1 00:00:20,312 --> 00:00:24,354 ನೈನಿತಾಲ್ 2 00:00:57,937 --> 00:00:59,603 ಹನಿ, ನಾವು ಮಾತಾಡಬೇಕು. 3 00:00:59,604 --> 00:01:02,021 ಈಗಲಾ? ಮಾತಾಡು. 4 00:01:02,812 --> 00:01:05,104 ನಿಮ್ಮ ಸುತ್ತಮುತ್ತ ಏನು ಕಾಣುತ್ತಿದೆ? 5 00:01:06,271 --> 00:01:07,146 ಮಕ್ಕಳು. 6 00:01:07,854 --> 00:01:08,854 ನಿದ್ರಾಭರಿತ ಮಕ್ಕಳು. 7 00:01:09,521 --> 00:01:11,021 ಅದರಿಂದ ನಮಗೇನು ಗೊತ್ತಾಗುತ್ತೆ? 8 00:01:12,271 --> 00:01:13,146 ಹನಿ! 9 00:01:13,271 --> 00:01:14,521 ಏನು ಗೊತ್ತಾಗುತ್ತೆ? 10 00:01:14,646 --> 00:01:16,979 ಮಕ್ಕಳಿಗೆ ತುಂಬಾ ಅನ್ಯಾಯವಾಗುತ್ತಿದೆ. 11 00:01:17,729 --> 00:01:20,561 ಸಮಯ ನೋಡು! ಬೆಳಿಗ್ಗೆ 7:00ಕ್ಕೆ ಶಾಲೆ ಶುರುವಾಗುತ್ತೆ. 12 00:01:20,562 --> 00:01:24,186 ಅದಕ್ಕಾಗಿ ಬೆಳಿಗ್ಗೆ 6:00ಕ್ಕೆ ಕಷ್ಟಪಟ್ಟು ಒತ್ತಾಯದಲ್ಲಿ ಏಳುತ್ತೇವೆ. 13 00:01:24,187 --> 00:01:27,312 ಇದು ನ್ಯಾಯವಲ್ಲ. ಶಾಲೆಯ ಸಮಯ ಸರಿಯೇ ಅಲ್ಲ. 14 00:01:27,937 --> 00:01:30,603 ಸರಿಯಾದ ಸಮಯಕ್ಕೆ ಮಲಗಿದರೆ, ಸರಿ ಸಮಯವೇ, ಅಲ್ವಾ? 15 00:01:30,604 --> 00:01:34,020 ನೋಡು, ಹನಿ, ಒಳ್ಳೆಯ ನಿದ್ದೆ ಅಂದರೆ ಒಳ್ಳೆಯ ಗಮನ. 16 00:01:34,021 --> 00:01:37,228 ಒಳ್ಳೆಯ ಗಮನ ಅಂದರೆ ಒಳ್ಳೆಯ ಅಂಕಗಳು. 17 00:01:37,229 --> 00:01:40,145 ಒಳ್ಳೆಯ ಅಂಕಗಳು ಅಂದರೆ ಒಳ್ಳೆಯ ಭವಿಷ್ಯ. 18 00:01:40,146 --> 00:01:42,728 ದೊಡ್ಡವಳಾಗಿ ಏನು ಮಾಡಬೇಕಂತ ನನಗೀಗ ಗೊತ್ತಾಯಿತು. 19 00:01:42,729 --> 00:01:43,978 ಶಾಲೆಯ ಪ್ರಾಂಶುಪಾಲೆ! 20 00:01:43,979 --> 00:01:46,062 ಆಗ ನಾನು ಈ ವ್ಯವಸ್ಥೆಯನ್ನು ಬದಲಾಯಿಸುತ್ತೇನೆ. 21 00:01:46,521 --> 00:01:47,729 ವ್ಯವಸ್ಥೆಯನ್ನೇ? ಸಮಯವನ್ನೇ? 22 00:01:48,271 --> 00:01:49,270 ಎರಡೂ. 23 00:01:49,271 --> 00:01:51,811 ನೆನ್ನೆ ನೀನು ರೈಲು ಚಾಲಕಿ ಆಗಬೇಕಂತಿದ್ದೆ, ಅಲ್ವಾ? 24 00:01:51,812 --> 00:01:53,395 ಶಾಲೆಯ ಪ್ರಾಂಶುಪಾಲೆ ಒಳ್ಳೆಯದು. 25 00:01:53,396 --> 00:01:55,186 ಯಾರು ಬೇಕಾದರೂ ರೈಲು ಓಡಿಸಬಹುದು. 26 00:01:55,187 --> 00:01:57,562 ಆದರೆ ಮಕ್ಕಳ ಬಗ್ಗೆ ಯಾರೂ ಯೋಚಿಸುವುದಿಲ್ಲ. 27 00:01:58,271 --> 00:02:00,811 ಮಕ್ಕಳ ಯೋಚನಾಶೈಲಿ ನನಗೆ ಗೊತ್ತು. ದೊಡ್ಡವರಿಗೆ ಗೊತ್ತಿಲ್ಲ. 28 00:02:00,812 --> 00:02:03,187 ಹೌದಾ? ನಿನ್ನನ್ನು ಕರಾಟೆ ತರಗತಿಗೆ ಕಳಿಸಿದ್ದು ಯಾರು? 29 00:02:03,854 --> 00:02:06,729 ನಾನು ಕಳಿಸದಿದ್ದರೆ, ನಿನಗೆ ಕರಾಟೆ ಇಷ್ಟ ಅಂತ ಗೊತ್ತಾಗ್ತಿತ್ತಾ? 30 00:02:08,021 --> 00:02:09,186 ನಾಳೆಯಿಂದ ನೃತ್ಯ ತರಗತಿ? 31 00:02:09,187 --> 00:02:12,395 ಇಲ್ಲ! ದಯವಿಟ್ಟು, ನೃತ್ಯ ಬೇಡ! 32 00:02:12,396 --> 00:02:14,603 ನಾನು ಕುಣಿದೇವ್ರಿಗೆ ನೆಲ ಡೊಂಕು ಅಂತೆ. 33 00:02:14,604 --> 00:02:16,395 ನೀನು ಡೊಂಕು ಅಂತ ಯಾರು ಹೇಳಿದ್ದು? 34 00:02:16,396 --> 00:02:17,853 ಚೆನ್ನಾಗಿ ನೃತ್ಯ ಮಾಡುವೆ. 35 00:02:17,854 --> 00:02:19,603 ವಿ ಅಂಕಲ್‌ಗೂ ನಿನ್ನ ನೃತ್ಯ ಇಷ್ಟ. 36 00:02:19,604 --> 00:02:20,811 - ನಿಜವಾಗಿಯೂ? - ಹೌದು. 37 00:02:20,812 --> 00:02:22,146 ನನಗೆ ನೃತ್ಯ ಇಷ್ಟವಿಲ್ಲ. 38 00:02:22,521 --> 00:02:24,271 ಕೇಳು, ಅಮ್ಮ ಯಾರು? 39 00:02:25,771 --> 00:02:27,520 ನಾಳೆಯಿಂದ ನೃತ್ಯ ತರಗತಿ ಶುರು. ಹೋಗು. 40 00:02:27,521 --> 00:02:30,854 ಅಮ್ಮ ಅಂತ ಹೇಳಿಕೊಂಡು ಯಾರು ಬೇಕಾದರೂ ವಾದ ಗೆಲ್ಲಬಹುದು. 41 00:02:31,687 --> 00:02:32,687 ಇರು. 42 00:02:35,396 --> 00:02:36,895 - ಯಾವಾಗಲೂ... - ಎಚ್ಚರವಾಗಿರುವೆ. 43 00:02:36,896 --> 00:02:38,811 - ಯಾರಿಂದಲೂ... - ತೊಂದರೆ ಅನುಭವಿಸಲ್ಲ. 44 00:02:38,812 --> 00:02:40,812 - ಯಾರಾದರೂ ಛೇಡಿಸಿದರೆ... - ಹಾಗಾಗಲು ಬಿಡಲ್ಲ. 45 00:02:41,771 --> 00:02:44,146 - ಮೊದಲ ಏಟು... - ನಾನೇ ಹೊಡೆಯುವೆ. 46 00:02:55,104 --> 00:02:57,520 ಕೆಫೆ ಕ್ರೌನ್ 47 00:02:57,521 --> 00:02:58,561 ತೆಗೆದುಕೊಳ್ಳಿ. 48 00:02:58,562 --> 00:03:00,061 - ಧನ್ಯವಾದ. - ಧನ್ಯವಾದ. 49 00:03:00,062 --> 00:03:01,146 ನೀವು ಆರಾಮಾ? 50 00:03:03,312 --> 00:03:05,061 ನೃತ್ಯ ತರಗತಿಗೆ ನಾಡಿಯಾ ಒಪ್ಪಿದಳಾ? 51 00:03:05,062 --> 00:03:06,520 ಸಾಕಷ್ಟು ನಾಟಕದ ನಂತರ. 52 00:03:06,521 --> 00:03:09,270 ಆದರೆ ಒಪ್ಪಿದಳಲ್ಲ! ಅದು ಅದ್ಭುತ. ಅವಳಿಗೆ ಇಷ್ಟವಾಗುತ್ತೆ. 53 00:03:09,271 --> 00:03:12,811 ಒಂದು ಸಲ ಅದು ಅವಳಿಗೆ ಹಿಡಿಸಿದರೆ, ಅತ್ಯುತ್ತಮವಾಗಿ ಮಾಡುತ್ತಾಳೆ! 54 00:03:12,812 --> 00:03:14,396 - ಹಾಗೆ ಆದರೆ ಸಾಕು. - ಹನಿ. 55 00:03:15,562 --> 00:03:17,146 ನಾನು ನಿನ್ನ ನೃತ್ಯ ನೋಡಿಲ್ಲ. 56 00:03:21,312 --> 00:03:24,645 ಕೇಳು, ವಿವೇಕ್, ನಾನು ಮಾರುಕಟ್ಟೆಗೆ ಹೋಗಿ ಸಾಮಾಗ್ರಿ ತರಬೇಕು. 57 00:03:24,646 --> 00:03:28,228 ತುಂಬಾ ಸಾಮಾಗ್ರಿಗಳಿವೆ. ನೀನೊಬ್ಬಳಿಗೇ ಆಗಲ್ಲ. 58 00:03:28,229 --> 00:03:30,978 ಹೇಗೋ ಮಾಡ್ತೀನಿ. ದೇವರು ನನಗೆ ಎತ್ತರ ಕೊಡಲಿಲ್ಲ, 59 00:03:30,979 --> 00:03:32,646 ಅದಕ್ಕಾಗಿ ಬಲ ಬೆಳೆಸಿಕೊಂಡೆ. 60 00:03:33,021 --> 00:03:34,686 ಬ್ಯಾಂಕ್ ಕೆಲಸ ಮುಗಿಸುತ್ತೀಯಾ? 61 00:03:34,687 --> 00:03:37,561 ಸಾಲ ತೀರಿದರೆ ಬೇಗ ಕೆಫೆಯನ್ನು ವಿಸ್ತರಿಸಬಹುದು. 62 00:03:37,562 --> 00:03:39,812 ಅದಕ್ಕೇ ನನಗೆ ನಮ್ಮಿಬ್ಬರ ಒಡನಾಟ ಇಷ್ಟ. 63 00:03:40,354 --> 00:03:42,687 ನೀನು ನನಗೆ ಬೆಂಬಲಿಸು, ನಾನು ನಿನಗೆ ಬೆಂಬಲಿಸುವೆ. 64 00:03:43,229 --> 00:03:44,396 ನಾವು ಅತ್ಯುತ್ತಮ ತಂಡ. 65 00:03:47,187 --> 00:03:48,187 ನಾನು ಹೊರಡಬೇಕು. 66 00:03:51,729 --> 00:03:53,936 ಹತ್ತು ರೂಪಾಯಿ, ರೂಪಾಯಿ. 67 00:03:53,937 --> 00:03:56,312 ನೀರು ಹತ್ತು ರೂಪಾಯಿ! ನೀರು ಹತ್ತು ರೂಪಾಯಿ! 68 00:04:02,146 --> 00:04:04,229 {\an8}ಚಾಂದ್ ಟೈಲರ್ಸ್ ಹೆಂಗಸರು ಮತ್ತು ಪುರುಷರಿಗೆ 69 00:04:18,354 --> 00:04:22,811 [ಫ್ರೆಂಚ್‌] ನಿನ್ನ ಹೆಸರೇನು? 