1 00:00:11,541 --> 00:00:12,625 ಈ ಹಿಂದೆ ಔಟರ್ ರೇಂಜ್ ಅಲ್ಲಿ 2 00:00:12,625 --> 00:00:13,750 ಜಾಮೀನು $5,00,000. 3 00:00:13,750 --> 00:00:16,500 {\an8}ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಬೇಕು 4 00:00:16,625 --> 00:00:20,083 {\an8}ಇಲ್ಲಾ ಆಬಟ್ ರಾಂಚಿನ ಹಕ್ಕು ಪತ್ರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು. 5 00:00:20,083 --> 00:00:22,125 ಬಿಲ್ಲಿ, ಪುಟ್ಟ, ನಿನಗೆ ಗುಂಡು ತಗುಲಿತು. 6 00:00:22,125 --> 00:00:25,083 ಯಾರು ಮಾಡಿದ್ದು? ಇದೆಂಥಾ ತಿರುವು ಬಂತು ಈ ಕಥೆಯಲ್ಲಿ. 7 00:00:25,083 --> 00:00:26,500 ಈಗೇನು ಮಾಡ್ತೀಯ, ವೇನ್? 8 00:00:26,500 --> 00:00:29,291 "ನನ್ನ ಶತ್ರುಗಳ ಮೇಲೆ ಸೇಡು ತೀರಿಸಿಕೊಳ್ಳುವೆ." 9 00:00:30,041 --> 00:00:31,916 ಇಲ್ಲೊಂದು ರುಚಿಕರವಾದ ತಿಂಡಿ ಇದೆ. 10 00:00:33,875 --> 00:00:35,791 ವೇನ್ ಟಿಲ್ಲರ್ಸನ್. 11 00:00:35,791 --> 00:00:38,291 - ಎಲ್ಲೋಗ್ತಿದ್ದೇವೆ? - ವಿಶೇಷ ಸ್ಥಳಕ್ಕೆ. 12 00:00:39,125 --> 00:00:42,208 ನನ್ನ ಮೊಮ್ಮಗಳು ಏಮಿ ನಿನ್ನೆ ರಾತ್ರಿ ಕಾಣೆಯಾದಳು. 13 00:00:42,208 --> 00:00:44,000 ನಿಮ್ಮ ಸಹಾಯ ಕೋರಿ ಭಿತ್ತಿಪತ್ರಗಳು... 14 00:00:44,125 --> 00:00:46,625 - ಮೊದಲು ತಾಯಿ, ಈಗ ಮಗಳು. - ಎಷ್ಟು ಭಯಾನಕ. 15 00:00:46,625 --> 00:00:48,125 ಅವಳ ಮಗ ಟಿಲ್ಲರ್ಸನ್ ಮಗನ ಕೊಂದ. 16 00:00:48,125 --> 00:00:49,958 ನೀವು ಹೇಳುವುದು ನನಗೆ ಕೇಳಿಸುತ್ತೆ. 17 00:00:50,750 --> 00:00:51,875 ಬೇವರ್ಸಿಗಳಾಗಬೇಡಿ. 18 00:00:51,875 --> 00:00:53,125 {\an8}ಕಾಣೆಯಾಗಿದ್ದಾಳೆ 19 00:00:53,125 --> 00:00:56,458 {\an8}- ಏಮಿ ಕಾಣೆಯಾಗಿದ್ದಾಳೆ. ನಾನು ಬರಲಾರೆ, ಮರಿಯಾ. - ನನಗೆ ಅರ್ಥವಾಗುತ್ತೆ. 20 00:00:56,458 --> 00:00:58,000 ನಿನ್ನ ತಂದೆ ನನಗೆ ಗೊತ್ತಾ? 21 00:00:58,000 --> 00:01:00,458 ಹೌದು. ಅವರ ಹೆಸರು ರಾಯಲ್ ಆಬಟ್. 22 00:01:00,458 --> 00:01:02,666 ನೀವು ಬಂದ ಕೂಪದಿಂದಲೇ ನಾನೂ ಬಂದೆ. 23 00:01:16,125 --> 00:01:17,333 ಬ್ರಹ್ಮಾಂಡವು 24 00:01:18,166 --> 00:01:22,750 ಗುಣಪಡಿಸಲು ಯೋಗ್ಯವಾದ ಮಹಿಳೆಯರನ್ನು ಆಯ್ಕೆ ಮಾಡುತ್ತದೆ. 25 00:01:24,208 --> 00:01:27,041 ತಾವಾಗಿ ವಿನಮ್ರಗೊಳ್ಳುವ ಮಹಿಳೆಯರು. 26 00:01:27,041 --> 00:01:29,958 ಮೋಕ್ಷದ ಮಾರ್ಗಕ್ಕಾಗಿ ತಮ್ಮ ಸರ್ವಸ್ವವನ್ನೂ 27 00:01:30,666 --> 00:01:33,666 ತ್ಯಾಗ ಮಾಡಲು ಸಿದ್ಧರಿರುವವರು. 28 00:01:37,041 --> 00:01:40,833 ಬ್ರಹ್ಮಾಂಡಕ್ಕೆ ಆರಂಭವೂ ಇಲ್ಲ, ಅಂತ್ಯವೂ ಇಲ್ಲ. 29 00:01:43,375 --> 00:01:46,916 ಆದರೆ ಅದರಲ್ಲಿ ಬೆಳೆಯಲು, 30 00:01:47,833 --> 00:01:49,125 ಗುಣವಾಗಲು, 31 00:01:50,166 --> 00:01:51,416 ಅನಂತ ಅವಕಾಶಗಳಿವೆ. 32 00:01:55,291 --> 00:01:58,291 ಈ ಬ್ರಹ್ಮಾಂಡದಲ್ಲಿರುವ 33 00:01:58,291 --> 00:02:01,833 ಪ್ರತಿ ರಹಸ್ಯವನ್ನು ಕಲಿಯಲು, ನಾನು ನಿಮಗೆ ಮಾತು ಕೊಡುವೆ... 34 00:02:02,625 --> 00:02:05,875 ಸಂದೇಶಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳುವವರಿಗೆ 35 00:02:07,416 --> 00:02:12,500 ಬ್ರಹ್ಮಾಂಡದ ರಹಸ್ಯಗಳು ತೆರೆದುಕೊಳ್ಳುತ್ತವೆ. 36 00:02:14,958 --> 00:02:17,291 ಆದರೆ ಸದ್ಯಕ್ಕೆ, 37 00:02:18,875 --> 00:02:20,375 ನಾವು ಗುಣವಾಗೋಣ. 38 00:02:32,083 --> 00:02:36,958 ಔಟರ್ ರೇಂಜ್ 39 00:03:02,291 --> 00:03:04,291 - ಆರಾಮಿದ್ದೀಯಾ? - ಹಾಂ. 40 00:03:05,125 --> 00:03:06,958 ನೀನು ರಾತ್ರಿಯೆಲ್ಲಾ ಒದ್ದಾಡುತ್ತಿದ್ದೆ. 41 00:03:09,958 --> 00:03:11,000 ಹಾಂ. 42 00:03:14,583 --> 00:03:15,833 ಏಮಿ ಇಲ್ಲಿದ್ದಳು. 43 00:03:17,708 --> 00:03:18,875 ಒಬ್ಬಳೇ. 44 00:03:21,583 --> 00:03:23,958 ಜಗತ್ತಿನ ಅಂಚಿನಿಂದ ನಡೆದು ಬಂದಂತೆ ಕಾಣುತ್ತಿದ್ದಳು. 45 00:03:37,416 --> 00:03:39,250 ಅವಳು ಇಲ್ಲಿದ್ದಳು, ಆದರೆ ಮನೆ ಇರಲಿಲ್ಲ. 46 00:03:41,916 --> 00:03:43,333 ಅದನ್ನು ನೆಲಸಮ ಮಾಡಿದ್ದರು, 47 00:03:44,500 --> 00:03:45,791 ಪ್ರತಿಯೊಂದು ಮೂಲೆಯನ್ನೂ. 48 00:03:47,208 --> 00:03:49,625 "ಅದನ್ನು ಸರಿ ಮಾಡು" ಅಂತ ಹೇಳುತ್ತಿದ್ದಳು. 49 00:03:53,291 --> 00:03:54,500 "ಅದನ್ನು ಸರಿ ಮಾಡು." 50 00:03:56,458 --> 00:03:57,625 ನಮ್ಮನೆ ಬಿದ್ದುಹೋಗಿತ್ತಾ? 51 00:03:58,416 --> 00:03:59,500 ಹೌದು. 52 00:04:00,541 --> 00:04:01,625 ಅದು ಕನಸಷ್ಟೇ. 53 00:04:11,541 --> 00:04:13,791 ಹೇ. ಎಲ್ಲಿಗೆ ಹೋಗುತ್ತಿದ್ದೀಯಾ? 54 00:04:14,291 --> 00:04:15,416 ಚರ್ಚಿಗೆ. 55 00:04:15,833 --> 00:04:17,750 ಬೈಬಲ್ ಓದಿ ಅವಳಿಗೆ ಕುತೂಹಲ ಮೂಡಿದೆ. 56 00:04:17,750 --> 00:04:19,458 ಅವಳು ಹೋದರೆ ನಿನಗೆ ಪರವಾಗಿಲ್ವಾ? 57 00:04:19,958 --> 00:04:21,958 ಅವಳೊಂದಿಗೆ ಮಾತಾಡಿದೆ. ಪಾದ್ರಿಗೆ ಹೇಳಿದೆ. 58 00:04:21,958 --> 00:04:24,500 ಹೇ, ಆಟಂ! ನಾವು ಮಾತನಾಡಿದ್ದು ನೆನಪಿರಲಿ. 59 00:04:26,833 --> 00:04:28,166 ನಡೆಯುತ್ತಿದ್ದಾಳಾ? 60 00:04:28,166 --> 00:04:30,833 - ರಾತ್ರಿ ಪವಾಡಸದೃಶವಾಗಿ ಗುಣವಾದಳಾ? - ಅದು ಅನುಮಾನವೇ. 61 00:04:31,458 --> 00:04:32,916 ಸ್ವಲ್ಪ ಕಾಫಿ ಮಾಡುತ್ತೇನೆ. 62 00:04:33,541 --> 00:04:35,791 - ನೀನು ನ್ಯಾಯಾಲಯಕ್ಕೆ ಹೋಗಲು ಸಿದ್ಧನಾಗು. - ಸರಿ. 63 00:04:51,750 --> 00:04:52,625 ಒಳಬರುವ ಕರೆ ಅಪ್ಪ 64 00:04:54,625 --> 00:04:55,625 ಹಾಂ? 65 00:04:59,041 --> 00:05:00,250 ಹಾಂ, ಸಿಗ್ತೀವಿ ಅಲ್ಲಿ. 66 00:05:01,500 --> 00:05:02,625 ಸರಿ. 67 00:05:10,583 --> 00:05:12,458 - ಶುಭೋದಯ. - ಹೇ. 68 00:05:14,875 --> 00:05:16,041 ಚೆನ್ನಾಗಿ ನಿದ್ದೆ ಬಂತಾ? 69 00:05:16,916 --> 00:05:17,958 ಅಷ್ಟೇನಿಲ್ಲ. 70 00:05:18,833 --> 00:05:19,958 ನಿನಗೆ? 71 00:05:21,041 --> 00:05:22,208 ಅಷ್ಟೇನಿಲ್ಲ. 72 00:05:25,750 --> 00:05:27,083 ನನ್ನ ಅಪ್ಪನ ಕರೆ. 73 00:05:28,458 --> 00:05:29,791 ನಾನು ಬೇಗ 74 00:05:30,958 --> 00:05:32,500 ನ್ಯಾಯಾಲಯಕ್ಕೆ ಹೋಗಬೇಕು. 75 00:05:34,000 --> 00:05:35,000 ಬರ್ತೀಯಾ? 76 00:05:36,916 --> 00:05:40,458 ನಿನ್ನ ಪೋಷಕರಿಗೆ ನನ್ನನ್ನು ಪರಿಚಯಿಸಲು ನ್ಯಾಯಾಲಯ ಸೂಕ್ತ ಜಾಗ ಅಲ್ಲ. 77 00:05:41,375 --> 00:05:43,458 - ಸರಿಯೇ. - ಹೌದು. 78 00:05:44,625 --> 00:05:48,208 ನೀನು ಹಿಂತಿರುಗುವವರೆಗೂ ನಾನು ಇಲ್ಲಿಯೇ ಇರುತ್ತೇನೆ. 79 00:06:06,083 --> 00:06:08,666 ಏಮಿ ರೆಬೆಕ್ಕಾ ಜೊತೆ ಇರೋದು ಶುಭ ಸುದ್ದಿ ಅಲ್ಲದಿರಬಹುದು, 80 00:06:08,666 --> 00:06:11,625 ಆದರೆ ಒಂದು ಪ್ರಶ್ನೆಗಂತೂ ಉತ್ತರ ಸಿಕ್ಕಿತಲ್ಲ. 81 00:06:12,416 --> 00:06:13,416 ಹೌದು. 