1 00:00:06,626 --> 00:00:08,543 ಮ್ಯಾಕ್ಸ್ ನಿನ್ನ ಬೆಕ್ಕು. ಮನೆಯಿಂದ ಕರೆತಂದೆಯಲ್ಲವೇ? 2 00:00:08,543 --> 00:00:09,543 ಹೂಂ. 3 00:00:09,543 --> 00:00:13,001 ನಿಮ್ಮ ಜೋಡಿ ನಿಮಗಾಗಿ ಮಾಡುವ ಒಂದು ಅದ್ಭುತ ವಿಷಯದ ಬಗ್ಗೆ ಹೇಳಿ. 4 00:00:13,001 --> 00:00:15,043 ಜಾನ್ ಯಾವಾಗಲೂ ಟಾಯ್ಲೆಟ್ ಸೀಟ್ ಕೆಳಗೆ ಮಾಡುತ್ತಾನೆ. 5 00:00:15,043 --> 00:00:17,418 ಕೆಲಸದಲ್ಲಿ ಏನಾದರೂ ಆಯಿತೇ? 6 00:00:18,293 --> 00:00:19,168 ಏನು? 7 00:00:21,126 --> 00:00:22,376 ಜೇನ್ ಹೇಗಿದ್ದಾಳೆ? 8 00:00:22,376 --> 00:00:24,543 ಅಮ್ಮನನ್ನು ಹಾಗೆ ನಾನು ಬಿಡಲಾಗಲ್ಲ. 9 00:00:24,543 --> 00:00:26,668 ನಾನೇ ನೋಡಿಕೊಳ್ಳಬೇಕು. ನಾನವಳ ಬಳಿ ಮಾತಾಡಲೇ ಬೇಕು. 10 00:00:26,668 --> 00:00:28,001 ನೀವೇನು ಮಾಡೋದು? 11 00:00:28,001 --> 00:00:29,459 ನಾನು ಸಾಫ್ಟವೇರ್ ಇಂಜಿನಿಯರ್. 12 00:00:30,418 --> 00:00:31,959 ನನಗೆ ಅವನು ಸ್ವಲ್ಪವೂ ಇಷ್ಟವಿಲ್ಲ. 13 00:00:31,959 --> 00:00:33,084 ನಿಜ ಒಪ್ಪಿಕೋ. 14 00:00:33,084 --> 00:00:35,168 ನೀನು ಅವಳೊಂದಿಗೆ ಸಂಬಂಧ ಬೆಳೆಸಿದ್ದೆ. 15 00:00:35,168 --> 00:00:36,959 ಅವಳು ನಿನ್ನನ್ನು ಕೊಲ್ಲಲು ನೋಡುತ್ತಿದ್ದಳು. 16 00:00:39,834 --> 00:00:43,126 {\an8}ಈಗ ಇನ್ನೊಂದು ವೈಫಲ್ಯ, ಯಾಕೆಂದರೆ ನಿನಗಿದು ಚೆನ್ನಾಗಿತ್ತು. 17 00:00:43,126 --> 00:00:44,501 ಕಾರ್ಯ ಅಪೂರ್ಣ. ಮೂರು ವೈಫಲ್ಯಗಳು. ಸೂಚನೆಗೆ ಕಾಯಿರಿ. 18 00:00:44,501 --> 00:00:46,376 ಇದರಲ್ಲಿ ಸೋತರೆ ಏನಾಗುತ್ತೆ? 19 00:00:46,376 --> 00:00:47,459 ಮದುವೆಯಲ್ಲಿಯೇ? 20 00:00:47,459 --> 00:00:48,543 ಈ ಕೆಲಸದಲ್ಲಿ. 21 00:00:51,751 --> 00:00:53,001 ಸಾಕಾಯಿತು ನನಗೆ. 22 00:02:10,709 --> 00:02:13,584 ಕೊಲ್ಲು! ನಿನ್ನ ಸ್ಮಿಥ್ ನನ್ನು ಕೊಲ್ಲು! 23 00:03:04,751 --> 00:03:07,876 - ತಗೊಳ್ಳಿ. - ಧನ್ಯವಾದ. 24 00:03:16,876 --> 00:03:18,293 ಚೆನ್ನಾಗಿ ಕಾಣುತ್ತಿದೆಯಲ್ಲವೇ? 25 00:03:22,293 --> 00:03:25,001 ಛೇ. ನಿನಗೆ ತಿನ್ನಿಸಲು ಮರೆತೆ. 26 00:03:26,459 --> 00:03:29,459 ಸಾರೀ, ಮ್ಯಾಕ್ಸಿ. ದೇವರೇ. 27 00:03:30,459 --> 00:03:32,626 ನಾನು ತಿರುಗಿ ನಿನ್ನ ಬಳಿಗೇ ಬರುವುದು. 28 00:03:39,584 --> 00:03:41,001 ಛೇ. 29 00:03:41,959 --> 00:03:43,334 ಇದು ವಾಸನೆ ಬರುತ್ತೆ. 30 00:04:08,834 --> 00:04:09,668 ಮ್ಯಾಕ್ಸ್. 31 00:04:11,168 --> 00:04:12,001 ಮ್ಯಾಕ್ಸ್. 32 00:04:16,293 --> 00:04:17,168 ಛೇ. 33 00:04:17,876 --> 00:04:19,043 ದೇವರೇ. ದೇವರೇ. 34 00:04:22,376 --> 00:04:24,293 ಸರಿ. ಸರಿ. 35 00:04:29,459 --> 00:04:32,584 ಮಿಸ್ಟರ್ ಆಂಡ್ ಮಿಸ್ಸಸ್ ಸ್ಮಿಥ್ 36 00:04:32,584 --> 00:04:35,126 ಹೋಗಿ ಈ ಉಗುರನ್ನು ಸರಿ ಮಾಡಿಸಿಕೊಂಡು ಬರಬೇಕು. 37 00:04:35,126 --> 00:04:37,543 ಇನ್ನೂ ಸ್ವಲ್ಪ ಹೊತ್ತು ಒಣಗಲು ಬಿಡಬೇಕಿತ್ತೆಂದು ಗೊತ್ತಿತ್ತು. 38 00:04:39,918 --> 00:04:41,209 - ಹೂಂ. - ಏನಿದು? 39 00:04:43,418 --> 00:04:45,668 - ಅದನ್ನು ತಿನ್ನಬಾರದು. - ಅದು ಡಾರ್ಕ್ ಚಾಕ್ಲೆಟ್. 40 00:04:46,793 --> 00:04:48,501 ಅದರಿಂದ ಅದು ಒಳ್ಳೆಯದಾಗಲ್ಲ. 41 00:04:48,501 --> 00:04:50,209 - ಒಳ್ಳೆಯದೇ. - ಅದು ಬ್ರೊಕೋಲಿ ಅಲ್ಲ. 42 00:04:50,209 --> 00:04:52,418 ಪ್ರತಿ ರಾತ್ರಿ ಚಿಕ್ಕ ತುಂಡು ತಿನ್ನುವೆ ಅಷ್ಟೇ. 43 00:04:53,668 --> 00:04:54,918 - ಏನೋ. - ಹೂಂ. 44 00:04:56,126 --> 00:04:58,668 ನೆನ್ನೆ ನೀನು ಒಂದು ದೊಡ್ಡ ಬೇಗಲ್ ತಿಂದೆ. 45 00:04:58,668 --> 00:05:00,959 ಹೂಂ, ಆದರೆ ಅದು ನನಗೆ ಖಿನ್ನತೆ ಇರುವುದಕ್ಕೆ. 46 00:05:00,959 --> 00:05:02,126 ಅದು ಬೇರೆ. 47 00:05:04,126 --> 00:05:05,918 - ನನ್ನ ಜೊತೆ ಇರುವುದಕ್ಕೆ ಖಿನ್ನತೆಯೇ? - ಅಲ್ಲ. 48 00:05:06,793 --> 00:05:08,168 ನೀನು ಇದರ ಅತ್ಯುತ್ತಮ ಭಾಗ. 49 00:05:11,459 --> 00:05:12,793 - ಮಗನೇ? - ಹಾಂ? 50 00:05:12,793 --> 00:05:13,793 ಕೇಳು... 51 00:05:14,543 --> 00:05:16,543 ಎಲ್ಲವೂ ಸರಿ ಹೋಗುತ್ತೆ, ಸರಿಯೇ? 52 00:05:17,209 --> 00:05:18,709 ನಿನ್ನಿಂದ ಆಗುತ್ತೆ, ನನಗೆ ಗೊತ್ತು. 53 00:05:18,709 --> 00:05:21,709 ಕೆಲವೊಮ್ಮೆ ಕಠಿಣ ಅನಿಸುತ್ತೆ. 54 00:05:23,293 --> 00:05:24,334 - ನನಗೆ... - ಗೊತ್ತು. 55 00:05:24,334 --> 00:05:26,209 - ಗೊತ್ತು. - ಕೌನ್ಸಲಿಂಗ್ ಹೋಗುವಿರಾ? 56 00:05:29,876 --> 00:05:31,626 ಹೂಂ, ಯೋಚಿಸಿ ನೋಡುವೆ. 57 00:05:35,168 --> 00:05:37,209 - ಬೀಗದಕೈ ಇದೆಯೇ? - ಹೂಂ, ಇದೆ. 58 00:05:38,834 --> 00:05:40,793 ಮುಂಬಾಗಿಲು ತೆರೆದಿದೆ. 59 00:05:47,459 --> 00:05:49,459 - ಟಾಯ್ಲೆಟ್ ಸೀಟ್ ಕೆಳ ಹಾಕಿಲ್ಲವೇ? - ಇಲ್ಲ. 60 00:05:50,293 --> 00:05:52,251 ನಾನು ಆ ಶೌಚಾಲಯ ಬಳಸುವುದೂ ಇಲ್ಲ. 61 00:05:53,751 --> 00:05:56,001 ಕಪ್ಪು ಟಾಯ್ಲೆಟ್ ಸ್ವಚ್ಛ ಇರುವುದಿಲ್ಲ. 62 00:05:57,001 --> 00:05:58,376 ನೀನಿರಬೇಕು. 63 00:05:59,418 --> 00:06:01,084 ಚೆನ್ನಾಗಿ ಬೆಳೆಸಿದೆ ಎಂದುಕೊಂಡೆ. 64 00:06:01,084 --> 00:06:02,126 ಅದು ನಿಜ. 65 00:06:05,709 --> 00:06:08,376 ಪಾರ್ಲರ್ ಗೆ ಹೋಗಿ ನಿನ್ನ ಉಗುರು ಸರಿ ಮಾಡಿಸಿಕೋಬಾರದೇಕೆ? 66 00:06:10,001 --> 00:06:12,001 - ಏನಾಯಿತು? - ಏನಿಲ್ಲ. ನಾನು... 67 00:06:12,876 --> 00:06:14,084 ಏನೋ ಪರಿಶೀಲಿಸಬೇಕು. 68 00:06:14,084 --> 00:06:16,459 ನಾನು ಬರಬಹುದು ಅನ್ನುವವರೆಗೂ ಬರಬೇಡ, ಸರಿಯೇ? 69 00:06:16,459 --> 00:06:17,751 - ಸರಿ. - ಸರಿ. 70 00:06:17,751 --> 00:06:19,918 - ಬರುವೆ. ಸರಿಯೇ? - ಹೂಂ. ಬಾ. 71 00:07:11,501 --> 00:07:13,168 ಮಾತಾಡಬೇಕು. ಈಗಲೇ. 72 00:07:15,543 --> 00:07:17,418 {\an8}ಹತ್ತಿರದಲ್ಲೇ ಇದ್ದೇನೆ. 73 00:07:17,418 --> 00:07:21,084 {\an8}ಗೊತ್ತಾಯಿತು. 74 00:07:29,001 --> 00:07:34,959 ವಿಟ್ನಿ ಅಮೆರಿಕದ ಕಲೆ ಸಂಗ್ರಹಾಲಯ ಲೆನರ್ಡ್ ಎ. ಲಾಡರ್ ಕಟ್ಟಡ 75 00:08:47,876 --> 00:08:48,834 ಪ್ರಚೋದನಕಾರಿಯಾಗಿದೆ. 76 00:08:52,043 --> 00:08:55,043 ಅವಳು ಒಂಟಿಯೇ ಅಥವಾ ಒಬ್ಬಂಟಿಯೇ ಅದು ನೋಡುಗರ ವಿಶ್ಲೇಷಣೆ. 77 00:08:58,168 --> 00:08:59,168 ಬಣ್ಣಗಳು ಇಷ್ಟವಾದವು. 78 00:09:00,001 --> 00:09:00,918 ಹಾಳಾಗಿ ಹೋಗು. 79 00:09:04,084 --> 00:09:04,918 ಏನು? 80 00:09:09,001 --> 00:09:10,084 ನನ್ನ ಕಡೆ ನೋಡು. 81 00:09:10,834 --> 00:09:11,668 ಯಾಕೆ? 82 00:09:12,584 --> 00:09:13,418 ತಿರುಗು. 83 00:09:21,293 --> 00:09:23,168 ಪಶ್ಚಾತ್ತಾಪವಿದೆಯೇ ನೋಡಬೇಕು. 84 00:09:26,793 --> 00:09:29,959 ನಿನಗೆ ಹೇಗನಿಸುತ್ತಿದೆಯೋ ಗೊತ್ತಿಲ್ಲ, ಆದರೆ ನಂಬು ನನ್ನನ್ನು, 85 00:09:30,876 --> 00:09:32,251 ಹತ್ತು ಪಟ್ಟು ಹೆಚ್ಚು ಕೋಪ ಇದೆ ನನಗೆ. 86 00:09:40,543 --> 00:09:42,168 ಅದಕ್ಕೇ ಇಲ್ಲಿ ಕರೆತಂದೆಯಾ, 87 00:09:43,126 --> 00:09:44,126 "ಹಾಳಾಗಿ ಹೋಗು" ಅನ್ನಲು? 