1 00:00:20,120 --> 00:00:21,320 ನಾನು ನಿನ್ನನ್ನು ನಂಬಿದ್ದೆ. 2 00:00:23,080 --> 00:00:25,280 ದಿಗ್ವಿಜಯ್ ನೀನೀಗ ಮಾಡಿದ್ದು, 3 00:00:26,000 --> 00:00:28,360 ಇದನ್ನು ಮಾಡುವ ಹಕ್ಕು ನಾನು ನಿನಗೆ ನೀಡಿಲ್ಲ. 4 00:00:28,440 --> 00:00:30,720 ನಿನ್ನಿಂದ ನಾನು ಹಕ್ಕು ಪಡೆಯಬೇಕಿಲ್ಲ. 5 00:00:32,600 --> 00:00:34,200 ಇದು ಮೊದಲಿಂದಲೂ ನನ್ನದು. 6 00:00:34,960 --> 00:00:35,760 ಇಲ್ಲ. 7 00:00:36,880 --> 00:00:39,320 ಈ ಸಂಕಲನದ ಮೇಲೆ ನಿನಗೆ ಹಕ್ಕು ಇರಲಿಲ್ಲ. 8 00:00:40,760 --> 00:00:42,960 ಪಂಡಿತ್ಜೀ ಈ ಪುಸ್ತಕವನ್ನು ರಾಧೆಗೆ ಕೊಟ್ಟಿದ್ದು. 9 00:00:45,760 --> 00:00:48,120 ಪಂಡಿತ್ಜೀ ಬೇಕಾದಷ್ಟು ತಪ್ಪುಗಳನ್ನು ಮಾಡಿದ್ದಾರೆ. 10 00:00:49,720 --> 00:00:52,000 ಇದು ನಿನಗಿಂತ ಚೆನ್ನಾಗಿ ಯಾರಿಗೆ ಗೊತ್ತು? 11 00:00:52,080 --> 00:00:53,120 ದಿಗ್ವಿಜಯ್. 12 00:00:53,200 --> 00:00:55,520 ಮೋಹಿನಿ. ಅವನು ಹೇಳಿದ್ದು ಸರಿ. 13 00:00:57,080 --> 00:01:00,640 ನಾನು ಯಾವಾಗಲೂ ಅವರ ತಪ್ಪುಗಳ ಮೇಲೆ ಕೇಂದ್ರೀಕರಿಸಿದೆ. 14 00:01:01,960 --> 00:01:03,320 ದ್ವೇಷಿಸುತ್ತಲೇ ಇದ್ದೆ. 15 00:01:04,120 --> 00:01:06,120 ಆದರೆ ಬದಲಾಗಿ ನನಗೆ ಏನು ಸಿಕ್ಕಿತು? 16 00:01:06,800 --> 00:01:07,840 ಕೇವಲ ಕಹಿ. 17 00:01:10,039 --> 00:01:12,920 ಆ ಕಹಿ ಎಂದಿಗೂ ನನ್ನನ್ನು ಶಾಂತಿಯಿಂದ ಬದುಕಲು ಬಿಡಲಿಲ್ಲ, 18 00:01:14,400 --> 00:01:17,200 ಅವರ ಎಲ್ಲಾ ಸರಿಯಾದ ನಿರ್ಧಾರಗಳ ಮೇಲೆ ನನಗೆ ಗಮನಹರಿಸಲೂ ಬಿಡಲಿಲ್ಲ. 19 00:01:19,520 --> 00:01:21,520 ಉದಾಹರಣೆಗೆ ನಿನ್ನ ಉತ್ತರಾಧಿಕಾರಿ ಮಾಡದ್ದು. 20 00:01:27,039 --> 00:01:31,520 ರಾಧೆಗೆ ಉತ್ತರಾಧಿಕಾರಿಯಾಗುವ ಜವಾಬ್ದಾರಿ ಹೇಗೆ ನಿಭಾಯಿಸಬೇಕೆಂದು ತಿಳಿದಿದ್ದರೆ, 21 00:01:31,600 --> 00:01:34,960 ನಮ್ಮ ಪರಂಪರೆಯನ್ನು ಸರಿಯಾದ ರೀತಿಯಲ್ಲಿ ಮುಂದಕ್ಕೆ ಕೊಂಡೊಯ್ಯುತ್ತಿದ್ದ. 22 00:01:37,720 --> 00:01:40,720 ನಾನಾಗಿಯೇ ನಿಮ್ಮ ಬಳಿ ಬಂದೆ. 23 00:01:40,800 --> 00:01:43,479 ಆದರೆ ನೀವೆಲ್ಲರೂ ಈ ಅಪ್ರಬುದ್ಧತೆಯ ಭಾಗವಾಗಿಬಿಟ್ಟಿರಿ. 24 00:01:44,200 --> 00:01:46,440 ಯಾರಾದರೂ ದೊಡ್ಡವರಂತೆ ನಿರ್ಧಾರ ಮಾಡಬೇಕಿತ್ತು. 25 00:01:47,039 --> 00:01:48,680 ನೀನು ದೊಡ್ಡವನೇ, ದಿಗ್ವಿಜಯ್, 26 00:01:50,440 --> 00:01:53,840 ಆದರೆ ನಿನ್ನ ಮನೆಯಲ್ಲಿ. ಈ ಕುಟುಂಬದಲ್ಲಿ ಅಲ್ಲ. 27 00:01:56,360 --> 00:02:00,160 ಇದನ್ನು ಮಾಡಿ, ನಿನಗೆ ನೀನು ಗೆದ್ದೆ ಅನಿಸುತ್ತಿದ್ದರೆ, 28 00:02:01,080 --> 00:02:02,320 ಹೋಗು, ಆಚರಿಸು. 29 00:02:04,520 --> 00:02:07,040 ಆದರೆ ನಿನ್ನ ಜೊತೆ ಯಾರೂ ಆಚರಿಸಲ್ಲ, 30 00:02:11,240 --> 00:02:12,760 ಇಂದಿಗೂ, ಎಂದಿಗೂ. 31 00:02:19,160 --> 00:02:21,160 ಸರ್, ಮಾಧ್ಯಮದವರು ಕಾಯುತ್ತಿದ್ದಾರೆ. 32 00:02:23,680 --> 00:02:26,079 ಮಾಧ್ಯಮದವರು, ಸರ್. ಕಾಯುತ್ತಿದ್ದಾರೆ. 33 00:02:41,040 --> 00:02:43,440 ನಾನು ದೊಡ್ಡ ತಪ್ಪು ಮಾಡಿದೆ. 34 00:02:46,560 --> 00:02:48,120 ನನ್ನನು ಕ್ಷಮಿಸಿ. 35 00:02:49,560 --> 00:02:50,440 ಮೋಹಿನಿ. 36 00:02:52,200 --> 00:02:53,240 ಹಾಗೆ ಹೇಳಬೇಡ. 37 00:02:54,320 --> 00:02:56,600 ನಾನು ತುಂಬಾ ತಪ್ಪುಗಳನ್ನು ಮಾಡಿದ್ದೇನೆ. 38 00:02:58,600 --> 00:03:00,600 ನೀನು ಲೆಕ್ಕವನ್ನೂ ಇಡಲಿಲ್ಲ. 39 00:03:02,280 --> 00:03:03,400 ಏನಾದರೂ ಮಾಡೋಣ. 40 00:03:07,400 --> 00:03:08,840 ಎಲ್ಲಾ ಸರಿಹೋಗುತ್ತೆ. 41 00:04:06,440 --> 00:04:11,280 ಬಂದಿಷ್ ಬ್ಯಾಂಡಿಟ್ಸ್ 42 00:04:15,360 --> 00:04:19,720 ನಾನು ಮತ್ತೆ ರಾಧೆಯೊಂದಿಗೆ ತೊಡಗಿದೆ, ಅದು ನಿನಗೆ ನ್ಯಾಯವಲ್ಲ. 43 00:04:19,800 --> 00:04:25,240 ಸೆಮಿಫೈನಲ್‌ನಲ್ಲಿ, ಎಲ್ಲವನ್ನೂ ನನ್ನ ಬಗ್ಗೆ ಮಾಡಿಕೊಂಡೆ, ಇದು ಬ್ಯಾಂಡ್‌ಗೆ ನ್ಯಾಯವಲ್ಲ. 44 00:04:25,360 --> 00:04:28,440 ನಾನು ದೂರ ಹೋಗುವುದೇ ಉತ್ತಮ. 45 00:04:28,520 --> 00:04:30,200 ಕರೆ ಮಾಡಲು ಪ್ರಯತ್ನಿಸುತ್ತಿರುವ... 46 00:04:30,240 --> 00:04:32,120 ಮತ್ತೆ ಮತ್ತೆ ಯಾಕೆ ಕರೆ ಮಾಡುತ್ತಿರುವಿರಿ? 47 00:04:33,360 --> 00:04:35,480 ಕೇಳು, ಅಯಾನ್, ನಮಗೆ ಮತ್ತೊಮ್ಮೆ ವಿವರಿಸು. 48 00:04:35,600 --> 00:04:39,360 ಹೇಳಿದೆನಲ್ಲ! ಅವಳು ಹೊರೆ ಅನಿಸುತ್ತಿದೆಯಂತೆ. ಅದಕ್ಕೇ ಓಡಿಹೋದಳು. 49 00:04:39,480 --> 00:04:41,320 ಕಡೇ ಪಕ್ಷ ನಮಗೆ ಆ ಪತ್ರ ತೋರಿಸು. 50 00:04:41,360 --> 00:04:43,320 ಏನು ಬೇಕೋ ಅದನ್ನು ಹೇಳಿರುವೆ. 51 00:04:43,360 --> 00:04:46,080 ಹೋಗಲಿ ಬಿಡಿ. ಮುಂದೇನು ಮಾಡುವುದು ಎಂದು ಯೋಚಿಸೋಣ. 52 00:04:46,159 --> 00:04:49,240 -ತಮನ್ನಾ ಹೋದಳು... -ಸ್ವಲ್ಪ ಇರಿ. ಗಾಬರಿಯಾಗುವ ಅಗತ್ಯವಿಲ್ಲ. 53 00:04:49,360 --> 00:04:52,240 ಅವಳಿಗೆ ಸ್ವಲ್ಪ ಸಮಯ ಬೇಕಿರಬಹುದು. ನಾಳೆ ವಾಪಸ್ ಬರಬಹುದು. 54 00:04:52,360 --> 00:04:55,360 ನಂದಿನಿ ಮೇಡಂಗೆ ಈಗಲೇ ಹೇಳಬೇಕಿಲ್ಲ. ಈ ರಾತ್ರಿ ಇಲ್ಲಿಗೆ ಮುಗಿಸೋಣ. 55 00:04:55,440 --> 00:04:58,080 -ನಾಳೆ ಮತ್ತೆ ಒಟ್ಟಾಗಿ ಯೋಚಿಸೋಣ. -ಯೋಚನೆ ಮಾಡಿ ಆಗಿದೆ. 56 00:04:58,720 --> 00:05:01,880 ಅವಳು ಎಲ್ಲಾ ಅವಳ ಬಗ್ಗೆ ಮಾಡಿಕೊಳ್ಳುತ್ತಾಳೆ ಎಂದು ಅವಳೇ ಹೇಳಿದ್ದು ತಾನೇ? 57 00:05:02,800 --> 00:05:05,480 ಈ ಬ್ಯಾಂಡ್ ಅದಕ್ಕಿಂತ ದೊಡ್ಡದು. ಅವಳು ಹಾಳಾಗಿ ಹೋಗಲಿ. 58 00:05:25,120 --> 00:05:28,560 ತಮನ್ನಾ ಇಲ್ಲದೆ, ಧೋನಿ ಇಲ್ಲದ ಟೀಂ ಇಂಡಿಯಾ ಅನಿಸುತ್ತಿದೆ. 59 00:05:28,640 --> 00:05:30,360 ಇದೆಲ್ಲಾ ನನ್ನಿಂದ ಆಗಿದ್ದು. 60 00:05:31,720 --> 00:05:33,640 -ಅವರೊಂದಿಗೆ ಮಾತಾಡಿ ಬರುವೆ. -ಏಯ್. 61 00:05:34,320 --> 00:05:36,880 ಇದರಲ್ಲಿ ನಿನ್ನ ತಪ್ಪೇನಿದೆ? ಇದು ಸ್ಪರ್ಧೆ. 62 00:05:36,960 --> 00:05:41,920 ಕಬೀರ್, ಅವಳು ತನ್ನ ಕನಸುಗಳನ್ನು ಬಿಟ್ಟುಕೊಡಲು ನಾನು ಕಾರಣವಾಗಲ್ಲ. 63 00:05:42,000 --> 00:05:44,560 ಸರಿ. ಹಾಗಾದರೆ, ಒಂದು ಕೆಲಸ ಮಾಡೋಣ. ಅವಳ ಬಳಿ ಹೋಗಿ 64 00:05:44,640 --> 00:05:47,440 ನೀನು ಫೈನಲ್ ಸೋಲುವೆ, ಪ್ರಶಸ್ತಿ ಅವಳದು ಎಂದು ಹೇಳಿಬಿಡೋಣ. 65 00:05:47,520 --> 00:05:49,400 ನಮಗೆ ಪ್ರಶಸ್ತಿ ಬೇಕಾಗಿಲ್ಲ ಎನ್ನೋಣ. 66 00:05:49,480 --> 00:05:51,920 -ಅದು ಅಷ್ಟು ಸರಳವಲ್ಲ. -ಹೀರೋ ಆಗಬೇಡ. 67 00:05:52,000 --> 00:05:53,800 ನೀನೇ ಅವಳ ಜೀವನದ ಖಳನಾಯಕ ಎಂದು ಒಪ್ಪಿಕೋ. 68 00:05:53,880 --> 00:05:55,600 ನೀನು ಅಮರೀಶ್ ಪುರಿ, ಶಾರುಖ್ ಖಾನಲ್ಲ. 69 00:05:55,680 --> 00:05:57,800 ಒಳ್ಳೆಯದು ಮಾಡಲು ಹೋಗಿ, ಕೆಟ್ಟದು ಮಾಡಿ ಬರುತ್ತೀಯ. 70 00:05:57,880 --> 00:06:02,120 ಪ್ರತಿ ಬಾರಿ ಗೆಲ್ಲುವ ಗುರಿ ಬೇಡ. ಕೆಲವೊಮ್ಮೆ ಹಾಗೇ ಬಿಡುವುದು ಜಾಣತನ. 71 00:06:02,200 --> 00:06:04,400 ಅರ್ಥ ಆಯಿತಾ? ಬಾ. 72 00:06:08,040 --> 00:06:09,840 ಚಿಂತಿಸುವ ಅಗತ್ಯವಿಲ್ಲ. 73 00:06:09,920 --> 00:06:12,640 ಏನು ಮಾಡಬೇಕೆಂದು ನಮಗೆ ತಿಳಿದಿದೆ. ಅವರಿಗೆ ಒಮ್ಮೆ ತೋರಿಸೋಣ. 74 00:06:13,760 --> 00:06:16,160 ಏನಾಗುತ್ತೆ ನೋಡೋಣ. ಸರಿನಾ? 75 00:06:16,240 --> 00:06:19,320 ತೀವ್ರ ಚರ್ಚೆ ನಡೆಯುತ್ತಿದೆ. ಏನಾದರೂ ಯೋಚಿಸಿದ್ದೀರಾ? 76 00:06:19,400 --> 00:06:20,600 -ಹಾಯ್, ಮೇಡಂ. -ಹಾಯ್. 77 00:06:20,680 --> 00:06:21,520 -ಹಾಯ್. -ಹಾಯ್. 78 00:06:21,600 --> 00:06:25,760 ಅದು, ನಾನು ಯೋಚಿಸುತ್ತಿದ್ದೆ, ನಾವೆಲ್ಲರೂ ಬೇರೆ ಬೇರೆ ಮೂಲಗಳನ್ನು ಹೊಂದಿದ್ದೇವೆ. 79 00:06:25,880 --> 00:06:30,640 ಹಾಗಾಗಿ, ಮ್ಯಾಶಪ್ ಮಾಡೋಣ ಅಂದುಕೊಳ್ಳುತ್ತಿದ್ದೆವು. 80 00:06:30,720 --> 00:06:34,360 ನಾವು ನಮ್ಮ ಎಲ್ಲಾ ಮೆಚ್ಚಿನ ಪ್ರಕಾರಗಳನ್ನು ತಗೊಂಡು, ರಾಕ್, ಜಾಝ್, ಹೀಗೆ ಪಟ್ಟಿ ಮಾಡಿ, 81 00:06:34,440 --> 00:06:36,680 -ಆಮೇಲೆ ಹಾಡನ್ನು ಸಂಯೋಜಿಸಬಹುದು... -ತಮನ್ನಾ ಎಲ್ಲಿ? 82 00:06:41,280 --> 00:06:44,360 -ಮೇಡಂ, ತಮನ್ನಾ ಬ್ಯಾಂಡ್ ತೊರೆದು ಹೋಗಿದ್ದಾಳೆ. -ಏನು? 83 00:06:44,440 --> 00:06:46,080 ನನಗನಿಸುತ್ತೆ, ರಾಧೆಗೆ ಸೋತ... 84 00:06:46,159 --> 00:06:48,320 ತೊರೆದು ಹೋಗಿದ್ದಾಳೆ ಅಂದರೆ ಏನರ್ಥ? 85 00:06:49,240 --> 00:06:51,320 -ಏನು ಹೇಳಿ ಹೋದಳು? -ಇಷ್ಟೇ. 86 00:06:52,159 --> 00:06:55,280 ಅವಳು ಬ್ಯಾಂಡ್ ಮತ್ತು ಸ್ಪರ್ಧೆಯನ್ನು ತೊರೆದು ಮನೆಗೆ ಹಿಂತಿರುಗಿದಳಂತೆ. 