1 00:00:05,965 --> 00:00:08,509 ಈ ಸಂಚಿಕೆಯಲ್ಲಿ ಆತ್ಮಹತ್ಯೆಯನ್ನೊಳಗೊಂಡ ದೃಶ್ಯವಿದೆ. 2 00:00:08,592 --> 00:00:09,927 ವೀಕ್ಷಕರ ವಿವೇಚನೆ ಪಾಲಿಸಿ. 3 00:00:10,136 --> 00:00:12,221 ಈ ಹಿಂದೆ... 4 00:00:12,430 --> 00:00:15,599 ನಿಮ್ಮ ಸ್ಕಯಿನ್ ತೆಗೆಯುವಿಕೆಯ ಸಂಶೋಧನಾ ಕಾರ್ಯಕ್ರಮದ ವರದಿ ಇಲ್ಲಿದೆ. 5 00:00:15,683 --> 00:00:16,600 ಅಸಹ್ಯವಾಗಿದೆ. 6 00:00:16,767 --> 00:00:19,937 ನನಗೆ ಕೆಲವು ದಾಖಲೆಗಳು ಸಿಕ್ಕಿವೆ. ಅದು ತುಂಬಾ ಭೀಕರವಾಗಿದೆ. 7 00:00:20,020 --> 00:00:21,272 ಹುಡುಗಿಯರ ಕೊಲೆಯಾಗಿದೆ. 8 00:00:21,439 --> 00:00:24,567 "ಮಹಿಳೆಯರ ಮೇಲೆ ಸರ್ಕಾರದ ಶೋಷಣೆ ಬಯಲುಮಾಡಿದ ಸೋರಿಕೆಯಾದ ದಾಖಲೆ." 9 00:00:24,650 --> 00:00:27,862 ನಿನ್ನಿಂದ ನನ್ನ ವೃತ್ತಿಗೂ ಕುತ್ತು ಬಂದಿರೋದು ಅರಿತೆಯಾ? 10 00:00:27,945 --> 00:00:31,323 ನಿನ್ನ ಚಿಂತೆ ಎಲ್ಲಾ ಅದರ ಬಗ್ಗೆಯೇ, ನಿನ್ನ ರಾಜಕೀಯ ವೃತ್ತಿಯ ಬಗ್ಗೆ. 11 00:00:31,490 --> 00:00:34,368 ದೇವರೇ. ಈಗ ನೀನು ಯಾರಂತಲೂ ನನಗೆ ಸರಿಯಾಗಿ ಗೊತ್ತಿಲ್ಲ. 12 00:00:34,452 --> 00:00:37,580 -ಎಂದಾದರೂ ವಿಚಿತ್ರ ದಿನಗಳನ್ನು ಹೊಂದಿರುವೆಯಾ? -ಹೌದು. ಪ್ರತಿದಿನವೂ. 13 00:00:40,666 --> 00:00:43,377 ಇದನ್ನು ಅನುಭವಿಸಿದೆಯಾ? ಅತಿ ದೊಡ್ಡ ಸ್ಥಿರ ವಿದ್ಯುದಾಘಾತ. 14 00:00:43,461 --> 00:00:45,129 ನೀನು ಸುಂದರಿ. ಗೊತ್ತಾ ಅದು? 15 00:00:45,212 --> 00:00:48,090 -ನಾನೇ ನೋಡಿಕೊಳ್ಳುವೆ. ನನಗೆ ಯಾಕೆ ಬಿಡಲ್ಲ? -ಆಯ್ತಮ್ಮ. 16 00:00:50,134 --> 00:00:53,846 -ನಡಿ. ನಡಿ. -ಅಯ್ಯೋ, ದೇವರೇ! ಎಲ್ಲಿದ್ದೆ? 17 00:00:54,346 --> 00:00:56,891 ಒಮ್ಮೆಯಾದರೂ ನೀನು ನಂಬುವುದನ್ನು ಮಾಡು. 18 00:00:56,974 --> 00:00:57,808 ಯಾರು ನೀನು? 19 00:00:58,976 --> 00:01:02,855 ರಕ್ಷಣೆ ನಮ್ಮ ಆದ್ಯ ಕರ್ತವ್ಯ. ಈ ವಿದ್ಯುತ್ತಿನವರಿಗೆ ಯಜಮಾನ ಯಾರೆಂದು ತೋರಿಸೋಣ. 20 00:01:02,938 --> 00:01:04,482 -ಏನೋ ಅದು? -ಅರ್ಬನ್ಡಾಕ್ಸ್. 21 00:01:04,565 --> 00:01:05,941 ತಾಯಿ ಬಗ್ಗೆ ಕೆಟ್ಟ ಮಾತಾಡೋನು. 22 00:01:06,025 --> 00:01:07,902 ನನಗದು ಬೇಕು. ನನಗೆ ಕೊಡು. 23 00:01:13,073 --> 00:01:15,785 ನಾವು ಗಂಡಸರಾಗಿ ಬದುಕಲು 24 00:01:16,076 --> 00:01:19,205 ಮರೆಯುತ್ತಿರುವ ಕುರುಹುಗಳು ಎಷ್ಟೋ ವರ್ಷಗಳಿಂದ ಇವೆ. 25 00:01:19,872 --> 00:01:24,668 ಈ ದೇಹಗಳಲ್ಲಿ ಯಾಕಿದ್ದೇವೆಂದು ಮರೆಯುತ್ತಿದ್ದೇವೆ. ಈ ದೊಡ್ಡ, ಬಲಶಾಲಿ ದೇಹಗಳಲ್ಲಿ. 26 00:01:25,628 --> 00:01:27,922 ಮಾನವತೆಗಾಗಿ ನಮ್ಮ ಕರ್ತವ್ಯವೇನು ಅಂತ. 27 00:01:28,672 --> 00:01:32,259 ಗಂಡಸರು ಬೇಟೆಯಾಡುತ್ತಿದ್ದರು. ಯುದ್ಧಗಳಲ್ಲಿ ಪಾಲ್ಗೊಳ್ಳುತ್ತಿದ್ದರು. 28 00:01:32,343 --> 00:01:36,180 ಆದರೆ ಮುಂದೆ ಎಲ್ಲೋ, ಜೀವನ ಸುಲಭವಾಯಿತು. ನಾವು ಮೆದುವಾದೆವು. 29 00:01:36,847 --> 00:01:40,851 ಅಲ್ಲಿಂದಲೇ ಈ ರೋಗ, ಈ ರೂಪಾಂತರ, ಬಂದಿದ್ದು. 30 00:01:40,935 --> 00:01:42,895 ಇದು ನಮಗೆ, ಮಾನವ ಜನಾಂಗಕ್ಕೆ, ಯಾಕೆ 31 00:01:43,062 --> 00:01:46,732 ಸಂಭವಿಸಿತು ಅಂದರೆ ನಾವು ಗಂಡಸರು ಬಲಶಾಲಿಯಾಗಿರುವುದನ್ನು ಮರೆತಿರುವುದರಿಂದ. 32 00:01:46,982 --> 00:01:50,527 ನಮ್ಮ ಮನೆಗಳನ್ನು, ನಮ್ಮ ಹೆಂಗಸರನ್ನು ಕಾಪಾಡುವುದನ್ನು ಮರೆತಿದ್ದೇವೆ. 33 00:01:51,027 --> 00:01:54,448 ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಅವರು ಇದನ್ನು ಅಭಿವೃದ್ಧಿಪಡಿಸಿಕೊಂಡರು. 34 00:01:55,157 --> 00:01:57,701 ನಾವು ಮೆದುವಾಗಿ, ಸೋಮಾರಿಗಳಾಗಿ ಕಳೆದುಹೋದೆವು. 35 00:01:57,993 --> 00:02:01,038 ಈ ಮುಂಡೆಯರು ಕದ್ದು ನುಗ್ಗಿದರು. ನಾವು ಪ್ರತಿರೋಧಿಸಲೂ ಇಲ್ಲ. 36 00:02:01,497 --> 00:02:03,499 ನಮ್ಮಿಂದ ಕಸಿಯಲು ಬಿಟ್ಟುಕೊಟ್ಟೆವು. 37 00:02:05,501 --> 00:02:06,961 ಆದರೆ ನಾವು ಮರಳಿ ಪಡೆಯಬಹುದು. 38 00:02:08,127 --> 00:02:12,132 ನಾನು ಮಾತು ಕೊಡುವೆ, ಸ್ನೇಹಿತರೇ. ನಾವು ಆ ಅಗ್ರಸ್ಥಾನವನ್ನು ಪಡೆಯಬಹುದು. 39 00:02:12,508 --> 00:02:14,802 ಮನುಜಕುಲದ ಒಳಿತಿಗಾಗಿ, ನಾವು ಮಾಡಲೇಬೇಕು. 40 00:02:16,262 --> 00:02:19,890 ನಮಗೆ ಸೇರಬೇಕಾದ ಸ್ಥಾನವನ್ನು ನಾವು ಮರಳಿ ಪಡೆಯಬೇಕು, ಅದೇನೇ ಆದರೂ. 41 00:02:21,725 --> 00:02:23,853 ನಿಜವಾದ ಶಕ್ತಿ ಅಂದ್ರೆ ಇದು. 42 00:02:25,062 --> 00:02:26,564 ಯಾವುದೋ ಇಂದ್ರಜಾಲವಲ್ಲ. 43 00:02:27,523 --> 00:02:30,276 ಸುರುಸುರು ಬತ್ತಿ ಬೆರಳುಗಳಲ್ಲ. 44 00:02:30,693 --> 00:02:33,863 ಈ ಹುಡುಗಿಯರಿಗೆ ಹೋರಾಡುವುದು ಗೊತ್ತಿಲ್ಲ. ಅವರು ಗುಂಡು ನಿರೋಧಕರೇನಲ್ಲ. 45 00:02:34,238 --> 00:02:37,908 ಮತ್ತೆ ಅವರ ಬಳಿ ಈ ಶಕ್ತಿ ಇದೆ. ಒಳ್ಳೆಯದೇ ಅವರಿಗೆ. 46 00:02:39,285 --> 00:02:43,289 ನಮ್ಮ ಬಳಿ ನಿಜವಾದ ಆಯುಧಗಳಿವೆ. ಮತ್ತು ಅವುಗಳನ್ನು ಬಳಸುವುದು ನಮಗೆ ಗೊತ್ತಿದೆ. 47 00:02:44,248 --> 00:02:49,168 ದಿ ಪವರ್ 48 00:03:00,681 --> 00:03:01,765 ಅಯ್ಯೋ. 49 00:03:08,898 --> 00:03:10,274 ಎಷ್ಟು ಅದ್ಭುತವಾಗಿದೆ. 50 00:03:11,609 --> 00:03:13,444 -ಮಾರ್ಗೋ. -ಹಾಂ. 51 00:03:14,570 --> 00:03:17,323 ಹೇ. ಬೇರೆ ಪ್ಯಾಂಟು ತಗೊಂಡಿದ್ದೆ. 52 00:03:30,002 --> 00:03:33,881 ನೋಡು, ನೀನು ಇಲ್ಲೇ ಮಲಗಬಹುದು, ಬೇಕಾದರೆ. 53 00:03:35,925 --> 00:03:38,761 ಅದು, ಏನಂದ್ರೆ, ನಾನು ಬರಬೇಕಾ ನಿನಗೆ? 54 00:03:38,886 --> 00:03:41,764 ಆ ರಾತ್ರಿಯಿಂದ ನೀನು ಎರಡು ಪದವಾದರೂ ಹೇಳಿಲ್ಲ. 55 00:03:41,847 --> 00:03:45,392 ಈಗ, ನಿಖರವಾಗಿ ನಾನು ಏಳು ಪದಗಳನ್ನಂತೂ ಹೇಳಿದೆ. 56 00:03:55,027 --> 00:03:58,072 -ತುಂಬಾನೇ ನಡೆಯುತ್ತಿದೆ. -ಹೌದು, ನಂಗೊತ್ತು. ನಂಗೊತ್ತು. 57 00:03:58,989 --> 00:04:01,283 -ವಕೀಲರ ಬಳಿ ಮಾತನಾಡಿದೆಯಾ? -ಹಾಂ. 58 00:04:01,367 --> 00:04:04,787 ನನ್ನ ಹೆಸರು ಹೊರಗೆ ಬಂದರೆ, ಕೆಟ್ಟದಾಗಬಹುದು. ದಂಡಗಳು ಬೀಳುತ್ತವೆ, ಖಂಡಿತವಾಗಿ. 59 00:04:04,870 --> 00:04:07,790 ಅವು ಗೌಪ್ಯ ದಾಖಲೆಗಳಾಗಿರುವುದರಿಂದ ಸಂಯುಕ್ತ ಸರ್ಕಾರದ್ದಿರಬಹುದು. 60 00:04:07,873 --> 00:04:09,541 ನನಗೆ ಜೈಲು ಶಿಕ್ಷೆ ಆಗಬಹುದು. 61 00:04:09,625 --> 00:04:12,628 ಅದು ಡೆಕ್ಲಾನ್ ನನ್ನ ಹೆಸರು ಹೇಳಿದರೆ ಮಾತ್ರ. ಅವನು ಹಾಗೆ ಮಾಡಲ್ಲ. 62 00:04:12,711 --> 00:04:14,797 ಆದರೂ ನಿನಗೆ ಇಷ್ಟು ಭರವಸೆ ಎಲ್ಲಿಂದ ಬಂತು? 63 00:04:14,880 --> 00:04:17,466 ಡೆಕ್ಲಾನ್ ಒಬ್ಬ ಮೂರ್ಖ. ನಿನಗೆ ಹೇಗೆ ಖಚಿತವಾಗಬೇಕು? 64 00:04:17,548 --> 00:04:21,178 -ನಾನು ನೋಡಿಕೊಳ್ಳುವೆ. ನೀನು ಚಿಂತಿಸಬೇಡ. -ಸರಿ, ನಾನು ಚಿಂತಿಸುವುದಿಲ್ಲ ಬಿಡು. 65 00:04:21,261 --> 00:04:23,389 -ನೀನು ನೋಡಿಕೊಳ್ಳುವೆ. -ಹೌದು, ನೋಡಿಕೊಳ್ಳುವೆ. 66 00:04:24,723 --> 00:04:28,769 ಮತ್ತೆ ನೀನು ಕ್ಷಮೆಯನ್ನು ಕೂಡ ಯಾಚಿಸಬಹುದೇ? 67 00:04:28,894 --> 00:04:31,981 ಓ, ದೇವರೇ. ಈಗಾಗಲೇ ಇದು ಮಾಡಿಯಾಗಿದೆ. ನಾನು ಮತ್ತೊಮ್ಮೆ ಮಾಡುವುದಿಲ್ಲ. 68 00:04:32,064 --> 00:04:34,566 -ನಮ್ಮ ಕೆಲಸಗಳಿಗೆ ಕುತ್ತು ತಂದೆ. -ಸರಿಯಾಗಿ ಮಾಡಿದೆ. 69 00:04:34,650 --> 00:04:37,444 ನನಗೆ ಹೇಳದೆ ನಮ್ಮ ಮನೆ, ಕುಟುಂಬವನ್ನು ಅಪಾಯಕ್ಕೆ ದೂಡಿದೆ. 70 00:04:37,528 --> 00:04:40,239 ನೀನು ಒಳ್ಳೆ ಕೆಲಸ ಮಾಡಬೇಕೆಂದುಕೊಳ್ತಿದ್ದದ್ದು ನೆನಪಿದೆಯೇ? 