1 00:00:08,217 --> 00:00:10,928 ಬಟರ್ಫ್ಲೈ ಹಿಂದಿನ ಸಂಚಿಕೆಯಲ್ಲಿ... 2 00:00:11,011 --> 00:00:12,722 ನೀನೇ ಮಾಡಿದ್ದು ಅಂತ ಹೇಳಿದೆ. 3 00:00:12,805 --> 00:00:15,224 ಒಂಬತ್ತು ವರ್ಷಗಳ ಹಿಂದೆ ಅವನಿಗೆ ದ್ರೋಹ ಮಾಡಿದ್ದು ನೀನೇ ಅಂತ ಹೇಳಿದೆ. 4 00:00:15,307 --> 00:00:16,308 ಇಲ್ಲಿ ಒಳಬೇಹುಗಾರರಿದ್ದಾರೆ. 5 00:00:16,392 --> 00:00:18,894 ವಿಕ್ಕಿ ಲಿನ್ವುಡ್, ನನ್ನ ಭದ್ರತಾ ತಂಡದ ಮುಖ್ಯಸ್ಥೆ. 6 00:00:20,938 --> 00:00:22,106 ಅಪ್ಪ, ನಾವು ಹೋಗಬೇಕು. 7 00:00:23,399 --> 00:00:26,026 ಡಾಸನ್ ಒಂದು ಉಲ್ಲೇಖ ಮಾಡಿದ್ದಾರೆ, "ಉನ್ನತ ಮಟ್ಟದ, ವಿಶೇಷ ಸಾಕ್ಷಿ 8 00:00:26,110 --> 00:00:27,903 ಜೂನೋ ಲಂಡ್ ಮತ್ತು ಕ್ಯಾಡಿಸ್ ವಿರುದ್ಧ." 9 00:00:27,987 --> 00:00:29,530 ಒಲಿವರ್ ಒಬ್ಬ ಹೇಡಿ. 10 00:00:29,613 --> 00:00:32,783 ಜೂನೋ ಅವನನ್ನು ಕೊಲ್ಲಲು ನೋಡುತ್ತಿದ್ದಾಳೆಂದು ಬಿಂಬಿಸಿದರೆ, ಸಹಾಯಕ್ಕೆಂದು ಡಾಸನ್ ಬಳಿ ಓಡುವನು. 11 00:00:32,867 --> 00:00:35,161 ಅವನ ತಾಯಿಯೇ ಅವನನ್ನು ಕೊಲ್ಲಲು ನೋಡಿದಳೆಂಬಂತೆ ಅವನನ್ನು ನಂಬಿಸಬೇಕಾ? 12 00:00:35,244 --> 00:00:37,872 ಅವನು ತಿರುಗಿಬೀಳಬೇಕೆಂದರೆ ಹೀಗೇ ಮಾಡಬೇಕು. 13 00:00:37,955 --> 00:00:40,124 ನನ್ನ ಮಗನಿಗೆ ಏನು ಮಾಡಿದ ಅನ್ನೋದು ನನಗೆ ಗೊತ್ತಾಗಬೇಕು. 14 00:00:40,916 --> 00:00:42,126 ಅಪ್ಪ! 15 00:00:59,143 --> 00:01:00,311 ಇಳಿ, ಈಗಲೇ! 16 00:01:02,313 --> 00:01:03,147 ಹೆಲ್ಮೆಟ್ ಕೂಡ. 17 00:03:29,793 --> 00:03:31,670 ಜೂನೋ ಮಾತಾಡಬೇಕಂತೆ. 18 00:04:34,191 --> 00:04:36,151 ಬಟರ್ಫ್ಲೈ 19 00:04:58,465 --> 00:04:59,967 ನಾನೆಂದರೆ ನಿನಗೆ ಭಯನಾ? 20 00:05:00,050 --> 00:05:01,635 ಅಪಾಯವನ್ನು ತಗ್ಗಿಸುವುದು ನನಗೆ ಗೊತ್ತು. 21 00:05:04,096 --> 00:05:05,723 ಬ್ಯಾರನ್ ಬಗ್ಗೆ ನಿನಗೆ ಎಂದಾದರೂ ಹೇಳಿದ್ದೇನೆಯೇ? 22 00:05:07,307 --> 00:05:08,225 ಯಾರು? 23 00:05:08,308 --> 00:05:10,978 ಒಲಿವರ್‌ಗೆ ತನ್ನ ಹತ್ತನೇ ಹುಟ್ಟುಹಬ್ಬಕ್ಕೆ ನಾಯಿ ಬೇಕಿತ್ತು. 24 00:05:11,562 --> 00:05:14,189 ಟಿಬೆಟನ್ ಮಾಸ್ಟಿಫ್. ಅದನ್ನು ಎಂದಾದರೂ ನೋಡಿದ್ದೀಯಾ? 25 00:05:15,190 --> 00:05:17,151 ಅದು ಮುದ್ದು ನಾಯಿಮರಿಯಂತೂ ಅಲ್ಲ. 26 00:05:17,693 --> 00:05:20,404 ಕೆಲವು ವಾರಗಳು ಹಾಗೆಯೇ ಇತ್ತು. ಆಮೇಲೆ 180 ಪೌಂಡ್ ತೂಕ ಗಳಿಸಿತು. 27 00:05:20,487 --> 00:05:22,656 ದೊಡ್ಡ ಸಿಂಹದಂತೆ ಕಾಣುತ್ತಿತ್ತು. 28 00:05:22,740 --> 00:05:24,867 ನಾನು ಊಹಿಸುವೆ. ನಿನ್ನ ಮಾಜಿ ಪತಿಯ ಜೊತೆ ಇತ್ತಾ? 29 00:05:25,659 --> 00:05:26,827 ತುಂಬಾ ಗಟ್ಟಿಯಾದ ನಾಯಿಯಾಗಿತ್ತು. 30 00:05:26,910 --> 00:05:30,080 ಯಾವಾಗಲೂ ಬೊಗಳುತ್ತಲೇ ಇತ್ತು, ನಿಕ್‌ನ ಹಿತ್ತಲಿನಲ್ಲಿ ಮೊಲಗಳನ್ನು ಕೊಲ್ಲುತ್ತಿತ್ತು. 31 00:05:30,164 --> 00:05:31,832 ಅದೇನೂ ನನಗೆ ತೊಂದರೆಯಾಗಿರಲಿಲ್ಲ... 32 00:05:31,915 --> 00:05:34,543 ಒಲಿವರ್ ಮೇಲೆ ದಾಳಿ ಮಾಡಿ ಅವನ ಐಸ್ ಕ್ರೀಮ್ ಕಿತ್ತುಕೊಳ್ಳುವವರೆಗೂ. 33 00:05:34,626 --> 00:05:36,462 ಐಸ್ ಕ್ರೀಮ್ ಯಾವ ರುಚಿಯದ್ದಾಗಿತ್ತು? 34 00:05:39,840 --> 00:05:41,175 ಅದರ ತಳಿಯೇ ಸಮಸ್ಯೆಯಾಗಿತ್ತು. 35 00:05:42,009 --> 00:05:45,512 ಟಿಬೆಟನ್ ಮ್ಯಾಸ್ಟಿಫ್‌ಗಳು ಸಾವಿರಾರು ವರ್ಷಗಳಿಂದ ಇದ್ದವು, ಆದರೆ ಸಾಕುಪ್ರಾಣಿಗಳಾಗಿ, 36 00:05:45,596 --> 00:05:46,972 ಅವು ಇನ್ನೂ ಹೊಸತು. 37 00:05:47,806 --> 00:05:49,933 ಅದನ್ನು ಕೊಲ್ಲಿಸಬೇಕಾಯಿತು. 38 00:05:50,017 --> 00:05:52,853 ಆ ನಾಯಿಯಿಂದ ತೋಳದ ಸ್ವಭಾವ ಇನ್ನೂ ಬಿಟ್ಟುಹೋಗಿರಲಿಲ್ಲ. 39 00:05:53,937 --> 00:05:57,024 ನಿನ್ನಿಂದಲೂ ತೋಳದ ಸ್ವಭಾವ ಬಿಟ್ಟುಹೋಗಿಲ್ಲ, ರೆಬೆಕ್ಕಾ. 40 00:05:59,777 --> 00:06:01,111 ನನ್ನನ್ನು ಕೊಲ್ಲುತ್ತೀಯಾ? 41 00:06:02,071 --> 00:06:03,280 ಕೊಲ್ಲಬೇಕು. 42 00:06:03,363 --> 00:06:04,490 ನೀನು ನನಗೆ ದ್ರೋಹ ಮಾಡಿದೆ. 43 00:06:04,573 --> 00:06:06,366 ನೀನು ನನ್ನ ಜೀವನವನ್ನು ಹಾಳುಮಾಡಿದೆ. 44 00:06:07,451 --> 00:06:09,286 ನಾನು ತಾಯಿ ಇಲ್ಲದ ಮಗುವಾಗಿದ್ದೆ, 45 00:06:09,369 --> 00:06:10,913 ನೀನು ನನ್ನ ತಂದೆಯನ್ನು ನನ್ನಿಂದ ಕಸಿದುಕೊಂಡೆ. 46 00:06:10,996 --> 00:06:12,831 ನಾನು ನಿಮ್ಮಿಬ್ಬರಿಗೂ ನೋಯಿಸಲು ಬಯಸಲಿಲ್ಲ. 47 00:06:12,915 --> 00:06:15,084 ಇಲ್ಲ, ನಮಗೆ ನೋವಾದರೂ ನೀನು ತಲೆಕೆಡಿಸಿಕೊಳ್ಳಲಿಲ್ಲ. 48 00:06:15,501 --> 00:06:19,171 ಅಲ್ಲದೆ, ಆತ ಬದುಕಿದ್ದಾರೆ ಅಂತ ತಿಳಿದ ಕೂಡಲೇ ನಮ್ಮಿಬ್ಬರನ್ನೂ ಕೊಲ್ಲಲು ನೋಡುತ್ತಿದ್ದೀಯ. 49 00:06:19,254 --> 00:06:20,255 ಡೇವಿಡ್ ನನ್ನ ಹಿಂದೆ ಬಂದ. 50 00:06:20,339 --> 00:06:22,925 ಕ್ಯಾಡಿಸ್ ವಿರುದ್ಧ ಯುದ್ಧ ಘೋಷಿಸಿದ. ನಾನು ಏನು ಮಾಡಬೇಕಿತ್ತು? 