1 00:00:06,465 --> 00:00:07,882 ರೀಚರ್ ಹಿಂದಿನ ಸಂಚಿಕೆಯಲ್ಲಿ… 2 00:00:07,883 --> 00:00:10,510 ಸಂಭಾವ್ಯ ಅಧ್ಯಕ್ಷೀಯ ಅಭ್ಯರ್ಥಿಯ ಸಿಬ್ಬಂದಿ ಮುಖ್ಯಸ್ಥ ಇರುವ 3 00:00:10,511 --> 00:00:12,178 ರೈಲಿನಲ್ಲಿಯೇ ಮಹಿಳೆ ಆತ್ಮಹತ್ಯೆ ಮಾಡಿಕೊಂಡಳಾ? 4 00:00:12,179 --> 00:00:14,181 ಅದಕ್ಕಾಗಿ ಸಿ ಐ ಎ ಜನರನ್ನು ಅಪಹರಿಸಲು ಪ್ರಾರಂಭಿಸುತ್ತದೆಯೇ? 5 00:00:15,224 --> 00:00:16,224 ಅದು ರೋಚಕ ಕಥೆಯೇ. 6 00:00:16,225 --> 00:00:19,310 ಬೆನ್ ಎಲ್ಲಿದ್ದಾನೆಂದು ನನಗೆ ಗೊತ್ತಿಲ್ಲ, ಆದರೆ ಅವನ ಜೊತೆ ಹೋದ ಹುಡುಗಿ ನನಗೆ ಗೊತ್ತು. 7 00:00:19,311 --> 00:00:22,523 - ಹಾಂ. ನಿಜ ಹೆಸರು ಮೇರಿ ಎಲ್ಲೆನ್ ಡ್ಯಾನಿಯಲ್ಸ್. - ಯಾವುದಾದರೂ ವಿಳಾಸವಿದೆಯೇ? 8 00:00:23,649 --> 00:00:25,483 ಇದನ್ನು ಮಾಡಿದವರು ಯಾರೋ ಹೊಸಬರಲ್ಲ. 9 00:00:25,484 --> 00:00:27,235 ಆತ್ಮಹತ್ಯೆಯವಳ ಕಾರು ಸಿಕ್ಕಿದೆ. 10 00:00:27,236 --> 00:00:29,696 ಇಷ್ಟು ಒಳ್ಳೆಯ ಕಾರನ್ನು ಬಿಟ್ಟು ಸಬ್‌ವೇಯಲ್ಲಿ 11 00:00:29,697 --> 00:00:30,573 ಏಕೆ ಹೋಗಿರಬಹುದು ಅವಳು? 12 00:00:31,031 --> 00:00:32,199 ಇದು ಕೆಲಸದ ಬ್ಯಾಡ್ಜ್. 13 00:00:33,909 --> 00:00:38,329 ಹೆಸರು, ಆನಾ ಮೆರಿಕ್. ಕೆಲಸದ ವಿಳಾಸ ಮತ್ತು ಎಂಟನೇ ಹಂತದ ಅನುಮತಿ? 14 00:00:38,330 --> 00:00:40,249 ಕನಿಷ್ಠ ಮುಂದೆ ಎಲ್ಲಿಗೆ ಹೋಗುತ್ತೇವೆಂದು ತಿಳಿದಿದೆ. 15 00:00:40,958 --> 00:00:42,376 ಆನಾ ಇಲ್ಲಿ ಏನು ಮಾಡುತ್ತಿದ್ದಳು? 16 00:00:43,294 --> 00:00:45,128 ಪೂತ್ರ ಮತ್ತು ಅವನ ಸೈನಿಕರಿಗೆ ಒಬ್ಬ ಅಮೆರಿಕನ್ 17 00:00:45,129 --> 00:00:47,881 - ಡೆಲ್ಟಾ ಫೋರ್ಸ್ ತಜ್ಞ ತರಬೇತಿ ಕೊಟ್ಟಿದ್ದ. - ಜಾನ್ ಸ್ಯಾಮ್ ಸನ್. 18 00:00:47,882 --> 00:00:50,633 ಆ ಡ್ರೈವ್ ಸ್ಯಾಮ್ ಸನ್‌ನನ್ನು ಇದಕ್ಕೆ ಸಂಪರ್ಕಿಸುವ ಪುರಾವೆಯನ್ನು ಹೊಂದಿದೆ. 19 00:00:50,634 --> 00:00:53,928 ನಾನು ಎಂದಿಗೂ ನಾಗರಿಕರನ್ನು ಹಿಂಸಿಸಿ ಕೊಂದಿಲ್ಲ. 20 00:00:53,929 --> 00:00:56,014 - ನಿಮ್ಮ ಸಿಬ್ಬಂದಿ ಮುಖ್ಯಸ್ಥರ ಬಗ್ಗೆ? - ಆತನ ಬಗ್ಗೆ ಏನು? 21 00:00:56,015 --> 00:00:59,184 ಆನಾ ಮೆರಿಕ್ ಸತ್ತ ರಾತ್ರಿ ನೀವು ಅವರ ಜೊತೆ ಸಬ್‌ವೇಯಲ್ಲಿ ಏಕೆ ಇದ್ದಿರಿ? 22 00:00:59,185 --> 00:01:00,102 ಕ್ಷಮಿಸಿ, ಜಾನ್. 23 00:01:01,061 --> 00:01:03,606 - ನೋಲಾನ್. ನೋಲಾನ್, ನೋಲಾನ್! - ಇಲ್ಲ! 24 00:01:12,740 --> 00:01:18,829 {\an8}ಬಾಲ್ಟಿಮೋರ್ 25 00:01:26,045 --> 00:01:28,797 ಮತ್ತು ಕೇಹಿಲ್ ಅವರು ಯಾವುದೇ ಸಂಕಟದ ಲಕ್ಷಣಗಳನ್ನು ತೋರಿದ್ದರೇ? 26 00:01:28,798 --> 00:01:29,715 ಇಲ್ಲ. 27 00:01:30,341 --> 00:01:34,761 ಅವರಿಗೆ ಏನಾದರೂ ನಿರ್ದಿಷ್ಟ ಸಂಕಟಗಳಿದ್ದವೇ? ಪ್ರಣಯ ಅಥವಾ ಆರ್ಥಿಕವಾದದ್ದು, ಅಂತಹದ್ದೇನಾದರೂ? 28 00:01:34,762 --> 00:01:35,846 ನನ್ನ ಅರಿವಿಗೆ ಬಂದಿಲ್ಲ. 29 00:01:36,514 --> 00:01:39,390 ಏನನ್ನಾದರೂ ಬರೆದಿದ್ದರಾ? ಒಂದು ಪಠ್ಯ ಸಂದೇಶ, ಬಹುಶಃ ಇಮೇಲ್? 30 00:01:39,391 --> 00:01:41,935 ನೋಡಿ, ಡಿಟೆಕ್ಟಿವ್, ನಿಮ್ಮ ಸಂಪೂರ್ಣತೆಯನ್ನು ನಾನು ಮೆಚ್ಚುವೆ. 31 00:01:41,936 --> 00:01:43,686 ಆದರೆ ಅವರು ಏನನ್ನೂ ಬಿಟ್ಟಿಲ್ಲ. 32 00:01:43,687 --> 00:01:46,232 ಅವರು ಯಾವುದೇ ಅನುಮಾನಾಸ್ಪದ ವರ್ತನೆ ತೋರಿಲ್ಲ, ಮತ್ತು ಈಗ, ನಾನು-- 33 00:01:49,568 --> 00:01:52,779 ಕ್ಷಮಿಸಿ, ನನ್ನ ಸ್ನೇಹಿತನ ಸಾವನ್ನು ಅರಗಿಸಿಕೊಳ್ಳಲು ಪ್ರಯತ್ನಿಸುತ್ತಿದ್ದೇನೆ. 34 00:01:52,780 --> 00:01:56,991 ಅರ್ಥವಾಯಿತು. ಇನ್ನೂ ಏನಾದರೂ ಪ್ರಶ್ನೆಗಳಿದ್ದರೆ, ನಾನು ನಿಮ್ಮ ಕಚೇರಿಯನ್ನು ಸಂಪರ್ಕಿಸುತ್ತೇನೆ. 35 00:01:56,992 --> 00:01:58,077 ಧನ್ಯವಾದ. 36 00:01:59,161 --> 00:02:01,121 ನಿಮ್ಮನ್ನು ಹೇಗೆ ಸಂಪರ್ಕಿಸುವುದು, ಮಿ. ರೀಚರ್? 37 00:02:01,664 --> 00:02:02,498 ನಿಮಗೆ ಸಾಧ್ಯವಿಲ್ಲ. 38 00:02:05,751 --> 00:02:09,003 ಮಿ. ರೀಚರ್ ಬಗ್ಗೆ ನಿಮ್ಮ ಯಾವುದೇ ವಿಚಾರಣೆಗಳನ್ನು ನನ್ನ ಕಚೇರಿ ರವಾನಿಸಬಹುದು. 39 00:02:09,004 --> 00:02:12,842 ಸರಿ, ಹಾಂ. ಇಷ್ಟು ಸಾಕು. ನನ್ನ ಸಂತಾಪಗಳು. 40 00:02:15,344 --> 00:02:18,054 ಪರಿಚಾರಕರು ಈಗಷ್ಟೇ ಕರೆ ಮಾಡಿದರು, ಸರ್. ಸುದ್ದಿ ಸಿಬ್ಬಂದಿ ಬರುತ್ತಿದ್ದಾರೆ. 41 00:02:18,055 --> 00:02:20,056 ನಾವು ನಿಮ್ಮನ್ನು ಬೇರೆ ಸ್ಥಳಕ್ಕೆ ಕರೆದೊಯ್ಯಬೇಕು. 42 00:02:20,057 --> 00:02:22,685 ಸರಿ, ನಾನು ಹೋಟೆಲ್‌ನಲ್ಲಿ ತಂಗಿದ್ದೆ ಎಂಬುದು ರಹಸ್ಯವೇನಲ್ಲ. 43 00:02:23,227 --> 00:02:24,727 ಅಥವಾ ನೋಲಾನ್ ನನಗೆ ಕೆಲಸ ಮಾಡಿದ್ದು. 44 00:02:24,728 --> 00:02:27,814 ಆತ್ಮಹತ್ಯೆಯ ಸ್ಥಳದಲ್ಲಿ ನೀವು ಇದ್ದದ್ದು ಒಳ್ಳೆಯದಲ್ಲ-- 45 00:02:27,815 --> 00:02:29,566 ಅಯ್ಯೋ, ಬಿಡು, ಸ್ಪ್ರಿಂಗ್ ಫೀಲ್ಡ್. 46 00:02:29,567 --> 00:02:31,484 ಆ ವ್ಯಕ್ತಿಯೊಂದಿಗೆ 11 ವರ್ಷಗಳ ಕಾಲ ಸೇವೆ ಸಲ್ಲಿಸಿದೆ, 47 00:02:31,485 --> 00:02:34,612 ಮತ್ತು ನಾನು ಆತನನ್ನು ಪಾರ್ಕಿಂಗ್ ಸ್ಥಳದಲ್ಲಿ, ಟಾರ್ಪ್ ಅಡಿಯಲ್ಲಿ ಬಿಡುವುದಿಲ್ಲ! 48 00:02:34,613 --> 00:02:37,407 ಜಾನ್, ಈಗ ನೀನು ಆತನಿಗಾಗಿ ಏನೂ ಮಾಡಲು ಸಾಧ್ಯವಿಲ್ಲ. 49 00:02:37,408 --> 00:02:39,242 ಪತ್ರಿಕೆಗಳವರಿಗೆ ಹೇಳಿಕೆಗಳು ಬೇಕು. 50 00:02:39,243 --> 00:02:41,369 ಮತ್ತು ಈಗ ನೀನು ಅಧಿಕೃತ ಹೇಳಿಕೆ ನೀಡುವ 51 00:02:41,370 --> 00:02:44,163 ಸ್ಥಿತಿಯಲ್ಲಿಲ್ಲ ಎಂದು ಬದುಕಿದ್ದಿದ್ದರೆ ನೋಲಾನ್ ತಾವೇ ಹೇಳುತ್ತಿದ್ದರು. 52 00:02:44,164 --> 00:02:46,624 ನೋಡು, ಇದು ನಿನ್ನ ಮಿಲಿಟರಿ ತರಬೇತಿಗಿಂತ ಭಿನ್ನವಾಗಿಲ್ಲ. 53 00:02:46,625 --> 00:02:49,795 ಕೆಲವೊಮ್ಮೆ, ನೀವು ಹಿಂದಡಿ ಇಟ್ಟು ಮನಸ್ಸು ಗಟ್ಟಿ ಮಾಡಿಕೊಳ್ಳಬೇಕಾಗುತ್ತದೆ. 54 00:02:56,135 --> 00:02:57,510 ನಾನು ಬಿಯರ್ ಕುಡಿಯಬೇಕು. 55 00:02:57,511 --> 00:02:59,178 ಈಗ ಬೆಳಿಗ್ಗೆ 9:00 ಗಂಟೆ. 56 00:02:59,179 --> 00:03:00,472 ಮೂರನೇ ಪಾಳಿಯಿರುವ ಬಾರ್ ಗೊತ್ತು. 57 00:03:10,316 --> 00:03:12,942 {\an8}ವಾಷಿಂಗ್ಟನ್, ಡಿ.ಸಿ. 58 00:03:12,943 --> 00:03:16,822 ಹೋಲ್ ಲಾಟ್ಟಾ ಲವ್ ಬೇಗೆಲ್‌ಗಳು ಮತ್ತು ಕಾಫಿ 59 00:03:18,240 --> 00:03:21,576 - ಧನ್ಯವಾದಗಳು. - ಧನ್ಯವಾದಗಳು. 60 00:03:21,577 --> 00:03:24,454 ನಿಮಗೆ ಯಾವ ರೀತಿಯ ಸಿಹಿಕಾರಕ ಇಷ್ಟ ಅಂತ ಗೊತ್ತಿರಲಿಲ್ಲ, ಹಾಗಾಗಿ ಸಕ್ಕರೆ, 61 00:03:24,455 --> 00:03:26,290 ಸ್ಪ್ಲೆಂಡಾ ಮತ್ತು ಸ್ವೀಟ್ 'ಎನ್ ಲೋ ತಂದೆ. 62 00:03:27,499 --> 00:03:28,666 ಸಕ್ಕರೆ ಸಾಕು, ಧನ್ಯವಾದ. 63 00:03:28,667 --> 00:03:31,921 ಇನ್ನೂ ಮುಂದೆ, ಹಾಗಾದರೆ ಸಕ್ಕರೆಯೇ ತರುವೆ. 64 00:03:33,714 --> 00:03:35,466 ಛೆ, ನಾನು ಈಗಷ್ಟೇ ಏನು ಕಂಡುಕೊಂಡೆ ಕೇಳಿ. 65 00:03:36,175 --> 00:03:39,427 ಕಳೆದ ವರ್ಷ, ಕಾಂಗ್ರೆಸ್ ನೀರಸ ದ್ವಿಪಕ್ಷೀಯ ಕೊರತೆ ಕಡಿತ ಯೋಜನೆಯನ್ನು ಅಂಗೀಕರಿಸಿತು. 66 00:03:39,428 --> 00:03:40,929 ನಮ್ಮ ಬೃಹತ್ ರಾಷ್ಟ್ರೀಯ ಸಾಲವನ್ನು 67 00:03:40,930 --> 00:03:43,264 ಪೂರ್ತಿಯಾಗಿ ತೀರಿಸಲು ಅದು ಲಕ್ಷಗಟ್ಟಲೆ ಬಾರಿ ಕತ್ತರಿಸಿದಂತೆ. 68 00:03:43,265 --> 00:03:45,224 ನಮ್ಮ ರಾಜಕಾರಣಿಗಳು ಏನೋ ಮಾಡುತ್ತಿದ್ದಾರೆ ಎಂದು 69 00:03:45,225 --> 00:03:46,809 ಜನಸಾಮಾನ್ಯರ ಮನವೊಲಿಸಲು ಒಂದು ಅಲಂಕಾರ. 70 00:03:46,810 --> 00:03:48,269 - ಗಮನ ಕೊಡು. - ಸರಿ, ಕ್ಷಮಿಸಿ. 