71 00:04:40,322 --> 00:04:43,409 -ನೆನಪಿದೆಯೇ ಅದು? -ನೀನು ನಾನು ನಂಬಬಹುದಾದ ವ್ಯಕ್ತಿಯಾಗಿದ್ದೆ. 72 00:04:44,409 --> 00:04:45,411 ಅದು ನ್ಯಾಯವಲ್ಲ. 73 00:04:46,203 --> 00:04:50,582 -ಆಯ್ತಾ? ಅದು ನ್ಯಾಯವಲ್ಲ. ನನ್ನನ್ನು ನಂಬಬಹುದು. -ನನಗೆ "ನೀನ್ಯಾರು?" ಅಂತ ಅನಿಸುತ್ತಿದೆ. 74 00:04:51,207 --> 00:04:55,129 ನಾನ್ಯಾರಾ? ನಾನು ನಿನ್ನ ಗಂಡ ಕಣೆ. ನೀನು ಯಾರು? 75 00:04:55,295 --> 00:04:59,008 ನಿನಗೆ ಹೇಳಲಾಗದ ಮುಖ್ಯವಾದ ಕೆಲಸ ಮಾಡಬೇಕಿರುವ ಹೆಂಗಸು ನಾನು. 76 00:04:59,091 --> 00:05:02,553 ಆಯ್ತು. ನನಗೆ ತಿಳಿಯಬೇಕಿಲ್ಲ, ಆಯ್ತಾ? ನನಗೆ ತಿಳಿಯಬೇಕಿಲ್ಲ. 77 00:05:02,636 --> 00:05:06,473 ಯಾಕಂದ್ರೆ ನನಗೂ ಮಾಡಲು ಕೆಲಸವಿದೆ. ಏನು ಗೊತ್ತಾ? ಅದು ಕೂಡ ಮುಖ್ಯವೇ. 78 00:05:06,557 --> 00:05:08,100 ತುಂಬಾ, ತುಂಬಾ ಧನ್ಯವಾದಗಳು. 79 00:05:23,198 --> 00:05:25,409 -ಹುಡುಗಿ... -ನನ್ನ ಶೂಗಳ ಬಗ್ಗೆ ಚರ್ಚೆ ಬೇಡ. 80 00:05:25,492 --> 00:05:28,370 ಏನಂದ್ರೆ, ಅಧಿಕೃತ ಮೇಯರ್ ಆದೇಶದ ಪ್ರಕಾರ, 81 00:05:28,454 --> 00:05:31,665 ಇನ್ನು ಮುಂದೆ ನನ್ನ ಪಾದರಕ್ಷೆಗಳ ಬಗ್ಗೆ ಯಾವುದೇ ಚರ್ಚೆ ನಡೆಯಬಾರದು. 82 00:05:31,957 --> 00:05:33,542 ಆಯ್ತು. ಅರ್ಥವಾಯಿತು. 83 00:05:34,418 --> 00:05:37,796 ಅಂದವಾಗಿ ಕಾಣುತ್ತೆ ಅಂತ ಹೇಳುತ್ತಿಲ್ಲ, ಆದರೆ ನಿಮ್ಮ ಆತ್ಮವಿಶ್ವಾಸ ಹಿಡಿಸಿತು. 84 00:05:38,505 --> 00:05:40,007 ಏನಾಗುತ್ತಿದೆ ನಿಮಗೆ? 85 00:05:42,134 --> 00:05:45,387 ಇಲ್ಲ. ಮಾರ್ಗೋ, ಹಾಗಾಗಲಿಲ್ಲ. 86 00:05:46,513 --> 00:05:48,265 ಆಯ್ತು. ಹಾಗಾಯ್ತು. 87 00:05:51,602 --> 00:05:52,519 ಅಯ್ಯೋ. 88 00:05:57,941 --> 00:06:00,944 -ಮತ್ತು ಅದು ಅದ್ಭುತವಾಗಿದೆ. -ನಾನು ನಿಮ್ಮನ್ನು ನಂಬುವುದಿಲ್ಲ. 89 00:06:01,070 --> 00:06:04,782 -ಏನು ಯೋಚಿಸುತ್ತಿದ್ದಿರಿ? -ಯೌವ್ವನ ಬಂದಂತಿದೆ. ಮ್ಯಾರಥಾನ್ ಓಡಬಲ್ಲೆ. 90 00:06:04,865 --> 00:06:08,077 ಎಲ್ಲವೂ ಪ್ರಕಾಶಮಾನವಾಗಿ ಹಗುರವಾಗಿದೆ. ದೊಡ್ಡದಾಗಿ ಉಸಿರಾಡಬಲ್ಲೆ. 91 00:06:08,327 --> 00:06:11,663 ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ, "ಮುಚ್ಕೊಂಡು ದಾರಿ ಬಿಡಿ" ಅಂತೀನಿ. 92 00:06:11,747 --> 00:06:12,581 ಸರಿ ಬಿಡಿ. 93 00:06:13,082 --> 00:06:16,460 ಅಂದರೆ… ನಿನಗೂ ಬೇಕಾ? ನಾನು ನಿನಗೆ ಕೊಡಬಲ್ಲೆ. 94 00:06:16,543 --> 00:06:20,339 ಅಯ್ಯೋ ಬೇಡ. ನಾನು ಹುಟ್ಟಿದಾಗಿನಿಂದ ನನಗೆ ಆಪತ್ತುಗಳೇ ಎದುರಾಗುತ್ತಿವೆ. 95 00:06:20,422 --> 00:06:23,717 ನನ್ನನ್ನು ಯಾರಾದರೂ ಅನುಮಾನದಿಂದ ನೋಡುವುದಂತೂ ಬೇಡವೇ ಬೇಡ. 96 00:06:24,218 --> 00:06:26,929 -ನನ್ನನ್ನು ಕೆಲಸದಿಂದ ತೆಗೆಯುವುದು. -ಯಾರ ಕೆಲಸವೂ ಹೋಗಲ್ಲ. 97 00:06:27,596 --> 00:06:32,183 ಹೋಗುತ್ತವೆ. ಈಗಾಗಲೇ ಶುರುವಾಗಿದೆ. ಟಾಮ್ ಅಂಡ್ ಕ್ರಿಸ್ಟೆನ್ ನ ಕ್ರಿಸ್ಟೆನ್. 98 00:06:32,308 --> 00:06:35,354 -ಬೆಳಗಿನ ಕಾರ್ಯಕ್ರಮ? -ಅದು ಇದ್ದಿದ್ದಕ್ಕೆ ಅವಳ ಕೆಲಸ ಹೋಯಿತು. 99 00:06:35,437 --> 00:06:38,190 ಅವರು ಹಾಗೆ ಮಾಡಬಾರದು. ಅದು ಕಾನೂನುಬಾಹಿರ. ಅದು ತಾರತಮ್ಯ. 100 00:06:38,273 --> 00:06:42,653 ಹಾಗಿದ್ದರೂ… ನಾವು ಇದರ ಗುಟ್ಟು ಬಿಟ್ಟುಕೊಡಬಾರದು. ಇದನ್ನು ನಿಭಾಯಿಸಲು. 101 00:06:49,243 --> 00:06:52,663 -ಹಿಂಬಡ್ತಿ ಪಡೆಯಬೇಕೇನು ನಿಮಗೆ? -ನಿನಗೆ ಧೈರ್ಯವಿಲ್ಲ. 102 00:06:52,746 --> 00:06:53,956 ನೋಡ್ತೀರೇನು? 103 00:07:05,008 --> 00:07:07,010 ಹೇ. ಹೇ. 104 00:07:09,972 --> 00:07:13,809 ಹಾಯ್. ನಾನು ನ್ದುಡಿ. ಈಗ ಫೋನ್ ಉತ್ತರಿಸಲಾರೆ, ಹಾಗಾಗಿ ಸಂದೇಶ ಬಿಡಿ. 105 00:07:14,977 --> 00:07:16,520 ಹೇ, ನ್ದುಡಿ, ಚಿನ್ನ. 106 00:07:17,062 --> 00:07:21,692 ಹೇ, ಕೇಳು. ಓಜೋ ಅವರು ವಾಪಸ್ ಬಂದಿದ್ದಾರೆ. ನಿನ್ನನ್ನು ಮದುವೆಯಲ್ಲಿ ಭೇಟಿಯಾಗುವೆ. 107 00:07:21,942 --> 00:07:24,069 ನನ್ನ ಝಂಕು ಜೊತೆಗಾರ್ತಿ ಬೇಕು. 108 00:07:32,786 --> 00:07:34,663 ಹೌದು, ತುಂಬಾ ಕಾಲವಾಗಿದೆ. 109 00:07:35,747 --> 00:07:37,916 ನಿನ್ನನ್ನು ನೋಡಿದರೆ ಚೆನ್ನಾಗಿರುತ್ತದೆ. 110 00:07:39,918 --> 00:07:43,547 -ಮಗಾ, ನಾವು ತೊಂದರೆಯಲ್ಲಿದ್ದೇವೆ. ಹೋಗೋಣ. -ಮಾತನಾಡುವುದಿಲ್ಲವೇ? 111 00:07:43,630 --> 00:07:45,716 -ನಿನ್ನನ್ನು ನೋಡಿ ಎಷ್ಟೋ ಕಾಲವಾಯಿತು. -ಹೋಗೋಣ. 112 00:07:45,799 --> 00:07:46,758 ಏನಾಯ್ತು? 113 00:07:46,884 --> 00:07:47,718 ಏನಂದೆ? 114 00:07:48,385 --> 00:07:51,889 ಅವಳು ಅದನ್ನು ಪಡೆದಿದ್ದರಿಂದ ನೀನು ಮದುವೆಯಾಗಲ್ವಾ? ಅಷ್ಟು ಗಂಭೀರವೇನು? 115 00:07:51,972 --> 00:07:55,683 ನನ್ನ ಹೆಂಡತಿ ನನಗೆ ಕಿಡಿ ಹೊಡೆಸಿದರೆ ನಾನು ಈ ಮನೆಯ ಯಜಮಾನ ಹೇಗಾಗಲಿ? 116 00:07:56,685 --> 00:07:58,937 ನೀನು ಅದನ್ನು ಪ್ರಯತ್ನಿಸುವವರೆಗೂ ತಿರಸ್ಕರಿಸಬೇಡ. 117 00:07:59,688 --> 00:08:02,649 ಹತ್ತು ವರ್ಷಗಳನ್ನು ಸುಮ್ಮನೆ ಹಾಗೆ ಬಿಟ್ಟು ಕೊಡುವೆಯಾ? 118 00:08:02,774 --> 00:08:05,986 -ಹತ್ತು ವರ್ಷಗಳಷ್ಟು ಸುಳ್ಳುಗಳು. -ವಾಲೆ, ಮೂರು ತಿಂಗಳಷ್ಟೇ ಆಗಿವೆ. 119 00:08:06,570 --> 00:08:08,780 ನಮ್ಮ ಮಧ್ಯೆ ರಹಸ್ಯಗಳೇ ಇರಲಿಲ್ಲ. ಎಂದಿಗೂ. 120 00:08:09,364 --> 00:08:10,199 ವಾಲೆ. 121 00:08:10,282 --> 00:08:12,117 ಹೇ, ನಾನು ನಿನಗೆ ಸುಳ್ಳು ಹೇಳಲ್ಲ. 122 00:08:12,868 --> 00:08:17,414 ನೀನು ಸ್ವಲ್ಪ ಅತಿಯಾಗಿ ಪ್ರತಿಕ್ರಿಯಿಸುತ್ತಿರುವೆ. ಆದರೆ ನಿನ್ನ ಸಮಸ್ಯೆ ಏನು ಗೊತ್ತಾ? 123 00:08:17,664 --> 00:08:19,750 ನಿನಗೆ "ಸಾಧು ಸ್ವಭಾವ"ದ ಹುಡುಗಿಯರು ಇಷ್ಟ. 124 00:08:20,125 --> 00:08:20,959 ಸಾಧು ಸ್ವಭಾವದವರೇ? 125 00:08:21,084 --> 00:08:22,920 ಫಿಸಾಯೋಗೆ ಉರಿಸಿದರೆ ಹುರಿದುಬಿಡುತ್ತಾಳೆ. 126 00:08:23,003 --> 00:08:26,423 -ಆಯ್ತು, ಆಯ್ತು, ಆಯ್ತು, ಆಯ್ತು. -ಮಾತು ಎಚ್ಚರವಾಗಿರಲಿ. 127 00:08:26,506 --> 00:08:28,759 -ಫಿಸಾಯೋನ ಯಾರೂ ಸಾಧು ಅನ್ನಬೇಡಿ. -ಇಲ್ಲ. 128 00:08:28,842 --> 00:08:31,303 ಕೇಳು, ನಾನು ರಿಯಾಧಿನಲ್ಲಿದ್ದಾಗ… 129 00:08:31,386 --> 00:08:34,222 ಒಂದು ಕ್ಷಣ ನನ್ನ ಸೋದರನಿಗಾಗಿ, ನಮ್ಮ ಅಂತಾರಾಷ್ಟ್ರೀಯ ಪತ್ರಕರ್ತ. 130 00:08:36,183 --> 00:08:38,352 -ಧನ್ಯವಾದ. -ದೊಡ್ಡಣ್ಣಂದಿರು. 131 00:08:38,559 --> 00:08:41,063 -ದಾಮಿ. -ಕುಡಿಯಲು ಏನಾದರೂ ತರುವೆ. 132 00:08:41,480 --> 00:08:46,026 ಕೇಳು. ನಾನು ಕೆಲವನ್ನು ನೋಡಿರುವೆ, ಆಯ್ತಾ? ಇದು ಯಾವುದೋ ಲೈಂಗಿಕ ಆಟಿಕೆ ಅಲ್ಲ. 133 00:08:46,318 --> 00:08:49,404 ಮತ್ತು ನಿನ್ನ ಭಾವಿ ಪತ್ನಿಯ ಕೈ ಬಿಡಲು ಇದು ಖಂಡಿತ ಕಾರಣವಲ್ಲ. 134 00:08:49,488 --> 00:08:53,116 ಇದು ಭವಿಷ್ಯ. ಇದನ್ನು ನೋಡಲು ಬದುಕಿರುವುದು ನಮ್ಮ ಅದೃಷ್ಟ. 135 00:08:54,868 --> 00:08:57,871 ಇದು ಸಮಾನತೆಯನ್ನು ತರಬಹುದು. 136 00:08:59,331 --> 00:09:03,293 ಮೊದಲಿಗೆ, ಅವರಿಗೆ ಮಾತ್ರ ಕೈಗಳಲ್ಲಿ ವಿದ್ಯುತ್ ಉತ್ಪತ್ತಿಯಾಗುವುದು ಸಮಾನತೆ ಹೇಗಾಗುತ್ತೆ? 137 00:09:03,502 --> 00:09:05,379 ನಾವು ಸಮಾನರಲ್ಲ ಎಂದು ಯಾರಂದರು? 138 00:09:05,462 --> 00:09:09,091 ವಾಲೆ, ನಿನ್ನನ್ನು ನೋಡು. ನಿನ್ನ ಕೈಗಳ ಗಾತ್ರವನ್ನು ನೋಡು. 139 00:09:10,008 --> 00:09:13,220 -ನಿನ್ನ ಒದೆ ತಿಂದರೆ ಈ ಹುಡುಗಿ ಕಥೆ ಮುಗಿಯಿತು. -ನಾನು ಹಾಗೆ ಮಾಡ್ತೀನಾ? 