70 00:04:22,812 --> 00:04:23,895 [ಫ್ರೆಂಚ್‌]ನನ್ನ ಹೆಸರು 71 00:04:23,896 --> 00:04:25,395 [ಫ್ರೆಂಚ್‌] ನನ್ನ ಹೆಸರು... 72 00:04:25,396 --> 00:04:26,561 ನಿಮ್ಮ ಹೆಸರು ಹೇಳಿ. 73 00:04:26,562 --> 00:04:28,853 [ಫ್ರೆಂಚ್‌] ನನ್ನ ಹೆಸರು ನಾಡಿಯಾ. 74 00:04:28,854 --> 00:04:29,771 ಹಾಂ. 75 00:05:00,229 --> 00:05:01,436 ಮತ್ತೊಮ್ಮೆ ಹೇಳ್ತೀರಾ? 76 00:05:01,437 --> 00:05:02,937 [ಫ್ರೆಂಚ್‌] ನನ್ನ ಹೆಸರು... 77 00:05:04,229 --> 00:05:06,228 ಈಗ "ಹೇಗಿದ್ದೀರಿ" ಅಂತ ಫ್ರೆಂಚಲ್ಲಿ ಹೇಳೋಣ. 78 00:05:06,229 --> 00:05:07,146 ಪ್ಲೇ 79 00:05:08,187 --> 00:05:09,270 ಹೇಗಿದ್ದೀರಿ? 80 00:05:09,271 --> 00:05:10,936 [ಫ್ರೆಂಚ್‌] ಹೇಗಿದ್ದೀರಿ? 81 00:05:10,937 --> 00:05:13,645 ಒಳ್ಳೆಯದು, ವಿದ್ಯಾರ್ಥಿಗಳೇ. ಒಟ್ಟಿಗೆ ಹೇಳೋಣವೇ? 82 00:05:13,646 --> 00:05:15,520 [ಫ್ರೆಂಚ್‌] ಹೇಗಿದ್ದೀರಿ? 83 00:05:15,521 --> 00:05:18,103 ಅದಕ್ಕೆ ಹೇಗೆ ಉತ್ತರಿಸುವಿರಿ? ಚೆನ್ನಾಗಿದ್ದೇನೆ. 84 00:05:18,104 --> 00:05:19,936 ಅದನ್ನು ಫ್ರೆಂಚಲ್ಲಿ ಹೇಗೆ ಹೇಳುವಿರಿ? 85 00:05:19,937 --> 00:05:21,895 - [ಫ್ರೆಂಚ್‌] ಚೆನ್ನಾಗಿದ್ದೇನೆ. - ಮಿಸ್! 86 00:05:21,896 --> 00:05:23,896 "ಚೆನ್ನಾಗಿದ್ದೇನೆ" ಅಂತ ಹೇಗೆ ಹೇಳ್ತೀರಿ? 87 00:05:24,312 --> 00:05:26,812 - [ಫ್ರೆಂಚ್‌] ಚೆನ್ನಾಗಿದ್ದೇನೆ. - ಅದ್ಭುತ! ಮತ್ತೆ. 88 00:05:27,396 --> 00:05:28,562 ಚೆನ್ನಾಗಿದ್ದೇನೆ. 89 00:06:35,021 --> 00:06:38,271 ಸಿನಿಮಾ 90 00:07:57,146 --> 00:07:59,396 ಸಿಟಡೆಲ್ ಹನಿ ಬನಿ 91 00:08:04,271 --> 00:08:07,812 ಸಿನಿಮಾ 92 00:08:40,396 --> 00:08:43,312 ಬಾಂಬೆ 93 00:09:30,437 --> 00:09:33,437 ಕಟ್! ವಾವ್! ವಾವ್! ಎಂತಹ ಪ್ರದರ್ಶನ! 94 00:09:36,354 --> 00:09:39,271 - ನಿನ್ನ ಕಡೆ ಬೈಕ್ ಓಡಿಸಿಕೊಂಡು ಬರ್ತೀನಿ. - ಸರ್. 95 00:09:40,062 --> 00:09:41,854 ಚೆನ್ನಾಗಿತ್ತಾ? ಶುಭ ಮಧ್ಯಾಹ್ನ. 96 00:09:44,021 --> 00:09:46,061 - ಹೇ. - ಬೋಳಿಮಗನೇ. 97 00:09:46,062 --> 00:09:48,687 ನನ್ನ ನಾಯಿಗೆ ನಿನ್ನ ಹೆಸರಿಡುತ್ತೇನೆ. 98 00:09:49,937 --> 00:09:52,895 ಏನಾಯ್ತು? ಮಾಸ್ಟರ್ ಹೆಚ್ಚಿನ ಕೆಲಸ ಮಾಡಿಸಿದರಾ? 99 00:09:52,896 --> 00:09:54,436 ತಾಕತ್ತು ಇಳಿದುಹೋಯ್ತಾ? 100 00:09:54,437 --> 00:09:55,686 ಸ್ಟಂಟ್ ಹೇಗಿತ್ತು? 101 00:09:55,687 --> 00:09:57,395 ನಿನ್ನ ಸ್ಟಂಟ್ ಬೆಂಕಿ, ಕಣೋ, ಬೆಂಕಿ. 102 00:09:57,396 --> 00:09:58,854 ಮೈಗೆ ಬೆಂಕಿ ಹತ್ತಿಸಿದೆ ನೀನು. 103 00:09:59,687 --> 00:10:02,437 ಮಾಸ್ಟರಿಗೆ ಹೇಳು, ಒಂದು ಸ್ಟಂಟ್ ಜೊತೆಯಾಗಿ ಮಾಡೋಣ. 104 00:10:03,271 --> 00:10:05,561 ಹಾಂ, ಮಾಡೋಣ. ಡಬಲ್ ಪಲ್ಟಿ ಹೊಡೆಯೋಣ. 105 00:10:05,562 --> 00:10:07,437 ನಾನು ಟರ್ಮಿನೇಟರ್, ನೀನು ಪ್ರಿಡೇಟರ್. 106 00:10:08,229 --> 00:10:11,395 ನಾ ಟರ್ಮಿನೇಟರ್, ನೀನು ಪ್ರಿಡೇಟರ್. 107 00:10:11,396 --> 00:10:13,770 - ಹೋದಸಲ ಹೇಳಿದ್ದೆ. - ನಾನೂ ಟರ್ಮಿನೇಟರ್ ಅಂದಿದ್ದೆ. 108 00:10:13,771 --> 00:10:14,729 ಮುಂದಿನವರು! 109 00:10:17,354 --> 00:10:19,771 - ಆಕ್ಷನ್. - ಹಲೋ, ನನ್ನ ಹೆಸರು ಹನಿ. 110 00:10:22,312 --> 00:10:23,812 {\an8}ಇವು ನನ್ನ ಪ್ರೊಫೈಲ್‌ಗಳು. 111 00:10:30,396 --> 00:10:31,728 - ಆರಂಭಿಸೋಣ್ವಾ? - ಹಾಂ. 112 00:10:31,729 --> 00:10:32,896 ಆಕ್ಷನ್. 113 00:10:36,146 --> 00:10:37,146 ಎಲ್ಲಿ? 114 00:10:38,229 --> 00:10:39,396 ಸ್ವಿಟ್ಜರ್ಲೆಂಡ್? 115 00:10:40,396 --> 00:10:41,646 ವಾವ್, ಸೋನಮ್! 116 00:10:42,271 --> 00:10:45,229 - ಸುಂದರ ಪರ್ವತಗಳು... - ಏನು ಮಾಡುತ್ತಿರುವೆ? 117 00:10:47,479 --> 00:10:48,603 ನನ್ನ ಸಾಲು, ಅಮರ್ ಸರ್. 118 00:10:48,604 --> 00:10:51,687 ಇದು ಹೀರೋಯಿನ್ ಗೆಳತಿಯ ಸಾಲುಗಳು. ಆ ಪಾತ್ರಕ್ಕೆ ಸಿಕ್ಕಾಗಿದೆ. 119 00:10:52,312 --> 00:10:53,645 ಮತ್ತೆ ಇದು ಯಾವುದಕ್ಕಾಗಿ? 120 00:10:53,646 --> 00:10:55,561 ಹಳ್ಳಿ ಹುಡುಗಿಗಾಗಿ. 121 00:10:55,562 --> 00:10:57,770 - ನಿನಗೆ ಹೊಂದಲ್ಲ. ಕ್ಷಮಿಸು. - ಇಲ್ಲ, ಸರ್. 122 00:10:57,771 --> 00:11:00,187 ನಾನು ಯಾವುದು ಬೇಕಾದರೂ ಮಾಡುವೆ. ಏನು ಮಾಡಬೇಕು? 123 00:11:02,646 --> 00:11:03,479 ಅಚ್ಚರಿ. 124 00:11:04,271 --> 00:11:06,228 - ಏನು? - ಅಚ್ಚರಿಗೊಂಡು ತೋರಿಸು. 125 00:11:06,229 --> 00:11:08,229 ಹಾಂ, ಮಾಡಬಲ್ಲೆ. 126 00:11:10,812 --> 00:11:11,812 ಇನ್ನೂ ಸ್ವಲ್ಪ. 127 00:11:13,146 --> 00:11:14,187 ಈಗ ಹೆದರು. 128 00:11:15,437 --> 00:11:16,437 ಇನ್ನೂ ಸ್ವಲ್ಪ. 129 00:11:17,687 --> 00:11:18,604 ಈಗ ಎರಡನ್ನೂ ಬೆರೆಸು. 130 00:11:19,854 --> 00:11:20,854 ಇನ್ನೂ ಸ್ವಲ್ಪ. 131 00:11:22,854 --> 00:11:23,771 ಕಿರುಚು. 132 00:11:26,229 --> 00:11:27,062 ಜೋರಾಗಿ ಕಿರುಚು. 133 00:11:28,021 --> 00:11:28,896 ಜೋರಾಗಿ! 134 00:11:29,354 --> 00:11:31,104 ಅಯ್ಯಬ್ಬಾ! 135 00:11:32,979 --> 00:11:34,229 - ಏನು? - ಹೇಗನಿಸುತ್ತಿದೆ? 136 00:11:34,604 --> 00:11:35,811 ನನ್ನ ಕೈಗಳಲ್ಲಿ ಜಾದೂ ಇದೆ. 137 00:11:35,812 --> 00:11:38,521 ಹೌದಾ? ಇನ್ನೆಲ್ಲಿದೆ ಜಾದೂ? 138 00:11:40,437 --> 00:11:41,437 ಹೇ, ಜಗನ್. 139 00:11:41,854 --> 00:11:43,396 ಇಲ್ಲೇನು ಮಾಡ್ತಿದ್ದೀರಿ, ಲೂಡೋ? 140 00:11:45,021 --> 00:11:47,312 ಬಾಬಾ ಕರೆ ಮಾಡಿದರು. ಸ್ವಲ್ಪ ಕೆಲಸವಿದೆಯಂತೆ. 141 00:11:47,812 --> 00:11:50,479 ವಿವರಗಳನ್ನು ಹೇಳೋಕೆ ಯಾವಾಗ ಭೇಟಿಯಾಗೋಣ? 142 00:11:50,979 --> 00:11:52,312 ರಾಹಿ, ಮಾಸ್ಟರ್. 143 00:11:52,812 --> 00:11:54,978 ಇನ್ನೊಂದು ಟೇಕ್ ಬೇಕಂತೆ. ಫೋಕಸ್ ಆಗಿಲ್ಲ. 144 00:11:54,979 --> 00:11:56,311 - ಬನಿ? - ಸರ್. 145 00:11:56,312 --> 00:11:58,686 ಇನ್ನೊಂದು ಟೇಕ್ ಬೇಕಂತೆ. ಫೋಕಸ್ ಆಗಿಲ್ಲ. ತಯಾರಾ? 