87 00:06:56,600 --> 00:07:00,840 ನಿಮ್ಮ ತಂಡ ಅಪೂರ್ಣವಾಗಿರುವಾಗ ಅಂತಿಮ ಕಲ್ಪನೆಯನ್ನು ಹೇಗೆ ನಿರೂಪಿಸುತ್ತಿದ್ದೀರಿ? 88 00:07:00,920 --> 00:07:03,240 ಉಳಿದವರೆಲ್ಲರೂ ಇದ್ದಾರೆ. ಹೇಗೋ ನಿಭಾಯಿಸುತ್ತೇವೆ. 89 00:07:04,920 --> 00:07:06,840 ಅಲ್ವಾ? ಶುರು ಮಾಡೋಣ. 90 00:07:14,840 --> 00:07:16,640 ಯಾರೂ ಇದನ್ನು ಗಂಭೀರವಾಗಿ ತಗೋತಿಲ್ವಾ? 91 00:07:16,760 --> 00:07:18,680 ಶೀಲಾ! ಅವಳಿಗೆ ಕರೆ ಮಾಡು! 92 00:07:18,760 --> 00:07:21,760 ಅವಳಿಗೆ ಹಿಂದಿರುಗಲು ಹೇಳು! ಇದನ್ನು ಒಟ್ಟಿಗೆ ಪರಿಹರಿಸೋಣ. 93 00:07:21,840 --> 00:07:26,640 ಅದು, ಮೇಡಂ, ನಾವು ಅವಳಿಗೆ ಕರೆ ಮಾಡಲ್ಲ ಎಂದು ನಿರ್ಣಯಿಸಿದ್ದೇವೆ. 94 00:07:33,760 --> 00:07:36,200 "ನಾವು" ಎಂದರೆ ನೀನಾ? 95 00:07:36,280 --> 00:07:37,720 ಮೇಡಂ, ನೀವು ನಮ್ಮ ಗುರುಗಳು, 96 00:07:37,800 --> 00:07:40,960 ಆದರೆ ಒಬ್ಬ ಸದಸ್ಯ ಬ್ಯಾಂಡ್ ಜೊತೆ ಹೊಂದಿಕೊಳ್ಳದಿದ್ದರೆ, 97 00:07:41,040 --> 00:07:43,880 ಅದು ಪ್ರತಿಯೊಬ್ಬರ ನೈತಿಕ ಸ್ಥೈರ್ಯವನ್ನು ಕುಗ್ಗಿಸುತ್ತದೆ. 98 00:07:43,960 --> 00:07:47,000 ಮತ್ತು ಒಬ್ಬ ಸದಸ್ಯರು ಅವರ ಅಹಂಕಾರದಿಂದಾಗಿ ಇತರರನ್ನು ಬಿಟ್ಟರೆ, 99 00:07:47,080 --> 00:07:48,840 ಅದು ನೈತಿಕ ಸ್ಥೈರ್ಯವನ್ನು ಕುಗ್ಗಿಸಲ್ವಾ? 100 00:07:49,520 --> 00:07:52,080 ಬ್ಯಾಂಡೇ ಒಡೆದರೆ, ಸ್ಪರ್ಧೆ ಗೆದ್ದು ಏನು ಉಪಯೋಗ? 101 00:07:52,159 --> 00:07:53,680 ನನಗೆ ಗೆಲ್ಲುವುದು ಮುಖ್ಯ. 102 00:07:54,440 --> 00:07:58,120 ಕ್ಷಮಿಸಿ, ನಿಮ್ಮ ಜೀವನ ಬೇರೆಯಾಗಿತ್ತೇನೋ, ಆದರೆ ಎಲ್ಲರೂ ಹಾಗೆ ಮಾಡಬೇಕಂತಿಲ್ಲ. 103 00:07:58,200 --> 00:07:59,760 ಅಯಾನ್! 104 00:08:01,720 --> 00:08:03,040 ಅವನು ಮಾತಾಡಲಿ. 105 00:08:05,280 --> 00:08:06,880 ನನ್ನ ಜೀವನ ಹೇಗೆ ಬೇರೆ? 106 00:08:09,240 --> 00:08:11,640 ಮೇಡಂ, ನೀವು ಎಂದಿಗೂ ವಾಸ್ತವ ಪ್ರಪಂಚಕ್ಕೆ ಹೋಗಿಲ್ಲ. 107 00:08:12,640 --> 00:08:16,200 ನೆನಪುಗಳ ಸಲುವಾಗಿ ಕಾಲೇಜಿನಲ್ಲೇ ಉಳಿದಿರಿ, ಮತ್ತು ಅವರು... 108 00:08:18,640 --> 00:08:19,720 ಯಾರು? 109 00:08:19,800 --> 00:08:23,880 ಇಲ್ಲಿ ನಿಮ್ಮ ಅನುಭವ ಉಪಯೋಗವಿಲ್ಲ. 110 00:08:23,960 --> 00:08:25,120 ಯಾರು, ಅಯಾನ್? 111 00:08:25,200 --> 00:08:27,280 ಇಮ್ರೋಝ್ ತನ್ನ ಗತವನ್ನು ಮರೆತರು, ಅಲ್ವಾ? 112 00:08:27,960 --> 00:08:29,280 ನೀವು ಬ್ಯಾಂಡ್ ಮುರಿದಾಗ! 113 00:08:33,880 --> 00:08:35,120 ಅವರೆಲ್ಲಿ ತಲುಪಿದರು, ನೋಡಿ. 114 00:08:36,360 --> 00:08:40,120 ಈ ಸ್ಪರ್ಧೆಯನ್ನು ಗೆಲ್ಲಬೇಕೆಂದರೆ, ನಾವೂ ಅದನ್ನೇ ಮಾಡಬೇಕು. 115 00:08:52,640 --> 00:08:53,520 ಸರಿ. 116 00:08:55,440 --> 00:08:56,280 ಮುಂದುವರೆಸಿ. 117 00:09:04,880 --> 00:09:08,240 ಮೇಡಂ! ನಮ್ಮನ್ನು ಕ್ಷಮಿಸಿ. ನಮ್ಮಲ್ಲಿ ಯಾರಿಗೂ ಹಾಗೆ ಅನಿಸಲ್ಲ. 118 00:09:08,320 --> 00:09:10,000 ಅಯಾನ್‌ಗೆ ಬೇಜಾರಾಗಿದೆ, ಹಾಗಾಗಿ... 119 00:09:10,080 --> 00:09:12,200 ನಾನು ಅದನ್ನು ಕೇಳಿದ್ದು ಇದೇ ಮೊದಲಲ್ಲ. 120 00:09:13,040 --> 00:09:14,360 ನನಗೆ ಅಭ್ಯಾಸವಾಗಿದೆ. 121 00:09:17,880 --> 00:09:20,400 ನಿಮಗೆ ಯಾಕೆ ಅರ್ಥವಾಗುತ್ತಿಲ್ಲ? ಈ ಸಂಯೋಜನೆಗಳು ನಮ್ಮದು. 122 00:09:20,480 --> 00:09:23,240 ನಮ್ಮ ಕುಟುಂಬಕ್ಕೆ ಸೇರಿದವು. ನನ್ನ ತಂದೆ ಅವನ್ನು ಸಂಯೋಜಿಸಿದ್ದು! 123 00:09:23,320 --> 00:09:25,760 ಇರಬಹುದು, ಆದರದರ ಹಕ್ಕುಸ್ವಾಮ್ಯ ಈಗ ದಿಗ್ವಿಜಯ್‌ರದ್ದು. 124 00:09:26,400 --> 00:09:28,080 ಸ್ಪರ್ಧೆಯ ನಿಯಮಗಳು ಸ್ಪಷ್ಟವಾಗಿವೆ. 125 00:09:28,160 --> 00:09:32,480 ಅಂತಿಮ ಹಂತಕ್ಕೆ, ನಮಗೆ ಅಗತ್ಯವಿರೋದು ಮೂಲ ಮತ್ತು ಅಪ್ರಕಟಿತ ಹಾಡು. 126 00:09:32,520 --> 00:09:35,200 ಅಣ್ಣಾ, ಇದು ಶಾಸ್ತ್ರೀಯಕ್ಕೆ ಅನ್ವಯಿಸಲ್ಲ. 127 00:09:35,280 --> 00:09:37,880 ದಿಗ್ವಿಜಯ್ ಬಿಡುಗಡೆ ಮಾಡಿದ ಹಾಡು 128 00:09:38,000 --> 00:09:40,200 ರಾಥೋಡ್‌ಗಳಿಗೆ ಸೇರಿದ್ದು. 129 00:09:40,280 --> 00:09:42,240 ಅವನು ಅದರ ಹಕ್ಕುಸ್ವಾಮ್ಯ ಹೊಂದಲು ಆಗಲ್ಲ! 130 00:09:42,320 --> 00:09:45,080 ನಾನು ಶಾಸ್ತ್ರೀಯ ಸಂಗೀತ ತಜ್ಞನೂ ಅಲ್ಲ, ವಕೀಲನೂ ಅಲ್ಲ. 131 00:09:45,160 --> 00:09:46,520 ಇನ್ನೂ 15 ದಿನಗಳಿವೆ. 132 00:09:46,640 --> 00:09:49,720 ಹೊಸ ಹಾಡು ರಚಿಸಲು ಅಷ್ಟು ಸಮಯ ಸಾಕಲ್ವಾ? 133 00:09:51,880 --> 00:09:53,880 ಏನಿದು ದರಿದ್ರ? 134 00:10:09,120 --> 00:10:12,840 ರಾಧೆ, ಇದು ಅಪೂರ್ಣ ಸಂಯೋಜನೆ ಸಂಕಲನದಲ್ಲಿ ಇದ್ದಿದ್ದಾ? 135 00:10:13,440 --> 00:10:15,120 -ಹೌದು. -ದಿಗ್ವಿಜಯ್ ಅದನ್ನು ಬಳಸಿಲ್ಲ. 136 00:10:15,840 --> 00:10:18,480 ಹಾಗಾಗಿ ಇವುಗಳು ಮೊದಲ ರಾಗಕ್ಕೆ ಸಂಭವನೀಯ ಆಯ್ಕೆಗಳು, 137 00:10:18,520 --> 00:10:19,640 ಇವು ಎರಡನೆಯದಕ್ಕೆ. 138 00:10:19,760 --> 00:10:21,400 -ಒಟ್ಟಿಗೆ... -ಮಗು. 139 00:10:21,480 --> 00:10:23,720 ಇದು ಪಾಪ್ ಸಂಗೀತವಲ್ಲ. ಇಲ್ಲಿ ಗಣಿತ ಕೆಲಸ ಮಾಡಲ್ಲ. 140 00:10:23,760 --> 00:10:25,240 ಇದು ಶಾಸ್ತ್ರೀಯ ಸಂಗೀತ. 141 00:10:28,880 --> 00:10:30,520 ಅನನ್ಯಾ, ಕ್ಷಮಿಸು. 142 00:10:30,600 --> 00:10:33,040 ನಿನ್ನ ಉದ್ದೇಶ ಸರಿ ಇದೆ, 143 00:10:33,120 --> 00:10:35,880 ಆದರೆ ಈಗ ಯಾವುದೇ ಪ್ರಯೋಜನವಿಲ್ಲ. ಎಲ್ಲವೂ ಮುಗಿದಿದೆ. 144 00:10:35,960 --> 00:10:37,000 ಮುಗಿದಿದೆಯಾ? 145 00:10:37,880 --> 00:10:41,200 ಏನಿದು? ತಮಾಷೆನಾ? 146 00:10:41,280 --> 00:10:44,400 ಇದು ಫೈನಲ್ಸ್, ಕಣೋ! ನಾವು ಏನಾದರೂ ಹಾಡಲೇಬೇಕು. 147 00:10:44,480 --> 00:10:45,520 ಜನ್ಮದಿನದ ಶುಭಾಶಯ ಹಾಡು, 148 00:10:45,640 --> 00:10:49,400 ಟ್ವಿಂಕಲ್, ಟ್ವಿಂಕಲ್, ರಾಧೆ ಹ್ಯಾಡ್ ಅ ಲಿಟಲ್ ಲ್ಯಾಂಬ್, ಭಜನೆ, ಏನಾದರೂ ಹಾಡು! 149 00:10:49,480 --> 00:10:52,280 ನಮ್ಮ ಮುಖ್ಯ ಉದ್ದೇಶ ಇದ್ದದ್ದು ಪಂಡಿತ್ಜೀಯವರ ಸಂಯೋಜನೆ ಹಾಡೋದು. 150 00:10:56,320 --> 00:11:01,000 ಪಂಡಿತ್ಜೀ ಹೇಗೆ ಸಂಯೋಜಿಸುತ್ತಿದ್ದರು ಎಂದು 151 00:11:01,080 --> 00:11:02,880 ನಿಮಗೆ ಗೊತ್ತಿರಬೇಕಲ್ವಾ? 152 00:11:02,960 --> 00:11:06,080 ಪೂರ್ಣಗೊಳಿಸಿದ ನಂತರವೇ ಅವರು ನಮಗೆ ಕಲಿಸುತ್ತಿದ್ದದ್ದು. 153 00:11:06,160 --> 00:11:09,600 ಸಂಯೋಜಿಸುತ್ತಿದ್ದಾಗ ಅವರು ಒಂಟಿಯಾಗಿ ಇರಲು ಇಷ್ಟಪಡುತ್ತಿದ್ದರು, ರಾಧೆ. 154 00:11:09,680 --> 00:11:12,000 ಮುಗಿದಮೇಲೆಯೇ ವಾಪಸ್ ಬರುತ್ತಿದ್ದದ್ದು. 155 00:11:12,080 --> 00:11:16,120 ನಮಗೆ ಅವರು ಎಂದೂ ಹೇಳಲೂ ಇಲ್ಲ. ನಾವು ಕೇಳುವ ಧೈರ್ಯವೂ ಮಾಡಲಿಲ್ಲ. 156 00:11:18,000 --> 00:11:21,840 ನಾನು ಅವರಿಗೆ ಬಸ್ ಟಿಕೆಟ್ ಖರೀದಿಸುತ್ತಿದ್ದೆ. 157 00:11:23,520 --> 00:11:24,520 ಬಿಕಾನೆರ್‌ಗೆ. 158 00:11:25,360 --> 00:11:27,720 ಆದರೆ ಅಲ್ಲಿಂದ ಎಲ್ಲಿಗೆ ಹೋಗುತ್ತಿದ್ದರೋ, ಗೊತ್ತಿಲ್ಲ. 159 00:11:32,320 --> 00:11:33,920 ಹಳೆಯ ಮಂದಿರ, ದಕ್ಷಿಣ ಬಿಕಾನೇರ್. 160 00:11:37,400 --> 00:11:38,480 ಏನು? 161 00:11:39,760 --> 00:11:42,800 ಪಂಡಿತ್ಜೀ ನನ್ನೊಂದಿಗೆ ತಮ್ಮೆಲ್ಲಾ ರಹಸ್ಯ ಹಂಚಿಕೊಳ್ಳುತ್ತಿದ್ದರು. 162 00:11:42,880 --> 00:11:44,520 ನಮ್ಮ ಸಂಬಂಧ ಆಳವಾದದ್ದು. 163 00:11:46,720 --> 00:11:48,640 ಪುಸ್ತಕದಲ್ಲಿ ಎಲ್ಲವೂ ಇದೆ! 164 00:11:48,720 --> 00:11:52,120 ಈ ಎಲ್ಲಾ ಗೊಂದಲ ಶುರು ಮಾಡಿದ ಪುಸ್ತಕವನ್ನೇ ಯಾರೂ ಓದಿಲ್ವಾ? 165 00:11:52,200 --> 00:11:54,160 -ಮಾಂಡ್ರೇಕರ್ ಪುಸ್ತಕನಾ? -ಹೌದು! 166 00:11:54,240 --> 00:11:58,480 ಓದಿರಿ! ಅದರಲ್ಲಿ ಅವರ ಬಗ್ಗೆ ರಸವತ್ತಾದ ವಿವರಗಳಿವೆ. 167 00:12:01,520 --> 00:12:04,600 ತುಂಬಾ... ಆಸಕ್ತಿದಾಯಕವಾಗಿದೆ. 168 00:12:05,440 --> 00:12:06,280 ಕ್ಷಮಿಸಿ. 169 00:12:06,360 --> 00:12:09,680 ಮಾಂಡ್ರೇಕರ್ ಬಿಕಾನೆರ್‌ನಲ್ಲಿರುವ ಒಬ್ಬ ವ್ಯಕ್ತಿಯ ಹೆಸರೂ ಹೇಳಿದ್ದಾರೆ! 170 00:12:11,320 --> 00:12:12,200 ಬಸಂತಿ. 171 00:12:12,280 --> 00:12:13,480 -ಬಾಬ್... -ಮಾರ್ಲಿ. 172 00:12:13,560 --> 00:12:16,280 -ಬಾಬ್ ಮಾರ್ಲಿ ಅಲ್ಲ. -ಅವರ ಹೆಸರು ಭೈರವ್ ಸಿಂಗ್. 173 00:12:17,880 --> 00:12:20,040 ಅವರ ತಂದೆ ವ್ಯಾಸರಿಗೆ ತಬಲಾ ನುಡಿಸುತ್ತಿದ್ದರು. 174 00:12:21,240 --> 00:12:23,480 ಮತ್ತು ಭೈರವ್ ಸಿಂಗ್ ಪಂಡಿತ್ಜೀಗಾಗಿ. 175 00:12:24,120 --> 00:12:25,800 ಅವರು ಬಾಲ್ಯದ ಗೆಳೆಯರಾಗಿದ್ದರು. 