51 00:06:23,008 --> 00:06:24,718 ಅದು ಕೇವಲ ವ್ಯವಹಾರವಷ್ಟೇ ಎಂದು ಬಲ್ಲೆ. 52 00:06:24,802 --> 00:06:28,639 ನನ್ನ ಸ್ಥಾನದಲ್ಲಿ ನೀನಿದ್ದಿದ್ದರೆ ಏನು ಮಾಡುತ್ತಿದ್ದೆ, ಎಷ್ಟು ಬೇಗ ಮಾಡುತ್ತಿದ್ದೆ? 53 00:06:34,853 --> 00:06:36,814 -ಒಲಿವರ್ ಅದನ್ನು ಹೇಗೆ ಸಹಿಸಿಕೊಂಡ? -ಏನನ್ನು? 54 00:06:37,981 --> 00:06:39,733 ಅವನ ನಾಯಿಗೆ ವಿಷದ ಚುಚ್ಚುಮದ್ದು ಕೊಟ್ಟಿದ್ದು. 55 00:06:39,817 --> 00:06:42,653 ಬ್ಯಾರನ್‌ನನ್ನು ಆಶ್ರಮದಲ್ಲಿರಲು ಕಳಿಸಿದೆವು ಅಂತ ಹೇಳಿದೆವು. 56 00:06:47,699 --> 00:06:49,368 ಅಲ್ಲೇ ಮುಚ್ಚಿಹಾಕಿದೆ ನೀನು. 57 00:06:51,203 --> 00:06:52,830 ಅವನಿಗೆ ನಿಜ ಯಾವಾಗ ಹೇಳಿದೆ? 58 00:06:53,539 --> 00:06:55,374 ಕೆಲವು ರಹಸ್ಯಗಳನ್ನು ನಾನು ಹೇಳುವುದೇ ಇಲ್ಲ. 59 00:07:00,003 --> 00:07:01,213 ಅದನ್ನು ಉತ್ತರಿಸು. 60 00:07:01,296 --> 00:07:02,673 ಇದು ಅದಕ್ಕಿಂತ ಮುಖ್ಯ. 61 00:07:03,507 --> 00:07:05,008 ನನಗೇನೋ ಅನುಮಾನವೇ. 62 00:07:07,469 --> 00:07:08,929 ಒಲಿವರ್ ತಿರುಗಿಬಿದ್ದ. 63 00:07:10,305 --> 00:07:13,308 ಡಾಸನ್ ಹತ್ತಿರ ಸಾಕ್ಷಿಯಾಗಿ ಒಪ್ಪಂದ ಮಾಡಿಕೊಂಡ. 64 00:07:13,725 --> 00:07:15,811 ನಿನ್ನ ವಿರುದ್ಧ ಸಾಕ್ಷಿ ಹೇಳಲಿದ್ದಾನೆ, 65 00:07:15,894 --> 00:07:17,688 ನೀನು ಜೈಲಿಗೆ ಹೋಗುತ್ತೀಯ, 66 00:07:17,771 --> 00:07:21,441 ಮತ್ತು ಕ್ಯಾಡಿಸ್ ಶಾಶ್ವತವಾಗಿ ಒಡೆದುಹೋಗುತ್ತದೆ. 67 00:07:47,634 --> 00:07:48,760 ಅಪ್ಪ! 68 00:07:51,930 --> 00:07:53,265 ನಮ್ಮ ರಾಜಕುಮಾರಿ. 69 00:07:54,266 --> 00:07:55,767 ನಿಮಗೆ ಪೆಟ್ಟಾಯಿತಾ? 70 00:07:56,518 --> 00:07:57,644 ನನಗೇನಾಗಲ್ಲ. 71 00:07:58,770 --> 00:08:01,356 ರೆಬೆಕ್ಕಾ ಎಲ್ಲಿದ್ದಾಳೆ? ಅವಳು ಚೆನ್ನಾಗಿದ್ದಾಳಾ? 72 00:08:04,776 --> 00:08:06,195 ನಂತರ ಮಾತನಾಡೋಣ. 73 00:08:11,450 --> 00:08:13,911 ಮತ್ತೆ ನಿಮ್ಮನ್ನು ನೋಡ್ತೀನಾ ಇಲ್ವಾ ಅಂತ ಗೊತ್ತಿರಲಿಲ್ಲ. 74 00:08:19,416 --> 00:08:22,169 ನಿನ್ನ ತಂದೆಯ ಜೊತೆ ನಾನು ಸ್ವಲ್ಪ ಮಾತನಾಡಬೇಕು. 75 00:08:22,961 --> 00:08:23,962 ಅಪ್ಪ, 76 00:08:24,296 --> 00:08:25,589 ನನಗೆ ನಿಮ್ಮ ಸಹಾಯ ಬೇಕು. 77 00:08:26,715 --> 00:08:28,050 ನನಗೆ ಜನ ಬೇಕು, 78 00:08:28,258 --> 00:08:29,593 ಉಪಕರಣ, 79 00:08:30,093 --> 00:08:31,178 ಗಾಡಿಗಳು, 80 00:08:31,762 --> 00:08:33,931 ನೀವು ಏನೇ ಕೊಡಲಾದರೂ ಸರಿ. 81 00:08:34,681 --> 00:08:36,725 ನೀವು ನನಗೆ ಸಹಾಯ ಮಾಡಲು ಬಯಸುವುದಿಲ್ಲವೆಂದು ಬಲ್ಲೆ. 82 00:08:36,808 --> 00:08:40,437 ನಾನು ನಿಮ್ಮ ಜೀವನದಿಂದ ಶಾಶ್ವತವಾಗಿ ಹೊರಟುಹೋದರೂ ನಿಮಗೆ ಚಿಂತೆಯಿಲ್ಲ. 83 00:08:42,606 --> 00:08:44,358 ಆದರೆ ರೆಬೆಕ್ಕಾಳನ್ನು ಅಪಹರಿಸಿದರು. 84 00:08:45,984 --> 00:08:47,694 ಅವಳು ನನ್ನ ಮಗಳು. 85 00:08:52,449 --> 00:08:53,450 ಏನೂಂದ್ರೆ. 86 00:08:57,913 --> 00:09:01,875 ರೆಬೆಕ್ಕಾಳನ್ನು ಕಾಪಾಡಲು ನನಗೆ ಬೇಕಾದದ್ದು ಸಿಗುವವರೆಗೂ ನಾನು ಇಲ್ಲಿಂದ ಹೊರಡಲ್ಲ. 87 00:09:14,096 --> 00:09:15,097 ನಿನಗೆ ಸಹಾಯ ಮಾಡುತ್ತೇನೆ. 88 00:09:17,140 --> 00:09:18,475 ಆದರೆ ಈ ಬಾರಿ, 89 00:09:18,558 --> 00:09:21,353 ನೀನು ನನಗಾಗಿ ಏನಾದರೂ ಮಾಡಬೇಕು. 90 00:09:21,436 --> 00:09:22,354 ಅಪ್ಪ. 91 00:09:22,437 --> 00:09:24,982 ಡೇವಿಡ್ ನಿಮಗಾಗಿ ಕೆಲಸ ಮಾಡಲ್ಲ ಅಂತ ನಿಮಗೆ ಗೊತ್ತಲ್ವಾ? 92 00:09:25,065 --> 00:09:28,735 ಡೇವಿಡ್ ಈಗ ನನ್ನನ್ನು ನಿರಾಕರಿಸುವ ಸ್ಥಿತಿಯಲ್ಲಿಲ್ಲ, ಅಲ್ವಾ? 93 00:09:29,695 --> 00:09:32,739 ನಾನು ಮಾಡುವ ಕೆಲಸದಲ್ಲಿ ನೀನೆಂದೂ ಆಸಕ್ತಿ ತೋರಿಲ್ಲ. 94 00:09:32,823 --> 00:09:34,825 ಆದರೆ ಅದು ಸುಲಭವಲ್ಲ. 95 00:09:34,908 --> 00:09:38,328 ಎಷ್ಟೊಂದು ಜವಾಬ್ದಾರಿಗಳು, ತುಂಬಾ ತಲೆನೋವು. 96 00:09:40,205 --> 00:09:41,081 ಹೌದು. 97 00:09:42,790 --> 00:09:46,962 ನೀನು ನನಗೊಂದು ಸಹಾಯ ಮಾಡುವ ಭರವಸೆ ಕೊಟ್ಟರೆ, 98 00:09:48,046 --> 00:09:49,548 ನಾನೂ ನಿನಗೆ ಸಹಾಯ ಮಾಡುತ್ತೇನೆ. 99 00:09:50,841 --> 00:09:52,467 ಏನ್ರೀ ಇದು, ನಿಜವಾಗಲೂ... 100 00:09:56,430 --> 00:09:57,681 ಏನು ಸಹಾಯ? 101 00:09:58,307 --> 00:10:00,642 ನೀವು ಸಹಾಯ ಮಾಡಬೇಕಾದಂಥ ವ್ಯಕ್ತಿಯಲ್ಲ ನನ್ನ ಅಪ್ಪ. 102 00:10:02,936 --> 00:10:04,354 ಅದು ಮುಖ್ಯವೇ? 103 00:10:06,690 --> 00:10:07,858 ನಾನು ಮಾಡುತ್ತೇನೆ. 104 00:10:08,775 --> 00:10:09,776 ಒಳ್ಳೆಯದು. 105 00:10:11,695 --> 00:10:13,363 ಮತ್ತೇನು ಬೇಕು ನಿನಗೆ? 