71 00:03:48,270 --> 00:03:51,522 ಹಾಗಿದ್ದಾಗ, ಅಂಥ ಒಂದು ಕಡಿತವು ದುಬಾರಿ ದಾಖಲೆ ಸಂಗ್ರಹಣಾ ಸೌಲಭ್ಯಗಳನ್ನು 72 00:03:51,523 --> 00:03:53,316 ಸರ್ಕಾರದಾದ್ಯಂತ ಸ್ಥಗಿತಗೊಳಿಸುವುದು. 73 00:03:53,317 --> 00:03:55,485 ದಶಕಗಳಷ್ಟು ಹಳೆಯ ದಾಖಲೆಗಳನ್ನು ಸಂಗ್ರಹಿಸಿದ್ದ ಗೋದಾಮುಗಳು. 74 00:03:55,486 --> 00:03:58,571 ಬಾಡಿಗೆ ಶುಲ್ಕ, ನಿರ್ವಹಣೆಗಳ ಜೊತೆ, ಅವು ನಿಜವಾಗಿಯೂ ದುಬಾರಿಯಾಗಿದ್ದವು. 75 00:03:58,572 --> 00:04:02,742 ಈಗ, ಹೊಸ ಕಾನೂನಿನ ಪ್ರಕಾರ, ಹತ್ತು ವರ್ಷಗಳಿಗಿಂತ ಹಳೆಯ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿ, 76 00:04:02,743 --> 00:04:05,828 ಸುರಕ್ಷಿತ ಸರ್ವರ್‌ಗೆ ಅಪ್‌ಲೋಡ್ ಮಾಡಿ, ನಂತರ ಕಾಗದದ ಪ್ರತಿಯನ್ನು ನಾಶಪಡಿಸಲಾಗುತ್ತದೆ. 77 00:04:05,829 --> 00:04:08,290 ಅವರು ಅದನ್ನು ಮಾಡುತ್ತಿರುವ ಸ್ಥಳ ಇದಾಗಿರಬೇಕು. 78 00:04:10,292 --> 00:04:11,417 ಊಹೆನಾ ಅಥವಾ ನಿಂಗೊತ್ತಾ? 79 00:04:11,418 --> 00:04:13,836 ಸರ್ಕಾರವು ತನ್ನ ರಹಸ್ಯ ದಾಖಲೆ-ನಾಶ ಮಾಡೋ ಡಿಪೋಗಳ ವಿಳಾಸಗಳನ್ನು 80 00:04:13,837 --> 00:04:15,755 ನಿಖರವಾಗಿ ಬಹಿರಂಗ ಮಾಡುವುದಿಲ್ಲ, 81 00:04:15,756 --> 00:04:18,299 ಆದರೆ ಈ ಫೆಡರಲ್ ಒಡೆತನದ ಕಟ್ಟಡಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿದ್ದೇನೆ, 82 00:04:18,300 --> 00:04:21,511 ಹಾಗಾಗಿ, ಆ ಹೊಗೆಯ ರಾಶಿಯು ವಾಣಿಜ್ಯ ದರ್ಜೆಯ ದಹನಕಾರಕದ 83 00:04:21,512 --> 00:04:23,346 ವಾಯುವಾಹಕ ಎಂದು ಹೇಳಬಹುದು. 84 00:04:23,347 --> 00:04:26,474 ಸರ್ಕಾರಕ್ಕೆ ಏನಾದರೂ ಮುಖ್ಯವಾದ ವಸ್ತು ಹೋಗಬೇಕಾದಾಗ, ಅದನ್ನು ಸುಟ್ಟು ಹಾಕುತ್ತಾರೆ. 85 00:04:26,475 --> 00:04:29,727 ಅದಕ್ಕಾಗಿಯೇ ಯಾರೂ ಮೂಲ ವಾರೆನ್ ಆಯೋಗದ ವರದಿಯನ್ನು ನೋಡಿಲ್ಲ. 86 00:04:29,728 --> 00:04:31,229 ಅವುಗಳನ್ನು ಏಕೆ ಚೂರುಚೂರು ಮಾಡಲ್ಲ? 87 00:04:31,230 --> 00:04:34,440 ಆರ್ಗೋ ಸಿನಿಮಾ ನೋಡಿಲ್ಲವೇ? ಅವರು ಅದನ್ನು ಮತ್ತೆ ಅಂಟಿಸಬಹುದು. 88 00:04:34,441 --> 00:04:37,610 ನಾವು ಅಲ್ಲಿಗೆ ಹೋಗಬೇಕು. ಆನಾಗೆ ಏನು ಸಿಗುತ್ತಿತ್ತು ಎಂದು ನಾವು ನೋಡಬೇಕು. 89 00:04:37,611 --> 00:04:38,611 ಮತ್ತು ಏನು ಕದ್ದಳೆಂದು. 90 00:04:38,612 --> 00:04:40,238 ಹೇ, ಅದು ನಮಗೆ ಗೊತ್ತಿಲ್ಲ. 91 00:04:40,239 --> 00:04:42,824 ನೋಡಪ್ಪ, ನಾನು ನಿನ್ನ ಅಕ್ಕನನ್ನು ದೂಷಿಸಲು ನೋಡುತ್ತಿಲ್ಲ, 92 00:04:42,825 --> 00:04:45,410 ಆದರೆ ಅವಳು ಉನ್ನತ ಮಟ್ಟದ ಸರ್ಕಾರಿ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದಳು 93 00:04:45,411 --> 00:04:47,537 ಮತ್ತವಳು ಎಲ್ಲರಿಗೂ ಬೇಕಾದ ಥಂಬ್ ಡ್ರೈವ್ ಜೊತೆ ಹೊರಟುಹೋದಳು. 94 00:04:47,538 --> 00:04:48,789 ಅವಳು ಇನ್ನೇನು ಮಾಡಬಹುದಿತ್ತು? 95 00:04:52,418 --> 00:04:54,294 ಉದ್ಯೋಗಿ ವಾಹನ ನಿಲುಗಡೆ ಪರವಾನಗಿ 96 00:04:57,548 --> 00:05:01,217 ನೋಡು, ಈ ಕಾರುಗಳಲ್ಲಿ ಬಹಳಷ್ಟು ವಾಹನ ನಿಲುಗಡೆ ಪರವಾನಗಿಗಳು ಆನಾ ಬಳಿ ಇದ್ದಂತೆಯೇ ಇವೆ. 97 00:05:01,218 --> 00:05:04,345 ಬಹುಶಃ ಅಲ್ಲಿ ನಿಲುಗಡೆ ಮಾಡಲು. ಮತ್ತು ಅವರಿಗೆ ಆನಾಳಂಥ ಪರವಾನಗಿಯೇ ಇದ್ದರೆ, 98 00:05:04,346 --> 00:05:06,807 ಅವರು ಬಹುಶಃ ಅಂಥದೇ ಕೆಲಸದ ಬ್ಯಾಡ್ಜ್ ಸಹ ಹೊಂದಿರಬಹುದು. 99 00:05:08,017 --> 00:05:09,643 ನೀವು ನಮ್ಮ ದಾರಿಯನ್ನು ಹುಡುಕಿದಿರಿ. 100 00:05:10,561 --> 00:05:14,147 ಹೇ. ಹೇ, ನಾವು ಇನ್ನೊಬ್ಬರ ಕೆಲಸದ ಬ್ಯಾಡ್ಜ್ ಕದ್ದರೆ, ನಾವು ಬಂಧನಕ್ಕೊಳಗಾಗಬಹುದು. 101 00:05:14,148 --> 00:05:15,314 ನಮ್ಮನ್ನು ಹುಡುಕುತ್ತಿದ್ದಾರೆ. 102 00:05:15,315 --> 00:05:16,775 ಪೊಲೀಸ್ ದಾಖಲಾತಿಗಳಲ್ಲಿ ಸೇರುವುದು ಬೇಡ! 103 00:05:18,402 --> 00:05:21,029 ನಾವು ಅಲ್ಲಿಗೆ ಹೋಗಬೇಕು. ನಾವು ಆನಾಳ ಬ್ಯಾಡ್ಜ್ ಬಳಸಲಾಗದು. 104 00:05:21,030 --> 00:05:23,281 ಆ ಭದ್ರತಾ ದ್ವಾರದ ಬಳಿ ಸತ್ತ ಮಹಿಳೆ ಬಂದಳು ಅಂತಾದರೆ, 105 00:05:23,282 --> 00:05:24,158 ಖಂಡಿತ ಸಿಕ್ಕಿಬೀಳುವೆವು. 106 00:05:47,431 --> 00:05:50,850 - ದೇವರೇ! ನೋಡಿಕೊಂಡು ಹೋಗಿ! - ದಯವಿಟ್ಟು ಕ್ಷಮಿಸಿ. 107 00:05:50,851 --> 00:05:52,685 ತಗೊಳ್ಳಿ, ತಗೊಳ್ಳಿ, ತಗೊಳ್ಳಿ, ತಗೊಳ್ಳಿ. 108 00:05:52,686 --> 00:05:55,938 - ತಗೊಳ್ಳಿ. ದಯವಿಟ್ಟು ನನ್ನನ್ನು ಕ್ಷಮಿಸಿ. - ಅಯ್ಯೋ. ದೇವರೇ. 109 00:05:55,939 --> 00:05:56,899 ಅಯ್ಯೋ, ದೇವರೇ. 110 00:06:01,653 --> 00:06:03,738 ನಿಮ್ಮ ವಸ್ತುಗಳನ್ನು ತಗೊಳ್ಳಿ. ನನ್ನನ್ನು ಕ್ಷಮಿಸಿ. 111 00:06:03,739 --> 00:06:05,324 ಪರವಾಗಿಲ್ಲ. ನಾನು ನೋಡಿಕೊಳ್ಳುವೆ. 112 00:06:06,867 --> 00:06:09,744 ಕೋಪಗೊಂಡಿದ್ದಕ್ಕೆ ಕ್ಷಮಿಸಿ, ಇದು ಹೊಸ ಅಂಗಿ, ಹಾಗಾಗಿ. 113 00:06:09,745 --> 00:06:12,705 ತಗೊಳ್ಳಿ, ಇದು ಅಗಸರ ಖರ್ಚಿಗಾಗಿ. ದಯವಿಟ್ಟು. 114 00:06:12,706 --> 00:06:15,501 ಪರವಾಗಿಲ್ಲ. ದೇವರೇ. 115 00:06:22,841 --> 00:06:24,384 - ಎರಡು ನ್ಯಾಟಿ ಬೋಗಳು. - ಧನ್ಯವಾದಗಳು. 116 00:06:28,555 --> 00:06:29,598 ನೋಲಾನ್ ಕೇಹಿಲ್‌ಗಾಗಿ. 117 00:06:31,266 --> 00:06:32,101 ಏನು ದರಿದ್ರ. 118 00:06:36,730 --> 00:06:39,774 ನಾನು ಅವನನ್ನು ಡೆಲ್ಟಾ ತರಬೇತಿಯ ಮೊದಲ ದಿನ ಭೇಟಿಯಾದೆ. 119 00:06:39,775 --> 00:06:41,360 ನಮ್ಮಲ್ಲಿ ಪ್ರತಿಯೊಬ್ಬರನ್ನೂ ಭಯಪಡಿಸಿದ. 120 00:06:43,362 --> 00:06:45,154 ನಾನು ಭೇಟಿಯಾದ ಅತ್ಯಂತ ನಿಷ್ಠುರ ವ್ಯಕ್ತಿ. 121 00:06:45,155 --> 00:06:47,115 ಅದಕ್ಕಾಗಿಯೇ ಸಿಬ್ಬಂದಿ ಮುಖ್ಯಸ್ಥರನ್ನಾಗಿ ಮಾಡಿದಿರಾ? 122 00:06:47,116 --> 00:06:49,909 ಯಾರೂ ಬೆದರಿಸಲು ಸಾಧ್ಯವಾಗದ ಸಿಬ್ಬಂದಿ ಮುಖ್ಯಸ್ಥ? 123 00:06:49,910 --> 00:06:51,953 ಅದಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. 124 00:06:51,954 --> 00:06:54,539 ತನ್ನ ಅಡಿಯಲ್ಲಿ ಸೇವೆ ಸಲ್ಲಿಸಿದವರಿಗಾಗಿ ಕೆಲಸ ಮಾಡಲು ಅವನಿಗೆ ಯಾವುದೇ 125 00:06:54,540 --> 00:06:56,082 ಸಮಸ್ಯೆ ಇಲ್ಲವೆಂದು ನನಗೆ ಗೊತ್ತಿತ್ತು. 126 00:06:56,083 --> 00:06:57,667 ಏಕೆಂದರೆ ಅವನಿಗೆ ಯಾವುದೇ ಅಹಂಕಾರವಿರಲಿಲ್ಲ. 127 00:06:57,668 --> 00:06:59,837 ಯಾವಾಗಲೂ ಕರ್ತವ್ಯದ ಬಗ್ಗೆಯೇ ಯೋಚಿಸುತ್ತಿದ್ದ. 128 00:07:01,004 --> 00:07:04,549 ಅವನ ಪ್ರತಿರೂಪದಲ್ಲೇ ನನ್ನನ್ನು ರೂಪಿಸಿದ. ನಮ್ಮೆಲ್ಲರನ್ನೂ. 129 00:07:04,550 --> 00:07:08,177 ಅದು ನಿಜವಾಗಿದ್ದರೆ, ನೀವು ಛಾವಣಿಯಿಂದ ಏತಕ್ಕೆ ಜಿಗಿಯುತ್ತೀರಿ? 130 00:07:08,178 --> 00:07:09,387 ಏನಂದೆ? 131 00:07:09,388 --> 00:07:11,348 ನೀವು ಅವರ ಪ್ರತಿರೂಪದಂತೆಯೇ ಎಂದು ಹೇಳಿದಿರಿ. 132 00:07:11,849 --> 00:07:14,684 ಅಂದರೆ ನೀವು ಒಂದೇ ರೀತಿಯ ಸ್ವಭಾವ ಅಥವಾ ನೈತಿಕತೆಯನ್ನು ಹೊಂದಿದ್ದೀರಿ. 133 00:07:14,685 --> 00:07:18,729 ಆದ್ದರಿಂದ, ಅದೇ ಮಾಹಿತಿ, ಅದೇ ಪರಿಸ್ಥಿತಿ, ಅದೇ ಸಂದರ್ಭ ಎದುರಾದರೆ, 134 00:07:18,730 --> 00:07:22,066 ನೀವು ಅದೇ ರೀತಿ ಪ್ರತಿಕ್ರಿಯಿಸಬಹುದು. ನಿಮಗೆ ತಿಳಿದಿಲ್ಲದ ಏನೋ ಅವರಿಗೆ ತಿಳಿದಿತ್ತು. 135 00:07:22,067 --> 00:07:25,194 ಹಾಗಾದರೆ, ನೀವು ಕಟ್ಟಡದಿಂದ ಹಾರಿ ಸಾಯಲು ಕಾರಣ ಏನಿರಬಹುದೆಂದು ಯೋಚಿಸುತ್ತಿದ್ದೇನೆ. 