88 00:09:48,418 --> 00:09:50,418 ನಿನ್ನಷ್ಟು ಕ್ರೂರ ಗಂಡಸನ್ನು ನೋಡಿಲ್ಲ ನಾನು. 89 00:09:54,043 --> 00:09:56,626 ನೀನು ಬೇರೆ ಗಂಡಸರನ್ನೇ ನೋಡಿಲ್ಲ. 90 00:09:58,168 --> 00:09:59,001 ನಾನು ನೋಡಿರುವೆ. 91 00:10:01,959 --> 00:10:03,709 ಏನದರ ಅರ್ಥ? 92 00:10:05,168 --> 00:10:06,668 ನಾನು ಗಂಡಸರನ್ನು ನೋಡಿರುವೆ. 93 00:10:12,626 --> 00:10:13,959 ನಮ್ಮ ನೆರೆಯವನ ಜೊತೆ ಮಲಗಿದೆಯಾ? 94 00:10:15,293 --> 00:10:16,459 ನಿಜ ಹೇಳು. 95 00:10:18,084 --> 00:10:19,459 ಇಲ್ಲಿ ಇದೆಲ್ಲ ನನಗೆ ಇಷ್ಟವಿಲ್ಲ. 96 00:10:21,084 --> 00:10:22,334 ಹೊರಗೆ ಹೋಗೋಣ. 97 00:10:25,459 --> 00:10:26,293 ಹೂಂ. 98 00:10:27,168 --> 00:10:28,209 ಹೋಗೋಣ. 99 00:11:47,543 --> 00:11:48,376 ಛೇ! 100 00:12:18,376 --> 00:12:19,209 ಹೇ! 101 00:12:44,001 --> 00:12:45,126 ಇರು! ಇರು! 102 00:12:50,501 --> 00:12:51,334 ನಾನು ಯಾರು? 103 00:12:52,209 --> 00:12:53,376 ಏನು? 104 00:12:54,209 --> 00:12:55,043 ಅದು ನೀನು. 105 00:13:01,209 --> 00:13:02,209 ಇದನ್ನು ಮಾಡಬೇಡ. 106 00:13:04,709 --> 00:13:06,418 ಇದನ್ನು ಮಾಡಬೇಡ. 107 00:13:16,126 --> 00:13:16,959 ಬನ್ನಿ, ಕಣ್ರೋ. 108 00:13:20,418 --> 00:13:21,709 ಬಿಡು ನನ್ನನ್ನು! 109 00:13:22,501 --> 00:13:23,334 ಇದನ್ನು ನಿಲ್ಸಿ. 110 00:13:24,668 --> 00:13:26,501 ಪರವಾಗಿಲ್ಲ. ಅವಳು ನನ್ನ ಹೆಂಡತಿ. ಪರವಾಗಿಲ್ಲ. 111 00:13:27,584 --> 00:13:28,418 ತರ್ಲೆ ಹೆಂಗ್ಸು. 112 00:13:28,418 --> 00:13:29,834 ಹಾಗನ್ನಬೇಡ. 113 00:13:36,209 --> 00:13:37,334 ಓ, ದೇವರೇ! 114 00:13:50,126 --> 00:13:51,626 ಬಾ ಇಲ್ಲಿ, ಬಡ್ಡಿಮಗನೆ. 115 00:14:02,626 --> 00:14:03,959 ಎಲ್ಲರಿಗೂ ಹುಚ್ಚು. 116 00:14:23,251 --> 00:14:26,626 ಅವನಲ್ಲಿ ಬಾಂಬ್ ಇದೆ! ಓಡಿ! ಎಲ್ಲರೂ ಓಡಿ! 117 00:14:47,918 --> 00:14:49,043 ಜೇನ್! 118 00:15:15,543 --> 00:15:17,209 ನಿನಗೆ ಏನೋ ಹೇಳಬೇಕಿತ್ತು. 119 00:15:18,084 --> 00:15:20,834 ನಿನ್ನನ್ನು ಕೊಂದ ನಂತರ, ನಿನ್ನ ಎಲ್ಲಾ ವಸ್ತುಗಳನ್ನು ಸುಟ್ಟುಹಾಕುವೆ. 120 00:15:21,959 --> 00:15:25,209 ಇಲವೇಟರಿನಲ್ಲಿ ಮೊದಲು ಭೇಟಿಯಾದಾಗ, ನನ್ನ ಬಗ್ಗೆ ಏನು ಯೋಚಿಸಿದೆ? 121 00:15:25,209 --> 00:15:26,293 ನೀನು ಹೇಳು. 122 00:15:27,209 --> 00:15:29,834 ನನಗಿಂತ ಒಬ್ಬಂಟಿಯಾಗಿದ್ದ ಸುಂದರಿ ನೀನು ಎಂದುಕೊಂಡೆ. 123 00:15:32,084 --> 00:15:33,501 ಇದನ್ನು ಯಾಕೆ ಹೇಳುತ್ತಿರುವೆ? 124 00:15:34,668 --> 00:15:38,001 ಇದು ನಿಜವೇ ತಿಳಿಯಬೇಕಿದೆ. ನೀನೂ ಅದೇ ರೀತಿ ಯೋಚಿಸಿದೆಯೇ ಎಂದು ತಿಳಿಯಬೇಕಿದೆ. 125 00:15:38,001 --> 00:15:39,793 ಅಥವಾ ಎಲ್ಲವೂ ಸುಳ್ಳೇ ಎಂದು ತಿಳಿಯಬೇಕಿದೆ. 126 00:15:42,876 --> 00:15:43,959 ನನಗನಿಸಿತು 127 00:15:44,834 --> 00:15:48,418 ನಿನಗೆ ಮೋಸ ಮಾಡಿ ಬೇಕಿರುವುದು ಪಡೆದುಕೊಳ್ಳುವುದು ಸುಲಭ ಎಂದು. 128 00:15:48,418 --> 00:15:51,293 ಕತೆ ಹೇಳಬೇಡ. ನೀನು ನನ್ನನ್ನು ನೋಯಿಸಲು ಯತ್ನಿಸುತ್ತಿರುವಂತಿದೆ. 129 00:15:54,209 --> 00:15:55,876 ಹಾಗಿದ್ದರೆ, ನನ್ನ ಕೆಲಸ ಸರಿಯಾಗಿ ಮಾಡಿದೆ. 130 00:15:57,334 --> 00:15:58,168 ಸರಿ, ಹಾಗಿದ್ದರೆ. 131 00:15:59,834 --> 00:16:01,001 ಅಷ್ಟೇ ಗೊತ್ತಾಗಬೇಕಿದ್ದದ್ದು. 132 00:16:04,668 --> 00:16:05,501 ಸರಿ. 133 00:16:06,209 --> 00:16:07,376 ಸರಿ. ಬಾಯ್. 134 00:16:49,709 --> 00:16:50,543 ಮಿತ್ರಾ, ಆರಾಮವೇ? 135 00:16:54,209 --> 00:16:56,126 ಹೇ, ಆರಾಮ ತಾನೇ? 136 00:16:57,626 --> 00:16:58,751 ಮಿತ್ರಾ, ಆರಾಮ ಇದ್ದೀಯಾ? 137 00:17:00,084 --> 00:17:02,126 - ಫೋನ್ ಇದೆಯೇ? ಯಾರನ್ನಾದರೂ ಕರೆಯಿರಿ. - ಫೋನ್. 138 00:17:02,126 --> 00:17:04,418 ಹೇ, ಹೇ, ಹೇ, ನಿಧಾನ. ನಿಧಾನ ಕಣೋ. 139 00:17:05,793 --> 00:17:07,251 ಅಲುಗಾಡದಿರು. 140 00:17:07,251 --> 00:17:08,543 ಹೌದು, ನಾನು ಚೆನ್ನಾಗಿದ್ದೇನೆ. 141 00:17:09,293 --> 00:17:10,876 ನಾನು ಚೆನ್ನಾಗಿದ್ದೇನೆ. 142 00:17:10,876 --> 00:17:12,251 ಆರಾಮಿದ್ದೇನೆ. ಧನ್ಯವಾದ. 143 00:17:29,876 --> 00:17:30,709 ಛೇ! 144 00:17:37,001 --> 00:17:37,834 ಹಲೋ. 145 00:17:50,918 --> 00:17:52,251 ಏನು ಹುಡುಕುತ್ತಿರುವೆ? 146 00:17:55,001 --> 00:17:56,459 ಏನಿಲ್ಲ. ನಾನು... 147 00:17:56,459 --> 00:17:58,501 ಬಾ. ಬಾ, ಕುಳಿತುಕೋ. 148 00:18:03,501 --> 00:18:07,168 ಏರ್ ಕಂಡಿಶನರ್ ಸೆಟ್ಟಿಂಗ್ ಬದಲಿಸಿದೆ. ತುಂಬಾ ತಂಪಾಗಿತ್ತು. 149 00:18:07,751 --> 00:18:09,501 ನೀವು ಯಾರು? 150 00:18:10,293 --> 00:18:11,543 ನಾನು ಡೆನಿಸ್. 151 00:18:12,334 --> 00:18:13,543 ಮೈಕಲ್ ನ ತಾಯಿ. 152 00:18:15,668 --> 00:18:16,501 ಮೈಕಲ್... 153 00:18:21,126 --> 00:18:22,918 ಡೆನಿಸ್, ನಾನು... 154 00:18:22,918 --> 00:18:25,043 ನನಗೆ ಸ್ವಲ್ಪ ಹೊತ್ತು ಒಂಟಿಯಾಗಿ ಕಳೆಯಬೇಕು. 155 00:18:26,251 --> 00:18:28,251 ಪರವಾಗಿಲ್ಲ. ನಾನು ಹೆಚ್ಚು ಹೊತ್ತು ಇಲ್ಲಿರಲ್ಲ. 156 00:18:28,876 --> 00:18:29,876 ಬಾ. ಕುಳಿತುಕೋ. 157 00:18:39,834 --> 00:18:40,668 ಮತ್ತೆ... 158 00:18:42,793 --> 00:18:44,126 ನೀವು... 159 00:18:44,126 --> 00:18:46,501 ನೀವು ಜಾ... ಮೈಕಲ್ ನನ್ನು ನೋಡಲು 160 00:18:46,501 --> 00:18:48,334 ಬಾಲ್ಟಿಮೋರ್ ನಿಂದ ಬಂದಿರಾ? 161 00:18:48,334 --> 00:18:50,251 ಇಲ್ಲ. ಈಗ ನಾನು ಇಲ್ಲೇ ಇರುವುದು. 162 00:18:51,001 --> 00:18:52,501 ಮೈಕಲ್ ಹೇಳಲಿಲ್ಲವೇ? 163 00:18:54,209 --> 00:18:57,876 ಹೂಂ. ಎರಡು ತಿಂಗಳ ಹಿಂದೆ ನನ್ನನ್ನು ನ್ಯೂ ಯಾರ್ಕ್ ಗೆ ಕರೆಸಿಕೊಂಡ. ಚೆನ್ನಾಗಿದೆ ಜಾಗ. 164 00:18:58,501 --> 00:19:00,584 ಮನೆಯೊಡತಿ ಸ್ವಲ್ಪ ತಲೆನೋವು, ಆದರೆ 165 00:19:01,543 --> 00:19:03,418 ಅವಳು ಅಷ್ಟು ಸಿಗುವುದಿಲ್ಲ, ಹಾಗಾಗಿ ಪರವಾಗಿಲ್ಲ. 166 00:19:04,543 --> 00:19:07,543 ಕ್ಷಮಿಸಿ, ಆದರೆ ಮೈಕಲ್ ನಿಮ್ಮನ್ನು ಇಲ್ಲಿಗೆ ಬರಲು ಹೇಳಿದನೇ? 167 00:19:07,543 --> 00:19:08,751 ಇಲ್ಲ. 168 00:19:08,751 --> 00:19:10,084 ನಾನಿಲ್ಲಿರುವುದವನಿಗೆ ಗೊತ್ತಿಲ್ಲ. 169 00:19:10,959 --> 00:19:12,834 ಅವನು ತುರ್ತು ಕೀಲಿಕೈ ಕೊಟ್ಟಿದ್ದ. 170 00:19:12,834 --> 00:19:14,376 ಹಾಗೆ ಒಳಗೆ ಬಂದೆ. 171 00:19:15,709 --> 00:19:17,168 ಅವನು ನಿನಗೆ ಅದನ್ನೂ ಹೇಳಲಿಲ್ಲವೇ? 172 00:19:19,418 --> 00:19:20,334 ಇಲ್ಲ, ಹೇಳಲಿಲ್ಲ. 173 00:19:26,709 --> 00:19:27,959 ಛೇ! ಛೇ! 174 00:19:30,584 --> 00:19:31,626 - ಹಾಯ್. - ಹೇ. 175 00:19:32,376 --> 00:19:33,209 ವಾಹ್. 176 00:19:34,168 --> 00:19:35,626 - ನೀನು... - ಹೂಂ. 