1
00:00:07,750 --> 00:00:09,950
ಈ ಹಿಂದೆ ಡೈಸಿ ಜೋನ್ಸ್ & ದ ಸಿಕ್ಸಲ್ಲಿ...
2
00:00:10,150 --> 00:00:12,910
ನಮ್ಮ ಬ್ಯಾಂಡಿನ ಹೊಸ ಸದಸ್ಯೆ.
ಡೈಸಿ ಜೋನ್ಸನ್ನು ಸ್ವಾಗತಿಸೋಣ.
3
00:00:13,110 --> 00:00:15,830
ನಿನ್ನ ಹೆಂಡತಿಯ ಪ್ರೇಮಗೀತೆಗಳಿಗೆ
ಕೋರಸ್ ಹಾಡಲು ಬಂದಿಲ್ಲ.
4
00:00:16,030 --> 00:00:19,500
ನೀವಿಬ್ಬರೇ ಎಲ್ಲಿಗಾದರೂ ಹೋಗಿ ಯಾವುದರ ಮೇಲಾದರೂ
ಕೆಲಸ ಮಾಡಿ.
5
00:00:19,700 --> 00:00:20,460
ಆರಾಮ ಇದ್ದೀವಲ್ಲಾ?
6
00:00:20,660 --> 00:00:21,560
ಖಂಡಿತವಾಗಲೂ ಇದ್ದೇವೆ.
7
00:00:22,890 --> 00:00:23,960
ಬರ್ತಿದ್ದೀಯಾ?
8
00:00:24,160 --> 00:00:25,730
ನಿನಗೆ ಗ್ರಹಮ್ ಅಂದರೆ ಇಷ್ಟವೇ?
9
00:00:26,400 --> 00:00:28,190
ಅವನು ತುಂಬಾ ಸೆಕ್ಸಿ ಅಂತ.
10
00:00:29,610 --> 00:00:31,720
ಕೆಟ್ಟದಾಗುವ ಕೆಲಸಗಳನ್ನು ಏಕೆ ಮಾಡುತ್ತೇವೆ,
11
00:00:31,920 --> 00:00:34,950
ಪ್ರಯೋಜನವಿಲ್ಲದಿದ್ದರೂ ಏಕೆ ಮಾಡುತ್ತಿರುತ್ತೇವೆ
ಎಂಬುದರ ಬಗ್ಗೆ.
12
00:00:36,030 --> 00:00:37,810
ದಿನದಲ್ಲಿ ಎಷ್ಟು ಮಾತ್ರೆ ತಗೋತೀಯ?
13
00:00:38,010 --> 00:00:40,520
ಶೌಚಾಲಯದಲ್ಲಿ ಎಸೆಯುತ್ತೇನೆ.
ನನಗೇನೂ ಅನಿಸುವುದಿಲ್ಲ.
14
00:00:40,720 --> 00:00:42,770
ನೀನು ಹೀಗಂತ ಅಂದುಕೊಂಡಿರಲಿಲ್ಲ…
15
00:00:42,970 --> 00:00:44,500
- ಏನು?
- ಅಂದರೆ, ನೊಂದವಳು.
16
00:00:45,370 --> 00:00:47,750
- ನನ್ನನ್ನು ಒಳಗೆ ಬಿಡ್ತೀಯಾ?
- ಏನು? ಯಾಕೆ?
17
00:00:50,500 --> 00:00:52,420
ನಾನು ಹೇಳಿದ್ದು ಏನಂದ್ರೆ ನಮ್ಮಲ್ಲಿ
18
00:00:52,920 --> 00:00:54,880
ಅಂದುಕೊಂಡಿದ್ದಕ್ಕಿಂತ ಸಾಮ್ಯತೆಯಿದೆ.
19
00:01:02,180 --> 00:01:04,190
{\an8}ರೆಕಾರ್ಡ್ ಸ್ಟಾಪ್ ಪ್ಲೇ
20
00:01:22,750 --> 00:01:25,940
{\an8}ಮೊದಲೆರಡು ವಾರಗಳಲ್ಲಿ ನಾವು
ಎಂಟೋ ಒಂಬತ್ತೋ ಹಾಡುಗಳನ್ನು ಬರೆದಿರಬಹುದು.
21
00:01:26,140 --> 00:01:29,440
ನನಗೊಂದು ಆಲೋಚನೆ ಬಂದರೆ, ಅವನು ಸ್ವಾರಸ್ಯಗೊಳಿಸಿ
ಸಂಗೀತ ಜೋಡಿಸುತ್ತಿದ್ದ.
22
00:01:29,640 --> 00:01:31,200
ನಾನು ರಾಗವನ್ನು ಆಲೋಚಿಸುತ್ತಿದ್ದೆ.
23
00:01:31,400 --> 00:01:33,800
ನಾವು ಒಂದು ಆಲ್ಬಮ್ ಮಾಡುವಾಗ,
ಯಾವುದೇ ಆಲ್ಬಮ್ ಆದರೂ,
24
00:01:34,380 --> 00:01:35,950
ಅದೊಂದು ನಿಕಟವಾದ ವಸ್ತು.
25
00:01:36,150 --> 00:01:37,490
{\an8}ಬಿಲ್ಲಿ ಡನ್
ಪ್ರಮುಖ ಗಾಯಕ/ಗೀತರಚನೆಕಾರ
26
00:01:37,690 --> 00:01:39,040
{\an8}ಅಂದರೆ, ಅದು ಹಾಗೆಯೇ ಇರಬೇಕು.
27
00:01:39,240 --> 00:01:42,170
ಅದರ ಅರ್ಥ ನಾವು ಜಗಳ ಆಡಲಿಲ್ಲ ಅಂತಲ್ಲ.
28
00:01:42,360 --> 00:01:44,210
ಪ್ರತಿ ಹಾಡಿಗೂ ಬ್ರಿಡ್ಜ್ ಬೇಕಾಗಿಲ್ಲ.
29
00:01:44,410 --> 00:01:46,310
ಒಂದೇ ಸಮನೆ ಜಗಳ ಮಾಡುತ್ತಿದ್ದೆವು.
30
00:01:47,560 --> 00:01:49,170
{\an8}ಒಂದು ತಿಂಗಳವರೆಗೂ ಅದು ಹಾಗೆಯೇ ಇತ್ತು.
31
00:01:49,370 --> 00:01:50,300
{\an8}ವಾರೆನ್ ರೋಜಸ್
ಡ್ರಮ್ಸ್
32
00:01:50,500 --> 00:01:53,550
{\an8}ನಾವು ಸ್ಟುಡಿಯೋದಲ್ಲಿ ಸಂಯೋಜನೆ
ರೆಕಾರ್ಡ್ ಮಾಡುತ್ತಾ ಇರ್ತೇವೆ,
33
00:01:53,750 --> 00:01:57,140
{\an8}ಮತ್ತು ಅವರು ಎಲ್ಲಿರುತ್ತಾರೆ,
ಏನು ಮಾಡುತ್ತಿರುತ್ತಾರೆ ದೇವರಿಗೇ ಗೊತ್ತು.
34
00:01:57,340 --> 00:01:59,350
{\an8}ಪ್ರತಿ ದಿನ ಹೊಸದರೊಂದಿಗೆ ಬರುತ್ತಿದ್ದರು.
35
00:01:59,550 --> 00:02:00,350
{\an8}ಕರೆನ್ ಸಿರ್ಕೊ
ಕೀಬೋರ್ಡ್ಸ್
36
00:02:00,550 --> 00:02:02,100
{\an8}ಅಂದರೆ, ನಿಜಕ್ಕೂ ಅದ್ಭುತ ಹಾಡುಗಳು.
37
00:02:02,300 --> 00:02:06,290
ಮತ್ತು ಪ್ರತಿ ರಾತ್ರಿ,
ಶಾಲೆಯ ಹುಡುಗಿಯರಂತೆ ನಗುತ್ತಾ ಬರುತ್ತಿದ್ದರು.
38
00:02:10,380 --> 00:02:12,860
- ಅಂದರೆ, ನಿಖರವಾಗಿ ಅದನ್ನೇ ಹೇಳಿದನು.
- ಸಾಧ್ಯವಿಲ್ಲ.
39
00:02:13,060 --> 00:02:15,050
- ಇಲ್ಲ, ನನ್ನ ಮೇಲಾಣೆ.
- ಅಸಾಧ್ಯ.
40
00:02:18,430 --> 00:02:20,330
ಏನು? ಅಷ್ಟೆಲ್ಲಾ ತಮಾಷೆ ಇಲ್ಲ.
41
00:02:20,530 --> 00:02:21,600
ನಿಮಗದರ ಚಿಂತೆಯಾಯಿತೇ?
42
00:02:22,050 --> 00:02:25,080
{\an8}ಹಾಗೇನಿಲ್ಲ. ಏನೇ ಇದ್ದರೂ, ಸದ್ಯಕ್ಕಂತೂ ಇಲ್ಲ.
43
00:02:25,280 --> 00:02:26,420
{\an8}ಗ್ರಹಮ್ ಡನ್
ಪ್ರಮುಖ ಗಿಟಾರ್
44
00:02:26,620 --> 00:02:29,690
{\an8}ಅಂದರೆ, ಅವರೇನೇ ಮಾಡುತ್ತಿದ್ದರೂ,
45
00:02:33,480 --> 00:02:34,530
ಅದು ಫಲಿಸುತ್ತಿತ್ತು.
46
00:02:46,120 --> 00:02:51,080
ನಿಜವು ಎಂದಾದರೂ ಸುಳ್ಳನ್ನು ಮರೆ ಮಾಡಬಹುದೇ?
47
00:02:52,540 --> 00:02:57,920
ಮಾತನ್ನು ಎಂದಾದರೂ ಮುರಿಯದಿರಬಹುದೇ?
48
00:02:58,220 --> 00:03:04,050
ಪ್ರಯತ್ನಿಸಲು ಹಿಂಜರಿಕೆ ಏಕೆ?
49
00:03:04,720 --> 00:03:10,310
ಹೇಳು, ಪ್ರಯತ್ನಿಸಲು ಹಿಂಜರಿಕೆ ಏಕೆ?
50
00:03:11,440 --> 00:03:15,980
ಹೇಳು, ಪ್ರಯತ್ನಿಸಲು ಹಿಂಜರಿಕೆ ಏಕೆ?
51
00:03:36,460 --> 00:03:38,950
ಚೆನ್ನಾಗಿ ಕೇಳುತ್ತಿಲ್ಲ. ತುಂಬಾ ಸೌಮ್ಯವಾಗಿದೆ.
52
00:03:39,150 --> 00:03:40,830
- ಗಡುಸಾಗಿ ಕೇಳಬೇಕು.
- ಗಡುಸಾಗಿ?
53
00:03:41,020 --> 00:03:43,840
ಹೇಳಿದ್ದು ಗೊತ್ತಾಯ್ತಲ್ಲ?
ಇನ್ನೂ ಗಡುಸಾಗಿ ಕೇಳಬೇಕು.
54
00:03:44,510 --> 00:03:48,640
ಹೈ ಹ್ಯಾಟ್ಸ್ ಬದಲು ಟಾಮ್ಸ್ ಹೊಡೆಯೋಣ.
ಎಡ್ಡಿ, ದೀರ್ಘ ಸ್ವರಗಳು.
55
00:03:48,850 --> 00:03:49,680
ಸರಿ.
56
00:03:59,820 --> 00:04:01,700
ಅದ್ಭುತ. ಇದು ಕಷ್ಟ ಇತ್ತೇನು?
57
00:04:02,320 --> 00:04:04,110
ಡೈಸಿಯಂತೆ ಮಾತಾಡುತ್ತಾನೆ ಅನ್ಸುತ್ತೆ.
