1 00:00:00,084 --> 00:00:01,210 ಇಲ್ಲಿಯ ವರೆಗೆ ಕೌಂಟ್ಡೌನ್ ನಲ್ಲಿ 2 00:00:01,293 --> 00:00:02,962 ರಾಜ್ಯಪಾಲರ ಕಾರ್ಯದರ್ಶಿಯ ಕೊಲೆಯಾಗಿದೆ. 3 00:00:03,045 --> 00:00:05,756 ಗವರ್ನರ್ ಶೆಲ್ಬಿ. ಕಾರ್ಯಕ್ರಮವನ್ನು ರದ್ದುಗೊಳಿಸಬೇಕೆಂದು ಶಿಫಾರಸು ಮಾಡುತ್ತೇನೆ. 4 00:00:05,840 --> 00:00:08,300 ರಾಜ್ಯಪಾಲರಿಗೆ ರಕ್ಷಣೆಯ ಬಗ್ಗೆ ಸಲಹೆ ನೀಡಲು ನೀನು ಯಾರು? 5 00:00:08,384 --> 00:00:10,302 -ಮತ್ತು ಗನ್? -ಎಐ ಎಎಕ್ಸ್ಎಸ್ಆರ್. 6 00:00:10,386 --> 00:00:11,846 ವಿಶ್ವದ ಅತ್ಯುತ್ತಮ ಸ್ನೈಪರ್ ರೈಫಲ್. 7 00:00:11,929 --> 00:00:14,056 ಮೊಲಿ ಕೆಲವು ಮಾದಕವಸ್ತು ವ್ಯಸನಿಗಳೊಂದಿಗೆ ಓಡಾಡುತ್ತಿದ್ದಾಳೆ. 8 00:00:14,140 --> 00:00:15,641 ನಿಮ್ಮಿಬ್ಬರ ಬಗ್ಗೆ ನನಗೆ ಸಂತೋಷವಿದೆ. 9 00:00:15,725 --> 00:00:17,351 ನಾವು ಎಲ್ಲವನ್ನೂ ಹಾಳುಮಾಡುತ್ತಿದ್ದೆವು. 10 00:00:17,435 --> 00:00:19,145 ಟಾಡ್ ನಮ್ಮ ಜೊತೆ ಕೆಲಸದಲ್ಲಿ ಇರಬಹುದು ಅನಿಸುತ್ತೆ. 11 00:00:19,228 --> 00:00:21,939 ಅವನು ಮಾಡುತ್ತಿರುವ ಪ್ರತಿಯೊಂದೂ ನಮ್ಮಿಂದ ಪ್ರತಿಕ್ರಿಯೆ ಪಡೆಯಲು. 12 00:00:22,022 --> 00:00:22,857 ಶುಭೋದಯ, ಚಿನ್ನ. 13 00:00:22,940 --> 00:00:26,694 ನೀನು ತುಂಬಾ ಕಷ್ಟಪಡುತ್ತಿದ್ದೀಯ ಅಂತ ಗೊತ್ತು, ನಾನು ಹೆಚ್ಚಿನ ಹೊರೆ ಸೇರಿಸಲ್ಲ. 14 00:00:28,028 --> 00:00:31,073 ಇದು ಅವನ ಸಹಿ. ಟಾಡ್ ಈ ಚಿಹ್ನೆಯನ್ನು ಹಲವು ಬಾರಿ ಬಳಸಿದ್ದಾನೆ. 15 00:00:31,157 --> 00:00:33,826 ಸಂಪರ್ಕಗಳನ್ನು ಸಂಪರ್ಕಿಸಿ, ಯಾರು ರೈಸಿಂಗ್ ಬೇನ್‌ಗೆ ಗಾಂಜಾ ಪೂರೈಸೋದು ನೋಡುವೆ. 16 00:00:33,909 --> 00:00:35,202 ಬಹುಶಃ ನಾವು ರಹಸ್ಯವಾಗಿ ಹೋಗಬಹುದೇನೋ? 17 00:00:35,286 --> 00:00:37,079 ಅವನು ಬೆಲ್ ಮತ್ತು ಒಲಿವೆರಸ್ ಚಿತ್ರ ತೆಗೆದ. 18 00:00:37,163 --> 00:00:40,249 ಅವನಿದನ್ನೆಲ್ಲಾ ಮಾಡಿದ್ದು ಕಾರ್ಯಪಡೆಯಲ್ಲಿ ಯಾರಿದ್ದಾರೆ, ಬೇಟೆಯಾಡುತ್ತಿದ್ದಾರಂತ ತಿಳಿಯಲು. 19 00:00:40,332 --> 00:00:42,168 ಸಾವು ಮಾತ್ರ ನನ್ನನ್ನು ತಡೆಯಲು ಸಾಧ್ಯ 20 00:00:47,214 --> 00:00:50,301 ಕ್ರೆನ್‌ಶಾ 21 00:02:50,462 --> 00:02:54,884 ಕೌಂಟ್ಡೌನ್ 22 00:03:09,899 --> 00:03:11,483 ಎಲ್ಏಪಿಡಿ, ತೆರೆಯಿರಿ. 23 00:03:13,569 --> 00:03:15,154 -ಹಾಯ್. -ಹಾಯ್. 24 00:03:16,155 --> 00:03:19,116 -ನೀನು ಕರೆ ಮಾಡಿದ್ದು ಆಶ್ಚರ್ಯವಾಯಿತು. -ನೀನು ಉತ್ತರಿಸಿದ್ದು ಆಶ್ಚರ್ಯವಾಯಿತು. 25 00:03:19,533 --> 00:03:21,535 ನೀನು ಸರಿಯಾದ ಸಮಯಕ್ಕೆ ಕರೆ ಮಾಡಿದೆ. 26 00:03:21,619 --> 00:03:22,453 ನಾನು… 27 00:03:23,120 --> 00:03:23,996 ಒಂಟಿಯಾಗಿದ್ದೇನೆ. 28 00:03:26,373 --> 00:03:27,458 ಸೀಬಾಸ್‌ಗೆ ಏನಾಯಿತು? 29 00:03:29,209 --> 00:03:30,628 ಅಮ್ಮ ಅವನೇ ಸರಿಯಾದ ಜೋಡಿ ಆಂತಿದ್ದಳು. 30 00:03:31,170 --> 00:03:33,172 -ಆಗಿರಲಿಲ್ವಾ? -ಇಲ್ಲ. 31 00:03:35,633 --> 00:03:37,343 ನಿನ್ನ ಅಮ್ಮ ನನ್ನ ಬಗ್ಗೆ ಏನು ಯೋಚಿಸುತ್ತಾರೆ? 32 00:03:38,385 --> 00:03:39,553 ಕಂಡರೆ ಆಗಲ್ಲ. 33 00:03:40,220 --> 00:03:41,055 ಹೂಂ. 34 00:04:01,283 --> 00:04:02,952 ಒಲಿವೆರಸ್ ಅವಕಾಶ ಸಿಕ್ಕಾಗ ಸಂದೇಶ ಕಳಿಸು. 35 00:04:03,035 --> 00:04:04,912 ನಿನ್ನೆ ರಾತ್ರಿ ದಾಳಿ ಬಗ್ಗೆ ಒಂದು ಯೋಚನೆ ಇದೆ. 36 00:04:06,121 --> 00:04:07,498 ಸಮಯ ಓಡುತ್ತಿದೆ. 37 00:04:12,169 --> 00:04:13,128 ಹೂಂ. 38 00:04:20,219 --> 00:04:23,097 ಸಂದೇಶ ಕಳಿಸು. ನಿನ್ನೆ ರಾತ್ರಿ ದಾಳಿ ಬಗ್ಗೆ ಒಂದು ಯೋಚನೆ ಇದೆ. 39 00:04:30,521 --> 00:04:31,438 ಏನು ಸಮಾಚಾರ? 40 00:04:32,314 --> 00:04:33,148 ಶುಭೋದಯ. 41 00:04:33,691 --> 00:04:36,026 ಓಟಕ್ಕೆ ಹೋಗುತ್ತಿದ್ದೇನೆ. ಐದು-ಕೆ ಓಟಕ್ಕೆ ತರಬೇತಿ ಪಡೆಯುತ್ತಿದ್ದೇನೆ. 42 00:04:36,652 --> 00:04:38,612 -ಅದಕ್ಕೂ ತರಬೇತಿ ಬೇಕಾ? -ಖಂಡಿತ. 43 00:04:39,238 --> 00:04:41,448 ಸೊಂಟ, ಕಾಲು ಉಳುಕದಿರಲಿ ಅಂತ. 44 00:04:41,532 --> 00:04:42,700 ಓಟ ದೇಹದ ಮೇಲೆ ಪರಿಣಾಮ ಬೀರುತ್ತೆ. 45 00:04:44,243 --> 00:04:46,537 ಪ್ರೋಟೀನ್ ಶೇಕ್ ಮಾಡಿದೆ. ನಿನಗಾಗಿ ಬ್ಲೆಂಡರ್‌ನಲ್ಲಿ ಇಟ್ಟಿದ್ದೇನೆ. 46 00:04:46,620 --> 00:04:50,374 ಹಾಗೂ ನಿನಗೆ ಸಾಧ್ಯವಾದರೆ, ಹ್ಯಾಂಬರ್ಗ್‌ಗಳೊಂದಿಗೆ ಊಟಕ್ಕೆ ಹೋಗಬೇಕು. 47 00:04:50,457 --> 00:04:53,168 ನನಗೆ ಯಾವಾಗ ಆಗುತ್ತೆ ಅಂತ ಹೇಳಲು ಆಗಲ್ಲ-- 48 00:04:53,252 --> 00:04:56,380 ಇಲ್ಲ, ನನಗೆ ಗೊತ್ತು, ನಿನಗೆ ಸ್ವಲ್ಪ ಬಿಡುವಾದಾಗ ಹೋಗೋಣ. 49 00:04:57,339 --> 00:04:58,215 ಸರಿ. 50 00:04:59,675 --> 00:05:00,968 -ಬಾಯ್. -ಆಮೇಲೆ ಸಿಗೋಣ. 51 00:05:28,495 --> 00:05:30,497 -ಎಲ್ಲಿ ಹೋಗಿದ್ದೆ? -ಅಯ್ಯೋ. 52 00:05:30,581 --> 00:05:32,582 -ಹೂಂ, ಅಯ್ಯೊ. -ನೀನು ಹೋಗಬೇಕು. 53 00:05:33,082 --> 00:05:34,334 ಏನೋ ತಗೊಂಡಿದ್ದೀಯಾ? 54 00:05:34,418 --> 00:05:37,004 -ದೇವರೇ, ತಲೆ ಏರಿ ಕೂರಬೇಡ. -ಇಲ್ಲಿಂದ ತೊಲಗೋ. 55 00:05:37,671 --> 00:05:40,591 ಮೊಲಿ, ನಾನು ನಿನ್ನ ತಲೆ ಏರಿ ಕೂತಿಲ್ಲ. ನಾವು ಊಟಕ್ಕೆ ಹೋಗುವವರಿದ್ದೆವು. 56 00:05:40,674 --> 00:05:41,592 ನಿನ್ನೆ ರಾತ್ರಿ? 57 00:05:41,675 --> 00:05:43,635 ನೀನು ಬರಲಿಲ್ಲ, ಸಂದೇಶ ಕಳಿಸಲಿಲ್ಲ, ಬರೆದಿಟ್ಟು ಹೋಗಲಿಲ್ಲ. 58 00:05:43,719 --> 00:05:46,305 ದೇವರೇ, ನಾನು ನಿನ್ನ ಪುಟ್ಟ ಮಗುವಲ್ಲ, ನಾನು ನಿನ್ನ ಅಕ್ಕ. 59 00:05:46,638 --> 00:05:49,099 ಹಾಗಾದರೆ ಪುಟ್ಟ ಮಗುವಿನಂತೆ ಆಡೋದು ನಿಲ್ಲಿಸು. 60 00:05:49,183 --> 00:05:50,601 -ಹಾಳಾಗಿ ಹೋಗು. -ಮೊಲಿ. 61 00:05:51,935 --> 00:05:52,770 ಮೊಲಿ! 62 00:05:57,191 --> 00:05:59,443 ಬೆಳಿಗ್ಗೆ 9ಕ್ಕೆ ಸಮಾವೇಶ ಕೋಣೆಗೆ ಎಲ್ಲರೂ ಬರಬೇಕಂತ ಬ್ಲೈಥ್ ಹೇಳಿದರು 63 00:06:00,486 --> 00:06:01,320 ಸರಿ. 64 00:06:44,822 --> 00:06:45,656 -ಹೇ. -ಹೇ. 65 00:06:47,407 --> 00:06:48,534 ನೀನು ಮರಳಿ ಸಂದೇಶ ಕಳಿಸಿಲ್ಲ. 66 00:06:49,368 --> 00:06:50,994 -ಕಳಿಸಲಿಲ್ವಾ? -ಇಲ್ಲ. 67 00:06:51,078 --> 00:06:52,121 ಏನು ಬೇಕಿತ್ತು? 68 00:06:53,413 --> 00:06:56,166 ಪ್ರಕರಣದ ಬಗ್ಗೆ ಕೆಲವು ಆಲೋಚನೆಗಳಿದ್ದವು. ಯಾಕೆ ಅಷ್ಟು ನಿರತನಾಗಿದ್ದೆ? 69 00:06:56,250 --> 00:06:59,002 ಸರಿ, ನಿನಗೆ ಮತ್ತು ಆ ಒಳ್ಳೆಯ ವೈದ್ಯನಿಗೆ ಅಡಚಣೆಯಾಗಲು ಇಷ್ಟ ಇರಲಿಲ್ಲ. 70 00:06:59,086 --> 00:07:01,922 ನೀವು ರೊಮ್ಯಾಂಟಿಕ್ ಡಿನರ್ ಮಾಡುತ್ತಿರಬಹುದು ಮತ್ತು ನಾನು, 71 00:07:02,005 --> 00:07:05,175 -ಶಿವ ಪೂಜೆಯಲ್ಲಿ ಕರಡಿ ಯಾಕೆ ಅಂತ. -ಹೂಂ, ಆದರೆ ನಾನು ಸಂದೇಶ ಕಳಿಸಿದ್ದೆ. 72 00:07:06,802 --> 00:07:10,013 -ನಾನು ರೊಮ್ಯಾಂಟಿಕ್ ಡಿನರ್ ಮಾಡುತ್ತಿದ್ದೆನೇನೋ. -ಎಲ್ಲಿ ಒಯ್ದೆ ಅವಳನ್ನು, ಓಣಿ ಚಾ ಅಂಗಡಿಗಾ? 73 00:07:10,097 --> 00:07:11,974 ಓಣಿ ಚಾ ಅಂಗಡಿ ಬಗ್ಗೆ ತಮಾಷೆ ಬೇಡ. 74 00:07:13,767 --> 00:07:15,102 -ಸಭೆ. -ಹೂಂ. 