177 00:19:36,918 --> 00:19:37,834 ಏನಾಯಿತು? 178 00:19:40,251 --> 00:19:41,084 ನಾನು... 179 00:19:42,376 --> 00:19:44,918 ಮಹಡಿಯಿಂದ ಬಿದ್ದೆ. ಬಿದ್ದುಬಿಟ್ಟೆ. 180 00:19:44,918 --> 00:19:46,334 ತಲೆ ಮುಂದಾಗಿ. 181 00:19:47,459 --> 00:19:49,626 ಹೂಂ. ಹುಚ್ಚ ನಾನು. 182 00:19:49,626 --> 00:19:50,834 ಸತ್ತಿರಬೇಕಿತ್ತು. 183 00:19:51,793 --> 00:19:53,251 ದೇವರೇ. ಆರಾಮ ಇರುವೆಯಾ? 184 00:19:53,251 --> 00:19:55,751 ಆರಾಮ ಇರುವೆ. ಹೂಂ. 185 00:19:55,751 --> 00:19:58,126 ಆದರೆ ನನ್ನ ಬೀಗದಕೈ ಕಳೆದುಕೊಂಡೆ. 186 00:19:59,043 --> 00:20:00,668 ಮೋರಿಯ ಒಳಗೆ ಹೋದವು ಅನಿಸುತ್ತೆ. 187 00:20:01,334 --> 00:20:02,751 ಒಳಗೆ ಹೋಗಲು ಆಗುತ್ತಿಲ್ಲ. 188 00:20:03,376 --> 00:20:06,376 ಹಿಂದಿನ ಬಾಗಿಲು ತೆರೆದಿಟ್ಟಿರಬೇಕು. ನಿಮ್ಮ ಮನೆಯ ಮೂಲಕ... 189 00:20:06,376 --> 00:20:08,959 ನಿಮ್ಮದರ ಮೂಲಕ ಹೋದರೆ ಪರವಾಗಿಲ್ಲವೇ... 190 00:20:08,959 --> 00:20:11,001 - ಖಂಡಿತ. - ಅದ್ಭುತ. 191 00:20:11,001 --> 00:20:13,376 ಹೂಂ, ಮನೆಯ ಮೂಲಕವೇ ಹೋಗಬೇಕು. 192 00:20:13,376 --> 00:20:14,876 ಹೂಂ. ಬೇಗ ಹೋಗಿಬಿಡುವೆ. 193 00:20:14,876 --> 00:20:16,834 - ಇರಲಿ. - ಬೇಗ ಹೋಗುವೆ. ಇದು ಪೊಯೆಟ್, ಅಲ್ಲವೇ? 194 00:20:16,834 --> 00:20:17,751 ಹೂಂ, ಹಾಯ್ ಹೇಳಿ. 195 00:20:17,751 --> 00:20:19,918 - ದಯವಿಟ್ಟು... - ಹೇಗಿರುವೆ, ಪುಟ್ಟ? 196 00:20:19,918 --> 00:20:21,501 ಅವನು ಹೇಳಿದನೋ ಗೊತ್ತಿಲ್ಲ, ಆದರೆ... 197 00:20:21,501 --> 00:20:24,084 ನಾವು ಬೇರೆಯಾಗುತ್ತಿದ್ದೇವೆ. 198 00:20:24,084 --> 00:20:26,251 ಗೊತ್ತು. ನಾನು ಕುರುಡಿ ಅಲ್ಲ. 199 00:20:26,251 --> 00:20:28,418 ನಾನು ಸುಮ್ಮನೆ ಮನೆಗೆ ಬಂದೆ ಎಂದುಕೊಂಡೆಯಾ? 200 00:20:29,501 --> 00:20:31,876 ಇಲ್ಲ. ಕ್ಷಮಿಸಿ. 201 00:20:33,293 --> 00:20:36,959 ಕೇಳು, ಮೈಕಲ್ ಗೆ ಹೇಳಬೇಕಿರುವುದು ಇಷ್ಟೇ, ನೀನವನನ್ನು 202 00:20:38,334 --> 00:20:39,418 ಪ್ರೀತಿಸುತ್ತಿರುವೆ ಎಂದು. 203 00:20:39,418 --> 00:20:43,626 ಅವನು ಮೊದಲಿನಿಂದಲೂ ಭಾವನಾತ್ಮಕ ಹುಡುಗ, ಮತ್ತು ಅವನಿಗೆ 204 00:20:43,626 --> 00:20:47,834 ಯಾವಾಗಲೂ ನನ್ನ ಜೊತೆಯಲ್ಲೇ ಇರಬೇಕಿತ್ತು, 205 00:20:47,834 --> 00:20:50,626 ನಾನೇ ಅವನನ್ನು ಮಲಗಿಸುತ್ತಿದ್ದೆ, ಮತ್ತು ಸ್ನಾನ ಮಾಡಲು 206 00:20:50,626 --> 00:20:52,459 ನನ್ನ ಜೊತೆಗೆ ಸ್ನಾನಗೃಹಕ್ಕೆ ತರುತ್ತಿದ್ದೆ. 207 00:20:54,168 --> 00:20:56,501 ನನಗೆ ಅವನ ಬಗ್ಗೆ ಗೊತ್ತಿರುವುದು ಏನೆಂದರೆ, 208 00:20:56,501 --> 00:21:00,126 ಅವನಿಗೆ ತಾನು ಸುರಕ್ಷಿತ ಎಂಬ ಭಾವನೆ ಬರಬೇಕು. 209 00:21:00,126 --> 00:21:01,793 ಅದು ಬಂದ ಮೇಲೆ, 210 00:21:02,459 --> 00:21:04,251 ಅವನು ತನ್ನಂತೆ ಇರುತ್ತಾನೆ. 211 00:21:04,251 --> 00:21:06,751 ಇಲ್ಲವಾದಲ್ಲಿ, ಅವನು ಏನಾಗಬೇಕೆಂದು ನೀನು ಬಯಸುವೆಯೋ 212 00:21:06,751 --> 00:21:09,668 ಅದೇ ಆಗುತ್ತಾನೆ. 213 00:21:11,126 --> 00:21:13,834 ಹೀಗಾಗಿ, ಅವನನ್ನು ಬಿಡುವ ಮುಂಚೆ, 214 00:21:13,834 --> 00:21:16,751 ಯಾವ ಮೈಕಲ್ ನೊಂದಿಗೆ ಸಂಬಂಧ ಕಡಿಯುತ್ತಿರುವೆ ಎಂದು ಖಚಿತಪಡಿಸಿಕೊ. 215 00:21:19,084 --> 00:21:20,668 ಮೈಕಲ್ ನನ್ನ ಬಗ್ಗೆ ಏನು ಹೇಳಿದ? 216 00:21:21,793 --> 00:21:24,126 ಒಳ್ಳೆಯದು ಬಿಟ್ಟು ಇನ್ನೇನೂ ಹೇಳಲಿಲ್ಲ. 217 00:21:24,918 --> 00:21:28,293 ನಾನು ಜನರನ್ನು ನೋಡಿ ಅವರು ಹೇಗೆ ಎಂದು ತಿಳಿದುಕೊಳ್ಳಬಲ್ಲೆ ಮತ್ತು... 218 00:21:28,293 --> 00:21:30,793 - ನೀನು ಶೀತಲ ವ್ಯಕ್ತಿ. - ಹೂಂ, ನನಗನಿಸುತ್ತೆ... 219 00:21:31,459 --> 00:21:33,376 ನಾನು ಜನರಿಗೆ ಸುರಕ್ಷಿತ ಭಾವನೆ ನೀಡಲ್ಲ. 220 00:21:33,376 --> 00:21:37,043 ನಾನು ಅವರನ್ನು ದೂರ ತಳ್ಳುತ್ತೇನೆ, ನಾನು ಅವರಿಂದ ದೂರ ಉಳಿಯುತ್ತೇನೆ. 221 00:21:38,209 --> 00:21:40,084 ನಾವು ಒಟ್ಟಿಗೆ ಇಲ್ಲದಿದ್ದರೆ ಒಳ್ಳೆಯದೇ. 222 00:21:40,084 --> 00:21:41,126 ಇರಬಹುದೇನೋ. 223 00:21:42,501 --> 00:21:45,209 ಆದರೆ, ಮೈಕಲ್ ಕ್ಲಿಷ್ಟ ಜನರನ್ನು ಅರ್ಥ ಮಾಡಿಕೊಳ್ಳುತ್ತಾನೆ. 224 00:21:47,543 --> 00:21:49,376 ಆದರೆ ಇಲ್ಲಿ ಯೋಚಿಸಲು ಇನ್ನಷ್ಟು ವಿಷಯಗಳು ಇವೆ. 225 00:21:50,668 --> 00:21:51,501 ನೀನು ಗರ್ಭಿಣಿಯೇ? 226 00:21:52,709 --> 00:21:53,834 ಅಲ್ಲ. 227 00:21:53,834 --> 00:21:56,001 ಅಷ್ಟೇನೂ ಕಷ್ಟದ ವಿಷಯವಲ್ಲ, ಹಾಗಿದ್ದರೆ. 228 00:22:05,459 --> 00:22:06,543 ಇದು ಬೇಜಾರಿನ ಸಂಗತಿ. 229 00:22:08,001 --> 00:22:10,084 ನೀವಿಲ್ಲಿ ಒಳ್ಳೆಯ ಜೀವನ ನಡೆಸುತ್ತಿರುವಂತೆ ಇದೆ. 230 00:22:18,793 --> 00:22:20,543 ನಿಮಗೇನೂ ತೊಂದರೆ ಇಲ್ಲ, ಅಲ್ಲವೇ? 231 00:22:21,293 --> 00:22:22,126 ಖಂಡಿತ ಇಲ್ಲ. 232 00:22:22,126 --> 00:22:24,126 ಒರೆಸಿಕೊಳ್ಳಲು ಬಟ್ಟೆ ಸಿಗಬಹುದೇ? 233 00:22:24,126 --> 00:22:26,334 - ರಕ್ತ ಸೋರುವುದು ಬೇಡ. ಬಿಳಿ ಬಟ್ಟೆ ಬೇರೆ. - ಖಂಡಿತ. 234 00:22:26,334 --> 00:22:27,709 - ಇಲ್ಲೇ ಇರು. - ಧನ್ಯವಾದ. 235 00:22:29,334 --> 00:22:31,043 ನಿಮ್ಮ ಮನೆ ಚೆನ್ನಾಗಿದೆ. 236 00:22:31,043 --> 00:22:32,126 ನಿಮ್ಮ ಹೆಂಡತಿ? 237 00:22:33,209 --> 00:22:34,043 ಧನ್ಯವಾದ. 238 00:22:34,626 --> 00:22:36,251 ನಿಮ್ಮ ಮನೆಯಷ್ಟಲ್ಲ. 239 00:22:36,251 --> 00:22:39,126 ನಿಮ್ಮ ಅಡುಗೆಮನೆಯ ಆ ಹಸಿರು ಟೈಲ್ ಗಳು... 240 00:22:41,418 --> 00:22:42,626 ನನ್ನ ಮನೆಗೆ ಬಂದಿರುವೆಯಾ? 241 00:22:43,709 --> 00:22:45,251 ಒಂದೋ ಎರಡೋ ಬಾರಿ. 242 00:22:46,251 --> 00:22:47,334 ಜೇನ್ ಗೆ ಪುಸ್ತಕ ನೀಡಿದ್ದೆ. 243 00:22:53,084 --> 00:22:54,418 ಹೂಂ... 244 00:22:55,751 --> 00:22:57,418 ಜೇನ್ ಬಗ್ಗೆ ಇನ್ನೇನು ಗೊತ್ತು? 245 00:22:59,209 --> 00:23:00,501 ಹೆಚ್ಚೇನಿಲ್ಲ. ಅವಳು 246 00:23:01,293 --> 00:23:03,251 ರಹಸ್ಯಮಯಿ, ನಿನ್ನಂತೆಯೇ. 247 00:23:03,251 --> 00:23:04,293 ಧನ್ಯವಾದ. 248 00:23:05,126 --> 00:23:06,918 ನಾವೆಲ್ಲಾ ನಿನ್ನ ಬಗ್ಗೆ ಮಾತಾಡುತ್ತೇವೆ. 249 00:23:09,001 --> 00:23:09,834 "ನಾವು"? 250 00:23:10,501 --> 00:23:11,501 ನೆರೆಹೊರೆಯವರು. 251 00:23:14,543 --> 00:23:15,501 ಬಾಲ್ಕನಿ ಈಕಡೆ. 252 00:23:16,334 --> 00:23:19,501 ಹೂಂ, ನನಗೆ ಆರಾಮ ಅನಿಸುತ್ತಿಲ್ಲ, 253 00:23:20,793 --> 00:23:23,418 ದೇವರೇ. ಕುಳಿತುಕೊಳ್ಳಲೇ? 254 00:23:23,418 --> 00:23:26,084 - ಕುಳಿತುಕೋ. - ಹೂಂ, ಧನ್ಯವಾದ. ಮತ್ತು... 255 00:23:27,126 --> 00:23:28,543 ಸ್ವಲ್ಪ ನೀರು ಸಿಗಬಹುದೇ? 256 00:23:29,459 --> 00:23:30,834 ನೀರು. ಬೇರೆ ಏನಾದರೂ? 257 00:23:31,626 --> 00:23:33,418 ಐಸ್. ಐಸ್ ಸಿಕ್ಕರೆ ಚೆನ್ನಾಗಿರುತ್ತೆ. 258 00:23:33,418 --> 00:23:34,876 ನೀರು ಮತ್ತು ಐಸ್. 259 00:23:35,501 --> 00:23:36,334 ಹೂಂ. 