176 00:12:25,920 --> 00:12:31,560 ಪಂಡಿತ್ಜೀ ಪ್ರತ್ಯೇಕ ಕುಟುಂಬ ಆರಂಭಿಸಿದರು. ಆದರೆ ಅವರ ಸ್ನೇಹ ಹಾಗೇ ಉಳಿಯಿತು. 177 00:12:32,440 --> 00:12:34,520 ಬಿಕಾನೇರ್ 178 00:12:36,560 --> 00:12:39,720 ಭೈರವ್ ಸಿಂಗ್ ಈಗಲೂ ಬಿಕಾನೇರ್‌ನಲ್ಲಿ ಪ್ರತ್ಯೇಕವಾಗಿ ನುಡಿಸುತ್ತಾರೆ. 179 00:12:40,840 --> 00:12:45,360 ಪಂಡಿತ್ಜೀಯ ಬಗ್ಗೆ ಕೇಳಿದಾಗ, ಅವರು ಹೆಚ್ಚು ಏನೂ ಹೇಳಲಿಲ್ಲ. 180 00:12:45,440 --> 00:12:48,200 ಅವರ ಮೊಮ್ಮಗನಾಗಿ ನೀವು ಒಮ್ಮೆ ಪ್ರಯತ್ನಿಸಿ ನೋಡಿ. 181 00:12:48,280 --> 00:12:50,600 ನಿಮಗೇನಾದರೂ ಹೇಳಬಹುದು. 182 00:12:55,280 --> 00:12:56,600 ಭೈರವ ಮಾಮ? 183 00:12:57,400 --> 00:12:58,720 ನಮಸ್ಕಾರ, ಸಿಂಗ್ ಸಾಹೇಬರೇ. 184 00:13:09,200 --> 00:13:13,280 ರಾಧೆಮೋಹನನ ಬಗ್ಗೆ ತಿಳಿಯದೆ, ಅವನ ಸಂಗೀತದ ಬಗ್ಗೆ ನೀವು ಹೇಗೆ ತಿಳಿಯಬಹುದು? 185 00:13:13,360 --> 00:13:16,840 -ನಾವ್ ಪಂಡಿತ್ಜೀಯ ಶಿಷ್ಯರು, ಭೈರವ್ ಅವರೇ. -ನಿಮಗೆ ಪಂಡಿತ್ಜೀ ಗೊತ್ತಿರಬಹುದು. 186 00:13:16,920 --> 00:13:19,240 ನಾನು ರಾಧೆಮೋಹನ್ ಬಗ್ಗೆ ಮಾತಾಡುತ್ತಿದ್ದೇನೆ. 187 00:13:19,320 --> 00:13:22,520 ಸಂಗೀತದೊಂದಿಗೆ ಅವನ ಸಂಬಂಧ ಶುರು ಆಗಿದ್ದು ಅವನು ಪಂಡಿತನಾಗುವ ಬಹಳ ಮುಂಚೆ. 188 00:13:22,600 --> 00:13:26,560 ಹಾಗಾದರೆ ನಮಗೆ ಹೇಳಿ. ನಾವವರ ಜೀವನದ ಬಗ್ಗೆ ತಿಳಿದುಕೊಳ್ಳಬೇಕು. 189 00:13:27,200 --> 00:13:31,000 ಇಲ್ಲ, ಮಗ, ನಿನಗೆ ರಾಗದ ಹಿಂದಿನ ತಂತ್ರ ಬೇಕಷ್ಟೆ. 190 00:13:31,080 --> 00:13:34,160 -ಅದು ನಿಜವಲ್ಲ. -ಅದೇ ನಿಜ. 191 00:13:34,240 --> 00:13:36,200 ಇಲ್ಲದಿದ್ದರೆ, ನೀವು ಮೊದಲೇ ಯಾಕೆ ಬರಲಿಲ್ಲ. 192 00:13:36,280 --> 00:13:40,640 ನೀವು ಈಗ ಬಂದಿರೋದೂ ಆ ಟಿವಿ ಸ್ಪರ್ಧೆ ಗೆಲ್ಲಕ್ಕೆ. 193 00:13:40,720 --> 00:13:44,320 ಅದೇನೇ ಇರಲಿ, ರಾಧೆಮೋಹನ್ ನಿಮಗೆ ಆ ರಾಗದ ತಂತ್ರ ಕಲಿಸದಿದ್ದರೆ, 194 00:13:44,400 --> 00:13:45,640 ಅದಕ್ಕೆ ಕಾರಣವಿರಬೇಕು. 195 00:13:46,880 --> 00:13:50,160 ಬಹುಶಃ ಅವನಿಗೆ ನೀವು ಯೋಗ್ಯರು ಅನಿಸಿಲ್ಲ. 196 00:13:55,480 --> 00:13:57,000 ಅವರಿಗೆ ಸ್ವಲ್ಪ ಚಹಾ, ತಿಂಡಿ ಕೊಡು. 197 00:14:05,840 --> 00:14:07,920 ಬ್ಯಾಂಡ್‌ನಲ್ಲಿ ನಾನೇ ದೊಡ್ಡ ಸಮಸ್ಯೆ. 198 00:14:09,880 --> 00:14:12,520 ನನ್ನಿಂದಾಗಿ ನಾವು ಸೆಮಿಫೈನಲ್ ಸೋತೆವು. 199 00:14:14,200 --> 00:14:16,920 ರಾಧೆಯನ್ನು ಮತ್ತೆ ಫೈನಲ್‌ನಲ್ಲಿ ಎದುರಿಸಬೇಕಾದರೆ... 200 00:14:19,840 --> 00:14:20,680 ಮೇಡಂ... 201 00:14:21,760 --> 00:14:26,560 ನಮ್ಮ ವಿಷಕಾರಿ ಸಂಬಂಧ ಮತ್ತೆ ಎಲ್ಲವನ್ನೂ ಹಾಳು ಮಾಡೋದು ನನಗಿಷ್ಟವಿಲ್ಲ. 202 00:14:39,880 --> 00:14:40,720 ಮೇಡಂ... 203 00:14:40,800 --> 00:14:42,800 ನಾನು ಚಿಕ್ಕ ಹಳ್ಳಿಯಿಂದ ಬಂದವಳು, ತಮನ್ನಾ. 204 00:14:44,040 --> 00:14:45,400 ನನಗೆ, 205 00:14:46,920 --> 00:14:49,960 ಸಂಗೀತ ಹೃದಯದಿಂದ ಬಂದು ಪರ್ವತಗಳಿಗೆ ಅಪ್ಪಳಿಸುವ ಪ್ರತಿಧ್ವನಿಯಾಗಿತ್ತು. 206 00:14:52,120 --> 00:14:54,080 ಆಮೇಲೆ ಇಮ್ರೋಝ್ ನನ್ನ ಜೀವನಕ್ಕೆ ಬಂದ. 207 00:14:55,040 --> 00:14:56,880 ನನ್ನನ್ನು ಸಂಗೀತ ಶಾಲೆಗೆ ಕರೆದೊಯ್ದ. 208 00:14:58,240 --> 00:15:01,640 ಸಂಗೀತ ಶಾಲೆಗಿಂತ ತುಂಬಾ ದೊಡ್ಡದು. 209 00:15:01,720 --> 00:15:03,840 ಅವನದನ್ನು ನನಗೆ ಮನವರಿಕೆ ಮಾಡಿಸಿದ. 210 00:15:05,560 --> 00:15:09,480 ನನಗೆ ಅವನ ಮೇಲೆ ಪ್ರೀತಿ ಮೂಡಿತು, 211 00:15:09,560 --> 00:15:11,480 ನನಗೆ ಹೊಸ ಬದುಕನ್ನು ತೋರಿದ ವ್ಯಕ್ತಿ ಮೇಲೆ. 212 00:15:12,960 --> 00:15:14,600 ನಾನು ತರಗತಿಯಲ್ಲಿ ಅಗ್ರಸ್ಥಾನ ಪಡೆದೆ. 213 00:15:14,680 --> 00:15:18,680 ಆದರೆ ನನಗೆ ಇನ್ನಷ್ಟು ಕಲಿಯಬೇಕಿತ್ತು. 214 00:15:21,680 --> 00:15:23,560 ಆದರೆ ಇಮ್ರೋಝ್... 215 00:15:25,200 --> 00:15:27,000 ಅವನಿಗೆ ಹೆಸರು, ಖ್ಯಾತಿ ಬೇಕಿತ್ತು. 216 00:15:28,680 --> 00:15:30,080 ನನಗೆ ಅವನು ಬೇಕಿದ್ದ. 217 00:15:31,480 --> 00:15:35,920 ಹಾಗಾಗಿ ನಾವು ಬ್ಯಾಂಡ್ ಮಾಡಿದೆವು ಮತ್ತು ಬಹಳ ಪ್ರಸಿದ್ಧರಾದೆವು. 218 00:15:37,600 --> 00:15:38,520 ಆದರೆ... 219 00:15:43,480 --> 00:15:45,520 ಆಮೇಲೆ ನನಗೆ ಅರಿವಾಯಿತು, 220 00:15:46,680 --> 00:15:48,760 ಸಂಗೀತವನ್ನು ಕಳೆದುಕೊಳ್ಳುತ್ತಿದ್ದೆ ಅಂತ. 221 00:15:50,960 --> 00:15:52,440 ಬಹುಶಃ ನನ್ನನ್ನೂ ಸಹ. 222 00:15:55,680 --> 00:16:01,560 ಎಷ್ಟರ ಮಟ್ಟಿಗೆಂದರೆ ನನ್ನ ಬಳಿ ಇಮ್ರೋಝ್ಗೆ ನೀಡಲು ಏನೂ ಉಳಿದಿರಲಿಲ್ಲ. 223 00:16:06,120 --> 00:16:07,240 ಆಮೇಲೆ ನಾನು 224 00:16:08,440 --> 00:16:11,800 ನನ್ನ ಬ್ಯಾಂಡ್, ಇಮ್ರೋಝ್, 225 00:16:15,040 --> 00:16:17,000 ಮತ್ತು ನನ್ನ ಸಂಗೀತವನ್ನೂ ತೊರೆದು ಓಡಿಹೋದೆ. 226 00:16:19,200 --> 00:16:21,480 ಆದರೆ ಸಂಗೀತ ನನ್ನನ್ನು ಕಾಡುತ್ತಲೇ ಇತ್ತು. 227 00:16:29,760 --> 00:16:32,880 ಕಲೆ ಒಂದು ವರದಾನ, ತಮನ್ನಾ, 228 00:16:33,760 --> 00:16:35,320 ಆದರೆ ಅದು ಶಾಪವೂ ಹೌದು. 229 00:16:37,320 --> 00:16:39,200 ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 230 00:16:40,560 --> 00:16:42,320 ಪ್ರೀತಿಯಂತೆಯೇ. 231 00:16:45,400 --> 00:16:47,320 ನೀನು ಎಂದೂ ರಾಧೆಯನ್ನು ಮರೆಯಲು ಸಾಧ್ಯವಿಲ್ಲ, 232 00:16:48,600 --> 00:16:51,040 ಮತ್ತು ಸಂಗೀತದಿಂದ ಎಂದಿಗೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 233 00:16:54,080 --> 00:16:57,120 ಇವು ನಿನ್ನ ಜೀವನದ ಎರಡು ವಿಭಿನ್ನ ವಾಸ್ತವಗಳು. 234 00:16:58,640 --> 00:17:01,160 ಒಪ್ಪಿಕೋ, ಆದರೆ ಬೆರೆಯಲು ಬಿಡಬೇಡ. 235 00:17:01,840 --> 00:17:03,080 ಸದ್ಯಕ್ಕೆ, 236 00:17:04,319 --> 00:17:07,960 ನಿನ್ನ ಬ್ಯಾಂಡ್ ಮತ್ತು ನಿನ್ನ ಸಂಗೀತ 237 00:17:09,560 --> 00:17:11,040 ಎರಡಕ್ಕೂ ನೀನು ಬೇಕು. 238 00:17:18,760 --> 00:17:22,400 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 239 00:17:23,960 --> 00:17:28,960 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 240 00:17:29,800 --> 00:17:32,480 ಬಂಕೆ ಬಿಹಾರಿ 241 00:17:32,560 --> 00:17:35,080 ತುಂಟ ಶ್ಯಾಮ 242 00:17:35,200 --> 00:17:38,000 ಓ ನನ್ನ ಗಿರಿಧರ 243 00:17:38,080 --> 00:17:41,920 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 244 00:17:43,560 --> 00:17:48,560 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 245 00:17:48,640 --> 00:17:54,640 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 246 00:17:55,680 --> 00:18:01,640 ಕೃಷ್ಣಾ... 247 00:18:10,080 --> 00:18:12,640 -ತುಂಬಾ ಚೆನ್ನಾಗಿ ಹಾಡಿದಿರಿ. -ಮಧುರ ಧ್ವನಿ. 248 00:18:12,720 --> 00:18:14,800 ಧನ್ಯವಾದ. ಧನ್ಯವಾದ. 249 00:18:14,960 --> 00:18:16,320 ತುಂಬಾ ಚೆನ್ನಾಗಿ ಹಾಡಿದಿರಿ. 250 00:18:16,440 --> 00:18:19,280 -ಐಬಿಸಿಯಲ್ಲಿ ನಿಮ್ಮ ಪ್ರದರ್ಶನ ಚೆನ್ನಾಗಿದೆ. -ಧನ್ಯವಾದ. 251 00:18:19,320 --> 00:18:20,800 ಕ್ಷಮಿಸಿ. 252 00:18:37,560 --> 00:18:38,680 ಏನಾಯಿತು? 253 00:18:39,800 --> 00:18:41,480 -ನನ್ನ ಚಪ್ಪಲಿ ಕಾಣುತ್ತಿಲ್ಲ. -ಬೇಕಾ? 254 00:18:46,800 --> 00:18:49,760 -ಹಿಂದಿರುಗಿಸಬೇಕೆಂದರೆ ಕದ್ದಿದ್ದೇಕೆ? -ಎಲ್ಲಿಂದ ಬಂದಿರುವೆ? 255 00:18:49,880 --> 00:18:52,560 -ನಿಮಗೆ ಯಾಕೆ? -ರಾಧೆ ಮೋಹನ್‌ಗೆ ನೀನು ಏನಾಗಬೇಕು? 256 00:18:56,520 --> 00:18:59,640 -ನಿಮಗೆ ಪಂಡಿತ್ಜೀ ಹೇಗೆ ಗೊತ್ತು? -ಅವನು ನಿನಗೆ ಪಂಡಿತ್ ಆಗಿರಬಹುದು. 257 00:18:59,720 --> 00:19:04,560 ಅವನು ನನ್ನ ಆಸರೆಯಲ್ಲಿದ್ದವನು. ಈಗ ನೀನು ಹಾಡಿದ ಭಜನೆ ನನ್ನ ರಾಧೆಯದು. 258 00:19:09,240 --> 00:19:12,080 ಅವನು ಹಾಡುತ್ತಿದ್ದ, ನಾನು ಇಲ್ಲಿ ಚಪ್ಪಲಿಗಳನ್ನು ಕದಿಯುತ್ತಿದ್ದೆ. 259 00:19:13,440 --> 00:19:16,480 ನಾವೆಲ್ಲಾ ದೇವಸ್ಥಾನದಲ್ಲಿ ಬಿಟ್ಟ ಅನಾಥರು. 260 00:19:16,560 --> 00:19:20,080 ರಾಧೆ ನಮ್ಮ ನಡುವಿನ ಒಬ್ಬನೇ ಪ್ರಾಮಾಣಿಕ. 261 00:19:21,160 --> 00:19:23,800 ಮಾತಾಡುವ ಮೊದಲು ಹಾಡಲು ಕಲಿತವನು. 262 00:19:23,880 --> 00:19:29,000 ಹಾಗಾಗಿ, ನಮ್ಮ ಕೆಲಸ ಮುಗಿಯುವವರೆಗೆ ಅವನಿಗೆ ಹಾಡುವಂತೆ ಬೆದರಿಕೆ ಹಾಕುತ್ತಿದ್ದೆವು. 