುತ್ತೆ. 373 00:28:56,910 --> 00:29:02,610 ಆಗಲೇ ಅವಳ ಜೊತೆ ಮಾತನಾಡುತ್ತಿದ್ದಾಗ ಅವಳು ಬ್ಯಾರಿ ಮ್ಯಾನಿಲೋ ಅಭಿಮಾನಿ ಅಂತ ಗೊತ್ತಾಯ್ತು. 374 00:29:03,740 --> 00:29:04,860 ತಮಾಷೆ ಮಾಡಬೇಡ. 375 00:29:13,870 --> 00:29:16,670 ನಾವು ಕೇವಲ ಮೂರು ನಾಲ್ಕು ಬಾರಿ ಹೊರಗೆ ಹೋಗಿದ್ದೇವೆ, 376 00:29:17,420 --> 00:29:22,320 ಮತ್ತು, ನಿಜ ಹೇಳಬೇಕೆಂದರೆ, ನಾವು ಜಾಸ್ತಿ ಮಾತಾಡಲ್ಲ, ಗೊತ್ತಾಯ್ತಲ್ಲ? 377 00:29:22,520 --> 00:29:24,910 - ಹೌದು. ಹೌದು, ಗೊತ್ತಾಯ್ತು. - ಹಾಂ. 378 00:29:25,110 --> 00:29:26,910 ಏನೇ ಇದ್ದರೂ ಹೆಚ್ಚಿಗೆ ಮಾತಿಲ್ಲ. 379 00:29:27,110 --> 00:29:29,040 - ಅರ್ಥ ಆಯ್ತು. - ಸಂಭೋಗದ ಕಾರಣದಿಂದ. 380 00:29:29,240 --> 00:29:30,810 ಧನ್ಯವಾದ, ಗ್ರಹಮ್. ಅರ್ಥವಾಯಿತು. 381 00:29:32,350 --> 00:29:34,890 - ದೇವರೇ. - ಅಲೆ ಬಂತು. ನೀನು ರೆಡಿನಾ? 382 00:29:35,440 --> 00:29:37,510 - ಇಲ್ಲ. - ತಡವಾಗಿದೆ. ತಯಾರಾಗು. 383 00:29:37,700 --> 00:29:39,050 - ಹೊಟ್ಟೆಯ ಮೇಲೆ. - ದೇವರೇ. 384 00:29:39,250 --> 00:29:41,470 - ಹೊಟ್ಟೆಯ ಮೇಲೆ. ಬೀಸು. - ಅಯ್ಯೋ, ದೇವರೇ. 385 00:29:41,670 --> 00:29:43,690 ಬೀಸು. ಬೀಸು. ಹೋಗು, ಹೋಗು, ಹೋಗು. 386 00:29:47,910 --> 00:29:48,780 ದೇವರೇ. 387 00:30:01,710 --> 00:30:03,490 - ನೀನು ರೆಡಿನಾ? - ಯಾವುದಕ್ಕೆ ರೆಡಿ? 388 00:30:03,690 --> 00:30:05,320 - ಹೋಗೋಣ ನೀರಿಗೆ? - ಬೇಡ, ಬೇಡ, ಬೇಡ. 389 00:30:05,520 --> 00:30:06,590 ರೆಡಿನಾ? ಬಾ. 390 00:30:17,390 --> 00:30:20,800 - ಇಷ್ಟ ಆಯ್ತಾ? - ಹೌದು, ಆದರೆ ಎಲ್ಲಿಗೆ ಹೋಗುತ್ತೆ? 391 00:30:21,000 --> 00:30:25,220 ನಾನು ಮಾಡುತ್ತಿದ್ದ ರೀತಿಯಲ್ಲಿ ಅದು ಎಲ್ಲಿಗೋ ಹೋಗುವಂತಿತ್ತು. 392 00:30:25,420 --> 00:30:28,760 ನೀನು ಬರೆದ ಸಾಲುಗಳಿಗೆ ಇದು ಚೆನ್ನಾಗಿ ಹೊಂದುತ್ತೆ ಅನ್ಸುತ್ತೆ. 393 00:30:28,960 --> 00:30:30,180 - ಸರಿ. - ಪ್ರಯತ್ನಿಸಿ ನೋಡು. 394 00:30:30,380 --> 00:30:31,100 ಸರಿ. 395 00:30:31,300 --> 00:30:33,020 ಗಂಟೆಗಳು ಅದರ ಸುತ್ತಲೇ ಗಿರಕಿ ಹೊಡೆದು, 396 00:30:33,220 --> 00:30:36,730 ಕಾರ್ಡ್ಸ್ ಮತ್ತು ರಾಗ ಬದಲಾಯಿಸಿ, ಅದು ಸಿಗುವವರೆಗೂ ಪ್ರಯತ್ನಿಸಿದೆವು. 