260 00:23:36,334 --> 00:23:37,668 ಈಗ ಬಂದೆ. ಇರು. 261 00:23:42,501 --> 00:23:44,501 ಅಂದಹಾಗೆ, ಹೆಂಡತಿ ಇಲ್ಲ. 262 00:23:45,418 --> 00:23:46,584 ಇತ್ತೀಚೆಗೆ ವಿಚ್ಛೇದನ ಆಯಿತು. 263 00:23:47,626 --> 00:23:48,668 ವಿಚಿತ್ರ. 264 00:23:50,084 --> 00:23:51,043 ನಿಜವಾಗಿಯೂ? 265 00:23:51,043 --> 00:23:53,084 ಹೂಂ, ಇನ್ನೂ ನಂಬಲಾಗುತ್ತಿಲ್ಲ. 266 00:23:56,334 --> 00:23:57,834 ನಿಮ್ಮ ಶೌಚಾಲಯ ಬಳಸಬಹುದೇ? 267 00:23:59,168 --> 00:24:01,126 ಖಂಡಿತ. ಮಹಡಿಯಲ್ಲಿರುವುದನ್ನು ಬಳಸು. 268 00:24:01,126 --> 00:24:02,501 ಕೆಳಗಿರುವುದು ಬೇಡ. 269 00:24:03,834 --> 00:24:05,584 ಕೆಳಗೆ ಶೌಚಾಲಯ ಇಲ್ಲ. 270 00:24:06,626 --> 00:24:08,084 ಹೇ, ಬೀದಿಯ ಕೊನೆಯಲ್ಲಿರುವ ಅಂಥೋನಿ, 271 00:24:08,876 --> 00:24:11,043 ಒಬ್ಬ ವೈದ್ಯ. 272 00:24:12,793 --> 00:24:14,376 ಬೇಕೆಂದರೆ, ಕರೆ ಮಾಡಿ ಕರೆಯುವೆ. 273 00:24:14,959 --> 00:24:18,126 ನಿನ್ನ ತಲೆಯ ಮೇಲಿರುವ ಊತ ತೋರಿಸು ಅವನಿಗೆ. 274 00:24:18,126 --> 00:24:19,626 ಪಟ್ಟಿ ನೋಡಿ 275 00:24:49,959 --> 00:24:51,834 ನೀನಿದನ್ನು ನೋಡಬಾರದಿತ್ತು. 276 00:24:57,209 --> 00:24:58,043 ಸ್ವಲ್ಪವೂ 277 00:24:59,709 --> 00:25:00,543 ಕದಲಬೇಡ. 278 00:25:02,501 --> 00:25:03,334 ಕದಲುತ್ತಿಲ್ಲ. 279 00:25:05,959 --> 00:25:06,918 ಯಾರು ನೀನು? 280 00:25:08,668 --> 00:25:09,959 ಯಾರಿಗೆ ಕೆಲಸ ಮಾಡುವುದು? 281 00:25:13,501 --> 00:25:15,709 ನಾನು ಹ್ಯಾರಿಸ್ ಮೇಟರ್ಬ್ಯಾಕ್. 282 00:25:16,959 --> 00:25:18,168 ನಾನು 283 00:25:19,501 --> 00:25:20,584 ಸದಬಿಯ ಏಜೆಂಟ್. 284 00:25:21,959 --> 00:25:23,001 ಸದಬಿ 285 00:25:24,334 --> 00:25:26,918 ಇನ್ನೊಂದು ಗುಪ್ತಚರ ಸಂಸ್ಥೆಯೇ... 286 00:25:27,584 --> 00:25:30,751 ಸಿಐಎ ಅವರ ಇನ್ನೊಂದು ವಿಭಾಗವೇ... 287 00:25:34,043 --> 00:25:35,043 ನೀನು ಹಾಯ್ ಹಾಯ್ ಏನು? 288 00:25:37,251 --> 00:25:38,501 ನೀನು ಹಾಯ್ ಹಾಯ್ ಏನು? 289 00:25:38,501 --> 00:25:40,459 ಏನು ಮಾತಾಡುತ್ತಿರುವೆ ನೀನು? 290 00:25:44,876 --> 00:25:46,126 ನೀನು ಯಾರಿಗೆ ಕೆಲಸ ಮಾಡುವುದು? 291 00:25:47,251 --> 00:25:48,084 ಈಗಲೇ ಹೇಳು. 292 00:25:50,251 --> 00:25:51,334 ಇಲ್ಲದಿದ್ದರೆ, ಕೊಲ್ಲುವೆ. 293 00:25:51,334 --> 00:25:53,168 ಸದಬಿ ಒಂದು ರಿಯಲ್ ಎಸ್ಟೇಟ್ ಸಂಸ್ಥೆ. 294 00:25:53,168 --> 00:25:55,918 ನಾನು ರಿಯಲ್ ಎಸ್ಟೇಟ್ ವಿಶ್ಲೇಷಕ. ಅವರಿಗೆ ನಿಮ್ಮ ಮನೆ ಬೇಕಿದೆ. 295 00:25:57,543 --> 00:25:59,918 ನಿಮಗೆ ಹೇಗೆ ಅನುಮತಿ ಸಿಕ್ಕಿತು ಯಾರಿಗೂ ತಿಳಿದಿಲ್ಲ. 296 00:26:00,543 --> 00:26:02,418 ಒಂದೂ ಅನುಮತಿ ಪತ್ರ ಇಲ್ಲ. 297 00:26:02,418 --> 00:26:06,001 ಎರಡು ಐತಿಹಾಸಿಕ ಕಟ್ಟಡಗಳನ್ನು ಒಂದು ಮನೆ ಮಾಡಿದ್ದೀರಿ, ಅದು ಸಾಧ್ಯವಿಲ್ಲ. 298 00:26:06,001 --> 00:26:07,418 ಒಂದು ಗರಾಜ್, ಒಂದು ಪೂಲ್ ಇದೆ, 299 00:26:07,418 --> 00:26:09,834 ಅದಕ್ಕೇ 25 ಮಿಲಿಯನ್ ಡಾಲರುಗಳು ಆಗುತ್ತೆ, 300 00:26:09,834 --> 00:26:11,876 ಅದೂ ನಗರ ಅನುಮತಿಸಿದರೆ. 301 00:26:11,876 --> 00:26:14,043 ಎರಡು ಸಾಫ್ಟವೇರ್ ಇಂಜಿನಿಯರ್ ಗಳ ಸಂಬಳದಲ್ಲಿ ಇಷ್ಟೆಲ್ಲಾ. 302 00:26:14,043 --> 00:26:15,084 ಅರ್ಥ ಆಗುತ್ತಿಲ್ಲ. 303 00:26:16,251 --> 00:26:18,168 ಇದು ಕೇವಲ ರಷ್ಯನ್ ದೊರೆಗಳಿಗೆ 304 00:26:18,168 --> 00:26:20,209 ಮತ್ತು ಸೌದಿ ರಾಜರುಗಳಿಗೆ ಸಾಧ್ಯ, 305 00:26:20,209 --> 00:26:22,751 ಆದರೆ ನಿಜ ಹೇಳಬೇಕೆಂದರೆ, ಇವರಿಬ್ಬರಿಗೂ 306 00:26:22,751 --> 00:26:24,834 ಇಂತಹ ಮನೆ ಮೇಲೆ ಆಸೆ ಇರುವುದಿಲ್ಲ. 307 00:26:24,834 --> 00:26:25,918 ಇದು ಬಂಗಾರ. 308 00:26:26,668 --> 00:26:28,126 ಇದು ನನ್ನ ಮರೀಚಿಕೆ. 309 00:26:36,543 --> 00:26:37,751 ನನ್ನನ್ನು ಕೊಲ್ಲಬೇಡ. 310 00:26:43,251 --> 00:26:45,626 ಜೇನ್ ಜೊತೆ ನಿನ್ನ ಚಕ್ಕಂದ, ಅವಳು ನಿನಗೆ ಇಷ್ಟ ಎಂದಲ್ಲ, 311 00:26:46,501 --> 00:26:47,918 ಈ ಮನೆ ಇಷ್ಟ ಎಂದು, ಅಲ್ಲವೇ? 312 00:26:50,209 --> 00:26:52,876 ಅವಳನ್ನು ನಾನು ಇಷ್ಟ ಪಡಬೇಕೇ? 313 00:27:01,293 --> 00:27:02,126 ಕ್ಷಮಿಸು. 314 00:27:02,959 --> 00:27:03,793 ಕ್ಷಮಿಸು. 315 00:27:05,209 --> 00:27:06,293 ನಂಬಲಸಾಧ್ಯ. 316 00:27:07,209 --> 00:27:08,209 ನಂಬಲಸಾಧ್ಯ. 317 00:27:10,501 --> 00:27:11,334 ಪರವಾಗಿಲ್ಲ. 318 00:27:27,334 --> 00:27:28,501 ನಿನಗೆ ಬೇಕೇ? 319 00:27:28,501 --> 00:27:29,918 ಖಂಡಿತ. 320 00:27:33,584 --> 00:27:36,209 ನಿನ್ನ ಜೇನ್ ನಡುವೆ ಏನಾದರೂ ತೊಂದರೆ? 321 00:27:36,209 --> 00:27:37,376 ಹೂಂ, ಹಾಗೇ ಏನೋ. 322 00:27:41,751 --> 00:27:43,793 ನನ್ನ ವಿಚ್ಛೇದನ ನನಗೆ ಹುಚ್ಚು ಹಿಡಿಸಿದೆ. 323 00:27:44,501 --> 00:27:45,793 ಹೂಂ, ಏನೋ ಹೇಳುತ್ತಿದ್ದೆ. 324 00:27:45,793 --> 00:27:47,251 ಅದಕ್ಕಿಂತ ಹೆಚ್ಚು ಇದು. 325 00:27:51,084 --> 00:27:52,793 ನನ್ನ ಮಾತು ಕೇಳುವೆಯೆಂದರೆ, 326 00:27:52,793 --> 00:27:55,834 ಕೆಲಸ, ಜೀವನ, ಹಣ, ಪ್ರೀತಿ, 327 00:27:55,834 --> 00:27:57,793 ಇವೆಲ್ಲಾ ಒಂದೇ ಯೋಜನೆಯ ಭಾಗಗಳು. 328 00:27:59,209 --> 00:28:02,459 ಮದುವೆ ಎಂಬ ಮನೆ ಕಟ್ಟುವೆ, ಆದರೆ ಆಮೇಲೆ ನಿನ್ನ ರುಚಿ ಬದಲಾಗುತ್ತೆ. 329 00:28:04,251 --> 00:28:06,168 ಅಥವಾ ಬಹುಶಃ ಆರಂಭದಲ್ಲೇ ನಿನಗಿರಲಿಲ್ಲ. 330 00:28:09,876 --> 00:28:11,376 ನನಗೆ ನನ್ನ ಮಾಜಿ ಹೆಂಡತಿ ಇಷ್ಟವಿಲ್ಲ. 331 00:28:14,084 --> 00:28:17,251 ಆದರೆ, ಒಬ್ಬನೇ ಇರಲೂ ಇಷ್ಟವಿಲ್ಲ. 332 00:28:22,001 --> 00:28:23,084 ನನಗೆ ಓದಲು ಇಷ್ಟವಿಲ್ಲ. 333 00:28:25,709 --> 00:28:26,626 ಅವಳಿಗೆ ಓದಲು ಇಷ್ಟ. 334 00:28:27,584 --> 00:28:28,876 ನನಗೆ ಓದಲು ಇಷ್ಟವಿಲ್ಲ. 335 00:28:32,293 --> 00:28:33,418 ಇಷ್ಟ ಇರಬೇಕೆಂದಿಲ್ಲ. 336 00:28:35,709 --> 00:28:36,918 ಆದರೆ, ಓದಲು ಶುರು ಮಾಡು. 337 00:28:42,501 --> 00:28:43,876 ದ ಪ್ರಾಫೆಟ್ ಓದಿರುವೆಯಾ? 338 00:28:48,334 --> 00:28:49,543 ನನ್ನ ಬಳಿ ಇದೆ, ಕೊಡಬಲ್ಲೆ. 339 00:28:53,543 --> 00:28:54,376 ಹೂಂ, ಧನ್ಯವಾದ. 340 00:28:57,251 --> 00:28:58,334 ಪೇಯಕ್ಕೂ ಧನ್ಯವಾದ. 341 00:30:40,001 --> 00:30:40,834 ಛೇ! 342 00:30:42,918 --> 00:30:44,751 ನಿನಗೆ ಸರಿಯಾಗಿ ಸುಳ್ಳು ಹೇಳಲೂ ಬರಲ್ಲ. 343 00:31:12,543 --> 00:31:13,626 ಸುಸ್ತಿನ ದಿನ. 344 00:31:14,293 --> 00:31:15,626 ನಿನ್ನ ಕೊನೆಯ ದಿನ. 345 00:31:18,126 --> 00:31:19,251 ಸರಿ. 346 00:31:20,918 --> 00:31:21,793 ಸರಿ, ಚಿನ್ನ. 347 00:31:41,668 --> 00:31:42,834 ಚಿನ್ನ? 348 00:31:55,751 --> 00:31:56,584 ಮುದ್ದು? 349 00:32:03,543 --> 00:32:04,376 ಬಂಗಾರಿ? 