263 00:19:29,080 --> 00:19:31,800 ಒಂದು ದಿನ ಪಂಡಿತ್ ವ್ಯಾಸರು ಅವನು ಹಾಡುವುದನ್ನು ಕೇಳಿದರು. 264 00:19:31,920 --> 00:19:33,400 -ನನ್ನ ಹಣ. -ಹೋಗು ಇಲ್ಲಿಂದ. 265 00:19:33,480 --> 00:19:37,000 ಅವನ ಲಯ ಮತ್ತು ಆತ್ಮ ಎರಡೂ ಪ್ರಾಮಾಣಿಕವಾಗಿದ್ದವು. 266 00:19:37,080 --> 00:19:39,680 ಅವನಿಗೆ ಏನು ದಕ್ಕಬೇಕೋ, ಅದಕ್ಕಾಗಿ ಹೋರಾಡುತ್ತಿದ್ದನು. 267 00:19:39,800 --> 00:19:41,560 -ಕಳ್ಳತನನಾ? -ಇದು ನನ್ನ ಹಣ! 268 00:19:41,640 --> 00:19:43,200 -ಯಾವುದಕ್ಕೆ? -ಹಾಡು ಹಾಡಿದ್ದಕ್ಕೆ. 269 00:19:43,280 --> 00:19:44,280 ಯಾರು ಕಲಿಸಿದ್ದು? 270 00:19:45,320 --> 00:19:49,480 ಪಂಡಿತ್ ವ್ಯಾಸರು ಅವರ ಉತ್ತರಾಧಿಕಾರಿಗಾಗಿ ಹುಡುಕುತ್ತಿದ್ದರು. 271 00:19:49,560 --> 00:19:53,160 ರಾಧೆಯಲ್ಲಿ ಅವರಿಗೆ ಬೆಳಕು ಕಂಡಿತು. ಅನಾಥನಿಗೆ ಮನೆ ಸಿಕ್ಕಿತು, 272 00:19:53,240 --> 00:19:55,800 ಮತ್ತು ಬಿಕಾನೇರ್ ಕುಟುಂಬಕ್ಕೆ ಅದರ ಉತ್ತರಾಧಿಕಾರಿ. 273 00:19:56,960 --> 00:20:00,720 ಪಂಡಿತ್ ವ್ಯಾಸರು ರಾಧೆಗೆ ಕಲಿಸುವಲ್ಲಿ ಎಷ್ಟು ತಲ್ಲೀನರಾದರೆಂದರೆ, 274 00:20:00,800 --> 00:20:04,400 ತಮ್ಮ ಕುಟುಂಬವನ್ನು ಸಂಪೂರ್ಣವಾಗಿ ಹೊರಗಿನ ಪ್ರಪಂಚದಿಂದ ಬೇರ್ಪಡಿಸಿದರು. 275 00:20:04,520 --> 00:20:08,760 ಜೋಧ್ಪುರದ ರಾಜರು ಸಂಗೀತ ಸಾಮ್ರಾಟ್‌ನಲ್ಲಿ ಭಾಗವಹಿಸಲು ನಿಮ್ಮನ್ನು ಆಹ್ವಾನಿಸಿದ್ದಾರೆ. 276 00:20:08,800 --> 00:20:10,000 ತೊಲಗು ಇಲ್ಲಿಂದ. 277 00:20:10,080 --> 00:20:13,560 ರಾಧೆ ಆ ನಾಲ್ಕು ಗೋಡೆಗಳ ಮಧ್ಯೆ ತನ್ನ ಕೌಶಲಗಳನ್ನು ಬೆಳೆಸುತ್ತಲೇ ಇದ್ದ. 278 00:20:13,680 --> 00:20:19,560 ಪಂಡಿತ್ ವ್ಯಾಸರು ತಮ್ಮ ಮಗಳನ್ನು ರಾಧೆಗೆ ಕೊಟ್ಟು, ಅವನಿಗೆ ಹೊಸ ಗುರುತನ್ನು ನೀಡಿದರು. 279 00:20:19,680 --> 00:20:22,480 ರಾಧೆಮೋಹನ್ ರಾಥೋಡ್. 280 00:20:22,560 --> 00:20:27,800 ನೀನು ಕುಳಿತಿರುವ ಸ್ಥಳ, ಇದು ನಿನ್ನ ಅಜ್ಜನ ಮೊದಲ ಮನೆ. 281 00:20:57,480 --> 00:20:59,560 ಆದರೆ ಈ ಬ್ಯಾಂಡ್ ನಿನ್ನ ರಚನೆ. 282 00:20:59,680 --> 00:21:01,800 ನೀನು ಸ್ವಂತ ಸಂಗೀತ ರಚಿಸುತ್ತೀಯ. 283 00:21:01,920 --> 00:21:04,560 ನಾನು ಇಲ್ಲಿಯವರೆಗೆ ಒಂದೇ ಒಂದು ಸ್ವಂತ ಸಂಯೋಜನೆ ಮಾಡಿಲ್ಲ. 284 00:21:05,880 --> 00:21:08,240 ನಿನ್ನಿಂದಾಗಿ ನನ್ನ ಕೂದಲಿಗೆ ನೀಲಿ ಬಣ್ಣ ಹಚ್ಚಿದೆ. 285 00:21:09,560 --> 00:21:12,200 ತಮನ್ನಾ, ಇದು ನಿನ್ನಿಂದ ಸಾಧ್ಯ. ನಮಗೆ ನಂಬಿಕೆ ಇದೆ. 286 00:21:17,200 --> 00:21:20,560 ನಿನ್ನ ಬ್ಯಾಂಡ್ ಮತ್ತು ನಿನ್ನ ಸಂಗೀತ ಎರಡಕ್ಕೂ ನೀನು ಬೇಕು. 287 00:21:50,840 --> 00:21:53,480 ಈ ಬ್ಯಾಂಡ್‌ನಲ್ಲಿ ನನಗೆ ಸ್ಥಾನವಿಲ್ಲ ಎಂದು ನನಗೆ ಗೊತ್ತು. 288 00:22:01,800 --> 00:22:03,760 ಆದರೆ ಇದನ್ನು ಒಮ್ಮೆ ಕೇಳಿ. 289 00:22:04,640 --> 00:22:07,240 ಬಹುಶಃ ಇದು ಅಂತಿಮ ಸುತ್ತಿನಲ್ಲಿ ಸಹಾಯ ಮಾಡಬಹುದು. 290 00:22:07,320 --> 00:22:10,160 ಸರಿ ಇಲ್ಲ ಅನಿಸಿದರೆ ಬಿಟ್ಟುಬಿಡಿ. 291 00:22:15,400 --> 00:22:16,520 ಮೇಡಂ? 292 00:22:19,040 --> 00:22:20,120 ತಮನ್ನಾ, ಇರು. 293 00:22:38,320 --> 00:22:43,520 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 294 00:22:44,160 --> 00:22:50,160 ನಮ್ಮ ಪ್ರಾರ್ಥನೆಗೆ ಉತ್ತರಿಸು 295 00:22:54,280 --> 00:22:56,760 ಶ್ರೀಕೃಷ್ಣ 296 00:22:56,840 --> 00:22:58,360 ಹೀಗೆ ಮಾಡಬೇಡ, ಮಗನೇ. 297 00:23:00,520 --> 00:23:04,000 ನಿನ್ನನ್ನು ಮತ್ತೆ ಮತ್ತೆ ನಿರಾಕರಿಸುವ ಪಾಪ ನನ್ನಿಂದ ಮಾಡಿಸಬೇಡ. 298 00:23:05,880 --> 00:23:07,040 ನಾನು ಇನ್ನೇನು ಮಾಡಲಿ? 299 00:23:07,920 --> 00:23:10,360 ಪಂಡಿತ್ಜೀ ನಿಮಗೆ ಏನಾಗಿದ್ದರು, 300 00:23:11,120 --> 00:23:14,520 ಅವರು ಸರಿಯಾದ ಕೆಲಸಗಳನ್ನು ಮಾಡಿದರೋ, ಇಲ್ಲವೋ, ನನಗೇನೂ ಗೊತ್ತಿಲ್ಲ. 301 00:23:16,120 --> 00:23:19,720 ಆದರೆ ಅವರು ಹೇಗೇ ಇದ್ದರೂ, ಏನೇ ಆಗಿದ್ದರೂ, 302 00:23:20,920 --> 00:23:22,480 ಅವರು ನನ್ನ ದೇವರು. 303 00:23:24,280 --> 00:23:26,240 ಅವರು ನಮ್ಮನ್ನು ತೊರೆದ ನಂತರ, 304 00:23:26,840 --> 00:23:30,360 ನಾನೂ ಈ ದೇವಸ್ಥಾನದಲ್ಲಿ ಹಾಡುತ್ತಿದ್ದ ಅದೇ ಅನಾಥ ಮಗು ಅನಿಸುತ್ತಿದೆ. 305 00:23:33,840 --> 00:23:35,600 ನಾವು ಖ್ಯಾತಿಯ ಬೆನ್ನಟ್ಟುತ್ತಿಲ್ಲ. 306 00:23:36,640 --> 00:23:41,360 ನಮಗೆ ಪಂಡಿತ್ಜೀಯವರ ಕೆಲಸವನ್ನು ಇಡೀ ಜಗತ್ತು ನೋಡಬೇಕೆಂಬ ಆಸೆ. ಹೆಮ್ಮೆಯಿಂದ. 307 00:23:42,840 --> 00:23:45,520 ಮತ್ತು ಈ ರಾಗವು ಅವರ ಕಥೆಯ ಅಪೂರ್ಣ ಭಾಗ. 308 00:23:48,720 --> 00:23:52,200 ಅದನ್ನು ಪೂರ್ಣಗೊಳಿಸಲು ನೀವು ನಮಗೆ ಸಹಾಯ ಮಾಡಬಹುದೆಂದು ಆಶಿಸುತ್ತಿದ್ದೆವು. 309 00:23:57,160 --> 00:23:58,720 ನಾವದನ್ನು ಅಪೂರ್ಣವಾಗಿ ಹಾಡಬಹುದು. 310 00:24:01,480 --> 00:24:04,400 ಆದರೆ ನಾನು ಅದನ್ನು ಪೂರ್ಣಗೊಳಿಸಲು ಪ್ರಯತ್ನಿಸದಿದ್ದರೆ, 311 00:24:06,360 --> 00:24:08,720 ಅವರ ಉತ್ತರಾಧಿಕಾರಿಯಾಗುವುದು ಹೇಗೆ? 312 00:24:13,720 --> 00:24:15,160 ಹಾಗಾಗಿ ನಾಳೆ, 313 00:24:16,520 --> 00:24:20,560 ನಾನು ಮತ್ತು ನನ್ನ ಕುಟುಂಬ ಈ ರಾಗದ ರಹಸ್ಯವನ್ನು ಬಿಡಿಸಲು ಮತ್ತೆ ಇಲ್ಲಿಗೆ ಬರುತ್ತೇವೆ. 314 00:24:22,920 --> 00:24:24,880 ಮತ್ತು ನಾನು ಮತ್ತೆ ನಿಮ್ಮ ಬಳಿಗೆ ಬರುತ್ತೇನೆ. 315 00:24:26,160 --> 00:24:27,960 ಸಹಾಯ ಮಾಡುತ್ತೀರಿ ಎಂಬ ಅದೇ ಆಸೆಯೊಂದಿಗೆ. 316 00:24:30,640 --> 00:24:34,520 ಮತ್ತು ನೀವು ಮತ್ತೆ ನನ್ನನ್ನು ತಿರಸ್ಕರಿಸಬಹುದು. ನೀವು ಹಿರಿಯರು. 317 00:24:36,240 --> 00:24:37,480 ನಿಮಗೆ ಹಕ್ಕಿದೆ. 318 00:24:47,840 --> 00:24:48,880 ಸಂಗೀತ ಮತ್ತು ಮೊಂಡುತನ, 319 00:24:50,440 --> 00:24:52,600 ಎರಡನ್ನೂ ಪಂಡಿತ್ಜೀಯಿಂದ ಅನುವಂಶಿಕವಾಗಿ ಪಡೆದಿರುವೆ. 320 00:24:55,360 --> 00:24:57,440 ನಾಳೆ ನಿನ್ನ ಕುಟುಂಬವನ್ನು ಕರೆತಂದಾಗ, 321 00:24:58,960 --> 00:25:03,160 ಪಂಡಿತ್ಜೀ ತಮ್ಮ ಎಲ್ಲಾ ಕೃತಿಗಳನ್ನು ರಚಿಸಿದ ಅದೇ ಸ್ಥಳದಲ್ಲಿ ಅಭ್ಯಾಸ ಮಾಡೋಣ. 322 00:25:16,680 --> 00:25:18,120 ನಮಸ್ಕಾರ. 323 00:25:55,840 --> 00:25:56,880 ಈ ಕಡೆ. 324 00:26:25,640 --> 00:26:27,200 ಅಪೂರ್ಣ ರಾಗ. 325 00:26:29,120 --> 00:26:31,280 ಇದು ಅವರ ಕೊನೆಯ ಸಂಯೋಜನೆಯಾಗಬೇಕಿತ್ತು. 326 00:26:31,360 --> 00:26:32,800 ಬನ್ನಿ, ಪ್ರಾರಂಭಿಸೋಣ್ವಾ? 327 00:26:43,600 --> 00:26:45,000 ಒಂದು ಯೋಚನೆಯಷ್ಟೆ. 328 00:26:47,080 --> 00:26:48,440 ಸ್ವಲ್ಪ ವಿಚಿತ್ರವಾಗಿದೆ. 329 00:26:50,320 --> 00:26:53,360 ವಿಭಿನ್ನವಾಗಿದೆ, ಆದರೆ ಆಸಕ್ತಿದಾಯಕವಾಗಿದೆ. 330 00:26:53,440 --> 00:26:55,600 ಆದರೆ ಇದು ಬೇರುಗಳಿಗೆ ಹೇಗೆ ಸಂಬಂಧಿಸಿದೆ? 331 00:27:00,200 --> 00:27:03,320 ಯಾರಿಗಾದರೂ ನೆನಪಿದೆಯಾ, ನಮಗೆ ಸಂಗೀತದಲ್ಲಿ ಯಾಕೆ ಆಸಕ್ತಿ ಬಂತು ಅಂತ? 332 00:27:06,360 --> 00:27:07,640 ನನಗೂ ಇಲ್ಲ. 333 00:27:10,360 --> 00:27:12,280 ಯಾಕೆಂದರೆ ಕಾರಣ ಇರಲೇ ಇಲ್ಲ. 334 00:27:15,320 --> 00:27:19,480 ಆದರೆ ಬೆಳೆದ ನಂತರ, ನಾವು ಸಂಗೀತದಲ್ಲಿ ಉತ್ತಮವಾಗಲು ಕಾರಣ ಹುಡುಕಿದೆವು. 335 00:27:20,840 --> 00:27:23,880 ಪ್ರಶಂಸೆ. ಗೆಳೆಯರ ಒತ್ತಡ. 336 00:27:23,960 --> 00:27:25,760 ಇಂಡಿಯಾ ಬ್ಯಾಂಡ್ ಚಾಂಪಿಯನ್‌ಶಿಪ್. 337 00:27:27,960 --> 00:27:29,560 ನಾವು ಯಾರೆಂಬುದನ್ನು ಮರೆತು, 338 00:27:30,720 --> 00:27:33,600 ಏನು ಆಗಬೇಕು ಎಂಬುದರ ಮೇಲೆ ಗಮನ ಹರಿಸಿದೆವು. 339 00:27:37,720 --> 00:27:39,720 ನಾವು ನಮ್ಮಿಂದ ದೂರ ಓಡಿಹೋಗಲು ಆರಂಭಿಸಿದೆವು. 340 00:27:43,680 --> 00:27:48,120 ಆದರೆ ನಾವು ಎಷ್ಟು ದೂರ ಹೋಗಲು ಪ್ರಯತ್ನಿಸಿದರೂ, 341 00:27:48,200 --> 00:27:51,600 ನಿಮ್ಮ ಪ್ರತಿಧ್ವನಿಯು ನಿಮ್ಮ ಬಳಿ ಹಿಂದಿರುಗುವ ಮಾರ್ಗ ಹುಡುಕುತ್ತೆ. 342 00:27:52,320 --> 00:27:54,680 ನಿಮ್ಮ ಧ್ವನಿಯಾದ ಆ ಪ್ರತಿಧ್ವನಿ. 343 00:27:54,760 --> 00:27:56,560 ನಾವು ಈಗ ಏನು, 344 00:27:58,560 --> 00:27:59,960 ನಾವು ಏನಾಗಿದ್ದೆವು, 345 00:28:02,280 --> 00:28:03,480 ನಮ್ಮ ಬೇರುಗಳು. 346 00:28:09,240 --> 00:28:11,120 ನಿನ್ನ ಹಾಡು ಸೊಗಸಾಗಿದೆ, ತಮನ್ನಾ. 347 00:28:14,400 --> 00:28:16,200 ಆದರೆ ನಾವು ಅದನ್ನು ಬಳಸಲು ಆಗಲ್ಲ. 348 00:28:17,520 --> 00:28:20,800 ಏನು ಹಾಡಬೇಕೆಂದು ನಮ್ಮ ಬ್ಯಾಂಡ್ ಈಗಾಗಲೇ ನಿರ್ಧರಿಸಿದೆ. 