1 00:02:17,596 --> 00:02:20,724 ಹೋಮ್ 2 00:03:14,403 --> 00:03:16,196 ನಿನ್ನ ಬಗ್ಗೆ ಯೋಚಿಸದೇ ಇರಲು ನನಗೆ ಸಾಧ್ಯವಾಗಲಿಲ್ಲ. 3 00:03:19,700 --> 00:03:23,537 ನೀನು ಹೇಗಿರುವೆ, ಏನು ಮಾಡುತ್ತಿರುವೆ ಎಂದು. 4 00:03:29,877 --> 00:03:34,089 ನಿಜ ಹೇಳಬೇಕೆಂದರೆ, ನೀನು ಚೆನ್ನಾಗಿರಬೇಕೆಂದು ನಾನು ಬಯಸುತ್ತೇನೆಯೇ ಎಂದು ನನಗೆ ತಿಳಿದಿಲ್ಲ. 5 00:03:37,927 --> 00:03:40,054 ನೀನು ನನ್ನ ಸಂದೇಶಕ್ಕೆ ಉತ್ತರಿಸಿದ್ದು ಖುಷಿಯಾಯಿತು. 6 00:03:40,137 --> 00:03:43,724 ನಂಗೊತ್ತಿರಲಿಲ್ಲ, ನೀನು ಇನ್ನೂ ಹಾಂಕಾಂಗಿನಲ್ಲಿರುವೆಯಾ, ಅಥವಾ... 7 00:03:49,647 --> 00:03:52,483 ಕ್ಲಾರ್ಕ್ ಮತ್ತು ನಾನು ಸ್ಟೇಟ್ಸಿಗೆ ವಾಪಸಾಗುವೆವು. ಹಾಗೆ ಮಾಡಬೇಕಿದೆ, 8 00:03:53,442 --> 00:03:54,610 ನಮ್ಮ ಇತರ ಮಕ್ಕಳಿಗಾಗಿ. 9 00:03:58,072 --> 00:03:59,740 ಅವರು ಬಾಳಿ ಬದುಕಬೇಕಿದೆ. 10 00:04:04,620 --> 00:04:09,291 ನನಗನಿಸುತ್ತದೆ... ನಾವೆಲ್ಲರೂ ಬದುಕಬೇಕಿದೆ. 11 00:04:14,129 --> 00:04:15,214 ನೀನೂ ಸಹ. 12 00:04:30,104 --> 00:04:31,230 ಏನು? 13 00:04:31,313 --> 00:04:32,481 ನೀನು ಹಾಡು. 14 00:04:33,107 --> 00:04:35,109 -ನನಗೆ ಅದು ಗೊತ್ತಿಲ್ಲ. -ನಿನಗೆ ಗೊತ್ತಿರಬೇಕು. 15 00:04:36,485 --> 00:04:40,739 ನಾನು ಕೊರಿಯನ್ ಎಂಬ ಭಾವನೆ ಹಾಂಗ್ ಕಾಂಗಿನಲ್ಲಿ ಹೆಚ್ಚು ಮೂಡಿದೆ, ನಿಂಗೊತ್ತೇ. 16 00:04:40,906 --> 00:04:43,534 ನಿನ್ನ ಸ್ನೇಹಿತರು ನನ್ನ ಬಗ್ಗೆ ಮೊದಲು ಅದನ್ನೇ ಹೇಳ್ತಾರೆ. 17 00:04:43,617 --> 00:04:46,328 "ಇವಳು ಚಾರ್ಲಿಯ ಗರ್ಲ್ ಫ್ರೆಂಡ್, ಇವಳು ಕೊರಿಯನ್." 18 00:04:47,079 --> 00:04:48,205 ಅದು ಚೆಂದ ಎಂದು ಅವರ ಭಾವನೆ. 19 00:04:48,956 --> 00:04:51,082 ಕೊರಿಯನ್ ಮತ್ತು ಕೊರಿಯನ್-ಅಮೆರಿಕನ್ ಆಗಿರುವುದು 20 00:04:51,166 --> 00:04:52,710 ಸಂಪೂರ್ಣ ಭಿನ್ನವಾಗಿವೆ, ಸರಿಯಲ್ಲವೇ? 21 00:04:52,793 --> 00:04:55,004 ಕೊರಿಯಾ ಕುರಿತು ನಿಂಗೆ ಸ್ವಲ್ಪವಾದರೂ ಗೊತ್ತಿದೆ ತಾನೇ? 22 00:04:55,629 --> 00:04:57,923 ಆ ಪ್ರತಿಭಟನಾಕಾರರ ಬಗ್ಗೆ ಯಾವತ್ತಾದರೂ ಕೇಳಿದ್ದೆಯಾ? 23 00:04:58,007 --> 00:05:00,217 ಲೀ ಹನ್-ಯೋಲ್ ಮತ್ತು ಜೊಂಗ್-ಚುಯಿ? 24 00:05:00,551 --> 00:05:02,302 ಅವರು ತುಂಬಾ ಸ್ಪೂರ್ತಿದಾಯಕರಾಗಿದ್ದಾರೆ. 25 00:05:03,345 --> 00:05:07,141 ನಂಗೊತ್ತಿಲ್ಲ. ಅಂದರೆ, ದಕ್ಷಿಣ ಕೊರಿಯಾದಿಂದ ಕ್ವೀನ್ಸ್ ಸಾಕಷ್ಟು ದೂರವಿದೆ. 26 00:05:08,475 --> 00:05:10,477 ಅವರಿಗೆ ನಿನ್ನ ಬಗ್ಗೆ ತಿಳಿಯಬೇಕು ಅಷ್ಟೇ. 27 00:05:10,978 --> 00:05:13,480 ಸ್ಟೇಟ್ಸಿನಲ್ಲಿ ಅದನ್ನು ಪುಟ್ಟ ಪ್ರತಿರೋಧ ಎನ್ನಲಾಗುವುದು. 28 00:05:13,605 --> 00:05:16,066 ನೀವು ಅಮೆರಿಕನ್ನರು ತೀರಾ ಸೂಕ್ಷ್ಮ ಪ್ರಕೃತಿಯವರು. 29 00:05:16,525 --> 00:05:17,526 ನಾನು ತೀರಾ ಸೂಕ್ಷ್ಮವೇ? 30 00:05:17,776 --> 00:05:18,861 ನಿಮಗೆ ಸ್ವಲ್ಪ ನೀರು ಬೇಕೇ? 31 00:05:18,944 --> 00:05:21,321 -ಬೇಕು. -ಈಗಷ್ಟೇ ತಾಜಾ ಪೂರೈಕೆಗಳು ದೊರೆತವು. 32 00:05:21,405 --> 00:05:24,992 -ಧನ್ಯವಾದ. -ನನಗೆ ಹೋಗಬೇಕಿದೆ. ಬಾಸ್ ಜೊತೆ ಮಾತಾಡಬೇಕಿದೆ. 33 00:05:26,493 --> 00:05:27,995 ನಿಜವಾಗಿಯೂ ನಿನಗೆ ಹೋಗಬೇಕೇ? 34 00:05:28,078 --> 00:05:31,081 ತುಂಬಾ ಸಮಯದಿಂದ ನನಗೆ ಶಿಫ್ಟ್ ದೊರಕಿಲ್ಲ, ಇದು ವಿಚಿತ್ರ. 35 00:05:31,165 --> 00:05:33,125 ಮತ್ತು ನನ್ನಲ್ಲಿ ಹಣವೂ ಕಡಿಮೆಯಾಗುತ್ತಿದೆ. 36 00:05:34,960 --> 00:05:35,878 ಮತ್ತೆ ಭೇಟಿಯಾಗೋಣ. 37 00:05:46,930 --> 00:05:47,973 ಕಮಾನ್. 38 00:05:52,770 --> 00:05:55,689 ನಮ್ಮ ಬೇಡಿಕೆಗಳು ಈಡೇರಲು ತಿಂಗಳುಗಳೇ ಬೇಕಾಗಬಹುದು. 39 00:05:55,773 --> 00:05:59,234 ಶೀಘ್ರ ಪರಿಹಾರ ದೊರಕುವ ನಿರೀಕ್ಷೆ ನಿಮಗಿದೆಯೇ? 40 00:05:59,568 --> 00:06:01,403 ಆದರೆ ಅದನ್ನು ಹೇಳುವುದು ನನಗೆ ಸಾಧ್ಯವಾಗದು. 41 00:06:01,487 --> 00:06:03,280 ನಿಮ್ಮ ಇತ್ತೀಚಿನ ಬಂಧನದ ಬಗ್ಗೆ ಹೇಳಬಹುದೇ? 42 00:06:03,363 --> 00:06:08,035 ನೋಡಿ, ವೈಯಕ್ತಿಕ ತ್ಯಾಗ ಇದ್ದೇ ಇದೆ ಆದರೆ ಯಾರಾದರೂ ಒಂದು ನಿಲುವು ಹೊಂದಬೇಕು. 43 00:06:08,118 --> 00:06:10,996 ನಮ್ಮ ಜನಾಂಗ ಈ ಕ್ಷಣದಲ್ಲಿ ಅತ್ಯಂತ ಜವಾಬ್ದಾರಿಯುತವಾಗಿದೆ. 44 00:06:11,080 --> 00:06:12,289 ನಾವು ಹೋರಾಡಬೇಕಿದೆ... 45 00:07:18,480 --> 00:07:19,481 ಮರ್ಸಿ! 46 00:07:20,232 --> 00:07:22,526 ಮರ್ಸಿ! 47 00:07:22,609 --> 00:07:23,902 ಬಾ. 48 00:07:27,781 --> 00:07:29,867 ನಿಮ್ಮ ಸಂದೇಶ ಸಿಕ್ಕಿತು. ಏನು ವಿಷಯ? 49 00:07:30,450 --> 00:07:32,953 ನಿನ್ನನ್ನು ಮುದ್ದು ಮಾಡಲು ಸಮಯವಿಲ್ಲ, ವಿಷಯಕ್ಕೆ ಬರುತ್ತೇನೆ. 50 00:07:33,328 --> 00:07:34,663 ನಿನ್ನ ಬಗ್ಗೆ ನಮಗೆ ದೂರು ಬಂದಿದೆ. 51 00:07:37,666 --> 00:07:39,501 ಟ್ರೆಗಂಟರ್ ಪಾರ್ಟಿಯಲ್ಲಿದ್ದ ವ್ಯಕ್ತಿಯೇ? 52 00:07:39,960 --> 00:07:42,421 ಅವನಿಗೆ ಎಂಡೈವ್ ನೀಡುವಾಗ ಅನುಚಿತವಾಗಿ ವರ್ತಿಸಿದ. 53 00:07:42,504 --> 00:07:44,256 ನಾನು ಅವನ ವಿರುದ್ಧ ದೂರಬೇಕು. 54 00:07:44,339 --> 00:07:45,549 ಸತ್ಯ ಹೊರಬರುತ್ತದೆ. 55 00:07:46,508 --> 00:07:47,342 ವಾಸ್ತವ. 56 00:07:48,177 --> 00:07:51,138 ಒಬ್ಬ ಕ್ಲೈಂಟ್ ಕರೆ ಮಾಡಿ ಅತಿಥಿಯೊಬ್ಬರ ಹಣ ಕಳೆದುಹೋಗಿದೆ ಎಂದರು. 57 00:07:51,930 --> 00:07:53,640 ನಿನ್ನ ಬಗ್ಗೆ ಆಕೆಯ ವಿವರಣೆ ಸ್ಪಷ್ಟವಿತ್ತು. 58 00:07:54,558 --> 00:07:56,185 ಏನು ಸ್ಪಷ್ಟವಾಗಿ? ಏನು ಹೇಳಿದಳಾಕೆ? 59 00:07:56,435 --> 00:07:57,436 ನಿನ್ನ ಹೆಸರು ಗೊತ್ತಿತ್ತು. 60 00:07:58,437 --> 00:07:59,730 ಏನು? ಹೇಗೆ? 61 00:08:00,230 --> 00:08:02,232 ಆಕೆ ದೂರು ಮುಂದುವರಿಸಲು ಬಯಸಿಲ್ಲ, ನೀ ಅದೃಷ್ಟವಂತೆ. 62 00:08:03,525 --> 00:08:04,526 ಆದರೆ ನಾನು ನಿರಪರಾಧಿ. 63 00:08:06,069 --> 00:08:08,530 ಇದು ಅನ್ಯಾಯ. ಹಣಕ್ಕಾಗಿ ನಾನು ಇನ್ನು ಏನು ಮಾಡುವುದು? 64 00:08:08,614 --> 00:08:10,282 ಈಗಲೇ ಬಾಡಿಗೆ ನೀಡಲು ಕಷ್ಟಪಡುತ್ತಿದ್ದೇನೆ. 65 00:08:23,045 --> 00:08:26,215 ಅಮ್ಮ ನನ್ನನ್ನು ಭೇಟಿಯಾಗಲು ಶೀಘ್ರ ಬರಲಿದ್ದಾರೆ, ಭಯವಾಗುತ್ತಿದೆ. 66 00:08:27,382 --> 00:08:29,968 ಅವಳನ್ನು ಭೇಟಿಯಾದಾಗ ಹೇಳಲು ಏನಾದರೂ ಒಳ್ಳೆ ವಿಷಯ ಬೇಕು. 67 00:08:30,093 --> 00:08:31,053 ಮತ್ತು ನನ್ನ ಬಳಿ ಇಲ್ಲ. 68 00:08:33,931 --> 00:08:36,433 ಕೆಲವೊಮ್ಮೆ ಬರ್ಬರ ಕಥೆಗಳಿಗಾಗಿ ಸುದ್ದಿಗಳನ್ನು ಜಾಲಾಡುತ್ತೇನೆ. 69 00:08:38,184 --> 00:08:41,730 ಸರಣಿ ಹಂತಕರು, ಮಕ್ಕಳು ಕಿಟಿಕಿಯಿಂದ ಬೀಳುವಂತಹ ಸುದ್ದಿಗಳು, 70 00:08:41,813 --> 00:08:43,690 ಅವರ ಹದಿಹರೆಯದ ತಾಯಿ ಅವರನ್ನು ಒಂಟಿಯಾಗಿ ಬಿಟ್ಟ ನಂತರ, 71 00:08:43,774 --> 00:08:45,901 ಅಥವಾ ಚಿಂಪಾಂಜಿ ಸಾಕುಪ್ರಾಣಿ ಹೊಂದಿದ ಆ ಮಹಿಳೆ ಬಗ್ಗೆ, 72 00:08:45,984 --> 00:08:47,945 ಗೆಳತಿ ಬರುವ ಮುಂಚೆ ಅದಕ್ಕೆ ಅಮಲು ಬರಿಸಿದವಳು, 73 00:08:48,028 --> 00:08:49,905 ಆದರೆ ಆ ಔಷಧಿ ಕೆಟ್ಟ ಪರಿಣಾಮ ಬೀರಿ ಆ ಚಿಂಪ್ 74 00:08:49,988 --> 00:08:51,406 ಸ್ನೇಹಿತೆಯ ಮುಖವನ್ನೇ ಪರಚಿಬಿಟ್ಟಿತು. 75 00:08:56,828 --> 00:08:58,413 ಅದು ನನಗೆ ಸಮಾಧಾನ ತರುತ್ತದೆ ಅನಿಸುತ್ತದೆ 76 00:08:58,956 --> 00:09:00,499 ಆ ಎಲ್ಲಾ ಗಲಾಟೆಗಳ ಬಗ್ಗೆ ಓದಲು, 77 00:09:03,001 --> 00:09:05,170 ನಮ್ಮ ಸುತ್ತ ನಡೆಯುತ್ತಿರುವ ಎಲ್ಲಾ ಕೆಟ್ಟ ವಿಷಯಗಳ ಕುರಿತಂತೆ. 78 00:09:06,338 --> 00:09:08,423 ನನ್ನ ಜೀವನ ಅಷ್ಟು ಕೆಟ್ಟದ್ದಾಗಿಲ್ಲ ಎಂದು ನಟಿಸಬಹುದು. 79 00:09:09,841 --> 00:09:11,385 ನಾನು ಮಾಡಿದ್ದು ಅಷ್ಟು ಕೆಟ್ಟದ್ದಲ್ಲವೆಂದು. 80 00:09:13,637 --> 00:09:15,681 ಬಹುಶಃ ನಾನು ಅಷ್ಟು ಏಕಾಂಗಿ ಎಂದು ಅನಿಸುವುದಿಲ್ಲ. 81 00:09:18,642 --> 00:09:21,478 ನಿನ್ನ ಬಾಸ್ ಜೊತೆ ಎಲ್ಲಾ ಸರಿಯಾಗಿರುವುದು ಖುಷಿ ನೀಡಿದೆ. 82 00:09:23,855 --> 00:09:24,856 ನಿನಗೆ ಒಂದು ಬೇಡವೇ? 