1 00:00:06,048 --> 00:00:08,592 ಈ ಹಿಂದೆ ಸ್ಪೈಡರ್-ನುಆನಲ್ಲಿ 2 00:00:09,760 --> 00:00:10,761 ಏನದು? 3 00:00:11,512 --> 00:00:14,347 ಅಲೌಕಿಕ ಶಕ್ತಿಯ ವ್ಯಕ್ತಿಗಳನ್ನು ಸಾಧಾರಣವಾಗಿಸುತ್ತೆ. 4 00:00:14,348 --> 00:00:16,975 ರೂಬಿ ಸತ್ತಾಗಿನಿಂದ ನೀನು ಒಂದು ಕೂಪ ಸೇರಿಬಿಟ್ಟಿದ್ದೀಯ, 5 00:00:16,976 --> 00:00:18,435 ಆಮೇಲೆ ಅಗೆಯುವುದನ್ನು ನಿಲ್ಲಿಸಿಯೇ ಇಲ್ಲ. 6 00:00:18,436 --> 00:00:21,147 ಈಗ ಆ ಗಾರೆಯನ್ನು ಬಿಸಾಡುವ ಸಮಯ ಬಂದಿದೆ. 7 00:00:21,439 --> 00:00:23,189 {\an8}ನಾನು ಎಲ್ಲರಿಗೂ ಚುಚ್ಚಬೇಕಾಗುತ್ತೆ. 8 00:00:23,190 --> 00:00:25,818 ಅವರೆಲ್ಲ ಮುಕ್ತರಾದ ಮೇಲೆ, ನನ್ನ ಸರದಿ. 9 00:00:26,527 --> 00:00:28,361 ಇನ್ನು ಅನಾರೋಗ್ಯದ ಮಾಜಿ ಸೈನಿಕರಿರಲ್ಲ, 10 00:00:28,362 --> 00:00:30,281 ಅವರ ಕಷ್ಟಗಳೂ ಇರಲ್ಲ. ದ ಸ್ಪೈಡರ್ ಕೂಡ ಇರಲ್ಲ. 11 00:00:32,032 --> 00:00:33,324 ಇದೆಲ್ಲಾ ಏನು? 12 00:00:33,325 --> 00:00:34,618 ಇವರೆಲ್ಲಾ ಸತ್ತಿದ್ದಾರೆ! 13 00:00:35,161 --> 00:00:36,619 ವೈದ್ಯರ ಪ್ರಯೋಗಾಲಯಕ್ಕೆ ಹೋಗಿದ್ದೆವು. 14 00:00:36,620 --> 00:00:38,538 - ಇದರಿಂದ ಹೊರಬರಲು ದಾರಿ ಇಲ್ಲ. - ನಿನಗದು ಗೊತ್ತಿಲ್ಲ. 15 00:00:38,539 --> 00:00:41,166 ನಾನು ಸಿಲ್ವರ್‌ಮೇನ್‌ಗೆ ನಿಜ ಹೇಳಲ್ಲ, ಆದರೆ ಅವನು ಜಾಣ. 16 00:00:41,167 --> 00:00:42,752 ಎಂದಾದರೂ ಅವನಿಗೆ ನೀನು ಮಾಡಿದ್ದು ತಿಳಿಯುತ್ತೆ. 17 00:00:52,052 --> 00:00:53,220 ಇಲ್ಲ, ಈಗಲ್ಲ. ಬಾ. 18 00:00:57,892 --> 00:01:00,102 ಒಳಗೆ ಬಾ. ಹೋಗೋಣ, ಹೋಗೋಣ! 19 00:01:02,271 --> 00:01:03,855 ಅವನನ್ನು ವೈದ್ಯರ ಬಳಿ ಒಯ್ಯೋದು ಬೇಡವಾ? 20 00:01:03,856 --> 00:01:05,607 ಇಲ್ಲ. ಅವನಿಗೆ ವಿಶ್ರಾಂತಿ ಬೇಕು ಅಷ್ಟೇ. 21 00:01:05,608 --> 00:01:06,900 ಏನದು? 22 00:01:06,901 --> 00:01:09,194 ಅದೇನೋ ಗೊತ್ತಿಲ್ಲ, ಆದರೆ ದೈತ್ಯ ಸೀದಾ ನೆಲಕ್ಕೆ ಬಿದ್ದ. 23 00:01:09,195 --> 00:01:10,737 ಏನು ಮಾಡೋಣ, ಬಾಸ್? 24 00:01:10,738 --> 00:01:12,948 ಸ್ಪೈಡರ್ ಅನ್ನು ಹುಡುಕೋಣ. 25 00:01:13,491 --> 00:01:14,950 - ರೈಲಿಯನ್ನು ತನ್ನಿ. - ರೈಲಿಯನ್ನು ತನ್ನಿ. 26 00:01:20,873 --> 00:01:21,956 ಪೀಠೋಪಕರಣ ಕ್ಯಾಮೆರಾಗಳು 27 00:01:21,957 --> 00:01:23,876 ಬಿ. ರೈಲಿ ಖಾಸಗಿ ಪತ್ತೇದಾರಿ 28 00:01:30,049 --> 00:01:31,217 ಈ ಮೂರ್ಖರನ್ನು ನೋಡು. 29 00:01:32,843 --> 00:01:33,803 ಎಷ್ಟು ಕಳೆದುಹೋಗಿದ್ದಾರೆ. 30 00:01:34,929 --> 00:01:37,348 ಗೊತ್ತಾ, ಒಂದಾನೊಂದು ಕಾಲದಲ್ಲಿ ನಾನೂ ಹೀಗೇ ಇದ್ದೆ. 31 00:01:38,390 --> 00:01:40,267 ಅವರಿಗೆ ಕುರುಡು, ಅವರಿಗದು ಗೊತ್ತೂ ಇಲ್ಲ. 32 00:01:41,143 --> 00:01:44,605 ದಿನೇ ದಿನೇ, ಕುರಿಮಂದೆಗಳಂತೆ ಯಾರದೋ ನಿಯಮಗಳನ್ನು ಅನುಸರಿಸುತ್ತಾ. 33 00:01:44,939 --> 00:01:46,564 ದೇವರೇ, ಎಂದಾದರೂ ಬಾಯಿ ಮುಚ್ಚುತ್ತೀಯಾ? 34 00:01:46,565 --> 00:01:47,399 ಇಲ್ಲ. 35 00:01:48,234 --> 00:01:51,319 ಜಗತ್ತಿನಿಂದ ನನ್ನ ಭವ್ಯ ನುಡಿಮುತ್ತುಗಳನ್ನು ಯಾಕೆ ಕಿತ್ತುಕೊಳ್ಳಲಿ? 36 00:01:51,320 --> 00:01:52,154 ಹೂಂ, ಅದು, 37 00:01:53,197 --> 00:01:55,698 ನಿನ್ನ ಶಕ್ತಿ ಖಾಲಿ ಆಗಲಿದೆ, ನಿನಗದು ಇನ್ನೂ ತಿಳಿದಿಲ್ಲ. 38 00:01:55,699 --> 00:01:58,869 ನಿನ್ನ ಶಕ್ತಿ ಖಾಲಿ ಆಗುತ್ತಿರಬಹುದು. ನನ್ನ ಬಲ ಹೆಚ್ಚುತ್ತಿದೆ ಅಷ್ಟೇ. 39 00:02:05,876 --> 00:02:06,877 ಇಂತಹ ಸನ್ನಿವೇಶಗಳು… 40 00:02:09,088 --> 00:02:10,714 ಒಳಾವಲೋಕನ ಮಾಡಿಸುತ್ತವೆ. 41 00:02:11,674 --> 00:02:12,633 ನಾನು ಹೆಚ್ಚಾಗಿ ಮಾಡಲ್ಲ. 42 00:02:13,801 --> 00:02:16,303 ಸ್ವತಃ ಕೊಚ್ಚಿಕೊಳ್ಳುವವನಲ್ಲ ನಾನು, ಆದರೆ… 43 00:02:17,555 --> 00:02:19,431 ದೇವರೇ, ನಾನು ಹುಟ್ಟಿ ಬೆಳೆದ ಜಾಗ ನಿನಗೆ ತಿಳಿದಿದ್ದರೆ… 44 00:02:20,933 --> 00:02:23,519 ಆ ಹಸಿವು, ಆ ಬಡತನ. 45 00:02:25,729 --> 00:02:28,148 ಹುಟ್ಟುವ ಮೊದಲೇ ಇಬ್ಬರು ಅಣ್ಣಂದಿರನ್ನು ಕಳೆದುಕೊಂಡಿದ್ದೆ. 46 00:02:30,067 --> 00:02:31,819 ಶುದ್ಧ ಹುಚ್ಚು ಆ ಅನುಭವ. 47 00:02:35,364 --> 00:02:36,865 ಆ ಸಮಯದಿಂದ ಹೊರಬಂದ ಉಳಿದ ಮೂರ್ಖರಿಗೂ, 48 00:02:36,866 --> 00:02:39,243 ನನಗೂ ಇರುವ ವ್ಯತ್ಯಾಸ ಏನು ಗೊತ್ತಾ? 49 00:02:40,452 --> 00:02:42,746 ಜೂಜಾಡುವ ಧೈರ್ಯ. ಅಷ್ಟೇ. 50 00:02:43,622 --> 00:02:44,540 ಶಕ್ತಿ ಅಲ್ಲ, 51 00:02:45,791 --> 00:02:47,334 ಯುಕ್ತಿ ಅಲ್ಲ, ಕ್ರೌರ್ಯ ಅಲ್ಲ. 52 00:02:50,004 --> 00:02:51,088 ಧೈರ್ಯ ಅಷ್ಟೇ. 53 00:02:55,217 --> 00:02:56,176 ಮತ್ತು ಚಡಪಡಿಕೆ. 54 00:02:56,844 --> 00:02:57,845 ಯಾವುದೂ ಸಾಲದು ಎಂಬ ವಿಚಲತೆ. 55 00:02:58,804 --> 00:03:01,390 ನಾನು ನಿಲ್ಲುತ್ತಿರಲಿಲ್ಲ, ಸಾಕು ಅನ್ನುತ್ತಿರಲಿಲ್ಲ. 56 00:03:07,438 --> 00:03:08,898 ನಿನಗೂ ಅದೇ ಸಲಹೆ ನೀಡುವೆ. 57 00:03:14,361 --> 00:03:15,737 "ಇಷ್ಟು ಸಾಕು ಅನ್ನಬೇಡ." 58 00:03:15,738 --> 00:03:17,323 ಎಂದೂ ಸಂತುಷ್ಟಳಾಗಬೇಡ. 59 00:03:18,324 --> 00:03:19,782 ಕೊಟ್ಟಿದ್ದು ಸಾಕು ಅನ್ನಬೇಡ, 60 00:03:19,783 --> 00:03:22,286 ಯಾಕೆಂದರೆ ನಿನಗೆ ಬೇಕಿರೋದು ಯಾರೂ ಎಂದೂ ಕೊಡಲ್ಲ. 61 00:03:22,786 --> 00:03:25,205 ಅವರಿಗೆ ಏನು ಬೇಕೋ, ಅದನ್ನಷ್ಟೇ ಕೊಡುತ್ತಾರೆ, ಅವರ ಲಾಭಕ್ಕಾಗಿ. 62 00:03:32,463 --> 00:03:34,840 ಅಷ್ಟು ಸಾಕು. ಕಥೆ ಮುಗಿಯಿತು. 63 00:03:37,217 --> 00:03:38,552 ಮೂತ್ರಕ್ಕೆ ಹೋಗಿಬರುವೆ. 64 00:04:00,240 --> 00:04:01,659 ನಾನು ಕ್ಯಾಟ್, ನಿನ್ನನ್ನು ಭೇಟಿಯಾಗಬೇಕು. 65 00:04:17,299 --> 00:04:19,510 ದೇವರ ದಯೆ. ನೀನು ಬರಲ್ಲವೇನೋ ಅಂದುಕೊಂಡಿದ್ದೆ-- 66 00:04:21,387 --> 00:04:22,346 ಬೆನ್‌ಗೆ ಮೋಸ ಮಾಡಿದ್ದಕ್ಕೆ. 67 00:04:23,222 --> 00:04:24,306 ನನಗದು ಆಗಲೇಬೇಕಿದ್ದದ್ದು. 68 00:04:25,975 --> 00:04:27,184 ಮತ್ತಿದು ನನ್ನಿಂದ. 69 00:04:28,352 --> 00:04:30,354 ಬೆನ್ ನಿನಗಾಗಿ ಎಲ್ಲವನ್ನೂ ಪಣಕ್ಕಿಟ್ಟ, 70 00:04:30,813 --> 00:04:32,647 ಆದರೆ ನೀನದನ್ನು ಬಳಸಿ ಅವನಿಗೇ ದ್ರೋಹ ಬಗೆದೆ. 71 00:04:32,648 --> 00:04:35,234 ಆ ವೈದ್ಯೆ ಅವನನ್ನು ಭಾಗ ಭಾಗವಾಗಿ ಕತ್ತರಿಸಿದಳು. 72 00:04:35,818 --> 00:04:37,945 ಅವನಿಗೆ ನೋವುಂಟು ಮಾಡುತ್ತಾಳೆ ಅಂತ ಗೊತ್ತಿರಲಿಲ್ಲ, ನನ್ನಾಣೆ. 73 00:04:38,529 --> 00:04:40,405 ಎಲ್ಲರ ಒಳಿತಿಗಾಗಿ ಅಂತ ಹಾಗೆ ಮಾಡಿದೆ. 74 00:04:40,406 --> 00:04:42,282 ಬೆನ್ ಸ್ವತಃ ಹೇಳಿದ್ದ ಅವನಿಗೆ ದ… 75 00:04:44,410 --> 00:04:46,829 ಈಗ ಅವನ ರಹಸ್ಯ ಮುಚ್ಚಿಡಬೇಕಾ ನಿನಗೆ? 76 00:04:47,663 --> 00:04:51,500 ಫೇಬರ್‌ಗೆ ಬೆನ್ ಬಗ್ಗೆ ಹೇಳುವ ಹಕ್ಕು ನಿನಗಿರಲಿಲ್ಲ. 77 00:04:52,793 --> 00:04:53,918 ನಾನದನ್ನು ಸರಿಪಡಿಸಬಹುದು. 78 00:04:53,919 --> 00:04:56,713 - ಅಬ್ಬಬ್ಬಾ, ದೊಡ್ಡ ದೊಡ್ಡ ಮಾತುಗಳು. - ಇಲ್ಲ, ನನ್ನಾಣೆ. ನನ್ನನ್ನು ನಂಬು. 79 00:04:56,714 --> 00:04:58,257 ಹೂಂ, ಒಮ್ಮೆ ನಂಬಿ ನೋಡಿದೆ. 80 00:04:58,632 --> 00:04:59,842 ನೀನೊಬ್ಬ ಸುಳ್ಳಿ. 81 00:05:00,259 --> 00:05:01,634 ಮೋಸಗಾತಿ. 82 00:05:01,635 --> 00:05:03,052 ನಾನು ಪ್ರೀತಿಗಾಗಿ ಹಾಗೆ ಮಾಡಿದ್ದು. 