106 00:10:25,792 --> 00:10:27,919 ಡೇವಿಡ್ ಒಲಿವರ್‌ನನ್ನು ನನ್ನ ವಿರುದ್ಧ ಎತ್ತಿಕಟ್ಟಿದನಾ? 107 00:10:29,463 --> 00:10:31,673 ಅಂದರೆ ಅದಕ್ಕಾಗಿ ನಮ್ಮ ಕುಟುಂಬ ಶ್ರಮಿಸಿದೆವು. 108 00:10:32,466 --> 00:10:34,009 ಅಂದರೆ, ಕಲ್ಪನೆ ಅವರದ್ದೇ, 109 00:10:34,092 --> 00:10:36,970 ಆದರೆ ಅದನ್ನು ಹೇಗೆ ಕೆಲಸ ಮಾಡಿಸಬೇಕಂತ ನನಗೆ ಗೊತ್ತಿತ್ತು. 110 00:10:37,679 --> 00:10:39,264 ಹಾಗಂತ ನನ್ನ ಕುಟುಂಬವನ್ನು ಒಡೆದುಹಾಕಿದೆಯಾ? 111 00:10:39,890 --> 00:10:41,767 ಬೇಜಾರಾಗುತ್ತೆ, ಅಲ್ವಾ? 112 00:10:42,851 --> 00:10:46,605 ಡಾಸನ್ ಹತ್ತಿರ ಅವನು ದೀರ್ಘಕಾಲದ ಆಟ ಆಡುತ್ತಿರಬಹುದು, ಅವನಿಗೆ ತರಬೇತಿ ಕೊಟ್ಟಂತೆ. 113 00:10:46,688 --> 00:10:47,522 ನೀನು... 114 00:10:48,357 --> 00:10:49,608 ನೀನು ಅವನಿಗೆ ತರಬೇತಿ ಕೊಡಲಿಲ್ಲ. 115 00:10:49,691 --> 00:10:51,234 ನೀನು ಅವನನ್ನು ಹಾಳುಮಾಡಿದೆ. 116 00:10:51,318 --> 00:10:53,737 ನನ್ನನ್ನು ಕಾಪಾಡಲು ಒಲಿವರ್ ಏನು ಬೇಕಾದರೂ ಮಾಡುತ್ತಾನೆ. 117 00:10:53,820 --> 00:10:54,905 ಕ್ಯಾಡಿಸ್‌ನ ರಕ್ಷಿಸಲು. 118 00:10:54,988 --> 00:10:57,074 ಒಲಿವರ್‌ಗೆ ಕ್ಯಾಡಿಸ್ ಬಗ್ಗೆ ಕಾಳಜಿ ಇಲ್ಲ. 119 00:10:57,949 --> 00:11:00,285 ನಿನಗೆ ಹತ್ತಿರವಾಗಿರಬಹುದು ಎಂದು ಸೇರಿಕೊಂಡ ಅಷ್ಟೇ. 120 00:11:01,161 --> 00:11:02,662 ಅವನಿಗೆ ಕ್ಯಾಡಿಸ್ ಕಂಡರೆ ಆಗಲ್ಲ. 121 00:11:02,746 --> 00:11:04,873 ನಿನಗೆ ಅದರ ಮೇಲೆ ಅವನಿಗಿಂತ ಹೆಚ್ಚು ಪ್ರೀತಿ ಇದೆ. 122 00:11:05,582 --> 00:11:08,502 ರೆಬೆಕ್ಕಾ, ನೀನೇನು ಹೇಳುತ್ತಿರುವೆ ಅಂತ ನಿನಗೆ ಗೊತ್ತಿಲ್ಲ. 123 00:11:10,045 --> 00:11:11,463 ಕ್ಯಾಡಿಸ್ ಒಂದು ವಿಷಯ. 124 00:11:12,130 --> 00:11:13,465 ನಾನು ಒಲಿವರ್‌ನ ಪ್ರೀತಿಸುತ್ತೇನೆ. 125 00:11:14,257 --> 00:11:16,426 ನಾನು ಇದುವರೆಗೆ ಮಾಡಿರುವುದೆಲ್ಲವೂ ಅವನಿಗಾಗಿಯೇ. 126 00:11:16,510 --> 00:11:17,844 ಕ್ಯಾಡಿಸ್ ಅವನಿಗಾಗಿಯೇ. 127 00:11:19,096 --> 00:11:20,514 ಅವನು ಮೃದು, ಅದು ನನಗೆ ತಿಳಿದಿದೆ. 128 00:11:20,597 --> 00:11:22,974 ಈ ಜಗತ್ತು ಅವನಂತಹ ಜನರಿಗೆ ನಿರ್ಮಾಣವಾಗಿಲ್ಲ. 129 00:11:23,058 --> 00:11:25,143 ಆದರೆ ನಾನು ಯೋಚಿಸಿದೆ, "ಪರವಾಗಿಲ್ಲ, 130 00:11:25,227 --> 00:11:26,728 ನಾನು ಅವನಿಗೆ ಜಗತ್ತನ್ನು ನೀಡಬಲ್ಲೆ." 131 00:11:28,188 --> 00:11:30,857 ಅವನ ಪೋರ್ಷೆಯನ್ನು ಸ್ಫೋಟಿಸಿದೆವು, ಅದು ನೀನೇ ಮಾಡಿಸಿದ್ದು ಅಂದುಕೊಂಡಿದ್ದಾನೆ. 132 00:11:30,941 --> 00:11:33,318 ಅದಕ್ಕಾಗಿಯೇ ಅವನು ಡಾಸನ್ ಬಳಿ ಹೋದ. 133 00:11:33,402 --> 00:11:35,695 ತನ್ನ ತಾಯಿಯೇ ತನ್ನನ್ನು ಕೊಲ್ಲಲು ಯತ್ನಿಸಿದಳು ಅಂದುಕೊಂಡಿದ್ದಾನೆ. 134 00:11:42,452 --> 00:11:43,453 ಎದ್ದೇಳು. 135 00:11:59,553 --> 00:12:01,054 ನೀನು ಅವನನ್ನು ಕಳೆದುಕೊಂಡೆ, ಜೂನೋ. 136 00:12:11,982 --> 00:12:14,526 ಈಗಲಾದರೂ ನಿನ್ನ ಉರಿಯುತ್ತಿರುವ ಸಾಮ್ರಾಜ್ಯವನ್ನು ನೋಡಿಕೋ. 137 00:12:15,318 --> 00:12:16,736 ಈಗ ಅದು ಬೇಕಾಗಿಲ್ಲ. 138 00:12:18,738 --> 00:12:20,115 ನನಗೆ ಬೇಕಿರುವುದು ನೀನಷ್ಟೇ. 139 00:12:26,496 --> 00:12:28,165 ನನಗೆ ಒಂದು ವಿಷಯ ತಿಳಿಯಬೇಕು, ಡೇವಿಡ್. 140 00:12:28,832 --> 00:12:32,002 ರೆಬೆಕ್ಕಾ, ಅವಳನ್ನು ಅಪಹರಿಸಿದರಾ, ಅಥವಾ-- 141 00:12:32,085 --> 00:12:33,628 ಅಥವಾ ಅವಳೇ ಅವರೊಂದಿಗೆ ಹೋದಳೇ? 142 00:12:36,131 --> 00:12:38,425 ಅವಳನ್ನು ಕಾಪಾಡಲು ನಿಮ್ಮ ಜೀವವನ್ನು ಪಣಕ್ಕಿಡುವ ಮೊದಲು, 143 00:12:39,092 --> 00:12:41,219 ಅವಳು ನಿಮ್ಮೊಂದಿಗೆ ಬರುತ್ತಾಳೆಂದು ಖಚಿತಪಡಿಸಿಕೊಳ್ಳಿ. 144 00:12:45,765 --> 00:12:47,184 ಅವಳನ್ನು ಅಪಹರಿಸಿದರು. 145 00:12:48,018 --> 00:12:50,520 ನಾನು ಅವಳನ್ನು ಕಾಪಾಡಲಿಲ್ಲವಾದ್ದರಿಂದ ಅವಳನ್ನು ಅಪಹರಿಸಿದರು. 146 00:12:52,606 --> 00:12:54,483 ನಾನು ಅವಳನ್ನು ಮತ್ತೆ ಪತ್ತೆಹಚ್ಚಬೇಕು. 147 00:13:49,829 --> 00:13:51,581 ವಾಹ್. ಎಂತಹ ಆತಿಥ್ಯ. 148 00:13:54,918 --> 00:13:57,045 ನಮ್ಮಪ್ಪ ನನಗಾಗಿ ಬರುತ್ತಾರೆ ಅಂತ ಗೊತ್ತಲ್ವಾ? 149 00:13:58,046 --> 00:13:59,756 ನಿನಗೆ ಅದೇ ಬೇಕಾ? 150 00:13:59,839 --> 00:14:01,800 ನಿಮ್ಮಪ್ಪ ನಿನ್ನನ್ನು ಕಾಪಾಡಬೇಕಾ? 151 00:14:03,009 --> 00:14:04,302 ನಾನು ಮನೆಗೆ ಹೋಗಬೇಕಷ್ಟೆ. 152 00:14:04,844 --> 00:14:05,929 ಅದು ಎಲ್ಲಿದೆ? 153 00:14:06,429 --> 00:14:09,391 ಡೇವಿಡ್ ಮತ್ತು ಅವನ ಹೊಸ ಹೆಂಡತಿ ಮತ್ತು ಅವನ ಹೊಸ ಮಗಳೊಂದಿಗೆ? 