1 00:00:13,760 --> 00:00:15,930 ನಾವು ಊಹಿಸುವ ಧೈರ್ಯ ಮಾಡಲೇ ಇಲ್ಲ. 2 00:00:19,680 --> 00:00:21,890 ನಮಗಾಗಿ ಕಟ್ಟಲಾದ ಒಂದು ಪ್ರಪಂಚ. 3 00:00:24,190 --> 00:00:25,440 ನಾವು ನಿಯಮಗಳನ್ನು ಮಾಡಿದೆಡೆ. 4 00:00:28,070 --> 00:00:30,360 ನಮಗೆ ಬೇಕಾದುದನ್ನು ಪಡೆಯಬಹುದಾದ ಜಾಗ. 5 00:00:32,860 --> 00:00:34,910 ದೇವರು ನಮ್ಮಂತೆಯೇ ಕಾಣುವ ಪ್ರಪಂಚ. 6 00:00:38,990 --> 00:00:40,660 ನಮಗೆ ಭಯ ಇಲ್ಲದ ಜಾಗ. 7 00:00:41,870 --> 00:00:44,040 ನಮ್ಮನ್ನು ನೋಡಿ ಭಯಪಡಬೇಕಾದ ಜಾಗ. 8 00:00:47,250 --> 00:00:49,710 ಆ ಪ್ರಪಂಚ ನಮ್ಮ ಬೆರಳಂಚಿನಲ್ಲೇ ಇತ್ತು. 9 00:00:51,880 --> 00:00:55,180 ಇದ್ದ ಪ್ರಪಂಚವನ್ನು ಸುಡುವುದಷ್ಟೇ ನಾವು ಮಾಡಬೇಕಿತ್ತು. 10 00:01:14,700 --> 00:01:18,160 ಪ್ರತಿ ಕ್ರಾಂತಿಯೂ ಒಂದು ಕಿಡಿಯೊಂದಿಗೆ ಶುರುವಾಗುತ್ತದೆ. 11 00:01:20,580 --> 00:01:25,540 ದಿ ಪವರ್ 12 00:01:28,080 --> 00:01:31,590 6 ತಿಂಗಳ ಹಿಂದೆ 13 00:01:33,510 --> 00:01:35,340 ಅವಳು ಅನುಭವಿಸಿರೋದು ದೇವರಿಗೇ ಗೊತ್ತು. 14 00:01:35,590 --> 00:01:38,240 ಅವಳಿಗೆ ಮೂರು ವರ್ಷ ಆಗಿದ್ದಾಗಲೇ ಅವರಮ್ಮ ಬಿಟ್ಟು ಹೋದಳಂತೆ. 15 00:01:38,440 --> 00:01:41,350 {\an8}ಸಾಕುಮನೆಯಿಂದ ಸಾಕುಮನೆಗೆ ಹೋಗ್ತಾನೇ ಇದ್ದಾಳೆ. 16 00:01:41,850 --> 00:01:44,230 ಈಗ ಅದೆಲ್ಲಾ ಮುಗಿದುಹೋದ ಕಥೆ, ಅಲ್ವಾ, ಚಿನ್ನ? 17 00:01:46,270 --> 00:01:51,980 ಅವಳಿಗೆ ದೈಹಿಕವಾಗಿ ಯಾವುದೇ ತೊಂದರೆ ಇಲ್ಲ ಅಂತ ವೈದ್ಯರು ಹೇಳಿದ್ದಾರೆ, ಆದರೆ ಅವಳು ಮಾತಾಡಲ್ಲ. 18 00:01:52,980 --> 00:01:54,860 ಆರು ತಿಂಗಳಿನಿಂದ ಅವಳು ಮಾತನ್ನೇ ಆಡಿಲ್ಲ. 19 00:01:55,650 --> 00:01:59,390 ವಾಕ್ ಚಿಕಿತ್ಸೆಯಲ್ಲಿ ಇದನ್ನು ಆಯ್ದ ಮೂಕಿತನ ಅಂತೀವಿ. 20 00:01:59,590 --> 00:02:01,930 ಅದೊಂದು ಮಾನಸಿಕ ಸ್ಥಿತಿ. 21 00:02:02,130 --> 00:02:06,620 ಇದು ಹೆಚ್ಚಾಗಿ ಮಾನಸಿಕ ಆಘಾತ ಅನುಭವಿಸಿದ ಮಕ್ಕಳಲ್ಲಿ ಸಂಭವಿಸುತ್ತದೆ. 22 00:02:07,330 --> 00:02:09,030 ಈಗ, ತಪ್ಪು ತಿಳಿಯಬೇಡಿ. 23 00:02:09,220 --> 00:02:14,710 ಈ ಚಿಕಿತ್ಸೆ ಎಲ್ಲಾ ಸುಮ್ಮನೆ ಉಗುರಿನಲ್ಲಿ ಹೋಗೋದಕ್ಕೆ ಕೊಡಲಿ ಎತ್ತಿಕೊಂಡಂತೆ ಆಗಿರಬಹುದಾ? 24 00:02:14,960 --> 00:02:18,580 ಅಯ್ಲಿ ಮೌನಿ ಆಗಿರಬಹುದು. ಅದರಲ್ಲೇನೂ ತಪ್ಪಿಲ್ಲ. 25 00:02:18,780 --> 00:02:21,660 ಅವರಿಬ್ಬರ ಮಾತುಗಳನ್ನು ನನ್ನ ಹೆಂಡತಿ ಒಬ್ಬಳೇ ಆಡುತ್ತಾಳೆ. 26 00:02:21,860 --> 00:02:23,930 ಕ್ಲೈಡ್, ಯಾವಾಗಲೂ ತಮಾಷೆನೇ. 27 00:02:26,640 --> 00:02:32,020 ನಾವು ತುಂಬಾ ರೀತಿಯಲ್ಲಿ ಧನ್ಯರು. ಆದರೆ ನಮ್ಮ ಸ್ವಂತ ಮಗು ಇಲ್ಲ ಅಷ್ಟೇ. 28 00:02:33,820 --> 00:02:38,610 ಮುಂಚೆಯೂ ನಾವು ಸಾಕುಮಕ್ಕಳನ್ನು ಬೆಳೆಸಿದ್ದೇವೆ, ಬಹಳ ಮಂದಿಯನ್ನು, ಆದರೆ ಅಯ್ಲಿ ಭಿನ್ನಳು. 29 00:02:40,700 --> 00:02:46,250 ನಾನಂದುಕೊಳ್ಳುತ್ತಿದ್ದೆ, ವ್ಯವಸ್ಥೆ ಮತ್ತು ಸ್ಥಿರತೆ, ಪ್ರೀತಿ ಮತ್ತು ಪ್ರಾರ್ಥನೆಯೊಂದಿಗೆ, 30 00:02:47,450 --> 00:02:49,330 ಅವಳು ಮತ್ತೆ ಮಾತನಾಡುವಂತೆ ಮಾಡಬಹುದು ಅಂತ. 31 00:02:50,580 --> 00:02:54,800 ಮಾತಾಡ್ತಾಳೆ. ಅವಳು ತಯಾರಾದಾಗ. ಅವಳಿಗೆ ತಾನು ಬಲಶಾಲಿ ಅನಿಸಿದಾಗ. 32 00:02:55,380 --> 00:02:59,800 ಅದರ ಮೇಲೆ ನಾವು ಜೊತೆಯಾಗಿ ಕೆಲಸ ಮಾಡಬಹುದು. ನಿನಗೆ ಒಪ್ಪಿಗೆಯಾದರೆ, ಅಯ್ಲಿ. 33 00:03:05,890 --> 00:03:08,310 {\an8}ಉತ್ತಮ ಭವಿಷ್ಯ ನಿಮ್ಮ ಕೈಯಲ್ಲಿದೆ 34 00:03:20,450 --> 00:03:22,950 ಅಯ್ಲಿ, ಹಳದಿ ಕೂದಲ ಪಟ್ಟಿ ಎತ್ಕೊಡ್ತೀಯಾ? 35 00:03:25,530 --> 00:03:26,540 ಆ್ಯಲಿಸನ್. 36 00:03:31,670 --> 00:03:32,670 ಧನ್ಯವಾದ. 37 00:03:41,470 --> 00:03:43,180 ಕ್ರಿಸ್ತನಲ್ಲಿರುವ ಸಹೋದರ ಸಹೋದರಿಯರೇ, 38 00:03:45,140 --> 00:03:46,260 ನನಗೊಂದು ಕಾಯಿಲೆ ಇದೆ. 39 00:03:48,720 --> 00:03:54,100 ವಾರಕ್ಕೊಮ್ಮೆ ಹುಲ್ಲು ಕತ್ತರಿಸದೇ ಇರುವುದು ಇದರ ರೋಗಲಕ್ಷಣ ಅಂತ ವೈದ್ಯರು ಹೇಳುತ್ತಾರೆ. 40 00:03:55,810 --> 00:04:00,610 ನೆರೆಮನೆಯವನ ಹೊಸ ಟ್ರಕ್ ನೋಡುವುದು. ಶೂಗಳಿಗೆ ಅತಿಯಾಗಿ ಖರ್ಚು ಮಾಡುವುದು. 41 00:04:02,490 --> 00:04:04,390 ಸೂಪರ್ ಹೀರೋ ಉಡುಗೆ ತೊಟ್ಟಿರುವ 42 00:04:04,590 --> 00:04:07,910 ಸ್ಕಾರ್ಲೆಟ್ ಜೋಹಾನ್ಸನ್ ಚಿತ್ರವನ್ನು ಸ್ವಲ್ಪ ಹೆಚ್ಚಿನ ಸಮಯವೇ ನೋಡುವುದು. 43 00:04:09,790 --> 00:04:11,230 ಹೌದು, ವೈದ್ಯರು ಹೇಳ್ತಾರೆ 44 00:04:11,430 --> 00:04:17,030 ನನ್ನಲ್ಲಿ ಪಾಪಿಷ್ಟ ಮಾನವ ಗುಣವು ವಿಜೃಂಭಿಸುತ್ತಿದೆ ಅಂತ, ಕೇಳಿ ಎಲ್ಲಾ. 45 00:04:17,230 --> 00:04:18,380 ಮತ್ತು ಅದು ಅನುವಂಶಿಕ. 46 00:04:19,670 --> 00:04:25,640 ಪಾಪವನ್ನು, ನನ್ನ ದೊಡ್ದಜ್ಜಿ, ಮುತ್ತಜ್ಜಿ, ಕೋಲಜ್ಜಿ ಈವ್ ಅವರಿಂದ ಬಳುವಳಿಯಾಗಿ ಪಡೆದದ್ದು. 47 00:04:26,260 --> 00:04:28,290 - ಮೊದಲ ಪಾಪ. - ಅಸಂಬದ್ಧ. 48 00:04:28,490 --> 00:04:33,960 - ನಾವು ಸ್ನಾನ ಮಾಡಿರುವುದು… - ಈವ್ ಮೇಲೆ ತಪ್ಪು ಹೊರಿಸಿ. ಯಾವಾಗಲೂ. 49 00:04:34,160 --> 00:04:36,360 ಅದನ್ನೇ ಯೋಚಿಸುತ್ತಿರುವೆ, ಅಲ್ವಾ, ಅಯ್ಲಿ? 50 00:04:38,320 --> 00:04:42,900 ಆ ಧ್ವನಿಯನ್ನು ಬಳಸುವ ಸಮಯ ಬಂದಿದೆ. ನಿನ್ನಲ್ಲೊಂದು ಇದೆ ಅಂತ ನಂಗೊತ್ತು. 