83 00:09:26,358 --> 00:09:27,192 ಸರಿ. 84 00:09:27,276 --> 00:09:28,402 ಎಲ್ಲವನ್ನೂ ತಿಂದು ಬಿಡುವೆ. 85 00:09:29,152 --> 00:09:31,446 ಈ ದಿನಗಳಲ್ಲಿ ನಿನಗೆ ಬಹಳಷ್ಟು ಹಸಿವು. 86 00:09:32,614 --> 00:09:33,573 ಇಲ್ಲವಲ್ಲ. 87 00:09:35,117 --> 00:09:37,119 ಒಳ್ಳೆಯದು. ಚೆನ್ನಾಗಿ ಕಾಣುತ್ತಿಯ. 88 00:09:37,202 --> 00:09:38,578 ಹಿಂದೆ ತುಂಬಾ ತೆಳ್ಳಗಿದ್ದೆ. 89 00:09:39,705 --> 00:09:41,081 ಅಂದರೆ ನೀನು ಖುಷಿಯಾಗಿರುವೆ. 90 00:10:01,977 --> 00:10:03,603 ಚಿನ್ನ, ನಾವೇಕೆ ಮೊದಲು ಸ್ನಾನ ಮಾಡಬಾರದು? 91 00:10:03,937 --> 00:10:04,771 ಹೇ. 92 00:10:05,147 --> 00:10:07,357 ಹೇ, ಮರ್ಸಿ. ಮರ್ಸಿ. 93 00:10:08,275 --> 00:10:10,277 ಡೇವಿಡ್? ಇಲ್ಲೇನು ಮಾಡುತ್ತಿರುವೆ? 94 00:10:10,902 --> 00:10:12,612 ನಿನ್ನ ಜೊತೆ ಮಾತನಾಡಲು ಪ್ರಯತ್ನಿಸುತ್ತಿರುವೆ. 95 00:10:18,201 --> 00:10:19,202 ಮಾತನಾಡಬಹುದೇ? 96 00:10:22,289 --> 00:10:23,457 ಏನು ನಡೆಯುತ್ತಿದೆ? 97 00:10:23,540 --> 00:10:25,083 ಅವನು ಹೋಗಬೇಕು ಎಂದು ಹೇಳುತ್ತಿದ್ದಾನೆ. 98 00:10:32,632 --> 00:10:34,092 ಅವನಿಗೆ ನೀನಿಷ್ಟವಿಲ್ಲ ಅನಿಸುತ್ತದೆ. 99 00:10:37,637 --> 00:10:39,097 ಕ್ಷಮಿಸು, ನಾನು ಡೇವಿಡ್. 100 00:10:40,182 --> 00:10:41,016 ಚಾರ್ಲಿ. 101 00:10:43,310 --> 00:10:44,561 ನಾನು ಕರೆ ಮಾಡುತ್ತಿದ್ದೆ... 102 00:10:45,604 --> 00:10:47,898 ಕ್ಷಮಿಸು, ನೀನು ಮೊದಲು ಮೇಲೆ ಹೋಗುವೆಯಾ? 103 00:10:48,273 --> 00:10:50,108 -ಆಯಿತು, ಖಂಡಿತಾ. -ನಾನು ಶೀಘ್ರ ಬರುವೆ. 104 00:10:50,192 --> 00:10:51,026 ಆಯಿತು. 105 00:11:08,585 --> 00:11:11,129 ನೋಡು, ವಿಷಯ ಅರ್ಥಮಾಡಿಕೊಳ್ಳಲು ಇಬ್ಬರಿಗೂ ಸ್ವಲ್ಪ ಸಮಯ ಬೇಕಿದೆ. 106 00:11:11,797 --> 00:11:13,632 ನಿನ್ನ ತಲೆ ಎಲ್ಲಿದೆ ಎಂದು ನನಗೆ ತಿಳಿಯಬೇಕು. 107 00:11:14,508 --> 00:11:16,635 ಈ ಹಿಂದೆ ನಿನಗೆ ಅಷ್ಟೊಂದು ಕಾಳಜಿ ಇರಲಿಲ್ಲ. 108 00:11:18,053 --> 00:11:21,264 ಅಂದರೆ, ನಿನಗೆ ಈ ಕುರಿತು ಏನೂ ಮಾಡುವುದು ಬೇಡವಾಗಿತ್ತು. 109 00:11:21,348 --> 00:11:24,351 ನಂಗೊತ್ತು. ನಾನು ಮೂರ್ಖನಾಗಿದ್ದೆ. ಕ್ಷಮಿಸು. 110 00:11:25,435 --> 00:11:27,813 ಇದು ಎಂತಹ ಉಡುಗೊರೆ ಎಂದು ನನಗೆ ಅರ್ಥವಾಗುತ್ತಿದೆ. 111 00:11:28,355 --> 00:11:30,440 -ಉಡುಗೊರೆ? -ಹೌದು, ಈ ಮಗು. 112 00:11:33,068 --> 00:11:35,237 ಅಥವಾ ನೀನು ಈಗಾಗಲೇ... 113 00:11:39,408 --> 00:11:40,700 ನೀನು ಮಾಡಿದೆ, ಅಲ್ಲವೇ? 114 00:11:40,909 --> 00:11:42,536 -ಏನು ಮಾಡಿದೆ? -ಏನು? 115 00:11:43,703 --> 00:11:44,788 ಇಲ್ಲ, ನಾನು ಮಾಡಿಲ್ಲ. 116 00:11:46,373 --> 00:11:47,749 ಹಾಗಿದ್ದರೆ ಅದನ್ನು ಉಳಿಸಿಕೊಳ್ಳುವೆಯಾ? 117 00:11:49,042 --> 00:11:49,876 ನಂಗೊತ್ತಿಲ್ಲ. 118 00:11:49,960 --> 00:11:53,463 ಮರ್ಸಿ, ಸ್ವಲ್ಪ ತಡವಾಗಿದೆ. ಎಷ್ಟು ಸಮಯವಾಯಿತು, ನಾಲ್ಕು, ಐದು ತಿಂಗಳು? 119 00:11:54,881 --> 00:11:58,927 ನೋಡು, ಎಲ್ಲರೂ ಹೋಗುವ ಡಾಕ್ಟರ್ ಅವರ ಹೆಸರು ಮತ್ತು ಸಂಖ್ಯೆ ತಂದಿದ್ದೇನೆ. 120 00:12:00,345 --> 00:12:01,388 ಅವರು ಮಟಿಲ್ಡಾದಲ್ಲಿದ್ದಾರೆ. 121 00:12:03,515 --> 00:12:06,601 ಇವ್ರು ತುಂಬಾನೇ ಒಳ್ಳೆ ಡಾಕ್ಟರ್. ಅವರು ಅತ್ಯುತ್ತಮ ಎಂದು ಹೇಳುತ್ತಾರೆ. 122 00:12:07,018 --> 00:12:08,228 ಅದಕ್ಕೆ ನಾನು ಪಾವತಿಸುತ್ತೇನೆ. 123 00:12:08,311 --> 00:12:09,146 ಪರವಾಗಿಲ್ಲ. 124 00:12:09,563 --> 00:12:11,314 -ನಿನ್ನಿಂದಾಗದು. -ನಾನು ನೋಡಿಕೊಳ್ಳುವೆ. 125 00:12:11,398 --> 00:12:13,775 -ನಿಲ್ಲಿಸು. ನಿನಗೆ ನನ್ನ ಅಗತ್ಯವಿದೆ. -ನಿನ್ನ ಅಗತ್ಯವಿಲ್ಲ. 126 00:12:13,859 --> 00:12:16,903 ನಾನು ತಂದೆ. ನಾವು ಕೈಗೊಳ್ಳುವ ನಿರ್ಧಾರಗಳ ಭಾಗವಾಗುವ ಹಕ್ಕು ನನಗಿದೆ. 127 00:12:16,987 --> 00:12:18,530 ನಿನಗೆ ಹಕ್ಕಿದೆಯೇ? ಖಂಡಿತವಾಗಿಯೂ? 128 00:12:20,490 --> 00:12:22,701 ನಿಂಗೊತ್ತೇ? ನಿನಗೆ ಬೇಕಿದ್ದಂತೆ ಮಾಡು. 129 00:12:23,618 --> 00:12:24,744 ಕೊನೆಗೂ ಒಪ್ಪಿದೆ. 130 00:12:25,579 --> 00:12:28,623 ನಿಂಗೊತ್ತೇ, ನಾನು ಸರಿಯಾದುದನ್ನು ಮಾಡಲು ಯತ್ನಿಸುತ್ತಿರುವೆ, ಸರಿಯೇ? 131 00:12:28,707 --> 00:12:31,209 ನಿನಗೆ ಚೆಕ್ ಕೂಡ ಬರೆದಿದ್ದೇನೆ ಸಮಸ್ಯೆ ಆಗದಿರಲಿ ಎಂದು, 132 00:12:31,293 --> 00:12:32,627 ಹಣ ಮತ್ತು ಇತರ ವಿಚಾರ ಕುರಿತಂತೆ. 133 00:12:34,963 --> 00:12:38,133 ಧನ್ಯವಾದ. ನಾನು ಇದನ್ನು ಮಾಡುವುದಾದರೆ ನನ್ನ ಖರ್ಚಿನಲ್ಲೇ ಮಾಡುವೆ. 134 00:12:39,718 --> 00:12:42,345 ಸರಿ. ನನ್ನಿಂದ ಏನೂ ನಿರೀಕ್ಷಿಸಬೇಡ. 135 00:12:42,721 --> 00:12:44,848 ಸರಿ. ಏನೇ ಆಗಲಿ. 136 00:12:55,984 --> 00:13:00,071 ಹೇ. ಅವನು ಡೇವಿಡ್. 137 00:13:00,780 --> 00:13:01,615 ನನಗೆ ಕೇಳಿಸಿತು. 138 00:13:03,200 --> 00:13:05,076 ಚಾರ್ಲಿ: ನಾವು ಪ್ರತಿಭಟನೆಗೆ ಮರಳಬೇಕು. 139 00:13:05,160 --> 00:13:09,039 ನಿಲ್ಲು, ನಿನ್ನ ಜೊತೆ ಏನೋ ಮಾತನಾಡಬೇಕಿದೆ. 140 00:13:10,957 --> 00:13:12,209 ಆ ಹುಡುಗನ ಕುರಿತೇ? 141 00:13:13,251 --> 00:13:14,211 ಗಸ್? 142 00:13:15,128 --> 00:13:15,962 ಅಲ್ಲ. 143 00:13:17,589 --> 00:13:20,675 ಅಂದರೆ, ನಾವು ಹಾಗೆ ಭೇಟಿಯಾದೆವು. 144 00:13:20,967 --> 00:13:21,801 ಯಾರು? 145 00:13:23,303 --> 00:13:24,137 ನಾನು ಮತ್ತು ಡೇವಿಡ್. 146 00:13:27,015 --> 00:13:29,184 ಗಸ್ ನಾಪತ್ತೆಯಾದ ದಿನ ಅವನು ಅಲ್ಲಿದ್ದ. 147 00:13:30,894 --> 00:13:33,355 ಆತ ತುಂಬಾ ಅನುಕಂಪ ತೋರಿದ, 148 00:13:34,397 --> 00:13:35,524 ಮನೆಗೆ ಕರೆದುಕೊಂಡು ಬಂದ. 149 00:13:37,317 --> 00:13:40,237 ನೀವು ಹಿಂದೆ ಒಟ್ಟಿಗೆ ಇದ್ದಿರಿ ಎಂದು ನೀನು ಹೇಳುತ್ತಿದ್ದರೆ, 150 00:13:41,279 --> 00:13:42,113 ಪರವಾಗಿಲ್ಲ. 151 00:13:43,949 --> 00:13:46,868 ಇಲ್ಲ. ಇಲ್ಲ, ನಾವು ಜೊತೆಯಾಗಿರಲಿಲ್ಲ, ಅದು... 152 00:13:47,869 --> 00:13:49,120 ಅದು ಹಾಗಲ್ಲ. 153 00:13:50,914 --> 00:13:53,040 ಅವನಿಗೆ ಮದುವೆಯಾಗಿದೆ ಮತ್ತು ಅದು... 154 00:13:59,381 --> 00:14:00,840 ಅವನ ಮಗು ನನ್ನ ಹೊಟ್ಟೆಯಲ್ಲಿದೆ. 155 00:14:06,096 --> 00:14:07,055 ಏನು? 156 00:14:08,348 --> 00:14:09,349 ಅಂದರೆ, ಈಗ? 157 00:14:09,766 --> 00:14:12,185 ಆದರೆ ಅವನಿಗೆ ಹೇಳಿದೆ ನನ್ನ ಹತ್ತಿರ ಆತ ಸುಳಿಯುವುದು ಬೇಡವೆಂದು. 158 00:14:12,894 --> 00:14:14,145 ನಿನಗೆ ಯಾವಾಗಿಂದ ಇದು ಗೊತ್ತು? 159 00:14:17,107 --> 00:14:17,941 ನಂಗೊತ್ತಿಲ್ಲ. 160 00:14:20,652 --> 00:14:21,570 ಒಂದೆರಡು ತಿಂಗಳು. 161 00:14:22,028 --> 00:14:23,113 ಒಂದೆರಡು ತಿಂಗಳು? 162 00:14:24,656 --> 00:14:26,199 ನನ್ನ ಮಾತು ಈಗ ನಿನಗೆ ಅರ್ಥವಾಗುತ್ತಿದೆ. 163 00:14:27,409 --> 00:14:29,369 ತುಂಬಾ ಗೋಜಲು. 164 00:14:30,203 --> 00:14:32,372 ನಾನೆಷ್ಟು ದೂರ ಓಡಿದರೂ, ಶಾಪದಿಂದ ದೂರ ಓಡಲಾಗುತ್ತಿಲ್ಲ, 165 00:14:32,455 --> 00:14:34,082 ಅದು ಯಾವತ್ತೂ ಇದೆ, 166 00:14:34,165 --> 00:14:36,918 ನನಗೆ ಅವಕಾಶ ದೊರೆಯುವ ಮುನ್ನ ಪ್ರತಿ ಬಾರಿ ಎಲ್ಲವೂ ಗೋಜಲಾಗುತ್ತದೆ... 167 00:14:37,002 --> 00:14:37,836 ಅವಕಾಶ? 168 00:14:38,503 --> 00:14:39,963 ಸಂತೋಷವಾಗಿರಲು ಅವಕಾಶ. 169 00:14:42,340 --> 00:14:44,801 ನನ್ನ ಬಾಳನ್ನು ಬಾಳಲು. ಈ ವಿಷಯದಿಂದ ಮುಕ್ತಳಾಗಲು. 170 00:14:45,385 --> 00:14:49,097 ನಿನಗೆ ಅವಕಾಶ ನೀಡಲಾಗಿಲ್ಲ ಎಂದು ಹೇಗೆ ಹೇಳುವೆ? ನನ್ನ ಬಳಿ? 171 00:14:51,099 --> 00:14:52,475 ನನ್ನ ಮಾತಿನ ಅರ್ಥ ಅದಲ್ಲ. 172 00:14:53,602 --> 00:14:57,063 ನೀನು ಎಲ್ಲವನ್ನೂ ಒಂದು ಶಾಪಕ್ಕೆ ದೂರುವೆ, ಆಯ್ಕೆ ಇರಲಿಲ್ಲ ಎನ್ನುವೆ ನಿನ್ನ ಜೀವನದಲ್ಲಿ, 173 00:14:57,147 --> 00:14:58,273 ನಿನ್ನ ಸ್ವಂತ ಸಂತೋಷದಲ್ಲಿ. 