75 00:07:18,438 --> 00:07:20,149 -ಮೊದಲು ನೀವು. -ಇಲ್ಲ. 76 00:07:20,816 --> 00:07:22,776 -ಖಂಡಿತ ಆಲೋಚಿಸೋದೂ ಇಲ್ಲ. -ಸರಿ. ಧನ್ಯವಾದ. 77 00:07:24,528 --> 00:07:28,490 ಬಾರ್ ಪಕ್ಕದ ರಸ್ತೆಯ ದಿನಸಿ ಅಂಗಡಿಯಿಂದ ಒಂದು ವಿಡಿಯೋ ಬಂದಿದೆ. 78 00:07:28,574 --> 00:07:31,869 ಅವರ ಭದ್ರತಾ ಕ್ಯಾಮರಾ ರೈಸಿಂಗ್ ಬೇನ್‌ನ ಪಾರ್ಕಿಂಗ್ ನಿರ್ಗಮಿಸೋ ಬೀದಿಯನ್ನ ತೋರುತ್ತೆ. 79 00:07:31,952 --> 00:07:34,746 ಎಚ್‌ಡಿ ವಿಡಿಯೋ ಇಲ್ಲ, ಹಾಗಾಗಿ ಸಂಖ್ಯಾ ಫಲಕ ಕಾಣಲ್ಲ, 80 00:07:34,830 --> 00:07:37,707 ಆದರೆ ವಾಹನಗಳ ಬ್ರಾಂಡ್ ಮತ್ತು ಮಾದರಿಗಳ ಬಗ್ಗೆ ಮಾಹಿತಿ ಸಿಗುತ್ತೆ. 81 00:07:37,791 --> 00:07:40,794 ನೋಂದಣಿಗಳಿಗೆ ಹೋಲಿಸಿ, 20 ಮೈಲಿ ವ್ಯಾಪ್ತಿಯೊಳಗಿನ 82 00:07:40,878 --> 00:07:42,171 ಪಟ್ಟಿ ತಯಾರಿಸುತ್ತಿದ್ದೇವೆ. 83 00:07:42,254 --> 00:07:44,923 ಒಬ್ಬ ಸಿಕ್ಕರೆ, ಸಾಲಾಗಿ ಎಲ್ಲರೂ ಸಿಗುತ್ತಾರೆ. ಇನ್ನೂ ಐದು. 84 00:07:45,007 --> 00:07:47,926 ಬಾರ್‌ನಲ್ಲಿ ಯಾರಿದ್ದರು, ಏನು ನೋಡಿದರು ಎಂಬುದರ ಒಳ್ಳೆ ಮಾಹಿತಿ ಸಿಗುತ್ತೆ. 85 00:07:48,010 --> 00:07:50,137 ಬಹುಶಃ ಅದೃಷ್ಟ ಚೆನ್ನಾಗಿದ್ದರೆ ಟಾಡ್ ಗಾಡಿ ಸಿಗಬಹುದು. 86 00:07:50,846 --> 00:07:52,723 ಪ್ರಣಾಳಿಕೆಯ ಬಗ್ಗೆ ಏನಾದರೂ ಹೊಸ ಮಾಹಿತಿ ಇದೆಯಾ? 87 00:07:53,599 --> 00:07:56,852 ಹೌದು. ಪ್ರಣಾಳಿಕೆಯ ಕೆಲವು ಮಾತುಗಳು 88 00:07:56,935 --> 00:08:01,148 ಎಲ್ಏನ ಒಂದು ರೇಡಿಯೋ ಕಾರ್ಯಕ್ರಮದ ನಿರೂಪಕರ ಮಾತುಗಳಿಗೆ ಅಕ್ಷರಶಃ ಹೋಲುತ್ತೆ. 89 00:08:02,524 --> 00:08:05,777 ನೀವು ನೋಡುತ್ತಿರುವುದು ಮತ್ತು ಕೇಳುತ್ತಿರುವುದು, 90 00:08:05,861 --> 00:08:08,113 ಅದನ್ನು ನಾನು ವಿಶ್ವಶೋಷಣೆ ಎಂದು ಕರೆಯುತ್ತೇನೆ. 91 00:08:08,989 --> 00:08:11,742 ಮತ್ತು ನಾನು, "ಇಲ್ಲ, ಇಲ್ಲ, ಇಲ್ಲ, ಇವತ್ತಲ್ಲ" ಎನ್ನುತ್ತೇನೆ. 92 00:08:11,825 --> 00:08:15,454 ನೀವು ನನ್ನ ಹಕ್ಕುಗಳನ್ನು ಕಸಿದುಕೊಳ್ಳಲು ಆಗಲ್ಲ, ಸರ್ಕಾರಿ ಸಾಮ್ರಾಜ್ಯಶಾಹಿ ಕೆರಳಿದ ಗೂಬೆಗಳೇ. 93 00:08:15,537 --> 00:08:17,706 ನೀವು ನನ್ನ ಹಕ್ಕುಗಳನ್ನು ಕಸಿದುಕೊಳ್ಳಲು ಆಗಲ್ಲ, ಲಾಭದಾಹಿ, 94 00:08:17,789 --> 00:08:20,626 ತಲೆರಹಿತ, ಬಣ್ಣ ಬದಲಿಸುವ ಊಸರವಳ್ಳಿಗಳೇ. 95 00:08:20,709 --> 00:08:23,795 ಹೂಂ, ಇಂತಹ ಪದಗಳನ್ನು ಬೇರೆ ಕಾರ್ಯಕ್ರಮಗಳಲ್ಲಿ ಕೇಳಿಲ್ಲ. 96 00:08:23,879 --> 00:08:25,255 ಇವೆಲ್ಲಾ ಅವನೇ ಹುಟ್ಟಾಕಿರೋ ಪದಗಳು. 97 00:08:25,339 --> 00:08:26,840 ಏನೇನೋ ಹೇಳುತ್ತಿದ್ದಾನೆ. 98 00:08:26,924 --> 00:08:30,469 -ತಲೆರಹಿತ ಊಸರವಳ್ಳಿ ಅಂದರೆ? -ನನ್ನ ಹಳೆ ಪ್ರೇಯಸಿಯನ್ನ ಹಾಗೇ ಕರೆಯುತ್ತಿದ್ದೆ. 99 00:08:31,511 --> 00:08:35,140 ಈ ಆಡಿಯೋ ರ್‍ಯಾಂಡಿ ಮ್ಯಾನ್‌ಕಿನ್‌ನ ಏಎಂ 1103ರ 100 00:08:35,224 --> 00:08:36,600 ಟ್ರೂತ್ ಟು ಪವರ್ ಕಾರ್ಯಕ್ರಮದ್ದು. 101 00:08:37,017 --> 00:08:40,479 ದಿನಕ್ಕೆ ಎರಡು ಬಾರಿ, ಒಂದೇ ಪ್ರಸಾರ ಕೇಂದ್ರ, ಆನ್‌ಲೈನ್‌ನಲ್ಲಿ ಸಿಗಲ್ಲ. 102 00:08:40,562 --> 00:08:42,438 ಹಾಗಾಗಿ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ಮಾತ್ರ ಕೇಳಬಹುದು. 103 00:08:42,522 --> 00:08:43,398 ಅದ್ಭುತ ಕೆಲಸ. 104 00:08:44,441 --> 00:08:47,110 ಮೀಚಮ್, ಒಲಿವೆರಸ್, ರ್‍ಯಾಂಡಿ ಮ್ಯಾನ್‌ಕಿನ್‌ನ ಭೇಟಿ ಮಾಡಿ, 105 00:08:47,194 --> 00:08:51,031 ಅವನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿರುವ ಯಾವುದೇ ಗೀಳು ಅಭಿಮಾನಿ ಇದ್ದಾನಾ ನೋಡಿ. 106 00:08:51,114 --> 00:08:52,074 -ಹೂಂ. -ಸರಿ. 107 00:08:57,913 --> 00:09:00,958 ನಾರ್ತ್ ಹಾಲಿವುಡ್ 108 00:09:16,807 --> 00:09:18,392 ವೈದ್ಯನ ಜೊತೆ ಎಲ್ಲಾ ಹೇಗಿದೆ? 109 00:09:19,434 --> 00:09:23,105 ಚೆನ್ನಾಗಿದೆ, ಅನಿಸುತ್ತೆ. ನನ್ನನ್ನು ವೈನ್ ಕಂಟ್ರಿಗೆ ಕರೆದೊಯ್ಯಲು ನೋಡುತ್ತಿದ್ದಾನೆ, 110 00:09:23,188 --> 00:09:25,315 ಆದರೆ ಈ ಕೆಲಸ ಹೇಗಂತ ಗೊತ್ತಲ್ಲಾ? 111 00:09:25,399 --> 00:09:26,233 ಹೂಂ. ಖಂಡಿತ. 112 00:09:27,192 --> 00:09:29,945 ನನ್ನ ಜೀವ ಪ್ರತಿ ಐದು ನಿಮಿಷಗಳಿಗೊಮ್ಮೆ ಹಾರಿಹೋಗುವುದೇನೋ ಅನಿಸುವಾಗ, 113 00:09:30,028 --> 00:09:34,741 ಸ್ವಲ್ಪ ಸ್ಥಿರವಾದ, ವಿಶ್ವಾಸಾರ್ಹ ಬೆಂಬಲ ಇರೋದು ಒಳ್ಳೆಯದು. 114 00:09:34,825 --> 00:09:37,869 ನನಗೆ ತಿಳಿದಿರುವ ಪ್ರತಿಯೊಬ್ಬ ಹುಡುಗಿಯೂ ಅತ್ಯಂತ ನೀರಸ ಹುಡುಗನನ್ನು ಹುಡುಕುತ್ತಿದ್ದಾಳೆ. 115 00:09:37,953 --> 00:09:40,038 ನೀವು ಬರುತ್ತಿದ್ದೀರಿ ಅಂತ ಲಿಂಡಾ ನನಗೆ ಹೇಳಿದಳು. 116 00:09:40,122 --> 00:09:42,915 ನಾನು ರ್‍ಯಾಂಡಿ ಮ್ಯಾನ್‌ಕಿನ್. ನೀವು ಫೆಡರಲ್ ಅಧಿಕಾರಿಗಳು. 117 00:09:43,000 --> 00:09:44,501 ನಾವು ಫೆಡರಲ್ ಕಾರ್ಯಪಡೆಗೆ ಕೆಲಸ ಮಾಡೋದು. 118 00:09:44,584 --> 00:09:47,754 ನಾನು ಡಿಟೆಕ್ಟಿವ್ ಮಾರ್ಕ್ ಮೀಚಮ್, ಇವರು ಏಜೆಂಟ್ ಆಂಬರ್ ಒಲಿವೆರಸ್. 119 00:09:48,213 --> 00:09:50,465 ನಿಮ್ಮ ಸೇವೆಗೆ ನಾನು ಕೃತಜ್ಞ. ಏನು ಸಹಾಯ ಬೇಕಿತ್ತು? 120 00:09:51,300 --> 00:09:52,301 ಅಷ್ಟು ಸುಲಭವಾಗಾ? 121 00:09:52,384 --> 00:09:53,218 ಖಂಡಿತ. 122 00:09:53,760 --> 00:09:57,556 ಆದರೆ ನೀವು ಟ್ರುತ್ ಟು ಪವರ್ ಕಾರ್ಯಕ್ರಮದ ನಿರೂಪಕ ರ್‍ಯಾಂಡಿ ಮ್ಯಾನ್‌ಕಿನ್ ಅಲ್ವಾ? 123 00:09:58,056 --> 00:09:59,182 ಯಾರು, ಅವನಾ? 124 00:10:00,267 --> 00:10:03,603 ಕ್ಯಾಮರಾ ಆಫ್ ಆದ ಮೇಲೂ ಕುಸ್ತಿಪಟುಗಳು ಪರಸ್ಪರ ದ್ವೇಷಿಸುತ್ತಾರಂತ ಅಂದುಕೊಂಡಿದ್ದೀರಾ? 125 00:10:03,687 --> 00:10:05,856 ಆರ್ಥಿಕ ಹಿಂಜರಿತ ನನ್ನ ರೇಟಿಂಗ್‌ಗಳನ್ನು 126 00:10:05,939 --> 00:10:09,735 ಪೂರ್ತಿ ಕುಗ್ಗಿಸುವವರೆಗೆ, ನಾನು ಆರ್ಥಿಕ ಸಲಹೆ ನೀಡುವ ವ್ಯಕ್ತಿಯಾಗಿದ್ದೆ. 127 00:10:09,818 --> 00:10:14,031 ನಿಜ ಗೊತ್ತಾ?ಮನೆ ಕಳೆದುಕೊಳ್ಳುತ್ತಿರುವ ವ್ಯಕ್ತಿ ಒಬ್ಬ ಡಿಜೆಯಿಂದ ಆರ್ಥಿಕ ಸಲಹೆಗಳನ್ನು ಬಯಸಲ್ಲ. 128 00:10:14,740 --> 00:10:18,368 ವಾಷಿಂಗ್ಟನ್ ಜೊತೆಗಿನ ವಾಲ್ ಸ್ಟ್ರೀಟ್‌ನ ಅನೈತಿಕ ಸಂಬಂಧ ಯಾಕೆ ದುರಂತ ಎಂಬುದರ ಬಗ್ಗೆ 129 00:10:18,452 --> 00:10:21,872 ಒಂದು ಕಾಮೆಂಟ್ ಮಾಡಿದೆ, 130 00:10:21,955 --> 00:10:25,334 ಮತ್ತು ಇದ್ದಕ್ಕಿದ್ದಂತೆ, ನನ್ನ ರೇಟಿಂಗ್‌ಗಳು ಪುಟಿದೆದ್ದವು, 131 00:10:25,417 --> 00:10:28,253 ಮತ್ತು ಇಲ್ಲಿನ ಹಿರಿಯಾಧಿಕಾರಿಗಳು ಅದನ್ನೇ ಮುಂದುವರೆಸಲು ಹೇಳಿದರು. 132 00:10:28,795 --> 00:10:30,589 ಸರಿ, ಹಣಕ್ಕಾಗಿ ಮೋಸ ಮಾಡುವವರು ನೀವು. 133 00:10:30,672 --> 00:10:32,507 "ವೃತ್ತಿಪರ ಮನರಂಜಕ" ಅನ್ನಿ. 134 00:10:32,591 --> 00:10:35,093 -ಸರಿ. -ಇವೆಲ್ಲಾ ತಮಾಷೆಗಷ್ಟೇ. 135 00:10:35,177 --> 00:10:37,179 ನಾನು ಯುಸಿಎಲ್ಎಯಲ್ಲಿ ರಂಗಭೂಮಿ ಪದವಿ ಪಡೆದೆ. 136 00:10:37,763 --> 00:10:41,058 ನಾಳೆ ನಾನು ತಂತ್ರಜ್ಞಾನ ಅಥವಾ ಕಾಲೇಜು ಫುಟ್‌ಬಾಲ್ ಬಗ್ಗೆ, 137 00:10:41,141 --> 00:10:45,228 ಅಥವಾ ರೆಸ್ಟೋರೆಂಟ್‌ಗಳ ಬಗ್ಗೆ ಮಾತಾಡಬಹುದು, ಆದರೆ ಇದೀಗ, ಕೋಪ ಹಣ ತರುತ್ತಿದೆ. 