349 00:28:34,000 --> 00:28:38,360 ಆ ನಿರ್ಧಾರವನ್ನು ಬದಲಾಯಿಸದ ಹೊರತು. 350 00:28:41,040 --> 00:28:44,320 ಮೇಡಂ, ಈ ಹಾಡು ಅದ್ಭುತವಾಗಿದೆ. ನಾವು ಇದನ್ನು ಬಳಸಬಹುದು. 351 00:28:49,520 --> 00:28:51,160 ಅಯಾನ್! 352 00:28:56,400 --> 00:28:57,760 ಧನ್ಯವಾದ. 353 00:28:57,880 --> 00:29:01,200 ಬೇಕಿಲ್ಲ. ನಿನ್ನ ಹಾಡು ಚೆನ್ನಾಗಿದೆ. 354 00:29:02,120 --> 00:29:04,960 ನಾನು ಯಾವಾಗಲೂ ಹೇಳಿದ್ದೇನೆ, ನೀನು ನನಗಿಂತ ಉತ್ತಮ ಸಂಯೋಜಕಿ. 355 00:29:05,040 --> 00:29:08,400 ಮತ್ತು ಇದು ಬಹುಶಃ ನಾನು ಕೇಳಿದ ಅತ್ಯುತ್ತಮ ಸಂಯೋಜನೆ. 356 00:29:08,480 --> 00:29:10,640 -ನಾನು ಇದಕ್ಕೆ ಯೋಗ್ಯಳಲ್ಲ. -ಅದು ನಿಜವೇ. 357 00:29:11,440 --> 00:29:12,880 ನೀನು ನನ್ನ ಹೃದಯವನ್ನು ಒಡೆದೆ. 358 00:29:16,080 --> 00:29:17,920 ಆದರೆ ಇರಲಿ, ಇದು ನನ್ನ ವಿರಹ, 359 00:29:19,320 --> 00:29:21,640 ಹಾಗಾಗಿ ನಾನು ಇದರೊಂದಿಗೆ ಬದುಕುವೆ, ಸರಿನಾ? 360 00:29:21,760 --> 00:29:24,000 ಅಯಾನ್, ಕ್ಷಮಿಸು. ನನ್ನನ್ನು ದಯವಿಟ್ಟು ಕ್ಷಮಿಸು. 361 00:29:24,080 --> 00:29:27,520 ಗೊತ್ತಾ, ನನಗೆ ಹೇಳಲು ಏನೂ ಇಲ್ಲ ಅಂದುಕೊಳ್ಳುತ್ತಿದ್ದೆ. 362 00:29:28,600 --> 00:29:31,120 ನಾನು ನನ್ನ ಮೊದಲ ಸ್ವಂತ ಸಂಯೋಜನೆ ಮಾಡಿದೆ. 363 00:29:32,920 --> 00:29:34,120 ಸರಿ ಅನಿಸಿತು. 364 00:29:36,000 --> 00:29:38,880 -ನಾನು ಅದನ್ನು ಕೇಳಿದೆ. ನಿಜಕ್ಕೂ ಚೆನ್ನಾಗಿದೆ. -ಗೊತ್ತು. 365 00:29:43,720 --> 00:29:45,920 ಇರಲಿ, ತಮನ್ನಾ. ಬ್ಯಾಂಡ್‌ಗೆ ಮರಳಿ ಸ್ವಾಗತ. 366 00:29:46,720 --> 00:29:50,200 ಆದರೆ ನಾನು ನಿನ್ನನ್ನು ಕ್ಷಮಿಸಿದ್ದೇನೆ ಅಂದುಕೊಳ್ಳಬೇಡ. 367 00:30:02,320 --> 00:30:04,960 ಇಲ್ಲಿಯವರೆಗೆ ನೀವು ಏನು ಸಿದ್ಧಪಡಿಸಿದ್ದೀರಿ, ಅದನ್ನು ಹಾಡಿ. 368 00:30:08,600 --> 00:30:11,360 ಗ್ರ್ಯಾಂಡ್ ಫಿನಾಲೆಗೆ ಇನ್ನು ನಾಲ್ಕೇ ದಿನ ಬಾಕಿ. 369 00:30:11,440 --> 00:30:13,720 ಅಗ್ರ ಐದು ಬ್ಯಾಂಡ್‌ಗಳು ಪರಸ್ಪರ ಮುಖಾಮುಖಿಯಾಗಲಿವೆ. 370 00:30:16,200 --> 00:30:17,760 ಆದರೆ ಮುಖ್ಯ ಪ್ರಶ್ನೆ... 371 00:30:17,840 --> 00:30:20,280 ಮೊದಲ ಐಬಿಸಿ ಚಾಂಪಿಯನ್ ಯಾರು ಆಗುತ್ತಾರೆ? 372 00:30:20,360 --> 00:30:24,240 ಅವರ ನೆಚ್ಚಿನವರು ಯಾರು ಎಂದು ಭಾರತವನ್ನು ಕೇಳೋಣ. 373 00:30:24,320 --> 00:30:26,040 ರಾಧೆ ಅಣ್ಣ ಗೆಲ್ಲುವರು! 374 00:30:26,120 --> 00:30:27,080 ಅತಿಕ್ರಮಣ್! 375 00:30:27,160 --> 00:30:28,880 -ಖಂಡಿತ ರಾಯಲ್ಟಿ ಫ್ರೀ. -ರಾಥೋಡ್ ಘರಾನಾ. 376 00:30:28,960 --> 00:30:30,200 -ಟ್ರಿನಿಟಿ. -ಜ್ವಾಲಾಮುಖಿ! 377 00:30:33,720 --> 00:30:38,080 ಯಾವ ಬ್ಯಾಂಡ್ ಈ ಸ್ಪರ್ಧೆಯಲ್ಲಿ ಗೆಲ್ಲುತ್ತೆ ಎಂದು ನೋಡಲು ಆಸಕ್ತಿದಾಯಕವಾಗಿರುತ್ತೆ. 378 00:30:38,160 --> 00:30:40,480 ಎರಡೂ ರಾಗಗಳ ಸಾರ ಈಗ ಕೇಳುತ್ತಿದೆ. 379 00:30:41,160 --> 00:30:43,200 ಇನ್ನು ನಾಲ್ಕು ದಿನದಲ್ಲಿ ಗೊತ್ತಾಗಲಿದೆ. 380 00:30:43,280 --> 00:30:45,840 ಯಾವ ಬ್ಯಾಂಡ್ ಭಾರತದ ಹೃದಯವನ್ನು ಗೆಲ್ಲುತ್ತದೆ? 381 00:30:45,920 --> 00:30:47,760 -ಅಯಾನ್. -ಖಂಡಿತ, ತಮನ್ನಾ. 382 00:30:47,840 --> 00:30:49,640 ಮೋಹಿನಿ ಮೇಡಂ ಚೆನ್ನಾಗಿ ಹಾಡುತ್ತಾರೆ. 383 00:30:49,720 --> 00:30:51,360 ರಾಥೋಡ್ ಘರಾನಾ. 384 00:30:51,440 --> 00:30:53,280 ಯಾರು ಗೆಲ್ಲುತ್ತಾರೆ? 385 00:30:53,360 --> 00:30:54,360 ಜ್ವಾಲಾಮುಖಿ! 386 00:30:54,440 --> 00:30:57,280 ಇಂಡಿಯಾ ಬ್ಯಾಂಡ್ ಚಾಂಪಿಯನ್‌ಶಿಪ್‌ನ ಮೊದಲ ಚಾಂಪಿಯನ್ ಯಾರು? 387 00:31:00,560 --> 00:31:04,600 ನನ್ನಿಂದ ಸಹಾಯ ಆಗಿದೆ ಎಂದುಕೊಳ್ಳುವೆ. 388 00:31:04,680 --> 00:31:07,960 ಭೈರವ್ ಅವರೇ, ನೀವು ಇಲ್ಲದೆ ಈ ರಾಗ ಪೂರ್ಣವಾಗುತ್ತಿರಲ್ಲ. 389 00:31:08,040 --> 00:31:12,760 ನಿಮ್ಮಿಂದಾಗಿ ನಾವು ಪಂಡಿತ್ಜೀಗೆ ಸ್ವಲ್ಪ ಹತ್ತಿರವಾದಂತೆ ಅನಿಸುತ್ತಿದೆ. 390 00:31:13,800 --> 00:31:17,120 ನಿಮಗೆ ಅಭ್ಯಂತರವಿಲ್ಲದಿದ್ದರೆ, ನಾವು ಮತ್ತೆ ಯಾವಾಗಲಾದರೂ ಬರುತ್ತೇವೆ. 391 00:31:18,680 --> 00:31:20,040 ಇದು ನಿಮ್ಮ ಸ್ವತ್ತು. 392 00:31:21,520 --> 00:31:22,640 ನಾನು ರಕ್ಷಕನಷ್ಟೆ. 393 00:31:23,680 --> 00:31:27,800 ನಮಸ್ಕಾರ, ಗೆಳೆಯರೇ. ಮೊದಲನೆಯದಾಗಿ, ನಮಗೆ ಇಷ್ಟು ಪ್ರೀತಿಯನ್ನು ನೀಡಿದ್ದಕ್ಕಾಗಿ ತುಂಬಾ ಧನ್ಯವಾದ. 394 00:31:27,880 --> 00:31:31,840 ನಿಮಗೆ ತಿಳಿದಿರುವಂತೆ, ರಾಥೋಡ್ ಘರಾನಾ ಈಗ ಐಬಿಸಿ ಫೈನಲ್‌ನಲ್ಲಿದೆ. 395 00:31:31,920 --> 00:31:33,840 ನಾನು ಈಗ ನಿಂತಿರುವ ಸ್ಥಳ, 396 00:31:34,480 --> 00:31:39,160 ನನ್ನ ತಂದೆ ಪಂಡಿತ್ ಮೋಹನ್ ರಾಥೋಡ್, ತಮ್ಮ ಎಲ್ಲಾ ಸಂಯೋಜನೆಗಳನ್ನು ರಚಿಸಿದ ಸ್ಥಳ. 397 00:31:40,360 --> 00:31:45,040 ಮತ್ತು ನೀವು ನನ್ನ ಹಿಂದೆ ಏನು ನೋಡುತ್ತಿದ್ದೀರಿ, ಅವು ನಮ್ಮ ಕುಟುಂಬದ 398 00:31:45,120 --> 00:31:46,320 ಐತಿಹಾಸಿಕ ಲಯದ ಕಲ್ಲುಗಳು. 399 00:31:46,400 --> 00:31:49,000 ನಿಮ್ಮ ಕುಟುಂಬ ತುಂಬಾ ಐತಿಹಾಸಿಕ, 400 00:31:49,080 --> 00:31:50,040 ಮತ್ತು ಲಯಬದ್ಧ ಸಹ. 401 00:31:50,120 --> 00:31:55,240 ಹೌದು. ಮತ್ತು ಕೈಲಾಶ್ ಅವರು ಪಂಡಿತ್ಜೀಯವರ ಅಧ್ಯಾಯಕ್ಕೆ ಶೀರ್ಷಿಕೆಯನ್ನು ಸಹ ನೀಡಿದರು. 402 00:31:55,960 --> 00:31:59,360 "ರಾಥೋಡ್ ಘರಾನಾ: ಒಂದು ಲಯಬದ್ಧ ಕುಟುಂಬದ ಲಯರಹಿತ ಕಥೆ." 403 00:32:00,880 --> 00:32:02,720 ಆ ಬರಹಗಾರ ವಂಚಕ! 404 00:32:03,720 --> 00:32:05,280 ಏನೇನೋ ಬರೆದಿದ್ದಾನೆ! 405 00:32:07,000 --> 00:32:07,920 ಹೋಗಲಿ ಬಿಡಿ. 406 00:32:08,880 --> 00:32:11,440 -ನಾವು ಆ ಪುಸ್ತಕವನ್ನು ಮರೆತಿದ್ದೇವೆ. -ನಾನು ಮರೆಯಲಿಲ್ಲ. 407 00:32:12,960 --> 00:32:16,720 ಪಂಡಿತ್ಜೀ ಸ್ವತಃ ತಮ್ಮ ಸ್ವಂತ ಕುಟುಂಬವನ್ನು ಯಾಕೆ ತೊರೆಯುತ್ತಾರೆ? 408 00:32:17,880 --> 00:32:20,920 ನಿಜವೇನೆಂದರೆ, ಗುರುಗಳು ಅವರನ್ನು ಹೊರಹಾಕಿದರು. 409 00:32:21,000 --> 00:32:24,360 ಐದು ವರ್ಷದ ಮಗುವನ್ನು ಅವನ ತಂದೆಯಿಂದ ಬೇರ್ಪಡಿಸಿದರು. 410 00:32:24,440 --> 00:32:26,240 ಇದು ನಿಮಗೆಲ್ಲಾ ಗೊತ್ತು. 411 00:32:27,720 --> 00:32:30,280 ಪಂಡಿತ್ಜೀ ಎಂದಿಗೂ ತಮ್ಮ ಗುರುವಿನ ವಿರುದ್ಧ ಮಾತಾಡಲಿಲ್ಲ, 412 00:32:30,880 --> 00:32:32,440 ಆದರೆ ನಾನು ಇಂದು ಮಾತಾಡುವೆ. 413 00:32:35,200 --> 00:32:37,040 ಮನೆಯಲ್ಲಿ ತಿನ್ನಲು ಏನೂ ಇರಲಿಲ್ಲ. 414 00:32:37,120 --> 00:32:38,840 ಅಪ್ಪ, ನನಗೆ ಹಸಿವಾಗಿದೆ. 415 00:32:38,920 --> 00:32:41,680 ಆದರೆ ಪಂಡಿತ್ ವ್ಯಾಸರು ತುಂಬಾ ಹಠಮಾರಿ, 416 00:32:41,760 --> 00:32:44,680 ಬೇರೆಯವರ ಮುಂದೆ ಹಾಡುವ ಕಲ್ಪನೆಗೂ ಸಂಪೂರ್ಣವಾಗಿ ವಿರುದ್ಧವಾಗಿದ್ದರು. 417 00:32:44,760 --> 00:32:46,800 ರಾಧೆಮೋಹನ್‌ಗೂ ಹಾಡಲು ಬಿಡುತ್ತಿರಲಿಲ್ಲ. 418 00:32:46,880 --> 00:32:49,800 ಪ್ರತಿ ವರ್ಷ ಸಂಗೀತ ಸಾಮ್ರಾಟ್‌ಗಾಗಿ ಅವರಿಗೆ ಆಹ್ವಾನ ಬರುತ್ತಿತ್ತು. 419 00:32:49,880 --> 00:32:51,320 ಅವರು ತಿರಸ್ಕರಿಸುತ್ತಿದ್ದರು. 420 00:32:52,240 --> 00:32:57,280 ಗುರುಗಳೇ, ಇಲ್ಲಿಯವರೆಗೆ ಸಂಗೀತ ಸಾಮ್ರಾಟ್‌ಗೆ ಹಾಜರಾಗಲು ನೀವು ಯಾಕೆ ಬಯಸಲಿಲ್ಲ ಎಂದು ಗೊತ್ತು. 421 00:32:57,360 --> 00:33:01,160 ಆದರೆ ನನ್ನ ಮಗ ಖಾಲಿ ಹೊಟ್ಟೆಯಲ್ಲಿ ಮಲಗುವುದನ್ನು ನನಗೆ ನೋಡಲು ಆಗಲ್ಲ. 422 00:33:01,240 --> 00:33:04,840 -ನಿಮ್ಮ ಅನುಮತಿಯಿದ್ದರೆ... -ನನ್ನ ಮೊಮ್ಮಗ ಹಸಿವಿನಿಂದ ಸಾಯುತ್ತಾನೆ, 423 00:33:06,520 --> 00:33:11,200 ಆದರೆ ನಾನು ಯಾವ ರಾಜನ ಮುಂದೆಯೂ ಹಾಡಲ್ಲ. 424 00:33:12,520 --> 00:33:15,360 ರಾಧೆಮೋಹನ್ ತನ್ನ ಗುರುವನ್ನು ವಿರೋಧಿಸುತ್ತಿರಲಿಲ್ಲ. 425 00:33:16,520 --> 00:33:20,720 ಆದರೆ ಅವರು ಮುಂದೆ ಮಾಡಿದ್ದು ಶಿಷ್ಯನ ನಿರ್ಧಾರವಲ್ಲ, ಒಬ್ಬ ತಂದೆಯ ನಿರ್ಧಾರ. 426 00:33:21,400 --> 00:33:25,440 ನಾನು ಬಿಕಾನೇರ್ ಕುಟುಂಬದಿಂದ ಬಂದವನು. ಇಂದು ನಾನು ಏನು ಚೆನ್ನಾಗಿ ಹಾಡುವೆನೋ 427 00:33:25,520 --> 00:33:29,000 ಅದು ನನ್ನ ಗುರು, ಶ್ರೀ ಕೇದರ್ನಾಥ್ ವ್ಯಾಸ್ ಅವರಿಗೆ ಸಮರ್ಪಿತ. 428 00:33:29,960 --> 00:33:33,160 ಮತ್ತು ನಾನು ಯಾವುದೇ ತಪ್ಪುಗಳನ್ನು ಮಾಡಿದರೂ, ಅವು ನನ್ನದಾಗಿರುತ್ತವೆ. 429 00:33:33,240 --> 00:33:38,600 ಸಂಗೀತ ಸಾಮ್ರಾಟ್ ಎಂಬ ಶೀರ್ಷಿಕೆಯೊಂದಿಗೆ, ರಾಧೆಮೋಹನ್ ತಮ್ಮ ಗುರುವಿನ ಬಳಿ ಹೋದರು. 