174 00:14:58,356 --> 00:15:01,568 ಜಗತ್ತಿನ ಹೆಚ್ಚಿನ ಜನರಂತಿಲ್ಲದೆ, ನಿನಗೆ ಆಯ್ಕೆಗಳಲ್ಲದೆ ಬೇರೇನಿಲ್ಲ. 175 00:15:01,651 --> 00:15:02,652 ಬೇಡ, ದಯವಿಟ್ಟು ಹೋಗಬೇಡ. 176 00:15:03,486 --> 00:15:06,448 ನೀನು ಅದೃಷ್ಟವಂತೆ ಆದರೆ ನೀನು ಅದನ್ನು ನೋಡುತ್ತಿಲ್ಲ. 177 00:15:06,990 --> 00:15:10,493 ನಿನ್ನ ಬಳಿ ಅಮೆರಿಕನ್ ಪದವಿ ಇದೆ, ಅಮೆರಿಕನ್ ಪಾಸ್ಪೋರ್ಟ್ ಇದೆ. 178 00:15:10,577 --> 00:15:11,828 ನಿನಗೆ ಸ್ವಾತಂತ್ರ್ಯವಿದೆ. 179 00:15:12,621 --> 00:15:15,999 ಈಗ ನೀನು ಯಾರೋ ಶ್ರೀಮಂತನ ಮಗುವಿನೊಂದಿಗೆ ಗರ್ಭ ಧರಿಸಿರುವೆ. 180 00:15:16,625 --> 00:15:18,501 ಈ ಬಾರಿ ಅದು ಯಾರ ತಪ್ಪು? 181 00:15:18,960 --> 00:15:21,755 ಅವನ ಹೆಂಡತಿಯದ್ದೇ? ನಿನ್ನ ಶಾಪದ ಭಾಗವಾಗಿ ಆಕೆಯೂ ಇರುವಳೇ? 182 00:15:22,255 --> 00:15:23,089 ನಾನು? 183 00:15:23,465 --> 00:15:26,593 ಅಥವಾ ನಿನ್ನನ್ನು ಬಿಟ್ಟು ನಿನಗೆ ಬೇರೆ ಯಾರ ಬಗ್ಗೆಯೂ ಯೋಚಿಸಲು ಅಸಾಧ್ಯವೇ? 184 00:15:26,843 --> 00:15:29,179 ಚಾರ್ಲಿ. ಚಾರ್ಲಿ, ನಾನೂ ನಿನ್ನೊಂದಿಗೆ ಬರುವೆ. 185 00:15:29,262 --> 00:15:30,096 ಏಕೆ? 186 00:15:30,639 --> 00:15:33,475 ನೀನು ಪ್ರತಿಭಟಿಸಿದೆ ಎಂದು ಎಲ್ಲರೆದುರೂ ಕೊಚ್ಚಿಕೊಳ್ಳಲೇ? 187 00:15:33,975 --> 00:15:36,353 ಇದು ನಿನ್ನ ಹೋರಾಟ ಅಲ್ಲ, ಯಾವತ್ತೂ ಆಗಿರಲಿಲ್ಲ. 188 00:15:36,936 --> 00:15:38,063 ನೀನೊಬ್ಬಳು ಪ್ರವಾಸಿ. 189 00:15:38,480 --> 00:15:41,691 ಅದು ನಿನ್ನ ಭವಿಷ್ಯವನ್ನು ಬಾಧಿಸದು. ನಿಜವಾಗಿಯೂ. ನೀನು ಹೊರಡಬಹುದು. 190 00:15:42,484 --> 00:15:44,819 ನಿನಗೆ ಕಾಣಿಸದಿರುವ ಇನ್ನೊಂದು ಅವಕಾಶ. 191 00:16:05,882 --> 00:16:08,051 ನಿಜವೇನೆಂದರೆ, ನಾನು ಯಾವತ್ತೂ ನಿನ್ನ ಬಗ್ಗೆ ಯೋಚಿಸಿಲ್ಲ, 192 00:16:10,220 --> 00:16:12,972 ನಿನ್ನನ್ನು ಮನಸ್ಸಿನಾಚೆ ದೂಡಬಲ್ಲೆ ಏಕೆಂದರೆ ನಿನ್ನ ಬಗ್ಗೆ ನಂಗೇನೂ ತಿಳಿದಿಲ್ಲ, 193 00:16:13,056 --> 00:16:14,224 ಮತ್ತು ಅದು ಹಾಗೆ ಸುಲಭವಾಗಿತ್ತು. 194 00:16:16,476 --> 00:16:19,020 ಅದೆಷ್ಟು ಕೆಟ್ಟದ್ದು ಎಂದು ಒಬ್ಬ ಗೆಳತಿ ಹೇಳುವವರೆಗೆ, 195 00:16:20,105 --> 00:16:21,815 ಆಕೆ ಹೇಳಿದ್ದು ನಿಜ ಎಂದು ಅರಿವಾಯಿತು. 196 00:16:24,776 --> 00:16:27,195 ನನ್ನ ಬಗ್ಗೆ ನೀನೇನು ಅಂದುಕೊಳ್ಳಬೇಕೆಂದು ಊಹಿಸಲಾಗದು. 197 00:16:28,238 --> 00:16:30,073 ನೀನು ನನ್ನನ್ನು ಎಷ್ಟು ದ್ವೇಷಿಸುವೆ. 198 00:16:32,659 --> 00:16:33,910 ನೀವು ದ್ವೇಷಿಸಬೇಕು. 199 00:16:36,121 --> 00:16:37,247 ನನಗೆ ಕೂಡ ಸಿಟ್ಟಾಗುತ್ತದೆ. 200 00:16:38,873 --> 00:16:40,834 ನೋಡಿ ಯಾರು ಮನೆಗೆ ಬಂದಿದ್ದಾರೆಂದು. 201 00:16:43,002 --> 00:16:44,587 ನೀನು ಆಯಾಸಗೊಂಡಂತೆ ಕಾಣುವೆ. 202 00:16:44,671 --> 00:16:46,506 ನಾನು ತಂದ ಫೇಸ್ ಕ್ರೀಮ್ ನೀನು ಬಳಸಿಲ್ಲವೇ? 203 00:16:47,048 --> 00:16:48,049 ನೆರಿಗೆ ಮೂಡಿಸದು. 204 00:16:48,133 --> 00:16:49,592 ಹಾಗಿದ್ದರೆ, ಇದು ಹೊಸ ಅಡುಗೆ ಮನೆ. 205 00:16:50,051 --> 00:16:51,594 ಇದು ಹೊಸತೇನಲ್ಲ. 206 00:16:52,345 --> 00:16:54,472 ನೀನು ಮನೆಗೆ ಬಾರದೆ ಐದು ವರ್ಷಗಳಾಗಿವೆ. 207 00:16:57,517 --> 00:16:59,853 ಅಲ್ಲಿ ಹೊರಗಿರುವುದು ನಿನ್ನ ಟೆಸ್ಲಾ ಹೌದೇ? ಅದು ಯಾರ ಐಡಿಯಾ? 208 00:16:59,936 --> 00:17:02,230 ನಿನ್ನ ಅಪ್ಪ ಉಡುಗೊರೆ ಆಗಿ ಅದನ್ನು ತಂದರು. 209 00:17:04,648 --> 00:17:05,900 ನೀನು ಅದಕ್ಕೆ ಖಂಡಿತಾ ಅರ್ಹಳು. 210 00:17:09,194 --> 00:17:11,614 ಓಹ್! ಕೊತ್ತಂಬರಿ ಸೊಪ್ಪು ಮರೆತೆ. 211 00:17:12,574 --> 00:17:13,907 -ನಾನು ಹೋಗಿ ತರಬೇಕೇ? -ಬೇಡ... 212 00:17:14,159 --> 00:17:15,452 ಕಾನ್ಸುವೆಲೊ ಹೋಗುತ್ತಾಳೆ. 213 00:17:15,535 --> 00:17:16,368 ಕಾನ್ಸುವೆಲೊ! 214 00:17:16,869 --> 00:17:19,664 ಅಂಗಡಿಗೆ ಹೋಗಿ ಸ್ವಲ್ಪ ತಾಜಾ ಕೊತ್ತಂಬರಿ ಸೊಪ್ಪು ತರುವೆಯಾ? 215 00:17:23,960 --> 00:17:25,377 ಸ್ವಲ್ಪ ಬೆಳ್ಳುಳ್ಳಿ ತುರಿಯಬೇಕೇ? 216 00:17:59,913 --> 00:18:02,290 ನಾಳೆ ನಾವು ಪಾಥ್ ಹೊಂದಿದ್ದೇವೆಂದು ಮರೆಯಬೇಡ. 217 00:18:02,373 --> 00:18:04,042 ನಿನ್ನ ತಂದೆ ಗುಣಮುಖರಾಗಲು. 218 00:18:04,292 --> 00:18:06,461 ಅಪ್ಪನ ಶಸ್ತ್ರಕ್ರಿಯೆಗಿಂತ ಮೊದಲು ಅದನ್ನು ನಡೆಸಲು ಬಯಸಿರುವೆ. 219 00:18:06,544 --> 00:18:08,463 ಅಮ್ಮಾ, ನನ್ನ ಭಾರತೀಯ ಬಟ್ಟೆ ನಾನು ತಂದಿಲ್ಲ. 220 00:18:08,546 --> 00:18:10,840 ಕಾನ್ಸುವೆಲೋಗೆ ಹೇಳಿ ನಿನ್ನ ಹಳೆಯ ಬಟ್ಟೆ ಅಟ್ಟದಲ್ಲಿ ಇರಿಸಿದ್ದೆ. 221 00:18:10,924 --> 00:18:12,217 ಅಲ್ಲಿ ಏನಾದರೂ ಇರಬಹುದು. 222 00:18:12,300 --> 00:18:13,718 ಸರಿ, ಈಗ ನಾವು ಹೊರಡಬೇಕು. 223 00:18:19,557 --> 00:18:21,476 ತುಂಬಾ ಕೃಶರಾಗಿದ್ದಾರೆ, ನಿಂಗೊತ್ತೇ. 224 00:18:21,768 --> 00:18:24,229 ಪ್ರತಿಯೊಂದಕ್ಕೂ ಸಮಯ ಮತ್ತು ಸ್ಥಳ ಇದೆ. 225 00:18:24,646 --> 00:18:26,773 ನಿನ್ನ ವಿಚ್ಛೇದನದ ಬಗ್ಗೆ ಅಪ್ಪನಿಗೆ ತಿಳಿಯುವ ಅಗತ್ಯವಿಲ್ಲ. 226 00:18:27,315 --> 00:18:28,817 -ಅಮ್ಮಾ. -ಅವರಿಗೆ ಅಸೌಖ್ಯವಿದೆ. 227 00:18:29,067 --> 00:18:30,902 ತುಂಬಾ ನೋವಾದರೆ ಅವರು ಸಾಯಬಹುದು. 228 00:18:31,319 --> 00:18:32,153 ಚೆನ್ಣಾಗಿ ಮಾತನಾಡು. 229 00:18:32,570 --> 00:18:36,157 ಚೆನ್ನಾಗಿ ವರ್ತಿಸಬೇಕೇ? ನನಗೆ ಸುಳ್ಳು ಹೇಳಲಾಗದು. ಅವರು ಕೇಳುತ್ತಾರೆ... 230 00:18:36,324 --> 00:18:37,283 ಯಾರಿದ್ದಾರೆ ನೋಡಿ. 231 00:18:37,367 --> 00:18:39,118 ಅವರು ಮಲಗಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳಲಿ. 232 00:18:39,202 --> 00:18:41,830 ಕೊಠಡಿಯಲ್ಲಿ ಬಹಳಷ್ಟು ಗದ್ದಲ ಇರುವುದು ಅವರಿಗೆ ಒಳ್ಳೆಯದಲ್ಲ. 233 00:18:41,996 --> 00:18:43,331 ನಾವು ಹೊರಡುತ್ತೇವೆ. 234 00:18:43,456 --> 00:18:44,415 ಮಕ್ಕಳೇ, ಹೋಗೋಣ. 235 00:18:44,624 --> 00:18:47,001 ನಿನ್ನ ತಂದೆ ಎಚ್ಚರಗೊಂಡಾಗ ಅವರನ್ನು ನೋಡೋಣ. 236 00:18:58,972 --> 00:19:00,557 ಅವರಿಲ್ಲಿರುವರೆಂದು ನಿನಗೆ ಗೊತ್ತಿತ್ತೇ? 237 00:19:00,640 --> 00:19:02,058 ಖಂಡಿತ. 238 00:19:02,141 --> 00:19:03,226 ಹಿಂದೆ ಅವರನ್ನು ನೋಡಿರುವೆಯಾ? 239 00:19:03,309 --> 00:19:05,812 ನಾವು ಒಟ್ಟಿಗೆ ಊಟ ಮಾಡುತ್ತೇವೆ. ನೀನೇನು ಅಂದುಕೊಂಡೆ? 240 00:19:06,062 --> 00:19:08,314 ನಿನ್ನ ತಂದೆ ಅವರನ್ನು ದೆಹಲಿಯಿಂದ ಇಲ್ಲಿಗೆ ಕರೆಸಿದರು. 241 00:19:08,398 --> 00:19:12,235 ಆ ಮಹಿಳೆಯಲ್ಲಿ ಅವರು ಏನು ಕಂಡರು ಎಂದು ನನಗೆ ನಿಜವಾಗಿಯೂ ಅರ್ಥವಾಗುತ್ತಿಲ್ಲ. 242 00:19:13,152 --> 00:19:15,613 ಆಕೆ ಭಿಕ್ಷುಕಿಯಂತೆ ಕಾಣುತ್ತಾಳೆ. 243 00:19:15,780 --> 00:19:17,532 ಭಟಿಂಡಾದ ಬಸ್ ನಿಲ್ದಾಣದಲ್ಲಿರುವವರಂತೆ. 244 00:19:17,949 --> 00:19:21,035 ಮಾರುಕಟ್ಟೆಯಲ್ಲಿ ಮಾವಿನಹಣ್ಣುಗಳನ್ನು ಮಾರಿ ಬಂದವರಿಂದ ನೀನು ಏನು ನಿರೀಕ್ಷಿಸುವೆ? 245 00:19:21,119 --> 00:19:22,036 ಅಮ್ಮಾ, ಸಾಕು. 246 00:19:24,330 --> 00:19:25,164 ದಯವಿಟ್ಟು. 247 00:19:32,589 --> 00:19:33,923 ನಿನ್ನ ದಾಲ್ ರುಚಿ ಮರೆತಿರುವೆ. 248 00:19:34,799 --> 00:19:36,092 ಅದನ್ನು ತಯಾರಿಸಲು ನೀನು ಯಾವಾಗ ಕಲಿಯುವೆ? 249 00:19:39,262 --> 00:19:42,015 ಅವರೊಂದಿಗೆ ಇಂದು ಮಾತನಾಡಲು ನಿನಗೆ ಆಗದೇ ಇರುವುದಕ್ಕೆ ವಿಷಾದವಿದೆ. 250 00:19:42,682 --> 00:19:45,518 ನಿನ್ನ ಅಪ್ಪ ಬಹಳಷ್ಟು ಬದಲಾಗಿದ್ದಾರೆ, ಅನಾರೋಗ್ಯಕ್ಕೀಡಾದ ನಂತರ. 251 00:19:47,270 --> 00:19:48,438 ಜನರು ಬದಲಾಗುತ್ತಾರೆಯೇ? 252 00:19:49,522 --> 00:19:50,356 ನನಗೆ ಗೊತ್ತಿಲ್ಲ. 253 00:19:51,065 --> 00:19:53,067 ಅವರು ಆತ್ಮಾವಲೋಕನ ಮಾಡಿದರು. 254 00:19:54,068 --> 00:19:56,529 ಆತ್ಮಾವಲೋಕನ ಮಾಡಲು ಅವರಿಗೆ ಬಹಳಷ್ಟಿದೆ. 255 00:20:02,744 --> 00:20:04,162 ನೀನು ತೊರೆಯಬಹುದಿತ್ತು, ಅಲ್ಲವೇ. 