138 00:10:45,812 --> 00:10:48,106 ಕೋಪದ ಬಗ್ಗೆ ಹೇಳುತ್ತಾ, ನಿಮಗೆ ಯಾರಾದರೂ ಗೀಳು ಅಭಿಮಾನಿ ಇದ್ದಾರಾ, 139 00:10:48,190 --> 00:10:50,233 -ಇದನ್ನು ತಮಾಷೆ ಅಂದುಕೊಳ್ಳದವರು? -ಖಂಡಿತ. 140 00:10:50,317 --> 00:10:52,778 ಇಂತಹ ಮಾತುಗಳನ್ನು ಆಡುವ ಯಾರಾದರೂ 141 00:10:52,861 --> 00:10:54,237 ಅಪಾಯಗಳನ್ನು ಬರಮಾಡಿಕೊಳ್ಳುತ್ತಾರೆ. 142 00:10:55,280 --> 00:10:57,824 ಗಿಲ್ಲಿ, ಇವರಿಗೆ ನಮ್ಮ ಭಯಾನಕ ಅಭಿಮಾನಿಗಳ ಬಗ್ಗೆ ಹೇಳು. 143 00:10:58,241 --> 00:11:00,702 ನಮಗೆ ಈಗ ಅಷ್ಟೊಂದು ಹಳೆಯ ರೀತಿಯ ಪತ್ರಗಳು ಬರಲ್ಲ, 144 00:11:00,786 --> 00:11:02,996 ಆದರೆ ಸಂಭಾಷಣೆ ವೆಬ್‌ಸೈಟ್‌ಗಳು ಹಿಂಸಾತ್ಮಕ ಜನರಿಂದ ತುಂಬಿವೆ. 145 00:11:03,080 --> 00:11:04,581 ಕೆಚ್ಚೆದೆಯ ಇಂಟರ್ನೆಟ್ ಯೋಧರು. 146 00:11:04,664 --> 00:11:07,751 ಸಮಸ್ಯಾತ್ಮಕ ಜನರ ಮೇಲ್ವಿಚಾರಣೆ ಮಾಡಲು ನಾವು ಭದ್ರತಾ ಸೇವೆಯನ್ನು ಬಳಸುತ್ತೇವೆ. 147 00:11:07,834 --> 00:11:10,629 ಯಾರಾದರೂ ಅನಿರೀಕ್ಷಿತವಾಗಿ ಬಂದರೆ ಅಂತ ವೀಕ್ಷಣಾ ಪಟ್ಟಿಯನ್ನ ಮಾಡುತ್ತೇವೆ. 148 00:11:10,712 --> 00:11:12,547 ಮೇಜಿನ ಬಳಿ ಚಿತ್ರಗಳನ್ನು ಹಾಕಿದ್ದೇವೆ. 149 00:11:12,631 --> 00:11:13,673 ಕೆಲವು ನಿಜವಾದ ಹುಚ್ಚರು. 150 00:11:14,466 --> 00:11:16,426 -ನಮಗೆ ಆ ಪಟ್ಟಿಯನ್ನ ನೋಡಬೇಕು. -ಖಂಡಿತ. 151 00:11:16,510 --> 00:11:17,344 ಅದ್ಭುತ. 152 00:11:18,220 --> 00:11:19,513 ನನಗೆ ಚಿಂತೆಯ ವಿಷಯನಾ? 153 00:11:20,430 --> 00:11:23,475 ಇಲ್ಲ. ಇವೆಲ್ಲಾ ತಮಾಷೆ, ಅಲ್ವಾ? 154 00:11:31,441 --> 00:11:33,735 ಪವರ್ಹೆಡ್ಸ್ ಗಳ ಖಾತೆಗಳನ್ನು ಪರಿಶೀಲಿಸಿದೆವು, 155 00:11:33,819 --> 00:11:36,488 ಮ್ಯಾನ್‌ಕಿನ್‌ನ ಕಾರ್ಯಕ್ರಮದ ಅಭಿಮಾನಿಗಳು ತಮ್ಮನ್ನು ಹಾಗೆ ಕರಿಯೋದು, 156 00:11:36,571 --> 00:11:38,615 ಆದರೆ ಅವರಲ್ಲಿ ಯಾರೂ ಟಾಡ್ ಅಂತ ಅನಿಸಲಿಲ್ಲ 157 00:11:38,698 --> 00:11:41,034 ಬಹಳಷ್ಟು ವಯಸ್ಸಾದ ಮಹಿಳೆಯರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. 158 00:11:41,118 --> 00:11:45,956 ಆದರೆ 92ರ ಮೇರಿಯಾನ್ ಕೊಲೆಟಾ ಪೆಟ್ರೋಲ್ ಬಂಕಲ್ಲಿ ಜನರಿಗೆ ಗುಂಡು ಹೊಡೆಯುತ್ತಿದ್ದಾಳೆ ಅಂತ ಅನಿಸಲ್ಲ. 159 00:11:46,039 --> 00:11:48,792 -ಇವರಲ್ಲಿ ಯಾರಾದರೂ ಕಾನೂನು ಜಾರಿಯ ಕೋಡಂಗಿಗಳಾ? -ಇಲ್ಲ. 160 00:11:48,875 --> 00:11:52,754 ಒಬ್ಬ ವ್ಯಕ್ತಿ ರಾಷ್ಟ್ರೀಯ ಗಾರ್ಡ್‌ನಲ್ಲಿದ್ದ, ಆದರೆ ಕಳೆದ ವರ್ಷ ಕ್ಯಾನ್ಸರ್‌ನಿಂದ ತೀರಿಕೊಂಡ. 161 00:11:52,838 --> 00:11:55,006 ಗುರುತಿಸಿದ ಯಾವ ಜನರೂ ನಮ್ಮ ಶಂಕಿತನಂತೆ ಕಾಣುತ್ತಿಲ್ಲ, ಅಲ್ವಾ? 162 00:11:55,090 --> 00:11:57,717 ಹುಚ್ಚು ಅಭಿಮಾನಿಗಳಿಂದ ಬೇಡದ ರಂಪಾಟಗಳು, ಖಂಡಿತ. 163 00:11:57,801 --> 00:12:00,137 ಆದರೆ ಟಾಡ್ ಮಟ್ಟಕ್ಕೆ ಏರುವಷ್ಟು ಜಾಣ್ಮೆ ಯಾರಲ್ಲೂ ಇಲ್ಲ. 164 00:12:00,220 --> 00:12:02,055 ಈ ಹೆಸರುಗಳು ಎಲ್ಲಿಂದ ಬಂದವು? 165 00:12:02,139 --> 00:12:05,183 ರೇಡಿಯೋ ಕೇಂದ್ರ ಬೆದರಿಕೆ ಮೇಲ್ವಿಚಾರಣಾ ಕಂಪನಿಯನ್ನು ನೇಮಿಸಿಕೊಂಡಿದೆ. 166 00:12:05,267 --> 00:12:07,060 ವರ್ಲ್ಡ್‌ಶೀಲ್ಡ್ ಅಂತನೋ ಏನೋ. 167 00:12:07,144 --> 00:12:09,438 ವರ್ಲ್ಡ್‌ಶೀಲ್ಡ್‌ಗೆ ತಮ್ಮ ಪ್ರದೇಶ ವಿಸ್ತರಿಸಲು ಹೇಳಿ. 168 00:12:09,521 --> 00:12:12,274 ರೇಡಿಯೋ ಕಾರ್ಯಕ್ರಮದಲ್ಲಿ ಮತ್ತು ಪ್ರಣಾಳಿಕೆಯಲ್ಲಿ ಕಂಡುಬಂದ 169 00:12:12,357 --> 00:12:15,152 ನಿರ್ದಿಷ್ಟ ಕೀವರ್ಡ್‌ಗಳನ್ನು ಹುಡುಕುತ್ತಿದ್ದೇವೆ ಅಂತ ಹೇಳಿ. 170 00:12:15,235 --> 00:12:18,947 ಬಹುಶಃ ಯಾರಾದರೂ ಒಮ್ಮೆ ಮಾತ್ರ ಪೋಸ್ಟ್ ಬರೆದಿರಬಹುದು, ಕರಡು ಪ್ರತಿಯಂತೆ. 171 00:12:19,030 --> 00:12:21,408 ಒಂದು ಬಾರಿ ಅಲ್ವಾ ಅಂತ ಇವರೂ ಗುರುತಿಸದೇ ಇರಬಹುದು, 172 00:12:21,491 --> 00:12:23,577 -ಆದರೆ ನಮಗೆ ಅದು ಮುಖ್ಯವಾಗಿರಬಹುದು. -ಈಗಲೇ ಮಾಡುವೆ. 173 00:12:29,082 --> 00:12:31,543 ಅಧ್ಯಕ್ಷರು ಆರು ದಿನಗಳಲ್ಲಿ ನಿಧಿಸಂಗ್ರಹಣೆಗಾಗಿ ಇಲ್ಲಿಗೆ ಬರಲಿದ್ದಾರೆ. 174 00:12:31,626 --> 00:12:34,588 ಹೂಂ. ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವಂತೆ ನನಗೆ ತಿಳಿಸಲಾಗಿಲ್ಲ. 175 00:12:34,671 --> 00:12:36,465 ಆದರೆ ನನಗೆ ಹೆಚ್ಚು ಸುದ್ದಿ ತಿಳಿಯೋದೂ ಇಲ್ಲ. 176 00:12:36,548 --> 00:12:38,425 ನನಗೆ ಜಾಗದ ಬಗ್ಗೆ ಮಾಹಿತಿ ಬೇಕು. 177 00:12:38,508 --> 00:12:41,178 ಸರಿ. ಅವರು ಖಂಡಿತ ಅದನ್ನು ಕೊಡಬೇಕು, ಮತ್ತು ನಾನು-- 178 00:12:41,261 --> 00:12:42,262 -ಫಿಟ್ಜ್. -ಹೂಂ. 179 00:12:42,345 --> 00:12:44,556 ಅದನ್ನು ಮಾಡಿಸಲು ನಿನ್ನ ಬಾಸ್‌ಗೆ ಹೇಳು. 180 00:12:46,808 --> 00:12:47,767 ಹೂಂ. ಸರಿ. 181 00:12:47,851 --> 00:12:52,939 ಅದು ಈಗ ನನ್ನ ಮಾಡಬೇಕಾದ ಕೆಲಸಗಳ ಪಟ್ಟಿಯಲ್ಲಿದೆ. ಸರಿ. 182 00:12:53,023 --> 00:12:55,150 ನಾನು ಸೀಕ್ರೆಟ್ ಸರ್ವೀಸ್‌ನ ಬ್ರಯನ್ ಹ್ಯೂಮ್ ಜೊತೆ ಮಾತಾಡಿ 183 00:12:55,233 --> 00:12:57,235 ವಿಷಯಗಳನ್ನು ಸರಿಪಡಿಸಿದೆ. 184 00:12:57,319 --> 00:13:00,197 -ಗವರ್ನರ್‌ಗೆ ನೀನು ಇಷ್ಟ ಅನ್ನೋದು ನಿನ್ನದೃಷ್ಟ. -ನನ್ನ ಕೆಲಸ ಮಾಡುತ್ತಿದ್ದೇನಷ್ಟೇ. 185 00:13:00,280 --> 00:13:04,493 ನಿನ್ನ ಶಂಕಿತ ನಿನ್ನ ಕಾರ್ಯಪಡೆಯನ್ನು ಒಂದು ಬೈಕರ್ ಬಾರ್‌ಗೆ ಸೆಳೆದನಂತೆ, ಏನದರ ಹೆಸರು? 186 00:13:04,576 --> 00:13:05,452 ರೈಸಿಂಗ್ ಬೇನ್. 187 00:13:06,203 --> 00:13:08,788 -ಯಾಕೆ, ಅವರ ಚಿತ್ರಗಳನ್ನು ತೆಗೆಯುವುದಕ್ಕಾಗಾ? -ಹೌದು. 188 00:13:08,872 --> 00:13:10,165 ಅವನು ಒಬ್ಬಂಟಿಯಾಗಿದ್ದನಾ? 189 00:13:10,248 --> 00:13:13,043 ಅವನು ಒಂಟಿಯಾಗಿದ್ದನೋ ಅಥವಾ ಗುಂಪಿನ ಭಾಗವಾಗಿದ್ದನೋ ನಮಗೆ ತಿಳಿದಿಲ್ಲ. 190 00:13:13,126 --> 00:13:16,546 ಅವನು ಈಗ ಅಥವಾ ಮುಂಚೆ ಕಾನೂನು ಜಾರಿ ಸಂಸ್ಥೆಯ ಭಾಗವಾಗಿರಬಹುದು ಅನ್ನೋದು ನಮ್ಮ ಅನಿಸಿಕೆ. 191 00:13:18,173 --> 00:13:20,050 ನಿನ್ನ ಜನರು ಅಪಾಯದಲ್ಲಿದ್ದಾರೆ ಅನಿಸುತ್ತಾ? 192 00:13:25,055 --> 00:13:27,849 -ಇದನ್ನು ಮಾಡುತ್ತಿರುವುದಕ್ಕೆ ಧನ್ಯವಾದ. -ಹೂಂ. ಪರವಾಗಿಲ್ಲ. 193 00:13:37,526 --> 00:13:38,401 ಹೇ, ಬೆಲ್. 194 00:13:39,986 --> 00:13:43,573 -ನನ್ನಕ್ಕನ ಜೊತೆ ನೀನು ನೋಡಿದ ವ್ಯಕ್ತಿ ಇವನೇನಾ? -ಹೌದು, ಹೌದು. ಅವನೇ. 195 00:13:44,115 --> 00:13:47,035 ಮಾದಕವಸ್ತುಗಳನ್ನು ಇಟ್ಟುಕೊಂಡಿರುವುದು, ವಿತರಿಸುವುದು. ದರೋಡೆ. ಹಲ್ಲೆ. 196 00:13:47,118 --> 00:13:49,329 -ಅವನು ಜೈಲಲ್ಲಿ ಯಾಕಿಲ್ಲ? -ನಾನೂ ಅದನ್ನೇ ಕೇಳುತ್ತಿದ್ದೇನೆ. 197 00:13:51,414 --> 00:13:52,249 ಹೇ. 198 00:13:54,376 --> 00:13:55,585 ಸರಿ, ಒಳ್ಳೆಯದು. 199 00:13:55,669 --> 00:13:56,878 ನಾನು ಕೆಳಗೆ ಬರುವೆ. 200 00:13:57,712 --> 00:13:59,923 ಹೇ, ಗುಂಡು ವಿಭಾಗದಲ್ಲಿರೋ ನನ್ನ ಗೆಳೆಯರ ಕರೆ ಬಂದಿತ್ತು. 201 00:14:00,006 --> 00:14:02,842 ಎಐ ಎಎಕ್ಸ್ಎಸ್ಆರ್ ಸ್ನೈಪರ್ ರೈಫಲ್ ಬಗ್ಗೆ ತನಿಖೆ ಮಾಡಿದ್ದೆ. 202 00:14:02,926 --> 00:14:04,135 ಅವರು ಈಗ ಬರುತ್ತಿದ್ದಾರೆ. 203 00:14:07,514 --> 00:14:08,515 ಹಾಪರ್. ಟನಕಾ. 204 00:14:09,599 --> 00:14:10,433 ಅಗೋ ಬಂದ. 205 00:14:10,517 --> 00:14:13,270 -ಹೇ. -ಮತ್ತೆ, ಈಗ ನೀನು ಸಾರ್ಜೆಂಟ್ ಅಂತೆ? 