154 00:14:10,559 --> 00:14:12,686 ಡೇವಿಡ್ ನಿನ್ನ ತಂದೆಯಾಗಿರಬಹುದು, 155 00:14:12,769 --> 00:14:14,020 ಆದರೆ ನಾನು ಕುಟುಂಬ. 156 00:14:15,355 --> 00:14:17,774 ನೀನು ಯಾವಾಗಲೂ ನನಗೆ ಮಗಳಂತೆ ಇದ್ದೆ. 157 00:14:21,194 --> 00:14:23,321 ಅದಕ್ಕಾಗಿ ನಾನು ನಿನಗೆ ಧನ್ಯವಾದ ಹೇಳಬೇಕೇ? 158 00:14:24,406 --> 00:14:26,658 ನನಗೆ ಅಪ್ಪ ಇಲ್ಲದಿರಲು ನೀನೇ ಕಾರಣ. 159 00:14:26,741 --> 00:14:30,036 ನಾನಾ? ನಾನು ಅವನಿಗೆ ಮೋಸ ಬಗೆದೆ, ಸರಿ, ನಾನು ಅದನ್ನು ಒಪ್ಪುತ್ತೇನೆ. 160 00:14:30,120 --> 00:14:31,997 ಆದರೆ ತನ್ನ ಸಾವಿನ ನಾಟಕವಾಡಿ 161 00:14:32,080 --> 00:14:35,250 ಒಂಬತ್ತು ವರ್ಷಗಳ ಕಾಲ ತಪ್ಪಿಸಿಕೊಂಡಿದ್ದು ಅವನೇ. 162 00:14:35,333 --> 00:14:38,044 ಅವನಷ್ಟು ಸಾಮರ್ಥ್ಯ ಇರುವವನು, ನಿನಗಾಗಿ ಯಾರನ್ನಾದರೂ ಕಳಿಸಬಹುದಿತ್ತು. 163 00:14:38,128 --> 00:14:39,296 ನನ್ನನ್ನು ರಕ್ಷಿಸುತ್ತಿದ್ದರು. 164 00:14:39,379 --> 00:14:42,757 ಹೌದಾ, ಅಥವಾ ಅವನು ರಕ್ಷಿಸುತ್ತಿದ್ದದ್ದು ಅವನ ಹೊಸ ಮಗಳನ್ನಾ? 165 00:14:48,054 --> 00:14:49,681 ಅವರು ನನಗಾಗಿ ಹಿಂತಿರುಗಿದರು. 166 00:14:50,348 --> 00:14:53,184 ನನ್ನನ್ನು ನಿಮ್ಮಿಂದ ದೂರ ತಪ್ಪಿಸಲು ಎಲ್ಲವನ್ನೂ ಪಣಕ್ಕಿಟ್ಟರು. 167 00:14:53,268 --> 00:14:55,312 ಯಾಕೆಂದರೆ ನಿನ್ನನ್ನು ಸರಿಮಾಡಲೆತ್ನಿಸಿದ. 168 00:14:58,690 --> 00:15:02,235 ನನ್ನ ಮಾತು ಕೇಳು, ರೆಬೆಕ್ಕಾ. ನಿನ್ನದೇನೂ ತಪ್ಪಿಲ್ಲ. 169 00:15:06,698 --> 00:15:07,907 ಖಂಡಿತ ಇದೆ. 170 00:15:09,993 --> 00:15:12,287 ನಿನಗೆ ಅನುಕೂಲವಾಗುವ ರೀತಿಯಲ್ಲಿ ನಾನು ನೊಂದಿದ್ದೇನೆ ಅಷ್ಟೇ. 171 00:15:12,370 --> 00:15:15,248 ನೀನು ನೊಂದಿಲ್ಲ. ನೀನು ಅಸಾಧಾರಣಳು. 172 00:15:16,374 --> 00:15:19,294 ಅದು ಅವನಿಗೆ ಕಾಣದಿದ್ದರೆ, ಅವನಿಗೆ ನಿಜವಾಗಿ ನಿನ್ನ ಮೇಲೆ ಪ್ರೀತಿ ಇಲ್ಲ. 173 00:15:19,377 --> 00:15:23,006 ನೀನು ಯಾವುದೋ ಪೆದ್ದ ಹುಡುಗಿಯಂತಿದ್ದರೇನೇ ಅವನಿಗೆ ಇಷ್ಟ. 174 00:15:29,638 --> 00:15:30,722 ನನ್ನನ್ನು ಪ್ರೀತಿಸುತ್ತೀಯಾ? 175 00:15:34,142 --> 00:15:35,226 ಹೌದು. 176 00:15:39,230 --> 00:15:42,484 ನಾನೇನಂದುಕೊಂಡಿದ್ದೆನೋ ನೀನು ಹಾಗೆಯೇ ಆಗಿರುವೆ. 177 00:15:51,576 --> 00:15:53,995 ನಾನು ಮಾಡುವುದು ನನ್ನಿಂದ ಆಗದೇ ಇದ್ದಿದ್ದರೆ? 178 00:15:54,579 --> 00:15:56,456 ನೀನು ಮಾಡುವ ಕೆಲಸ ನಿನ್ನಿಂದ ಆಗದೇ ಇದ್ದಿದ್ದರೆ, 179 00:15:56,539 --> 00:15:59,125 ಕನ್ನಡಿಯಲ್ಲಿ ನಿನ್ನನ್ನು ನೀನೇ ಗುರುತು ಹಿಡಿಯುತ್ತಿರಲಿಲ್ಲ. 180 00:16:01,670 --> 00:16:03,922 ಜಂಗ್ ಕುಟುಂಬದ ಕಳಂಕ ನೀನಾಗಬಹುದು, 181 00:16:04,005 --> 00:16:06,758 ಅಥವಾ ನೀನು ನನ್ನೊಂದಿಗೆ ಬರಬಹುದು. 182 00:16:10,011 --> 00:16:11,346 ಅಲ್ಲಿ ಒಂದು ಜೆಟ್ ಕಾಯುತ್ತಿದೆ. 183 00:16:11,930 --> 00:16:14,516 ಅದನ್ನು ಹತ್ತೋಣ. ಡಾಸನ್ ನಮ್ಮನ್ನು ಮುಟ್ಟಲು ಸಾಧ್ಯವಿಲ್ಲದೆಡೆ ಹೋಗೋಣ. 184 00:16:14,599 --> 00:16:16,434 ಮರುಗುಂಪು ಮಾಡೋಣ. ಹೊಸದಾಗಿ ಪ್ರಾರಂಭಿಸೋಣ. 185 00:16:17,602 --> 00:16:18,436 ಒಟ್ಟಿಗೆ. 186 00:16:27,237 --> 00:16:28,863 ನಾನು ಒಪ್ಪದಿದ್ದರೆ? 187 00:16:29,614 --> 00:16:31,241 ನೀನು ಹಾಗೆ ಮಾಡಲ್ಲ ಅಂದುಕೊಳ್ಳುವೆ. 188 00:16:54,973 --> 00:16:56,349 ನನಗೂ ನಿನ್ನ ನೆನಪಾಗುತ್ತಿತ್ತು. 189 00:16:58,309 --> 00:16:59,519 ಜೂನೋ. 190 00:17:00,103 --> 00:17:01,104 ಹಾಂ. 191 00:17:02,105 --> 00:17:03,648 ಕ್ಯಾಡಿಸ್‌ಗೆ ಎಫ್‌ಬಿಐ ಬರುತ್ತಿದ್ದಾರೆ. 192 00:17:04,190 --> 00:17:05,942 ನಾವೀಗಲೇ ಹೋಗಬೇಕು. 193 00:17:28,173 --> 00:17:29,591 ನೀನಿನ್ನೂ ಇಲ್ಲೇ ಇದ್ದೀಯ. 194 00:17:31,384 --> 00:17:32,927 ನನ್ನ ಕೆಲಸ ಇನ್ನೂ ಮುಗಿದಿಲ್ಲ. 195 00:18:23,895 --> 00:18:26,314 ನಿನ್ನ ಮಗಳನ್ನು ಅಪಹರಿಸಿದವರು... 196 00:18:26,397 --> 00:18:27,607 ಅವರು ಯಾರಂತ ಗೊತ್ತಾ? 197 00:18:27,690 --> 00:18:28,525 ಹೌದು. 198 00:18:28,608 --> 00:18:33,613 ಅದಕ್ಕಿಂತ ಮುಖ್ಯವಾಗಿ, ಅವರು ಎಲ್ಲಿಗೆ ಹೋಗುತ್ತಿದ್ದಾರೆ ಅಂತ ಗೊತ್ತಿದೆ. 199 00:18:34,864 --> 00:18:37,951 ಅವಳು ಇಂಚಿಯಾನ್‌ನಲ್ಲಿ ತನ್ನ ಖಾಸಗಿ ಜೆಟ್‌ಗೆ ಹೋಗುತ್ತಿದ್ದಾಳೆ. 200 00:18:41,287 --> 00:18:43,039 ಹಾಗಾದರೆ ಅವರನ್ನೆಲ್ಲ ಕೊಲ್ಲು, 201 00:18:43,122 --> 00:18:46,960 ಮತ್ತು ನನ್ನ ಮಗಳನ್ನು ತುಂಬಾ ಕಾಯುವಂತೆ ಮಾಡಬೇಡ. 202 00:18:47,502 --> 00:18:49,546 ಅದನ್ನೇ ಯೋಚಿಸುತ್ತಿದ್ದೇನೆ. 203 00:19:01,015 --> 00:19:02,767 ನನ್ನ ಹೆಸರು ಡೇವಿಡ್ ಜಂಗ್. 204 00:19:03,893 --> 00:19:06,229 ಕೆಲವು ದುಷ್ಟರು ನನ್ನ ಮಗಳನ್ನು ಅಪಹರಿಸಿದರು, 205 00:19:06,312 --> 00:19:07,856 ನಾನು ಅವಳನ್ನು ವಾಪಸ್ ಕರೆತರಬೇಕು. 