83 00:05:03,053 --> 00:05:04,304 ಯಾರ ಪ್ರೀತಿಗಾಗಿ? 84 00:05:06,181 --> 00:05:07,224 ಫ್ಲಿಂಟ್. 85 00:05:12,438 --> 00:05:13,605 ಆದರೆ ಬೆನ್ ಒಳ್ಳೆಯ ವ್ಯಕ್ತಿ. 86 00:05:16,358 --> 00:05:18,068 ನಾನವನಿಗಾಗಿ ಇದನ್ನು ಸರಿಪಡಿಸುವೆ. 87 00:05:19,653 --> 00:05:20,487 ಹೇಗೆ? 88 00:05:21,488 --> 00:05:24,867 ಅವನು ನನಗೆ ಪ್ರತಿವಿಷ ಕೊಟ್ಟರೆ, ಫ್ಲಿಂಟ್ ಮತ್ತು ಡರ್ಕ್‌ಗೆ ನಾನದನ್ನು ಚುಚ್ಚುವೆ. 89 00:05:25,868 --> 00:05:28,454 ಅವರಿಗೆ ಸಂದೇಹ ಬರದಂತೆ ನಾನು ಅವರ ಬಳಿ ಹೋಗಬಹುದು. 90 00:05:29,580 --> 00:05:32,666 ಮತ್ತು ಇದರ ನಿರ್ಧಾರ ಮಾಡಬೇಕಿರೋದು ನೀನಲ್ಲ. ಬೆನ್ ನಿರ್ಧಾರ ಮಾಡಲಿ. 91 00:05:38,756 --> 00:05:40,007 ಗೊತ್ತಾ, ನಾನು ಯೋಚಿಸುತ್ತಿದ್ದೆ. 92 00:05:40,799 --> 00:05:41,966 ಆದರೆ ಯಾಕೆ? 93 00:05:41,967 --> 00:05:43,844 ನೋಡಿದೆಯಾ? ಅದೇ ಸಮಸ್ಯೆ. 94 00:05:44,970 --> 00:05:47,264 ನಾವು ಈ ಮುದುಕನ ಕೆಲಸ ಯಾಕೆ ಮಾಡುತ್ತಿದ್ದೇವೆ? 95 00:05:48,015 --> 00:05:49,600 ಶಕ್ತಿ ಇರೋದು ನಮ್ಮಲ್ಲಿ ಅಲ್ವಾ? 96 00:05:50,517 --> 00:05:52,226 ಅವನು ನಮಗೆ ಯಾಕೆ ಬೇಕು? 97 00:05:52,227 --> 00:05:54,353 ನಿನಗೆ ನಿಷ್ಠೆ ಅಂದರೇನು ಗೊತ್ತಿಲ್ಲ ಅಂದುಕೊಳ್ಳುವೆ. 98 00:05:54,354 --> 00:05:56,398 "ನಿಷ್ಠೆ." "ನಿಷ್ಠೆ." 99 00:05:57,316 --> 00:06:00,819 ನೀನು ಏನನ್ನು ನಿಷ್ಠೆ ಅಂತ ಕರೆಯುತ್ತೀಯೋ ನಾನದನ್ನು ಅವನ ನಿಯಂತ್ರಣ ಅಂತ ಕರೆಯುತ್ತೇನೆ. 100 00:06:02,196 --> 00:06:04,948 ಅವನ ಕೆಲಸ ನಾವು ಮಾಡಿದಾಗ, ನಮಗೇನು ಸಿಗುತ್ತೆ, ಅವನಿಗೇನು ಸಿಗುತ್ತೆ ಹೋಲಿಸು. 101 00:06:07,576 --> 00:06:11,371 ನೀನು ಅವನ ಆದೇಶ ಪಾಲಿಸದಿದ್ದರೆ ಅವನು ನಿನಗೆ ಎಷ್ಟು ನಿಷ್ಠನಾಗಿರುತ್ತಾನೆ? 102 00:06:12,289 --> 00:06:14,291 ಏನು ಗೊತ್ತಾ? ಅದಕ್ಕೆ ಉತ್ತರ ಹೇಳಬೇಡ. 103 00:06:15,042 --> 00:06:17,001 ವಿನ್‌ಸ್ಟನ್ ಬಳಿ ಅದೇ ಪ್ರಶ್ನೆ ಕೇಳೋಣ. 104 00:06:17,002 --> 00:06:19,004 ಅಯ್ಯೋ, ಆಗಲ್ಲ. ಅವನು ಸತ್ತುಹೋಗಿದ್ದಾನೆ. 105 00:06:23,509 --> 00:06:24,760 ಅವಳು ಅವನ ಕಾರ್ಯದರ್ಶಿ ತಾನೇ? 106 00:06:25,594 --> 00:06:27,888 ಹೂಂ. ಚೆನ್ನಾಗಿದ್ದಾಳೆ. 107 00:06:38,690 --> 00:06:40,775 ಎಲ್ಲಿ ಹೋಗಿದ್ದೆ? ನಿನ್ನನ್ನು ಹುಡುಕಿ ಜನ ಬಂದಿದ್ದರು. 108 00:06:40,776 --> 00:06:45,029 "ಜನ" ಬಂದಿದ್ದರಾ, ಯಾವ ಜನ ಬಂದಿದ್ದರು? 109 00:06:45,030 --> 00:06:47,825 ರಾಬಿ ಜನ ಉದಾಹರಣೆಗೆ. ಬೆನ್ ಅವನ ಮನೆಯಲ್ಲಿದ್ದಾನೆ. 110 00:06:48,367 --> 00:06:51,036 ರಾಬಿ ಸಾಕಾಗಿಹೋಗಿದೆ ಅನ್ನುತ್ತಿದ್ದ. 111 00:06:51,537 --> 00:06:54,247 "ಅನ್ನುತ್ತಿದ್ದರು." "ಅನ್ನುತ್ತಿದ್ದರು." 112 00:06:54,248 --> 00:06:55,707 - ಏನು? - ಗೌರವ. 113 00:06:56,208 --> 00:06:57,751 ಅದು ಸಾಯಲಿ. 114 00:07:02,506 --> 00:07:03,966 - ರೈಲಿ ಇನ್ವೆಸ್ಟಿಗೇಷನ್ಸ್-- - ಜಾನೆಟ್. 115 00:07:04,591 --> 00:07:06,426 - ಹೇ, ಹ್ಯಾಂಕ್. - ನನ್ನಿಂದ ನಿನಗಿದು ತಿಳಿಯಲಿಲ್ಲ. 116 00:07:06,844 --> 00:07:08,469 ಆದರೆ ನಿನ್ನ ಬಾಸ್ ಸಂಕಷ್ಟದಲ್ಲಿದ್ದಾನೆ. 117 00:07:08,470 --> 00:07:09,971 ಅವನು ಏನು ಮಾಡಿದ್ದಾನೋ ಗೊತ್ತಿಲ್ಲ, 118 00:07:09,972 --> 00:07:11,931 ಆದರೆ ಎಲ್ಲ ಪೊಲೀಸರೂ ಅವನಿಗಾಗಿ ಹುಡುಕುತ್ತಿದ್ದಾರೆ. 119 00:07:11,932 --> 00:07:15,060 ನೇರವಾಗಿ ಮೇಯರ್ ಕೊಟ್ಟ ಆದೇಶ. ಜಾಗ್ರತೆ, ಚಿನ್ನ. 120 00:07:15,644 --> 00:07:16,478 ಧನ್ಯವಾದ, ಹ್ಯಾಂಕ್. 121 00:07:17,855 --> 00:07:19,314 ಅದನ್ನು ನಿಲ್ಲಿಸು, ಇಲ್ಲೇ ಇರು. 122 00:07:30,951 --> 00:07:33,120 ಈಗ, ನಾನು ನಿರ್ದೇಶನ ಮಾಡುತ್ತಿದ್ದರೆ, 123 00:07:33,579 --> 00:07:36,623 ಇದನ್ನು "ಅವಸರದ ಭೇಟಿ" ಅಂತ ಕರೆಯುತ್ತಿದ್ದೆ. 124 00:07:37,291 --> 00:07:38,292 ಹೂಂ. 125 00:07:50,345 --> 00:07:51,180 ರೋಗಿ ಹೇಗಿದ್ದಾನೆ? 126 00:07:51,680 --> 00:07:52,722 ಬದುಕಿದ್ದಾನೆ. 127 00:07:52,723 --> 00:07:56,267 ಆದರೆ ಶಕ್ತಿಗಳು ಇನ್ನೂ ಮರಳಿ ಬಂದಿಲ್ಲ. ಅವನಿಗೆ ಇನ್ನಷ್ಟು ವಿಶ್ರಾಂತಿ ಬೇಕು. 128 00:07:56,268 --> 00:07:57,603 ಇನ್ನೂ ಬಾಳೆಹಣ್ಣಿನಂತೆ ಕಾಣುತ್ತಿದ್ದೀಯ. 129 00:07:58,729 --> 00:08:02,023 ಹಣ್ಣು ಹಣ್ಣಾದ ಬಾಳೆಹಣ್ಣು. ಕಪ್ಪು ಕಲೆಗಳು ಮೂಡತೊಡಗಿವೆ. 130 00:08:02,024 --> 00:08:03,692 ಹೂಂ, ಹಾಗೇ ಏನೋ. 131 00:08:04,359 --> 00:08:05,610 ಹೇಗನಿಸುತ್ತಿದೆ? 132 00:08:05,611 --> 00:08:07,111 ಕಾಣುವುದಕ್ಕಿಂತ ಕೆಟ್ಟದಾಗಿದೆ. 133 00:08:07,112 --> 00:08:08,196 ಆ ಇನ್ನೊಬ್ಬ ಹೇಗಿದ್ದಾನೆ? 134 00:08:08,197 --> 00:08:10,741 ನಯಾಗರಾ ಜಲಪಾತಕ್ಕೆ ಹೊರಟಿದ್ದಾನೆ. ತಾಯಿಯ ಜೊತೆ. 135 00:08:12,910 --> 00:08:15,287 ಕೇಳು, ನಿನಗೇನೋ ಹೇಳಬೇಕು. 136 00:08:16,163 --> 00:08:18,123 - ಕ್ಯಾಟ್ ನನ್ನನ್ನು ಭೇಟಿಗೆ ಕರೆದಳು. - ಏನು? 137 00:08:18,832 --> 00:08:20,333 - ಯಾವಾಗ? - ಇಂದು ಸಂಜೆ. 138 00:08:20,334 --> 00:08:22,793 ಪ್ರತಿವಿಷ ಅವಳಿಗೆ ಕೊಟ್ಟರೆ ಅವಳೇ ಫ್ಲಿಂಟ್‌ಗೆ ಚುಚ್ಚುತ್ತಾಳಂತೆ. 139 00:08:22,794 --> 00:08:24,337 ಮತ್ತು ಆ ಲೇಡನ್‌ಗೆ ಸಹ. 140 00:08:24,338 --> 00:08:26,465 ಅವರಿಗೆ ಸಂಶಯ ಬರದಂತೆ ಅವರ ಬಳಿಗೆ ಹೋಗಬಹುದು ಎಂದಳು. 141 00:08:27,299 --> 00:08:28,133 ಒಮ್ಮೆ ನಂಬಿದ್ದು ಸಾಕು. 142 00:08:28,550 --> 00:08:29,676 ಏನೋ ಗೊತ್ತಿಲ್ಲ. 143 00:08:30,469 --> 00:08:32,220 ಅದು ಅಷ್ಟೇನೂ ಕೆಟ್ಟ ಉಪಾಯ ಅಲ್ಲ. 144 00:08:32,221 --> 00:08:35,389 ಲಾನಿ ನಿನಗೆ ಎಷ್ಟು ಬಾರಿ ಹೊಡೆದ? ಆ ಮಹಿಳೆ ಈಗಷ್ಟೇ ನಿನಗೆ ಮೋಸ ಮಾಡಿದಳು. 145 00:08:35,390 --> 00:08:37,934 - ಯಾತಕ್ಕಾಗಿ ಮೋಸ ಮಾಡಿದಳು? - ಫ್ಲಿಂಟ್‌ಗಾಗಿ. 146 00:08:37,935 --> 00:08:40,561 - ಅವಳೇ ಹೇಳಿದಳು. - ನಿಜ, ಅವಳಿಗೆ ಫ್ಲಿಂಟ್‌ನನ್ನು ಉಳಿಸಬೇಕು. 147 00:08:40,562 --> 00:08:43,190 ಇದು ಅವಳಿಗೆ ಸಹಾಯ ಮಾಡುತ್ತೆ ಅಂತ ಅವಳಿಗನಿಸಿದರೆ ಖಂಡಿತ ಇದನ್ನು ಮಾಡುತ್ತಾಳೆ. 148 00:08:46,360 --> 00:08:47,360 ಯಾರು? 149 00:08:47,361 --> 00:08:50,363 - "ಅಬ್ರಕಡಬ್ರಾ…" - ಅದು ಲೇಡನ್. 150 00:08:50,364 --> 00:08:52,406 - "…ಬಾಗಿಲು ತೆಗೀ ಶೇಷಮ್ಮ" - ಇಲ್ಲೇನು ಮಾಡುತ್ತಿದ್ದಾನೆ? 151 00:08:52,407 --> 00:08:56,160 "ಇಲ್ಲಾಂದ್ರೆ ಈಗಲೇ ನಿನ್ನ ಮನೆ ಸುಟ್ಟು, 152 00:08:56,161 --> 00:08:58,288 ಬೂದಿ ಮಾಡಿಬಿಡುತ್ತೀನಿ.!" 153 00:08:59,122 --> 00:09:01,166 ಧನ್ಯವಾದ! ಧನ್ಯವಾದ. 154 00:09:01,708 --> 00:09:03,001 ಧನ್ಯವಾದ. 155 00:09:07,339 --> 00:09:08,714 ದರಿದ್ರವಾಗಿ ಕಾಣುತ್ತಿದ್ದೀಯ. 156 00:09:08,715 --> 00:09:11,884 - ಅದಕ್ಕೇನೀಗ? - ಅದಕ್ಕೇನೀಗ ಅಂತ ಆ ನಾಟಕ ನಿರ್ದೇಶಕನಿಗೆ ಹೇಳು. 157 00:09:11,885 --> 00:09:14,388 ನನ್ನ ಗದ್ದ ಕತ್ತೆಯ ತಿಕದಂತೆ ಕಾಣುತ್ತೆ ಅಂದ. 158 00:09:17,641 --> 00:09:19,934 ನಿನ್ನನ್ನು ಮುಂಚೆಯೂ ಎಲ್ಲೋ ನೋಡಿದ್ದೇನೆ. 159 00:09:19,935 --> 00:09:23,271 ಹೌದು, ಕೆಲವು ರಾತ್ರಿಗಳ ಹಿಂದೆ, ಸಿಲ್ವರ್‌ಮೇನ್‌ನ ಬಂಗಲೆಯಲ್ಲಿ. 