146 00:11:58,687 --> 00:12:01,020 ಆಜ್ಞೆ ಮಾಡಿ, ಮಾಸ್ಟರ್. ಈ ಜೀವ ನಿಮಗಾಗಿಯೇ. 147 00:12:01,021 --> 00:12:02,187 - ಬೇಗ ಬಾ. - ಹಾಂ. 148 00:12:03,562 --> 00:12:04,395 ಚಿತ್ರೀಕರಣದ ನಂತರ. 149 00:12:04,396 --> 00:12:05,853 - ಬನಿ. - ಬಂದೆ. ಹೇಳಿ. 150 00:12:05,854 --> 00:12:07,021 ನೀವು ಗಮನ ಕೊಡಿ. 151 00:12:07,896 --> 00:12:08,979 ಅದೇ ಮಾಡಕ್ಕಾಗುತ್ತಿಲ್ಲ. 152 00:12:16,479 --> 00:12:17,437 ನಾನು ನೋಡಿದೆ. 153 00:12:19,312 --> 00:12:22,021 ನಿನ್ನೊಳಗೆ ಅದು ಇದೆ ಅನ್ನೋದನ್ನು ಕಂಡೆ. 154 00:12:23,729 --> 00:12:24,729 ಏನು ಹಾಗಂದರೆ? 155 00:12:25,479 --> 00:12:28,229 ತಾರಾ ಗುಣ. ನೀನು ದೊಡ್ಡ ಚಿತ್ರತಾರೆ ಆಗಬಹುದು. 156 00:12:28,979 --> 00:12:31,311 ನೋಡು, ಪ್ರತಿಭೆ ಹಾಳುಮಾಡಿಕೊಳ್ಳಬೇಡ. 157 00:12:31,312 --> 00:12:33,604 ಏನು ಬೇಕಾದರೂ ಮಾಡು. ಹಿಂದೆ ಸರಿಯಬೇಡ. 158 00:12:34,312 --> 00:12:36,520 ಹೀರೋಯಿನ್ ಗೆಳತಿಯ ಪಾತ್ರ ಬೇಕಾ ನಿನಗೆ? 159 00:12:36,521 --> 00:12:39,104 ಅದು ಒಳ್ಳೆಯ, ಸೊಗಸಾದ ಮಾದಕ ಪಾತ್ರ. 160 00:12:39,812 --> 00:12:40,937 ಮತ್ತು ಹೇಳ್ತೀನಿ ಕೇಳು, 161 00:12:42,062 --> 00:12:43,896 ಈ ಪಾತ್ರ ನಿನ್ನ ವೃತ್ತಿ ಬೆಳೆಸುತ್ತೆ. 162 00:12:47,021 --> 00:12:48,104 ಹೆಚ್ಚು ಯೋಚಿಸಬೇಡ. 163 00:12:49,604 --> 00:12:52,521 ಈ ಪಾತ್ರಕ್ಕಾಗಿ ನೀನು ಏನು ಬೇಕಾದರೂ ಮಾಡಬಲ್ಲೆ 164 00:12:53,521 --> 00:12:54,771 ಅಂತ ನೆನೆಪಿಸಿಕೋ. 165 00:12:59,062 --> 00:13:00,646 {\an8}ಇಲ್ಲಿ ಮಸಾಲೆ ದೋಸೆ, ಚಹಾ ಕಳಿಸಿ! 166 00:13:04,771 --> 00:13:08,478 ಈ ವಡಾ ಪಾವ್‌ನವನು ಹೇಳಿದ, ಇಂದು ಉದಯೋನ್ಮುಖ, ಸುಂದರ, ಪ್ರತಿಭಾವಂತ ಹುಡುಗಿ 167 00:13:08,479 --> 00:13:09,937 ನಿರ್ದೇಶಕನಿಗೆ ಹೊಡೆದಳಂತೆ. 168 00:13:10,271 --> 00:13:13,104 ಮೆಚ್ಚಬೇಕು ಅವಳನ್ನು. ನೇರವಾಗಿ ನಿರ್ದೇಶಕರಿಗೇನಾ? 169 00:13:16,479 --> 00:13:19,353 ತಗೋ, ಏನಾದರೂ ತಿನ್ನು. ನಿನಗೆ ಹಸಿವಾಗಿರಬೇಕು. 170 00:13:19,354 --> 00:13:21,562 - ತಗೋ. - ನನಗೆ ಆ ಪಾತ್ರ ಬೇಕಿತ್ತು. 171 00:13:22,646 --> 00:13:26,396 ಬನಿ, ಹಿಂದಿಯಲ್ಲಿ ಹೇಳ್ತಾರಲ್ಲ? ಬೀದಿಗೆ ಬೀಳುತ್ತೇನೆ ಅಂತ? 172 00:13:26,729 --> 00:13:28,271 - ರಸ್ತೆಯ ಮೇಲೆ. - ರಸ್ತೆಯ ಮೇಲೆ. 173 00:13:28,979 --> 00:13:31,396 ಅದು ನಾನೇ, ಅಕ್ಷರಶಃ. 174 00:13:35,187 --> 00:13:36,937 ಎಷ್ಟೋ ತಿಂಗಳಿಂದ ಬಾಡಿಗೆ ಕಟ್ಟಿಲ್ಲ. 175 00:13:38,687 --> 00:13:41,312 ನಾನು ಎಲ್ಲೆಡೆ ಪ್ರಯತ್ನಿಸಿದೆ, ಆದರೆ ಕೆಲಸವಿಲ್ಲ. 176 00:13:42,896 --> 00:13:45,771 ನಾನು ನಿಷ್ಪ್ರಯೋಜಕಳು ಅನಿಸುತ್ತೆ. ಏನು ಮಾಡುತ್ತಿದ್ದೇನೆ? 177 00:13:46,687 --> 00:13:48,479 ಯಾರಿಗಾಗಿ ಮಾಡುತ್ತಿದ್ದೇನೆ? 178 00:13:49,062 --> 00:13:50,770 ನಾನು ಇಲ್ಲಿ ಏನು ಮಾಡುತ್ತಿದ್ದೇನೆ? 179 00:13:50,771 --> 00:13:52,270 ನಾನೇಕೆ ಬಾಂಬೆಗೆ ಬಂದೆ? 180 00:13:52,271 --> 00:13:53,811 - ಹನಿ... - ನಾನು ನಿಷ್ಪ್ರಯೋಜಕಿ. 181 00:13:53,812 --> 00:13:56,729 ಹನಿ, ಮೊದಲು ಏನಾದರೂ ತಿನ್ನು. ಎಲ್ಲವನ್ನೂ ನಂತರ ಹೇಳು. 182 00:13:57,812 --> 00:13:59,729 ಸಾಕಾಯಿತು. ಸಾಕು. 183 00:14:00,354 --> 00:14:03,020 ಏನಿದು "ಸಾಕು, ನಿಷ್ಪ್ರಯೋಜಕಿ, ಮುಗೀತು"? ಇದೆಲ್ಲಾ ಏನು? 184 00:14:03,021 --> 00:14:05,311 ಜನರು ಇಲ್ಲಿ ನಿನಗೆಷ್ಟು ಬೆಲೆ ಕೊಡುತ್ತಾರೆ! 185 00:14:05,312 --> 00:14:09,396 ನಿನ್ನ ಬಗ್ಗೆ ಎಷ್ಟು ಕಾಳಜಿವಹಿಸುತ್ತೇನೆ. ಒಂದು ಮೃದು ಭಾವನೆ ಇದೆ. ನಿಜವಾಗಲೂ. 186 00:14:09,729 --> 00:14:11,979 ಹನಿ, ನನ್ನನ್ನು ನೋಡು. ನನ್ನನ್ನು ನೋಡು. 187 00:14:13,604 --> 00:14:14,937 ಹನಿ, ನೀನು ನಿಷ್ಪ್ರಯೋಜಕಳಲ್ಲ. 188 00:14:15,896 --> 00:14:18,896 ನೀನು ಭವಿಷ್ಯದಲ್ಲಿ ದೊಡ್ಡ ಕೆಲಸ ಮಾಡುವೆ ಎಂದು ನಾನು ನಂಬುವೆ. 189 00:14:24,187 --> 00:14:25,770 ನನಗೆ ಈಗ ಹಣದ ಅವಶ್ಯಕತೆ ಇದೆ. 190 00:14:25,771 --> 00:14:29,271 - ನಿನಗೆ ಎಷ್ಟು ಹಣ ಬೇಕು? ನಾನು ಕೊಡ್ತೀನಿ. - ನನಗೆ ದಾನ ಬೇಡ. 191 00:14:36,687 --> 00:14:37,771 ನಿನಗಂತ ಒಂದು ಕೆಲಸ ಇದೆ. 192 00:14:41,104 --> 00:14:44,229 ಬರೀ ಸ್ಟಂಟ್ ಮಾಡಿಕೊಂಡು ಜೀವನ ನಡೆಸುತ್ತೇನೆ ಅಂದುಕೊಂಡೆಯಾ? 193 00:14:44,937 --> 00:14:47,479 ಬೇರೆ ಕೆಲಸಗಳನ್ನೂ ಮಾಡುತ್ತೇನೆ. ಹೆಚ್ಚಿನ ಹಣಕ್ಕಾಗಿ. 194 00:14:49,062 --> 00:14:50,104 ಏನು ಕೆಲಸ? 195 00:14:52,187 --> 00:14:53,187 ನಟನೆಯಂತೆಯೇ. 196 00:14:53,979 --> 00:14:57,979 ಆದರೆ ಚಿತ್ರೀಕರಣ ಇಲ್ಲ, ಕ್ಯಾಮೆರಾ ಇಲ್ಲ. ನಿಜ ಜೀವನ. 197 00:15:00,396 --> 00:15:02,811 ಒಬ್ಬರ ಜೊತೆ ನೀನು 30 ನಿಮಿಷ ಕಳೆಯಬೇಕು. 198 00:15:02,812 --> 00:15:04,561 ಯಾರ ಜೊತೆಯೋ ನಾನು ಮಲಗಬೇಕಾ? 199 00:15:04,562 --> 00:15:08,187 ಛೀ! ಹಾಗೆ ಹೇಳಿದೆನಾ? ನಿನಗೆ ಹಾಗೆ ಹೇಳ್ತೀನಾ... 200 00:15:09,021 --> 00:15:13,062 ಸರಿ, ಕ್ಷಮಿಸು. ಆದರೆ ಅಪಾಯ ಇದ್ದಂತಿದೆ, ಅನುಮಾನಾಸ್ಪದವಾಗಿ ಕೂಡ. 201 00:15:14,562 --> 00:15:15,979 ಧನ್ಯವಾದ, ಆದರೆ ಬೇಡ. 202 00:15:22,437 --> 00:15:24,603 ಮೇಡಂ, ರೂಂ 203, ಅಲ್ವಾ? 203 00:15:24,604 --> 00:15:27,061 - ಸಾಮಾನು ತಗೊಂಡು ಹೋಗಿ. - ಹೀಗೆ ಹೇಗೆ ಮಾಡ್ತೀರಿ? 204 00:15:27,062 --> 00:15:28,978 ಹೇಳದೆ ವಸ್ತುಗಳನ್ನು ಎಸೆದಿದ್ದೀರಿ? 205 00:15:28,979 --> 00:15:30,478 ಎರಡು ದಿನ ಕಾಯಿರಿ ಅಂದೆನಲ್ಲ? 206 00:15:30,479 --> 00:15:32,979 ವ್ಯವಸ್ಥಾಪಕರು ಕಾಯಲು ಆಗಲ್ಲ ಅಂದರು. ತಗೊಂಡು ಹೋಗಿ. 207 00:15:33,979 --> 00:15:36,436 ಪೂರ್ತಿ ಹಣವನ್ನು ಚಡ್ಡಾ ಅಂಕಲ್‌ಗೆ ಕೊಟ್ಟು ಹೋಗುವೆ. 208 00:15:36,437 --> 00:15:38,603 ಸದ್ಯಕ್ಕೆ ಸಾಮಾನು ತಗೊಂಡು ಅವರ ಜೊತೆ ಮಾತಾಡಿ. 209 00:15:38,604 --> 00:15:41,228 ಇದು ಅಪಹಾಸ್ಯ! ಹೆಂಗಸರಿಗೆ ಹೀಗೆ ಮಾಡಬಾರದು. 210 00:15:41,229 --> 00:15:42,686 ಇದರಲ್ಲಿ ನನ್ನ ತಪ್ಪೇನಿದೆ? 