206 00:19:09,148 --> 00:19:10,483 ನನಗೆ ನಿಮ್ಮ ಸಹಾಯ ಬೇಕು. 207 00:19:23,329 --> 00:19:24,831 ಚಾಕು ಚೆನ್ನಾಗಿದೆ. 208 00:19:26,875 --> 00:19:28,793 ನನಗಾಗಿ ಚೂಪು ಮಾಡಲು ಹೇಳಿದಳಾ? 209 00:19:40,388 --> 00:19:41,973 ಅವರ ಬಗ್ಗೆ ನಿನಗೆ ಕನಸು ಬೀಳುತ್ತಾ? 210 00:19:43,308 --> 00:19:44,225 ಯಾರು? 211 00:19:51,149 --> 00:19:52,066 ಇಲ್ಲ. 212 00:19:54,319 --> 00:19:55,486 ನಾನು ಕನಸು ಕಾಣುವುದಿಲ್ಲ. 213 00:20:27,352 --> 00:20:28,770 ಎಫ್‌ಬಿಐ ಬಂದಿದ್ದಾರೆ. 214 00:20:34,734 --> 00:20:36,819 ಸೆನೆಟರ್ ಡಾಸನ್ ನಮ್ಮ ಕಛೇರಿಯ ಮೇಲೆ ದಾಳಿ ಮಾಡಿದರು. 215 00:20:47,372 --> 00:20:49,332 ಪ್ರತಿಯೊಂದು ಫೈಲ್, ಜನರೇ. 216 00:20:49,707 --> 00:20:51,793 ಪ್ರತಿ ಹಾರ್ಡ್ ಡ್ರೈವ್ ಮತ್ತು ಸೆಲ್ ಫೋನ್. 217 00:21:01,344 --> 00:21:04,305 ಕಾಗದದ ಚೂರುಗಳ ಮೇಲೆ ಬರೆದ ಪ್ರತಿ ಟಿಪ್ಪಣಿ. 218 00:21:05,348 --> 00:21:06,599 ಎಲ್ಲವನ್ನೂ ತೆಗೆದುಕೊಳ್ಳುತ್ತೇವೆ. 219 00:21:14,941 --> 00:21:15,775 ಹಾಂ. 220 00:21:19,362 --> 00:21:20,530 ಆಕೆಗೆ ತಿಳಿಸುತ್ತೇನೆ. 221 00:21:22,699 --> 00:21:25,201 ಒಲಿವರ್‌ನ ನ್ಯಾಯಾಂಗ ಬಂಧನಕ್ಕೆ ಇಂದು ಸ್ಥಳಾಂತರಿಸಲಾಗುತ್ತಿದೆ. 222 00:21:51,477 --> 00:21:52,687 ಬೆಂಗಾವಲು ಪಡೆ ಒಳಬರುತ್ತಿದೆ. 223 00:21:52,770 --> 00:21:55,314 -ನಿಮ್ಮ ಸ್ಥಳಕ್ಕೆ ಮೂರು ನಿಮಿಷಗಳು. -ತಿಳಿಯಿತು. 224 00:22:14,250 --> 00:22:16,169 ಒಲಿವರ್ ಬಗ್ಗೆ ನನಗೆ ವಿಷಾದವಿದೆ. 225 00:22:17,670 --> 00:22:19,213 ಇಲ್ಲ, ನಿನಗಿಲ್ಲ. 226 00:22:22,467 --> 00:22:25,803 ನಿನ್ನನ್ನು ಒಂದು ಕೇಳಿದರೆ, ನನಗೆ ಸತ್ಯವನ್ನು ಹೇಳುವೆಯಾ? 227 00:22:30,099 --> 00:22:32,769 ನನ್ನ ತಂದೆಯ ಮೇಲೆ ಸೇಡು ತೀರಿಸಿಕೊಳ್ಳಲು ನನ್ನನ್ನು ಕರೆದೊಯ್ಯುತ್ತಿರುವೆಯಾ? 228 00:22:35,730 --> 00:22:37,190 ನಾನು ಈಗಾಗಲೇ ಒಲಿವರ್‌ನ ಕಳೆದುಕೊಂಡೆ. 229 00:22:38,024 --> 00:22:39,734 ನಾನು ನಿನ್ನನ್ನೂ ಕಳೆದುಕೊಳ್ಳುವುದಿಲ್ಲ. 230 00:23:10,348 --> 00:23:11,766 ಅಲ್ಲಿ ಸಮಸ್ಯೆ ಏನು? 231 00:23:11,849 --> 00:23:15,061 ಸಂಚಾರ ದೀಪಗಳು ಕೆಲಸ ಮಾಡುತ್ತಿಲ್ಲ ಅನಿಸುತ್ತೆ. ಏನು ಮಾಡೋಣ? 232 00:23:18,773 --> 00:23:20,024 ಏನು ಮಾಡೋಣ ಅನ್ನುವೆ? 233 00:23:20,108 --> 00:23:22,193 ನಿಲ್ಲಿಸುವುದು ಬೇಡ. ಅರ್ಥ ಆಯ್ತಾ? 234 00:23:22,276 --> 00:23:23,694 ನಾವು ಬೇರೆ ದಾರಿಯಲ್ಲಿ ಹೋಗಬೇಕು. 235 00:23:23,778 --> 00:23:27,657 ನಮ್ಮ ಬಲಕ್ಕೆ ಇದಕ್ಕೆ ಸಮಾನಾಂತರವಾದ ಒಂದು ರಸ್ತೆ ಇದೆ. ನನ್ನನ್ನು ಅನುಸರಿಸಿ. 236 00:23:56,102 --> 00:23:58,563 ಅವರು ಈಗ ಎರಡನೆಯ ರಸ್ತೆಯತ್ತ ಹೋಗುತ್ತಿದ್ದಾರೆ. 237 00:23:58,646 --> 00:23:59,689 ತಂಡ ಒಂದು, ಹೋಗಿ. 238 00:23:59,772 --> 00:24:01,190 ರಸ್ತೆಯನ್ನು ತಡೆಯಿರಿ. 239 00:24:50,281 --> 00:24:52,116 ನೀನು ನನ್ನ ತಂದೆಯನ್ನು ಪ್ರೀತಿಸುತ್ತಿದ್ದೆ, ಅಲ್ಲವೇ? 240 00:24:55,328 --> 00:24:56,662 ಏನಾಯಿತು? 241 00:24:58,414 --> 00:25:02,168 ಡೇವಿಡ್ ಪ್ರಪಂಚದ ಬಗ್ಗೆ... ನಿಷ್ಕಪಟ ದೃಷ್ಟಿಕೋನವನ್ನು ಹೊಂದಿದ್ದಾನೆ. 242 00:25:02,877 --> 00:25:07,089 ಎಲ್ಲವೂ ಇರುವುದಕ್ಕಿಂತ ಉತ್ತಮವಾಗಿದೆ ಅಂದುಕೊಂಡಿದ್ದಾನೆ, ನಾವು ಉತ್ತಮವಾಗಿದ್ದೇವಂತ. 243 00:25:10,301 --> 00:25:12,428 ಕೆಲವರು ವಾಸ್ತವದಲ್ಲಿ ಬದುಕಬೇಕು. 244 00:25:20,561 --> 00:25:21,562 ಸಿದ್ಧರಾಗಿರಿ. 245 00:25:21,646 --> 00:25:22,772 ತಿಳಿಯಿತು. 246 00:25:27,777 --> 00:25:28,736 ಮಾತನಾಡು, ಶಿನ್. 247 00:25:28,819 --> 00:25:31,239 ಅವರು ಬಂದಿದ್ದಾರೆ. ನಾವು ಸಿದ್ಧರಿದ್ದೇವೆ. 248 00:25:31,781 --> 00:25:33,074 ಕಳುಹಿಸು. 249 00:25:41,499 --> 00:25:42,541 ನಮ್ಮನ್ನು ಸುತ್ತುವರೆದಿದ್ದಾರೆ. 250 00:25:42,625 --> 00:25:43,501 ಅದು ಡೇವಿಡ್. 251 00:25:45,628 --> 00:25:47,463 ಹಿಂದಕ್ಕೆ! ಹಿಂದಕ್ಕೆ! ಹಿಂದಕ್ಕೆ! 252 00:25:48,464 --> 00:25:49,715 ಹೋಗು! ಹೋಗು! 253 00:26:02,603 --> 00:26:04,063 ಇಲ್ಲಿಂದ ನಮ್ಮನ್ನು ತಪ್ಪಿಸು. 254 00:26:21,372 --> 00:26:24,542 ಅವರು ನುಗ್ಗಿದರು, ಅವರು ನುಗ್ಗಿದರು! ಅವರನ್ನು ತಡೆಯಲು ಪ್ರಯತ್ನಿಸುವೆ. 255 00:26:58,868 --> 00:26:59,994 ಹಿಂದೆ, ಹಿಂದೆ, ಹಿಂದಕ್ಕೆ! 256 00:27:53,881 --> 00:27:55,341 ಏನಾದರೂ ಸೂಚನೆ? 257 00:27:55,841 --> 00:27:57,385 ಕೆಟ್ಟದಾಗಿ ಸಾಯಬೇಡ. 258 00:28:26,205 --> 00:28:27,039 ದೇವರೇ. 