1 00:00:02,000 --> 00:00:07,000 Downloaded from YTS.BZ 2 00:00:04,672 --> 00:00:10,678 Fallout ಫಾಲ್ ಔಟ್ ದ ಗೌಲ್ ಲಾಗ್ 3 00:00:08,000 --> 00:00:13,000 Official YIFY movies site: YTS.BZ 4 00:00:16,058 --> 00:00:19,937 ಹೂಂ, ಇದು ಹೂವಿಲ್ ಅಲ್ಲ, ಆದರೂ ಪರವಾಗಿಲ್ಲ. 5 00:00:21,313 --> 00:00:25,401 ಕ್ರಿಸ್ಮಸ್ ಮುಗಿಯೋವರೆಗೂ ಬೇಕಾಗುವಷ್ಟು ವಯಲ್ಸ್ ಇವೆ. 6 00:00:27,153 --> 00:00:28,446 ಇದನ್ನು ನೋಡಿ. 7 00:00:28,529 --> 00:00:33,451 ಇದು ಮರದ ದಿಮ್ಮಿ ಅಲ್ಲ, ಇದು ಒಬ್ಬ ಮನುಷ್ಯನ ತೋಳು. 8 00:00:33,534 --> 00:00:35,619 ಅದೂ ಧಡೂತಿ ಮನುಷ್ಯನದ್ದು. 9 00:00:36,412 --> 00:00:38,622 ಚೆನ್ನಾಗಿ ಸುಡುತ್ತೆ, ಅಲ್ವಾ? 10 00:00:39,540 --> 00:00:40,666 ಆಶ್ಚರ್ಯ ಆಯಿತಾ? 11 00:00:41,625 --> 00:00:44,170 ನಾನು ವರ್ಷ ಪೂರ್ತಿ ಇಂತಹ ಕೆಲವು ತೋಳುಗಳನ್ನ ಒಣಗಲು ಬಿಟ್ಟಿರುತ್ತೇನೆ, 12 00:00:44,253 --> 00:00:46,630 ಚಳಿಗಾಲದಲ್ಲಿ ಬಳಸಲು ಚೆನ್ನಾಗಿರುತ್ತೆ ಅಂತ. 13 00:00:46,714 --> 00:00:50,593 ತೋಳಿದ್ದಲ್ಲಿ, ಬೆಚ್ಚಾಗಿರುತ್ತೆ. ನಾನು ಯಾವಾಗಲೂ ಅದನ್ನೇ ಹೇಳೋದು. 14 00:00:54,847 --> 00:00:58,017 ನಾನು ನಿಮಗೆ ಹಬ್ಬದ ಶುಭಾಶಯ ಹೇಳುವವನಿದ್ದೆ, 15 00:00:58,100 --> 00:01:02,313 ಆದರೆ ಇಲ್ಲಿ ಹಬ್ಬಗಳು ಅಂತ ಈಗ ನಡೆಯಲ್ಲ. 16 00:01:02,938 --> 00:01:06,192 ಮತ್ತು ಖಂಡಿತ ಇಲ್ಲಿ ಸಾಂಟಾ ಕ್ಲಾಸ್ ಕೂಡ ಇಲ್ಲ. 17 00:01:08,569 --> 00:01:10,070 ಮಾತಾಡಿ ಬಾಯೆಲ್ಲಾ ನೋಯುತ್ತಿದೆ, 18 00:01:10,154 --> 00:01:13,991 ಹಾಗಾಗಿ ಸ್ವಲ್ಪ ಹೊತ್ತು ನೀವೆಲ್ಲಾ ಈ ಬೆಂಕಿಯನ್ನು ನೋಡಿ. 19 00:01:15,284 --> 00:01:19,205 ಈಗ, ನನಗೆ ನಿದ್ದೆ ಬಂದರೆ, ನನ್ನ ತಲೆಯನ್ನ ಅದರಿಂದ ದೂರಕ್ಕೆ ವಾಲಿಸಿ. 20 00:01:22,374 --> 00:01:28,631 ಹೌದು, ಇದು ನಾನೇ, ಮಿ. ನ್ಯೂ ವೇಗಸ್, ನೇರವಾಗಿ ನನ್ನದೇ ಹೆಸರಿನ ಕಾರ್ಯಕ್ರಮದಿಂದ, 21 00:01:28,714 --> 00:01:33,969 ನಿಮಗಾಗಿ ಕ್ರಿಸ್ಮಸ್ ಹಬ್ಬದ ನೆಚ್ಚಿನವುಗಳನ್ನು ತರುತ್ತಿದ್ದೇನೆ. 22 00:01:34,053 --> 00:01:36,555 ಈಗ, ನೀವು ಇರುವಲ್ಲಿ, ಬೆಚ್ಚಗಿದೆ, ಚೆನ್ನಾಗಿದೆ ಅಂದುಕೊಳ್ಳುವೆ, 23 00:01:36,639 --> 00:01:39,475 ಮತ್ತು ಅದು ನೀವು ಪ್ರಜ್ಞೆ ತಪ್ಪುವುದರಿಂದ ಅಲ್ಲ ಅಂದುಕೊಳ್ಳುವೆ, 24 00:01:39,558 --> 00:01:42,436 ನಿಮಗೆ ಅದೇ ಮಾಡಲು ಇಷ್ಟ ಇದ್ದರೆ ಅದು ಬೇರೆ ವಿಷಯ ಬಿಡಿ. 25 00:01:42,520 --> 00:01:48,108 ನಾವೆಲ್ಲಾ ನಮ್ಮದೇ ಮದ್ದುಗಳೊಂದಿಗೆ ನಮ್ಮ ಜೀವನದ ಭಯಾನಕತೆಗಳನ್ನು ಹೋರಾಡುತ್ತೇವೆ. 26 00:01:48,734 --> 00:01:51,111 ನಾನು ರಾತ್ರಿಯಿಡೀ ನಿಮ್ಮ ಸಮರ್ಪಣೆಗಳನ್ನು ಸ್ವೀಕರಿಸುತ್ತಾ, 27 00:01:51,195 --> 00:01:57,284 ನಿಮ್ಮ ಕ್ರಿಸ್ಮಸ್ ಶುಭಾಶಯಗಳನ್ನು, ಹೃತ್ಪೂರ್ವಕ ಕಥೆಗಳನ್ನೋದುವೆ, ನೇರ ಪ್ರಸಾರದಲ್ಲಿ. 