397 00:30:36,930 --> 00:30:38,210 ಮತ್ತೆ ಸಿ ಗೆ. 398 00:30:48,220 --> 00:30:50,290 ಅದು ಸರಿ ಬಂದಾಗ ಆಗುವ ಅನುಭವವೇ ಬೇರೆ. 399 00:30:50,490 --> 00:30:53,790 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 400 00:30:53,990 --> 00:30:56,000 ನಾವಿಬ್ಬರೂ ಕೆಳಗೆ ಹೋಗಬಾರದು. 401 00:30:56,200 --> 00:30:57,670 - ಅದನ್ನು ಪ್ರಯತ್ನಿಸೋಣ. - ಸರಿ. 402 00:30:57,870 --> 00:30:58,960 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 403 00:30:59,160 --> 00:30:59,980 ಹಾಗೆ. 404 00:31:15,910 --> 00:31:19,400 ಆಯ್ತು, ಆದರೆ ಅವನು ಆ ಹಾಡನ್ನು ಬರೆಯಲಿಲ್ಲ. 405 00:31:19,600 --> 00:31:20,580 ಅದು ಯಾರಿಗೆ ಬೇಕು? 406 00:31:20,960 --> 00:31:25,320 ಆದರೆ, ಕ್ಯಾರೋಲಿನ್, ಅದು… ಆ ಹಾಡಿನ ಹೆಸರೇ "ನಾನು ಹಾಡುಗಳನ್ನು ಬರೆಯುವೆ." 407 00:31:25,520 --> 00:31:27,530 ಅದರಿಂದ ನಿನಗೆ ಏನೂ ಸಮಸ್ಯೆ ಅನ್ಸಲ್ವಾ? 408 00:31:27,730 --> 00:31:30,790 - ಯಾರು ಬರೆದರೂ ಅದು ಒಳ್ಳೆಯ ಹಾಡೇ. - ಸ್ವಲ್ಪ ಸಹಾಯ ಮಾಡ್ತೀಯಾ? 409 00:31:30,980 --> 00:31:33,080 ಅದರಲ್ಲಿ ನಿನಗೆ ಏನಿಷ್ಟ? 410 00:31:33,280 --> 00:31:35,930 ಗೊತ್ತಿಲ್ಲ. ಪದಗಳು? ಅವನ ಧ್ವನಿ? 411 00:31:37,100 --> 00:31:38,890 ಅಂದರೆ, ನಿಜವಾಗಿ ಹೇಳು. 412 00:31:40,770 --> 00:31:42,840 ಹೇ, ನೋಡು, ಯಾವುದೇ ಉತ್ತರ ತಪ್ಪಲ್ಲ. 413 00:31:43,040 --> 00:31:45,860 - ನಾನು ಹಾಗೆ ಹೇಳಲ್ಲ. - ತುಂಬಾ ಕೇಳಬೇಕೆನಿಸುವ ಹಾಡು. 414 00:31:47,030 --> 00:31:48,240 ನನಗೆ ಸಂತೋಷ ಕೊಡುತ್ತೆ. 415 00:31:49,820 --> 00:31:51,560 ಪಾಪ್ ಸಂಗೀತ ಇರುವುದೇ ಹಾಗಲ್ಲವೇ? 416 00:31:51,760 --> 00:31:54,740 ಅದು ನಿಮ್ಮ ಜೀವನವನ್ನೇನೂ ಬದಲಾಯಿಸಬೇಕಿಲ್ಲ. 417 00:31:55,950 --> 00:31:56,890 ಇದೊಳ್ಳೆ ಚೆನ್ನಾಗಿದೆ. 418 00:31:57,090 --> 00:31:59,960 - ಯಾವುದೇ ತಪ್ಪು ಉತ್ತರ ಇಲ್ಲ ಅಂದೆ? - ಹೋಗೋಲೋ. 419 00:32:03,170 --> 00:32:04,340 ಬ್ಯಾರಿ ಮ್ಯಾನಿಲೋ. 