1 00:00:31,916 --> 00:00:33,375 ಅಲಾರಂ ಸ್ನೂಜ್ 2 00:00:46,125 --> 00:00:47,875 ಗ್ರಾಹಂ 44 3 00:02:25,791 --> 00:02:26,958 ತಗೊಳ್ಳಿ. 4 00:02:30,083 --> 00:02:32,457 ಹಾಯ್. ಮಲೋನ್ಸ್‌ಗೆ ಸ್ವಾಗತ. ನಾನು ಹಾನಾ. 5 00:02:32,458 --> 00:02:34,666 ತಿನ್ನಲು ಏನು ತರಲಿ? 6 00:02:35,500 --> 00:02:36,957 - ಹಾನಾ ವೆಲ್ಸ್? - ಹೌದು. 7 00:02:36,958 --> 00:02:39,875 ಹೌದು, ಅದು ನಾನೇ. ನಿಮಗೆ ನನ್ನ ಪರಿಚಯವಿದೆಯಾ? 8 00:02:41,333 --> 00:02:43,708 ಅದು, ನಾವು ಬೇರೆಯವರಿಗೆ ಆರ್ಡರ್ ಕೊಡಬಹುದಾ? 9 00:02:44,833 --> 00:02:49,124 ಸದ್ಯಕ್ಕೆ ಎಲ್ಲರೂ ತುಂಬಾ ಬ್ಯುಸಿಯಾಗಿದ್ದಾರೆ, ಆದರೆ ನಾನು ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುವೆ. 10 00:02:49,125 --> 00:02:51,207 ಬೇಕಾದರೆ ನಮ್ಮ ಕಡೆಯಿಂದ ಒಂದು ಕೇಕ್ ಪೀಸ್ ಫ್ರೀ ಆಗಿ ಕೊಡುವೆ. 11 00:02:51,208 --> 00:02:53,750 ನನಗೆ ಈಗಾಗಲೇ ಗರ್ಲ್‌ಫ್ರೆಂಡ್ ಇದ್ದಾಳೆ… 12 00:02:54,333 --> 00:02:56,125 ಅಸಲಿಗೆ, ನಮಗೆಲ್ಲರಿಗೂ ಇದ್ದಾರೆ. 13 00:02:57,541 --> 00:02:58,833 ಹೂಂ, ಸರಿ. 14 00:03:00,916 --> 00:03:04,415 ನೋಡಿ, ನಾನು ಕೇವಲ ಆರ್ಡರ್ ಕೇಳಲು ಬಂದಿದ್ದು. ನಿಮಗೆ ಸ್ವಲ್ಪ ಸಮಯ ಬೇಕಾದರೆ-- 15 00:03:04,416 --> 00:03:06,208 ಹೌದು, ನಮಗೆ ಸ್ವಲ್ಪ ಸಮಯ ಬೇಕು. ಥ್ಯಾಂಕ್ಸ್. 16 00:03:14,208 --> 00:03:15,249 ಶಾನ್. 17 00:03:15,250 --> 00:03:17,208 ಅಯ್ಯೋ. ಹಾಯ್. 18 00:03:17,833 --> 00:03:20,124 ಇವತ್ತು ಅವಳು ಕೆಲಸಕ್ಕೆ ಬಂದಿಲ್ಲ ಅಲ್ವಾ? 19 00:03:20,125 --> 00:03:22,832 ಪ್ರತಿ ಮಂಗಳವಾರ ಅವಳಿಗೆ ನಟನಾ ಅಭಿವ್ಯಕ್ತಿ ತರಗತಿ ಇರುತ್ತೆ ಅಂತ ಗೊತ್ತು. 20 00:03:22,833 --> 00:03:25,124 - ಇವತ್ತು ಅವಳು ಕೆಲಸಕ್ಕೆ ಬಂದಿಲ್ಲ. - ಒಳ್ಳೆಯದು. 21 00:03:25,125 --> 00:03:28,124 ನಾನು ಡೆಲಾರ ಫ್ರೈಸ್ ಅನ್ನು ತುಂಬಾ ಮಿಸ್ ಮಾಡುತ್ತಿದ್ದೆ. 22 00:03:28,125 --> 00:03:30,207 ಹೂಂ, ಗೊತ್ತು. 23 00:03:30,208 --> 00:03:31,833 ನಾನೂ ಟಕರ್‌ನ ಮೀನು ಸಾರನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. 24 00:03:32,791 --> 00:03:34,957 ನಾನು… ಗ್ಯಾರೆಟ್ ಮತ್ತು ನಾನು-- ಬೇರೆಯಾದೆವು. 25 00:03:34,958 --> 00:03:36,541 ಹೂಂ, ಕೇಳ್ಪಟ್ಟೆ. 26 00:03:37,125 --> 00:03:38,332 ಫಿಫ್ತ್ ಲೈನ್ ತುಂಬಾ ಅದೇ ಸುದ್ದಿ ಇದೆ. 27 00:03:38,333 --> 00:03:39,583 ಅಲ್ಲದೆ… 28 00:03:41,000 --> 00:03:42,166 ಅಲ್ಲದೆ ಏನು? 29 00:03:42,750 --> 00:03:44,499 ಅದು ನಿಜವೋ ಅಲ್ಲವೋ ಗೊತ್ತಿಲ್ಲ. 30 00:03:44,500 --> 00:03:47,999 ನಿಜ ಅಲ್ಲ ಬಿಡು. ಕ್ಲಾಸಲ್ಲಿ ಒಬ್ಬ ಹುಡುಗ ನನಗೆ ಹೇಳಿದ ಒಂದು ಮಾತು ಅಷ್ಟೇ. 31 00:03:48,000 --> 00:03:50,207 - ಗ್ಯಾರೆಟ್ ಆ ರೀತಿ-- - ಶಾನ್. 32 00:03:50,208 --> 00:03:51,374 ಹಾನಾ. 33 00:03:51,375 --> 00:03:53,291 ವಿಷಯ ಏನು? 34 00:03:59,500 --> 00:04:00,707 ಗ್ಯಾರೆಟ್ ಅಲ್ಲಿ ಇದ್ದನಾ? 35 00:04:00,708 --> 00:04:02,790 ಹೌದು, ಆದರೆ ನೀನಲ್ಲಿಗೆ ಹೋಗಬಾರದು ಅನಿಸುತ್ತೆ. 36 00:04:02,791 --> 00:04:04,083 ಹಾನಾ. ಹಾನಾ, ಇರು. 37 00:04:07,833 --> 00:04:09,000 ಅಯ್ಯೋ ದೇವರೇ! 38 00:04:16,041 --> 00:04:18,999 ಆಫ್ ಕ್ಯಾಂಪಸ್ 39 00:04:19,000 --> 00:04:21,958 ಸಂಚಿಕೆ ಎಂಟು ದ ಲೈನ್ ಚೇಂಜ್ 40 00:04:22,583 --> 00:04:24,125 ಅಬ್ಬಾ, ವೆಲ್ಸಿ! 41 00:04:26,500 --> 00:04:28,125 ದಾರಿ ತಪ್ಪಿ ಇಲ್ಲಿಗೆ ಬಂದೆಯಾ, ಅಥವಾ… 42 00:04:29,958 --> 00:04:30,999 ಗ್ಯಾರೆಟ್‌ನನ್ನ ನೋಡಿದ್ದೀಯಾ? 43 00:04:31,000 --> 00:04:32,499 ಇಲ್ಲ. ಬೆಳಗ್ಗೆಯಿಂದ ನೋಡಿಲ್ಲ. 44 00:04:32,500 --> 00:04:34,583 ಸಿಮ್ಸ್ ಹೇಳಿದ ಅವನು… 45 00:04:35,333 --> 00:04:36,582 ಥತ್, ಇಲ್ಲಿದ್ದ ಅಂತ. 46 00:04:36,583 --> 00:04:37,458 ವೆಲ್ಸಿ? 47 00:04:43,750 --> 00:04:46,332 ಸರಿ, ನೀನು ಈಗ ನಿಜವಾಗಲೂ ಹದ್ದುಮೀರಿದ್ದೀಯ. 48 00:04:46,333 --> 00:04:47,749 ಈಗ ಮಜಾ ಬರಲಿದೆ. 49 00:04:47,750 --> 00:04:51,124 ಎಷ್ಟು ಹದ್ದುಮೀರಿದ್ದೀಯ ಎಂದರೆ, ಹದ್ದು ಎಲ್ಲಿದೆ ಅಂತಲೂ ಕಾಣುತ್ತಿಲ್ಲ. 50 00:04:51,125 --> 00:04:53,207 ಕ್ಯಾಂಪಸ್‌ನಾದ್ಯಂತ ಯಾರೂ ನನ್ನ ಜೊತೆ ಸಂಬಂಧ ಬೆಳೆಸಬಾರದು ಅಂತ ಹೇಳಿದ್ದೀಯಾ? 51 00:04:53,208 --> 00:04:54,665 ನೀನು ನನ್ನ ಜೊತೆ ಸಂಬಂಧ ಮುರಿದುಕೊಂಡಿದ್ದು. 52 00:04:54,666 --> 00:04:57,415 - ಸೂಟ್ ಯಾಕೆ ಹಾಕಿದ್ದೀಯ? - ಹಾನಾ-- 53 00:04:57,416 --> 00:04:59,374 ನೀನು ಎಲ್ಲರಿಗೂ ನನ್ನ ಜೊತೆ ಮಾತಾಡಿದರೆ ಅವರಿಗೆ ಹೊಡೆಯುತ್ತೀಯ ಅಂತ 54 00:04:59,375 --> 00:05:01,249 ಹೇಳಿಕೊಂಡು ಸುತ್ತುವಂತಿಲ್ಲ. 55 00:05:01,250 --> 00:05:03,165 ನಿನಗೇನು ಹುಚ್ಚಾ? ಆ ಗಂಡುಬೀರಿ… 56 00:05:03,166 --> 00:05:04,999 ಸ್ಸಾರಿ, ಗಾಂಚಾಲಿಯೊಂದಿಗೆ… 57 00:05:05,000 --> 00:05:08,082 ಸ್ಸಾರಿ, ನನ್ನ ತಲೆ ಸರಿಯಾಗಿ ಓಡುತ್ತಿಲ್ಲ. ಈ ರೂಮಲ್ಲಿ ತುಂಬಾ ಶಿಶ್ನಗಳಿವೆ! 58 00:05:08,083 --> 00:05:09,499 ಇದು ಹುಡುಗರ ಲಾಕರ್ ರೂಮ್. 59 00:05:09,500 --> 00:05:13,207 ಸರಿ, ಗ್ಯಾರೆಟ್, ನನ್ನ ಬಳಿ ಮಾತನಾಡಲು ನನ್ನ ಗ್ರಾಹಕರು ಭಯಪಡಬಾರದು. 60 00:05:13,208 --> 00:05:14,415 ನಾನು ಟಿಪ್ಸ್‌ಗಾಗಿ ಕೆಲಸ ಮಾಡೋದು. 61 00:05:14,416 --> 00:05:16,041 ನಾನು ಅಂಥದ್ದೇನೂ ಹೇಳಿಲ್ಲ. 62 00:05:17,708 --> 00:05:20,999 ಸುಮ್ಮನಿರು. ಇಲ್ಲಿ ಏನಾಗುತ್ತಿದೆ ಅಂತ ಇವರಿಗೂ ಗೊತ್ತು. 63 00:05:21,000 --> 00:05:23,707 ಹಾನಾ ಬಳಿ ಮಾತಾಡಿದವರನ್ನು ಗ್ಯಾರೆಟ್ ಚಚ್ಚಿಹಾಕುತ್ತಾನೆ ಅಂತ ಸ್ಟೂಬ್ಸ್ ಹೇಳಿದ. 64 00:05:23,708 --> 00:05:25,040 ನಾನು ಹಾಗೆ ಹೇಳಲಿಲ್ಲ. ಡೀನ್ ಹೇಳಿದ್ದು. 65 00:05:25,041 --> 00:05:26,624 ತಮಾಷೆ ಮಾಡುತ್ತಿದ್ದೀಯಾ? 66 00:05:26,625 --> 00:05:29,915 - ನಾನು ಹೇಳಿದ್ದು ಅವನಿಗೆ ಕೋಪ ಬರುತ್ತಂತ, ಪೆದ್ದ. - ಅದರರ್ಥ ಜನರನ್ನ ಹೊಡೆಯುತ್ತಾನೇ ಅಂತಲ್ಲ. 67 00:05:29,916 --> 00:05:31,625 ಆದರೆ ಅವನು ಹಾಗೆ ಮಾಡಿದ ಅಲ್ವಾ? 68 00:05:32,291 --> 00:05:34,166 ಅದನ್ನ ಸರಿಪಡಿಸಿಬಿಡು. ಸರಿನಾ? 69 00:05:34,750 --> 00:05:35,750 ಸರಿ, ಖಂಡಿತ. 70 00:05:36,708 --> 00:05:37,625 ಸ್ಸಾರಿ, ವೆಲ್ಸಿ. 71 00:05:41,333 --> 00:05:44,499 ನೋಡು, ನಾನು ಯಾವತ್ತೂ ಯಾರಿಗೂ ನಿನ್ನಿಂದ ದೂರ ಇರಲು ಹೇಳಲ್ಲ. 72 00:05:44,500 --> 00:05:46,083 ನೀನು ನಿನಗೆ ಬೇಕಾದ ವ್ಯಕ್ತಿಯ ಜೊತೆ ಇರಬೇಕು. 73 00:05:49,416 --> 00:05:50,583 ಥ್ಯಾಂಕ್ ಯು. 74 00:05:55,791 --> 00:05:56,625 ಬಾಯ್. 75 00:06:03,000 --> 00:06:06,957 ಕಲೆದ ವಾರ ನಡೆದ ಜಗಳದ ನಂತರ ಕೋಚ್ ಜೆನ್ಸನ್ ನಿನ್ನನ್ನು 76 00:06:06,958 --> 00:06:08,874 ನಾಲ್ಕು ಆಟಗಳಿಂದ ಹೊರಗಿಟ್ಟಿದ್ದಾರೆ, ಅಲ್ವಾ? 77 00:06:08,875 --> 00:06:09,790 ಹೌದು, ಮೇಡಂ. 78 00:06:09,791 --> 00:06:11,290 ಏನ್‌ಸಿಎಎ ಉಲ್ಲಂಘನಾ ಸಮಿತಿ 79 00:06:11,291 --> 00:06:14,666 ಅದಕ್ಕೆ ನಮ್ಮ ಬೆಂಬಲವಿದೆ. ನಿನ್ನ ತಪ್ಪನ್ನು ನೀನು ಒಪ್ಪಿಕೊಂಡಿದ್ದಕ್ಕೆ ನಮಗೆ ಸಂತೋಷವಿದೆ. 80 00:06:16,000 --> 00:06:19,707 ಆದರೆ, ನಿನ್ನ ಹಿಂದಿನ ತಪ್ಪು ವರ್ತನೆಯ ಹಿನ್ನೆಲೆಯಲ್ಲಿ, 81 00:06:19,708 --> 00:06:23,166 - ನಾವು ಇದನ್ನು ಹಾಗೆಯೇ ಬಿಡಲು ಆಗಲ್ಲ. - ಯಾವ ಹಿಂದಿನ ತಪ್ಪು… 82 00:06:32,458 --> 00:06:34,500 ಅದ್ಭುತ. ಇಷ್ಟ ಆಯಿತಾ? 83 00:06:36,625 --> 00:06:40,165 ವಿದ್ಯಾರ್ಥಿ ಕ್ರೀಡಾಪಟುಗಳು ತಮ್ಮ ಹವ್ಯಾಸಿ ಸ್ಥಾನಮಾನವನ್ನು ಉಳಿಸಿಕೊಳ್ಳಬೇಕೆಂದು 84 00:06:40,166 --> 00:06:42,291 ಸೂಚಿಸುವ ಏನ್‌ಸಿಎಎ ನಿಯಮದ ಬಗ್ಗೆ ನಿನಗೆ ತಿಳಿದಿದೆಯಾ? 85 00:06:44,916 --> 00:06:48,291 - ಕ್ಷಮಿಸಿ, ಅದು-- - ಉತ್ತರ ಕೊಡು. 86 00:06:51,416 --> 00:06:52,999 ಹೌದು, ನನಗೆ ಗೊತ್ತಿದೆ. 87 00:06:53,000 --> 00:06:57,040 ನಿನ್ನದೇ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದ ಪ್ರಕಾರ, 88 00:06:57,041 --> 00:07:01,040 ನೀನು ಬ್ರೂಯಿನ್ಸ್ ತಂಡದ ವೃತ್ತಿಪರ ಅಭ್ಯಾಸದಲ್ಲಿ ಭಾಗವಹಿಸಿರುವುದು ಕಂಡುಬಂದಿದೆ. 89 00:07:01,041 --> 00:07:02,749 ಆ ವಿಡಿಯೋ, ಅಭ್ಯಾಸದ ನಂತರ ತೆಗೆದದ್ದು. 