160 00:09:23,272 --> 00:09:26,357 ನಿನಗಾಗಿ ನಟನೆಯ ಬಗ್ಗೆ ಒಂದು ಹಾಡನ್ನೂ ಹಾಡಿದೆ. ಯಾಕೆ, ಇಷ್ಟ ಆಗಲಿಲ್ವಾ? 161 00:09:26,358 --> 00:09:28,819 ಇಲ್ಲ, ಇಲ್ಲ, ಇಲ್ಲ. ಅದಕ್ಕೆ ಮುಂಚೆಯೂ ನೋಡಿದ್ದೇನೆ. 162 00:09:29,278 --> 00:09:31,196 ನೀನು ಬೇರೆಯವರ ಹೆಂಡತಿಯ ಜೊತೆ ಮಲಗಿರಬೇಕು. 163 00:09:32,864 --> 00:09:34,865 ನಿನಗೇನಾಯಿತು ಅದನ್ನು ಹೇಳು. 164 00:09:34,866 --> 00:09:36,868 ಯಾರದೋ ಚಿತ್ರ ತೆಗೆದುಕೊಳ್ಳಲು ಹೋಗಿದ್ದೆ. 165 00:09:38,161 --> 00:09:39,870 ನಿಮಗೇನು ಬೇಕು? 166 00:09:39,871 --> 00:09:40,789 ಇವನು. 167 00:09:41,665 --> 00:09:44,042 ಎದ್ದೇಳು. ಬಾಸ್ ನಿನ್ನ ಜೊತೆ ಮಾತಾಡಬೇಕಂತೆ. 168 00:09:44,960 --> 00:09:47,795 ಮಾತುಕತೆ ಮಾತಾ, ಕತೆ ಮುಗಿಸೋ ಮಾತಾ? 169 00:09:47,796 --> 00:09:50,798 ನನ್ನ ಗೆಳೆಯರಿಗೆ ಎಂತಹ ವಿದಾಯ ಹೇಳಬೇಕು ಅಂತ ನನಗೆ ಗೊತ್ತಾಗಬೇಕು. 170 00:09:50,799 --> 00:09:53,968 ಇನ್ನೂ ಉಯಿಲು ಬರೆಯುವ ಬಗ್ಗೆ ನೀನು ಯೋಚಿಸಬೇಕಿಲ್ಲ ಅಂದುಕೊಳ್ಳುವೆ. 171 00:09:53,969 --> 00:09:55,178 ಈಗ, ಎದ್ದೇಳು. 172 00:09:59,308 --> 00:10:03,603 ಸರಿ, ಬರುತ್ತಿದ್ದೇನೆ. ಬರುತ್ತಿದ್ದೇನೆ. ಮೊದಲು ನನ್ನ ಕೋಟು ಎತ್ತಿಕೊಳ್ಳುವೆ. 173 00:10:12,487 --> 00:10:14,823 ಬೇಕಿಲ್ಲ, ನಿನ್ನನ್ನು ಬೆಚ್ಚಗೆ ಇಟ್ಟಿರುತ್ತೇವೆ. 174 00:11:34,528 --> 00:11:36,905 {\an8}ಮಾರ್ವೆಲ್ ಕಾಮಿಕ್ಸ್ ಆಧಾರಿತ 175 00:11:37,114 --> 00:11:41,284 "ಸ್ಪೈಡರ್-ನುಆ" 176 00:11:52,712 --> 00:11:55,549 ಆಲ್ಕೋವ್ 177 00:12:06,893 --> 00:12:09,396 ಹೇ, ರೈಲಿ, ನನ್ನ ಮಾತು ಕೇಳುತ್ತಿದೆಯಾ? 178 00:12:10,439 --> 00:12:13,566 ವಿಷಯ ಏನೆಂದರೆ, ನೀನು ಸುಮ್ಮನೆ ಕೇಳಬಹುದಿತ್ತು. 179 00:12:13,567 --> 00:12:15,025 ನಾವು ಗೆಳೆಯರು ಅಂದುಕೊಂಡಿದ್ದೆ. 180 00:12:15,026 --> 00:12:16,360 ಖಂಡಿತ ಗೆಳೆಯರೇ. 181 00:12:16,361 --> 00:12:18,488 ಆದರೆ ಇದು ಸ್ವಲ್ಪ ತುರ್ತು ವಿಷಯ. 182 00:12:19,322 --> 00:12:21,866 ನಿನ್ನ ಗೆಳೆಯ ನಗರ ತುಂಬಾ ಓಡಾಡಿಕೊಂಡು 183 00:12:21,867 --> 00:12:23,742 ನನ್ನ ಸೈನಿಕರನ್ನು ನೆಲಸಮ ಮಾಡೋದು ನನಗೆ ಬೇಕಿರಲಿಲ್ಲ. 184 00:12:23,743 --> 00:12:28,039 ಹಾಗಾಗಿ ದೂರವಾಣಿ ತಗೋ, ನಿನ್ನ ಗೆಳೆಯ ಸ್ಪೈಡರ್ ಜೊತೆ ಮಾತಾಡು. 185 00:12:38,842 --> 00:12:40,426 ಇಲ್ಲ, ಹಾಗೆ ಮಾಡಲು ಆಗಲ್ಲ. 186 00:12:40,427 --> 00:12:41,886 ಏನಂದೆ? 187 00:12:41,887 --> 00:12:44,305 ನನಗೆ ಸ್ಪೈಡರ್ ಜೊತೆ ಮಾತಾಡೋ ಮನಸ್ಸಿಲ್ಲ. 188 00:12:44,306 --> 00:12:47,933 ನಿಜ ಏನೆಂದರೆ, ಅವನು ದೂರವಾಣಿಗೆ ಸಿಕ್ಕೋದು ಸ್ವಲ್ಪ ಕಷ್ಟ. 189 00:12:47,934 --> 00:12:51,146 "ಗೆಳೆಯ, ಸ್ವಲ್ಪ ಮುಖವಾಡ ತೆಗೆಯುವೆಯಾ? ನೀನು ಹೇಳೋದು ಕೇಳುತ್ತಿಲ್ಲ." 190 00:12:52,272 --> 00:12:55,816 ಇದೇನು ತಮಾಷೆನಾ? ನನಗೆ ಅರ್ಥವಾಗದ ಹಾಸ್ಯಚಟಾಕಿನಾ? 191 00:12:55,817 --> 00:12:56,734 ಇಲ್ಲ, ನಿಜವಾಗಲೂ. 192 00:12:56,735 --> 00:13:00,362 ಅವನು ಮಾತಾಡೋ ಅರ್ಧಕ್ಕರ್ಧ ಮಾತು ಅರ್ಥ ಆಗಲ್ಲ. 193 00:13:00,363 --> 00:13:02,991 ನೀನವನನ್ನು ನೋಡಿದ್ದೀಯ. ಅವನು ಮುಖದ ಮೇಲೂ ಕಾಲುಚೀಲ ಹಾಕುತ್ತಾನೆ. 194 00:13:03,700 --> 00:13:05,659 ನಾನು ಮೊದಲೇ ಒಮ್ಮೆ ನಿನಗೆ ಹೇಳಿದ್ದೆ, 195 00:13:05,660 --> 00:13:07,829 ನಿನ್ನ ನಾಲಗೆ ನಿನ್ನ ಅಂತ್ಯಕ್ಕೆ ಕಾರಣವಾಗುತ್ತೆ ಅಂತ. 196 00:13:09,706 --> 00:13:12,041 ಅದು ಇಂದೇ ಆಗುತ್ತೆ ಅನಿಸುತ್ತೆ. 197 00:13:12,042 --> 00:13:15,628 ಇಲ್ಲ, ನಿನಗೆ ನಾನು ಬೇಕು. ಇದು ಚೌಕಾಶಿ. 198 00:13:15,629 --> 00:13:18,672 ನಿನಗೆ ಸ್ಪೈಡರ್ ಬೇಕು, ಅರ್ಥಾತ್ ನಿನಗೆ ನಾನು ಬೇಕು. 199 00:13:18,673 --> 00:13:20,717 ರೆಸ್ ಇಪ್ಸ ಲೋಕೂಟರ್… 200 00:13:21,176 --> 00:13:22,385 ನನಗೆ ಅಷ್ಟೇ ಲ್ಯಾಟಿನ್ ಬರೋದು. 201 00:13:23,386 --> 00:13:26,764 ಅಲ್ಲದೆ, ಜನರು ಮಾತಾಡಿಕೊಳ್ಳುತ್ತಿದ್ದರು, ಮೇಯರ್ ಮೋರಿಸ್ ಕೂಡ 202 00:13:26,765 --> 00:13:28,599 ದ ಸ್ಪೈಡರ್ ಅನ್ನು ಹುಡುಕುತ್ತಿದ್ದಾನಂತೆ. 203 00:13:28,600 --> 00:13:31,227 ಎಲ್ಲಾ ಕಡೆ ಇಂದ ದುಡ್ಡಿನ ಸುರಿಮಳೆ. 204 00:13:31,228 --> 00:13:33,980 ದುಡ್ಡೇ ಕಾಣದ ಖಾಸಗಿ ಪತ್ತೇದಾರಿ ಏನು ತಾನೇ ಮಾಡಬಹುದು? 205 00:13:39,861 --> 00:13:41,613 ಸರಿ, ಹಾಗಾದರೆ 500 ಡಾಲರ್. 206 00:13:42,364 --> 00:13:44,323 ನಾನಂದುಕೊಳ್ಳುತ್ತಿದ್ದ ಸಂಖ್ಯೆ ಐದರಿಂದ ಶುರು ಆಗುತ್ತೆ, 207 00:13:44,324 --> 00:13:45,951 ಆದರೆ ನೂರರಲ್ಲಿ ಅಂತ್ಯ ಆಗಲ್ಲ. 208 00:13:47,786 --> 00:13:48,995 ಜಾಗ್ರತೆ, ಗೆಳೆಯ. 209 00:13:49,788 --> 00:13:53,165 ನಾನು ನಿನಗೆ ಹಣ ಕೊಟ್ಟರೆ ಸಾಕಾ, ಕೆಲಸ ಮುಗಿದ ಮೇಲೆ ನೀನು ಬದುಕುಳಿಯೋದು ಬೇಡವಾ? 210 00:13:53,166 --> 00:13:54,542 ಅದೇ ವಿಷಯ. 211 00:13:54,543 --> 00:13:57,044 ನನಗೆ ಬದುಕಬೇಕು, ಚೆನ್ನಾಗಿ. ಅದಕ್ಕೆ ಹಣ ಬೇಕು. 212 00:13:57,045 --> 00:14:00,214 ಮೊದಲು ನಾನು ಸ್ಯಾಂಟೋರಿನಿ ಅಂದುಕೊಂಡೆ. ಆದರೆ ಇಲ್ಲ. 213 00:14:00,215 --> 00:14:03,926 ಆದರೆ ಈಗ ಫ್ರಾನ್ಸ್ ಸುರಕ್ಷಿತ, ಪ್ರಣಯದಾಯಕ ಅನಿಸುತ್ತೆ. 214 00:14:03,927 --> 00:14:05,554 ನನ್ನಂತಹ ನಾಲಗೆ ಇರುವವನಿಗೂ. 215 00:14:06,137 --> 00:14:09,014 - 1,000 ಡಾಲರ್. - ಹತ್ತು ಸಾವಿರ ಕೇಳಿದರೂ ನಿನಗದು ಒಂದು ಹನಿಯಂತೆ. 216 00:14:09,015 --> 00:14:12,102 ಇದು ತತ್ತ್ವಗಳ ಬಗ್ಗೆ, ಹುಡುಗ. ನೀನೇ ಹೇಳಿದಂತೆ, ನಾವು ಚೌಕಾಶಿ ಮಾಡುತ್ತಿದ್ದೇವೆ. 217 00:14:12,769 --> 00:14:13,686 - ಮೂರು. - ಎರಡು. 218 00:14:13,687 --> 00:14:14,979 ಒಪ್ಪಿಗೆ. 219 00:14:14,980 --> 00:14:17,731 ಸರಿ, ಈಗ ಅದು ಇತ್ಯರ್ಥವಾಗಿದೆ. ಕ್ಯಾಟ್, ಒಬ್ಬ ಚಿನ್ನದ ಹುಡುಗಿಯಂತೆ 220 00:14:17,732 --> 00:14:21,069 ನನಗೂ, ಮಿಸ್ಟರ್ ಬರ್ನ್ ಅವರಿಗೂ ಒಂದು ಗ್ಲಾಸು ಗ್ರೀನ್ ಸ್ಪಾಟ್ ತರುವೆಯಾ? 221 00:14:21,653 --> 00:14:22,862 ಇವನಿಗೊಂದು ದೂರವಾಣಿ ತಂದುಕೊಡಿ. 222 00:14:29,286 --> 00:14:30,412 ಒಂದಕ್ಕೂ ಈ ಕೆಲಸ ಮಾಡುತ್ತಿದ್ದೆ. 223 00:14:31,204 --> 00:14:32,664 ನಾನು ಖುಷಿಯಿಂದ ಹತ್ತು ಕೊಡುತ್ತಿದ್ದೆ. 224 00:14:37,168 --> 00:14:38,003 ರಿಂಗಣಿಸುತ್ತಿದೆ. 225 00:14:38,753 --> 00:14:39,670 ಹಾಯ್, ನಾನು ಬೆನ್. 226 00:14:39,671 --> 00:14:42,382 ಹೂಂ, ಗೊತ್ತು, ಗೊತ್ತು, ಇಷ್ಟು ತಡವಾಗಿ ಕರೆ ಮಾಡಿದ್ದಕ್ಕೆ ಕ್ಷಮಿಸು, ನಾನು… 227 00:14:42,757 --> 00:14:43,592 ಏನು? 228 00:14:44,384 --> 00:14:45,343 ಏನು ಮಾಡಿದೆ? 229 00:14:46,261 --> 00:14:47,429 ಅದ್ಭುತ. 230 00:14:47,929 --> 00:14:50,139 ಸರಿ. ಕೇಳು, ನಾನು ಸಿಲ್ವರ್‌ಮೇನ್ ಜೊತೆ ಇದ್ದೇನೆ-- 231 00:14:50,140 --> 00:14:52,516 ಆ ದಿನದ ಬಗ್ಗೆ ಬೇಜಾರು ಬೇಡ ಅನ್ನು. 232 00:14:52,517 --> 00:14:55,102 ಆದದ್ದನ್ನು ಮರೆತು ಮುನ್ನಡೆಯಬೇಕು. ಅವನಿಗೆ ಹೇಳು. 233 00:14:55,103 --> 00:14:56,770 ಅವನು ಹೇಳುತ್ತಿದ್ದಾನೆ 234 00:14:56,771 --> 00:14:59,440 ಆ ದಿನದ ಬಗ್ಗೆ ಬೇಜಾರು ಬೇಡವಂತೆ… 235 00:14:59,441 --> 00:15:00,733 ಆದದ್ದನ್ನು ಮರೆಯುವ ಬಗ್ಗೆ ಹೇಳು. 