82 00:06:15,541 --> 00:06:16,583 ಆರಾಮಾಗಿದ್ದೀಯಾ? 83 00:06:19,208 --> 00:06:20,291 ಒಳ್ಳೆಯದು. 84 00:06:21,000 --> 00:06:23,583 ಹೋಗಿ ತಯಾರಾಗು, ಒಳ್ಳೆಯದಾಗಲಿ. 85 00:07:26,166 --> 00:07:28,083 ಏನಾದರೂ ಬದಲಾದರೆ ನಮಗೆ ತಿಳಿಸಿ. 86 00:07:28,083 --> 00:07:30,750 ನನ್ನ ಮಗನಿಗಾಗಿ ನೀವು ಮಾಡಿದ ಎಲ್ಲದಕ್ಕೂ ಧನ್ಯವಾದ. 87 00:07:31,583 --> 00:07:33,333 ಅವರು ಬೇಗ ಗುಣಮುಖವಾಗುತ್ತಾರೆ. 88 00:07:33,791 --> 00:07:36,750 ಅದರಲ್ಲೂ ನೀವು ಪಾರ್ಶ್ವವಾಯುವಿನಿಂದ ಚೇತರಿಸಿಕೊಂಡಿದ್ದೀರಿ. 89 00:07:37,708 --> 00:07:38,958 ಅದು ಪವಾಡ ಅಲ್ಲದಿದ್ದರೆ... 90 00:07:40,083 --> 00:07:42,583 ಹೌದು, ಹೌದು, ಹೌದು. ಪವಾಡವೇ. 91 00:07:45,208 --> 00:07:47,750 - ಧನ್ಯವಾದಗಳು, ವಿದಾಯ. -"ವಿದಾಯ"? 92 00:07:48,708 --> 00:07:50,125 ಹೇ... 93 00:07:52,291 --> 00:07:53,916 ಎಲ್ಲಿಗೆ ಹೋಗುತ್ತಿದ್ದಾರೆ? 94 00:07:53,916 --> 00:07:57,125 ಯಾರೋ ಅಪರಿಚಿತರಿಗೆ ಇವನ ಜವಾಬ್ದಾರಿಯನ್ನು ವಹಿಸುವುದು ಬೇಡ. 95 00:07:57,125 --> 00:07:58,500 ಅದು ನಮ್ಮದು. 96 00:07:59,750 --> 00:08:00,916 ನಮ್ಮದಾ? 97 00:08:02,791 --> 00:08:05,250 ಅಪ್ಪ, ನಾನು ನರ್ಸ್ ಅಲ್ಲ. 98 00:08:05,250 --> 00:08:08,666 ನೀನು ಅವನ ಸಹೋದರ. ರಕ್ತಸಂಬಂಧವೇ ಎಲ್ಲಕ್ಕಿಂತ ಪ್ರಮುಖವಾದದ್ದು. 99 00:08:09,250 --> 00:08:11,083 - ಅಪ್ಪ, ನಮ್ಮಲ್ಲಿ ಹಣವಿದೆ. -"ಹಣವಿದೆಯಾ"? 100 00:08:12,208 --> 00:08:16,875 ನಮಗೆ ಇರೋದು ಬಿಲ್ಲಿಯನ್ನು ಗುಣವಾಗಿಸುವ ಜವಾಬ್ದಾರಿ. 101 00:08:21,416 --> 00:08:23,750 ಸರಿ. ನಾನು... 102 00:08:24,625 --> 00:08:26,833 ಪಶ್ಚಿಮದ ಹುಲ್ಲುಗಾವಲನ್ನು ಗಮನಿಸುತ್ತೇನೆ. 103 00:08:26,833 --> 00:08:29,541 - ಆಬಟ್ ರನ್ನು ನಿಭಾಯಿಸುವೆ. - ಸರಿ, ಎಲ್ಲಿಂದ ಶುರು ಮಾಡೋಣ? 104 00:08:33,541 --> 00:08:34,625 ಮತ್ತೆ... 105 00:08:34,625 --> 00:08:36,041 ನಿನ್ನ ತಮ್ಮನನ್ನು ನೋಡಿಕೋ, 106 00:08:36,166 --> 00:08:37,416 ಆಗ ನಾವಿಬ್ಬರೂ ಪಶ್ಚಿಮದ 107 00:08:37,416 --> 00:08:39,791 ಹುಲ್ಲುಗಾವಲಿನ ಬಗ್ಗೆ ಗಂಡಸರಂತೆ ಚರ್ಚಿಸೋಣ. 108 00:08:40,666 --> 00:08:42,583 ಆಬಟ್ಟರ ಜೊತೆ ಭೇಟಿ ಇದೆ. 109 00:08:45,166 --> 00:08:46,250 ಏನು ನಡೆಯುತ್ತಿದೆ? 110 00:08:46,833 --> 00:08:48,083 ಡ್ಯೂಟರಾನಮಿ, ಮಗನೇ. 111 00:08:50,000 --> 00:08:51,625 "ನಿನ್ನ ಸೋದರನನ್ನು ನೋಡಿಕೋ." 112 00:08:52,208 --> 00:08:55,041 ಆ ಪಾದ್ರಿ ಏನಾದರೂ ಬಂದರೆ, ಅವನ ಗುಂಪಿನ ಜೊತೆ ತುಂಬಾ ಪ್ರವಚನ 113 00:08:55,041 --> 00:08:56,208 ಕೊಡೋ ಹಾಗೆ ಮಾಡಬೇಡ. 114 00:09:03,625 --> 00:09:05,208 ಶುಭೋದಯ, ನ್ಯಾಯಾಧೀಶ ಪೆಟ್ಟಿಗ್ರು. 115 00:09:05,625 --> 00:09:08,625 ನಿಮ್ಮಂಥ ಪ್ರತಿಷ್ಠಿತ ನ್ಯಾಯಾಧೀಶರ ಮುಂದೆ ನಿಲ್ಲುವುದೇ 116 00:09:08,625 --> 00:09:09,625 ಒಂದು ಸಂತೋಷ... 117 00:09:09,625 --> 00:09:11,375 ಬಾರ್ನಿಯವರೇ, ಪೆರ್ರಿ ಆಬಟ್ ಎಲ್ಲಿ? 118 00:09:11,375 --> 00:09:14,375 ಯುವರ್ ಆನರ್, ಇವು ಅಸಾಧಾರಣ ಸಂದರ್ಭಗಳು. 119 00:09:14,375 --> 00:09:16,875 ಏಮಿ ಆಬಟ್ ಮೂರು ದಿನಗಳ ಹಿಂದೆ ನಾಪತ್ತೆಯಾದಳು. 120 00:09:17,833 --> 00:09:20,541 ಅವಳ ತಂದೆ ದುಃಖಭರಿತನಾಗಿ 121 00:09:20,541 --> 00:09:23,250 ತನ್ನ ಮಗಳನ್ನು ಹುಡುಕಲು ಹೋಗಿದ್ದಾನೆ. 122 00:09:24,083 --> 00:09:25,791 ನಿಜವೇ, ಮಿಸ್ಟರ್ ಅಂಡ್ ಮಿಸೆಸ್ ಆಬಟ್? 123 00:09:26,250 --> 00:09:27,916 ಹೌದು, ಸರ್. 124 00:09:30,333 --> 00:09:32,833 ಡೆಪ್ಯುಟಿ ಕ್ಯಾಟ್ಲೆಟ್ ಪ್ರಕಾರ, ರೋಡಿಯೋದ ಆ ರಾತ್ರಿ 125 00:09:33,500 --> 00:09:37,875 ಏಮಿ ಆಬಟ್ ತಾನಾಗೇ ತನ್ನ ತಾಯಿಯ ಜೊತೆ ಹೋದಳು ಅಂತ ನೋಡಿದ ಸಾಕ್ಷಿಗಳಿದ್ದಾರೆ. 126 00:09:38,666 --> 00:09:39,916 ಅದು ನಿಜವೇ? 127 00:09:42,083 --> 00:09:44,250 ನಿಮ್ಮ ಮೌನ ನೋಡಿದರೆ ಹೌದು ಅನಿಸುತ್ತೆ. 128 00:09:44,250 --> 00:09:45,500 ನಿಮ್ಮ ಕಕ್ಷಿದಾರರಿಗೆ 129 00:09:45,500 --> 00:09:47,583 ಗೊತ್ತಿದ್ದರೆ, ಗೈರುಹಾಜರಿಗೆ ಕ್ಷಮೆ ಇಲ್ಲ. 130 00:09:47,583 --> 00:09:49,583 ಹಾಗಾದರೆ ಪೆರ್ರಿಗೆ ಗೊತ್ತೇ? 131 00:09:50,375 --> 00:09:53,416 ಅಯ್ಯಾ, ನನ್ನ ಮಗ ಒಳ್ಳೆಯವನು, ಅವನಿಗೆ ಒಳ್ಳೆಯದ್ದು, ಕೆಟ್ಟದ್ದರ 132 00:09:53,416 --> 00:09:54,916 - ವ್ಯತ್ಯಾಸ ಗೊತ್ತಿದೆ. - ನನ್ನ 133 00:09:54,916 --> 00:09:57,041 ಮಗನೂ ಒಳ್ಳೆಯವನೇ, ಆದರೆ ಕೊಲೆಯಾಗಿದ್ದಾನೆ. 134 00:09:57,041 --> 00:09:58,125 ಟಿಲ್ಲರ್ಸನ್, ದಯಮಾಡಿ. 135 00:09:58,125 --> 00:10:00,000 - ನನಗನಿಸಿತು... - ಅಯ್ಯಾ, ನನ್ನ ಮಗ 136 00:10:00,000 --> 00:10:01,916 ತನ್ನ ಹೆಂಡತಿ ಜೊತೆ ರಾಜಿ ಮಾಡಿಕೊಂಡು 137 00:10:01,916 --> 00:10:03,541 ಮಗಳನ್ನು ಕರೆತರಲು ಹೋದ. 138 00:10:03,541 --> 00:10:04,791 ಟಿಲ್ಲರ್ಸನ್ ಅವರೇ! 139 00:10:04,791 --> 00:10:06,125 ರಾಯಲ್, ಕುಳಿತುಕೊಳ್ಳಿ. 140 00:10:15,958 --> 00:10:19,000 ಯುವರ್ ಆನರ್, ಈ ಸಂದರ್ಭ ಪೆರ್ರಿಗೆ ಶಿಕ್ಷೆ ಬೇಡ. 141 00:10:19,583 --> 00:10:21,583 ಇಂದು ಆಬಟ್ ರಾಂಚ್ ಕುರಿತಾಗಿದೆ. 142 00:10:23,083 --> 00:10:24,541 ನೀವು ಹೇಳಿದ್ದು ಸರಿ, ಬಾರ್ನಿ. 143 00:10:28,041 --> 00:10:30,375 ಪೆರ್ರಿ ಆಬಟ್ ಜಾಮೀನನ್ನು ಉಲ್ಲಂಘಿಸಿದ್ದಾನೆ. 144 00:10:31,291 --> 00:10:34,375 ಅವನ ಗೈರುಹಾಜರಿಯನ್ನು ಮುಟ್ಟುಗೋಲಿನ ಸೂಚನೆ ಎಂದು ಪರಿಗಣಿಸಲಾಗುತ್ತದೆ. 145 00:10:36,125 --> 00:10:38,833 ಆಬಟ್ ಅವರೇ, ಕೋರ್ಟಿಗೆ ನಿಮ್ಮ ಮನವಿ ನಿಜವೇ ಆಗಿದ್ದರೂ, 146 00:10:39,833 --> 00:10:41,500 ನೀವೇ ತಡ ಮಾಡಿಸುತ್ತಿರುವಂತಿದೆ. 147 00:10:42,541 --> 00:10:44,333 ಹಾಗಾಗಿ ನೀವು, ಸೋಮವಾರದ ಒಳಗೆ 148 00:10:45,083 --> 00:10:46,541 $500,000 ಪಾವತಿಸಬೇಕಾಗುತ್ತದೆ 149 00:10:46,541 --> 00:10:49,166 ಇಲ್ಲದಿದ್ದಲ್ಲಿ ನಿಮ್ಮ ಜಮೀನು ಮುಟ್ಟುಗೋಲಾಗುತ್ತದೆ. 150 00:10:54,833 --> 00:10:57,791 - ಇದು ನಿನ್ನಿಂದಲೇ, ವೇನ್. - ಇದು ಪ್ರಯೋಜನವಿಲ್ಲ, ರೆಟ್. 151 00:10:58,916 --> 00:11:02,416 ಮಾನ್ಯರೇ, ಸೋಮವಾರದೊಳಗೆ ಅಷ್ಟು ಹಣ ಪಾವತಿಸಲು ಅವರಿಗೆ ಸಾಧ್ಯವಿಲ್ಲ. 152 00:11:03,000 --> 00:11:05,666 ನಿಮ್ಮ ಕಕ್ಷಿದಾರರಿಗೆ ಬೇರೆ ದಾರಿಗಳೂ ಇವೆ. 153 00:11:07,166 --> 00:11:09,250 ಸೆಸಿಲಿಯಾ, ರಾಯಲ್... 154 00:11:10,500 --> 00:11:11,625 ನನ್ನನ್ನು ಕ್ಷಮಿಸಿ. 155 00:11:17,458 --> 00:11:18,375 ಬೇವರ್ಸಿ ಮಗನೇ. 156 00:11:18,375 --> 00:11:20,750 ಹೇ, ಹೇ. ತಡಿ. ಬೇಡ. ಅವನಿಗೆ ಅದೇ ಬೇಕು. 