136 00:07:25,195 --> 00:07:27,238 ನನಗೆ ಏನೇನೂ ಗೊತ್ತಿಲ್ಲ. 137 00:07:27,239 --> 00:07:29,448 ನಿನ್ನ ಮೂಲವು ನಿನಗೆ ಹೇಳಿದಂತೆ ಅಲ್ಲ. 138 00:07:29,449 --> 00:07:32,034 ನಾವು ಎಂದಿಗೂ ನಾಗರಿಕರನ್ನು ಹಿಂಸಿಸಿಲ್ಲ ಅಥವಾ ಕೊಂದಿಲ್ಲ. 139 00:07:32,035 --> 00:07:34,120 ಆದರೆ ಜನರನ್ನು ಹಿಂಸಿಸಿ ಕೊಲ್ಲಲಾಯಿತು. 140 00:07:34,121 --> 00:07:35,038 ನಾವು ಹೋದ ನಂತರ. 141 00:07:35,706 --> 00:07:38,125 ನೀವು ಇಂಡೋನೇಷ್ಯಾದಲ್ಲಿ ನಿಖರವಾಗಿ ಏನು ಮಾಡುತ್ತಿದ್ದಿರಿ? 142 00:07:39,585 --> 00:07:41,919 ನೋಡಿ, ನಿಮಗೆ ಆನಾ ಮೆರಿಕ್ ಪರಿಚಯವಿರಲಿಲ್ಲ ಅಂತ ನನಗೆ ಗೊತ್ತು. 143 00:07:41,920 --> 00:07:43,964 ಒಬ್ಬ ಸತ್ತ ಮಹಿಳೆ ನಿಮಗೆ ಮುಗಿದ ಕಥೆಯಾಗಿರಬಹುದು. 144 00:07:44,798 --> 00:07:46,424 ಆದರೆ ಅವಳ ಮಗ ಇನ್ನೂ ಕಾಣೆಯಾಗಿದ್ದಾನೆ. 145 00:07:46,425 --> 00:07:49,720 ಇಪ್ಪತ್ತು ವರ್ಷ ವಯಸ್ಸು ಮತ್ತು ಸಮಾಜವಿರೋಧಿ ಹಂತಕರೊಂದಿಗೆ ಇರುವ ಸಾಧ್ಯತೆ ಹೆಚ್ಚಿದೆ. 146 00:07:51,013 --> 00:07:52,681 ಹಾಗಾಗಿ, ಸತ್ಯವಷ್ಟೇ ಈಗ ಸಹಾಯ ಮಾಡಬಹುದು. 147 00:07:54,600 --> 00:07:56,685 ಮಿಸ್. ಸ್ಕಾಚ್. 148 00:07:58,437 --> 00:08:00,271 ಸ್ಕಾಚ್ ಅಗತ್ಯವಿರುವ ಸಂಭಾಷಣೆಗಳು-- 149 00:08:00,272 --> 00:08:02,733 ಬಹುಶಃ ನಡೆಯಬಾರದ ಸಂಭಾಷಣೆಗಳಿಗಾಗಿ. 150 00:08:03,525 --> 00:08:07,862 ಆದರೆ ನನ್ನಿಂದ ಸಹಾಯವಾಗಬಹುದು ಎಂದು ನಿನಗನಿಸಿದರೆ, ನನಗೆ ಗೊತ್ತಿದ್ದನ್ನು ಹೇಳುವೆ. 151 00:08:07,863 --> 00:08:10,072 ಕಾನೂನುಬದ್ಧವಾಗಿ ನೀವು ಹೇಳಲಾಗದ ಸಂಗತಿಗಳೂನಾ? 152 00:08:10,073 --> 00:08:14,244 ನೋಡು, ಆ ನಿಟ್ಟಿನಲ್ಲಿ ನನ್ನ ಪ್ರಮಾಣವಚನಕ್ಕೆ ಭಂಗ ತರದಂತೆ ಪ್ರಯತ್ನಿಸುತ್ತೇನೆ. 153 00:08:15,329 --> 00:08:16,662 ಡ್ಯೂವರ್ಸ್ ಇರಲಿನಾ? 154 00:08:16,663 --> 00:08:17,915 ಇರಲಿ, ಧನ್ಯವಾದಗಳು. 155 00:08:32,930 --> 00:08:36,349 ನಮ್ಮ ತುಕಡಿಯನ್ನು ವಿಜ್ಞಾನಿಗಳ ತಂಡದೊಂದಿಗೆ ಇಂಡೋನೇಷ್ಯಾಕ್ಕೆ ಕಳುಹಿಸಲಾಯಿತು. 156 00:08:36,350 --> 00:08:39,810 ಮಲೇರಿಯಾದ ಹೊಸ, ಪ್ರತಿಜೀವಕ-ನಿರೋಧಕ ತಳಿಗಳಿಗೆ 157 00:08:39,811 --> 00:08:44,398 ಮಳೆಕಾಡಿನ ಸಸ್ಯಗಳನ್ನು ಬಳಸಿಕೊಂಡು ಚಿಕಿತ್ಸೆಯನ್ನು ಕಂಡುಹಿಡಿಯುವ ಬಗ್ಗೆ ಏನೋ, 158 00:08:44,399 --> 00:08:46,151 ಅಥವಾ ಬೇರೇನೋ… ಅಂದರೆ, ಯಾರಿಗೆ ನೆನಪಿರುತ್ತದೆ? 159 00:08:46,693 --> 00:08:49,904 ಸರ್ಕಾರವು ನೀವು ವಿಜ್ಞಾನಿಗಳ ಗುಂಪಿನೊಂದಿಗೆ ಏಷ್ಯಾಗೆ ಹೋಗುತ್ತಿದ್ದೀರಿ ಅಂತ ಹೇಳಿದರೆ, 160 00:08:49,905 --> 00:08:50,989 ನಾವು ಏಷ್ಯಾಗೆ ಹೋಗಬೇಕು. 161 00:08:53,867 --> 00:08:56,035 ವಿಜ್ಞಾನಿಗಳನ್ನು ಸುರಕ್ಷಿತವಾಗಿಡುವುದು ನಮ್ಮ ಕೆಲಸವಾಗಿತ್ತು. 162 00:08:56,036 --> 00:08:57,328 ಮತ್ತು ನಾವು ಅಲ್ಲಿದ್ದಾಗ ಸ್ಥಳೀಯ 163 00:08:57,329 --> 00:08:59,498 ಸರ್ಕಾರದ ಸಹಕಾರವನ್ನು ಭದ್ರಪಡಿಸಿಕೊಳ್ಳುವುದು. 164 00:08:59,998 --> 00:09:03,042 ಕೇಹಿಲ್ ಆ ಕಾರ್ಯಾಚರಣೆಯ ಶಾಖೆಯ ಮೇಲ್ವಿಚಾರಣೆ ಮಾಡಿದ. 165 00:09:03,043 --> 00:09:06,128 ಈಗ, ಇಂಡೋನೇಷ್ಯಾದ ಆತಿಥ್ಯಕ್ಕೆ ಬದಲಾಗಿ, 166 00:09:06,129 --> 00:09:09,091 ಅಮೆರಿಕವು ಅವರ ಮಿಲಿಟರಿ ವಿಶೇಷ ಪಡೆಗಳಿಗೆ ತರಬೇತಿ ನೀಡಲು ಒಪ್ಪಿಕೊಂಡಿತು, 167 00:09:10,300 --> 00:09:12,551 ಅವುಗಳ ನೇತೃತ್ವ ಜನರಲ್ ರೆಜಾ ಪೂತ್ರ ವಹಿಸಿದ್ದ. 168 00:09:12,552 --> 00:09:15,596 ನಾನು ಆ ಕಾರ್ಯಾಚರಣೆಯ ಶಾಖೆಯ ಮೇಲ್ವಿಚಾರಣೆ ಮಾಡಿದೆ. 169 00:09:15,597 --> 00:09:20,518 ನೋಡು, ನಾನು ಅವರಿಗೆ ಶಸ್ತ್ರಾಸ್ತ್ರ ತರಬೇತಿಯಿಂದ ಗೆರಿಲ್ಲಾ ತಂತ್ರಗಳವರೆಗೆ ಎಲ್ಲವನ್ನೂ ಕಲಿಸಿದೆ. 170 00:09:20,519 --> 00:09:23,021 ರಾಜಕೀಯ ಭಿನ್ನಮತೀಯರನ್ನು ಹತ್ಯೆ ಮಾಡಿದ ಬಗ್ಗೆ ಯಾವಾಗ ಹೇಳುತ್ತೀರಿ? 171 00:09:26,608 --> 00:09:28,360 ನಾವು ದೇಶಕ್ಕೆ ಹಿಂತಿರುಗಿದ ನಂತರ… 172 00:09:30,112 --> 00:09:31,405 ಪೂತ್ರ ಜನರ ಹಿಂದೆ ಬಿದ್ದನು. 173 00:09:32,114 --> 00:09:35,324 ಅವನ ಹೆಚ್ಚುತ್ತಿರುವ ಶಕ್ತಿಯನ್ನು ವಿರೋಧಿಸಿದವರ ಹಿಂದೆ. 174 00:09:35,325 --> 00:09:38,370 ಮತ್ತು ಆ ಪ್ರಕ್ರಿಯೆಯಲ್ಲಿ, ಅವನು ಒಂದಿಡೀ ಹಳ್ಳಿಯನ್ನು ನಾಶಮಾಡಿದನು. 175 00:09:39,121 --> 00:09:42,499 ನಾಗರಿಕರು, ಮಕ್ಕಳು, ವೃದ್ಧರು. 176 00:09:43,583 --> 00:09:46,502 ಮುಗ್ಧ, ಒಳ್ಳೆಯ ಜನರು. ಅವನು ಯಾರ ಬಗ್ಗೆಯೂ ತಾರತಮ್ಯ ಮಾಡಲಿಲ್ಲ. 177 00:09:46,503 --> 00:09:50,464 ಇದ್ದಕ್ಕಿದ್ದಂತೆ, ನಾವು ಕಾಡಿನಲ್ಲಿ ಕವಾಯತು ನಡೆಸುತ್ತಿದ್ದ ಜನರಲ್ ಅಷ್ಟೇ ಆಗಿರಲಿಲ್ಲ ಅವನು. 178 00:09:50,465 --> 00:09:51,717 ಅವನು ಯುದ್ಧ ಅಪರಾಧಿಯಾಗಿದ್ದ. 179 00:09:52,426 --> 00:09:56,054 ಹೇಳಲೂ ಆಗದ… ಕೃತ್ಯಗಳನ್ನು ಎಸಗುತ್ತಿದ್ದ. 180 00:09:56,596 --> 00:09:59,182 ಸದ್ದಾಂ ಹುಸೇನ್, ನೋರಿಯೇಗಾ. 181 00:10:00,100 --> 00:10:03,477 ಬಿನ್ ಲಾಡೆನ್ ರಷ್ಯನ್ನರ ವಿರುದ್ಧ ಹೋರಾಡುತ್ತಿದ್ದಾಗ ನಮ್ಮ ಸ್ನೇಹಿತನಾಗಿದ್ದ. 182 00:10:03,478 --> 00:10:05,604 ಅಮೆರಿಕಕ್ಕೆ ದ್ರೋಹ ಬಗೆದಿರುವುದು ಇದೇ ಮೊದಲಲ್ಲ. 183 00:10:05,605 --> 00:10:08,942 ಆದರೂ, ಪೂತ್ರನೊಂದಿಗಿನ ನನ್ನ ಸಂಪರ್ಕವನ್ನು ಬಹಿರಂಗಪಡಿಸಿದರೆ, 184 00:10:10,527 --> 00:10:13,195 ಅದು ನನ್ನ ತಂಡ ಮತ್ತು ನಾನು ಕಳೆದ ಕೆಲವು ವರ್ಷಗಳಿಂದ 185 00:10:13,196 --> 00:10:15,614 ಗಳಿಸಿರುವ ಎಲ್ಲವನ್ನೂ ಹಳಿತಪ್ಪಿಸುತ್ತದೆ, ಸರಿನಾ? 186 00:10:15,615 --> 00:10:21,245 ನಿನ್ನ ಈ ಮೂಲವು ನನ್ನನ್ನು ಒಬ್ಬ ರಾಕ್ಷಸನೊಂದಿಗೆ ಸಂಪರ್ಕಿಸುವ ಕದ್ದ ದಾಖಲೆಗಳ ಬೆನ್ನಟ್ಟಿದ್ದಾರೆ. 187 00:10:21,246 --> 00:10:22,955 ಅವಳು ನೀವೇ ಆ ರಾಕ್ಷಸ ಅಂತ ಭಾವಿಸುತ್ತಾಳೆ. 188 00:10:22,956 --> 00:10:25,374 ಅವಳಿಗೆ ಹೇಳು, ತಪ್ಪಾದ ಮರಕ್ಕೆ ಕಲ್ಲು ಹೊಡೆಯುತ್ತಿದ್ದಾಳೆ ಅಂತ, 189 00:10:25,375 --> 00:10:29,128 ಏಕೆಂದರೆ ಪೂತ್ರ ಆ ಜನರಿಗೆ ಮಾಡಿದ್ದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. 190 00:10:29,129 --> 00:10:32,799 ಅಲ್ಲದೆ, ತಮಗೆ ತಿಳಿದ ತಕ್ಷಣ, ಪೂತ್ರನನ್ನು ಎದುರಿಸಲು ಅಮೆರಿಕ ಸರ್ಕಾರವು 191 00:10:33,508 --> 00:10:36,510 ಅಲ್ಲಿಗೆ ಒಂದು ತಂಡವನ್ನು ಕಳುಹಿಸಿತು. 192 00:10:36,511 --> 00:10:38,971 ಸರಿ, ಕೇಹಿಲ್ ಆನಾ ಮೆರಿಕ್‌ಳನ್ನು ಆ ಸಬ್‌ವೇಯಲ್ಲಿ ಹಿಂಬಾಲಿಸಲು 193 00:10:38,972 --> 00:10:42,184 ಮತ್ತು ಆತ ಆ ಛಾವಣಿಯಿಂದ ಹಾರಲು ಏನೋ ಕಾರಣ ಇರಬೇಕು. 194 00:10:43,268 --> 00:10:45,394 ನಾನು ಆ ಡ್ರೈವ್ ಪಡೆದು ಅದು ಏನೆಂದು ಕಂಡುಹಿಡಿಯುತ್ತೇನೆ. 195 00:10:45,395 --> 00:10:47,104 ಸರಿ, ಖಂಡಿತ ಅದನ್ನು ಮಾಡು. 196 00:10:47,105 --> 00:10:49,566 ಮತ್ತು ಅದು ನಿನಗೆ ಸಿಕ್ಕಾಗ, ಸರಿಯಾದ ಕೆಲಸವನ್ನು ಮಾಡು… 197 00:10:52,861 --> 00:10:53,904 ಅದನ್ನು ನನಗೆ ಹಿಂತಿರುಗಿಸು. 198 00:10:56,490 --> 00:10:59,825 ಅದರೊಳಗೆ ಏನಿದೆ ಅಂತ ಗೊತ್ತಿಲ್ಲದಿದ್ದರೂ ಅದು ನಿಮಗೆ ತುಂಬಾ ಅವಶ್ಯಕತೆ ಇದ್ದಂತೆ ಕಾಣುತ್ತಿದೆ. 199 00:10:59,826 --> 00:11:01,452 ನಿನ್ನ ಬಗ್ಗೆಯೂ ಹಾಗೆಯೇ ಹೇಳಬಲ್ಲೆ. 200 00:11:01,453 --> 00:11:04,872 ಕೊಲೆಗಾರರನ್ನು ನನ್ನ ಹಿಂದೆ ಸೈನಿಕರ ವೇಷದಲ್ಲಿ ಕಳಿಸುವಷ್ಟು ಅದರ ಅವಶ್ಯಕತೆ ನಿಮಗಿದ್ದಂತಿದೆ. 