236 00:15:00,734 --> 00:15:03,111 ಆದದ್ದನ್ನು ಮರೆತು ಅದೇನೋ… 237 00:15:03,945 --> 00:15:04,821 ಅದೇನೋ, ಮತ್ತು ನಾನು… 238 00:15:05,155 --> 00:15:07,364 ನಾನು ಅವನ ಜೊತೆ ಮಾತಾಡಬೇಕು ಅಷ್ಟೇ ಅಂತ ಹೇಳು. 239 00:15:07,365 --> 00:15:09,158 - ಮಾತಾಡಬೇಕು ಅಷ್ಟೇ ಅಂತೆ. - ಅವನಿಗೆ ಹೇಳು-- 240 00:15:09,159 --> 00:15:10,869 ಒಂದು ಕೆಲಸ ಮಾಡು. ನೀನೇ ಹೇಳು. 241 00:15:15,790 --> 00:15:17,167 ಮಿಸ್ಟರ್ ಸ್ಪೈಡರ್, ಸರ್. 242 00:15:21,296 --> 00:15:23,672 ಹೂಂ, ಇದಕ್ಕಿಂತ ಮುಂಚೆ ನಡೆದ 243 00:15:23,673 --> 00:15:27,510 ಎಲ್ಲ ವಿಷಯಗಳನ್ನು ಪರಿಗಣಿಸಿ ಹೇಳಬೇಕಾಗುತ್ತೆ. 244 00:15:28,386 --> 00:15:30,721 ಹಾಗೆ ಯಾಕೆ ಮಾತಾಡುತ್ತಿದ್ದೀಯ? 245 00:15:30,722 --> 00:15:32,098 ಬೆನ್ ಥರ ಮಾತಾಡುತ್ತಿದ್ದೇನೆ. 246 00:15:34,392 --> 00:15:36,769 ಬೆನ್ ರೈಲಿ ಜೀವ. ಇನ್ನೇನು? 247 00:15:36,770 --> 00:15:40,315 ಆ ಸಂಬಂಧವನ್ನು ಕಡೆಗಣಿಸುವ ತಪ್ಪು ಮಾಡಬೇಡ. 248 00:15:45,904 --> 00:15:47,197 ಸರಿ, ಒಪ್ಪಿದೆ. 249 00:15:48,281 --> 00:15:49,199 ಬರುತ್ತೇನೆ. 250 00:15:51,451 --> 00:15:52,285 ಏನು? 251 00:15:52,869 --> 00:15:54,162 ಅವನಿಗೆ ಪ್ರತಿವಿಷ ಬೇಕಂತೆ, 252 00:15:55,038 --> 00:15:57,874 ದ ಸ್ಪೈಡರ್ ಅದನ್ನು ತೆಗೆದುಕೊಂಡು ಹೋಗಬೇಕಂತೆ. 253 00:15:58,958 --> 00:16:00,125 - ಅವನು ಬರುತ್ತಿದ್ದಾನೆ. - ಅದ್ಭುತ. 254 00:16:00,126 --> 00:16:02,878 ಮತ್ತು, ಈಗ, ನಿನಗೆ ಅಭ್ಯಂತರವಿಲ್ಲದಿದ್ದರೆ, ನನಗೆ ನನ್ನ ಹಣ ಬೇಕು. 255 00:16:02,879 --> 00:16:06,965 ಅಥವಾ, ಫ್ರಾನ್ಸ್‌ನಲ್ಲಿ ಹೇಳುವಂತೆ, ನನ್ನ ಡೇಹ್ ಮೇಹ್ ಬೇಕು. 256 00:16:06,966 --> 00:16:08,133 ಚೆನ್ನಾಗಿತ್ತು. 257 00:16:08,134 --> 00:16:11,345 ಆದರೆ ಹಣ ದ ಸ್ಪೈಡರ್ ಬಂದರೆ ಮಾತ್ರ ಸಿಗೋದು. ಕರೆ ಮಾಡಿದ್ದಕ್ಕೆ ಮಾತ್ರವಲ್ಲ. 258 00:16:11,346 --> 00:16:13,807 ಸರಿ. ಹಾಗಾದರೆ, ಇನ್ನೊಂದು ಸುತ್ತು ಕುಡಿಯೋಣ. 259 00:16:14,849 --> 00:16:17,935 ಸಾಮಾನ್ಯ ಜನರಿಗೆ ಸಿಗದಂತಹದ್ದು ಅಲ್ಲಿ ಇನ್ನೂ ಏನೇನು ಇವೆ? 260 00:16:17,936 --> 00:16:19,478 ಅಮೆರಿಕದ ಮದ್ಯ ಪ್ರಯತ್ನಿಸುವೆಯಾ? 261 00:16:19,479 --> 00:16:22,273 ಸ್ವಲ್ಪ ಬರ್ಬನ್, ಅದು ಸಾಕಾಗಲ್ವಾ ನಿನಗೆ? 262 00:16:22,607 --> 00:16:24,358 ಬಾಜಿ ಕಟ್ಟುವೆ, ದ ಸ್ಪೈಡರ್ ಬರಲ್ಲ. 263 00:16:24,359 --> 00:16:26,068 ಅವನು ಜಾಣನಾದರೆ, ಖಂಡಿತ ಬರಲ್ಲ. 264 00:16:26,069 --> 00:16:29,530 ಅಷ್ಟಕ್ಕೂ ನಿಮಗೆ ಸ್ಪೈಡರ್ ಯಾಕೆ ಬೇಕು? ಅವನು ಈಗ ಮುದುಕನಾಗಿದ್ದಾನೆ. 265 00:16:29,531 --> 00:16:32,783 ಯಾಕೆ ಹಾಗೆ ಹೇಳುತ್ತಿದ್ದೀಯ? ಅವನು ಈಗಲೂ ಕಟ್ಟುಮಸ್ತು ಕಾಣುತ್ತಾನೆ. 266 00:16:32,784 --> 00:16:35,453 ಅಲ್ಲದೆ, ಏನೂ ತೊಂದರೆಯಿಲ್ಲದೆ, ಆ ಕೋಡಂಗಿಯನ್ನು ಸೋಲಿಸಿದ. 267 00:16:36,913 --> 00:16:39,540 ಸ್ಪೈಡರ್ ನನಗೆ ಕೆಲಸ ಮಾಡುವಲ್ಲಿ 268 00:16:39,541 --> 00:16:41,458 ಆಸಕ್ತಿ ತೋರುತ್ತಾನೆ ಅನಿಸುತ್ತಾ? 269 00:16:41,459 --> 00:16:44,212 ಅವನು ವಿರೋಧಿಯ ಬೆಂಬಲ ನಿಂತಿದ್ದನ್ನು ನಾನು ಮರೆಯಲು ಸಿದ್ಧ. 270 00:16:44,713 --> 00:16:46,463 ನನಗೆ ಖಂಡಿತ ಗೊತ್ತಿಲ್ಲ. 271 00:16:46,464 --> 00:16:48,674 ಸ್ಪೈಡರ್ ಅವನಿಗೇನು ಬೇಕೋ ಅದನ್ನೇ ಮಾಡೋದು. 272 00:16:48,675 --> 00:16:50,802 ತುಂಬಾ ಕಿರಿಕಿರಿಯ ಮನುಷ್ಯ ಅವನು. 273 00:16:53,012 --> 00:16:56,223 - ಏನು ಮಾಡುತ್ತಿದ್ದೀಯ? - ಪ್ರಯಾಣಕ್ಕಾಗಿ ಹಣ ಮಾಡಿಕೊಳ್ಳುತ್ತಿದ್ದೇನೆ. 274 00:16:56,224 --> 00:16:58,601 ನಿನ್ನನ್ನೂ ಕರೆಯುತ್ತಿದ್ದೆ, ಆದರೆ ಕೊನೆ ಬಾರಿ ಏನಾಯಿತು ಗೊತ್ತಲ್ಲಾ? 275 00:16:59,185 --> 00:17:01,520 ಸಿಲ್ವರ್‌ಮೇನ್‌ಗೆ ನೀನೇ ದ ಸ್ಪೈಡರ್ ಅಂತ ನಾನು ಹೇಳಬಹುದಿತ್ತು. 276 00:17:01,521 --> 00:17:03,398 ನೀನೇ ಅವನಿಗೆ ಮೋಸ ಮಾಡಿದವಳು ಅಂತ ನಾನೂ ಹೇಳಬಹುದಿತ್ತು. 277 00:17:03,773 --> 00:17:05,107 ಈಗಲೂ ಹೇಳಬಹುದು. 278 00:17:05,108 --> 00:17:07,068 ನಮ್ಮಿಬ್ಬರಿಗೂ ನಮ್ಮದೇ ಆದ ರಹಸ್ಯಗಳಿವೆ ಅಂತಾಯಿತು. 279 00:17:10,155 --> 00:17:14,242 ಸ್ಪೈಡರ್ ಬಂದಾಗ ನಾನು ಹೇಳದೆ ನೀವು ಏನೂ ಮಾಡುವಂತಿಲ್ಲ. 280 00:17:15,285 --> 00:17:17,287 ನಾನು ಖಂಡಿತ ಅವನನ್ನು ಎಲ್ಲೋ ನೋಡಿದ್ದೇನೆ. 281 00:17:18,455 --> 00:17:22,041 ಗಮನ ಕೊಡು. ನಾನು ಸಂಕೇತ ನೀಡೋವರೆಗೂ ಏನೂ ಮಾಡಬಾರದು. 282 00:17:23,251 --> 00:17:24,085 ಅರ್ಥ ಆಯಿತಾ? 283 00:17:24,961 --> 00:17:27,213 ಆಯಿತು, ಧಣಿಗಳೇ. 284 00:17:27,630 --> 00:17:29,339 ಮತ್ತೆ, ಪ್ರತಿವಿಷವನ್ನು ನನಗೆ ಕೊಡುವೆಯಾ? 285 00:17:29,340 --> 00:17:31,717 ಚೆನ್ನಾಗಿ ಗಮನ ಸೆಳೆಯುತ್ತಿದ್ದೀಯ, ನಾನು ಈಗಲೇ ಅದನ್ನು ಚುಚ್ಚಬಹುದು. 286 00:17:31,718 --> 00:17:34,303 ತಮಾಷೆ ಏನೆಂದರೆ, ನನಗೆ ನಿನ್ನ ಮೇಲೆ ನಂಬಿಕೆ ಇದೆ, ಆದರೆ ಪ್ರತಿವಿಷ ಇಲ್ಲ. 287 00:17:34,304 --> 00:17:37,973 - ನಿಜವಾಗಲೂ? - ನಿಮ್ಮಿಬ್ಬರದ್ದು ಏನು ಪಿಸುಮಾತು? 288 00:17:37,974 --> 00:17:40,642 ನಾನು ಕ್ಯಾಟ್‌ಗೆ ಫ್ರೆಂಚ್ ದ್ವೀಪದ ಬಗ್ಗೆ ಹೇಳುತ್ತಿದ್ದೆ, 289 00:17:40,643 --> 00:17:43,396 ಅಲ್ಲೇ ನಾನು ನೀವು ಕೊಡೋ ಹಣ ಉಡಾಯಿಸಬೇಕು ಅಂತ ಇರೋದು. 290 00:17:43,980 --> 00:17:46,106 ಸುಂದರ ಮರಳಿನ ಕಡಲತೀರಗಳು, 291 00:17:46,107 --> 00:17:49,194 ಹಸಿರು ಕಣಿವೆಗಳು, ತಪ್ಪಲಿನ ಮನೆಗಳು… 292 00:17:49,903 --> 00:17:53,031 - ನೀರಸವಾಗಿದೆ. - ನಿಜ. ಒಂಟಿಯಾಗಿರಲು ಹೇಳಿ ಮಾಡಿಸಿದ ಜಾಗ. 293 00:17:53,615 --> 00:17:54,532 - ಚಿಯರ್ಸ್. - ಶುಭವಾಗಲಿ. 294 00:17:56,493 --> 00:17:58,620 ಅಲ್ಲಿಂದಲೇ ನನಗೆ ನೀನು ಗೊತ್ತಿರೋದು. 295 00:17:59,204 --> 00:18:00,121 ಫ್ರಾನ್ಸ್. 296 00:18:00,705 --> 00:18:02,915 ಏನು ಹೇಳುತ್ತಿದ್ದೀಯೋ ಗೊತ್ತಾಗುತ್ತಿಲ್ಲ. 297 00:18:02,916 --> 00:18:04,917 ನಾನೊಬ್ಬ ಪತ್ತೇದಾರಿ, ಹಾಗಾಗಿ ಬಾಯಿ ಮುಚ್ಚು! 298 00:18:04,918 --> 00:18:07,170 ಇಲ್ಲ, ಇಲ್ಲ, ಇಲ್ಲ. ನನಗೆ ಖಚಿತವಾಗಿ ಗೊತ್ತು. 299 00:18:07,670 --> 00:18:09,421 ಮೂಸ್-ಆರ್ಗಾನ್. 300 00:18:09,422 --> 00:18:12,759 ನೀನೇ ನಮ್ಮನ್ನು ಒತ್ತೆಯಾಳು ಶಿಬಿರದಿಂದ ರಕ್ಷಿಸಿದವನು. 301 00:18:13,760 --> 00:18:16,303 ಒಂದು ನಿಮಿಷ. ನಿಮಗೆ ಪರಸ್ಪರ ಪರಿಚಯವಿದೆಯಾ? 302 00:18:16,304 --> 00:18:18,556 ಹೂಂ. ಫ್ಲಿಂಟ್‌ಗೆ ಸಹ ಇವನು ಗೊತ್ತು. 303 00:18:19,516 --> 00:18:21,391 ನೀವು ಕುಡಿದ ಮತ್ತಿನಲ್ಲಿರಬೇಕು. 304 00:18:21,392 --> 00:18:23,101 ನಾನು ಕುಡಿಯೋದೇ ಇಲ್ಲ. 305 00:18:23,102 --> 00:18:24,686 ನೀವು ಹೇಳುತ್ತಿರೋದು ಏನು? 306 00:18:24,687 --> 00:18:29,399 ನಮ್ಮ ಖಾಸಗಿ ಪತ್ತೇದಾರಿ ನಿಮ್ಮಿಬ್ಬರ ಒತ್ತೆಯಾಳು ಶಿಬಿರದಲ್ಲಿ ಇದ್ದನಾ? 307 00:18:29,400 --> 00:18:30,692 ಲಾನಿ ಕೂಡ ಅಲ್ಲೇ ಇದ್ದ. 308 00:18:30,693 --> 00:18:31,611 ಆಡಿಸನ್ ಕೂಡ. 309 00:18:33,571 --> 00:18:34,613 ಬೇರೆ ಮಾತಲ್ಲಿ ಹೇಳೋದಾದರೆ, 310 00:18:34,614 --> 00:18:38,910 ನಿಮ್ಮ ಮೇಲೆ ಪ್ರಯೋಗ ನಡೆಯುವಲ್ಲಿ ಇವನೂ ಇದ್ದ, 311 00:18:39,577 --> 00:18:43,122 ಮತ್ತು ಇವನೇ ಸ್ಪೈಡರ್‌ನ ಅತ್ಯುತ್ತಮ ಗೆಳೆಯ ಕೂಡನಾ? 