28 00:01:58,869 --> 00:02:02,331 ಮುಂಚಿನ ಅರಿಜೋನಾದಿಂದ ಇದು ಬಾಬ್‌ನ ಕಥೆ. 29 00:02:02,414 --> 00:02:06,418 ಅವರು ಹೀಗೆ ಬರೆದಿದ್ದಾರೆ. "ನನ್ನ ನಾಯಿ ಕ್ರಿಸ್ಮಸ್ ಹಿಂದಿನ ದಿನ ಓಡಿಹೋಯಿತು, 30 00:02:06,502 --> 00:02:10,965 "ಮತ್ತು ನಿಜ ಹೇಳುವೆ, ಕ್ರಿಸ್ಮಸ್ ಕಥೆಯೇ ಪುನರಾವರ್ತಿಸಿದಂತೆ ಅನಿಸಿತು." 31 00:02:11,048 --> 00:02:15,135 "ಎಲ್ಲಿಂದಲೋ ಅಪರಿಚಿತರು ಬಂದು ಅದನ್ನು ಹುಡುಕಲು ಸಹಾಯ ಮಾಡಿದರು, 32 00:02:15,219 --> 00:02:18,347 "ಓರಿಯಂಟ್ ಆರ್‌ನ ಮೂರು ರಾಜರುಗಳಂತೆಯೇ." 33 00:02:18,430 --> 00:02:21,100 "ನಾನು ಅವರಲ್ಲೊಬ್ಬ ರಾಜನಂತೆ ಕೆಲಸ ಮಾಡುತ್ತಿದ್ದೆ, 34 00:02:21,183 --> 00:02:25,145 ಮತ್ತು ದೇವರು ಎಲ್ಲಾ ರಾಜರ ರಾಜ." 35 00:02:25,229 --> 00:02:30,317 "ಹಾಗಾಗಿ ಐದು ರಾಜರಿದ್ದರು, ಆದರೆ ನಾವು ಒಟ್ಟು ಏಳು ಮಂದಿ ಇದ್ದೆವು." 36 00:02:30,401 --> 00:02:33,863 "ಇಬ್ಬರು ಮಹಿಳೆಯರು, ಐವರು ಪುರುಷರು, ಹಾಗಾಗಿ ಐದು ರಾಜರು." 37 00:02:33,946 --> 00:02:38,909 "ಎರಡು ರಾಣಿಯರು, ಜೊತೆಗೆ ನಾನು ಮತ್ತು ದೇವರು, ಅಂದರೆ ಒಟ್ಟಿಗೆ ಒಂಬತ್ತು ರಾಜರು, 38 00:02:38,993 --> 00:02:40,494 ರಾಣಿಯರೂ ಸೇರಿದಂತೆ." 39 00:02:41,036 --> 00:02:44,498 "ಆದರೆ ಈ ನಾಯಿ ಎಲ್ಲಿತ್ತು ಅಂತ ನಮಗೆ ಯಾರಿಗೂ ಗೊತ್ತಿರಲಿಲ್ಲ." 40 00:02:44,582 --> 00:02:49,169 "ಅದಕ್ಕೇ ನಾನು 'ಇದು ಅಸಲಿ ಯೇಸುವಿನ ಕಥೆ ಥರ ಇದೆಯಲ್ಲಾ? 41 00:02:49,253 --> 00:02:52,006 'ಆ ನಾಯಿ ಶಿಶು ಯೇಸು ಇದ್ದಂತೆ' ಅಂದುಕೊಂಡೆ." 42 00:02:52,089 --> 00:02:54,592 "ನನಗೆ ತುಂಬಾ ಒತ್ತಡವಾಗತೊಡಗಿತು. 43 00:02:54,675 --> 00:02:57,761 ಯಾಕೆಂದರೆ ನಾಯಿ ಕಳೆದುಹೋಗಿದ್ದು ಮಾತ್ರವಲ್ಲ, 44 00:02:57,845 --> 00:03:00,389 ಯಾರಾದರೂ ಬರುವಾಗ ಅದು ನನಗೆ ಹೇಳುತ್ತಿತ್ತು ಅಂತ ಕೂಡ." 45 00:03:00,472 --> 00:03:03,767 "ಈ ಮನುಷ್ಯರು ಬರುತ್ತಾರೆ. ಆದರೆ ಅದು ಸಿಗಲ್ಲ." 46 00:03:03,851 --> 00:03:07,980 "ಜೊತೆಗೆ, ನನ್ನ ಬಳಿ ಮದ್ದು ಇದೆಯಾ ಅಂತ ಅವರು ಕೇಳುತ್ತಲೇ ಇರುತ್ತಾರೆ." 47 00:03:08,063 --> 00:03:10,608 "ನನ್ನ ಬಳಿ ಇದೆ, ಆದರೆ ನಾನು ಕೊಡಲ್ಲ." 48 00:03:10,691 --> 00:03:14,194 "ನನಗೆ ಕೋಪ ಬರುತ್ತಿದೆ, ಮತ್ತು ಅದು ನನ್ನಲ್ಲಿ ತಪ್ಪಿತಸ್ಥ ಭಾವನೆ ಮೂಡಿಸುತ್ತಿದೆ." 49 00:03:14,278 --> 00:03:16,739 "ಹೌದು, ನಾನು ಮುಂಗೋಪಿ, 50 00:03:16,822 --> 00:03:20,659 ಆದರೆ ಅದಕ್ಕೇ ನಾನು ಮದ್ದು ಬಿಟ್ಟು ಇರಲು ಆಗಲ್ಲ." 51 00:03:20,743 --> 00:03:21,577 "ಅವು ಔಷಧಿಗಳು." 52 00:03:21,660 --> 00:03:24,830 "ಇರಲಿ, ನಾಯಿ ಹೆಚ್ಚೇನೂ ದೂರ ಹೋಗಿರಲಿಲ್ಲ." 53 00:03:24,914 --> 00:03:28,042 "ನಾನು ಸ್ವಲ್ಪ ಹೊತ್ತು ಮುಂಚೆ ಕೆಲವು ಜನರನ್ನು ಮುಗಿಸೋದು ನೋಡಿ, 54 00:03:28,125 --> 00:03:30,461 ಹೆದರಿ, ಫಲಕಗಳಲ್ಲಿ ಅಡಗಿದ್ದ." 55 00:03:30,544 --> 00:03:32,588 "ಕೊನೆಗೂ ಹೊರಗೆ ಬಂದ, 56 00:03:32,671 --> 00:03:35,424 ನಾನು ಕೊಂದ ಜನರಲ್ಲಿ ಒಬ್ಬರನ್ನು ಸುಡೋದು ನೋಡಿ." 