430 00:33:38,680 --> 00:33:42,960 ಜೋಧ್ಪುರದಲ್ಲಿ ಅವರ ಸಂಗೀತಕ್ಕಾಗಿ ಯೋಗ್ಯ ಪ್ರೇಕ್ಷಕರೂ ಸಿಗಬಹುದು, 431 00:33:43,040 --> 00:33:46,600 ಮತ್ತು ಅವರ ಮಗನಿಗೆ ಸಂತೋಷದ ಜೀವನವನ್ನು ನಡೆಸುವ ಅವಕಾಶವೂ ಸಿಗಬಹುದು ಎಂದರು. 432 00:33:46,680 --> 00:33:48,600 ಆದರೆ ವ್ಯಾಸರು ಅವರ ಮಾತನ್ನು ಕೇಳಲಿಲ್ಲ. 433 00:33:48,680 --> 00:33:51,960 ನೀನು ನನ್ನ ಅನುಮತಿಯಿಲ್ಲದೆ ನನ್ನ ಸಂಗೀತವನ್ನು ಹಾಡಿದೆ. 434 00:33:52,040 --> 00:33:56,040 ನನ್ನ ಸಂಗೀತದ ಮೇಲೆ ಅಥವಾ ಬಿಕಾನೇರ್ ಕುಟುಂಬದ ಮೇಲೆ ನಿನಗೆ ಹಕ್ಕಿಲ್ಲ. 435 00:33:56,120 --> 00:33:58,840 ನೀನು ಆಗಲೂ ಕಳ್ಳ, ಈಗಲೂ ಕಳ್ಳನೇ! 436 00:34:01,720 --> 00:34:04,120 ನೀವು ನನ್ನನ್ನು ಬಿಕಾನೇರ್ ಕುಟುಂಬದಿಂದ ಹೊರಹಾಕಬಹುದು, 437 00:34:04,200 --> 00:34:07,160 ಆದರೆ ಈ ಸಂಗೀತದ ಮೇಲೆ ನನಗೆ ಹಕ್ಕಿದೆ ಗುರುಗಳೇ, 438 00:34:07,240 --> 00:34:10,040 ಆ ಹಣದ ಮೇಲೆ ನನಗೆ ಹಕ್ಕಿದ್ದಂತೆಯೇ. 439 00:34:10,120 --> 00:34:12,400 ಈ ಸಂಗೀತವು ನಿಮಗಿಂತ ಅಥವಾ ನನಗಿಂತ ದೊಡ್ಡದು. 440 00:34:12,480 --> 00:34:15,520 -ನಾನು ಈ ಸಂಗೀತವನ್ನು ಸಾಯಲೂ ಬಿಡಲ್ಲ, ಗುರುಗಳೇ. -ಇಲ್ಲಿಂದ ತೊಲಗು! 441 00:34:15,600 --> 00:34:17,920 ನೀವು ನನ್ನನ್ನು ನಿಮ್ಮ ಶಿಷ್ಯ ಎಂದು ಪರಿಗಣಿಸದಿರಬಹುದು, 442 00:34:18,000 --> 00:34:21,000 ಆದರೆ ನನಗೆ, ನೀವು ಯಾವಾಗಲೂ ನನ್ನ ಗುರುಗಳಾಗಿರುತ್ತೀರಿ. 443 00:34:21,080 --> 00:34:23,760 ಆದರೆ ಗುರುಗಳು ತಮ್ಮ ಶಿಷ್ಯನಿಂದ ತಮ್ಮ ಹಕ್ಕನ್ನು ಕೇಳಿದರು. 444 00:34:23,840 --> 00:34:25,679 ಗುರುದಕ್ಷಿಣೆಯಾಗಿ, 445 00:34:25,800 --> 00:34:28,000 ನೀನು ಪ್ರತಿಜ್ಞೆ ಮಾಡಬೇಕು, 446 00:34:28,080 --> 00:34:32,600 ಮನೆಗೆ ಹೇಗೆ ಏಕಾಂಗಿಯಾಗಿ ಬಂದೆಯೋ, ಹಾಗೆ ಏಕಾಂಗಿಯಾಗೇ ಹೋಗಬೇಕು. 447 00:34:32,639 --> 00:34:38,280 ಇಂದಿನಿಂದ, ನನ್ನ ಮಗಳು ಅಥವಾ ನನ್ನ ಮೊಮ್ಮಗ ದಿಗ್ವಿಜಯ್ ಜೊತೆ ನಿನಗೆ ಯಾವುದೇ ಸಂಬಂಧವಿಲ್ಲ. 448 00:34:49,560 --> 00:34:53,040 ರಾಧೆಮೋಹನ್ ಹೊಸ ಹೆಸರಿನೊಂದಿಗೆ ಹೊಸ ಕುಟುಂಬವನ್ನು ಸೃಷ್ಟಿಸಿದರು, 449 00:34:53,120 --> 00:34:55,960 ಆದರೆ ಸ್ವಂತ ಮಗನಿಗೆ ಅವರ ಹೆಸರನ್ನು ಎಂದೂ ನೀಡಲಾಗಲಿಲ್ಲ. 450 00:34:56,040 --> 00:34:57,400 ಅವರ ಅತ್ಯಂತ ಪ್ರೀತಿಯ ಮಗನಿಗೆ. 451 00:35:23,680 --> 00:35:24,560 ಕ್ಷಮಿಸಿ. 452 00:35:51,040 --> 00:35:54,600 ನಿಮ್ಮ ಜೀವನದುದ್ದಕ್ಕೂ ನೀವು ಯಾವುದಕ್ಕಾಗಿ ಹೋರಾಡುತ್ತೀರೋ, 453 00:35:57,320 --> 00:36:01,440 ಅದು ನಿಜವೇ ಆಗಿರಲಿಲ್ಲ ಎಂದು ನಿಮಗೆ ತಿಳಿದಾಗ... 454 00:36:03,160 --> 00:36:04,920 ಏನು ತಾನೇ ಮಾಡಬಹುದು? 455 00:36:10,000 --> 00:36:13,120 ನನ್ನ ಅಜ್ಜ ಯಾಕೆ ಅಪ್ಪನ ಬಗ್ಗೆ ಕೆಟ್ಟದ್ದನ್ನೇ ಹೇಳುತ್ತಿದ್ದರು, 456 00:36:14,440 --> 00:36:16,920 ಮತ್ತು ಅಮ್ಮ ಯಾಕೆ ಅವರನ್ನು ತಡೆಯುತ್ತಿದ್ದರು 457 00:36:18,640 --> 00:36:20,320 ಎಂದು ಈಗ ನನಗೆ ಅರ್ಥವಾಗುತ್ತಿದೆ. 458 00:36:26,080 --> 00:36:30,600 ಅಪ್ಪ ನನಗೆ ಅನ್ಯಾಯ ಮಾಡಿದ್ದಾರೆ ಎಂದು ಯೋಚಿಸುತ್ತಲೇ ಬೆಳೆದೆ. 459 00:36:32,680 --> 00:36:33,960 ನನ್ನ ಕಾಳಜಿ ವಹಿಸಲಿಲ್ಲ. 460 00:36:34,800 --> 00:36:36,160 ನನ್ನ ಹಕ್ಕನ್ನು ಕಿತ್ತುಕೊಂಡರು. 461 00:36:41,360 --> 00:36:43,960 ಆದರೆ ಈಗ ನನಗೆ ಸತ್ಯ ತಿಳಿದಿದೆ, 462 00:36:46,320 --> 00:36:48,040 ಆದರೆ ತಿಳಿದು ಏನು ಮಾಡಲಿ? 463 00:36:52,040 --> 00:36:53,920 ಇದು ನಿನ್ನ ತಪ್ಪಲ್ಲ, ದಿಗ್ವಿಜಯ್. 464 00:36:54,920 --> 00:36:56,320 ನೀನು ಏನು ಮಾಡಬಹುದಿತ್ತು? 465 00:36:58,920 --> 00:37:01,800 ಈ ಹಿರಿಯರು ಯಾಕೆ ಸಂಪೂರ್ಣ ಸತ್ಯವನ್ನು 466 00:37:01,880 --> 00:37:04,840 ಮುಂದಿನ ಪೀಳಿಗೆಯೊಂದಿಗೆ ಎಂದಿಗೂ ಹಂಚಿಕೊಳ್ಳಲ್ಲ ಅಂತ ಗೊತ್ತಿಲ್ಲ. 467 00:37:07,840 --> 00:37:09,560 ನಮಗೆ ನಿಜ ಹೇಳಿದ್ದರೆ... 468 00:37:11,640 --> 00:37:16,080 ಅಪ್ಪ ಬದುಕಿದ್ದಿದ್ದರೆ ಅವರ ಬಳಿಗೆ ಹೋಗುತ್ತಿದ್ದೆ ಮತ್ತು ನಾನು... 469 00:37:24,920 --> 00:37:26,560 ಅವರನ್ನು ತಬ್ಬಿಕೊಳ್ಳುತ್ತಿದ್ದೆ. 470 00:37:55,320 --> 00:38:00,280 ನೀವು ಪಂಡಿತ್ಜೀಯವರ ಸಂಕಲನದಿಂದ ಯಾವುದೇ ಸಂಯೋಜನೆಯನ್ನು ಆಯ್ಕೆ ಮಾಡಬಹುದು. 471 00:38:00,360 --> 00:38:02,160 ಹಕ್ಕುಸ್ವಾಮ್ಯಗಳ ಬಗ್ಗೆ ಚಿಂತಿಸಬೇಡಿ. 472 00:38:02,200 --> 00:38:04,800 ನಾನು ವಕೀಲರು ಮತ್ತು ಆಯೋಕರನ್ನು ನಿಭಾಯಿಸುತ್ತೇನೆ. 473 00:38:07,840 --> 00:38:09,560 ಅದರ ಅಗತ್ಯವಿಲ್ಲ. 474 00:38:11,960 --> 00:38:15,040 ಪಂಡಿತ್ಜೀಯವರ ಬಗ್ಗೆ ನನಗೆ ಇನ್ನೊಂದು ವಿಷಯ ತಿಳಿಯಿತು. 475 00:38:16,560 --> 00:38:18,440 ನಮ್ಮ ಬೇರುಗಳಿಗೆ ಹೆಚ್ಚು ಸಂಬಂಧಿಸಿದ ವಿಷಯ. 476 00:38:21,160 --> 00:38:25,280 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 477 00:38:26,040 --> 00:38:30,800 ಶ್ರೀಕೃಷ್ಣ 478 00:38:43,120 --> 00:38:47,040 ಕೇಳು, ನಾನು ಏನಾದರೂ ಹಾಡು, ಭಜನೆಯಾದರೂ ಸರಿ ಎಂದಾಗ, ತಮಾಷೆ ಮಾಡುತ್ತಿದ್ದೆ. 479 00:38:47,120 --> 00:38:48,480 ಅದನ್ನೇ ಮಾಡು ಅಂತಲ್ಲ. 480 00:38:48,560 --> 00:38:51,840 ಇದು ಇಂಡಿಯಾ "ಭಜನ್" ಚಾಂಪಿಯನ್‌ಶಿಪ್ ಅಲ್ಲ. 481 00:38:51,920 --> 00:38:54,200 ಆರ್ಘ್ಯ ಹೇಳಿದ್ದು ಸರಿ. ಈ ಹಾಡು ಯಾಕೆ ಹಾಡಬೇಕು? 482 00:38:54,320 --> 00:38:56,280 -ಜೋಡಿ-ರಾಗ ಸಹ ಕಲಿತಿದ್ದೇವೆ. -ಹೌದು, ಯಾಕೆ? 483 00:38:56,480 --> 00:38:58,080 ಇದು ಪಂಡಿತ್ಜೀಯವರ ಹಾಡು. 484 00:38:59,640 --> 00:39:02,160 ನಾನು ಚಿಕ್ಕವನಾಗಿದ್ದಾಗ, ನನಗಾಗಿ ಇದನ್ನು ಹಾಡುತ್ತಿದ್ದರು. 485 00:39:04,120 --> 00:39:05,000 ನನಗೆ ನೆನಪಿದೆ. 486 00:39:05,120 --> 00:39:08,520 ಅವರು ಈ ಭಜನೆಯನ್ನು ರಚಿಸಿದಾಗ, ಅವರಿಗೆ 487 00:39:08,600 --> 00:39:10,520 ಕುಟುಂಬ ಎಂದರೇನು ಎಂದೂ ತಿಳಿದಿರಲಿಲ್ಲ. 488 00:39:11,560 --> 00:39:15,320 ಇದು ಅವರ ನಿಜವಾದ ಸಾರವನ್ನು ಹೊಂದಿದೆ, 489 00:39:16,800 --> 00:39:18,040 ಯಾವುದೇ ಕಲಬೆರಕೆ ಇಲ್ಲದೆ. 490 00:39:18,960 --> 00:39:21,160 ರಾಥೋಡ್ ಕುಟುಂಬ ಅಥವಾ ಬಿಕಾನೇರ್ ಕುಟುಂಬ ಅಲ್ಲ. 491 00:39:22,080 --> 00:39:24,160 ಈ ಭಜನೆ ನಮ್ಮೆಲ್ಲರನ್ನೂ ಒಟ್ಟಿಗೆ ಸೇರಿಸುತ್ತದೆ. 492 00:39:28,640 --> 00:39:30,080 ಇದಕ್ಕೆ ತಯಾರಿ ನಡೆಸೋಣ. 493 00:39:30,160 --> 00:39:32,520 ಸರಿ, ಆದರೆ ನಮ್ಮ ಬಳಿ ಎರಡೇ ದಿನ ಇರೋದು 494 00:39:33,560 --> 00:39:36,880 ಇದನ್ನು ಸಂಯೋಜಿಸಿ, ಸ್ಪರ್ಧೆಯ ಸ್ವರೂಪಕ್ಕೆ ತರಲು. 495 00:39:36,960 --> 00:39:40,160 ಇನ್ನು ನಾವಿದನ್ನು ಯಾವ ಸ್ವರೂಪಕ್ಕೂ ತರಬೇಕಿಲ್ಲ. 496 00:39:42,120 --> 00:39:43,880 ಪ್ರೇಕ್ಷಕರು ಇನ್ನು ಅತಿಥಿಗಳಲ್ಲ. 497 00:39:45,200 --> 00:39:46,400 ಅವರು ಈಗ ನಮ್ಮವರು. 498 00:39:48,160 --> 00:39:52,160 ಹಾಗಾಗಿ, ನಮ್ಮ ಸಂಗೀತವನ್ನು ಇರುವಂತೆಯೇ ಪ್ರಸ್ತುತಪಡಿಸೋಣ. 499 00:39:54,280 --> 00:39:55,680 ಮನೆಯಲ್ಲಿ ಮಾಡಿದ ಅಡುಗೆಯಂತೆ. 500 00:40:01,760 --> 00:40:05,000 ಮಹಿಳೆಯರೇ ಮತ್ತು ಮಹನೀಯರೇ! 501 00:40:05,440 --> 00:40:10,480 ಇಂಡಿಯಾ ಬ್ಯಾಂಡ್ ಚಾಂಪಿಯನ್‌ಶಿಪ್ ಮೊದಲ ಫೈನಲ್‌ಗೆ ಸ್ವಾಗತ! 502 00:40:10,560 --> 00:40:13,640 ಇಂಡಿಯಾ ಬ್ಯಾಂಡ್ ಚಾಂಪಿಯನ್‌ಶಿಪ್ ಗ್ರ್ಯಾಂಡ್ ಫಿನಾಲೆ ರಾತ್ರಿ 503 00:40:20,440 --> 00:40:22,320 ಎಂತಹ ಪ್ರದರ್ಶನ! 504 00:40:22,400 --> 00:40:25,960 ಜ್ವಾಲಾಮುಖಿಗಾಗಿ ಭಾರೀ ಚಪ್ಪಾಳೆ! 505 00:40:30,560 --> 00:40:35,280 ತಮ್ಮ ಬೇರುಗಳನ್ನು ನಮಗೆ ತೋರಿಸಲು ರಾಯಲ್ಟಿ ಫ್ರೀಯನ್ನು ಸ್ವಾಗತಿಸಿ. 506 00:40:41,080 --> 00:40:45,200 ಇಂದು, ಅವರಿಗೆ ನಿಮ್ಮ ಕಥೆ ಕೇಳಿಸಿ, ಸಂಗೀತವಲ್ಲ. 507 00:40:47,080 --> 00:40:47,920 ಸರಿನಾ? 508 00:40:53,840 --> 00:40:54,840 ಒಳ್ಳೆಯದಾಗಲಿ. 509 00:41:14,320 --> 00:41:16,160 ನಿನ್ನನ್ನು ಭೇಟಿಯಾಗಲು ನೆಪ ಸಿಕ್ಕಿತು, 510 00:41:17,600 --> 00:41:18,760 ತಡೆದುಕೊಳ್ಳಲು ಆಗಲಿಲ್ಲ. 511 00:41:22,640 --> 00:41:24,000 ಹೊರಡುವೆ. 512 00:41:24,080 --> 00:41:25,320 ಹಾಡು ಕೇಳಿ ಹೋಗಬಹುದಲ್ಲಾ? 513 00:41:27,160 --> 00:41:28,800 ನಿನ್ನ ಜೊತೆ ನಿಂತು ಕೇಳಬಹುದಾ? 514 00:41:28,880 --> 00:41:32,800 ನಾವು ಒಟ್ಟಿಗೆ ಹಾಡು ಕೇಳಿ ಬಹಳ ಸಮಯ ಕಳೆದಿದೆ. 