90 00:07:02,750 --> 00:07:06,624 ಇರಬಹುದು, ಆದರೆ ನಮಗೆ ಇಲ್ಲಿ ಅದು ಸ್ಪಷ್ಟವಾಗಿ ಕಾಣುತ್ತಿಲ್ಲ. 91 00:07:06,625 --> 00:07:10,541 ನಿನಗಾಗಿ ನಾವು ನಿಯಮಗಳನ್ನು ಮುರಿದರೆ ಅದು ಹೇಗೆ ಕಾಣುತ್ತೆ, ಮಿಸ್ಟರ್ ಗ್ರಾಹಂ? 92 00:07:11,708 --> 00:07:14,582 ಇದು ನಿನ್ನ ಸೀಸನ್ ಆರಂಭಕ್ಕೂ ಮುಂಚೆ ಪೋಸ್ಟ್ ಮಾಡಲಾದ ವಿಡಿಯೋ, 93 00:07:14,583 --> 00:07:18,499 ಅಂದರೆ ಬ್ರಯರ್ ಯೂನಿವರ್ಸಿಟಿ ಒಬ್ಬ ಅನರ್ಹ ಆಟಗಾರನನ್ನು ಆಡಿಸಿದೆ. 94 00:07:18,500 --> 00:07:23,249 ಹಾಗಾಗಿ ನಮ್ಮ ತೀರ್ಮಾನ ಏನೆಂದರೆ ಬ್ರಯರ್ ಈವರೆಗೆ ಆಡಿದ ಎಲ್ಲಾ ಆಟಗಳನ್ನು ಬಿಟ್ಟುಕೊಡಬೇಕು. 95 00:07:23,250 --> 00:07:25,749 - ಏನು? ನೀವು ಹಾಗೆ ಮಾಡುವಂತಿಲ್ಲ! - ಗ್ಯಾರೆಟ್. ಗ್ಯಾರೆಟ್. 96 00:07:25,750 --> 00:07:30,915 ಹಾಗಾಗಿ ನಿಮ್ಮ ಪ್ರಸ್ತುತ ಸ್ಥಾನಮಾನ ಈಗ 13 ಗೆಲುವು, ಮೂರು ಸೋಲು ಹಾಗೂ ಒಂದು ಟೈನಿಂದ 97 00:07:30,916 --> 00:07:34,708 ಶೂನ್ಯ ಗೆಲುವು, 17 ಸೋಲು ಮತ್ತು ಶೂನ್ಯ ಟೈ. 98 00:07:36,291 --> 00:07:37,666 ಅವರು ನನ್ನನ್ನು ದ್ವೇಷಿಸಲಿದ್ದಾರೆ. 99 00:07:39,333 --> 00:07:41,416 ಹೂಂ, ಅವರಿಗೆ ಕೋಪ ಬರುತ್ತೆ. 100 00:07:43,166 --> 00:07:45,790 - ಯಾಕೆ ಹಾಗೆ ಮಾಡಿದೆ, ಗ್ಯಾರೆಟ್? - ಬ್ರೂಯಿನ್ಸ್ ನನ್ನನ್ನು ಕರೆದರು. 101 00:07:45,791 --> 00:07:48,750 ಇದು ಅದರ ಬಗ್ಗೆ ಅಲ್ಲ. ನಿಜವಾಗಲೂ. 102 00:07:49,708 --> 00:07:51,583 ಯಾಕೆ ಅವನ ಮೇಲೆ ಹಾಗೆ ದಾಳಿ ಮಾಡಿದೆ? 103 00:07:55,416 --> 00:07:57,415 ಕೋಚ್, ನಾನದನ್ನು ಹಂಚಿಕೊಳ್ಳಬಾರದು. 104 00:07:57,416 --> 00:07:58,250 ಸರಿ. 105 00:08:02,875 --> 00:08:05,000 ನಿನಗೆ ಯಾವ ರೀತಿಯ ಹಾಕಿ ಆಟಗಾರ ಆಗಬೇಕು? 106 00:08:06,166 --> 00:08:09,874 ಡೆಲೇನಿಗೆ ಹೊಡೆದ ಕೋಪಿಷ್ಠನಾ? ಅಂತಹ ವ್ಯಕ್ತಿಗೆ ಕೋಚ್ ಮಾಡಲು ನನಗೆ ಇಷ್ಟವಿಲ್ಲ. 107 00:08:09,875 --> 00:08:12,874 ನನ್ನಂತೆಯೇ ಆಟವನ್ನು ಇಷ್ಟಪಡುವವರನ್ನು ಕೋಚ್ ಮಾಡಬೇಕು ನನಗೆ. 108 00:08:12,875 --> 00:08:16,290 ಹೃದಯದ ಮೂಲೆಮೂಲೆಯಿಂದ ಆಡಲು ಬಯಸುವವರನ್ನು ಕೋಚ್ ಮಾಡಬೇಕು ನನಗೆ. 109 00:08:16,291 --> 00:08:18,125 ಅದರ ಮೇಲೆ ನಿನಗೆ ಪ್ರೀತಿ ಮೂಡಬೇಕು, ಗ್ಯಾರೆಟ್. 110 00:08:21,416 --> 00:08:22,916 ನಿನಗದರ ಮೇಲೆ ಪ್ರೀತಿ ಇದೆಯಾ? 111 00:08:27,625 --> 00:08:28,958 ಹಾಗಾದರೆ ನನಗೊಂದು ಉಪಕಾರ ಮಾಡು. 112 00:08:29,541 --> 00:08:30,833 ಅದರ ಬಗ್ಗೆ ಯೋಚಿಸು. 113 00:08:36,625 --> 00:08:37,749 ಕೊನೆ ಸ್ಥಾನಾನಾ? 114 00:08:37,750 --> 00:08:39,374 ನಾವು ಕೊನೆಯ ಸ್ಥಾನದಲ್ಲಿ ಹೇಗೆ ಇರಲು ಸಾಧ್ಯ? 115 00:08:39,375 --> 00:08:41,624 - ನಾವೇ ಕೊನೆಯ ಸ್ಥಾನ. - ಅಂದರೆ, ನನ್ನ ಸೀನಿಯರ್ ವರ್ಷ ಹಾಳಾಯಿತು. 116 00:08:41,625 --> 00:08:42,624 ಹಾಗಾಗಬೇಕಂತಿಲ್ಲ. 117 00:08:42,625 --> 00:08:45,124 ಕೊನೆಯ ಸ್ಥಾನದಿಂದ ಫ್ರೋಜನ್ ಫೋರ್ ಅನ್ನು ಹೇಗೆ ತಲುಪೋದು ನೀನೇ ಹೇಳು. 118 00:08:45,125 --> 00:08:47,540 - ಹೂಂ, ನಿಜ. ಗ್ಯಾರೆಟ್ ಕೂಡ ಇಲ್ಲ. - ಬರ್ಡಿನೂ ಇಲ್ಲ. 119 00:08:47,541 --> 00:08:49,915 ತಲೆಗೆ ಏಟು ಬಿದ್ದಿದೆ. ಜೋ ರೋಜರ್ಸ್. 120 00:08:49,916 --> 00:08:50,832 ಅವನಿನ್ನೂ ತಯಾರಿಲ್ಲ. 121 00:08:50,833 --> 00:08:51,874 - ಆದರೆ ಅವನು-- - ಇಲ್ಲ. 122 00:08:51,875 --> 00:08:54,457 - ಹೌದು, ಅವನಿನ್ನೂ ತಯಾರಿಲ್ಲ. - ನಾವು ಎಷ್ಟು ಆಟಗಳನ್ನ ಗೆಲ್ಲಬೇಕು? 123 00:08:54,458 --> 00:08:55,957 - ಪ್ರತಿ ಆಟವನ್ನೂ ಗೆಲ್ಲಬೇಕು. - ಅಥವಾ ಟೈ ಮಾಡಬೇಕು. 124 00:08:55,958 --> 00:08:57,582 - ಎಲ್ಲಾ ಆಟ ಗೆಲ್ಲಲು ಸಾಧ್ಯವೇ ಇಲ್ಲ. - ಟೈ ಆಗಬಹುದು. 125 00:08:57,583 --> 00:09:00,165 - ಮೊದಲ ಸಾಲಿನ ಐದರಲ್ಲಿ ಮೂರು ಜನ ಇಲ್ಲ. - ಗ್ಯಾರೆಟ್ ವಾಪಸ್ ಆಗುತ್ತಾನೆ. 126 00:09:00,166 --> 00:09:02,125 ನಾವು ಈ ಸ್ಥಿತಿಗೆ ಬರಲು ಕಾರಣನೇ ಗ್ಯಾರೆಟ್. 127 00:09:03,250 --> 00:09:06,415 ಸರಿ, ಇದು ನಮ್ಮ ಜವಾಬ್ದಾರಿ. ನಾವಿದನ್ನು ಸರಿಪಡಿಸಬೇಕು. 128 00:09:06,416 --> 00:09:08,874 ಫ್ರೋಜನ್ ಫೋರ್‌ಗೆ ಹೋಗಲು ಒಂದೇ ದಾರಿ ಎಂದರೆ ಕಾನ್ಫರೆನ್ಸ್ ಗೆಲ್ಲೋದು. 129 00:09:08,875 --> 00:09:10,207 ಮತ್ತು ಅದಕ್ಕೆ ನಮಗೆ ಹೊಸ ಆಟಗಾರರು ಬೇಕು. 130 00:09:10,208 --> 00:09:12,374 ಟಕ್, ಬಲವಾದ ಸೆಂಟರ್ ಇಲ್ಲದೆ ಕೂಡ ನಾವು ಹಿಡಿದಿಟ್ಟುಕೊಳ್ಳಬಹುದು, 131 00:09:12,375 --> 00:09:14,790 ಆದರೆ ನಮಗೆ ಬಲವಾದ ಡಿ-ಲೈನ್ ಬೇಕು. ಡೀನ್, ನೀನದನ್ನು ಒಂಟಿಯಾಗಿ ಮಾಡಲು ಆಗಲ್ಲ. 132 00:09:14,791 --> 00:09:18,332 ನಮಗೆ ಹೊಸ ಬರ್ಡಿ ಬೇಕು. ಕಳೆದ ವರ್ಷ ಮುಕ್ತ ಸ್ಪರ್ಧೆಯಲ್ಲಿ ಒಬ್ಬ ಹುಡುಗ ಇದ್ದ. 133 00:09:18,333 --> 00:09:21,457 ನೆನಪಿದೆಯಾ? ಮೈದಾನವನ್ನು ಹರಿದು ಬಿಸಾಕಿದ. ಅದ್ಭುತ ವೇಗದ ಡಿಫೆನ್ಸ್‌ಮ್ಯಾನ್. 134 00:09:21,458 --> 00:09:24,540 - ಹೌದು. ಹಂಟರ್-ಏನೋ, ಅಲ್ವಾ? - ಹೌದು. 135 00:09:24,541 --> 00:09:26,832 ಡ್ಯಾವನ್‌ಪೋರ್ಟ್. ಹಂಟರ್ ಡ್ಯಾವನ್‌ಪೋರ್ಟ್. 136 00:09:26,833 --> 00:09:28,000 ಸಾಧ್ಯವೇ ಇಲ್ಲ. 137 00:09:28,875 --> 00:09:31,540 - ಏನು? - ಇಲ್ಲ. ಅವನು ಹಾಳಾಗಿ ಹೋಗಲಿ. 138 00:09:31,541 --> 00:09:34,207 - ಯಾಕೆ? ನಿನ್ನನ್ನ ಔಟ್-ಸ್ಕೇಟ್ ಮಾಡಿದ ಅಂತನಾ? - ಹಾಗೇನೂ ಆಗಿಲ್ಲ. 139 00:09:34,208 --> 00:09:35,582 ಹಾಗೇ ಆಗಿದ್ದು, ಗುರೂ. 140 00:09:35,583 --> 00:09:37,790 ಜೆನ್ಸನ್ ಅವನನ್ನು ಸೇರಿಕೋ ಅಂದಿದ್ದರು, ಆದರೆ ಅವನು ಬೇಡ ಅಂದ. 141 00:09:37,791 --> 00:09:38,999 ನೀನೇ ಕಾರಣ ಇರಬಹುದು. 142 00:09:39,000 --> 00:09:42,374 ಇಲ್ಲ, ಅವನಿಗೆ ಅಹಂಕಾರ ಜಾಸ್ತಿ ಅನ್ನೋದು ಕಾರಣ, ನಾನವನ ಜೊತೆ ಆಡಲ್ಲ. 143 00:09:42,375 --> 00:09:44,333 - ಆದರೆ ಅದು-- - ಬೇಡ ಅಂದೆ. 144 00:09:45,375 --> 00:09:46,208 ನಿಜವಾಗಲೂ. 145 00:09:47,666 --> 00:09:50,000 ನಾನು ರೋಜರ್ಸ್ ಜೊತೆ ಮಾತಾಡಿ ಅವನನ್ನು ತಯಾರು ಮಾಡುವೆ. 146 00:10:10,500 --> 00:10:14,000 ಮ್ಯಾವರಿಕ್ - ಬೆಳಿಗ್ಗೆ ನೀನಿಲ್ಲದೆ ನಿನ್ನೆ ರಾತ್ರಿ ಅಷ್ಟು ಮಜವಾಗಿರಲಿಲ್ಲ 147 00:10:15,583 --> 00:10:16,958 ನಾವು ಮಾತಾಡಬೇಕು 148 00:10:23,583 --> 00:10:24,416 ಮುಗಿಯಿತು. 149 00:10:25,208 --> 00:10:27,624 ಕೆಲಸ, ಓದು, ಫೈನಲ್ಸ್. 150 00:10:27,625 --> 00:10:29,500 ಸೆಮಿಸ್ಟರ್, ಎಲ್ಲವೂ. 151 00:10:30,208 --> 00:10:31,583 ಈಗ ಬಿಡುವೋ ಬಿಡುವು. 152 00:10:32,916 --> 00:10:34,166 ಸರಿ, ಅದು… 153 00:10:35,375 --> 00:10:38,208 ಒಳ್ಳೆಯದಾ? ಕೆಟ್ಟದ್ದಾ? ಸ್ಸಾರಿ, ನಿನ್ನ ಡೈಲಾಗ್ ಡೆಲಿವರಿ ಕೆಟ್ಟದಾಗಿದೆ. 154 00:10:41,041 --> 00:10:42,416 ನನಗೇ ಗೊತ್ತಿಲ್ಲ. 155 00:10:44,125 --> 00:10:46,540 ಇನ್ನು ಮನಸ್ಸನ್ನ ಬೇರೆಡೆ ಸೆಳೆಯಲು ಏನೂ ಉಳಿದಿಲ್ಲ. 156 00:10:46,541 --> 00:10:49,040 ಹೌದು, ಏನೂ ಉಳಿದಿಲ್ಲ. 157 00:10:49,041 --> 00:10:51,249 ಹೂಂ, ದುಃಖ ಬೇಕು, ಚಿನ್ನ. ಅದು ಪ್ರೀತಿಯ ಭಾಗ. 158 00:10:51,250 --> 00:10:53,374 ಇಲ್ಲ. ಗ್ಯಾರೆಟ್‌ಗೆ ಯಾವ ದುಃಖವೂ ಇಲ್ಲ. 159 00:10:53,375 --> 00:10:59,374 ಯಾರೂ ಅವಳ ಜೊತೆ ಮಾತಾಡಬಾರದು ಅಂತ ಅವನು ಹೇಳಿಯೇ ಇಲ್ಲವಂತೆ. 160 00:10:59,375 --> 00:11:02,665 ಸರಿ, ಆದರೆ ನೆನಪಿದೆಯಾ? ನಮಗೂ ಆವನು ಹಾಗೆ ಹೇಳದೇ ಇರೋದೇ ಬೇಕಿದ್ದದ್ದು. 161 00:11:02,666 --> 00:11:04,999 - ಅದರಿಂದ ತುಂಬಾ ತೊಂದರೆಯಾಗುತ್ತೆ. - ಗೊತ್ತು. 162 00:11:05,000 --> 00:11:09,957 ಆದರೆ, ಅವನು ಹಾಗೆ ಹೇಳಿದ್ದರೆ, ಅವನೂ ನನ್ನನ್ನ ಮಿಸ್ ಮಾಡುತ್ತಾ ದುಃಖದಲ್ಲಿದ್ದಾನಂತಾಗುತ್ತಿತ್ತು. 163 00:11:09,958 --> 00:11:13,499 ಅವನೂ ದುಃಖದಲ್ಲಿರಬೇಕು ಅಂತ ಅಂದುಕೊಂಡರೆ, ನಾನು ಕೆಟ್ಟವಳಾ? 164 00:11:13,500 --> 00:11:15,458 ಇಲ್ಲ. ಬ್ರೇಕ್-ಅಪ್ ಅಂದರೆ ಹಾಗೇನೇ. 165 00:11:16,458 --> 00:11:18,125 ನೀನು ಶಾನ್ ಅನ್ನು ಅಷ್ಟು ಬೇಗ ಹೇಗೆ ಮರೆತೆ? 166 00:11:18,958 --> 00:11:22,082 ಒಂದು ದಿನ ಅತ್ತು, ಆಮೇಲೆ ಸರಿಯಾಗಿಬಿಟ್ಟೆ. 167 00:11:22,083 --> 00:11:23,208 ನನಗೂ ಹೇಳಿಕೊಡು. 168 00:11:24,791 --> 00:11:28,458 ನಾನು ಮಜಾ ಮಾಡಲು ಶುರು ಮಾಡಿದೆ. 169 00:11:31,375 --> 00:11:32,707 ಏನು, ನೀನು ಬೇರೆಯವರ ಜೊತೆ ಸಂಬಂಧ ಬೆಳೆಸಿದೆಯಾ? 170 00:11:32,708 --> 00:11:33,541 ಇಲ್ಲ. 171 00:11:34,208 --> 00:11:36,290 ಬೇರೆಯವರ ಜೊತೆ ಸಂಬಂಧ ಬೆಳೆಸಿ ನೀನು ನನಗೆ ಹೇಳಲಿಲ್ವಾ? 