211 00:15:42,687 --> 00:15:45,354 - ಪೊಲೀಸ್ ಕರೆಸುತ್ತೇನೆ. - ಸರಿ. ಯಾರನ್ನಾದರೂ ಕರೆಸು. ಹೋಗು! 212 00:15:58,062 --> 00:16:00,062 ಹಾಸಿಗೆಯನ್ನು ಅಲ್ಲಿಡು. 213 00:16:03,104 --> 00:16:06,311 ಇಲ್ಲಿ ನಮಗೇ ಉಸಿರಾಡಲು ಜಾಗವಿಲ್ಲ, ನೀನು ಇನ್ನೊಬ್ಬಳನ್ನು ಕರೆಸಿದೆಯಾ? 214 00:16:06,312 --> 00:16:07,396 ಹಣ ಕೊಡುತ್ತಾಳಾ? 215 00:16:18,187 --> 00:16:21,729 {\an8}ಫಿಯರ್ಲೆಸ್ ನಾಡಿಯಾ ಡೈಮಂಡ್ ಕ್ವೀನ್ - ಏನೇ ಆದರೂ ಪ್ರಯತ್ನಿಸುವೆ!! 216 00:16:37,979 --> 00:16:41,979 ಡೇವಿಡ್ ಡಿ'ಸೋಜಾ ಒಂದು ಹೈ-ಟೆಕ್ ವಸ್ತುವಿನ ದಲ್ಲಾಳಿಗಾಗಿ ಬಾಂಬೆಗೆ ಬರುತ್ತಿದ್ದಾನೆ. 217 00:16:42,937 --> 00:16:45,103 ಅವನ ಓಡಾಟಗಳ ಬಗ್ಗೆ ಏನು ಮಾಹಿತಿ ಇದೆ? 218 00:16:45,104 --> 00:16:47,853 ಅವನು ಕೆಲವು ಗಂಟೆಗಳಿಗಷ್ಟೇ ಬಾಂಬೆಗೆ ಬರುತ್ತಿದ್ದಾನೆ. 219 00:16:47,854 --> 00:16:50,561 ಆ ತಂತ್ರಜ್ಞಾನ ರಾತ್ರಿ ತಗೊಂಡು ಹೋಟೆಲಿಗೆ ಹೋಗುವನು, 220 00:16:50,562 --> 00:16:52,270 ಬೆಳಗ್ಗೆ ಲಂಡನಿಗೆ ಹೊರಡುವನು. 221 00:16:52,271 --> 00:16:54,311 ಹಾಗಾಗಿ, ನಮಗೆ ಹೆಚ್ಚಿನ ಸಮಯವಿಲ್ಲ. 222 00:16:54,312 --> 00:16:57,146 ಹೋಟೆಲ್ ಮತ್ತು ಕೋಣೆಯ ಸಂಖ್ಯೆ ತಿಳಿದುಕೊಂಡಿದ್ದು ನಾನೇ. 223 00:16:57,521 --> 00:16:59,853 ಧನ್ಯವಾದ, ಲೂಡೋ. ನೀನಿಲ್ಲದೆ ನಮ್ಮಿಂದೇನಾಗುತ್ತೆ? 224 00:16:59,854 --> 00:17:01,061 ಖಂಡಿತವಾಗಿ. 225 00:17:01,062 --> 00:17:03,603 ಆದರೆ ಜಾಗರೂಕರಾಗಿರಬೇಕು. ಅವನಿಗೆ ಭದ್ರತೆ ಇರುತ್ತೆ. 226 00:17:03,604 --> 00:17:05,396 ಮತ್ತು ಈ ಶಸ್ತ್ರಾಸ್ತ್ರ ವಿತರಕರಿಗೆ 227 00:17:05,521 --> 00:17:06,771 ಸ್ವಲ್ಪ ಶೋಕಿ ಜಾಸ್ತಿ. 228 00:17:08,021 --> 00:17:10,145 ಇಲ್ಲಿ ಗಮನ ಕೊಡಿ! ಇದು ಗಂಭೀರ ವಿಷಯ. 229 00:17:10,146 --> 00:17:12,521 ನಾನೇನು ಮಾಡುತ್ತಿದ್ದೇನೆ? ಆಟವಾಡುತ್ತಿದ್ದೇನಾ? 230 00:17:13,646 --> 00:17:15,770 - ಕೆಲಸವೇ. - ಕಳ್ಳ ಬಜಾರಿನ ವಸ್ತುಗಳ ಜೊತೆ? 231 00:17:15,771 --> 00:17:17,270 ಅವುಗಳೇ ಉತ್ತಮ, ಗೊತ್ತಾ? 232 00:17:17,271 --> 00:17:19,853 ಇದಕ್ಕಿಂತ ಅಗ್ಗ ಮತ್ತು ಉತ್ತಮವಾಗಿ ಎಲ್ಲೂ ಸಿಗಲ್ಲ. 233 00:17:19,854 --> 00:17:23,520 ಏನು ಮಾಡ್ತಿದ್ದೀನಿ ಅಂತ ನೋಡು. ಸಂವಹನ ಎಷ್ಟು ಗಟ್ಟಿ ಆಗುತ್ತೆ ನೋಡು! 234 00:17:23,521 --> 00:17:25,436 - ಯೋಜನೆ ಏನು? - ಅದು ಸರಳವಾಗಿದೆ. 235 00:17:25,437 --> 00:17:28,353 ಡಿಸೋಜನ ಕೋಣೆಗೆ ಹೊಕ್ಕು ಆ ತಂತ್ರಜ್ಞಾನ ಕದಿಯಬೇಕು, 236 00:17:28,354 --> 00:17:30,686 ಆಗ ಲೂಡೋ ಅದರ ಜೊತೆ ಸಂಭೋಗಿಸಬಹುದು. 237 00:17:30,687 --> 00:17:33,020 ಯಾರಿಗೂ ಹಾನಿಯಾಗದಂತೆ ಹೋಗಿ ಬರಬೇಕು. ಗೊತ್ತಾಯ್ತಾ? 238 00:17:33,021 --> 00:17:35,896 ಅದ್ಭುತ ಯೋಜನೆ. ಶ್ರೇಷ್ಠ ನಾಯಕತ್ವ! 239 00:18:18,062 --> 00:18:19,062 ಹನಿ? 240 00:18:19,687 --> 00:18:22,771 ನಾನು ಆ ಕೆಲಸ ಮಾಡುತ್ತೇನೆ. ಏನು ಮಾಡಬೇಕು? 241 00:18:43,271 --> 00:18:45,270 ಶುಭಂ 242 00:18:45,271 --> 00:18:46,562 ನಿರ್ದೇಶನ ಆರ್ಯಮಾನ್ ಚೌಧರಿ 243 00:19:27,396 --> 00:19:29,562 ವಿಗೆ ಕರೆ ಮಾಡು. 244 00:19:33,521 --> 00:19:36,979 ಅಂಕಲ್, ಒಂದು ಸ್ಥಳೀಯ ಕರೆ ಮಾಡಬೇಕು. ಈ ನಂಬರ್ ಡಯಲ್ ಮಾಡ್ತೀರಾ? 245 00:19:37,979 --> 00:19:39,896 432731. 246 00:19:40,354 --> 00:19:43,437 ಮಗು, ನಿನ್ನ ತಂದೆ-ತಾಯಿ ಹೇಳಿದರೆ ಮಾಡುತ್ತೇನೆ. 247 00:19:44,104 --> 00:19:46,062 ಇರಲಿ ಬಿಡಿ. ನಾನೇ ಮಾಡಿಕೊಳ್ತೀನಿ. 248 00:19:46,896 --> 00:19:47,854 ಹೇ! 249 00:19:57,646 --> 00:19:58,979 - ಹಲೋ? - ವಿ ಅಂಕಲ್? 250 00:19:59,687 --> 00:20:00,603 ನಾಡಿಯಾ? 251 00:20:00,604 --> 00:20:03,812 ತಡವಾದರೆ ನಿಮಗೆ ಕರೆ ಮಾಡಲು ಹನಿ ಹೇಳಿದರು. 252 00:20:05,312 --> 00:20:07,187 - ಆಕೆ ಇನ್ನೂ ವಾಪಸ್ ಬಂದಿಲ್ವಾ? - ಇಲ್ಲ. 253 00:20:08,354 --> 00:20:10,520 - ಸರಿ, ಇರು. ಮನೆಗೆ ಬರುತ್ತೇನೆ. - ವಿ ಅಂಕಲ್? 254 00:20:10,521 --> 00:20:12,437 - ಹಾಂ? - ನೀವು ನನ್ನನ್ನು ಕರೆದೊಯ್ಯಬೇಕು. 255 00:20:14,562 --> 00:20:16,646 ಕರೆದೊಯ್ಯಬೇಕಾ? ಎಲ್ಲಿಂದ? ಈಗ ಎಲ್ಲಿದ್ದೀಯಾ? 256 00:20:17,271 --> 00:20:18,354 ಸಿನಿಮಾ ನೋಡ್ತಿದ್ದೇನೆ. 257 00:20:21,396 --> 00:20:24,354 1992 ಬಾಂಬೆ 258 00:20:39,604 --> 00:20:42,228 - ಅಷ್ಟೆಲ್ಲಾ ಆದಮೇಲೂ? - ಏನು ಅಷ್ಟೆಲ್ಲಾ? 259 00:20:42,229 --> 00:20:43,811 - ಎಣಿಸು. - ಎಣಿಸಬೇಕಾ? 260 00:20:43,812 --> 00:20:44,770 - ಸೊನ್ನೆ! - ಎಣಿಸಲೇ? 261 00:20:44,771 --> 00:20:47,020 ಸೊನ್ನೆ, ನೀನು ಮಾಡಿರೋದು! ಬರೀ ಒತ್ತಡ ಕೊಟ್ಟೆ. 262 00:20:47,021 --> 00:20:48,311 ನನ್ನ ಕೂದಲು ಬೆಳ್ಳಗಾಯಿತು. 263 00:20:48,312 --> 00:20:50,978 ಹೀರೋ ಆಗಲು ಬಂದೆ, ಹೀರೋ ಗೆಳೆಯನಾಗಿ ಉಳಿದೆ! 264 00:20:50,979 --> 00:20:52,311 - ಥೂ! - ಎಷ್ಟು ಧೈರ್ಯ ನಿನಗೆ? 265 00:20:52,312 --> 00:20:53,645 ನಿನಗಾಗಿ ಏನೆಲ್ಲಾ ಮಾಡಿದೆ! 266 00:20:53,646 --> 00:20:57,895 ನನಗೇನು ಸಿಕ್ಕಿತು? ಈ ನಕಲಿ ವಸ್ತುಗಳೇ? 267 00:20:57,896 --> 00:21:00,478 ಅಗ್ಗದ, ಅಗ್ಗದ ಉಡುಗೊರೆಗಳು. 268 00:21:00,479 --> 00:21:02,395 - ಎಲ್ಲಾ ತಗೊಂಡು ಹೋಗು! - ಹೇ! 269 00:21:02,396 --> 00:21:05,145 ಮುಂಚೆ ದೊಡ್ಡ ಬ್ರಾಂಡ್‌ಗಳದ್ದೇ ಧರಿಸುತ್ತಿದ್ದೆ, ಅಲ್ವಾ? 270 00:21:05,146 --> 00:21:07,853 ನಕಲು ತಂದುಕೊಟ್ಟಿದ್ದರಿಂದಲೇ ನಿನಗೆ ಬ್ರಾಂಡು ಗೊತ್ತಾಯ್ತು. 271 00:21:07,854 --> 00:21:09,187 ಡೇವಿಡ್‌ನ ರೂಂ 1101. 272 00:21:09,646 --> 00:21:12,686 - ಆ ಹೈ-ಟೆಕ್ ಡಿಸ್ಕ್ ನೋಡಲು ಹೇಗಿರುತ್ತೆ? - ಅಂದರೆ? 273 00:21:12,687 --> 00:21:15,020 ದುಂಡಾಗಿಯೇ? ಚೌಕಾಕಾರವೇ? ನಿನ್ನ ಮುಖದಂತೆಯೇ? 274 00:21:15,021 --> 00:21:16,603 - ಹೀಗೆ ಕಾಣುತ್ತೆ. - ಬೇವರ್ಸಿ! 275 00:21:16,604 --> 00:21:17,936 ಹೇ, ಗಾಂಚಲಿ ಬಿಡ್ರೋ. 276 00:21:17,937 --> 00:21:19,353 - ಇದನ್ನು ಮಾಡಬೇಡ. - ಮುಚ್ಚೋ. 