51 00:04:45,860 --> 00:04:47,070 ಅವಳ ಹಿಂದೆ ಹೋಗುವೆ. 52 00:04:51,950 --> 00:04:54,330 ಓಡಿ ಪ್ರಯೋಜನವಿಲ್ಲ. ನಾನು ನಿನ್ನ ತಲೆಯಲ್ಲಿರುವೆ. 53 00:05:02,010 --> 00:05:05,880 ನಿನ್ನ ರಕ್ಷಕ ದೇವತೆ ಅಂದುಕೋ. ಅಥವಾ ಸೈತಾನ. ನಿನ್ನ ಅಮ್ಮ. 54 00:05:09,050 --> 00:05:10,760 ನಿನ್ನನ್ನು ಸುರಕ್ಷಿತವಾಗಿಡಲು ಇರುವೆ. 55 00:05:12,680 --> 00:05:14,390 ನೀನು ಭಯ ಪಡಬೇಕಿಲ್ಲ. 56 00:05:15,640 --> 00:05:18,270 ನೀನು ಮತ್ತೆ ಎಂದಿಗೂ ಭಯ ಪಡಬೇಕಿಲ್ಲ. 57 00:05:21,440 --> 00:05:25,400 ನಿನಗೆ ಅನುಭವ ಆಗುತ್ತಿದೆ, ತಾನೇ? ಅಲ್ಲಿಯೇ ನಿನ್ನ ಎದೆಯಲ್ಲಿ? 58 00:05:28,320 --> 00:05:29,410 ಆ ಶಕ್ತಿ. 59 00:05:32,910 --> 00:05:35,910 ಉತ್ತಮ ಭವಿಷ್ಯ ನಿನ್ನ ಕೈಗಳಲ್ಲಿದೆ. 60 00:05:55,480 --> 00:05:57,980 - ರಾಕ್ಸಿ, ಇನ್ನೊಂದು ಗಂಟೆಯಲ್ಲಿ ಮದುವೆ. - ಅಯ್ಯೋ. 61 00:05:59,190 --> 00:06:00,400 {\an8}- ರಾಕ್ಸಿ. - ಥೂ. 62 00:06:03,320 --> 00:06:06,800 - ಅಳ್ತಾ ಇದ್ದೀಯಾ? - ಇಲ್ಲ. ಕಾಡಿಗೆ. 63 00:06:07,000 --> 00:06:09,850 ಅವರಂತೆಯೇ ನೀನು ಕೂಡ ಅಲ್ಲಿ ಸಲ್ಲುವೆ, ಚಿನ್ನ. 64 00:06:10,050 --> 00:06:13,240 ಅಮ್ಮ, ಅಂಥದ್ದೇನೂ ಇಲ್ಲ. ಪೆನ್ಸಿಲಿಂದ ಕಣ್ಣಿಗೆ ಚುಚ್ಚಿಕೊಂಡೆ ಅಷ್ಟೇ. 65 00:06:18,420 --> 00:06:23,450 - ಮತ್ತೆ, ಇದನ್ನು ಹಾಕಿಕೊಳ್ಳುತ್ತೀಯಾ? - ಅಮ್ಮ, ನನ್ನ ತಲೆ ತಿನ್ನಬೇಡ. 66 00:06:23,650 --> 00:06:25,910 ಕ್ಷಮಿಸು. ಅಂದವಾಗಿ ಕಾಣ್ತೀಯ. 67 00:06:26,110 --> 00:06:28,680 ನಿನ್ನ ವಯಸ್ಸಿನಲ್ಲಿ ಅಂಥದ್ದೇ ಉಡುಪು ಹೊಂದಿದ್ದೆ. 68 00:06:29,340 --> 00:06:31,850 ನನ್ನ ಎದೆ ಅದರಲ್ಲಿ ನಿನಗಿಂತ ಚೆನ್ನಾಗಿ ಕಾಣುತ್ತಿತ್ತು. 69 00:06:32,890 --> 00:06:33,890 ಸೂಳೆ. 70 00:06:35,220 --> 00:06:36,060 ಓಯ್. 71 00:06:41,560 --> 00:06:46,110 - ಒಳ್ಳೆ ಕೆಲಸ ಕೊಡಿಸಲು ಅಪ್ಪನನ್ನು ಕೇಳುತ್ತೇನೆ. - ಇವತ್ತು ಬೇಡ, ರಾಕ್ಸ್. ಎಚ್ಚರಿಕೆ. 72 00:06:46,940 --> 00:06:50,780 ಈ ಮದುವೆಯ ಮೇಲೆ ತುಂಬಾ ಅವಲಂಬಿಸಿದೆ. ಈಗಾಗಲೇ ಅವರಿಗೆ ಹೆಚ್ಚಿನ ಚಿಂತೆ ಇದೆ. 73 00:06:51,160 --> 00:06:54,160 - ಅವರೊಂದಿಗೆ ಮಾತನಾಡ್ತೀಯಾ? - ಹೌದು. 74 00:06:54,910 --> 00:06:56,660 ಕಳೆದ ವಾರ ಅವರೊಂದಿಗೆ ಪಿಂಟ್ ಕುಡಿದೆ. 75 00:06:58,830 --> 00:07:02,840 ಅಂದರೆ, ಆತ ನಿನ್ನನ್ನು ಹಾಗೆ ನೋಡುವುದಿಲ್ಲ, ಚಿನ್ನ. 76 00:07:16,390 --> 00:07:18,890 ದೊಡ್ಡದಾಗಿ ಮದುವೆಯಾಗಬೇಕು ಅಂತ ನನಗೆ ಬಹಳ ಆಸೆ ಇತ್ತು. 77 00:07:22,480 --> 00:07:24,360 ನಿನಗೆ ಯಾರೂ ಸಾಟಿ ಇಲ್ಲ, ಅಮ್ಮ. 78 00:07:36,410 --> 00:07:38,080 ನೀನು ಸುಂದರಿ. ಗೊತ್ತಲ್ವಾ? 79 00:07:48,550 --> 00:07:50,510 ನಮಗೊಂದು ತುಂಡು ಕೇಕ್ ತಗೊಂಡು ಬಾ, ಆಯ್ತಾ? 80 00:07:51,130 --> 00:07:52,680 - ಶುಭೋದಯ, ಸರ್. - ಮಿ. ಮೊಂಕ್. 81 00:08:06,820 --> 00:08:08,070 ಶುಭೋದಯ, ಮಿ. ಮೊಂಕ್. 82 00:08:10,490 --> 00:08:14,360 - ಏನದು? - ಇದನ್ನೇ ನೀವು ಕೇಳಿದ್ದು. 83 00:08:16,660 --> 00:08:18,120 ಐರ್ಲೆಂಡಿನವನಂತೆ ಕಾಣ್ತೀನಾ? 84 00:08:20,500 --> 00:08:23,250 ಇಲ್ಲ, ನಿಮ್ಮ ಪತ್ನಿ ಹೇಳಿದಂತೆಯೇ ಮಾಡಿದೆ. 85 00:08:26,000 --> 00:08:28,920 ಅಂದರೆ ನನ್ನ ಹೆಂಡತಿ ಐರ್ಲೆಂಡಿನ ಸುಳ್ಳುಗಾತಿ ಸೂಳೆ ಅಂತೀಯಾ? 86 00:08:33,010 --> 00:08:35,470 ಮಿ. ಮೊಂಕ್. ಎಲ್ಲವೂ ಆರಾಮವೇ? 87 00:08:35,720 --> 00:08:39,310 ನಾನು ಹೇಳಿದ ಕೇಕ್ ಇದಲ್ಲ. ಅದು ಹಸಿರಾಗಿದೆ. 88 00:08:41,810 --> 00:08:42,940 ಹೊಸದನ್ನು ಮಾಡಿಕೊಡಿ. 89 00:08:44,560 --> 00:08:47,860 ಕ್ಷಮಿಸಿ. ಅದು ಅಸಾಧ್ಯ, ಸರ್. 90 00:08:48,730 --> 00:08:51,240 ಇನ್ನು ಕೆಲವೇ ಗಂಟೆಗಳಲ್ಲಿ ಇದನ್ನು ಕತ್ತರಿಸಬೇಕು. 91 00:09:06,330 --> 00:09:07,380 ಮಿ. ಮೊಂಕ್, ನಾನು... 92 00:09:24,890 --> 00:09:25,980 ಹೊಸದನ್ನು ಮಾಡಿಕೊಡಿ. 93 00:09:36,700 --> 00:09:40,120 ಈಗಲೇ ವಾಪಸ್ ಬರುವೆ. ಇನ್ನೊಂದು ಕಣ್ಣಿನ ಕ್ಯಾಮೆರಾ ಆಚೆ ಮಾಡುವೆ... 94 00:10:00,180 --> 00:10:01,810 84 ಲೈಕುಗಳು 95 00:10:11,110 --> 00:10:13,940 ಅಫೀಷಿಯಲ್_ಮೇಯರ್ಮಾರ್ಗೊಟ್ 96 00:10:15,490 --> 00:10:17,650 {\an8}ಶ್ರೀಮಂತ ಮಾಟಗಾತಿ ಸುಳ್ಳುಗಾತಿ 97 00:10:22,990 --> 00:10:25,080 ಬೇಯಿಸದ ಕೋಳಿಯಂತೆ ಇದ್ದಾಳೆ ಅವಳ ಮುಖ ಕಂಡ್ರೆ ಆಗಲ್ಲ 98 00:10:25,280 --> 00:10:26,080 ಸಿಯಾಟಲ್ ಜನರಿಗೆ ಇನ್ನೂ ಚಂದದ್ದು ಬೇಕು 99 00:10:35,800 --> 00:10:39,260 ಅವಳ ಶೂಗಳ ಬೆಲೆ $800, ಇವಳೊಬ್ಬ ನಕಲಿ ಬಂಡವಾಳಶಾಹಿ ಸೂಳೆ 100 00:10:48,560 --> 00:10:49,550 ಕ್ರಿಸ್ಮಸ್ ಶುಭಾಶಯಗಳು. 101 00:10:49,740 --> 00:10:52,010 ಅಮ್ಮ, ಸಾಕು. ನಾನಿದನ್ನು ತೊಡುವುದಿಲ್ಲ ಅಂತ ಹೇಳಿದೆ. 102 00:10:52,210 --> 00:10:53,730 ಮುದ್ದಾಗಿ ಕಾಣ್ತೀಯ, ಚಿನ್ನ. 103 00:10:54,150 --> 00:10:55,260 ಸಾಧ್ಯವೇ ಇಲ್ಲ. 104 00:10:55,460 --> 00:10:57,110 ಅಮ್ಮ, ಇದನ್ನು ಪ್ರಕಟಿಸಬೇಡ. 105 00:11:07,500 --> 00:11:09,960 ಜೋಸ್, ಬೇಗ ಮಾಡು. ಇಲ್ಲದಿದ್ದರೆ ಬಸ್ ತಪ್ಪುತ್ತೆ. 