206 00:14:13,353 --> 00:14:15,021 ಕಾಗದಪತ್ರಗಳಲ್ಲಿ ಏನೋ ತಪ್ಪಾಗಿರಬೇಕು. 207 00:14:15,105 --> 00:14:17,399 ಮೀಚಮ್ ಮತ್ತು ಒಲಿವೆರಸ್, ಕಾರ್ಯಪಡೆ ಸದಸ್ಯರು. 208 00:14:17,482 --> 00:14:18,858 ಹಾಯ್, ಹೇಗಿದ್ದೀರಾ? 209 00:14:18,942 --> 00:14:21,653 ಸರಿ, ಕೇಳು, ನೀನು ಎಐ ಎಎಕ್ಸ್ಎಸ್ಆರ್ ಬಗ್ಗೆ ತನಿಖೆ ಮಾಡಿದ್ದೆ, ಅಲ್ವಾ? 210 00:14:21,736 --> 00:14:25,407 -ಹೂಂ. -ಆಲೋಚನೆ ಬಂತು. ನಾವು ದಾಳಿ ಮಾಡಿದ್ದೆವು. 211 00:14:25,490 --> 00:14:28,785 ಆರು, ಏಳು ತಿಂಗಳ ಹಿಂದೆ, ಸ್ಯಾನ್ ಡಿಯಾಗೋದ ಅಸ್ತ್ರ ವ್ಯಾಪಾರಿಯೊಬ್ಬನ ಮೇಲೆ. 212 00:14:28,868 --> 00:14:31,788 ದೊಡ್ಡ ಕಾರ್ಯಾಚರಣೆ, ದೀರ್ಘ ತನಿಖೆ, ಆದರೆ ನಾವು ಅದರಲ್ಲಿದ್ದೆವು, 213 00:14:31,871 --> 00:14:34,915 ಎಫ್‌ಬಿಐ ಇತ್ತು, ಸ್ಯಾನ್ ಡಿಯಾಗೋ ಪಿಡಿ ಇತ್ತು. 214 00:14:35,000 --> 00:14:39,087 ಗೊತ್ತುಪಡಿಸಿದ ಕಾರ್ಯಪಡೆ ಏನೂ ಅಲ್ಲ, ಆದರೆ ಬಹಳಷ್ಟು ಇಲಾಖೆಗಳು ಭಾಗಿಯಾಗಿದ್ದವು. 215 00:14:39,170 --> 00:14:41,464 -ಸರಿ. -ದಾಳಿ ಹೆಚ್ಚೇನೂ ಉಪಯೋಗ ಆಗಲಿಲ್ಲ, 216 00:14:41,548 --> 00:14:43,925 ಆದರೆ ದಕ್ಷಿಣ ಅಮೆರಿಕಾಕ್ಕೆ ಹೊರಟಿದ್ದ ಒಂದೆರಡು ಅಸ್ತ್ರ ಕಂಟೇನರ್‌ಗಳನ್ನು 217 00:14:44,009 --> 00:14:46,886 -ವಶಪಡಿಸಿಕೊಂಡೆವು. -ಸ್ನೈಪರ್ ರೈಫಲ್‌ಗಳು ಅಂದುಕೊಳ್ಳುವೆ. 218 00:14:46,970 --> 00:14:48,888 ಹೌದು. ಬ್ರಿಟಿಷರ ಉದ್ದ ಬಂದೂಕು ನೋಡಿ ಆಶ್ಚರ್ಯವಾಯಿತು. 219 00:14:48,972 --> 00:14:52,475 -ಅಮೇರಿಕದಲ್ಲಿ ಆ ಮಾದರಿ ಹೆಚ್ಚು ಸಿಗಲ್ಲ. -ದಾಳಿಯ ನಂತರ ರೈಫಲ್‌ಗಳು ಎಲ್ಲಿಗೆ ಹೋದವು? 220 00:14:52,559 --> 00:14:56,688 ಎಲ್ಲವನ್ನೂ ಬ್ಯೂರೋಗೆ ವಹಿಸಿದೆವು. ಶಸ್ತ್ರಾಸ್ತ್ರ ವ್ಯಾಪಾರಿ ತಪ್ಪಿಸಿಕೊಂಡ, 221 00:14:56,771 --> 00:14:58,189 ಹೆಸರು ರಾಗ್ನರ್ ಎಗ್ಗನ್. 222 00:14:58,273 --> 00:14:59,357 ಅದೇನು? ಸ್ವೀಡಿಷ್ ಹೆಸರಾ? 223 00:14:59,441 --> 00:15:00,400 ನಾರ್ವೇಜಿಯನ್. 224 00:15:00,483 --> 00:15:02,777 ನಮಗೆ ತಿಳಿದಿರುವಂತೆ ಓಸ್ಲೋವರೆಗೆ ಓಡಿಹೋದ. 225 00:15:02,861 --> 00:15:06,031 ಎಫ್‌ಬಿಐ ಇನ್ನೂ ಅವನನ್ನು ಹುಡುಕುತ್ತಿದೆ. ನಾವು ಬೇರೆ ಕೆಲಸಕ್ಕೆ ಹೋದೆವು. 226 00:15:06,114 --> 00:15:07,907 ಪ್ರಕರಣ ನಿರ್ವಹಿಸುತ್ತಿದ್ದ ಬ್ಯೂರೋ ಏಜೆಂಟರು ಯಾರು? 227 00:15:07,991 --> 00:15:08,825 ಛೇ. 228 00:15:10,035 --> 00:15:11,453 ನನಗೆ ಗೊತ್ತಿಲ್ಲ. ನಿನಗೆ ನೆನಪಿದೆಯಾ? 229 00:15:11,536 --> 00:15:13,997 ಡಜನ್‌ಗಟ್ಟಲೆ ಇದ್ದರು. ನಾನು ಪ್ರಕರಣದ ಫೈಲ್ ನೋಡಬಹುದು. 230 00:15:14,080 --> 00:15:15,206 ನಾವು ಸ್ವತಂತ್ರರಾಗಿದ್ದೆವು. 231 00:15:15,290 --> 00:15:17,292 ಹೂಂ, ಸಾಧ್ಯವಾದರೆ ನೋಡಿ. ನಾನವರಿಗೆ ನನ್ನ ಹೆಸರನ್ನು ನೀಡಿ, 232 00:15:17,375 --> 00:15:21,546 ಅಸ್ತ್ರ ವ್ಯಾಪಾರಿ ಬಂದೂಕು ಹೇಗೆ ಪಡೆದ, ಅವರ ಬಳಿ ಬೇರೆ ಹೊಸ ಸುಳಿವು ಇದೆಯಾ, ಅದೆಲ್ಲಾ ಕೇಳುವೆ. 233 00:15:21,630 --> 00:15:24,424 ಖಂಡಿತ. ನಾನು ನನ್ನ ಮೇಜಿಗೆ ಹಿಂತಿರುಗಿದ ನಂತರ ಅದನ್ನು ಫಿನೌಗೆ ಕಳಿಸುವೆ. 234 00:15:24,507 --> 00:15:25,342 ಒಳ್ಳೆಯದು. 235 00:15:25,425 --> 00:15:26,593 -ಧನ್ಯವಾದ. -ಖಂಡಿತ. 236 00:15:26,676 --> 00:15:27,844 -ಖುಷಿ ಆಯಿತು. -ಧನ್ಯವಾದ. 237 00:15:27,927 --> 00:15:28,762 ಖುಷಿಯಾಯಿತು. 238 00:15:31,765 --> 00:15:33,141 ಹೂಲಿಯೊ ನೀರಸ ವ್ಯಕ್ತಿ ಅಲ್ಲ. 239 00:15:34,809 --> 00:15:36,186 ಹೂಂ, ಅಲ್ಲ, ಕ್ಷಮಿಸು. 240 00:15:36,269 --> 00:15:37,228 ಅವನು… 241 00:15:39,397 --> 00:15:41,191 ಅವನು ಸ್ಥಿರ. 242 00:15:41,274 --> 00:15:43,068 -ವಿಶ್ವಾಸಾರ್ಹ. -ನಿಜ. 243 00:15:43,151 --> 00:15:44,194 ಒಳ್ಳೆಯದು. 244 00:15:45,528 --> 00:15:46,738 ಕಿರಿಕಿರಿ ನೀನು. 245 00:15:46,821 --> 00:15:48,573 -ಹೇಳಿದ್ದನ್ನು ಒಪ್ಪುತ್ತಿದ್ದೇನೆ. -ಗೊತ್ತಾಗುತ್ತಿದೆ. 246 00:15:52,327 --> 00:15:54,579 ಇಪ್ಪತ್ತು ವರ್ಷಗಳ ವ್ಯವಹಾರದಲ್ಲಿ ನಾನು ಕಲಿತದ್ದು ಇದು, 247 00:15:54,663 --> 00:15:56,456 ಅದೂ ವಾರಕ್ಕೆರಡು ಬಾರಿ ಗುಂಡಿಗೆ ಬಲಿಯಾಗುತ್ತಿರುವಾಗ. 248 00:15:56,539 --> 00:15:59,501 -ಮತ್ತೊಂದು ಉಪನ್ಯಾಸ. -ವಿರುದ್ಧ ಗುಣಗಳು ಆಕರ್ಷಿಸಲ್ಲ. 249 00:16:01,127 --> 00:16:04,547 ನಮ್ಮ ಲೋಕದ ಜನರು ಸಾಮಾನ್ಯ ಲೋಕದ ಜನರನ್ನು ಸೇರಲು ನೋಡಿದಾಗ, 250 00:16:04,631 --> 00:16:05,507 ದುರಂತವಾಗುತ್ತೆ. 251 00:16:06,007 --> 00:16:08,593 ಯಾಕೆಂದರೆ ನಿಜ ಏನೆಂದರೆ, ಅವರಿಗೆ ನಮ್ಮ ಲೋಕ ಅರ್ಥ ಆಗಲ್ಲ. 252 00:16:08,677 --> 00:16:09,678 ಎಂದಿಗೂ ಆಗಲ್ಲ. 253 00:16:10,303 --> 00:16:13,014 ನೀನವರಿಗೆ ಕೆಲಸದ ಬಗ್ಗೆ ಹೇಳಲು ಪ್ರಯತ್ನಿಸಬಹುದು, ಅದನ್ನು ಅವರಿಗೆ ವಿವರಿಸಬಹುದು, 254 00:16:13,098 --> 00:16:15,392 ಅವರು ಅರ್ಥಮಾಡಿಕೊಂಡಂತೆ ನಟಿಸುತ್ತಾರೆ, ಆದರೆ ಅವರಿಗೆ ಅರ್ಥವಾಗಲ್ಲ. 255 00:16:16,976 --> 00:16:20,188 ಅವರಿಗೆ ಎಲ್ಲವನ್ನೂ ಹೇಳಲೂಬಾರದು, ನಾವು ಎಲ್ಲಾ ಹೇಳಿಕೊಂಡರೆ, 256 00:16:20,271 --> 00:16:21,773 ಅವರಿಗೆ ಆಘಾತವಾಗುತ್ತೆ. 257 00:16:21,856 --> 00:16:25,276 ಹಾಗಾಗಿ, ನಾವು ಅದನ್ನು ಒಳಗೇ ಇಟ್ಟುಕೊಂಡು ಕೆಳಕ್ಕೆ ತಳ್ಳುತ್ತೇವೆ. 258 00:16:25,360 --> 00:16:28,697 ನಾವು ನಗುತ್ತೇವೆ, ತಲೆಯಾಡಿಸುತ್ತೇವೆ, ನಾವು ಸಾಮಾನ್ಯರು ಎಂಬಂತೆ ನಟಿಸುತ್ತೇವೆ, 259 00:16:29,614 --> 00:16:31,366 ಮತ್ತು ಅದು ಆದ ಕೂಡಲೇ 260 00:16:31,449 --> 00:16:33,159 ಅಂತ್ಯ ಶುರುವಾಗುತ್ತೆ. 261 00:16:34,536 --> 00:16:37,622 ಹಾಗಾಗಿ, ಒಂದು ಗೆರೆ ಎಳೆದರೆ ಉತ್ತಮ, 262 00:16:37,706 --> 00:16:39,290 ಯಾಕೆಂದರೆ, ನೆನಪಿರಲಿ, ಅಕ್ಕಾ, 263 00:16:39,374 --> 00:16:42,585 ಅವನು ನಿನ್ನೊಂದಿಗೆ ಎಂದಿಗೂ ನಿಜವಾಗಿ ಸಮಯ ಕಳೆಯಲು ಸಾಧ್ಯವಿಲ್ಲ ಎಂದವನಿಗೆ ತಿಳಿದ ತಕ್ಷಣ… 264 00:16:45,422 --> 00:16:46,339 ದುರಂತ ಶುರು. 265 00:16:55,306 --> 00:16:56,391 -ಅದಕ್ಕೇನೀಗ? -ದೇವರೇ. 266 00:16:56,474 --> 00:16:58,184 ಹೂಲಿಯೊ ಜೊತೆ ಸಂಬಂಧ ಮುರಿದು ನಿನ್ನ ಜೊತೆ ಇರಬೇಕಾ? 267 00:16:59,144 --> 00:17:02,021 -ಅಂದರೆ-- -ಯಾಕೆಂದರೆ ನೀನು ನನಗಾಗಿ ಕಾಯುತ್ತಿದ್ದೀಯಲ್ವಾ? 268 00:17:02,105 --> 00:17:04,441 ಒಂಟಿಯಾಗಿ, ನನ್ನಿಂದ ದೂರವಾಗಿ, ದುಃಖದಲ್ಲಿ. 269 00:17:06,401 --> 00:17:07,569 ಇರಬಹುದೇನೋ. 270 00:17:08,278 --> 00:17:09,820 ಬರೀ ಕಟ್ಟುಕಥೆ. 271 00:17:09,904 --> 00:17:12,156 ನೀನು ನನಗೆ ಕಷ್ಟದ ಸಮಯದಲ್ಲಿ ಸಹಾಯ ಮಾಡಿದೆ, 272 00:17:12,240 --> 00:17:13,616 ನನಗೆ ಅದು ತುಂಬಾ ಅರ್ಥಪೂರ್ಣವಾಗಿತ್ತು. 