259 00:28:59,321 --> 00:29:00,823 ಕದಲಬೇಡ! 260 00:29:53,542 --> 00:29:56,921 ಇದೇ ಕಣೋ ನಿನ್ನ ಅಂತ್ಯ, ಬೋಳಿಮಗನೇ. 261 00:32:04,965 --> 00:32:06,508 ಬಿಡು! 262 00:33:19,331 --> 00:33:20,374 ನಿನಗೇನಾಗಿಲ್ಲ ತಾನೆ? 263 00:33:22,042 --> 00:33:22,918 ಹಾಂ. 264 00:33:25,254 --> 00:33:26,255 ಗನ್ ಎಲ್ಲಿದ್ದಾನೆ? 265 00:33:27,172 --> 00:33:28,173 ಅವನು ಸತ್ತ. 266 00:33:33,095 --> 00:33:34,388 ನಿನ್ನ ಕಥೆ ಮುಗಿಯಿತು, ಜೂನೋ. 267 00:33:35,013 --> 00:33:36,432 ಕ್ಯಾಡಿಸ್ ಮುಗಿಯಿತು. 268 00:33:39,143 --> 00:33:40,686 ಕ್ಯಾಡಿಸ್ ಮುಗಿದಿರಬಹುದು. 269 00:33:41,520 --> 00:33:42,479 ಹೆಸರಿಗೆ. 270 00:33:43,230 --> 00:33:44,732 ಆದರೆ ಅದು ಕೇವಲ ಹೆಸರಷ್ಟೇ. 271 00:33:45,357 --> 00:33:46,567 ನನ್ನ ಬಳಿ ಹೆಚ್ಚು ಇವೆ. 272 00:33:46,650 --> 00:33:48,110 ನೀನು ನನ್ನ ಕುಟುಂಬದ ಹಿಂದೆ ಬಿದ್ದೆ. 273 00:33:48,193 --> 00:33:49,737 ನೀನೂ ನನ್ನ ಕುಟುಂಬದ ಹಿಂದೆ ಬಿದ್ದೆ. 274 00:33:51,572 --> 00:33:53,532 ಈಗಲೂ ನಾವು ರಾಜಿ ಮಾಡಿಕೊಳ್ಳಬಹುದು. 275 00:33:54,366 --> 00:33:57,161 ನಾವು ಒಟ್ಟಿಗೆ ಮಾಡಬಹುದಾದ ಅದ್ಭುತಗಳ ಬಗ್ಗೆ ಯೋಚಿಸು. 276 00:33:57,244 --> 00:33:59,955 ನೀನು, ನಾನು, ರೆಬೆಕ್ಕಾ, 277 00:34:00,038 --> 00:34:01,248 ನಮ್ಮನ್ನು ಯಾರೂ ತಡೆಯಲಾರರು. 278 00:34:01,331 --> 00:34:02,708 ನನ್ನ ಕುಟುಂಬ! 279 00:34:06,795 --> 00:34:08,755 ನೀನು ನನ್ನನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲಲ್ಲ. 280 00:34:09,297 --> 00:34:11,467 ನಂತರ ನೀನು ಪೊಲೀಸರನ್ನೂ ಎದುರಿಸಬೇಕಾಗುತ್ತದೆ. 281 00:34:11,550 --> 00:34:13,177 -ರೆಬೆಕ್ಕಾ, ನನ್ನ ಹಿಂದೆ ಬಾ. -ಇಲ್ಲ. 282 00:34:13,260 --> 00:34:14,219 ಬಾ. 283 00:34:15,137 --> 00:34:16,472 ಅವಳು ಸಾಯುವುದು ಬೇಡ. 284 00:34:17,848 --> 00:34:20,601 ಅವಳನ್ನು ಬಿಟ್ಟರೆ, ಮತ್ತೆ ಗುಂಪು ಕಟ್ಟಿಕೊಂಡು ನಮ್ಮ ಹಿಂದೆ ಬರುತ್ತಾಳೆ. 285 00:34:20,726 --> 00:34:22,478 ನಾವು ಎಂದಿಗೂ ಸುರಕ್ಷಿತವಾಗಿರುವುದಿಲ್ಲ. ನಿಂಗೊತ್ತು. 286 00:34:22,561 --> 00:34:23,978 ಅವಳು ನನ್ನ ಒಂದು ಭಾಗ, ಅಪ್ಪ. 287 00:34:25,397 --> 00:34:27,565 ಇದಕ್ಕೆ ಅರ್ಥವಿಲ್ಲ ಅಂತ ನನಗೆ ಗೊತ್ತು... 288 00:34:29,067 --> 00:34:30,569 ಆದರೆ ಅವಳು ನನ್ನ ಒಂದು ಭಾಗ. 289 00:34:32,196 --> 00:34:33,405 ಅವಳು ಬದುಕಬೇಕು. 290 00:34:35,908 --> 00:34:38,659 -ದಯವಿಟ್ಟು. -ಅವಳು ನಿನ್ನನ್ನು ಹೋಗಲು ಬಿಡಲ್ಲ. 291 00:34:39,661 --> 00:34:40,788 ಇರಬಹುದು. 292 00:34:42,956 --> 00:34:44,333 ಆದರೆ ನಾನು ಅವಳಲ್ಲ. 293 00:34:47,543 --> 00:34:48,754 ನೀನೂ ಅಲ್ಲ. 294 00:34:51,799 --> 00:34:53,382 ಅಪ್ಪ, ದಯವಿಟ್ಟು. 295 00:34:53,467 --> 00:34:54,842 ದಯವಿಟ್ಟು ಬೇಡ. 296 00:35:06,688 --> 00:35:08,398 ಈಗಲೂ ಅವಕಾಶ ಇದೆ. 297 00:35:12,236 --> 00:35:13,987 ನನ್ನ ಉತ್ತರ ಈಗಲೂ ಅದೇ. 298 00:35:16,156 --> 00:35:17,574 ಸಿಗುತ್ತಾ ಇರುತ್ತೇನೆ, ಡೇವಿಡ್. 299 00:35:22,496 --> 00:35:24,623 ಅವರು ಮತ್ತೆ ನಿನ್ನ ಹಿಂದೆ ಬೀಳುವಂತೆ ಮಾಡಿಕೊಳ್ಳಬೇಡ, ಜೂನೋ. 300 00:36:11,587 --> 00:36:12,421 ಹೇ... 301 00:36:17,426 --> 00:36:18,594 ಇದು ಚೆನ್ನಾಗಿದೆ. 302 00:36:25,642 --> 00:36:27,144 ಅವಳು ನಿನಗೆ ಏನು ಹೇಳಿದಳು? 303 00:36:28,061 --> 00:36:29,062 ಜೂನೋ. 304 00:36:29,813 --> 00:36:31,607 ಅವಳು ನಿನ್ನನ್ನು ಸೆರೆಹಿಡಿದಿದ್ದಾಗ. 305 00:36:31,815 --> 00:36:34,943 "ಅಪ್ಪ ಪ್ರಪಂಚವನ್ನು ಕಾಪಾಡಿದ" ಎಂಬ ನಿನ್ನ ಭ್ರಮೆಯನ್ನು ನಾನು ಹಾಳುಮಾಡಲ್ಲ, 306 00:36:35,027 --> 00:36:36,403 ಆದರೆ ನಾನು ಯಾರ ಸೆರೆಯಾಗಿರಲಿಲ್ಲ. 307 00:36:37,070 --> 00:36:40,115 ನಾವು ಈ ಘಟನೆಯ ಬಗ್ಗೆ ವೃತ್ತಿಪರರಂತೆ ಚರ್ಚಿಸಬೇಕು. 308 00:36:40,198 --> 00:36:41,366 ನಾನು ನಿನ್ನ ಸ್ವತ್ತಲ್ಲ. 309 00:36:42,075 --> 00:36:43,368 ನೀನು ಅವಳ ಸ್ವತ್ತಾ? 310 00:36:49,708 --> 00:36:51,043 ನೀನು ನನಗೆ ಹೇಳಬೇಕಾಗಿಲ್ಲ. 311 00:36:51,835 --> 00:36:52,878 ನಿಜವಾಗಿ ಹೇಳಿದೆ. 312 00:36:57,215 --> 00:36:59,134 ಜೂನೋ ನನಗೆ ಏನನ್ನೂ ಹೇಳಲಿಲ್ಲ. 313 00:36:59,843 --> 00:37:01,845 ಕೆಲವು ಗಂಟೆಗಳು ನನ್ನನ್ನು ಒಂದು ಕೋಣೆಯಲ್ಲಿ ಇರಿಸಿದ್ದರು. 314 00:37:01,929 --> 00:37:03,847 ನನ್ನನ್ನು ಮೇಜಿಗೆ ಕೈಕೋಳ ಹಾಕಿ ಕಟ್ಟಿಹಾಕಿದ್ದಳು. 315 00:37:03,931 --> 00:37:06,183 ನಂತರ ಅವರು ನನ್ನನ್ನು ಮೋಟರ್‌ಕೇಡ್‌ಗೆ ಕರೆದೊಯ್ದರು. 