57 00:03:35,507 --> 00:03:40,471 "ಈಗ, ನಾನು ಉಳಿದ ರಾಜರನ್ನು ಮುಗಿಸುವ ಮುಂಚೆ ಅದು ನನಗೆ ತಿಳಿದಿದ್ದರೆ ಚೆನ್ನಾಗಿತ್ತು." 58 00:03:40,554 --> 00:03:45,059 "ಆದರೆ ನನಗೆ ತಿಳಿದ ಮಾಹಿತಿ ಇಟ್ಟುಕೊಂಡು ನಾನು ಮಾಡಬಹುದಾಗಿದ್ದು ಮಾಡಿದೆ." 59 00:03:45,142 --> 00:03:47,478 "ಒಟ್ಟಾರೆ ಹೇಳುವುದಾದರೆ, 60 00:03:47,561 --> 00:03:50,814 ನಾಯಿ ಇಲ್ಲದೆ ಕ್ರಿಸ್ಮಸ್ ಆಚರಿಸುವವರೆಗೂ 61 00:03:50,898 --> 00:03:53,984 ನನಗೆ ಕ್ರಿಸ್ಮಸ್ ಆಚರಿಸಲು ನಾಯಿ ಬೇಕು ಅಂತ ತಿಳಿದಿರಲಿಲ್ಲ." 62 00:03:54,068 --> 00:03:57,655 "ಎಂತಹ ದಾರುಣ ಕಥೆ ಅಲ್ವಾ? ನನಗೆ ನನ್ನ ಮೇಲೇ ದ್ವೇಷ ಮೂಡಿದೆ." 63 00:03:59,323 --> 00:04:00,783 ಧನ್ಯವಾದ, ಬಾಬ್. 64 00:04:00,866 --> 00:04:04,453 ಈಗ ನಿಮ್ಮ ತಲೆಯ ತುಂಬಾ ತುಂಬಿದ ಮದ್ದಿಗಿಂತ ಬೇಗ 65 00:04:04,536 --> 00:04:08,666 ನಿಮಗೆ ಆಹ್ಲಾದಕರವೆನಿಸುವ ಸುಂದರ ಸಂಗೀತ ಬರಲಿದೆ. 66 00:11:02,037 --> 00:11:05,123 ಹಾಯ್, ನಾನು ಡಿಜೆ ಮಿ. ನ್ಯೂ ವೇಗಸ್, 67 00:11:05,207 --> 00:11:10,462 ನೀವು ನಿಮ್ಮ ಒಳಉಡುಪಿನಲ್ಲಿ ವಿರಮಿಸುತ್ತಾ, ಅಲ್ಲಿ ಕೂತು ಕೇಳುವುದನ್ನು ಕಲ್ಪಿಸಿಕೊಂಡರೆ 68 00:11:10,545 --> 00:11:14,758 ನನ್ನ ಕಲ್ಪನೆಗಳು ಗಿರ್ರನೆ ಓಡುತ್ತಿವೆ. 69 00:11:14,841 --> 00:11:16,259 ತಗೊಳ್ಳಿ ಒಂದು ಸಂಗೀತ. 70 00:15:30,597 --> 00:15:33,600 ಗೊತ್ತಾ, ನನಗೆ ಹಳೆಯ ಹಾಡುಗಳು ಇಷ್ಟ, 71 00:15:33,683 --> 00:15:37,812 ಆದರೆ ನಿಮ್ಮ ಕಥೆಗಳನ್ನು ಕೇಳುವಷ್ಟು ಅಲ್ಲ. 72 00:15:37,896 --> 00:15:39,606 ನಾನು ನಿಮ್ಮಿಂದ ಕೇಳಬಯಸುತ್ತೇನೆ. 73 00:15:39,689 --> 00:15:43,151 ಸಿಲ್ಟ್‌ಲ್ಯಾಂಡ್ಸ್‌ನ ಲೇಖಕ ಸ್ಲಗ್ಗಿನ್ಸ್ ರೆಕ್ಸ್‌ ಅವರಿಂದ 74 00:15:43,234 --> 00:15:47,572 ಒಂದು ಸ್ಮರಣಿಕೆಯ ಗಾಥೆ ಇಲ್ಲಿದೆ. 75 00:15:48,990 --> 00:15:52,619 "ಜನರು ವೇಸ್ಟ್ ಲ್ಯಾಂಡ್‌ನ ಕ್ರಿಸ್ಮಸ್ ಬಗ್ಗೆ ದೂರಬಹುದು, 76 00:15:52,702 --> 00:15:55,121 ಆದರೆ ಇದು ವಾಲ್ಟ್‌ಗಳಿಗಿಂತ ಉತ್ತಮವಾಗಿದೆ." 77 00:15:55,205 --> 00:16:00,627 "ನನ್ನನ್ನು ನಂಬಿ. ಕಳೆದ ವರ್ಷ ನಾನು ಕ್ರಿಸ್ಮಸ್ ವಾಲ್ಟ್‌ನಲ್ಲಿ ಆಚರಿಸಿದೆ, ದರಿದ್ರವಾಗಿತ್ತು." 78 00:16:00,710 --> 00:16:04,005 "ಅದೇನೋ ಹವಾಯಿಯಲ್ಲಿ ಕ್ರಿಸ್ಮಸ್ ಅನ್ನೋದನ್ನ ಮಾಡುತ್ತಿದ್ದರು 79 00:16:04,089 --> 00:16:06,341 ಮತ್ತದು ಕಳಪೆ ಮತ್ತು ಹೀನಾಯವಾಗಿತ್ತು." 80 00:16:06,424 --> 00:16:09,969 "ಅವರು, 'ಹೇ, ಈ ಕಲುವಾ ಪೋರ್ಕ್ ಪ್ರಯತ್ನಿಸಿ,' ಅಂತ ಹೇಳಿ, 81 00:16:10,053 --> 00:16:12,430 ಆಮೇಲೆ ನನಗೆ ಕಾಕ್‌‌ಟೈಲ್ ವೀನಿ ಕೊಟ್ಟರು." 82 00:16:12,514 --> 00:16:15,308 "ಎಂತಹ ನಿರಾಶಾದಾಯಕ ಸ್ಥಿತಿ." 