140 00:09:13,887 --> 00:09:15,305 ನಿನಗೆ ಆಘಾತ ಹೊಡೆಸಿದ್ದಾಳಾ? 141 00:09:19,101 --> 00:09:22,396 ಇದಕ್ಕೆ ಮುಂಚೆ ನೀನು ಸ್ತ್ರೀ ಹಕ್ಕುವಾದಿಯಾಗಿದ್ದದ್ದು ನನಗೆ ನೆನಪಿಲ್ಲ. 142 00:09:22,479 --> 00:09:25,107 ನ್ದುಡಿಯ ಮುಖದ ಬಗ್ಗೆ ಅವನಿಗೆ ಪಶ್ಚಾತ್ತಾಪ ಆಗುತ್ತಿದೆ. 143 00:09:26,525 --> 00:09:27,359 ಮುಚ್ಕೊಂಡು ಹೋಗೋ. 144 00:09:29,778 --> 00:09:32,572 ಏನೋ ನಿನ್ನ ಸಮಸ್ಯೆ? ಅದು ಮಧುಚಂದ್ರಕ್ಕಾಗಿ ಇದ್ದದ್ದು. 145 00:09:34,324 --> 00:09:35,617 ಏನು ನಿನ್ನ ಸಮಸ್ಯೆ? 146 00:09:38,120 --> 00:09:39,538 ಕ್ಷಮಿಸು. 147 00:09:42,082 --> 00:09:44,251 -ಸುಮ್ಮನೆ ಕೂರು, ಆರಾಮವಾಗು. -ಛೆ. 148 00:09:45,752 --> 00:09:46,962 ಸರಿ ಹೋಗುತ್ತೆ. ತಗೋ. 149 00:09:50,674 --> 00:09:52,968 ವಾಲೆ. ವಾಲೆ. 150 00:09:54,011 --> 00:09:55,012 ಎಲ್ಲಿಗೆ ಹೋದ? 151 00:10:12,779 --> 00:10:14,656 ಟೆರ್ರಿ ಮೊಂಕ್ 152 00:10:35,969 --> 00:10:36,887 ಅಮೆನ್. 153 00:10:40,098 --> 00:10:41,600 ನನ್ನನ್ನು ದಯವಿಟ್ಟು ಕ್ಷಮಿಸು. 154 00:10:54,321 --> 00:10:59,576 ನಿನ್ನ ತಾಯಿಯ ವಿಚಾರವಾಗಿ ನನ್ನನ್ನು ಕ್ಷಮಿಸು. ಮತ್ತು ಈಗ, ಇವೆಲ್ಲಾ. 155 00:11:04,122 --> 00:11:05,332 ನನ್ನನ್ನೂ ಕ್ಷಮಿಸು. 156 00:11:09,211 --> 00:11:12,464 -ನಿಮ್ಮಮ್ಮ ಈಗಲೂ ನನ್ನ ಜೊತೆ ಮಾತಾಡಲ್ಲ. -ಹೌದು, ಅದು ಆಕೆಗೆ ಕಷ್ಟ. 157 00:11:12,547 --> 00:11:16,051 ನಿಮ್ಮಮ್ಮ ಗರ್ಭಿಣಿಯಾಗಿದ್ದಾಗ ಬರ್ನಿ ನಮ್ಮಮ್ಮನ ಜೊತೆ ಮಲಗಿದ್ದು ನನ್ನ ತಪ್ಪಲ್ಲ. 158 00:11:16,134 --> 00:11:20,764 ನನಗೂ ನಿನಗೂ ಯಾಕೆ ಒಂದೇ ವಯಸ್ಸು ಎಂದು ಅಪ್ಪನನ್ನು ಕೇಳಿದೆ, ನನಗೊಂದು ನಾಯಿ ಕೊಡಿಸಿದರು. 159 00:11:21,348 --> 00:11:22,349 ಖಂಡಿತ ಮಾಡಿರುತ್ತಾರೆ. 160 00:11:26,686 --> 00:11:28,188 ನಿನಗೊಂದು ಹೇಳಲೇ? 161 00:11:29,064 --> 00:11:31,316 -ಖಂಡಿತ. -ನಾನಿನ್ನು ಇದನ್ನು ಮಾಡಲಾರೆ. 162 00:11:32,609 --> 00:11:34,778 ನನಗೆ ಈ ವ್ಯವಹಾರದ ಭಾಗವಾಗಲು ಇಷ್ಟವಿಲ್ಲ. 163 00:11:34,861 --> 00:11:37,030 -ವಿಶ್ವವಿದ್ಯಾಲಯಕ್ಕೆ ಹೋದರೆ ಸಾಕು. -ಹಾಗನ್ನಬೇಡ. 164 00:11:37,322 --> 00:11:39,408 ನನಗೆ ಶಾಂತಿ ಬೇಕು, ರಾಕ್ಸ್. 165 00:11:45,664 --> 00:11:47,332 ನೀನು ಎಂದಿಗೂ ಹೊಂದಲಿಲ್ಲ ಬಿಡು. 166 00:11:51,128 --> 00:11:53,547 ಅತಿವಿನಯದ ರಿಕ್ಕಿ ಅಪ್ಪನಿಗೆ ಬಾಲದಂತೆ ಇರುತ್ತಿದ್ದ. 167 00:11:56,091 --> 00:11:57,801 -ಟೆರ್ರಿ ಏನೂ ಗೊತ್ತಾಗದವನು. -ಓಯ್. 168 00:11:58,343 --> 00:12:00,345 ಅವನನ್ನು ತುಂಬಾ ಪ್ರೀತಿಸುವೆ, ಅದು ನಿಜ. 169 00:12:01,847 --> 00:12:03,181 ಹೌದು, ಅದು ನಿಜ. 170 00:12:03,390 --> 00:12:06,518 ನೀನು, ನನ್ನ ಅವಳಿ ಸೋದರ, ಐಷಾರಾಮಿ ಗೆಳೆಯರೊಂದಿಗೆ ಐಷಾರಾಮಿ ಶಾಲೆಯಲ್ಲಿ. 171 00:12:06,601 --> 00:12:09,688 -ನಾನು ಐಷಾರಾಮಿ ಅಲ್ಲ. -ನೀನು ಸಂತೋಷಕ್ಕಾಗಿ ಓದುವೆ, ಡಾಲ್. 172 00:12:14,943 --> 00:12:17,529 -ನಿನ್ನನ್ನು ಇನ್ನೊಂದು ಕೇಳಬಹುದೇ? -ಹಾಂ, ಕೇಳು. 173 00:12:17,612 --> 00:12:20,073 ಆ ವ್ಯಕ್ತಿಯನ್ನು ನೀನು ಕೊಂದಾಗ ಹೇಗನಿಸಿತು? 174 00:12:27,497 --> 00:12:28,415 ಚೆನ್ನಾಗಿತ್ತು. 175 00:12:49,728 --> 00:12:51,438 ಇಂದು ತುಂಬಾ ಅಂದವಾಗಿ ಕಾಣ್ತೀಯ. 176 00:13:05,160 --> 00:13:07,829 -ಏನು? -ಏನೂ ಇಲ್ಲ. 177 00:13:09,831 --> 00:13:10,790 ಸರಿ ಮತ್ತೆ. 178 00:13:24,012 --> 00:13:25,430 ನಾನು ನಿನಗೆ ತೊಂದರೆ ಮಾಡಲ್ಲ. 179 00:13:36,608 --> 00:13:37,484 ಜೋಸ್, ತಡಿ. 180 00:13:45,825 --> 00:13:46,826 ಜೋಸ್, ನಿಲ್ಲಿಸೋಣವೇ? 181 00:13:48,286 --> 00:13:50,705 ನಿಲ್ಲು. ನಿಲ್ಲು. ಜೋಸ್, ನಿಲ್ಲು ಅಂದೆ. 182 00:13:51,998 --> 00:13:53,333 -ಅಯ್ಯೋ, ದೇವರೇ. -ಛೆ. 183 00:13:53,542 --> 00:13:55,460 ಕ್ಷಮಿಸು. ನನ್ನನ್ನು ಕ್ಷಮಿಸು. 184 00:13:58,838 --> 00:14:00,465 ತಗೋ. ತಗೋ. ಇದನ್ನುಪಯೋಗಿಸು. 185 00:14:03,760 --> 00:14:07,305 -ಏನು ದರಿದ್ರ, ರಯಾನ್? -ನಿನಗೆ ನಿಲ್ಲಲು ಹೇಳಿದೆ. 186 00:14:08,598 --> 00:14:10,433 ಜೋಸ್, ನೀನಂದ್ರೆ ಇಷ್ಟವಿಲ್ಲ ಅಂತಲ್ಲ. 187 00:14:10,517 --> 00:14:12,852 ವಾಹನ ನಿಲುಗಡೆಯಲ್ಲಿ ನನಗೆ ಸಂಭೋಗ ಮಾಡುವುದು ಬೇಡ. 188 00:14:12,936 --> 00:14:14,980 ಕ್ಯಾರೆನ್ ಜೊತೆ ಶೌಚಾಲಯದಲ್ಲಿ ಸಂಭೋಗಿಸಿದೆ. 189 00:14:15,981 --> 00:14:17,941 ಜೋಸ್, ಈಗ ಅದೆಲ್ಲಾ ಬದಲಾಗಿದೆ. 190 00:14:19,317 --> 00:14:22,737 ಜೋಸ್, ಇದು ನೀನಂದುಕೊಂಡಂತೆ ಅಲ್ಲ. ಜೋಸ್. ಜೋಸ್. 191 00:14:35,250 --> 00:14:36,126 ಏನಿದು ವಿಚಿತ್ರ? 192 00:14:37,711 --> 00:14:40,046 ದ್ವೇಷದ ಪತ್ರಗಳು. ಎಲ್ಲವೂ ಸಹ. 193 00:14:40,171 --> 00:14:43,216 ಸುರಕ್ಷತಾ ಮುಖ್ಯಸ್ಥರು ಇಂಥದ್ದನ್ನು ನೋಡಿಯೇ ಇಲ್ಲವಂತೆ. 194 00:14:43,300 --> 00:14:45,844 20 ವರ್ಷಗಳಿಂದ ಈ ವೃತ್ತಿಯನ್ನು ಮಾಡುತ್ತಿದ್ದಾರೆ. 195 00:14:45,927 --> 00:14:50,640 -ಈ ಆಡಳಿತದಲ್ಲಿ ಅವರನ್ನು ಖುಷಿಪಡಿಸುತ್ತೇವೆ. -ಇದು ಏನಂತ ನಿಮಗೆ ಗೊತ್ತಾ? 196 00:14:55,145 --> 00:14:57,188 -ನಾಯಿಯ ಹೇಲೇ? -ತಾಜಾ ನಾಯಿಯ ಹೇಲು. 197 00:14:57,397 --> 00:15:01,318 -ಎಲ್ಲವೂ ಇರುವ ಮಹಿಳೆಗಾಗಿ. -ಇದು ತಮಾಷೆಯಲ್ಲ. ನಿಮಗೆ ಎಚ್ಚರಿಸಿದ್ದೆ. 198 00:15:01,401 --> 00:15:06,364 ಹುಚ್ಚರನ್ನು ಕುಪಿತಗೊಳಿಸಬೇಡಿ ಎಂದಿದ್ದೆ. ಇವುಗಳಲ್ಲಿ ಕೊಲೆ ಬೆದರಿಕೆಗಳೂ ಇವೆ. 199 00:15:08,617 --> 00:15:10,160 "ಅರ್ಬನ್ಡಾಕ್ಸ್ ಸರಿ ಹೇಳಿದ್ದ. 200 00:15:10,243 --> 00:15:14,539 "ಬೇರೆ ಮಿಂಚುವ ಮಳ್ಳಿಗಳ ಬಗ್ಗೆಯಷ್ಟೇ ಕಾಳಜಿ ವಹಿಸುವ ಮಿಂಚುವ ಮಳ್ಳಿ ನೀನು. 201 00:15:14,623 --> 00:15:18,043 -"ಕಾದ ಕಬ್ಬಿಣವನ್ನು ನಿಂದ್ರೊಳಗೆ..." -ಸರಿ, ಅರ್ಥವಾಯಿತು ಬಿಡು. 202 00:15:18,126 --> 00:15:20,920 ಈಓಡಿಗಾಗಿ ಪರೀಕ್ಷಿಸುತ್ತಿದ್ದಾರೆ. ಎಲ್ಲರೂ ಮಾಡಿಸಬೇಕಂತೆ. 203 00:15:21,046 --> 00:15:24,716 ಏನು? ಇಲ್ಲ. ಇಲ್ಲ. ಅದು ಆಗುವುದಿಲ್ಲ. ಅದು ಕಾನೂನುರೀತ್ಯವೂ ಅಲ್ಲ. 204 00:15:24,799 --> 00:15:29,929 ಆಗಿದೆ, ನಿಜವಾಗಿ, ರಾಷ್ಟ್ರವ್ಯಾಪಿ ಸಾರ್ವಜನಿಕ ಆರೋಗ್ಯ ತುರ್ತುಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ, 205 00:15:30,013 --> 00:15:35,560 ಇದನ್ನು ನಾನು ಅಧಿಕೃತವಾಗಿ ಸುಮಾರು ನಾಲ್ಕು, ಐದು ನಿಮಿಷಗಳ ಹಿಂದಷ್ಟೇ ಘೋಷಿಸಿದೆ. 206 00:15:38,730 --> 00:15:42,108 ಹಾಯ್. ಈಗ ನಾವು ಭೇಟಿಯ ಯೋಜನೆ ಮಾಡುವುದಿಲ್ಲವಾದ್ದರಿಂದ ಇಲ್ಲಿಗೆ ಬಂದೆ. 207 00:15:42,859 --> 00:15:44,444 -ಡೇನಿಯಲ್. -ಬೂಟುಗಳು ಚೆನ್ನಾಗಿವೆ. 208 00:15:44,527 --> 00:15:48,573 ನಾವು ಬೂಟುಗಳ ಬಗ್ಗೆ ಮಾತನಾಡುತ್ತಿಲ್ಲ. ನಾನು ಹೊರಗಿರುವೆ. 209 00:15:57,248 --> 00:16:00,126 ನಾವು ಇದನ್ನು ಮಾಡಲಾಗದು. ಇದು ಗೌಪ್ಯತೆಗೆ ಧಕ್ಕೆಯಾಗುತ್ತೆ. 210 00:16:00,210 --> 00:16:03,588 ಇಲ್ಲ, ಇದು ಮಾಹಿತಿಯ ಸಂಗ್ರಹ. ಇದರಿಂದ ಕಚೇರಿಯನ್ನು ಅರ್ಥಮಾಡಿಕೊಳ್ಳಬಹುದು, 211 00:16:03,672 --> 00:16:06,174 ಜನರನ್ನು ಸುರಕ್ಷಿತವಾಗಿಡಬಹುದು, ಉತ್ತಮ ಕ್ರಿಯೆ ಮತ್ತು 212 00:16:06,257 --> 00:16:08,718 ನಿಯಮಗಳ ರೂಪಿಸುವ ಮಾಹಿತಿಯುಕ್ತ ಮೌಲ್ಯಮಾಪನ ನಡೆಸಬಹುದು. 