58
00:04:04,740 --> 00:04:06,740
- ಗಡುಸಾಗಿ.
- ಗಡುಸಾಗಿ.
59
00:04:16,130 --> 00:04:17,860
ಹೌದು, ಚೆನ್ನಾಗಿದೆ ಅಂತ ಗೊತ್ತಿತ್ತು.
60
00:04:18,060 --> 00:04:20,740
ಟೆಡ್ಡಿಗೆ ಎಲ್ಲರಿಗಿಂತ ಹೆಚ್ಚಿನ ವಿಶ್ವಾಸ ಇತ್ತು.
61
00:04:20,940 --> 00:04:22,720
ಟೆಡ್ಡಿಗೆ ಎಷ್ಟು ವಿಶ್ವಾಸ ಇತ್ತು ಅಂದ್ರೆ,
62
00:04:23,220 --> 00:04:27,910
ನಾವು ರೆಕಾರ್ಡಿಂಗ್ ಮುಗಿಸೋಕೂ ಮುಂಚೆ,
ರೋಲಿಂಗ್ ಸ್ಟೋನಿಂದ ಸಹಾಯ ಕೇಳುತ್ತಾರೆ.
63
00:04:28,110 --> 00:04:29,620
{\an8}ಅದು ನನ್ನ ಐದನೆಯ ಕೆಲಸ ಆಗಿತ್ತು.
64
00:04:29,820 --> 00:04:30,960
{\an8}ಜೋನಾ ಬರ್ಗ್
ಪತ್ರಕರ್ತ/ದಿ ರೈಸ್ ಆಫ್ ಡೈಸಿ ಜೋನ್ಸ್ ಲೇಖಕ
65
00:04:31,160 --> 00:04:35,150
{\an8}ದ ಸಿಕ್ಸ್ ಬಗ್ಗೆ ಪತ್ರಿಕೆ ಹೆಚ್ಚು ಯೋಚಿಸಿದ್ದರೆ,
ಬೇರೆ ಯಾರನ್ನಾದರೂ ಕಳಿಸುತ್ತಿದ್ದರು.
66
00:04:36,810 --> 00:04:40,010
ಏನದು?
ನಾನೇನು ಮಾಡಬೇಕು?
67
00:04:40,210 --> 00:04:43,260
ನಾನು ಹೇಳಿದರೆ
ಸತ್ಯವಾಗಿ ಮಾಡುವೆ ಎಂದು ಪ್ರಮಾಣ ಮಾಡು
68
00:04:43,460 --> 00:04:46,930
ಬರುವೆ
ನಿನಗಾಗಿ ನಾನು ಮನೆಗೆ ಬರುವೆ
69
00:04:47,130 --> 00:04:52,250
ಹೇಳು
ಅಲ್ಲಿರುವೆನೆಂದು ಮಾತು ಕೊಡು
70
00:04:58,380 --> 00:05:01,760
ನೋಡಿ, ನಿಮಗೆ ಎಲ್ಲವನ್ನೂ ಹೇಳುತ್ತೇನೆ
ಅಂತ ಹೇಳಿದ್ದೆನೆಂದು ಗೊತ್ತು.
71
00:05:02,840 --> 00:05:05,630
ಆದರೆ ಎಲ್ಲದರದ್ದೂ ನಿಮಗೆಷ್ಟು ಗೊತ್ತಾಗಬೇಕು?
72
00:05:59,480 --> 00:06:02,020
{\an8}ಡೈಸಿ ಜೋನ್ಸ್
& ದ ಸಿಕ್ಸ್
73
00:06:11,450 --> 00:06:13,190
ಗೀತೆ 6: "ವಾಟೆವರ್ ಗೆಟ್ಸ್ ಯು
ಥ್ರೂ ದ ನೈಟ್"
74
00:06:13,390 --> 00:06:16,370
ಇದೆಲ್ಲಾ ನಡೆಯುತ್ತಿದ್ದಾಗ
ನೀವೇನು ಮಾಡುತ್ತಿದ್ದಿರಿ?
75
00:06:17,080 --> 00:06:18,820
{\an8}ನಾನು ಮಗುವನ್ನು ಬೆಳೆಸುತ್ತಿದ್ದೆ.
76
00:06:19,020 --> 00:06:20,320
{\an8}ಕೆಮೀಲ ಅಲ್ವಾರೆಜ್
ಛಾಯಾಗ್ರಾಹಕಿ
77
00:06:20,520 --> 00:06:23,710
{\an8}ಬಹುತೇಕ ನಾನೊಬ್ಬಳೆ.
78
00:06:27,090 --> 00:06:30,180
ಇಲ್ಲ, ನಾನು ಒಪ್ಪಲ್ಲ. ಅಂದರೆ, ನಾನು…
79
00:06:30,800 --> 00:06:36,180
ನೀನು ಪ್ರತಿ ಬಾರಿ ಅದನ್ನು ಮಾಡಲು
ಪ್ರಯತ್ನಿಸಿದಾಗ, ಪ್ರತಿ ಸಲ, ಅದು ಕೆಲಸ ಮಾಡಲ್ಲ.
80
00:06:37,890 --> 00:06:40,020
ಇಲ್ಲ, ಇಲ್ಲ, ಇಲ್ಲ.
81
00:06:40,310 --> 00:06:44,510
ಇಲ್ಲ, ನನ್ನ ಪ್ರಕಾರ ಮೊದಲ ಸಾಲು
ಹೇಗಿರಬೇಕು ಅಂದ್ರೆ,
82
00:06:44,710 --> 00:06:46,820
ಕೋರಸ್ ಸಾಲು ಆಗಿರಬೇಕು, ಆಮೇಲೆ ಹಿಂದಿನ ಪದ್ಯ…
83
00:06:47,690 --> 00:06:48,900
ಆದರೆ ಮೊದಲು…
84
00:06:51,740 --> 00:06:53,890
ದಯವಿಟ್ಟು ನಾನು ಕುಸಿದಿರುವೆ
ನನಗೆ ಕುಟುಂಬ ಇದೆ
85
00:06:54,090 --> 00:06:55,900
ನಿನಗೆ ಅರ್ಥ ಆಗುತ್ತಿಲ್ಲವೇ? ಹೇಗೆ?
86
00:06:56,090 --> 00:06:57,730
ದಯವಿಟ್ಟು ಇದೊಂದು ಕೆಟ್ಟ ಖಾಯಿಲೆ
ಮತ್ತು ಇದಾಗುತ್ತಿದೆ
87
00:06:57,930 --> 00:06:59,210
ದಯವಿಟ್ಟು ಒಮ್ಮೆ ಕಚ್ಚು
ಕೆಟ್ಟ ಮರಗಳಲ್ಲಿ ನಾನಿರುವೆ
88
00:07:03,090 --> 00:07:06,210
ಕೇಳು. ಕೇಳು. ಕೇಳು.
89
00:07:07,630 --> 00:07:09,300
ನಿಜವಾಗಿ, ಇಲ್ಲ.
90
00:07:22,060 --> 00:07:24,880
ಈ ಸಾಲು ನಡೆಯಲ್ಲ, ಅಲ್ವಾ?
91
00:07:25,080 --> 00:07:27,150
ನನ್ನನ್ನು ಕೇಳುತ್ತಿದ್ದೀಯಾ ಅಂದ್ರೆ ನಡೆಯಲ್ಲ.
92
00:07:30,570 --> 00:07:31,780
ಮತ್ತೆ, ಸರಿ ಮಾಡಬಲ್ಲೆಯಾ?
93
00:07:32,360 --> 00:07:33,570
ಬಹುಶಃ.
94
00:07:39,250 --> 00:07:40,080
ಸರಿ.
95
00:07:44,590 --> 00:07:46,920
ನಾವು ಸ್ಪರ್ಧಿಗಳು ಅಂತ ಅನಿಸುತ್ತಿತ್ತು.
96
00:07:47,500 --> 00:07:48,960
ಅಥವಾ ವಿರೋಧಿಗಳಂತೆ.
97
00:07:51,930 --> 00:07:53,050
ನಿನಗಾಗಿ ಸರಿಪಡಿಸಿದೆ.
98
00:08:00,680 --> 00:08:02,960
ನಡೆಯದ ಒಂದು ಸಾಲನ್ನೇ ಉಳಿಸಿಕೊಂಡಿರುವೆ ನೀನು.
99
00:08:03,160 --> 00:08:04,690
ಆ ಸಾಲು ಸುಂದರವಾಗಿದೆ.
100
00:08:06,650 --> 00:08:08,480
ಬೇರೆಯವು ಚೆನ್ನಾಗಿರಲಿಲ್ಲ.
101
00:08:16,330 --> 00:08:17,490
ಅಯ್ಯೋ, ಛೆ.
102
00:08:23,120 --> 00:08:25,670
- ನೀನು ಯೋಚಿಸುವಂತೆ ಅಲ್ಲ, ಬಿಡು.
- ಸರಿ.
103
00:08:32,010 --> 00:08:33,880
ಬಾನೀ ಅಂಡ್ ಕ್ಲೈಡ್ ನೋಡಿದ್ದೀಯಲ್ಲ?
104
00:08:34,220 --> 00:08:36,200
- ವಾರೆನ್ ಬೀಟಿ ಮತ್ತು ಫೇಯ್ ಡನವೇ.
- ಹಾಂ.
105
00:08:36,400 --> 00:08:38,910
ಕ್ಯಾಮೆರಾ ಮುಂದೆ
ಅವರ ನಡುವೆ ಕಿಚ್ಚು ಕಾಣುತ್ತಿತ್ತು,
106
00:08:39,110 --> 00:08:43,190
ಆದರೆ ಅವರಿಗೆ ಅವರದೇ ಜೀವನಗಳು ಇದ್ದವು,
ನಾನು ಮತ್ತು ಡೈಸಿ ಕೂಡ ಹಾಗೆಯೇ.
107
00:08:45,020 --> 00:08:46,610
ಮತ್ತೆ ಇದು ನಟನೆ ಅಂತ ಹೇಳುವೆಯಾ?
108
00:08:47,980 --> 00:08:50,400
ಅಂದರೆ, ಹಾಗಂತ ಏನಿಲ್ಲ,
109
00:08:51,360 --> 00:08:53,280
ಆದರೆ ಇದು ನಿಜ ಜೀವನ ಕೂಡ ಅಲ್ಲ.
110
00:08:54,610 --> 00:08:55,990
ಅದೇ ವಿಚಾರ ಇರೋದು.
111
00:08:58,030 --> 00:08:58,950
ಸರಿ.
112
00:09:08,170 --> 00:09:09,170
- ಹೇ.
- ಹೇ.
113
00:09:19,390 --> 00:09:20,390
ಸುಂದರ.
114
00:09:22,270 --> 00:09:23,640
ಸುಂದರಿಯೇ.
115
00:09:24,390 --> 00:09:25,810
ನಾನು ಫೋಟೋ ಬಗ್ಗೆ ಹೇಳಿದೆ.
116
00:09:27,060 --> 00:09:28,150
ನೀವು ತೆಗೆದದ್ದಾ?
117
00:09:30,520 --> 00:09:32,970
ಅವಳ ಮುಖಕ್ಕೆ ಬೆಳಕು ಬಡಿಯುತ್ತಿರುವ ರೀತಿ.
118
00:09:33,170 --> 00:09:36,200
ಮತ್ತು ಕೋಣೆಯಲ್ಲಿ ಸಮತೋಲನ ತಪ್ಪಿರುವ ಹಾಗೆ…
119
00:09:41,200 --> 00:09:42,370
ಅಯ್ಯೋ, ದೇವರೇ.
120
00:09:43,750 --> 00:09:45,750
ನನ್ನ ಸ್ಪ್ಯಾನಿಶ್ ಹಿಂದಿನಂತೆ ಇಲ್ಲ.