312 00:18:44,916 --> 00:18:47,334 ಸ್ಪೈಡರ್ ಇನ್ನೂ ಬರದಿರಲು ಕಾರಣ 313 00:18:47,335 --> 00:18:50,171 ಅವನು ಈಗಾಗಲೇ ಇಲ್ಲಿ ನಮ್ಮ ಮಧ್ಯೆ ಕುಳಿತಿರೋದಾ? 314 00:18:55,510 --> 00:18:58,428 ನೀವು ಏನೇನೋ ಕಥೆ ಹೆಣೆಯುತ್ತಿದ್ದೀರ. 315 00:18:58,429 --> 00:19:01,766 ದ ಸ್ಪೈಡರ್ ನನಗೆ ಗೆಳೆಯನಾಗಿರಲು ಕಾರಣ… 316 00:19:05,353 --> 00:19:09,857 ನಾನೇ ಮೂಸ್-ಆರ್ಗಾನ್‌ನಲ್ಲಿ ಅವನ ಜೀವ ಉಳಿಸಿದ್ದು. 317 00:19:09,858 --> 00:19:13,318 ಹೂಂ, ನಿಜ. ಇದೇನೋ ದೊಡ್ಡ ಪಿತೂರಿ ಅಲ್ಲ. 318 00:19:13,319 --> 00:19:14,153 ಹಾಗಾ ವಿಷಯ? 319 00:19:15,488 --> 00:19:16,990 ಹಾಗೇ ವಿಷಯ. 320 00:19:22,120 --> 00:19:23,996 ಏನು ಮಾಡುತ್ತಿದ್ದೀಯ? 321 00:19:23,997 --> 00:19:25,289 ನಿನ್ನ ಗಮನ ನನ್ನ ಮೇಲಿಟ್ಟು, 322 00:19:25,290 --> 00:19:28,000 ಕಿವಿಗಳನ್ನು ಬೆರಳುಗಳಿಂದ ಮುಚ್ಚಿ, ನನ್ನ ಆತ್ಮವನ್ನು ಇಣುಕಿ ನೋಡುತ್ತೀಯಾ? 323 00:19:28,001 --> 00:19:31,044 ಇಲ್ಲ, ನಮಗೆ ಆ ಮಾಂತ್ರಿಕತೆ ಬೇಕಿಲ್ಲ ಅಂದುಕೊಳ್ಳುವೆ. 324 00:19:31,045 --> 00:19:33,005 ಅದನ್ನು ಮಕ್ಕಳ ಹುಟ್ಟುಹಬ್ಬಕ್ಕಾಗಿಯೇ ಉಳಿಸೋಣ. 325 00:19:33,006 --> 00:19:35,799 ಸರಿ, ಮತ್ತೇನು? ನನ್ನ ಜೇಬುಗಳನ್ನು ಪರಿಶೀಲಿಸುವೆಯಾ, ಅಥವಾ ನನ್ನ ರಸೀದಿಗಳನ್ನಾ? 326 00:19:35,800 --> 00:19:40,053 ತಗೋ, ಇದನ್ನು ಇನ್ನಷ್ಟು ಸುಲಭ ಮಾಡುವೆ. ನನನ್ ಬಳಿ ಒಂದು ನಾಣ್ಯ ಇದೆ ಮತ್ತು… 327 00:19:40,054 --> 00:19:44,434 ಒಂದಲ್ಲ, ಎರಡು ತಿಂಡಿ ಪೊಟ್ಟಣ ಇದೆ. 328 00:19:47,353 --> 00:19:49,939 ನೀನು ಒತ್ತಡದಲ್ಲಿ ಚಿಂತೆ ಮಾಡಲ್ಲ, ಆದರೆ ವಿಷಯ ಇದು. 329 00:19:50,607 --> 00:19:53,109 ನಾನೂ ಸ್ವಲ್ಪ ನಿನ್ನಂತೆಯೇ. ಒಬ್ಬ ಪತ್ತೇದಾರಿ. 330 00:19:53,693 --> 00:19:55,612 ಗಮನಿಸುತ್ತೇನೆ. ಆಲಿಸುತ್ತೇನೆ. 331 00:19:56,237 --> 00:19:58,323 ವಿಷಯಗಳನ್ನು ಇಲ್ಲಿ ಇಟ್ಟುಕೊಳ್ಳುತ್ತೇನೆ. 332 00:20:00,491 --> 00:20:01,784 ಇನ್ನೊಂದು ಗ್ಲಾಸು ತರುವೆಯಾ, ಚಿನ್ನ? 333 00:20:03,077 --> 00:20:03,953 ಖಂಡಿತ ಬೇಕು. 334 00:20:09,334 --> 00:20:10,418 ಮತ್ತು ನಿನ್ನಂತೆಯೇ, 335 00:20:11,085 --> 00:20:14,839 ನಾನು ನನಗೆ ಮಾತ್ರ ನಿಷ್ಠಾವಂತ. 336 00:20:15,548 --> 00:20:18,927 ಹಾಗಾಗಿ, ನನಗೆ ನೀನು ಬೆನ್ ರೈಲಿ 337 00:20:19,469 --> 00:20:22,262 ದ ಸ್ಪೈಡರ್ ಹೌದೋ ಅಲ್ಲವೋ ಅಂತ ತಿಳಿಯಬೇಕೆಂದರೆ, 338 00:20:22,263 --> 00:20:24,514 ನಾನದನ್ನು ತಿಳಿದೇ ತೀರುವೆ. ಪರಿಣಾಮ ಏನೇ ಇರಲಿ. 339 00:20:24,515 --> 00:20:27,518 - ನಾನು ಹೇಳಿದ್ದು ಅರ್ಥ ಆಯಿತಾ? - ಅರ್ಥ ಆಗಲಿಲ್ಲ. 340 00:20:28,394 --> 00:20:29,228 ಕೂರು. 341 00:20:31,522 --> 00:20:33,566 ನೋಡು, ನನಗೆ ಕಾಣುವಂತೆ ವಿಷಯ ಇದು. 342 00:20:34,275 --> 00:20:36,234 ಬೆನ್ ರೈಲಿ ಒಬ್ಬ ಖಾಸಗಿ ಪತ್ತೇದಾರಿ, 343 00:20:36,235 --> 00:20:39,072 ಅವನಿಗೆ ತನ್ನ ಬಗ್ಗೆ ಬಿಟ್ಟು ಬೇರೆ ಯಾರ ಬಗ್ಗೆಯೂ ಚಿಂತೆಯಿಲ್ಲ. 344 00:20:39,781 --> 00:20:42,824 ಆದರೆ ದ ಸ್ಪೈಡರ್ ಇತರರ ಬಗ್ಗೆ ಕಾಳಜಿ ವಹಿಸುವವನು. 345 00:20:42,825 --> 00:20:45,453 ಅಮಾಯಕರ ಸಾವು ಕಂಡರೆ ಸುಮ್ಮನಿರಲ್ಲ ಅವನು. 346 00:20:46,162 --> 00:20:49,373 ನೋಡಿಕೊಂಡು ಸುಮ್ಮನಿರಲ್ಲ, ಅವನು ಅದರ ಬಗ್ಗೆ ಏನಾದರೂ ಮಾಡಬಹುದೆಂದರೆ ಮಾಡೇ ಮಾಡುತ್ತಾನೆ. 347 00:20:49,374 --> 00:20:50,541 ನನಗದರ ಬಗ್ಗೆ ಗೊತ್ತಿಲ್ಲ. 348 00:20:51,125 --> 00:20:51,960 ನನಗೆ ಗೊತ್ತು. 349 00:20:52,543 --> 00:20:53,962 ನಿನ್ನ ಬಂದೂಕು ಕೊಡು. 350 00:20:56,839 --> 00:20:58,591 ಯಾರಿಗೂ ಗೊತ್ತಿಲ್ಲ ಅಂದುಕೊಂಡಿರೋ ಬಂದೂಕು. 351 00:21:00,426 --> 00:21:03,513 ನನಗೆ ಬಹುತೇಕ ಖಚಿತ. 352 00:21:04,389 --> 00:21:05,472 ಆದರೆ ಖಂಡಿತ ಖಚಿತವಲ್ಲ. 353 00:21:05,473 --> 00:21:08,433 ನಾವೆಲ್ಲ ಸಾಯಲಿದ್ದೇವೆ ಅಂತ ಬಹುತೇಕ ಖಚಿತ, 354 00:21:08,434 --> 00:21:10,645 ಆದರೆ ನನಗೂ ಖಂಡಿತ ಖಚಿತವಿಲ್ಲ. 355 00:21:11,270 --> 00:21:13,272 ಹೂಂ. ನಿಜ. ಜಾಣ ನೀನು. 356 00:21:14,107 --> 00:21:18,318 ಈಗ, ಕೋಣೆ ಸುತ್ತಾ ನೋಡಿದರೆ, ಕೆಲವು ಕೆಟ್ಟ ಮನುಷ್ಯರು ಇದ್ದಾರೆ. 357 00:21:18,319 --> 00:21:22,239 ಗೂಂಡಾಗಳು, ಡಕಾಯಿತರು, ಅಪರಾಧಿಗಳು. 358 00:21:22,240 --> 00:21:25,367 ಅಂತಹವರು ಸತ್ತರೆ ದ ಸ್ಪೈಡರ್ ತಲೆನೂ ಕೆಡಿಸಿಕೊಳ್ಳಲ್ಲ. 359 00:21:25,368 --> 00:21:26,535 ಅಲ್ವಾ? 360 00:21:26,536 --> 00:21:27,745 ಆದರೆ ಒಬ್ಬರನ್ನು ಬಿಟ್ಟು. 361 00:21:28,246 --> 00:21:30,456 ಒಬ್ಬ ಅಮಾಯಕರು, 362 00:21:31,082 --> 00:21:35,795 ದ ಸ್ಪೈಡರ್ ಅವರು ಸಾಯೋದನ್ನು ಕಂಡರೆ ಸುಮ್ಮನೆ ಕೈಕಟ್ಟಿ ಕೂರಲ್ಲ. 363 00:21:36,796 --> 00:21:38,631 ಸಾಕು, ನನಗಿದು ಇಷ್ಟವಾಗುತ್ತಿಲ್ಲ. 364 00:21:39,007 --> 00:21:42,218 - ಇಷ್ಟ ಆಗುವಂತಹದ್ದಲ್ಲ ಇದು. - ನಿಜ ಹೇಳುತ್ತಿದ್ದೇನೆ. ಇದು ತಮಾಷೆಯಲ್ಲ. 365 00:21:42,760 --> 00:21:43,594 ಖಂಡಿತ ಅಲ್ಲ. 366 00:21:44,303 --> 00:21:45,972 ನಿನ್ನನ್ನು ಕಳೆದುಕೊಂಡರೆ ನನಗೇ ನಷ್ಟ. 367 00:21:46,931 --> 00:21:49,517 ವ್ಯವಹಾರ ಹಾಳಾಗುತ್ತೆ, ಹೃದಯ ಒಡೆಯುತ್ತೆ. 368 00:21:50,560 --> 00:21:52,270 ನೀನು ನನಗೆ ಎಷ್ಟು ಖುಷಿ ಕೊಡುತ್ತೀಯ ನಿನಗೂ ಗೊತ್ತು. 369 00:21:53,312 --> 00:21:54,439 ಆದರೆ ನನಗೆ ಕಾಣುವಂತೆ, 370 00:21:56,107 --> 00:21:58,276 ಇದರಿಂದ ಮಾತ್ರ ನನ್ನ ಸಂಶಯ ದೂರ ಆಗೋದು. 371 00:21:59,527 --> 00:22:01,654 ನನ್ನನ್ನು ಬಿಡು, ಫಿನ್. ಈಗಲೇ! 372 00:22:02,905 --> 00:22:06,200 ಅಬ್ಬಬ್ಬಾ, ಇದು ನಗರದ ಅತ್ಯುತ್ತಮ ಪ್ರದರ್ಶನ. 373 00:22:06,826 --> 00:22:08,578 ನಾನು ಇವಳನ್ನು ಕೊಲ್ಲಲು ಆದರೆ, 374 00:22:09,245 --> 00:22:12,205 ನೀನು ಕೇವಲ ಬೆನ್ ರೈಲಿ, ತನ್ನ ಬಗ್ಗೆ ಮಾತ್ರ ಯೋಚಿಸುವ 375 00:22:12,206 --> 00:22:13,791 ಒಬ್ಬ ಖಾಸಗಿ ಪತ್ತೇದಾರಿ. 376 00:22:14,208 --> 00:22:16,669 ನೀನು ಸ್ಪೈಡರ್ ಆಗಿದ್ದರೆ, 377 00:22:16,961 --> 00:22:19,213 ನಾನು ಗುಂಡು ಹಾರಿಸೋ ಮುನ್ನ ನೀನು ನನ್ನನ್ನು ತಡೆಯುವೆ. 378 00:22:26,345 --> 00:22:27,305 ಕೇಳು. 379 00:22:28,014 --> 00:22:29,640 ಅವನು ನನ್ನನ್ನು ಉಳಿಸಲ್ಲ. 380 00:22:30,433 --> 00:22:32,100 ಅವನು ಕೆಟ್ಟ ಮನುಷ್ಯ ಎಂಬ ಕಾರಣಕ್ಕಲ್ಲ. 381 00:22:32,101 --> 00:22:33,311 ಮತ್ತೆ ಯಾಕೆ? 382 00:22:34,687 --> 00:22:36,939 ಪರವಾಗಿಲ್ಲ ಚಿನ್ನ, ಸತ್ಯಕ್ಕಾಗಿ ಕಾಯುವೆ. 383 00:22:38,983 --> 00:22:40,109 ನಾನವನ ಹೃದಯ ಒಡೆದ ಕಾರಣಕ್ಕೆ. 384 00:22:43,988 --> 00:22:44,906 ಯಾಕೆ ಹಾಗೆ ಮಾಡಿದೆ? 385 00:22:45,531 --> 00:22:46,407 ನಿನಗೆ ಗೊತ್ತು. 386 00:22:48,493 --> 00:22:49,911 ನಿನ್ನ ಬಾಯಿಂದ ಕೇಳಬೇಕು ನನಗೆ. 387 00:22:52,497 --> 00:22:54,248 ಯಾಕೆಂದರೆ ನನಗೆ ಫ್ಲಿಂಟ್ ಅಂದರೆ ಇಷ್ಟ. 388 00:22:55,583 --> 00:22:56,709 ನನಗೆ ಅವನ ಮೇಲೆ ಪ್ರೀತಿ. 389 00:22:57,251 --> 00:22:58,668 ಅವನನ್ನು ಉಳಿಸೋ ಆಸೆ ಇತ್ತು. 