83 00:16:15,392 --> 00:16:17,936 "ನಾನು ಜನರ ಸುತ್ತ ಸಮಯ ಕಳೆದು ಹಲವು ವರ್ಷಗಳಾಗಿದ್ದರೂ, 84 00:16:18,019 --> 00:16:20,897 ಇದು ದರಿದ್ರ ಅಂತ ಹೇಳಬಲ್ಲೆ." 85 00:16:20,980 --> 00:16:23,233 "ಇದು ಒಂದು ರೀತಿಯ ಕ್ರಿಸ್ಮಸ್ ಉಡುಗೊರೆ ಅನಿಸುತ್ತೆ, 86 00:16:23,316 --> 00:16:26,695 ನೂರು ಪ್ರತಿಶತ ವಾಲ್ಟಿಗಳಿಗಿಂತ 87 00:16:26,778 --> 00:16:29,155 ನೀವು ಆಸಕ್ತಿದಾಯಕ ಅಂತ ಅರಿವಾಗೋದು." 88 00:16:29,239 --> 00:16:32,742 "ಹೀಗಾಗಿ ಸಾಂಟಾ ಕಿವಿ ಕೊಟ್ಟು ಕೇಳುತ್ತಾನೆ ಅಂದುಕೊಳ್ಳುವೆ." 89 00:16:32,826 --> 00:16:38,081 "ಸಾಂಟಾ, ನೀನು ಕೇಳುತ್ತಿದ್ದರೆ, ನಿಜವಾದ ಕಲುವಾ ಪೋರ್ಕ್ ಅನ್ನು ವಾಪಸ್ ತಾ." 90 00:16:38,164 --> 00:16:42,085 "ನಾವೆಲ್ಲರೂ ಈ ದೈತ್ಯ ಹಂದಿ ಜೀವಿಗಳು ವೇಸ್ಟ್ ಲ್ಯಾಂಡಲ್ಲಿ ಸುತ್ತೋದನ್ನ ನೋಡಿದ್ದೇವೆ." 91 00:16:42,168 --> 00:16:46,756 "ಖಂಡಿತ ನೋಡಿದ್ದೇನೆ, ಕನಿಷ್ಟ ಪಕ್ಷ ಅವು ಎಗರಿಸುವ ಧೂಳನ್ನು ನೋಡಿದ್ದೇನೆ." 92 00:16:46,840 --> 00:16:52,137 "ನಾವೆಲ್ಲಾ ಕೇಳುಗರು ಗುಂಪು ಬೇಟೆಯಾಡಿ, 93 00:16:52,220 --> 00:16:54,514 ಅರ್ಧದಷ್ಟು ಜನ ನೆಲ ಅಗೆದು, 94 00:16:54,597 --> 00:16:59,227 ಎಂದೂ ತಂಪಾಗದ ಬಿಸಿ ಕಲ್ಲುಗಳಿಂದ ತುಂಬಿ, 95 00:16:59,310 --> 00:17:04,566 ಅವುಗಳನ್ನು ಕಲುವಾ ಮಾಡಲು ನೋಡೋಣ." 96 00:17:05,275 --> 00:17:07,235 "ನಾನದನ್ನು ಮಾಡಿ ನೋಡುವೆ. ನನ್ನಾಣೆ." 97 00:17:07,318 --> 00:17:11,948 "ಕೂಡಲೇ ನನ್ನ ಮುಖದಲ್ಲಿ ಗೆಡ್ಡೆಗಳು ಬೆಳೆಯುತ್ತವಾ ನೋಡೋಣ, 98 00:17:12,031 --> 00:17:14,743 ಅದೇ ಆ ಜೋಳ ಬೆಳೆದ ಸಮಯದಂತೆ." 99 00:17:14,826 --> 00:17:16,870 ನನಗೆ ಸರಿ ಅನಿಸುತ್ತಿದೆ, ಸ್ಲಗ್ಗಿನ್ಸ್. 100 00:17:16,953 --> 00:17:20,248 ನಿನ್ನ ಗುಂಪು ಬೇಟೆಗೆ ಸೇರುವ ಸರದಿಯಲ್ಲಿ ನಾನೇ ಮೊದಲನೆಯವನಾಗುವೆ. 101 00:17:20,331 --> 00:17:24,878 ಈಗ, ಈ ಅದ್ಭುತ ಹಾಡು ಯಾರು ಗುರುತಿಸಬಲ್ಲಿರಿ? 102 00:22:42,361 --> 00:22:47,075 ನೀವು ಈ ಅದ್ಭುತ ಸಮರ್ಪಣೆಗಳನ್ನು ಕೇಳುತ್ತಿದ್ದೀರೋ ಇಲ್ಲವೋ 103 00:22:47,158 --> 00:22:50,369 ನಾನಂತೂ ನಿಮ್ಮನ್ನು ಎಂದಿಗೂ ಪ್ರೀತಿಸುವೆ. 104 00:22:50,453 --> 00:22:52,246 ಅದನ್ನು ಏನೂ ಬದಲಿಸಲ್ಲ. 105 00:27:18,804 --> 00:27:22,016 ಜನರೇ, ನನಗೆ ನಿಮ್ಮಲ್ಲಿ ಪ್ರತಿಯೊಬ್ಬರೂ ಇಷ್ಟ. 106 00:27:22,099 --> 00:27:26,062 ನಿಮ್ಮ ಪ್ರೀತಿ ನನ್ನತ್ತ ಪುಟಿದು ಬರೋದು ನನಗೆ ಭಾಸವಾಗುತ್ತಿದೆ. 107 00:27:26,145 --> 00:27:29,732 ಅಬ್ಬರದ ಅಲೆಯಂತೆ ಅಪ್ಪಳಿಸುತ್ತಿದೆ. 108 00:27:29,815 --> 00:27:32,568 ಸಮರ್ಪಣೆಗಳು ಬರುತ್ತಿರಲಿ. 109 00:36:17,593 --> 00:36:20,304 ಇಲ್ಲಿದೆ ಆ್ಯಂಗ್ರಿ ರಾನ್ ಅವರಿಂದ ಪತ್ರ. 110 00:36:20,387 --> 00:36:26,727 ರಾನ್ ಹೇಳುತ್ತಾರೆ, "ನನಗೆ ಕೋಪ ಯಾಕೆಂದರೆ, ಪ್ರತಿ ವರ್ಷ ಅವೇ ಕ್ರಿಸ್ಮಸ್ ಹಾಡುಗಳು." 