201 00:11:04,873 --> 00:11:07,124 ನಾನು ಕಾನೂನು ಮೀರಿ ವರ್ತಿಸುವುದಿಲ್ಲ. 202 00:11:07,125 --> 00:11:09,960 ಸಿ ಐ ಎ ಹಾಗೆ ಮಾಡುತ್ತೆ. ಬಹುಶಃ ನೀವು ಅವರ ಮೇಲೆ ಅವಲಂಬಿತರಾಗಿರಬಹುದು. 203 00:11:09,961 --> 00:11:12,963 ನಾನು ಈಗಾಗಲೇ ನಿನಗೆ ಹೇಳಿದೆ, ನನಗೆ ಆ ಏಜೆನ್ಸಿಯೊಂದಿಗೆ ಯಾವುದೇ ಸಂಬಂಧವಿಲ್ಲ. 204 00:11:12,964 --> 00:11:16,676 ಯು.ಎಸ್. ಕಾಂಗ್ರೆಸ್ ಮ್ಯಾನ್‌ನಿಂದ ಅವರು ಆದೇಶ ಪಡೆದರೆ, ಅಂದು ಸೂರ್ಯ ಪಶ್ಚಿಮದಲ್ಲಿ ಹುಟ್ಟಿದಂತೆ. 205 00:11:18,136 --> 00:11:21,680 ನೋಡು, ನೀನು ಇಲ್ಲಿ ಮೂಗು ತೂರಿಸಲು ಆರಂಭಿಸಿದಾಗ ನಿನ್ನನ್ನು ರಕ್ಷಣಾ ಇಲಾಖೆಗೆ 206 00:11:21,681 --> 00:11:23,057 ಒಪ್ಪಿಸಿದ್ದಷ್ಟೇ ನಾನು ಮಾಡಿದ್ದು. 207 00:11:23,058 --> 00:11:25,559 ಸ್ನಾಪ್, ಕ್ರಾಕಲ್, ಮತ್ತು ಪಾಪ್ ಕೆಲಸ ಮಾಡುವುದು ಅವರಿಗೇನಾ? 208 00:11:25,560 --> 00:11:27,019 ನೀನು ಅವರನ್ನು ಹಾಗೆ ಕರೆಯುತ್ತೀಯಾ? 209 00:11:27,020 --> 00:11:28,772 ಅವರು ತಮ್ಮ ಹೆಸರುಗಳನ್ನು ನನಗೆ ಹೇಳಲಿಲ್ಲ. 210 00:11:31,525 --> 00:11:32,984 ನೋಡು, ಕೊನೆಯದಾಗಿ, ರೀಚರ್. 211 00:11:34,027 --> 00:11:36,612 ನನ್ನ ವೈಯಕ್ತಿಕ ಆಸಕ್ತಿಗಳು ಏನೇ ಇರಲಿ, 212 00:11:36,613 --> 00:11:41,033 ಆ ಡ್ರೈವ್‌ನಲ್ಲಿ ಏನೇ ಇದ್ದರೂ ಅದು ಯುನೈಟೆಡ್ ಸ್ಟೇಟ್ಸ್ ಸೈನ್ಯದ ಸ್ವತ್ತು. 213 00:11:41,034 --> 00:11:44,745 ಮತ್ತು ಅದು ಸೇರಬೇಕಾದ ಪೆಂಟಗನ್‌ಗೆ ಹಿಂತಿರುಗುವುದನ್ನು ನಾನು ನೋಡಲು ಬಯಸುವೆ ಅಷ್ಟೇ. 214 00:11:44,746 --> 00:11:49,084 ನಾನು ಆ ಡ್ರೈವ್ ಹುಡುಕುತ್ತೇನೆ. ಮತ್ತು ಅದರಲ್ಲಿ ಏನಿದೆ ಎಂದು ನಾನು ನೋಡಿದ ನಂತರ, 215 00:11:50,419 --> 00:11:52,378 ಅದರೊಂದಿಗೆ ಏನು ಮಾಡಬೇಕೆಂದು ನಿರ್ಧರಿಸುತ್ತೇನೆ. 216 00:11:52,379 --> 00:11:57,300 ರೀಚರ್ 217 00:12:14,568 --> 00:12:16,820 - ಅವರು ಬಹುಶಃ ಸ್ವಲ್ಪ ಸಮಯ ಇರುತ್ತಾರೆ. - ಪರವಾಗಿಲ್ಲ. 218 00:12:18,738 --> 00:12:22,658 ತನ್ನ ಆತ್ಮೀಯ ಸ್ನೇಹಿತನನ್ನು ಕಳೆದುಕೊಂಡು ಜಾನ್ ಸ್ಯಾಮ್ ಸನ್ ಅಗ್ಗದ ಮದ್ಯ ಕುಡಿಯುವುದಿಲ್ಲ. 219 00:12:22,659 --> 00:12:24,494 ಏನನ್ನು ಕುಡಿದರೆ ಸತ್ತವರಿಗೆ ಏನಾಗಬೇಕು. 220 00:12:28,457 --> 00:12:29,875 ಜೋನಾಹ್ ಎಂದರೆ ಏನು ಎಂದು ಗೊತ್ತಾ? 221 00:12:31,084 --> 00:12:33,752 ನಾವಿಕರಲ್ಲಿ, ಜೋನಾಹ್ ಎಂದರೆ ಹಡಗಿನಲ್ಲಿ ದುರದೃಷ್ಟವನ್ನು ಬಿಟ್ಟರೆ 222 00:12:33,753 --> 00:12:35,714 ಬೇರೆ ಏನನ್ನೂ ಆಕರ್ಷಿಸದ ವ್ಯಕ್ತಿ ಎಂದರ್ಥ. 223 00:12:36,506 --> 00:12:40,093 ಅವನು ಹಡಗನ್ನು ಹತ್ತಿದ ಪ್ರತಿ ಸಲವೂ, ದುರಾದೃಷ್ಟ ಜೊತೆಗೂಡುತ್ತದೆ. 224 00:12:42,637 --> 00:12:44,139 ನೀವೊಬ್ಬ ಜೋನಾಹ್, ಮಿ. ರೀಚರ್. 225 00:12:45,182 --> 00:12:46,266 ನನ್ನ ತಾಯಿ ಹೇಳಿದಂತೆ, 226 00:12:47,601 --> 00:12:49,310 ತೊಂದರೆ ಯಾವಾಗಲೂ ನನ್ನನ್ನೇ ಹುಡುಕುತ್ತದೆ. 227 00:12:49,311 --> 00:12:51,395 ನಿಮಗೆ ಬೇಕಿರುವುದು ಜಾನ್‌ನಿಂದ ಸಿಕ್ಕಿದೆ ಎಂದು ಭಾವಿಸುವೆ, 228 00:12:51,396 --> 00:12:53,982 ಏಕೆಂದರೆ ನೀವು ಈಗ ನಮ್ಮಿಂದ ದೂರವಿದ್ದರೆ, ಅದು ಉತ್ತಮ. 229 00:13:00,864 --> 00:13:02,781 ನಿಮ್ಮ ಗಾಡಿಯಲ್ಲಿ ನನ್ನನ್ನು ಹೋಟೆಲಿಗೆ ಬಿಡುತ್ತೀರಾ? 230 00:13:02,782 --> 00:13:03,783 ಹೋಗೋಲೋ. 231 00:13:17,172 --> 00:13:18,756 ಇಲ್ಲಿಗೆ ನಡೆದು ಬರುವವರು ಕಡಿಮೆ. 232 00:13:18,757 --> 00:13:21,635 ಹಾಂ, ಕಾರು ರಿಪೇರಿಯಲ್ಲಿದೆ. ಲಿಫ್ಟ್ ನನ್ನನ್ನು ಬೇಗೆಲ್ ಸ್ಥಳದಲ್ಲಿ ಇಳಿಸಿತು. 233 00:13:27,057 --> 00:13:28,891 ಅವಳು ಯಾಕೆ ನೆಲ ನೋಡುತ್ತಿದ್ದಾಳೆ? 234 00:13:28,892 --> 00:13:31,143 ಕ್ಯಾಮೆರಾಗಳು ಅವಳ ಮುಖವನ್ನು ನೋಡುವುದು ಬೇಡ ಅಂತ. 235 00:13:31,144 --> 00:13:32,521 ಇದು ತುಂಬಾ ಸಮಯ ತೆಗೆದುಕೊಳ್ಳುತ್ತಿದೆ. 236 00:13:36,107 --> 00:13:39,027 - ಅವಳು ಖಂಡಿತವಾಗಿಯೂ ಸಿಕ್ಕಿಬೀಳುತ್ತಾಳೆ. - ಇಲ್ಲ, ಸಿಕ್ಕಿಬೀಳಲ್ಲ. 237 00:13:40,070 --> 00:13:42,781 - ಸಮಸ್ಯೆ ಇರುವಂತೆ ಕಾಣುತ್ತಿದೆ. - ನೀವು ಚಿಪ್ ಮೇಲೆ ಹಾಕಬೇಕು. 238 00:13:43,907 --> 00:13:46,284 ನೋಡಿ, ಕೇವಲ ಡೀಕ್ಯಾಫ್ ಸಿಕ್ಕಾಗ ಹೀಗೇ ಆಗುತ್ತದೆ. 239 00:13:49,287 --> 00:13:50,121 ಶುಭದಿನ. 240 00:13:55,126 --> 00:13:56,043 ಹಾಂ. 241 00:13:56,044 --> 00:13:59,255 ವಿತರಣೆಯವರಿಗೆ ಕೇವಲ ಇಮೇಲ್ ಮಾಡಿ, ಅವರು ಅದನ್ನು ಅನುಸರಿಸುತ್ತಾರೆಂದುಕೊಂಡರಾಗದು, 242 00:13:59,256 --> 00:14:00,256 ಏಕೆಂದರೆ ಅವರು ಮಾಡಲ್ಲ. 243 00:14:00,257 --> 00:14:03,927 ಹಾಗಾಗಿ ಇನ್ನು ಮುಂದೆ ನನ್ನನ್ನು ಎಲ್ಲಾ ಇಮೇಲ್ ರವಾನೆಗೂ ಸೇರಿಸಬೇಕು, ಸರಿನಾ? ಸರಿ. 244 00:14:06,930 --> 00:14:09,223 ಹಾಯ್. ನೀವು ನನಗೊಂದು ಸಹಾಯ ಮಾಡಬಹುದೇ? 245 00:14:09,224 --> 00:14:12,810 ಶಾನನ್ ಥಾಮಸ್. ನಾನು ದಾರಿ ತಪ್ಪಿದ್ದೇನೆ. ನಾನು ಪೆಂಟಗನ್‌ನಿಂದ ಇಲ್ಲಿಗೆ ವರ್ಗವಾದೆ. 246 00:14:12,811 --> 00:14:15,271 ನಾನು ಆನಾ ಮೆರಿಕ್ ಸ್ಥಾನದಲ್ಲಿ ಜವಾಬ್ದಾರಿ ವಹಿಸಿಕೊಳ್ಳಬೇಕಾಗಿದೆ. 247 00:14:15,272 --> 00:14:18,608 ಶೆರಿಲ್ ಬ್ರ್ಯುಸ್ಟರ್. ಆನಾ ವಿಷಯ ದುರಂತವೇ. ನಿಮಗೆ ಅವಳು ಗೊತ್ತಿದ್ದಳಾ? 248 00:14:19,276 --> 00:14:20,943 ಆ ಭಾಗ್ಯ ಸಿಗಲಿಲ್ಲ. 249 00:14:20,944 --> 00:14:22,821 ಬನ್ನಿ, ನಾನು ನಿಮಗೆ ವ್ಯವಸ್ಥೆ ಮಾಡುತ್ತೇನೆ. 250 00:14:23,822 --> 00:14:25,115 ಆನಾ ತುಂಬಾ ಒಳ್ಳೆಯವಳಾಗಿದ್ದಳು. 251 00:14:25,782 --> 00:14:28,534 ಆದರೂ ಯಾರು ಏನನ್ನು ಅನುಭವಿಸುತ್ತಿದ್ದಾರೆ ಎಂದು ಗೊತ್ತಾಗುವುದೇ ಇಲ್ಲ, ಅಲ್ವಾ? 252 00:14:28,535 --> 00:14:30,869 ಇಲ್ಲ. ಹೇಳಲು ಮುಜುಗರವಾಗುತ್ತೆ, 253 00:14:30,870 --> 00:14:33,290 ನಾನು ಇಲ್ಲಿ ಏನು ಮಾಡಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ. 254 00:14:34,583 --> 00:14:36,375 ನನ್ನನ್ನು ಕೊನೆಯ ಕ್ಷಣದಲ್ಲಿ ಮರುನೇಮಕ ಮಾಡಿದರು. 255 00:14:36,376 --> 00:14:39,211 ಇದು ತುಂಬಾ ಸರಳ. ಭೌತಿಕ ಫೈಲ್‌ಗಳನ್ನು ಡಿಜಿಟಲ್‌ಗೆ ಪರಿವರ್ತಿಸುತ್ತಿದ್ದೇವೆ. 256 00:14:39,212 --> 00:14:41,880 ಕಡಿಮೆ ಸ್ಥಳ, ಕಡಿಮೆ ತ್ಯಾಜ್ಯ. ನೀವು ದಾಖಲೆಗಳನ್ನು ಸ್ಕ್ಯಾನ್ ಮಾಡಿ 257 00:14:41,881 --> 00:14:44,301 ಅವುಗಳನ್ನು ನಮ್ಮ ಡಿಜಿಟಲ್ ಸಂಗ್ರಹಣಾ ವ್ಯವಸ್ಥೆಗೆ ಅಪ್‌ಲೋಡ್ ಮಾಡಬೇಕು. 258 00:14:45,093 --> 00:14:47,929 ಇದು ಬಿಡುವಿಲ್ಲದ ಕೆಲಸ, ಆದರೆ ಹೆಚ್ಚುವರಿ ವೇತನ ಕೊಡುವಂಥ ಕೆಲಸ. 259 00:14:51,433 --> 00:14:53,851 ಹಾಂ, ಇದು ಆನಾಳ ಕಾರ್ಯಸ್ಥಳವಾಗಿತ್ತು. 260 00:14:53,852 --> 00:14:55,352 ಇದು ಸ್ವಲ್ಪ ಅನಾನುಕೂಲಕರ ಎಂದು ಬಲ್ಲೆ, 261 00:14:55,353 --> 00:14:58,606 ಆದರೆ ಉತ್ಪಾದಕತೆಯ ದಾಖಲೆಗಳನ್ನು ಕಾರ್ಯಸ್ಥಳ ಸಂಖ್ಯೆಗೆ ಜೋಡಿಸಲಾಗಿದೆ, 262 00:14:58,607 --> 00:15:01,358 ಹಾಗೆ. ಯಾರಾದರೂ ಅವಳ ಮೇಜನ್ನು ಸ್ವಚ್ಛಗೊಳಿಸುವಂತೆ ನೋಡುವೆ. 263 00:15:01,359 --> 00:15:02,611 ಪರವಾಗಿಲ್ಲ. ಇರಲಿ. 264 00:15:04,487 --> 00:15:08,283 ಆನಾಳ ಐಡಿ ಅಡಿಯಲ್ಲಿ ನಿಮ್ಮನ್ನು ಲಾಗಿನ್ ಮಾಡುವೆ, ಅವಳು ಎಲ್ಲಿ ಬಿಟ್ಟಿದ್ದಳೋ ನಿಮಗೆ ತಿಳಿಯುತ್ತೆ. 265 00:15:10,827 --> 00:15:13,455 ಈ ದಿನದ ಕೊನೆಯಲ್ಲಿ ನಿಮ್ಮ ಹೆಸರಿಗೆ ಇದನ್ನು ಬದಲಾಯಿಸುತ್ತೇನೆ. 266 00:15:14,039 --> 00:15:15,707 ಎಲ್ಲಾ ಫೈಲ್‌ಗಳಿಗೆ ಸಂಖ್ಯೆ ನೀಡಲಾಗಿದೆ. 