420 00:32:08,960 --> 00:32:10,590 ಅವರಿನ್ನೂ ವಾಪಸ್ ಬಂದಿಲ್ವಾ? 421 00:32:13,340 --> 00:32:16,510 ದೇವರೇ, ಒಂದೇ ದಿನದಲ್ಲಿ ರೋಲರ್ಬಾಲ್ ಎಷ್ಟು ಸಲ ನೋಡಬಹುದು? 422 00:32:20,100 --> 00:32:22,340 - ನನ್ನನ್ನು ಒಳಗೆ ಬಿಡ್ತೀಯಾ? - ಏನು? ಯಾಕೆ? 423 00:32:22,540 --> 00:32:24,860 ಗೊತ್ತಿಲ್ಲ. ಮನೆಯಲ್ಲಿ ಯಾರಾದರೂ ಇದ್ದರೆ? 424 00:32:25,480 --> 00:32:28,110 - ಎಂಥವರು? - ಗೊತ್ತಿಲ್ಲ. ಕಳ್ಳರು? 425 00:32:28,780 --> 00:32:29,840 - ಕಳ್ಳರಾ? - ಹಾಂ. 426 00:32:30,040 --> 00:32:32,200 ಈ ನಡುವೆ ತುಂಬಾ ಕಳ್ಳತನ ಆಗುತ್ತಿದೆ. 427 00:32:33,240 --> 00:32:36,930 - ನಾನು ಯಾವುದೂ ಕೇಳಿಲ್ಲವಲ್ಲ. - ಸುಮ್ಮನೆ ಒಳಗಡೆ ಬಿಡ್ತೀಯಾ? 428 00:32:37,130 --> 00:32:40,020 - ಹೋಗಲಿ ಒಳಗಡೆ ಬಿಡು. - ಹಾಂ. ಸರಿ. ಆಯ್ತು. 429 00:32:40,220 --> 00:32:41,560 ದೇವರೇ. 430 00:32:41,760 --> 00:32:43,500 - ಒಂದು ಕ್ಷಣ ಬರ್ತೀನಿ. - ಸರಿ. 431 00:32:50,710 --> 00:32:52,840 ಮತ್ತೆ, ಎಲ್ಲವೂ ಸರಿ ಇದ್ದಂತಿದೆ. 432 00:33:14,570 --> 00:33:16,070 ಬಹುಶಃ ನಾನು… 433 00:33:17,990 --> 00:33:20,160 ನನ್ನ ಸರ್ಫ್ಬೋರ್ಡ್ ತರಬೇಕು. 434 00:33:29,880 --> 00:33:35,800 ದೂರದಲ್ಲಿ ಅದು ನನ್ನೆಡೆ ಕೈ ಬೀಸುತ್ತಿದೆ ಮರಳಿನಲ್ಲಿ ಮರೀಚಿಕೆಯಂತೆ 435 00:33:36,970 --> 00:33:41,420 ನಾವು ರಹಸ್ಯಗಳ ಹಂಚಿಕೊಳ್ಳುತ್ತಿರುವುದಿರಬಹುದು ಯಾರಿಗೂ ಅರ್ಥವಾಗದಂತೆ 436 00:33:41,620 --> 00:33:42,880 ಯಾಕೆ "ಅದು" ಅಂತೀವಿ? 437 00:33:43,070 --> 00:33:45,690 "ದೂರದಲ್ಲಿ ಅದು ನನ್ನೆಡೆ ಕೈ ಬೀಸುತ್ತಿದೆ." "ಅದು" ಏನು? 438 00:33:47,310 --> 00:33:49,670 - ನಮ್ಮ ಭವಿಷ್ಯ. - ದೂರದಲ್ಲಿ ಏನು ಕಾಣುತ್ತಿದೆ? 439 00:33:49,870 --> 00:33:52,090 "ನೀವು" ಅಥವಾ "ನಾವು" ಯಾಕಾಗಬಾರದು? 440 00:33:52,290 --> 00:33:53,470 - "ನಾವು" ಸರಿ. - ಹೌದು. 441 00:33:53,670 --> 00:33:54,930 - "ನಾವು" ಚಂದ. - ಅದ್ಭುತ. 442 00:33:55,130 --> 00:33:56,490 - ಪ್ರಯತ್ನಿಸೋಣ. - "ನಾವು" ಹಾಕು. 443 00:33:57,070 --> 00:33:57,910 ಸರಿ. 