350 00:32:14,584 --> 00:32:15,501 ಬದುಕಿರುವೆಯಾ, ಚಿನ್ನ? 351 00:32:16,376 --> 00:32:17,209 ಹೂಂ. 352 00:32:36,918 --> 00:32:39,834 ಜಾಗ್ರತೆ. ಒದ್ದೆಯಿದೆ. 353 00:32:42,126 --> 00:32:44,751 ನೀನು ತಂದಿರುವ ದುಬಾರಿ ಕಲೆಗಳು ಹಾಳಾಗುತ್ತವೆ, ಚಿನ್ನ. 354 00:32:44,751 --> 00:32:45,751 ಹೂಂ, ಅದು... 355 00:32:46,709 --> 00:32:49,959 ಈ ಟೈಲುಗಳನ್ನು ಬಂದೂಕಿನಿಂದ ಹೊಡೆಯಬಾರದು. 356 00:33:29,001 --> 00:33:31,459 ನೀನು ಎಂದೂ ಓದದ ಪುಸ್ತಕ ಇಲ್ಲಿದೆ, ಬೇವರ್ಸಿ! 357 00:33:36,584 --> 00:33:38,709 ಜೇನ್, ಉಸಿರಾಡು. ಜೇನ್! 358 00:33:43,751 --> 00:33:44,709 ಬಿಡು ಅದನ್ನು. 359 00:33:46,209 --> 00:33:47,584 ಏನು ಮಾಡಬೇಕೆಂದು ನನಗೆ ಹೇಳಬೇಡ. 360 00:34:05,543 --> 00:34:06,834 ಹುಚ್ಚಿಯಂತೆ ಆಡಬೇಡ. 361 00:34:19,793 --> 00:34:20,626 ಸ್ವಲ್ಪ 362 00:34:21,876 --> 00:34:22,876 ಸಮಾಧಾನ. 363 00:34:24,543 --> 00:34:25,376 ಸಮಾಧಾನದಿಂದಿದ್ದೇನೆ. 364 00:34:39,543 --> 00:34:41,084 ನನಗೆ ನಿನ್ನ ಜೊತೆ 365 00:34:41,668 --> 00:34:43,459 ಮಾತಾಡಬೇಕು. 366 00:34:47,376 --> 00:34:49,251 ಎಲ್ಲವೂ ನಿನ್ನ ಬಗ್ಗೆಯೇ ಅಲ್ಲ. 367 00:34:56,293 --> 00:34:57,251 ನಿಲ್ಲಿಸು... 368 00:35:29,501 --> 00:35:31,293 ಗೋಟಿಗೆ ಹೊಡೆಯುವುದು ನಿಲ್ಲಿಸು. 369 00:35:34,626 --> 00:35:35,459 ನೀನು... 370 00:35:55,459 --> 00:35:58,043 ಬೇಡ... ಮಾಡಬೇಡ. 371 00:36:01,084 --> 00:36:02,293 ಮಾಡಬೇಡ ಹಾಗೆ. 372 00:36:48,584 --> 00:36:49,501 ಏನು ಮಾಡುತ್ತಿರುವೆ? 373 00:36:54,126 --> 00:36:54,959 ಜಾನ್... 374 00:36:57,959 --> 00:36:59,084 ಇಲ್ಲ. 375 00:36:59,084 --> 00:37:01,751 ಇಲ್ಲ, ಇಲ್ಲ. ಬೇಡ, ಬೇಡ, ಬೇಡ. 376 00:37:01,751 --> 00:37:03,501 ಮಾಡಬೇಡ ಹಾಗೆ. 377 00:37:55,043 --> 00:37:55,876 ಇಲ್ಲ! 378 00:38:02,084 --> 00:38:03,418 ನನಗೆ ನಿನ್ನನ್ನು ಕಂಡರಾಗಲ್ಲ! 379 00:38:04,334 --> 00:38:05,626 ನಿನ್ನನ್ನು ಕಂಡರಾಗಲ್ಲ! 380 00:38:08,709 --> 00:38:09,584 ನನಗೂ. 381 00:38:23,876 --> 00:38:25,584 ಇದು ನನಗೇನು ಮಾಡುತ್ತಿದೆ? 382 00:38:25,584 --> 00:38:27,543 ಪ್ರಾಮಾಣಿಕವಾಗುವಂತೆ ಮಾಡುತ್ತಿದೆ. 383 00:38:29,043 --> 00:38:30,543 ನೀನೆಂದೂ ಪ್ರಾಮಾಣಿಕವಾಗಿರಲಿಲ್ಲ. 384 00:38:31,459 --> 00:38:32,293 ಎಂದೂ. 385 00:38:33,251 --> 00:38:34,501 ಪ್ರಾಮಾಣಿಕವಾಗಿದ್ದೇನೆ. 386 00:38:35,168 --> 00:38:38,043 ನಿನಗೆ ಅರ್ಥವಾಗಲ್ಲ ಎಂದ ಮಾತ್ರಕ್ಕೆ ನಾನು ಸುಳ್ಳಿಯಲ್ಲ. 387 00:38:38,043 --> 00:38:39,459 ಕಟ್ಟುಕತೆ! 388 00:38:40,126 --> 00:38:44,376 ಎಲ್ಲಾ ಕಟ್ಟುಕತೆ. ಎಲ್ಲರೂ ತಮ್ಮ ಸುತ್ತ ಒಂದು ಗೋಡೆ ಕಟ್ಟಿಕೊಳ್ಳುವಂತೆ ಮಾಡುವೆ ನೀನು, 389 00:38:44,376 --> 00:38:45,751 ನೀನು ಮಾಡಬೇಕಾಗಿರುವುದಿಲ್ಲ ಎಂದು. 390 00:38:46,376 --> 00:38:47,543 ಅದು ನ್ಯಾಯವಲ್ಲ! 391 00:38:48,251 --> 00:38:49,293 ದೇವರೇ! 392 00:38:51,793 --> 00:38:55,959 ನಿನ್ನ ಸುತ್ತಲಿರುವವರೆಲ್ಲಾ ನೀನು ಪಾಪದ ಪೆದ್ದ ಎಂದುಕೊಂಡಿದ್ದಾರೆ. 393 00:38:58,584 --> 00:39:00,418 ಸಮರ್ಥನೇಕೆ ಆಗುವುದಿಲ್ಲ ನೀನು? 394 00:39:03,043 --> 00:39:05,584 ನಿನಗೆ ನನ್ನ ಮೇಲೆ ಎಂದಾದರೂ ಪ್ರೀತಿ ಇತ್ತೇ? ಎಂದಾದರೂ ಇತ್ತೇ? 395 00:39:07,501 --> 00:39:08,334 ಇತ್ತು. 396 00:39:09,918 --> 00:39:11,209 ಇತ್ತು. ಪ್ರೀತಿ ಇತ್ತು... 397 00:39:12,168 --> 00:39:13,084 ನನಗೆ... 398 00:39:18,668 --> 00:39:19,501 ವಾಹ್, 399 00:39:21,626 --> 00:39:24,001 - ಇದು ಮಜಾವಾಗಿದೆ. - ಹೂಂ, ಚೆನ್ನಾಗಿದೆ. 400 00:39:24,834 --> 00:39:27,876 ನನ್ನ ಒಂದು ಕೈಬೆರಳು ಮುರಿದಿದೆ, ಆದರೆ ಈಗ... 401 00:39:29,293 --> 00:39:31,876 ನನ್ನ ಬೆರಳ ಮೇಲೆ ಸೆಕ್ಸ್ ಇದೆ ಅನಿಸುತ್ತಿದೆ. 402 00:39:33,834 --> 00:39:35,293 ನನ್ನ ಬೆನ್ನ ಮೇಲೆ ಇದೆ. 403 00:39:38,126 --> 00:39:38,959 ಇದು 404 00:39:40,126 --> 00:39:41,626 ಒಳಗಿಂದ ಅಪ್ಪಿಕೊಂಡಂತಿದೆ 405 00:39:42,418 --> 00:39:45,459 ನನ್ನ ದೇಹವನ್ನು, ಒಂದು ದುಂಬಿ... 406 00:39:58,834 --> 00:40:01,543 ನಾನು ನನ್ನ ಸಿಐಎ ಸೈಕಾಲಜೀ ಪರೀಕ್ಷೆ ಫೇಲ್ ಆದೆ, 407 00:40:02,251 --> 00:40:05,709 ಯಾಕೆಂದರೆ ನನಗೆ "ಸಾಮಾಜಿಕ ಅಸ್ವಸ್ಥತೆ" ಇದೆಯಂತೆ. 408 00:40:06,876 --> 00:40:09,126 ನಿನಗಿದನ್ನು ಹೇಳುವುದು ನನಗೆ ಇಷ್ಟವಿರಲಿಲ್ಲ. 409 00:40:09,126 --> 00:40:11,001 ನೀನು ಸಾಮಾಜಿಕವಾಗಿ ಅಸ್ವಸ್ಥತೆಳೇ? 410 00:40:12,584 --> 00:40:15,418 ಮೇಜಿನ ಮೇಲೊಂದು ಡಬ್ಬಿ ಇದೆ, ಪ್ರತಿ ಬಾರಿ ನಾನು ಅಂಥದ್ದೇನಾದರೂ ಮಾಡಿದಾಗ, 411 00:40:15,418 --> 00:40:17,793 ಅದರಲ್ಲಿ ಒಂದು ಗೋಲಿ ಹಾಕುವೆ. 412 00:40:18,376 --> 00:40:20,168 ಎಷ್ಟು ಗೋಲಿಗಳಿವೆ? 413 00:40:20,168 --> 00:40:21,209 ಎಪ್ಪತ್ತೆಂಟು. 414 00:40:21,876 --> 00:40:23,918 ಛೇ. ನಿನಗಿದನ್ನು ಹೇಳುವುದು ಇಷ್ಟವಿರಲಿಲ್ಲ ನನಗೆ. 415 00:40:27,668 --> 00:40:29,251 ನಿನಗೆ ಏನನಿಸುತ್ತೆ? 416 00:40:32,126 --> 00:40:33,959 ನೀನು ಜಪಾನೀಸ್ ಅಷ್ಟೇ. 417 00:40:34,709 --> 00:40:37,543 ಅಮೆರಿಕದಲ್ಲಿ. ಮತ್ತು ಒಂದು ಹೆಂಗಸು. ನನಗನಿಸುತ್ತೆ... 418 00:40:39,043 --> 00:40:40,001 ನೀನು ತುಂಬಾ 419 00:40:40,751 --> 00:40:41,834 ಒತ್ತಡ ತಗೊಳ್ಳುವೆ. 420 00:40:42,251 --> 00:40:44,501 ನಾನು "ಬಿಳಿ" ಅಲ್ಲವೇ, ನಿನ್ನ ಪ್ರಕಾರ? 421 00:40:44,501 --> 00:40:45,501 ಹೂಂ. 422 00:40:46,751 --> 00:40:49,584 ಕಿರಿಕಿರಿ ಮಾಡಲು ಹೇಳುವುದು ಹಾಗೆ. ಯಾಕೆಂದರೆ ನನಗೆ ಕಿರಿಕಿರಿ ಆಗುತ್ತೆ. 423 00:40:49,584 --> 00:40:52,001 ನನಗೆ ಕಿರಿಕಿರಿ ಆಗುತ್ತೆ. ಕಿರಿಕಿರಿ ಆಗುತ್ತೆ. 424 00:40:52,001 --> 00:40:53,501 ಇನ್ನು ಮುಂದೆ ಹೇಳಲ್ಲ. 425 00:40:53,501 --> 00:40:54,584 ಗೊತ್ತೇ, 426 00:40:55,751 --> 00:40:59,418 ನೀನು ನನ್ನನ್ನು ಜಪಾನೀಸ್ ಎಂದಾಗ, ಅಪ್ಪನಿಗೆ ಹತ್ತಿರವಿದ್ದಂತೆ ಅನಿಸುತ್ತೆ. 427 00:41:01,251 --> 00:41:02,418 ನನಗೆ ನನ್ನ ಅಪ್ಪ ಇಷ್ಟ ಇಲ್ಲ. 428 00:41:04,418 --> 00:41:06,584 ಅವರ ಬಳಿ ಮಾತಾಡದ್ದಕ್ಕೆ ಕೆಟ್ಟವಳು ಎಂದುಕೊಂಡಿರುವೆ. 429 00:41:10,043 --> 00:41:10,876 ಹೌದು. 430 00:41:12,293 --> 00:41:13,376 ನಾನೂ. 431 00:41:15,168 --> 00:41:16,918 ಆದರೆ ಅವರಿಗೆ ನನ್ನ ಬಗ್ಗೆ ಏನೂ ಬೇಕಿಲ್ಲ. 432 00:41:18,501 --> 00:41:21,251 ಇದರಿಂದ ಏನಾಗುತ್ತೆ ಗೊತ್ತೇ? 433 00:41:21,251 --> 00:41:23,668 ಕೆಟ್ಟ ಪ್ರಭಾವ ಬೀರುತ್ತೆ. 434 00:41:27,418 --> 00:41:29,834 ನನ್ನನ್ನು ಮರೈನ್ಸ್ ನಿಂದ ಬೇಗ ಹೊರಹಾಕಿದರು. 435 00:41:31,168 --> 00:41:33,043 ಹೌದೇ? ಯಾಕೆ? 436 00:41:34,084 --> 00:41:37,001 ಕೊಲ್ಲಬಾರದವರನ್ನು ಕೊಂದೆಯಾ? 