111 00:36:26,810 --> 00:36:29,563 "ಯಾರೂ ನನಗಾಗಿ ಏನೂ ಮಾಡಲ್ಲ ಇತ್ತೀಚೆಗೆ." 112 00:36:29,646 --> 00:36:35,903 "ಯಾವುದೋ 8,000 ಕಿಮೀ ದೂರದ ಮಗು ಬಗೆಗಿನ ಹಾಡಿಗೂ, ನನಗೂ ಏನು ಸಂಬಂಧ?" 113 00:36:35,986 --> 00:36:40,073 "ನನ್ನ ಅನುಭವಕ್ಕೆ ತಕ್ಕ ಕಲೆಗೆ ನಾನು ಸ್ಪಂದಿಸುವೆ." 114 00:36:40,157 --> 00:36:45,329 "ವೇಸ್ಟ್ ಲ್ಯಾಂಡ್‌ನಲ್ಲಿ ರಚಿಸಿದ ಯಾವುದಾದರೂ ಸಮಕಾಲೀನ ಹಾಡು ಹಾಕಿ." 115 00:36:45,412 --> 00:36:48,248 ಕ್ಷಮಿಸು, ರಾನ್, ನೀನು ಕೋಪದಲ್ಲಿರಬಹುದು. 116 00:36:48,332 --> 00:36:52,127 ಆದರೆ ನಮ್ಮ ಕೇಂದ್ರದಲ್ಲಿರೋದು ಈ ಹಾಡುಗಳು ಮಾತ್ರ. 117 00:36:52,210 --> 00:36:56,757 ಉಳಿದೆಲ್ಲವೂ ಡಕಾಯಿತರು ಹಾಕಿದ ಬೆಂಕಿಯಲ್ಲಿ ಸುಟ್ಟುಹೋಯಿತು. 118 00:36:56,840 --> 00:37:02,971 ಈಗ ಇಂದು ರಾತ್ರಿ ಐದನೇ ಬಾರಿಗೆ, "ಗಾಡ್ ರೆಸ್ಟ್ ಯೇ ಮೆರಿ ಜಂಟಲ್‌ಮೆನ್." 119 00:45:44,659 --> 00:45:48,538 ನಿಮ್ಮ ಇನ್ನಷ್ಟು ಕ್ರಿಸ್ಮಸ್ ಶುಭಾಶಯಗಳು ಮತ್ತು ಸಮರ್ಪಣೆಗಳೊಂದಿಗೆ ಹಿಂದಿರುಗುವೆ. 120 00:45:48,621 --> 00:45:53,710 ಆ್ಯಂಡಿ ಸಿ. ಬರೆಯುತ್ತಾರೆ, "ನನಗೆ ಈ ಹಳೆಯ ಹಾಡುಗಳು ಇಷ್ಟ, 121 00:45:53,793 --> 00:45:56,629 ಆದರೆ ನಾನು ನೂರಾರು ಜನರನ್ನು ತಿಂದಿರುವಾಗ, 122 00:45:56,713 --> 00:46:00,884 ಹೀಗೆ ದೇವರನ್ನು ನೆನೆಯೋದು ತಪ್ಪು ಅನಿಸುತ್ತೆ." 123 00:46:00,967 --> 00:46:05,472 ಪರವಾಗಿಲ್ಲ, ಆ್ಯಂಡಿ, ನಿಮ್ಮ ಬದಲು ನಮ್ಮ ರೇಡಿಯೋನೇ ಹಾಡಲಿ. 124 00:46:05,555 --> 00:46:09,809 ಆ್ಯಂಡಿ ಮುಂದುವರೆಸುತ್ತಾರೆ, "ಒಬ್ಬ ವ್ಯಕ್ತಿಯನ್ನು ಕೊಂದ ನಂತರ 125 00:46:09,893 --> 00:46:12,645 'ರುಡಾಲ್ಫ್ ದಿ ರೆಡ್ ನೋಸ್ಡ್ ರೈನ್ ಡೀರ್' ಹಾಡೋದು ಕಷ್ಟ, 126 00:46:12,729 --> 00:46:15,815 ಆದರೆ ಅವನ ಇಡೀ ಕುಟುಂಬವನ್ನು ತಿಂದ ನಂತರ, 127 00:46:15,899 --> 00:46:21,070 ಅಳದೇ ಆ ಸಂಗೀತ ಗುನುಗುನಿಸೋದೂ ಕಷ್ಟ ಆಗುತ್ತಿದೆ." 128 00:46:21,154 --> 00:46:23,823 "ನೀವು ಜೊತೆಯಲ್ಲಿ ಆಚರಿಸುತ್ತಿದ್ದ ಜನರನ್ನು ತಿನ್ನೋದು 129 00:46:23,907 --> 00:46:27,702 ಹಬ್ಬದ ಸಂಭ್ರಮವನ್ನು ಸ್ವಲ್ಪ ಕಡಿಮೆ ಮಾಡುತ್ತೆ." 130 00:46:27,785 --> 00:46:31,664 ಮನುಷ್ಯನ ಪಿತ್ತಕೋಶದ ರುಚಿ ನೋಡಿದ ಮೇಲೆ, ನಾನು ಹಾಡೋದು, 131 00:46:31,748 --> 00:46:33,750 'ಓಹ್, ಪವಿತ್ರ ರಾತ್ರಿಯೇ. 132 00:46:33,833 --> 00:46:36,878 'ಪಿತ್ತ ಬಿಟ್ಟು ಬೇರೆ ಯಾವ ಯೋಚನೆಯೂ ಬರದೇ.'" 133 00:46:36,961 --> 00:46:38,713 "ಪದಗಳನ್ನು ಹಾಡುವುದು ಸುಲಭ, 134 00:46:38,796 --> 00:46:41,216 ಆದರೆ ಪದಗಳಿಗೆ ಈಗ ಯಾವ ಅರ್ಥವೂ ಉಳಿದಿಲ್ಲ." 135 00:46:41,299 --> 00:46:44,511 "ಅಂದರೆ, ಹಿಮಬಂಡಿ ಎಂದರಾದರೂ ಗೊತ್ತಾ?" 136 00:46:45,345 --> 00:46:49,265 "ನಾನು 400 ವರ್ಷಗಳಲ್ಲಿ ಹಿಮಬಂಡಿಯ ಗಂಟೆಗಳನ್ನು ಕೇಳಿಲ್ಲ ಅನಿಸುತ್ತೆ." 