444 00:33:59,490 --> 00:34:00,600 ನಾವು ಕೈ ಬೀಸುವುದು… 445 00:34:00,800 --> 00:34:02,370 - ಪ್ರಯತ್ನಿಸು. - ಆಯ್ತು. ಸರಿ. 446 00:34:03,450 --> 00:34:05,830 ಒಂದು, ಎರಡು, ಮೂರು, ನಾಲ್ಕು. 447 00:34:06,210 --> 00:34:12,050 ದೂರದಲ್ಲಿ ನಾವು ಕೈ ಬೀಸುವುದು ಕಂಡೆ ಮರಳಿನಲ್ಲಿ ಮರೀಚಿಕೆಯಂತೆ 448 00:34:13,380 --> 00:34:18,800 ನಾವು ರಹಸ್ಯಗಳ ಹಂಚಿಕೊಳ್ಳುತ್ತಿರುವುದಿರಬಹುದು ಯಾರಿಗೂ ಅರ್ಥವಾಗದಂತೆ 449 00:34:19,220 --> 00:34:20,160 ನನಗಿಷ್ಟವಾಯಿತು. 450 00:34:20,360 --> 00:34:25,500 ನೀನೀಗ ನನ್ನ ತಲೆಯ ಮೇಲೆ ಕುಳಿತಿರುವೆ ಯಾಕಿಷ್ಟು ಕಷ್ಟ ಮಾಡುತ್ತಿರುವೆ? 451 00:34:25,700 --> 00:34:27,130 ಈಗ ಹಾಡಿನಂತೆ ಕೇಳಿಸುತ್ತಿದೆ. 452 00:34:27,330 --> 00:34:29,130 ನನ್ನ ಮನಸ್ಸು ಮುರಿಯಬೇಡ ನನ್ನ… 453 00:34:29,330 --> 00:34:32,980 ನನ್ನ ಮನಸ್ಸು ಮುರಿದು ಬಿಡಬೇಡ ನೀನೆಲ್ಲಿರುವೆ ಹೇಳುವೆಯಾ? 454 00:34:33,530 --> 00:34:36,050 - ಸರಿ. - ಸರಿ. ಈ ಭಾಗ... 455 00:34:36,250 --> 00:34:38,560 - ನಾವು ಇದನ್ನು ಮತ್ತೆ ಮಾಡಬೇಕು. - ಯಾಕೆ? 456 00:34:38,760 --> 00:34:39,850 ಇದು ಡಿಸ್ನಿಲ್ಯಾಂಡ್. 457 00:34:40,050 --> 00:34:41,770 - ಇದು ಡಿಸ್ನಿಲ್ಯಾಂಡ್ ಅಲ್ಲ. - ಹೌದು. 458 00:34:41,970 --> 00:34:44,310 ಇದು ಸಕಾರಾತ್ಮಕ. ಆಶಯವುಳ್ಳದ್ದು. 459 00:34:44,510 --> 00:34:47,480 - ಆಶಯ ಇದ್ದರೆ ಏನಂತೆ? - ನಾವು ಅದರ ಬಗ್ಗೆ ಬರೆಯುತ್ತಿಲ್ಲ. 460 00:34:47,680 --> 00:34:50,690 ಕೆಟ್ಟದಾಗುವ ಕೆಲಸಗಳನ್ನು ಏಕೆ ಮಾಡುತ್ತೇವೆ, ಪ್ರಯೋಜನವಿಲ್ಲದಿದ್ದರೂ 461 00:34:50,890 --> 00:34:54,360 ಏಕೆ ಮಾಡುತ್ತಿರುತ್ತೇವೆ ಎಂಬುದರ ಬಗ್ಗೆ ಹಾಡು ಬರೆಯುತ್ತಿದ್ದೇವೆ. 462 00:34:54,560 --> 00:34:56,320 ನಾನು ಒಪ್ಪುವುದಿಲ್ಲ. 463 00:34:56,520 --> 00:34:58,260 ನೀನು ತಪ್ಪಾಗಿರುವೆ, ಹಾಗಾಗಿ… 464 00:35:00,090 --> 00:35:02,810 ಯಾರೋ ನಿನಗೆ ನೋವುಂಟು ಮಾಡಿದ್ದಾರೆ, ಅಲ್ವಾ? 465 00:35:05,520 --> 00:35:07,000 ಅಂದರೆ ಏನರ್ಥ? 466 00:35:07,200 --> 00:35:08,130 ಏನು? 467 00:35:08,330 --> 00:35:10,560 ನಿನ್ನ ಬಗ್ಗೆ ತಪ್ಪಾಗಿ ತಿಳಿದಿದ್ದೆ, ಅಷ್ಟೇ. 