267 00:15:16,291 --> 00:15:18,667 ಸ್ಕ್ಯಾನ್ ಮಾಡಿದ ನಂತರ ನೀವು ಆ ಫೈಲ್‌ಗೆ ಅದೇ ಹೆಸರಿಡಬೇಕು. 268 00:15:18,668 --> 00:15:22,379 ಪೆಟ್ಟಿಗೆಯಲ್ಲಿರುವ ಫೈಲ್‌ಗಳನ್ನು ಸ್ಕ್ಯಾನ್ ಮಾಡಿ, ಪೆಟ್ಟಿಗೆ ಮತ್ತು ಅದರಲ್ಲಿರುವುದನ್ನು 269 00:15:22,380 --> 00:15:24,340 ದಹನಕ್ಕೆ ಕಳಿಸುವ ತಳ್ಳುಗಾಡಿಯಲ್ಲಿ ಇರಿಸಿ. 270 00:15:24,341 --> 00:15:26,926 ಆಮೇಲೆ ಹೊಸ ಪೆಟ್ಟಿಗೆಯನ್ನು ಶುರು ಮಾಡಿ. ಏನಾದರೂ ಪ್ರಶ್ನೆಗಳಿವೆಯಾ? 271 00:15:27,552 --> 00:15:28,511 ಇಲ್ಲ. 272 00:15:30,180 --> 00:15:31,306 ನನಗೆ ಅರ್ಥವಾಯಿತು ಅನಿಸುತ್ತೆ. 273 00:15:36,436 --> 00:15:38,771 ನೀನು ಬ್ಯಾಡ್ಜ್ ಕದ್ದಿದ್ದು ಆ ಮಹಿಳೆಯಿಂದಲೇ ಅಲ್ಲವೇ? 274 00:15:38,772 --> 00:15:41,399 ಅಯ್ಯೋ. ಅವಳು ಎಷ್ಟು ಬೇಗ ಊಟ ಮಾಡುತ್ತಾಳೆ? 275 00:15:46,571 --> 00:15:49,240 ಅಪ್‌ಲೋಡ್ ಮಾಡಲಾಗಿದೆ ದಹನ ಮಾಡಲಾಗಿದೆ 276 00:15:52,202 --> 00:15:54,536 ಕ್ಷಮಿಸಿ, ನಾನು ಇಂದು ನನ್ನ ಬ್ಯಾಡ್ಜ್ ಮರೆತಿರಬೇಕು. 277 00:15:54,537 --> 00:15:55,621 ಹೆಸರೇನು? 278 00:15:55,622 --> 00:15:56,539 ಜ್ಯಾಕ್ಲಿನ್ ರೀಡ್. 279 00:16:03,880 --> 00:16:04,963 ಅಳಿಸಲಾಗಿದೆ 280 00:16:04,964 --> 00:16:07,467 ದಾಖಲೆಯಲ್ಲಿ ಯಾವುದೇ ಫೈಲ್ ಇಲ್ಲ 281 00:16:08,885 --> 00:16:11,805 ಮೇಡಂ, ನಿಮ್ಮ ಬ್ಯಾಡ್ಜ್ ಹತ್ತು ನಿಮಿಷಗಳ ಹಿಂದೆ ಸ್ವೈಪ್ ಆಗಿದೆ. 282 00:16:13,014 --> 00:16:14,473 - ಏನು? - ನೀವು ಅಲ್ಲಿಂದ ಹೊರಡಬೇಕು. 283 00:16:14,474 --> 00:16:15,684 ಬ್ಯಾಡ್ಜ್ ಕದ್ದಿದ್ದು ತಿಳಿದರು. 284 00:16:18,478 --> 00:16:19,521 ಛೆ. 285 00:16:20,021 --> 00:16:22,272 ಕೇಳಿ, ಮೇಡಂ. ದಯವಿಟ್ಟು ನಿಮ್ಮ ಜೊತೆ ಮಾತನಾಡಬಹುದೇ? 286 00:16:22,273 --> 00:16:23,858 ಮೇಡಂ, ನೀವು ಕಾಯಬೇಕು. 287 00:16:24,818 --> 00:16:26,528 ಹಾಂ, ನನಗೆ ಸಿಕ್ಕಳು. ಇಲ್ಲೇ ಇದ್ದಾಳೆ. 288 00:16:27,028 --> 00:16:28,278 - ಮೇಡಂ! - ಅದು ಯಾರು? 289 00:16:28,279 --> 00:16:30,031 ನನಗೆ ಎರಡನೇ ಮಹಡಿಯಲ್ಲಿ ಸಹಾಯ ಬೇಕು. 290 00:16:56,474 --> 00:16:58,685 ಅವಳು ಓಡುತ್ತಿರುವುದು ಒಳ್ಳೆಯದೇ? 291 00:17:04,983 --> 00:17:06,650 ಗುರು, ಸ್ವಲ್ಪ ಇರು! ನಿಲ್ಲಿಸು! 292 00:17:06,651 --> 00:17:08,068 ಬೇಗ! ಇಲ್ಲಿಗೆ ಹಿಂತಿರುಗಿ! ಈಗಲೇ! 293 00:17:08,069 --> 00:17:10,196 - ಹೋಗು! ಹೋಗು! ಹೋಗು! - ಕಾರಿನಿಂದ ಇಳಿಯಿರಿ! ಥತ್! 294 00:17:35,638 --> 00:17:37,807 ಈ ಬಾರಿ ಸುಲಭವಾದ ರೀತಿಯಲ್ಲಿ ಮಾಡೋಣ, ರೀಚರ್. 295 00:17:42,061 --> 00:17:42,896 ಇಲ್ಲ. 296 00:17:43,688 --> 00:17:44,606 ಛೆ! 297 00:17:46,524 --> 00:17:47,484 ಅವನನ್ನು ಜೀವಂತವಾಗಿಡಿ. 298 00:18:11,674 --> 00:18:13,551 ಬೇರೆ ದಿಕ್ಕುಗಳಲ್ಲಿ ಹೋಗಿ. ಸಮರತಾಂತ್ರಿಕವಾಗಿ ಹೋಗಿ. 299 00:20:29,896 --> 00:20:30,855 ನಿಮ್ಮ ಯೋಜನೆ ಏನಾಗಿತ್ತು? 300 00:20:34,400 --> 00:20:37,904 ನಿನ್ನನ್ನು ಗಾಯಗೊಳಿಸಿ, ವ್ಯಾನ್‌ಗೆ ತಳ್ಳಿ, ಕೆಲವು ಪ್ರಶ್ನೆಗಳನ್ನು ಕೇಳುವುದು ಅಂತ. 301 00:20:49,374 --> 00:20:54,796 ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ, ಇಲ್ಲ! ಛೆ! ಛೆ! ದೇವರೇ! 302 00:21:00,551 --> 00:21:01,927 ಹಾಳಾದವನೇ! 303 00:21:01,928 --> 00:21:03,888 ನಾನು ನಿನ್ನನ್ನೂ ಎಸೆಯದಿರುವುದು ನಿನ್ನ ಪುಣ್ಯ. 304 00:21:21,197 --> 00:21:28,162 {\an8}ಫಿಲಡೆಲ್ಫಿಯ ಐ-95 305 00:21:28,997 --> 00:21:32,624 ಅದು ಒಂದೇ ಒಂದು ಫೈಲ್. ಆನಾ ಅದನ್ನು ಸ್ಕ್ಯಾನ್ ಮಾಡಿ, ಅಳಿಸಿ ದಹನಕಾರಕಕ್ಕೆ ಕಳುಹಿಸಿದಳು. 306 00:21:32,625 --> 00:21:34,501 ಅದನ್ನು ಸರ್ಕಾರಿ ಸರ್ವರ್‌ಗೆ ಅಪ್‌ಲೋಡ್ ಮಾಡಿಲ್ಲ. 307 00:21:34,502 --> 00:21:37,254 ಅವಳು ಅದನ್ನು ಅಳಿಸುವ ಮೊದಲು ಜಂಪ್ ಡ್ರೈವ್‌ಗೆ ಡೌನ್‌ಲೋಡ್ ಮಾಡಿರಬೇಕು. 308 00:21:37,255 --> 00:21:38,505 ಅದನ್ನೇ ಅಂದುಕೊಳ್ಳುತ್ತಿದ್ದೇವೆ. 309 00:21:38,506 --> 00:21:42,175 ಹಾಗಾದರೆ, ಆ ಡ್ರೈವ್‌ನಲ್ಲಿರುವುದೇ ಪ್ರಸ್ತುತ ಅಸ್ತಿತ್ವದಲ್ಲಿರುವ ಏಕೈಕ ಪ್ರತಿಯಾಗಿದೆ. 310 00:21:42,176 --> 00:21:43,343 ನನ್ನ ಅಕ್ಕನ ಕೆಲಸವೇ? 311 00:21:43,344 --> 00:21:45,387 ಬಹುಶಃ ಆ ಡೇಟಾವನ್ನು ಯಾರಿಗಾಗಿ ಪಡೆಯುತ್ತಿದ್ದಳೋ ಅವರದು. 312 00:21:45,388 --> 00:21:48,140 ಅದರಲ್ಲಿರುವ ಯಾವುದೇ ದಾಖಲೆಗಳ ಏಕೈಕ ಪ್ರತಿಯನ್ನು ಅದು ಹೊಂದಿದ್ದರೆ, 313 00:21:48,141 --> 00:21:49,641 ಅದು ಹೆಚ್ಚು ಮೌಲ್ಯಯುತವಾಗುತ್ತದೆ. 314 00:21:49,642 --> 00:21:52,185 ಅದನ್ನು ಯಾರು ಬಯಸಿದ್ದರೋ ಬಹುಶಃ ಅದನ್ನು ಮಾರಲು ನೋಡುತ್ತಿದ್ದಾರೆ. 315 00:21:52,186 --> 00:21:55,313 ಅಥವಾ ನಾವು ಯೋಜನೆ ಹಾಕುವುದು ಬೇಡ ಅಂತ ಅದನ್ನು ನಮ್ಮಿಂದ ಮುಚ್ಚಿಡಲು ನೋಡುತ್ತಿರಬಹುದು. 316 00:21:55,314 --> 00:21:56,565 ತಿಳಿಯುವವರೆಗೂ ಗೊತ್ತಾಗುವುದಿಲ್ಲ. 317 00:21:56,566 --> 00:21:58,275 ತಿಳಿಯುವ ಹೊತ್ತಿಗೆ ಕಾಲ ಮಿಂಚಿರದಿದ್ದರೆ ಸಾಕು. 318 00:21:58,276 --> 00:21:59,484 ನಿಮಗೆ ಫಿಲ್ಲಿಯಲ್ಲಿ ಸಿಗುವೆ. 319 00:21:59,485 --> 00:22:02,237 ನಾವು ಬಹುತೇಕ ಹಿಂತಿರುಗಿದ್ದೇವೆ. ನಗರದ ದಕ್ಷಿಣದಲ್ಲಿ ವಾಹನ ದಟ್ಟಣೆ ಇದೆ. 320 00:22:02,238 --> 00:22:04,197 ರಾತ್ರಿ ವೇಳೆ ನಿರ್ಮಾಣ ಮಾಡುವ ಉದ್ದೇಶವಾದರೂ ಏನು? 321 00:22:04,198 --> 00:22:06,075 ಈ ಉಪಕರಣವನ್ನು ದಿನವಿಡೀ ರಸ್ತೆಯಲ್ಲಿ ಇಡುತ್ತಾರೆ. 322 00:22:07,243 --> 00:22:08,785 ನೀವು ಎಷ್ಟು ಸಮಯದಿಂದ ಸಿಲುಕಿದ್ದೀರಿ? 323 00:22:08,786 --> 00:22:09,870 ಎರಡು ನಿರ್ಗಮನಗಳಾಚೆ. 324 00:22:09,871 --> 00:22:11,997 ಆದರೆ ಈ ಅಡಚಣೆಯಲ್ಲಿ ನಿಜವಾಗಿಯೂ ಕಷ್ಟವಾಗುತ್ತದೆ. 325 00:22:11,998 --> 00:22:13,499 ಮುಂದಿನ ಸೇವಾ ರಸ್ತೆ ಕಾಣುತ್ತದೆಯಾ? 326 00:22:14,792 --> 00:22:15,876 ನಿರ್ಗಮನ 20, 327 00:22:15,877 --> 00:22:18,045 "ಕೊಲಂಬಸ್ ಬೌಲೆವಾರ್ಡ್ ಮತ್ತು ವಾಷಿಂಗ್ಟನ್." 328 00:22:18,046 --> 00:22:21,048 ಪ್ಲಂ, ನಿರ್ಗಮನ 20ರ ಹತ್ತಿರದ ಸುರಂಗಮಾರ್ಗ ನಿಲ್ದಾಣವನ್ನು ಹುಡುಕಿ. 329 00:22:21,049 --> 00:22:22,049 ಹಾಂ, ತಿಳಿಯಿತು. 330 00:22:22,050 --> 00:22:23,133 ಏನು ಯೋಚಿಸುತ್ತಿದ್ದೀಯ? 331 00:22:23,134 --> 00:22:25,969 ಆನಾ ತನ್ನ ಕಾರಿನಿಂದ ಇಳಿದು ಸಬ್‌ವೇಗೆ ಏಕೆ ಹೋದಳು ಎಂದು ನನಗೆ ತಿಳಿದಿರಬಹುದು. 332 00:22:25,970 --> 00:22:27,721 ಟಾಸ್ಕರ್-ಮೋರಿಸ್ ಸ್ಟೇಷನ್. 333 00:22:27,722 --> 00:22:30,057 ಅಲ್ಲೇ ಆನಾ ತನ್ನ ಸೆಪ್ಟಾ ಪಾಸ್ ಖರೀದಿಸಿದಳು. 334 00:22:30,058 --> 00:22:33,518 ಅವಳು ಲೈಲಾಗಾಗಿ ಡ್ರೈವ್ ತಗೊಂಡು ಬರುವಾಗ ಅದೇ ದಟ್ಟಣೆಯಲ್ಲಿ ಸಿಲುಕಿಕೊಂಡಿರಬಹುದು. 335 00:22:33,519 --> 00:22:36,104 ಹಾಗಾಗಿ, ದಟ್ಟಣೆ ಹೆಚ್ಚಿದ ನಂತರ ಮೊದಲ ನಿರ್ಗಮನವನ್ನು ತೆಗೆದುಕೊಂಡಳು, 336 00:22:36,105 --> 00:22:38,690 ಹತ್ತಿರದ ಸೆಪ್ಟಾ ನಿಲ್ದಾಣಕ್ಕೆ ಹೋಗಿ, ಮುಂದಿನ ಸಬ್‌ವೇ ಹತ್ತಿದಳು. 337 00:22:38,691 --> 00:22:40,192 ಆನಾಗೆ ಸಮಯದ ಮಿತಿಯಿತ್ತು. 338 00:22:40,193 --> 00:22:41,568 ಆಕೆಗೆ ಗಡುವು ನೀಡಲಾಗಿತ್ತು. 339 00:22:41,569 --> 00:22:43,570 ನೀವು ಆ ಸುರಂಗಮಾರ್ಗ ನಿಲ್ದಾಣಕ್ಕೆ ಹೋಗಬಹುದೇ? 