106 00:11:35,940 --> 00:11:39,300 - ಹೇ, ತುಂಡೆ. - ಹೇ, ನ್ದುಡಿ. 107 00:11:39,500 --> 00:11:44,030 - ನಿನಗೆ ಹುಚ್ಚಾ, ಮಾರ್ಕೆಟ್ಟಲ್ಲಿ ಹಾಗೆ ಹೋಗಲು? - ಗೊತ್ತಲ್ಲ. ನನ್ನನ್ನು ಏನೂ ಮುಟ್ಟಲ್ಲ. 108 00:11:45,740 --> 00:11:47,870 ನ್ದುಡಿ, ಇದನ್ನು ಈಗಲ್ಲದೆ ಮತ್ತೊಮ್ಮೆ ಮಾಡಬಹುದಾ? 109 00:11:49,200 --> 00:11:51,710 ಮೊದಲ ವಾರವೇ ನಾನು ತಡವಾಗಿ ಹೋಗುವುದು ಅಪ್ಪನಿಗೆ ಬೇಡ. 110 00:11:51,910 --> 00:11:55,880 ನಿನಗೆ ಅದರ ಬಗ್ಗೆ ಹೇಳುವೆ. ಇಂಟರ್ನೆಟ್ ಹುಚ್ಚೆದ್ದು ಹೋಗುತ್ತೆ. 111 00:11:56,130 --> 00:11:57,740 - ಹೇಳ್ತಿದ್ದೇನೆ. - ಬಿಡು, ನ್ದುಡಿ. 112 00:11:57,940 --> 00:11:59,920 ನಿನ್ನನ್ನು ಮನೆಗೆ ಬಿಡುತ್ತೇನೆ. 113 00:12:00,260 --> 00:12:02,970 ಸರಿ. ಗೇಟ್ ಬಳಿ ಬಿಡು ಸಾಕು. ಇದನ್ನು ಹಿಡಿ. 114 00:12:07,390 --> 00:12:09,060 9 ರಿಂದ 5 ರವರೆಗೂ ಕಷ್ಟಪಡ್ತೀಯಾ? 115 00:12:09,640 --> 00:12:12,940 ದಯವಿಟ್ಟು. ನಮ್ಮಪ್ಪನಿಗೆ ಏನು ಬೇಕಾದರೂ ನಾನು ಪತ್ರಕರ್ತನಾಗುವೆ. 116 00:12:14,440 --> 00:12:17,720 - ಬಾ. - ಸರಿ. ಒಂದು ಸಣ್ಣ ಪ್ರಕಟಣೆ ಮಾಡೋಣ. 117 00:12:17,920 --> 00:12:20,140 - ಅಷ್ಟೇ. ನೀನು ತಯಾರಾ? - ಸರಿ. ನಾನು ತಯಾರಿದ್ದೇನೆ. 118 00:12:20,340 --> 00:12:23,240 ಸರಿ, ಲಾಗೊಸಿಗೆ ತುಂಡೆ ಓಜೋ ಮಾರ್ಗದರ್ಶನಕ್ಕೆ ಮತ್ತೆ ಸ್ವಾಗತ. 119 00:12:26,160 --> 00:12:29,980 ಇಂದು ನಮ್ಮ ಜೊತೆ ತುಂಬಾ ವಿಶೇಷವಾದ ಅತಿಥಿ ಇದ್ದಾರೆ. ಕೇಳಿ, ಕೇಳಿರಿ ಸರಿಯಾಗಿ. 120 00:12:30,180 --> 00:12:34,610 - ಈಕೆ ಲಾಗೋಸಿನ ಅಗ್ರ ಮಹಿಳಾ ಪತ್ರಕರ್ತೆ. - ನಿನ್ನನ್ನು ಮೀರಿಸುವಂತ ಪತ್ರಕರ್ತೆ. 121 00:12:34,810 --> 00:12:37,150 ನ್ದುಡಿ ಒಕಾಫೋರ್! 122 00:12:37,350 --> 00:12:40,030 ಈಕೆಯ ಬಳಿ ಪ್ರಪಂಚವನ್ನೇ ಬದಲಾಯಿಸಬಲ್ಲ ಕಥೆ ಇದೆ. 123 00:12:40,230 --> 00:12:41,300 - ಯಾವುದರ ಬಗ್ಗೆ… - ಜುಜು. 124 00:12:43,180 --> 00:12:44,540 - ನಿಜವಾಗಲೂ? - ಹೌದು. ನಿಜವಾಗಲೂ. 125 00:12:44,730 --> 00:12:46,180 - ಇಂದ್ರಜಾಲ? - ಜುಜು ಬಗ್ಗೆ. 126 00:12:48,050 --> 00:12:49,060 ನನ್ನೆಡೆ ತಿರುಗಿಸು. 127 00:12:50,140 --> 00:12:54,480 ನನಗೆ ಗೊತ್ತಿರುವ ಒಬ್ಬ ಹುಡುಗಿಯ ಸಂಬಂಧಿ ಅವಳನ್ನು ಜುಜು ಸಭೆಗೆ ಕರೆದಳು. 128 00:12:54,690 --> 00:12:57,510 ತಮ್ಮ ಶಕ್ತಿಗಳನ್ನು ಎಬ್ಬಿಸಲು ಮಹಿಳೆಯರಿಗಾಗಿ ಮಾತ್ರ. 129 00:12:57,710 --> 00:12:59,050 - ಅವರ ಶಕ್ತಿಗಳು. - ಗೊತ್ತು, ಅಲ್ವಾ? 130 00:12:59,250 --> 00:13:03,760 ಇದರಲ್ಲೇನೋ ಮೋಸ ಇದೆ. ನನ್ನ ಆಲೋಚನೆ, ನಾನು ಒಳಗೆ ಹೋಗುವೆ, ನೀನು ಅವಿತು ಚಿತ್ರೀಕರಿಸು. 131 00:13:03,960 --> 00:13:05,410 - ಹಾಂ. - ಪ್ರಬಂಧದಲ್ಲಿ ಬರೆಯುವೆ. 132 00:13:05,700 --> 00:13:08,120 ನೀನು ವಿಡಿಯೋ ಪ್ರಕಟಿಸು, ಅಪರಾಧಿಗಳನ್ನು ನಾಶ ಮಾಡೋಣ. 133 00:13:10,330 --> 00:13:12,770 - ಹೇಳು, ತುಂಡೆ. ಪ್ರಕಟಿಸಲು ನೀನು ತಡೆಯಲಾರೆ. - ಹಾಂ. 134 00:13:12,970 --> 00:13:14,650 - ಅಯ್ಯೋ. ಆಗಲ್ಲ. - ಯಾರಿಗೆ ಸಂದೇಶ? 135 00:13:14,850 --> 00:13:15,590 ನಿನ್ನ ಮನೆಯ ಬಳಿ ಕಾಯುತ್ತಿರುವೆ ಬರುತ್ತಿದ್ದೇನೆ 136 00:13:15,790 --> 00:13:18,000 ಟಿಂಡರ್ರಾ? ಟಿಂಡರ್ ಮಾಡ್ತಿದ್ದೀಯಲ್ವಾ? 137 00:13:29,010 --> 00:13:30,180 ಏನೋ ಯೋಜನೆ ಮಾಡಿದ್ದೀಯಾ. 138 00:13:38,400 --> 00:13:42,860 - ನೀನು ಮರಳಿ ಬಂದಾಗ ಕರೆ ಮಾಡು? - ನೋಡ್ತೀನಿ. ನನಗೆ ಸುಸ್ತಾಗಿರುತ್ತೆ. 139 00:13:43,570 --> 00:13:44,900 ಪತ್ರಕರ್ತ ಸಾಹೇಬ. 140 00:13:49,120 --> 00:13:51,990 - ಬೇಗ ಬಂದಿದ್ದೀಯಾ. - ತಡವಾಗಿ ಬಂದಿದ್ದೀಯಾ. 141 00:14:11,350 --> 00:14:13,720 ಗೊತ್ತಾ, ನ್ದುಡಿ ಇನ್ನೂ ನಿನ್ನನ್ನ ಇಷ್ಟಪಡ್ತಾಳೆ. 142 00:14:19,150 --> 00:14:21,060 ಅದು ಒಂದೇ ಸಲ ನಡೆದದ್ದು. 143 00:14:26,740 --> 00:14:31,950 "ಒಂದೇ ಸಲ ನಡೆದದ್ದು," ಅಂತಾನೆ. ಹೃದಯ ತುಂಡು ಮಾಡುವವನು ನೀನು, ತುಂಡೆ. 144 00:14:34,830 --> 00:14:35,870 ಸರಿ. 145 00:14:37,330 --> 00:14:38,330 ನಿರೂಪಿಸು. 146 00:15:37,810 --> 00:15:39,100 ಒಂದು ನಿಮಿಷ ಬಂದೆ. 147 00:15:47,530 --> 00:15:49,570 ಏನೋ ಅದು? 148 00:15:56,410 --> 00:15:57,580 ಛೆ. 149 00:16:08,670 --> 00:16:12,010 ಅಡುನೋಲಾ ನಾನು ಹೋಗಬೇಕಾಯಿತು 150 00:16:15,010 --> 00:16:17,310 ಅಡುನೋಲಾ. ಅಡುನೋಲಾ. 151 00:16:28,610 --> 00:16:29,480 ಹೇ, ರಾಕ್ಸ್. 152 00:16:31,110 --> 00:16:32,110 ಸರಿ. ಆಯಿತು. 153 00:16:36,570 --> 00:16:38,730 - ಕೇಳಿ. ಟೇಬಲ್ 20 ಎಲ್ಲಿದೆ? - ಹಿಂದೆ. 154 00:16:38,930 --> 00:16:40,500 - ಎಲ್ಲಿ? - ಶೌಚಾಲಯದ ಪಕ್ಕ. 155 00:16:45,040 --> 00:16:47,840 ಸ್ವಲ್ಪ ಕೇಳಿ. ಸ್ವಲ್ಪ ಕೇಳಿ. 156 00:16:49,750 --> 00:16:50,590 ಕ್ಷಮಿಸಿ. 157 00:16:54,720 --> 00:16:57,140 ಸ್ವಲ್ಪ ಕೇಳಿ. ನಮ್ಮ ಚಿತ್ರ ತೆಗೆಯುತ್ತೀರಾ? 158 00:17:06,900 --> 00:17:08,440 - ಸುಂದರವಾಗಿದ್ದೀರಿ. - ಧನ್ಯವಾದ. 159 00:17:10,530 --> 00:17:13,700 - ರಾಕ್ಸ್, ರಾಕ್ಸ್. ನುಗ್ಗಬೇಡ. - ಮುಚ್ಕೊಂಡು ಹೋಗೋ, ಟೆರ್ರಿ. 