468 00:35:12,110 --> 00:35:15,150 - ನೀನು ಹೀಗಂತ ಅಂದುಕೊಂಡಿರಲಿಲ್ಲ… - ಏನು? 469 00:35:17,070 --> 00:35:18,200 ಅಂದರೆ, ನೊಂದವಳು. 470 00:35:36,260 --> 00:35:37,130 ಡೈಸಿ. 471 00:35:43,220 --> 00:35:46,470 ನನ್ನ ಮಾತಿನ ಅರ್ಥ ಅದಲ್ಲ. ಡೈಸಿ. 472 00:35:54,230 --> 00:35:55,270 ಡೈಸಿ. 473 00:35:59,240 --> 00:36:00,950 ಡೈಸಿ, ನನ್ನನ್ನು ಕ್ಷಮಿಸು, ಆಯ್ತಾ? 474 00:36:02,450 --> 00:36:03,620 ಅಯ್ಯೋ. 475 00:36:23,260 --> 00:36:24,390 ನೋಡು, 476 00:36:25,760 --> 00:36:27,100 ನನ್ನನ್ನು ಕ್ಷಮಿಸು. 477 00:36:30,020 --> 00:36:31,850 ನಾನು ಹೇಳಿದ್ದು ಏನಂದ್ರೆ ನಮ್ಮಲ್ಲಿ 478 00:36:34,560 --> 00:36:36,650 ಅಂದುಕೊಂಡಿದ್ದಕ್ಕಿಂತ ಸಾಮ್ಯತೆಯಿದೆ. 479 00:36:38,610 --> 00:36:39,610 ಅದು ಹೇಗೆ? 480 00:36:41,450 --> 00:36:44,160 ನನ್ನ ತಂದೆ ಕೂಡ ಹೇಳದೆ ಕೇಳದೆ ಹೊರಟುಹೋದರು. 481 00:36:47,910 --> 00:36:48,990 ನನಗಾಗ ಎಂಟು ವರ್ಷ. 482 00:36:52,160 --> 00:36:54,790 ಅವರ ಬಗ್ಗೆ ಹೆಚ್ಚು ಯೋಚಿಸದಿರಲು ಪ್ರಯತ್ನಿಸುತ್ತೇನೆ, 483 00:36:59,000 --> 00:37:03,010 ಆದರೆ ನಾನು ಮಾಡುವುದೆಲ್ಲವೂ ಅವರಿಗೆ ಪಶ್ಚಾತ್ತಾಪ ತರಲಿ ಎಂದು ಬಯಸುತ್ತೇನೆ. 484 00:37:13,770 --> 00:37:15,020 ನಾನು ನೊಂದವಳಲ್ಲ. 485 00:37:20,360 --> 00:37:21,650 ನಾನು ಕೂಡ ಅಷ್ಟೇ. 486 00:37:34,620 --> 00:37:35,920 ಛೆ. 487 00:37:38,750 --> 00:37:40,750 ನನ್ನ ಮನೆಯೊಳಗೆ ಹೇಗೆ ಬಂದ್ರಿ? 488 00:37:42,880 --> 00:37:43,920 ಬಾಗಿಲಿನಿಂದ. 489 00:37:50,640 --> 00:37:52,680 ಮುದ್ದುಗಳೇ, ಮನೆಗೆ ಬಂದಿರುವೆ. 490 00:37:56,940 --> 00:37:59,980 ಹೇ. ಬಿಲ್ಲಿ ಏನಾದರೂ ಕರೆ ಮಾಡಿದ್ನಾ? 491 00:38:02,480 --> 00:38:03,610 ಇಲ್ಲ. 492 00:38:07,110 --> 00:38:08,200 ಹಲೋ? 493 00:38:10,200 --> 00:38:11,160 ಸರಿ. 494 00:38:14,620 --> 00:38:16,080 ಹಾಂ, ಸರಿ. ಪರವಾಗಿಲ್ಲ. 495 00:38:20,750 --> 00:38:21,920 ಈಗಲೇ ಬರ್ತೀನಿ. 