121
00:09:45,950 --> 00:09:48,580
- ಇವನ್ನು ಬಹಳ ಮೆಚ್ಚುತ್ತೇನೆ ಎನ್ನುತ್ತಿದ್ದೆ.
- ಧನ್ಯವಾದ.
122
00:09:48,920 --> 00:09:49,840
ಹಾಂ.
123
00:09:52,250 --> 00:09:54,840
- ನನಗೂ ಅದು ಇಷ್ಟವಾಯಿತು.
- ಧನ್ಯವಾದ.
124
00:10:01,220 --> 00:10:03,180
ಯಾವಾಗಲಾದರೂ ಸಿನಿಮಾ ನೋಡೋಣವೇ?
125
00:10:09,600 --> 00:10:11,440
ಈ ಚಿತ್ರದಲ್ಲಿರುವುದು ನನ್ನ ಗಂಡ.
126
00:10:11,940 --> 00:10:13,220
ಮತ್ತೆ ಆಕೆ ಯಾರು?
127
00:10:13,420 --> 00:10:18,450
ಆಕೆ ಆತನ ಬ್ಯಾಂಡ್ ಸದಸ್ಯೆ.
128
00:10:19,410 --> 00:10:20,240
ಸರಿ ಬಿಡಿ.
129
00:10:25,540 --> 00:10:28,730
- ನೋಡಲು ಹೇಗಿದ್ದ?
- ಅದಕ್ಕೂ ಇದಕ್ಕೂ ಏನು ಸಂಬಂಧ?
130
00:10:28,930 --> 00:10:31,290
ಗೊತ್ತಿಲ್ಲ. ಮನಸ್ಸಿನಲ್ಲೇ
ಚಿತ್ರ ಬಿಡಿಸುತ್ತಿದ್ದೇನೆ.
131
00:10:32,840 --> 00:10:35,510
ಸ್ಪ್ಯಾನಿಶ್ ಮಾತನಾಡಲು ಚಂದವೆನಿಸಿತು.
132
00:10:36,090 --> 00:10:37,630
ಗೊತ್ತಾ, ಆಮೇಲೆ ಏನಂದ್ರೆ…
133
00:10:39,010 --> 00:10:41,350
30 ಕ್ಷಣಗಳ ಕಾಲ ತಾಯಿಯಂತೆ ಅನಿಸಲಿಲ್ಲ.
134
00:10:47,850 --> 00:10:49,940
ನಿನ್ನ ಮತ್ತು ಯಜಮಾನನ ನಡುವೆ ಎಲ್ಲವೂ ಹೇಗಿದೆ?
135
00:10:50,520 --> 00:10:53,150
ಗೊತ್ತಲ್ಲ. ಚೆನ್ನಾಗಿದೆ ಅನ್ಸುತ್ತೆ.
136
00:10:54,360 --> 00:10:59,070
ಅವನು ಇಲ್ಲಿರುವುದೇ ಇಲ್ಲ,
ಒಂದು ವೇಳೆ ಇದ್ದರೂ, ಇಲ್ಲಿ ಇರುವುದಿಲ್ಲ.
137
00:10:59,740 --> 00:11:03,200
- ಗೊತ್ತಾ?
- ಆದರೂ, ಹಾಡುಗಳು ತುಂಬಾ ಚೆನ್ನಾಗಿ ಬರುತ್ತಿವೆ.
138
00:11:03,660 --> 00:11:07,700
ಆದರೆ ಅದು ಮತ್ತೊಂದು ವಿಚಾರ.
ನಾನಿನ್ನೂ ಹಾಡುಗಳನ್ನೇ ಕೇಳಿಲ್ಲ.
139
00:11:08,710 --> 00:11:13,840
ನೀವು ಮೊದಲ ಆಲ್ಬಮ್ ಮಾಡುತ್ತಿದ್ದಾಗ, ಯಾವುದೋ
ರೀತಿಯಲ್ಲಿ ನಾನು ಕೂಡ ಅದರ ಭಾಗ ಎಂದು ಅನಿಸಿತು.
140
00:11:15,750 --> 00:11:21,300
ಬಹುಶಃ ನನಗೆ ನನ್ನದೇ ಆದದ್ದು
ಏನಾದರೂ ಬೇಕೇನೋ. ಗೊತ್ತಾ?
141
00:11:24,890 --> 00:11:25,720
ಹಾಂ.
142
00:11:27,180 --> 00:11:29,420
ಅದಿರಲಿ, ನೀನು ಮತ್ತು ಗ್ರಹಮ್ ಹೇಗಿದ್ದೀರಿ?
143
00:11:29,620 --> 00:11:32,340
ಇರು. ಏನು? ನಿನಗೆ ಹೇಳಿದ್ನಾ?
144
00:11:32,540 --> 00:11:36,570
ಗ್ರಹಮ್ನ 17 ವರ್ಷ ವಯಸ್ಸಿನಿಂದ ಬಲ್ಲೆ.
ಅವನು ಇಷ್ಟು ಮುಗುಳ್ನಗುವುದು ನೋಡಿಯೇ ಇಲ್ಲ.
145
00:11:37,110 --> 00:11:40,110
- ಸುಮ್ಮನೆ ಮಜಾ ಮಾಡ್ತಿದ್ದೇವೆ.
- "ಸುಮ್ಮನೆ"? "ಸುಮ್ಮನೆ" ಯಾಕೆ?
146
00:11:43,200 --> 00:11:45,030
- ದೇವರೇ.
- ಆದರೂ, ನಿನಗೆ ಅವನಂದ್ರೆ ಇಷ್ಟ.
147
00:11:45,950 --> 00:11:47,440
- ಹೌದು, ನಿನಗೆ ಅವನಿಷ್ಟ.
- ಹೌದು.
148
00:11:47,640 --> 00:11:49,410
- ಹೌದು, ನನಗೆ ಅವನಂದ್ರೆ ಇಷ್ಟ.
- ಆಮೇಲೆ…
149
00:11:50,870 --> 00:11:53,040
- ನಿನ್ನನ್ನು ಪ್ರೀತಿಸುತ್ತಾನೆ.
- ಇಲ್ಲ.
150
00:11:53,500 --> 00:11:56,040
- ಕರೆನ್.
- ದಯವಿಟ್ಟು ಯಾರಿಗೂ ಹೇಳಬೇಡ.
151
00:11:57,130 --> 00:11:58,130
ಖಂಡಿತ ಹೇಳಲ್ಲ.
152
00:12:06,260 --> 00:12:08,970
- ಹಾಯ್. ಹೇಗಾಯಿತು?
- ಹೇ.
153
00:12:11,060 --> 00:12:12,100
ಹಾಂ.
154
00:12:13,400 --> 00:12:15,230
- ಸುಮಾರಾಗಿ ಬಂದಿರಬಹುದು.
- ಹೌದಾ?
155
00:12:17,150 --> 00:12:20,240
- ಅಂದುಕೊಂಡಿದ್ದಕ್ಕಿಂತ ತಡವಾಗಿದ್ದಕ್ಕೆ ಕ್ಷಮಿಸು.
- ಪರವಾಗಿಲ್ಲ.
156
00:12:23,610 --> 00:12:26,120
ಆ ಹಾಡಿನ ಕೆಲವು ಸಾಲುಗಳನ್ನು ಓದಿದೆ.
157
00:12:27,490 --> 00:12:28,620
"ದಯವಿಟ್ಟು"?
158
00:12:31,460 --> 00:12:34,000
ಚೆನ್ನಾಗಿತ್ತು. ತುಂಬಾ ಚೆನ್ನಾಗಿತ್ತು.
159
00:12:34,370 --> 00:12:35,330
ತುಂಬಾ…
160
00:12:37,040 --> 00:12:38,090
ಗಾಢವಾಗಿದೆ.
161
00:12:41,260 --> 00:12:42,550
ಅದನ್ನು ಬರೆದಿದ್ದು ಡೈಸಿ.
162
00:12:47,890 --> 00:12:49,220
ಆದರೆ ನನಗಿಷ್ಟವಾಯಿತು.
163
00:12:50,470 --> 00:12:52,060
ಅದನ್ನು ಯಾವಾಗ ಕೇಳಿಸುವೆ?
164
00:12:55,690 --> 00:12:56,770
ಅದು ತಯಾರಾದಾಗ.
165
00:13:03,150 --> 00:13:04,030
ಏನು?
166
00:13:05,610 --> 00:13:06,740
ಏನು?
167
00:13:07,280 --> 00:13:09,440
ನಿನಗಾಗಿ ಅದು ಚಂದವಾಗಿರಬೇಕು.
168
00:13:09,630 --> 00:13:10,660
ಯಾವಾಗಿನಿಂದ?
169
00:13:12,750 --> 00:13:16,500
ನೀನು ಮೊದಲು ಹಾಡುತ್ತಿದ್ದದ್ದು ಯಾವಾಗಲೂ
ನನ್ನ ಮುಂದೆಯೇ, ಅದಕ್ಕೆ…
170
00:13:20,000 --> 00:13:21,000
ಬೇಗ.
171
00:13:22,710 --> 00:13:23,630
ಸರಿ.
172
00:13:35,480 --> 00:13:40,770
ಯಾವುದೇ ಪದಗಳಿಲ್ಲ
ನಾನಿಲ್ಲಿ ಹಾಡಲು ಬಂದಿರುವ ಹಾಡಿಗೆ
173
00:13:43,490 --> 00:13:45,720
ಯಾವುದೇ ಪದಗಳಿಲ್ಲ
ನಾನಿಲ್ಲಿ ಹಾಡಲು ಬಂದಿರುವ ಹಾಡಿಗೆ
174
00:13:45,920 --> 00:13:48,220
ಈಗಲೂ ನೀವು ಆ ಆಲ್ಬಮ್ ಕೇಳಿದಾಗ,
175
00:13:48,420 --> 00:13:52,540
ಪ್ರತಿ ಹಾಡೂ ಬಿಲ್ಲಿಯಿಂದ ಡೈಸಿಗೆ, ಡೈಸಿಯಿಂದ
ಬಿಲ್ಲಿಗೆ ಬರೆದಿರುವ ಒಗಟಿನ ಸಂದೇಶ.
176
00:13:52,910 --> 00:13:54,700
ಕ್ಷಮಿಸಿ. "ಒಗಟು" ಅಂದರಾ?
177
00:13:55,750 --> 00:13:57,190
ಇದು ತಪ್ಪು. ಇದು…
178
00:13:57,390 --> 00:13:59,440
ನನ್ನ ತಲೆಯಲ್ಲಿ ಬೇರೆ ರೀತಿಯಿತ್ತು. ಹೋಗಬೇಕು.
179
00:13:59,640 --> 00:14:01,820
- ಎಲ್ಲಿಗೆ ಹೋಗುತ್ತಿರುವೆ?
- ಮದ್ದು ತಗೋಬೇಕು.
180
00:14:02,020 --> 00:14:03,510
ನೀನು ಹೋಗಬೇಕಿಲ್ಲ.
181
00:14:32,700 --> 00:14:34,290
ಕಾರಿನಲ್ಲಿತ್ತು ಅಂದುಕೊಂಡೆ.
182
00:14:37,830 --> 00:14:39,290
ಮತ್ತೆ ಕಾರಿಗೆ ಹೋಗೋಣ.
183
00:14:43,800 --> 00:14:46,010
ಆ ರಾಗ ನಿನಗೆ ಮತ್ತೆ ನೆನಪಾಯ್ತಾ?
184
00:14:52,470 --> 00:14:55,220
- ಆಶ್ಚರ್ಯ ಏನು ಗೊತ್ತಾ?
- ಏನು?