172 00:11:36,291 --> 00:11:38,874 ಇಲ್ಲ, ಸರಿನಾ? ನಾನು ಸಂಬಂಧ ಎಲ್ಲಾ ಬೆಳೆಸಿಲ್ಲ. 173 00:11:38,875 --> 00:11:42,083 ಸಂಬಂಧ ಬೆಳೆಸಿದರೆ ಮುಂದೆ ಕಷ್ಟ ಆಗುತ್ತೆ. ನನಗೆ ಅವೆಲ್ಲ ಸಾಕಾಯಿತು. 174 00:11:42,791 --> 00:11:47,708 ತುಂಬಾ ಟೆನ್ಷನ್ ಆಗುತ್ತೆ. ನಾನೀಗ ಒಬ್ಬಂಟಿ ಮತ್ತು ರಸಿಕೆ. 175 00:11:48,416 --> 00:11:52,332 ಸೆಕ್ಸ್ ಕೂಡ ಸಿಗುತ್ತೆ, ಟೆನ್ಷನ್ ಕೂಡ ಆಗಲ್ಲ. ನೀನೂ ಅದನ್ನೇ ಮಾಡಬೇಕು. 176 00:11:52,333 --> 00:11:57,624 ನೀನು ಶಾಲೆ, ಕೆಲಸ, ಶೋಕೇಸ್, ಗ್ಯಾರೆಟ್ ಅಂತ ತುಂಬಾ ತಲೆ ಕೆಡಿಸಿಕೊಂಡಿದ್ದೀಯ. 177 00:11:57,625 --> 00:11:59,415 ಸ್ವಲ್ಪ ಕಡಿಮೆ ಟೆನ್ಷನ್ ತಗೋ. 178 00:11:59,416 --> 00:12:01,832 - ಮಜಾ ಮಾಡಬೇಕಾ? - ಮಜಾ ಮಾಡು. 179 00:12:01,833 --> 00:12:03,541 ನಿನಗೆ ಬೇಕು ಅನಿಸೋದು ಮಾಡು. 180 00:12:04,291 --> 00:12:06,665 ಸರಿ, ನಿದ್ದೆ ಮಾಡಬಹುದಾ? 181 00:12:06,666 --> 00:12:08,665 ನಿದ್ದೆ ಆರೋಗ್ಯಕ್ಕೆ ಮುಖ್ಯ. ಅದನ್ನು ಮಾಡಬಹುದು. 182 00:12:08,666 --> 00:12:14,582 ಹೂಂ, ಈಗ ಹಾಸಿಗೆ ಮೇಲೆ ಬಿದ್ದರೆ, ಇನ್ನು ಎಂಟು ಗಂಟೆ ಬಿಟ್ಟೇ ಎದ್ದೋಳೋದು. 183 00:12:14,583 --> 00:12:16,207 ಕನಸುಗಳು ದೊಡ್ಡದಾಗಿರಲಿ, ಹಾನಾ. 184 00:12:16,208 --> 00:12:19,041 - ನೀನು ಒಂಬತ್ತು ಗಂಟೆ ಮಲಗಬಹುದು. - ಅದ್ಭುತ. 185 00:12:25,791 --> 00:12:26,749 {\an8}ಮ್ಯಾವರಿಕ್ ಭೇಟಿಯಾಗಲು ಬಾ 186 00:12:26,750 --> 00:12:28,875 {\an8}ತುಂಬಾ ಕೆಟ್ಟ ಸುದ್ದಿ ಸಿಕ್ಕಿತು ಅದನ್ನು ಮನಸ್ಸಿಂದ ತೆಗೆಯಬೇಕು 187 00:12:38,083 --> 00:12:39,958 - ಅಯ್ಯೋ. ಆಲ್. - ಹಾಯ್. 188 00:12:41,166 --> 00:12:42,416 ಸರಿ. 189 00:12:43,166 --> 00:12:44,583 ದೇವರೇ! 190 00:12:47,333 --> 00:12:49,291 - ಹಾಯ್. - ಹಾಯ್. 191 00:12:54,916 --> 00:12:56,290 ಏನೂ ಆಗಿಲ್ಲ ತಾನೇ? 192 00:12:56,291 --> 00:12:57,125 ಹೂಂ. ಇಲ್ಲ… 193 00:12:59,791 --> 00:13:00,625 ಏನೂ ಆಗಿಲ್ಲ. 194 00:13:01,333 --> 00:13:05,875 ಸ್ವಲ್ಪ ಕೂರು. 195 00:13:09,125 --> 00:13:12,874 ನಾನು ಹೇಳಲು ಬಂದಿದ್ದು… 196 00:13:12,875 --> 00:13:15,166 ಸರಿ, ಏನಾಯಿತು? 197 00:13:18,625 --> 00:13:20,915 ನೀನು ಗಮನಿಸಿರಬಹುದು, 198 00:13:20,916 --> 00:13:23,832 ನಾವು ಒಟ್ಟಿಗೆ ಮಲಗಿ ಸ್ವಲ್ಪ ಸಮಯ ಆಗಿದೆ. 199 00:13:23,833 --> 00:13:25,124 ಗಮನಿಸಿದ್ದೇನೆ. 200 00:13:25,125 --> 00:13:27,999 ಮತ್ತು ಹೇಳುತ್ತಿದ್ದೇನೆ, ನನಗೆ ಅದು ಅಷ್ಟು ಇಷ್ಟ ಆಗುತ್ತಿಲ್ಲ. 201 00:13:28,000 --> 00:13:29,583 ಹೂಂ, ಆದರೆ ಅದು ಯಾಕೆಂದರೆ ನನಗೆ ಒಂದು ವಿಷಯ ಗೊತ್ತಾಯಿತು. 202 00:13:31,833 --> 00:13:33,583 ನಾವು ಬೇರೆಯವರ ಜೊತೆ ಮಲಗಬೇಕು. 203 00:13:34,708 --> 00:13:36,832 ಇದನ್ನ ಮೊದಲೇ ನಿರ್ಧರಿಸಿದ್ದೆವಲ್ಲಾ? ನಾವು ಬೇರೆಯವರ ಜೊತೆ ಮಲಗಬಹುದು. 204 00:13:36,833 --> 00:13:38,582 ಹೂಂ, ಹೌದು, ನೀನು ಕುದುರೆ. 205 00:13:38,583 --> 00:13:43,124 ಆದರೆ ನನ್ನನ್ನು ಬಿಟ್ಟು ಈ ಕುದುರೆಯನ್ನು 206 00:13:43,125 --> 00:13:47,333 ಇತ್ತೀಚೆಗೆ ಯಾರು ಸವಾರಿ ಮಾಡಿದ್ದಾರೆ? 207 00:13:49,541 --> 00:13:51,875 - ಅಯ್ಯೋ. - ಹೂಂ, ಅದೇ ವಿಷಯ. ಅದಕ್ಕೇ… 208 00:13:54,166 --> 00:13:59,500 ನಮ್ಮ ನಡುವಿನ ಈ ವಿಷಯ ಮಜವಾಗಿದೆ. 209 00:14:00,083 --> 00:14:01,124 ನಿಜ. 210 00:14:01,125 --> 00:14:03,540 - ಆದರೆ ಇದು ಸಂಬಂಧ ಅಲ್ಲ. - ಖಂಡಿತ ಅಲ್ಲ. 211 00:14:03,541 --> 00:14:07,000 ಸ್ವಲ್ಪ ಇದನ್ನ ಕಡಿಮೆ ಮಾಡಬೇಕು. ಅವಲಂಬಿಸಬಾರದು. 212 00:14:08,416 --> 00:14:09,707 ಬೇರೆಯವರೊಂದಿಗೆ ಮಲಗಬೇಕು, 213 00:14:09,708 --> 00:14:12,915 ಆಗ ನಾವಿಬ್ಬರೂ ಒಟ್ಟಿಗೆ ಮಲಗಬಹುದು. 214 00:14:12,916 --> 00:14:16,082 - ನನಗೆ ನಿನ್ನ ಲಾಜಿಕ್ಕೇ ಅರ್ಥ ಆಗುತ್ತಿಲ್ಲ. - ಏನಿಲ್ಲ, ಬೇರೆಯವರ ಜೊತೆ ಮಲಗು ಅಷ್ಟೇ. 215 00:14:16,083 --> 00:14:18,083 ಒಪ್ಪಿಗೆಯಾ ಇಲ್ಲವಾ, ಡಿ ಲಾರೆಂಟಿಸ್? 216 00:14:19,166 --> 00:14:21,125 ಒಂದು ಸೆಕ್ಸಿ ಹೋಂವರ್ಕ್. 217 00:14:23,791 --> 00:14:27,083 ನನಗೆ ಒಪ್ಪಿಗೆ, ಆಲಿ ಮುದ್ದು. ಪೂರ್ತಿ ಒಪ್ಪಿಗೆ. 218 00:14:28,166 --> 00:14:29,083 ಒಳ್ಳೆಯದು. 219 00:14:30,875 --> 00:14:32,000 ಒಳ್ಳೆಯದು. 220 00:14:33,875 --> 00:14:34,875 ಸರಿ, ಬಾಯ್. 221 00:14:36,958 --> 00:14:38,207 ಅಂದರೆ, ನಾವು ಈಗ-- 222 00:14:38,208 --> 00:14:40,500 ಕೆಲಸ ಮುಗಿಸಿದಾಗ ನನಗೆ ತಿಳಿಸು. 223 00:15:47,833 --> 00:15:49,708 {\an8}ಈ ಕಥೆಯನ್ನು ವೀಕ್ಷಿಸಿದವರು 224 00:16:19,291 --> 00:16:23,665 ಪುಟ ಒಂದು, ಇದು ಕೇವಲ ಮುನ್ನುಡಿ 225 00:16:23,666 --> 00:16:29,082 ಅದೆಲ್ಲವೂ ಸಂಭವಿಸಲು ವೇದಿಕೆಯನ್ನು ಸಿದ್ಧಪಡಿಸುವುದು 226 00:16:29,083 --> 00:16:32,790 ನಂತರ ಮೊದಲ ಅಧ್ಯಾಯಕ್ಕೆ 227 00:16:32,791 --> 00:16:34,290 ಗ್ಯಾರೆಟ್‌ಜಿ.44 ನಿಮ್ಮ ಪೋಸ್ಟ್ ಅನ್ನು ಇಷ್ಟಪಟ್ಟಿದ್ದಾರೆ. 228 00:16:34,291 --> 00:16:38,832 ಎಲ್ಲರೂ ಸಂತೋಷವಾಗಿದ್ದಾರೆ ಬೆಂಬಲ ಮತ್ತು ಬಾಕಿ ಇರುವ ವಿಪತ್ತಿಗಾಗಿ 229 00:16:38,833 --> 00:16:43,290 ನಂತರ ಹುಡುಗಿ ಹುಡುಗನನ್ನು ಭೇಟಿಯಾಗುತ್ತಾಳೆ ಇದು ವಿಚಿತ್ರ, ಗೊಂದಲಮಯ 230 00:16:43,291 --> 00:16:46,915 ಅದು ಪ್ರೀತಿಯೋ ದ್ವೇಷವೋ ಗೊತ್ತಿಲ್ಲ 231 00:16:46,916 --> 00:16:50,415 ಕೈಗಳು ಸ್ಪರ್ಶಿಸಿದಾಗ 232 00:16:50,416 --> 00:16:55,874 ಅತಿ ನೀರಸ ಮತ್ತು ಲೌಕಿಕಕ್ಕಾಗಿ ಕೈ ಚಾಚುವುದು 233 00:16:55,875 --> 00:17:02,207 ಈಗ ಇದು ಒಂದು ಮಹಾನ್ ಪ್ರೇಮಕಥೆ 234 00:17:02,208 --> 00:17:06,332 ಎಂದಿಗೂ ಹೇಳದಂತಹವು 235 00:17:06,333 --> 00:17:10,832 ಎರಡು ಹೃದಯಗಳು ಒಂದಾಗಿ ಮಿಡಿಯುತ್ತಿವೆ 236 00:17:10,833 --> 00:17:14,458 ಸೂರ್ಯನ ಕಿರಣಗಳತ್ತ ಸಾಗೋಣ 237 00:17:15,375 --> 00:17:21,457 ಓಹ್! ಮತ್ತೆ ಒಮ್ಮೆ ಅಲ್ಲಿಗೆ ಹಿಂದಿರುಗಿಸು 238 00:17:21,458 --> 00:17:24,708 ಪುಟ ಒಂದಕ್ಕೆ ಹಿಂತಿರುಗಿಸು 239 00:17:27,125 --> 00:17:29,207 ಹೇ, ಯಾವ ಲೈಟ್ ಮೊದಲು ಆನ್ ಆಯಿತು? 240 00:17:29,208 --> 00:17:32,624 - ಅಲುಗಾಡೋ ಲೈಟ್ ಅನಿಸುತ್ತೆ. ಗೊತ್ತಿಲ್ಲ. - ಏನು… ಯಾವುದು? 241 00:17:32,625 --> 00:17:34,457 ನನಗೆ ತೋರಿಸು. 242 00:17:34,458 --> 00:17:37,250 ತೋರಿಸುತ್ತಿದ್ದೆ. ಆದರೆ ನನ್ನ ಹೊಸ ಬಟ್ಟೆಗೆ ಎಣ್ಣೆ ತಗುಲುತ್ತೆ. 243 00:17:38,166 --> 00:17:39,000 ಇಲ್ಲ. 244 00:17:39,791 --> 00:17:42,290 ಇಲ್ಲ. ಖಂಡಿತ ಇಲ್ಲ. 245 00:17:42,291 --> 00:17:45,374 - ನಿನಗೆ ಎಷ್ಟು ಒಳ್ಳೆ ವಸ್ತುಗಳನ್ನ ಕಳಿಸಿದ್ದಾರೆ. - ನನ್ನ ಮೇಲ್ ಬಾಕ್ಸ್ ತೆರೆಯಬೇಡ ಅಂದಿದ್ದೆ. 246 00:17:45,375 --> 00:17:48,207 ನೀನು ಎಷ್ಟೋ ದಿನಗಳಿಂದ ಅದನ್ನ ತೆರೆದಿಲ್ಲ. ಎಷ್ಟೋ ದಿನಗಳಿಂದ. 247 00:17:48,208 --> 00:17:51,374 ತೆರೆಯದೆ ಇದ್ದರೆ ಅದಕ್ಕೆ ಬೇಜಾರಾಗುತ್ತೆ ಅಂತ ತೆರೆದೆ. ಒಳ್ಳೆಯದೇ ಆಯಿತು, 248 00:17:51,375 --> 00:17:52,499 ನೋಡು ಏನು ಸಿಕ್ಕಿತು. 249 00:17:52,500 --> 00:17:53,958 ಲಿಕ್ವಿಡ್ ಐ.ವಿ. ಹರಿಯಿರಿ ಸುರಿಯಿರಿ ಗೋಲ್ ಹೊಡೆಯಿರಿ 250 00:17:55,208 --> 00:17:56,750 {\an8}ಪತ್ರಿಕೆಗಳು ಇನ್ನೂ ಸತ್ತಿಲ್ಲ. 251 00:17:58,291 --> 00:18:00,665 - ಅದನ್ನು ಎಸೆ. - ಖಂಡಿತ ಇಲ್ಲ. 252 00:18:00,666 --> 00:18:03,374 ಸರಿ, ಕೊನೆಗೂ ಸಿಕ್ಕಿದ. 253 00:18:03,375 --> 00:18:07,249 ಇಯನ್‌ನ ತಮ್ಮನ ಗೆಳೆಯನ ಪ್ರೇಮಿ ಅವನೊಂದಿಗೆ ಅಮೇರಿಕನ್ ಸ್ಟಡೀಸ್‌ನಲ್ಲಿದ್ದಾಳೆ. 254 00:18:07,250 --> 00:18:09,875 - ಮತ್ತೆ? - ಇದು ಒಳ್ಳೆ ಉಪಾಯ ಅಲ್ಲ ಅನಿಸುತ್ತೆ. 255 00:18:10,458 --> 00:18:12,665 - ಯಾವುದು ಒಳ್ಳೆ ಉಪಾಯ ಅಲ್ಲ? - ನಿನಗದರ ಚಿಂತೆ ಬೇಡ. 256 00:18:12,666 --> 00:18:13,666 ಹಂಟರ್ ಡ್ಯಾವನ್‌ಪೋರ್ಟ್. 257 00:18:14,791 --> 00:18:15,999 ಬರ್ಡಿಯ ಜಾಗಕ್ಕಾ? 258 00:18:16,000 --> 00:18:18,124 - ನೀನು ಏನು ಮಾಡಿದೆ ನೋಡು. - ಅದು ಕೆಲಸ ಕೆಡಿಸುತ್ತೆ. 259 00:18:18,125 --> 00:18:20,665 - ಮಜಾ ಇರುತ್ತೆ. - ಇರು. ಯಾಕೆ ಕೆಡಿಸುತ್ತೆ? 260 00:18:20,666 --> 00:18:23,666 - ಅವನಿಗೆ ಡೀನ್‌ನನ್ನು ಕಂಡರೆ ಆಗಲ್ಲ ಅಲ್ವಾ? - ಸರಿ, ಮುಂದುವರೆಸು. 261 00:18:24,333 --> 00:18:25,499 ನಿನಗೆ ಏನು ಗೊತ್ತು? 