137 00:46:49,349 --> 00:46:52,852 "ಆದರೆ ನನ್ನ ಗೆಳೆಯರ ಮತ್ತು ನೆರೆಯವರ ಚೀರುವ ಶಬ್ದ ಕೇಳಿದ್ದೇನೆ, ನಾನವರನ್ನು ಕೊಲ್ಲುವಾಗ." 138 00:46:52,936 --> 00:46:56,689 "ಆದರೆ ಒಂಟಿ ಕುದುರೆಯ ತೆರೆದ ಹಿಮಬಂಡಿ ಅರ್ಥಹೀನ." 139 00:46:56,773 --> 00:47:02,695 "ಸೋದರಸಂಬಂಧಿಯನ್ನು ತಿಂದಿದ್ದೇನೆ ಎಂದು ಒಪ್ಪಿಕೊಂಡಿದ್ದಕ್ಕೆ, ಭೋಜನದಿಂದ ಹೊರಹಾಕಿದ್ದರು." 140 00:47:02,779 --> 00:47:06,699 "ಯಾರನ್ನು ತಿಂದಿರಿ ಅಂತ ತಿನ್ನುವ ಸಮಯದಲ್ಲಿ ಯಾರ ಮುಂದೆಯೂ ಹೇಳಬಾರದು." 141 00:47:06,783 --> 00:47:10,411 "ನನ್ನ ಜೊತೆ ಇದ್ದ ಜನರು ಅದು ವಾಂತಿ ಬರಿಸುತ್ತೆ ಅನ್ನುತ್ತಾರೆ." 142 00:47:10,495 --> 00:47:14,916 "ಅದು ನಿಜಾನಾ ಗೊತ್ತಿಲ್ಲ, ಆದರೆ ಅದು ಜನರಿಗೆ ಕೋಪ ಅಂತೂ ಬರಿಸುತ್ತೆ ಅಂತ ನನಗೆ ಖಂಡಿತ ಗೊತ್ತು." 143 00:47:14,999 --> 00:47:17,377 "ನಾನು ಅಷ್ಟು ಜನರನ್ನು ತಿನ್ನದೇ ಇದ್ದಿದ್ದರೆ ಚೆನ್ನಾಗಿತ್ತು, 144 00:47:17,460 --> 00:47:20,797 ನನಗೆ ಸಮಾಧಾನ ಹೇಳಲು ಆಗ ಯಾರಾದರೂ ಇರುತ್ತಿದ್ದರು." 145 00:47:20,880 --> 00:47:23,967 ಹೂಂ, ಆ್ಯಂಡಿ ಸಿ., ನಿಮಗೆ ಸಮಾಧಾನ ಹೇಳಲು ಆಗಲ್ಲ, 146 00:47:24,050 --> 00:47:28,513 ಯಾಕೆಂದರೆ ನೀವು ಮಾಡಿರೋದು ದುಷ್ಟ ಕೆಲಸ. 147 00:47:28,596 --> 00:47:31,349 ಆದರೆ ಅದರ ನಿರ್ಣಯ ದೇವರು ಮಾಡಲಿ. 148 00:47:31,432 --> 00:47:33,226 ಇಗೊಳ್ಳಿ ಒಂದು ಹಳೆಯ ಹಾಡು. 149 00:55:56,395 --> 00:56:00,274 ಸ್ಯಾಂಡಿ ಗಲ್ಚ್‌ನಿಂದ ಜಾರ್ಜ್ ವಾಷಿಂಗ್ಟನ್ ಥಿಝ್ ಬರೆಯುತ್ತಾರೆ, 150 00:56:00,357 --> 00:56:03,486 "ಯುದ್ಧವು ಎಂದಿಗೂ ಬದಲಾಗುವುದಿಲ್ಲ. ಕ್ರಿಸ್ಮಸ್ ಕೂಡ." 151 00:56:03,569 --> 00:56:06,447 "ಪ್ರತಿ ವರ್ಷವೂ ಅದೇ ಹಾಡುಗಳು. ನೀವು ಎಂದಾದರೂ ಗಮನಿಸಿದ್ದೀರಾ?" 152 00:56:07,865 --> 00:56:09,867 ನನಗದು ಇಷ್ಟ ಆಯಿತು, ಜಾರ್ಜ್. 153 00:56:09,950 --> 00:56:14,163 ಗೊತ್ತಾ, ಮರಳಿನ ದಿಬ್ಬಗಳು ಬದಲಾಗುವ ಸ್ಥಳದಲ್ಲಿ ವಾಸವಿರುವಾಗ, 154 00:56:14,246 --> 00:56:18,626 ನೀವು ನಿಜವಾಗಿಯೂ ಎಲ್ಲಿದ್ದೀರಿ ಎಂದು ನಿಮಗೆ ತಿಳಿದಿರುವುದಿಲ್ಲ, 155 00:56:18,709 --> 00:56:24,632 ಆಗ ನಿಮಗೆ ಕ್ರಿಸ್ಮಸ್ ಹಾಡುಗಳೇ ಕಾಲದ ಮಾರ್ಗದರ್ಶನ ನೀಡುವ ನಕ್ಷತ್ರಗಳಂತೆ. 156 00:56:24,715 --> 00:56:29,178 ಅವು ಕೇಳಿತೆಂದರೆ, ಕ್ರಿಸ್ಮಸ್ ಹತ್ತಿರದಲ್ಲಿದೆ ಎಂದರ್ಥ. 157 01:00:57,529 --> 01:01:02,242 ನಾನು ಡಿಜೆ ಮಿ. ನ್ಯೂ ವೇಗಸ್ ಮತ್ತು ನನಗೆ ನಿಮ್ಮ ಶೈಲಿ ಹಿಡಿಸಿತು. 158 01:01:02,326 --> 01:01:05,287 ನೀವು ನನ್ನನ್ನು ಆಕರ್ಷಿಸಿದಿರಿ. ಅರ್ಥ ಆಯಿತಾ? 159 01:06:56,430 --> 01:07:00,892 ಮತ್ತು ದೀರ್ಘ ಕಾಲದ ಕೇಳುಗರಾದ ಡಿಇಯ ಪಿ ಅವರಿಂದ ಬಂದ ಪತ್ರ ಇಲ್ಲಿದೆ. 160 01:07:01,226 --> 01:07:03,895 ಅವರು, "ಪ್ರತಿ ವರ್ಷ ನಾನು ನಿಮ್ಮ ಕಾರ್ಯಕ್ರಮವನ್ನು ಕೇಳುತ್ತೇನೆ" ಎನ್ನುತ್ತಾರೆ. 161 01:07:03,979 --> 01:07:05,063 ಧನ್ಯವಾದ, ಪಿ. 