185
00:14:57,100 --> 00:15:01,150
ನಾವು ಕ್ಯಾಲಿಫೋರ್ನಿಯಾದಲ್ಲಿದ್ದೇವೆ. ಸಾಗರವು
ಅಲ್ಲಿಯೇ ಇದೆ, ಆದರೆ ನನಗೆ ಮಾತ್ರ ಕಾಣಲ್ಲ.
186
00:15:04,320 --> 00:15:05,190
ಬಲಕ್ಕೆ ತಿರುಗು.
187
00:15:30,300 --> 00:15:33,260
ಇದು ಏನೇ ಆದರೂ, ನನಗಿದು ಹೊಸದು.
188
00:15:35,640 --> 00:15:37,220
ಇದು ನನಗೂ ಹೊಸದೇ, ಡೈಸಿ.
189
00:15:40,730 --> 00:15:42,230
ನನ್ನ ನಿಜವಾದ ಹೆಸರು ಮಾರ್ಗರೇಟ್.
190
00:15:43,900 --> 00:15:45,440
ಮತ್ತೆ ಡೈಸಿ ಎಲ್ಲಿಂದ ಬಂದಳು?
191
00:15:49,490 --> 00:15:52,320
ನಾನು ಚಿಕ್ಕವಳಾಗಿದ್ದಾಗ
ನಾನಂದ್ರೆ ಅಷ್ಟು ಇಷ್ಟ ಇರಲಿಲ್ಲ,
192
00:15:54,370 --> 00:15:55,950
ಅದಕ್ಕೆ ಬೇರೆಯವಳಾದೆ.
193
00:15:59,410 --> 00:16:01,080
ನಿನಗೊಂದು ಸತ್ಯ ಹೇಳಬೇಕು.
194
00:16:05,130 --> 00:16:07,840
ನಿನ್ನಿಂದ "ಹನೀಕೂಂಬ್" ಉತ್ತಮವಾಯಿತು.
195
00:16:10,260 --> 00:16:11,090
ನಂಗೊತ್ತು.
196
00:16:17,600 --> 00:16:19,220
ನೀನು ಎಲ್ಲವನ್ನೂ ಉತ್ತಮಪಡಿಸುವೆ.
197
00:16:30,650 --> 00:16:33,280
ಆ ಹಾಡಿನ ಮಿಕ್ಕ ಭಾಗವನ್ನು
ನಾವಿನ್ನೂ ಆಲೋಚಿಸಬೇಕು.
198
00:16:34,780 --> 00:16:35,950
ನನಗೇನೂ ಸುಸ್ತಾಗಿಲ್ಲ.
199
00:17:11,820 --> 00:17:13,070
ನಾನು ಬಹುಶಃ…
200
00:17:20,120 --> 00:17:21,120
ನಾಳೆ ಸಿಕ್ತೀನಿ.
201
00:17:28,330 --> 00:17:29,880
ಆತ ಏಕೆ ಮನಸ್ಸು ಬದಲಿಸಿದ?
202
00:17:32,010 --> 00:17:33,260
ನಿಮಗೇನು ಹೇಳಿದ?
203
00:17:34,590 --> 00:17:37,680
ನಾನು ಆ ಕೋಣೆಯೊಳಗೆ ನೋಡಿದಾಗ ನನಗೆ ಕಂಡಿದ್ದೆಲ್ಲ…
204
00:17:41,010 --> 00:17:42,020
ಪ್ರಲೋಭನೆಯೇ.
205
00:17:44,890 --> 00:17:46,230
ಹೌದು, ಆದರೆ,
206
00:17:47,190 --> 00:17:48,610
ಮಾದಕ ವಸ್ತುವಿನಿಂದಲ್ಲ.
207
00:18:23,640 --> 00:18:26,060
ಹೇ. ರೋಲಿಂಗ್ ಸ್ಟೋನ್.
208
00:18:27,230 --> 00:18:28,250
- ಜೋನಾ.
- ಹೌದು.
209
00:18:28,450 --> 00:18:29,270
ಹಾಂ.
210
00:18:30,020 --> 00:18:33,720
- ನೀವು ಎಲ್ಲಿ ಇರ್ತೀರಿ ಅಂತ ಗೊತ್ತಿರಲಿಲ್ಲ.
- ನೆನಪಿಲ್ವಾ? ಮುಂಚೆ ಹೇಳಿದ್ದೆ.
211
00:18:33,920 --> 00:18:35,190
ನಾನು ಗಮನ ಕೊಟ್ಟಿರಲಿಲ್ಲ.
212
00:18:40,950 --> 00:18:42,120
ಏನು?
213
00:18:43,700 --> 00:18:45,870
ನೀವಿಬ್ಬರೂ ಜೊತೆಯಲ್ಲಿ ಇದ್ದೀರಂತ ನಂಬಿದ್ದೆ.
214
00:18:46,660 --> 00:18:48,160
ಬರೀ ಹಾಡುಗಳಿಂದ.
215
00:18:49,120 --> 00:18:50,880
ಜೊತೆಯಲ್ಲಿಲ್ಲ ಅಂತ ಹೇಗೆ ತಿಳಿದೆ?
216
00:18:54,250 --> 00:18:55,630
ಬಿಲ್ಲಿಯ ಪ್ರಕಾರ ಇಲ್ಲ.
217
00:18:58,550 --> 00:18:59,760
ಆಮೇಲೆ ಏನು ಹೇಳಿದ?
218
00:19:01,640 --> 00:19:05,270
ಅದು ನಟನೆ. ನಂಬಿಸುವುದಕ್ಕೆ ಅಂತ ಹೇಳಿದ.
219
00:19:06,980 --> 00:19:09,480
ಅವನಿಗೆ ನಿನ್ನ ಮೇಲೆ ನಿಜವಾದ ಭಾವನೆ ಇಲ್ಲ,
220
00:19:09,940 --> 00:19:12,770
ಆದರೆ ಜನ ಹಾಗಂದುಕೊಂಡರೆ
ಅವನಿಗೇನೂ ಸಮಸ್ಯೆ ಇದ್ದಂತಿಲ್ಲ.
221
00:19:13,610 --> 00:19:15,780
ಎಲ್ಲವೂ ಸಂಗೀತಕ್ಕಾಗಿ ಅಂತ ಹೇಳಿದ.
222
00:19:25,330 --> 00:19:26,620
ನಿನ್ನ ಬಳಿ ಕೋಕ್ ಇದೆಯಾ?
223
00:19:27,660 --> 00:19:31,460
ಮಾರನೆಯ ದಿನ ನಾವು "ಅರೋರಾ"ಗೆ
ಧ್ವನಿ ರೆಕಾರ್ಡ್ ಮಾಡಬೇಕಿತ್ತು.
224
00:19:33,460 --> 00:19:34,840
ಗಂಟೆಗಳು ಕಾದೆವು.
225
00:19:35,250 --> 00:19:37,960
- ಅವಳ ಕೋಣೆಯಲ್ಲಿ ನೋಡಿದೆಯಾ?
- ಹೌದು, ಎರಡು ಸಲ.
226
00:19:40,170 --> 00:19:42,080
ಏನಾದರೂ ಆಗಿರಬಹುದು ಅಂತ ಚಿಂತೆಯಾಗಿದೆ.
227
00:19:42,280 --> 00:19:44,370
ಸುಮ್ಮನೆ ಎಲ್ಲೋ ಹೋಗಿರ್ತಾಳೆ ಬಿಡು.
228
00:19:44,570 --> 00:19:49,060
ಇಲ್ಲ, ಇಲ್ಲ. ಇದು ನನಗಷ್ಟೇ ಅಲ್ಲದೆ ಅವಳಿಗೂ
ಪ್ರಮುಖ ರೆಕಾರ್ಡ್. ಏನೋ ಸರಿ ಇಲ್ಲ.
229
00:19:50,140 --> 00:19:51,710
- ನಾನು ಹೋಗಬೇಕು.
- ನಾನೂ ಬರ್ತೇನೆ.
230
00:19:51,910 --> 00:19:54,210
- ಸಾಹೇಬ್ರು ಬಂದರೆ ಕಷ್ಟ.
- ವಾರೆನ್ನ ಕರ್ಕೊಂಡು ಹೋಗು.
231
00:19:54,410 --> 00:19:55,320
ನಾನು ನೋಡ್ಕೋತೀನಿ.
232
00:20:14,750 --> 00:20:18,670
ಹಾರು! ಹಾರು! ಹಾರು! ಹಾರು!
233
00:20:19,170 --> 00:20:21,630
ಹಾರು! ಹಾರು! ಹಾರು!
234
00:20:39,820 --> 00:20:40,910
ಅಯ್ಯೋ.
235
00:20:41,110 --> 00:20:42,530
"ಅಯ್ಯೋ"ನೇ.
236
00:20:46,530 --> 00:20:47,450
ಕ್ಷಮಿಸು.
237
00:20:47,910 --> 00:20:51,400
ಲೇಬಲ್ನವರು ಟೆಡ್ಡಿಗೆ ನರಕ ತೋರಿಸುತ್ತಿದ್ದರೆ
ನೀನು ಇಡೀ ದಿನ ಹಾಳು ಮಾಡಿದೆ.
238
00:20:51,600 --> 00:20:53,370
ಈಗ ಕ್ಷಮೆ ಕೇಳಿದ್ನಲ್ಲ?
239
00:20:57,040 --> 00:20:58,710
ನಿನಗೊಂದು ರಹಸ್ಯ ಹೇಳಬೇಕು.
240
00:21:04,380 --> 00:21:09,680
ನಿನ್ನಂಥ ಪ್ರತಿಭಾವಂತನನ್ನು
ನಾನು ಇದುವರೆಗೂ ನೋಡಿಯೇ ಇಲ್ಲ.
241
00:21:13,020 --> 00:21:14,270
ನನ್ನ ಬಿಟ್ಟು.
242
00:21:14,890 --> 00:21:16,250
ಎಷ್ಟು ತಗೊಂಡಿದ್ದೀಯಾ?
243
00:21:16,450 --> 00:21:21,400
ನಾನು ಸಂಪೂರ್ಣ ನಿಯಂತ್ರಣದಿಂದಿದ್ದೇನೆ.
244
00:21:35,080 --> 00:21:37,360
ಹದಗೆಟ್ಟು ಹೋಗಿದ್ದೀಯಾ. ಗೊತ್ತಾ?
245
00:21:37,560 --> 00:21:38,710
ಹಾಳಾಗಿ ಹೋಗು.
246
00:21:42,760 --> 00:21:44,550
ಕೆಮೀಲಗೆ ನನ್ನ ಪರವಾಗಿ ಹಾಯ್ ಹೇಳು.
247
00:21:48,260 --> 00:21:51,260
ಅವನು ಯೋಚಿಸುತ್ತಿರುವುದು ನನಗೆ ಕೇಳಬೇಕು.
248
00:21:52,680 --> 00:21:55,770
ಆಮೇಲೆ ಅವನು ತುಂಬಾ ಒತ್ತಡಕ್ಕೆ ಒಳಗಾಗುತ್ತಾನೆ.
249
00:21:59,190 --> 00:22:00,310
ಹೇ.
250
00:22:01,860 --> 00:22:03,230
ನಿನಗೇನೋ ಬರೆದಿದ್ದೇನೆ.
251
00:22:09,370 --> 00:22:12,410
"ಜೊತೆ ಇರುವುದಕ್ಕಿಂತ ನೆನೆಸಿಕೊಳ್ಳಲು ಚಂದ."
252
00:22:15,710 --> 00:22:16,960
ನಾನಿದನ್ನು ಹಾಡುತ್ತಿಲ್ಲ.
253
00:22:19,330 --> 00:22:21,380
ಕೇವಲ ಪದಗಳಷ್ಟೇ. ಏನು ಸಮಸ್ಯೆ?