340 00:22:43,571 --> 00:22:45,405 ಹಾಂ, ನಾವು ಬಹುತೇಕ ಅಡಚಣೆಯನ್ನು ದಾಟಿದ್ದೇವೆ. 341 00:22:45,406 --> 00:22:47,533 ಸಾಧ್ಯವಾದಷ್ಟು ಬೇಗ ಟಾಸ್ಕರ್-ಮೋರಿಸ್‌ನಲ್ಲಿ ಭೇಟಿಯಾಗುತ್ತೇನೆ. 342 00:23:11,224 --> 00:23:12,225 ಆರಾಮಿದ್ದೀಯಾ? 343 00:23:17,230 --> 00:23:19,357 ಬೆನ್ ಆರಾಮವಾಗಿರಲು ಸಾಧ್ಯವೇ ಇಲ್ಲ, ಅಲ್ವಾ? 344 00:23:19,941 --> 00:23:21,316 ನಮಗೆ ಅದು ಇನ್ನೂ ತಿಳಿದಿಲ್ಲ. 345 00:23:21,317 --> 00:23:22,819 ಅವನು ಜೀವಂತವಾಗಿದ್ದಾನೆಂದು ಅನಿಸುತ್ತಾ? 346 00:23:23,986 --> 00:23:25,987 ಹೇಳಿ, ನೀವು ನಗರ ಪೊಲೀಸ್. 347 00:23:25,988 --> 00:23:27,864 ಹಿಂದೆ ನೀವು ಕಷ್ಟದ ಪ್ರಕರಣಗಳನ್ನು ಬಗೆಹರಿಸಿದ್ದೀರಿ. 348 00:23:27,865 --> 00:23:28,950 ನಿಮ್ಮಲ್ಲಿ ಆ ಪ್ರವೃತ್ತಿ ಇದೆ. 349 00:23:30,701 --> 00:23:32,328 ನನ್ನ ಸೋದರಳಿಯ ಬದುಕಿದ್ದಾನೆಯೇ? 350 00:23:33,746 --> 00:23:36,165 ಬೆನ್ ಸತ್ತಿದ್ದಾನೆಂದು ದೃಢೀಕರಿಸುವ ಯಾವುದೇ ಪುರಾವೆ ನನಗೆ ಸಿಕ್ಕಿಲ್ಲ. 351 00:23:39,127 --> 00:23:44,214 ನಡೆಯುತ್ತಿರುವ ಯಾವುದೇ ವಿಷಯದ ಮೇಲೆ ನನಗೆ ಯಾವುದೇ ನಿಯಂತ್ರಣವಿಲ್ಲ ಎಂದು ಅನಿಸುತ್ತಿದೆ, 352 00:23:44,215 --> 00:23:46,134 ಮತ್ತು ಅದನ್ನು ತಡೆಯಲು ನನಗೆ ಯಾವುದೇ ಶಕ್ತಿ ಇಲ್ಲ. 353 00:23:47,885 --> 00:23:49,512 ನಾನು ನಿಯಂತ್ರಣ ಕಳೆದುಕೊಳ್ಳುತ್ತಿದ್ದೇನೆ. 354 00:23:50,680 --> 00:23:52,932 ಹೇ. ಹೇ. ನನ್ನ ಮಾತು ಕೇಳು. 355 00:23:53,516 --> 00:23:55,351 ನಾನು 15 ವರ್ಷಗಳಿಂದ ಪೊಲೀಸ್ ಆಗಿದ್ದೇನೆ. 356 00:23:56,394 --> 00:23:58,646 ಒಳ್ಳೆಯ ಜನರಿಗೆ ನಡೆದ ಭಯಾನಕ ಸಂಗತಿಗಳನ್ನು ನಾನು ನೋಡಿದ್ದೇನೆ. 357 00:24:01,023 --> 00:24:03,525 ಪರಿಣಾಮಗಳಲ್ಲಿ ಕಳೆದುಹೋಗುವುದು ಸುಲಭ. 358 00:24:03,526 --> 00:24:05,278 ನಮಗೆ ಈಗ ಆ ಭಾಗ್ಯ ಇಲ್ಲ. 359 00:24:06,028 --> 00:24:08,321 ಕೊಲೆಗಾರರು ಮತ್ತು ಫೆಡ್ಸ್ ನಮ್ಮ ಮೇಲೆ ದಾಳಿ ಮಾಡುತ್ತಿದ್ದಾರೆ 360 00:24:08,322 --> 00:24:10,448 ಮತ್ತು ಅರ್ಥವೇ ಆಗುತ್ತಿಲ್ಲದ ಪ್ರಕರಣ ನಮ್ಮ ಹೆಗಲ ಮೇಲಿದೆ. 361 00:24:10,449 --> 00:24:15,120 ನಮಗೆ ನೀನು ಬೇಕು, ಸಂಪೂರ್ಣ ನಿಯಂತ್ರಣ ಪಡೆದು ನಿನ್ನ ಗಮನವನ್ನು ಇದರಲ್ಲಿ ತೊಡಗಿಸು. 362 00:24:15,121 --> 00:24:17,372 ಆ ನಕಾರಾತ್ಮಕತೆ ನಿನ್ನನ್ನು ಸುತ್ತುವರೆಯಲು ಆರಂಭಿಸಿದಾಗ 363 00:24:17,373 --> 00:24:19,749 ಮತ್ತು ನೀನು ನಿಯಂತ್ರಣವನ್ನು ಕಳೆದುಕೊಳ್ಳುತ್ತಿರುವೆ ಅನಿಸಿದಾಗ, 364 00:24:19,750 --> 00:24:22,044 ನಿನ್ನ ಬಗ್ಗೆ ಕಾಳಜಿ ವಹಿಸುವ ಜನರಿದ್ದಾರೆ ಅಂತ ತಿಳಿದಿರು. 365 00:24:23,504 --> 00:24:24,589 ನಾನೂ ಸೇರಿ. 366 00:24:29,844 --> 00:24:30,761 ನಿನ್ನಿಂದ ನೆನಪಾಯಿತು. 367 00:24:33,055 --> 00:24:36,267 ಇದನ್ನು ಆನಾಳ ಕಾರ್ಯಸ್ಥಳದಿಂದ ತೆಗೆದುಕೊಂಡೆ. ಇದನ್ನು ನಿನಗೆ ಕೊಡಬೇಕು ಎಂದು ಭಾವಿಸಿದೆ. 368 00:24:41,689 --> 00:24:42,523 ಧನ್ಯವಾದ. 369 00:24:43,608 --> 00:24:46,527 ಟರ್ಕಿ ಮತ್ತು ಚೀಸ್ ಯಾರಿಗೂ ಸಮಸ್ಯೆ ಇರುವುದಿಲ್ಲ ಎಂದು ಭಾವಿಸಿದೆ. 370 00:24:49,322 --> 00:24:50,698 ಎಲ್ಲವೂ ಸರಿಯಾಗಿದೆಯೇ? 371 00:24:51,908 --> 00:24:52,742 ಆರಾಮವಾಗಿದ್ದೇವೆ. 372 00:24:55,369 --> 00:24:56,287 ಬಂದ. 373 00:25:00,625 --> 00:25:03,336 ಅಯ್ಯೋ. ಇವನಿಗಾಗಿ ನಾನು ದೊಡ್ಡ ಸ್ಯಾಂಡ್ವಿಚ್ ತರಲಿಲ್ಲ. 374 00:25:06,714 --> 00:25:07,673 ಕ್ಷಮಿಸು, ಗುರು. 375 00:25:08,382 --> 00:25:12,469 ಸರಿ, ಆನಾ ಬಂದಿದ್ದು ಇಲ್ಲಿಗೆ. ಅವಳು ಹತಾಶಳಾಗಿದ್ದಳು. 376 00:25:12,470 --> 00:25:14,721 ಅವಳಿಗೆ ಸಮಯ ಇರಲಿಲ್ಲ ಎಂದೆ, ಹೇಗೆಂದು ವಿವರಿಸು. 377 00:25:14,722 --> 00:25:16,514 ನಾವು ಸರಿ ಎಂದು ಭಾವಿಸೋಣ. 378 00:25:16,515 --> 00:25:18,975 ಓನ್ಲಿ ಫ್ಯಾನ್ಸ್ ಮಹಿಳೆಯ ಕೊಲೆ ಮಾಡಲಾಯಿತು ಮತ್ತು ಆಕೆಯ ಕೊಲೆಗಾರರು, 379 00:25:18,976 --> 00:25:21,228 ಬಹುಶಃ ಗುತ್ತಿಗೆ ಕೊಲೆಗಾರರು, ಬೆನ್‌ನನ್ನು ಅಪಹರಿಸಿರಬಹುದು. 380 00:25:21,229 --> 00:25:24,356 ಅದನ್ನು ಲೈಲಾಗೆ ಕೊಡುವ ಬದಲು ತಮಗೆ ತಂದುಕೊಡುವಂತೆ ಆನಾಳನ್ನು ಒತ್ತಾಯಿಸಿರಬಹುದು. 381 00:25:24,357 --> 00:25:27,234 "ಇಷ್ಟು ಸಮಯದೊಳಗೆ ಡ್ರೈವ್ ತಂದುಕೊಡದಿದ್ದರೆ ನಿನ್ನ ಮಗನನ್ನು ಕೊಲ್ಲುತ್ತೇವೆ." 382 00:25:27,235 --> 00:25:29,236 ಅದಕ್ಕಾಗಿಯೇ ಅವಳು ಟ್ರಾಫಿಕ್‌ನಲ್ಲಿರಲು ಆಗಲಿಲ್ಲ. 383 00:25:29,237 --> 00:25:32,072 ಹಾಗಾಗಿ, ಬೆನ್‌ನನ್ನು ಕಾಪಾಡಲು ಅವಳು ಸಬ್‌ವೇಯನ್ನು ಹತ್ತಿದಳು. 384 00:25:32,073 --> 00:25:34,116 ಆದರೆ ಅದಕ್ಕೆ ಅರ್ಥವಿಲ್ಲ ಏಕೆಂದರೆ… 385 00:25:35,326 --> 00:25:36,410 ಏಕೆಂದರೆ ಏನು? 386 00:25:37,119 --> 00:25:38,912 ನನಗೆ ಗೊತ್ತಿಲ್ಲ, ಗುರು. ಏನೂ ಇಲ್ಲ. 387 00:25:38,913 --> 00:25:40,831 ಪ್ಲಂ ಹೇಳಲು ಪ್ರಯತ್ನಿಸುತ್ತಿರುವುದು ಏನೆಂದರೆ, 388 00:25:41,999 --> 00:25:44,000 ನಿನ್ನ ಅಕ್ಕನ ಬಳಿ ರೈಲಿನಲ್ಲಿ ಡ್ರೈವ್ ಇರಲಿಲ್ಲ, 389 00:25:44,001 --> 00:25:46,127 ಮತ್ತು ಅದು ಇಲ್ಲದೆ ಆಕೆ ಬೆನ್‌ನನ್ನು ಕಾಪಾಡಲು ಸಾಧ್ಯವಿಲ್ಲ. 390 00:25:46,128 --> 00:25:49,798 ಆನಾ ಸಬ್‌ವೇ ಹತ್ತುವ ಹೊತ್ತಿಗೆ, ತನ್ನ ಮಗ ಸತ್ತಿದ್ದಾನೆಂದು ಅವಳಿಗೆ ತಿಳಿದಿತ್ತು. 391 00:25:49,799 --> 00:25:54,135 ಇಲ್ಲ, ಇಲ್ಲ, ಇಲ್ಲ, ಇಲ್ಲ. ಅದು ಸರಿ ಅನಿಸಲ್ಲ. ಅವನು ಸತ್ತರೆ ಅವರು ಚೌಕಾಶಿ ಹೇಗೆ ಮಾಡಬಹುದು? 392 00:25:54,136 --> 00:25:57,597 ಅಪಹರಣ ಮಾಡುವುದು ಸಾಮಾನ್ಯವಾಗಿ ಸುಲಭವಲ್ಲ. ಮಗುವನ್ನು ನಿಯಂತ್ರಿಸುವುದೇ ಕಷ್ಟ, 393 00:25:57,598 --> 00:26:00,016 ಅದರಲ್ಲೂ ಅವನೊಬ್ಬ 250-ಪೌಂಡ್ ತೂಕದ ಲೈನ್‌ಬ್ಯಾಕರ್. 394 00:26:00,017 --> 00:26:02,644 ಹಾಗಾಗಿ, ಪರಿಸ್ಥಿತಿ ಕೈತಪ್ಪಿ ಬೆನ್ ಸತ್ತಿರಬಹುದು. 395 00:26:02,645 --> 00:26:04,562 ಇದು ನಿಜವಾಗುವುದು ಬೇಡ, ಆದರೆ ಹೀಗೆ ನಡೆದಿರಬಹುದು. 396 00:26:04,563 --> 00:26:06,147 ಬೆನ್ ಸತ್ತಿದ್ದಾನೆಂದು ಆಕೆ ಹೇಗೆ ತಿಳಿದಳು? 397 00:26:06,148 --> 00:26:08,900 ಅವನು ಬದುಕಿರುವ ಸಾಕ್ಷಿಗಳು ಅವಳಿಗೆ ಸಿಗುತ್ತಿದ್ದವೇನೋ. 398 00:26:08,901 --> 00:26:11,194 ಫೋನ್ ಕರೆಗಳು, ಬಹುಶಃ ವಿಡಿಯೋ. 399 00:26:11,195 --> 00:26:15,156 ಆನಂತರ ಅವರು ಅದನ್ನು ಮಾಡಲಿಲ್ಲ. ಆನಾ ವಾಹನದಟ್ಟಣೆಯಲ್ಲಿ ಸಿಲುಕಿದಳು. 400 00:26:15,157 --> 00:26:18,159 ಸಮಯ ಮೀರಿದರೆ ಬೆನ್‌ಗೆ ಅಪಾಯಕರ. ಹಾಗಾಗಿ, ಕರೆ ಮಾಡಿದಳು, 401 00:26:18,160 --> 00:26:22,414 ಅವನನ್ನು ಸುರಕ್ಷಿತವಾಗಿ ತೋರಿಸಲು ಕೇಳಿದಳು. ಅವರು ಅವನನ್ನು ಕರೆಯಲ್ಲಿ ಮಾತನಾಡಿಸಲಿಲ್ಲ. 402 00:26:22,415 --> 00:26:26,626 ಏಕೆಂದರೆ ಅವನನ್ನು ಕರೆಯಲ್ಲಿ ಮಾತನಾಡಿಸಲಾಗಲಿಲ್ಲ. ಹಾಗಾಗಿ ಅವನು ಸತ್ತಿದ್ದಾನೆಂದು ಆಕೆ ಅರಿತಳು. 403 00:26:26,627 --> 00:26:31,172 ಅಂದರೆ, ಆನಾ ಬೆನ್‌ನನ್ನು ಕಾಪಾಡಲಾಗಲಿಲ್ಲ. ಹಾಗಿದ್ದಾಗ ಸಬ್‌ವೇಗೆ ಯಾಕೆ ಹೋದಳು? 404 00:26:31,173 --> 00:26:34,010 ಅವರು ಮಾಡಿದ ಕೃತ್ಯವನ್ನು ತಿಳಿದಾಗ ಅವಳಿಗೆ ಸುಮ್ಮನೆ ಕೂರಲಾಗಲಿಲ್ಲ. 405 00:26:35,469 --> 00:26:37,930 ಸೇಡು ತೀರಿಸಿಕೊಳ್ಳಲು ಮುಂದಾದಳು. ಸೇವಾ ರಸ್ತೆಯಿಂದ ಹೊರಟು, 406 00:26:38,806 --> 00:26:39,973 ರೈಲು ಹತ್ತಿದಳು. 