437 00:41:37,001 --> 00:41:38,251 ಇಲ್ಲ. 438 00:41:40,043 --> 00:41:40,876 ಇಲ್ಲ. 439 00:41:41,876 --> 00:41:43,043 ಆಸ್ತಮಾ. 440 00:41:45,501 --> 00:41:47,834 ಅದು ನಿನ್ನ ತಪ್ಪಲ್ಲ, ಜಾನ್. 441 00:41:47,834 --> 00:41:51,376 ನನಗೆ ಅದು ನನ್ನ ತಪ್ಪು ಅನಿಸುತ್ತೆ. ನಾನು ಗಂಡಸಲ್ಲ ಅನಿಸುತ್ತೆ. 442 00:41:55,751 --> 00:41:57,126 ಈಗದನ್ನು ನಂಬಿ ಬಿಟ್ಟಿದ್ದೇನೆ. 443 00:41:57,918 --> 00:41:58,751 ಹೂಂ. 444 00:42:02,501 --> 00:42:04,334 ನಿನ್ನ ಆಸ್ತಮಾ ಬಗ್ಗೆ ನಿನಗೆ ನಾಚಿಕೆಯೇ? 445 00:42:05,084 --> 00:42:06,168 ನನಗೆ ನಾಚಿಕೆ, 446 00:42:07,168 --> 00:42:10,126 ಅದು ಆಸ್ತಮಾ ಅಲ್ಲ, ಆತಂಕ ಎಂದು. 447 00:42:18,834 --> 00:42:19,876 ಯಾಕೆ... 448 00:42:23,001 --> 00:42:24,876 ಯಾಕೆ ನಿನ್ನನ್ನು ಪ್ರೀತಿಸಲು ಬಿಡಲಿಲ್ಲ ನೀನು? 449 00:42:25,751 --> 00:42:28,293 ಯಾಕೆಂದರೆ ನನಗೆ ಪ್ರೀತಿ ಮಾಡಲು ಸುರಕ್ಷಿತ ಅನಿಸಬೇಕಿಲ್ಲ. 450 00:42:28,293 --> 00:42:30,043 ನಾನು ನಿನ್ನಂತಲ್ಲ. 451 00:42:31,376 --> 00:42:32,293 ನೆರೆಯವನೊಂದಿಗೆ 452 00:42:33,001 --> 00:42:36,001 ನಾನು ಮಾತಾಡಿದಾಗ ನಿನಗೆ ಈರ್ಷ್ಯೆ ಆಗುವುದು ನನಗಿಷ್ಟ. 453 00:42:38,084 --> 00:42:39,376 ಈರ್ಷ್ಯೆ ಇಷ್ಟವೇ? 454 00:42:40,001 --> 00:42:40,834 ಹೂಂ. 455 00:42:41,501 --> 00:42:44,501 ನೀನು ಕೆಲಸಕ್ಕಾಗಿ ಆ ಇಬ್ಬರೊಂದಿಗೆ ಮಲಗಿದಾಗ ನನಗೆ ಈರ್ಷ್ಯೆ ಆಗಿತ್ತು. 456 00:42:46,043 --> 00:42:49,751 ನಾನು... ನಾನು ಅವರೊಂದಿಗೆ ಮಲಗಲಿಲ್ಲ. 457 00:42:49,751 --> 00:42:51,793 ನಿನಗೆ ಬೇಜಾರು ಮಾಡಲು ಹೇಳಿದೆ. 458 00:42:51,793 --> 00:42:54,584 ಬೇಜಾರಾಯಿತು ನನಗೆ. ತುಂಬಾ. 459 00:42:55,459 --> 00:42:56,543 ಅಷ್ಟು ಬೇಜಾರಾಯಿತೇ? 460 00:42:56,543 --> 00:42:59,459 ನೀನು ಬೆವ್ ಜೊತೆ ಮಲಗಬೇಕೆಂದಿದ್ದಾಗ ನನಗೆ ಬೇಜಾರಾಯಿತು. 461 00:43:02,418 --> 00:43:04,751 ನಿನಗವಳು ಬೇಕಿರುವುದು ಬೇಜಾರಾಯಿತು. 462 00:43:05,751 --> 00:43:06,668 ಅದು ನಕಲಿ. 463 00:43:07,793 --> 00:43:08,834 ಆದರೆ ಅದು ನಕಲಿ. 464 00:43:09,918 --> 00:43:11,626 ಹೂಂ, ಆದರೆ ಆ ದುಃಖ. 465 00:43:13,418 --> 00:43:14,501 ಅದು ನಿಜ. 466 00:43:16,793 --> 00:43:18,376 ನಿನಗೆ ತುಂಬಾ ಬೇಜಾರಾಗುವ ವಿಷಯವೇನು? 467 00:43:19,126 --> 00:43:21,293 ನನ್ನ ಅಮ್ಮ ಸತ್ತಾಗ ಅವಳ ದೇಹ ನೋಡಿ. 468 00:43:23,334 --> 00:43:25,668 ಅವಳು ಕಾರ್ ಅಪಘಾತದಲ್ಲಿ ಸತ್ತಳು. 469 00:43:26,584 --> 00:43:27,418 ಹೂಂ. 470 00:43:28,334 --> 00:43:30,543 ಬಂದವರಿಗೆ ಮುಖಾನೂ ತೋರ್ಸಕಾಗಿಲ್ಲ. 471 00:43:32,876 --> 00:43:34,584 ನಿನಗೆ ತುಂಬಾ ಬೇಜಾರಾದ ವಿಷಯ? 472 00:43:36,459 --> 00:43:38,459 ನನ್ನ ಅಪ್ಪನಿಗೆ ಮರುಪಾವತಿ ಮಾಡಲಾಗದಿರುವುದು. 473 00:43:41,084 --> 00:43:43,459 ನನ್ನ ಅಜ್ಜಿಗೆ ಮರುಪಾವತಿ ಮಾಡಲಾಗದಿರುವುದು. 474 00:43:44,626 --> 00:43:46,293 ಹೇಗೆ ಮರುಪಾವತಿ ಮಾಡಬೇಕಿತ್ತು ನಿನಗೆ? 475 00:43:47,501 --> 00:43:48,834 ಅವರಿಗೆ ಮಕ್ಕಳನ್ನು ನೀಡಿ. 476 00:43:53,876 --> 00:43:55,709 ನನಗೆ ಎಲ್ಲದಕ್ಕಿಂತ ಹೆಚ್ಚು ಮಕ್ಕಳು ಬೇಕು. 477 00:44:00,876 --> 00:44:02,626 ನಾನು ಸಾಮಾಜಿಕವಾಗಿ ಅಸ್ವಸ್ಥಳಿದ್ದರೂ 478 00:44:03,501 --> 00:44:05,334 ನನ್ನ ಜೊತೆ ಮಕ್ಕಳು ಬೇಕೇ? 479 00:44:06,959 --> 00:44:09,626 ನೀನು ಈಗಿರುವಂತೆಯೇ ಇರುವೆಯಾ, 480 00:44:10,626 --> 00:44:12,793 ಸಾಮಾಜಿಕವಾಗಿ ಅಸ್ವಸ್ಥಳಿದ್ದರೂ? 481 00:44:12,793 --> 00:44:13,751 ಹೂಂ. 482 00:44:15,584 --> 00:44:17,084 ಹಾಗಿದ್ದಲ್ಲಿ, ಖಂಡಿತ ಮಾಡಿಕೊಳ್ಳುವೆ. 483 00:44:18,543 --> 00:44:20,418 ಹೃದಯ ಬಡಿತ ಹೆಚ್ಚಿಸುತ್ತಿರುವೆ ನೀವು. 484 00:44:23,834 --> 00:44:26,834 ಮೆಟ್ಟಿಲಲ್ಲಿ ನಿನ್ನ ಮೇಲೆ ಗುಂಡು ಹೊಡೆಯುವ ಅವಕಾಶ ಇತ್ತು. 485 00:44:27,709 --> 00:44:30,709 ನನಗೆ ಆಡುಗೆಮನೆಯಲ್ಲಿ ನಿನ್ನ ಮೇಲೆ ಗುಂಡು ಹೊಡೆಯುವ ಅವಕಾಶ ಇತ್ತು. 486 00:44:32,459 --> 00:44:33,543 ಈ ಸೀರಮ್ 487 00:44:34,834 --> 00:44:36,418 ಚೆನ್ನಾಗಿದೆ. 488 00:44:43,668 --> 00:44:45,584 ನಿನ್ನ ಮೇಲೆ ನೀನೇ ನಗುವುದು ನನಗೆ ಇಷ್ಟ. 489 00:44:45,584 --> 00:44:47,876 - ನನಗದು ಇಷ್ಟವಿಲ್ಲ. - ನನಗೆ ತುಂಬಾ ಇಷ್ಟ. 490 00:44:47,876 --> 00:44:49,209 ನನಗೆ ನಾನು ನಗುವ ರೀತಿ ಹಿಡಿಸಲ್ಲ. 491 00:44:49,209 --> 00:44:52,668 ನೀನು ಯಾವಾಗಲೂ, "ನಿನ್ನದು ಯಾಂತ್ರಿಕ ನಗು" ಎನ್ನುವೆ. 492 00:44:52,668 --> 00:44:53,584 ನೀನು... 493 00:44:56,584 --> 00:44:57,668 ನಿಲ್ಲಿಸು. 494 00:45:00,793 --> 00:45:02,001 ಆಗಲ್ಲ. 495 00:45:05,543 --> 00:45:06,793 ನಿಲ್ಲಿಸಲು ಆಗಲ್ಲ. 496 00:45:19,501 --> 00:45:20,793 ನನಗೆ ನಿನ್ನ ಪರಿಮಳ ಇಷ್ಟ. 497 00:45:21,459 --> 00:45:22,751 ನನಗೆ ಸ್ವಲ್ಪವೂ ಇಷ್ಟ ಇಲ್ಲ. 498 00:45:22,751 --> 00:45:24,459 - ನಿನ್ನ ಕತ್ತಿನ ಪರಿಮಳ ನೋಡಬಹುದೇ? - ಇಲ್ಲ. 499 00:45:25,209 --> 00:45:27,126 - ನಾನು ಹಾಗೆ ಮಾಡುವುದು ನಿನಗಿಷ್ಟವೇ? - ಹೂಂ. 500 00:45:27,126 --> 00:45:28,293 - ಸರಿ. - ಸರಿ. 501 00:45:54,168 --> 00:45:58,001 ನೀನು ಮಾದಕವಾಗಿ ನಿನ್ನ ದನಿ ಕಡಿಮೆ ಮಾಡುವುದು ನನಗಿಷ್ಟವಿಲ್ಲ. 502 00:46:00,168 --> 00:46:01,293 ನನಗೆ ನೀನು 503 00:46:02,334 --> 00:46:05,334 ಬೇರೆಯವರನ್ನು ಖುಷಿ ಪಡಿಸಲು ಅವರನ್ನು ನಕಲಿಸುವುದು ಇಷ್ಟ ಇಲ್ಲ. 504 00:46:08,376 --> 00:46:10,709 ನೀನು ನನ್ನ ಜೊತೆ ಹಾಗೆ ಮಾಡುವುದಿಲ್ಲ ಎನ್ನುವುದು ನನಗಿಷ್ಟ. 505 00:46:13,751 --> 00:46:15,334 ನೀನು ನನ್ನನ್ನು ನೋಡುವುದು ನನಗಿಷ್ಟ. 506 00:46:25,626 --> 00:46:26,459 ನಾನು... 507 00:46:27,418 --> 00:46:28,834 ನನಗೆ ನಿನ್ನ ಕೆನ್ನೆ ಇಷ್ಟ. 508 00:46:30,626 --> 00:46:32,793 ಅದು ಪ್ಯಾನ್ ಕೇಕ್ ಇದ್ದಂತೆ, ತಿನ್ನಬೇಕು ಅನಿಸುತ್ತೆ. 509 00:46:37,043 --> 00:46:38,126 ನನಗೆ ನಿನ್ನ ಮೂಗು ಇಷ್ಟ. 510 00:46:38,751 --> 00:46:40,584 ಅದರ ಮೇಲೆ ಗುಳಿ ಇದೆ. 511 00:46:41,459 --> 00:46:42,501 ಸಿಂಹದಂತೆ ಕಾಣುತ್ತದೆ. 512 00:46:44,543 --> 00:46:46,668 ನನಗೆ ನಿನ್ನ ಮೂಗು ತಿನ್ನಬೇಕು. 513 00:46:47,751 --> 00:46:49,334 ಮ್ಯಾಕ್ಸ್ ನ ಏಕೆ ಕೊಂದೆ? 514 00:46:53,043 --> 00:46:54,209 ಅವನನ್ನು ನಾನು ಕೊಲ್ಲಲಿಲ್ಲ. 515 00:46:56,126 --> 00:46:58,876 ನನಗೆ ಗುಂಡು ಹೊಡೆಯುವ ಬದಲು ಅವನಿಗೆ ಹೊಡೆದು ಕೊಂದೆ. 516 00:47:00,543 --> 00:47:02,751 - ನನ್ನನ್ನು ಏಕೆ ಕೊಲ್ಲಲು ನೋಡಿದೆ? - ನಾನು ಹಾಗೆ ಮಾಡಲಿಲ್ಲ. 517 00:47:05,209 --> 00:47:06,334 ನನಗೆ ಆ ಬೆಕ್ಕು ಇಷ್ಟವಿಲ್ಲ. 518 00:47:07,834 --> 00:47:10,043 ನಿನ್ನನ್ನು ಕೊಲ್ಲಲು ನೋಡಲಿಲ್ಲ. ಬೆಕ್ಕನ್ನೂ ಕೊಲ್ಲಲಿಲ್ಲ. 519 00:47:12,084 --> 00:47:14,959 ನೀನು ನನ್ನನ್ನು ಕೊಲ್ಲಲು ನೋಡಿದೆ. 