162 01:07:05,147 --> 01:07:10,318 "ಮತ್ತು ಹಿಂದಿನ ಕ್ರಿಸ್‌ಮಸ್‌ಗಳಲ್ಲಿ ಒಟ್ಟಿಗೆ ಸಮಯ ಕಳೆದ ಜನರನ್ನು ನೆನೆಪಿಸಿಕೊಳ್ಳುತ್ತೇನೆ, 163 01:07:10,402 --> 01:07:12,195 ತಿನ್ನುತ್ತಲೋ, ಕೊಲ್ಲುತ್ತಲೋ, ಹೇಗೇ ಇರಲಿ." 164 01:07:12,279 --> 01:07:16,032 "ನಾವು ದರೋಡೆ ಮಾಡುವಾಗ ನಮ್ಮ ಗುರುತುಗಳನ್ನು ಮರೆಮಾಚಲು 165 01:07:16,116 --> 01:07:19,953 ನನ್ನೊಂದಿಗೆ ಕ್ಯಾರೋಲ್ ಹಾಡಲು ಬಂದ ಜಿಮ್ಮಿ ಕೇನ್‌ನಂತೆ." 166 01:07:20,579 --> 01:07:24,207 "ಹಂಚಿಕೊಳ್ಳುವ ಸರದಿ ಬಂದಾಗ ಸ್ವಲ್ಪ ದುರಾಸೆ ತೋರಿದ." 167 01:07:24,291 --> 01:07:26,460 "ಹಾಗಾಗಿ ಅವನ ತಲೆಗೆ ಗುಂಡಿಡಬೇಕಾಯಿತು." 168 01:07:27,294 --> 01:07:31,715 "ಅಥವಾ ಮೆಲಿಸ್ಸಾ, ನಮ್ಮ ಕುಸಿದ ಶಿಪ್ಪಿಂಗ್ ಕಂಟೇನರ್‌ನ ಹಾಲ್‌ಗಳನ್ನು 169 01:07:31,798 --> 01:07:34,718 ಎಲ್ಲಾ ರೀತಿಯ ವಿಕಿರಣಶೀಲ ಮಿಂಚುವ ಕೀಟಗಳೊಂದಿಗೆ 170 01:07:34,801 --> 01:07:38,305 ಉತ್ಸಾಹಭರಿತ ಕ್ರಿಸ್ಮಸ್ ಶೈಲಿಯಲ್ಲಿ 171 01:07:38,388 --> 01:07:40,515 ಅಲಂಕರಿಸುತ್ತಿದ್ದವಳು." 172 01:07:41,224 --> 01:07:45,270 "ಅವಳಲ್ಲಿ ತುಂಬಾ ಗೆಡ್ಡೆಗಳು ಬೆಳೆದವು, ಹಾಗಾಗಿ ಅವಳಿಗೆ ಕಷ್ಟ ಬೇಡ ಅಂತ ಸಾಯಿಸಿಬಿಟ್ಟೆ." 173 01:07:47,147 --> 01:07:49,566 "ಮತ್ತು ಬಿಗ್ ಸಾರಾಳನ್ನು ಹೇಗೆ ಮರೆಯಲಿ, 174 01:07:49,649 --> 01:07:53,069 ನಮ್ಮ ಉಪಕರಣಗಳನ್ನು ಕಟ್ಟಿದ್ದಕ್ಕೆ 175 01:07:53,153 --> 01:07:56,656 ಕೆಲವು ಬ್ರಾಹ್ಮಿಣ್‌ಗಳು ಕೋಪಗೊಂಡಾಗ, ನಮ್ಮ ಹಿಮಬಂಡಿಯ ನಾಯಕತ್ವ ವಹಿಸಿ 176 01:07:56,740 --> 01:08:01,077 ವೇಸ್ಟ್‌ ಲ್ಯಾಂಡ್‌ನಾದ್ಯಂತ ನೂರು ಮೈಲುಗಳಿಗಿಂತ ಹೆಚ್ಚು ದೂರವನ್ನು ಕ್ರಮಿಸಿ ಕಾಪಾಡಿದವಳು." 177 01:08:01,161 --> 01:08:03,663 "ಆದರೆ ಅವಳು ನನಗೆ ಸರಿಯಾಗಿ ಧನ್ಯವಾದ ಹೇಳಲಿಲ್ಲ, 178 01:08:03,747 --> 01:08:06,249 ಹಾಗಾಗಿ ಅವಳ ತಲೆಗೂ ಗುಂಡಿಟ್ಟು ಕೊಲ್ಲಬೇಕಾಯಿತು." 179 01:08:06,750 --> 01:08:13,089 "ಆದರೆ ಅವಳ ನೆನಪು ಕಾಡುತ್ತೆ, ಯಾಕೆಂದರೆ ನಾನು ತುಂಬಾ ಸಮಯ 180 01:08:13,173 --> 01:08:17,511 ಅವಳ ಕಾಲುಗಳ ತುಂಬಿದ ಮಾಂಸವನ್ನು ಒಣಗಿಸುತ್ತಾ, ಆನಂದಿಸುತ್ತಾ ತಿಂದೆ." 181 01:08:17,594 --> 01:08:20,055 "ಅವಳ ಕಾಲುಗಳು ದೊಡ್ಡದಾಗಿ, ಅದ್ಭುತವಾಗಿದ್ದವು." 182 01:08:20,138 --> 01:08:23,517 "ಕಾಮುಕನಂತೆ ಹೇಳುತ್ತಿಲ್ಲ, ಹಸಿದ ವ್ಯಕ್ತಿಯಾಗಿ ಹೇಳುತ್ತಿದ್ದೇನೆ." 183 01:08:24,434 --> 01:08:27,896 "ಅವಳ ಒಂದು ಕಾಲಲ್ಲಿ ದೊಡ್ಡ ಗೆಡ್ಡೆ ಸಿಕ್ಕಿತು 184 01:08:27,979 --> 01:08:30,398 ಮತ್ತು ಆ ಗೆಡ್ಡೆಯಲ್ಲಿ ಒಂದು ಹಲ್ಲು ಬೆಳೆಯುತ್ತಿತ್ತು." 185 01:08:30,899 --> 01:08:35,028 "ದಯವಿಟ್ಟು ನನಗಾಗಿ, 'ಏಂಜೆಲ್ಸ್ ವಿ ಹ್ಯಾವ್ ಹರ್ಡ್ ಆನ್ ಹೈ' ನುಡಿಸಿ." 186 01:17:27,685 --> 01:17:30,229 ನಾನು ಡಿಜೆ ಮಿ. ನ್ಯೂ ವೇಗಸ್. 