262 00:18:25,500 --> 00:18:28,415 ಅವರಿಬ್ಬರೂ ಹ್ಯಾಂಪ್ಟನ್ಸ್‌ನಲ್ಲಿ ರಜೆ ಕಳೆಯುವ ಶ್ರೀಮಂತ ನಾಯಿಗಳು, 263 00:18:28,416 --> 00:18:29,999 ಜಗಳಕ್ಕೆ ಏನಾದರೂ ಕಾರಣ ಇರಬಹುದು. 264 00:18:30,000 --> 00:18:34,124 ನನಗೆ ಖಚಿತವಾಗಿ ತಿಳಿದಿರೋದು, ಹಂಟರ್ ಮತ್ತು ಡೀನ್‌ನ ತಂಗಿ ಒಂದೇ ಹೈ ಸ್ಕೂಲ್‌ಗೆ ಹೋಗಿದ್ದು. 265 00:18:34,125 --> 00:18:35,999 ಅಯ್ಯೋ! ಸಮರ್ ಆ? 266 00:18:36,000 --> 00:18:38,082 - ಹೂಂ, ಅವಳೇ. - ಇದು ಒಳ್ಳೆ ಸುದ್ದಿ ಅಲ್ಲ, ಕಣೋ. 267 00:18:38,083 --> 00:18:41,040 ನನಗೆ ಚಿಂತೆ ಇಲ್ಲ. ಗ್ಯಾರೆಟ್ ಮಾಡಿರೋ ಕಾಂಡವನ್ನ ಸರಿ ಮಾಡಲು ನಮಗವನು ಬೇಕು. 268 00:18:41,041 --> 00:18:43,582 - ನಿನಗವನು ಸಿಕ್ಕಿದ, ತಾನೇ? - ಹೂಂ. 269 00:18:43,583 --> 00:18:46,291 ಸರಿ, ಮಾತಾಡಿಸೋಣ. 270 00:18:49,625 --> 00:18:53,041 ಈ ನೋವಿನಿಂದ ನನ್ನನ್ನು ರಕ್ಷಿಸು 271 00:18:54,500 --> 00:18:59,415 ಮತ್ತೆ ಪ್ರೀತಿ ಮಾಡುವ ಧೈರ್ಯ ಹೇಗೆ ಬರುತ್ತದೆ 272 00:18:59,416 --> 00:19:02,500 ನಾನು ಗೋಡೆ ಕಟ್ಟುವೆ 273 00:19:03,916 --> 00:19:07,582 ಮತ್ತೆ ಬೀಳದಂತೆ 274 00:19:07,583 --> 00:19:12,041 ಮತ್ತೊಂದು ಪ್ರೀತಿಯ ಬಲೆಗೆ 275 00:19:13,666 --> 00:19:14,707 ಹಾಯ್. 276 00:19:14,708 --> 00:19:16,875 ಏನದು? ಸುಂದರವಾಗಿದೆ. 277 00:19:18,041 --> 00:19:21,540 ಇದು ನಾನು ಹೈ ಸ್ಕೂಲಲ್ಲಿ ಬರೆದ ಒಂದು ಹಾಡು ಅಷ್ಟೇ. 278 00:19:21,541 --> 00:19:23,666 ಸರಿ, ಟೇಲರ್ ಸ್ವಿಫ್ಟ್. 279 00:19:24,625 --> 00:19:26,083 ಸಾಹಿತ್ಯ ಅದ್ಭುತವಾಗಿದೆ. 280 00:19:28,625 --> 00:19:31,290 ಹೂಂ. ಆಗ ಬರೆಯೋದು ಸುಲಭವಾಗಿತ್ತು. 281 00:19:31,291 --> 00:19:33,916 ಮನಸ್ಸಿಗೆ ಬಂದ ಭಾವನೆಯನ್ನು ಹಾಳೆಯಲ್ಲಿ ಬರೆಯುತ್ತಿದ್ದೆ. 282 00:19:35,041 --> 00:19:39,416 ಹೂಂ, ಎಷ್ಟೋ ಒಳ್ಳೆ ಹಾಡುಗಳನ್ನ ಜನರು ಬರೆದಿರೋದು ಬ್ರೇಕಪ್ ಆದಾಗಲೇ. 283 00:19:40,250 --> 00:19:42,875 ನಿನ್ನ ಬ್ರೇಕಪ್ ನಿನಗೂ ಬರೆಯಲು ಸಹಾಯ ಮಾಡಬಹುದು. 284 00:19:43,750 --> 00:19:45,083 ಹೂಂ, ಅದು… 285 00:19:46,208 --> 00:19:49,375 ವಿಷಯ ಅದಲ್ಲ ಅನಿಸುತ್ತೆ. 286 00:19:52,875 --> 00:19:53,875 ಮತ್ತೆ? 287 00:19:55,791 --> 00:19:56,875 ಅದು, 288 00:20:16,083 --> 00:20:18,416 ನಾವು ಯಾರನ್ನಾದರೂ ಭೇಟಿಯಾದಾಗ… 289 00:20:19,500 --> 00:20:22,457 ಮೊದಲು ಅವರ ಹೆಸರು ಕೂಡ ಗೊತ್ತಿರಲ್ಲ ಆದರೆ ನಾವು ಕೇಳೋದೂ ಇಲ್ಲ, 290 00:20:22,458 --> 00:20:26,040 ಆದರೆ ಆಮೇಲೆ ಯಾವಾಗಲೂ ಅವರನ್ನು ಭೇಟಿಯಾಗುತ್ತಾ ಒಳಗೊಳಗೇ ಮಾತಾಡಿಕೊಳ್ಳುತ್ತಾ, 291 00:20:26,041 --> 00:20:29,165 ತುಂಬಾ ಹತ್ತಿರವಾಗಿ ಹೋಗಿಬಿಡುತ್ತೇವೆ, ಮತ್ತು ಆಗ ಹೆಸರು ಕೇಳಲು ಮುಜುಗರ ಅನಿಸುತ್ತೆ. 292 00:20:29,166 --> 00:20:31,375 ನನಗೆ ಹೀಗೆ ಆಗಿದೆ. ಮುಂದುವರೆಸು. 293 00:20:38,833 --> 00:20:42,125 ಹಾಗೆಯೇ, ನಿನ್ನ ಆತ್ಮೀಯ ಗೆಳತಿಗೆ 294 00:20:43,083 --> 00:20:48,500 ನಿನ್ನ ಬದುಕಿನ ಒಂದು ಮುಖ್ಯ, ಮೂಲಭೂತ ವಿಷಯವೇ ಗೊತ್ತಿಲ್ಲದಿದ್ದರೆ ಹೇಗಿರುತ್ತೆ? 295 00:20:50,458 --> 00:20:51,291 ಸರಿ. 296 00:20:52,625 --> 00:20:54,957 ನಾನು ನಿನಗೆ ಏನೋ ಹೇಳುವೆ. 297 00:20:54,958 --> 00:20:57,332 ಆದರೆ ನನ್ನ ಮೇಲೆ ಬೇಜಾರು ಮಾಡಿಕೊಳ್ಳದೆ, 298 00:20:57,333 --> 00:21:00,165 ವಿಚಿತ್ರವಾಗಿ ನೋಡದೇ, ಮುಂಚೆಯೇ ಹೇಳದ್ದಕ್ಕೆ ಕೋಪ ಮಾಡಿಕೊಳ್ಳದೇ ಇರುವೆಯಾ? 299 00:21:00,166 --> 00:21:04,833 - ಖಂಡಿತ ಕೋಪ ಮಾಡಲ್ಲ. - ಹಾಗೆ ಹೇಳುವೆ. ಆದರೆ ತುಂಬಾ ಜನ ಕೋಪಮಾಡಿಕೊಂಡರು. 300 00:21:11,000 --> 00:21:14,875 ನನ್ನ ಹೈ ಸ್ಕೂಲ್ ಗೆಳತಿ ಬಗ್ಗೆ ಹೇಳಿದ್ದೆ ನೆನಪಿದೆಯಾ? 301 00:21:16,250 --> 00:21:21,625 ಅವಳಿಗೆ ನಶೆ ಬೆರೆಸಿ ಕೊಟ್ಟಿದ್ದು, ಆಮೇಲೆ ಅವಳ ಜೊತೆ ಅಷ್ಟೆಲ್ಲಾ ನಡೆದಿದ್ದು? 302 00:21:27,750 --> 00:21:29,291 ಆ ಗೆಳತಿ ನೀನೇ. 303 00:21:32,541 --> 00:21:34,375 ಹಾನಾ, ನನಗೆ ಮುಂಚೆಯಿಂದ ಗೊತ್ತಿತ್ತು. 304 00:21:34,958 --> 00:21:35,916 ನಾನು… 305 00:21:37,208 --> 00:21:39,458 ನೀನು ಹೇಳಲು ತಯಾರಾದಾಗ ನನಗೆ ಹೇಳುವೆ ಅಂತ ಸುಮ್ಮನಾದೆ. 306 00:21:51,041 --> 00:21:53,499 ನೀನು ನನ್ನ ಅತ್ಯಂತ ಮೆಚ್ಚಿನ ವ್ಯಕ್ತಿ. 307 00:21:53,500 --> 00:21:54,875 ನೀನೂ ನನಗೆ ತುಂಬಾ ಇಷ್ಟ, ಕಣೇ. 308 00:21:56,833 --> 00:21:58,749 ಅದಕ್ಕೂ, ನೀನು ಹಾಡು ಬರೆಯಲು ಆಗದ್ದಕ್ಕೂ ಏನು ಸಂಬಂಧ? 309 00:21:58,750 --> 00:22:02,916 ಆಗಿಂದಲೇ ನನಗೆ ಬರೆಯಲು ಸಾಧ್ಯವಾಗಿಲ್ಲ. 310 00:22:04,666 --> 00:22:06,750 ನನಗೆ ಅತ್ಯಾಚಾರದ ಬಲಿಪಶು ಆಗಿರಲು ಇಷ್ಟವಿರಲಿಲ್ಲ. 311 00:22:08,708 --> 00:22:10,250 ನನಗೆ ಈ ಹುಡುಗಿ ಆಗಿರಬೇಕು. 312 00:22:11,083 --> 00:22:12,791 ಈ ಹಾಡನ್ನು ಬರೆದ ಹುಡುಗಿ. 313 00:22:16,375 --> 00:22:20,250 ನನಗೆ ಇಷ್ಟ ಇರೋ ಹಾನಾ ಅದೇ ಹುಡುಗಿ. 314 00:22:22,958 --> 00:22:24,375 ಮತ್ತು ಈ ಹುಡುಗಿ ಕೂಡ. 315 00:22:25,583 --> 00:22:27,916 ಮತ್ತು ಮಧ್ಯದಲ್ಲಿ ನೀನು ಬೇರೆ ಯಾವ ಯಾವ ಹುಡುಗಿ ಆಗಿದ್ದೆಯೋ ಅವೆಲ್ಲ. 316 00:22:28,666 --> 00:22:32,666 ಯಾಕೆಂದರೆ ನೀನು ಅದು, ಅಥವಾ ಇದು ಅಲ್ಲ. ನೀನು ಅದೆಲ್ಲವೂ. 317 00:22:34,583 --> 00:22:35,999 ಅದನ್ನು ಮರೆಯಬೇಡ, ಸರಿನಾ? 318 00:22:36,000 --> 00:22:38,916 ನೀನು ಎಲ್ಲವೂ. 319 00:22:44,916 --> 00:22:46,875 ಮತ್ತು ಹಾಡು ಬರಬೇಕಾ ಬರುತ್ತೆ. 320 00:22:57,000 --> 00:23:01,082 ನಾನು ಸ್ವಲ್ಪ ಶುರು ಮಾಡಿಕೊಂಡೆ, 321 00:23:01,083 --> 00:23:04,874 ಏನೋ ಒಂದು ಹೊಸ ಕಲ್ಪನೆ ಬಂದಿದೆ, 322 00:23:04,875 --> 00:23:07,416 ಆದರೆ ಅದಕ್ಕೆ ನನಗೆ ಸಹಾಯ ಬೇಕು. 323 00:23:09,750 --> 00:23:11,415 ಸಹಾಯ ಮಾಡಿದ್ದಕ್ಕೆ ಥ್ಯಾಂಕ್ಸ್. 324 00:23:11,416 --> 00:23:14,207 ಪರವಾಗಿಲ್ಲ. ಮುಗಿಸಿದಾಗ ನನಗೆ ತೋರಿಸು. 325 00:23:14,208 --> 00:23:16,707 ಹೂಂ, ಅದು ಚೆನ್ನಾಗಿ ಮುಗಿದರೆ ತೋರಿಸುವೆ. 326 00:23:16,708 --> 00:23:18,249 ಹೇ, ಅದು ಚೆನ್ನಾಗಿ ಬಂದರೆ, 327 00:23:18,250 --> 00:23:21,291 ನನಗೆ ರೇಡಿಯೋ ಸ್ಟೇಷನ್‌ನಲ್ಲಿ ಕೆಲಸ ಮಾಡೋ ಗೆಳೆಯರಿದ್ದಾರೆ. ಅವರ ಸಹಾಯ ಕೇಳಬಹುದು. 328 00:23:22,541 --> 00:23:24,540 ಇಲ್ಲ, ಇದು ನನಗೆ ಮಾತ್ರ. 329 00:23:24,541 --> 00:23:26,624 ಹಾಡಿನ ಮಧ್ಯೆ ಹಾಕಿ ಸೌಂಡ್ಸ್ ಚೆನ್ನಾಗಿ ಕೇಳುತ್ತೆ. 330 00:23:26,625 --> 00:23:29,791 ಸರಿ. ಖಂಡಿತ. ನಮ್ಮ ಬಳಿ ಚೆನ್ನಾಗಿರೋ ಸೌಂಡ್ಸ್ ಇವೆ. 331 00:23:39,458 --> 00:23:41,707 ಅಭ್ಯಾಸ ಮುಗಿಯೋ ಸಮಯಕ್ಕೆ ಬರುತ್ತಾನೆ. 332 00:23:41,708 --> 00:23:45,207 ಮೈದಾನದಲ್ಲಿ ಸಣ್ಣ ಪುಟ್ಟದಾಗಿ ಸುತ್ತು ಬರುತ್ತಾನೆ. 333 00:23:45,208 --> 00:23:46,540 ನೋಡಲು ಬೇಜಾರಾಗುತ್ತೆ. 334 00:23:46,541 --> 00:23:49,665 ಅವನ ಬೋರಿಂಗ್ ಟಾಮ್ ಬ್ರೇಡಿ ಕಥೆಗಳನ್ನ ಕೇಳಿದಾಗ ಆದಷ್ಟೇ ಬೇಜಾರು. 335 00:23:49,666 --> 00:23:51,916 - ಹೂಂ, ಅರ್ಥ ಆಗುತ್ತೆ. - ಹೂಂ. 336 00:23:54,708 --> 00:23:58,582 ಹೂಂ, ಆಲಿ ಫೋನಲ್ಲಿ ಅವನ ಬಗ್ಗೆ ನೋಡುತ್ತೇನೆ, ಅವನಿಗೆ ಗೊತ್ತಾಗಬಾರದು ಅಂತ. 337 00:23:58,583 --> 00:24:02,165 - ಹೂಂ, ಅಣ್ಣನೂ ನನ್ನ ಫೋನಲ್ಲಿ ನೋಡುತ್ತಾನೆ. - ಅವರಿಬ್ಬರೂ ಮಾತಾಡುತ್ತಿಲ್ವಾ? 338 00:24:02,166 --> 00:24:06,582 ಇಲ್ಲ. ಏನೋ ಇಬ್ಬರ ಮಧ್ಯೆ ದೊಡ್ಡ ಜಗಳವಾಯಿತಂತೆ. 339 00:24:06,583 --> 00:24:08,707 ಬಿಡು, ನನಗೆ ಆ ಹಾಡು ಕಳಿಸು. 340 00:24:08,708 --> 00:24:10,666 ಮುಗಿಸಿದರೆ. 341 00:24:11,375 --> 00:24:12,625 ಹೂಂ. 342 00:24:28,583 --> 00:24:29,625 ಹೇ. 343 00:24:32,458 --> 00:24:33,500 ಹೇ. 344 00:24:36,750 --> 00:24:37,875 ನೀನು ಯಾಕೆ… 345 00:24:38,708 --> 00:24:40,625 ಜೂಲ್ಸ್ ನನಗೆ ಹಾಡಿನಲ್ಲಿ ಸಹಾಯ ಮಾಡುತ್ತಿದ್ದಳು. 346 00:24:41,791 --> 00:24:42,708 ಹೌದಾ? 347 00:24:43,708 --> 00:24:44,583 ಹೂಂ. 348 00:24:45,708 --> 00:24:48,790 ನಿನ್ನ ಸಹಾಯದಿಂದಲೇ ಹಾಡಿಗೆ ಐಡಿಯಾ ಹೊಳೆದಿದ್ದು. 349 00:24:48,791 --> 00:24:50,707 ಅದಕ್ಕೆ ಥ್ಯಾಂಕ್ಸ್. 350 00:24:50,708 --> 00:24:52,375 ಏನು ಕೋಪದ ಹಾಡು ಬರೆದಿದ್ದೀಯಾ ಹೇಗೆ? 