316 00:37:07,893 --> 00:37:09,519 ಕೈಕೋಳವಿಲ್ಲದೆ. 317 00:37:15,025 --> 00:37:16,276 ರಕ್ಷಿಸಿದ್ದಕ್ಕೆ ಧನ್ಯವಾದ. 318 00:37:18,320 --> 00:37:19,780 ತಡವಾದರೂ ಮುಗಿಯಿತಲ್ಲ. 319 00:37:54,147 --> 00:37:56,066 ಸೆನೆಟರ್ ಡಾಸನ್ ಗೆಲುವನ್ನು ಆಚರಿಸುತ್ತಿದ್ದಾರೆ. 320 00:37:56,149 --> 00:37:58,193 ಸಿಎನ್ಎನ್ ಆಗಲೇ ಮುಖ್ಯಾಂಶಗಳನ್ನು ಬಿತ್ತರಿಸುತ್ತಿದೆ. 321 00:37:58,777 --> 00:38:02,155 "ಖಾಸಗಿ ಪತ್ತೇದಾರಿ ಸಂಸ್ಥೆ ಕ್ಯಾಡಿಸ್ ಮೇಲೆ ಹತ್ಯೆಗಳ ತನಿಖೆ." 322 00:38:04,199 --> 00:38:07,703 ಇದನ್ನು ವೈಟ್ ಹೌಸ್‌ವರೆಗೂ ಕೊಚ್ಚಿಕೊಂಡು ಹೋಗುತ್ತಾನೆ. 323 00:38:07,786 --> 00:38:10,998 ನಾವು ಟ್ಯಾಂಜಿಯರ್ಸ್‌ನಲ್ಲಿ ಇಳಿಯುವ ಹೊತ್ತಿಗೆ ಒಂದು ತಂತ್ರವನ್ನು ಹೊಂದಿರಬೇಕು. 324 00:38:11,081 --> 00:38:12,791 ಕ್ಯಾಡಿಸ್ ನಾಶವಾಗಲಿ. 325 00:38:14,167 --> 00:38:15,669 ನಾನು ಹೊಸದನ್ನು ನಿರ್ಮಿಸುತ್ತೇನೆ, 326 00:38:16,753 --> 00:38:20,716 ಎಲ್ಲೋ ಉತ್ತಮವಾದ ಕಡೆ, ಅಲ್ಲಿ ನಾನು ಅಮೆರಿಕನ್ ಕಾನೂನಿಗೆ ಬದ್ಧಳಾಗಿ ನಟಿಸಬೇಕಿರಲ್ಲ. 327 00:38:26,596 --> 00:38:27,681 ಒಲಿವರ್ 328 00:38:28,682 --> 00:38:29,808 ಒಲಿವರ್? 329 00:38:29,891 --> 00:38:30,976 ಅಮ್ಮ? 330 00:38:33,478 --> 00:38:34,896 ಈ ಕರೆಯನ್ನು ರೆಕಾರ್ಡ್ ಮಾಡಲಾಗುತ್ತಿದೆ. 331 00:38:35,355 --> 00:38:36,356 ನನಗೆ ಗೊತ್ತು. 332 00:38:37,649 --> 00:38:39,818 -ನಾನು ನಿನ್ನನ್ನು ಕೇಳಬೇಕು-- -ಅದು ನಾನಲ್ಲ. 333 00:38:41,319 --> 00:38:42,571 ಡೇವಿಡ್ ನಮ್ಮನ್ನು ಮೋಡಿ ಮಾಡಿದ. 334 00:38:45,240 --> 00:38:47,242 ನಾನು ನಿನ್ನನ್ನು ಎಂದಿಗೂ ಹಿಂಸಿಸುವುದಿಲ್ಲ. 335 00:38:50,078 --> 00:38:51,705 ಅಮ್ಮ, ನನ್ನನ್ನು ಕ್ಷಮಿಸು. 336 00:38:54,207 --> 00:38:57,169 ದೇವರೇ, ನನ್ನನ್ನು ಕ್ಷಮಿಸು. ನಾನು ಏನು ಮಾಡುತ್ತಿದ್ದೇನೆ ಎಂದು ಗೊತ್ತಿಲ್ಲ. 337 00:38:58,253 --> 00:38:59,796 ಏನು ಹೇಳಬೇಕೆಂದು ನನಗೆ ಗೊತ್ತಿಲ್ಲ. ನಾನು-- 338 00:38:59,880 --> 00:39:01,339 ಬ್ಯಾರನ್ ಬಗ್ಗೆ ಕ್ಷಮಿಸು. 339 00:39:02,215 --> 00:39:03,050 ಏನು? 340 00:39:03,133 --> 00:39:05,302 ತಪ್ಪು ರೀತಿಯ ತಾಯಿಯಾಗಿದ್ದಕ್ಕಾಗಿ ಕ್ಷಮಿಸು, 341 00:39:05,385 --> 00:39:07,512 ನಿನಗೆ ಬೇಕಾದುದೆಲ್ಲವೂ ಆಗಿಲ್ಲದ್ದಕ್ಕೆ. 342 00:39:09,097 --> 00:39:10,682 ಅದರ ಹತ್ತಿರಕ್ಕೂ ನಾನು ಬರಲಿಲ್ಲ. 343 00:39:13,226 --> 00:39:14,811 ಆದರೆ ನೀನು ಇನ್ನೂ ನನ್ನ ಮಗನೇ. 344 00:39:16,271 --> 00:39:17,481 "ಬ್ಯಾರನ್" ಎಂದು ಹೇಳಿದೆಯಾ? 345 00:39:19,066 --> 00:39:21,693 ನಿನ್ನ ಮೇಲೆ ಕಠೋರವಾಗಿದ್ದೆ ಅಂತ ಗೊತ್ತು, ಆದರೆ ಅದು... 346 00:39:21,777 --> 00:39:23,153 ಏಕೆಂದರೆ ನೀನು ನನ್ನವನು. 347 00:39:23,236 --> 00:39:24,863 ಏಕೆಂದರೆ ನಾನು ನಿನ್ನನ್ನು ಪ್ರೀತಿಸುತ್ತೇನೆ. 348 00:39:24,946 --> 00:39:26,448 ನೀನು ಬಹುಶಃ ನನ್ನನ್ನು ನಂಬುವುದಿಲ್ಲ, 349 00:39:26,531 --> 00:39:29,743 ಮತ್ತು ಅದಕ್ಕೆ ನನಗೆ ಅರ್ಹಳು. ನೀನು ನನ್ನನ್ನು ದ್ವೇಷಿಸಲು ನಾನು ಅರ್ಹಳು. 350 00:39:29,826 --> 00:39:31,411 ಆದರೆ ನೀನು ಒಂದು ವಿಷಯ ತಿಳಿದುಕೊಳ್ಳಬೇಕು. 351 00:39:31,495 --> 00:39:32,996 ಅಮ್ಮ, ನಿನ್ನ ಮಾತು ನನಗೆ ಕೇಳಿಸುತ್ತಿಲ್ಲ. 352 00:39:33,955 --> 00:39:37,167 ನೀವು ನನಗೆ ಸಾವಿರ ಬಾರಿ ದ್ರೋಹ ಮಾಡಬಹುದು... 353 00:39:37,250 --> 00:39:39,002 ಹಲೋ? ಅಮ್ಮ, ನಾನು ಇಲ್ಲಿದ್ದೇನೆ. 354 00:39:39,086 --> 00:39:41,630 ನಾನು ಎಂದಿಗೂ ನಿನ್ನ ತಾಯಿಯಾಗಿರುತ್ತೇನೆ. 355 00:39:45,258 --> 00:39:46,259 ಹಲೋ? 356 00:39:49,971 --> 00:39:51,306 ಒಲಿವರ್. 357 00:40:32,848 --> 00:40:34,683 ನಾನು ಕಾಲೇಜಿನ ಬಗ್ಗೆ ಯೋಚಿಸಿದೆ, ಗೊತ್ತಾ? 358 00:40:37,644 --> 00:40:41,815 ಕ್ಯಾಡಿಸ್‌ನಲ್ಲಿ ತರಬೇತಿ ಪಡೆಯುತ್ತಿದ್ದಾಗ, ಊರ ಸುತ್ತಲೂ ವಿದ್ಯಾರ್ಥಿಗಳನ್ನು ನೋಡುತ್ತಿದ್ದೆ, 359 00:40:41,898 --> 00:40:45,235 ಆಗ, "ದೇವರೇ, ಈ ಹೆಡ್ಡರನ್ನು ನೋಡು" ಅಂತ ಅಂದುಕೊಳ್ಳುತ್ತಿದ್ದೆ. 360 00:40:45,318 --> 00:40:48,780 "ಮನೆಗೆಲಸದ ನಂತರ ಈ ದಡ್ಡ ಮಕ್ಕಳು ತಮ್ಮ ಹೆತ್ತವರಿಗೆ ಕರೆ ಮಾಡುತ್ತಿದ್ದಾರೆ." 361 00:40:49,990 --> 00:40:51,366 ಅವರ ಮೇಲೆ ನನಗೆ ಹೊಟ್ಟೆಯುರಿಯಾಗಿರಬಹುದು. 362 00:40:52,200 --> 00:40:53,451 ಈಗಲೂ ಕಾಲ ಮಿಂಚಿಲ್ಲ. 363 00:40:53,535 --> 00:40:55,829 -ಅದು ನನಗೆ ಅಲ್ಲ. -ಹೇ. 364 00:40:55,912 --> 00:40:59,332 ನೀನು ಬುದ್ಧಿವಂತೆ. ನೀನು ಸಮರ್ಥಳು. ನಿನಗೆ 23 ವರ್ಷ. 365 00:40:59,916 --> 00:41:01,751 ನೀನು ಮಾಡಲಾಗದ್ದು ಹೆಚ್ಚೇನಿಲ್ಲ. 366 00:41:03,837 --> 00:41:05,839 ಅಧ್ಯಕ್ಷರ ಸ್ಥಾನಕ್ಕೆ ಸ್ಪರ್ಧಿಸಲೇ? 