187 01:17:30,313 --> 01:17:32,857 ಪರಸ್ಪರ ಒಬ್ಬರಿಗೊಬ್ಬರು ನಾವು ಇರುವವರೆಗೆ, 188 01:17:32,940 --> 01:17:36,986 ಕೆಟ್ಟ ಜೀವನದಲ್ಲಿ ನಾವು ಒಂಟಿಯಲ್ಲ. 189 01:17:37,653 --> 01:17:41,032 ಹಾರ್ಟ್‌ಲ್ಯಾಂಡ್‌ನಲ್ಲಿರುವ ಹಾರ್ಡ್ ಟೆಡ್ ಅವರ ಪತ್ರ ಇಲ್ಲಿದೆ. 190 01:17:41,741 --> 01:17:44,744 ಟೆಡ್ "ದಯವಿಟ್ಟು 'ಲೆಟ್ ಇಟ್ ಸ್ನೋ' ನುಡಿಸಿ" ಎಂದು ಬರೆಯುತ್ತಾರೆ. 191 01:17:44,827 --> 01:17:46,704 "ನನಗೆ ಹಿಮದ ನೆನಪಾಗುತ್ತೆ." 192 01:17:46,788 --> 01:17:49,540 "ಅದು ತುಂಬಾ ಚಳಿಗಾಲ ಅನಿಸುತ್ತೆ, 193 01:17:49,624 --> 01:17:54,170 ಆದರೆ ಅಚಾನಕ್ಕಾಗಿ ಯುರೇನಿಯಮ್ ಅನ್ನು ನೆಕ್ಕಿದಾಗ ಆಗುವ ಚಳಿ ಅಲ್ಲ, 194 01:17:54,253 --> 01:17:59,467 ಅಥವಾ ಶಿಲೀಂಧ್ರ ಬೆಳೆದಿರುವಂಥ ಸಂದಿಯಲ್ಲಿ ಮಲಗಿದಾಗ ಆಗುವ ಚಳಿಯಲ್ಲ." 195 01:17:59,550 --> 01:18:03,805 "ಬರೀ ಸುಡುವ ಹೊಟ್ಟುಗಳಿಂದ ಉದುರುವ ವಿಕಿರಣಶೀಲದ ಹಿಮ ಅಲ್ಲದೇ, 196 01:18:03,888 --> 01:18:06,641 ಒಳ್ಳೆಯ ಹಿಮ ನೋಡಬೇಕೆಂದು ಆಸೆ ಆಗಿದೆ." 197 01:18:06,724 --> 01:18:08,017 "ನನಗೆ ನೆನಪಿದೆ, 198 01:18:08,101 --> 01:18:12,730 ಅದೇನದು, ಮೋಡ ಅಲ್ವಾ, ಅದರಿಂದ ಬರುತ್ತಿದ್ದ ಹಿಮ." 199 01:18:12,814 --> 01:18:16,776 "ಹಿಮದಲ್ಲಿ ಜಾರುವುದು ಹೇಗೆ ಎಂದು ನೆನಪಿಸಿಕೊಳ್ಳಲು ನೋಡುತ್ತಿದ್ದೆ, 200 01:18:16,859 --> 01:18:20,363 ಆದರೆ ಯಾಕೋ ಏನೋ, ಅದನ್ನು ನೆನಪಿಸಿಕೊಳ್ಳಲು ಹೋದಾಗಲೆಲ್ಲಾ 201 01:18:20,446 --> 01:18:25,118 ಸುಟ್ಟ ಶವಗಳಿಂದ, ಅವುಗಳ ಮೂಳೆಗಳಿಂದ ಚರ್ಮ ಸುಲಿದು ಬರೋದೇ ನೆನಪಾಗುತ್ತದೆ." 202 01:18:25,201 --> 01:18:27,829 "ಕಳೆದ ವರ್ಷ ನಾನು ಹಿಮ ನೋಡಿದೆ ಅಂದುಕೊಂಡೆ, 203 01:18:27,912 --> 01:18:33,793 ಆದರೆ ಅದು ಅಸಲಿಗೆ ಕೊಟ್ಟಿಗೆಯಿಂದ ಹಾರಿಬರುತ್ತಿದ್ದ ಟನ್‌ಗಟ್ಟಲೆ ಗೆದ್ದಲುಗಳು." 204 01:18:33,876 --> 01:18:36,045 "ಆ ಕೊಟ್ಟಿಗೆಯಲ್ಲಿ ಅದೇನಿತ್ತೋ, 205 01:18:36,129 --> 01:18:40,299 ಗೆದ್ದಲುಗಳ ಸಾಂಕ್ರಾಮಿಕತೆಗಿಂತ ಕೆಟ್ಟದಾಗಿತ್ತು ಅನಿಸುತ್ತೆ." 206 01:18:40,383 --> 01:18:43,344 "ಈಗ ನಾನು ಹಾಗೇ ಯೋಚಿಸೋದು." 207 01:18:43,845 --> 01:18:46,889 ನಾವೆಲ್ಲರೂ ಹಾಗೇ ಯೋಚಿಸೋದು, ಟೆಡ್. ಮೆರಿ ಕ್ರಿಸ್ಮಸ್. 208 01:18:46,973 --> 01:18:48,391 ಕೆಲವು ಮದ್ದುಗಳನ್ನು ನುಂಗಿ, 209 01:18:48,474 --> 01:18:53,187 ನಿನ್ನ ಸನ್ನಿವೇಶವನ್ನು ಮರೆಯಲು ಆಗುತ್ತಾ ನೋಡು. 210 01:29:11,346 --> 01:29:13,348 ಅಲ್ಲಿಗೆ ಮುಕ್ತಾಯ, ಮಕ್ಕಳೇ. 211 01:29:15,184 --> 01:29:16,894 ನೀವೆಲ್ಲಾ ಜೀವಂತ ಉಳಿಯಿರಿ. 212 01:29:16,977 --> 01:29:18,729 ನಿಜ ಹೇಳಬೇಕೆಂದರೆ, ನಾನಂತೂ ಇಲ್ಲ. 213 01:29:18,812 --> 01:29:22,316 ಈಗ ನಾನು ಮಿ. ನ್ಯೂ ವೇಗಸ್ ವಿದಾಯ ಹೇಳುತ್ತಿರುವೆ. 214 01:29:22,941 --> 01:29:28,155 ಎಲ್ಲರಿಗೂ ಮೆರಿ ಕ್ರಿಸ್ಮಸ್ ಮತ್ತು ಶುಭ ರಾತ್ರಿ.