351 00:24:53,666 --> 00:24:57,500 ಇಲ್ಲ. ನೀನು… 352 00:24:58,833 --> 00:25:01,458 ನಾನು ಯಾರಾಗಿದ್ದೆ ಅಂತ ನನಗೆ ನೆನಪಿಸಿದೆ. 353 00:25:03,083 --> 00:25:04,250 ಸರಿ. 354 00:25:05,875 --> 00:25:06,958 ಸರಿ… 355 00:25:08,333 --> 00:25:09,833 ಶೋಕೇಸ್‌ಗಾಗಿ ಆಲ್ ದಿ ಬೆಸ್ಟ್. 356 00:25:11,250 --> 00:25:13,000 ಅದು, ನಾನು ಅದರಲ್ಲಿ ಭಾಗವಹಿಸುತ್ತಿಲ್ಲ. 357 00:25:15,625 --> 00:25:17,499 ಓಹ್, ಹೌದಾ? 358 00:25:17,500 --> 00:25:19,125 ನೀನು ಚೆನ್ನಾಗಿ ಮಾಡುತ್ತಿದ್ದೆ. 359 00:25:22,000 --> 00:25:23,875 - ಹೇ, ನಾನು-- - ನಾನು-- 360 00:25:25,000 --> 00:25:26,082 ಸ್ಸಾರಿ, ಏನು? 361 00:25:26,083 --> 00:25:27,541 - ಇಲ್ಲ, ಪರವಾಗಿಲ್ಲ. - ಗ್ಯಾರೆಟ್. 362 00:25:28,125 --> 00:25:29,458 ನನಗೆ ಗೊತ್ತು ನಾವು… 363 00:25:30,041 --> 00:25:31,166 ನಾವು ಜೊತೆಗಿಲ್ಲ. 364 00:25:31,916 --> 00:25:33,583 ಆದರೆ ನಾನಿನ್ನೂ ನಾನೇ. ನೀನು ಹಂಚಿಕೊಳ್ಳಬಹುದು. 365 00:25:44,750 --> 00:25:46,333 ನಾನು ಬಿಡುವ ಬಗ್ಗೆ ಯೋಚಿಸುತ್ತಿದ್ದೇನೆ. 366 00:25:48,125 --> 00:25:49,374 ಹಾಕಿಯನ್ನಾ? 367 00:25:49,375 --> 00:25:50,583 ಹೌದು. 368 00:25:55,000 --> 00:25:57,291 ನಾನು ಅದರಲ್ಲಿರೋದು ಸರಿಯಾದ ಕಾರಣಗಳಿಗಾ ಅಂತಲೂ ನನಗೆ ಗೊತ್ತಿಲ್ಲ. 369 00:25:58,791 --> 00:26:01,999 ಯಾಕೆ ಆಡುತ್ತಿದ್ದೇನೆ ಅಂತಲೂ ನನಗೆ ಗೊತ್ತಿಲ್ಲ. ನಾನು ಅಪ್ಪನಂತೆ ಅಲ್ಲ ಅಂತ ಸಾಬೀತು ಮಾಡುವುದಕ್ಕಾ, 370 00:26:02,000 --> 00:26:05,375 ಅಥವಾ ಅಪ್ಪನಂತೆಯೇ ಅಂತ ಸಾಬೀತು ಮಾಡುವುದಕ್ಕಾ … 371 00:26:08,166 --> 00:26:11,250 ಯಾಕೆಂದರೆ ನನಗೆ ಬೇರೆ ಏನೂ ಗೊತ್ತಿಲ್ಲ. ಆದರೆ… 372 00:26:14,333 --> 00:26:17,541 ನನಗೆ ಆಡಲು ಇಷ್ಟ ಅನ್ನೋ ಕಾರಣಕ್ಕೆ ನಾನು ಆಡಬೇಕು ಅಂತ ಜೆನ್ಸನ್ ಹೇಳಿದರು, ಆದರೆ… 373 00:26:20,375 --> 00:26:21,500 ನನಗೆ ಗೊತ್ತಿಲ್ಲ. 374 00:26:24,958 --> 00:26:29,416 ನೀನು ಒಮ್ಮೆ ನನಗೆ ಹೇಳಿದ್ದೆ, ನಿನಗೆ ಆಡಲೇಬೇಕು ಅನ್ನೋ ಒತ್ತಡ ಇರದಿದ್ದರೆ 375 00:26:30,000 --> 00:26:31,666 ನಿನಗೆ ನಿರಾಳ ಆಗುತ್ತೆ ಅಂತ. 376 00:26:33,208 --> 00:26:34,208 ಮತ್ತು ಈಗ ನಿನಗೆ ಆಡಲು ಆಗಲ್ಲ. 377 00:26:35,375 --> 00:26:37,457 ಅದರರ್ಥ ನೀನು ಎಲ್ಲಿ ಬೇಕಾದರೂ ಇರಬಹುದು, 378 00:26:37,458 --> 00:26:39,041 ಏನು ಬೇಕಾದರೂ ಮಾಡಬಹುದು. 379 00:26:39,750 --> 00:26:40,916 ಆದರೆ ನೀನು ಹಾಗೆ ಮಾಡುತ್ತಿಲ್ಲ. 380 00:26:42,375 --> 00:26:43,416 ನೀನು ಇಲ್ಲಿದ್ದೀಯ. 381 00:26:44,291 --> 00:26:46,125 ಮೈದಾನದ ಮೇಲೆ, ಆಡುತ್ತಾ. 382 00:26:51,375 --> 00:26:55,250 ಮತ್ತು ಕೇಳು, ಏನೋ ಗೊತ್ತಿಲ್ಲ, ಆದರೆ ನಿನಗೆ ಆಡಲು ಒಳ್ಳೆಯ ಕಾರಣ ಇದೆ. 383 00:26:56,250 --> 00:26:57,708 ಮತ್ತು ಅದು ನಿನ್ನ ತಂದೆಯಲ್ಲ. 384 00:26:58,791 --> 00:27:02,083 ನಿನ್ನ ಜೊತೆ ಆಡುತ್ತಿದ್ದ ವ್ಯಕ್ತಿ, ನಿನಗೆ ಯಾವಾಗಲೂ ಬೆಂಬಲ ನಿಂತವನು. 385 00:27:04,166 --> 00:27:05,958 ನೀನು ಬೇವರ್ಸಿಯಂತೆ ವರ್ತಿಸುತ್ತಿದ್ದರೂ. 386 00:27:26,625 --> 00:27:27,708 ಬಾ! ಬೇಗ ಬಾ! 387 00:27:29,708 --> 00:27:31,416 ಹಾಂ! ಹಾಗೆ! 388 00:27:44,541 --> 00:27:47,207 ಗ್ರಾಹಂ ಮತ್ತು ಲೋಗನ್ ಅಲ್ಲಿ ತುಂಬಾ ಮೋಜು ಮಾಡುತ್ತಿರುವಂತಿದೆ. 389 00:27:47,208 --> 00:27:50,875 ನಮಗದು ತುಂಬಾ ಇಷ್ಟ ಆಗುತ್ತೆ. ನನಗದು ತುಂಬಾ ಇಷ್ಟ ಆಗುತ್ತೆ. 390 00:27:56,000 --> 00:27:58,165 ಎರಡೇ ನಿಮಿಷಗಳು ಉಳಿದಿವೆ. ಈಗ… 391 00:27:58,166 --> 00:28:00,958 ಗ್ರಾಹಂ ಮತ್ತು ಡೆಲೇನಿ ಮೈದಾನದ ಮಧ್ಯದಲ್ಲಿ ಆಟ ಪ್ರಾರಂಭಿಸಲು ಸಿದ್ಧರಾಗಿ ನಿಂತಿದ್ದಾರೆ. 392 00:28:23,291 --> 00:28:25,250 ದೇವರೇ! ಹೇ! ಎದ್ದೇಳು! 393 00:28:25,875 --> 00:28:27,000 ಬಿಡು ನನ್ನನ್ನ! 394 00:28:27,666 --> 00:28:29,291 ಹೇ! ಗ್ಯಾರೆಟ್! 395 00:28:30,583 --> 00:28:32,375 ಹೇ! ಹೇ! 396 00:28:32,708 --> 00:28:33,624 ನನ್ನನ್ನ ನೋಡು! 397 00:28:33,625 --> 00:28:34,458 ಇಲ್ಲಿ ಬಾ! 398 00:28:35,291 --> 00:28:36,915 ಗ್ಯಾರೆಟ್, ನನ್ನನ್ನ ನೋಡು! ಹೇ! 399 00:28:36,916 --> 00:28:38,333 ನಾನಿದ್ದೇನೆ. 400 00:28:40,500 --> 00:28:41,541 ನಾನಿದ್ದೇನೆ. 401 00:28:42,333 --> 00:28:43,500 ಸರಿನಾ? 402 00:28:55,625 --> 00:28:58,375 ನೀನು ಅಡುಗೆಮನೆ ತುಂಬಾ ಹೀಗೆ ಮಾಡೋದು ಟಕರ್‌ಗೆ ಇಷ್ಟ ಆಗಲ್ಲ. 403 00:29:00,250 --> 00:29:01,250 ಪರವಾಗಿಲ್ಲ, ಬಿಡು. 404 00:29:06,458 --> 00:29:07,791 ನಿನಗೇನು ಬೇಕು, ಗ್ಯಾರೆಟ್? 405 00:29:12,416 --> 00:29:15,666 ಸೇಂಟ್ ಏ ಆಟದಲ್ಲಿ… 406 00:29:18,708 --> 00:29:20,666 ನೀನು ನನ್ನನ್ನು ಡೆಲೇನಿಯಿಂದ ದೂರ ಎಳೆದು ತಂದೆ. 407 00:29:22,416 --> 00:29:23,375 ಹೌದು. 408 00:29:25,500 --> 00:29:26,500 ಥ್ಯಾಂಕ್ ಯು. 409 00:29:30,333 --> 00:29:31,625 ನನಗೆ ಮಂಕು ಬಡಿದಿತ್ತು. 410 00:29:34,666 --> 00:29:36,083 ನೀನು ನನ್ನನ್ನು ತಡೆಯದೇ ಇದ್ದಿದ್ದರೆ, ನಾನು… 411 00:29:40,166 --> 00:29:42,250 ನೋಡು, ಡೆಲೇನಿ ಹೊಲಸು ನನ್ನ ಮಗ. 412 00:29:43,166 --> 00:29:45,208 ಆದರೆ ನನಗೆ ಅವನಂತೆ ಆಗಲು ಇಷ್ಟ ಇಲ್ಲ. 413 00:29:46,250 --> 00:29:50,083 ನನಗೆ ಕೋಪದ ಕೈಗೆ ಬುದ್ಧಿ ಕೊಡೋ ವ್ಯಕ್ತಿ ಆಗಲು ಇಷ್ಟ ಇಲ್ಲ. 414 00:29:52,250 --> 00:29:53,500 ನನಗೆ… 415 00:30:02,625 --> 00:30:04,166 ನನಗೆ ನನ್ನ ಅಪ್ಪನಂತಾಗಲು ಇಷ್ಟ ಇಲ್ಲ. 416 00:30:07,833 --> 00:30:09,125 ನೋಡು… 417 00:30:11,250 --> 00:30:13,000 ನಾನು ಕೆಲವು ವಿಷಯಗಳನ್ನು ಹೇಳುತ್ತೇನೆ. 418 00:30:14,166 --> 00:30:16,375 ಇದಕ್ಕಿಂತ ಮೊದಲು ನಾನಿದನ್ನು ಯಾರ ಜೊತೆಗೂ ಹಂಚಿಕೊಂಡಿಲ್ಲ. 419 00:30:17,916 --> 00:30:20,291 ಅಂದರೆ… ಹಾನಾಳನ್ನು ಬಿಟ್ಟು ಯಾರಿಗೂ ಹೇಳಿಲ್ಲ. 420 00:30:23,500 --> 00:30:24,958 ಆದರೆ ಹೇಳಿಕೊಳ್ಳಬೇಕು ಅನಿಸುತ್ತೆ. 421 00:30:30,583 --> 00:30:31,583 ಸರಿ. 422 00:30:36,291 --> 00:30:37,291 ಹೇಳು. 423 00:30:39,875 --> 00:30:40,957 ಮಲೋನ್ಸ್ 424 00:30:40,958 --> 00:30:43,207 ಏನಿದು ನಿಗೂಢ ಸಂದೇಶ, ಗುರೂ? 425 00:30:43,208 --> 00:30:47,083 ದೊಡ್ಡ ಕಷ್ಟದಲ್ಲಿದ್ದೇನೆ. ಒಂದು ರಹಸ್ಯ ಹೇಳುವೆ, ಯಾರಿಗೂ ಹೇಳಬಾರದು, ಸರಿನಾ? 426 00:30:49,500 --> 00:30:50,582 ಶವ ಎಲ್ಲಿ ಬಚ್ಚಿಟ್ಟಿದ್ದೀಯ? 427 00:30:50,583 --> 00:30:51,915 - ಗಂಭೀರವಾಗಿರು. - ಸರಿ. 428 00:30:51,916 --> 00:30:53,791 ಸರಿ. ಸ್ಸಾರಿ. 429 00:30:55,250 --> 00:30:56,916 ನಾನು ಸ್ವಲ್ಪ ಸಮಯದಿಂದ ಆಲಿ ಜೊತೆ ಮಲಗುತ್ತಿದ್ದೇನೆ. 430 00:30:58,083 --> 00:30:59,874 - ಗೊತ್ತು. - ಗೊತ್ತಾ? 431 00:30:59,875 --> 00:31:03,082 ನಾನು ನಿಮ್ಮ ಜೊತೆ ಎಂಟು ಗಂಟೆ ಕಾರಲ್ಲಿದ್ದೆ, ನನಗೂ ಕಣ್ಣುಗಳಿವೆ. 432 00:31:03,083 --> 00:31:04,124 ವಾವ್. 433 00:31:04,125 --> 00:31:07,332 - ನೀನು ಕಾಣುವಷ್ಟು ಪೆದ್ದನಲ್ಲ ಹಾಗಾದರೆ. - ಅದು ಹೊಗಳಿಕೆನಾ? 434 00:31:07,333 --> 00:31:10,165 - ಏನು ಕಷ್ಟ ಎದುರಾಗಿದೆ, ಹೇಳು. - ನನ್ನಲ್ಲಿ ಏನೋ ಸಮಸ್ಯೆ ಇದೆ. 435 00:31:10,166 --> 00:31:11,249 ಏನು? 436 00:31:11,250 --> 00:31:13,707 ನಾನು ಮೂರು ಬೇರೆ ಬೇರೆ ಹುಡುಗಿಯರನ್ನು ಪಟಾಯಿಸಲು ನೋಡಿದೆ. 437 00:31:13,708 --> 00:31:15,249 ಅತಿ ಸುಂದರ ಹುಡುಗಿಯರು. 438 00:31:15,250 --> 00:31:17,207 ಮೂವರೂ ಹಾಸಿಗೆಗೆ ಬರಲು ಸಿದ್ಧ. 439 00:31:17,208 --> 00:31:18,625 ಆದರೆ ನನಗೆ… 440 00:31:19,166 --> 00:31:20,166 ನನಗೆ ಬೇಕನಿಸುತ್ತಿಲ್ಲ. 441 00:31:20,750 --> 00:31:21,583 ಮನಸ್ಸಿಗೆ ಬೇಕು ಅನಿಸುತ್ತಿಲ್ಲ. 442 00:31:22,166 --> 00:31:23,458 ಸಾಮಾನಿಗೆ ಬೇಕು ಅನಿಸುತ್ತಿಲ್ಲ. ಅಂದರೆ… 443 00:31:24,500 --> 00:31:25,750 ವಿಚಿತ್ರ ಅಲ್ವಾ? 444 00:31:26,500 --> 00:31:28,249 ಗುರೂ, ನಿನಗೆ ಅಲಿ ಇಷ್ಟ ಆಗಿದ್ದಾಳೆ. 445 00:31:28,250 --> 00:31:30,083 ಅಂದರೆ, ಪ್ರೀತಿ-ಪ್ರೇಮ ಥರ. 446 00:31:31,750 --> 00:31:34,291 - ನಿನ್ನ ಭಾವನೆ ಅವಳಿಗೆ ಹೇಳು. - ಇಲ್ಲ. ಅದು… 447 00:31:35,125 --> 00:31:36,208 ಇಲ್ಲ! 448 00:31:37,083 --> 00:31:38,207 ಅವಳಿಗೆ ಕುದುರೆ ಸವಾರಿ ಬೇಕಿರೋದು. 