496 00:38:26,680 --> 00:38:28,090 ಅದು ಟೆಡ್ಡಿ. 497 00:38:29,390 --> 00:38:30,550 ಏನಂದರು? 498 00:38:32,510 --> 00:38:36,980 ನನಗೆ ಇನ್ನು ತಡೆಯಲಾಗಲಿಲ್ಲ. ನಾನು… ನಾನಂತೂ… 499 00:38:37,850 --> 00:38:39,560 - ಹಾಯ್. - ಹಾಯ್. 500 00:38:40,980 --> 00:38:44,010 ಹೇ, ಗ್ರಹಮ್. ನೀನು ಯಾವಾಗಲೂ ನುಡಿಸುತ್ತಿದ್ದ ರಿಫ್ ಗೊತ್ತಲ್ಲ? 501 00:38:44,210 --> 00:38:46,100 ಹೌದು. ಏನಾದ್ರೂ ಬರೆದ್ರಾ? 502 00:38:46,290 --> 00:38:48,160 ಕುಳಿತುಕೋ. ನಿನಗಿದು ಇಷ್ಟವಾಗಬಹುದು. 503 00:38:48,780 --> 00:38:51,830 ಅವರು ಮೊದಲ ಬಾರಿ ನಿಜವಾಗಲೂ ಜೊತೆಯಾಗಿ ಬರೆದ ಹಾಡು ಅದು. 504 00:38:52,530 --> 00:38:54,230 ಈಗಲೂ ನನಗೆ ಅಚ್ಚುಮೆಚ್ಚು. 505 00:38:54,430 --> 00:38:59,480 ನಾನು ನಂಬಲಾಗಲಿಲ್ಲ ಅಂತಲ್ಲ ನಾನು ನಂಬುವುದಿಲ್ಲ ಅಂತಲ್ಲ 506 00:38:59,680 --> 00:39:01,130 ಒಂದೆರಡು ಸಲ ನುಡಿಸಿದೆವು. 507 00:39:01,330 --> 00:39:05,670 ಆ ಸಮಯಕ್ಕೆ ಪ್ರತಿ ಸುಳ್ಳೂ ನಿಜವೇ, ಚಿನ್ನ ಅದುವೇ ರೋಚಕತೆ 508 00:39:07,220 --> 00:39:08,830 ನನಗೆ ನಿರಾಸೆ ಮೂಡಿಸಲಿದ್ದರೆ... 509 00:39:09,030 --> 00:39:13,310 ಮುಂದೆ ಯಾವುದೂ ಈಗ ಇರುವಂತೆ ಇರುವುದಿಲ್ಲ ಎಂಬ ಭಾವನೆ ಕಾಡಿತು. 510 00:39:14,060 --> 00:39:15,220 ಅದಂತೂ ನಿಜವಾಗಲೂ 511 00:39:17,640 --> 00:39:18,940 ಅದ್ಭುತ ದಿನವಾಗಿತ್ತು. 512 00:39:20,900 --> 00:39:22,730 ಆಮೇಲೆ ಡಿ ಮೇಜರಿಗೆ ಹೋಗುತ್ತಾ? 513 00:39:24,230 --> 00:39:28,320 ಹೌದು, ಗೊತ್ತು. ಆದರೆ ನನ್ನನ್ನು ನಂಬು, ಸರಿ ಹೊಂದುತ್ತೆ. ಆಯ್ತಾ? 514 00:39:29,070 --> 00:39:33,280 ಅದರ ಜೊತೆ ನೀನು ಪ್ರಯೋಗ ಮಾಡಬೇಕಿದ್ದರೆ, ಧಾರಾಳವಾಗಿ ಮಾಡು. 515 00:39:35,040 --> 00:39:38,230 - ಇದನ್ನು ನಾವು ರೆಕಾರ್ಡ್ ಮಾಡಬೇಕಾ? - ಹೌದು. 516 00:39:38,430 --> 00:39:41,370 - ಇದರ ಹೆಸರೇನು? - "ಆರಾಮವಾಗಿ ನಿರಾಸೆ ಮೂಡಿಸು." 