390 00:22:58,669 --> 00:23:00,880 ಅದಕ್ಕಾಗಿ ಯಾರಿಗೆ ನೋವು ಮಾಡಿದೆ ಅನ್ನೋ ಬಗ್ಗೆಯೂ ಚಿಂತಿಸಲಿಲ್ಲ. 391 00:23:04,509 --> 00:23:07,053 ಬಿಡು, ಕಡೇ ಪಕ್ಷ ತಪ್ಪು ಒಪ್ಪಿಕೊಂಡಳು. 392 00:23:07,512 --> 00:23:09,304 ನಿಜ, ತಪ್ಪು ಒಪ್ಪಿಕೊಂಡೆ. 393 00:23:09,305 --> 00:23:12,350 ನನಗೆ ಈ ಮುಚ್ಚುಮರೆ ಸಾಕಾಗಿದೆ, ಸುಳ್ಳು ಹೇಳಿ ಸಾಕಾಗಿದೆ. 394 00:23:13,559 --> 00:23:15,811 - ಉಳಿದ ಸತ್ಯ ಬಾಯಿ ಬಿಡಲಾ? - ಕ್ಯಾಟ್, ಬೇಡ. 395 00:23:15,812 --> 00:23:19,690 ನಾನು ಹಾಗೆ ಮಾಡಿದ್ದು ಫ್ಲಿಂಟ್‌ನನ್ನು ಉಳಿಸಲು ಮತ್ತು ನಿನ್ನನ್ನು ಕೊಲ್ಲಲು. 396 00:23:20,733 --> 00:23:22,109 ಕೊಲ್ಲಲೇಬೇಕು ಅಂತ. 397 00:23:22,110 --> 00:23:24,987 - ಹಾಗಾದರೆ, ಆಡಿಸನ್‌ಗೆ ಹಣ ನೀಡಿದ್ದು ನೀನು. - ಹೌದು. 398 00:23:25,863 --> 00:23:28,281 ಮೇಯರ್‌ಗೆ ಮದ್ಯ ವಿನಿಮಯದ ಬಗ್ಗೆ ತಿಳಿಸಿದ್ದೂ ನೀನೇ. 399 00:23:28,282 --> 00:23:29,117 ಹೌದು. 400 00:23:29,742 --> 00:23:30,992 ನೀನೇ ದ್ರೋಹ ಬಗೆದವಳು. 401 00:23:30,993 --> 00:23:33,703 ಹೌದ, ಮುಂದುವರೆ, ನನ್ನನ್ನು ಕೊಲ್ಲು. 402 00:23:33,704 --> 00:23:35,456 ಆದರೆ ನನ್ನ ಸಾವು ನೋಡಬೇಕು ಅನ್ನೋ ಕಾರಣಕ್ಕೆ ಕೊಲ್ಲು, 403 00:23:36,541 --> 00:23:38,835 ಬೆನ್ ಬಗ್ಗೆ ನಾನು ಏನೋ ಸಾಬೀತುಪಡಿಸುವೆ ಅನ್ನೋ ಕಾರಣಕ್ಕೆ ಅಲ್ಲ. 404 00:23:39,293 --> 00:23:43,047 ಅವನು ಮಾಡಿದ ಒಂದೇ ತಪ್ಪು, ಇಂತಹ ಸನ್ನಿವೇಶದಲ್ಲಿ ಸಿಕ್ಕಿಬಿದ್ದದ್ದು. 405 00:23:45,508 --> 00:23:46,592 ನೋಡಿದೆಯಾ, ರೈಲಿ, 406 00:23:47,426 --> 00:23:48,511 ಅದು ಬಹುತೇಕ ಖಚಿತ 407 00:23:49,804 --> 00:23:51,139 ಮತ್ತು ಖಂಡಿತ ಖಚಿತದ ನಡುವಿನ 408 00:23:51,848 --> 00:23:53,432 - ವ್ಯತ್ಯಾಸ. - ಬೇಡ! 409 00:23:59,063 --> 00:24:00,814 ನಾನು ತಪ್ಪು ಸಮಯದಲ್ಲಿ ತಲುಪಿದೆನಾ? 410 00:24:00,815 --> 00:24:01,774 ಖಂಡಿತ ಇಲ್ಲ. 411 00:24:02,316 --> 00:24:06,237 ಸಿಲ್ವರ್‌ಮೇನ್ ನಮಗೆ ಅಬಲೆ ಹೆಂಗಸನ್ನು ಹೇಗೆ ಕೊಲ್ಲೋದು ಅಂತ ಹೇಳಿಕೊಡುತ್ತಿದ್ದ. 412 00:24:06,821 --> 00:24:07,779 ಕ್ಷಮಿಸು. 413 00:24:07,780 --> 00:24:08,823 ಹಾಳಾಗಿ ಹೋಗು. 414 00:24:09,907 --> 00:24:13,619 ಎಂತಹ ಅದ್ಭುತ ಇದು. 415 00:24:14,203 --> 00:24:16,204 ಅಷ್ಟು ಹತ್ತಿರ ಬಂದರೆ ಸಾಕು. 416 00:24:16,205 --> 00:24:18,165 - ಎಲ್ಲಾ ಹೇಗಿದೆ, ರೈಲಿ? - ಅದ್ಭುತವಾಗಿದೆ. 417 00:24:18,166 --> 00:24:21,376 ನೋಡು, ನೀನು ಬರಲು ಹೇಳಿದೆ, ನಾನು ಬಂದೆ. ನಿನಗೇನು ಬೇಕು? 418 00:24:21,377 --> 00:24:24,297 ಇಷ್ಟ ಆಯಿತು. ನೇರವಾಗಿ ವಿಷಯಕ್ಕೆ ಬಂದಿದ್ದು. 419 00:24:25,173 --> 00:24:27,340 - ಬಾ ಮಾತಾಡೋಣ. - ಹೂಂ, ಹೇಳು. 420 00:24:27,341 --> 00:24:31,179 ನೀನು ಮೇಯರ್‌ಗಾಗಿ ಕೆಲಸ ಮಾಡುತ್ತಿದ್ದೀಯ ಅಂತ ನನಗೆ ಖಂಡಿತ ಅನಿಸಲ್ಲ. 421 00:24:31,721 --> 00:24:33,764 ನೀನು ತುಂಬಾ ಜಾಣ ಮತ್ತು ಅವನು ತುಂಬಾ ಕೋಣ. 422 00:24:35,141 --> 00:24:37,018 ಹಾಗಾಗಿ ಬಂದು ನನಗಾಗಿ ಕೆಲಸ ಮಾಡು. 423 00:24:38,102 --> 00:24:39,937 ನಮ್ಮನ್ನು ಸೋಲಿಸಲು ಆಗಲ್ಲ, ಆದರೆ ಸೇರಬಹುದಲ್ಲಾ? 424 00:24:41,522 --> 00:24:42,939 ಸೋಲಿಸಲು ಆಗಲ್ಲ ಅಂದವರು ಯಾರು? 425 00:24:42,940 --> 00:24:43,941 ನಾನು ಹೇಳಿದೆ. 426 00:24:44,859 --> 00:24:46,068 ನಾನೂ ಕೂಡ. 427 00:24:46,652 --> 00:24:47,777 ಕ್ಷಮಿಸಿ. 428 00:24:47,778 --> 00:24:52,240 ನೀವಿಬ್ಬರೂ ಮರೆತಿರಾ, ನಾನು ಸ್ಪೈಡರ್, ನಿಮ್ಮಿಬ್ಬರನ್ನೂ ಸುಲಭವಾಗಿ ಸೋಲಿಸಿದವನು. 429 00:24:52,241 --> 00:24:56,913 ಅದು, ಹದ್ದು ಮೀರುತ್ತಿದ್ದೇನೆ ಅಂದುಕೊಳ್ಳಬೇಡ, ಮಿಸ್ಟರ್ ಬರ್ನ್ ಅವರ ಮಾತನ್ನು ಒಮ್ಮೆ ಕೇಳು. 430 00:24:57,997 --> 00:25:00,540 ಏನಂದೆ? ಸಿಲ್ವರ್‌ಮೇನ್ ಮಾತನ್ನು ನಾನು ಕೇಳಬೇಕಾ? 431 00:25:00,541 --> 00:25:03,460 ಹೇಳುತ್ತಿದ್ದೇನೆ ಅಷ್ಟೇ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, 432 00:25:03,461 --> 00:25:05,630 ನೀನು ಮೊದಲಿನಷ್ಟು ಯುವಕನಾಗಿ ಉಳಿದಿಲ್ಲ. 433 00:25:07,673 --> 00:25:11,301 ನನ್ನದು ಕಟ್ಟುಮಸ್ತು ದೇಹ. ಗಟ್ಟಿಮುಟ್ಟು. ಚೈತನ್ಯಭರಿತ. 434 00:25:11,302 --> 00:25:12,719 ಸಲಹೆ ಅಷ್ಟೇ, 435 00:25:12,720 --> 00:25:17,140 ಲಾನಿ ಲಿಂಕನ್ ಜೊತೆ ನಡೆದ ಹೊಡೆದಾಟದಿಂದ ಚೇತರಿಸಿಕೊಳ್ಳೋ ಮೊದಲೇ 436 00:25:17,141 --> 00:25:20,228 ಮತ್ತೊಂದು ಹೊಡೆದಾಟಕ್ಕೆ ನೀನು ಇಳಿಯೋದು ಒಳ್ಳೆಯದಲ್ಲವೇನೋ ಅನಿಸುತ್ತೆ. 437 00:25:22,355 --> 00:25:25,483 ಹೂಂ. ಸ್ವಲ್ಪ ವಿಶ್ರಾಂತಿ ತಗೊಂಡು, ವಿರಮಿಸಿ ಯೋಚಿಸು. 438 00:25:26,776 --> 00:25:27,610 ಸರಿ. 439 00:25:27,944 --> 00:25:31,154 ನೀನು ಇವನಿಗೆ ಪ್ರತಿವಿಷವನ್ನು ಕೊಡು, ಅವನು ನನಗೆ ನನ್ನ ಹಣ ಕೊಡಲಿ, 440 00:25:31,155 --> 00:25:33,574 - ಆಮೇಲೆ ನಾವೆಲ್ಲ ನಮ್ಮ ದಾರಿ ನೋಡಿಕೊಳ್ಳೋಣ. - ಹೂಂ. 441 00:25:34,116 --> 00:25:35,826 ಅಬ್ಬಬ್ಬಾ. 442 00:25:36,410 --> 00:25:37,995 ಸ್ವಾರಸ್ಯಕರವಾಗಿದೆ. 443 00:25:38,788 --> 00:25:41,748 ಎಷ್ಟು ಕಥಾಹಂದರಗಳು. 444 00:25:41,749 --> 00:25:43,584 ಇನ್ನೊಂದು ಕಥೆ ಸೇರಿಸೋಣವೇ? 445 00:25:44,919 --> 00:25:46,920 ಇವಳು ಹೊರಗೆ ನಿಂತಿದ್ದಳು. 446 00:25:46,921 --> 00:25:49,340 - ಕ್ಷಮಿಸು, ಬೆನ್. ನಾನು ಹೀಗೆ-- - ಬಾಯಿ ಮುಚ್ಚು. 447 00:25:51,300 --> 00:25:53,094 ಇವಳ ಬಳಿ ಏನು ಸಿಕ್ಕಿತು ನೋಡಿ. 448 00:25:57,932 --> 00:26:01,643 ಏನು, ಸುಮ್ಮನೆ ಅದನ್ನು ಒಳತರಬೇಕಿತ್ತಾ? ಅದು ಪೆದ್ದುತನ ಆಗುತ್ತಿತ್ತು. 449 00:26:01,644 --> 00:26:04,522 ನಿಜ, ಇದು ತುಂಬಾ ಜಾಣತನ. 450 00:26:10,152 --> 00:26:14,197 ಮತ್ತೆ, ಇದೇನಾ ಅಷ್ಟು ದೊಡ್ಡ ವಿಷಯವಾಗಿದ್ದು? 451 00:26:14,198 --> 00:26:15,323 ಅದನ್ನು ಇಲ್ಲಿಗೆ ತಾ. 452 00:26:15,324 --> 00:26:17,576 ಹಾಂ, ಹಾಂ. ಒಂದು ನಿಮಿಷ. 453 00:26:20,955 --> 00:26:21,914 ಈಗ ಹೇಗನಿಸುತ್ತಿದೆ? 454 00:26:23,749 --> 00:26:25,126 ಯಾಕೆ ಹಾಗೆ ಮಾಡಿದೆ? 455 00:26:26,377 --> 00:26:27,837 ಕೆಲಸ ಮಾಡುತ್ತಾ ನೋಡಲು. 456 00:26:31,465 --> 00:26:33,258 ಹೂಂ. ಕೆಲಸ ಮಾಡುತ್ತೆ. 457 00:26:33,259 --> 00:26:34,634 ಅವನ್ನು ಕೊಡು, ಗೆಳೆಯ. 458 00:26:34,635 --> 00:26:35,677 ಏನು, ಇವನ್ನಾ? 459 00:26:35,678 --> 00:26:37,471 ಹೂಂ. ಏನೂ ಆಟವಾಡದೆ. 460 00:26:39,056 --> 00:26:41,892 ಆದರೆ ನನಗೆ ಆಡಬೇಕು ಅಂದರೆ? 461 00:26:42,852 --> 00:26:45,895 "ಯಾಕೆ ಕೊಡಲಿ" ಅನ್ನೋ ಆಟ. 462 00:26:45,896 --> 00:26:48,816 ನಾನು ಯಾರಿಗೂ ಸಮಜಾಯಿಷಿ ಹೇಳಲ್ಲ. 463 00:26:49,984 --> 00:26:52,445 ನಿನಗೂ ಹೇಳಲ್ಲ, ಬೇರೆಯವರಿಗೂ ಹೇಳಲ್ಲ. 464 00:26:52,987 --> 00:26:54,321 ಈಗ ಅದನ್ನು ಕೊಡು. 465 00:26:54,322 --> 00:26:55,906 ದ ಸ್ಪೈಡರ್ ಬಗ್ಗೆ ಇನ್ನು ಭಯ ಬೇಕಿಲ್ಲ. 466 00:26:56,657 --> 00:26:57,908 ಮತ್ತೆ, ನಿನಗೆ ಯಾಕೆ 467 00:26:58,826 --> 00:27:03,331 ಇದರಲ್ಲಿರುವುದರ ಮೇಲೆ ಅಷ್ಟು ಆಸಕ್ತಿ? 468 00:27:03,873 --> 00:27:07,960 ಯಾಕೆಂದರೆ, ನಿನಗೆ ನಮ್ಮನ್ನು ನಿಯಂತ್ರಿಸಬೇಕು. 