407 00:26:39,974 --> 00:26:41,224 ಅವನು ಹೇಳಿದ್ದು ಸರಿ. 408 00:26:41,225 --> 00:26:44,686 ನಾನು ಆನಾಳನ್ನು ನೋಡಿದಾಗ, ಅವಳು ಗನ್ ಹಿಡಿದು ದುಃಖಿಸುತ್ತಿದ್ದ, ಕಳವಳಗೊಂಡ ತಾಯಿಯಾಗಿದ್ದಳು. 409 00:26:44,687 --> 00:26:46,313 ಅವಳಿಗೆ ಪ್ರತೀಕಾರ ಬೇಕಿತ್ತು. 410 00:26:46,314 --> 00:26:49,274 ವೃತ್ತಿಪರ ಕೊಲೆಗಾರರ ವಿರುದ್ಧ. ಅವಳೊಬ್ಬ ಸರ್ಕಾರಿ ಗುಮಾಸ್ತೆ. 411 00:26:49,275 --> 00:26:51,860 ಆಕೆ ಚಿಂತಿಸಲಿಲ್ಲ. ತಾನು ಧರಿಸಿದ್ದ ಬಿಳಿ ಅಂಗಿಯನ್ನು ಮುಚ್ಚಲು 412 00:26:51,861 --> 00:26:53,445 ಕಪ್ಪು ಕೋಟ್ ಎತ್ತಿಕೊಂಡಳು, 413 00:26:53,446 --> 00:26:56,031 ಬೆನ್‌ನ ಕೊಲೆಗಾರರ ಹತ್ತಿರ ನುಸುಳಲು ಸಹಾಯವಾಗಬಹುದು ಅಂದುಕೊಂಡಳು. 414 00:26:56,032 --> 00:26:57,824 ಡ್ರೈವ್ ಅನ್ನು ಅಪಹರಣಕಾರರಿಗೆ ಕೊಟ್ಟ ನಂತರ, 415 00:26:57,825 --> 00:27:00,243 ತನ್ನ ಮತ್ತು ಬೆನ್‌ನ ರಕ್ಷಣೆಗಾಗಿ ಗನ್ ತಂದಿರಬಹುದು, 416 00:27:00,244 --> 00:27:03,456 ಅಲ್ಲಿಂದ ತಪ್ಪಿಸಿಕೊಳ್ಳೋಕೆ. ಆದರೆ ನಂತರ ಅದನ್ನು ಪ್ರತೀಕಾರಕ್ಕಾಗಿ ಬಳಸಲು ಯೋಚಿಸಿರಬಹುದು. 417 00:27:04,165 --> 00:27:07,877 ಆದರೆ ಅವಳು ಅಂಥ ಯೋಜನೆ ಹೊಂದಿದ್ದರೆ, ಆತ್ಮಹತ್ಯೆ ಏಕೆ ಮಾಡಿಕೊಳ್ಳುತ್ತಿದ್ದಳು? 418 00:27:13,341 --> 00:27:14,175 ಏನು? 419 00:27:16,635 --> 00:27:17,928 ನಾನು ಆನಾ ಹತ್ತಿರ ಹೋದಾಗ… 420 00:27:19,513 --> 00:27:20,723 ನಾನು ಪೊಲೀಸ್ ಎಂದು ಹೇಳಿದೆ. 421 00:27:21,891 --> 00:27:23,058 ಅವಳು ಬುದ್ಧಿವಂತೆ. 422 00:27:23,059 --> 00:27:25,853 ಅವಳನ್ನು ನಾನು ಬಂಧಿಸಿದರೆ, ಸೇಡಿನ ಯೋಜನೆ ಕೈತಪ್ಪುತ್ತದೆ ಎಂದು ತಿಳಿದಿದ್ದಳು. 423 00:27:26,479 --> 00:27:28,646 ಬೆನ್‌ನ ಜೀವಕ್ಕೆ ತನ್ನಿಂದ ಅನ್ಯಾಯವಾಯಿತು ಅಂದುಕೊಂಡಳು. 424 00:27:28,647 --> 00:27:30,231 ಈಗ ಸಾವಿನಲ್ಲೂ ಅನ್ಯಾಯವಾಯಿತು ಅಂದುಕೊಂಡಳು. 425 00:27:30,232 --> 00:27:32,234 ಆ ಪಶ್ಚಾತ್ತಾಪ ಮತ್ತು ನೋವನ್ನು ಆಕೆ ಭರಿಸಲಾಗಲಿಲ್ಲ. 426 00:27:33,361 --> 00:27:36,113 ಅವಳಿಗೆ ನೀನು ಪೊಲೀಸ್ ಅಂತ ಹೇಳಿದೆಯಾ? 427 00:27:36,781 --> 00:27:39,616 ನಿಯಂತ್ರಣದಲ್ಲಿರುವವರೊಂದಿಗೆ ಆಕೆ ಸುರಕ್ಷಿತ ಎಂದು ಬಿಂಬಿಸಲು ನೋಡಿದೆ, 428 00:27:39,617 --> 00:27:41,951 ಆದರೆ ಸ್ಪಷ್ಟವಾಗಿ ಆಕೆ ನಿಯಂತ್ರಣವನ್ನೇ ಕಳೆದುಕೊಂಡಿದ್ದಳು. 429 00:27:41,952 --> 00:27:43,579 ಅದರಿಂದ ಪರಿಸ್ಥಿತಿ ತಿಳಿಯಾಗಬಹುದು ಅಂದುಕೊಂಡೆ. 430 00:27:44,330 --> 00:27:45,539 ಅವಳಿಗೆ ಸಹಾಯ ಮಾಡಲು ಬಯಸಿದ್ದೆ. 431 00:27:47,625 --> 00:27:48,459 ನನ್ನಿಂದ ಆಗಲಿಲ್ಲ. 432 00:27:50,252 --> 00:27:52,337 ಆ ಡ್ರೈವ್, ಆನಾ ಫಿಲ್ಲಿಗೆ ಹೊರಟಾಗ ಅದು ಅವಳ ಬಳಿ ಇತ್ತು. 433 00:27:52,338 --> 00:27:55,340 ಆ ಡ್ರೈವ್ ಬೆನ್‌ನ ಕೊಲೆಗಾರರಿಗೆ ಸಿಗಲು ಅವಳು ಖಂಡಿತ ಬಿಡುತ್ತಿರಲಿಲ್ಲ, 434 00:27:55,341 --> 00:27:57,050 ಹಾಗಾಗಿ ಅದನ್ನು ಬಿಟ್ಟು ಹೋದಳು. 435 00:27:57,051 --> 00:28:00,970 ಅವಳು ಅದನ್ನು ಎಲ್ಲಿ ಇಟ್ಟಿರಬಹುದೆಂದು ನನಗೆ ಗೊತ್ತು. ಆನಾಳ ಕಾರಿನಲ್ಲಿ ನಮಗೆ ಸಿಕ್ಕ ಅಂಚೆ. 436 00:28:00,971 --> 00:28:04,057 ಆ ಕ್ರೆಡಿಟ್ ಕಾರ್ಡ್ ಕೊಡುಗೆ ಮಾತ್ರ ತೆರೆದ ಅಂಚೆಯಾಗಿತ್ತು. 437 00:28:04,058 --> 00:28:07,227 ಅದಕ್ಕೆ ಉತ್ತರಿಸುವ ಅಂಚೆ ಇದ್ದಂತಿರಲಿಲ್ಲ. ಮೂಲೆಯಲ್ಲಿ "ಅಂಚೆ ಶುಲ್ಕ ಇಲ್ಲ" 438 00:28:07,228 --> 00:28:09,729 ಅಂತ ಬರೆದಿರುತ್ತದೆ ಅಲ್ವಾ, ಅಂಥದ್ದು. 439 00:28:09,730 --> 00:28:13,108 ಸಬ್‌ವೇ ಹತ್ತುವ ಮೊದಲು ಡ್ರೈವ್ ಮತ್ತು ಬಹುಶಃ ಅವಳ ಫೋನನ್ನು ಅಂಚೆಯಲ್ಲಿ ಕಳಿಸಿರಬಹುದು. 440 00:28:13,109 --> 00:28:16,152 - ಯಾರಿಗೆ? - ಲೈಲಾಗೆ. ಆನಾ ಸೇಡು ತೀರಿಸಿಕೊಳ್ಳುವಾಗ ಸತ್ತರೆ, 441 00:28:16,153 --> 00:28:18,488 ಕನಿಷ್ಠ ಬೆನ್‌ನ ಕೊಲೆಗಾರರು ಅವಳ ಕಥೆಯಿಂದ ಬಹಿರಂಗಗೊಳ್ಳುವರು. 442 00:28:18,489 --> 00:28:21,574 ಸಾರ್ವಜನಿಕ ಮಾಧ್ಯಮ. ದಬ್ಬಾಳಿಕೆಯ ವಿರುದ್ಧ ರಕ್ಷಣೆಯ ಕೊನೆಯ ಪಂಕ್ತಿ. 443 00:28:21,575 --> 00:28:24,994 ಹಾಗಾದರೆ, ನಾವು ಇಷ್ಟು ದಿನ ಹುಡುಕುತ್ತಿದ್ದದ್ದು ಲೈಲಾಳ ಹೋಟೆಲ್‌ನಲ್ಲಿಯೇ ಇದೆಯೇ? 444 00:28:24,995 --> 00:28:26,913 ಲೈಲಾ ಉಳಿದಿದ್ದ, ಆನಾಗೆ ತಿಳಿದಿದ್ದ ಕೊನೆಯ ಸ್ಥಳ. 445 00:28:26,914 --> 00:28:28,832 ಆದರೆ ದಾಳಿಯ ನಂತರ ಲೈಲಾ ಅಲ್ಲಿಂದ ಹೊರಡಬೇಕಾಯಿತು, 446 00:28:28,833 --> 00:28:30,084 ಡ್ರೈವ್ ಅವಳಿಗೆ ತಲುಪುವ ಮೊದಲು. 447 00:28:33,295 --> 00:28:34,212 ಡಾಕೆರ್ಟಿ. 448 00:28:34,213 --> 00:28:36,214 ಅವನಿಗೆ ನಿಮ್ಮ ಬರ್ನರ್ ನಂಬರ್ ಕೊಟ್ಟಿದ್ದೀರಾ? 449 00:28:36,215 --> 00:28:37,133 ಹೇ. 450 00:28:41,637 --> 00:28:42,638 ಸರಿ. 451 00:28:46,100 --> 00:28:46,934 ಧನ್ಯವಾದಗಳು. 452 00:28:51,772 --> 00:28:52,690 ಬೆನ್ ಸಿಕ್ಕಿದ್ದಾನೆ. 453 00:28:55,651 --> 00:28:56,861 ನನ್ನನ್ನು ಕ್ಷಮಿಸು. 454 00:29:06,245 --> 00:29:08,455 ಶವಾಗಾರಕ್ಕೆ ಅವನೊಬ್ಬನೇ ಹೋಗುವುದು ನನಗೆ ಬೇಡ. 455 00:29:08,456 --> 00:29:10,165 - ಪ್ಲಂ ಮತ್ತು ನಾನು ಜೊತೆ ಹೋಗುತ್ತೇವೆ. - ಹಾಂ. 456 00:29:10,166 --> 00:29:13,001 ನೀನು ಲೈಲಾಳನ್ನು ಆ ಹಳೆಯ ಹೋಟೆಲ್‌ನಲ್ಲಿ ಭೇಟಿಯಾಗಿ ಆ ದರಿದ್ರ ಡ್ರೈವ್ ಪಡೆ. 457 00:29:13,002 --> 00:29:14,003 ಅದು ಸಿಕ್ಕಾಗ ನಿಮಗೆ ಹೇಳುವೆ. 458 00:29:16,881 --> 00:29:18,756 ಲೈಲಾ, ನಾನು ರೀಚರ್. 459 00:29:18,757 --> 00:29:19,841 ಕಾರ್ಟರ್ ಹೋಟೆಲ್ ಪಾರ್ಕಿಂಗ್ 460 00:29:19,842 --> 00:29:22,093 - ಹಿಂಭಾಗದಲ್ಲಿ ಪರಿಶೀಲಿಸುವಿರಾ? - ಹಿಂಭಾಗದಲ್ಲಿ ಏನೂ ಇಲ್ಲ. 461 00:29:22,094 --> 00:29:25,221 ಹಳೆಯ, ಕಳೆದುಹೋಗಿ ಸಿಕ್ಕ ಅಂಚೆ ಪತ್ರ ಮೇಜಿನ ಮೇಲೆಯೇ ಇರುತ್ತದೆ. 462 00:29:25,222 --> 00:29:26,806 ಸರಿ, ನಾನು ಮ್ಯಾನೇಜರ್ ಜೊತೆ ಮಾತನಾಡಬಹುದೇ? 463 00:29:26,807 --> 00:29:29,517 ಜೀನ್ ಮುಂದಿನ ವಾರದವರೆಗೆ ಪೊಕೊನೊಸ್‌ನಲ್ಲಿರುವರು. ಅವರೂ ಅದನ್ನೇ ಹೇಳುತ್ತಾರೆ. 464 00:29:29,518 --> 00:29:30,686 ಸಹಾಯಕ್ಕಾಗಿ ಧನ್ಯವಾದಗಳು. 465 00:29:34,064 --> 00:29:36,274 ಆನಾ ನಿನಗೆ ಡ್ರೈವ್ ಕಳಿಸುವಂಥ ಬೇರೆ ಯಾವುದಾದರೂ ಸ್ಥಳ ಇದೆಯಾ? 466 00:29:36,275 --> 00:29:38,985 ಅವಳಿಗೆ ಗೊತ್ತಿದ್ದ ಏಕೈಕ ಸ್ಥಳ ಅದು. ಅದು ಅಲ್ಲಿಲ್ಲ ಎಂದು ನಂಬಲಾಗುತ್ತಿಲ್ಲ. 467 00:29:38,986 --> 00:29:41,571 - ನಾನು ಶವಾಗಾರಕ್ಕೆ ಹೋಗಬೇಕು. - ಶವಾಗಾರವೇ? 468 00:29:41,572 --> 00:29:44,324 ಆನಾಳ ಮಗನ ಕೊಲೆಯಾಗಿದೆ. ಶವ ಈಗಷ್ಟೇ ಪತ್ತೆಯಾಯಿತು. 469 00:29:44,325 --> 00:29:46,117 ದೇವರೇ. ತಾಯಿ ಮತ್ತು ಮಗ. 470 00:29:46,118 --> 00:29:48,369 ನಮ್ಮ ಹಿಂದೆ ಬಿದ್ದಿದ್ದ ಅದೇ ಜನರಾ? 471 00:29:48,370 --> 00:29:50,747 ಅವರೇ ಇರಬಹುದು. ನನ್ನ ಸಿದ್ಧಾಂತ ಏನೆಂದರೆ, 472 00:29:50,748 --> 00:29:53,291 ಆನಾಳಿಂದ ಡ್ರೈವ್ ಪಡೆಯಲು ಅವರು ಬೆನ್‌ನನ್ನು ಗಾಳವಾಗಿ ಬಳಸಿದ್ದರು. 473 00:29:53,292 --> 00:29:56,462 ಅಂದರೆ, ಆನಾ ಮತ್ತು ಅವಳ ಒಬ್ಬನೇ ಮಗನ ಸಾವಿಗೆ ನಾನೇ ಕಾರಣ. 474 00:29:58,631 --> 00:30:00,507 - ಏನಾಯಿತು? - ನಮ್ಮನ್ನು ಹಿಂಬಾಲಿಸುತ್ತಿದ್ದಾರೆ. 475 00:30:00,508 --> 00:30:03,426 ನಿನ್ನ ಮೇಲೆ ದಾಳಿ ಮಾಡಿದವರು ನೀನು ಇಲ್ಲಿಗೆ ಮತ್ತೆ ಬರಬಹುದೆಂದು 476 00:30:03,427 --> 00:30:04,845 ಈ ಜಾಗದಲ್ಲೇ ಕಾಯುತ್ತಿದ್ದರು ಅನಿಸುತ್ತೆ. 