517 00:40:01,230 --> 00:40:04,630 ಹಗಲುಗನಸಿನಲ್ಲಿ ಕಳೆದುಹೋಗಿದ್ದೆ 518 00:40:04,830 --> 00:40:07,230 ತುಂಬಾ ಹೊತ್ತಿನಿಂದ ಎದ್ದಿರುವೆ 519 00:40:08,240 --> 00:40:11,180 ನನ್ನ ಕಣ್ಣುಗಳೇನೋ ತೆರೆದಿವೆ ಆದರೆ ನನ್ನ ಹೃದಯ ಕುಸಿಯುತ್ತಿದೆ 520 00:40:11,380 --> 00:40:13,780 ದಿನಗಳು ಕಳೆದಂತೆ ಆಳವಾಗಿ 521 00:40:14,910 --> 00:40:18,310 ನಾನು ನಂಬಲಾಗಲಿಲ್ಲ ಅಂತಲ್ಲ 522 00:40:18,510 --> 00:40:21,610 ನಾನು ನಂಬುವುದಿಲ್ಲ ಅಂತಲ್ಲ 523 00:40:21,810 --> 00:40:26,340 ಆ ಸಮಯಕ್ಕೆ ಪ್ರತಿ ಸುಳ್ಳೂ ನಿಜವೇ, ಚಿನ್ನ ಅದುವೇ ರೋಚಕತೆ 524 00:40:28,460 --> 00:40:32,450 ನಿರಾಸೆ ಮೂಡಿಸಲಾರೆಯಾ, ನಿರಾಸೆ ಮೂಡಿಸಲಾರೆಯಾ ಆರಾಮವಾಗಿ ಮೂಡಿಸಲಾರೆಯಾ 525 00:40:32,650 --> 00:40:34,720 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 526 00:40:35,930 --> 00:40:39,250 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 527 00:40:39,450 --> 00:40:41,770 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 528 00:40:42,730 --> 00:40:46,420 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 529 00:40:46,620 --> 00:40:49,150 ಈಗಲೇ ನೀನು ಹೊರಡುವುದಿದ್ದರೆ 530 00:40:49,820 --> 00:40:53,390 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 531 00:40:53,590 --> 00:40:56,070 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 532 00:41:04,620 --> 00:41:10,050 ದೂರದಲ್ಲಿ ನಾವು ಕೈ ಬೀಸುವುದು ಕಂಡೆ ಮರಳಿನಲ್ಲಿ ಮರೀಚಿಕೆಯಂತೆ 533 00:41:11,630 --> 00:41:16,800 ನಾವು ರಹಸ್ಯಗಳ ಹಂಚಿಕೊಳ್ಳುತ್ತಿರುವುದಿರಬಹುದು ಯಾರಿಗೂ ಅರ್ಥವಾಗದಂತೆ 534 00:41:18,350 --> 00:41:21,060 ನೀನೀಗ ನನ್ನ ತಲೆಯ ಮೇಲೆ ಕುಳಿತಿರುವೆ 535 00:41:21,930 --> 00:41:24,350 ಯಾಕಿಷ್ಟು ಕಷ್ಟ ಮಾಡುತ್ತಿರುವೆ? 536 00:41:25,100 --> 00:41:29,360 ನನ್ನ ಮನಸ್ಸು ಮುರಿದು ಬಿಡಬೇಡ ನೀನೆಲ್ಲಿರುವೆ ಹೇಳುವೆಯಾ? 537 00:41:30,110 --> 00:41:33,010 ಅದರ ಉತ್ತಮ ಗುಣ ಏನೆಂದರೆ ಎಲ್ಲರಿಗೂ ಭಾಗವಹಿಸುವ ಅವಕಾಶವಿತ್ತು. 538 00:41:33,210 --> 00:41:35,910 ಕೇವಲ ಬಿಲ್ಲಿಯ ಪ್ರದರ್ಶನ ಮಾತ್ರ ಆಗಿರಲಿಲ್ಲ. 539 00:41:37,820 --> 00:41:39,310 ಡೈಸಿ ನಮಗಾಗಿ ಹಾಗೆ ಮಾಡಿದಳು. 