213 00:16:08,802 --> 00:16:09,886 ಉತ್ತಮ ಕ್ರಿಯೆಗಳೇ? 214 00:16:09,969 --> 00:16:13,973 ಈಓಡಿ ಇರುವ ಮಹಿಳೆಯರಿಗೆ ನೀವು ಮತ್ತು ಯಾರು ಉತ್ತಮ ಕ್ರಿಯೆಗಳನ್ನು ನಿರ್ಧರಿಸುತ್ತೀರಿ? 215 00:16:14,057 --> 00:16:17,977 ಈಓಡಿ ಇರೋ ಎಲ್ಲಾ ಮಹಿಳೆಯರಿಗೂ ಅಲ್ಲ, ಸರ್ಕಾರಿ ಕಚೇರಿಗಳಲ್ಲಿ ಕೆಲಸ ಮಾಡುವವರಿಗೆ ಮಾತ್ರ. 216 00:16:18,061 --> 00:16:22,107 ಓ, ದೇವರೇ. ಇದು ಆಕ್ರಮಣಕಾರಿ, ಇದು ಅನೈತಿಕ, ಇದು ಅನ್ಯಾಯ. 217 00:16:22,190 --> 00:16:25,485 ಸರಿ, ಕೇಳು. ಶಾಂತವಾಗು. ನಾನೊಂದು ಪಟ್ಟಿಯನ್ನು ಕೇಳುತ್ತಿರುವೆ ಅಷ್ಟೇ. 218 00:16:25,568 --> 00:16:26,736 ಪಟ್ಟಿಯಿಂದಲೇ ಶುರು. 219 00:16:26,820 --> 00:16:31,991 ಆದರೆ ಆ ಪಟ್ಟಿ ಮಹಿಳೆಯರನ್ನು ವಜಾಗೊಳಿಸುವ ಆಯುಧವಾಗುತ್ತದೆ ಎಂಬುದು ನಮ್ಮಿಬ್ಬರಿಗೂ ಗೊತ್ತು. 220 00:16:32,200 --> 00:16:34,285 ನನ್ನ ಸಿಬ್ಬಂದಿಗೆ ಹಾಗೆ ಮಾಡಲಾರೆ. 221 00:16:37,580 --> 00:16:40,458 ನೀನು ಮತ್ತು ನಿನ್ನ ಸಿಬ್ಬಂದಿ ಪರೀಕ್ಷೆಯನ್ನು ನಿರಾಕರಿಸಬಹುದು. 222 00:16:43,294 --> 00:16:46,297 ಮತ್ತು ವೇತನಾರಹಿತ ರಜೆಯಲ್ಲಿ ಮನೆಗೆ ಹೋಗಬಹುದು. ಅದು ನಿಮ್ಮಿಷ್ಟ. 223 00:16:52,637 --> 00:16:56,182 ಬೂಟುಗಳು ನಿಜವಾಗಲೂ ಇಷ್ಟವಾದವು. ನಿನಗೆ ಚೆನ್ನಾಗಿವೆ. 224 00:17:00,937 --> 00:17:04,022 ಬೋಳಿ ಮಗ. ಹಾಳಾಗಲಿ. ನಾನು ಮಾಡಿಸುವುದಿಲ್ಲ. 225 00:17:04,190 --> 00:17:06,984 -ಅದು ನನ್ನಲ್ಲಿದೆ ಎಂದು ಅವನಿಗೆ ಹೇಳುವೆ. -ಮಾರ್ಗೋ. 226 00:17:07,068 --> 00:17:09,695 ಆತ ನನ್ನನ್ನು ಅಮಾನತು ಮಾಡಲಾಗದು. ನಾನು ಚುನಾಯಿತ ಪ್ರತಿನಿಧಿ. 227 00:17:09,779 --> 00:17:14,742 ನೀವೊಬ್ಬ ಚುನಾಯಿತ ಪ್ರತಿನಿಧಿ ಆಗಿರಬೇಕೆಂದರೆ ಅಥವಾ ಮತ್ತೊಮ್ಮೆ ಚುನಾಯಿತರಾಗಬೇಕೆಂದಿದ್ದರೆ, 228 00:17:14,826 --> 00:17:16,493 ಆ ವಿಷಯ ಮುಚ್ಚಿಡಿ. 229 00:17:17,162 --> 00:17:20,290 ಇದು ನಡೆಯುತ್ತಿರುವುದನ್ನು ನೋಡಿದರೆ, ಜನರು ತಯಾರಿಲ್ಲ. 230 00:17:23,167 --> 00:17:26,628 ಮಾರ್ಗೋ, ಯೋಚಿಸಿ. ಡ್ಯಾಂಡನ್ ಈಗ ಯಾಕೆ ಈ ಕೆಲಸ ಕೈಗೆತ್ತಿಕೊಂಡಿದ್ದಾನೆ ಅಂತ? 231 00:17:27,297 --> 00:17:30,467 ಯಾಕೆಂದರೆ ಅವನಿಗೆ ನಿಮ್ಮ ಭಯವಿದೆ. 232 00:17:31,176 --> 00:17:34,095 ಈ ಇಡೀ ರಾಷ್ಟ್ರದಲ್ಲಿ ಆ ಸೆನೆಟ್ ಕುರ್ಚಿಗಾಗಿ 233 00:17:34,179 --> 00:17:37,390 ಅವನನ್ನು ಮೀರಿಸಬಲ್ಲ ವ್ಯಕ್ತಿ ಅಂದರೆ ನೀವು ಒಬ್ಬರೇ. 234 00:17:37,474 --> 00:17:39,225 ಇದು ನಿಮ್ಮಲ್ಲಿದೆ ಎಂದವನು ಬಲ್ಲ. 235 00:17:39,309 --> 00:17:42,562 ಹಾಗಾಗಿ ನಿಮ್ಮನ್ನು ಕೆಳಗಿಳಿಸಲು ಇದನ್ನೆಲ್ಲಾ ಬಳಸುತ್ತಿದ್ದಾನೆ. 236 00:17:45,356 --> 00:17:50,487 ಸರಿ. ಸರಿ. ನಾನೇನು ಮಾಡಲಿ? 237 00:17:50,612 --> 00:17:52,572 ಸರಿ. ಇದರ ಪ್ರಕಾರ ದೇಹದೊಳಗೆ ವಿದ್ಯುತ್ 238 00:17:52,655 --> 00:17:55,450 ಸಂಕೇತ ಕಳಿಸುವುದರಿಂದ ಯಂತ್ರವು ಕಾರ್ಯನಿರ್ವಹಿಸುತ್ತದೆ. 239 00:17:55,533 --> 00:17:57,243 ದೇವರೇ. ತೀರಾ ಪ್ರಾಚೀನವಾಗಿದೆ. 240 00:17:57,327 --> 00:17:58,953 ಸ್ಕಯಿನ್ ಒಂದು ಕೋಶದಂತೆ ತುಂಬಿದಾಗ 241 00:17:59,037 --> 00:18:01,956 ಯಂತ್ರವು ಆಕಸ್ಮಿಕವಾದ ವಿದ್ಯುತ್ ಬಿಡುಗಡೆ ಮಾಡಿಸುತ್ತದೆ. 242 00:18:02,040 --> 00:18:04,459 -ಅದನ್ನು ಮಾಡದಿರುವುದು ಹೇಗೆ? -ಓ, ದೇವರೇ. 243 00:18:04,542 --> 00:18:07,045 ಇಲ್ಲಿ ಹೆಚ್ಚಾಗಿ ಏನೂ ಇಲ್ಲ. ಇದು ಹೊಸ ತಂತ್ರಜ್ಞಾನ. 244 00:18:07,128 --> 00:18:08,671 ಅಂದರೆ ಇದು ವಿಫಲಗೊಳ್ಳಬಹುದು. 245 00:18:08,755 --> 00:18:12,425 ಸರಿ, ಇಲ್ಲಿ ಕೆಲವು ನೋವು ನಿರ್ವಹಣಾ ತಂತ್ರಗಳು, ಆಳ ಉಸಿರಾಟದ ಬಗ್ಗೆ… 246 00:18:12,550 --> 00:18:15,011 ಲಮಾಜೆ ವಿಧಾನ ಉಪಯೋಗಿಸಿ ಒಬ್ಬಾಕೆ ಪರೀಕ್ಷೆ ಗೆದ್ದಳು. 247 00:18:24,103 --> 00:18:27,565 ಸರಿ. ಹಾಗಂದ್ರೆ, ನೋವು ನಿರ್ವಹಣೆ ಮತ್ತು ಆಳ ಉಸಿರಾಟ. 248 00:18:28,817 --> 00:18:32,362 ಸರಿ, ಹೆರಿಗೆ ಮತ್ತು ಬಾಲ್ಯದ ನೋವಿನ ನಡುವೆ, 249 00:18:34,864 --> 00:18:35,907 ಇದನ್ನು ನಿಭಾಯಿಸುವೆ. 250 00:18:41,120 --> 00:18:43,122 ಮೇಯರ್. ದಯವಿಟ್ಟು ಕುಳಿತುಕೊಳ್ಳಿ. 251 00:18:52,799 --> 00:18:57,136 ಆರಂಭಿಸುವ ಮುನ್ನ, ನಿಮ್ಮಲ್ಲಿ ಪೇಸ್ ಮೇಕರ್ ಇಲ್ಲಾ ಯಾವುದಾದರೂ ಆಂತರಿಕ ವೈದ್ಯಕೀಯ ಪರಿಕರಗಳಿವೆಯೇ? 252 00:18:57,804 --> 00:18:59,514 ನೀವು ಅದನ್ನು ಕೇಳಲಾಗದು. 253 00:19:00,890 --> 00:19:04,519 ಕೆಲ ವೈದ್ಯಕೀಯ ಪರಿಕರಗಳ ಮೇಲೆ ಈ ಯಂತ್ರವು ಪರಿಣಾಮ ಬೀರಬಹುದು. 254 00:19:05,937 --> 00:19:08,106 ಇಲ್ಲ, ನನ್ನಲ್ಲಿಲ್ಲ. 255 00:19:09,023 --> 00:19:11,025 ಇದು ಆಕ್ರಮಣಕಾರಿಯಾಗಿ ಅನಿಸಬಹುದೆಂದು ಬಲ್ಲೆ. 256 00:19:11,818 --> 00:19:15,488 ಇಂದು ಆಗಲೇ ನಾನೂ ಸಹ ಪರೀಕ್ಷೆಗೆ ಒಳಪಟ್ಟೆ. ಇದು ಭಯ ಮೂಡಿಸುತ್ತೆಂದು ಗೊತ್ತು. 257 00:19:15,572 --> 00:19:17,115 ನನಗೆ ನಿಜವಾಗಿ ತುಂಬಾ ಕೆಲಸಗಳಿವೆ. 258 00:19:18,199 --> 00:19:20,660 ಅರ್ಥವಾಯಿತು. ಇದಕ್ಕೆ ಹೆಚ್ಚು ಸಮಯ ಹಿಡಿಯಲ್ಲ. 259 00:19:21,202 --> 00:19:25,623 ನನ್ನ ಮುಂದೆ ಈಓಡಿ ಪರೀಕ್ಷೆ ಇದೆ. ಇದು ಸ್ಕಯಿನ್ ಇರುವಿಕೆಯನ್ನು ಹುಡುಕುತ್ತದೆ. 260 00:19:25,707 --> 00:19:28,001 ಸ್ಥಿರ ವಿದ್ಯುತ್ ಶಕ್ತಿ, ಈಓಡಿ ಅಂತಲೂ ಅಂತಾರೆ. 261 00:19:28,751 --> 00:19:32,088 ನಿಮಗೆ ಅದರ ಇರುವಿಕೆ ಗೊತ್ತಿಲ್ಲದೆಯೂ ನಿಮ್ಮಲ್ಲಿ ಈಓಡಿ ಇರಬಹುದು. 262 00:19:32,171 --> 00:19:35,008 ಫಲಿತಾಂಶಗಳನ್ನು ರಾಜ್ಯಪಾಲರ ಕಚೇರಿ ಮತ್ತು ಮಿಕ್ಕ ಪ್ರಮುಖ 263 00:19:35,091 --> 00:19:36,968 ರಾಜ್ಯ ಸಂಸ್ಥೆಗಳಿಗೆ ಒಪ್ಪಿಸಲಾಗುತ್ತದೆ. 264 00:19:37,260 --> 00:19:38,177 ಮಾಡಲೇ? 265 00:19:45,685 --> 00:19:49,814 ಈ ಪರೀಕ್ಷೆಯಲ್ಲಿ ನಿಮ್ಮ ದೇಹದ ಮೂಲಕ ವಿದ್ಯುತ್ ಶಕ್ತಿಯನ್ನು ಕಳಿಸಲಾಗುತ್ತದೆ. 266 00:19:49,898 --> 00:19:53,902 ನಿಮಗೆ ಜುಮ್ಮೆನಿಸುವ ಸಂವೇದನೆ, ಸ್ನಾಯು ಚಲನೆ ಅಥವಾ ಒತ್ತಡ, 267 00:19:53,985 --> 00:19:55,653 ತಲೆ ತಿರುಗುವಂತೆ ಅನಿಸಬಹುದು. 268 00:19:55,737 --> 00:19:58,031 ಇದನ್ನು ಮಾಡಿದ ನಂತರ ಹೇಗೆ ಬದುಕುತ್ತೀರಿ? 269 00:19:59,824 --> 00:20:04,162 ನೀವು ಈ ಫಲಿತಾಂಶಗಳಿಂದ ವಿಚಲಿತರಾದರೆ, ನಿಮಗೆ ನೆರವಾಗಲು ಆಪ್ತಸಮಾಲೋಚನೆ ಲಭ್ಯವಿದೆ. 270 00:20:05,038 --> 00:20:05,872 ಎಲ್ಲವೂ ತಯಾರೇ? 271 00:20:18,134 --> 00:20:20,303 ನನಗೇನೂ ಅನಿಸುತ್ತಿಲ್ಲ. ಅದೇನಾದರೂ ಮಾಡುತ್ತಿದೆಯೇ? 272 00:20:20,386 --> 00:20:21,804 ಆರಾಮವಾಗಿರಿ. 273 00:20:30,605 --> 00:20:31,689 ಏನನ್ನು ಬರೆಯುತ್ತಿರುವೆ? 274 00:20:31,773 --> 00:20:35,276 ಪರೀಕ್ಷೆ ಮುಗಿಯುವವರೆಗೂ ದಯವಿಟ್ಟು ಮಾತನಾಡಬೇಡಿ. ಧನ್ಯವಾದ. 275 00:21:16,359 --> 00:21:17,193 ಸರಿ. 276 00:21:21,197 --> 00:21:22,657 ಅಷ್ಟೇನಾ? ಮುಗೀತಾ? 277 00:21:22,824 --> 00:21:25,284 ಅಷ್ಟೇ. ನೀವು ತೇರ್ಗಡೆಯಾದಿರಿ. 278 00:21:33,835 --> 00:21:35,628 ಪ್ರಾಥಮಿಕಗಳಲ್ಲಿ ನಿಮಗೆ ಸಿಗುವೆ. 279 00:21:46,347 --> 00:21:47,890 ನನಗೆ ಸ್ವಲ್ಪ ಗಾಳಿ ಬೇಕು. 280 00:22:54,207 --> 00:22:58,169 ಸ್ಕಾರ್ಲೆಟ್ ಮಿನ್ನೋ? ನಿಜವಾಗಲೂ? ಅದೇನಾ ನಿನಗೆ ಹೊಳೆದದ್ದು? 281 00:22:58,586 --> 00:23:01,255 ಹೆಣ್ಣಿನ ಹೆಸರು ನಿನ್ನ ಜಾಡು ತಪ್ಪಿಸಬಲ್ಲದು ಅಂದ್ಕೊಂಡೆ. 