449 00:31:38,208 --> 00:31:40,415 ಅದರ ಅರ್ಥ ಏನು? 450 00:31:40,416 --> 00:31:42,582 ಅವಳಿಗೆ ಸಂಬಂಧ ಬೆಳೆಸಲು ಇಷ್ಟ ಇಲ್ಲ. 451 00:31:42,583 --> 00:31:45,416 ನೆನ್ನೆ ಅವಳು ನಾವು ಬೇರೆಯವರ ಜೊತೆ ಮಲಗಬೇಕು ಅಂತ ಹೇಳಿದಳು. 452 00:31:45,958 --> 00:31:48,749 - ಮತ್ತು, ನನ್ನಿಂದ ಅದು ಆಗುತ್ತಿಲ್ಲ. - "ನಾವು" ಅಂದರೆ? 453 00:31:48,750 --> 00:31:51,415 ಅಂದರೆ, ಅವಳೂ ಬೇರೆಯವರ ಜೊತೆ ಮಲಗಲು ನೋಡುತ್ತಾಳಾ? 454 00:31:51,416 --> 00:31:54,290 - ಹೌದು. - ಮತ್ತು ನಿನಗೆ ಅದು ಪರವಾಗಿಲ್ವಾ? 455 00:31:54,291 --> 00:31:55,708 ಖಂಡಿತ. ಅಂದರೆ… 456 00:31:56,541 --> 00:31:58,249 - ನಾವು ಜೊತೆಗಿಲ್ಲ-- - ಇಲ್ಲ, ನೀವು ಜೊತೆಗಿಲ್ಲ. 457 00:31:58,250 --> 00:32:00,000 ಪ್ರೇಮಿಗಳ ಥರ ಅಂತೂ ಅಲ್ಲ, ಅಂದರೆ… 458 00:32:00,916 --> 00:32:02,250 ಆದರೆ… 459 00:32:06,041 --> 00:32:07,041 ಹೂಂ. 460 00:32:09,000 --> 00:32:10,541 ನೀನು ಅದ್ಭುತ ಕಣೋ, ಡೀನ್. 461 00:32:11,791 --> 00:32:13,457 ಅದು ನನಗೆ ಗೊತ್ತು. ಅವಳಿಗೂ ಗೊತ್ತು. 462 00:32:13,458 --> 00:32:15,999 ಇಲ್ಲದಿದ್ದರೆ, ಅವಳು ನಿನ್ನ ಜೊತೆ ಮಲಗುತ್ತಿರಲಿಲ್ಲ. 463 00:32:16,000 --> 00:32:18,832 ಹಾಗಾಗಿ, ಹೇಡಿಯಂತೆ ಆಡೋದು ಬಿಟ್ಟು ನಿನ್ನ ಭಾವನೆ ಅವಳ ಮುಂದೆ ಹೇಳಿಕೋ. 464 00:32:18,833 --> 00:32:21,625 ಅವಳು ಬೇರೆ ಹುಡುಗನ ಜೊತೆ ಮಲಗಲು ಶುರು ಮಾಡೋ ಮುನ್ನ ಹೇಳಿಬಿಡು. 465 00:32:25,458 --> 00:32:26,957 ಸರಿ, ನಾಳೆ ಸಿಗುವೆ ನಿನಗೆ. 466 00:32:26,958 --> 00:32:28,375 - ಲವ್ ಯು, ಬಾಯ್. - ಲವ್ ಯು. 467 00:32:30,666 --> 00:32:31,750 ಮ್ಯಾವರಿಕ್ 468 00:32:37,375 --> 00:32:38,375 ಕಾರ್ಟರ್ ಸೇಂಟ್ ಜೇಮ್ಸ್. 469 00:32:49,000 --> 00:32:50,333 ಕಣ್ಣು ಮಿಟುಕಿಸದೆ ನೋಡುತ್ತಿದ್ದೀಯಾ? 470 00:32:51,416 --> 00:32:52,458 ಇಲ್ಲ. 471 00:32:54,041 --> 00:32:55,083 ಪಕ್ಕಾನಾ? 472 00:32:57,791 --> 00:32:58,833 ಇಲ್ಲ. 473 00:33:02,916 --> 00:33:06,082 {\an8}ಬ್ರಯರ್ ಯೂನಿವರ್ಸಿಟಿ ಕ್ರೀಡಾ ಅಖಾಡ 474 00:33:06,083 --> 00:33:09,249 {\an8}ಸರಿ, ಬ್ರಾನ್ ಮಧ್ಯದಲ್ಲಿ ಇರುತ್ತಾನೆ. ರೋಜರ್ಸ್ "ಡಿ"ನಲ್ಲಿ ಇರುತ್ತಾನೆ. 475 00:33:09,250 --> 00:33:11,582 ಲೋಗನ್, ಡೀನ್, ಅವರನ್ನು ನೋಡಿಕೊಳ್ಳಿ, ಸರಿನಾ? 476 00:33:11,583 --> 00:33:14,540 ಇವತ್ತು ರಾತ್ರಿ ಬಿಲ್ಲೆ ಗೋಲು ಸೇರಲೇಬೇಕು. ಸರಿನಾ? 477 00:33:14,541 --> 00:33:17,582 ಎಲ್ಲರಿಗೂ ಹೇಳುತ್ತಿದ್ದೇನೆ. ಎಲ್ಲರೂ ಶ್ರಮ ಹಾಕಿ ಆಡಬೇಕು. 478 00:33:17,583 --> 00:33:19,625 ಆಲಸ್ಯ ಬೇಡ. ಅರ್ಥ ಆಯಿತಾ? 479 00:33:22,333 --> 00:33:24,541 ಸ್ಸಾರಿ, ಕೋಚ್. ನಾನು… 480 00:33:30,125 --> 00:33:31,416 ಮಾತಾಡು, ಕ್ಯಾಪ್ಟನ್. 481 00:33:36,583 --> 00:33:38,500 ನನಗೆ ಭಾಷಣ ಎಲ್ಲ ಹೊಡೆಯಲು ಬರಲ್ಲ. 482 00:33:39,750 --> 00:33:42,208 ಆದರೆ ನಾನು ಆಟದಲ್ಲಿ ಇಲ್ಲದ ಕಾರಣ… 483 00:33:46,750 --> 00:33:50,624 ನೋಡಿ, ನಾನು ಕ್ಯಾಪ್ಟನ್ ಆಗಿರೋದು ಎಂದರೆ ಎಲ್ಲ ನಾನೇ ಮಾಡಬೇಕು ಅಂದುಕೊಂಡಿದ್ದೆ. 484 00:33:50,625 --> 00:33:55,082 ಹಾಗಾಗಿ, ಸ್ವಾರ್ಥಿಯಾಗಿದ್ದೆ. ಕೋಪದಲ್ಲಿರುತ್ತಿದ್ದೆ. 485 00:33:55,083 --> 00:33:57,499 ನಿಮ್ಮನ್ನೆಲ್ಲ ಒಂದು ರೀತಿ ಆಟದಿಂದ ಹೊರಗಿಟ್ಟೆ. 486 00:33:57,500 --> 00:33:59,624 ತಂಡಕ್ಕಿಂತ ನಾನೇ ಮುಖ್ಯ ಎಂಬಂತೆ ನಡೆದುಕೊಂಡೆ. 487 00:33:59,625 --> 00:34:01,291 ಹೂಂ, ಸ್ವಲ್ಪ ಬೇವರ್ಸಿಯಂತೆಯೇ ಆಡುತ್ತಿದ್ದೆ. 488 00:34:04,208 --> 00:34:05,333 ನಿಜ. 489 00:34:07,291 --> 00:34:09,040 ಆದರೆ ನಾನು ನಿಮ್ಮನ್ನು ಬಿಟ್ಟುಕೊಟ್ಟಾಗಲೂ, 490 00:34:09,041 --> 00:34:13,207 ನಿಮ್ಮ ತಪ್ಪು ಇಲ್ಲದಿದ್ದರೂ ನಾನು ನಿಮ್ಮ ಮೇಲೆ ಕೋಪ ಮಾಡಿಕೊಂಡಾಗಲೂ, 491 00:34:13,208 --> 00:34:16,499 ಆಟದ ಬಗ್ಗೆ, ತಂಡದ ಒಗ್ಗಟ್ಟಿನ ಬಗ್ಗೆ ನಾನು ಮರೆತಾಗಲೂ, 492 00:34:16,500 --> 00:34:19,625 ನಾವಲ್ಲಿ ಒಟ್ಟಿಗೆ ಇದ್ದಾಗ ಎಷ್ಟು ಮಜ ಮಾಡುತ್ತೇವೆ ಅನ್ನೋದನ್ನ ಮರೆತಾಗಲೂ, 493 00:34:21,000 --> 00:34:22,207 ನೀವು ನನ್ನನ್ನ ಬಿಟ್ಟುಕೊಡಲಿಲ್ಲ. 494 00:34:22,208 --> 00:34:24,333 ನನ್ನ ಬೆಂಬಲ ನಿಂತಿರಿ. 495 00:34:24,916 --> 00:34:27,916 ಅದಕ್ಕೇ ನನಗೆ ಈ ಆಟ ಇಷ್ಟ. 496 00:34:28,750 --> 00:34:31,999 ಈ ಆಟ, ಧೈರ್ಯವಾಗಿ ಎದ್ದು ನಿಂತು ಮೈದಾನದ ಮೇಲೆ ಪೂರ್ತಿ ಬಲ ತೋರುವ ಬಗ್ಗೆ. 497 00:34:32,000 --> 00:34:34,541 ಕೇವಲ ನಿಮಗಾಗಿ ಮಾತ್ರವಲ್ಲ, ನಿಮ್ಮ ಜೊತೆ ಆಡುವವರಿಗಾಗಿ. 498 00:34:35,583 --> 00:34:37,000 ನಿಮ್ಮ ಸಹೋದರರಿಗಾಗಿ. 499 00:34:39,125 --> 00:34:42,958 ನಾನು ನಿಮ್ಮನ್ನು ನಿರಾಸೆಗೊಳಿಸಿದೆ ನನಗೆ ಗೊತ್ತು. ನಾನು ನಿಮಗೆ ತಕ್ಕ ಕ್ಯಾಪ್ಟನ್ ಆಗಲಿಲ್ಲ, ಆದರೆ… 500 00:34:47,166 --> 00:34:48,250 ಆದರೆ ನಾನು ಹಾಗಾಗುವವರೆಗೆ… 501 00:34:53,625 --> 00:34:56,208 ನಿಮಗೆ ತಕ್ಕ ಕ್ಯಾಪ್ಟನ್ ಈಗಾಗಲೇ ನಿಮ್ಮ ಜೊತೆ ಆಡುತ್ತಿದ್ದಾನೆ. 502 00:35:00,625 --> 00:35:01,625 ಪರವಾಗಿಲ್ವಾ, ಕೋಚ್? 503 00:35:02,291 --> 00:35:03,582 ನನಗೆ ಒಪ್ಪಿಗೆ. 504 00:35:03,583 --> 00:35:04,791 ಏನು ಹೇಳುವಿರಿ? 505 00:35:05,458 --> 00:35:06,833 ಹಾಂ. 506 00:35:08,041 --> 00:35:10,749 - ಹಾಂ, ಲೋಗನ್! - ಹಾಗೆ, ಲೋಗನ್! 507 00:35:10,750 --> 00:35:11,916 ಅದಪ್ಪಾ! 508 00:35:13,500 --> 00:35:14,416 ಹಾಗೆ, ಲೋಗನ್! 509 00:35:15,541 --> 00:35:16,915 ಕ್ಯಾಪ್ಟನ್ ಲೋಗನ್! 510 00:35:16,916 --> 00:35:18,082 ಒಪ್ಪಿಗೆ, ಸರ್. 511 00:35:18,083 --> 00:35:19,916 ಅದಪ್ಪಾ, ಆಡೋಣ! 512 00:35:23,666 --> 00:35:25,040 ಅಡೋಣ ಕಣ್ರೋ! 513 00:35:25,041 --> 00:35:26,457 ಸರಿ, ಸರ್. 514 00:35:26,458 --> 00:35:27,500 ಹೋಗೋಣ! 515 00:35:28,083 --> 00:35:28,916 ನಡೆಯಿರಿ! 516 00:36:06,500 --> 00:36:08,125 ಬ್ರಯರ್ ಈಸ್ಟ್ ವುಡ್ 517 00:36:10,625 --> 00:36:13,457 - ಹಾಗೆ ಹೊಡಿ, ಡಿಡಿ! - ಡಿ ಲಾರೆಂಟಿಸ್‌ನಿಂದ ಅದ್ಭುತ ಹೊಡೆತ. 518 00:36:13,458 --> 00:36:16,000 ಎಲ್ಲೇ ಇದ್ದರೂ, ಗ್ಯಾರೆಟ್ ಗ್ರಾಹಂ ಹೆಮ್ಮೆಪಡುತ್ತಿರುತ್ತಾನೆ ಅಂದುಕೊಳ್ಳುವೆ. 519 00:36:40,166 --> 00:36:41,750 ಹಾಂ! ಹಾಗೆ! 520 00:36:43,291 --> 00:36:45,041 ಹಾಗೆ, ಟಕರ್! 521 00:36:59,125 --> 00:37:00,250 ದವೀದ್! 522 00:37:00,708 --> 00:37:01,666 ಹಾಯ್. 523 00:37:02,500 --> 00:37:07,332 ನಾನು ಏನೋ ಬರೆದೆ. ಯಾಕೋ ಗೊತ್ತಿಲ್ಲ, ತುಂಬಾ ಚೆನ್ನಾಗಿದೆ ಅನಿಸುತ್ತಿದೆ, ಮತ್ತು… 524 00:37:07,333 --> 00:37:10,832 ನನಗೆ ಸೋಲು-ಗೆಲುವು ಏನೂ ಬೇಕಿಲ್ಲ, ಆದರೆ ಇದನ್ನು ಹಂಚಿಕೊಳ್ಳಬೇಕು, 525 00:37:10,833 --> 00:37:14,040 ಜನರಿಗೆ ಇದನ್ನು ಹಂಚಿಕೊಂಡು ನನ್ನ ಗಾಯವನ್ನು ಮಾಗಲು ಬಿಡಬೇಕು ಅಷ್ಟೇ. 526 00:37:14,041 --> 00:37:17,874 ಈಗ ತುಂಬಾ ತಡವಾಗಿದೆ ಅಂತ ನನಗೆ ಗೊತ್ತು, ನಾನು ಶೋಕೇಸ್‌ನಲ್ಲಿ ಹಾಡಲ್ಲ ಅಂತಲೂ ಹೇಳಿದ್ದೆ, 527 00:37:17,875 --> 00:37:20,499 ಆದರೆ ನಾನು ಮತ್ತೆ ಸೇರಿಕೊಳ್ಳಬಹುದಾ? 528 00:37:20,500 --> 00:37:21,416 ಕೇಳು, ಹುಡುಗಿ, 529 00:37:22,000 --> 00:37:25,458 ಆ ಎಲ್ಲ ಕಾರ್ಯಕ್ರಮಗಳನ್ನು ಬದಲಿಸಿ, ಮತ್ತೆ ಪ್ರಿಂಟ್ ಮಾಡಲು ಅವರ ಬಳಿ ಬಜೆಟ್ ಇರಲಿಲ್ಲ. 530 00:37:26,125 --> 00:37:27,332 ಅಂದರೆ, ನೀವು ಹೇಳುತ್ತಿರೋದು… 531 00:37:27,333 --> 00:37:31,874 ನಾನು ಹೇಳುತ್ತಿರೋದು, ಅಭ್ಯಾಸ ಶುರು ಹಚ್ಚಿಕೋ ಅಂತ. ಬೆಥನಿ ಆದ ಮೇಲೆ ನೀನೇ ಇರೋದು. 532 00:37:31,875 --> 00:37:33,375 ಥ್ಯಾಂಕ್ ಯು! 533 00:37:34,750 --> 00:37:36,208 ಹೂಂ! ಸರಿ! 534 00:37:37,916 --> 00:37:40,499 ಟೈ ಆದರೆ ಪರವಾಗಿಲ್ಲ, ಆದರೆ ಸೋತರೆ ನಮ್ಮ ಕಥೆ ಮುಗಿದಂತೆ. 535 00:37:40,500 --> 00:37:42,457 - ಚೆನ್ನಾಗಿ ಆಡಿ. - ಅವರ ಕೈಗೆ ಬಿಲ್ಲೆ ಹೋಗಲ್ಲ. 536 00:37:42,458 --> 00:37:45,375 - ಹೋಗೋಣ. - ಸರಿ, ಗೆದ್ದು ಬನ್ನಿ. ಬದಲಾಯಿಸಿ, ಬದಲಾಯಿಸಿ! 537 00:37:48,041 --> 00:37:49,250 ತಡೆ. ತಡೆ. 538 00:37:51,958 --> 00:37:54,082 - ಹಾಂ, ಹೇಗೆ! - ಚೆನ್ನಾಗಿತ್ತು. 