277 00:21:19,354 --> 00:21:21,561 ನೋಡು, ಯೋಜನೆ ತುಂಬಾ ಸರಳ. 278 00:21:21,562 --> 00:21:24,186 ಹನಿ ಹೆಚ್ಚಿನ ಹೊತ್ತು ಡೇವಿಡ್ ಗಮನ ಸೆಳೆಯಲಾಗದು. 279 00:21:24,187 --> 00:21:26,728 ಈ ತಂತ್ರಜ್ಞಾನ ಹುಡುಕಲು ನಮಗೆ ಹೆಚ್ಚಿನ ಸಮಯವಿಲ್ಲ, 280 00:21:26,729 --> 00:21:29,896 ಇದು, ಲೂಡೋ ಪ್ರಕಾರ, ಹೇಗಾದರೂ ಕಾಣಬಹುದು. ಅಲ್ವಾ? 281 00:21:30,437 --> 00:21:32,561 ಹಾಂ. ಬಹಳ ಬೇಗ ಒಳಗೆ ಹೊಕ್ಕಿ ಹೊರಬರಬೇಕು. 282 00:21:32,562 --> 00:21:34,645 ಏನು ಗೊತ್ತಾ? ಹಾಳಾಗಿ ಹೋಗು! 283 00:21:34,646 --> 00:21:36,436 ಹೋಗು! ನೀನೇ ಹಾಳಾಗಿ ಹೋಗು! 284 00:21:36,437 --> 00:21:37,687 ಹಾಂ, ಹೋಗುತ್ತೇನೆ. 285 00:21:53,896 --> 00:21:55,354 ನಿಮ್ಮ ಕರುಣೆಗೆ ಧನ್ಯವಾದಗಳು. 286 00:21:56,771 --> 00:21:57,771 ಪರವಾಗಿಲ್ಲ. 287 00:21:59,562 --> 00:22:00,562 ನನಗೆ ಪಾನೀಯ ಬೇಕು. 288 00:22:04,062 --> 00:22:05,061 ಬೆಂಕಿ ಥರ ಇತ್ತಲ್ವಾ? 289 00:22:05,062 --> 00:22:07,561 ಬೆಂಕಿನಾ? ಲಾವಾರಸದಂತಿತ್ತು! ನೀನು ಅದ್ಭುತ. 290 00:22:07,562 --> 00:22:11,186 ನಿಜ ಜೀವನದಲ್ಲಿ ಚೆನ್ನಾಗಿ ನಟಿಸುತ್ತೀಯ. ಕ್ಯಾಮೆರಾ ಮುಂದೆ ನಿನಗೇನಾಗುತ್ತೆ? 291 00:22:11,187 --> 00:22:15,520 - ಇನ್ನೊಂದು ಮಾತು ಆಡಿದರೆ ಏನು ಮಾಡ್ತೀನಿ ನೋಡು. - ನಿನ್ನನ್ನು ಪ್ರಶಂಸಿಸುತ್ತಿದ್ದೆ. 292 00:22:15,521 --> 00:22:17,811 ಆದರೆ ನಿನ್ನ ಪ್ರಿಯಕರ ಜಾಸ್ತಿ ಮಾಡ್ತಿದ್ದ. 293 00:22:17,812 --> 00:22:19,353 ಆತ ಫರ್ಝಿ ನಟನೇ? 294 00:22:19,354 --> 00:22:22,228 ಪಾಪ ಭುವನ್. ಹತ್ತು ತಿಂಗಳಿಂದ ಅವನಿಗೆ ಪಾತ್ರ ಸಿಕ್ಕಿಲ್ಲ. 295 00:22:22,229 --> 00:22:24,353 ಅದಕ್ಕಾಗಿಯೇ ಎಲ್ಲಾ ನಟನೆ ಇಲ್ಲೇ ಮಾಡಿದ. 296 00:22:24,354 --> 00:22:26,353 ಹನಿ, ಡೇವಿಡ್ ವಾಪಸ್ ಬರ್ತಾನೆ ಅನಿಸುತ್ತಾ? 297 00:22:26,354 --> 00:22:29,186 ಬರುತ್ತಾನೆ. ಮಾದಕ ಹುಡುಗಿಯ ಸೂತ್ರ ಯಾವಾಗಲೂ ಫಲಿಸುತ್ತೆ. 298 00:22:29,187 --> 00:22:31,853 ಮಾದಕ ಹುಡುಗಿ ಅಷ್ಟೇ ಅಲ್ಲ, ಅಳುವ ಮಾದಕ ಹುಡುಗಿ. 299 00:22:31,854 --> 00:22:34,436 ಸಂಪರ್ಕ ಸರಿ ಇದೆಯಾ? ಸರಿಯಾಗಿ ಕೇಳಿಸುತ್ತಿದೆಯಾ? 300 00:22:34,437 --> 00:22:36,312 ಸ್ಪಷ್ಟವಾಗಿದೆ, ರೋಮಾಂಚನಕಾರಿಯಾಗಿದೆ. 301 00:22:37,021 --> 00:22:38,395 ತುಂಬಾ ಹೈ-ಟೆಕ್, ಲೂಡೋ! 302 00:22:38,396 --> 00:22:41,021 ನನ್ನ ಹೈ-ಟೆಕ್ ಕೌಶಲ್ಯಗಳನ್ನು ಯಾರೋ ಮೆಚ್ಚಿಕೊಂಡರಲ್ಲ. 303 00:22:43,437 --> 00:22:45,895 - ನನ್ನನ್ನು ಕಾಪಾಡಲು ಡೇವಿಡ್ ಬಂದ. - ಸರಿ. ಗೊತ್ತಾಯ್ತು. 304 00:22:45,896 --> 00:22:47,687 ಹುಡುಗರೇ, ಎಚ್ಚರ! ಹೋಗೋಣ. 305 00:23:00,312 --> 00:23:02,686 ಬಿಡು, ದಯವಿಟ್ಟು ಅಳಬೇಡ. 306 00:23:02,687 --> 00:23:05,062 ನಿನ್ನ ಬಗ್ಗೆ ಯೋಚಿಸಿ ಬೇಜಾರಾಯಿತು. 307 00:23:05,604 --> 00:23:07,646 ನೀನು ಆರಾಮಾಗಿದ್ದೀಯಾ ಅಂತ ನೋಡಲು ಬಂದೆ. 308 00:23:08,854 --> 00:23:10,521 - ಪರ್ವಾಗಿಲ್ಲ, ಸರ್. - ಡೇವಿಡ್. 309 00:23:11,896 --> 00:23:12,812 ಡೇವಿಡ್ ಅಂತ ಕರೆ. 310 00:23:14,646 --> 00:23:15,521 ನೂರಿ. 311 00:23:16,687 --> 00:23:19,021 ನಿನಗೊಂದು ಪಾನೀಯ ಕೊಡಿಸಲೇ, ನೂರಿ? 312 00:23:24,146 --> 00:23:27,187 ಮದುವೆಯಾಗಿದೆ. ನಿನಗೆ ಪಾನೀಯ ಕೊಡಿಸುತ್ತೇನೆ, ಅಷ್ಟೇ. 313 00:23:35,854 --> 00:23:37,812 ಮತ್ತೆ, ಏನು ಕುಡಿಯುತ್ತೀಯ? 314 00:23:39,021 --> 00:23:41,604 - ವೋಡ್ಕಾ ಮಾರ್ಟಿನಿ. - ಆಸಕ್ತಿಕರ ಆಯ್ಕೆ. 315 00:23:43,937 --> 00:23:46,354 ಮಹಿಳೆಗೆ ವೋಡ್ಕಾ ಮಾರ್ಟಿನಿ, ಮತ್ತು ನನಗೆ ಮಾಲ್ಟ್. 316 00:23:56,854 --> 00:23:58,103 ಚಾಕೋ, ಅಲ್ಲಿ ನೋಡು. 317 00:23:58,104 --> 00:24:00,311 ಸಾಧನ ಅಥವಾ ಡಿಸ್ಕ್‌ಗಾಗಿ ಹುಡುಕಿ. 318 00:24:00,312 --> 00:24:02,646 ತಾಂತ್ರಿಕ ವಸ್ತು, ನಿಮ್ಮ ತಿಳುವಳಿಕೆ ಮೀರಿದ್ದು. 319 00:24:13,646 --> 00:24:15,436 ನನಗೆ ಏನೂ ಸಿಗಲಿಲ್ಲ. ನಿನಗೆ? 320 00:24:15,437 --> 00:24:17,186 - ಇಲ್ಲ. - ಲೂಡೋ ಎಲ್ಲಿ? 321 00:24:17,187 --> 00:24:18,562 ಬನಿ, ಚಾಕೋ, 322 00:24:19,271 --> 00:24:20,437 ಇಲ್ಲೊಂದು ಲಾಕರ್ ಇದೆ. 323 00:24:21,979 --> 00:24:24,311 ಏನು ಗೊತ್ತಾ, ತಪ್ಪು ತಿಳಿಯಬೇಡ, 324 00:24:24,312 --> 00:24:27,229 ಆ ಹುಡುಗ ನಿನಗೆ ಲಾಯಕ್ಕಲ್ಲ. 325 00:24:27,854 --> 00:24:31,479 ನಿನ್ನಂಥ ಒಳ್ಳೆಯ ಹುಡುಗಿಯನ್ನು ಬಿಡಲು ಅವನೊಬ್ಬ ಮೂರ್ಖನಾಗಿರಬೇಕು. 326 00:24:31,896 --> 00:24:33,936 ನಾನು ಒಳ್ಳೆಯವಳು ಅಂತ ನಿಮಗೆ ಹೇಗೆ ಗೊತ್ತು? 327 00:24:33,937 --> 00:24:36,646 ಅರೆ. ನಿನ್ನನ್ನು ನೋಡಿಯೇ ಹೇಳಬಲ್ಲೆ. 328 00:24:37,562 --> 00:24:38,770 ಆದರೆ ಅವನು? 329 00:24:38,771 --> 00:24:41,604 ಅವನು ನಿನ್ನ ಜೊತೆ ಜಗಳವಾಡುವಾಗ ನನಗೆ ಕೋಪ ಬರುತ್ತಿತ್ತು. ನಿಜ. 330 00:24:42,146 --> 00:24:43,728 ಅವನಿಗಾಗಿ ನಾನು ಏನೇನು ಮಾಡಿಲ್ಲ? 331 00:24:43,729 --> 00:24:46,562 ನಿನಗೆ ಅವನು ಲಾಯಕ್ಕಲ್ಲ, ಕೇಳು. ನೋಡಿದರೇನೇ ಗೊತ್ತಾಗುತ್ತೆ. 332 00:24:47,479 --> 00:24:49,687 ಅವನ ಗೆಳೆಯನ ಜೊತೆ ಸಂಬಂಧ ಇಟ್ಟುಕೊಂಡೆ, ಅಷ್ಟೇ. 333 00:24:56,979 --> 00:24:58,146 ನನಗೆ ಅರ್ಥವಾಗುತ್ತದೆ. 334 00:24:58,979 --> 00:25:00,896 ಎಲ್ಲರೂ ತಪ್ಪು ಮಾಡುತ್ತಾರೆ. 335 00:25:01,479 --> 00:25:03,020 ಅವನ ಸೋದರಸಂಬಂಧಿ ಜೊತೆಯೂ. 336 00:25:03,021 --> 00:25:08,521 ಅಂದರೆ, ಎಷ್ಟು ಸಲ, ಎರಡು... ನಾಲ್ಕು ಸಲ. ಬರೀ-ಬರೀ ನಾಲ್ಕು ಸಲ. 337 00:25:11,771 --> 00:25:14,479 ಸರಿ, ಸಂಬಂಧ ಅಂದರೆ ಸಂಬಂಧವೇ. 338 00:25:15,187 --> 00:25:18,020 ಯಾರನ್ನು ಪ್ರೀತಿಸುತ್ತೇವೆ ಅನ್ನೋದೇ ಮುಖ್ಯ. 339 00:25:18,021 --> 00:25:19,895 ಇದು ಪ್ರೀತಿಯ ಬಗ್ಗೆ ಅಲ್ಲ, ಡೇವಿಡ್. 340 00:25:19,896 --> 00:25:21,687 - ಮತ್ತೆ? - ಇದು ಪ್ರೀತಿಯ ಬಗ್ಗೆ ಅಲ್ಲ. 341 00:25:22,896 --> 00:25:26,271 ಅಂದರೆ, ಒಬ್ಬ ಹೆಣ್ಣಿಗೂ ಬಯಕೆಗಳಿರುತ್ತವೆ, ಅಲ್ವಾ? 