273 00:17:15,702 --> 00:17:18,872 ನಮ್ಮಿಬ್ಬರ ನಡುವೆ ಏನಿದೆಯೋ, ಅದಕ್ಕೆ ಶ್ರಮ ಪಡಬೇಕಿಲ್ಲ. 274 00:17:20,582 --> 00:17:25,252 ನಾವು ಶಂಕಿತನ ಬಾಯಿ ಬಿಡಿಸುತ್ತಿರಲಿ, ಬೆಟ್ಟಗಳಲ್ಲಿ ಹುಚ್ಚಾಗಿ ಗಾಡಿ ಓಡಿಸುತ್ತಿರಲಿ, 275 00:17:25,336 --> 00:17:29,257 ಅಥವಾ ನಮ್ಮ ನಗರವನ್ನು ಸ್ಫೋಟಿಸಲು ನೋಡುತ್ತಿದ್ದ ವ್ಯಕ್ತಿಯನ್ನು ಬೆನ್ನಟ್ಟುತ್ತಿರಲಿ… 276 00:17:31,259 --> 00:17:33,386 ಇದು ನಕಲಿ ಜಾದೂ ಅಲ್ಲ, 277 00:17:34,804 --> 00:17:35,805 ಅದು ನಿನಗೂ ಗೊತ್ತು, 278 00:17:38,057 --> 00:17:39,058 ನನಗೂ ಗೊತ್ತು. 279 00:17:47,484 --> 00:17:48,693 ದೇವರೇ. 280 00:17:49,652 --> 00:17:51,362 -ಇನ್ನೇನು ನಂಬುವವಳಿದ್ದೆ. -ಚೆನ್ನಾಗಿ ನಟಿಸಿದೆನಾ? 281 00:17:51,446 --> 00:17:55,325 -ನೀನೊಬ್ಬ ಬೇವರ್ಸಿ. -ಹೂಂ, ಕಾಫಿಗೆ ಸಕ್ಕರೆ ಹಾಕಲು ಮರೆತೆ. 282 00:18:06,211 --> 00:18:09,464 ಆರ್ಕೇಡಿಯಾ 283 00:18:34,906 --> 00:18:37,033 ಇನ್ನೂ ಕೆಲವು ಗಂಟೆಗಳವರೆಗೆ ಪಾರ್ಕಿಂಗ್ ಸ್ಥಳ ತೆರೆಯಲ್ಲ. 284 00:18:37,116 --> 00:18:38,326 ಏಳು ಗಂಟೆಗೇ ತೆರೆಯೋದು. 285 00:18:39,953 --> 00:18:40,954 ಗೇಟ್ ತೆರೆ. 286 00:18:42,205 --> 00:18:43,581 ಕ್ಷಮಿಸಿ. ಖಂಡಿತ. 287 00:18:45,208 --> 00:18:46,209 ಒಳಗೆ ಹೋಗಿ. 288 00:19:35,884 --> 00:19:37,969 -ಹೂಲಿಯೊ. -ಹೇ, ಕೇಳು… 289 00:19:38,511 --> 00:19:40,763 ನಾವು ಹ್ಯಾಂಬರ್ಗ್‌ರ ಜೊತೆ ಹೊರಗೆ ಹೋಗಬೇಕಾಗಿಲ್ಲ. 290 00:19:40,847 --> 00:19:42,348 ಇಲ್ಲ, ನನಗೆ ಹೋಗಬೇಕು. 291 00:19:42,891 --> 00:19:44,309 -ನಾನು ಹಾಗೆ-- -ನನಗೆ ಅರ್ಥ ಆಗುತ್ತೆ. 292 00:19:44,392 --> 00:19:45,226 ನಿಜವಾಗಲೂ. 293 00:19:46,102 --> 00:19:49,856 ನೀನು ನನ್ನ ಜೀವನದಲ್ಲಿರೋದು ನನಗೆ ತುಂಬಾ ಸಂತೋಷ, ಅದನ್ನು ಎಲ್ಲರ ಜೊತೆ ಹಂಚಿಕೊಳ್ಳಬೇಕು ನನಗೆ. 294 00:19:51,816 --> 00:19:52,817 ಅದು… 295 00:19:55,945 --> 00:19:56,946 ನನಗೆ ಅರ್ಥ ಆಗುತ್ತೆ. 296 00:19:57,906 --> 00:20:00,450 ಕ್ಷಮಿಸು, ನಾನು ಹೋಗಬೇಕು. 297 00:20:01,701 --> 00:20:03,828 ಖಂಡಿತ. ಸಾಧ್ಯವಾದಾಗ ಕರೆ ಮಾಡು. 298 00:20:14,255 --> 00:20:15,214 ಒಲಿವೆರಸ್? 299 00:20:15,798 --> 00:20:18,301 -ಹಾಂ? -ಒಂದು ಸಹಾಯ ಮಾಡುವೆಯಾ? 300 00:20:18,384 --> 00:20:19,218 ಖಂಡಿತ. 301 00:20:19,302 --> 00:20:21,763 ಈ ವ್ಯಕ್ತಿಯ ಬಗ್ಗೆ ಸಾಧ್ಯವಾದಷ್ಟು ಕಂಡುಹಿಡಿಯಬಲ್ಲೆಯಾ? 302 00:20:23,681 --> 00:20:25,016 ಎಲ್ಏಪಿಡಿ ಬಳಿ ಕೇಳಿ ನೋಡಿದೆಯಾ? 303 00:20:25,516 --> 00:20:28,686 ಹೂಂ. ಹೂಂ, ಮಾದಕವಸ್ತು ಇಟ್ಟುಕೊಂಡಿದ್ದಕ್ಕೆ, ವಿತರಿಸಿದ್ದಕ್ಕೆ ಅವನನ್ನು ಬಂಧಿಸಲಾಗಿದೆ, 304 00:20:28,770 --> 00:20:30,271 ಆದರೆ ಅವನು ಆರೋಪಗಳನ್ನು ಮೀರಿಯೋ, 305 00:20:30,355 --> 00:20:32,315 ಅಥವಾ ಪರೋಲ್ ಮಾಡಿಯೋ ಮುಕ್ತವಾಗಿದ್ದಾನೆ. 306 00:20:33,191 --> 00:20:34,317 ಪ್ರಕರಣಕ್ಕೆ ಸಂಬಂಧಿಸಿದ್ದಾ? 307 00:20:35,777 --> 00:20:37,028 ಇಲ್ಲ, ನನ್ನ ಅಕ್ಕನ ಜೊತೆ ಇದ್ದಾನೆ. 308 00:20:39,489 --> 00:20:40,323 ಖಂಡಿತ ಮಾಡಿಕೊಡುವೆ. 309 00:20:42,367 --> 00:20:45,119 ನ್ಯಾಯಾಲಯದ ವರದಿಯಲ್ಲಿಲ್ಲದ್ದು ಡಿಇಎಗೆ ಏನು ಗೊತ್ತು ಅಂತ ನನಗೆ ತಿಳಿಯಬೇಕು. 310 00:20:45,912 --> 00:20:46,788 ಇದು ರಹಸ್ಯವಾಗಿರುತ್ತೆ. 311 00:20:47,914 --> 00:20:48,748 ಧನ್ಯವಾದ. 312 00:20:49,374 --> 00:20:51,250 ಫಿಟ್ಜ್, ಜೊತೆ ಬಾ. 313 00:20:56,631 --> 00:20:59,842 ಬೆವರ್ಲಿ ಹಿಲ್ಸ್ 314 00:21:24,909 --> 00:21:26,494 -ನೇಥನ್. -ಗವರ್ನರ್. 315 00:21:28,079 --> 00:21:29,497 ಇದೇ ಜಾಗ ಅಂದುಕೊಳ್ಳುವೆ. 316 00:21:29,914 --> 00:21:31,791 ಪ್ರತಿ ಅತಿಥಿಗೆ 50 ಸಾವಿರ. 317 00:21:31,874 --> 00:21:33,209 ಎಷ್ಟು ಅತಿಥಿಗಳು ಬರಬಹುದು? 318 00:21:33,292 --> 00:21:34,669 200ಕ್ಕೆ ಸೀಮಿತಗೊಳಿಸುತ್ತೇವೆ. 319 00:21:34,752 --> 00:21:36,629 ತನಿಖೆ ಎಲ್ಲಿಯವರೆಗೆ ಬಂತು? 320 00:21:36,713 --> 00:21:39,799 ಗುಂಡು ಹಾರಿಸಿದವನು ಕಾನೂನು ಜಾರಿಯಲ್ಲಿರಬಹುದು ಅನ್ನೋದು ನಮ್ಮ ಅನಿಸಿಕೆ. 321 00:21:39,882 --> 00:21:43,428 -ದೇವರೇ. ಏನದರ ಅರ್ಥ? -ನಾವು ಇನ್ನೂ ಮಾಹಿತಿ ಸಂಗ್ರಹಿಸುತ್ತಿದ್ದೇವೆ. 322 00:21:43,511 --> 00:21:46,264 -ಒಂದು ವಾರಕ್ಕಿಂತ ಕಡಿಮೆ ಸಮಯವಿದೆ. -ಅಡ್ವಾನ್ಸ್ ತಂಡದಿಂದ ಕರೆ ಬಂದಿತ್ತು. 323 00:21:46,347 --> 00:21:48,182 ಸೀಕ್ರೆಟ್ ಸರ್ವಿಸ್ ಜಾಗವನ್ನು ಪರಿಶೀಲಿಸಿದೆ. 324 00:21:48,266 --> 00:21:51,352 ಡೇರೆಗಳು, ಸ್ನೈಪರ್ ಸ್ಥಾನಗಳು, ಸಿಎಟಿ ತಂಡ, ವೈದ್ಯಕೀಯ ಮತ್ತು ತುರ್ತು ಯೋಜನೆ, 325 00:21:51,436 --> 00:21:54,355 ಎಲ್ಲವೂ ತಯಾರಿದೆ. ಇದು ನಡೆಯಲಿದೆ. 326 00:21:54,439 --> 00:21:56,733 ನೋಡಿದೆಯಾ? ಚಿಂತೆಯ ವಿಷಯ ಇಲ್ಲ. 327 00:21:57,608 --> 00:21:59,902 ನಾನು ಸೀಕ್ರೆಟ್ ಸರ್ವೀಸ್‌ನ ಯೋಜನೆ ನೋಡಬಹುದಾ? 328 00:22:00,403 --> 00:22:02,572 ನಾನು ವಿಶೇಷವಾಗಿ ಕೇಳಬಹುದು. 329 00:22:02,655 --> 00:22:03,865 -ಹಾಗೆ ಮಾಡು. -ಸರಿ. 330 00:22:05,533 --> 00:22:06,743 ನಿಮಗೆ ಮನೆಮಾಲೀಕರು ಗೊತ್ತಾ? 331 00:22:06,826 --> 00:22:07,660 ಆತ್ಮೀಯ ಸ್ನೇಹಿತರು. 332 00:22:09,746 --> 00:22:11,080 ಒಂದು ನಿಮಿಷ. ಕ್ಷಮಿಸಿ, ಸರ್. 333 00:22:12,248 --> 00:22:13,082 ಮಾತಾಡಿಸು. 334 00:22:14,500 --> 00:22:15,376 ಏಜೆಂಟ್ ಫಿಟ್ಜೆರಾಲ್ಡ್? 335 00:22:16,419 --> 00:22:17,336 ಹಾಂ, ಸರ್. 336 00:22:17,420 --> 00:22:20,381 ನನ್ನ ಜೀವಕ್ಕೆ ಬೆದರಿಕೆ ಇದೆ ಅಂತ ನೀನೇ ಕಂಡುಹಿಡಿದಿದ್ದು ಅಂತ ಕೇಳಿದೆ. 337 00:22:20,465 --> 00:22:24,260 -ಅದೇನೋ-- -ಹೂಂ, ಮಜಲ್ ಪೈಲ್, ಸರ್. 338 00:22:24,343 --> 00:22:25,470 -ಸರಿ. -ಅದು… 339 00:22:25,553 --> 00:22:26,846 ಬ್ಯಾರೆಲ್‌ನ ಕೆಳಭಾಗ. 340 00:22:27,305 --> 00:22:28,181 ಹೌದು. 341 00:22:28,264 --> 00:22:30,725 ನಿಮ್ಮ ಬಗ್ಗೆ ಅದು ಏನು ಹೇಳುತ್ತೆ? ಈ ತರದ ಕೆಲಸಗಳನ್ನ ನಿಮಗೆ ವಹಿಸಿದ್ದಾರಾ? 342 00:22:32,685 --> 00:22:35,021 ಅಮ್ಮ ಯಾವಾಗಲೂ ಹೇಳುತ್ತಿದ್ದರು, "ಒತ್ತಡವಿಲ್ಲದೆ ವಜ್ರ ಆಗಲ್ಲ" ಅಂತ. 343 00:22:35,646 --> 00:22:38,816 ನನ್ನನ್ನು ಎಲ್ಲಿ ಹಾಕಿದರೂ ಸರಿ. ನಾನು ನನ್ನ ಯೋಗ್ಯತೆಯನ್ನು ಸಾಬೀತುಪಡಿಸುತ್ತೇನೆ. 344 00:22:40,443 --> 00:22:42,195 ನನ್ನಪ್ಪ ನನ್ನನ್ನು ರಿಯಲ್ ಎಸ್ಟೇಟ್‌ಗೆ ಸೇರಿಸಿದ್ದು. 345 00:22:43,279 --> 00:22:45,990 ಅದರಲ್ಲಿ ಅವರು ಪರಿಣತರು, ಆದರೆ ಅವರಿಂದ ಅದು ಅಭಿವೃದ್ಧಿ ಆಗಲಿಲ್ಲ, 346 00:22:46,074 --> 00:22:48,534 ಆದರೂ ಎಲ್ಏಯಲ್ಲಿ ಆಸ್ತಿ ಖರೀದಿಸುತ್ತಲೇ ಇದ್ದರು, 347 00:22:48,618 --> 00:22:50,244 ಮತ್ತು ಸತ್ತಾಗ ಅವುಗಳನ್ನು ನನಗೆ ಬಿಟ್ಟು ಹೋದರು. 348 00:22:50,328 --> 00:22:52,205 ಅದರ ಜೊತೆ ದೊಡ್ಡ ಸಾಲವನ್ನೂ ಸಹ. 349 00:22:53,915 --> 00:22:57,043 ನಾನು ಅವುಗಳನ್ನು ಮಾರಬಹುದಿತ್ತು, ಬ್ಯಾಂಕಿಗೆ ಉಳಿದದ್ದನ್ನು ತಗೊಳ್ಳಲು ಬಿಡಬಹುದಿತ್ತು, 350 00:22:57,126 --> 00:23:00,254 ಆದರೆ ನಾನು ಶ್ರಮಿಸಿದೆ, ಒಳಹೊಕ್ಕು ನೋಡಿದೆ. 351 00:23:00,338 --> 00:23:01,422 ಕಟ್ಟಿ ನೋಡಿದೆ. 