256 00:20:04,579 --> 00:20:06,873 ಅಂದರೆ, ನಿನಗೆ ಉದ್ಯೋಗವಿತ್ತು. ನೀನೇ ನಿಭಾಯಿಸಬಹುದಾಗಿತ್ತು. 257 00:20:06,956 --> 00:20:08,333 ಅದು ಯಾವ ರೀತಿಯ ಜೀವನ? 258 00:20:08,416 --> 00:20:10,209 ಆ ಕಷ್ಟಗಳಿಲ್ಲದ ಜೀವನ. 259 00:20:11,294 --> 00:20:13,796 ಕ್ಷಮಿಸು, ನಾನು ಓಪ್ರಾಹ್ ಥರ ಮಾತನಾಡುವುದಿಲ್ಲ. 260 00:22:17,128 --> 00:22:17,962 ಹಾಯ್. 261 00:22:19,130 --> 00:22:20,006 ಹಾಯ್. 262 00:22:22,008 --> 00:22:22,967 ನಾನು ಸುಖಿ. 263 00:22:24,260 --> 00:22:25,136 ಇದು ಫೌಜಾ. 264 00:22:25,928 --> 00:22:26,971 ನೀವು ಯಾರೆಂದು ನಂಗೊತ್ತು. 265 00:22:29,223 --> 00:22:31,934 ಅಮ್ಮನಿಗೆ ಬರುವುದು ಬೇಡವಾಗಿತ್ತು. ಅದು ಒಳ್ಳೆಯದೆಂದು ಅಂದುಕೊಂಡೆವು. 266 00:22:33,102 --> 00:22:34,520 ನಿಮ್ಮನ್ನು ಭೇಟಿಯಾಗಬೇಕೆಂದು ಬಯಸಿದ್ದೆ. 267 00:22:35,021 --> 00:22:36,814 ಪಾಪಾಜಿಗೆ ನಿಮ್ಮ ಬಗ್ಗೆ ಅಭಿಮಾನ. 268 00:22:39,567 --> 00:22:42,195 ನನ್ನ ಬಗ್ಗೆ? ನಿಮ್ಮ ಜೊತೆ ಮಾತನಾಡಿದ್ದರೇ? 269 00:22:42,945 --> 00:22:44,906 ನಿಮ್ಮ ಯಶಸ್ಸಿನ ಬಗ್ಗೆ ಅವರು ಹೇಳುತ್ತಿರುತ್ತಾರೆ. 270 00:22:45,865 --> 00:22:49,202 ಆದರೆ ನಿಮ್ಮಿಬ್ಬರಲ್ಲಿ ಒಬ್ಬರ ಬಗ್ಗೆಯೂ ಅವರು ನನ್ನ ಬಳಿ ಹೇಳಿರಲಿಲ್ಲ. 271 00:22:49,660 --> 00:22:50,703 ಹಾಗಂದುಕೊಂಡೂ ಇರಲಿಲ್ಲ. 272 00:22:53,790 --> 00:22:58,002 ಅವರು ಆಸೆ ಪಟ್ಟಂತೆ ಮಗನನ್ನು ಹೊಂದಿರುವುದಕ್ಕೆ ಅವರು ಖುಷಿ ಪಟ್ಟಿರುವುದು ಖಂಡಿತ. 273 00:22:58,795 --> 00:22:59,879 ಅವರು ಒಳ್ಳೆಯ ಮನುಷ್ಯ. 274 00:23:00,713 --> 00:23:02,757 ನಿಮ್ಮನ್ನು ತುಂಬಾ ಭಿನ್ನ ವ್ಯಕ್ತಿ ಬೆಳೆಸಿರಬೇಕು. 275 00:23:02,840 --> 00:23:05,259 ಅಮೆರಿಕಾದಲ್ಲಿ ಪಾಪಾಜಿಗೆ ಕಷ್ಟವಿತ್ತೆಂದು ಗೊತ್ತು. 276 00:23:05,510 --> 00:23:09,097 ಅಲ್ಲಿ ತುಂಬಾ ಭಯವಾಗಿತ್ತು ಎಂದು ಹೇಳಿದ್ದರು. ತಾವು ನಿಯಂತ್ರಣದಲ್ಲಿಲ್ಲ ಅಂದುಕೊಂಡಿದ್ದರು. 277 00:23:11,474 --> 00:23:12,934 ನಾವು ಯಾವ ನಿಯಂತ್ರಣ ಹೊಂದಿದ್ದೆವು? 278 00:23:13,267 --> 00:23:14,185 ಕ್ಷಮಿಸಿ? 279 00:23:15,144 --> 00:23:16,020 ಅದನ್ನು ಮರೆತು ಬಿಡಿ. 280 00:23:16,187 --> 00:23:19,273 ಅವರು ನಿಮ್ಮನ್ನು ತುಂಬಾ ಪ್ರೀತಿಸುತ್ತಾರೆ. ಅರ್ಥಮಾಡಿಕೊಳ್ಳಿ. 281 00:23:31,828 --> 00:23:33,329 ನೋಡಿ ಯಾರು ಬಂದಿದ್ದಾರೆ! 282 00:23:33,412 --> 00:23:34,956 ಹಠಮಾರಿ ಮಗಳು ವಾಪಸಾಗಿದ್ದಾಳೆ. 283 00:23:35,289 --> 00:23:38,126 ನಿಮ್ಮನ್ನು ನೋಡಲು ನಿನ್ನೆ ಬಂದಿದ್ದಳು, ಆದರೆ ನೀವು ನಿದ್ದೆಯಲ್ಲಿದ್ದಿರಿ. 284 00:23:40,086 --> 00:23:41,129 ಬಂದೆಯಾ, ಮಗು? 285 00:23:41,462 --> 00:23:42,421 ಹಾಯ್, ಅಪ್ಪಾ. 286 00:23:45,925 --> 00:23:48,886 ನಾನು ಹೋಗಿ ಸ್ವಲ್ಪ ಕಾಫಿ ತರುವೆ. ನೀವಿಬ್ಬರೂ ಮಾತನಾಡಿ. 287 00:23:54,225 --> 00:23:55,893 ಹೇಗಿದ್ದೀರಿ? ಭಯವಾಗುತ್ತಿದೆಯೇ? 288 00:23:57,645 --> 00:23:59,313 ನೀನಿಲ್ಲಿರುವುದರಿಂದ ಈಗ ಚೇತರಿಸಿಕೊಂಡಿರುವೆ. 289 00:24:00,565 --> 00:24:01,732 ತುಂಬಾ ಸಮಯವಾಗಿತ್ತು. 290 00:24:03,442 --> 00:24:04,902 ನಾನು ವಾಪಸ್ ಬರದೇ ಇರುವುದಕ್ಕೆ ಕ್ಷಮಿಸಿ. 291 00:24:06,654 --> 00:24:07,864 ನನಗೆ ಅರ್ಥವಾಗುತ್ತದೆ. 292 00:24:10,241 --> 00:24:11,993 ಡೇವಿಡ್ ಹೇಗಿದ್ದಾನೆ? 293 00:24:13,578 --> 00:24:14,704 ಅವರು... 294 00:24:16,205 --> 00:24:17,790 ಅವರಿಗೆ ಬರಲು ಆಗದೇ ಇರುವುದಕ್ಕೆ ಕ್ಷಮಿಸಿ. 295 00:24:18,124 --> 00:24:19,208 ಹೌದೇ. 296 00:24:21,377 --> 00:24:23,045 ಫೌಜಾ ಮತ್ತು ಸುಖಿಯನ್ನು ಭೇಟಿಯಾದೆಯಾ? 297 00:24:24,255 --> 00:24:25,089 ಹೌದು. 298 00:24:25,173 --> 00:24:28,759 ಅವರು ಒಳ್ಳೆಯ ಮಕ್ಕಳು. ನಾನು ಹೋದ ಮೇಲೆ ನೀನು ಅವರ ಬಗ್ಗೆ ಮೃದು ನಿಲುವು ತಾಳುವೆ ಅಂದುಕೊಳ್ಳುವೆ. 299 00:24:30,094 --> 00:24:32,388 ಕುಟುಂಬ ಹೊಂದುವ ಪ್ರಯೋಜನಗಳ ಬಗ್ಗೆ ತಿಳಿಯುವೆ. 300 00:24:34,932 --> 00:24:37,685 ನೀವು ನಮ್ಮನ್ನು ಆ ದೃಷ್ಟಿಯಲ್ಲಿ ನೋಡುತ್ತೀರಾ? ಕುಟುಂಬದಂತೆ? 301 00:24:37,768 --> 00:24:39,562 ಖಂಡಿತಾ. ನನ್ನ ಕುಟುಂಬ. 302 00:24:40,188 --> 00:24:41,939 ಮಕ್ಕಳು ಮನುಷ್ಯರಿಗೆ ದೇವರು ನೀಡಿದ ವರ. 303 00:24:42,815 --> 00:24:45,067 ಡೇವಿಡ್ ಮತ್ತು ನಿನಗೆ ಇನ್ನೂ ತಡವಾಗಿಲ್ಲ... 304 00:24:45,151 --> 00:24:46,319 ನಿಜವಾಗಿ ನಾನು ಗರ್ಭಿಣಿ. 305 00:24:47,945 --> 00:24:48,905 ಓಹ್, ದೇವರೇ. 306 00:24:50,489 --> 00:24:53,159 ನಿಮಗೆ ಮೊದಲು ಹೇಳಬೇಕೆಂದಿದ್ದೆ, ಹೇಳಿದೆ. 307 00:24:55,661 --> 00:24:57,747 ಅದು ಗಂಡು ಮಗುವೇ ಎಂದು ಗೊತ್ತೇ? 308 00:25:00,291 --> 00:25:01,125 ಹೌದು. 309 00:25:02,376 --> 00:25:03,211 ಗಂಡು ಮಗು. 310 00:25:03,294 --> 00:25:05,254 ಓಹ್, ಮಗಾ. ಖುಷಿಯಾಯಿತು. 311 00:25:06,797 --> 00:25:09,383 ಧನ್ಯವಾದ ಈ ಒಳ್ಳೆಯ ಮತ್ತು ಆಶಾವಾದದ ಸುದ್ದಿಗಾಗಿ. 312 00:25:10,218 --> 00:25:14,096 ಅವರು ನಿಮಗಾಗಿ ಸಿದ್ಧರಾಗಿದ್ದಾರೆ. ಮಿ. ಸಿಂಗ್. ನೀವು ಸಿದ್ಧರಾಗಿದ್ದರೆ ಸರಿ. 313 00:25:15,348 --> 00:25:18,226 ಗಂಡು ಮಗು. ಎಂತಹ ಆಶೀರ್ವಾದ. 314 00:25:18,851 --> 00:25:22,146 ಒಳ್ಳೆಯ ಸುದ್ದಿಗಾಗಿ ಧನ್ಯವಾದ, ಮಗು. ನನಗೆ ಶಕ್ತಿ ನೀಡಿದೆ. 315 00:25:30,279 --> 00:25:31,322 ಹೇ, ಆಪ್ಪಾ. 316 00:25:33,950 --> 00:25:35,076 ನಿಮಗೆ ತಿಳಿಯಬೇಕೆಂದು ಬಯಸುವೆ, 317 00:25:36,661 --> 00:25:40,790 ಅವನ ಅಜ್ಜ ಯಾವ ರೀತಿಯ ಮನುಷ್ಯನಾಗಿದ್ದ ಎಂದು ತಿಳಿದುಕೊಂಡೇ ನನ್ನ ಮಗು ದೊಡ್ಡವನಾಗುವ. 318 00:25:41,374 --> 00:25:42,917 ಅದು ನನ್ನ ದೊಡ್ಡ ಆಸೆ, ಮಗಾ. 319 00:25:43,167 --> 00:25:45,169 ನಿಮ್ಮ ಬಗ್ಗೆ ಎಲ್ಲವನ್ನೂ ಅವನಿಗೆ ಹೇಳುವೆ. 320 00:25:46,963 --> 00:25:49,757 ಹೇಗೆ ಅಮ್ಮನ ಗಲ್ಲದ ಮೂಳೆಯನ್ನು ಅಮ್ಮಂದಿರ ದಿನದಂದು ಮುರಿದಿರೆಂದು, 321 00:25:50,758 --> 00:25:52,718 ಹೇಗೆ ಅವರನ್ನು ಮೆಟ್ಟಿಲಿನಿಂದ ನೂಕಿದಿರೆಂದು, 322 00:25:53,386 --> 00:25:56,847 ಆಕೆಗೆ ಉಂಗುರಗಳು ಸರಿಹೊಂದುವುದಿಲ್ಲ, ನೀವು ಆಕೆಯ ಪ್ರತಿ ಬೆರಳು ಮುರಿದಿರುವಿರೆಂದು, 323 00:25:56,931 --> 00:26:00,059 ಮತ್ತು ಆ ಇನ್ನೊಂದು ಕುಟುಂಬಕ್ಕೆ ನೀವು ಪ್ರೀತಿಯ ಅಪ್ಪನಾಗಿರುವಾಗ, 324 00:26:00,142 --> 00:26:03,145 ನಾನು ಮನೆಯಲ್ಲಿ ಆಕೆಯ ಗಾಯಗೊಂಡ ಮುಖಕ್ಕೆ ಐಸ್ ಇಡುತ್ತಿದ್ದೆನೆಂದು. 325 00:26:08,401 --> 00:26:10,361 ಆ ಇನ್ನೊಂದು ಕುಟುಂಬ ಏನೇ ಹೇಳಲಿ, 326 00:26:12,613 --> 00:26:16,158 ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮನ್ನು ಕ್ಷಮಿಸುವುದೂ ಇಲ್ಲ. 327 00:26:21,956 --> 00:26:22,957 ನೀವೀಗ ಹೋಗಬಹುದು. 328 00:27:20,306 --> 00:27:24,310 ಏರ್ಲೈನ್ಸ್ ಬೋರ್ಡಿಂಗ್ ಪಾಸ್ ಮತ್ತು ದಾಖಲೆ ಪರಿಶೀಲನೆಯನ್ನು 329 00:27:24,393 --> 00:27:26,020 ನಿರ್ಗಮನ ಗೇಟುಗಳಲ್ಲಿ ನಡೆಸುವುದು. 330 00:27:29,190 --> 00:27:30,608 -ಹಾಯ್. -ಹಾಯ್. 331 00:27:33,152 --> 00:27:35,154 ಬಾ. ಹೇ. 332 00:27:36,364 --> 00:27:37,865 ನಿನ್ನ ಅಪ್ಪನ ಬಗ್ಗೆ ಕೇಳಿ ಬೇಸರವಾಯಿತು. 333 00:27:43,037 --> 00:27:43,871 ತಗೋ. 334 00:27:44,663 --> 00:27:45,998 -ಧನ್ಯವಾದ. -ಸರಿ. 335 00:27:46,457 --> 00:27:49,043 -ನಿನ್ನ ಅಮ್ಮ ಹೇಗಿದ್ದಾರೆ? -ನಿನಗೆ ಗೊತ್ತು, ಆಕೆ... 336 00:27:49,168 --> 00:27:50,002 ಬ್ರಿಂದರ್? 337 00:27:50,920 --> 00:27:52,338 ಹೌದು. ಸರಿ. ಬಾ. 338 00:27:54,590 --> 00:27:57,301 ನೀನು ನನಗೆ ಕರೆ ಮಾಡಿದ್ದು ಖುಷಿಯಾಯಿತು. ನಿನ್ನ ಬಗ್ಗೆ ಚಿಂತಿತನಾಗಿದ್ದೆ. 339 00:27:57,385 --> 00:27:58,219 ಏನು... 340 00:28:00,471 --> 00:28:01,305 ಹಿಲ್ಸ್? 341 00:28:02,556 --> 00:28:03,599 ನನ್ನ ತಂದೆಯನ್ನು ಕೊಂದೆ. 