157 00:11:20,750 --> 00:11:22,708 - ಅವನಿಗೆ ಅದೇ ಬೇಕು. ಬೇಡ. - ಹೌದು. 158 00:11:24,666 --> 00:11:26,583 ಧನ್ಯವಾದ, ಟಾಡ್. ಕರೆ ಮಾಡುತ್ತೇವೆ. 159 00:11:27,666 --> 00:11:30,291 ರೆಟ್, ನೀನು ಮರಿಯಾಳನ್ನು ಕರೆತರಬಾರದೇ? ನಿನ್ನ ಗೆಳತಿ. 160 00:11:30,291 --> 00:11:32,750 ಜಮೀನು ಇರುವಾಗಲೇ ಅದನ್ನು ಬಳಸಿಕೊಳ್ಳೋಣ. 161 00:11:32,750 --> 00:11:33,791 ಸರಿಯಮ್ಮ. 162 00:11:48,541 --> 00:11:50,000 ಪ್ರತೀಕಾರ, ರಾಯಲ್. 163 00:11:50,000 --> 00:11:52,708 ಟ್ರೆವರ್ ಮತ್ತು ಬಿಲ್ಲಿಗಾಗಿ. 164 00:11:55,083 --> 00:11:57,666 ನಿನ್ನ ಮಕ್ಕಳಿಗೆ ನಡೆದ ಘೋರ ಅನ್ಯಾಯ ಏನು ಗೊತ್ತಾ? 165 00:11:58,333 --> 00:11:59,750 ಅವರು ನಿನಗೆ ಹುಟ್ಟಿದ್ದು. 166 00:12:24,166 --> 00:12:25,500 ಧನ್ಯವಾದ. 167 00:12:37,250 --> 00:12:39,458 ಸ್ವಾಗತ. ನೀನು ಬರುತ್ತೀಯ ಎಂದಳು ಸೆಸಿಲಿಯಾ. 168 00:12:39,958 --> 00:12:42,625 ನಿನ್ನನ್ನು ಕೇಳಬೇಕು ಅಂತಿದ್ದೆ, ಆರಾಮಾಗಿದ್ದೀಯಾ? 169 00:12:43,875 --> 00:12:46,250 ಸದ್ಯಕ್ಕೆ ಅಷ್ಟೇನಿಲ್ಲ, ಆದರೂ ಪರವಾಗಿಲ್ಲ. 170 00:12:46,250 --> 00:12:47,458 ನಾನು ಆಟಂ. 171 00:12:48,458 --> 00:12:49,791 ಸ್ವಾಗತ, ಆಟಂ. 172 00:12:50,291 --> 00:12:53,041 ಆ ದಿನದ ಬಗ್ಗೆ ನಾನು ಕ್ಷಮೆ ಕೇಳಬೇಕಿತ್ತು. 173 00:12:54,375 --> 00:12:55,875 ನಾವೆಲ್ಲರೂ ಸಂಯಮ ತಪ್ಪುತ್ತೇವೆ, 174 00:12:55,875 --> 00:12:58,083 ಸರಿಯಾದದ್ದನ್ನೇ ಮಾಡ್ತಿದ್ದೇವೆ ಅಂದುಕೊಂಡಾಗಲೂ. 175 00:12:58,666 --> 00:13:01,166 ನನ್ನ ಬಗ್ಗೆ ಹೇಳ್ತಿದ್ದೀರಾ, ಸಭೆಯ ಬಗ್ಗೆನಾ? 176 00:13:01,625 --> 00:13:03,416 ಯಾರೂ ಪರಿಪೂರ್ಣರಲ್ಲ. 177 00:13:04,875 --> 00:13:07,083 ಆಟಂ, ಎಂದಾದರೂ ಚರ್ಚ್ ಕುಟುಂಬದ ಭಾಗವಾಗಿದ್ದೀಯಾ? 178 00:13:08,208 --> 00:13:10,416 ಇಲ್ಲ. ನಾನೊಂದು ಧರ್ಮಪ೦ಥದಲ್ಲಿದ್ದೆ. 179 00:13:11,041 --> 00:13:12,791 ಪಾದ್ರಿ ಕೆನ್, ಹೋಗಲು ತಯಾರಿದ್ದೇವೆ. 180 00:13:12,791 --> 00:13:14,750 ಒಂದು ನಿಮಿಷದಲ್ಲಿ ಬರುವೆ. ಧನ್ಯವಾದ. 181 00:13:17,541 --> 00:13:20,083 ಇಂದು ಯಾಕೆ ಇಲ್ಲಿ ಬಂದಿರುವೆ ಎಂದು ಕೇಳಬಹುದೇ? 182 00:13:21,708 --> 00:13:23,625 ಎಫೆಸಿಯನ್ಸ್ 4:11. 183 00:13:24,458 --> 00:13:27,375 "ಮತ್ತು ಆತ ಕೆಲವು ಧರ್ಮಪ್ರಚಾರಕರು, ಕೆಲವು ಪ್ರವಾದಿಗಳು, 184 00:13:27,958 --> 00:13:29,375 "ಕೆಲವು ಸುವಾರ್ತಾಬೋಧಕರು, 185 00:13:30,291 --> 00:13:32,375 "ಕೆಲ ಪಾದ್ರಿಗಳು ಮತ್ತು ಗುರುಗಳ ಕೊಟ್ಟನು." 186 00:13:33,625 --> 00:13:36,666 ಗುರು ಎಂಬ ಕಲ್ಪನೆ, 187 00:13:36,666 --> 00:13:39,083 ಅಥವಾ ಶಿಕ್ಷಕರೆಂದರೆ ನನಗೆ ತುಂಬಾ ಇಷ್ಟ. 188 00:13:40,666 --> 00:13:43,041 ಚರ್ಚನ್ನು ಸೇರಲು ಯಾರೂ ಈ ಪದ್ಯವನ್ನು ಬಳಸಿಲ್ಲ 189 00:13:43,041 --> 00:13:46,250 ಅಂತ ಅನಿಸುತ್ತೆ, ಆದರೆ ಈಗ ನನಗೆ ಆಸಕ್ತಿ ಮೂಡಿದೆ. 190 00:13:47,666 --> 00:13:51,208 ಒಂದೊಂದೇ ಹೆಜ್ಜೆ ಮೂಲಕ ಸಾಗುವುದೇ ಬುದ್ಧಿವಂತಿಕೆ. ಹೋಗೋಣವೇ? 191 00:13:53,708 --> 00:13:54,791 ಈ ಕಡೆ. 192 00:13:58,500 --> 00:13:59,916 ವಯೋಮಿಂಗ್ ಚಾಲಕರ ಪರವಾನಗಿ 193 00:13:59,916 --> 00:14:01,708 ನನ್ನ ಅತ್ಯುತ್ತಮ ಚಿತ್ರವೇನಲ್ಲ. 194 00:14:02,166 --> 00:14:04,000 ಈಗಷ್ಟೇ ಜೈಲಿಂದ ಹೊರಬಂದಂತಿದ್ದೀಯ. 195 00:14:05,000 --> 00:14:07,083 ನಮ್ಮ ಮನೆಯಲ್ಲಿ ನಗುವುದು ಸಾಮಾನ್ಯವಾಗಿರಲಿಲ್ಲ. 196 00:14:08,916 --> 00:14:10,166 ಹೇಳ್ತೀನಿ ಕೇಳು, 197 00:14:10,750 --> 00:14:13,833 ನಾವಿಬ್ಬರೂ ಒಂದು ದಿನ ಹ್ಯಾಂಡ್ಸಮ್ ಗೆ ಹೋಗಿ, ಬಿಯರ್ ಕುಡಿಯೋಣ. 198 00:14:14,458 --> 00:14:16,666 ಕೆಟ್ಟ ರಾಯಲ್ ವಿಚಾರಗಳನ್ನೆಲ್ಲಾ ಹೇಳುವೆಯಂತೆ. 199 00:14:17,500 --> 00:14:20,250 ಅಲ್ಲಿಯವರೆಗೆ ನೀನು ಹೊಂದಿಕೊಳ್ಳಬೇಕು. 200 00:14:21,500 --> 00:14:23,000 ನೀನು ಒಬ್ಬರನ್ನು ಭೇಟಿಯಾಗಬೇಕು. 201 00:14:23,000 --> 00:14:25,083 ಹೋದ ಸಲ ವೇನ್ ಟಿಲ್ಲರ್ಸನ್ ತೋರಿಸಿದ್ರಿ. 202 00:14:26,083 --> 00:14:27,166 ಈ ಸಲ ಅಲ್ಲ. 203 00:14:33,541 --> 00:14:35,000 ನಮಸ್ಕಾರ. 204 00:14:35,916 --> 00:14:39,041 ಹಾಕಿಕೊಂಡು ನೋಡುವವರೆಗೂ ಯಾವುದು ಚೆನ್ನಾಗಿದೆ ಅಂತ ಗೊತ್ತಾಗಲ್ಲ. 205 00:14:39,041 --> 00:14:40,750 - ತೋರಿಸಲೇ? - ಖಂಡಿತ. 206 00:14:41,208 --> 00:14:42,666 ಇದನ್ನು ಪ್ರಯತ್ನಿಸಿ. 207 00:14:45,750 --> 00:14:46,750 ತಗೊಳ್ಳಿ. 208 00:14:50,708 --> 00:14:53,958 ಅಬ್ಬಾ, ಈ ಸ್ಟೆಟ್ಸನ್ ನಿಮಗಾಗಿಯೇ ಮಾಡಿಸಿದಂತಿದೆ. 209 00:14:54,541 --> 00:14:56,416 ಗೊತ್ತಾ, ತಪ್ಪು ಟೋಪಿ ಧರಿಸುವ ಕೌಬಾಯ್ 210 00:14:56,416 --> 00:14:59,666 ಈ ಜಗತ್ತಿನಲ್ಲಿ ತನ್ನ ಸ್ಥಾನವನ್ನು ಅರಿಯದವನು. 211 00:15:05,291 --> 00:15:07,250 ನನಗೆ ದನಗಾಹಿಗಳ ಟೋಪಿ ಆದರೆ ಸರಿ. 212 00:15:08,000 --> 00:15:10,416 ಸರಿ ಬಿಡಿ. ಇಲ್ಲಿ ನೋಡೋಣ. 213 00:15:10,416 --> 00:15:13,000 ನನ್ನ ಮಾಜಿ ಪತಿ ಕೂಡ ದನಗಾಹಿ ಆಗಿದ್ದ ಗೊತ್ತಾ? 214 00:15:13,458 --> 00:15:15,500 ಅದಕ್ಕೇ ಅವನು ನನ್ನ ಮಾಜಿ ಪತಿ ಆದ. 215 00:15:15,958 --> 00:15:17,333 ಮಿಸ್ ಥರ್ಬೀ, ಸರಸವೇ? 216 00:15:17,333 --> 00:15:20,833 - ನಾನು ಹುರುಪಿನಿಂದ ಇರಬೇಕು. - ಹೌದಮ್ಮ, ನೀವಿರಬೇಕು. 217 00:15:22,625 --> 00:15:23,875 ಹೇಗಿದ್ದೀಯಾ, ರಾಯಲ್? 218 00:15:24,833 --> 00:15:26,958 ಬೆನ್, ಇವರು ಶ್ರೀಮತಿ ಥರ್ಬೀ. ಈಕೆ ನಮಗೆ... 219 00:15:26,958 --> 00:15:28,708 ಹೇಳಬೇಡ ಅಷ್ಟೇ. 220 00:15:28,708 --> 00:15:30,000 ಆಯ್ತಮ್ಮ. 221 00:15:30,833 --> 00:15:33,833 ಈ ಅಂಗಡಿಯನ್ನು ಅವರ ಕುಟುಂಬ 80 ವರ್ಷಗಳಿಂದ ನಡೆಸುತ್ತಿದ್ದಾರೆ. 222 00:15:33,833 --> 00:15:34,916 ಹೌದು. 223 00:15:34,916 --> 00:15:37,750 ನಿಮ್ಮ ಭೇಟಿ ಸಂತೋಷ ಆಯಿತು. ನಿಮ್ಮ ಸಹಾಯಕ್ಕೆ ನಾನು ಋಣಿ. 224 00:15:37,750 --> 00:15:39,416 ಸರಿ. 225 00:15:39,416 --> 00:15:42,541 ಕೊಡಿ, ಅವುಗಳನ್ನು ಕಟ್ಟಿ ಕೊಡುತ್ತೇನೆ. 226 00:15:42,541 --> 00:15:43,833 ಧನ್ಯವಾದ, ಮೇಡಮ್. 227 00:15:43,833 --> 00:15:47,333 ಶ್ರೀಮತಿ ಥರ್ಬೀ, ನೀವು ಹೋಗುವ ಮೊದಲು. ಬೆನ್, ನಿನ್ನ ಆ ಫೋಟೋ ತೋರಿಸು. 228 00:15:49,666 --> 00:15:52,083 ಥರ್ಬೀಯವರೇ, ನಿಮಗೆ ಈ ಊರಿಗೆ ಬರೋ ಎಲ್ಲರೂ ಗೊತ್ತು. 229 00:15:52,083 --> 00:15:53,791 ಈ ಯುವತಿಯನ್ನೇನಾದರೂ ನೋಡಿದ್ದೀರಾ? 230 00:15:56,041 --> 00:15:58,041 ಇಲ್ಲ, ನೋಡಿಲ್ಲ ಅನ್ಸುತ್ತೆ. 231 00:15:59,083 --> 00:16:00,958 ಆದರೆ ತುಂಬಾ ಚೆಂದದ ಕುಟುಂಬ. 232 00:16:01,500 --> 00:16:03,166 ಇವಳು ಕಾಣೆಯಾಗಿದ್ದಾಳಾ? 