520 00:47:14,959 --> 00:47:16,626 ನನ್ನನ್ನು, ಅಮ್ಮನನ್ನು ಕೊಲ್ಲನೋಡಿದೆ. 521 00:47:16,626 --> 00:47:17,668 ಇಲ್ಲ. 522 00:47:20,168 --> 00:47:21,334 ನಾನು ಅವಳ ಮನೆಗೆ ಹೋಗಿದ್ದೆ. 523 00:47:22,209 --> 00:47:24,084 - ಅಲ್ಲಿ ದಾಳಿ ಆಗಿತ್ತು. - ಇಲ್ಲ. 524 00:47:25,709 --> 00:47:26,876 ಅದು ನಾನಲ್ಲ. 525 00:47:28,334 --> 00:47:29,834 ಮತ್ತೆ ಯಾರು? 526 00:47:31,209 --> 00:47:32,126 ಹಲೋ? 527 00:47:32,126 --> 00:47:34,168 - ಹಲೋ? - ಹಲೋ? 528 00:47:34,168 --> 00:47:35,293 - ವಾವ್. - ಹೂಂ. 529 00:47:35,293 --> 00:47:36,876 - ಎಂತಹ ಅವ್ಯವಸ್ಥೆ. - ವಾವ್. 530 00:47:37,918 --> 00:47:38,751 ವಾವ್. 531 00:47:44,793 --> 00:47:47,084 - ಪಾರ್ಟಿ ಮಾಡಿದಿರೇ, ನೀವಿಬ್ಬರೂ? - ಇರುವ ಎಲ್ಲಾ ಬಂದೂಕು 532 00:47:47,084 --> 00:47:49,084 ಬಳಸಿದಂತಿದೆ. 533 00:47:49,084 --> 00:47:51,334 ನಾನು ಎರಡು ಹೆಣ ಸಿಗುತ್ತೆ ಅಂದುಕೊಂಡೆ. 534 00:47:53,668 --> 00:47:55,376 ನೀವಿಬ್ಬರೂ ಹೇಗೆ ಒಳಗೆ ಬಂದಿರಿ? 535 00:47:55,376 --> 00:47:56,959 ಸೂಪರ್ವೈಸರ್. ಹೂಂ. 536 00:47:56,959 --> 00:47:58,376 ನಮಗೆ ಬೀಗದಕೈ ಕೊಟ್ಟನು. 537 00:47:59,626 --> 00:48:01,043 ಏನು ಯೋಚಿಸುತ್ತಿರುವಿರೆಂದು ಗೊತ್ತು. 538 00:48:02,084 --> 00:48:03,334 ನಾಟಕ ಬೇಡ. 539 00:48:04,626 --> 00:48:05,793 ಎರಡೂ ಕೈ ಮೇಲೆ ಹಿಡಿಯಿರಿ. 540 00:48:05,793 --> 00:48:07,834 ಹೂಂ, ಇರಿ. 541 00:48:07,834 --> 00:48:10,084 ನಾವು ಕುಳಿತುಕೊಳ್ಳೋಣವೇ? 542 00:48:10,084 --> 00:48:12,501 - ಹಾಗೆ ಚೆನ್ನಾಗಿರುತ್ತೆ. ಅಲ್ಲವೇ? - ಹೂಂ, ಸರಿ. 543 00:48:12,501 --> 00:48:14,209 - ಸರಿ. - ಕು... ಕುಳಿತುಕೊಳ್ಳಿ. 544 00:48:15,084 --> 00:48:17,126 - ಬನ್ನಿ. - ಹೂಂ, ಕುಳಿತುಕೊಳ್ಳೋಣ. 545 00:48:18,876 --> 00:48:20,293 ಕುಡಿಯಲು ಏನಾದರೂ ಬೇಕೇ? 546 00:48:20,293 --> 00:48:22,209 ಇಲ್ಲ. ನಾವು ಟ್ರೂತ್ ಸೀರಮ್ ಮೇಲಿದ್ದೇವೆ. 547 00:48:22,209 --> 00:48:23,251 ನನಗೆ ಬೇಕು. 548 00:48:23,251 --> 00:48:24,501 ಜಾಣ ಮನುಷ್ಯ. 549 00:48:25,126 --> 00:48:27,043 - ಟ್ರೂತ್ ಸೀರಮ್ ಮೇಲಿರುವಿರಾ? - ಹೂಂ. 550 00:48:28,793 --> 00:48:29,876 ಯಾವುದಾದರೂ ಅಸ್ತ್ರವಿದೆಯೇ? 551 00:48:31,709 --> 00:48:32,543 - ಇಲ್ಲ. - ಇಲ್ಲ. 552 00:48:33,918 --> 00:48:35,876 ಮನೆಯಲ್ಲಿ ಯಾವುದಾದರೂ ಅಸ್ತ್ರವಿದೆಯೇ? 553 00:48:35,876 --> 00:48:36,918 ಹೂಂ. 554 00:48:36,918 --> 00:48:38,793 - ಫ್ರಿಡ್ಜ್ ಮೇಲೆ ಒಂದು. - ಮತ್ತೆ... 555 00:48:38,793 --> 00:48:41,334 - ಮೆಟ್ಟಿಲ ಬಳಿ ಒಂದಿದೆ. - ...ಆಡುಗೆಮನೆಯ ಕಸತೊಟ್ಟಿಯ ಬಳಿ ಒಂದು, 556 00:48:41,334 --> 00:48:44,084 - ಹಾಸಿಗೆಯ ಹಿಂದೆ ಒಂದು. - ಬೇರೆ ಇಲ್ಲ ಅನಿಸುತ್ತೆ 557 00:48:44,084 --> 00:48:46,084 - ಯಾಕೆಂದರೆ ನಾನು ಉಳಿದೆಲ್ಲವನ್ನೂ ಬಳಸಿದೆ. - ಎಷ್ಟೊಂದು ಬಳಸಿದೆವು. 558 00:48:46,084 --> 00:48:47,084 ಇದು ವಿಚಿತ್ರ. 559 00:48:49,334 --> 00:48:52,751 ನಾವು ಎಷ್ಟು ಸ್ಮಿಥ್ ಗಳನ್ನು ಕೊನೆಗೊಳಿಸಿದ್ದೇವೆ. 560 00:48:52,751 --> 00:48:55,459 ಟ್ರೂತ್ ಸೀರಮ್ ಮೇಲೆ ಯಾರೂ ಇರಲಿಲ್ಲ. 561 00:48:55,459 --> 00:48:57,209 "ಕೊನೆಗೊಳಿಸಿದ್ದೇವೆ" ಎಂದರೆ? 562 00:48:57,209 --> 00:48:59,126 ಬೇರೆ ಸ್ಮಿಥ್ ಗಳನ್ನು ಕೊಲ್ಲುವುದು. 563 00:49:00,376 --> 00:49:02,084 "ಕೊನೆಗೊಳಿಸುವುದು" ಎನ್ನುತ್ತಾರೆ. 564 00:49:04,209 --> 00:49:06,084 ಎಷ್ಟು "ಕೊನೆಗೊಳಿಸುವ" ಕೆಲಸ ಇರುತ್ತೆ? 565 00:49:06,084 --> 00:49:07,168 ನಾವು ಇದನ್ನೇ ಮಾಡುವುದು. 566 00:49:09,001 --> 00:49:11,793 "ಅತ್ಯಂತ ಅಪಾಯಕಾರಿ" ಇನ್ನೇನಿರುತ್ತೆ? 567 00:49:13,084 --> 00:49:15,376 - ಅತ್ಯಂತ ಅಪಾಯಕಾರಿ... - ಬೇರೆ ಸ್ಮಿಥ್ ಗಳನ್ನು ಕೊಲ್ಲುವುದು. 568 00:49:15,376 --> 00:49:16,876 ...ಬೇರೆ ಸ್ಮಿಥ್ ಕೊಲ್ಲುವುದು. 569 00:49:17,501 --> 00:49:18,459 - ಅದೇ. - ಹೂಂ. 570 00:49:19,459 --> 00:49:20,501 ಬೇಜಾರಿನ ವಿಷಯ ಇದು. 571 00:49:20,501 --> 00:49:23,168 - ನಮಗೆ ನೀವು ನಿಜವಾಗಿ ಇಷ್ಟವಾಗಿದ್ದಿರಿ. - ಹೌದು. 572 00:49:23,751 --> 00:49:24,709 ಮಜಾ ಇದ್ದೀರಿ ನೀವು. 573 00:49:25,251 --> 00:49:26,418 - ಧನ್ಯವಾದ. - ಧನ್ಯವಾದ. 574 00:49:26,418 --> 00:49:29,043 ನಮಗೂ ನೀವು ಇಷ್ಟವಿದ್ದಿರಿ. ಅಲ್ಲವೇ? 575 00:49:29,043 --> 00:49:30,126 ಇಷ್ಟವಾಗದ ವರೆಗೆ ಮಾತ್ರ. 576 00:49:30,834 --> 00:49:32,251 ಕೊನೆಯಲ್ಲಿ. 577 00:49:33,959 --> 00:49:36,334 ಎಲ್ ಸಾಲ್ವಡಾರ್ ನಲ್ಲಿನ ವ್ಯಕ್ತಿ... ಏನು, ಏನು... 578 00:49:36,918 --> 00:49:38,209 ಸ್ಮಿಥ್. 579 00:49:38,209 --> 00:49:39,334 ಅವನೂ ಸ್ಮಿಥ್. 580 00:49:41,043 --> 00:49:43,959 ಎಲ್ಲರಿಗೂ ದೊಡ್ಡದೇನಾದರೂ ಮಾಡಬೇಕು 581 00:49:43,959 --> 00:49:46,126 ಆದರೆ ಅದು... 582 00:49:48,001 --> 00:49:49,543 ಪೆದ್ದುತನ. 583 00:49:49,543 --> 00:49:52,084 ಹೂಂ. ಸೂಪರ್ವೈಸರ್ ಮಾತು ಕೇಳಿದಷ್ಟೂ... 584 00:49:52,084 --> 00:49:53,001 ಹೂಂ. 585 00:49:53,001 --> 00:49:54,668 ನಿಮ್ಮ ನಂಬಿಕೆ ಹೆಚ್ಚಿದ್ದಷ್ಟೂ... 586 00:49:54,668 --> 00:49:56,668 - ಎಲ್ಲವೂ ಸುಲಭ ಆಗುತ್ತೆ. - ಸುಲಭ. 587 00:49:56,668 --> 00:50:00,418 ಅವನು ದೇವರು ಎನ್ನುವಂತೆ ನೀವು ಏಕೆ ಮಾತಾಡುತ್ತಿದ್ದೀರಿ. 588 00:50:01,126 --> 00:50:02,001 ಅವನು ದೇವರೇ. 589 00:50:04,959 --> 00:50:06,918 ನೀನು ಎಲ್ಲಿ ಸಿಗುವೆ ಎಂದು ಹೇಗೆ ಗೊತ್ತಿತ್ತು? 590 00:50:07,918 --> 00:50:09,293 ಅದು ಕಾಕತಾಳೀಯವಲ್ಲ. 591 00:50:09,876 --> 00:50:12,959 ರೈತರ ಮಾರುಕಟ್ಟೆ. ಜ್ಯೂಸ್ ಅಂಗಡಿ. ಬೆಳಿಗ್ಗೆ 11:52. 592 00:50:14,209 --> 00:50:15,084 ಅವನು ಎಂದೂ ತಪ್ಪಲ್ಲ. 593 00:50:15,709 --> 00:50:18,668 ನೀನೇನು ಮಾಡುವೆ ಎನ್ನುವುದು ಮಾಡುವುದಕ್ಕೂ ಮೊದಲು ಅವನಿಗೆ ಗೊತ್ತಿರುತ್ತೆ. 594 00:50:20,459 --> 00:50:24,209 ನೀನು ಎಲ್ಲಿ ಹೋಗುವೆ ಎನ್ನುವುದು ನೀನು ಹೋಗುವುದಕ್ಕೂ ಮೊದಲು ಅವನಿಗೆ ಗೊತ್ತಿರುತ್ತೆ. 595 00:50:24,209 --> 00:50:26,918 ನಾವು ಸ್ಮಿಥ್ ಆಗುವುದಕ್ಕೂ ಮುಂಚೆಯಿಂದಲೇ ಅವನಿಗೆ ನಾವು ಗೊತ್ತು. 596 00:50:27,793 --> 00:50:31,418 ಮತ್ತು ಅವನು... ಅವನಿಗೆ ಗೊತ್ತಿರುವ ವಿಷಯಗಳು, ಅವನು ಹೇಳುವುದು... 597 00:50:31,418 --> 00:50:33,626 - ಅವರು ಅದ್ಭುತ. - ನಗನಿಸುತ್ತೆ... ಅದೊಂದು ತರಹ 598 00:50:33,626 --> 00:50:36,459 ಅವನು ಹೇಳಿದ್ದನ್ನು ನೀನು ಮಾಡಿದರೆ 599 00:50:36,459 --> 00:50:39,918 ನಿನಗೆ ಇಂದಿನ ಉಡುಗೊರೆ ಸಿಗುತ್ತೆ. 600 00:50:39,918 --> 00:50:42,126 ಯಾಕೆಂದರೆ ನಾಳೆಯ ಖಾತರಿ ಇಲ್ಲ. 601 00:50:42,126 --> 00:50:43,293 ಆಮೆನ್. 