254
00:22:25,300 --> 00:22:29,220
ಸಿಂಕಲ್ಲಿರುವ ಲೋಟಗಳಿಗೆಲ್ಲ
ನನಗಿನ್ನೂ ಬೇಕಿದೆ ಡ್ರಿಂಕ್
255
00:22:29,680 --> 00:22:32,460
ನರಕದೊಳಗೆ ಪ್ರತಿಧ್ವನಿಸಿದ
ಗುಂಡೇಟಿನ ಬೆನ್ನಟ್ಟುವುದಕ್ಕೆ
256
00:22:32,660 --> 00:22:33,430
ನಿಲ್ಲಿಸು.
257
00:22:34,850 --> 00:22:38,190
- ಏನು ಸಮಸ್ಯೆ?
- ಮೊದಲಿನಿಂದ ಹೋಗೋಣ.
258
00:22:41,440 --> 00:22:42,590
ನನಗಿನ್ನೂ ಬೇಕಿದೆ...
259
00:22:42,790 --> 00:22:43,570
ನಿಲ್ಲಿಸು.
260
00:22:45,320 --> 00:22:47,110
ಭಾವನೆ ಬರುತ್ತಿಲ್ಲ, ಡೈಸಿ.
261
00:22:47,400 --> 00:22:48,860
ಮುಕ್ತವಾಗಿ ಬರಲಿ.
262
00:22:51,820 --> 00:22:55,580
ಸಿಂಕಲ್ಲಿರುವ ಲೋಟಗಳಿಗೆಲ್ಲ
ನನಗಿನ್ನೂ ಬೇಕಿದೆ ಡ್ರಿಂಕ್
263
00:22:56,200 --> 00:23:00,920
ನರಕದೊಳಗೆ ಪ್ರತಿಧ್ವನಿಸಿದ
ಗುಂಡೇಟಿನ ಬೆನ್ನಟ್ಟುವುದಕ್ಕೆ...
264
00:23:01,540 --> 00:23:02,460
ಮತ್ತೊಮ್ಮೆ.
265
00:23:05,000 --> 00:23:06,200
ನನಗಿನ್ನೂ ಬೇಕಿದೆ--
266
00:23:06,400 --> 00:23:08,410
- ಮತ್ತೊಮ್ಮೆ.
- ಸಮಸ್ಯೆ ಏನಾಗಿದೆ?
267
00:23:08,610 --> 00:23:10,890
ನೆನ್ನೆಯ ನಂತರ, ಇಷ್ಟಾದರೂ ಮಾಡು.
268
00:23:13,050 --> 00:23:14,100
ಮತ್ತೊಮ್ಮೆ.
269
00:23:16,520 --> 00:23:21,760
ಕಣ್ಣು ಹೊಡೆದರೆ ನಾನು ನಂಬಲ್ಲ
ಆದರೆ ನೀನು ಮಾಡುವ ಆ ಸಣ್ಣ…
270
00:23:21,950 --> 00:23:24,690
ನಿಲ್ಲಿಸು. ಮತ್ತೆ ಮೊದಲಿನಿಂದ.
271
00:23:28,950 --> 00:23:31,600
ಕಣ್ಣು ಹೊಡೆದರೆ ನಾನು ನಂಬಲ್ಲ
272
00:23:31,800 --> 00:23:35,020
ಆದರೆ ನೀನು ಮಾಡುವ ಆ ಸಣ್ಣ ಕೆಲಸ ಸರಿಯಲ್ಲ
273
00:23:35,220 --> 00:23:38,270
ಜೊತೆ ಇರುವುದಕ್ಕಿಂತ ನೆನೆಸಿಕೊಳ್ಳಲು ಚಂದ...
274
00:23:38,470 --> 00:23:40,320
ನಿಲ್ಲಿಸು. ನಿಲ್ಲಿಸು.
275
00:23:40,510 --> 00:23:44,320
ನಿಲ್ಲಿಸು. ನಿಲ್ಲಿಸು. ನಿಲ್ಲಿಸು!
ನಿಲ್ಲಿಸು. ನಿಲ್ಲಿಸು!
276
00:23:44,520 --> 00:23:48,010
ಬಿಲ್ಲಿ. ಅವಳು ಸ್ವಲ್ಪ ಆರಾಮವಾಗಿ ಹಾಡಲಿ ಬಿಡೋ.
277
00:23:55,470 --> 00:23:58,020
ಡೈಸಿ, ನೀನು ಶ್ರಮ ಹಾಕುತ್ತಿಲ್ಲ.
278
00:23:58,390 --> 00:24:01,440
ಅದನ್ನು ಅನುಭವಿಸುತ್ತಾ ಹಾಡಬೇಕು.
ನಿನಗೆ ಯಾವುದರ ಬಗ್ಗೆ ಭಯ?
279
00:24:04,440 --> 00:24:05,480
ಹಾಳಾಗಿ ಹೋಗಲಿ.
280
00:24:14,570 --> 00:24:15,530
ಡೈಸಿ.
281
00:24:16,950 --> 00:24:18,040
ಡೈಸಿ!
282
00:24:21,040 --> 00:24:22,360
ಯಾಕೆ ಇದನ್ನು ಮಾಡುತ್ತಿದ್ದೀಯಾ?
283
00:24:22,560 --> 00:24:25,330
ನಾವು ಇದನ್ನೇ ಮಾಡುವುದು.
ಒಬ್ಬರನ್ನೊಬ್ಬರು ಪ್ರೇರೇಪಿಸುವುದು.
284
00:24:25,920 --> 00:24:27,170
ಅವಳಿಗೆ ಏನು ಹೇಳಿದ್ರಿ?
285
00:24:27,670 --> 00:24:28,670
ಅಂದರೆ ಏನರ್ಥ?
286
00:24:29,130 --> 00:24:31,300
ಅಂದರೆ ಅಲ್ಬಮ್ ಒಳಗಿನ ಧ್ವನಿ.
287
00:24:31,920 --> 00:24:34,180
ಅವಳಿಂದ ಹಾಗೆ ಹೇಗೆ ಹಾಡಿಸಿದಿರಿ?
288
00:24:36,720 --> 00:24:38,330
ನಿನ್ನ ಹಾಡು ನಾನು ಹಾಡಬೇಕಾ?
289
00:24:38,530 --> 00:24:41,310
ನೀನು ನಿಜ ಹೇಳಿದರೆ
ನಿನ್ನ ಹಾಳಾದ ಹಾಡನ್ನು ಹಾಡುವೆ.
290
00:24:42,140 --> 00:24:44,480
ನಮ್ಮಿಬ್ಬರ ಮಧ್ಯೆ ಏನೂ ಇಲ್ಲ ಅಂತ ನನಗೆ ಹೇಳು.
291
00:24:45,520 --> 00:24:47,800
ಹೇಳು, ಈ ವಿಷಯ, ನನ್ನ ಭಾವನೆಗಳು,
292
00:24:48,000 --> 00:24:51,050
ಇದೆಲ್ಲಾ ನನ್ನ ಭ್ರಮೆ ಅಂತ ಹೇಳು,
ನಾನು ಹೋಗಿ ಹಾಡನ್ನು ಹಾಡಿ
293
00:24:51,250 --> 00:24:53,180
ಆಮೇಲೆ ನಾವಿದರ ಬಗ್ಗೆ ಮಾತನಾಡುವುದೇ ಬೇಡ.
294
00:24:53,380 --> 00:24:54,860
ನಾನು ಹುಚ್ಚಿನಾ ಹೇಳು.
295
00:24:57,530 --> 00:25:01,330
ಸಿಂಕಲ್ಲಿರುವ ಲೋಟಗಳಿಗೆಲ್ಲ
ನನಗಿನ್ನೂ ಬೇಕಿದೆ ಡ್ರಿಂಕ್
296
00:25:01,870 --> 00:25:04,960
ನರಕದೊಳಗೆ ಪ್ರತಿಧ್ವನಿಸಿದ
ಗುಂಡೇಟಿನ ಬೆನ್ನಟ್ಟುವುದರಿಂದ
297
00:25:05,830 --> 00:25:09,360
ನಿಜ ಹೇಳಬೇಕೆಂದರೆ
ನನ್ನದಂತ ಮಿಕ್ಕಿರುವುದರಲ್ಲೇ ನನಗೆ ತೃಪ್ತಿಯಿದೆ
298
00:25:09,560 --> 00:25:13,050
ನಿನ್ನನ್ನು ಬೇರೆಯವನೆಂದು
ತಪ್ಪಾಗಿ ಭಾವಿಸುವವಳಿದ್ದೆ
299
00:25:13,550 --> 00:25:17,620
ಒಳಗಿನದೆಲ್ಲಾ ಕಾಣುವ ಉಡುಪಿನಲ್ಲಿ
ನೀನ್ಯಾರೋ ಏನೋ
300
00:25:17,820 --> 00:25:21,540
ನಾನು ಗಾಡಿ ಓಡಿಸಿದರೆ
ನೀನು ಕೂಗುವುದು ಮಾತ್ರ ಬೇಡ
301
00:25:21,740 --> 00:25:25,750
ಆ ಕಣ್ಸನ್ನೆಯನ್ನು ನಂಬಿದೆ ಎಂದು ನಂಬಲು
ಗುಂಡಿಗೆ ಬೇಕಾಯಿತು
302
00:25:25,950 --> 00:25:29,190
ಆದರೆ ನೀನು ಮಾಡುವ ಸಣ್ಣ ಕೆಲಸ ಸರಿಯಲ್ಲ
303
00:26:26,000 --> 00:26:27,070
ಹೇ.
304
00:26:27,260 --> 00:26:28,690
- ಹಾಯ್.
- ಬಂದಳು ನೋಡಿ.
305
00:26:28,890 --> 00:26:29,790
ಹೇ, ಗುರು.
306
00:26:31,380 --> 00:26:32,670
ಗ್ರಹಮ್ ಚಿಕ್ಕಪ್ಪ.
307
00:26:33,050 --> 00:26:34,800
- ಗ್ರಹಮ್ ಚಿಕ್ಕಪ್ಪ.
- ಇಲ್ಲಿದ್ದಾಳೆ.
308
00:26:39,090 --> 00:26:41,080
- ಬಿಲ್ಲಿ ಡನ್.
- ಹೇ.
309
00:26:41,280 --> 00:26:42,210
ಲ್ಯಾರಿ ಸ್ಕಾರ್ಡೀನೋ.
310
00:26:42,400 --> 00:26:44,920
ನಿಮ್ಮ ಭೇಟಿ ಸಂತೋಷವಾಯಿತು.
ಈಕೆ ನನ್ನ ಹೆಂಡತಿ, ಕೆಮೀಲ.
311
00:26:45,120 --> 00:26:47,670
ಹಾಯ್. ನಾನು ನಿಜವಾಗಿ ನಿಮ್ಮ ಕೆಲಸದ
ದೊಡ್ಡ ಅಭಿಮಾನಿ.
312
00:26:47,870 --> 00:26:50,770
ಮತ್ತೆ ಈ ಹಾಡುಗಳೆಲ್ಲ ಈಕೆಯ ಬಗ್ಗೆಯೋ.
313
00:26:51,650 --> 00:26:53,400
ನನಗೀಗ ಅರ್ಥವಾಯಿತು.
314
00:26:55,030 --> 00:26:59,600
ಬೆಟ್ಟದ ಮೇಲೆ, ಬೆಳಕು ಇಣುಕುವ ಹೊತ್ತಲ್ಲಿ,
ಬ್ಯಾಂಡ್ ಎಂಬ ಪರಿಕಲ್ಪನೆಗೆ ಏನಾಯ್ತು? ನಿಮ್ಮ…
315
00:26:59,800 --> 00:27:01,930
ಡೈಸಿಗೆ ಇನ್ನೂ ಭವ್ಯವಾಗಿ ಬೇಕಿತ್ತಂತೆ.