233 00:16:03,166 --> 00:16:04,291 ಹೌದಮ್ಮ. 234 00:16:06,208 --> 00:16:10,083 ಕೆಲವೊಮ್ಮೆ ಜನರು ಅವರಿಗೆ ಬೇಕಾದ ಜಾಗವನ್ನು ಅರಸಿ, ಎಲ್ಲವನ್ನೂ ಪರಿಹರಿಸಿಕೊಂಡು, 235 00:16:10,583 --> 00:16:11,833 ನಂತರ ಹಿಂತಿರುಗುತ್ತಾರೆ. 236 00:16:13,291 --> 00:16:14,750 ಸಮಯ ಕೊಡಿ, ಸರಿನಾ? 237 00:16:15,166 --> 00:16:17,083 - ಹಾಂ. ಧನ್ಯವಾದ. - ಧನ್ಯವಾದ. 238 00:16:20,666 --> 00:16:23,166 ಆಕೆ ನನ್ನ ಸೋದರಿಯ ಮೊಮ್ಮಗಳು. 239 00:16:24,041 --> 00:16:25,791 ನನ್ನ ಕೊನೆಯ ಜೀವಂತ ಸಂಬಂಧಿ. 240 00:16:26,500 --> 00:16:27,916 ಆಕೆಗೆ ಗೊತ್ತಾ? 241 00:16:28,666 --> 00:16:29,958 ಏನೂ ಗೊತ್ತಿಲ್ಲ. 242 00:16:33,000 --> 00:16:34,291 ನಿಮಗೆ ಹೇಗೆ ಸಿಕ್ಕರು? 243 00:16:35,000 --> 00:16:37,250 ಊರಿನ ದಾಖಲೆ ಪತ್ರಗಳಲ್ಲಿ ಸ್ವಲ್ಪ ಹುಡುಕಿದೆ. 244 00:16:37,250 --> 00:16:39,208 ಇಸಬೆಲ್ಲಾ, ನನ್ನ ಸಹೋದರಿ. 245 00:16:40,416 --> 00:16:43,250 ಅವಳಿಗೆ 15 ವರ್ಷಕ್ಕೇ 10 ವರ್ಷ ಹಿರಿಯವನೊಂದಿಗೆ ಮದುವೆ ಆಯಿತು. 246 00:16:44,375 --> 00:16:45,333 ಮಾಡಲೇಬೇಕಾಯಿತು. 247 00:16:46,583 --> 00:16:49,333 ಅವರಿಗೆ ಇಬ್ಬರು ಮಕ್ಕಳು, ಆ ಇಬ್ಬರಲ್ಲಿ ಒಬ್ಬರ ಮಗಳು. 248 00:16:50,458 --> 00:16:51,791 ಆ ಮಗಳೇ ಶ್ರೀಮತಿ ಥರ್ಬೀ. 249 00:16:53,750 --> 00:16:56,375 - ಯಾಕೆ ಇಲ್ಲಿಗೆ ಕರೆತಂದಿರಿ? - ನಾನು ನಿರ್ಧರಿಸಬೇಕಿತ್ತು. 250 00:16:57,250 --> 00:17:00,291 ನಾನು ಗತಕಾಲದಲ್ಲೇ ಬದುಕಬಹುದು ಅಥವಾ 251 00:17:01,375 --> 00:17:03,000 ನಡೆದಿದ್ದನ್ನು ಸ್ವೀಕರಿಸಬಹುದು. 252 00:17:06,000 --> 00:17:07,708 ಆ ರೀತಿ ನಿಮಗೆ ನಡೆದಿದ್ದರೆ, 253 00:17:07,708 --> 00:17:10,041 ಅದೇ ನನಗೂ ನಡೆಯುತ್ತೆ ಅನ್ನೋಕಾಗಲ್ಲ. 254 00:17:10,041 --> 00:17:12,291 ಇದು ನಿನಗೇನಾಗುತ್ತಿದೆ ಅನ್ನೋದಲ್ಲ, ಪೆರ್ರಿ. 255 00:17:14,000 --> 00:17:15,041 ಸರಿನಾ? 256 00:17:17,916 --> 00:17:19,500 - ಈಗ, ಶ್ರೀಮತಿ ಥರ್ಬೀ. - ಹಾಂ. 257 00:17:19,500 --> 00:17:21,041 ನಿಮಗೆ ಎಷ್ಟು ಕೊಡಬೇಕು? 258 00:17:25,458 --> 00:17:27,291 ಇಲ್ಲ! 259 00:17:28,333 --> 00:17:30,666 ಇದು ನನ್ನ ಸಿಗರೇಟಿನ ಸಮಯ. 260 00:17:31,750 --> 00:17:34,291 ನಾನು ಮರೆಯಲಿ ಅಂತ ಮಂಪರು ಮಾತ್ರೆ ಕೊಡುತ್ತಿದ್ದೀರಿ, 261 00:17:34,291 --> 00:17:36,791 ಆದರೆ ನನ್ನ ಮನಸ್ಸು ಚುರುಕಾಗಿದೆ. 262 00:17:37,791 --> 00:17:40,000 ನನಗೆ ಅಲ್ಲಿರೋ ಗಡಿಯಾರ ಕಾಣುತ್ತೆ. 263 00:17:40,541 --> 00:17:42,708 ನಿಮಗೆ ಎಷ್ಟು ಸಲ ಹೇಳಲಿ? 264 00:17:43,250 --> 00:17:44,750 ಸ್ಯಾಲಿ... 265 00:17:45,833 --> 00:17:46,916 ಏನಿದು ಗಲಾಟೆ? 266 00:17:47,750 --> 00:17:52,000 ನನಗೆ ಬೇಕಿರೋದು ನಾನು ಪ್ರತಿ ದಿನ ಕೇಳುವ ಒಂದೇ ಒಂದು ಸಿಗರೇಟು, ಅಷ್ಟೇ, 267 00:17:52,000 --> 00:17:53,875 ಅದಕ್ಕೆ ಯಾವಾಗಲೂ ಜಗಳವೇ. 268 00:17:53,875 --> 00:17:55,916 ಇದು ನಿಮ್ಮ ಆರೋಗ್ಯಕ್ಕಾಗಿ ಜಗಳ. 269 00:17:57,208 --> 00:18:00,250 ಆ ದೇವರು ನನ್ನ ವಿಧಿ ಬರೆದಾಗಿದೆ. 270 00:18:00,250 --> 00:18:03,000 ಅವನು ನನ್ನ ಸಮಯವನ್ನು ನನಗೆ ವಾಪಸ್ ಕೊಡಲ್ಲ ಅಂದ್ರೆ, 271 00:18:03,000 --> 00:18:06,458 ಇರುವುದರಲ್ಲೇ ಆನಂದಿಸುತ್ತೇನೆ. 272 00:18:06,458 --> 00:18:08,041 ನನಗೆ ಅರ್ಥವಾಗುತ್ತೆ. 273 00:18:10,791 --> 00:18:12,416 ಹಲೋ, ನಾನು ಆಟಂ. 274 00:18:14,583 --> 00:18:16,208 ಮಸ್ಟಾಂಗ್ ಸ್ಯಾಲಿ. 275 00:18:18,958 --> 00:18:21,750 ನೀವು ಸಮಯವನ್ನು ಗೌರವಿಸುತ್ತಿಲ್ಲ ಅಂತ ಗೊತ್ತಾ? 276 00:18:23,750 --> 00:18:25,333 ಹಾಗಂದ್ರೆ ಏನು? 277 00:18:26,666 --> 00:18:29,333 ಈ ರೀತಿಯ ವರ್ತನೆ ನಿಮ್ಮ ಸಮಯವನ್ನು ಕಸಿಯುತ್ತಿದೆ. 278 00:18:32,083 --> 00:18:34,083 ನಿನಗೆ ಅದೆಲ್ಲಾ ಹೇಗೆ ಗೊತ್ತು? 279 00:18:34,083 --> 00:18:37,083 ನೀವು ಬೇಸತ್ತಿರುವ ವಿಷಯದಿಂದಲೇ ಬೇಸತ್ತಿರುವ ಇನ್ನೊಬ್ಬರು 280 00:18:37,083 --> 00:18:38,958 ನನಗೆ ಅದನ್ನು ತೋರಿಸಿದರು, 281 00:18:38,958 --> 00:18:42,208 ದೇವರು ಮತ್ತು ಬ್ರಹ್ಮಾಂಡ ನಮ್ಮಲ್ಲಿ ಕೆಲವರಿಗೆ ಸಮಯ ಕೊಡುತ್ತಾರೆ, 282 00:18:42,208 --> 00:18:44,916 ಅದನ್ನು ಸದುಪಯೋಗಪಡಿಸಿಕೊಳ್ಳುವುದು ನಮಗೆ ಬಿಟ್ಟಿದ್ದು. 283 00:18:46,750 --> 00:18:49,333 ನಿಮ್ಮ ಸಿಗರೇಟ್ ನಿಮಗೆ ಸಿಗುತ್ತೆ ಅಂತ ಗೊತ್ತು, 284 00:18:50,916 --> 00:18:52,458 ಮತ್ತೆ ಯಾಕೆ ಜಗಳ ಆಡ್ತಿದ್ದೀರಿ? 285 00:18:54,291 --> 00:18:56,208 ನಿಮಗೆ ಯಾವುದರ ಬಗ್ಗೆ ಅಷ್ಟು ಭಯ? 286 00:18:57,833 --> 00:19:01,166 ಸಮಯವನ್ನು ಹಾಳು ಮಾಡುತ್ತಿರುವ ನಿಮಗೆ ಯಾಕೆ ಇನ್ನಷ್ಟು ಸಮಯ ಕೊಡಬೇಕು? 287 00:19:05,541 --> 00:19:08,041 ನೀನು ಯಾಕೆ ಇಷ್ಟು ಬುದ್ದಿವಂತೆ ಅಲ್ಲ? 288 00:19:10,083 --> 00:19:11,041 ಸರಿ. 289 00:19:12,333 --> 00:19:13,541 ಸರಿ, ಸ್ಯಾಲಿ. 290 00:19:19,250 --> 00:19:21,041 ಸರಿ. ಧನ್ಯವಾದ. ಹೋಗೋಣ. 291 00:19:21,041 --> 00:19:22,958 ಕೆನ್, ಅವಳನ್ನು ಇಲ್ಲಿಗೆ ಮತ್ತೆ ಕರೆತಾ. 292 00:19:23,916 --> 00:19:24,916 ಹಾಂ. 293 00:19:25,666 --> 00:19:27,750 ನೀವಿಬ್ಬರೂ ಆತ್ಮೀಯರಂತೆ ಕಾಣುತ್ತೀರಿ. 294 00:19:46,000 --> 00:19:47,625 ನಾವು ಈ ಜನರನ್ನು ಹಣ ಕೇಳಲಾಗದು. 295 00:19:47,625 --> 00:19:49,750 ಅವರ ಸ್ಥಿತಿಯೂ ಚೆನ್ನಾಗಿಲ್ಲ. 296 00:19:49,750 --> 00:19:51,583 ಅವರು ಜಮೀನು ಕಳೆದುಕೊಳ್ಳುತ್ತಿಲ್ಲ. 297 00:19:51,583 --> 00:19:53,291 ವೇನ್ ಪೆಟ್ಟಿಗ್ರು ಜೊತೆ ಇದ್ದಾನೆ. 298 00:19:53,291 --> 00:19:56,333 - ಅವನಿಗೆ ಪಶ್ಚಿಮದ ಹುಲ್ಲುಗಾವಲು ಬೇಕು. - ನಮ್ಮ ಜೀವನ ಹಾಳಾಗಬೇಕು. 299 00:19:56,333 --> 00:19:58,791 ಅದಕ್ಕಾಗಿಯೇ ನಾವು ಈ ಸಹಾಯವನ್ನು ಕೇಳಬೇಕು. 300 00:19:58,791 --> 00:20:00,125 ಜನರ ಬಳಿ ನಮ್ಮ ಋಣ ಇದೆ. 301 00:20:04,000 --> 00:20:05,916 ಬ್ಯಾಂಕಿನೊಂದಿಗೆ ಸೌಹಾರ್ದತೆ ಇದೆ. 302 00:20:05,916 --> 00:20:09,291 ಅದರಲ್ಲಿ ಈ ಕಾಗದದ ಮೇಲಿರುವ ಜನಗಳಿಗಿಂತ ಹೆಚ್ಚಿನ ಹಣವಿದೆ. 303 00:20:09,291 --> 00:20:10,666 ಕಾರಿನಲ್ಲಿ ಸಿಗುವೆ. 304 00:20:14,833 --> 00:20:18,000 ಖಾತಾ ಪುಸ್ತಕ 305 00:20:18,000 --> 00:20:21,083 ಬೈಸನ್ ವ್ಯಾಲಿ ಬ್ಯಾಂಕ್ ಆಫ್ ವಯೋಮಿಂಗ್ 306 00:20:40,000 --> 00:20:41,625 ಏನು ಹೇಳ್ತಾ ಇದ್ರಿ? 307 00:20:42,458 --> 00:20:43,625 ಕ್ಷಮಿಸಿ. 308 00:20:45,625 --> 00:20:50,375 ನಾವು ಹೇಳಿದಂತೆ, ಅಧಿಕ ಬಡ್ಡಿ ದರದ ಸಾಲಕ್ಕೆ ನಮಗೆ ಯಾವುದೇ ಅಭ್ಯಂತರ ಇಲ್ಲ, 309 00:20:50,375 --> 00:20:52,000 ಯಾಕೆಂದರೆ ಪರಿಸ್ಥಿತಿಗಳು ಹಾಗಿವೆ. 