367 00:41:06,339 --> 00:41:07,632 ನಾನು ನಿನಗೆ ಮತ ಹಾಕುತ್ತೇನೆ. 368 00:41:30,947 --> 00:41:32,949 ನಾನು ಅಮೆರಿಕಾಗೆ ಹಿಂದಿರುಗಬಯಸುತ್ತೇನೆ. 369 00:41:33,033 --> 00:41:34,743 ನಾವು ಎಲ್ಎಗೆ ಹೋಗಬಹುದು. 370 00:41:37,037 --> 00:41:39,497 ನಿನಗೆ ಯಾರಾದರೂ ಸೆಲೆಬ್ರಿಟಿಗಳು ಗೊತ್ತಾ? 371 00:41:40,373 --> 00:41:41,416 ಇಲ್ಲ. 372 00:41:41,917 --> 00:41:43,668 ನಿನಗೆ ಯಾರಾದರೂ ವೀಗನ್ ಗೊತ್ತಾ? 373 00:41:43,752 --> 00:41:46,379 ಗೊತ್ತು. ನಾನು ಇರುವ ಕಡೆ ತುಂಬಾ ಜನ ಇದ್ದಾರೆ. 374 00:41:46,463 --> 00:41:49,299 ವೀಗನರು ದುರ್ಬಲ ಮತ್ತು ತೆಳ್ಳಗೆ ಇದ್ದಾರೆಯೇ? 375 00:41:49,382 --> 00:41:50,383 ಏನು? 376 00:41:50,467 --> 00:41:52,636 -ಹಾಗೇನಿಲ್ಲ. -ನಿನಗೆ ಹಾಗೆ ಯಾರು ಹೇಳಿದರು? 377 00:41:52,719 --> 00:41:53,845 -ಇಲ್ಲಿ ಬಾ ನೀನು. -ಹೌದು. 378 00:41:53,929 --> 00:41:55,931 ಎಷ್ಟೊಂದು ಪ್ರಶ್ನೆಗಳನ್ನು ಕೇಳುತ್ತೀಯ. 379 00:41:56,473 --> 00:41:57,974 ಹೌದು, ಅವಳಿಗೆ ಕುತೂಹಲ. 380 00:41:58,808 --> 00:41:59,893 ನನಗೂ ಇರುತ್ತಿತ್ತು. 381 00:42:00,894 --> 00:42:02,187 ನಿನಗೆ ಟಾಕೋಸ್ ಇಷ್ಟನಾ? 382 00:42:02,270 --> 00:42:04,022 ನನಗೆ ಟಾಕೋಸ್ ಇಷ್ಟ, ಹಾಂ. 383 00:42:04,105 --> 00:42:05,774 ಟಾಕೋಸ್ ಬಗ್ಗೆ ತುಂಬಾ ಕೇಳಿದ್ದಾಳೆ. 384 00:42:06,441 --> 00:42:09,653 ಕೊರಿಯಾದಲ್ಲಿ ಎಲ್ಲವೂ ಇದೆ, ಆದರೆ ಒಳ್ಳೆಯ ಮೆಕ್ಸಿಕನ್ ಆಹಾರ ಸಿಗುವುದು ಕಷ್ಟ. 385 00:42:10,779 --> 00:42:13,365 ಅದು ಯಾವಾಗಲೂ ಸಿಹಿಯಾಗಿರುತ್ತದೆ ಅಂತ ಅಪ್ಪ ಹೇಳುತ್ತಾರೆ. 386 00:42:14,324 --> 00:42:16,618 ನಾನು ಅದನ್ನೇ ಹೇಳೋದು. ನಿನಗೆ ಹೇಗೆ ಗೊತ್ತಾಯಿತು? 387 00:42:20,872 --> 00:42:22,666 ನನಗೆ ನಿದ್ದೆ ಬರುತ್ತಿದೆ. 388 00:42:31,633 --> 00:42:33,260 ನೀವು ಸಂತೋಷವಾಗಿರುವಿರಿ. 389 00:42:36,054 --> 00:42:38,014 ಇದಕ್ಕಾಗಿ ನಾನು ಬಹಳ ಸಮಯದಿಂದ ಕಾಯುತ್ತಿದ್ದೆ. 390 00:42:45,897 --> 00:42:47,065 ನಾನು ನಿನ್ನನ್ನು ಪ್ರೀತಿಸುತ್ತೇನೆ. 391 00:42:52,988 --> 00:42:54,447 ಸರಿ, ಕಣ್ರೀ. 392 00:43:02,539 --> 00:43:03,498 ಹೊರಡೋಣವಾ? 393 00:43:05,083 --> 00:43:07,627 ನಾವು ಹೊರಡುವ ಮುಂಚೆ ಶೌಚಾಲಯ ಬಳಸಿ ಬರುತ್ತೇನೆ. 394 00:43:11,006 --> 00:43:12,048 ನಾನೂ ಬರುವೆ. 395 00:43:15,010 --> 00:43:16,428 ಜಾಸ್ತಿ ಹೊತ್ತು ಇರಬೇಡಿ. 396 00:43:31,943 --> 00:43:32,777 ಮಿನ್ಹೀ-ಯಾ. 397 00:43:33,403 --> 00:43:34,571 ಮಿನ್ಹೀ-ಯಾ. 398 00:43:36,156 --> 00:43:37,991 ನೀನು ಅಮೆರಿಕಾಗೆ ಹೋಗಬೇಕಾ? 399 00:43:38,074 --> 00:43:39,576 ಹವಾಯಿ. 400 00:43:39,659 --> 00:43:41,077 ಹವಾಯಿ. 401 00:43:43,621 --> 00:43:45,123 ಅದು ಒಳ್ಳೆಯ ಉಪಾಯ. 402 00:44:03,016 --> 00:44:04,642 ಈಗಲೇ ಬರುತ್ತೇನೆ, ಆಯ್ತಾ? 403 00:44:05,185 --> 00:44:08,897 ಬಾ. ಇಲ್ಲೇ ಮಲಗು. ಇಲ್ಲಿ ಮಲಗಿರು. 404 00:44:20,867 --> 00:44:21,868 ಅಂಜು? 405 00:44:25,080 --> 00:44:26,498 ಚಿನ್ನ, ಆರಾಮಾಗಿದ್ದೀಯಾ? 406 00:44:30,794 --> 00:44:31,795 ರೆಬೆಕ್ಕಾ? 407 00:44:47,310 --> 00:44:49,062 ದೇವರೇ! 408 00:44:49,896 --> 00:44:51,898 ಅಂಜು. ಅಂಜು. 409 00:44:51,981 --> 00:44:54,526 ನನ್ನ ಮಾತು ಕೇಳುತ್ತಿದೆಯಾ? ನನ್ನ ಮಾತು ಕೇಳುತ್ತಿದೆಯಾ? 410 00:44:55,276 --> 00:44:57,737 ತೋರಿಸು. ತೋರಿಸು. ತೋರಿಸು. 411 00:44:57,821 --> 00:44:59,948 ಅಯ್ಯೋ. ಅಯ್ಯೋ! 412 00:45:08,832 --> 00:45:09,749 ನಾನಿದ್ದೇನೆ. 413 00:45:09,833 --> 00:45:13,878 ನಾನಿದ್ದೇನೆ. ಉಸಿರಾಡು, ಆಯ್ತಾ? ಸುಮ್ಮನೆ ಉಸಿರಾಡು. 414 00:45:15,380 --> 00:45:16,589 ಉಸಿರಾಡು. 415 00:45:20,343 --> 00:45:21,928 ನನ್ನ ಜೊತೆ ಇರು. 416 00:45:23,304 --> 00:45:24,514 ಇದನ್ನು ಮಾಡಿದ್ದು ಯಾರು? 417 00:45:25,807 --> 00:45:27,308 ಇದನ್ನು ಮಾಡಿದ್ದು ಯಾರು? 418 00:45:32,897 --> 00:45:34,190 ರೆಬೆಕ್ಕಾ ಮಾಡಿದಳಾ? 419 00:45:36,151 --> 00:45:37,652 ರೆಬೆಕ್ಕಾ ಮಾಡಿದಳಾ? 420 00:45:41,489 --> 00:45:43,074 ರೆಬೆಕ್ಕಾ! 421 00:45:46,536 --> 00:45:48,204 ರೆಬೆಕ್ಕಾ! 422 00:46:38,379 --> 00:46:40,381 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 423 00:46:40,465 --> 00:46:42,467 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