160 00:17:18,910 --> 00:17:21,040 ರಿಕ್ಕಿ ಅತ್ಯಾಚಾರಿಯಂತೆ ಯಾಕೆ ಬೆವರುತ್ತಿದ್ದಾನೆ? 161 00:17:21,580 --> 00:17:24,620 ಬೆಳಿಗ್ಗೆ ಅವನ ಕಾಫಿ ಒಳಗೆ ಭೇದಿ ಮಾತ್ರೆ ಹಾಕಿದೆ. 162 00:17:29,790 --> 00:17:30,950 - ಅಮೆನ್. - ಅಮೆನ್. 163 00:17:31,150 --> 00:17:32,090 ಅಮೆನ್. 164 00:17:43,100 --> 00:17:44,640 ಏನೋ ಹಾಕ್ಕೊಂಡಿದ್ದೀಯಾ? 165 00:17:46,770 --> 00:17:48,610 ಸಾಮಾನಿನ ಮೂಟೆ ಇದ್ದಂಗಿದ್ದೀಯ, ದರ್ರೆಲ್. 166 00:17:59,370 --> 00:18:02,200 - ಉಡುಗೆಯಲ್ಲಿ ರಾಕ್ಸ್. ಎಲ್ಲಿಂದ ಕದ್ದೆ? - ನಿನ್ನ ಕಪಾಟಿನಿಂದ. 167 00:18:03,160 --> 00:18:05,160 ನೃತ್ಯದ ರಂಗ ಸಕ್ಕತ್ತಾಗಿದೆ, ಅಪ್ಪ. 168 00:18:05,580 --> 00:18:07,420 - ಹಲೋ, ಮುದ್ದು. - ಚೆನ್ನಾಗಿ ಕಾಣ್ತೀಯ. 169 00:18:08,040 --> 00:18:10,670 ಬೈನಾಕುಲರ್ ಇಲ್ಲದೆ ನನ್ನ ಮೇಜಿನಿಂದ ನೀನು ಕಾಣಲೇ ಇಲ್ಲ. 170 00:18:11,000 --> 00:18:15,050 ನೀನು ಕುರ್ಚಿಯಲ್ಲಿ ಕೂತಿದ್ದು ನೋಡಲು ಚೆಂದ. ಇಲ್ಲದಿದ್ದರೆ £200 ಊಟ ಪೋಲಾಗುತ್ತಿತ್ತು. 171 00:18:15,250 --> 00:18:18,590 - ಹಾಂ, ರುಚಿಯಾಗಿದೆ. - ಸರಿ, ಪುಟ್ಟಿ. ಬಾ. 172 00:18:19,180 --> 00:18:22,350 - ನಾವಿಬ್ಬರೂ ಟೋಸ್ಟ್ ಮಾಡೋಣವೇ? - ನನಗೂ ಪಾನೀಯ ಇದ್ದರೆ ಚೆನ್ನ. 173 00:18:30,980 --> 00:18:31,980 ಏನು? 174 00:18:40,870 --> 00:18:44,540 ಅದೇನು ಕತೆಗಳಲ್ಲಿರೋ ಖುಪ್ಪಾ ಥರ ಇದೆ? ನಿಜವಾಗಲೂ, ನಮಗೆ ವಯಸ್ಸು 12 ಏನು? 175 00:18:44,740 --> 00:18:46,330 ಅದು ಬಾರ್ಬರಾಳ ಉಪಾಯ, ನನ್ನದಲ್ಲ. 176 00:18:47,460 --> 00:18:50,360 ನೀನವಳಿಗೆ ಡಿಸ್ನಿ ರಾಜಕುಮಾರಿಯ ಜೀವನ ರೂಢಿಯಾಗುವಂತೆ ಮಾಡಿದೆ. 177 00:18:50,560 --> 00:18:51,960 ಅದು ನಿನ್ನದೇ ತಪ್ಪು. 178 00:18:52,290 --> 00:18:54,500 ಈ ದೊಡ್ಡ ಹುಟ್ಟುಹಬ್ಬದ ಬಗ್ಗೆ ಏನು ಮಾಡೋಣ? 179 00:18:55,170 --> 00:18:57,380 ನಿನ್ನ 18ನೆಯದಕ್ಕೆ ಏನಾದರೂ ವಿಶೇಷವಾಗಿ ಮಾಡಬೇಕು. 180 00:18:58,340 --> 00:19:01,970 - ಬಾಲ್ ರೂಮ್ ಕೊಡಿಸುತ್ತೀಯಾ, ಅಪ್ಪ? - ಇನ್ನು ಸಾಕು, ರಾಕ್ಸ್. 181 00:19:04,640 --> 00:19:07,640 - ಆದರೂ ನನಗೆ ಬೇಕಿರುವುದು ಒಂದಿದೆ. - ಏನದು, ಪುಟ್ಟಿ? 182 00:19:09,730 --> 00:19:11,060 ನಾನು ನಿನಗೆ ಕೆಲಸ ಮಾಡಬೇಕು. 183 00:19:14,400 --> 00:19:18,110 ನಿನಗಾಗಿ ಕೆಲಸ ಮಾಡಲು ಬಿಡು. ಟೆರ್ರಿಯನ್ನು ಮೀರಿಸಬಲ್ಲೆ ಅಂತ ನಿನಗೆ ಗೊತ್ತು. 184 00:19:19,240 --> 00:19:20,780 ದರ್ರೆಲ್ಗಿಂತ ಗಟ್ಟಿಗಿತ್ತಿ ನಾನು. 185 00:19:30,580 --> 00:19:33,960 ದರ್ರೆಲ್ ತಲೆಯನ್ನು ತಣ್ಣಗಿರಿಸಿಕೊಳ್ಳುತ್ತಾನೆ. 186 00:19:35,420 --> 00:19:38,880 ನೀನು ತಾಳ್ಮೆ ಕಳೆದುಕೊಳ್ಳುವೆ, ರಾಕ್ಸ್. ಅದು ಸರಿಯಲ್ಲ. 187 00:19:41,930 --> 00:19:43,390 ನೀನು ತುಂಬಾ ಭಾವನಾತ್ಮಕಳು. 188 00:19:46,180 --> 00:19:49,520 ಖಾಲಿ ಇರುವ ಸ್ಥಾನ ನನ್ನ ಬಳಿ ಇದೆ. ಅದು ಸ್ಪಾ. 189 00:19:50,980 --> 00:19:51,980 ಕಾಟ್ಸ್ವೋಲ್ಡ್ಸಲ್ಲಿ. 190 00:19:53,940 --> 00:19:54,980 ಕಾಟ್ಸ್ವೋಲ್ಡ್ಸ್? 191 00:19:55,900 --> 00:19:58,990 - ಅಂದರೆ, ಲಂಡನ್ ಅಲ್ವಾ? - ಹೌದು. 192 00:20:00,240 --> 00:20:03,310 ಆರು ತಿಂಗಳು, ಒಂದು ವರ್ಷ, ದೇಶದ ಅತ್ಯಂತ ಸುಂದರ ಭಾಗದಲ್ಲಿ. 193 00:20:03,510 --> 00:20:04,990 - ಒಂದು ವರ್ಷವೇ? - ನಿರೂಪಿಸಿಕೋ. 194 00:20:05,580 --> 00:20:07,410 ಸಿರಿವಂತಳಾಗು. ಒಳ್ಳೆ ಶ್ವಾಸಕೋಶಗಳು. 195 00:20:08,040 --> 00:20:10,580 ತಮಾಷೆಯ ಮಾತನಾಡುವ ಪ್ರಿಯಕರನನ್ನು ಪಡೆದುಕೊಳ್ಳಬಹುದು. 196 00:20:11,750 --> 00:20:13,540 ಅಥವಾ ಪ್ರಿಯತಮೆಯನ್ನು. ಏನಾದರೂ. 197 00:20:19,300 --> 00:20:20,470 ಹಾಂ. ಧನ್ಯವಾದ, ಅಪ್ಪ. 198 00:20:22,220 --> 00:20:26,160 ಭಾಷಣದ ಸಮಯವಾಗಿದೆ. ನಿಮ್ಮಪ್ಪ ನಗೆಪಾಟಲಾಗುವುದನ್ನು ನೋಡು ಬಾ. 199 00:20:26,360 --> 00:20:27,510 ಹಾಂ, ಒಂದು ನಿಮಿಷ. 200 00:20:31,980 --> 00:20:35,480 ಈ ಮಾತನ್ನು ಮತ್ತೆ ಮುಂದುವರಿಸೋಣ. ಎಲ್ಲಿಗೂ ಹೋಗಬೇಡ. 201 00:20:47,950 --> 00:20:52,310 "ಹಶೇಮ್ ಅಬ್ರಹಾಮಿಗೆ ಹೇಳಿದನು, 'ನಾನು ತೋರಿಸುವ ಜಾಗಗಳಿಗೆ ಹೋಗು 202 00:20:52,510 --> 00:20:56,290 "'ಮತ್ತು ನಾನು ನಿನಗೆ ಆಕಾಶದಲ್ಲಿರುವ ನಕ್ಷತ್ರಗಳಷ್ಟು ವಂಶಸ್ಥರನ್ನು ಕೊಡುವೆ, 203 00:20:56,710 --> 00:20:58,740 "'ಮತ್ತು ಅವರಿಗೆ ಈ ಭೂಮಿಯನ್ನು ಕೊಡುವೆ. 204 00:20:58,940 --> 00:21:02,490 "'ಮತ್ತು ಪ್ರಪಂಚದ ಜನರು ನಿಮ್ಮ ವಂಶಸ್ಥರಿಂದ ಧನ್ಯರಾಗುತ್ತಾರೆ.'" 205 00:21:02,690 --> 00:21:06,720 ನನಗೆ ಮೂವರು ಸುಂದರ ಗಂಡುಮಕ್ಕಳಿದ್ದಾರೆ, ಮತ್ತು ಈಗ… 206 00:21:08,930 --> 00:21:09,930 ಈಗ… 207 00:21:13,140 --> 00:21:16,770 ಈಗ, ಲಿಯಾಟಲ್ಲಿ, ನನ್ನವಳು ಎನ್ನಬಹುದಾದ ನನ್ನ ಮಗಳಿದ್ದಾಳೆ. 208 00:21:17,810 --> 00:21:18,650 ಎಷ್ಟು ಚಂದ. 209 00:21:52,720 --> 00:21:54,480 ನಾನು ಬರ್ನಿ ಮೊಂಕ್ ಅವರ ಮಗಳು. 