539 00:37:54,083 --> 00:37:56,707 - ನೀನು ಡಿಫೆನ್ಸ್ ಆಡಬೇಕಲ್ವಾ? - ಅವರ ಕೈಗೆ ಬಿಲ್ಲೆನೇ ಸಿಗಲ್ಲ. 540 00:37:56,708 --> 00:37:57,708 ಅದು ನಿಜ. ಆಡೋಣ! 541 00:37:58,708 --> 00:38:00,000 ರಿಸ್ಕ್ ತಗೊಳ್ಳಿ. ಹಿಂದೆ ಹೋಗಿ. 542 00:38:00,583 --> 00:38:03,125 - ಹೇ, ಟಕ್! ಟೈ ಮತ್ತು ಗೆಲುವು ಒಂದೇ ಅಲ್ಲ. - ನಿಜ, ಕ್ಯಾಪ್! 543 00:38:04,916 --> 00:38:05,958 ಹೋಗು. ಹೊಡಿ. 544 00:38:07,583 --> 00:38:08,625 ಗೋಲ್ ಮಾಡು! 545 00:38:09,416 --> 00:38:11,083 - ಹಾಂ! - ಯಾಹೂ! 546 00:38:11,666 --> 00:38:12,500 ಹಾಗೆ! 547 00:38:13,125 --> 00:38:14,082 ಅದ್ಭುತ, ಜಾನ್! 548 00:38:14,083 --> 00:38:15,290 ಅಬ್ಬಬ್ಬಾ! 549 00:38:15,291 --> 00:38:17,624 ಅದ್ಭುತ, ಲೋಗನ್! ಶಭಾಷ್! 550 00:38:17,625 --> 00:38:19,332 ಹಾಗೆ, ಹಾಗೆ, ಹಾಗೆ! 551 00:38:19,333 --> 00:38:20,458 ಬನ್ರೋ! 552 00:38:31,166 --> 00:38:32,666 ಹೋಗೋಣ! 553 00:38:44,375 --> 00:38:47,125 {\an8}ಹಾನಾ - ಏನೇನೋ ಎಲ್ಲ ಆಯಿತು, ಮತ್ತು ಈಗ ನಾನು ಶೋಕೇಸ್… 554 00:38:51,500 --> 00:38:53,166 ಅಬ್ಬಾ ದೇವರೇ. ಅವಳು ಹಾಡುತ್ತಿದ್ದಾಳೆ. 555 00:38:53,791 --> 00:38:56,749 ಸರಿ. ಇದು ಮಜ ಇತ್ತು. ಆದರೆ ನಾನು ಹೋಗಬೇಕು. 556 00:38:56,750 --> 00:38:57,916 ನಿನಗೆ ನನ್ನ ನಂಬರ್ ಬೇಡವಾ? 557 00:38:58,875 --> 00:39:00,708 ಇಲ್ಲ. ನನಗೆ ನಿನ್ನ ನಂಬರ್ ಬೇಡ. 558 00:39:01,375 --> 00:39:04,582 ನಾನು ಇಲ್ಲಿಯೇ ಇದ್ದು ನಮ್ಮ ಈ ಮುದ್ದಾದ ಮಾತುಕತೆಯನ್ನ ಮುಂದುವರಿಸಬಹುದು, 559 00:39:04,583 --> 00:39:07,457 ಆದರೆ, ನೀನೇ ಹೇಳಿದಂತೆ, ಅಪರಿಚಿತರಾಗಿರುವುದರಿಂದ ಒಂದು ಒಳ್ಳೆಯದು, 560 00:39:07,458 --> 00:39:09,166 ನಾವು ಒಬ್ಬರಿಗೊಬ್ಬರು ಏನೂ ಹೇಳಿಕೊಳ್ಳಬೇಕಿಲ್ಲ, ಅಲ್ವಾ? 561 00:39:10,375 --> 00:39:12,375 ಹೂಂ, ನನಗೆ ಪರವಾಗಿಲ್ಲ. 562 00:39:13,041 --> 00:39:16,250 ಸರಿ. ನಾನು ಹೋಗಿ ನನ್ನ ಆತ್ಮೀಯ ಗೆಳತಿಗೆ ಬೆಂಬಲ ನಿಲ್ಲಬೇಕು. 563 00:39:22,500 --> 00:39:25,374 ಹೇ, ನಾವು ಗೆದ್ದೆವು. ಮಲೋನ್ಸ್‌ಗೆ ಬಾ. ಏನೋ ಮಾತನಾಡಬೇಕು. 564 00:39:25,375 --> 00:39:28,374 ಸಮಯ ಇಲ್ಲ. ಹಾನಾ ಶೋಕೇಸ್‌ನಲ್ಲಿ ಹಾಡುತ್ತಿದ್ದಾಳೆ. ಗ್ಯಾರೆಟ್‌ನ ಅಲ್ಲಿಗೆ ಕರೆತಾ. 565 00:39:28,375 --> 00:39:30,457 - ಯಾಕೆ? - ಯಾಕೆಂದರೆ ಅವರು ಹೇಳಿ ಮಾಡಿಸಿದ ಜೋಡಿ. 566 00:39:30,458 --> 00:39:33,415 - ಮತ್ತು ಹಾನಾಗೆ ಅವಳಿಗೆ ತಕ್ಕ ಪ್ರೇಮ ಸಿಗಬೇಕು. - ಹಾಗಾದರೆ, ನಾನು-- 567 00:39:33,416 --> 00:39:34,333 ಹೌದು, ಈಗಲೇ! 568 00:39:38,041 --> 00:39:39,457 ಹೇ, ಜಿ! 569 00:39:39,458 --> 00:39:40,582 ನಾವು ಈಗಲೇ ಹೋಗಬೇಕು. 570 00:39:40,583 --> 00:39:41,499 ಏನಾಯಿತು? 571 00:39:41,500 --> 00:39:43,541 ವೆಲ್ಸಿ ಶೋಕೇಸ್‌ನಲ್ಲಿ ಹಾಡುತ್ತಿದ್ದಾಳಂತೆ. ನೀನು ಅಲ್ಲಿ ಇರಬೇಕು. 572 00:39:44,666 --> 00:39:45,750 ಅದು ನಿನಗೆ ಹೇಗೆ ಗೊತ್ತು? 573 00:39:47,375 --> 00:39:49,874 ನಾನೂ ಕೇಳ್ಪಟ್ಟೆ. ಜನರು ಮಾತಾಡಿಕೊಳ್ಳುತ್ತಿದ್ದರು. 574 00:39:49,875 --> 00:39:51,915 ಇರು, ಹಾನಾ ಶೋಕೇಸ್‌ನಲ್ಲಿ ಹಾಡುತ್ತಿದ್ದಾಳಾ? 575 00:39:51,916 --> 00:39:53,999 ನಾವು ಹೋಗಲೇಬೇಕು. ಎಷ್ಟು ಹೊತ್ತಿಗೆ ಶುರು? 576 00:39:54,000 --> 00:39:55,790 - ಈಗಲೇ ಅಂತೆ. - ಹಾಗಾದರೆ ಬೇಗ ಹೋಗೋಣ. 577 00:39:55,791 --> 00:39:58,166 - ಹೋಗೋಣ! ಬನ್ನಿ. - ಬನ್ನಿ. 578 00:40:03,291 --> 00:40:04,333 ಏನಾಯಿತು? 579 00:40:05,833 --> 00:40:07,624 ಅವಳಿಗೆ ನಾನು ಅಲ್ಲಿ ಬೇಡದಿದ್ದರೆ? 580 00:40:07,625 --> 00:40:09,915 ಏನು ಹೇಳುತ್ತಿದ್ದೀಯ? ಖಂಡಿತ ನೀನು ಅವಳಿಗೆ ಅಲ್ಲಿ ಬೇಕು. 581 00:40:09,916 --> 00:40:12,415 - ಅವಳು ಮುಂದುವರೆದಿದ್ದಾಳೆ. ನಾನು ಅಡ್ಡ ಬರಬಾರದು. - ದೇವರೇ. 582 00:40:12,416 --> 00:40:16,082 ನೋಡು, ನೀವಿಬ್ಬರೂ ಒಬ್ಬರಿಗೊಬ್ಬರು ಹೇಳಿ ಮಾಡಿಸಿದ ಜೋಡಿ. 583 00:40:16,083 --> 00:40:18,624 ನೀನು ಅದೇನು ಮಾಡಿ ಹಾಳು ಮಾಡಿಕೊಂಡೆಯೋ, ಹೋಗಿ… 584 00:40:18,625 --> 00:40:19,625 ಅದನ್ನು ಸರಿಮಾಡು. 585 00:40:20,500 --> 00:40:22,749 ಅದು ಅಷ್ಟು ಸುಲಭವಲ್ಲ. ಅವಳಿಗೆ ನನಗಿಂತ ಒಳ್ಳೆ-- 586 00:40:22,750 --> 00:40:24,165 ಇಲ್ಲ, ಹಾಗೆ ಹೇಳಲೂ ಹೋಗಬೇಡ. 587 00:40:24,166 --> 00:40:26,250 ನೀನು ನಿನ್ನ ತಂದೆಯಂತೆ ಅಲ್ಲ, ಸರಿನಾ? 588 00:40:27,583 --> 00:40:29,000 ಮತ್ತೆ, ಅವಳಿಗಾಗಿ ಹೋರಾಡುತ್ತೀಯಾ? 589 00:40:33,041 --> 00:40:34,125 ನಡಿ. 590 00:40:36,541 --> 00:40:39,041 ದಯವಿಟ್ಟು ವೇದಿಕೆಗೆ ಸ್ವಾಗತಿಸಿ, ಹಾನಾ ವೆಲ್ಸ್. 591 00:41:12,500 --> 00:41:15,416 ನಾನು ಅದೇ ಹುಡುಗಿ 592 00:41:59,500 --> 00:42:05,083 ನಾನು ಎಂದೂ ಕೇಳಬಾರದಿದ್ದ ಮಾತುಗಳನ್ನು ಕೇಳಿದೆ 593 00:42:06,791 --> 00:42:12,499 ಚೂರಿಗಳ ಇರಿತದಂಥವು ಮರೆಯಲಾಗದಂಥವು 594 00:42:12,500 --> 00:42:17,749 ಪಿಸುಮಾತಲ್ಲಿ ತೇಲಿ ಬಂದ ಕಠಿಣ ಅಭಿಪ್ರಾಯಗಳು 595 00:42:17,750 --> 00:42:21,624 ನಾನು ಮಾಡಿದ್ದಾದರೂ ಏನು 596 00:42:21,625 --> 00:42:27,083 ಕೆಳಕ್ಕೆ ಬಿದ್ದ ಗಾಜಿನಂತೆ ನನ್ನ ಪ್ರಪಂಚವೇ ಒಡೆದು ಚೂರಾಯಿತು 597 00:42:28,916 --> 00:42:31,500 ಒಂದೆರಡು ವರ್ಷ ಸಹಿಸಿದೆ ಮನಸ್ಸಲ್ಲೇ ಇಟ್ಟು ನಲುಗಿದೆ 598 00:42:32,583 --> 00:42:34,999 ಪದಗಳಿರಲಿಲ್ಲ ನನ್ನ ಬಳಿ 599 00:42:35,000 --> 00:42:36,916 ಧ್ವನಿಯೂ ಮೂಡಲಿಲ್ಲ ಕಂಠದಲಿ 600 00:42:38,000 --> 00:42:40,207 ಆದರೆ ನಾನು ಸಮಯ ತೆಗೆದುಕೊಂಡೆ 601 00:42:40,208 --> 00:42:42,875 ಈಗ ನಾನು ಇಲ್ಲಿದ್ದೇನೆ 602 00:42:45,666 --> 00:42:48,415 ಮನಸ್ಸಲ್ಲೇ ನಲುಗುತ್ತಾ ಬಹಳ ಸಮಯ ಕಳೆದೆ 603 00:42:48,416 --> 00:42:51,040 ಆ ನೋವು, ಕಣ್ಣೀರು, ಮುಚ್ಚಿಟ್ಟುಕೊಂಡ ರಹಸ್ಯಗಳು 604 00:42:51,041 --> 00:42:56,832 ಒಂದು ದಿನ ಅವೇ ನನ್ನ ಅಂತ್ಯಕ್ಕೆ ಕಾರಣವಾಗುತ್ತವೆ 605 00:42:56,833 --> 00:43:02,665 ಒಮ್ಮೆಗೇ ಎಲ್ಲವಕ್ಕೂ ಅರ್ಥ ಬಂದಿದೆ ನಾನು ಬಗ್ಗಿದೆ, ನಾನು ಮುರಿದೆ 606 00:43:02,666 --> 00:43:07,583 ನನ್ನನ್ನೇ ಕಳೆದುಕೊಂಡೆ, ಆಗಲೇ ನನಗೆ ಕಂಡಿದ್ದು 607 00:43:08,333 --> 00:43:10,000 ನಾನು ಅದೇ ಹುಡುಗಿ 608 00:43:10,750 --> 00:43:17,708 ನಾನು ಮೊದಲೇನಾಗಿದ್ದೆನೋ ಅದರಿಂದಾಗಿ 609 00:43:29,541 --> 00:43:35,625 ರಹಸ್ಯವನ್ನು ಬಿಚ್ಚಿಟ್ಟೆ ಮುಂದೇನಾಗುವುದು ಎಂಬ ಅರಿವಿಲ್ಲದೆ 610 00:43:37,041 --> 00:43:42,832 ಮತ್ತೊಮ್ಮೆ ಅದನ್ನು ಮಾಡಲು ಸಿದ್ಧ ಸಮಯ ಎಲ್ಲ ಗಾಯಗಳ ಚಿಕಿತ್ಸೆ 611 00:43:42,833 --> 00:43:46,916 ಬಿಟ್ಟು ಹೋಗುವ ಗಾಯದ ಕಲೆ, ಸುಂದರವೇ 612 00:43:48,458 --> 00:43:51,332 ಮುಂಚಿಗಿಂತ ಗಟ್ಟಿಗಳಾಗಿದ್ದೇನೆ 613 00:43:51,333 --> 00:43:53,875 ನನ್ನ ಪದಗಳು ನನ್ನನ್ನು ಹುಡುಕಿ ಬಂದಿವೆ 614 00:43:54,500 --> 00:43:56,708 ಜೋರಾಗಿ ಹಾಡುವೆನು ಅವನ್ನು 615 00:43:57,500 --> 00:44:01,915 ಅವೇ ಎಲ್ಲ ನೋವುಗಳು ನನ್ನನ್ನು ಇಲ್ಲಿಗೆ ಕರೆತಂದಿವೆ 616 00:44:01,916 --> 00:44:07,957 ಮನಸ್ಸಲ್ಲೇ ನಲುಗುತ್ತಾ ಬಹಳ ಸಮಯ ಕಳೆದೆ ಆ ನೋವು, ಕಣ್ಣೀರು, ಮುಚ್ಚಿಟ್ಟುಕೊಂಡ ರಹಸ್ಯಗಳು 617 00:44:07,958 --> 00:44:12,500 ಒಂದು ದಿನ ಅವೇ ನನ್ನ ಅಂತ್ಯಕ್ಕೆ ಕಾರಣವಾಗುತ್ತವೆ 618 00:44:13,250 --> 00:44:16,040 ಒಮ್ಮೆಗೇ ಎಲ್ಲವಕ್ಕೂ ಅರ್ಥ ಬಂದಿದೆ 619 00:44:16,041 --> 00:44:19,082 ಮತ್ತೆ ಸುಖ ಪಡೆಯಲು ನಾನು ನಂಬಬೇಕಿತ್ತು 620 00:44:19,083 --> 00:44:23,915 ಮನದ ಕೋಟೆಯೊಳಗೆ ನಿನ್ನನ್ನು ಬರಬಿಡಬೇಕಿತ್ತು ಕೊನೆಗೂ ನಿನಗೆ ತೋರಲು 621 00:44:23,916 --> 00:44:26,832 ನಾನು ಅದೇ ಹುಡುಗಿ 622 00:44:26,833 --> 00:44:28,790 ನಾನು ಮೊದಲೇನಾಗಿದ್ದೆನೋ 623 00:44:28,791 --> 00:44:35,083 ಅದರಿಂದಾಗಿ 624 00:44:35,625 --> 00:44:37,707 ಎಲ್ಲವಕ್ಕೂ ಅರ್ಥ ಬಂದಿದೆ ಎಲ್ಲವಕ್ಕೂ 625 00:44:37,708 --> 00:44:40,499 ಎಲ್ಲವಕ್ಕೂ ಅರ್ಥ ಬಂದಿದೆ ಅರ್ಥ ಬಂದಿದೆ 626 00:44:40,500 --> 00:44:45,125 ನನ್ನ ಪದಗಳು ನನ್ನನ್ನು ಹುಡುಕಿ ಬಂದಿವೆ ಜೋರಾಗಿ ಹಾಡುವೆನು ಅವನ್ನು 627 00:44:46,500 --> 00:44:49,665 ಮನದೊಳಗೆ ನಿನ್ನನ್ನು ಬರಬಿಡಬೇಕಿತ್ತು ನಿನ್ನನ್ನು ಬರಬಿಡಬೇಕಿತ್ತು 628 00:44:49,666 --> 00:44:51,999 ಕೊನೆಗೂ ನಿನಗೆ ತೋರಲು 629 00:44:52,000 --> 00:44:56,207 ಅವೇ ಎಲ್ಲ ನೋವುಗಳು ನನ್ನನ್ನು ಇಲ್ಲಿಗೆ ಕರೆತಂದಿವೆ 630 00:44:56,208 --> 00:44:59,040 ಮನಸ್ಸಲ್ಲೇ ನಲುಗುತ್ತಾ ಬಹಳ ಸಮಯ ಕಳೆದೆ 631 00:44:59,041 --> 00:45:01,832 ಆ ನೋವು, ಕಣ್ಣೀರು, ಮುಚ್ಚಿಟ್ಟುಕೊಂಡ ರಹಸ್ಯಗಳು 632 00:45:01,833 --> 00:45:06,000 ಒಂದು ದಿನ ಅವೇ ನನ್ನ ಅಂತ್ಯಕ್ಕೆ ಕಾರಣವಾಗುತ್ತವೆ 633 00:45:07,416 --> 00:45:13,124 ನಾನು ಅದೇ ಹುಡುಗಿ ನಾನು ಅನುಭವಿಸಿದ ಎಲ್ಲದರಿಂದಾಗಿ 634 00:45:13,125 --> 00:45:18,915 ನಾನು ಅದೇ ಹುಡುಗಿ ಭಾಗಶಃ ನಿನ್ನಿಂದಾಗಿ 635 00:45:18,916 --> 00:45:21,374 ನಾನು ಅದೇ ಹುಡುಗಿ 636 00:45:21,375 --> 00:45:26,166 ನಾನು ಮೊದಲೇನಾಗಿದ್ದೆನೋ 637 00:45:27,750 --> 00:45:29,458 ಅದರಿಂದಾಗಿ 638 00:46:14,875 --> 00:46:16,290 ನೀನು ಬಂದೆ. 