316
00:27:02,130 --> 00:27:06,450
ಮತ್ತೆ, ನಾನು ಅವಳೊಂದಿಗೆ
ಇದರ ಬಗ್ಗೆ ಮಾತನಾಡಬೇಕಿದೆ. ಬರ್ತೀನಿ.
317
00:27:10,620 --> 00:27:13,150
ಹೇ, ಇದು... ಅದು "ಅರೋರಾ", ತಾನೇ?
318
00:27:13,350 --> 00:27:14,650
- ಹಾಂ.
- ನಿನ್ನ ಹಾಡು ಬರುತ್ತಿದೆ.
319
00:27:14,850 --> 00:27:17,820
ಕೇಳಿಸಿಕೋ. ನಿನಗೇನನ್ಸುತ್ತೆ ಹೇಳು. ಆಯ್ತಾ?
320
00:27:18,020 --> 00:27:18,800
ಸರಿ.
321
00:27:19,590 --> 00:27:22,200
- ಆರಾಮವಾಗಿರಿ, ಕೆಮೀಲ.
- ಧನ್ಯವಾದ.
322
00:27:22,400 --> 00:27:23,550
ಒಳ್ಳೆಯದು. ಧನ್ಯವಾದ.
323
00:27:34,320 --> 00:27:36,230
ಇದು ಸ್ವಲ್ಪ ಜಾಸ್ತಿ ಆಯ್ತಲ್ಲ?
324
00:27:37,280 --> 00:27:39,070
ನಾವು ಪಿಟ್ಸ್ ಬರ್ಗಿನ ಬ್ಯಾಂಡ್.
325
00:27:39,990 --> 00:27:40,990
ಇನ್ನು ಮುಂದೆ ಅಲ್ಲ.
326
00:27:44,330 --> 00:27:45,370
ಆರಾಮವಾಗಿದ್ದೀಯಾ?
327
00:27:56,130 --> 00:27:58,340
- ಹೊಡಿ ಅವನಿಗೆ.
- ನಾನು ನಿನಗೆ ಜೀವಂತ ಸಿಗಲ್ಲ.
328
00:27:58,630 --> 00:27:59,720
ನಿಂಗೆ ಕೌಶಲ್ಯ ಇದೆ.
329
00:28:01,550 --> 00:28:03,660
- ಅಮ್ಮ ಬಂದರು.
- ಮಗುವನ್ನು ವಾಪಸ್ ಕೊಡ್ತೀರಾ?
330
00:28:03,860 --> 00:28:05,120
- ಇದು ಬೇಕಾ?
- ಹೌದು.
331
00:28:05,320 --> 00:28:06,100
ಒಳ್ಳೆಯದು. ಸರಿ.
332
00:28:06,760 --> 00:28:08,920
- ಬಂದಳು ನೋಡಿ.
- ತರಲೆ ನೀನು.
333
00:28:09,120 --> 00:28:10,850
- ಹೌದು.
- ನಾನು ತರಲೆನೇ.
334
00:28:11,230 --> 00:28:12,840
- ಧನ್ಯವಾದ.
- ಮತ್ತೆ ಬೇಗ ಸಿಗೋಣ.
335
00:28:13,040 --> 00:28:14,270
- ಧನ್ಯವಾದ.
- ಸಿಗೋಣ, ಜೂಲ್ಸ್.
336
00:28:21,280 --> 00:28:23,990
- ದೇವರೇ. ಎಷ್ಟು ಬೆಳೆದಿದ್ದಾಳೆ.
- ಹೌದು. ಅಲ್ವಾ?
337
00:28:24,990 --> 00:28:27,490
- ದೇವರೇ. ಎಷ್ಟು ಉದ್ದ ಆಗಿದ್ದೀಯ.
- ಹಾಂ.
338
00:28:28,290 --> 00:28:30,830
- ಜೂಲಿಯಾ, ಬೇಡ. ಕ್ಷಮಿಸಿ.
- ಪರ್ವಾಗಿಲ್ಲ. ಕೂದಲು ಅಷ್ಟೇ.
339
00:28:32,330 --> 00:28:33,690
ಅವಳನ್ನು ಚೆನ್ನಾಗಿ ನೋಡ್ಕೋತೀರಿ.
340
00:28:33,890 --> 00:28:37,960
ಇಲ್ಲ, ಕೇವಲ ಮಕ್ಕಳ ಪೌಡರ್
ಮತ್ತು ಡೈಪರ್ಸ್ ಅಷ್ಟೇ.
341
00:28:38,250 --> 00:28:39,340
ಯಾರಾದರೂ ಮಾಡಬಲ್ಲರು.
342
00:28:39,960 --> 00:28:42,930
ಆಗಲ್ಲ. ನನ್ನನ್ನು ನಂಬಿ, ನನಗೆ ಗೊತ್ತು.
343
00:28:46,300 --> 00:28:50,120
ಇದೇ ಅಲ್ವಾ "ದಯವಿಟ್ಟು" ಎನ್ನುವ ಹಾಡು.
ಸಾಲುಗಳನ್ನು ಗುರುತಿಸಿದೆ.
344
00:28:50,320 --> 00:28:52,690
ಹೌದು. ಬಿಲ್ಲಿಗೆ ಅವತ್ತು ಮೈಮೇಲೇನೋ ಬಂದಿತ್ತು.
345
00:28:54,020 --> 00:28:54,850
ಬಿಲ್ಲಿ?
346
00:28:55,690 --> 00:28:56,550
ಏನು?
347
00:28:56,750 --> 00:28:58,610
ಇಲ್ಲ, ನೀವು ಬರೆದಿದ್ದು ಅಂತ ಹೇಳಿದ.
348
00:29:01,110 --> 00:29:02,950
ಹಾಗೆ ಯಾಕೆ ಹೇಳಿದ ಗೊತ್ತಿಲ್ಲ.
349
00:29:05,780 --> 00:29:07,870
- ಆಮೇಲೆ ಸಿಗುತ್ತೇನೆ.
- ಬೈ.
350
00:29:19,920 --> 00:29:22,070
- ನನ್ನ ಜೊತೆ ಇರೋಕೆ ಮುಜುಗರವೇ?
- ಏನು?
351
00:29:22,270 --> 00:29:23,280
ಇಲ್ಲ.
352
00:29:23,480 --> 00:29:25,660
ಬೇರೆ ಏನು ಅಂದುಕೋಬೇಕೋ ಗೊತ್ತಿಲ್ಲ.
353
00:29:25,860 --> 00:29:27,600
ಅದು ಹಾಗಲ್ಲ. ಏನಂದರೆ…
354
00:29:29,430 --> 00:29:32,130
ನಾವಿಬ್ಬರೂ ಜೊತೆ ಅಂತ ಗೊತ್ತಾದರೆ
ಎಲ್ಲವೂ ಬದಲಾಗುತ್ತದೆ.
355
00:29:32,320 --> 00:29:35,750
- ಹಾಗಾಗಬೇಕಿಲ್ಲ.
- ಆದರೆ ಆಗುತ್ತೆ. ನನ್ನನ್ನು ಬೇರೆ ಥರ ನೋಡ್ತಾರೆ.
356
00:29:35,950 --> 00:29:39,050
ಅದು ಹುಡುಗರು ಮಾತ್ರ. ಮಿಕ್ಕ ಪ್ರಪಂಚದ ಕಥೆಯೇನು?
357
00:29:39,250 --> 00:29:42,590
"ಗಿಟಾರಿಸ್ಟ್ ಜೊತೆ ಮಲಗಿದ್ದಕ್ಕೆ ಅವಳನ್ನು
ಬ್ಯಾಂಡಿಗೆ ಸೇರಿಸಿಕೊಂಡರು."
358
00:29:42,790 --> 00:29:44,320
ಜನ ಹಾಗೆ ಅಂದುಕೊಳ್ತಾರೆ.
359
00:29:45,070 --> 00:29:48,100
ನಾನು ತುಂಬಾ ಕಷ್ಟಪಟ್ಟಿದ್ದೇನೆ,
360
00:29:48,300 --> 00:29:52,370
"ದ ಸಿಕ್ಸಲ್ಲಿನ ಪ್ರಿಯತಮೆ" ಅಂತ ಎಂದಿಗೂ
ಕರೆಸಿಕೊಳ್ಳೋದು ನನಗೆ ಬೇಡ.
361
00:29:52,790 --> 00:29:54,160
ನಿನಗೆ ಅರ್ಥವಾಗುತ್ತಾ?
362
00:29:55,920 --> 00:29:58,040
ಹೌದು. ಹೌದು, ಅರ್ಥವಾಗುತ್ತೆ.
363
00:29:59,290 --> 00:30:02,000
- ಆಮೇಲೆ?
- ಆಮೇಲೆ ಏನಿಲ್ಲ.
364
00:30:03,960 --> 00:30:05,420
ಮತ್ತೆ ಇದರ ಮಾತು ಬೇಡ.
365
00:30:29,740 --> 00:30:32,370
ಕ್ಷಮಿಸಿ. ನೀವು ಮತ್ತು ಬಿಲ್ಲಿ
ಜಾಗ ಬದಲಾಯಿಸುತ್ತೀರಾ?
366
00:30:33,700 --> 00:30:34,660
ಸರಿ.
367
00:30:46,550 --> 00:30:48,300
ಈಗ ಬಿಲ್ಲಿ ಮತ್ತು ಡೈಸಿ ಮಾತ್ರ.
368
00:30:50,010 --> 00:30:51,300
ಆಶ್ಚರ್ಯ ಏನಿಲ್ಲ.
369
00:30:56,310 --> 00:30:57,770
ಇಬ್ಬರೂ ಚೆನ್ನಾಗಿ ಕಾಣ್ತೀರ.
370
00:30:59,850 --> 00:31:01,110
ಅವನ ಪಕ್ಕ ಕೂರ್ತೀರಾ?
371
00:31:23,340 --> 00:31:24,550
ಬಿಲ್ಲಿ.
372
00:31:26,710 --> 00:31:28,410
ಕೆಲವು ವಿಚಾರಗಳ ಬಗ್ಗೆ ಮಾತಾಡಬಹುದಾ?
373
00:31:28,610 --> 00:31:29,450
- ಖಂಡಿತ.
- ಸರಿ.
374
00:31:29,650 --> 00:31:32,660
ಒಂದೆರಡು ವಿಷಯಗಳ ಬಗ್ಗೆ ಕೇಳಬೇಕಿತ್ತು.
ಅದರ ಹೆಸರು ಅರೋರಾನಾ?
375
00:31:32,860 --> 00:31:34,250
ಹೌದು. ಅರೋರಾ.
376
00:31:34,450 --> 00:31:40,290
- ನೀನು ಬೆಳೆದ ಸ್ಥಳ?
- ಹೇ-ಝ-ಲ್-ವು-ಡ್. ಹೇಝಲ್ ವುಡ್.
377
00:31:40,490 --> 00:31:42,940
ಆ ರಿಕವರಿ ಕ್ಲಿನಿಕ್ ಹೆಸರೇನು?
378
00:31:47,360 --> 00:31:48,840
ಅದರ ಬಗ್ಗೆ ಯಾರು ಹೇಳಿದರು?
379
00:31:49,040 --> 00:31:51,600
ಕ್ಷಮಿಸು. ಡೈಸಿ ನಿಮ್ಮ ಮೊದಲ ಟೂರ್ ಬಗ್ಗೆ
ಏನೋ ಹೇಳಿದಳು.