210 00:22:24,050 --> 00:22:28,130 ಹೇ, ಜೋಸ್. ಈಗಾಗಲೇ ಶುಕ್ರವಾರ ಆಗಿಲ್ಲದಿದ್ದರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೆ. 211 00:22:29,260 --> 00:22:31,660 - ನಿನ್ನ ಕನ್ನಡಕಕ್ಕೆ ಏನಾಯ್ತು? - ಹೋಗಬಹುದು. 212 00:22:31,860 --> 00:22:34,220 - ಅದರ ಮೇಲೆ ಕುಳಿತೆ. - ಸರಿ. ಮುಂದೆ ಹೋಗಿ, ದಯವಿಟ್ಟು. 213 00:22:36,680 --> 00:22:37,730 ಮೇಲಕ್ಕೆ ಹೋಗಿ. 214 00:22:40,770 --> 00:22:42,920 ಏನಿದು ವಿಚಿತ್ರ? ಇದು ಮತ್ತೆ ಕೆಟ್ಟಿದೆ. 215 00:22:43,120 --> 00:22:45,110 - ಸರಿ ಬಿಡು. - ಒಂದು ಕ್ಷಣ ಇರಮ್ಮ. 216 00:22:48,400 --> 00:22:50,990 - ನನ್ನ ಬೋರ್ಡ್ ತಗೊಳ್ಳಲಾ? ಧನ್ಯವಾದ. - ಹಾಂ. ಹೋಗಬಹುದು. 217 00:22:51,280 --> 00:22:52,120 ಮುಂದಿನವರು. 218 00:23:05,840 --> 00:23:06,710 ಆರಾಮ ಇದ್ದೀಯಾ? 219 00:23:09,970 --> 00:23:12,510 ಹಾಂ. ಹಾಂ. 220 00:23:16,560 --> 00:23:19,060 ನಿನ್ನ ಸ್ವರೂಪದಲ್ಲೇ ನಿನಗೆ ವಿಚಿತ್ರ ಅನಿಸುವ 221 00:23:20,520 --> 00:23:23,230 ದಿನಗಳು ಎಂದಾದರೂ ಅನುಭವಿಸಿರುವೆಯಾ? 222 00:23:25,190 --> 00:23:28,240 ಹಾಂ. ಹಾಂ. ಅಂದರೆ, ಪ್ರತಿ ದಿನ. 223 00:23:34,830 --> 00:23:38,690 ಅದು ಅನುಭವಕ್ಕೆ ಬಂತಾ? ಅಂದರೆ, ಅದು ಅತ್ಯಂತ ಸ್ಥಿರ ವಿದ್ಯುದಾಘಾತ. 224 00:23:38,890 --> 00:23:42,380 ಹಾಂ, ಗೊತ್ತಾಯ್ತು. ವಿಚಿತ್ರ. ಮತ್ತೆ ಸಿಗ್ತೀನಿ, ಆಯ್ತಾ? 225 00:23:56,560 --> 00:23:58,100 ಅದೇನು ಅಂತ ನಂಗೊತ್ತು. 226 00:24:00,520 --> 00:24:03,480 - ಏನು? - ಆಮೇಲೆ ಏನು ಮಾಡುತ್ತಿರುವೆ? 227 00:24:06,900 --> 00:24:07,900 ಏನಿಲ್ಲ. 228 00:24:13,990 --> 00:24:16,030 ಅಯ್ಲಿ, ಕನಸಿನ ಲೋಕದಿಂದ ಹೊರಗೆ ಬಾ. 229 00:24:16,910 --> 00:24:19,540 ಐಸ್ ಕ್ರೀಮ್ ನಿನ್ನ ಕಾಲಿನ ಮೇಲೆ ಸೋರುತ್ತಿದೆ. 230 00:24:22,120 --> 00:24:25,380 ತಗೋ. ಮರೆಗುಳಿ ಹುಡುಗಿ. 231 00:24:28,090 --> 00:24:30,130 ಬೂಮ್, ಬೂಮ್, ಬೂಮ್ 232 00:24:31,010 --> 00:24:33,180 ಎಗರು, ಎಗರು ಹೇ, ಜಾರು, ಜಾರು 233 00:24:35,890 --> 00:24:37,970 ಒಂದು ಕಪ್ ಕಾಫಿಗೆ ಉಲ್ಲಾಸ ಉಕ್ಕುತ್ತಿದೆ 234 00:24:56,530 --> 00:25:00,120 ಅದು ನಿನಗೆ ಬೇಕಾದಾಗ ಬರುತ್ತದೆ. ನೀನೇ ನೋಡುವೆಯಂತೆ. 235 00:25:05,330 --> 00:25:06,210 ಹಲೋ. 236 00:25:20,560 --> 00:25:21,720 ಈಗಲೇ ಅಲ್ಲ, ಮಗು. 237 00:25:26,100 --> 00:25:29,070 ಸರಿಯಾದ ಸಮಯವಾದಾಗ, ನಿನಗೇ ತಿಳಿಯುತ್ತದೆ. 238 00:25:32,900 --> 00:25:35,530 ಉತ್ತಮ ಭವಿಷ್ಯ ನಿನ್ನ ಕೈಗಳಲ್ಲಿದೆ. 239 00:25:37,740 --> 00:25:38,660 ಬರ್ತಿದ್ದೇನೆ. 240 00:25:48,670 --> 00:25:49,710 ಆಮೇಲೆ ಸಿಗೋಣ. 241 00:26:07,850 --> 00:26:11,980 ಬಾಯಿ ತೆರೆದು ಹೇಳು. ಹೇಳು, ಅಯ್ಲಿ. 242 00:26:12,530 --> 00:26:13,530 ತಗೊಳ್ಳಿ. 243 00:26:16,900 --> 00:26:17,950 ಇಲ್ಲ, ಪರವಾಗಿಲ್ಲ. 244 00:26:20,450 --> 00:26:21,530 ನನಗೆ ಮಾಂಸ ಇಷ್ಟವಿಲ್ಲ. 245 00:26:26,080 --> 00:26:29,580 - ಆದರೆ ಯಾವಾಗಲೂ ತಿಂತೀಯಾ. - ನೀವು ಕೇಳಿಯೇ ಇಲ್ಲ. 246 00:26:32,040 --> 00:26:34,460 ಅರೆ, ಇದೇನಪ್ಪಾ ತಕ್ಷಣ ಇಷ್ಟೊಂದು ಮಾತನಾಡುತ್ತಿದ್ದಾಳೆ. 247 00:26:38,050 --> 00:26:42,010 ಒಂದು ಜೀವಿಯ ಸಾವಿನಿಂದ ನಾನೆಂದಿಗೂ ಸಂತೋಷ ಪಡೆಯುವವಳಲ್ಲ. 248 00:26:44,350 --> 00:26:49,650 ಸರಿ, ಆ್ಯಲಿಸನ್, ನಿನ್ನ ತಾಯಿಯ ಬಳಿ ಹಾಗೆ ಮಾತನಾಡಬೇಡ. 249 00:26:50,980 --> 00:26:55,190 ಆಕೆ ನನ್ನ ತಾಯಿ ಅಲ್ಲ. ನೀವು ನನ್ನ ತಂದೆಯಲ್ಲ. 250 00:26:58,240 --> 00:27:01,280 ದಯವಿಟ್ಟು, ಚಿನ್ನ. ಸುಮ್ಮನೆ ಮಾಂಸ ತಿನ್ನು. 251 00:27:07,120 --> 00:27:08,250 ನಿನ್ನ ಸ್ಥಾನವನ್ನು ಅರಿ. 252 00:27:13,790 --> 00:27:15,630 ಇದು ನನ್ನ ಸ್ಥಾನ ಆಗಿಯೇ ಇಲ್ಲ. 253 00:27:19,590 --> 00:27:21,300 ಇದು ನನ್ನ ಸ್ಥಾನ ಆಗಿಯೇ ಇಲ್ಲ. 254 00:27:41,660 --> 00:27:42,910 ಭಯಪಡಬೇಡ. 255 00:27:55,250 --> 00:27:58,130 ಏನು ಮಾಡಬೇಕಂತ ನಿನಗೆ ಗೊತ್ತಿದೆ. ನೀನು ಇದನ್ನು ಮಾಡಬಲ್ಲೆ. 256 00:28:09,930 --> 00:28:11,270 ಹೋಗಿ ಅವಳನ್ನು ಮಾತನಾಡುವೆ. 257 00:28:13,350 --> 00:28:16,270 - ಊಟವನ್ನು ಮರಳಿ ಓವನ್ ಒಳಗೆ ಇಡುತ್ತೇನೆ. - ಬೇಡ. 258 00:28:18,820 --> 00:28:20,070 ನನಗೊಂದೇ ನಿಮಿಷ ಸಾಕು. 259 00:28:21,860 --> 00:28:27,410 ಅಲ್ಲಿ ಎಷ್ಟು ಹೆಣ್ಣು ಮಕ್ಕಳು ಇದ್ದರು? ಎಷ್ಟು ಎರಡು ಜಡೆಗಳು? 260 00:28:29,950 --> 00:28:31,160 ಮತ್ತೆ ಎಂದಿಗೂ ಇಲ್ಲ. 261 00:28:37,550 --> 00:28:39,380 ಮತ್ತೆ ಎಂದೆಂದಿಗೂ ಇಲ್ಲ. 262 00:29:00,070 --> 00:29:01,570 ಈಗಲೇ ಕೊನೆಯಾಗುತ್ತದೆ. 263 00:29:12,120 --> 00:29:16,670 ನೀನೆಂಥ ಹುಡುಗಿ ಅಂತ ನನಗೆ ಗೊತ್ತು, ಆ್ಯಲಿಸನ್. 264 00:30:09,300 --> 00:30:10,760 ಅವನನ್ನು ಮುಗಿಸು, ಚಿನ್ನ. 265 00:30:16,390 --> 00:30:17,310 ದಯವಿಟ್ಟು. 266 00:30:52,260 --> 00:30:54,680 ಹೋಗುವ ಸಮಯವಾಗಿದೆ, ಅಯ್ಲಿ. ಓಡು. 267 00:30:57,140 --> 00:30:59,190 ಅದನ್ನು ತಗೋ. ನಿನಗೆ ಬೇಕಾಗುತ್ತದೆ. 