282 00:23:02,090 --> 00:23:05,510 ಅಲ್ಲದೆ, ಹಾಂ, ಒಪ್ಪಿಕೊಳ್ಳುವೆ, ನಾನು ತಮಾಷೆ ಮಾಡುತ್ತಿದ್ದೆ. 283 00:23:10,473 --> 00:23:11,849 ಗೊತ್ತಿಲ್ಲ, ಡೆಕ್. 284 00:23:13,643 --> 00:23:14,894 ತುಂಬಾ ಒತ್ತಡ ಇದೆ. 285 00:23:15,895 --> 00:23:18,231 -ಇದಕ್ಕೆ ಅವರು ನನ್ನನ್ನು ಸೇರಿಸಿದರೆ… -ಅದು ಆಗಲ್ಲ. 286 00:23:18,606 --> 00:23:20,900 ನಿನ್ನ ಹೆಸರನ್ನು ಹೇಳುವುದಿಲ್ಲ. ನಿನಗೆ ಗೊತ್ತು. 287 00:23:24,195 --> 00:23:26,656 ಹೇಳ್ತೀನಿ ಕೇಳು. ಇದು ಒಳ್ಳೆಯ ಸುದ್ದಿ. 288 00:23:27,990 --> 00:23:30,201 ಮರು-ವಿಚಾರಣೆಗೆ ಕಾರ್ಪೇಥಿಯಾಗೆ ಹೋಗುತ್ತಿರುವೆ. 289 00:23:30,326 --> 00:23:31,869 ಒಳ್ಳೆಯದು. ಒಳ್ಳೆಯದು. 290 00:23:31,953 --> 00:23:36,249 ನೀನು ಪ್ರಪಂಚ ಸುತ್ತಾಡಿ, ವೀರನಾಗಿ ಪುಲಿಟ್ಜರ್ ಪ್ರಶಸ್ತಿ ಗೆಲ್ಲಬಹುದು, 291 00:23:36,332 --> 00:23:39,210 ಮತ್ತು ನಾನು ನನ್ನ ಮಿಕ್ಕ ಜೀವನವನ್ನು ಬಂಧಿಯಾಗಿ ಕಳೆಯಬೇಕು. 292 00:23:40,628 --> 00:23:43,923 -ನಿನ್ನ ಹೆಂಡತಿಗೆ ಇನ್ನೂ ಕೋಪವೇ? -ಯಾಕೆ ಕೇಳ್ತೀಯ ಬಿಡು. 293 00:23:44,298 --> 00:23:47,385 ಇಂಥ ಸುದ್ದಿಗಳನ್ನು ಬಯಲಿಗಳೆಯುವುದು ಮಾರ್ಗೋಗೆ ಇಷ್ಟ ಅಂದುಕೊಂಡಿದ್ದೆ. 294 00:23:47,468 --> 00:23:50,388 ಅವಳಿಗೆ ಇಷ್ಟ ಇತ್ತು. ಈಗ ಅವಳಿಗೆ ರಾಜಕೀಯವಷ್ಟೇ ಬೇಕು. 295 00:23:51,389 --> 00:23:55,393 ಅವಳು ನನ್ನನ್ನು ಮಾತನಾಡಿಸುವ ರೀತಿ ನೀನು ನೋಡಬೇಕು. ನನ್ನೊಂದಿಗೆ ಮಾತನಾಡಿದರೆ. 296 00:23:56,936 --> 00:24:01,190 ಆಶಾವಾದಿ ಶಕ್ತಿಯುತ ಹೆಂಗಸಿನೊಂದಿಗೆ ಇರುವುದು ನನಗೆ ಎಂದಿಗೂ ಸಮಸ್ಯೆಯಾಗಿರಲಿಲ್ಲ. ಎಂದಿಗೂ. 297 00:24:02,024 --> 00:24:04,819 -ಅವಳು ಮಾಡುತ್ತಿರುವ ಕೆಲಸ ಮುಖ್ಯವಾದದ್ದು. -ಆದರೆ? 298 00:24:06,737 --> 00:24:09,574 ಆದರೆ ನಾನು ಇದನ್ನು ಊಹಿಸಿರಲಿಲ್ಲ. 299 00:24:12,577 --> 00:24:16,289 ನನ್ನ ಮಕ್ಕಳೂ ಅಷ್ಟೇ. ನಮಗೆ ಯಾವಾಗಲೂ ಕೊಲೆ ಬೆದರಿಕೆಗಳು ಬರುತ್ತಿರುತ್ತವೆ. 300 00:24:16,372 --> 00:24:20,418 ನನ್ನ ಮಗಳಿಗೆ ತನ್ನ ಹುಟ್ಟುಹಬ್ಬದ ಪತ್ರಗಳನ್ನು ತೆರೆಯಲೂ ಆಗುತ್ತಿಲ್ಲ. 301 00:24:20,501 --> 00:24:25,506 ಇದು ತಾತ್ಕಾಲಿಕ. ಯಾರೂ ಶಾಶ್ವತವಾಗಿ ಮುಖಪುಟದ ಮೇಲೆ ಇರುವುದಿಲ್ಲ. 302 00:24:26,215 --> 00:24:30,261 ಆಕೆಯ 15 ನಿಮಿಷಗಳು ಕ್ಷೀಣಿಸುತ್ತವೆ ಮತ್ತು ನೀವು ದಂಪತಿಗಳ ಆಪ್ತಸಮಾಲೋಚನೆಗೆ ಹೋಗುತ್ತೀರಿ. 303 00:24:30,344 --> 00:24:34,223 ಎಲ್ಲೋ ಒಂದು ಸಮುದ್ರ ತೀರದಲ್ಲಿ ಪಾನೀಯಗಳೊಂದಿಗೆ ಪ್ರೀತಿಭರಿತ ರಜಾಸಮಯ ಕಳೆಯಿರಿ. 304 00:24:35,266 --> 00:24:37,185 ಗೊತ್ತಿಲ್ಲ, ಡೆಕ್. ಇದು ಬೇರೆ. 305 00:24:37,894 --> 00:24:40,479 -ಇನ್ನೊಂದು ಕೊಡ್ತೀರಾ? -ಪ್ರಪಂಚ ಬದಲಾಗುತ್ತಿದೆ… 306 00:24:40,563 --> 00:24:43,608 -ಇಲ್ಲ. ನಿನಗೆ ನಿಲ್ಲಿಸಲಾಗಿದೆ. -ಅದರೊಂದಿಗೆ ಬದಲಾಗುತ್ತಿದ್ದಾಳೆ. 307 00:24:44,567 --> 00:24:45,776 ನನಗೆ ಕುಡಿಯಲು ಕೊಡೇಲೇ. 308 00:24:46,027 --> 00:24:49,322 ಮೈಕ್, ಇದಕ್ಕೇ ಆಗಲ್ಲ ಅಂದೆ. ಒಳ್ಳೆಯವರಿಗೆ ನೀನು ತೊಂದರೆ ಕೊಡುತ್ತಿರುವೆ. 309 00:24:49,864 --> 00:24:51,365 ಬಿಯರ್ ಕೊಡೆ, ಸೂಳೆ ಮುಂಡೆ. 310 00:24:52,700 --> 00:24:54,118 ಸರಿ, ಇಷ್ಟೇ ಇನ್ನು. 311 00:24:56,162 --> 00:25:00,958 ಇಲ್ಲಿಂದ ಹೊರಡಲು ನಿನಗೆ 10 ಕ್ಷಣ ಸಮಯ ಇದೆ. ಹತ್ತು. ಒಂಬತ್ತು. ಎಂಟು. 312 00:25:03,294 --> 00:25:06,714 ಈಗ ಸರಿ ಹೊಂದುತ್ತೆ, ಅಲ್ವಾ, ಕಿಡಿಗಳ ಬೆರಳಮ್ಮ? 313 00:25:06,797 --> 00:25:09,175 ನಾನು ನಿನಗಿಂತ ದೊಡ್ಡದಾಗಿರುವೆ. ನಿನಗಿಂತ ಬಲಶಾಲಿ. 314 00:25:09,800 --> 00:25:13,721 -ನಿನಗೂ ಮರಳಿ ಶಾಕ್ ಕೊಡುವೆ. -ಮಾಡ್ತೀಯ ಬಿಡು. ಇದು ಹೇಗಿದೆ? 315 00:25:13,804 --> 00:25:14,639 ಬಿಡು. 316 00:25:14,722 --> 00:25:17,683 ಬೆದರಿಕೆ ಹಾಕಿದಳು. ನೀವೇ ನೋಡಿದ್ರಿ. ಆತ್ಮರಕ್ಷಣೆ ಇದು. 317 00:25:17,767 --> 00:25:20,603 -ಬಿಡು, ಗುರು. -ಮೈಕ್, ಹೊರಗಡೆ ಗಾಳಿಗೆ ಹೋಗೋಣ. 318 00:25:20,686 --> 00:25:23,397 -ಮುಂದಿನ ಸುತ್ತು ನನ್ನಿಂದ. -ನನ್ನನ್ನು ಬೆದರಿಸುವೆಯಾ? 319 00:25:23,522 --> 00:25:26,525 ಮೇಲಿರುವೆ ಅಂದುಕೊಂಡೆಯಾ? ನೀನು ಇಲ್ಲ. ನಿನ್ನ ಸ್ಥಾನದ ಅರಿವಾಗುತ್ತದೆ. 320 00:25:26,609 --> 00:25:28,277 -ಅರ್ಬನ್ಡಾಕ್ಸಿಗೆ ಗೊತ್ತು. -ನಡಿ. 321 00:25:28,361 --> 00:25:29,904 ಹಾಂ, ಬೈ, ಮೈಕ್. 322 00:25:52,885 --> 00:25:54,428 ನಿಮ್ಮಲ್ಲೇನಿದ್ದರೂ, ದಯವಿಟ್ಟು. 323 00:26:08,734 --> 00:26:11,320 ಶ್ರೀಮಂತ ಸರ್ಕಾರಗಳು ಕೊಲೆಯಿಂದ ಹೇಗೆ ತಪ್ಪಿಸಿಕೊಂಡವು - ಡೆಕ್ಲಾನ್ ಬ್ಲೀಜ್ ಅವರಿಂದ 324 00:26:20,997 --> 00:26:22,999 ಹೇ, ಸುಂದರಾಂಗ. 325 00:26:23,082 --> 00:26:24,041 ಕ್ಷಮಿಸಿ. 326 00:26:36,762 --> 00:26:40,516 ಮತ್ತೆ, ಜನಪ್ರಿಯ ತುಂಡೆ ಓಜೋ ಮರಳಿ ಲಸ್ಗಿಡಿಗೆ ಬಂದುಬಿಟ್ಟಿದ್ದಾರೆ. 327 00:26:40,641 --> 00:26:42,143 -ನಾನು ಜನಪ್ರಿಯನಲ್ಲ. -ನಿಜವಾಗಲೂ? 328 00:26:42,893 --> 00:26:46,022 ಎಲ್ಲಾ ಸಾಮಾಜಿಕ ತಾಣಗಳಲ್ಲೂ ಪರಿಶೀಲಿಸಲ್ಪಟ್ಟವನು ನೀನು. 329 00:26:46,689 --> 00:26:47,857 ಮಿ. ದಶಲಕ್ಷ ನೋಟಗಳು. 330 00:26:53,529 --> 00:26:57,533 -ನಿನಗೆ ಬೇಕಾದ ಎಲ್ಲವೂ ನಿನ್ನ ಬಳಿ ಇದೆ. -ಎಲ್ಲವೂ ಅಲ್ಲ. 331 00:26:59,076 --> 00:27:01,746 ಏನಾದರೂ ಕುಡಿಯುವೆಯಾ? ಇನ್ನೂ ಸಮಯವಿದೆ. 332 00:27:04,623 --> 00:27:06,584 ಅವಳು ತುಂಬಾ ಚಿಕ್ಕವಳು. ಏನು ಗೊತ್ತಾ? 333 00:27:06,667 --> 00:27:09,337 ವಾಲೆ ಈ ಮದುವೆ ಬೇಡ ಅಂತಿರೋದು ನನಗೆ ಆಶ್ಚರ್ಯ ಇಲ್ಲ. 334 00:27:09,420 --> 00:27:11,964 ಆ ಹುಡುಗನಿಗೆ ಮಾಂಸಖಂಡಗಳಿದ್ದವು ಆದರೆ ಶಕ್ತಿ ಇರಲಿಲ್ಲ. 335 00:27:12,715 --> 00:27:15,634 ಹೇಳು. ನಿನಗದು ನಿಜ ಅಂತ ಗೊತ್ತು. ಸುಲಭವಾಗಿ ಭಯಗೊಳ್ಳುತ್ತಾನೆ. 336 00:27:15,760 --> 00:27:18,929 ದೊಡ್ಡ ಮನುಷ್ಯ ಆಗಬೇಕೆಂದುಕೊಂಡ ಆದರೆ ಚಿಕ್ಕ ಹುಡುಗನ ಹಾಗಾಡ್ತಾನೆ. 337 00:27:19,138 --> 00:27:22,350 ಅವನು ಸಂವೇದನಾಶೀಲ. ಗಂಡಸರಿಗೆ ಭಾವನೆಗಳಿರಬಾರದೇ? 338 00:27:24,810 --> 00:27:28,230 ಅಂದರೆ ಅವನ ಇಡೀ ಜೀವನವೇ ತಲೆಕೆಳಗಾಗಿದೆ. ಅವನು ಸ್ವಲ್ಪ ಉಸಿರಾಡಲಿ. 339 00:27:34,987 --> 00:27:35,905 ರಿಯಾಧ್ ಹೇಗಿತ್ತು? 340 00:27:37,865 --> 00:27:38,783 ಅದು 341 00:27:41,619 --> 00:27:42,536 ಬಿಸಿಯಾಗಿತ್ತು. 342 00:27:47,917 --> 00:27:48,876 ನಿನ್ನ ಬದಲಾಯಿಸಿತು. 343 00:27:51,837 --> 00:27:53,464 ಜೀವನವನ್ನು ಬದಲಾಯಿಸುತ್ತದೆಯಲ್ವಾ? 344 00:27:54,882 --> 00:27:56,592 ಈಓಡಿ ತಂದುಕೊಟ್ಟಿರುವ ಸ್ವಾತಂತ್ರ್ಯ. 345 00:27:58,260 --> 00:28:01,222 ಸೋದರಿಕೆ. ಅದನ್ನು ಇಷ್ಟು ಗಟ್ಟಿಯಾಗಿ ನಾನೆಲ್ಲೂ ಕಂಡಿಲ್ಲ. 346 00:28:02,056 --> 00:28:04,058 ನೀನು ಇಲ್ಲಿ ಸೋದರಿಕೆಯನ್ನು ನೋಡಿಲ್ವಾ? 347 00:28:06,727 --> 00:28:10,564 ಇಲ್ಲ. ನೀನು ನನ್ನೊಂದಿಗೆ ಬಂದಿದ್ದರೆ ಚೆನ್ನಾಗಿರುತ್ತಿತ್ತು. 348 00:28:10,773 --> 00:28:16,654 ಗೊತ್ತಾ, ನಾನು ನಿನ್ನಿಂದಾಗಿಯೇ ಹೋದೆ. ಅಂದು ರಾತ್ರಿ ನೀನು ಹೇಳಿದ ಮಾತಿನಿಂದ. 349 00:28:17,738 --> 00:28:21,367 ನೀನು ಸರಿ ಹೇಳಿದೆ. ನಾನೊಬ್ಬ ಸವಲತ್ತುಭರಿತ ದಡ್ಡನಾಗಿದ್ದೆ ಅಷ್ಟೇ. 350 00:28:24,453 --> 00:28:26,038 ನೀನು ನನ್ನೊಂದಿಗೆ ಬರಬೇಕಿತ್ತು. 