380
00:31:51,800 --> 00:31:53,620
ನೀನು ಕುಡಿತ ಬಿಡುವುದರ ಬಗ್ಗೆ.
381
00:31:56,490 --> 00:31:58,770
- ನಾ...
- ಅಂದ್ರೆ, ಏನೇ ಆಗಿರಲಿ. ಆಗುತ್ತೆ, ಅಲ್ವಾ?
382
00:31:58,970 --> 00:32:01,820
ಮಾದಕ ವಸ್ತು, ಹೆಂಗಸರು. ನೀನು ರಾಕ್ಸ್ಟಾರ್.
ಇನ್ನೇನು ಮಾಡೋದು?
383
00:32:02,020 --> 00:32:04,820
ಎಷ್ಟು ಕೋಕ್ ಹೊಡೆದಿರ್ತಾರಂದ್ರೆ
ನಾಮಕರಣ ತಪ್ಪಿಸೋದೇ ಇಲ್ಲ.
384
00:32:05,020 --> 00:32:07,760
- ಅದು ನಿಜವಲ್ಲ.
- ಯಾವುದು?
385
00:32:09,720 --> 00:32:12,700
ಪ್ರಚಾರದ ಅಂಕಣ ಬರೆಯುತ್ತಿದ್ದೀರಿ
ಅಂತ ಟೆಡ್ಡಿ ಹೇಳಿದರು, ಅಲ್ವಾ?
386
00:32:12,900 --> 00:32:13,660
ಅಂದರೆ...
387
00:32:13,860 --> 00:32:16,430
ಸತ್ಯಾಂಶ ತಿಳಿಯಲು
ಪ್ರಯತ್ನಿಸುತ್ತಿದ್ದೇನೆ, ಅಷ್ಟೇ.
388
00:32:18,560 --> 00:32:19,390
ಹಾಂ.
389
00:32:20,850 --> 00:32:24,190
ಹೇ, ಡೈಸಿ. ಒಂದು ನಿಮಿಷ ಮಾತಾಡಬಹುದಾ?
390
00:32:28,280 --> 00:32:30,600
ಈ ಬ್ಯಾಂಡ್ ಸೋಲುವುದು ನಿನಗಿಷ್ಟವೇ?
391
00:32:30,790 --> 00:32:33,350
ನನಗೆಷ್ಟು ಕಸಿವಿಸಿಯಾಗಬಹುದು ಅಂತ
ನಿನಗೇನಾದರೂ ಗೊತ್ತಿದೆಯಾ?
392
00:32:33,550 --> 00:32:34,950
ನಿನ್ನ ಹೆಂಡತಿಯನ್ನು ಕರೆತಂದೆಯಾ?
393
00:32:51,340 --> 00:32:52,450
ಅವನಿಗೆ ಹೇಗೆ ಹೇಳಿದೆ?
394
00:32:52,650 --> 00:32:54,700
- ನೀನು ಸಂಗೀತಕ್ಕಾಗಿ ಅಂದೆ.
- ಸಂಗೀತಕ್ಕಾಗಿಯೇ.
395
00:32:54,900 --> 00:32:56,700
ನಾನು ಮತ್ತೆ ಮೈಕ್ ಹಿಡಿಯಲು ಮುತ್ತಿಟ್ಟೆ.
396
00:32:56,900 --> 00:33:00,140
ಹಾಡನ್ನು ಕೇಳು.
ಸಾರ್ಥಕವಾಯಿತು ಅನ್ಸುತ್ತೆ. ಹೌದಲ್ವಾ?
397
00:33:02,640 --> 00:33:04,140
ನೀನೊಬ್ಬ ಸುಳ್ಳ.
398
00:33:06,360 --> 00:33:07,610
ನನಗಿದು ಸಾಕು.
399
00:33:28,540 --> 00:33:29,920
ಬೇವರ್ಸಿ.
400
00:33:37,180 --> 00:33:38,330
ಛೆ!
401
00:33:38,530 --> 00:33:40,220
ನನಗೊಂದು ಪೆನ್ನು ಬೇಕು. ಒಂದು ಪೆನ್.
402
00:33:42,180 --> 00:33:43,270
ಛೆ.
403
00:33:49,900 --> 00:33:52,010
ನೀನು ಪರಿತಪಿಸುವೆ
404
00:33:52,210 --> 00:33:54,070
ಹಲೋ. ಹಲೋ.
405
00:33:55,780 --> 00:33:57,140
ಏನು ಮಾಡಿದೆ ನೋಡು.
406
00:33:57,340 --> 00:33:58,680
ಸ್ಪಷ್ಟವಾಗಿ ನನ್ನನ್ನು ತಡೆದರು.
407
00:33:58,880 --> 00:34:00,620
ಯಾವುದರದೋ ನಡುವೆ ಇದ್ದೇನೆ.
408
00:34:06,920 --> 00:34:08,420
ಸ್ವಲ್ಪ ಹೊರಗೆ ಹೋಗಿ ಬರ್ತೀನಿ.
409
00:34:11,130 --> 00:34:12,210
ಸರಿ.
410
00:34:49,170 --> 00:34:50,780
ಇಲ್ಲೇನು ಮಾಡುತ್ತಿರುವೆ?
411
00:34:50,980 --> 00:34:53,630
ಗೊತ್ತಿಲ್ಲ. ಸ್ಥಳ ಬದಲಾವಣೆ. ಹಾಯ್.
412
00:34:53,880 --> 00:34:55,340
ಹೇ. ತುಂಬಾ ಚೆನ್ನಾಗಿ ಕಾಣುತ್ತೀಯ.
413
00:34:56,800 --> 00:34:58,630
- ಧನ್ಯವಾದ.
- ನಮ್ಮ ಜೊತೆ ಬರ್ತೀಯಾ?
414
00:34:58,970 --> 00:35:01,800
ಇಲ್ಲ, ಇಲ್ಲ. ಪರವಾಗಿಲ್ಲ.
ಇಲ್ಲೇ ಚೆನ್ನಾಗಿದೆ. ಧನ್ಯವಾದ.
415
00:35:02,600 --> 00:35:03,680
ಹೋಗು. ಮಜಾ ಮಾಡು.
416
00:35:04,100 --> 00:35:05,220
- ಸರಿ.
- ಬೈ.
417
00:35:20,320 --> 00:35:21,320
ಬೇವರ್ಸಿ.
418
00:35:27,790 --> 00:35:29,980
ಅವಳ ಬದಲು ನನ್ನನ್ನು ಆರಿಸಿದೆಯಾ?
419
00:35:30,180 --> 00:35:31,830
ಯಾರೇ ಇದ್ದರೂ ನಿನ್ನನ್ನೇ ಆರಿಸುವೆ.
420
00:35:36,340 --> 00:35:39,050
ಹೇ, ನೋಡು, ನೀನು ನಿಜವಾಗಿಯೂ ಆರಾಮ ಇದ್ದೀಯಾ?
421
00:36:13,080 --> 00:36:14,710
ಅಲ್ಲಿ ತುಂಬಾನೇ…
422
00:36:16,670 --> 00:36:17,750
ರಹಸ್ಯಗಳಿದ್ದವು.
423
00:36:21,930 --> 00:36:24,220
ನನಗೂ ನನ್ನದೇ ಆದದ್ದೊಂದು ಬೇಕಿತ್ತು.
424
00:36:34,810 --> 00:36:35,900
ಊಟ ಆಯ್ತಾ?
425
00:36:38,480 --> 00:36:40,280
ಫ್ರೆಂಡ್ ಜೊತೆ ಊಟ ಮಾಡಿ ಬಂದೆ.
426
00:36:47,450 --> 00:36:48,450
ಹೇ, ಮಗಾ.
427
00:36:56,960 --> 00:37:00,670
ನೀನು ನನ್ನನ್ನು ಪರಿತಪಿಸಿದರೆ
ನಾನು ನಿನ್ನನ್ನು ಪರಿತಪಿಸುವೆ
428
00:37:04,180 --> 00:37:08,760
ನಿನಗೆ ಸಾರಾಯಿ ಮೇಲೇನೇ ಹಿಡಿತ ಇರಲ್ಲ
ನಿನಗೆ ಸತ್ಯದ ಮೇಲೂ ಹಿಡಿತ ಇದ್ದಂತೆ ಕಾಣಲ್ಲ
429
00:37:11,480 --> 00:37:13,500
ವ್ಯವಸ್ಥೆಯೊಳಗಿನ ವೈಫಲ್ಯ ನಾನು
430
00:37:13,700 --> 00:37:18,480
ಹೊಡೆಯಲು ಪೂರ್ಣವಾಗಿ ತಯಾರಿರುವೆ
431
00:37:19,070 --> 00:37:24,740
ಧಾರಾಳವಾಗಿ ನನ್ನನ್ನು ಪರಿತಪಿಸು
ಆದರೆ ನಾನು ಮಾತ್ರ ಈ ಮೈಕ್ ಬಿಡಲ್ಲ
432
00:37:28,740 --> 00:37:30,540
ಈ ಸಲ ನಿನಗಾಗಿ ಬರೆದೆ.
433
00:37:40,460 --> 00:37:42,740
- ಇದು ಆಲ್ಬಂನಲ್ಲಿ ಬರಲ್ಲ.
- ಯಾಕೆ?
434
00:37:42,940 --> 00:37:44,830
ಎಲ್ಲವನ್ನೂ ಜೊತೆಯಲ್ಲಿ ಬರೆಯೋಣ ಅಂದುಕೊಂಡೆವು.
435
00:37:45,030 --> 00:37:47,660
"ನೆನೆಸಿಕೊಳ್ಳಲು ಚಂದ"
ಬರೆದೆ ನೀನು. ಅಲ್ಬಂನಲ್ಲಿದೆ.
436
00:37:47,860 --> 00:37:49,250
- ಇದು ಬೇರೆ.
- ಯಾಕೆ?
437
00:37:49,450 --> 00:37:51,310
ನಾನು ಹೇಳಿದೆ ಅಂತ. ಅದಕ್ಕೆ.
438
00:37:51,970 --> 00:37:54,100
ಈ ಹಾಡು ಆಲ್ಬಂನಲ್ಲಿ ಯಾರ್ಯಾರಿಗೆ ಇರಬೇಕು?
439
00:38:02,610 --> 00:38:04,440
ಒಳ್ಳೆಯ ಹಾಡು, ಬಿಲ್ಲಿ.
440
00:38:05,570 --> 00:38:07,360
ಅದಕ್ಕೇ ತಾನೆ ನಾವು ಇಲ್ಲಿರುವುದು?
441
00:38:09,240 --> 00:38:11,160
ಸರಿ ಹೇಳಿದಳು, ಕಣೋ. ಚೆನ್ನಾಗಿದೆ.
442
00:38:21,800 --> 00:38:23,240
ಇದು ಅಸಂಬದ್ಧ.
443
00:38:23,440 --> 00:38:25,120
- ಸಿಗೋಣ.
- ಎಲ್ಲಿಗೆ ಹೋಗುತ್ತಿರುವೆ?
444
00:38:25,320 --> 00:38:26,380
ಬಾ, ಬಿಲ್ಲಿ.
445
00:38:28,340 --> 00:38:29,760
ಇನ್ನೊಂದು ಸಲ ಹಾಡೋಣ?
446
00:38:45,900 --> 00:38:47,200
ದರಿದ್ರವೇ.
447
00:38:50,700 --> 00:38:53,480
ನೋಡು, ಗುರು, ನಾನು ಸಮಸ್ಯೆ ಮಾಡಲು ನೋಡುತ್ತಿಲ್ಲ.
448
00:38:53,680 --> 00:38:56,650
- ನಾನು ನಿನ್ನನ್ನು ನಂಬಲ್ಲ.