268 00:31:18,120 --> 00:31:21,250 ಕ್ಲೈಡ್? ಕ್ಲೈಡ್? 269 00:31:27,300 --> 00:31:29,430 'ವಿದ್ಯುದಾಘಾತದ ಕೈಗಳು' + 'ಕುಂಡಿಗೆ ವಿದ್ಯುತ್' 270 00:31:33,260 --> 00:31:34,210 ಅವರಿಗೆ ನೀವು ತಿಳಿಯಬಾರದ ಸಣ್ಣಗಾಗುವ ಯಂತ್ರ 271 00:31:34,400 --> 00:31:35,640 ಈ ಎಲೆಕ್ಟ್ರೋಡನ್ನು ನನ್ನ ಕುಂಡಿ ಒಳಗೆ ತೂರಿಸಬೇಕಾ? 272 00:31:50,780 --> 00:31:52,180 ತುಂಡೆ, ನಾನೀಗ ಮಾತನಾಡಲಾರೆ. 273 00:31:52,380 --> 00:31:55,690 ನ್ದುಡಿ, ನೀನಿನ್ನೂ ಆ ಜುಜು ಸಭೆಯಲ್ಲಿದ್ದೀಯಾ? ಅದೆಲ್ಲಿದೆ? 274 00:31:55,880 --> 00:31:58,620 ನಿನಗೆ ಬರುವುದು ಬೇಕಿರಲಿಲ್ಲ. ಇದು ನನ್ನ ಕಥೆ. 275 00:31:58,830 --> 00:31:59,660 ಇಲ್ಲ, ಇಲ್ಲ, ಇಲ್ಲ. 276 00:32:06,500 --> 00:32:08,880 ನಡಿ. ಹೋಗು. 277 00:32:11,630 --> 00:32:14,290 ದಾಮಿ, ನಿನಗೆ ಜುಜು ಸಭೆಗಳ ಬಗ್ಗೆ ಗೊತ್ತಾ? 278 00:32:14,490 --> 00:32:16,710 ಕೆಟ್ಟ ಸುದ್ದಿ, ತುಂಡೆ. ಮಾಟವು ಹುಚ್ಚು ಸಹವಾಸ. 279 00:32:16,910 --> 00:32:19,460 ಇಬಿಸಿಯ ಪಾಳು ಬಿದ್ದ ಮನೆಗಳಲ್ಲಿ ಒಂದರ ಬಗ್ಗೆ ಕೇಳಿದ್ದೆ. 280 00:32:19,660 --> 00:32:21,980 - ಸರಿ. ಧನ್ಯವಾದ. - ನಾನು ಎಚ್ಚರಿಸಲಿಲ್ಲ ಅನ್ನಬೇಡ. 281 00:32:26,020 --> 00:32:28,720 ಇಲ್ಲ! ನಾನಿಲ್ಲಿ ನಿನಗೆ ಎಲ್ಲಿಗೂ ದಾರಿ ತೋರಿಸುವುದಿಲ್ಲ. 282 00:32:28,920 --> 00:32:30,430 ಈಗಲೇ ಮನೆಗೆ ಹೋಗು. 283 00:32:30,630 --> 00:32:32,930 ಈ ಜಾಗಕ್ಕೆ ತೊಂದರೆಯನ್ನು ಹುಡುಕಿಕೊಂಡು ಬಂದಿದ್ದೀಯಾ. 284 00:32:33,130 --> 00:32:35,200 ಹೋಗು ಮನೆಗೆ ಈಗ! ಹೋಗು ಮನೆಗೆ! 285 00:32:35,490 --> 00:32:37,200 - ಧನ್ಯವಾದ, ಅಮ್ಮ. - ವಿದಾಯ! 286 00:32:54,090 --> 00:32:56,010 ನಿನ್ನ ಆರೋಗ್ಯ ಕೆಡುತ್ತೆ. 287 00:32:56,930 --> 00:32:58,850 ಇಲ್ಲ, ಮೊಂಕರ ಕರುಳು ಉಕ್ಕಿನದ್ದು. 288 00:33:00,020 --> 00:33:03,460 - ನೀನು ಮೊಂಕ್ ಸಂಬಂಧಿಯೇ? - ನಾನು ಬರ್ನಿ ಮೊಂಕ್ ಅವರ ಮಗಳು. 289 00:33:03,660 --> 00:33:05,730 ಬರ್ನಿ ಮೊಂಕಿಗೆ ಮಗಳಿದ್ದಾಳೆ ಅಂತ ಗೊತ್ತಿರಲಿಲ್ಲ. 290 00:33:08,820 --> 00:33:11,820 ಯಾರಿಗೂ ಗೊತ್ತಿಲ್ಲ. ಅದರಲ್ಲೂ ಆತ ಮಾಡಿದ ಭಾಷಣದ ನಂತರ. 291 00:33:12,070 --> 00:33:16,850 - ಮತ್ತೆ, ರಿಕ್ಕಿ... - ನನ್ನ ಅಣ್ಣ. ಅಥವಾ ಮಲ ಸಹೋದರ, ಏನೋ. 292 00:33:17,050 --> 00:33:19,980 ಸಿಂಹಾಸನದ ಅಧಿಪತಿ. ತನ್ನ ಕುಂಡಿಯಿಂದ ಸೂರ್ಯ ಉರಿಯುತ್ತಾನೆ ಅಂತಾನೆ. 293 00:33:20,180 --> 00:33:22,690 ಅವನೊಬ್ಬ ಬೇವರ್ಸಿ. ಅವರೆಲ್ಲರೂ ಬೇವರ್ಸಿಗಳೇ. 294 00:33:22,890 --> 00:33:25,400 ಟೆರ್ರಿ ಯಾವಾಗಲೂ ನನ್ನಿಂದ ಡ್ರಗ್ಸ್ ಪಡೆಯಲು ನೋಡ್ತಾನೆ. 295 00:33:25,600 --> 00:33:28,460 ದರ್ರೆಲ್ ಒಬ್ಬ ಶ್ರೀಮಂತ ಬೇವರ್ಸಿ. ಸೋಮಾರಿ ನನ್ಮಗ. 296 00:33:30,000 --> 00:33:32,280 ಬ್ಯಾಬ್ಸ್ ಗರ್ಭಿಣಿಯಾಗಿದ್ದಾಗ ಅಪ್ಪ ಅಮ್ಮ ಸೇರಿದರು. 297 00:33:32,480 --> 00:33:35,120 ನಮ್ಮದು ಒಂದೇ ವಯಸ್ಸು, ಅದಕ್ಕೆ ಬ್ಯಾಬ್ಸಿಗೆ ನಾನು ಬೇಡ. 298 00:33:35,320 --> 00:33:38,640 ನಾನು ಕುಟುಂಬದಲ್ಲಿರುವುದು ಬೇಡ. ಅವಳೇ ಎಲ್ಲರಿಗಿಂತ ದೊಡ್ಡ ಬೇವರ್ಸಿ. 299 00:33:41,520 --> 00:33:44,600 ಅಯ್ಯೋ. ಅದನ್ನು ಹೇಗೆ ಮಾಡಿದೆ? 300 00:33:46,400 --> 00:33:47,400 ನಂಗೊತ್ತಿಲ್ಲ. 301 00:33:53,030 --> 00:33:54,030 ನಾನು ಹೋಗಬೇಕು. 302 00:34:09,250 --> 00:34:10,250 ಹೇ. 303 00:34:10,590 --> 00:34:11,630 ಕ್ರಿಸ್, ಬಾ ಇಲ್ಲಿ. 304 00:34:20,220 --> 00:34:22,390 - ನಿಮ್ಮಮ್ಮನಿಗೆ ಹೇಳಲಿಲ್ಲ, ತಾನೇ? - ಖಂಡಿತ ಇಲ್ಲ. 305 00:34:23,220 --> 00:34:25,430 ಮತ್ತೆ, ನಿನಗಿದು ಎಷ್ಟು ಕಾಲದಿಂದ ಆಗುತ್ತಿದೆ? 306 00:34:27,100 --> 00:34:30,060 ಅಂದರೆ, ಇಂದಿನಿಂದ. ನಿನಗೆ? 307 00:34:32,570 --> 00:34:35,110 - ಎರಡು ವಾರಗಳಿಂದ. - ಅಯ್ಯೋ. 308 00:34:36,110 --> 00:34:39,160 ನನಗೆ ಚೆನ್ನಾಗಿ ಅನಿಸುತ್ತಿದೆ. ಬಲಶಾಲಿಯಾಗಿ. 309 00:34:41,990 --> 00:34:43,620 ಇದರಿಂದ ನಾನು ಬೆಂಕಿ ಉರಿಸಬಲ್ಲೆ. 310 00:34:47,080 --> 00:34:48,460 ಏನು ಇದು? 311 00:34:52,040 --> 00:34:55,630 ಗೊತ್ತಿಲ್ಲ. ಅಂದರೆ, ಯಾರಿಗೆ ಏನಾಗಬೇಕು? ಇದು ನಮ್ಮದು. 312 00:34:59,010 --> 00:35:02,300 ಮತ್ತೆ ಇದು ಸುಮ್ಮನೆ ಆಗುತ್ತಾ ಅಥವಾ ನೀನು ನಿಯಂತ್ರಿಸಬಲ್ಲೆಯಾ? 313 00:35:33,790 --> 00:35:36,880 - ನಾನು ಪ್ರಯತ್ನಿಸುವಾಗ ಬರಲ್ಲ. - ಅತಿಯಾಗಿ ಆಲೋಚಿಸುತ್ತಿರುವೆ. 314 00:35:41,130 --> 00:35:42,010 ಸುಮ್ಮನೆ ಅನುಭವಿಸು. 315 00:36:40,530 --> 00:36:42,610 - ನೀನೇನಾ, ರಾಕ್ಸ್? - ಅಲ್ಲ. 316 00:36:44,030 --> 00:36:47,240 - ನಿನ್ನ ಗಂಡ, ಜಾರ್ಜ್ ಕ್ಲೂನೀ. - ಮನೆಗೆ ಬೇಗ ಬಂದಿರುವೆ. 317 00:36:47,780 --> 00:36:50,660 - ಮತ್ತೆ, ಹೇಗಿತ್ತು? - ಪರವಾಗಿಲ್ಲ. 318 00:36:54,290 --> 00:36:57,440 ಒಳ್ಳೆ ಕಲಾತ್ಮಕವಾಗಿದೆ. ಇದರಲ್ಲಿ ಹಾಲು ಇಲ್ಲ, ತಾನೇ? 319 00:36:57,640 --> 00:36:59,380 - ಕೋಶರ್, ತಾನೇ? - ಚಿಯರ್ಸ್. 320 00:36:59,920 --> 00:37:03,220 ಮತ್ತೆ, ಎಲ್ಲವನ್ನೂ ಹೇಳು. ಅವಳ ಬಟ್ಟೆ ಹೇಗಿತ್ತು? 