477 00:30:05,554 --> 00:30:06,721 ಏನು ಮಾಡೋಣ? 478 00:30:06,722 --> 00:30:09,974 ಇಷ್ಟು ಮಂದಿ ಬೇವರ್ಸಿಗಳನ್ನು ಕಳಿಸಲು ಯಾರ ಬಳಿಯೋ ತುಂಬಾ ಹಣ ಇರಬೇಕು. 479 00:30:09,975 --> 00:30:11,727 ಅದು ಯಾರೆಂದು ಕಂಡುಹಿಡಿಯಬೇಕು. ಬಾ. 480 00:30:29,828 --> 00:30:31,162 - ಇಲ್ಲ! - ನಾನು ಇವರೊಂದಿಗೆ ವ್ಯವಹರಿಸಿ 481 00:30:31,163 --> 00:30:32,498 ನಿನಗೆ ಹೋಟೆಲ್‌ನಲ್ಲಿ ಸಿಗುತ್ತೇನೆ! 482 00:30:42,007 --> 00:30:42,883 ಡ್ರೈವ್. 483 00:30:44,051 --> 00:30:45,218 ಎಡ ಜೇಬು. 484 00:30:45,219 --> 00:30:46,220 ಹಾಗಾದರೆ ತೆಗೆದು ಕೊಡು. 485 00:30:49,181 --> 00:30:51,683 ಇಷ್ಟೆಲ್ಲಾ ಜನರ ಮುಂದೆ ನನಗೆ ಗುಂಡು ಹೊಡೆದು, ನೀನು ಆ ವಸ್ತುವನ್ನು 486 00:30:51,684 --> 00:30:55,436 ಪಡೆಯಲು ಬಂದ ದಿನವೇ ಬಂಧನಕ್ಕೆ ಒಳಗಾಗಬಾರದೆಂದರೆ, 487 00:30:55,437 --> 00:30:56,355 ನೀನೇ ತೆಗೆದುಕೋ. 488 00:31:16,125 --> 00:31:17,417 ಯಾರಿಗಾಗಿ ಕೆಲಸ ಮಾಡುತ್ತೀಯ? 489 00:31:17,418 --> 00:31:18,335 ಹೋಗೋಲೋ! 490 00:31:29,805 --> 00:31:30,764 ಅಬ್ಬಾ! 491 00:31:35,686 --> 00:31:37,730 ನನ್ನ ಪ್ರಶ್ನೆಗೆ ಉತ್ತರಿಸು, ಇಲ್ಲಾ ಇನ್ನೊಂದು ಕೈ ಮುರಿಯುವೆ. 492 00:31:48,532 --> 00:31:49,741 ಅಯ್ಯೋ. 493 00:31:49,742 --> 00:31:51,118 ಇಲ್ಲಿ ಪ್ಲಾಟ್ಫಾರ್ಮ್ ಮೇಲೆ. 494 00:31:57,708 --> 00:31:58,876 ಕೈ ಮೇಲೆತ್ತು! 495 00:32:00,044 --> 00:32:00,961 ನಿನ್ನ ಕೈಗಳನ್ನು ತೋರಿಸು. 496 00:32:04,506 --> 00:32:05,799 ಓಡುತ್ತಿದ್ದಾನೆ. 497 00:32:20,439 --> 00:32:23,358 ನಮಗೆ ಟಾಸ್ಕರ್-ಮೋರಿಸ್ ದಕ್ಷಿಣ ದಿಕ್ಕಿನ ಪ್ಲಾಟ್ಫಾರ್ಮಲ್ಲಿ ನೆರವಿನ ಅಗತ್ಯವಿದೆ. 498 00:32:23,359 --> 00:32:24,943 ನಿರ್ಗಮನಗಳಲ್ಲಿ ನಮ್ಮವರನ್ನು ಇರಿಸಿ, ಈಗಲೇ! 499 00:32:51,970 --> 00:32:52,888 ಹೇ. 500 00:32:53,764 --> 00:32:54,973 ಸ್ವಲ್ಪ ಸಹಾಯ ಬೇಕಾ? 501 00:33:01,522 --> 00:33:02,523 ಅವನು ಈ ಕಡೆ ಬರಲಿಲ್ಲ. 502 00:33:03,524 --> 00:33:05,025 ನಾನು ಪೂರ್ವಕ್ಕೆ, ನೀನು ಪಶ್ಚಿಮಕ್ಕೆ ಹೋಗು. 503 00:33:12,324 --> 00:33:13,533 ಧನ್ಯವಾದ. 504 00:33:13,534 --> 00:33:16,453 ಈ ಸುರಂಗಗಳ ಮೂಲಕ ಲಿಬರ್ಟಿ ಗಾರ್ಡನ್ಸ್ ಹೋಟೆಲ್‌ಗೆ ಹೇಗೆ ಹೋಗುವುದು? 505 00:33:23,460 --> 00:33:27,631 ಫಿಲಡೆಲ್ಫಿಯಾ ವೈದ್ಯಕೀಯ ಪರೀಕ್ಷಕರ ಕಚೇರಿ 506 00:33:41,645 --> 00:33:42,938 ಇವನು ಅವರಿಗೆ ಎಲ್ಲಿ ಸಿಕ್ಕಿದ? 507 00:33:43,564 --> 00:33:46,316 ನೈನ್ಥ್ ಅಂಡ್ ಕ್ಯಾಲೋಹಿಲ್ ಸುತ್ತಮುತ್ತ ಸಿಕ್ಕಿದ. 508 00:33:50,237 --> 00:33:51,280 ಇದನ್ನು ವರದಿ ಮಾಡಿದ್ದು ಯಾರು? 509 00:33:56,827 --> 00:34:00,330 ಒಬ್ಬ ಪೌರಕಾರ್ಮಿಕ. ಕಸದ ತೊಟ್ಟಿಯಿಂದ ವಾಸನೆ ಬರುತ್ತಿದೆ ಎಂದು ವರದಿ ಮಾಡಿದ. 510 00:34:02,416 --> 00:34:03,625 ನಿಮಗೆ ಒಂದು ಕ್ಷಣ ಸಮಯ ಕೊಡುವೆ. 511 00:34:14,553 --> 00:34:16,096 ಆನಾ ಅಷ್ಟೆಲ್ಲಾ ನಲುಗಿಹೋಗುತ್ತಿದ್ದರೂ… 512 00:34:20,225 --> 00:34:21,769 ಸಹಾಯಕ್ಕಾಗಿ ನನಗೆ ಒಮ್ಮೆಯೂ ಕರೆ ಮಾಡಲಿಲ್ಲ. 513 00:34:23,353 --> 00:34:25,147 ಯಾಕೆಂದರೆ ಅವಳಿಗೆ ಗೊತ್ತಿತ್ತು, ನಾನು ಕೇವಲ… 514 00:34:26,982 --> 00:34:31,028 ಬ್ಯಾಡ್ಜ್ ಇರುವ ವೈಭವೀಕೃತ ಕಾವಲುಗಾರ ಅಷ್ಟೇ ಅಂತ. 515 00:34:33,697 --> 00:34:37,326 ಅಸಮರ್ಥ, ನಿಷ್ಪ್ರಯೋಜಕ, ದರಿದ್ರ… 516 00:34:38,994 --> 00:34:39,995 ದಂಡ ಹಾಕುವ ಪ್ಯಾದೆ ಅಂತ. 517 00:34:47,544 --> 00:34:49,213 ನಾನಾಗಿದ್ದರೂ ನನಗೆ ಕರೆ ಮಾಡುತ್ತಿರಲಿಲ್ಲ. 518 00:35:05,938 --> 00:35:07,481 ನನ್ನ ಬಳಿ ಈಗ ಏನೂ ಇಲ್ಲ. 519 00:35:10,526 --> 00:35:13,987 ನಾನು ಸಂಪೂರ್ಣವಾಗಿ ಒಂಟಿಯಾಗಿದ್ದೇನೆ. 520 00:35:43,267 --> 00:35:44,350 ನನ್ನ ಮಾತು ಕೇಳಿಸುತ್ತಾ? 521 00:35:44,351 --> 00:35:46,228 ಆದಷ್ಟು ಬೇಗ ಲಿಬರ್ಟಿ ಗಾರ್ಡನ್ಸ್‌ನಲ್ಲಿ ಭೇಟಿಯಾಗೋಣ. 522 00:35:47,229 --> 00:35:49,314 ಬೆನೆಟ್, ಕೇಳಿಸಿತಾ? ಓವರ್. 523 00:35:50,190 --> 00:35:51,400 ಟೈಲರ್? 524 00:35:53,193 --> 00:35:57,322 ಬೇಗ ಲಿಬರ್ಟಿ ಗಾರ್ಡನ್ಸ್‌ನಲ್ಲಿ ಭೇಟಿಯಾಗೋಣ. ನಾವು ಅವಳಿರುವ ಟವರ್‌ಗೆ ಹೋಗುತ್ತಿದ್ದೇವೆ. 525 00:36:01,743 --> 00:36:02,952 ಕರೆ ವಿಫಲವಾಗಿದೆ 526 00:36:02,953 --> 00:36:04,288 ಸಿಗು, ಲೈಲಾ. 527 00:36:06,123 --> 00:36:06,957 ಛೆ! 528 00:36:14,923 --> 00:36:17,718 ಲಿಬರ್ಟಿ ಗಾರ್ಡನ್ಸ್ ಹೋಟೆಲ್ 529 00:36:37,237 --> 00:36:38,447 ಓ, ದೇವರೇ. 530 00:36:40,991 --> 00:36:42,701 {\an8}ನೀನು ನನ್ನನ್ನು ಬೆಚ್ಚಿಬೀಳಿಸಿಬಿಟ್ಟೆ. 531 00:36:45,329 --> 00:36:46,579 {\an8}ನಿನಗೆ ಡ್ರೈವ್ ಸಿಕ್ಕಿತಾ? 532 00:36:46,580 --> 00:36:49,916 {\an8}ಅದು ಅಲ್ಲಿ ಇರಲಿಲ್ಲ. ಆದರೆ ರೀಚರ್ ಇನ್ನೂ ನಮಗೆ ಸಹಾಯ ಮಾಡುತ್ತಿದ್ದಾನೆ, 533 00:36:49,917 --> 00:36:51,208 {\an8}ಆದ್ದರಿಂದ ಅದು ಒಳ್ಳೆಯದು. 534 00:36:51,209 --> 00:36:53,420 {\an8}- ಸರಿ. - ಇದೆಲ್ಲ ಏನು? 535 00:36:54,129 --> 00:36:55,588 {\an8}ನಾನು ನಮಗೆ ಸೋಟೊ ಆಯಮ್ ಮಾಡುತ್ತೇನೆ. 536 00:36:55,589 --> 00:36:58,634 {\an8}ನಾನು ಇನ್ನು ಮುಂದೆ ಅಮೆರಿಕನ್ ಆಹಾರವನ್ನು ತಿನ್ನಲಾರೆ. 537 00:36:59,843 --> 00:37:03,847 {\an8}ಈ ದಿನವಾದರೂ ಅಷ್ಟು ಕೆಟ್ಟದಾಗಿ ಇರುವುದಿಲ್ಲವೇನೋ. 538 00:37:07,017 --> 00:37:10,603 ಮೇರಿ ಎಲ್ಲೆನ್ ಡ್ಯಾನಿಯಲ್ಸ್ ಕೊಲೆ ವರದಿ ಮಾಡಿದ ಅಧಿಕಾರಿ ನೀವೇ, ಅಲ್ವಾ? 539 00:37:10,604 --> 00:37:13,064 ಹೌದು. ಅವಳು ಸತ್ತ ರಾತ್ರಿ ಬೆನ್ ಮೆರಿಕ್ ಜೊತೆಗಿದ್ದಳು. 540 00:37:13,065 --> 00:37:14,690 ಎಲ್ಲವೂ ದೊಡ್ಡ ತನಿಖೆಯ ಭಾಗವೇ. 541 00:37:14,691 --> 00:37:18,194 ಸರಿ, ನಿಮಗೆ ಆಸಕ್ತಿ ಮೂಡಿಸುವಂಥ ಗಾಯದ ವಿಶ್ಲೇಷಣೆ ನನಗೆ ಸಿಕ್ಕಿದೆ. 542 00:37:18,195 --> 00:37:19,737 ಮೇರಿಯನ್ನು ಕೊಂದ ಅದೇ ರೀತಿಯ ಆಯುಧದಿಂದ 543 00:37:19,738 --> 00:37:22,115 ಬೆನ್‌ನ ಗಂಟಲು ಕತ್ತರಿಸಲ್ಪಟ್ಟಂತೆ ತೋರುತ್ತದೆ. 544 00:37:51,853 --> 00:37:54,356 ಕದಲಬೇಡಿ. ಮತ್ತು ಕಿರುಚಬೇಡಿ. 545 00:37:58,193 --> 00:38:01,363 ನೀವು ಅವರಂತೆ ಸಾಯಲು ಬಯಸದಿದ್ದರೆ, ಡ್ರೈವ್ ಎಲ್ಲಿದೆ ಎಂದು ನಮಗೆ ತಿಳಿಸಿ. 546 00:38:06,785 --> 00:38:07,953 ಚಾಕುಗಳು. 547 00:38:10,330 --> 00:38:12,124 ಯಾರಿಗೂ ಗುಂಡಿನ ಸದ್ದು ಕೇಳಿಸದಿರಲಿ ಅಂತ. 548 00:38:15,168 --> 00:38:18,295 ಅದು ಬಾಗಿದ ಚಾಕು. ಅದನ್ನು ಕರಂಬಿಟ್ ಎಂದು ಕರೆಯಲಾಗುತ್ತದೆ. 549 00:38:18,296 --> 00:38:21,508 ಇಂಡೋನೇಷ್ಯಾದಲ್ಲಿ ಕೆಲವು ಸಮರ ಕಲೆಗಳ ಅಭ್ಯಾಸಕಾರರು ಬಳಸುತ್ತಾರೆ. 550 00:38:24,678 --> 00:38:25,804 ಇಂಡೋನೇಷ್ಯಾನಾ? 551 00:39:20,192 --> 00:39:23,236 ಫಿಲ್ಲಿ ಪೊಲೀಸ್! ಕೈ ಮೇಲಕ್ಕೆತ್ತು! ಕೈ ಮೇಲಕ್ಕೆತ್ತು! 552 00:39:26,364 --> 00:39:28,075 ಅಲುಗಾಡಬೇಡ. 553 00:41:20,103 --> 00:41:22,188 ಉಪ ಶೀರ್ಷಿಕೆ ಅನುವಾದ:: ಸುಜಿತ್ ವೆಂಕಟರಾಮಯ್ಯ 554 00:41:22,189 --> 00:41:24,191 ಸೃಜನಶೀಲ ಮೇಲ್ವಿಚಾರಕರು ವಿವೇಕ್