342 00:28:04,183 --> 00:28:06,102 ಓಹ್, ದೇವರೇ, ನನ್ನನ್ನು ಯಾವತ್ತೂ ಕ್ಷಮಿಸೆನು. 343 00:28:06,185 --> 00:28:08,813 ಇಲ್ಲ, ಇಲ್ಲ. ಇಲ್ಲ. ನಾನು ಅವರನ್ನು ಕೊಂದೆ. ಡೇವಿಡ್, ನಾನು ಕೊಂದೆ. 344 00:28:09,146 --> 00:28:11,273 -ನಾನು ಅಪ್ಪನನ್ನು ಕೊಂದೆ! -ನಾವು ಕಾರಿನ ಬಳಿ ಹೋಗೋಣವೇ? 345 00:28:11,357 --> 00:28:13,567 ಅಲ್ಲಿ ಮಾತನಾಡೋಣ. ಸರಿಯೇ? 346 00:28:13,651 --> 00:28:15,569 -ಸರಿ. -ಹೇ, ಏನೂ ಸಮಸ್ಯೆಯಿಲ್ಲ. ಸರಿ, ಬಾ. 347 00:28:17,947 --> 00:28:22,952 ಹಿಂಸೆಪೀಡಿತ ವ್ಯಕ್ತಿಯಂತೆ ನನ್ನನ್ನು ನಾನು ಅಂದುಕೊಂಡ ಹಾಗಿತ್ತು, 348 00:28:23,035 --> 00:28:25,621 ನನ್ನ ನಿಯಂತ್ರಣದಲ್ಲಿರದ ಮಾತುಗಳನ್ನು ಆಡಿದಂತೆ. 349 00:28:26,414 --> 00:28:28,624 ಇಲ್ಲ. ನಿನಗೆ ಗೊತ್ತೇ? ಇಲ್ಲ, ನಾನು ನಿಯಂತ್ರಣದಲ್ಲಿದ್ದೆ. 350 00:28:28,707 --> 00:28:30,126 ನಾನು ಪ್ರಾಮಾಣಿಕಳಾಗಿ ಹೇಳಿದರೆ... 351 00:28:31,752 --> 00:28:34,088 ಅದನ್ನು ಹೇಳುವುದನ್ನು ತಡೆಯಲು ನನಗೆ ಸಾಧ್ಯವಾಗಲಿಲ್ಲ. 352 00:28:34,171 --> 00:28:36,382 ಅಂದರೆ, ಅದನ್ನು ಕೇಳದೆ ಅವರು ಸಾಯುವುದು ನನಗೆ ಬೇಕಿರಲಿಲ್ಲ. 353 00:28:36,924 --> 00:28:39,135 ಅದರ ಯೋಚನೆಯನ್ನೇ ಸಹಿಸುವುದು ನನಗೆ ಸಾಧ್ಯವಿರಲಿಲ್ಲ. 354 00:28:41,679 --> 00:28:42,680 ಓಹ್. 355 00:28:45,349 --> 00:28:48,227 -ನಾವು ಪ್ರತ್ಯೇಕಗೊಂಡಿದ್ದೇವೆ ಎಂದು ಹೇಳಿದೆಯಾ? -ಇಲ್ಲ, ಸಮಯವಿರಲಿಲ್ಲ. 356 00:28:48,310 --> 00:28:51,188 ನನ್ನ ಮಾತುಗಳಿಂದ ಅವರನ್ನು ಕೊಲ್ಲುವುದರಲ್ಲಿಯೇ ನಿರತಳಾಗಿದ್ದೆ. 357 00:28:52,106 --> 00:28:52,940 ಚಿಂತಿಸಬೇಡ. 358 00:28:55,025 --> 00:28:57,611 ಸಿಟ್ಟುಗೊಂಡು ನನಗೆ ಸಾಕಾಗಿದೆ. 359 00:28:59,196 --> 00:29:00,156 ಹೌದು. 360 00:29:05,828 --> 00:29:07,037 ಆವಳು ಹೇಗಿದ್ದಾಳೆ? ನಿನ್ನ... 361 00:29:09,707 --> 00:29:10,541 ಮರ್ಸಿ? 362 00:29:14,879 --> 00:29:16,172 ನಿನ್ನಲ್ಲಿ ಒಂದು ವಿಷಯ ಕೇಳಬಹುದೇ? 363 00:29:18,466 --> 00:29:20,551 ಮಕ್ಕಳು ಬೇಡ ಎಂದು ನೀನು ಹೇಳಿದಾಗ, 364 00:29:20,968 --> 00:29:23,179 ನನ್ನಿಂದ ನಿನಗೆ ಬೇಡ ಎಂದರ್ಥವಾಗಿತ್ತೇ ಅಥವಾ... 365 00:29:27,433 --> 00:29:28,726 ಇಲ್ಲ, ಖಂಡಿತಾ ಇಲ್ಲ. 366 00:29:31,270 --> 00:29:32,521 ನೀನು ಹಾಗೆಂದು ಅಂದುಕೊಂಡಿದ್ದೆಯಾ? 367 00:29:38,694 --> 00:29:40,446 ಹೌದು, ಮರ್ಸಿಗೆ ನನ್ನ ಸಹಾಯ ಬೇಕಿಲ್ಲ. 368 00:29:41,155 --> 00:29:42,948 ನನಗೂ ಅವಳಿಗೂ ಯಾವುದೇ ಸಂಬಂಧವಿಲ್ಲ ಎಂದಳು. 369 00:29:44,950 --> 00:29:48,370 ಸರಿ, ಆದರೆ ಮತ್ತೆ ಆಕೆ ಬರಬಹುದು, ನಿಂಗೊತ್ತಿಲ್ಲ. 370 00:29:51,040 --> 00:29:53,000 ನೀನು ಒಳ್ಳೆಯ ವ್ಯಕ್ತಿಯಾಗಿರಬೇಕು, ಅಷ್ಟೇ. 371 00:29:55,127 --> 00:29:56,587 ಆಕೆ ಕೂಡ ಅದನ್ನೇ ಹೇಳಿದಳು. 372 00:29:56,921 --> 00:29:58,464 ನಾನು ಒಳ್ಳೆಯ ವ್ಯಕ್ತಿ ಆಗಬೇಕು ಎಂದು. 373 00:29:58,589 --> 00:29:59,840 ಏಕೆಂದರೆ ಅದು ನಿಜ. 374 00:30:00,174 --> 00:30:01,091 ಅದು... 375 00:30:01,842 --> 00:30:04,720 ನಿನ್ನ ನಂತರ ನಾನೇನಾಗಬಹುದು ಎಂದು ಯೋಚಿಸುತ್ತದೆ, 376 00:30:04,803 --> 00:30:07,181 ಅಷ್ಟರಲ್ಲಿ ಇದೆಲ್ಲ ನಡೆಯಿತು. 377 00:30:08,057 --> 00:30:11,602 ಮತ್ತು... ನನಗೆ ಯೋಚಿಸಲು ಸಮಯವೇ ಇರಲಿಲ್ಲ... 378 00:30:11,685 --> 00:30:14,271 ನಿನ್ನ ಬಗ್ಗೆ ನಾನು ಅನುಕಂಪ ಹೊಂದಬೇಕೆಂದು ನೀನು ಕೇಳುತ್ತಿಲ್ಲ ಅಲ್ಲವೇ? 379 00:30:17,274 --> 00:30:20,277 ಇಲ್ಲ. ಇಲ್ಲ, ಖಂಡಿತಾ ಇಲ್ಲ. 380 00:30:23,447 --> 00:30:24,281 ಸರಿ. 381 00:30:29,453 --> 00:30:31,121 ಸರಿ, ಇದು ಸ್ವಲ್ಪ ವಿಚಿತ್ರ ಅನಿಸಬಹುದು, 382 00:30:32,081 --> 00:30:35,376 ಆದರೆ ಕಳೆದ ಬಾರಿ ನಾನು ಮರ್ಸಿಯನ್ನು ಭೇಟಿಯಾದಾಗ, ಅವಳು ನಿನ್ನ ನಂಬರ್ ಕೇಳಿದಳು. 383 00:30:36,502 --> 00:30:37,336 ಅದು ಸರಿಯಾಗಬಹುದೇ... 384 00:30:42,967 --> 00:30:43,842 ಖಂಡಿತ. 385 00:30:44,969 --> 00:30:46,053 ಹೌದೇ? 386 00:31:04,738 --> 00:31:05,990 ಮುಂದೇನು ನನಗೆ ತಿಳಿದಿಲ್ಲ. 387 00:31:08,742 --> 00:31:10,828 ಡೇವಿಡ್ ಮನೆಯನ್ನೇ ನನ್ನ ಮನೆ ಎಂದು ತಿಳಿದಿದ್ದೆ. 388 00:31:11,662 --> 00:31:12,830 ನಾವು ಅದನ್ನೇ ಹೇಳಿದ್ದು. 389 00:31:15,249 --> 00:31:17,209 "ನಾವೆಲ್ಲಿಗೆ ಹೋದರೂ, ನಾವು ಜೊತೆಯಾಗಿರುವ ತನಕ..." 390 00:31:17,293 --> 00:31:19,128 -ಹತ್ತಿರದಲ್ಲಿ ನಿನ್ನ ಭೇಟಿಯಾಗಬಹುದೇ? -ಹೌದು. 391 00:31:19,211 --> 00:31:20,754 -"ಅದು ಮನೆಯಾಗಿರುವುದು" -ಧನ್ಯವಾದ. 392 00:31:34,059 --> 00:31:35,769 ಎಲ್ಎ ಖಂಡಿತ ಮನೆಯಾಗಿ ಉಳಿದಿಲ್ಲ. 393 00:31:35,853 --> 00:31:37,771 ಹಿಂದಕ್ಕೆ ಹೋಗುವುದು ಅದನ್ನು ಸ್ಪಷ್ಟವಾಗಿಸಿತ್ತು. 394 00:31:42,276 --> 00:31:44,111 ಕಳೆದುಕೊಳ್ಳುವ ಬಗ್ಗೆ ನಿನಗೆ ಹೇಳಲು ನಾನು ಯಾರು? 395 00:31:46,822 --> 00:31:48,616 ಕನಿಷ್ಠ ನಾನು ಚೇತರಿಸಿಕೊಳ್ಳುವೆ ಎಂದು ನಂಗೊತ್ತು. 396 00:31:50,576 --> 00:31:52,202 ಖಂಡಿತಾ ನನಗೆ ಭಯವಾಗಿದೆ, ಆದರೆ... 397 00:31:56,498 --> 00:32:00,461 ಮಾತೊಂದಿದೆ, ತೀರದ ನೋಟ ಕಳೆದುಕೊಳ್ಳುವ ಕುರಿತು ಧೈರ್ಯವಿಲ್ಲದೇ ಇದ್ದರೆ 398 00:32:00,544 --> 00:32:02,755 ನಾವು ಹೊಸ ಜಾಗಗಳನ್ನು ಅನ್ವೇಷಿಸಲು ಸಾಧ್ಯವಿಲ್ಲ. 399 00:32:03,631 --> 00:32:05,299 ಅಲ್ಲಿಗೆ ಹೋಗಿ ಬಣ್ಣದ್ದು ತರಲು ಬಯಸುತ್ತೇನೆ. 400 00:32:05,924 --> 00:32:07,217 ಬಣ್ಣ ಚೆನ್ನಾಗಿರುತ್ತದೆ, ಮ್ಯಾʼಮ್. 401 00:32:09,011 --> 00:32:10,679 ಈ ಮಾತಿನ ಬಗ್ಗೆ ಬಹಳ ಯೋಚಿಸುತ್ತೇನೆ. 402 00:32:12,139 --> 00:32:13,349 ಮುಂದಕ್ಕೆ ಸಾಗುವುದು. 403 00:32:13,766 --> 00:32:14,725 ಸರಿ. 404 00:32:14,808 --> 00:32:15,684 ಮುಂದೆ ಸಾಗುವುದು. 405 00:32:17,019 --> 00:32:19,104 -ಈ ಕಡೆಯೇ? -ಹೌದು. ಸರಿ. 406 00:32:19,188 --> 00:32:20,397 ಹಿಂತಿರುಗಿ ನೋಡದೇ ಇರುವುದು. 407 00:32:20,689 --> 00:32:24,193 ಆಕ್ರಮಿಸಿದ ಪ್ರದೇಶ ತೆರವುಗೊಳಿಸಲು ಯಾವುದೇ ಪ್ರತಿರೋಧ ಒಡ್ಡದೆ, ಯಾವುದೇ ಸೂಚನೆಯಿಲ್ಲದೆ... 408 00:32:24,276 --> 00:32:26,111 -ಬಾ. ತಡ ಮಾಡಬೇಡ... -ಸರಿ, ಅಮ್ಮಾ! 409 00:32:26,195 --> 00:32:28,572 ... ಆಕ್ಯುಪೈ ಆಂದೋಲನದ ಮುಂದಿನ ಹೆಜ್ಜೆ ಏನಾಗಬಹುದೆಂದು. 410 00:32:28,656 --> 00:32:32,534 ಹಾಂಗ್ ಕಾಂಗ್ ಆರ್ಥಿಕ ಜಿಲ್ಲೆಯಲ್ಲಿ ಪರಿಸ್ಥಿತಿ ಸಹಜತೆಗೆ ಮರಳುತ್ತಿದೆ. 411 00:32:32,660 --> 00:32:36,497 ಪ್ರಜಾಪ್ರಭುತ್ವ-ಪರ ಹೋರಾಟಗಾರರ ತೆರವು ಹಾಗೂ ನೂರಾರು ಮಂದಿಯ ಬಂಧನದ ನಂತರ. 412 00:32:36,580 --> 00:32:39,750 ಚೈನ್ ಸಾ ಮತ್ತು ಎಕ್ಸ್ಕವೇಟರ್ ಹೊಂದಿದ ಪೊಲೀಸ್ ಅಧಿಕಾರಿಗಳು 413 00:32:39,833 --> 00:32:42,586 ಸರಕಾರಿ ಮುಖ್ಯ ಕಾರ್ಯಾಲಯದ ಹೊರಗಿದ್ದ ಶಿಬಿರವನ್ನು ನೆಲಸಮಗೊಳಿಸಿದರು, 414 00:32:42,670 --> 00:32:44,296 ಪ್ರಮುಖವಾಗಿ ಅಭಿಯಾನದ ಮುಖ್ಯ ಪ್ರದೇಶದಲ್ಲಿ. 415 00:32:44,380 --> 00:32:47,549 ಹೆಚ್ಚಿನ ಪ್ರತಿಭಟನಾಕಾರರು ಶಾಂತವಾಗಿ ತೆರಳಿದ್ದಾರೆ 416 00:32:47,633 --> 00:32:48,842 ಯಾವುದೇ ಪ್ರತಿರೋಧವಿಲ್ಲದೆ. 417 00:32:48,967 --> 00:32:53,222 ಗೇಬ್ರಿಯಲ್ ಆರ್ಲ್ಸ್ ವರದಿ ಮಾಡಿದಂತೆ, ಕೆಲ ಹಠಮಾರಿ ಪ್ರತಿಭಟನಾಕಾರರು ಉಳಿದಿದ್ದಾರೆ. 418 00:32:53,472 --> 00:32:56,517 ಗುರುವಾರದ ತನಕ, ಹಾಂಗ್ ಕಾಂಗ್ ಸರಕಾರದ ಮುಖ್ಯ ಕಾರ್ಯಾಲಯದ ಹೊರಗಿನ ಪ್ರದೇಶವು... 419 00:32:56,600 --> 00:32:57,434 ಹೇ, ಮಗು... 420 00:32:57,518 --> 00:32:59,603 ಪ್ರಜಾಪ್ರಭುತ್ವ ಹೋರಾಟದ ಕೇಂದ್ರವಾಗಿತ್ತು. 421 00:32:59,687 --> 00:33:01,855 -ನನಗೆ ಕೆಲ ಸಾಮಾನು ಖರೀದಿಸಲಿದೆ. -ಸರಿ. 422 00:33:11,573 --> 00:33:13,784 ಮಾರ್ಗರೆಟ್ ವೂ ಹೆಸರಿನಲ್ಲಿ ರಿಸರ್ವೇಶನ್ ಇತ್ತು. 