342 00:25:30,854 --> 00:25:33,146 ಎಲ್ಲರಿಗೂ ಬಯಕೆಗಳಿರುತ್ತವೆ, ಖಂಡಿತ. 343 00:25:34,187 --> 00:25:36,020 ಪ್ರೀತಿಯದು ತುಂಬಾ ಸಂಕುಚಿತ ಮನಸ್ಸು. 344 00:25:36,021 --> 00:25:39,604 ಖಂಡಿತ. ಇದು ತುಂಬಾ 1980ರ ದಶಕದಂತೆ, ನಿಜವಾಗಿ. 345 00:25:40,604 --> 00:25:42,686 ನಾವು 90ರ ದಶಕದಲ್ಲಿದ್ದೇವೆ, ಅಲ್ವಾ? 346 00:25:42,687 --> 00:25:44,686 ಇದು ಆಧುನಿಕ ಜಗತ್ತು, ಅಲ್ವಾ? 347 00:25:44,687 --> 00:25:46,562 ಇದು ಆಧುನಿಕ ಜಗತ್ತೇ. 348 00:25:47,521 --> 00:25:48,646 ಹೌದು! 349 00:25:52,979 --> 00:25:55,186 - ಇದೇನು ಈಗ? - ಸುಧಾರಿತ ತಂತ್ರಜ್ಞಾನ. 350 00:25:55,187 --> 00:25:56,687 ಈ ವಿಡಿಯೋ ಗೇಮಾ? 351 00:26:00,562 --> 00:26:02,687 ಮೇಲೆ ನೋಡಿ ದೇವರಿಗೆ ಧನ್ಯವಾದ ಅರ್ಪಿಸು... 352 00:26:04,562 --> 00:26:06,562 ...ನಾನು ನಿಮ್ಮ ತಂಡದಲ್ಲಿರುವುದಕ್ಕೆ. 353 00:26:15,562 --> 00:26:16,562 ಸಿಕ್ಕಿತಾ? 354 00:26:20,937 --> 00:26:22,104 ಡಿಸ್ಕ್ ಈ ಕೋಣೆಯಲ್ಲಿಲ್ಲ. 355 00:26:23,521 --> 00:26:25,021 ನಿನ್ನಿಂದ ನನ್ನ ಪತ್ನಿ ನೆನಪಾದಳು. 356 00:26:26,104 --> 00:26:29,896 ಅವಳು ಬಿಟ್ಟುಹೋದಾಗಿನಿಂದ, ಜೀವನ ಬೇಸರವಾಗಿದೆ. 357 00:26:30,896 --> 00:26:34,021 ಹೊರನೋಟಕ್ಕೆ ನಾನು ಸಂತೋಷವಾಗಿ ಕಾಣಬಹುದು, 358 00:26:35,521 --> 00:26:37,687 ಆದರೆ, ಒಳಗೆ... 359 00:26:39,896 --> 00:26:41,062 ನಾನು ಒಳಗೆ ತುಂಬಾ ಮೃದು. 360 00:26:41,812 --> 00:26:43,854 - ಕಾಣುತ್ತಿದೆ. - ಏನು? 361 00:26:45,062 --> 00:26:48,104 ನಿಮ್ಮೊಳಗಿನ ಮೃದುತ್ವ. 362 00:26:53,146 --> 00:26:56,646 ಈ ಮೃದುತ್ವವನ್ನು ಬಿಡು. ನೀನು ಹೇಳಿದ್ದು ಸಂಪೂರ್ಣವಾಗಿ ಸರಿ. 363 00:26:57,562 --> 00:27:00,061 ಏನು ಗೊತ್ತಾ, ನೂರಿ? ನನ್ನ ಕೋಣೆಗೆ ಹೋಗೋಣ, 364 00:27:00,062 --> 00:27:03,603 ಇನ್ನೂ ಸ್ವಲ್ಪ ಕುಡಿಯೋಣ. ಈ ಕ್ಷಣವನ್ನು ಆನಂದಿಸೋಣ. 365 00:27:03,604 --> 00:27:05,229 ಏನೆಂದರೆ, ನಾನು ಹೊರಡಬೇಕು. 366 00:27:06,771 --> 00:27:09,521 - ಈಗಷ್ಟೇ ನೀನು ಬೇಜಾರಾಗಿದ್ದೆ. - ಹಾಂ, ಆದರೆ ಈಗ ಚೆನ್ನಾಗಿದೆ. 367 00:27:10,104 --> 00:27:12,979 ನನ್ನ ಪ್ರಿಯಕರನನ್ನು ಮರೆತೆ. ತುಂಬಾ ಧನ್ಯವಾದ! 368 00:27:19,396 --> 00:27:21,146 ಸೂಳೆ ಮುಂಡೆ! 369 00:27:24,937 --> 00:27:27,021 - ಸೂಪರ್ ಹಿಟ್ಟಾ? ಇಲ್ವಾ? - ಚೆನ್ನಾಗಿತ್ತು. 370 00:27:27,937 --> 00:27:29,354 ನಿಮಗೆ ಬೇಕಿದ್ದದ್ದು ಸಿಕ್ಕಿತಾ? 371 00:27:31,312 --> 00:27:34,146 ಇಲ್ಲ. ಅವನ ಬಳಿಯೇ ಇರಬಹುದು. ಅವನ ಜೇಬಿನಲ್ಲಿ. 372 00:27:35,479 --> 00:27:36,646 ಈಗ ಏನು ಮಾಡುತ್ತೀರಿ? 373 00:27:37,354 --> 00:27:39,854 ಮನೆಗೆ ಹೋಗು. ನಾವು ನೋಡಿಕೊಳ್ಳುತ್ತೇವೆ. ಸರಿನಾ? 374 00:27:40,562 --> 00:27:42,228 ಮಗಾ, ಬೇಗ ಊಟ ಮಾಡ್ತೀನಿ. 375 00:27:42,229 --> 00:27:43,853 - ಪ್ಲಾನ್ ಬಿ. - ಪ್ಲಾನ್ ಬಿ. 376 00:27:43,854 --> 00:27:45,896 - ಮೇಲಿಂದ ಒಳಹೋಗೋಣ. - ಸರಿ. 377 00:27:47,104 --> 00:27:48,104 ನಾನು ತರಬಲ್ಲೆ. 378 00:27:48,812 --> 00:27:50,936 - ಹನಿ, ನೀನು ಹೊರಡು. - ಈಗಲೂ ಅವಕಾಶವಿದೆ. 379 00:27:50,937 --> 00:27:53,812 ಅವನ ಬಳಿ ವಾಪಸ್ ಹೋಗುವೆ. ಆದರೆ ಡಬಲ್... 380 00:27:54,396 --> 00:27:55,604 ಮೂರು ಪಟ್ಟು ಹಣ ಬೇಕು. 381 00:27:59,396 --> 00:28:00,729 ಉತ್ಸುಕಳಾಗಿದ್ದಾಳೆ. ಹೋಗಲಿ. 382 00:28:10,354 --> 00:28:11,854 ನನಗೆ ಪೂರ್ತಿ ಮರೆಯಲಾಗಲಿಲ್ಲ. 383 00:28:14,146 --> 00:28:16,229 - ಏನು? - ನನ್ನ ಪ್ರಿಯಕರನನ್ನು. 384 00:28:17,396 --> 00:28:20,479 ಇನ್ನೂ ಇಲ್ಲಿ ಸಿಲುಕಿಕೊಂಡಿದ್ದಾನೆ. ಸ್ವಲ್ಪ. 385 00:28:22,437 --> 00:28:26,312 ಹೊರಗೆ ಹೋಗಿದ್ದೇ ತಡ, ನಿಮ್ಮ ಜೊತೆ ಎಷ್ಟೋ ಚೆನ್ನಾಗಿತ್ತು ಅನಿಸಿತು. 386 00:28:41,937 --> 00:28:43,478 ಬನಿ, ಅವನು ಸತ್ತಿದ್ದಾನಾ? 387 00:28:43,479 --> 00:28:47,187 ಇಲ್ಲ, ಅದು ಡೋಸ್ ಅಷ್ಟೇ. ಕೆಲವು ಗಂಟೆಗಳ ಕಾಲ ಪ್ರಜ್ಞಾಹೀನನಾಗಿರುತ್ತಾನೆ. 388 00:28:48,729 --> 00:28:50,646 ಎಲ್ಲಾ ಸ್ವಚ್ಛಗೊಳಿಸಿ ಡಿಸ್ಕ್ ತಾ. 389 00:30:04,354 --> 00:30:07,061 ಒಂದು ಚೌಕಕಾರದ ವಸ್ತು ಸಿಕ್ಕಿತು, ಬನಿ. ಕಪ್ಪಗೆ, ತೆಳ್ಳಗೆ. 390 00:30:07,062 --> 00:30:10,520 - ಇಲೆಕ್ಟ್ರಾನಿಕ್ಸ್ ಥರ ಇದೆ. - ಅದೇ ಇರುತ್ತೆ. ತಗೊಂಡು ಹೊರಡು. 391 00:30:10,521 --> 00:30:12,021 ಸರಿ, ಹೊರಡುತ್ತಿದ್ದೇನೆ. 392 00:30:18,562 --> 00:30:19,604 ಹೇ. 393 00:30:22,021 --> 00:30:24,021 - ಯಾರ ಜೊತೆ ಮಾತಾಡುತ್ತಿದ್ದೆ? - ಛೇ! 394 00:30:25,146 --> 00:30:26,021 ಯಾರೂ ಇಲ್ಲ. 395 00:30:28,354 --> 00:30:29,687 ರೆಕಾರ್ಡ್ ಮಾಡ್ತಿದ್ಯಾ? 396 00:30:30,812 --> 00:30:31,646 ನಡಿಯೇ! 397 00:30:32,687 --> 00:30:35,686 ಯೋಚಿಸಲೂ ಬೇಡ. ಕಾರ್ಯವಿಧಾನ ಅನುಸರಿಸಬೇಕು. 398 00:30:35,687 --> 00:30:37,520 - ಅವಳನ್ನು ಬಿಡಲಾಗದು. - ಬೇಡ, ಬನಿ. 399 00:30:37,521 --> 00:30:38,811 - ಅವಳು ನಮ್ಮವಳಲ್ಲ. - ಮಗಾ... 400 00:30:38,812 --> 00:30:40,354 ಏನಂತಲೂ ಅವಳಿಗೆ ಗೊತ್ತಿಲ್ಲ. 401 00:30:44,437 --> 00:30:45,354 ಯಾರು ನೀನು? 402 00:30:46,729 --> 00:30:48,396 ನಾನೊಬ್ಬಳು ನಟಿ ಅಷ್ಟೇ. 403 00:31:01,146 --> 00:31:02,770 ಲೂಡೋ. ನಾನು ಹೋಗಲೇಬೇಕು! 404 00:31:02,771 --> 00:31:05,603 ಮಗಾ, ನಿನ್ನಿಂದ ನಾವು ಸಿಕ್ಕಿಹಾಕಿಕೊಳ್ಳುತ್ತೇವೆ. 405 00:31:05,604 --> 00:31:06,853 ಚಾಕೋ, ಅವನಿಗೆ ಹೇಳೋ. 406 00:31:06,854 --> 00:31:08,478 ಲೋ, ಭದ್ರತೆ ತುಂಬಾ ಬಿಗಿಯಾಗಿದೆ. 407 00:31:08,479 --> 00:31:10,186 ವಾಪಸ್ ಹೋಗಲು ಆಗಲ್ಲ. 408 00:31:10,187 --> 00:31:11,271 ನಾನು ನಿಭಾಯಿಸುವೆ. 409 00:31:12,229 --> 00:31:13,937 - ನಮಗೆ ಡಿಸ್ಕ್ ಸಹ ಬೇಕು. - ಬೇಡ. 410 00:31:20,646 --> 00:31:23,978 ಈ ಒಳ್ಳೆ ಬಟ್ಟೆ ಧರಿಸಲು ನನಗೆ 2000 ಕೊಟ್ಟರು. 411 00:31:23,979 --> 00:31:25,311 ನನ್ನನ್ನು ನಂಬಿ, ಸರ್. 