515 00:41:49,800 --> 00:41:52,200 ಈ ರಾತ್ರಿ 516 00:41:52,320 --> 00:41:56,200 ನನ್ನ ಜೊತೆಗೆ ಮಲಗಿದೆ 517 00:41:56,320 --> 00:41:58,480 ಈ ಚಂದ್ರ 518 00:41:58,560 --> 00:42:02,160 ಇಲ್ಲೇ ಎಲ್ಲೋ ಅಡಗಿದೆ 519 00:42:02,200 --> 00:42:05,800 ಈ ಎಲ್ಲಾ ದೃಶ್ಯಗಳು 520 00:42:05,880 --> 00:42:08,680 ರಾತ್ರಿಯ ಈ ನಕ್ಷತ್ರಗಳು 521 00:42:08,800 --> 00:42:11,040 ಎಲ್ಲವೂ ಹಾಡುತ್ತಿವೆ 522 00:42:11,120 --> 00:42:15,640 ಲಾಲಿ ಹಾಡು 523 00:42:15,760 --> 00:42:17,960 ನನ್ನ ಆಸೆ 524 00:42:18,040 --> 00:42:22,080 ಈ ಕನಸುಗಳು ನನಸಾಗಲೆಂದು 525 00:42:22,160 --> 00:42:24,560 ನನ್ನ ಆಸೆ 526 00:42:24,640 --> 00:42:28,560 ಅವು ನಮ್ಮವಾಗಲಿ ಎಂದು 527 00:42:28,640 --> 00:42:30,840 ನನ್ನ ಆಸೆ 528 00:42:30,920 --> 00:42:33,960 ನಕ್ಷತ್ರಗಳ ಮೇಲೆ ಸವಾರಿ ಮಾಡಲು 529 00:42:34,040 --> 00:42:37,280 ಸ್ವಲ್ಪ ಸಾಲ ಪಡೆಯಲು 530 00:42:37,360 --> 00:42:40,280 ಆಕಾಶದಿಂದ 531 00:42:43,760 --> 00:42:48,600 ಆಕಾಶದಿಂದ 532 00:43:16,400 --> 00:43:19,320 ನಿನ್ನ ಕನಸು 533 00:43:29,280 --> 00:43:32,320 ನೀನು ಕಳೆದುಹೋದ ಪ್ರಯಾಣಿಕ 534 00:43:32,400 --> 00:43:35,320 ನಿನ್ನೊಳಗೇ ಕಳೆದುಹೋಗಿರುವೆ 535 00:43:35,400 --> 00:43:38,560 ನೀನು ಕಳೆದುಹೋದ ಪ್ರಯಾಣಿಕ 536 00:43:38,640 --> 00:43:42,760 ನಿನ್ನನ್ನೇ ನೀನು ಹುಡುಕುತ್ತಿರುವುದು 537 00:43:42,840 --> 00:43:45,920 ನೀನು ಹುಡುಕುತ್ತಿರುವುದು ನಿನ್ನೊಳಗೇ ಅಡಗಿದೆ 538 00:43:46,000 --> 00:43:47,640 ಹೌದು, ಇದು ನಿಜ 539 00:43:47,720 --> 00:43:52,800 ನಿನ್ನ ಕನಸು ಈಗಾಗಲೇ ಬಿತ್ತಿಯಾಗಿದೆ 540 00:43:52,880 --> 00:43:55,880 ನನ್ನ ಕರ್ಮ 541 00:43:55,960 --> 00:43:57,680 ನನ್ನ ಭ್ರಮೆ 542 00:43:57,760 --> 00:44:00,480 ನಾನು ಕಿರುಚುತ್ತೇನೆ, ಕೂಗುತ್ತೇನೆ 543 00:44:00,560 --> 00:44:03,320 ಹಾಂ, ಈಗ! 544 00:44:03,400 --> 00:44:08,760 ಕಳೆದುಹೋಗಿರುವ ಪ್ರಯಾಣಿಕನಿಗೆ ತಿಳಿದೂ ಇಲ್ಲ 545 00:44:10,160 --> 00:44:15,960 ಕಳೆದುಹೋಗಿರುವ ಪ್ರಯಾಣಿಕನಿಗೆ ತಿಳಿದೂ ಇಲ್ಲ 546 00:44:17,880 --> 00:44:21,480 ಆಕಾಶದಿಂದ... 547 00:44:33,000 --> 00:44:35,360 ಹೌದು 548 00:44:35,440 --> 00:44:38,520 ಈ ಆಕಾಶ 549 00:44:46,640 --> 00:44:49,000 ಈ ರಾತ್ರಿ 550 00:44:49,080 --> 00:44:53,040 ನನ್ನ ಜೊತೆಗೆ ಮಲಗಿದೆ 551 00:44:53,120 --> 00:44:55,080 ಈ ಚಂದ್ರ 552 00:44:56,080 --> 00:44:59,400 ಇಲ್ಲೇ ಎಲ್ಲೋ ಅಡಗಿದೆ 553 00:44:59,480 --> 00:45:03,560 ಈ ಎಲ್ಲಾ ದೃಶ್ಯಗಳು 554 00:45:03,640 --> 00:45:06,400 ರಾತ್ರಿಯ ಈ ನಕ್ಷತ್ರಗಳು 555 00:45:06,480 --> 00:45:09,160 ಎಲ್ಲವೂ ಹಾಡುತ್ತಿವೆ 556 00:45:09,240 --> 00:45:13,080 ಲಾಲಿ ಹಾಡು 557 00:45:13,160 --> 00:45:17,440 ನನ್ನ ಆಸೆ 558 00:45:17,520 --> 00:45:23,400 ಈ ಕನಸುಗಳು ನನಸಾಗಲೆಂದು 559 00:45:23,480 --> 00:45:29,000 ನನ್ನ ಆಸೆ ಅವೆಲ್ಲಾ ನಮ್ಮವಾಗಲಿ ಎಂದು 560 00:45:30,360 --> 00:45:33,560 ಓಹ್, ಆಕಾಶ 561 00:45:37,200 --> 00:45:41,120 ಆಕಾಶದಿಂದ 562 00:45:44,160 --> 00:45:48,760 ಆಕಾಶದಿಂದ 563 00:46:50,680 --> 00:46:55,280 ಮತ್ತೊಮ್ಮೆ! ಮತ್ತೊಮ್ಮೆ! ಮತ್ತೊಮ್ಮೆ! 564 00:47:03,440 --> 00:47:04,680 ರಾಧೆ. 565 00:47:28,840 --> 00:47:29,680 ಒಳ್ಳೆಯದಾಗಲಿ. 566 00:47:31,560 --> 00:47:32,440 ದೊಡ್ಡಪ್ಪ. 567 00:48:04,160 --> 00:48:06,000 ನಿನ್ನನ್ನು ಉತ್ತರಾಧಿಕಾರಿ ಮಾಡುವ, 568 00:48:07,640 --> 00:48:09,200 ಪಂಡಿತ್ಜೀಯವರ ನಿರ್ಧಾರ ಸರಿ. 569 00:48:10,640 --> 00:48:11,680 ಒಳ್ಳೆಯದಾಗಲಿ. 570 00:48:12,840 --> 00:48:15,480 ಆದರೆ ಈ ಕುಟುಂಬದಲ್ಲಿ ಕೇವಲ ಒಂದು ಧ್ವನಿ ಅಲ್ಲ ಇರೋದು. 571 00:48:17,480 --> 00:48:22,120 ಇಂದಿನಿಂದ ನೀವು ನಮ್ಮ ಜೊತೆ 572 00:48:24,320 --> 00:48:25,200 ಹಾಡಬೇಕು ಎಂದು ಆಸೆ. 573 00:48:28,120 --> 00:48:31,000 ಸ್ಪರ್ಧೆಯಲ್ಲಿ ಅವರದನ್ನು ಅನುಮತಿಸಲ್ಲ. 574 00:48:31,080 --> 00:48:33,520 ಇದು ಸ್ಪರ್ಧೆಗಿಂತ ದೊಡ್ಡದು, ದೊಡ್ಡಪ್ಪ. 575 00:48:34,360 --> 00:48:35,600 ಇದು ನಮ್ಮ ಕುಟುಂಬದ ಬಗ್ಗೆ, 576 00:48:37,400 --> 00:48:38,600 ನಮ್ಮ ಪರಿವಾರದ ಬಗ್ಗೆ. 577 00:49:31,040 --> 00:49:31,880 ಹೋಗೋಣ್ವಾ, ಅಣ್ಣ? 578 00:49:32,800 --> 00:49:33,880 ತಾಳ ಹಾಕೋಣ. 579 00:49:35,720 --> 00:49:41,360 ಮುಂದಿನ ಪ್ರದರ್ಶಕರು ರಾಥೋಡ್ ಘರಾನಾ! 580 00:49:41,480 --> 00:49:43,200 ಅವರಿಗಾಗಿ ಭಾರೀ ಚಪ್ಪಾಳೆ! 581 00:49:43,280 --> 00:49:44,200 ರಾಧೆ. 582 00:49:44,800 --> 00:49:47,440 ನಿನ್ನ ವ್ಯವಸ್ಥಾಪಕನಾಗಿ ಹೇಳುತ್ತಿರುವೆ, ಇದು ಕೆಟ್ಟ ಉಪಾಯ. 583 00:49:47,520 --> 00:49:50,280 ಅಂದರೆ, ಇದು ಆತ್ಮಹತ್ಯೆ. 584 00:49:50,360 --> 00:49:53,120 ಈ ಭಜನೆಯಿಂದ ಕೆಲಸ ನಡೆಯಲ್ಲ. 585 00:49:53,200 --> 00:49:54,400 ಆರ್ಘ್ಯ. 586 00:49:54,480 --> 00:49:55,880 ಆದರೆ ನಾನು ನಿಮ್ಮ ಕೃಷ್ಣ. 587 00:49:56,800 --> 00:50:00,640 ಮತ್ತು ಶ್ರೀಕೃಷ್ಣನು ಹೇಳುವಂತೆ, ಮಾಡಬೇಕಾದುದನ್ನು ಮಾಡಲೇಬೇಕು. 588 00:50:00,720 --> 00:50:01,920 ತಥಾಸ್ತು. 589 00:50:09,960 --> 00:50:15,920 ಇಂದು ನಾವು ಚೆನ್ನಾಗಿ ಹಾಡುವುದೆಲ್ಲವೂ ಪಂಡಿತ್ ರಾಧೆಮೋಹನ್ ರಾಥೋಡ್‌ರಿಗೆ ಸಮರ್ಪಿತ. 590 00:50:18,160 --> 00:50:20,040 ಮತ್ತು ನಾವು ಯಾವುದೇ ತಪ್ಪು ಮಾಡಿದರೆ... 591 00:50:25,040 --> 00:50:26,320 ...ಅವು ನಮ್ಮವು. 592 00:50:31,320 --> 00:50:35,760 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 593 00:50:35,840 --> 00:50:40,840 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 594 00:50:40,920 --> 00:50:44,280 ಬಂಕೆ ಬಿಹಾರಿ, ತುಂಟ ಶ್ಯಾಮ 595 00:50:44,360 --> 00:50:45,960 ಓ ನನ್ನ ಗಿರಿಧರ 596 00:50:46,040 --> 00:50:50,840 ನಮ್ಮ ಪ್ರಾರ್ಥನೆಗೆ ಉತ್ತರಿಸು, ಗಿರಿಧರ 597 00:50:50,920 --> 00:50:56,120 ನಮ್ಮ ಪ್ರಾರ್ಥನೆಗೆ ಉತ್ತರಿಸು, ಗಿರಿಧರ 598 00:51:10,960 --> 00:51:14,680 ಕೊಳಲು ನುಡಿಸು, ಹಸುವಿಗೆ ಉಣಿಸು 599 00:51:14,760 --> 00:51:18,600 ಪ್ರೀತಿಯನ್ನು ಹರಡು, ಮುರಾರಿ 600 00:51:18,680 --> 00:51:24,000 ಓ ಮುರಾರಿ, ಸದಾ ಹರ್ಷಚಿತ್ತ 601 00:51:24,080 --> 00:51:27,320 ರಾಧೆಯೊಂದಿಗೆ 602 00:51:30,840 --> 00:51:35,760 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 603 00:51:35,840 --> 00:51:40,880 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 604 00:52:44,160 --> 00:52:50,120 ನಮ್ಮ ಪ್ರಾರ್ಥನೆಗೆ ಉತ್ತರಿಸು, ಶ್ರೀಕೃಷ್ಣ 605 00:54:01,320 --> 00:54:04,520 ಇಂಡಿಯಾ ಬ್ಯಾಂಡ್ ಚಾಂಪಿಯನ್‌ಶಿಪ್ 606 00:54:04,600 --> 00:54:08,720 ಗ್ರ್ಯಾಂಡ್ ಫಿನಾಲೆಗೆ ಮರಳಿ ಸ್ವಾಗತ! 607 00:54:11,000 --> 00:54:12,200 ಹಾಂ! 608 00:54:12,280 --> 00:54:13,960 ಹಾಂ! ಆ ಕ್ಷಣ ಕೊನೆಗೂ ಬಂದಿದೆ. 609 00:54:14,040 --> 00:54:18,200 ಐದು ಅನನ್ಯ ಬ್ಯಾಂಡ್‌ಗಳು, ಐದು ಅದ್ಭುತ ಪ್ರದರ್ಶನಗಳು. 610 00:54:18,280 --> 00:54:20,240 ಆದರೆ ಅವರಲ್ಲಿ ಒಬ್ಬರು ಮಾತ್ರ ಆಗುವರು 611 00:54:20,320 --> 00:54:25,560 ಭಾರತದ ಮೊದಲ ಬ್ಯಾಂಡ್ ಚಾಂಪಿಯನ್! 612 00:54:30,240 --> 00:54:32,040 ನಿರ್ಣಾಯಕರೇ, ನಿಮ್ಮ ನಿರ್ಣಯ! 613 00:54:35,120 --> 00:54:36,200 ಶುರು ಮಾಡೋಣ. 614 00:54:36,280 --> 00:54:42,200 ರಾಯಲ್ಟಿ ಫ್ರೀ, ನಿಮ್ಮ ಪ್ರದರ್ಶನ ನಮ್ಮನ್ನು ಗೊಂದಲಗೊಳಿಸಿತು. 615 00:54:45,200 --> 00:54:49,680 ಅಂದರೆ, ಅಂತಹ ಅಸಾಧಾರಣ ಸಂಯೋಜನೆ ಯಾರಾದರೂ ಹೇಗೆ ಮಾಡಬಹುದು, ಪ್ರೇಕ್ಷಕರೇ? 616 00:54:49,760 --> 00:54:53,840 ಅಂತಹ ಅದ್ಭುತ ಕಲ್ಪನೆ, ಸಂಕೀರ್ಣತೆ ಮತ್ತು ಮೋಡಿ. 617 00:54:53,920 --> 00:54:59,480 ಮತ್ತೊಂದೆಡೆ, ರಾಥೋಡ್ ಘರಾನಾ, ಅವರು ಹಾಡಿದ ಭಜನೆಯಲ್ಲಿ 618 00:54:59,560 --> 00:55:03,200 ಎಂತಹ ಮುಗ್ಧತೆ ಮತ್ತು ಭಕ್ತಿ ಇತ್ತು. ಅವರು ನಮ್ಮೆಲ್ಲರನ್ನು ಮಂತ್ರಮುಗ್ಧಗೊಳಿಸಿದರು! 