310 00:20:52,000 --> 00:20:54,125 ಟ್ರಕ್ಕುಗಳು ನಮ್ಮ ಒಡೆತನದಲ್ಲಿವೆ. 311 00:20:55,250 --> 00:20:58,625 ಸಮಸ್ಯೆ ಏನಂದರೆ ಇಷ್ಟು ಮೊತ್ತದ ಸಾಲಕ್ಕೆ ನಿಮ್ಮ ಬಳಿ ಅಡವಿಡಲು ಏನೂ ಇಲ್ಲ. 312 00:20:59,416 --> 00:21:00,666 ಅದು ನಮಗೆ ಗೊತ್ತಿದೆ. 313 00:21:06,541 --> 00:21:08,458 {\an8}ಬಟರ್ಫ್ಲೈ ಸ್ಟ್ರೋಕ್ ಪ್ರಶಸ್ತಿ 2011 ಲಿಂಡ್ಸೇ ಶಾಂಕ್ಲರ್ ಅವರಿಗೆ ಪುರಸ್ಕೃತ 314 00:21:12,666 --> 00:21:15,875 ಲಿಂಡ್ಸೇ, ನನ್ನ ಕುಟುಂಬ ಈ ಬ್ಯಾಂಕಿನೊಂದಿಗೆ 80 ವರ್ಷ ವ್ಯವಹರಿಸಿದೆ. 315 00:21:16,916 --> 00:21:19,916 ನನ್ನ ತಂದೆ, ನಿಮ್ಮ ತಂದೆ ಒಳ್ಳೆಯ ಸ್ನೇಹಿತರಾಗಿದ್ದರು. 316 00:21:21,166 --> 00:21:24,000 ಆರ್ಥಿಕ ಹಿಂಜರಿತದ ಸಮಯದಲ್ಲಿ, ನಿಮ್ಮ ತಂದೆ ಮನೆ ಮನೆಗೆ ಹೋಗಿ 317 00:21:24,000 --> 00:21:27,375 ಗ್ರಾಹಕರಿಗೆ ಉಳಿಯಲು ಬೇಡಿಕೊಂಡಾಗ, ನಾವು ಉಳಿದೆವು. 318 00:21:27,375 --> 00:21:29,583 ಅದರ ವಿರುದ್ಧ ಯೋಚಿಸಲೂ ಇಲ್ಲ. 319 00:21:30,291 --> 00:21:33,583 ಈ ಸಲ, ಪರಿಸ್ಥಿತಿ ನಮಗೆ ವಿರುದ್ಧವಾಗಿದೆ, 320 00:21:33,583 --> 00:21:35,416 ನಿಮ್ಮ ತಂದೆ ಮನೆ ಮನೆಗೆ ಹೋದಂತೆ. 321 00:21:37,041 --> 00:21:39,791 ನಿಷ್ಠೆ ಅನ್ನೋದು ನಿಮ್ಮ ಫಲಕದ ಮೇಲಿನ ಪದವಷ್ಟೇ ಆಗಿರಬಾರದು. 322 00:21:41,541 --> 00:21:44,916 ಆಬಟ್ ಮಾತೇ ಸಾಕಾಗಿತ್ತು ಅನ್ನುವುದನ್ನು ನೆನಪಿಡಿ. 323 00:21:50,125 --> 00:21:51,500 ಆಬಟ್ ಹೆಸರು, ಅದು... 324 00:21:55,541 --> 00:21:57,375 ನಿಮ್ಮ ಮಗನ ಕೃತ್ಯದ ನಂತರ... 325 00:22:00,375 --> 00:22:01,833 ಅದು ಹಾಗೇ ಉಳಿದಿಲ್ಲ. 326 00:22:21,916 --> 00:22:23,666 ಕಕ್ಕಸು ಇರೋ ಕಡೆ ನೊಣಗಳು ಬರುತ್ತವೆ. 327 00:22:27,375 --> 00:22:29,791 ಜೀವನವನ್ನು ಸ್ವಚ್ಛಗೊಳಿಸಿ, ಲಿಂಡ್ಸೇ, ನೊಣ ಇರಲ್ಲ. 328 00:23:08,625 --> 00:23:11,166 ಹಾಂ! ದೇವರೇ! 329 00:23:19,041 --> 00:23:20,375 ದರಿದ್ರ. 330 00:23:36,833 --> 00:23:38,750 ಹಾಳಾದ್ದು! 331 00:23:38,750 --> 00:23:40,791 $10,000 ಬೂಟುಗಳು. 332 00:23:42,625 --> 00:23:43,750 ಹಾಂ. 333 00:23:43,750 --> 00:23:45,833 ದರಿದ್ರದವನೇ. 334 00:23:45,833 --> 00:23:47,416 ಥತ್ತೇರಿಕೆ, ಹಾಂ! 335 00:23:50,875 --> 00:23:53,333 ನಾವು ಬರಬಹುದೆಂದು ನಿಮ್ಮ ತಂದೆ ಹೇಳಿದರು. 336 00:23:53,333 --> 00:23:56,208 - ಹಾಂ. - ಆ ಬಡಪಾಯಿ ಹುಡುಗ ಎಲ್ಲಿದ್ದಾನೆ? 337 00:23:56,208 --> 00:23:57,958 ನಡೆದದ್ದು ತುಂಬಾ ಘೋರ. 338 00:24:00,041 --> 00:24:02,500 - ಪಡಸಾಲೆ ಒಳಗೆ ಬಲಗಡೆ ಇದ್ದಾನೆ. - ಹಾಂ. ಬಲಗಡೆ. ಹೋಗೋಣ. 339 00:24:02,500 --> 00:24:03,791 ಹಾಂ. 340 00:24:08,375 --> 00:24:09,791 ಧನ್ಯವಾದ. 341 00:24:19,125 --> 00:24:20,500 ಹಾಯ್. 342 00:24:38,083 --> 00:24:42,208 ಜೋಶುವಾ 1:9 ಹೇಳುತ್ತದೆ, "ದೃಢವಾಗಿ ಧೈರ್ಯದಿಂದಿರಿ. 343 00:24:43,291 --> 00:24:45,333 "ಭಯಪಡಬೇಡಿ, ದಿಗಿಲು ಬೇಡ, 344 00:24:45,333 --> 00:24:48,250 "ನೀವೆಲ್ಲಿಗೆ ಹೋದರೂ, ಭಗವಂತ ನಿಮ್ಮೊಂದಿಗೆ ಇರುತ್ತಾನೆ." 345 00:24:49,291 --> 00:24:51,333 ನಮ್ಮ ದುಃಖದಲ್ಲಿ ಮಹಿಮೆ ಇದೆ, 346 00:24:52,416 --> 00:24:55,083 ಸಂಕಟವು ಪರಿಶ್ರಮವನ್ನು ಉಂಟುಮಾಡುತ್ತದೆ. 347 00:24:55,875 --> 00:24:58,125 ಪರಿಶ್ರಮವು ವ್ಯಕ್ತಿತ್ವವನ್ನುಂಟುಮಾಡುತ್ತೆ, 348 00:24:59,291 --> 00:25:01,041 ವ್ಯಕ್ತಿತ್ವ ಭರವಸೆ ಉಂಟುಮಾಡುತ್ತದೆ. 349 00:25:01,958 --> 00:25:03,666 - ಆಮೆನ್. - ಆಮೆನ್. 350 00:25:05,250 --> 00:25:06,583 ನಿನಗಾಗಿ ನಾವಿದ್ದೇವೆ. 351 00:25:07,458 --> 00:25:08,666 ಮಹಿಳೆಯರೇ. 352 00:25:11,750 --> 00:25:15,333 ನಿನ್ನ ತಮ್ಮನನ್ನು ನೋಡಿಕೊಂಡಿದ್ದಕ್ಕೆ ದೇವರು ನಿನಗೆ ಒಳ್ಳೆಯದು ಮಾಡುವನು. 353 00:25:27,000 --> 00:25:28,041 ಹಲೋ. 354 00:25:32,250 --> 00:25:35,791 ನೀನು ಸತ್ತಿರುವೆ ಅಂದುಕೊಂಡಿದ್ದೆ. 355 00:25:37,583 --> 00:25:39,500 ನಾನೂ ಅಷ್ಟೇ. 356 00:25:42,791 --> 00:25:44,166 ಆದರೆ... 357 00:25:46,458 --> 00:25:48,000 ರಾಯಲ್ ನನ್ನನ್ನು ಕರೆದೊಯ್ದರು. 358 00:25:51,750 --> 00:25:52,958 ರಾಯಲ್? 359 00:25:53,791 --> 00:25:56,125 ನನ್ನನ್ನು ಅವರ ಕುಟುಂಬದವಳು ಅಂದುಕೊಂಡಿದ್ದಾರೆ. 360 00:26:04,958 --> 00:26:06,291 ಬಿಲ್ಲಿ. 361 00:26:09,416 --> 00:26:11,041 ನಾವು ಪರಸ್ಪರರೊಳಗೆ ವಾಸಿಸುತ್ತೇವೆ. 362 00:26:14,291 --> 00:26:15,458 ಅದನ್ನು ನಂಬುತ್ತೀಯಾ? 363 00:26:53,416 --> 00:26:54,750 ಹೇ. 364 00:26:57,375 --> 00:26:59,166 ನನ್ನ ತಮ್ಮ ನಿನ್ನಿಂದ ಗುಂಡೇಟು ತಿಂದನಾ? 365 00:27:08,291 --> 00:27:10,333 ಹ್ಯಾಂಡ್ಸಮ್ ಗ್ಯಾಂಬ್ಲರ್ ಒಳಗೆ ಸಿಗು. 366 00:27:18,416 --> 00:27:19,625 ಸರಿ. ಬನ್ನಿ. 367 00:27:19,625 --> 00:27:21,083 ಪೈನ್ ರಿಡ್ಜ್ ಪ್ರೊಟೆಸ್ಟಂಟ್ ಚರ್ಚ್ 368 00:27:32,958 --> 00:27:36,833 ಹೇ, ನಾವು ಟಿಲ್ಲರ್ಸನ್ ಮನೆಯಿಂದ ಹೊರಟಾಗಿನಿಂದ ನೀನು ಸುಮ್ಮನಿದ್ದೀಯ. 369 00:27:37,541 --> 00:27:38,916 ಎಲ್ಲವೂ ಆರಾಮಾ? 370 00:27:40,541 --> 00:27:43,250 ಹಾಂ. ಅಂದರೆ, ಬಿಲ್ಲಿ ನನ್ನ ಗೆಳೆಯ. 371 00:27:43,875 --> 00:27:46,416 ಗೊತ್ತು. ಅವನ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇವೆ. 372 00:27:47,916 --> 00:27:50,125 ಪ್ರಾರ್ಥನೆ ಎಂದರೆ ಬಚ್ಚಿಟ್ಟುಕೊಳ್ಳುವುದಲ್ವಾ? 373 00:27:53,250 --> 00:27:55,375 - ಅದು... - ಅದರಿಂದ ಜನರಿಗೆ ತಮ್ಮ ಬಗ್ಗೆ 374 00:27:55,375 --> 00:27:57,291 ಒಳ್ಳೆಯ ಭಾವನೆ ಮೂಡಬಹುದು. 375 00:27:58,208 --> 00:28:01,625 ಆದರೆ ಅದು ನಿಷ್ಕ್ರಿಯತೆ. ಸುಮ್ಮನೆ ಮೌನವಾಗಿ ಕುಳಿತಿರುತ್ತೀರಿ. 376 00:28:02,500 --> 00:28:05,041 ಸುಮ್ಮನೆ ಮೌನವಾಗಿ ಕುಳಿತಿರುವುದರಿಂದ ಏನಾದರೂ ಸಮಸ್ಯೆಯೇ? 377 00:28:05,541 --> 00:28:07,125 ಆ ಮಹಿಳೆ, ಸ್ಯಾಲಿಯನ್ನು ನೋಡಿ. 378 00:28:07,125 --> 00:28:10,958 ಆಕೆಗೆ ಬೇಕಾಗಿದ್ದದ್ದು ಮಾತನಾಡಲು ಯಾರಾದರೂ ಒಬ್ಬರು ಅಷ್ಟೇ. 379 00:28:11,958 --> 00:28:14,666 ಆಟಂ, ನೀನು ಸ್ಯಾಲಿಗೆ ಹೇಳಿದ್ದು ಆಕೆಗೇನೂ ಉಪಯೋಗವಾಗಿಲ್ಲ. 380 00:28:15,958 --> 00:28:19,833 ಅಂದರೆ, ಸ್ಯಾಲಿ ಜೊತೆ ಐದು ನಿಮಿಷ ಕಳೆದು ನಿನಗೆ ಜ್ಞಾನೋದಯವಾಗಿದೆಯೇ? 381 00:28:21,500 --> 00:28:25,166 ಕ್ರಿಸ್ತನನ್ನು ಶಿಲುಬೆಗೆ ಯಾಕೆ ನೇತುಹಾಕಿದರು ಅಂತೀರಿ, ಪಾದ್ರಿಯವರೇ? 382 00:28:25,916 --> 00:28:27,416 ಯಾಕೆಂದರೆ ಆತ ದೇವರ ಮಗ. 383 00:28:29,541 --> 00:28:32,041 ನಿಜ ಹೇಳಿದ್ದಕ್ಕೆ ಆತನನ್ನು ಶಿಲುಬೆಗೇರಿಸಿದರು. 