352 00:23:02,757 --> 00:23:04,634 ಚೆನ್ನಾಗಿ ಮಾಡಿದಿರಿ, ರಾಜ್ಯಪಾಲರೇ. 353 00:23:05,176 --> 00:23:06,344 ನಿಮ್ಮಮ್ಮ ಏನು ಹೇಳುತ್ತಿದ್ದದ್ದು? 354 00:23:07,178 --> 00:23:08,763 "ಒತ್ತಡವಿಲ್ಲದೆ ವಜ್ರ ಆಗಲ್ಲ." 355 00:23:09,931 --> 00:23:10,807 ಜಾಣ ಮಹಿಳೆ. 356 00:23:12,850 --> 00:23:13,851 ಏನು? 357 00:23:16,354 --> 00:23:17,480 ಎಲ್ಲಿ? 358 00:23:34,872 --> 00:23:36,249 ನಾವು ಇಲ್ಲಿ ಯಾಕೆ ಇದ್ದೇವೆ? 359 00:23:36,332 --> 00:23:37,667 ನಮಗೆ ಹೇಳಿದ್ದನ್ನು ಅವರಿಗೆ ಹೇಳು. 360 00:23:39,210 --> 00:23:41,921 ಆ ಟ್ರಕ್ ಓಡಿಸುತ್ತಿದ್ದ ವ್ಯಕ್ತಿ ನನಗೆ ಎಫ್‌ಬಿಐ ಗುರುತಿನ ಚೀಟಿ ತೋರಿಸಿದ. 361 00:23:43,256 --> 00:23:45,883 -ಮುಖ್ಯವಾದ ಕೆಲಸ ಇದೆ ಅಂದ. -ಹೀಗೆ ಕಾಣುತ್ತಿತ್ತಾ? 362 00:23:46,968 --> 00:23:48,094 ಥೇಟ್ ಹಾಗೇ. 363 00:23:48,803 --> 00:23:50,138 ಅದರ ಮೇಲೆ ಹೆಸರಿತ್ತಾ? 364 00:23:51,013 --> 00:23:53,432 ಅವನ ಹೆಬ್ಬೆರಳು ಆ ಭಾಗದ ಮೇಲೆ ಇತ್ತು ಅನಿಸುತ್ತೆ. 365 00:23:53,516 --> 00:23:54,642 ಆಮೇಲೆ ಏನಾಯಿತು? 366 00:23:54,725 --> 00:23:56,519 ಅವನು ಒಳಗೆ ಹೋದ. ನಾನು ಕಚೇರಿಗೆ ಕರೆ ಮಾಡಿ ತಿಳಿಸಿದೆ. 367 00:23:57,436 --> 00:23:59,063 ಅಲ್ಲಿ ನಿಲ್ಲಿಸುವ ಬದಲು ಇಲ್ಲಿ ನಿಲ್ಲಿಸಿದ. 368 00:23:59,147 --> 00:24:00,231 ನನಗೆ ಐದು ನಿಮಿಷ 369 00:24:00,314 --> 00:24:02,525 ಏನೂ ಅನಿಸಲಿಲ್ಲ, ಆಮೇಲೆ ಅಲ್ಲಿ ಹೊಗೆ ಕಂಡಿತು. 370 00:24:03,067 --> 00:24:05,278 ನಿಮಗೆ ಹೇಳಬೇಕಾಗಿಲ್ಲ, ಕುದುರೆ ಟ್ರ್ಯಾಕ್‌ನಲ್ಲಿ ಬೆಂಕಿ ಕೆಟ್ಟದು. 371 00:24:06,654 --> 00:24:07,947 ಲಾಯಕ್ಕೆ ಬೆಂಕಿ ಹತ್ತಿದೆ ಅಂದುಕೊಂಡೆ. 372 00:24:08,531 --> 00:24:09,532 ಅಲ್ಲಿ ಹೋಗಿ ನೋಡಿದರೆ… 373 00:24:10,992 --> 00:24:12,034 ದರಿದ್ರ. 374 00:24:12,118 --> 00:24:13,119 ನೋಡಲು ಹೇಗಿದ್ದ? 375 00:24:14,162 --> 00:24:15,204 ಗಡ್ಡ. 376 00:24:15,288 --> 00:24:16,539 ಬಾಲ್ ಕ್ಯಾಪ್. ಕನ್ನಡಕ. 377 00:24:17,707 --> 00:24:21,586 ನಾನದನ್ನು ಇನ್ನಷ್ಟು ಪ್ರಶ್ನಿಸಬೇಕಿತ್ತನಿಸುತ್ತೆ, ಆದರೆ ಎಲ್ಲವೂ ಸ್ವಲ್ಪ ಬೇಗಬೇಗನೇ ಆಯಿತು. 378 00:24:22,670 --> 00:24:25,131 ವ್ಯಕ್ತಿಯನ್ನು ಸೂಚಿಸಲು ಇನ್ನಷ್ಟು ಸುಳಿವು ಸಿಗಬಹುದು. 379 00:24:25,965 --> 00:24:26,799 ಹೌದು. 380 00:24:27,967 --> 00:24:31,053 ಅವನು ಟ್ರಕ್‌ನ ಬದಿಯಲ್ಲಿ ಒಂದು ವಸ್ತುವನ್ನು ಇಟ್ಟಂತೆ ಕಾಣುತ್ತಿದೆ. 381 00:24:31,137 --> 00:24:31,971 ಸ್ವಲ್ಪ ಜಾಗ ಬಿಡಿ. 382 00:24:32,889 --> 00:24:34,140 ಅದು ಸುಡದಂತೆ. 383 00:24:47,195 --> 00:24:48,946 ಇಲ್ಲಿ ಬೂದಿ ಬಿಟ್ಟು ಬೇರೇನೂ ಇಲ್ಲ, ಅಣ್ಣಾ. 384 00:24:49,030 --> 00:24:52,408 ಗೊತ್ತು. ಬೆರಳಚ್ಚು ಅಥವಾ ಡಿಎನ್‌ಎ ಇರಲ್ಲ. 385 00:24:54,869 --> 00:24:57,038 -ನೀವು ಎಲ್ಲಿದ್ದಿರಿ? -ಅಲ್ಲಿ. 386 00:24:57,872 --> 00:24:59,373 ಹೊಗೆ ನೋಡಿ ಓಡಿ ಬಂದೆ. 387 00:24:59,457 --> 00:25:02,710 -ಯಾರೂ ಸ್ಥಳದಿಂದ ಓಡಿಹೋಗುವುದನ್ನು ಕಾಣಲಿಲ್ವಾ? -ನಾನು ಅದಕ್ಕಾಗಿ ನೋಡುತ್ತಿರಲಿಲ್ಲ. 388 00:25:03,669 --> 00:25:06,422 ಆ ವ್ಯಕ್ತಿ ಲಾಟ್‌ನ ಮಧ್ಯದಲ್ಲಿ ಪಾರ್ಕ್ ಮಾಡಿ, ತನ್ನ ಟ್ರಕ್‌ಗೆ ಬೆಂಕಿ ಹಚ್ಚಿದ, 389 00:25:06,505 --> 00:25:07,798 ನೀವು ಆದರೂ ಏನೂ ನೋಡಲಿಲ್ವಾ? 390 00:25:07,882 --> 00:25:09,175 ನೋಡಲಿಲ್ಲ, ಮೇಡಂ. 391 00:25:24,857 --> 00:25:27,193 -ನನಗೆ ಇಲ್ಲಿರುವ ಎಲ್ಲರ ಫೋಟೋಗಳು ಬೇಕು. -ಸರಿ. 392 00:25:29,862 --> 00:25:32,490 ನೀವು ಇಲ್ಲಿನ ಉಸ್ತುವಾರಿನಾ? ನಾನು ಬಾಜಿ ಕಟ್ಟುವವರನ್ನು ಒಳಬಿಡಬೇಕು, 393 00:25:32,573 --> 00:25:35,785 ಇಲ್ಲದಿದ್ದರೆ ಯಾವ ರೇಸ್‌ಗಳೂ ನಡೆಯಲ್ಲ. ಮತ್ತು ಇಂದು ರಾತ್ರಿ ರದ್ದತಿ ಆಗಬಾರದು. 394 00:25:36,744 --> 00:25:37,995 ಮೀಚಮ್, ಒಲಿವೆರಸ್. 395 00:25:38,663 --> 00:25:41,332 ಈ ಜಾಗವನ್ನು ಮುಚ್ಚಿಡಲು ಆ ಅಧಿಕಾರಿಗಳಿಗೆ ಹೇಳಿ 396 00:25:41,415 --> 00:25:43,751 ಆದರೆ ದಕ್ಷಿಣ ಭಾಗದಲ್ಲಿ ವಾಹನ ನಿಲುಗಡೆಗೆ ಅವಕಾಶ ನೀಡಬಹುದು. 397 00:25:43,834 --> 00:25:45,962 -ನಿಮಗೆ ಒಪ್ಪಿಗೆ ಇದಿಯಾ? -ಇದೆ. 398 00:25:47,838 --> 00:25:51,259 -ನಾನು ಅಲ್ಲಿಗೆ ಹೋಗಲು ಪ್ರಯತ್ನಿಸುತ್ತಿದ್ದೇನೆ. -ಅಧಿಕಾರಿಗಳೇ. ನನಗೆ ಇವೆಲ್ಲಾ… 399 00:25:55,513 --> 00:25:59,392 ಪಾರ್ಕಿಂಗ್ ಸ್ಥಳ ಬೇಕು, ಕಾರುಗಳನ್ನು ಬೇರೆಡೆಗೆ ತಿರುಗಿಸಿ, 400 00:25:59,475 --> 00:26:00,351 ದಕ್ಷಿಣ ಭಾಗಕ್ಕೆ. 401 00:26:00,434 --> 00:26:02,228 ಇಲ್ಲಿ ಯಾರೂ ಪಾರ್ಕ್ ಮಾಡಬಾರದು, ಸರಿನಾ? 402 00:26:03,604 --> 00:26:04,981 -ನೀನು ಆರಾಮಾ? -ಹಾಂ. 403 00:26:05,773 --> 00:26:06,774 ಸ್ವಲ್ಪ ಇವನ್ನೆಲ್ಲಾ… 404 00:26:07,358 --> 00:26:08,734 -ದಕ್ಷಿಣ ಭಾಗಕ್ಕೆ. -ಹೌದು. 405 00:26:08,818 --> 00:26:11,487 ಅರ್ಥವಾಯಿತು. ಹೇ, ಆಮೇಲೆ ಸಿಗುವೆಯಾ, ಮೀಚಮ್? 406 00:26:14,573 --> 00:26:17,410 ಈ ಪ್ರಕರಣ… ಸದ್ಯಕ್ಕೆ ಈ ಕೆಲಸಕ್ಕೆ ಎಲ್ಲಾ ಏಜೆಂಟರ ಸಹಕಾರ ಅಗತ್ಯ, ಹಾಗಾಗಿ… 407 00:26:18,244 --> 00:26:19,078 ಸರಿ. 408 00:26:19,870 --> 00:26:21,872 ಹೂಂ, ಬಿಡುವಾದಾಗ ನಾನು ಎಲ್ಲಿ ಸಿಗುವೆ ಗೊತ್ತಲ್ಲಾ? 409 00:26:21,956 --> 00:26:22,790 ಹೂಂ. 410 00:26:26,419 --> 00:26:28,462 -ಮಜಾ ಇದ್ದಾಳೆ ಅನಿಸುತ್ತೆ. -ಹೂಂ, ಸರಿ, ಅದ್ಭುತ. 411 00:26:30,923 --> 00:26:32,758 ಸರಿ, ಓದಲು ತಯಾರಾ? 412 00:26:37,138 --> 00:26:38,889 ಸೀಕ್ರೆಟ್ ಸರ್ವೀಸ್ಜೊತೆ ಮಾತಾಡಿದೆಯಾ? 413 00:26:38,973 --> 00:26:39,849 ನನ್ನ ಬಳಿ ವಿವರವಿದೆ. 414 00:26:39,932 --> 00:26:42,768 ರಾಜ್ಯಪಾಲರಿಗೆ ಅತ್ಯಂತ ಸುರಕ್ಷಿತ ಸ್ಥಳವೆಂದರೆ ಅಧ್ಯಕ್ಷರ ಪಕ್ಕದಲ್ಲಿ. 415 00:26:42,852 --> 00:26:45,104 -ಒಪ್ಪುವೆ. -ಬೆದರಿಕೆ ಬಗ್ಗೆ ಏನು ಗೊತ್ತಾಗಿದೆ? 416 00:26:45,187 --> 00:26:47,189 -ಭದ್ರ ಸ್ಥಿತಿಯಲ್ಲಿದ್ದೇವಾ? -ಹೌದು. 417 00:26:47,273 --> 00:26:50,359 ಯಾರಾದರೂ ನಮ್ಮ ಪ್ರಕರಣದ ಫೈಲ್ ಅನ್ನು ಪ್ರವೇಶಿಸಲು ಪ್ರಯತ್ನಿಸುತ್ತಿದ್ದಾರಾ ಅಂತ ನೋಡಲು 418 00:26:50,443 --> 00:26:52,737 ಏಜೆಂಟ್ ಶೆಫರ್ಡ್ ಎಫ್‌ಬಿಐನೆಟ್‌ನಲ್ಲಿ ವಿಶ್ಲೇಷಣೆ ನಡೆಸುತ್ತಿದ್ದಾರೆ. 419 00:26:52,820 --> 00:26:54,530 ಬ್ಯೂರೋ ಒಳಗೆ ಯಾರೋ ಇರಬಹುದು ಅಂತ ನಿಮ್ಮ ಅನಿಸಿಕೆನಾ? 420 00:26:54,613 --> 00:26:58,451 ಈ ಪ್ರಕರಣವನ್ನು ಸಾಕಷ್ಟು ಬಾರಿ ಪರಿಹರಿಸುವಷ್ಟು ಹತ್ತಿರ ಹೋಗಿದ್ದೇವೆ. ಯಾವ ಅಪಾಯವೂ ಬೇಡ ಅಂತ. 421 00:26:58,534 --> 00:27:01,245 -ಸರಿ. -ನಮ್ಮ ಕಾರ್ಯಪಡೆಯ ಬಗ್ಗೆ ಯಾರಾದರೂ 422 00:27:01,329 --> 00:27:04,248 ಕೇಳುತ್ತಿದ್ದಾರಾ ಅಂತ ತಿಳಿಯಲು ಇತರ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿರುವೆ. 423 00:27:04,332 --> 00:27:06,917 -ತಮ್ಮ ಸಹಾಯಕರನ್ನು ಕೆಲಸಕ್ಕೆ ಹಚ್ಚಿದ್ದಾರೆ. -ಪ್ರತಿಕ್ರಿಯೆ ಏನಿತ್ತು? 