412 00:31:25,312 --> 00:31:28,270 ನನಗೆ ಗೊತ್ತಿಲ್ಲ, ಸರ್. ಚಿತ್ರರಂಗದಲ್ಲಿ ಕೆಲಸ ಮಾಡುತ್ತೇನೆ. 413 00:31:28,271 --> 00:31:29,354 ಯಾರು ದುಡ್ಡು ಕೊಟ್ಟರು? 414 00:31:30,146 --> 00:31:32,312 ಗೊತ್ತಿಲ್ಲ. ದಯವಿಟ್ಟು, ನನ್ನನ್ನು ಬಿಡಿ. 415 00:31:33,021 --> 00:31:37,021 ಸರ್, ದಯವಿಟ್ಟು, ಮುಖದ ಮೇಲೆ ಬೇಡ. ಮುಖದ ಮೇಲೆ ಬೇಡ. 416 00:31:42,396 --> 00:31:45,103 - ಯಾರ ಜೊತೆ ಮಾತಾಡುತ್ತಿದ್ದೆ? - ಗೊತ್ತಿಲ್ಲ, ಸರ್. 417 00:31:45,104 --> 00:31:47,228 ನನ್ನ ಸಂಯೋಜಕರನ್ನು ಕೇಳಿ. 418 00:31:47,229 --> 00:31:50,062 ನನ್ನ ಚೀಲದಲ್ಲಿ ಒಕ್ಕೂಟದ ಕಾರ್ಡ್ ಇದೆ. ಒಂದು ನಿಮಿಷ, ನಾನು... 419 00:31:54,104 --> 00:31:55,521 ವಿಶ್ವನಿಗೆ ಕೆಲಸ ಮಾಡ್ತಿದ್ದೀಯಾ? 420 00:31:56,146 --> 00:31:57,062 ವಿಶ್ವ? 421 00:31:57,937 --> 00:31:59,437 ವಿಶ್ವ ಯಾರೋ ಗೊತ್ತಿಲ್ಲ. 422 00:32:00,021 --> 00:32:01,979 ಸರ್, ದಯವಿಟ್ಟು ನನ್ನನ್ನು ಹೋಗಲು ಬಿಡಿ. 423 00:32:05,104 --> 00:32:07,979 ಹೋಗಬೇಕೆಂದರೆ ಎಲ್ಲವನ್ನೂ ಹೇಳು. 424 00:32:09,729 --> 00:32:11,271 ಇವನು ಯಾರು? ಹಿಡ್ಕೊಳ್ಳಿ ಅವನನ್ನ. 425 00:33:15,187 --> 00:33:16,478 ಏನು ನಡೆಯುತ್ತಿದೆ, ಬನಿ? 426 00:33:16,479 --> 00:33:17,812 ನಿನಗೇನೂ ಆಗಿಲ್ಲ ತಾನೆ? 427 00:33:18,479 --> 00:33:19,479 ಹಾಂ. 428 00:33:20,979 --> 00:33:21,812 ನಡಿ! 429 00:33:23,979 --> 00:33:25,353 ಆದರೆ ಏನು ನಡೆಯುತ್ತಿದೆ? 430 00:33:25,354 --> 00:33:26,895 ಆಮೇಲೆ ಹೇಳ್ತೀನಿ. ನಡಿ! 431 00:33:26,896 --> 00:33:28,937 ನಿನಗೆ ಈ ಥರ ಫೈಟ್ ಮಾಡೋಕೆ ಹೇಗೆ ಗೊತ್ತು? 432 00:33:49,521 --> 00:33:51,229 ಎಲ್ಲಾ ಘಟಕದವರೇ, ಹೋಗೋಣ! 433 00:33:53,021 --> 00:33:54,146 ಬೇಗ, ಹೋಗೋಣ! 434 00:34:04,437 --> 00:34:06,104 ದಯವಿಟ್ಟು ಏನಾದರೂ ಹೇಳುತ್ತೀಯಾ? 435 00:34:06,896 --> 00:34:08,021 - ಧರಿಸಿಕೋ. - ಬನಿ! 436 00:34:09,354 --> 00:34:11,021 ಲೂಡೋ, ಡಿಸ್ಕ್ ಸಿಕ್ಕಿತು. 437 00:34:11,437 --> 00:34:13,770 ಹೋಗಿ, ಅದನ್ನು ರವಾನಿಸು. ನಡೀರಿ! ನಡೀರಿ! 438 00:34:13,771 --> 00:34:16,146 - ಸರಿ. - ಬನಿ, ಏನಾಗುತ್ತಿದೆ? ವಿಶ್ವ ಯಾರು? 439 00:34:17,271 --> 00:34:18,479 - ಯಾರು? - ವಿಶ್ವ. 440 00:34:18,771 --> 00:34:20,646 ಡೇವಿಡ್ ನೀವೆಲ್ಲರೂ ವಿಶ್ವನ ಕಡೆಯವರು ಅಂದ. 441 00:34:21,354 --> 00:34:22,687 ನನಗೆ ವಿಶ್ವ ಗೊತ್ತಿಲ್ಲ. 442 00:34:23,229 --> 00:34:24,853 - ಬೇರೇನಾದರೂ ಕೇಳಿದನಾ? - ಕೇಳುವುದಾ? 443 00:34:24,854 --> 00:34:26,145 ಹೊಡೆದ! ಚೆನ್ನಾಗಿ ಹೊಡೆದ! 444 00:34:26,146 --> 00:34:28,061 ಆದರೂ ನಿಮ್ಮ ಹೆಸರುಗಳನ್ನು ಹೇಳಲಿಲ್ಲ, 445 00:34:28,062 --> 00:34:30,271 - ನೀವು ನನಗೆ ಧನ್ಯವಾದ ಹೇಳಬೇಕು. - ಧನ್ಯವಾದ. ಕೂರು. 446 00:34:34,479 --> 00:34:35,396 ಅವರೇ ಇರಬೇಕು. ನೋಡು. 447 00:34:35,854 --> 00:34:37,229 ಛೇ, ಹೋಗೋಣ! 448 00:34:37,937 --> 00:34:38,854 ಲೋ, ಅವರೇ ಕಣೋ! 449 00:34:47,771 --> 00:34:49,312 ಯೂನಿಟ್ ಫೀನಿಕ್ಸ್, ಬ್ರಾವೋ ಎಲ್ಲೋ? 450 00:34:50,729 --> 00:34:52,354 ಯುನಿಟ್ ಬ್ರಾವೋ ಬರುತ್ತಿದ್ದಾರೆ. 451 00:34:59,562 --> 00:35:02,020 ಇಲ್ಲ, ಇಲ್ಲ, ಇಲ್ಲ! ಜಾರಿಸಬೇಡ! ಜಾರಿಸಬೇಡ! 452 00:35:02,021 --> 00:35:03,312 ಇಲ್ಲ, ಇಲ್ಲ, ಇಲ್ಲ! 453 00:35:04,312 --> 00:35:05,187 ಹುಚ್ಚಾ ನಿನಗೆ? 454 00:35:32,021 --> 00:35:33,021 ಜಗನ್! 455 00:35:34,062 --> 00:35:35,520 ರಾಹಿ, ಹೋಗು! ಜಗನ್‌ಗೆ ಗುಂಡೇಟು! 456 00:35:35,521 --> 00:35:36,604 ಛೆ! 457 00:35:37,854 --> 00:35:38,854 ಜೋರಾಗಿ ಓಡಿಸು! 458 00:35:56,229 --> 00:35:57,062 ಚಾಕೋ, ಬಲಗಡೆಗೆ. 459 00:36:03,396 --> 00:36:04,396 ಹೇ! 460 00:36:05,521 --> 00:36:07,271 ಏನೋ ನೋಡ್ತಿದ್ದೀಯಾ? ನಡಿಯೋ. 461 00:36:30,854 --> 00:36:31,811 ಛೇ! 462 00:36:31,812 --> 00:36:34,020 - ಚಾಕೋ, ನಿನಗೇನೂ ಆಗಿಲ್ಲ ತಾನೆ? - ಹಾಂ. 463 00:36:34,021 --> 00:36:35,896 ನೀನು ಹೊರಡು. ಛೇದಕದ ಬಳಿ ಸಿಗು. 464 00:36:45,521 --> 00:36:46,521 ಅಲ್ಲೇ, ಮುಂದೆ. 465 00:36:58,854 --> 00:36:59,854 ಹನಿ! 466 00:37:19,187 --> 00:37:20,021 ಹನಿ? 467 00:37:23,771 --> 00:37:24,687 ಹನಿ? 468 00:37:25,937 --> 00:37:28,604 ಛೇ! ಹೋರಾಡು. 469 00:38:22,062 --> 00:38:28,021 ನಿರ್ದೇಶಕರು 470 00:38:36,896 --> 00:38:37,979 ಅದು ವಿಶ್ವನಾ? 471 00:38:41,854 --> 00:38:44,812 ನನಗೆ ಖಚಿತವಿದೆ. ಅವರೆಲ್ಲರೂ ವೃತ್ತಿಪರರೇ. 472 00:38:45,896 --> 00:38:47,854 ಕ್ಷಮಿಸಿ, ಡಿಸ್ಕ್ ಅನ್ನು ಕಾಪಾಡಲು ಆಗಲಿಲ್ಲ. 473 00:38:55,562 --> 00:38:57,896 ಆ ಡಿಸ್ಕ್ ಹೇಗೆ ಕಳೆದುಕೊಂಡೆ, ಶಾನ್? 474 00:38:59,854 --> 00:39:04,062 ನಿನಗೆ ಗೊತ್ತು, ವಿಶ್ವನಂಥವರನ್ನು ಮುಗಿಸಲು ಪ್ರಾಜೆಕ್ಟ್ ತಲ್ವಾರ್ ಶುರು ಮಾಡಿದೆವೆಂದು. 475 00:39:04,687 --> 00:39:06,728 ಮತ್ತು ವಿಶ್ವನ ತಂಡ ಡಿಸ್ಕ್ ಕದ್ದರಾ? 476 00:39:06,729 --> 00:39:09,646 ಇದರಲ್ಲಿ ಅತ್ಯಂತ ಕೆಟ್ಟ ಸಂಗತಿ ಏನು ಗೊತ್ತಾ? 477 00:39:10,604 --> 00:39:12,854 ವಿಶ್ವ ಯಾರೆಂದೂ ಕೂಡ ನಮಗೆ ಗೊತ್ತಿಲ್ಲ! 478 00:39:13,854 --> 00:39:15,771 ನಮಗೆ ಬರೀ ಅವನ ಹುಸಿನಾಮವಷ್ಟೇ ಗೊತ್ತು. 479 00:39:22,312 --> 00:39:25,061 ಸರ್, ಇದು ಸುಟ್ಟುಹೋಗಿದೆ. ಇದನ್ನು ಎಸೆಯಬೇಕೇ? 480 00:39:25,062 --> 00:39:26,271 ಬೇಡ, ಬೇಡ, ಇಡು. 481 00:39:29,229 --> 00:39:31,103 ಆದರೆ ಇದನ್ನು ಯಾರು ತಿನ್ನುತ್ತಾರೆ, ಸರ್? 482 00:39:31,104 --> 00:39:32,854 ಇದರ ಜೊತೆ ಸಿಹಿಯನ್ನು ಕೊಡೋಣ. 483 00:39:46,229 --> 00:39:47,562 ಪರವಾಗಿಲ್ಲ. ಪರವಾಗಿಲ್ಲ. 484 00:39:50,437 --> 00:39:52,562 ಮೊದಲು ಕೆಟ್ಟ ಸುದ್ದಿ ಹೇಳು. 485 00:39:55,646 --> 00:39:57,937 ಡೇವಿಡ್ ನಿಮ್ಮ ರಹಸ್ಯ ನಾಮ ಹೇಳಿದ. ವಿಶ್ವ. 486 00:39:58,646 --> 00:40:01,562 ಅವರಿಗೆ ನಮ್ಮ ಮೇಲೆ ಅನುಮಾನವಿದೆ. ಇದು ಝೂನಿಯ ಕಾರ್ಯಾಚರಣೆ. 