384 00:28:33,833 --> 00:28:35,291 ನಿಮಗೆ ಭಯವಾಯಿತು ಅನ್ಸುತ್ತೆ. 385 00:28:36,500 --> 00:28:40,208 ಆ ಹೆಂಗಸಿಗೆ ನಾನು ಸತ್ಯ ಹೇಳಿದ್ದು ನೋಡಿ ನಿಮಗೆ ಭಯವಾಗಿರಬೇಕು. 386 00:28:43,416 --> 00:28:47,500 ಆಟಂ, ನೀನು ಆಕೆಗೆ ಹೇಳಿದ್ದು ಚಿಲ್ಲರೆ ಕಾಸಿನ ಉಪದೇಶ. 387 00:28:48,416 --> 00:28:50,833 ಸ್ಯಾಲಿಯ ತಲೆಗೆ ಆಘಾತಕಾರಿ ಏಟು ಬಿದ್ದಿದ್ದು, 388 00:28:50,833 --> 00:28:53,791 ಕೇಳುವವರಿಗೆ ಅದೇ ಕಥೆಯನ್ನು ಹೇಳುತ್ತಿರುತ್ತಾಳೆ. 389 00:28:54,125 --> 00:28:56,291 ನೀನು ನಾಳೆ ಹೋದರೆ, ಅವಳಿಗೆ ನಿನ್ನ ನೆನಪಿರಲ್ಲ 390 00:28:56,291 --> 00:28:58,125 ಮತ್ತು ಎಲ್ಲವನ್ನೂ ಮತ್ತೆ ಹೇಳುತ್ತಾಳೆ. 391 00:29:03,000 --> 00:29:05,625 ಇವತ್ತು ಯಾವುದರಿಂದ ತಪ್ಪಿಸಿಕೊಳ್ಳಲು ಇಲ್ಲಿಗೆ ಬಂದೆ? 392 00:29:07,125 --> 00:29:08,875 ನಾನು ಜನರಿಗೆ ಸಹಾಯ ಮಾಡಬೇಕು. 393 00:29:10,041 --> 00:29:13,250 ಹಾಗಿದ್ದರೆ ನೀನು ಸೇವೆ ಮಾಡುವುದನ್ನು ಕಲಿಯಬೇಕು. ನಿಜವಾದ ಸೇವೆ. 394 00:29:13,916 --> 00:29:16,916 ನೀನು ಅದನ್ನೇ ಮಾಡಬೇಕಂತಿದ್ದರೆ, ಇಲ್ಲಿ ನಿನಗೆ ಯಾವಾಗಲೂ ಸ್ವಾಗತ. 395 00:29:18,500 --> 00:29:19,916 ಶುಭದಿನ. 396 00:29:19,916 --> 00:29:21,958 - ಧನ್ಯವಾದ, ಪಾದ್ರಿ. - ನಿನಗೆ ಧನ್ಯವಾದ. 397 00:29:35,541 --> 00:29:38,083 ಚಿಕ್ಕವನಾಗಿದ್ದಾಗ ನಿಮ್ಮ ಜೊತೆ ಇದನ್ನು ಮಾಡುತ್ತಿದ್ದೆ. 398 00:29:44,125 --> 00:29:46,250 - ನಾನು ಮಾಡಬಹುದೇ? - ಖಂಡಿತ. 399 00:29:58,958 --> 00:30:01,583 ರೆಬೆಕ್ಕಾ ನನ್ನನ್ನು ಯಾಕೆ ಬಿಟ್ಟು ಹೋದಳೋ, ಆದರೆ ಹೋದಳು. 400 00:30:02,041 --> 00:30:04,500 ನಮ್ಮ ಮಗಳು ಬೇಡವೆಂಬಂತೆ ನನ್ನ ಬಳಿ ಬಿಟ್ಟು ಹೋದಳು. 401 00:30:05,916 --> 00:30:07,791 ಆಮೇಲೆ ಎಲ್ಲವೂ ಹಾಳಾಯಿತು. 402 00:30:09,000 --> 00:30:10,583 ನಾನಿದ್ದ ನೋವಿನಲ್ಲಿ, ನಾನು... 403 00:30:13,291 --> 00:30:15,208 ...ಯಾರನ್ನಾದರೂ ಕೊಲ್ಲುವೆ ಅಥವಾ ಏಮಿಯನ್ನು 404 00:30:16,416 --> 00:30:17,833 ಬಿಡುವೆ ಅಂದುಕೊಳ್ಳಲಿಲ್ಲ. 405 00:30:20,000 --> 00:30:22,125 - ಆದರೂ ಮಾಡಿದೆಯಲ್ಲ. - ಹೌದು. 406 00:30:22,625 --> 00:30:24,375 ಎಲ್ಲವನ್ನೂ ಸರಿಪಡಿಸಲು ನೋಡುತ್ತಿರುವೆ. 407 00:30:27,833 --> 00:30:29,750 ನಿನಗೆ ನೀನೇ ಸುಳ್ಳು ಹೇಳುತ್ತಿರುವೆ. 408 00:30:30,458 --> 00:30:31,750 ಇಲ್ಲ. 409 00:30:33,500 --> 00:30:34,500 ನಿಮಗೆ ಗೊತ್ತಿಲ್ಲ. 410 00:30:37,375 --> 00:30:39,500 ನನಗಿಂತ ಚೆನ್ನಾಗಿ ಯಾರು ಬಲ್ಲರು? 411 00:30:40,458 --> 00:30:43,250 ವ್ಯತ್ಯಾಸವೆಂದರೆ, ನನಗಾಗ ಎಂಟು ವರ್ಷ, ಮತ್ತು ಅದು ಆಕಸ್ಮಿಕ. 412 00:30:43,250 --> 00:30:46,458 ನೀನು ಮಾಡುವುದು ನಿನಗೆ ಗೊತ್ತಿತ್ತು. ನೀನು ಬೆಳೆದ ಗಂಡಸು. 413 00:30:51,166 --> 00:30:55,250 ಹೌದು, ನೀವು ಒಳ್ಳೆಯ ತಂದೆ ಎನ್ನುವಂತೆ ಆಡಬೇಡಿ. 414 00:30:57,458 --> 00:31:00,708 ಸಮಾಧಾನ ಆಯ್ತಾ? ನೋವು ಕಡಿಮೆ ಆಯ್ತಾ? 415 00:31:02,625 --> 00:31:03,666 ಇಲ್ಲ. 416 00:31:18,916 --> 00:31:19,875 ಧನ್ಯವಾದಗಳು. 417 00:31:26,166 --> 00:31:27,250 ಹೇ. 418 00:31:29,166 --> 00:31:30,666 ನಿನಗೂ ಗುಂಡು ತಗುಲಿತಾ? 419 00:31:31,750 --> 00:31:33,625 ಅದಕ್ಕೇ ಹಾಗೆ ನಡೆಯುತ್ತಿದ್ದೀಯಾ? 420 00:31:35,541 --> 00:31:36,875 ಕಾಡೆಮ್ಮೆಗಳು. 421 00:31:40,083 --> 00:31:41,166 ಕಾಡೆಮ್ಮೆ. 422 00:31:43,958 --> 00:31:45,291 ಆದರೂ ನಡೆಯುತ್ತಿದ್ದೀಯಲ್ಲ. 423 00:31:50,333 --> 00:31:52,791 ನನ್ನ ತಮ್ಮನನ್ನು ಯಾಕೆ ನಿಯಂತ್ರಿಸುತ್ತಿದ್ದೀಯಾ? 424 00:31:53,708 --> 00:31:55,833 ನಾನು ಅವನನ್ನು ನಿಯಂತ್ರಿಸುತ್ತಿಲ್ಲ. 425 00:31:55,833 --> 00:31:57,958 ನಿನ್ನನ್ನು ನೋಡಿದ ತಕ್ಷಣ ಅವನ ಮುಖ ಹೊಳೆಯಿತು. 426 00:31:59,333 --> 00:32:00,708 ಅವನಿಗೆ ದರ್ಶನಗಳಾಗಿವೆ. 427 00:32:01,625 --> 00:32:02,750 ಆ ಕೂಪದಿಂದಲಾ? 428 00:32:06,375 --> 00:32:07,750 ಇಲ್ಲಿಂದ ಹೋಗೋಣ. 429 00:32:22,333 --> 00:32:23,583 ಕೂಪ ಈಗಿಲ್ವಾ? 430 00:32:25,166 --> 00:32:28,208 ದೊಡ್ಡ ಗುಂಡಿ ಮುಚ್ಚಿಕೊಂಡಿತು. ನಾನು ಅಗೆದಂಥವು ಮುಚ್ಚಿದವು. 431 00:32:31,416 --> 00:32:32,666 ಈಗಿಲ್ಲ. 432 00:32:34,041 --> 00:32:36,000 ಮುಚ್ಚಿದೆ ಅಂದರೆ "ಈಗಿಲ್ಲ" ಅಂತಾನಾ? 433 00:32:39,125 --> 00:32:41,250 ಇಷ್ಟು ಮಂದ ಬುದ್ಧಿಯಿಂದ ಹೇಗೆ ಯೋಚಿಸಿದೆ? 434 00:32:45,916 --> 00:32:47,041 ಹುಷಾರು. 435 00:32:47,541 --> 00:32:49,458 ಇವತ್ತು ತುಂಬಾ ಜನರನ್ನು ಎದುರಿಸಿದ್ದೇನೆ. 436 00:32:49,458 --> 00:32:51,041 ಹೌದಾ, ಬೇರೆ ಯಾರನ್ನು ಎದುರಿಸಿದೆ? 437 00:32:51,875 --> 00:32:53,125 ನಮ್ಮಪ್ಪ. 438 00:32:54,458 --> 00:32:55,916 ನಿನಗೂ ಅವರಿಗೂ ಸರಿ ಹೋಗುತ್ತೆ. 439 00:32:56,833 --> 00:32:58,625 ನಿಮ್ಮಿಬ್ಬರಿಗೂ ಬಿಲ್ಲಿ ಅದ್ಭುತ. 440 00:33:01,583 --> 00:33:02,666 ಅವನು ಅದ್ಭುತವೇ. 441 00:33:05,458 --> 00:33:06,791 ನೀನಲ್ಲ ಅಂತಲ್ಲ. 442 00:33:09,000 --> 00:33:10,500 ಅವನು ಇನ್ನೂ ಚಿಕ್ಕ ಹುಡುಗನಂತೆ. 443 00:33:12,125 --> 00:33:13,833 ಅವನ ಮೇಲೆ ನಿನಗೆ ಯಾಕಷ್ಟು ಕೋಪ? 444 00:33:15,375 --> 00:33:17,333 ಎಲ್ಲವೂ ಅವನ ಪರವಾಗಿಯೇ ನಡೆಯುತ್ತೆ. 445 00:33:18,000 --> 00:33:20,333 ಅದು ನಿಜವಾ ಅಥವಾ ನಿನಗೆ ಹಾಗನಿಸುತ್ತಾ? 446 00:33:26,875 --> 00:33:28,333 ಅವನಲ್ಲಿ ನಿನಗೇನು ಕಾಣುತ್ತೆ? 447 00:33:30,583 --> 00:33:32,541 ಬಿಲ್ಲಿ ಮುಂದಾಗುವುದನ್ನು ನೋಡಿದ್ದಾನೆ. 448 00:33:35,166 --> 00:33:36,416 ಖಚಿತವಾ? 449 00:33:40,583 --> 00:33:42,125 ನೀನೇನು ನೋಡಿದೆ? 450 00:33:44,375 --> 00:33:45,583 ನಿನ್ನನ್ನು ನೋಡಿದೆ. 451 00:33:47,791 --> 00:33:50,916 ನೀನು ಶಕ್ತಿಶಾಲಿಯಾಗಿದ್ದೆ. 452 00:33:54,458 --> 00:33:56,333 ಒಂದು ಪ್ರಬಲ ಕೈ ನಿನ್ನನ್ನು 453 00:33:58,500 --> 00:33:59,875 ಸ್ಪರ್ಶಿಸಿದ ಹಾಗೆ. 454 00:34:01,875 --> 00:34:03,416 ಅನೇಕ ಜನರು ನಿನ್ನನ್ನು ನೋಡಿದರು, 455 00:34:05,750 --> 00:34:07,291 ಆದರೆ ನನಗೆ ಬಿಲ್ಲಿ ಕಾಣಲಿಲ್ಲ. 456 00:34:11,041 --> 00:34:12,291 ನಾನು ನೋಡಬೇಕು. 457 00:34:14,875 --> 00:34:16,166 ನೀನು ಕೂಪದೊಳಗೆ ಹೋಗಿದ್ದೀಯ. 458 00:34:16,166 --> 00:34:17,666 ಖನಿಜವನ್ನು ಪಡೆಯಲಿಲ್ಲವೇ? 459 00:34:17,666 --> 00:34:19,625 ಅದನ್ನು ಪಡೆಯಬಹುದು ಅಂತ ಗೊತ್ತಿರಲಿಲ್ಲ. 460 00:34:22,541 --> 00:34:23,875 ನಿನ್ನ ಹತ್ರ ಏನಾದರೂ ಇದೆಯಾ? 461 00:34:30,916 --> 00:34:32,041 ಇಲ್ಲ. 462 00:34:35,250 --> 00:34:37,083 - ನಿನಗೇನಾದರೂ ಕಾಣಿಸಿದರೆ... - ಹೇಳುತ್ತೇನೆ. 