619 00:55:07,080 --> 00:55:11,640 ನಾವು ಜ್ವಾಲಾಮುಖಿಯ ಅದ್ಬುತ ಪ್ರದರ್ಶನವನ್ನೂ ಹೊಗಳಲೇಬೇಕು. 620 00:55:11,720 --> 00:55:13,360 ಪ್ರೇಕ್ಷಕರೇ, ನೀವು ಏನು ಹೇಳುತ್ತೀರಿ? 621 00:55:16,040 --> 00:55:17,600 ಆದರೆ ನಿಸ್ಸಂದೇಹವಾಗಿ, 622 00:55:17,680 --> 00:55:22,520 ಈ ಸಂಜೆಯ ಪ್ರಮುಖ ಪ್ರದರ್ಶನ ನೀಡಿದ ಮನಸೆಳೆಯುವ ಬ್ಯಾಂಡ್, 623 00:55:22,600 --> 00:55:26,880 ತಮ್ಮ ಬೇರುಗಳಿಗೆ ವಿನೂತನ ವ್ಯಾಖ್ಯಾನ ನೀಡಿದವರು 624 00:55:26,960 --> 00:55:28,160 ಊಹೆಗೂ ನಿಲುಕದ ವ್ಯಾಖ್ಯಾನ! 625 00:55:28,800 --> 00:55:33,280 ಐಬಿಸಿಯ ವಿಜೇತರು, 626 00:55:38,880 --> 00:55:41,080 ಕಸೌಲಿಯಿಂದ ಬಂದವರು! 627 00:55:42,560 --> 00:55:44,880 ರಾಯಲ್ಟಿ ಫ್ರೀ! 628 00:55:48,080 --> 00:55:51,000 ವಿಜೇತರಿಗೆ ಭಾರೀ ಚಪ್ಪಾಳೆ! 629 00:56:03,800 --> 00:56:05,160 ನೀನು ಮಾಡಿ ತೋರಿದೆ! 630 00:56:05,240 --> 00:56:07,600 ಇಲ್ಲ, ನಾವು ಮಾಡಿ ತೋರಿದೆವು! 631 00:56:32,640 --> 00:56:36,360 ಮೇಡಂ, ಇದು ನಿಮಗಾಗಿ. ನಿಮ್ಮಿಂದಾಗಿ! 632 00:56:47,840 --> 00:56:50,200 -ಹೃತ್ಪೂರ್ವಕ ಅಭಿನಂದನೆಗಳು. -ಧನ್ಯವಾದ. 633 00:56:53,800 --> 00:56:55,240 ಅಭಿನಂದನೆಗಳು! 634 00:56:57,280 --> 00:56:58,120 ಧನ್ಯವಾದ. 635 00:57:18,000 --> 00:57:19,000 ನಮಸ್ಕಾರ. 636 00:57:19,920 --> 00:57:22,360 ನೀವು ಜೋಧ್ಪುರದ ಹೆಮ್ಮೆ. 637 00:57:23,440 --> 00:57:26,720 ಆದರೆ ನಮ್ಮ ಒಂದು ಆಜ್ಞೆಯನ್ನು ಇನ್ನೂ ಪೂರೈಸಿಲ್ಲ. 638 00:57:26,800 --> 00:57:28,080 ಆಜ್ಞೆ ನೀಡಿ. 639 00:57:29,800 --> 00:57:34,280 ನೀವು ಇನ್ನೂ ಪಂಡಿತ್ಜೀಯವರ ನೆನಪಿನಲ್ಲಿ ಗೌರವಾರ್ಥ ಆಯೋಜಿಸಬೇಕು, ನೆನಪಿದೆಯೇ? 640 00:57:36,240 --> 00:57:37,480 ನಿಮ್ಮ ಆಜ್ಞೆಯಂತೆ ಆಗಲಿ. 641 00:57:41,880 --> 00:57:43,040 ನಾವು ಮಾಡಿ ತೋರಿದೆವು! 642 00:57:46,880 --> 00:57:47,800 ದೇವರೇ! 643 00:57:49,240 --> 00:57:50,800 ಎಷ್ಟು ಸುಂದರವಾಗಿದೆ! 644 00:57:52,520 --> 00:57:54,800 -ನಾವು ಸಾಧಿಸಿದೆವು! -ಕೇಳಿ. ಹೇಳಿ, ಎಲ್ಲರೂ! 645 00:57:55,360 --> 00:57:59,000 ಈಗ ನೀವು ಪಾರ್ಟಿ ಯಾಕೆ ಎಂದು ಮರೆಯುವಷ್ಟು ಪಾರ್ಟಿ ಮಾಡಬೇಕು! 646 00:58:00,360 --> 00:58:03,440 ಆದರೆ ನಂತರ, ಈ ಯಶಸ್ಸನ್ನು ಮರೆತುಬಿಡಿ. 647 00:58:04,440 --> 00:58:08,880 ಯಾಕೆಂದರೆ ನೀವು ಇದನ್ನು ಮರೆಯದಿದ್ದರೆ, ನೀವು ಇದಕ್ಕಿಂತ ಉತ್ತಮವಾಗುವುದಿಲ್ಲ. 648 00:58:10,560 --> 00:58:12,000 ಅಲ್ವಾ? 649 00:58:12,080 --> 00:58:14,560 -ಪಾರ್ಟಿ. -ಪಾರ್ಟಿ! 650 00:58:16,400 --> 00:58:18,840 -ಸರ್, ಇದು ನಿಮಗೂ ಸೇರಿದೆ. -ಇಲ್ಲ. 651 00:58:18,920 --> 00:58:21,680 ಬೆಬಾಕಿಯಾ ಇಲ್ಲದೆ, ನಾವು ಇಂದು ಇಲ್ಲಿ ಇರುತ್ತಲೂ ಇರಲಿಲ್ಲ. 652 00:58:21,760 --> 00:58:25,360 ನೀವೂ ನಮ್ಮೊಂದಿಗೆ ಪಾರ್ಟಿ ಮಾಡಬೇಕು. ಅಲ್ವಾ, ನಂದಿನಿ ಮೇಡಂ? 653 00:58:26,280 --> 00:58:27,640 ಅವಳು ಮೊದಲಿಂದ ಹೀಗೇ. 654 00:58:29,120 --> 00:58:32,160 ಹೆಸರು ಬಂದಾಗ ಮಾಯವಾಗಿರುತ್ತಾಳೆ. 655 00:58:35,240 --> 00:58:36,880 ನಾವು ಮಾಡಿಕೊಂಡ ಒಪ್ಪಂದ 656 00:58:37,840 --> 00:58:39,760 ಪರಿಮಳವನ್ನು ಜೀವಂತವಾಗಿರಿಸುವುದು. 657 00:58:40,680 --> 00:58:43,160 ಹಾಗಾಗಿ, ಇದು ಹೂವಿನ ಪ್ರಯಾಣದ ಒಂದು ಭಾಗ 658 00:58:44,200 --> 00:58:47,080 ಪುಸ್ತಕದಲ್ಲಿ ಜೀವಿಸುತ್ತಿರಲು. 659 00:58:49,680 --> 00:58:52,960 ಅಯಾನ್ ಈ ಸಾಲನ್ನು ಬಹಳಷ್ಟು ಹುಡುಗಿಯರ ಮೇಲೆ ಬಳಸಿದ್ದಾನೆ. 660 00:58:53,880 --> 00:58:55,200 ಖಂಡಿತ ಬಳಸಿರುತ್ತಾನೆ! 661 00:58:56,680 --> 00:58:59,560 ಮುಂದೆ ಇನ್ನೂ ಸಾಲುಗಳಿವೆ. ಆದರೆ ನಾನು ಎಂದೂ ಹಾಡಿಲ್ಲ. 662 00:59:00,840 --> 00:59:04,360 ಆದರೆ ಕವಿಯಿಂದ ಕವಿಗಳಿಗೆ, 663 00:59:05,480 --> 00:59:06,840 ನಾನು ನಿಮಗೆ ಹೇಳುತ್ತೇನೆ. 664 00:59:08,080 --> 00:59:09,680 -ಮುಂದುವರೆಸಿ! -ಹೂಂ! 665 00:59:09,760 --> 00:59:11,880 ಆದರೆ ನನ್ನ ಪುಸ್ತಕಗಳಲ್ಲಿ ನಾನು ಉಳಿಸಿದ 666 00:59:13,480 --> 00:59:15,800 ಆ ಹೂವನ್ನು ನಾನು ಕಿತ್ತಿರಲಿಲ್ಲದಿದ್ದರೆ, 667 00:59:17,000 --> 00:59:20,560 ಅದರ ಪರಿಮಳ ಶಾಶ್ವತವಾಗಿ ನನ್ನ ನೆನಪಿನ ಹೂಗುಚ್ಛದಲ್ಲಿ ಉಳಿಯುತ್ತಿತ್ತು. 668 00:59:28,440 --> 00:59:30,520 ನೀವು ತುಂಬಾ ಅದೃಷ್ಟವಂತರು, 669 00:59:31,400 --> 00:59:33,200 ಅವಳು ನಿಮ್ಮ ಮಾರ್ಗದರ್ಶಕಿ. 670 00:59:36,320 --> 00:59:38,400 ಬಹುಶಃ ಒಂದು ದಿನ, ಆ ಕವಯಿತ್ರಿ 671 00:59:39,640 --> 00:59:41,760 ಈ ಮೂರ್ಖನನ್ನು ಆರಿಸಿ 672 00:59:41,840 --> 00:59:46,280 ಅವನನ್ನು ತನ್ನೊಂದಿಗೆ ಇರಿಸಿಕೊಳ್ಳಬಹುದು ಎಂಬ ಭರವಸೆಯೊಂದಿಗೆ ನಾನು ಬದುಕುತ್ತಿರುವೆ. 673 00:59:51,440 --> 00:59:52,280 ಇರಿ. 674 00:59:53,680 --> 00:59:54,840 ಏನು ನಿಮ್ಮ ಅರ್ಥ? 675 00:59:57,880 --> 01:00:01,720 ಹೌದು, ಕವಿತೆಯಲ್ಲಿನ ಹೂವು 676 01:00:02,720 --> 01:00:04,800 ನಂದಿನಿ ಅಲ್ಲ, ನಾನು. 677 01:00:07,200 --> 01:00:08,920 ನಂದಿನಿ ಇದನ್ನು ನನಗಾಗಿ ಬರೆದಿದ್ದು. 678 01:00:09,720 --> 01:00:13,960 ನನ್ನನ್ನು ತೊರೆದಾಗ, ಅವಳು ನನಗೆ ಬಹಳಷ್ಟು ಕವನಗಳನ್ನು ಉಡುಗೊರೆಯಾಗಿ ಕೊಟ್ಟಳು. 679 01:00:15,400 --> 01:00:18,680 ಮತ್ತು ಅವು ನನ್ನ ಮೊದಲ ಆಲ್ಬಮ್‌ಗೆ ಸ್ಫೂರ್ತಿ ಆದವು. 680 01:00:21,200 --> 01:00:23,000 ನೀವು ಅದೃಷ್ಟವಂತರು. 681 01:00:24,440 --> 01:00:25,720 ಒಳ್ಳೆಯದಾಗಲಿ. 682 01:01:09,360 --> 01:01:10,960 ತುಂಬಾ ಬದಲಾಗಿರುವೆ ನೀನು. 683 01:01:28,400 --> 01:01:31,000 ನನಗಿಂತ ಹೆಚ್ಚು ನೀನು ಬದಲಾಗಿರುವೆ. 684 01:01:33,320 --> 01:01:34,360 ಖಂಡಿತ. 685 01:01:36,200 --> 01:01:38,080 ಕೊನೆಗೂ ನಿನ್ನನ್ನು ಸೋಲಿಸಿದೆ. 686 01:01:43,720 --> 01:01:46,680 ಈ ಗೆಲುವಿಗೆ ನಿನಗಿಂತ ಹೆಚ್ಚು ಯಾರೂ ಅರ್ಹರಲ್ಲ, ತಮನ್ನಾ. 687 01:01:51,680 --> 01:01:52,880 ಧನ್ಯವಾದ. 688 01:01:57,040 --> 01:02:00,080 ನಾನು ಹಿಂದಿನ ಸುತ್ತಿನಲ್ಲಿ ಮಾಡಿದ್ದಕ್ಕೆ, ಆದರೆ ಕ್ಷಮಿಸಿಬಿಡು. 689 01:02:04,760 --> 01:02:05,840 ಪ್ರಯತ್ನಿಸುವೆ. 690 01:02:12,120 --> 01:02:13,920 ಆದರೆ ನಿಜವಾದ ಗೆಲುವು ನಿನ್ನದು. 691 01:02:15,040 --> 01:02:17,400 ನೀನು ಈ ಕುಟುಂಬವನ್ನು ಪರಿವಾರವಾಗಿ ಮಾಡಿದೆ. 692 01:02:19,280 --> 01:02:24,080 ಪಂಡಿತ್ಜೀ ಬದುಕಿದ್ದಿದ್ದರೆ ನಿಜಕ್ಕೂ ಹೆಮ್ಮೆಪಡುತ್ತಿದ್ದರು. 693 01:02:28,760 --> 01:02:29,960 ಮತ್ತು ನಾವು? 694 01:02:36,080 --> 01:02:37,800 ಇಲ್ಲಿಂದ ನಮ್ಮ ದಾರಿ ಹೇಗೆ? 695 01:02:43,080 --> 01:02:44,200 ರಾಧೆ. 696 01:02:45,920 --> 01:02:47,240 ಐ ಲವ್ ಯು. 697 01:02:50,600 --> 01:02:53,000 ಆದರೆ ನಾವು ಒಬ್ಬರಿಗೊಬ್ಬರು ಸೇರಿದವರು ಮಾತ್ರವಲ್ಲ. 698 01:02:55,560 --> 01:02:57,360 ನಾವು ನಮ್ಮ ಸಂಗೀತಕ್ಕೆ ಸೇರಿದವರು ಸಹ. 699 01:03:01,560 --> 01:03:04,840 ಅದರಿಂದ ನಾವು ಎಷ್ಟು ದೂರ ಓಡಬಹುದು? 700 01:03:08,000 --> 01:03:10,640 ನಾನು ಬಹಳ ಸಮಯದಿಂದ ಓಡುತ್ತಿದ್ದೇನೆ, 701 01:03:12,960 --> 01:03:16,680 ಮತ್ತು ಇಂದು, ನಾನು ಕೊನೆಗೂ ನನ್ನನ್ನು ಕಂಡುಕೊಂಡಿದ್ದೇನೆ. 702 01:03:21,280 --> 01:03:25,400 ನಿನ್ನ ಜೊತೆ ಇದ್ದರೆ, ನಾನು ಮತ್ತೆ ನನ್ನನ್ನು ಕಳೆದುಕೊಳ್ಳಬಹುದು. 703 01:03:48,160 --> 01:03:51,520 ನಾನು ನಿನ್ನಷ್ಟು ಜಾಣನಲ್ಲ, ತಮನ್ನಾ. 704 01:03:57,440 --> 01:03:59,680 ಹಾಗಾಗಿ ನಿನಗಾಗಿ ಕಾಯುತ್ತೇನೆ. 705 01:04:03,240 --> 01:04:04,960 ನಾನು ಕಾಯುತ್ತೇನೆ. 706 01:04:08,320 --> 01:04:09,440 ಯಾವಾಗಲೂ. 707 01:04:22,080 --> 01:04:24,760 ಬಂದಿಶ್ ಬ್ಯಾಂಡಿಟ್ಸ್‌ಗಾಗಿ ಒಂದು ನೃತ್ಯ. 708 01:04:31,000 --> 01:04:34,400 -ನನಗೆ ಕುಣಿಯಲು ಬರಲ್ಲ. -ಪರವಾಗಿಲ್ಲ. 709 01:04:36,320 --> 01:04:38,080 ನಾನು ಕಲಿಸುವೆ. 710 01:09:05,399 --> 01:09:07,399 ಉಪ ಶೀರ್ಷಿಕೆ ಅನುವಾದ: ಅನುರಾಧ 711 01:09:07,520 --> 01:09:09,520 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