639 00:46:16,291 --> 00:46:18,375 ನಿನ್ನ ಅಷ್ಟು ದೊಡ್ಡ ಕ್ಷಣಕ್ಕೆ ಹೇಗೆ ಬರದಿರಲಿ? 640 00:46:23,583 --> 00:46:26,875 ಅದು ಅದ್ಭುತವಾಗಿತ್ತು. 641 00:46:28,916 --> 00:46:31,375 ಎಲ್ಲರ ಮುಂದೆ ನೀನು ಮನಸ್ಸು ಬಿಚ್ಚಿಟ್ಟ ರೀತಿ. 642 00:46:33,375 --> 00:46:35,333 ನನಗೂ ನಿನ್ನಂತೆಯೇ ಆಗಬೇಕು, ವೆಲ್ಸಿ. 643 00:46:36,083 --> 00:46:37,666 ಗ್ರೀನ್ ರೂಮಿನ ಆ ಹುಡುಗಿಯಂತೆ. 644 00:46:38,416 --> 00:46:40,166 ವೇದಿಕೆಯ ಮೇಲಿದ್ದ ಆ ಹುಡುಗಿಯಂತೆ. 645 00:46:41,833 --> 00:46:42,916 ಅಬ್ಬಾ. 646 00:46:45,375 --> 00:46:46,791 ಪೂರ್ತಿ ನಿನ್ನಂತಾಗಬೇಕು. 647 00:46:49,083 --> 00:46:52,666 - ಗ್ಯಾರೆಟ್… - ನನ್ನ ಮಾತು ಕೇಳು. ಪ್ಲೀಸ್. 648 00:46:56,250 --> 00:47:00,250 ನೀನು ನನ್ನಲ್ಲಿ ಉತ್ತಮವಾಗಬೇಕೆಂಬ ಭಾವನೆ ಮೂಡಿಸುತ್ತೀಯ. ನನ್ನನ್ನು ಸುಧಾರಿಸುತ್ತೀಯ… 649 00:47:01,958 --> 00:47:04,500 ನಾನು ಸುಧಾರಿಸುವೆ ಕೂಡ. ಒಂದು… 650 00:47:06,666 --> 00:47:08,250 ಒಂದೇ ಒಂದು ಅವಕಾಶ ಕೊಡು. 651 00:47:09,750 --> 00:47:13,416 ನಾನು ಆಗಲೇ ಹೇಳಿದ್ದು ನಿಜ. ನೀನು ನಿನಗೆ ಯಾರು ಬೇಕೋ ಅವರ ಜೊತೆಗೆ ಇರಬೇಕು, ಆದರೆ… 652 00:47:15,583 --> 00:47:17,208 ನನಗೆ ನಿಜಕ್ಕೂ ಆ ಹುಡುಗ ಆಗಬೇಕು. 653 00:47:22,875 --> 00:47:26,000 ಇಷ್ಟು ಸುಲಭವಾಗಿ ಸಿಗೋ ಹುಡುಗರು ಹುಡುಗಿಯರಿಗೆ ಇಷ್ಟ ಆಗಲ್ಲ. 654 00:47:28,291 --> 00:47:29,500 ಹೌದಾ? 655 00:47:30,541 --> 00:47:34,208 - ಅಯ್ಯೋ. - ಹೂಂ. ನೀನು ಕಲಿಯೋದು ತುಂಬಾ ಇದೆ, ಗ್ಯಾರೆಟ್. 656 00:47:36,625 --> 00:47:38,083 ಯಾರಾದರೂ ಹೇಳಿಕೊಡೋರು ಗೊತ್ತಾ? 657 00:47:39,583 --> 00:47:40,583 ಹೌದನಿಸುತ್ತೆ. 658 00:47:58,958 --> 00:47:59,958 ಚಿಯರ್ಸ್. 659 00:48:11,791 --> 00:48:14,540 ಒಳ್ಳೆಯ ಆಟ. ಇನ್ನು 16 ಆಟ ಗೆದ್ದರೆ ಆಯಿತು. 660 00:48:14,541 --> 00:48:15,791 ಥ್ಯಾಂಕ್ ಯು. 661 00:48:18,833 --> 00:48:21,624 ಅಗೋ ಅಲ್ಲಿದ್ದಾಳೆ! ನಮ್ಮ ತಾರೆ, ನಮ್ಮ ದಂತಕತೆ. 662 00:48:21,625 --> 00:48:24,707 - ಅವರು ಮೋಸ ಮಾಡಿದರು. - ಪಾಪ್ ಶೋಕೇಸಲ್ಲಿ ಮೋಸ ನಡೆಯಲ್ಲ. 663 00:48:24,708 --> 00:48:27,375 - ಏನೋ. ಬೆಥನಿ ಹಣ ಕೊಟ್ಟಿರಬೇಕು. - ಖಂಡಿತ ಕೊಟ್ಟಿರಬೇಕು. 664 00:48:27,833 --> 00:48:30,207 ನಮಗೆ ನಿನ್ನ ಎರಡನೇ ಸ್ಥಾನವೂ ಮೊದಲ ಸ್ಥಾನದಂತೆ. 665 00:48:30,208 --> 00:48:32,540 ಅಲ್ವಾ? ನನಗೆ ಇಂಟರ್ನ್‌ಶಿಪ್ ಕೂಡ ಸಿಕ್ಕಿತು. 666 00:48:32,541 --> 00:48:35,790 ಸಂಬಳದೊಂದಿಗೆ. ಅದೇ ಹೆಸರಲ್ಲಿ ಕುಡಿಯೋಣ. 667 00:48:35,791 --> 00:48:38,582 - ಯಾರಿಗೆ ಏನು ಬೇಕು? - ನಾನು ಕುಡಿಯುವೆ. 668 00:48:38,583 --> 00:48:40,250 ನಾಲ್ಕು ಪಿನ್ಯಾ ಕೊಲಾಡ ಬೇಕು. 669 00:48:44,166 --> 00:48:45,375 ಹೇ, ವಾಲ್ಟರ್. 670 00:48:46,958 --> 00:48:50,666 ಹೇ, ನನಗೆ ಮೂರು ಟಕಿಲಾ ಕೊಡುವೆಯಾ? ಥ್ಯಾಂಕ್ಸ್. 671 00:48:52,375 --> 00:48:53,416 - ಹೇ. - ಹೇ. 672 00:49:01,666 --> 00:49:03,665 - ನೀನು ಒಳ್ಳೆ ಕೆಲಸ ಮಾಡಿದೆ. - ಏನು? 673 00:49:03,666 --> 00:49:06,374 - ಅವರನ್ನು ಮತ್ತೆ ಒಟ್ಟಿಗೆ ಸೇರಿಸೋದು. - ಅವರು ತಾವಾಗೇ ಒಟ್ಟಿಗೆ ಸೇರಿಕೊಂಡರು. 674 00:49:06,375 --> 00:49:07,875 ನಿನ್ನ ಸಹಾಯದಿಂದ. 675 00:49:08,375 --> 00:49:09,375 ಮತ್ತು ನನ್ನ ಸಹಾಯದಿಂದ. 676 00:49:10,416 --> 00:49:11,333 ಥ್ಯಾಂಕ್ಸ್ ಬೇಕಿಲ್ಲ. 677 00:49:15,416 --> 00:49:16,541 ನನಗೆ ಈಗ ಅರ್ಥವಾಯಿತು. 678 00:49:19,000 --> 00:49:20,291 ನಿನಗೆ ಪ್ರೀತಿಯೆಂದರೆ ಪ್ರೀತಿ. 679 00:49:21,416 --> 00:49:24,333 ನಿನಗೆ ಅದೇ ಅಲ್ವಾ ಬೇಕಿದ್ದದ್ದು? ಆವತ್ತು ಬೆಂಕಿಯ ಮುಂದೆ ನೀನು ಹೇಳಿದ್ದು. 680 00:49:26,708 --> 00:49:28,750 ಹಾಗಾಗಿ, ನಾನು ನಿನಗೆ ಹೇಳಲು ಬಂದಿದ್ದು… 681 00:49:32,791 --> 00:49:34,791 ನೀನು ಕೊಟ್ಟ ಹೋಂವರ್ಕ್ ನಾನು ಮುಗಿಸಲಿಲ್ಲ. 682 00:49:35,666 --> 00:49:37,915 ಏನು? ಯಾಕೆ? 683 00:49:37,916 --> 00:49:38,958 ಯಾಕೆಂದರೆ ನನಗೆ ನೀನು ಇಷ್ಟ. 684 00:49:39,916 --> 00:49:41,083 ನಾವು ಒಟ್ಟಿಗೆ ಇರೋದು ಇಷ್ಟ. 685 00:49:42,291 --> 00:49:44,957 ನಮ್ಮ ಒಪ್ಪಂದ ಅದಾಗಿರಲಿಲ್ಲ ಅಂತ ನನಗೆ ಗೊತ್ತು, 686 00:49:44,958 --> 00:49:46,833 - ಆದರೆ ನಾನಂದುಕೊಂಡೆ-- - ಹೇ, ಇಲ್ಲ, ಡೀನ್. 687 00:49:48,083 --> 00:49:50,540 - ನೀನು ಹೀಗೆ ಮಾಡುವಂತಿಲ್ಲ. - ಆದರೂ ಅದು ಆಗಿ ಹೋಗಿದೆ. 688 00:49:50,541 --> 00:49:54,125 ಇಲ್ಲ, ಅಂದರೆ, ನೀನು ಹೋಂವರ್ಕ್ ಪೂರ್ತಿ ಮಾಡಲೇಬೇಕು. 689 00:49:56,250 --> 00:49:57,583 - ಯಾಕೆಂದರೆ-- - ಯಾಕೆ? 690 00:49:59,708 --> 00:50:01,083 ಯಾಕೆಂದರೆ ನಾನು ಪೂರ್ತಿ ಮಾಡಿದೆ. 691 00:50:04,291 --> 00:50:07,582 ಸರಿ. ಇಲ್ಲಿ ಯಾಕೆ ಯಾರೂ ಕುಡಿಯುತ್ತಿಲ್ಲ? 692 00:50:07,583 --> 00:50:10,332 ನಿಜವಾಗಲೂ, ಅದಕ್ಕೆ ಏನೂ ಅರ್ಥ ಇರಲಿಲ್ಲ. ನಾನು-- 693 00:50:10,333 --> 00:50:13,624 ಜೋಆನಾ ಬಾರಲ್ಲಿ ಯಾವುದೋ ಅಪರಿಚಿತ ಹುಡುಗನ ಜೊತೆ ನನ್ನನ್ನು, ಅಂದರೆ, ನಾನು-- 694 00:50:13,625 --> 00:50:14,625 ಅಯ್ಯೋ. 695 00:50:20,583 --> 00:50:21,625 ಅಯ್ಯೋ ದೇವರೇ! 696 00:50:23,875 --> 00:50:25,541 ಆಲಿ, ಅವನ ಜೊತೇನಾ ನೀನು… 697 00:50:29,916 --> 00:50:31,249 ಅವನಾ? 698 00:50:31,250 --> 00:50:32,333 ಅಲ್ಲ. 699 00:50:33,250 --> 00:50:35,416 ಹೌದು. ನಿನಗವನು ಗೊತ್ತಾ? 700 00:50:39,541 --> 00:50:40,457 - ಡೀನ್! - ಡೀನ್. 701 00:50:40,458 --> 00:50:41,790 ನೀನು ಇಲ್ಲಿ ಏನು ಮಾಡುತ್ತಿದ್ದೀಯ? 702 00:50:41,791 --> 00:50:43,416 ನಿನ್ನ ತಂಡ ಉಳಿಯಲು ನಾನು ಬೇಕೇ ಬೇಕಂತೆ. 703 00:50:43,958 --> 00:50:45,416 ಹೋಗೋಲೇ. ಇಲ್ಲಿಂದ ತೊಲಗು. 704 00:50:45,916 --> 00:50:48,582 ಹೇ, ಲೋಗನ್, ಇದು ಇವನದೇ ಐಡಿಯಾ ಅಂದಿದ್ದೆ ನೀನು. 705 00:50:48,583 --> 00:50:50,082 ಏನು ಹೇಳಿದೆ ನೀನು? 706 00:50:50,083 --> 00:50:52,165 - ಏನೋ ಮಾಡಿಬಿಟ್ಟೆ ನೀನು. - ಹೇ, ಇಲ್ಲಿ ಏನು ನಡೆಯುತ್ತಿದೆ? 707 00:50:52,166 --> 00:50:53,999 ನೀನು ಇರಲಿಲ್ಲ. ನಾನು ನಿರ್ಧಾರ ತೆಗೆದುಕೊಳ್ಳಬೇಕಾಯಿತು, 708 00:50:54,000 --> 00:50:55,458 ನಾನು ಈ ಬೇವರ್ಸಿ ಜೊತೆ ಆಡಲ್ಲ. 709 00:50:56,291 --> 00:50:59,207 - ಯಾಕೆ, ಮತ್ತೆ ಸೋಲುವೆ ಅಂತ ಭಯಾನಾ? - ಸೋಲಿಸು ತೋರಿಸು ನೋಡೋಣ. 710 00:50:59,208 --> 00:51:01,790 - ಸರಿ. - ಹೌದಾ? ಪ್ರಯತ್ನಿಸಿ ನೋಡೋ, ಮಗನೇ. 711 00:51:01,791 --> 00:51:03,665 - ಇಲ್ಲಿಂದ ತೊಲಗೋಲೇ. - ದರಿದ್ರ… 712 00:51:03,666 --> 00:51:05,291 ಹೇ! ಹೇ, ಡೀನ್! ಹೇ! 713 00:51:06,833 --> 00:51:09,000 ಹೇ! 714 00:51:09,333 --> 00:51:10,666 ಬಾರೋ! ಬಾ ನೋಡೇ ಬಿಡೋಣ! 715 00:51:11,625 --> 00:51:13,749 ಡ್ರಾಮಾ, ಡ್ರಾಮಾ, ಡ್ರಾಮಾ. 716 00:51:13,750 --> 00:51:15,290 ಕೆಲಸ ಕೆಡುತ್ತೆ ಅಂತ ನನಗೆ ಗೊತ್ತಿತ್ತು. 717 00:51:15,291 --> 00:51:17,290 ಏನಾಗುತ್ತಿದೆ? ಆ ಹುಡುಗ ಯಾರು? 718 00:51:17,291 --> 00:51:19,707 ಒಳ್ಳೆಯ ಪ್ರಶ್ನೆ. ಬೊ, ಆ ಹುಡುಗ ಯಾರು? 719 00:51:19,708 --> 00:51:22,583 ಅವನು ಹಂಟರ್ ಡ್ಯಾವನ್‌ಪೋರ್ಟ್. 720 00:51:25,541 --> 00:51:27,750 ಮತ್ತು ಅದು ನಮ್ಮ ಆಟದ ಹೊಸ ಆರಂಭಿಕ ಸಾಲು. 721 00:53:21,750 --> 00:53:23,832 ಉಪ ಶೀರ್ಷಿಕೆ ಅನುವಾದ: ಅನುರಾಧ 722 00:53:23,833 --> 00:53:25,833 ಸೃಜನಾತ್ಮಕ ಮೇಲ್ವಿಚಾರಕರು: ಸುಬ್ಬಯ್ಯ ಕೆಜಿ