424 00:27:07,460 --> 00:27:08,377 ಇನ್ನೂ ಏನೂ ಇಲ್ಲ. 425 00:27:08,461 --> 00:27:10,296 ಸರಿ. ನನಗೆ ಮಾಹಿತಿ ನೀಡುತ್ತಿರು. 426 00:27:10,379 --> 00:27:11,797 ಸರಿ, ಬಾಸ್. 427 00:27:15,009 --> 00:27:15,843 ಎಲ್ಲರಿಗೂ ಬಾಯ್. 428 00:27:38,407 --> 00:27:40,034 ಹ್ಯಾನ್ನಾ ನಿನ್ನನ್ನ ಆಗಲೇ ನೋಡಿ ಖುಷಿಯಾಯಿತು. 429 00:27:40,117 --> 00:27:41,577 ಹ್ಯಾನ್ನಾ ನಿನ್ನ ಗೆಳತಿ ಮುದ್ದಾಗಿದ್ದಳು 430 00:27:41,660 --> 00:27:42,620 ಹ್ಯಾನ್ನಾ ನನಗೆ ಕರೆ ಮಾಡು 431 00:28:14,360 --> 00:28:17,363 ಸ್ಟುಡಿಯೋ ಸಿಟಿ 432 00:28:22,576 --> 00:28:23,744 ಇಂದು ಏನು ಮಾಡುತ್ತಿದ್ದೀಯಾ? 433 00:28:24,453 --> 00:28:25,663 ಮಧ್ಯಾಹ್ನದ ಪಾಳಿ. 434 00:28:25,746 --> 00:28:26,789 ಹನ್ನೆರಡರಿಂದ ಎಂಟಾ? 435 00:28:26,872 --> 00:28:27,873 ಒಂದರಿಂದ ಒಂಬತ್ತು. 436 00:28:30,167 --> 00:28:31,919 ಸ್ವಲ್ಪ ತಿಂಡಿ ಮಾಡಲಾ? 437 00:28:33,546 --> 00:28:35,339 ಇಲ್ಲ, ಬೇಡ. ನಾನು ಕೆಲಸಕ್ಕೆ ಹೋಗಬೇಕು. 438 00:28:36,298 --> 00:28:38,467 ಸರಿ. ಒಳ್ಳೆಯದು. 439 00:28:41,387 --> 00:28:44,140 ನಾನು ಕೆಲಸ ಶುರು ಮಾಡುವೆ, ನಿನಗೆ ಬಿಡುವಾದಾಗ ಸಿಗೋಣ. 440 00:28:46,892 --> 00:28:47,726 ಹೇ. 441 00:28:50,146 --> 00:28:52,940 ನಾನು ಇದನ್ನು ನೀರಸವಾಗಿಸುತ್ತಿಲ್ಲ, ಅಲ್ವಾ? 442 00:28:53,607 --> 00:28:54,817 ಏನು ನಿನ್ನ ಅರ್ಥ? 443 00:28:54,900 --> 00:28:55,734 ಇಲ್ಲ, ನಾನು… 444 00:28:57,862 --> 00:29:00,448 ನಮ್ಮಿಬ್ಬರ ಕೆಲಸವೂ ತುಂಬಾ ತುರ್ತು, ನಿರತ, 445 00:29:00,531 --> 00:29:03,242 ನಾವು ಒಟ್ಟಿಗೆ ಇರುವಾಗ ಆರಾಮಾಗಿರುವುದು ಒಳ್ಳೆಯದು, ಅಲ್ವಾ? 446 00:29:04,201 --> 00:29:05,870 ಹೌದು, ನಿಜ. ಖಂಡಿತ. 447 00:29:07,121 --> 00:29:08,956 -ನಿಜವಾಗಲೂ? -ನಿಜವಾಗಲೂ. 448 00:29:09,039 --> 00:29:10,040 ಸರಿ. ಒಳ್ಳೆಯದು. 449 00:29:11,083 --> 00:29:13,919 ನಾನು ಸಂತೋಷವಾಗಿಲ್ಲ ಅಂತ ನಿನಗೆ ಅನಿಸಬಾರದು. 450 00:29:14,753 --> 00:29:15,588 ಗೊತ್ತಾ? 451 00:29:16,172 --> 00:29:17,006 ನನಗೆ ಹಾಗನಿಸಲ್ಲ. 452 00:29:17,715 --> 00:29:19,717 ಅಥವಾ ಅನಿಸುತ್ತಿರಲಿಲ್ಲ. 453 00:29:20,384 --> 00:29:22,428 ಹೂಂ, ನಾನು ಸಂತೋಷವಾಗಿದ್ದೇನೆ. 454 00:29:29,226 --> 00:29:31,437 -ಆಮೇಲೆ ಇನ್ನಷ್ಟು? -ಹೂಂ, ಖಂಡಿತ. 455 00:29:31,520 --> 00:29:32,354 ಸರಿ. 456 00:30:02,551 --> 00:30:03,385 ಏನಿದು? 457 00:30:27,409 --> 00:30:28,661 -ಡಿಟೆಕ್ಟಿವ್ ಮೀಚಮ್. -ಹಾಂ? 458 00:30:28,744 --> 00:30:30,120 ಆಂಬರ್‌ನ ನೋಡಿದಿರಾ? 459 00:30:31,539 --> 00:30:32,790 ಇಲ್ಲ. ಇಲ್ಲ, ನೋಡಿಲ್ಲ. 460 00:30:32,873 --> 00:30:33,832 ಕರೆ ಮಾಡಿ ನೋಡುವೆ. 461 00:30:35,960 --> 00:30:38,087 ವಿಶ್ಲೇಷಣೆಯ ಫಲಿತಾಂಶ ಸಿಕ್ಕಿತು. 462 00:30:38,170 --> 00:30:40,589 ಸೆಥ್ ವಾನ್ ಲೂಯಿಸ್ ಎಂಬ ಬ್ಯೂರೋ ಏಜೆಂಟ್ 463 00:30:40,673 --> 00:30:43,092 ನಮ್ಮ ಕಾರ್ಯಪಡೆಯ ಬಗ್ಗೆ ಮಾಹಿತಿ ಪಡೆಯಲು ಪ್ರಯತ್ನಿಸಿದ್ದಾನೆ, 464 00:30:43,175 --> 00:30:46,178 48 ಗಂಟೆಗಳ ಹಿಂದೆ ಎಫ್‌ಬಿಐನೆಟ್ ಮೂಲಕ. 465 00:30:46,262 --> 00:30:48,180 -ಪ್ರಯತ್ನಿಸಿದನಾ, ಪಡೆದನಾ? -ಗೊತ್ತಿಲ್ಲ. 466 00:30:48,264 --> 00:30:53,102 ಸರಿ. ಕುದುರೆ ಟ್ರ್ಯಾಕ್‌ನಲ್ಲಿ ಪತ್ತೆಯಾದ ಟ್ರಕ್ 2018ರ ಫೋರ್ಡ್ ಎಫ್-150 ಆಗಿತ್ತು. 467 00:30:53,185 --> 00:30:57,856 ಮತ್ತು ಈ ಸೆಥ್ ವಾನ್ ಲೂಯಿಸ್ 2018ರ ಎಫ್-150 ಅನ್ನು ವೆಸ್ಟ್‌ವುಡ್ ಕಚೇರಿಯೊಂದಿಗೆ 468 00:30:57,940 --> 00:31:00,025 ನೋಂದಾಯಿಸಿದಂತೆ ಕಾಣುತ್ತಿದೆ. 469 00:31:00,109 --> 00:31:03,696 ರೈಸಿಂಗ್ ಬೇನ್‌ನಿಂದ ಹೊರಡುವಾಗಲೂ ಕನಿಷ್ಠ 3 ಎಫ್-150ಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದವು. 470 00:31:04,405 --> 00:31:07,950 ಇದರ ಪ್ರಕರಣ ಫೈಲ್ ನಿರ್ಬಂಧಿತವಾಗಿರಲಿ. ಪ್ರವೇಶಿಸಲು ನೋಡಿದರೆ ಎಚ್ಚರಿಕೆ ಮೂಡುತ್ತೆ. 471 00:31:08,659 --> 00:31:11,370 ಸೆಥ್ ವಾನ್ ಲೂಯಿಸ್ ಬಗ್ಗೆ ನನಗೆ ಎಲ್ಲವೂ ಒಂದು ಗಂಟೆಯೊಳಗೆ ಬೇಕು, 472 00:31:11,453 --> 00:31:13,080 ಅವನ ಮೇಲ್ವಿಚಾರಕರೊಂದಿಗೆ ಮಾತುಕತೆ ಸೇರಿದಂತೆ. 473 00:31:13,163 --> 00:31:14,999 ಅವನು ಯಾವುದರ ಮೇಲೆ ಕೆಲಸ ಮಾಡುತ್ತಿದ್ದಾನೆ, 474 00:31:15,082 --> 00:31:18,043 ಎಲ್ಲಿ ವಾಸಿಸುತ್ತಾನೆ, ತಿನ್ನುತ್ತಾನೆ ಮತ್ತು ಮಲಗುತ್ತಾನೆ, ಎಲ್ಲವೂ ನನಗೆ ತಿಳಿಯಬೇಕು. 475 00:31:18,127 --> 00:31:21,130 ಈಗ ಈ ಭೂಮಿಯ ಮೇಲೆ ಅವನು ಎಲ್ಲಿದ್ದಾನೆಂದು ನನಗೆ ತಿಳಿಯಬೇಕು. 476 00:31:21,213 --> 00:31:22,256 ಶುರು ಮಾಡಿ. 477 00:31:27,344 --> 00:31:30,556 ಹೇ, ಒಲಿವೆರಸ್ ಏನಾದರೂ ತಡವಾಗಿ ಬರುವೆ ಅಂತ ಹೇಳಿದ್ದಳಾ? 478 00:31:31,432 --> 00:31:32,266 ಇಲ್ಲ. 479 00:31:33,809 --> 00:31:35,477 ಯಾರ ಜತೆಗಾದರೂ ಒಲಿವೆರಸ್ ಸಾಧನವಿಳಾಸ ಹಂಚಿದ್ದಾಳಾ? 480 00:31:36,645 --> 00:31:39,064 -ಹೌದು. ನನ್ನಲ್ಲಿ ಇದೆ. ಯಾಕೆ? -ಅವಳು ಇನ್ನೂ ಬಂದಿಲ್ಲ. 481 00:31:41,442 --> 00:31:42,276 ಸರಿ. 482 00:31:45,529 --> 00:31:48,616 ಸನ್‌ಸೆಟ್ ರಸ್ತೆಯ ಹೇಲೀಸ್ ಕೆಫೆಯ ಬಳಿ ಇರುವಂತೆ ಕಾಣುತ್ತಿದೆ. 483 00:31:49,700 --> 00:31:50,534 ಕರೆ ಮಾಡುತ್ತಿದ್ದೇನೆ. 484 00:32:07,760 --> 00:32:12,056 ಸೆಥ್ ವಾನ್ ಲೂಯಿಸ್‌ನ ವಿಳಾಸ ಸಿಕ್ಕಿದೆ. 10243 ಸಾಲ್ಟರ್ ಅವೆನ್ಯೂ, ಅರ್ಕಾಡಿಯಾ. 485 00:32:12,139 --> 00:32:13,682 ಕುದುರೆ ಟ್ರ್ಯಾಕ್ ಹತ್ತಿರವೇ. 486 00:32:13,766 --> 00:32:15,267 -ಅವನು ಮನೆಗೆ ನಡೆದು ಹೋಗಿರಬಹುದು. -ಹೌದು. 487 00:32:15,351 --> 00:32:19,355 ಸ್ಯಾನ್ ಬರ್ನಾರ್ಡಿನೊದಲ್ಲಿ 2017ರಲ್ಲಿ ಸಿಸ್ಟರ್ಸ್ ಆಫ್ ಲವ್ ಕಲ್ಟ್ ಕೊಲೆ ಪ್ರಕರಣದಲ್ಲಿ 488 00:32:19,438 --> 00:32:21,106 ಏಜೆಂಟ್ ಲೂಯಿಸ್ ಕೆಲಸ ಮಾಡುತ್ತಿದ್ದ. 489 00:32:21,190 --> 00:32:23,150 ಹ್ಯಾಮರ್‌ಹೆಡ್ ಕ್ಯಾಬಿನ್‌ಗಳಿಂದ ಅದು ಎಷ್ಟು ದೂರ? 490 00:32:23,692 --> 00:32:26,153 ಅಲ್ಲೇ ಅಕ್ಕ-ಪಕ್ಕ ಅವು. 491 00:32:26,820 --> 00:32:29,365 -ತನಿಖೆ ಮೂರು ವರ್ಷಗಳ ಕಾಲ ನಡೆಯಿತು. -ಇದನ್ನು ನೋಡಿ. 492 00:32:29,448 --> 00:32:31,408 ಈ ಪ್ರಕರಣದಲ್ಲಿ ವಿಚಿತ್ರ ಧಾರ್ಮಿಕ ಸಂಕೇತಗಳಿದ್ದವು. 493 00:32:31,492 --> 00:32:34,370 -ಅವನದನ್ನು ವಿಶ್ಲೇಷಿಸಿರಬಹುದು. -ಅಲ್ಲಿಂದಲೇ ಪ್ರಣಾಳಿಕೆ ಕಲ್ಪನೆ ಬಂದಿರಬಹುದು. 494 00:32:34,453 --> 00:32:36,789 -ದೇವರೇ. -ಏನು? 495 00:32:36,872 --> 00:32:38,624 ನನ್ನ ಗುಂಡಿನ ವಿಭಾಗದ ಗೆಳೆಯರು, ದಾಳಿಯ ನಂತರ 496 00:32:38,707 --> 00:32:43,087 ಎಐ ಎಎಕ್ಸ್ಎಸ್ಆರ್ ರೈಫಲ್‌ಗಳನ್ನು ಪಡೆದ ಎಫ್‌ಬಿಐ ಏಜೆಂಟ್‌ಗಳ ಪಟ್ಟಿ ಕಳಿಸಿದರು. 497 00:32:43,170 --> 00:32:45,172 -ಸೆಥ್ ಲೂಯಿಸ್? -ಪಟ್ಟಿಯಲ್ಲಿ ಮೊದಲ ಹೆಸರು. 498 00:32:46,215 --> 00:32:47,299 ಹೇ. 