351 00:28:28,707 --> 00:28:32,044 ನನಗೆ ಗೊತ್ತಿರಲಿಲ್ಲ, ಆದರೆ ಇಲ್ಲಿ ಮಾಡಲು ನನಗೆ ಕೆಲಸವಿದೆ. 352 00:28:33,921 --> 00:28:35,423 ಯಾವುದರಲ್ಲಿ ಮಗ್ನಳಾಗಿರುವೆ? 353 00:28:37,091 --> 00:28:38,008 ಸಹಸಂಬಂಧ. 354 00:28:39,260 --> 00:28:42,346 ನಾವು ನೈಜೀರಿಯಾವನ್ನು ಗುಣಪಡಿಸಬೇಕು. 355 00:28:43,931 --> 00:28:48,936 ಮಿಕ್ಕ ಪ್ರಪಂಚ ತಮ್ಮನ್ನು ತಾವು ನೋಡಿಕೊಳ್ಳಲಿ. ಯಾವಾಗಲೂ ಅದೇ ಮಾಡ್ತಾರೆ. 356 00:28:49,019 --> 00:28:52,356 -ಅವರ ಕೆಲಸ ನಮ್ಮ ಮೇಲೆ ಪರಿಣಾಮ ಬೀರುತ್ತೆ. -ನಾವು ಒಳಗಿನಿಂದ ಬಲಗೊಂಡರೆ ಅಲ್ಲ. 357 00:28:52,440 --> 00:28:55,401 -ಪ್ರಪಂಚ ಹಾಗೆ ನಡೆಯುವುದಿಲ್ಲ. -ಪ್ರಪಂಚವು ಬದಲಾಗಿದೆ. 358 00:28:56,819 --> 00:29:00,865 ನಿಜವಾದ ಮಾತೃಪ್ರಧಾನತೆಯನ್ನು ತರುವ ಅವಕಾಶ ನಮಗಿಲ್ಲಿದೆ. 359 00:29:03,033 --> 00:29:06,454 ದೇಶವನ್ನು ಹಾಳುಮಾಡಲು ಪುರುಷರು ಬಿಟ್ಟಿರುವ ಭ್ರಷ್ಟಾಚಾರವನ್ನು ನಾಶಗೊಳಿಸುವುದು. 360 00:29:16,505 --> 00:29:17,506 ನಿನ್ನ ನೆನಪಾಗುತ್ತೆ. 361 00:29:20,176 --> 00:29:21,427 ನನಗೆ ನಿನ್ನ ಕನಿಕರ ಬೇಡ. 362 00:29:21,760 --> 00:29:25,097 -ನೋಡು, ನ್ದುಡಿ. ನಾನು... -ನನಗೆ ನಿನ್ನಿಂದ ಬೇರೆ ಏನೋ ಬೇಕು. 363 00:30:30,538 --> 00:30:34,917 -ನಿನ್ನಲ್ಲಿ ಅದು ಇದೆಯೇ? -ನೀನೇ ಹೇಳು, ತುಂಡೆ. 364 00:31:00,484 --> 00:31:03,862 ನೀನು ಅದರ ಬಗ್ಗೆ ಬರೆಯಬೇಕು. ನಿನ್ನ ಪ್ರಯಾಣದ ಬಗ್ಗೆ ಪುಸ್ತಕ ಮಾಡು. 365 00:31:06,156 --> 00:31:07,491 ನಾನೆಲ್ಲಿಗೆ ಹೋಗುತ್ತಿರುವೆ? 366 00:31:10,911 --> 00:31:11,787 ಎಲ್ಲಾ ಕಡೆ. 367 00:31:22,673 --> 00:31:23,632 ನನ್ನ ಜೊತೆ ಬಾ. 368 00:31:27,344 --> 00:31:28,387 ನನ್ನ ಕೆಲಸ ಇಲ್ಲಿದೆ. 369 00:31:48,115 --> 00:31:49,658 -ಮದುವೆ ನಡೆಯುತ್ತಿದೆಯೇ? -ಹೌದು. 370 00:31:49,742 --> 00:31:50,576 ಛೆ. 371 00:31:58,208 --> 00:31:59,376 ನನ್ನೊಬ್ಬಳನ್ನೇ ಬಿಡಿ. 372 00:32:00,336 --> 00:32:02,588 ನಾನು. ಮ್ಯಾಟಿ ನನ್ನನ್ನು ಒಳಗೆ ಬಿಟ್ಟ. 373 00:32:24,902 --> 00:32:25,736 ಹಾಯ್. 374 00:32:28,864 --> 00:32:32,493 -ನನ್ನನ್ನು ಕ್ಷಮಿಸು. -ಇಲ್ಲ, ನನ್ನನ್ನು ಕ್ಷಮಿಸು. 375 00:32:32,576 --> 00:32:38,582 ಕಾರಿನಲ್ಲಿ ನಾನು ನಿನ್ನ ಮೇಲೆ ರೇಗಬಾರದಿತ್ತು. ನನ್ನ ಈಓಡಿ ಅಷ್ಟು ಚೆನ್ನಾಗಿ ಕೆಲಸ ಮಾಡಲ್ಲ. 376 00:32:38,832 --> 00:32:44,380 ಕೆಲವೊಮ್ಮೆ ನಿಂತು ಹೋಗುತ್ತದೆ ಮತ್ತು ನನ್ನ ಇಡೀ ದೇಹವನ್ನೇ ನಿಯಂತ್ರಿಸಲಾರಂಭಿಸುತ್ತದೆ. 377 00:32:46,548 --> 00:32:49,927 ಅದು ನಿನಗೆ ಭಯಪಡಿಸಿರಬಹುದು ಎಂದು ನಾನು ಅರ್ಥ ಮಾಡಿಕೊಳ್ಳಬಲ್ಲೆ. 378 00:32:50,886 --> 00:32:53,764 ವಿಷಯ ಅದಲ್ಲ. ನಿನ್ನ ಶಕ್ತಿ ನನ್ನನ್ನು ಹೆದರಿಸಲ್ಲ. 379 00:32:55,599 --> 00:32:59,978 ಮತ್ತೆ ಯಾಕೆ ಬೇಡ ಅಂತ… 380 00:33:00,062 --> 00:33:02,022 ನಾನು ನಿನಗೊಂದು ವಿಚಾರ ತಿಳಿಸಬೇಕು. 381 00:33:11,281 --> 00:33:14,910 ನಾನು ದ್ವಿಲಿಂಗಿ. 382 00:33:15,452 --> 00:33:17,496 ಎರಡೂ ಲಿಂಗಗಳೊಂದಿಗೆ ಹುಟ್ಟಿದೆ. 383 00:33:19,498 --> 00:33:25,295 ಮಗುವಾಗಿದ್ದಾಗ ಶಸ್ತ್ರಚಿಕಿತ್ಸೆಗೆ ಒಳಪಟ್ಟೆ, ಆದರೆ ನಾನು ಹುಡುಗ. ನನ್ನನ್ನು ಹುಡುಗ ಎನ್ನುವೆ. 384 00:33:30,008 --> 00:33:30,843 ಸರಿ. 385 00:33:33,345 --> 00:33:34,179 ಸರಿ. 386 00:33:36,682 --> 00:33:42,396 ಅದು, ಏನಂದ್ರೆ, ನೀನು ಯಾರೇ ಆಗಿದ್ರೂ ನನಗಿಷ್ಟ. 387 00:33:43,439 --> 00:33:45,816 ಅಂದರೆ, ನೀನಂದ್ರೆ ನನಗಿಷ್ಟ. 388 00:33:46,191 --> 00:33:49,570 ಮತ್ತು ನಾನು ನಿನ್ನನ್ನು ಇಷ್ಟಪಡುತ್ತಲೇ ಇರುತ್ತೇನೆ. 389 00:33:50,571 --> 00:33:52,364 -ಗೊತ್ತಾ? -ಹಾಂ. 390 00:33:55,159 --> 00:33:56,076 ಸರಿ. 391 00:34:17,054 --> 00:34:18,348 ಏನಿದು ಅಚ್ಚರಿ? 392 00:34:21,935 --> 00:34:25,856 -ಹೇಗೆ? -ನನ್ನ ಎಸ್ಟ್ರೋಜನ್ ಪ್ರಮಾಣ ಹೆಚ್ಚಿದೆ. 393 00:34:27,274 --> 00:34:30,444 ಹಾಗಾಗಿ ಇದನ್ನು ಮಾಡಬಲ್ಲೆ ಅಂದುಕೊಳ್ಳುವೆ. 394 00:34:36,699 --> 00:34:38,034 ಎಷ್ಟು ದಿನಗಳಿಂದ ಇದೆ? 395 00:34:40,788 --> 00:34:44,416 ನಿನ್ನ ಲಾಕರ್ ಬಳಿ ನೀನು ಆಕಸ್ಮಿಕವಾಗಿ ಶಾಕ್ ಹೊಡೆಸಿದಾಗ. 396 00:34:44,875 --> 00:34:48,670 ನನಗೆ ಹುಚ್ಚು ಅನಿಸಿತು, ಆಮೇಲೆ ನನಗೊಬ್ಬನಿಗೇ ಅಲ್ಲ ಅಂತ ಗೊತ್ತಾಯ್ತು. 397 00:34:51,255 --> 00:34:56,469 ಹಾಗಂದರೆ ನಾವು ಜೊತೆಯಾಗಿರುವ ಕಾಲದುದ್ದಕ್ಕೂ ಇದು ನಿನ್ನಲ್ಲಿತ್ತಾ? 398 00:34:57,429 --> 00:35:00,140 ಹುಡುಗಿಯರನ್ನು ತರಗತಿಯಿಂದ ಹೊರಕಳಿಸುವಾಗ ಕೂಡ? 399 00:35:00,265 --> 00:35:04,353 ನನ್ನದರೊಂದಿಗೆ ನಾನು ಕಷ್ಟಪಡುವಾಗ ಇಷ್ಟು ಕಾಲ ನಿನ್ನಲ್ಲಿತ್ತು. 400 00:35:05,437 --> 00:35:08,649 ಬೇರೆ ಯಾರಿಗೂ ಗೊತ್ತಾಗುವುದು ನನಗೆ ಬೇಕಿರಲಿಲ್ಲ. 401 00:35:08,732 --> 00:35:10,692 ನಮ್ಮಮ್ಮನ ಜೀವ ಅಪಾಯದಲ್ಲಿದೆ. 402 00:35:11,693 --> 00:35:16,615 ಸ್ಕಯಿನ್ ಇರುವ ಜನರನ್ನು ರಕ್ಷಿಸುವುದಕ್ಕಾಗಿ ಪ್ರತಿದಿನ ಜೀವ ಬೆದರಿಕೆ ಎದುರಿಸುತ್ತಿದ್ದಾಳೆ. 403 00:35:16,698 --> 00:35:20,452 -ಮತ್ತು ನಿನ್ನದನ್ನು ಮುಚ್ಚಿಟ್ಟಿರುವೆ. -ಜೋಸ್, ನಾನು ಈಓಡಿ ಇರುವ ಹುಡುಗ. 404 00:35:21,370 --> 00:35:24,748 ಸ್ಕಯಿನ್ ತೆಗೆಸಿಕೊಳ್ಳುತ್ತಿರುವ ಹುಡುಗಿಯರ ಬಗ್ಗೆ ಅಂಕಣಗಳನ್ನು ನೋಡಿರುವೆಯಾ? 405 00:35:24,832 --> 00:35:28,335 -ನನಗೇನು ಮಾಡಬಲ್ಲರೆಂದು ಊಹಿಸು. -ಆದರೆ ನೀನು ಪ್ರಪಂಚಕ್ಕೆ ಹೇಳಬೇಕಿಲ್ಲ. 406 00:35:28,418 --> 00:35:31,129 ನನಗೆ ಹೇಳಲು ಹೇಳುತ್ತಿರುವೆ. ನಿನ್ನ ಪ್ರೇಯಸಿಗೆ. 407 00:35:31,213 --> 00:35:32,756 ಸರಿ, ಈಗ ಹೇಳುತ್ತಿದ್ದೇನಲ್ವಾ? 408 00:35:33,590 --> 00:35:37,803 ನಾನು ಹೇಳದಿದ್ದರೂ, ಇದು ನನ್ನ ದೇಹ. ನಿನಗೆ ಯಾವುದೇ ಹಕ್ಕಿಲ್ಲ. 409 00:35:39,555 --> 00:35:40,430 ಏನು ಗೊತ್ತಾ? 410 00:35:43,851 --> 00:35:44,935 ನನಗಿದು ಬೇಡ. 411 00:35:48,105 --> 00:35:49,064 ಏನು? 412 00:36:00,701 --> 00:36:01,577 ಛೆ. 413 00:36:04,121 --> 00:36:05,747 ಡ್ಯಾರೆಲ್? ಡಾಲ್? 414 00:36:08,417 --> 00:36:09,751 ಅವನು ಹೊರಗೆ ಹೋಗಿರಬಹುದು. 415 00:36:19,761 --> 00:36:21,555 ನನಗೇನೂ ನಿನ್ನ ಭಯವಿಲ್ಲ. 416 00:36:23,390 --> 00:36:26,476 -ನಿನಗಿದನ್ನು ಕೊಡಬಲ್ಲೆ, ಬಾರ್ಬರಾ. -ನನಗದು ಬೇಡ. 417 00:36:28,729 --> 00:36:32,232 -ನಿನಗೆ ಸುರಕ್ಷಿತ ಅನಿಸಬಹುದು. -ನನಗದು ಬೇಡ. 418 00:36:34,192 --> 00:36:35,694 -ನಿನಗೆ ಅರ್ಥ ಆಯ್ತಾ? -ಸರಿ. 419 00:36:35,777 --> 00:36:39,489 ಇಲ್ಲ, ಸರಿ ಇಲ್ಲ. ಸರಿ ಇಲ್ಲ. ನೀನು ನನ್ನ ಮಗನನ್ನು ಕೊಂದೆ! 420 00:36:40,032 --> 00:36:44,536 ಅವನನ್ನು ಸುರಕ್ಷಿತವಾಗಿಡಲು ಎಲ್ಲವನ್ನೂ ಮಾಡಿದೆ. ಆಮೇಲೆ ನೀನು ಬಂದೆ, ಈಗವನು ಸತ್ತಿದ್ದಾನೆ. 421 00:36:44,620 --> 00:36:46,872 ಆದರೆ ನಿನಗೆ ಅದರ ಚಿಂತೆಯೇ ಇಲ್ಲ. 422 00:36:46,955 --> 00:36:49,625 -ನನಗೆ ಚಿಂತೆಯಿದೆ. -ಅವನು ನನ್ನ ಮಗು. 423 00:36:49,958 --> 00:36:51,460 ನಾನು ಅವನನ್ನು ಕಾಪಾಡಬೇಕಿತ್ತು. 424 00:36:51,668 --> 00:36:53,629 -ಕ್ಷಮಿಸು. -ಅವನು ನನಗಿಲ್ಲಿ ಬೇಕು. 