487 00:40:02,146 --> 00:40:03,604 ಅವಳ ಏಜೆಂಟರೂ ಸಿದ್ಧರಿದ್ದರು. 488 00:40:05,354 --> 00:40:09,146 ನಮ್ಮ ಅವಶ್ಯಕತೆ ಮುಗಿದಾಗ, ನಾವು ಜಗತ್ತಿಗೆ ಭಾರವಾಗುತ್ತೇವೆ. 489 00:40:10,062 --> 00:40:12,729 ಸತ್ತವರಿಗೆ ಏಕೆ ಅಂಟಿಕೊಂಡಿರುತ್ತೇವೆಂದು ಅರ್ಥವಾಗಲ್ಲ. 490 00:40:13,979 --> 00:40:15,146 ಅವನನ್ನು ನೋಡಿಕೊಳ್ಳುವೆ. 491 00:40:16,354 --> 00:40:18,728 ನೀನು ರೋಲೊ ಬಗ್ಗೆ ಚಿಂತಿಸಬೇಕಾಗಿಲ್ಲ. 492 00:40:18,729 --> 00:40:20,311 - ಅವನು ನನ್ನ ಗಂಡನ... - ಗೊತ್ತು. 493 00:40:20,312 --> 00:40:21,771 ಅವನು ರಿಂಜಿ ಸರ್‌ನ ನಾಯಿ. 494 00:40:22,604 --> 00:40:25,436 ನೀನು ನೋಡಿಕೊಳ್ಳಬೇಕಾಗಿದ್ದನ್ನು ನೋಡಿಕೊಳ್ಳಲು ಆಗಲಿಲ್ಲ. 495 00:40:25,437 --> 00:40:27,687 ವಿಶ್ವನಿಗೆ ಡೇವಿಡ್ ಬಗ್ಗೆ ಗೊತ್ತಿತ್ತು. 496 00:40:28,312 --> 00:40:29,562 ಈ ವಿನಿಮಯದ ಬಗ್ಗೆ. 497 00:40:30,104 --> 00:40:32,437 - ಅಂದರೆ... - ಪ್ರಾಜೆಕ್ಟ್ ತಲ್ವಾರ್ ನಡೆಯುತ್ತಿದೆ. 498 00:40:37,396 --> 00:40:40,896 ನನ್ನನ್ನು ಕೇಳದೆ ನೀನು ಜೊತೆ ಸೇರಿಸಿದ ಆ ನಾಗರಿಕಳು? 499 00:40:43,604 --> 00:40:45,604 ಅವಳಿಗೆ ಗಾಯವಾಗಿದೆ, ಆದರೆ ಸರಿಹೋಗುತ್ತಾಳೆ. 500 00:40:50,312 --> 00:40:51,271 ಆದರೆ ಜಗನ್... 501 00:40:54,479 --> 00:40:56,104 ಇದು ನಮ್ಮ ಯುದ್ಧ, ಮಗನೇ. 502 00:40:58,187 --> 00:41:00,479 ಇದಕ್ಕಾಗಿಯೇ ನಮ್ಮ ಬದುಕು, ಸಾವು. ನಿನಗದು ಗೊತ್ತು! 503 00:41:01,271 --> 00:41:03,146 ಇದು ಅಗತ್ಯವಾದ ತ್ಯಾಗ. 504 00:41:08,729 --> 00:41:12,687 ಬುಕಾರೆಸ್ಟ್ 505 00:42:05,937 --> 00:42:06,937 ಹನಿ! 506 00:42:40,896 --> 00:42:43,521 ಜ್ಞಾಪನೆ ಪೋರ್ಟಲ್ ಪರಿಶೀಲಿಸಿ 507 00:42:53,021 --> 00:42:55,020 {\an8}ನೈನಿತಾಲ್ 508 00:42:55,021 --> 00:42:57,686 {\an8}"ರಾಜ ದಶರಥನಿಗೆ ನೀರು ತುಂಬುವ ಶಬ್ದ ಕೇಳಿಸಿತು. 509 00:42:57,687 --> 00:43:00,937 "ತನ್ನ ಬಿಲ್ಲು-ಬಾಣವನ್ನು ತೆಗೆದು, ಹರಿಬಿಟ್ಟನು. 510 00:43:01,812 --> 00:43:04,270 "ನೋವಿನ ಚೀತ್ಕಾರ ಗಾಳಿಯನ್ನು ಸೀಳಿತು. 511 00:43:04,271 --> 00:43:08,687 "ಅಯ್ಯೋ! ರಾಜನು ಅದೊಂದು ಪ್ರಾಣಿ ಅಂದುಕೊಂಡನು, ಆದರೆ ಇಲ್ಲ, ಅದಾಗಿರಲಿಲ್ಲ. 512 00:43:09,979 --> 00:43:12,562 "ಬಡಪಾಯಿ ಶ್ರವಣನಿಗೆ ಬಾಣ ಹೊಡೆದಿದ್ದ. 513 00:43:15,812 --> 00:43:17,770 "ನಂತರ, ರಾಜ ದಶರಥ ಅವನ ಹೆತ್ತವರ ಬಳಿ ಹೋದ. 514 00:43:17,771 --> 00:43:20,436 "ಅವರ ಮನಸ್ಸು ಮುರಿದಿತ್ತು. ಅವರ ಕ್ಷಮೆ ಕೇಳಿದನು. 515 00:43:20,437 --> 00:43:22,561 "ಆದರೆ, ಇಲ್ಲ. ಅವರು ನೋವಿನಲ್ಲಿದ್ದರು. 516 00:43:22,562 --> 00:43:24,436 "ರಾಜ ದಶರಥನಿಗೆ ಶಾಪ ಕೊಟ್ಟರು. 517 00:43:24,437 --> 00:43:28,478 "ನಾವು ಸಾಯುವಂತೆ, ನೀನೂ ನಿನ್ನ ಮಗನನ್ನು ಕಳೆದುಕೊಂಡು ಸಾಯುವೆ." 518 00:43:28,479 --> 00:43:32,187 "ಮತ್ತು ಅವರು ಆ ಹರಿಯುವ ನದಿಯಲ್ಲೇ ಮುಳುಗಿ ಪ್ರಾಣಬಿಟ್ಟರು." 519 00:43:33,771 --> 00:43:38,061 ವಿ ಅಂಕಲ್, ಯಾಕೆ ಯಾವಾಗಲೂ ದುಃಖದ ಕಥೆಗಳನ್ನು ಹೇಳುತ್ತೀರಿ? 520 00:43:38,062 --> 00:43:40,311 ಎಲ್ಲರೂ ಸಾಯುವರು ಅಥವಾ ಹತ್ಯೆಯಾಗುವರು. 521 00:43:40,312 --> 00:43:43,603 - ನಾನಿನ್ನೂ ಮಗು, ಗೊತ್ತಾ? - ಕಂದ, ಓದಲು ಪುಸ್ತಕ ಕೊಟ್ಟಿದ್ದು ನೀನು. 522 00:43:43,604 --> 00:43:46,728 ಹಾಗಿದ್ದರೂ, ನೀನು ಈ ಕಥೆಗಳನ್ನು ತಿಳಿಯಬೇಕು. ಯಾಕೆಂದು ಕೇಳು. 523 00:43:46,729 --> 00:43:47,895 ಯಾಕೆ? 524 00:43:47,896 --> 00:43:50,561 ಯಾಕೆಂದರೆ ಈ ಕಥೆಗಳು ನಮಗೆ ನಮ್ಮ ಸಂಸ್ಕೃತಿ 525 00:43:50,562 --> 00:43:52,479 ಮತ್ತು ಇತಿಹಾಸದ ಬಗ್ಗೆ ತಿಳಿಸುತ್ತವೆ. 526 00:43:53,104 --> 00:43:56,436 ಮುಂದಿನ ಸಲ, ತಮಾಷೆಯ ಕಥೆ ಹೇಳಿ, ಆಯ್ತಾ? 527 00:43:56,437 --> 00:43:59,353 ಮುಂದಿನ ಸಲ, ಅಕ್ಬರ್-ಬೀರಬಲ್ ಕಥೆ ಹೇಳುತ್ತೇನೆ. 528 00:43:59,354 --> 00:44:01,229 ತುಂಬಾ ತಮಾಷೆ ಇರುತ್ತೆ, ನನ್ನನ್ನು ನಂಬು. 529 00:44:02,729 --> 00:44:05,021 ಹನಿ ಎಲ್ಲಿ? ಇನ್ನೂ ವಾಪಸ್ ಬಂದಿಲ್ಲ. 530 00:44:05,646 --> 00:44:06,729 ಈಗಾಗಲೇ ತಡವಾಗಿದೆ. 531 00:44:07,271 --> 00:44:10,771 ಬಂದುಬಿಡುತ್ತಾರೆ! ಇಂಥ ಸಂದರ್ಭಗಳಲ್ಲೇ ನಾವು ತಾಳ್ಮೆಯಿಂದ ಇರಬೇಕು. 532 00:44:11,896 --> 00:44:12,979 ಎಂಥಾ ಸಂದರ್ಭ? 533 00:45:23,812 --> 00:45:24,646 ಛೇ! 534 00:45:49,271 --> 00:45:50,271 ಹೋಗೋಣ. 535 00:46:04,646 --> 00:46:05,561 ಹೇಳಿ? 536 00:46:05,562 --> 00:46:08,437 ಸರ್, ಮಗುವನ್ನು ಕರೆತರಲು ಹನಿ ಕಳಿಸಿದರು. 537 00:46:11,021 --> 00:46:12,146 ನಿಮಗೆ ಹನಿ ಗೊತ್ತಾ? 538 00:46:12,646 --> 00:46:13,604 ಹಾಂ, ಸರ್. 539 00:46:14,896 --> 00:46:17,146 ತನ್ನ ಮಗಳು ಮಾಯಾಳನ್ನು ಕರೆತರಲು ಹನಿ ಕಳಿಸಿದರಾ? 540 00:46:17,729 --> 00:46:19,021 ಹಾಂ, ಸರ್. ಮಾಯಾ ಇದ್ದಾಳಾ? 541 00:46:21,771 --> 00:46:24,437 ಅವಳ ಹೆಸರು ಮಾಯಾ ಅಲ್ಲ. ನೀನು ಯಾರು? 542 00:46:32,229 --> 00:46:35,479 {\an8}ಬುಕಾರೆಸ್ಟ್ 543 00:46:45,687 --> 00:46:47,979 ಬ್ರೇಕ್ ಡ್ಯಾನ್ಸರ್‌ನಿಂದ 1 ಹೊಸ ಸಂದೇಶ 544 00:47:00,062 --> 00:47:01,229 ಅತಿ ಬುದ್ಧಿವಂತ ಪೆಕ್ರ! 545 00:47:04,771 --> 00:47:06,729 ಏನು ನೋಡುತ್ತಿದ್ದೀರಿ? ಅವಳನ್ನ ಹುಡುಕಿ. 546 00:47:14,937 --> 00:47:19,561 ಬ್ರೇಕ್ ಡ್ಯಾನ್ಸರ್: ಹನಿ ಬದುಕಿದ್ದಾಳೆ. ನಿನಗೆ ಮಗಳಿದ್ದಾಳೆ. 547 00:47:19,562 --> 00:47:23,604 ಅವರು ಅಪಾಯದಲ್ಲಿದ್ದಾರೆ. ಎಲ್ಲೋ ನೈನಿತಾಲ್‌ನಲ್ಲಿ. 548 00:47:30,312 --> 00:47:32,104 ಕಾಪಾಡಿ 549 00:47:37,521 --> 00:47:39,687 ಇಲ್ಲ, ಇಲ್ಲ, ಇಲ್ಲ, ಇಲ್ಲ! ಛೇ! 550 00:49:33,854 --> 00:49:35,853 ಉಪ ಶೀರ್ಷಿಕೆ ಅನುವಾದ: ಸುಜಿತ್ ವೆಂಕಟರಾಮಯ್ಯ 551 00:49:35,854 --> 00:49:37,937 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