423 00:33:24,962 --> 00:33:25,838 ಧನ್ಯವಾದ. 424 00:33:25,921 --> 00:33:26,797 ನಿಮ್ಮ ಊಟ ಆನಂದಿಸಿ 425 00:34:30,860 --> 00:34:32,905 ಮಾತನಾಡುವುದರ ವಿರುದ್ಧ ಏನು ಎಂದು ನಿನಗೆ ಗೊತ್ತೇ? 426 00:34:33,614 --> 00:34:35,449 ಅದು ಆಲಿಸುವುದಲ್ಲ. ಕಾಯುವುದು. 427 00:34:41,413 --> 00:34:44,708 ಹಾಗಿದ್ದರೆ, ನೀನು ಕೇವಲ ಕಾಯುತ್ತಿರುವೆಯಾ? ನನ್ನ ಮಾತನ್ನು ಆಲಿಸುತ್ತಿಲ್ಲವೇ? 428 00:34:45,042 --> 00:34:48,670 ಇದು ನಿಜವಾಗಿಯೂ ವಿಚಿತ್ರ ಸಂಭಾಷಣೆಯಾಗಿದೆ 429 00:34:48,754 --> 00:34:50,714 ಮತ್ತು ಈ ವಿಚಿತ್ರ ಮೌನ ಅಲ್ಲಿದೆ. 430 00:35:00,682 --> 00:35:01,809 ನೀನು ಗರ್ಭಿಣಿ. 431 00:35:07,022 --> 00:35:08,524 ನಿಮಗೆ ಹೇಗೆ ಹೇಳುವುದೆಂದು ತಿಳಿದಿರಲಿಲ್ಲ. 432 00:35:08,857 --> 00:35:09,691 ನನಗೆ ಗೊತ್ತಿತ್ತು. 433 00:35:11,777 --> 00:35:12,611 ನಿಜವಾಗಿಯೂ? 434 00:35:13,445 --> 00:35:14,279 ಹೇಗೆ? 435 00:35:14,613 --> 00:35:16,615 ಜನರು ಮಾತನಾಡುತ್ತಾರೆ. ಹಾಂಗ್ ಕಾಂಗ್ ಚಿಕ್ಕ ಪ್ರದೇಶ. 436 00:35:26,083 --> 00:35:27,543 ಡೈಸಿ ಮತ್ತು ಫಿಲಿಪ್ ಹೇಗಿದ್ದಾರೆ? 437 00:35:29,795 --> 00:35:32,256 ನಿನ್ನನ್ನು ಸಂಪರ್ಕಿಸಿದ ವಿಚಾರ ಅವರಿಗೆ ಗೊತ್ತಿಲ್ಲ. 438 00:35:32,464 --> 00:35:33,882 ನೀನೇಕೆ ನನ್ನನ್ನು ಸಂಪರ್ಕಿಸಿದೆ? 439 00:35:33,966 --> 00:35:37,970 ನಂಗೊತ್ತಿಲ್ಲ. ಕ್ಷಮೆಯಾಚಿಸಲು, ಪ್ರಾಯಶಃ? 440 00:35:41,265 --> 00:35:42,850 ನಾನೂ ನಿನ್ನಲ್ಲಿ ಕ್ಷಮೆ ಕೇಳಬೇಕಿದೆ. 441 00:35:43,141 --> 00:35:43,976 ಏಕೆ? 442 00:35:45,602 --> 00:35:46,645 ಕಚೇರಿಗೆ ಕರೆ ಮಾಡಿದ್ದೆ. 443 00:35:47,604 --> 00:35:48,647 ಕೆಲಸ ಹೋಗುವಂತೆ ಮಾಡಿದೆ. 444 00:35:50,315 --> 00:35:51,483 ಅದು ನೀವೇ. 445 00:35:52,526 --> 00:35:53,944 ಕದ್ದಿದ್ದೇನೆಂದು ಸುಳ್ಳು ಹೇಳಿದಿರಿ. 446 00:35:54,570 --> 00:35:57,531 ಈಗ ಅದು ಕ್ಷುಲ್ಲಕ ಅನಿಸುತ್ತದೆ, ಆದರೆ ಆ ಸಮಯಲ್ಲಿ, 447 00:35:58,365 --> 00:35:59,908 ನಾನು ಅದನ್ನು ಮಾತ್ರ ಯೋಚಿಸಬಲ್ಲವಳಾಗಿದ್ದೆ. 448 00:36:01,326 --> 00:36:03,120 ನನಗೆ ನೋವಾಗಿತ್ತು ಸಿಟ್ಟು ಬಂದಿತ್ತು. 449 00:36:03,996 --> 00:36:05,831 ಆಕ್ರೋಶಗೊಳ್ಳಲು ನಿಮಗೆ ಎಲ್ಲಾ ಹಕ್ಕು ಇತ್ತು. 450 00:36:05,914 --> 00:36:09,334 ನನ್ನ ಆರೋಪಗಳು ನಿಮ್ಮ ವಿವಾಹದ ಮೇಲೆ ಪರಿಣಾಮ ಬೀರಿದ್ದಕ್ಕೆ ಕ್ಷಮಿಸು. 451 00:36:09,543 --> 00:36:12,212 ಡೇವಿಡ್ ಕುರಿತು ವೈಯಕ್ತಿಕವೇನೂ ಇರಲಿಲ್ಲ. 452 00:36:13,088 --> 00:36:17,301 ಉತ್ತರಕ್ಕಾಗಿ ಹತಾಶಳಾಗಿದ್ದೆ, ಎಲ್ಲಿ ಬೇಕಾದರೂ ಹುಡುಕಲು ಸಿದ್ಧಳಿದ್ದೆ. 453 00:36:33,567 --> 00:36:34,401 ಕ್ಷಮಿಸಿ. 454 00:36:37,738 --> 00:36:39,489 ನಾನು ಮಾಂಸ, ಹಾಲಿನ ಬಗ್ಗೆ ಮಾತ್ರ ಯೋಚಿಸಬಲ್ಲೆ. 455 00:36:40,157 --> 00:36:40,991 ಮಾಂಸ ಮತ್ತು ಹಾಲು. 456 00:36:41,700 --> 00:36:42,618 ನಿನಗೆ ಹಸಿವಾಗಿದೆ. 457 00:36:42,993 --> 00:36:44,620 ಕಳೆದ ರಾತ್ರಿ, ಹಾಸಿಗೆಯಲ್ಲಿದ್ದಾಗ, 458 00:36:44,703 --> 00:36:48,874 ಕಣ್ಣು ಮುಚ್ಚಿದಾಗ, ನನ್ನ ಕಣ್ಣಾಲಿಗಳ ಹಿಂದೆ ಕೋಳಿಮರಿಯ ಸತ್ತ ದೇಹವಿತ್ತು. 459 00:36:50,792 --> 00:36:54,046 ಮಾಂಸ ತಿನ್ನಬೇಕೆಂದು ಅದೆಷ್ಟು ಬಯಕೆಯಾಗಿತ್ತೆಂದರೆ ಅದರ ವಾಸನೆ ಕೂಡ ಬಂದಿತ್ತು. 460 00:36:54,880 --> 00:36:56,048 ನಿನ್ನಲ್ಲಿ ಮಾಂಸ ಬೆಳೆಯುತ್ತಿದೆ. 461 00:36:57,007 --> 00:36:58,675 ನೀನು ಆ ಕನಸು ಕಾಣುವುದು ಅರ್ಥವಾಗುತ್ತದೆ. 462 00:37:10,103 --> 00:37:12,230 -ಮಿಸ್ ಕಿಮ್, ದಯವಿಟ್ಟು ನನ್ನ ಜೊತೆ ಬನ್ನಿ. -ಸರಿ. 463 00:37:17,277 --> 00:37:20,030 ಮರ್ಸಿ ಕಿಮ್. ಇಪ್ಪತ್ತೈದು. 464 00:37:21,156 --> 00:37:23,367 ನಿಮ್ಮ ಕೊನೆಯ ಮುಟ್ಟಿನ ದಿನ ನನಗೆ ಹೇಳಬಹುದೇ? 465 00:37:23,742 --> 00:37:24,993 ಫಾರ್ಮಿನಲ್ಲಿ ಖಾಲಿ ಬಿಟ್ಟಿದ್ದೀರಿ. 466 00:37:26,161 --> 00:37:30,791 ನಾನು ಸಾಮಾನ್ಯವಾಗಿ ಅದರ ಮೇಲೆ ನಿಗಾ ಇರಿಸುವುದಿಲ್ಲ. 467 00:37:31,166 --> 00:37:32,000 ಹೌದೇ. 468 00:37:33,043 --> 00:37:35,087 ಸರಿ, ಅದನ್ನು ಮಗುವೇ ನಮಗೆ ಹೇಳಬೇಕಿದೆ. 469 00:37:35,170 --> 00:37:36,338 ದಯವಿಟ್ಟು ಮಲಗಿ. 470 00:37:39,424 --> 00:37:40,926 ನಿನ್ನ ಬಟ್ಟೆ ತೆರೆಯಲಿದ್ದೇವೆ. 471 00:37:41,593 --> 00:37:43,178 ಬಹುಶಃ ನೀವು ಮೊದಲು ನನಗೆ ಊಟ ಖರೀದಿಸಬೇಕು. 472 00:37:45,597 --> 00:37:46,431 ಸರಿ. 473 00:37:53,146 --> 00:37:54,147 ಒಳ್ಳೆಯದು. 474 00:37:58,986 --> 00:37:59,903 ಆರಾಮವಾಗಿರಿ. 475 00:38:01,905 --> 00:38:04,074 ನಿನ್ನ ಆರೈಕೆ ಚೆನ್ನಾಗಿ ಮಾಡುತ್ತಿರುವೆಯಾ? 476 00:38:05,033 --> 00:38:06,201 ಫಾಲಿಕ್ ಆಸಿಡ್? 477 00:38:07,953 --> 00:38:09,121 ಪೋಷಕಾಂಶ? 478 00:38:10,247 --> 00:38:13,125 ವೋಡ್ಕಾ ಜೊತೆ ತಕೊಳ್ಳೋ ಕಿತ್ತಳೆ ಜೂಸ್ನ ಪರಿಗಣಿಸಬೋದಾ? 479 00:38:14,001 --> 00:38:15,252 ಇಲ್ಲ. 480 00:38:17,421 --> 00:38:20,090 ಎಷ್ಟು ವಾರಗಳಾಗಿವೆ ಎಂದು ತಿಳಿಯಲು ಕೆಲ ಪರೀಕ್ಷೆ ನಡೆಸುವೆವು. 481 00:38:25,470 --> 00:38:27,264 ನೀನು ಬಹಳ ದೂರ ಸಾಗಿರುವೆ. 482 00:38:28,181 --> 00:38:29,766 ವೈದ್ಯರನ್ನು ನೋಡಿಲ್ಲವೇ? 483 00:38:31,059 --> 00:38:32,436 ನನ್ನ ಮಾಡಬೇಕಾದ ಕೆಲಸದ ಪಟ್ಟಿಯಲ್ಲಿದೆ. 484 00:38:34,980 --> 00:38:37,566 ನೀನು ಸಪ್ಲಿಮೆಂಟ್ ತೆಗೆದುಕೊಳ್ಳುವುದನ್ನು ಆರಂಭಿಸಬೇಕು. 485 00:38:42,279 --> 00:38:43,405 ನಿನ್ನ ಮಗು ಇಲ್ಲಿದೆ. 486 00:38:48,243 --> 00:38:49,411 ಅದು ನನ್ನ ಮಗುವೇ? 487 00:38:51,163 --> 00:38:55,208 ಹೌದು. ನಿನಗೆ 23 ವಾರ ಆಗಿರಬೇಕೆಂದು ಹೇಳಬಲ್ಲೆ. 488 00:38:59,421 --> 00:39:02,841 ನನಗೆ ಅದು ತಿಳಿಯುತ್ತಿಲ್ಲ, ಅದು ಚಲಿಸುತ್ತಿದೆ. ನಿಜವಾಗಿಯೂ ವಿಚಿತ್ರ. 489 00:39:03,842 --> 00:39:06,595 ಎಲ್ಲವೂ ನಾರ್ಮಲ್ ಆಗಿದೆ, ಅದೃಷ್ಟವಶಾತ್ ನೀನಿನ್ನೂ ಯುವತಿ. 490 00:39:07,220 --> 00:39:09,806 ಬಹಳಷ್ಟು ಮಹಿಳೆಯರು ವಯಸ್ಸಾದ ಮೇಲೆ ಗರ್ಭ ಧರಿಸುತ್ತಿದ್ದಾರೆ. 491 00:39:12,893 --> 00:39:14,561 ಲಿಂಗ ತಿಳಿಯಬೇಕೇ? 492 00:39:46,635 --> 00:39:49,304 ಬಹಳ ಸಮಯದಿಂದ, ನಿನ್ನನ್ನು ತೆಗೆದುಹಾಕಬೇಕೆಂದು ಬಯಸಿದ್ದೆ. 493 00:39:50,597 --> 00:39:52,891 ನೀನು ಅಸ್ತಿತ್ವದಲ್ಲಿರಬಾರದೆಂದು ಬಯಸಿದ್ದೆ, 494 00:39:54,559 --> 00:39:57,104 ಇಲ್ಲಿ ನೀನಿದ್ದು ಜಗತ್ತಿಗೆ ಸೇರಿಸುತ್ತಿರುವೆ. 495 00:39:59,106 --> 00:40:00,857 ಅದು ವಿಪರ್ಯಾಸ, ಅಲ್ಲವೇ? 496 00:40:08,824 --> 00:40:11,201 ನನ್ನ ಮಗುವನ್ನು ಹೊಂದುವ ಬಗ್ಗೆ ಯಾವತ್ತಾದರೂ ಯೋಚಿಸಿದ್ದಿರಾ? 497 00:40:12,577 --> 00:40:14,496 ಏಕೆಂದರೆ ಅದರ ಬಗ್ಗೆಯೇ ನಾನು ಸದಾ ಯೋಚಿಸುತ್ತಿರುವೆ. 498 00:40:18,542 --> 00:40:19,793 ಹಾಗೆ ಹೇಳಬೇಡ. 499 00:40:22,295 --> 00:40:23,755 ಅದರ ಬಗ್ಗೆ ಯೋಚಿಸಬೇಡ. 500 00:40:23,839 --> 00:40:25,632 ನಿಮ್ಮ ಬಹಳಷ್ಟು ಋಣ ನನ್ನ ಮೇಲಿದೆ, 501 00:40:27,217 --> 00:40:29,511 ನಿಮ್ಮಿಂದ ಬಹಳಷ್ಟು ಕಸಿದಿದ್ದೇನೆಂಬ ನೋವು. 502 00:40:31,012 --> 00:40:32,806 ಅದನ್ನು ಸರಿಪಡಿಸಲು ನನಗಾಗುತ್ತಿಲ್ಲ. 503 00:40:35,100 --> 00:40:36,726 ನಿಮಗೆ ಏನಾದರೂ ಕೊಡಬೇಕೆಂದು ಬಯಸುವೆ. 504 00:40:36,810 --> 00:40:38,520 ನಿನಗೆ ನಿನ್ನ ಮಗು ಬೇಡವೇ? 505 00:40:43,191 --> 00:40:44,359 ನನಗೆ ಬೇಕು. 506 00:40:47,070 --> 00:40:48,947 ಆದರೆ ಆಕೆಗೆ ಸಮಸ್ಯೆ ಸೃಷ್ಟಿಸುವುದು ನನಗೆ ಬೇಡ. 507 00:40:50,866 --> 00:40:51,867 ಆದರೆ ನಾನು ಹಾಗೆ ಮಾಡುವೆ. 508 00:40:53,368 --> 00:40:54,744 ಅದು ಹುಡುಗಿ. 509 00:40:58,748 --> 00:41:00,667 ಈಗಾಗಲೇ ಆಕೆಗಾಗಿ ನನಗೆ ಭಯವಾಗುತ್ತಿದೆ. 510 00:41:38,371 --> 00:41:40,498 ದಯವಿಟ್ಟು ಗಮನ ನೀಡಿ. ಪ್ರಯಾಣಿಕರು... 