321 00:37:03,760 --> 00:37:05,510 ಅವನು ಹೇಗಿದ್ದ? ಯಾರು ಬಂದಿದ್ದರು? 322 00:37:05,890 --> 00:37:08,720 ಬೆಳ್ಳಗೆ. ಪೆದ್ದಗೆ. 323 00:37:09,850 --> 00:37:12,600 - ಮೂರ್ಖರು. - ಮತ್ತೆ ಬಾಲ್ ರೂಮ್ ಸಂಗತಿ ಏನು? 324 00:37:12,940 --> 00:37:16,550 ಮತ್ತೆ ಬಚ್ಚಲುಗಳು? ಹೇಳು. ಏನಾದರೂ ಹೇಳು. 325 00:37:16,750 --> 00:37:19,380 - ಚೆನ್ನಾಗಿತ್ತು, ಅಮ್ಮ. - ಮತ್ತೆ ಕೊಳಕು ರಾಣಿ? 326 00:37:19,580 --> 00:37:21,740 ಹಲೋ ಹೇಳುವಷ್ಟು ಕೆಳ ಮಟ್ಟಕ್ಕೆ ಇಳಿದಳೇನು? 327 00:37:23,030 --> 00:37:25,410 ನನ್ನ ಊಟದಿಂದ ಅವಳಿಗೆ 200 ಪೌಂಡ್ ಖರ್ಚಾಯಿತಂತೆ. 328 00:37:27,030 --> 00:37:29,700 ಬೆಲೆಯನ್ನೂ ಹೇಳುತ್ತಿದ್ದಾಳೆ. ಎಷ್ಟು ಸಾಧಾರಣ. 329 00:37:30,200 --> 00:37:32,830 ಬೇರೆ ಅತಿಥಿಗಳ ಮುಂದೆ ಅದನ್ನು ಖಂಡಿತ ಹೇಳಿರುವುದಿಲ್ಲ. 330 00:37:34,790 --> 00:37:35,960 ಏನಾಯಿತು? 331 00:37:37,380 --> 00:37:41,050 ನಿನ್ನ ತಂದೆಗೆ ತೊಂದರೆ ಕೊಡಲಿಲ್ಲ ಅಲ್ವಾ, ರಾಕ್ಸ್. ಯಾಕೆಂದರೆ ನಿನಗೆ ಹೇಳಿದೆ. 332 00:37:41,670 --> 00:37:42,920 ನನಗೆ ಕೆಲಸ ಕೊಡ್ತಾರಂತೆ. 333 00:37:45,090 --> 00:37:48,720 - ಕಾಟ್ಸ್ವೋಲ್ಡ್ಸ್ ಸ್ಪಾದಲ್ಲಿ. - ಒಳ್ಳೆಯದೇ, ರಾಕ್ಸ್. 334 00:37:50,680 --> 00:37:53,750 - ಆತನಿಗೆ ಕೆಲಸ ಮಾಡುವುದು ನಿನಗಿಷ್ಟವಿಲ್ಲವಲ್ಲ. - ಇದು ಬೇರೆ. 335 00:37:53,950 --> 00:37:56,210 ಲಂಡನ್ನಿಂದ ಹೊರಗೆ ಹೋಗಲು ಇದು ಒಳ್ಳೆಯ ಅವಕಾಶ. 336 00:37:56,410 --> 00:37:59,420 ಯಾಕೆ ಎಲ್ಲರೂ ನನ್ನನ್ನು ಓಡಿಸಲು ನೋಡುತ್ತಿದ್ದೀರಿ? ನಾನು ಅಡ್ಡಿಯೇ? 337 00:37:59,620 --> 00:38:02,440 ಇಲ್ಲ, ಖಂಡಿತ ಇಲ್ಲ. ಅವರಿಗೆ ಒರಟಾಗಿ ಹೇಳಲಿಲ್ಲ ತಾನೇ? 338 00:38:02,820 --> 00:38:06,350 ಬರ್ನಿ ನಮ್ಮನ್ನು ನೋಡಿಕೊಳ್ಳುತ್ತಿದ್ದಾರೆ. ಆಯ್ತಾ? ಅವರಿಗೆ ಕೋಪ ತರಿಸಬೇಡ. 339 00:38:06,550 --> 00:38:08,120 ಕಾಟ್ಸ್ವೋಲ್ಡ್ಸಲ್ಲೇ ಕೆಲಸ ಮಾಡು. 340 00:38:08,870 --> 00:38:12,410 - ಅಪ್ಪನ ಬೇರೆ ವ್ಯವಹಾರಗಳಲ್ಲಿ ಕೆಲಸ ಮಾಡುವೆ. - ಜೈಲಿಗೆ ಹೋಗುತ್ತೀಯ. 341 00:38:13,160 --> 00:38:15,110 ಹಾಳು ಸ್ಪಾಗಿಂತ ಕಡಿಮೆ ನೀರಸವಾಗಿರುತ್ತೆ. 342 00:38:15,310 --> 00:38:17,570 ನಾನು ಸೌಂದರ್ಯವರ್ಧಕಿಯಾಗಿ ಒಳ್ಳೆ ದುಡ್ಡು ದುಡಿದೆ. 343 00:38:17,770 --> 00:38:21,800 ಆಮೇಲೆ ಯಾರೋ ರೌಡಿಯಿಂದ ಗರ್ಭ ಧರಿಸಿದೆ. ನಿನ್ನ ಗರ್ಭದ ಫಲದಿಂದ ಬದುಕುತ್ತಿದ್ದೀಯಾ. 344 00:38:22,170 --> 00:38:24,050 ನೀನು ಕೃತಜ್ಞತೆಯಿಲ್ಲದ ಮುಂಡೆ. 345 00:38:26,380 --> 00:38:27,380 ಏನದು? 346 00:38:37,350 --> 00:38:39,210 - ಹೊರಗೆ ಹೋಗಿ. - ಹುಡುಗಿಯರು ಇಲ್ಲಿರಬಾರದು. 347 00:38:39,410 --> 00:38:41,300 - ಏನು? - ಯಾರೊಂದಿಗೆ ಇಟ್ಕೋತಿದ್ದೀಯಾ ಗೊತ್ತಾ? 348 00:38:41,500 --> 00:38:44,050 - ಮುಚ್ಚು ಬಾಯಿ. - ನಾನು ಬರ್ನಿ ಮೊಂಕ್ ಮಗಳು. 349 00:38:44,250 --> 00:38:47,580 - ಹೋಗು. ನಿನಗಾಗಿ ಬಂದಿಲ್ಲ. - ರಾಕ್ಸ್, ಹೋಗು. ರಾಕ್ಸ್! ಹೋಗೋಲೋ! 350 00:38:47,780 --> 00:38:50,390 - ಅವಳನ್ನು ಬಿಡಿ! ಅವಳಿನ್ನೂ ಮಗು! - ಟೋನಿ! ಅವಳನ್ನು ಕಳಿಸು! 351 00:38:50,590 --> 00:38:53,450 - ನನ್ನ ಹೆಸರು ಹೇಳಬೇಡ! - ಅಮ್ಮ! ಅಮ್ಮ! 352 00:38:54,290 --> 00:38:57,210 ನಿನ್ನನ್ನು ಪ್ರೀತಿಸುವೆ. ನಿನ್ನನ್ನು ತುಂಬಾ ಪ್ರೀತಿಸುವೆ. 353 00:38:57,410 --> 00:39:00,170 ನಿನಗೇನಾಗಲ್ಲ. ನಿನ್ನನ್ನು ಪ್ರೀತಿಸುವೆ, ಹೌದು. 354 00:39:02,250 --> 00:39:03,090 ಅವರನ್ನು ಎಬ್ಬಿಸು! 355 00:39:04,920 --> 00:39:05,760 ಏಳೇ, ಲೇ! 356 00:39:06,260 --> 00:39:08,090 - ಓಯ್. - ಬಿಡೋ ನನ್ನನ್ನು! 357 00:39:09,380 --> 00:39:10,510 ಬಿಡೋ ನನ್ನನ್ನು! 358 00:39:11,430 --> 00:39:13,640 ಅಮ್ಮ! ಇರು! 359 00:39:18,730 --> 00:39:21,400 ಅಮ್ಮ! ಏನಿದು? 360 00:39:24,820 --> 00:39:26,740 ನಿನ್ನನ್ನು ಕೊಂದುಬಿಡುವೆ! 361 00:39:28,650 --> 00:39:29,650 ರಾಕ್ಸಿ. 362 00:39:31,240 --> 00:39:33,870 ಮಗು. ದಯವಿಟ್ಟು, ಯಾರಾದರೂ... 363 00:39:34,580 --> 00:39:36,540 ಬಾ ಇಲ್ಲಿ. ಹೋಗಾಚೆ. 364 00:40:21,500 --> 00:40:22,500 ಹಲೋ? 365 00:40:52,610 --> 00:40:54,820 {\an8}ರೆಕಾರ್ಡ್ 366 00:41:16,760 --> 00:41:17,600 ಛೆ. 367 00:42:25,370 --> 00:42:28,690 ತುಂಡೆ, ಇಲ್ಲೇನು ಮಾಡ್ತಿದ್ದೀಯಾ? ಅಡುನೋಲಾ ಜೊತೆ ಇದ್ದೆ ತಾನೇ? 368 00:42:28,890 --> 00:42:32,210 - ನ್ದುಡಿ, ಏನು ನಡೆಯುತ್ತಿದೆ? - ಇದು ನನ್ನ ಕಥೆ. 369 00:42:32,880 --> 00:42:33,760 ಒಬ್ಬ ವ್ಯಕ್ತಿ ಇಲ್ಲಿದ್ದಾನೆ. 370 00:42:34,550 --> 00:42:37,530 ದಯವಿಟ್ಟು, ದಯವಿಟ್ಟು. ಕೇಳಿ. ನಾನು ಆಗಂತುಕನಲ್ಲ. 371 00:42:37,730 --> 00:42:40,600 - ಪರವಾಗಿಲ್ಲ. ನಂಜೊತೆ ಇದ್ದಾನೆ. - ಗೂಢಚರ್ಯ ಮಾಡ್ತಿದ್ದಾನೆ. 372 00:42:44,980 --> 00:42:47,190 ನಿಲ್ಲು, ಹೇ. ಅವನು ನನ್ನ ಗೆಳೆಯ. 373 00:42:54,480 --> 00:42:55,400 ಅಯ್ಯೋ. ಛೆ. 374 00:42:55,860 --> 00:42:57,570 ಛೆ, ಛೆ, ಛೆ, ಛೆ, ಛೆ. 