540 00:41:39,510 --> 00:41:42,560 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 541 00:41:42,760 --> 00:41:44,920 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 542 00:41:45,870 --> 00:41:49,400 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 543 00:41:49,600 --> 00:41:51,960 ಈಗಲೇ ನೀನು ಹೊರಡುವುದಿದ್ದರೆ 544 00:41:53,050 --> 00:41:56,660 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 545 00:41:56,860 --> 00:41:59,100 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 546 00:42:14,070 --> 00:42:17,390 ನೀನು ನನಗೆ ನಿರಾಸೆ ಮೂಡಿಸಲಿದ್ದರೆ ಆರಾಮವಾಗಿ ಮೂಡಿಸು 547 00:42:17,590 --> 00:42:19,870 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 548 00:42:22,240 --> 00:42:24,690 ಅವರು ಒಬ್ಬರನ್ನೊಬ್ಬರು ಉತ್ತಮಪಡಿಸುತ್ತಿದ್ದರು. 549 00:42:24,890 --> 00:42:26,870 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 550 00:42:27,920 --> 00:42:31,490 ನೀನು ಹೊರಡುವಾಗ ನನ್ನನ್ನು ಪ್ರೀತಿಸುವೆ ಅಂತ ಹೇಳಬೇಡ 551 00:42:31,690 --> 00:42:33,960 ಈಗಲೇ ನೀನು ಹೊರಡುವುದಿದ್ದರೆ 552 00:42:35,920 --> 00:42:37,720 ಹಾಗಾಗದಿರುವವರೆಗಂತೂ ಖಂಡಿತ. 553 00:42:38,340 --> 00:42:40,720 ನೀನು ನನಗೆ ನಿರಾಸೆ ಮೂಡಿಸಲಿದ್ದರೆ 554 00:43:08,960 --> 00:43:10,580 ಅಬ್ಬಾ, ದೇವರೇ. 555 00:43:11,790 --> 00:43:15,010 ಇದು ಅತ್ಯುತ್ತಮವಾಗಿತ್ತು, ಅಲ್ವಾ? ನಿಮಗೇನನಿಸುತ್ತೆ? 556 00:43:19,510 --> 00:43:21,140 ನಾನೊಬ್ಬ ಮಹಾಮೇಧಾವಿ. 557 00:43:25,470 --> 00:43:26,680 ನಿನಗಾಗಿ ಒಂದು ಮಾಡು. 558 00:43:42,870 --> 00:43:45,240 - ಸಮಯ ಎಷ್ಟಾಗಿದೆ? - ತಡವಾಗಿದೆ. 559 00:43:47,910 --> 00:43:49,660 ಕ್ಷಮಿಸು. ಅಷ್ಟು ಕೆಟ್ಟದಾಗಿತ್ತಾ? 560 00:45:57,580 --> 00:45:59,530 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 561 00:45:59,730 --> 00:46:01,670 ಸೃಜನಶೀಲ ಮೇಲ್ವಿಚಾರಕರು ವಿವೇಕ್