511 00:41:44,753 --> 00:41:47,672 ... ನಿರ್ಗಮನ ದ್ವಾರವು ಈಗ ಬದಲಾಗಿದೆ ಎಂದು ದಯವಿಟ್ಟು ಗಮನಿಸಿ... 512 00:41:47,756 --> 00:41:48,590 ಮರ್ಸಿ-ಆ! 513 00:41:50,300 --> 00:41:51,301 ಹೇ, ಅಮ್ಮಾ. 514 00:41:53,220 --> 00:41:54,304 ಏನಿದು? 515 00:41:54,930 --> 00:41:57,265 ಇಲ್ಲ, ಕೆಲ ಪೌಂಡ್ ತೂಕ ಹೆಚ್ಚಿಸಿಕೊಂಡಿರುವೆ. 516 00:41:58,558 --> 00:41:59,726 ಮೀಯಂಗ್-ಅ... ನೀನು? 517 00:41:59,851 --> 00:42:00,852 ದಪ್ಪಗಾಗಿರುವೆ, ನಂಗೊತ್ತು. 518 00:42:02,562 --> 00:42:05,440 ನಾಟಕ ಬೇಡ! ನೀನು ದಪ್ಪ ಆಗಿಲ್ಲ! ನೀನು ಗರ್ಭಿಣಿ! 519 00:42:05,690 --> 00:42:07,275 ಓಹ್, ದೇವರೇ. ಅದು ನಿಜವೇ? 520 00:42:07,609 --> 00:42:09,736 ನಾನು ತಿಂದ ಡಿಮ್ ಸಮ್ ಹಾಗೆ ಮಾಡಿದೆ ಅಂದುಕೊಂಡೆ. 521 00:42:09,986 --> 00:42:10,820 ಕೆಟ್ಟ ಹುಡುಗಿ! 522 00:42:10,987 --> 00:42:11,947 ಹೇಗೆ? 523 00:42:12,656 --> 00:42:13,740 ಯಾವಾಗ? 524 00:42:15,575 --> 00:42:16,993 ಅಪ್ಪ ಯಾರು? 525 00:42:17,577 --> 00:42:20,163 ನನಗೆ ಮೊದಲೇ ಏಕೆ ಹೇಳಿಲ್ಲ? 526 00:42:20,664 --> 00:42:22,499 ಖುದ್ದಾಗಿ ಹೇಳಬೇಕೆಂದಿದ್ದೆ. 527 00:42:24,876 --> 00:42:27,128 ಬಾ, ಜನರು ದಿಟ್ಟಿಸುತ್ತಿದ್ದಾರೆ. ಹೋಗೋಣ. 528 00:42:29,881 --> 00:42:31,675 ಮಗು ಹುಟ್ಟಿದ ನಂತರ... 529 00:42:32,050 --> 00:42:33,635 ಸ್ತನ್ಯಪಾನಕ್ಕಾಗಿ ನಾನು ನಿನಗಾಗಿ ಮಿಯುಕ್ ಗುಕ್ ಮಾಡಿಕೊಡುವೆ. 530 00:42:35,053 --> 00:42:36,888 ಆಕ್ಸ್ಟೈಲ್ ತರಲು ಹೊರಗೆ ಹೋಗಬೇಕಿದೆ. 531 00:42:36,972 --> 00:42:38,014 ನಿನಗೆ ಕೊಲಾಜನ್ ಅಗತ್ಯವಿದೆ. 532 00:42:39,224 --> 00:42:41,518 ಅಮ್ಮ, ಅದು ತುಂಬಾ ಆಯಿತು. ಹೆಚ್ಚು ಆಹಾರ ಖರೀದಿಸಬೇಡಿ. 533 00:42:41,601 --> 00:42:43,395 ಈ ಸ್ಥಳದಲ್ಲಿ ಬೇರೇನೂ ತುಂಬಿಸಲು ಆಗದು. 534 00:42:43,937 --> 00:42:45,355 ಸದ್ಯಕ್ಕೆ ಅದು. 535 00:42:46,314 --> 00:42:51,778 ನಿನ್ನೊಂದಿಗೆ ಏನು ಕೊಂಡುಹೋಗುವುದು, ಏನು ಬಿಸಾಕುವುದೆಂದು ನೋಡೋಣ. 536 00:42:53,071 --> 00:42:54,114 ನಾನು ಸಹಾಯ ಮಾಡುವೆ. 537 00:42:54,197 --> 00:42:55,365 ತೆಗೆದುಕೊಂಡು ಹೋಗುವುದು? 538 00:42:55,573 --> 00:42:57,325 ಹೌದು, ನ್ಯೂಯಾರ್ಕಿಗೆ. 539 00:42:57,784 --> 00:42:59,327 ನಿನ್ನ ಟಿಕೆಟ್ ಕಾಯ್ದಿರಿಸುವೆ. 540 00:42:59,786 --> 00:43:01,121 ಜೊತೆಯಾಗಿ ನಾವು ಹೋಗಬಹುದು. 541 00:43:02,080 --> 00:43:03,415 ನಾನು ಹೋಗುವುದಿಲ್ಲ, ಅಮ್ಮಾ. 542 00:43:03,498 --> 00:43:04,332 ಹೋಗುವುದಿಲ್ಲವೇ? 543 00:43:05,041 --> 00:43:06,084 ಖಂಡಿತಾ ಹೋಗುವೆ. 544 00:43:06,835 --> 00:43:08,253 ಇಲ್ಲಿ ನನಗೆ ಸಾಕಷ್ಟು ಸ್ಥಳವಿಲ್ಲ. 545 00:43:08,420 --> 00:43:09,629 ನಿನ್ನನ್ನು ಇಲ್ಲಿ ಉಳಿದುಕೊಳ್ಳಲು ಯಾರು ಹೇಳಿದರು? 546 00:43:13,091 --> 00:43:14,592 ಮತ್ತೆ ನಿನ್ನನ್ನು ಯಾರು ನೋಡಿಕೊಳ್ಳುವರು? 547 00:43:22,058 --> 00:43:23,768 ಅಪ್ಪ ಯಾರೆಂದು ಇನ್ನೂ ನೀನು ಹೇಳಿಲ್ಲ. 548 00:43:25,103 --> 00:43:26,146 ಹಾಗಿರುವಾಗ ನಾನಂದುಕೊಳ್ಳುವೆ... 549 00:43:26,604 --> 00:43:28,315 ಅವನಿಂದ ಏನೂ ನಿರೀಕ್ಷಿಸಲು ಸಾಧ್ಯವಿಲ್ಲವೇ? 550 00:43:34,571 --> 00:43:36,197 ಹಾಗೆಂದು ನಾನು ಯೋಚಿಸಿದೆ. 551 00:43:47,792 --> 00:43:51,212 -ಡೈಸಿ, ಬಾ, ಹೋಗೋಣ! ಡೈಸಿ! -ಬಾ, ಚೌನ್ಸೆ. ಬಾ! 552 00:43:51,296 --> 00:43:53,298 -ಫಿಲಿಪ್, ನಿನ್ನ ಹೂಡಿ ಎಲ್ಲಿ? -ಬ್ಯಾಗ್ ಪ್ಯಾಕಿನಲ್ಲಿ. 553 00:43:53,381 --> 00:43:55,216 -ನಿನ್ನ ಬ್ಯಾಗ್ ಪ್ಯಾಕ್ ಎಲ್ಲಿ? -ನನ್ನ ಬಳಿ ಇದೆ. 554 00:43:55,300 --> 00:43:58,720 -ಬನ್ನಿ! ನೀವು ವಿಮಾನ ತಪ್ಪಿಸಿಕೊಳ್ಳಬಹುದು. -ಅಮ್ಮಾ, ನನ್ನ ಹೆಡ್ ಫೋನ್ ತುಂಡಾಗಿದೆ. 555 00:43:58,803 --> 00:44:01,014 ಹೇ, ಬನ್ನಿ, ಹೊರಡೋಣ. ತಡವಾಗುತ್ತದೆ. 556 00:44:01,514 --> 00:44:05,226 ಚೌನ್ಸೆ ಏನೂ ತಿಂದಿಲ್ಲ, ಕುಡಿದಿಲ್ಲ ತಾನೇ? ಏನೂ ಇಲ್ಲ. 557 00:44:05,310 --> 00:44:08,938 -ಸರಿ, ಮತ್ತೆ ಆ ಪುಟ್ಟ ಆಟಿಕೆ ಆವನಿಗಾಗಿ ಇದೆಯೇ? -ಹೌದು. 558 00:44:39,803 --> 00:44:41,304 ನಾವ್ಯಾರೆಂದು ನೀನಂದುಕೊಂಡಿರುವೆ? 559 00:44:42,222 --> 00:44:43,390 ನಮ್ಮಲ್ಲಿ ಯಾರಾದರೂ, 560 00:44:45,141 --> 00:44:47,227 ದುರಂತ ನಮಗಾಗದು ಎಂದು ತಿಳಿಯಲು. 561 00:44:49,938 --> 00:44:52,315 ಅದು ನನ್ನೊಂದಿಗಿಲ್ಲದ ದಿನ ಊಹಿಸಲು ನನಗಾಗದು. 562 00:44:54,025 --> 00:44:55,902 -ನನ್ನ ಬಗ್ಗೆ ನೆನಪಾಗದೇ ಇರುವುದು... -ನಿಲ್ಲಿಸು. 563 00:44:56,236 --> 00:44:58,488 ನಿನ್ನನ್ನು ನೀನು ದಂಡಿಸುವ ಅಗತ್ಯವಿಲ್ಲ, ತಿಳಿಯಿತೇ. 564 00:44:59,906 --> 00:45:02,867 ನೀನು ಚೆನ್ನಾಗಿ ಬಾಳುವ ಮೂಲಕ ಯಾರಿಗೂ ದ್ರೋಹವೆಸಗುತ್ತಿಲ್ಲ. 565 00:45:06,871 --> 00:45:11,292 ಗಸ್ ನಾಪತ್ತೆಯಾದ ಮೊದಲ ಕೆಲ ದಿನಗಳಲ್ಲಿ ನೋವಿನಿಂದ ನರಳುತ್ತಿದ್ದೆ. 566 00:45:11,376 --> 00:45:13,670 ಊಹಿಸಲಸಾಧ್ಯವಾದ ನೋವು. 567 00:45:14,003 --> 00:45:15,380 ಸಾಯಬೇಕೆಂದು ಅನಿಸಿತ್ತು. 568 00:45:17,590 --> 00:45:18,758 ಆದರೆ ಆಗಿರಲಿಲ್ಲ, 569 00:45:19,759 --> 00:45:22,971 ಏಕೆಂದರೆ ಗಸ್ ನನ್ನು ಹುಡುಕಲು ನಾನು ಬದುಕಬೇಕಿತ್ತು. 570 00:45:25,390 --> 00:45:29,060 ಜೀವನದಲ್ಲಿ ನೋವು ಬಿಟ್ಟು ಬೇರೇನೂ ಊಹಿಸಲು ಕಷ್ಟ ಎಂದು ನನಗೆ ಗೊತ್ತು. 571 00:45:30,437 --> 00:45:31,521 ಆದರೆ ಅದು ಸಾಧ್ಯ. 572 00:45:32,856 --> 00:45:34,065 ನಾವು ಬದುಕುಳಿಯುತ್ತೇವೆ. 573 00:45:34,149 --> 00:45:37,485 ಹಾಗೆಯೇ ಆಗಬೇಕು, ಡೈಸಿ ಮತ್ತು ಫಿಲಿಪ್ಗಾಗಿ. 574 00:45:42,282 --> 00:45:44,284 ಕೆಟ್ಟ ಯೋಚನೆಗಳು ಕಾಡಿದಾಗ... 575 00:45:44,367 --> 00:45:46,536 ಅವುಗಳು ನಿನ್ನನ್ನು ಹಿಮ್ಮೆಟ್ಟಿಸಬೇಕೇ... 576 00:45:46,619 --> 00:45:48,413 ಅಥವಾ ಎದ್ದೇಳುವೆಯೇ ಎಂದು ನೀನು ನಿರ್ಧರಿಸುವೆ... 577 00:45:48,496 --> 00:45:49,372 ಹಲ್ಲುಜ್ಜುವುದು... 578 00:45:49,456 --> 00:45:50,498 ಪರದೆಗಳನ್ನು ತೆರೆ. 579 00:45:50,582 --> 00:45:51,958 ವಾಕಿಂಗಿಗೆ ಹೋಗು. 580 00:45:52,041 --> 00:45:54,461 ಮತ್ತು ನೀನು ಇನ್ನೂ ಹೊಂದಿರುವ ಮಕ್ಕಳನ್ನು ನೋಡುತ್ತೀ... 581 00:45:58,465 --> 00:45:59,924 ಮತ್ತು ನೀನು ಗುನುಗುತ್ತೀ. 582 00:46:03,303 --> 00:46:05,763 ಆಗ ಮೌನ ನಮ್ಮನ್ನು ತುಂಬಾ ಆವರಿಸುವುದಿಲ್ಲ. 583 00:46:12,103 --> 00:46:14,063 ಎದೆಹಾಲು ನೀಡಿಕೆ ಸಲಹೆಗಳನ್ನು ನಾನು ಬಳಸಬಹುದು. 584 00:46:22,989 --> 00:46:25,241 -ಎಸ್ಸಿ, ನನ್ನ ಗಮ್ ಎಲ್ಲಿ? -ನಿನ್ನ ಬ್ಯಾಗ್ ಪ್ಯಾಕಿನಲ್ಲಿ. 585 00:46:25,325 --> 00:46:27,702 -ನಾನು ಪರಿಶೀಲಿಸಿದೆ, ಅಲ್ಲಿಲ್ಲ. -ಬ್ಯಾಗ್ ಪ್ಯಾಕಿನಲ್ಲಿದೆ. 586 00:46:27,785 --> 00:46:30,580 ಎಸ್ಸಿ, ನಮಗೆ ನಮ್ಮ ಗಮ್ ಬೇಕು ಇಲ್ಲದೇ ಇದ್ದಲ್ಲಿ ನಮ್ಮ ಕಿವಿ ಒಡೆದು ಹೋಗಲಿವೆ. 587 00:46:30,997 --> 00:46:33,041 -ಸಮಯ? -ಫಿಲಿಪ್ ಚೀಲದಲ್ಲಿದೆ. 588 00:46:33,124 --> 00:46:34,375 ಕಾಲು ಗಂಟೆ ಕಳೆದಿದೆ, ಸರಿಯಾದ ಸಮಯ. 589 00:46:34,459 --> 00:46:36,961 ಎಷ್ಟು ಹೊತ್ತು? ವಿಮಾನ ನಿಲ್ದಾಣ ದೊಡ್ಡದಿದೆ. 590 00:46:37,045 --> 00:46:38,505 ಉದಾಸೀನತೆ ನಿಲ್ಲಿಸು, ಡೈಸಿ. 591 00:46:39,589 --> 00:46:40,840 ಲೇಝಿ ಡೈಸಿ! 592 00:46:40,924 --> 00:46:42,300 -ಲೇಝಿ ಡೈಸಿ! -ಓಹ್, ದೇವರೇ. 593 00:46:42,383 --> 00:46:43,301 ಫಿಲಿಪ್, ಫಿಲಿಪ್. 594 00:46:43,384 --> 00:46:45,720 -ಬಾಯ್ಮುಚ್ಚು! ಅಪ್ಪಾ ನಿಮಗೆ ಕೇಳಿಸಿತೇ? -ಹೇ, ಫಿಲಿಪ್! ಬಾ! 595 00:46:45,803 --> 00:46:47,430 ಕಾಲು ನೋಯುತ್ತಿದೆ ಎಂದು ಹೇಳಿದ್ದು ನೀನು. 596 00:46:47,514 --> 00:46:49,891 ಉದಾಸೀನವೆಂದಲ್ಲ, ಸಾಕರ್ ಆಡುವಾಗ ತರಚಿದ ಗಾಯವಾಗಿದೆ. 