463 00:34:42,708 --> 00:34:44,458 ನಾನು ಹೊರಡಬೇಕು. 464 00:34:47,375 --> 00:34:48,625 ನಿನ್ನನ್ನು ಬಿಡಬೇಕಾ? 465 00:34:49,416 --> 00:34:50,875 ನಾವು ಅದೇ ಕಡೆ ಹೋಗುತ್ತಿದ್ದೇವೆ. 466 00:35:58,625 --> 00:36:01,416 ಲೂಕ್! ಲೂಕ್! 467 00:36:04,666 --> 00:36:05,958 ಲೂಕ್! 468 00:36:09,416 --> 00:36:12,708 ಅಪ್ಪ ಇಲ್ಲಿದ್ದಾರೆ. ನಾನಿಲ್ಲಿದ್ದೀನಿ. ನಿನ್ನ ಅಪ್ಪ ಇಲ್ಲಿದ್ದಾರೆ. 469 00:36:13,875 --> 00:36:15,750 ನಿನಗೆ ಏನಾಗಿಲ್ಲ. ನಾನಿದ್ದೇನೆ. 470 00:36:17,583 --> 00:36:19,291 ಕಾರು. 471 00:36:26,416 --> 00:36:28,041 ಕಾರು. 472 00:36:59,250 --> 00:37:01,666 ನನಗೆ ಗೊತ್ತಾಯ್ತು. ಗೊತ್ತಾಯ್ತು. 473 00:37:04,166 --> 00:37:05,333 ಸರಿ. 474 00:37:07,458 --> 00:37:08,916 ತಗೋ. 475 00:37:09,666 --> 00:37:11,000 ತಗೋ. 476 00:37:13,375 --> 00:37:15,000 ಹಾಂ, ತಗೋ. 477 00:37:17,750 --> 00:37:19,333 ಹಾಗೆ. 478 00:39:18,666 --> 00:39:22,708 ನೀನು ಮೋಸಗಾತಿಯಾದರೆ, ಒಳ್ಳೆಯ ಮೋಸಗಾತಿಯೇ. 479 00:39:26,916 --> 00:39:28,458 ನೀನು ಕೂಪವನ್ನು ನೋಡಿದೆ. 480 00:39:29,291 --> 00:39:31,916 ನಿನಗೆ ನನ್ನನ್ನು ನೋಡುವ ಮೊದಲೇ ದರ್ಶನವಾಗಿತ್ತು. 481 00:39:33,208 --> 00:39:34,583 ಹೌದು. 482 00:39:37,041 --> 00:39:39,375 ನಿನಗೆ ಜೀವನದಲ್ಲಿ ಬೇಕಿರುವುದು ಏನು? 483 00:39:45,541 --> 00:39:46,875 ಮುಖ್ಯವಾಗೋದು. 484 00:40:47,666 --> 00:40:48,875 ಹೇ. 485 00:40:53,791 --> 00:40:55,500 ಯಾಕೆ ಎಲ್ಲರೂ ಸಪ್ಪಗಿದ್ದೀರಿ? 486 00:40:56,208 --> 00:40:58,125 ಮನೆಯನ್ನು ಹರಾಜಿಗೆ ಹಾಕಲಾಗಿದೆ. 487 00:40:59,666 --> 00:41:03,041 ಬಿಲ್ಲಿ ಜೊತೆ ಇದ್ದ ಹುಡುಗಿ ಅವಳೇ. ಹುಚ್ಚಿ ಅವಳು. 488 00:41:04,333 --> 00:41:05,583 ಮತ್ತೆ ನಮಸ್ಕಾರ. 489 00:41:07,458 --> 00:41:08,666 ನಾನು ಆಟಂ. 490 00:41:10,041 --> 00:41:12,958 ನಮಗೆ ಹುಚ್ಚಿಲ್ಲದಿದ್ದರೇನೇ ನಾವು ಬಡವರು. 491 00:41:16,166 --> 00:41:17,958 ಮನೆ ಏಕೆ ಹರಾಜಿಗಿದೆ? 492 00:41:19,583 --> 00:41:21,875 ಅದನ್ನು ಆಮೇಲೆ ಮಾತಾಡೋಣ. 493 00:41:24,583 --> 00:41:27,208 ಸಂಕಷ್ಟದ ಕೃಷಿ ಸಾಲಗಳ ಬಗ್ಗೆ ಬ್ಯಾಂಕಿನಲ್ಲಿ ಕೇಳಿದಿರಾ? 494 00:41:27,708 --> 00:41:29,416 ಒಂದು ಬೆಳೆ ನೆಟ್ಟರೂ ಅರ್ಹರಾಗಬಹುದು. 495 00:41:29,416 --> 00:41:32,500 ಈಗ ಆ ವಿಷಯ ಕೆದಕುವುದು ಬೇಡ. ದಯವಿಟ್ಟು. 496 00:41:32,500 --> 00:41:34,791 - ಮರಿಯಾ ಮಾತನ್ನು ಕೇಳಿ. - ಪರವಾಗಿಲ್ಲ. 497 00:41:43,916 --> 00:41:45,916 ನಿಮ್ಮ ಕಷ್ಟದ ಬಗ್ಗೆ ನನಗೆ ಬೇಜಾರಿದೆ, 498 00:41:47,375 --> 00:41:49,375 ಆದರೆ ಈ ಪಾಲಿಗೆ-ಬಂದಿದ್ದು-ಪಂಚಾಮೃತ 499 00:41:49,375 --> 00:41:52,250 ಅನ್ನೋ ಧೋರಣೆಯಿಂದ ನಿಮ್ಮ ಜಮೀನು ನಿಮಗೆ ದಕ್ಕಲ್ಲ. 500 00:41:54,541 --> 00:41:57,166 ನಿಮಗೆ ಯಾವುದು ನೋವಾಗುತ್ತೋ, ರೆಟ್ಟಿಗೂ ಅದೇ ನೋವೇ, 501 00:41:58,291 --> 00:41:59,541 ಮತ್ತು ನನಗದು ಬೇಡ. 502 00:42:04,208 --> 00:42:05,666 ಶುಭರಾತ್ರಿ. 503 00:42:12,416 --> 00:42:14,416 ಕೆಲವರು ಒಳ್ಳೆಯದಕ್ಕೇ ಹೇಳುತ್ತಾರೆ. 504 00:42:25,666 --> 00:42:28,583 ಸೆಸಿ, ಅವರನ್ನು ಸುಮ್ಮನೆ ಬಿಡು. 505 00:42:29,750 --> 00:42:30,791 ಸರಿ. 506 00:42:36,833 --> 00:42:38,750 ಮನೆ ಏಕೆ ಹರಾಜಿಗೆ ಹೋಗುತ್ತಿದೆ? 507 00:42:41,208 --> 00:42:42,458 ಪೆರ್ರಿ ಹೋದ. 508 00:42:43,125 --> 00:42:44,458 ತಪ್ಪಿಸಿಕೊಂಡ ಅಂತಿದ್ದಾರೆ. 509 00:42:45,041 --> 00:42:46,375 ಎಲ್ಲಿಗೆ ಹೋದ? 510 00:42:48,666 --> 00:42:49,833 ಕೂಪದೊಳಗೆ ಹಾರಿದ. 511 00:42:51,208 --> 00:42:52,583 ನಿನ್ನ ಜೊತೆ ಮಾತಾಡಿದ ನಂತರ. 512 00:43:20,791 --> 00:43:22,791 ನಾನು ತರುವೆ, ನಾನು ತರುವೆ. ಹೇ, ಹೇ! 513 00:43:22,791 --> 00:43:26,208 ನಮ್ಮ ಕೀಮೋಸಾಬಿಗಳಿಗೆ ಒಂದು ಸುತ್ತು ಕಾಮಿಕಾಜಿಗಳು. 514 00:43:26,208 --> 00:43:28,208 ಹೇ, ಕೀಮೋಸಾಬಿ. 515 00:43:33,291 --> 00:43:34,500 ಕೇಳಿ, ಸ್ನೇಹಿತರೇ. 516 00:43:36,250 --> 00:43:37,583 ಸ್ನೇಹಿತರೇ? 517 00:43:37,583 --> 00:43:39,708 ಈ ರಾತ್ರಿ ಎಷ್ಟು ಚೆನ್ನಾಗಿರುತ್ತೆ ಅಂದರೆ 518 00:43:39,708 --> 00:43:43,250 ಮುಂದೆ ನೀನು ಮಾಂಸವನ್ನು ಬೇರೆ ಯಾರಿಂದಲೂ ಖರೀದಿಸುವುದಿಲ್ಲ. 519 00:43:44,041 --> 00:43:46,208 - ಹಾಂ. ಸರಿ. - ಟಿಲ್ಲರ್ಸನ್ ಮಾಂಸ 520 00:43:46,208 --> 00:43:48,833 ಈ ಊರಿನಲ್ಲಿ ಮತ್ತು ರಾಜ್ಯದಲ್ಲೇ ಅತ್ಯುತ್ತಮವಾದದ್ದು. 521 00:43:49,416 --> 00:43:51,125 ದೇಶದಲ್ಲೇ ಅತ್ಯುತ್ತಮ. 522 00:44:06,833 --> 00:44:09,166 ನಿನಗೆ ಒಂದೇ ಒಂದು ಕೆಲಸ ವಹಿಸಿದ್ದೆ, 523 00:44:09,875 --> 00:44:12,208 ಒಡಹುಟ್ಟಿದವನನ್ನು ನೋಡಿಕೊಳ್ಳುವುದು. 524 00:44:12,833 --> 00:44:14,666 ಆದರೆ ನಿನಗೆ ಮಾಡಲಾಗಲಿಲ್ಲ, ಅಲ್ವಾ? 525 00:44:17,791 --> 00:44:18,708 ನಾನು ನರ್ಸ್ ಅಲ್ಲ. 526 00:44:19,500 --> 00:44:22,625 ಅವನ ಅಗತ್ಯತೆಗಳನ್ನು ನೋಡಿಕೋ ಅಂದಿದ್ದೆ. 527 00:44:24,708 --> 00:44:27,250 ನನ್ನ ಬಗ್ಗೆ ನೀವು ಇಷ್ಟು ಕೀಳಾಗಿ ಯೋಚಿಸಲು 528 00:44:28,083 --> 00:44:31,041 ನಾನೇನು ಮಾಡಿದ್ದೇನೆ? 529 00:44:31,750 --> 00:44:36,541 ನೀನು ಚಿಕ್ಕವನಾಗಿದ್ದಾಗಿನಿಂದ ಮಾಡಿರುವ ಪ್ರತಿ ನಡೆ 530 00:44:36,541 --> 00:44:39,291 ಸ್ವಾರ್ಥ ಮತ್ತು ಸ್ವಯಂ ಕರುಣೆಯಿಂದ ಹುಟ್ಟಿದೆ. 531 00:44:40,958 --> 00:44:42,500 ಸ್ವಾರ್ಥವೇ? 532 00:44:43,500 --> 00:44:45,666 ನಾನು ಚಿಕ್ಕಂದಿನಿಂದಲೂ, 533 00:44:45,666 --> 00:44:49,166 ಈ ಜಮೀನನ್ನು ಪ್ರತಿ ದಿನ ನಡೆಸಿದ್ದೇನೆ. 534 00:44:51,541 --> 00:44:53,083 ನಾನು ನಿಮ್ಮಿಂದ ಬಯಸಿದ್ದು 535 00:44:54,041 --> 00:44:55,791 ಒಂದು ಅಪ್ಪುಗೆಯಷ್ಟೇ. 536 00:45:01,291 --> 00:45:03,250 ಇದೇ ಬೇಕು ತಾನೆ ನಿನಗೆ? 537 00:45:03,250 --> 00:45:06,791 ನಿನ್ನ ಸ್ಥಿತಿಗೆ ನನ್ನನ್ನು, ಬಿಲ್ಲಿಯನ್ನು ದೂಷಿಸಲು ನಿನಗೆ ಕಾರಣಗಳು ಬೇಕು. 538 00:45:06,791 --> 00:45:09,166 ಆದರೆ ನಾನು ನಿನಗೆ ಅವನ್ನು ಕೊಡಲ್ಲ. 539 00:45:10,958 --> 00:45:12,250 ನಿನಗೆ ಗೊತ್ತಾ 540 00:45:13,250 --> 00:45:16,541 ನನ್ನ ತಾಯಿ ನನಗೇನು ಹೇಳುತ್ತಿದ್ದರು ಅಂತ? 541 00:45:16,541 --> 00:45:19,708 ದೊಡ್ಡ ಮಗನೇ ತನ್ನ ತಂದೆಯಿಂದ 542 00:45:19,708 --> 00:45:22,458 ಜವಾಬ್ದಾರಿ ವಹಿಸಿಕೊಳ್ಳಬೇಕು ಎನ್ನುತ್ತಿದ್ದರು. 543 00:45:22,458 --> 00:45:24,041 ತನಗೆ ಬಂದದ್ದನ್ನು ಬೆಳೆಸಬೇಕು. 