425 00:36:53,962 --> 00:36:57,966 -ಟೆರ್ರಿಯನ್ನು ಪ್ರೀತಿಸುತ್ತಿದ್ದೆ. ನನ್ನ ಸೋದರ. -ಅವನು ನಿನ್ನ ಸೋದರನಲ್ಲ! 426 00:36:58,050 --> 00:37:00,761 ಅವನಿಗೂ ನಿನಗೂ ಸಂಬಂಧವಿಲ್ಲ! ಅವನು ನನ್ನವನು! 427 00:37:00,928 --> 00:37:03,388 ಸರಿ, ಸರಿ, ಸರಿ. ಬಿಡು. ಬಿಡು. 428 00:37:03,472 --> 00:37:06,433 ಆಯ್ತು. ಆಯ್ತು, ಚಿನ್ನ. ಸರೀನಾ? ನಂಗೊತ್ತು. 429 00:37:09,102 --> 00:37:09,937 ಆಯ್ತಾ? 430 00:37:10,020 --> 00:37:12,606 ಬಿಡು. ಹೇ. ಒಂದು ಕಪ್ ಚಹಾ ಮಾಡು. 431 00:37:14,566 --> 00:37:16,234 ಪರವಾಗಿಲ್ಲ. ಪರವಾಗಿಲ್ಲ. 432 00:37:18,445 --> 00:37:19,780 ಹೊರಗೆ ಹೋಗೋಣ. 433 00:37:22,449 --> 00:37:23,784 ನಿನ್ನ ಮೂಗು ಒರೆಸಿಕೋ. 434 00:37:28,747 --> 00:37:31,708 ನನಗೆ ಹೋಗಲು ಹೇಳಬೇಕಿದ್ದರೆ, ಸುಮ್ಮನೆ ಹೇಳಿಬಿಡುವೆಯಾ? 435 00:37:59,987 --> 00:38:03,573 ನಿಮಗೆ ದೀರ್ಘಾಯಸ್ಸಿರಲಿ. ಕಾರು ಅಪಘಾತ. ತುಂಬಾ ಭೀಕರ ವಿಚಾರ. 436 00:38:04,408 --> 00:38:08,328 -ಪಾಪ ನಿಮ್ಮ ಮಗ. -ಹೌದು, ಹಾಗೆಯೇ. ಭೀಕರ. 437 00:38:10,288 --> 00:38:12,708 ಮತ್ತೆ, ನನಗೇನಾದರೂ ಕಲ್ಲುಗಳಿವೆಯೇ? 438 00:38:13,083 --> 00:38:16,795 -ಹಿಂದಿನ ರಾಶಿಗೆ ಪಾವತಿಸುವೆಯಾ ಮೊದಲು? -ಹಾಂ, ಅದನ್ನೇ ಮಾಡುವವನಿದ್ದೆ. 439 00:38:37,232 --> 00:38:40,736 -ಏನಿದು? -ಇದು ಅರ್ಧ. ಮಿಕ್ಕಿದ್ದು ಆಮೇಲೆ ಕೊಡ್ತೀನಿ. 440 00:38:40,819 --> 00:38:43,780 -ಇದನ್ನು ನಾವು ಮತ್ತೆ ಮಾಡ್ತಿಲ್ಲ ತಾನೇ? -ಇಲ್ಲ, ಏನಂದ್ರೆ... 441 00:38:43,947 --> 00:38:47,659 ಸರಿ, ಕೇಳು. ಏನು ವಿಷಯ? ಏನು ವಿಷಯ? 442 00:38:51,538 --> 00:38:53,707 ಸರಿ, ನಾನು ಸಿಕ್ಕಿಕೊಂಡೆ. 443 00:38:53,790 --> 00:38:56,209 ರಾಕ್ಸ್, ಶಾಕ್ ಕೊಡು ಇವನಿಗೆ. 444 00:38:58,712 --> 00:38:59,546 ಬಾ. 445 00:38:59,629 --> 00:39:03,133 ಅವನ ಎಲ್ಲವೂ ಅಲ್ಲ. ನನಗೆ ಯಾರೂ ಸಾಯೋದು ಬೇಡ. ಸ್ವಲ್ಪ ಅಷ್ಟೇ. 446 00:39:03,925 --> 00:39:04,760 ಇಲ್ಲ. 447 00:39:04,843 --> 00:39:06,636 -ಬರ್ನಿ. -ಶಾಕ್ ಕೊಡು ಇವನಿಗೆ. 448 00:39:07,345 --> 00:39:09,639 -ನನಗೆ ಬೇಕಿಲ್ಲ. -"ನನಗೆ ಬೇಕಿಲ್ಲ." 449 00:39:10,891 --> 00:39:14,186 "ನನಗೆ ಬೇಕಿಲ್ಲ." ದರಿದ್ರ. ಮಕ್ಕಳು. 450 00:39:20,192 --> 00:39:21,651 ಈಗ ಇವಳಿಗೆ ಪುಕ್ಕಲು. 451 00:39:26,031 --> 00:39:29,701 ಗೊತ್ತಾಯ್ತು. ತಪ್ಪು ಮಾಡಿದೆ. ನಾನು ಮಾಡಿದ ರೀತಿ ತಪ್ಪೇ. ಕ್ಷಮೆ ಕೇಳಲ್ಲ. 452 00:39:29,785 --> 00:39:31,787 -ಏನು ನೀನು? -ಅವನು ನನ್ನ ತಾಯಿಯ ಕೊಂದ. 453 00:39:33,413 --> 00:39:36,541 -ನಿಜವಾಗಿ ಹೇಳ್ತಿದ್ದೀಯಾ? -ಟೆರ್ರಿ ನನ್ನಿಂದ ಸತ್ತಿಲ್ಲ. 454 00:39:37,375 --> 00:39:38,502 ಅದು ದುರಾದೃಷ್ಟ. 455 00:39:40,212 --> 00:39:43,298 -ಮಿತಿ ಮೀರಬೇಡ, ರಾಕ್ಸಿ. -ಅವನೇ ನನ್ನ ಜೊತೆ ಬಂದಿದ್ದು. 456 00:39:43,381 --> 00:39:46,551 ಅವನೇ ಮೊದಲು ಗನ್ ತೆಗೆದದ್ದು. ನಾನಲ್ಲಿ ಯಾಕೆ ಹೋಗ್ತಿದ್ದೆ ಗೊತ್ತಿತ್ತು. 457 00:39:48,762 --> 00:39:53,141 ಸಾಕು, ರಾಕ್ಸ್. ಆಯ್ತಾ? ನನ್ನ ಸಹನೆ ಪರೀಕ್ಷಿಸಬೇಡ. 458 00:39:53,225 --> 00:39:54,059 ಇಲ್ಲಾಂದ್ರೆ ಏನು? 459 00:39:54,142 --> 00:39:56,937 -ನನ್ನ ಸಹನೆ ಪರೀಕ್ಷಿಸಬೇಡ! -ಇಲ್ಲಾಂದ್ರೆ ಏನು? 460 00:40:13,912 --> 00:40:14,913 ದಿನ ಹೇಗಿತ್ತು? 461 00:40:21,378 --> 00:40:24,256 ನನ್ನ ದಿನ ಚೆನ್ನಾಗಿತ್ತು. ಹಾಂ, ಚೆನ್ನಾಗಿತ್ತು. 462 00:40:26,091 --> 00:40:27,384 ಕೇಳಿದ್ದಕ್ಕೆ ಧನ್ಯವಾದ. 463 00:40:29,177 --> 00:40:31,096 ಜೋಸ್, ನಿನ್ನ ದಿನ ಹೇಗಿತ್ತು? 464 00:40:32,806 --> 00:40:34,599 ನನಗದು ಮಾತನಾಡಲು ಇಷ್ಟವಿಲ್ಲ. 465 00:40:35,517 --> 00:40:36,351 ಸರಿ. 466 00:40:37,894 --> 00:40:39,938 -ಮ್ಯಾಟಿ? -ನೀವು ವಿಚ್ಛೇದನ ಪಡೆಯುತ್ತೀರಾ? 467 00:40:40,188 --> 00:40:45,277 -ಏನು? ಇಲ್ಲ. -ಇಲ್ಲ. ಅರೆ. ಹಾಗ್ಯಾಕೆ ಕೇಳ್ತೀಯಾ? 468 00:40:45,360 --> 00:40:49,614 -ಯಾಕಂದ್ರೆ ಹೀಗೆ ಊಟದ ಮೇಜಿನ ಮಾತಾಡುತ್ತಿದ್ದೇವೆ. -ಕುಟುಂಬಗಳು ಊಟದ ಮೇಜಿನ ಮೇಲೆ ತಿಂತಾರೆ. 469 00:40:49,698 --> 00:40:52,159 -ನಾವಲ್ಲ. -ಇತ್ತೀಚೆಗಿಲ್ಲ, ಅಷ್ಟೇ. 470 00:40:53,160 --> 00:40:55,162 -ವಿಚಿತ್ರವಾಗಿದೆ. -ವಿಚಿತ್ರವಾಗಿದೆ. 471 00:40:57,455 --> 00:41:01,501 ಹಾನಾಳ ತಂದೆತಾಯಿಯರ ವಿಚ್ಛೇದನವಾಗಿ ಈಗ ಎರಡೆರಡು ಕ್ರಿಸ್ಮಸ್ ಮಾಡ್ತಾಳೆ. 472 00:41:02,085 --> 00:41:05,630 -ಎಷ್ಟೊಂದು ಉಡುಗೊರೆಗಳು. -ಸರಿ. ನಾವು ವಿಚ್ಛೇದನ ಪಡೆಯುತ್ತಿಲ್ಲ. 473 00:41:05,922 --> 00:41:10,760 ನಾವು ಅಡಚಣೆಯಿಲ್ಲದೆ ಜೊತೆಯಾಗಿ ಕೂರೋಣ ಅಂದುಕೊಂಡೆ. 474 00:41:12,012 --> 00:41:17,893 ಯಾಕಂದ್ರೆ ನಾನಿಂದು ವೃತ್ತಿಪರವಾಗಿ ದೊಡ್ಡ ನಿರ್ಧಾರ ಕೈಗೊಂಡೆ. 475 00:41:18,560 --> 00:41:20,604 ಅದು ಇಡೀ ಕುಟುಂಬದ ಮೇಲೆ ಪರಿಣಾಮ ಬೀರಲಿದೆ. 476 00:41:23,982 --> 00:41:26,193 ಸೆನೆಟ್ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವೆ. 477 00:41:28,570 --> 00:41:30,363 -ಅಭಿನಂದನೆಗಳು. -ಧನ್ಯವಾದ. 478 00:41:37,704 --> 00:41:40,916 ಅದ್ಭುತ. ನಿಜಕ್ಕೂ ಅದ್ಭುತ. ನನಗೆ ನಿನ್ನ ಬಗ್ಗೆ ಹೆಮ್ಮೆ ಎನಿಸುತ್ತಿದೆ. 479 00:41:41,458 --> 00:41:44,669 -ಇದಕ್ಕಾಗಿ ಎಷ್ಟು ಕಷ್ಟಪಟ್ಟಿರುವೆ ಎಂದು ಗೊತ್ತು. -ನಿನಗೆ ನನ್ನ ಮತವಿಲ್ಲ. 480 00:41:45,337 --> 00:41:49,507 -ಏನೋ, ಮ್ಯಾಟಿ. ಆಕೆ ನಿನ್ನ ತಾಯಿ. -ನಿನಗೆ ಮತ ಹಾಕಲೂ ಆಗುವುದಿಲ್ಲ. ನಿನಗಿನ್ನೂ 15. 481 00:41:49,591 --> 00:41:52,052 ಯಾಕೆ, ಮ್ಯಾಟಿ? ನನಗೆ ಅರ್ಥ ಮಾಡಿಸುವೆಯಾ? 482 00:41:52,135 --> 00:41:55,764 ಯಾಕೆ ಆ ಚಿಂತೆ? ಈಗ ಗಂಡಸರ ಧ್ವನಿಗೆ ಯಾವುದೇ ಪ್ರಾಮುಖ್ಯತೆ ಇಲ್ಲ. 483 00:41:56,056 --> 00:41:59,809 -ನಿನ್ನ ಧ್ವನಿ ಖಂಡಿತ ಮುಖ್ಯ. -ಗಂಡಸರು ಮತ್ತು ಹೆಂಗಸರು ಸ್ಥಾನ ಅರಿಯಬೇಕು. 484 00:41:59,893 --> 00:42:01,519 -ಏನು? -ಎಲ್ಲವೂ ಉಲ್ಟಾ ಆಗಿದೆ. 485 00:42:01,603 --> 00:42:04,773 ಈ ಕುಟುಂಬದಲ್ಲೂ ಅಪ್ಪ ಯಾವಾಗಲೂ ಅಡುಗೆ ಮಾಡ್ತಾರೆ. ನೀನು ಮಾಡೋದೇ ಇಲ್ಲ. 486 00:42:05,315 --> 00:42:08,026 ಅಪ್ಪ ಒಳ್ಳೆ ಅಡುಗೆ ಮಾಡ್ತಾರೆ ಮತ್ತು ಅವರಿಗದು ಇಷ್ಟ. 487 00:42:08,109 --> 00:42:09,110 ನನಗಿಷ್ಟವೇ. 488 00:42:09,194 --> 00:42:11,988 ನಮ್ಮ ಶಕ್ತಿ ಪ್ರಕಾರ ಮಾಡೋಣ. ಕ್ಲೆಯರಿ-ಲೋಪೆಜ್ ತಂಡಕ್ಕೆ ಜೈ. 489 00:42:12,280 --> 00:42:14,908 ಅವರ ಮೇಲೆ ದಬ್ಬಾಳಿಕೆ ಮಾಡ್ತೀಯ. ಅವರು ಸಹಿಸಿಕೊಳ್ತಾರೆ. 490 00:42:17,327 --> 00:42:21,498 ಅದು ನಿಜವಲ್ಲ. ಅಂದರೆ, ಆ ಪದವನ್ನು ಎಲ್ಲಿ ಕಲಿತೆ? 491 00:42:21,623 --> 00:42:24,376 -ಅರ್ಬನ್ಡಾಕ್ಸ್? -ಅರ್ಬನ್ಡಾಕ್ಸ್ ಕೇಳ್ತೀಯಾ? 492 00:42:24,751 --> 00:42:27,420 -ನಮ್ಮನ್ನು ದ್ವೇಷಿಸುತ್ತಾನೆ. -ಇಲ್ಲ, ನಿಮ್ಮನ್ನೊಪ್ಪಲ್ಲ. 493 00:42:27,504 --> 00:42:31,883 -ಒಪ್ಪಬೇಕಾಗಿಲ್ಲ. ಇದು ಮುಕ್ತ ದೇಶ. -ಮೂರ್ಖನ ಹಾಗೆ ಮಾತಾಡಬೇಡ. 494 00:42:31,967 --> 00:42:33,885 -ಸರಿ, ನಿಲ್ಲಿಸ್ತೀರಾ? -ಏನು? 495 00:42:34,010 --> 00:42:36,888 ನೋಡಿದ್ರಾ? ನನ್ನ ಆಲೋಚನೆ ನಿಮಗೆ ಬೇಕಾಗಿಲ್ಲ. ಯಾರಿಗೂ ಬೇಡ. 496 00:42:39,933 --> 00:42:42,602 -ಅವನ ಜೊತೆ ಮಾತನಾಡುವೆ. -ಬೇಡ, ಬೇಡ. ನಾನು ಹೋಗುವೆ. 