597 00:46:49,974 --> 00:46:51,893 ಬಹುಶಃ ನೀನು ಸಾಕರ್ನಲ್ಲಿ ಚೆನ್ನಾಗಿಲ್ಲ. 598 00:46:51,976 --> 00:46:53,561 ಮಕ್ಕಳೇ! ಮಕ್ಕಳೇ! 599 00:46:59,651 --> 00:47:00,818 ಹಾಗಿದ್ದರೆ ಯಾವಾಗ ಹೊರಡುವಿರಿ? 600 00:47:08,618 --> 00:47:09,827 ಅತಿ ಶೀಘ್ರ. 601 00:47:10,662 --> 00:47:13,039 -ವಾವ್! ಆ ವಿಮಾನ ಎಷ್ಟು ದೊಡ್ಡದಿದೆ ನೋಡು. -ಹೌದು, ದೊಡ್ಡದು. 602 00:47:13,122 --> 00:47:14,415 ಇದೊಂದು ಘೋಷಣೆ... 603 00:47:14,499 --> 00:47:16,334 -ಅಪ್ಪ ಅದು ನಮ್ಮದೆ? -ಹೌದು. 604 00:47:21,839 --> 00:47:23,883 ಮನೆಗೆ ವಾಪಸಾಗುವುದು ನಿಮಗೆಲ್ಲರಿಗೂ ಒಳ್ಳೆಯದು. 605 00:47:29,847 --> 00:47:32,016 ಗಸ್ ಇಲ್ಲದೆ ನನಗೆ ಮನೆಯಿಲ್ಲ. 606 00:47:38,648 --> 00:47:40,775 -ಆ ಬದಿ ನೀನು ಶೌಚಾಲಯದ ಹತ್ತಿರ ಇರುವೆ. -ಹೇ, ಹೇ. 607 00:47:40,858 --> 00:47:42,694 ನಾನೇಕೆ ಶೌಚಾಲಯದ ಹತ್ತಿರ ಇರಬೇಕು? 608 00:47:42,777 --> 00:47:45,446 -ನಾನು ಮಧ್ಯದ ಆಸನದಲ್ಲಿ ಕುಳಿತುಕೊಳ್ಳುವುದಿಲ್ಲ. -ನಾವು ಹತ್ತುತ್ತಿದ್ದೇವೆ.. 609 00:47:45,530 --> 00:47:48,157 -ಏಕೆ? -ನಾವು ಆಸನ ಬದಲಾಯಿಸಬಹುದು. 610 00:47:49,325 --> 00:47:50,159 ಮಾರ್ಗರೆಟ್. 611 00:47:50,577 --> 00:47:51,661 ಏನಾಯಿತು? 612 00:47:52,120 --> 00:47:53,204 ನನ್ನಿಂದಾಗದು. 613 00:47:54,664 --> 00:47:55,498 ಅಮ್ಮಾ? 614 00:47:55,582 --> 00:47:56,916 -ಹೇ. -ಅಮ್ಮಾ? 615 00:47:57,875 --> 00:47:58,918 ಸರಿ. 616 00:47:59,377 --> 00:48:01,296 -ಅವನನ್ನು ಇಲ್ಲಿ ಬಿಟ್ಟುಬರಲು ಆಗದು. -ನನಗೆ ಗೊತ್ತು. 617 00:48:01,379 --> 00:48:02,755 ನನಗೆ ಗೊತ್ತು. 618 00:48:02,839 --> 00:48:04,048 -ಅರ್ಥವಾಯಿತು. -ಏನು? 619 00:48:04,132 --> 00:48:06,175 -ನನ್ನಿಂದಾಗದು. -ನಿಲ್ಲು. 620 00:48:06,342 --> 00:48:07,218 ಪರವಾಗಿಲ್ಲ. 621 00:48:08,052 --> 00:48:10,013 -ಸರಿಯಾ? ಪರವಾಗಿಲ್ಲ. -ಅಮ್ಮಾ, ಏನು... 622 00:48:10,096 --> 00:48:12,056 -ಲವ್ ಯೂ. -ಹೀಗೆ ಮಾಡಕೂಡದು. 623 00:48:12,140 --> 00:48:12,974 ಅವನನ್ನು ಮನೆಗೆ ತಾ. 624 00:48:13,141 --> 00:48:16,644 -ಅಮ್ಮಾ, ಏನು ಮಾಡುತ್ತಿರುವಿರಿ. ಹೋಗೋಣ! -ಅಮ್ಮ ಮನೆಯಲ್ಲಿ ಭೇಟಿಯಾಗುವರು, ಸರಿಯೇ? 625 00:48:16,728 --> 00:48:18,187 ಹೋಗೋಣ, ಮಕ್ಕಳೇ. 626 00:48:18,271 --> 00:48:21,024 ಡೈಸಿ, ಅವನನ್ನು ಇಲ್ಲಿ ಬಿಟ್ಟು ಬರಲು ಸಾಧ್ಯವಾಗದು ನನಗೆ. ಸಾಧ್ಯವಾಗದು. 627 00:48:21,107 --> 00:48:23,443 ಜಗತ್ತಿನ ಅತ್ಯಂತ ಕೆಟ್ಟ ಅಮ್ಮ ನೀವು, 628 00:48:23,526 --> 00:48:25,987 ನಿಮ್ಮನ್ನು ದ್ವೇಷಿಸುತ್ತೇನೆ. 629 00:48:26,070 --> 00:48:27,488 -ಡೈಸಿ! -ಡೈಸಿ! 630 00:48:29,073 --> 00:48:30,408 ನಿಮ್ಮನ್ನು ಪ್ರೀತಿಸುವೆ, ಅಮ್ಮಾ. 631 00:48:31,326 --> 00:48:33,578 ಲಾಸ್ ಏಂಜಲಿಸ್ ಗೆ ಫ್ಲೈಟ್ 852 ಗೆ ಕೊನೆಯ ಬೋರ್ಡಿಂಗ್ ಕರೆ. 632 00:48:33,661 --> 00:48:35,079 -ಫಿಲಿಪ್, ನಾವು ಹೋಗಬೇಕು. -ಅಪ್ಪಾ! 633 00:48:35,204 --> 00:48:37,123 -ಬನ್ನಿ, ಚಿಂತಿಸಬೇಡಿ. -ಬನ್ನಿ! 634 00:48:37,206 --> 00:48:39,667 ಮತ್ತೆ ಅವಳನ್ನು ಭೇಟಿಯಾಗುವೆ. ಸರಿಯೇ? 635 00:48:43,963 --> 00:48:44,797 ಎಸ್ಸಿ. 636 00:48:48,676 --> 00:48:49,677 ನನಗೆ ಅರ್ಥವಾಗುತ್ತದೆ. 637 00:48:53,348 --> 00:48:55,642 ನೀವು ಜಾಗ್ರತೆ ವಹಿಸಿ. ಸರಿಯೇ? 638 00:49:42,271 --> 00:49:44,732 -ಹಲೋ! ಹಾಯ್! -ಹಲೋ! 639 00:49:44,816 --> 00:49:47,610 ಓಹ್. ನನಗೆ ಬೇಕಿದ್ದುದು ಇದೇ! ಪರಿಪೂರ್ಣ! 640 00:49:47,777 --> 00:49:50,029 -ತುಂಬಾ ಧನ್ಯವಾದ. -ಸಾಕಷ್ಟು ಭಾರವಾಗಿದೆ. 641 00:49:50,113 --> 00:49:52,198 -ನಾನೇ ಕೊಂಡು ಹೋಗುವೆ... -ನಿಮಗೆ ಗೊತ್ತೇ, ನಾನೇ ತರಬಹುದು. 642 00:49:52,281 --> 00:49:53,116 -ಸರಿ. -ಹೌದು. 643 00:49:53,199 --> 00:49:55,618 -ನನಗೆ ಸಿಕ್ಕಿತು. ಧನ್ಯವಾದ! -ಬೈ! 644 00:49:55,702 --> 00:49:56,661 ಧನ್ಯವಾದ! 645 00:50:00,957 --> 00:50:02,125 ರಗ್ ಹೊತ್ತುಕೊಂಡ ಮಹಿಳೆ. 646 00:50:02,208 --> 00:50:03,543 ಕ್ಷಮಿಸಿ. 647 00:50:05,378 --> 00:50:06,504 ನನ್ನನ್ನು ಕ್ಷಮಿಸಿ. 648 00:50:19,976 --> 00:50:20,810 ನಿನಗೆ ಸಿಕ್ಕಿತು. 649 00:50:20,893 --> 00:50:22,770 ಧನ್ಯವಾದ. ಧನ್ಯವಾದ. 650 00:50:25,690 --> 00:50:27,483 ಹೌದು. ಕ್ಷಮಿಸಿ. 651 00:50:27,942 --> 00:50:29,026 ಧನ್ಯವಾದ! 652 00:50:30,153 --> 00:50:31,237 ಎಕ್ಸ್ಕ್ಯೂಸ್ ಮಿ. 653 00:50:31,571 --> 00:50:32,530 ಎಕ್ಸ್ಕ್ಯೂಸ್ ಮಿ. 654 00:50:32,613 --> 00:50:34,782 -ಧನ್ಯವಾದ. 655 00:50:52,550 --> 00:50:53,885 ಸ್ವಲ್ಪ ಗೊಮ್-ಟಂಗ್ ತಿನ್ನು. 656 00:50:55,970 --> 00:50:57,263 ತಳಮಳಗೊಳ್ಳಬೇಡ. 657 00:51:08,816 --> 00:51:09,734 ಇಲ್ಲಿ ಬಾ. 658 00:51:12,278 --> 00:51:13,362 ಅಮ್ಮಾ. ನಾನು ಚೆನ್ನಾಗಿರುವೆ. 659 00:51:13,446 --> 00:51:14,614 ಇಲ್ಲಿ ಬಾ! 660 00:51:26,167 --> 00:51:30,129 ನನ್ನ ಮಗುವಿಗೆ ಮಗುವಾಗಲಿದೆಯಲ್ಲ? 661 00:52:03,746 --> 00:52:05,206 ಉಮ್ಮಾ. 662 00:52:15,258 --> 00:52:17,009 ಎಲ್ಲಾ ಸರಿಯಾಗಲಿದೆ... 663 00:52:18,678 --> 00:52:19,971 ಉಮ್ಮಾ ಇಲ್ಲಿದ್ದಾರೆ. 664 00:52:37,405 --> 00:52:38,531 ಅಳುವುದನ್ನು ನಿಲ್ಲಿಸು. 665 00:52:42,076 --> 00:52:44,954 ನಿನ್ನ ಮಗುವಿಗಾಗಿ ನೀನು ಚೆನ್ನಾಗಿ ತಿನ್ನಬೇಕು. 666 00:52:46,289 --> 00:52:47,623 ಸ್ವಲ್ಪ ಸೂಪ್ ಕುಡಿ. 667 00:52:48,749 --> 00:52:50,418 ಸ್ವಲ್ಪ ಅನ್ನ ತರುವೆ. 668 00:53:44,972 --> 00:53:48,184 ನಾನು ಮಾಡಿದ್ದನ್ನು ನಾನು ಯೋಚಿಸದೆ ಒಂದು ಕ್ಷಣವೂ ಕಳೆಯದು. 669 00:53:50,227 --> 00:53:52,772 ನಾನ ನಿನ್ನ ಬಗ್ಗೆ ಯೋಚಿಸದೆ ಒಂದು ಕ್ಷಣವೂ ಕಳೆಯದು. 670 00:53:55,316 --> 00:53:57,318 ನಾನು ಒಂದು ನಿರ್ದಿಷ್ಟ ವಿಷಯಕ್ಕಾಗಿ ಆಶಿಸಿದ್ದೆ. 671 00:53:58,778 --> 00:54:00,988 ಕರುಣೆಯ ಊಹಿಸಲಾಗದ ಕಾರ್ಯವನ್ನು, 672 00:54:02,239 --> 00:54:05,451 ಎಲ್ಲವನ್ನೂ ಸರಿಪಡಿಸುವ ಒಂದು ಕ್ಷಮಾಪಣೆಯನ್ನು. 673 00:54:06,953 --> 00:54:09,330 ನನಗೆ ಮತ್ತೆ ಆರಂಭಿಸಲು ಅನುಮತಿ ನೀಡಬಹುದು. 674 00:54:12,416 --> 00:54:14,794 ಆದರೆ ಎಲ್ಲವನ್ನೂ ಸರಿಪಡಿಸಲು ಯಾವುದೇ ಪವಾಡವಿಲ್ಲ. 675 00:54:15,586 --> 00:54:17,797 ನೋವನ್ನು ಇರಿಸಿಕೊಂಡೇ ಜೀವನ ಸಾಗಿಸಬೇಕು. 676 00:54:20,341 --> 00:54:21,801 ನೋವು ನಿಮ್ಮ ಭಾಗವಾಗುತ್ತದೆ. 677 00:54:22,009 --> 00:54:24,303 ಬಹು ಬೇಗ, ಅದಿಲ್ಲದೆ ನೀವು ನಿಮ್ಮನ್ನು ಗುರುತಿಸಲಾರಿರಿ. 678 00:54:27,765 --> 00:54:28,891 ಎಲ್ಲಕ್ಕಿಂತ ಹೆಚ್ಚಾಗಿ... 679 00:54:29,976 --> 00:54:32,603 ಭವಿಷ್ಯದಲ್ಲಿ ಯಾವದೋ ಒಂದು ಹಂತದಲ್ಲಿ, ನೀನು ಖುಷಿಯಾಗಬಹುದೆಂದು. 680 00:54:34,397 --> 00:54:37,400 ಒಮ್ಮೊಮ್ಮೆ ನೋವು ಮರೆತು ನಿನ್ನನ್ನು ಹುಡುಕಬಹುದೆಂದು. 681 00:54:40,236 --> 00:54:43,447 ನಾನು... ನಾನು ಕೂಡ ಸಂತೋಷವಾಗಿರಲು ಬಯಸುತ್ತೇನೆ. 682 00:54:45,449 --> 00:54:46,492 ನನ್ನ ಮಗಳಿಗಾಗಿ. 683 00:54:48,703 --> 00:54:49,662 ನನಗಾಗಿ. 684 00:54:51,998 --> 00:54:54,417 ಮತ್ತೆ ಬಾಳಿ ಬದುಕುವ ಆಯ್ಕೆಯನ್ನು ನಾವು ಮಾತ್ರ ಮಾಡಬಹುದು. 685 00:54:59,463 --> 00:55:01,507 ನಾವು ಒಂದು ಪಾದವನ್ನು ಇನ್ನೊಂದರ ಮುಂದೆ ಇಡುತ್ತೇವೆ... 686 00:55:03,801 --> 00:55:05,761 ಒಂದಾದ ನಂತರ ಇನ್ನೊಂದು ಉಸಿರು ಎಳೆಯುತ್ತೇವೆ... 687 00:55:09,640 --> 00:55:10,891 ನಾವು ಗುನುಗುತ್ತೇವೆ. 688 00:57:19,228 --> 00:57:21,230 ಉಪ ಶೀರ್ಷಿಕೆ ಅನುವಾದ: ಜಯಶ್ರೀ 689 00:57:21,313 --> 00:57:23,315 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