469 00:27:08,836 --> 00:27:12,422 ನಿನಗೆ ನಮ್ಮ ಮೇಲೆ ಅಧಿಕಾರ ಚಲಾಯಿಸಬೇಕು. 470 00:27:12,423 --> 00:27:15,425 ಫ್ಲಿಂಟ್. ಇವನನ್ನು ಸ್ವಲ್ಪ ನೋಡಿಕೋ. 471 00:27:15,426 --> 00:27:19,054 ಇಲ್ಲದಿದ್ದರೆ, ನಾನು ಈ ಕೊನೆ ಎರಡು ಮದ್ದುಗಳನ್ನು ಒಡೆದುಹಾಕುವೆ. 472 00:27:19,055 --> 00:27:21,223 - ಅಲ್ಲಿಗೆ ಮುಕ್ತಾಯ ಅಂದುಕೊಳ್ಳೋಣ. - ಫ್ಲಿಂಟ್. 473 00:27:21,849 --> 00:27:24,060 ನೀನು ಇನ್ನೂ ನನ್ನ ಕಡೆಯವನೇ. ನೀವಿಬ್ಬರೂ. 474 00:27:25,353 --> 00:27:27,980 ನಾನು ಅವಳಿಗೆ ಏನೂ ಆಗಲು ಬಿಡಲ್ಲ ಅಂತ ನಿನಗೂ ಗೊತ್ತು. 475 00:27:28,731 --> 00:27:30,149 ಏನು ಮಾಡಬೇಕು ಅಂತಲೂ ನಿನಗೆ ಗೊತ್ತು. 476 00:27:30,524 --> 00:27:31,816 ಹೌದಾ? 477 00:27:31,817 --> 00:27:35,987 ಅವನ ಪ್ರೇಯಸಿಗೆ ಏನು ಮಾಡಬೇಕು ಅಂತ ಗೊತ್ತಿತ್ತು. 478 00:27:35,988 --> 00:27:40,117 ನಿನಗೆ ಧೈರ್ಯ ಇರಲಿಲ್ಲ ಅಷ್ಟೇ. 479 00:27:41,577 --> 00:27:42,745 ಜಾಗ್ರತೆ. 480 00:27:43,329 --> 00:27:44,872 ಅವನು ನಿನ್ನ ಗೆಳೆಯನಲ್ಲ, ಫ್ಲಿಂಟ್. 481 00:27:45,206 --> 00:27:46,832 ಅವನು ನಿನ್ನ ಬಾಸ್ ಕೂಡ ಅಲ್ಲ. 482 00:27:49,543 --> 00:27:51,504 ಅವನು ನಿನ್ನ ಸೂತ್ರಧಾರಿ, 483 00:27:52,171 --> 00:27:56,133 ನಿನ್ನನ್ನು ಗೊಂಬೆಯಂತೆ ಕುಣಿಸುತ್ತಿರುವವ. 484 00:27:59,136 --> 00:28:00,304 ಆದರೆ ಯಾಕೆ ಅವನಿಗೆ ಆ ಹಕ್ಕು? 485 00:28:00,888 --> 00:28:01,889 ಅವನನ್ನು ನೋಡು. 486 00:28:02,515 --> 00:28:03,682 ಅವನು ವಿಶೇಷ ವ್ಯಕ್ತಿ ಏನಲ್ಲ. 487 00:28:05,726 --> 00:28:10,021 ದುಬಾರಿ ಸೂಟು ಧರಿಸಿರುವ ಒಬ್ಬ ಮುದುಕ ಅಷ್ಟೇ. 488 00:28:10,022 --> 00:28:12,273 ಅಧಿಕಾರದಲ್ಲಿರಲು ಹೆಣಗುತ್ತಿರುವವ. 489 00:28:12,274 --> 00:28:15,027 ನಾಲಗೆ ಮೇಲೆ ಹಿಡಿತ ಇರಲಿ, ಹುಡುಗ. 490 00:28:15,277 --> 00:28:16,821 ಇದೇ ಅದರಿಂದ ಬರೋ ಕೊನೆ ಮಾತಾಗಿರಬಹುದು. 491 00:28:21,283 --> 00:28:24,954 ಈಗ, ಮುಖವಾಡದ ಹಿಂದಿನ ಮುಖ ನೋಡೋಣ. 492 00:28:37,800 --> 00:28:39,552 - ಏನಿದು? - ಪತ್ರಕರ್ತ. 493 00:28:49,520 --> 00:28:50,521 ಅಬ್ಬಾ-- 494 00:29:02,283 --> 00:29:03,868 ರಾಬಿ? ಎದ್ದೇಳು. 495 00:29:15,337 --> 00:29:16,172 ಬಗ್ಗು! 496 00:29:32,146 --> 00:29:33,397 ಬೆನ್, ನಿನ್ನ ಹಿಂದೆ! 497 00:29:41,113 --> 00:29:41,947 ಓಹ್, ಬೆನ್. 498 00:29:42,656 --> 00:29:46,243 - ರಾಬಿ. ರಾಬಿ. ಆರಾಮಿದ್ದಾನಾ? - ಹೌದು ಅನಿಸುತ್ತೆ. 499 00:29:47,578 --> 00:29:49,455 ನಿನಗೆ ಯಾಕೆ ಈ ಕೆಲಸ ಇಷ್ಟವಿಲ್ಲ ಅಂತ ಅರ್ಥ ಆಯಿತು. 500 00:30:03,719 --> 00:30:06,138 ಹಾಯ್, ಹುಡುಗರೇ. ಕುಡಿಯುವಿರಾ? 501 00:30:47,596 --> 00:30:49,472 - ಅದು ಸ್ಪೈಡರ್ ಅಲ್ವಾ? - ಇಲ್ಲಿ ಏನು ನಡೆಯುತ್ತಿದೆ? 502 00:30:49,473 --> 00:30:54,060 ಬಾರೋ ಬಾರೋ ಮಳೆರಾಯ ಜೇಡರ ಬಲೆಯ ಬೀಳಿಸೋಣ 503 00:30:54,061 --> 00:30:55,479 ಅಲ್ಲಿ ನೋಡಿ. 504 00:31:07,825 --> 00:31:08,866 ಸರಿ. 505 00:31:08,867 --> 00:31:10,077 ಪ್ರಯತ್ನಿಸಿ ನೋಡೋಣ. 506 00:31:15,291 --> 00:31:16,625 ಬಂದು ಹಿಡಿಯಿರಿ. 507 00:31:36,478 --> 00:31:37,313 ಅಯ್ಯೋ ದೇವರೇ. 508 00:32:56,225 --> 00:32:57,350 ನಿನಗಾಗಿ ಇಷ್ಟೆಲ್ಲ ಮಾಡಿದರೂ, 509 00:32:57,351 --> 00:32:59,977 ನನಗೇ ದ್ರೋಹ ಬಗೆದೆ ನೀನು. ಬೇಜಾರಾಯಿತು ತಿಳಿದು. 510 00:32:59,978 --> 00:33:02,731 ನಿನಗೆ ಬೇಜಾರಾಗಿದ್ದು ನಾನು ಅಂತ ತಿಳಿಯದಿದ್ದದ್ದು. 511 00:33:04,525 --> 00:33:06,150 ಇದು ಆ ಹಲ್ಲಿನ ವೈದ್ಯನಿಗಾಗಿನಾ? 512 00:33:06,151 --> 00:33:08,277 ನೀನು ಅವನೊಂದಿಗೆ ಎಂದೂ ಖುಷಿಯಾಗಿ ಇರುತ್ತಿರಲಿಲ್ಲ. 513 00:33:08,278 --> 00:33:11,365 ಯಾವುದೋ ನ್ಯೂ ಜೆರ್ಸಿ ಉಪನಗರದಲ್ಲಿ ಹುಳುಕು ಹಲ್ಲು ತುಂಬುತ್ತಾ ಇರುತ್ತಿದ್ದೆ. 514 00:33:11,865 --> 00:33:13,659 ಅವನನ್ನು ಕೊಂದು ನಿನ್ನ ಜೀವ ಉಳಿಸಿದೆ. 515 00:33:15,202 --> 00:33:17,037 ಮೊದಲು ಆ ಹಲ್ಲಿನ ವೈದ್ಯ, ಆಮೇಲೆ ಆ ಫ್ಲಿಂಟ್. 516 00:33:18,247 --> 00:33:20,248 ನಿನಗೆ ಸರಿಯಾದವರನ್ನು ಹುಡುಕಲು ಬರಲ್ಲ, ಅಲ್ವಾ? 517 00:33:20,249 --> 00:33:21,083 ನಿಜ. 518 00:33:21,959 --> 00:33:23,209 ನನಗೆ ನನ್ನ ಪುರುಷರು, 519 00:33:23,210 --> 00:33:24,836 ನನ್ನ ಉಡುಗೆಗಳು, ನನ್ನ ಹಾಡುಗಳು 520 00:33:24,837 --> 00:33:26,255 ಎಲ್ಲವನ್ನೂ ಸರಿಯಾಗಿ ಆರಿಸಲು ಬರುತ್ತೆ. 521 00:33:29,883 --> 00:33:32,468 ಸುಳ್ಳಿ. ನಿನಗೆ ಬಿಟ್ಟಿ ಸಂಬಳ ಇಷ್ಟವಾಗುತ್ತಿತ್ತು. 522 00:33:32,469 --> 00:33:34,263 ನನ್ನ ಕಾಳಜಿ ಇಷ್ಟ ಆಗುತ್ತಿತ್ತು. 523 00:33:34,847 --> 00:33:38,183 ಊಟ ಹಾಕಿ, ಅಲಂಕಾರ ಮಾಡಿ, ಮೇಲಿಂದ ಕೆಳಗೆ ಬಣ್ಣ ಹಚ್ಚಿ. 524 00:33:38,559 --> 00:33:39,643 ಸ್ವಲ್ಪವೂ ಕೆದರದ ಕೂದಲು. 525 00:33:40,310 --> 00:33:43,271 ಯಾವ ಚಿಂತೆಯೂ ಇಲ್ಲದೆ ವೇದಿಕೆಯ ಮೇಲೆ ಕಳೆದ ಸಮಯ. 526 00:33:43,272 --> 00:33:45,524 ಎಲ್ಲರ ಹೊಗಳಿಕೆ. 527 00:33:46,859 --> 00:33:49,653 "ಎಂದೂ ಸಾಕು ಅನ್ನಬೇಡ." ಅದನ್ನೇ ಅಲ್ವಾ ನೀನು ಹೇಳಿದ್ದು? 528 00:33:50,612 --> 00:33:52,364 "ಸಿಕ್ಕಿದಷ್ಟು ಸಾಕು ಅನ್ನಬೇಡ." 529 00:34:00,539 --> 00:34:01,540 ನನಗೆ ಒಂದೇ ವಿಷಾದವೆಂದರೆ 530 00:34:02,833 --> 00:34:04,752 ನಿನ್ನನ್ನು ಒಮ್ಮೆ ಮಾತ್ರ ಕೊಲ್ಲಲು ಆಗೋದು. 531 00:34:15,387 --> 00:34:16,889 ನಿಜ ಏನೆಂದರೆ, ಚಿನ್ನ, 532 00:34:18,932 --> 00:34:20,350 ನಿನ್ನ ಕೈಯಾರೆ ಸತ್ತದ್ದು ನನಗೆ ಖುಷಿ. 533 00:34:54,092 --> 00:34:55,676 ಎದ್ದೇಳು. 534 00:34:55,677 --> 00:34:58,679 ನಾನು ನಿನಗೆ ಧನ್ಯವಾದ ಹೇಳಬೇಕು. 535 00:34:58,680 --> 00:35:01,140 ಫ್ರಾನ್ಸ್‌ನಲ್ಲಿ ನಿನ್ನ ಜೀವ ಉಳಿಸಿದ್ದಕ್ಕಾ? 536 00:35:01,141 --> 00:35:02,434 ನಿಜ ಹೇಳಬೇಕೆಂದರೆ… 537 00:35:03,101 --> 00:35:04,727 ಈಗ ಅದರ ಬಗ್ಗೆ ಪಶ್ಚಾತ್ತಾಪ ಆಗುತ್ತಿದೆ. 538 00:35:04,728 --> 00:35:06,771 ಇಲ್ಲ, ಇಲ್ಲ, ಇಲ್ಲ, ಇಲ್ಲ. 539 00:35:06,772 --> 00:35:10,234 ನನಗೆ ಬೇಕಿದ್ದ ಒಂದೇ ಒಂದು ವಿಷಯವನ್ನು ನನಗೆ ನೀಡಿದ್ದಕ್ಕೆ. 540 00:35:11,235 --> 00:35:12,903 ಈಗ ನನ್ನನ್ನು ನೋಡು, ಅಮ್ಮ! 541 00:35:13,403 --> 00:35:15,571 ನಾನೊಬ್ಬ ತಾರೆ! 542 00:35:15,572 --> 00:35:16,864 ನೀನು ತಾರೆ ಅಲ್ಲ. 543 00:35:16,865 --> 00:35:18,407 ಆದರೆ ನಿನಗೆ ಹುಷಾರಿಲ್ಲ. 544 00:35:18,408 --> 00:35:21,452 ಮತ್ತು ನಿನ್ನ ಶಕ್ತಿ ಹೆಚ್ಚಾದಷ್ಟೂ, ನಿನ್ನ ಆರೋಗ್ಯ ಹೆಚ್ಚು ತಪ್ಪುತ್ತೆ. 545 00:35:21,453 --> 00:35:22,662 ಆದರೆ ನಾನು ಸಹಾಯ ಮಾಡಬಲ್ಲೆ. 546 00:35:22,663 --> 00:35:24,248 ಬೇಕಿಲ್ಲ, ಗೆಳೆಯ. 547 00:35:24,581 --> 00:35:26,708 ನಿನ್ನ ಚಿಕಿತ್ಸೆ ಮೂರ್ಖರಿಗಾಗಿಯೇ ಇರಲಿ. 548 00:35:37,761 --> 00:35:38,762 ನಿನ್ನ ಹಿಂದೆ! 549 00:35:43,225 --> 00:35:44,560 ಇದು ಒಳ್ಳೆಯದಲ್ಲ. 550 00:36:04,621 --> 00:36:06,707 ದ ಸ್ಪೈಡರ್, ಹಾಂ? 551 00:36:09,334 --> 00:36:12,004 ನನಗೆ ನಾಯಿಯಂತೆ ಕಾಣುತ್ತಿದ್ದೀಯ. 552 00:36:14,715 --> 00:36:17,092 ಅದೂ ಕಜ್ಜಿ ನಾಯಿಯಂತೆ. 