- ಆದರೂ ನಾನು ಕಥೆಯನ್ನು ಬರೆಯಬೇಕು.
449
00:38:56,850 --> 00:39:01,880
ದಯವಿಟ್ಟು ಕೇಳಿಕೊಳ್ಳುತ್ತೇನೆ,
ನಿಮ್ಮ ಕಥೆಯಲ್ಲಿ ನನ್ನ ಮಗಳನ್ನು ಸೇರಿಸಬೇಡಿ.
450
00:39:04,340 --> 00:39:06,130
ಇನ್ನೂ ಸ್ವಾರಸ್ಯಕರವಾದುದನ್ನು ಕೊಡು.
451
00:39:13,390 --> 00:39:16,730
ಒಳ್ಳೆಯದು. ನಿಮಗಿಷ್ಟ ಬಂದಿದ್ದು ಮಾಡಿಕೊಳ್ಳಿ.
452
00:39:32,120 --> 00:39:36,080
ನೀನು ನನ್ನನ್ನು ಪರಿತಪಿಸಿದರೆ
ನಾನು ನಿನ್ನನ್ನು ಪರಿತಪಿಸುವೆ
453
00:39:39,080 --> 00:39:43,590
ಇಲ್ಲಿ ಕಾರಲ್ಲಿ ಮಾಡುವುದು
ನನಗೆ ಪೂರ್ತಿ ಸಹಜವೆನಿಸುತ್ತಿದೆ
454
00:39:46,090 --> 00:39:51,800
ಪಿಸಿಎಚ್ ಹೈವೇ ಆಚೆ
ರಮಣೀಯ ದೃಶ್ಯ ಇರುವೆಡೆ
455
00:39:54,140 --> 00:39:58,600
ಧಾರಾಳವಾಗಿ ನನ್ನನ್ನು ಪರಿತಪಿಸು
ಆದರೆ ನಾನು ನಿನ್ನನ್ನೂ ಮೀರಿಸುತ್ತೇನೆ, ಕಣೋ
456
00:40:01,900 --> 00:40:07,150
ಧಾರಾಳವಾಗಿ ನನ್ನನ್ನು ಪರಿತಪಿಸು
ಆದರೆ ನಾನು ಯಾವಾಗಲೂ ನಿನ್ನನ್ನು ಪರಿತಪಿಸುವೆ
457
00:40:09,650 --> 00:40:15,120
ಧಾರಾಳವಾಗಿ ನನ್ನನ್ನು ಪರಿತಪಿಸು
ಆದರೆ ನಾನು ಯಾವಾಗಲೂ ನಿನ್ನನ್ನು ಪರಿತಪಿಸುವೆ
458
00:40:17,370 --> 00:40:23,130
ಧಾರಾಳವಾಗಿ ನನ್ನನ್ನು ಪರಿತಪಿಸು
ಆದರೆ ನಾನು ಯಾವಾಗಲೂ ನಿನ್ನನ್ನು ಪರಿತಪಿಸುವೆ
459
00:40:24,630 --> 00:40:27,530
"ಅರೋರಾ" ಕೆಲಸವನ್ನು ನಾವು ಹಾಗೆ ಮುಗಿಸಿದ್ದು.
460
00:40:27,730 --> 00:40:30,620
ಪೂರ್ವತಯಾರಿಗೂ ಮುಂಚೆ ನಮಗೆ
ಮೂರು ವಾರಗಳ ವಿರಾಮ ಇತ್ತು.
461
00:40:30,820 --> 00:40:33,660
ಒಂದು ದೋಣಿ ಬಾಡಿಗೆಗೆ ಪಡೆದು ಮೆಕ್ಸಿಕೋಗೆ ಹೋದೆ,
462
00:40:33,860 --> 00:40:36,040
ಒಂದೇ ರೀತಿ ಕಾಣುವ ಇಬ್ಬರು ಅವಳಿಗಳ ಜೊತೆ.
463
00:40:36,240 --> 00:40:40,730
ಏನಾಗುತ್ತೋ ಏನೋ ನೋಡೋಣ ಅಂತ
ನಾನು ಸುಮ್ಮನೆ ಇಲ್ಲೇ ಇದ್ದೆ.
464
00:40:41,020 --> 00:40:43,170
ನಾವೇನೂ ಮಾಡಲಿಲ್ಲ ಅಂತ ಅನ್ಸುತ್ತೆ.
465
00:40:43,370 --> 00:40:46,300
ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ದ ಸಿಕ್ಸ್ ಅವರ
ಹೊಚ್ಚಹೊಸ ಹಾಡು,
466
00:40:46,500 --> 00:40:50,110
ಈ ದಿನದ ಅತಿ ಹೆಚ್ಚು ಬೇಡಿಕೆಯಲ್ಲಿರುವ ಹಾಡು.
ಇದರ ಹೆಸರು "ಅರೋರಾ".
467
00:40:55,780 --> 00:40:58,450
ನೀ ನನ್ನ ಈ ರೀತಿ ಕಂಡೆ
468
00:40:58,830 --> 00:41:01,830
ಇದು ನಾನು ಬದಲಾದ ದಿನ
469
00:41:05,710 --> 00:41:08,360
ನಾನು ಖುಷಿಯಾಗಿರಬೇಕಿತ್ತು ಅಂತ ಗೊತ್ತಿತ್ತು.
470
00:41:08,560 --> 00:41:10,450
ನಾನು ಹೆಮ್ಮೆಪಡುವಂಥದ್ದನ್ನು ಮಾಡಿದೆ.
471
00:41:10,650 --> 00:41:13,680
ನಮ್ಮ ಮೊದಲ ಯುಎಸ್ ಟೂರಿಗೆ ನಾವು ಹೊರಡಬೇಕಿತ್ತು.
472
00:41:16,010 --> 00:41:19,540
ಆದರೆ ಮಾದಕ ವಸ್ತುವಿನ ಮತ್ತು ಇಳಿದು
ಉತ್ಸಾಹ ಕುಗ್ಗಿದ್ದೇ,
473
00:41:19,740 --> 00:41:24,060
"ನೀನು ಯಾವುದಕ್ಕೂ ಲಾಯಕ್ಕಿಲ್ಲ" ಎನ್ನುತ್ತಿದ್ದ
ನನ್ನ ತಾಯಿಯ ಧ್ವನಿಯೇ ಕೇಳಿಸುತ್ತಿತ್ತು.
474
00:41:29,400 --> 00:41:30,900
ಡೈಸಿಗೆ,
ಪ್ರೀತಿಯಿಂದ ಜೋನಾ
475
00:41:42,080 --> 00:41:43,190
ಪ್ರೇಮ, ಕಾಮ & ದ್ವೇಷ:
476
00:41:43,390 --> 00:41:47,210
…ಡೈಸಿ ಮೇಲೆ ಕೋಪಿಸಿಕೊಳ್ಳಲಾಗಲ್ಲ,
ಅದು ಅವಳ ಸ್ವಭಾವ ಅಷ್ಟೇ
477
00:41:50,170 --> 00:41:51,910
ಕಡೆಗೂ ಡೈಸಿ ಜೋನ್ಸ್ ಸ್ಟುಡಿಯೋಗೆ ಬಂದಾಗ
478
00:41:52,110 --> 00:41:54,370
(ಕನಿಷ್ಠ ಮೂರು ಗಂಟೆಗಳಷ್ಟು ತಡ
ಸಾಮಾನ್ಯವಾಗಿ), ಕುಡಿದಿರುತ್ತಾಳೆ…
479
00:41:54,570 --> 00:41:56,510
…ಊಟಕ್ಕೆ ಮುಂಚೆ ಔಷಧದ ಅಂಗಡಿಗೇ
ಕೊಡಬಹುದಾದಷ್ಟು ಮಾತ್ರೆಗಳು.
480
00:42:13,360 --> 00:42:15,610
ಇವನು ಸರಿಬರಲ್ಲ ಅಂತ ನನಗೆ ಗೊತ್ತಿತ್ತು.
481
00:42:16,110 --> 00:42:18,070
ನನ್ನ ಅಂತರಾತ್ಮದ ಮಾತು ಕೇಳಬೇಕಿತ್ತು.
482
00:42:34,710 --> 00:42:36,380
ನಾವು ಹಾಗೇ ಜಗಳ ಆಡುತ್ತಿದ್ದೆವು.
483
00:42:38,590 --> 00:42:41,960
ನೋಡು, ನನಗೆ ಎಲ್ಲವೂ ತಿಳಿಯಬೇಕಿಲ್ಲ,
ನೀನವಳನ್ನು ಪ್ರೀತಿಸುತ್ತಿದ್ದರೆ…
484
00:42:42,160 --> 00:42:44,220
- ಇಲ್ಲ.
- ಒಂದು ವೇಳೆ ಪ್ರೀತಿಸಿದರೆ,
485
00:42:45,810 --> 00:42:47,520
ಆಗಲೇ ಇದು ಕೊನೆಯಾಗುತ್ತೆ.
486
00:42:48,730 --> 00:42:49,850
ಅರ್ಥ ಆಯ್ತಾ?
487
00:42:59,610 --> 00:43:01,950
ಯಾವತ್ತಿಗೂ ನಾವಿಬ್ಬರೇ. ಆಣೆ ಮಾಡುವೆ.
488
00:43:08,080 --> 00:43:10,380
ಆಗ ಮಿಕ್ಕಿದ್ದೆಲ್ಲವನ್ನೂ ನಾವು ನಿಭಾಯಿಸಬಹುದು.
489
00:43:12,040 --> 00:43:13,880
ಏನಾಯ್ತು ಅನ್ನೋದು ಇತಿಹಾಸ.
490
00:43:14,750 --> 00:43:16,420
ಇನ್ನೇನು ಆಗಿಬಿಟ್ಟಿತ್ತು ಅನ್ನೋದಲ್ಲ.
491
00:43:18,970 --> 00:43:23,600
ನೀನು ಮಾಡಿದ್ದನ್ನು ಯಾಕೆ ಮಾಡಿದೆ ಅಂತಲ್ಲ,
ಆದರೆ ಏನನ್ನು ಮಾಡಿದೆ ಅನ್ನೋದು. ಅದೇ ಮುಖ್ಯ.
492
00:43:28,060 --> 00:43:29,100
ಏನಾಗಬೇಕಿತ್ತು?
493
00:43:32,480 --> 00:43:35,130
ಇಲ್ಲಿರುವ ಮಹಿಳೆಯನ್ನು ನೋಡಬೇಕಿದೆ.
494
00:43:35,330 --> 00:43:37,740
ಬುಧವಾರದಿಂದ ಇಲ್ಲಿ ಯಾರೂ ಇಲ್ಲ.
495
00:43:47,910 --> 00:43:49,040
ಪಾಸ್ಪೋರ್ಟ್
ಅಮೇರಿಕಾದ ಸಂಯುಕ್ತ ಸಂಸ್ಥಾನಗಳು
496
00:43:50,540 --> 00:43:53,590
ಗ್ರೀಸಲ್ಲಿ ಎಷ್ಟು ಕಾಲ ಇರಲು ಬಯಸಿದ್ದೀರಾ,
ಮಿಸ್ ಜೋನ್ಸ್?
497
00:43:55,460 --> 00:43:58,970
ಏನಂದ್ರೆ, ನಾನು ಅಷ್ಟೆಲ್ಲಾ
ಮುಂದೆ ಆಲೋಚನೆ ಮಾಡಲ್ಲ.
498
00:45:43,150 --> 00:45:45,100
ಅನುವಾದಿಸಿದವರು : ಸುಜಿತ್ ವೆಂಕಟರಾಮಯ್ಯ
499
00:45:45,300 --> 00:45:47,240
ಸೃಜನಶೀಲ ಮೇಲ್ವಿಚಾರಕರು:
Vivek