497 00:42:52,320 --> 00:42:56,449 ಈಗ ಈ ಸಭೆ ಮುಗೀತಾ? ನಾನು ಸೋಫಾ ಮೇಲೆ ಊಟ ತಿನ್ನಬಹುದೇ? 498 00:42:58,785 --> 00:43:00,287 ಹಾಂ, ಖಂಡಿತ. ಹೋಗು. 499 00:43:13,550 --> 00:43:16,720 ನನ್ನೊಂದಿಗೆ ಹೊರಗೆ ಹೋಗುವೆಯಾ? 500 00:43:21,224 --> 00:43:24,394 ಹಾಂ. ಹಾಳಾಗಲಿ. ಈ ಸಲ ಮಾತ್ರ ಅಷ್ಟೇ. 501 00:43:24,978 --> 00:43:26,021 ಹಾಂ. 502 00:43:34,112 --> 00:43:34,946 ಧನ್ಯವಾದ. 503 00:43:40,035 --> 00:43:41,244 ನಿನಗೆ ನನ್ನ ಮತವಿದೆ. 504 00:43:43,246 --> 00:43:44,581 ಅದಕ್ಕಿರುವ ಬೆಲೆಗಾಗಿ. 505 00:43:46,124 --> 00:43:49,210 ಹೌದಾ? ನಿಲ್ಲಲು ನನಗೆ ಹುಚ್ಚು ಅಂತ ನಿನಗನ್ಸಲ್ವಾ? 506 00:43:51,546 --> 00:43:53,506 ನಮಗಾಗಿ ಹೋರಾಡಲು ಯಾರಾದರೂ ಇರಬೇಕು. 507 00:43:54,132 --> 00:43:57,761 ತಮಗೆ ಇದು ಇರೋದು ಹೇಳಿಕೊಳ್ಳಲು ಜನರಿಗೆ ಭಯವಿರಬಾರದು. 508 00:43:59,763 --> 00:44:01,097 ಇದೆಲ್ಲವೂ ಹಾಳಾಗಿದೆ. 509 00:44:04,684 --> 00:44:08,146 ಡ್ಯಾಂಡನ್ ಕಚೇರಿಯಲ್ಲಿ ಎಲ್ಲರ ಪರೀಕ್ಷೆ ಮಾಡಿಸಿದ. ನಾನು ತೇರ್ಗಡೆಯಾದೆ. 510 00:44:08,813 --> 00:44:14,319 ಅನಾನುಕೂಲತೆಯೊಂದಿಗೆ ಹೊಂದಿಕೊಳ್ಳುವ ಅದ್ಭುತ ಸಾಮರ್ಥ್ಯ ನನ್ನಲ್ಲಿದ್ದಂತಿದೆ. 511 00:44:15,570 --> 00:44:18,865 ಸರಿ. ಅದು ನಿನ್ನಲ್ಲಿದೆಯೆಂದು ಅವರಿಗೆ ಗೊತ್ತಾದಾಗ ಏನಾಗುತ್ತೆ? 512 00:44:20,950 --> 00:44:22,452 ಅಪ್ಪನಿಗೆ ಇನ್ನೂ ಹೇಳಿಲ್ವಾ? 513 00:44:26,373 --> 00:44:29,376 -ಅಮ್ಮ, ನೀನವರಿಗೆ ಹೇಳಬೇಕು. -ಗೊತ್ತು. ಸದ್ಯಕ್ಕಂತೂ ಅಲ್ಲ. 514 00:44:29,834 --> 00:44:33,922 ಈಓಡಿ ಇರೋ ಸೆನೆಟರನ್ನು ಯಾರೂ ಆಯ್ಕೆ ಮಾಡಲ್ಲ. ಅವರನ್ನು ಆ ಸ್ಥಿತಿಗೆ ತಳ್ಳಲಾರೆ. 515 00:44:34,005 --> 00:44:37,050 ಅವರು ಮಾಧ್ಯಮದ ಮುಂದೆ ನಿಲ್ಲಬೇಕಾಗುತ್ತೆ. ಅವರು ಸುಳ್ಳು ಹೇಳೋದು ಬೇಡ. 516 00:44:37,425 --> 00:44:38,802 ನನ್ನನ್ನು ಕೇಳುತ್ತಿರುವೆಯಾ? 517 00:44:40,428 --> 00:44:42,472 ಜೋಸ್, ನನ್ನನ್ನು ಕ್ಷಮಿಸು. 518 00:44:48,353 --> 00:44:52,857 ಇದು ಸರಿ ಅನ್ಸಲ್ಲ ಅಂತ ಗೊತ್ತು ಆದರೆ ಕೆಲವೊಮ್ಮೆ ನಮ್ಮ ಪ್ರೀತಿಪಾತ್ರರಿಗೆ ಸುಳ್ಳು ಹೇಳಬೇಕಾಗುತ್ತೆ. 519 00:44:53,400 --> 00:44:54,526 ಅವರನ್ನು ಕಾಪಾಡಲು. 520 00:44:56,277 --> 00:45:00,824 ನಮಗೆ ಈಓಡಿ ಇರೋದ್ರಿಂದ, ದೇವರೇ, ಗೆಲ್ಲೋದು ತುಂಬಾನೇ ಮುಖ್ಯ ಆಗುತ್ತೆ. ನನಗಾಗಲ್ಲ... 521 00:45:03,743 --> 00:45:06,287 ಸೆನೆಟಲ್ಲಿ ಡ್ಯಾಂಡನ್ ಏನು ಮಾಡ್ತಾನಂತ ನಾನು ಊಹಿಸಲಾರೆ. 522 00:45:10,500 --> 00:45:11,334 ಅರ್ಥವಾಗುತ್ತೆ. 523 00:45:20,468 --> 00:45:24,681 ಅಪ್ಪನಿಗೆ ಸರಿಯಾಗಿ ಸುಳ್ಳು ಹೇಳಲು ಬರಲ್ಲ, ನಿಜವಾಗಲೂ. 524 00:45:25,014 --> 00:45:29,644 ಅವರಿಗೆ ಆಶ್ಚರ್ಯಪಡಿಸುವುದೂ ಸರಿಯಾಗಿ ಬರಲ್ಲ. ಎಲ್ಲಾ ಹೇಳಿಬಿಡುತ್ತಾರೆ. 525 00:45:44,284 --> 00:45:45,743 ಚುನಾವಣೆ ಆಗೋವರೆಗೂ ಅಷ್ಟೇ. 526 00:45:49,664 --> 00:45:50,665 ಅರ್ಥವಾಯಿತು. 527 00:46:06,973 --> 00:46:09,100 ಕಿಡಿ ಬೆರಳುಗಳು ಒಂದಾಗಲಿ. 528 00:46:14,189 --> 00:46:16,524 ಇಲ್ಲ. ಇಲ್ಲ. 529 00:46:25,492 --> 00:46:28,244 ರಾಜ್ಯಪಾಲ ಡ್ಯಾಂಡನ್ ಶಾಲೆಗಳನ್ನು ವರ್ಗೀಕರಿಸಲಿದ್ದಾರೆ. 530 00:46:28,411 --> 00:46:31,456 ಹೆಣ್ಣುಮಕ್ಕಳನ್ನು ಮನೆಯಲ್ಲೇ ಇರಿಸಿ, ದೂರವಾಗಿ ಓದಿಸುತ್ತಾರೆ. 531 00:46:31,706 --> 00:46:34,083 ಅಂದರೆ, ನಾವು ಇತಿಹಾಸದಲ್ಲಿ ಕಲಿತಿರುವುದು, 532 00:46:34,167 --> 00:46:37,921 ಈ ದೇಶದ ನ್ಯಾಯಾಲಯಗಳು ತಮ್ಮ ಪರಿಧಿಯಲ್ಲಿ ತೀರ್ಮಾನಿಸಿರುವುದೇನೆಂದರೆ 533 00:46:38,004 --> 00:46:40,298 ಪ್ರತ್ಯೇಕತೆ ಸಮಾನತೆಯಲ್ಲ. 534 00:46:44,010 --> 00:46:46,971 ಮತ್ತು ನಾನು ತಿಳಿದಿರುವುದು, ನನ್ನ ಅಲ್ಪಸ್ವಲ್ಪ ಜ್ಞಾನದಲ್ಲಿ, 535 00:46:47,055 --> 00:46:48,681 ಒಬ್ಬ ತಾಯಿ ಮತ್ತು ಮಾನವಳಾಗಿ, 536 00:46:49,098 --> 00:46:53,603 ಏನಂದ್ರೆ ನಾವು ಒಗ್ಗಟ್ಟಾಗಿದ್ದಾಗ ಶ್ರೇಷ್ಠವಾಗಿ ನಿರ್ವಹಿಸುತ್ತೇವೆ. 537 00:46:53,686 --> 00:46:57,857 ನಾವು ಸಮಾನವಾಗಿ ಮತ್ತು ಜನಾಂಗೀಯವಾಗಿ ಬದುಕಿ ವರ್ತಿಸಿದಾಗ. 538 00:47:02,612 --> 00:47:03,821 ನಿಮ್ಮ ಬಗ್ಗೆ ಗೊತ್ತಿಲ್ಲ, 539 00:47:03,905 --> 00:47:08,493 ನನ್ನಿಡೀ ಜೀವನ ನಾನು ಮಾಡಿದ ಹೋರಾಟವನ್ನೇ ನನ್ನ ಹೆಣ್ಣುಮಕ್ಕಳಿಗಾಗಿ ಮಾಡುತ್ತಿರುವುದರಿಂದ 540 00:47:08,868 --> 00:47:10,912 ನಾನು ಬಳಲಿಹೋಗಿದ್ದೇನೆ. 541 00:47:11,120 --> 00:47:15,041 ನನಗಿಂತ ಮುಂಚೆ ನನ್ನ ತಾಯಿ ಹೋರಾಡಿದ್ದಳು. ಆಕೆಗಿಂತ ಮುಂಚೆ ತನ್ನ ತಾಯಿ ಹೋರಾಡಿದ್ದಳು. 542 00:47:15,124 --> 00:47:17,502 ಪ್ರಕೃತಿ ಮಾತೆಗೂ ಸಾಕಾಗಿ ಹೋದಂತಿದೆ. 543 00:47:21,923 --> 00:47:24,175 ಈ ಶಕ್ತಿಯು ವಿಕಾಸ. 544 00:47:24,384 --> 00:47:27,804 ಈ ಶಕ್ತಿ ಮರುಸೃಷ್ಟಿಗೊಂದು ಅವಕಾಶ, 545 00:47:27,971 --> 00:47:30,473 ಸಮಾಜವನ್ನು ಹೊಸದಾದ ರೀತಿಯಲ್ಲಿ ಸಮೀಪಿಸುವುದಕ್ಕಾಗಿ. 546 00:47:30,765 --> 00:47:33,851 ಈ ಜಗತ್ತಿನಲ್ಲಿ ಸಮಾನವಾಗಿ ಅಧಿಕಾರವನ್ನು ಹಂಚುವುದಕ್ಕಾಗಿ. 547 00:47:40,525 --> 00:47:44,988 ಮತ್ತು ಅದಕ್ಕಾಗಿಯೇ, ನಾನು ಮಾರ್ಗೋ ಕ್ಲೆಯರಿ-ಲೋಪೆಜ್, ನಿಮ್ಮ ಮೇಯರ್, ಸೆನೆಟಿಗೆ 548 00:47:46,114 --> 00:47:47,448 ಸ್ಪರ್ಧಿಸಲಿದ್ದೇನೆ. 549 00:48:00,628 --> 00:48:01,629 ಇದೊಂದು ಯುದ್ಧ. 550 00:48:04,507 --> 00:48:08,094 ನಮ್ಮ ಹಕ್ಕನ್ನು ಮರಳಿ ಪಡೆಯುವ ಯುದ್ಧ. ನಮ್ಮ ಜನ್ಮಸಿದ್ಧ ಹಕ್ಕು. 551 00:48:16,978 --> 00:48:20,982 ಮನುಜಕುಲ ಆಗಬೇಕಿರುವುದನ್ನು ಮರಳಿ ಪಡೆಯುವ ಯುದ್ಧ. 552 00:48:26,404 --> 00:48:29,115 ಪ್ರಪಂಚವನ್ನು ತಡೆದು ಕೇಳಿಸಬೇಕಾದ ಸಮಯ ಬಂದಿದೆ. 553 00:48:35,038 --> 00:48:36,956 ಬೆಂಕಿಯನ್ನು ಬೆಂಕಿಯಿಂದಲೇ ಎದುರಿಸಬೇಕು. 554 00:48:39,167 --> 00:48:40,001 ಕೆಳಗೆ ಬಗ್ಗಿ! 555 00:50:49,422 --> 00:50:51,466 ಮುಂದಿನ ಸಲ... 556 00:50:51,674 --> 00:50:54,969 ಹೆಂಗಸರು ತಿಂಡಿಗೆ ಗಂಡಸರನ್ನು ತಿನ್ನುವ ಜಾಗಕ್ಕೆ ಯಾರಾದರೂ ಹೋಗಬೇಕು. 557 00:50:55,052 --> 00:50:57,472 ಇವಳು ನಾಯಕಿಯಂತೆ ತೋರುತ್ತಾಳೆ. 558 00:50:57,555 --> 00:51:01,559 ದೊಡ್ಡ ಬದಲಾವಣೆ ಬರುತ್ತಿದ್ದು ಒಂದು ಪಂಥವನ್ನು ಆಯ್ಕೆಮಾಡಲು ನನ್ನ ಸೋದರಿಗೆ ಹೇಳು. 559 00:51:01,768 --> 00:51:03,728 ನಿನಗಾಗಿ ಸ್ವಲ್ಪ ಒಡವೆ ತಂದಿರುವೆ. 560 00:51:04,312 --> 00:51:07,732 ನನ್ನ ದೊಡ್ಡ ಮತ್ತು ಚಿಕ್ಕ ಮಗು ಜೊತೆಯಾಗಿ ಕೆಲಸ ಹೇಗೆ ಮಾಡ್ತಾರೆ ನೋಡ್ಬೇಕು. 561 00:51:07,815 --> 00:51:09,942 ಅಪ್ಪ ನಿಂಜೊತೆ ಆಟ ಆಡ್ತಿದ್ದಾರೆ, ಗೊತ್ತಾ? 562 00:51:10,026 --> 00:51:12,779 ಮುಂಚೆ ಭೇಟಿಯಾಗಿದ್ದೀವಾ? ನಿನ್ನನ್ನು ಎಲ್ಲೋ ನೋಡಿದ ಹಾಗಿದೆ. 563 00:51:13,154 --> 00:51:14,280 ನನಗೆ ನಿನ್ನ ಭಯವಿಲ್ಲ. 564 00:51:14,614 --> 00:51:17,533 ನೀನು ಯಾರೆಂದು ಕಂಡುಹಿಡಿದು ಮರಳಿ ನಿನ್ನ ಜಾಗಕ್ಕೆ ಕಳಿಸಿಬಿದುವೆ. 565 00:51:17,617 --> 00:51:20,703 ಸರಿ ಹೇಳಿದರು. ನಾನು ವಂಚಕಿ. ನಾನು ಕೊಲೆಗಡುಕಿ. 566 00:51:21,037 --> 00:51:22,038 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 567 00:51:22,163 --> 00:51:23,164 ಸೃಜನಶೀಲ ಮೇಲ್ವಿಚಾರಕರು ವಿವೇಕ್