553 00:36:19,595 --> 00:36:21,513 ಹೇ, ಅವನು ಒದ್ದಾಡೋದು ನೋಡಿ. 554 00:36:22,347 --> 00:36:24,725 ಎಂತಹ ದುರ್ಬಲ ವೀರ. 555 00:36:26,894 --> 00:36:28,477 ನೀನು ಬೇಕಿದ್ದದ್ದು ಸಾಬೀತುಪಡಿಸಿ ಆಯಿತು. 556 00:36:28,478 --> 00:36:29,563 ತಮಾಷೆ ಮಾಡುತ್ತಿದ್ದೀಯಾ? 557 00:36:30,022 --> 00:36:32,064 ಇದಕ್ಕಾಗಿ ಜೀವಮಾನ ಪೂರ್ತಿ ಕಾದಿದ್ದೇನೆ. 558 00:36:32,065 --> 00:36:34,234 ನನ್ನ ಬ್ರಾಡ್ವೇ ಪ್ರದರ್ಶನ! 559 00:36:34,735 --> 00:36:36,527 ತುಂಬಿದ ಸಭಾಂಗಣ. 560 00:36:36,528 --> 00:36:39,071 ತುಂಬಿದ ಪ್ರೇಕ್ಷಕರು, ನಿಲ್ಲಲು ಮಾತ್ರ ಸ್ಥಳ. 561 00:36:39,072 --> 00:36:42,326 - ಥೂ. - "ಥೂ" ನೀವು. 562 00:36:44,161 --> 00:36:46,788 ಸ್ಪೈಡರ್‌ಗೆ ವಿದಾಯ ಹೇಳಿ, ಎಲ್ಲರೂ. 563 00:36:55,464 --> 00:36:56,298 ನಿಲ್ಲಿಸು! 564 00:37:00,385 --> 00:37:01,386 ಚಿನ್ನ. 565 00:37:01,762 --> 00:37:05,223 ನೀನು ಗುಂಡು ಹಾರಿಸುತ್ತೀಯ ಅಂತ ನನಗೆ ಖಂಡಿತ ಅನಿಸಲ್ಲ. 566 00:37:08,852 --> 00:37:10,187 ಅಯ್ಯೋ ಪಾಪ. 567 00:37:11,521 --> 00:37:12,522 ಬೇಡ! 568 00:37:23,492 --> 00:37:25,284 ನೋಡ್ರಪ್ಪೋ ನೋಡಿ. 569 00:37:25,285 --> 00:37:28,037 ಮಹಿಳೆಯರೇ, ಮಹನೀಯರೇ, ನಿಮ್ಮ ಅದೃಷ್ಟ ಖುಲಾಯಿಸಿದೆ. 570 00:37:28,038 --> 00:37:31,123 ಇಂದು ದುಪ್ಪಟ್ಟು ಪ್ರದರ್ಶನ, 571 00:37:31,124 --> 00:37:35,295 ಪ್ರಸ್ತುತಪಡಿಸುತ್ತಿರುವೆ ನಿಮ್ಮ ನಾಯಕ, ಮೆಗಾವಾಟ್, 572 00:37:35,837 --> 00:37:39,049 ದ ಸ್ಯಾಂಡ್‌ಮ್ಯಾನ್ ವಿರುದ್ಧ. 573 00:37:42,678 --> 00:37:45,013 ಅವನಿಗೆ ತನ್ನ ಹೊಸ ಹೆಸರು ಇಷ್ಟವಾದಂತಿಲ್ಲ. 574 00:37:50,143 --> 00:37:54,105 ಪ್ರದರ್ಶನ ಕೊನೆಯ ಹಂತ ತಲುಪಿದೆ. 575 00:37:54,106 --> 00:37:55,774 ಕೊನೆಯ ದೃಶ್ಯ. 576 00:38:03,323 --> 00:38:04,741 "ಶುಭ ರಾತ್ರಿ, ಮುದ್ದು ರಾಜಕುಮಾರ." 577 00:38:05,701 --> 00:38:09,746 "ಅಪ್ಸರೆಯರ ಜೋಗುಳದಲಿ ನೆಮ್ಮದಿಯ ನಿದ್ದೆ ಬರಲಿ." 578 00:38:41,945 --> 00:38:43,113 - ಅದ್ಭುತ, ಸ್ಪೈಡರ್. - ಶಭಾಷ್! 579 00:39:09,431 --> 00:39:10,974 ನನ್ನ ಬಳಿ ಇನ್ನೂ ಒಂದು ಉಳಿದಿದೆ. 580 00:39:18,356 --> 00:39:20,817 - ಯಾಕೆ? - ಯಾಕೆ ಅಂತ ನಿನಗೆ ಗೊತ್ತು. 581 00:39:23,570 --> 00:39:24,613 ಅವನಿಗೂ ಗೊತ್ತು. 582 00:39:36,958 --> 00:39:37,876 ಅದ್ಭುತ, ಸ್ಪೈಡರ್. 583 00:39:41,338 --> 00:39:43,339 - ಮರಳಿ ಸ್ವಾಗತ. - ನೀವು ಬಂದದ್ದು ಸಂತೋಷ. 584 00:39:43,340 --> 00:39:44,508 ಥ್ಯಾಂಕ್ಸ್. 585 00:39:59,523 --> 00:40:04,027 ಫಿನ್ ಸಿಲ್ವರ್‌ಮೇನ್ ಬರ್ನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. 586 00:40:23,463 --> 00:40:24,673 ಆರಾಮಾಗಿರುವಂತಿದೆ. 587 00:40:25,841 --> 00:40:26,800 ಎಲ್ಲ ನಿನ್ನಿಂದಾಗಿ. 588 00:40:29,553 --> 00:40:30,720 ಒಂಟಿಯಾಗಿ ಅವನ ಬಳಿ ಮಾತಾಡಬಹುದಾ? 589 00:40:31,763 --> 00:40:32,681 ಸರಿ. 590 00:40:37,894 --> 00:40:38,854 ನನಗೆ ಫ್ಲಿಂಟ್ ಇಷ್ಟ, 591 00:40:40,147 --> 00:40:42,524 ಇನ್ನೊಂದು ಜಗತ್ತಿನಲ್ಲಿ ಬಹುಶಃ ನಾನು ನಿನ್ನ ಜೊತೆ ಓಡಿಹೋಗುತ್ತಿದ್ದೆ. 592 00:40:45,235 --> 00:40:46,361 ನಿನಗದು ಗೊತ್ತು, ಅಲ್ವಾ? 593 00:40:47,612 --> 00:40:49,197 ಒಬ್ಬ ವ್ಯಕ್ತಿಯನ್ನು ಬಳಸಿಕೊಳ್ಳೋದು ತಪ್ಪು. 594 00:40:50,532 --> 00:40:53,325 ಆದರೆ ಒಬ್ಬ ಜೊತೆಯಾಗುವಾಗ ಇನ್ನೊಬ್ಬನನ್ನು ಹೀಗೆ ಆಡಿಸೋದು 595 00:40:53,326 --> 00:40:55,453 ಅದಕ್ಕಿಂತ ದೊಡ್ಡ ತಪ್ಪು. 596 00:40:56,746 --> 00:40:58,582 - ನೀನು ನರಕ ಸೇರುವೆ, ಬೆನ್. - ನಾನು ನರಕ ಸೇರಿಯಾಗಿದೆ. 597 00:40:59,166 --> 00:41:00,750 ನಿನ್ನ ಆಗಮನಕ್ಕೆ ಕಾಯುವೆ. 598 00:41:28,028 --> 00:41:29,403 ಧನ್ಯವಾದ! 599 00:41:29,404 --> 00:41:30,780 ಧನ್ಯವಾದ, ನ್ಯೂ ಯಾರ್ಕ್! 600 00:41:31,448 --> 00:41:33,741 ನಿಮ್ಮ ಮೇಯರ್ ಆಗಿದ್ದು ನನಗೆ ಸಂತೋಷ! 601 00:41:33,742 --> 00:41:36,285 ನೀವು ನನ್ನಲ್ಲಿ ನಂಬಿಕೆ ಇಟ್ಟಿರಿ, ನಾನು ನಿಮಗಾಗಿ ಕೆಲಸ ಮಾಡುವೆ! 602 00:41:36,286 --> 00:41:39,539 ನನಗಿನ್ನೂ ಅವನು ಯಾವ ಪಕ್ಷದವನು ಅಂತ ಗೊತ್ತಿಲ್ಲ. 603 00:41:40,332 --> 00:41:42,625 ನೀನು ಮತ ಹಾಕಿದಾಗ ಅದರಲ್ಲಿ ಏನು ಬರೆದಿತ್ತು? 604 00:41:42,626 --> 00:41:44,669 "ಹೊಲಸಿಗಾಗಿ ಮತ ಹಾಕಿ" ಅಂತ ಇದ್ದಲ್ಲಿ ಒತ್ತಿ ಬಂದೆ. 605 00:41:48,340 --> 00:41:49,298 ನೋಡಿದಿರಾ? 606 00:41:49,299 --> 00:41:52,343 ಎಷ್ಟು ಅಲ್ಲಾಡುತ್ತೆ ನೋಡಿದಿರಾ? ಅದನ್ನು ಸರಿ ಮಾಡಿ. 607 00:41:52,344 --> 00:41:54,553 ಕೇಳಿತಲ್ಲಾ? ಅಲುಗಾಟ ಬೇಡ. 608 00:41:54,554 --> 00:41:57,724 ಅಲುಗಾಡೋ ಮೇಜಿನ ಮೇಲೆ ನಾನು ಗಣಿತ ಹೇಗೆ ಕಲಿಯೋದು? 609 00:41:59,476 --> 00:42:01,810 ಮತ್ತೆ ತವರಿಗೆ. 610 00:42:01,811 --> 00:42:03,062 {\an8}ಜೋ ರಾಬರ್ಟ್ಸನ್ - ಮುಖ್ಯ ಸಂಪಾದಕ 611 00:42:03,063 --> 00:42:04,146 {\an8}ಮೋರಿಸ್ ಎರಡನೇ ಅವಧಿಗೂ ಮೇಯರ್ 612 00:42:04,147 --> 00:42:07,983 {\an8}ಇಷ್ಟೆಲ್ಲಾ ಆದ ಮೇಲೆ, ನನಗೆ ಸುದ್ದಿಪತ್ರಿಕೆ ನಡೆಸಲು ಸಿಕ್ಕಿತು, ಮೋರಿಸ್ ಚುನಾವಣೆ ಗೆದ್ದರು, 613 00:42:07,984 --> 00:42:10,194 ಫ್ಲಿಂಟ್‌ಗೆ ಹುಡುಗಿ ಸಿಕ್ಕಳು, ಜಾನೆಟ್‌ಗೆ ಕಚೇರಿ ಸಿಕ್ಕಿತು. 614 00:42:10,195 --> 00:42:11,196 ನಿನಗೇನು ಸಿಕ್ಕಿತು? 615 00:42:13,156 --> 00:42:14,866 ಹೊಸ ಜೀವನ? 616 00:42:15,909 --> 00:42:20,455 ನನಗೆ ಒಳ್ಳೆ ತಿಂಡಿ ಸಿಕ್ಕರೆ ಸಾಕು. 617 00:42:22,832 --> 00:42:24,376 ದೂರವಾಣಿ ಕೆಲಸ ಮಾಡುತ್ತಿದೆ. 618 00:42:28,672 --> 00:42:30,215 ರೈಲಿ-ರೂಯಿಸ್ ಇನ್ವೆಸ್ಟಿಗೇಷನ್ಸ್? 619 00:42:32,259 --> 00:42:35,470 ಖಂಡಿತ, ನಾವು ತೆರೆದಿದ್ದೇವೆ. ನೀವು ನಮ್ಮ ಬಳಿ… 620 00:42:36,972 --> 00:42:39,724 ನಿಮ್ಮ ಅದೃಷ್ಟ ಚೆನ್ನಾಗಿದೆ. ಈಗಷ್ಟೇ 2:00 ಗಂಟೆಯ ಭೇಟಿ ರದ್ದಾಗಿದೆ. 621 00:42:40,725 --> 00:42:41,685 ಅದ್ಭುತ. 622 00:42:42,477 --> 00:42:43,478 ಆಮೇಲೆ ಸಿಗೋಣ. 623 00:42:44,104 --> 00:42:44,980 2:00 ಗಂಟೆ ಯಾಕೆ? 624 00:42:45,438 --> 00:42:46,773 ನಾವು ನಿರತರಾಗಿರುವಂತೆ ಕಾಣುತ್ತೆ. 625 00:42:47,190 --> 00:42:49,817 ಅಲ್ಲದೆ, ನನಗೆ ಹಾಟ್‌ಡಾಗ್ ತಿನ್ನಬೇಕು. 626 00:42:49,818 --> 00:42:51,111 ರಾಬಿ ಕೊಡಿಸುತ್ತಿದ್ದಾನೆ. 627 00:42:51,778 --> 00:42:53,904 ಏನು? ಈಗ ನಿನ್ನದೇ ಆದ ಸುದ್ದಿಪತ್ರಿಕೆ ಇದೆ. 628 00:42:53,905 --> 00:42:56,199 ಹೂಂ. ಆದರೆ ಬ್ಯೂಗಲ್‌ನಲ್ಲಿ ಇದಕ್ಕಿಂತ ಹೆಚ್ಚು ಸಂಬಳ ಬರುತ್ತಿತ್ತು. 629 00:42:59,327 --> 00:43:01,579 ಏನಿದು. ರಾಬರ್ಟ್ಸನ್? ನನಗೊಂದು ಹಾಟ್‌ಡಾಗ್ ಕೊಡಿಸಲು ಆಗಲ್ವಾ? 630 00:43:15,302 --> 00:43:18,972 ರೈಲಿ ಮತ್ತು ರೂಯಿಸ್ ಖಾಸಗಿ ಪತ್ತೇದಾರಿಗಳು 631 00:45:28,726 --> 00:45:30,811 ಉಪ ಶೀರ್ಷಿಕೆ ಅನುವಾದ: ಅನುರಾಧ 632 00:45:30,812 --> 00:45:32,814 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