499 00:32:47,383 --> 00:32:50,052 ರ್‍ಯಾಂಡಿ ಮ್ಯಾನ್‌ಕಿನ್‌ನ ಪವರ್ ಕಾರ್ಯಕ್ರಮದ ಬೆದರಿಕೆ ನಿರ್ವಹಣೆಗೆ 500 00:32:50,135 --> 00:32:52,346 ಒಪ್ಪಂದ ಪಡೆದಿರುವ ಕಂಪನಿ, ವರ್ಲ್ಡ್‌ಶೀಲ್ಡ್, 501 00:32:52,429 --> 00:32:54,431 ಅವರ ಸಲಹೆಗಾರರ ಪಟ್ಟಿಯನ್ನು ಹಾಕಿದ್ದಾರೆ. ತೋರುವೆಯಾ? 502 00:32:54,515 --> 00:32:55,349 ಹೂಂ. 503 00:33:02,272 --> 00:33:03,273 ಇವನೇ ನಮ್ಮ ಶಂಕಿತ. 504 00:33:04,024 --> 00:33:08,112 ಈಗ, ಈ ಕಾರ್ಯಪಡೆಯ ಕುರಿತು ಅವನಿಗೆ ಏನು ಪ್ರವೇಶವಿದೆ ಅಂತ ನಮಗೆ ತಿಳಿದಿಲ್ಲ, 505 00:33:08,195 --> 00:33:11,031 ಹಾಗಾಗಿ ಈ ಕೋಣೆಯ ಹೊರಗೆ ಯಾರೊಂದಿಗೂ ಏನನ್ನೂ ಚರ್ಚಿಸಬೇಡಿ. 506 00:33:11,115 --> 00:33:13,200 ನನಗೆ ಆ ವಿಳಾಸವನ್ನು ಹತ್ತು ನಿಮಿಷಗಳಲ್ಲಿ ತಲುಪಬೇಕು. 507 00:33:13,909 --> 00:33:16,203 -ಮತ್ತು ಒಲಿವೆರಸ್? -ನಾವು ಕಾಯಲ್ಲ. 508 00:33:48,652 --> 00:33:50,404 ಬಹುಶಃ: ಸೀಡರ್ಸ್ ಸಿನೈ ವೈದ್ಯಕೀಯ ಕೇಂದ್ರ 509 00:33:50,988 --> 00:33:51,822 ಹಲೋ? 510 00:33:53,615 --> 00:33:54,450 ಹಾಯ್, ಹಾಂ. 511 00:33:55,200 --> 00:33:56,285 ಹೌದು, ನಾನು ಅವಳ ತಂಗಿ. 512 00:33:57,536 --> 00:33:59,329 ಏನು… ಕ್ಷಮಿಸಿ, ಏನು? 513 00:34:00,330 --> 00:34:02,166 ಹೂಂ. ಈಗಲೇ ಬರುವೆ. 514 00:34:21,893 --> 00:34:23,145 ಹಾಯ್. ಹಾಯ್. 515 00:34:23,228 --> 00:34:24,730 ನಾನು ಎವನ್ ಶೆಫರ್ಡ್. ನಾನು… 516 00:34:25,272 --> 00:34:27,608 ನನ್ನ ಅಕ್ಕ, ಮೊಲಿ. ಅವಳು ಇಲ್ಲಿದ್ದಾಳಂತ ನನಗೆ ಕರೆ ಬಂತು. 517 00:34:28,108 --> 00:34:29,777 -ಅವರ ಹೆಸರು? -ಮೊಲಿ ಶೆಫರ್ಡ್. 518 00:34:30,485 --> 00:34:32,654 ನಶೆ ಮಿತಿಮೀರಿದೆ ಅಂತ ಕರೆ ಬಂದಿತ್ತು. 519 00:34:32,737 --> 00:34:33,822 ಕೋಮಾದಲ್ಲಿದ್ದಾಳೆ ಅಂತ. 520 00:34:33,906 --> 00:34:34,907 ನೀವು ಒಮ್ಮೆ… 521 00:34:45,833 --> 00:34:49,379 ಫಿನೌ, ಬೆಲ್, ಹಿಂದೆ. ಫಿಟ್ಜ್, ಮೀಚಮ್, ನನ್ನ ಜೊತೆ, ಮುಂದಿನ ಬಾಗಿಲು. 522 00:35:04,353 --> 00:35:05,187 ಲೂಯಿಸ್? 523 00:35:11,235 --> 00:35:12,736 ನಾನು ಅಧಿಕಾರಿ ಬ್ಲೈಥ್. 524 00:35:13,487 --> 00:35:14,488 ನಾವು ಮಾತಾಡಬೇಕು. 525 00:35:16,657 --> 00:35:17,783 ಈಗಲೇ ಬಾಗಿಲು ತೆರೆ! 526 00:35:22,329 --> 00:35:23,455 ಏನಿದೆಲ್ಲಾ? 527 00:35:24,456 --> 00:35:25,666 ಸೆಥ್ ಎಲ್ಲಿ? 528 00:35:26,834 --> 00:35:28,001 ಸ್ನಾನ ಮಾಡುತ್ತಿದ್ದಾನೆ. 529 00:35:30,671 --> 00:35:31,505 ಸೆಥ್-- 530 00:36:23,140 --> 00:36:24,391 -ಬಾಯಿ-- -ಕೆಳಗೆ ಕೂರು! 531 00:36:24,474 --> 00:36:26,727 -ನೀನು ಯಾರು? -ಕೆಳಗೆ ಕೂರು! ಮೊಣಕಾಲೂರು! 532 00:36:26,810 --> 00:36:27,853 -ಸರಿ! -ಈಗಲೇ! 533 00:36:28,979 --> 00:36:30,689 ಕೈಗಳನ್ನು ಬೆನ್ನಿನ ಹಿಂದೆ ಕಟ್ಟು. 534 00:36:30,772 --> 00:36:32,482 ನಾನು ಒಬ್ಬ ಎಫ್‌ಬಿಐ ಏಜೆಂಟ್. 535 00:36:32,566 --> 00:36:34,401 ನಿನಗೆ ಮೌನವಾಗಿರುವ ಹಕ್ಕಿದೆ. 536 00:36:35,152 --> 00:36:37,070 -ನೀನು ಹೇಳುವ ಎಲ್ಲವನ್ನೂ… -ಇದು ತಮಾಷೆನಾ? 537 00:36:37,154 --> 00:36:39,239 …ನ್ಯಾಯಾಲಯದಲ್ಲಿ ನಿನ್ನ ವಿರುದ್ಧ ಬಳಸಬಹುದು, ಬಳಸಲಾಗುವುದು. 538 00:36:39,323 --> 00:36:40,324 ಏನು… 539 00:36:40,407 --> 00:36:43,535 -ನನ್ನ ಬ್ಯಾಡ್ಜ್ ಡ್ರೆಸ್ಸರ್ ಮೇಲಿದೆ. -ನಿನಗೆ ವಕೀಲರನ್ನು ಪಡೆಯುವ ಹಕ್ಕಿದೆ. 540 00:36:43,619 --> 00:36:45,537 -ನನಗೆ ಗೊತ್ತು. -ನಿನ್ನ ಬಳಿ ಹಣವಿಲ್ಲದಿದ್ದರೆ, 541 00:36:45,621 --> 00:36:48,790 ನಿನಗಾಗಿ ನಾವು ವಕೀಲರನ್ನು ಒದಗಿಸುತ್ತೇವೆ. ನಿನಗೆ ಅರ್ಥವಾಯಿತಾ… 542 00:36:53,378 --> 00:36:54,630 ಕೊಂದುಬಿಡುವೆ ನಿನ್ನನ್ನು. 543 00:36:54,713 --> 00:36:55,964 ಕೊಂದುಬಿಡುವೆ. 544 00:36:56,048 --> 00:36:57,299 ಕೊಂದುಬಿಡುವೆ. 545 00:37:07,059 --> 00:37:09,895 ಎಲ್ಏ ಫೀಲ್ಡ್ ಕಚೇರಿಯಲ್ಲಿರುವ ನನ್ನ ಸಹಾಯಕ ಡೆಲ್ ಕಿಲ್ಮಾರ್ಟಿನ್‌ಗೆ ಕರೆ ಮಾಡಿ. 546 00:37:09,978 --> 00:37:12,522 -ನಾನು ಒಬ್ಬ ಏಜೆಂಟ್. ಅಪರಾಧಿ ಅಲ್ಲ. -ಚಿನ್ನ? 547 00:37:15,984 --> 00:37:16,902 ಹೇ, ಬಾಸ್, 548 00:37:18,070 --> 00:37:19,404 ಏನೋ ಸರಿಯಿಲ್ಲ ಅನಿಸುತ್ತಿದೆಯಾ? 549 00:38:16,712 --> 00:38:17,546 ಹೇ, ಬಾಸ್. 550 00:38:17,629 --> 00:38:19,923 ನಾಳೆ ಪಸಾಡೆನಾದಲ್ಲಿ ನಿನಗೆ ಇನ್ನೂ ಆ ಸಂದರ್ಶನಗಳು ಇವೆಯಾ? 551 00:38:20,007 --> 00:38:22,134 ಹೂಂ, ಆದರೆ ಮಧ್ಯಾಹ್ನದೊಳಗೆ ಮುಗಿಯಬಹುದು. 552 00:38:22,217 --> 00:38:23,969 ಅವನ್ನು ರದ್ದುಮಾಡು. ನೇರವಾಗಿ ಇಲ್ಲಿಗೆ ಬಾ. 553 00:38:24,803 --> 00:38:26,013 ಯಾಕೆ? ಏನಾಗುತ್ತಿದೆ? 554 00:38:26,096 --> 00:38:28,682 ನೀನು ನಂಬಲ್ಲ. ಈಗಷ್ಟೇ ಸೆಥ್ ಅನ್ನು ಬಂಧಿಸಿದ್ದಾರೆ. 555 00:38:29,141 --> 00:38:31,518 -ಏನು ಹೇಳುತ್ತಿದ್ದೀರಾ? -ಎಲ್ಲರೂ ಮಾತಾಡಿಕೊಳ್ಳುತ್ತಿದ್ದಾರೆ. 556 00:38:31,601 --> 00:38:34,479 ಸೆಥ್ ರಾಜ್ಯಪಾಲರಿಗೋ, ಅಧ್ಯಕ್ಷರಿಗೋ ಬೆದರಿಕೆ ಹಾಕುತ್ತಿದ್ದನಂತೆ. 557 00:38:35,188 --> 00:38:36,440 ಕಾರ್ಯಪಡೆ ಅವನನ್ನು ಹಿಡಿಯಿತು. 558 00:38:37,024 --> 00:38:37,858 ಹೌದಾ? 559 00:38:37,941 --> 00:38:39,943 ಗೊತ್ತಾ? ಅವನು ನಿನ್ನ ಮಾಜಿಪತ್ನಿಯೊಂದಿಗೆ ಮನೆಯಲ್ಲಿದ್ದನಂತೆ. 560 00:38:40,652 --> 00:38:41,695 ನಿಜವಾಗಲೂ? 561 00:38:41,778 --> 00:38:44,239 ಇಲ್ಲಿಗೆ ಹಿಂತಿರುಗು. ಅವರು ನಿನ್ನನ್ನು ಪ್ರಶ್ನಿಸಬಹುದು. 562 00:38:44,322 --> 00:38:45,282 ವೆಂಟುರಾ ಘಟನೆಯ ಸಮಯದಿಂದ 563 00:38:45,365 --> 00:38:47,743 -ನಾನು ಸೆಥ್‌ನ ನೋಡಿಲ್ಲ. -ಅವನು ನಿನ್ನ ಹಳೆಯ ಜೋಡಿ. 564 00:38:47,826 --> 00:38:49,745 -ನಿನ್ನ ಜೊತೆ ಖಂಡಿತ ಮಾತಾಡುತ್ತಾರೆ. -ಸರಿ. 565 00:38:50,787 --> 00:38:52,914 ಖಂಡಿತ. ನಾನು ಈಗಲೇ ಬರುತ್ತೇನೆ. 566 00:38:53,707 --> 00:38:54,750 ಇದು ಹುಚ್ಚುತನ. 567 00:38:54,833 --> 00:38:56,793 ಗೊತ್ತು. ಬೇಗ ಸಿಗೋಣ, ಗೆಳೆಯ. 568 00:38:56,877 --> 00:38:57,878 ಖಂಡಿತ. ಹೂಂ. 569 00:39:49,805 --> 00:39:50,639 ಹೊರಗೆ. 570 00:39:51,389 --> 00:39:52,224 ಹೊರಗೆ ಬಾ! 571 00:39:54,476 --> 00:39:55,310 ಏಳು. 572 00:40:04,528 --> 00:40:05,821 -ಹೇ, ಕೇಳು. -ನಡಿ. 573 00:40:06,446 --> 00:40:08,865 -ನಡಿ. -ನಾನು ಯಾರಂತ ನಿನಗೆ ಗೊತ್ತಿಲ್ಲ, 574 00:40:08,949 --> 00:40:11,785 ಆದರೆ ಒಂದು ಮಾತು ಹೇಳುವೆ, ಜನರು ನನ್ನನ್ನು ಹುಡುಕಿಕೊಂಡು ಬರುತ್ತಾರೆ. 575 00:40:16,832 --> 00:40:17,833 ನಾನು ಫೆಡರಲ್ ಏಜೆಂಟ್. 576 00:40:20,544 --> 00:40:21,670 ಓಡು. 577 00:40:22,671 --> 00:40:23,672 ಏನು? 578 00:40:25,048 --> 00:40:26,049 ಓಡು! 579 00:40:26,716 --> 00:40:28,301 -ಹೋಗು! -ಅಯ್ಯೋ! 580 00:42:43,687 --> 00:42:45,689 ಉಪ ಶೀರ್ಷಿಕೆ ಅನುವಾದ: ಅನುರಾಧ 581 00:42:45,772 --> 00:42:47,774 ಸೃಜನಶೀಲ ಮೇಲ್ವಿಚಾರಕರು ಸುಬ್ಬಯ್ಯ ಕೆಜಿ