544 00:45:24,041 --> 00:45:27,583 ಅವನಿಗೆ ಹುತ್ತವೇ ಸಿಕ್ಕರೂ, ಅದನ್ನು ಬೆಟ್ಟವಾಗಿ ಬೆಳೆಸಬೇಕು. 545 00:45:28,916 --> 00:45:30,458 ಮತ್ತು ಕಿರಿಯ ಮಗನ ಕರ್ತವ್ಯ, 546 00:45:30,458 --> 00:45:34,333 ಕಿರಿಯ ಮಗನ ಕರ್ತವ್ಯ ತನ್ನ ತಂದೆ ತಾಯಿಯನ್ನು ಪ್ರೀತಿಸುವುದು, 547 00:45:34,333 --> 00:45:39,458 ಮತ್ತು ಅವರ ಇಳಿವಯಸ್ಸಿನಲ್ಲಿ ಅವರನ್ನು ಚೆನ್ನಾಗಿ ನೋಡಿಕೊಳ್ಳುವುದು. 548 00:45:39,958 --> 00:45:41,333 ಆದರೆ ನಿನಗೆ ಗೊತ್ತಾ, 549 00:45:42,291 --> 00:45:45,750 ಮಧ್ಯದ ಮಗ ಏನು ಮಾಡಬೇಕು ಅಂತ? 550 00:45:46,541 --> 00:45:50,250 ಅವನು ರಹಸ್ಯ ವಿಮಾ ಪಾಲಿಸಿಯಾಗಿರಬೇಕು. 551 00:45:51,958 --> 00:45:53,458 ತುರ್ತು ಸಂದರ್ಭದಲ್ಲಿ 552 00:45:54,125 --> 00:45:56,625 ಬಳಸಬಹುದಾದ ಸಾಧನದಂತೆ. 553 00:46:00,916 --> 00:46:03,666 ಇವತ್ತು, ನಿನ್ನಿಂದ ಯಾವುದೇ ಪ್ರಯೋಜನ ಇಲ್ಲ ಅಂತ ಗೊತ್ತಾಯ್ತು. 554 00:46:04,416 --> 00:46:06,916 ಹಾಗಾಗಿ ಹೇಳು, ನಿನ್ನಿಂದ 555 00:46:08,541 --> 00:46:09,791 ನನಗೇನಾಗಬೇಕಿದೆ? 556 00:46:24,750 --> 00:46:28,166 ಟ್ರೆವರ್ ನಿಮ್ಮನ್ನು ದ್ವೇಷಿಸುತ್ತಿದ್ದನು. 557 00:46:31,916 --> 00:46:33,041 ನಾನೂ ದ್ವೇಷಿಸುತ್ತೇನೆ. 558 00:46:35,583 --> 00:46:37,208 ಅದೇನಾ ನಿನ್ನ ಸತ್ಯ? 559 00:46:41,833 --> 00:46:44,750 ನೀನು ನನ್ನ ಮನೆಯಲ್ಲಿ ಇರುವವರೆಗೂ ಅದರಿಂದ ಏನಾಗಲ್ಲ. 560 00:46:44,750 --> 00:46:47,250 ಇನ್ನು ಬಿಲ್ಲಿಯನ್ನು ನೋಡಿಕೊಳ್ಳುವ ಚಿಂತೆ ನಿನಗಿರಲ್ಲ. 561 00:46:47,250 --> 00:46:50,208 ಹೋಗಿ ನಿಮ್ಮಮ್ಮನ ಜೊತೆ ಇರು, 562 00:46:51,125 --> 00:46:52,958 ನಿನ್ನ ಮನಸ್ಸಿನಲ್ಲಿ ಅದೇ ಇದ್ದರೆ. 563 00:46:53,875 --> 00:46:55,958 ನನ್ನ ಮನಸಲ್ಲೇನಿದೆ ಅಂತ ತಿಳಿಯಬೇಕಾ? 564 00:46:58,791 --> 00:47:00,875 ಅದರೊಳಗೆ ಏನಿದೆ ಅಂತ ನಿಮಗೆ ತೋರಿಸುತ್ತೇನೆ. 565 00:47:02,083 --> 00:47:03,375 ನಿಮಗೆ ತೋರಿಸುತ್ತೇನೆ. 566 00:47:03,375 --> 00:47:04,583 ಕಾತುರದಿಂದಿದ್ದೇನೆ. 567 00:47:07,416 --> 00:47:10,208 ಅದರ ಮಧ್ಯೆ, ನೀನು ಅಲ್ಲಿರೋ 568 00:47:11,458 --> 00:47:16,458 ನಿನ್ನ ಗೆಳೆಯ ಲೂಕ್ ಜೊತೆ ಅದನ್ನು ಯೋಚಿಸಬಾರದೇಕೆ? 569 00:49:27,875 --> 00:49:29,375 ಏನೋ, ಬೇವರ್ಸಿ? 570 00:49:30,666 --> 00:49:33,000 ನೀನಿಲ್ಲಿರೋದು ಸೆಸಿಲಿಯಾಗೆ ಗೊತ್ತಾ? 571 00:50:19,041 --> 00:50:21,416 ಕೋಪದಲ್ಲಿರುವಂತಿದ್ದೀಯಾ. ಆರಾಮಿದ್ದೀಯಾ? 572 00:50:24,166 --> 00:50:28,541 ನಾನು ಹೊರಗೆ ಹೋದಾಗ ಏನು ಮಾಡ್ತೀನಿ ಅನ್ನೋದು ನನ್ನಿಷ್ಟ, ಅರ್ಥ ಆಯ್ತಾ? 573 00:50:29,416 --> 00:50:31,875 ಅರ್ಥವಾಯಿತು. ಟಿಲ್ಲರ್ಸನ್ ಅಂದರೆ ಟಿಲ್ಲರ್ಸನ್ನೇ. 574 00:50:37,000 --> 00:50:39,208 ಹೇ, ನೀನು ನನ್ನ ಮೂಗು ಮುರಿದೆ! 575 00:50:39,791 --> 00:50:41,958 ನಾನು ಅದನ್ನಷ್ಟೇ ಮಾಡಿದ್ದರೆ, 576 00:50:43,625 --> 00:50:45,000 ನಿನ್ನ ಪುಣ್ಯ ಅಂದುಕೋ. 577 00:51:34,666 --> 00:51:36,083 ಸೆಸಿಲಿಯಾ. 578 00:51:37,291 --> 00:51:38,458 ವೇನ್. 579 00:51:39,666 --> 00:51:40,833 ಒಳಗೆ ಬಾ. 580 00:51:40,833 --> 00:51:42,250 ಧನ್ಯವಾದ. 581 00:51:51,666 --> 00:51:53,208 ಏನಿಲ್ಲಿ ಬಂದೆ? 582 00:51:59,791 --> 00:52:01,791 ನಿನ್ನಿಂದ ಒಂದು ಸಹಾಯ ಆಗಬೇಕಿತ್ತು. 583 00:52:02,958 --> 00:52:06,333 ನನ್ನ ಜಮೀನನ್ನು ಉಳಿಸಿಕೊಳ್ಳಲು ನನಗೆ $500,000 ಸಾಲ ಬೇಕು. 584 00:52:12,708 --> 00:52:14,291 $500,000? 585 00:52:15,666 --> 00:52:18,708 ಇದು ಉಪಕಾರಕ್ಕಿಂತ ವಿಮುಕ್ತಿಯಂತಿದೆ. 586 00:52:21,625 --> 00:52:23,125 ನನ್ನ ಕುಟುಂಬವನ್ನು ಕಾಪಾಡಬೇಕು. 587 00:52:25,208 --> 00:52:26,708 ನನ್ನ ಕುಟುಂಬ ನಾಶ ಮಾಡಿದ ಮೇಲಾ? 588 00:52:28,541 --> 00:52:29,791 ಇದು ರಾಯಲ್ ಬಗ್ಗೆ ಅಲ್ಲ. 589 00:52:30,625 --> 00:52:32,250 ಯಾವಾಗಲೂ ರಾಯಲ್ ಬಗ್ಗೆಯೇ ಆಗಿದೆ. 590 00:52:33,291 --> 00:52:35,750 ರಾಯಲ್, ರಾಯಲ್, ರಾಯಲ್. 591 00:52:38,708 --> 00:52:41,041 ನಿನ್ನ ಮಾತಿನಲ್ಲಿಲ್ಲದಿದ್ದರೂ, ಕ್ರಿಯೆಯಲ್ಲಿತ್ತು. 592 00:52:42,958 --> 00:52:46,416 ನಾನು ರಾಯಲ್ ಗೆ ಅಂಥ ಸಹಾಯ ಮಾಡಲ್ಲ. 593 00:52:50,250 --> 00:52:52,208 ಸರಿ. ನಿನ್ನ ಸಮಯಕ್ಕೆ ಧನ್ಯವಾದ, ವೇನ್. 594 00:52:52,958 --> 00:52:57,000 ನನಗೆ ಗೊತ್ತಿದ್ದ ಛಲಗಾತಿ ಸೆಸಿಲಿಯಾಗೆ ಏನಾಯಿತು? 595 00:53:03,583 --> 00:53:05,083 ನನಗೆ ಸಾಕಾಗಿದೆ. 596 00:53:05,750 --> 00:53:07,208 ನನ್ನ ಕುಟುಂಬವನ್ನು ಕಾಪಾಡಬೇಕು. 597 00:53:12,166 --> 00:53:14,291 ನೀನು ಹೇಳಿದ ಅತ್ಯಂತ ಸತ್ಯವಾದ ಮಾತಿದು. 598 00:53:20,541 --> 00:53:21,791 ನಾನು ಹಣ ಕೊಡುತ್ತೇನೆ. 599 00:53:23,083 --> 00:53:26,500 ಒಂದು ಷರತ್ತಿನ ಮೇಲೆ. 600 00:53:26,500 --> 00:53:28,875 ಇಲ್ಲ, ಇಲ್ಲ, ಇಲ್ಲ, ವೇನ್. ಇದು ಆಗುವುದಿಲ್ಲ. 601 00:53:28,875 --> 00:53:30,875 - ಆಗುವುದಿಲ್ಲ. - ನನ್ನ ಮಾತನ್ನು ಕೇಳು. 602 00:53:33,000 --> 00:53:34,375 ಹಳೆಯ ಕಾಲದ ಸಲುವಾಗಿ. 603 00:54:00,291 --> 00:54:01,625 ಎಲ್ಲಿಗೆ ಹೋಗಿದ್ದೆ? 604 00:54:04,250 --> 00:54:05,916 ವೇನ್ ನಮಗೆ ದುಡ್ಡು ಕೊಡುತ್ತಾನೆ. 605 00:54:09,125 --> 00:54:13,083 ಅವನಿಗೆ ಪಶ್ಚಿಮದ ಹುಲ್ಲುಗಾವಲು ಕೊಟ್ಟು ಕ್ಷಮೆಯಾಚನೆ ಕೇಳಿದರೆ ಸಾಕಂತೆ. 606 00:54:18,375 --> 00:54:19,500 ಕ್ಷಮೆಯಾಚನೆಯಾ? 607 00:54:20,791 --> 00:54:22,208 ಯಾರಿಂದ ಕ್ಷಮೆಯಾಚನೆ? 608 00:54:23,750 --> 00:54:24,791 ನಿನ್ನಿಂದ. 609 00:54:26,791 --> 00:54:28,333 ಯಾವುದಕ್ಕಾಗಿ? 610 00:54:29,791 --> 00:54:33,208 ಅವನಿಂದ ನನ್ನನ್ನು ಕಸಿದಿದ್ದಕ್ಕಾಗಿ. ಅವನ ಮಾತಿದು. ನನ್ನದಲ್ಲ. 611 00:54:35,125 --> 00:54:36,875 ಅದನ್ನು ಇಲ್ಲಿ ಹೇಳುತ್ತಿದ್ದೀಯಾ. 612 00:54:38,541 --> 00:54:40,291 ನಮ್ಮ ಕುಟುಂಬವನ್ನು ಉಳಿಸಲು. 613 00:54:40,291 --> 00:54:44,458 - ನನ್ನ ಹೆಸರು, ಕುಟುಂಬದ ಹೆಸರು ಉಳಿಸಲು, ರಾಯಲ್! - ನಿನ್ನ ಹೆಸರಾ? 614 00:54:44,458 --> 00:54:46,000 ನಿನ್ನ ಹೆಸರು! 615 00:54:48,375 --> 00:54:51,375 - ರಾಯಲ್ ಆಬಟ್. - ಸಮ್ನರ್, ಸೆಸಿಲಿಯಾ. 616 00:54:51,375 --> 00:54:54,000 ನನ್ನ ಹೆಸರು ರಾಯಲ್ ಸಮ್ನರ್! 617 00:57:17,666 --> 00:57:18,875 ರಾಯಲ್? 618 00:57:20,166 --> 00:57:21,583 ಜಾಯ್? 619 00:59:26,791 --> 00:59:28,791 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 620 00:59:28,791 --> 00:59:30,875 ಸೃಜನಶೀಲ ಮೇಲ್ವಿಚಾರಕರು ಮಧುರಾ ಸುಬ್ರಹ್ಮಣ್ಯ