602 00:50:45,584 --> 00:50:47,043 ಛೇ. 603 00:50:49,751 --> 00:50:50,626 ಛೇ! 604 00:50:51,209 --> 00:50:53,376 ದೇವರೇ! ಕಣ್ಣು ಕಾಣುತ್ತಿಲ್ಲ! 605 00:50:53,376 --> 00:50:55,251 ದೇವರೇ! 606 00:50:55,918 --> 00:50:57,126 ನನ್ನ ಕಣ್ಣು! 607 00:50:57,293 --> 00:50:59,376 ಏನು ಮಾಡಿದಿರಿ! 608 00:50:59,376 --> 00:51:00,876 - ಜಾನ್! ಸುಮ್ಮನಿರು! - ನನ್ನ ಕಣ್ಣು! 609 00:51:00,876 --> 00:51:02,876 - ಅವರೆಲ್ಲಿದ್ದಾರೆ ಕೇಳಬೇಕು ನನಗೆ. - ಅಯ್ಯೋ! 610 00:51:03,709 --> 00:51:04,876 ಜೇನ್! 611 00:51:26,543 --> 00:51:29,293 ಸುಸ್ತಾಗುತ್ತಿದೆ, ಚಿನ್ನ. ಸುಸ್ತಾಗಿದೆ. 612 00:51:29,293 --> 00:51:30,459 ಯಾರೂ ಇಲ್ಲ. 613 00:51:35,293 --> 00:51:38,001 - ಎಷ್ಟು ರಕ್ತವಿದೆ. - ಸಮಾಧಾನವಾಗಿರು. 614 00:51:40,043 --> 00:51:40,876 ಯಾರೂ ಇಲ್ಲ. 615 00:52:01,251 --> 00:52:02,084 ಜಾನ್? 616 00:52:07,293 --> 00:52:08,126 ಇಲ್ಲಿ, 617 00:52:09,668 --> 00:52:10,501 ತೋರಿಸು. 618 00:52:11,293 --> 00:52:12,418 - ಸ್ವಲ್ಪ... - ಹೂಂ. 619 00:52:12,418 --> 00:52:14,709 - ಸ್ವಲ್ಪ ಮೆತ್ತಗೆ. - ಸರಿ. 620 00:52:32,418 --> 00:52:35,543 - ಇದು ರಕ್ತದ ಹರಿವು ಕಡಿಮೆ ಮಾಡಲು. ಸರಿಯೇ? - ಸರಿ. 621 00:52:36,001 --> 00:52:37,334 ಇಲ್ಲಿಂದ ಈಗಲೇ ಹೋಗುತ್ತಿಲ್ಲ ನಾವು. 622 00:52:39,918 --> 00:52:41,459 ಎಷ್ಟು ಗುಂಡುಗಳಿವೆ ನಿನ್ನ ಬಳಿ? 623 00:52:48,793 --> 00:52:49,626 ಒಂದು. 624 00:52:52,876 --> 00:52:53,959 ನಿನ್ನ ಬಳಿ? 625 00:52:56,334 --> 00:52:57,334 ಎಂದೂ ಇರಲಿಲ್ಲ. 626 00:53:03,459 --> 00:53:04,293 ಸರಿ. 627 00:53:05,876 --> 00:53:06,709 ಸರಿ. 628 00:53:07,959 --> 00:53:09,001 ಮೊದಲು ಯೋಚಿಸುವೆ ನಾನು. 629 00:53:17,376 --> 00:53:18,209 ಹೇ. 630 00:53:19,834 --> 00:53:20,876 ಬಾಗಿಲು ತೆರೆಯಬೇಡ. 631 00:53:22,251 --> 00:53:24,084 ಅವಳಿಗೆ ಅದೇ ಬೇಕಿರುವುದು, ಅದಕ್ಕೆ... 632 00:53:24,959 --> 00:53:26,918 - ಇಬ್ಬರೂ ಸತ್ತರೆ ಉಪಯೋಗವಿಲ್ಲ. - ನಿಲ್ಲಿಸು. 633 00:53:28,418 --> 00:53:29,251 ನಾನು... 634 00:53:30,793 --> 00:53:31,793 ನಾವು ಹಾಗೆ ಮಾಡುತ್ತಿಲ್ಲ. 635 00:53:33,501 --> 00:53:34,334 ಸರಿ. 636 00:53:42,751 --> 00:53:43,626 ಏನು ಯೋಜನೆ? 637 00:53:49,751 --> 00:53:52,168 - ನನ್ನನ್ನು ಕೇಳುತ್ತಿರುವೆಯಾ? - ಹೂಂ. 638 00:53:53,334 --> 00:53:54,293 ನಿನ್ನ ಕೇಳುತ್ತಿರುವೆ. 639 00:54:01,168 --> 00:54:02,126 ಇನ್ನು... 640 00:54:04,126 --> 00:54:06,126 ಸ್ವಲ್ಪ ಹೊತ್ತಿನಲ್ಲಿ ಕತ್ತಲೆ ಆಗುತ್ತೆ. 641 00:54:07,001 --> 00:54:10,084 ಅವಳು ದೀಪ ಹಚ್ಚಬೇಕು ಇಲ್ಲವೇ ಕತ್ತಲೆಯಲ್ಲಿ ಇರಬೇಕು. 642 00:54:11,209 --> 00:54:13,168 ಎರಡೂ ನಮಗೆ ಒಳ್ಳೆಯದೇ. 643 00:54:14,334 --> 00:54:15,293 ಸರಿ. 644 00:54:16,584 --> 00:54:17,418 ಸರಿ. 645 00:54:19,418 --> 00:54:20,459 ಈಗ ಕಾಯುವುದಷ್ಟೇನಾ? 646 00:54:24,209 --> 00:54:25,209 ಕಾಯುವುದಷ್ಟೇ. 647 00:54:28,001 --> 00:54:28,834 ಸರಿ. 648 00:54:51,834 --> 00:54:52,709 ಕೆಟ್ಟದಾಗಿದೆಯೇ? 649 00:54:57,334 --> 00:54:58,168 ಸುಳ್ಳಿ. 650 00:55:10,418 --> 00:55:11,626 ಹೇ, ಜಾನ್? 651 00:55:13,751 --> 00:55:15,084 - ಜಾನ್? - ಎದ್ದಿರುವೆ. 652 00:55:15,709 --> 00:55:16,543 ನನ್ನನ್ನು ನೋಡು. 653 00:55:18,334 --> 00:55:20,001 ನಿನಗೆ ಏನೋ ಮುಖ್ಯವಾದದ್ದು ಹೇಳಬೇಕು. 654 00:55:23,626 --> 00:55:24,668 ಒಂದು ಮಗು ಮಾಡಿಕೊಳ್ಳಬಹುದು. 655 00:55:26,001 --> 00:55:26,834 ಸರಿಯೇ? 656 00:55:30,668 --> 00:55:31,501 ಐದು. 657 00:55:32,709 --> 00:55:33,959 ಎರಡು. 658 00:55:34,334 --> 00:55:36,168 ಅಷ್ಟೇ. ಇನ್ನು ಮಾತುಕತೆ ಬೇಡ. 659 00:55:39,584 --> 00:55:41,126 ನನಗೆ ಬೆಟ್ಟದಲ್ಲಿ ಇರಬೇಕು. 660 00:55:45,751 --> 00:55:47,626 ನನ್ನ ಅಮ್ಮನಿಗಾಗಿ ಒಂದು ಜಾಗ ಹುಡುಕಬೇಕು. 661 00:55:50,543 --> 00:55:51,376 ಹೂಂ. 662 00:56:03,459 --> 00:56:04,626 ನಿನ್ನ ನಿಜ ಹೆಸರೇನು? 663 00:56:08,668 --> 00:56:09,501 ಅಲಾನಾ. 664 00:56:13,668 --> 00:56:14,918 ನನಗೆ "ಜೇನ್" ಇಷ್ಟ. 665 00:56:24,418 --> 00:56:25,751 ನನಗೆ "ಜಾನ್." 666 00:57:02,251 --> 00:57:03,626 ಹೇ. ಜಾನ್? 667 00:57:04,459 --> 00:57:05,293 ಎದ್ದಿರು. 668 00:57:13,043 --> 00:57:13,959 ಗುಂಡು ಹಾರಿಸುವೆ. 669 00:57:20,209 --> 00:57:21,459 ಇಲ್ಲಿ. ತಗೋ. 670 00:57:21,459 --> 00:57:23,209 ನಾನು ಗುಂಡು ಹಾರಿಸುವೆ, ಸರಿಯೇ? 671 00:57:25,209 --> 00:57:26,043 ನನ್ನನ್ನು ನೋಡು. 672 00:57:26,876 --> 00:57:27,709 ಉಸಿರಾಡು. 673 00:57:28,751 --> 00:57:29,668 ಎದ್ದಿರು. 674 00:57:32,709 --> 00:57:35,043 ನಾನು ಹೊರಹೋಗುವೆ. ಮೂರರವರೆಗೆ ಎಣಿಸು. 675 00:57:35,043 --> 00:57:36,918 ಇಲ್ಲೇ ಇರು. ಉಸಿರಾಡು. 676 00:57:38,126 --> 00:57:40,001 ಅವಳನ್ನು ಕೊಂದು, ಇಲ್ಲಿಂದ ಹೊರಡೋಣ. 677 00:57:40,751 --> 00:57:41,793 ಇದು ಒಳ್ಳೆಯ ಯೋಜನೆಯೇ? 678 00:57:44,876 --> 00:57:45,709 ಹೂಂ? 679 00:57:48,209 --> 00:57:49,126 ಆರಾಮ ಇರುವೆಯಾ? 680 00:57:51,459 --> 00:57:52,501 ಹೌದು. 681 00:57:52,501 --> 00:57:53,626 ಮೂರರವರೆಗೆ ಎಣಿಸು. 682 00:57:56,459 --> 00:58:00,043 ಸರಿ. ನಾನು ಗುಂಡು ಹಾರಿಸಲಿರುವೆ. ಆಮೇಲೆ ಇಲ್ಲಿಂದ ಹೊರಡೋಣ. 683 00:58:00,043 --> 00:58:00,959 ಸರಿ. 684 00:58:02,209 --> 00:58:03,543 ನನ್ನೊಂದಿಗೆ ಮೂರರವರೆಗೆ ಎಣಿಸು. 685 00:58:06,209 --> 00:58:07,043 ಒಂದು... 686 00:58:09,084 --> 00:58:10,126 ಎರಡು... 687 00:58:13,668 --> 00:58:14,501 ಮೂರು! 688 00:58:38,459 --> 00:58:39,293 ಹಲೋ? 689 00:58:42,876 --> 00:58:44,209 ನಿನಗೊಂದು ಪುಸ್ತಕ ತಂದೆ. 690 00:58:49,876 --> 00:58:50,709 ನಾನು... 691 00:58:54,001 --> 00:58:55,126 ಇಲ್ಲಿಟ್ಟು ಹೋಗುವೆ. 692 00:58:59,834 --> 00:59:00,668 ಸರಿ. 693 00:59:02,501 --> 00:59:03,501 ಬಾಯ್! 694 00:59:04,959 --> 00:59:06,001 ಮಿತ್ರಾ. 695 00:59:08,668 --> 00:59:10,001 ಸೆತ್? ಹೇ. 696 00:59:10,626 --> 00:59:14,084 ಅವರು ಮಾರಲು ತಯಾರಿದ್ದಾರೆ. 697 00:59:17,668 --> 00:59:19,751 ಈ ಮರೀಚಿಕೆಯನ್ನು ಮಾರಿಯೇ ತೀರುವೆ. 698 01:00:50,709 --> 01:00:52,709 ಉಪ ಶೀರ್ಷಿಕೆ ಅನುವಾದ: ಅನುರಾಧ 699 01:00:52,709 --> 01:00:54,793 ಸೃಜನಶೀಲ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