375 00:43:00,200 --> 00:43:03,660 ಅಯ್ಯೋ. ಇರಿ. ಇರಿ. ಇರಿ. ಯಾರಾದ್ರೂ ನಮ್ಮನ್ನು ಕಾಪಾಡಿ! 376 00:43:04,450 --> 00:43:05,450 ಕಾಪಾಡಿ! 377 00:43:12,920 --> 00:43:13,920 ಅಮ್ಮ? 378 00:43:31,650 --> 00:43:32,520 ಅಮ್ಮ. 379 00:43:56,630 --> 00:43:58,300 ನಿನಗೆ ಸುಸ್ತಾಗಿದೆ ಅಂತ ಗೊತ್ತು. 380 00:44:00,010 --> 00:44:05,390 ಆದರೆ ನೀನಿರಬೇಕಾದ ಜಾಗ ಒಂದಿದೆ. ನಾನು ಮಾತು ಕೊಡುವೆ. ಅಲ್ಲಿ ಬೇಗ ತಲುಪುತ್ತೇವೆ. 381 00:44:08,890 --> 00:44:10,520 ನೀನು ಸಂಜ್ಞೆಗಳನ್ನು ನೋಡುವೆ. 382 00:45:30,640 --> 00:45:31,980 ಸಹಾಯ ಮಾಡು! ರಿಕ್ಕಿ! 383 00:45:32,770 --> 00:45:34,850 ರಾಕ್ಸಿ. ರಾಕ್ಸಿ. 384 00:46:45,260 --> 00:46:47,620 ಪ್ರಕೃತಿಯ ಆಘಾತಕಾರಿ ಶಕ್ತಿ 385 00:46:47,820 --> 00:46:49,260 ಸೂಚನೆಗಳಿರುತ್ತವೆ ಅಂದೆ. 386 00:47:07,150 --> 00:47:10,100 ತಮ್ಮ ಬೇಟೆಯನ್ನು ಆಘಾತಕ್ಕೊಳಪಡಿಸಲು ಶಕ್ತಿಯುತ 387 00:47:10,300 --> 00:47:14,490 ವಿದ್ಯುತ್ ಶಕ್ತಿ ಸೃಷ್ಟಿಸಲು ಎಲೆಕ್ಟ್ರಿಕ್ ಈಲ್ ಬಳಿ ಮೂರು ಪ್ರತ್ಯೇಕ ಅಂಗಗಳಿರುತ್ತವೆ. 388 00:47:16,910 --> 00:47:19,710 ಈ ಶಕ್ತಿ ಪ್ರಕೃತಿಯಲ್ಲಿದೆ. 389 00:47:22,840 --> 00:47:25,090 ಇದು ನಿನಗೆ ಮುಂಚೆಯೂ ಇತ್ತು. 390 00:47:26,510 --> 00:47:29,970 ಇದು ಪ್ರಪಂಚದ ಅತ್ಯಂತ ಸಹಜ ವಸ್ತು. 391 00:47:30,550 --> 00:47:32,370 ಇನ್ನೂ ಅದ್ಭುತ ಸಂಗತಿ ಏನೆಂದರೆ 392 00:47:32,570 --> 00:47:37,270 ಈ ವಿದ್ಯುತ್ ಸಂಜ್ಞೆಗಳೊಂದಿಗೆ ಈಲುಗಳು ತಮ್ಮ ಬೇಟೆಯ ನರವ್ಯವಸ್ಥೆಯನ್ನು ನಿಯಂತ್ರಿಸಬಲ್ಲವು, 393 00:47:37,560 --> 00:47:39,710 ಅಕ್ಷರಶಃ ಅವುಗಳ ಮೆದುಳಿನ ನಿಯಂತ್ರಣ ಪಡೆದು 394 00:47:39,910 --> 00:47:42,610 ಮೀನುಗಳು ತಮ್ಮ ಬಾಯಿಯೊಳಗೇ ಈಜುವಂತೆ ಮಾಡಬಲ್ಲವು. 395 00:47:43,610 --> 00:47:47,140 ಈಲುಗಳು ಏಕಾಂಗಿ ಬೇಟೆಗಾರರು ಎಂದು ವಿಜ್ಞಾನಿಗಳು ಮೊದಲು ನಂಬಿದ್ದರು, 396 00:47:47,340 --> 00:47:50,490 ಈಗ ತಿಳಿದಂತೆ, ಅತ್ಯಂತ ಶಕ್ತಿಯುತವಾದವು ಗುಂಪುಗಳಲ್ಲಿ ಬೇಟೆಯಾಡುತ್ತವೆ. 397 00:47:50,780 --> 00:47:52,030 ಅದು ನಿಜ, ಮಗು. 398 00:47:52,740 --> 00:47:58,040 ನೀನು ದೊಡ್ಡ, ದೊಡ್ಡ ಕೆಲಸಗಳನ್ನು ಮಾಡಲಿರುವೆ. 399 00:48:15,890 --> 00:48:21,640 ಈ ಸೀಸನ್ ದಿ ಪವರಿನಲ್ಲಿ... 400 00:48:22,060 --> 00:48:25,610 ಪ್ರಪಂಚದಲ್ಲಿರುವ ಎಲ್ಲಾ ಮಹಿಳೆಯರಿಗೂ, ಇದೊಂದು ಹೊಸ ಜೀವನದ ಆರಂಭ. 401 00:48:26,940 --> 00:48:32,490 ಆದರೆ ಇದು ಪ್ರಕೃತಿಯ ನಿಯಮ, ಪ್ರತಿ ಕ್ರಿಯೆಗೂ ಒಂದು ಪ್ರತಿಕ್ರಿಯೆ ಇರುವುದು. 402 00:48:39,160 --> 00:48:40,710 ಇದು ಪೊಳ್ಳಲ್ಲ. 403 00:48:41,460 --> 00:48:44,790 ನಮಗೆ ಗೊತ್ತಿರುವ ಈ ಪ್ರಪಂಚ ಮುಂದೆ ಹೀಗಿಲ್ಲದಿರಬಹುದು. 404 00:48:45,340 --> 00:48:49,170 {\an8}ನೀವು ಅದರ ಮುಂದೆ ಕಾಲಿಟ್ಟ ಕೂಡಲೇ ಅದರ ಪ್ರತಿನಿಧಿಯಾದಿರಿ. 405 00:48:50,130 --> 00:48:52,550 ಈ ಶಕ್ತಿಯೇ ವಿಕಾಸ. 406 00:48:53,890 --> 00:48:55,830 ನಮಗದು ಬೇಕಿತ್ತು, ಅದಕ್ಕೆ ಸಿಕ್ಕಿತು. 407 00:48:56,030 --> 00:48:58,770 ನನಗೆ ಅವಳ ಬಗ್ಗೆ ಬೇರೆಯೇ ಭಾವನೆ ಮೂಡುತ್ತೆ. ಏನೋ ವಿಶೇಷವಾದದ್ದು. 408 00:49:02,190 --> 00:49:03,100 ಮುನ್ನಡೆಸಬಲ್ಲಳು. 409 00:49:05,060 --> 00:49:06,860 ಸಾಕಿನ್ನು, ರಾಕ್ಸ್. ಕೆರಳಿಸಬೇಡ. 410 00:49:07,860 --> 00:49:10,400 - ನನ್ನನ್ನು ಕೆರಳಿಸಬೇಡ! - ಇಲ್ಲದಿದ್ದರೆ ಏನು? 411 00:49:11,320 --> 00:49:12,800 ಈ ಶಕ್ತಿ ವಿಸ್ತರಿಸುತ್ತಿದೆ. 412 00:49:13,000 --> 00:49:15,180 ಇದು ವಿಶ್ವದೆಲ್ಲೆಡೆ ಎಲ್ಲವನ್ನೂ ಬದಲಾಯಿಸುತ್ತದೆ. 413 00:49:15,380 --> 00:49:18,160 ಇದು ಒಳ್ಳೆಯ ಕತೆ. ಪ್ರಾರಂಭಿಸಿದ್ದನ್ನು ಮುಗಿಸಬೇಕೆಂದಿರುವೆಯಾ? 414 00:49:23,620 --> 00:49:26,330 ಯಾವಾಗಲೂ ಭಯದಲ್ಲಿ ಬದುಕುತ್ತಿದ್ದೆ ಅಂತಾನೇ ಗೊತ್ತಿರಲಿಲ್ಲ. 415 00:49:29,130 --> 00:49:31,050 ನನಗೆ ನೂರು ಪೌಂಡ್ ತೂಕ ಇಳಿದಂತೆ, 416 00:49:33,590 --> 00:49:35,130 ನೂರು ಪಟ್ಟು ಬಲಶಾಲಿಯಂತನ್ಸುತ್ತೆ. 417 00:49:35,890 --> 00:49:37,350 ಫೆಡ್ಸ್ ಇಲ್ಲೇನು ಮಾಡ್ತಿದ್ದಾರೆ? 418 00:49:39,850 --> 00:49:41,680 ಮಕ್ಕಳನ್ನು ಅಪರಾಧಿಗಳಂತೆ ನೋಡ್ತೀಯಾ? 419 00:49:42,560 --> 00:49:44,350 ನನಗೊಂದು ಸುಳಿವು ಸಿಕ್ಕಂತಿದೆ. 420 00:49:45,980 --> 00:49:48,610 ಈಓಡಿ ಪರೀಕ್ಷೆ ಮಾಡ್ತಿದ್ದಾರೆ. ಎಲ್ಲರೂ ಮಾಡಿಸಬೇಕಂತೆ. 421 00:49:51,280 --> 00:49:53,240 ನಿನ್ನ ವೃತ್ತಿ ಜೀವನವನ್ನು ಮುಗಿಸುವೆ. 422 00:49:57,530 --> 00:50:01,330 ಹೋಗಿ ಎಲ್ಲರಿಗೂ ಹೇಳು. ಹೊಸ ಬದಲಾವಣೆ ಬರುತ್ತಿದೆ ಅಂತ. 423 00:50:03,160 --> 00:50:04,000 ಒಂದು ಆಯ್ಕೆ ಮಾಡು. 424 00:50:09,880 --> 00:50:10,710 ಅಯ್ಯೋ, ದೇವರೇ. 425 00:50:11,880 --> 00:50:14,720 ಇನ್ನು ಮುಂದೆ ಏನು ಮಾಡಬೇಕಂತ ನೀವು ನಮಗೆ ಹೇಳಬೇಕಿಲ್ಲ. 426 00:50:15,680 --> 00:50:20,140 ದಿ ಪವರ್ 427 00:52:12,170 --> 00:52:14,110 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 428 00:52:14,310 --> 00:52:16,250 ಸೃಜನಶೀಲ ಮೇಲ್ವಿಚಾರಕರು ವಿವೇಕ್